Monday 1 July 2019

gurupranesha dasaru 1860 magha amavasya lingasuguru ಗುರುಪ್ರಾಣೇಶ ದಾಸರು



info from sumadhwaseva.com--->

Sri Gurupranesha Dasaru

Place – Lingasugooru

Father – Pranesha Dasaru

Period – 1785-1860

Janma Naama – Venkata Dasa

Ankitha – Guru Pranesha Vittala


Gurugalu – Sri Pranesha Dasa  (Father)
Punya Dina – Maga Bahula Amavasya

know more

GURU PRAANESHA VITTALA DAASARU -CLICK

Original name: shri venkata dAsaru
ankita: taken from his father, shri prANEsha viTTala dAsaru. 
vidyA gurugaLu: shri jagannAtha dAsaru

He performed sEve to shri jagannAtha dAsaru and studied under him for several years. He took dAsa dIkshe from his father as per the orders of shri jagannAtha dAsaru only. 

When he finished his education and Seve with jagannAtha dAsaru and returned to lingasuguru, jagannAtha dAsaru had gifted him a tambUri which can be seen even today at the Sannidhi of shri varadEndra tIrtharu. 

Being an aparOxsha jnAni, he had predicted to his son that he would do dEha tyAga on mAgha amAvAsya 6 months ahead of time. 

He has composed many dEvara namas. 
**********


Sri Guru Pranesha Vittala Dasa1785-1860Venkata DasaGuru Pranesha VittalaSri Pranesha DasaLingasuguruMaga Bahula Amavasya

ಶ್ರೀ ಗುರುಪ್ರಾಣೇಶವಿಠಲರು

ಪೂರ್ವನಾಮ : ವೆಂಕಟದಾಸರು
ಕಾಲ 1785- 1860
ಲಿಂಗಸೂಗೂರು

ಇವರು ಶ್ರೀ ಪ್ರಾಣೇಶದಾಸರ ಪುತ್ರರು. ಇವರನ್ನು ಶ್ರೀ ಪ್ರಾಣೇಶವಿಠಲರು ತಮ್ಮ ಗುರುಗಳಾದ ಶ್ರೀ ಜಗನ್ನಾಥದಾಸರ ಬಳಿ 12 ವರ್ಷಗಳ ಕಾಲ ಗುರುಗಳ ಸೇವೆಗಾಗಿ ಬಿಟ್ಟರು... ಆಗ ಶ್ರೀ ವೆಂಕಟದಾಸರು ವ್ಯಾಸಂಗವನ್ನು ಮಾಡಿ, ಸುಧಾಪಾಠವನ್ನು, ಮೋದತೀರ್ಥರ ತತ್ವವನ್ನು ಜೊತೆಗೆ ದಾಸ ಸಾಹಿತ್ಯದ ಪ್ರಮೇಯಗಳನ್ನೂ ಕಲೆತರು.. ಆಗ ಬಹಳ ಸಂತೃಪ್ತರಾಗಿ ಶಿಷ್ಯನಮೇಲೆ ವಾತ್ಸಲ್ಯಾತಿಶಯದಿಂದ ತಮ್ಮ ಕೈಯಲ್ಲಿದ್ದ ತಂಬೂರಿಯನ್ನು ಕೊಟ್ಟು ದಾಸಪಂಥವನ್ನು ಮುಂದೆವರಿಸಲು ಆಶೀರ್ವಾದ ಮಾಡಿದರು... ಈ ತಂಬೂರಿ ಇವತ್ತಿಗೂ ಸಹಾ ದಾಸರ ವಂಶಸ್ಥರ  ಮನೆಯಲ್ಲಿ ಪೂಜೆಗೈಯುತ್ತಿದೆ..... 

ವೆಂಕಟದಾಸರು ಕುಲಕರ್ಣಿ ವೃತ್ತಿಯಲ್ಲಿದ್ದರು.. ಒಂದು ರೋಮಾಂಚಕವಾದ ಸಂಘಟನೆ  ವೆಂಕಟದಾಸರ ಜೀವನವನ್ನು ಬದಲಾಯಿಸಿ ವೈರಾಗ್ಯದೆಡೆ ಕರೆದೊಯ್ಯಿದೆ ಅಂತ ಹೇಳ್ತಾರೆ.. ಒಮ್ಮೆ ದಾಸರು ಕುದುರೆಯಮೇಲೆ ರಾಮಾಪುರವೆಂಬ ಗ್ರಾಮಕ್ಕೆ ಬೇರೊಂದು ಕೆಲಸದ ನಿಮಿತ್ತವಾಗಿ ಹೋಗುವಾಗ ಗಾಢವಾದ ಈಚಲು ಗಿಡಗಳ ಮಧ್ಯದಲ್ಲಿಂದ ಒಂದು ಹುಲಿ, ಇವರೆದುರ್ಗಡೆ ಬಂದು ನಿಲ್ಲಿತು... ಆದರೇ ಆ ಹುಲಿ ವೆಂಕಟದಾಸರು ಹತ್ತಿ ನಿಂತ ಕುದುರೆಯನ್ನು ಮಾತ್ರ ಹಿಂಸಿಸಿ ಹೊರಟುಹೋಯಿತು... ಇದನ್ನು ಕಂಡು ದಾಸರು ಇದು ನನಗೆ ಪುನರ್ಜನ್ಮ ವೇ ಸರಿ..  ಅಂತ ನೆನೆಸಿ ಕುಲಕರ್ಣಿ ವೃತ್ತಿಯನ್ನು ಬಿಟ್ಟು  ಆಧ್ಯಾತ್ಮಿಕದ ಹಾದಿ ಹಿಡಿದರು... 

ವೆಂಕಟದಾಸರಿಗೆ ತಮ್ಮ ತಂದೆಯವರಾದ ಶ್ರೀ ಪ್ರಾಣೇಶದಾಸರು, ಗುರುಪ್ರಾಣೇಶವಿಠಲ ಎಂದು ಅಂಕಿತ ಪ್ರದಾನ ಮಾಡುತ್ತಾರೆ.....  ಇವರ ಜೀವನ  ಈಗಿನ ದಾಸರಿಗೆ ಮಾರ್ಗದರ್ಶಕ .. ಇವರ ಕೃತಿಗಳು 18 ಮಾತ್ರ ಲಭ್ಯವಿದೆ ಅಂತ ಹೇಳ್ತಾರೆ.. ಮುಂದೆ ಕೃತಿ ರಚನೆ ಮಾಡುವಾಗ ತಂದೆಯವರಾದ ಪ್ರಾಣೇಶವಿಠಲರು - ಹಿರಿಯರ,ಅಪರೋಕ್ಷಜ್ಙಾನಿಗಳ ಪದಗಳನ್ನು ನೋಡಿಕೊಂಡರೇ ಸಾಲದೇ ಸ್ವ-ರಚನೆ ಬೇಕೇ???..... ಅಂತ ಆಜ್ಙಾಪಿಸಿದಾಗ... ಇವರು ಮುಂದೆ ಕೃತಿರಚನೆಯನ್ನು ಮಾಡಲಿಲ್ಲವಂತೆ... ಎಷ್ಟು ಗುಪ್ತಸಾಧಕರಲ್ಲವೇ..... 

ಇವರ ಸಾಹಿತ್ಯ  ಕನ್ನಡ-ಸಂಸ್ಕೃತ ದ ಮಿಶ್ರಿತವಾಗಿತ್ತು... ಇವರು ಕಪಿಲನಾಮಕ ಪರಮಾತ್ಮನ, ವೇದವ್ಯಾಸದೇವರ, ಮಹಿದಾಸರೂಪದ, ಹಯಗ್ರೀವನ ಸ್ತುತಿರೂಪವಾಗಿ ಕೃತಿರಚನೆ ಮಾಡಿದ್ದಾರೆ... ಹಾಗೇ ದೇಸೀ ಭಾಷೆಯ ಛಂದದಲ್ಲಿ ಸುವ್ವಿಪದವೂ ರಚನೆ ಮಾಡಿದ್ದಾರೆಂದು ಹೇಳ್ತಾರೆ... 

