Monday 1 July 2019

jagannathadasa jagannatha dasaru 1809 manvi bhadrapada shukla navami ಜಗನ್ನಾಥ ದಾಸರು














orginal harikathamrutasara book




info from sumadhwaseva.com--->

shri Jagannatha dasaru

Punya Tithi: bhAdrapada Shudda Navami


Birth Date: 27.07.1727

Birth Place: Byagavata, Manvi Taluk, Raichur District

Parents: shri Narasimha Dasaru & Lakshmamma

Birth Tithi: Shravana Shudda Bidige Keelaka Samvatsara

Janmanama: Srinivasacharya

Gotra: Haritasa;

Veda: Yajurveda

Vidyabhyasa: Balaramacharyaru (Varadendra Thirtharu)

Wife: Thamarasamma, d/o Ramacharya

Children: Thimmanna Dasaru, and Damodara Dasaru

amsha - SahlAda rajaru (Brother of PrahlAdarAja)



avatarAs: Shalyaraja (Dwaparayuga)

pATa Pravachana:
He started teaching his shisyas at his own house at Byagavata initially. He was looking after the boarding and lodging facility of all his shisyas. Subsequently with the increase in the number of disciples, he shifted his teaching place to Manvi. He was very well versed in Srimadacharyara Sarvamoola Granthas, Teekarayara Tippani Granthas, Vyasathraya and Sri Gururaja’s Parimala, etc.

prArabdha karma:
Once Sri Vijayadasaru had come to Manvi for bhAgavata mangaLa. He had invited Sri srinivAsAchAryaru for tIrtha prasAda. At that time Sri Vijaya dasaru was a well known scholar in HARIDASA KEERTHANE. Unfortunately, Sri srinivAsAchAryaru had developed an intense dislike for Haridaasas, who he felt, were misrepresenting Dvaita philosophy. He was a great sanskrit and dvaita scholar. He had ego about his knowledge and disliked the Haridasas of that time. He had thought that Kannada Devaranama had nothing about Srihari and would no way fetch moksha. Sri Vijayadasaru invited srinivAsAchAryaru to come for the tIrtha prasAda and he had accepted to attend the tIrtha prasAda and never turned up. So, Vijayadasaru had sent his disciple to bring srinivAsAchAryaru. But srinivAsAchAryaru refused to come saying he is suffering from udarashUle (stomach problem). After srinivAsAchAryaru failed to turn up, Vijayadasaru had the tIrtha prasAda. From that day, srinivAsAchAryaru developed intense stomach problems which grew worse by the day, finally reaching unbearable proportions. srinivAsAchAryaru went to Tirupathi, GhatikAchala and MantrAlaya, performing intense sEve to Thimmappa, Narasimha Devaru, Vaayu Devaru and Sri Rayaru. None of this helped in improving his health condition. Day by day, his stomach ache worsened. He even thought of commiting suicide.

srinivAsAchAryaru became Jagannathadasaru:
Sri Rayaru appeared in his dream and asked him to go to Sri Vijayadasaru. He immediately rushed to Vijayadasaru, who in turn, re-directed him to go to Gopaladasaru, who is his swarUpa uddAraka. Sri Gopaladasaru as per instructions of Vijaya Dasaru, donated 40 years of his Ayushya to srinivAsAchAryaru. Deeply affected by the events in his recent past, srinivAsAchAryaru, decided to become a haridAsaru. Sri Gopala dAsaru gave him Haridaasa Deekshe and directed him to Pandarapur for ankita. There srinivAsAchAryaru found a stone bearing the words “Jagannatha Vittala”. From that day, he started composing devotional works with that ankita. He became renowned as Jagannatha Daasaru.


His works :


A) Harikathamruthasara is regarded as a great authority and standard work of reference based on Srimad bhagavatha Dharma, by adherents of Dasa Koota. It is written in the Bhamini Satpadi style and is having 32 sandhis (chapters). This Kannada work has the special honour of having a commentary in Sanskrit by Sankarshana Wodeyar. Harikathamruthasara deals with Kakshya, Vyapthi and all information which has been conveyed in Bhagavatha.

B) Thathvasuvvali – which contains various shlokas in kannada, dashavatara varnana, mayavada khandana

C) Suladigalu - He has written many suladIs

D) UgabhogagaLu – He has written many ugAbhOgAs with four to six line stanzaas.

E) Devaranamagalu – Hundreds of devaranamas he has written on various aspects of Bhakthi, Jnana, Vairagya, etc

Shishyas -


Deshpande Krishnarayaru – With the Ankita – “Venugopala”. He has written “Krishna karnaamrutha” and “stuthisara”, “Bhagavatha Dashama Skanda in Yakshagana style”, and Harisarvottamasara.

Raghavendrappa – He has written “Saraswatha parinaya”
Lingasuguru praneshadasaru – Ankitha “Sripraneshavittala”
Shridhavittalaru – “Shridhavittala”
Shrishavittalaru (Hundekara dasappa) – ankita – Shrishavittala
Premadasaru – ankitha “Abhinava Janardhana Vittala”;
Gopathivittala, Anandamaya vittala, prasannavittala, Gnanamayavittala, Manamadhure dasaru, venkatavittal, yogindravittala, Srinivasavittala,


Sri pranesha Vittala (chikkodi Bhagavantharao), Hukkeridasaru, kuntojidasaru, sirivatsa ankitha Indiresha (Harapanahalli Ramacharya),

guru indiresha, prasannavittala, etc are his other SHISHYAAS.


ಮಲಗಿ ಪರಮಾದರದಿ ಪಾಡಲು |
ಕುಳಿತು ಕೇಳುವ |

ಕುಳಿತು ಪಾಡಲು ನಿಲುವ |

ನಿಂತರೆ ನಲಿವ | ನಲಿದರೆ ಒಲಿವೆ |

ನಿಮಗೆಂಬ ಸುಲಭನೋ ಹರಿ|

ತನ್ನವರನರಘಳಿಗೆ ಬಿಟ್ಟಗಲನು |

ರಮಾಧವನೊಲಿಸಲರಿಯದೆ |

ಪಾಮರರು ಬಳಲುವರು ಭವದೊಳಗೆ

Summary of the devaranama – Srihari will be pleased with his bhajana in any manner.


If a bhakta praises Srihari with Bhakthi, even in his bed, Srihari will sit and hear him

If a bhakta praises Srihari with Bhakthi, even while sitting, Srihari will stand and listen to him


If the bhakta sings standing, Srihari will dance to his tune and listen to him

If the bhakta sings while dancing, Srihari will be completely with us and blesses us.

Ramapathi Srihari never leaves his bhaktas even for a fraction of time.


Some people failing to understand him will fall in samsara bandhana.


Even though the present devaranama says that Bhakta praising Srihari while in bed – it does not apply to all. If you are healthy, capable you have to stand and with due respect only you have to praise him.
Bheeshmacharya as he was helpless in bed, praised Krishna paramathma – So Krishna did the anugraha to him sitting in front of him hearing Vishnu Sahasranama by him. Similarly while sitting means – not only sitting but with druda bhakthi like that of Pundarika.
Prahladarajaru was standing while praising Narasimha – which he accepted by Dancing, etc. There is no time restriction for doing the stotra of Srihari.
shri jagannAtha dAsa guruvAntargata, shri maharudradEva guruvAntargata, bhArathiramaNa mukhyaprANantargata rukmiNi sathyabhAma patE shri pAnDuranga viTTala dEvara pAdAravindakke gOvindA gOvindA...




**********

info from dwaita org--->
Sri Jagannath Dasaru (1727 to 1809)
Born in a pious Brahmin family, he was given the name of Srinivasa. Even at a young age his brilliance was very evident and he was commended by Sri Vageesha Theertha, the then Pontiff at Mantralaya. He grew up to be a very great scholar, very well versed in all the great Dvaita works. Unfortunately, he also grew very proud and developed an intense dislike for Haridaasas, who he felt, were misrepresenting Dvaita philosophy.
He was a great sanskrit and dvaita scholar before becomming Dasa ( Srinivasa ). He had ego about his knowledge and disliked the Haridasas of that time. Foremost among the Haridasas among the time was Sri Vijaya Dasa. He disliked Haridasas of that time because he felt that they are misrepresenting the Dvaita School of thought by composing works in Kannada ( the local langauge ). He is said to have commented about Sri Vijaya Dasa that "Kannada pada heluva aa kUsi maganenu dasanaguttane". Meaning "How can that son of kUsi(name of Sri Vijaya Dasa's Mother), who sings kannada songs be a scholar". Later on he also refused to a feast in the honour of Sri Vijaya Dasa in the same city even when invited by Sri Vijaya Dasa himself. He complained that he is having some problems with stomach and thus he has already taken the food. To this Sri Vijaya Dasa replied "hage aagali" ( let it be so). Then Srinivasa developped a 'real' pain in the stomach.
From that day, Srinivasa developed intense stomach problems which grew worse by the day, finally reaching unbearable proportions. Srinivasa went to Tirupathi, Ghatikaachala and Mantralaya, performing intense Seva towards the Lord, Vaayu Devaru and Sri Raghavendra Swamigalu. None of this proved to be of any avail.
Finally, at the end of his stay in Mantralaya, he decided to commit suicide. That night, the epitome of mercy, Sri Raghavendra Swamigalu, appeared in his dream and told him that the cure for his problems lay in surrendering to Sri Vijayadaasaru and seeking his blessings. Srinivasa felt intense disgust at his own arrogance and rushed to Sri Vijayadaasaru, deeply regretting his behavior.
Sri Vijayadaasaru welcomed him without rancor, gave him a cure right away, and directed him to Sri Gopaala Daasaru who would be his swaroopa guru. Srinivasa went to Sri Gopaala Daasaru and spent some time with him. He realized the greatness of both the Daasarus and the fallacy of his own thinking.
Later, Sri Gopaala Daasaru and Srinivasa visited Tirupathi, where another miracle happened. Due to a combination of his previous ill-health and the strain of travelling to Tirupathi, Srinivasa expired on Bhadrapada Shukla Navami . Then, Sri Vijaya Daasaru appeared in an astral form before Sri Gopala Daasaru and directed him to donate 40 years of his life-span to Srinivasa and revive him. Sri Gopala Daasaru immediately complied, and by the grace of the Lord, Srinivasa came back to life again.
Deeply affected by the events in his recent past, Srinivasa decided to become a Haridaasa. Sri Gopala daasaru gave him Haridaasa Deekshe and directed him to Pandarapur for ankitha. There Srinivasa found a stone bearing the words "Jagannatha Vittala". From that day, he started composing devotional works with that ankitha. He became renowned as Jagannatha Daasaru.
He lived for 40 years after his miraculous rebirth. His life was full of incidents that reveal that he was an Aporaksha Gyani and a great Bhaktha with whom the Lord performed many leelas. There were many instances when the Lord took somebody's form and personally served Jagannatha Daasaru. When he visited Mantralaya, Rayaru personally appeared from the Brindavan and spoke to him (this wonderful incident is captured in the Devaranama "Yeddu Baruthaare Nodu...."). The jewel in his devotional crown was of course Hari Kathaamrutha Saara. It is said that in this wonderful work Sri Jagannatha Dasaru has captured the essence of his amazing grasp of Sastras, Srimad Acharya's works and works of other great Dvaita saints. It is a "must" for every Mumukshu aspiring for the grace of Hari, Vaayu, Guru.
Again, on the same Bhadrapada Shukla Navami, exactly 40 years after his rebirth, he reached the Lord's lotus feet.













  • Overview of his CompositionsWhen we look into the entire Compositions of Sri Jagannatha Dasaru most of them are devotional and giving importance to bhakti. One more thing we can find in his compositions are that it is stotra oriented: vittalayya vittalayya tatitkotinibhkaya jagannathavittalayya.. it starts and yendu kambeno pan.duran.ga mArutiya yi.ndu bhaga nivAsa narana sArathiya... prays humbly. He also expresses satisfaction when he felt that he has seen the Panduranage Vittala in his songs.. ka.nde pa.ndarirAyana... and dhanyanAde vittalana ka.ndu. He felt very happy in explaining Vittala whom he met. Sri Jagannatha Dasa exponents contains Devottee humble beginning to see and percept Sri Hari, his humanatarian relationship which makes him happy and comfortable, devotion which is beyond emotional touch are some of the concepts of his works. It is assumed that a devotee can build a relationship with Sri Hari in four ways, they are:
  • Master and Servant relationship (Dasya bhava)
  • Friendliness
  • Mother and child relatonship (Tender fondness, parental relationship)












  • Husband and Wife (love) Other than the above four there is fifth one which is Devotee and Sri Hari relationship. This is very popular in Devotional group/sect. This has been carried from Sri Padaraja and Sri Jagannatha Dasa also has done this with his devotional compositions. In Jagannatha Dasa's atma para compositions his dasya bhava can be seen visibly ie master and servant relationship. dAsOHAM tava dAsOHAM is coming from his inner heart, pAhi pAhi is from his mind and he has expressed that Sri Hari has to protect him 'rakshisOsrIsha srInivsa.. He also regrets that with the relationship bad people and his mind has become culmina A devotee can build relationship with Sri Hari in four way Explanations in respect of Devotees humble beginning to see Sri Hari.Sri Jagannatha Dasa is a very forciable writer and known chiefly for his prodgious schloarship in Sanskrit and mastery of original sanskrit texts of the system. He has burning enthusiasm for the cause of Madhva philosophy and writes a powerful style laden with technical wisdom and theological intricacies. His style is highly Sanskritised and his work teems with the details of Bhakti, Mukti, Taratamya, Aparoksa etc. His magnum opus, the Harikathamruthasara is a mind of information on Madva theology and is honored as a great authority and standard work of reference on the Estoerics of its theology, by adherents of Dasa Koota. It is written in the Bhamini Satpadi meter and is an epitome of Madhva theology, in 32 sandhis (chpaters). This Kannada work has the special honor of having a very recondite sanskrit commentary by Sankarsana Odeyaru disciple of Sri Visvapriya Tiirtha of Sode mutt. 

  • ********

    Sri Jagannatha Dasa1728-1809Srinivasa CharyaJagannatha VittalaPanduranga VittalaManviBhadrapada Shudda Navami

    Jagannatha Dasa (1728–1809), a native of Manvi town in the Raichur district, is considered one of the notable Haridasa ("devotee of the Hindu god Vishnu") saint-poets of the Kannada language. Apart from authoring numerous well-known devotional songs that propagate the Vaishnava bhakti, Jagannatha Dasa wrote the Harikathamritasara in the native shatpadi (six-line verse) metre and Tattva suvvali in the native tripadi (three-line verse) metre. He was also an accomplished scholar in the Sanskrit language.


    Legend has it that Jagannatha Dasa (known earlier as Srinivasacharya), was once invited by Vijaya Dasa, to attend a religious ceremony at Manvi. He excused himself from attending the ceremony on the pretext of suffering from severe stomach ache. Unfortunately, he actually fell ill and unable to find relief, sought the help of Vijaya Dasa who asked him to meet his desciple Gopala Dasa, who cured him. Repentant for his attitude towards the Haridasas, Srinivasacharya became a disciple of Gopala Dasa and took to the Haridasa fold. His poems are written with the ankita (pen name, also called mudrika) "Jagannatha Vittala". These details are known from a song written by Jagananatha Dasa expressing his gratitide to Gopala Dasa and Vijaya Dasa.

    For about a century after the death of Vadiraja Tirtha (1480–1600), a noted saint-poet, the Haridasa devotional cult which propagated the Dvaita philosophy of Madhvacharya through lucid Kannada devotional songs, seemed to wane. The movement however revived in the 18th century under the guidance of Vijaya Dasa, this time centered in the holy town of Mantralayam in modern Andhra Pradesh and a large area covering the Raichur district in modern Karnataka. About 300 saint-poets from this cadre enriched Kannada literature during the 18th–19th centuries.

    KANNADA LITERATURE ~ The Harikathamritasara treats on the philosophy of Madhvacharya and is considered his magnum opus and a work of immense importance by the Dvaita school. Written in the native Bhamini Shatpadi metre with a poetic touch, it contains 32 chapters (sandhis) comprising 988 stanzas. Later day scholars wrote ten commentaries on this work, including a Sanskrit commentary in 1862 (by Sankarsana Odeyaru), an indication of its superior literary content.

    The Tattva Suvvali, containing 1,200 pithy and proverbial poems of which 600 stanzas are available today, was written in the native tripadi metre, in a simple style, and is known to have been a consolation to his young widowed daughter.




    ಶ್ರೀವೇದವ್ಯಾಸ-ಶ್ರೀಮಧ್ವ ಭಗವತ್ಪಾದರ ಸಿದ್ಧಾಂತದ ಸಾರಸರ್ವಸ್ವದಂತಿರುವ ಕನ್ನಡದ ಮೇರುಕೃತಿ ಶ್ರೀಹರಿಕಥಾಮೃತಸಾರವನ್ನು ನೀಡಿ ಸಜ್ಜನರಿಗೆ ಮಹದುಪಕಾರಮಾಡಿರುವ ದಾಸಶ್ರೇಷ್ಟ ಶ್ರೀಜಗನ್ನಾಥದಾಸರಾಯರ ಆರಾಧನಾ ಪರ್ವಕಾಲ ಸಮೀಪಿಸುವ ಸಂದರ್ಭದಲ್ಲಿ, ದಾಸರಾಯರ ಮಹತಿಯನ್ನು ಬಿಂಬಿಸುವ ಘಟನೆಯೊಂದು ನೆನಪಾಗುತ್ತಿದೆ. ಕೆಲವು ವರ್ಷಗಳ ಹಿಂದೆ, ಶ್ರೀಜಗನ್ನಾಥದಾಸರ ಜೀವನವನ್ನು ಕುರಿತ ಕಾದಂಬರಿಯನ್ನು ರಚಿಸುವ ಅಭಿಲಾಶೆ ಮನಸ್ಸಿನಲ್ಲಿ ಬಹಳವಿತ್ತು. ಇದೇ ಸಮಯದಲ್ಲಿ ಮನೋಭಿಮಾನಿಗಳಾದ ಶ್ರೀರುದ್ರದೇವರ ಮಹತ್ತರ ಸನ್ನಿಧಾನವಿರುವ ನಂಜನಗೂಡಿನ ಶ್ರೀಕಂಠೇಶ್ವರನ ದರ್ಶನಕ್ಕೆ ಹೋಗುವ ಪ್ರಸಂಗ ಬಂದು ಒದಗಿತು. ಶ್ರೀರುದ್ರದೇವರ ದರ್ಶನಾನಂತರ ಶ್ರೀಪಾರ್ವತಿದೇವಿಯ ದೇವಸ್ಥಾನದಲ್ಲಿ ಶ್ರೀಭವಾನಿಯ ದರ್ಶನ ಪಡೆಯುತ್ತಿರುವ ಸಂದರ್ಭ- ಶ್ರೀಭವಾನಿಗೆ ಕುಂಕುಮಾರ್ಚನೆ ಮಾಡುತ್ತಿದ್ದ ವಯೋವೃದ್ಧ ಅದ್ವೈತಮತಾನುಯಾಯಿಯಾದ ಅರ್ಚಕರು ಆಶ್ಚರ್ಯವೆಂಬಂತೆ, ಹೊರಗೆ ಬಂದು ದೇವಿಯ ಕುಂಕುಮವನ್ನು ನನ್ನ ಕೈಯಲ್ಲಿ ಹಾಕಿ ಶ್ರೀಜಗನ್ನಾಥದಾಸರು ಮಹಾನುಭಾವರಪ್ಪ- ಅವರ ಶ್ರೀಹರಿಕಥಾಮೃತಸಾರ ಮಂತ್ರತುಲ್ಯವಾದ ಕೃತಿ, ಶ್ರೀವ್ಯಾಸರಾಜರು ಯತಿಗಳ ರಾಜರು ಎಂದು ಹೇಳಿದರು. ಸತ್ಯಹೇಳಬೇಕೆಂದರೆ, ಪ್ರಯಾಣದ ಕಾರಣದಿಂದ ನನ್ನ ಲಲಾಟದಲ್ಲಿ ಆ ಸಂದರ್ಭದಲ್ಲಿ ವೈಷ್ಣವ ಲಾಂಛನಗಳು ಯಾವುವೂ ಕಾಣದಾಗಿದ್ದವು. ಹಾಗಿದ್ದಾಗ್ಯೂ ಮಾಧ್ವಮತಾನುಯಾಯಿಗಳಲ್ಲದ ವಯೋವೃದ್ಧರು ಅಲ್ಲಿ ಸೇರಿದ್ದ ಜನರ ಮಧ್ಯೆ ನನ್ನ ಕೈಯಲ್ಲಿ ಕುಂಕುಮಪ್ರಸಾದವನ್ನಿರಿಸಿ ಶ್ರೀಜಗನ್ನಾಥದಾಸರ, ಅವರ ಕೃತಿಯ ಬಗ್ಗೆ ಗೌರವಾದರಗಳಿಂದ ಮಾತನಾಡಿದ್ದು, ಶ್ರೀವ್ಯಾಸರಾಜರು ಯತಿಗಳ ರಾಜರು ಎಂದು ಹೇಳಿದ್ದು ರೋಮಾಂಚನವನ್ನುಂಟು ಮಾಡಿತು. ಮನೋಭಿಮಾನಿಗಳ ಹಾಗೂ ಅವರ ಅಂತರ್ಯಾಮಿಯ ಅನುಗ್ರಹದ ದ್ಯೋತಕವಾಗಿ ಕೆಲವುದಿನಗಳಲ್ಲಿಯೇ ಶ್ರೀದಾಸರಾಯರ ಜೀವನ ಕುರಿತ 'ಫಲವಿದು ಬಾಳ್ದುದಕೆ' ಕೃತಿಯ ರಚನೆಯಾಗಿ ಪರಮಪೂಜ್ಯ ಶ್ರೀಪೇಜಾವರ ಶ್ರೀಗಳಿಂದ ಶ್ರೀಜಗನ್ನಾಥದಾಸರ ಆರಾಧನೆಯಂದೇ ಕೃತಿ ಲೋಕಾರ್ಪಣೆ, ಲೋಕೇಶ್ವರಾರ್ಪಣೆಗೊಂಡಿತು.
    ಎಲ್ಲ ವಿಚಾರಗಳ ಎರಕವೆನಿಸಿದ ಹರಿದಾಸಸಾಹಿತ್ಯವು ತಿಳಿಗನ್ನಡದ ಉಪನಿಷತ್ತೆಂದೇ ಬಲ್ಲವರು ಆದರಿಸುವರು. ಇಲ್ಲಿನ ಭಾಷೆ ಆಡುಮಾತಿಗೆ ಹತ್ತಿರವಾಗಿರುವುದಲ್ಲದೆ ರೂಢಿಗೂ ಹತ್ತಿರವಾಗಿದೆ. ಸಾಮಾನ್ಯರಿಗೆ ಅಪರಿಚಿತವೆನಿಸಿದ್ದ ವೇದಾಂತ ವಿಚಾರಗಳು ನರಹರಿತೀರ್ಥರಿಂದ ಚಿಗುರೊಡೆದು ಶ್ರೀಪಾದರಾಜರಿಂದ ಬಲಿತು ಶ್ರೀವ್ಯಾಸರಾಜರಿಂದ ಹಣ್ಣಾಗಿ ಪುರಂದರರಿಂದ ರಸಾಯನವಾಗಿ ಹೊಮ್ಮಿದಾಗ ಅದನ್ನು ಅನುಭವಿಸಿದ ರಸಿಕರು ಲೆಕ್ಖಕ್ಕೆ ಸಿಗದಷ್ಟಿರುವರು!.ಆದಾಗ್ಯೂ ಮರೆಯಲಾಗದ ಕೆಲ ಮಹಾತ್ಮರಲ್ಲಿ ಜ್ಞಾನಿವರೇಣ್ಯರೆನಿಸಿದ ಶ್ರೀಜಗನ್ನಾಥದಾಸರೂ ಒಬ್ಬರು. 17ನೇ ಶತಮಾನದಲ್ಲಿ ಸಂಪ್ರದಾಯಸ್ಥರ ಮನೆತನದಲ್ಲಿ ಹುಟ್ಟಿದ ಶ್ರೀನಿವಾಸನೆಂಬ ಬ್ರಾಹ್ಮಣನೋರ್ವ ರಾಯರ ಮಠದ ಶ್ರೀವಾಗೀಶತೀರ್ಥರ ಗರಡಿಯಲ್ಲಿ ಬೆಳೆದವನಾಗಿ ಆಚಾರ-ವಿಚಾರಗಳಿಂದ ತುಂಬಿದ್ದ ಪ್ರಕಾಂಡ ಪಂಡಿತನೆನಿಸಿದ್ದ. ವ್ಯಾಸಸಾಹಿತ್ಯವೇ ಶ್ರೇಷ್ಠವೆಂಬ ಭಾವನೆಯಲ್ಲಿ ಬದುಕುತ್ತಿದ್ದ ಆತನಿಗೆ ದಾಸರು-ದಾಸಸಾಹಿತ್ಯವೆಂದರೆ ಒಂದು ರೀತಿಯಲ್ಲಿ ತಾತ್ಸಾರ. ಅದೇ ಕಾಲಘಟ್ಟದಲ್ಲಿದ್ದ ಸುಳಾದಿ ದಾಸರೆಂದೇ ಖ್ಯಾತರಾದ ಶ್ರೀವಿಜಯದಾಸರೇ ಮೊದಲಾದವರು ಆಡುಭಾಷೆಯ ಮೂಲಕ ವ್ಯಾಸಸಾಹಿತ್ಯದ ಗಾಂಭೀರ್ಯವನ್ನು ಹಾಳುಮಾಡುತ್ತಿರುವರೆಂದು ‘ಕನ್ನಡ ಪದಹೇಳುವ ಕೂಸಿಮಗನೇನು’ ದಾಸನಾಗುವನು ಎಂದು ವೈಯಕ್ತಿಕವಾಗಿ ಹೀಯಾಳಿಸುವರು. ಇದಕ್ಕೆ ಬೇಸರಿಸದ ವಿಜಯದಾಸರು ಮುಗುಳುನಕ್ಕು ಒಮ್ಮೆ ಆತಿಥ್ಯ ಸ್ವೀಕರಿಸಲು ಆಹ್ವಾನಿಸಿದಾಗ ಹೊಟ್ಟೆನೋವಿನ ನೆಪಹೇಳಿದ ಶ್ರೀನಿವಾಸನು ಉದ್ದೇಶಪೂರ್ವಕವಾಗಿ ತಿರಸ್ಕರಿಸುವನು. ಇದರ ಪರಿಣಾಮ ನಿಜಕ್ಕೂ ಉದರಶೂಲೆಯನ್ನನುಭವಿಸಿದ ಶ್ರೀನಿವಾಸನು ತಿರುಪತಿ, ಘಟಿಕಾಚಲ, ಮಂಚಾಲೆಗೆ ದೌಡಾಯಿಸಿ ಹರಿವಾಯು ಗುರುಗಳನ್ನು ಮೊರೆಹೋಗುವನು. ಕೊನೆಗೆ ರಾಯರಿಂದ ಸ್ವಪ್ನದಲ್ಲಿ ವಿಜಯದಾಸರನ್ನೇ ಮೊರೆಹೋಗೆಂದು ಆದಿಷ್ಟನಾದಾಗ ವಿಜಯದಾಸರನ್ನು ಶರಣುಹೊಂದಿ ಅನುಗ್ರಹೀತರಾಗುವರು. ಬಳಿಕ, ಸ್ವರೂಪೋದ್ಧಾರಕ ಗುರುಗಳೆನಿಸಿದ ಗೋಪಾಲದಾಸರ ಶಿಷ್ಯತ್ವವನ್ನು ವಹಿಸಿದ ಶ್ರೀನಿವಾಸಾಚಾರ್ಯರು ಒಮ್ಮೆ ತಿಮ್ಮಪ್ಪನ ದರುಶನಕ್ಕೆಂದು ಹೋದಾಗ ದುರದೃಷ್ಟವಶಾತ್ ಅಪಮೃತ್ಯುವಿಗೆ ಗುರಿಯಾಗಿ ಇದೇ ಭಾದ್ರಪದ ನವಮಿಯಂದು ಪ್ರಾಣಬಿಡುವರು. ಆಗಲೆ ಪವಾಡವೆಂಬಂತೆ ವಿಜಯದಾಸರಿಂದ ಆಜ್ಞಪ್ತರಾದ ಗೋಪಾಲದಾಸರು ತಮ್ಮ 40ವರುಷ ಆಯುಸ್ಸನ್ನು ಶ್ರೀನಿವಾಸನಿಗೆ ಧಾರೆಯೆರೆದು ದಾಸದೀಕ್ಷೆಯೊಂದಿಗೆ ಉದ್ಧರಿಸುವರು. ಮುಂದೆ ಪಂಢರಪುರದಲ್ಲಿ ಶಿಲೆಯ ಮೇಲೆ ಕಾಣಿಸಿದ ‘ಜಗನ್ನಾಥವಿಠ್ಠಲ’ವೆಂಬ ಅಂಕಿತವನ್ನೇ ಹರಿಯ ಅನುಗ್ರಹವೆಂದು ಭಾವಿಸಿದ ಶ್ರೀನಿವಾಸಾಚಾರ್ಯರು ಜಗನ್ನಾಥದಾಸರಾಗಿ ಪ್ರಸಿದ್ಧಿಪಡೆದರು.
    ಜಗನ್ನಾಥದಾಸರ ಮೇರುಕೃತಿಯೆನಿಸಿದ ‘ಹರಿಕಥಾಮೃತಸಾರ’ವು ದ್ವೈತಸಿದ್ಧಾಂತದ ಮೇರುಕೃತಿಗಳ ಕನ್ನಡೀಕರಣ ಕೃತಿಯೆಂದರೆ ತಪ್ಪಾಗಲಾರದು. ಇಲ್ಲಿನ ಪದ-ಭಾವ-ಚಿಂತನೆಗಳೆಲ್ಲವೂ ಆಚಾರ್ಯಮಧ್ವರ ಸರ್ವಮೂಲಗಳ ಪ್ರತಿಬಿಂಬವೇ ಆಗಿದೆ. ಜಗನ್ನಾಥದಾಸರ ಎಲ್ಲ ಕೃತಿಗಳಲ್ಲೂ ಭಾಗವತಧರ್ಮಗಳೆನಿಸಿದ ನಿಷ್ಕಾಮಕರ್ಮ-ಭಕ್ತಿ-ಪಂಚಭೇದತಾರತಮ್ಯ- ಹರಿಸವೋತ್ತಮತ್ವ ಹಾಗು ವಾಯುಜೀವೋತ್ತಮತ್ವ ವಿಚಾರಗಳು ಅಮೋಘವಾಗಿ ಅರಳಿವೆ. ಭಗವಂತನ ಪ್ರಸಾದವೆನಿಸಿದ ಈ ಜನುಮಕ್ಕೆ ಸಾರ್ಥಕ್ಯ ಸಿಗುವುದೇ ಅವನ ಸ್ಮರಣೆಯಿಂದ ಹಾಗು ಅಭಿಮಾನ ಬಿಡುವಿಕೆಯಿಂದ ಎಂದು ಸಾರಿಹೇಳಿದ್ದಾರೆ. ‘ದುರಿತವನ ಕುಠಾರೀ ದುರ್ಜನ ಕುಲವೈರಿ’ ಎಂಬ ದಾಸರ ಪ್ರಸಿದ್ಧ ಸುಳಾದಿಯು ಭಗವಂತನ ಹಿರಿತನ, ಕರುಣೆ, ಸಲಹುವ ಪ್ರೀತಿ ಮುಂತಾದ ಗುಣಗಳನ್ನು ಸಕಾರಣವಾಗಿ ಸಮರ್ಥಿಸಿ ಕೊನೆಗೆ ‘ನಿನ್ನಲ್ಲಿ ಕೇಳಿಕೊಳ್ಳುವುದೇನುಂಟು ಎಲ್ಲವೂ ನಿನ್ನಾಧೀನವಾಗಿರಲೆಂದು’ ವಿನಮ್ರವಾಗಿ ಹೇಳುವ ಪರಿಯನ್ನು ಗಮನಿಸಿದಾಗ ದಾಸ್ಯಭಾವವೆನ್ನುವುದೂ ಸುಲಭವಾಗಿ ಮೂಡಿಬರುವಂಥದ್ದಲ್ಲವೆಂದು ಗೊತ್ತಾಗುವುದು. ಸಂಸ್ಕೃತ ಭಾಷೆಯಲ್ಲಿ ಅಸದೃಶ ಪಾಂಡಿತ್ಯವಿದ್ದಿದ್ದರ ಪರಿಣಾಮ ಜಗನ್ನಾಥದಾಸರು ‘ಯಾತರವ ನಾನಯ್ಯ ಇಂದಿರೇಶ ಹೋತಾಹ್ವಯನೆ ನಿನ್ನಧೀನವೀ ಜಗವೆಲ್ಲ’ ಎಂಬ ಕೃತಿಯಲ್ಲಿ ಶಾಸ್ತ್ರೀಯ ಪ್ರಮೇಯಗಳನ್ನು ಸಂಗ್ರಹಿಸಿ ಕೊಟ್ಟಿದ್ದಾರೆ. ಅಂತೆಯೇ ತತ್ತ್ವಸುವ್ವಾಲಿ, ನರಸಿಂಹ ಸುಳಾದಿ ಮುಂತಾದ ಕೃತಿರತ್ನಗಳಲ್ಲಿ ದೇವತಾ ಉಪಾಸನಾಕ್ರಮ ಕುರಿತಂತೆ ವಿಸ್ತಾರವಾಗಿ ತಿಳಿಸಿದ್ದಾರೆ. ಹೀಗೆ ಸಾಧನಾ ಶರೀರವನ್ನು ಎರಡುಬಾರಿ ಪಡೆದ ದಾಸರು; ಬದುಕಿ ಸಾಯುವುದು ಬದುಕಲ್ಲ ಬದುಕಿಗೆ ಬೆಳಕನಿತ್ತ ಹರಿಯನ್ನು ಸ್ಮರಿಸುವುದೇ ನಿಜವಾದ ಬದುಕೆಂದು ತಮ್ಮನ್ನೇ ಉದಾಹರಣೆಯಾಗಿ ತಿಳಿಸಿ ಭಾದ್ರಪದ ಶುದ್ಧ ನವಮಿಯಂದೇ ವಿಷ್ಣುಪದಕ್ಕೆ ತೆರಳಿದ ಜಗನ್ನಾಥದಾಸರನ್ನು ಸ್ಮರಿಸಿ ಕೃತಾರ್ಥರಾಗೋಣ.
    (ಲೇಖಕರು ಸಂಸ್ಕೃತ ಪ್ರವಾಚಕರು, ವಿಮರ್ಶಕರು)




    ||ಪೊಂದಿ ಭಜಿಸು ಸತತ
    ಒಂದೇ ಮನದಿ ಸ್ತಂಭ ಮಂದಿರ ಮಾನವಿ ದಾಸಾರ್ಯರ||

    ರಾಯಚೂರು ಜಿಲ್ಲೆ ಮಾನವಿ ತಾಲ್ಲೂಕಿನ ಬ್ಯಾಗವಾಟ ಗ್ರಾಮದಲ್ಲಿ ನಮ್ಮ ಇಂದಿನ ಕಥಾನಾಯಕರಾದ ಶ್ರೀ ಜಗನ್ನಾಥ ದಾಸರ ಜನನ.
    ತಂದೆ ಶ್ರೀ ನರಸಿಂಹ ಆಚಾರ್ಯರು ಮಹಾ ವಿದ್ವಾಂಸರು, ಇವರಿಗೆ ಸ್ವಪ್ನದಲ್ಲಿ ಶ್ರೀ ಪುರಂದರ ದಾಸರು "ನರಸಿಂಹ ವಿಠ್ಠಲ" ಎಂಬ ಅಂಕಿತವನ್ನು,ಪ್ರಧಾನ ಮಾಡಿರುತ್ತಾರೆ
    ತಾಯಿ ಶ್ರೀಮತಿ ಲಕ್ಷ್ಮೀ ಬಾಯಿ.
    ಮಗು ಬೆಳೆದ ಹಾಗೆಲ್ಲ ತಂದೆಯ ಕಡೆಇಂದ ಪಾಠ ಪ್ರವಚನದ ಅಧ್ಯಯನ ಅಭ್ಯಾಸ ಆಯಿತು.
    ಹೆಚ್ಚಿನ ವಿದ್ಯಾಭ್ಯಾಸ ಕ್ಕಾಗಿ ಮಂತ್ರಾಲಯ ಮಠದ ಪರಂಪರೆಯಲ್ಲಿ ಬಂದ ಶ್ರೀ ವರದೇಂದ್ರ ಗುರುಗಳ ಬಳಿ ಬರುತ್ತಾರೆ.
    ಶ್ರೀ ವರದೇಂದ್ರ ಗುರುಗಳ ಅನುಗ್ರಹದಿಂದ ಸಕಲ ವಿದ್ಯೆಯಲ್ಲಿ ಪಾರಂಗತರಾಗಿ,ಸಚ್ಛಾಸ್ತ್ರ ಪ್ರವೀಣರಾಗುತ್ತಾರೆ.
    ಗುರುಗಳ ಮಾತಾ ಪಿತೃಗಳ ಆಜ್ಞೆಯಂತೆ ಗೃಹಸ್ಥಾಶ್ರಮ ಧರ್ಮವನ್ನು ಸ್ವೀಕರಿಸಿ, ಶಿಷ್ಯರಿಗೆ ಪಾಠ ಹೇಳುತ್ತಾ ಜೀವನ ಸಾಗಿಸುತ್ತಾರೆ.
    ಒಂದು ದಿನ ಶ್ರೀ ಹರಿಯ ಆಜ್ಞೆಯಂತೆ
    ಶ್ರೀ ವಿಜಯದಾಸರು ಇವರನ್ನು ಉದ್ದಾರ ಮಾಡಲು ಇವರು ಇರುವ ಕಡೆ ಬಂದು ತಮ್ಮಲ್ಲಿ  ತೀರ್ಥ ಪ್ರಸಾದ ಸ್ವೀಕಾರ ಮಾಡಲು ಶ್ರೀನಿವಾಸ ಆಚಾರ್ಯರನ್ನು ಆಹ್ವಾನಿಸುತ್ತಾರೆ.
    ಮೊದಲಿಗೆ ಒಪ್ಪಿಕೊಂಡು ನಂತರ
    ವಿಜಯ ದಾಸರ ಮೇಲಿನ ಅಸಡ್ಡೆ,ತಾನು ಪಂಡಿತ, ಇವರು ಯಾರೋ  ದಾಸರು ಕಾಲಿಗೆ ಗೆಜ್ಜೆ ಕಟ್ಟಿ ಕೊಂಡು ಕುಣಿಯುವವರು ಅನ್ನುವ ತಾತ್ಸಾರದಿಂದ  ಊಟಕ್ಕೆ ಕರೆಯಲು ಬಂದವರಿಗೆ  
    ನನಗೆ ಊಟ ತಡವಾದರೆ ಉದರ ಶೂಲೆ ಬರುತ್ತದೆ ಹಾಗಾಗಿ ನಾನು ಬೇಗ ಊಟ ಮಾಡಿದೆ ಅಂತ ಹೇಳಿ ಅವರ ಆಮಂತ್ರಣ ವನ್ನು ನಿರಾಕರಿಸುತ್ತಾರೆ.
    ಇದನ್ನು ಶಿಷ್ಯರ ಮುಖಾಂತರ ಕೇಳಿದ ಶ್ರೀ ವಿಜಯದಾಸರು ಶ್ರೀ ಹರಿಯ ಚಿತ್ತಕ್ಕೆ ಇದಿರಾರು ಅಂತ ಹೇಳಿ ಬ್ರಾಹ್ಮಣ ಸುವಾಸಿನಿಯರಿಗೆ ಭೋಜನ ಮಾಡಿಸಿ ಅಲ್ಲಿ ಇಂದ ಮುಂದೆ ತೆರಳುತ್ತಾರೆ..
    ದೊಡ್ಡವರಲ್ಲಿ ಮಾಡಿದ ತಿರಸ್ಕಾರ ,ನಿಂದನೆ  ಈ ತಪ್ಪು ಅವರಿಗೆ ನಿಜವಾಗಿಯೂ ಉದರ ಶೂಲೆ ಬರಲು ಆರಂಭವಾಯಿತು.
    ಹಿಂದಿನ ಜನ್ಮದಲ್ಲಿ ಶಲ್ಯ ಮಹಾರಾಜ ಆಗಿದ್ದಾಗ ಮಹಾಭಾರತ ಸಮಯದಲ್ಲಿ ಕಲಿಯ ಅವತಾರವಾದ ದುರ್ಯೋಧನನ ಮನೆಯ ಅನ್ನ ಉಂಡ ಪರಿಣಾಮವಾಗಿ ಶ್ರೀ ವಿಜಯಪ್ರಭುಗಳ ನಿಂದನೆ ಮಾಡುವ ಮಟ್ಟಕ್ಕೆ ಬಂತು.
    ಈ ಘಟನೆ ಮುಂದೆ ಅವರ ಜೀವನದಲ್ಲಿ ಒಂದು ತಿರುವು ಪಡೆಯಿತು.
    ಉದರ ಶೂಲೆಯ ಬಾಧೆಯನ್ನು ತಡೆಯಲಾರದೇ ಪ್ರಾಣದೇವರ ಸೇವೆ, ರಾಯರ ಸೇವೆ ಯನ್ನು ಮಾಡುತ್ತಾರೆ.
    ಕೊನೆಗೆ ಸ್ವಪ್ನದಲ್ಲಿ ಮಂತ್ರಾಲಯ ಪ್ರಭುಗಳು ಬಂದು ತಿರುಪತಿಗೆ ಹೋಗಿ ವಿಜಯದಾಸರು ಬಳಿ ಶರಣುಹೊಂದು ಅವರೇ ನಿನ್ನ ಉದ್ದಾರ ಮಾಡುವವರು ಅಂತ ಸೂಚನೆ ಆದಾಗ ತಕ್ಷಣ ತಿರುಪತಿ ಪ್ರಯಾಣ ಬೆಳೆಸುತ್ತಾರೆ.
    ವಿಜಯದಾಸರು ಬಳಿ ಬಂದು ತಮ್ಮ ತಪ್ಪು ಕ್ಷಮಿಸಿ ಅಂತ ಕೇಳಿ ಬಲು ಪಶ್ಚಾತ್ತಾಪ ಪಡುತ್ತಾರೆ.
    ಅವರಲ್ಲಿ ಆದ ಬದಲಾವಣೆ ಕಂಡು  ದಾಸರು ಅವರನ್ನು 
    ಶ್ರೀ ಗೋಪಾಲ ದಾಸರ ಬಳಿ ಉತ್ತನೂರಿಗೆ ಕಳುಹಿಸುತ್ತಾರೆ.
    ಗೋಪಾಲ ದಾಸರು ತಮ್ಮ ಹತ್ತಿರ ಬಂದು ಶರಣಾಗತರಾದ ಆಚಾರ್ಯ ರನ್ನು ಕಂಡು ಅವರಿಗೆ ಉಪಚಾರವನ್ನು ಮಾಡುತ್ತಾರೆ.
    ಆ ಸಮಯದಲ್ಲಿ ಶ್ರೀ ವಿಜಯದಾಸರು ಸೂಕ್ಷ್ಮ ರೂಪದಿಂದ ಅವರ ಬಳಿಗೆ ಬಂದು 
    ಈ ಜೀವಿಗೆ ಅಲ್ಪಾಯು ಇದೆ. ಮುಂದೆ ಇವನಿಂದ ಅನೇಕ ಕಾರ್ಯಗಳು ಆಗಬೇಕಾಗಿದೆ.ನಿನ್ನ ಆಯುಸ್ಸು ನಲ್ಲಿ40 ವರುಷ ದಾನ ಮಾಡು ಅಂತ ಹೇಳುತ್ತಾರೆ. 
    ಗುರುಗಳ ಆಜ್ಞೆಯಂತೆ ಗೋಪಾಲ ದಾಸರು
    ಶ್ರೀನಿವಾಸ ಆಚಾರ್ಯರ ಉದರಶೂಲೆಯನ್ನು ಧನ್ವಂತರಿ ರೂಪಿ ಪರಮಾತ್ಮನ ಹತ್ತಿರ ಪ್ರಾರ್ಥನೆ ಮಾಡಿ ಅದನ್ನು ಗುಣಪಡಿಸಿ ತಮ್ಮ ಆಯುಸ್ಸು ನಲ್ಲಿ ನಲವತ್ತು ವರುಷಗಳನ್ನು ಅವರಿಗೆ ದಾನ ಮಾಡುತ್ತಾರೆ.
    ದೇವತೆಗಳಿಗೆ ಯಾವುದು ಅಸಾಧ್ಯವಲ್ಲ.
    ಆ ನಂತರ ಗುರುಗಳ ಅಪ್ಪಣೆ ಪಡೆದು  ಶ್ರೀನಿವಾಸ ಆಚಾರ್ಯರು ಪಂಡರಾಪುರಕ್ಕೆ ಬಂದು ಭೀಮರಥಿಯಲ್ಲಿ ಮುಳುಗಿ ಸ್ನಾನ ಮಾಡುವಾಗ ತಲೆಯ ಮೇಲೆ ಒಂದು ಕರಿಯ ಶಿಲೆ ಕಂಡಿತು.ಅದರಲ್ಲಿ "ಜಗನ್ನಾಥ ವಿಠ್ಠಲ" ಎಂದು ಬರೆಯಲಾಗಿತ್ತು.
    ಉಭಯ ಗುರುಗಳ ಅನುಗ್ರಹದಿಂದ ತಮ್ಮ ಮೇಲೆ ಭಗವಂತ ಮಾಡಿದ ಕಾರುಣ್ಯವನ್ನು ನೆನೆದು ಅಂದಿನಿಂದ ಅದೇ ಅಂಕಿತದಿಂದ ಅನೇಕ ಕೃತಿಗಳು ರಚನೆಯನ್ನು ಮಾಡಿ ಜಗನ್ನಾಥ ದಾಸರೆಂದು ಪ್ರಸಿದ್ಧಿ ಹೊಂದುತ್ತಾರೆ.
    ಕೊನೆಯ ವಯಸ್ಸಿನಲ್ಲಿ ಭಗವಂತನ ಆಜ್ಞೆಯಂತೆ ಶ್ರೀ ವ್ಯಾಸರಾಜ,ವಾದಿರಾಜ ಗುರುಗಳ ಹಾಗು ಪುರಂದರ ದಾಸರ ಅನುಗ್ರಹದಿಂದ "ಸಕಲ ವೇದ ಶಾಸ್ತ್ರ, ಭಾಗವತ,ಸಂಗ್ರಹವಾದ ಶ್ರೀ ಹರಿಕಥಾಮೃತ ಸಾರವೆಂಬ" ಭಾಮಿನೀ ಷಟ್ಪದಿಯಲ್ಲಿ ಕೃತಿ ರಚನೆಯನ್ನು ಮಾಡಿ ಭಗವಂತನಿಗೆ ಅರ್ಪಣೆ ಮಾಡುತ್ತಾರೆ.
    ಅನೇಕ ಶಿಷ್ಯರು ಇವರಿಗೆ.
    ಮುಖ್ಯವಾಗಿ ಶ್ರೀ ಪ್ರಾಣೇಶ ದಾಸರು, ಕರ್ಜಗಿ ದಾಸರು, ಗುರು ಶ್ರೀಶ ವಿಠ್ಠಲ ದಾಸರು.
    ತಮ್ಮ ಕಾರ್ಯ ಮುಗಿದ ಮೇಲೆ ದೇವತೆಗಳು ಭೂ ಸಂಪರ್ಕವನ್ನು ಹೊಂದದಿರುವದು ಭಗವಂತನ ಆಜ್ಞೆ. 
    ಅದರಂತೆ ತಾವು ಹಿಂದೆ ದಾನವಾಗಿ ಪಡೆದ ತಮ್ಮ ಮನೆಯಲ್ಲಿ ಪ್ರತಿನಿತ್ಯ ದಂತೆ ನಿತ್ಯ ಕಾರ್ಯವನ್ನು ಮುಗಿಸಿ ಶಿಷ್ಯ ರಿಗೆ ಹಿತೋಪದೇಶ ಮಾಡಿ ಆಶೀರ್ವಾದ ಮಾಡಿ ತಾವು ಮಹಾಯಾತ್ರೆ ಮಾಡುವದಾಗಿ ತಿಳಿಸಿ ದರು.
    ದಿನಾಲು ತಾವು ಪಾಠ ಪ್ರವಚನ,ಭಜನೆ ಮಾಡುತ್ತಿದ್ದ ಪಡಸಾಲೆಯಲ್ಲಿ ಇರುವ ಕಂಭದ ಮುಂದೆ ಕುಳಿತು ಕೊಂಡು ಲಯ ಚಿಂತನೆ ಯನ್ನು ಮಾಡುತ್ತಾ, ಯೋಗಬಲದಿಂದ, ತೇಜೋಮಯ ರೂಪದಿಂದ, ಬ್ರಹ್ಮ ರಂಧ್ರ ದಿಂದ, ದೇಹತ್ಯಾಗ ಮಾಡಿ ತಮ್ಮ ಒಂದು ಅಂಶವನ್ನು ಕಂಬದಲ್ಲಿಟ್ಟು ವಿಷ್ಣುದೂತರು ತಂದ ವಿಮಾನ ದಲ್ಲಿ ಕುಳಿತು ಜಗನ್ನಾಥ ವಿಠ್ಠಲನ ಬಳಿ ತೆರಳಿದರು.
    "ಅಂದು ಶಾಲಿವಾಹನ.ಶಕ ೧೭೩೧, ಶುಕ್ಲ ಪಕ್ಷದ ಭಾದ್ರಪದ ಮಾಸದ ನವಮಿ ತಿಥಿ."
    ಅಂದಿನಿಂದ ಇಂದಿನವರೆಗೆ ಮಾನವಿಯಲ್ಲಿ ಇವರ ನಿತ್ಯ ಪೂಜೆ ಆ ಸ್ತಂಭ ಕ್ಕೆ ಮತ್ತು ಪ್ರತಿ ವರ್ಷ ಆರಾಧನಾ ಬಹಳ ವಿಜೃಂಭಣೆಯಿಂದ ನಡೆಯುತ್ತದೆ.
    🙏🙏🙏
     ಈತನ ಭಜಿಸಲು ಯಾತನೆಗಳು ಇಲ್ಲ|
    ಈತನ ಸೇರಲು ಯಾತರ ಭೀತಿಯೋ|
    ಈತನ ಹೊರೆತಿನ್ನು ದಾತರು ನಮಗಿಲ್ಲ| ಈತನೆ ರಕ್ಷಕ ಈತನೆ ತಾಯಿ ತಂದೆ
    ಈತನೆ ಸದ್ಗುರು ಈತನೆ ಗತಿಪ್ರದ
    ಈತನೆ ಮೂಕಗೆ ಮಾತು ನುಡಿಸಿದಾತ
    ಈತನ ಭಕ್ತಿ ಗೆ ಸೋತು ಎರಡು ವ್ಯಾಳೆ ವಾತಾಂತರ್ಗತ ನಮ್ಮ ಶ್ಯಾಮ ಸುಂದರ ವಿಠ್ಠಲ |ಪ್ರೀತಿ ಇಂದ ಇವರಿಗೆ ಮೃಷ್ಟಾನ್ನ ಉಣಿಸಿದ.||
    ಈ ಮಹಾ ಮಹಿಮರ ಪ್ರೇಮ ಪಡೆವರನ್ನ|
    ಶ್ಯಾಮ ಸುಂದರ ವಿಠ್ಠಲ ಸ್ವಾಮಿ ಸತತ ಪೊರೆವ.||
    God was courteous in sending Devatas as aparoksha Jnani Haridasas to earth, to disseminate the essence contained in Vedas, Upanishads, Madhwa Philosophy, wrong traditions in practice etc., in simple kannada language so that everybody get to know what is real Jnana which HE loves. Shri Jagannatha Dasaru who was one such Haridasa, belongs to the lineage of Shri Vijayadasaru, Shri Gopaladasaru and was transformed into a haridasa by Shri Vijayadasaru as per Shri Hari prerane!

