Monday, 1 July 2019

vijayaramachandra vittala dasaru 1872 vaishakha shukla triteeya mysore kattemane ವಿಜಯರಾಮಚಂದ್ರ ವಿಠಲ ದಾಸರು


akshya triteeya- Aradhane Vijayaramachandra Vithala Dasaru , Mysore Katte Mane

gaMgApita padAbjALim | gaMgAdhara samaprabham |maMgaLAMgaM mahIdEvam | maisUru puravAsinam ||viThalOpa padOpEtam | vijayarAma chAMdiram |vairAgya j~jAna mUrtiMcha | bhajEham bhavatArakam ||   

shri vijaya rAmachandra viTTala dAsaru:

Period: 1819 - 1872

He lived in Mysore and that house is maintained even today with nitya pUja being offered there. The house is popularly called KATTE MANE.

gaMgApita padAbjALim | gaMgAdhara samaprabham |maMgaLAMgaM mahIdEvam | maisUru puravAsinam ||viThalOpa padOpEtam | vijayarAma chAMdiram |vairAgya j~jAna mUrtiMcha | bhajEham bhavatArakam ||   

Shri Vijaya Ramachandra ViTTala Dasa's Jivana Charitra is incomplete without the mention of Shri Ibharamapura Appavaru. Shri Appavaru played a great role in the adhyAtma sAdhana of Shri Vijaya Ramachandra ViTTala Dasa.  

shri vijaya rAmachandra viTTala dAsa varada gOvindA gOvindA... 


shri krishNArpaNamastu...
************


Shri Vijaya Ramachandra ViTTala Dasa's Jivana Charitra is incomplete without the mention of Shri Ibharamapura Appavaru . Shri Appavaru played a great role in the adhyAtma sAdhana of Shri Vijaya Ramachandra ViTTala Dasa.  

Once Shri Appavaru visited Mysore on the invitation of King Mummudi Krishnaraja Wodeyar to alienate the evil spirit that was hiding in the palace and troubling the kingdom.  After recognizing the spiritual power of Shri Appavaru, King offered to surrender anything that Shri Appavaru desired.  After driving away the Evil Spirit from the Kingdom, Shri Appavaru asked for the idol of Shri PANCHAMUKHI PRANA DEVA that was hidden in Raja Mandira.  King was amazed to know the Jnana DrushTi of Shri Appavaru and surrendered Shri Prana Deva to Shri Appavaru.  Shri Ramaryaru having already known the Mahima of Shri Appavaru, without any delay, visited Shri Appavaru and prostrated before him and begged for his blessings (Anugraha). Gurus do not always bless those who just prostate or beg. Instead Gurus always choose to grant anugraha based on the svarUpa of the jIva. As Shri Appavaru had the complete knowledge of the svarUpa of Shri Ramaryaru, Shri Appavaru bestowed pUrna anugraha on Shri Ramaryaru with a deep affectionated hug (Aalingana). With this,  Shri Ramaryaru regained his ThirOhita aporOxa that was masked due to his rebirth in mAnusha janma. Immediately Sri Ramaryaru realized his svarUpa and his responsibilities for the current birth.
************

ಶ್ರೀಂ ಶ್ರೀ ಕಂ ಕಪಿಲಾಯ ನಮಃ
ಶ್ರೀ ವೇಣುಗೋಪಾಲದಾಸರ ಮಧ್ಯಾರಾಧನೆಯ ಶುಭವಂದನೆಗಳ ಜೊತೆಗೆ,

ಇಂದಿನಿಂದ ಮೈಸೂರು ಕಟ್ಟೆಮನೆಯಲ್ಲಿ 
ಶ್ರೀ ಜಯೇಶವಿಠಲದಾಸರ ಗುರುಗಳು, ಅಪ್ಪಾವರ ಪರಮಾನುಗ್ರಹ ಪಾತ್ರರೂ, ಶ್ರೀ ಕುಂಭಕೋಣ ಶ್ರೀ ಪ್ರಸನ್ನವೇಂಕಟ ವಿಠಲರ ಶಿಷ್ಯರೂ ಆದ ಶ್ರೀ ವಿಜಯರಾಮಚಂದ್ರವಿಠಲರ ಆರಾಧನಾ ಮಹೋತ್ಸವವೂ..

ದಾಸದ್ವಯರ ಪರಮಾನುಗ್ರಹ ನಮ್ಮ ಸಮೂಹದ ಎಲ್ಲರಮೇಲೆ ಸದಾಕಾಲವಿರಲೆಂದು ಪ್ರಾರ್ಥನೆ ಮಾಡುತ್ತಾ...

-Smt. Padma Sirish

ನಾದನೀರಾಜನದಿಂ ದಾಸಸುರಭಿ 🙏🏽

*************

info from kannadasiri.in
ವಿಜಯದಾಸರು ಮತ್ತು ಜಗನ್ನಾಥದಾಸರ ಕಾಲದಲ್ಲಿ ವಿಸ್ತಾರಗೊಂಡ ದಾಸಕೂಟದ ಚಟುವಟಿಕೆಗಳು 19-20ನೆಯ ಶತಮಾನಗಳಲ್ಲಿ ಹಳೆಯ ಮೈಸೂರು ಪ್ರಾಂತ್ಯಕ್ಕೂ ಪಸರಿಸಿತು. ಮೈಸೂರು, ಬೆಂಗಳೂರು, ದೇವರಾಯನ ದುರ್ಗ ಇವು ಹರಿದಾಸರ ಧಾರ್ಮಿಕ ಚಟುವಟಿಕೆಯ ಕೇಂದ್ರಗಳಾದವು. ದೊಡ್ಡಬಳ್ಳಾಪುರದ ಮುದ್ದುಮೋಹನದಾಸರು, ಭಾಗ್ಯನಿಧಿ ವಿಠಲಾಂಕಿತದ ದೂರಪ್ಪದಾಸರು, ಧಾರಾಪುರದ ತಿಮ್ಮಪ್ಪದಾಸರು, ಚಿತ್ರದುರ್ಗದ ಮಾಧವರಾಯರು, ಮೊದಲಾದವರು ಬೆಂಗಳೂರನ್ನು ಕೇಂದ್ರವಾಗಿಟ್ಟುಕೊಂಡು ಧಾರ್ಮಿಕ ಚಟುವಟಿಕೆಗಳಲ್ಲಿ ನಿರತರಾಗಿದ್ದರು.

