Monday 1 July 2019

sundara vittala dasaru gorebala hanumanta rayaru 1968 lingasuguru pushya bahula dwadashi ಸುಂದರ ವಿಠ್ಠಲ ದಾಸರು ಗೋರೆಬಾಳ ಹನುಮಂತ ರಾಯರು 1968


check pushya shukla or bahula
Sri Sundara Vittala Dasaru
puShya bahula dwAdashI is Aradhana of sri sundara viTTala dAsaru.

Period: 1893 - 1968
Ankita given by: guru jagannAtha dAsaru
janma nAma: gOrEbALa Hanumantha Rao of lingasuguru
Father: Venkata Rao
Mother: Balamma

DhyAna sloka

srimantham dAsa sAhityam sarvathOpi pravarthayan |
sarvam thathya jyOtimAn vandeham sundarapitham ||


He was a leading lawyer. He was a contemporary and relative of shri varadEsha dAsaru. He established the varadEndra dAsa sAhitya maNDali in 1944. He sold hundreds of acres of his land to research, compile and publish dAsa sAhitya leterature. We all have access to dAsa sAhitya today because of the tremendous amount of wealth and effort spent by shri sundara viTTala dAsaru. We are all indebted to dAsaru.

He also completed the construction of rathA at kuppi bhImasEna dEvaru. 

shri sundara viTTala dAsa guruvAntargata, bhArati ramaNa mukhyaprANAntargata, sridEvi bhUdEvi samEta shri srinivasa dEvara pAdAravindakke gOvindA gOvindA...

****
He was born as Gorebale Hanumantha Rao in Lingasugur in Raichur district to Venkat Rao and Balamma. He became a successful lawyer, before being initiated into Haridasa parampare.
He was a disciple of Guru Jaganntha Dasaru of Kosigi and got the Anikta Sundara Vittala from him.
He wrote under the ankita Sundara Vittala.

