Monday, 1 July 2019

abhinava pranesha vittala dasaru lingasuguru 1978 pushya bahula saptami ಅಭಿನವ ಪ್ರಾಣೇಶ ವಿಠ್ಠಲ ದಾಸರು





Sri Abhinava Pranesha Vittala Dasaru
Period: 1903 - 1978
Original Name: Hanumantha rao, Archaka
Ankita: Abhinava Pranesh Vittala (swapnalabdha)
Preceptor: Pranesha Dasa
Place: Lingasuguru
Aradhana: Pushya Bahula Sapthami

Original name: shri Hanumantha Rao Archakaru
Father: shri rAmachandra rAyaru, maternal uncle of varadEsha dAsaru
Brother: suLAdi kuppe rAyaru
Grand father: guru prANEsha viTTala dAsaru, son of shri prANEsha viTTala dAsaru
Great grand father: shri prANEsha viTTala dAsaru


He popularized suLAdIs along with his brother, shri suLAdi kuppe rAyaru. In his young days, his untimely death was prevented by shri varadEsha dAsaru's prayers. He has described this in one of his suLAdIs. He spent his life in the seve of shri varadEndra tIrtharu.
*********

" ಶ್ರೀ ರಾಯರ - ಶ್ರೀ ವರದೇಂದ್ರರ, ಶ್ರೀ ಪ್ರಾಣೇಶದಾಸರ ಪ್ರೀತ್ಯಾಸ್ಪದರು ಶ್ರೀ ಅಭಿನವ ಪ್ರಾಣೇಶದಾಸರು "
ಈದಿನ - 04.02.2021 ಪುಷ್ಯ ಬಹುಳ ಸಪ್ತಮೀ ಗುರುವಾರ -  ಶ್ರೀ ಅಭಿನವ ಪ್ರಾಣೇಶದಾಸರ ಆರಾಧನಾ ಮಹೋತ್ಸವ, ಲಿಂಗಸೂಗೂರು.
" ಶ್ರೀ ಅಭಿನವ ಪ್ರಾಣೇಶದಾಸರ ಸಂಕ್ಷಿಪ್ತ ಮಾಹಿತಿ "
ಹೆಸರು : ಶ್ರೀ ಹನುಮಂತರಾಯರು
ತಂದೆ : ಶ್ರೀ ರಾಘಪ್ಪನವರು
ಕಾಲ : ಕ್ರಿ. ಶ. 1903 - 1978
ತಾತ : ಶ್ರೀ ಗುರು ಪ್ರಾಣೇಶದಾಸರು
ಮುತ್ತಾತ : ಶ್ರೀ ಮರುದಾಂಶ ಶ್ರೀ ಪ್ರಾಣೇಶದಾಸರು
ಪ್ರಗತಿ ಸಾಧನಕೆ ವರ ಕ್ಷೇತ್ರವೆನಿಸಿದ । ಭರತ ಖಂಡ ಧರ್ಮಬೀಡು ಕನ್ನಡ ನಾಡು । ಸರಿತ ಕೃಷ್ಣ ತುಂಗಾ ಮಧ್ಯಪ್ರದೇಶ । ರಾಯಿ । ಚೂರು ಜಿಲ್ಲೆ ಲಿಂಗಸೂಗೂರು ವಾಸ ಶಶಿಭಾಸ । ತಿರುಕಾರ್ಯ ಸುಪುತ್ರ ಧರಿನಾಥದಾಸ ಛಾತ್ರ । ಗುರುವರೇಂದ್ರರ ಪರಮ ಕರುಣಪಾತ್ರ । ಸಿರಿವರ ಅಭಿನವ ಪ್ರಾಣೇಶವಿಠಲನ । ಚರಣ ವಾರಿಜ ದಾಸ ಪ್ರಾಣೇಶಧೀಶ ।।
ಅಂಕಿತ : 
ಶ್ರೀ ಪ್ರಾಣೇಶದಾಸರಿಂದ ಸ್ವಪ್ನ ಲಬ್ಧ " ಅಭಿನವ ಪ್ರಾಣೇಶವಿಠ್ಠಲ "
ಬಾಲತನದಲಿ ವಿದ್ಯೆಗಳನು ಕಲಿತಾ । ನಿಜ ಜ್ಞಾನವನರಿತಾ ।
ವೇಳೆಯನರಿತು ಪ್ರಾಣೇಶದಾಸರೋಲಿದೂ । ಸ್ವಪ್ನದಲಿ ಉಳಿದು ।
ಮಾಲೋಲನ ಪದ ಧ್ಯಾನ ಜ್ಞಾನವನ್ನೂ । ಕರುಣಿಸೆ ಇವಗಿನ್ನು ।
ತಾಳಿ ಪದ ಸುಳಾದಿಗಳ ಬರೆದಾ । ತತ್ತ್ವರ್ಥವ ಒರೆದಾ ।।
ಶ್ರೀ ಹನುಮಂತರಾಯರಿಗೆ ಶ್ರೀ ಪ್ರಾಣೇಶ ದಾಸರು ಸ್ವಪ್ನಾಂಕಿತವನ್ನು ನೀಡಿದರು. 
ಅಂದಿನಿಂದ ಅವರು ಲಕ್ಷ್ಮೀಪತಿಯಾದ ಶ್ರೀ ಹರಿಯ ಚರಣ ಕಮಲದಲ್ಲಿ ಅನೇಕ ಪದ ಸುಳಾದಿಗಳನ್ನು ರಚಿಸಿ ಅರ್ಪಿಸುವುದರೊಂದಿಗೆ ತತ್ತ್ವಾರ್ಥಗಳನ್ನು ತಿಳಿಸಿದರು.
ಕುಲ ಗುರುಗಳು : ಶ್ರೀ ಮಂತ್ರಾಲಯ ಪ್ರಭುಗಳು
" ಶ್ರೀ ರಾಯರ ಅವತಾರ ಮಹಿಮಾ ವರ್ಣನೆ "
ಜಯ ರಾಘವೇಂದ್ರ ಗುರುರಾಜ ।
ಜಯ ರಾಘವೇಂದ್ರ ಗುರುರಾಜ ।
ಯೋಗಿವರ್ಯ ಭವಸಾಗರ ಪೋತನೆ ।
ಬಾಗಿ ಭಜಿಪೆ ಗುರುರಾಜ ।। ಪಲ್ಲವಿ ।।
... ವಸು ಕಶ್ಯಪ ಸುತ ಕುಸುಮ ಬಾಣ ಜಿತ ।
ಅಸಮ ಮಹಿಮ ಗುರುರಾಜ ।।
ಆಹ್ಲಾದೋದಯ ಸಹ್ಲಾದಾಗ್ರಜ ।
ಪ್ರಹ್ಲಾದನೆ ಗುರುರಾಜ ।।
ಮುನಿಸುರ ದಯದಿಂದನಲ ಭೃಗು ಸಮ ।
ನೆನಿಸುವ ಪ್ರಹ್ಲಾದರಾಜ ।।
ಕುರುಕುಲದಲಿಯವತರಿಸಿದ ಬಾಹ್ಲೀಕ ।
ನರ ಪಾಲನೆ ಗುರುರಾಜ ।।
ಕಾಷಾಯಾಂಬರ ಭೇಶ ಭಾಸಯತಿ ।
ವ್ಯಾಸರಾಯ ಗುರುರಾಜ ।।
ಐದನೇ ವರುಷದಿ ವಾದಿಯ ಗೆಲಿದೆ ।
ಶ್ರೀದವ್ಯಾಸ ಗುರುರಾಜ ।।
ಕನ್ನಡ ರಾಜನ ಬನ್ನವ ಕಳಿದಿಹ ।
ಮಾನ್ಯ ವ್ಯಾಸ ಗುರುರಾಜ ।।
