Ondu baari smarane saalade written by Vadirajaru
by Pt. P M Venkatesh Kumar
ಮಾಘ ಶುದ್ಧ ದ್ವಾದಶಿ ವಾದಿರಾಜರಸ್ವಾಮಿಗಳು ಅವತರಿಸಿದ ದಿನ
ತಪೋ ವಿದ್ಯಾ ವಿರಕ್ತ್ಯಾದಿ ಸದ್ಘುಣೌ ಘಾಕರಾನಹಮ್ |
ವಾದಿರಾಜ ಗುರೂನ್ ವಂದೇ ಹಯಗ್ರೀವ ದಯಾಶ್ರಯನ್ ||
ತಥಾ ಖಲೌ ವಾದಿರಾಜ: ಶ್ರೀಪಾದೋ ಅಭೀಷ್ಟದ:ಸತಾಮ್||
ಮಾತಾ ರಾಜಾ ಮತ್ಪಿತಾ ವಾದಿರಾಜೋ ಭ್ರಾತಾ ರಾಜಾ ಮತ್ಸಖಾ ವಾದಿರಾಜ:|
ಸರ್ವಸ್ವಂ ಮೇ ವಾದಿರಾಜೋ ದಯಾಳು: ನಾನ್ಯದ್ದೈವಂ ನೈವ ಜಾನೇ ನ ಜಾನೇ |
- Paryaya – Initially all the disciples of Srimadacharya used to perform the pooja of Sri Krishna. Subsequently it was changed to two months rotation for each mutt, wherein also the Mutt Seers had problems in managing the Mutt Administration. In 1532, Sri Vadirajaru, created the Paryaya System for the Sri Krishna Pooja and each Asta Mutt Seer would get 2 years term for their Administration and Pooja of Sri Krishna Mutt. Vaadiraajaru has completed 5 terms of Paryaya at Udupi.
- Anugraha to Arasappa Nayak – Arasappa Naika was the Chieftain or King of Soda, an independent Province after the fall of Vijayanagar Empire. Entire Nayak’s army was attacked by rebels and enemies, which made Arasappa Nayaka to flee out of Soda and on the way, he met Sri Vadirajaru and surrendered to his feet. Vadirajaru gave him Mantrakshate and blessed him and instructed to go back and fight against the enemies. Nayaka went back and fought with them and had a grand success and Sode was liberated. Immediately he asked Vadirajaru to come to Soda and for him he constructed a very nice premises, temples, etc. Vaadirajaru used the bell given by Arasappa Nayaka with Basava at the head of the bell instead of Hanuman . That is why we can see the Basava Bell being used by Sonda Vadiraja Mutt (Whereas everywhere we find Hanumanthana bell).
- Construction of Rama Trivikrama Temple in Sonda – Arasappa Nayaka constructed a very good temple for Rama Trivikrama Devaru to be brought from Badari. For bringing the Rama Trivikrama Devaru alongwith a chariot, Vadirajaru sent in Bhootarajaru. While Bhootarajaru was bringing the Chariot he was attacked by some demons, he then immediately took one Wheel of the Chariot and defeated the demons. He then reached Sonda in time before the Maha Pooja. Even today, one can see, the Rama Trivikrima Devaru placed in a big chariot with only 3 wheels and one wheel missing in Sonda.
- Subsequently Vadirajaru shifted from Udupi to Sonda or Sode or Swadi on the banks of Shalmali River (Shalmali River flows in the Tapovana where he used to do paata to his disciples) as it is popularly called and gave ashrama to Vedavyasa Thirtha as his successor.
- Dhavalagange Sarovara in Sonda & Madhwa Sarovara in Udupi
- Dhavala Gangadhareshwara & Chandramouleshwara in Sonda & Udupi respectively.
- Mukhya praana prathiste done in both places by Vaadiraajaru.