*****

ದಾಸ ಸಾಹಿತ್ಯ ಉಳಿಸಿ ಬೆಳೆಸಿದ ಗೊರೆಬಾಳ ಹನುಮಂತ ರಾಯರು ರಾಯಚೂರು ಜಿಲ್ಲೆ ಲಿಂಗಸುಗೂರು ತಾಲ್ಲೂಕಿನ ಗೊರೆಬಾಳ ಗ್ರಾಮದಲ್ಲಿ ಜನಿಸಿದ ಹನುಮಂತರಾಯರು ವೃತ್ತಿ ಯಲ್ಲಿ ವಕೀಲರಾದರೂ ಪ್ರವ್ರೃತಿಯಿಂದ ದಾಸಸಾಹಿತ್ಯ ಅಧ್ಯಯನ ಕಾರರಾಗಿದ್ದರು. ಹಳ್ಳಿ ಹಳ್ಳಿಗಳಲ್ಲಿ ಸಂಚರಿಸಿ ಶ್ರೀಪಾದರಾಜರಿಂದ ಮೊದಲ್ಗೊಂಡು ಅನೇಕ ದಾಸರ ಹಸ್ತಪ್ರತಿಗಳನ್ನು,ತಾಳೆಗರಿಗಳನ್ನು ಸಂಗ್ರಹಿಸಿದರು.ಜನರಿಂದ ಕೇಳಿ ತಿಳಿದು ತಾವೇ ಸ್ವತಹ ಟಿಪ್ಪಣಿ ಮಾಡಿಕೊಂಡು ಕೈಬರಹದ ಪ್ರತಿಯಲ್ಲಿ ಬರೆದುಕೊಂಡು ಅಮೂಲ್ಯ ದಾಸಸಾಹಿತ್ಯದ ಸಂಪತ್ತನ್ನು ಸಂಪಾದಿಸಿದರು. ಮೂಲತಃ ಧಾರ್ಮಿಕ ವಾಗಿ ಹಾಗೂ ಆರ್ಥಿಕವಾಗಿ ಸುಸಂಪನ್ನ ಕುಟುಂಬದ ಹಿನ್ನೆಲೆಯುಳ್ಳ ಹನುಮಂತರಾ ಯರು ದಾಸ ಸಾಹಿತ್ಯದ ಸಂಗ್ರಹಕ್ಕಾಗಿ ಹಸ್ತಪ್ರತಿಗಳ ಸಂಪಾದನೆಗಾಗಿ ತಮ್ಮ ಹೊಲ ಮನೆಗಳನ್ನು ಮಾರಿ ಕತ್ತಲ ಮೂಲೆಯಲ್ಲಿ ಅಡಗಿ ಕುಳಿತಿದ್ದ ದಾಸ ಸಾಹಿತ್ಯವನ್ನು ಬೆಳಕಿಗೆ ತಂದರು. ವಿಜಯ ದಾಸರು ರಚಿಸಿದ ಸುಳಾದಿಗಳ ಮೂಲ ಹಸ್ತಪ್ರತಿಗಳನ್ನು ಸಂಗ್ರಹಿಸಿ ಪ್ರಕಟಣೆ ಮಾಡುವುದರ ಜೊತೆಗೆ 79 ಪುಸ್ತಕಗಳನ್ನು ತಾವೇ ಸ್ವತಹ ಪ್ರಕಟಿಸಿ ಪುಸ್ತಕ ಪ್ರಕಾಶಕರಾದರು. ಇದರೊಂದಿಗೆ 'ದ್ವೈಮಾಸಿಕ' ಎಂಬ ಆಧ್ಯಾತ್ಮದ ಪತ್ರಿಕೆಯನ್ನು ಹೊರತಂದರು. ದಾಸ ಸಾಹಿತ್ಯ ಸಂಗ್ರಹ ಸಂಪಾದನೆ ಪ್ರಕಾಶನದ ಜೊತೆಗೇ, ತಾವೇ ಖುದ್ದು ನಾಡಿನೆಲ್ಲೆಡೆ ಏರ್ಪಡಿಸ ಲಾಗುತ್ತಿದ್ದ ಧಾರ್ಮಿಕ ಸಭೆ ಸಮಾರಂಭಗಳಲ್ಲಿ ಭಾಗ ವಹಿಸಿ, ಪುಸ್ತಕ ಪ್ರದರ್ಶನ ಮತ್ತು ಮಾರಾಟ ಕಾರ್ಯದಲ್ಲಿ ತೊಡಗಿ ಜನರಲ್ಲಿ ಧಾರ್ಮಿಕ ಆಸಕ್ತಿ ಹಾಗೂ ದಾಸಸಾಹಿತ್ಯದ ಆಸಕ್ತಿ ಬೆಳೆಯಲು  ಕಾರಣ ರಾದರು. ಹನುಮಂತ ರಾಯರು ದಾಸ ಸಾಹಿತ್ಯ ಸಂಗ್ರಹ, ಸಂಪಾದನೆ, ಪ್ರಚಾರದಲ್ಲಿ ತೊಡಗಿದ್ದರು ಕೂಡ ತಾವು ಸಹ ಸ್ವತಃ ಹರಿ ದಾಸರಾಗುವುದನ್ನು ಮರೆಯ ಲಿಲ್ಲ. ಗುರು ಜಗನ್ನಾಥ ರಿಂದ 'ಸುಂದರ ವಿಠಲ' ಎಂಬ ಅಂಕಿತ ವನ್ನು ಪಡೆದುಕೊಂಡು ಕೀರ್ತನೆ, ಸುಳಾದಿ, ಉಗಾ ಭೋಗ ಸ್ತೋತ್ರಗಳ ಜೊತೆಗೆ ವೆಂಕಟೇಶ ಮಹಾತ್ಮೆ ಹಾಗೂ ಸತ್ಯ ನಾರಾಯಣ ಕಥೆಯನ್ನು ಸುಳಾದಿ ರೂಪದಲ್ಲಿ ರಚಿಸಿ, ಹರಿಕಥಾಮೃತಸಾರ ಹಾಗೂ ಸುಮಧ್ವವಿಜಯಕ್ಕೆ ಭಾವಾರ್ಥ ಗಳನ್ನು ಬರೆದಿದ್ದಾರೆ. ಹನುಮಂತರಾಯರು ತಾವೊಬ್ಬರೇ ಏಕವ್ಯಕ್ತಿ ಯಾಗಿ ದಾಸ ಸಾಹಿತ್ಯದ ಅನೇಕ ಕಾರ್ಯಗಳನ್ನು ಮಾಡಿದ್ದರೂ ಸಹ ದಾಸ ಸಾಹಿತ್ಯದ ಬೆಳ ವಣಿಗೆ ಇನ್ನೂ ಹೆಚ್ಚಿನ ಪ್ರಮಾಣ ದಲ್ಲಿ ಆಗಲಿ ಎಂದು ಆಶಿಸಿ 1944 ರಲ್ಲಿ' ಶ್ರೀ ವರದೇಂದ್ರ ಹರಿದಾಸ ಸಾಹಿತ್ಯ ಮಂಡಳಿ' ಎಂಬ ಸಂಸ್ಥೆಯನ್ನು ಲಿಂಗ ಸುಗೂರಿನಲ್ಲಿ ಪ್ರಾರಂಭಿಸಿದರು. ದಾಸ ಸಾಹಿತ್ಯ ಸಂರಕ್ಷಕ' ಎಂಬ ಬಿರುದನ್ನು ಪಡೆದ ಹನುಮಂತ ರಾಯರು ಸಂಗ್ರಹಿಸಿದ ಇನ್ನೂ ಅದೆಷ್ಟೋ ಹಸ್ತಪ್ರತಿಗಳು, ತಾಳೆ ಗರಿಗಳು, ಮೂಲ ಕೈಬರಹದ ಪ್ರತಿಗಳು ರಾಶಿರಾಶಿಯಾಗಿ ಬಟ್ಟೆಗಳ ಗಂಟಿನಲ್ಲಿ ಅಡಗಿ ಕುಳಿತು ಕೊಂಡಿವೆ . ಅವು ಗಳನ್ನು ತೆಗೆದು ಸಂಸ್ಕರಿಸಿ ಸಂಪಾದಿಸಿ ಹನುಮಂತರಾಯ ಆಶಯ ದಂತೆ ದಾಸ ಸಾಹಿತ್ಯ ಉಳಿಸಿ ಬೆಳೆಸುವ  ನಿಟ್ಟಿನಲ್ಲಿ ನಾವೆಲ್ಲರೂ ಪ್ರಯತ್ನ ಪಡಬೇಕಾಗಿದೆ. ಸಂಗ್ರಹ.
******
ಶ್ರೀಯುತರಾದ ಮತ್ತು ಪ್ರಾತಃ ಸ್ಮರಣೀಯ ರಾದ ಶ್ರೀ ಗೋರೆಬಾಳ ಹನುಮಂತ ರಾಯರ ಬಗ್ಗೆ ಹಿರಿಯರಾದ ಕೌತಾಳಂ ಶ್ರೀ ಅಪ್ಪಣ್ಣ ಆಚಾರ್ಯರು ಹೇಳಿದ್ದು..ದಾಸ ಸಾಹಿತ್ಯ  ಪ್ರಚಾರದಲ್ಲಿ ಅವರು ಪಟ್ಟ ಪರಿಶ್ರಮ ಬಗ್ಗೆ ಆಚಾರ್ಯರು ಬಹುವಾಗಿ ಹೇಳಿದ್ದಾರೆ.ಒಮ್ಮೆ ಆಲಿಸಿ🙏

