Monday 1 July 2019

mohana dasaru mohanadasa 1815 chippagiri jyeshta shukla shashti ಮೋಹನ ದಾಸರು






info from sumadhwaseva.com--->

shri Mohana Dasaru


Period:  1728 -1815
gurugaLu: shri vijaya dAsaru
Father – Bhimappa Nayak
Ankita – “Mohana Vittala” in 1747
Gurugalu – Vijaya Dasaru
Araadhana – Jyesta Shudda Shashti
kaTTe: chippagiri, next to shri vijaya dAsara kaTTe

ಮೋಹಭಯ ದು:ಖಾದಿದೂರಂ 

ಲೋಹಲೋಷ್ಠ ಸಮೇಕ್ಷಣಂ |
ಮಾಹಿತಾಂಘ್ರಿ ಸರೋಜಭೃಂಗಂ 

ಮೋಹನಾರ್ಯ ಗುರುಂ ಭಜೇ ||


mOhabhaya du:khaadidUraM 
lOhalOShTha samEkShaNaM |
maahitaaMGri sarOjaBRuMgaM 
mOhanaarya guruM bhajE ||

kaTTe: chippagiri, next to shri vijaya dAsara kaTTe


Vijaya Dasaru blessed Mohanadasaru – Mohana Daasaru’s father expired without distributing his property to his children. Even though he had good properties, Mohana Daasa could not get anything. He was starving for food for a very long time. They found it very difficult to survive without sufficient food and clothing. His mother tried to commit suicide near Nava Vrundavana on the banks of the River Tungabhadra. Vijayadasaru happened to visit that place at the same time, seeing the lady trying to jump to the river, he stopped her, brought them to his house, gave them food, clothing, shelter. Mohan dasaru grown with the blessings of Vijaya Dasaru as if he is his son. Vijayadasaru used to say , “In strength of devotion none to beat Bhaganna (Sri Gopaladasaru) in proper sayings Mohanna (Sri Mohana Dasaru) and in strength of writings Thimanna. ” Such was the appreciation Sri Mohana Dasaru had from his guru as well as mentor/father.


Charama Shloka Meaning of Mohana Daasaru – Mohana Daasaru is free from “Mamakaara”, (AhaMkaara), he is fearless, he was faar from Sorrow, he was not seeing any difference between any Precious Metals and Stone (i.e., Gold, Silver and other jewellery were equal to ordinary stone for him). We shall pray and do namana to Mohana daasaru so that he can carry us to lotus feet of Srimannaraayana.

read more

Please click the link here for PDF File on Mohanadasaru

Click for Kolu haadu by Mohanadasaru   (Kannada)
Click for Kolu haadu in Sanskrit

*********

info from dvaita.org--->


Sri Mohana Dasaru (1728-1751)
Mohan Dasa was a famous devotee of God and was blessed even when he was young. Mohan Dasa's father Bhimappa Nayak was in Anegondi and was a jeweller. He had earned a good deal of money. But he died without distributing his property to hs wife and children.
Bhimappa Nayak's wife with her son, young Mohan, became almost destitute Both found it hard to lead even a simple life of sufficient food and clothing. The wife was ill-treated and she suffered the pain of social and financial insults. Not able to undergo deprivation the wife decided to commit suicide along with her son. The place chosen was the present Nava Vrindavan off Hampi. It is an island in the river Tungabhandra.
It so happened that Vijaya Dasa had gone to the island. Seeing the women trying to jump into the river the Dasa stopped her from her suicidal effort. He blessed the boy with long life. Later he took the child and raised him as though he was his own son. The son later became known as Mohan Dasa.
Mohan Dasa was destined to write a number of songs in praise of Hari. But, unfortunately he met with prematue death. When he suddenly died Vijaya Dasa it is said went personally to the God of death and got back Mohana Dasa. Later Mohan Dasa became a seer, philosopher and a great devotee of lord Hari. Vijaya Dasa used to say " In devotion none to beat Bhaganna (gopala dasa), In proper sayings Mohanna; In strength of writing Timmanna".

Mohana Dasa wrote his songs to preach to the common people. With his sayings and teaching methods he won the heart of the people. His ankita is "Mohana Vittala". 

**********


Sri Mohana Dasa1728-1751MohanaMohana VittalaSri Vijaya DasaChippagiriJestta Shudda Shast


info is from FB madhwanet--->

jEshTa shuddha shashTi is the ArAdhane of shri mOhana dAsaru.
Shri mOhana dAsarU had a difficult life when he was a small child. His father, Bhimappa Nayaka, was a jeweler in Anegondi. While he was rich, he died suddenly without distributing his wealth to his wife and child. mOhana dAsarU and his mother were driven away by his uncles and were undergoing abject poverty. One day, unable to bear the situation, his mother decided to commit suicide and was about to jump into the river at nava brindAvana, when viJaya dAsarU, who happened to be there saved her. He accepted her as his sister and took her and her son under his responsibility. 

He had foreseen the swarUpa of mOhana dAsarU and nurtured him. He brought him up as his own son. mOhana dAsarU, by birth, had a skin disease, which was also cured by vijaya dAsarU. He gave him the ankitA of mOhana viTTala. He got him married also. vijaya dAsarU foresaw untimely death of mOhana dAsarU and had instructed mOhana dAsarU's wife to remember him if something befell mOhana dAsarU. 

Indeed mOhana dAsarU had an untimely death at a young age. At that time, his wife remembered vijaya dAsaru's words and started praying to him and did not allow the body to be taken for cremation. Vijaya dAsarU who was on a tour heard the prayer and went to yamalOka and told yamadharmarAja that it was another mOhanA that was to have died and not mOhana dAsarU. YamadharmarAja agreed that it was a mistake and returned the soul of mOhana dAsarU to the body which was lying on earth. mOhana dAsarU got up as though he was sleeping and composed a dEvara nAma on his guru. 

He went onto live for 85 years and composed several dEvara nAmAs and uga-bhOgAs. The affection of vijaya dAsarU was so much that the kaTTE of mOhana dAsarU is next to vijaya dAsaru himself.

shishya parampareE
His shishya paramparE continues to this day through muddu mOhana viTTala dAsarU, tandE muddu mOhana viTTala dAsarU, guru gOvinda viTTala dAsarU. guru gOvinda dAsarU founded Ahila bhArata harisdAsa sammELanA Trust and had many shishyAs including khagavaradhwaja viTTala dAsarU (who is instrumental in the construction of haridAsAshrAma and pAnDUranga viTTala temple at Raja Rajeshwari Nagar, Bangalore and lives in ITTamaDU, Bangalore), harinArAyaNa viTTala dAsarU (who has founded purandara AshrAma near manthrAlayA and lives there), shri varAha viTTala dAsarU (who lives in manDya).
mOhabhaya du:khaadidUraM lOhalOShTha samEkShaNaM |

mAhitAMGri sarOjaBRuMgaM mOhanArya guruM bhajE ||

Shri mOhan dAsa guruvAntargata, shri vijaya dAsa guruvAntargata, maharudradeva guruvAntargata, bhArathiramana mukhyaprANantargata, rukmiNi sathyabhAma patE shri gOpAlakrishNa dEvara pAdAravindakke gOvindA gOvindA...
shri krishNArpaNamastu...
***********


ಭಕ್ತಿಯಲ್ಲಿ ಭಾಗಣ್ಣ  - ಯುಕ್ತಿಯಲ್ಲಿ ಮೋಹನ್ನ  - ಶಕ್ತಿಯಲ್ಲಿ ತಿಮ್ಮಣ್ಣ 💐💐"

ಇದು ವಿಜಯರಾಯರ ಶಿಷ್ಯಂದಿರ ಶಿಷ್ಯರ ಬಗ್ಗೆ ಇರುವ ಉದ್ಗಾರ. ಇಂಥಹ ಪ್ರಮುಖ ಶಿಷ್ಯರಲ್ಲಿ ಒಬ್ಬರಾದವರು ಮೋಹನದಾಸರು. ಮೋಹನದಾಸರ ಕೃತಿಗಳ ಹಾಗೂ ಮಾತಿನ ಶೈಲಿಯಲ್ಲಿ ಯುಕ್ತಿಯನ್ನು ಬಳಸುತ್ತಾರೆ ಎಂಬುವದಕ್ಕಾಗಿ " ಯುಕ್ತಿಯಲ್ಲಿ ಮೋಹನ್ನ " ಎಂದು ವರ್ಣಿಸಿದ್ದಾರೆ. ಶ್ರೀ ಮೋಹನದಾಸರು ವಿಜಯದಾಸರ ಸಾಕುಮಗ. ಇವರ ತಂದೆ, ಗುರು, ಉದ್ಧಾರಕ ದಾಸಾರ್ಯ ಶ್ರೀವಿಜಯದಾಸರು.
               
ವಿಜಯದಾಸರು ಒಮ್ಮೆ ಪುರಂದರದಾಸರ ಆರಾಧನೆಯನ್ನು ಹಂಪಿಯಲ್ಲಿ ಹಮ್ಮಿಕೊಂಡಾಗ ಒಬ್ಬ ತಾಯಿ ಜೀವನದಲ್ಲಿ ಬೇಸತ್ತು ತನ್ನ ರೋಗಗ್ರಸ್ತ ಮಗುವಿನೊಂದಿಗೆ ಚಕ್ರತೀರ್ಥದಲ್ಲಿ ಹಾರಿ ತಾನು ಪ್ರಾಣ ಬಿಡಬೇಕೆನ್ನುವ ಹೊತ್ತಿಗೆ ಶ್ರೀ ವಿಜಯದಾಸರು ಅವಳನ್ನು ಸಮಾಧಾನ ಮಾಡಿ ನದಿಯಲ್ಲಿ ಅದ್ದಿ ತೆಗೆದರು. ಆಗ ಮಗುವಿನ ಗಾಯಗಳೆಲ್ಲಾ ವಾಸಿಯಾಗಿ ಸುಂದರವಾಗಿ ಕಾಣುತ್ತದೆ. ಆ ಮಗುವಿಗೆ "ಚಿರಂಜೀವಯಾಗೆಲೋ ಚಿಣ್ಣ ಹರಿದಾಸ ದಾಸ ದಾಸರ ಪಾದ ಧೂಳಾಗಿ" (ಆಡಿಯೋ 👇)ಎಂದು ಆಶೀರ್ವಾದಪೂರ್ವಕವಾಗಿ ಹರಸುತ್ತಾರೆ. ಎಲ್ಲರ ಮನವನ್ನು ಸೆಳೆದ ಆ ಕಂದನ ಹೆಸರನ್ನು " ಮೋಹನ " ಎಂದು ನಾಮಕರಣ ಮಾಡುತ್ತಾರೆ. ಆ ಮಗುವನ್ನು "ಇವನೇ ನಿನ್ನ ಮಗ" ಎಂದು ತಮ್ಮ ಪತ್ನಿಗೆ ಒಪ್ಪಿಸುತ್ತಾರೆ. ಆ ಮಗುವೇ ಮುಂದೆ ಮೋಹನದಾಸರಾಗಿ ಬೆಳೆಯುತ್ತಾರೆ. ವಿಜಯದಾಸರ ಸಾಕುಮಗನಾಗಿ ಬೆಳೆದಿದ್ದರಿಂದ "ಮೋಹನ" ಮೋಹನದಾಸರಾಗಿ ಮತ್ತು ವಿಜಯದಾಸರು ಪ್ರದಾನ ಮಾಡಿದ " ಮೋಹನ ವಿಠಲ " ಅಂಕಿತದಿಂದ ಪ್ರಸಿದ್ಧರಾಗುತ್ತಾರೆ.

 ನವವೃಂದಾವನ* "ಮೋಹನರಿಗೆ ಶ್ರೀ ವಿಜಯಪ್ರಭುಗಳಿಂದ ದಾಸದೀಕ್ಷೆ ದೊರೆತದ್ದು ನವಯತಿಗಳ ಸನ್ನಧಿಯಲ್ಲಿ. ಈ ದಿವ್ಯ ಸ್ಥಳದ ಉಲ್ಲೇಖ‌‌‌‌ ವಿಜಯದಾಸರ‌ನ್ನು ಸ್ತುತಿಸಿರುವ ಕೆಳಗಿನ ಪದವೊಂದರಲ್ಲಿ‌ ಬರುತ್ತದೆ. ನಿನ್ನ ಪಾದವ ನಂಬಿ ಅನ್ಯರಾಶ್ರಯವೇಕೆ ಚನ್ನಗುರು ವಿಜಯರಾಯ ಇನ್ನೇನು ಇನ್ನೇನು ಯೆನ್ನ ಕುಲಕೋಟಿ ಪಾವನ್ನವಾದುದು ನಿಶ್ಚಯ ಜೀಯಾ.. 
                
ಒಮ್ಮೆ ವಿಜಯದಾಸರು ಕಾಶಿಗೆ  ಹೊರಡುವಾಗ ಸೊಸೆ ಸೀತಮ್ಮನವರಿಗೆ ಕರೆದು ಮೋಹನದಾಸರಿಗೆ ಅಪಮೃತ್ಯು ಸಂಭವಿಸುವದಾಗಿ ಹಾಗೂ ಸಂಸ್ಕಾರ ಮಾಡಲು ಬಿಡದೆ ಭಗವಂತನನ್ನು ನನ್ನನ್ನು ಸ್ಮರಣೆ ಮಾಡು ಎಂದು ಹೇಳಿ ಹೋದಂತೆ, ಮೋಹನದಾಸರು ಪೂಜೆ ಮಾಡಿ ಕುಳಿತುಕೊಂಡಾಗ ಅವರ ಪ್ರಾಣ ಹೋಗುತ್ತದೆ. ಜನಸಂದಣಿಯಾಗುತ್ತದೆ, ಇನ್ನೇನು ಅಂತ್ಯಸಂಸ್ಕಾರ ಮಾಡಲು ಹೊರಡಬೇಕೆಂದು ತಯಾರಾಗುತ್ತಿದ್ದಂತೆಯೇ ಶ್ರೀ ಅಶ್ವತ್ಥನರಸಿಂಹನ ಸನ್ನಿಧಿಯಲ್ಲಿ ತನ್ನನ್ನು ಕರೆಸಿ ಹೇಳಿಹೋಗಿದ್ದ ಮಾತುಗಳನ್ನು ನೆನೆಯುತ್ತಾ ಧೈರ್ಯ ತಂದುಕೊಂಡು ಸೀತಮ್ಮ ಅವರನ್ನು ಸ್ಮರಿಸಲು ವಿಜಯದಾಸರು ಯಮಲೋಕಕ್ಕೆ ಪ್ರವೇಶ ಮಾಡಲು ಅಲ್ಲಿ ವಿಜಯರಾಯರು ಯಾರದ್ದೋ ಜೀವ ತರುವ ಬದಲು ಮೋಹನದಾಸರ ಜೀವ ತಂದಿದ್ದೀರಿ ಎಂದು ಅರುಹಲು ಯಮಧರ್ಮರಾಯ ವಿಜಯರಾಯರ ಆಜ್ಞೆಯ ಮೇರೆಗೆ ಜೀವವನ್ನು ಕರುಣಿಸುತ್ತಾರೆ. ಹೀಗೆ ಮೋಹನದಾಸರಿಗೆ ಬಂದ ಅಪಮೃತ್ಯುವನ್ನು ಪರಿಹಾರ ಮಾಡುತ್ತಾರೆ. ಆಗ ಏನು ಆಗಿಲ್ಲವೆಂಬಂತೆ ಮೋಹನದಾಸರು ಚಿಕಲಪರವಿಯಲ್ಲಿ ಎದ್ದು ಕುಳಿತು, ತಮ್ಮ ಗುರು ಹಾಗೂ ತಂದೆ ವಿಜಯರಾಯರ ಕುರಿತು -
               
 ಸಿರಿ ಮೋಹನ ವಿಠಲನ ಪದವ ತೋರಿ ಧರೆಗೆ ತಂದುಬಿಟ್ಟೆ ಕರುಣಾಳುವೆ,ತಂದೆ ವಿಜಯರಾಯ ಈ ವ್ಯಾಳೆಗೆ ಬಂದ್ಯೋ ವಿಜಯರಾಯ||"  ಎಂದು ಸ್ತುತಿಸುತ್ತಾರೆ.(ಶ್ರೀ ಮೋಹನದಾಸರಿಗೆ ಅಪಮೃತ್ಯು ಪರಿಹರಿಸಿದ ಕಟ್ಟೆ,ಚಿಕಲಪರ್ವಿ 👇)

 ಮೋಹನ ದಾಸರು ಸಂಚಾರ ಮಾಡಿದ ಕೆಲ ಸ್ಥಳಗಳು ..

 ಚಿಕ್ಕೇರಿಪುರ ಅಥವಾ ಚಿಕ್ಕೇರಹಳ್ಳಿ* ಇದು ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರ ತಾಲೂಕಿನ ಹಳ್ಳಿ. ಶ್ರೀನರಹರಿತೀರ್ಥರಿಂದ ಸ್ಥಾಪಿತವಾದ ಪ್ರಾಣದೇವರಗುಡಿ‌‌ ಇಲ್ಲಿದೆ. ಇಲ್ಲೇ ಮೋಹನದಾಸರಿಂದ ಪ್ರತಿಷ್ಟಾಪಿಸಲಪಟ್ಟ ಶ್ರೀರಾಮಚಂದ್ರ ಮೂರ್ತಿ ಇದೆ. ಇದೇ ಸಂದರ್ಭದಲ್ಲಿ ಮೋಹನದಾಸರು ಅಲ್ಲಿನ ಪ್ರಾಣಪತಿಯ ಅರ್ಚಕರಾಗಿದ್ದ ಕೃಷ್ಣದಾಸರ ಪುತ್ರ ರಾದ ತಿಮ್ಮಣ್ಣ ನನ್ನು ತಮ್ಮ ಪ್ರಪಥಮ ಶಿಷ್ಯ ರನ್ನಾಗಿ ಸ್ವೀಕರಿಸಿ ಮಧ್ವಪತಿವಿಠಲಾಂಕಿತ ದಯಪಾಲಿಸಿದರು. 

 ಕಂಪ್ಲಿ* ಪಟ್ಟಾಭಿರಾಮಚಂದ್ರನ ಪ್ರತಿಷ್ಟಾಪನೆ ಬಳ್ಳಾರಿ ಜಿಲ್ಲೆ ಹೊಸಪೇಟೆ ತಾಲೂಕಿನ‌ ಕಂಪ್ಲಿ ‌ಪ್ರದೇಶಕ್ಕೆ ೧೭೯೦ ಕಾಶಿಯಿಂದ ಬಾವಾಜಿಯೊಬ್ಬರು ತಮ್ಮ‌‌ಶಿಷ್ಯ ಸಮೇತರಾಗಿ ಪಟ್ಟಾಭಿರಾಮಚಂದ್ರನ ಮೂರ್ತಿಯೊಂದಿಗೆ ಆಗಮಿಸಿದ್ದರು. ಆದರೆ ಮೂರ್ತಿ ಪ್ರತಿಷ್ಟಾಪನೆ ನೆರವೇರಿಸದೆ ಬಾವಾಜಿಗಳು ತಮ್ಮ ಇಹಯಾತ್ರೆ ಕೈಗೊಂಡರು. ಮೂರ್ತಿ ಪ್ರತಿಷ್ಟಾಪನೆಯ ಪುಣ್ಯ ಮೋಹನದಾಸರಿಗೆ ಲಭಿಸಿತು. ತಮ್ಮ ಪರಿವಾರ ಸಮೇತ ದಾಸರು ಆಗಮಿಸಿ ವಿದಿವತ್ತಾಗಿ ಶ್ರೀರಾಮನ ಪ್ರತಿಷ್ಟಾಪನೆ ನೆರವೇರಿಸುತಾರೆ.

 ಯಂತ್ರೋಧಾರಕ 
ದಾಸರು ಸಂಚಾರ ಕ್ರಮೇಣವಾಗಿ ಹಂಪಿಗೆ ಬಂದು, ಶ್ರೀ ಯಂತ್ರೋಧಾರಕ ಪ್ರಾಣದೇವರಮೇಲೆ ಹಾಡು ಮಾಡುತಾರೆ " ಸಂಜೀವನ ಗಿರಿಧರ ಪಾಹಿಮಾಂ ಚಕ್ರತೀರ್ಥ ನಿವಾಸ ಶಕ್ರಾದ್ಯಮರಾಧೀಶ ವಕ್ರಾನನ ಮೂರುತಿ ಪಾಹಿಮಾಂ ಮಂತ್ರ ಮೂಲ ಸ್ಥಿತ ಕಂತುಪಿತನ ದೂತ ಯಂತ್ರೋದ್ಧಾರಕ ಪಾಹಿಮಾಂ *ಮೋಹನ ವಿಠಲದಾಸ ಪೋಷಕ ಮಾಯಾ ಮೋಹಕ ಭಂಜಕ ಪಾಹಿಮಾಂ*...