ವಿಜಯ ರಾಮಚಂದ್ರವಿಠಲ, ಜಯೇಶವಿಠಲ, ರಂಗೇಶವಿಠಲ, ದಾಸರ ಲಕ್ಷ್ಮೀನಾರಾಯಣರಾಯರು ಮತ್ತು ಕರಿಗಿರೀಶ ಅಂಕಿತದ ವರವಣಿ ರಾಮರಾಯರು ಇವರೆಲ್ಲ 20 ನೆಯ ಶತಮಾನದ ಆದಿಭಾಗದಲ್ಲಿ ದಾಸ ವಾಙ್ಮಯದ ಏಳಿಗೆಗೆ ದುಡಿದವರು. ಈ ಐದು ಮಂದಿ ಹರಿದಾಸರಲ್ಲಿ ಕೆಲವು ಸಮಾನ ಅಂಶಗಳನ್ನು ಗುರುತಿಸಬಹುದು. ಇವರೆಲ್ಲ ಸಮಕಾಲೀನರು. 20 ನೆಯ ಶತಮಾನದ ಆದಿಭಾಗದಲ್ಲಿದ್ದವರು. ಬೆಂಗಳೂರಿನಲ್ಲಿ ಹುಟ್ಟಿದವರು ಅಥವಾ ಬೆಳೆದವರು. ಆಧುನಿಕ ವಿದ್ಯಾಭ್ಯಾಸವನ್ನು ಪದವಿಗಳನ್ನು ಪಡೆದು ಲೌಕಿಕದಲ್ಲಿ ಉತ್ತಮ ಉದ್ಯೋಗದಲ್ಲಿದ್ದವರು. ಸಂಸಾರಿಗಳಾಗಿದ್ದು ಹರಿದಾಸ ದೀಕ್ಷೆಯನ್ನು ಕೈಕೊಂಡು ವೈರಾಗ್ಯದ ಜೀವನ ನಡೆಸಿದವರು. ತಮ್ಮ ಹಿಂದಿನ ಹರಿದಾಸರ ಕೃತಿಗಳನ್ನು ಆಳವಾಗಿ ಅಭ್ಯಾಸಮಾಡಿ ಅದರಿಂದ ಪ್ರಭಾವಿತರಾದವರು. ಕನ್ನಡದ ಜೊತೆಗೆ ಇಂಗ್ಲೀಷ್, ಸಂಸ್ಕøತ ಮೊದಲಾದ ಭಾಷೆಗಳ ಪರಿಚಯವಿದ್ದವರು. ಇದರ ಜೊತೆಗೆ ಈ ಐದೂ ಮಂದಿ ಹರಿದಾಸರು ಪರಸ್ಪರ ಪರಿಚಯ ಮತ್ತು ಗೌರವ ಇದ್ದವರು. ಈ ಹಿನ್ನಲೆಯಲ್ಲಿ ಈ ಕೃತಿಗಳನ್ನು ಈ ಸಂಪುಟದಲ್ಲಿ ಅಳವಡಿಸಲಾಗಿದೆ.

ವಿಜಯ ರಾಮಚಂದ್ರವಿಠಲದಾಸರು (1819-1872)

ಇವರ ಜನ್ಮಸ್ಥಳ ತಮಿಳುನಾಡಿನ ರಾಮನಾಥಪುರ. ಜಮದಗ್ನಿ ಗೋತ್ರದ ವೆಂಕಟರಾಯರು ಮತ್ತು ಬಹಿಣಾಬಾಯಿ ದಂಪತಿಗಳ ಮೂರನೆಯ ಮಗ ರಾಮಚಂದ್ರ. ವೆಂಕಟರಾಯರು ಮೂಲತಃ ಕನ್ನಡಿಗರಾಗಿದ್ದರು. ಉದ್ಯೋಗದ ನಿಮಿತ್ತ ರಾಮನಾಥಪುರದಲ್ಲಿ ನೆಲೆಸಿದರು. ರಾಮಚಂದ್ರ ಬಾಲ್ಯದಲ್ಲೇ ತಂದೆಯನ್ನು ಕಳೆದುಕೊಂಡ. ಅನಂತರ ಅವನ ವಿದ್ಯಾಭ್ಯಾಸ ದೊಡ್ಡಪ್ಪÀನ ಮನೆಯಲ್ಲಿ ನಡೆಯಿತು. ಮೆಟ್ರಿಕ್ ಪರೀಕ್ಷೆ ತೇರ್ಗಡೆಯಾಗುವ ಹೊತ್ತಿಗೆ ಸಾಕಷ್ಟು ಶಾಸ್ತ್ರe್ಞÁನವನ್ನು ರಾಮಚಂದ್ರ ಸಂಪಾದಿಸಿದ್ದ. ನ್ಯಾಯಾಧೀಶರಾಗಿದ್ದು, ಪ್ರಭಾವಶಾಲಿಗಳಾಗಿದ್ದ ಶೇಷಗಿರಿರಾಯರು ರಾಮಚಂದ್ರನಿಗೆ ಮೈಸೂರಿನ ಆಡಳಿತಕ್ಕೆ ಒಳಪಟ್ಟ ಯಳಂದೂರು ಜಹಗೀರಿಯಲ್ಲಿ ಕೆಲಸ ಕೊಡಿಸಿದರು. ಅನಂತರ ಮೀನಾಬಾಯಿ ಎಂಬ ಕನ್ಯೆಯೊಡನೆ ಇವರ ಲಗ್ನವಾಯಿತು. ದೇವತಾರಾಧನೆ, ಹರಿಕಥಾಶ್ರವಣ, ದೇವರನಾಮಗಳನ್ನು ಹೇಳುವುದು ಇವುಗಳಲ್ಲಿ ಮೊದಲಿನಿಂದಲೂ ಆಸಕ್ತನಾಗಿದ್ದ ರಾಮಚಂದ್ರನಿಗೆ ಆಧ್ಯಾತ್ಮಿಕ ವಿಷಯಗಳಲ್ಲಿ ಹೆಚ್ಚು ಆಸಕ್ತಿಯಿತ್ತು. ತಾನು ಗುರುಗಳಿಂದ ಅಂಕಿತ ಉಪದೇಶವನ್ನು ಪಡೆದು ಕೀರ್ತನೆಗಳನ್ನು ರಚಿಸಬೇಕೆಂಬ ಅಪೇಕ್ಷೆಯಿತ್ತು. ಅದರಂತೆಯೇ ಕುಂಭಕೋಣದ ವೆಂಕಟದಾಸರಿಂದ (ಪ್ರಸನ್ನ ವೆಂಕಟವಿಠಲ) `ವಿಜಯ ರಾಮಚಂದ್ರ ವಿಠಲ' ಎಂಬ ಅಂಕಿತ ಪಡೆದರು. ಇದೇ ಸಂದರ್ಭದಲ್ಲಿ ಮೈಸೂರಿನ ಸರ್ ಅಮೀನ್ ಕಛೇರಿಯಲ್ಲಿ ಶಿರಸ್ತೇದಾರರ ಕೆಲಸಕ್ಕೆ ಬಡ್ತಿ ದೊರೆತು ಮೈಸೂರಿನಲ್ಲಿ ನೆಲೆಸಿದರು.