    Hiranyakashipu had totally five sons, Prahlada, Ahlada, Sahlada, Anuhlada and Kahlada. Prahlada is our Shri Guru Rayaru, Ahlada-Appannacharyaru, Sahlada-Jagannathadasaru, Anuhlada-Krishnavadhootaru and Kahlada is not known yet. Because of earlier relationship, all brothers of Prahlada, in all their births were more attached affectionately to Shri Guru Rayaru. Shri Jagannathadasaru, took avatara almost 100-years after Shri Guru Rayaru entered Brindavan and used to stay at Mangralaya for very long periods, enjoying the divine love and affection of " Brother ".
    After he became Haridasa, Shri Jagannathadasaru paid his first visit to Mantralaya and after taking bath in Tungabhadra river and doing ahnika, came and stood infront of Shri Guru Rayaru's Brindavan, continuously chanting Guru Stotra and a lo, suddenly Brindavan vanished and Shri Guru Rayaru gave him pratyaksha darshana with a divine smile in his lips! Tears started rolling down the cheeks of Shri Jagannathadasaru for his love and affection! From then onwards, whenever daily Shri Jagannathadasaru comes infront of Brindavan, Shri Guru Rayaru used to come out of Brindavan and both brothers, Jnanis used to discuss about Shri Hari Leelas. Slowly this news spreads around and people start flocking to Mantralaya to meet Shri Jagannathadasaru and express their problems and requested him to enquire with Shri Guru Rayaru about the solution. This increased the rush at Mantralaya and one fine day, Shri Guru Rayaru stops appearing infront, when Shri Jagannathadasaru comes and stands infront of his Brindavan. In pain, tears starts flowing from Shri Jagannathadasaru and with uncontrollable emotion, below devara Nama ( song ) comes out of his mouth :

    ಯಾಕೆ ಮೂಕನಾದ್ಯೋ ಗುರುವೆ ನೀ ಯಾಕೆ ಮೂಕನಾದ್ಯೋ ।
    ಯಾಕೆ ಮೂಕನಾದೆ ಲೋಕಪಾಲಕ ಎನ್ನ ।
    ಸಾಕುವರ್ಯಾರಯ್ಯ ಶ್ರೀಕರ ರಾಘವೇಂದ್ರ ॥
    ಹಿಂದಕ್ಕೆ ನೀ ಎನ್ನ ಮುಂದೆ ಸುಳಿದಾಡಿದಿ ।
    ಮಂದಿಯೊಳಗೆ ಎನ್ನ ಮಂದನ್ನ ಮಾಡಿದ್ಯಲ್ಲೋ ॥ ೧ ॥
    ಬೇಕಾಗದಿದ್ದರಿನ್ಯಾಕೆ ಕೈಯನು ಪಿಡಿದೆ ।
    ಕಾಕುಜನರೊಳೆನ್ನ ನೂಕಿಬಿಟ್ಟು ನೀನು  ॥ ೨ ॥
    ಈಗ ಪಾಲಿಸದಿರೆ ಯೋಗಿಕುಲವರ್ಯ ।
    ರಾಘವೇಂದ್ರನೆ ಭವ ಸಾಗುವದ್ಹ್ಯಾಂಗಯ್ಯ ॥ ೩ ॥
    ನಿನ್ನಂಥ ಕರುಣಿಯಿಲ್ಲ ಎನ್ನಂಥ ಕೃಪಣಿಯಿಲ್ಲ ।
    ಘನ್ನಮಹಿಮ ನೀ ಎನ್ನನು ಬಿಟ್ಟೀಗ ॥ ೪ ॥
    ಜನನಿಯು ನೀ ಎನ್ನ ಜನಕನಯ್ಯ ।
    ಮನ್ನಿಸೊ ನೀ ನಿತ್ಯಾನನ್ಯ ಶರಣನೆ  ॥ ೫ ॥
    ಎಂದಿಗಾದರು ನಿನ್ನ ಪೊಂದಿಕೊಂಡವನಲ್ಲೋ ।
    ಇಂದು ನೀ ಕೈಬಿಟ್ಟರೆನ್ನ ಮುಂದೆ ಕಾಯುವರ್ಯಾರೋ ॥ ೬ ॥
    ನಾಥನು ನೀ ಅನಾಥನು ನಾನಯ್ಯ ।
    ಪಾತಕರರಿ ಜಗನ್ನಾಥವಿಠ್ಠಲದಾಸ ॥ ೭
    At the completion of the song, Shri Guru Rayaru appears and says that his meeting with Shri Jagannathadsasru should have been kept secret, but now there is no way and henceforth Shri Guru Rayaru will give Darshan to Shri Jagannathadasaru in his dreams only, whenever he remembers Shri Rayaru. Our ancestors used to say divine dreams, special anugraha by God/Guru, should not be discussed in public, since it looses it's power!

                                        || Om Shri Raghavendraya Namaha ||

    " ಶ್ರೀ ಜಗನ್ನಾಥದಾಸರ ಕೃತಿಗಳ ವೈಶಿಷ್ಟ್ಯ - ಒಂದು ಚಿಂತನೆ "

    ಶ್ರೀ ವಿಜಯರಾಯರ ( ಶ್ರೀ ಭೃಗು ಮಹರ್ಷಿಗಳ ಅವತಾರರು ) ಆಜ್ಞಾನುಸಾರ ಶ್ರೀ ಗೋಪಾಲದಾಸರು ( ಶ್ರೀ ವಿಘ್ನೇಶ್ವರನ ಅಂಶ ಸಂಭೂತರು ) ಇತ್ತ ಆಯುರ್ದಾನದಿಂದ ಶ್ರೀ ಜಗನ್ನಾಥದಾಸರು 82 ವರ್ಷಗಳ ಕಾಲ ಬದುಕಿ ಅನೇಕ ಪದ - ಪದ್ಯ - ಕೀರ್ತನೆ - ಕಾವ್ಯ - ಸುವಾಲಿ ಮುಂತಾಗಿ ವಿಪುಲ ಸಾಹಿತ್ಯವನ್ನು ರಚಿಸಿದ್ದಾರೆ.

    1. ಸಂಸ್ಕೃತ ಭೂಯಿಷ್ಠವಾದ ಶ್ರೀ ಜಗನ್ನಾಥದಾಸರ ಕಾವ್ಯ ಶೈಲಿಯು ಪಾಂಡಿತ್ಯದ ಪ್ರಖರತೆಯಿಂದ ಕ್ಲಿಷ್ಟ ಶಿಷ್ಟವೆಂದು ತೋರಿದರೂ ಪ್ರಾಸಾದಿಕತೆ, ಪ್ರಾಸೋಲ್ಲಾಸ, ರಸ ರಮಣೀಯತೆಗಳನ್ನೂ ಕೈಬಿಟ್ಟಿಲ್ಲ.

    2. ಶ್ರೀ ಪುರಂದರ ( ಶ್ರೀ ನಾರದಾಂಶರು ) ಶ್ರೀ ಕನಕ ( ಶ್ರೀ ಯಮಾಂಶರು ) ರಿಗೆ ಹೋಲಿಸಿದರೆ ಶ್ರೀ ಜಗನ್ನಾಥದಾಸರು ( ಶ್ರೀ ಬೃಹಸ್ಪತ್ಯಾಚಾರ್ಯರ ಅವತಾರರು ) ಅಪ್ಪಟ ಪಂಡಿತ ಮಂಡಳಿಯ ಹಿನ್ನೆಲೆಯಲ್ಲಿ ದಾಸ ಸಾಹಿತ್ಯವನ್ನು ಪ್ರವೇಶಿಸಿದವರು. ಈ ಕಾರಣಕ್ಕಾಗಿ ಶ್ರೀ ಜಗನ್ನಾಥದಾಸರ ಅಭಿವ್ಯಕ್ತಿಯು ಉಳಿದವರಿಗಿಂತ ಭಿನ್ನವಾಗಿರುತ್ತದೆ.

    3. ಸಂಸ್ಕೃತ ಭೂಯಿಷ್ಠ ರಚನೆಗಳಲ್ಲಿ ರಚನೆಗಳಲ್ಲಿ ಕಂಡು ಬರುವ ನಿರೂಪಣೆ ಬಹುತೇಕ ವ್ಯಕ್ತಿ ನಿರಪೇಕ್ಷ ಮಾದರಿಯದು. ವ್ಯಕ್ತಿಗತವಾದ ದನಿಯ ಏರಿಳಿತಗಳಿಗೆ ಇಲ್ಲಿ ಅವಕಾಶವಿಲ್ಲ. ಇಂಥಹಾ ರಚನೆಗಳು ಹೆಚ್ಚಾಗಿ ಸಾಂಪ್ರದಾಯಿಕವಾದ ಸ್ತೋತ್ರದ ಮಾದರಿಯನ್ನು ಅನುಸರಿಸುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ ಇನ್ನೂ ಕೆಲವೆಡೆಯಲ್ಲಿ ಸಂಸ್ಕೃತವನ್ನು ಕನ್ನಡದ ಶಾಬ್ದಿಕ ಪರಿಣಾಮದೊಂದಿಗೆ ಹೊಂದಿಸುವ, ಕನ್ನಡದೊಂದಿಗೆ ಮಿಳಿತಗೊಳಿಸುವ ಮಾದರಿಯನ್ನೂ ಶ್ರೀ ಜಗನ್ನಾಥದಾಸರ ರಚನೆಗಳಲ್ಲಿ ಗುರುತಿಸಬಹುದು.
    4. ಸಂಸ್ಕೃತ ಕನ್ನಡಗಳ ನಡುವಿನ ಸಾಮರಸ್ಯವನ್ನು ಸಾಧಿಸಲು ಶ್ರೀ ಜಗನ್ನಾಥದಾಸರ ರಚನೆಗಳು ಕಂಡು ಕೊಂಡಿರುವ ಇನ್ನೊಂದು ದಾರಿಯೆಂದರೆ, ಸಂಸ್ಕೃತವನ್ನು ನಾದಮಯತೆ ಮತ್ತು ಲಯಗಾರಿಕೆಗಳಿಗೆ ವಾಹಕವಾಗಿ ಮಾಡಿಕೊಳ್ಳುವುದು.

    5. ಶ್ರೀ ಜಗನ್ನಾಥದಾಸರ ಸುಂದರವಾದ ಕಾವ್ಯ ಶೈಲಿಯಲ್ಲಿ ಕನ್ನಡದ ಸಹಜ ಗುಣವಾದ ಮಾರ್ದವ ಮಾಧುರ್ಯ ಹಾಗೂ ಲಾಲಿತ್ಯಗಳು ಮೊದಲಿನಿಂದ ತುದಿಯ ವರೆಗೂ ತೂಗುಯ್ಯಾಲೆ ಆಡುತ್ತಲಿವೆ...

    ರಾಗ : ಸೌರಾಷ್ಟ್ರ ತಾಳ : ಅಟ್ಟ

    ರಂಗಾ ನಿನ್ನ ಕೊಂಡಾಡುವ ಮಂಗಳಾತ್ಮರ ।
    ಸಂಗ ಸುಖವಿತ್ತು ಕಾಯೋ ಕರುಣಾಸಾಗರ ।। ಪಲ್ಲವಿ ।।

    ಅರಿಯರೋ ನೀನಲ್ಲದೆ ಮತ್ತನ್ಯ ದೈವರ ।
    ಮರೆಯರೋ ನೀ ಮಾಡಿದ ಅನಿಮಿತ್ತೋಪಕಾರ ।
    ಪೊರೆಯರೋ ನಿನ್ನಂಘ್ರಿ ಸೇವಾ ಪ್ರತಿವಾಸರ ।
    ಓರೆಯರೋ ಪರಾತತ್ತ್ವವಲ್ಲದೆ ಇತರ ವಿಚಾರ ।। ಚರಣ ।।

    ಮೂಕ ಬಧಿರರಂತಿಪ್ಪರೋ ನೋಳ್ಪ ಜನಕೆ ।
    ಕಾಕು ಯುಕುತಿಗಳನ್ನು ತಾರರೋ ಮನಕೆ ।
    ಸ್ವೀಕರಿಸರನರ್ಪಿತ ಒಂದು ಕಾಲಕ್ಕೆ ।
    ಆ ಕೈವಲ್ಯ ಭೋಗ ಸುಖ ಅವರಿಗೆ ಬೇಕೆ ।। ಚರಣ ।।

    ಕಂಡ ಕಂಡಲ್ಲಿ ವಿಶ್ವ ರೂಪ ಕಾಂಬರು ।
    ಉಂಡು ಉಣಿಸಿದ್ದೆಲ್ಲ ನಿನ್ನ ಯಜ್ಞವೆಂಬರು ।
    ಬಂದುಣಿಯಂದದಿ ನಾಮಾಮೃತವನಂಬರು ।
    ಹೆಂಡಿರು ಮಕ್ಕಳು ನಿನ್ನ ತೊಂಡರೆಂಬರು ।। ಚರಣ ।।

    ಬಿಡರು ತಮ್ಮ ಸ್ವಕರ್ಮಗಳೇನು ಬಂದರು ।
    ಬಡರು ದೈನ್ಯ ಒಬ್ಬರಿಗೂ ಲೋಕ ವಂದ್ಯರು ।
    ಪಿಡಿಯರೋ ನಿನ್ನ ದ್ವೇಷಿಗಳಿಂದೇನು ಬಂದರು ।
    ಕೊಡುವರೋ ಬೇಡಿದಿಷ್ಟಾರ್ಥ ನಿತ್ಯಾನಂದರು ।। ಚರಣ ।।

    ಜಯಾಜಯ ಲಾಭಾಲಾಭ ಮಾನಾಪಮಾನ ।
    ಭಯಾಭಯ ಸುಖದುಃಖ ಲೋಷ್ಟ ಕಾಂಚನ ।
    ಪ್ರಿಯಾಪ್ರಿಯ ನಿಂದಾಸ್ತುತಿಗಳನುದಿನ ।
    ಶ್ರೀಯರಸ ಚಿಂತಿಸುವರೋ ನಿನ್ನ ಅಧೀನ ।। ಚರಣ ।।

    ಈ ಶಿತವ್ಯರೆಂಬರೋ ಏಕಾಂತ ಭಕ್ತರೋ ।
    ದೇಶ ಕಾಲೋಚಿತ ಧರ್ಮ ಕರ್ಮಾಸಕ್ತರು ।
    ಆಶಾ ಕ್ರೋಧ ಲೋಭ ಮೋಹ ಪಾಶ ಮುಕ್ತರು ।
    ಈ ಸುಜನರೇವೆ ಶಾಪಾನುಗ್ರಹ ಶಕ್ತರು ।। ಚರಣ ।।

    ನಗುವರೋ ರೋಧಿಸುವರೋ ನಾಟ್ಯವಾಡೋರೋ ।
    ಬಗೆಯರೋ ಬಡತನ ಭಾಗ್ಯ ಭಾಗವತರು ।
    ತೆಗೆಯರೋ ನಿನ್ನಲ್ಲಿ ಮನ ಒಮ್ಮೆಯಾದರು ।
    ಜಗನ್ನಾಥವಿಠ್ಠಲ ನಿನ್ನವರೇನು ಧನ್ಯರೋ ।। ಚರಣ ।।

    ಇಂಥಾ ಪದಗಳಲ್ಲಿ ಯಾವ ತ್ರಾಸ, ಆಯಾಸವಿಲ್ಲದೆ ಭಾವಾನುಗುಣವಾಗಿ ತಾನಾಗಿಯೇ ಬಂದು ಅಂದವಾಗಿ ಹೊಂದುಕೊಂಡು ಸೌಂದರ್ಯವನ್ನು ಸೂಸುವ ಸಹಜ ಪ್ರಾಸವು ಅಂತರಂಗದ ಆಶಯವನ್ನು ಹಂತ ಹಂತವಾಗಿ ಏರಿಸುತ್ತಾ ಉತ್ಕಟ ಅವಸ್ಥೆಗೆ ತಲಿಪಿಸುತ್ತದೆ.

    ಶ್ರೀ ಜಗನ್ನಾಥದಾಸರ ಕಲ್ಪನಾ ಶಕ್ತಿಯ ವಿರಾಡ್ ವೈಭವವನ್ನು ಅವರ ಕೆಲವು ಆಧ್ಯಾತ್ಮಿಕ ಗೀತೆಗಳಲ್ಲಿ ಕಾಣಬಹುದು.

    ವ್ಯಾಪ್ತೋಪಾಸಕರು ಬ್ರಹ್ಮಾಂಡ ವ್ಯಾಪಿಯಾದ ಭಗವದ್ರೂಪವನ್ನು ಚಿಂತಿಸುವಾಗ...

    ಜಗದಂಡ ಮಂಡಲವೆಲ್ಲ ಆ ಶ್ರೀ ಹರಿಯ ಪೂಜಾ ಮಂಟಪವೆಂದು ಭಾವಿಸಬೇಕು.

    ಭೂಮಂಡಲ ಆತನ ಪೀಠ.

    ರವಿ ಚಂದ್ರರು ದೀಪ.

    ಆಕಾಶವೇ ಛತ್ರಿ.

    ಮಳೆಯು ಅವನ ಅಭಿಷೇಕ.

    ಮಲಯ ಪರ್ವತದ ಚಂದನದ ಪರಿಮಳವೇ ಗಂಧ ಧೂಪ.

    ನೆಲದಲ್ಲಿ ಬೆಳೆದ ಧಾನ್ಯವೆಲ್ಲ ಅವನಿಗೆ ನೈವೇದ್ಯ.

    ಥಳಥಳಿಸುವ ಮಿಂಚಿನ ಮಾಲೆಯೇ ಮಂಗಳಾರತಿ.

    ಅಂತರಿಕ್ಷದಲ್ಲಿಯ ನಕ್ಷತ್ರ ಮಂಡಲವೇ ಅವನಿಗೆ ಅರ್ಪಿಸಿದ ಲಕ್ಷ ದೀಪೋತ್ಸವ.

    ಗುಡುಗು, ಸಾಗರದ ಮೊರೆತಗಳೇ ಮಂಗಳ ವಾದ್ಯಗಳು!!

    ಅಬ್ಬಾ! ಎಂಥಾ ವಿರಾಟ್ ಕಲ್ಪನೆಯು ಇಲ್ಲಿ ಗರಿಗೇರಿದೆ. ಹೆಚ್ಚಿನ ಮಾಹಿತಿಗಾಗಿ ನಾಡೀ ಪ್ರಕರಣ ಸಂಧಿ ನೋಡುವದು!!

    ಶ್ರೀ ಜಗನ್ನಾಥದಾಸರ ಪ್ರತಿ ಪದ್ಯದಲ್ಲಿಯೂ, ಪ್ರತಿ ಪದಗಳಲ್ಲಿಯೂ ಭಕ್ತಿಯ ಪ್ರವಾಹವು ಉಕ್ಕಿ ಉಕ್ಕಿ ಹರಿದಿದೆ. ಪಾಂಡಿತ್ಯದ ಪ್ರಖರತೆಗೆ ಕವಿತ್ವದ ಮಧುರ ಮುಖರತೆಯು ಸೇರಿ ಸತ್ವ ಸಂಪನ್ನವಾದ ತಾತ್ವಿಕ ಕಾವ್ಯ ಕೃತಿಗಳು ಹುಟ್ಟಿ ರಸಪೂರದಿಂದ ಹೊಮ್ಮಿ ಹೊಮ್ಮಿದೆ.

    ಶ್ರೀ ಜಗನ್ನಾಥದಾಸರ " ತತ್ತ್ವಸುವ್ವಾಲಿ " ಎಂಬ ಗ್ರಂಥವನ್ನು ಬರೆದು ಸಾಂಗತ್ಯ ರೀತಿಯಲ್ಲಿ ಮಧುರ ಮುಕ್ತಕಗಳ ಒಂದು ಸುಂದರವಾದ ಗುಚ್ಛವನ್ನೇ ಕನ್ನಡಿಗರ ಕೈಯಲ್ಲಿಟ್ಟಿದ್ದಾರೆ. ಇದರಲ್ಲಿ...

    1. ಶ್ರೀ ವಿನಾಯಕ ಸ್ತುತಿ - 5 ಪದ್ಯಗಳು
    2. ಶ್ರೀ ನವಗ್ರಹ ಸ್ತೋತ್ರ - 23 ಪದ್ಯಗಳು
    3. ಶ್ರೀ ಅಗ್ನಿ ಸ್ತುತಿ - 7 ಪದ್ಯಗಳು
    4. ಶ್ರೀ ರುದ್ರದೇವರ ಸ್ತೋತ್ರ - 19 ಪದ್ಯಗಳು
    5. ಶ್ರೀ ತುಳಸೀ ವೃಂದಾವನ ಸ್ತೋತ್ರ - 8 ಪದ್ಯಗಳು
    6. ಶ್ರೀ ವಾಯುದೇವರ ಸ್ತೋತ್ರ - 58 ಪದ್ಯಗಳು
    7. ಶ್ರೀ ಬ್ರಹ್ಮದೇವರ ಸ್ತೋತ್ರ - 10 ಪದ್ಯಗಳು
    8. ಶ್ರೀ ಭೂ ದುರ್ಗಾ ಸ್ತುತಿ - 11 ಪದ್ಯಗಳು
    9. ಶ್ರೀ ರುಕ್ಮಿಣೀ ವಿಲಾಸ - 19 ಪದ್ಯಗಳು
    10. ಶ್ರೀ ದಶಾವತಾರ ಸ್ತೋತ್ರ - 10 ಪದ್ಯಗಳು
    11. ಶ್ರೀ ವೆಂಕಟೇಶ್ವರ ಸ್ತೋತ್ರ - 27 ಪದ್ಯಗಳು
    12. ಶ್ರೀ ಶ್ರೀನಿವಾಸ ಸ್ತೋತ್ರ - 161 ಪದ್ಯಗಳು
    13. ಶ್ರೀ ಕೃಷ್ಣ ಸ್ತೋತ್ರ - 49 ಪದ್ಯಗಳು
    14. ಮಾಯಾವಾದ ಖಂಡನ - 27 ಪದ್ಯಗಳು
    15. ಶ್ರೀ ಭಾಗೀರಥಿ ಸ್ತೋತ್ರ - 3 ಪದ್ಯಗಳು
    16. ಶ್ರೀ ರಾಯರ ಸ್ತೋತ್ರ - 11 ಪದ್ಯಗಳು
    17. ಮಂಗಳ ಸುವ್ವಿ ಪದ - 5 ಪದ್ಯಗಳು

    ಮುಂತಾದ ದೇವತಾ ಸ್ತೋತ್ರಗಳನ್ನು ಪ್ರಮೇಯ ಭೂಯಿಷ್ಠವಾಗಿ ನಿರೂಪಿಸಿದ್ದಾರೆ. ಇದರಲ್ಲಿ ಶ್ರೀ ಕೃಷ್ಣಸ್ತೋತ್ರ, ಶ್ರೀ ದಶಾವತಾರ ಸ್ತೋತ್ರ, ಶ್ರೀ ರುಕ್ಮಿಣೀ ವಿಲಾಸ ಮತ್ತು ಶ್ರೀ ಶ್ರೀನಿವಾಸ ಸ್ತೋತ್ರ ಮುಂತಾದ ಖಂಡ ಕಾವ್ಯಗಳನ್ನು ಅಖಂಡ ರಸಸ್ಯ೦ದಿಯಾಗುವಂತೆ ರಚಿಸಿದ್ದಾರೆ. ಇದರಲ್ಲಿ ೧೬೧ ನುಡಿಗಳುಳ್ಳ ಶ್ರೀ ಶ್ರೀನಿವಾಸ ಸ್ತೋತ್ರವೇ ದೊಡ್ಡದಾಗಿದೆ.

    ಈ ಎಲ್ಲಾ ಕಿರು ಕೃತಿಗಳಲ್ಲಿ ಕೃತಿಗೆ ತಕ್ಕ ಭಾಷೆ, ಭಾವಕ್ಕೆ ಅನುಗುಣವಾಗಿ ಶೈಲಿ, ಶೈಲಿಗೆ ಸರಿಹೋಗುವ ಭಾವ ಪುಷ್ಟಿ ತುಂಬಿ ತುಳುಕಿವೆ.

    ಆ ಭಾವರತ್ನಕೋಶದ ಅದರುಪದರುಗಳನ್ನೆಲ್ಲ ಜನರ ಮನದಲ್ಲಿ ಮೂಡುವಂತೆ ಎತ್ತಿ ತೋರಿಸುವ ಮಂಜುಳ ಪದ ಪುಂಜಗಳು ಈ ಎಲ್ಲಾ ಗುಣಗಳನ್ನೂ ಒಮ್ಮೈ ಹಮ್ಮುಗೆಯಲ್ಲಿ ಹಾಸಿ, ಹೊಂದಿಸಿ ತೋರಿಸುತ್ತವೆ.

    ಅಂದ ಚಂದವಾದ ಛಂದೋ ವೈವಿಧ್ಯದಲ್ಲಿ ಈ ಎಲ್ಲಾ ಗುಣಗಳು ಮೇಳೈಯಿಸಿ ಶ್ರೀ ಜಗನ್ನಾಥದಾಸರ ಕೃತಿಗಳಲ್ಲಿ ಕಾವ್ಯ ಸಿದ್ಧಿಯು ಸಮೃದ್ಧಿಯ ಸೀಮಾ ಚುಂಬಿಯಾಗಿ ಸಿದ್ಧಾಂತದ ಅಂತರ್ಭಾವನೆಯಿಂದ ಸಾರ್ಥಕ್ಯವನ್ನು ಪಡೆದು ಸೊಗಯಿಸುತ್ತದೆ.

    ರಾಗ : ಸುರಟಿ ತಾಳ : ಆದಿ

    ಮಂಗಾಳ ಮಹಿಮನೆ ಸಂಗೀತ ಪ್ರೀಯನೇ ।
    ಶೃಂಗಾರ ಚಿನ್ಹಿತ ಸದ್ಗಾತ್ರಾ ರಾಯಬಾರೋ ।।
    ಶೃಂಗಾರ ಚಿನ್ಹಿತ ಸದ್ಗಾತ್ರ ಸುಚರಿತ್ರ ।
    ತುಂಗಾಂಬು ತಟನೇ ರಾಘವೇಂದ್ರಾ ರಾಯಬಾರೋ ।।

    ಘನ ಕೀರ್ತಿ ಯತಿ ಶಿರೋಮಣಿ ಕೇಳೋ ಮೊರೆಯನು ।
    ಅನುಗಾಲ ಸಕಲಾ ಸುಖವಿತ್ತೂ ಯೋಗಿ ಬಾರೋ ।
    ಅನುಗಾಲ ಸಕಲಾ ಸುಖವಿತ್ತೂ ಯೋಗಿ । ಜ ।
    ಗನ್ನಾಥವಿಠ್ಠಲನ ಪಾದ ತೋರ್ಪಾ ರಾಯ ಬಾರೋ ।।

    ಜಯ ಮಂಗಳಂ ನಿತ್ಯ ಶುಭ ಮಂಗಳಂ ।।

    " ಶ್ರೀ ಜಗನ್ನಾಥದಾಸರ ಮೇರು ಕೃತಿ ಶ್ರೀ ಹರಿಕಥಾಮೃತಸಾರ - ಒಂದು ಚಿಂತನೆ "

    ಹರಿದಾಸ ಸಾಹಿತ್ಯದ ಮೇರು ಕೃತಿ ಯೆನಿಸಿದ " ಹರಿಕಥಾಮೃತ ಸಾರ " ವು ಶ್ರೀ ಜಗನ್ನಾಥದಾಸರ ಆಧ್ಯಾತ್ಮಿಕ ಕವಿತ್ವದ ಮಂಗಳ ಕಳಸವಾಗಿದೆ. ಇಂಥಾ ಮಧುರ, ಗಂಭೀರವಾದ ಸಾತ್ವಿಕ ಸಾಹಿತ್ಯಿಕ ಕೃತಿಯು ಹಿಂದಾಗಲಿಲ್ಲ. ಇಂದಿಲ್ಲ. ಮುಂದೆ ಆಗುವುದಿಲ್ಲ ಎಂದು ಹೇಳಿದರೆ ಸತ್ಯಕ್ಕೆ ವ್ಯತ್ಯಾಸವಾಗಿ ನುಡಿದಂತಾಗಲಿಲ್ಲ.

    ಹರಿಕಥಾಮೃತಸಾರ ಒಂದು ಪ್ರಮೇಯ ಪಾರಿಜಾತ. ಆಚಾರ್ಯ ಮಧ್ವರ ಸಿದ್ಧಾಂತವೆಲ್ಲವೂ ಇಲ್ಲಿಯ ಮುದ್ದು ಭಾಷೆಯಲ್ಲಿ ಮೂಡಿ ನಿಂತಿವೆ.

    ವೇದ ವೇದಾಂತದ ತಿರುಳೆಲ್ಲವೂ ಈ ಕಾವ್ಯದ ಹುರುಳಾಗಿ ಇಲ್ಲಿ ಅರಳಿವೆ. ವೈದಿಕ ದರ್ಶನದ ನೂರಾರು ಗ್ರಂಥಗಳಲ್ಲಿ ಹೇಳಿದ ತತ್ತ್ವಾರ್ಥಗಳನ್ನೂ, ಪ್ರಮೇಯ ರಹಸ್ಯಗಳನ್ನೂ ಮಥಿಸಿ ಈ ತಮ್ಮ ಅನರ್ಘ್ಯವಾದ ಕೃತಿಯಲ್ಲಿ ಎರಕ ಹಾಕಿದ್ದಾರೆ.

    ಆಸ್ತಿಕ ದರ್ಶನಗಳನ್ನೆಲ್ಲಾ ಜಾಲಿಸಿ ತತ್ತ್ವಸಾರವಾದ ತತ್ತ್ವಗಳ ಕೆನೆಯನ್ನೆಲ್ಲಾ ಕಡೆದು ಅವುಗಳ ಆರ್ಕದಂತಿದ್ದ ಹೂ ಬೆಣ್ಣೆಯನ್ನೇ ಇಲ್ಲಿ ತೇಲಿಸಿದ್ದಾರೆ.

    ಸಾಹಿತ್ಯವು ಸಿದ್ಧಾಂತವನ್ನಪ್ಪಿ ಇಲ್ಲಿ ಸಾರ್ಥಕವಾಗಿದೆ. ಸಿದ್ಧಾಂತವು ಸಾಹಿತ್ಯದ ಆಲಿಂಗನದಿಂದ ಮಧುರ ಮೋದಕವಾಗಿದೆ.

    ಹರಿಕಥಾಮೃತಸಾರವನ್ನು ಓದಿದ ಜೀವಕ್ಕೆ ಆರೋಗ್ಯ, ಸೌಭಾಗ್ಯ, ರುಚಿ, ರಸ, ಲೌಕಿಕ ಆನಂದ, ಬ್ರಹ್ಮಾನಂದ, ಕಾವ್ಯಾರ್ಥ, ಪುರುಷಾರ್ಥ ಎಲ್ಲವೂ ದೊರಕಿ ಮಾನವೀಯ ಜೀವನವೇ ಪಾವನವಾಗುವದು.

    ಈ ಹರಿಕಥಾಮೃತಸಾರದಲ್ಲಿ 32 ಸಂಧಿಗಳಿದ್ದು, 988 ಪದ್ಯಗಳು ಸುಂದರವಾದ ಭಾಮಿನೀ ಷಟ್ಪದಿಯ ಛಂದಸ್ಸಿನಲ್ಲಿ ಸಮಗ್ರ ವೇದಾಂತ ಪ್ರಪಂಚಕ್ಕೆ ಕಂಕಣ ಪರಿಧಿಯನ್ನು ಕಟ್ಟಿ ರಸೋಧಧಿಯನ್ನೇ ಒಟ್ಟೈಸಿದೆ.

    1. ಮಂಗಳಾಚರಣ ಸಂಧಿ - 13 ಪದ್ಯಗಳು
    2. ಕರುಣಾ ಸಂಧಿ - 31 ಪದ್ಯಗಳು
    3. ವ್ಯಾಪ್ತಿ ಸಂಧಿ - 32 ಪದ್ಯಗಳು
    4. ಭೋಜನ ಸಂಧಿ - 30 ಪದ್ಯಗಳು
    5. ವಿಭೂತಿ ಸಂಧಿ - 40 ಪದ್ಯಗಳು
    6. ಪಂಚಾಗಿಹೋತ್ರ ಸಂಧಿ - 35 ಪದ್ಯಗಳು
    7. ಪಂಚತನ್ಮಾತ್ರ ಸಂಧಿ - 33 ಪದ್ಯಗಳು
    8. ಮಾತೃಕಾ ಸಂಧಿ - 32 ಪದ್ಯಗಳು
    9. ವರ್ಣ ಪ್ರಕ್ರಿಯಾ ಸಂಧಿ - 31 ಪದ್ಯಗಳು
    10. ಸರ್ವ ಪ್ರತೀಕ ಸಂಧಿ - 25 ಪದ್ಯಗಳು
    11. ಧ್ಯಾನ ಪ್ರಕ್ರಿಯಾ ಸಂಧಿ - 32 ಪದ್ಯಗಳು
    12. ನಾಡೀ ಪ್ರಕರಣ ಸಂಧಿ - 45 ಪದ್ಯಗಳು
    13. ನಾಮ ಸ್ಮರಣ ಸಂಧಿ - 33 ಪದ್ಯಗಳು
    14. ಜೀವನ ಪ್ರಕ್ರಿಯಾ ಸಂಧಿ - 31 ಪದ್ಯಗಳು
    15. ಶ್ವಾಸ ಸಂಧಿ - 29 ಪದ್ಯಗಳು
    16. ದಟ್ಟ ಸ್ವಾತಂತ್ರ್ಯ ಸಂಧಿ - 15 ಪದ್ಯಗಳು
    17. ಸ್ವಾತಂತ್ರ್ಯ ವಿಭಜನ ಸಂಧಿ - 37 ಪದ್ಯಗಳು
    18. ಬಿಂಬೋಪಾಸನಾ ಸಂಧಿ - 31 ಪದ್ಯಗಳು
    19. ಸ್ತೋತ್ರ ಸಂಧಿ - 35 ಪದ್ಯಗಳು
    20. ಅವರೋಹಣ ತಾರತಮ್ಯ ಸಂಧಿ - 07 ಪದ್ಯಗಳು
    21. ಆವೇಶಾವತಾರ ಸಂಧಿ - 57 ಪದ್ಯಗಳು
    22. ಭಕ್ತಾಪರಾಧ ಸಹಿಷ್ಣು ಸಂಧಿ - 35 ಪದ್ಯಗಳು
    23. ಬೃಹತ್ತಾರತಮ್ಯ ಸಂಧಿ - 29 ಪದ್ಯಗಳು
    24. ಕಲ್ಪನಾ ಸಂಧಿ - 63 ಪದ್ಯಗಳು
    25. ಕ್ರೀಡಾವಿಲಾಸ ಸಂಧಿ - 63 ಪದ್ಯಗಳು
    26. ಆರೋಹಣ ತಾರತಮ್ಯ ಸಂಧಿ - 19 ಪದ್ಯಗಳು
    27. ದೇವತಾನುಕ್ರಮಣಿಕಾ ಸಂಧಿ - 05 ಪದ್ಯಗಳು
    28. ವಿಘ್ನೇಶ ಸಂಧಿ - 21 ಪದ್ಯಗಳು
    29. ಅಣು ತಾರತಮ್ಯ ಸಂಧಿ - 16 ಪದ್ಯಗಳು
    30. ದೈತ್ಯ ತಾರತಮ್ಯ ಸಂಧಿ - 25 ಪದ್ಯಗಳು
    31. ನೈವೇದ್ಯ ಪ್ರಕರಣ ಸಂಧಿ - 25 ಪದ್ಯಗಳು
    32. ಕಕ್ಷಾ ತಾರತಮ್ಯ ಸಂಧಿ - 36 ಪದ್ಯಗಳು

    ಒಟ್ಟು : 988 ಪದ್ಯಗಳು

    ಶ್ರೀ ಜಗನ್ನಾಥದಾಸರು ಪ್ರತಿಯೊಂದು ಸಂಧಿಯ ಪ್ರಾರಂಭದಲ್ಲೂ...

    ಹರಿಕಥಾಮೃತಸಾರ ಗುರುಗಳ ।
    ಕರುಣದಿಂದಾ ಪಾಣಿತು ಪೇಳುವೆ ।
    ಪರಮ ಭಗವದ್ಭಕ್ತರಿದನಾದರದಿ ಕೇಳುವುದು ।।

    ಎಂದು ಅನುಬಂಧ ಚತುಷ್ಟಯರನ್ನು ಸುಂದರವಾಗಿ ಹೇಳಿ ತಮ್ಮ ಧ್ಯೇಯ ದರ್ಶನಗಳನ್ನು ಮತ್ತೆ ಮತ್ತೆ ಸಾರಿ ಹೇಳುತ್ತಾರೆ.

    " ಹರಿ "

    1. ಮುಮುಕ್ಷುಗಳಾದ ಜೀವರು ಪರಮಾತ್ಮನ ಸಾಕ್ಷಾತ್ಕಾರವಾಗಬೇಕಾದರೆ ಭಗವಂತನ ಬಿಂಬೋಪಾಸನೆಯನ್ನು ಮಾಡಲೇಬೇಕು.

    2. ಶ್ರೀ ಗಣೇಶನಿಗೆ ತನ್ನ ಬಿಂಬ ರೂಪ " ಶ್ರೀ ವಿಶ್ವ೦ಭರ " ಯೆಂದು ತಿಳಿದಿದೆ. ಆದ್ದರಿಂದ ಶ್ರೀ ಗಣೇಶನು ಶ್ರೀ ಶ್ರೀ ವಿಶ್ವ೦ಭರನಾಮಕ ಪರಮಾತ್ಮನನ್ನು ಉಪಾಸನೆ ಮಾಡುತ್ತಾನೆ.

    3. ಆದರೆ, ಸಾಮಾನ್ಯ ಜೀವರಿಗೆ ತಮ್ಮ ಬಿಂಬ ರೂಪ ಯಾವುದು ಎಂದು ಗೊತ್ತಿಲ್ಲ. ಅದಕ್ಕೆ ಶ್ರೀಮದಾಚಾರ್ಯರು ತಮ್ಮ ಭಾಷ್ಯದಲ್ಲಿ ಸಾಮಾನ್ಯವಾಗಿ ಸರ್ವ ಜೀವರ ಬಿಂಬ ರೂಪ ಪರಮಾತ್ಮನು " ಹರಿ " ಶಬ್ದ ವಾಚ್ಯನಾಗಿದ್ದಾನೆ.

    " ಕಥಾ "

    " ಕಥಾ " ಎಂದರೆ ಕತೆಯಲ್ಲ. ಇಲ್ಲಿ " ಹರಿ ಕಥಾ " ಎಂದರೆ....

