Sri Jayesha Vittala Dasaru | 1850-1932 | Attaji Venkata Rao | Jeyesha Vittala | Sri Vijaya Ramachandra Vittala Dasaru | Mysore | Vyshaka Bahula dwithiya |
He attained the feet is shri hari in 1932.
ವೈಶಾಖ ಬಹುಳ ದ್ವಿತೀಯ ಅಪ್ಪಾವರ ಪರಮಾನುಗ್ರಹಕೆ ಪಾತ್ರರಾದ ಶ್ರೀ ವಿಜಯರಾಮಚಂದ್ರವಿಠ್ಠಲ ಶಿಷ್ಯರಾದ ಜಯೇಶವಿಠಲರ ಆರಾಧನೆ , ಕಟ್ಟೆ ಮನೆ ಮೈಸೂರ
ಹೆಸರು : ಅಟ್ಟಜಿ ವೆಂಕಟರಾಯರು
ಅಂಕಿತ ನಾಮ : ಶ್ರೀಜಯೇಶವಿಠಲ
ಅಂಕಿತ ಪ್ರದಾನ : ಶ್ರೀವಿಜಯರಾಮಚಂದ್ರವಿಠ್ಠಲ
ಅಂಶ : ಮನ್ಮಥ
ಇಂದುಮೌಳಿ ಪದಾಬ್ಜಾಳಿಂ |
ಮಂದ ಸಜ್ಜನ ತಾರಕಂ |
ಇಂದ್ರಕಾಮ ಸಮಾಭಾಸಂ |
ಸುಂದರಾಂಗ ಸಮನ್ವಿತಂ ||
ವಿಜಯೋಪದೋಪೇತಂ |
ಅಜಜಾತ ಸುತಾಖ್ಯಾಜಂ |
ಶ್ರೀ ಜಯೇಶೇತಿ ದಾಸಾಖ್ಯಂ |
ಭಜೇ ವೈರಾಗ್ಯಶಾಲಿನಂ ||
ಜಗದ್ಗುರು ಶ್ರೀಮನ್ ಮಧ್ವಾಚಾರ್ಯರ ಸಿದ್ಧಾಂತದ ಪ್ರಮೇಯಗಳನ್ನು ಸರಳವಾಗಿ ಜನಮನಕ್ಕೆ ಮುಟ್ಟುವಂತೆ ಮಾಡಿದವರು ನಮ್ಮ ಹರಿದಾಸರು. ಅಂತಹ ಹರಿದಾಸರಲ್ಲಿ ಜ್ಞಾನ ಭಕ್ತಿ ವೈರಾಗ್ಯ ಗುರುಭಕ್ತಿಯ ಪ್ರತೀಕವೇ ಶ್ರೀಜಯೇಶವಿಠಲ ದಾಸರು.
ಸಾತ್ವಿಕ ಮನೆತನದ ಶ್ರೀ ರಾಮರಾಯರು ಮತ್ತು ಶ್ರೀಮತಿ ರಾಧಾ ಬಾಯಿಯವರ ಪುತ್ರರತ್ನವಾಗಿ ಜನಿಸಿದ ದಾಸರಿಗೆ ಶ್ರೀ ವೆಂಕಟ ರಾಯರು ಅಂತ ನಾಮಕರಣವನ್ನು ಮಾಡುತ್ತಾರೆ. ಇವರು ಶ್ರೀಮಂತಿಕೆಯ ಸುಪತ್ತಿನಲ್ಲಿ ಬೆಳೆದವರು. ನೋಡಲು ತುಂಬಾ ಸ್ಪೂರದ್ರೂಪಿಗಳು. ಅವರನ್ನು ನೋಡಿಕೊಳ್ಳಲು ಅಂಗರಕ್ಷಕರನು ನೇಮಿಸಿರುತ್ತಾರೆ ಅಂತಹ ಶ್ರೀಮಂತಿಕೆಯಲ್ಲಿ ಬೆಳೆದ ಶ್ರೀ ವೆಂಕಟರಾಯರು ಒಮ್ಮೆ ತಮ್ಮ ಮೈಮೇಲೆ ಹಾಕಿಕೊಂಡ ಆಭರಣವೆಲ್ಲವನ್ನು ರಸ್ತೆಯಲ್ಲಿ ಹಾಕಿ ತಮಗೆ ಈ ಜಡವಸ್ತುಗಳ ಮೇಲಿನ ಮೋಹ ಬೇಡ ಅಂತ ತೇಜಿಸುತ್ತಾರೆ. ಜೊತೆಯಲ್ಲಿ ಇದ್ದ ಅಂಗರಕ್ಷರು ಈ ವಿಷಯವನ್ನು ಶ್ರೀರಾಮರಾಯರಿಗೆ ತಿಳಿಸುತ್ತಾರೆ. ಎಲ್ಲ ಮೋಹಕವಾದ ಜಡವಸ್ತುಗಳು ಮೇಲಿನ ಮೋಹ ತೊರೆದು ಅಧ್ಯಾತ್ಮದ ಕಡೆ ಒಲವು ಹೆಚ್ಚಿಸಿಕೊಳ್ಳುತ್ತಾರೆ.
ಗುರು ಪ್ರಾಪ್ತಿ ಮತ್ತು ಅಂಕಿತ ಪ್ರದಾನ :
ಶ್ರೀ ಮುಖ್ಯಪ್ರಾಣ ಹಾಗೂ ನರಸಿಂಹ ದೇವರ ಸೇವೆಗೆಂದು 7 ದಿವಸ ಶ್ರೀದಾಸರು ನಾಮಕಲ್ ಕ್ಷೇತ್ರಕ್ಕೆ ಬಂದಿರುತ್ತಾರೆ. ಅಲ್ಲಿ ಬಂದ ಕೆಲವರು ಶ್ರೀವಿಜಯರಾಮಚಂದ್ರ ದಾಸರ ಸಾಧನೆ ಮತ್ತೆ ಮಹಿಮೆಗಳ ಬಗ್ಗೆ ಮಾತಾಡುವುದು ಅವರ ಕಿವಿಗೆ ಕೇಳಿಸುತ್ತದೆ, ಶ್ರೀವಿಜಯರಾಮಚಂದ್ರರ ಹೆಸರು ಕೇಳಿದಾಕ್ಷಣದಿಂದ ಶ್ರೀದಾಸರಿಗೆ ಮೈಯಲ್ಲಿ ರೋಮಾಂಚನ , ಮನಸ್ಸಲ್ಲಿ ಖುಷಿ ಯಾವುದೋ ಜನ್ಮದ ತುಂಬಾ ಹತ್ತಿರದ ಸಂಬಂಧದ ಹಾಗೆ ಅನುಭವ. ಮರುದಿನ ಮುಂಜಾನೆ ಬ್ರಾಹ್ಮಿ ಮುಹೂರ್ತದ ಸ್ವಪ್ನದಲ್ಲಿ ಮುಖ್ಯಪ್ರಾಣ ದೇವರು ಶ್ರೀವಿಜಯರಾಮಚಂದ್ರವಿಠಲ ದಾಸರ ಸಂದರ್ಶನ ಮಾಡಿ ಅವರ ಶಿಷ್ಯತ್ವ ಸ್ವೀಕರಿಸಲು ಸೂಚನೆ ಆಗುತ್ತದೆ ತಮಗಾದ ಸಾಕ್ಷಾತ್ ಶ್ರೀ ಮುಖ್ಯಪ್ರಾಣ ಹಾಗೂ ನರಸಿಂಹ ದೇವರ ಈ ಅನುಗ್ರಹ ವರ್ಣಿಸಲು ಅಸಾಧ್ಯ.