- Anugraha to Bhootarajaru –
- Rukminisha Vijaya
- Theertha Prabhanda
- Swapna Vrundavanakyanam
- Sarasa Bharathi Vilasa
- Kavi Kadamba Kanta bhushana
- Mahabhaaratha Lakshalankara Teeka
- Talavakaropanishad Bhashya Teeka
- Taittareeyopanishad Bhashya Teeka
- Kathakopanishad Bhashya Teeka
- Atharvanopanishad Bhashya Teeka
- Mandookopanishad Bhashya Teeka
- Tantra Saara Teeka
- Mahabhaaratha Prasthana
- Shatprashnopanishad Bhashya Teeka Tippani
- Mahabharatha Tatparya Nirnaya Bhavaprakashika
- Tatvaprakashika Guruvartha Deepika
- Ishavasyopanishad Bhashya Teeka Prakashana
- Geethabhashya Tippani
- Nyaya sudha Guruvartha Deepika
- Bhagavatha Anukramanika
- Ramesha Stuthi
- Dashavataara Stotra
- Dashavataara Stuti
- Hayavadana Astaka
- Narahari Astaka
- Roupya Peetha Krishna Stuthi
- Hayavadana Astaka
- Hayagreeva Panchaka
- Hayagreeva Dhyana Prakarana
- Hayagreeva Stuthi
- Hayagreeva Sampada Stotra
- Sri Krishna Stavana
- Dhee Shuddhi Stotra
- Varaha Hayavadana Stotra
- Aapada Stotram
- Ukti Pratyukthi stotram
- Aksha Panchakam
- Varaha Panchakam
- Sri Raama Kavacham
- Sri Raama Dashakam
- Sri Raama Panchakam
- Avataara Traya Stotram
- Swapna Padyam
- Vedavyasa Varnanam
- Vedavyasa Stotram
- Shlokatrayam
- Chaturvimshati Murthibedha Stotram
- Venkatesha Mangalastaka
- Runa Mochana Stotra
- Prarthana Dashakam
- Vishnu Stuthi
- Trivikrama Stotra
- Haryastaka
- Hayasya Dashaka
- Navagraha Stuthi
- Haribhakthyastaka
- Guru Stuthi
- Hitopadesham
- Sripadarajastakam
- Durga Stavana
- Madhwastakam
- Vibheeshana Hanumad samvaada roopa vaayustuthi
- Astamahishi yukta Krishna stotram
- Madhwamuni Prathapastaka
- Vaikunta Varnane
- Lakshmi Shobhane
- Keechaka Vadha
- Namaskara Stotra
- Naivedya Prakarana
- Swapana Pada
- Naarada Koravanji
- Bhagavatha Saara Keerthane
- Swapna Gadya
- Bhramara Geethe
- Gunda Kriye
सद्वातागमपोषितात्महृदयं तत्पूर्वपक्षासुरै: ।
सिद्धांतोक्तिसुरेश्वरश्च मथितो य: कृष्णदुग्धांबुधि:
स्वीयानाममृतं प्रयच्चति स मां पायाद्गुणोध्यन्मणि: ॥ १ ॥ (mangalacharana shloka)
Jeevana Charitre(Life History) – clickVadirajara Granthagalu – click
Vadirajarara Krishnastakam – clickVadirajara “Devaranamagalu” – click
ಲಘು ವಾಯುಸ್ತುತಿ Vayustuti in Kannada by Vadirajaru
Narayanana nene manave – devaranama – click
*********
info from dasasreshtaru.com--->
********
info from dvaita.org--->
- DhavaLa Gangâ (to replicate the Madhva Sarovara of Udupi)
- Gopâlakrishna temple (to replicate the Krishna temple)
- DhavaLa Gangâdhara (to replicate Chandramoulîshwara)
- Sri MukhayaprâNa temple (to replicate the respective temple)
Date: 08-03-1996
Works by Srî Vâdirâja Tîrtha
to know more please CLICK 👇👇here
vadirajaru 11
******
*****
ಮಗುವಾದರೆ ಮಠಕ್ಕೆ ಕೊಡುವಿರ?’
ಉಡುಪಿ-ಕುಂದಾಪುರ ಮಾರ್ಗದಲ್ಲಿ ಕೋಟೇಶ್ವರ ಎಂಬ ಪ್ರಸಿದ್ಧ ಕ್ಷೇತ್ರವಿದೆ. ಅಲ್ಲಿಗೆ ಸಮೀಪದಲ್ಲಿ ಕುಂಭಾಸಿ ಕ್ಷೇತ್ರಕ್ಕೆ ಈಶಾನ್ಯದಲ್ಲಿ ಹೂವಿಕೆರೆ ಎಂಬ ಒಂದು ಸಣ್ಣ ಹಳ್ಳಿ. ಅಲ್ಲಿ ಹದಿನೈದನೆಯ ಶತಮಾನದಲ್ಲಿ (ಎಂದರೆ ಸುಮಾರು ಐದು ನೂರು ವರ್ಷಗಳ ಹಿಂದೆ) ಶ್ರೀ ರಾಮಾಚಾರ್ಯ-ಗೌರಮ್ಮ ಎಂಬ ಸಾತ್ವಿಕ ದಂಪತಿಗಳು ಸುಖವಾಗಿ ವಾಸ ಮಾಡಿಕೊಂಡಿದ್ದರು. ಅವರ ವಾಸ ಹೂವಿನಕೆರೆಗೆ ಸೇರಿದ ತಮ್ಮ ಸ್ವಂತ ಜಮೀನಿನ ಮಧ್ಯೆಯೇ ಒಂದು ಕುಟೀರದಲ್ಲಿ. ಹಣ, ದೊಡ್ಡ ಸ್ಥಾನ ಈ ಬಗೆಯ ಯಾವ ಆಸೆಯೂ ಅವರಿಗೆ ಇರಲಿಲ್ಲ. ದೇವರು ಕೊಟ್ಟುದರಲ್ಲೇ ಅವರಿಗೆ ತೃಪ್ತಿ. ಆದರೆ ಅವರ ಮನಸ್ಸಿಗೆ ಮಾತ್ರ ಸಮಾಧಾನವಿರಲಿಲ್ಲ. ಇದಕ್ಕೆ ಕಾರಣ ಅವರಿಗೆ ಮಕ್ಕಳಿರಲಿಲ್ಲ. ಒಂದು ಮಗುವಾದರೆ ಸಂತೋಷದಿಂದ ಸಂಸಾರ ಮಾಡಬಹುದು ಎನ್ನುವ ಹಂಬಲ ಅವರಿಗೆ.
