Sunday 1 August 2021

kavi paramadeva dasaru 1900+ ಕವಿ ಪರಮದೇವದಾಸರು

Kavi Paramadeva Dasaru

ಕವಿ ಪರಮದೇವದಾಸರು

info from kannadasiri.in

ಈ ಸಂಪುಟದಲ್ಲಿ ಅದ್ವೈತ ಕೃತಿಕಾರರಾದ ಕವಿ ಪರಮದೇವ, ಬೇಟೆರಾಯ ದೀಕ್ಷಿತ, ಶಂಕರಭಟ್ಟ ಅಗ್ನಿಹೋತ್ರಿ, ಕರ್ಕಿ ಕೇಶವದಾಸ ಮತ್ತು ಭಟಕಳದ ಅಪ್ಪಯ್ಯ- ಈ ಐವರ ಹಾಡುಗಳನ್ನು ಸಂಗ್ರಹಿಸಲಾಗಿದೆ. ಕವಿ ಪರಮದೇವರು ಶಿವಮೊಗ್ಗ ಜಿಲ್ಲೆಯವರು. ಬೇಟೆರಾಯ ದೀಕ್ಷಿತರು ತುಮಕೂರು ಜಿಲ್ಲೆಯವರು. 'ದೇವ' ಅಂಕಿತದಿಂದ ಪರಿಚಿತರಾಗಿದ್ದ ಶಂಕರಭಟ್ಟ ಅಗ್ನಿಹೋತ್ರಿಯವರು ಧಾರವಾಡ ಜಿಲ್ಲೆಯವರು. ಕರ್ಕಿ ಕೇಶವದಾಸರು ಹೊನ್ನಾವರ ತಾಲೂಕಿನವರು. ಭಟಕಳದ ಅಪ್ಪಯ್ಯ ಅವರು ಉತ್ತರ ಕನ್ನಡದವರು. ಇವರುಗಳು ಶಿವನನ್ನೆ ಆರಾಧ್ಯದೈವವಾಗಿಟ್ಟುಕೊಂಡಿದ್ದರಾದರೂ ವಿಷ್ಣುವನ್ನು ಕಡೆಗಣಿಸಿದವರಲ್ಲ. ಮತ್ತ್ತೊಂದೆಂದರೆ ದಾಸ ದೀಕ್ಷೆಯನ್ನು ಹೊಂದುವುದರ ಮೂಲಕ ಇವರು ಹಾಡುಗಳನ್ನು ರಚಿಸಿದವರಲ್ಲ. ಅನೇಕ ಕಡೆಗಳಲ್ಲಿ ಇವರುಗಳ ಕೃತಿಗಳಲ್ಲಿ ಭಕ್ತಿಭಾವದ ಅಭಿವ್ಯಕ್ತಿಯ ಸಾಮ್ಯವನ್ನು ಗುರುತಿಸಬಹುದಾಗಿದೆ. ಇವರುಗಳ ಹಾಡುಗಳನ್ನು ಜೊತೆಗೂಡಿಸಿ ಒಂದೇ ಕಡೆ ಕೊಡುವುದರಿಂದ ಅದ್ವೈತ ಪರಂಪರೆಯ ದಾಸರ ಕೃತಿಗಳನ್ನು ಅಧ್ಯಯನ ಮಾಡುವವರಿಗೆ ಪ್ರಯೋಜನ- ವಾಗುವುದರಲ್ಲಿ ಅನುಮಾನವಿಲ್ಲ.

end

***





No comments:

Post a Comment