ತಮ್ಮ ಸ್ವರೂಪೋದ್ದಾರಕ ಗುರುಗಳನ್ನು ಆ ಕ್ಷಣವೇ ಭೇಟಿ ಮಾಡಲು ಹೊರಡುತ್ತಾರೆ. ನಾಮಕಲ್ ಇಂದ ಸೇಲಂಗೆ ಬರಿಗಾಲಿನಿಂದ ತೆರಳಿ ಅಲ್ಲಿಂದ ತಕ್ಷಣೆವೆ ಮೈಸೂರಿಗೆ ಪ್ರಯಾಣಿಸುತ್ತಾರೆ.
ಜ್ಞಾನಿಗಳಾದ ಶ್ರೀವಿಜಯರಾಮಚಂದ್ರವಿಠಲರಿಗೆ ತಮ್ಮಗೆ ಓರ್ವ ಯೋಗ್ಯನಾದ ಶಿಷ್ಯನ ಪ್ರಾಪ್ತಿಯಾಗುತ್ತದೆ ಎಂದು ಗೋಚರವಾಗಿ ಆತುರದಿಂದ ಕಾಯುತ್ತಿರುತ್ತಾರೆ. ಶ್ರೀ ವೆಂಕಟ ರಾಯರು ಮೈಸೂರಿಗೆ ತಲುಪಿ ಶ್ರೀವಿಜಯರಾಮಚಂದ್ರವಿಠಲರನ್ನು ಭೇಟಿಯಾಗುತ್ತಾರೆ. ತಮಗಾದ ಸ್ವಪ್ನದ ಬಗ್ಗೆ ತಿಳಿಸುತ್ತಾ ಗುರುಗಳ ಚರಣಕ್ಕೆ ನಮಸ್ಕರಿಸುತ್ತಾ ತಮ್ಮ ಶಿಷ್ಯರಾಗಿ ಸ್ವೀಕಾರ ಮಾಡಲು ನೀವೇದನೆ ಮಾಡಿಕೊಳ್ಳುತ್ತಾರೆ. ಶ್ರೀ ವೆಂಕಟರಾಯರ ಗುರು ಭಕ್ತಿಗೆ ಮೆಚ್ಚಿ ತಮ್ಮ ಶಿಷ್ಯರಾಗಿ ಸ್ವೀಕರಿಸಿ ಶ್ರೀವಿಜಯರಾಮಚಂದ್ರವಿಠಲರು ತಮ್ಮ ಶಿಷ್ಯನಿಗೆ ತಾಯಿಯಂತೆ ಪ್ರೀತಿ ತೋರಿ ಅವರನು ಆಲಿಂಗನ ಮಾಡುತ್ತಾರೆ. ಇದೇ ಸಂದರ್ಭದಲ್ಲಿ ವೆಂಕಟರಾಯರಿಗೆ ಶ್ರೀ ಜಯೇಶವಿಠಲವೆಂದು ಅಂಕಿತ ಪ್ರದಾನಮಾಡಿ ಅನುಗ್ರಹಿಸುತ್ತಾರೆ.
ಕರುಣಿಸು ಜಯೇಶ ವಿಠಲ |
ವರ ಅಂಕಿತವಿದನು ಇತ್ತೆ || ಪ ||
ತರುಳ ನಿನ್ನವನೆಂದು |
ಗುರುವಾತ ಸ್ಥಿತನಾಗಿ | ಭರದಿ ಪಾಲಿಸಿದೆ ಇವನ |
ಹರಿ ನೀ ನಿದ್ದೆಡೆಗೆ ಕರೆಸಿ || ಅ. ಪ ||
ಇರಿಸು ವರ್ಣಾಶ್ರಮ ವರಧರ್ಮ ಕರ್ಮಗಳಲ್ಲಿ, ಮರೆಸಿ ಕಾಮ್ಯ ಕರ್ಮಗಳೆಲ್ಲವನ್ನು,
ಸ್ಮರಿಸದಂತೆ ಮಾಡು ಪರಸತಿಯರೊಲಿಮೆ, ಮರೆಯದಂತಿರಲಿ ಪರತತ್ವವನ್ನು || 1 ||
ಅತಿಥಿ ಅಭ್ಯಾಗತರ ಪೂಜೆ ಸತಿ ಸುತ ಪರಿವಾರದಿ ಕೃತ ಕೃತ್ಯನಾಗಿ ಮಾಡಿಸಿ,
ಪತಿತರಾ ಸಹವಾಸ ಹಿತವೆಂದರುಪದೇ,
ಸದ್ಗತಿ ನೀವ ಮಾರ್ಗ ತಿಳಿಸಿ || 2 ||
ನಿರುತ ತತ್ವ ನಿಶ್ಚಯದಲ್ಲಿ ಜ್ಞಾನ, ಗುರುಹಿರಿಯರಲಿ ಭಕ್ತಿ, ದುರ್ವಿಷಯದಲಿ ವಿರಕ್ತಿನಿತ್ತು,
ವರ ವಿಜಯ ರಾಮಚಂದ್ರ|
ವಿಠಲ ಸುರರೊಡೆಯ ಒರೆದು ನಾಮಾಮೃತವ ನುಡಿಸೀ || 3 ||
ತಂಜಾವೂರುನಲ್ಲಿ ತೋರಿದ ಮಹಿಮೆ :
ಶ್ರೀ ದಾಸರು ಸಂಜೀವರಾಯ ಎಂಬುವರ ಮನೆಯಲ್ಲಿ ತಂಜಾವೂರಿಗೆ ತೆರಿಳಿದಾಗ ಅಲ್ಲಿ ಉಳಿದುಕೊಳ್ಳುತ್ತಿದರು. ದಾಸರು ಬಂದಿರೋದು ಗೊತ್ತಾಗಿ ಊರಿನ ವಿಪ್ರರೆಲ್ಲಾ ಸಂಜೀವರಾಯರ ಮನೆಗೆ ಅವರ ಸಂದರ್ಶನಕ್ಕೆ ಬರುತ್ತಾರೆ. ದಾಸರು ನಿತ್ಯದಲ್ಲಿ ಪಾರಾಯಣದ ಕ್ರಮವಾಗಿ ಅವರ ಮನೆಯಲ್ಲಿ ಸುಮಧ್ವ-ವಿಜಯ ಪಾರಾಯಣ ಪ್ರಾರಂಭಿಸುತ್ತಾರೆ. ಪಾರಾಯಣ ಸಮಯದಲ್ಲಿ ಅಲ್ಲಿ ಇದ್ದ ಜನರಿಗೆ ಹೆದರಿಕೆ ಜೊತೆಯಲ್ಲಿ ಅಚ್ಚರಿ. ಸುಮಧ್ವ-ವಿಜಯ ಪಾರಾಯಣದ ಸಮಯದಲ್ಲಿ ಅಲ್ಲಿ ಸರ್ಪ ಪ್ರತ್ಯಕ್ಷವಾಗಿ ದಾಸರ ಹೇಳೋ ಆ ಸ್ತೋತ್ರಕ್ಕೆ ತಲೆ ತೂಗುತ್ತಿತು ಪಾರಾಯಣ ಮುಗಿದಾಕ್ಷಣ ಆ ಸರ್ಪ ಮಾಯವಾಯಿತು. ಇದನ್ನು ಪ್ರತ್ಯಕ್ಷವಾಗಿ ಕಂಡ ಅಲ್ಲಿಯ ಜನರು ದಾಸರ ಮಹಿಮೆಗಳನ್ನು ನೋಡಿ ಅವರಲ್ಲಿ ಶರಣು ಹೋಗುತ್ತಾರೆ.
ಶ್ರೀ ಅಪ್ಪಾವರು ನನ್ನ ಉಸಿರು
ಒಮ್ಮೆ ಶ್ರೀದಾಸರು ಮದರಾಸಿಗೆ ಹೋಗಿರುತ್ತಾರೆ. ಶ್ರೀದಾಸರು ತಾವು ಎಲ್ಲಾ ಸಂದರ್ಭದಲ್ಲೂ ಶ್ರೀ ಅಪ್ಪಾವರ ಚಿತ್ರ ಪಠ ಅವರಲ್ಲಿ ಇಟ್ಟಕೊಂಡೇ ಮುಂದಿನ ಎಲ್ಲಾ ಕೆಲಸ ಕಾರ್ಯ ಮಾಡುತಿದ್ದರು. ಅಲ್ಲಿಯೇ ಅವತ್ತಿನ ಶ್ರೀಉತ್ತರಾಧಿಮಠದ ಪೀಠಾಧಿಪತಿಗಳಾದ ಸತ್ಯಧೀರತೀರ್ಥರು ಸಂಚಾರದಲ್ಲಿ ಇರುವರೆಂದು ತಿಳಿದು ಅವರ ಸಂದರ್ಶನ ಮಾಡಲು ಹೊರಡುತ್ತಾರೆ. ದಾಸರನ್ನು ಬರಮಾಡಿಕೊಂಡ ಶ್ರೀಗಳು ಹಲವು ಶಾಸ್ತ್ರದ ವಿಷಯ ವಿನಿಮಯಮಾಡಿಕೊಳ್ಳುತ್ತಾರೆ.
ವಿಷಯ ವಿನಿಮಯದ ಸಂದರ್ಭದಲ್ಲಿ ಶ್ರೀಗಳು ದಾಸರಿಗೆ ಅದೇನು ದಾಸರೆ ತಾವು ಚಿತ್ರಪಟ ಇಟ್ಟುಕೊಂಡು ಪೂಜೆ ಮಾಡುತಿರಲ್ಲಾ ? ಇಭರಾಮಪುರ ಅಪ್ಪಾವರು ಅಪರೋಕ್ಷ ಜ್ಞಾನಿಗಳೆಂದು ಹಾಗೆ ಮಾಡುತ್ತಿದ್ದೀರಾ ? ಅಂತ ಶ್ರೀ ದಾಸರಿಗೆ ಪ್ರಶ್ನೆ ಮಾಡುತ್ತಾರೆ.
ಶ್ರೀ ದಾಸರು ಶ್ರೀಗಳ ಪ್ರಶ್ನೆಗೆ ಮಾರ್ಮಿಕವಾಗಿ ಎನುಬೇಕಾದರು ಮಾಡಬಹುದು ಬಿಡಬಹುದು ಶ್ವಾಸೋಚ್ಛಾಸವನ್ನು ಬಿಡಬಹುದೇ ಅಂತ ವಿನಯಪೂರ್ವಕವಾಗಿ ಹೇಳುತ್ತಾರೆ.
ಪರಮಗುರುಗಳಾದ ಇಭರಾಮಪುರ ಶ್ರೀಅಪ್ಪಾವರಸ್ಮರಣೆ ಮಾಡುವಾಗ ವಿಶೇಷ ಅನುಭವ :
ಶ್ರೀವಿಜಯರಾಮಚಂದ್ರವಿಠಲರು ನಿತ್ಯದಲ್ಲಿ ತಮ್ಮ ಸ್ವರೂಪೋದ್ದಾರಕ ಗುರುಗಳಾದ ಇಭರಾಮಪುರ ಶ್ರೀ ಅಪ್ಪಾವರ ಮಹಿಮೆಗಳನ್ನು ಶ್ರೀ ಜಯೇಶವಿಠಲ ದಾಸರಿಗೆ ತಿಳಿಸುತ್ತಿದರು. ಮಹಿಮೆಗಳನ್ನು ತಿಳಿಸುವಾಗ ವಿಶೇಷವಾದ ಅನುಭವ. ಅಪ್ಪಾವರು ಸರ್ಪ ರೂಪದಲ್ಲಿ ಅಲ್ಲಿ ಕಾಣಿಸಿಕೊಂಡು ಆ ಸ್ಥಳವೆಲ್ಲ ಸುಗಂಧ ಪರಿಮಳ ಭರಿತವಾಯಿತು.
ಹೆಗ್ಗಡದೇವನಕೋಟೆಯಲ್ಲಿ ತೋರಿದ ಮಹಿಮೆ
ಶ್ರೀ ದಾಸರು ಅಧ್ಯಾತ್ಮವಲ್ಲದೆ ಲೌಕಿಕ ವಿದ್ಯೆಯಲ್ಲಿಯು ಶ್ರೇಷ್ಟ ಸಾಧಕರು. ಶ್ರೀ ವೆಂಕಟ ರಾಯರು(ಶ್ರೀಜಯೇಶವಿಠಲ ದಾಸರು) ಉನ್ನತ ಹುದ್ದೆಯ ಅಧಿಕಾರಿಯಾಗಿದ್ದರು. ಅವರು ಹೆಗ್ಗಡದೇವನಕೋಟೆಯಲ್ಲಿ ತಮ್ಮ ಕಾರ್ಯನಿರ್ವಹಣೆ ಮಾಡುತ್ತಿದ್ದರು. ಅಲ್ಲಿಯ ಕಾರ್ಯ ವೀಕ್ಷಣೆಗೆ ವೇಲ್ಸ್ ರಾಜಕುಮಾರ( Prince of Wales ) . ಅಲ್ಲಿ ಕಾಡಾನೆಗಳನು ತರಬೇತಿಯನ್ನು ನೀಡಿ ಕೆಲಸಕ್ಕೆ ಬಳಸುವ ಕೆಲಸ ನಡೆಯುತ್ತಿತ್ತು.
ಹೆಗ್ಗಡದೇವನಕೋಟೆ ತುಂಬಾ ದಟ್ಟ ಅರಣ್ಯ ಪ್ರದೇಶ ಅಲ್ಲಿ ಉಳಿದುಕೊಳ್ಳಲು ಎಲ್ಲರಿಗೂ ಜೀವ ಭಯ ಕಾರಣ ಅಲ್ಲಿ ವ್ಯಾಘ್ರಗಳ ಭಾದೆ. ಅಲ್ಲಿಗೆ ಬಂದ ರಾಜಕುಮಾರ ಉಳಿದುಕೊಳ್ಳಲು ತಾತ್ಕಾಲಿಕವಾಗಿ ಅರಣ್ಯದಲ್ಲಿ ಗುಡಿಸಲು ನಿರ್ಮಿಸಿದರು.
ರಾತ್ರಿಯ ಸಮಯದಲ್ಲಿ ಭೇಟೆಗೆಂದು ಆ ರಾಜಕುಮಾರ ಹೊರಡುತ್ತಾನೆ. ಅಲ್ಲಿ ವ್ಯಾಘ್ರವೊಂದು ಕಂಡುಬರುತ್ತೆ ಅದನ್ನು ಭೇಟೆಯಾಡಲು ಅಧಿಕಾರಿ ಆ ಹುಲಿಗೆ ಗುರಿಯನ್ನು ಇಟ್ಟು ಹೊಡೆಯಲು ಪ್ರಯತ್ನ ಮಾಡುತ್ತಾನೆ. ಆ ವ್ಯಾಘ್ರವು ತಪ್ಪಿಸಿಕೊಂಡು ಸಿಟ್ಟಿನಿಂದ ಅಲ್ಲಿ ಮೆರೆದ ಜನರಮಧ್ಯೆ ಬರಲುಪ್ರಯತ್ನ ಮಾಡಿತು. ಅಧಿಕಾರಿ ಮತ್ತು ಕೆಲಸದವರು ಜೀವ ಉಳಿಸಿಕೊಳ್ಳಲು ಹರಸಾಹಸ ಮಾಡಿ ಮರಗಿಡಗಳ ಮೇಲೇರಿ ಕುಳಿತರು. ಶ್ರೀದಾಸರು ಮಾತ್ರ ಅಲ್ಲಿಯೇ ಉಳಿದುಕೊಳ್ಳುತ್ತಾರೆ.