 ವಿಜಯದಾಸರ ಪ್ರಯಾಣದ ನಂತರ ಕೆಲ ಕಾಲ ವಿಜಯರಾಯರ ಕಟ್ಟೆಯನ್ನು ನೋಡಿಕೊಂಡಿದಾರೆ. ಈಗಲೂ ಮೋಹನದಾಸರ ವಂಶಸ್ಥರೇ ಚಿಪ್ಪಗಿರಿಯಲ್ಲಿರುವ ವಿಜಯದಾಸರ ಕಟ್ಟೆಯನ್ನು ನೋಡಿಕೊಂಡು ಬರುತ್ತಿದ್ದಾರೆ. ವಿಜಯದಾಸರಿಗೆ ಸಾಕು ಮಗನಾಗಿ ಹಾಗೂ ಶಿಷ್ಯನಾಗಿ ಅವರಿಗೆ ಪ್ರೀತಿಪಾತ್ರರಾದ ಕಾರಣ ಇವತ್ತಿಗೂ ವಿಜಯದಾಸರ ಕಟ್ಟೆಯ ಬಲಭಾಗದಲ್ಲಿ ಇಂದಿಗೂ ಮೋಹನದಾಸರು ವಿರಾಜಮಾನರಾಗಿದ್ದಾರೆ. ಹಾಗೂ ನಿರಂತರ ಹರಿವಾಯುಗುರುಗಳ ಸ್ಮರಣೆ ಮಾಡುತ್ತಾ ವಿಜಯದಾಸರ ಚರಣ ಸೇವಕರಾಗಿದ್ದಾರೆ. 

 **ಮನ್ನಿಸೋ ಮೋಹನ್ನ ಗುರುವೇ
ಧನ್ಯಾಪನ್ನ ಜನಾಮರತರುವೇ...** 
ದಾಸಾರ್ಯರ ಸೇವೆಯಲ್ಲಿ...
ಎಸ್.ವಿಜಯ ವಿಠ್ಠಲ.💐🙏🏼
********

ಚಿಪ್ಪಗಿರಿಯ ನಿಲಯ ಅಪ್ಪ ವಿಜಯರಾಯರ ಸಾಕು ಮಕ್ಕಳಾದ ಶ್ರೀ ಮೋಹನದಾಸರ ಆರಾಧನಾ ಮಹೋತ್ಸವ🙏🙏 
🕉️ಮೋಹಭಯ ದು:ಖಾದಿದೂರಂ 
ಲೋಹಲೋಷ್ಠ ಸಮೇಕ್ಷಣಂ |
ಮಾಹಿತಾಂಘ್ರಿ ಸರೋಜಭೃಂಗಂ 
ಮೋಹನಾರ್ಯ ಗುರುಂ ಭಜೇ ||
🕉️ಅಜ್ಞಾನತಿಮಿರಚ್ಛೇದಂ ಬುದ್ಧಿಸಂಪತ್ಪ್ರದಾಯಕಂ |
ವಿಜ್ಞಾನವಿಮಲಂ ಶಾಂತಂ ವಿಜಯಾಖ್ಯ ಗುರುಂ ಭಜೇ|

27-05-2020 : ಜ್ಯೇಷ್ಠ ಶುಕ್ಲ ಪಂಚಮಿ : ಪೂರ್ವಾರಾಧನೆ
28-05-2020 : ಜ್ಯೇಷ್ಠ ಶುಕ್ಲ ಷಷ್ಠಿ : ಮಧ್ಯಾರಾಧನೆ
29-05-2020 : ಜ್ಯೇಷ್ಠ ಶುಕ್ಲ ಸಪ್ತಮಿ : ಉತ್ತರಾರಾಧನೆ
ಮೋಹಭಯ ದು:ಖಾದಿದೂರಂ ಲೋಹಲೋಷ್ಠ ಸಮೇಕ್ಷಣಂ |
ಮಾಹಿತಾಂಘ್ರಿ ಸರೋಜಭೃಂಗಂ ಮೋಹನಾರ್ಯ ಗುರುಂ ಭಜೇ ||

ಮೋಹಕಾರ, ಭಯ, ಮತ್ತು ದುಖಾದಿಗಳಿಂದ ದೂರರಾದ, ಲೋಹಪದಾರ್ಥಗಳಿಗೂ ಕಲ್ಲಿಗೂ ವ್ಯತ್ಯಾಸವನ್ನೇ ಕಾಣದ (ಬಂಗಾರಾದಿ ಬೆಲೆ ಬಾಳುವ ಲೋಹಪದಾರ್ಥಗಳನ್ನೂ ಮತ್ತು ಕಲ್ಲನ್ನು ಒಂದೇ ಎಂದು ಭಾವಿಸಿರುವ), ಶ್ರೀಹರಿಯ ಶ್ರೇಷ್ಠವಾದ ಪಾದಕಮಲಗಳಿಗೆ ಭೃಂಗ (ದುಂಬಿ)ದಂತೆ ಸೇವಿಸುವ ಮೋಹನದಾಸರನ್ನು ಭಜಿಸುತ್ತೇನೆ 


Meaning of Charama Shloka of Mohana Daasaru - Mohana Dasaru is free from “Mamakaara”, (AhaMkaara), he is fearless, he was faar from Sorrow, he was not seeing any difference between any Precious Metals and Stone (i.e., Gold, Silver and other jewellery were equal to ordinary stone for him). We shall pray and do namana to Mohana daasaru so that he can carry us to lotus feet of Srimannarayana.
*************

||  ಶ್ರೀ ವಿಠ್ಠಲ ಪ್ರಸಿದ್ದ ||

“ವ್ಯಾಸೋಚ್ಛಿಷ್ಟ ಜಗತ್ ಸರ್ವಂ “ ಅಂದಹಾಗೆ ವ್ಯಾಸಭಗವಾನರ
ಅಭಿಪ್ರಾಯಗಳನ್ನು ತಿಳಿಗನ್ನಡದಲ್ಲಿ ಪಾಮರರಿಗೂ ಅಥವಾಗುವಂತೆ  ಹೇಳಿದ್ದು ದಾಸಾರ್ಯರುಗಳು ಅವರಲ್ಲಿ  ಒಬ್ಬರು ಶ್ರೀ ಮೋಹನದಾಸರು .  
 ಮಹಿಮಾನ್ವಿತರಾದ ಶ್ರೀ ಮೋಹನ ಗುರುವರ್ಯರ ಕಿಂಚಿತ್ ಸ್ಮರಣೆ .
ಶ್ರೀ ವಿಜಯದಾಸರ ಮೂರುಜನ ಪ್ರಮುಖ ಜ್ಞಾನಿ ಶಿಷ್ಯರುಗಳು “ ಭಕ್ತಿಯಲ್ಲಿ ಭಾಗಣ್ಣ (ಗೋಪಾಲದಾಸರು ) ಶಕ್ತಿಯಲ್ಲಿ ತಿಮ್ಮಣ್ಣ          (ವೇಣುಗೋಪಾಲದಾಸರು ) ಮೂರನೆಯವರಾಗಿ ಯುಕ್ತಿಯಲ್ಲಿ ಮೋಹನ್ನ “ ಎಂದುಕರೆಸಿಕೊಂಡವರೇ ಶ್ರೀಮೋಹನದಾಸರು
ಶ್ರೀ ವಿಜಯರಾಯರ ಸಾಕುಮಗ .
ದಾಯಾದಿಗಳ ಆಸ್ತಿಗಲಾಟೆಯಲ್ಲಿ ಎಲ್ಲವನ್ನು ಕಳೆದುಕೊಂಡ ನತದೃಷ್ಟ ಹೆಣ್ಣುಮಗಳ ರೋಗಿಷ್ಠಮಗು , ಮಹಿಮಾನ್ವಿತರ ಕೃಪಾದೃಷ್ಟಿಯಿಂದ  ಬೆಳವಣಿಗೆ ಹೊಂದಿ 
ಹುಣ್ಣಿಮೆಯ ಚಂದ್ರನಂತೆ ವೃದ್ಧಿಯನ್ನು ಪಡೆದು 
ಮೋಹನದಾಸರಾದದ್ದು ಪವಾಡ .

ಗುರುಕರುಣೆಯಿಂದ ಶಾಸ್ತ್ರಜ್ಞಾನ ಬೆಳೆಯಿತು 
ಶ್ರೀವಿಜಯರಾಯರ ಅನುಗ್ರಹದಿಂದ ಗೃಹಸ್ಥಾಶ್ರಮ ಪ್ರವೇಶಿಸಿದರು . ಗೃಹಸ್ಥರಾದ ಅವರನ್ನು ಆಶೀರ್ವದಿಸುತ್ತ ಗುರುಗಳು  “ ಚಿರಂಜೀವಿಯಾಗಲೊ ಚಿಣ್ಣನೀನು”
ಎಂದು ಆಶಿರ್ವದಿಸಿದರು  .
ಸಮೃದ್ಧಿಜೀವನದಲ್ಲಿ ಕೊಂಚ ಮೈಮರೆತರು ಮೋಹನರಾಯರು .  ತನ್ನ ಪರಿವಾರ ದೇವತೆಯಾದ ಅವರು ಭುವಿಗೆ ಬಂದಕಾರಣವನ್ನು ಭಗವಂತ ಮರೆಯುತ್ತಾನೆಯೇ  ಶ್ರೀವಿಜಯದಾಸಾರ್ಯರ 
ಮೂಲಕ  ಎಚ್ಚರಿಸಿದ .
ಶ್ರೀ ಪುರಂದರದಾಸರ ಆರಾಧನೆಯದಿನ 
ಅವರಿಗೆ ವಿಧ್ಯುಕ್ತವಾಗಿ ನವವೃಂದಾವನ  ಗಡ್ಡೆಯಲ್ಲಿ ದಾಸಧೀಕ್ಷೆ ನೀಡಿ  “ಮೋಹನ ವಿಠ್ಠಲ”
ಎಂದು ಅಂಕಿತನೀಡಿದರು 
ಸಂಪ್ರದಾಯದಂತೆ , ಅಂಕಿತ ಉಪದೇಶದ ಕೃತಿಯೊಂದನ್ನು ಗುರುಗಳು ರಚಿಸುತ್ತಾರೆ 
ಹಾಗೆ ವಿಜಯದಾಸರು “ ಪಾಹಿ ಮೋಹನ ವಿಠ್ಠಲ ಪರಮ ಕರುಣಾ ಜಲಧಿ 
ಮಹದಾದಿ ದೇವ ವಂದ್ಯ , ಮೋಹಪಾಶವ ಬಿಡಿಸಿ ನಂಬಿದನಿಗೊಲಿದು , ರಹಸ್ಯ ಮತಿ ಕೊಡುವುದು ಸ್ವಾಮಿ .” ಎಂದು ಭಗವಂತನ್ನ ಬೇಡಿದರು 
ಮತ್ತೊಂದುಸಲ ಅವರು ಯಾತ್ರೆಗೆ ಹೋಗಿದ್ದಾಗ 
ಶ್ರೀ ಮೋಹನದಾಸರ ಪತ್ನಿಯನ್ನು ಕರೆದು 
“ನಿನ್ನಪತಿ ಅಕಾಲ ಮೃತ್ಯುಗೀಡಾಗುವನು ಆದರೆ ದೇಹವನ್ನು ಸಂಸ್ಕಾರಕ್ಕೆ ಕೊಡಬೇಡ ಎಂದು ಹೇಳಿಹೋಗಿದ್ದರು .
ಅವರು ಹೇಳಿದಂತೆ ಆಯಿತು . ಪತ್ನಿ ದಾಸರು ಹೇಳಿದ್ದ ಮಾತನ್ನು ಕಟ್ಟು ನಿಟ್ಟಾಗಿ ಪಾಲಿಸಿದಳು 
ಶ್ರೀ ವಿಜಯದಾಸರು ತಮ್ಮ ಮೂಲರೂಪದಿಂದ ಯಮಪುರಿಗೆ ತೆರಳಿ  ಯಮನೊಡನೆ ಸಂಭಾಷಿಸಿ ಮೋಹನ ದಾಸರ  ಮೃತ್ಯು ಆಕಾಲದ್ದು ಎಂದು ವಾದಿಸಿ ತಮ್ಮ ಪ್ರೀತಿಯ ಮೋನಪ್ಪನಿಗೆ ಜೀವದಾನ ಮಾಡಿದರು . 
ಶ್ರೀ ಮೋಹನದಾಸರು ಎದ್ದು ಕುಳಿತರು 
ಶ್ರೀ ವಿಜಯದಾಸರು ಯಾತ್ರೆಯಿಂದ ಹಿಂದಿರುಗಿದರು ಮೋಹನದಾಸರು, “ ಪರಮಹರುಷವಾಯಿತು, ವಿಜಯರಾಯ ಗುರುಗಳ ಆoಘರಿಯ “ಕಂಡು ಎಂದು ಹಾಡಿ ಚರಣಕ್ಕೆರಗಿದರು .
ಮುಂದೆ ವಿಜಯರಾಯರು ಹರಿಪಾದ ಸೇರಿದರು 
ಆಗ ಮೋಹನದಾಸರು “ ತೆರಳಿದರು ಹರಿಪುರಕೆ ವಿಜಯರಾಯರು” ಎಂದು ಚರಮ ಗೀತೆ ರಚಿಸಿ ಗದ್ಗದಿತರಾದರು  .
ಮುಂದೆ ಚಿಪ್ಪಗಿರಿಯಲ್ಲಿ ಅವರಕಟ್ಟೆ ಸ್ಥಾಪಿಸಿ 
ಅದರ ನಿರ್ವಹಣೆ  ದಾಸರ ಆರಾಧನೆ ನಡೆಸಿಕೊಂಡು ಬಂದರು . ಈ ವಿಷಯವನ್ನು 
ಶ್ರೀ ಮುದ್ದುಮೊಹನ ವಿಠ್ಠಲದಾಸರ ವಂಶಸ್ಥ ರಾಘವೇಂದ್ರಪ್ಪ ಎನ್ನುವವರು ತಾವು ಶ್ರೀ ಮೋಹನದಾಸರನ್ನು , ಜಗನ್ನಾಥದಾಸರನ್ನು ಪ್ರತ್ಯಕ್ಷ ಕಂಡಿದ್ದ ಮಾಹಿತಿಯನ್ನು ಬರೆದುಕೊಂಡಿದ್ದಾರೆ .
ಅನೇಕ ತೀರ್ಥಕ್ಷೇತ್ರ ಸಂದರ್ಶಿಸಿ  ಅನೇಕ ದೇವರನಾಮಗಳು ಸುಳಾದಿಗಳನ್ನು ರಚಿಸಿದ್ದಾರೆ 
ಅತಿ ಜನಪ್ರಿಯವಾದ  ಇದು ಏನೋ ಈ
 ವೇಷ. ವೇದವ್ಯಾಸ ಭಾನುಕೋಟಿ ಪ್ರಕಾಶ ಬದರಿ ನಿವಾಸ “ ಎಂದು ಬದರೀನಾಥನನ್ನು ಕೊಡಾಡಿದರು .
ಅನೇಕ ಶಿಷ್ಯರನ್ನು ತಯಾರುಮಾಡಿದರು . ಅವರಲ್ಲಿ ಚಿಕ್ಕೇರಿ ದಾಸರೆಂದು ಪ್ರಖ್ಯಾತರಾದ 
ಮದ್ವಪತಿವಿಠ್ಠಲದಾಸರು ಪ್ರಮುಖರು . ಅಲ್ಲಿ ಸೀತಾರಾಮ ದೇವರ ವಿಗ್ರಹವನ್ನು ಪ್ರತಿಷ್ಠೆ ಮಾಡಿದರು.
ಅನೇಕ ಸುಳಾದಿಗಳನ್ನು ರಚಿಸಿದ್ದಾರೆ . ಅದರಲ್ಲಿ ಡಾಂಭಿಕ ಭಕ್ತಿಯನ್ನು ಲೇವಡಿಮಾಡುವ ಕೃತಿ 
“ ಹರಿಭಕ್ತನು ನಾನಲ್ಲ “ ಇಲ್ಲಿ ಸುಳ್ಳು ಹೇಳಿ ಹಣ ಸಂಗ್ರಹಿಸುವವರನ್ನು ಬಹಿರಂಗವಾಗಿ ಟೀಕಿಸಿದ್ದಾರೆ . ಅವರ ಕಾಲದಲ್ಲಿ ವಿದೇಶಿಯರ ಹಾವಳಿ ಬಹಳವಾಗಿತ್ತು ಅದನ್ನು ಕುರಿತು ದ್ವಂದ್ವಾರ್ಥ ಬರುವಧಾಟಿಯಲ್ಲಿ “ ತುರುಕರಿಲ್ಲದ ಊರೊಳು “ ಎನ್ನುವ ಕೃತಿ ರಂಜಿಸುತ್ತದೆ .
ತಮ್ಮ ಸ್ವರೂಪೋದ್ಧಾರಕ ಶ್ರೀ ವಿಜಯರಾಯರಮೇಲೆ ಸರಿಸುಮಾರು ಕೃತಿಗಳನ್ನು ರಚಿಸಿದ್ದಾರೆ . ಅದರಲ್ಲಿ “ ವಿಜಯರಾಯರ ಪಾದ ದಿಟವಾಗಿ ನಂಬಲು ಅಜನಪಿತ  ತಾನೇ ಒಲಿವ “ ಎನ್ನುವ ಕೃತಿ ಎಲ್ಲರ ಮನದಲ್ಲೂ ಹರಿದಾಡುವಂತಹುದು . ಅದಲ್ಲದೆ ಕೋಲಾಟದಪದ , ಯತಿಗಳನ್ನು ಸ್ತುತಿಸುವ ಪದಗಳು  ತಾರತಮ್ಯದಿಂದ ಕೂಡಿದ ಪದಗಳು
ರುದ್ರದೇವರನ್ನು ಲೇವಡಿಮಾಡಿದಂತೆ ಕಂಡ ಪದಗಳು ಅವರ ಭಂಡಾರದಲ್ಲಿದೆ .
ಸುಮಾರು ಎಂಬತ್ತುವರ್ಷಕಾಲ ಜೀವಿಸಿದ್ದ ದಾಸರು ಅನೇಕ ಹರಿದಾಸರುಗಳಿಗೆ ಅಂಕೀತೋಪದೇಶ ವಿತ್ತರು . ಶ್ರೀ ವಿಜಯದಾಸರ
ಪ್ರೇಮದ ಪುತ್ರ  ಕ್ರಿ ಶ ೧೮೧೫  ಯುವನಾಮ ಸಂವತ್ಸರ  ಜೇಷ್ಠ ಶುದ್ಧ ಪಂಚಮಿ  ಹರಿಪಾದ
ಸೇರಿದರು.
ಜ್ಞಾನಿಗಳು ಅವರ ಸ್ಮರಣೆಯನ್ನು  “ಮೋಹಭಯ
ದುಃಖದಿ ದೂರಂ ಲೋಹ ಲೊಷ್ಟ ಸಮೇ ಕ್ಷಣಂ 
ಮಾಹಿತಾಂಗ್ರಿಸರೋಜ ಬೃಂಗಂ ಮೋಹನಾರ್ಯಗುರುಮ್ ಭಜೇ “ ಎಂದು ಸ್ಮರಿಸುತ್ತಾರೆ 
       ನಾಹಂ ಕರ್ತಾ ಹರಿಃ ಕರ್ತಾ