    " ಕಥ್ಯ೦ತೇ ಪ್ರತಿಪಾದ್ಯ೦ತೇ ಹರೇ: ಜ್ಞಾನಾನಂದಾದಿ ಗುಣಾ: ಅನಂತ ರೂಪಾಣಿ ಯತ್ರ ಪ್ರತಿಪಾದ್ಯ೦ತೇ ತೇ ಹರಿ ಕಥಾ: ಇತಿ " ಎಂದರೆ ವೇದಾದಿಗಳು ಯೆಂದರ್ಥ.

    " ದ್ವೇ ವಿದ್ಯೇ ವೇದಿತವ್ಯೇ " ...

    1. ಅಪರಾ ವಿದ್ಯಾ

    " ಅಪರಾ ವಿದ್ಯೆ " ಎಂದರೆ " ಋಗ್ವೇದಾದಿಗಳು ".

    2. ಪರ ವಿದ್ಯಾ

    " ಪರಾ " ಶ್ರೀ ಪರಮಾತ್ಮನನ್ನೇ ಪ್ರತಿಪಾದನೆ ಮಾಡುವ ಉಪನಿಷತ್ತುಗಳೂ, ಬ್ರಹ್ಮಸೂತ್ರಗಳೂ, ಭಾಗವತ, ಮಹಾಭಾರತ ಮತ್ತು ಮೂಲರಾಮಾಯಣ.

    ಪರಮಾತ್ಮನನ್ನೇ ಪ್ರತಿಪಾದನೆ ಮಾಡುವ " ಪರಾ " ವಿದ್ಯೆಗೆ " ಅಮೃತ " ಎಂದು ಹೆಸರು.

    ಅಂದರೆ, ಅಮೃತ ಸ್ವರೋಪ ಮೋಕ್ಷಕ್ಕೆ ಸಾಧಕವೆನಿಸುತ್ತದೆ.

    " ಸಾರ "

    ಸಾರ = ರಹಸ್ಯ / ಶ್ರೇಷ್ಠ

    ದೇವತೆಗಳು ಪಾನ ಮಾಡುವ ಅಮೃತಕ್ಕಿಂತಲೂ ಈ ಜ್ಞಾನಾಮೃತ ಶ್ರೇಷ್ಠ ಎಂಬುದನ್ನು ತಿಳಿಸುವುದಕ್ಕಾಗಿ " ಸಾರ " ಶಬ್ದ ಪ್ರಯೋಗ ಮಾಡಿದ್ದಾರೆ.

    ಅಚ್ಛ ತಿಳಿಗನ್ನಡದಲ್ಲಿ ಅವುಗಳ ಸಾರ ರಹಸ್ಯವನ್ನು ತಿಳಿಸುತ್ತೇನೆಂಬ ಅಭಿಪ್ರಾಯದಿಂದ ಈ ಗ್ರಂಥಕ್ಕೆ " ಹರಿಕಥಾಮೃತಸಾರ " ಯೆಂದು ನಾಮಕರಣ ಮಾಡಿದ್ದಾರೆ.

    ಭಗವಂತನ ಸಾರ್ವತ್ರಿಕ ವ್ಯಾಪ್ತಿಯು ಸಾಮಾನ್ಯವಾಗಿ ತಿಳಿದುಕೊಳ್ಳಲು ಕಠಿಣವಾದರೂ ದೃಷ್ಟಾಂತ ಮುಖಾಂತರ ಸುಲಭ ಗಮ್ಯವಾಗುವಂತೆ ರಮ್ಯವಾಗಿ ಹೇಳುತ್ತಾರೆ ಶ್ರೀ ಜಗನ್ನಾಥದಾಸರು.

    ಪರಿಮಳವು ಸುಮನದೊಳಗೆ ಅನಲನು ।
    ಅರಣಿಯೊಳಗೆ ಇಪ್ಪಂತೆ । ದಾಮೋ ।
    ದರನು ಬ್ರಹ್ಮಾದಿಗಳ ಮನದಲಿ ತೋರಿ ತೋರದಲೆ ।।
    ಇರುತಿಹ ಜಗನ್ನಾಥವಿಠಲನ ।
    ಕರುಣ ಪಡೆವ ಮುಮುಕ್ಷು ಜೀವರು ।
    ಪರಮ ಭಾಗವತರನು ಕೊಂಡಾಡುವುದು ಪ್ರತಿ ದಿನವು ।। ೧ - ೧೩ ।।

    ಸಂಸ್ಕೃತದಲ್ಲಿ " ಉಪಮಾ ಕಾಳಿದಾಸಸ್ಯ " ಎಂಬ ವಚನವಿದ್ದಂತೆ " ಉಪಮಾ ಜಗನ್ನಾಥಸ್ಯ " ಎಂದು ಹೇಳಬೇಕೆನಿಸುತ್ತದೆ.

    ಶ್ರೀ ಜಗನ್ನಾಥದಾಸರ ಕೃತಿಗಳನ್ನು ಪರಾಮರ್ಶಿಸಿದ ರಸ ಚೇತನಕ್ಕೆ...

    ಭಕ್ತ ಭಗವಂತರ ರಾಗಾನುರಾಗಗಳನ್ನೂ, ಪ್ರೀತಿ ವಾತ್ಸಲ್ಯಗಳನ್ನೂ, ಎಂಥ ಹೃದಯ ಸ್ಪರ್ಶಿಯಾದ ನಿದರ್ಶನದಿಂದ ಪ್ರದರ್ಶನ ಮಾಡಿದ್ದಾರೆ ಶ್ರೀ ಜಗನ್ನಾಥದಾಸರು.

    ಜನನಯನು ಕಾಣದಿಹ ಬಾಲಕ ।
    ನೆನೆನೆನೆದು ಹಲುಬುತಿರೆ ಕತ್ತಲ ।
    ಮನೆಯೊಳಗಿದ್ದವನ ನೋಡುತ ನಗುತ ಹರುಷದಲಿ ।।
    ತನಯನಂ ಬಿಗಿದಪ್ಪಿ ರಂಬಿಸಿ ।
    ಕನಲಿಕೆಯ ಕಳೆವಂತೆ । ಮಧುಸೂ ।
    ದನನು ತನ್ನವರಿದ್ದೆಡೆಗೆ ಬಂದೊದಗಿ ಸಲಹುವನು ।। ೨ - ೧೧ ।।

    ಇದಕ್ಕೆ ಅನೇಕ ಸಾಕ್ಷಿಗಳನ್ನು ಹೇಳಿ ಆರ್ತತ್ರಾನ ತತ್ಪರತೆಯನ್ನು ಸಿದ್ಧ ಮಾಡಿದ್ದಾರೆ.

    ಮಹಾಭಾರತದ ವಿಷಯದಲ್ಲಿ....

    " ಯದಿಹಾಸ್ತಿತದನ್ಯತ್ರಯನ್ನೇಹಾಸ್ತಿ ನ ತತ್ ಕ್ವಚಿತ್ "

    ಯೆಂದು ಹೇಳಿದಂತೆ ನ್ಯೂನಾರ್ಥದಲ್ಲಿ ಹರಿಕಥಾಮೃತಸಾರ ವಿಷಯದಲ್ಲೂ ಹಾಗೆ ಹೇಳಬಹುದಾಗಿದೆ.

    ಶ್ರೀ ಹರಿಕಥಾಮೃತಸಾರದಲ್ಲಿ...

    ಬಾರದ ಪ್ರಮೇಯವಿಲ್ಲ.
    ತಿಳಿಸದ ತತ್ತ್ವವಿಲ್ಲ.
    ಬಣ್ಣಿಸದ ಭಗವನ್ಮಹಿಮಾ ಇಲ್ಲ.

    ಸರ್ವ ಸೈದ್ಧಾಂತಿಕ ಜ್ಞಾತವ್ಯಾ೦ಶಗಳ ಒಂದು ಮಂಜುಳ ಮಂಜೂಷಿಕೆಯಂತೆ ಕಂಗೊಳಿಸುತ್ತಿದೆ ಈ ಸತ್ಪ್ರಬಂಧ!!

    ಶ್ರೀ ಹರಿಕಥಾಮೃತಸಾರಕ್ಕೆ ವ್ಯಾಖ್ಯಾನಗಳು....

    ಸಂಸ್ಕೃತದಲ್ಲಿ...

    1. ಶ್ರೀ ತಾಮ್ರಪರ್ಣಿ ಆಚಾರ್ಯರ " ಪದಾರ್ಥ ಚಂದ್ರಿಕಾ ( ಪದ ಪ್ರಕಾಶಿಕಾ )

    2. ಶ್ರೀ ಜಂಬುಖಂಡಿ ವಾದಿರಾಜಾಚಾರ್ಯರ " ಭಾವ ಸೂಚನ ", " ವ್ಯಾಸದಾಸಸಿದ್ಧಾಂತಕೌಮುದೀ " ಮತ್ತು " ಹರಿಕಥಾಮೃತಸಾರಪಂಚಿಕಾ " ( 3 ವ್ಯಾಖ್ಯಾನಗಳನ್ನು ಬರೆದಿದ್ದಾರೆ ).

    3. ಶ್ರೀ ಗುರು ಜಗನ್ನಾಥದಾಸರು ( ಇವರು ಪೂರ್ವ ಅಂದರೆ ಹಿಂದಿನ ಆವವತಾರದಲ್ಲಿ ಶ್ರೀ ಶ್ರೀದವಿಠಲರು. ಮುಂದಿನ ಅವತಾರವೇ ಶ್ರೀ ಗುರು ಜಗನ್ನಾಥದಾಸರು )

    a. ಹರಿಕಥಾಮೃತಸಾರ ತಾತ್ಪರ್ಯ 8 ಸಂಧಿಗಳಿಗೆ ಸಂಸ್ಕೃತದಲ್ಲಿ ಪೂರ್ಣ ಶ್ಲೋಕಗಳನ್ನು ರಚಿಸಿದ್ದಾರೆ.

    b. ಮೊದಲನೇ ಸಂಧಿಗೆ - ೪೨ ಶ್ಲೋಕಗಳೂ, ಎರಡನೇ ಸಂಧಿಗೆ - 64 ಶ್ಲೋಕಗಳೂ, 3ನೇ ಸಂಧಿಗೆ 67 ಶ್ಲೋಕಗಳನ್ನು ರಚಿಸಿದ್ದಾರೆ.

    c. ೪ನೇ ಸಂಧಿಗೆ ಶ್ರೀ ಹರಿಕಥಾಮೃತಸಾರ ತಾತ್ಪರ್ಯ ಚಂದ್ರಿಕಾ ಎಂಬ ಸಂಸ್ಕೃತ ವ್ಯಾಖ್ಯಾ!

    d. 12ನೇ ಸಂಧಿಗೆ ಶ್ರೀ ಹರಿಕಥಾಮೃತಸಾರ ಮಂದ ಪ್ರಬೋಧಿನಿ ಮೂಲ ಸನಾಭಿ ಸಂಸ್ಕೃತ ಟೀಕಾ

    e. ಶ್ರೀ ಹರಿಕಥಾಮೃತಸಾರ ಸಂಗ್ರಹ ಸೃಗ್ಧರಾ ಸಂಸ್ಕೃತ ಶ್ಲೋಕಗಳು - 6 ಪತ್ರ

    f. ಹರಿಕಥಾಮೃತಸಾರ ತಾತ್ಪರ್ಯ ಪ್ರಕಾಶಿಕಾ ಸಂಧಿ - 3 ಪತ್ರ

    g. ಹರಿಕಥಾಮೃತಸಾರ ಚಂದ್ರಿಕಾ - ಸ್ವಾಮಿರಾಜೀಯ - 8 ಪತ್ರ ( ಸಂಸ್ಕೃತ ಮತ್ತು ಕನ್ನಡ )

    h. ಹರಿಕಥಾಮೃತಸಾರ ಮಂಡಬೋಧಿನೀ - 4 ಪತ್ರ
    .
    i. -- ಸದರ -- - 6 ಪತ್ರ

    j. ಹರಿಕಾಥಾಮೃತಸಾರ ಚಂದ್ರಿಕಾ - 6 ಪತ್ರ

    k. --- ಸದರ ---- - 4 ಪತ್ರ

    l. ಹರಿಕಥಾಮೃತಸಾರಾಮೋದ - 2 ಪತ್ರ

    m. ಹರಿಕಥಾಮೃತಸಾರ ತಾತ್ಪರ್ಯ ಚಂದ್ರಿಕಾ - 2 ಪತ್ರ

    n. ಹರಿಕಥಾಮೃತಸಾರ ಚಂದ್ರಿಕಾ - 2 ಪತ್ರ

    o. ದತ್ತ ಸ್ವಾತಂತ್ರ್ಯ ಸಂಧಿಗೆ ಸಂಬಂಧ ಪಟ್ಟ ಪತ್ರ

    q. ಹರಿಕಥಾಮೃತ ಪರಿಮಳಸನಾಭಿ ಮೂಲ ಪದ್ಯ ಕನ್ನಡಾರ್ಥ - 2 ಪತ್ರ

    " ಕನ್ನಡ ವ್ಯಾಖ್ಯಾನಗಳು "

    1. ಶ್ರೀ ಶ್ರೀದ ವಿಠಲರು
    2. ಶ್ರೀ ಗುರು ಶ್ರೀಶ ವಿಠಲರು
    3. ಶ್ರೀ ದ್ರೌಪದೀಶಪತಿವಿಠಲರು
    4. ಶ್ರೀ ಸಂಕರ್ಷಣ ಒಡೆಯರು
    5. ಶ್ರೀ ಗುರುಯೋಗಿಧ್ಯೇಯವಿಠಲರು
    6. ಶ್ರೀ ಕಮಲಾಪತಿವಿಠಲರು
    7. ಶ್ರೀ ಮೊದಲಕಲ್ ಶೇಷದಾಸರು
    8. ಶ್ರೀ ಪದ್ಮನಾಭದಾಸರು

    ಅ) ಶ್ರೀ ಸಂಕರ್ಷಣ ಒಡೆಯರಂಥಾ ಸಂನ್ಯಾಸಿವರೇಣ್ಯರೂ ಇದಕ್ಕೆ ಟೀಕೆ ಬರೆಯಬೇಕಾದರೆ ಹರಿಕಥಾಮೃತದ ಶ್ರೇಷ್ಠತ್ವ ಎಂಥಾದ್ದಿರಬೇಕು. ಇದಕ್ಕೆ ಅನೇಕಾನೇಕ ಕನ್ನಡ, ಸಂಸ್ಕೃತ ಪಂಡಿತರ ಟೀಕಾ ಟಿಪ್ಪಣಿಗಳೂ, ಫಲ ಶ್ರುತಿಗಳೂ, ಸಂಧಿ ಸೂಚಕ ಶ್ಲೋಕಗಳೂ, ವ್ಯಾಖ್ಯಾನ ವಿವರಣಗಳೂ ಒಂದರಮೇಲೊಂದು ಅಂದಿನಿಂದ ಇಂದಿನ ವರೆಗೂ ಆಗುತ್ತಲೇ ಇದ್ದು ಅದರ ಉತ್ತಮೋತ್ತಮಿಕೆಯನ್ನು ಎತ್ತಿ ಸಾರುತ್ತದೆ.

    ಆ) ಶ್ರೀ ತಾಮ್ರಪರ್ಣಿ ಆಚಾರ್ಯರೂ, ಶ್ರೀ ಜಂಬುಖಂಡಿ ಆಚಾರ್ಯರೂ ಈ ಕನ್ನಡ ಮಹಾತ್ಪ್ರಬಂಧಕ್ಕೆ ಸಂಸ್ಕೃತದಲ್ಲಿ ವೇದ - ವೇದಾಂತ, ನ್ಯಾಯ, ವ್ಯಾಕರಣ, ಮೀಮಾಂಸಾ, ಸಾಹಿತ್ಯಾದಿ ಶಾಸ್ತ್ರೀಯ ವಿಷಯ ವಿವೇಚನಾ ಪ್ರಚುರವಾದ ಪ್ರಗಲ್ಭ ಟೀಕೆಗಳನ್ನು ಬರೆದಿದ್ದಾನು ನೋಡಿದರೆ ಈ ಗ್ರಂಥದ ಅಂತಸ್ಸತ್ತ್ವವು, ವಾಸ್ತವಿಕ ಮಹತ್ವವು ಎಷ್ಟು ಘನತರವಾಗಿದೆ ಎಂಬುದು ಗೊತ್ತಾಗದೆ ಇರದು!!

    ಇ) ಲಿಂಗಸೂಗೂರಿನ ಶ್ರೀ ವರದೇಂದ್ರ ಹರಿದಾಸ ಸಾಹಿತ್ಯ ಮಂಡಲದವರು ಶ್ರೀ ಗುರುವಿಜಯವಿಠಲ, ಶ್ರೀ ಗುರುಶ್ರೀಶವಿಠಲ, ಶ್ರೀ ದ್ರೌಪದೀಶವಿಠಲರು ಈ ಮೂರು ದಾಸ ಕೂಟ ದೇಶಿಕರ ಕನ್ನಡ ಟಿಪ್ಪಣಿಗಳನ್ನೂ, ಶ್ರೀ ತಾಮ್ರಪರ್ಣಿ ( ಪದಾರ್ಥ ಚಂದ್ರಿಕಾ ) ಮತ್ತು ಶ್ರೀ ಜಂಬುಖಂಡಿ ಆಚಾರ್ಯರ ( ವ್ಯಾಸದಾಸ ಸಿದ್ಧಾಂತ ಕೌಮುದೀ ಮತ್ತು ಭಾವಸೂಚನಾ ) ಹೀಗೆ 3 ಸಂಸ್ಕೃತ ಟಿಪ್ಪಣಿಗಳನ್ನೂ ಸೇರಿಸಿ ಒಟ್ಟು 6 ವ್ಯಾಖ್ಯಾನಗಳಿಂದ ಒಡಗೂಡಿದ " ಹರಿಕಥಾಮೃತಸಾರ " ವನ್ನು ಪ್ರಕಟಿಸಿ ಪರಮೋಪಕಾರ ಮಾಡಿದ್ದಾರೆ.

    ಈ ) ಶ್ರೀ ಸಂಕರ್ಷಣ ಒಡೆಯರ ಟೀಕೆಯು ಕನ್ನಡದಲ್ಲಿ ಇದ್ದರೂ ಅದರ ಲಿಪಿ ಮಾತ್ರ ದುರ್ದೈವದಿಂದ ತೆಲಗು ಲಿಪಿಯಾಗಿದೆ.

    ಇದಲ್ಲದೆ ಅನೇಕ ಬೇರೆ ಬೇರೆ ಟೀಕೆ, ಟಿಪ್ಪಣಿಗಳು ಇದಕ್ಕೆ ಇದ್ದು ಅದರಲ್ಲಿ ಕೆಲವು ಪ್ರಕಟವಾಗಿವೆ. ಹಲವು ಲುಪ್ತವಾಗಿವೆ. ಅವೆಲ್ಲವುಗಳನ್ನೂ ಕ್ರೋಢೀಕರಿಸಿ ಎಲ್ಲಾ ಟೀಕೆಗಳ ಸಾರೋದ್ಧಾರ ಮಾಡಿ ಪ್ರತಿಯೊಂದು ಟೀಕೆಯಲ್ಲಿಯ ಅಪೂರ್ವಾಂಶವನ್ನು ಹೆಕ್ಕಿ ತೆಗದು " ಭಾವರತ್ನಕೋಶ " ದಂತಹ ಹೊಸ ವ್ಯಾಖ್ಯಾನವನ್ನು ನಿರ್ಮಿಸುವುದೂ, ಪ್ರಕಟಿಸುವುದೂ ಅತ್ಯವಶ್ಯವಾಗಿದೆ.

    ಉ) ಶ್ರೀ ಹರಿಕಥಾಮೃತಸಾರಕ್ಕೆ ಕರ್ಜಗಿಯ ಶ್ರೀ ಶ್ರೀದವಿಠಲರೂ, ಶ್ರೀ ಗುರುಶ್ರೀಶವಿಠಲರು, ಶ್ರೀ ಮನೋಹರವಿಠಲರು ಫಲಶ್ರುತಿಯನ್ನು ಭಾಮಿನೀ ಷಟ್ಪದಿಯಲ್ಲಿ ಸುಂದರವಾಇ ಹೇಳಿ ಹೊಗಳಿದ್ದಾರೆ.

    ಊ) ಶ್ರೀ ಭೀಮೇಶವಿಠಲರು " ಸಂಧಿಮಾಲಾ ಸಂಧಿ " ಎಂಬ ಪುಟ್ಟ ಪದ್ಯ ಪ್ರಬಂಧವನ್ನು ರಚಿಸಿ ಹರಿಕಥಾಮೃತಸಾರದ ೩೨ ಸಂಧಿಗಳಲ್ಲಿ ಪ್ರತಿಪಾದಿತವಾದ ವಿಷಯಗಳ ಛಂದೋಬದ್ಧವಾದ ದಿಗ್ದರ್ಶನವನ್ನು ಮಾಡಿದ್ದಾರೆ.

    ಶ್ರೀಮನ್ನ್ಯಾಯಸುಧೆಯ ಪ್ರತೀಕದಂತಿರುವ ಹರಿಕಥಾಮೃತಸಾರ ಗ್ರಂಥದಿಂದ ಕನ್ನಡ ಸಾಹಿತ್ಯದ ಸ್ಥಾನವು ಉನ್ನತವಾಗಿದೆ.

    ಕನ್ನಡ ಆಧ್ಯಾತ್ಮಿಕ ವಾಗ್ಮಯಭಾಂಡಾರವು ಸಿರಿ ಸಂಪನ್ನವಾಗುವಂತೆ ಮಾಡಿದೆ.

    ಇದರಿಂದ ಕನ್ನಡ ನಾಡು, ನುಡಿ ಪುನೀತವಾಗಿದೆ.

    ಮಾಧ್ವ ಪ್ರಪಂಚವೆಲ್ಲವೂ ಈ ವಿಶ್ವಮಾನ್ಯವಾದ ಕೃತಿಯಿಂದ ಧನ್ಯವಾಗಿದೆ.

    " ವಿಶೇಷ ವಿಚಾರ "

    1. ಬೆಂಗಳೂರಿನ ಪರಮಪೂಜ್ಯ ಶ್ರೀ ಹೆಚ್ ಎಸ್ ಶ್ರೀನಿವಾಸರಾಯರು ಸಜ್ಜನರು ಪಾರಾಯಣ ಮಾಡಲು ಅನುಕೂಲವಾಗುವಂತೆ ಶ್ರೀ ಹರಿಕಥಾಮೃತಸಾರದ ಪ್ರತಿ ಪದಾರ್ಥದೊಂದಿಗೆ ಐದು ವ್ಯಾಖ್ಯಾನಗಳ ಸಹಿತ ಮುದ್ರಿಸಿ ನಾಡಿನ ಸಜ್ಜನರಿಗೆ ಮಹೋಪಕಾರ ಮಾಡಿದ್ದಾರೆ. ಅರ್ಥ ಸಹಿತ ಪಾರಾಯಣ ಮಾಡಿದಾಗ್ಗೆ ವಿಶೇಷ ಫಲವುಂಟು. ಇವರು ಶ್ರೀಮತಿ ಸರಸ್ವತೀ ವಟ್ಟಂ ಅವರ ಮಾವನವರು!!

    2. ಶ್ರೀ ಹರಿ ವಾಯು ರಾಯರು ಮತ್ತು ಶ್ರೀ ವಿಜಯ -  ಶ್ರೀ ಗೋಪಾಲ - ಶ್ರೀ ಜಗನ್ನಾಥದಾಸರ ಪರಮಾನುಗ್ರಹದಿಂದ ವೇದ - ಉಪನಿಷತ್ - ಪುರಾಣ - ಇತಿಹಾಸಗಳ ಸಪ್ರಮಾಣದನ್ವಯ ಕನ್ನಡದಲ್ಲಿ ಅರ್ಥ ವಿವರಣೆಯನ್ನು ಈ ಕೆಳಕಂಡ ಸಂಧಿಗಳಿಗೆ ನನ್ನಲ್ಲಿ ( ಆಚಾರ್ಯ ನಾಗರಾಜು ಹಾವೇರಿ ) ನಿಂತು ಶ್ರೀ ದಾಸಾರ್ಯರು ಮಾಡಿಸಿದ್ದಾರೆ. ಸಂಧಿಗಳು ಹೀಗಿವೆ....

    1. ಮಂಗಳಾಚರಣ ಸಂಧಿ
    2. ಕರುಣಾ ಸಂಧಿ
    3. ವ್ಯಾಪ್ತಿ ಸಂಧಿ
    4. ದೇವತಾನುಕ್ರಮಣಿಕಾ ಸಂಧಿ
    5. ಆರೋಹಣ ತಾರತಮ್ಯ ಸಂಧಿ
    6. ಅವರೋಹಣ ತಾರತಮ್ಯ ಸಂಧಿ
    7. ಶ್ರೀ ವಿಘ್ನೇಶ ಸಂಧಿ
    8. ಅಣು ತಾರತಮ್ಯ ಸಂಧಿ
    9. ದೈತ್ಯ ತಾರತಮ್ಯ ಸಂಧಿ
    10. ಕಕ್ಷ್ಯಾ ತಾರತಮ್ಯ ಸಂಧಿ

    ಶ್ರೀ ಶ್ರೀದವಿಠಲರಿಂದ ರಚಿತವಾದ ಹರಿಕಥಾಮೃತಸಾರ - ಫಲ ಶ್ರುತಿ ಸಂಧಿಯ 13ನೇ ಪದ್ಯ ಹೀಗಿದೆ...

    ವ್ಯಾಸತೀರ್ಥರ ಒಲವೋ । ವಿಠಲೋ ।
    ಪಾಸಕ ಪ್ರಭುವರ್ಯ ಪುರಂದರ ।
    ದಾಸರಾಯರ ದಯವೋ ತಿಳಿಯದಿದು ಓದಿ ಕೇಳದಲೆ ।।
    ಕೇಶವನ ದಿನ ಮಣಿಗಳನು । ಪ್ರಾ ।
    ಣೇಶಗರ್ಪಿಸಿ ವಾದಿರಾಜರ ।
    ಕೋಶಕೊಪ್ಪುವ ಹರಿಕಥಾಮೃತಸಾರ ರಚಿಸಿದರು ।।

    ಶ್ರೀ ಪ್ರಹ್ಲಾದಾಂಶ ವ್ಯಾಸರಾಜ ಗುರುಸಾರ್ವಭೌಮರ ಒಲುಮೆಯೋ; ಶ್ರೀ ಪಂಢರಾಪುರಾಧೀಶ ವಿಠ್ಠಲನ ಉಪಾಸಕರಾದ ಶ್ರೀ ನಾರದಾಂಶ ಪುರಂದರದಾಸರ ದಯವೋ ಓದಿ ಕೇಳದಲೆ ಇದು ( ಹರಿಕಥಾಮೃತಸಾರ ) ತಿಳಿಯದು.

    ಕೇಶವ ( ಸರ್ವರ ರಕ್ಷಕ = ಸರ್ವೋತ್ತಮ ಅಂದರೆ ಶ್ರೀ ಮಹಾಲಕ್ಷ್ಮೀ - ಶ್ರೀ ಚತುರ್ಮುಖ ಬ್ರಹ್ಮದೇವರು - ಶ್ರೀ ರುದ್ರದೇವರೇ ಮೊದಲಾದ ಸಕಲ ಚೇತನಗಳನ್ನು ವಶದಲ್ಲಿಟ್ಟುಕೊಂಡಿರುವ ಶ್ರೀ ಮಹಾವಿಷ್ಣು ) ಶ್ರೀ ಹರಿಯ ಗುಣಗಳೆಂಬ ಮಣಿಗಳನ್ನು ಪ್ರಾಣೇಶನಾದ ( ಶ್ರೀ ವಾಯುದೇವರ ತಂದೆ ) ಶ್ರೀ ಹರಿಗೆ ಅರ್ಪಿಸಿ; ಶ್ರೀ ಭಾವಿಸಮೀರ ವಾದಿರಾಜರ ಕೋಶಕ್ಕೆ ( ಭಂಡಾರ / ಖಜಾನೆ ) ಒಪ್ಪಿಗೆ ಆಗುವಂತೆ ಈ ಹರಿಕಥಾಮೃತಸಾರವನ್ನು ಶ್ರೀ ಜಗನ್ನಾಥದಾಸರು ರಚಿಸಿದರು!!

    ಶ್ರೀ ಜಗನ್ನಾಥದಾಸರು...

    ರಾಗ : ಪಂತುವರಾಳಿ ತಾಳ : ಆದಿ

    ತಾರಕವಿದು ಹರಿಕಥಾಮೃತಸಾರ ಜನಕೆ ।
    ಘೋರತರ ಅಸಾರ ಸಂಸಾರವೆಂಬ ವನಧಿಗೆ ನವ ।। ಪಲ್ಲವಿ ।।

    ... ಭೂತ ಭವ್ಯ ಭವತ್ಪ್ರಭು ಅನಾಥ ಬಂಧು । ಜಗ ।
    ನ್ನಾಥವಿಠಲ ಪಾಹಿ ಎಂದು ಮಾತುಮಾತಿಗೆಂಬುವರಿಗೆ ।।

    ಆಚಾರ್ಯ ನಾಗರಾಜು ಹಾವೇರಿ
    ಗುರು ವಿಜಯ ಪ್ರತಿಷ್ಠಾನ

    ********


    " ಶ್ರೀ ಗುರು ಜಗನ್ನಾಥದಾಸರ ಉತ್ತರಾರಾಧನೆ ವಿಶೇಷ "
    " ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮ ವಿರಚಿತ ಪ್ರಮೇಯಸಂಗ್ರಹಃ " ದಲ್ಲಿ - ಶ್ರೀ ಭಾರತೀದೇವಿಯರು ".
    ।। ತತಃ ಸೂಕ್ಷ್ಮ ಸೃಷ್ಟಿ ಪ್ರಕಾರಃ ।।
    ವಾಸುದೇವಾತ್ ಮಾಯಾಯಾ೦ ಪುರುಷನಾಮ ಜಾತಃ । ಸಂಕರ್ಷಣಾತ್ ಜಯಾಯಾ೦ ಸೂತ್ರ ನಾಮಾ ವಾಯುರ್ಜಾತಃ । ಪ್ರದ್ಯುಮ್ನಾತ್ ಪ್ರಕೃತ್ಯಾಂ ಪ್ರಧಾನಸಂಜ್ಞಾ ಸರಸ್ವತೀ, ಶ್ರದ್ಧಾ, ಸಂಜ್ಞಾ, ಭಾರತೀ ಚ ಜಾತಾ ಇತಿ ।
    ಶ್ರೀ ವಾಸುದೇವನಿಂದ ಶ್ರೀ ಮಾಯಾದೇವಿಯಲ್ಲಿ " ಪುರುಷ " ನೆಂಬುವನು ಹುಟ್ಟಿದನು.
    ಶ್ರೀ ಸಂಕರ್ಷಣನಿಂದ ಶ್ರೀ ಜಯಾದೇವಿಯಲ್ಲಿ " ಸೂತ್ರ " ನಾಮಕರಾದ ಶ್ರೀ ವಾಯುದೇವರು ಹುಟ್ಟಿದರು.
    ಶ್ರೀ ಪ್ರದ್ಯುಮ್ನನಿಂದ ಶ್ರೀ ಕೃತೀದೇವಿಯಲ್ಲಿ " ಪ್ರಧಾನ " ಎಂಬ ಹೆಸರುಳ್ಳ ಶ್ರೀ ಸರಸ್ವತೀದೇವಿಯರೂ, " ಶ್ರೀ ಶ್ರದ್ಧಾ " ಎಂಬ ಹೆಸರುಳ್ಳ ಶ್ರೀ ಭಾರತೀದೇವಿಯರು ಹುಟ್ಟಿದರು.
    " ಶ್ರೀ ಸಹ್ಲಾದಾಂಶ ಜಗನ್ನಾಥದಾಸರು "
    ಕೃತಿ ರಮಣ ಪ್ರದ್ಯುಮ್ನ ನಂದನೆ ।
    ಚತುರವಿಂಶತಿ ತತ್ತ್ವಪತಿ । ದೇ ।
    ವತೆಗಳಿಗೆ ಗುರುವೆನಿಸುತಿಹ ಮಾರುತನ ನಿಜಪತ್ನೀ ।।
    ಸತತ ಹರಿಯಲಿ ಗುರುಗಳಲಿ । ಸ ।
    ದ್ರತಿಯ ಪಾಲಿಸಿ ಭಾಗವತ । ಭಾ ।
    ರತ ಪುರಾಣ ರಹಸ್ಯ ತತ್ತ್ವಗಳರುಪು ಕರುಣದಲಿ ।। ಹ ಸಾ 1/6 ।।
    ಕೃತಿ ರಮಣ ಪ್ರದ್ಯುಮ್ನ = ಶ್ರೀ ಕೃತಿ ನಾಮಕ ಶ್ರೀ ರಮಾದೇವಿಯರ ಪತಿಯಾದ ಶ್ರೀ ಪ್ರದ್ಯುಮ್ನ
    " ನಂದನೆ "
    ಶ್ರೀ ಪ್ರದ್ಯುಮ್ನ ರೂಪಿ ಶ್ರೀ ಹರಿಯ ಪುತ್ರಿಯಾದ " ಶ್ರದ್ಧಾ " ನಾಮಕ ಶ್ರೀ ಭಾರತೀದೇವಿಯರು
    ಚತುರವಿಂಶತಿ ತತ್ತ್ವಪತಿ ದೇವತೆಗಳಿಗೆ = 24 ತತ್ತ್ವಾಭಿಮಾನಿ ದೇವತೆಗಳಿಗೆ
    " 24 ತತ್ತ್ವಗಳು "
    ಮಹತ್ತತ್ತ್ವ - ಶ್ರೀ ಚತುರ್ಮುಖ ಬ್ರಹ್ಮದೇವರು ಮತ್ತು ಶ್ರೀ ವಾಯುದೇವರು
    ಇವರಿಬ್ಬರೂ ಗುರುಸ್ಥಾನದಲ್ಲಿರುವವರು. ಶ್ರೀ ವಾಯುದೇವರು ಭಾವಿ ಶ್ರೀ ಬ್ರಹ್ಮದೇವರು ಆದ್ದರಿಂದ ಅವರಿಬ್ಬರೂ ತತ್ತ್ವಾಭಿಮಾಗಳೂ ಹಾಗೂ ತತ್ತ್ವಾಭಿಮಾನಿಗಳಿಗೆ ಗುರುಗಳು.
    ಅವ್ಯಕ್ತ ತತ್ತ್ವ - ಶ್ರೀ ಸರಸ್ವತೀದೇವಿಯರು ಮತ್ತು ಶ್ರೀ ಭಾರತೀದೇವಿಯರು
    " ಅವ್ಯಕ್ತ ತತ್ತ್ವ ರೂಪಿಣ್ಯೌ ಭಾರತೀ ಚ ಸರಸ್ವತೀ ।। "
    ಅಹಂಕಾರ ತತ್ತ್ವ - ಶ್ರೀ ಗರುಡದೇವರು, ಶ್ರೀ ಶೇಷದೇವರು,ಶ್ರೀ ರುದ್ರದೇವರು.
    ( ಶ್ರೀ ರುದ್ರದೇವರು ಮನಸ್ ತತ್ತ್ವಕ್ಕೂ ಅಭಿಮಾನಿಗಳು )
    * ಅಹಂಕಾರ ತತ್ತ್ವದಲ್ಲಿ ಮೂರು ಪ್ರಕಾರಗಳಿರುತ್ತವೆ. ಅದರಲ್ಲಿ ಎರಡಕ್ಕೆ ಶ್ರೀ ಗರುಡದೇವರು, ಶ್ರೀ ಶೇಷದೇವರು ಅಭಿಮಾನಿಯಾಗಿರುತ್ತಾರೆ. ಇನ್ನೊಂದಕ್ಕೆ ಶ್ರೀ ರುದ್ರದೇವರು ಅಭಿಮಾನಿಯಾಗಿರುತ್ತಾರೆ.
    ಮನಸ್ ತತ್ತ್ವ - ಇಂದ್ರ, ಕಾಮರು
    " ಪಂಚ ಜ್ಞಾನೇಂದ್ರಿಯಗಳು "
    ಶ್ರೋತ್ರ - ಇಂದ್ರ, ಚಂದ್ರ ಮೊದಲಾದ ದಿಗ್ದೇವತೆಗಳು
    ತ್ವಕ್ - ಆಹಾಂಕಾರಿಕ ಪ್ರಾಣ
    ಕಣ್ಣು - ಸೂರ್ಯ
    ಜಿಹ್ವೆ - ವರುಣ
    ಘ್ರಾಣ - ಅಶ್ವನೀ ದೇವತೆಗಳು
    " ಪಂಚ ಕರ್ಮೇಂದ್ರಿಯಗಳು "
    ವಾಕ್ - ಅಗ್ನಿ, ವಾಣಿ, ಶಚಿ, ರತಿ, ಅನಿರುದ್ಧ, ಸ್ವಯಂಭುವಮನು, ದಕ್ಷ ಹಾಗೂ ಬೃಹಸ್ಪತಿ
    ಪಾದ - ಜಯಂತ, ವೃಷಭ
    ಪಾಯು - ಮಿತ್ರ
    ಉಪಸ್ಥ - ವಶಿಷ್ಠಾದಿ ಸಪ್ತ ಋಷಿಗಳು
    " ಪಂಚ ತನ್ಮಾತ್ರಗಳು "
    ಶಬ್ದ - ಅಹಂಕಾರಿಕ ಪ್ರಾಣ, ಬೃಹಸ್ಪತಿ
    ರೂಪ - ವ್ಯಾನ
    ರಸ - ಉದಾನ
    ಸ್ಪರ್ಶ - ಅಪಾನ
    ಗಂಧ - ಸಮಾನ
    " ಪಂಚ ಭೂತಗಳು "
    ಆಕಾಶ - ಗಣೇಶ
    ವಾಯು - ಮರೀಚೀ
    ಜಲ - ವರುಣ
    ತೇಜಸ್ - ಅಗ್ನಿ
    ಪೃಥುವೀ - ಧರಾ
    ************
    ಒಟ್ಟು ತತ್ತ್ವಾಭಿಮಾನಿ ದೇವತೆಗಳು = 24
    *************
    ಇವುಗಳಲ್ಲಿ " ಪ್ರಕೃತಿ ತತ್ತ್ವ " ಕ್ಕೆ ಶ್ರೀ ಮಹಾಲಕ್ಷ್ಮೀದೇವಿಯರು ಮುಖ್ಯಾಭಿಮಾನಿನಿ. ಆದ್ದರಿಂದ ಇವರನ್ನು ತೆಗೆದು ಕೊಳ್ಳುವಂತಿಲ್ಲ.
    ಆದರೆ ಸರಸ್ವತೀ, ಭಾರತೀಯರು ಅವಾಂತರಾಭಿಮಾನಿಗಳು. ಅವರನ್ನು ಗ್ರಹಿಸಿದರೆ ಬಾಧಕವಿರುವುದಿಲ್ಲ.
    ಶ್ರೀ ಚತುರ್ಮುಖ ಬ್ರಹ್ಮದೇವರು, ಶ್ರೀ ವಾಯುದೇವರು " ಮಹತ್ತತ್ತ್ವ " ಕ್ಕೆ ಅಭಿಮಾನಿ ದೇವತೆಗಳಾಗಿದ್ದು ಒಟ್ಟು 24 ತತ್ತ್ವಾಭಿಮಾನಿ ದೇವತೆಗಳಲ್ಲೇ ಪರಮ ಶ್ರೇಷ್ಠವಾಗಿರುವರು.
    ಗುರುವೆನಿಸುತಿಹ = ಗುರುವೆಂದು ಪ್ರಸಿದ್ಧಿಯನ್ನು ಹೊಂದಿರುವ
    " ಶ್ರೀ ವಾಯುದೇವರು ತತ್ತ್ವಾಭಿಮಾನಿ ದೇವತೆಗಳಿಗೆ ಗುರುಗಳು? ವಿವರ ಹೀಗಿದೆ.....
    ಹಿಂದೊಮ್ಮೆ 23 ತತ್ತ್ವೇಶರು ( ಶ್ರೀ ವಾಯುದೇವರನ್ನು ಹೊರತು ಪಡಿಸಿ ) ತಮ್ಮೊಳಗೆ ತಾವು ನಾನು ಉತ್ತಮನೆಂದು, ತಾನು ಉತ್ತಮನೆಂದು ಕಲಹ ಮಾಡತೊಡಗಿದರು. ಆಗ ಶ್ರೀ ಹರಿ ಪರಮಾತ್ಮನು...
    ಎಲೈ ದೇವತೆಗಳಿರಾ! ನಿಮ್ಮ ನಿಮ್ಮೊಳಗೆ ಕಲಹ ಬೇಡ. ಬಿದ್ದಿರುವ ಈ ವಿರಾಟ್ ಶರೀರವು ಯಾರ ಪ್ರವೇಶದಿಂದ ಎದ್ದು ಕೂಡುವುದೋ, ಮತ್ತು ಯಾರು ಶರೀರದಿಂದ ಹೊರ ಬಂದರೆ ಈ ಶರೀರ ಬೀಳುವುದೋ ಅವನೇ ಉತ್ತಮನೆಂದು ಭಾವಿಸಿರಿ. ಈಗ ನಿಮ್ಮ ಶಕ್ತಿ ತೋರಿಸಿರಿ ಎಂದು ತತ್ತ್ವಾಭಿಮಾನಿ ದೇವತೆಗಳಿಗೆ ತಿಳಿಸಿದನು.
    ಅದರಂತೆಯೇ, ಆ ಶರೀರದಲ್ಲಿ 23 ತತ್ತ್ವೇಶರುಪ್ರವೇಶ ಮಾಡಿದರೂ ಆ ಶರೀರವು ಏಳಲಿಲ್ಲ.
    ಆಗ ಶ್ರೀ ವಾಯುದೇವರು ಹೃದಯದಲ್ಲಿ ಪ್ರವೇಶ ಮಾಡಿದ ಕೂಡಲೇ ಆ ಶರೀರವು ಎದ್ದಿತು ಮತ್ತೂ ಎಲ್ಲಾ ತತ್ತ್ವೇಶರು ಹೊರಗೆ ಹೊರಟರೂ ಆ ಶರೀರವು ಬೀಳಲಿಲ್ಲ.
    ಶ್ರೀ ವಾಯುದೇವರು ಹೊರಗೆ ಹೊರಟ ಕೂಡಲೇ ಶರೀರವು ಕೆಳಗೆ ಬಿದ್ದಿತು. ಆಗಲೂ ಉಳಿದ ತತ್ತ್ವೇಶರು ನಾವುಗಳು ಅಂದರೆ ಇತರೆ ಎಲ್ಲಾ ಇಂದ್ರಿಯಾಭಿಯಾನಿ ದೇವತೆಗಳು ಇಲ್ಲದಿದ್ದರೆ ಶ್ರೀ ವಾಯುದೇವರೊಬ್ಬರೇ ಏನು ಮಾಡಿಯಾರು? ಅಂದರು.
    ಆಗ ಶ್ರೀ ವಾಯುದೇವರು ಒಬ್ಬರೇ ಶರೀರದಲ್ಲಿ ಪ್ರವೇಶಿಸಿ 23 ತತ್ತ್ವೇಶರ ಕಾರ್ಯಗಳನ್ನು ತಾವು ಒಬ್ಬರೇ ಮಾಡಿದರು.
    ಆಗ ತತ್ತ್ವೇಶರೆಲ್ಲರೂ ಶ್ರೀ ವಾಯುದೇವರ ಪಾದ ಪದ್ಮಗಳಿಗೆ ನಮಸ್ಕರಿಸಿ ಕ್ಷಮಿಸಬೇಕೆಂದು ಪ್ರಾರ್ಥಿಸಿ ಶ್ರೀ ವಾಯುದೇವರನ್ನು ಗುರುಗಳನ್ನಾಗಿ ಸ್ವೀಕರಿಸಿ ಅವರ ಶಿಷ್ಯರಾದರು!
    ಮಾರುತನ ನಿಜಪತ್ನೀ = ಶ್ರೀ ವಾಯುದೇವರ ನಿಯತ ಪತ್ನೀ
    ಸತತ = ನಿರಂತರ
    ಹರಿಯಲಿ = ಸರ್ವೋತ್ತಮನೂ, ಸ್ವತಂತ್ರನೂ ಆದ ಶ್ರೀ ಹರಿಯಲ್ಲಿ
    ಗುರುಗಳಲಿ = ಶ್ರೀ ಚತುರ್ಮುಖ ಬ್ರಹ್ಮದೇವರೇ ಮೊದಲಾದ ಗುರುಗಳಲ್ಲಿ ( ತಾರತಮ್ಯೋಕ್ತ )
    ಸದ್ರತಿಯ = ಸಮೀಚೀನವಾದ ಭಕ್ತಿಯನ್ನು
    ಪಾಲಿಸಿ = ದಯಪಾಲಿಸಿ ಕೊಟ್ಟು
    ಕರುಣದಲಿ = ಅಂತಃಕರಣದಿಂದ
    " ಭಾಗವತ ಭಾರತ ಪುರಾಣ ರಹಸ್ಯ ತತ್ತ್ವಗಳರುಪು "
    ಭಾಗವತ, ಭಾರತ ಪುರಾಣಗಳಲ್ಲಿ ಅಡಗಿದ ಗೂಢವಾದ ತತ್ತ್ವಗಳನ್ನೂ, ಸಹಸ್ಯಗಳ ಜ್ಞಾನವನ್ನು ದಯಮಾಡಿ ತಿಳಿಸಮ್ಮಾ!!
    " ಶ್ರೀ ಭಾರತೀದೇವಿಯರ ಕುರಿತು ಮತ್ತಷ್ಟು ಮಾಹಿತಿ "
    ತಾರತಮ್ಯ ಕ್ರಮದಲ್ಲಿ 4ನೇ ಕಕ್ಷಾಪನ್ನರು.
    ಇದೇ ಕಕ್ಷದಲ್ಲಿರುವ ಶ್ರೀ ಸರಸ್ವತೀದೇವಿಯರಗಿಂತ ಪದ ಪ್ರಯುಕ್ತ ಕಿಂಚಿತ್ ಅವರರು.
    ಸೂಕ್ಷ್ಮ ಸೃಷ್ಟಿಯಲ್ಲಿ ಶ್ರೀ ಪ್ರದ್ಯುಮ್ನ ರೂಪಿ ಶ್ರೀ ಹರಿಯಿಂದ ಶ್ರೀ ಕೃತಿ ನಾಮಕಳಾದ ಶ್ರೀ ರಮಾದೇವಿಯಲ್ಲಿ " ಪ್ರಕೃತಿ " ನಾಮಕ " ಸರಸ್ವತೀದೇವಿಯರೂ, ಶ್ರೀ ಶ್ರದ್ಧಾ ನಾಮಕ ಭಾರತೀದೇವಿಯರು ಎಂಬ ಇಬ್ಬರು ಪುತ್ರಿಯರು ಜನಿಸಿದರು.
    ಸತ್ವ ಪ್ರಾಚುರ್ಯವಾದ " ಮಹತ್ತತ್ತ್ವ ಶರೀರ " ಉಳ್ಳವರು.
    ಪರಶುಕ್ಲತ್ರಯ ವರ್ಗಕ್ಕೆ ಸೇರಿದವರು.
    ಮೂಲ ಮತ್ತು ಅವತಾರ ಶರೀರಗಳು ಶ್ರೀ ವಾಯುದೇವರಂತೆಯೇ ಶುಕ್ಲ ಶೋಣಿತ ಸಂಬಂಧ ರಹಿತವಾದುದು.
    ಒಂದು ಬ್ರಹ್ಮ ಕಲ್ಪದಲ್ಲಿ 200 ಮಂದಿ ಋಜು ಗಣಸ್ಥರೂ ಮತ್ತು ತತ್ಪತ್ನಿಯರೂ ಇರುತ್ತಾರೆ.
    ಋಜು ಪತ್ನಿಯರ ಪೈಕಿ ಭಾರತೀ ಪದಸ್ಥ ಜೀವರು ಒಬ್ಬರೇ ಇರುತ್ತಾರೆ.
    ಇವರ ಸಾಧನ ಕಲ್ಪದ ಅವಧಿಯು ತಮ್ಮ ಪತಿಯಾದ ಶ್ರೀ ವಾಯುದೇವರರಷ್ಟೇ ಇರುವುದು.
    ಶ್ರೀ ಭಾರತೀದೇವಿಯರು ತಮ್ಮ ಪತಿಯಾದ ಶ್ರೀ ವಾಯುದೇವರಿಗಿಂತ 100 ಗುಣ ನ್ಯೂನವುಳ್ಳವರು.
    ಪ್ರಸಕ್ತ ಬ್ರಹ್ಮ ಕಲ್ಪದಲ್ಲಿರುವ ಶ್ರೀ ಭಾರತೀದೇವಿಯರಿಗೆ ಮುಂದಿನ ಕಲ್ಪ ಶ್ರೀ ಸರಸ್ವತೀದೇವಿಯರ ಪದವಿಯಿಂದ ಮುಕ್ತಿ. ಇದರಿಂದ ಭಾವಿ ಸರಸ್ವತೀ ಪದಾರ್ಹರು.
    ಭಕ್ತಿಗೆ ಅಭಿಮಾನಿ ದೇವತೆ!
    ಕಾಲಾಭಿಮಾನಿಗಳು. ಜೀವರ ಸ್ಥೂಲ ಶರೀರಗತ ಎಡ ಪಾರ್ಶ್ವದಲ್ಲಿರುವ 36000 ಸ್ತ್ರೀ ನಾಡಿಗಳಲ್ಲಿ " ರಯೀ " ಯೆಂಬ ಹೆಸರಿಂದ ನಾಡ್ಯಾಭಿಮಾನಿ ದೇವತೆಗಳಿಗೆ ನಿಯಾಮಕರು.
    " ಅವತಾರಗಳು "
    ನಳ ನಂದಿನಿಯಾದ " ಇಂದ್ರಸೇನಾ.
    ಕಾಶೀರಾಜನ ಪುತ್ರಿ ಕಾಳೀ
    ಭುಜೀ
    ಚಂದ್ರಾ
    ದ್ರುಪದರಾಜನ ಪುತ್ರಿ ದ್ರೌಪದೀದೇವಿಯರು
    ಪಾಂಚಾಲಿ ನಾಮಕಳಾದ ದ್ರೌಪದಿಯಲ್ಲಿ ಶಾಪಗ್ರಸ್ತರಾದ ಪಾರ್ವತೀ, ಶಚೀ, ಶ್ಯಾಮಲಾ, ಉಷಾ ಈ ಸ್ತ್ರೀ ದೇವತೆಗಳಿಗೆ ಆಶ್ರಯದಾತರು.
    " ಬೃಹದ್ಭಾಷ್ಯ " ದಲ್ಲಿ.....
    ಸರಸ್ವತೀ ಚ ಗಾಯತ್ರೀ ಶ್ರದ್ಧಾದ್ಯಾ ಪ್ರೀತಿರೇವ ಚ ।
    ಸರ್ವ ವೇದಾತ್ಮಿಕಾ ಬುದ್ಧಿರಾನುಭೂತಿ: ಸುಖಾತ್ಮಿಕಾ ।
    ಗುರುಭಕ್ತಿರ್ಹರೌ ಪ್ರೀತಿ: ಸರ್ವ ಮಂತ್ರಾತ್ಮಿಕಾ ಭುಜಿ: ।।
    ವಾಸುದೇವನ ಮೂರ್ತಿ ಹೃದಯಾ ।
    ಕಾಶ ಮಂಡಲ ಮಧ್ಯದಲಿ । ತಾ ।
    ರೇಶನಂದದಿ ಕಾಣುತತಿ ಸಂತೋಷದಲಿ ತುತಿಪ ।।
    ಆ ಸರಸ್ವತೀ ಭಾರತೀಯರಿಗೆ ।
    ನಾ ಸಂತತ ವಂದಿಸುವೆ । ಪರಮೋ ।
    ಲ್ಲಾಸದಲಿ ಸುಜ್ಞಾನ ಭಕುತಿಯ ಸಲ್ಲಿಸಲೆಮಗೆಂದು ।। ಹ ಕ ಸಾ 32/7 ।।
    ಶ್ರೀ ಗುರು ಜಗನ್ನಾಥದಾಸರು....
    ಭಾರತಿ ಪಾಲಿಸು ನಿತ್ಯ ।
    ಭಾರತಿ ಭಾಸ್ವರಕಾಂತೆ । ನಿನ್ನ ।
    ಸಾರುವೆ ಸತತ ನಿಶ್ಚಿಂತೆ ।। ಆಹಾ ।।
    ವಾರಿಜ ಸಮ ಪಾದ ತೋರಿಸು ಮಮ ಸುಹ್ಯ ।
    ನ್ನೀರಜದೊಳು ನಿತ್ಯಗಾರುಮಾಡದೆ ಜನನೀ ।।
    ಭಾಸ್ವರಕಾಂತೆ = ಭರತ ನಾಮಕ ಶ್ರೀ ವಾಯುದೇವರ ಪತ್ನಿ
    " ಚಿತ್ರ "