ಇಭರಾಮಪುರದ ಕೃಷ್ಣಾಚಾರ್ಯರೆಂಬವರು ಈ ಕಾಲದ ಪ್ರಸಿದ್ಧ ವಿದ್ವಾಂಸರು. ಉತ್ತರ ಕರ್ನಾಟಕ ಮತ್ತು ಹಳೆಯ ಮೈಸೂರು ಪ್ರಾಂತ್ಯಗಳಲ್ಲಿ ಇವರು ತ್ರಿಕಾಲಜ್ಞರಾದ ಮಹಾತ್ಮರೆಂದೇ ಪ್ರಸಿದ್ಧರಾಗಿದ್ದರು. ಇಂಥ e್ಞÁನಿಗಳು ಮೈಸೂರಿಗೆ ಆಗಮಿಸಿದಾಗಲೆಲ್ಲ ದಾಸರ ಮನೆಯಲ್ಲಿಯೇ ಬಿಡಾರ ಮಾಡುತ್ತಿದ್ದರು. ಇಂಥ e್ಞÁನಿಗಳ ಸಂಪರ್ಕದಲ್ಲಿ ದಾಸರು ತಮ್ಮ ಆಧ್ಯಾತ್ಮಿಕ ಜೀವನ ರೂಪಿಸಿಕೊಂಡರು. `ಕಟ್ಟೆಮನೆ' ಎಂದು ಖ್ಯಾತಿಯನ್ನು ಪಡೆದ ಶ್ರೀ ಕೂಸಪ್ಪ ಎಂಬವರ ಮನೆ ಒಂದು ಆಧ್ಯಾತ್ಮಿಕ ಕೇಂದ್ರವೇ ಆಗಿತ್ತು . ಈ ಕಟ್ಟೆ ಮನೆಯಲ್ಲಿ ದಾಸರ ಧ್ಯಾನ, ಪೂಜೆ, ಉಪದೇಶ ಇವುಗಳಿಗೆ ಅಗತ್ಯವಾದ ಪರಿಸರವಿತ್ತು. ಇದೇ ಕಾಲದಲ್ಲಿ ಇವರಿಗೆ ಹಲವಾರು ಮಂದಿ ಶಿಷ್ಯರು ದೊರೆತು ಶಾಸ್ತ್ರಾಧ್ಯಯನ ಮತ್ತು ದಾಸಸಾಹಿತ್ಯ ಪ್ರಚಾರದಲ್ಲಿ ದಾಸರಿಗೆ ನೆರವಾದರು.

ವಿಜಯ ರಾಮಚಂದ್ರವಿಠಲರ ಜೀವನ ಮತ್ತು ಮಹಿಮೆಗಳನ್ನು ಅವರ ಶಿಷ್ಯರಾದ ಜಯೇಶವಿಠಲರು 211 ನುಡಿಗಳ ಧೀರ್ಘಕೃತಿಯಲ್ಲಿ ನಿರೂಪಿಸಿದ್ದಾರೆ. ದಾಸರು e್ಞÁನಿಗಳೂ, ಸಿದ್ಧಪುರುಷರೂ, ಆಗಿದ್ದರೆಂಬುದಕ್ಕೆ ಈ ಕೃತಿಯಲ್ಲಿ ಹಲವಾರು ನಿದರ್ಶನಗಳು ದೊರೆಯುತ್ತವೆ.

ದಾಸರು ತಮ್ಮ 53ನೆಯ ವಯಸ್ಸಿನಲ್ಲಿ ವಿಧಿವಶರಾದರು. ಪ್ರಜೋತ್ಪತ್ತಿ ಸಂವತ್ಸರದ ವೈಶಾಖ ಶುದ್ಧ ತದಿಗೆ (1873) ಇವರು ವೈಕುಂಠವಾಸಿಗಳಾದರೆಂದು ಇವರ ಶಿಷ್ಯರಾದ ಗುರುರಾಮಚಂದ್ರವಿಠಲರು ತಿಳಿಸಿದ್ದಾರೆ ಇವರ ಮತ್ತೊಬ್ಬ ಶಿಷ್ಯೆ `ಬಾಲಕೃಷ್ಣ' ಅಂಕಿತದ ಶ್ರೀರಂಗಮ್ಮ ಎಂಬುವರು ತಮ್ಮ ಗುರುಗಳ ಹಿರಿಮೆಯನ್ನು ವಿವರಿಸುವ ಹಾಡುಗಳನ್ನು ರಚಿಸಿದ್ದಾರೆ. ಕೆಲವು ನುಡಿಗಳು ಹೀಗಿವೆ :