ಇವರ ಪ್ರಖ್ಯಾತ  ಕೃತಿ ಪವನ ಸಂಭೂತ ಒಲಿದು ತವಕದಿಂ ಕಾಯಬೇಕು  ರಾಯರ, ಸತ್ಯಪರಾಯಣರ, ಕೃತಿಗಳು ನಾವು ಕೇಳಿದ್ದೆವೆ... 

ಇವರು ಶ್ರೀ ಪ್ರಾಣೇಶವಿಠಲರ ಕುರಿತು, ಶ್ರೀ ಸುಖದಸುಂದರವಿಠಲರ ಕುರಿತೂ ಕೃತಿಗಳು ಮಾಡಿದ್ದಾರೆ.. ಇವರ ಶಿಷ್ಯ ಸಂಪತ್ತಿನಲಿ ಶ್ರೀಶಪ್ರಾಣೇಶವಿಠಲರು, ಮೋದವಿಠಲರು, ಸವದತ್ತಿ ಲಂಗೋಟಿದಾಸರು ಪ್ರಮುಖರಾಗಿದ್ದಾರೆ... 

ಇವರ ಕುರಿತು ಶ್ರೀ ಗೊರೆಬಾಳ ಹನುಮಂತರಾಯರು  ಹರಿದಾಸಭಾರತಿ ಮಾಸಪತ್ರಿಕೆಯಲ್ಲಿ ಪ್ರಕಟಮಾಡಿದ್ದಾರೆ... ಅಪರೋಕ್ಷಜ್ಞಾನಿಗಳ ಕೃತಿಗಳು ಹಾಡುತ್ತ, ಅವುಗಳ ಚಿಂತನೆ ಮಾಡುತ್ತಾ, ತಂದೆಯ ಹಾದಿಯಲ್ಲೇ ಹಾಗೂ ಶ್ರೀ ಜಗನ್ನಾಥ ದಾಸರ ಅನುಗ್ರಹದಂತೆ ದಾಸಪಂಥವನ್ನು ಮುಂದೆವರಿಸುತ್ತಾ ಸದಾ ಪರಮಾತ್ಮನ ಧ್ಯಾನದಲ್ಲಿರುವ ಶ್ರೀ ದಾಸರು ಅವರ ಮರಣದ ವಿಷಯವನ್ನು ಮುಂಚಿತವಾಗೇ ತಿಳಿದ ಮಹಾನುಭಾವರಾಗಿದ್ದರು... ಅನೇಕ ಪವಾಡಗಳನ್ನೂ ಮಾಡಿದರೆಂದು ತಿಳಿದುಬರುತ್ತದೆ...  ಇಂಥಹಾ ಗುಪ್ತಸಾಧಕರ ಕರುಣಾಕಟಾಕ್ಷವೀಕ್ಷಣಾ ವೀಚಿಕ ಈಷಣ್ಮಾತ್ರವಾದರೂ ನಮ್ಮಂತವರ ಮೇಲೆ ಬಿದ್ದಲ್ಲಿ... ನಮ್ಮ ಜನ್ಮ ಧನ್ಯವೇ ಸರಿ..

ದಾಸರ ಕರುಣೆದಿಂದ ದಾಸರ ಸೇವೆಯಂತೆ ದಾಸರ ಅನುಗ್ರಹದಿಂದ ದಾಸರ ಆರಾಧನಾ ಶುಭಸಂದರ್ಭದಲಿ ಬರೆದ ಈ  ಲೇಖನವನ್ನು
ಅಸ್ಮದ್ ಪತ್ಯಂತರ್ಗತ, ಭಾರತೀರಮಣ ಮುಖ್ಯಪ್ರಾಣಾಂತರ್ಗತ ಶ್ರೀ ಲಕ್ಷ್ಮೀ ವೆಂಕಟೇಶ ಪದಪದ್ಮಗಳಲ್ಲಿ ಸಮರ್ಪಣೆ ಮಾಡುತ್ತಾ...