ದಾಸವರ್ಯಗುಪದೇಶವಿತ್ತ ಗುರು ।
ವ್ಯಾಸರಾಯ ಗುರುರಾಜ ।।
ದ್ವಾದಶ ವರ್ಷವು ಶ್ರೀದ ವೆಂಕಟನ ।
ಪಾದಾರ್ಚಕ ಗುರುರಾಜ ।।
ಗುರುಗಳಾಜ್ಞೆಯನು ಶಿರದಿ ಧರಿಸಿ । ಮ ।
ಸ್ಕರಿಯಾದನು ಗುರುರಾಜ ।।
ಮಸ್ಕರಿ = ಸಂನ್ಯಾಸಿ
ಗುರು ಮಧ್ವಾರ್ಯರ ಹರಿವಿಷ್ಟರದಲಿ ।
ಮೆರೆದನು ತಾ ಗುರುರಾಜ ।।
ಅನಿಲ ಮತಾಂಬುಧಿ ವನಧಿಜ ಪೌರ್ಣಿಮ ।
ಇನಿನ ಭಾಗ ಗುರುರಾಜ ।।
ವಾದಿ ಸಲಗ ಮದ ಭೇದನ ಕೇಸರಿ ।
ಮೋದದಾತ ಗುರುರಾಜ ।।
ಧರೆಯೊಳು ಬೀರಿದ ಮರುತ ಮತದ ಯಶ ।
ತ್ವರಿತದಿ ಶ್ರೀಗುರುರಾಜ ।।
ಆತನ ಜನರಿಗೆ ಜ್ಞಾನ ಸುಪಥವನು ।
ಕಾಣಿಸಿದನು ಗುರುರಾಜ ।।
ಹರುಷದಿ ಪಡೆದನು ವರ ಮಂತ್ರಾಲಯ ।
ಅರಸನಿಂದ ಗುರುರಾಜ ।।
ಮಂತ್ರ ಮಂದಿರ ತಂತ್ರ ದೀಪಿಕಾ ।
ಗ್ರಂಥ ಕರ್ತ ಗುರುರಾಜ ।।
ರಾಘವ ಕುಳಿತಿಹ ಭೋಗದ ಶಿಲೆಯನು ।
ರಾಗದಿ ತೋರಿದ ಗುರುರಾಜ ।।
ವೃಂದಾವನ ವೀ ಸುಂದರ ಶಿಲೆಯೊಳು ।
ಯೆಂದನು ತಾ ಗುರುರಾಜ ।।
ಇಂದ್ರ ಪೀಠ ಯೋಗೀ೦ದ್ರರಿಗಿತ್ತನು ।
ಚಂದ್ರ ನಿಭನು ಗುರುರಾಜ ।।
ವೃಂದಾವನದೊಳು ಚೆಂದದಿ ಕುಳಿತನು ।
ಇಂದು ತೇಜ ಗುರುರಾಜ ।।
ಮಂತ್ರ ಮಂದಿರದಿ ನಿಂತು ರಕ್ಷಿಸುವ ।
ಸಂತಜವರ ಗುರುರಾಜ ।।
ಆರಾಧನೆಯಲಿ ಮೀರಿದ ವೈಭವ ।
ತೋರ್ಪದು ಶ್ರೀ ಗುರುರಾಜ ।।
ಪಾದೋದಕದಿ೦ದಾದಿ ವ್ಯಾಧಿಗಳ ।
ಬಾಧೆ ಕಳೆವ ಗುರುರಾಜ ।।
ಮೃತ್ತಿಕ ಜಲದಿಂದುತ್ತಮ ಲೋಕವ ।
ನಿತ್ತು ಪೊರೆವ ಗುರುರಾಜ ।।
ಯೋಗೀ೦ದ್ರರ ಹೃದಯಾಗಸ ಚಂದ್ರನೆ ।
ರಾಘವೇಂದ್ರ ಗುರುರಾಜ ।।
ಮುನಿ ವರದೇಂದ್ರರ ಮನ ಮಂದಿರ । ಭವ ।
ವನಧಿ ಘಟಿಜ ಗುರುರಾಜ ।।
ಶರಣ ಜನಕೆ ಸುರತರು ಚಿಂತಾಮಣಿ ।
ಸುರಭಿಯೆನಿಪ ಗುರುರಾಜ ।।
ಪಾಹಿ ಯತೀಂದ್ರನೆ ಪಾಹಿ ಮುನೀಂದ್ರನೆ ।
ಪಾಹಿ ಪಾಹಿ ಗುರುರಾಜ ।।
ಜಯ ಜಯ ಗುರುವರ ಜಯ ಜಯ ಶುಭಕರ ।
ಭಯಹರ ಜಯ ಗುರುರಾಜ ।।
ಗುರುಗಳ ಭಜನೆಯ ನಿರುತದಿ ಪಾಡಲು ।
ಪೊರೆವನು ತಾ ಗುರುರಾಜ ।।
ಮೌನದ ಅಭಿನವ ಪ್ರಾಣೇಶವಿಠಲನ ।
ಧ್ಯಾನವ ಕೊಡು ಗುರುರಾಜ ।।
ಉದ್ಧಾರಕ ಗುರುಗಳು : ಶ್ರೀ ವರದೇಂದ್ರತೀರ್ಥರು
ಆಸುಪತಿ ಶ್ರೀಮಧ್ವಕಸವರಪೀಠಸ್ಥ । ವಸುಧೇಂದ್ರರ ಕರಬಿಸಿಜೋದ್ಭವನೀತ । ವಸುಧಿಜಾಪತಿಪಾದಾನಿಶ ಧೇನಿಸುವಾತ । ಶ್ವಸನ ಮತದ ಯಶವ ದಶದಿಶ ಪಸರಿಸಿದ । ಅಸಮ ಮಹಿಮ ಗುರುವೆ ನತಜನ ಸುರತರುವೆ । ಋಷಭಾಭಿನವಪ್ರಾಣೇಶವಿಠಲನಾಮ । ರಸನೇಂದ್ರಿಯದಲ್ಲಿ ಹಸನಾಗಿ ನಿಲ್ಲಿಸೋ ।।
ಸಮಕಾಲೀನ ಯತಿಗಳು :
ಶ್ರೀ ಸುಶೀಲೆಂದ್ರ ತೀರ್ಥರು - ಶ್ರೀ ಸುವ್ರತೀಂದ್ರ ತೀರ್ಥರು - ಶ್ರೀ ಸುಯಮೀಂದ್ರ ತೀರ್ಥರು - ಶ್ರೀ ಸುಜಯೀಂದ್ರ ತೀರ್ಥರು - ಶ್ರೀ ವಿದ್ಯಾಪ್ರಸನ್ನ ತೀರ್ಥರು - ಶ್ರೀವಿದ್ಯಾಪಯೋನಿಧಿತೀರ್ಥರು
ಹರಿದಾಸರು :
ಶ್ರೀ ಇಂದಿರೇಶ ( ಶ್ರೀ ಪಾಂಡುರಂಗಿ ಹುಚ್ಚಾಚಾರ್ಯ ) - ಶ್ರೀ ಶ್ಯಾಮಸುಂದರದಾಸರು - ಶ್ರೀ ಐಕೂರು ಆಚಾರ್ಯರು -  ಶ್ರೀ ಕಾರ್ಪರ ನರಹರಿ -  ಶ್ರೀ ಬಡೇ ಸಾಹೇಬರು - ಶ್ರೀ ಸುಳಾದಿ ಕುಪ್ಪೆರಾಯರು
ಆರಾಧನೆ : ಪುಷ್ಯ ಬಹುಳ ಸಪ್ತಮೀ
" ಶ್ರೀ ಅಭಿನವ ಪ್ರಾಣೇಶದಾಸರ ಸುಳಾದಿಗಳು - ಪ್ರಾರಂಭವನ್ನು ಮಾತ್ರ ಪರಿಚಯಾತ್ಮಕವಾಗಿ ಇಲ್ಲಿ ಕೊಡಲಾಗಿದೆ. 
19 - 20ನೇ ಶತಮಾನದಲ್ಲಿ ಅತಿ ಹೆಚ್ಚು ಸುಳಾದಿಗಳನ್ನು ರಚಿಸಿದ ಹರಿದಾಸರೆಂದರೆ ಅದು ಶ್ರೀ ಅಭಿನವ ಪ್ರಾಣೇಶವಿಠ್ಠಲರು.
ಅಲ್ಲದೇ ಇವರು ದೊಡ್ಡವರ ವಂಶ ಸಂಜಾತರು ಮತ್ತು ಶ್ರೀ ಪ್ರಾಣೇಶದಾಸರಿಂದಲೇ ಸ್ವಪ್ನಾಂಕಿತ ಪಡೆದ ಮಹಾತ್ಮರು. 
( ಶ್ರೀ ಪ್ರಾಣೇಶದಾಸರ ವಂಶದ ಕುಡಿ ) "
" ಶ್ರೀ ಗಜೇಂದ್ರಮೋಕ್ಷ ಸುಳಾದಿ " :
ಕರಿರಾಜ ಕರೆಯಲು ಗರುಡನಪೆಗಲೇ ।
ಭರದಿಂದ ಬಂದುದ್ಧರಿಸಿದ ಕರುಣಾಳು ।।
" ಭಗವಂತನ ಮಹಿಮಾ ಸುಳಾದಿ " :
ಶತಪತ್ರಲೋಚನ ಪತಿತಪಾವನ ದೇವ ।
ಕ್ಷಿತಿಯೊಳಗೆ ನನ್ನಂಥ ಪತಿತರುಂಟೆ ।।
" ಹರಿಯೇ ಸರ್ವೋತ್ತಮ ಸ್ತೋತ್ರ ಸುಳಾದಿ " :
ಹರಿಯೇ ಸರ್ವೋತ್ತಮ ಸಾಕಾರ ಸ್ವತಂತ್ರ ।
ಪರಿಪೂರ್ಣ ಆನಂದ ಗಿರಿರಾಜ ಗೋವಿಂದ ।।
" ಶ್ರೀ ರಂಗನಾಥನ ಸ್ತೋತ್ರ ಸುಳಾದಿ " :
