Monday, 1 July 2019

ananda vittala dasaru lingasuguru 1918 ashwija shukla dwiteeya ಆನಂದ ವಿಠ್ಠಲ ದಾಸರು

Sri. Ananda Vittala Dasaru
Original Name: Sri. Kulkarni Rama Rao
Period: 1869 - 1918
Ankita: Ananda Vittala
Preceptor: Sri. Guru Jagannatha Vittala Dasa
Place: Lingasuguru
Aradhana: Ashwija Shudda dwithiya

******

" ಈದಿನ [ 18.10.2020 ಭಾನುವಾರ ಆರಾಧನೆ ] - ಶ್ರೀ ರಾಯರ, ಶ್ರೀ ಪ್ರಾಣೇಶದಾಸರ ಅಂತರಂಗ ಭಕ್ತರೂ - ಶ್ರೀ ಗುರು ಜಗನ್ನಾಥದಾಸರ ಪ್ರೀತಿಯ ಶಿಷ್ಯರಾದ ಶ್ರೀ ಆನಂದ ವಿಠ್ಠಲರ ಸ್ಮರಣೆ "
" ಶ್ರೀ ಆನಂದ ವಿಠ್ಠಲರ  ಸಂಕ್ಷಿಪ್ತ ಮಾಹಿತಿ " 
ಹೆಸರು : ಶ್ರೀ ರಾಮರಾವ್ ಕುಲಕರ್ಣಿ 
ತಂದೆ : ಶ್ರೀ ವಿಜಯರಾವ್ ಕುಲಕರ್ಣಿ 
ಜನ್ಮ ಸ್ಥಳ : ಲಿಂಗಸೂಗೂರು 
ಕಾಲ : ಕ್ರಿ ಶ 1869 - 1917
ಅಂಕಿತ : ಶ್ರೀ ಆನಂದ ವಿಠ್ಠಲ 
ಉಪದೇಶ ಗುರುಗಳು : ಶ್ರೀ ಗುರು ಜಗನ್ನಾಥ ವಿಠ್ಠಲ [ ಶ್ರೀ ಕೋಸಗಿ ಮುತ್ಯ ]
ಶ್ರೀ ರಾಮರಾವ್ ಕುಲಕರ್ಣಿ ಅವರು ಶ್ರೀ ಜಗನ್ನಾಥದಾಸರ ಪ್ರಿಯ ಶಿಷ್ಯರೂ - ಶ್ರೀ ಮರುದಂಶರೂ ಆದ ಶ್ರೀ ಪ್ರಾಣೇಶ ದಾಸರ ಸದ್ವಂಶದಲ್ಲಿ ಜನ್ಮ ತಾಳಿದವರು. 
ಶ್ರೀ ರಾಮಾರಾವ್ ಕುಲಕರ್ಣಿ ಅವರು ಶ್ರೀ ಪ್ರಾಣೇಶದಾಸರೂ - ಶ್ರೀ ಗುರು ಪ್ರಾಣೇಶದಾಸರ ಆಧ್ಯಾತ್ಮ ಮಾರ್ಗದಲ್ಲಿ ನಡೆದು " ಹರಿದಾಸ ದೀಕ್ಷೆ " ಯನ್ನು ಶ್ರೀ ಗುರು ಪ್ರಾಣೇಶದಾಸರಿಂದ ಪಡೆದು - ಅನೇಕ ಪದ ಪದ್ಯಗಳನ್ನು ರಚಿಸಿದ್ದಾರೆಂದು ಬಲ್ಲವರು ಹೇಳುತ್ತಾರೆ. 
ಶ್ರೀ ರಾಮರಾವ್ ಕುಲಕರ್ಣಿ ಅವರು " ಕೋಸಗಿಯ ಮುತ್ಯಾಯೆಂದು ಖ್ಯಾತರಾದ ಶ್ರೀ ಗುರು ಜಗನ್ನಾಥ ದಾಸರಿಂದ " ಶ್ರೀ ಆನಂದ ವಿಠ್ಠಲ" ಯೆಂಬ ಅಂಕಿತವನ್ನು ಪಡೆದು ಪದ - ಪದ್ಯ - ಸುಳಾದಿಗಳು ರಚಿಸಿದ್ದಾರೆಂದು ತಿಳಿದು ಬರುತ್ತದೆ. 
ಆದರೆ ಇವರ ಮತ್ತು ಇವರ ತಂದೆಯವರ ಕೃತಿಗಳು ಉಪಲಬ್ಧವಿಲ್ಲ. 
ಶ್ರೀ ರಾಮರಾವ್ ಕುಲಕರ್ಣಿ ಅವರಿಗೆ ಇಬ್ಬರು ಪುತ್ರರು. ಅವರುಗಳು ಕ್ರಮವಾಗಿ... 
1. ಶ್ರೀ ಹನುಮಂತರಾವ್ ಕುಲರರ್ಣಿ [ ಶ್ರೀ ಅಭಿನವ ಪ್ರಾಣೇಶ ವಿಠ್ಠಲ]
2. ಶ್ರೀ ಕುಪ್ಪೆರಾಯರು [ ಇವರು ಸುಳಾದಿಯನ್ನು ಹಾಡುತ್ತಿದ್ದುದರಿಂದ ಶ್ರೀ ಸುಳಾದಿ ಕುಪ್ಪೆರಾಯರೆಂದು ಖ್ಯಾತರಾದರು ]
ಶ್ರೀ ಆನಂದ ವಿಠ್ಠಲರು ಆಶ್ವಯುಜ ಶುದ್ಧ ದ್ವಿತೀಯಾ ವೈಕುಂಠಕ್ಕೆ ಪ್ರಯಾಣ ಬೆಳೆಸಿದರು. 
ಆಚಾರ್ಯ ನಾಗರಾಜು ಹಾವೇರಿ " ವೆಂಕಟನಾಥ " ಮುದ್ರಿಕೆಯಲ್ಲಿ... 
ಗುರುರಾಯರ ಪ್ರಾಣೇಶರಾಯರ ಪ್ರೇಷ್ಠಾ ನೆಂದೆನಿಸಿ ।
ಗುರು ಜಗನ್ನಾಥಾರ್ಯರ ಉಪದೇಶವ ಪಡೆದು ।
ಹರಿ ಗುರು ಪದ ಪದ್ಯ ಸುಳಾದಿಯ ವಿರಚಿಸಿ ।
ವರಗಿರಿ ವೆಂಕಟನಾಥನ ಪ್ರಿಯ ಆನಂದ ವಿಠ್ಠಲ।।
by ಆಚಾರ್ಯ ನಾಗರಾಜು ಹಾವೇರಿ
ಗುರು ವಿಜಯ ಪ್ರತಿಷ್ಠಾನ
****


Sri Ananda Vittala Dasa1869-1918Kulkarni Rama RaoAnanda VittalaSri Guru Jagannatha Vittala DasaLingasuguruAshwija Shudda dwithiya







No comments:

Post a Comment