Friday 13 August 2021

rangesha vittala dasaru 1954 ರಂಗೇಶ ವಿಠಲ ದಾಸರು

    ..

Name:  rangesha vittala dasaru ರಂಗೇಶ ವಿಠಲ ದಾಸರು

Ankita: rangesha vittala

Kruti: 106

ರಂಗೇಶ ವಿಠಲ ದಾಸರು ದಾಸರು

***


info from kannadasiri.in

ರಂಗೇಶ ವಿಠಲರು (1875-1954)

ತಂದೆ ಮುದ್ದುಮೋಹನದಾಸರ ಶಿಷ್ಯರಲ್ಲಿ ಒಬ್ಬರಾದ ರಂಗೇಶವಿಠಲರ ನಿಜನಾಮ ಎ.ಆರ್. ಸಂಜೀವರಾಯರು (ಅರಕೆರೆ ರಾಮಣ್ಣ ಸಂಜೀವರಾವ್) ತುಮಕೂರು-ಮಧುಗಿರಿ ರಸ್ತೆಯಲ್ಲಿರುವ ಅರಕೆರೆ ಇವರ ಜನ್ಮಸ್ಥಳ. ಇವರ ತಂದೆ ರಾಮಣ್ಣ, ತಾಯಿ ಸಂಜೀವಮ್ಮ. ರಾಮಣ್ಣನವರಿಗೆ ಏಳು ಮಂದಿ ಹೆಣ್ಣುಮಕ್ಕಳು ಮತ್ತು ಒಬ್ಬನೇ ಗಂಡು ಮಗ. ಅರಕೆರೆ ರಾಮಣ್ಣನವರು ತಾಲ್ಲೂಕು ಕಛೇರಿಯಲ್ಲಿ ಗುಮಾಸ್ತರಾಗಿದ್ದರು. ರಾಮಣ್ಣನವರ ಹಿರಿಯ ಮಗ ಸಂಜೀವರಾಯರು ಎಸ್.ಎಸ್.ಎಲ್.ಸಿ.ವರೆಗೂ ವಿದ್ಯಾಭ್ಯಾಸ ಮುಗಿಸಿ, ಸಿವಿಲ್ ಇಂಜಿನಿಯರಿಂಗ್‍ನಲ್ಲಿ ಡಿಪ್ಲಮೊ ಮಾಡಿದ್ದರು. ಕೆಲವು ಕಾಲ ಮೈಸೂರು ಸಂಸ್ಥಾನದ ಪಬ್ಲಿಕ್‍ವಕ್ರ್ಸ್ ಇಲಾಖೆಯಲ್ಲಿ ಓವರ್‍ಸೀಯರ್ ಆಗಿ ಕೆಲಸ ಮಾಡಿದರು. ತಮ್ಮ ಮೇಲಿನ ಅಧಿಕಾರಿಯ ಧೋರಣೆ ಹಿಡಿಸದೆ ಅವನ ಜೊತೆ ವಾದಿಸಿ ರಾಜೀನಾಮೆ ಕೊಟ್ಟರು. ಅನಂತರ ಹಲವು ಟೌನ್ ಮುನ್ಸಿಪಾಲಿಟಿಗಳಲ್ಲಿ ಕಾಮಗಾರಿ ಪರಿವೀಕ್ಷಕರಾಗಿ ಕೆಲಸಮಾಡಿದರು.

ಸಂಜೀವರಾಯರ ಬದುಕಿನಲ್ಲಿ ನಡೆದ ಒಂದು ಕಹಿಘಟನೆ ಜೀವನದಲ್ಲಿ ಬೇಸರ ವೈರಾಗ್ಯ ಬರುವಂತೆ ಮಾಡಿತು. ರಾಯರಿಗೆ ಒಬ್ಬಳೇ ಮಗಳು. ಅವಳಿಗೆ ಹತ್ತನೇ ವಯಸ್ಸಿನಲ್ಲಿಯೇ ಮದುವೆಯನ್ನು ಮಾಡಿದರು. ಹನ್ನೊಂದನೇ ವಯಸ್ಸಿನಲ್ಲಿ ಆಕೆ ವಿಧವೆಯಾದಳಂತೆ. ಬದುಕಿನಲ್ಲಿ ಬೇಸತ್ತ ರಾಯರು ದೇಶಾಂತರ ಹೊರಟುಹೋದರು. ಒಂದು ವರ್ಷ ಅವರು ಎಲ್ಲಿದ್ದಾರೆಂದು ಸುಳಿವು ಸಿಗಲಿಲ್ಲ. ಅನಂತರ ತಮ್ಮ ತಂದೆಗೆ ಹೈದ್ರಾಬಾದಿನಿಂದ ಪತ್ರ ಬರೆದು ಅಲ್ಲಿ ಅಂಚೆ ಇಲಾಖೆಯಲ್ಲಿ ಗುಮಾಸ್ತರಾಗಿರುವುದಾಗಿ ತಿಳಿಸಿದರು. ಸ್ವಲ್ಪ ಕಾಲವಾದ ಮೇಲೆ ಆ ಕೆಲಸ ಬಿಟ್ಟು ಕರಾಚಿಗೆ ಹೋಗಿ ಸಿಂಗರ್ ಹೊಲಿಗೆ ಯಂತ್ರದ ಮಾರಾಟ ವಿಭಾಗದಲ್ಲಿ ಕೆಲಸ ಮಾಡಿದರು. 1910ರ ಸುಮಾರಿಗೆ ಮತ್ತೆ ಬೆಂಗಳೂರಿಗೆ ಹಿಂತಿರುಗಿದರು. ಕೆಲವು ವರ್ಷ ಸೌದೆ ಇದ್ದಿಲು ಡಿಪೋ ನಡೆಸಿದರು. ಕೆಲವು ಕಾಲ ಬೆಂಗಳೂರು ಪ್ರೆಸ್ ಮ್ಯಾನೇಜರಾಗಿದ್ದರು. ಇನ್ನು ಕೆಲವು ದಿನ ಫೋಟೋ ಸ್ಟುಡಿಯೋ ನಡೆಸಿದರು. 1930-42ರವರೆಗೆ ಕುಣಿಗಲ್ ತಾಲ್ಲೂಕು ಕೀಲಾರ ಎಂಬಲ್ಲಿ ಇನಾಂದಾರರೊಬ್ಬರ ಎಸ್ಟೇಟ್ ಮ್ಯಾನೇಜರ್ ಆಗಿ ಕೆಲಸಮಾಡಿದರು. 1942ರ ವೇಳೆಗೆ ತಮ್ಮ ಸ್ವಂತ ಊರು ಅರಕೆರೆಗೆ ಬಂದು ನೆಲೆಸಿದರು. ಸಂಜೀವರಾಯರು ಕಟ್ಟುನಿಟ್ಟಿನ ಮನುಷ್ಯ ಎಂಬುದನ್ನು, ಸ್ವಲ್ಪ ವಿಚಿತ್ರ ಸ್ವಭಾವದವರು ಎಂಬುದನ್ನು ಮೂರು ಪ್ರಸಂಗಗಳೊಂದಿಗೆ ಡಾ|| ಪ್ರಭುಶಂಕರ1 ಅವರು ನಿರೂಪಿಸಿದ್ದಾರೆ.

ಹತ್ತು ಹನ್ನೆರಡು ಉದ್ಯೋಗಗಳನ್ನು ನಡೆಸಿದ ಸಂಜೀವರಾಯರು `ನಾಗರಾಜ', `ಸುಮಿತ್ರ' ಎಂಬ ಎರಡು ಕಾದಂಬರಿಗಳನ್ನೂ ಬರೆದು ಪ್ರಕಟಿಸಿದರು.2 ಈ ಮಧ್ಯದಲ್ಲಿ ಆಗಾಗ ದೇಶಾಂತರ ಹೋಗುವುದು, ವರ್ಷಗಳ ಕಾಲ ಕಾಣೆಯಾಗುವುದು ಅವರಿಗೆ ಅಭ್ಯಾಸವಾಗಿಬಿಟ್ಟಿತ್ತು. 1915ರ ಸುಮಾರಿನಲ್ಲಿ ಒಮ್ಮೆ ಹೀಗೆ ನಾಪತ್ತೆಯಾದರು. ಮನೆಯವರಿಗೆಲ್ಲಾ ಇದು ಅಭ್ಯಾಸವಾಗಿತ್ತೊ ಏನೋ ಅವರನ್ನು ಹುಡುಕಿಸುವ ಪ್ರಯತ್ನ ಮಾಡಲಿಲ್ಲ. ದೇವರಾಯನದುರ್ಗದ ಜಾತ್ರೆಯಲ್ಲಿ ದಾಸರ ವೇಷದಲ್ಲಿ ಗೆಜ್ಜೆಕಟ್ಟಿ, ತಂಬೂರಿ ಹಿಡಿದು ಕುಣಿಯುತ್ತಿದ್ದ ಸಂಜೀವರಾಯರನ್ನು ತಾವು ಕಂಡದ್ದಾಗಿ ಪರಿಚಿತರೊಬ್ಬರು ತಿಳಿಸಿದರಂತೆ.

ಸಂಜೀವರಾಯರು ಮುದ್ದು ಮೋಹನದಾಸರಿಂದ ಹರಿದಾಸ ದೀಕ್ಷೆ ಪಡೆದರು.

ವರಗುರು ತಂದೆ ಮುದ್ದು ಮೋಹನದಾಸ| ರೆನಗಿತ್ತರು ಲೇಸ

ಪರಮ ಸಂಭ್ರಮದೊಳಿವರ ಸಹವಾಸ ಕರುಣಿಸಿದನು ಶ್ರೀಶ ಕೀ.181

ಈ ಕೀರ್ತನೆಯಲ್ಲಿ ತಮಗೆ ಗುರುಗಳ ಅನುಗ್ರಹವಾದ ಸಂದರ್ಭವನ್ನು ದಾಸರು ಸ್ಮರಿಸಿದ್ದಾರೆ. `ಪರಮಾರ್ಥ ಚಂದ್ರೋದಯ' ಪತ್ರಿಕೆಯ 1928 ರ ಒಂದು ಸಂಚಿಕೆಯಲ್ಲಿ ಈ ಕೀರ್ತನೆ ಪ್ರಕಟವಾಗಿದೆ. ಈ ವೇಳೆಗೆ ಸುಬ್ಬರಾಯದಾಸರು (ತಂದೆ ಮುದ್ದುಮೋಹನವಿಠಲ) 75 ಮಂದಿ ಶಿಷ್ಯರಿಗೆ ಅಂಕಿತೋಪದೇಶವನ್ನು ಮಾಡಿದ್ದರು. ಅಂಕಿತೋಪದೇಶ ಪಡೆದ ಮೊದಲ ಶಿಷ್ಯರು ಬಾಗೇಪಲ್ಲಿ ಶೇಷದಾಸರು. ಸಂಜೀವರಾಯರು 39ನೆಯವರು. ಬಾಗೇಪಲ್ಲಿ ಶೇಷದಾಸರು 1924ರ ರಕ್ತಾಕ್ಷಿ ಸಂವತ್ಸರದ ಭಾದ್ರಪದ ಶುಕ್ಲ ಪೌರ್ಣಮಿಯಂದು ಸ್ವರ್ಗಸ್ಥರಾದ ಸಂಗತಿಯನ್ನು ರಂಗೇಶವಿಠಲರು ತಮ್ಮ ಕೀರ್ತನೆಯೊಂದರಲ್ಲಿ ಸ್ಮರಿಸಿದ್ದಾರೆ. (ಕೀ.182) ಇವುಗಳ ಆಧಾರದ ಮೇಲೆ 1915ರ ಸುಮಾರಿನಲ್ಲಿ ಸಂಜೀವರಾಯರಿಗೆ ಅಂಕಿತೋಪದೇಶವಾಯಿತು ಎಂದು ಭಾವಿಸಬಹುದು. ತಂದೆ ಮುದ್ದುಮೋಹನದಾಸರಿಂದ ಅವರು ಪಡೆದ ಅಂಕಿತ `ರಂಗೇಶವಿಠಲ'. `ಮಾನನಿಧಿ ರಂಗೇಶವಿಠಲ ಕೇಳೊ' ಎಂಬ ಅಂಕಿತಪದದ ಮೂಲಕ (ಅನುಬಂಧ 5-ಅ) ತಂದೆ ಮುದ್ದುಮೋಹನವಿಠಲರು ದಾಸದೀಕ್ಷೆ ನೀಡಿದರು ಎಂದು ತಿಳಿದುಬರುತ್ತದೆ.

ರಂಗೇಶವಿಠಲರ ಸÀುಮಾರು 115 ಕೀರ್ತನೆಗಳು ದೊರೆತಿವೆ. ಈ ಕೀರ್ತನೆಗಳ ಶುದ್ಧಪ್ರತಿಯನ್ನು 1925ರಲ್ಲೇ ದಾಸರೇ ಸಿದ್ಧಪಡಿಸಿ ಮುದ್ರಣ ಪ್ರತಿಯನ್ನು ತಯಾರಿಸಿದ್ದರು. ಮೈಸೂರು ಕೃಷ್ಣರಾಜ ಮಿಲ್ಸ್‍ನ ಆಫೀಸ್À ಮ್ಯಾನೇಜರ್ ಆಗಿದ್ದ ಎಸ್. ಬಿಂದುರಾಯರು ಈ ಕೀರ್ತನೆಗಳಿಗೆ ರಾಗ ತಾಳಗಳನ್ನು ನಿರ್ಣಯಿಸಿ ಕೊಟ್ಟಿದ್ದರು. ಉಡುಪಿಯ ಪಾವಂಜೆ ಗುರುರಾಯರು ಈ ಕೀರ್ತನೆಗಳನ್ನು ಪ್ರಕಟಿಸಲು ಒಪ್ಪಿದ್ದರು. ಆದರೆ ಪ್ರಕಟವಾಗಲಿಲ್ಲ. ಸುಮಾರು 1915ರಲ್ಲಿ ದಾಸದೀಕ್ಷೆ ಸ್ವೀಕರಿಸಿದ ರಂಗೇಶವಿಠಲರು ಮುಂದಿನ ಹತ್ತು ವರ್ಷಗಳಲ್ಲಿ ರಚಿಸಿದ ಕೀರ್ತನೆಗಳು ಇವು. ಆ ಮುಂದಿನ 30 ವರ್ಷಗಳ ಕಾಲ ಇವರು ಕೀರ್ತನೆಗಳನ್ನು ರಚನೆ ಮಾಡಿದರೆ ಇಲ್ಲವೇ ಎಂಬುದು ತಿಳಿದು ಬರುವುದಿಲ್ಲ. ತಂದೆ ಮುದ್ದುಮೋಹನವಿಠಲರು ಮತ್ತು ಅವರ ಶಿಷ್ಯರು 20-30ರ ದಶಕದಲ್ಲಿ ಹರಿದಾಸ ಸಾಹಿತ್ಯ ಆಂದೋಲನವನ್ನೇ ಕೈಗೊಂಡರು. ದೇವರಾಯನದುರ್ಗ ಮತ್ತು ಬೆಂಗಳೂರು ಇವರ ಧಾರ್ಮಿಕ ಮತ್ತು ಸಾಹಿತ್ಯಿಕ ಚಟುವಟಿಕೆಗಳ ಕೇಂದ್ರವಾಗಿತ್ತು. 1940ರಲ್ಲಿ ತಂದೆ ಮುದ್ದುಮೋಹನದಾಸರು ಸ್ವರ್ಗಸ್ಥರಾದ ಮೇಲೆ ದಾಸಕೂಟದ ಚಟುವಟಿಕೆಗಳು ಕ್ಷೀಣಿಸುತ್ತಾ ಬಂದವು. ಸಮಕಾಲೀನ ಹರಿದಾಸರ ಧಾರ್ಮಿಕ ಸಾಹಿತ್ಯದ ಪ್ರಕಟಣೆಗೇ ಮೀಸಲಾಗಿದ್ದ `ಪರಮಾರ್ಥ ಚಂದ್ರೋದಯ'1 ಪತ್ರಿಕೆಯೂ ಸ್ಥಗಿತವಾಯಿತು. ಸ್ವಾತಂತ್ರ್ಯ ಪೂರ್ವದ ಸಾಮಾಜಿಕ, ರಾಜಕೀಯ ಬದಲಾವಣೆಗಳಿಂದಾಗಿ ಹರಿದಾಸರು ಬೇರೆ ಬೇರೆ ಭಾಗಗಳಿಗೆ ಹಂಚಿಹೋದರು. ದಾಸಸಾಹಿತ್ಯದ ರಚನೆಗಳು ಸ್ಥಗಿತಗೊಂಡವು. ರಂಗೇಶವಿಠಲರು ಇದೇ ಪರಿಸರದಲ್ಲಿ ಇದ್ದವರಾದ್ದರಿಂದ 1925ರ ನಂತರ ಅವರು ಕೀರ್ತನೆಗಳ ರಚನೆಯನ್ನು ಮುಂದುವರೆಸಲಿಲ್ಲವೆಂದು ತೋರುತ್ತದೆ. ಕೀರ್ತನೆಗಳಲ್ಲದೆ ಕೇಶವಾದಿ ಚರ್ತುವಿಂಶತಿ ರೂಪ ಲಕ್ಷಣ ವಿವರಣ ಸ್ತೋತ್ರವನ್ನು (25 ಷಟ್ಪದಿಗಳು), ಮಾಸ ನಿಯಾಮಕ ಪರಮಾತ್ಮನ ರೂಪಗಳ ಸ್ತುತಿಯನ್ನು (15 ಭಾಮಿನಿ ಷಟ್ಪದಿಗಳು) ರಚಿಸಿದ್ದಾರೆ. ಈ ಎರಡು ಭಾಮಿನಿ ಷಟ್ಪದಿಗಳನ್ನು ರಚಿಸಿದ್ದು 1940ರಲ್ಲಿ. ದಾಸರು ಕೀಲಾರದಲ್ಲಿ ಇದ್ದಾಗ. ಕೀಲಾರದಿಂದ ತಮ್ಮ ಸ್ವಂತ ಸ್ಥಳ ಅರಕೆರೆಗೆ ಬಂದು ನೆಲೆಸಿದರು.

*****

rangadasaru dasaru ರಂಗದಾಸರು

    ..

Name:  rangadasaru ದಾಸರು

Ankita:  mahadevapuravasa    

ದಾಸರ ಹೆಸರು: ರಂಗದಾಸರು

ಜನ್ಮ ಸ್ಥಳ: ಮಾದಗೊಂಡನಹಳ್ಳಿ, ತುಮಕೂರು ಜಿಲ್ಲೆ

ಕಾಲ: 1830 -

ಅಂಕಿತನಾಮ: ಮಹದೇವಪುರವಾಸ

ಲಭ್ಯ ಕೀರ್ತನೆಗಳ ಸಂಖ್ಯೆ: 16

ಗುರುವಿನ ಹೆಸರು: ಅರಾಧ್ಯ ದೈವ ಶ್ರೀ ರಂಗನಾಥ

ಆಶ್ರಯ: ಮಹಾದೇವಪುರ ರಂಗನಾಥಸನ್ನಿಧಿ

ಪೂರ್ವಾಶ್ರಮದ ಹೆಸರು:

ಮಕ್ಕಳು: ಅವರ ಹೆಸರು: ಇಲ್ಲ

ಕೀರ್ತನೆಗಳಲ್ಲದೆ ಇತರ ಲಭ್ಯ ಕೈತಿಗಳು : 5 ಧಾರ್ಮಿಕ ಕೃತಿಗಳು

ಪತಿ: ಪತ್ನಿಯ ಹೆಸರು: ಇಲ್ಲ

ಒಡಹುಟ್ಟಿದವರು: ಒಬ್ಬ ಆಣ್ಣ

ವೃತ್ತಿ: ಅರ್ಚನೆ

ಕಾಲವಾದ ಸ್ಥಳ: ಮಾದಗೊಂಡನಹಳ್ಳಿ

ವೃಂದಾವನ ಇರುವ ಸ್ಥಳ: ಇಲ್ಲ

****

jnanabodhakaru dasaru ಜ್ಞಾನಬೋದಕರು ದಾಸರು

    ..

Name:  jnanabodhakaru ಜ್ಞಾನಬೋದಕರು ದಾಸರು

Ankita: jnanabodha    

Kruti: 13

****

gopati krishnavittalaru dasaru mudenur acharyaru ಗೋಪತಿ ಕೃಷ್ಣವಿಠಲರು ದಾಸರು

Name: Gopati Krishnavittalaru Mudenur Acharyaru

Ankita: gopatikrishna

ದಾಸರ ಹೆಸರು: ಗೋಪತಿ ಕೃಷ್ಣವಿಠಲರು ಮುದೇನೂರ ಆಚಾರ್ಯ

ಜನ್ಮ ಸ್ಥಳ: ಸುರಪುರ, ನೆಲಸಿದ್ದು ಹೊಳೆ ಆನವೇರಿ (ಹಾವೇರಿ ಜಿಲ್ಲೆ), ಮುದೇನೂರು

ಕಾಲ : 0 -

ಅಂಕಿತನಾಮ: ಗೋಪತಿ(ಕೃಷ್ಣ)ವಿಠಲರು(ರೂಡಿಯಲ್ಲಿ ಮುದೇನೂರ ಆಚಾರ್ಯ)

ಲಭ್ಯ ಕೀರ್ತನೆಗಳ ಸಂಖ್ಯೆ: 5

ಪೂರ್ವಾಶ್ರಮದ ಹೆಸರು: ಸುರಪುರದ ಸುಬ್ಬಣ್ಣಾಚಾರ್ಯ

ವೃತ್ತಿ : ಮಾಹಿತಿ ಲಭ್ಯವಿಲ್ಲ

ಕಾಲವಾದ ಸ್ಥಳ ಮತ್ತು ದಿನ : ಹಾವನೂರು

ಕೃತಿಯ ವೈಶಿಷ್ಟ್ಯ: ತುಂಗಭದ್ರಾ-ಕುಮುದ್ವತಿ ನದೀಸಂಗಮದ ತಟದಲ್ಲಿರುವ ಹೊಳೆಆನವೇರಿಯಲ್ಲಿ ಶಿವಮಂದಿರವಿದೆಎಂದೂ ಅವರ ಕೃತಿುಂದ ತಿಳಿಯುತ್ತದೆ.

ಇತರೆ: ಇಳಿವಯಸ್ಸಿನಲ್ಲಿ ಮುದೇನೂರಿನಲ್ಲಿ ನೆಲಸಿ ಪ್ರಾಣದೇವರನ್ನು ಪ್ರತ್ಠಿಸಿದರು. ಈ ವಿವರಗಳು ಅವರ ಕೃತಿಗಳಲ್ಲಿ ತಿಳಿಯುತ್ತದೆ.'

****


tande varada vittalaru dasaru ತಂದೆವರದವಿಠಲರು ದಾಸರು

Name: tande varada vittalaru dasaru 

Ankita:  tandevarada vittala

kruti: 7    


ದಾಸರ ಹೆಸರು: ತಂದೆವರದವಿಠಲರು

ಜನ್ಮ ಸ್ಥಳ:

ತಂದೆ ಹೆಸರು: ರಾಘವೇಂದ್ರ

ತಾಯಿ ಹೆಸರು: ರುಕ್ಮಿಣಿ

ಕಾಲ: 1912 -

ಅಂಕಿತನಾಮ: ತಂದೆವರದವಿಠಲ

ಲಭ್ಯ ಕೀರ್ತನೆಗಳ ಸಂಖ್ಯೆ: 7

ಪೂರ್ವಾಶ್ರಮದ ಹೆಸರು: ಶ್ರೀನಿವಾಸಾರ್ಯ

ಮಕ್ಕಳು: ಅವರ ಹೆಸರು: ಗೋಪಾಲರಾವ (ಮಗ)

****


tande shreenarahari dasaru ತಂದೆ ಶ್ರೀನರಹರಿ ದಾಸರು

Name: tande shreenarahari  

Ankita:  tandeshreenarahari  

Kruti: 7  

ತಂದೆ ಶ್ರೀನರಹರಿ ದಾಸರು

****


radhabai dasaru ರಾಧಾಬಾಯಿ ದಾಸರು

Name:  radhabai

Ankita:  raghavendra     

ದಾಸರ ಹೆಸರು: ರಾಧಾಬಾಯಿ

ಜನ್ಮ ಸ್ಥಳ: ಮದನಪಲ್ಲಿ

ತಂದೆ ಹೆಸರು: ಆನಂದರಾವ್

ತಾಯಿ ಹೆಸರು: ಇಂದಿರಾಬಾಯಿ

ಕಾಲ: 1901 -

ಅಂಕಿತನಾಮ: ರಾಘವೇಂದ್ರ

ಲಭ್ಯ ಕೀರ್ತನೆಗಳ ಸಂಖ್ಯೆ : 60

ಗುರುವಿನ ಹೆಸರು: ರಾಘವೇಂದ್ರ ಸ್ವಾಮಿಗಳು - ಪರೋಕ್ಷ ಪ್ರೇರಣೆ

ಆಶ್ರಯ: ಕುಟುಂಬ

ರೂಪ: ಬೆತ್ತರ ಮತ್ತು ದಪ್ಪವಾಗಿ ಬೆಳ್ಳಿಗೆ ಸುಂದರಿಯಾಗಿದ್ದರು

ಪೂರ್ವಾಶ್ರಮದ ಹೆಸರು: ರುಕ್ಮಿಣಿ

ಮಕ್ಕಳು: ಅವರ ಹೆಸರು: ಗಂ - 6, ಹೆ - 3, ಪದ್ಮನಾಭರಾವ್, ಅಚ್ಯುತರಾವ್, ರಾಘವೇಂದ್ರರಾವ್, ಆನಂದರಾವ್, ವ್ಯಾಸರಾವ್, ಸಾರಂಗಪಾಣಿ, ಸರಸ್ವತಿ ಜಯ ಮತ್ತು ಶಾಂತ

ಕೀರ್ತನೆಗಳಲ್ಲದೆ ಇತರ ಲಭ್ಯ ಕೈತಿಗಳು : ಇಲ್ಲ

ಪತಿ: ಪತ್ನಿಯ ಹೆಸರು: ಶ್ರೀನಿವಾಸರಾವ್ ಮುನ್ಷಿ

ಒಡಹುಟ್ಟಿದವರು: ಕೃಷ್ಣಮೂರ್ತಿರಾವ್ ಬಂಕಾಪುರ, ತುಂಗಾಬಾು, ಜನಮ್ಮ, ಕಮಲಾಬಾು, ದ್ರೌಪದಿ

ವೃತ್ತಿ: ಗೃಹಿಣಿ

ಕಾಲವಾದ ಸ್ಥಳ ಮತ್ತು ದಿನ: ಬಳ್ಳಾರಿ

ಕೃತಿಯ ವೈಶಿಷ್ಟ್ಯ: ಬಹಳ ಸರಳ ಮತ್ತು ನೇರ ಭಾಷೆ

ಇತರೆ: ಲಲಿತಕಲೆಗಳಲ್ಲಿ ನಿಪುಣರಾಗಿದ್ದರು.