ಹತ್ತಿರವೇ ಇದ್ದ ಕುಂಭಸಿಯಲ್ಲಿ ಶ್ರೀ ವಾಗೀಶ ತೀರ್ಥರೆಂಬ ತಪಸ್ವಿಗಳು ವಾಸವಾಗಿದ್ದರು. ಈ ದಂಪತಿಗಳು ಅಲ್ಲಿಗೆ ಹೋದರು. ಆ ಮಠದ ಭೂವರಾಹ ದೇವರಲ್ಲಿ ಸೇವೆ ಸಲ್ಲಿಸಿದರು. ನಮಗೆ ಒಂದು ಮಗುವನ್ನು ಕೊಡು ಎಂದು ಬೇಡಿಕೊಂಡರು. ದೇವರಿಗೆ ಹರಕೆ ಮಾಡಿಕೊಳ್ಳುವ ಪದ್ಧತಿ ಇಲ್ಲವೆ? ಗೌರಮ್ಮ ಭೂವರಾಹ ದೇವರಿಗೆ ಹರಕೆಯನ್ನು ಹೊತ್ತುಕೊಂಡಳು, ನನಗೆ ಮಗ ಹುಟ್ಟಿದರೆ ನಿನಗೆ ಲಕ್ಷಾಲಂಕಾರ ಸೇವೆ ಮಾಡಿಸುತ್ತೇನೆ ಎಂದು! ಸ್ವಾಮಿಗಳಲ್ಲೂ ಗಂಡ ಹೆಂಡತಿ ತಮ್ಮ ಆಸೆಯನ್ನು ತೋಡಿಕೊಂಡರು.
ಶ್ರೀ ವಾಗೀಶತೀರ್ಥರು ನಿಮಗೆ ಗಂಡು ಮಗುವಾದರೆ ಅದನ್ನು ಮಠಕ್ಕೆ ಕೊಡುವಿರ? ಎಂದು ಕೇಳಿದರು.
ಈ ಪ್ರಶ್ನೆಯನ್ನು ಕೇಳಿ ಗಂಡ ಹೆಂಡತಿಗೆ ಅಷ್ಟೇನೂ ಸಂತೋಷವಾಗಲಿಲ್ಲ. ತಮಗೆ ಮಗು ಬೇಕು ಎಂದು ಬೇಡಿಕೊಳ್ಳುತ್ತಿರುವುದು ಮಗುವನ್ನು ಬೇರೆಯವರಿಗೆ ಕೊಡುವುದಕ್ಕೆ? ಆದರೆ ಸ್ವಾಮಿಗಳು ಕೇಳುತ್ತಿದ್ದಾರೆ. ಗಂಡ ಹೆಂಡತಿ ಉತ್ತರ ಕೊಡಲು ತೋರದೆ ಸುಮ್ಮನೆ ನಿಂತರು. ಸ್ವಾಮಿಗಳು ಯೋಚಿಸಿ ಮತ್ತೆ ಹೇಳಿದರು; ಮಗು ಮನೆಯಲ್ಲಿ ಹುಟ್ಟಿದರೆ ನಿಮಗೆ, ಹೊರಗೆ ಹುಟ್ಟಿದರೆ ನಮ್ಮ ಮಠಕ್ಕೆ, ಎನು ಹೇಳುತ್ತೀರಿ?
ಸ್ವಾಮಿಗಳು ಕೇಳಿದರೆ ಇಲ್ಲ ಎನ್ನುವುದು ಹೇಗೆ ಎಂದು ದಂಪತಿಗಳು ಯೋಚಿಸುತ್ತಿದ್ದರು. ಈ ಮಾತನ್ನು ಕೇಳಿ ಗೌರಮ್ಮನ ಮನಸ್ಸು ಸ್ವಲ್ಪ ಸಮಾಧಾನಪಟ್ಟಿತು. ಮಗು ಮನೆಯ ಹೊರಗೆ ಹುಟ್ಟುವ ಸಂಭವವೆಲ್ಲಿ? ಆದ್ದರಿಂದ ಸ್ವಾಮಿಗಳ ಮಾತನ್ನು ಒಪ್ಪಿದರೂ ಮಗು ನಮಗೇ. ಸ್ವಾಮಿಗಳಿಗೂ ನಾವು ಅವರ ಮಾತನ್ನು ಒಪ್ಪಿದರೂ ಮಗು ನಮಗೇ. ಸ್ವಾಮಿಗಳಿಗೂ ನಾವು ಅವರ ಮಾತು ಕೇಳಲಿಲ್ಲ ಎಂಬ ಬೇಸರವಿಲ್ಲ ಎಂಬುದೇ ಆ ಸಮಾಧಾನಕ್ಕೆ ಕಾರಣ.
“ಆಗಬಹುದು” ಎಂದು ಹೇಳಿ ನಮಸ್ಕಾರ ಮಾಡಿ ಹಿಂದಕ್ಕೆ ಬಂದರು.