***
ಇಂದು ನಾವು ಹರಿದಾಸರೆಲ್ಲರ ರಚನೆಗಳ ಸರಿಯಾದ ಸಾಹಿತ್ಯವನ್ನು ಪಡೆದಿದ್ದೇವೆ ಅಂದರೆ ಅದು ಕೆಲವರು ಸಂಶೋಧಕರ ಮಹಾಯಜ್ಞದ ಫಲ. ಅಂತಹವರಲ್ಲಿ ಆದ್ಯರೆನಿಸಿಕೊಂಡಂತಹಾ, ತಮ್ಮ ಇಡೀ ಜೀವನವನ್ನು ಹರಿದಾಸ ಸಾಹಿತ್ಯದ ಅಧ್ಯಯನ, ಸಂಗ್ರಹ, ಪ್ರಕಟಣೆ, ಪ್ರಸಾರಗಳಿಗಾಗಿಯೇ ಅರ್ಪಿಸಿದವರು, ಒಂದು ತಪಸ್ಸಿನಂತೆ ಈ ಯಜ್ಞವನ್ನು ಪೂರೈಸಿ ಇವತ್ತು ನಮ್ಮೆಲ್ಲರಿಗೂ ಹರಿದಾಸ ಸಾಹಿತ್ಯದ ಸರಿಯಾದ ಸಾಹಿತ್ಯವನ್ನು, ದಾಸರ ಪಟ್ಟಿಯನ್ನು, ಯಾರು ಯಾರ ಶಿಷ್ಯರು ಅವರ ಕಾಲಮಾನ, ಕೃತಿಗಳು ಇವೆಲ್ಲವೂ ಸಹ ದೊರೆಯುವಂತೆ ದಾಖಲಿಸಿ ಇಟ್ಟಂತಹವರು, ಶ್ರೀ ಕೋಸಗಿ ಮುತ್ಯನವರು ಅರ್ಥಾತ್ ಶ್ರೀ ಗುರುಜಗನ್ನಾಥವಿಠಲರಿಂದ ಸುಂದರವಿಠಲ ಎನ್ನುವಂತಹ ಅಂಕಿತನಾಮವನ್ನು ಪಡೆದು ಅನೇಕ ಕೃತಿಗಳನ್ನು, ಸುಳಾದಿಗಳನ್ನು ರಚನೆ ಮಾಡುವುದಲ್ಲದೆ , ಶುದ್ಧ ಸಾಹಿತ್ಯವನ್ನು ಒದಗಿಸಿದವರಾದ, ಲಿಂಗಸೂಗೂರು ಶ್ರೀ  ಕುಪ್ಪಿಭೀಮಸೇನನ ರಥವನ್ನು ಪೂರ್ಣಗೊಳಿಸಿದವರಾದ, ದಾಸ ದೀಕ್ಷೆ ಪಡೆದವರಿಗೆ ಉಪಾಸನಾ ರೂಪದ ಪರಿಕಲ್ಪನೆಯಂತೆ ಅತ್ಯದ್ಭುತವಾದ ರಥವನ್ನು ನಿರ್ಮಿಸಿ ಶ್ರೀ ಮಾನವಿ ಪ್ರಭುಗಳಿಗೆ ಅರ್ಪಿಸಿದವರಾದ, ಶ್ರೀ ಮಧ್ವವಿಜಯಕ್ಕೆ ಮಂದಬೋಧಿನಿ ಎನ್ನುವ ಭಾವಾರ್ಥವನ್ನು ರಚಿಸಿದವರಾದ, ಶುದ್ಧ ಸಾಹಿತ್ಯವನ್ನು ಪ್ರಕಟಿಸಲು 1944 ರಲ್ಲಿ ವರದೇಂದ್ರ ಸಾಹಿತ್ಯ ಮಂಡಲಿಯನ್ನು ಆರಂಭಿಸಿದವರಾದ, ಸದಾ  ಪ್ರಾತಃಸ್ಮರಣೀಯರಾದ ಶ್ರೀ ಗೋರೆಬಾಳ ಹನುಮಂತರಾಯರ ಆರಾಧನಾ.