-Smt. Padma Sirish

ನಾದನೀರಾಜನದಿಂ ದಾಸಸುರಭಿ 🙏🏽
***


6 march 2019 - ಇಂದು ಮಹಾನುಭಾವ ರಾದ ಶ್ರೀ ಪ್ರಾಣೇಶದಾಸರ ಪುತ್ರರು ಆದ ಶ್ರೀ ಗುರುಪ್ರಾಣೇಶದಾಸರ ಆರಾಧನೆ..
ಇವರ ಆರಾಧನೆ ಯನ್ನು ಕಸಬಾ ಲಿಂಗಸೂಗುರು ನಲ್ಲಿ ಅವರ ವಂಶಸ್ಥರು ಹಾಗು ಭಕ್ತರು ಬಹು ವಿಜೃಂಭಣೆಯಿಂದ ಮಾಡುತ್ತಾರೆ.
ಶ್ರೀ ಗುರು ಪ್ರಾಣೇಶದಾಸರ ಮೊದಲ ಹೆಸರು ವೆಂಕಟ ದಾಸರು ಎಂದು.
ಚಿಕ್ಕ ವಯಸ್ಸಿನಲ್ಲೇ ಇವರನ್ನು ಶ್ರೀ ಪ್ರಾಣೇಶದಾಸರು ತಮ್ಮ ಗುರುಗಳು ಹಾಗು ಸ್ವರೂಪೊದ್ದಾರಕರಾದ
ಶ್ರೀ ಜಗನ್ನಾಥ ದಾಸರ ಬಳಿ ಸೇವಾ ವೃತ್ತಿ ಗೆ ಬಿಡಲು ಇವರು ಅವರ ಬಳಿ ಸತತ ೧೨ವರುಷಗಳ ಸೇವೆಯನ್ನು ಮಾಡಿ ಸಕಲ ವಿದ್ಯಾ ಪಾರಂಗತರಾಗಿ,ಅವರ ಸಂಪೂರ್ಣ ಅನುಗ್ರಹ ಕ್ಕೆ ಪಾತ್ರ ರಾಗಿ
ಶ್ರೀ ಜಗನ್ನಾಥ ದಾಸರ ಆಜ್ಞೆ ಯಂತೆ ತಮ್ಮ ತಂದೆಯವರಾದ ಶ್ರೀ ಪ್ರಾಣೇಶದಾಸರ ಬಳಿ ಶ್ರೀ ಗುರುಪ್ರಾಣೇಶವಿಠ್ಠಲ ಎಂದು ಅಂಕಿತ ವನ್ನು ಪಡೆದುಕೊಳ್ಳುತ್ತಾರೆ.ಆ ನಂತರ ಭಗವಂತನ ಅನುಗ್ರಹ ದಿಂದ ಅಪರೋಕ್ಷಿಗಳಾದರು.
ತಾವು ಶ್ರೀ ಜಗನ್ನಾಥ ದಾಸರ ಸೇವೆ ಯನ್ನು ಮಾಡಿ ಹಿಂತಿರುಗಿ ಬರಬೇಕಾದರೆ ಶ್ರೀ ಜಗನ್ನಾಥ ದಾಸರು ಪರಮ ಅನುಗ್ರಹ ಮಾಡಿ ಕೊಟ್ಟ ತಂಬೂರಿ ಇಂದಿಗು ಇದೆ.
ಇದನ್ನು ಕಸಬಾ ಲಿಂಗಸೂಗುರು ನಲ್ಲಿ ಇರುವ ಶ್ರೀವರದೇಂದ್ರ ಗುರುಗಳ ಸನ್ನಿಧಿಯಲ್ಲಿ ಇಂದಿಗು ನೋಡಬಹುದು
ಮಹಾತ್ಮರು ಆದ ಇವರು ಅನೇಕ ಕೃತಿಗಳನ್ನು ರಚನೆ ಮಾಡಿದ್ದಾರೆ.
ಇನ್ನೂ ಅನೇಕ ಕೀರ್ತನೆ ಗಳನ್ನು ಮಾಡಬೇಕು ಅನ್ನುವಷ್ಟರಲ್ಲಿ ತಮ್ಮ ತಂದೆಯವರಾದ ಶ್ರೀ ಪ್ರಾಣೇಶದಾಸರು ಹಿರಿಯರಾದ ರಚನೆಯನ್ನು ಮಾಡುವದು ಬೇಡವೆಂದು ಅಜ್ಞಾ ಮಾಡಿದ ಕಾರಣದಿಂದ ಅಲ್ಲಿ ಗೆ ನಿಲ್ಲಿಸಿದರು.
ಆನಂತರ ಕೆಲ ಕಾಲ ಲೌಕಿಕ ಕಾರ್ಯ ಗಳನ್ನು  ಮಾಡುವ ಸಮಯದಲ್ಲಿ,
ಯಾವುದೋ ಒಂದು ಕೆಲಸದ ಸಲುವಾಗಿ ಅಶ್ವಾರೂಢರಾಗಿ ತಮ್ಮ ಕುಲಕರ್ಣಿ ಗ್ರಾಮವಾದ ರಾಮಪುರಕ್ಕೆ ಹೋಗುತ್ತಾ ಇರಲು ಮಾರ್ಗದಲ್ಲಿ ನಿಭಿಡವಾದ ಈಚಲ ಪೊದೆಯಿಂದ ಒಂದು ವ್ಯಾಘ್ರವು ಬಂದು ಅವರ ಕುದುರೆ ಯನ್ನು ಹಿಂಸಿಸಿ ಇವರಿಗೆ ಮಾತ್ರ ಏನನ್ನು ಮಾಡದೇ ಹಿಂತಿರುಗಿ ಹೋಯಿತು.ಅವಾಗ್ಗೆ ಇವರ ತಲೆಯ ಮೇಲಿದ್ದ ರುಮಾಲು ಕೆಳಗೆ ಬಿತ್ತು.
ಆ ತಕ್ಷಣ ದಿಂದ ಲೌಕಿಕ ವನ್ನು ಸಂಪೂರ್ಣ ತ್ಯಜಿಸಿ ಭಗವಂತನ ಧ್ಯಾನ ದಲ್ಲಿ ತಮ್ಮ ಜೀವನವನ್ನು ಕಳೆದರು..
ಈ ಮಹನೀಯರು ತಮ್ಮ ಕಾಲ ಸಮಾಪ್ತಿಯ ಸಮಯವನ್ನು ತಿಳಿದು
ಆರು ತಿಂಗಳ ಮುಂಚೆ
ತಮ್ಮ ಮಕ್ಕಳನ್ನು ಕರೆದು
ನಾವು ಇಂದಿನಿಂದ ಆರು ತಿಂಗಳು ಸರಿಯಾಗಿ ಮಾಘ ಬಹುಳ ಅಮವಾಸ್ಯೆ ನಮ್ಮ ದೇಹತ್ಯಾಗ ವನ್ನು ಮಾಡುತ್ತೇವೆ.ನಮ್ಮ  ಈ ಭೌತಿಕ ದೇಹ ಯಜ್ಞ ಕ್ಕೆ ಬೇಕಾಗುವ ಜಾಗವನ್ನು ಶುಚಿಭೂರ್ತವನ್ನಾಗಿ ಮಾಡಿ,ಅಲ್ಲಿ ಗಚ್ಚಿನ ಕಟ್ಟಿ ಯನ್ನು ಕಟ್ಟಿಸಿ,ಶ್ರೀ ತುಲಸಿ ಚಂದನ ಕಾಷ್ಟ ಮೊದಲಾದ ತಕ್ಕ ಯಜ್ಞ ದ್ರವ್ಯಗಳ ಸಂಗ್ರಹಣೆ ಮಾಡಬೇಕು ಎಂದು ಅಜ್ಞಾಪಿಸಿದರು...
ಆದರ ನಂತರ ಯಾವ ಯೋಚನೆ ಇಲ್ಲದೆ
ಮಾಘ ಬಹುಳ ಅಮವಾಸ್ಯೆ ಯಂದು ಶ್ರೀ ಕೃಷ್ಣಾ ಭಾಗೀರಥಿ ಜಲವನ್ನು ತರಿಸಿ, ಸ್ನಾನವನ್ನು ಮಾಡಿ ಊರ್ಧ್ವಪುಂಡ್ರ ಧಾರಣವನ್ನು ಮಾಡಿ ತಮಗೆ ಪರಮ ಪ್ರಿಯ ಶಿಷ್ಯರಾದ,ತಮ್ಮ ಸೋದರಳಿಯರಾದ ಅಪರೋಕ್ಷ ಜ್ಞಾನಿಗಳಾದ ಶ್ರೀಶ ಪ್ರಾಣೇಶದಾಸರನ್ನು ಕರೆದು ಅವರಿಂದ ಶಾಲಿಗ್ರಾಮ ತೀರ್ಥ ವನ್ನು ಪ್ರಾಶನ ಮಾಡಿ
ಅವರ ಶಿರದಲ್ಲಿ  ತಮ್ಮ ಕರವನ್ನು ಇಟ್ಟು
ಈ ಕರಗಳು ೧೨ವರುಷಗಳ ಕಾಲ ಶ್ರೀ ಜಗನ್ನಾಥ ದಾಸರ ಸೇವೆ ಯನ್ನು ಮಾಡಿರುವವು.. ಅಂತಹೇಳಿ ಅವರಿಗೆ ಆಶೀರ್ವಾದ ಮಾಡಿ ಸಕಲ ಜನರಿಂದ ಅಪ್ಪಣೆ ತೆಗೆದುಕೊಂಡು ಯಾವ ತರಹದ ರೋಗೊಪದ್ರವಗಳಿಲ್ಲದೇ,
ಸ್ಥಿರ ವಾದ ಆಸನದಲ್ಲಿ ಕುಳಿತು ಲಯ ಚಿಂತನೆ ಮಾಡುತ್ತಾ,ವೈಕುಂಠಕ್ಕೆ ಪ್ರಯಾಣ ಬೆಳೆಸಿದರು..
ಈಗಲೂ
ಅವರು ಕೂಡುತ್ತಾ ಇದ್ದ  ಕಂಬಕ್ಕೆ  ಅಲಂಕಾರ ಗಳನ್ನು ಮಾಡಿ ಅವರ ಆರಾಧನೆಯನ್ನು ಕಸಬಾ ಲಿಂಗಸೂಗುರು ನಲ್ಲಿ ಮಾಡುತ್ತಾರೆ...
ಶ್ರೀ ಗುರು ಪ್ರಾಣೇಶದಾಸರ ಅಂತರ್ಯಾಮಿಯಾದ ಶ್ರೀ ಹರಿ ಪ್ರೀತಿಯಾಗಲಿ.
ಶ್ರೀ ಕೃಷ್ಣಾರ್ಪಣಮಸ್ತು..

ತಮ್ಮ ಬಳಿ ೧೨ವರುಷ ಇದ್ದು ಸೇವೆ ಮಾಡಿ ಹಿಂತಿರುಗಿ ಹೋಗಬೇಕಾದಾಗ ದಾಸರು ತಮ್ಮ ಬಳಿ ಇದ್ದ ತಂಬೂರಿ ಹಾಗು ಈ ಪ್ರತಿಮೆ ಗಳನ್ನು ಶ್ರೀ ಗುರು ಪ್ರಾಣೇಶದಾಸರಿಗೆ ಕೊಟ್ಟರು.