ಇದಾದ ಕೆಲ ಕಾಲದ ತರುವಾಯ ಗೌರಮ್ಮ ಗರ್ಭಿಣಿಯಾದಳು. ರಾಮಾಚಾರ್ಯರು, ಅವರ ಹೆಂಡತಿ ಯೋಚನೆ ಮಾಡಿದರು. ಗಂಡು ಕೂಸು ಹುಟ್ಟಿದರೆ ಅದನ್ನು ಮಠಕ್ಕೆ ಒಪ್ಪಿಸುವುದು ಹೇಗೆ? ಆದ್ದರಿಂದ ಮಗು ಯಾವ ಕಾರಣಕ್ಕೂ ಮನೆಯ ಹೊರಗೆ ಹುಟ್ಟಬಾರದು ಎಂದು ತೀರ್ಮಾನಿಸಿದರು. ಗೌರಮ್ಮನೂ ಸದಾ ಜಾಗೃತಳಾಗಿದ್ದು ಮನೆಯಲ್ಲೇ ಇರುವುದಾಗಿ ತೀರ್ಮಾನಿಸಿದಳು.
ಮನುಷ್ಯ ತಾನೊಂದು ನೆನೆದರೆ ದೈವ ತಾನೊಂದು ಬಗೆಯುವುದು ಎನ್ನುತ್ತಾರೆ. ನಾವು ಎಷ್ಟೋ ಎಚ್ಚರಿಕೆಯಿಂದ ಒಂದು ಪ್ರಯತ್ನ ಮಾಡಿ, ಖಂಡಿತ ಹೀಗೆಯೇ ಆಗುತ್ತದೆ ಎಂದು ಲೆಖ್ಖ ಹಾಕುತ್ತೇವೆ, ಅದು ತಪ್ಪಿ ಹೋಗುತ್ತದೆ ಎಂಬುದು ಬಹುವೇಳೆ ನಮ್ಮ ಅನುಭವಕ್ಕೆ ಬರುವುದಲ್ಲವೆ? ರಾಮಾಚಾರ್ಯ ದಂಪತಿಗಳಿಗೂ ಅದು ಚೆನ್ನಾಗಿ ಅನುಭವಕ್ಕೆ ಬಂದಿತು.
ಗೌರಿ ಗದ್ದೆ
ಗೌರಮ್ಮನಿಗೆ ಪ್ರಸವ ಕಾಲ ಹತ್ತಿರ ಬಂದಂತೆ ಮನಸ್ಸು ಜಾಗೃತವಾಗಿದ್ದು ಕಳವಳವೂ ಆಗುತ್ತಿದ್ದಿತು. ಶಾಲೀವಾಹನ ಶಕ ೧೪೦೨ ಶಾರ್ವರೀ ಸಂವತ್ಸರ (ಕ್ರಿಸ್ತಶಕ ೧೪೮೦) ಮಾಘ ಶುದ್ಧ ದ್ವಾದಶಿಯ ದಿನ. ಅಂದು ಸಾಧನೆ ದ್ವಾದಶಿ, ಎಂದರೆ ಬೇಗನೆ ಎಲ್ಲರ ಊಟ ಆಗಬೇಕು. ರಾಮಾಚಾರ್ಯರ ಮನೆಯಲ್ಲಿ ಬೆಳಗಿನ ಝಾವದಲ್ಲೇ ಎದ್ದು ಅಡಿಗೆ-ಪೂಜಾ ಕಾರ್ಯಗಳಲ್ಲಿ ನಿರತರಾದರು. ಇನ್ನೂ ಪೂರ್ತಿ ಬೆಳಗಾಗಿಲ್ಲ, ಎಲ್ಲರೂ ಭೋಜನಕ್ಕೆ ಕುಳಿತರು. ಆ ಸಮಯದಲ್ಲಿ ಒಂದೆರಡು ದನಗಳು ಗದ್ದೆಯ ಒಳಕ್ಕೆ ಬಂದವು. ಸೊಂಪಾಗಿ ಬೆಳೆದು ನಿಂತಿದ್ದ ಹಚ್ಚ ಹಸಿರ ಪಚ್ಚೆ ಪೈರನ್ನು ಮೇಯಲು ಪ್ರಾರಂಭಿಸಿದವು. ಇದನ್ನು ಮನೆಯೊಳಗಿನಿಂದಲೇ ಗೌರಮ್ಮ ಕಂಡಳು. ಪಾಪ, ಪೈರಿನ ಕಡೆ ಲಕ್ಷ್ಯ ಹೆಚ್ಚು ಹೋಯಿತು. ಉಳಿದ ವಿಚಾರವೆಲ್ಲ ಮರೆತು ಹೋಯಿತು. ತಾನೇ ದನಗಳನ್ನು ಓಡಿಸಲು ಮನೆಯಿಂದ ಹೊರಗೆ ಧಾವಿಸಿದಳು. ಇದನ್ನು ಉಳಿದವರು ಯಾರೂ ಗಮನಿಸಲೂ ಇಲ್ಲ.