    ಸೂಕ್ಷ್ಮ ಸೃಷ್ಟಿಯಲ್ಲಿ ಶ್ರೀ ವಾಯುದೇವರು " ಅಖಿಲಾಂಡಕೋಟಿ ಬ್ರಹ್ಮಾಂಡನಾಯಕನಾದ ಶ್ರೀಮನ್ನಾರಾಯಣನ ತೊಡೆಯ ಮೇಲೆ ವಿರಾಜಮಾನರಾಗಿರುವುದು."
    *****

    Gururaj kulkarni Revoor Gulbarga Karnataka 9341744464

    *****


    ಶ್ರೀ ಜಗನ್ನಾಥದಾಸರ ಕೃತಿ 

     ರಾಘವೇಂದ್ರ ಯತಿಸಾರ್ವಭೌಮ ದುರಿ -

     ತೌಘದೂರ ತೇ ನಮೋ ನಮೋ 
     ಮಾಗಧರಿಪುಮತಸಾಗರಮೀನ ಮ - 
     ಮಾಘವಿನಾಶನ ನಮೋ ನಮೋ 
     ಶ್ಲಾಘಿತಗುಣಗಣಸೂರಿಪ್ರಸಂಗ ಸ - 
     ದಾಗಮಜ್ಞ ತೇ ನಮೋ ನಮೋ 
     ಮೇಘಶ್ಯಾಮಲ ರಾಮಾರಾಧಕ - 
     ಮೋಘಬೋಧ ತೇ ನಮೋ ನಮೋ ॥ 1 ॥ 

     ದುರಿತೌಘದೂರ = ಪಾಪಸಮೂಹದಿಂದ ದೂರರು ಎಂದರೆ ಪಾಪ ರಹಿತರು ; ಮಾಗಧರಿಪುಮತಸಾಗರಮೀನ = ಮಧ್ವಮತವೆಂಬ ಸಾಗರದಲ್ಲಿ ಮೀನಿನಂತೆ ಸುಖಿಸುವ; ಮಮಾಘವಿನಾಶನ = ನನ್ನ ಪಾಪಗಳನ್ನು ನಿರ್ಮೂಲಮಾಡುವ; ಶ್ಲಾಘಿತಗುಣಗಣಸೂರಿಪ್ರಸಂಗ = ಜ್ಞಾನಿಗಳು ಹೊಗಳುವುದಕ್ಕೆ ವಿಷಯಗಳಾದ ಗುಣಸಮುದಾಯವುಳ್ಳ; ಸದಾಗಮಜ್ಞ = ಸಚ್ಛಾಸ್ತ್ರಗಳ ಅರಿವು ಉಳ್ಳ ; ರಾಮಾರಾಧಕಮೋಘಬೋಧ = ಶ್ರೀರಾಮದೇವರ ಆರಾಧನೆಯಲ್ಲಿ ಯಶಸ್ಕರ ಜ್ಞಾನವುಳ್ಳ;


     ತುಂಗಭದ್ರಸುತರಂಗಿಣಿತೀರಗ 

     ಮಂಗಳಚರಿತ ಶುಭಾಂಗ ನಮೋ 
     ಇಂಗಿತಜ್ಞ ಕಾಳಿಂಗಮಥನಯದು - 
     ಪುಂಗವಹೃದಯಸುಸಂಗ ನಮೋ 
     ಸಂಗಿರಚಿನ್ಹಿತಶೃಂಗಾರಾನನ - 
     ತಿಂಗಳ ಕರುಣಾಪಾಂಗ ನಮೋ 
     ಗಾಂಗೇಯಸಮಾಭಾಂಗ ಕುಮತಮಾ - 
     ತಂಗಸಂಘಶಿತಪಿಂಗ ನಮೋ ॥ 2 ॥ 

     ಇಂಗಿತಜ್ಞ = ಮತ್ತೊಬ್ಬರ ಅಂತರಂಗವನ್ನು ತಿಳಿದ; ಕಾಳಿಂಗಮಥನಯದುಪುಂಗವಹೃದಯಸುಸಂಗ = ಕಾಳೀಯ ಸರ್ಪವನ್ನು ಮರ್ದಿಸಿದ ಶ್ರೀಕೃಷ್ಣನನ್ನು ತಮ್ಮ ಚಿತ್ತದಲ್ಲಿ ದೃಢವಾಗಿಟ್ಟುಕೊಂಡಿರುವ ; ಸಂಗಿರಚಿನ್ಹಿತಶೃಂಗಾರಾನನತಿಂಗಳ = ಶ್ರೇಷ್ಠವಾಕ್ಯೋಚ್ಚಾರಣೆಯೇ ಗುರುತಾಗಿವುಳ್ಳ ಸುಂದರಮುಖಚಂದ್ರನುಳ್ಳ ; ಗಾಂಗೇಯಸಮಾಭಾಂಗ = ಬಂಗಾರದ ಹೊಳಪಿನಂತೆ ಹೊಳೆವ ಶರೀರವುಳ್ಳ; ಕುಮತಮಾತಂಗಸಂಘಶಿತಪಿಂಗ = ದುರ್ಮತಗಳೆಂಬ ಆನೆಗಳ ಸಮೂಹಕ್ಕೆ ಸಿಂಹಸದೃಶರಾದ; 


     ಕೋವಿದಮಸ್ತಕಶೋಭಿತಮಣಿಸಂ - 

     ಭಾವಿತಸುಮಹಿಮ ಪಾಲಯ ಮಾಂ 
     ಸೇವಾಪರಸರ್ವಾರ್ಥಪ್ರದ ಬೃಂ - 
     ದಾವನಮಂದಿರ ಪಾಲಯ ಮಾಂ 
     ಭಾವಜಮಾರ್ಗಣಭುಜಗವಿನಾಯಕ 
     ಭಾವಜ್ಞಪ್ರಿಯ ಪಾಲಯ ಮಾಂ 
     ಕೇವಲನತಜನಪಾವನರೂಪ ಸ - 
     ದಾ ವಿನೋದಿ ಹೇ ಪಾಲಯ ಮಾಂ ॥ 3 ॥ 

     ಕೋವಿದಮಸ್ತಕಶೋಭಿತಮಣಿಸಂಭಾವಿತಸುಮಹಿಮ = ಶಿರಸ್ಸಿನಲ್ಲಿ ಹೊಳೆಯುವ ರತ್ನದಂತೆ, ಜ್ಞಾನಿಗಳಿಂದ ಮೆಚ್ಚುಗೆ ಪಡೆದ ದೊಡ್ಡಸ್ತಿಕೆಯುಳ್ಳ; ಸೇವಾಪರಸರ್ವಾರ್ಥಪ್ರದ = ಸೇವಕರಿಗೆ ಸಕಲಾಭೀಷ್ಟದಾಯಕರಾದ; ಭಾವಜಮಾರ್ಗಣಭುಜಗವಿನಾಯಕ = ಮನ್ಮಥನಿಂದ ಪ್ರಯೋಗಿಸಲ್ಪಡುವ ಬಾಣವೆಂಬ ಸರ್ಪಕ್ಕೆ (ನಾಶಕ) ಗರುಡನಂತಿರುವ ಅಂದರೆ ದುಷ್ಟಕಾಮರಹಿತರೂ; ಹಾಗೂ (ಭಕ್ತರಿಗೆ) ದುಷ್ಟಕಾಮನಾಶಕರೂ ಆದ; ಭಾವಜ್ಞಪ್ರಿಯ = (ಶಾಸ್ತ್ರಗಳ) ಸಾರಗ್ರಾಹಿಗಳ ಪ್ರೀತಿಪಾತ್ರರಾದ; ಕೇವಲನತಜನಪಾವನರೂಪ = ನೀವೇ ಗತಿಯೆಂದು ನಂಬಿ, ಸ್ತೋತ್ರ ಮಾಡುವವರನ್ನು ಪವಿತ್ರಗೊಳಿಸುವ ಸ್ವರೂಪವುಳ್ಳ; ಸದಾ ವಿನೋದಿ = ಯಾವಾಗಲೂ ಉತ್ಸಾಹವುಳ್ಳ;


     ಶ್ರೀಸುಧೀಂದ್ರಕರಜಾತ ನಮೋ ನಮೋ 

     ಭೂಸುರವಿನುತವಿಖ್ಯಾತ ನಮೋ 
     ದೇಶಿಕವರಸಂಸೇವ್ಯನಮೋ ನಮೋ 
     ದೋಷವಿವರ್ಜಿತಕಾವ್ಯ ನಮೋ 
     ಕ್ಲೇಶಿತಜನಪರಿಪಾಲ ನಮೋ ನಮೋ 
     ಭಾಸಿತಕರುಣಾಪಾಲ ನಮೋ 
     ವ್ಯಾಸರಾಮಪದಭಕ್ತ ನಮೋ ನಮೋ 
     ಶಾಶ್ವತಧರ್ಮಾಸಕ್ತ ನಮೋ ॥ 4 ॥ 

     ಭೂಸುರವಿನುತವಿಖ್ಯಾತ = ಬ್ರಾಹ್ಮಣರಿಂದ ಸ್ತೋತ್ರಮಾಡಲ್ಪಡುವ ಹಾಗೂ ಪ್ರಖ್ಯಾತರೂ ಆದ; ದೇಶಿಕವರಸಂಸೇವ್ಯ = ಉಪದೇಶಕೊಡುವ ಜ್ಞಾನಿವರರುಗಳಿಂದಲೂ ಭಕ್ತಿಪೂರ್ವಕ ಸೇವಿಸಲ್ಪಡುವ; ದೋಷವಿವರ್ಜಿತ ಕಾವ್ಯ = ಎಳ್ಳಷ್ಟೂ ನ್ಯೂನತೆಯಿಲ್ಲದ ಕವನವುಳ್ಳ; ಕ್ಲೇಶಿತಜನಪರಿಪಾಲ = ದುಃಖಿತರಾದ (ಸುಜನರನ್ನು) ಚೆನ್ನಾಗಿ - ಪುನಃ ದುಃಖಭಾಗಿಗಳಾಗದಂತೆ ರಕ್ಷಿಸುವ; ಭಾಸಿತಕರುಣಾಪಾಲ = ಎದ್ದು ಕಾಣುವ ಕರುಣೆಯ ಸ್ವಭಾವರಾದ;



     ಸನ್ನುತಮಹಿಮಜಗನ್ನಾಥವಿಟ್ಠಲ - 

     ಸನ್ನಿಹಿತಸುಮಾನಸ ಜಯ ಭೋ 
     ಚಿನ್ಹಿತದಂಡಕಮಂಡಲುಪುಂಡ್ರ ಪ್ರ - 
     ಪನ್ನಭಯಾಪಹ ಜಯ ಜಯ ಭೋ 
     ಮಾನ್ಯಮಹಾತ್ಮಪ್ರಸನ್ನವದನ ಕಾ - 
     ರುಣ್ಯಪಯೋದಧಿ ಜಯ ಜಯ ಭೋ 
     ಧನ್ಯ ಕ್ಷಮಾಸಂಪನ್ನ ಬುಧಜನಶ - 
     ರಣ್ಯ ಸದಾರ್ಚಿತ ಜಯ ಜಯ ಭೋ ॥ 5 ॥ 

     ಸನ್ನುತಮಹಿಮಜಗನ್ನಾಥವಿಟ್ಠಲಸನ್ನಿಹಿತಸುಮಾನಸ = ಚೆನ್ನಾಗಿ ತುತಿಸಲ್ಪಟ್ಟ ಮಹಿಮೆಯುಳ್ಳ, ಜಗತ್ತಿಗೆ ಒಡೆಯನಾದ, (ಮುಕ್ತಿಯೋಗ್ಯರಾದ) ಜ್ಞಾನರಹಿತರಾದ ಜೀವರನ್ನು ಕೈಹಿಡಿದು ರಕ್ಷಿಸುವ ಪರಮಾತ್ಮನು ಯಾರ ಸುಚಿತ್ತದಲ್ಲಿ ನೆಲೆಸಿದ್ದಾನೋ (ಅಂತಹ); ಮಾನ್ಯಮಹಾತ್ಮಪ್ರಸನ್ನವದನ = (ಸಲ್ಲೋಕದಿಂದ) ಮನ್ನಣೆ ಪಡೆದವರು ಸಹ, ವಿಭೂತಿಪುರುಷತ್ವಸೂಚಕ ಪ್ರಸನ್ನತಾ ವಿಶಿಷ್ಟ ಇವರ ಮುಖವನ್ನು ಕಂಡು ' ಈ ಗುರುಗಳು ನಮ್ಮ ಪೂಜ್ಯರು - ಮಹಾಪುರುಷರು ' ಎಂದು ತಿಳಿಯುತ್ತಾರೆ; ಕಾರುಣ್ಯಪಯೋದಧಿ = ಕರುಣಾರಸರೂಪಕ್ಷೀರಸಮುದ್ರರಾದ; ಧನ್ಯ = ಕೃತಕೃತ್ಯರಾದ (ಅವತಾರಮಾಡಿ ಮಾಡಬೇಕಾದ ಕೆಲಸಗಳನ್ನೆಲ್ಲ ಪೂರ್ಣಗೊಳಿಸಿದ); ಕ್ಷಮಾಸಂಪನ್ನ = ಭಕ್ತರ ಅಪರಾಧಗಳನ್ನು ಲೆಕ್ಕಿಸದೆ ರಕ್ಷಿಸುವ; ಬುಧಜನಶರಣ್ಯ = ಪಂಡಿತರಿಂದ ಸಹ, ಒಮ್ಮೊಮ್ಮೆ ಅರ್ಥವಾಗದ ಘಟ್ಟಗಳನ್ನು ತಮ್ಮ ಘನಟಿಪ್ಪಣಿಗಳಿಂದ ತಿಳಿಸುವ ಮೂಲಕ, ಶರಣು ಹೋಗಲು ಅರ್ಹತೆಯುಳ್ಳವರಾದ ; ಸದಾರ್ಚಿತ = (ಸತ್ + ಆ + ಅರ್ಚಿತ) ಸುಜನರಿಂದ ತಮ್ಮ ತಮ್ಮ ವರ್ಣಾಶ್ರಮವಿಹಿತವಾದ ರೀತಿಯಿಂದ ಭಕ್ತಿಪೂರ್ವಕ ಪೂಜೆಗೊಂಡು (ರಕ್ಷಿಸುವ);


     ವ್ಯಾಖ್ಯಾನ : 

     ಹರಿದಾಸರತ್ನಂ ಶ್ರೀಗೋಪಾಲದಾಸರು

    ********

    ********
    ತುಂಗಭದ್ರಾ ನದಿಯ ದಂಡೆಯ ಕಂಪ್ಲಿ ಎನ್ನುವ ಆ ಗ್ರಾಮದ ಒಬ್ಬರ ಮನೆಯಲ್ಲಿ ಧಾರ್ಮಿಕ ಮಂಗಳ ಕಾರ್ಯಕ್ರಮ.ದೇವರ ಪೂಜೆ ಮುಗಿದಿದೆ. ನೈವೇದ್ಯ ಸಮರ್ಪಣೆ ಯ ಸಮಯ.
    ನೈವೇದ್ಯಕ್ಕೆ ಹಾಗು ನಂತರದ ಅನ್ನ ಸಂತರ್ಪಣೆಗೆ ತುಪ್ಪ ಇನ್ನೊಂದು ದಡದಿಂದ ಬರಬೇಕು. ನದಿ ತುಂಬಿ ಹರಿಯುತ್ತಾ ಇದೆ.ಎಲ್ಲರಿಗು ಆತಂಕ ಇನ್ನೂ ತುಪ್ಪ ಬರಲಿಲ್ಲ ಅಂತ.
    ಮನೆಯ ಯಜಮಾನರು ಈ ಪರಿಸ್ಥಿತಿ ನೋಡಿದರು.
    ಶಿಷ್ಯನಿಗೆ ಕರೆದು ತುಂಗಾ ನದಿಯಿಂದ ಒಂದು ಕೊಡ ನೀರು ತರಲು ಹೇಳಿದರು.ತಂದಂತಹ ನೀರಿನ ಕೊಡಕ್ಕೆ ಮಂತ್ರಾಕ್ಷತೆ ಹಾಕಿ ಅದರ ಮೇಲೆ  ಕೈ ಇಟ್ಟು ಅಭಿಮಾನಿ ದೇವತೆಗಳ ಆವಾಹನ  ಮಂತ್ರಗಳನ್ನು ಪಠಣೆ ಮಾಡಿ ಆ ನೀರನ್ನು ತುಪ್ಪ ವಾಗಿಸಿದರು.
    ನೈವೇದ್ಯ ಭೋಜನ ಸಂತರ್ಪಣೆ ಆದ ಮೇಲೆ ತುಪ್ಪ ದವನು ಬಂದ.ಅವನು ತಂದ ತುಪ್ಪ ವನ್ನು ನದಿಗೆ ಸುರಿಯಲು ಯಜಮಾನರು ಶಿಷ್ಯ ನಿಗೆ ಆಜ್ಞೆ ಮಾಡುತ್ತಾರೆ.
    ಅಷ್ಟು ತುಪ್ಪ ವನ್ನು ಸುರಿಯಲು ಕಾರಣವೇನು??ಅಂತ ಎಲ್ಲಾ ರು ಕೇಳುವರು.
    "ನದಿಯಿಂದ ನಾನು ತುಪ್ಪ ವನ್ನು ಸಾಲವಾಗಿ ಪಡೆದಿದ್ದೆ.ಅದನ್ನು ಮರಳಿಸಬೇಕು.ಎಂದು ಹೇಳಿದರು"...
    ಇನ್ನೊಂದು ಬಾರಿ ಮಾನವಿ ಶ್ರೀಜಗನ್ನಾಥ ದಾಸರು ತಮ್ಮ ಶಿಷ್ಯ ಪರಿವಾರದ ಜೊತೆಯಲ್ಲಿ ಭೂವೈಕುಂಠವೆನಿಸಿದ ತಿರುಪತಿ ಯಲ್ಲಿ ಶ್ರೀನಿವಾಸ ನ ದರುಶನ ಮಾಡಲು ಹೋಗಿದ್ದಾರೆ.
    "ತಕ್ಷಣ ತಮ್ಮ ಪ್ರೀತಿಪಾತ್ರ ಶಿಷ್ಯ ರಾದ ಕಂಪ್ಲಿಯ ಆ ಯಜಮಾನ ಇದ್ದರೆ ಚೆನ್ನಾಗಿ ಇತ್ತು ಅಂತ ಉಳಿದವರ ಮುಂದೆ ಹೇಳಿದಾಗ
    ಕ್ಷಣಮಾತ್ರದಲ್ಲಿ ಅವರ ಮುಂದೆ ಬಂದು ನಿಂತರಂತೆ"...
    ಹೀಗೆ ಇಂತಹ ಮಹಿಮೆಯನ್ನು "ಭಗವಂತನ ಅನುಗ್ರಹದಿಂದ ತೋರಿಸಿದ ಆ ಕಂಪ್ಲಿಯ ಯಜಮಾನ ಇಂದಿನ ಆರಾಧನಾ ಕಥಾನಾಯಕರು ಆದ ಶ್ರೀ ಗುರು ಶ್ರೀಶವಿಠ್ಠಲ ದಾಸರು,ಕುಂಟೋಜಿ ದಾಸರು, ಕಂಪ್ಲಿ ದಾಸರು ಎನ್ನುವ ಹೆಸರಿನಲ್ಲಿ ಕರೆಸಿಕೊಂಡ ಮಹಾನುಭಾವರು."..
    ದಾಸರು ಪ್ರಸಿದ್ಧ ಕನಕಗಿರಿಯ ಒಂದು ಕರಣಿಕ ಮನೆತನದಲ್ಲಿ ಜನಿಸಿದರು. ನರಸಿಂಹ ಎಂಬ ಹೆಸರಿನಿಂದ ವಿದ್ಯಾಭ್ಯಾಸ ಎಲ್ಲಾ ನಡೆಯಿತು. ಮನೆತನದ ವೃತ್ತಿ ಯಾದ ಕರಣಿಕ ಕೆಲಸ ಮಾಡುತ್ತಾರೆ. ಬಂದಂತಹ ಅತಿಥಿಗಳಿಗೆ,ಧಾರ್ಮಿಕ ಕಾರ್ಯಗಳಿಗೆ ಹೇರಳ ಹಣವನ್ನು ಖರ್ಚು ಮಾಡುವುದನ್ನು ಕಂಡು ಅವರ ಮೇಲೆ ರಾಜಧನ ದುರುಪಯೋಗವಾಗಿದೆ ಅಂತ ಹೇಳಿ ಆರೋಪವನ್ನು ಹೊರಿಸಿ ಸೆರೆಮನೆಯಲ್ಲಿ ಇಡುತ್ತಾರೆ.
    ಒಂದೆರಡು ದಿನಗಳ ನಂತರ ಭಗವಂತ ಕಾಣಿಸಿಕೊಂಡ.. 
    "ನನ್ನ ದಾಸನಾಗು" ಎಂದುಹೇಳಿದ.
    "ಸೆರೆಯಲ್ಲಿ ಇರುವ ನಾನು ನಿನ್ನ ದಾಸನಾಗಲು ಹೇಗೆ ಸಾಧ್ಯ??" ಎನಲು 
    "ಮತ್ತೊಂದು ಬಾರಿ ಆ ಲೆಕ್ಕ ಪತ್ರದ ಪುಸ್ತಕಗಳನ್ನು ನೋಡಲು ರಾಜನಿಗೆ ಹೇಳು.ನೀನು ಬಂಧ ಮುಕ್ತ ನಾಗುವೆ.ನಂತರ ಜಗನ್ನಾಥ ದಾಸರ ಬಳಿ ಹೋಗಿ ಸೇವೆ ಮಾಡಿ ನಿನ್ನ ಜನ್ಮ ಸಾರ್ಥಕ ಮಾಡಿಕೊ" ಎಂದು ಸ್ವಾಮಿ ಸೂಚನೆ ಕೊಡುತ್ತಾನೆ...
    ಆ ನಂತರ ಅಧಿಕಾರಿಗಳು ಲೆಕ್ಕ ಪತ್ರ ನೋಡಲು ಎಲ್ಲಾ ಸರಿ ಇರುವದು ಕಂಡು ಇವರ ತಪ್ಪು ಇಲ್ಲ ಅಂತ ಹೇಳಿ ಬಿಡುಗಡೆ ಮಾಡುತ್ತಾರೆ.
    ನಂತರ ಶ್ರೀ ಜಗನ್ನಾಥ ದಾಸರ ಬಳಿ ೧೨ವರುಷ ಸೇವೆಯನ್ನು ಮಾಡಿ ಊರಿಗೆ ಹೊರಡಲು ಅಪ್ಪಣೆ ಕೇಳಿದರು ದಾಸರು ಅಪ್ಪಣೆ ಕೊಡಲಿಲ್ಲ...
    ಒಂದು ದಿನ ದಾಸರ ಕಾಲನ್ನು ಒತ್ತುವಾಗ ಇವರ ಕಣ್ಣಿನ ನೀರು ದಾಸರ ಕಾಲ ಮೇಲೆ ಬೀಳುತ್ತದೆ.
    ತಕ್ಷಣ ಶ್ರೀಜಗನ್ನಾಥ ದಾಸರು ಎದ್ದು ಕುಳಿತು..
    "'ಮಗು!! ನಿನಗೆ ಅಪಮೃತ್ಯು ಬರಲಿದೆ ಅದನ್ನು ಪರಿಹಾರ ಮಾಡಿ ಕಳುಹಿಸುವ ಅಂತ ಅಂದುಕೊಂಡಿದ್ದೆ.ಭಗವಂತನ ಸಂಕಲ್ಪ. ನಿನಗೆ ಹೊರಡುವ ಆತುರ.ಶ್ರೀಶವಿಠ್ಠಲ ಅಂಕಿತ ಶ್ರೀ ಹುಂಡೇಕಾರ ದಾಸರು ನಿನ್ನ ನಿಯತ ಗುರುಗಳು.ಅವರಲ್ಲಿ ಹೋಗಿ ಅಂಕಿತ ಪಡೆದುಕೊ" ಅಂತ ಹೇಳಿ "ಅವರಿಗೆ ಒಂದು ಕೈ ಕೋಲನ್ನು  ಕೊಟ್ಟುದಾರಿಯಲ್ಲಿ ನಿನಗೆ ಸರ್ಪ ಬಂದು ಕಚ್ಚುತ್ತದೆ.ಈ ಕೋಲನ್ನು ಆ ಜಾಗದಲ್ಲಿ ಇಡು.ನಿನ್ನ ಅಪಮೃತ್ಯು ಪರಿಹಾರವಾಗುತ್ತದೆ" ಅಂತ ಹೇಳಿ ಕಳುಹಿಸುತ್ತಾರೆ.
    ನಂತರ ಅದರಂತೆ ತಮ್ಮ "ಅಪಮೃತ್ಯುವನ್ನು ಕಳೆದುಕೊಂಡು ಹುಂಡೆಕಾರ ದಾಸರಿಂದ ಗುರು ಶ್ರೀಶ ವಿಠ್ಠಲ ಅಂತ ಅಂಕಿತ ವನ್ನು ಪಡೆದುಕೊಂಡು" ಗಂಗಾವತಿ ಬಳಿಯ ಕುಂಟೋಜಿ ಎನ್ನುವ ಗ್ರಾಮದಲ್ಲಿ ವಾಸವಾಗಿದ್ದರು.
    ಶತಾಯುಷಿಗಳಾಗಿದ್ದ ದಾಸರು ಜೀವಿತಕಾಲದ ಕೊನೆಯಲ್ಲಿ ಕುಟುಂಬ ವರ್ಗದ ಜೊತೆಯಲ್ಲಿ ಕಾಶಿಯಾತ್ರೆ ಹೊರಟರು. "ಗಂಗಾನದಿ ದಾಟುವಾಗ  ನಾವೆ ಸಹಿತವಾಗಿ ಇಡೀ ಕುಟುಂಬ  ಮುಳುಗಿ ಹೋಗುತ್ತದೆ.ಒಳ್ಳೆಯ ಈಜುಗಾರರಾದ ದಾಸರು ನದಿಯನ್ನು ಈಜಿ ದಂಡೆಯನ್ನು ತಲುಪಿ ಎಲ್ಲಾ ವೃತ್ತಾಂತವನ್ನು ಬರೆದು  ತಾವು ಬದರಿಯತ್ತ ಪ್ರಯಾಣ ಮಾಡುವ ದಾಗಿ ಹೇಳಿ ಪತ್ರ ಮುಖೇನ ತಿಳಿಸಿ ಅದನ್ನು ಊರಿಗೆ ಮುಟ್ಟಲು ವ್ಯವಸ್ಥೆ ಮಾಡಿ ಬದರಿ ಕಡೆ ಪಯಣವನ್ನು ಬೆಳೆಸಿದರು."
    ದಾಸರು ಬದರಿ ಕಡೆ ಹೋದ ದಿನದಂದು ಅವರ ಮನೆತನದವರು ಹಾಗು ಶಿಷ್ಯ ಮನೆತನದವರು ಆರಾಧನೆ ಮಾಡುತ್ತಾ ಬಂದಿದ್ದಾರೆ...
    ಸಾಹಸಿ ಈಜುಗಾರರಾದ ದಾಸರು ತುಂಗಭದ್ರಾ ನದಿಯಲ್ಲಿ ಈಜುವಾಗ ಎದೆಗೆ ಸುಣ್ಣ ಹಚ್ಚಿ ಕೊಂಡು ಒಂದು ದಡದಿಂದ ಇನ್ನೊಂದು ದಡಕ್ಕೆ ಸುಣ್ಣ ನೀರಿಗೆ ತಾಕದಂತೆ ಸರಾಗವಾಗಿ ಈಜುತ್ತಿದ್ದರು...
    🙏🙏
    ಗುರು ಶ್ರೀಶ ದಾಸರ 
    ದಾಸರ ಅಂತರ್ಯಾಮಿಯಾದ ಗುರು ಶ್ರೀಶ ವಿಠ್ಠಲ ರೂಪಿ ಭಗವಂತನಿಗೆ ಸಮರ್ಪಣೆ ಮಾಡುತ್ತಾ 
     🙏ಶ್ರೀಕೃಷ್ಣಾರ್ಪಣಮಸ್ತು🙏..
    ದಾಸರ ನೆರೆ ನಂಬಿರೋ|
    ಗುರು ಶ್ರೀಶದಾಸರ ನೆರೆ ನಂಬಿರೋ||
    🙏ಅ.ವಿಜಯವಿಠ್ಠಲ🙏

    *********


    ತರಳನ ಮೊರೆ ಕೇಳಿ ತವಕದಿಂದಲಿ ಬಂದು ದುರುಳನಾದ ಹಿರಣ್ಯ ಕಶಿಪುವಿನ ಸಂಹಾರ ಭಗವಂತನು ಮಾಡಿದ್ದಾನೆ.
    ಆದರು 
    ನರಸಿಂಹ ದೇವರ ಕೋಪ ಕಡಿಮೆ ಆಗಲಿಲ್ಲ. ಅದು ಅವನ ನಟನೆ.

     ಬ್ರಹ್ಮಾದಿ ದೇವತೆಗಳು ಬಾಲಕ ಪ್ರಹ್ಲಾದ ನನ್ನು ಭಗವಂತನ ಹತ್ತಿರ ಕಳುಹಿಸಿದ್ದಾರೆ.

    ಅಣುರೇಣು ಪರಿಪೂರ್ಣ ನಾದ ಭಗವಂತ ಕಂಬದಿಂದ ಉದ್ಬವನಾಗಿ, ಬಂದು ಕುಳಿತಿರುವದನ್ನು ನೋಡಿ ಬಾಲಕ ಪ್ರಹ್ಲಾದ ನರಸಿಂಹ ದೇವರ ಪಾದ ಕಮಲಗಳಲ್ಲಿ ಭಕ್ತಿ ಉದ್ರೇಕದಿಂದ ಎರಗಿದ್ದಾನೆ...
    ತನ್ನ ಭಕ್ತನಾದ ಪರಮ ಭಾಗವತರಾದ ಪ್ರಹ್ಲಾದ ರಾಜರನ್ನು ನರಸಿಂಹ ದೇವರು ಎರಡು ಕೈಗಳಿಂದ ಹಿಡಿದು ಮೇಲೆ ಎಬ್ಬಿಸಿದ್ದಾನೆ.

    ಭಗವಂತನ ಕರಸ್ಪರ್ಶದಿಂದ ಅಪರೋಕ್ಷ ಪ್ರತಿಬಂಧಕ ವಾದ ಪಾಪವೆಲ್ಲವು ಪರಿಹಾರವಾಗಿದೆ.

    ಬಿಂಬ ಮೂರುತಿಯ ದರುಶನ ಕಣ್ಣಿನ ಎದುರಿಗೆ ಪ್ರಹ್ಲಾದ ರಾಜರಿಗೆ ಆಗಿದೆ.

    ಭಕ್ತಿ ರಸದಿಂದ ಕಣ್ಣುಗಳು ನೀರು ಸುರಿಸುತ್ತಿವೆ.
    ಇದೇ ನಿಜವಾದ ಸುಖ.
    ಭಗವಂತನ ಭಕ್ತರಿಗೆ ದೇವರಿಂದ ದೊರೆಯುವ ನಿಜವಾದ ಸುಖದ ಅನುಭವ.
    ಇದನ್ನು ಅನುಭವಿಸಿ ನಮಗೆಲ್ಲ ಭಗವಂತನ ಹತ್ತಿರ ಹೇಗೆ ಭಕ್ತಿ ಮಾಡಬೇಕು ಅಂತ ತೋರಿಸಿಕೊಟ್ಟ ಪರಮ‌ಭಾಗವತರಾದ ಪ್ರಹ್ಲಾದ ರಾಜರು ಮುಂದೆ ರಾಘವೇಂದ್ರ ಸ್ವಾಮಿಗಳು ಆಗಿ ಅವತಾರ ಮಾಡುತ್ತಾರೆ.
    🙏ಶ್ರೀ ಕೃಷ್ಣಾರ್ಪಣ ಮಸ್ತು🙏
    ಮುನ್ನ ಯೋಚಿಸದೇ ಗುರುಪಾದಕ್ಕೆ ಶರಣೆನಲು|
    ಮನುಜನೇ ನಿನ್ನ ಸಕಲ ಜನುಮಗಳು ಉದ್ದರಿಸುವವು||
    ..
    ರಾಯರ ಪಾಡು ಎಲೇ ಮನವೇ |ರಾಯರ ಪಾಡು ಎಲೇ ಮನವೆ.||
    ಭವ ಸಾಗರವನ್ನು ಜಯಿಸಬೇಕಾದರೆ| ರಾಯರ ಪಾಡು ಎಲೇ ಮನವೇ||

    🙏ಇವರ ಪಾದ ಸ್ಮರಣೆಯ ಮಾಡದವನೇ ಪಾಪಿ🙏
    ***********


    ಶ್ರೀ ಜಗನ್ನಾಥ ದಾಸರಿಗೆ ರಂಗಒಲಿದ ದಾಸರು ಎಂದು ಹೆಸರು ಬರುವುದಕ್ಕೆ 
    ಹಿನ್ನಲೆ....ಈ ಘಟನೆ...
    👇🏽👇🏽👇🏽👇🏽
    ನಮ್ಮ ಶ್ರೀ ಜಗನ್ನಾಥ ದಾಸರು ರಂಗವಲ್ಲಿಯನ್ನ ಬಿಡಿಸುವದಲ್ಲಿ ಅತ್ಯಂತ ನೈಪುಣ್ಯತೆ ಹೊಂದಿದ್ದರು...

    ಹೀಗೆ ಅವರು ಪಾಠ ಪ್ರವಚನ ಮಾಡುವ ಎಲ್ಲಾ ಪ್ರದೇಶಗಳಲ್ಲೀ ಸಹಾ ಒಂದು ಅದ್ಭುತವಾದ ದೇವರ ರಂಗವಲ್ಲಿಯನ್ನ ಬಿಡಿಸಿಯೇ ಪಾಠ ಪ್ರವಚನ ಷುರೂ ಮಾಡುತ್ತಿದ್ದರಂತೆ ...

    ಹೀಗೆ ಒಮ್ಮೆ ಶ್ರೀರಂಗಪಟ್ಟಣದ ಹತ್ತಿರದ ಒಂದು ಗ್ರಾಮಕ್ಕೆ ಹೋದಾಗ ಅಲ್ಲಿಯೂ ಸಹಾ ಶ್ರೀ ರಂಗನಾಥನ್ನ * ತಮ್ಮ ರಂಗವಲ್ಲಿಯಲ್ಲಿ ಚಿತ್ರಣೆ ಮಾಡಿದರಂತೆ.. ಆದರೇ *ಕಿರೀಟವನ್ನು ಮಾತ್ರ ಬಿಡಿಸಿರಲಿಲ್ಲ... ಆಗ ಒಬ್ಬ ಕುಹುಕ ಏನೋ ದೊಡ್ಡ ದಾಸರು ಅಂತಿರೀ ಆದರೇ ರಂಗನಾಥನ ಕಿರೀಟವನ್ನೇ ಬಿಡಿಸಿಲ್ಲವಲ್ಲವೇ ಅಂತ ಮಾತನಾಡಿದನಂತೆ....

    ಆಗ ಶ್ರೀ ಜಗನ್ನಾಥ ದಾಸರು  ಇವತ್ತು ಶ್ರೀರಂಗಪಟ್ಟಣದಲ್ಲಿ ರಂಗನಾಥನಿಗೆ ಕಿರೀಟ ಹಾಕಿರಲಿಲ್ಲ .. ಮುತ್ತುಗಳು ಬಿಚ್ಚಿ ಹೋದ ಕಾರಣ ಸರಿ ಮಾಡಿಸಲು ಕಳಿಸಿದ್ದಾರೆ ಅಂತ ನುಡಿದರಂತೆ....

    ಆಗ ಒಬ್ಬ ಕುದುರೆಯ ಮೇಲೆ ಶ್ರೀರಂಗಪಟ್ಟಣಕ್ಕೆ ಹೋಗಿ ದೇವಸ್ಥಾನದಲ್ಲಿ ದೇವರನ್ನ ನೋಡಿದಾಗ ಅದು ನಿಜ ಅಂತ ತಿಳಿದು ಬಂತು....

    ನಂತರ ಬಂದು ಆ ವಿಷಯವನ್ನು ಅವನು ಎಲ್ಲರಿಗೆ  ತಿಳಿಸಿದಾಗ ಶ್ರೀ ಜಗನ್ನಾಥ ದಾಸರ ಅಪಾರ ಮಹಿಮೆಯನ್ನು ಕಂಡ ಎಲ್ಲರಿಗೂ ಅವರ ದೈವ ಭಕ್ತಿ ಮನವರಿಕೆಯಾಗಿ...
    ಅಂದಿನಿಂದ ಅವರನ್ನ ಶ್ರೀ ರಂಗಒಲಿದ ದಾಸರು ಅಂತ ಕರೆದರಂತೆ...