ಪೋಷಿಸೆನ್ನಾ ಜೀಯಾ| ಗುರು ಪ್ರಾಣೇಶ ದಾಸರಾಯ|
ಶ್ರೀಶನ ಗುಣ ಸಂತೋಷದಿ ಪಾಡುವ ದಾಸ ಕುಲಾಗ್ರಣಿಯೆ|
ವಾಸುದೇವನ ಪುರಕ್ಕೆ ತೆರಳಿದರು|
ಶ್ರೀಶನ ಪ್ರಿಯ ಗುರು ಪ್ರಾಣೇಸದಾಸರು|
by prasadacharya

*******

ಪವನಾ ಸಂಭೂತಾ ಒಲಿದೂತವಕಾದಿ ಕಾಯಬೇಕೂ |ಇವನಾರೋ ಎಂದೂ ದಾಸಿನಾ | ಮಾಡದಲೆ ಎನ್ನಾ ||ಪ||

ಹರಿವೇಷಧರನೆ ನರ |ಹರಿಭಕುತರ ಪೊರೆಯುವದಕ್ಕೇ ||ಹರಿಯಂತೆ ಒದಗುವೆಯೋ ನೀನೂ | ಹರಿದಾಸ ನಾನೂ ||1||

ಕಪಿಪಾ ಕಪಿಯಾಜ್ಞದಂತೇ |ಕಪಿಲನ್ನ ಪತ್ನಿಯನ್ನೂ ||ಕಪಿಗಳು ಹುಡುಕಿ ಮಿಡುಕಲು | ಕಾಯ್ದೆ ಆವಾಗಲೂ ||2||

ಅಜಸುತನ ಶಾಪದಿಂದ |ಅಜಗರನಾದ ವನಪಾದ ||ರಜದೀ ಪೂನೀತನ ಮಾಡಿದನೇ | ಅಜಪದವಿಗೆ ಬಹನೇ ||3||

ಕಲಿಯುಗದಿ ಕವಿಗಳೆಲ್ಲಾ |ಕಲಿಯಾ ಬಾಧೆಗೆ ಬಳಲಿ |ಕಲಿವೈರಿ ಮುನಿಯೆಂದೆನಿಸಿದೇ | ಕಲಿಮಲವಾ ಕಳೆದೆ ||4||

ಗುರು ಪ್ರಾಣೇಶ ವಿಠಲಾ |ಗುರುವರನೆಂಬೊ ಜ್ಞಾನಾ ||ಗುರು ಮಧ್ವರಾಯಾ ಕರುಣಿಸೋ | ಗುರುಮತಿಯನು ಬಿಡಿಸೋ ||5||
********