ಆ ವ್ಯಾಘ್ರವು ಶ್ರೀದಾಸರು ಕೆಳಗಡೆ ಇರುವುದನ್ನು ಗಮನಿಸಿ ಅವರ ಹತ್ತಿರ ಬರುತ್ತೆ. ಶ್ರೀ ದಾಸರು ಧೃತಿಗೆಡದೆ ಶ್ರೀಹರಿಯ ಮತ್ತು ಗುರುಗಳ ಸ್ಮರಣೆ ಮಾಡುತ್ತಾ ಆ ವ್ಯಾಘ್ರದ ಕಣ್ಣಲ್ಲಿ ನೋಡುತ್ತಾ ಚಪ್ಪಾಳೆ ಹೊಡೆದು ದಾರಿತೋರಿಸಿದರು.ವ್ಯಾಘ್ರವು ದಾಸರಾಯರ ಸುತ್ತು ಪ್ರದಕ್ಷಿಣೆ ಮಾಡಿ ಹೊರಡುತ್ತೆ.
ವ್ಯಾಘ್ರವು ಹೊರಟುಹೋದಮೇಲೆ ಅಲ್ಲಿಗೆ ಬಂದ ರಾಜಕುಮಾರ ಮತ್ತು ಕೆಲಸದವರು ಶ್ರೀದಾಸರಿಗೆ ಏನು ಆಗದನ್ನು ನೊಡಿ ಆಶ್ಚರ್ಯವಾಯಿತು. ಶ್ರೀದಾಸರು ಎಲ್ಲಾ ನಮ್ಮ ಗುರುಗಳಾದ ಅಪ್ಪಾವರು ಮತ್ತು ವಿಜಯರಾಮಚಂದ್ರ ವಿಠಲ ದಸರಾ ಅನುಗ್ರಹವೆಂದು ಅಲ್ಲಿನವರಿಗೆ ತಿಳಿಸುತ್ತಾರೆ.
ರಾಜದರ್ಬಾರ್ ನಲ್ಲಿ ನಡೆದ ಘಟನೆ
ಶ್ರೀ ಶೇಷಾದ್ರಿ ಐಯ್ಯರ್ ಮೈಸೂರ್ ಸಂಸ್ಥಾನದ ದಿವನಾಗಿದರು. ಇವರು ಶ್ರೀ ಜಯೇಶವಿಠಲ ದಾಸರ ಪರಮಾಪ್ತರಾಗಿದರು. ಶ್ರೀದಾಸರು ಲೌಕಿಕದಲ್ಲಿ ಸರ್ಕಾರದ ಉತ್ತನ ಹುದ್ದೆಯಲ್ಲಿ ಇದ್ದರು ತಮ್ಮ ನಿತ್ಯಧರ್ಮಾಚರಣೆಯಲ್ಲಿ ಕಿಂಚಿತ್ತೂ ವ್ಯತ್ಯಾಸ ಮಾಡುತ್ತಿರಲಿಲ್ಲ. ಅನೇಕರು ದಾಸರಿಗೆ ಧರ್ಮಾನಿಷ್ಠ ಪರೀಕ್ಷಿಸಲು ಹೋಗಿ ವಿಫಲಯತ್ನ ಮಾಡಿದರು.
ಶ್ರೀ ನಾಲ್ವಡಿ ಕೃಷ್ಣರಾಜೇಂದ್ರ ಒಡೆಯರ್ ತಮ್ಮ ಎಲ್ಲ ಮಂತ್ರಿಗಳು ಅಧಿಕಾರಿಗಳಿಗೆ ದರ್ಬಾರ ಆನಂತರದಲ್ಲಿ ಔತಣ ಕೂಟ ವ್ಯವಸ್ಥೆಯನ್ನು ಮಾಡಿದಿರುತ್ತಾರೆ. ಶ್ರೀ ಶೇಷಾದ್ರಿ ಐಯ್ಯರ್ ಅರಮನೆಯ ದಿವಾನರಾದ ಕಾರಣ ಅವರ ಮುಂದಾಳತ್ವದಲ್ಲಿ ಎಲ್ಲಾ ವ್ಯವಸ್ಥೆಯ ನೋಡಿಕೊಂಡು ಎಲ್ಲಾ ಗಣ್ಯಾತಿಗಣ್ಯರನ್ನು ಅತಿಥಿಗಳ ಬರಮಾಡಿಕೊಳ್ಳಲಾಯಿತು. ದಾಸರಿಗೂ ವಿಶೇಷವಾದ ಆಹ್ವಾನವಿತ್ತು.ಆದರೆ ದಾಸರು ತಮ್ಮ ಅನುಷ್ಟಾನಕೆ ಭಂಗವಾಗುವಂತಹ ಯಾವದೇ ಕಾರ್ಯಕ್ರಮಕೆ ಹೋಗುತ್ತಿರಲಿಲ್ಲ.
ಶ್ರೀದಾಸರು ಯಾವುದೇ ಔತಣಕೆ ಬರುವುದಿಲ್ಲದ ಕಾರಣ ದರ್ಬಾರ್ ಮುಗಿಯುವ ಕ್ಷಣದಲ್ಲಿ ದಿವಾನರು ಜೋರಾಗಿ ರಾಜರಿಗೆ ಕೇಳುವಹಾಗೆ ದಾಸರನ್ನು ನೋಡುತ್ತಾ ಔತಣಕೆ ಬರದೆ ರಾಜರಿಗೆ ಅವಮರ್ಯಾದೆ ಮಾಡುತಿದಿರಿ ಒಡೆಯರಿಂದ ನಿಮಗೆ ಎರಡುಹೊತ್ತು ಅನ್ನ ದೊರೆಯುತ್ತದೆ ಅಂತ ಜೋರಾಗಿ ಹೇಳಿದರು. ದಾಸರು ಅದಕ್ಕೆ "ನನಗೆ ಅನ್ನ ದೊರೆಯುತ್ತಿರುವುದು ಜಗದೊಡೆಯನಾದ ಪರಾಮಾತ್ಮನಿಂದ" ಅಂತ ದಿವಾನರು ಪ್ರತಿಕ್ರಿಯೆ ನೀಡಿ ಸುಮ್ಮನಾಗುತ್ತಾರೆ. ಶ್ರೀ ನಾಲ್ವಡಿ ಕೃಷ್ಣರಾಜೇಂದ್ರ ಒಡೆಯರು ಈ ಸಂಭಾಷಣೆ ಕಿವಿಗೆ ಬಿದ್ದು ಶ್ರೀದಾಸರ ನೀಡಿದ ಪ್ರತಿಕ್ರಿಯೆಗೆ , ಸ್ವನಿಷ್ಠೆಯನ್ನು ಮೆಚ್ಚಿ ಗೌರವ ಸಮರ್ಪಣೆ ಮಾಡಿ ತೆರಳುತ್ತಾರೆ.
*ಶ್ರೀ ಜಯೇಶವಿಠಲ ದಾಸರ ತಿರುಪತಿಯಾತ್ರೆ :
ಒಮ್ಮೆ ಶ್ರೀದಾಸರು ಶ್ರೀ ಶ್ರೀನಿವಾಸನ ದರ್ಶನಕ್ಕೆಂದು ಭೂವೈಕುಂಠವಾದ ತಿರುಪತಿಗೆ ಯಾತ್ರೆ ಮಾಡುತ್ತಾರೆ. ಅದೇ ದಿನವೇ ಅಂದಿನ ಬ್ರಿಟೀಷ್ ಸರ್ಕಾರದ ರಾಜ್ಯಪಾಲರು ಕೂಡ ದರ್ಶನಕ್ಕಾಗಿ ಬಂದಿರುತ್ತಾರೆ. ಗಣ್ಯರು ಬಂದಿದ್ದಾರೆ ಎಂದು ಅವರು ದರ್ಶನ ಪಡೆಯುವವರೆಗೂ ದೇವಸ್ಥಾನದ ಪ್ರವೇಶ ಮಾಡುವ ಬಾಗಿಲುಗಳನ್ನು ಮುಚ್ಚಿರುತ್ತಾರೆ.