    ಇಂಥಹಾ ಮಹಾನುಭಾವರ ಚರಣಾರವಿಂದಕ್ಕೆ ಕೋಟಿ ಕೋಟಿ ನಮನಗಳನ್ನ ಸಲ್ಲಿಸುತ್ತಾ .... ನಮ್ಮೆಲ್ಲರಿಗೂ ಆ ದಾಸವರೇಣ್ಯರ ಕೃಪೆ ಲವಲೀಶವಾದರೂ ಸಿಗಲೀ ಎಂದು ಪ್ರಾರ್ಥನೆ ಮಾಡುತ್ತಾ.....
               🙏🏻 ಪದ್ಮ ಶಿರೀಷ🙏🏻

      ...  ಶ್ರೀ ಜಗನ್ನಾಧ ಗುರುಂ ಭಜೇ....
    *************

    ಮೇದಿನಿ ಮೇಲುಳ್ಳ ಗಂಗಾದಿ
    ತೀರ್ಥ ಸತಿಗಳಿವರ|
    ಕಾದುಕೊಂಡಿಹರು ಬಿಡದೆ..|
    ...
    ಸಂಗ ಸುಖವ ಬಯಸಿ ಬದುಕಿರೋ|
     ರಂಗ ಒಲಿದ ಭಾಗವತರ|
    ✍ಶ್ರೀದ ವಿಠ್ಠಲ ದಾಸರು
    ಮಾನವಿ ಪ್ರಭುಗಳು ಮತ್ತು ತಮ್ಮ ಗುರುಗಳಾದ ಶ್ರೀ ಜಗನ್ನಾಥ ದಾಸರೊಂದಿಗೆ ಶ್ರೀದವಿಠ್ಠಲ ದಾಸರು ಮಾನವಿಯಲ್ಲಿ ,ಕೆಲವು ದಿನಗಳ ವರೆಗೆ ಅವರ ಮನೆಯಲ್ಲಿ (ಇವಾಗ ಇರುವ ದಾಸರಾಯರ ಗುಡಿ) ವಾಸಿಸುತ್ತಿರುವಾಗ ,ಅವರಿಗೆ ಕಾಶಿಯಾತ್ರೆ ಮಾಡಿ ಗಂಗಾ ಸ್ನಾನ ಮಾಡಬೇಕೆಂಬ ಬಯಕೆಮೂಡಿತು.. ಆದರೆ ಕಾರಣಾಂತರಗಳಿಂದ 
    ಶ್ರೀ ಜಗನ್ನಾಥ ದಾಸರು ಅವರ ಈ ಆಸೆಯನ್ನು ಈಡೇರಿಸದಿದ್ದಾಗ.. 
     ಶ್ರೀದವಿಠ್ಠಲರು ಯೋಚಿಸಿ
     ಗುರುಗಳಿಗೆ ಹೇಳದೇ, ಹೊರಟುಬಿಡಲು ತೀರ್ಮಾನಿಸಿ ,ಎಲ್ಲಾ ಸಿದ್ಧತೆ ಗಳನ್ನು ಮಾಡಿಕೊಂಡು  ಪ್ರಾತಃಕಾಲದಲ್ಲಿ ಎದ್ದು , ತಮ್ಮ ಗಂಟು ಮೂಟೆ ಗಳನ್ನು ಹೆಗಲಿಗೇರಿಸಿ , ದಾಸರ ಮನೆಯಿಂದ ಹೊರಬರುತ್ತಲೇ ಅತ್ಯಾಶ್ಚರ್ಯ ಕರವಾದ ದೃಶ್ಯ ವನ್ನು ಕಂಡರು..

    "ಸ್ಫುರದ್ರೂಪಿಗಳಾದ , ಸರ್ವಾಂಗಾಭರಣ ಭೂಷಿತರಾದ , ಸುಗಂಧ ಪರಿಮಳವನ್ನು ಸೂಸುತ್ತಿರುವ ಹಲವಾರು ದೇವತಾಸ್ತ್ರೀಯರು ಶ್ರೀ ಜಗನ್ನಾಥದಾಸರ ಮನೆಯ ಅಂಗಳವನ್ನು ಸಾರಿಸುತ್ತಾ , ರಂಗೋಲಿಗಳನ್ನು ಹಾಕುತ್ತಾ , ತುಳಸೀಕಟ್ಟೆಗೆ ನೀರು ಹಾಕುತ್ತಾ , ಮಂಜುಳ ಧ್ವನಿಯಿಂದ ಶ್ರೀ ಹರಿಯ ಕೀರ್ತನೆ ಯನ್ನು ಹಾಡುತ್ತಿದ್ದರು!!"
    ಆಶ್ಚರ್ಯ ಭರಿತರಾದ ಕರ್ಜಗಿ ದಾಸಪ್ಪನವರು , 
    ಭಕ್ತಿ ವಿನಯಗಳಿಂದ ಯುಕ್ತ ರಾದ ಆ ಸ್ತ್ರೀಯರ ಬಳಿಸಾರಿ , 
    ಅಮ್ಮಾ!! , ತಾಯಂದಿರಾ!! , ನೀವ್ಯಾರು ?ಈ ಹೊತ್ತಿನಲ್ಲಿ ಎಲ್ಲಿಂದ ಬಂದಿರಿ ? ನಿಮ್ಮ ವೃತ್ತಾಂತವೇನು?" ಎಂದು ಕೇಳಲು , ಆ ದೇವತಾಸ್ತ್ರೀಯರು , "ದಾಸರೇ!! ,ನಾವು ತೀರ್ಥಾಭಿಮಾನಿ ದೇವತೆಗಳು. ನಾನು ಗಂಗೆ ,ಈಕೆ ಗೌತಮಿ , ಇವಳು ತುಂಗಭದ್ರಾ ,ಈಕೆಯೇ ಕಾವೇರಿ , ಪಕ್ಕದಲ್ಲಿ ಇರುವವಳು ಕಪಿಲಾ ,ಅಲ್ಲಿ ಇರುವವರು ಕೃಷ್ಣಾ , ಗೋದಾವರಿ ಯರು" ಎಂದು ತಮ್ಮನ್ನು ಪರಿಚಯಿಸಿಕೊಂಡು ,    "ನಾವು ಪ್ರತಿನಿತ್ಯವೂ ಒಂದಂಶದಿಂದ ಈ ಜಗನ್ನಾಥ ದಾಸರಲ್ಲಿಗೆ ಬಂದು ಸೇವೆಯನ್ನು ಮಾಡುತ್ತಾ ,ಕೃತಾರ್ಥ ರಾಗುತ್ತಿದ್ದೇವೆ.."

    "ತೀರ್ಥಂಕುರ್ವಂತಿ ತೀರ್ಥಾನಿ" 
    ಎಂಬಂತೆ ನಮಗೆ ಇವರೇ ಗತಿಯು . ನಾವು ನಿಮ್ಮ ಕಣ್ಣಿಗೆ ಗೋಚರಿಸಬೇಕಾದರೆ ಅದು ಶ್ರೀ ಜಗನ್ನಾಥದಾಸರು ನಿಮಗೆ ಮಾಡಿದ ಅನುಗ್ರಹ. ಆ ದಾಸರ ದಾಸರಾದ ನಿಮ್ಮನ್ನು ಕಂಡು ಧನ್ಯರಾದೆವು !", ಎನ್ನುತ್ತಾ
    ಶ್ರೀದವಿಠ್ಠಲರ ಚರಣಕ್ಕೆರಗಿ ,ಅದೃಶ್ಯ ರಾದರು. 
    ಆ ಕ್ಷಣದಲ್ಲೇ ಶ್ರೀದವಿಠ್ಠಲ ದಾಸರು ತಮ್ಮ ತೀರ್ಥಯಾತ್ರೆಯ ಆಸೆಯನ್ನು  ಬಿಟ್ಟು , 
    "ಯಾವ ನಮ್ಮ ಗುರುಗಳ ಸನ್ನಿಧಾನ ದಲ್ಲಿ ಸಕಲ ತೀರ್ಥಾಭಿಮಾನಿ ದೇವತೆಗಳು ನಿತ್ಯವೂ ಬಂದು ಸೇವೆಗೈಯುತ್ತಿರುವರೋ .., ಅಂಥಾ ಗುರುಗಳನ್ನು ಬಿಟ್ಟು ದೇಹಾಯಾಸದಿಂದ ಬೇರಾವ ಕ್ಷೇತ್ರಕ್ಕೆ ಹೋಗಲಿ???
     ಒಂದೊಂದು ಕ್ಷೇತ್ರದಲ್ಲಿ ಒಬ್ಬೊಬ್ಬರಿದ್ದರೆ , ಇಲ್ಲಿ ಎಲ್ಲರೂ ಒಟ್ಟಾಗಿ ಸೇರುತ್ತಾರೆ..!
    ಇದನ್ನರಿಯದವ ನಾನಾದರೂ , ನನ್ನ ಮೇಲೆ ಗುರುಗಳು ಅದೆಷ್ಟು ಅಂತಃಕರಣ ವನ್ನಿಟ್ಟಿದ್ದಾರೆ ?.. 
    ಇವರ ಸ್ಮರಣೆ ಯಿಂದಲೇ ಸಮಸ್ತ ತೀರ್ಥಾವಗಾಹನದ ಫಲವು ಬರುವದರಲ್ಲಿ ಸಂದೇಹವಿಲ್ಲ.." 
    ಎಂದು ಯೋಚಿಸುತ್ತಾ  ಗುರುಗಳ ಬಳಿಗೆ ಬಂದು  ಸಾಷ್ಟಾಂಗ ನಮಸ್ಕಾರ ಮಾಡಿ ನಡೆದ ವೃತ್ತಾಂತವನ್ನು ಅರುಹಿ ಕ್ಷಮಿಸಬೇಕೆಂದು ಕೇಳಿಕೊಂಡರು. 
    ಭಗವಂತ ತನ್ನ ಭಕ್ತರಾದ ಶ್ರೀ ಜಗನ್ನಾಥ ದಾಸರ ಮಹಿಮೆ ಯನ್ನು ಜಗತ್ತಿನ ಜನರಿಗೆ ತೋರಿಸಲೋಸುಗ ಮಾಡಿದ ಲೀಲೆ.
    ಮಾನವಿ ಪ್ರಭುಗಳು ಶ್ರೀದ ವಿಠ್ಠಲದಾಸರನ್ನು ತುಂಬುಹೃದಯದಿಂದ ಹರಿಸಿದ್ದೂ ಅಲ್ಲದೇ ಕಾಲಾಂತರದಲ್ಲಿ ಕಾಶೀಯಾತ್ರೆಯನ್ನೂ ಮಾಡಿಸಿದರು..
    ಈ ಸಂಗತಿಯನ್ನು ಸಜ್ಜನರಿಗೆ ಶ್ರೀದ ವಿಠ್ಠಲ ದಾಸರು ತಮ್ಮ ಕೃತಿ ಯಲ್ಲಿ ತಿಳಿಸುತ್ತಾ ...

    ಸಂಗಸುಖವ ಬಯಸಿ ಬದುಕಿರೋ| ರಂಗ ಒಲಿದ ಭಾಗವತರ| ಸಂಗ ಸುಖವ ಬಯಸಿ ಬದುಕಿರೋ||ಪ||

    ಸಂಗ ಸುಖವ ಬಯಸಿ ಬದುಕಿ| ಭಂಗ ಬಡಿಪ ಭವವ ನೂಕಿ| ಹಿಂಗದೇ ನರಸಿಂಗನಂಘ್ರಿ| ಕಂಗಳಿಂದ ಕಾಣುತಿಹರ||ಅ ಪ||
    ಎಂದು ಮೂರು ನುಡಿಗಳ ಕೃತಿ ಯನ್ನು ರಚಿಸಿದ್ದಾರೆ!!
    ಪ್ರಾತಃ ಕಾಲ ಇಂತಹ ಭಗವಂತನ ಭಕ್ತರ ಸ್ಮರಣೆ ನಮ್ಮ ಪಾಪ ನಾಶನ ಮತ್ತು ಜೀವನ ಧನ್ಯ..ಮತ್ತು ಉದ್ದಾರ.
    🙏ಶ್ರೀ ಕೃಷ್ಣಾರ್ಪಣಮಸ್ತು.🙏
    ಪರಮ ಭಾಗವತರನು| ಕೊಂಡಾಡುವದು ಪ್ರತಿದಿನವು|

    🙏ಶ್ರೀ ಜಗನ್ನಾಥ ದಾಸ ಗುರುಭ್ಯೋ ನಮಃ🙏
    ****************


    ಜಗನ್ನಾಥದಾಸರು ಅಂದಾಜು 82 ವರ್ಷ ಬದುಕಿದ್ದರು. ಅವರಿಗೆ 40 ವರ್ಷ ಆಯುಷ್ಯ ದಾನವಾದ ಮೇಲೆ ತೀರ್ಥ ಯಾತ್ರೆ ಮಾಡಿಕೊಂಡು ಕೊನೆಗೆ ಮನವಿಯಲ್ಲಿ ನೆಲೆಸಿದರು.  ಆಗ ಅವರಿಗೆ ಎಲ್ಲ ಶೃತಿ ಪುರಾಣ, ಭಾರತ, ರಾಮಾಯಣ, ಉಪನಿಷತ್ತು ಗಳ ಸಾರ , ವೇದಗಳಲ್ಲಿಯ ತತ್ವ ಎಲ್ಲವನ್ನು  ಕ್ರೂಢೀಕರಿಸಿ ಒಂದೇ ಕಾವ್ಯದಲ್ಲಿ ಬರೆಯಬೇಕೆಂಬ ಆಸೆ ಹುಟ್ಟಿತು.  ಈ ಮೊದಲು ತಂತ್ರಸಾರ, ಬ್ರಹ್ಮ ಸೂತ್ರ ಭಾಷ್ಯಗಳನ್ನು ಒಂದು ಕಾವ್ಯದಲ್ಲಿ ಸಂಗ್ರಹಿಸಿ ಬರೆದಿದ್ದರು. ಈಗ ಹರಿಕಥಾಮೃತ ಸಾರ ಎಂಬ ಉತ್ಕೃಷ್ಟ ಕಾವ್ಯ ಬರೆಯಲು ಪ್ರಾರಂಭಿಸಿದರು. ಮುಪ್ಪುಅವರನ್ನು ಕಾಡುತ್ತಿತ್ತು. ಪರಮಾತ್ಮನ ಮಹಿಮೆ ಗುಣಗಳು ತಾರತಮ್ಯ, ಭೋಜನ, ಶ್ರೀಹರಿಯ ಕರುಣೆ, ಆತನ ವ್ಯಾಪ್ತಿ, ತತ್ವಗಳು ನಾಡಿಗಳು, ದೇಹದಲ್ಲಿಯ ಅಭಿಮಾನಿ ದೇವತೆಗಳು., ವಿವಿಧ ವಸ್ತುವಿನಲ್ಲಿ ಪರಮಾತ್ಮನ ರೂಪಗಳು ಅವುಗಳ ಸಂಖ್ಯೆ ಅಲ್ಲದೆ ಇನ್ನು ಅನೇಕ ವಿಷಯಗಳನ್ನು  ಸಂಗ್ರಹಿಸಿ ಬರೆದರು. ಮಧ್ಯದಲ್ಲಿ ಅವರಿಗೆ ಕೈ ಓಡಲಿಲ್ಲ.  ಇಪ್ಪತೇಳು ಸಂಧಿ ಮುಗಿದಿದ್ದವು. ಕಾರಣಎಲ್ಲಿ ತಪ್ಪಾಗಿದೆ ಎಂದು ವಿಚಾರ ಮಾಡಿಕೊಂಡರು. ತಿಳಿಯಲಿಲ್ಲ. ಆಗ ಗುರುಗಳಾದ ಗಣಪತಿಯ  ಅವತಾರಿಗಳಾದ ಗೋಪಾಲದಾಸರು ಕನಸಿನಲ್ಲಿ ಕಾಣಿಸಿಕೊಂಡುಆಚಾರ್ಯರೇ ಕಾವ್ಯದ ಮೊದಲು ವಿಘ್ನೇಶನನ್ನು ಮರೆತಿರಿ. ಈಗಲಾದರೂ ಮಧ್ಯದಲ್ಲಿ ಆತನನ್ನು ಸ್ಮರಿಸಿರಿ ಎಂದು ಹೇಳಿದಂತಾಯಿತು. ಎದ್ದವರೇ ಆಹ್ನಿಕ ಮುಗಿಸಿ ಗಣಪತಿಯನ್ನು ನೆನೆದು ಅವನ ಗುಣಗಳನ್ನು ಮಹಿಮೆಯನ್ನು ವರ್ಣಿಸಿ ವಿಘ್ನೇಶ್ವರ ಸಂಧಿ ಯನ್ನು ಬರೆದರು. ಎಲ್ಲ ದಾಸರು ಮುನಿಗಳು ಕವಿಗಳು ಮೊದಲು ಗಣಪತಿ ಸ್ತೋತ್ರ ಮಾಡಿದರೆ ಜಗನ್ನಾಥದಾಸರು ಕಾವ್ಯ ಮಧ್ಯದಲ್ಲಿ ಗಣೇಶನನ್ನು ಸ್ತುತಿಸಿದ್ದು ವಿಶೇಷವಾಗಿದೆ. ಕಾವ್ಯ ಮುಗಿದಮೇಲೆ ಫಲಶ್ರುತಿಗಾಗಿ ಬೇರೆಯವರಿಗೆ ಅಂಕಿತ ಕೊಡು ಅವರೇ  ಫಲಶ್ರುತಿ ಸಂಧಿ ಬರೆಯುವರು ಎಂದು ಕನಸಿನಲ್ಲಿ ಆಜ್ಞೆ ಆಯಿತು. 


    ದಾಸರು ಇಂತಹ ಮುಪ್ಪಿನಲ್ಲಿ ಹಾವೇರಿಹತ್ತಿರ  ಕರ್ಜಗಿ ಊರಿಗೆ ಬಂದರು. ಊರಲ್ಲಿ ಪರಿವಾರ ಸಹಿತ ವಸತಿ ಹೂಡಲು ದಾಸಪ್ಪ ನೆಂಬವನ ದೊಡ್ಡ ಮನೆಯನ್ನು ಆರಿಸಿದರು.  ಆತನು ಬ್ರಾಹ್ಮಣ ನಿಜ. ಆದರೆ ಯಾವಾಗಲು ಎಲೆ ಅಡಿಕೆ  ತಂಬಾಕು, ಮುಖದಲ್ಲಿ ಕೋರೆ ಮೀಸೆ, ಯಾವಾಗಲೋ ಮನೆಗೆ ಭೆಟ್ಟಿ, ಸಾಲದಕ್ಕೆ ವೇಶ್ಯಾ ಸಂಗ ಅವನಲ್ಲಿ ಮನೆ ಮಾಡಿದ್ದವು.  ದಾಸರ ಸಂಗಡ ಪ್ರಾಣೇಶದಾಸರು ಇದ್ದರು.  ದಾಸಪ್ಪ ತನ್ನ ಮನೆಗೆ ದಾಸರು ಬಂದಿರುವರೆಂದು ಎಚ್ಚರಗೊಳಲಿಲ್ಲ. ತಾನಾಯಿತು ತನ್ನ ವೇಶ್ಯೆ ಆಯಿತು ಇದ್ದನು. ಸಾಧ್ವಿ ಪತ್ನಿ ದೇವರಲ್ಲಿ ಗಂಡನಿಗೆ ಒಳ್ಳೆಯ ಬುದ್ಧಿ haakendu ಬೇಡಿ ಕೊಳ್ಳುತ್ತಾ ಇದ್ದಳು. ದಾಸರಿಗೆ ದಾಸಪ್ಪನ ಇತಿಹಾಸ ಪುರಾಣ ಎಲ್ಲ ತಿಳಿದು ಸಾಧ್ವಿಯನ್ನು ಸಮಾಧಾನ ಮಾಡಿದರು. ಅಂದು ಮುಂಜಾನೆ ಗಂಡನಿಗೆ ಇಂದು ಒಂದು ದಿನ ಭಜನೆಗೆ ಇರಬೇಕೆಂದು ಕೇಳಿಕೊಂಡಳು. ಆಗಲೆಂದು ದಾಸಪ್ಪ ಸ್ನಾನ ಮಾಡಿ ಗೋಪಿ ಹಚ್ಚಿಕೊಂಡು ಪೂಜೆಗೆ ಕುಳಿತ. ಸಾಯಂಕಾಲ ಭಜನೆಗೂ ಕುಳಿತ. ಪ್ರಾಣೇಶ ದಾಸರು "ಆದದ್ದೆಲ್ಲ ಆಯಿತು ಇನ್ನಾದರೂ ಒಳ್ಳೇ ದಾರಿ ಹಿಡಿಯೋ ಪ್ರಾಣಿ "ಎಂದು ದಾಸಪ್ಪನತ್ತ ಕೈಮಾಡುತ್ತ ಹಾಡಿದರು. ದಾಸಪ್ಪನ ಅಜ್ಞಾನ ದೂರವಾಯಿತು.  ಆಶೀರ್ವಾದ ಮಾಡಿರೆಂದು ದಾಸದ್ವಯರಿಗೆ ನಮಸ್ಕಾರ ಮಾಡಿದನು.  ಪ್ರಾಣೇಶರು ಸರಿ ಗಡ್ಡ ಮೀಸೆ ಗತಿ ಏನೆಂದರು.  ನಾಳೆ ಅದಕ್ಕೆ ಗತಿ ಕಾಣಿಸುವೆ ಎಂದನು. ಮರುದಿನ ಕ್ಷೌರ ಮಾಡಿಸಿಕೊಂಡು ಸ್ನಾನ ಮಡಿ ದಸರೆದು ಕುಳಿತ.  ಜಗನ್ನಾಥ ದಾಸರು ಶ್ರೀಧರ್ ವಿಠಲ ಎಂದು ಅಂಕಿತ ಕೊಟ್ಟರು.  ಇವರೇ ಕರ್ಜಗಿ ದಾಸರು. ಹರಿಕಥಾಮೃತ ಸಾರ ಕಾವ್ಯಕ್ಕೆ ಫಲಶ್ರುತಿ ಬರೆದ ಮಹಾನುಭಾವರು.  ಇದಾದ ನಂತರದಲ್ಲಿ ಜಗನ್ನಾಥದಾಸರು ಮನವಿಯಲ್ಲಿ ಉಳಿದರು .  ಭಾದ್ರಪದ ಶುದ್ಧ ನವಮಿಯ ದಿನ ಜಗನ್ನಾಥ ವಿಠಲನ ಪಾದಾರವಿಂದಗಳನ್ನು ಭಜಿಸುತ್ತ ಇಹಲೋಕ ತ್ಯಜಿಸಿದರು. ದಾಸರ ಅಂತರ್ಗತ ಭಾ. ಮು. ಅಂ ಜಗನ್ನಾಥ ಎಲ್ಲರನ್ನೂ ಕಾಪಾಡಲೆಂದು ಬೇಡುವ ಮಧುಸೂದನ ಕಲಿಭಟ್.
    ****************


    ||ಶ್ರೀ ಜಗನ್ನಾಥ ಗುರುಂ ಭಜೇ||
    ಇಂದು ಶ್ರೀಮಾನವಿ ಪ್ರಭುಗಳ ಆರಾಧನ ಪರ್ವಕಾಲ.
    ✍️ಮಾನವಿ ಪ್ರಭುಗಳಾದ ಶ್ರೀಜಗನ್ನಾಥ ದಾಸರು ಶ್ರೀ ಹರಿಯ ಅನುಗ್ರಹದಿಂದ ಅನೇಕ ಮಹಿಮೆಯನ್ನು ತೋರಿಸಿದ್ದಾರೆ..
    ಒಬ್ಬ ಬ್ರಾಹ್ಮಣ ಕಡು ಬಡತನ,ತನ್ನ ದಾರಿದ್ರ್ಯ ತನವನ್ನು ಹೋಗಲಾಡಿಸಲು ದಾಸರ ಮೊರೆ ಹೊಕ್ಕ...
    ದಾಸರು ಅವನ ಹಿಂದಿನ ಜನ್ಮವೃತ್ತಾಂತ ನೋಡಲಾಗಿ ಯಾರಿಗು ದಾನ ಧರ್ಮ ವನ್ನು ಮಾಡದೇ ಇರುವ ಕಾರಣ ತಿಳಿಯುತ್ತದೆ.
    ಈ ಜನ್ಮದಲ್ಲಿ ಆದರು ಅವನಿಂದ ದಾನ ಮಾಡಲು ಹೇಳಿದರೆ ಅವನ ಬಳಿ ಏನು ಸಂಪತ್ತು ಇಲ್ಲ.
    ಕೊನೆಗೆ ಅವನ ಬಳಿ ಇದ್ದ ಹಿತ್ತಾಳೆ ತಂಬಿಗೆಯನ್ನು ಮಾರಿಸಿ,ಅದರಿಂದ ಬಂದ ದ್ರವ್ಯ ದಿಂದ ಬ್ರಾಹ್ಮಣ ರಿಗೆ ಸಕ್ಕರೆ ಪಾನಕ ಕೊಡಿಸಿ,
    ಅವನಿಗೆ ಶ್ರೀನರಸಿಂಹ ದೇವರ ಸ್ತೋತ್ರ ರೂಪವಾದ ದುರಿತವನ ಕುಠಾರ ಎಂಬ ಸುಳಾದಿ ಯನ್ನು ರಚನೆಯನ್ನು ಮಾಡಿ ಅವನಿಗೆ ಅದನ್ನು ಪಠಣ ಮಾಡಲು ಹೇಳುತ್ತಾರೆ.
    ಅದರಂತೆ ಅವನು ಪಠಣ ಮಾಡಿ ತನ್ನ ದಾರಿದ್ರ್ಯ ವನ್ನು ಕಳೆದುಕೊಂಡ.
    ಅದೇ ರೀತಿ ದಾಸರು ಉಡುಪಿಗೆ ಹೋದಾಗ ಇವರು ಹರಿಕಥೆ ಹೇಳಬೇಕಾದರೆ ಕುಹಕಿಗಳು ಇವರನ್ನು ಪರೀಕ್ಷೆ ಮಾಡಲು ಮೂಕವ್ಯಕ್ತಿಯನ್ನು ಕರೆ ತಂದು ಇವರ ಮುಂದೆ ಕೂಡಿಸುತ್ತಾರೆ.ದಾಸರು ಮೂಕ ವ್ಯಕ್ತಿಯ ಹತ್ತಿರ ಮಾತನಾಡಿ ಅವನಿಗೆ ಮಾತು ಬರಿಸುತ್ತಾರೆ...
    ಹೀಗೆ ಅನೇಕ ಮಹಿಮೆಯನ್ನು ಶ್ರೀ ಹರಿವಾಯು ಗುರುಗಳ ಅನುಗ್ರಹದಿಂದ ತೋರಿಸಿ ಕೊಟ್ಟಿದ್ದಾರೆ...
    ಇದನ್ನು  ಶ್ರೀಶ್ಯಾಮ ಸುಂದರ ದಾಸರು ತಮ್ಮ ಶ್ರೀ ಜಗನ್ನಾಥ ದಾಸರ ಸುಳಾದಿ ಯಲ್ಲಿ ಹೇಳುತ್ತಾರೆ.
    |ಈತನೇ ಮೂಕಗೆ ಮಾತು ಬರೆಸಿದಾತ|| ಅಂತ ವರ್ಣನೆ ಮಾಡುತ್ತಾರೆ..
    ಇಲ್ಲಿ ಮೂಕ ಎಂದರೆ ಮಾತನಾಡಲು ಬಾರದವ ಎಂದರ್ಥ.
    ನಾವು ಸಹ  ಮಾತನಾಡಲು ಬಾರದವರು ಮತ್ತು ಮಾತಿನ ದಾರಿದ್ರ್ಯ ಉಳ್ಳವರು. ಹೇಗೆಂದರೆ ಭಗವಂತನ ಮತ್ತು ಅವನ ಭಕ್ತರ ಚರಿತ್ರೆ ಕೇಳಲು, ಓದಲು ,ನಮಗೆ ಮನಸ್ಸು, ಮತ್ತು ನಾಲಿಗೆಯಲ್ಲಿ ಮಾತು ಸಹ  ಬಾರದು.
    ಒಂದು ಅರ್ಥದಲ್ಲಿ ನಾವು ಸಹ ಆ ವಿಷಯದಲ್ಲಿ ಮೂಕರು.  ಬೇರೆ ವಿಷಯ ವಾದ ಲೌಕಿಕ ವಿಷಯಗಳ ಬಗ್ಗೆ  ಅತೀ ಆಸಕ್ತಿ ಉಳ್ಳವರು ಮತ್ತು ಗಂಟೆಗಟ್ಟಲೆ ಮಾತನಾಡುವವರು...
    ನಮ್ಮ ಈ ಮೂಕತನದ ದಾರಿದ್ರ್ಯವನ್ನು ಶ್ರೀ ಮಾನವಿ ಪ್ರಭುಗಳು ಹೋಗಲಾಡಿಸಬೇಕು.
    ಭಗವಂತನ ಹಾಗು ಅವನ ಭಕ್ತರ ಚರಿತ್ರೆ ಕೊಂಡಾಡದ,ಅವರ ಬಗ್ಗೆ ಮಾತನಾಡದ ನಮ್ಮ ನಾಲಿಗೆಯ ಮೂಕತನವನ್ನು ದಾಸರೇ ಹೋಗಲಾಡಿಸಿ ನಮಗೆ ಅದರ ಕಡೆ ಮನಸ್ಸು ಕೊಡಿಸಬೇಕು...
    ಭಗವಂತನನ್ನು ಕೊಂಡಾಡುವ, ಮಾತನ್ನು ನಮ್ಮ ನಾಲಿಗೆಯಲ್ಲಿ ಬರುವಂತೆ ದಾಸರೇ ಅನುಗ್ರಹ ಮಾಡಬೇಕು...
    ಕರುಣಾಶಾಲಿಗಳಾದ ದಾಸರಾಯರು ನಮಗೆಲ್ಲ ಅನುಗ್ರಹ ಮಾಡಲಿ.
    ಇಂದು ಅವರ ಆರಾಧನಾ ಪರ್ವಕಾಲ.ಈ ಪುಟಲೇಖನ ಕುಸುಮ ಅವರ ಅಂತರ್ಯಾಮಿಯಾದ ಶ್ರೀ ಜಗನ್ನಾಥ ವಿಠ್ಠಲ ಪಾದಕ್ಕೆ ಸಮರ್ಪಣೆ ಮಾಡುತ್ತಾ
    🙏ಶ್ರೀ ಕೃಷ್ಣಾರ್ಪಣ ಮಸ್ತು🙏
    ಮಾನವಿಯ ಸ್ಥಾನದಲ್ಲಿ|
    ನೀನಿರಲು ನಿನ್ನ ಮರೆತು|
    ತಾ ನೆತ್ತ ಪೋದರೇನು|
    ಆ ನರಗೆ ಉಂಟೇ ಮೋದ|
    🙏ಶ್ರೀ ಜಗನ್ನಾಥ ಗುರುಂ ಭಜೇ🙏🙇‍♂️🙇‍♂️🙇‍♂️
    *************

    ಶ್ರೀ‌ಜಗನ್ನಾಥ ದಾಸರ ಗುಡಿಯಲ್ಲಿ ಇರುವ ತಂಬೂರಿ ಚಿತ್ರ.      ದೀಪದ ಬಲಗಡೆ ಶ್ರೀ ಶ್ರೀನಿವಾಸ ಆಚಾರ್ಯರು ಚಂದ್ರಭಾಗ ನದಿಯಲ್ಲಿಮುಳುಗಿದಾಗ ಸಿಕ್ಕ ಶಾಲಗ್ರಾಮ ಶಿಲೆ. ಅದರಲ್ಲಿ ಶ್ರೀ ಜಗನ್ನಾಥ ವಿಠ್ಠಲ ಎನ್ನುವ ಅಂಕಿತ
    ಶ್ರೀ ಪಂಡರಾಪುರದ ಒಡೆಯನಾದ ಪಾಂಡುರಂಗ ಮತ್ತು ರಕುಮಾಬಾಯಿ ದಂಪತಿಗಳಿಂದ ಅನುಗ್ರಹ ರೂಪದಲ್ಲಿ.
    ಇನ್ನೂ ನಮ್ಮ ಎಡಗಡೆ
    ಶ್ರೀ ಗೋಪಾಲ ದಾಸರ ಬಳಿ ಶ್ರೀನಿವಾಸ ಆಚಾರ್ಯರು ಶ್ರೀ ವಿಜಯಪ್ರಭುಗಳ ಅಣತಿಯಂತೆ ಬಂದು ಶರಣು ಹೋಗಿ ಉದ್ದರಿಸಲು ಪ್ರಾರ್ಥನೆ ಮಾಡುವ ಚಿತ್ರ.
    ಶ್ರೀ ಗೋಪಾಲ ದಾಸರು ಶ್ರೀ ಧನ್ವಂತರಿ ರೂಪಿ ಪರಮಾತ್ಮನ ಧ್ಯಾನ ಮಾಡುತ್ತಾ ನಿಂತಿರುವ ಭಂಗಿ.
    ಅವರ ಮೇಲೆ ಶ್ರೀ ಧನ್ವಂತರಿ ರೂಪಿ ಪರಮಾತ್ಮನ ದರುಶನ ಉಭಯ ಜ್ಞಾನಿಗಳಿಗು.

    ಇದಿಷ್ಟು  ರಂಗವಲ್ಲಿಯಲ್ಲಿ ಈ ತಂಬೂರಿಯಲ್ಲಿ ಮೂಡಿಬಂದ ಅಧ್ಬುತ ಕಲೆ.
    ಶ್ರೀ ರಂಗವಲ್ಲಿಯ ದಾಸರ ಅನುಗ್ರಹದಿಂದ ಸಹೋದರಿಯರಾದ ಶ್ರೀಮತಿ ವಂದನಾ ಕಾರಟಗಿ ಅವರ ಕೈಯಲ್ಲಿ.
    ಅನಂತ ನಮನಗಳು ಅಮ್ಮ
    **********

    ದಾಸರ ಹೆಸರಿನ ಒಂದು ಚಿಂತನೆ(ಜಗನ್ನಾಥ ದಾಸರು)💐💐


     ಜ - ಜಡವಾದ ಜಲದಲ್ಲಿ ಜಡವಾದ ಶಿಲಾಫಲಕೆಯಲ್ಲಿ “ಜಗನ್ನಾಥ ವಿಟ್ಠಲ” ಎಂಬ ಅಂಕಿತ ಪಡೆದು
    ಜಗನ್ನಾಥದಾಸರಾಗಿ ಈ ಗ್ರಂಥ ರಚಿಸಲು ಪ್ರೇರಣೆ ಪಡೆದವರು

     ಗ - ಗೋಪಾಲದಾಸರು ಮಾಡಿದಂತ ಆಯುರ್ಧಾನ..

     ನ್ನಾ - ನಾವೆಯಂತಿರುವ “ಹರಿಕಥಾಮೃತಸಾರ”ವೆಂಬ ಕೃತಿಯು ಇವರಿಂದ ರಚಿತವಾಗಿದೆ.

     ಥ - ಥಳಥಳಿಸುವ ಭಕ್ತಿ ಸಾಹಿತ್ಯದ ಕಳಶವಾಗಿ ಜೀವರುಗಳಿಗೆ..

     ದಾ - ದಾರಿ ದೀಪವಾಗಿ ಮುಕ್ತಿಗೆ ಸೋಪಾನವಾಗಿ..

     ಸ - ಸಂಸಾರ ಸಾಗರವನ್ನು ದಾಟಿಸಿ.

     ರು - ರಮಾ ನಾರಾಯಣರ ವೈಕುಂಠ ಪುರಿಯನ್ನು ತಲುಪುವಲ್ಲಿ ನಾಂದಿಯಾಗುತ್ತದೆ ಎಂಬ ನಂಬಿಕೆ.

    ಎನ್ನಪರಾಧವನ್ನು ಮನ್ನಿಸಿ ಸಲಹುವಂಥ|
    ನಿನ್ನಹೊರೆತು ಭುವನದೊಳಗೆ ಇನ್ನಾರ ಕಾಣೆನಯ್ಯ||

    ಕರುಣಿಸಿ ಪಿಡಿಯೋ ಕೈಯ| ಗುರು ರಂಗ ಒಲಿದರಾಯ..

    ಶ್ರೀ ದಾಸಾರ್ಯರ ಸೇವೆಯಲ್ಲಿ...


    🙏🏼💐ಎಸ್.ವಿಜಯ ವಿಠ್ಠಲ
    **********

    ಶ್ರೀಂ ಶ್ರೀ ಕಂ ಕಪಿಲಾಯ ನಮಃ

    ಜಲಜೇಷ್ಟ ನಿಭಾಕಾರಂ ಜಗದೀಶ ಪದಾಶ್ರಯಮ್/
    ಜಗತೀತಲ ವಿಖ್ಯಾತಮ್ ಜಗನ್ನಾಥ ಗುರುಮ್ ಭಜೇ//

    ದಾಸ ಸಾಹಿತ್ಯದ ವಾಹಿನಿಯಲ್ಲಿ ಅಗ್ರಮಾನ್ಯರೆಂದೆ ಸ್ತುತಿಸಲ್ಪಟ್ಟ, ಸ್ತುತಿಸಲ್ಪಡುತ್ತಿರುವ ಶ್ರೀ ಮಾನವಿ ಪ್ರಭುಗಳ ಕುರಿತು ಎಷ್ಟು ಬರೆದರೂ ಬಹಳ ಕಮ್ಮಿ ಆಗ್ತದ... ಇಂದು ಅವರ ಮಧ್ಯಾರಾಧನೆಯ ಪರ್ವದಿನ ಮಾನವಿಯಲ್ಲಿ, ಮನೆ ಮನೆಗಳಲ್ಲಿ, ಭಕ್ತರ ಮನದಾಳಗಳಲ್ಲಿ ಮಹದಾನಂದಭರಿತವಾಗಿ ನಡೆಯುತ್ತಿದೆ....

    ಶ್ರೀ ನಾರಸಿಂಹಾಭಿನ್ನ ವಿಠಲನ, ಶ್ರೀ ರಾಯರ, ಶ್ರೀ ವರದೇಂದ್ರರ, ಶ್ರೀ ವಿಜಯಪ್ರಭುಗಳ, ಶ್ರೀ ಗೋಪಾಲದಾಸಾರ್ಯರ ಪರಮಾನುಗ್ರಹ ಪಾತ್ರರಾಗಿ ತಮ್ಮ ಇಡೀ ಜೀವನವನ್ನು ಪರಮಾತ್ಮನ ತತ್ವಗಳನ್ನು ರಚಿಸುವುದರಲ್ಲಿ ತೊಡಗಿಸಿ ನಮ್ಮಂತಹಾ ಪಾಮರರನು ಉದ್ಧರಿಸಲೆಂದೆ ಅವತಾರ ಮಾಡಿ ಬಂದವರು ಅಂದರೆ ಅದು ಅತಿಶಯೋಕ್ತಿಯಲ್ಲ..

    ಅವರು ನಮಗೆ ನೀಡಿದ , ವೈದಿಕ ವಾಙ್ಮಯವನ್ನು, ದ್ವೈತ ಸಿದ್ಧಾಂತದ ಪಡಿಯಚ್ಚಿನಲ್ಲಿ ಹಾಕಿ  ಹರಿಕಥಾಮೃತಸಾರವೆನ್ನುವ ಕಂಠಾಭರಣವನ್ನು ಸಿದ್ಧಪಡಿಸಿ ಸಜ್ಜನ ಪ್ರಪಂಚಕ್ಕೆ ನೀಡಿದ ಉಪಕಾರವನ್ನು ನಾವು ಜನ್ಮ ಜನ್ಮದಲ್ಲಿ ಮರೆಯಲಂತೂ ಸಾಧ್ಯವಿಲ್ಲ..  ಅದೇ ರೀತಿಯಲ್ಲಿ,  ದೇವತಾ ತಾರತಮ್ಯೋಕ್ತವಾದ ತತ್ವಸುವ್ವಾಲಿ, ಸಾಧನೆಗೆ ಹಾದಿ ತೋರಿಸುವ ಫಲವಿದು ಬಾಳ್ದುದಕೆ... ಇನ್ನಿತರ ಕೃತಿಗಳು.. ಒಂದು ಅಂತ ಪ್ರತ್ಯೇಕ ತೆಗದು ಇದು ಚಂದ, ಇದು ಇನ್ನೂ ಚಂದ ಅಂತ ಭೇದ ಪಡಿಸಲಸಾಧ್ಯವೂ ಹೌದು..

    ಅಂತಹ ಅದ್ಭುತ ಕೃತಿಗಳಲ್ಲಿನ ಫಲವಿದು ಬಾಳ್ದುದಕೆ  ಕೃತಿಯ ಒಂದು ಪಕ್ಷಿನೋಟ 

    ನಮ್ಮ ಬದುಕು, ಬದುಕಿನಲಿ ನಾವು ಮಾಡುವ ಸತ್ಕರ್ಮಗಳೂ ಸಾರ್ಥಕವಾಗಲು, ಸಾಧನೆಗೆ ಫಲವನ್ನು ಪಡೆಯಲು ಬೇಕಾದ ಎಲ್ಲ ಉಪಾಯಗಳನ್ನೂ ಸಾರ ಸಂಗ್ರಹ ರೂಪದಲಿ 27 ನುಡಿಗಳಲ್ಲಿ ಅಡಗಿಸಿದ ಅಪೂರ್ವ ವಜ್ರವೇ ಫಲವಿದು ಬಾಳ್ದುದಕೆ  

    ಈ ಕೃತಿ ಶ್ರೀ ದಾಸಾರ್ಯರ ಮೇರು ಕೃತಿಯಾದ ಶ್ರಿಮದ್ಹರಿಕಥಾಮೃತಸಾರದ ತತ್ವದ ಕ್ಷೀರದಲ್ಲಿನ ರುಚಿಯಾದ ಕೆನೆಯಾಗಿದೆ. ಇದನ್ನು ಅಣುಹರಿಕಥಾಮೃತಸಾರ ಎಂದು ಸಹ ಕರೆಯುತ್ತಾರೆ.. ನಮ್ಮ ಬಾಳನ್ನು ಹೇಗೆ ಬಾಳಬೇಕು ಅದರ ಫಲ ತಿಳಿಸಿ ಹೇಳುವ ಮಹತ್ಕೃತಿಯಾಗಿದೆ..

    ಫಲವಿದು ಬಾಳ್ದುದಕೆ ಶಿರಿ-
    ನಿಲಯನ ಗುಣಗಲ ತಿಳಿದು ಭಜಿಸುವುದೆ ಎಂದೇ ಪ್ರಾರಂಭವಾಗುವ ಈ ಪದ್ಯದಲ್ಲಿ ಶಿರಿನಿಲಯನ, ಲಕ್ಷ್ಮೀ ಪತಿಯಾದ ಶ್ರೀಹರಿಯನು ಸರಿಯಾದ ಪದ್ಧತಿಯಲ್ಲಿ, ಶ್ರೀಮದಾಚಾರ್ಯರ ತತ್ವಗಳ ಅನುಸಾರವಾಗಿ ಸಮೀಚೀನವಾದ ಭಕ್ತಿಯಿಂದ  ತಿಳಿದು ಭಜಿಸುವುದೇ ನಮ್ಮ ಜೀವನದ ಸಾಫಲ್ಯ ಅಂತಾರೆ ದಾಸಾರ್ಯರು.. 


    ಸ್ವೋಚಿತ ಕರ್ಮಗಳಾಚರಿಸುತ ಬಲು
    ನೀಚರಲ್ಲಿ ಪೋಗಿ ಯಾಚಿಸದೆ ಎನ್ನುವ 
    ಮತ್ತೊಂದು ಪದ್ಯದಲಿ
    ವೇದಗಳ ಸಂದೇಶವನ್ನೇ ತಿಳಿಸಿದ್ದಾರೆ. ಪ್ರತಿಯೊಂದು ಜೀವಿಯೂ ತಮ್ಮ ತಮ್ಮ ವರ್ಣಾಶ್ರಮದ ಅನುಸಾರವಾಗಿ ಸತ್ಕರ್ಮಗಳನು ಮಾಡಬೇಕು, ಕಂಡ ಕಂಡವರಲ್ಲಿ, ನೀಚರಲ್ಲಿ (ನಿತ್ಯ ಸಂಸಾರಿಗಳು, ಲೌಕಿಕರು, ಪರಮಾತ್ಮನ ವಿಷಯವನ್ನು ಸಹ ಲೌಕಿಕ ರೂಪದಲ್ಲಿ ಕಾಣುವರು)  ಯಾವುದಕ್ಕೂ ಕೈ ಚಾಚದೆ ನಮ್ಮ ನಮ್ಮ ಯೋಗ್ಯತಾನುಸಾರವಾಗಿ ಹರಿ ಸರ್ವೋತ್ತಮ  - ವಾಯುಜೀವೋತ್ತಮ ತತ್ವವನ್ನು ಸ್ವೋತ್ತಮರಾದ ಗುರುಗಳ ಮುಖಾಂತರ ತಿಳಿದು , ಪರಮಾತ್ಮನ ಶರಣಾಗುವುದೇ ಫಲವಿದು ಬಾಳ್ದುದಕೆ ಅಂತಾರೆ ದಾಸಾರ್ಯರು..

    ನಂತರ 
    ತುಚ್ಛವಿಷಯಗಳಿಚ್ಛೈಸದೆಯ-
    ದೃಚ್ಛಾಲಾಭದಿಂ ಪ್ರೋಚ್ಛನಾಗುವುದೆ ಫಲವಿದು ಬಾಳ್ದುದಕೆ ಅಂತಾರೆ..

    ಇಟ್ಟಾಂಗೆ ಇರುವೇನೋ ಹರಿಯೆ ಎನ್ನುವ ಧೃವಾಂಶ ಸಂಭೂತರ ಮಾತಿನಂತೆ ತೇನತ್ಯಕ್ತೇನ ಭುಂಜಿಥಾ ಎನ್ನುವುದನ್ನನುಸರಿಸಿ ಪರಮಾತ್ಮನು ನೀಡಿದ್ದನ್ನು ಸರಿಯಾಗಿ ತಿಳಿದು,  ಐಹಿಕ ವಿಷಯಗಳಲ್ಲಿ ಮಗ್ನನಾಗದೆ, ಕರ್ಮಾನುಸಾರವಾಗಿ ಸಿಕ್ಕಿದ್ದನ್ನು ಪರಮ ಭಕ್ತಿಯಿಂದ ಪರಮಾತ್ಮನ ಅನುಗ್ರಹ ಎಂದು ಬಾಳುವುದೇ ಫಲವಿದು ಬಾಳ್ದುದಕೆ ಅಂತಾರೆ..