****


rajagopala dasaru ರಾಜಗೋಪಾಲ ದಾಸರು

 Name:  rajagopala dasaru

Ankita:      rajagopala

ದಾಸರ ಹೆಸರು: ರಾಜಗೋಪಾಲ ದಾಸರು

ಜನ್ಮ ಸ್ಥಳ: ಕಡಕೊಳ

ಕಾಲ: 0 -

ಅಂಕಿತನಾಮ: ರಾಜಗೊಪಾಲದಾಸರು-ಆಶುಕವಿ

ಲಭ್ಯ ಕೀರ್ತನೆಗಳ ಸಂಖ್ಯೆ: 2

ಪೂರ್ವಾಶ್ರಮದ ಹೆಸರು: ರಾಜಗೊಪಾಲಾಚಾರ್ಯರು(ತಾತ-ಭೀಮಚಾರ್ಯ)

ಕೀರ್ತನೆಗಳಲ್ಲದೆ ಇತರ ಲಭ್ಯ ಕೈತಿಗಳು  : ಕೀಚಕ ವಧವು(ಸಣ್ಣಕಾವ್ಯ)

ಇತರೆ: ಇವರು ಆಶುಕವಿಗಳಾಗಿದ್ದರಿಂದ ನಿಂತಲ್ಲೇ ಲಾವಣಿಗಳು,ಪದ್ಯಗಳನ್ನು ರಚಿಸುತ್ತಿದ್ದರು ಇದರಿಂದ ಮುಮ್ಮಡಿ ಕೃಷ್ಣರಾಜರಿಂದ ಮಾನ್ಯತೆಯನ್ನೂ ಪಡೆದಿದ್ದ ಇವರ ಕೀಚಕ ವಧವು ಒಂದು ರಮ್ಯ ಕಾವ್ಯವಾಗಿದೆ.

****


rukmangadaru dasaru ರುಕ್ಮಾಂಗದರು ದಾಸರು

 Name:  rukmangadaru

Ankita:  rukma

Vrundavana: Vijayapura/Bijapur    

ದಾಸರ ಹೆಸರು: ರುಕ್ಮಾಂಗದರು

ಜನ್ಮ ಸ್ಥಳ: ಮಾಹಿತಿ ಲಭ್ಯವಿಲ್ಲ

ತಂದೆ ಹೆಸರು: ಕೃಷ್ಣಪಂಡಿತ

ತಾಯಿ ಹೆಸರು: ಲಕ್ಷ್ಮೀದೇವಿ

ಕಾಲ: 1532 -

ಅಂಕಿತನಾಮ: ರುಕ್ಮ

ಲಭ್ಯ ಕೀರ್ತನೆಗಳ ಸಂಖ್ಯೆ: 31

ಗುರುವಿನ ಹೆಸರು: ಗೌರವಾನಂದಯತಿ

ಆಶ್ರಯ: ರುಚಿಕಾನಂದ ಸರಸ್ವತಿ

ಒಡಹುಟ್ಟಿದವರು: ಅಕ್ಕ ಭಾಗೀರಥಿ

ವೃತ್ತಿ: ಅಧ್ಯಾಪನ ಕಾರ್ಯ, ಪ್ರವಚನ, ಕೀರ್ತನ, ದೀನದಲಿತರ, ದುಃಖ ನಿವಾರಣೆಗಾಗಿ ತತ್ಪರರು.

ಕಾಲವಾದ ಸ್ಥಳ ಮತ್ತು ದಿನ: ಫಾಲ್ಹಗುಣ ವಿಜಾಪುರ ದ್ವಾದಶಿ

ವೃಂದಾವನ ಇರುವ ಸ್ಥಳ: ವಿಜಾಪುರ

ಕೃತಿಯ ವೈಶಿಷ್ಟ್ಯ: ಭಾವಭಕ್ತಿಗಳಿಂದ ಕೀರ್ತನೆಗಳು ಆಕರ್ಷಕವಾಗಿವೆ.

ಇತರೆ: ಪಾರ ವಿದ್ವತ್ತೆ, ಧರ್ಮ ಪಾರಾಯಣತೆ ಮತ್ತು ಏಕೋಪಕರ ವೃತ್ತಿ - ಇವರ ಆದರ್ಶ ಜೀವನದ ಕುರುಹುಗಳು

****


ramapati vittalaru dasaru ರಮಾಪತಿವಿಠಲರು ದಾಸರು

 Name:  ramapati vittalaru dasaru

Ankita:  ramapati vittala   

ದಾಸರ ಹೆಸರು: ರಮಾಪತಿವಿಠಲರು

ಜನ್ಮ ಸ್ಥಳ: ನರೇಗಲ್ಲ

ತಾಯಿ ಹೆಸರು: ಈಕೆ ಶ್ರೀದವಿಠಲರ ತಂಗಿ

ಕಾಲ: 1830 -

ಅಂಕಿತನಾಮ: ವೆಂಕಟ ಎಂಬ ಮುದ್ರಿಕೆಯಲ್ಲಿಯೂ ಕೀರ್ತನೆಗಳನ್ನು ರಚಿಸಿದ್ದಾರೆ. ನಂತರ ರಮಾಪತಿ ಎಂಬ ಮುದ್ರಿಕೆಯಲ್ಲಿಯೂ ರಚಿಸಿದ್ದಾರೆ .

ಲಭ್ಯ ಕೀರ್ತನೆಗಳ ಸಂಖ್ಯೆ: 6

ಗುರುವಿನ ಹೆಸರು: ಕರ್ಜಗಿಯ ತೀರ್ಥಪಾದವಿಠಲ

ಪೂರ್ವಾಶ್ರಮದ ಹೆಸರು: ನರೇಗಲ್ಲ ರಾಮಣ್ಣ (ಶ್ರೀದವಿಠಲರ ತಂಗಿಯ ಮಗ)

ವೃತ್ತಿ: ಹೈಸ್ಕೂಲ್ ಶಿಕ್ಷಣ ಪಡೆದು, ಕಾರಕೂನರಾಗಿದ್ದರು

ಕೃತಿಯ ವೈಶಿಷ್ಟ್ಯ: ಒಂದು ಕೀರ್ತನೆಯಲ್ಲಿ ದೀಪದ ಅಣ್ಣಯ್ಯಾಚಾರ್ಯರನ್ನೂ, ಸತ್ಯಪರಾಕ್ರಮರನ್ನೂ ಶ್ರೀ ಸತ್ಯವೀರನ್ನೂ ನೆನೆದಿದ್ದಾರೆ.

ಇತರೆ: ಇವರ ಸ್ವಹಸ್ತಿ ಪ್ರತಿಯಲ್ಲಿ ನರೇಗಲ್ಲ ರಾಮದಾಸ ನಾಮಕ ನರಕೀಟಕನ ಹಸ್ತಾಷಕ' ಎಂದು ಬರೆದು,ಕಾಲವನ್ನು (1876) ಸೂಚಿಸಿದ್ದಾರೆ.

****


raghurama vittala dasaru swamirayacharyaru bidi sanyasi adoni 1972 ರಘುರಾಮ ವಿಠಲ ದಾಸರು ಮುತ್ತಗಿ ಸ್ವಾಮಿರಾಜಾಚಾರ್ಯ

Name: raghurama vittala dasaru (Muthagi Swamirajacharya)

Ankita: raghurama vittala     

ರಘುರಾಮ ವಿಠಲ ದಾಸರು (ಮುತ್ತಗಿ ಸ್ವಾಮಿರಾಜಾಚಾರ್ಯ)

kruti:  15

 shri gurubyO namaha..., hari Om...


*vaishAka bahuLa panchami is the ArAdhane  of shri raghurAma viTTala dAsaru. *


shri raghurAma viTTala dAsaru...


ArAdhane: vaishAka bahuLa panchami

                  ವೈಶಾಖ ಬಹುಳ ಪಂಚಮಿ


Original name: shri muttagi swAmirAyAchAryaru


ಶ್ರೀರಾಮಚರಣಾಸಕ್ತಂ ಮುಖ್ಯಪ್ರಾಣೇನ ಪೋಷಿತಂ |

ರಘುಪ್ರೇಮ ಕೃಪಾಪಾತ್ರಂ ಸ್ವಾಮಿರಾಯಂ ನಮಾಮಿ ತಂ ||


He was the pUrvAshrama adopted son of shri raghuprEma tIrtharu. The adoption itself had the pUrNAnugraha of shri mukhyaprANadEvaru.


All his shAstra eduction was from his father. He was deeply devoted to mukhyaprANa dEvaru. The anugraha that mukhyaprAnaNa dEvaru had showered on him can be seen in the dEvaranAmAs he has composed. 


He has also written shri raghuprEma tIrtha guru stOtra. He attained haripAda in 1972.


shri raghuprema tIrtharu came to the pITa in kUDali akshObhya tIrtha parampare. But he gave up pITa due to some differences and remained a biDi sanyAsigaLu for the rest of his life.  His beautiful brindAvana is at Adoni. It is nicely maintained by his pUrvAshrama family.


shri raghurAma viTTala dAsa varada gOvindA gOvindA.... 

Shri krishNArpaNamastu...

****

In some places it is given 

Name: Muttagi Swamirajacharyaru

ಶ್ರೀ ಮುತ್ತಗಿ ಸ್ವಾಮಿರಾಜಾಚಾರ್ಯ 

***

ಶ್ರೀರಾಮಚರಣಾಸಕ್ತಂ ಮುಖ್ಯಪ್ರಾಣೇನ ಪೋಷಿತಂ /

ರಘುಪ್ರೇಮ ಕೃಪಾಪಾತ್ರಂ ಸ್ವಾಮಿರಾಯಂ ನಮಾಮಿ ತಂ // 

ಹಾಗೆಯೇ 19ನೇ ಶತಮಾನದ ದಾಸಾರ್ಯರು, ಮುಖ್ಯಪ್ರಾಣದೇವರ ಪರಮಾನುಗ್ರಹಪಾತ್ರರೂ, ಪರಮವೈರಾಗ್ಯಶಾಲಿಗಳು, ಶ್ರೀ ರಘುಪ್ರೇಮತೀರ್ಥರ ಪೂರ್ವಾಶ್ರಮದ ಪುತ್ರರೂ, ಅತ್ಯುತ್ತಮ ಕೃತಿಗಳನ್ನು ರಚನೆ ಮಾಡುವುದರ ಜೊತೆ , ಶ್ರೀ ರಘುಪ್ರೇಮಾಷ್ಟಕವನ್ನು ರಚನೆ ಮಾಡಿದವರಾದ ಶ್ರೀ ರಘುರಾಮವಿಠಲರ,  (ಮುತ್ತಗಿ ಸ್ವಾಮಿರಾಜಾಚಾರ್ಯರ ) ಆರಾಧನಾ ಮಹೋತ್ಸವ.

***


Thursday 12 August 2021

gururama vittalaru dasaru bagepalli subramanya dasaru ಗುರುರಾಮವಿಠಲ ದಾಸರು 1912


Name: Gururama vittalaru dasaru  ಗುರುರಾಮವಿಠಲ ದಾಸರು  

Krutis: 345

***


ಶ್ರೀ ಬಾಗೇಪಲ್ಲಿ ಸುಬ್ರಹ್ಮಣ್ಯ ದಾಸರು 
ankita - ಗುರುರಾಮವಿಠಲ

 ನಮ್ಮ ಪ್ರಾತಃ ಸ್ಮರಣೀಯರಾದ ಹರಿದಾಸರು

19ನೇ ಶತಮಾನದ ಪ್ರಖ್ಯಾತ ದಾಸಾರ್ಯರಲ್ಲಿ ಕೋಲಾರದ, ಬಾಗೇಪಲ್ಲಿಗೆ ಸೇರಿದ ದಾಸಾರ್ಯರು ಶ್ರೀ ಬಾಗೇಪಲ್ಲಿ ಸುಬ್ರಹ್ಮಣ್ಯದಾಸರು.  ತಂದೆತಾಯಿ - ಮಧ್ವರಾಯ, ನರಸಮ್ಮ...  ತಂದೆತಾಯಿಯವರು ದಾಸರು 4 ವರ್ಷದ ಮಗು ಆಗಿದ್ದ ಕಾಲಕ್ಕೇನೇ ಪರಂಧಾಮ ಸೇರಿದರು.. ನಂತರದಲಿ ಸೋದರಮಾವ ವೆಂಕಟರಾಯರ ಮನೆಯಲ್ಲಿ ಬೆಳೆದ ಸುಬ್ರಹ್ಮಣ್ಯದಾಸರು 12 ವರ್ಷ ವಯಸ್ಸು ಬಂದನಂತರದಿಂದ ದೇಶಸಂಚಾರಕ್ಕೆ ತೆರಳಿದರು... ತಮ್ಮ 23 ನೇ ವಯಸ್ಸಿನಲ್ಲಿ  ಶ್ರೀ ವಿಜಯರಾಮದಾಸರಿಂದ (ಚಿತ್ರದುರ್ಗದ ಮಾಧವರಾಯರು)  ವಿಜಯರಾಮವಿಠಲರಿಂದ (ಶ್ರೀರಾಮವಿಠಲ, ರಾಮವಿಠಲರು) ಅಂಕಿತೋಪದೇಶವನ್ನು ಪಡೆದು ಗುರುರಾಮವಿಠಲ ರಾಗ್ತಾರೆ..  ಸುಬ್ರಹ್ಮಣ್ಯದಾಸರು, ದೊಡ್ಡಬಳ್ಳಾಪುರದ ಮುದ್ದುಮೋಹನದಾಸರ ಸಮಕಾಲೀನರಾಗಿದ್ದರು. ಮುದ್ದುಮೋಹನದಾಸರಿಂದ ನಿರ್ಮಿತವಾದ ವಿಠಲ ಮಂದಿರಕ್ಕೆ ಭೂಮಿಯನ್ನು ದಾನವಾಗಿ ನೀಡಿದರೆಂದು ಹೇಳ್ತಾರೆ... 

ಗುರುರಾಮವಿಠಲರು  ಕುರುಡರಾಗಿದ್ದರು. ಅವರನ್ನು ಕುರುಡದಾಸರೆಂದೇ ಕರೆಯುತ್ತಿದ್ದರಂತೆ. ಕುರುಡರಾದರೂ ಸಹಾ , ಯಾರ ಸಹಾಯವನ್ನೂ ಬೇಡದೆ ಒಂಟಿಯಾಗಿಯೇ ಊರೂರಾ ಸಂಚಾರ ಮಾಡ್ತಿದ್ದರು.ಸಂಚಾರದ ಸಂದರ್ಭದಲ್ಲಿ ಸಜ್ಜನರ ಸಹವಾಸದಿಂದ ಭಾಗವತ್,  ಭಾರತ, ರಾಮಾಯಣ ಇತ್ಯಾದಿ ಶಾಸ್ತ್ರ ಗ್ರಂಥಗಳನ್ನು ಕೇಳಿ ಅವಲೋಕನ ಮಾಡಿದ್ದರಿಂದ ಶಾಸ್ತ್ರ ಜ್ಞಾನವನ್ನೂ ಆಳವಾಗಿ ಪಡೆದವರಾಗಿದ್ದಾರೆ..
ಕಾಶಿಯಿಂದ-ಕನ್ಯಾಕುಮಾರಿ ವರೆಗೂ ಪಾದಚಾರಿಗಳಾಗಿಯೇ ತೀರ್ಥಯಾತ್ರೆ ಮಾಡ್ತಿದ್ದರಂತೆ. ಕುರುಡರಾದರೂ ಸಹಾ ಶ್ರೀಮದಾಚಾರ್ಯರ ಗ್ರಂಥಗಳು, ಹರಿದಾಸರ ಕೀರ್ತನೆಗಳು, ಶಾಸ್ತ್ರ ಜ್ಞಾನ ಎಲ್ಲದರಲ್ಲೂ ನಿಷ್ಣಾತರಾಗಿದ್ದರು. ಯಾರಾದರೂ ಪ್ರಶ್ನೆ ಕೇಳಿದರೆ ಗ್ರಂಥ,ಶ್ಲೋಕದ ಪ್ರಮಾಣದೊಂದಿಗೆ , ಶ್ಲೋಕಗಳ ಸಂಖ್ಯೆಯೊಂದಿಗೆ ಉತ್ತರ ನೀಡ್ತಿದ್ದರಂತೆ... ಬಹುಭಾಷಾ ಕೋವಿದರಾದ ದಾಸಾರ್ಯರು ತಾವು ಯಾತ್ರೆ ಮಾಡಿದ ಎಲ್ಲಾ ಕ್ಷೇತ್ರ ಮೂರ್ತಿಗಳ ವರ್ಣನೆ ಅಲ್ಲಿನವರಿಂದ ತಿಳಿದು, ತಮ್ಮ ಒಳಗಣ್ಣಿನಿಂದ ನೋಡಿ ಆಶುಕವನ ಬರೆಯುತ್ತಿದ್ದರಂತೆ. ಇವರು ಹಾಡಿದ ಪ್ರತಿಯೊಂದು ರಚನೆಯನ್ನು ಬೇರೆಯವರಿಂದ ಬರೆಸಿಡ್ತಿದ್ದರು.. ಹೀಗೆ ಬರೆದಿಟ್ಟಿರುವ ಕೃತಿಗಳು ಮೈಸೂರು ರಾಘವೇಂದ್ರಾಚಾರ್ಯರು, ಬಾಗೇಪಲ್ಲಿ ವಿದ್ವಾಂಸರು ಶ್ರೀನಿವಾಸರಾಯರು ನಿರೂಪಣೆ ಮಾಡಿ 1905 ಪ್ರಕಟಮಾಡಿದ್ದರು. 

ದಾಸರು ಪವಾಡಗಳನ್ನು ಮಾಡಿದ್ದನ್ನು ಇಂದಿಗೂ ಜನರು ನೆನೆಯುತ್ತಾರೆ. ಚಿಂತಾಮಣಿಯಲ್ಲಿ ಒಂದು ಮದುವೆಗೆ ಹೋದಾಗ ಅಲ್ಲಿ ಒಂದು ಬಂಗಾರದ ಸರ ಹೋಗಿದ್ದು, ಆ ಆರೋಪ ದಾಸರಮೇಲೆ ಬಂದದ್ದು, ಅಲ್ಲಿನ ಪೋಲಿಸ್ ಠಾಣೆಗೆ ಕರೆದೊಯ್ದದ್ದು , ಮತ್ತೆ ಸರ ಸಿಕ್ಕಾಗ ಎಲ್ಲರೂ ಬಂದು ದಾಸಾರ್ಯರ ಕಾಲಿಗೆ ಬಿದ್ದು ಕ್ಷಮೆ ಬೇಡಿದ್ದು ಇದೊಂದು ಘಟನೆ ಆಗಿದೆ.. ಎಲ್ಲರೂ ಕಾಲಿಗೆ ಬಿದ್ದು ಕ್ಷಮೆ ಕೇಳಿದಾಗ, ಜನ್ಮಾಂತರದಲಿ ತೀರದ ಪಾಪರಾಶಿಯನ್ನು ಒಂದೇ ದಿನದಲಿ ದೂರಮಾಡಿದರೆಂದು ಹೇಳಿ ಹೊರಟುಹೋದರು.. ಅಷ್ಟು ವೈರಾಗ್ಯಶಾಲಿಗಳೂ, ಹಾಗೂ ಎಲ್ಲವನ್ನೂ ಪರಮಾತ್ಮನ ಲೀಲೆಯೆಂದೆ  ಅನುಸಂಧಾನಪೂರ್ವಕವಾಗಿಯೇ ತಿಳಿದವರಾಗಿದ್ದವರು ಶ್ರೀ ದಾಸಾರ್ಯರು...

ಮತ್ತೊಂದು ಸಂದರ್ಭದಲ್ಲಿ ಒಂದು ಪುಟ್ಟ ಹುಡುಗ ಜ್ವರ ಬಂದು ಊಟ, ನೀರು ಇಲ್ಲದೇ ಬಿದ್ದಿದ್ದನು, ಅದೇ ಸಮಯ ದಾಸರು ಆ ಮನೆಗೆ ಬಂದು ಜ್ವರಹರಹ್ವಯನಾದ ನರಸಿಂಹ ದೇವರ ಸ್ತುತಿಯನ್ನು ಮಾಡಿ, ಆತನ ಜ್ವರವನ್ನು ದೂರಮಾಡಿದರು.. 

ಮತ್ತೊಮ್ಮೆ ಕೋಲಾರದಲ್ಲಿ ಮಳೆಯಿಲ್ಲದೆ ಕುಡಿಯುವುದಕ್ಕೆ ನೀರೂ ಇಲ್ಲದೆ ಜನ ಬಾಧೆ ಪಡ್ತಿದ್ದಾಗ, ಮಳೆ ಬಂದು ಸಂತೋಷ ನೆಳಗೊಳಲೆಂದು ದಾಸಾರ್ಯರು ಸೂರ್ಯ ಮಂಡಲ ಅಂತರ್ಗತ ನಾರಾಯಣನನ್ನು ಸ್ತುತಿಸಿದರು. ಪರ್ಜನ್ಯ ನಾಮಕನಾದ ಪರಮಾತ್ಮನ ದಯೆದಿಂದ ಕುಂಭವೃಷ್ಟಿ ಆಗಿ ಅಲ್ಲಿನ ಜನರ ಸಂತೋಷಕ್ಕೆ ಎಣೆಯಿಲ್ಲವಂತೆ... 

ಇವರು ಶ್ರೀಮದ್ವ್ಯಾಸರಾಜ ಮಠದ ಯತಿಪರಂಪರಾ ಸ್ತುತಿ ರಚನೆ ಮಾಡಿದವರಾಗಿದ್ದಾರೆ. ಅಲ್ಲದೆ ಮಧ್ವಸಿದ್ಧಾಂತ ಸಾರ ಎಂಬ 1055 ಕಂದಪದ್ಯಗಳ  ಗ್ರಂಥವನ್ನು ರಚನೆ ಮಾಡಿದ್ದಾರೆ. (ಇದರಲ್ಲಿಯೇ ಪರಂಪರಾ ಸ್ತುತಿ ಬಂದಿದೆ) 
ವಾರ್ಧಕ ಷಟ್ಪದಿಯಲ್ಲಿ ದಾಸಪೀಳಿಗೆಯ ಕೃತಿ ರಚನೆ ಮಾಡಿದವರಾಗಿದ್ದಾರೆ. ಇವಲ್ಲದೇ ಆತ್ಮನಿವೇದನೆಯ, ಲೋಕದ, ಸಮಾಜದ , ಸಂಪ್ರದಾಯದ, ವಿಶೇಷ ಸಂದರ್ಭದ ಕೃತಿಗಳು ಹೀಗೆ ಒಟ್ಟು ಎಲ್ಲವೂ ಸೇರಿ 350 ಕೃತಿಗಳು ರಚನೆ ಮಾಡಿದರು. ಮೈಸೂರು ನಾಲ್ವಡಿ ಕೃಷ್ಣರಾಜ ಒಡೆಯರ ಪಟ್ಟಾಭಿಷೇಕದ ಕೃತಿಯೂ ಸೇರಿದೆ.. 

ಕಥನಗಳ ರೂಪದಲ್ಲಿ ಪುರಂಜನೋಪಾಖ್ಯಾನ ( ತಮ್ಮ ಪೂರ್ವಜರ ಪರಂಪರೆಯ ಸ್ತುತಿ , ಸಂಸ್ಕೃತಿ ಸ್ತುತಿ ),  ಮನ್ಮಥ ಚರಿತ್ರೆ,  ಸಂಕ್ಷಿಪ್ತ ಭಾರತ, ಭಾಗವತ, ದಶಮಸ್ಕಂಥದ ಕೃಷ್ಣನ ಕಥೆ, ವಿಷ್ಣು ಶತಕ ಇವುಗಳ ರಚನೆ ಮಾಡಿದರು. ಅಲ್ಲದೆ ಹರಿಕಥೆಗೆ ಅನುಕೂಲವಾದಂತೆ ಪ್ರಲ್ಹಾದಚರಿತ್ರೆ, ಅನಸೂಯಾ ಚರಿತ್ರೆ,  ದ್ಯೂತಪರ್ವ, ಮಾಧವ ಚರಿತ್ರೆ,  ದೂರ್ವಾಸಚರಿತ್ರೆ ಇತ್ಯಾದಿಗಳ ರಚನೆಯೂ ಮಾಡಿದ್ದಾರೆ... ಪರಮ ವೈರಾಗ್ಯದಿಂದ ಜೀವನವನ್ನು ಸಾಗಿಸಿದ ಶ್ರೀ ದಾಸಾರ್ಯರು 1915 ರ ವರೆಗೂ ಜೀವಿಸಿ ಪರಮಾತ್ಮನ ಸೇರಿದರೆಂದು ಹೇಳ್ತಾರೆ.... ಅವರಿಗೆ ಬಂಗಾರ ಧನ ಇತ್ಯಾದಿಗಳ ಮೋಹ ಇರದೇ ಇದ್ದರೂ  ಎಂದೂ ಕೈಗೆ ಬೆಳ್ಳಿಯ ಕಡಗವನ್ನು ಧರಿಸುತ್ತಿದ್ದರಂತೆ. ಯಾರಾದರೂ ಏಕೆಂದು ಕೇಳಿದಾಗ ನಾವು ಎಂದು ಎಲ್ಲಿ ಇರ್ತಿವಿ ಗೊತ್ತಿಲ್ಲ.  ಬೇರೆಡ ಸಾವು ಬಂದಲ್ಲಿ ಈ ಬೆಳ್ಳಿಯ ಕಂಕಣ ಉಪಯೋಗವಾಗುವುದು ಎಂತಿದ್ದರಂತೆ.. ಅವರ ಮುನ್ನೋಟಕ್ಕೆ , ಮುಂದುಜಾಗ್ರತ್ತೆಗೆ ನಮೋ.. 

