Monday 1 July 2019

sheshadasa shesha dasaru 1885 modalkallu vaishakha shukla ashtami ಶೇಷ ದಾಸರು










info is from FB madhwanet--->

Sri Shesha Dasaru Modalakallu 

gurugaLu: shri vijaya dAsaru (swapna sUchane) 

Ankita given by Sri Vijaya Dasa (swapna)
ankita: Guru vijaya viTTala (swapnalabda)
Period: 1817 - 1885
Original name: Sheshappa
kaTTe: modalkallu
Amsha: indra 
Punyadina – Vaishaka Shudda Ashttami
Place   –  Modalakallu
Birth place – Darur village (gadvala samstana)

He was in loukika jeevana or nearly 40 years.  He was a a great hari bhaktha, daasaru was a strong follower of Vijayarayaru.
He was enjoying the shanubhoga vrutti for 5 villages.  He did the seva of Vijayadaasaru at Chippagiri and Sri Vijayadasaru gave him ankita in svapna as “guru vijaya vittala”.    Then he came to Modalakallu
His first kruti is said to be  ” nambide ninna paada mukyapraana…”
He has written more than 40 Suladees, Ugaboogaas, Ahnika paddati, etc.
***********



SRI SHESHADASARU (1810-1885) 
vaishAka shuddha ashTami, is the ArAdhane of modalakallu shEsha dAsaru.

Starting from Sri Narahari Thirtharu the Dasa Sahithya originated and continued through Sri Sripadarajaru, Sri Vysarajaru, Sri bhAvi samIra Vadirajaru, Sri Purandaradasaru, Sri Kanakadasaru, Sri Vijayadasaru, Sri Gopaladasaru, Sri Jagannathadasaru besides others. In the same “PARAMAPARA” comes shri Shesha dAsaru. 

Modalakallu Sri Shesha Dasaru is the Amsha of Arjuna (Indra). Sri Sheshadasaru was born in Dharur, a small village now near Gadwal of Andhra Pradesh. He was doing “Kulkarni” or “patwari” job that came to him through Parampara. One day for a silly reason the Gadwall King insults Sheshappa in his “Raja sabha”. Disgusted Sri Sheshappa decided to end his life and intentionally put his hand into an anthill. However, to his surprise he finds a beautiful idol of Pranadevaru in the “Snake Bila”.

He realizes that the Pranadevaru idol was the one consecrated by Sri Vysarajaru many years ago. He decides to conduct “Ugra Tapasya” for 41 days. Finally Sri Pranadevaru appears in his dreams and instructs him to go to Chippagiri - the place of Vijayadasaru. He observes difficult Tapasya at Chippagiri and pleased over this Sri Sheshappa is blessed with Ankita Nama of “Guru Vijaya Vittala” by Sri Vijayadasaru in his dreams.

"Nambidhe ninna paadha, Shree MukhaPraaNa" was the first kirthana composed by him. After that he returned o Modala Kallu. It is the place of first Shrusti of stone or shila hence the name of Adishila or Modala(first) Kallu(stone). There he ran a choultry to serve poor and needy pilgrims. He has composed many Suladigalu, Ughabhogagalu, and Devaranamas. He cleared the ill effects of his Sishya-Kallur Krishnappa through 3 Ughabhogagalu. Those Ughabhogagalu are known as Apattu Parihara Ughabhogagalu and are famous even today. 

On the Ugadi day of “Parthiva Nama Samvatsara” (1885 AD) he consecrated “Partha Sarathy" idol at his home. And same year on Vaishakha Suddha Ashtami he attained the lotus feet of Sri Hari. 

Shri Raghudantha Theertha Swamiji of kUDli Arya Akshobhya tIrtha maTa has composed an Ashtaka on Sri Sheshadasaru, in his pUrvAshrama. 

shri modalakallu shEsha dAsa guruvAntargata, shri Vijaya dAsaru guruvantargata, bhArati ramaNa mukhyaprANAntargata, srIdEvi bhUdEvi samEta shri modalakallu srInivAsa dEvara pAdAravindakke gOvindA gOvindA....

shri krishNArpaNamastu...

***

Modalakallu Shri Shesha Dasaru was a great Haridasa and an aparoksha GynAni. He is an amsha-sambhuta of Arjuna which he himself proclaimed in many of his suladi-s. He was born in year 1810 A.D. in Darur village (the abode of Shri Parthasarathy) of Gadwal Taluk in Andhra Pradesh.
Before becoming a Haridasa, Sheshappa was doing Kulkarni job that had come to him from his forefathers. On one occasion, due to a petty reason, he gets insulted by the Queen of Gadwal in front of everyone and a very deeply hurt Seshappa decides to end his life at Chintraveli by putting his hand inside an ant hill expecting some snake to bite him. To his astonishment, he found a beautiful vigraha of Shri MukhyaPraNa which he later identified as a vigraha consecrated by Great Shri Vyasa Teertha. He performed deep penance there and on the 48th day Shri MukhyaPraNa directed him to Shri Bhrugvamsha Sambhuta Vijaya Dasa of Chippagiri.
At Chippagiri, Seshappa dedicated himself at the lotus feet of Shri Vijaya Dasa and finally got bestowed with ankita nama ‘Shri Guru Vijaya Vittala’ by Shri Vijaya Dasa. Since then, Sheshappa came to be known as Shri Shesha Dasaru or Shri Guru Vijaya Dasaru. After that, he made Adi-shila Kshetra (Modalakallu) as his Karya Kshetra. He wrote many songs, ugabhoga-s, sulaadi-s. A notable song of Shri Shesha Dasaru on Shri Mukhya PraNa is “Nambide Ninna Paada Guru MukhyaPraNa….”. "ನಂಬಿದೆ ನಿನ್ನ ಪಾದ ಮುಖ್ಯ್ಯ ಪ್ರಾಣ ... ಡಿಂಭದೊಳಗೆ ಹರಿಯ ಬಿಂಬ ಪೊಳ್ಯುವಂತೆ ಮಾಡು..... ಶ್ರೀ ಗುರು ವಿಜಯ ವಿಟ್ಠಲನ ಪಾದಕೆ ಬಾಗಿದ ಭವದೂರ ಜಾಗರ ಮೂರುತಿ..."
Shri Shesha Dasaru installed the idol of Shri Parthasarathy at Darur, his birth place, in the year 1885 – on Yugaadi of Shri Parthiva Samvatsara. The same year, on Vaishakha Shuddha Ashtami, he left his mortal body and reached the abode of Shri Hari. Shri Arya Akhobhya MaThAdheesha Shri Shri 1008 Shri Raghudaanta Teertharu (Ashrama Guruji of Shri Shri 1008 Shri Raghuprema Teertharu of Adoni - wrote an AshTaka in Sanskrit in his poorvashrama on Shri Shesha Dasaru as per the instructions of Shri Raghavendra Swamiji conveyed through Shri Bheemacharyaru & his Vidya Guru Shri Yelameli Vittalacharyaru. For the benefit of saadhaka-s, Shri Raghudaanta Teertharu himself wrote the Kannada translation of his own work.
Source:sumadhwaseva group.

**
ಶ್ರೀ ಶೇಷದಾಸರು ತಮ್ಮ ಭಕ್ತರ ಭೂತ ಪ್ರೇತಗಳನ್ನೂ ಪರಿಹಾರ ಸಹಿತ ಬಿಡಿಸುವುದನ್ನು ಅವರ ಸ್ತೋತ್ರ ಪದಗಳಲ್ಲಿ ಕಾಣುವುದು...
ಕುಷ್ಟ ರೋಗ ವ್ಯಾದಿಜ್ವರ ಚತುರ್ಥಿ ಭಯ ಭೀತಿಗಳನೆಲ್ಲ
ಬಿಟ್ಟೋಡಿಸಿ ತೀರ್ಥ ಅಂಗಾರದಲ್ಲಿ ಸಮಸ್ತರ ಮಹಿಮೆಯ ನೋಡಿ
ಸ್ಮರಿಸಿ ಬದುಕಿರೋ ಸರ್ವಾನಂದ ಗುರುಗಳ...........
-----------ಹರಪನಹಳ್ಳಿ ಭೀಮವ್ವನವರು.

**
ಶ್ರೀ ಪಾರ್ಥ ಸಾರಥಿ ವಿಠ್ಠಲರು ಹೇಳುವ ಹಾಗೆ.....
ಭೂತಳಾದೋಳು ಭೂತ ಪ್ರೇತ ಬಿಡಿಸುವರೆಂದು
ಖ್ಯಾತಿಯ ಇವರಿಗೆ ನೀತವಲ್ಲವೂ ನಿರುತ......
ಭಜನೆ ಮಾಡಿರೋ ಗುರು ವಿಜಯರಾಯರ ಪಾದ.......

**
ಕಾರ್ಪರ ನರಹರಿ ಅಂಕಿತ ಗಿರಿಯಚಾರ್ಯರು ಹೇಳುವ ಹಾಗೆ........
ಕರುಣ ಸಿಂಧು ನಿಮ್ಮ ನಾಮ ಸ್ಮರಣೆ ಮಾತ್ರದಿ ಭೂತ ಪ್ರೆಟಾಗಳಿ-
ರದೆ ಪೋಪವು ಶರಣ ಜನರ ದುರಿತ ವನಕೆ ಮರುತರೆನಿಪ
ದಾಸವರ್ಯ ಪೋಷಿ ಸೆನ್ನುನು.......

**
ಮೊದಲಕಲ್ಲಿನಲ್ಲಿ ಗಂಗೆಯನ್ನು ತರಿಸಿದ್ದು:
ಶ್ಯಾಮಸುಂದರ ದಾಸರು ಹೇಳುವ ಹಾಗೆ.......
ನಂಬಿದ ದ್ವಿಜರಿಗೆ ಶಂಭೋರ್ಗಿರಿಯಲ್ಲಿ ದಾಸರಾಯ
ಬಾಂಭೂಳೆ ತೋರಿಸಿ ಸಂಭ್ರಮಗೊಲಿಸಿದಿ ದಾಸರಾಯ

**
ಶ್ರೀ ಶೇಷದಾಸರ ಸುಳಾದಿಗಳ ಜತೆಗಳು
ಹರಿಯಾ ವಿಹಾರಕ್ಕೆ ಆವಾಸ ನೆನಿಸುವಿ
ಉನ್ನಂತ ಮಹಿಮಾ ಗುರು ವಿಜಯ ವಿಠ್ಠಲನ್ನ ಸುಪ್ರಿತಾ ಘನದೂತ ||:

**
ಶ್ರೀ ಶೇಷದಾಸರ ಸುಳಾದಿಗಳ ಅದ್ಯಂತಗಳು
ಮಖವನ್ನೇ ಮಾಡುವದು ಮರ್ಮವ ನಿನರಿತು|
ವಿಖನ ಸಾರ್ಚಿತ ಪಾದ ಮನದಿ ನಿಲಿಸಿ ||
ಹರಿಯಾ ಯಜಿಸು ಇನಿತು ಜನುಮದೊಳಗೆ ಒಮ್ಮೆ |
ಮರಳೆ ಬಾರದು ದೇಹ ಗುರು ವಿಜಯ ವಿಠ್ಠಲ ಬಲ್ಲ||

**
ಆಲಿಸಿಕೆಳುವದು ಆದರದಿಂದಲಿ|
ಶ್ರೀ ಲಕುಮಿಶನ ಭಕುತರೆಲ್ಲ||
ಸಕಲ ಸಾಧನ ಮದ್ಯ ಉತ್ಕೃಷ್ಟವೆನಿಪದು|
ನಖಶಿಖ ಪರಿಪೂರ್ಣ ಗುರುವಿಜಯ ವಿಠ್ಠಲ ವೋಲಿವ||

**

*Source:google(Praveen Joshi)
*

ಶ್ರೀ ಶೇಷದಾಸರು ಕಲ್ಲೂರು ಕೃಷ್ಣಪ್ಪನಿಗೆ ಬಂದ ಆಪತ್ತು ಪರಿಹಾರವಾಗಲು ರಚಿಸಿದ ೩ ಉಗಾಭೋಗಗಳು
೧)ಭಕ್ತರ ಮನೋರಥ ಪೂರ್ಣಮಾಡುವಲ್ಲಿ | ಉಕ್ತವಾದ ಕಾಮಧೇನು ಎನಿಪೆ|
ಭಕ್ತರ ಅಪರಾಧ ಸಹನ ಮಾಡುವಲ್ಲಿ ಧಾ | ರಿತ್ರಿಗೆ ಸಮಾನನೆನಿಪ ಸಾರ್ವಭೌಮ | ಭಕ್ತರ ಮ್ಯಾಲೆ ಮಹಾಕರುಣ ಮಾಡುವಲ್ಲಿ | ಪಿತೃ ಮಾತೃ ಭಾತೃ ಗುರು ಸಮಾನನೆನಿಪೆ | ಭಕ್ತರ ಅಭಿಮಾನ ಸಹನ ಮಾಡುವಲ್ಲಿ | ಮಿತ್ರ ನೆನೆಸಿಕೊಂಬೆ ಅನಿಮಿತ್ತ ಬಂಧು | ಭಕ್ತರ ದುರಿತ ಕಳೆದು ಕಾವ ವಿಷಯದಲಿ | ಛತ್ರ ನೆನೆಪೆ ಸತತ ಸನ್ಮಾಂಗಳಾಂಗ |ಭಕ್ತರ ನಿಂದಕರ ನಿಗ್ರಹ ಮಾಡುವಲ್ಲಿ ಮೃತ್ಯು ಯಮಗೆಸದೃಶನೆನಿಪ ದೇವ | ಭೃತ್ಯವತ್ಸಲ ಗುರು- ವಿಜಯವಿಠಲರೇಯಾ|ಭಕ್ತರ ಪೊರೆವ ಬಿರಿದು ನಿನ್ನದಯ್ಯಾ ||
೨)ಭಕ್ತವತ್ಸಲನೆಂಬ ಬಿರುದುಳ್ಳ ದೇವ, ನಿನ್ನ | ಭಕುತಿಯಿಂದಲಿ ನಮಿಸಿ ಬಿನೈಸುವೆ | ರಿಕತನ್ನ ಬಿನ್ನಪವ ಮನಕೆ ತಂದು ವೇಗ ಆ | ಸಕುತಿಯಿಂದಲಿ ಗ್ರಹಿಸಿ ಸಫಲ ಮಾಡು | ಭಕುತನಾದ ಇವಗೆ ಲೌಕಿಕದಿಂದ ಬಂದ |ವಿಕಟ ರೂಪವಾದ ದುರಿತದಿಂದ | ಮುಕುತನ್ನ ಮಾಡುವದು ಕರುಣದಿಂದಲಿ ವೇಗ | ಶಕಟ ಭಂಜನ ಕೃಷ್ಣ ಉತ್ಕೃಷ್ಟ‌ನು | ಮುಕುತಿದಾಯಕ ಗುರುವಿಜಯವಿಠಲ| ಮಮದ್ಭಕ್ತನ ಪ್ರಾಣಪ್ರೀತಿಯೆಂಬುದು ಸತ್ಯ ಮಾಡು.|
೩)ಶತ್ರು ಮಿತ್ರಗಳಲ್ಲಿ ಸಮಸ್ಥಿತನಾಗಿ ನೀನೇ | ಪ್ರಕೃತಿಯು ಜೀವಕಾಲನುಸರಿಸೀ | ಕೃತ್ಯವ ಮಾಳ್ಪನಾಗಿ ಜೀವರ್ಗೆ ಸುಖದುಃಖ | ಮೊತ್ತಗಳುಣಿಸುವಿ ನಿಯಮದಂತೆ | ಕರ್ತೃನೆಂದು ನಿನ್ನ ನೆರೆನಂಬಿ ಇಪ್ಪವರಿಗೆ | ಯಿದು | ಕೃತ್ಯಗಳಲ್ಲವೆಂದು ಶಾಸ್ರ್ತಸಿದ್ದ |ಚಿತ್ತಕ್ಕೆ ತಂದು ವೇಗ ಶತ್ರುಸಹಸವನ್ನು | ವ್ಯರ್ಥಮಾಡಿ ಭಕ್ತನಾದವನ ಹತ್ತಿರ ಕರೆದು ದಯದೃಷ್ಟಿಯಿಂದಲಿ ನೋಡಿ | ಉತ್ತಮವಾದ ಸುಖ ವೈದಿಪುದೊ | ಭಕ್ತವತ್ಸಲ *ಗುರುವಿಜಯವಿಠಲರೇಯ| ಎತ್ತಲಿದ್ದರು ನಿನ್ನ ಪೊಂದಿದವನು |
*************************
ಶ್ರೀಶಾಂಘ್ರಿಸೇವಕಂನಿತ್ಯಂ| ಭೂಸುರಾಗ್ರಕುಲೋಧ್ಭವಂ| ವಾಸಮಾದಿಶಿಲಾಕ್ಷೇತ್ರಂ ಶೇಷದಾಸಗುರುಂಭಜೇ|
|ಇಂದು ಶ್ರೀಮೊದಲು ಕಲ್ಲು ಶೇಷದಾಸರ ಆರಾಧನ ಪ್ರಯುಕ್ತ ಅವರ ಮಹಿಮೆ ತಿಳಿಯುವ ಪ್ರಯತ್ನ.
✍ರಾಯಚೂರು ಹತ್ತಿರ ಬರುವ ಕಲ್ಲೂರು ಗ್ರಾಮ.ಇಲ್ಲಿ ಶ್ರೀಲಕ್ಚ್ಮಿದೇವಿಯು ತನ್ನ ಪತಿಯಾದ ಶ್ರೀನಿವಾಸನ ಜೊತೆ ಇರುವ ಒಂದು ಪುಣ್ಯ ಕ್ಷೇತ್ರ.
ಇಲ್ಲಿ ಸಾಣೆ ಕಲ್ಲಿನಲ್ಲಿ ಲಕ್ಷ್ಮೀದೇವಿಯು ತಾನೇ ಒಡಮೂಡಿದ್ದಾಳೆ ಎನ್ನುವದು ಹಿರಿಯರ ವಚನ.
ಇಂತಹ ಕಲ್ಲೂರು ಗ್ರಾಮಕ್ಕೆ ಸೇರಿದ ಕುಲಕರ್ಣಿಯವರಾದ ಕೃಷ್ಣಪ್ಪ ಅನ್ನುವವರಿಗೆ ಒಮ್ಮೆ ಅವರ ಮೇಲೆ ಒಂದು ಅಪವಾದ ಬರುತ್ತದೆ. ಅದರ ಸತ್ಯಾ ಅಸತ್ಯತೆ ತಿಳಿಯದೇ ಹೈದ್ರಾಬಾದ್ ನವಾಬ ಅವರಿಗೆ ಮರಣದಂಡನೆಯನ್ನು ವಿಧಿಸುತ್ತಾನೆ.
ತಕ್ಷಣ ಆ ಕಲ್ಲೂರು ಕೃಷ್ಣಪ್ಪ ಮೊದಲುಕಲ್ಲು ಶೇಷದಾಸರಲ್ಲಿ ಶರಣುಹೋಗಿ ತನಗೆ ಬಂದ ಆಪತ್ತನ್ನು ಕಳೆಯಬೇಕು ಅಂತ ಕೇಳಿಕೊಳ್ಳುವನು.
ಕರುಣಾಸಮುದ್ರರಾದ ದಾಸರು ಅವನಿಗೆ ಬಂದ ಆಪತ್ತನ್ನು ನೋಡಿ, ತಮ್ಮ ಉಪಾಸ್ಯ ಮೂರುತಿಯಾದ ಗುರುವಿಜಯವಿಠ್ಠಲನಲ್ಲಿ ಪ್ರಾರ್ಥಿಸಿ ಅವನ ಕಷ್ಟ ಕಳೆಯಲು ೩ ಉಗಾಭೋಗ ರಚನೆ ಮಾಡಿ ಕೊಡುತ್ತಾರೆ.
ಅದು ಹೀಗಿದೆ.
"ಭಕ್ತವತ್ಸಲನೆಂಬ ಬಿರಿದುಳ್ಳದೇವ"
ಅದನ್ನು ನಿತ್ಯಪಾರಾಯಣ ಮಾಡಲು ಹೇಳಿ ಮಂತ್ರಾಕ್ಷತೆ ಕೊಟ್ಟು ನಿನ್ನ ಹತ್ತಿರ ಇರಲಿ ಎಂದು ಹೇಳುತ್ತಾರೆ.
ಆ ಕುಲಕರ್ಣಿ ಅದನ್ನೇ ಭಕ್ತಿಯಿಂದ ಪಾರಾಯಣ ಮಾಡುತ್ತಾ ಇರುತ್ತಾನೆ.
ನವಾಬ ಹೇಳಿದ ದಿನ ಬರುತ್ತದೆ. ಆ ದಿನ ಅವನ ಕಡೆಯ ಸೈನಿಕರು ಬಂದು ಇವರನ್ನು ಹೈದ್ರಾಬಾದ್ಗೆ ಕರೆದುಕೊಂಡು ಹೋಗುತ್ತಾರೆ.
ಅಲ್ಲಿ ಇವರನ್ನು ನಿಲ್ಲಿಸಿ ಬಂದೂಕಿನಿಂದ, ಗುಂಡು ಹಾರಿಸಿ ಕೊಲ್ಲುವಂತೆ ಆಜ್ಞೆ ಆಗುತ್ತದೆ.
ಇವರಿಗೆ ಗುಂಡು ಹಾರಿಸುವ ಸಮಯದಲ್ಲಿ ಸಹ ಅವರು ಉಗಾಭೋಗ ಪಠಣೆ ಮಾಡುವದು ಬಿಡಲಿಲ್ಲ..
ಮತ್ತು
ಆ ದಿನ ಅವರು ದಾಸರು ಕೊಟ್ಟ ಮಂತ್ರಾಕ್ಷತೆ ಯನ್ನು ತಮ್ಮ ತಲೆಯಲ್ಲಿ ಧರಿಸಿಕೊಂಡು ಹೋಗಿದ್ದರು...
ಆದರೆ ಏನಾಶ್ಚರ್ಯ!!??
ಬಂದೂಕಿನಿಂದ ಗುಂಡುಗಳು ಹಾರುವದಿಲ್ಲ.ಸ್ವತಃ ನವಾಬನು ಪರೀಕ್ಷೆ ಮಾಡಿದರು ಅದರಿಂದ ಗುಂಡು ಬರುವದಿಲ್ಲ..
ತಕ್ಷಣ ತನ್ನ ಕಡೆಯವರಿಗೆ ಹೇಳುತ್ತಾನೆ.
*ಛೋಡ್ ದೋ ಉನ್ಕೋ ..ವೋ ಖುದಾ ಕಿ ಆದ್ಮಿ ಹೈ..
(ಅವನನ್ನು ಬಿಟ್ಟು ಬಿಡಿ.ಅವನು ದೇವರ ಭಕ್ತನಿದ್ದಾನೆ..*
ಬಂದಂತಹ ಆಪತ್ತು ಕಳೆದುಕೊಂಡ ಮೇಲೆ ದಾಸರ ದರುಶನ ಮಾಡಲು ಕೃಷ್ಣಪ್ಪ ಮೊದಲಕಲ್ಲು ಗೆ ಬರುತ್ತಾನೆ.
ಹೀಗೆ ಶ್ರೀ ಮೊದಲಕಲ್ಲು ಶೇಷದಾಸರು ರಚಿಸಿದ ಆ ಉಗಾಭೋಗ ಪಾರಾಯಣ ಮಾಡಿ ಬಂದಂತಹ ಆಪತ್ತಿನಿಂದ ಪಾರಾದವರು ಆ ಕುಲಕರ್ಣಿ ಕೃಷ್ಣಪ್ಪ..
ಪ್ರತಿಯೊಬ್ಬ ಹರಿದಾಸರ ಸುಳಾದಿ, ಉಗಾಭೋಗ,ಪದಗಳಲ್ಲಿ ನಾವು ಎಷ್ಟು ವಿಶ್ವಾಸ ಇಟ್ಟು ಪಾರಾಯಣ ಮಾಡುತ್ತೇವೆ ಅಷ್ಟೇ ಫಲ ದೊರಕುವದು.
ಶ್ರೀ ಶೇಷದಾಸರು ಮತ್ತು ಅವರ ಅಂತರ್ಯಾಮಿಯಾದ ಶ್ರೀ ಗುರು ವಿಜಯವಿಠ್ಠಲ ನಿಗೆ ಈ ಲೇಖನ ಸಮರ್ಪಣೆ ಮಾಡುತ್ತಾ
🙏ಶ್ರೀ ಕೃಷ್ಣಾರ್ಪಣಮಸ್ತು🙏