ದಿನಾಂಕ : 13.03.2021 ಶನಿವಾರ ಮಾಘ ಬಹುಳ ಅಮಾವಾಸ್ಯೆಯಂದು -  
" ಶ್ರೀ ರಾಯರ - ಶ್ರೀ ವರದೇಂದ್ರತೀರ್ಥರ ಅಂತರಂಗ ಭಕ್ತರೂ, ಶ್ರೀ ಮರುದಂಶ ಪ್ರಾಣೇಶದಾಸರ ಪುತ್ರರೂ ಆದ ಶ್ರೀ ಗುರು ಪ್ರಾಣೇಶದಾಸರ ಆರಾಧನಾ ಮಹೋತ್ಸವ., ಲಿಂಗಸೂಗೂರು "
" ಪ್ರಸ್ತಾವನೆ "
" ಹರಿದಾಸ ಸಾಹಿತ್ಯದ ಉಗಮ "
ದಾಸ ಸಾಹಿತ್ಯದ ಮೂಲ ಬೇರುಗಳನ್ನು ನಾವು ಋಗ್ವೇದದ ಮೂಲ ಮಂತ್ರಗಳಲ್ಲಿಯೇ ಕಾಣಬಹುದು. 
ಋಗ್ವೇದದ ಋಷಿಗಳು ಸೃಷ್ಟಿಯ ಹಾಗು ಹೋಗುಗಳಲ್ಲಿಯೂ -
ಪ್ರಕೃತಿಯ ಪಟ ಪರಿವರ್ತನೆಯಲ್ಲಿಯೂ - ಮಾನವೀಯ ಜೀವನದ ಪತನ - ಪುನರುತ್ಥಾನಗಳಲ್ಲಿಯೂ " ಪರಾಶಕ್ತಿ " ಯ ಕೈವಾಡವನ್ನು ಕಂಡು ಹೃದಯ ತುಂಬಿ - ಬಾಯಿ ತುಂಬಿ ಕೊಂಡಾಡಿದ್ದಾರೆ. 
" ಋಗ್ವೇದ " ದ ವಿಷ್ಣು ಸೂಕ್ತ - ಇಂದ್ರ ಸೂಕ್ತ - ಅಗ್ನಿ ಸೂಕ್ತಗಳಲ್ಲಿ ಆ ದೇವದೇವನನ್ನು  ಕುರಿತು ಭಕ್ತಿ ಭಾವ ಭರಿತರಾಗಿ ಪ್ರಾಗೈತಿಹಾಸಿಕ ಕಾಲದ ಆ ಆದಿ ಮುನಿಗಳು ದಾಸ್ಯ ಭಾವದಿಂದ ಆತ್ಮ ನಿವೇದನೆ ಮಾಡಿದ್ದು ಕಂಡು ಬರುತ್ತದೆ. 
ಮುಂದೆ ಉಪನಿಷತ್ಕಾಲದಲ್ಲಿ ಈ ದಾಸ ಭಾವನೆಯು ಇನ್ನೂ ಅಭಿವೃದ್ಧಿ ಹೊಂದಿ ಪುರಾಣಗಳಲ್ಲಿ ಪರಿಪೂರ್ಣತೆಯನ್ನು ಕಂಡಿದೆ. 
ಶ್ರೀಮದ್ಭಾಗವತದಲ್ಲಿ ಯಂತೂ ಶ್ರೀ ಪ್ರಹ್ಲಾದರಾಜರು ಒಂಬತ್ತು ಅಂಗಗಳಲ್ಲಿ ( ನವ ವಿಧ ಭಕ್ತಿ ) ದಾಸ್ಯವನ್ನೂ ಪರಿಗಣಿಸಿದ್ದಾರೆ. 
ಶ್ರೀಮದಾನಂದತೀರ್ಥರು ಬಹು ಕಾಲದಿಂದ ರೂಢವಾಗಿ ಬಂದ " ಸೋsಹಂ " ಭಾವವನ್ನು ಖಂಡಿಸಿ " ದಾಸೋsಹಂ " ಭಾವನೆ ಈಶ ಸೇವನೆಗಳಿಂದಲೇ " ಮುಕ್ತಿ " ಯೆಂದು ಯುಕ್ತಿಯುಕ್ತವಾಗಿ ಸಾಧಿಸಿ ತೋರಿಸಿದರು. 
ಶ್ರೀ ಸರ್ವಜ್ಞಾಚಾರ್ಯರ ಪ್ರಥಮ ಅವತಾರವಾದ ಶ್ರೀ ಹನುಮದ್ರೂಪದಲ್ಲಿ ರಾವಣನ ಆಸ್ಥಾನಕ್ಕೆ ಹೋದಾಗ... 
" ದಾಸೋsಹಂ ಕೋಸಲೇಂದ್ರಸ್ಯ 
ರಾಮಸ್ಯ ಹಿ ಮಹಾತ್ಮನಃ " 
ಯೆಂದು ನಿಸ್ಸಂಕೋಚವಾಗಿ ನುಡಿದು ಆ ಶ್ರೀ ಪ್ರಾಣದೇವರೇ ಶ್ರೀಕಾರ ಹಾಕಿದ್ದಾರೆ. 
ಶ್ರೀ ಶ್ರೀ ದಾಸ ಸಾಹಿತ್ಯಕ್ಕೆ ಶ್ರೀಮದಾನಂದತೀರ್ಥರು ತಮ್ಮ ಗ್ರಂಥಗಳಲ್ಲಿ ಈ ಭಗವದ್ದಾಸ್ಯ ಭಾವಕ್ಕೆ ಪುಷ್ಟಿ ವೈಶಿಷ್ಟ್ಯಗಳನ್ನು ತಂದು ತೋರಿಸುವ ಅನೇಕ ಪದ್ಯಗಳನ್ನು ಶ್ರುತಿ - ಸ್ಮೃತಿ - ಪುರಾಣಗಳಿಂದ ಎತ್ತಿ ತೋರಿಸಿ ಸಂಗ್ರಹಿಸಿ " ಕೃಷ್ಣಾಮೃತ ಮಹಾರ್ಣವಾ " ದಿ ಗ್ರಂಥಗಳಲ್ಲಿ ಕೂಡಿಸಿ ಇಟ್ಟಿದ್ದಾರೆ. 
ತ್ವಯೋಪಭುಕ್ತ ಸೃಗ್ಗಂಧ 
ವಾಸೋಲಂಕಾರಚರ್ಚಿತಾಃ ।
ಉಚ್ಛಿಷ್ಟ ಭೋಜಿನೋ ದಾಸಾ:
ತವ ಮಾಯಾ೦ಜಯೇಮಹಿ ।।
ಮುಂತಾದ ಅಭಿಯುಕ್ತೋಕ್ತಿಗಳನ್ನು ಉದಾಹರಿಸಿ ದಾಸ್ಯ ಭಾವದ ಮೇಲ್ಮ - ಮಹತಿ ಮುಂತಾದ ಗುಣಗಳನ್ನು ಪ್ರಖ್ಯಾಪಿಸಿದ್ದಾರೆ. 
" ಪಂಚರಾತ್ರಾಗಮ " ದಲ್ಲಿ ಸ್ವಯಂ ಶ್ರೀ ಚತುರ್ಮುಖ ಬ್ರಹ್ಮದೇವರು ಭಗವಂತನನ್ನು ಕುರಿತು.. 
" ತವ ದಾಸ್ಯೈಕ ಭಾವೇಸ್ಯಾತ್ 
ಸದಾ ಸರ್ವತ್ರ ಮೇ ರತಿ: "
" ನಿತ್ಯಂ ಕಿಂಕರ ಭಾವೇನ 
ಪರಿ ಗೃಹ್ಣೀಷ್ವಮಾಂ ವಿಭೋ "
" ಕಿಂಕರೋsಸ್ಮಿ ಹೃಷೀಕೇಶ 
ಭೂಯೋಭೂಯೋsಸ್ಮಿ ಕಿಂಕರಃ "
" ಚರೇಯಂ ಭಗವತ್ಪಾದ 
ಪರಿಚರ್ಯಾ ಸುವೃತ್ತಿಷು "
" ತವ ದಾಸೋsಸ್ಮಿ ಕೇವಲಂ "
ಮುಂತಾದ ಅನೇಕ ವಚನಗಳಿಂದ ತಮ್ಮ ದಾಸ್ಯ ಭಾವವನ್ನು ನಿವೇದನ ಮಾಡಿದ್ದಾರೆ. 
ಶ್ರೀಮನ್ಮಧ್ವಾಚಾರ್ಯರು " ಆನಂದತೀರ್ಥ ಅಂಕಿತ " ದಲ್ಲಿ ರಚಿಸಿದ ಶ್ರೀಮದ್ದ್ವಾದಶ ಸ್ತೋತ್ರವು ದಾಸ್ಯ ಭಾವದ ಅತ್ಯುಪಯುಕ್ತವಾದ ಇತ್ತೀಚಿನ ಯುಗದ ಪ್ರಥಮಾವಿಷ್ಕಾರವಾಗಿದೆ. 
ಈ ಶ್ರೀ ದ್ವಾದಶ ಸ್ತೋತ್ರದ ಉದ್ದಕ್ಕೂ.. 
" ಭವ ಮಮ ಶರಣಂ "
" ಕರುಣಾಪೂರ್ಣ ವರಪ್ರದಚರಿತಂ ಜ್ಞಾಪಯ ಮೇ ತೇ "
" ಪ್ರೀಣಯಾಮೋ ವಾಸುದೇವಂ "