 ‌(received in WhatsApp)

***
ವಕೀಲರು ಹರಿದಾಸರಾದರು !
◆◆◆◆◆◆◆◆◆◆◆◆◆◆

ನ್ಯಾಯವಾದಿ ವೃತ್ತಿಯಲ್ಲಿ ಪ್ರಸಿದ್ಧಿ ಪಡೆದಿದ್ದರು ಆಧ್ಯಾತ್ಮಿಕ ಒಲುಮೆಯಿಂದ ಶ್ರೀಗುರುಜಗನ್ನಾಥದಾಸರಾಯರಿಂದ ಅಂಕಿತಾನುಗ್ರಹ ಪಡೆದು ಹರಿದಾಸರಾದವರಲ್ಲಿ ಶ್ರೀ ಸಂತೇ ಕೇಲೂರು ಸ್ವಾಮಿರಾಯರು (ಶ್ರೀ ವರದೇಶವಿಠಲರು) ಒಬ್ಬರಾದರೆ, ಇನ್ನೊಬ್ಬರು ಸುಂದರ ವಿಠಲಾಂಕಿತ ಶ್ರೀ ಗೋರೆಬಾಳು ಹನುಮಂತ ರಾಯರು. (ಕ್ರೀ.ಶ.1893-1969). ಶ್ರೀ ಗುರುಜಗನ್ನಾಥದಾಸರಾಯರಿಂದ ಅಂಕಿತಾನುಗ್ರಹ ಉಪದೇಶಾದಿಗಳು ಪಡೆದ ನಂತರ ಶ್ರೀ ಹನುಮಂತ ರಾಯರು ಒಳ್ಳೆ ಆದಾಯದ ತಮ್ಮ ವಕೀಲ ವೃತ್ತಿಯನ್ನು ಬಿಟ್ಟು , ಹರಿದಾಸರಾಗಿ ದಾಸ ಸಾಹಿತ್ಯ ಸಂಗ್ರಹ,ಪರಿಷ್ಕರಣೆ, ಸಂಪಾದನೆ ಪುಸ್ತಕ ಪ್ರಕಟಣೆ, ಮನೆಮನೆಗೂ ತಲುಪುವ ಕಾರ್ಯ ಏಕಾಂಗಿಯಾಗಿ ಮಾಡಿ, ಹರಿದಾಸ ಸಾಹಿತ್ಯವನ್ನು ಶ್ರೀಮಂತ ಗೊಳಿಸಿದರು. ತಮ್ಮ 14 ವರ್ಷದಿಂದ ಪ್ರಾರಂಭಿಸಿ ಯಾವಜ್ಜೀವನಪರ್ಯಂತ (ತಮ್ಮ ಜೀವನದ 30 ವರ್ಷಕ್ಕೂ ಮೀರಿದ ಕಾಲವನ್ನು ಅವಿಶ್ರಾಂತವಾಗಿ ಹರಿದಾಸ ಸಾಹಿತ್ಯದ ಗೂಢವಾದ ಭಾಂಡಾರವನ್ನು ಬೆಳಕಿಗೆ ತರಲು ಮೀಸಲಾಗಿಸಿ, ಚದರಿದ ಗುಪ್ತವಾದ ಮೂಲ ಕೃತಿಗಳನ್ನು ವಿಸ್ತಾರವಾಗಿ ಸಂಗ್ರಹಿಸಿ ಜಾಗರೂಕತೆಯಿಂದ ಮನಃಪೂರ್ವಕವಾಗಿ ಅಧ್ಯಯನ ನಡೆಸಿ ಗ್ರಂಥಾವಳಿಗಳನ್ನು ಪ್ರಕಾಶನ ಗೊಳಿಸಿದ್ದಾರೆ. ಜನರಿಂದ ಸಹಾಯ ಸಹಕಾರಗಳು ಲಭ್ಯವಾಗದಿದ್ದಾಗ, ತಮ್ಮ ದಾಸ ಸಾಹಿತ್ಯದ ಮೇಲಿನ ಅಪಾರವಾದ ಗೌರವಾಭಿಮಾನಗಳಿಂದ,  ತಮ್ಮ ಆಸ್ತಿಪಾಸ್ತಿಗಳನ್ನು ಮಾರಿ, ತಾವು ಬಡವರಾಗಿ ಜೀವನವನ್ನು ನಡೆಸಿದರು ಹರಿದಾಸ ಸಾಹಿತ್ಯವನ್ನು ಶ್ರೀಮಂತ ಗೊಳಿಸಿದ ಉದಾರ ವ್ಯಕ್ತಿತ್ವ ಶ್ರೀ ಗೊರೆಬಾಳು ಹನುಮಂತ ರಾಯರದು. ತಮ್ಮ ಚರಮ ಭಾಗದ ಜೀವನದಲ್ಲೂ ಅನಾರೋಗ್ಯವನ್ನು ಲಕ್ಷಿಸದೆ ಹರಿದಾಸ ಸಾಹಿತ್ಯದ ಬಗ್ಗೆ ವಿಶೇಷ ಸೇವಾ ಮಾಡಿ ದಾಸಸಾಹಿತ್ಯಾಭಿಮಾನಿಗಳಿಂದ ಸ್ತುತ್ಯರಾಗಿ ಅಜರಾಮರರಾಗಿದ್ದಾರೆ.

ಶ್ರೀಮಂತಂ ದಾಸಸಾಹಿತ್ಯಂ
ಸರ್ವತೋಪಿ ಪ್ರವರ್ದಯನ್|
ಸರ್ವಂ ತತ್ಯಜಯೋಧಿಮಾನ್
ವಂದೇ ತಂ ಸುಂದರಾಭಿದಮ್||