🙏ಪೋಷಿಸು ಎನ್ನಯ ದೋಷಗಳೆಣಿಸದೇ
ದಾಸ ರಾಯ🙏
🙏ಶ್ರೀ ಮೊದಲಕಲ್ಲು ಶೇಷದಾಸ ಗುರುಭ್ಯೋ ನಮಃ🙏

|| nAham kartA hariH kartA ||
|| Shri BharatI ramaNa mukhyaprANANtargata
Shri KRuShNArpaNamastu ||
******

 shri gurubyO namaha, hari Om... 

vaishAka shuddha ashTami is the ArAdhane of modalakallu shEsha dAsaru .

ಶ್ರೀಶಾಂಘ್ರಿಸೇವಕ ನಿತ್ಯಂ ಭೂಸುರಾಗ್ರ ಕುಲೋದ್ಭವಂ ।
ವಾಸವಾದಿ ಶಿಲಾಕ್ಷೆತ್ರಂ ಶೇಷದಾಸ ಗುರುಂಭಜೇ ।।

Original name: Sheshappa
Birth Place : daruru Village, gadwal taluk, kurnool District
Period: 1806 - 1885
amsha: Indra dEvaru
Upadesha gurugalu: shri vijaya dAsaru
Ankita: (swapnAlabhdha) guru vijayavittala
Swarupa uddhArakaru : shri rAyaru
Shishyaru: bhima dAsaru, gOvinda dAsaru

Contemporaries: appavaru, surapura Ananda dAsaru, yeLamEli hayagriva acharyaru

suLAdi - 45
UgAbhOga - 12
pada - 13

His katte is at modalakallu. The house where he lived is inside the walls of modalakallu temple itself. His vamshastaru continue to live in that house today. 

Shri modalakallu shEsha dAsa varada gOvindA gOvindA... 

Shri krishNArpaNamastu...
***

 ಶ್ರೀ ಗುರು ಶ್ರೀ ಶೇಷದಾಸಾರ್ಯಾಷ್ಟಕಮ್

ಸೀತಾಪತಿಂ ಹರಿಜಾತಂ ಪ್ರಣಮ್ಯ ಮತಿಹೇತುಂ ಸುಖಾಯ ಪವನಾ-
ಜ್ಞಾತಂ ಬಲಾಯ ಪುರುಹೂತಾವಾತಾರ ಜಯತೀರ್ಥಂ ಧನಾರ್ಥಮನಿಶಮ್ ।
ಪೋತಂ ಶ್ರೀ ಸುಧೀಂದ್ರ ಗುರುಜಾತಂ ತಥೈವ ಮಮ ತಾತಂ ಚ ಜೀವಿತಕೃತೇ
ಖಾತಸ್ಯ ರೀತಿಮನುನಿತಾಂ ಕರೋಮಿ ಕೃತಿಮೇತಾಂ ತು ಶೇಷಸುಗುರೋಃ ।। ೧ ।।

ಶ್ರೀಪಾರ್ಥಸೂತಪದಜಾಪಾಖ್ಯಮುಕ್ತಿಪದ ಸೋಪಾನಮಾರ್ಗದ ಗುರುಃ
ಪಾಪಾತ್ಮಾನಾಂ ನಿಖಿಲತಾಪಾಪನೋದನತಯಾsಪಾರಸೌಖ್ಯಮಧುಹತ ।
ಭೂಪಾಲವರ್ಯಕೃತ ಕೋಪಾತ್ಕದಾಚಿದಯಮಾಪಾಶು ಚಿಪ್ಪಶಿಖರಂ
ಗೋಪಲಭಕ್ತವಿಜಯೋಪಾಭಿದಸ್ಯ ಮಹಿಮಾಪೂರಮಜ್ಜಮದಾತ್ ।। ೨ ।।

ದಾಸಾರ್ಯವರ್ಯ ಕರುಣಾಸಾಗರೋಪಗತಮೀಶಾಂಘ್ರಿಪದ್ಮ ಮಹಿಮಾ
ಲೇಶಾಮೃತಾಪ್ತಿಮತಿ ಕೋಶಃ ಶುಚೀಶ ಇವ ಭಾಸಾಭಿನಂದ್ಯ ವಿಬುಧಾನ್ ।
ದೇಶಾನಟನ್ ಖಲಕುಲೇಶಾನ್ ವಿಚಿತ್ಯ ರಭಸಾssಸಾಧ್ಯ ಭಕ್ತಿಭರಿತೋ
ವ್ಯಾಸಾರ್ಯ ಪನ್ನವಪಾಲಾಶೇ ನನಾಮ ಪಥಗೇಶೋ ಯಥಾ ಮುರಹರನ್ ।। ೩ ।।

ಕ್ರೂರಾರಿ ದುಷ್ಟಮತ ವಾರಾಶಿ ಕುಂಭಸುತಮಾರಾದ್ಯ ತದ್ವರಯುತಃ
ಸಾರಂ ಸುಚಿಂತ್ರವಲಿಮಾರಾದುಪೇತ್ಯ ಕವಿವೀರಂ ಭಜನ್ ಕತಿಪಯಾನ್ ।
ವಾರಾನುವಾಸ ಗುರುರಾರಾಧಯನ್ ಸುಜನವಾರಂ ಸುಭೋಜ್ಯಧನತೋ
ದೂರಾತ್ಪಿಶಾಚ್ಯಪರಿವಾರಃ ಪ್ರಯಾತಿ ಖಲು ಘೋರೋsಪಿ ಯತ್ಸ್ಮರಣತಃ ।। ೪ ।।

ಜಂಭಾರಿದಂತಿವರ ದಂಭಾಪಹಾರಿ ಕುಚಕುಂಭಾಂಚಿತೇಂ ದ್ವವರಜಾ
ಸಂಭೋಗಕಾಲ ಪರಿರಂಭಾಪ್ತ ಕುಂಕುಮ ವರಾಂಭೋರುಹಂಕರುಚಿರಮ್ ।
ಅಂಭೋಜನಾಭಮತಿ ಸಂಭಾವನಾಯ ಜಗದಂಬಾ ಕುಮಾರ ವಚನಾತ್
ಕುಂಭೀಂದ್ರ ಕೃತ್ತಿಧರ ಶಂಭೋರ್ಗಿರಿಂ ಜನಕದಂಬಾವೃತೋ ಗುರುಗರಾತ್ ।। ೫ ।।

ರಾಮಂ ರಘೋಃ ಕುಲಲಲಾಮಂ ನಿಶಾಟತತಿ ಭೀಮಂ ಬಲಾಹಕ ಇವ
ಶ್ಯಾಮಂ ಸತಾಂ ಸಕಲ ಕಾಮಪ್ರದಂ ತಮಿಹ ಸೋಮಂ ಸರೋಡುನಿಕರೇ ।
ಸ್ತೌಮ್ಯಂಬುಜಾಕ್ಷಮಿತಿ ವಾಮಂ ಯಥಾ ಸುಜನಧಾಮಾಸ್ತುವನ್ ಭಗವತಃ
ಪ್ರೇಮಂ ಪ್ರಸಾದ್ಯ ಬಲಸೀಮಂ ಸಮೀರಣಮಧೋಮಾಕಳತ್ರಮಭಜತ ।। ೬ ।।

ಗಂಗಾಂ ಕದಾಚಿದಘ ಸಂಘಾಪ ಹಾರಕ ವಿಹಂಗಾಧಿಪ ದ್ವಜವರೋ
ತ್ಸಂಗಾವಧಿಪ್ಲುತ ತರಂಗಾಂ ದದರ್ಶ ಭವಭಂಗಾಂ ಜನೈಃ ಪರಿವೃತಃ ।
ತುಂಗೋಪವಾಸವೃತರಂಗಾಧಿಪಸ್ಸುಜನಸಂಗೀ ಹರೇರ್ಗುಣಗಣಾನ್
ಸಂಗೀತತೋ ಕಥಯದಂಗೀಚಕಾರ ಮೃದುಲಾಂಗೀ ರಮಾ ಸುತ ಇತಿ ।। ೭ ।।

ಶ್ರೀ ರಾಘವೇಂದ್ರಗುರುಮಾರಾಧ್ಯ ಮಾಯದಿತಿಜಾರಿಂ ತದೀಯಕರುಣಾ
ಧಾರೋsನುಭೂಯ ಸುಖಸಾರಂ ಕಿರೀಟಿ ರಥಭಾರಂ ವಹಂತಮದಧತ ।
ಶ್ರೀರಾಮವತ್ ಖಲಕುಠಾರೋಪನೀತಿಕೃತಿಮಾರಾಧ್ವಿಧಾಯ ಸುಶಯೋ
ದೂರಂ ಗತಂ ಭುವಿ ದಧಾರಾಥ ನಾಕಿಪರಿವಾರಸ್ತುತೋsಯಮಭವೇತ್ ।। ೮ ।।

ಶ್ರೀ ಶೇಷವರ್ಯ ಹರಿದಾಸಾಗ್ರಣೇಶ್ಚರಿತಮಾಶಂಸಿತಂ ಯಲಮಳೌ
ವಾಸಸ್ಸ್ಯ ವಿಠ್ಠಲಕೃತೀಶಸ್ಯ ಪೂರ್ಣ ಕರುಣಾಶಾವತಾಹ್ಯಹರಃ ।
ಶ್ರೀ ಶ್ರೀನಿವಾಸ ಸುಕವಿಶೇನ ಪಾಠಮನು ಮೇಶೋ ದದಾತಿ ಸುಸುತಂ
ವಾಸೋ ಧನಂ ಚ ಸುಯಶಃ ಶೋಭನಂ ಸುಖಮಶೇಷಃ ಶ್ರುತಿ ಸ್ಮೃತಿ ಗತಿಮ್।।೯।।

।। ಇತಿ ಶ್ರೀ ಟಂಕಸಾಲಿ ಶ್ರೀನಿವಾಸಾಚಾರ್ಯ ( ಶ್ರೀ ರಘುದಾಂತ ಸ್ವಾಮಿನಃ ) 
ವಿರಚಿತಂ ಶ್ರೀ ಶೇಷದಾಸಾರ್ಯಾಷ್ಟಕಮ್ ಸಂಪೂರ್ಣಮ್ ।।

 ರಾಗ : ಸೌರಾಷ್ಟ್ರ ತಾಳ : ಆಟ 

ಪೋಷಿಸು ಎನ್ನಯ ।
ದೋಷಗಳೆಣಿಸದೆ ದಾಸರಾಯ ।
ಶೇಷ ನಾಮಕನೆ । ವಿ ।
ಶೇಷ ಜ್ಞಾನವನೇಯೋ ದಾಸರಾಯ ।। ಪಲ್ಲವಿ ।।

ಸಂತತ ಕರಪಿಡಿ ।
ಸಂತರೊಡೆಯ ಗುರು ದಾಸರಾಯ ।
ಸಂತೋಷ ತೀರ್ಥರ ।
ಅಂತಃಕರುಣ ಪಾತ್ರ ದಾಸರಾಯ ।।
ಚಿಂತಿಪ ಜನರಿಗೆ ।
ಚಿಂತಾಮಣಿಯು ನೀನೆ ದಾಸರಾಯ ।
ಚಿಂತ ರಹಿತ ವರ ।
ಚಿಂತರವೇಲಿ ವಾಸ ದಾಸರಾಯ ।। ಚರಣ ।।

ಕುಂಭಿಣಿದೇವಕ ।
ದಂಬ ಸಂಸೇವಿತ ದಾಸರಾಯ ।
ಬೆಂಬಿಡದತಿ ಮನದ ।
ಹಂಬಲ ಪೂರೈಸು ದಾಸರಾಯ ।।
ನಂಬಿದ ದ್ವಿಜರಿಗೆ ।
ಶಂಭುಗಿರಿಯಲ್ಲಿ ದಾಸರಾಯ ।
ಬಾಂಬೋಳೆ ತೋರಿಸಿ ।
ಸಂಭ್ರಮಗೊಳಿಸಿದ ದಾಸರಾಯ ।। ಚರಣ ।।

ಹರಿಕೇತು ಹರಿಸುತ ।
ಹರಿಣಾಂಕ ಕುಲ ಜಾತ ದಾಸರಾಯ ।
ಹರಿಕೇತು ಹರುಸುತಾ ।
ದ್ಯರನ ಸಂಹರಿಸಿದ ದಾಸರಾಯ ।।
ಹರಿದಾಡುತಿಹ ಮನ ।
ಹರಿಯಲ್ಲಿ ನಿಲಿಸಯ್ಯ ದಾಸರಾಯ ।
ಹರಿವೈರಿಮತಕರಿ ಹರಿ ।
ಪರಿಹರಿಸಘ ದಾಸರಾಯ ।। ಚರಣ ।।

ಅರ್ಥ ಜನರ । ಇ ।
ಷ್ಟಾರ್ಥವ ಜಗದೊಳು ದಾಸರಾಯ ।
ಪೂರ್ತಿಸುವ ನಿನ್ನ ।
ವಾರ್ತಿ ಕೇಳಿ ಬಂದೆ ದಾಸರಾಯ ।।
ಪಾರ್ಥಿವ ವರುಷದಿ ।
ಪಾರ್ಥಸಾರಥಿ ನಿನ್ನ ಭವ್ಯ ದಾಸರಾಯ ।
ಮೂರ್ತಿ ಸ್ಥಾಪಿಸಿ ।
ಕೀರ್ತಿಯ ಪಡೆದಿ ದಿವ್ಯ ದಾಸರಾಯ ।। ಚರಣ ।।

ನೇಮ ನಿಷ್ಠೆಯ ಬಿಟ್ಟು ।
ಪಾಮರನಾದೆನಗೆ ದಾಸರಾಯ ।
ಶ್ರೀಮಧ್ವ ನಿಗಮಾರ್ಥ ।
ಪ್ರೇಮದಿ ತಿಳಿಸಯ್ಯ ದಾಸರಾಯ ।।
ಕಾಮಾದಿಷಡ್ವೈರಿ ।
ಸ್ತೋಮಾದ್ರಿಕುಲಿಶನೆ ದಾಸರಾಯ ।
ಕಾಮಿತ ಫಲದಾತ ।
ಶ್ಯಾಮಸುಂದರರ ದೂತ ದಾಸರಾಯ ।। ಪಲ್ಲವಿ ।।

- ಇಭರಾಮಪುರಾಧೀಶ
************


ಅಂಕಿತ – ಗುರು ವಿಜಯವಿಠಲ
ಮೊದಲಕಲ್ಲು ಶೇಷದಾಸರು


ಉಗಾಭೋಗಗಳು :
ಒಂದು ಸ್ಮರಿಸುತಿರೆ ಆನಂದವಾಗುತಿದೆ ಮ-
ತ್ತೊಂದು ಸ್ಮರಿಸುತಿರೆ ಕ್ಲೇಶವಹದೋ |
ಕುಂದು ಲೇಸಗಳು ಕಾಲಭೇದದಿಂದ ಸಂ-
ಬಂಧ ಗೈಸಿದೆನಗೆ ಸಾರ್ವಭೌಮ |
ಇಂದಿರಾಪತಿ ನಿನ್ನ ಸತ್ಯ ಸಂಕಲ್ಪವ |
ಮಂದನಾದವ ನಾನು ದಾಟುವೆನೆ |
ಅಂದು ಮಾಡಿದ ಕರುಣ ಒಂದೊಂದು ಸ್ಮರಿಸುತಿರೆ |
ತಂದೆ ಎನ್ನಯ ಭಾಗ್ಯಕ್ಕೆಣೆಯಾವದೊ |
ಇಂದಿನ ದುರ್ಭಾಗ್ಯಕ್ಕೆ ಎಣಿಸಿ ಗುಣಿಸಿ ನೋಡೆ |
ಕುಂದಿಗೆ ಸಮ ಉಂಟೆ ವಸುಂಧರೆಲಿ |
ಮಂದರೋದ್ಧಾರ ಗುರು ವಿಜಯವಿಠಲ ನಿನ್ನ |
ಪೊಂದಿದವಗಿನಿತು ಫಲವೇನೋ ||
********

|| ಶ್ರೀಮನ್ಮೂಲರಾಮೋ ವಿಜಯತೇ ||
|| ಶ್ರೀ ಗುರುರಾಜೋ ವಿಜಯತೇ ||
|| ಶ್ರೀ ಶೇಷದಾಸಾರ್ಯ ಗುರುಭ್ಯೋ ನಮಃ ||

ವೈಶಾಖ ಶುದ್ಧ ಅಷ್ಟಮಿ : ಶೇಷದಾಸರ ಆರಾಧನೆ

ಶ್ರೀಶಾಂಘ್ರಿ ಸೇವಕಮ್ ನಿತ್ಯಂ
ಭೂಸುರಾಗ್ರ ಕುಲೋದ್ಭವಮ್ |
ವಾಸಮಾದಿ ಶಿಲಾಕ್ಷೇತ್ರಂ 
ಶೇಷದಾಸ ಗುರುಮ್ ಭಜೇ ||

ಗದ್ವಾಲ್ ಜಿಲ್ಲೆಯ ದರೂರ್ ಎಂಬ ಗ್ರಾಮದಲ್ಲಿ ಶ್ರೀ ಶೇಷದಾಸರು ಅವತಾರ ಮಾಡಿದರು. ಲೌಕಿಕದಲ್ಲಿ ಅವರು ಪೂರ್ವಿಕರಿಂದ ಬಂದ ಕುಲಕರ್ಣಿ ವೃತಿಯನ್ನು ನಡೆಸುತ್ತಿದ್ದರು.