ರಂಗ ಶ್ರೀರಂಗ ಭವರಂಗ ವಿಹಂಗವಾಹ ।
ತುಂಗವಿಕ್ರಮ ದಯಾಪಾಂಗ ದೇವ ।।
" ತಮ್ಮ ಹರಿದಾಸ ವಂಶದ ಸುಳಾದಿ " :
ಹರಿದಾಸ ವಂಶದಲ್ಲಿ ಧರೆಸುರ ಜನುಮವ ।
ಧರಿಸಿ ಬಂದೆನೋ ನಾನು ಮುರಮರ್ದನ ।।
" ಶ್ರೀ ಹರಿ ಕಾರುಣ್ಯ ಸ್ತೋತ್ರ ಸುಳಾದಿ " :
ರಕ್ಷಿಸುವದುಯನ್ನನೀಕ್ಷಿಸಿ ಕರುಣದಿ ।
ಪಕ್ಷಿವಾಹನ ಕಮಲಾಕ್ಷ ದೇವ ।।
" ಹರಿಯ ಪ್ರಾಥನಾ ಸುಳಾದಿ "
ಬೇಡಿಕೊಂಬೆನು ದೇವ ಮೂಡಲಗಿರಿವಾಸ ।
ಬೇಡದಂತೆ ಪರರ ಮಾಡೆನ್ನನು ।।
" ಶ್ರೀ ಸತ್ಯನಾರಾಯಣ ಕಥಾಸಾರ ಸ್ತೋತ್ರ ಪಂಚ ಸುಳಾದಿಗಳು " :
ಸತ್ಯನಾರಾಯಣ ವ್ರತವನ್ನು ಮಾಳ್ಪದು ।
ಸತ್ಯವಂತರಾಗಿ ನಿತ್ಯದಲ್ಲಿ ।
ಸತ್ಯವ್ರತವಿದು ಮುಕ್ತಿಗೆ ಸೋಪಾನ ।
ಮರ್ತ್ಯರ ಭವ ಬಂಧನ ವಿನಾಶ ।।
" ಶ್ರೀ ಮೂಲರಾಮಚಂದ್ರನ ಸ್ತೋತ್ರ ಸುಳಾದಿ " :
ಕಾಮಿತಪ್ರದ ರಘುರಾಮಚಂದ್ರನ ಪಾದ ।
ತಾಮರಸಾಳಿಶಿಖಿಸೋಮಾರ್ಕನಯನನೆ ।।
" ಶ್ರೀ ವಾಯುದೇವರ ಸ್ತೋತ್ರ ಸುಳಾದಿ "
ಮರುತದೇವನೆ ನಿನ್ನ ಚರಿತೆ ಬಣ್ಣಿಸಲಳವೆ ।
ಹರ ನೀಲಾಂಬರ ವಿಪರರಿಯರಯ್ಯಾ ।।
" ವಾಯು ಜೀವೋತ್ತಮಮತ್ವ ಸುಳಾದಿ "
ಸರ್ವ ಜೀವೋತ್ತಮನೇ ಶಿರಬಾಗಿ ಪ್ರಾರ್ಥಿಸುವೆ ।
ಜೀರ್ಣಿಸಿ ಭವತಾಪ ಭವ ವಿದೂರ ।।
" ಶ್ರೀ ಕುಪೀ ಭೀಮನ ( ಶ್ರೀ ಪ್ರಾಣದೇವರ ) ಸ್ತೋತ್ರ ಸುಳಾದಿ " :
ಗುರು ವ್ಯಾಸರಾಯರ ಕರಕಂಜದಿಂದಜಸ್ಥಾಪಿ ।
ಸಿರುವ ವಿಗ್ರ ಕುಪ್ಪೀ ಭೀಮರಾಯ ।।
" ಶ್ರೀ ರಾಯರ ಮೇಲಿನ ಸ್ತೋತ್ರ ಸುಳಾದಿ " :
ಗುರು ರಾಘವೇಂದ್ರ ಪರಮ ಮಂಗಳ ಮೋದ ।
ಚರಿತೆ ಬರೆವೆ ಗುರು ವರದೇಂದ್ರ ರಾಯರ ।
ಕರುಣದಿಂದಾ ಪನಿತು ಹರುಷದಿಂದ ।
ಪರಮೇಷ್ಠಿ ಚರಣಾಬ್ಜ ಮಧುಕರ ಶಂಖುಕರ್ಣ ।
ಶರಜಜನಾಜ್ಞದಿ ವರ ಕೃತ ಯುಗದಲ್ಲಿ ।
ಪುರಟನಯ್ಯನ ಸುತನಾಗಿ ಜನಿಸೀ ।
ಹರಿ ಭಕ್ತಾಗ್ರಣಿಯೆನಿಸಿ ಹರಿಭಕ್ತಿ ಸುಧೆ ಸುರಿಸಿ ।
ಹಿರಿಯನ ಛಲದಿಂದ ವರ ಸಭೆ ಸ್ತಂಭದಿ ।
ನರಹರಿಯನು ತೋರ್ದ ಪ್ರಹ್ಲಾದನೆ ।।
ಎರಡೊಂದು ಯುಗದಲ್ಲಿ ಕುರಕುಲ ಸಂಜಾತ ।
ಮುರಹರ ಸೇವಕ ಬಾಹ್ಲೀಕ ।।
ಖರ ಯುಗದಲ್ಲಿ ಪ್ರಥಮ ಬನ್ನೂರುರಾಯರ ಪುತ್ರ ।
ಸ್ವರ್ಣವರ್ಣರ ಛಾತ್ರ ವ್ಯಾಸತೀರ್ಥ ।
ಕರಿನಾಡಿನಲ್ಲಿ ಅವತರಿಸಿದ ಪುನರಪಿ ।
ಧರಿಜಪತಿಯ ಚರಣಾರ್ಚನೆ ಗೈಯ್ಯಲು ।
ನರಹರಿ ಅಭಿನವ ಪ್ರಾಣೇಶ ವಿಠ್ಠಲನ ।
ಚರಣ ಕಿಂಕರ ಚಂದ್ರ ಗುರುರಾಘವೇಂದ್ರ ।।
" ಶ್ರೀ ವರದೇಂದ್ರತೀರ್ಥ ಸ್ತೋತ್ರ ಸುಳಾದಿ " :
ವಂದಿಸುವೆನು ಭವ ಮಂದಧಿ ತಾರಕ ।
ಸಿಂಧು ಶಯನ ರಾಮಚಂದ್ರಾರ್ಚಕ । ವಸು ।
ಧೇಂದ್ರರಾಯರ ಕರಮಂದಜೋದ್ಭವ । ವರ ।
ದೇಂದ್ರರಾಯನೆ ಮತಿ ಚಂದಿರನೆ ।।
ಇನ್ನೊಂದು ಸುಳಾದಿಯಲ್ಲಿ..
ದುರಿತ ಕದಳಿ ವನ ದ್ವಿರದಿಯಂತಿಪ್ಪನು ।
ಪರಮತ ಶರನಿಧಿ ಕರಿರಾಜನೆನಿಸುವ ।
ಮರುತಮತಾಂಬುಧಿ ಪರಿಪೂರ್ಣ ಹಿಮಕರ ।
ಧರಣಿ ದೇವರ ಸೇವೆ ಹರುಷದಿ ಕೊಳ್ಳುತವರು ।।
ದ್ಧರಿಸುವ ಕರುಣಾಳು ಗುರುರಾಜ ಪವಿತೇಜ ।
ಸುರರಾಜನಂತೆ ಭೂಸುರ ಗಢನದಿ ಮೆರೆವ ।
ಕರಿಚರ್ಮಾಂಬರ ಪ್ರೀತ ವರದೇಂದ್ರನೇ ।।
" ಶ್ರೀ ಗೋಪಾಲದಾಸರ ಸ್ತೋತ್ರ ಸುಳಾದಿ " :
ಹರಿದಾಸ ಚತುಷ್ಟಯರೊಳಗೋರ್ವ ಮಹಿಮರ ।
ತರುಪಾಲದಾಸ ಚರಿತೆಯ ತಿಳಿದಷ್ಟು ।
ಬರೆಯುವೆ ಶ್ರೀ ಹರಿ ಗುರುಗಳ ಕರುಣದಿ ।
ಸಿರಿವರನಾಜ್ಞದಿ ಕರಿಕಂಠ ಧರೆಯೊಳು ।
ವರ ಭಾಗವತ ಧರ್ಮ ಪಸರಿಸ ಲೋಸಗ ।।
ಮುರಹರಿಯುದರದಿ ದಧಿಶಿಲೆಯೋಳು ಪುಟ್ಟಿ ।
ಪೆರೆ ಶುಕ್ಲನಂದದಿ ವರ್ಧಿಸಿದ ।
ಉರಿಯುದರದಿ ಭಾಗದಿಗಳೆಲ್ಲ ಸ್ವತ್ತಪ ।
ಹಸಿರುದೊಡಲು ಬಂದು ಸಂಕಾಪುರದಿ ।
ಮರುತದೇವನ ಆಶ್ರಯವನ್ನು ಪಡೆದರು ।
ಹರಿಯಭಿನವ ಪ್ರಾಣೇಶವಿಠ್ಠಲನ ದಯದಿ ।।
ನಳ ನಾಮ ಸಂವತ್ಸರ ಪುಷ್ಯ ಬಹುಳ ಸಪ್ತಮೀ ಲಿಂಗಸೂಗೂರಿನ ಶ್ರೀ ವರದೇಂದ್ರತೀರ್ಥರ ವೃಂದಾವನ ಸನ್ನಿಧಾನದಲ್ಲಿ ( ಶ್ರೀ ಪ್ರಾಣೇಶದಾಸರಿಗೆ ಒಲಿದು ಬಂದ ಸ್ವಪ್ನ ವೃಂದಾವನ ) ಶ್ರೀ ಅಭಿನವ ಪ್ರಾಣೇಶದಾಸರು ಲಯ ಚಿಂತನೆ ಮಾಡುತ್ತಾ ವೈಕುಂಠಕ್ಕೆ ತೆರಳಿದರು!!
by ಆಚಾರ್ಯ ನಾಗರಾಜು ಹಾವೇರಿ
     ಗುರು ವಿಜಯ ಪ್ರತಿಷ್ಠಾನ
****