ಹೀಗೆ ಕಣ್ಣಿಲ್ಲದವರಾದರೂ, ಒಳಗಣ್ಣಿನಿಂದ ಪರಮಾತ್ಮನ ನಿಜ ದರ್ಶನ ಮಾಡಿ, ಆತನ ಸ್ಮರಣೆ, ಕೃತಿ, ಗ್ರಂಥಗಳ ರೂಪದಲ್ಲಿ ಮಾಡಿ ನಮಗೆ ನೀಡಿದ ಶ್ರೀ ಬಾಗೇಪಲ್ಲಿ ಸುಬ್ರಹ್ಮಣ್ಯದಾಸರ ಗುರುರಾಮವಿಠಲರ ಜೀವನದ ಮಹತ್ವದ ವಿಷಯಗಳನ್ನು ತಿಳಿಸಿ ಹೇಳಲು ನಾನಂತೂ ಬಹಳ ಸಣ್ಣವಳು.. ಆದರೂ ಅವರ ಅನುಗ್ರಹದಂತೆ ಮಾಡಿದ ಪದುಮಳ ಈ ಸಣ್ಣ ಪ್ರಯತ್ನಾ ಸುಮವನ್ನು ಶ್ರೀ ದಾಸಾರ್ಯರ ಅಂತರ್ಗತ ಅವರ ಮನೆದೇವರಾದ ಭಾರತೀರಮಣ ಮುಖ್ಯಪ್ರಾಣಾಂತರ್ಗತ  ನರಸಿಂಹ ದೇವರ ಪದಪದ್ಮಗಳಲ್ಲಿ ವಿನಯಪೂರ್ಕಕ  ಸಮರ್ಪಣೆಯೊಂದಿಗೆ.....
-Smt. Padma Sirish   7 April 2020
ನಾದನೀರಾಜನದಿಂ ದಾಸಸುರಭಿ 
***


info from kannadasiri.in

ಹತ್ತೊಂಬತ್ತನೆಯ ಶತಮಾನದ ಹರಿದಾಸ ಸಾಹಿತ್ಯಕ್ಕೆÉ ತಮ್ಮ ವೈವಿಧ್ಯಮಯ ರಚನೆಗಳ ಮೂಲಕ ಅಪೂರ್ವ ಕೊಡುಗೆಯನ್ನು ನೀಡಿ ಕೇವಲ 50-60 ವರ್ಷಗಳ ಅಂತರದಲ್ಲಿಯೇ ಅe್ಞÁತರ ಪಟ್ಟಿಗೆ ಸೇರಿಹೋದವರು ಬಾಗೇಪಲ್ಲಿ ಸುಬ್ರಹ್ಮಣ್ಯ ದಾಸರು. ಇವರ ಅಂಕಿತ `ಗುರುರಾಮವಿಠಲ'.

ಶ್ರೀಸುಬ್ರಹ್ಮಣ್ಯದಾಸರು ಕೋಲಾರ ಜಿಲ್ಲೆಯ ಬಾಗೇಪಲ್ಲಿಯವರು. ವೈಷ್ಣವರಲ್ಲಿ ಒಂದು ಉಪಪಂಗಡವಾದ ಷಾಷ್ಟಿಕಕುಲ (ಅರವತ್ತೊಕ್ಕಲು)ದವರು. ಶಾಂಡಿಲ್ಯಗೋತ್ರದವರು. ನರಸಿಂಹ ಇವರ ಮನೆದೇವರು. ಬಾಗೇಪಲ್ಲಿಯ ಸಮೀಪದ ಪಾತಪಾಳ್ಯ ಇವರ ಪೂರ್ವಿಕರ ವಾಸಸ್ಥಳ. ಬಾಗೇಪಲ್ಲಿದಾಸರು, ಪಾತಪಾಳ್ಯದ ದಾಸರು, ಸುಬ್ರಹ್ಮಣ್ಯದಾಸರು, ಬಾಗೇಪಲ್ಲಿ ಸುಬ್ರಹ್ಮಣ್ಯದಾಸರು, ಗುರುರಾಮವಿಠಲರು, ಕುರುಡುದಾಸರು ಹೀಗೆ ಹಲವು ಹೆಸರುಗಳಿಂದ ದಾಸರನ್ನು ಕರೆಯುತ್ತಿದ್ದರು. ದಾಸರು ರಚಿಸಿರುವ ಸ್ವವಂಶಾವಳಿ ಶ್ಲೋಕ 25 ಪದ್ಯಗಳ ಒಂದು ಸಂಸ್ಕøತ ಕೃತಿ. ಇದರಲ್ಲಿ ತಮ್ಮ ವಂಶಾವಳಿಯನ್ನು, ಕುಲಗೋತ್ರಗಳನ್ನು ನಿರೂಪಿಸಿದ್ದಾರೆ. 'ಪುರಂಜನೋಪಾಖ್ಯಾನ ' ಎಂಬ ಕೃತಿಯ ಕೊನೆಯ ಭಾಗದಲ್ಲಿ, 'ಒಬ್ಬನೇದಾಸ ಹುಟ್ಟಿದನಿವ' ಎಂಬ ಕೀರ್ತನೆಯಲ್ಲಿಯೂ ತಮ್ಮ ಸ್ವಂತ ವಿಷಯಗಳನ್ನು ತಿಳಿಸಿದ್ದಾರೆ. ಇವರ ತಂದೆಯವರ ಹೆಸರು ಮಧ್ವರಾಯ, ನರಸಪ್ಪ ಪಿತಾಮಹ, ನಾರಣಪ್ಪ ಪ್ರಪಿತಾಮಹ. ದಾಸರ ತಾಯಿಯವರ ಹೆಸರು ನರಸಮ್ಮ, ಆಕೆಯ ತಂದೆ ಅಹೋಬಲರಾಯ.

ಸುಬ್ರಹ್ಮಣ್ಯ ನಾಲ್ಕು ವರ್ಷದವನಾಗಿರುವಾಗಲೇ ತಂದೆತಾಯಿಗಳು ಸ್ವರ್ಗಸ್ಥರಾದರು. ಅನಂತರ ಅವನು ಬೆಳೆದದ್ದು ಸೋದರಮಾವ ವೆಂಕಟರಾಯನ ಮನೆಯಲ್ಲಿ. ಅಜ್ಜಿ ಪುಟ್ಟಮ್ಮ 12ನೆಯ ವಯಸ್ಸಿನವರೆಗೂ ಪೋಷಿಸಿದಳು. ಸೋದರಮಾವ ವೆಂಕಟರಾಯನೇ ಉಪನಯನ ಮಾಡಿದ. ಉಪನಯನವಾದ ಮೇಲೆ ಹಲವಾರು ವರ್ಷಗಳ ಕಾಲ ಸುಬ್ರಹ್ಮಣ್ಯ ಒಬ್ಬೊಂಟಿಗನಾಗಿ ದೇಶಸಂಚಾರ ಮಾಡಿದ 23ನೆಯ ವರ್ಷದಲ್ಲಿ ವಿಜಯರಾಮದಾಸರಿಂದ ದಾಸತ್ವದ ದೀಕ್ಷೆಯನ್ನು ಪಡೆದು ಗುರುರಾಮವಿಠಲ ಎಂಬ ಅಂಕಿತದಿಂದ ಹರಿದಾಸನಾದ.

ದಾಸರ ಇಬ್ಬರು ಸೋದರ ಮಾವಂದಿರಲ್ಲಿ ಒಬ್ಬ ಗೃಹಸ್ಥನಾದರೂ ಮಕ್ಕಳಿರಲಿಲ್ಲ. ಮತ್ತೊಬ್ಬ ಬ್ರಹ್ಮಚಾರಿಯಾಗಿ ಉಳಿದುಕೊಂಡ. ದಾಸರು ಬ್ರಹ್ಮಚಾರಿಯಾಗಿಯೇ ಉಳಿದುಕೊಂಡದ್ದರಿಂದ ತಾಯಿಯ ಅಥವಾ ತಂದೆಯ ಕಡೆ ವಂಶ ಬೆಳೆಯಲಿಲ್ಲ. ಹೀಗಿರುವಾಗ ತನ್ನ ಪಿತೃಗಳಿಗೆ ಮೋಕ್ಷ ದೊರೆಯುವುದಾದರೂ ಹೇಗೆ ಎಂದು ಚಿಂತಿಸಿ ಪಿತೃಗಳ ಉದ್ಧಾರಕ್ಕಾಗಿ vಬಿಬಿÁವು ಹರಿಸ್ತೋತ್ರಗಳನ್ನು ರಚಿಸಿದ್ದಾಗಿ ದಾಸರು ಹೇಳಿಕೊಂಡಿದ್ದಾರೆ. ತಮ್ಮ ಕೃತಿಗಳನ್ನೇ ಮಕ್ಕಳೆಂದು ಭಾವಿಸಿ ಇವೇ ತಮ್ಮ ಪಿತೃಗಳಿಗೆ ಮೋಕ್ಷವನ್ನು ನೀಡುತ್ತವೆಂಬ ಭಾವನೆ ತುಂಬ ಉದಾತ್ತವಾದುದು.

ದಾಸರ ಜೀವಿತಕಾಲವನ್ನು ನಿರ್ದಿಷ್ಟವಾಗಿ ಹೇಳಲು ಸಾಧ್ಯವಿಲ್ಲದಿದ್ದರೂ, ಅವರೇ ರಚಿಸಿರುವ ಕೀರ್ತನೆಗಳ ಆಧಾರದ ಮೇಲೆ ಸುಮಾರು ಕ್ರಿ.ಶ.1850 ರಿಂದ 1915 ಎಂದು ಭಾವಿಸಬಹುದು. ವ್ಯಾಸರಾಜ ಮಠದ ಗುರುಪೀಳಿಗೆಯನ್ನು ನಿರೂಪಿಸುವ ಒಂದು ಕೃತಿಯಲ್ಲಿ ವಿದ್ಯಾಶ್ರೀನಿವಾಸ ಯತೀಂದ್ರರು(ಕ್ರಿ.ಶ.1890) ತಮ್ಮ ಸಮಕಾಲೀನರು ಎಂಬುದನ್ನು ಗುರುರಾಮವಿಠಲರು ಉಲ್ಲೇಖಿಸಿದ್ದಾರೆ. ವಿದ್ಯಾಪೂರ್ಣ ತೀರ್ಥರಿಂದ ಪ್ರಾರಂಭಿಸಿ (ಕ್ರಿ.ಶ.1824-1872) ವಿದ್ಯಾರತ್ನಾಕರ ತೀರ್ಥರವರೆಗೆ (ಕ್ರಿ.ಶ.1915) ಇದ್ದ ವ್ಯಾಸರಾಜಮಠದ ಯತಿಗಳು ಗುರುರಾಮವಿಠಲರ ಸಮಕಾಲೀನರು. ಆದರೆ ವಿದ್ಯಾ ಶ್ರೀನಿವಾಸ ತೀರ್ಥರವರಗೆ (ಕ್ರಿ.ಶ.1890) ಮಾತ್ರ ಗುರುಪರಂಪರೆಯ ಸ್ತುತಿಯಲ್ಲಿ ಉಲ್ಲೇಖಿಸಲಾಗಿದೆ. ಆದ್ದರಿಂದ ಕ್ರಿ.ಶ.1890ಕ್ಕೆ ಮೊದಲು ಗುರುರಾಮವಿಠಲರು ಈ ಗುರು ಪರಂಪರೆಯನ್ನು ರಚಿಸಿರಬೇಕು. ಗುರುರಾಮವಿಠಲರು ತಮ್ಮ ' ಸಿದ್ಧಾಂತ ಸಾರ ' ಎಂಬ ಗ್ರಂಥವನ್ನು ಕ್ರಿ.ಶ.1893ರಲ್ಲಿ ರಚಿಸಿದ್ದಾಗಿ ತಿಳಿಸಿದ್ದಾರೆ. ಕ್ರಿ.ಶ.1912ರಲ್ಲಿ ದೆಹಲಿಯಲ್ಲಿ ದರ್ಬಾರು ನಡೆಸಿದ ಜಾರ್ಜ್ ದ ಫಿಫ್ತ್‍ದೊರೆಗೆ ರಾಜಾಶೀರ್ವಾದ ಮಾಡಿದ್ದಾರೆ. ಇದರಿಂದ ದಾಸರು ಕ್ರಿ.ಶ.1912ರ ವರೆಗೂ ಜೀವಂತವಾಗಿದ್ದಿರಬೇಕು.

ನಾಲ್ವಡಿ ಕೃಷ್ಣರಾಜ ಒಡೆಯರಿಗೆ ಪಟ್ಟಾಭಿಷೇಕವಾದ ಸಂದರ್ಭದಲ್ಲಿ (ಫೆಬ್ರುವರಿ 1, 1895) ಗುರುರಾಮವಿಠಲರು ' ಕೃಷ್ಣನೃಪನು ಸಲಹಲಿ ಉತ್ಕøಷ್ಟ ಫಲಗಳಾಗಲಿ ' ಎಂದು ಕೀರ್ತನೆಯೊಂದರಲ್ಲಿ ಹಾರೈಸಿದ್ದಾರೆ. ಮಹಾ ಎಡ್ವರ್ಡ್ ಚಕ್ರವರ್ತಿ ಹೆಸರನ್ನು ಉಲ್ಲೇಖಿಸಿದ್ದಾರೆ. ಮೈಸೂರಿನ ದಿವಾನರಾಗಿದ್ದ ದಿವಾನ್ ಸಿ.ವಿ.ರಂಗಚಾರ್ಲು ಅವರ ಆಡಳಿತದ ಅವಧಿಯಲ್ಲಿ ಬೆಂಗಳೂರು ಖಜಾನೆಯ ಭಕ್ಷಿಯಾಗಿದ್ದ ಸೇತುರಾಯ ಎಂಬ ಅಧಿಕಾರಿಯನ್ನು ಕರಿತು ' ಸೇತುರಾಯನ ಕತೆ ' ಎಂಬ ಖಂಡಕಾವ್ಯವನ್ನು ರಚಿಸಿದ್ದಾರೆ.

'ಪ್ರಾಣದೇವ ಜೀಯ ದೇಹದಲಿ ಪ್ರಾಣ ತಗ್ಗಿತಯ್ಯ' ಎಂಬ ಕೀರ್ತನೆಯಲ್ಲಿ ಅನಾರೋಗ್ಯ ತಮ್ಮನ್ನು ಕಾಡುತ್ತಿದೆ ಎಂದೂ, ಕೈಕಾಲುಗಳು ಸೋತು ಹೋಗಿದೆಯೆಂದೂ, ಕಾಲ ಮೃತ್ಯು ಸಮೀಪಿಸುತ್ತಿದೆಯೆಂದೂ ತಿಳಿಸಿದ್ದಾರೆ. 'ವರುಷ ಐವತ್ತಾರು ಕಳೆದಿತು ಪರಿಪಾಲಿಪರ್ಯಾರು' ಎಂದು ಹಂಬಲಿಸಿದ್ದಾರೆ. ಸ್ವಕೀಯ ವೃತ್ತಾಂತವನ್ನೊಳಗೊಂಡ ಈ ಕೀರ್ತನೆಯ ರಚನೆಯ ಕಾಲಕ್ಕೆ ದಾಸರಿಗೆ ಐವತ್ತಾರು ವರ್ಷವಾಗಿರಬೇಕು.

ಸುಬ್ರಹ್ಮಣ್ಯದಾಸರು ದೊಡ್ಡಬಳ್ಳಾಪುರದ ಮುದ್ದುಮೋಹನ ವಿಠಲದಾಸರ (ಕ್ರಿ.ಶ.1898) ಸಮಕಾಲೀನರು. ಮುದ್ದುಮೋಹನ ವಿಠಲದಾಸರು ದೊಡ್ಡಬಳ್ಳಾಪುರದಲ್ಲಿ ಕಟ್ಟಿಸಿದ ವಿಜಯ ವಿಠಲ ದೇವಾಲಯಕ್ಕೆ ಸುಬ್ರಹ್ಮಣ್ಯದಾಸರು ಭೂಮಿಯನ್ನು ದಾನವಾಗಿ ನೀಡಿದ್ದರು.

ಈ ಎಲ್ಲದರ ಆಧಾರದ ಮೇಲೆ ಶ್ರೀ ಗುರುರಾಮವಿಠಲರು ಕ್ರಿ.ಶ. ಸುಮಾರು 1850 ರಿಂದ 1915ರವರೆಗೆ ಜೀವಿಸಿದ್ದರೆಂದು ಹೇಳಬಹುದು.

ಗುರುರಾಮವಿಠಲರು ಹುಟ್ಟು ಕುರುಡರಾಗಿದ್ದರೆಂದೂ, ಆದ್ದರಿಂದ ಅವರನ್ನು ಕುರುಡುದಾಸರೆಂದೇ ಕರೆಯುತ್ತಿದ್ದರೆಂದೂ ಪ್ರತೀತಿ. ಆದರೆ ಅವರ ಕೃತಿಗಳಲ್ಲಿರುವ ಅಪಾರ ಲೋಕಾನುಭವ, ಪಾಂಡಿತ್ಯಗಳನ್ನು ಗಮನಿಸಿದರೆ ಇವರು ಹುಟ್ಟು ಕುರುಡರಾಗಿರಲಾರರು. ಬಹುಶಃ ಮಧ್ಯವಯದಲ್ಲಿ ಕಣ್ಣುಗಳನ್ನು ಕಳೆದುಕೊಂಡು ಕುರುಡರಾಗಿ ದೇಶಾಂತರ ಹೊರಟುಹೋದರೆಂದು ಕಾಣುತ್ತದೆ. ಊರೂರು ಅಲೆದು, ನೂರಾರು ವಿಷಯಗಳನ್ನು ತಿಳಿದು, ಭಾರತ, ಭಾಗವತ, ಶಾಸ್ತ್ರ ಗ್ರಂಥಗಳನ್ನು ಕೇಳಿ ಲೋಕಾನುಭವ ಪಡೆದು ದಾಸದೀಕ್ಷೆ ಸ್ವೀಕರಿಸಿರಬೇಕು. ಇವರು ಕುರುಡರಾಗಿದ್ದರೆಂಬುದಕ್ಕೆ ಕೀರ್ತನೆಗಳಲ್ಲೂ ಉಲ್ಲೇಖಗಳು ದೊರೆಯುತ್ತವೆ. ' ಇಹ ಸುಖ ಮೊದಲೇ ಇಲ್ಲ' ಎಂಬ ಕೀರ್ತನೆಯಲ್ಲಿ

'ಕಣ್ಣಲ್ಲದ ಚಿಂತೆ ಒಂದು | ಸದಾ

ಬನ್ನಬಡುವುದು ಯೋಚನೆ ಎರೆಡು

ನಿನ್ನವನೆನಿಸೀ ಕಷ್ಟ ಬಿಡಿಸಿ ಒಳ

ಗಣ್ಣ ಕೊಟ್ಟು ನಿನ್ನ ಸೇವೆಯ ಪಾಲಿಸೋ'

ಎಂದು ತಮಗೆ ಒಳಗಣ್ಣು ನೀಡುವಂತೆ ದೇವರನ್ನು ಬೇಡಿದ್ದಾರೆ. 'ಸಾಕು ಸಾಕು ಸ್ವಾಮಿ ಸಂಸಾರವು' ಎಂಬ ಕೀರ್ತನೆಯಲ್ಲಿ ಕಿವಿಗಳು ಕೇಳದು. ಕಣ್ಣುಕಾಣದು, ಬಂಧುಗಳನ್ನು ಆಶ್ರಯಿಸಿ ಬದುಕುವುದು ಬಹಳ ಕಷ್ಟ ಎಂದು ಭಾಗ್ಯವಲ್ಲಿಯ ಹನುಮಂತನಲ್ಲಿ ತಮ್ಮ ಕಷ್ಟಗಳನ್ನು ನಿವೇದಿಸಿಕೊಂಡಿದ್ದಾರೆ. 'ಒಂದು ಅರಿಯದ ಉಭಯಾಂಧನು ನಾನು' ಎಂದು ಮತ್ತೊಂದು ಕೀರ್ತನೆಯಲ್ಲಿ ಹೇಳಿದ್ದಾರೆ.

ಗುರುರಾಮವಿಠಲರ ಎಲ್ಲ ಕೀರ್ತನೆಗಳನ್ನು ಸಂಗ್ರಹಿಸಿ ತಮ್ಮ ಹರಿಕಥೆಗಳಿಗೆ ಬಳಸಿಕೊಳ್ಳುತ್ತಿದ್ದ ಶ್ರೀ ಟಿ.ಕೆ. ವೇಣುಗೋಪಾಲದಾಸರು ತಮ್ಮ ದತ್ತು ತಾಯಿಯ ತವರು ಮನೆಯ ದಾಯಾದಿಗಳಾದ ಗುರುರಾಮವಿಠಲರ ಬಗ್ಗೆ ಹೀಗೆ ಹೇಳಿದ್ದಾರೆ:'ಸುಬ್ರಹ್ಮಣ್ಯ ದಾಸರನ್ನು ನಮ್ಮ ಜನಕತಂದೆ, ತಾಯಿ, ಹಿರಿಯ ಅಕ್ಕ ಮತ್ತು ಹಿರಿಯ ಅಣ್ಣ ನೋಡಿದ್ದರು, ಅವರು ವರ್ಷಕ್ಕೆ ಒಂದು ಬಾರಿ ನಮ್ಮ ಮನೆಗೆ ಬಂದು ಹೋಗುತ್ತಿದ್ದರಂತೆ. ಅವರು ಹುಟ್ಟು ಕುರುಡರು ಎಂದು ಅವರಿಂದ ತಿಳಿದು ಬಂತು. ಇದು ಅವರನ್ನು ನೋಡಿದವರ ಅಭಿಪ್ರಾಯವಾದರೂ. ಬಹುಶಃ ಹುಟ್ಟುಕುರುಡರಾಗಿರಲಾರರು. ಯೌವ್ವನಾವಸ್ಥೆಯಲ್ಲಿ ಯಾವಾಗಲೋ ಕಣ್ಣು ಕಳೆದುಕೊಂಡು ವೈರಾಗ್ಯಪರರಾಗಿರಬೇಕು'.