ಗದ್ವಾಲ್  ರಾಜ್ಯಸಭೆಯಲ್ಲಿ ಶೇಷಾಪ್ಪರಿಗೆ (ಶೇಷಾದಾಸರು) ಅಲ್ಲಿಯ ರಾಜರು ಅವಮರ್ಯಾದೆ ಮಾಡಿದ ಕಾರಣ ಪ್ರಾಣತ್ಯಾಗ ಮಾಡಲು ಸಿದ್ದರಾಗುತ್ತಾರೆ. ಇನ್ನೇನು ತಾವು ಪ್ರಾಣತ್ಯಾಗ ಮಾಡಬೇಕು, ತಮಗೆ ಗೊತ್ತಿಲ್ಲದೆ ಪಕ್ಕಕೆ ಇರುವ ಹುತ್ತು ಕೈ ಹಾಕಿದರು ಅಲ್ಲಿಯ ಹುತ್ತಿನಲ್ಲಿ ಸುಂದರವಾದ ಮುಖ್ಯಪ್ರಾಣದೇವರು. ಈ ಪ್ರಾಣದೇವರನ್ನು ನೋಡಿ ತಮ್ಮನುತಾವೆ ಮರೆತುಬಿಟ್ಟರು. ಪ್ರಾಣತ್ಯಾಗ ಮಾಡಬೇಕೆಂಬ ನಿರ್ಣಯ ಬಿಟ್ಟು ನಂತರ ಅಲ್ಲಿಯೇ ಉಳಿದುಕೊಂಡು 41 ದಿವಸದ ಕಾಲ ಕಠಿಣವಾದ ತಪಸ್ಸು ಮಾಡಿದರು. ಮುಖ್ಯಪ್ರಾಣದೇವರು ಶೇಷಪ್ಪರಿಗೆ ಚಿಪ್ಪಗಿರಿಯಲ್ಲಿ ವಿಜಯರಾಯರ ಸೇವೆ ಮಾಡಲು ಸೂಚಿಸುತ್ತಾರೆ.

ಮುಖ್ಯಪ್ರಾಣ ದೇವರ ಆಜ್ಞೆಯಂತೆ ಚಿಪ್ಪಗಿರಿಯಲ್ಲಿ ನಿಷ್ಠೆಯಿಂದ ಸೇವೆಮಾಡಿದ ಶೇಷಪ್ಪರಿಗೆ ವಿಜಯರಾಯರು ಸ್ವಪ್ನದಲ್ಲಿ ಗುರುವಿಜಯವಿಠ್ಠಲರೆಂದು ಅಂಕಿತವನು ನೀಡಿ ಅನುಗ್ರಹಿಸಿದರು. ಅಂಕಿತ ಪ್ರದಾನ ನಂತರ ಶ್ರೀಶೇಷದಾಸರು ಪ್ರಥಮವಾಗಿ ನಂಬಿದೆ ನಿನ್ನ ಪಾದ ಶ್ರೀ ಮುಖ್ಯಪ್ರಾಣ ಎಂದು ಸ್ತೋತ್ರ ಮಾಡಿದ್ದಾರೆ. 

ದಾಸರು ಮರಳಿ ಮೊದಲ ಕಲ್ಲು ಗ್ರಾಮಕೇ ಹಿಂದುರಿಗಿ ಅಲ್ಲಿ ಬಂದ ಬಡವರು ಮತ್ತು ಭಕ್ತರಿಗೆ ಅನ್ನಛತ್ರವನು ನಡೆಸುತ್ತಾರೆ. ದಾಸರು ಹಲವಾರು ದೇವರ ನಾಮ, ಸುಳಾದಿಗಳು ಮತ್ತು ಉಗ ಭೋಗಗಳು ರಚಿಸಿ ದಾಸ ಸಾಹಿತ್ಯಕ್ಕೆ ವಿಶೇಷ ಕೊಡುಗೆ ನೀಡಿದಾರೆ.

ದಾಸರು ತಮ್ಮ ಶಿಷ್ಯರಾದ ಕಲ್ಲೂರು ಕೃಷ್ಣಪ್ಪಾವರಿಗೆ ತಾವು ರಚಿಸಿದ ಉಗ ಭೋಗಗಳಿಂದ ವ್ಯಾಧಿ ಪರಿಹಾರ ಮಾಡಿದಾರೆ. ಇಂದಿಗೂ ಭಗವತ್ ಭಕ್ತರು ತಮಗೆ ಬಂದ ಆಪತ್ತುನ್ನು ಈ ಸ್ತೋತ್ರದ ಮೂಲಕ ಪರಿಹರಿಸಿಕೊಳ್ಳುತ್ತಾರೆ.

ಆಪತ್ತು ಪರಿಹಾರ ಉಗಾಭೋಗ
ಭಕ್ತರ ಮನೋರಥ ಪೂರ್ಣಮಾಡುವಲ್ಲಿ | ಉಕ್ತವಾದ ಕಾಮಧೇನು ಎನಿಪೆ |
ಭಕ್ತರ ಅಪರಾಧ ಸಹನ ಮಾಡುವಲ್ಲಿ ಧಾ | ರಿತ್ರಿಗೆ ಸಮಾನನೆನಿಪ ಸಾರ್ವಭೌಮ | ಭಕ್ತರ ಮ್ಯಾಲೆ ಮಹಾಕರುಣ ಮಾಡುವಲ್ಲಿ | ಪಿತೃ ಮಾತೃ ಭಾತೃ ಗುರು ಸಮಾನನೆನಿಪೆ | ಭಕ್ತರ ಅಭಿಮಾನ ಸಹನ ಮಾಡುವಲ್ಲಿ | ಮಿತ್ರ ನೆನೆಸಿಕೊಂಬೆ ಅನಿಮಿತ್ತ ಬಂಧು | ಭಕ್ತರ ದುರಿತ ಕಳೆದು ಕಾವ ವಿಷಯದಲಿ | ಛತ್ರ ನೆನೆಪೆ ಸತತ ಸನ್ಮಾಂಗಳಾಂಗ |ಭಕ್ತರ ನಿಂದಕರ ನಿಗ್ರಹ ಮಾಡುವಲ್ಲಿ ಮೃತ್ಯು ಯಮಗೆಸದೃಶನೆನಿಪ ದೇವ | ಭೃತ್ಯವತ್ಸಲ ಗುರು- ವಿಜಯವಿಠಲರೇಯಾ |ಭಕ್ತರ ಪೊರೆವ ಬಿರಿದು ನಿನ್ನದಯ್ಯಾ ||

ಭಕ್ತವತ್ಸಲನೆಂಬ ಬಿರುದುಳ್ಳ ದೇವ, ನಿನ್ನ | ಭಕುತಿಯಿಂದಲಿ ನಮಿಸಿ ಬಿನೈಸುವೆ | ರಿಕತನ್ನ ಬಿನ್ನಪವ ಮನಕೆ ತಂದು ವೇಗ ಆ | ಸಕುತಿಯಿಂದಲಿ ಗ್ರಹಿಸಿ ಸಫಲ ಮಾಡು | ಭಕುತನಾದ ಇವಗೆ ಲೌಕಿಕದಿಂದ ಬಂದ |ವಿಕಟ ರೂಪವಾದ ದುರಿತದಿಂದ | ಮುಕುತನ್ನ ಮಾಡುವದು ಕರುಣದಿಂದಲಿ ವೇಗ | ಶಕಟ ಭಂಜನ ಕೃಷ್ಣ ಉತ್ಕೃಷ್ಟ‌ನು | ಮುಕುತಿದಾಯಕ ಗುರುವಿಜಯವಿಠಲ ಮಮದ್ಭಕ್ತನ ಪ್ರಾಣಪ್ರೀತಿಯೆಂಬುದು ಸತ್ಯ ಮಾಡು.

ಶತ್ರು ಮಿತ್ರಗಳಲ್ಲಿ ಸಮಸ್ಥಿತನಾಗಿ ನೀನೇ | ಪ್ರಕೃತಿಯು ಜೀವಕಾಲನುಸರಿಸೀ | ಕೃತ್ಯವ ಮಾಳ್ಪನಾಗಿ ಜೀವರ್ಗೆ ಸುಖದುಃಖ | ಮೊತ್ತಗಳುಣಿಸುವಿ ನಿಯಮದಂತೆ | ಕರ್ತೃನೆಂದು ನಿನ್ನ  ನೆರೆನಂಬಿ ಇಪ್ಪವರಿಗೆ | ಯಿದು | ಕೃತ್ಯಗಳಲ್ಲವೆಂದು ಶಾಸ್ರ್ತಸಿದ್ದ |ಚಿತ್ತಕ್ಕೆ ತಂದು ವೇಗ ಶತ್ರುಸಹಸವನ್ನು | ವ್ಯರ್ಥಮಾಡಿ ಭಕ್ತನಾದವನ ಹತ್ತಿರ ಕರೆದು ದಯದೃಷ್ಟಿಯಿಂದಲಿ ನೋಡಿ | ಉತ್ತಮವಾದ ಸುಖ ವೈದಿಪುದೊ | ಭಕ್ತವತ್ಸಲ ಗುರುವಿಜಯವಿಠಲರೇಯ ಎತ್ತಲಿದ್ದರು ನಿನ್ನ ಪೊಂದಿದವನು |




ಶ್ರೀದಾಸರು ಪಾರ್ಥಿವ ನಾಮ ಸಂವತ್ಸರ 1885 ವೈಶಾಖ ಶುದ್ಧ ಅಷ್ಟಮಿ ಹರಿಪಾದವನ್ನು ಹೊಂದಿದರು.

ಶ್ರೀ ಇಭರಾಮಪುರಾಧೀಶ

ವಿಷ್ಣು ತೀರ್ಥಾಚಾರ್ ಇಭರಾಮಪುರ
**************


ಶ್ರೀಶಾಂಘ್ರಿಸೇವಕಂನಿತ್ಯಂ| ಭೂಸುರಾಗ್ರಕುಲೋಧ್ಭವಂ| ವಾಸಮಾದಿಶಿಲಾಕ್ಷೇತ್ರಂ ಶೇಷದಾಸಗುರುಂಭಜೇ|

|ಇಂದು  ಶ್ರೀಮೊದಲು ಕಲ್ಲು ಶೇಷದಾಸರ ಆರಾಧನ ಪ್ರಯುಕ್ತ ಅವರ ಮಹಿಮೆ ತಿಳಿಯುವ ಪ್ರಯತ್ನ.
✍ರಾಯಚೂರು ಹತ್ತಿರ ಬರುವ ಕಲ್ಲೂರು ಗ್ರಾಮ.ಇಲ್ಲಿ ಶ್ರೀಲಕ್ಚ್ಮಿದೇವಿಯು ತನ್ನ ಪತಿಯಾದ ಶ್ರೀನಿವಾಸನ ಜೊತೆ ಇರುವ ಒಂದು ಪುಣ್ಯ ಕ್ಷೇತ್ರ.
ಇಲ್ಲಿ ಸಾಣೆ ಕಲ್ಲಿನಲ್ಲಿ  ಲಕ್ಷ್ಮೀದೇವಿಯು ತಾನೇ ಒಡಮೂಡಿದ್ದಾಳೆ ಎನ್ನುವದು ಹಿರಿಯರ ವಚನ.
ಇಂತಹ ಕಲ್ಲೂರು ಗ್ರಾಮಕ್ಕೆ ಸೇರಿದ ಕುಲಕರ್ಣಿಯವರಾದ ಕೃಷ್ಣಪ್ಪ ಅನ್ನುವವರಿಗೆ ಒಮ್ಮೆ ಅವರ ಮೇಲೆ ಒಂದು ಅಪವಾದ ಬರುತ್ತದೆ. ಅದರ ಸತ್ಯಾ ಅಸತ್ಯತೆ ತಿಳಿಯದೇ ಹೈದ್ರಾಬಾದ್ ನವಾಬ ಅವರಿಗೆ ಮರಣದಂಡನೆಯನ್ನು ವಿಧಿಸುತ್ತಾನೆ.
ತಕ್ಷಣ ಆ ಕಲ್ಲೂರು ಕೃಷ್ಣಪ್ಪ ಮೊದಲುಕಲ್ಲು ಶೇಷದಾಸರಲ್ಲಿ ಶರಣುಹೋಗಿ ತನಗೆ ಬಂದ ಆಪತ್ತನ್ನು ಕಳೆಯಬೇಕು ಅಂತ ಕೇಳಿಕೊಳ್ಳುವನು.
ಕರುಣಾಸಮುದ್ರರಾದ ದಾಸರು ಅವನಿಗೆ ಬಂದ ಆಪತ್ತನ್ನು ನೋಡಿ, ತಮ್ಮ ಉಪಾಸ್ಯ ಮೂರುತಿಯಾದ ಗುರುವಿಜಯವಿಠ್ಠಲನಲ್ಲಿ ಪ್ರಾರ್ಥಿಸಿ ಅವನ ಕಷ್ಟ ಕಳೆಯಲು  ೩ ಉಗಾಭೋಗ ರಚನೆ ಮಾಡಿ ಕೊಡುತ್ತಾರೆ.
ಅದು ಹೀಗಿದೆ.
"ಭಕ್ತವತ್ಸಲನೆಂಬ ಬಿರಿದುಳ್ಳದೇವ"
ಅದನ್ನು  ನಿತ್ಯಪಾರಾಯಣ ಮಾಡಲು ಹೇಳಿ ಮಂತ್ರಾಕ್ಷತೆ ಕೊಟ್ಟು ನಿನ್ನ ಹತ್ತಿರ ಇರಲಿ ಎಂದು ಹೇಳುತ್ತಾರೆ.
ಆ ಕುಲಕರ್ಣಿ ಅದನ್ನೇ ಭಕ್ತಿಯಿಂದ ಪಾರಾಯಣ ಮಾಡುತ್ತಾ ಇರುತ್ತಾನೆ.
ನವಾಬ ಹೇಳಿದ ದಿನ ಬರುತ್ತದೆ. ಆ ದಿನ ಅವನ ಕಡೆಯ ಸೈನಿಕರು ಬಂದು ಇವರನ್ನು ಹೈದ್ರಾಬಾದ್ಗೆ ಕರೆದುಕೊಂಡು ಹೋಗುತ್ತಾರೆ.
ಅಲ್ಲಿ ಇವರನ್ನು ನಿಲ್ಲಿಸಿ ಬಂದೂಕಿನಿಂದ, ಗುಂಡು ಹಾರಿಸಿ ಕೊಲ್ಲುವಂತೆ ಆಜ್ಞೆ ಆಗುತ್ತದೆ.
ಇವರಿಗೆ ಗುಂಡು ಹಾರಿಸುವ ಸಮಯದಲ್ಲಿ ಸಹ ಅವರು ಉಗಾಭೋಗ ಪಠಣೆ ಮಾಡುವದು ಬಿಡಲಿಲ್ಲ.. 
ಮತ್ತು 
ಆ ದಿನ ಅವರು ದಾಸರು ಕೊಟ್ಟ ಮಂತ್ರಾಕ್ಷತೆ ಯನ್ನು ತಮ್ಮ ತಲೆಯಲ್ಲಿ ಧರಿಸಿಕೊಂಡು ಹೋಗಿದ್ದರು...
ಆದರೆ ಏನಾಶ್ಚರ್ಯ!!??
ಬಂದೂಕಿನಿಂದ ಗುಂಡುಗಳು ಹಾರುವದಿಲ್ಲ.ಸ್ವತಃ ನವಾಬನು ಪರೀಕ್ಷೆ ಮಾಡಿದರು ಅದರಿಂದ ಗುಂಡು ಬರುವದಿಲ್ಲ..
ತಕ್ಷಣ ತನ್ನ ಕಡೆಯವರಿಗೆ ಹೇಳುತ್ತಾನೆ.
ಛೋಡ್ ದೋ ಉನ್ಕೋ ..ವೋ ಖುದಾ ಕಿ ಆದ್ಮಿ ಹೈ..(
ಅವನನ್ನು ಬಿಟ್ಟು ಬಿಡಿ.ಅವನು ದೇವರ ಭಕ್ತನಿದ್ದಾನೆ..
 ಬಂದಂತಹ ಆಪತ್ತು ಕಳೆದುಕೊಂಡ ಮೇಲೆ ದಾಸರ ದರುಶನ ಮಾಡಲು ಕೃಷ್ಣಪ್ಪ ಮೊದಲಕಲ್ಲು ಗೆ ಬರುತ್ತಾನೆ.

ಹೀಗೆ ಶ್ರೀ  ಮೊದಲಕಲ್ಲು ಶೇಷದಾಸರು ರಚಿಸಿದ ಆ ಉಗಾಭೋಗ ಪಾರಾಯಣ ಮಾಡಿ ಬಂದಂತಹ ಆಪತ್ತಿನಿಂದ ಪಾರಾದವರು ಆ ಕುಲಕರ್ಣಿ ಕೃಷ್ಣಪ್ಪ..

ಪ್ರತಿಯೊಬ್ಬ ಹರಿದಾಸರ ಸುಳಾದಿ, ಉಗಾಭೋಗ,ಪದಗಳಲ್ಲಿ  ನಾವು ಎಷ್ಟು ವಿಶ್ವಾಸ ಇಟ್ಟು ಪಾರಾಯಣ ಮಾಡುತ್ತೇವೆ ಅಷ್ಟೇ ಫಲ ದೊರಕುವದು.
ಶ್ರೀ ಶೇಷದಾಸರು ಮತ್ತು ಅವರ ಅಂತರ್ಯಾಮಿಯಾದ ಶ್ರೀ ಗುರು ವಿಜಯವಿಠ್ಠಲ ನಿಗೆ ಈ ಲೇಖನ ಸಮರ್ಪಣೆ ಮಾಡುತ್ತಾ
🙏ಶ್ರೀ ಕೃಷ್ಣಾರ್ಪಣಮಸ್ತು🙏

ಕೆಳಗೆ ೩ಉಗಾಭೋಗಗಳನ್ನು ಹಾಕಲಾಗಿದೆ.
ಆಸಕ್ತರು ಪಾರಾಯಣ ಮಾಡಬಹುದು.
🙏ಪೋಷಿಸು ಎನ್ನಯ ದೋಷಗಳೆಣಿಸದೇ
ದಾಸ ರಾಯ🙏

🙏ಶ್ರೀ ಮೊದಲಕಲ್ಲು ಶೇಷದಾಸ ಗುರುಭ್ಯೋ ನಮಃ🙏
***********

ಶ್ರೀ ಶೇಷದಾಸರ ಆರಾಧನೆಯ ಪವಿತ್ರ ಸಮಯದಲಿ ಒಂದು ಪುಟ್ಟ ಸೇವೆ

ಉಗಾಭೋಗದ ಚಿಂತನೆ

ಇನ್ನೆಷ್ಟು ಕಾಲಕ್ಕು  ಮರಿಯಾದಂತೆ ಮಾಡಿಸಿದಿ
ಉನ್ನತಮಹಿಮ ನಿನ್ನ ಇಚ್ಛಕ್ಕೆ ಇದಿರಾರೊ 
ಇನ್ನಾದರೂ ಕೃಪೆಯಿಂದ ನೋಡದಿರೇ
ಘನ್ನವಾದ ದುಃಖದಿಂದ ಕಡಿಗೆ ಐದುವೆನೆಂತೊ
ಚಿನ್ಮಯಮೂರುತಿ ಗುರುವಿಜಯವಿಠಲರೇಯ
ಎನ್ನ ಅಪರಾಧವು ನಿನಗರ್ಪಿತವು...

ಎನ್ನುವ ಶ್ರೀ ದಾಸಾರ್ಯರ ಉಗಾಭೋಗ ಸಣ್ಣದೇ ಆದರೂ ಅದರ ಅರ್ಥ ಅದೆಷ್ಟು ಆಳವಾಗಿದೆ ನೋಡೋಣ..

ಕೃಶಂ ಕೃತಘ್ನಂ ದುಷ್ಕರ್ಮಕಾರಿಣಂ ಪಾಪಭಾಜನಮ್ /
ಅಪರಾಧಸಹಸ್ರಾಣಾಮಾಕರಂ ಕರುಣಾಕರ/
ಕೃಪಯಾ ಮಾಂ ಕೇವಲಯಾ ಗೃಹಾಣ ಮಧುರಾಧಿಪ//
      ಎಂದು ಶ್ರೀಚತುರ್ಮುಖಬ್ರಹ್ಮದೇವರು ಜಿತಂತೇ ಸ್ತೋತ್ರದ ಮುಖಾಂತರ ಪರಮಾತ್ಮನನ್ನು ಸ್ತೋತ್ರ ಮಾಡಿದ್ದನ್ನೇ ಶ್ರೀ ದಾಸಾರ್ಯರು ಇಲ್ಲಿ ಪ್ರಸ್ತುತಪಡಿಸುತ್ತಿದ್ದಾರೆ..