ಲಿಂಗಸೂಗುರು ಶ್ರೀ ಪ್ರಾಣೇಶದಾಸರ ಪ್ರಪೌತ್ರರಾದ ಶ್ರೀ ರಾಮಚಂದ್ರ ರಾಯರ ನವರ ಜೇಷ್ಠ ಪುತ್ರ
ಶ್ರೀಹನುಮಂತ ರಾಯರಿಗೆ ಏಳೆಂಟು ವರ್ಷ ವಯಸ್ಸಿನಲ್ಲಿ,ಲಿಂಗಸೂಗುರು ನಲ್ಲಿ,ಅತಿಜಾಡ್ಯವಾಗಿ ಬದುಕುವ,ಯಾವ ಆಸೆ ಇಲ್ಲವೆಂದು ಪತ್ರ  ಶ್ರೀ ವರದೇಶ ದಾಸರಿಗೆ ಬರಲು.. ವಕೀಲಿ ಕೆಲಸಕ್ಕಾಗಿ ರಾಯಚೂರಿಗೆ ಬಂದಿದ್ದ ಶ್ರೀವರದೇಶದಾಸರು(ಸ್ವಾಮೀ ರಾಯರು)ರಾಯಚೂರು ಮೊಕ್ಕಾಂ ಮಾಡಿದ ಸ್ಥಳದಲ್ಲಿ.. 
ಶ್ರೀ ವಾಸುದೇವ ರೂಪಿ ಪರಮಾತ್ಮನನ್ನು ಸ್ತುತಿಸಿ,ರೋಗ ಪರಿಹರಿಸಬೇಕೆಂದು ಅನನ್ಯ ಭಾವದಿಂದ ಪ್ರಾರ್ಥನೆ ಮಾಡಿ ಈ ಕೆಳಗಿನ ಕೃತಿಯನ್ನು ರಚನೆ ಮಾಡುತ್ತಾರೆ..
👇
ಹರಿ ನಿನ್ನ ಕರುಣೆವಿರಲಾವ ಭಯವೋ|
ಸ್ಮರಣೆ ಮಾತ್ರದಿ ಸಕಲ ದುರಿತಗಳ ಪರಿಹರಿಪ||ಪ||
ಒಟ್ಟು ೫ನುಡಿಗಳ ಸಾಲು ಉಳ್ಳ ಈ ಮೇಲಿನ ಕೃತಿಯಲ್ಲಿ ಶ್ರೀಜಗನ್ನಾಥದಾಸರ ಅಪಮೃತ್ಯು ಪರಿಹಾರಮಾಡಿದರ ಬಗ್ಗೆ ಹೇಳಿ
ಕೊನೆಯ ನುಡಿಯಲ್ಲಿ
ನಿನ್ನನ್ನೆ ನಂಬಿರುವೆ ನಿನ್ನನ್ನೆ ಪ್ರಾರ್ಥಿಸುವೆ|
ಧನ್ವಂತರಿ ನೀ ಎನ್ನ ಮೊರೆ ಆಲಿಸೊ|
ನಿನ್ನ ಸೇವಕ ಜನರ ಬನ್ನ ಬಡಿಸಲು ಸಲ್ಲ|
ಮುನ್ನ ನೀ ಕರುಣಿಪುದು ವರದೇಶ ವಿಠ್ಠಲ||೫|
ಹರಿ ನಿನ್ನ ಕರುಣೆವಿರಾಲಾವ ಭಯವೋ |ಪ|
ಶ್ರೀಪ್ರಾಣೇಶದಾಸರ ವಂಶದ ಕುಡಿಯನ್ನು ಉಳಿಸಿಕೊಡು ಅಂತ ಆ ಭಗವಂತನಲ್ಲಿ ಪ್ರಾರ್ಥನೆ ಮಾಡುತ್ತಾರೆ.
ತದನಂತರ ಅವರ ಅಪಮೃತ್ಯು ಪರಿಹಾರ ವಾಗುತ್ತದೆ.
ಅವರಿಂದ ಅಪಮೃತ್ಯುವನ್ನು ಗೆದ್ದ ಆ ಬಾಲಕ,ಮುಂದೆ ಸುಳಾದಿ ರಚನೆ ಮಾಡಿ ಅದರ ಅನುಭವವನ್ನು ಹೇಳುತ್ತಾರೆ.
ಆ ಸುಳಾದಿ ಹರಿದಾಸ ವಂಶದಲ್ಲಿ 👇
ತರಳತನದಲ್ಲಿ   ಘೋರ ರೋಗದಿಂದ |ಧರೆಯಾಸೆಯ ನಾನು ತೊರೆದಿರಲು ನಿನ್ನ|
ಚರಣಕಿಂಕರರಾದ ವರದೇಶದಾಸರು| ಹರಿದಾಸನು ಇವನು ಕರುಣವ ತೋರೆಂದು|
ಹರಿ ನಿನ್ನಡಿಯಲ್ಲಿ ಮೊರೆಯಿಡಲಾಕ್ಚಣ|
ವರಭಕ್ತರ ನುಡಿಯ ಲಾಲಿಸಿ ಎನ್ನನು|
ಕರೆದು ತಂದೀದೇವ ನಿರಯನಗರದಿಂದ|
ಕರುಣಾರ್ಣವಭಿನವ ಪ್ರಾಣೇಶ ವಿಠ್ಠಲನೆ|
ಮರೆದು ನಿನ್ನಯ ನಾಮ ನರಕಭಾಜನನಾದೆ|
🙏
ಶ್ರೀ ವರದೇಶದಾಸರನ್ನು ಸ್ತುತಿಸಿದ ಮತ್ತು ಅವರ ಕರುಣಾ ಪಡೆದವರು ಇಂದಿನ ಕಥಾನಾಯಕರಾದ ಕಸಬಾ ಲಿಂಗಸೂಗುರುನವರಾದ ಶ್ರೀ ಅಭಿನವ ಪ್ರಾಣೇಶ ವಿಠ್ಠಲ ದಾಸರು..
ಇಂದು ಅವರ ಆರಾಧನಾದಿನ..
ಶ್ರೀ ಅಭಿನವ ಪ್ರಾಣೇಶ ವಿಠ್ಠಲ ಎಂಬ ಅಂಕಿತ ದಿಂದ ಪ್ರಸಿದ್ದರಾದ  ಕಸಬಾಲಿಂಗಸೂಗುರಿನ ಶ್ರೀಹನುಮಂತ ರಾಯರ ಆರಾಧನೆ ಇಂದು ಪುಷ್ಯ ಬಹುಳ ಸಪ್ತಮಿಯಂದು.ನಡೆಯುತ್ತದೆ
ಇವರ ಕಾಲ ಕ್ರಿ ಶ1903 to1978 ರ ವರೆಗೆ.
ತಂದೆಯ ಹೆಸರು 
ಶ್ರೀ ರಾಮಚಂದ್ರರಾಯರು..
(ಇವರು ಶ್ರೀ ವರದೇಶದಾಸರ ಸೋದರಮಾವನವರು).
ತಾತ 
ಶ್ರೀಗುರುಪ್ರಾಣೇಶವಿಠ್ಠಲ ದಾಸರು..
(ಶ್ರೀ ಪ್ರಾಣೇಶದಾಸರ ಮಕ್ಕಳಾದ ಶ್ರೀಗುರು ಪ್ರಾಣೇಶದಾಸರು)
ಮುತ್ತಾತ ಶ್ರೀ ಪ್ರಾಣೇಶದಾಸರು.....
ಇವರಿಗೆ 
ಅಂಕಿತ ಅಭಿನವ ಪ್ರಾಣೇಶ ವಿಠ್ಠಲ ಅಂತ ಇವರಿಗೆ ಸ್ವಪ್ನದಲ್ಲಿ ಶ್ರೀ ಪ್ರಾಣೇಶದಾಸರಿಂದ ಆಯಿತು..
ಇವರ ಉದ್ದಾರಕ ಗುರುಗಳು ಶ್ರೀ ವರದೇಂದ್ರ ರಾಯರು...
ಇವರ ಸಹೋದರರು ಸುಳಾದಿ ಕುಪ್ಪೇರಾಯರು.
ಮತ್ತು 
ಅವರ ಕಾಲದಲ್ಲಿ ಇದ್ದ ಹರಿದಾಸರು. 
ಶ್ರೀ ಶ್ಯಾಮಸುಂದರ ದಾಸರು,ಶ್ರೀ ಐಕೂರು ಆಚಾರ್ಯರು, ಶ್ರೀ ಕಾರ್ಪರ ನರಹರಿ ದಾಸರು,ಶ್ರೀ ಸುಳಾದಿ ಕುಪ್ಪೇರಾಯರು.ಮತ್ತು ಸಂತಿಕೆಲ್ಲೂರು ವೆಂಕಟರಾಯರು ಇನ್ನೂ ಅನೇಕರು..
ಇವರು ಅನೇಕ ಸುಳಾದಿ ಗಳನ್ನು ಹಾಗು  ಪದಗಳನ್ನು ಮಾಡಿದ್ದಾರೆ.
ತಮ್ಮ ಸಹೋದರರಾದ ಶ್ರೀ ಸುಳಾದಿ ಕುಪ್ಪೇರಾಯರ ಜೊತೆ ಆಗಿನ ಕಾಲದಲ್ಲಿ ಸುಳಾದಿ ಪ್ರಚಾರ ಮಾಡಿದವರು ಮತ್ತು
ಶ್ರೀ ವರದೇಂದ್ರ ಗುರುಗಳ ಸೇವೆ ಯಲ್ಲಿ ತಮ್ಮ ಕಾಲವನ್ನು ಕಳೆದ ಮಹಾನುಭಾವರು.
ಅಂತಹ ಮಹನೀಯರ ಸ್ಮರಣೆ ನಮ್ಮ ಜೀವನ ಧನ್ಯ.
ಕೆಳಗಡೆ ಅವರ ಚಿತ್ರ ಹಾಕಿದ್ದೇನೆ...
ದಾಸರ ಅಂತರ್ಯಾಮಿಯಾದ ಮದ್ವೇಶ ಕೃಷ್ಣ ಪ್ರೀತಿಯಾಗಲಿ..
🙏ಶ್ರೀ ಕೃಷ್ಣಾರ್ಪಣಮಸ್ತು🙏
ದಾಸವರ್ಯರ ಪಾದಕ್ಕೆರಗಿ| ಜನ್ಮಾಂತರದ ದೋಷವ ಪರಿಹರಿಸಿಕೊಂಬೆ|