ಆಗ ದೇವಸ್ಥಾನ ಒಳಗಡೆಯ ಪ್ರಾಕಾರದಲ್ಲಿಯೇ ಶ್ರೀದಾಸರು ಕುಳಿತುಕೊಂಡಿರುತ್ತಾರೆ. ದಾಸರಿಗೆ ಸಿಗಬೇಕಿದ್ದ ಶ್ರೀ ಶ್ರೀನಿವಾಸನ ಪ್ರಸಾದ ಗಣ್ಯರಪಾಲಾಗುತ್ತದೆ. ದೇವಸ್ಥಾನದ ಪ್ರಾಂಗಣದಲ್ಲಿ ಇರುವ ವಿಮಾನ ವೆಂಕಟೇಶ್ವರನ ಹತ್ತಿರ ದಾಸರು ಪ್ರದಕ್ಷಿಣೆ ಸೇವೆ ಮಾಡುತ್ತಿರುತ್ತಾರೆ. ಸೇವೆ ಮಾಡುತ್ತಿರುವಾಗ ವಿಶೇಷವಾದ ಅನುಭವವಾಗುತ್ತದೆ.
ಒಬ್ಬ ಭಸ್ಮಧಾರಿಯಾದ ಬ್ರಾಹ್ಮಣ ವಿಮಾನ ವೆಂಕಟೇಶ್ವರನ ಸನ್ನಿಧಾನದಲ್ಲಿ ಜೋರಾಗಿ ಪುರಾಣ ಹೇಳುತ್ತಿರುತ್ತಾರೆ. ಅವರು ಹೇಳುತ್ತಿರುವುದು ದಾಸರ ಮನಸೆಳೆದು ಭಕ್ತಿಯಿಂದ ಶ್ರವಣ ಮಾಡುತ್ತಿರುತ್ತಾರೆ. ಪುರಾಣ ಶ್ರವಣದ ಸಮಯದಲ್ಲಿ ದಾಸರಿಗೆ ಯಾರೋ ಒಬ್ಬ ಎತ್ತರದ ಮೂರು ನಾಮವುಳ್ಳ ಬ್ರಾಹ್ಮಣ ವಿಮಾನ ವೆಂಕಟೇಶ್ವರನ ಸನ್ನಿಧಿಯಲ್ಲಿ ಕಾಣಿಸಿಕೊಳ್ಳುತ್ತಾನೆ. ಆ ಅಯ್ಯಂಗಾರಿ ಬ್ರಾಹ್ಮಣ ದಾಸರ ಹತ್ತಿರ ಬಂದು ಶ್ರೀ ಶ್ರೀನಿವಾಸನ ಪ್ರಸಾದ ನೀಡಿ ತಮಿಳಿನಲ್ಲಿ "ಇವಲ್ ಗುರುಗಳಕ್ಕು ಶಿಷ್ಯರಿಕು ಪಾಟಾಕ ಇರೊಂಟು ಕಣ್ಣು ಪೋರದೇ' ಅಂದರೆ ದಾಸರು ಮತ್ತು ಅವರ ಗುರುಗಳ (ವಿಜಯರಾಮಚಂದ್ರವಿಠಲ ದಾಸರು) ಸಮಾಗಮ ನೋಡಲು ಎರಡು ಕಣ್ಣು ಸಾಲದು ಎಂದು ಹೇಳಿ ದಾಸರಿಗೆ ಶ್ರೀನಿವಾಸನ ಪ್ರಸಾದ ನೀಡುತ್ತಾರೆ. ಪ್ರಸಾದ ಸ್ವೀಕರಿಸಿ ಎರಡನೆಯ ಪ್ರದಕ್ಷಿಣೆ ಮುಗಿಯುವದರಲ್ಲಿ ಪುರಾಣ ಹೇಳುವ ಬ್ರಾಹ್ಮಣ ಮತ್ತು ಅಯ್ಯಂಗಾರಿ ಬ್ರಾಹ್ಮಣ ಎಲ್ಲಿಯೂ ದಾಸರಿಗೆ ಕಾಣಲಿಲ್ಲ.
ತಿರುಪತಿಯಿಂದ ದಾಸರು ನಂತರದಲ್ಲಿ ಪದ್ಮಾವತಿ ದೇವಿಯ ದರ್ಶನಕ್ಕೆ ಬಂದರು. ಅಲ್ಲಿಯ ಪದ್ಮ ಸರೋವರದಲ್ಲಿ ಮತ್ತೆ ಭಸ್ಮಧಾರಿಯಾದ ಬ್ರಾಹ್ಮಣ ದರ್ಶನವಾಯಿತು. ಕುತೂಹಲದಿಂದ ಶ್ರೀದಾಸರು ಆ ಬ್ರಾಹ್ಮಣರನ್ನು ಭೇಟಿ ಮಾಡಲು ಹೊರಟರು ಆದರೆ ಅಲ್ಲಿಂದ ಮತ್ತೆ ಎಲ್ಲಿಯೂ ಕಾಣಿಸಿಕೊಳ್ಳಲಿಲ್ಲ. ದಾಸರು ಅಲ್ಲಿಂದ ಪದ್ಮಾವತಿ ಅಮ್ಮನವರ ದರ್ಶನಕ್ಕೆ ಹೊರಟರು. ಅಮ್ಮನವರ ದರ್ಶನ ಪಡೆದು ಅಲ್ಲಿಂದ ಅಮ್ಮನವರ ವಿಶೇಷ ಸೇವೆಯನ್ನು ಮಾಡಿ ದೇವಿಯ ಪ್ರಸಾದ ಪಡೆದರು.
ದರ್ಶನಂತರದಲ್ಲಿ ಆ ಮೂರು ನಾಮಧಾರಿ ಅಯ್ಯಂಗಾರಿ ಹೇಳಿದ " ದಾಸರು ಮತ್ತು ಅವರ ಗುರುಗಳ (ವಿಜಯರಾಮಚಂದ್ರವಿಠಲ ದಾಸರು) ಸಮಾಗಮ ನೋಡಲು ಎರಡು ಕಣ್ಣು ಸಾಲದು" ಎಂಬ ಮಾತುಗಳನ್ನು ಪುನಃ ಪುನಃ ಮನನ ಮಾಡಿಕೊಂಡ ಮೇಲೆ ತಮ್ಮ ಗುರುಗಳಾದ ರುದ್ರಾಂಶ ಸಂಭೂತರಾದ ವಿಜಯರಾಮಚಂದ್ರವಿಠಲರು ದರ್ಶನ ಕೊಟ್ಟು ಅನುಗ್ರಹಸಿದ್ದಾರೆ ಎಂದು ತಿಳಿದು ಯಾತ್ರೆ ತಮ್ಮ ಗುರುಗಳ ಅಂತರ್ಯಾಮಿಯಾದ ಶ್ರೀ ಶ್ರೀನಿವಾಸದೇವರಿಗೆ ಸಮರ್ಪಣೆ ಮಾಡಿದರು.
ದಾಸರಿಗೆ ಗುರುಗಳಾದ ಶ್ರೀ ವಿಜಯರಾಮಚಂದ್ರ ವಿಠಲರ ಅನುಗ್ರಹದಿಂದ ಶ್ರೀನಿವಾಸನ ಸಾಕ್ಷಾತ್ಕಾರವಾಯಿತು.