   ಕೃಶಂ ಕೃತಘ್ನಂ ಎಂಬುದರ ವಿವರಣೆಯನ್ನು ಇನ್ನೆಷ್ಟು ಕಾಲಕ್ಕೂ ಮರಿಯದಂತೆ ಮಾಡಿಸಿದಿ ಎಂಬ ಸಾಲಿನಲ್ಲಿ ಪ್ರಸ್ತುತ ಪಡಿಸುತ್ತಿದ್ದಾರೆ. ಹೇ ಪರಮಾತ್ಮನೇ ನಾನು ಸಾಧನೆ ಮಾಡಲಿ ಎನ್ನುವ ಉದ್ದೇಶದಿಂದ ನನಗೆ ಈ ನಿನ್ನ ಕಾರುಣ್ಯಾತಿಶಯದಿಂದ ಈ ಜನ್ಮವನ್ನು ನೀನು ಕರುಣಿಸಿದರೂ ಸಹಾ, ನಿನ್ನ ಸ್ಮರಣೆಯಲ್ಲಿ ನಾನು ದುರ್ಬಲನಾಗಿ ನೀನು ಮಾಡಿದ ಈ ಉಪಕಾರವನ್ನು ಸ್ಮರಿಸಲಾರದೇ, ಮರೆತು ಕೃತಘ್ನನಾಗಿಬಿಟ್ಟಿದ್ದೆ ಆದರೇ ನನಗೆ ಈಗ ಸೂಕ್ತ ಗುರುಗಳನ್ನು ದೊರಕಿಸಿಕೊಟ್ಟು ನಿನ್ನ ನಾಮಸ್ಮರಣೆಯ ಭಾಗ್ಯವನ್ನು ಕರುಣಿಸಿದ್ದೀಯಾ. ಇಂತಹಾ ಈ ನಿನ್ನ  ಮಹದುಪಕಾರವನ್ನು ನಾನು ಎಷ್ಟೆಷ್ಟು ಜನ್ಮಗಳನ್ನು ಎತ್ತಿ ಬಂದರೂ ಸಹ  ಮರೆಯದಂತೆ ಅನುಗ್ರಹಿಸು ತಂದೇ.. ಅಂತಾರೆ ದಾಸಾರ್ಯರು.... 

ಕರುಣಾಸಾಗರನಾದ ಅತ್ಯುನ್ನತ ಮಹಿಮೆಯುಳ್ಳ ನಿನ್ನ ಇಚ್ಛೆಗೆ ಯಾರೂ ಎದುರಾಗಲು, ಅರ್ಥಾತ್ ಎದುರಿಸಿ ನಿಲ್ಲಲು ಸಾಧ್ಯವೇ ಇಲ್ಲ. ಈಗ ಎಷ್ಟ ಜನ್ಮಗಳು ಹೋಗಿವೆಯೋ ಬಲ್ಲವರ್ಯಾರು? ಇನ್ನು ಮೇಲಾದರೂ ಕೃಪಯಾ ಮಾಮ ಕೇವಲಯಾ ಗೃಹಾಣ ಮಧುರಾಧಿಪ ನನ್ನಂತಹಾ ಅಲ್ಪ ಜೀವಿಯ ಮೇಲೆ ನೀನು ಕರುಣಾಭರಿತ ದೃಷ್ಟಿ ಚೂರಾದರೂ ಸೋಕಿದರೆ ಸಾಕು, ಘನ್ನವಾದ ಅಂದರೇ ಆಧ್ಯಾತ್ಮಿಕ, ಆಧಿದೈವಿಕ ಹಾಗೂ ಆಧಿಭೌತಿಕ ದುಃಖಗಳನ್ನು ನಾನು ಹೊಂದಲು ಸಾಧ್ಯವೇ ಇಲ್ಲ, ಹೀಗಾಗಿ ನನ್ನ ಮೇಲೆ ನಿನ್ನ ಕರುಣಾಭರಿತ ದೃಷ್ಟಿಯನ್ನು ಪಸರಿಸು...... ಅಂತಾರೆ....

    ಹೇ ಪರಮಾತ್ಮನೇ ನಾನು ಕಾಯಾ - ವಾಚಾ - ಮನಸಾ ಅನಂತ ಅಪರಾಧಗಳನ್ನು ಮಾಡಿದ್ದೇನೆ, ಹಾಗೂ ಮಾಡುತ್ತಿದ್ದೇನೆ ಮುಂದೆಯೂ ಮಾಡುವೆ, ಆದರೇ ನೀನು ಸತ್+ಚಿತ್+ಆನಂದ --ಸಚ್ಚಿದಾನಂದ ಸ್ವರೂಪನು, ಚಿನ್ಮಯ ಮೂರುತಿಯಾದ ಗುರುವಿಜಯವಿಠ್ಠಲಾ ನಿನ್ನ ಪಾದಾರವಿಂದಗಳಲ್ಲಿ ನನ್ನ ಈ ಎಲ್ಲಾ ಅನಂತ ಅಪರಾಧಗಳೂ ಸಮರ್ಪಿತವು ಸ್ವಾಮೀ. ನನ್ನ ಅನಂತ ಅಪರಾಧಗಳನ್ನು ಮನ್ನಿಸಿ ನಿನ್ನ ಕರುಣಾದೃಷ್ಟಿಯನ್ನು ನನ್ನ ಮೇಲೆ ಬೀರು ಹಾಗೇ ಮುಂದೆ ಅಪರಾಧಗಳನ್ನು ಮಾಡದೇ ನನ್ನನ್ನು ಸಾಧನಾ ಮಾರ್ಗದಲ್ಲಿ ಪೂರ್ತಿಯಾಗಿ ತೊಡಗಿಸು ಅಂತ ಇಲ್ಲಿ ಪ್ರಾರ್ಥಿಸಿಕೊಂಡಿದ್ದಾರೆ..... 

ಉಗಾಭೋಗ ಸಣ್ಣದೇ ಆದರೂ ಅರ್ಥಭಾವವನ್ನು ನಾವು ಅನುಸಂಧಾನಮಾಡಿಕೊಂಡಿದ್ದಲ್ಲಿ ಅದರ ಆನಂದವೇ ಬೇರೇ.. ಶ್ರೀ ಸುಳಾದಿ ಕುಪ್ಪೇರಾಯರ ವಾಕ್ಯದಂತೆ
100 ಕೀರ್ತನೆ = ಒಂದು ಸುಳಾದಿ
100 ಸುಳಾದಿ  = ಒಂದು ಉಗಾಭೋಗ.... ಹೀಗಾಗಿ ಸಮಯವಿದ್ದಲ್ಲಿ ಉಗಾಭೋಗಗಳ ಅರ್ಥಾನುಸಂಧಾನವೂ ಪರಮಾತ್ಮನ ದಯೆಯಿಂದ ಆಗುವಂತಾಗಲೀ ಎಂದು ಬೇಡಿಕೊಳ್ಳುತ್ತಾ 

ಶ್ರೀ ಶೇಷದಾಸಾರ್ಯರ ಅನುಗ್ರಹ ನಮ್ಮ ಎಲ್ಲರಮೇಲೆ ಸದಾ ಇರಲಿ ಎಂದು ಪ್ರಾರ್ಥನೆ ಮಾಡುತ್ತಾ... ಸ್ತೋತ್ರವನ್ನು ನೀಡಿದ ಶ್ರೀ ಹಂಪಿಹೊಳಿ ಆಚಾರ್ಯರಿಗೆ ಕೃತಜ್ಞತೆ ತಿಳಿಸುತ್ತಾ. ಈ ಸೇವಾ ಪದ್ಮವನ್ನು ಅಸ್ಮದ್ ಪತ್ಯಂತರ್ಗತ,  ಶ್ರೀ ಶೇಷದಾಸಾರ್ಯರ, ಅವರ ಅಂತರ್ಗತ ಹರಿವಾಯುಗುರುಗಳ ಪದಪದ್ಮಗಳಲ್ಲಿ ಸಮರ್ಪಣೆ ಮಾಡುತ್ತಾ.... 

-Smt. Padma Sirish

ನಾದನೀರಾಜನದಿಂ ದಾಸಸುರಭಿ 🙏🏽

***********


ಶ್ರೀಂ ಶ್ರೀ ಕಂ ಕಪಿಲಾಯ ನಮಃ

 ಶ್ರೀಶಾಂಘ್ರಿ ಸೇವಕಮ್ ನಿತ್ಯಂ
ಭೂಸುರಾಗ್ರ ಕುಲೋದ್ಭವಮ್ /
ವಾಸಮಾದಿ ಶಿಲಾಕ್ಷೇತ್ರಂ ಶೇಷದಾಸ ಗುರುಮ್ ಭಜೇ//

ಹರಿ ದಾಸ ಸಾಹಿತ್ಯದ ಎರಡನೇ ಘಟ್ಟದ ನೇತಾರರಾದ ಶ್ರೀ ವಿಜಯದಾಸಾರ್ಯರ ಪರಮ ಕೃಪಾ ಪಾತ್ರರಾದ, ಅವರಿಂದಲೆ ಗುರುವಿಜಯವಿಠಲ ಎನ್ನುವ  ಸ್ವಪ್ನಾಂಕಿತವನ್ನು ಪಡೆದು ಅನೇಕ ಪದ ಪದ್ಯ ಸುಳಾದಿಗಳನ್ನು ರಚಿಸಿ ಸಜ್ಜನರ ಸಾಧನೆಗಾಗಿ ನೀಡಿದ, ರುದ್ರದೇವರ,  ಮುಖ್ಯಪ್ರಾಣದೇವರನ್ನು ಜೀವದ ಭಕ್ತಿಯಿಂದ ಆರಾಧಿಸಿದಂತಹಾ, ತಮ್ಮ ಸ್ವರೂಪೋದ್ಧಾರಕರಾದ ಶ್ರೀ ವಿಜಯದಾಸಾರ್ಯರನ್ನೇ ಮತ್ತೆ ತಮ್ಮ ಮೊಮ್ಮಕ್ಕಳನ್ನಾಗಿ ಪಡೆದಂತಹಾ ಗುರುಭಕ್ತಿ ಪರಾಯಣರಾದ ಶ್ರೀ ಮೊದಲಕಲ್ಲು ಶೇಷದಾಸಾರ್ಯರ ಮಧ್ಯಾರಾಧನೆಯ ಶುಭವಂದನೆಗಳು..

ಕುಷ್ಟುರೋಗ ವ್ಯಾಧಿಜ್ವರ ಚತುರ್ಥಿ ಭಯಭೀತಿಗಳನೆಲ್ಲ
ಬಿಟ್ಟೋಡಿಸಿ ತೀರ್ಥ ಅಂಗಾರದಲ್ಲಿ ಸಮಸ್ತರ ಮಹಿಮೆ ನೋಡಿ 
ಸ್ಮರಿಸಿ ಬದುಕಿರೊ ಸರ್ವಾನಂದ ಗುರುಗಳ

ಅಂತ ಹರಿದಾಸಿ ಹರಪನಹಳ್ಳಿ ಭೀಮವ್ವನವರು ಶ್ರೀ  ಶೇಷದಾಸಾರ್ಯರು ಜನರ ವ್ಯಾಧಿ,ರೋಗಗಳನ್ನು ದೂರ ಮಾಡಿದಂತಹಾ ಮಹಿಮೆಗಳನ್ನು ಭಕ್ತಿಯಿಂದ ಸ್ಮರಣೆ ಮಾಡಿದ್ದಾರೆ.. 

ಹರಿಕೇತು ಹರಿಸುತ ಹರಿಣಾಂಕಕುಲಜಾತ ಎಂದು
ಶ್ರಿ  ಶೇಷದಾಸಾರ್ಯರು ಇಂದ್ರಾಂಶಜರೆಂದು ಶ್ರೀ ಶ್ಯಾಮಸುಂದರದಾಸರು ತಮ್ಮ ಕೃತಿಯಲ್ಲಿ ದಾಖಲಿಸಿದ್ದಾರೆ..

ಸಟಿಯನಾಡುವನಲ್ಲ ಧಿಟ ಪಾರ್ಥಸಾರಥಿ-
-ವಿಠಲನೇ ಇವರಲ್ಲಿ ಸ್ಪುಟವಾಗಿ ಇರುವ
ಕುಟಿಲ ಮನುಜರಿವರ ನಟನೇನು ಬಲ್ಲರು
ತೃಟಿಯೊಳು ಜನರ ಮಹತು ಪಟಲ ಬಿಡಿಸುವರೆಂದು

ಎಂದು ಶ್ರೀ ದಾಸಾರ್ಯರ ಶಿಷ್ಯರಾದ ಪಾರ್ಥಸಾರಥಿವಿಠಲರು ತಮ್ಮ ಗುರುಗಳ ಸ್ತುತಿಯಲ್ಲಿ ತಿಳಿಸಿ ಹೇಳಿದ್ದಾರೆ..

ಹಾಗೆಯೆ ಶ್ರೀ ರಘುಧಾಂತತೀರ್ಥರಿಂದ ರಚಿತವಾದಂತಹಾ ಶೇಷದಾಸರ ಅಷ್ಟಕ ನಮ್ಮ ದಿನನಿತ್ಯದ ಪಾರಾಯಣದ ಅವಿಭಾಜ್ಯ ಅಂಗವಾಗಬೇಕೂ ಸರಿ.. 

ಹೀಗೆ ಎಲ್ಲ ಶಿಷ್ಯರ, ಹರಿದಾಸರ, ಜನರ ಆರಾಧ್ಯ ದಾಸಾರ್ಯರಾದ ಶ್ರೀ ಮೊದಲಕಲ್ಲು ಶೇಷದಾಸಾರ್ಯರ ಆರಾಧನೆಯನ್ನು ನಾವೂ ಸಹ ಪರಮಭಕ್ತಿಯಿಂದ ಆಚರಣೆ ಮಾಡಿ ದಾಸಾರ್ಯರ ಕೃಪೆಗೆ ಪಾತ್ರರಾಗೋಣ.. 

ಹಾಗೆಯೇ ಆಸುಕವಿಗಳು, ಶ್ರೀ ಗುರುಜಗನ್ನಾಥವಿಠಲರ ಅನುಗ್ರಹ ಪಾತ್ರರು, ಶ್ರೀ ಅಸ್ಕಿಹಾಳ ಗೋವಿಂದದಾಸಾರ್ಯರ ಪ್ರೀತಿಪಾತ್ರರೂ, ಮಾನವಿ ಪ್ರಭುಗಳ ಪರಮಭಕ್ತರು, ರಾಯರನ್ನು ಜೀವದ ಭಕ್ತಿಯಿಂದ ಸೇವಿಸಿದಂತಹಾ, ತಮ್ಮ ಜೀವನವನ್ನು ಹರಿದಾಸ ಸಾಹಿತ್ಯಕ್ಕೆ ಅಂಕಿತವನ್ನಾಗಿ ಮಾಡಿದ, ಅನೇಕ ಜನ ಶಿಷ್ಯರಿಗೆ ಸಾಧನೆಯ ಮಾರ್ಗವನ್ನು ಕರುಣಿಸಿದ ಶ್ರೀ ಮಾನವಿ ಗುಂಡಾಚಾರ್ಯರ (ಶ್ರೀ ಶ್ಯಾಮಸುಂದರದಾಸರ) ಆರಾಧನೆಯೂ ಇಂದಿನಿಂದ ಮೂರು ದಿನ... 

ಶ್ರೀ ಶೇಷದಾಸಾರ್ಯರ,  ಶ್ರೀ ಶ್ಯಾಮಸುಂದರದಾಸಾರ್ಯರ ಪರಮಾನುಗ್ರಹ ನಮ್ಮ ಎಲ್ಲರಮೇಲೆ ಸದಾ ಸದಾ ಇರಲಿ ಎಂದು ಅವರಲ್ಲಿ ಭಕ್ತಿಯಿಂದ ಪ್ರಾರ್ಥನೆ ಮಾಡುತ್ತಾ..