🙏ಅ.ವಿಜಯವಿಠ್ಠಲ🙏
***********


ಲೇಸಾಗಿ ಭಜಿಸುವೆ ಗೋಪಾಲ ದಾಸರ||
✍️ಒಮ್ಮೆ ಶ್ರೀ ಗೋಪಾಲ ದಾಸರು ತಮ್ಮ ಸಹೋದರ ರಾದ ಶ್ರೀ ಶೀನಪ್ಪದಾಸರನ್ನು ಕರೆದು "ಶೀನಪ್ಪಾ! ನೀನು ಕಂಚಿ ಕ್ಷೇತ್ರಕ್ಕೆ ಹೋಗಿ ಅಲ್ಲಿ ಇರುವ ಶ್ರೀ ವರದರಾಜ ಸ್ವಾಮಿಯ ಸೇವೆ ಯನ್ನು ಮಾಡಿ ಅವನ ಅನುಗ್ರಹ ವನ್ನು ಪಡೆದುಕೊಂಡು ಬಾ" ಎಂದು ಕಳುಹಿಸಿದರು.
ತಕ್ಷಣ ಶೀನಪ್ಪದಾಸರು ಅಣ್ಣನ ಮಾತಿನಂತೆ ಕಂಚಿ ಕ್ಷೇತ್ರಕ್ಕೆ ಆಗಮಿಸಿ
ಶ್ರೀ ವರದರಾಜ ಸ್ವಾಮಿಯ ಸುಂದರ ಮೂರುತಿಯನ್ನು ನೋಡಿ ಬಹು ವಿಧವಾಗಿ ವರ್ಣನೆ ಮಾಡುತ್ತಾರೆ...
ತಕ್ಷಣ ವೇ ಒಂದು ಕೃತಿಯನ್ನು ರಚನೆ ಮಾಡಿ ಸ್ವಾಮಿಯಲ್ಲಿ ಪ್ರಾರ್ಥನೆ ಮಾಡುತ್ತಾ ಇರುವಾಗ ಅಲ್ಲಿ ಇದ್ದ ಅರ್ಚಕರು ಶ್ರೀ ವರದರಾಜನಿಗೆ ಮಂಗಳಾರತಿ ಮಾಡಲು ಆರಂಭಿಸಿದರು.
ಆಚಾರ್ಯರು ಅಂದು ಅಚಾತುರ್ಯವಾಗಿ ಅಂದು ದೇವರ ದೀಪವನ್ನು ಸ್ವಾಮಿಯ ವಿಗ್ರಹ ಸಮೀಪ ಇಟ್ಟುಬಿಟ್ಟಿದ್ದ ರಿಂದ ದೇವದೇವನಿಗೆ ಉಡಿಸಿದ ವಸ್ತ್ರಕ್ಕೆ ದೀಪ ಸೋಕಿ ಬೆಂಕಿ ಹತ್ತಿಕೊಂಡಿತು..
ಇದೇ ವೇಳೆಗೆ
 ವೇಣಿಸೋಮಾಪುರದಲ್ಲಿ ಶ್ರೀ ಗೋಪಾಲ ದಾಸರು ತಮ್ಮ ಸಹೋದರರ ಹಾಗು ಶಿಷ್ಯ ಜನರ ಜೊತೆಯಲ್ಲಿ ತುಂಗಭದ್ರಾ ನದಿಯಲ್ಲಿ ಮಿಂದು ಆಹ್ನೀಕ ತತ್ಪರರಾಗಿ ಕುಳಿತಿದ್ದರು..
ಮುಸುಕು ಇಟ್ಟು ಜಪ ಮಾಡುತ್ತಾ ಇದ್ದ ಶ್ರೀ ಗೋಪಾಲ ದಾಸರು ತಕ್ಷಣ ಮುಸುಕು ತೆಗೆದು ಹಸನ್ಮುಖರಾಗಿ ತಮ್ಮ ಎರಡು ಕೈಗಳನ್ನು ಉಜ್ಜತೊಡಗಿದರು...
ಒಂದೆರಡು ನಿಮಿಷಗಳ ನಂತರ ಮತ್ತೆ ಮುಸುಕು ಹೊದ್ದುಕೊಂಡು ಜಪ ಮಾಡಲು ಆರಂಭಿಸಿದರು..
ಇತ್ತ ಕಂಚಿಯಲ್ಲಿ ಶೀನಪ್ಪ ದಾಸರು ನೋಡುತ್ತಾರೆ..!!. ಅವರ ಎದುರು ಗಡೆ ಶ್ರೀ ಗೋಪಾಲ ದಾಸರು ಬಂದು ನಿಂತು  ಬೆಂಕಿ ಹತ್ತಿದ ವಸ್ತ್ರಕ್ಕೆ  ತಮ್ಮ ಎರಡು ಕೈಗಳಿಂದ ಅದನ್ನು ಉಜ್ಜಿ ಆರಿಸಿದ್ದನ್ನು ಕಂಡರು...
ಬಹಳ ಸಂತೋಷ ಮತ್ತು ಆಶ್ಚರ್ಯದಿಂದ ಅಣ್ಣಾ!!ಭಾಗಣ್ಣಾ!!ಅಂತ ಕರೆಯುವ ಒಳಗಡೆ ದಾಸರು ಮಾಯವಾಗಿದ್ದರು...
ನಂತರ ಅಲ್ಲಿ ಸೇವೆಯನ್ನು ಮುಗಿಸಿಕೊಂಡು ಉತ್ತನೂರಿಗೆ ಬಂದು ಉಳಿದ ಸಹೋದರರಿಗೆ ಭಾಗಣ್ಣ ಬಂದು ದೇವರ ವಸ್ತ್ರಕ್ಕೆ ಹತ್ತಿದ ಬೆಂಕಿ ಆರಿಸಿದ ಘಟನೆಯನ್ನು ಹೇಳುತ್ತಾರೆ.
ಇದನ್ನು ಎಲ್ಲವನ್ನೂ ನೋಡಿದ ಮತ್ತು ಕೇಳಿದ ಜನ ದಾಸರ ಬಳಿಗೆ ಬಂದು ಭಯ ಭಕ್ತಿ ಇಂದ ಅವರಿಗೆ ನಮಸ್ಕಾರ ಮಾಡುತ್ತಾರೆ.
ತುಂಗಭದ್ರಾ ತಟದಲ್ಲಿ ಕುಳಿತ ಶ್ರೀ ಗೋಪಾಲ ದಾಸರಿಗೆ ಕಂಚಿಯಲ್ಲಿ ಶ್ರೀ ವರದರಾಜ ಸ್ವಾಮಿಯ ವಸ್ತ್ರ ದೀಪ ಸೋಕಿ ಉರಿಯತೊಡಗಿದಾಗ ಅಲ್ಲಿ ಹೋಗಿ ಅದನ್ನು ಆರಿಸಿಬಂದದ್ದು..
ಮತ್ತು 
ಇನ್ನೊಂದು ರೂಪದಿಂದ ಅಲ್ಲಿ ಕುಳಿತು ಜಪ ತಪಗಳನ್ನು ಮಾಡುತ್ತಾ ಕುಳಿತುಇರುವುದು 
ಇವು ದಾಸರ ಅಣಿಮಾದಿ ಸಿದ್ದಿಯ ಸಾಧನೆಯನ್ನು ತೋರಿಸುತ್ತದೆ.
ಸಾಂಶರಾದ ದೇವತೆಗಳಿಗೆ ಯಾವುದು ಅಸಾಧ್ಯವಲ್ಲ.
ಸಾಂಶರು ಅಂದರೆ ಏಕಕಾಲದಲ್ಲಿ ಎಲ್ಲಾ ಕಡೆ ಪ್ರಕಟವಾಗುವದು...
ಇಂತಹ ಮಹಿಮೆಯನ್ನು ಭಗವಂತನ ಅನುಗ್ರಹದಿಂದ ತೋರಿಸಿದ ಶ್ರೀ ಗೋಪಾಲ ದಾಸರನ್ನು ಅವರ ಸಹೋದರರು ಈ ರೀತಿಯಲ್ಲಿ ಸ್ತೋತ್ರ ಮಾಡುತ್ತಾರೆ...
👇👇
ವಸುಧಿಪತಿ ಕಂಚಿ ವರದ ರಾಜನ ವಸನ ದೀಪಕೆ ಸೋಂಕಲು|
ಮುಸುಕು ತೊರೆದು ತುಂಗ ನದಿಯಲು ನಸು ನಗುತಲದವರೆಸಲು||
🙏ಶ್ರೀ ಕೃಷ್ಣಾರ್ಪಣಮಸ್ತು🙏
ಇವರ ಕೊಂಡಾಡುವದೇ ವಿಜಯರಾಯರ ಸ್ತೋತ್ರ|
ಇವರೇ ಶ್ರೀ ವಿಜಯರಾಯರ ಮುಖ್ಯ ಪ್ರತಿಮಾ|
🙏ಶ್ರೀ ಕೃಷ್ಣಾಯ ನಮಃ🙏
******

2021
ಶ್ರೀಂ ಶ್ರೀ ಕಂ ಕಪಿಲಾಯ ನಮಃ

ಶ್ರೀಮದುತ್ತರಾದಿಮಠದ 19ನೇ ಶತಮಾನದ ತಪಸ್ವಿಗಳೂ, ಶ್ರೀ ಸತ್ಯಪ್ರಮೋದತೀರ್ಥರ ಗುರುಗಳಾದ ಶ್ರೀ ಸತ್ಯಾಭಿಜ್ಞತೀರ್ಥರ ಆರಾಧನಾ ಮಹೋತ್ಸವ ಇಂದು... ರಾಣಿಬೆನ್ನೂರು... 