ಎಂಬ ಮುಂತಾದ ಪಾದ ಪಲ್ಲವಿಗಳಲ್ಲಿ ದಾಸ್ಯ ಭಾವದ ಆತ್ಮಾರ್ಪಣೆಯ ಆರ್ತ ಭಾವನೆಯು ಅನುರಣಿಸುತ್ತದೆ. 
ಶಾಸ್ತ್ರ ಸಂಸ್ಕಾರದಿಂದ ಹದಗೊಂಡ ಹೃದಯದಲ್ಲಿ ಉಕ್ಕುವ ಭಗವದ್ಭಕ್ತಿಗೆ ಗೀತ ರೀತಿಯಲ್ಲಿ ಅಭಿವ್ಯಕ್ತಿಗೆ ಅನುವು ಮಾಡಿ ಶ್ರೀ ಸರ್ವಜ್ಞಾಚಾರ್ಯರು ಶ್ರೀ ದಾಸ ಸಾಹಿತ್ಯಕ್ಕೆ ಆದ್ಯ ದಷ್ಟಾರರಾದ ಮಹಾ ಪುರುಷರಾಗಿದ್ದಾರೆ. 
ಪ್ರಥಮಾವತಾರದ್ಲಲಿ ವ್ಯಕ್ತ ಪಡೆದ ದಾಸ್ಯ ಭಾವದ ಸಮ್ಯಗಭಿವ್ಯಕ್ತಿಗೆ ಈ ತೃತೀಯಾವತಾರದಲ್ಲಿ ಸರಸ ಸುಂದರವಾದ ಸಾಹಿತ್ಯಕ ಸುವರ್ಣ ಮಾಧ್ಯಮವನ್ನು ಗೊತ್ತು ಪಡಿಸಿದ ಶ್ರೇಯಸ್ಸು ಶ್ರೀಮದಾನಂದತೀರ್ಥರಿಗೆ ಸಲ್ಲುತ್ತದೆ. 
ಇದಕ್ಕಿಂತ ಪೂರ್ವದಲ್ಲಿ ಶ್ರೀ ಶಂಕರಾಚಾರ್ಯರು - ಶ್ರೀ ರಾಮಾನುಜಾಚಾರ್ಯರು ಮುಂತಾದವರ ಕೃತಿ ಮಾತುಗಳಲ್ಲಿ ಭಕ್ತಿ ಭಾವವು ಹೂತು ನಿಂತಂತೆ ತೋರಿದರೂ - ಅವುಗಳ ಅಂತರಂಗದಲ್ಲಿ ಅಡಗಿದ ಆತ್ಮೈಕ ಭಾವನೆಯ ಬರಸಿಡಿಲಿನಿಂದ ಅಲ್ಲಿ ಶ್ರದ್ಧ - ಶ್ರದ್ಧೆಯ - ಶ್ರಾದ್ಧವಾಗಿ ನಿಜವಾದ ದಾಸ್ಯ ಭಾವವು ಹೂತು ಹೋಗಿದೆ - ಹೂಳಿ ಹೋಗಿದೆ. 
ನಿಜವಾದ ಭಗವದ್ಭಕ್ತಿಗೆ ಶ್ರೀ ಮಧ್ವಮತದಲ್ಲಿ ಮಾತ್ರ ಇಂಬು ದೊರೆತದ್ದರಿಂದ ಮಾಧ್ವ ಸಂಪ್ರದಾಯದ ಮುನಿ ಮಹಾನುಭಾವ ಮನುಜ ಮಾನ್ಯ ಸಾಮಾನ್ಯರ ಹೃದಯ ಕ್ಷೇತ್ರಗಳಲ್ಲಿ  ಭಕ್ತಿ ಭಾಗೀರಥಿಯು ತುಂಬಿ ಹರಿದಿದ್ದಾಳೆ. 
ಶತಕಾನುಶತಕಗಳಿಂದ ವಿಜ್ರುಂಭಿಸಿ ಮೆರೆದಿದ್ದಾಳೆ. 
ಇದನ್ನು ಅನುಲಕ್ಷಿಸಿಯೇ " ಪದ್ಮಪುರಾಣ " ದಲ್ಲಿ ಸಾಕ್ಷಾತ್ ಭಕ್ತಿದೇವಿಯು ತನ್ನ ಸ್ಥಿತಿ ಗತಿ ಪ್ರಗತಿಗಳನ್ನು ತಿಳಿಸುತ್ತಾ... 
" ವೃದ್ಧಿ೦ ಕರ್ನಾಟಕೇ ಗತಾ "
ಯೆಂದು ಕರ್ನಾಟಕದಲ್ಲಿಯೇ ಹುಟ್ಟಿ ಬೆಳೆದು ಬೆಳಗಿದ ಭಕ್ತಿ ಸಂಪ್ರದಾಯದ ಶುದ್ಧಿ ಸಿದ್ಧಿಗಳನ್ನು ಎತ್ತಿ ಹೇಳಿದ್ದಾಳೆ. 
ಕರ್ನಾಟಕದಲ್ಲಿಯಾಗಲೀ ಅಥವಾ ಸಮಗ್ರ ಭರತಖಂಡದಲ್ಲಿಯಾಗಲೀ ಇಂಥಾ ಶಾಸ್ತ್ರ ಶುದ್ಧವಾದ - ಪ್ರಮಾಣ ಬದ್ಧವಾದ - ವಿರೋಧ ವ್ಯಾಹತಿ ವಿಸಂಗತಿಗಳಿಂದ ಮುಕ್ತವಾದ ಸುಭದ್ರ ಬುನಾದಿಯ ಮೇಲೆ ಭಕ್ತಿ ತತ್ತ್ವದ ಭವ್ಯ ಕಟ್ಟಡವನ್ನು ನಿರ್ಮಿಸಿದ ಇಂಥಾ ದಿವ್ಯ ದೇಶಿಕರು ( ಶ್ರೀ ಸರ್ವಜ್ಞಾಚಾರ್ಯರು ಹೊರತು ) ಬೇರೊಬ್ಬರಿಲ್ಲ ಎಂದು ಎದೆ ತಟ್ಟಿ ಹೇಳಬಹುದು. 
ಆದುದರಿಂದಲೇ " ದಾಸ ಸಾಹಿತ್ಯ " ಯೆಂದರೆ " ಮಾಧ್ವ ಸಂಪ್ರದಾಯದ ಹರಿದಾಸ ಸಾಹಿತ್ಯ " ಯೆಂದೇ ಸಮೀಕರಣ ಮಾಡುವಂತಾಗಿದೆ. 
ಶ್ರೀ ಸರ್ವಜ್ಞಾಚಾರ್ಯರು ( ಶ್ರೀ ಆನಂದತೀರ್ಥ ); ಶ್ರೀ ನರಹರಿತೀರ್ಥರು ( ರಘುಪತಿ ); ಶ್ರೀ ಜಯತೀರ್ಥರು ( ಶ್ರೀ ರಾಮ ), ಶ್ರೀ ವಿಬುಧೇಂದ್ರ ತೀರ್ಥರು ( ವಿಬುಧರಾಮ ); ಶ್ರೀ ಶ್ರೀಪಾದರಾಜರು ( ರಂಗವಿಠಲ ); ಶ್ರೀ ವ್ಯಾಸರಾಜರು ( ಸಿರಿಕೃಷ್ಣ / ಶ್ರೀಕೃಷ್ಣ ), ಶ್ರೀ ವಾದಿರಾಜರು ( ಹಯವದನ ), ಶ್ರೀ ವಿಜಯೀ೦ದ್ರತೀರ್ಥರು ( ವಿಜಯೀ೦ದ್ರರಾಮ ); ಶ್ರೀ ಗೋವಿಂದ ಒಡೆಯರು ( ಗುರುಕೃಷ್ಣ ) ಶ್ರೀ ಪುರಂದರದಾಸರು ( ಪುರಂದರವಿಠಲ ); ಶ್ರೀ ಕನಕದಾಸರು ( ಆದಿಕೇಶವ );ಶ್ರೀ ರಾಘವೇಂದ್ರತೀರ್ಥರು ( ವೇಣುಗೋಪಾಲ ); ಶ್ರೀ ಯೋಗೀ೦ದ್ರತೀರ್ಥರು ( ಶ್ರೀರಾಮ ); ಶ್ರೀ ವಾದೀಂದ್ರತೀರ್ಥರು ( ವಾದೀಂದ್ರಯತಿ ); ಶ್ರೀ ವರದೇಂದ್ರತೀರ್ಥರು ( ವರದೇಂದ್ರಯತಿ ); ಶ್ರೀ ವ್ಯಾಸತತ್ತ್ವಜ್ಞತೀರ್ಥರು ( ವಾಸುದೇವವಿಠಲ ); ಶ್ರೀ ವಿಜಯದಾಸರು (ವಿಜಯವಿಠಲ); ಶ್ರೀ ಗೋಪಾಲದಾಸರು ( ಗೋಪಾಲವಿಠಲ ); ಶ್ರೀ ಜಗನ್ನಾಥದಾಸರು ( ಜಗನ್ನಾಥವಿಠಲ ); ಶ್ರೀ ಪ್ರಾಣೇಶವಿಠಲ ); 
ಇಂಥಾ ಸತ್ಪರಂಪರೆಯಲ್ಲಿ ಬಂದ ಶ್ರೀ ಪ್ರಾಣೇಶದಾಸರ ಮಕ್ಕಳೇ ನಮ್ಮ ಇಂದಿನ ಕಥಾನಾಯಕರಾದ ಶ್ರೀ ಗುರುಪ್ರಾಣೇಶದಾಸರು. 
" ಶ್ರೀ ಗುರು ಪ್ರಾಣೇಶ ದಾಸರ ಸಂಕ್ಷಿಪ್ತ ಮಾಹಿತಿ "