ಗುರುಗಳಾದ ಶ್ರೀವಿಜಯರಾಮಚಂದ್ರವಿಠಲರು ಹಾಕಿಕೊಟ್ಟ ಮಾರ್ಗ ಶ್ರೀ ಜಯೇಶವಿಠಲರು ತಮ್ಮ ಪರಮಗುರುಗಳಾದ ಇಭರಾಮಪುರ ಅಪ್ಪಾವರ ಮೇಲೆ ವಿಶೇಷವಾದ ಭಕ್ತಿ ಅವರ ವಿಶೇಷ ಸೇವೆಗೈದು ಅವರ ಮೇಲೆ ಸ್ತೋತ್ರಪದಗಳನ್ನು ರಚನೆ ಮಾಡಿದಾರೆ.
ಶ್ರೀದಾಸರು 500ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿ ದಾಸಸಾಹಿತ್ಯಕ್ಕೆ ವಿಶಿಷ್ಟ ಕೊಡುಗೆ ನೀಡಿದ್ದಾರೆ.
ಶ್ರೀ ಇಭರಾಮಪುರಾಧೀಶ
ವಿಷ್ಣುತೀರ್ಥಾಚಾರ್ ಇಭರಾಮಪುರ
*************
|| ಶ್ರೀ ಗುರುರಾಜೋ ವಿಜಯತೇ ||
|| ಶ್ರೀ ಇಭರಾಮಪುರಾಧೀಶಾಯ ನಮಃ ||
ಗುರು ಮಹಿಮೆ : ಶ್ರೀ ಜಯೇಶವಿಠಲ ದಾಸರ ತಿರುಪತಿಯಾತ್ರೆ
ಇಂದುಮೌಳಿ ಪದಾಬ್ಜಾಳಿಂ |
ಮಂದ ಸಜ್ಜನ ತಾರಕಂ |
ಇಂದ್ರಕಾಮ ಸಮಾಭಾಸಂ |
ಸುಂದರಾಂಗ ಸಮನ್ವಿತಂ ||
ವಿಜಯೋಪದೋಪೇತಂ |
ಅಜಜಾತ ಸುತಾಖ್ಯಾಜಂ |
ಶ್ರೀ ಜಯೇಶೇತಿ ದಾಸಾಖ್ಯಂ |
ಭಜೇ ವೈರಾಗ್ಯಶಾಲಿನಂ ||
ಒಮ್ಮೆ ಶ್ರೀದಾಸರು ಶ್ರೀ ಶ್ರೀನಿವಾಸನ ದರ್ಶನಕ್ಕೆಂದು ಭೂವೈಕುಂಠವಾದ ತಿರುಪತಿಗೆ ಯಾತ್ರೆ ಮಾಡುತ್ತಾರೆ. ಅದೇ ದಿನವೇ ಅಂದಿನ ಬ್ರಿಟೀಷ್ ಸರ್ಕಾರದ ರಾಜ್ಯಪಾಲರು ಕೂಡ ದರ್ಶನಕ್ಕಾಗಿ ಬಂದಿರುತ್ತಾರೆ. ಗಣ್ಯರು ಬಂದಿದ್ದಾರೆ ಎಂದು ಅವರು ದರ್ಶನ ಪಡೆಯುವವರೆಗೂ ದೇವಸ್ಥಾನದ ಪ್ರವೇಶ ಮಾಡುವ ಬಾಗಿಲುಗಳನ್ನು ಮುಚ್ಚಿರುತ್ತಾರೆ.
ಆಗ ದೇವಸ್ಥಾನ ಒಳಗಡೆಯ ಪ್ರಾಕಾರದಲ್ಲಿಯೇ ಶ್ರೀದಾಸರು ಕುಳಿತುಕೊಂಡಿರುತ್ತಾರೆ. ದಾಸರಿಗೆ ಸಿಗಬೇಕಿದ್ದ ಶ್ರೀ ಶ್ರೀನಿವಾಸನ ಪ್ರಸಾದ ಗಣ್ಯರಪಾಲಾಗುತ್ತದೆ. ದೇವಸ್ಥಾನದ ಪ್ರಾಂಗಣದಲ್ಲಿ ಇರುವ ವಿಮಾನ ವೆಂಕಟೇಶ್ವರನ ಹತ್ತಿರ ದಾಸರು ಪ್ರದಕ್ಷಿಣೆ ಸೇವೆ ಮಾಡುತ್ತಿರುತ್ತಾರೆ. ಸೇವೆ ಮಾಡುತ್ತಿರುವಾಗ ವಿಶೇಷವಾದ ಅನುಭವವಾಗುತ್ತದೆ.
ಒಬ್ಬ ಭಸ್ಮಧಾರಿಯಾದ ಬ್ರಾಹ್ಮಣ ವಿಮಾನ ವೆಂಕಟೇಶ್ವರನ ಸನ್ನಿಧಾನದಲ್ಲಿ ಜೋರಾಗಿ ಪುರಾಣ ಹೇಳುತ್ತಿರುತ್ತಾರೆ. ಅವರು ಹೇಳುತ್ತಿರುವುದು ದಾಸರ ಮನಸೆಳೆದು ಭಕ್ತಿಯಿಂದ ಶ್ರವಣ ಮಾಡುತ್ತಿರುತ್ತಾರೆ. ಪುರಾಣ ಶ್ರವಣದ ಸಮಯದಲ್ಲಿ ದಾಸರಿಗೆ ಯಾರೋ ಒಬ್ಬ ಎತ್ತರದ ಮೂರು ನಾಮವುಳ್ಳ ಬ್ರಾಹ್ಮಣ ವಿಮಾನ ವೆಂಕಟೇಶ್ವರನ ಸನ್ನಿಧಿಯಲ್ಲಿ ಕಾಣಿಸಿಕೊಳ್ಳುತ್ತಾನೆ. ಆ ಅಯ್ಯಂಗಾರಿ ಬ್ರಾಹ್ಮಣ ದಾಸರ ಹತ್ತಿರ ಬಂದು ಶ್ರೀ ಶ್ರೀನಿವಾಸನ ಪ್ರಸಾದ ನೀಡಿ ತಮಿಳಿನಲ್ಲಿ "ಇವಲ್ ಗುರುಗಳಕ್ಕು ಶಿಷ್ಯರಿಕು ಪಾಟಾಕ ಇರೊಂಟು ಕಣ್ಣು ಪೋರದೇ' ಅಂದರೆ ದಾಸರು ಮತ್ತು ಅವರ ಗುರುಗಳ (ವಿಜಯರಾಮಚಂದ್ರವಿಠಲ ದಾಸರು) ಸಮಾಗಮ ನೋಡಲು ಎರಡು ಕಣ್ಣು ಸಾಲದು ಎಂದು ಹೇಳಿ ದಾಸರಿಗೆ ಶ್ರೀನಿವಾಸನ ಪ್ರಸಾದ ನೀಡುತ್ತಾರೆ. ಪ್ರಸಾದ ಸ್ವೀಕರಿಸಿ ಎರಡನೆಯ ಪ್ರದಕ್ಷಿಣೆ ಮುಗಿಯುವದರಲ್ಲಿ ಪುರಾಣ ಹೇಳುವ ಬ್ರಾಹ್ಮಣ ಮತ್ತು ಅಯ್ಯಂಗಾರಿ ಬ್ರಾಹ್ಮಣ ಎಲ್ಲಿಯೂ ದಾಸರಿಗೆ ಕಾಣಲಿಲ್ಲ.