ಶ್ರೀಗುರುಶ್ರೀಶಪ್ರಾಣೇಶವಿಠಲಾಂಕಿತರಾದ ಗೊರೆಬಾಳ ಕುಲಕುರ್ಣಿ ವೆಂಕಪ್ಪ ಮತ್ತು ಬಾಳಮ್ಮ ಪುಣ್ಯದಂಪತಿಗಳ ಪುತ್ರರಾಗಿ ರಾಯಚೂರು ಜಿಲ್ಲೆ ಲಿಂಗಸುಗೂರು ತಾಲ್ಲೂಕಿನ ಗೊರೆಬಾಳ ಗ್ರಾಮದಲ್ಲಿ  ಕ್ರಿ.ಶ.1893ರಲ್ಲಿ ಜನಿಸಿ, ಬಾಲ್ಯದಲ್ಲಿಯೇ
ಶ್ರೀ ವರದೇಶ ವಿಠಲಾಂಕಿತ ಶ್ರೀ ಕೇಲೂರು ಸ್ವಾಮಿರಾಯರ ದಿವ್ಯಮಾರ್ಗದರ್ಶನ ದಲ್ಲಿ ಲೌಕಿಕ ಮತ್ತು ಅಧ್ಯಾತ್ಮಿಕವಾಗಿ ಸಂಪೂರ್ಣಪಳಗಿ, ಶ್ರೀ ಕೂಡ್ಲಿ ಆರ್ಯ ಅಕ್ಷೋಭ್ಯ ತೀರ್ಥ ಮಠಾಧೀಶರಾದ ಶ್ರೀಮದ್ರಘುಕಾಂತತೀರ್ಥ ಶ್ರೀಪಾದರಲ್ಲಿ  ಶಾಸ್ತ್ರಾಧ್ಯಯನ ಮಾಡಿ, ಕೋಸಿಗಿಯ ಶ್ರೀಗುರುಜಗನ್ನಾಥವಿಠಲ ದಾಸವರ್ಯ ರಿಂದ ದಾಸದೀಕ್ಷೆ ಹಾಗೂ
ಸುಂದರವಿಠಲ ಎನ್ನುವ ಅಂಕಿತ ಹೊಂದಿದ್ದಾರೆ. ತದಾರಭ್ಯ, ದಾಸಸಾಹಿತ್ಯದಲ್ಲಿ ಅನಿತರ ಕೃಷಿಗೈದಿದ್ದಾರೆ. ಕೀರ್ತನೆ, ಸುಳಾದಿ, ಉಗಾ ಭೋಗ ಸ್ತೋತ್ರಗಳ ಜೊತೆಗೆ ವೆಂಕಟೇಶ ಮಹಾತ್ಮೆ ಹಾಗೂ ಸತ್ಯ ನಾರಾಯಣ ಕಥೆಯನ್ನು ಸುಳಾದಿ ರೂಪದಲ್ಲಿ ರಚಿಸಿ, ಹರಿಕಥಾಮೃತಸಾರ ಹಾಗೂ ಸುಮಧ್ವವಿಜಯಕ್ಕೆ ಭಾವಾರ್ಥ ಗಳನ್ನು ಬರೆದಿದ್ದಾರೆ. 