ಹೆಸರು : ಶ್ರೀ ವೆಂಕಟದಾಸರು 
ತಂದೆ  : ಶ್ರೀ ಪ್ರಾಣೇಶ ದಾಸರು 
ಕಾಲ : ಕ್ರಿ ಶ 1775 1860
ವಿದ್ಯಾ ಗುರುಗಳು : ಶ್ರೀ ಜಗನ್ನಾಥದಾಸರು 
ಗೀರ್ವಾಣ ಭಾಷಾ ಕೋವಿದರೂ - ಶ್ರೀ ರಾಯರ ಉಭಯ ವಂಶಾಬ್ಧಿ ಚಂದ್ರಮರೂ - ಶ್ರೀ ರುದ್ರದೇವರ ಅಂಶ ಸಂಭೂತರೂ ಆದ ಶ್ರೀ ವರದೇಂದ್ರ ತೀರ್ಥರ ವಿದ್ಯಾ ಶಿಷ್ಯರೂ - ಶ್ರೀ ಬೃಹಸ್ಪತ್ಯಾಚಾರ್ಯರ ಅಂಶ ಸಂಭೂತರಾದ ಜಗನ್ನಾಥದಾಸರಲ್ಲಿಯೇ - ಶ್ರೀ ವೆಂಕಟದಾಸರು 12 ವರ್ಷಗಳ ಕಾಲ ಸಮಗ್ರ ದ್ವೈತ ವೇದಾಂತವನ್ನೂ ಅಧ್ಯಯನ ಮಾಡಿ - ಶ್ರೀಮನ್ನ್ಯಾಯಸುಧಾ ಹೇಳುವುದನ್ನೂ - ಪದ ಮಾಡುವುದನ್ನೂ ಕಲಿತರು. 
ಶ್ರೀ ಜಗನ್ನಾಥದಾಸರು ಇವರ ಜ್ಞಾನ - ಭಕ್ತಿಗಳಿಗೆ ಮೆಚ್ಚಿ ದಾಸ ಪಂಥವನ್ನು ಮುಂದುವರೆಸಬೇಕೆಂದು ತಮ್ಮ ಪ್ರೀತಿಯ ಶಿಷ್ಯರಾದ ಶ್ರೀ ಪ್ರಾಣೇಶದಾಸರಿಂದ ಇವರಿಗೆ ಅಂಕಿತವನ್ನು ಕೊಡಿಸಿದರು. 
ಉಪದೇಶ ಗುರುಗಳು : ಶ್ರೀ ಪ್ರಾಣೇಶ ದಾಸರು 
ಅಂಕಿತ : ಗುರು ಪ್ರಾಣೇಶ ವಿಠಲ    
" ಶ್ರೀ ರಾಯರ ಕಾರುಣ್ಯ "
ತಮ್ಮ ತಂದೆಯವರಾದ ಶ್ರೀ ಪ್ರಾಣೇಶದಾಸರನ್ನು ಉದ್ಧಾರ ಮಾಡಿ ಪರಮಾನುಗ್ರಹ ಮಾಡಿದ ಕಲಿಯುಗ ಕಲ್ಪವೃಕ್ಷ - ಕಾಮಧೇನುವೆಂದು ಜಗತ್ಪ್ರಸಿದ್ಧರಾದ ಶ್ರೀ ಮಂತ್ರಾಲಯ ಪ್ರಭುಗಳ ದರ್ಶನಾಕಾಂಕ್ಷಿಗಳಾಗಿ ಶ್ರೀ ಕ್ಷೇತ್ರ ಮಂತ್ರಾಲಯಕ್ಕೆ ತಮ್ಮ ತಂದೆಯ ಜೊತೆಯಲ್ಲಿ ಬಂದು ತುಂಗೆಯಲ್ಲಿ ಮಿಂದು - ಅಹ್ನೀಕ ಮುಗಿಸಿಕೊಂಡು ಶ್ರೀ ಗುರುರಾಜರ ಸನ್ನಿಧಿಗೆ ಬಂದು ಭಕ್ತಿ ಶ್ರದ್ಧೆಗಳಿಂದ ಪ್ರದಕ್ಷಿಣೆ ನಮಸ್ಕಾರ ಮಾಡಿ ಶ್ರೀ ಗುರುಸಾರ್ವಭೌಮರ ಮೂಲ ವೃಂದಾವನದ ಮುಂದೆ ನಿಂತಿದ್ದಾರೆ. 
ಕಣ್ಣುಗಳಲ್ಲಿ ಆನಂದಬಾಷ್ಪ ತುಂಬಿ ಹರಿಯುತ್ತಿದೆ. ಗದ್ಗದ ಕಂಠ, ಶ್ರೀ ರಾಯರ ಮಹಿಮೆಯನ್ನು ಸಾರುವ ಸ್ತೋತ್ರವು ಗಂಗಾ ಪ್ರವಾಹದಂತೆ ಹರಿದಿದೆ. 
ರಾಗ : ಹಂಸಾನಂದೀ   ತಾಳ : ಆದಿ 
ತಂಗಿ ಕೇಳಿದ್ಯಾ ರಾಘವೇಂದ್ರಾ ।
ಘಂಗಳು ಕಳೆದುಸುಖಂಗಳ 
ಕೊಡುವದು ।। ಪಲ್ಲವಿ ।।
ಶ್ರೀ ಪೂರ್ಣಬೋಧರ । ಮ ।
ತಾಪಯೋಬ್ಧಿಗೆ ಚಂದ್ರ ।
ತಾಪಸೋತ್ತಮರ । ದಿ ।
ವ್ಯಾಪಾರ ಮಹಿಮೆಯ ।। ಚರಣ ।।
ಅಂಗ ಹೀನರಿಗೆ । ದಿ ।
ವ್ಯಾಂಗ ಕೊಟ್ಟರೆಂದು ।
ಸಂಗೀತ ಮುಖದಿ । ಜ ।
ನಂಗಳು ಪಾಡುವದು ।। ಚರಣ ।।
ಕಿವಿಯಿಲ್ಲದವರಿಗೆ ।
ತವಕಾದಿ ಕೊಟ್ಟರೆಂದು ।
ಸುವಿವೇಕ ಮನದಿಂದ ।
ಕವಿ ಜನ ಪಾಡುವದು ।। ಚರಣ ।।
ವಂಧ್ಯಾ ಸ್ತ್ರೀಯರು ।
ಬಂದು ನಿಂದು ಆರಾಧಿಸೆ ।
ಸಂದೇಹವಿಲ್ಲ ಬಹು ।
ಮಂದಿ ಮಕ್ಕಳ ಕೊಟ್ಟ ।। ಚರಣ ।।
ಗುರು ಪ್ರಾಣೇಶ ವಿಠಲಾ ।
ಸಾರುವ ಕಾಮಿತಾರ್ಥವಾ ।
ಗುರು ರಾಘವೇಂದ್ರರಲ್ಲಿ ।
ನಿರುತದಿ ಕೊಡಿಸುವ ।। ಚರಣ ।।
ಶ್ರೀ ರಾಯರ ಮಹಿಮೆಯನ್ನು ಕೊಂಡಾಡಿ - ಹಾಡಿ ಹೊಗಳಿದ್ದಾರೆ. 
ಪಾಪಗಳನ್ನು ಕಳೆದು - ಸುಖಗಳನ್ನು ಕೊಡುವ - ಅಂಗ ಹೀನರಿಗೆ ದಿವ್ಯಾಂಗವನ್ನೂ - ದೃಷ್ಟಿ ಹೀನರಿಗೆ ದೃಷ್ಟಿಯನ್ನೂ ಅನುಗ್ರಹಿಸುತ್ತಿರುವ ದಯಾಳುಗಳಾದ ಶ್ರೀ ರಾಘವೇಂದ್ರ ತೀರ್ಥರ ಮಾತೃ ವಾತ್ಸಲ್ಯ, ಸಾಮಾರ್ಥ್ಯ - ಸತ್ವಗಳನ್ನು ಶ್ರೀ ಗುರು ಪ್ರಾಣೇಶದಾಸರು ಅತ್ಯಂತ ಮನೋಜ್ಞವಾಗಿ ಮೇಲ್ಕಂಡ ಕೃತಿಯಲ್ಲಿ ಸೆರೆ ಹಿಡಿದಿದ್ದಾರೆ. 
ಮತ್ತೊಂದು ಕೃತಿಯಲ್ಲಿ... 
ರಾಗ : ಧನಾಶ್ರೀ    ತಾಳ : ಅಟ್ಟ 
ತಪ್ಪುಗಳೆಣಿಸಾದೆನ್ನಪ್ಪ ಕಾಯಲಿಬೇಕು ।
ಸರ್ಪ ಶಯನನ ದೂತಾ । 
ಇಪ್ಪತ್ತು ವಂದು ಕುಭಾಷ್ಯ -
ಮುರಿದರಾ । ಮ ।
ತ ಪ್ರವರ್ತಕ ರಾಘವೇಂದ್ರ -
ಮುನಿಪ ಮಹಾ ।। ಪಲ್ಲವಿ ।।
ಪ್ರತಿ ವರುಷಕೆ ಬಂದು । 
ನುತಿಸಿ ಪೋಗು ಯೆಂದು ।
ನತ ಸ್ವಪ್ನದಲಿ ನೀ ಬಂದೂ ।।
ಹಿತದಿಂದ ಪೇಳಲು ।
ರತನಾಗಿ ಧನದಿ । ಮ ।
ರತು ಬಿಟ್ಟೆ ನಿಮ್ಮನು ।