ಮನೆಯಿಂದ ಕೊಂಚ ದೂರ ಗದ್ದೆಯ ಅಂಚಿಗೆ ಹೋಗಿ ಗೌರಮ್ಮ ದನ ಓಡಿಸಿದಳು. ಅಲ್ಲಿಂದ ಮನೆಯ ಕಡೆ ಹೊರಟಳು. ಆದರೆ ಗೌರಮ್ಮನಿಗೆ ಆಯಾಸವಾಯಿತು. ಏನು ಮಾಡುವುದು? ಅಲ್ಲೇ ಒಂದು ಮರ. ಸ್ವಲ್ಪ ಆಯಾಸ ಕಡಿಮೆ ಆದ ಮೇಲೆ ಎದ್ದು ಹೋಗುತ್ತೇನೆ ಎಂದುಕೊಂಡಳು, ಮರದ ಕೆಳಗೆ ಕುಳಿತಳು. ಸೂರ್ಯೋದಯವಾಗುವ ಸುಮೂಹರ್ತದಲ್ಲೇ ಮನೆಯಲ್ಲಿ ಯಾರಿಗೂ ತಿಳಿಯದೆ ಗದ್ದೆ ಬಯಲು ಮರದ ಕೆಳಗೆ- ಮನೆಯ ಹೊರಗಡೆ ಮಗು ಹುಟ್ಟಿಬಿಟ್ಟಿತು! ಮಗು ಮುದ್ದಾಗಿತ್ತು. ಆಶ್ಚರ್ಯವಾಗುವ ಕಳೆ ಮುಖದಲ್ಲಿ.
ಶ್ರೀ ವಾಗೀಶತೀರ್ಥರಿಗೆ ಮಾತು ಕೊಟ್ಟು ಆಗಿ ಹೋಗಿತ್ತು, ಮಗು ಮನೆಯ ಹೊರಗೆ ಹುಟ್ಟಿದರೆ ಅದನ್ನು ಮಠಕ್ಕೆ ಒಪ್ಪಿಸುತ್ತೇವೆ ಎಂದು. ಗಂಡ ಹೆಂಡತಿ ಮಗುವನ್ನು ಸ್ವಾಮಿಗಳಿಗೆ ಒಪ್ಪಿಸಿದರು.
ವಾಗೀಶರು ಮಗುವಿಗೆ ತಾವು ಪೂಜಿಸುತ್ತಿದ್ದ ಭೂವರಾಹ ಸ್ವಾಮಿಯ ಹೆಸರನ್ನೇ ಇಟ್ಟರು. ಭೂವರಾಹ ಹುಟ್ಟಿದ ಈ ಗದ್ದೆಗೆ ಈಗಲೂ ಗೌರೀ ಗದ್ದೆಯೆಂದೇ ಹೆಸರಿದೆ. ಇಲ್ಲಿ ಬೆಳೆದ ಅಕ್ಕಿಯನ್ನೆ ಈಗಲೂ ಶ್ರೀ ವಾದಿರಾಜರ ಆರಾಧನೆಯಂದು ನಿವೇದನೆ ಮಾಡು ಪದ್ಧತಿಯೂ ಇದೆ. ಈ ಗದ್ದೆಯಲ್ಲೇ ಅವರು ಹುಟ್ಟಿದ ಸ್ಥಳದಲ್ಲಿ ಈಗ ವಾದಿರಾಜರ ಗುಡಿಯೂ ಇದೆ.
ವಾಧಿರಾಜರ ಬಾಲ್ಯ ಜೀವನ
ಬಾಲ್ಯ–ಅಸಾಧಾರಣ ಗುಣ
ಭೂವರಾಹ ಶ್ರೀಮಠದ ಶಿಶುವೇ ಆದರೂ ತಾಯಿಯ ಲಾಲನೆ-ಪಾಲನೆಯಲ್ಲೇ ಮಗುವನ್ನು ಬಿಡಲಾಯಿತು. ಭೂವರಾಹ ಮೂರ್ತಿಗೆ ಮಾಡಿದ ಅಭಿಷೇಕದ ಹಾಲು ನಿತ್ಯವೂ ಹೂವಿನಕೆರೆಗೆ ಈ ಮಗುವಿಗಾಗಿ ಹೋಗುತ್ತಿತ್ತು. ಮೂರನೆಯ ವರ್ಷದಲ್ಲೇ ಅಕ್ಷರಾಭ್ಯಾಸ ಪ್ರಾರಂಭಿಸಿ ಐದನೆಯ ವಯಸ್ಸಿನಲ್ಲೇ ಬ್ರಹ್ಮೋಪದೇಶವೂ ತಂದೆಯವರಿಂದಲೇ ನಡೆಯಿತು. ಅನಂತರ ಮಗವನ್ನು ಶ್ರೀ ಮಠಕ್ಕೆ ಕರೆಸಿಕೊಂಡು ವಿದ್ಯಾಭ್ಯಾಸಕ್ಕೆ ಏರ್ಪಾಡು ಮಾಡಿದರು. ಚಿಕ್ಕ ಗುರುಗಳಾಗಿದ್ದ ಶ್ರೀ ವಿದ್ಯಾನಿಧಿ ತೀರ್ಥರೇ ಭೂವರಾಹನ ಗುರುಗಳು. ಹುಡುಗ ಬುದ್ಧಿವಂತ, ಬಹು ಚ ಟುವಟಿಕೆಯವನು. ಅವನ ಬುದ್ಧಿಶಕ್ತಿಯಿಂದ ವಿದ್ಯಾ ಗುರುಗಳಿಗೆ ಬಹು ಸಂತೋಷ. ವಾಗೀಶತೀರ್ಥರು ಇವನ ಜಾತಕವನ್ನು ಬರೆಸಿ ಪರೀಶೀಲಿಸಿದಾಗ ಬಹು ಸೊಗಸಾಗಿ ಮಾತನಾಡುವ ಶಕ್ತಿ, ವಾದದಲ್ಲಿ ಗೆಲ್ಲುವ ಶಕ್ತಿ ಈತನಿಗಿವೆ, ಮುಂದೆ ಸಂನ್ಯಾಸಿಯಾಗುತ್ತಾನೆ ಎಂದು ಅವರಿಗೆ ತೋರಿತು. ಭೂವರಾಹನಿಗೂ ಸನ್ಯಾಸ ಆಶ್ರಮ ಕೊಡುವುದಾಗಿ ಯೋಚಿಸಿದರು. ಆದರೂ ಒಂದು ಮಾಡಿ ನೋಡಬೇಕು ಎನ್ನಸಿತು. ಪರೀಕ್ಷೆ ನಡೆಸಿದರು.