ಸುಬ್ರಹ್ಮಣ್ಯದಾಸರು ಕುರುಡರಾದರೂ ಯಾರ ಸಹಾಯವನ್ನೂ ಪಡೆಯದೆ ಒಬ್ಬಂಟಿಗರಾಗಿ ಹೆಗಲ ಮೇಲೆ ಹಸಿಬೆ ಚೀಲವನ್ನು ಹಾಕಿಕೊಂಡು ಊರೂರು ಸಂಚರಿಸುತ್ತಿದ್ದರು. ಕಾಶಿಯಿಂದ ಕನ್ಯಾಕುಮಾರಿಯವರೆಗೂ ಪಾದಚಾರಿಗಳಾಗಿ ತೀರ್ಥಯಾತ್ರೆಯನ್ನು ಮಾಡಿ ಬಂದವರು. ದಾಸರು ಕುರುಡರಾದ್ದರಿಂದ ಓದುವ ಬರೆಯುವ ಅವಕಾಶವೇ ಅವರಿಗಿರಲಿಲ್ಲ. ಆದರೂ ಬಹುಭಾಷಾe್ಞÁನವುಳ್ಳವರಾಗಿದ್ದರು. ಮಧ್ವಾಚಾರ್ಯರ ಕೃತಿಗಳು, ಹರಿದಾಸರ ಕೀರ್ತನೆಗಳು, ಭಾರತ, ಭಾಗವತ, ರಾಮಾಯಣ ಇವುಗಳನ್ನು ಕಂಠಪಾಠ ಮಾಡಿಕೊಂಡಿದ್ದರು. ಯಾವುದಕ್ಕಾದರೂ ಆಧಾರ ಎಲ್ಲಿದೆ ಎಂದು ಕೇಳಿದರೆ ಗ್ರಂಥದ ಹೆಸರನ್ನೂ, ಅಧ್ಯಾಯವನ್ನೂ, ಶ್ಲೋಕಗಳ ಸಂಖ್ಯೆಯನ್ನು ಕೇಳಿದ ನೆನಪಿನಿಂದಲೇ ಹೇಳುತ್ತಿದ್ದರಂತೆ. ತಾವು ಯಾತ್ರೆ ಮಾಡಿದ ಕ್ಷೇತ್ರ ಮೂರ್ತಿಗಳ ವರ್ಣನೆಯನ್ನು ಬೇರೆಯವರಿಂದ ಕೇಳಿ ತಿಳಿದುಕೊಂಡು ಆ ಪ್ರತಿಮೆಗಳ ಉದ್ದ, ಅಗಲ, ಭಂಗಿ, ಅಡಿಯಿಂದ ಮುಡಿಯವರೆಗಿನ ವಸ್ತ್ರ್ತ್ರಾಲಂಕಾರ ತಾವು ಒಳಗಣ್ಣಿಂದ ನೋಡಿದ ದರ್ಶನ ಎಲ್ಲವನ್ನೂ ನಿರೂಪಿಸುತ್ತಿದ್ದರು. ಆಶು ಕವಿಗಳಾಗಿ ಕೇಳಿದ ವಸ್ತುಗಳ ಮೇಲೆಲ್ಲಾ ಪದ್ಯ ಬರೆಯುತ್ತಿದ್ದರು. ಕುಳಿತಲ್ಲೇ ಹತ್ತಾರು ನುಡಿಗಳ ದೇವರನಾಮಗಳನ್ನು ಕಟ್ಟುತ್ತಿದ್ದರು. ಮದುವೆ, ಮುಂಜಿ, ಉತ್ಸವ, ಜಾತ್ರೆ ಹೀಗೆ ಹಲವು ಸಂದರ್ಭಗಳಿಗೆ ಸ್ಪಂದಿಸಿ ಹಾಡು ಹೇಳುತ್ತಿದ್ದರು. ಯಾರಾದರೂ ಬರವಣಿಗೆ ತಿಳಿದವರು ಸಿಕ್ಕಿದರೆ ತಾವು ರಚಿಸಿದ ದೇವರನಾಮಗಳನ್ನು ಮರಯದೆ ಹೇಳಿ ಬರೆಯಿಸುತ್ತಿದ್ದರು. ಈಗ ನಮಗೆ ದೊರೆತಿರುವ ಅವರ ಕೃತಿಗಳೆಲ್ಲವೂ ಇದೇ ಕ್ರಮದಲ್ಲಿ ಬೇರೆಯವರು ಬರೆದುಕೊಂಡ ರಚನೆಗಳು. ತಾವು ರಚಿಸಿದ ಕೃತಿಗಳನ್ನು ಮತ್ತೊಮ್ಮೆ ಅವಲೋಕಿಸಿ ತಿದ್ದುಪಡಿ ಮಾಡುವ ಸಾಧ್ಯತೆಯೂ ದಾಸರಿಗೆ ಇರಲಿಲ್ಲ. ಆದರೆ ದಾಸರ ವಿದ್ವತ್ತನ್ನು, ಕವಿತಾ ಚಾತುರ್ಯವನ್ನು ಮೆಚ್ಚಿಕೊಂಡಿದ್ದ ಆಗಿನ ವಿದ್ವಾಂಸರುಗಳಾದ ಬಾಗೇಪಲ್ಲಿಯ ಸಾಹಿತ್ಯ ವಿದ್ವಾನ್ ಶ್ರೀನಿವಾಸಾಚಾರ್ಯರು ಮೈಸೂರು ರಾಘವೇಂದ್ರಾಚಾರ್ಯರು, ಬೆಂಗಳೂರು ಶಿವರಾಮಶಾಸ್ತ್ರಿಗಳು ಕೃತಿಗಳ ಪರಿಷ್ಕರಣೆಯಲ್ಲಿ ಸಹಾಯ ಮಾಡುತ್ತಿದ್ದರು. ಈ ವಿದ್ವಾಂಸರುಗಳ ಸಹಕಾರದಿಂದ ಸಿದ್ಧಾಂತಸಾರ, ಪಂಚಕಥಾ, ಮತ್ತು ದೇವರನಾಮಗಳು 1905ರಲ್ಲಿ ಪ್ರಕಟವಾದುವು. ಮುದ್ರಿತ ಕೃತಿಗಳಿಂದ ಬರಬಹುದಾದ ಅಲ್ಪಾದಾಯವನ್ನು ಕೂಡಾ ದಾಸರು ಅಪೇಕ್ಷಿಸಲಿಲ್ಲ ತಮ್ಮ ಎಲ್ಲ ಕೃತಿಗಳ ರಿಜಿಸ್ಟರ್ಡ್ ಕಾಪಿರೈಟ್ ಹಕ್ಕನ್ನು ಬಾಗೇಪಲ್ಲಿ ತಾಲ್ಲೂಕು ಪಾತಪಾಳ್ಯದ ಜಗದೇಶವಿಠಲನಾರಾಯಣದಾಸರಿಗೆ ಧರ್ಮವಾಗಿ ಬಿಟ್ಟುಕೊಟ್ಟರು.

ದಾಸದೀಕ್ಷೆ ಪಡೆಯುವ ಪೂರ್ವದಲ್ಲಿ ಮತ್ತು ಅನಂತರ ನಿಂತಲ್ಲಿ ನಿಲ್ಲದೆ ದಾಸರು ದೇಶ ಸಂಚಾರ ಮಾಡಿದರು. ಬೆಂಗಳೂರು, ಕೋಲಾರ, ನೆರೆಯ ಆಂಧ್ರದ ಗಡಿಪ್ರದೇಶಗಳ ಹಳ್ಳಿಹಳ್ಳಿಗಳನ್ನು ಸುತ್ತಿದರು. ಅಲ್ಲಿನ ದೇವಾಲಯಗಳನ್ನು, ದೇವತಾಮೂರ್ತಿಗಳನ್ನು ಕುರಿತು ಕೀರ್ತನೆಗಳನ್ನು ರಚಿಸಿದರು. ಜನರ ನಡವಳಿಕೆಗಳನ್ನು ಆಚಾರ ವಿಚಾರಗಳನ್ನು ಬದಲಾಗುತ್ತಿದ್ದ ಸಾಂಸ್ಕøತಿಕ ನೆಲೆಗಳನ್ನು ಕೇಳಿ ತಿಳಿದು ತಮ್ಮ ಕೃತಿಗಳಲ್ಲಿ ದಾಖಲಿಸಿದರು. ಈ ಅವಧಿಯಲ್ಲಿ ಅವರಿಗೆ ಚೆನ್ನಾಗಿ ದ್ರವ್ಯ ಸಂಪಾದನೆಯೂ ಆಯಿತು. ತಾವು ಸಂಪಾದಿಸಿದ ದ್ರವ್ಯವನ್ನು ಬಡವರಿಗೆ, ದೇವಾಲಯಗಳಿಗೆ ದಾನ ಮಾಡುತ್ತ ಅವಧೂತರಂತೆ ಸಂಚರಿಸಿದರು. 56ನೆಯ ವಯಸ್ಸಿನಲ್ಲಿ ರೋಗದ ಉಪದ್ರವ ಇವರನ್ನು ಬಹಳವಾಗಿ ಕಾಡಿರಬೇಕು. ಶರೀರ ಬೆಂಡಾಯಿತು, ಊಟ ಮಾಡಲು, ಬಟ್ಟೆ ಉಡಲು ಕೂಡಾ ಬೇರೊಬ್ಬರನ್ನು ಆಶ್ರಯಿಸಬೇಕಾದ ಪರಿಸ್ಥಿತಿ ಉಂಟಾಯಿತು. ಎಲ್ಲ ಲೌಕಿಕ ಪಾರಮಾರ್ಥಿಕ ಆಸೆಗಳು ದೂರವಾಗಿ ದಾಸರು ಸಂಪೂರ್ಣ ವಿರಕ್ತರಾದರು. ಇದೇ ಸುಮಾರಿನಲ್ಲಿ ಅವರು ಎಲ್ಲಿ ಯಾವಾಗ ದೇಹತ್ಯಾಗ ಮಾಡಿದರೆಂಬ ವಿವರಗಳು ತಿಳಿಯುವುದಿಲ್ಲ. ಏಕೆಂದರೆ ಅವರ ವಂಶಸ್ಥರಲ್ಲಿ ದಾಸರೇ ಕೊನೆಯ ವ್ಯಕ್ತಿ.

ದಾಸರು ತಮ್ಮ ಜೀವಿತಾವಧಿಯಲ್ಲಿ ಕೆಲವು ಪವಾಡಗಳನ್ನು ಮಾಡಿದರೆಂಬ ಪ್ರತೀತಿಯಿದೆ. ಅವರು ನಿಜವಾಗಿ ಪವಾಡಗಳನ್ನೇ ಮಾಡಿದರೋ ಅಥವಾ ಸ್ವಾಭಾವಿಕ ಘಟನೆಗಳೇ ಪವಾಡ ಸದೃಶವಾಗಿ ಕಂಡವೋ ತಿಳಿಯದು. ಒಂದೆರೆಡು ಸಂದರ್ಭಗಳು ಹೀಗಿವೆ :

ಚಿಂತಾಮಣಿಯ ಸಮೀಪದ ಹಳ್ಳಿಯೊಂದರಲ್ಲಿ ದಾಸರು ಒಂದು ಮದುವೆ ಮನೆಗೆ ಹೋಗಿದ್ದರು. ಮದುವೆ ಮನೆಯಲ್ಲಿ ಒಂದು ಬಂಗಾರದ ಸರ ಕಳುವಾಗಿ ದಾಸರೇ ಅದನ್ನು ಕದ್ದಿರಬೇಕೆಂದು ಆರೋಪಿಸಲಾಯಿತು. ಪೋಲಿಸರು ದಾಸರನ್ನು ಎಳೆದೊಯ್ದು ಬೂಟುಕಾಲಿನಿಂದ ಒದ್ದರು. ದಾಸರು ಬೇಸರಗೊಳ್ಳಲಿಲ್ಲ, ರೋದಿಸಲಿಲ್ಲ, ತಾವು ಅಪರಾಧಿ ಅಥವಾ ನಿರಪರಾಧಿ ಎಂಬುದನ್ನು ಹೇಳಲಿಲ್ಲ. ಬದಲಿಗೆ ಒದ್ದವನನ್ನು ಕುರಿತು 'ಮಹಾರಾಯ ನೀನೆಷ್ಟು ದಯಾಮಯ, ನನ್ನ ಪಾಪಗಳನ್ನೆಲ್ಲಾ ದೂರಮಾಡಿಬಿಟ್ಟೆ ಸುಖವಾಗಿರು' ಎಂದು ಹಾರೈಸಿದರು. ರಾತ್ರಿಯೆಲ್ಲಾ ಠಾಣೆಯಲ್ಲಿಯೇ ಕಳೆದರು. ಮಾರನೆಯದಿನ ಬೆಳಗ್ಗೆಯೇ ದೂರು ಕೊಟ್ಟಿದ್ದ ಗೃಹಸ್ಥ ಠಾಣೆಗೆ ಧಾವಿಸಿ ಬಂದ. ಬಂಗಾರದ ಸರ ಸಿಕ್ಕಿತೆಂದೂ, ಅನ್ಯಾಯವಾಗಿ ದಾಸರ ಮೇಲೆ ಅಪವಾದವನ್ನು ಹೊರಿಸಿ ಮಹಾಪರಾಧ ಮಾಡಿದೆನೆಂದೂ ಮತ್ತೆ ಮತ್ತೆ ಅವರ ಕಾಲಿಗೆ ಬಿದ್ದ, ಪೋಲೀಸ್ ಅಧಿಕಾರಿಗೂ ತುಂಬಾ ಭಯವಾಯಿತು ಪಶ್ಚಾತ್ತಾಪಪಡುತ್ತಾ ಅವನೂ ದಾಸರ ಕಾಲಿಗೆ ಬಿದ್ದ. ದಾಸರು ಎಲ್ಲರಿಗೂ ಕೈಮುಗಿದು 'ಎಷ್ಟು ಪ್ರಾಯಶ್ಚಿತ್ತ ಮಾಡಿಕೊಂಡರೂ ಹೋಗದ ಪಾಪರಾಶಿಯನ್ನೆಲ್ಲಾ ಒಂದೇ ರಾತ್ರಿಯಲ್ಲಿ ಪರಿಹಾರವಾಗುವಂತೆ ನೀವೆಲ್ಲರೂ ಮಹೋಪಕಾರ ಮಾಡಿದ್ದೀರಿ, ಪತಿತನನ್ನು ಪಾವನಮಾಡಿದ ನಿಮಗೆಲ್ಲರಿಗೂ ವಂದನೆಗಳು' ಎಂದು ಹೇಳಿ ನಗುತ್ತಾ ಹೊರಟುಹೋದರು. ಈತನೇನು ಹುಚ್ಚನೋ, ಬೆಪ್ಪನೋ, ಅವಧೂತನೋ ಎಂದು ಜನ ವಿಸ್ಮಯಪಟ್ಟರು.

ಬಾಲಕನೊಬ್ಬನಿಗೆ ವಿಪರೀತ ಜ್ವರ ಬಂದು ಅನ್ನನೀರುಗಳನ್ನು ತೆಗೆದುಕೊಳ್ಳದೆ ಬಳಲುತ್ತಿದ್ದ. ಅಕಸ್ಮಾತ್ ದಾಸರು ಆ ಮನೆಗೆ ಬಂದರು. ಬಳಲಿದ ಬಾಲಕನ ಸ್ಥಿತಿಯನ್ನು ಕೇಳಿ ಕನಿಕರ ಉಂಟಾಯಿತು. ಜ್ವರವು ಅಡಗುವಂತೆ ಮೃತ್ಯುಂಜಯನಾದ ಭಯನಿವಾರಣ ನಾರಸಿಂಹನನ್ನು ಒಂದು ಕೀರ್ತನೆಯ ಮೂಲಕ ಸ್ತುತಿಸಿ ಪ್ರಾರ್ಥಿಸಿದರು. (ಕೀ.334) ಬಾಲಕ ಆರೋಗ್ಯವಂತನಾಗಿ ಬದುಕಿಕೊಂಡ.

ಕೋಲಾರಜಿಲ್ಲೆಯಲ್ಲಿ ಸಾಮಾನ್ಯವಾಗಿ ಮಳೆ ಕಡಿಮೆ. ಮಳೆಯಿಲ್ಲದೆ ಒಮ್ಮೆ ಕುಡಿಯುವ ನೀರಿಗೂ ತೊಂದರೆಯಾಗಿ ಜನ ಪರಿತಪಿಸಿ ಮಳೆ ತರಿಸುವಂತೆ ದಾಸರನ್ನು ಬೇಡಿದರು. ಮಳೆ ಬಂದು ಸುಭಿಕ್ಷ ನೆಲಸಲಿ ಎಂದು ಹಾರೈಸುತ್ತಾ ದಾಸರು ಸೂರ್ಯಮಂಡಲ ಮಧ್ಯವರ್ತಿಯಾದ ನಾರಾಯಣನನ್ನು ಸ್ತೋತ್ರಮಾಡಿ ಹಾಡಿದರು. (ಕೀ.337) ಪರ್ಜನ್ಯ ನಾಮಕನಾದ ಶ್ರೀಹರಿ ಸುವೃಷ್ಟಿಯನ್ನು ಕೊಟ್ಟು ಜನರನ್ನು ಸಂತೋಷಪಡಿಸಿದನೆÉಂದು ಹೇಳುತ್ತಾರೆ.

ದಾಸರು ತಮ್ಮ ತೋಳಿನಲ್ಲಿ ಒಂದು ಸೇರು ತೂಕದ ಬೆಳ್ಳಿ ಬಳೆಯನ್ನು ಧರಿಸುತ್ತಿದ್ದರು. ದಾಸರಿಗೇಕೆ ಬೆಳ್ಳಿ ಬಂಗಾರ ಎಂದು ಯಾರಾದರೂ ಕೇಳಿದರೆ 'ನನಗೆ ಹಿಂದೆ ಮುಂದೆ ಯಾರೂ ಇಲ್ಲ, ಯಾವಾಗ ಎಲ್ಲಿ ಸಾಯುತ್ತೇನೆಯೋ ಗೊತ್ತಿಲ್ಲ ಹಣವನ್ನು ಚಂದಾ ಎತ್ತಿ ಅಗ್ನಿ ಸಂಸ್ಕಾರ ಮಾಡುವ ತೊಂದರೆ ಯಾರಿಗೂ ಬೇಡ. ಈ ಬೆಳ್ಳಿಯ ಬಳೆಯನ್ನು ಮಾರಿ ಯಾವನಾದರೂ ಪುಣ್ಯಾತ್ಮ ನನ್ನ ಸಂಸ್ಕಾರ ಮಾಡಲಿ ಎಂದು ಈ ಬಳೆಯನ್ನು ಹಾಕಿಕೊಂಡಿದ್ದೇನೆಯೇ ಹೊರತು ಅಂದ ಚಂದಕ್ಕಲ್ಲ' ಎಂದು ಹೇಳುತ್ತಿದ್ದರಂತೆ.

ಗುರುರಾಮವಿಠಲರು ವಾರ್ಧಕ ಷಟ್ಪದಿಯಲ್ಲಿ ರಚಿಸಿರುವ ದಾಸಪೀಳಿಗೆಯ ಸ್ತುತಿಯಲ್ಲಿ ತಮ್ಮ ಗುರು ಪರಂಪರೆಯನ್ನು ಹೀಗೆ ತಿಳಿಸಿದ್ದಾರೆ :

1. ಶ್ರೀಪಾದರಾಜ (ರಂಗವಿಠ್ಠಲ)

2. ವ್ಯಾಸರಾಜ (ಶ್ರೀಕೃಷ್ಣ)

3. ಪುರಂದರದಾಸ (ಪುರಂದರ ವಿಠಲ)

4. ವಿಜಯದಾಸ (ವಿಜಯವಿಠಲ)

5. ಮೋಹನದಾಸ (ಮೋಹನ ವಿಠಲ)

6. ತಿರುಮಲದಾಸ (ಜನಾರ್ಧನ ವಿಠಲ)

7. ಪ್ರೇಮದಾಸ (ಅಭಿನವ ಜನಾರ್ಧನವಿಠಲ)

8. ದೂರಪ್ಪದಾಸ (ಭಾಗ್ಯನಿಧಿವಿಠಲ)

9. ಚಿತ್ರದುರ್ಗದ ಮಾಧವರಾಯ (ರಾಮವಿಠಲ)

10. ಬಾಗೇಪಲ್ಲಿ ಸುಬ್ರಹ್ಮಣ್ಯದಾಸ (ಗುರುರಾಮವಿಠಲ)

'ಗುರುಸಂತತಿಗೆ ನಮೋ' ಎಂಬ ಕೀರ್ತನೆಯಲ್ಲಿ ಮತ್ತು 'ಪಾರಂಪರ್ಯಾಂಕಿತ ಪದ' ಇವುಗಳಲ್ಲಿ ಆರೋಹಣ ಕ್ರಮದಲ್ಲಿ ತಮ್ಮ ಗುರು ಪರಂಪರೆಯನ್ನು ನಿರೂಪಿಸಿದ್ದಾರೆ. ಇದು ಹಿಂದಿನ ದಾಸ ಪೀಳಿಗೆಗಿಂತ ಸ್ವಲ್ಪ ಭಿನ್ನವಾಗಿದೆ.

1. ಗುರುರಾಮವಿಠಲ (ಬಾಗೇಪಲ್ಲಿ ಸುಬ್ರಹ್ಮಣ್ಯದಾಸ)

2. ಶ್ರೀರಾಮವಿಠಲ, ರಾಮವಿಠಲ, ವಿಜಯರಾಮವಿಠಲ (ಚಿತ್ರದುರ್ಗದ ಮಾಧವರಾಯರು)

3. ಭಾಗ್ಯನಿಧಿವಿಠಲ (ದೂರಪ್ಪದಾಸರು ಅಥವಾ ದೂರ್ವಾಸರಾಯರು)

4. ಅಭಿನವ ಜನಾರ್ದನ ವಿಠಲ (ಪ್ರೇಮದಾಸರು)

5. ಸಿರಿಜನಾರ್ದನವಿಠಲ (ತಿರುಮಲದಾಸರು)

6. ಗುರುಗೋಪಾಲವಿಠಲ (ಶೀನಪ್ಪದಾಸರು)

7. ಗೋಪಾಲವಿಠಲ (ಭಾಗಣ್ಣದಾಸರು)

8. ವಿಜಯವಿಠಲ (ವಿಜಯದಾಸರು)

9. ಪುರಂದರವಿಠಲ (ಪುರಂದರದಾಸರು)

10. ಶ್ರೀಕೃಷ್ಣ (ವ್ಯಾಸರಾಜರು)

11. ರಂಗವಿಠಲ (ಶ್ರೀ ಪಾದರಾಜರು)

ಗುರುರಾಮವಿಠಲರು ರಚಿಸಿರುವ 'ಮಧ್ವಸಿದ್ಧಾಂತಸಾರ' ಎಂಬ ಕೃತಿಯಲ್ಲಿನ 16ನೆಯ ಸಂಧಿಯ ಐದು ಪದ್ಯಗಳಲ್ಲಿ ವ್ಯಾಸರಾಯರಿಂದ ಪ್ರಾರಂಭಿಸಿ ಅವರೋಹಣ ಕ್ರಮದಲ್ಲಿ ಗುರು ಪರಂಪರೆಯನ್ನು ನಿರೂಪಿಸಿದ್ದಾರೆ. ಇದಕ್ಕೂ 'ಗುರುಸಂತತಿಗೆ ನಮೋ' ಮತ್ತು 'ಪಾರಂಪರ್ಯಾಂಕಿತ ಪದ' ಎಂಬ ಕೀರ್ತನೆಯಲ್ಲಿ ಹೇಳಿರುವ ಗುರುಪರಂಪರೆಗೂ ವ್ಯತ್ಯಾಸವಿಲ್ಲ.

'ವಿಷ್ಣುಶತಕ' ಎಂಬ ಕೃತಿಯ ಅಂಕಿತನುಡಿಯಲ್ಲಿ ತಮ್ಮ ಗುರುಪರಂಪರೆಯನ್ನು ಹೀಗೆ ಪ್ರಸ್ತಾಪಿಸಿದ್ದಾರೆ :

ಸಿರಿಪಾದರಾಯರ ಪರಂಪರೆಯೊಳ್

ನೆರೆಪತ್ತೊಂದನೆಯವಂ ಮನದೊಳ್

ಗುರುರಾಮವಿಠಲನು ಪೇಳಿಸಿದಂ-

ತರುಹಿರ್ಪ ವಿಷ್ಣುಶತಕಂ ತರಳಂ

ಇದರಂತೆ ಶ್ರೀಪಾದರಾಜ ಪರಂಪÀರೆಯಲ್ಲಿ ತಾವು ಹನ್ನೊಂದನೆಯವರು ಎಂದು ಹೇಳಿಕೊಂಡಿರುವುದರಿಂದ ಆರೋಹಣ ಕ್ರಮದ ಗುರುಪರಂಪರೆಯೆ ಹೆಚ್ಚು ಸಂಭಾವ್ಯವಾದದ್ದು ಎನ್ನಬಹುದು. ಗುರುರಾಮವಿಠಲರಿಗೆ ಅಂಕಿತ ನೀಡಿದವರು ಚಿತ್ರದುರ್ಗದ ಮಾಧವರಾಯರು. ಇವರು ಬೆಂಗಳೂರಿನಲ್ಲಿ (ಕಲ್ಯಾಣಪುರ) ಹಲವುಕಾಲ ನೆಲೆಸಿದ್ದು ಕೀರ್ತನೆ, ಹರಿಕಥೆ, ಪುರಾಣಗಳನ್ನು ಬೋಧಿಸುತ್ತ ಇದ್ದವರು, e್ಞÁನ, ವೈರಾಗ್ಯ ಮತ್ತು ಸದ್ಭಕ್ತಿಗಳನ್ನು ಹೊಂದಿದ್ದವರು ಎಂದು ದಾಸ ಪೀಳಿಗೆಯ ಷಟ್ಪದಿಯಲ್ಲಿ ಸ್ತುತಿಸಿದ್ದಾರೆ. (ಅನುಬಂಧ-8)



ಗುರುರಾಮವಿಠಲ ಅಂಕಿತದಲ್ಲಿ ದೊರೆತಿರುವ ಕೀರ್ತನೆಗಳ ಸಂಖ್ಯೆ ಸುಮಾರು 350. ಭಗವಂತನ ಮತ್ತಿತರ ದೇವತೆಗಳ ಸಂಕೀರ್ತನೆ, ಆತ್ಮನಿವೇದನೆ, ತಾತ್ವಿಕ ಕೃತಿಗಳು, ಲೋಕನೀತಿ, ಸಮಾಜ ದರ್ಶನ, ಸಂಪ್ರದಾಯದ ಹಾಡುಗಳು, ವಿಶೇಷ ಸಂದರ್ಭದ ಕೃತಿಗಳು, ಹೀಗೆ ಕೀರ್ತನೆಗಳಲ್ಲಿ ವಿಷಯ ವೈವಿಧ್ಯವನ್ನು ಕಾಣಬಹುದು.

ಕಥನರೂಪವಾದ ಮನ್ಮಥ ಚರಿತ್ರೆ, ಪುರಂಜನೋಪಾಖ್ಯಾನ ಲಾವಣಿ, ಆಧ್ಯಾತ್ಮ ರಾಮಾಯಣ, ಸಂಕ್ಷೇಪ ಭಾಗವತ, ಸಂಕ್ಷೇಪಭಾರತ, ಸಂಕ್ಷೇಪ ರಾಮಾಯಣ, ಭಾಗವತ ದಶಮ ಸ್ಕಂಧದ ಕಥೆ, ವಿಷ್ಣುಶತಕ, ಇವು ಕೀರ್ತನ ಸಂಪ್ರದಾಯಕ್ಕೇ ಸೇರುವ ಇತರ ಕೃತಿಗಳು.