    ಎಲ್ಲದಕ್ಕಿಂತ ಮುಖ್ಯವಾಗಿ 

    ಹೃದಯದಿ ರೂಪವು ವದನದಿ ನಾಮವು
    ಉದರದಿ ನೈವೇದ್ಯವು ಶಿರದಿ
    ಪದಜಲ ನಿರ್ಮಾಲ್ಯವ ಧರಿಸುತ ಕೋ- 
    ವಿದರ ಸದನ ಹೆಗ್ಗದವ ಕಾಯ್ವದಿದೆ ಫಲವಿದು ಬಾಳ್ದುದಕೆ ಅಂತಾರೆ..

    ಶ್ರೀ ಜಗನ್ನಾಥ ದಾಸಾರ್ಯರೆ ತಮ್ಮ ರಥವಾನೇರಿದ ರಥಿಕನ್ಯಾರೇ ಪೇಳಮ್ಮಯ್ಯಾ ಎನ್ನುವ  ಕೃತಿಯಲ್ಲಿ ಹೇಳ್ತಾರೆ - ದೇಹವೇ ರಥವು ಆ ರಥದ ಮಧ್ಯದಲ್ಲಿ  ಅರ್ಥಾತ್ ನಮ್ಮ ಹೃದಯ ಮಂಟಪದಲ್ಲಿ ಸದಾ ನೆಲಸಿ ನಮ್ಮನ್ನು ಕಾಯ್ತಿರುವ ಪರಮಾತ್ಮನನ್ನು ಅನುಸಂಧಾನ ಪೂರ್ವಕವಾಗಿ ಧ್ಯಾನಿಸಿ , ಸದಾ ಹರಿನಾಮ ಸಂಕೀರ್ತನೆ, ಸ್ತೋತ್ರ ವದನದಲಿ ಸ್ಥಿರವಾಗಿ ನಿಲ್ಲಿಸುತ್ತಾ ಅರ್ಥಾತ್ ಪದಗಳು,  ಸ್ತೋತ್ರಾದಿಗಳು ಪಾಡುತ್ತಾ, ಸ್ನಾನವೇ ಮೊದಲು, ವಸ್ತ್ರಾಭರಣಗಳಿಂದ ಹಿಡಿದು,  ಭೋಜನಾದಿಗಳೆಲ್ಲವೂ ಒಳಗಿರುವ ಬಿಂಬನಿಗೆ ಸಮರ್ಪಣೆ ಎಂದು ಅನುಸಂಧಾನ ಪೂರ್ವಕವಾಗಿ, ಸದಾ ಪರಮಾತ್ಮನ ನಿರ್ಮಾಲ್ಯವನ್ನು ಶಿರದಲಿ ಧರಿಸುತ್ತ, ಜ್ಞಾನಿಗಳ ಮನೆ ಬಾಗಿಲುಗಳನ್ನ ಕಾಯೋದೆ ಅರ್ಥಾತ್ ಭಕ್ತ ಜನರ , ಸಜ್ಜನರಾದ ಜ್ಞಾನಿಗಳ ಸೇವೆ ಮಾಡೋದೆ ಫಲವಿದು ಬಾಳ್ದುದಕೆ ಅಂತಾರೆ... ಬಂಟನಾಗಿ ಬಾಗಿಲ ಕಾಯುವೆ ಎಂದೇ ಕನಕಪ್ಪ ಹಾಡಿಲ್ಲವೆ?   

    ಹೀಗೆ ಈ ಕೃತಿಯ  ಪ್ರತಿಯೊಂದು ಪದ್ಯದ ಅರ್ಥಾನುಸಂಧಾನವನ್ನು ನೋಡುತ್ತ, ಓದುತ್ತ, ಮಾಡುತ್ತ ಹೋದರೆ ಭಕ್ತಿಯಿಂದ ಕಣ್ತುಂಬಿ ಬರ್ತವೆ ಅನ್ನೋದು ಸಹ ಅನುಭವದ ಮಾತಾಗಿದೆ..

    ಕೃತಿಯ ಕೊನೆಯ ಪದ್ಯದಲ್ಲಿ ಶ್ರೀ ಜಗನ್ನಾಥ ದಾಸಾರ್ಯರಂತಾರೆ..

    ಪನ್ನಗಾಚಲ ಸನ್ನಿವಾಸ ಪಾ 
    ವನ್ನ ಚರಿತ ಸದ್ಗುಣ ಭರಿತ
    ಜನ್ಯ ಜನಕ ಲಾವಣ್ಯೈಕನಿಧಿ ಜ-
    ಗನ್ನಾಥವಿಠಲಾನನ್ಯಪನೆಂಬುದೆ   - ಫಲವಿದು ಬಾಳ್ದುದಕೆ...  ಅಂತ ಇಡೀ ಕೃತಿಯ ಅರ್ಥವನ್ನು ಅಡಗಿಸಿದ್ದಾರೆ..

    ಪರಮ ಪಾವನ ಚರಿತನು, ದೋಷದೂರನು, ಸರ್ವತಂತ್ರ್ಯ ಸ್ವತಂತ್ರ್ಯ ನೂ, ಭಕ್ತ ಪರಾಧೀನನಾದ,  ಸಮಸ್ತ ಜಗತ್ತನ್ನು ಸೃಷ್ಟಿಸಿ, ಎಲ್ಲೆಡ ವ್ಯಾಪಿಸಿ, ಎಲ್ಲರಲಿ ನಿಂತು ಎಲ್ಲರನು ಅವರವರ ಕರ್ಮಾನುಸಾರವಾಗಿ ಫಲಗಳನ್ನು ನೀಡುವ ವೆಂಕಪ್ಪನ ಗುಣಗಳನ್ನು ಗುರುಮುಖೇನ ತತ್ವಸಾರವನ್ನನುಸರಿಸಿ ತಿಳಿದು ಉಪಾಸನೆ ಮಾಡುವುದೆ ಫಲವಿದು ಬಾಳ್ದುದಕೆ.. ಅರ್ಥಾತ್ ನಮ್ಮ ಜೀವನದ ಸಾರ್ಥ್ಯಕ್ಯತೆಗೆ ಸೂಕ್ಷ್ಮವಾದ, ಸುಲಭವಾದ, ಮಹತ್ಕರವಾದ ಮಾರ್ಗವಿದು .. ಈ ರೀತಿಯ ಸಾಧನೆ ಯಾರು ಮಾಡುತ್ತಾರೆಯೋ ಅವರನ್ನು ಬಿಡದೆ ರಕ್ಷಿಸುವ ಜಗನ್ನಾಥ ವಿಠಲನ ಸ್ಮರಣೆ ಮಾಡಿ ಮಾಡಿಸಿದ ಶ್ರೀ ಜಗನ್ನಾಥ ದಾಸಾರ್ಯರ ಕಾರುಣ್ಯಕ್ಕೆ ಶತಕೋಟಿ ನಮನಗಳನ್ನು ಸಲ್ಲಿಸುತ್ತಾ... ಶ್ರೀ ದಾಸಾರ್ಯರ ಮಧ್ಯಾರಾಧನೆಯ ಮಹದ್ದಿನದಲ್ಲಿ ಈ ಸಣ್ಣ ಸೇವಾ ಕುಸುಮವನ್ನು 
    ಅಸ್ಮದ್ ಪತ್ಯಂತರ್ಗತ ಭಾರತೀರಮಣ ಮುಖ್ಯಪ್ರಾಣಾಂತರ್ಗತ ಶ್ರೀ ಲಕ್ಷ್ಮೀ ವೆಂಕಟೇಶನ ಅಡಿದಾವರೆಗಳಲ್ಲಿ ಸಮರ್ಪಣೆ ಮಾಡುತ್ತಾ... ದಾಸಾರ್ಯರ ಸೇವೆಯಲ್ಲಿ ಎಲ್ಲರೂ ತಲ್ಲೀನರಾಗೋಣ..... 


    ನಾದನೀರಾಜನದಿಂ ದಾಸಸುರಭಿ 
    ******
    2021



    *********


    ಹಾವೇರಿ ಹತ್ತಿರದ ಕೋಣನತಂಬಿಗೆಯಲ್ಲಿನ ಬ್ಯಾಟಿ ಆಂಜನೇಯ ದೇವಸ್ಥಾನ ಹಾಗೂ ಮಾವಿನ ಮತ್ತು ಆಲದ ಜೋಡಿ ಮರಗಳು -  ಈ ಸ್ಥಳದಲ್ಲಿ ಶ್ರೀ ಜಗನ್ನಾಥದಾಸರು ಹರಿಕಥಾಮೃತಸಾರದ ಮೂರು ಸಂಧಿಗಳನ್ನು ರಚಿಸಿದ್ದಾರೆ. ವಿಶೇಷವೇನೆಂದರೆ ಮಾವಿನ ಮತ್ತು ಆಲದ ಜೋಡಿ ಮರಗಳಿಗೆ ದಾಸರ ಮರ ಎಂದು ಸ್ಥಳೀಯವಾಗಿ ಕರೆಯುತ್ತಾರೆ ಈ ಮರಗಳಲ್ಲಿನ ಮಾವಿನಹಣ್ಣುಗಳನ್ನು ಈಗಲೂ ಯಾರೂ ಕೀಳುವುದಿಲ್ಲ ತಾವಾಗಿಯೇ ಹಣ್ಣಾಗಿ ಬಿದ್ದಮೇಲೆ ಮಾತ್ರ ಪ್ರಸಾದವೆಂದು ಸ್ವೀಕರಿಸುತ್ತಾರೆ ಈ ಮರಗಳ ಸುತ್ತಮುತ್ತಲು ಅನೇಕ ಮರಗಳು ಇದ್ದವಂತೆ ಕಾಲಾಂತರದಲ್ಲಿ ನೆರೆ ಹಾವಳಿಗೆ ಸಿಕ್ಕು  ಅನೇಕ ಮರಗಳು ನಾಶವಾದರೂ ಸಹಿತ ಈ ಜೋಡಿ ಮರ ಮಾತ್ರ ಗಟ್ಟಿಯಾಗಿ ಉಳಿದಿದೆ.
    ****


    ದಾಸರ ಹೆಸರು: ಜಗನ್ನಾಥದಾಸರು
    ಜನ್ಮ ಸ್ಥಳ: ಬ್ಯಾಗವಟ್ಟಿ , (ಮಾನ್ವಿ ತಾಲ್ಲೂಕು)
    ತಂದೆ ಹೆಸರು: ನರಸಿಂಹಾಚಾರ್ಯ (ನರಸಿಂಹ ದಾಸರು)
    ತಾಯಿ ಹೆಸರು: ಲಕ್ಷ್ಮೀಬಾಯಿ
    ಕಾಲ : -1708 -
    ಅಂಕಿತನಾಮ: ಜಗನ್ನಾಥ ವಿಠಲ
    ಲಭ್ಯ ಕೀರ್ತನೆಗಳ ಸಂಖ್ಯೆ: 200
    ಗುರುವಿನ ಹೆಸರು: ವರದೇಂದ್ರತೀರ್ಥ ಶ್ರೀಪಾದಂಗಳು, ಶ್ರೀ ಗೋಪಾಲದಾಸರು
    ರೂಪ: ಪ್ರಹ್ಲಾದನ ತಮ್ಮ ಸಹ್ಲಾದ ಅವತಾರ ಎಂಬ ನಂಬಿಕೆ ಶ್ರೀನಿವಾಸಾಚಾರ್ಯ
    ಪೂರ್ವಾಶ್ರಮದ ಹೆಸರು: ತಿಮ್ಮಣ್ಣದಾಸ ಮತ್ತು ದಾಮೋದರ ದಾಸ
    ಕೀರ್ತನೆಗಳಲ್ಲದೆ ಇತರ ಲಭ್ಯ ಕೈತಿಗಳು: ಹರಿಕಥಾಮೃತ ಸಾರ (988 ಷಟ್ಪದಿಗಳಲ್ಲಿದೆ) ದೈತ ಸಿದ್ದಾಂತವನ್ನು ಲೌಕಿಕ ಪಾರಮಾರ್ಥಿಕ ದೃಷ್ಯಾಂತಗಳ ಮೂಲಕ ಕನ್ನಡದಲ್ಲಿ ನಿರೂಪಿಸುವ ಕೃತಿ, ಪದಗಳ ಪ್ರೌಢಿಮೆ ಕವಿತಾ ಕೌಶಲ, ಅಪಾರ e್ಞÁನ ಶಕ್ತಿ, ಅತೀಂದ್ರಿಯ ವಸ್ತುಗಳ ನಿರೂಪಣೆ ಮೊದಲಾದ ಅಪೂರ್ವ ಗುಣಗಳಿಂದ ಕೂಡಿದ ಗ್ರಂಥ
    ಪತಿ: ಪತ್ನಿಯ ಹೆಸರು : ತಾಮರಸಮ್ಮ
    ವೃತ್ತಿ : ವರದೇಂದ್ರ ಮಠಲ ಆಸ್ಥಾನ ಪಂಡಿತರು
    ಕಾಲವಾದ ಸ್ಥಳ ಮತ್ತು ದಿನ : ಮಾನ್ವಿ 1809 ಭಾದ್ರಪದ ಶುದ್ಧ ನವಮಿ
    ವೃಂದಾವನ ಇರುವ ಸ್ಥಳ: ಮಾನ್ವಿಯಲ್ಲಿ ಜಗನ್ನಾಥದಾಸರ ಕಂಬವಿದೆ
    ಕೃತಿಯ ವೈಶಿಷ್ಟ್ಯ: ಹರಿಗುರುಗಳನ್ನು ಕುರಿತ ರಚನೆಗಳು, ತತ್ವಾರ್ಥ ಗರ್ಭಿತವೂ ಪ್ರೌಢವೂ ಆಗಿವೆ. ಜಗನ್ನಾಥದಾಸರ ಸಂಸ್ಕøತ ಭಾಷೆಯ ಪಾಂಡಿತ್ಯ ಕೃತಿಗಳಲ್ಲಿ ಒಡಮೂಡಿವೆ. ನರ್ತನ ಮತ್ತು ಹರಿವಾಣ ಸೇವೆಗೆ ಅಳಪಡುವ ಕೃತಿಗಳೂ ಇವೆ. ತತ್ವ ಸುವ್ವಾಲಿಗಳಲ್ಲಿ ಜಗನ್ನಾಥದಾಸರು ತಮ್ಮ ಜೀವನಾನುಭವವನ್ನು ತತ್ವe್ಞÁನದ ಬೆಳಕಿನಲ್ಲಿ ಮಂಡಿಸಿದ್ದಾರೆ.
    ***

    info from kannadasiri.in
    ಇಂದಿನ ಕರ್ಣಾಟಕ ರಾಜ್ಯದ ರಾಯಚೂರು ಜಿಲ್ಲೆಯ ಮಾನವೀ ತಾಲ್ಲೂಕಿನಲ್ಲಿರುವ ಬ್ಯಾಗವಟ್ಟಿ ಎಂಬ ಗ್ರಾಮದಲ್ಲಿ ವಾಸಿಸುತ್ತಿದ್ದ ಶ್ರೀ ನರಸಿಂಹಾಚಾರ್ಯರು - ಲಕ್ಷ್ಮೀಬಾಯಿ ಎಂಬ ಮಾಧ್ವ ದಂಪತಿಗಳು ಶಾ.ಶ. 1649ನೆಯ ಕೀಲಕನಾಮ ಸಂವತ್ಸರದ ಶ್ರಾವಣ ಶುದ್ಧ ಬಿದಿಗೆಯ ಶುಭ ದಿನದಂದು, ಅಂದರೆ ಕ್ರಿ.ಶ. 1728ನೆಯ ಇಸವಿ ಜುಲೈ ತಿಂಗಳ ದಿನಾಂಕ ಇಪ್ಪತ್ತೆÉೀಳರಂದು (27-7-1728) ಸತ್ಪುತ್ರರೊಬ್ಬರನ್ನು ಪಡೆದರು. ತಿರುಪತಿಯ ಶ್ರೀನಿವಾಸನ ಪರಮಾನುಗ್ರಹದಿಂದ ಈ ಮಗು ಜನಿಸಿದ ನಿಮಿತ್ತ ಶ್ರೀನಿವಾಸ ಎಂದೇ ಮಗುವಿಗೆ ನಾಮಕರಣವಾಯಿತು.

    ಶ್ರೀನಿವಾಸನು ಬೆಳೆದಂತೆ ಅವನ ಪ್ರತಿಭೆಯೂ ಪ್ರಕಾಶವಾಯಿತು. ಮನೆಯಲ್ಲಿಯೇ ಕೆಲವು ವರ್ಷಗಳು ವಿದ್ಯಾಭ್ಯಾಸವನ್ನು ಮಾಡಿದ ನಂತರ ಬಾಲಕನ ಪ್ರತಿಭಾ ಶಕ್ತಿಯನ್ನು ಗುರುತಿಸಿದ ತಾಯಿ ತಂದೆಯರು, ಆ ಕಾಲದಲ್ಲಿ ಶ್ರೀ ರಾಘವೇಂದ್ರ ಗುರುಸಾರ್ವಭೌಮರ ಮಠದ ಪರಂಪರೆಯಲ್ಲಿ ಪೀಠಸ್ಥರಾಗಿದ್ದ ಶ್ರೀವರದೇಂದ್ರತೀರ್ಥ ಶ್ರೀಪಾದಂಗಳವರಲ್ಲಿ ಮುಂದಿನ ವಿದ್ಯಾಭ್ಯಾಸಕ್ಕಾಗಿ ಕಳುಹಿಸಿದರು. ಆ ಹೊತ್ತಿಗಾಗಲೇ ಶ್ರೀಪಾದಂಗಳವರ ವಿಚಾರವನ್ನು ಅರಿತಿದ್ದ ಬಾಲಕ ಅವರನ್ನು ಕುರಿತು ಸಂಸ್ಕøತದಲ್ಲಿ ವರದೇಂದ್ರ ಪಂಚರತ್ನ ಮಾಲಿಕಾ ಎಂದು ಐದು ಶ್ಲೋಕಗಳನ್ನು ರಚಿಸಿ, ಶ್ರೀಪಾದಂಗಳವರಿಗೆ ಅರ್ಪಿಸಿದನಂತೆ! ಶ್ರೀನಿವಾಸನಲ್ಲಿ ಸುಪ್ತವಾಗಿದ್ದ ಪ್ರತಿಭೆಯನ್ನು ಆ ಮೂಲಕ ಗುರುತಿಸಿದ ಶ್ರೀಪಾದಂಗಳವರು ತಮ್ಮ ಮಠದಲ್ಲಿಯೇ ಬಾಲಕನಿಗೆ ಆಶ್ರಯವಿತ್ತು ವಿದ್ಯಾದಾನ ಮಾಡಿದರು. ಶ್ರೀನಿವಾಸ ಅನೇಕ ವರ್ಷಗಳ ಸತತ ಅಭ್ಯಾಸದಿಂದಲೂ, ಭಕ್ತಿ ಶ್ರದ್ಧಾದಿಗಳಿಂದಲೂ ಮತ್ತು ದೈವದತ್ತವಾದ ಸಹಜ ಪ್ರತಿಭಾ ಶಕ್ತಿಯಿಂದಲೂ ಸಕಲ ಶಾಸ್ತ್ರಾರ್ಥಗಳನ್ನೂ, ವೇದೋಪನಿಷತ್ತುಗಳನ್ನೂ ಕರತಲಾಮಲಕ ವನ್ನಾಗಿಸಿಕೊಂಡರು. ತರ್ಕ, ಮಿಮಾಂಸಾದಿ ಶಾಸ್ತ್ರಗಳಲ್ಲಿ ಅದ್ವಿತೀಯರಾಗಿ, ಪ್ರತಿವಾದಿ ಭಯಂಕರರೆನಿಸಿ ಖ್ಯಾತರಾದರು. ತಮ್ಮ ವಿದ್ಯಾ ಗುರುಗಳಿಂದಲೂ ಮತ್ತು ಪಂಡಿತರಿಂದಲೂ ಮಾನ್ಯರಾಗಿ, ಆಚಾರ್ಯ ಎಂಬ ಬಿರುದನ್ನು ಪಡೆದು, ಮುಂದೆ ಶ್ರೀನಿವಾಸಾಚಾರ್ಯರೆಂದೇ ಪ್ರಸಿದ್ಧರಾದರು. ಶ್ರೀವರದೇಂದ್ರ ತೀರ್ಥ ಶ್ರೀಪಾದಂಗಳವರ ಸಮಕ್ಷಮದಲ್ಲಿ ನಡೆಯುತ್ತಿದ್ದ ಎಲ್ಲಾ ವಿದ್ವತ್ಸಭೆ ಗಳಲ್ಲಿಯೂ ಇವರೇ ಮುಖ್ಯ ಪ್ರವರ್ತಕರಾಗಿದ್ದು, ಪ್ರತಿವಾದಿಗಳನ್ನು ತಮ್ಮ ಅಸಾಧಾರಣವಾದ ತರ್ಕಭೂಯಿಷ್ಠವಾದ ವಾದಸರಣಿ ಮತ್ತು ಪ್ರತಿಭೆಯಿಂದ ನಿರುತ್ತರರನ್ನಾಗಿಸಿ, ವಿಜಯೋತ್ಸಾಹದಿಂದ ಮೆರೆದರು. ಇದರಿಂದ ಶ್ರೀ ಮಠದ ಕೀರ್ತಿಯು ಹೆಚ್ಚಿತಲ್ಲದೆ, ಆಚಾರ್ಯರ ಯಶಸ್ಸು ದಿಗಂತ ವಿಶ್ರಾಂತವಾಗಿ ವ್ಯಾಪಿಸಿತು. ಇಂತಹ ಕೀರ್ತಿಶ್ರೀಯಿಂದ ಆಢ್ಯರಾಗಿದ್ದ ಆಚಾರ್ಯರಲ್ಲಿ ಸಹಜವಾಗಿಯೇ ಸಂಸ್ಕøತ ಭಾಷೆಯಲ್ಲಿ ಅತೀವ ನಿಷ್ಠೆ ಮತ್ತು ಕನ್ನಡ ಪದಗಳನ್ನು ರಚಿಸಿ, ಹಾಡಿ, ತಾವೂ ಶ್ರೀಹರಿಯ ವಿಷಯದಲ್ಲಿ ಭಕ್ತಿ ರೂಪವಾದ ರಸ ಪ್ರವಾಹದಲ್ಲಿ ತನ್ಮಯರಾಗಿ, ಇತರರನ್ನೂ ಆನಂದ ವಾರಿಧಿಯಲ್ಲಿ ಮಗ್ನರನ್ನಾಗಿ ಮಾಡಿದ ಹರಿದಾಸರ ವಿಷಯದಲ್ಲಿ ತಾತ್ಸಾರ ಬುದ್ಧಿ ಉಂಟಾಯಿತು.

    ಪಂಡಿತ ಮಾನ್ಯರಾಗಿ, ತಮ್ಮ ಗುರುಗಳ ಪ್ರೀತ್ಯಾದರಗಳಿಗೆ ಪಾತ್ರರಾಗಿ, ಆಚಾರ್ಯರು ಮಾನವಿಯಲ್ಲಿ ಬಂದು ನೆಲಸಿ, ಶಿಷ್ಯವೃಂದಕ್ಕೆ ವಿದ್ಯಾದಾನವನ್ನು ಮಾಡುತ್ತಾ, ಪರಮ ವೈಷ್ಣವಾಧ್ಯಕ್ಷರೆನಿಸಿಕೊಂಡು, ಶಿಷ್ಟ ಸದಾಚಾರನಿಷ್ಠರಾಗಿ ಕೆಲವು ನಿಯಮ ನಿಷ್ಠೆಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು, ಗೌರವಾ ನ್ವಿತರೆನಿಸಿದರು. ಒಮ್ಮೆ ಭೃಗ್ವಂಶ ಸಂಭೂತರೆಂದು ವಿಖ್ಯಾತರಾದ, ಭಗವದ ಪರೋಕ್ಷಿಗಳೆಂದೆನಿಸಿದ್ದ ಶ್ರೀವಿಜಯದಾಸರು ಮಾನವಿಗೆ ತಮ್ಮ ಶಿಷ್ಯ ಪರಿವಾರ ದೊಡನೆ ಬಂದರು. ಆಚಾರ್ಯರ ಸಮೀಪದ ಬಂಧುಗಳಾಗಿದ್ದ ಶ್ರೀದಾಸರಾಯರು ಅವರನ್ನು ಭೋಜನಕ್ಕೆ ಆಹ್ವಾನಿಸಿದರು. ದಾಸರ ಬಗ್ಗೆ ಅಸಡ್ಡೆಯನ್ನು ಹೊಂದಿದ್ದ ಆಚಾರ್ಯರು ಆಹ್ವಾನವನ್ನು ತಿರಸ್ಕರಿಸಿ, ತಡವಾಗಿ ಊಟ ಮಾಡಿದರೆ ಹೊಟ್ಟೆನೋವು ಬರುವುದಾಗಿ ಹೇಳಿ ಕಳುಹಿಸಿದರು. ಸ್ವೋತ್ತುಮ ದ್ರೋಹದ ಫಲವನ್ನು ಆಚಾರ್ಯರು ಶೀಘ್ರದಲ್ಲಿಯೇ ಅನುಭವಿಸ ಬೇಕಾಯಿತು. ಉದರ ವ್ಯಾಧಿಯ ಬಾಧೆಯು ತೀವ್ರವಾಯಿತು. ಲೋಕ ವೈದ್ಯರಿಂದ ಗುಣಪಡಿಸಲು ಸಾಧ್ಯವಾಗಲಿಲ್ಲವಾದುದರಿಂದ ಪರಲೋಕೈಕನಾಥನನ್ನು ಮೊರೆ ಹೊಕ್ಕರು; ಪ್ರಾರಬ್ಧ ರೂಪದ ವ್ಯಾಧಿ ಪರಿಹಾರಕ್ಕಾಗಿ, ಶ್ರೀ ರಾಘವೇಂದ್ರ ತೀರ್ಥ ಶ್ರೀಪಾದಂಗಳವರನ್ನು ಮೊರೆಹೊಕ್ಕು, ಅತ್ಯಂತ ದೈನ್ಯದಿಂದ ಸೇವೆ ಮಾಡಿದರು. ಶ್ರೀರಾಯರು ನೀನು ಸ್ವೋತ್ತಮ ದ್ರೋಹಾನುಲಿಪ್ತನಾಗಿರುವೆ ದ್ರೋಹವು ಯಾವ ಮೂಲದಲ್ಲಿ ಉಂಟಾಯಿತೋ, ಅಂತಹ ಮಹಾನುಭಾವರೂ ಪರಮ ಕರುಣಾಮೂರ್ತಿಗಳೂ ಆದ ಶ್ರೀ ವಿಜಯದಾಸರನ್ನೇ ಮೊರೆಹೊಕ್ಕ ಹೊರತು, ಬೇರೆ ಪರಿಹಾರ ಮಾರ್ಗವಿಲ್ಲ ಎಂದು ಸ್ವಪ್ನದ್ವಾರಾ ಸೂಚನೆಯಿತ್ತರು. ಯಾರಲ್ಲಿ ಗೌರವ ವಿರಲಿಲ್ಲವೋ, ಅವರನ್ನೇ ಶರಣು ಹೋಗಬೇಕಾದ ವಿಚಿತ್ರ ಪ್ರಸಂಗ ದೈವ ಚಿತ್ತದಿಂದ ಆಚಾರ್ಯರಿಗೆ ಒದಗಿತು. ತಮ್ಮ ಅಪರಾಧವನ್ನು ಅರಿತ ಆಚಾರ್ಯರು ಶ್ರೀ ವಿಜಯ ದಾಸರಲ್ಲಿಗೆ ಧಾವಿಸಿದರು. ಶ್ರೀಹರಿಯ ಸಂಕಲ್ಪದಂತೆ ನಡೆಯಲೇ ಬೇಕಾದ ಪ್ರಸಂಗಗಳು ತಮ್ಮ ಸಂದರ್ಭಗಳ ಯೋಗಾಯೋಗ ವಿಷಯಗಳನ್ನು ಮೊದಲೇ ತಮ್ಮ ದಿವ್ಯ e್ಞÁನ ದೃಷ್ಟಿಯಿಂದ ತಿಳಿದಿದ್ದ ಶ್ರೀ ವಿಜಯದಾಸರು ಅಚಾರ್ಯರ ಆಗಮನವನ್ನೇ ನಿರೀಕ್ಷಿಸುತ್ತಿದ್ದರು. ಅಡಿಗಡಿಗೆ ನಡುಗುತ್ತ ಭಯ ಭಕ್ತಿಗಳಿಂದ ತಮ್ಮೆಡೆಗೆ ಧಾವಿಸಿ ಬಂದ ಆಚಾರ್ಯರನ್ನು ಹೃದಯ ವಾತ್ಸಲ್ಯದಿಂದ ಬರಮಾಡಿಕೊಂಡು, ಆ ಆತ್ಮೀಯ ಬಂಧುವನ್ನು ಪ್ರೀತಿಯಿಂದ ಮಾತನಾಡಿಸಿ, ಸಂತೈಸಿದರು. ದಾಸರಾಯರು ತಮ್ಮ ಶಿಷ್ಯರಾದ ಶ್ರೀ ಗೋಪಾಲದಾಸರ ಬಳಿಗೆ ಹೋದರೆ ರೋಗ ನಿವಾರಣೆಯಗುವುದೆಂದು ತಿಳಿಸಿದರು. ಶ್ರೀ ವಿಜಯದಾಸರಿಗೆ ಆಚಾರ್ಯರ ರೋಗ ನಿವಾರಣೆ ಮಾಡುವ ಸಾಮಥ್ರ್ಯವಿದ್ದರೂ, ಶ್ರೀ ಗೋಪಾಲದಾಸರೇ ಅವರ ನಿಯಮಿತ ಗುರುಗಳು ಮತ್ತು ಸ್ವರೂಪೋದ್ಧಾರಕರು ಎಂದು ತಿಳಿದಿದ್ದುದರಿಂದ, ಆಚಾರ್ಯರನ್ನು ಉತ್ತನೂರಿಗೆ ಕಳುಹಿಸಿದರು.

    ಶ್ರೀ ಜಗನ್ನಾಥದಾಸರು ತಮ್ಮ ಮೂಲ ರೂಪದಲ್ಲಿ ಹತ್ತೊಂಭತ್ತನೆಯ ಕಕ್ಷೆಗೆ ಸೇರಿದ ಕರ್ಮಜ ದೇವತೆಗಳು (ಸಹ್ಲಾದಾಂಶರು) ಮತ್ತು ಶ್ರೀ ಗೋಪಾಲದಾಸರು ಹದಿನೆಂಟನೆಯ ಕಕ್ಷೆಗೆ ಸೇರಿದ ಗಣೇಶಾಂಶರೆಂದು ಪ್ರಸಿದ್ಧರಾಗಿದ್ದಾರೆ.

    ಶ್ರೀನಿವಾಸಾಚಾರ್ಯರು ಉತ್ತನೂರಿಗೆ ಬಂದು ಶ್ರೀಗೋಪಾಲದಾಸರನ್ನು ಕಂಡು, ಭಯಭಕ್ತಿಗಳಿಂದ ತಮ್ಮ ರೋಗ ನಿವಾರಣೆಗಾಗಿ ಪ್ರಾರ್ಥಿಸಿದರು. ಆಗ ಪರಮ ದÀಯಾಶೀಲರಾದ ಶ್ರೀ ಗೋಪಾಲದಾಸರಾಯರು, ತಮ್ಮ ಪೂಜ್ಯಗುರುಗಳ ಆಣತಿಯಂತೆ 'ಎನ್ನ ಬಿನ್ನಪ ಕೇಳೋ, ಧನ್ವಂತ್ರಿ ದಯಮಾಡೋ, ಸಣ್ಣವನು ಇವ ಕೇವಲ' ಎಂಬ ಕೀರ್ತನೆಯನ್ನು ರಚಿಸಿ, ಎರಡು ಜೋಳದ ಭಕ್ರಿಗಳನ್ನು ಅಭಿಮಂತ್ರಿಸಿ, ಆಚಾರ್ಯರಿಗೆ ಔಷಧ ರೂಪವಾಗಿ ಭುಂಜಿಸಲು ಕೊಟ್ಟರು. ಸಕಲ ರೋಗ ಪರಿಹಾರಕನೂ, ತನ್ನ ಕರಕಮಲಗಳಲ್ಲಿ ಅಮೃತ ಕಲಶವನ್ನು ಹಿಡಿದಿರುವವನೂ ಆದ ಧನ್ವಂತ್ರಿ ನಾಮಕ ಶ್ರೀಹರಿಯನ್ನು ಅತ್ಯಂತ ಭಕ್ತಿಯಿಂದ ಪ್ರಾರ್ಥಿಸಿ, ಆಚಾರ್ಯರಿಗೆ ಬಂದೊದಗಿದ್ದ ಅಪಮೃತ್ಯುವನ್ನು ಪರಿಹರಿಸುವಂತೆ ಮೊರೆ ಇಟ್ಟರು. ಈ ಕೀರ್ತನೆಯಲ್ಲಿ ‘ಸಣ್ಣವನು ಇವ ಕೇವಲ’ ಎಂಬ ಪದ ಪ್ರಯೋಗವಿರುವುದರಿಂದ, ಆಚಾರ್ಯರು ವಯಸ್ಸಿನಲ್ಲಿ ಕಿರಿಯರು ಎಂಬುದು ತಿಳಿಯುತ್ತದೆ, ಅಲ್ಲದೆ 'ಎನ್ನ ಮಾತಲ್ಲವಿದು, ಎನ್ನ ಪಿರಿಯರ ಮಾತು' ಎಂಬ ಉಕ್ತಿ ಪ್ರಯೋಗದಿಂದ, ಶ್ರೀ ಗೋಪಾಲದಾಸಾರ್ಯರು, ತಮ್ಮ ಗುರುಗಳಾದ ಶ್ರೀ ವಿಜಯದಾಸರಲ್ಲಿಟ್ಟಿದ್ದ ಪೂಜ್ಯ ಭಾವ ಮತ್ತು ಭಕ್ತಿಯ ಅತಿಶಯಗಳನ್ನು ತಿಳಿಯಬಹುದಾಗಿದೆ. e್ಞÁನಿವರೇಣ್ಯರಾದ ದಾಸರಾಯರ ಭಕ್ತಿ ಪುರಸ್ಸರವಾದ ಪ್ರಾರ್ಥನೆಗೆ ಕರುಣಾವತ್ಸಲನಾದ ಧನ್ವಂತ್ರಿಯು ಕೃಪೆದೋರಿದನು. ಅಂದಿನಿಂದ ಆಚಾರ್ಯರ ಉದರ ಶೂಲೆಯು ಸಂಪೂರ್ಣವಾಗಿ ಗುಣವಾಗಿ, ಅವರು ಮೊದಲಿನಂತೆ ದೃಢಾಂಗರಾದರು. ದೈವ ಸಂಕಲ್ಪದಿಂದ ಬಂದೊದಗಿದ ಈ ಪ್ರಸಂಗವು ಆಚಾರ್ಯರ ಜೀವನದಲ್ಲಿ ಒಂದು ದೊಡ್ಡ ತಿರುವು. ಅವರ ಜೀವನದಲ್ಲೇ ಮಹತ್ವ ಪೂರ್ಣವಾದ ಕ್ರಾಂತಿಯನ್ನುಂಟು ಮಾಡಿ, ಭಗವತ್ಸಾಧನೆಗೆ ಪ್ರತಿಬಂಧಕಗಳಾಗಿದ್ದ ಗರ್ವ, ಅಸಹನೆ ಮತ್ತು ಹರಿದಾಸರಲ್ಲಿದ್ದ ತಾತ್ಸಾರ ಮನೋಭಾವಗಳನ್ನು ಬೇರು ಸಹಿತ ಕಿತ್ತೊಗೆದು, ಕೇವಲ ಸಾತ್ವಿಕ ಮಾರ್ಗದಲ್ಲಿಯೇ ಅವರು ಪ್ರವೃತ್ತರಾಗುವಂತೆ ಮಾಡಿದ ಈ ಘಟನೆಯು ಅದ್ಭುತವಾದ ಪವಾಡವೇ ಸರಿ. ಈ ಭಾವವನ್ನೇ ಆಚಾರ್ಯರು ತಮ್ಮ ಸ್ವರೂಪೋದ್ಧಾರಕ ಗುರುಗಳಾದ ಶ್ರೀ ಗೋಪಾಲದಾಸರ ಸ್ತೋತ್ರದಲ್ಲಿ 'ಅಪಮೃತ್ಯುವನ್ನು ತೊಡೆದೆ, ಎನ್ನೊಳಗಿದ್ದ ಅಪರಾಧಗಳ ಮರೆದೆ' ಎಂದು ಕಳಕಳಿಯಿಂದ ಕೇಳಿಕೊಂಡಿರುತ್ತಾರೆ.

    ಶ್ರೀ ಗೋಪಾಲದಾಸರಿಂದ ಆಯುರ್ದಾನವನ್ನು ಪಡೆದ ನಂತರ ಶ್ರೀನಿವಾಸಾಚಾರ್ಯರಿಗೆ ಅಂಕಿತವನ್ನು ಪಡೆದು ಹರಿದಾಸ ದೀಕ್ಷೆಯನ್ನು ಹೊಂದಬೇಕೆಂಬ ಪ್ರಬಲ ಹಂಬಲ ಉಂಟಾಯಿತು ‘ಅಪರೋಕ್ಷ e್ಞÁನಿಗಳಾಗಿದ್ದ ಶ್ರೀ ಗೋಪಾಲದಾಸರು ಆಚಾರ್ಯರು ಫಂಡರಪುರಕ್ಕೆ ಹೋಗಬೇಕೆಂದೂ, ಅಲ್ಲಿ ಶ್ರೀಹರಿಯ ವರಪ್ರಸಾದ ರೂಪವಾಗಿ ಪಾಂಡುರಂಗನೇ ಅಂಕಿತ ಪ್ರದಾನ ಮಾಡುವನೆಂದೂ ತಿಳಿಸಿದರು’. ಆಚಾರ್ಯರು ಫಂಡರಪುರಿಗೆ ಪಾಂಡುರಂಗನ ದರ್ಶನಕ್ಕಾಗಿ ಧಾವಿಸಿ ಬಂದರು. ಅಲ್ಲಿ ಚಂದ್ರಭಾಗಾ ನದಿಯಲ್ಲಿ ಸ್ನಾನ ಮಾಡುತ್ತಿರುವಾಗ, ಅವರ ತಲೆಯ ಹತ್ತಿರ ಒಂದು ಶಿಲಾ ಫಲಕವು ದೊರಕಿತು. ಅದರ ಮೇಲೆ ಜಗನ್ನಾಥವಿಠಲ ಎಂಬ ಅಂಕಿತನಾಮವು ಸ್ಫುಟವಾಗಿ ಮೂಡಿರುವುದನ್ನು ಕಂಡು ಅವರು ಆನಂದ ತುಂದಿಲರಾದರು. ಶ್ರೀ ಗೋಪಾಲದಾಸರಾಡಿದ ಮಾತು, ತಮ್ಮ ಜೀವನದಲ್ಲಿ ಪ್ರತ್ಯಕ್ಷ ನಿದರ್ಶನವಾಗಿ, ಶ್ರೀಹರಿಯು ತೋರಿದ ಕರುಣಾ ವಿಲಾಸಕ್ಕೆ ಆನಂದ ಬಾಷ್ಪಲೋಚನರಾಗಿ, e್ಞÁನ ಮೂರುತಿಯಾದ ಪಾಂಡುರಂಗ ವಿಠಲನನ್ನು ಸ್ಮರಿಸಿ ಮೈ ಮರೆತು, ನರ್ತಿಸಿ.

    ವಿಠಲಯ್ಯಾ ವಿಠಲಯ್ಯಾ ಪ

    ತಟಿತ್ಕೋಟಿನಿಭಕಾಯ ಜಗನ್ನಾಥ ಅ

    ಭಜಿಸುವೆ, ನಿನ್ನನು ಅಜಭವಸುರ ನುತ

    ಭಜ ಕಾಮರತರು ಕುಜನ ಕುಠಾರಿ 1

    ನೀ ಕರುಣಿಸದೆ ನಿರಾಕರಿಸಲು ಎನ್ನ

    ಸಾಕುವರಾರು ದಯಾಕರ ಮೂರುತಿ 2

    ಶರಣಾಗತರನು ಪೊರೆವೆನೆಂಬ ತವ

    ಬಿರುದು ಕಾಣೋ ಕರಿವರದ ಜಗನ್ನಾಥ

    ವಿಠಲಯ್ಯಾ ವಿಠಲಯ್ಯಾ 3

    ಎಂದು ಹಾಡಿದರು

    ಅನಂತರ ಪಾಂಡುರಂಗನ ದರ್ಶನ ಮಾಡಿ ಹರ್ಷಗೊಂಡು ತಮ್ಮ ಊರಿಗೆ ಹಿಂದಿರುಗಿದರು. ಶ್ರೀನಿವಾಸಾಚಾರ್ಯರಿಗೆ, ಪರಮಾತ್ಮನಿಂದಲೇ ಅಂಕಿತ ದೊರೆತ ಮೇಲೆ ಅವರು ಕನ್ನಡದಲ್ಲಿ ಭಕ್ತಿಸುಧಾಪೂರಿತವಾದ ಕೀರ್ತನೆ, ಸುಳಾದಿ, ಸುವ್ವಾಲಿಗಳನ್ನು ರಚಿಸಲಾರಂಭಿಸಿದರು. ಕಾಲಕಳೆದಂತೆ ಆಚಾರ್ಯರು ಜಗನ್ನಾಥದಾಸರಾಯರೆಂದೇ ಪ್ರಸಿದ್ಧಿಯಾದರು. ಗುರುಗಳ ಆಶೀರ್ವಾದದಿಂದ ಹರಿ ಕರುಣೆಯುಂಟಾಗಿ ಶ್ರೀ ಜಗನ್ನಾಥದಾಸರು ಅಪರೋಕ್ಷ e್ಞÁನಿಗಳಾದರು.

    ಬಿಂಬ ಮೂರ್ತಿಯ ದರ್ಶನ ಪಡೆದ ಮೇಲೆ ಲೋಕದ ವಿಚಾರದಲ್ಲಿ ವೈರಾಗ್ಯವೂ ಪರಲೋಕೈಕನಾಥನಲ್ಲಿ ಭಕ್ತಿಯೂ ಅಧಿಕವಾಯಿತು. ಈ e್ಞÁನ ಶಕ್ತಿಯಿಂದ ಶ್ರೀಜಗನ್ನಾಥದಾಸರು ಅನೇಕರನ್ನುದ್ಧಾರ ಮಾಡಿದರು. ರಂಗೋಲಿಯಲ್ಲಿ ಚಿತ್ರವನ್ನು ಬಿಡಿಸುವುದರಲ್ಲಿ ಅತಿ ನಿಪುಣರಾದ ಇವರನ್ನು ರಂಗೋಲಿದಾಸರು ಎಂದೂ ಕರೆಯುವುದುಂಟು, ರಂಗವೊಲಿದ ದಾಸರು ಎಂದೂ ಕರೆಸಿಕೊಂಡರು.

    ಒಮ್ಮೆ ದಿವಾನ್ ಪೂರ್ಣಯ್ಯನವರ ಮನೆಯಲ್ಲಿ ಶ್ರೀರಂಗದ ರಂಗನಾಥಸ್ವಾಮಿಯ ಚಿತ್ರವನ್ನು ರಂಗೋಲಿಯಲ್ಲಿ ಬಿಡಿಸಿದರು; ಆದರೆ ಆ ದೇವರಿಗೆ ಕಿರೀಟವನ್ನು ಮಾತ್ರ ಚಿತ್ರಿಸಲಿಲ್ಲ ! ದಿವಾನರು ಇದನ್ನು ಗಮನಿಸಿ ದಾಸರನ್ನು ಪ್ರಶ್ನಿಸಿದಾಗ ಆ ದಿನ ರಂಗನಾಥನಿಗೆ ಕಿರೀಟ ಹಾಕಿಲ್ಲವೆಂದು ದಾಸರು ಉತ್ತರಿಸಿದರು. ದಿವಾನ್ ಪೂರ್ಣಯ್ಯನವರು ಶ್ರೀರಂಗಕ್ಕೆ ದೂತರನ್ನು ಕಳುಹಿಸಿ ವಿಚಾರಿಸಿದಾಗ ಅದು ನಿಜ ಸಂಗತಿಯಾಗಿತ್ತು ! ದಾಸರ ದಿವ್ಯ e್ಞÁನವನ್ನು ತಿಳಿದು ಪೂರ್ಣಯ್ಯನವರು ಆಶ್ಚರ್ಯ ಚಕಿತರಾದರು. ದಿವಾನರು ಶ್ರೀ ಜಗನ್ನಾಥದಾಸರ ಅತಿಶಯ e್ಞÁನ ಶಕ್ತಿಯನ್ನು ತಿಳಿಯುವ ಮುನ್ನ ಅವರಿಗೆ ಐದು ರೂಪಾಯಿ ಮತ್ತು ಮಂಡ್ಯದ ಧಾಬಳಿಯನ್ನು ಕೊಡಬೇಕೆಂದಿದ್ದ ತಮ್ಮ ನಿರ್ಧಾರವನ್ನು ಪ್ರಧಾನಿಗಳು ಬದಲಾಯಿಸಿ ವಿಶೇಷ ಗೌರವವನ್ನು ಸಲ್ಲಿಸಿದರು; ಆಗ ಶ್ರೀ ಜಗನ್ನಾಥದಾಸರು ತಮಗೆ ಹೆಚ್ಚಿನ ಬಹುಮಾನ ಬೇಡವೆಂದು ಹೇಳಿ ಐದು ರೂಪಾಯಿ ಮತ್ತು ಮಂಡ್ಯದ ಧಾವಳಿ ಮಾತ್ರ ಸಾಕೆಂದು ಹೇಳಿದರಂತೆ!