1. ಉತ್ಕøಷ್ಟ ಮಹಿಮೆಗಳುಳ್ಳ ಕೃಷ್ಣಾರ್ಯರಂಘ್ರಿಯನು

ಮುಟ್ಟಿ ಭಜಿಸಿದೆÀನು ನಿವ್ರ್ಯಾಜದಿಂದ

ಇಷ್ಟಾರ್ಥ ಪಡೆದು ಗುರು ಕರುಣಾರ್ಣವದಿ ಮುಳುಗಿ

ಸ್ಪಷ್ಟವಾಗಿ ತಿಳಿದ ತನ್ನ ಬಗೆಯ

2. ಕಾಮಿನಿಯರೊಡನಿದ್ದು ಕಾಮವನೆ ಜಯಿಸಿದನು

ಹೇಮಲೋಷ್ಠಗಳನು ಸಮನಾಗಿ ತಿಳಿದಾ

ಕಾಮಧೇನುವಿನಂತೆ ಕಾಮಿತಾರ್ಥಗರಿವ

ಈ ಮಹಾತ್ಮರಿಗೆ ಸರಿಯುಂಟೆ ಜಗದಿ

3. ಅಪರೋಕ್ಷವನೆ ಪಡೆದು ಅಪರಿಮಿತ ಗುಣಪೂರ್ಣ

ರುಕುಮಿಣೀಶನ ಪಾದ ನಿಮಿಷ ಬಿಡದೆ

ಸಕಲ ವಸ್ತುಗಳಲ್ಲಿ ಹರಿಯ ನೋಡುವ ಸುಖದಿ

ನಿಖಿಲ ಕರ್ಮಗಳ ತ್ಯಾಗವ ಮಾಡಿದ

ದಾಸರ ಆಧ್ಯಾತ್ಮಿಕ ಜೀವನದ ಸ್ವರೂಪವನ್ನು ಈ ನುಡಿಗಳು ಸಮರ್ಥವಾಗಿ ಚಿತ್ರಿಸುತ್ತವೆ.

ಕೃತಿಗಳು

ವಿಜಯ ರಾಮಚಂದ್ರವಿಠಲ ಅಂಕಿತzಲ್ಲಿ ದೊರೆಯುವ ಕೀರ್ತನೆಗಳು ಸುಮಾರು 40. ಇವುಗಳಲ್ಲಿ ದೇವರ ಸ್ತೋತ್ರಗಳು, ವೈರಾಗ್ಯ ಬೋಧಕ ಪದಗಳೇ ಹೆಚ್ಚು. ಸತಿ ಸುತರ ಹಿತಕ್ಕಾಗಿ ಅತಿ ನೀಚ ವೃತ್ತಿಗಳನ್ನು ನಡೆಸಿ ಪತಿತನಾದದ್ದು, ಅರಿಷಡ್ವರ್ಗಗಳ ಉಪಟಳವನ್ನು ಗೆಲ್ಲಲಾರದೆ ಕಳವಳಿಸಿದ್ದು, ವಿಷಯಗಳ ದಾಸನಾಗಿ ಪಶುವಿನಂತೆ ನಡೆದುಕೊಂಡದ್ದು, ಹೀಗೆ ಸಂಸಾರ ದಾವಾಗ್ನಿಯಲ್ಲಿ ಸುಟ್ಟು ಬೇಯುತ್ತಿರುವವರಿಗೆ 'ನಿನ್ನ ನಾಮಾಮೃತವೆಂಬ ಮಳೆಗರೆÀದು ಹರಿಸಿ ಪೊರೆಯಯ್ಯ' ಎಂದು ಪ್ರಾರ್ಥಿಸುತ್ತಾರೆ.

'e್ಞÁನ ಭಕ್ತಿ ವೈರಾಗ್ಯವನು ಅನುವಾಗಿ ಕೈಗೊಳ್ಳುವುದೆ ಮಾನ

ಅನ್ಯಾಧೀನವೆನ್ನದೆಂಬುದೆ ಲಜ್ಜ

ಅನುಭವ e್ಞÁನಿಗಳ ಸಹವಾಸ ಸ್ನಾನ, ಸಚ್ಚಾಸ್ತ್ರಾಲಾಪ

ನಾನು ನನ್ನದು ಬಿಡುವುದೆ ತ್ಯಾಗ- ಇದೆ ಯೋಗ'

ದಾಸರು ಮಧುರ ಭಾವದ ಹಲವಾರು ಕೃತಿಗಳನ್ನು ರಚಿಸಿದ್ದಾರೆ. ಗೋಪಿಯರು ಕೃಷ್ಣನನ್ನು ಕಾಣಲು ವ್ಯಕ್ತಪಡಿಸುವ ಹಂಬಲ, ಕೃಷ್ಣನಿಗೆ ನೀಡುವ ಆಹ್ವಾನ, ಅವರ ರಸಿಕ ಹೃದಯದ ವಿರಹ, ಇವುಗಳನ್ನು ನಿರೂಪಿಸಿದ್ದಾರೆ. ಕೃಷ್ಣನ ಅಗಲಿಕೆಯನ್ನು ತಾಳಲಾರದೆ ಅವನನ್ನು ಮನಮುಟ್ಟಿ ಭಜಿಸಿವುದರಲ್ಲಿ ಗೋಪಿಯರು ತಮ್ಮ ವಿರಹವನ್ನು ಉಪಶಮನ ಮಾಡಿಕೊಳ್ಳುತ್ತಾರೆ. ಕೃಷ್ಣನ ಆಗಮನವನ್ನು ನಿರೀಕ್ಷಿಸುತ್ತ ಅನ್ಯವಿಷಯಗಳಲ್ಲಿ ಆಸಕ್ತಿ ಕಳೆದುಕೊಂಡ ಹೆಣ್ಣೊಬ್ಬಳ ವೈರಾಗ್ಯ ಹೀಗಿದೆ :