ಲಿಂಗಸೂಗೂರ್ ಶ್ರೀಪ್ರಾಣೇಶದಾಸರಿಗೆ ಒಲಿದುಬಂದ ಶ್ರೀ ಮದ್ವರದೇಂದ್ರ ತೀರ್ಥರ ಸನ್ನಿಧಿಗೆ ಸಂಪೂರ್ಣ ಬೆಂಬಲವಾಗಿ ನಿಂತು, ಕುಪ್ಪಿ ಭೀಮಸೇನ ದೇವರ ರಥವನ್ನು ಪೂರ್ತಿಗೊಳಿಸಿ, ಮಾನವಿ ಜಗನ್ನಾಥದಾಸರಿಗೆ ಭವ್ಯ
ದೇಹಾಖ್ಯ ರಥವನ್ನು ಸಮರ್ಪಿಸಿದ್ದ ಖ್ಯಾತಿ ಇವರದು. ಹರಿದಾಸ ಸಾಹಿತ್ಯ ಪ್ರಕಾಶನದ
ಹಂಬಲದಿಂದ ಶ್ರೀ ವಾಯಿ ಕೃಷ್ಣಾಚಾರ್ಯರ ಒತ್ತಾಸೆಯಂತೆ
"ಶ್ರೀವರದೇಂದ್ರ ಹರಿದಾಸ ಸಾಹಿತ್ಯ ಮಂಡಲಿ"ಎನ್ನುವ ಸಂಸ್ಥೆಯನ್ನು ಕ್ರೀ.ಶ
1944ರಲ್ಲಿ ಸ್ಥಾಪಿಸಿ, ಹಲವಾರು ದಾಸರಾಯರುಗಳ ಕೃತಿಗಳನ್ನು ಮನೆ
ಮನೆ ತಿರುಗಿ, ಕಷ್ಟ ನಿಷ್ಠೂರಗಳನ್ನು ಸಹಿಸಿ, ಸಂಗ್ರಹಿಸಿ, ಅವುಗಳನ್ನು
ಪ್ರಕಟಿಸಲು ತಮ್ಮ ಯಾವತ್ತೂ ಸರ್ವಸ್ವವನ್ನು ವಿನಿಯೋಗಿಸಿ
ಸುಮಾರು 80ಕ್ಕೂ ಹೆಚ್ಚು ಕೃತಿರತ್ನಗಳನ್ನು ಪ್ರಕಟಿಸಿದ್ದಾರೆ. ಮಿಕ್ಕ ಅಪ್ರಕಟಿತ ಸಂಗ್ರಹವನ್ನು ಬೆಳಕಿಗೆ ತರುವ ಹೊಣೆಯನ್ನು ಶ್ರೀ ಭೋಗೇಶ
ರಾಯರು ಮತ್ತು ಶ್ರೀ ಸುಳಾದಿ ಕುಪ್ಪೇರಾಯರಿಗೆ ವಹಿಸಿರುತ್ತಾರೆ. ಅನೇಕ ಸುಂದರ ಕೀರ್ತನೆಗಳನ್ನು ರಚಿಸಿದ್ದಾರೆ.
       ದಾಸಸಾಹಿತ್ಯ ಪ್ರಕಾಶನ, ಪುನರುಜೀವನಕ್ಕಾಗಿಯೇ, ಮುದ್ರಣ ವ್ಯವಸ್ಥೆ ಹೆಚ್ಚಾಗಿ ಅಭಿವೃದ್ಧಿಕಾಣದ ಕಾಲದಲ್ಲಿ, ಶ್ರೀ ದಾಸಾರ್ಯರು ಮಾಡಿದ ಗುರುತರ ಸೇವೇ ಪ್ರಶಂಸನೀಯ. ಹರಿದಾಸಸಾಹಿತ್ಯ ಪಿಪಾಸುಗಳಿಗೇ ಇವರ ಉಪಕಾರ ಅವಿಸ್ಮರಣೀಯ.

ಶ್ರೀ ದಾಸಾರ್ಯರು ಕೀಲಕ ನಾಮ ಸಂ.|| ಪುಷ್ಯ ಶುದ್ಧ ದ್ವಾದಶಿ 
(15-01-1969) ದಿನ, ಭಾಗ್ಯನಗರದಿಂದ
ಶ್ರೀವೈಕುಂಠಕ್ಕೇ ಪ್ರಯಾಣ ಬೆಳೆಸಿದರೂ,
ಜ್ಞಾನಿಗಳೂ, ತತ್ತ್ವವೇತ್ತರೂ, ತ್ಯಾಗಮೂರ್ತೀಗಳಾದ ಶ್ರೀಸುಂದರವಿಠಲದಾಸಾರ್ಯರ ಸಂಕಲ್ಪಬಲ, ಅವರು ಸ್ಥಾಪಿಸಿದ "ಶ್ರೀವರದೇಂದ್ರ ಹರಿದಾಸ ಸಾಹಿತ್ಯ ಮಂಡಲಿ" ಲಿಂಗಸೂಗೂರ್ ಕಾರ್ಯಕ್ಷೇತ್ರವಾಗಿ ಈಗಲು ಹರಿದಾಸ ಸಾಹಿತ್ಯ ಸೇವಾರಂಗದಲ್ಲಿ ಕಾರ್ಯಪ್ರವರ್ತೀತವಾಗಿ ಅನೇಕ ಗ್ರಂಥಗಳನ್ನು ಪ್ರಕಾಶಗೊಳಿಸಿ, ಇನ್ನೂ ಪ್ರಕಾಶನಗೊಳಿಸುತ್ತ ಶ್ರೀ ದಾಸಾರ್ಯರ
ಮಹದಾಶೆಯ ಸಾಧನೆಯಲ್ಲಿ ಕಟಿಬದ್ಧವಾಗಿದೆ.
(whatsapp)
***

Sri Sundara Vittala Dasaru1893-1969Gorebalu Hanumantha RaoSundara VittalaSri Guru Jagannatha VittalaLingasuguruPushya Bahula Dwadashi

No comments:

Post a Comment