-Smt. Padma Sirish

ನಾದನೀರಾಜನದಿಂ ದಾಸಸುರಭಿ 🙏🏽

***********


year 2021
" ದಿನಾಂಕ : 20.05.21 ಗುರುವಾರ - ಶ್ರೀ ಪ್ಲವ ನಾಮ ಸಂವತ್ಸರ ಉತ್ತರಾಯಣ ವಸಂತ ಋತು ವೈಶಾಖ ಶುದ್ಧ ಅಷ್ಟಮೀ - ಶ್ರೀ ರಾಯರ - ಶ್ರೀ ಮುಖ್ಯಪ್ರಾಣದೇವರ - ಶ್ರೀ ಶ್ರೀನಿವಾಸನ ಅಂತರಂಗ ಭಕ್ತರಾದ - ಶ್ರೀ ಶೇಷದಾಸರ ಆರಾಧನಾ ಮಹೋತ್ಸವ., ಮೊದಲಕಲ್ಲು "
" ಶ್ರೀ ಇಂದ್ರದೇವರ ಅಂಶ ಸಂಭೂತರು ಶ್ರೀ ಮೊದಲಕಲ್ ಶೇಷದಾಸರು "
ಶ್ರೀ ಶೇಷದಾಸರೇ ತಮ್ಮ ಸ್ವರೂಪವನ್ನು ಈ ಕೆಳಗಿನ ಉಗಾಭೋಗದಲ್ಲಿ ಸ್ಪಷ್ಟ ಪಡಿಸಿದ್ದಾರೆ. 
ವಿಜಯನಾಮವು ಎನಗೆ ಸಾರ್ಥಕ ಮಾಳ್ಪನೆಂದು । ಕುಜನ ಮರ್ದನ ನೀನಂಗೆ ನೀನೆ ಒಲಿದು । ವಿಜಯಸಾರಥಿ ಎನಿಸಿ ಎನ್ನಲ್ಲಿ ನಿಲ್ಲದಿರೆ । ವಿಜಯ ನಾಮವು ಸಫಲವಾಗುವುದೇ । ಭುಜಗ ತಲ್ಪನೆ ಈ ಸೊಬಗು ದೃಢವಾಗದಲೆ । ಕುಜನ ಮಣಿಯಾದ ಕಲಿ ಕೃತ ಕಲ್ಮಷದಿ । ರಾಜ ತಮೋ ಗುಣದಿಂದ ಬದ್ಧನಾಗಿ । ಅಜಯವುಳ್ಳವನಾದೆ ಬಲು ವತ್ಸರವು ನೋಡು । ವಿಜಯ ಸಖನೆಂಬ ಕಾರಣವಿತ್ತೆ । ಸುಜನಾ ಪೋಷಕನೇ ಕೇಳೆಂದು ಸ್ವಪ್ನದಲಿ । ನಿಜವಾಗಿ ದಶ ನಾಮ ಸಫಲ ಮಾಳ್ಪೆನೆಂದು । ನಿಜ ಮುಖದಿಂದ ಪೇಳಿದದನು ವೇಗ । ತ್ಯಜನೆ ಮಾಡದೆ ವಾಕ್ಯ ತಂದುಕೊ ಮನನಕ್ಕೆ । ಸುಜನಾ ಕುಲಾಬ್ಧಿ ಚಂದ್ರ ಸುಗುಣ ಸಾಂದ್ರ । ವೃಜನಗಳೆಣಿಸದೇ ತ್ವರಿತದಿಂದಲಿ ಎನಗೆ । ವಿಜಯ ನಾಮವು ಸಫಲ ಮಾಡುವದು । ಭುಜಗ ಭೂಷಣ ವಂದ್ಯ ಗುರು ವಿಜಯ ವಿಠ್ಠಲರೇಯ । ಋಜು ಮಾರ್ಗವನೇ ಇತ್ತು ಪಾಲಿಪುವುದು ।।
" ಶ್ರೀ ಶೇಷದಾಸರ ಸಂಕ್ಷಿಪ್ತ ಮಾಹಿತಿ "
ಹೆಸರು : ಶ್ರೀ ಶೇಷಪ್ಪ 
ಜನ್ಮ ಸ್ಥಳ : ಧರೂರು ಗ್ರಾಮ 
ಕಾಲ : ಕ್ರಿ ಶ 1801 - 1885
" ಆದಿಶಿಲಾ ಕ್ಷೇತ್ರ - ಮೊದಲಕಲ್ಲು "
ಆಗಿನ ಕಾಲದಲ್ಲಿ  ಪ್ರಾಂತ್ಯದಲ್ಲಿ " ಆದಿಶಿಲಾ " ಯೆಂಬ ಕ್ಷೇತ್ರ ಹೆಸರಾಗಿತ್ತು. 
ಈ ಕ್ಷೇತ್ರದ ಮಹಿಮೆ ಬಗ್ಗೆ ಸ್ಥಳ ಪುರಾಣವೇ ರಚನೆಗೊಂಡಿದೆ. 
ತುಂಗಭದ್ರೆ - ಕೃಷ್ಣಾ ನದಿಗಳ ಮಧ್ಯೆ ನೆಲೆಸಿದ ಈ ಪುಣ್ಯ ಕ್ಷೇತ್ರವೇ ಆದಿಶಿಲಾಂಕಿತ ಮೊದಲಕಲ್ಲುಗೆ 01 ಮೈಲು ದೂರದಲ್ಲಿರುವ ಗುಡ್ಡ " ಶ್ರೀ ಸ್ವಯಂವ್ಯಕ್ತ ಶ್ರೀ ಶ್ರೀನಿವಾಸನ ಪರಮ ಪವಿತ್ರವಾದ ಕ್ಷೇತ್ರವೆನಿಸಿದೆ. 
ಊರಿನ ಪಕ್ಕದಲ್ಲಿಯೇ ಇರುವ ಶ್ರೀ ಶ್ರೀನಿವಾಸದೇವರ ಗುಡಿ ಕೂಡಾ ಅದೇ ರೀತಿ ಪ್ರಖ್ಯಾತವಾಗಿದೆ. 
ಇಂಥಾ ಸ್ಥಳದಲ್ಲಿ ತಪಸ್ಸು ಮಾಡಿ ಅಪರೋಕ್ಷ ಜ್ಞಾನ ಪಡೆದ ಮಹಾತ್ಮರು ಶ್ರೀ ಮೊದಲಕಲ್ಲು ಶೇಷದಾಸರು. 
ಶ್ರೀ ಶೇಷದಾಸರು ಅಪರೋಕ್ಷ ಜ್ಞಾನಿಗಳೆಂದು ಆರಾಧಿಸಲ್ಪಡುವ ಶ್ರೀ ವಿಜಯರಾಯರು - ಶ್ರೀ ಗೋಪಾಲದಾಸರು - ಶ್ರೀ ಜಗನ್ನಾಥದಾಸರ ಶ್ರೇಣಿಯಲ್ಲಿ ಒಬ್ಬರು. 
ಇಂದು ಗದ್ವಾಲ ಸಂಸ್ಥಾನಕ್ಕೆ ಸೇರಿದ " ಧರೂರು " ಗ್ರಾಮದವರು. 
" ಲೌಕಿಕದಿಂದ ಆಧ್ಯಾತ್ಮದೆಡೆಗೆ "
ಶ್ರೀ ಶೇಷಪ್ಪನವರು ಶ್ಯಾನುಭೋಗ ವೃತ್ತಿಯಲ್ಲಿದ್ದಾಗ ನಡೆದ ಒಂದು ಘಟನೆ ಅವರನ್ನು ಆಧ್ಯಾತ್ಮದೆಡೆಗೆ ತಿರುಗುವಂತೆ ಮಾಡಿತು. 
ಒಮ್ಮೆ ಗದ್ವಾಲ ಸಂಸ್ಥಾನಾಧಿಪತಿಯಾದ ರಾಜಾ ಸೀತಾರಾಮಭೂಪಾಲ ಮತ್ತು ಅವರ ಧರ್ಮಪತ್ನಿಯಾದ ರಾಣಿ ವೆಂಕಟ ಲಕ್ಷ್ಮಮ್ಮನವರು ಯಾವುದೋ ಒಂದು ವ್ಯವಹಾರದ ತಪ್ಪಿಗಾಗಿ ಶ್ರೀ ಶೇಷಪ್ಪನವರನ್ನು ಕರೆಯಿಸಿ ಸೇವಕನಿಂದ ಶಿರಸ್ತಾಡನ ಮಾಡಿಸಿದರು. 
ಶ್ರೀ ಶೇಷಪ್ಪನವರ ತಲೆಯ ಮೇಲಿರುವ ರುಮಾಲು ಕೆಳಗೆ ಬಿದ್ದಿತು - ಸಮಾನ ಸ್ನೇಹಿತರೆದುರು ಆದ ಈ ಅವಮಾನದಿಂದ ಮನನೊಂದು ಯಾರಿಗೂ ಮುಖ ತೋರಿಸದೆ ಅಲ್ಲಿಂದ ಹೊರಟು ನೇರವಾಗಿ ಚಿಂತ್ರವೇಲಿಗೆ [ ಚಿಂತರವೇಲಿ ] ಬಂದರು. 
ಅಲ್ಲಿ ಕೃಷ್ಣಾ ನದೀ ತೀರದಲ್ಲಿ ಶ್ರೀ ವ್ಯಾಸರಾಯರಿಂದ ಪ್ರತಿಷ್ಠೆಗೊಂಡ ಶ್ರೀ ಮುಖ್ಯಪ್ರಾಣದೇವರು ಹುತ್ತದಲ್ಲಿ ಮುಚ್ಚಿಹೋಗಿತ್ತು. 
ಶ್ರೀ ಶೇಷಪ್ಪನವರು ಆ ಶ್ರೀ ಮುಖ್ಯಪ್ರಾಣದೇವರ ಮೂರ್ತಿಯನ್ನು - ಮಣಿರವನ್ನೂ ಶುಚಿಗೊಳಿಸಿ ಅಲ್ಲಿಯೇ ತಪಸ್ಸಿಗೆ ತೊಡಗಿದರು. 
" ತಪಸ್ಸು "
ಶ್ರೀ ಶೇಷಪ್ಪನವರು ಒದ್ದೆ ವಸ್ತ್ರದಲ್ಲಿ ಒಂಟಿ ಕಾಲಿನ ಮೇಲೆ ನಿಂತು " ಸ್ವಾಮೀ - ಉದ್ಧಾರ ಮಾಡು " ಯೆಂದು ಹೇಳುತ್ತಾ ಜಪ ಮಾಡುತ್ತಿದ್ದರು. 
ಮೈಮೇಲಿನ ವಸ್ತ್ರ ಒಣಗಿದ ತಕ್ಷಣ ಪುನಃ ದೇವಾಲಯದ ಪೂರ್ವ ದಿಕ್ಕಿನಲ್ಲಿ ಸ್ನಾನ ಮಾಡಿ ಒದ್ದೆ ವಸ್ತ್ರ ಧರಿಸುತ್ತಿದ್ದರು. 
ಹೀಗೆಯೇ ಎರಡು ದಿನಗಳ ಕಾಲ ಉಪವಾಸವಿದ್ದು ತಪಸ್ಸನ್ನು ಮುಂದುವರೆಸಿದರು. 
" ಶ್ರೀ ಮುಖ್ಯಪ್ರಾಣದೇವರ ಪರಮಾನುಗ್ರಹ "
ಚಿಂತರವೇಲಿಗೆ ಸಮೀಪದ ದೇವನಹಳ್ಳಿ ಗ್ರಾಮದ ಶಾನುಭೋಗ ತಿಮ್ಮಯ್ಯನವರಿಗೆ ಸ್ವಪ್ನದಲ್ಲಿ ಶ್ರೀ ಮುಖ್ಯಪ್ರಾಣದೇವರು - ಶ್ರೀ ಶೇಷಪ್ಪನವರ ಸೇವೆ ಮಾಡುವಂತೆ ಸೂಚನೆಯಾಯಿತು. 
ಭಗವದ್ಭಕ್ತರಾದ ತಿಮ್ಮಯ್ಯನವರು ಪ್ರತಿದಿನ ಗ್ರಾಮದ ರೈತರಿಂದ ಬುಡಿಮೆ - - ಅಕ್ಕಿ - ಅಲಸಂದಿಬೇಳೆ - ಹುಣಿಸೇಕಾಯಿ ಮೊದಲಾದ ಪದಾರ್ಥಗಳನ್ನು ಸಂಪಾದಿಸಿ ಶ್ರೀ ಶೇಷಪ್ಪನವರ ಭಗವದಾರಾಧನೆ ಮುಗಿದ ನಂತರ ನಿವೇದನ ಮಾಡಿಸಿ ನಂತರ ತಾವು ಉಣ್ಣುತ್ತಾ ಶ್ರೀ ಶೇಷಪ್ಪನವರ ತಪಸ್ಸು ನಿರ್ವಿಘ್ನವಾಗಿ ನಡೆಯುವಂತೆ ಅನುಕೂಲರಾಗಿದ್ದರು. 
ಈ ಎಲ್ಲಾ ವಿಷಯವು ಶ್ರೀ ಶೇಷಪ್ಪನವರ ತಾಯಿಗೆ ತಿಳಿಯಿತು - ಅವರು ದುಃಖ್ಗದಿಂದ ಚಿಂತರವೇಲಿಗೆ ಬಂದು ಮರಳಿ ಮನೆಗೆ ಬರುವಂತೆ ಕೇಳಿಕೊಂಡರು. 
ಶ್ರೀ ಶೇಷಪ್ಪನವರು ಒಪ್ಪಲಿಲ್ಲ - ತಮ್ಮ ಸಾಧನಗೆ ಅಡ್ಡಿ ಬಂದರೆ ತಾವು ದೇಶಾಂತರ ಹೊರತು ಹೋಗುವುದಾಗಿ ತಿಳಿಸಿದರು. 
ಚಿಂತರವೇಲಿಗೆ ಆಗಾಗ ಬಂದು ನೋಡಬಹುದೆಂದು ವಿಧಿಯಿಲ್ಲದೇ ತಾಯಿ ಸಮ್ಮತಿಸಿದರು. 
ಶ್ರೀ ಶೇಷಪ್ಪನವರ ತಪಸ್ಸು ಅತ್ಯಂತ ಉಗ್ರವಾಗಿ ಸಾಗಿತು. 
ಅವರಿಗೆ ಚಳಿ ಜ್ವರ ಬಂದರೂ ಅವರು ತಮ್ಮ ಉಪಾಸನೆಯನ್ನು ನಿಲ್ಲಿಸಲಿಲ್ಲ - 41 ದಿನಗಳವರೆಗೆ ಹಾಗೆಯೇ ಜ್ವರದಲ್ಲಿಯೇ ತಪಸ್ಸು ಮಾಡಿದರು. 
ಕೊನೆಗೆ ಸ್ವಪ್ನ ಸೂಚನೆಯಂತೆ ದೇವರ ಅಭಿಷೇಕದನೀರು ಹರಿದು ಹೋಗುವ ಕಡೆಯ ನೀರನ್ನು ಕಣ್ಣು ಮುಚ್ಚಿ ಕುಡಿದರು. 
ಜ್ವರದ ತಾಪ ಪರಿಹಾರವಾಯಿತು - ಮುಂದೆ ಚಿಪ್ಪಗಿರಿಗೆ ಬಂದು ಶ್ರೀ ವಿಜಯರಾಯರ ಸೇವೆಯನ್ನು ಭಕ್ತಿಯಿಂದ ಮಾಡಿದರು. 
ಶ್ರೀ ಶೇಷಪ್ಪನವರು ಚಿಂತರವೇಲಿಯಲ್ಲಿರುವಾಗ ಅವರಿಂದ ನೂರಾರು ಜನ ಭಕ್ತರು ತಮ್ಮ ಮನೋರಥಗಳನ್ನು ಈಡೇರಿಸಿ ಕೊಳ್ಳುತ್ತಿದ್ದರು. 
ಅನ್ನ ಸಂತರ್ಪಣೆ - ವಸ್ತ್ರ ಭೂಷಣಾದಿ ದಾನಗಳು ನಡೆಯುತ್ತಿದ್ದವು. 
" ಶ್ರೀ ಪಾಂಡುರಂಗನ ಅಪ್ಪಣೆ "
ಶ್ರೀ ಶೇಷಪ್ಪನವರಿಗೆ ದಾಸನಾಗಿ ಸಾಹಿತ್ಯ ರಚನೆಗೆ ತೊಡುಗುವಂತೆ ಒಂದು ಘಟನೆಯು ಪ್ರೇರಣೆ ನೀಡಿತು. 
ಒಮ್ಮೆ ಉತ್ತಮವಾದ ಕುದುರೆಯನ್ನೇರಿ - ಮಹಾರಾಷ್ಟ್ರದ ಕೊಂಕಣಸ್ಥ ಪಾಗಾ ಧರಿಸಿದ ತೇಜಸ್ವೀ ಪುರುಷರೊಬ್ಬರು ಒಂದು ಶೇಷಪ್ಪನವರನ್ನು.... 
" ಶೇಷದಾಸ್ ಕೂಠೇ ಆಹೇತ್ "
ಎಂದು ಪ್ರಶ್ನಿಸಿದರು. 
ಅವರನ್ನು ಶ್ರೀ ಶೇಷಪ್ಪನವರು ಅವರ ದೇಶ - ಬಂದ ಕಾರಾಣ ಇತ್ಯಾದಿ ಬಗ್ಗೆ ಕೇಳಿದಾಗ - ಅವರು ತಮ್ಮ ಊರು ಪಂಢರಪುರ ಗ್ರಾಮ - ಹೆಸರು ಪಾಂಡುರಂಗ - ಶೇಷಪ್ಪನಿಂದ ರಚಿತವಾದ ಸುಳಾದಿಗಳನ್ನು ಕೇಳಲು ಬಂದಿದ್ದೇವೆಂದು ಹೇಳಿ ತತ್ ಕ್ಷಣ ಅದೃಶ್ಯರಾದರು. 
ಶ್ರೀ ಶೇಷಪ್ಪನವರಿಗೆ ಪದ - ಪದ್ಯ - ಸುಳಾದಿಗಳ ರಚನೆಗೆ ಶ್ರೀ ಪಾಂಡುರಂಗನಿಂದಲೇ ಅಪ್ಪಣೆ ದೊರೆಯಿತೆಂದು  - ನೇರವಾಗಿ ಚಿಪ್ಪಗಿರಿಗೆ ಬಂದರು. 
" ಶ್ರೀ ವಿಜಯರಾಯರಿಂದ ಸ್ವಪ್ನಾಂಕಿತ "
ಶ್ರೀ ವಿಜಯರಾಯರು ಶ್ರೀ ಶೇಷಪ್ಪನವರಿಗೆ ಸ್ವಪ್ನದಲ್ಲಿ ಕಾಣಿಸಿಕೊಂಡು " ಗುರು ವಿಜಯ ವಿಠ್ಠಲ " ಯೆಂದು ಅಂಕೀತೋಪದೇಶ ನೀಡಿದರು. 
ಶ್ರೀ ಪಾಂಡುರಂಗನ ಅಪ್ಪಣೆಯಂತೆ ಸುಳಾದಿಗಳನ್ನು ಹೆಚ್ಚಾಗಿ ರಚಿಸಿದರು. 
ಶ್ರೀ ಶೇಷದಾಸರ ಈ ರಚನೆಗೆ " ಭಗವದ್ಗೀತೆ " ಆಕಾರ ಗ್ರಂಥವಾಗಿದೆ. 
ಶ್ರೀ ವಿಜಯರಾಯರಿಂದ ಅಂಕಿತ ಪಡೆದ ಬಗ್ಗೆ ಶ್ರೀ ಶೇಷದಾಸರೇ.... 
ಗುರು ವಿಜಯರಾಯರೊಂದು ಸಮ್ಮುಖದಲ್ಲಿ ಬಂದು । ಪರಿವ್ಯಾಪ್ತನಾದ ಹರಿಯ ವಿವಕ್ಷದಿ । ಪರಿಪರಿ ವಿಧದಿಂದ ಸ್ತುತಿಸಿ ಪ್ರಾಂತದಲ್ಲಿ ಗುರು ವಿಜಯ ವಿಠ್ಠಲನ್ನ ಸೇವಕ ನೀನೆಂದು । ಕಾರಣದಿಂದ ನಿನಗೆ ಇದೇ ಮುದ್ರಿಕವು ಎಂಬ । ತೆರವಾದ ಸಂಜ್ಞವನ್ನು ಸೂಚಿಸಿದಿ । ಪರಮ ಧನ್ಯನಾದೆ ಗುರು ವಿಜಯದಾಸರಿಗೆ । ಚರಣ ಸೇವಕನಾದೆ ನಿನ್ನ ದಯದಿ । ಗುರುಗಳ ದ್ರೋಹದಿಂದ ಮುಕ್ತನಾಗಿ ನಿನ್ನ । ಕುರುಹು ಕಾಣುವ ಅಧಿಕಾರಿಯಾದೆ । ಪರಿಪೂರ್ಣ ಕೃಪಾನಿಧೇ ಗುರು ವಿಜಯ ವಿಠ್ಠಲ ನಿನ್ನ । ಕರುಣದ ಫಲವಿದೆ ಬಾಳಿದುದಕೆ ।।
" ಶ್ರೀ ಕ್ಷೇತ್ರ ಮಂತ್ರಾಲಯದಲ್ಲಿ ಶ್ರೀ ಶೇಷದಾಸರು "
ಚಿಂತರವೇಲಿಯಲ್ಲಿ ತಪಗೈದ ನಂತರ ಶ್ರೀ ಶೇಷದಾಸರು " ರುದ್ರಾಚಲ " ವೆಂದು ಪ್ರಸಿದ್ದವಾದ " ಮೊದಲಕಲ್ಲು " ಕ್ಷೇತ್ರಕ್ಕೆ ಬಂದು ಶ್ರೀ ಶ್ರೀನಿವಾಸನನ್ನು ಸೇವಿಸಿದರು. 
ಅಲ್ಲಿಂದ ಶ್ರೀ ಕ್ಷೇತ್ರ ಮಂತ್ರಾಲಯಕ್ಕೆ ಬಂದು ಶ್ರೀ ರಾಯರನ್ನು ಅತ್ಯಂತ ಭಕ್ತಿಯಿಂದ ಸೇವಿಸಿದರು ಮತ್ತು ಶ್ರೀ ಶೇಷದಾಸರು ಒಂದು ವರ್ಷ ಶ್ರೀ ಕ್ಷೇತ್ರ ಮಂತ್ರಾಲಯ ಶ್ರೀ ರಾಘವೇಂದ್ರ ತೀರ್ಥ ಗುರುಸಾರ್ವಭೌಮರ ಪರಮ ಪವಿತ್ರವಾದ ಸ್ಥಳದಲ್ಲಿ ವಾಸ ಮಾಡಿದರು - ನಂತರ ಧರೂರು ಗ್ರಾಮಕ್ಕೆ ಬಂದು - " ಪಾರ್ಥಿವ ನಾಮ ಸಂವತ್ಸರ ವೈಶಾಖ ಶುದ್ಧ ಅಷ್ಟಮೀ ಶ್ರೀ ಹರಿಯ ವಾಸ ಸ್ಥಾನವಾದ ವೈಕುಂಠಕ್ಕೆ ಪ್ರಯಾಣ ಬೆಳೆಸಿದರು. 
" ಕೃತಿಗಳು "
04 - ಪದಗಳು 
12 - ಉಗಾಭೋಗಗಳು 
43 - ಸುಳಾದಿಗಳು 
" ಮಹಿಮೆಗಳು "
1. ತಿಮ್ಮಯ್ಯನವರನ್ನು ಪ್ರವಾಹದಿಂದ ಪಾರು ಮಾಡಿದ್ದು - 2. ಭೂತ ಬಾಧೆ ಬಿಡಿಸಿದ್ದು - 3. ಯೋಗ ಸಾಧನೆಯಿಂದ ವಯಸ್ಸಾದರೂ ಯುವಕರಂತೆ ಶೋಭಿಸಿದ್ದು - 4. ಶ್ರೀ ಪ್ರಾಣದೇವರ ಭಿನ್ನ ಮೂರ್ತಿಯನ್ನು ಬಿರುಕುಗಳನ್ನು ಮುಚ್ಚಿ ಮೊದಲಿನಂತೆ ಮಾಡಿದ್ದು - 5. ಆಗಾಗ ಸರ್ಪದ ರೂಪ ತಾಳಿ ಭಕ್ತರಿಗೆ ಅನುಗ್ರಹ ಮಾಡಿದ್ದು [ ಬಹುಶಃ ಅವರಿಗೆ ಶ್ರೀ ಶೇಷದಾಸರೆಂದು ಹೆಸರು ಬಂದಿರಬೇಕು ]
ಶ್ರೀಶಾಂಘ್ರಿ ಸೇವಕಂ ನಿತ್ಯಂ 
ಭೂಸುರಾಗ್ರ ಕುಲೋದ್ಭವಂ ।
ವಾಸಮಾದಿ ಶಿಲಾಕ್ಷೇತ್ರಂ 
ಶೇಷದಾಸ ಗುರುಂ ಭಜೇ ।।
by ಆಚಾರ್ಯ ನಾಗರಾಜು ಹಾವೇರಿ
ಗುರು ವಿಜಯ ಪ್ರತಿಷ್ಠಾನ
***
ಇಂದ್ರದೇವರ ಅಂಶ ಸಂಭೂತರಾದ ಶ್ರೀ ಶೇಷದಾಸರ ಆರಾಧನಾ ಮಹೋತ್ಸವ "
ಶ್ರೀ ರಾಯರ ಮಠದ ಶಿಷ್ಯರಾದ ಶ್ರೀ ಮೊದಲಕಲ್ಲು  ಶೇಷದಾಸರು ಶ್ರೀ ಇಂದ್ರದೇವರ ಅಂಶ ಸಂಭೂತರು. 
ಶ್ರೀ ವಿಜಯರಾಯರು ಶ್ರೀ ರಾಯರ ಮಠದ ಶಿಷ್ಯರು. 
ಶ್ರೀ ವಿಜಯರಾಯರು ಶ್ರೀ ರಾಯರ ಮಠದ ಶಿಷ್ಯರಾದ್ದರಿಂದಲೇ ಅವರು ಕಾಶಿಯಲ್ಲಿ ರಾಮಶಾಸ್ತ್ರಿಯನ್ನು ವಾಕ್ಯಾರ್ಥದಲ್ಲಿ ಜಯಿಸಿ - ಶಾಸ್ತ್ರಿಗಳನ್ನು ಶ್ರೀ ಕ್ಷೇತ್ರ ಮಂತ್ರಾಲಯಕ್ಕೆ ಕರೆತಂದು ತಮ್ಮ ಕುಲ ಗುರುಗಳಾದ ಶ್ರೀ ರಾಯರ ಮೂಲ ವೃಂದಾವನ ಸನ್ನಿಧಿಯಲ್ಲಿ - ಶ್ರೀ ರಾಯರ ಮಠದ ಪೀಠಾಧಿಪತಿಗಳಾದ ಶ್ರೀ ಬೃಹಸ್ಪತಿ ಅಂಶ ಸಂಭೂತರಾದ ಶ್ರೀ ವಾದೀಂದ್ರ ತೀರ್ಥರ ಅಮೃತ ಹಸ್ತಗಳಿಂದ - ತಪ್ತ ಮುದ್ರಾಧಾರಣೆ, ಫಲ ಮಂತ್ರಾಕ್ಷತೆ ಕೊಡಿಸಿ ಶ್ರೀ ವಿಜಯರಾಯರೂ ಆಶೀರ್ವದಿಸಿ ಕಳಿಸಿಕೊಟ್ಟರು. 
ಶ್ರೀ ವಿಜಯರಾಯರೇ ಅವರ ಮುಂದಿನ ಅವತಾರವನ್ನು ಶ್ರೀ ಮೊದಲಕಲ್ಲು ಶೇಷದಾಸರ ಪುತ್ರರಾದ ಶ್ರೀ ತಿಮ್ಮಣ್ಣನವರ ಮಕ್ಕಳಾಗಿ " ಶ್ರೀ ವಿಜಯರಾಯ " ರ ಹೆಸರಲ್ಲೇ ಪ್ರಸಿದ್ಧಿ ಹೊಂದಿದ್ದಾರೆ.
ಇಬ್ಬರೂ ಶ್ರೀ ರಾಯರ ಅಂತರಂಗ ಭಕ್ತರೂ, ಶ್ರೀ ರಾಯರ ಮಠದ ಶಿಷ್ಯರು. 
ಈ ವಿಷಯವನ್ನು ಅವರೇ ತಮ್ಮಿಂದ ರಚಿತವಾದ ಈ ಕೆಳಕಂಡ ಉಗಾಭೋಗದಲ್ಲಿ ಖಚಿತ ಪಡಿಸಿದ್ದಾರೆ. 
ವಿಜಯ ನಾಮವು ಎನಗೆ ಸಾರ್ಥಕ ಮಾಳ್ಪನೆಂದು । ಕುಜನ ಮರ್ದನ ನಿನಗೆ ನೀನೆ ಒಲಿದು । ವಿಜಯ ಸಾರಥಿ ಯೆನಿಸಿ ಯೆನ್ನಲ್ಲಿ ನಿಲ್ಲದಿರೆ । ವಿಜಯ ನಾಮವು ಸಫಲವಾಗುವುದೆ । ಭುಜಗ ತಲ್ಪನೆ ಈ ಸೊಬಗು ದೃಢವಾಗದಲೆ । ಕುಜನ ಮಣಿಯಾದ ಕಲಿ ಕೃತ ಕಲ್ಮಷದಿ । ರಜ ತಮ ಗುಣದಿಂದ ಬದ್ಧನಾಗಿ । ಅಜಯವುಳ್ಳವನಾದೆ ಬಲು ವತ್ಸರವು ನೋಡು । ವಿಜಯ ಸಖನೆಂದು ಕರುಣವಿತ್ತೆ । ಸುಜನ ಪೋಷಕನೇ ಕೇಳೆಂದು ಸ್ವಪ್ನದಲಿ । ನಿಜವಾಗಿ ದಶನಾಮ ಸಫಲ ಮಾಳ್ಪೆನೆಂಬೆ । ನಿಜ ಮುಖದಿಂದ ಪೇಳಿದದನು ವೇಗ । ತ್ಯಜನೆ ಮಾಡದೆ ವಾಕ್ಯ ತಂದುಕೋ ಮನನಕ್ಕೆ । ಸುಜನ ಕುಲಾಬ್ಧಿಚಂದ್ರ ಸುಗುಣಸಾಂದ್ರ । ವೃಜನಗಳೆಣಿಸದೆತ್ವರಿತದಿಂದಲಿ ಯೆನಗೆ । ವಿಜಯ ನಾಮವು ಸಫಲ ಮಾಡುವದು । ಭುಜಗ ಭೂಷಣ ವಂದ್ಯ ಗುರು ವಿಜಯವಿಠ್ಠಲರೇಯ । ಋಜು ಮಾರ್ಗವನೆ ಇತ್ತು ಪಾಲಿಸುವುದು ।।
" ವಿವರಣೆ "
" ವಿಜಯಸಾರಥಿ " ಎಂದು ನೀನು  [ ಶ್ರೀ ಕೃಷ್ಣ ಪರಮಾತ್ಮ ] ಎನ್ನಲ್ಲಿ ನಿಂತಿದ್ದರಿಂದಲೇ ವಿಜಯ ನಾಮವು ಸಫಲವಾಯಿತು. 
ಶ್ರೀ ಕೃಷ್ಣಾ ನೀನು ಯೆನ್ನ ಮೇಲೆ ತೋರಿದ ಕಾರುಣ್ಯಕ್ಕೆ ಕಾರನೇವೇನೆಂದರೆ " ವಿಜಯ ಸಖ " ನಾದ್ದರಿಂದಲೇ. 
ವಿಜಯ = ಶ್ರೀ ಇಂದ್ರದೇವರ ಅವತಾರಿ ಅರ್ಜುನ 
ವಿಜಯ ಸಖ = ಶ್ರೀ ಕೃಷ್ಣ ಪರಮಾತ್ಮ       
" ಶ್ರೀ ಶ್ಯಾಮಸುಂದರ ದಾಸರೂ - ಶ್ರೀ ಶೇಷದಾಸರ ಸ್ತೋತ್ರ ಪದ " ದಲ್ಲಿ .... 
ಹರಿಕೇತು ಹರಿಸುತ ಹರಿಣಾಂಕ -
ಕುಲ ಜಾತ ದಾಸರಾಯ ।
ಹರಿಕೇತು ಹರಿಸುತಾದ್ಯರಸನ -
ಸಂಹರಿಸದೆ ದಾಸರಾಯ ।।
ಎಂದು " ಪೋಷಿಸು ಎನ್ನಯ ದೋಷಗಳೆಣಿಸದೆ ದಾಸರಾಯ " ಎಂಬ ಪದದಲ್ಲಿ ಶ್ರೀ ಶೇಷದಾಸರು ಶ್ರೀ ಇಂದ್ರದೇವರ ಅವತಾರನಾದ ಶ್ರೀ ಅರ್ಜುನನ ಅವತಾರವೆಂದು ಸ್ಪಷ್ಟ ಪಡಿಸಿದ್ದಾರೆ. 
" ಹರಿಕೇತು "
ಹರಿ = ಕಪಿ 
ಕೇತು = ಧ್ವಜ 
ರಥದ ಮೇಲೆ ಕಪಿಧ್ವಜ ಉಳ್ಳವನು " ಅರ್ಜುನ ". 
" ಹರಿಸುತ "
ಹರಿ = ಇಂದ್ರ 
ಸುತ = ಮಗ 
ಹರಿಸುತ ಅಂದರೆ " ಅರ್ಜುನ "
" ಹರಿಣಾಂಕ ಕುಲ "
ಹರಿಣಾಂಕ  = ಚಂದ್ರ 
ಕುಲ = ವಂಶ 
ಹರಿಣಾಂಕ ಕುಲ ಅಂದರೆ " ಚಂದ್ರ ವಂಶ. 
" ಹರಿಕೇತು "
ಹರಿ = ಸರ್ಪ 
ಕೇತು = ಧ್ವಜ 
ರಥದ ಮೇಲೆ ಸರ್ಪದ ಧ್ವಜ ಉಳ್ಳವನು " ಕರ್ಣ 
" ಹರಿಸುತ "
ಹರಿ = ಸೂರ್ಯ 
ಸುತ = ಮಗ 
ಹರಿಸುತ ಅಂದರೆ " ಕರ್ಣ "
ಅಂದರೆ... 
ಕುರುಕ್ಷೇತ್ರದಲ್ಲಿ ಕರ್ಣನನ್ನ ಸಂಹರಿಸಿದ ಅರ್ಜುನನೇ " ಶ್ರೀ ಶೇಷದಾಸರು " ಎಂದು ಶ್ರೀ ರಾಯರ - ಶ್ರೀ ಜಗನ್ನಾಥದಾಸರ ಕಾರುಣ್ಯಪಾತ್ರರಾದ ಶ್ರೀ ಶ್ಯಾಮಸುಂದರದಾಸರು ಹೇಳಿದ್ದಾರೆ. 
" ಶ್ರೀಭಗವದ್ಗೀತಾ ಸ್ತೋತ್ರ ಸುಳಾದಿ "
ರಾಗ ಕಲ್ಯಾಣಿ 
"  ತಾಳ :  ಧ್ರುವ  "
ತಸ್ಮಾತ್ ತ್ವಮುತ್ತಿಷ್ಠ ಯಶೋ ಲಭಸ್ವ । ಜಿತ್ವಾ ಶತ್ರೂನ್ ಭುಂಕ್ಷ್ವಂ ರಾಜ್ಯಂ ಸಮೃದ್ಧಂ । ಮಯೈ ವೈತೇ ನಿಹತಾಃ ಪೂರ್ವಮೇವ  । ನಿಮಿತ್ತ ಮಾತ್ರಂ ಭವ ಸವ್ಯಸಾಚಿನ್  [ 11/33 ] । ಎನ್ನಿಂದ ಆದ ಕೃತ್ಯ ಅವಜ್ಞ ಮಾಡದಲೆ । ಉತ್ತರವ ಪೇಳುವದು ।  ಭಾವಾಭಿ ಜನ್ಯವಾದ ಅಹಂಕಾರವಾದರೂ । ಶ್ರೀವರ ನಿನ್ನಿಂದೇ ಪುಟ್ಟಿ ತೆನಗೆ । ಪಾವನ ಮಹಿಮ ಗುರು ವಿಜಯ ವಿಠ್ಠಲ ರೇಯಾ । ಆವಪರಾಧ ಉಂಟು ತಿಳಿಸಿ ಪೇಳೋ ॥ 1 ॥
 " ತಾಳ : ಮಠ್ಯ " 
ದ್ರೋಣಂಚ ಭೀಷ್ಮಂಚ ಜಯದ್ರಥಂಚ । ಕರ್ಣಂ ತಥಾನ್ಯಾನಪಿ ಯೋಧ ವೀರಾನ್ । ಮಯಾ ಹತಾಂ ಸ್ತ್ವಂ ಜಹಿ ಮಾ ವ್ಯಥಿಷ್ಠಾ । ಯುದ್ಧ್ಯಸ್ವ ಜೇತಾऽಸಿ ರಣೇ ಸಪತ್ನಾನ್  [ 11/34 ] ।  ಪ್ರಾಣನಾಥನೆ ಗುರು ವಿಜಯ ವಿಠ್ಠಲರೇಯಾ ।  ಎನಗಾವದು ಕೃತ್ಯ ಇದರೊಳಗೆ ॥ 2 ॥
 " ತಾಳ : ತ್ರಿವಿಡಿ "
ವೀರನಾದವ ಒಂದು ಕರಗಸ ಕೈಯಲ್ಲಿ  । ಧರಿಸಿ ಶತ್ರುಗಳನ್ನು ಹನನ ಮಾಡೆ । ಪರಿಪ್ರಾಪ್ತವಾದ ಘನತಿಯು ಪುರುಷಗಲ್ಲದೆ ಜಡ । ಕರಗಸಕೆ ಕೀರ್ತಿ ಬರುವದೆಂತೊ । ತುರಗ ಬಿಗಿದ ರಥ ಗಮನಾಗಮನದಿಂದ । ಪರಿಖ್ಯಾತಾ ವೈದಿದ ಕೀರ್ತಿಯನ್ನು ।  ತುರಗ ಶ್ರೇಷ್ಠಕೆ ಹೊರತು ಜಡಕೆ ಬರುವದುಂಟೆ ಈ । ತೆರದಿ ಬರುವದಯ್ಯಾ ಎನಗೆ ಕೀರ್ತಿ । ಹರಿ ನೀ ವೊಲಿದು ಎನ್ನ ನಾಮ ರೂಪವ ಧರಿಸಿ  । ಧರಣಿ ಭಾರವ ನಿಳುಹಿ ಮೆರೆದ ದೇವಾ । ಯ ಏನಂ ವೇತ್ತಿ ಹಂತಾರಂ ಯಶ್ಚೈನಂ ಮನ್ಯತೇ ಹತಂ ಉಭೌತೌ ನವಿಜಾನೀತೋ ನಾಯಂ ಹಂತಿ ನಹನ್ಯತೇ  । ಕರುಣಾನಿಧಿಯೇ ಗುರು ವಿಜಯವಿಠ್ಠಲ ರೇಯಾ । ಹರಣ ಮಾಡುವ ಕರ್ತು ನೀನೆ ದೇವಾ ॥ 3 ॥
" ತಾಳ : ಅಟ್ಟ " 
ನ ಜಾಯತೇ ಮ್ರಿಯತೇ ವಾ ಕದಾಚಿನ್ನಾ । ಯಂ ಭೂತ್ವಾ ಭಾವಿತಾವಾ ನಭೂಯಃ  । ಅಜೋ ನಿತ್ಯಃ ಶಾಶ್ವತೋಽಯಂ ಪುರಾಣೋ । ನಹನ್ಯತೆ ಹನ್ಯಮಾನೇ ಶರೀರೇ । ವಿಜಯ ಸಾರಥಿ ಗುರು ವಿಜಯ ವಿಠ್ಠಲ ರೇಯ । ಸೋಜಿಗವೇ ಸರಿ ಎನ್ನ ಅಪರಾಧವಾ ॥ 4 ॥
" ತಾಳ : ಆದಿ " 
ಲೇಲೀಹ್ಯಸೇ ಗ್ರಸಮಾನಃ ಸಮಂತಾತ್ । ಲೋಕಾನ್ ಸಮಗ್ರಾನ್ ವದನೈರ್ಜ್ವಲದ್ಭಿಃ । ತೇಜೋಭಿರಾಪೂರ್ಯ ಜಗತ್ ಸಮಗ್ರಂ । ಭಾಸಸ್ತವೋಗ್ರಾಃ ಪ್ರತಪಂತಿ ವಿಷ್ಣೋ [ 11/30 ] । ಬಾಲಾರ್ಕ ಕೋಟಿ ಪ್ರಭ ಗುರು ವಿಜಯ ವಿಠ್ಠಲ ರೇಯಾ । ಆಲೋಚಿಸಿದರೂ ಎನಗಿಲ್ಲಪರಾಧವಾ ॥ 5 ॥
 ಜತೆ 
ಬ್ರಹ್ಮಸ್ತು ಬ್ರಹ್ಮಾನಾಮಾಸೌ ರುದ್ರಸ್ತು ರುದ್ರನಾಮಾ  ।  ಎಮ್ಮ ನಾಮವು ನೀನೇ ಗುರುವಿಜಯವಿಠ್ಠಲರೇಯಾ ॥
by ಆಚಾರ್ಯ ನಾಗರಾಜು ಹಾವೇರಿ 
     ಗುರು ವಿಜಯ ಪ್ರತಿಷ್ಠಾನ
*****