      ಶ್ರೀ ಮೋಹನ ವಿಠ್ಠಲಾರ್ಪಣಮಸ್ತು
***



ಚಿರಂಜೀವಿಯಾಗೆಲೋ ಚಿಣ್ಣ ನೀನು|
ಪರಮ ಭಾಗವತರ ಪದ ಧೂಳಿ ಧರಿಸುತಲಿ||
ಎಂದು ಶ್ರೀ ವಿಜಯದಾಸರು ಹರಿಸಿದ್ದಾರೆ ನಮ್ಮ ಮೋಹನದಾಸರಿಗೆ.
ಬಂಧು ಬಳಗದವರಿಂದ ,ಸಮಾಜದ ಜನರಿಂದ ತಿರಸ್ಕಾರ ಹೊಂದಿದ ಕೂಸು,ಹಂಪಿಯ ತುಂಗಭದ್ರಾ ನದಿಯಲ್ಲಿ ತಾಯಿಯ ಕೈಯಿಂದ ನೀರು ಪಾಲಾಗಬೇಕಿದ್ದ ಮೋಹನ ಎಂಬ ಕೂಸನ್ನು ಉಳಿಸಿ ಶ್ರೀವೇದವ್ಯಾಸರ ಶ್ರೀಆನಂದ ತೀರ್ಥರು ರಚಿಸಿದ ಶಾಸ್ತ್ರ ವೆಂಬ ಸಮುದ್ರ ದ ನೀರಿನಲ್ಲಿ ಈಜಾಡುವವಂತೆ ಮಾಡಿದವರು ನಮ್ಮ ಶ್ರೀ ವಿಜಯಪ್ರಭುಗಳು..
ಮತ್ತು 
ಚೀಕಲಪರವಿಯಲ್ಲಿ ಅವರಿಗೆ ಅಪಮೃತ್ಯು ಬಂದಾಗ ಅದನ್ನು ಸಹ ಪರಿಹಾರವನ್ನು ಮಾಡಿದ ಮಹಾನುಭಾವರು ನಮ್ಮ ವಿಜಯದಾಸರು...
ಹೀಗೆ ಶ್ರೀ ವಿಜಯದಾಸರಿಂದ  ಸಂಪೂರ್ಣ ಅನುಗ್ರಹ ಪಡೆದ ಶ್ರೀ ಮೋಹನದಾಸರ ಆರಾಧನೆಯ ಕೊನೆಯ ದಿನ ಇಂದು. 
ಒಂದು ಕಡೆ ಮೋಹನದಾಸರು ಶ್ರೀ ವಿಜಯದಾಸರು ಬಗ್ಗೆ ಹೇಳುತ್ತಾರೆ.
ವಿಜಯದಾಸರ ಪಾದ ಭಜಿಸಿದವಗನವರತ| ವಿಜಯವಾಗುವದಕ್ಕೆ ಸಂಶಯವ್ಯಾಕೆ||.
🙏🙏
 ಶುಭಗಳಾಗಲಿ ಅಶುಭಗಳು ಓಡಲಿ|
ಇಭವರದನೊಲುಮೆ ದೊರೆಯಲಿ ಕೋಲೆ||
ಇಭವರದ ನೊಲುಮೆ ದೊರೆಯಲಿ ನಮ್ಮ| ವಿಜಯಪ್ರಭುಗಳ ಕೀರ್ತಿ ಮೆರೆಯಲಿ ಕೋಲೆ||
ಹೀಗೆ ತಮ್ಮ ಸಾಕು ತಂದೆ ಶ್ರೀ ವಿಜಯದಾಸರನ್ನು ಹೊಗಳಿದ ನಮ್ಮ ಶ್ರೀ ಮೋಹನ ದಾಸರ ಆರಾಧನೆ ಪ್ರಯುಕ್ತವಾಗಿ ಅವರ ಸ್ಮರಣೆ.
 ಶ್ರೀಮೋಹನದಾಸರು.
ಇವರು ವಿಜಯದಾಸರ ಸಾಕುಮಗ. ಇವರ ತಂದೆ, ಗುರು, ಉದ್ಧಾರಕ ದಾಸಾರ್ಯ ಶ್ರೀವಿಜಯದಾಸರು.

ಮೋಹಭಯ ದುಃಖಾದಿದೂರಂ|
ಲೋಹಲೋಷ್ಠ ಸಮೇಕ್ಷಣಂ |
ಮಾಹಿತಾಂಘ್ರಿ ಸರೋಜಭೃಂಗಂ|
ಮೋಹನಾರ್ಯ ಗುರುಂ ಭಜೇ||

ಅರ್ಥ: 
ಮಮಕಾರ,ಹೆದರಿಕೆ ಮತ್ತು
ದುಃಖವಿಲ್ಲದವರು, ಬಂಗಾರ,ಬೆಳ್ಳಿ ಮೊದಲಾದ ಬೆಲೆ ಬಾಳುವ ವಸ್ತುಗಳೂ, ಕಲ್ಲೂ  ಒಂದೇ ಎಂದು ಕಾಣುವ,  ಸರ್ವೋತ್ತಮನಾದ ಶ್ರೀಹರಿಯ ಪಾದಕಮಲಕ್ಕೆ ದುಂಬಿಯಂತೆ ಸೇರಲು ಆಸಕ್ತರಾದ ಗುರುಗಳಾದ ಮೋಹನದಾಸವರ್ಯರನ್ನು ಭಜಿಸುತ್ತೇನೆ.
🙏🙏🙏
 ಯುಕ್ತಿ ಯಲ್ಲಿ ಮೋಹನ್ನ ಎನ್ನುವ ಹಿರಿಯರ ವಾಣಿಯಂತೆ
ಶ್ರೀ ವಿಜಯದಾಸರ ಸಾಕು ಮಕ್ಕಳಾದ ಶ್ರೀ ಮೋಹನದಾಸರ 
 ಕೋಲಾಟದ ಕೃತಿಯಲ್ಲಿ ಕೆಲವು ನುಡಿಗಳು.

ಎಲ್ಲಾ ಒಂದೇ ಎಂದು ವಾದ ಮಾಡುವ ಜನರಿಗೆ ಅವರು ಕೊಟ್ಟ ಉತ್ತರ.
ಕತ್ತೆ ಕುದುರೆ ಒಂದೇ| 
ಅತ್ತೆ ಸೊಸೆಯು ಒಂದೇ| ಹೆತ್ತಮ್ಮ ಒಂದೇ ಹೆಂಡತಿ ಒಂದೇ ಕೋಲೆ||
ಹೆತ್ತಮ್ಮ ಒಂದೇ ಹೆಂಡತಿ| ಒಂದಾದ ಮೇಲೆ| ಮತ್ತೆ ಮದುವೆ ನಿನಗ್ಯಾಕೆ ಕೋಲೆ||

ಹಿಟ್ಟು ಬೂದಿಯೊಂದೆ| ರೊಟ್ಟಿ ಮುಚ್ಚಳಿಯೊಂದೆ|
ಕಟ್ಡಿಗೆ ಒಂದೆ ಕಬ್ಬೊಂದೆ ಕೋಲೆ|
ಕಟ್ಟಿಗೆ ಒಂದೆ ಕಬ್ಬೊಂದಾದ ಮೇಲೆ|
ಕಟ್ಟಿಗೆ ಯಾಕೆ ಮೆಲ್ಲುವಲ್ಲಿ ಕೋಲೆ||
ಹೀಗೆ ಹೇಳುತ್ತಾ 
ಮುಂದೆ ಸುಭದ್ರ ದೇವಿ ದ್ವಾರಕಾ ಪಟ್ಟಣಕ್ಕೆ ಮುಯ್ಯ ಕೊಡಲು ಬಂದಾಗ ಯಾರು ಬರುವದಿಲ್ಲ ಅರಮನೆ ಒಳಗಿನಿಂದ.
ಆಗ ಸುಭದ್ರ ಹೇಳುತ್ತಾಳೆ.
ತಾಯಿ ಮನೆಗೆ ಬಂದು ಬಹಳ ಹೊತ್ತಾಯಿತು|
ತಾಯಿ ಸೊಸೆಯರು ಬರಲಿಲ್ಲ
 ಕೋಲೆ|
ತಾಯಿ ಸೊಸೆ ಯರು ಬರಲಿಲ್ಲ| ನಮಗಂಜಿ
ಬಾಯಿ ಬಿಡುತಾರೆ ಒಳಗೆಲ್ಲ‌ ಕೋಲೆ||
ಅವಾಗ ರುಕ್ಮಿಣಿ ದೇವಿ ಬಂದು ಉಪಚಾರ ಮಾಡಿದಾಗ ಸುಭದ್ರೆ ಹೇಳುವ ಮಾತು.
ಓಡಿ ಬಂದವಳು ಒಳಗೆ ಸೇರಿಕೊಂಡು ನೋಡುವಳೆ| ನಮ್ಮ ನುಡಿಸುವಳೇ ಕೋಲೆ|
ನೋಡುವಳೇ ನಮ್ಮ ನುಡಿಸುವಳೇ ನಮ್ಮಣ್ಣ| ಮಾಡಿದ ಮೋಹ ತಲೆಗೇರಿತು ಕೋಲೆ||
 ಅಣ್ಣನ ವಂಚಿಸಿ ಓಡಿ ಬಂದವಳೆನ್ನ| 
ತಣ್ಣಿಲಿ ನೋಡಿ ಕರೆಯುವಳೇ ಕೋಲೆ|
ತಣ್ಣಿಲಿ ನೀಡಿ ಕರೆಯುವಳು ನಮ್ಮ ಅಣ್ಣನ ಬಲವ| ಹಿಡಕೊಂಡು ಕೋಲೆ||
(ಅಣ್ಣನಾದ ರುಕ್ಮಿಗೆ ಹೇಳದೇ ಕೃಷ್ಣ ನ ಜೊತೆಯಲ್ಲಿ ರುಕ್ಮಿಣಿ ದೇವಿ ಬರುವಳು.ಬಂದಂತಹ ರುಕ್ಮಿಣಿ ನಮ್ಮ ಅಣ್ಣ ನಾದ ಕೃಷ್ಣ ನ ಬಲದಿಂದ ಇಲ್ಲಿ ದ್ವಾರಕೆಯಲ್ಲಿ ಮೆರೆಯುತ್ತಾ ಇರುವಳು ಅಂತ ಸುಭದ್ರ ಹೇಳುವ ಮಾತು)
ಇದಕ್ಕೆ ರುಕ್ಮಿಣಿ ದೇವಿ ಉತ್ತರ.
ಅಣ್ಣನ ವಂಚಿಸಿ ಓಡಿ ಬಂದವಳೆಂದು|
ಎನ್ನ ನೀ ನುಡಿವೆ ಸುಭದ್ರೆ ಕೋಲೆ|
ಎನ್ನ ನೀ ನುಡಿವೆ ಸುಭದ್ರೆ ಕೇಳು| 
ನಾ ಸನ್ಯಾಸಿ ಯೊಡನೆ ಬರಲಿಲ್ಲ ಕೋಲೆ||
(ನಿನ್ನ ಹಾಗೆ ಸನ್ಯಾಸಿ ವೇಷ ಧಾರಿಯ ಜೊತೆ ಓಡಿ ಹೋಗಲಿಲ್ಲ ನಾನು
ಜಗತ್ಪತಿಯಾದ ಕೃಷ್ಣ ನ ಜೊತೆಗೆ ಬಂದೆ ಅಂತ ಹೇಳುತ್ತಾಳೆ.)
ಅಷ್ಟು ಹೊತ್ತಿಗೆ ವಾದ ವಿವಾದ ಆದ ಮೇಲೆ ಕೃಷ್ಣ ಮಲಗಿದ್ದವನು ಎದ್ದು ಕೂಡುತ್ತಾನೆ.
ಅರ್ಜುನ ನನ್ನು ಕಂಡು ಮಾತಾಡಿಸುವ.
ನಂತರ ಕೃಷ್ಣ ಅರ್ಜುನ ಇಬ್ಬರಿಗು ವಿನೋದ ಭರಿತವಾದ ಸಂವಾದ ನಡೆಯುತ್ತದೆ.
🙏ಶ್ರೀ ಕೃಷ್ಣಾರ್ಪಣ ಮಸ್ತು🙏
🙏ಪಾಹಿ ಮೋಹನ್ನ ವಿಠ್ಠಲ🙏
*****

15 June 2021
ಶ್ರೀಂ ಶ್ರೀ ಕಂ ಕಪಿಲಾಯ ನಮಃ
           
      ಜ್ಯೇಷ್ಠ ಶುದ್ಧ ಪಂಚಮಿ

ಮೋಹಭಯದುಃಖಾದಿ ದೂರಂಲೋಹಲೋಷ್ಟಸಮೇಕ್ಷಣಂ/
ಮಾಹಿತಾಂಘ್ರಿ ಸರೋಜ ಭೃಂಗಂ ಮೋಹನಾರ್ಯಗುರುಂ ಭಜೇ

ಶ್ರೀ ವಿಜಯದಾಸಾರ್ಯರ ಸಾಕು ಮಗ,ಮುದ್ದು ಮಗ ಅಲ್ಲದೇ ಪ್ರೀತಿಯ ಪ್ರಿಯ ಶಿಷ್ಯರೂ, ಯುಕ್ತಿಯಲ್ಲಿ ಮೋಹನ್ನ ಅಂತಲೇ ಹೆಸರು ಪಡೆದವರು, ಶ್ರೀ ವಿಜಯದಾಸಾರ್ಯರನ್ನು ಭೃಗು ಮಹರ್ಷಿಗಳಂತೇ ಕಂಡವರೂ, ಶ್ರೀ ವಿಜಯದಾಸಾರ್ಯರ ನಂತರ ಹರಿದಾಸಸಾಹಿತ್ಯ ಹಾಗೂ ಪರಂಪರೆಯನ್ನು ಮುಂದುವರೆಸುವಲ್ಲಿ ಪ್ರಧಾನ ಪಾತ್ರವಹಿಸಿದವರು,ತಮ್ಮ ಕಡೆಯ ಉಸಿರಿನವರೆಗೂ ಶ್ರೀ ವಿಜಯರಾಯರ ಸೇವೆಯನ್ನು ಮಾಡಿದವರು, 217 ನುಡಿಗಳ ಕೋಲುಪದವೇ ಮೊದಲು  ಅದ್ಭುತವಾದ ಪ್ರಮೇಯಗರ್ಭಿತವಾದ ಪದಗಳ ರಚನೆ ಮಾಡಿ ನೀಡಿದವರೂ,ವಿಜಯದಾಸರಕಟ್ಟಿಯಲ್ಲೇ 60ವರ್ಷಗಳ ಕಾಲ, ವೇಣುಗೋಪಾಲಕೃಷ್ಣನ ಪೂಜೆ ಮಾಡಿದವರು, ಶ್ರೀ  ಪ್ರಾಣೇಶದಾಸರೇ ಮೊದಲು ಎಲ್ಲಾ ಹರಿದಾಸರಿಂದ ಗೇಗೀಯಮಾನರಾದ  ಶ್ರೀ ಮೋಹನದಾಸಾರ್ಯರ ಆರಾಧನಾ ಮಹೋತ್ಸವ  (ಚಿಪ್ಪಗಿರಿ) ಇಂದಿನಿಂದ ಮೂರು ದಿನ... 

ಶ್ರೀ ದಾಸಾರ್ಯರ ಪರಮಾನುಗ್ರಹ ನಮ್ಮ ಸಮೂಹದ ಎಲ್ಲರಮೇಲೆ ಸದಾಕಾಲ ಇರಬೇಕೆಂದು ಹಾರೈಸುತ್ತಾ.... ಈ ಮೂರೂ ದಿನ ಶ್ರೀ ದಾಸಾರ್ಯರ ಸೇವೆ ಮಾಡಿ ಅವರ ಕಾರುಣ್ಯಕ್ಕೆ ಪಾತ್ರರಾಗೋಣ ಎಂದು ಶ್ರೀ ದಾಸಾರ್ಯರಲ್ಲಿ ಭಕ್ತಿಯಿಂದ ಪ್ರಾರ್ಥನೆ ಮಾಡುತ್ತಾ.... 

-Smt. Padma Sirish

ನಾದನೀರಾಜನದಿಂ ದಾಸಸುರಭಿ 🙏🏽
****
year 2021
ಶ್ರೀ ಮೋಹನ ದಾಸರು
ಕ್ರಿ. ಶ.1730- 1815
ಹೆಸರು - ಮೋಹನ ( ಶ್ರೀ ವಿಜಯ ದಾಸರ ದತ್ತು ಪುತ್ರ ) ದುರ್ದೈವ ವಶಾತ್ ಋಣ ರೋಗದಿಂದ ಕೂಡಿದ ಮಗು.
ಜನನ - ಕ್ರಿ. ಶ. ಸುಮಾರು 1730.
ತಂದೆ - ಭೀಮಪ್ಪ ನಾಯಕ (ಚಿನಿವಾರ ವೃತ್ತಿ. ಶ್ರೀಮಂತ ಕುಟುಂಬ )
ತಾಯಿ -ಶ್ರೀಮತಿ  ಸೀತಮ್ಮ
ಮಕ್ಕಳು - ವೆಂಕೋಬ
ಮೊಮ್ಮಕ್ಕಳು - ದಾಸಪ್ಪ ದಾಸ, ವಿಜಯದಾಸ, ರಾಘವೇಂದ್ರ ದಾಸ, ಗುರುರಾಯಪ್ಪದಾಸ, ಶ್ರೀನಿವಾಸದಾಸ.
ಪೂರ್ವ ಜನ್ಮ - ಮಾಂಡವ್ಯ ಋಷಿಗಳು 
ಅಂಕಿತ - ಮೋಹನ ವಿಠಲ
ಅಂಕಿತ ಕೊಟ್ಟವರು - ಶ್ರೀ ವಿಜಯದಾಸರು.
ಅಂಕಿತ ಪಡೆದ ಸ್ಥಳ - ನವ ವೃಂದಾವನ. ಶ್ರೀ ವಿಜಯದಾಸರು ಮೋಹನನನ್ನು ನವ ವೃಂದಾವನಕ್ಕೆ ಶ್ರೀ ವ್ಯಾಸರಾಜರ ದರ್ಶನಕ್ಕೆ ಕರೆದುಕೊಂಡು ಹೋಗಿದ್ದಾಗ ಬೃಂದಾವನದಿಂದ ಪ್ರತ್ಯಕ್ಷ ದರ್ಶನ ಕೊಟ್ಟ ವ್ಯಾಸರಾಯರು ಮೋಹನನಿಗೆ ಅಂಕಿತ ನೀಡಲು ಆದೇಶಸಿದರಂತೆ.)
ಅಪಮೃತ್ಯು ಬಂದ ಸ್ಥಳ - ಚೀಕಲಪರವಿ (ಮಾನವಿ ತಾಲೂಕು ರಾಯಚೂರು ಜಿಲ್ಲಾ )
ಗ್ರಂಥಗಳು - ಹಲವಾರು ಕೀರ್ತನೆಗಳು, ಪದಪದ್ಯ, ಸುಳಾದಿಗಳು, ಕೋಲು ಹಾಡು, ಮುಂತಾದುವು. ತಾರತಮ್ಯಅನುಸಾರ, ದಾಸ ಕಕ್ಷ, ಯತಿ ಕಕ್ಷ, ಹಾಗು ದೇವತಾ ಕಕ್ಷಕ್ಕೆ  ಕೀರ್ತನೆಗಳನ್ನು ರಚಿಸಿದವರು. ವಿಶೇಷವಾಗಿ ತಂದೆ ಹಾಗು ಗುರುಗಳಾದ  ಶ್ರೀ  ವಿಜಯದಾಸರ ಮೇಲಿನ ಕೃತಿಗಳೇ ಜಾಸ್ತಿ ಎನ್ನುವರು. ತತ್ವಾರ್ಥಗರ್ಭಿತ 217 ನುಡಿಗಳುಳ್ಳ ಕೋಲು ಪದ ತುಂ ಬ ಪ್ರಸಿದ್ಧವಾದದ್ದು.
ಕಾಲವಾದದ್ದು - ಜೇಷ್ಠ ಮಾಸ ಶುದ್ಧ ಷಷ್ಟಿ ಕ್ರಿ. ಶ.1815.
ಶ್ರೀ ಮದಾನಂದತೀರ್ಥರ ಸಾಕ್ಷಾತ್ ಶಿಷ್ಯರಾದ ಶ್ರೀ ನರಹರಿ ತೀರ್ಥರು ಪ್ರತಿಷ್ಟಾಪಿಸಿದ ಶ್ರೀ ರಾಮ ಸೀತಾ ಲಕ್ಶ್ಮಣ ಹಾಗು ಹನುಮಂತ ದೇವರ ದರ್ಶನವನ್ನು ತಮ್ಮ 80ನೇ ಇಳಿ ವಯಸ್ಸಿನಲ್ಲಿ ಚಿಕ್ಕೆರಹಳ್ಳಿಗೆ ಹೋಗಿ ಪಡೆದವರು.
ಇಂತಹ ಮಹಿಮಾನ್ವಿತ ದಾಸವರ್ಯರ ಅನುಗ್ರಹ ಸದಾ ನಮ್ಮೆಲ್ಲರ ಮೇಲಿರಲಿ ಎಂದು ಪ್ರಾರ್ಥಿಸುವೆ.
ಸಕಲ ದಾಸವಾರ್ಯಂತರ್ಗತ ಸಕಲ ಗುರುಗಳಂತರ್ಗತ ಭಾರತೀರಮಣ ಮುಖ್ಯ ಪ್ರಾಣಾಂತರ್ಗತ ಶ್ರೀ ಕೃಷ್ಣಾರ್ಪಣ ನಮಸ್ತು.
🙏🙏🙏🙏🙏
*****

ಶ್ರೀಂ ಶ್ರೀ ಕಂ ಕಪಿಲಾಯ ನಮಃ
           
      ಜ್ಯೇಷ್ಠ ಶುದ್ಧ ಷಷ್ಠಿ

ಮೋಹಭಯದುಃಖಾದಿ ದೂರಂಲೋಹಲೋಷ್ಟಸಮೇಕ್ಷಣಂ/
ಮಾಹಿತಾಂಘ್ರಿ ಸರೋಜ ಭೃಂಗಂ ಮೋಹನಾರ್ಯಗುರುಂ ಭಜೇ

ನವವಿಧ ಭಕುತಿಗಳೆಂಬೊ ಸರಪಳಿಯೊಳು 
ನವನವರೂಪದಿ ನಲಿವ ಸುಧೀರ..