    ಶ್ರೀ ಜಗನ್ನಾಥದಾಸರು ಅಪರೋಕ್ಷ e್ಞÁನಿಗಳೆಂದು ಪ್ರಸಿದ್ಧರಾದ ಮೇಲೆ ಅವರನ್ನು ವ್ಯಂಗ್ಯವಾಗಿ ಆಡಿಕೊಂಡವರೂ ಉಂಟು. ಅಂತಹವರು ದಾಸರ ಬಳಿ ಬಂದು ಅವರನ್ನು ಪರೀಕ್ಷಿಸಿ ಸೋತವರೂ ಇಲ್ಲದಿಲ್ಲ. ಒಮ್ಮೆ ಉಡುಪಿಗೆ ದಾಸರು ಹೋಗಿದ್ದಾಗ ಕುಹಕಿಗಳು ದಾಸರ ಬಳಿ ಮೂಕನೊಬ್ಬನನ್ನು ಕರೆತಂದು ಅವನಿಗೆ ಮಾತು ಬರುವಂತೆ ಮಾಡಬೇಕೆಂದು ಪ್ರಾಥಿಸಿದರು. ದಾಸರ e್ಞÁನ ದೃಷ್ಟಿಗೆ ವಾಸ್ತವ ವಿಚಾರ ತಿಳಿಯಿತು. ಆಗ ಮೂಕನಿಗೆ ಮಾತನಾಡುವ ಶಕ್ತಿ ದಯಪಾಲಿಸಿ ಕುಹಕಿಗಳನ್ನು ಮೂಕರನ್ನಾಗಿಸಿದರಂತೆ. ಶ್ರೀ ವೆಂಕಟವಿಠಲರು ಒಂದು ಪದದಲ್ಲಿ ಈ ವಿಚಾರವನ್ನು ಹೀಗೆ ಹೇಳಿರುವರು;

    ನಿನ್ನ ಮಹಿಮೆ ಘನ್ನವಯ್ಯ | ಗುರು ಶ್ರೀನಿವಾಸ ಪ

    ಮೂಕ ಮಂದ ಮತಿಗಳಿಂದ |

    ನೇಕ ಚತುರ ನುಡಿಯ ನುಡಿಸಿ

    ಸಾಕಿದ ಗಿಳಿಯಂತೆ ದಯದಿ |

    ವಾಕು ಶುದ್ಧಿಯ ಮಾಡಿದೆ 1

    ಪೊಡವಿಪತಿಯು ಹಾಟಕರದಿ |

    ಅಡವಿಯೊಳಗೆ ಕುಳಿತಿರಲು

    ಬಿಡದೆ ಅನ್ನವಸ್ತ್ರವನ್ನಿತ್ತು | ಬಡವ ಬಲ್ಲಿದನೆನಿಸಿದೇ 2

    ಸಂಕಟದಿಂದ ಬಂದ ಜನರ | ಬಿಂಕದಿಂದ ಪಾಲಿಸುವಿ

    ವೆಂಕಟ ವಿಠಲರಾಯನ ಪಾದ |

    ಪಂಕಜ ತೋರು ಕರುಣದೀ 3

    ಮಾನವಿಯಲ್ಲಿ ಒಮ್ಮೆ ಕಡು ದರಿದ್ರನೊಬ್ಬನು ಬಂದು ತನ್ನನ್ನು ಉದ್ಧಾರ ಮಾಡಬೇಕೆಂದು ಪ್ರಾರ್ಥಿಸಿದನು. ದಾಸರು e್ಞÁನ ದೃಷ್ಟಿಯಿಂದ ಅವನ ಹಿಂದಿನ ಅನೇಕ ಜನ್ಮಗಳ ಕರ್ಮಗಳನ್ನು ಪರಿಶೀಲಿಸಿದಾಗ ಅವನಿಂದ ಯಾವ ಪುಣ್ಯ ಕರ್ಮವೂ ನಡೆಯದಿದ್ದುದನ್ನು ಅರಿತರು. ಆಗ ಅವನಲ್ಲಿದ್ದ ತಂಬಿಗೆಯನ್ನು ಮಾರಿಸಿ, ಅದರಿಂದ ಬಂದ ಧನದಿಂದ ಪಾನಕ ಮಾಡಿಸಿ ಸತ್ಪಾತ್ರರಿಗೆ ಕೃಷ್ಣಾರ್ಪಣ ಬುದ್ಧಿಯಿಂದ ದಾನ ಮಾಡಿಸಿ ತಾವೂ ಸ್ವೀಕರಿಸಿದರು. ಅಲ್ಲದೆ, ದುರಿತವನ ಕುಠಾರಿ ದುರ್ಜನ ಕುಲವೈರಿ, ಎಂಬ ಶ್ರೀನಾರಸಿಂಹ ಸುಳಾದಿಯನ್ನು ರಚಿಸಿ ಬಡವನಿಗೆ ಉಪದೇಶಿಸಿ ಅದನ್ನು ಪಾರಾಯಣ ಮಾಡಬೇಕೆಂದು ಹೇಳಿದರು. ಆ ವ್ಯಕ್ತಿ ಶ್ರದ್ಧೆಯಿಂದ ಸ್ತೋತ್ರವನ್ನು ಪಾರಾಯಣ ಮಾಡಿ ಕೆಲ ಕಾಲದಲ್ಲಿಯೇ ಸಂಪತ್ತು ಅಧಿಕಾರಗಳನ್ನು ಪಡೆದನು. ಇಂದಿಗೂ ಮೇಲೆ ಹೇಳಿದ ಸುಳಾದಿಯನ್ನು ಪಠಿಸಿ ಅನೇಕರು ಕುತ್ತುಗಳಿಂದ ಪಾರಾಗಿರುವುದುಂಟು.

    ಶ್ರೀ ತಂದೆ ವೆಂಕಟೇಶವಿಠಲರು ತಮ್ಮ ಒಂದು ಕೃತಿಯಲ್ಲಿ ಈ ಸುಳಾದಿಯ ಪಠನೆಯಿಂದುಂಟಾದ ಅನುಗ್ರಹವನ್ನು ಹೀಗೆ ತಿಳಿಸಿರುವರು.

    ಯಾರೆ ಕೂಗಿದವರು | ಕದವನದಾರೆ ತಾಗಿದವರು ಪ

    ಪಾಪ ಶೇಷ ರೋಗ ರೂಪದಿ ತಾಪ ಪಡಿಸುವಾಗ

    ದುರಿತವನ ಕುಠಾರಿ ಎಂಬುರುತರ ಸುಳಾದಿ ನಾರೀ

    ಪರವಶದಲಿ ಪಠಿಸಿರೆ ಮನ ಒಲಿದದಕರರೆ ಬಂದ

    ನರಹರಿ ಎಂಬುವ ಪರಿ ||

    ಭೂಸುರ ಜಗನ್ನಾಥದಾಸರ ಕವನಕೆ ಶ್ರೀನಿವಾಸ

    ಅವಸರದಲಿ ಒಂದು ವಿನತನಪರಾಧವನು ಮರೆತು

    ಅಭಯವನು ಕರುಣಿಸುತ ||

    ಶ್ರೀ ಜಗÀನ್ನಾಥದಾಸರು ಹತ್ತೊಂಭತ್ತನೆಯ ಕಕ್ಷದ ಕರ್ಮಜ ದೇವತೆ ಎಂದೇ ಪ್ರಸಿದ್ಧರು. ಪ್ರಹ್ಲಾದನ ಅನುಜನಾಗಿ ಸಹ್ಲಾದನೆನಿಸಿದ ಇವರು ದ್ವಾಪರ ಯುಗದಲ್ಲಿ ಶಲ್ಯ ಮಹಾರಾಜರಾಗಿ ಅವತರಿಸಿ ಕರ್ಣನಿಗೆ ಸಾರಥಿüಯಾಗಿದ್ದರು. ಅಲ್ಲದೆ ಶ್ರೀವ್ಯಾಸರಾಜರು, ಶ್ರೀ ವಾದಿರಾಜರು, ಶ್ರೀ ಪುರಂದರದಾಸರು, ಒಮ್ಮೆ ಪರಮಾತ್ಮನ ಲೀಲಾ ವಿನೋದಗಳನ್ನು ಚಿತ್ರಿಸಿಕೊಳ್ಳುತ್ತಾ ಆನಂದಭಾಷ್ಪವನ್ನು ಸುರಿಸುತ್ತಿರಲು ಕನಕದಾಸರನ್ನು ಅಲ್ಲಿಗೆ ಕರೆಸಿ ಕೊಳ್ಳಬೇಕೆಂದೆನಿಸಿತಂತೆ. ಆಗ ಅಲ್ಲಿಯೇ ಹತ್ತಿರದಲ್ಲಿದ್ದ ಅಪರಿಚಿತ ವ್ಯಕ್ತಿಯನ್ನು ಕರೆದು ಕನಕದಾಸರನ್ನು ಕರೆತರಲು ಹೇಳಿದರು. ಆಗ ಆ ವ್ಯಕ್ತಿ ಕನಕದಾಸರನ್ನು ಕರೆತಂದನು. ದಾರಿಯಲ್ಲಿ ಕನಕದಾಸರು ತಮ್ಮನ್ನು ಕರೆತರುವ ಕಾರ್ಯಕ್ಕಾಗಿ ಯತಿಗಳನ್ನು ಪುರಂದರದಾಸರ ನಗು ಮತ್ತು ಅಳುವಿನಲ್ಲಿ ಕೊಂಚ ಭಾಗವನ್ನು ದಯಪಾಲಿಸಬೇಕೆಂದು ಕೇಳಲು ಆ ವ್ಯಕ್ತಿಗೆ ಹೇಳಿಕೊಟ್ಟರಂತೆ. ಆ ವ್ಯಕ್ತಿ ಅಪರೋಕ್ಷ e್ಞÁನಿಗಳಿಂದ ನಗು ಅಳುವಿನ ಕೊಂಚ ಭಾಗವನ್ನು ಶ್ರೀ ಜಗನ್ನಾಥದಾಸರಾಗಿ ಜನ್ಮ ತಾಳಿದಾಗ ಅನುಭವಿಸಿದರೆಂದು ಐತಿಹ್ಯವಿದೆ. ಪರಮಾತ್ಮನ ವಿಚಾರವನ್ನು ಭಕ್ತಿಯಿಂದ ನೆನೆವವರಿಗೆಲ್ಲಾ ಆನಂದ ಬಾಷ್ಪ ಉಕ್ಕುವುದು ಸಹಜ, ಶ್ರೀ ಜಗನ್ನಾಥದಾಸರು ಭಕ್ತರ ರೀತಿಯನ್ನು ಬಣ್ಣಿಸುತ್ತಾ,

    ‘ರಂಗ ನಿನ್ನ ಕೊಂಡಾಡುವ ಮಂಗಳಾತ್ಮರ’ ಎಂಬ ಕೃತಿಯಲ್ಲಿ ಹೀಗೆ ಹೇಳಿರುವರು.

    ನಗುವರೋ ರೋದಿಸುವರೋ ನಾಟ್ಯವಾಡೋರು

    ಬಗೆಯರೋ ಬಡತನ ಭಾಗ್ಯ ಭಾಗವತರು ||

    ಶ್ರೀ ಜಗನ್ನಾಥದಾಸರ ಅವತಾರ ವಿಚಾರವನ್ನು ಅವರ ಅಂತರಂಗ ಶಿಷ್ಯರಾದ ಶ್ರೀಪ್ರಾಣೇಶದಾಸರು ಹೀಗೆ ತಿಳಿಸಿರುತ್ತಾರೆ

    ತಿಳಿಯನು ಎಂದೆಂದಿಗನ್ಯ ರಂಗ ಒಲಿದ ದಾಸರು ಜಗನ್ಮಾನ್ಯ ಪ

    ಹಿರಣ್ಯಕಶಿಪುಜ ಸಹ್ಲಾದನೇವೆ | ಎರಡನೇ ಜನ್ಮ ಶಲ್ಯನಾದ

    ಗುರು ವಾದಿರಾಜರನರ್ಚಿಸಿದ |

    ಪುರಂದರ ದಾಸರಾಯರಲ್ಲುದಿಸಿದ

    ಶ್ರೀ ಕಮಲಾಪತಿದಾಸರು ಒಂದು ಕೃತಿಯಲ್ಲಿ ;

    ಅಂಬುಜಾಕ್ಷಿ ಸ್ತಂಭದಿ ಇಹರ್ಯಾರೇ| ಸಾರೆ|

    ಘಲ್ಲಲೋಚಲ ಬಲೆಯೂ ಇವ | ರಿಲ್ಲಿರುವ ಕಾರಣವಿದೇನೇ

    ಫುಲ್ಲನಾಥನ ಪುಡುಕಲೀ | ಪ್ರಹ್ಲಾದನನುಜ

    ಸಹ್ಲಾದರಿವರೇ

    ಎಂದಿದ್ದಾರೆ;

    ಪ್ರಹ್ಲಾದಾವರಜೋ ಯಃ ಸಹ್ಲಾದೋ

    ನಾಮಕೋ ಹರೇರ್ಭಕ್ತ ಃ

    ಸಮೂರುತಾವೇಶಾತ್ ಪೃಥಿವ್ಯಾಂ ಬಲಾಧಿಕೋ

    ಯ ಭೂದ್ವರತಶ್ಯಧಾತು ಃ

    ಶಲ್ಯಚ್ಚನಾಮ್ನಾ - ಎಂದು ಶ್ರೀ ಮಧ್ವಾಚಾರ್ಯರು, ಸಹ್ಲಾದರೇ ಶಲ್ಯರಾಗಿ ಅವತರಿಸಿದರೆಂದು ತಿಳಿಸಿರುತ್ತಾರೆ.

    ಶ್ರೀ ಜಗನ್ನಾಥದಾಸರು 81 ವರ್ಷ 1 ತಿಂಗಳು 2 ದಿನಗಳ ಸುದೀರ್ಘ ಬಾಳಿನಲ್ಲಿ ಸತ್ಸಾಧನೆಯನ್ನು ಮಾಡಿ ಕೊಂಡರಲ್ಲದೆ, ಮುಂದಿನ ಸುಜೀವಿಗಳಿಗೆ ದಿವ್ಯ ಮಾರ್ಗವನ್ನು ತೋರಿಸಲು ಶ್ರೀ ಹರಿಕಥಾಮೃತಸಾರವೆಂಬ ಕಾವ್ಯ ರತ್ನವನ್ನೂ, ಅನೇಕ ಸುಳಾದಿ, ಕೀರ್ತನೆ ತತ್ವ ಸುವಾಲಿಗಳನ್ನು ರಚಿಸಿದರು. ಇವರ ಸಾಹಿತ್ಯರಾಶಿ ಉಳಿದು ಬಂದಿರುವುದು, ಸುಜೀವಿಗಳ ಪುಣ್ಯವೆನಿಸುತ್ತದೆ. ಇವರು ಶಾಲೀವಹನಶಕ 1731ನೆಯ ಶುಕ್ಲ ನಾಮ ಸಂವತ್ಸರದ ಭಾದ್ರಪದ ಶುದ್ಧ ನವಮಿಯ ಭಾನುವಾರದ ದಿನ ಮೂಲಾ ನಕ್ಷತ್ರದಲ್ಲಿ ರಾತ್ರಿ 8-30 ಗಂಟೆಗೆ [17-9-1809] ಹರಿಪುರವನ್ನು ಸೇರಿದರು.

    ತೆರಳಿದರು ಶ್ರೀ ಜಗನ್ನಾಥದಾಸಾರ್ಯರು

    ಸಿರಿ ಪತಿಯ ಸ್ಮರಿಸಿ ಹರಿಪುರಕೆ ಹರುಷದಲಿ ಪ

    ವರ ಶುಕ್ಲ ವತ್ಸರದ ಭಾದ್ರಪದ ಸಿತ ಪಕ್ಷ

    ಹರಿವಾರ ನವಮಿಯಲ್ಲಿ

    ಪುರಸಿದ್ಧ ಸಾಧ್ಯ ಸನ್ಮುನಿ ಗಣಾರ್ಚಿತ ಪಾದ

    ಹರಿಯೆ ಪರನೆಂದೆನುತಲಿ

    -ಶ್ರೀದ ವಿಠಲರು

    ಮೋಕ್ಷ ಶುಕ್ಲ ವರುಷ ಶುಕ್ಲಪಕ್ಷ ಭಾದ್ರಪದ ನವಮಿ

    ದಕ್ಷಿಣಾಯನದಿ ಮೂಲ ನಕ್ಷತ್ರ ರವಿವಾರ

    ಲಕ್ಷ್ಯವಿಟ್ಟು ಲಯದ ಚಿಂತನಾ

    ತತ್‍ಕ್ಷಣ ಅಭಿನವ ಜನಾರ್ದನ ವಿಠಲನಲ್ಲಿ

    ದೀಕ್ಷೆ ಪಡೆದು ನಡೆದರಾಕ್ಷಣ ಭಕುತಿಯಿಂದ

    ಈ ಕ್ಷೋಣಿ ಬಿಟ್ಟು ಇಂದೆ ತಾ ಕ್ಷೇಮದಿಂದ ಮುದದಿ

    ನಗುನಗುತಲೆ ಹರಿಯಪುರಕೆ ತೆರಳಿ ಪೋದರು ||

    -ಶ್ರೀ ಅಭಿನವ ಜನಾರ್ದನ ವಿಠಲದಾಸರು

    ಶ್ರೀ ಜಗನ್ನಾಥದಾಸರು ವಾಸಿಸುತ್ತಿದ್ದ ಮಾನ್ವಿಯ ಮನೆ ಇಂದು ಗುಡಿಯಾಗಿದೆ. ಆ ಗುಡಿಯಲ್ಲಿ ದಾಸರು ಹಿಂದೆ ಒರಗಿ ಕುಳಿತು ಹರಿದಾಸ ಸಾಹಿತ್ಯವನ್ನು ರಚಿಸುತ್ತಿದ್ದ ಕಂಬದಲ್ಲಿಯೇ ಅವರು ಸನ್ನಿಹಿತರಾಗಿರುವರೆಂದು ಇಂದಿಗೂ ಕಂಬಕ್ಕೆ ಭಕ್ತರು ಪೂಜೆ ಸಲ್ಲಿಸಿ ಕೃತಾರ್ಥರಾಗುವರು.

    ಶೋಕ ಬ್ಯಾಡಲೆ ನರಲೋಕ ಉಳಿದರೆಂದು

    ಈ ಕಂಭದೊಳಗಿಹರೇ | ಹೇ ನೀರೇ

    ಎಂದು ಶ್ರೀ ಪ್ರಾಣೀಶದಾಸರು ಹೇಳಿರುತ್ತಾರೆ

    ದಿಟ್ಟ ಜಗನ್ನಾಥ ವಿಠ್ಠಲ ಮೂರ್ತಿಯ

    ಘಟ್ಟ್ಯಾಗಿ ಮನದೊಳಗಿಟ್ಟುಕೊಂಡು

    ದಟ್ಟದಿ ಸ್ವಾಂಶವ ಇಟ್ಟು ಕಂಭದಿ ಪೋದ

    ಧಿಟ್ಟ ಗುರುಜಗನ್ನಾಥ ವಿಠ್ಠಲ ದೂತ

    ಎಂದು ಶ್ರೀ ಗುರು ಜಗನ್ನಾಥವಿಠಲರು ಮಾನ್ವಿಯ ಕಂಭದಲ್ಲಿ ಶ್ರೀ ಜಗನ್ನಾಥದಾಸರನ್ನು ಕೊಂಡಾಡಿದ್ದಾರೆ.

    ಕೃತಿಗಳ ಅವಲೋಕನ

    ಶ್ರೀ ಹರಿಕಥಾಮೃತಸಾರ

    ಶ್ರೀ ಮದಾನಂದತೀರ್ಥರು ಸಂಸ್ಕøತದಲ್ಲಿ ಪ್ರತಿಪಾದಿಸಿದ ದ್ವೈತ ಸಿದ್ಧಾಂತದ ತತ್ವಗಳನ್ನು ಕನ್ನಡ ಭಾಷೆಯಲ್ಲಿ ಬೋಧಿಸುವ ಛಂದೋ ವೈವಿದ್ಯವುಳ್ಳ ಸಂಗೀತದ ರಾಗ ತಾಳಲಯಗಳ ನೆರವು ಪಡೆದು ಸುಮಧುರವೂ ಸುಶ್ರಾವ್ಯವೂ ಆದ ಸಂಕೀರ್ತನ ಸಾಹಿತ್ಯವೇ - ಹರಿದಾಸ ಸಾಹಿತ್ಯ. ಕರ್ಣಾಟಕದ ಹರಿದಾಸ ಸಾಹಿತ್ಯ ಒಂದು ಪುಷ್ಪವೃಕ್ಷ, ದ್ವೈತ ಸಿದ್ಧಾಂತ ಗ್ರಂಥಗಳನ್ನೇ ಬೇರಾಗಿ, ಅವುಗಳ ಟೀಕೆ, ಟಿಪ್ಪಣಿ ಗ್ರಂಥಗಳೇ ಕಾಂಡವಾಗುಳ್ಳ ಇಲ್ಲಿ ಸಾವಿರಾರು ಸುಂದರ ಭಕ್ತಿ ಪುಷ್ಪಗಳು ಅರಳಿವೆ. ಹರಿದಾಸರ ಅನುಭವಪೂರ್ಣವಾದ ಸದುಕ್ತಿಗಳು, ವೇದ, ಉಪನಿಷತ್ತು, ರಾಮಾಯಣ, ಭಾರತ ಭಾಗವತಾದಿ ಪುರಾಣಗಳ ದ್ವೈತ ಸಿದ್ಧಾಂತದ ಸಾರಭೂತ ಸಾಹಿತ್ಯವಿಲ್ಲಿದೆ. ಸಂಸ್ಕøತ ಭಾಷೆಯ e್ಞÁನವಿಲ್ಲದ ಕನ್ನಡಿಗರು, ಶ್ರೀ ಮದಾನಂದತೀರ್ಥರು ತಿಳಿಸಿದ ತತ್ವಸಾರವನ್ನು ಹರಿದಾಸ ಸಾಹಿತ್ಯದ ನೆರವಿನಿಂದ ಅರಿತುಕೊಳ್ಳಬಹುದಾಗಿದೆ. ಇಂತಹ ಮಹತ್ಕಾರ್ಯವನ್ನು ಶ್ರೀ ಶ್ರೀ ಪಾದರಾಜರು ಕ್ರಿ.ಶ.15ನೆಯ ಶತಮಾನದಲ್ಲಿಯೇ ಆರಂಭಿಸಿ ಅದರೊಡನೆ ದಾಸ ಪರಂಪರೆಯನ್ನು ಬೆಳೆಸಿದರು, ಶ್ರೀ ಪಾದರಾಜರು ಶ್ರೀ ವ್ಯಾಸರಾಜರು, ಶ್ರೀ ವಾದಿರಾಜರು, ಶ್ರೀ ಪುರಂದರದಾಸರು, ಶ್ರೀ ವಿಜಯದಾಸರು, ಶ್ರೀ ಗೋಪಾಲದಾಸರೇ ಮೊದಲಾದ ಪ್ರಮುಖ ಹರಿದಾಸರು ಈ ತತ್ವವಾದವನ್ನು ಬಿಡಿ ಬಿಡಿ ಪದ್ಯಗಳಲ್ಲಿ ಹೇಳಿರುವವರಾದರೆ, ಶ್ರೀ ಜಗನ್ನಾಥದಾಸರು ಈ ವಿಚಾರವನ್ನು ಕಾವ್ಯದ ಚೌಕಟ್ಟಿನಲ್ಲಿ ಸುಂದರವಾಗಿ ಷಟ್ಪದಿ ಛಂದಸ್ಸಿನಲ್ಲಿ ಶ್ರೀ ಹರಿಕಥಾಮೃತಸಾರದ ಮೂಲಕ ತಿಳಿಸಿರುತ್ತಾರೆ. ಅತ್ಯುದಾತ್ತ ಮಹಾಚೇತನವೊಂದರ ಸತತ ಸಾಧನೆಯ ಫಲವಾಗಿ ಹೊಮ್ಮಿರುವ ಈ ಅನಘ್ರ್ಯ ಕೃತಿಯ ಮೂವತ್ತೆರಡು ಸಂಧಿಗಳ 988 ಷಟ್ಪದಿಗಳಲ್ಲಿ, ದ್ವೈತ ಸಿದ್ಧಾಂತವನ್ನು ಲೌಕಿಕ, ಪಾರಮಾರ್ಥಿಕ ದೃಷ್ಟಾಂತಗಳಿಂದ ಬಹು ಗಂಭೀರವಾಗಿಯೂ, ರಸವತ್ತಾಗಿಯೂ ಶ್ರೀ ಜಗನ್ನಾಥದಾಸರು ನಿರೂಪಿಸಿರುತ್ತಾರೆ. ಪದಗಳ ಪ್ರೌಢಿಮೆ, ಕವಿತಾ ಕೌಶಲ, ಅತೀಂದ್ರಿಯ ವಸ್ತುಗಳ ಅನುವಾದ; ಒಂದೇ ವಿಷಯವನ್ನು ಅತಿ ಸಂಕ್ಷಿಪ್ತ, ಬಹು ವಿಸ್ತಾರ ರೂಪಗಳಿಂದ ವಿವರಿಸಿರುವ ಅಪಾರ e್ಞÁನಶಕ್ತಿ, ಇದೇ ಮೊದಲಾದ ಅಸದೃಶ ಅಪೂರ್ವ ಗುಣಗಳಿಂದ ಈ ಗ್ರಂಥ ಶೋಭಿಸುತ್ತಿದೆ.

    ಶ್ರೀ ಜಗನ್ನಾಥದಾಸರು ಈ ಕೃತಿಯ ಪಲ್ಲವಿಯಲ್ಲಿಯೇ ಕಾವ್ಯದ ವಿಷಯ, ಅಧಿಕಾರಿ, ಪ್ರಯೋಜನ ಮತ್ತು ಸಂಬಂಧಗಳನ್ನು ತಿಳಿಸಿದ್ದಾರೆ. ಅಮೃತ ಸದೃಶವಾದ ಪರಮಾತ್ಮನ ಕಥೆಯ ಸಾರ ಇದರ ವಸ್ತು. ಪರಮ ಭಗವದ್ಭಕ್ತರೇ ಇದಕ್ಕೆ ಅಧಿಕಾರಿಗಳು; ಗುರುಕರುಣವೇ ಪ್ರಯೋಜನ ಮೋಕ್ಷ. ಈ ಕಥೆಯನ್ನು ಆದರದಿ ಕೇಳುವುದು - ಸಂಬಂಧವೆನ್ನಬಹುದು; ಹರಿಕಥಾಮೃತಸಾರ ಎಂಬ ಪದದಲ್ಲಿಯೇ ಶ್ರೀ ಜಗನ್ನಾಥದಾಸರು ತಾರತಮ್ಯಾತ್ಮಕವಾಗಿ ಹರಿಗುರುಗಳ ಸ್ತೋತ್ರÀ್ರ ಮಾಡಿ ತನ್ಮೂಲಕ ಮಧ್ವ ಸಿದ್ಧಾಂತದ ಅಡಿಗಲ್ಲೆನಿಸಿದ, ತಾರತಮ್ಯ ವಿಚಾರವನ್ನೇ ಮಾರ್ಮಿಕವಾಗಿ ತಿಳಿಸಿದ್ದಾರೆ.











    ಹರಿ = ಸರ್ವೋತ್ತಮನಾದ ಸಕಲ ಜೀವರ ಬಿಂಬ ಮೂರ್ತಿ.

    ಹರಿಕಥಾ = ಪರಮಾತ್ಮನ ಕಥೆಯನ್ನು ಸರಿಯಾಗಿ ತಿಳಿಸುವ ವೇದಗಳು; ಈ ವೇದಗಳಿಗೆ ಅಭಿಮಾನಿ ಲಕ್ಷ್ಮೀ ಯಾಗಿರುವುದರಿಂದ = ಹರಿಕಥಾ ಎಂದರೆ ಲಕ್ಷ್ಮೀ ಎಂದು ಅರ್ಥವಾಗುತ್ತದೆ.

    ಅಮೃತ = ವಾಯುದೇವರಿಗೆ ಅಮೃತ ಎಂಬ ಹೆಸರುಂಟು, ಆದುದರಿಂದ ಹರಿಕಥಾಮೃತ ಎಂಬ ಪದದಲ್ಲಿ ತಾರತಮ್ಯದಲ್ಲಿ ಹರಿ ಹಾಗೂ ಲಕ್ಷ್ಮೀಯ ತರುವಾಯ ಬ್ರಹ್ಮ ವಾಯುಗಳು ಎಂದು ಸೂಚಿಸಿದ್ದಾರೆ.

    ಸಾರ = ಸೃ ಪದದಿಂದ ಉಂಟಾದ ಸಾರ ಶಬ್ದಕ್ಕೆ ಮುಂದುವರಿ ಎಂಬರ್ಥವುಂಟು. ಶೇಷ ದೇವರು ಸರಿಯುವಂತಹ ವರು ಅಂದ ಮೇಲೆ ಗರುಡ ಶೇಷರುದ್ರರನ್ನು ಈ ಪದದಿಂದ ತಿಳಿದಂತಾಯಿತು. ಅಲ್ಲದೆ ಸೃ ಎಂದರೆ ಸೃಷ್ಟಿಯೂ ಹೌದು. ಪರಮಾತ್ಮನಿಂದ ಸೃಷ್ಟಿಯಾದ ಸಮಸ್ತ ಸುಜೀವರ ತಾರತಮ್ಯ ಹೀಗೆಯೇ ಸರಿಯುವುದೆಂಬ ಅರ್ಥವನ್ನು ಹೇಳಬಹುದು.

    ಹೀಗೆ,

    ಹರಿಕಥಾಮೃತಸಾರ ಗುರುಗಳ

    ಕರುಣದಿಂದಾಪನಿತು ಪೇಳುವೆ

    ಪರಮ ಭಗವದ್ಭಕ್ತರಿದನಾದರದಿ ಕೇಳುವುದು.

    ಎಂಬ ಮೊದಲ ಪಲ್ಲವಿಗೆ ಇನ್ನೂ ವಿಶೇಷಾರ್ಥಗಳನ್ನು ಹೇಳಲು ಸಾಧ್ಯವಿದೆ ಎಂದ ಮೇಲೆ ಈ ಗ್ರಂಥದ ಮುಂದಿನ ಪದ್ಯಗಳು ವ್ಯಾಖ್ಯಾನ ಸಾಪೇಕ್ಷ ವಾದುವೆಂಬುದರಲ್ಲಿ ಸಂಶಯವೇ ಇಲ್ಲ. ಆದುದರಿಂದಲೇ ಈ ಕೃತಿಯನ್ನು ಕುರಿತು, ಶ್ರೀ ಸಂಕರ್ಷಣ ಒಡೆಯರು, ಶ್ರೀ ಪದ್ಮನಾಭದಾಸರು, ಶ್ರೀ ಕಮಲಾಪತಿದಾಸರು ವ್ಯಾಖ್ಯಾನಗಳನ್ನು ರಚಿಸಿದರು.

    ಅಧ್ಯಾತ್ಮ ವಿಚಾರಗಳೆಲ್ಲವೂ ಒಂದು ಕೃತಿಯಲ್ಲಿ ಕ್ರೋಢೀಕೃತವಾಗಿರುವುದು ಯಾವ ಭಾಷೆಯಲ್ಲಿಯಾದರೂ ವಿರಳವಾದುದು. ಶ್ರೀ ಹರಿಕಥಾಮೃತಸಾರದಲ್ಲಿ ಪರಮಾತ್ಮನ ಸೃಷ್ಟ್ಯಾದಿ ಅಷ್ಟಕರ್ತೃತ್ವ, ಸರ್ವೋತ್ತಮತ್ವ, ವ್ಯಾಪ್ತತ್ವ, ಹರಿ ಕಾರುಣ್ಯ ದೇವದೈತ್ಯ ತಾರತಮ್ಯ, ಜೀವರ ಸಾಧನೆಯ ಕ್ರಮ, ಭಕ್ತಿಯ ಪ್ರಾಶಸ್ತ್ಯ, ಧ್ಯಾನಕ್ರಮ, ಬಿಂಬಾಪರೋಕ್ಷ, ದತ್ತ ಸ್ವಾತಂತ್ರ್ಯ ಮೊದಲಾದ ವಿಚಾರಗಳನ್ನು ಯುಕ್ತಿ ಯುಕ್ತವಾಗಿ ಕಾವ್ಯ ಶೈಲಿಯಲ್ಲಿ ತಿಳಿಸಲಾಗಿದೆ. ಶ್ರೀ ಹರಿಕಥಾಮೃತಸಾರ ವೇದಾಂತದ ವಿಶ್ವಕೋಶ. ಹರಿಕಥೆಯ ಅಮೃತಸಾರ ಎಂದರೆ ಸಾರಾಮೃತ-ಅಣುಸುಧಾ ಎಂದೇ ಹೇಳಬೇಕು.

    ಯುಕ್ತಿ ಮಾತುಗಳಲ್ಲ ಶ್ರುತಿಸ್ಮø

    ತ್ಯುಕ್ತಿ ಮಾತುಗಳಿವು ವಿಚಾರಿಸೆ

    ಮುಕ್ತಿಗಿವು ಸೋಪಾನವೆನಿಪುವು ಪ್ರತಿ ಪ್ರತಿ ಪದವು.

    ಭಕ್ತಿ ಪೂರ್ವಕ ಪರಿಸುವವರಿಗೆ

    ವ್ಯಕ್ತಿ ಕೊಡುವ ಸ್ವರೂಪ ಸುಖ ಪ್ರವಿ

    ವಿಕ್ತರನು ಮಾಡುವನು ಭವಭಯದಿಂದ ಬಹುರೂಪಾ

    ಎಂಬ ಶ್ರೀ ಜಗನ್ನಾಥದಾಸರ ಮಾತು ಅಕ್ಷರಶಃ ನಿಜವಾದುದು.

    ಶ್ರೀ ಹರಿಕಧಾಮೃತಸಾರ ಕೃತಿಯನ್ನು ಓದಿದವರಿಗೆ ದೊರೆಯುವ ಫಲವನ್ನು ದಾಸರು ಈ ಕೃತಿಯಲ್ಲಿ ಹೇಳಿರುವುದರೊಡನೆ ಕೀರ್ತನೆಯೊಂದರಲ್ಲಿಯೂ ಧ್ವನ್ಯಾತ್ಮಕವಾಗಿ ಸೂಚಿಸಿರುವಂತಿದೆ;

    ತಾರಕವಿದು ಹರಿಕಥಾಮೃತಸಾರ ಜನಕೆ ಪ

    ಘೋರತರ ಅಪಾರ ಸಂಸಾರವೆಂಬ ನವಶರಧಿಗೆ ಅ.ಪ

    ಶ್ವಾನ ಸೂಕರಾದಿ ನೀಚ ಯೋನಿಗಳಲಿ ಬಂದು ನೊಂದು

    ವೈನತೇಯ ವಾಹನ ಸನ್ನಿಧಾನ ಬೇಕು ಎಂಬವರಿಗೆ 1

    ಪ್ರೀಯ ವಸ್ತುಗಳೊಳು ಪಾಂಡವೇಯ

    ಸಖನೆ ಎಮಗೆ ಬ್ರಹ್ಮ

    ವಾಯು ಉಚ್ಚ ಸುರರು ತಂದೆ

    ತಾಯಿಯೆಂದರಿತವರಿಗೆ 2

    ಶ್ರೀ ಮುಕುಂದ ಸರ್ವಮಯ ಸ್ವಾಮಿ ಅಂತರಾತ್ಮ ಪರಂ

    ಧಾಮ ಧೀನಬಂಧು ಪುಣ್ಯನಾಮವೆಂದರಿತವರಿಗೆ 3

    ಜ್ಞೇಯ e್ಞÁನ e್ಞÁತೃ ಬಾದಾರಾಯಣಾಖ್ಯ ಹರಿಯ ವಚನ

    ಕಾಯ ಮನದಿ ಮಾಡ್ಡ ಕರ್ಮ ಶ್ರೀಯರಸನಿಗೀವರಿಗೆ 4

    ಭೂತ ಭವ್ಯ ಭವತ್ಪ್ರಭು ಅನಾಥ ಜನರ ಬಂಧು ಜಗ

    ನ್ನಾಥವಿಠಲ ಪಾಹಿಯೆಂದು ಮಾತು ಮಾತಿಗೆಂಬುವರಿಗೆ 5

    ಈ ಪ್ರಾಸಾದಿಕ ಗ್ರಂಥವನ್ನು ಶ್ರೀ ಜಗನ್ನಾಥದಾಸರಾಯರು ರಚಿಸುವಾಗ ವರ್ಣಾಭಿಮಾನಿ ದೇವತೆಗಳು ಅಹಮಹಮಿಕೆಯಿಂದ ತಾವಾಗಿಯೇ ಮುಂದೆ ಬರುತ್ತಿದ್ದರಲ್ಲದೆ, ಶ್ರೀ ವ್ಯಾಸರಾಜರು, ಶ್ರೀ ಪುರಂದರದಾಸರು, ಶ್ರೀ ವಾದಿರಾಜರ ವಿಶೇಷ ಅನುಗ್ರಹಗಳಿಂದ ರಚನೆ ಮಾಡಿದರೆಂದು ಶ್ರೀದವಿಠಲರು ತಿಳಿಸಿರುತ್ತಾರೆ;

    ವಾಸ್ಯತೀರ್ಥರ ಒಲವೂ ವಿಠಲೋ

    ಪಾಸಕ ಪ್ರಭುವರ್ಯ ಪುರಂದರ

    ದಾಸರಾಯರ ದಯವೊ ತಿಳಿಯದು ಓದಿ ಕೇಳದಲೆ

    ಕೇಶವನ ಗುಣಮಣಿಗಳನು ಪ್ರಾ

    ಣೇಶಗರ್ಪಿಸಿ ವಾದಿರಾಜರ

    ಕೋಶಕೊಪ್ಪುವ ಹರಿಕಥಾಮೃತಸಾರ ಪೇಳಿದರು.

    ಆದುದರಿಂದಲೇ ಅವರವರ e್ಞÁನದ ಪಾರಕ್ಕನುಗುಣವಾಗಿ ಅರ್ಥ ವಿಶೇಷವನ್ನು ಆನಂದಗೊಳಿಸುವ ಮಹತ್ಕøತಿ ಶ್ರೀಹರಿಕಥಾಮೃತಸಾರ ರೂಪವಾಗಿ ಶ್ರೀ ಜಗನ್ನಾಥವರ್ಯರಿಂದ ಪ್ರಕಾಶಿತವಾಯಿತು.

    ಕೀರ್ತನೆಗಳು

    ಶ್ರೀ ಜಗನ್ನಾಥದಾಸರು, ರಚಿಸಿರುವ ಕೀರ್ತನೆಗಳಲ್ಲಿ ಸುಮಾರು 200 ದೊರೆತು ಮುದ್ರಣವಾಗಿವೆ. ಈ ಕೀರ್ತನೆಗಳಲ್ಲಿ ಸ್ತೋತ್ರ ರೂಪವಾದುವು ಹೆಚ್ಚಾಗಿವೆ. ಭಗವದ್ಭಕ್ತಿಯಿಂದ ಒಡಮೂಡಿರುವ ಈ ಕೀರ್ತನೆಗಳನ್ನು ಹಾಡಿದಾಗ ಆಗುವ ಆನಂದ ಅಪಾರ. ಪರಮಾತ್ಮನನ್ನು ಅವರು ಪೂಜಿಸುವ ಪರಿ ಅನನ್ಯವಾದುದು.

    ಪ್ರಕೃತಿಯ ಒಂದೊಂದು ಲೀಲೆಯನ್ನು ನೆನೆದು ತನ್ಮೂಲಕವಾಗಿ ಅವರು ಪೂಜಿಸುವ ವೈಖರಿ ಬೆರಗುಗೊಳಿಸುವಂತಹುದಾಗಿದೆ.

    ಅರಿತವರಿಗತಿ ಸುಲಭ ಹರಿಯ ಪೂಜೆ

    ಅರಿಯದವ ನಿರ್ಭಾಗ್ಯತರ ಲೋಕದೊಳಗೆ ಪ

    ಹೈಮಾಂಡ ಮಂಟಪವು ಭೂಮಂಡಲವೆ ಪೀಠ

    ಸೋಮ ಸೂರ್ಯರೇ ದೀಪ, ಭೂರುಹಗಳು

    ಚಾಮರಗಳತಿವ್ಯೋಮ ಮಂಡಲ ಛತ್ರ

    ಯಾಮಾಷ್ಟಕಗಳಷ್ಟದಳದ ಪದ್ಮವುಯೆಂದು 1

    ಮಳೆಯೆ ಮಜ್ಜನವು ದಿಗ್ವಲಯಂಗಳೇ ವಸನ

    ಮಲಯಜಾಲವೆ ಶ್ರೀಗಂಧ ಧೂಪಾ

    ಇಳೆಯೊಳಗೆ ಬೆಳೆದ ಧಾನ್ಯಗಳೆಲ್ಲ ನೈವೇದ್ಯ

    ಥಳÀ ಥsÀಳಿಪ ಮಿಂಚು ಕರ್ಪೂರದಾರತಿಗಳೆಂದು 2

    ನಕ್ಷತ್ರ ಮಂಡಲವೆ ಲಕ್ಷ ದೀಪಾವಳಿಯು

    ದಕ್ಷಿಣೋತ್ತರ ಅಯನಗಳೆ ಬನವು

    ವೃಕ್ಷವಲ್ಲಿಜ ಸುಫಲ ಪುಷ್ಪಗಳೊಳಗೆ ಲಕ್ಷ್ಮೀ

    ವಕ್ಷ ವ್ಯಾಪಕನಾಗಿ ತಾನೆ ಭೋಗಿಪನೆಂದು 3

    ಗುಡುಗು ಸಪ್ತ ಸಮುದ್ರ ಸಿಡಿಲು ಘೋಷವೆ ವಾದ್ಯ

    ಪೊಡವಿಪರಿಗೀವ ಕಪ್ಪವೆ ಕಾಣಿಕೆಗಳು

    ಉಡುಪ ಭಾಸ್ಕರರ ಮಂಡಲಗಳಾದರ್ಶಗಳು

    ನಡೆವ ನಡೆಗಳು ಹರಿಗೆ ಬಿಡದೆ ನರ್ತನವೆಂದು 4

    ಹೀಗೆ ಸಾಗುವ ಏಳು ನುಡಿಗಳ ಈ ಪದ್ಯವು ದಾಸರ ಪ್ರತಿಭೆ ಮತ್ತು e್ಞÁನದ ಪರಮ ಸಂಕೇತವಾಗಿದೆ. ಪರಮಾತ್ಮನ ವಿರಾಡ್ರೂಪಕ್ಕೆ ಅಭೀಷೇಕ ಪೂಜೆ, ನಮಸ್ಕಾರ, ಮಂಗಳಗಳೆಲ್ಲವೂ ಪ್ರಪಂಚದಲ್ಲಿ ನಡೆಯುವ ಸರ್ವ ವ್ಯಾಪಾರಗಳು ಎಂಬ ಭವ್ಯ ರೂಪಕದಂತಹ ಕೀರ್ತನೆ ಹರಿದಾಸ ಸಾಹಿತ್ಯದಲ್ಲಿಯೇ ವಿಶಿಷ್ಟ ರಚನೆಯೆನ್ನಬಹುದು.

    ಆದರ್ಶ ಭಕ್ತರ ನಿಲುವನ್ನು ಶ್ರೀ ಜಗನ್ನಾಥದಾಸರು ತುಂಬ ಚೆನ್ನಾಗಿ ತಿಳಿಸಿರುತ್ತಾರೆ. ;

    ಬೇಡಲೇತಕೋ ಪರರ ದೇಹಿಯೆಂದು

    ನೀಡುವ ದೊರೆ ಎನಗೆ ನೀನಿರಲು ಸರ್ವದಾ ಪ

    ಕಲ್ಪ ಕಲ್ಪಗಳಲ್ಲಿ ವಿಶ್ವಜೀವರಿಗನ್ನ

    ಕಲ್ಪಕನು ನೀನಿರಲು, ಭ್ರಾಂತಿಯಿಂದ

    ಅಲ್ಪಮಾನವರಿಗಾಲ್ಪರಿದರೇನಹುದಹಿ

    ತಲ್ಪ ಜಗನ್ನಾಥ ವಿಠ್ಠಲ ಕಲ್ಪತರುವಿರಲು ||

    ಈ ಅಭಿಪ್ರಾಯವನ್ನೇ ದಾಸರು ತತ್ವ ಸುವಾಲಿಯಲ್ಲಿಯೂ ತಿಳಿಸಿದ್ದಾರೆ. 'ಅಶನವಸನಗಳೀವ ವಸುದೇವ ಸುತನಿರಲು ಹುಸಿಯಾಗಿ ಬಾಳುವ ನರರಿಗಾಲ್ಪರಿದರೆ ಹಸಿವೆ ಅಡಗುವುದೆ ಎಲೆ ಜೀವ ?' ಎಂಬ ಮಾತು ಸಾರ್ಥಕವಾದುದು. ಭಕ್ತನಾದವನು ಭವವಿಮುಕ್ತನಾಗಲು ಪರಮಾತ್ಮನನ್ನು ಎಲ್ಲ ಕಾಲದಲ್ಲಯೂ ಸ್ಮರಿಸಬೇಕು. ಆಗ ಅವನನ್ನು ಲೋಕದ ಯಾವ ಶಕ್ತಿಗಳು ಭಯಗೊಳಿಸಲಾರವು. 'ಆವ ಭಯವಿಲ್ಲ ಪರಾವರೇಶನ ಸಕಲ | ಠಾವಿನಲಿ ಚಿಂತಿಸುವ ಭಾವಜ್ಞರಿಗೆ' ಎಂದು ದಾಸರು ಧೈರ್ಯ ಹೇಳಿರುವರು.