ಬಾಲಕ ಭೂವರಾಹ ’ನಾವು ಹಣ್ಣನ್ನು ಮುಟ್ಟಬಾರದು’ಎಂದು ಗೆಳೆಯರಿಗೆ ಹೇಳಿದ.
ಒಂದು ಕೋಣೆಯಲ್ಲಿ ಗುರಗಳು ಹಲವು ಬಗೆಯ ಹಣ್ಣುಗಳನ್ನು ಇಡಿಸಿದರು. ಭೂವರಾಹನ ಜೊತೆಯ ಅನೇಕ ಬಾಲಕರನ್ನು ಕರೆದು, ಆ ಹಣ್ಣುಗಳಲ್ಲಿ ಯಾವುದನ್ನಾದರೂ ನಾವು ತಿನ್ನಬಹುದು-ಗುರುಗಳಿಗೆ ಮಾತ್ರ ತಿಳಿಸಬಾರದು; ನಿನ್ನ ಮೇಲಿನ ಮಮತೆಯಿಂದ ಅವರು ನಮ್ಮನ್ನು ಆಕ್ಷೇಪಿಸಲಾರರು ಎಂದು ಭೂವರಾಹನಿಗೆ ಹೇಳಿ ಕರೆದುಕೊಂಡು ಹೋಗಿ. ಆಗ ಅವನೇನು ಹೇಳುವನೋ ನನಗೆ ಬಂದು ತಿಳಿಸಿ ಎಂದರು!
ಓರಗೆಯ ಹುಡುಗರು ಹಾಗೆಯೇ ಮಾಡಿದರು. ಹಣ್ಣುಗಳನ್ನು ತಿನ್ನೋಣ; ಗುರುಗಳಿಗೆ ಹೇಗೆ ಗೊತ್ತಾಗುತ್ತದೆ? ಗೊತ್ತಾದರೂ ಅವರು ಬಯ್ಯುವುದಿಲ್ಲ, ಗುರುಗಳಿಗೆ ನಿನ್ನನ್ನು ಕಂಡರೆ ತುಂಬ ಪ್ರೀತಿ ಎಂದರು. ಆ ಬಾಲಕ ಅದನ್ನು ಒಪ್ಪಲಿಲ್ಲ. ಗುರುಗಳಿಗೆ ಗೊತ್ತಾಗಲಿ ಬಿಡಲಿ, ನಾವು ಹಣ್ಣನ್ನು ಮುಟ್ಟಬಾರದು. ನಾವು ಅದನ್ನು ಅವರ ಅಪ್ಪಣೆ ಇಲ್ಲದೆ ತೆಗೆದುಕೊಳ್ಳಬಾರದು ಎಂದು ಖಂಡಿತವಾಗಿ ನುಡಿದ.
ಗುರುಗಳು ಇನ್ನೊಂದು ಪರೀಕ್ಷೆ ಮಾಡಿದರು. ಒಂದು ಕೋಣೆಯಲ್ಲಿ ಪುಸ್ತಕ, ಹಣ್ಣು ಮುಂತಾದ ಅನೇಕ ಬಗೆಯ ಪದಾರ್ಥಗಳನ್ನಿರಿಸಿದರು. ವಿವಿಧ ವಯಸ್ಸಿನ ಹಲವು ಬಾಲಕರನ್ನು ಕರೆದು, ನಿಮಗೆ ಏನು ಬೇಕೋ ತೆಗೆದುಕೊಳ್ಳಿ ಎಂದರು. ಕೆಲವರು ತಿಂಡಿಯನ್ನು ಆರಿಸಿದರು, ಕೆಲವರು ಹಣ್ಣುಗಳಿಗೆ ಕೈಚಾಚಿದರು. ಭೂವರಾಹ ಮಾತ್ರ ಒಳ್ಳೆಯ ಶಾಸ್ತ್ರಗ್ರಂಥವೊಂದನ್ನು ಆರಿಸಿ ತೆಗೆದುಕೊಂಡು ಬಂದನಂತೆ!
ಒಮ್ಮೆ ಶಾಲೆಯಲ ಹತ್ತಿರವೇ ಬಯಲಾಟ ನಡೆಯುತ್ತಿತ್ತು. ಬಯಲಾಟವನ್ನು ನೋಡಲು ಹೋಗೋಣವೆಂದು ಅವನ ಜೊತೆಯ ಹುಡುಗರು ಬಲಾತ್ಕರಿಸಿದಾಗ ಅದಕ್ಕೂ ಭೂವರಾಹ ಒಪ್ಪಲಿಲ್ಲ. ಗುರುಗಳ ಅಪ್ಪಣೆಯಿಲ್ಲದೆ ಹೋಗಬಾರದು ಎಂದ.