          ಶ್ರೀ ಪ್ರಾಣೇಶದಾಸಾರ್ಯರು

ಅಲವಬೋಧರ ತತ್ವನೆಲೆ ಎಂದೇ ಧರಿಸುತಲಿ ಇರಲ್ಹಗಲು ನಿತ್ಯ ಸ್ಮರಿಸಿ

          ಧೀರವಿಠಲರು

ಹೀಗೆ ಶ್ರೇಷ್ಠ ಹರಿದಾಸರಿಂದ ಗೇಗೀಯಮಾನರಾದ ಶ್ರೀ ಮೋಹನದಾಸಾರ್ಯರು ನಮಗೆ ನೀಡಿದ ವಾಙ್ಮಯದ ಕಿರು ಪರಿಚಯ..

ಶ್ರೀ ದಾಸಾರ್ಯರು ತಾರತಮ್ಯಾನುಸಾರವಾಗಿ ಮೊದಲಿಗೆ ದಾಸ ಕಕ್ಷ್ಯ,  ಆನಂತರ ಯತಿಕಕ್ಷ್ಯ,  ನಂತರ ದೇವತಾ ಕಕ್ಷ್ಯ ಹೀಗೆ ಮೂರೂ ಕಕ್ಷ್ಯಗಳಲ್ಲಿ ಕೃತಿಗಳು  ರಚನೆ ಮಾಡಿದ್ದಾರೆ.  ಶ್ರೀ ವಿಜಯಪ್ರಭುಗಳ ಸ್ತುತಿಪದಗಳೇ ಬಹಳ, ಶ್ರೀ ಸತ್ಯಬೋಧರ,  ಶ್ರೀ ಸತ್ಯವರರ ಸ್ತುತಿಪದಗಳೂ ಮಾಡಿದ್ದಾರೆ.  ಅಲ್ಲದೇ ವೈರಾಗ್ಯ ಪದಗಳು,  ತತ್ವಪದಗಳು,  ಅಲ್ಲದೇ ಜನಜನಿತವಾದ ಸುಪ್ರಸಿದ್ಧ ಕೋಲುಪದವೂ ಬಹಳ ಅದ್ಭುತವಾಗಿ ತತ್ವಗರ್ಭಿತವಾಗಿದೆ. ಅಲ್ಲದೇ ಸುಳಾದಿಗಳ ರಚನೆ ಮಾಡಿದ್ದಾರೆ ಎಂದು ತಿಳಿದುಬರ್ತದೆ.  ಪ್ರತೀ ಕ್ಷೇತ್ರವನ್ನೂ ದರ್ಶನ ಮಾಡಿದಾಗ,  ಕ್ಷೇತ್ರಸ್ಥ ಮೂರ್ತಿಗಳ ಸ್ತುತಿ ಪದಗಳು. ಎಲ್ಲವೂ ಬಹಳ ಸುಂದರ,  ಸರಳ,  ಅತ್ಯಂತ ಅರ್ಥಗರ್ಭಿತವಾದ ಶ್ರೀಮದಾಚಾರ್ಯರ ಶಾಸ್ತ್ರಾರ್ಥಗಳನ್ನ ಅಡಗಿಸಿ ನಮಗಾಗಿ ನೀಡಿದ ಅತ್ಯಂತ ಅಮೂಲ್ಯವಾದ ಆಸ್ತಿಯಾಗಿದೆ. 

ಇವರ ಯುಕ್ತಿಯ ಕೃತಿಗಳು ಬಹಳ ಚಂದ , ಅವುಗಳ ಅರ್ಥ ತಿಳಿದು ಹಾಡುವುದೇ ಸುಖ. 

ಇಂತಹಾ ಮಹಾನುಭಾವರಾದ,  ಶ್ರೀ ವಿಜಯದಾಸಾರ್ಯರ ಪ್ರೀತಿಯ ಪುತ್ರರಾದ,  ಹರಿದಾಸ ಸಾಹಿತ್ಯದ ಪೀಳಿಗೆಯನ್ನು ಬೆಳೆಸಿದ ಮಹಾನ್ ದಾಸವರೇಣ್ಯರಾದ ಶ್ರೀ ಮೋಹನದಾಸಾರ್ಯರ ಮಧ್ಯಾರಾಧನೆಯ ಸುಸಂದರ್ಭದಲಿ ಅವರ ಸ್ಮರಣೆ, ಧ್ಯಾನ,  ಅವರ ಕೃತಿಗಳ, ಗಾಯನ ಅರ್ಥಾನುಸಂಧಾನ ಇವುಗಳೇ ದಿನಚರ್ಯೆಯಾಗಿಸಿಕೊಂಡು ಶ್ರೀ ದಾಸಾರ್ಯರ ಕಾರುಣ್ಯಕ್ಕೆ ಪಾತ್ರರಾಗೋಣ ಎಂದು ಭಕ್ತಿಯಿಂದ ಪ್ರಾರ್ಥನೆ ಮಾಡುತ್ತಾ....

-Smt. Padma Sirish

ನಾದನೀರಾಜನದಿಂ ದಾಸಸುರಭಿ 🙏🏽
***

[4:38 PM, 6/17/2021] Prasad Karpara Group: ಚಿರಂಜೀವಿಯಾಗೆಲೋ ಚಿಣ್ಣ ನೀನು ಭಾಗ-೧

ಅವಶ್ಯಂ ಅನುಭೋಕ್ತವ್ಯಂ ಕೃತ ಕರ್ಮ ಶುಭಾಶುಭಂ ಎನ್ನುವ ಮಾತಿನಂತೆ ಶುಭ ಅಶುಭ ಯಾವುದೇ ಇರಲಿ ಮತ್ತು ಯಾರೇ ಮಾಡಲಿ  ಮಾಡಿದ ಕರ್ಮವನ್ನು ಅವಶ್ಯವಾಗಿ ಅನುಭವಿಸಲೇಬೇಕು.
ದೇವತೆಗಳು, ಋಷಿಗಳು, ಗಂಧರ್ವರು, ಮಾನುಷೋತ್ತಮರು ಯಾರೂ ಈ ವಿಧಿಗೆ ಬದ್ಧರಾಗದೇ  ಇಲ್ಲ. ಹರಿವಾಯುಗುರುಗಳ ಅನುಗ್ರಹಕ್ಕೆ ಪಾತ್ರರಾದ ಜೀವಿಯಾದರೆ ಅವರ ಅನುಗ್ರಹದಿಂದ ದುಃಖದ ಕರ್ಮ ಅನುಭವಿಸುವಾಗಲೂ ಅದರ ಬಗ್ಗೆ ಲಕ್ಷ್ಯಕೊಡದೆ ಅವನ ಆಜ್ಞೆಯಂತೆ ಜ್ಞಾನಪ್ರಸಾದಕ್ಕೆ ಮಾತ್ರ ಪ್ರಾರ್ಥಿಸುತ್ತಾರೆ ವಿನಃ ಅನು‌ಭವಿಸುತ್ತಿರುವ ಯಾತನೆಯನ್ನು ಕಡಿಮೆ ಮಾಡುವುದರ  ಬಗ್ಗೆ ಕೇಳಿಕೊಳ್ಳುವುದಿಲ್ಲ. ಉತ್ತಮವಾದ ಉದಾಹರಣೆ ಅಂದರೆ ನಮ್ಮ ಭೀಷ್ಮಾಚಾರ್ಯರು. ಒಂದೊಂದು ರೋಮಕ್ಕೆ ಒಂದೊಂದು ಬಾಣ. ಯಾರು ಹೊಡೆದದ್ದು ಅಂದರೆ ಅವರಿಗಿಂತ ಉತ್ತಮನಾದ ಇಂದ್ರ ದೇವರ ಅವತಾರಿಗಳು. ನರನಾರಾಯಣರ ವಿಶೇಷ ಆವೇಶ ಉಳ್ಳವರು, ಜೊತೆಗೆ ಭಗವಂತನೇ ಕೃಷ್ಣ ರೂಪದಿಂದ ಎದುರಿಗಿದ್ದಾನೆ. ವಾಯುದೇವರು  ಭೀಮಸೇನ ದೇವರಾಗಿ ಜೊತೆಯಲ್ಲಿದ್ದಾರೆ‌. ಸಾಕ್ಷಾತ್ ಬ್ರಹ್ಮದೇವರ, ಎಂದೂ ಬತ್ತದ  ಬತ್ತಳಿಕೆಯಲ್ಲಿರುವ ಬಾಣಗಳು. ಮತ್ತೂ ವಿಶೇಷ  ಮಂತ್ರಗಳಿಂದ ಆಹ್ವಾನಿತವಾದವುಗಳು. ಎಷ್ಟು ನೋವಿರಬೇಡ ಭೀಷ್ಮಾಚಾರ್ಯರಿಗೆ?! ಊಹಿಸಲಿಕ್ಕೂ ಅಶಕ್ಯ. ಇಂತಹ ನೋವಿನ ಸ್ಥಿತಿಯಲ್ಲಿದ್ದರೂ, ಪಾಪಿಗಳ ಸಹವಾಸ ಮಾಡಿದ್ದರ ಫಲ ಅನುಭವಿಸುತ್ತೀನಿ ಅಂತ ಚಿಂತನೆ ಮಾಡಿದರೇ ವಿನಃ,  ಸ್ವಾಮಿ ಪಾಂಡವರು ಎಲ್ಲರನ್ನೂ ಕರೆದುಕೊಂಡು ಬಂದು ಜ್ಞಾನೋಪದೇಶ ಮಾಡಿ ಅಂದಾಗ, ಈ ನೋವಿನಲ್ಲಿ ಹೇಗೆ ಮಾಡಲಿ ಸ್ವಾಮಿ,ಯುದ್ಧ ಮಾಡುವಾಗ, ಅರ್ಜುನನ ರಥದ ಕುದುರೆಗಳಿಗಾದ ಆಯಾಸ, ನೋವುಗಳನ್ನು ನಿನ್ನ ಪವಿತ್ರವಾದ ಮನೋಹರವಾದ ಕೈಗಳಿಂದ ಸ್ಪರ್ಶಿಸಿ, ಮೈ ಸವರಿ ಪರಿಹರಿಸಿದಹಾಗೇ ನನ್ನನ್ನೂ ಒಮ್ಮೆ ಸ್ಪರ್ಶಿಸಿ ನನ್ನ ನೋವು ಕಮ್ಮಿ ಮಾಡು, ಉಪದೇಶ ಮಾಡುತ್ತೇನೆ ಅಂತ ಕೇಳಿಕೊಂಡರೆ?ಖಂಡಿತ ಇಲ್ಲ‌. ಅವರು ಕೇಳಲಿಲ್ಲ, ಸ್ವಾಮಿ ಕಮ್ಮಿ ಮಾಡಲಿಲ್ಲ‌. ಶ್ರೀವಿಜಯದಾಸರ ಕವಚದಲ್ಲಿ ತಿಳಿಸಿದಂತೆ ಅವರನ್ನು ಸ್ಮರಣೆ ಮಾಡಿದರೆ ವ್ಯಾಧಿ ಬಾರದೋ,ದೇಹ ಬಾಧೆ ತಟ್ಟದೋ ವ್ಯಾಧಿ ಅನ್ನುವುದು ಬರುವುದಿಲ್ಲ,ಒಂದು ವೇಳೆ ಬಂದರೆ ಸಾಧನೆ ಮಾಡಲಿಕ್ಕೆ ಯಾವುದೇ ಬಾಧೆಯಾಗುವುದಿಲ್ಲ ಅಂತ  ಇರುವಾಗ ಇನ್ನೂ ಸಾಕ್ಷಾತ್ ಭಗವಂತನ ಸ್ಮರಣೆ ಮಾಡಿದ ಭೀಷ್ಮಾಚಾರ್ಯರಿಗೆ ಆ ದೇಹಕ್ಕಿದ್ದ ನೋವಿನ ವ್ಯಾಧಿಯು, ಶಾಂತಿಪರ್ವ ಉಪದೇಶ ಮಾಡುವುದಕ್ಕೆ ಯಾವುದೇ ಅಡ್ಡಿಯನ್ನು ಮಾಡಲಿಲ್ಲ. 
 ಇದೇ ರೀತಿ ಕೆಲವು  ಜ್ಞಾನಿಗಳು  ಪ್ರಾರಬ್ಧ ಅನುಭವಿಸುವುದರ  ಜೊತೆಗೆ ಗುರುಗಳ ಅನುಗ್ರಹದಿಂದ ಅದರ ಪರಿಣಾಮವನ್ನು  ಕಮ್ಮಿ ಮಾಡಿಕೊಳ್ಳುತ್ತಾರೆ‌. ದೊಡ್ಡದಾಗಬೇಕಾದ ದುಃಖದ ಪರಿಣಾಮ ಚಿಕ್ಕದರಲ್ಲಿಯೇ ಕಳೆದುಕೊಳ್ಳುತ್ತಾರೆ. 

ಗಂಡನನ್ನು ಕಳೆದುಕೊಂಡು, ಆಸ್ತಿಯನ್ನು ತಮ್ಮದಾಗಿಸಿಕೊಳ್ಳಲು ಕುಟುಂಬದವರಿಂದ ದೂಡಲ್ಪಟ್ಟು,  ತವರು ಮನೆಯಲ್ಲಿದ್ದು ಗಂಡುಕೂಸಿಗೆ ಜನ್ಮನೀಡಿದರೂ ಕಿತ್ತು ತಿನ್ನುವ ಬಡತನದಿಂದ ಮಗುವಿಗೆ  ಸರಿಯಾಗಿ ಲಾಲನೆ ಪಾಲ‌ನೆ ಮಾಡದೇ ಕೊನೆಗೆ ಕಜ್ಜಿರೋಗ ಹೊಂದಿದ ಮಗುವನ್ನು ಸಾಕಲಾರದೇ ಇದ್ದಾಕೆಯ ಒಬ್ಬ ಹೆಣ್ಣಿನ  ಸ್ಥಿತಿ ಹೇಗಿರಬೇಡ. ತನಗಿರಲಿ,ಮಗುವಿಗೂ ಹೊಟ್ಟೆ ತುಂಬಾ ಆಹಾರ ಒದಗಿಸದ ಸ್ಥಿತಿ. ಪ್ರತಿನಿತ್ಯ ಭಗವಂತನ ಮೊರೆ ಹೋಗುವುದೊಂದೇ ಆಕೆಗೆ ದಾರಿ. ಹಂಪೆಯಲ್ಲಿ ಪ್ರತಿವರ್ಷದಂತೆಯೇ ಈ ಸಲವೂ ಶ್ರೀವಿಜಯದಾಸರು ತಮ್ಮ ಗುರುಗಳಾದ ಶ್ರೀಪುರಂದರ ದಾಸರ ಆರಾಧನೆಯನ್ನು  ವೈಭವದಿಂದ ನಡೆಸುತ್ತಾರೆ, ಅಲ್ಲಿಗೆ ಹೋದರೆ ಅಷ್ಟೂ ದಿನಗಳು ತನಗೂ ತನ್ನ ಮಗುವಿಗೂ ಹೊಟ್ಟೆ ತುಂಬಾ ಭಗವಂತನ ಪ್ರಸಾದವಾಗುತ್ತದೆ ಅಂತ ಯೋಚಿಸಿ ಬಂದಳು.ಅಲ್ಲಿ ನಡೆಯುತ್ತಿದ್ದ ಜ್ಞಾನಯಜ್ಞದಲ್ಲಿ, ಭಜನೆಯಲ್ಲಿ ಭಗವಂತನ ನಾಮಸಂಕೀರ್ತನೆಯಲ್ಲಿ ಯಥಾಶಕ್ತಿ  ಶ್ರವಣ ಮಾಡಿ, ಊಟದ ಹೊತ್ತಿಗೆ ಎಲ್ಲೋ ಒಂದು ಕಡೆ ಎಲೆ ಹಿಡಿದು ಕೂತರೆ, ಆಕೆಯ ಸ್ಥಿತಿ, ಮಗುವಿನಸ್ಥಿತಿ,ಮಗುವಿನ ವ್ರಣಯುಕ್ತ  ದೇಹದಿಂದ ಬರುತ್ತಿದ್ದ ವಾಸನೆಯನ್ನು ಯಾರು ಸಹಿಸಿಯಾರು? ಎಲ್ಲರೂ  ಇಲ್ಲಿ ಬೇಡ,  ಅಲ್ಲಿ ಕೂಡು ಅಂತ ಅನ್ನುವವರೇ.. ಆ ವ್ರಣದ ಮಗುವೇ ಮುಂದೆ ಸುಂದರನೂ ಮ‌ನೋಹರನೂ ಆಗಿ, ಪ್ರಸಿದ್ಧನಾಗುತ್ತಾನೆ ಅಂತ ಅವರಿಗೇನು ಗೊತ್ತಿದೆ ಪಾಪ.
ಸರಿ, ಅವಮಾನವಾದರೂ ಪರ್ವಾಗಿಲ್ಲ,ಮಗುವಿಗೆ ಊಟ ಸಿಗುತ್ತದೆ ಅಂತ ಸಹಿಸಿಕೊಂಡು,ಅಲ್ಲಿಂದ ಇಲ್ಲಿ ಇಲ್ಲಿಂದ ಅಲ್ಲಿ ಎಲೆಗಳನ್ನು, ಜಾಗವನ್ನು ಬದಲಾಯಿಸಿದಳು. ಎಲ್ಲ ಕಡೆಯಲ್ಲೂ ಅದೇ ಪರಿಸ್ಥಿತಿ. ಖಾಲಿ ಇದ್ದಲ್ಲಿ ಕೂತರೂ ಜನ ಅಲ್ಲೂ ಬಂದು ಎಬ್ಬಿಸುತ್ತಿದ್ದಾರೆ‌‌.  ನಂತರ ಪಂಙ್ತಿಯ ಕೊನೆಯ ಜಾಗಕ್ಕೆ ಹೋಗಿ ಕೂತಳು. ಅಲ್ಲಿಯೂ ಜನ ಬಂದರು ಆದರೆ ಅವರಿಗೆ ಜಾಗ ಇತ್ತಾದ್ದರಿಂದ ಎಬ್ಬಿಸಲಿಲ್ಲ‌. ಆದರೆ ದೇಹದ ದುರ್ನಾತ ಅವರಿಗೆ ತಡೆಯಲಾಗಿತ್ತಿರಲಿಲ್ಲ‌.ಇನ್ನೇನು ಊಟಕ್ಕೆ ಕೂಡಬೇಕು,ಮಗು ಹೇಸಿಗೆಯನ್ನು ಮಾಡಿಕೊಂಡಿತು. ಜನರು ಮತ್ತೇ  ಆಕೆಯನ್ನು ನಿಂದಿಸಲಿಕ್ಕೆ ಶುರುಮಾಡಿದರು. 
 ತಡೆಯದೇ ಆಕೆ ಅಲ್ಲಿಂದ ಎದ್ದು ಹೋಗಿ, ಮಗುವಿನ ಹಣೆಬರಹವನ್ನು ಶಪಿಸುತ್ತಾ,ದುಃಖ ತಡೆಯಲಾರದೆ ಅಳುತ್ತಾ,ನುಂಗಿಕೊಂಡು, ಇನ್ನೂ ತನಗೆ ಮಗುವನ್ನು ಸಾಕಲು ಸಾಧ್ಯವಿಲ್ಲ,ಮತ್ತು ತಾನು ತಾಯಿಯಾದಕಾರಣ  ನನ್ನ ಬಿಟ್ಟರೆ ಈ  ಕಜ್ಜಿಯನ್ನು ಹೊಂದಿದ  ಮಗುವನ್ನು  ಯಾರೂ ಸಾಕಲಾರಳು( ಹೆತ್ತ ಮಕ್ಕಳು ಹುಚ್ಚರಾದರೆ, ಎತ್ತಿ ಬಿಸುಡುವರೇನೋ ಗೋವಿಂದ- ಶ್ರೀಪಾದರಾಜರು), ಆದ್ದರಿಂದ ನಮ್ಮಿಬ್ಬರಿಗೂ ಸಾವೇ ಗತಿ ಅಂತ ನಿರ್ಧರಿಸಿ,ಕತ್ತಲಾಗುವವರೆಗೂ ಕಾದು, ಯಾರೂ ಇಲ್ಲದ್ದನ್ನು ನೋಡಿ, ಚಕ್ರತೀರ್ಥದ ಬಳಿ ನೀರಿನಲ್ಲಿಳಿದು, ಮಗುವನ್ನೊಮ್ಮೆ ಪ್ರೀತಿಯಿಂದ ಬಿಗಿದಪ್ಪಿ, ಮುದ್ದಿಸಿ, ಕೊನೆಯಬಾರಿ ನೋಡಿ, ಎಂತಹ ಪಾಪಿಯ ಹೊಟ್ಟೆಯಲ್ಲಿ ಹುಟ್ಟುದೆಯೋ ನನ್ನ ಕಂದ ಅಂತ ಅಳುತ್ತಾ,ಮನಸ್ಸಿನಲ್ಲಿ ಯಾರಾದರೂ ಈಗ ಬಂದು ಈ ಮಗುವನ್ನು ಸಂರಕ್ಷಿಸಬಾರದೇ ಎಂದು ಯೋಚಿಸುತ್ತಾ ಇನ್ನೇನು ಮುಳುಗಬೇಕು, ಯಾರು ತಾಯಿ ನೀನು, ಯಾಕೆ ಅಳುತ್ತಿರುವೆ, ಏನು ನಿನ್ನ ದುಃಖ,ಈ ಕತ್ತಲಲ್ಲಿ ನೀರಿನಲ್ಲಿ ಏನು ಮಾಡುತ್ತಿರುವೆ ಎಂದು ಮೃದುವಾದ, ಸಿಹಿಯಾದ, ಮನಸ್ಸಿಗೆ ಮುದನೀಡುವಂತಹ ಮಾತು ಕೇಳಿಸಿತು. ಹಿಂದೆ ತಿರುಗಿ ನೋಡುತ್ತಾಳೆ, ಭವ್ಯಸ್ವರೂಪರಾದ, ಶ್ರೀಭೃಗುಋಷಿಗಳ ಅವತಾರಿಗಳಾದ, ಅಂದವಚನವನ್ನು  ಮನಕೆ ತಂದುಕೊಡುವರಾದ(ಆಕೆ ಮನಸ್ಸಿನಲ್ಲಿ ಯಾರಾದರೂ ಬಂದು ಮಗುವನ್ನು ಸಂರಕ್ಷಿಸಬಾರದಾ ಅಂತ ಅಂದ ವಚನನವನ್ನು ಯಾರು ನೀನು ಎಂದು ಕೇಳುವ ಮೂಲಕ ನಾನಿದ್ದೇನೆ ರಕ್ಷಿಸಲು ಎಂದು ಆಕೆಗೆ ಮನಕೆ ತಂದುಕೊಟ್ಟರು) ಶ್ರೀವಿಜಯದಾಸರು ನಿಂತಿದ್ದಾರೆ. ಎಷ್ಟೋ ವರ್ಷಗಳಿಂದ ಬರೀ ನಿಂದೆ, ಬೈಗುಳ ಕೇಳಿದ ಆಕೆಗೆ ಈ ಸಾಂತ್ವನದ,ಪ್ರೀತಿಯ ಮಾತುಗಳನ್ನು ಕೇಳಿ ಎಷ್ಟು  ಸಂತೋಷವಾಗಿರಬೇಡ!
(ಮುಂದುವರೆಯುವುದು)..