ಆಗತಾದಿ ತ್ರಿಕಾಲಜ್ಞಂ ಆಗಮಾರ್ಥ ವಿಶಾರದಮ್/      ತ್ಯಾಗಭೋಗ ಸಮಾಯುಕ್ತಂ ಭಾಗಣ್ಣಾರ್ಯ ಗುರುಮ್ ಭಜೇ// 

ಪರಮವೈರಾಗ್ಯಶಾಲಿಗಳು, ಶ್ರೀ ವಿಜಯದಾಸಾರ್ಯರ ಪರಮಪ್ರೀತಿಪಾತ್ರರೂ, ಗಣೇಶಾಂಶಜರು, ಉತ್ತನೂರು ಋಷಿಪುಂಗವರೆಂದೇ ಖ್ಯಾತರಾದ,
ಗಾಯತ್ರಿ ಮಂತ್ರವನ್ನು ಸಿದ್ಧಿಸಿಕೊಂಡಂತಹಾ, ಗುರ್ವಾಜ್ಞೆಯಂತೆ ತಮ್ಮ ಜೀವನದ ನಲವತ್ತು ವರ್ಷಗಳ ಕಾಲ ಆಯುಷ್ಯವನ್ನು ದಾನಮಾಡಿದ, ವಿಠಲನನ್ನೂ ಒಲಿಸಿಕೊಂಡಂತಹಾ ಪರಮ ಪರಮ ಶ್ರೇಷ್ಠ ದಾಸಾಗ್ರಣಿಗಳು, ಅಪರೋಕ್ಷಜ್ಞಾನಿಗಳಾದ ಶ್ರೀ ಗೋಪಾಲದಾಸಾರ್ಯರ ಮಧ್ಯಾರಾಧನೆಯ ಮಹಾಪರ್ವಕಾಲದಲಿ ಅವರ ಸ್ಮರಣೆ ಮತ್ತಷ್ಟು ನಮ್ಮಿಂದ ಆಗಲಿ, ಇವರ ನಾಮಸ್ಮರಣೆಮಾತ್ರದಲಿ ಕಷ್ಮಲಗಳು ದೂರವಾಗುತ್ತವೆ ಎಂಬುವುದರಲ್ಲಿ ಈಷಣ್ಮಾತ್ರವೂ ಸಂದೇಹವಿಲ್ಲ... ಹೀಗಾಗಿ ಇಂದಿನದಿನವೂ ನಮ್ಮ ಸೇವೆಯನ್ನು ದಾಸಾರ್ಯರ ಪದತಲಗಳಲ್ಲಿ ಸ್ತುತಿ ರೂಪಕವಾಗಿ ಸಮರ್ಪಣೆ ಮಾಡೋಣ ಎಂದು ಸವಿನಯಪೂರ್ವಕವಾಗಿ ಪ್ರಾರ್ಥನೆ ಮಾಡುತ್ತಾ...

ಶ್ರೀ ಯತಿಗಳೂ,  ಶ್ರೀ ಗೋಪಾಲ ದಾಸಾರ್ಯರು ಸದಾ ನಮ್ಮನ್ನು  ಸದಾ ಸಲಹಲಿ.. ವೈರಾಗ್ಯ ಹುಟ್ಟುವಂತೆ ಎಂದು ಪ್ರಾರ್ಥನೆ ಮಾಡುತ್ತಾ....