ಹರಿಕಥೆಗೆ ಅನುಕೂಲವಾಗುವಂತೆ ಪ್ರಹ್ಲಾದ ಚರಿತ್ರೆ, ಮಾಧವ ಚರಿತ್ರೆ, ಅನಸೂಯಾ ಚರಿತ್ರೆ, ದ್ಯೂತಪರ್ವ ಮತ್ತು ದೂರ್ವಾಸ ಚರಿತ್ರೆ ಎಂಬ ಐದು ಕಥೆಗಳನ್ನು ಕಥಾ ಕೀರ್ತನ ರೂಪದಲ್ಲಿ ರಚಿಸಿದ್ದಾರೆ. ಈ ಕಥಾ ಕೀರ್ತನೆಗಳಲ್ಲಿ ಕೀರ್ತನೆ, ಕಂದ ಪದ್ಯಗಳು, ಷಟ್ಪದಿಗಳು, ಶ್ಲೋಕಗಳು, ವಚನ, ಆರ್ಯೆ, ಜಂಗಲಾರ್ಯ, ಸೀಸಪದ್ಯ, ಕಡಕು, ದ್ವಿಪದಿ, ಸಂಸ್ಕøತ ವೃತ್ತಗಳು ಹೀಗೆ ಹಲವು ರೀತಿಯ ಛಂದೋರೂಪಗಳನ್ನು ಬಳಸಿದ್ದಾರೆ. ಕೀರ್ತನೆಗಳಲ್ಲಿ ಬಹಳಷ್ಟು ಪ್ರಸಿದ್ಧವಾದ ಕನ್ನಡ. ತೆಲುಗು ಮತ್ತು ತಮಿಳು ಮಟ್ಟುಗಳ ಅನುಕರಣೆಯನ್ನು ಕಾಣಬಹುದು. ಸಂಭಾಷಣೆ ಬರುವ ಸಂದರ್ಭಗಳಲ್ಲಿ ಕೀರ್ತನೆಗಳನ್ನು ಅಳವಡಿಸಿರುವುದು ಈ ಕಥಾ ಕೀರ್ತನೆಗಳ ವೈಶಿಷ್ಟ್ಯ. ಈ ಕೀರ್ತನೆಗಳು ಆಯಾ ಕಥಾಸಂದರ್ಭಕ್ಕೆ ಹೊಂದುವಂತಿದ್ದು, ಆಯಾ ಕಥಾನಕದ ಒಂದೊಂದು ಭಾಗವಾಗಿವೆÉ. ಇಂಥ ಕೀರ್ತನೆಗಳನ್ನು ಸ್ವತಂತ್ರ ಕೀರ್ತನೆಗಳೆಂದು ಪ್ರತ್ಯೇಕಿಸಲು ಸಾಧ್ಯವಿಲ್ಲ.

ಭಾಗವತೋತ್ತಮನಾದ ಪ್ರಹ್ಲಾದನ ಕಥೆ ಪ್ರಹ್ಲಾದ ಚರಿತೆಯವಸ್ತು. ಬ್ರಹ್ಮಸೃಷ್ಟಿಯ ಯಾವುದರಿಂದಲೂ ಸಾವು ಬಾರದಂತೆ ಹಿರಣ್ಯಗರ್ಭನಿಂದ ವರವನ್ನು ಪಡೆದ ದೈತ್ಯ ಹಿರಣ್ಯಕಶಿಪು. ಪ್ರಹ್ಲಾದ ಇವನ ಮಗ. ಲೋಕ ಕಂಟಕನಾದ ತಂದೆಗೆ ವಿರುದ್ಧವಾದ ಸ್ವಭಾವ ಪ್ರಹ್ಲಾದನದು. ದೈವ ಭಕ್ತಿ ಸತ್ಯಸಂಧತೆ ಜಿತೇಂದ್ರಿಯತ್ವ ಇತ್ಯಾದಿ ಸದ್ಗುಣಗಳಿಂದ ಕೂಡಿದ ಪ್ರಹ್ಲಾದ ಮಹಾನ್ ವಿಷ್ಣುಭಕ್ತ. ಹಿರಣ್ಯ ಕಶಿಪುವಿನ ದುರಭಿಮಾನ, ಅಹಂಕಾರ, ಮಗನನ್ನು ತನ್ನ ದಾರಿಗೆ ತರಲು ಅವನು ನೀಡಿದ ಹಿಂಸೆಗಳು, ಹಿಂಸೆಗಳನ್ನು ಗಂಭೀರವಾಗಿ ಸ್ವೀಕರಿಸಿದ ಪ್ರಹ್ಲಾದನ ತಾಳ್ಮೆ, ನರಸಿಂಹನ ಅವತಾರ, ಹಿರಣ್ಯ ಕಶಿಪುವಿನ ಸಂಹಾರ ಮತ್ತು ಪ್ರಹ್ಲಾದನಿಗೆ ದೊರೆತ ಅನುಗ್ರಹ -ಈ ಸಂದರ್ಭಗಳನ್ನು ಕಥಾ ಕೀರ್ತನೆಯಲ್ಲಿ ಅಳವಡಿಸಲಾಗಿದೆ.

ಜಾತಿ ನೀತಿಗಳನ್ನು ಮೀರಿದ ಕಾಮಸುಖ ತಾತ್ಕಾಲಿಕವಾದದ್ದೆಂದು ಇದರಿಂದ ಗೌರವ ಘನತೆಗಳು ಕೆಟ್ಟು ಸಂಸಾರಿಗಳು ಭ್ರಷ್ಟರಾಗುತ್ತಾರೆಂಬ ನೀತಿಯನ್ನು ನಿರೂಪಿಸುವ ಕಥೆ ಮಾಧವ ಚರಿತ್ರೆ. ವರ್ಣಾಶ್ರಮ ಧರ್ಮಕ್ಕೆ ವಿರುದ್ಧವಾಗಿ ತಂದೆ ತಾಯಿಗಳನ್ನೂ. ಪತ್ನಿಯನ್ನೂ ದೂರಮಾಡಿ ಕುಂತಳೆ ಎಂಬ ಚಂಡಾಲ ಕನ್ಯೆಯನ್ನು ವರಿಸಿದ 'ದ್ವಿಜ' ಮಾಧವ. ಯೌವ್ವನ ಕಳೆದು ಮುದಿತನ ಮತ್ತು ರೋಗಗಳಿಂದ ಪೀಡಿತನಾದಾಗ ಮಾಧವನಿಗೆ ಪಾಪಪ್ರಜ್ಞೆ ಜಾಗೃತವಾಗುತ್ತದೆ. ಹರಿದಾಸರ ಜೊತೆಯಲ್ಲಿ ತಿರುಪತಿಗೆ ಬಂದ ಮಾಧವ ಆತ್ಮಶೋಧನೆ ಮಾಡಿಕೊಂಡು ಪರಿಶುದ್ಧನಾಗುತ್ತಾನೆ. ಕಾಮವನ್ನು ಭಗವತ್ಪ್ರೇಮವಾಗಿಸುವುದರಲ್ಲಿ ಜೀವನದ ಸಾರ್ಥಕ್ಯ ಅಡಗಿದೆ ಎಂಬ ನೀತಿಯನ್ನು ಗುರುರಾಮವಿಠಲರು ಇಲ್ಲಿ ನಿರೂಪಿಸಿದ್ದಾರೆ.

ದೂರ್ವಾಸ ಚರಿತ್ರೆ ಮಹಾಭಾರತದ ಅರಣ್ಯಪರ್ವದಲ್ಲಿ ನಿರೂಪಿತವಾಗಿರುವ ಕಥೆ. ಪಾಂಡವರನ್ನು ಪರೀಕ್ಷಿಸಲು ಅತಿಥಿಯಾಗಿ ಬಂದ ದೂರ್ವಾಸನ ಆಗಮದಿಂದ ಧರ್ಮರಾಯಾದಿಗಳು ಪಟ್ಟ ಆತಂಕ, ದ್ರೌಪದಿಯ ಕೃಷ್ಣಭಕ್ತಿ, ಕೃಷ್ಣನ ಕರುಣೆ ಇವುಗಳನ್ನು ನಿರೂಪಿಸುವ ಕೃತಿ ಇದು. ಭಕ್ತರ ಮೊರೆಗೆ ತಕ್ಷಣ ಸ್ಪಂದಿಸಿ ಅವರ ತೊಂದರೆಗಳನ್ನು ಪರಿಹರಿಸುವ ಕೃಷ್ಣನ ಕಾರುಣ್ಯವನ್ನು ಈ ಕೃತಿ ನಿರೂಪಿಸುತ್ತದೆ.

ದ್ರೌಪದಿಯ ಮಾನರಕ್ಷಣೆಯ ಮೂಲಕ ಶ್ರೀಕೃಷ್ಣನ ಭಕ್ತಪರಾಧೀನತೆಯನ್ನು ತಿಳಿಸುವುದು ದ್ಯೂತಪರ್ವದ ಉದ್ದೇಶ. ಶಕುನಿಯ ಕುತಂತ್ರ, ದುರ್ಯೋಧನನ ಕ್ರೋಧ, ವಿದುರನ ಪಾಂಡವ ಪಕ್ಷಪಾತ, ಕರ್ಣದುಶ್ಯಾಸನರ ಅಮಾನವೀಯ ನಡವಳಿಕೆ, ಕೃಷ್ಣನ ಕರುಣೆ, ಧೃತಾಷ್ಟ್ರನ ಔದಾರ್ಯ ಹೀಗೆ ಮಾನವ ಸ್ವಭಾವದ ಹಲವು ಮುಖಗಳ ಚಿತ್ರಣವನ್ನು ದ್ಯೂತಪರ್ವದಲ್ಲಿ ಕಾಣಬಹುದು. ಭೀಮ, ಅರ್ಜುನ, ಮತ್ತು ಸಹದೇವರು ಮಾಡಿದ ಪ್ರತಿಜ್ಞೆಗಳಲ್ಲಿ ಖಳ ಚತುಷ್ಟಯರಿಗೆ ಮುಂದೆ ಒದಗಬಹುದಾದ ವಿಪತ್ತನ್ನೂ ದ್ಯೂತಪರ್ವ ಸೂಚಿಸುತ್ತದೆ.

ಅನಸೂಯಾ ಚರಿತ್ರೆ ನಾರದೀಯ ಪುರಾಣದಲ್ಲಿ ಬರುವ ಒಂದು ಕಥಾಭಾಗ. ಪತಿವ್ರತೆಯರ ಎದುರು ಕುಚೇಷ್ಟೆಗಳು ನಡೆಯುವುದಿಲ್ಲ ಎಂಬ ಪೌರಾಣಿಕ ತತ್ವವನ್ನು ನಿರೂಪಿಸುವುದು ಇಲ್ಲಿ ಕೃತಿಕಾರನ ಉದ್ದೇಶ. ಅತ್ರಿ ಅನಸೊಯೆಯರ ಸೌಹಾರ್ದಯುತವಾದ ದಾಂಪತ್ಯ, ನಾರದನ ಚಿತ್ತ ಚಾಂಚಲ್ಯ, ತ್ರಿಮೂರ್ತಿ ಪತ್ನಿಯರ ಗರ್ವಭಂಗವಾದದ್ದು, ಈ ಸಂಗತಿಗಳ ನಿರೂಪಣೆಯಲ್ಲಿ ಅಲ್ಲಲ್ಲಿ ಕಾವ್ಯಾಂಶ ಮಿಂಚುವಂತೆ ಗುರುರಾಮ ವಿಠಲರು ನಿರೂಪಿಸಿದ್ದಾರೆ.

ಸೇತೂರಾಯನ ಕಥೆ ಮಿಶ್ರ ಛಂದಸ್ಸಿನ ಖಂಡ ಕಾವ್ಯ. ಸೇತೂರಾಯ ಮೈಸೂರರಸರ ಖಜಾನೆಯಲ್ಲಿ ಕೆಲಸ ಮಾಡುತ್ತಿದ್ದ ಒಬ್ಬ ಅಧಿಕಾರಿ. ಹಣ ದುರುಪಯೋಗದ ಆಪಾದನೆಯನ್ನು ಹೊತ್ತು ದೇಶಾಂತರ ಹೊರಟು ಅನಂತರ ಬಂಧನಕ್ಕೆ ಒಳಗಾದ. ದಿವಾನ್ ರಂಗಾಚಾರ್ಯರು ಈ ಬಗ್ಗೆ ವಿಚಾರಣೆಯನ್ನು ನಡೆಸಿ ಸೇತೂರಾಯನನ್ನು ದೋಷ ಮುಕ್ತನನ್ನಾಗಿ ಮಾಡಿದರು. ಚಾಮರಾಜ ಒಡೆಯರು ಸೇತೂರಾಯನನ್ನು ಮತ್ತೆ ಎಷ್ಟೇ ಸಮಾಧಾನಪಡಿಸಿದರೂ ಆತ ರಾಜಸೇವೆಗೆ ಹಿಂತಿರುಗದೆ ವೈರಾಗ್ಯಪರನಾಗಿ ತಿರುಮಕೂಡಲು ನರಸೀಪುರದಲ್ಲಿ ತನ್ನ ಕೊನೆಯ ದಿನಗಳನ್ನು ಕಳೆದು ಬೆಂಗಳೂರಿನಲ್ಲಿ ನಿಧನ ಹೊಂದಿದ.



ಸಿದ್ಧಾಂತ ಸಾರ 1055 ಕಂದಪದ್ಯಗಳ ಒಂದು ಕೃತಿ. ದ್ವೈತ ಸಿದ್ಧಾಂತದ ತತ್ವಗಳು, ಪದ್ಧತಿಗಳು, ಇವುಗಳ ನಿರೂಪಣೆ ಈ ಕೃತಿಯ ವಸ್ತು. ಹರಿಯ ಅವತಾರಗಳು, ಸೃಷ್ಟಿಪ್ರಕರಣ, ಪುರಾಣ ವಿಭಾಗ, ಜೀವಿಗಳ ಸ್ವರೂಪ, ಆತ್ಮದ ಸ್ವರೂಪ, ತಾರತಮ್ಯ, ಭಗವನ್ಮಹಿಮಾ ವರ್ಣನೆ. ಗೀತಾಮೃತಸಾರ, e್ಞÁನ ಭಕ್ತಿ ವೈರಾಗ್ಯಗಳ ಸ್ವರೂಪ, ಸೂರ್ಯಚಂದ್ರವಂಶಾನು ಕೀರ್ತನೆ, ಪ್ರಳಯ ಪ್ರಕರಣ, ಪೂಜಾವಿಧಾನ, ಯೋಗ ವಿಚಾರ, ಮಧ್ವಾಚಾರ್ಯರ ಅವತಾರತ್ರಯಗಳು, ಹೀಗೆ ಸಿದ್ಧಾಂತಸಾರವನ್ನು ಪ್ರತ್ಯೇಕ ವಿಭಾಗಗಳಲ್ಲಿ ನಿರೂಪಿಸಿದ್ದಾರೆ.

ಸಿದ್ಧಾಂತಸಾರದಲ್ಲಿ ಇಷ್ಟೆಲ್ಲಾ ವಿಚಾರಗಳು ಅಡಕವಾಗಿದ್ದರೂ ತಾನು ಏನೂ ಅರಿಯದ ಅಜ್ಞನೆಂಬ ವಿನಯ ಕೃತಿಕಾರನದು. e್ಞÁನ ಭಕ್ತಿ ವೈರಾಗ್ಯಗಳನ್ನು ಅರಿಯದ ಶಾಸ್ತ್ರ ಚಿಂತನೆಗಳನ್ನು ಕನಸಿನಲ್ಲೂ ಕಾಣದ ತಾನು

'ಪವಮಾನಮತಾನುಗರ ಕರುಣ ಬಲದಿಂ ಪೇಳ್ವೆಂ' ಎಂದು ಹೇಳುವಲ್ಲಿಯೂ,

ಕಂದನ ಕಲಭಾಷೆಗಳಾ

ನಂದದೊಳಾಲಿಸುವ ತಂದೆ ತಾಯಿಗಳಂತೀ

ಗ್ರಂಥsÀವನು ಕಂದ ಪದ್ಯಗÀ

ಳೆಂದು ನಿರಾಕರಿಸದೆಲ್ಲ ಕೇಳ್ವುದು ಸುಜನರ್

ಎಂಬಲ್ಲಿಯೂ ಈ ವಿನಯವನ್ನು ಗುರುತಿಸಬಹುದು. ಕಂದ ಪದ್ಯಗಳನ್ನು ನಿರಾಕರಿಸಬೇಡಿ ಎಂದು ಹೇಳುವಾಗ 'ಕಂದಪದ್ಯ' ಎಂಬ ಪದದ ಶ್ಲೇಷಾರ್ಥ ಗಮನಾರ್ಹವಾದುದು. ಇದು ಬಾಲಭಾಷೆಯ ಬರಹಗಳಲ್ಲ, ಮಕ್ಕಳ ಸಾಹಿತ್ಯವೂ ಅಲ್ಲ, ಗಂಭೀರವಾಗಿ ಅಧ್ಯಯನ ಮಾಡಬೇಕಾದ ಕೃತಿ ಎಂಬುದನ್ನು ಸೂಚಿಸಿದ್ದಾರೆ.



ಭೋಜನ ಕಾಲ ನಿರ್ಣಯ ಭಾಮಿನಿ ಷಟ್ಪದಿಯ ಒಂದು ಸಣ್ಣ ಕೃತಿ. ಹಗಲು ರಾತ್ರಿಗಳಲ್ಲಿ, ಯಾವ ಕಾಲದಲ್ಲಿ ಯಾವ ಯಾವ ಆಹಾರವನ್ನು ಸ್ವೀಕರಿಸಬೇಕು ಎಂದು ತಿಳಿಸುವುದೇ ಈ ಕೃತಿಯ ವಸ್ತು. ಈ ಕೃತಿಯಲ್ಲಿ ದಾಸರು ತಮ್ಮ ಸ್ಥಳದ ಬಗ್ಗೆ ಹೇಳಿಕೊಳ್ಳುವ ಸ್ವಂತ ವಿಷಯ ಗಮನಾರ್ಹವಾದುದು :

ಧಾರುಣಿ ಮಂಡಲದೊಳಗೆ ಮಹಿ

ಶೂರ ದೇಶಕೆ ಸೇರಿರುವ ಕೋ-

ಲಾರದ ಭಾಗದಲಿ ಬಾಗೆಪಲ್ಲೆಂತೆಂಬ |

ಚಾರುನಗರದ ವಾಸಿ ಎನಿಸುವ

ಸೂರಿನಿಕರ ವಿಧೇಯ ಸುಬ್ಬನು

ತಾರಚನೆಗೈದಿರುವ ಗುರುರಾಮವಿಠ್ಠಲಾಂಕಿತದಿ ||

ಗುರುರಾಮವಿಠಲರ ಕೀರ್ತನೆಗಳನ್ನು ಅಭ್ಯಾಸದ ದೃಷ್ಟಿಯಿಂದ ಹೀಗೆ ವಿಭಾಗಿಸಿಬಹುದು.

1. ಆತ್ಮಶೋಧನೆ-ಸಮರ್ಪಣೆ, 2. ಹರಿಭಕ್ತಿ, 3. ತತ್ವಪ್ರತಿಪಾದನೆ ಮತ್ತು ಉಪದೇಶಾತ್ಮಕ ಕೃತಿಗಳು.

ಆತ್ಮಶೋಧನೆ-ಸಮರ್ಪಣೆ :ಆತ್ಮಶೋಧನೆಯ ಕೃತಿಗಳಲ್ಲಿ ದಾಸರ ವೈಯಕ್ತಿಕ ವಿಷಯಗಳೂ ಅಡಕವಾಗಿದ್ದು, ಅವರು ಬದುಕಿನಲ್ಲಿ ಅನುಭವಿಸಿದ ಕಷ್ಟಗಳ ನಿರೂಪಣೆಯಿದೆ. ತಮ್ಮ ಜೀವನವನ್ನು ತಾವೇ ವಿಮರ್ಶಿಸಿಕೊಂಡು, ತಮ್ಮ ತಪ್ಪುಗಳನ್ನು ತಾವೇ ಎತ್ತಿ ಹಿಡಿದು, ತಮ್ಮ ನಡವಳಿಕೆಗಳನ್ನು ತಾವೇ ನಿಂದಿಸಿಕೊಂಡು, ತಮ್ಮ ರ್ದೌಬಲ್ಯಗಳಿಗೆ ತಾವೇ ನಾಚಿ ಪಶ್ಚಾತ್ತಾಪದ ಮೂಲಕ ಪರಿಶುದ್ಧರಾಗುವುದೇ ಆತ್ಮಶೋಧನೆಯ ಉದ್ದೇಶ. ಆಸೆಗಳಲ್ಲಿ ಕುಂದಿಕೊರಗಿ ಸಾರವಿಲ್ಲದ ಸುಖಗಳನ್ನು ಬಯಸಿ, ಬಾಲ್ಯದಲ್ಲಿ ಪರಾಧೀನ, ಯೌವ್ವನದಲ್ಲಿ ಅe್ಞÁನ, ವಾರ್ಧಕ್ಯದಲ್ಲಿ ಚಿಂತೆಗಳನ್ನು ಅನುಭವಿಸುವಂತೆ ಮಾಡುವ 'ಬದ್ಧ ಸಂಸಾರ' ದಾಸರಿಗೆ ಬೇಸರಿಕೆÀ ತರಿಸಿತ್ತು.

'ಯಾವ ವಿಧಿ ಸುಖಲೇಶ ಕಾಣೆನೊ ನಾನು

ದೇವ ನಿನ್ನ ಚಿತ್ತವೊ ಪುರಾಕೃತವೊ' (ಕೀ.183)

-ಎಂದು ಹೇಳುವಲ್ಲಿ ಸಾಂಸಾರಿಕ ಕಷ್ಟಸುಖಗಳು ಹರಿಯ ಚಿತ್ತದಂತೆ ಪ್ರಾಪ್ತವಾಗುತ್ತವೆÉ ಇವು ನಮ್ಮ ಅಧೀನದಲ್ಲಿ ಇಲ್ಲ ಎಂಬ ನಿರ್ಧಾರಕ್ಕೆ ಬರುತ್ತಾರೆ. ಮಾನಸದಲ್ಲಿ ದೇವರು ಸಾಕ್ಷಿಯಾಗಿರುವಾಗ ಅವನಿಗರಿವಿಲ್ಲದಂತೆ ನಾವೇನು ತಪ್ಪು ಮಾಡಲು ಸಾಧ್ಯವಿಲ್ಲ. ನಾವು ಮಾಡುವ ಅಪರಾಧ ಮತ್ತು ಸತ್ಕಾರ್ಯಗಳಿಗೆ ಕಾರಣರಾದ ಕರಣಾಭಿಮಾನಿ ದೇವತೆಗಳಿಗೆ ಶ್ರೀ ಹರಿಯೆ ಒಡೆಯ. ಹೀಗಿರುವಾಗ ತಪ್ಪು ಒಪ್ಪುಗಳನ್ನು ನಾನು ಮಾಡಿದೆ ಎಂದು ಹೇಳುವುದರಲ್ಲಿ ಯಾವ ಅರ್ಥವೂ ಇಲ್ಲ.

1. ಏನು ಅರಿಯೆ ನಾನು ಅಸ್ವಾತಂತ್ರನು ಜೀವ

ನೀನೆ ಸರ್ವ ಸ್ವತಂತ್ರ ಗುರುರಾಮವಿಠಲ (ಕೀ.183)

2. ಎಲ್ಲವು ನಿನ್ನಾಧೀನ | ನಾ

ಬಲ್ಲೆನೆಂಬುದ e್ಞÁನ (ಕೀ.182)

3. ಕ್ಷೇಮದಿಂದಿರುವುದಕೂ | ನಿರ್ನಾಮವೈದಿ ಕೆಡುವುದಕೂ

ಪಾಮರ ಜೀವರು ತಾವರಿಯರು ಗುರು-

ರಾಮ ವಿಠಲ ನೀನಾ ಮಮತೆ ಕೊಡದಿರೆ (ಕೀ.182)

4. ಅಣುಗ ನಿನಗೆ ನಾನು | ಅಗಣಿತ

ಗುಣ ಸಮುದ್ರ ನೀನು (ಕೀ.175)

5. ದ್ವಾಸುಪರ್ಣ ಶ್ರುತಿಯ | ಪ್ರಮಾಣದಿ

ದಾಸನು ನಾನಯ್ಯಾ

ಓ ಸೀತಾಪತಿ ಗುರುರಾಮ ವಿಠಲಾ

ಶ್ವಾಸ ಬಿಡುವುದಕೆ ಸ್ವತಂತ್ರವೆನಗಿಲ್ಲ (ಕೀ.175)

-ಹೀಗೆ ಜೀವಿಗಳ ಅಸ್ವಾತಂತ್ರವನ್ನು ಒಪ್ಪಿಕೊಂಡು ಸ್ವಾಹಂಕಾರ ಮತ್ತು ಮಮಕಾರಗಳಿಂದ ದೂರವಾದ ದಾಸತ್ವ ಒಂದೇ ಬದುಕಿಗೆ ಮಾರ್ಗದರ್ಶನ ನೀಡಬಲ್ಲದೆಂಬ ನಂಬಿಕೆ ದಾಸರದು.

ಗುರುರಾಮವಿಠಲರು ಸಂಸಾರಿಗಳಲ್ಲದಿದ್ದರೂ ಸಾಂಸಾರಿಕ ಕಷ್ಟಗಳಿಂದ ದೂರಾದವರೇನೂ ಅಲ್ಲ. ನೆಂಟರಾದವರಿಗೆ 'ಬಾಡಿಗೆ ಎತ್ತಿನ ಪರಿ' ಆಳಾಗಿರಬೇಕು. ಅವರು ಕೇಳಿದ್ದೆಲ್ಲಾ ಕೊಡಬೇಕು. ಸ್ವಾರ್ಥ ಸಾಧನೆಯಾದ ನಂತರ 'ಭವ ಸಮುದ್ರದಲಿ ಮುಳುಗಿಸಿ ಕಡೆÉಯಲಿ ಜವನಾಳ್ಗಳ ಕೈಗೊಪ್ಪಿಸಿ ಕೊಡುವ ' ಸ್ವಭಾವ ನೆಂಟರದು. ಇಂತಹ ದೇಹ ಸಂಬಂಧಿಗಳನ್ನು ನಂಬಿ 'ಕವಳಕೆ ಗತಿಯಿಲ್ಲದ ಪರಿಯಾಯಿತು' ಎಂದು ಕಳವಳಪಡುತ್ತಾರೆ.