🙏 ವಿಜಯರಾಯರ ಪಾದರಜವ ಧರಿಸಿ ನೀರಜ ಪ್ರಾಣೇಶವಿಠಲನಲ್ಲೆರಗಿದ|ಪಾಹಿ ಪಾಹಿ ಗುರು ಮೋಹನರಾಯ ಪಾಹಿ ಪಾಹಿ🙏
***

ಚಿರಂಜೀವಿಯಾಗೆಲೋ ಚಿಣ್ಣ ನೀನು ಭಾಗ-೨

ಆ ಸಾದ್ವಿಯ ಮತ್ತು ಮಗುವಿನ ಪುಣ್ಯರೂಪವೇ ಮೂರ್ತಿವೆತ್ತಂತೆ ದೈವಪ್ರೇರಣೆಯಿಂದ,ದೈವ ಸೂಚನೆಯಿಂದ   ತಿಳಿದು ಬಂದ
ಶ್ರೀವಿಜಯದಾಸರಿಗೆ, ಆಕೆ ತನ್ನ ಸ್ಥಿತಿ‌ ವಿವರಿಸಿದಾಗ, ಆಕೆಯನ್ನು ಕುರಿತು ತಾಯಿ, ಪ್ರಾಣತ್ಯಾಗ ಮಾಡುವುದರಿಂದ ಪ್ರಾರಬ್ಧ ಕಳೆಯುವುದಿಲ್ಲ, ಈಸಬೇಕು ಇದ್ದು ಜೈಸಬೇಕು ಜೀವನವನ್ನು ಅಂತ ಧೈರ್ಯ ಹೇಳಿ,  ನಿನಗೆ ಬೇಡವಾದ ಮಗುವನ್ನು ನನ್ನ ಮಡಲಿಗೆ ಹಾಕು ಎಂದು ಕೈ ಒಡ್ಡಿ, ಮಗುವನ್ನೆತ್ತಿಕೊಂಡು, ಚಕ್ರತೀರ್ಥದಲ್ಲಿ ಒಮ್ಮೆ ಮುಳುಗಿಸಿ,ತಮ್ಮ ಕೈಯ್ಯಿಂದ  ಮೈಯ್ಯೆಲ್ಲಾ ತಿಕ್ಕಿ ತಮ್ಮ ವಸ್ತ್ರದಲ್ಲಿ ಸುತ್ತಿ, ಈ ಮಗು ನನಗೆ ದತ್ತುಪುತ್ರನಾಗಲಿ,ನೀನು ನನ್ನ ತಂಗಿಗೆ ಸಮಾನ,‌ನಮ್ಮ ಮನೆಯಲ್ಲೇ ಇದ್ದುಬಿಡು ಅಂತ ಹೇಳಿ ಮನೆಗೆ  ಕರೆದುಕೊಂಡು ಹೋಗಿ ಸಾಕಿದರು. ಪ್ರತಿನಿತ್ತ ಮಗುವಿನ ಸ್ನಾನ  ತಮ್ಮ ಅಮೃತಹಸ್ತದ ಸ್ಪರ್ಶದಿಂದ ಮಾಡಿಸುತ್ತಿದ್ದಿದರಿಂದ ಮಗುವಿನ ವ್ರಣವೆಲ್ಲಾ ಕಳೆದು ಪೂರ್ಣ  ಚಂದ್ರನಂತೆ ಕಳೆಯನ್ನು ಹೊಂದಿದ ಮಗುವಿಗೆ ಮೋಹನ ಎನ್ನುವ ಅನ್ವರ್ಥಕವಾದ ಹೆಸರನ್ನೇ ಇಟ್ಟರು.    ಜೊತೆಗೆ ಸ್ವಂತ ಮಗನ ಮೇಲೆ ಪ್ರೀತಿ ತೋರಿದಂತೆ ಈ ಮಗುವಿನಮೇಲೂ ಪ್ರೀತಿತೋರಿಸಿದರಲ್ಲದೇ ,ತಮ್ಮ ಬಿಂಬ ಮೂರುತಿಯನ್ನು ಇವನ ಪಾಲಿಸಿದರೆ ನಿನಗೆ ಪುಣ್ಯ,ಅವನಿಯೊಳಗೆ ಎಂದೆಂದಿಗೂ ನಾನೇ ಧನ್ಯ  ಎಂದು ಪ್ರಾರ್ಥಿಸಿ, ನೆಟ್ಟ ಮುಳ್ಳು ಕಿತ್ತಿಬಿಟ್ಟಂತೆ ಮಾಡು|ಘಟ್ಯಾಗಿ ಭಕುತನ್ನ ಕಾಪಾಡು ಎಂದು ಪ್ರಾರ್ಥಿಸುತ್ತಾರೆ. 
  ಇವನು ಸಾಧನೆ ಮಾಡುವ ಸುಜೀವಿ, ಇವನಿಂದ ಅನೇಕ ಸಜ್ಜನರಿಗೆ ಅನುಗ್ರಹ ಆಗುತ್ತದೆ ಎಂದು ಆ ಮಗುವಿನ ಸ್ವರೂಪವನ್ನು  ತಿಳಿದಿದ್ದ ಶ್ರೀವಿಜಯದಾಸರು ಸಾಧನ ಪ್ರಾಣಿಗಳಿರಲಿ ಬೇಕು|ಆದರದಿಂದಲಿ ಕೇಳೆನ್ನ ವಾಕು ಎಂದು ಪ್ರಾರ್ಥಿಸಿದರು. ಭಜಿಪರ ಭಾಗ್ಯೋದಯ ನಿಧಿಯೇ|ವಿಜಯವಿಠಲ ಕೇಳೆನ್ನ ದೊರೆಯೆ  ಎಂದು ಪ್ರಾರ್ಥಿಸಿದಾಗ, ಶ್ರೀವಿಜಯದಾಸರ ಕೃಪಾಶೀರ್ವಾದದಿಂದ ಮೋಹನನ ಭಾಗ್ಯೋದಯವಷ್ಟೇ ಅಲ್ಲ, ಆ ಮೂಲಕ ದಾಸಪಂಥದ ಭಾಗ್ಯೋದಯವೂ ಆಯಿತು. 
ಹೆಸರಿಗೆ ತಕ್ಕಂತೆ ಮೋಹನನಾಗಿ ಬೆಳೆಯುತ್ತಿದ್ದ ಮಗುವಿಗೆ ಕಾಲಕಾಲಕ್ಕೆ ತಕ್ಕ ಸಂಸ್ಕಾರಗಳಾದ ಅನ್ನಪ್ರಾಶನ, ಚೌಲಗಳನ್ನು ಮಾಡಿ, ಎಸೆವ ದ್ವಾದಶ ನಾಮ ಪಂಚಮುದ್ರೆಯನಿಡಿಸುತ್ತಾ ಮಗುವಿಗೆ ಚಿಕ್ಕಂದಿನಿಂದಲೇ ಶುದ್ಧ ವೈಷ್ಣವ ದೀಕ್ಷೆಯನ್ನಿತ್ತು, ಕ್ಷೇತ್ರ  ಸಂಚಾರತ್ವೇನ ಮಧ್ವವರನಾದ ಶ್ರೀಕೃಷ್ಣನ ಪವಿತ್ರ ಕ್ಷೇತ್ರವಾದ ಉಡುಪಿಯಲ್ಲಿ ತಮ್ಮ ಚಿಣ್ಣವರದನಿಗೆ ಗರ್ಭಾಷ್ಟಮದಲ್ಲಿದ್ದಾಗ ಬ್ರಹ್ಮೋಪದೇಶ ಮಾಡಿದರು. ತಮ್ಮ ಪುತ್ರನಾದ ಶೇಷಗಿರಿಯ ಜೊತೆ ಮೋಹನನಿಗೂ ತಾವೇ ಗುರುವಾಗಿ ಪಾಠಹೇಳಿದರು‌ . ಜೊತೆಗೆ ಹರಿದಾಸ ಸಾಹಿತ್ಯದಲ್ಲಿಯೂ ಉತ್ತಮ ಪರಿಣಿತಿಯನ್ನು ಹೊಂದುವಂತೆ ಅನುಗ್ರಹಿಸಿದರು. ಶಾಸ್ತ್ರದಲ್ಲಿ  ಪಾರಂಗತನಾಗಿ ಮಹಾ ಪಂಡಿತನಾದ  ಯುವ ವಯಸ್ಸಿನ ಮೋಹನನಿಗೆ   ಸೂಕ್ತ ಕನ್ಯಾಮಣಿಯೊಂದಿಗೆ ವಿವಾಹ ಮಾಡಿ, ಆ ಸಂದರ್ಭದಲ್ಲಿ  ಅತ್ಯದ್ಭುತವಾದ ಹಿತನುಡಿಗಳಿಂದ ಒಡಗೂಡಿದ ಕೃತಿ ರಚಿಸಿ, ಅನುಗ್ರಹಿಸಿದರು. ಚಿರಂಜೀವಿಯಾಗೆಲೋ ಚಿಣ್ಣ ನೀನು,ಪರಮಭಾಗವತರ ಪದ ಧೂಳಿ ಧರಿಸುತಲಿ 
ಶ್ರೀವಿಜಯದಾಸರಿಗಿಂತ ಪರಮ ಭಾಗವತರ ಪದ ಧೂಳಿ ಮೋಹನದಾಸರ  ಪಾಲಿಗೆ ಮತ್ತೊಂದಿದೆಯಾ!!

ಪ್ರತಿಯೊಬ್ಬ ಸುಜೀವಿಯ ಜೀವನಕ್ಕೂ ಅವಶ್ಯವಾಗಿ ಬೇಕಾದ ನುಡಿಮುತ್ತುಗಳನ್ನು ಹೊಂದಿದ ಕೃತಿ ಇದು.ನಿಜವಾದ ಸಾಧಕನಾಗಲು ಹೇಗೆ ಜೀವನ ನಡೆಸಬೇಕು ಅಂತ ಸುಲಭವಾಗಿ ಅರ್ಥವಾಗುವಂತೆ ತಿಳಿಸುವ ಕೃತಿ.  ಸಾಲ ಮಾಡಲಿಬೇಡ, ದೇವರು ಕೊಟ್ಟಷ್ಟು ಸಾಕು,ನಾಳೆಯ ಚಿಂತೆ ಬೇಡ, ಲೋಕವಾರ್ತೆಯನ್ನು ಆಡುವುದಿರಲಿ, ಕೇಳಲೂಬೇಡ, ಭಗವಂತನ ಭಗವದ್ಭಕ್ತರ ಕೀರ್ತನೆ ಕೇಳದೇ ಇರಬೇಡ, ಅತಿಥಿಗಳಿಗೆ ಭೋಜನ ಹಾಕದೇ ಏಕಾಂತದಲ್ಲಿ ಊಟ ಮಾಡಬೇಡ ಹೀಗೇ ಹಲವಾರು ಮಾತುಗಳನ್ನು ತಿಳಿಸುತ್ತಾರೆ‌. ಇವು ಬರೀ ಬುದ್ಧಿಮಾತುಗಳು ಅಷ್ಟೇ ಅಲ್ಲ ಮೋಹನನಿಗೆ, ಹೇಳುವುದರ ಜೊತೆ ಹಾಗೆಯೇ ಇರು ಅಂತ ಆಶೀರ್ವಾದವೂ ಮಾಡಿದ್ದಾರೆ ಶ್ರೀವಿಜಯದಾಸರು. ಹಾಗೆಯೇ ಜೀವನವಿಡೀ ನಡೆದುಕೊಂಡರೂ ಕೂಡ. ಪಂಡಿತರು ಪಾಮರರು ಆರಾದರೂ ನಿನ್ನ ಕಂಡವರಿಗೆ ಕೌತುಕವ ತೋರಲಿ  ಎನ್ನುವ  ಅದ್ಭುತವಾದ ಆಶೀರ್ವಾದ ಮಾಡಿದ್ದಾರೆ ಶ್ರೀವಿಜಯದಾಸರು. ಹಾಗೇಯೆ ಇದ್ದರು ನಮ್ಮ ಶ್ರೀಮೋಹನದಾಸರು. 