-Smt. Padma Sirish

ನಾದನೀರಾಜನದಿಂ ದಾಸಸುರಭಿ 🙏🏽
****


" ಶ್ರೀ ಅಭಿನವ ಪ್ರಾಣೇಶ ದಾಸರ ಕಣ್ಣಲ್ಲಿ ಜಾತ್ಯಾತೀತ ಗುರುಗಳು ಶ್ರೀ ರಾಘವೇಂದ್ರ ಪ್ರಭುಗಳು "
ಶ್ರೀ ಅಭಿನವ ಪ್ರಾಣೇಶದಾಸರು ಶ್ರೀ ಗುರು ರಾಘವೇಂದ್ರ ಅಷ್ಟೋತ್ತರ ಶತಕ ಎಂಬ ಭಜನಾ ಪದವನ್ನು ರಚಿಸಿದ್ದಾರೆ.
ಜಯ ರಾಘವೇಂದ್ರ ಗುರುರಾಜ ।
ಜಯ ರಾಘವೇಂದ್ರ ಗುರುರಾಜ ।
ಯೋಗಿವರ್ಯ ಭವ । ಸಾಗರ ಪೋತನೆ ।
ಬಾಗಿ ಭಾಜಿಪೆ । ಗುರುರಾಜ ।। 
ಎಂಬ ಪಲ್ಲವಿಯೊಂದಿಗೆ ಪ್ರಾರಂಭವಾಗುವ ಈ ಪದದಲ್ಲಿ ಅಂಕಿತದ ನುಡಿ ಸೇರಿ 109 ನುಡಿಗಳುಳ್ಳ ಸುಧೀರ್ಘವಾದ ಪದ ರಚನೆ ಮಾಡಿದ್ದು ಅದರಲ್ಲಿ ಶ್ರೀ ಪ್ರಹ್ಲಾದ - ಶ್ರೀ ಬಾಹ್ಲೀಕ - ಶ್ರೀ ವ್ಯಾಸರಾಜ - ಶ್ರೀ ರಾಘವೇಂದ್ರರ ವೈಭವವನ್ನು ಹೇಳಿದ್ದಾರೆ. ಅದರಲ್ಲಿ ಶ್ರೀ ರಾಯರು ಬ್ರಿಟೇಷ್ ಅಧಿಕಾರಿಯಾದ ಥಾಮಸ್ ಮನ್ರೋಗೆ ಮಾಡಿದ ಪರಮಾನುಗ್ರಹ ಕುರಿತ ವಿವರ ಇಲ್ಲಿದೆ. 
ಅರುಣ ತೇಜ ಮುಖಿ ।
ದೊರೆಗೆ ಕರುಣಿಸಿದ ।
ದರುಶನವನು ।
ಗುರುರಾಜ ।। 71 ।। 
ಅರುಣ ತೇಜ ಮುಖಿ = ಕೆಂಪು ಮುಖದ ಅಂದರೆ ಆಂಗ್ಲ ಆಂಗ್ಲ ದೊರೆಯ ಪ್ರತಿನಿಧಿಯಾದ ಮನ್ರೋಗೆ ದರ್ಶನ ಕೊಟ್ಟ ಘಟನೆ ಇಲ್ಲಿ ಸೂಚಿತವಾಗಿದೆ. 
ಸರ್ ಥಾಮಸ್ ಮನ್ರೋ ಈಸ್ಟ್ ಇಂಡಿಯಾ ಕಂಪೆನಿಯ ಮದ್ರಾಸ್ ಆಧಿಪತ್ಯದ ಸರ್ವೇ ಸೆಟ್ಲಮೆಂಟ್ ಅಧಿಕಾರಿ. 
ಮಂತ್ರಾಲಯ ಗ್ರಾಮ ಶ್ರೀ ಗುರುಸಾರ್ವಭೌಮರ ಬೃಂದಾವನದ ಪೂಜಾ ದೀಪಾರಾಧನೆಗಾಗಿ ಜಹಗೀರು ಕೊಟ್ಟಿದ್ದನ್ನು ಸರಕಾರಕ್ಕೆ ಸೇರಿಸಿ ಕೊಳ್ಳಬೇಕೆಂಬ ಉದ್ಧೇಶದಿಂದ ಕಂಪೆನಿಯ ಅಧಿಕಾರಿಗಳು ಒಂದು ಆದೇಶವನ್ನು ಹೊರಡಿಸಿತು. 
ಅದಕ್ಕೆ ಶ್ರೀ ಗುರುರಾಜರ ಭಕ್ತರು ಅಂಜಿ " ಇದು ಮಹಾ ಸ್ಥಳ. ಇಲ್ಲಿಯ ವಿಚಾರದಲ್ಲಿ ಸರಕಾರದವರು ಅನವಶ್ಯಕವಾಗಿ ಕೈ ಹಾಕುವುದು ಸಾಧುವಲ್ಲ " ಎಂದು ಅರ್ಜಿ ಸಲ್ಲಿಸಿದರು. 
ಇದರ ವಿಚಾರಣೆಗಾಗಿ ಮನ್ರೋ ಸಾಹೇಬ ಮಂತ್ರಾಲಯಕ್ಕೆ ಸಿರಸ್ತೇದಾರ ಮೊದಲಾದವರಿಂದ ಕೂಡಿ ಬಂದ. ಮನ್ರೋ ಧಾರ್ಮಿಕ ಶ್ರದ್ಧೆಯುಳ್ಳವ. 
ಅಂತೆಯೇ ಅವನು ಶ್ರೀ ಗುರುರಾಜರ ಮಠದ ಹೊರಗಡೆಯೇ ತನ್ನ ಪಾದರಕ್ಷೆಗಳನ್ನು ಬಿಟ್ಟು ಹ್ಯಾಟನ್ನು ಕೈಯ್ಯಲ್ಲಿ ತೆಗೆದುಕೊಂಡು ಅವನು ಬೃಂದಾವನದ ಮುಂದೆ ಬಂದು ನಿಂತ.
ಆಗೆ ಬೃಂದಾವನದೊಳಗೆ ಕುಳಿತ ಶ್ರೀ ಗುರುಸಾರ್ವಭೌಮರು ಅವನೊಂದಿಗೆ ಮಂಚಾಲೆ ಜಹಗೀರು ವಿಷಯ ಚರ್ಚಿಸಿ, ಅವನು ಅವರ ಮಾತನ್ನು ಒಪ್ಪುವಂತೆ ಮಾಡಿ ಅವನಿಗೆ ಒಂದು ಬೊಗಸೆ ಮಂತ್ರಾಕ್ಷತೆ ಕೊಟ್ಟು ಅದೃಶ್ಯರಾದರು. 
ಪಕ್ಕದಲ್ಲಿಯೇ ನಿಂತಿದ್ದವರಾರಿಗೂ ಈ ವಿಷಯವೇನೆಂದು ಅರ್ಥವೇ ಆಗಲಿಲ್ಲ. 
ಶ್ರೀ ಗುರುರಾಯರು ಅವನ ಹೊರತು ಇನ್ನಾರಿಗೂ ಕಾಣಿಸಲಿಲ್ಲ! 
ಅಲ್ಲಿದ್ದವರೆಲ್ಲರಿಗೂ ಮನ್ರೋ ಒಬ್ಬನೇ ಮಾತಾಡುವುದು ಆಶ್ಚರ್ಯವೆನಿಸಿತು. 
ನಂತರ ಅವನು ತಾನು ಇಳಿದು ಕೊಂಡಿದ್ದ ಸ್ಥಳಕ್ಕೆ ಹೋಗಿ ಕಂಪೆನಿಯ ಆದೇಶವನ್ನು ರದ್ದು ಮಾಡಿದನು. 
ಶ್ರೀ ಗುರುರಾಜರ ಅಮೃತಮಯವಾದ ಹಸ್ತದಿಂದ ಅನುಗ್ರಹಿತವಾದ ಮಂತ್ರಾಕ್ಷತೆಯನ್ನು ಅಂದಿನ ಊಟಕ್ಕೆ ಒಪಯೋಗಿಸಿದ! 
ಈ ಘಟನೆ ನಡೆದಿದ್ದು ಹತ್ತೊಂಭತ್ತನೆ ಶತಮಾನದ ಪ್ರಾರಂಭದಲ್ಲಿ. ಶ್ರೀ ಗುರುಸಾರ್ವಭೌಮರ ಅಗಮ್ಯ ಮಹಿಮೆಯನ್ನು ತಿಳಿಯಲು ವಿದೇಶೀಯನೂ, ವಿಧರ್ಮೀಯನೂ ಆದ ಅಧಿಕಾರಿಯೋಬ್ಬನಿಗೆ ದರ್ಶನ ಕೊಟ್ಟು ಅವನೊಂದಿಗೆ ಮಾತನಾಡಿದ ವಿಷಯವನ್ನು ನೋಡಿದಾಗ ಶ್ರೀ ರಾಯರು ಜಾತಿ, ಮತ, ಕುಲವನ್ನು ನೋಡದೇ ನಂಬಿ ಬಂದ ಭಕ್ತರನ್ನು ಕಲ್ಪವೃಕ್ಷದಂತೆ ಅನುಗ್ರಹಿಸುತ್ತಿದ್ದಾರೆಂದು ಶ್ರೀ ಅಭಿನವ ಪ್ರಾಣೇಶದಾಸರು ಮನೋಜ್ಞವಾಗಿ ತಿಳಿಸಿದ್ದಾರೆ. 