ಹಣ, ಅಧಿಕಾರ, ಬಂಧುಗಳು, ದೇಹಬಲ, ಯೌವ್ವನ ಇದ್ದವರೆಗೆ ಮಾತ್ರ ಈ ಸಮಾಜದಲ್ಲಿ ಬೆಲೆಯಿದೆ. ಇವಾವುದೂ ಇಲ್ಲದೆ ಜೊತೆಗೆÉ ಎರಡು ಕಣ್ಣೂ ಇಲ್ಲದ ದಾಸರು ಸಮಾಜದ ಬಂಧುಗಳ ಅವಕೃಪೆಗೆ ಒಳಗಾಗಿ ಸಾಕಷ್ಟು ನೋವನ್ನು ಅನುಭವಿಸಿದರು.

ಜನರ ಬೇಡಲಾರೆ ನಿನಗಿದು

ವಿನೋದವೇನೊ ದೊರೆ (ಕೀ.188)

-ಹೀಗೆ ತಮ್ಮ ನೋವನ್ನು ನಿವೇದಿಸಿಕೊಂಡು ಅನಾದಿ ಕರ್ಮಗಳನ್ನು ಕಳೆಯುವಂತೆ ಪ್ರಾರ್ಥಿಸುತ್ತಾರೆ. ತಮ್ಮ ವೈಯಕ್ತಿಕ ಬದುಕಿನ ಕೊರತೆಗಳನ್ನು ಹೀಗೆ ನಿರೂಪಿಸಿದ್ದಾರೆ :

ಆರೊಂದು ವ್ಯಸನದಿ ಈರೊಂದು ತಾಪದಿ

ಗಾರಾದೆ ಮೋಹದಿ ಕಾರುಣ್ಯ ವಾರಿಧಿ (ಕೀ.185)

ತಂದೆ, ತಾಯಿ, ಪತ್ನಿ, ಸೋದರ ಮೊದಲಾದ ಹೊರಗಿನ ಬಂಧುಗಳು ಯಾರೂ ಇಲ್ಲದ್ದರಿಂದ ದಾಸರು ವೈರಾಗ್ಯದ ಜೊತೆಗೆ ದೃಢವಾದ ಭಕ್ತಿಯನ್ನು ಬೆಳೆಸಿಕೊಂಡಿದ್ದರು. ಸತ್ಯವೇ ತಾಯಿ, e್ಞÁನವೇ ತಂದೆ, ಧರ್ಮವೇ ಸಹೋದರರು, ಶಾಂತಿಯೆ ಸತಿ, ಕ್ಷಮೆಯೆ ಸುತ, -ಹೀಗೆ ಹೊರಗಿನ ಬಂಧುಗಳಿಗಿಂತ ಒಳಗಿನ ಬಂಧುಗಳೇ ಇಹಪರ ಸೌಖ್ಯಕ್ಕೆ ಕಾರಣರೆಂದು ಭಾವಿಸಿದ್ದರು. ಹೊರಗಿನ ಬಂಧುಗಳ ಜೊತೆ ಸಂಬಂಧಗಳು ಕೆಟ್ಟರೂ ಚಿಂತೆಯಿಲ್ಲ, ಒಳಗಿನ ಬಂಧುಗಳ ಸಂಬಂಧಗಳನ್ನು ಗಟ್ಟಿಮಾಡಿಕೊಳ್ಳಬೇಕು ಎಂಬ ಸಂಕಲ್ಪ ಅವರದು (ಕೀ.285) ಈ ಸಂಕಲ್ಪವನ್ನು ಶಾಶ್ವತಗೊಳಿಸುವಂತೆ ದಾಸರು ದೇವರ ಮೊರೆ ಹೋಗುತ್ತಾರೆ. ವಿಹಿತ ಅಹಿತಗಳನ್ನು ಚಿಂತಿಸಿದ ಕುಹುಕಾತ್ಮರಾದವರ ಸ್ನೇಹದಿಂದ ಅನುಭವಿಸಿದ ನೋವುಗಳನ್ನು ವಿವರಿಸಲು ಪದಗಳಿಗೆ ಶಕ್ತಿಯಿಲ್ಲ. ಆದ್ದರಿಂದ ತಪ್ಪು ಒಪ್ಪುಗಳನ್ನು ಭಗವಂತನಲ್ಲಿ ನಿವೇದಿಸಿ ಮತ್ತೆ ಮತ್ತೆ ಶರಣಾಗತಿ ಬೇಡುತ್ತಾರೆ.

ಹರಿದಾಸನಾದ ಮೇಲೂ ಮಾಡಿದ ತಪ್ಪುಗಳು ಹೀಗಿವೆ:

1. ಹೊಟ್ಟೆಗಾಗಿ ನಿಜತತ್ವಂಗಳಂ ಬೆಲೆಮಾಡಿ ಜೀವಿಸುವೆ

ಪಾಪಿಯು ನಾನು (ಕೀ.241)

2. ತವಪಾದ ಧ್ಯಾನವನು ಮಾಡುವ

ಭಾಗ್ಯವ ಬಿಟ್ಟು ಸಂಸರಣದೊಳ್ ಮುಳುಗಿ

ಕವಿಗಳ್ ಪ್ರಶಂಶಿಸುವ ವರ್ಣನೆಗೆ

ಕಿವಿಗೊಟ್ಟು ನಾನಕಟ ಕೆಟ್ಟೆನು (ಕೀ.241)

3 . ಕಾಸಿಗೋಸುಗ ಪರರ ಕಾಡಿಬೇಡಿದೆ ಬರಿದೆ

ವೇಷ ಹಾಕಿದರೇನು ವೇದಾರ್ಥ ತಿಳಿದೀತೇ

ಉದರಂಭರಣಕ್ಕಾಗಿ ಪದ ಪದ್ಯಗಳ ಹೇಳಿ

ಉಂಟಾದುದಿಲ್ಲವೆನ್ನುವೆ

ತುದಿಮೊದಲಿಲ್ಲದ ದೋಷಕೆ ಗುರಿಯಾಗಿ

ಸದಮಲನೆಂದರೆ ಸರ್ವರು ನಗರೇನೊ (ಕೀ.218)

4. ಬವನಾಸಿ ಧರಿಸಿ ದಾಸನೆಂದು ನಾ

ಬರಿದೆ ದೇಶಗಳ ತಿರುಗಿ ಬೆಂಡಾದೆನು

ಯಮನಿಯಮಾಸನಯೋಗ | ಗಳ

ಕ್ರಮವರಿಯೆನು ನರಜನ್ಮದೊಳೀಗ

ಭ್ರಮೆ ಪಡುತ ಬಳಲುವೆ ಯಾವಾಗ

ಮಮ ಎಂಬುದರಿಂದ ಬಂದಿತು ರೋಗ (ಕೀ.178)

ಖಳಸ್ನೇಹ, ಅಸ್ವಾಭಾವಿಕ ಬಯಕೆಗಳು, ಕಳವಳ, ಬಳಲಿಕೆ, ದುಷ್ಟತನ, ವ್ಯಾಮೋಹ, ಸ್ವಾರ್ಥಕ್ಕಾಗಿ ಪರರ ಸ್ತೋತ್ರ ಮಾಡುವುದು ನೀತಿಹೇಳಿದವರನ್ನು ನಿಂದಿಸುವುದು, ಮಾತಿನಲ್ಲಿ ನಿಸ್ಪøಹನಾಗಿ ಮನದಲ್ಲಿ ಚಂಚಲನಾಗಿ ಆತ್ಮe್ಞÁನವಿಲ್ಲದ ದುರಾಸಕ್ತನೆನಿಸುವುದು -ಹೀಗೆ ತಪ್ಪುಗಳ ಪಟ್ಟಿ ಬೆಳೆಯುತ್ತಲೇ ಹೋಗುವುದು. ಇವುಗಳ ಬಗ್ಗೆ ಆತ್ಮಾವಲೋಕನ ಮಾಡಿಕೊಂಡಾಗ ನಿತ್ಯಕರ್ಮಗಳಲ್ಲಿ ಆಸಕ್ತಿ ಮೂಡುತ್ತದೆ. ಹೀಗೆ ಆತ್ಮಶೋಧನೆ ಹರಿದಾಸರ ಸಾಧನಪಥದಲ್ಲಿ ಒಂದು ಪ್ರಮುಖವಾದ ಘಟ್ಟ. ಆತ್ಮಾವಲೋಕನದಿಂದ ಪಾಪಪ್ರಜ್ಞೆ ಉಂಟಾಗಿ ಪಶ್ಚಾತ್ತಾಪಪಡದ ಹೊರತು ಬದುಕಿನಲ್ಲಿ ಬದಲಾವಣೆ ಆಗುವುದಿಲ್ಲ. ಈ ಪಶ್ಚತ್ತಾಪದಿಂದ ಜೀವನಪಥವೇ ಬದಲಾಗುತ್ತದೆ. ಹೊರಗಿನ ಡಂಭವ ಬಿಟ್ಟು, ಒಳಗೆ ನಿಶ್ಚಲನಾಗಿ, ಪರಹಿತವ ಕೋರುತ್ತ, ಕರಣತ್ರಯ ಶುದ್ಧಿಯಿಂದ ಹರಿಧ್ಯಾನ ಮಾಡಬೇಕೆಂಬ ಹಾದಿಯನ್ನು ದಾಸರು ಕಂಡುಕೊಳ್ಳುತ್ತಾರೆ. (ಕೀ.218) e್ಞÁನ, ಭಕ್ತಿ, ವೈರಾಗ್ಯ, ದಾನ, ಧರ್ಮಾದಿ ಸದ್ಗುಣಗಳು ತಾವಾಗಿಯೇ ಸ್ವಾಧೀನವಾಗುತ್ತವೆÉ. ಕಾಮ ಕ್ರೋಧಾದಿ ತಾಮಸ ಗುಣಗಳು ನಿರ್ನಾಮವಾಗುತ್ತವೆ. ಬದುಕಿನ ಪ್ರಯೋಜನವೇನು ಎಂಬ ಪ್ರಶ್ನೆಗೆ ಉತ್ತರವು ದೊರೆಯುತ್ತದೆ. ಆ ಉತ್ತರ ಹೀಗಿದೆ.

1. ದೇವರ ದಿವ್ಯ ಗುಣಂಗಳ ಪೊಗಳುವುದು

ಜೀವರಿಗಿದುವೆ ಪ್ರಯೋಜನವು

ಭಾವದಿ ತೋರುವ ವಿಷಯಗಳೆಲ್ಲವು

ಭಕ್ತಿಯೊ4.ಳರಿತು ಸಮರ್ಪಿಸುತ (ಕೀ.220)

2. ಪರಸೌಖ್ಯವಿದೆ ಮಾನವ ನಿನಗೆ

ನಿರತಂ ಹರಿಪಾದ ಭಜನೆ (ಕೀ.226)

-ಹೀಗೆ ಆತ್ಮಶೋಧನೆ ಭಕ್ತಿಗೂ ಸಮರ್ಪಣ ಭಾವಕ್ಕೂ ಕಾರಣವಾಗುತ್ತದೆ.

1. ನಡೆವುದು ನುಡಿವುದು ಕೊಡುವುದು ಬಿಡುವುದು

ಒಡೆಯ ಹರಿಯ ಪ್ರೇರಣೆಯೆಂದು

ದೃಢಮನದಲಿ ತಿಳಿದಾವಾಗಲು ತಾ

ಮೃಢಸಖನÀಡಿ ಧ್ಯಾನಕೆ ತಂದು (ಕೀ.220)

2. ಈಶನಾಧೀನ ಸಕಲ ಜೀವನ

<ಈಔಓಖಿ ಜಿಚಿಛಿ

****

henne rangadasaru honnappa dasaru ಹೆನ್ನೆರಂಗದಾಸರು magha bahula ashtami

  ದಾಸರ ಹೆಸರು :HENNE RANGADASARU ಹೆನ್ನೆರಂಗದಾಸರು

                         OR HONNAPPA DASARU ಹೊನ್ನಪ್ಪದಾಸರು

ಲಭ್ಯ ಕೀರ್ತನೆಗಳ ಸಂಖ್ಯೆ : 188

 ದಾಸರ ಹೆಸರು : ಸದಾನಂದರು

ಲಭ್ಯ ಕೀರ್ತನೆಗಳ ಸಂಖ್ಯೆ : 69

***

ಮಾಘ ಕೃಷ್ಣ ಅಷ್ಟಮಿ

ಶ್ರೀಹೊನ್ನಪ್ಪದಾಸರ ಆರಾಧನಾ ಮಹೋತ್ಸವ

          

ವಂದ್ಯಾಯ ಹೆನ್ನೆರಂಗ ದಾಸಾರ್ಯಾಯ ದಾಸಧರ್ಮ ರತಾಯಚ/ 

ನಮತಾಮಿಷ್ಠದಾತ್ರೇಚ ಭಕ್ತಾನಾಂ ಕಾಮಧೇನವೇ//

          

17 ನೆಯ ಶತಮಾನದ ಶ್ರೇಷ್ಠ ಹರಿದಾಸರು, ಆಂಧ್ರದ ಕದಿರಿ ಮತ್ತು  ಅನಂತಪುರದ ಸಮೀಪದಲ್ಲಿರುವ ಪೆನ್ನಹೋಬಿಲ ನರಸಿಂಹ ದೇವರ ಪರಮ ಆರಾಧಕರು, ನರಸಿಂಹ ದೇವರ ಪ್ರೇರಣೆಯಂತೆಯೇ ಹೆನ್ನೆರಂಗವಿಠಲ ಎನ್ನುವ ಅಂಕಿತನಾಮದಿಂದ ಅದ್ಭುತವಾದ ಕೃತಿರಚನೆಗಳನ್ನು ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ರಚನೆ ಮಾಡಿದವರು, ಸದಾ ಹರಿಧ್ಯಾನದಲ್ಲಿಯೇ ತರ್ಪರರಾಗಿದ್ದು  ತಮ್ಮ ಇಡೀ ಜೀವನವನ್ನೇ ಭಗವಂತನ ಪಾದಸೇವೆಯಲ್ಲಿ ಕಳೆದವರಾದ

 ಶ್ರೀ ಹೊನ್ನಪ್ಪದಾಸರ ಆರಾಧನಾ ಮಹೋತ್ಸವ  ಶ್ರೀ ದಾಸರ ಕಟ್ಟಿ ಅನಂತಪುರ ಜಿಲ್ಲೆಯ ವಜ್ರಕರೂರು ಮಂಡಲದ ಕಡಮಲಕುಂಟಾ ಗ್ರಾಮದಲ್ಲಿದೆ

***


ಶ್ರೀ ಹೆನ್ನೆ ರಂಗ ವಿಠಲಾಂಕಿತ  ಹೆನ್ನೆರಂಗದಾಸರು


ನಮ್ಮ ಭಾರತ ದೇಶದಲ್ಲಿ ಹರಿದಾಸರುಗಳ ಅಪಾರವಾದ ಸಮೂಹವಿದೆ. ಅಂತಹ ಸಮೂಹಕ್ಕೆ ಸೇರಿದವರು ನಮ್ಮ ಹೆನ್ನೆರಂಗ ವಿಠಲಾಂಕಿತ ಹೊನ್ನಪ್ಪ ದಾಸರು. ದಾಸರ  ಜನ್ಮ ಸ್ಥಳ ಆಂಧ್ರಪ್ರದೇಶದ ಅನಂತಪುರಂ ಜಿಲ್ಲೆಯ ವಜ್ರಕರೂರು ಮಂಡಲದ ಗಡೇ ಹೊತೂರು ಎಂಬ ಗ್ರಾಮ. ಇದು ಪ್ರಸಿದ್ಧ ನರಸಿಂಹಕ್ಷೇತ್ರವಾದ ಪೆನ್ನಾ ಅಹೋಬಿಲಂಗೆ ಹತ್ತಿರವಿದ್ದ ಕಾರಣ ದಾಸರಿಗೆ ಈ ನರಸಿಂಹ ಸ್ವಾಮಿಯಲ್ಲಿ ಅಪಾರ ಭಕ್ತಿ ಇದ್ದರಿಂದ ಅವರು ಹೆನ್ನೆರಂಗ ವಿಠಲ ಎಂಬ ಅಂಕಿತದಿಂದ ಅನೇಕ ಕೀರ್ತನೆಗಳು ರಚಿಸಿ ಹೆನ್ನೆರಂಗದಾಸರೆಂದು ಪ್ರಸಿದ್ಧಿಯಾಗಿದ್ದಾರೆ.

      

     ಈ ಪ್ರದೇಶವು ಕರ್ನಾಟಕದ ಗಡಿಭಾಗದಲ್ಲಿರುವಕಾರಣ ದಾಸರು ಕನ್ನಡದಲ್ಲಿಯೇ ಕೀರ್ತನೆ ರಚಿಸಿದರು. ಕೀರ್ತನೆಗಳ  ಜೊತೆಗೆ ಶತಕವುಕೂಡ ಇವರ ಕೃತಿಗಳಲ್ಲಿ ಕಾಣಬಹುದು ದಾಸರು ರಚಿಸಿದ 'ಹೆನ್ನೆ ರಂಗವಿಠಲ ಶತಕದ' ಮೂಲಕ ನಮಗೆ ಭಾಗವತದ ಸಾರವನ್ನು ತಿಳಿಸಿದ್ದಾರೆ.

  

      ದಾಸರು ಕೆಲ ಕಾಲ ಗಡೆಹೊತೂರಿನಿಂದ ಹತ್ತಿರದಲ್ಲಿರುವ ಕಡಮಲಕುಂಟ ಗ್ರಾಮಕ್ಕೆ ಬಂದು ನೆಲಸಿದಾಗ ಅವರಿಗೆ ಕರ್ನಾಟಕದ ಸುರಪುರ ದೊರೆಯಾದ ವಾಸುದೇವ ನಾಯಕರ ಆಗ್ರಹದಮೇರೆಗೆ ಅವರ ಆಸ್ಥಾನದಲ್ಲಿಯ ಮುದನೂರಿಗೆ ಬಂದರು. ಏಳು ತೀರ್ಥಗಳ ಸಂಗಮವಾದ (ರಾಮ ತೀರ್ಥ, ಪಾಲುತೀಥ೯, ಸಂಗಮ ತೀರ್ಥ, ಮರಳುತೀರ್ಥ, ಚಕ್ರ ತೀರ್ಥ) ಮುದನೂರು ಗ್ರಾಮದಲ್ಲಿನ  ಏಕ ಶಿಲಾ ವಿಗ್ರಹವಿರುವ ಸ್ವಯಂಭೂ ರುಕ್ಮಿಣಿ ಪಾಂಡು ರಂಗಸ್ವಾಮಿ, ವೇಣುಗೋಪಾಲ ಸ್ವಾಮಿ ಮತ್ತು ನರಸಿಂಹಸ್ವಾಮಿಯ ನಿತ್ಯ ಪೂಜೆಗಳನ್ನು ನೆರವೇರಿಸತ್ತಾ ಅಲ್ಲಿಯೇ ಕೆಲ ಕಾಲ ಉಳಿದುಕೊಂಡರೆಂದು ತಿಳಿದು ಬಂದಿದೆ. ಈ ಆಧಾರದಿಂದ ಇವರ ಕಾಲ 17ನೇ ಶತಮಾನ ವಿರಬಹುದೆಂದು ಹೇಳಬಹುದು.


        ಪುರಂದರ ದಾಸರು ವಿಜಯದಾಸರಂತೆ  ಹೆನ್ನೆರಂಗದಾಸರು ಕೂಡ 'ಹರಿ ಸರ್ವೋತ್ತಮ ವಾಯು ಜೀವೊತ್ತಮ' ತತ್ವವನ್ನು ಪ್ರಚಾರ ಮಾಡುತ್ತ ಕೀರ್ತನೆಗಳನ್ನು ರಚಿಸಿದ್ದಾರೆ. ಇವರ ಕೀರ್ತನೆಗಳಲ್ಲಿ ಅವರ ಆರಾಧ್ಯ ದೈವ ಪೆನ್ನಾ ಅಹೋಬಿಲ ನರಸಿಂಹಸ್ವಾಮಿಯ ಅಕ್ಷರಮಾಲೆಯನ್ನು ಸಮರ್ಪಿಸಿ ಪೆನ್ನಾ ಅಹೋಬಿಲ ಅನ್ನಮಯ್ಯ ಎಂದು ಪ್ರಸಿದ್ದರಾಗಿದ್ದಾರೆ. ದಾಸರ ಕೀರ್ತನೆಗಳಲ್ಲಿ ಅವರು ಅರ್ಚಿಸಿದ ಮುದನೂರು ಗೋಪಾಲಸ್ವಾಮಿ, ಹೊತೂರು ವೆಂಕಟರಮಣ, ತಿರುಪತಿ ವೆಂಕಟೇಶ್ವರ ಸ್ವಾಮಿಯನ್ನು ಸ್ತುತಿಸಿದ್ದಾರೆ.

    ದಾಸರ ಕ್ಷೇತ್ರದಲ್ಲಿ ಅವರ ಪವಾಡಗಳು ಇವತ್ತಿಗೂ ಮನೆ ಮಾತಾಗಿವೆ. ಅವರು ಗಡೇ ಹೊತೂರಿನ ತಮ್ಮ ಮನೆಯಿಂದ ಪೆನ್ನಾ ಅಹೋಬಿಲ ನರಸಿಂಹಸ್ವಾಮಿಯ ಗುಡಿಗೆ ಸುರಂಗ ಮಾರ್ಗವಾಗಿ ಹೋಗಿ ನಿತ್ಯವೂ ದರ್ಶನ ಪಡೆದು ಬರುತ್ತಿದ್ದರೆಂದು ಪ್ರತೀತಿ. 


     ದಾಸರ ಪ್ರಸಿದ್ಧಿಯಿಂದ ಅಸೂಯೆಗೊಂಡ ಕೆಲವರು ದಾಸರ ಮೇಲೆ ಗೋಹತ್ಯ ಆಪಾದನೆ ಮಾಡಿದರು. ಆಗ ದಾಸರು ಆ ಹಸುವನ್ನು ದ್ವಾದಶ ಸ್ತೋತ್ರ ಪಠಿಸಿ ಅದನ್ನು ಬದುಕಿಸಿದರು. ಸ್ವಯಂ ಆದಿಶೇಷರೇ ಇವರ ಸಹೋದರರೆಂದು ನಂಬಿಕೆ. ದಾಸರು ಅವರ ಸಹೋದರನ ಜೊತೆ ಮಾತನಾಡುತ್ತಿದ್ದರೆಂದು, ಆ ನಾಗಪ್ಪನ ಮಹಿಮೆಯಿಂದ ಅವರಿಗೆ ಭೂಮಿ ದೊರೆಯಿತೆಂದು ಸರಕಾರಿ ಕಡೆತಗಳಲ್ಲಿ ಉಲ್ಲೆಖವಿದೆ. ಆ ಕಡಮಲಕುಂಟ ಮತ್ತು ಗಡೇ ಹೊತೂರಿನ ಮಧ್ಯದ ಭೂಮಿಯನ್ನು ಈಗಲೂ ನಾಗಪ್ಪ ಮಾನ್ಯಂ ಎಂದು ಕರೆಯುತ್ತಾರೆ.

       ಇಲ್ಲಿಯವರೆಗೆ ದೊರೆತಿರುವ ದಾಸರ ಕೀರ್ತನೆಗಳು ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಮಗ್ರ ದಾಸ ಸಾಹಿತ್ಯ  Vol 29 Part 1 & part 2 ನಲ್ಲಿ 2003ರಲ್ಲಿ ಪ್ರಕಟಿಸಲಾಯಿತು. 

        ದಾಸರ ಹಲವಾರು ಶಿಷ್ಯರು ಆಂಧ್ರ, ಕರ್ನಾಟಕ ಮಹಾರಾಷ್ಟ್ರದಲ್ಲಿದ್ದಾರೆ. ಪ್ರತಿ ವರ್ಷ ದಾಸರ ಆರಾಧನೆಯು ಮಾಘ ಬಹುಳ ಸಪ್ತಮಿ, ಅಷ್ಟಮಿ ಮತ್ತು ನವಮಿ ತಿಥಿಗಳಂದು  ಹೆನ್ನೆರಂಗ ವಿಠಲ ದಾಸ ಮಂಡಳಿಯು ವಿಜ್ರಂಬಣೆಯಿಂದ ಕಡಮಲ ಕುಂಟದಲ್ಲಿರುವ ದಾಸರ ವೃಂದಾವನಕಟ್ಟೆಯಲ್ಲಿ ಜರುಗಿಸುತ್ತಾರೆ.

      ಹೆನ್ನೆರಂಗ ವಿಠಲ ದಾಸರು ಇವತ್ತಿಗೂ ಕಡಮಲ ಕುಂಟದ ತಮ್ಮ ಕಟ್ಟೆಯಲ್ಲಿದ್ದು ಶ್ರದ್ದಾ ಭಕ್ತಿಯಿಂದ ಬಂದವರ ಮನೋ ಬಿಷ್ಟೆಯನ್ನು ನೆರವೇರಿಸುತ್ತಾರೆ

***


info from kannadasiri.in


by

ಡಾ. ಬಸವರಾಜ ಸಬರದ

ಡಾ. ಜಯಲಕ್ಷ್ಮಿ ಮಂಗಳಮೂತಿ

ಪೀಠಿಕೆ


ಸಮಗ್ರ ದಾಸವಾಙ್ಮಯವು ವೈವಿಧ್ಯಮಯವಾಗಿ ಬೆಳೆದು ನಿಂತಿದೆ. ಪ್ರಾರಂಭದ ಘಟ್ಟದಲ್ಲಿ ಶ್ರೀಪಾದರಾಯರಿಂದ ಹಿಡಿದು ಇಂದಿನ ಆಧುನಿಕ ಸಂದರ್ಭದ ಕಾರ್ಪರ ನರಹರಿದಾಸರವರೆಗೆ ಇದರ ಬೆಳವಣಿಗೆಯನ್ನು ಗಮನಿಸಬಹುದಾಗಿದೆ. ಹೀಗಾಗಿ ಅಧ್ಯಯನದ ದೃಷ್ಟಿಯಿಂದ ಸಮಗ್ರ ದಾಸ ವಾಙ್ಮಯವನ್ನು ಎರಡು ರೀತಿಯ ಶಿಸ್ತನ್ನಳವಡಿಸಿಕೊಂಡು ಗಮನಿಸಬೇಕೆನಿಸುತ್ತದೆ.