year 2021
ಶ್ರೀಂ ಶ್ರೀ ಕಂ ಕಪಿಲಾಯ ನಮಃ

ವೈಶಾಖ ಶುದ್ಧ ಅಷ್ಟಮಿ

ಶ್ರೀಶಾಂಘ್ರಿಸೇವಕಮ್ ನಿತ್ಯಂ ಭೂಸುರಾಗ್ರ ಕುಲೋದ್ಭವಮ್/
ವಾಸವಾದಿ ಶಿಲಾಕ್ಷೇತ್ರಂ ಶೇಷದಾಸ ಗುರುಮ್ ಭಜೇ//
 
ಆದಿಶಿಲಾ (ಮೊದಲಕಲ್) ವೆಂಕಪ್ಪನ ಪರಮಾರಾಧಕರು
ಶ್ರೀ ವಿಜಯಪ್ರಭುಗಳ ಪರಮಕಾರುಣ್ಯ ಪಾತ್ರರೂ, ಅವರಿಂದಲೆ ಸ್ವಪ್ನದಲ್ಲಿ ಅಂಕಿತೋಪದೇಶವನ್ನು ಪಡೆದವರು,  ಇಂದ್ರಾಂಶ ಸಂಭೂತರು, ಕಲ್ಲೂರು ಕೃಷ್ಣಪ್ಪನಿಗೆ ಅಪಮೃತ್ಯು ಬಂದಾಗ ಉಗಾಭೋಗಗಳಿಂದ ಪರಮಾತ್ಮನನ್ನು ಸ್ತುತಿಸಿ ಪಾರುಮಾಡಿದವರು, ಗಂಗೆಯನ್ನು ಒಲಿಸಿಕೊಂಡವರು,  ಬ್ರಹ್ಮರಾಕ್ಷಸ ಬಾಧೆಗಳಿಂದ ಭಕ್ತರನ್ನು ಕಾಯ್ದವರು,  ಶ್ರೀ ಟಂಕಶಾಲಿ ಶ್ರೀನಿವಾಸಾಚಾರ್ಯರು (ಶ್ರೀ ರಘುದಾಂತತೀರ್ಥರಿಂದ) ಸ್ತುತಿಸಲ್ಪಟ್ಟವರು . ಅತ್ಯದ್ಭುತವಾದ ಕೃತಿ, ಪದ ಪದ್ಯ ಸುಳಾದಿಗಳನ್ನು,  ವಿಶೇಷವಾಗಿ ವಾರದ ಸುಳಾದಿಗಳನ್ನು ರಚಿಸಿ ನಮಗೆ ಅನುಗ್ರಹಿಸಿದವರೂ ಆದ ಶ್ರೀ ಗುರುವಿಜಯವಿಠಲರ ಅರ್ಥಾತ್ ಶ್ರೀ ಮೊದಲಕಲ್ ಶೇಷದಾಸಾರ್ಯರ ಮಧ್ಯಾರಾಧನಾ ಮಹೋತ್ಸವವಿಂದು