ವಾಧಿರಾಜರ ಸನ್ಯಾಸ ದೀಕ್ಷೆ
ಭೂವರಾಹ ವ್ಯಾಸಂಗದ ಆಸಕ್ತಿ, ಶುದ್ಧವಾದ ಅಭಿರುಚಿ, ಪ್ರಾಮಾಣಿಕತೆ, ತೇಜಸ್ಸು ಮುಂತಾದವುಗಳ ಕಂಡು ಕೇಳಿ ಗುರುಗಳಿಗೆ ತುಂಬ ಸಂತೋಷವಾಯಿತು ಆತನಿಗೆ ಏಳನೆಯ ವಯಸ್ಸಿನಲ್ಲಿಯೇ ಸನ್ಯಾಸಾಶ್ರಮ ಕೊಟ್ಟರು. ’ವಾದಿರಾಜ ತೀರ್ಥ’ ಎಂದು ನಾಮಕರಣ ಮಾಡಿದರು. ಶಾಸ್ತ್ರ-ಸಿದ್ಧಾಂತ ಮುಂತಾದವುಗಳ ಪಾಠ ಹೇಳಲು ಪ್ರಾರಂಭಿಸಿದರು. ಬಹು ಸ್ವಲ್ಪ ಕಾಲದಲ್ಲಿ ವಾದಿರಾಜರು ಎಲ್ಲ ಶಾಸ್ತ್ರಗಳ ಸಾರವನ್ನೂ ಗ್ರಹಿಸಿ ಅಪಾರ ವಿದ್ವತ್ತನ್ನು ಪಡೆದುಕೊಂಡರು. ಯತಿಗಳಿಗೆ ಉಚಿತವಾದ ಪ್ರಣವ ಮಂತ್ರ ಮೊದಲಾದುವನ್ನು ಶ್ರದ್ಧಾ ಭಕ್ತಿಗಳಿಂದ ನಿತ್ಯವೂ ಸಹಸ್ರಾರು ಬಾರಿ ಜಪ ಮಾಡಿದರು. ಮಂತ್ರ ಸಿದ್ಧಿಯನ್ನು ಸಂಪಾದಿಸಿ ಮಹಾಮಹಿಮರಾದರು. ಇದರೊಂದಿಗೇ ವಾದಿರಾಜರು ಹಯಗ್ರೀವ ದೇವರ ಉಪಾಸನೆಯನ್ನು ಬಹು ಭಕ್ತಿಯಿಂದ ಮಾಡಿ, ಆ ದೇವರ ವಿಶೇಷ ಅನುಗ್ರಹಕ್ಕೆ ಪಾತ್ರರಾದರು.
ಶ್ರೀ ವಾದಿರಾಜರು ಮಾಡಿದ ಒಂದು ಕೆಲಸ ವಿಶೇಷವಾದುದು. ಗುರುಗಳ ಅಪ್ಪಣೆಯನ್ನು ಪಡೆದು ಅವರು ಭಾರತದ ಪುಣ್ಯಕ್ಷೇತ್ರಗಳಿಗೆ ಹೋದರು, ಪ್ರತಿಯೊಂದು ಕಡೆಯೂ ಭಕ್ತಿಯಿಂದ ದೇವರ ಪೂಜೆ ನಡೆಸಿದರು. ಭಾರತದಲ್ಲಿ ಎಷ್ಟು ಪವಿತ್ರ ಸ್ಥಳಗಳಿವೆ, ಅಲ್ಲವೆ? ಸಾವಿರಾರು ಜನರು ಇಂತಹ ಸ್ಥಳಗಳಿಗೆ ಹೋಗಿ ಬರುತ್ತಾರೆ. ಅವರಿಗೆ ಆ ಸ್ಥಳಗಳ ವಿಷಯ ತಿಳಿಯುವುದು ಹೇಗೆ? ಪ್ರತಿಯೊಂದು ಸ್ಥಳದ ಪರಿಚಯ ಮಾಡಿ ಕೊಡುವವರು ಯಾರು? ವಾದಿರಾಜರು ಇತರ ಯಾತ್ರಿಕರಿಗೆ ಸಹಾಯವಾಗಲಿ ಎಂದು ತೀರ್ಥಪ್ರಬಂಧ ಎಂಬ ಪುಸ್ತಕವನ್ನು ಸಂಸ್ಕೃತದಲ್ಲಿ ಬರೆದರು. (ಆಗ ಭಾರತದಲ್ಲಿ ಎಲ್ಲ ಕಡೆಗಳಲ್ಲಿಯೂ ಉಪಯೋಗದಲ್ಲಿದ್ದ ಭಾಷೆ ಎಂದರೆ ಸಂಸ್ಕೃತ ತಾನೆ?) ಯಾವ ಕ್ಷೇತ್ರವಾದ ಮೇಲೆ ಯಾವ ಕ್ಷೇತ್ರಕ್ಕೆ ಹೋಗಬೇಕು; ಪ್ರತಿ ಸ್ಥಳದಲ್ಲಿ ನೋಡಬೇಕಾದುದೇನು, ಮಾಡಬೇಕಾದುದೇನು; ಆ ಕ್ಷೇತ್ರ ಏಕೆ ಮುಖ್ಯ – ಈ ಎಲ್ಲ ವಿಚಾರಗಳನ್ನು ಈ ಗ್ರಂಥ ತಿಳಿಸುತ್ತದೆ. ಈ ’ತೀರ್ಥಪ್ರಬಂಧ’ ಯಾತ್ರಿಕರ ಕೈಪಿಡಿ ಎನ್ನಬಹುದು. ಸುಮಾರು ನಾಲ್ಕು ನೂರ ಐವತ್ತು ವರ್ಷಗಳ ಹಿಂದೆ ಈ ಯತಿಗಳು ಹೀಗೆ ಇತರ ಯಾತ್ರಿಕರ ಕಷ್ಟಸುಖಗಳ ವಿಷಯ ಯೋಚನೆ ಮಾಡಿ ಪುಸ್ತಕ ಬರೆದರು.