ಶ್ರೀಪಾದರಾಜರಿಂದ ವಿಜಯದಾಸರವರೆಗೆ ರಚನೆಗೊಂಡ ದಾಸ ವಾಙ್ಮಯವು ಶಿಷ್ಟ ಪರಂಪರೆಯಿಂದ ಬೆಳೆದು ಮಾಧ್ವ ಸಿದ್ಧಾಂತವನ್ನು ಅನುಸರಿಸಿ ರಚನೆಯಾಗಿದೆ. ಸಂಸ್ಕøತ ಸಾಹಿತ್ಯದ ಶಾಸ್ತ್ರಗ್ರಂಥಗಳ ಅಧ್ಯಯನದ ಹಿನ್ನೆಲೆಯಲ್ಲಿ ಕನ್ನಡದಲ್ಲಿ ರಚನೆಗೊಂಡದ್ದಾಗಿದೆ. ಎರಡನೇ ಹಂತದಲ್ಲಿ ಬೆಳೆದು ಬಂದ ದಾಸ ವಾಙ್ಮಯವು ಜನಪದರಿಂದ ರಚನೆಯಾದುದಾಗಿದೆ. ಮಾಧ್ವಮತದÀ ಸಿದ್ಧಾಂತ ಹಾಗೂ ಮೊದಲನೇ ಘಟ್ಟದ ದಾಸವರೇಣ್ಯರ ಪ್ರಭಾವ ಸಹಜವಾಗಿಯೇ ಈ ಜನಪದ ಮೂಲದಿಂದ ಬಂದ ಹರಿದಾಸರ ಮೇಲೆ ಪ್ರಭಾವವನ್ನುಂಟು ಮಾಡಿದೆ. ಎರಡನೇ ಹಂತದಲ್ಲಿ ಬೆಳೆದು ನಿಂತಿರುವ ಈ ಜನಪದ ಹರಿದಾಸರು ಮೂಲ ಸಿದ್ಧಾಂತಕ್ಕನುಗುಣವಾಗಿಯೇ ಕೀರ್ತನೆಗಳನ್ನು ರಚಿಸಿದರೂ ಕೂಡಾ ಈ ಕೀರ್ತನೆಗಳಲ್ಲಿ ಜನಪದ ಸಂಸ್ಕøತಿಯ ಅನೇಕ ಸಂರಚನೆಗಳು ಕೂಡಿಕೊಂಡಿವೆ. ಹೀಗಾಗಿ ಈ ಎರಡನೇ ಹಂತದ ಹರಿದಾಸರ ಕೀರ್ತನೆಗಳನ್ನು ಜಾನಪದದ ನೆಲೆಯಿಂದ ನೋಡುವುದು ಕೂಡ ಇಂದಿನ ಅಗತ್ಯವಾಗಿದೆ.


ಈ ಸಂಪುಟದಲ್ಲಿ ಅಂತಹ ಜನಪದ ಪರಂಪರೆಯಿಂದ ಬಂದಂತಹ ನಾಲ್ಕು ಜನ ಹರಿದಾಸರ ಸಂಕೀರ್ತನೆಗಳನ್ನು ಸಂಪಾದಿಸಿಕೊಂಡಲಾಗಿದೆ. 18-19ನೇ ಶತಮಾನದಲ್ಲಿದ್ದ ಹರಿದಾಸರ ರಚನೆಗಳನ್ನು ಇಲ್ಲಿ ಸಂಗ್ರಹಿಸಲಾಗಿದೆ. ಆಧ್ಯಾತ್ಮವೆಂಬುದು ಕೇವಲ ಯತಿಗಳ ಹಾಗೂ ಪಂಡಿತರ ಸೊತ್ತಾಗಿರುವಂಥ ಸಂದರ್ಭದಲ್ಲಿ ಸಾಮಾನ್ಯ ಜನವರ್ಗದಿಂದ ಬಂದ ಈ ಹರಿದಾಸರು ಸಂಸಾರದಲ್ಲಿದ್ದುಕೊಂಡೇ ಮಹತ್ತರವಾದುದನ್ನು ಸಾಧಿಸಿದರು. ತಮ್ಮ ದಿನನಿತ್ಯದ ದುಡಿಮೆಯ ಪ್ರತೀಕಗಳ ಮೂಲಕವೇ ಆಧ್ಯಾತ್ಮದ ಅನನ್ಯತೆಯನ್ನು ಕಟ್ಟಿ ನಿಲ್ಲಿಸಿದರು. ಸಂಸಾರದ ಜಂಜಾಟದಲ್ಲಿದ್ದುಕೊಂಡೇ ಭಕ್ತಿಯ ಮಹತ್ವವನ್ನು ಸಾರಿ ಹೇಳಿದರು. ಹೀಗಾಗಿ ಇವರಿಗೆ ಸಂಸಾರವೆಂಬುದು ಆಧ್ಯಾತ್ಮ ಸಾಧನೆಗೆ ತೊಡಕಾಗಿ ಕಾಣಲಿಲ್ಲ. ಈ ಸಾಮಾನ್ಯ ವರ್ಗದಿಂದ ಬಂದ ಹರಿದಾಸರ ವಿಶಿಷ್ಟತೆಯೇನೆಂದರೆ ಇವರು ಕೇವಲ ಕೀರ್ತನಗೆಳನ್ನು ಮಾತ್ರ ರಚಿಸಲಿಲ್ಲ. ಕೀರ್ತನೆ ಕಥನ ಕವನಗಳೊಂದಿಗೆ, ಲಾವಣಿ, ಗೀಗೀ ಪದ, ಬಯಲಾಟದಂತಹ ಜನಪದ ಪ್ರಕಾರಗಳಲ್ಲಿಯೂ ಕಾವ್ಯ ರಚಿಸಿದರು.


ಈ ಸಂಪುಟದಲ್ಲಿ ಬರುವ ನಾಲ್ಕು ಜನ ಹರಿದಾಸರಲ್ಲಿ ಇಬ್ಬರು ಹರಿದಾಸರು ಸುಶಿಕ್ಷಿತ ಮನೆತನದಿಂದ ಬಂದರೆ ಇನ್ನಿಬ್ಬರು ಹರಿದಾಸರು ಸಾಮಾನ್ಯ ವರ್ಗದಿಂದ ಬಂದವರಾಗಿದ್ದಾರೆ. ಇವರು ಹುಟ್ಟಿ ಬಂದ ಪರಿಸರದಲ್ಲಿ ವ್ಯತ್ಯಾಸವಿದ್ದರೂ ಹರಿದಾಸ ಮತದ ತತ್ತ್ವಗಳ ಪಾಲನೆಯಲ್ಲಿ ಒಮ್ಮತವಿರುವುದನ್ನು ಕಾಣಬಹುದಾಗಿದೆ.


ಕನ್ನಡ ಸಾಹಿತ್ಯದಲ್ಲಿ ಸಾಮಾನ್ಯವಾಗಿ ಹದಿನೆಂಟು ಮತ್ತು ಹತ್ತೊಂಬತ್ತನೇ ಶತಮಾನವನ್ನು ಅಷ್ಟೊಂದು ಗಂಭೀರವಾಗಿ ಪರಿಗಣಿಸಿರುವುದಿಲ್ಲ. ಆದರೆ ಕುತೂಹಲದ ಸಂಗತಿಯೆಂದರೆ ಈ ಎರಡು ಶತಮಾನಗಳ ಅವಧಿಯಲ್ಲಿ ಅಸಂಖ್ಯಾತ ತತ್ವಪದಕಾರರು, ಕೀರ್ತನಕಾರರು ಹುಟ್ಟಿಬೆಳೆದಿರುವುದು ಗಮನಾರ್ಹ ಸಂಗತಿಯೆನಿಸುತ್ತದೆ. ಹದಿನೈದು ಹದಿನಾರನೇ ಶತಮಾನದಲ್ಲಿದ್ದ ಶಿಷ್ಟ ಪರಂಪರೆ ಈ ಸಮುದಾಯದ ಮೇಲೆ ಪ್ರಭಾವ ಬೀರಿದ್ದರೂ ಸಾಮಾನ್ಯವರ್ಗದಿಂದ ಬಂದ ಈ ಹರಿದಾಸರು ರಚಿಸಿದ ರಚನೆಗಳು ಭಾಷೆ, ವಸ್ತು, ಅಭಿವ್ಯಕ್ತಿ ನಲೆಯಲ್ಲಿ ವಿಶಿಷ್ಟವಾಗಿಯೇ ನಿಲ್ಲುತ್ತಾರೆ.


ಈ ಸಂಪುಟದಲ್ಲಿ ಬೆಳಗಾಂವ ಜಿಲ್ಲೆಯ ಗೋಕಾಕದ ಅನಾಂತಾದ್ರೀಶರ ಕಥನ ಕವನಗಳು, ಗುಲ್ಬರ್ಗ ಜಿಲ್ಲೆಯ ಮುದನೂರಿನ ಹೆನ್ನೆರಂಗದಾಸರ ಕೀರ್ತನೆಗಳು, ರಾಯಚೂರು ಜಿಲ್ಲೆಯ ಅಸ್ಕಿಹಾಳ ಗೋವಿಂದದಾಸರ ರಚನೆಗಳು ಮತ್ತು ರಾಯಚೂರು ಜಿಲ್ಲೆಯ ಕೊಪ್ಪರ ಗ್ರಾಮದ ಕಾರ್ಪರ ನರಹರಿದಾಸರ ಕೀರ್ತನೆಗಳು ಸೇರಿಕೊಂಡಿವೆ.


ಶ್ರೀ ಹೆನ್ನೆರಂಗ ದಾಸರ ಜನ್ಮಸ್ಥಳ ಹಾಗೂ ಅವರ ಜೀವನ ವಿವರಗಳಿಗೆ ಸಂಬಂಧಿಸಿದಂತೆ ಅಧಿಕೃತವಾದ ಮಾಹಿತಿ ದೊರಕುವುದಿಲ್ಲ. 'ಹೆನ್ನೆರಂಗವಿಠಲ' ಎಂಬ ಅಂಕಿತನಾಮದಲ್ಲಿ ಅವರು ಕೀರ್ತನೆಗಳನ್ನು ರಚಿಸಿದ್ದಾರೆ. ಮದ್ರಾಸ್ ಪ್ರಾಂತದ ಅನಂತಪುರ ಜಿಲ್ಲೆಯ ಗುತ್ತಿ ತಾಲೂಕಿನಲ್ಲಿ ಪೆನ್ನ ಅಹೋಬಲವೆಂಬ ಕ್ಷೇತ್ರವಿದೆ. ಅಲ್ಲಿಯ ನರಸಿಂಹ ದೇವರು ಸುಪ್ರಸಿದ್ಧವಾಗಿದೆ. ಈ ಕ್ಷೇತ್ರದ ಹತ್ತಿರವೇ ಪಿನಾಕಿನಿ ನದಿ ಹರಿಯುತ್ತದೆ. ಮೈಸೂರು ಪ್ರಾಂತದ ನಂದಿದುರ್ಗದಲ್ಲಿ ಹುಟ್ಟಿದ ಈ ನದಿಗೆ 'ಪೆನ್ನೆರುಪೆನ್ನ' ಎಂದು ಆ ಪ್ರದೇಶದ ಜನ ಕರೆಯುತ್ತಾರೆ. ಹೀಗಾಗಿ ನರಸಿಂಹ ದೇವರ ಭಕ್ತರಾದ ಹೆನ್ನೆರಂಗದಾಸರು 'ಹೆನ್ನೆರಂಗವಿಠಲ' ಎಂಬ ಮುದ್ರಿಕೆಯಿಂದ ತಮ್ಮ ಕೀರ್ತನೆಗಳನ್ನು ರಚಿಸಿದ್ದಾರೆ. ಹೀಗಾಗಿ ಇವರು ಮದ್ರಾಸ್ ಪ್ರಾಂತದ ಅನಂತಪುರ ಜಿಲ್ಲೆಯಲ್ಲಿಯೇ ಜನಿಸಿರಬೇಕೆಂದು ಊಹಿಸಬಹುದಾಗಿದೆ. ಕನಕಗಿರಿಯ ರಾಜಗೋಪಾಲಾಚಾರ್ಯರು ಕ್ರಿ.ಶ 1939ರಲ್ಲಿ ಪ್ರಕಟಿಸಿರುವ 'ಹೆನ್ನೆರಂಗ ವಿಠಲರ ಕೀರ್ತನೆಗಳು' ಪುಸ್ತಕದಲ್ಲಿ ಇದೇ ಅಭಿಪ್ರಾಯವನ್ನು ತಾಳಿದ್ದಾರೆ. ಮುಂದೆ ಹೆನ್ನರಂಗದಾಸರು ಗುಲಬರ್ಗಾ ಜಿಲ್ಲೆಯ ಸುರಪುರ ತಾಲೂಕಿನ ಮುದನೂರು ಗ್ರಾಮದಲ್ಲಿ ಬಂದು ನೆಲೆಸಿರಬಹುದಾಗಿದೆ. ಏಳು ತೀರ್ಥಗಳ ( ರಾಮತೀರ್ಥ, ಹಾಲುತೀರ್ಥ, ಸಂಗಮತೀರ್ಥ, ಪಾಂಡುತೀರ್ಥ ಮರುಳತೀರ್ಥ, ಸಕ್ಕರೆತೀರ್ಥ) ಸಂಗಮ ಕ್ಷೇತ್ರವೆಂದು ಮುದನೂರು ಗ್ರಾಮ ಪ್ರಸಿದ್ಧವಾಗಿದೆ. ಅಲ್ಲದೆ ಇಲ್ಲಿ ಏಕಶಿಲೆಯಲ್ಲಿ ಸ್ವಯಂಭೂ ರುಕ್ಮಿಣಿಪಾಂಡುರಂಗದೇವರು, ವೇಣುಗೋಪಾಲದೇವರು, ಮತ್ತು ನರಸಿಂಹದೇವರು ಆವಿರ್ಭವಿಸಿದ ತ್ರಿಮೂರ್ತಿ ಇದೆ. ಈ ಕ್ಷೇತ್ರಕ್ಕೆ ಹೆನ್ನೆರಂಗದಾಸರು ಭಕ್ತಿಯಿಂದ ನಡೆದು ಕೊಳ್ಳುತ್ತಿದ್ದರೆಂದು ತಿಳಿದು ಬರುತ್ತದೆ.


ಹೆನ್ನೆರಂಗದಾಸರ ಕಾಲನಿರ್ಣಯವೂ ಸಂಧಿಗ್ದವಾಗಿದೆ ಕನಕಗಿರಿಯ ರಾಜಗೋಪಾಲಾಚಾರ್ಯರ ಪ್ರಕಾರ ಹೆನ್ನೆರಂಗವಿಠಲರು ಸುರಪುರದ ವಾಸುದೇವ ನಾಯಕರಂಥಹ ದೊರೆತನದಲ್ಲಿ ಬಾಳಿದರೆಂದು ತಿಳಿದು ಬರುತ್ತದೆ. ಆದ್ದರಿಂದ ಸುರಪುರದ ವಾಸುದೇವ ನಾಯಕರ ಕಾಲವನ್ನು ಗಮನದಲ್ಲಿಟ್ಟುಕೊಂಡರೆ ಹೆನ್ನೆರಂಗದಾಸರು ಕ್ರಿ.ಶ 1800-1860ರ ಸುಮಾರಿಗೆ ಬಾಳಿರಬಹುದೆಂದು ತಿಳಿದು ಬರುತ್ತದೆ.


ಸಂಗ್ರಹ-ಸಂಸ್ಕರಣ-ಸಂಪಾದನೆ


ಈ ಸಂಪುಟದಲ್ಲಿ ಬರುವ ನಾಲ್ಕು ಜನ ಹರಿದಾಸರ ಕೀರ್ತನೆಗಳ ಸಂಗ್ರಹಕ್ಕೆ ಸಂಬಂಧಿಸಿದಂತೆ ಅನೇಕ ಆಕರಗಳನ್ನು ಬಳಸಿಕೊಳ್ಳಲಾಗಿದೆ. ಇಲ್ಲಿಯ ಕೀರ್ತನೆಗಳನ್ನು ಮುಖ್ಯವಾಗಿ ಎರಡು ರೀತಿಯ ಆಕರ ಗಳಿನ್ನಿಟ್ಟುಕೊಂಡು ಜೋಡಿಸಲಾಗಿದೆ. ಇಲ್ಲಿಯ ಕೆಲವು ದಾಸರ ಕೀರ್ತನಗಳು ಈಗಾಗಲೆ ಪ್ರಕಟವಾಗಿವೆ. ಇನ್ನು ಕೆಲವು ದಾಸರ ಕೀರ್ತನಗಳು, ಈ ಸಂಪುಟದ ಮೂಲಕ ಮೊದಲಬಾರಿಗೆ ಪ್ರಕಟಗೊಳ್ಳುತ್ತಲಿವೆ. ಇವುಗಳಿಗೆ ಸಂಬಂಧಿಸಿದ ವಿವರಗಳನ್ನು ಗಮನಿಸಬಹುದಾಗಿದೆ.


ಶ್ರೀಗೋಕಾವಿ ಅನಂತಾದ್ರೀಶರ ರಚನೆಗಳ ಸಂಗ್ರಹಕ್ಕೆ ಸಂಬಂಧಿಸಿದಂತೆ ಈಗಾಗಲೇ ಪ್ರಕಟವಾಗಿರುವ ಮೂರು ಪಠ್ಯಗಳನ್ನು ಆಕರವಾಗಿಟ್ಟುಕೊಳ್ಳಲಾಗಿದೆ. ಅನಂತಾದ್ರೀಶದಾಸರು ವೆಂಕಟೇಶ ಪಾರಿಜಾತ, ಶಿವಪಾರಿಜಾತ, ಧ್ರುವಚರಿತ್ರೆ ಹಾಗೂ ಪ್ರಹ್ಲಾದ ಚರಿತ್ರೆ ಮುಂತಾದ ಕಥನಕಾವ್ಯಗಳನ್ನು ಕೆಲವು ಕೀರ್ತನೆಗಳನ್ನು ರಚಿಸಿದ್ದಾರೆ. ಇವುಗಳಲ್ಲಿ ವೆಂಕಟೇಶ ಪಾರಿಜಾತ ಕಥನಕಾವ್ಯವನ್ನು ಗದಗಿನ ಹೊಂಬಾಳಿ ಬಂಧುಗಳು ಪ್ರಕಾಶನದವರು ಕ್ರಿ.ಶ 1960 ರಲ್ಲಿ ಪ್ರಕಟಿಸಿದ್ದಾರೆ.'ಶ್ರೀ ಕೃಷ್ಣಚರಿತ್ರೆ'ಯನ್ನು 1935 ರಲ್ಲಿ ದಿ|| ಬಿಂದಾಚಾರ್ಯಜಯತೀರ್ಥಾಚಾರ್ಯ ಗೋಕಾಕ ಇವರು ಪ್ರಕಟಿಸಿದ್ದರು. 'ಪ್ರಹ್ಲಾದ ಚರಿತ್ರೆ' ಕಥನಕಾವ್ಯವು ಇದೇ ಪ್ರಕಾಶನದಿಂದ ಕ್ರಿ.ಶ 1980ರಲ್ಲಿ ಪ್ರಕಟವಾಗಿದೆ. ಇವೆರಡೂ ಪ್ರಕಟಿತ ಕೃತಿಗಳಲ್ಲಿರುವ ಹಾಡುಗಳನ್ನು ಸಂಗ್ರಹಿಸಿ ಇಲ್ಲಿ ಕೊಡಲಾಗಿದೆ. ಈ ಪ್ರಕಟಿತ ಹಾಡುಗಳಲ್ಲಿ ಅನೇಕ ಅಶುದ್ಧ ಪಾಠಗಳಿದ್ದು ಅವುಗಳನ್ನು ಪರಿಷ್ಕರಿಸಿ ಶುದ್ಧ ಪಾಠಗಳನ್ನು ಮಾತ್ರ ಇಲ್ಲಿ ಸಂಪಾದಿಸಲಾಗಿದೆ. 'ಶಿವಪಾರಿಜಾತ' ಕಥನ ಕಾವ್ಯವು ಜೀರ್ಣಾವಸ್ಥೆಯಲ್ಲಿರುವ ಮುದ್ರಿತ ಕೃತಿಯಾಗಿದ್ದು ಈ ಕೃತಿಯ ಸಂಪಾದಕರ ಪ್ರಕಾಶಕರ ವಿವರಗಳು ತಿಳಿದುಬಂದಿಲ್ಲ. ನಾವು ಕ್ಷೇತ್ರಕಾರ್ಯ ಮಾಡಿದಾಗ ಧ್ವನಿ ಮುದ್ರಿಸಿಕೊಂಡ ವಕ್ತøಗಳ ಹಾಡುಗಳನ್ನು ಈ ಜೀರ್ಣಗೊಂಡ ಕೃತಿಯೊಂದಿಗೆ ತುಲನೆ ಮಾಡಿನೋಡಿ ಶುದ್ಧ ಪಾಠಗಳನ್ನು ಸಿದ್ಧಪಡಿಸಿ ಈ ಕಾವ್ಯವನ್ನು ಸಂಪಾದಿಸಿಕೊಡಲಾಗಿದೆ. 'ಧ್ರುವಚರಿತ್ರೆ' ಕಥನ ಕಾವ್ಯವು ಇದುವರೆಗೆ ಎಲ್ಲಿಯೂ ಪ್ರಕಟವಾಗಿರುವುದಿಲ್ಲ. ಇದರ ಮೂಲ ಪ್ರತಿಯನ್ನು ನಾವು ಶ್ರೀ ಜಯತೀರ್ಥ ಅಷ್ಟಪುತ್ರೆ, ಗೋಕಾಕ, ಇವರಿಂದÀ ಪಡೆದುಕೊಂಡಿದ್ದೇವೆ. ಈ ಹಸ್ತಪ್ರತಿ ದೇವನಾಗರಿ ಲಿಪಿಯಲ್ಲಿದೆ. ಈ ಹಸ್ತಪ್ರತಿಯನ್ನು ಪರಿಷ್ಕರಿಸಿ ದೇವನಾಗರಿ ಲಿಪಿಯಿಂದ ಕನ್ನಡ ಲಿಪಿಗೆ ಬದಲಾಯಿಸಿ ಅದರ ಶುದ್ಧ ಪಾಠವನ್ನು ಇಲ್ಲಿಕೊಡಲಾಗಿದೆ. ಶ್ರೀತುಳಜಾಮಹಾತ್ಮೆ ಹಸ್ತಪ್ರತಿಯನ್ನು ಉದಯ ಆಚಾರ ಗೋಕಾಕರಿಂದ ಸಂಗ್ರಹಿಸಲಾಗಿದ್ದು ಪ್ರಥಮ ಬಾರಿ ಪ್ರಕಟಗೊಳ್ಳುತ್ತಲಿದೆ. ಅನಂತಾದ್ರೀಶರು ಅನೇಕ ಕೀರ್ತನೆಗಳನ್ನು ರಚಿಸಿದ್ದಾರೆಂಬುದು ಈಗಾಗಲೇ ಸ್ವಷ್ಟವಾಗಿದೆ. ನಾವು ಕೈಕೊಂಡ ಕ್ಷೇತ್ರಕಾರ್ಯದಲ್ಲಿ ಇವರ ಕೀರ್ತನೆಗಳು ಅಧಿಕ ಸಂಖ್ಯೆಯಲ್ಲಿ ನಮಗೆ ದೊರೆಯಲಿಲ್ಲ. ಈಗ ಸಧ್ಯಕ್ಕೆ ಏಳು ಕೀರ್ತನೆಗಳನ್ನು ಇದರೊಂದಿಗೆ ಸಂಗ್ರಹಿಸಿಕೊಟ್ಟಿದ್ದೇವೆ. ಈ ಕೀರ್ತನೆಗಳನ್ನು ಶ್ರೀಮತಿ ಲಲಿತಾಬಾಯಿ ಕೊಪ್ಪರ, ಶ್ರೀಮತಿ ಗೋದಾವರಿ ಕಲ್ಲೂರಕರ್, ಡಾ||ಶೈಲಜಾ ಕೊಪ್ಪರ್, ಶ್ರೀಮತಿ ಶಾಲಿನಿ ಕೊಪ್ಪರ ವಕ್ತøಗಳಿಂದ ಪಡೆದುಕೊಳ್ಳಲಾಗಿದೆ. ಹಾಗೆ ಪಡೆದು ಕೊಂಡ ಕೀರ್ತನೆಗಳನ್ನು ಪರಿಷ್ಕರಿಸಿ ತೆಗೆದುಕೊಳ್ಳಲಾಗಿದೆ.