1. ಮುಟ್ಟಳು ಅನ್ನಾಹಾರವನು

ಬಿಟ್ಟಳು ಇಷ್ಟ ಪದಾರ್ಥವೆಲ್ಲ

2. ಇಡಳು ಕನಕಾಭರಣಗಳು

ತೊಡಳು ವರವಸ್ತ್ರಗಳು

ಬಡವಾಗಿ ನಡು ಬಳುಕುತಿಹಳು

ಒಡೆಯ ನೀ ಬಾರದಿರಲು ಪ್ರಾಣ

ಬಿಡುವಳು ನಿಶ್ಚಯವೆಂದು

ಹರಿದಾಸ ಸಂಪ್ರದಾಯವನ್ನು ಅನುಸರಿಸಿ ರಚಿತವಾಗಿರುವ ಲಕ್ಷ್ಮಿ, ವಾಯು, ರುದ್ರ, ಗಂಗೆ, ಮತ್ತು ಗುರುಸ್ತುತಿಗಳಲ್ಲಿ ಸಾಂಪ್ರಾದಾಯಿಕ ನಿಷ್ಠೆಯನ್ನು ಪ್ರತಿಪಾದಿಸಿದ್ದಾರೆ. ಇವರ ರಚನೆಗಳಲ್ಲಿ ಗೇಯಾಂಶ ಕಡಿಮೆ. ಭಾಷೆಯು ಸುಲಲಿತವಾಗಿಲ್ಲ. ಒಟ್ಟಿನಲ್ಲಿ ಪ್ರೌಢವಾದದ್ದು. ಹಿಂದಿನ ಹರಿದಾಸರ ಕೃತಿಗಳಲ್ಲಿ ಹೇಳಿರುವುದಕ್ಕಿಂತ ಹೆಚ್ಚಿನದೇನೂ ಕಾಣದು. ಆದರೂ ಪಾಶ್ಚಾತ್ಯ ಪ್ರಭಾವ ಮತ್ತು ಆಧುನಿಕತೆಗಳ ಆಕರ್ಷಣೆಗೆ ಜನ ಒಳಗಾಗಿದ್ದ ಕಾಲದಲ್ಲಿ ಭಕ್ತಿಪಂಥವನ್ನು ಸಂಘಟಿಸಿದ ಸಾಧನೆ ದಾಸರದು. ಹರಿದಾಸರಾಗಿ ಇವರು ಮಾಡಿದ ಸಾಧನೆಗಿಂತ, ತತ್ವವೇತ್ತರಾಗಿ, ಭಕ್ತಿಪಂಥದ ಅನುಯಾಯಿಗಳಿಗೆ ಮಾರ್ಗದರ್ಶಕರಾಗಿ ಮಾಡಿದ ಧಾರ್ಮಿಕ ಸಂಘಟನೆ ದೊಡ್ಡದು.
***



|| ಶ್ರೀ ಗುರುರಾಜೋ ವಿಜಯತೇ ||
|| ಶ್ರೀ ಇಭರಾಮಪುರಾಧೀಶಾಯ ನಮಃ ||
|| ಶ್ರೀ ವಿಜಯರಾಮಚಂದ್ರವಿಠ್ಠಲ ದಾಸರ್ಯ ಗುರುಭ್ಯೋ ನಮಃ ||

ವೈಶಾಖ ಶುಕ್ಲ ತೃತೀಯ : ಶ್ರೀ ವಿಜಯರಾಮಚಂದ್ರವಿಠ್ಠಲರ ದಾಸರ ಆರಾಧನೆ ,  ಕಟ್ಟೆ ಮನೆ ಮೈಸೂರ್

ಹೆಸರು : ಶ್ರೀರಾಮರಾಯರು
ಅಂಕಿತ ಪ್ರದಾನ: ಪ್ರಸನ್ನವೇಂಕಟ ವಿಠಲ ದಾಸರು
ಸ್ವರೂಪೋಧಾರಕ ಗುರುಗಳು : ಶ್ರೀ ಇಭರಾಮಪುರ ಅಪ್ಪಾವರು
ಸಮಕಾಲೀನ ಅಪರೋಕ್ಷ ಜ್ಞಾನಿಗಳು :
ಶ್ರೀ ಏಳಮೇಲಿ ಹಯಗ್ರೀವಾಚಾರ್ಯರು , ಶ್ರೀಯೋಗಿ ನಾರಾಯಣಾಚಾರ್ಯರು , ಶ್ರೀ ಸುರಪುರದ ಆನಂದ ದಾಸರು ,ಶ್ರೀ ಶೇಷದಾಸರು
ಅಂಶ : ರುದ್ರದೇವರ

ಶ್ರೀ ಇಭರಾಮಪುರಾಧೀಶಕೃಷ್ಣಾರ್ಯಸ್ಯ ಮಹಾತ್ಮನ:
ಪಾದಭಕ್ತಿಂ ಮಯಿ ಸ್ಥಾಪ್ಯ ವಾಂಛಿತಾರ್ಥಪ್ರದೋ ಭವ

ಗಂಗಾಪಿತ ಪದಾಬ್ಜಾಳಿಂ | ಗಂಗಾಧರ ಸಮಪ್ರಭಂ | 
ಮಂಗಳಾಂಗಂ ಮಹಿದೇವಂ | ಮೈಸೂರು ಪುರವಾಸಿನಂ ||
ವಿಠಲೋಪ ಪದೋಪೇತಂ |  ವಿಜಯರಾಮಚಾಂದಿರಂ ||
ವೈರಾಗ್ಯ ಜ್ಞಾನ ಮೂರ್ತಿಂಚ  | ಭಜೇಹಂ ಭವತಾರಕಕ್ಮ್ ||

ಶ್ರೀ ವೆಂಕಟರಾಯರು ಮತ್ತು ಶ್ರೀಮತಿ ಬಹಿನಿ ಬಾಯಿಯಾರ ಸಾತ್ವಿಕ ಕುಟುಂಬದ ತೃತಿಯ ಪುತ್ರರೆ ಶ್ರೀರಾಮರಾಯರು. ಶ್ರೀರಾಯರು ಚಿಕ್ಕ ವಯಸ್ಸಿನ್ನಲ್ಲಿಯೇ ಆಚಾರ್ಯರ ತತ್ವವಾದ ಶಾಸ್ತ್ರದ ದಾಸ ಸಾಹಿತ್ಯದ ಕಡೆ ಮನಸ್ಸುಉಳ್ಳವರಾಗಿದರು.

ರಾಮರಾಯರು ತಂದೆ ತಾಯಿಯೊಡನೆ ದ್ವಾರಕೆಯಲ್ಲಿ ಶ್ರೀಕೃಷ್ಣನ ದರ್ಶನಕೆ ಬಂದಿರುತ್ತಾರೆ. ಅಲ್ಲಿ ಕೃಷ್ಣನ ದರ್ಶನ ಪಡೆಯುವಾಗ ಆ 7 ವರ್ಷದ ಬಾಲಕನ ಅಂತಃ ಧೃಡ ಭಕ್ತಿಯನ್ನು ನೋಡಿ ಎಲ್ಲಾರಿಗೆ ಆಶ್ಚರ್ಯವಾಯಿತು. ಆ ಪುಟ್ಟ ವಯಸ್ಸಿನ  
ಶ್ರೀರಾಮರಾಯರು ಕೃಷ್ಣನನ್ನು ಕಂಡು ಕೃಷ್ಣನಂತೆ ಇರುವ ವಿಗ್ರಹಜೊತೆ ಆಡಲು ಬಯಸಿ ತಮ್ಮ ತಂದೆತಾಯಿಯಲ್ಲಿ ಈ ವಿಷಯವನ್ನು ಹೇಳಿಕೊಳ್ಳುತ್ತಾರೆ. ದರ್ಶನ ನಂತರದಲ್ಲಿ ಸಮುದ್ರ ಸ್ನಾನ ಮಾಡಲು ಹೋದಾಗ ಅವರಿಗೆ ಪರಮಾಶ್ಚರ್ಯವಾಯಿತು, ಸಮುದ್ರದಲ್ಲಿ ಮುಳುಗಿ ಸ್ನಾನ ಮಾಡಿದಾಗ ಅಲ್ಲಿ ರಾಮರಾಯರಿಗೆ ಸುಂದರವಾದ ಕೃಷ್ಣ ಪ್ರತಿಮೆ ದೊರೆಯಿತು. ರಾಮರಾಯರಿಗೆ ಇನ್ನು ಹೆಚ್ಚಾಗಿ ದೇವರಮೇಲೆ ವಿಶ್ವಾಸ ಬೆಳೆಯಿತು. 