ತಿರುಪತಿಯಿಂದ ದಾಸರು ನಂತರದಲ್ಲಿ ಪದ್ಮಾವತಿ ದೇವಿಯ ದರ್ಶನಕ್ಕೆ ಬಂದರು. ಅಲ್ಲಿಯ ಪದ್ಮ ಸರೋವರದಲ್ಲಿ ಮತ್ತೆ ಭಸ್ಮಧಾರಿಯಾದ ಬ್ರಾಹ್ಮಣ ದರ್ಶನವಾಯಿತು. ಕುತೂಹಲದಿಂದ ಶ್ರೀದಾಸರು ಆ ಬ್ರಾಹ್ಮಣರನ್ನು ಭೇಟಿ ಮಾಡಲು ಹೊರಟರು ಆದರೆ ಅಲ್ಲಿಂದ ಮತ್ತೆ ಎಲ್ಲಿಯೂ ಕಾಣಿಸಿಕೊಳ್ಳಲಿಲ್ಲ. ದಾಸರು ಅಲ್ಲಿಂದ ಪದ್ಮಾವತಿ ಅಮ್ಮನವರ ದರ್ಶನಕ್ಕೆ ಹೊರಟರು. ಅಮ್ಮನವರ ದರ್ಶನ ಪಡೆದು ಅಲ್ಲಿಂದ ಅಮ್ಮನವರ ವಿಶೇಷ ಸೇವೆಯನ್ನು ಮಾಡಿ ದೇವಿಯ ಪ್ರಸಾದ ಪಡೆದರು.
ದರ್ಶನಂತರದಲ್ಲಿ ಆ ಮೂರು ನಾಮಧಾರಿ ಅಯ್ಯಂಗಾರಿ ಹೇಳಿದ " ದಾಸರು ಮತ್ತು ಅವರ ಗುರುಗಳ (ವಿಜಯರಾಮಚಂದ್ರವಿಠಲ ದಾಸರು) ಸಮಾಗಮ ನೋಡಲು ಎರಡು ಕಣ್ಣು ಸಾಲದು" ಎಂಬ ಮಾತುಗಳನ್ನು ಪುನಃ ಪುನಃ ಮನನ ಮಾಡಿಕೊಂಡ ಮೇಲೆ ತಮ್ಮ ಗುರುಗಳಾದ ರುದ್ರಾಂಶ ಸಂಭೂತರಾದ ವಿಜಯರಾಮಚಂದ್ರವಿಠಲರು ದರ್ಶನ ಕೊಟ್ಟು ಅನುಗ್ರಹಸಿದ್ದಾರೆ ಎಂದು ತಿಳಿದು ಯಾತ್ರೆ ತಮ್ಮ ಗುರುಗಳ ಅಂತರ್ಯಾಮಿಯಾದ ಶ್ರೀ ಶ್ರೀನಿವಾಸದೇವರಿಗೆ ಸಮರ್ಪಣೆ ಮಾಡಿದರು.
ದಾಸರಿಗೆ ಗುರುಗಳಾದ ಶ್ರೀ ವಿಜಯರಾಮಚಂದ್ರ ವಿಠಲರ ಅನುಗ್ರಹದಿಂದ ಶ್ರೀನಿವಾಸನ ಸಾಕ್ಷಾತ್ಕಾರವಾಯಿತು.
ವಿಷ್ಣುತೀರ್ಥಾಚಾರ್ ಇಭರಾಮಪುರ
ಶ್ರೀ ಇಭರಾಮಪುರಾಧೀಶ
*************
ಶ್ರೀಂ ಶ್ರೀ ಕಂ ಕಪಿಲಾಯ ನಮಃ
ಇಂದುಮೌಳಿ ಪದಾಬ್ಜಾಳಿಂ/ ಮಂದ ಸಜ್ಜನ ತಾರಕಂ/
ಇಂದ್ರಕಾಮ ಸಮಾಭಾಸಂ/ ಸುಂದರಾಂಗ ಸಮನ್ವಿತಂ/
ವಿಜಯೋಪದೋಪೇತಮ್/ ಅಜಜಾತ ಸುತಾಖ್ಯಜಮ್/
ಶ್ರೀ ಜಯೇಶೇತಿ ದಾಸಾಖ್ಯಂ ಭಜೇ ವೈರಾಗ್ಯಶಾಲಿನಮ್//
ಪರಮ ವೈರಾಗ್ಯಶಾಲಿಗಳೂ, ಪ್ರಮೇಯಗರ್ಭಿತ ಕೃತಿ ರಚನಾ ನಿಪುಣರು, ಶ್ರೀ ಅಪ್ಪಾವರ ಅನುಗ್ರಹ ಪಾತ್ರರೂ, ಶ್ರೀ ವಿಜಯರಾಮಚಂದ್ರವಿಠಲದಾಸರ ಶಿಷ್ಯರೂ ಆದ ಶ್ರೀ ಜಯೇಶವಿಠಲದಾಸಾರ್ಯರ ಆರಾಧನಾ ಮಹೋತ್ಸವ... ಮೈಸೂರು,ಕಟ್ಟೆಮನೆಯಲ್ಲಿ ನಡೆಯುತ್ತದೆ ...
ಶ್ರೀ ದಾಸಾರ್ಯರ ಪರಮಾನುಗ್ರಹ ನಮ್ಮ ಸಮೂಹದ ಸಜ್ಜನರೆಲ್ಲರ ಮೇಲೆ ಪಸರಿಸುವಂತಾಗಲೀ ಎಂದು ದಾಸಾರ್ಯಯ ಅಂತರ್ಗತ ಪರಮಾತ್ಮನಲ್ಲಿಪ್ರಾರ್ಥನೆ ಮಾಡುತ್ತಾ.... ದಾಸರ ಪದಗಳು ಹಾಡಿ ಅವರ ಸೇವೆ ಮಾಡೋಣ...
**********
ಶ್ರೀ ಗುರುಗೋಪಾಲದಾಸಾರ್ಯರ ಶಿಷ್ಯರಾದ ಶ್ರೀ ಜನಾರ್ದನ ವಿಠಲರು, ತಮ್ಮ ಪ್ರೀತಿಯ ಶಿಷ್ಯರಾದ ಪ್ರೇಮದಾಸರಿಗೆ ಅಭಿನವಜನಾರ್ದನವಿಠಲ ಎನ್ನುವ ಅಂಕಿತವನ್ನು ಪ್ರದಾನ ಮಾಡಿದ ಸುದಿನ.. ಹಾಗೆಯೆ..
ಶ್ರೀ ವಿಜಯರಾಮಚಂದ್ರವಿಠಲರ ಪ್ರೀತಿಯ ಶಿಷ್ಯರು, ತತ್ವ ಭರಿತ ಕೃತಿಗಳು ರಚನೆ ಮಾಡಿ ನೀಡಿದವರು, ಸಾತ್ವಿಕ ಜೀವನವನ್ನು ನಡೆಸಿದವರು, ಅನೇಕ ಜನ ಶಿಷ್ಯರಿಗೆ ಮಾರ್ಗವನ್ನು ತೋರಿ, ದಾಸ ಸಾಹಿತ್ಯದ ಸೇವೆ ಮಾಡಿದ ಮಹಾನ್ ವೈರಾಗ್ಯ ಚೇತನರಾದ ಶ್ರೀ ಜಯೇಶವಿಠಲರ ಆರಾಧನಾ ಮಹೋತ್ಸವದ ಶುಭಸ್ಮರಣೆಗಳು...
ಶ್ರೀ ದಾಸದ್ವಯರ, ಅಂತರ್ಗತ ಪರಮಾತ್ಮನ ಅನುಗ್ರಹ ಸದಾ ನಮಗಿರಲಿ ಎಂದು ಪ್ರಾರ್ಥನೆ ಮಾಡುತ್ತಾ...