ಹೆನ್ನರಂಗವಿಠಲರು ಅನೇಕ ಕೀರ್ತನೆಗಳನ್ನು ರಚಿಸಿದ್ದಾರೆ. ಕ್ರಿ.ಶ 1939ರಲ್ಲಿ ಕನಕಗಿರಿಯ ರಾಜಗೋಪಾಲಾಚಾರ್ಯರು ಹೆನ್ನರಂಗ ವಿಠಲರ 63 ಕೀರ್ತನಗಳನ್ನು ಪ್ರಕಟಿಸಿದ್ದಾರೆ ಹೀಗೆ ಹೆನ್ನರಂಗವಿಠಲರ ಕೀರ್ತನೆಗಳಿಗೆ ಸಂಬಂಧಿಸಿದಂತೆ ಇದುವರೆಗೆ ಇದೊಂದೇ ಕೃತಿ ಪ್ರಕಟವಾಗಿದೆ. ಇದು ಕೂಡಾ ಅಪೂರ್ಣವಾಗಿದೆ. ಗುಲಬರ್ಗಾ ಜಿಲ್ಲೆಯ ಸುರಪುರದಲ್ಲಿ ವಾಸಿಸುತ್ತಿರುವ ಶ್ರೀ ಶ್ರೀಹರಿರಾವ್ ಆದವಾನಿಯವರು ಆಸಕ್ತಿಯಿಂದ ಕೆಲವು ದಾಸರ ಹಸ್ತಪ್ರತಿಗಳನ್ನು ಸಂಗ್ರಹಿಸಿದ್ದಾರೆ. ಅವರ ಸಂಗ್ರಹದಿಂದ ಹೆನ್ನೆರಂಗವಿಠಲ ರಚನೆಗಳನ್ನು ಆಯ್ದುಕೊಂಡು, ಪರಿಷ್ಕರಿಸಿ ಇಲ್ಲಿಕೊಡಲಾಗಿದೆ. ಪರಿವಿಡಿಯಲ್ಲಿ ಎರಡುನೂರು ಕೀರ್ತನೆಗಳ ಪ್ರಸ್ತಾಪವಿದ್ದರೂ ಅದರಲ್ಲಿ ಕೆಲಕೀರ್ತನೆಗಳು ಅಳಿಸಿ ಹೋಗಿವೆ. ಹೀಗಾಗಿ ಒಂದು ನೂರಾ ಎಂಬತ್ತೈದು ಕೀರ್ತನಗಳನ್ನು ಮಾತ್ರ ನಮಗೆ ಸಂಪಾದಿಸಿಕೊಡಲು ಸಾಧ್ಯವಾಗಿದೆ. ಶ್ರೀ ಶ್ರೀಹರಿರಾವರ್ ಆದವಾನಿಯವರಿಂದ ನಮಗೆ ದೊರೆತಿರುವ ಈ ಹಸ್ತಪ್ರತಿ ತೆಲುಗು ಲಿಪಿಯಲ್ಲಿದೆ. ಇದನ್ನು ಕನ್ನಡ ಲಿಪಿಗೆ ಅಳವಡಿಸಿ, ಪಾಠಾಂತರಗಳನ್ನು ಪರಿಷ್ಕರಿಸಿ ಭಾವಾರ್ಥವನ್ನು ಜೋಡಿಸಿ ಸಂಪಾದಿಸಿ ಕೊಡಲಾಗಿದೆ. ಹೆನ್ನೆರಂಗ ವಿಠಲರು, ಶತಕಗಳನ್ನು ಹಾಗೂ ಸೀಸಪದ್ಯಗಳನ್ನು ರಚಿಸಿರುವುದು ತಿಳಿದು ಬರುತ್ತದೆ. ಕನಕಗಿರಿಯ ರಾಜಗೋಪಾಲಚಾರ್ಯರು ಸಂಪಾದಿಸಿ ಪ್ರಕಟಿಸಿರುವ ಕೃತಿಯಲ್ಲಿ ಶತಕ ಹಾಗು ಸೀಸಪದ್ಯಗಳನ್ನು ನೋಡಬಹುದಾಗಿದೆ. ಈ ಸಂಪುಟವು ಕೀರ್ತನೆಗಳ ಪ್ರಕಟಣೆಗೆ ಮಾತ್ರ ಸೀಮಿತವಾಗಿರುವುದರಿಂದ ನಾವಿಲ್ಲಿ ಅವರ ಕೀರ್ತನಗಳನ್ನು ಮಾತ್ರ ಸಂಪಾದಿಸಿ ಕೊಟ್ಟಿದ್ದೇವೆ.


ಅಸ್ಕಿಹಾಳ ಗೋವಿಂದದಾಸರು ಕೀರ್ತನೆಗಳನ್ನು ರಚಿಸಿರುವುದಲ್ಲದೆ ಬಯಲಾಟ, ಗೀಗಿಪದ, ಲಾವಣಿಗಳನ್ನು ಕೂಡಾ ರಚಿಸಿದ್ದಾರೆ. ಮೂವತ್ತು ಕೀರ್ತನಗಳನ್ನೊಳಗೊಂಡ ಕೃತಿಯೊಂದು 1978ರಲ್ಲಿ ರಾಯಚೂರಿನ 'ಶ್ರೀಕೋಟೆ ಗುರುರಾಜ ಭಜನಾಮಂಡಳಿಯವರಿಂದ ಪ್ರಕಟಗೊಂಡಿದೆ' ಗೋವಿಂದದಾಸರ ಮನೆತನದವರು ಈಗ ರಾಯಚೂರಿನಲ್ಲಿ ವಾಸಿಸುತ್ತಿದ್ದಾರೆ. ಅವರನ್ನು ಭೇಟಿಯಾಗಿ ನಾವು ಅವರಿಂದ ಗೋವಿಂದ ದಾಸರ ಕೀರ್ತನೆಗಳÀÀ ಹಸ್ತ ಪ್ರತಿಯನ್ನು ಪಡೆದುಕೊಂಡಿದ್ದೇವೆ. ಈ ಹಸ್ತಪ್ರತಿ ಹಾಗೂ ಈಗಾಗಲೇ ಪ್ರಕಟಿತವಾಗಿರುವ ಕೀರ್ತನಗಳ ಸಂಕಲನ ಇವರೆಡನ್ನೂ ಇಲ್ಲಿ ಆಕರವಾಗಿಟ್ಟುಕೊಳ್ಳಲಾಗಿದೆ. ಎರಡೂ ಆಕರಗಳ ಮೂಲಕ ಪರಿಷ್ಕರಣೆಯನ್ನು ಮಾಡಿ ಅಂತಿಮವಾಗಿ ಮೂವತ್ತು ಕೀರ್ತನೆಗಳನ್ನು ಇಲ್ಲಿ ಸಂಪಾದಿಸಿಕೊಡಲಾಗಿದೆ.


ಕಾರ್ಪರ ನರಹರಿದಾಸರು ಅನೇಕೆ ಕೀರ್ತನೆಗಳನ್ನು, ಬಯಲಾಟದ ಹಾಡುಗಳನ್ನು ರಚಿಸಿದ್ದಾರೆ. ರಾಯಚೂರಿನ ಕೋಟೆ ಭಜನಾ ಮಂಡಳಿಯವರು ಈಗಾಗಲೇ ಇವರ ಒಂದನೂರಾ ಹದಿನಾಲ್ಕು ಕೀರ್ತನೆÀಗಳನ್ನು 1984ರಲ್ಲಿ ಪ್ರಕಟಿಸಿದ್ದಾರೆ. ಕಾರ್ಪರ ನರಹರಿದಾಸರ ಮಕ್ಕಳಾದ ಶ್ರೀ.ಕೆ ಜಯಾಚಾರ್ಯ ಹಾಗೂ ದಾಸರ ಅಳಿಯಂದಿರಾದ ಶ್ರೀ ಕೆ.ಎನ್.ಆಚಾರ್ಯ ಇವರು ಸಂಗ್ರಹಿಸಿದ ಹಸ್ತ ಪ್ರತಿಗಳನ್ನು ಇಲ್ಲಿ ಆಧಾರವಾಗಿಟ್ಟುಕೊಳ್ಳಲಾಗಿದೆ. ಇವೆರಡೂ ಆಕರಗಳಿಂದ ಶುದ್ಧ ಪಾಠವನ್ನು ಗುರಿತಿಸಿ ಇತ್ತೀಚೆಗೆ ದೊರೆತ ಅವರ ಆರು ಕೀರ್ತನೆಗಳನ್ನು ಇದಕ್ಕೆ ಜೋಡಿಸಿ ಕಾರ್ಪರ ನರಹರಿದಾಸರ ಒಟ್ಟು ನೂರಾಇಪ್ಪತ್ತು ಕೀರ್ತನಗಳನ್ನು ಇಲ್ಲಿ ಕಟ್ಟಿಕೊಡಲಾಗಿದೆ.


ಈ ಸಂಪುಟದಲ್ಲಿ ಬರುವ ನಾಲ್ಕುಜನ ಹರಿದಾಸರ ರಚನೆಗಳನ್ನು ಇತರ ದಾಸರ ರಚನೆಗಳೊಂದಿಗೆ, ಹೋಲಿಸಿ ನೋಡಿದಾಗ ಕೆಲವು ವಿಶಿಷ್ಟ ಸಂಗತಿ ಬೆಳಕಿಗೆ ಬರುತ್ತವೆ. ದಾಸ ಸಾಹಿತ್ಯದ ಮೊದಲಿನ ಘಟ್ಟಗಳಿಗೆ ಭಿನ್ನವಾಗಿ ನಿಲ್ಲುವ ಈ ದಾಸರ ಸಾಹಿತ್ಯ ರಚನೆಗಳಲ್ಲಿ ಜಾನಪದ ಪ್ರಭಾವವನ್ನು ಕಾಣಬಹುದಾಗಿಗೆ. ದ್ವೈತಸಿದ್ಧಾಂತವು ಜನಪದ ರೂಪಗಳ ಮುಖಾಂತರ ಇಲ್ಲಿ ಕಾಣಿಸಿಕೊಂಡಿದೆ. ಶಿಷ್ಟ ಪರಂಪರೆಯ ಪುರಾಣ ಶತಕ, ಕೀರ್ತನೆಗಳಿರುವಂತೆ ಜನಪದ ಪರಂಪರೆಯ ಪಾರಿಜಾತ, ಲಾವಣಿ ಬಯಲಾಟದಂತಹ ಜನಪದ ರೂಪಗಳೂ ಈ ಹರಿದಾಸರಲ್ಲಿ ಬಳಕೆಯಾಗಿವೆ.


18-19ನೇ ಶತಮಾನ ಕನ್ನಡ ಸಾಹಿತ್ಯದ ಶಿಷ್ಟ ಪರಂಪರೆಯಲ್ಲಿ ಅಂತಹ ಮಹತ್ವದ ಕಾಲವಾಗಿರದಿದ್ದರೂ ತತ್ವಪದ ಸಾಹಿತ್ಯ, ಕೀರ್ತನ ಸಾಹಿತ್ಯದಂತಹ ಕ್ಷೇತ್ರಗಳಲ್ಲಿ ಬಹಳ ಮಹತ್ವ, ಬೆಳವಣಿಗೆಯನ್ನು ಈ ಸಂದರ್ಭದಲ್ಲಿ ಕಾಣಬಹುದಾಗಿದೆ. ದೇಶದಾದ್ಯಂತ ಪಾಶ್ಚಾತ್ಯರ ರೋಮ್ಯಾಂಟಿಕ ಪ್ರಭಾವ ತೀವ್ರಗೊಳ್ಳುತ್ತಿರುವ ಸಂದರ್ಭದಲ್ಲಿ ಈ ಪ್ರದೇಶದ ಕವಿಗಳು, ಕೀರ್ತನಕಾರರು ದೇಶೀಯ ರೂಪಕಗಳೊಂದಿಗೆ, ಬದುಕಿನ ಹುಡುಕಾಟವನ್ನು ಪ್ರಾರಂಭಿಸಿದ್ದು ತುಂಬ ಗಮನಾರ್ಹವಾದ ಸಂಗತಿಯಾಗಿದೆ.


ದಕ್ಷಿಣ ಕರ್ನಾಟಕದ ಹಾಗೂ ಮುಂಬಯಿ ಕರ್ನಾಟಕ ಕಡೆ ಪಾಶ್ಚಾತ್ಯ ಸಾಹಿತ್ಯ ತುಂಬ ಪ್ರಭಾವಭೀರಿದ ಸಂದರ್ಭದಲ್ಲಿ ಈ ಹೈದ್ರಾಬಾದ ಕರ್ನಾಟಕದ ಪ್ರದೇಶದಲ್ಲಿ ಕೀರ್ತನಕಾರರು, ತತ್ವಪದಕಾರರು, ತಮ್ಮ ದೇಶೀಯರೂಪಗಳ ಮೂಲಕವೇ ಹೊಸ ಚಿಂತನೆಯನ್ನು ಪ್ರಾರಂಭಿಸಿದ್ದು ಹಾಗೂ ಇವರ ರಚನೆಗಳು ಜನಸಮುದಾಯದ ನಾಲಿಗೆಯ ಮೇಲೆ ನರ್ತಿಸಿದ್ದು ಇವತ್ತಿನ ಸಂದರ್ಭದಲ್ಲಿ ಹೆಚ್ಚು ಪ್ರಸ್ತುತವೆನಿಸುತ್ತದೆ.


ಭಕ್ತಿ ಆಧ್ಯಾತ್ಮದಂತಹ ವಿಷಯಗಳಲಿ ಇಲ್ಲಿಯ ಜನ ಸಮುದಾಯದಲ್ಲಿ ಸಹಿಷ್ಣುತೆ, ಭಾವೈಕ್ಯತೆಯನ್ನು ಮೂಡಿಸಿದ್ದು ಮಹತ್ವದ ಸಂಗತಿಯಾಗಿದೆ. ದಾಸ ಸಾಹಿತ್ಯದ ಪರಂಪರೆಯಲ್ಲಿ ಅನೇಕ ಕೀರ್ತನಕಾರರು ಬೇರೆ ಬೇರೆ ಜಾತಿ-ಮತಗಳಿಂದ ಹುಟ್ಟಿಬಂದಿರುವುದು ಗಮನಿಸುವ ವಿಷಯವಾಗಿದೆ. ದಾಸ ಸಾಹಿತ್ಯದ ಮೊದಲನೇ ಘಟ್ಟದಲ್ಲಿ ಕುರುಬ ಜನಾಂಗದಿಂದ ಕನಕದಾಸ ಮಹತ್ವದ ಕೀರ್ತನಕಾರನಾದರೆ 19ನೆ ಶತಮಾನದಲ್ಲಿ ಹೈದ್ರಾಬಾದ ಕರ್ನಾಟಕ ಪ್ರದೇಶದ ಪಿಂಜಾರ ಜನಾಂಗದಿಂದ ಬಂದ ರಾಮದಾಸನÀು ದ್ವೈತಮತದ ವಿಶಾಲತೆಗೆ ಸಾಕ್ಷಿಯಾಗಿದ್ದಾನೆ. ವೈಷ್ಣವ ಮನೆತನದಲ್ಲಿ ಜನಿಸಿದ ಅನಂತಾದ್ರೀಶರು ಶಿವಪಾರಿಜಾತದಂತಹ ಕಥನಕಾವ್ಯವನ್ನು ರಚಿಸಿರುವುದು ಮಹತ್ವದ ಸಂಗತಿಯಾಗುತ್ತದೆ. ಜನಪದ ಮೌಲ್ಯಗಳಿಂದ ಬಂದ ಇಂತಹ ಕೀರ್ತನಕಾರರು ತಮ್ಮ ಕೀರ್ತನೆಗಳ ಮೂಲಕ ಜನಸಮುದಾಯಕ್ಕೆ ಹತ್ತಿರವಾಗಿದ್ದಾರೆ. ಹರಿ-ಹರ ಎಂಬ ಭೇದವನ್ನು ಬಿಟ್ಟು ಜಾತಿ-ಮತಗಳ ಹಂಗನ್ನು ತೊರೆದು ಮಾನವೀಯತೆಗೆ ಪ್ರಾಮುಖ್ಯತೆ ನೀಡಿದ್ದು, ಆಧ್ಯಾತ್ಮದ ಎತ್ತರವನ್ನೇರಿದ್ದು ಗುರುತಿಸುವಂಥ ವಿಷಯವಾಗಿದೆ.


ಈ ಸಂಪುಟದ ಹರಿದಾಸರು ವಸ್ತು, ಅಭಿವ್ಯಕ್ತಿ, ಭಾಷೆ ಆಶಯ ಇವುಗಳಲ್ಲಿ ತಮ್ಮದೇ ಆದ ವಿಶಿಷ್ಟತೆಯನ್ನು ಮೆರೆದಿದ್ದಾರೆ. ಅನಂತಾದ್ರೀಶರು ರಚಿಸಿರುವ ನಾಲ್ಕು ಸುದೀರ್ಘ ಕಥನಕಾವ್ಯಗಳಲ್ಲಿ ಪುರಾಣದ ಮೂಲಕ ಭಕ್ತಿ ಪರಂಪರೆಯನ್ನು ಪರಿಣಾಮಕಾರಿಯಾಗಿ ತಿಳಿಸಿದ್ದಾರೆ. 18-19ನೇ ಶತಮಾನದ ಸಂದರ್ಭದಲ್ಲಿ ಮೂಡಿ ಬಂದ ಈ ಕಲ್ಯಾಣ ಹಾಗೂ ಪರಿಣಯಕ್ಕೆ ಸಂಬಂದಪಟ್ಟ ಕಥಾವಸ್ತು ಹೆಚ್ಚು ಕುತೂಹಲವನ್ನುಂಟು ಮಾಡುತ್ತದೆ. ವೆಂಕಟೇಶ, ಶಿವ, ಧ್ರುವ, ಪ್ರಹ್ಲಾದ, ಈ ಮೊದಲಾದ ಮಹಿಮರನ್ನು ಈ ಕವಿ ಸಾಮಾನ್ಯ ಜನತೆಯಲ್ಲಿರುವ ಭಕ್ತಿಯ ಅನಂತತೆಯಲ್ಲಿ ಕಂಡುಕೊಳ್ಳುತ್ತಾರೆ. ಹೀಗಾಗಿ ಈ ಶಿವ ವೆಂಕಟೇಶರು ನಮ್ಮ ಸುತ್ತು ಮುತ್ತಲಿನ ಮಹತ್ವದ ಸಾಧಕರಂತೆ ಕಾಣಿಸುತ್ತಾರೆ. ಹೀಗೆ ಪುರಾಣವನ್ನು ವಾಸ್ತವದ ಮೂಲಕ ಕಟ್ಟಿಕೊಡುವ ಅನಂತಾದ್ರೀಶರ ಕಥನಕವನಗಳು ದಾಸ ಸಾಹಿತ್ಯ ಪರಂಪರೆಯಲ್ಲಿಯೇ ವಿಶಿಷ್ಟ ರಚನೆಗಳಾಗಿ ಕಾಣಿಸಿಕೊಳ್ಳುತ್ತವೆ. ಇಂತಹುದೇ ಪರಂಪರೆಯನ್ನು ಮುಂದುವರೆಸಿದ ಕಾರ್ಪರ ನರಹರಿ ದಾಸರು ಸಮಗ್ರ ಭಾಗವತ ಪುರಾಣವನ್ನು ಕೇವಲ 18 ನುಡಿಗಳಲ್ಲಿ ಕಟ್ಟಿಕೊಟ್ಟಿರುವುದು ಅವರ ಕಥನಕಲೆಗೆ ಸಾಕ್ಷಿಂiÀiಂತಿದೆ. ಹೆನ್ನೆರಂಗದಾಸರ ಹಾಗೂ ಅಸ್ಕಿಹಾಳ ಗೋವಿಂದದಾಸರ ಕೀರ್ತನೆಗಳಲ್ಲಿ ಈ ಪ್ರದೇಶದ ಭಾಷೆ ಮೈಕೊಡವಿ ನಿಂತಿದೆ. ಅನೇಕ ಲಾವಣಿ, ಬಯಲಾಟಗಳನ್ನು ಬರೆದಿರುವ ಗೋವಿಂದ ದಾಸರು ಜನಪದ ನುಡಿಗಟ್ಟಿನ ಮೂಲಕ ಕೀರ್ತನ ಪರಂಪರೆಯನ್ನು ಬೆಳೆಸಿರುವುದು ಕುತೂಹಲಕಾರಿಯಾದ ಸಂಗತಿಯಾಗಿದೆ.


ಈ ಸಂಪುಟದ ಹರಿದಾಸರ ರಚನೆಗಳಿಗೆ ಸಂಬಂಧಿಸಿದಂತೆ ಹೆಚ್ಚಿನ ಅಧ್ಯಯನ ನಡೆದಿರುವದಿಲ್ಲ. ಇವರ ರಚನೆಗಳನ್ನು ತೌಲನಿಕವಾಗಿ ಅಧ್ಯಯನ ಮಾಡಿದಾಗ ಇನ್ನೂ ಹೊಸ ಸಂಗತಿಗಳು ಬೆಳಕಿಗೆ ಬರುವ ಸಾಧ್ಯತೆ ಇದೆ, ನಡೆ ನುಡಿ ಒಂದಾಗಿ ಸರಳ ಜೀವನ ನಡೆಸಿ ತಮ್ಮ ಅನುಭಾವದ ಅಂತ:ಸತ್ವವನ್ನು ಧಾರೆಯೆರೆದು ಕೊಟ್ಟಿರುವ ಇಲ್ಲಿಯ ದಾಸರು ಅಧ್ಯಯನ ಯೋಗ್ಯರಾಗಿದ್ದಾರೆ. e್ಞÁನ, ಭಕ್ತಿ, ಸಾಧನೆಗೆ ಇಂತಹ ದಾಸರ ರಚನೆಗಳು ಸ್ಥೂರ್ತಿದಾಯಕವಾಗಿದೆ.


ಕೃತಜ್ಞತೆಗಳು


ಈ ಸಂಪುಟದ ಹರಿದಾಸರ ಕೀರ್ತನೆಗಳನ್ನು ಸಂಪಾದಿಸಿಕೊಡಲು ನಮಗೆ ತಿಳಿಸಿದ ಕಾರ್ಯನಿರ್ವಾಹಕÀ ಸಂಪಾದಕರಾದ ಡಾ||ಶ್ರೀನಿವಾಸ ಹಾವನೂರು ಅವರಿಗೆ ಇಂತಹ ಮಹತ್ವದ ಯೋಜನೆಯನ್ನು ಕೈಗೊಂಡು ಈ ಯೋಜನೆಯಲ್ಲಿ ಭಾಗವಹಿಸುವ ಅವಕಾಶವನ್ನಿತ್ತ ಕನ್ನಡ ಸಂಸ್ಕøತಿ ಇಲಾಖೆಯ ನಿರ್ದೇಶಕರಿಗೆ ಅನಂತ ಕೃತಜ್ಞತೆಗಳು ಸಲ್ಲುತ್ತವೆ. ಸಮಗ್ರ ದಾಸವಾಙ್ಮಯ ಯೋಜನೆಯ ಸಮಿತಿಯ ಎಲ್ಲ ಸದಸ್ಯರುಗಳಿಗೂ ನಾವು ಋಣಿಯಾಗಿದ್ದೇವೆ.


ಈ ಸಂಪುಟದ ಹರಿದಾಸರ ರಚನೆಗಳನ್ನು ಸಂಗ್ರಹಿಸುವ ಕಾರ್ಯದಲ್ಲಿ ಅನೇಕರು ಸಹಾಯ ಸಹಕಾರ ನೀಡಿದ್ದಾರೆ. ಅವರಲ್ಲಿ ಪ್ರಮುಖವಾಗಿ ಸುರಪುರದ ಶ್ರೀಹರಿ ಕುಲಕರ್ಣಿ, ಗೋಕಾಕದ ಶ್ರೀಜಯತೀರ್ಥ ಅಷ್ಟಮಿತ್ರೆ. ರಾಯಚೂರಿನ ಭೀಮದಾಸ, ಕೊಪ್ಪರದ ಶ್ರೀ ಕೆ. ಜಯಾಚಾರ್ಯರು ಇವರ ಸಹಾಯ ಸಹಕಾರವನ್ನು ಕೃತಜ್ಞತೆಯಿಂದ ಸ್ಮರಿಸುತ್ತೇವೆ.


ಶ್ರೀ ಹೆನ್ನೆರಂಗದಾಸರ ಎರಡುನೂರು ಕೀರ್ತನೆಗಳು ಪ್ರಪ್ರಥಮವಾಗಿ ಈ ಸಂಪುಟದ ಮೂಲಕ ಬೆಳಕು ಕಾಣುತ್ತಿರುವುದು ನಮಗೆ ಹೆಮ್ಮೆಯ ಸಂಗತಿಯಾಗಿದೆ. ಅದರಂತೆ ಅನಂತಾದ್ರೀಶರ 'ಧ್ರುವಚರಿತ್ರೆ' ಕಥನಕಾವ್ಯವು ಇದೇ ಮೊದಲಬಾರಿಗೆ ಈ ಸಂಪುಟದ ಮೂಲಕ ಪ್ರಕಟವಾಗುತ್ತಿದೆ. ನಾವು ಎಷ್ಟೋಶ್ರಮವಹಿಸಿದ್ದರೂ ಈ ದಾಸರ ಚರಿತ್ರೆಯನ್ನು ಇಡಿಯಾಗಿ ಕಟ್ಟಿಕೊಡಲಿಕ್ಕೆ ಆಗಲಿಲ್ಲ. ಪಾಠ ಪರಿಷ್ಕರಣೆಯಲ್ಲಿ ಕೆಲವು ದೋಷಗಳು ಉಳಿದುಕೊಂಡಿರಬಹುದಾಗಿದೆ. ಓದುಗರು, ವಿಮರ್ಶಕರು, ದಯವಿಟ್ಟು ತಮ್ಮ ರಚಾನಾತ್ಮಕ ಸಲಹೆಗಳನ್ನು ನೀಡಬೇಕೆಂದು ಕೋರುತ್ತೇವೆ. ಈ ಸಂಪುಟವನ್ನು ಸಿದ್ಧಪಡಿಸುವಲ್ಲಿ ಸಹಕರಿಸಿದ ಎಲ್ಲರಿಗೂ ನಮ್ಮ ಅನಂತ ಕೃತಜ್ಞತೆಗಳು.

ಸಂಪಾದಕರು

ಡಾ. ಬಸವರಾಜ ಸಬರದ

ಡಾ. ಜಯಲಕ್ಷ್ಮಿ ಮಂಗಳಮೂತಿ

***