ದಾಸ ದೀಕ್ಷೆ :
ಶ್ರೀರಾಮರಾಯರು ಪುರಂದರೋಪನಿಷತ್ ಪ್ರವಚನ ಶ್ರವಣ ಮಾಡುತಿದ್ದರು. ಉಪನ್ಯಾಸದಲ್ಲಿ "ಅಂಕಿತವಿಲ್ಲದ ದೇಹ ನಿಷಿದ್ಧ" ಎಂಬ ಪುರಂದರ ದಾಸರ ಮಾತುಗಳು ಶ್ರೀರಾಮರಾಯರು ದಾಸನಾಗುವ ಇಚ್ಛೆ ಇನ್ನಷ್ಟು ಮನದಟ್ಟುವಾಯಿತು. ಹರಿವಾಯುಗುರುಗಳ ಪ್ರೇರಾಣಾನುಸಾರ ಕುಂಭಕೋಣದ ಪ್ರಸನ್ನವೇಂಕಟ ವಿಠಲ ದಾಸರು ಸಂದರ್ಶನ ಮಾಡಲು ಹೊರಡುತ್ತಾರೆ. ಶ್ರೀಪ್ರಸನ್ನವೆಂಕಟದಾಸರು ಮೋಹನ ದಾಸರ ಪರಂಪರೆಯಲ್ಲಿ ಬಂದ ಮಹತಪಸ್ವಿಗಳು. ಪ್ರಸನ್ನವೆಂಕಟದಾಸರಿಗು ಅಂದೆ ಸ್ವಪ್ನವಾಗಿ ತಮ್ಮ ಒಬ್ಬ ಯೋಗ್ಯವಾದ ಶಿಷ್ಯ ದೊರಕುತ್ತಾನೆ ಅವರಿಗೆ ದಾಸದೀಕ್ಷೆ ಕೂಟು ಅನುಗ್ರಹಿಸಬೇಕೆಂದು ಸೂಚನೆಯಾಗುತೆ. ಶ್ರೀರಾಮರಾಯರು ಬಂದು ಪ್ರಸನ್ನವೇಂಕಟ ವಿಠಲ ದಾಸರು ಸಂದರ್ಶನ ಮಾಡಿದ ಆತತ್ಕ್ಷಣದಲ್ಲಿಯೇ ದಾಸ ದೀಕ್ಷೆಯನ್ನು ಕೂಟು ವಿಜಯರಾಮಚಂದ್ರವಿಠ್ಠಲ ಎಂದು ಅಂಕಿತ ಪ್ರದಾನಮಾಡಿದರು. 

ಇಭರಾಮಪುರಾಧೀಶರಲ್ಲಿ ವಿಶೇಷ ಭಕ್ತಿ :
ಶ್ರೀ ಅಪ್ಪಾವರು ಮೈಸೂರ್ ಸಂಚಾರದಲ್ಲಿದಾಗ ಶ್ರೀವಿಜಯರಾಮಚಂದ್ರವಿಠ್ಠಲರು ಭೇಟಿಯಾಗುತ್ತಾರೆ. ಶ್ರೀ ಅಪ್ಪಾವರು ಮಹಿಮೆಯನ್ನು ಅರಿತ ಶ್ರೀವಿಜಯರಾಮಚಂದ್ರವಿಠ್ಠಲರು ಸಾಷ್ಟಾಂಗ ನಮಸ್ಕರಿಸಿದರು. ಅಪರೋಕ್ಷ ಜ್ಞಾನಿಗಳಾದ ಅಪ್ಪಾವರು ದಾಸರ ಸ್ವರೂಪವನು ತಿಳಿಸಿ ಅವರನು ಆಲಿಂಗನ ಮಾಡಿಕೊಳ್ಳುತ್ತಾರೆ. ಶ್ರೀ ವಿಜಯರಾಮಚಂದ್ರವಿಠ್ಠಲರು ಅಪ್ಪಾವರ ವಿಶೇಷ ಸೇವೆ ಮಾಡಿ ಅವರ ಕರುಣೆಯನ್ನು ಪಡೆದು ಅಪರೋಕ್ಷ ಜ್ಞಾನ ಹೊಂದುತ್ತಾರೆ. ದಾಸರು ತಮ್ಮ ಸ್ವರೂಪೋಧ್ಧಾರಕ ಗುರುಗಳಾದ ಶ್ರೀಅಪ್ಪಾವರ ಮತ್ತು ಪರಮಾತ್ಮನ ಮೇಲೆ ಹಲವಾರು ಕೃತಿಗಳು ರಚಿಸಿ ದಾಸ ಸಾಹಿತ್ಯಕ್ಕೆ ವಿಶೇಷ ಕೊಡುಗೆಯನ್ನು ನೀಡಿದ್ದಾರೆ. ದಾಸರ ಶಿಷ್ಯರಲ್ಲಿ ಅನೇಕರು ಅದರಲ್ಲಿ ಶ್ರೀಜಯೇಶವಿಠ್ಠಲರು ಅಗ್ರಗಣ್ಯರು. 