ಹೀಗೆ ಶ್ರೀವಿಜಯದಾಸರ ಅನುಗ್ರಹದಿಂದ  ಗೃಹಸ್ಥ ಜೀವನ ನಡೆಸುತ್ತಾ, ತಮ್ಮ ಅವತಾರ ಕಾರ್ಯ ಮರೆತು, ಮೈಮರೆತಿದ್ದ ತಮ್ಮನ್ನು ಮತ್ತೊಮ್ಮೆ ಕರುಣಾಳುಗಳಾದ ಶ್ರೀವಿಜಯದಾಸರು ಬಂದು ಎಚ್ಚರಿಸಿ, ಪ್ರಪಂಚವನ್ನು ಬಿಡಿಸಿ, ಸಂಚಿತಾಗಾಮಿಗಳನ್ನು ತೊಡೆದುಹಾಕುವ ಉಪದೇಶ ದೀಕ್ಷೆಯನ್ನು ನೀಡಿದರೆಂದು ಪಂಚಮಹಾಪಾತಕರೊಳಗೆ ಮೂರನೆ ಕಕ್ಷಿ|ಕಾಂಚನ ದ್ರೋಹಿ ನಾನುಯೆನ|ಮುಂಚೆ ಬಂದಾಗೆ ಕೈ ಬಿಡದೆ ಪ್ರಾ|-ಪಂಚವನು ಬಿಡುಯೆಂದು ನುಡಿದೆ ಯೆನ್ನ-|ಸಂಚಿತಾಗಮವೆಲ್ಲ ತೊಡೆದ ಯೆನ್ನ|ಕಂಚುಕಟ್ಟಳೆ ಮೇಣಕಲ್ಲುಗಳ ಕಾಸಿಗೆ ಪಂಛೇರು ಮಾಡಿ ನಡೆದೆ ಬಿಡದೆ 
ಎಂದು ಶ್ರೀಮೋಹನದಾಸರೇ  ನಿನ್ನ ಪಾದವ ನಂಬಿ ಅನ್ಯರಾಶ್ರಯವೇಕೆ ಚನ್ನ ಗುರು ವಿಜಯರಾಯಾ ಎಂಬ ತಮ್ಮ ಕೃತಿಯಲ್ಲಿ ತಿಳಿಸಿದ್ದಾರೆ‌. ಶ್ರೀವಿಜಯದಾಸರು
ತಾವು  ಹಂಪೆಯಲ್ಲಿ ಭಕ್ತಿಯಿಂದ ನಡೆಸುತ್ತಿದ್ದ ಶ್ರೀಪುರಂದರ ದಾಸರ ಆರಾಧನೆಯ ಸಂದರ್ಭದಲ್ಲಿ ಅಲ್ಲಿಯೇ ಹತ್ತಿರದ, ಆನೆಗೊಂದಿಯ ನಡುಗಡ್ಡೆಯಲ್ಲಿಯೇ ಆ ಮಹಾನ್ ಯತಿಗಳ ಸನ್ನಿಧಾನದಲ್ಲಿ ಮತ್ತೂ  ಶ್ರೀವ್ಯಾಸರಾಜ ಗುರುಸಾರ್ವಭೌಮರು ತಪಸ್ಸನ್ನಾಚರಿಸುತ್ತಿದ್ದ ಗುಹೆಯಲ್ಲಿ  ದಾಸ ದೀಕ್ಷೆಯಿತ್ತು ಮೋಹನವಿಠಲ ಎಂದು ಅಂಕತೋಪದೇಶವನ್ನು ನೀಡಿ ಪರಮಾನುಗ್ರಹ ಮಾಡಿದರು.
ಮೋಹಪಾಶವ ಬಿಡಿಸಿ ನಂಬಿದವನಿಗೊಲಿದು|ರಹಸ್ಯಮತಿ ಕೊಡುವುದು ಸ್ವಾಮಿ|ಪಾಹಿ ಮೋಹನ ವಿಠಲ ಪರಮ ಕರುಣಾ ಜಲಧಿ ಮಹದಾದಿ ದೇವವಂದ್ಯ  ಎಂದು , ಪಿರಿದಾಗಿ ಬೇಡಿದೆನೋ ವಿಜಯವಿಠಲ ನಿನ್ನ|ಶರಣರೊಳಗಿಡು ಕಾಪಾಡೋ|ಸ್ಥಿರವಾಗಿ ಅಂಕಿತವ ಪ್ರೇರಿಸಿಕೊಡಿಸಿದ್ದು|ಧರೆಯೊಳಗೆ ಪರಿಪೂರ್ಣವಾಗಿ ಇರಲಿ ಸ್ವಾಮಿ ಎಂದು ತಮ್ಮ  ಬಿಂಬಮೂರುತಿಯಾದ ಶ್ರೀವಿಜಯವಿಠಲನಲ್ಲಿ ಪರಿಪರಿಯಾಗಿ ಪ್ರಾರ್ಥಿಸಿದರು.
ಜ್ಞಾನಿಗಳು ಕೊಡುವ ಅಂಕಿತೋಪದೇಶ ಅದು ಮಂತ್ರತುಲ್ಯ ಮತ್ತು ನಿತ್ಯಾಹ್ನೀಕದ ಜೊತೆ ಅವಶ್ಯವಾಗಿ ಗುರುಗಳಿಂದ ಪ್ರಾಪ್ತವಾದ ಅಂಕಿತೋಪದೇಶವನ್ನು ಹೇಳಿಕೊಂಡು ಗುರುಗಳ ಮುಖಾಂತರ ಭಗವಂತನಿಗೆ ಸಮರ್ಪಿಸಬೇಕು. ಎಷ್ಟು ಭಕ್ತಿ ಇರುತ್ತದೆಯೋ ಅಷ್ಟು ಬೇಗ ಆ ಉಪದೇಶದಲ್ಲಿರುವ ಮಾತುಗಳು ಸತ್ಯವಾಗಿ ಅನುಭವಕ್ಕೆ ಬರುತ್ತವೆ. 
ಶ್ರೀವಿಜಯದಾಸರು ಮುಂಚೆಯೇ ಆಶೀರ್ವದಿಸಿದಂತೆ ಪಂಡಿತರು ಪಾಮರರು ಯಾರಾದರೂ ನಿನ್ನ ಕಂಡರೆ ಕೌತುಕವು ಬರಲಿ ಎನ್ನುವ ಅನುಗ್ರಹ, ಮತ್ತು ಅಂಕಿತೋಪದೇಶದಲ್ಲಿ ತಿಳಿಸಿದಂತೆ ಮೋಹಪಾಶಗಳನ್ನೆಲ್ಲಾ ಬಿಡಿಸಿ, ರಹಸ್ಯಮತಿ ಕೊಡುವುದು ಸ್ವಾಮಿ ಎಂದು ಪ್ರಾರ್ಥಿಸಿದ್ದು,( ಭಗವಂತನ ವಿಶೇಷವಾದ ಅನೇಕ ರಹಸ್ಯ ಚಿಂತನೆಗಳ ಉಪಾಸನೆಯನ್ನು ಗುರುಗಳು ಹೇಳಿಕೊಟ್ಟ  ರೀತಿಯಲ್ಲಿ ಚಿಂತನೆಮಾಡುತ್ತಾ ಧ್ಯಾನಮಾಡುವುದು) ಮತ್ತು ಈ ಮುಂಚೆಯೇ ತಾವೇ ಸ್ವತಃ ಸಕಲ ಶಾಸ್ತ್ರಗಳನ್ನು ಪಾಠ ಹೇಳಿ ಅನುಗ್ರಹಿಸಿದ್ದು ಎಲ್ಲ ಅನುಗ್ರಹಗಳ  ಸಂಗಮದ ಫಲವೇ , ಶ್ರೀಮೋಹನದಾಸರು ಅದ್ವಿತೀಯ ಶಾಸ್ತ್ರಪಂಡಿತರಾಗಿ, ಜ್ಞಾನಿಗಳಾಗಿ ಮತ್ತು ಯುಕ್ತಿಯಲಿ ಮೋಹನ್ನ ಅಂತ ಲೋಕ ಪ್ರಸಿದ್ಧಿ.  

ಸಾಕು ತಂದೆ, ಶಾಸ್ತ್ರವಿದ್ಯೆಯ ಗುರುಗಳು ಮತ್ತು ಅಂಕಿತೋಪದೇಶದ ಗುರುಗಳೂ ಆದ ಶ್ರೀವಿಜಯದಾಸರಿಂದ ಅಂಕಿತೋಪದೇಶ ಪಡೆದ ಶ್ರೀಮೋಹನದಾಸರು ಭಕ್ತಿಯಿಂದ ಈ ಅಂಕಿತೋಪದೇಶವನ್ನು  ಹೇಳಿಕೊಳ್ಳುತ್ತಾ,ಮನನ ಮಾಡುತ್ತಾ  ಗುರುಗಳ ಕೃಪೆಯಿಂದ ಬಿಂಬ ಮೂರುತಿಯ ದರ್ಶನ ಪಡೆದು ಆಧ್ಯಾತ್ಮಿಕ ಲೋಕದ ಮೇರು ಸುಖವನ್ನನುಭವಿಸಿದರು.

(ಮುಂದುವರೆಯುವುದು)

ಇನ್ನಾದರು ಪೊರೆಯೋ ಮೋಹನರಾಯ|ನಿನ್ನವನಲ್ಲವೇನೋ|ಎನ್ನನೀಪರಿ ಬನ್ನ ಬಡಿಪದಯಚಿತವೇನೋ ಚೆನ್ನ ಶ್ರೀವಿಜಯ ದಾಸಾರ್ಯರ ಚಿಣ್ಣಾ- ಯುಕ್ತಿ ಕಥೋಕ್ತಿಯಲಿ ಪವನ|ಮತದ ಸಾರ|ಭಕ್ತರಿಗರ್ಥಿಯಲಿ ಸ್ತವನ|ಮುಕ್ತಿದಾಯಕ ಗುರು ಗೋವಿಂದ ವಿಠಲನ|ವ್ಯಕ್ತಮಾಡಿಸೋ ಗುರು ಮೋಹನ್ನರಾಯಾ (ಶ್ರೀಗುರುಗೋವಿಂದ ವಿಠಲ ದಾಸರು)
***
ಚಿರಂಜೀವಿಯಾಗೆಲೋ ಚಿಣ್ಣ ನೀನು ಭಾಗ-೩

ಶ್ರೀಮೋಹನದಾಸರಿಗೆ  ಚಿಕ್ಕ ಮಗುವಿದ್ದಾಗಿಂದ ಪ್ರಾರಂಭಿಸಿ  ಪೂರ್ತಿ ಜೀವನ  ಹೆಜ್ಜೆ ಹೆಜ್ಜೆಗೂ ತಮಗಾದ ಆಪತ್ತನ್ನು ಪರಿಹರಿಸಿದ್ದು,ಎಡವಿದಾಗ ಎಚ್ಚರಿಸಿದ್ದೂ, ಸದಾ ಅನುಗ್ರಹಿಸಿದ್ದು ಎಲ್ಲವೂ ಕೂಡ ಶ್ರೀವಿಜಯಪ್ರಭುಗಳೇ. ಅದು ಯಾವ ಜನುಮಗಳ ಸಂಬಂಧವೋ ಅವರಿಬ್ಬರ ಮಧ್ಯೆ! ಯಾರು ಬಲ್ಲರು!

ಆವ ಕಾಲ ತಪ್ಪಿಸಿದರೂ ಸಾವ ಕಾಲತಪ್ಪಿಸನು ಎನ್ನುವ ಶ್ರೀವಿಜಯದಾಸರದ್ದೇ ಮಾತಿನಂತೆ, ತಮ್ಮ ಸ್ವಂತ ಮಗನಾದ  ಶ್ರೀಶೇಷಗಿರಿರಾಯರನ್ನು ಕಳೆದುಕೊಂಡನಂತರ,ಶ್ರೀಮೋಹನ ದಾಸರಲ್ಲಿಯೇ ಪ್ರೇಮಪುತ್ರನನ್ನು ಕಂಡುಕೊಂಡು, ಕುಟುಂಬದ ಜೊತೆ ತೀರ್ಥಯಾತ್ರೆಯನ್ನು ಮಾಡಲು ನಿರ್ಧರಿಸಿ, ಹೊರಡುವ ಮುನ್ನ, ಶ್ರೀಮೋಹನದಾಸರ ಪತ್ನಿಯನ್ನು ಕುರಿತು,ಅಮ್ಮಾ ಸೀತಮ್ಮ, ನಿನಗೊಂದು ರಹಸ್ಯವಿಷಯ ತಿಳಿಸುತ್ತೇನೆ, ಯಾರಿಗೂ ತಿಳಿಸಬಾರದು. ನಾವು ಈಗ ತೀರ್ಥಯಾತ್ರೆಗೆ ಹೋದ ಕೆಲವೇ ದಿನಗಳಲ್ಲಿ ನಿನ್ನ ಪತಿಯು ಅಪಮೃತ್ಯುವಿಗೆ ಈಡಾಗುತ್ತಾನೆ. ಹೆದರಬೇಡ.  ಶಿಂಶುಮಾರಾಭಿನ್ನ, ಧನ್ವಂತರಿಯಾದ ಶ್ರೀವಿಜಯವಿಠಲನ ಅನುಗ್ರಹವಿರುವುದರಿಂದ ಅವನಿಗೆ ಯಾವುದೇ ಭಯವಿಲ್ಲ. ಆದರೆ, ಒಂದು ಮಾತು ನೆನಪಿನಲ್ಲಿಟ್ಟುಕೋ, ಎಂತಹ ಸಂದರ್ಭ ಬಂದರೂ ಅವನ ದೇಹ ಸಂಸ್ಕಾರಕ್ಕೆ ಅವಕಾಶ ಕೊಡ ಬೇಡ, ನಿರ‌ಂತರ ಹರಿವಾಯುಗುರುಗಳ ಸ್ಮರಣೆ ಮಾಡು ಅಂತ ಉಪದೇಶಿಸಿ ಹೊರಡುತ್ತಾರೆ‌.
ಭಗವಂತನ ಅಪರೋಕ್ಷಿಗಳ ಮಾತು ಎಂದು ಸುಳ್ಳಾಗುವುದಿಲ್ಲ ಅಲ್ಲವೇ? ಕೆಲವು ದಿನಗಳನಂತರ ಶ್ರೀ ಮೋಹನದಾಸರು ಅಪಮೃತ್ಯುವಿಗೆ ಈಡಾಗಿ, ಈ ಸುದ್ಧಿ ತಕ್ಷದಲ್ಲಿಯೇ ಊರೆಲ್ಲಾ ಹರಡಿ, ಗುಂಪುಗುಂಪಾಗಿ ಜನರು ಬಂದು,ತಲೆಗೊಂದರಂತೆ ಮಾತಾಡುತ್ತಿದ್ದಾಗ, ದುಃಖ ಒತ್ತರಿಸಿ ಬರುತ್ತಿದ್ದರೂ ತಡೆದು, ಶ್ರೀವಿಜಯದಾಸರು ತಿಳಿಸಿದಂತೆ ಹರಿವಾಯುಗುರುಗಳ ಧ್ಯಾನ ಮಾಡುತ್ತಾ ಅದರಲ್ಲಿರೂ ಮುಖ್ಯವಾಗಿ ವಿಜಯರಾಯರ ಸ್ಮರಣೆ ಮಾಡುತ್ತಿರಲು, ಊರಿನ ಪ್ರಮುಖರು ಆಕೆಗೆ, ಪುಣ್ಯಜೀವಿಯ ಸಂಸ್ಕಾರ ಬೇಗ ಆಗಬೇಕೆಂದು ಒತ್ತಾಯಿಸಿ ಬೇಕಾದ ಏರ್ಪಾಟು ಮಾಡಲಾರಂಭಿಸಿದರು. ಆದರೆ ಯಾರು ಎಷ್ಟೇ ಹೇಳಿದರು  ದೇಹವನ್ನು  ಸಂಸ್ಕಾರಕ್ಕೆ ಎತ್ತಲು ಅವಕಾಶ ಕೊಡದೇ ವಿಜಯರಾಯಾ ವಿಜಯರಾಯ ಎಂದು ಗಟ್ಟಿಯಾಗಿ ಸ್ಮರಿಸತೊಡಗಿದಳು.
ತಮ್ಮ ತೀರ್ಥಯಾತ್ರೆಯ ಸಂಚಾರದಲ್ಲಿ ಎಲ್ಲೋ ಇದ್ದ ಶ್ರೀವಿಜಯಪ್ರಭುಗಳು ಸೊಸೆಯು  ಸ್ಮರಿಸುತ್ತಿರುವುದನ್ನು  ಅರಿತು, ತಕ್ಣಣವೇ ಯಮಲೋಕಕ್ಕೆ ಹೋದಾಗ, ಯಮಧರ್ಮರಾಜರಿಗೆ ಆಶ್ಚರ್ಯದ ಜೊತೆಗೆ ಸಂತೋಷವೂ ಆಗಿ, ಬನ್ನಿ ಭೃಗುಋಷಿಗಳೇ ಎಂದು ಸತ್ಕರಿಸಿ ಬಂದ ಕಾರಣ ಕೇಳಿದಾಗ, ಯಾವ ತಪ್ಪ‌ನ್ನೂ ಮಾಡದ, ಇನ್ನೂ ಆಯುಷ್ಯವಿರುವ ನಮ್ಮ ಶಿಷ್ಯರನ್ನು ನಿಮ್ಮ ಲೋಕಕೆ ಯಾಕೆ ಕರೆತಂದೀರಿ ಎಂದು ಕೇಳುತ್ತಾರೆ. ಇದನ್ನು ಕೇಳಿ ಮತ್ತಷ್ಟು ವಿಸ್ಮಿತರಾದ ಯಮಧರ್ಮರಾಜರು ಚಿತ್ತಗುಪ್ತರನ್ನು ಕರೆಸಿ ವಿಚಾರಿಸಿದಾಗ, ಭೃಗುವಾಣಿಯು ಸತ್ಯವೆಂದೂ, ಆಯುಷ್ಯ ಮುಗಿದಿದ್ದ ಅದೇ ಊರಿನ ಮೋನಪ್ಪ ಎಂಬ ಕುಂಬಾರನೊಬ್ಬನನ್ನು ಕರೆತರುವ ಬದಲು, ಮೋಹನಪ್ಪ‌ನನ್ನು ಕರೆತಂದಿರುವಾದಾಗಿ ತಿಳಿದು, ತಮ್ಮ ಲೋಕದಲ್ಲಿ ಜರುಗಿದ ಈ ಪ್ರಮಾದಕ್ಕಾಗಿ ಋಷಿಗಳಲ್ಲಿ ಕ್ಷಮೆಯಾಚಿಸಿ, ತಮ್ಮ ಶಿಷ್ಯರ ಜೀವವನ್ನು ಗೌರವಭಾವದಿಂದ ಪುನಃ  ಭೂಲೋಕಕ್ಕೆ ಕಳುಹಿಸುವ ಏರ್ಪಾಟು ಮಾಡಿದರು. ಇದಾದನಂತರ ಯಮಾಜ್ಞೆಯಂತೆ ಅದೇ ಊರಿನ ಮೋನಪ್ಪ ಎನ್ನುವ ಜೀವನನ್ನು ಯಮಪುರಿಗೆ ತರಲಾಯಿತು. 
ಇತ್ತ ಮೋಹನದಾಸರು ನಿದ್ದೆಯಿಂದ ಎಚ್ಚರವಾದವರಂತೆ ಎದ್ದು ಕೂತಿದ್ದು ನೋಡಿ, ಅಲ್ಲಿದ್ದವರಿಗೆಲ್ಲಾ ಗಾಬರಿಯಾಯಿತು. ಸತ್ತವನು ಎಲ್ಲಾದ್ರೂ ಬದುಕೋದುಂಟೆ ಎಂದು ಆಶ್ಚರ್ಯಪಡುವ ಹೊತ್ತಿಗೆ, ಅದೇ ಊರಿನ ಮೋನಪ್ಪ ಎನ್ನುವವ ಸತ್ತ ಅಂತ ಸುದ್ಧಿ ಬಂದಿತು. ಸೀತಮ್ಮನಿಗಂತೂ ಆದ ಸಂತೋಷಕ್ಕೆ ಪಾರವೇ ಇಲ್ಲ‌. ಆನಂದದಿಂದ ಶ್ರೀವಿಜಯದಾಸರ ಸ್ಮರಣೆ ಮತ್ತಷ್ಟು ಗಟ್ಟಿಯಾಗಿ ಮಾಡತೊಡಗಿದಳು. ಇದೆಲ್ಲವನ್ನೂ ಕೇಳಿ ತಿಳಿದುಕೊಂಡ ಶ್ರೀಮೋಹನದಾಸರಿಗೆ ಗುರುವನುಗ್ರಹದಿಂದ ಯಮಲೋಕದಲ್ಲಿ ತಮ್ಮನ್ನು ಕರೆದುಕೊಂಡು ಹೋದದ್ದು, ಅಲ್ಲಿ ಗುರುಗಳು ಬಂದು ತಮ್ಮನ್ನು ವಾಪಾಸು ಕರೆತಂದಿದ್ದು ಎಲ್ಲವೂ ಕೂಡ ಸ್ಮರಣೆಗೆ ಬರುತ್ತದೆ. ಆಗ ಭಕ್ತಿಯಿಂದ ಈ ಪ್ರಸಂಗವನ್ನೇ ತಿಳಿಸುವ ಕೃತಿ ರಚಿಸುತ್ತಾರೆ. ಕರಗಳನೇ ಕಟ್ಟಿ ಎಳೆಯುತಿರೆ ಧೊರೆಗಳನೇ ಮುಟ್ಟಿ|ಸಿರಿಮೋಹನ ವಿಠಲನ ಪಾದವ ತೋರಿ ಧರೆಗೆ ತಂದು ಬಿಟ್ಟೆ ಕರುಣಾಳುವೆಯೆನ್ನ ತಂದೆ ವಿಜಯರಾಯ ವ್ಯಾಳಕೆ ಬಂದೆ ವಿಜಯರಾಯ ಅಂತ ತಮ್ಮ ಜೀವಿತಾವಧಿಯಲ್ಲಿ ಪವಾಡ ಸದೃಶದಂತೆ ನಡೆದ ಈ ಘಟನೆಯನ್ನು ಕಣ್ಣಿಗೆ ಕಟ್ಟುವಂತೆ ಮೂರು ನುಡಿಗಳಿಂದ   ಸ್ತುತಿಸಿದ್ದಾರೆ. ಗುರುಗಳನ್ನು ಆಶ್ರಯಿಸಿದರೆ ಭಗವಂತನನ್ನು ಕಾಣುವುದು ಸುಲಭ, ಗುರುಗಳ ಮುಖಾಂತರ ಮಾತ್ರ ಭಗವಂತನ ದರ್ಶನ  ಸಾಧ್ಯ. ತಮ್ಮ ಗುರುಗಳಾ ಶ್ರೀವಿಜಯದಾಸರು ಶ್ರೀಮೋಹನದಾಸರನ್ನು ಅಪಮೃತ್ಯುವಿನಿಂದ ಪಾರು ಮಾಡಿದ್ದಲ್ಲದೇ ಭಗವಂತನ ದರ್ಶನವನ್ನೂ ಮಾಡಿಸಿದರು ಅನ್ನುವ ವಿಷಯವನ್ನು ಸಿರಿಮೋಹನ ವಿಠಲನ ಪಾದವ ತೋರಿ ಧರೆಗೆ ತಂದು ಬಿಟ್ಟೆ ಎಂದು  ತಿಳಿಸಿದ್ದಾರೆ. 
ನಂತರ ಶ್ರೀವಿಜಯದಾಸರು ತೀರ್ಥಯಾತ್ರೆ ಮುಗಿಸಿ ಬರುವುದ‌ನ್ನೇ ಕಾಯುತ್ತಿದ್ದ ಶ್ರೀಮೋಹನದಾಸರು, ಅವರು ಬಂದ ತಕ್ಷಣ ದರ್ಶನಮಾಡಿ, ಆನಂದೋದ್ರೇಕಗಳಿಂದ ಕಣ್ಣೀರು ಸುರಿಸ್ತಾ ಪರಮ ಹರುಷವಾಯಿತು ವಿಜಯರಾಯ ಗುರುಗಳಂಘ್ರಿಯನೆ ಕಂಡು| ಪರಿಪರಿ ಜನುಮದ ಥರಥರದಘಗಳು|ತಿರುಗಿ ನೋಡದಲೇವೆ ತೆರಳಿ ಪೋದವುಯಿಂದು ಎಂದು ಸ್ತುತಿಸಿ, ಧನವ ಪೋಗಾಡಿಸಿಕೊಂಡು ನರನು ಬಲು ಮನಕ್ಲೇಶದಿಂದಲು|ಘನ ಮಹಿಮನೆ ನಮ್ಮ ಮೋಹನ ವಿಠಲವನ ಕೈಯೊಳಗೆ ಚಿಂತಾಮಣಿಯನು ಯಿತ್ತಂತೆ ಎಂದು ಪ್ರಾರ್ಥಿಸುತ್ತಾರೆ. 