ಇಂದಿನ ದಿನ ಶ್ರೀ ಶೇಷದಾಸಾರ್ಯರ  ಕಾರುಣ್ಯ ಪಡೆಯಲು ಶೇಷದಾಸಾಷ್ಟಕಮ್ ಜೊತೆಗೆ ಅವರು ಅಪಮೃತ್ಯುಪರಿಹಾರ ಮಾಡಿದ ಉಗಾಭೋಗಗಳನ್ನು ಪಾರಾಯಣ ಮಾಡೋಣ... 
***
ಶ್ರೀಶೇಷದಾಸರು
******
ಶ್ರೀಶೇಷದಾಸರು ಹುಟ್ಟಿದ್ದು 1800 ರಲ್ಲಿ ಮೆಹಬೂಬ್ ನಗರದ ದರೂರು ಎಂಬ ಊರಿನಲ್ಲಿ.
ಇವರು ಗಡ್ವಾಲ್ ಸಂಸ್ಥಾನದ ರಾಜನಾಗಿದ್ದ ಸೋಮ ಭೂಪಾಲನ ಹತ್ತಿರ ಕೆಲಸಮಾಡುತ್ತಿದ್ದರು.ಇವರು ಅವರ ತಂದೆಯವರು ಮಾಡುತ್ತಿದ್ದ ಕುಲಕರ್ಣಿ ವೃತ್ತಿ
ಯನ್ನೇ ಮಾಡುತ್ತಿದ್ದರು.
ಬಹಳ ಸಜ್ಜನಿಕೆಯ ಮನೋಭಾವ ಉಳ್ಳವರಾಗಿದ್ದರು.ಇವರ ಮೃದು ಸ್ವಭಾವದಿಂದಾಗಿ ರೈತರುಗಳಿಂದ ಕರ ವಸೂಲಿ
ಮಾಡಲಾಗದಿದ್ದುದಕ್ಕಾಗಿ ಗದ್ವಾಲಿನ ಸೋಮ ಭೂಪಾಲ ರಾಜ ಅವರನ್ನು ಕೆಲಸದಿಂದ ವಜಾಮಾಡುತ್ತಾನೆ.
ಶೇಷಪ್ಪನವರು ಇದರಿಂದಾಗಿ ಯಾವ ಚಿಂತೆಯನ್ನೂ ಮಾಡದೆ ಮನೆಗೂ ವಾಪಸ್ಸು ಹಿಂದಿರುಗದೆ ದರೂರಿನ ಹತ್ತಿರದ ಚಿಂತಲರೇವಿನಲ್ಲಿರುವ ಶ್ರೀವ್ಯಾಸತೀರ್ಥರು ಪ್ರತಿಷ್ಠೆ ಮಾಡಿದ್ದ ಶ್ರೀಮಖ್ಯಪ್ರಾಣದೇವರ ಮೊರೆ ಹೋಗುತ್ತಾರೆ.ಶ್ರೀಪ್ರಾಣದೇವರು ಸ್ವಪ್ನದಲ್ಲಿ ಸೂಚಿಸಿದಂತೆ ಮೊದಲುಕಲ್ಲಿಗೆ ತೆರಳಿ
ತಪಸ್ಸಿನಲ್ಲಿ ಮಗ್ನರಾಗುತ್ತಾರೆ.ಕೇವಲ ತುಳಸೀದಳ ಸೇವಿಸಿ ಉಪವಾಸದಿಂದ ಮುಖ್ಯಪ್ರಾಣದೇವರನ್ನು ಪ್ರಾರ್ಥಿಸುತ್ತಾರೆ.
ಅವರು ಧ್ಯಾನಮಾಡಿ ಕೃಶರಾದರೂ ಅವರ 
ಮುಖದಲ್ಲಿ ಒಳ್ಳೆಯ ದೈವದತ್ತವಾದ ಕಾಂತಿ
ಮಿರುಗುತ್ತಿತ್ತು.ಅವರು ದೇವರೇ ಕೊಟ್ಟ ಪರೀಕ್ಷೆ
ಎಂದು ಆನಂದಮಗ್ನರಾಗಿದ್ದರು.
ಅವರಿಗೆ ಸ್ವಪ್ನದಲ್ಲಿ ಅವರ ಕುಲದೇವರಾದ 
ಶ್ರೀಶ್ರೀನಿವಾಸನ ದರ್ಶನವೂ ಆಯಿತು.
ಇವರಿಗೆ ಗುರುವಿಜಯ ವಿಠಲ ಎಂಬ ಹರಿದಾಸ ದೀಕ್ಷೆ ಅಂಕಿತ ಪ್ರದಾನವೂ ಆಯಿತು.
ಅವರ ಮೊದಲ ಕೃತಿ:
 "ನಂಬಿದೆ ನಿನ್ನ ಪಾದ ಮುಖ್ಯಪ್ರಾಣ
 ಡಿಂಭದೊಳಗೆ ಹರಿಯ ಬಿಂಬ ಪೊಳೆಯುವಂತೆ
ಮಾಡು......""
ತಮ್ಮ ಬದುಕಿನ ಹೆಚ್ಚುಕಾಲವನ್ನು ದೇವರಸೇವೆಯಲ್ಲಿ ಕಳೆದರು.
ಅಲ್ಲಿಗೆ ಬಂದ ವರಿಗೆ  ನಾಮ ಸಂಕೀರ್ತನೆ,ಮತ್ತು
ಶ್ರವಣಾದಿಗಳಿಂದ ಮನದಣಿಸುತ್ತಿದ್ದರು.
ಶ್ರೀನಿವಾಸನ,ಶ್ರೀಪ್ರಾಣದೇವರ ಕೃಪೆಯಿಂದ ಅವರ ಕೀರ್ತಿವ್ಯಾಪಿಸಿ ಸಜ್ಜನರು ತಂಡೋಪ
ತಂಡವಾಗಿ ಅವರ ಬಳಿ ಬಂದು ಧನ್ಯರಾದರು.
ದಾಸರು ಶ್ರೀಜಗನ್ನಾಥದಾಸರು ರಚಿಸಿರುವ ಹರಿಕಥಾಮೃತ ಸಾರದ ಮೇಲೆ ವ್ಯಾಖ್ಯಾನವನ್ನೂ ರಚಿಸಿದ್ದಾರೆ.
ಇಲ್ಲಿಗೆ ಬಂದವರಿಗೆ ದಾಸರ ಮೂಲಕ ಶ್ರೀನಿವಾಸನ ದರ್ಶನ ಮತ್ತು ಅನುಗ್ರಹದ ಭಾಗ್ಯ ದೊರೆಯುತ್ತಿತ್ತು.
ಶ್ರೀಶೇಷದಾಸರು ಭಗವಂತನ ಅನುಗ್ರಹದಿಂದ
ಅನೇಕ ಪವಾಡ ಸದೃಶ ಘಟನೆಗಳನ್ನು ತೋರಿಸಿದ್ದಾರೆ.
ಅನೇಕ ಭಕ್ತರ ಉನ್ಮಾದ ರೋಗ,ಭೂತಬಾಧೆ,ಸಂತಾನ ಹೀನತೆಗಳನ್ನು ಶ್ರೀವಾಯುದೇವರ ಅನುಗ್ರಹದಿಂದ ಕಳೆದು ಇಂದಿಗೂ ಜನರು ಮೊದಲಕಲ್ಲಿಗೆ ಹೋಗಿ ಅನುಗ್ರಹ ಪಡೆಯುತ್ತಿದ್ದಾರೆ ಎಂದು ಕೇಳಿದ್ದೇವೆ.
ಶ್ರೀಗುರು ವಿಜಯವಿಠಲರು ವೈಶಾಖ ಶುದ್ಧ ಅಷ್ಟಮೀ (1869)ಯಂದು ಹರಿಪದವನ್ನೈದಿದರು.
ಈದಿನವನ್ನು ಅವರ ಆರಾಧನಾ ದಿನವನ್ನಾಗಿ
ಭಕ್ತರು ಆಚರಿಸುತ್ತಾ ಬಂದಿದ್ದಾರೆ.
ಮೊದಲಕಲ್ಲು ಶ್ರೀಶೇಷದಾಸರ ಆರಾಧನ ದಿನವಾದ ಇಂದು ಶ್ರೀದಾಸರನ್ನು  ಸ್ಮರಣೆಮಾಡಿ,ಭಕ್ತಿಪೂರ್ವಕ ನಮಸ್ಕಾರಗಳನ್ನು
ಅರ್ಪಿಸಿ ಅವರ ಅಂತರ್ಯಾಮಿಯಾದ ಶ್ರೀಪ್ರಾಣದೇವರು,ಶ್ರೀಶ್ರೀನಿವಾಸದೇವರ ಅನುಗ್ರಹಕ್ಕೆ ಪಾತ್ರರಾಗೋಣ.

 ‌(received in WhatsApp)