ಶ್ರೀ ಗುರುರಾಯರ ಮಹಿಮೆಯನ್ನು ಎಷ್ಟು ಹೇಳಿದರೂ ಸಾಲದು ಶ್ರೀ ಹರಿಯ ದಾಸರಿಗೆ. ಅವರು ಹೇಳಿದ ಶ್ರೀ ರಾಯರ ಮಹಿಮೆಯ ಒಂದು ತುಣಕನ್ನು ಶ್ರೀ ರಾಯರ ಭಕ್ತರೊಂದಿಗೆ ಹಂಚಿಕೊಳ್ಳಲಾಗಿದೆ. 
ಈ ವಿಷಯವು ಆಗಿನ " ಮದ್ರಾಸ್ ರಿವ್ಯೂ " ಎಂಬ ಪತ್ರಿಕೆಯ 8ನೇ ಸಂಪುಟದ 740ನೇ ಪುಟದಲ್ಲಿ ಉಕ್ತವಾಗಿದೆ. 
19ನೇ ಶತಮಾನದ ಪ್ರಾರಂಭದಲ್ಲಿ ನಡೆದ ಈ ಸುಂದರ ಘಟನೆಯನ್ನು ಮದ್ರಾಸ್ ಸರ್ಕಾರವು ಪ್ರಕಟಿಸಿರುವ " ಬಳ್ಳಾರಿ ಗೆಜೆಟಿಯರ್ " ನಲ್ಲಿ ಉಲ್ಲೇಖಿಸಿ ಬರೆಯಲಾಗಿದೆ. ವಿವರ ಈ ಕೆಳಗಿನಂತಿದೆ. 
Extract from Madras District Gazetteers
By W. Francis Esq. I.C.S.
Reprint 1916 by the Superintendent
Government Press, Madras,
Chapter A Adoni Taluk – Page No. 213 Mantsala ( Mantralaya ) A Shrotriem village with a population of 1212 on the bank of the Tungabhadra in the extreme north of the Taluk. The village is widely known as containing the tomb of the Madhva saint, Sri Raghavendra Swami. The annual festival in August connected with which is attended by a large number of piligrims including even lingayats from Bombay, the Nizam’s Dominion and even Mysore. The tomb it self is not of Architectural interest. The grant of the landed endowment attached to it is said in of the Mackenzic MSS to have been made by Venkanna Pant, the well known Diwan of Siddi Masaud Khan, Governor of Adoni from 1662 – 1687. A quaint story of Sir Thomas Munroe is told about the place. The endowment being threatened with resumption. Munroe, it is said, came to make enquires, after removing his boots and taking off his hat he approached the grave. The saint thereupon emerged from his tomb and met him. They conversed together for some time regarding the resumption, but though the saint was visible and audible to Munroe none of the others who were there could either see him or hear what he said. The discussion ended, Munroe returned to his tent and quashed the proposal to resume the endowment. Being offered some consecrated rice he accepted it and ordered it to be used in the preparation of his meals for that day. Madras Review VIII, 280 
by ಆಚಾರ್ಯ ನಾಗರಾಜು ಹಾವೇರಿ
     ಗುರು ವಿಜಯ ಪ್ರತಿಷ್ಠಾನ
***


Abhinava Pranesha Vittala Dasa1903-1978Hanumantharao ArchakaAbhinava Pranesha Vittala (swapnalabda)Pranesha DasaLingasuguruPushya Bahula Saptami

*


2 comments:

  1. Please send the lyrics of Marudradevara suladi of abinava pranesa vittala dasaru

    ReplyDelete
  2. Can I get 'neneve na anudinadi Jagannatha dasara' lyrics written by abhinava pranesha
    dasaru

    ReplyDelete