ಶ್ರೀಮೋಹನದಾಸರ ಮೇಲೆ ಅನುಗ್ರಹಸಿದ ಶ್ರೀವಿಜಯದಾಸರು ತಮ್ಮ ನಿರ್ಯಾಣದ  ನಂತರ ತಮ್ಮ ಸಂಸ್ಕಾರವನ್ನೂ ಇವರಿಂದಲೇ ಮಾಡಿಸಿಕೊಂಡು ಅನುಗ್ರಹಿಸಿದರು. ಎಲ್ಲಾ  ಶಿಷ್ಯರಿಂದ ಒಡಗೂಡಿ ಸಕಲ ಸಂಸ್ಕಾರಗಳನ್ನೆಲ್ಲಾ ಮುಗಿಸಿ,  ತಮ್ಮ ಸಾಕು ತಂದೆಯವರೂ, ಸ್ವರೂಪೋದ್ಧಾರಕ ಗುರುಗಳೂ ಆದ, ತಮ್ಮ ಬದುಕಿನ ಸಾರ ಸರ್ವಸ್ವವೂ ಆಗಿದ್ದ ಶ್ರೀವಿಜಯದಾಸರನ್ನೂ ಕಳೆದುಕೊಂಡು  ಮಗುವಿನಂತೆ ಅತ್ತುಬಿಟ್ಟರು.  ಜಾತಸ್ಯ ಮರಣಂ ಧೃವಂ ಎನ್ನುವುದನ್ನು ಜ್ಞಾಪಿಸಿಕೊಂಡು, ನಂತರ ವೇಣುಗೋಪಾಲನ ಸನ್ನಿಧಿಯಲ್ಲೇ ಗುರುಗಳ ಕಟ್ಟೆಯನ್ನು ಸ್ಥಾಪಿಸಿ ಭಕ್ತಿಯಿಂದ ಪೂಜಿಸಲಾರಂಭಿಸಿದರು. ಅಲ್ಲಿಯತನಕ ಹುಟ್ಟಿದ ಮಕ್ಕಳು ದಕ್ಕದೇ ತುಂಬಾ ಸಂಕಟ  ಅನುಭವಿಸುತ್ತಿದ್ದ ಶ್ರೀಮೋಹ‌ನದಾಸರಿಗೆ ಕಟ್ಟೆ ಕಾದರೆ ಹೊಟ್ಟೆ ಕಾಯುವೆ ಎಂದು ಶ್ರೀವಿಜಯದಾಸರು ಸೂಚನೆ ಇತ್ತರು. ನಂತರದ ದಿನಗಳಲ್ಲಿ ದಾಸರ ಕಟ್ಟೆಯ ಪೂಜೆಯನ್ನು ಆರಂಭಿಸಿದ ಮೇಲೆ ಅವರ ಜೀವನದಲ್ಲಿ ಮಂಗಳದ ಮುಂಬೆಳಕು ಮೂಡಿತು. ಗುರುಗಳ ಪರಮಾನುಗ್ರಹದಿಂದ ಗಂಡು ಕೂಸೊಂದು ಹುಟ್ಟಿತು. ಅದಕ್ಕೆ ದಾಸಪ್ಪದಾಸ ಅಂತಲೂ, ಕುಲದೇವರ ಸ್ಮರಣೆಗೋಸ್ಕರ ವೆಂಕೋಬ ಎಂತಲೂ  ಹೆಸರಿಟ್ಟರು. ನಂತರ ಅವರಿಗೆ ಮತ್ತೇ ನಾಲ್ಕು ಜನ ಗಂಡು ಮಕ್ಕಳು ಜನಿಸಿ, ಕ್ರಮವಾಗಿ, ವಿಜಯದಾಸ, ಗುರುರಾಯಪ್ಪದಾಸ,ರಾಘವೇಂದ್ರದಾಸ ಮತ್ತು ಶ್ರೀನಿವಾಸದಾಸ ಎಂದು ಹೆಸರಿಟ್ಟರು. 
ಎನ್ನೊಬ್ಬನ ಪಾಲಿಸಿದ್ದು ಬಲು ಗುರುತಲ್ಲ|ಚಿನ್ನವರದನ ಸಂತತಿಯೆಲ್ಲ|ನಿನ್ನ ಪಾಲಿಗೆ ಬಿಟ್ಟಿದ್ದಲ್ಲ ವಾಕು| ಅನ್ಯಥಾ ಮಾಡುವುದು ಸಲ್ಲ,ಮೋ|ಹನ್ನವಿಠಲ ಎದನು ಬಲ್ಲ ಮುನ್ನಾ|ಪನ್ನಗಶಯನ ಪ್ರಸನ್ನನಾದುದಕೆ ಇದು|ಎನ್ನ ಮನೋರಥದ ಸಿದ್ಧಿಯೋ ಸ್ವಾಮಿ ಎಂಬ ದಾಸರ ಪ್ರಾರ್ಥನೆ ವ್ಯರ್ಥವಾಗದೇ, ಶ್ರೀವಿಜಯರಾಯರು ಮಾತುಕೊಟ್ಟಂತೆ ಚಿನ್ನವರದನನ್ನೂ ಅವನ ಸಂತತಿಯನ್ನೂ ಕಡೆಯ ತನಕ ಬಿಡದೆ ಪೋಷಿಸುತ್ತಿದ್ದಾರೆ. 
 ಹೀಗೆ ಶ್ರೀಮೋಹನದಾಸರ ಇಡೀ ಜೀವನವನ್ನು ಹೆಜ್ಜೆಹೆಜ್ಜೆಗೂ ಕರುಣೆಯಿಂದ  ಸಂರಕ್ಷಿಸಿದ ಶ್ರೀವಿಜಯದಾಸರು ಚಿರಂಜೀವಿಯಾಗೆಲೋ ಚಿಣ್ಣ ನೀನು ಎಂದು  ಆಶೀರ್ವದಿಸಿದಂತೆ, ಶ್ರೀಮೋಹನದಾಸರ ಗುರುಭಕ್ತಿ, ಅವರ ಸಾಹಿತ್ಯದ ಶಕ್ತಿ, ಅವುಗಳಲ್ಲಿಯ ಯುಕ್ತಿ ( ಯುಕ್ತಿಯಲಿ ಮೋಹನ್ನ ಅಂತಲೇ ಪ್ರಸಿದ್ಧಿ ಪಡೆದ), ಅವರ ವಂಶ ಹೀಗೇ ಎಲ್ಲವೂ ಶಾಶ್ವತವಾಗಿ ಚಿರಂಜೀವಿತ್ವ ವನ್ನು ಪಡೆದಿವೆ ಅನ್ನುವುದರಲ್ಲಿ ಯಾವುದೇ ಸಂಶಯವಿಲ್ಲ‌.
ಶ್ರೀಮೋಹನ ದಾಸರ ಅಂತರ್ಗತ, ಶ್ರೀವಿಜಯರಾಯ ಗುರುವಂತರ್ಗತ,ಶ್ರೀಪುರಂದರ ದಾಸರ ಅಂತರ್ಗತ ಶ್ರೀವ್ಯಾಸರಾಜ ಗುರುಸಾರ್ವ ಭೌಮರ ಅಂತರ್ಯಾಮಿಯಾದ ಭಾರತೀರಮಣ ಮುಖ್ಯಪ್ರಾಣಾಂತರ್ಗತ ಶ್ರೀವಿಜಯವಿಠಲಾಭಿನ್ನ ಶ್ರೀಮೋಹನವಿಠಲನು ‌‌ನಮಗೆಲ್ಲರಿಗೂ ಪರಮಾನುಗ್ರಹ ಮಾಡಲಿ ಎಂದು ಶ್ರೀಮೋಹನ ದಾಸರ  ಆರಾಧನೆಯ ಪರ್ವಕಾಲದಲ್ಲಿ ಭಕ್ತಿಯಿಂದ ಪ್ರಾರ್ಥಿಸೋಣ. 🙏🙏

ಕೆರೆ ನೀರು ಕೆರೆಗೆ ಚೆಲ್ಲಿ ವರಗಳು ಪಡೆದಂತೆ|ಕರುಣಾಳು ಮೋಹನ್ನ ವಿಠಲನರ್ಚಿಸು ಮನವೆ

ತನುವೆ ತೀರಲಿ ನಿಚ್ಚಾ ಗುಣವೆ ತೀರಲಿ ಎನ್ನ| ಮನ ನಿನ್ನಂಘ್ರಿಯಲಿಡೊ ಮೋಹನ್ನ‌ವಿಠಲ

ನಿನ್ನ ಪಾದವ ನಂಬಿ ಅನ್ಯರಾಶ್ರಯವ್ಯಾಕೆ ಚನ್ನ ಗುರು‌ವಿಜಯರಾಯ|ಇನ್ನೇನು ಯಿನ್ನೇನು ಯೆನ್ನ ಕುಲಕೋಟಿ ಪಾವನ್ನವಾದುದು ನಿಶ್ಚಯ ಜೀಯಾ

 ಮೋಹನ ದಾಸವರ್ಯ ಮುದ್ದು ಮೋಹನ ದಾಸವರ್ಯ ಭವದ ವ್ಯಾ| ಮೋಹ ಬಿಡಿಸಯ್ಯಾ ( ಶ್ರೀಲಕುಮೀಶ ದಾಸರು)
     🙏ಶ್ರೀಕೃಷ್ಣಾಪರ್ಣಮಸ್ತು🙏
****