ಮಹಿಮೆಗಳು :
ಇಂತಹ ಅಪರೋಕ್ಷ ಜ್ಞಾನಿಗಳಾದ ವಿಜಯರಾಮಚಂದ್ರವಿಠ್ಠಲ ದಾಸರ ಹತ್ತಿರ  ಹೊನ್ನಾಳಿ ಶ್ರೀನಿವಾಸದಾಸರು ಸಂದರ್ಶನಕೆ ಬಂದಿರುತ್ತಾರೆ. ಶ್ರೀನಿವಾಸದಾಸರು  ಕಾಶಿಯಾತ್ರೆ ಮಾಡಲು ಇಚ್ಚಿಸಿ ಗುರುಗಳಿಗೆ ತಮ್ಮ ಯಾತ್ರೆಯ ಬಗ್ಗೆ ತಿಳಿಸುತ್ತಾರೆ ಅದರಂತೆಯೇ ಅವರಿಗೆ ಮಂತ್ರಾಕ್ಷತೆ ಕೊಟ್ಟು ಹೋಗಿಬಾ ಎಂದು ವಿಜಯರಾಮಚಂದ್ರವಿಠ್ಠಲ ದಾಸರು ಅನುಗ್ರಹಿಸುತ್ತಾರೆ. 

ರಾತ್ರಿ ಅಲ್ಲೇ ಉಳಿದುಕೊಂಡು ಮರುದಿನ ಹೊರಡಲು ಸಿದ್ಧರಾಗುತ್ತಾರೆ. ಕಾಶಿಗೆ ತಲುಪಿದ ಶ್ರೀನಿವಾಸದಾಸರಿಗೆ ಆ ದಿನ ರಾತ್ರಿ ಒಂದು ಸ್ವಪ್ನವಾಗುತ್ತದೆ. ಆ  ಸ್ವಪ್ನದಲ್ಲಿ ಕಾಶಿಯ  ವಿಶ್ವನಾಥನು  ಜಠ ಧಾರಿಯಾಗಿ,ಗಜ ಚರ್ಮ ಧರಣೆಮಾಡಿ , ಭಸ್ಮ ಲೇಪನ , ಕೊರಳಲ್ಲಿ ನಾಗಭರಣ ಧಾರಣೆಮಾಡಿಕೊಂಡು ಶ್ರೀನಿವಾಸದಾಸರಿಗೆ ಸ್ವಪ್ನದಲ್ಲಿ  ವಿಶ್ವನಾಥನ ಸಾಕ್ಷಾತ್ಕಾರವಾಗುತೆ.

ಸ್ವಪ್ನದಲ್ಲಿ ಈ ದೃಶ್ಯವನ್ನು ಕಂಡು ಅವರಿಗೆ ಕಣ್ಣಲ್ಲಿ ನೀರು ತುಂಬಿ ಗುರುಗಳ ಅನುಗ್ರಹ ಅಂತ ತಿಳಿದು ವರ್ಣಿಸಲಾಗದ ಸಂತೋಷವನ್ನು‌ ಹೊಂದಿ ಆ ಕ್ಷಣವೇ ಗುರುಗಳ ಸಂದರ್ಶನಕೆ ಹೊರಡುತ್ತಾರೆ.ಶ್ರೀನಿವಾಸದಾಸರಿಗೆ ಆದರದಿಂದ ಬರಮಾಡಿಕೊಂಡು ಕಾಶಿಯಲ್ಲಿಯಾದ ಸ್ವಪ್ನ ವಿಚಾರವನ್ನು ವಿಜಯರಾಮಚಂದ್ರವಿಠ್ಠಲರಿಗೆ ಪ್ರಸ್ತಾಪಿಸುತ್ತಾರೆ.  ಶ್ರೀನಿವಾಸದಾಸರು ತಮಗಾದ ಸ್ವಪ್ನವನು ಇವರಿಗೆ ಗೋಚರವಾಗಿದನು ಕಂಡು ಅಚ್ಚರಿಯಾಯಿತು. ಗುರುಗಳ ಮಹಿಮೆಯನ್ನು ಕಣ್ಣಾರೆ ಕಂಡು ಅವರಿಗೆ ಸಂತೋಷಕೆ ಮಿತಿಳಿಲ್ಲದಂತಾಯಿತು.

ಶ್ರೀವಿಜಯರಾಮಚಂದ್ರವಿಠ್ಠಲ ದಾಸರು ಸಾಕ್ಷಾತ್ ರುದ್ರದೇವರ ಅಂಶವೆಂದು ಪ್ರಾಜ್ಞರ ವಚನ.

ಶ್ರೀ ಇಭರಾಮಪುರಾಧೀಶ

ವಿಷ್ಣುತೀರ್ಥಾಚಾರ ಇಭರಾಮಪುರ
**************

ಶ್ರೀಂ ಶ್ರೀ ಕಂ ಕಪಿಲಾಯ ನಮಃ 

ಅಕ್ಷಯವಾಗಲಿ ನಮ್ಮ ಭಕ್ತಿ, ಅಕ್ಷಯವಾಗಲಿ ನಮ್ಮ ನಿಜ ಸಂಪತ್ತು, ಅಕ್ಷಯವಾಗಲಿ ಜ್ಞಾನಾದಿಗಳು, ಅಕ್ಷಯವಾಗಲಿ ಸಕಲವೂ ಎಂದು ಈ ಅಕ್ಷಯತೃತೀಯಾದಿನದಲಿ ಪರಮಾತ್ಮನಲ್ಲಿ ಪ್ರಾರ್ಥನೆ ಮಾಡಿ ಸಾಧನೆಗೆ ದೇವರ ಸ್ಮರಣೆ ಗೆ ಮಾತ್ರ ಆರೋಗ್ಯಭಾಗ್ಯ ನಮಗೆ ಪರಮಾತ್ಮ ನೀಡುವಂತಾಗಲಿ..

 ಅಹಂಕಾರ ದಿಂದ ರಾಜ್ಯವಾಳುತ್ತಿರುವ ದುಷ್ಟ ರಾಜರನೆಲ್ಲ ಕೊಂದ ಹರಿಣೀ ಪತಿ ಪರಶುರಾಮದೇವರ ಅವತಾರ ಮಾಡಿದ ಈ ದಿನದಲಿ, ಪರಮಾತ್ಮ ತನ್ನ ಕೊಡಲಿಯಿಂದ ನಮ್ಮಲ್ಲಿನ ಅಜ್ಞಾನದ ಕಷ್ಮಲದ ಮರಗಳನ್ನು ಕತ್ತರಿಸಿ ಜ್ಞಾನದ ಭಿಕ್ಷೆನೀಡಿ ಪರಮಾನುಗ್ರಹವನ್ನು ಮಾಡಲಿ ಎಂದು ಪ್ರಾರ್ಥನೆ ಮಾಡುತ್ತಾ.. ..