***

🙏ಹರೇ ಶ್ರೀನಿವಾಸ🙏
 ಶ್ರೀ ಮೊದಲಕಲ್ಲು   ಶೇಷದಾಸರು (ಶ್ರೀಗುರು ವಿಜಯವಿಠಲದಾಸರು) ಇಂದು ಶ್ರೀದಾಸರ ಆರಾಧನಾ ಪುಣ್ಯಸ್ಮರಣೆ.
ತುಂಗಭದ್ರಾ-ಕೃಷ್ಣಾನದಿಗಳ ಮಧ್ಯೆದಲ್ಲಿರುವ ಮೊದಲಕಲ್ಲು ಅಥವಾ ಆದಿಶಿಲೆ ಶ್ರೀವೇಂಕಟೇಶದೇವರು ನೆಲೆನಿಂತ ಪರಮಪವಿತ್ರವಾದ ನೆಲ. ಇಂತಹ ಪುಣ್ಯಭೂಮಿಯಲ್ಲಿ ತಮ್ಮ ಕಠೋರವಾದ ತಪಶ್ಚರ್ಯದಿಂದ ಅಪರೋಕ್ಷಜ್ಞಾನವನ್ನು ಹೊಂದಿ ಭಗವಂತನ ಕಾರುಣ್ಯಕ್ಕೆ ಪಾತ್ರರಾದ ಪುಣ್ಯಪುರುಷರು ಶ್ರೀಮೊದಲಕಲ್ಲು ಶೇಷದಾಸರು. ಗದ್ವಾಲ ಸಂಸ್ಥಾನದ ಸಮೀಪದಲ್ಲಿರುವ ದರೂರು ಎಂಬ ಗ್ರಾಮದಲ್ಲಿ ಜನಿಸಿದ ಶೇಷಪ್ಪನವರು ಆ ಗ್ರಾಮದ ಕುಲಕರ್ಣಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಶ್ರೀಶೇಷಪ್ಪನವರು ಗದ್ವಾಲಿಗೆ ಹೋಗಿಬರುವ ವಿದ್ವಾಂಸರು, ಸದ್ಗೃಹಸ್ಥರಿಗೆ ವಿಶೇಷವಾಗಿ ಆತಿಥ್ಯ ಮಾಡುತ್ತಿದ್ದರು. ಗ್ರಾಮಾಧಿಕಾರಿಯ ಸ್ಥಾನ ಅತ್ಯಂತ ಪ್ರಭಾವಶಾಲಿಯಾದ ಅಧಿಕಾರವಾದುದರಿಂದ ಮತ್ತು ಯಥೇಚ್ಛವಾದ ಧನಸಂಪತ್ತು ಇದ್ದುದರಿಂದ ಶೇಷಪ್ಪನವರ ಜೀವಿತ ಸುಖಮಯವಾಗಿಯೇ ಇತ್ತು. ಸ್ವಭಾವತ: ಸಜ್ಜನರೂ, ಉದಾರಿಗಳೂ ಆದ ಶೇಷಪ್ಪನವರಿಗೆ ಸುತ್ತಮುತ್ತಲಿನ ಪ್ರದೇಶದಲ್ಲಿ ಜನರೂ ಅಪಾರವಾದ ಗೌರವವನ್ನು ನೀಡುತ್ತಿದ್ದರು. ಶೇಷಪ್ಪನವರು ಒಮ್ಮೆ ಸರಕಾರಕ್ಕೆ ಸಲ್ಲಿಸಬೇಕಾದ ಹಣ ಸಂದಾಯ ಮಾಡಲು ವಿಳಂಬವಾಯಿತು. ಗದ್ವಾಲ್ ಸಂಸ್ಥಾನವನ್ನು ಪಾಲಿಸುತ್ತಿದ್ದ ಸ್ವಭಾವತ: ದುಷ್ಟನಾಗಿದ್ದ ಸೋಮಭೂಪಾಲ ನೆಂಬುವನು ಇದರಿಂದ ಅಸಮಾಧಾನ ಹೊಂದಿ ಶೇಷಪ್ಪನವರನ್ನು ಆಸ್ಥಾನಕ್ಕೆ ಕರೆಕಳುಹಿಸಿ ಶೇಷಪ್ಪನವರ ತಲೆಯ ಮೇಲಿನ ರುಮಾಲು ಕೆಳಗೆ ಉರುಳುವಂತೆ ಹೊಡೆಸಿದ. ಇದರಿಂದ ಮನನೊಂದ ಶೇಷಪ್ಪನವರು ಕೆಳಗೆ ಬಿದ್ದ ರುಮಾಲನ್ನು ಮತ್ತೆ ಧರಿಸೆನೆಂದು ಶಪಥಮಾಡಿ, ಲೌಕಿಕವಾದ ವೃತ್ತಿಗೆ ತಿಲಾಂಜಲಿ ನೀಡಿ ಚಿಂತರವೇಲಿಯ ಪ್ರಾಣದೇವರ ಸನ್ನಿಧಿಗೆ ತೆರಳಿ ಕಠೋರವಾದ ತಪಶ್ಚರ್ಯೆಯಲ್ಲಿ ತೊಡಗಿದರು. ಕೇವಲ ಬೇವಿನ ಸೊಪ್ಪಿನ ಗುಳಿಗೆಯಿಂದ ಪ್ರಾಣಧಾರಣ ಮಾಡಿಕೊಂಡು ಪ್ರಾಣನಾಥನ ಸೇವೆಯಲ್ಲಿ ತೊಡಗಿದ ಶೇಷಪ್ಪನವರು ನಂತರ ಮಹಾನುಭಾವರಾದ ಶ್ರೀವಿಜಯದಾಸಾರ್ಯರ ಜನ್ಮಭೂಮಿ ಚೀಕಲಪರವಿಯಲ್ಲಿ ಶ್ರೀಅಶ್ವತ್ಥನಾರಸಿಂಹನನ್ನು ಸೇವಿಸಿದರು. ಶ್ರೀವಿಜಯದಾಸಾರ್ಯರು ಪರಂಧಾಮವನ್ನು ಸೇರಿದ ಪುಣ್ಯಭೂಮಿ ಚಿಪ್ಪಗಿರಿಗೆ ಬಂದು ಶ್ರೀವಿಜಯ ಪ್ರಭುಗಳನ್ನು ಸೇವಿಸಿದ ಶೇಷಪ್ಪನವರಿಗೆ ತಾವು ಹಿಂದೆ ಸೇವಿಸಿದ ಸರ್ವೋತ್ತಮ, ಜೀವೋತ್ತಮರ ಅನುಗ್ರಹದ ಫಲರೂಪವಾಗಿ ವಿಜಯರಾಯರಿಂದ ಸ್ವಪ್ನದ್ವಾರಾ 'ಗುರುವಿಜಯವಿಠಲ' ಎಂಬ ಅಂಕಿತ ದೊರೆಯಿತು. ತಮ್ಮ ಅಸದೃಶವಾದ ತಪಸ್ಸಿನಿಂದ ಅಪಾರವಾದ ಸಿದ್ಧಿಯನ್ನು ಪಡೆದ ಶ್ರೀಶೇಷದಾಸರು ಶ್ರೀವಿಜಯದಾಸಾರ್ಯರ ಸೂಚನೆಯಂತೆ ಯಂತ್ರೋದ್ಧಾರಕನನ್ನು, ನವಬೃಂದಾವನದಲ್ಲಿ ನೆಲೆಸಿರುವ ಶ್ರೀಪದ್ಮನಾಭತೀರ್ಥರು, ಶ್ರೀವ್ಯಾಸತೀರ್ಥರೇ ಮೊದಲಾದ ಯತಿವರೇಣ್ಯರನ್ನು ಸೇವಿಸಿದರು. ಶ್ರೀಯಂತ್ರೋದ್ಧಾರಕ ಪ್ರಾಣದೇವರನ್ನು ಸ್ತುತಿಸಿರುವ 'ನಂಬಿದೆ ನಿನ್ನ ಪಾದ ಗುರು ಮುಖ್ಯಪ್ರಾಣ ನಂಬಿದೆ ನಿನ್ನ ಪಾದ ಡಂಭವ ತೊಲಗಿಸಿ ಡಿಂಬದೊಳಗೆ ಹರಿಯ ಬಿಂಬ ಪೊಳೆವಂತೆ ಮಾಡೊ' ಶ್ರೀಶೇಷದಾಸರ ಮೊದಲ ಕೃತಿ ಎನ್ನಲಾಗಿದೆ. ತಮ್ಮ ಜನ್ಮಸ್ಥಳ ದರೂರಿನಲ್ಲಿ ಶ್ರೀಪಾರ್ಥಸಾರಥಿ ದೇವಸ್ಥಾನವನ್ನು ನಿರ್ಮಿಸಿದ ಶ್ರೀಶೇಷದಾಸರು ಅಲ್ಲಿ ಅನೇಕ ಜನೋಪಯೋಗಿ ಕಾರ್ಯಗಳನ್ನು ಮಾಡಿದರು. ಮೊದಲಕಲ್ಲಿನಲ್ಲಿ ನೆಲೆಸಿ ಶ್ರೀವೇಂಕಟೇಶದೇವರರನ್ನು, ಶ್ರೀರುದ್ರದೇವರನ್ನು ವಿಶೇಷವಾಗಿ ಉಪಾಸನೆ ಮಾಡಿದ ಶ್ರೀಶೇಷದಾಸರು ಮೊದಲಕಲ್ಲು ಶೇಷದಾಸರೆಂದೇ ಪ್ರಖ್ಯಾತರಾದರು. ತಮ್ಮ ಯೋಗಸಿದ್ಧಿಯಿಂದ ಅಸಂಖ್ಯ ಮಹಿಮೆಗಳನ್ನು ತೋರಿ ಮೊದಲಕಲ್ಲು ಕ್ಷೇತ್ರದಲ್ಲಿಯೇ ಶ್ರೀಹರಿಯ ಪಾದವನ್ನು ಸೇರಿದ ಶ್ರೀಮೊದಲಕಲ್ಲು ಶೇಷದಾಸರು ಶ್ರೀವಿಜಯದಾಸಾರ್ಯರ 'ಚಕ್ರಾಬ್ಜಮಂಡಲ'ದ ನಕ್ಷೆಯನ್ನು ರಚಿಸಿದ್ದಾರೆ. ಅನೇಕ ಸುಳಾದಿ,ಉಗಾಭೋಗ, ಕೀರ್ತನೆಗಳನ್ನು ರಚಿಸಿರುವ ಶ್ರೀಶೇಷದಾಸರ ಶೈಲಿ ಅತ್ತಂತ ಗಂಭೀರವಾದ ಮತ್ತು ತತ್ತ್ವಗರ್ಭಿತವಾದ ಶೈಲಿಯಾಗಿದೆ. ಸಂಸ್ಕೃತಭಾಷೆಯನ್ನು ಹದವರಿತು ಬಳಸಿರುವ ಶ್ರೀಶೇಷದಾಸರ ಕನ್ನಡಭಾಷೆಯೂ ಅಷ್ಟೇ ಗಂಭೀರವಾಗಿದೆ. ಶ್ರೀಶೇಷದಾಸರ ಸುಳಾದಿಗಳಲ್ಲಿಯೂ ಶ್ರೀಹರಿಯ, ಶ್ರೀಮಹಾಲಕ್ಷ್ಮಿಯ, ಮುಖ್ಯಪ್ರಾಣನ ವಿಶೇಷವಾದ ಸ್ತುತಿಗಳಿವೆ. ಆತ್ಮನಿವೇದನೆ ಬಹುತೇಕ ಸುಳಾದಿಗಳ ಸ್ಥಾಯೀಭಾವವಾಗಿದೆ. "ನಿನ್ನಿಂದ ನುಡಿವೆ,ನಿನ್ನಿಂದ ಕೇಳುವೆ ನಿನ್ನಿಂದ ಪೋಗುವೆ ನಿನ್ನಿಂದ ಬರುವೆ ನಿನ್ನಿಂದ ಮಾಡುವೆ ಸಕಲ ಕರ್ಮಾಕರ್ಮ ನಿನ್ನ ವ್ತತಿರಿಕ್ತ ಶ್ವಾಸೋಚ್ಛ್ವಾಸಕ್ಕೆ ಎನ್ನ ಸ್ವಾತಂತ್ರ್ಯವು ಇಲ್ಲ" ಹೀಗೆ ಸರ್ವವೂ ಭಗವದಧೀನವೆನ್ನುವ ಶ್ರೀಮೊದಲಕಲ್ಲು ಶೇಷದಾಸರು 'ಕೃಷ್ಣಾ ಎನಗೆ ನೀನು ಪ್ರೀತನಾಗುತಲಿರೆ ದುಷ್ಟ ಕರ್ಮಗಳುಂಟೆ ಗುರು ವಿಜಯವಿಠ್ಠಲ' ಎಂದು ಭಗವಂತ ಅನುಗ್ರಹಿಸಿದರೆ ದುಷ್ಟಕರ್ಮಗಳ ಲೇಪವಿಲ್ಲವೆನ್ನುತ್ತಾರೆ, ಗೀತಾಸುಳಾದಿ,ಲೋಕನೀತಿಯ ಸುಳಾದಿಗಳನ್ನು ರಚಿಸಿರುವ ಶ್ರೀಮೊದಲಕಲ್ಲು ಶೇಷದಾಸರ ತಾತ್ವಿಕ ಹಿನ್ನೆಲೆಯ ಸುಳಾದಿಗಳು ಅತ್ಯಂತ ಶಾಸ್ತ್ರೀಯ ಅನುಸಂಧಾನವನ್ನು ವಿವರಿಸಿರುವ ಸುಳಾದಿಗಳಾಗಿವೆ. ಸುಳಾದಿಗಳನ್ನು ಅಧಿಕ ಸಂಖ್ಯೆಯಲ್ಲಿ ರಚಿಸಿರುವ ಶ್ರೀಶೇಷದಾಸರು ರಚಿಸಿರುವ ಶ್ರೀರಾಘವೇಂದ್ರಯತಿಗಳ ಸ್ತೋತ್ರಸುಳಾದಿ ಮಂತ್ರಾಲಯ ಮಹಾಪ್ರಭುಗಳ ಮಹಿಮೆಯನ್ನು ವರ್ಣಿಸುತ್ತದೆ. ಕಲಿನಿಗ್ರಹ ಸುಳಾದಿ ಎಂಬುದು ಸಹಾ ವಿಶೇಷವಾದ ಸುಳಾದಿ. ಸುಳಾದಿಗಳಲ್ಲಿ ತಮ್ಮ ಹಿಂದಿನ ಜನ್ಮಗಳ ಬಗೆಗಿನ ಉಲ್ಲೇಖವನ್ನೂ ಮಾಡಿರುವುದು ವಿಶೇಷ.ಗೀತಾ ಪ್ರಮೇಯಭಾಗವನ್ನು ಗದ್ಯರೂಪದಲ್ಲಿ ರಚಿಸಿರುವ ಶ್ರೀಮೊದಲಕಲ್ಲು ಶೇಷದಾಸರು ತಮ್ಮ ಮಕ್ಕಳಾದ ಭೀಮದಾಸರು ಹಾಗೂ ಗೋವಿಂದದಾಸರಿಗೆ ಹರಿದಾಸದೀಕ್ಷೆ ನೀಡಿ ಹರಿದಾಸಸಾಹಿತ್ಯಪರಂಪರೆಯನ್ನೂ ಮುಂದುವರೆಸಿದ ಶ್ರೀಮೊದಲಕಲ್ಲು ಶೇಷದಾಸರ ಸಾಹಿತ್ಯದ ತಾತ್ತ್ವಿಕ ಅನುಸಂಧಾನ ಇನ್ನೂ ಹೆಚ್ಚಿನ ರೀತಿಯಲ್ಲಿ ಆಗಬೇಕಿದೆ ಎನಿಸುತ್ತಿದೆ. 
- ವೇಣುಗೋಪಾಲ ಬಿ.ಎನ್
***
ಮೊದಲಕಲ್ಲು (ಆದಿಕಲ್ಲು) ಶೇಷದಾಸರು
(ಹರಿಪಾದ ಸೇರಿದ  ದಿನ ವೈಶಾಖ ಶುಧ್ಧ  ಅಷ್ಟಮಿ , ತನ್ನಿಮಿತ್ತ ಈ ಲೇಖನ)
(ಕಾಲವು ಕ್ರಿ.ಶ. 1806-1885)
ಮೊದಲಕಲ್ಲು ಗದ್ವಾಲ ಸಂಸ್ಥಾನದಲ್ಲಿ ಒಂದು ಪವಿತ್ತ ಕ್ಷೇತ್ರವೆನಿಸಿದೆ. ಊರಿನ ಎರಡೂ ಬದಿಗಳಲ್ಲಿ ತುಂಗಭದ್ರಾ ಮತ್ತು ಕೃಷ್ಣಾ ನದಿಗಳು ಹರಿಯುತ್ತಿದ್ದು ಸ್ವಯಂವ್ಯಕ್ತ ಶ್ರೀನಿವಾಸನ ಕ್ಷೇತ್ರವಾಗಿದೆ. ಪಕ್ಕದಲ್ಲಿರುವ ದೊಡ್ಡ ಬಂಡೆಯಲ್ಲಿ ರಂಗನಾಥ, ಶ್ರೀನಿವಾಸ, ಮಹಾಲಕ್ಷ್ಮೀ ,ವರಾಹ ಮತ್ತು ನರಹರಿಯ ಮೂರ್ತಿಗಳು ಮೂಡಿವೆ. ಪಕ್ಕದಲ್ಲಿ ಕೊಳವಿದ್ದು ಅದನ್ನು ಪುಷ್ಕರಣಿ ಎಂದು ಕರೆಯುತ್ತಾರೆ. 
ಗದ್ವಾಲಕ್ಕೆ ಸ್ವಲ್ಪದೂರದಲ್ಲಿ ದರೂರ ಎಂಬಗ್ರಾಮದಲ್ಲಿ ಶೇಷಪ್ಪನೆಂಬುವನು ಕುಲಕರ್ಣಿ ಮನೆತನದಲ್ಲಿ ಕ್ರಿ.ಶ. 1806ರಲ್ಲಿ ಜನ್ಮ ತಾಳಿದನು. ಭಾರದ್ವಾಜ ಗೋತ್ರದವನಾದ ಇವನನ್ನು ಜನ ಬಹು ಆದರದಿಂದ ನೋಡುತ್ತಿದ್ದರು. ಗದ್ವಾಲ ಸಂಸ್ಥಾನದ ರಾಜ  ದರ್ಬಾರಕ್ಕೆ ಬರುತ್ತಿದ್ದ ಆನಂದದಾಸರು ಮತ್ತು ಯಳಮೇಲಿ ಹಯಗ್ರೀವ ಆಚಾರ್ಯರು ಉದ್ದಾಮ ಪಂಡಿತರಿದ್ದು ಶೇಷಪ್ಪನ ಅತಿಥಿಗಳಾಗಿ ಆದರಿಸಲ್ಪಡುತ್ತಿದ್ದರು. ಸಂಸ್ಥಾನದ ರಾಜನು ಕಠಿಣ ಮನಸ್ಸಿನವನಾಗಿದ್ದು ಅಧಿಕಾರಿಗಳನ್ನು ಸಂಶಯ ದೃಷ್ಟಿಯಿಂದ ನೋಡುತ್ತಿದ್ದ. ಶೇಷಪ್ಪನು ಅವನ ಸಂಸ್ಥಾನದಲ್ಲಿ ಕುಲಕರ್ಣಿ ವೃತ್ತಿ ಮಾಡುತ್ತಿದ್ದು  ನಂಬಿಕೆಯ  ವ್ಯಕ್ತಿಯಾಗಿದ್ದು ಎಲ್ಲರಿಗೂ ಬೇಕಾದವನಾಗಿದ್ದ. ದುರಹಂಕಾರಿಯಾದ ಅರಸನು ಇವನ ಮೇಲೆ ಸುಳ್ಳು ಆರೋಪ ಹೊರಿಸಿ ಸೇವಕರಿಂದ ದಂಡಿಸಿ ತುಂಬಾ ಅಪಮಾನ ಮಾಡಿದ. ಅಭಿಮಾನಿಯಾದ ಶೇಷಪ್ಪನು ತನ್ನ ವೃತ್ತಿಯನ್ನು ತ್ಯಜಿಸಿದನು. ಇಂತಹ ಉತ್ತಮ ಮತ್ತು ನಂಬುಗೆಯ ಶೇಷಪ್ಪನಿಗೆ ಆದ ಆವಮಾನ ನೋಡಿ ಜನ ಮಮ್ಮಲ ಮರುಗಿದರು. ಶೇಷಪ್ಪನು ತನ್ನ ಊರಾದ ದರೂರಿಗೆ ಹೋಗದೇ ಚಿಂತಲರೇವಲಿಯಲ್ಲಿ ಶ್ರೀವ್ಯಾಸರಾಯರಿಂದ ಪ್ರತಿಷ್ಠಾಪಿಸಿದ ಹನುಮನ ಸೇವೆಯಲ್ಲಿ ನಿರತನಾದ.
ಮನೆಯ ಜನಕ್ಕೆ ನಾನು ಬರುವದಿಲ್ಲ. ಲೌಕಿಕವೃತ್ತಿಗೆ ತಿರುಗಿ ಬರಲಾರೆ ಎಂದು ಖಡಾಖಂಡಿತವಾಗಿ ಹೇಳಿದ. ನರನ ಸೇವೆ ಮಾಡೆ. ಹರಿಯ ಸೇವೆಯಲ್ಲಿ ನಿರತನಾಗಿರುವೆನು ಎಂದು ದೃಢನಿರ್ಧಾರದಿಂದ ಸತಿಸುತ ಇವರನ್ನು ತಿರುಗಿ  ಕಳಿಸಿದ. 
ಶೇಷಪ್ಪನು  ಕೃಷ್ಣೆಯಲ್ಲಿ ಸ್ನಾನ ಮಾಡಿ ಕೃಷ್ಠೆಯ  ನೀರಿನಿಂದ  ದೇವರಿಗೆ ಅಭಿಷೇಕ ಮಾಡಿ ಒಂಟಿ ಕಾಲಲ್ಲಿ ನಿಂತು ಆಂಜನೇಯನ ಮಂತ್ರ ಪಠಿಸುತ್ತ ಬೇವಿನ ಎಲೆಗಳನ್ನು ಅರೆದು ಗುಳಿಗೆ ಮಾಡಿ ಭುಜಿಸುತ್ತಿದ್ದನು.. ಮತ್ತೆ ಸಾಯಂಕಾಲ ನದಿ ಸ್ನಾನ ಹನುಮನ ಸೇವೆ ಇವನ ನಿತ್ಯ ದಿನಚರಿ ಆದವು. ದೇವರ ದರ್ಶನ ಮತ್ತು ಅನುಗ್ರಹ ಬೇಗನೇ ಆಗದೇ ಇದ್ದಾಗ ಹಾವಿನ ಹುತ್ತದಲ್ಲಿ ಕೈಹಾಕಿ ಕಡಿಸಿಕೊಂಡು ಸಾಯಬೇಕೆಂದಾಗ  ಹಾವು ಇವನಿಗೆ  ಏನೂ ಮಾಡದೇ ಹೆಡೆ ತೋರಿಸಿ ಹೊರಟು ಹೋಯಿತು. ಒಂದು ದಿನ ಸ್ವಪ್ನದಲ್ಲಿ ವಿಜಯದಾಸರು ಅಭಯವನ್ನಿತ್ತು ನಿನ್ನ ಮನೋಸಿಧ್ಧಿಯಾಗುವದು. ಚಿಂತೆ ಬೇಡ ಎಂದು ಹಲವು ಮಾರ್ಗ ಮತ್ತು ಉಪಾಯಗಳನ್ನು ಹೇಳಿದರು. ವಿಜಯದಾಸರು ತಿಳಿಸಿದಂತೆ ತಿಮ್ಮಪ್ಪ ಎಂಬ ಗೃಹಸ್ಥನು ಇವರಿಗೆ ಅಡಿಗೆ ಮಾಡಿ ಉಣ ಬಡಿಸಿ ಶೇಷಪ್ಪನ ಸೇವೆಯಲ್ಲಿ ಇರತೊಡಗಿದ. ಅಖಂಡ ಎರಡು ವರ್ಷಗಳ ಮಂತ್ರೋಪಾಸನೆಯಿಂದ  ಶೇಷಪ್ಪನಿಗೆ ಆಂಜನೇಯನ ಅನುಗೃಹದಿಂದ ಶ್ರೀರಾಮದೇವರ ದರ್ಶನ ಭಾಗ್ಯ ಉಂಟಾಯಿತು . ಇವನ ಕೀರ್ತಿ  ಎಲ್ಲೆಡೆ ಹರಡಿ ಈತನನ್ನು ಜನರು ಗೌರವಿತೊಡಗಿದರು. ಈತನ ವಾಕ್ ಸಿಧ್ಧಿಯು ಚುರುಕುಗೊಂಡು ಎಲ್ಲ ಮಾತುಗಳು ಸತ್ಯವಾಗತೊಡಗಿದವು.
ಮುಂದೆ ಚಿಕ್ಕಲಪರವಿಯಲ್ಲಿ ಶ್ರೀಅಶ್ವತ್ಥನರಸಿಂಹದೇವರ ಸೇವೆ ಮಾಡಿ ಚಿಪ್ಪಗಿರಿಗೆ ಬಂದರು. ವಿಜಯದಾಸರು ಇವರಿಗೆ ಸ್ವಪ್ನದಲ್ಲಿ ದರ್ಶನ ಕೊಟ್ಟು “ಗುರುವಿಠಲ” ಎಂಬ ಅಂಕಿತನಾಮ ಕರುಣಿಸಿದರು ಮತ್ತು ನವವೃಂದಾವನದಲ್ಲಿ ನರಹರಿತೀರ್ಥರ ಮತ್ತು ವ್ಯಾಸರಾಯರ ಸೇವೆ ಮಾಡು ನೀನು ಉಧ್ಧಾರವಾಗುವಿಯೆಂದು ತಿಳಿಸಿದರು. ಯಂತ್ರೋಧ್ಧಾರಕ ಪ್ರಾಣದೇವರ ಸೇವೆ ಮಾಡಿ “ನಂಬಿದೆ ನಿನ್ನ  ಮುಖ್ಯಪ್ರಾಣ “ ಎಂಬ ಮೊಟ್ಟಮೊದಲಿನ ಹಾಡನ್ನು ರಚಿಸಿ ಅರ್ಚಿಸಿದರು. ಅಲ್ಲಿ ಪ್ರಾಣದೇವರ ದರ್ಶನಲಾಭವು ಅವರಿಗಾಯಿತು.   ಈಗಾಗಲೇ ಅವರ ಹೆಸರು ಸಾಕಷ್ಟು  ಪ್ರಖ್ಯಾತವಾಗಿತ್ತು. 
ಚಿಂತಲರೇವಲಕ್ಕೆ ಬಂದ ಕೂಡಲೇ ಅವರ ದರ್ಶನಕ್ಕೆ ಜನರು ಮುಗಿಬಿದ್ದರು. ದೊಡ್ಡದೊಡ್ಡ ಜನರಿಂದ ಮಾನ್ಯತೆ ಪಡೆಯತೊಡಗಿದರು.
ಹಿಂದೆ ವೈಕುಂಠದಾಸರಾಗಿದ್ದವರೇ ನಂತರ ಪಂಗನಾಮ ತಿಮ್ಮಯ್ಯನಾಗಿದ್ದು ಈಗ ಶೇಷದಾಸರಾಗಿ ಪರೋಕ್ಷ ಜ್ಞಾನ ಪಡೆಯಲು ಸಾಧನೆ ಮಾಡುತ್ತಿರುವರು. ಇವೆಲ್ಲವುಗಳಿಂದ ವಾಕ್ ಸಿಧ್ಧಿ ಮತ್ತು ಅನೇಕ ಸಿಧ್ಧಿಗಳು ಉಂಟಾದವು. ಇದರಿಂದ ಇವರಿಗೆ ಧನ, ಕನಕ, ವಸ್ತ್ರ ಮುಂತಾದ ವಸ್ತು ವಡವೆಗಳು ದಾನವಾಗಿ ಬರುತ್ತಿದ್ದವು. ವಿಷಯ ಸುಖಕ್ಕೆ ಇವೆಲ್ಲ ಸಾಧನೆಗಳು ಎಂದು ಅರಿತಿದ್ದ ಅವರು ಚಿಂತಿತರಾಗಿ ಮೊದಲಕಲ್ಲಿನಲ್ಲಿ ಪ್ರಾಣದೇವರ ಅನುಜ್ಞೆಯಂತೆ ತಪ ಮಾಡಿ ಇಷ್ಟಾರ್ಥ ಪಡೆಯಲು ಮೊದಲಕಲ್ಲಿಗೆ ಬಂದರು. ಹೊರಡುವ ಮುಂಚೆ ಒಂದು ಸುಳಾದಿ ರಚಿಸಿ ಭಜಿಸಿದರು. “ಘನದಯಾನಿಧಿಯಾದ ಪವನರಾಯನೇ ನಮೋ , ಪುನರಪಿ ನಮೋ ನಿನ್ನ ಪಾದ ಸರಸೀರುಹಕ್ಕೆ”
ಮೊದಲಕಲ್ಲಿನ ಶಿವದೇವಾಲಯದಲ್ಲಿ ದಾಸರು ಮಹಾದೇವನನ್ನು ಕುರಿತು ಉಗ್ರ ತಪಸ್ಸು ಮಾಡಿ ಮಹಾದೇವನನ್ನು ಒಲಿಸಿಕೊಂಡು ಅನುಗ್ರಹ ಪಡೆದು ನಂತರ ಹರಿವಾಯುಗಳ ನಿರಂತರ ಧ್ಯಾನದಿಂದ ಹರಿ ಮತ್ತು ಗುರುಗಳ ಅನುಗ್ರಹ ಪಡೆದರು. ದಾಸರ ಕೀರ್ತಿ ದೇಶ, ದೇಶಗಳಲ್ಲಿ ಪಸರಿತೊಡಗಿತು. ಇವರ ಆಶೀರ್ವಾದದಿಂದ ಸಜ್ಜನರ, ದು:ಖ, ಚಿಂತೆ ಪರಿಹಾರವಾಗತೊಡಗಿದವು. ದಾಸರು 43 ಸುಳಾದಿ, 13 ಉಗಾಭೋಗ, 4 ಕೀರ್ತನೆಗಳನ್ನು ರಚಿಸಿದರು. ಇವರ ಸುಳಾದಿಗಳು ಬಹು ಮಹತ್ವ ಪಡೆದಿವೆ. 
ಶೇಷದಾಸರು ಅನೇಕ ಪವಾಡಗಳನ್ನು ತೋರಿಸಿದ್ದಾರೆ. ಅವುಗಳಲ್ಲಿ ಪ್ರಮುಖವು ..
1 ಬ್ರಹ್ಮರಾಕ್ಷಸನ ಬಾಧೆಗಳಿಂದ ಪರಿಹಾರ ಸೂಚಿಸಿ , ಬಾಧೆ ಪರಿಹಾರ ಮಾಡಿದ್ದು
2 ಕಾಶಿಯಾತ್ರೆ ಮಾಡುವ ಒಂದು ಕುಟುಂಬಕ್ಕೆ ಮೊದಲಕಲ್ಲಿನಲ್ಲಿಯೇ ಗಂಗೆ ತರಿಸಿ ಸ್ನಾನ         ಮಾಡಿಸಿದ್ದು. 
ತಾವು ಜನ್ಮ ತಳೆದ ದರೂರಿನಲ್ಲಿ ಸಜ್ಜನರ ಸಹಕಾರದಿಂದ ಪಾರ್ಥಸಾರಥಿಯನ್ನು ಪ್ರತಿಷ್ಠಾಪಿಸಿದರು. ಜನರ ಅನುಕೂಲಕ್ಕಾಗಿ ವಾಸದ ಮನೆಗಳು , ಮತ್ತಿತರ ವ್ಯವಸ್ಥೆ ಮಾಡಿದರು. ಅವರ  ವಾಸಕ್ಕೆ ಒಂದು ಗೃಹ ನಿರ್ಮಾಣವಾಯಿತು. ಮೊಮ್ಮಗನಿಗೆ ಅಲ್ಲಿಯೇ ಮುಂಜಿವೆ ಮಾಡಿಸಿ ಗದ್ವಾಲಿನಲ್ಲಿ ಮೂರು ದಿನಗಳಿದ್ದು  ಮತ್ತೆ ಮೊದಲುಕಲ್ಲು ಸೇರಿದರು. ಮುಂದೆ ವೈಶಾಖಶುಧ್ಧ ಪಂಚಮಿಯಂದು ದಾಸರಿಗೆ ದೇಹಾಲಸ್ಯವಾಯಿತು. ತಮ್ಮದು  ಇನ್ನು ಮೂರೇ ದಿನಗಳೆಂದು ಅರಿತು ತಮ್ಮ ಮಕ್ಕಳಾದ ಭೀಮದಾಸರು, ಗೋವಿಂದದಾಸರು ಇವರಿಗೆ  ಅಂಕಿತ ಅನುಗ್ರಹಿಸಿ ಉಪದೇಶ ಮಾಡಿದರು. ಶಾಲಿವಾಹನ ಶಕೆ 1807 ಪಾರ್ಥಿವ ಸಂವತ್ಸರದ ವೈಶಾಖ ಶುಧ್ಧ ಅಷ್ಟಮಿಯ ದಿನ ಎಂಭತ್ತು ವರ್ಷದ ದಾಸರು  ತಮ್ಮ ಶರೀರ ತ್ಯಜಿಸಿ ಹರಿಪಾದ ಸೇರಿದರು.
ವೈಶಾಖ ಶುಧ್ಧ ಅಷ್ಟಮಿಯಂದು ಮೊದಲಕಲ್ಲಿನಲ್ಲಿ ಇವರ ಆರಾಧನೆಯು ವಿಜ್ರಂಭಣೆಯಿಂದ ನಡೆಯುತ್ತದೆ. ಅರ್ಜುನ ಆಂಶದವರಾದ ಇವರು , ರವಿವಾರ ಸುಳಾದಿ, ಸೋಮವಾರಸುಳಾದಿ ಎಂಬ ಉತ್ತಮವಾದ ಸುಳಾದಿಗಳನ್ನು ರಚಿಸಿದ್ದಾರೆ. ಪಂಚಪ್ರಮೇಯ ಎಂಬ ಕೃತಿಯನ್ನು ರಚಿಸಿದ್ದಾರೆ. 
ಒಟ್ಟಾರೆ ದಾಸಸಾಹಿತ್ಯದಲ್ಲಿ ತಮ್ಮದೇ ಆದ ಛಾಪು ಮೂಡಿಸಿ ಹರಿದಾಸರ ಪಂಕ್ತಿಯಲ್ಲಿ ಶೋಭಿಸುತ್ತಿದ್ದಾರೆ.  

-ಕೃಷ್ಣ ನಾರಾಯಣ ಬೀಡಕರ
 ನಿವೃತ್ತಬ್ಯಾಂಕ ವ್ಯವಸ್ಥಾಪಕರು 
  ಕೆಎಚ್ ಬಿ ಕಾಲನಿ, ವಿಜಯಪುರ. -3
***
 


Modalakallu Shesha Dasa1806-1885Shesha DasaGuru Vijaya Vittala (swapnalabda)Vijaya Dasa (swapna)ModalakalluVaishaka Shudda Ashttami



No comments:

Post a Comment