" ಚಿಪ್ಪಗಿರಿ ನಿಲಯ  ಶ್ರೀ ಮೋಹನ ದಾಸವರ್ಯ "
 " ದಿನಾಂಕ : 16.06.21 ಬುಧವಾರ - ಶ್ರೀ ಪ್ಲವ ನಾಮ ಸಂವತ್ಸರ ಉತ್ತರಾಯಣ ಗ್ರೀಷ್ಮ ಋತು ಜ್ಯೇಷ್ಠ ಶುದ್ಧ ಷಷ್ಟೀ -  ಶ್ರೀ ರಾಯರ ಅಂತರಂಗ ಭಕ್ತರೂ - ಶ್ರೀ ವಿಜಯರಾಯರ ಕಾರುಣ್ಯ ಪಾತ್ರರೂ ಆದ  ಶ್ರೀ ಮೋಹನದಾಸರ ಆರಾಧನಾ ಮಹೋತ್ಸವ, ಚಿಪ್ಪಗಿರಿ "
 ಆಚಾರ್ಯ ನಾಗರಾಜು ಹಾವೇರಿ....
ಅಜನ ಮಾಸನ ಪುತ್ರ-
ನಾವತಾರರಾದ ।
ವಿಜಯರಾಯರ ಸಾಕು -
ಸುತನೆ ಪೊರೆಯೋ ।
ವಿಜಯ ಸಖ ವೆಂಕಟನಾಥನ -
ದಾಸಾ ಮೋಹನಾರ್ಯ ।।
ಶ್ರೀ ತಂದೆ ಮೋಹನವಿಠ್ಠಲರು... 
ಮೋಹ ಭಯಾದಿ ದುಃಖ ದೂರಂ 
ಲೋಹಲೊಷ್ಟ ಸಮೇಕ್ಷಣಮ್ ।
ಮೋಹಿತಾಂಘ್ರಿ ಸರೋಜಯುಗ್ಮಂ 
ಮೋಹನಾರ್ಯ ಗುರುಂಭಜೇ ।। 
ಶ್ರೀ ಮೋಹನದಾಸರು ಶ್ರೀ ವಿಜಯರಾಯರು ಸಾಕಿದ ಕೂಸು. 
ಶ್ರೀ ವಿಜಯರಾಯರಿಂದ ಪುನರ್ಜನ್ಮ ಪಡೆದ ಪುಣ್ಯಶಾಲಿಗಳು. 
ಶ್ರೀ ವಿಜಯರಾಯರು ಇವರಿಗೆ " ಮೋಹನವಿಠ್ಠಲ " ಎಂಬ ಅಂಕಿತ ಪ್ರಧಾನ ಮಾಡಿದರು. 
ಶ್ರೀ ಮೋಹನದಾಸರ ಕೃತಿಗಳಲ್ಲಿ 217ನುಡಿಗಳಜನಪದ ಶೈಲಿಯಲ್ಲಿರವ... 
ಆಕಾಶಾಭಿಮಾನಿ ಶ್ರೀಕಂಠ ವರಪುತ್ರ ।
ಏಕದಂತನೆ ವಿಘ್ನೇಶ ಕೊಲೆ ।
ಏಕದಂತನೆ ವಿಘ್ನೇಶ ನಿನ್ನ ಪದ ।
ಏಕ ಚಿತ್ತದಲಿ ಬಲಗೊಂಬೆ ಕೊಲೆ ।। ಪಲ್ಲವಿ ।। 
ಕೊನೆಯ ನುಡಿ.... 
ಪನ್ನಂಗಶಯನ ಸುಪರ್ಣ ಗಿರೀಶ । ಸು ।
ಪರ್ಣವಾಹನ್ನ ಸುಖಪೂರ್ಣ ಕೊಲೆ । ಸು ।
ಪರ್ಣವಾಹನ್ನ ಸುಖಪೂರ್ಣನಾದ । ಮೋ ।
ಹನ್ನವಿಠ್ಠಲ ಕರುಣಿಸೊ ಕೊಲೆ ।। 217 ।। 
" ಶ್ರೀ ಮೋಹನದಾಸರ ಸಂಕ್ಷಿಪ್ತ ಚರಿತ್ರೆ " 
ಆ ಕಾಲದಲ್ಲಿ ಹಂಪಿಗೆ ಹತ್ತಿರವಿರುವ ಆನೆಗೊಂದಿಯಲ್ಲಿ ಶ್ರೀ ಭೀಮಣ್ಣ ನಾಯಕರೆಂಬುವರು ಇದ್ದರು. 
ಅವರು ಚೈವಾರರು ಸಾಹುಕಾರರಾಗಿದ್ದರು. 
ಅವರಿಗೆ ಇಬ್ಬರು ತಮ್ಮಂದಿರಿದ್ದರು. 
ಕೂಡಿದ್ದ ಮನೆತನ - ಹೆಂಡತಿ 3 ತಿಂಗಳ ಗರ್ಭಿಣಿ - ಕಾಲವಕಾಶ ಶ್ರೀ ಭೀಮಣ್ಣ ನಾಯಕರಿಗೆ ಜಾಡ್ಯವಾಗಿ ಆ ಜಾಡ್ಯದಲ್ಲಿಯೇ ಅವಸಾನ ಹೊಂದಿದರು. 
ಬಡತನದ ಬೇಗೆಯಲ್ಲಿ ಬೆಂದ ಓರ್ವ ಅನಾಥ ತಾಯಿಯು ತನ್ನ ಮಗುವನ್ನು ಉಡಿಯಲ್ಲಿ ಕಟ್ಟಿಕೊಂಡು ತುಂಗೆಯ ಮಡುವಿಗೆ ಹಾರ ಹೊರಟಿದ್ದಳು. 
ಸುದೈವದಿಂದ ಅದು ಶ್ರೀ ವಿಜಯರಾಯರ ಕಣ್ಣಿಗೆ ಬಿದ್ದು ಅವರು ಧಾವಿಸಿ ಹೋಗಿ ಅದನ್ನು ತಡೆದರು. 
ತುಂಗೆಯಲ್ಲಿ ಎಸೆಯ ಹೊರಟ ಅವಳನ್ನೂ - ಅವಳ ಮಗುವನ್ನೂ ತಡೆದು ಅವಳಿಂದ ಆ ಮಗುವನ್ನು ಪಡೆದರು. ಆ ಅನಾಥಳಿಗೆ ಆಶ್ರಯವಿತ್ತು ಕಾಪಾಡಿದರು. 
ಆ ಮಗುವನ್ನು ತೊಡೆಯ ಮೇಲೆ ಆಡಿಸಿ ಬೆಳಿಸಿ ದೊಡ್ಡವನನ್ನಾಗಿ ಮಾಡಿದರು. 
ಚಿರಂಜೀವಿಯಾಗೆಲೆವೊ ಚಿನ್ನ ನೀನು ।
ಪರಮ ಭಾಗವತರ ಪಾದ -
ಧೂಳಿ ಧರಿಸುತಲೀ ।। 
ಆ ಮಹಾ ಮಹಿಮರ ಹರಕೆ - ಆರೈಕೆಗಳಿಂದ ಬಡಕಲು ಮೈಯ ಆ ರೋಗಿಷ್ಟ ಕೂಸು ಒಳ್ಳೆ ಸುಂದರವಾದ ಮೋಹನಾಂಗದ ಮಗುವಾಗಿ ಬೆಳೆಯಿತು.
ಶ್ರೀ ವಿಜಯರಾಯರು ತಮ್ಮ ತೋಳಿನಲ್ಲಿಟ್ಟು ಎತ್ತಿಕೊಂಡು ಇನ್ನೊಂದು ಬ್ರಾಹ್ಮಣರ ಪಂಕ್ತಿ ಸೇವಾಕ್ಕೆ ಬರಲು - ಜ್ಞಾನಿಗಳಾದ ಬ್ರಾಹ್ಮಣರೆಲ್ಲರೂ ಏನು ಮುದ್ದು ಮೋಹನ ಮಗುವೆಂದು ನೋಡಹತ್ತಿದರು. 
ಆಗ್ಗೆ ಶ್ರೀ ವಿಜಯರಾಯರು ಈ ಬಾಲಕನಿಗೆ " ಮೋಹನ " ನೆಂದು ಕರೆದರು. 
ಅಂದಿನಿಂದ ಶ್ರೀ ದಾಸರು ತಮ್ಮ ಹೊಟ್ಟೆಯಲ್ಲಿ ಹುಟ್ಟಿದವನಂತೆ ರಕ್ಷಿಸುತ್ತಾ ಬಂದರು. 
ಅನಾಥೆಯಾದ ತಾಯಿಯೂ ಸಹ ಶ್ರೀ ದಾಸಾರ್ಯರ ಸೇವಾ ವೃತ್ತಿಯಲ್ಲಿದ್ದು ನಿಜಗತಿಯನ್ನು ಹೊಂದಿದಳು. 
ಕೆಲವು ಕಾಲಾನಂತರ - ಈ ಮೋಹನನಿಗೆ ಶ್ರೀ ವಿಜಯರಾಯರೇ ಮುಂಜಿ - ಮಾಡುವೆ ಮಾಡಿದರು. 
ಕಾಲ ವಿಶೇಷದಲಿ ಈ ಮೋಹನನಿಗೆ.....
" ಶ್ರೀ ಪದ್ಮನಾಭ ತೀರ್ಥರೂ - ಶ್ರೀ ಜಯತೀರ್ಥರೂ - ಶ್ರೀ ಕವೀಂದ್ರ ತೀರ್ಥರೂ - ಶ್ರೀ ವಾಗೀಶ ತೀರ್ಥರೂ - ಶ್ರೀ ಗೋವಿಂದ ಒಡೆಯರೂ - ಶ್ರೀ ವ್ಯಾಸರಾಜರೂ - ಶ್ರೀ ಶ್ರೀನಿವಾಸ ತೀರ್ಥರೂ - ಶ್ರೀ ರಾಮ ತೀರ್ಥರೂ - ಶ್ರೀ ಸುಧೀಂದ್ರ ತೀರ್ಥರ ಮೂಲ ವೃಂದಾವನ ಸನ್ನಿಧಾನವಾದ - " ನವ ವೃಂದಾವನ ಗಡ್ಡೆ " ಯಲ್ಲಿ - ಜ್ಞಾನಿವರೇಣ್ಯರ ಸಮ್ಮುಖದಲ್ಲಿ - ಯೋಗ್ಯ ಉಪದೇಶವನ್ನು ಮಾಡಿ " ಮೋಹನ ವಿಠ್ಠಲ" ನೆಂಬೋ ಅಂಕಿತವನ್ನು ಕೊಟ್ಟು ಜ್ಞಾನಿ ಶ್ರೇಷ್ಠರನ್ನು ಮಾಡಿದರು. 
ಇವರೇ ಶ್ರೀ ವಿಜಯರಾಯರ ಸಾಕು ಮಕ್ಕಳಾದರು. 
ಇದೇ ಅಂಕಿತದಲ್ಲಿ ಶ್ರೀ ಮೋಹನದಾಸರು ಅನೇಕ ಕೀರ್ತನೆಗಳನ್ನೂ - 217 ನುಡಿಯ ಒಂದು ಕೋಲು ಪದವನ್ನು ರಚಿಸಿದ್ದಾರೆ!! 
ಹೆಸರು : 
ಶ್ರೀ ಮೋಹನ 
ತಂದೆ : 
ಶ್ರೀ ಭೀಮಪ್ಪನಾಯಕ 
ತಾಯಿ : 
ಸಾಧ್ವೀ ತುಂಗವ್ವ [ ತುಂಗಾಬಾಯಿ ] 
ಕಾಲ : 
ಕ್ರಿ ಶ 1730 - 1815 
ಅಂಕಿತ : 
ಶ್ರೀ ಮೋಹನವಿಠ್ಠಲ 
ಉಪದೇಶ ಗುರುಗಳು : 
ಶ್ರೀ ವಿಜಯರಾಯರು 
" ಅಂಕಿತ ಪದ " 
ರಾಗ : ಕಲ್ಯಾಣಿ ತಾಳ : ಝಂಪೆ 
ಪಾಹಿ ಮೋಹನ ವಿಠಲ -
ಪರಮ ಕರುಣಾ ಜಲನಿಧೆ ।
ಮಹದಾದಿ ದೇವ ವಂದ್ಯ ।
ಮೋಹ ಪಾಶವ ಬಿಡಿಸಿ -
ನಂಬಿದವಗೆ ವೊಲಿದು ।
ರಹಸ್ಯ ಮತಿ ಕೊಡುವುದು -
ಸ್ವಾಮಿ ।। ಪಲ್ಲವಿ ।। 
ನೀನಿತ್ತ ಮಾತುಗಳು -
ಪೊಳ್ಳಗ ಬಲ್ಲವೇ ।
ಅನಂತ ಜನಮದಾಗೆ ।
ಆನೊಬ್ಬ ನೆನ್ನದಿರು । -
ಕೀರ್ತಿಸು ।
ವ ನರನೆಂದು ಜ್ಞಾನಿ-
ಗಳಿರುದಾಗಿದೆ ।।
ಏನಯ್ಯಾ ನಿನ್ನಂಘ್ರಿ -
ಭಜಿಸದಿಪ್ಪ ।
ಮಾನವನ ಕ್ಲೇಶಕೆಣಿಯೆ ।
ಆನಂದ ನಂದನೆ -
ತೃಣವ ಪಿಡಿದು । ರ ।
ತುನವನು ಮಾಡಿ ತೋರುವ -
ಸ್ವಾಮಿ ।। ಚರಣ ।। 
ನಿನ್ನಧೀನ ಕರ್ಮ -
ಸ್ವಭಾವ ಮೊದಲಾಗಿ ।
ಅನ್ಯಥಾ ಎಲ್ಲಿ ಕಾಣೆ ।
ಮನ್ನಿಪುದು ಮುದದಿಂದ -
ಮೋದದಲ್ಲಿ ।
ಎನ್ನ ಬಿನ್ನಪವನು -
ಬಿರಿದೆನಿಸಿದೆ ।।
ಅನ್ಯರಿದರೊಳಗಿಲ್ಲ -
ಯೆನ್ನ ಪೊಂದಿದವನು ।
ನಿನ್ನ ದಾಸರ -
ದಾಸರು ಉನ್ನತ ।
ಗುಣವಿತ್ತು ಉರು-
ಕಾಲ ವೊಲಿದು ।
ಪ್ರಸನ್ನನಾಗೋಪಾವನ್ನಾ -
ರನ್ನಾ ।। ಚರಣ ।। 
ನರರಿಗೆ ಸಾಧನಾ -
ಸತ್ಕೀರ್ತನೆಯೆಂದು ।
ಪರಮೇಷ್ಠಿ ಒಲಿಪನಾಹಕೊ ।
ಪರಿ ಪರಿಯಿಂದ -
ಕರ್ಮಗಳ ಮಾಡಿದರೆ ।
ದುರಿತ ಬೆಮ್ಮೊಗವಾಗವು ।।
ಪಿರವಾಗಿ ಬೇಡಿದೆನೋ -
ವಿಜಯವಿಠ್ಠಲ ನಿನ್ನ ।
ಶರಣರೊಳಗಿಡು ಕಾಪಾಡು ।
ಸ್ಥಿರವಾಗಿ ಅಂಕಿತವ -
ಪ್ರೇರಿಸಿ ಕೊಡಿಸಿದ್ದು ।
ಧರೆಯೊಳಗೆ ಪರಿಪೂರ್ಣ-
ವಾಗಿ ಇರಲಿ ಸ್ವಾಮಿ ।। ಚರಣ ।। 
" ಶಿಷ್ಯರು " 
ಚಿಕ್ಕೆರಹಳ್ಳಿ ಶ್ರೀ ತಮ್ಮಣ್ಣದಾಸರು - " ಶ್ರೀ ಮಧ್ವಪತಿವಿಠ್ಠಲ "
 ಚಿಪ್ಪಗಿರಿ ಶ್ರೀ ವೆಂಕಟದಾಸರು - ಶ್ರೀ ತಂದೆ ಮೋಹನವಿಠ್ಠಲ ( ಶ್ರೀ ಮೋಹನದಾಸರ ಮಗ ) - ಶ್ರೀ ಗುರುಮೋಹನವಿಠ್ಠಲ 
" ಸಮಕಾಲೀನ ಹರಿದಾಸರು " 
ಶ್ರೀ ಗೋಪಾಲದಾಸರು - ಶ್ರೀ ಜಗನ್ನಾಥದಾಸರು - ಶ್ರೀ ಪ್ರಾಣೇಶದಾಸರು - ಶ್ರೀ ಶ್ರೀದವಿಠ್ಠಲರು - ಶ್ರೀ ಹಯವದನವಿಠ್ಠಲ ( ಶ್ರೀ ವಿಜಯರಾಯರ ತಮ್ಮಂದಿರು ) - ಶ್ರೀ ವೆಂಕಟವಿಠ್ಠಲ ( ಶ್ರೀ ಹೊನ್ನಾಳಿ ದಾಸರು ) - ಶ್ರೀ ಗುರು ಮಧ್ವೇಶವಿಠ್ಠಲರು ( ಕೂಡ್ಲಿಗಿ ಶ್ರೀ ಮಧ್ವಾಚಾರ್ಯರು ) - ಶ್ರೀ ವೇಣುಗೋಪಾಲವಿಠ್ಠಲ ( ಶ್ರೀ ಪಂಗನಾಮದ ತಿಮ್ಮಣ್ಣದಾಸರು ) - ಶ್ರೀ ವೆಂಕಟೇಶವಿಠ್ಠಲ ( ಬೇಲೂರು ಶ್ರೀ ವೆಂಕಟ ಸುಬ್ಬದಾಸರು ) - ಶ್ರೀ ಮುದ್ದುವಿಠ್ಠಲ ( ಶ್ರೀ ಮೀನಪ್ಪದಾಸರು ). 
" ಶ್ರೀ ಮೋಹನದಾಸರ ಕೃತಿ ವೈಭವ " 
ಶ್ರೀ ಮೋಹನದಾಸರು ರಚಿಸಿರುವ ಕೋಲು ಪದ - ರುಕ್ಮಿಣೀ, ಸುಭದ್ರಾ, ಅರ್ಜುನ ಮತ್ತು ಶ್ರೀ ಕೃಷ್ಣ ಪರಮಾತ್ಮನ ನಡುವಿನ ಸರಸ ಸಂಭಾಷಣಾ ರೂಪವಾಗಿದೆ. 
ಶ್ರೀ ಮೋಹನದಾಸರ ಲಲಿತ ಬಂಧುರವಾದ ಶೈಲಿಗೂ - ಯುಕ್ತಿ ಯುಕ್ತವಾದ ಸಂವಾದ ಭಂಗಿಯ ಚಾತುರ್ಯಕ್ಕೂ ಇದು ಒಳ್ಳೇ ನಿದರ್ಶನವಾಗಿದೆ. 
ಇದರಿಂದಲೇ... 
ಭಕ್ತಿಯಲಿ ಭಾಗಣ್ಣ -  ಯುಕ್ತಿಯಲಿ ಮೋಹನ್ನ - ಶಕ್ತಿಯಲಿ ತಿಮ್ಮಣ್ಣ ಎಂಬ ಉಕ್ತಿಯು ರೂಢಿಯಲ್ಲಿ ಬಂದಿದೆ. 
ಜಾನಪದದ ಗೀತೆಗಳ ಧಾಟಿ - ಘಾಟುಗಳನ್ನು ಸಾಹಿತ್ಯದ ಶೈಲಿಗೆ ಅಳವಡಿಸಿ ಸಿದ್ಧಾಂತಕ್ಕೆ ಅನಿರುದ್ಧವಾಗಿ ವಿನೋದ - ವ್ಯಂಗ್ಯ ವಕ್ರೋಕ್ತಿಗಳನ್ನು ಧಾರಾಳವಾಗಿ ಉಪಯೋಗಿಸಿ ರಚಿಸಿದ ಈ ಕೋಲು ಪದ ಅತಿ ರಂಜಕವೂ - ರಸ ಭರಿತವೂ - ಹಾಸ್ಯ ಪ್ರಚುರವೂ ಆಗಿದೆ. 
ಸುಭದ್ರೆಯು ಅತ್ತಿಗೆ ರುಕ್ಮಿಣಿಯನ್ನು... 
ಓಡಿ ಬಂದು ನನ್ನ ಸೋದರ ಕೃಷ್ಣನನ್ನು ಕೂಡಿದ ನಿನಗೆ ಅಣ್ಣನ ಆದರ ಅತಿಯಾಗಿದೆ. 
ಆದುದರಿಂದ ಅವನ ಒಲಿಮೆಯ ಗರ್ವದಿಂದ ನೀನು ನಮ್ಮೊಡನೆ ಮಾತನಾಡದೆ ಬಿಗುವಿನಿಂದ ಇರುವಿ - 
ಎಂದು ಮೂದಲಿಸುವಳು. 
ಅದಕ್ಕೆ ಪ್ರತಿಯಾಗಿ ರುಕ್ಮಿಣಿಯು... 
ನಾನೇನು ನಿನ್ನಂತೆ ಸಂನ್ಯಾಸಿಯನ್ನು ಕಾಮಿಸಿ ಓಡಿ ಬರಲಿಲ್ಲ - ಎಂದು ತಕ್ಕ ಉತ್ತರ ಕೊಡುತ್ತಾಳೆ. 
ಇದರಂತೆ ಕೃಷ್ಣಾರ್ಜುನರಲ್ಲಿಯೂ ಒಳ್ಳೆ ಚುರುಕಾದ ವಾದ ವಿವಾದವು ಇದರಲ್ಲಿ ನಡೆಯುತ್ತವೆ. 
ಇಬ್ಬರೂ ಪರಸ್ಪರ ಶೀಲ ಚಾರಿತ್ರ್ಯದ ಮೂಲವನ್ನೇ ಕೆಣಕಿ ಕೊಂಕು ನುಡಿಗಳನ್ನಾಡುತ್ತಾರೆ. 
ವ್ಯಕ್ತಿಗತವಾದ ಮೂದಲಿಕೆ ಮಾತಿನ ಎಸೆದಾಟಗಳು - ಯುಕ್ತಿಯ ಮನದಾಟಗಳು ಕೇಳುವವರಿಗೆ ಒಳ್ಳೆ ಆಪ್ಯಾಯವೆನಿಸುತ್ತದೆ. 
ಕೃಷ್ಣನು ಪಾರ್ಥನಿಗೆ... 
ಅರ್ಜುನ ನೀನೆಲ್ಲಿ ಸುಭದ್ರೆಯಲ್ಲಿ! 
ಆ ನನ್ನ ತಂಗಿ ಕನಕಾಂಗಿ, ಕಡು ಕಠೋರವಾದ ನೀನೋ ಕಬ್ಬಿಣ ರಂಗಿ - ಎಂದು ಅಧಿಕ್ಷೇಪಿಸುತ್ತಾನೆ. 
ಅದಕ್ಕೆ ಅರ್ಜುನನು ಮರಳನಂತೆ ತೆಪ್ಪಗೆ ಕೂಡುವುದಿಲ್ಲ. 
ಮರಳಿ ಕೃಷ್ಣನಿಗೆ ತಿರುಗುಬಾಣ ಹೂಡುತ್ತಾನೆ. 
ಕೃಷ್ಣ ನಿನಗೆ ಸಮುದ್ರರಾಜ ಏಕೆ ಮಗಳನ್ನು ಕೊಟ್ಟ. 
ನೀನು ಆ ಲಕ್ಷ್ಮೀದೇವಿಗೆ ತಕ್ಕ ವರನಲ್ಲ. 
ದರಿದ್ರ ನಾರಾಯಣನಾದ ನೀನು ಮನೆಯಿಲ್ಲದ್ದಕ್ಕೆ ಅತ್ತೆಯ ಮನೆ ಸೇರಿದೆ.
ಹಾಲು ಮೊಸರು ಕಳವು ಮಾಡಿದೆ. 
ಮಳ್ಳ ಗೊಲ್ಲತಿಯರನ್ನು ನೀನು ಬಿಡಲಿಲ್ಲ.
ಕರಡಿ ಮಗಳೊಡನೆ ಕೂಡಿದೆ. 
ನಿನಗೆ ಕೈಯಲ್ಲಿ ಕಾಸಿಲ್ಲ.
ನೀರು ಮನೆಯೇ ನಿನಗೆ ಠಾವು. 
ನಿನ್ನ ಹಾಸಿಗೆ ಹಾವು.
ಹದ್ದಿನ ಮೇಲೆ ಕುಳಿತು ಹಾರುವಾಗ ಬಿದ್ದರೆ ಗತಿಯೇನು?
ಬೇಡತಿಯ ಎಂಜಲು ತಿಂದೆ. 
ಕುಬ್ಜೆಯ ಜೊತೆಗೆ ಸರಸಕ್ಕೆ ಇಳಿದೆ.
ಈ ನಿನ್ನ ಮೋಡಿ ಕೃತ್ಯರ್ಥವನ್ನು ಕಂಡೆ ಭೃಗು ಮುನಿಯು ನಿನ್ನನ್ನು ಕಾಲಿನಿಂದ ಒದ್ದು ಹೋದನು ಎಂದು ಸುರಿಮಳೆಯನ್ನೇ ಮಾಡುವನು. 
ಇದನ್ನು ಕೇಳಿದ ಕೃಷ್ಣನು.... 
ಅರ್ಜುನನಿಗೆ ತಂಗಿಯನ್ನು ಕೊಟ್ಟು ನಿನ್ನ ಬಂಡಿ ಬೋವಿಯಾದುದಕ್ಕೆ ಒಳ್ಳೆ ಉಪಕಾರ ತೀರಿಸಿದಿ ಎಂದುದಕ್ಕೆ.....
ಅರ್ಜುನನು ಶಿರ ಬಾಗಿ... 
ಸ್ವಾಮೀ ಭೃತ್ಯ ನ್ಯಾಯವರಿಯದೆ ನಾ ನಿನ್ನ ।
ವಾಮನನಂತೆ ನುಡಿದೇನ ಕೋಲೆ ।।
ವಾಮನನಂತೆ ನುಡಿದಪರಾಧವ ।
ಶ್ರೀ ಮನೋಹರನೇ ಮನ್ನಿಸು ಕೋಲೆ ।। 
ಎಂದು ಕ್ಷಮೆ ಬೇಡುತ್ತಾನೆ. 
ಹೀಗೆ ಕೋಲಾಟದ ಗತ್ತಿನಲ್ಲಿಯೇ ಸಾಹಿತ್ಯದ ಲೀಲಾಟವೂ ನಡೆದು ಚಿತ್ತ ಚಮತ್ಕೃತಿಯನ್ನುಂಟು ಮಾಡುತ್ತದೆ. 
ಹೊಸ ಕಲ್ಪನೆಯ ಹೊಳಿವು ಹಾಕಿ - ಹಳೆಯ ರೀತಿಯಲ್ಲಿಯೂ ಚಮತ್ಕಾರದ ಮಿಂಚು ಗೊಂಚಲಾಡುವಂತೆ ಮಾಡುವುದು ಶ್ರೀ ಮೋಹನದಾಸರ ವೈಶಿಷ್ಟ್ಯವಾಗಿದೆ. 
" ಅವತಾರ ಸಮಾಪ್ತಿ " 
ಶ್ರೀ ವಿಜಯರಾಯರಿಂದ ರಕ್ಷಿಸಲ್ಪಟ್ಟು; ಅವರ ಪೂರ್ಣಾನುಗ್ರಹಕ್ಕೆ ಪಾತ್ರರಾಗಿ - ಅವರಿಂದಲೇ ಅಂಕಿತೋಪದೇಶವನ್ನು ಪಡೆದು 40 ಪದ - 3 ಸುಳಾದಿ - 2 ಉಗಾಭೋಗವನ್ನು ರಚಿಸಿ ಹರಿದಾಸ ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸಿ ಶ್ರೀ ವಿಜಯರಾಯರು ನೆಲೆನಿಂತ ಪರಮ ಪವಿತ್ರವಾದ ಚಿಪ್ಪಗಿರಿ ಕ್ಷೇತ್ರದಲ್ಲಿ.......
" ಜ್ಯೇಷ್ಠ ಶುದ್ಧ ಷಷ್ಠಿ " 
ಯಂದು ಶ್ರೀ ಮೋಹನದಾಸರು ಶ್ರೀ ಹರಿಧ್ಯಾನಪರರಾದರು!! 
ರಾಗ : ನಾದನಾಮಕ್ರಿಯೆ ತಾಳ : ಆದಿ 
ಪಾಹಿ ಪಾಹಿ ಗುರು -
ಮೋಹನರಾಯಾ ।। ಪಲ್ಲವಿ ।। 
ಪಾಹಿ ಪಾಹಿ ಗುರು -
ಮೋಹನ ಸಿಂಧುರ ।
ವಾಹನ ಪದ ಪಂಕೇರುಹ -
ಭೃಂಗ ।। ಅ. ಪ ।। 
ನವ ಭಕುತಿಗಳೆಂಬೋ -
ಸರಪಳಿಯೊಳು ।
ನವ ನವ ರೂಪದಿ -
ನಲಿವ ಸುಧೀರಾ ।। ಚರಣ ।। 
ಪದುಮನಾಭನ -
ಧ್ಯಾನದ ಮದವೇರಿ ।
ಪದೆಪದೆಗೆ ಹರಿಪದವಾ-
ಗಾವಾ ।। ಚರಣ ।। 
ವಿಜಯದಾಸರ ಪದ-
ರಜವ ಧರಿಸಿ ।
ವೀರಜ ಪ್ರಾಣೇಶ-
ವಿಠ್ಠಲನ ಭಜಿಸಿದಿ ।। ಚರಣ ।।
by ಆಚಾರ್ಯ ನಾಗರಾಜು ಹಾವೇರಿ 
     ಗುರು ವಿಜಯ ಪ್ರತಿಷ್ಠಾನ
****


No comments:

Post a Comment