Showing posts with label srikrishnavittala dasaru bheearayaru 1963 holenarasipura ಶ್ರೀಕೃಷ್ಣವಿಠ್ಠಲ ದಾಸರು ಶ್ರೀ ಭೀಮರಾಯರು. Show all posts
Showing posts with label srikrishnavittala dasaru bheearayaru 1963 holenarasipura ಶ್ರೀಕೃಷ್ಣವಿಠ್ಠಲ ದಾಸರು ಶ್ರೀ ಭೀಮರಾಯರು. Show all posts

Sunday, 23 May 2021

srikrishnavittala dasaru bheearayaru 1963 holenarasipura ಶ್ರೀಕೃಷ್ಣವಿಠ್ಠಲ ದಾಸರು ಶ್ರೀ ಭೀಮರಾಯರು

 ಹೆಸರು : ಶ್ರೀ ಭೀಮರಾಯರು., ಹೊಳೇ ನರಸೀಪುರ

ಕಾಲ :  ಕ್ರಿ ಶ 1902 - 1963

ಉಪದೇಶ ಗುರುಗಳು :  ಶ್ರೀ ಉರಗಾದ್ರಿವಾಸ ವಿಠ್ಠಲರು

ಅಂಕಿತ : ಶ್ರೀ ಕೃಷ್ಣವಿಠ್ಠಲ shreekrishnavittala

ಕೃತಿ :

ಶ್ರೀ ಕೃಷ್ಣ ವಿಠ್ಠಲರು....... 

" ಭಾಷ್ಯಾನುಸಾರಿ ದಶೋಪನಿಷತ್ತುಗಳನ್ನು ಭಾಮಿನೀ ಷಟ್ಪದಿಯಲ್ಲಿ  ಪ್ರಮೇಯಭರಿತವಾದ " ಕೃತಿಗಳನ್ನು-  ಎಲ್ಲರಿಗೂ ಅರ್ಥವಾಗುವ ಶೈಲಿಯಲ್ಲಿ ಸರಳ ಸುಂದರವಾಗಿ ಅಚ್ಛ ಕನ್ನಡದಲ್ಲಿ ರಚಿಸುವುದರ ಜೊತೆಯಲ್ಲಿ ಅನೇಕ ಪದ - ಪದ್ಯಗಳನ್ನು ರಚಿಸಿ ಹರಿದಾಸ ಸಾಹಿತ್ಯಕ್ಕೆ ತಮ್ಮ ಕೊಡುಗೆಯನ್ನು ನೀಡಿದ್ದಾರೆ!!

ರಾಗ : ಶಂಕರಾಭರಣ  ತಾಳ : ಆದಿ

ಯಾವ ಗುರುಗಳಿಗುಂಟು -

ಈ ವೈಭವವು ।

ಪವನನೊಡೆಯನ ಭಕ್ತ ರಾ-

ಘವೇಂದ್ರರಿಗಲ್ಲದಲೆ ।। ಪಲ್ಲವಿ ।।

ವರ ತುಂಗಾ ತೀರದಲಿ ।

ಮೆರೆವ ಮಂತ್ರಾಲಯದಿ ।

ತರಣಿಯಂದದಿ ಮೆರೆದು । ಭ ।

ಕ್ತರನು ಪೋಷಿಸುವ ।

ಶರಣ ರಕ್ಷಕನೆಂಬ ।

ಬಿರುದಿಂದ ತಾ ಮೆರೆವ ।

ವರ ಮಧ್ವ ಕುಲಚಂದ್ರ ।

ಗುರುರಾಜಗಲ್ಲದೆ ।। ಚರಣ ।।

ಸಂತರೆಲ್ಲರೂ ಬಂದು ।

ಶಾಂತಿಯಿಂದಲಿ ನಿಂದು ।

ಕಂತುಪಿತನ ಭಕ್ತ । 

ಚಿಂತೆಯನ್ನು ಹರಿಸೆಂದು ।

ಸಂತತವು ಬೇಡುತಿಹ ।

ಶಾಂತರಾಗಿಹ ಜನರ ।

ಸಂತೋಷದಲಿ ಕಾಯ್ವ -

ಗುರುರಾಜಗಲ್ಲದೆ ।। ಚರಣ ।।

ಕಾವಿ ವಸ್ತ್ರವನು ಧರಿಸಿ ।

ಕವಿದ ಭ್ರಮೆಯನು ಬಿಡಿಸಿ ।

ಭುವಿಜ ರಮಣನ ಭಜಿಪ ।

ಕವಿ ಕುಲೋತ್ತಮ ನಮ್ಮ ।

ಸೇವಕರ ಸುರಧೇನು ।

ಪಾವನಾತ್ಮನು ಆದ ।

ಕೃಷ್ಣ ವಿಠ್ಠಲನ ಭಕ್ತ -

ಗುರುರಾಜಗಲ್ಲದೆ ।। ಚರಣ ।।