ಹಾಗೆಯೇ....

ವಿದ್ಯಾಧೀಶಪದಾಸಕ್ತೋ ವಿದ್ಯಾಕೌಶಲ್ಯಸಂಯುತಃ/
ವಿದ್ಯಾಧಿರಾಜತೀರ್ಥಾಖ್ಯೋ ಗುರುರ್ಭೂಯಾದಭೀಷ್ಟದಃ//

ಶ್ರೀಮಟ್ಟೀಕಾಕೃತ್ಪಾದರ ನೇರ ಶಿಷ್ಯರು, ಶ್ರೀಮತ್ಕವೀಂದ್ರತೀರ್ಥರ, ಶ್ರೀ ರಾಜೇಂದ್ರತೀರ್ಥರ ಗುರುಗಳೂ ಆದ  ಶ್ರೀ ವಿದ್ಯಾಧಿರಾಜತೀರ್ಥರ ಆರಾಧನಾ ಮಹೋತ್ಸವ, ಯರಗೋಳದಲ್ಲಿ... ಮತ್ತೆ...

ಅಂಜನಾಸೂನು ಸಾನ್ನಿಧ್ಯಾತ್ ವಿಜಯೇನ ವಿರಾಜಿತಮ್/
ಅಜಿತಪ್ರೀತಿಜನಕಂ ಭಜೇಹಂ ವಿಜಯಧ್ವಜಮ್// 

14ನೆಯ ಶತಮಾನದವರಾದ, 
ಸಜ್ಜನರ ಉದ್ಧಾರಕ್ಕಾಗಿಯೆ ಶ್ರೀಮದ್ಭಾಗವತಕ್ಕೆ ವ್ಯಾಖ್ಯಾನವಾದ ಪದರತ್ನಾವಲಿಯನ್ನು  ಬರೆದು ಎಲ್ಲ ಸಜ್ಜನರಿಗೆ ದಾರಿದೀಪರಾದ ಕಣ್ವತೀರ್ಥನಿವಾಸಿಗಳಾದ, ಶ್ರೀ ಪೇಜಾವರ ಮಠದ 6ನೆಯ ಯತಿಗಳಾದ ಶ್ರೀ ವಿಜಯಧ್ವಜತೀರ್ಥ ಗುರುಸಾರ್ವಭೌಮರ ಆರಾಧನಾ ಮಹೋತ್ಸವವೂ..

ವಿಜಯದಾಸಪದಾಸಕ್ತಮ್ ವಿಟಲೋಪಪದಸಂಯುತಮ್/
ವೇಣುಗೋಪಾಲದಾಸಾಖ್ಯಂ ದಾಸವರ್ಯಂಮಹಂಭಜೇ//

ಶ್ರೀ ವೇಣುಗೋಪಾಲವಿಠಲ ದಾಸಾರ್ಯರ ಉತ್ತರಾರಾಧನೆಯ ಶುಭವಂದನೆಗಳನ್ನು ಸಲ್ಲಿಸುತ್ತಾ... ಜೊತೆಗೆ..

ಗಂಗಾಪಿತ ಪದಾಬ್ಜಾಳಿಂ ಗಂಗಾಧರ ಸಮಪ್ರಭಂ/ 
ಮಂಗಳಾಂಗಂ ಮಹಿದೇವಂ ಮೈಸೂರು ಪುರವಾಸಿನಂ/
ವಿಠಲೋಪ ಪದೋಪೇತಂ/ ವಿಜಯರಾಮಚಾಂದಿರಂ/
ವೈರಾಗ್ಯ ಜ್ಞಾನ ಮೂರ್ತಿಂಚ ಭಜೇಹಂ ಭವತಾರಕಮ್//

ಶ್ರೀ ಜಯೇಶವಿಠಲರ ಪರಮಪೂಜ್ಯ ಗುರುಗಳು,  ಶ್ರೀ ಅಪ್ಪಾವರ ಪರಮಾನುಗ್ರಹಪಾತ್ರರೂ, ಪರಮ ವೈರಾಗ್ಯ ಪುರುಷರೂ, ಕನ್ನಡ, ಮರಾಠಿ ಮೊದಲಾದ ಭಾಷೆಗಳಲ್ಲಿ ಪದ ಪದ್ಯ ಸುಳಾದಿಗಳನ್ನು ರಚನೆಮಾಡಿದವರಾದ, ಶ್ರೀ ಕುಂಭಕೋಣಂ ಪ್ರಸನ್ನವೇಂಕಟವಿಠಲರ ಶಿಷ್ಯರು, ಅನೇಕ ಜನ ಸಜ್ಜನ ಸಮುದಾಯವನ್ನು ಶಿಷ್ಯ ಸಂಪತ್ತನ್ನಾಗಿ ಹೊಂದಿದವರಾದ,     ಶ್ರೀ ವಿಜಯರಾಮಚಂದ್ರವಿಠಲರ ಮಧ್ಯಾರಾಧನೆ ಮೈಸೂರಿನ ಕಟ್ಟೆಮನೆಯಲ್ಲಿ...

ಇಂಥಾ ಅದ್ಭುತವಾದ ದಿನದಲಿ ಪರಮಾತ್ಮನ,ದಾಸರ ಕುರಿತಾದ ಪದಗಳು ಹಾಡುವ ಮುಖಾಂತರ, ಯತಿಗಳ ಕುರಿತಾದ ಲೇಖನಾ, ಪ್ರವಚನಗಳು ಹಂಚಿಕೊಳ್ಳುವ ಮುಖಾಂತರ   ಸಣ್ಣ ಸೇವೆಯನ್ನು ಪ್ರತಿಯೊಬ್ಬರೂ ಸಲ್ಲಿಸುವ ಪ್ರಯತ್ನವನ್ನು ಮಾಡೋಣ ಎಂದು ಬೇಡಿಕೊಳ್ಳುತ್ತಾ...

-Smt. Padma Sirish

ನಾದನೀರಾಜನದಿಂ ದಾಸಸುರಭಿ 🙏🏽
***


No comments:

Post a Comment