ಯತಿ ಕುಲೋತ್ತಮ ಇಂಥಾ ।। ಚರಣ ।।
ಸ್ನಾನ ಸಂಧ್ಯಾನ ಸುಜಪ ।
ತಪ ವ್ರತ ಹೋಮ ।
ಮೌನ ಮಾರ್ಗಗಳರಿಯೆ ।।
ಜ್ಞಾನಿಗಳಾನು । ಸಂ ।
ಧಾನ ಪೂರ್ವಕ ಪೂಜೆ ।
ಯಾನು ಮಾಡದೆ ದುಷ್ಟ ।
ಮಾನವರೊಳಗಿದ್ದೆ ।। ಚರಣ ।।
ಏಸು ಜನ್ಮದಿ ಬಂದಾ ।
ದೋಷವ ಕಳದು । ವಿ ।
ಶೇಷ ಸುಖವ ಕೊಡುವಾ ।।
ಈ ಸುವಾರ್ತಿಯ ಕೇಳಿ -
ಮೊರೆಹೊಕ್ಕ ಗುರು ಪ್ರಾ ।
ಣೇಶ ವಿಠಲನ ದೂತಾ -
ಮತ್ಪ್ರೀತಾ ।। ಚರಣ ।।
" ಶ್ರೀ ಗುರು ಪ್ರಾಣೇಶ ದಾಸರ ಕೃತಿಗಳು "
3. ತೆರಳಿದರು ಪರಮ ತೋಷದಲಿ - ಶ್ರೀ ಪ್ರಾಣೇಶದಾಸರ ಸ್ತೋತ್ರ 
4. ಕಂಗಳು ದಣಿಯೇ ನೋಡಲೇ ಮನವೇ - ಶ್ರೀ ಸತ್ಯಪಾರಾಯಣ ತೀರ್ಥರ ಸ್ತೋತ್ರ 
5. ಮಹಾದೇವ ಮಹಾದೇವ ಕಾಯೋ - ಶ್ರೀ ರುದ್ರದೇವರ ಸ್ತೋತ್ರ 
6. ವಾಣಿ ಬ್ರಹ್ಮನ ರಾಣಿ - ಶ್ರೀ ಸರಸ್ವತೀ ದೇವಿಯರ ಸ್ತೋತ್ರ 
7. ಶ್ರೀಮದಾನಂದತೀರ್ಥರೆಂಬ ಅರ್ಥಿಯ ಪೆಸರುಳ್ಳ - ಶ್ರೀ ವಾಯುದೇವರ ಸ್ತೋತ್ರ
8. ಪಾವನಾ ಸಂಭೂತಾ ವಲಿದು - ಶ್ರೀ ವಾಯುದೇವರ ಅವತಾರ ತ್ರಯ ಸ್ತೋತ್ರ 
9. ದಯಮಾಡೆ ದಯಮಾಡೆ ಹಯವದನಗೆ - ಶ್ರೀ ಲಕ್ಷ್ಮೀ ಸ್ತೋತ್ರ 
10. ಮಂಗಳಂ ಮಂಗಳಂ - ಶ್ರೀ ಲಕ್ಷ್ಮೀ ಸ್ತೋತ್ರ 
11. ಪಾಹಿ ಪಂಢರಿರಾಯ - ಶ್ರೀ ಪಾಂಡುರಂಗ ಸ್ತೋತ್ರ 
12. ಪೋರಿಯ ಬೇಕಲಾ - ಶ್ರೀ ಕೃಷ್ಣ ಸ್ತೋತ್ರ 
13. ದಯಾನಿಧೇ ದಯ ಮಾಡಬೇಕು - ಶ್ರೀ ಹಯಗ್ರೀವ ಸ್ತೋತ್ರ 
14. ಸುಖದ ಸುಂದರ ವಿಠಲರಾಯ - ಅಂಕಿತ ಪದ 
15. ತಂದೆ ಪ್ರಾಣೇಶ ವಿಠಲರಾಯ ಒಲಿದು - ಅಂಕಿತ ಪದ 
16. ಶ್ರೀ ಹರಿಯ ಸ್ಮರಣೆಯ ಮಾಡೋ ಪ್ರಾಣಿ - ಶ್ರೀ ಹರಿ ಸ್ತೋತ್ರ 
17. ಪಂಚಶರ ಪಿತನೆ - ಸುವ್ವೀಪದ 
18. ಯಾಯಾ ವರವ ನೀಡಿ ಶ್ರೀಮಾಯಾ ರಮಣನ ಭಕುತರಿಗೆ 
ಶ್ರೀ ಗುರು ಪ್ರಾಣೇಶ ದಾಸರ  ರಚನೆಗಳು ಕನ್ನಡ - ಸಂಸ್ಕೃತ ಭಾಷಾ ಪ್ರೌಢಿಮೆಯಿಂದ ಕೂಡಿವೆ. 
ಇದಕ್ಕೆ  ಶ್ರೀ ಸಹ್ಲಾದಾಂಶ ಜಗನ್ನಾಥದಾಸರು -  ಶ್ರೀ ಮರುದಂಶ ಪ್ರಾಣೇಶದಾಸರಂಥ ಪಂಡಿತೋತ್ತಮರ ಸಾನ್ನಿಧ್ಯವು ಕಾರಣವಾಗಿದೆ. 
ಮಧ್ವ ಶಾಸ್ತ್ರದ ತತ್ತ್ವ ಪ್ರಮೇಯ, ಹರಿ - ಗುರು ಕಾರುಣ್ಯ, ಉಪದೇಶ ಪರವಾದ ಸಾಮಾಜಿಕ ಕಾಳಜಿ ಶ್ರೀ ಗುರು ಪ್ರಾಣೇಶದಾಸರ ಕೃತಿಗಳಲ್ಲಿ ಕಂಡು ಬರುತ್ತವೆ. 
" ನಿರ್ಯಾಣ "
ಶ್ರೀ ಜಗನ್ನಾಥದಾಸರ ವಿದ್ಯಾ ಶಿಷ್ಯರೂ, ಶ್ರೀ ಪ್ರಾಣೇಶದಾಸರಿಂದ ಅಂಕಿತ ಪಡೆದು ಅನೇಕ ಪದ - ಪದ್ಯ - ಸುಳಾದಿಗಳನ್ನು ರಚಿಸಿ ಹರಿದಾಸ ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸಿದ್ದಾರೆ. 
18 ಪದಗಳು ಮಾತ್ರ ಸಿಕ್ಕಿವೆ.
ಶ್ರೀ ಸವದತ್ತಿ ಲಂಗೋಟಿದಾಸರು - ಶ್ರೀ ಶ್ರೀಶ ಪ್ರಾಣೇಶವಿಠಲರೂ - ಶ್ರೀ ಮೋದ ವಿಠಲರೂ ಇವರ ಶಿಷ್ಯರಲ್ಲಿ ಮುಖ್ಯವಾಗಿದ್ದಾರೆ. 
ಶ್ರೀ ಗುರು ಪ್ರಾಣೇಶ ದಾಸರ ಪರಮ ಮಿತ್ರರಾದ ಶ್ರೀ ಗಾರ್ಲಪಾಡ ಕೃಷ್ಣಾಚಾರ್ಯರು ಇವರು ಕೂಡುತ್ತಿದ್ದ ಕಂಬದ ಬುಡದಲ್ಲಿ ಅವರ ಕಟ್ಟೆಯನ್ನು ಕಟ್ಟಿ ನಿರಂತರ ಪೂಜೆ ನಡೆಯುವಂತೆ ಮಾಡಿದ್ದಾರೆ. 
ಶ್ರೀ ಗುರು ಪ್ರಾಣೇಶ ದಾಸರ ಆರಾಧನೆ ಪ್ರತಿವರ್ಷ ಮಾಘ ಬಹುಳ ಅಮಾವಾಸ್ಯೆಯಂದು ನಡೆಯುತ್ತದೆ. 
ಶ್ರೀ ಶ್ರೀಶ ಪ್ರಾಣೇಶ ದಾಸರು.... 
ವಾಸುದೇವನ ಪುರಕೆ-
ತೆರಳಿದರು 
ಶ್ರೀಶನ ಪ್ರಿಯ ಗುರು -
ಪ್ರಾಣೇಶ ದಾಸಾರ್ಯ ।। ಪಲ್ಲವಿ ।।
ಮೋಕ್ಷ ರೌದ್ರಿ ಅಬ್ಧಿ 
ಮಾಘ ದರ್ಶ ಪೂರ್ವಾ -
ಬಾದ್ದರಾ ನಕ್ಷತ್ರ ।
ಸೋಮವಾರಾದಿದ 
ದ್ವಿತೀಯ ಯಾಮದಿ 
ಲಕ್ಷ್ಯ ಇತ್ತು ಲಯದ 
ಚಿಂತನೆಯ ಗೈಯುತಲಿ 
ಪಕ್ಷಿವಾಹನ ಶ್ರೀಶ -
ಪ್ರಾಣೇಶ ವಿಠಲೆನುತ ।।
by ಆಚಾರ್ಯ ನಾಗರಾಜು ಹಾವೇರಿ 
     ಗುರು ವಿಜಯ ಪ್ರತಿಷ್ಠಾನ
***

No comments:

Post a Comment