    ಶ್ರೀ ಜಗನ್ನಾಥದಾಸರು ಮಾಧ್ವಯತಿ ಪರಂಪರೆಯನ್ನು, ‘ಸ್ಮರಿಸು ಗುರು ಸಂತತಿಯನು’ ಎಂಬ ಕೀರ್ತನೆಯಲ್ಲಿ ಸ್ತುತಿಸಿರುವರು. ಇತಿಹಾಸವನ್ನರಿಯುವ ದೃಷ್ಟಿಯಿಂದ ಈ ಕೃತಿ ಮುಖ್ಯವಾಗಿದೆ ಎನ್ನಬಹುದು. ಶ್ರೀ ರಾಘವೇಂದ್ರರಲ್ಲಿ ಭಕ್ತಿ ಹೊಂದಿದ್ದ ದಾಸರು, ರಾಯರನ್ನು ಕುರಿತು,

    'ಶ್ರೀ ರಾಘವೇಂದ್ರಾ ನಿಮ್ಮ ಚಾರು ಚರಣವ ; ಶ್ರೀ ರಾಘವೇಂದ್ರ ಬಾರೋ ವಂದಿಸುವೆ ಗುರುರಾಘವೇಂದ್ರಾ, ರಾಘವೇಂದ್ರ ಯತಿ ಸಾರ್ವಭೌಮ; ರಾಘವೇಂದ್ರ ರಾಜಿತ ಗುಣ ಸಾಂದ್ರಾ; ರೋಗಹರನೇ ಕೃಪಾಸಾಗರ ಶ್ರೀ ಗುರು ರಾಘವೇಂದ್ರ, ವಂದಿಸುವೆ ಗುರು ರಾಘವೇಂದ್ರಾರ್ಯರಾ, ಪೊಂದಿ ಬದುಕಿರೋ ರಾಘವೇಂದ್ರರಾಯರ; ಕರುಣಿಗಳೊಳಗೆಣಿಗಾಣೆನೋ ನಿನಗೆ ಸದ್ಗುರುವರ ರಾಘವೇಂದ್ರಾ', ಮೊದಲದ ಭಕ್ತಿಭರಿತ ಕೃತಿಗಳನ್ನು ರಚಿಸಿದ್ದಾರೆ.

    ಶ್ರೀ ಜಗನ್ನಾಥದಾಸರು ತಮ್ಮ ಕಾಲದಲ್ಲಿಯೇ ಇದ್ದ ಶ್ರೀವ್ಯಾಸತತ್ವಜ್ಞರು, ಶ್ರೀ ಗೋಪಾಲದಾಸರು ಮತ್ತು ಶ್ರೀ ವಿಜಯದಾಸರನ್ನು ಕುರಿತು ಹಾಡಿರುವ ಕೃತಿಗಳಿಂದ ಅವರವರ ವ್ಯಕ್ತಿತ್ವದ ಪರಿಚಯ ಉಂಟಾಗುತ್ತದೆ. ಪರಮಾತ್ಮನ ವಿವಿಧ ಅವತಾರ, ರೂಪಗಳ ವರ್ಣನಾತ್ಮಕವಾದ, ಸ್ತೋತ್ರ ರೂಪವಾದ ಸುಮಾರು ಎಂಭತ್ತು ಕೀರ್ತನೆಗಳನ್ನು ದಾಸರು ರಚಿಸಿದ್ದಾರೆ. ಇವುಗಳಲ್ಲಿ ತತ್ತ್ವಾರ್ಥಗರ್ಭಿತವೂ, ಫ್ರೌಢವೂ ಸಾಮಾನ್ಯ ಜನರಿಗೆ ಅರ್ಥ ಮಾಡಿಕೊಳ್ಳಲು ಸಾಧ್ಯವಾಗುವ ಅರ್ಥ ಪರಂಪರೆಯನ್ನು ಹೊಂದಿರುವ ಕೀರ್ತನೆ ಎಂದರೆ, ‘ಶ್ರೀ ವೇಂಕಟ ಶೈಲಾಧಿಪ ನಮೋ’ ಎಂಬ ಕೃತಿಯಾಗಿದೆ. ಶ್ರೀ ಜಗನ್ನಾಥದಾಸರ ಸಂಸ್ಕøತ ಭಾಷೆಯ ಪಾಂಡಿತ್ಯ ಇಲ್ಲಿ ನಿರರ್ಗಳವಾಗಿ ಹರಿದಿರುವುದು ಕಂಡು ಬರುತ್ತದೆ. ಇವರು ರಚಿಸಿರುವ ‘ದಾಸೋಹಂ ತವ ದಾಸೋಹಂ’ ಎಂಬ ಕೀರ್ತನೆಯು ಮತ್ತೊಂದು ಅನಘ್ರ್ಯ ಕೃತಿಯಾಗಿದೆ. ಶ್ರೀ ಜಗನ್ನಾಥದಾಸರ ಹೆಚ್ಚು ಕೀರ್ತನೆಗಳು ನರ್ತನ -ಹರಿವಾಣ ಸೇವೆಗೆ ಅಳವಡುವಂತಹುದಾಗಿವೆ. ಶ್ರೀ ವಾದಿರಾಜರು, ಶ್ರೀ ಸತ್ಯಬೋಧರು, ಶ್ರೀ ಪುರಂದರದಾಸರೇ ಮೊದಲಾದವರನ್ನು ಕುರಿತ ಕೀರ್ತನೆಗಳಲ್ಲದೆ ಇವರ ತಂದೆಯವರಾದ ಶ್ರೀನರಸಿಂಹದಾಸರ ಮೇಲೆ ಕುರಿತ ರಚನೆ ಇವರ ವಂಶದ ವಿಚಾರವನ್ನು ತಿಳಿಯಲು ಸ್ಪಷ್ಟವಾದ ಆಧಾರವಾಗಿದೆ.
    ****

    year 2021..
    5/6 sep 202


     5/6 sep 2021

    " ಹರಿಕಥಾಮೃತಸಾರ " ವು " ಶ್ರೀ ಹರಿ " ಎಂಬ " ದಿವ್ಯಾಮೃತ " ವನ್ನು ತನ್ನ ಗ್ರಂಥ ಪಾತ್ರದಲ್ಲಿ ತುಂಬಿ ಕೊಂಡಂತಹ ಅಸದೃಶ ಸಾಹಿತ್ಯ ಪ್ರಕಾರ.

    ಅನಂತ ಕಲ್ಯಾಣ ಗುಣಗಳಿಂದ ಪೂರ್ಣನಾದ ಶ್ರೀ ಹರಿಯ ಕುರಿತಾಗಿ ಶ್ರೀ ಜಗನ್ನಾಥದಾಸರು ರಚಿಸಿದ್ದಾರೆ. 

    ಭವರೋಗಕ್ಕೆ ಅಮೃತ ಸಿಂಚನವನ್ನು ಈ ಆಧ್ಯಾತ್ಮಿಕ ಕೃತಿಯ ಒಳ ಹೊಕ್ಕು ನೋಡಿದರೆ ಕಾಣುವುದೆಲ್ಲಾ ಶ್ರೀ ಹರಿಯ ಅನಂತ ರೂಪಗಳು ಮತ್ತು ಶ್ರೀ ಹರಿಯ ಕರುಣಾ ವ್ಯಾಪಾರದ ಅನಂತ ಮುಖಗಳು.

    ಸಚ್ಚಿದಾನಂದಾತ್ಮ । ಬ್ರಹ್ಮ ಕ ।

    ರಾರ್ಚಿತಾಂಘ್ರಿ ಸರೋಜ ಸುಮನಸ ।

    ಪ್ರೋಚ್ಚ ಸನ್ಮಂಗಳದ -

    ಮಧ್ವಾಂತಃಕರಣರೂಢ ।।

    ಅಚ್ಯುತ ಜಗನ್ನಾಥವಿಠ್ಠಲ ।

    ನಿಚ್ಚಮೆಚ್ಚಿದ ಜನರ ಬಿಡ । ಕಾ ।

    ಡ್ಗಿಚ್ಚನುಂಡಾರಣ್ಯದೊಳು -

    ಗೋ ಗೋಪರನು ಕಾಯ್ದ ।। 10/25 ||

    ಶ್ರೀ ಜಗನ್ನಾಥವಿಠಲ ರೂಪಿ ಭಗವಂತನು ಸಚ್ಚಿದಾನಂದ ಸ್ವರೂಪನು.

    ಸತ್ = ಉತ್ತಮ

    ಚಿತ್ = ಜ್ಞಾನಪೂರ್ಣ

    ಆನಂದ = ಆನಂದಪೂರ್ಣ

    ಆತ್ಮ = ಸ್ವಾಮಿ

    ಪ್ರೋಚ್ಚ = ಅತ್ಯುತ್ತಮ

    ಶ್ರೀ ಚತುರ್ಮುಖ ಬ್ರಹ್ಮದೇವರ ಕರಗಳಿಂದ ಪೂಜಿತವಾದ ಪಾದ ಕಮಲನು.

    ದೇವತೆಗಳಲ್ಲಿ ಅತ್ಯತ್ತಮನಾದವನು ( ಸರ್ವೋತ್ತಮನೂ, ಸ್ವತಂತ್ರನು )

    ಉತ್ತಮವಾದ ಮಂಗಲವನ್ನುಂಟು ಮಾಡುವವನು.

    ಶ್ರೀಮದಾಚಾರ್ಯರ ಹೃದಯದಲ್ಲಿ ನೆಲೆ ನಿಂತವನು.

    ಯಾವುದೇ ವಿಧವಾದ ನಾಶವಿಲ್ಲದವನು.

    " ಅಚ್ಯುತ "

    ಅನಿತ್ಯತ್ವ, ದೇಹ ಹಾನಿ, ದುಃಖ ಪ್ರಾಪ್ತಿ, ಪೂರ್ಣತಾ ಎಂಬ ನಾಲ್ಕು ವಿಧ ನಾಶ ರಹಿತನು ಎಂದರ್ಥ.

    ಗೊಂಡಾರಣ್ಯದಲ್ಲಿ ಕಾಡ್ಗಿಚ್ಚನು ನುಂಗಿ ಗೋವುಗಳನ್ನೂ, ಗೋಪಕರನ್ನೂ ರಕ್ಷಿಸಿದವನು.

    ಶ್ರೀ ಹರಿಯು ತನ್ನನ್ನು ನಿರ್ಮಲರಾಗಿ ಮೆಚ್ಚುವ ಜನರನ್ನು ಎಂದೆಂದೂ ಕೈ ಬಿಡನು.

    " ಶ್ರೀ ಜಗನ್ನಾಥದಾಸಾರ್ಯ ವಿರಚಿತ ಹರಿಕಥಾಮೃತಸಾರ " ದ ಮಹತ್ವ ಮತ್ತು ಫಲಶ್ರುತಿ "

    1. ಶ್ರೀ ಶ್ರೀದ ವಿಠಲರ ಫಲ ಶ್ರುತಿ ( 24 ಪದ್ಯಗಳು )

    ಆದಿ :

    ಹರಿಕಥಾಮೃತಸಾರ ಶ್ರೀಮ ।

    ದ್ಗುರುವರ ಜಗನ್ನಾಥದಾಸರ ।

    ಕರತಲಾಮಲಕವೆನೆ -

    ಪೇಳಿದ ಸಕಲ ಸಂಧಿಗಳ ।।

    ಪರಮ ಪಂಡಿತಾಭಿಮಾನಿಗಳು । ಮ ।

    ತ್ಸರಿಸಲೆದೆಗಿಚ್ಚಾಗಿ ತೋರುವ ।

    ದರಸಿಕರಿಗಿದು ಪೇಳಿ -

    ಕೇಳುವದಲ್ಲ ಧರೆಯೊಳಗೆ ।। 1 ।।

    ಶ್ರೀ ಸಹ್ಲಾದಾಂಶ ಜಗನ್ನಾಥದಾಸರ ಈ ಕೃತಿಯಲ್ಲಿ ಶಾಸ್ತ್ರ ಪ್ರಮೇಯಗಳನ್ನು ಅತ್ಯಂತ ಸ್ಫುಟವಾಗಿ  ನಿರೂಪಿಸಿರುವರು.

    ತಾವೇ ಮಹಾ ಪಂಡಿತರು ಎಂದು ಅಹಂಕಾರ ಪಡುವವರಿಗೆ ಅಸೂಯೆ ಹುಟ್ಟಿಸುವಂಥಾ ಮಹೋನ್ನತ ಕೃತಿ.

    ಭಗವನ್ಮಹಿಮೆ ತಿಳಿಸುವ ಅಭಿರುಚಿ ಇಲ್ಲದ ಜನಕ್ಕೆ ಹರಿಕಥಾಮೃತಸಾರವನ್ನು ತಿಳಿಸಕೂಡದು.

    ಅಂತ್ಯ :

    ದುಷ್ಟರೆನ್ನದೆ ದುರ್ವಿಷಯದಿಂ ।

    ಪುಷ್ಟರೆನ್ನದೆ ಪೂತಕರ್ಮ ।

    ಭ್ರಷ್ಟರೆನ್ನದೆ ಶ್ರೀದ -

    ವಿಠ್ಠಲವೇಣುಗೋಪಾಲ ।।

    ಕೃಷ್ಣ ಕೈವಿಡಿವನು ಸುಸತ್ಯ । ವಿ ।

    ಶಿಷ್ಟ ದಾಸತ್ವವನು ಪಾಲಿಸಿ ।

    ನಿಷ್ಠೆಯಿಂದಲಿ -

    ಹರಿಕಥಾಮೃತಸಾರ ।। 24 ।।

    ಕಾರಣಾಂತರದಿಂದ ದುಷ್ಟರಾಗಿದ್ದವರೂ, ದುರ್ವಿಷಯಗಳಲ್ಲಿ ಮುಳುಗಿದವರೂ, ಸತ್ಕರ್ಮಗಳನ್ನು ತೊರೆದು ಭಷ್ಟರಾದವರೂ ಸಹ ಪಶ್ಚಾತ್ತಾಪ ಪಟ್ಟು ಈ ಹರಿಕಥಾಮೃತಸಾರವನ್ನು ನಿಷ್ಠೆಯಿಂದ ಪಠಿಸ ತೊಡಗಿದರೆ ಶ್ರೀ ಕೃಷ್ಣ ಪರಮಾತ್ಮ ಅವರನ್ನು ನಿಶ್ಚಿತವಾಗಿಯೂ ಕೈ ಹಿಡಿಯುವನು ಮತ್ತು ತನ್ನ ಭಕ್ತ ವರ್ಗದಲ್ಲಿ ಸೇರಿಸಿಕೊಳ್ಳುವನು.

    ಸ್ವಭಾವತಃ ಯೋಗ್ಯರಾದವರು ಕಾರಣಾಂತರದಿಂದ ಅಯೋಗ್ಯ ಕಾರ್ಯದಲ್ಲಿ ತೊಡಗಿದ್ದರೂ, ಈ ಶ್ರೀ ಹರಿಕಥಾಮೃತಸಾರ ಪಠನೆಯಿಂದ ಪರಿಶುದ್ಧರಾಗಿ ಶ್ರೀ ಹರಿ ಪರಮಾತ್ಮನ ಪರಮಾನುಗ್ರಹಕ್ಕೆ ಪಾತ್ರರಾಗುವರು ಎಂದು ತಾತ್ಪರ್ಯ!!

    2. ಶ್ರೀ ಗುರು ಶ್ರೀಶರಾಯರ ಫಲಶ್ರುತಿ ( 3 ಪದ್ಯಗಳು )

    ದಾಸವರ್ಯರ ದಾಸ ಕರ್ಜಿಗಿ ।

    ದಾಸರೆಂಬರ ಈ ಸುವಾಕ್ಯ । ಉ ।

    ದಾಸೀನವ ಮಾಡದಿರಿ -

    ಶ್ರೀ ಹರಿ ದಾಸರಾದವರು ।।

    ಕಾಶಿ ಮೊದಲಾದ ಸುಕ್ಷೇತ್ರದಿ ।

    ವಾಸ ಮಾಡಲು ಈ ಸುಜನ । ಸಹ ।

    ವಾಸ ಫಲ ದೊರಕುವದೆ -

    ಶೋಧಿಸೆ ಸಕಲ ಶಾಸ್ತ್ರದಲಿ ।। 1 ।।

    ಹರಿಕಥಾಮೃತಸಾರಕ್ಕೆ ಶ್ರೀ ಶ್ರೀದ ವಿಠ್ಠರು ಬರೆದಿರುವ ಫಲಶ್ರುತಿಯ ವಾಕ್ಯಗಳೆಲ್ಲಾ ಸತ್ಯವಾದುವು. ಅದರ ಬಗ್ಗೆ ಶ್ರೀ ಹರಿಯ ದಾಸರು ಔದಾಸೀನ್ಯವನ್ನು ಹೊಂದಬಾರದು. ಕಾಶಿ ಮೊದಲಾದ ಕ್ಷೇತ್ರ ವಾಸಕ್ಕಿಂತಲೂ ಇಂಥಹ ಸಜ್ಜನರ ಸಹವಾಸ ದೊಡ್ಡದು ಎಂದು ತಾತ್ಪರ್ಯ!

    ಶ್ರೀವರನ ದಾಸರಿಗೆ ಭಕುತಿಯಲಿ ।

    ಸೇವಕನು ನಾನೆಂದು ಪೇಳುವ ।

    ಜೀವನವ ಸಜ್ಜೀವಿ -

    ಆವ ಹರಿದಾಸನೆಂದರಿದು ।।

    ಆವನಾದರೂ ಆದಿಯಲಿ ಇದ ।

    ಭಾವ ಶುದ್ಧದಿ ಓದಿ ಬರೆಯಲು ।

    ಕಾವನಯ್ಯನು ಕರುಣಿಸುವನು -

    ಸದಾವಕಾಲದಲಿ ।। 2 ।।

    ಶ್ರೀ ಮಹಾಲಕ್ಷ್ಮೀ ಪತಿಯಾದ ಶ್ರೀ ಹರಿಯ ದಾಸರಿಗೆ ಭಕ್ತಿಯಿಂದ ನಾನು ಸೇವಕ ಎಂದು ಹೇಳುವ ಜೀವನು ಸುಜೀವಿ! ಅವನು ಹರಿದಾಸನು ಎಂದು ತಿಳಿದು ಯಾವನಾದರೂ ಮೊದಲಿಗೆ ಹರಿಕಥಾಮೃತಸಾರವನ್ನು ಶುದ್ಧ ಮನಸ್ಸಿನಿಂದ ಓದಿ ಬರೆಯಲು ಕಾಯುವವರ ಒಡೆಯನಾದ ಶ್ರೀಮನ್ನಾರಾಯಣನು ಎಲ್ಲಾ ಕಾಲಗಳಲ್ಲೂ ಸದಾ ಕರುಣಿಸುವವನು!

    ಹರಿಕಥಾಮೃತಸಾರ ನೋಡುವ ।

    ಪರಮ ಭಕ್ತರ ಜ್ಞಾನ ದೃಷ್ಟಿಗೆ ।

    ವರ ಸುಲೋಚನದಂತೆ -

    ಇಪ್ಪವು ಈ ಸುಪದ್ಯಗಳು ।।

    ಅರಸಿಕರಿಗಿದು ಪೇಳಲಾಗದು ।

    ಮುರಹರನ ದಾಸರಿಗೆ ತಪ್ಪದೆ ।

     ಹರುಷ ಸುರಿಸುವನಿಹಪರದಿ -

    ಗುರುಶ್ರೀಶವಿಠ್ಠಲನು ।। 3 ।।

    ಶ್ರೀ ಹರಿಕಥಾಮೃತಸಾರವನ್ನು ಅಧ್ಯಯನ ಮಾಡುವ ಪರಮ ಭಕ್ತರ ಜ್ಞಾನ ದೃಷ್ಟಿಗೆ ಈ ಫಲಶ್ರುತಿ ಸಂಧಿಯ ಸುಪದ್ಯಗಳು ಶ್ರೇಷ್ಠವಾದ ಕನ್ನಡಕದಂತೆ ಇರುವವು.

    ಶ್ರೀ ಹರಿಕಥಾಮೃತಸಾರದ ಮತ್ತು ಫಲಶ್ರುತಿ ಪದ್ಯಗಳನ್ನು ಅರಸಿಕರಿಗೆ ಹೇಳಕೂಡದು.

    ಶ್ರೀ ಹರಿಯ ದಾಸರಿಗೆ ಇವುಗಳನ್ನು ತಪ್ಪದೇ ಹೇಳಲೇಬೇಕು.

    ಹಾಗೆ ಮಾಡಿದರೆ ಶ್ರೀ ಗುರು ಶ್ರೀಶ ವಿಠ್ಠಲೋಭಿನ್ನ ಶ್ರೀ ಹರಿಯು ಇಹ ಪರಗಳಲಿ ಆನಂದವನ್ನು ಸುರಿಸುವನು!!

    3. " ಶ್ರೀ ಕಮಲಾಪತಿವಿಠಲರ - ಹರಿಕಥಾಮೃತಸಾರ ಫಲ ಸ್ತುತಿ - ( 9 ಪದ್ಯಗಳು ) "

    ಶ್ರೀಮದ್ವಿಶ್ವಗ್ರೀವ ನೂಲುಮಿಗೆ ।

    ಧಾಮರೆನಿಪ ಶ್ರೀ ವಾದಿರಾಜರು ।

    ಸ್ವಾಮಿ ವ್ಯಾಸಾರ್ಯ -

    ವಿಠಲೋಪಾಸ್ಯ ಸ್ವಪ್ನದಲಿ ।।

    ಶ್ರೀ ಮನೋರಮನೆನಿಪ ತತ್ತ್ವ । ಸು ।

     ಸೌಮನದ ಮಾಲಿಕೆಯನಿತ್ತು ।

    ದ್ಧಾಮ ಗ್ರಂಥವ ರಚಿಸೆನುತಲಿ-

     ನುಡಿದ ಕಾರಣದಿ ।। 1 ।।

    ಭಾರತ ಸು ಭಾಗವತ ವಾಮನ ।

    ಗಾರುಡ ಭವಿಶೋತ್ತರ ಪದವು ।

    ಚಾರು ವಿಷ್ಣುರಹಸ್ಯ -

    ವಾಯು ಪಂಚರಾತ್ರಾಗಮ ।।

    ಸಾರ ಗುರು ವೃತ್ತ ಪ್ರವೃತ್ತ ।

    ಈರ ಸಂಹಿತಾದಿತ್ಯ ವಾಗ್ನೆಯ ।

    ಪಾರ ರಸಗಳ ತೋರ್ಪ -

    ಶ್ರೀಗುರುಮಧ್ವ ಶಾಸ್ತ್ರವು ।। 2 ।।

    ಸಾರ ಕ್ರೋಢೀಕರಿಸಲನುದಿನ ।

    ಸಾರೆ ವರ್ಣಾಭಿಮಾನಿ । ದೀನೋ ।

    ದ್ಧಾರಗೋಸುಗ ಹರಿಕ-

    ಥಾಮೃತಸಾರವನು ರಚಿಸಿ ।।

    ಸ್ಥೈರ್ಯ ಮಾನಸದಿಂದ । ಭಾವಿ ।

    ಭಾರತಿಪತಿ ವಾದಿರಾಜರ ।

    ಭೂರಿ ಕೋಶಕೆ ವೊಪ್ಪಿಸುತ-

    ಲಾಪಾರ ಮುದ ಪಡೆದ ।। 3 ।।

    ಸಾಸಿರಾರ್ಥದೊಳೊಂದು । ಪಾದಕವ ।

    ಕಾಶ ವಿರುವೊ ಶ್ರೀದ ಬೃಹತೀ ।

    ಸಾಸಿರದ ನಾಮವನು -

    ಯೋಚಿಸಿ ಇವರು ಗ್ರಂಥದಲ್ಲಿ ।।

    ಈ ಸುರಹಸ್ಯವನರಿತು ಪಠಿಪಗೆ ।

    ಯೇಸು ದೂರವೋ ಮುಕ್ತಿ । ಬರಿದಾ ।

    ಯಾಸ ಬಟ್ಟದರಿಂದ -

    ಫಲವೇನಿಲ್ಲವೀ ಜಗದಿ ।। 4 ।।

    " ಹ " ಯೆನಲು ಹರಿಯೊಲಿವನು ತಾ ।

    " ರಿ " ಯೆನಲು ರಿಕ್ತತ್ವ ಹರಿಯುವ ।

    " ಕ " ಯೆನಲು ಕತ್ತಲೆಯ -

    ಅಜ್ಞಾನವನು ಪರಿಹರಿಪ ।।

    " ಥಾ " ಯೆನಲು ಸ್ಥಾಪಿಸುವ ಜ್ಞಾನವ ।

    " ಮೃ " ಯೆನಲು ಮೃತಿ ಜನಿಯ ಬಿಡಿಸುವ ।

    " ತ " ಯೆನಲು ಹರಿ ತನ್ನ -

    ಮೂರುತಿಯ ತೋರುವನು ನಿತ್ಯ ।। 5 ।।

    " ಸಾ " ಯೆನಲು ಸಾಧಿಸುವ ಮುಕ್ತಿ ।

    " ರ " ಯೆನಲು ರತಿಯಿತ್ತು ರಮಿಪನು ।

    ಕಾಯ ವಾಗ್ಜ್ಮಯದೆಂಟು -

    ಅಕ್ಕರ ನುಡಿದರದರೊಳಗೆ ।।

    ಶ್ರೀಯರಸ ವಿಶ್ವಾದಿ । ಅಷ್ಟೈ ।

    ಶ್ವರ್ಯ ರೂಪದಿ ನಿಂತು ತಾ । ಪರ ।

    ಕೀಯ ನೆನಿಸದೆ ಇವನ -

    ಮನದೊಳು ರಾಜಿಪನು ಬಿಡದೆ ।। 6 ।।

    ಹರಿಯೆನಿಪಗನಿರುದ್ಧ ಧರ್ಮವು ।

    ದೊರಕಿಸುವನವು ಪರಮ ಹರುಷದಿ ।

    ತ್ವರ ಕಥಾಯನೆ ಕೃತಿ-

    ರಮಣನರ್ಥಿಗಳ ಹನಿಗರೆವ ।।

    ವರ ಅಮೃತ ಯೆನಲಾಗ । ಶ್ರೀ ಸಂ ।

    ಕರುಷಣನೇ ಕಾಮಹನು ಯೋಜಿಪ ।

    ಸರಸಸಾರನೆ ವಾಸುದೇವನು -

    ಮೋಕ್ಷ ಕೊಡುತಿಪ್ಪ ।। 6 ।।

    ಈ ರಹಸ್ಯವನರಿತು ಪ್ರತಿದಿನ ।

    ಸಾರಸಾಕ್ಷನ ಪದಕಮಲಕೆ ।

    ಆರು ಪದನಂತಿರುವ -

    ಸುಜನಕೆ ಮೇಲೆ ನುಡಿದ ಫಲ ।।

    ಸಾರಿ ಸಾರಿಗೆ ಒದಗಿ ಬರುತಲೆ ।

    ಸೇರಿಸುವರೈ ವಿಷ್ಣು ಮಂದಿರ ।

    ತೋರುವರು ನಿಂದಕರ -

    ನಿಕರಕೆ ನಿರಯವನು ನಿತ್ಯ ।। 8 ।।

    ಚಾರುತನದಿ ಹರಿಕಥಾಮೃತ ।

    ಸಾರ ಕೃತ ಋಷಿ ಭಾರದ್ವಾಜರ ।

    ಸಾರ ಹೃದಯದಿ ನಿಂತ -

    ಸಕಲ ಸು ಶಾಸ್ತ್ರದಾ ಲೋಕಾ ।।

    ಸಾರಿಸಾರಿಗೆ ಮಾಡಿ ಮಾಡಿಸಿ ।

    ಸೂರೆಗೊಟ್ಟಾನಂದ ಚಿನ್ಮಯ ।

    ಪಾರವಾರಶಯನ -

    ಶ್ರೀ ಕಮಲಾಪತಿ ವಿಠ್ಠಲಾ ।। 9 ।।

    ಮಾನವಿಯಲ್ಲಿ ತಮ್ಮ ಮನೆಯ ಕಂಭದಲ್ಲಿಯೇ ಶ್ರೀ ಸಹ್ಲಾದಾಂಶ ಜಗನ್ನಾಥದಾಸರು ಸನ್ನಿಹಿತರಾಗಿದ್ದಾರಷ್ಟೇ. ಆ ಸಂದರ್ಭವನ್ನು ತಮ್ಮ ಒಂದು ಪದ್ಯದಲ್ಲಿ ಉಲ್ಲೇಖಿಸಿ ಶ್ರೀ ಕಮಲಾಪತಿ ವಿಠ್ಠಲರು ಒಂದು ರಮಣೀಯವಾದ ಉತ್ಪ್ರೇಕ್ಷಾ ವಿಲಾಸಗೈಯ್ದಿದ್ದಾರೆ.

    ಅಂಬುಜಾಕ್ಷಿ ಸ್ತ೦ಭ-

    ದಿಹರ್ಯಾಕೆ ।ಯಾರೆ । ಸಾರೆ ।

    ಫುಲ್ಲಲೋಚನೆ ಬಲ್ಲೆಯಾ । ಇವ ।

    ರಲ್ಲಿರುವ ಕಾರಣವಿದೇನೇ ।

    ಫುಲ್ಲನಾಭನ ಹುಡುಕುತಲಿ ।

    ಪ್ರಲ್ಹಾದನನುಜ ಸಲ್ಹಾದರಿವರೆ ।।

    ಶ್ರೀ ಪರಮಾತ್ಮನು ಶ್ರೀ ನೃಸಿಂಹ ರೂಪದಲ್ಲಿ ಕಂಬದಲ್ಲಿಯೇ ಹೊರಬಿದ್ದು ಬಂದುದರಿಂದ ಆ ಕಂಬದಲ್ಲಿ ಮತ್ತೊಮ್ಮೆ ಶ್ರೀ ನೃಸಿಂಹನನ್ನು ಹುಡುಕಲಿಕ್ಕಾಗಿಯೇ ಏನೋ ಎಂಬುವಂತೆ ಶ್ರೀ ಪ್ರಹ್ಲಾದರಾಜರ ತಮ್ಮ ಶ್ರೀ ಸಹ್ಲಾದಾಂಶರಾದ ಶ್ರೀ ಜಗನ್ನಾಥದಾಸರು ಕಂಬದಲ್ಲಿ ವಾಸವಾಗಿದ್ದಾರೆ.

    ಉತ್ಪ್ರೇಕ್ಷಾಲಂಕಾರದ ಸೊಗಸು ಕಾವ್ಯ ಮರ್ಮಜ್ಞರಿಗೆ ಹೃದ್ಯವಾಗಿ ವೇದ್ಯವಾಗುವುದರಲ್ಲಿ ಸಂದೇಹವಿಲ್ಲ.

    4. " ಶ್ರೀ ಮನೋಹರವಿಠ್ಠಲಾಂಕಿತ " ಬೂರಲದಿನ್ನಿ ಶ್ರೀ ಮೋನಪ್ಪನವರ - ಶ್ರೀ ಹರಿಕಥಾಮೃತಸಾರ ಫಲಶ್ರುತಿ ( 17 ಪದ್ಯಗಳು )

    ಆದಿ :

    ಸಿರಿವರ ಜಗನ್ನಾಥವಿಠಲನ ।

    ಚರಣ ಭಜಕ ನೃಸಿಂಹದಾಸನ ।

    ವರ ಮುಖಾಂಬುಜದಿಂದ -

    ಪರಿಮಳದಂತೆ ಪಸರಿಸಿದೆ ।।

    ಹರಿಕಥಾಮೃತಸಾರ ಪುಸ್ತಕ ।

    ಬರೆದು ಓದುತ ಕೇಳ್ವ ಸುಜನರ ।

    ದುರಿತ ಪರಿಹಾರ ಮುಕುತಿಯವರಿಗೆ -

    ಕರತಲಾಮಲಕ ।। 1 ।।

    ಶ್ರೀ ನೃಸಿಂಹಾಪಾಸಕರಾದ ಶ್ರೀ ಜಗನ್ನಾಥದಾಸರ ವದನಾರವಿಂದದಿಂದ ಹೊರಹೊಮ್ಮಿದ ಶ್ರೀ ಹರಿಕಥಾಮೃತಸಾರದ ಪರಿಮಳವು ಎಲ್ಲೆಡೆ ಹರಡಿದೆ. ಅಂಥಹ   ಶ್ರೀ ಹರಿಕಥಾಮೃತಸಾರವನ್ನು ಭಕ್ತಿಯಿಂದ ಓದುವವ ಮತ್ತು ಬರೆಯುವ ದುರಿತಗಳೆಲ್ಲಾ ಪರಿಹಾರವಾಗಿ ಮುಕ್ತಿಯನ್ನು ಹೊಂದುವರು!

    ಅಂತ್ಯ :

    ಇರುಳುಹಗಲರುವತ್ತು ಘಳಿಗೆಯ ।

    ಪರಿ ಪರಿಯ ದಿವಸದಲಿ ಸಂತತ ।

    ನಿರಂತರ ಸಂಸಾರ-

    ವೆಂಬಬ್ಧಿಯೊಳು ಮುಳುಗಿರದೆ ।।

    ಅರೆಘಳಿಗೆ ಸದ್ಭಕ್ತಿಯಲಿ । ಶ್ರೀ ।

    ಹರಿಕಥಾಮೃತಸಾರ ಸವಿದರೆ ।

    ಸಿರಿ ಮನೋಹರವಿಠಲ-

    ನಡಿದಾವರೆಯ ಸೇರುವನು ।। 17 ।।

    ಶ್ರೀ ಹರಿಕಥಾಮೃತಸಾರವನ್ನು ನಿತ್ಯ ನಿರಂತರ ಅರ್ಥ ಸಹಿತ ಪಾರಾಯಣ ಮಾಡುವವ ಶ್ರೀ ಹರಿ ಚರಣ ಕಮಲವನ್ನು ಸೇರುವನು.

    5. " ಶ್ರೀ ಭೀಮೇಶ ದಾಸ ಕೃತ ಸಂಧಿ ಮಾಲಾ ಸಂಧಿ "

    ಹರಿಕಥಾಮೃತಸಾರ ಸಂಧಿಗ ।

    ಳರಹುವೆನು ತತ್ಕೃನ್ಮಹಾತ್ಮರ ।

    ಚರಣ ಕರುಣಾ ಬಲವಿರಲು -

    ಸನ್ಮಂಗಳಾಚರಣ ।।

    ಸರಸ ಸಂಧಿಯ ಪೇಳ್ದ ಸುಜನರಿಗಿಂ ।

    ಹರುಷ ಕೊಡುವದು ಎಂದು । ಪರಮಾ ।

    ದರದಿ ಕರುಣಾಸಂಧಿ -

    ವ್ಯಾಪ್ತಿಸಂಧಿ ಭೋಜನದ ।। 1 ।।

    ಸಂಧಿ ಸುಖದ ವಿಭೂತಿ ಸಿರಿ ಗೋ ।

    ವಿಂದನಾಜ್ಞದಿ ಪೇಳಿದರು । ಆ ।

    ನಂದ ನೀಡುವ ಪಂಚ -

    ಮಹಾಯಜ್ಞದ ಸುಸಂಧಿಯನು ।।

    ಚಂದದಿಂದಲಿ ಪಂಚತನ್ಮಾ ।

    ತ್ರೆ೦ದು ಕರಿಸುವ ಸಂಧಿ ಪೇಳ್ದರು ।

    ಇಂದಿರೇಶನ ಪ್ರೀತಿ -

    ಬಡಿಸುವ ಮಾತೃಕಾಸಂಧಿ ।। 2 ।।

    ವರ್ಣಪ್ರಕ್ರಿಯಾಸಂಧಿ ಸುಜನರ ।

    ಕರ್ಣಗಳಗತಿ ಶ್ರಾವ್ಯವೆನಿಪುದು ।

    ತೂರ್ಣದಲಿ ಸರ್ವಪ್ರತೀಕ -

    ಧ್ಯಾನಪ್ರಕ್ರಿಯವ ।।

    ನಿರ್ಣಯಿಸಿದರು ನಾಡಿಯನು । ಸಂ ।

    ಪೂರ್ಣ ಗುಣಾನಾಮಸ್ಮರಣೆಯನು ।

    ಸ್ವರ್ಣನಾಭಿಪ್ರಮುಖ -

    ಜೀವನಪ್ರಕ್ರಿಯಾ ಸಂಧಿ ।। 3 ।।

    ವಾಸುದೇವನ ಕರುಣದಿಂದಲಿ ।

    ಶ್ವಾಸಸಂಧಿಯ ಪೇಳಿದರು । ಜಗ ।

    ದೀಶನಿಂದಲಿ ದತ್ತ-

    ಸ್ವಾತಂತ್ರಾಖ್ಯ ಸಂಧಿಯನು ।।

    ಲೇಸೆನಿಪ ಸ್ವಾತಂತ್ರ್ಯ ವಿಭಜನ ।

    ದಾಸ ಸಾರಿದರೆಲ್ಲ । ಬಿಂಬೋ ।

    ಪಾಸನದ ಸಂಧಿಯನು -

    ಹರಿಯ ಸ್ತೋತ್ರ ಸಂಧಿಯನು ।। 4 ।।

    ಸುಗುಣ ತರತಮಭಾವಸಂಧಿಯು ।

    ಮಿಗಿಲು ಆವೇಶಾವತಾರವನು ।

    ನಗಧರನ ಭಕ್ತಾಪರಾಧ-

    ಸಹಿಷ್ಣು ಸಂಧಿಯನು ।।

    ಹಗಲು ಇರಳೆನ್ನದಲೆ ಪಿರಿಯರು ।

    ಬಗೆಬಗೆಯ ಶಾಸ್ತ್ರವನು ಶೋಧಿಸಿ ।

    ಸುಗತಿಪ್ರದ ಬೃಹತ್ತಾರತಮ್ಯದ 

    ಸಾಧನದ ಸಂಧಿ ।। 5 ।।

    ದೇವನಂಘ್ರಿಯ  ನೆನೆವುತಲಿ ಕ್ರೀ ।

    ಡಾವಿಲಾಸವರೋಹ ಸಂಧಿಯ ।

    ದೇವತಾನುಕ್ರಮಣಿಕಾ -

    ವಿಘ್ನೇಶ ಸಂಧಿಯನು ।।

    ಭಾವವುಳ್ಳಣು ತಾರತಮ್ಯವ ।

    ತಾ ವಿರಚಿಸುತ ದೈತ್ಯ ತರತಮ ।

    ಭಾವ ನೈವೇದ್ಯ ಪ್ರಕರಣದ -

    ಸಂಧಿ ಪೇಳಿದರು ।। 6 ।।

    ನೀರಜಾಕ್ಷನ ನೆನೆದು । ಕಕ್ಷಾ ।

    ತಾರತಮ್ಯದ ಸಂಧಿ ಪೇಳುತ ।

    ಶ್ರೀರಮಣಗರ್ಪಿಸುತಲಿರೆ -

    ಭೀಮೇಶ ವಿಠ್ಠಲನ ।।

    ಚಾರುಚರಣವ ನೆನೆಯುತನುದಿನ ।

    ಧಾರುಣೀಯೊಳು ಮೆರೆದ ನಮ್ಮಯ ।

    ಗುರು ಧೊರೆ ಜಗನ್ನಾಥದಾಸಾಖ್ಯ -

    ದಾಸರ ನೆನೆವೆನನವರತ ।। 7 ।।

    ನಾಡಿನ ಸಜ್ಜನ ಬಂಧುಗಳೆಲ್ಲರೂ ಪ್ರತಿನಿತ್ಯವೂ ಶ್ರೀ ಸಹ್ಲಾದಾಂಶ ಜಗನ್ನಾಥದಾಸಾರ್ಯ ಕೃತ ಶ್ರೀ ಹರಿಕಥಾಮೃತಸಾರ ಓದಿ - ಬರೆದು ಶ್ರೀ ಹರಿಯ ಪರಮಾನುಗ್ರಹಕ್ಕೆ ಪಾತ್ರರಾಗೋಣ......

    " ವಿಶೇಷ ವಿಚಾರ "

    ನನ್ನ ತಂದೆಯವರಾದ ಪ್ರಾತಃಸ್ಮರಣೀಯ ಪರಮಪೂಜ್ಯ ಶ್ರೀ ಹಾವೇರಿ ಗುಂಡಾಚಾರ್ಯರು ತಮ್ಮ ಅಮೃತ ಹಸ್ತಗಳಿಂದ ನಿರ್ಮಿಸಿ - ಪೂಜಿಸಿದ ರಜತ ಶ್ರೀ ವೇಣುಗೋಪಾಲ ಕೃಷ್ಣದೇವರು.

    ಈ ಶ್ರೀ ವೇಣುಗೋಪಾಲ ಕೃಷ್ಣದೇವರನ್ನು ಕ್ರಿ ಶ 2008 ರಲ್ಲಿ ನಿತ್ಯ ಪೂಜೆ ಮಾಡೆಂದು ಕೊಟ್ಟರು - ಅಂದಿನಿಂದ ಇಂದಿನ ವರೆಗೂ ನಿರ್ವಿಘ್ನವಾಗಿ ಪೂಜೆ ನಡೆಯುತ್ತದೆ.

    by ಆಚಾರ್ಯ ನಾಗರಾಜು ಹಾವೇರಿ ಗುರು ವಿಜಯ ಪ್ರತಿಷ್ಠಾನ

    ****1


    1 comment:

    1. ಭಗವಂತನ ಸ್ಮರಣೆ ಮಾಡಲು ಭಕ್ತಿ ಮುಖ್ಯ. ಸಮಯ ಅಲ್ಲ .
      ಮಕ್ಕಳಾಡಿಸುತ, ಸಂಸಾರದಿ ಸುಖವಾಗಿರುವಾಗ, ಬಿಕ್ಕಳಿಸುವಾಗ, ಆಕಳಿಸುವಾಗ, ಎಲ್ಲಾ ಸಮಯದಲ್ಲೂ ದೃಢವಾದ ಭಕ್ತಿಯಿಂದ ಹರಿಸ್ಮರಣೆ ನಿರಂತರ ಮಾಡಬೇಕು.
      (ಹ.ಕ.ಸಾ)
      ಶ್ರೀ ಜಗನ್ನಾಥ ದಾಸರು.

      ಸರಿಯಾದ ಭಗವಂತನ ಜ್ಞಾನವನ್ನು ಹೊಂದಿ ಭಕ್ತಿಯಿಂದ ಭಗವಂತನ ಭಜಿಸಿದರೆ ಭಕ್ತರ ಅಧಿನನಾಗಿರುವ ಕರುಣಾನಿಧಿ ಭಗವಂತ‌‌‌ ಎಂದು ಶ್ರೀ ಹರಿಯ ಕಾರುಣ್ಯವನ್ನು ಸಾರಿದ ದಾಸರು ನಮ್ಮ ನಾಡು ಕಂಡ ಹರಿದಾಸ ಪಂಥದ ಪ್ರಮುಖರಲ್ಲಿ ಒಬ್ಬರು.ಆಧ್ಯಾತ್ಮಿಕ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ ಶ್ರೀ ಜಗನ್ನಾಥ ದಾಸರು ಮಧ್ವಸಿದ್ಧಾಂತದ ಜ್ಞಾನವನ್ನು ಹರಿಕಥಾಮೃತಸಾರವೆನ್ನುವ ಮಹತ್ತರವಾದ ಗ್ರಂಥದಲ್ಲಿ ಸಂಗ್ರಹಿಸಿ ಜನಸಾಮಾನ್ಯರಿಗೆ ಮಹದೂಪಕಾರ ಮಾಡಿದ ಮಹೀಮರು ಶ್ರೀ ಜಗನ್ನಾಥ ದಾಸರು.....ಇಂತಹ ಮಹೀಮರನ್ನು ಶ್ರೀ ಗೋಪಾಲದಾಸರ ಮೂಲಕ ಅನುಗ್ರಹಿಸಿದ ಶ್ರೀ ವಿಜಯದಾಸರ ಕರುಣೆ ಅಪಾರ.

      ಶ್ರೀ ಜಗನ್ನಾಥದಾಸರ ಪಾದಪದ್ಮಗಳಲ್ಲಿ ಅನಂತ ‌ನಮನಗಳು.

      ✍️ಶ್ರೀಕಾಂತ.ಲಿಂಗಸುಗೂರ

      ReplyDelete