-Smt. Padma Sirish
ನಾದನೀರಾಜನದಿಂ ದಾಸಸುರಭಿ 🙏🏽********
-Smt. Padma Sirish
ನೀ ಬುದ್ಧಿ ಕೊಡದಿರಲು ಜೀವ ಪಶುವೋ ॥ ಪ ॥
ಶ್ರೀ ಭೂಮಿ ದುರ್ಗೇಶ ಗೋವಿಂದ ಪರಿಪೂರ್ಣ ॥ ಅ ಪ ॥
ಸೃಷ್ಟಿಗೆ ಬರಲಿನ್ನು ಜೀವಯತ್ನವು ಉಂಟೆ ।
ಸೃಷ್ಟಿ ಸ್ಥಿತಿ ಲಯ ಕರ್ತ ತಿಳಿಯೊ ನೀನು ॥
ಮೊಟ್ಟ ಮೊದಲಿಗೆ ನಿನ್ನ ವಶನಾಗಿ ನಾವಿರಲು ।
ಸೃಷ್ಟಿಯೊಳು ನಮ್ಮೆತ್ನ ಕಲ್ಪಿಸುವುದೆಂತೈಯ್ಯಾ ॥ 1 ॥
ಜಡಜನ್ಮದಿಂದಲೆ ದ್ವಿಜ ಜನ್ಮ ಬಂದಿಹುದು
ಒಡೆಯ , ನಮ್ಮೆತ್ನವೇ ಸತ್ಯ ಕೇಳೊ ॥
ಕಡುನಿದ್ರೆಯಲಿ ಜೀವ ನಿಶ್ಚೇಷ್ಟನಾಗಿರಲು ।
ಬಿಡದೆ ದಿನದಿನದಲ್ಲಿ ಎಚ್ಚರಿಕೆ ಆರಿಂದ ॥ 2 ॥
ಇಂತಿರಲು ನಿಜತತ್ವ , ಎಂಥ ಶಕ್ತಿಯೋ ನಮಗೆ ।
ಸ್ವಾಂತ ಮಂಗಳ ಸುಗುಣನಿಧಿಯೆ ಪೇಳೋ ॥
ಭ್ರಾಂತಿ ಜೀವನ ಬಿಡಿಸಿ ಜಯೇಶವಿಠ್ಠಲ ।
ಶಾಂತಿ ಪಾಲಿಸು ನಮಗೆ ಭಾರವಾಂತೂ ನೀನೆ॥ 3 ॥
***
ಇದರಲ್ಲಿ " ಸೃಷ್ಟಿಗೆ ಬರಲಿನ್ನು ಜೀವಯತ್ನವು ಉಂಟೆ "
ಎಂಬ ಸಾಲಿನಲ್ಲಿ, ದಾಸರು ಜೀವರಾಶಿಗಳ ಸೃಷ್ಟಿಯ ಬಗ್ಗೆ ತಿಳಿಸಿದ್ದಾರೆ.
ಅನಾದಿಕಾಲದಿಂದ ಅನಂತಜೀವರಾಶಿಗಳು ಅಸೃಜ್ಯಾವಸ್ಥೆಯಲ್ಲಿರುವರು.
ಆಯಾ ಕಲ್ಪಕ್ಕೆ ಅನುಗುಣವಾಗಿ ಭಗವಂತ ಅವರನ್ನು ಸೃಷ್ಟಿಗೆ ತರುವನು.
ಅದು ಹೇಗೆ ??
ಅಸೃಜ್ಯಾವಸ್ಥೆಯಲ್ಲಿ ಜೀವರಿಗೆ ಸ್ವರೂಪದೇಹ ಮತ್ತು ಲಿಂಗದೇಹ ಮಾತ್ರವಿರುತ್ತದೆ. ಯಾವ ಕರ್ಮ ಮಾಡಲೂಆಗುವದಿಲ್ಲ.
ಪರಮಾತ್ಮನೇ ಒಳಗೆ ನಿಂತು ಶ್ವಾಸೋಚ್ಛಾಸ ನಡೆಸುವನು.
ಹೀಗೆ, ಕರ್ಮ ಪಕ್ವವಾಗಿರುವ ಜೀವರನ್ನು ಆಯಾ ಕಲ್ಪದಲ್ಲಿ ಸೃಷ್ಟಿಗೆ ತರುವನು.
(ಶ್ರೀ ವಾದಿರಾಜಸ್ವಾಮಿಗಳು ಸೃಷ್ಟಿಪ್ರಕರಣ ಸುಳಾದಿಯಲ್ಲಿ ಇದನ್ನ ಹೀಗೆ ಹೇಳಿರುವರು:
"ಲಿಂಗವಿಶಿಷ್ಟರಾದ
ಇನಿತು ಜೀವರ ಹಿಡಿ ತುಂಬಿಕೊಂಡು")
ಲಿಂಗವಿಶಿಷ್ಟರು ಎಂದರೆ ಕರ್ಮ ಪಕ್ವವಾಗಿ ಈ ಕಲ್ಪಕ್ಕೆ ಸೃಷ್ಟಿಗೆ ಬರಲು ಯೋಗ್ಯರಾದವರು.
ಇದರಲ್ಲಿ ಜೀವರ ಯತ್ನವೇನಿದೆ??... ಏನು ಇಲ್ಲ..
ಕರ್ಮಮಾಡಲು ಸ್ಥೂಲದೇಹವಿಲ್ಲ.
ಭಗವಂತ, ತಾನೇ ಮಾಡಿಸಿ, ಕರ್ಮಪಕ್ವವಾಗಿರುವ ನೆಪಮಾತ್ರದಿಂದ ನಮ್ಮನು ಸೃಷ್ಟಿಗೆ ತರುವನು.
(ಇಲ್ಲವಾದಲ್ಲಿ ವೈಷಮ್ಯ-ನೈರ್ಘಣ್ಯದೋಷಬಂದೀತು)
ಇದರಲ್ಲಿ ಒಂದು ಸಂದೇಹ ಬರುವದು.
ಎಲ್ಲರ ಕರ್ಮವು ಒಂದೇಕಾಲಕ್ಕೆ ಪಕ್ವವಾದರೆ ಹೇಗೆ ??
ಇದರ ಉತ್ತರಕ್ಕೆಒಂದು ಲೌಕಿಕ ಉದಾಹರಣೆ ನೀಡಬಹುದು.
ಮೊಳಕೆ ಒಡೆಯಲು ಕಾಳನ್ನು ಒದ್ದೆಬಟ್ಟೆಯಲ್ಲಿ ಹಿಂದಿನ ದಿನರಾತ್ರಿ ನೆನೆಸಿ ಒಂದೇಕಾಲಕ್ಕೆ ಇಟ್ಟರೂ, ಮರುದಿನ ಕೆಲವು ಮೊಳಕೆ ಬಂದಿರುತ್ತವೆ, ಕೆಲವಕ್ಕೆ ಇಲ್ಲ.. ಇದು ಸ್ವಭಾವಕ್ಕೆ ಸಂಬಂಧಪಟ್ಟದ್ದು..
ಹಾಗೆ ಜೀವರ ಕರ್ಮಪಕ್ವವಾಗುವರೀತಿ.
ಹೀಗೆ ಇಂತಹ ಸೂಕ್ಷ್ಮವಿಚಾರವನ್ನು ಸುಲಭವಾಗಿ ತಿಳಿಸಲು ದಾಸರು "ಸೃಷ್ಟಿಗೆ ಬರಲಿನ್ನು ಜೀವಯತ್ನವು ಉಂಟೆ" ಎಂದು ತಿಳಿಸಿದ್ದಾರೆ.
ಅಲ್ಪನ ಈ ಪ್ರಯತ್ನವನ್ನು ಹಂಸ-ಕ್ಷೀರನ್ಯಾಯದಂತೆ ಸ್ವೀಕರಿಸಬೇಕು.
ಶ್ರೀ ಮಧ್ವೇಶಾರ್ಪಣಮಸ್ತು
by prasadacharya, koppara
*****
������������
ReplyDeleteಉತ್ತಮ ಮಾಹಿತಿ..ಧನ್ಯವಾದಗಳು ಅಣ್ಣಾ.....
������������