ವಾಧಿರಾಜರಿಗೆ ಒಲಿದುಬಂದ ಹಯವದನ
ಹಯವದನ ಬಿಳಿಯ ಕುದುರೆಯ ರೂಪದಿಂದ ಬರುತ್ತಿದ್ದನಂತೆ.
“ನನ್ನನ್ನು ವಾದಿರಾಜರಿಗೆ ಅರ್ಪಿಸು” ಎಂದು ಸೂಚನೆಯಾಯಿತು. ಮೆರವಣಿಗೆಯಿಂದ ಕೊಂಡೊಯ್ದು ಮಠಕ್ಕೆ ಒಪ್ಪಿಸಲು, ವಾದಿರಾಜರು ಭಕ್ತಿಯಿಂದ ಹಯವದನನನ್ನು ಬರಮಾಡಿಕೊಂಡು ಪೂಜಿಸಲು ಪ್ರಾರಂಭಿಸಿದರು.
ಆ ಸ್ವರ್ಣಕಾರ ಗುಂಪಿನವರೆಲ್ಲಾ ವಾದಿರಾಜರ ಶಿಷ್ಯರಾದರು. ಈಗಲೂ ಈ ವಂಶಸ್ಥರೆಲ್ಲಾ ಸೋಕೆ ಮಠದ ಶಿಷ್ಯರೇ ಆಗಿದ್ದಾರೆ.
ಈ ಹಯವದನ ವಾದಿರಾಜರ ಜೀವನದಲ್ಲಿ ಅನೇಕ ವಿಚಿತ್ರ ಲೀಲೆಗಳನ್ನು ತೋರಿದ್ದಾನೆ. ಒಮ್ಮೆ ಪಂಢರಪುರದಲ್ಲಿ ಸ್ವಾಮಿಗಳು ಬಿಡಾರ ಮಾಡಿದಾಗ, ಹಯವದನ ದೇವದಿವ್ಯಾಶ್ವ ರೂಪದಲ್ಲಿ ಬಂದು ಹೊಲದಲ್ಲಿ ಕಡಲೆ ಪೈರನ್ನು ಮೇಯಲಾರಂಭಿಸಿದನಂತೆ. ಆ ಕುದುರೆಯನ್ನು ಹಿಡಿಯಲು ಜನ ಪ್ರಯತ್ನಪಟ್ಟರು. ಅದು ವಾದಿರಾಜರ ಬಿಡಾರದವರೆಗೂ ಬಂದು ಅದೃಶ್ಯವಾಯಿತು. ಆ ಹೊಲದೊಡೆಯ ಸ್ವಾಮಿಗಳಲ್ಲಿ ದೂರಿಕೊಂಡನು.
ವಾದಿರಾಜರು ನಮ್ಮ ಮಠದಲ್ಲಿ ಕುದುರೆಯಿಲ್ಲ ಎಂದರು. ಮರುದಿನ ಆ ಬಿಳಿ ಕುದುರೆ ಅದೇ ಹೊಲಕ್ಕೆ ದಾಳಿಯಿಟ್ಟತು. ಯಜಮಾನನೇ ಅಟ್ಟಿಸಿಕೊಂಡು ಬಂದನು. ಸ್ವಾಮಿಗಳ ಪೂಜೆ ನಡೆಯುವ ಕಾಲಕ್ಕೆ ಸರಿಯಾಗಿ ಬಂದು ಕುದುರೆಯು ಪೂಜೆಯನ್ನು ನೋಡುತ್ತ ಕುಳಿತಿದ್ದ ನೂರಾರು ಜನರನ್ನು ಭೇದಿಸಿಕೊಂಡು ಬಂದಿತು. ಪೂಜಾಪೀಠದಲ್ಲಿ ವಿರಾಜಮಾನಾಗಿದ್ದ ಹಯಗ್ರೀವ ಮೂರ್ತಿಯಲ್ಲಿ ಐಕ್ಯವಾದಂತೆ ಭಾಸವಾಯಿತು. ಜಮೀನ್ದಾರ ಈ ಅಚ್ಚರಿಯನ್ನು ವಾದಿರಾಜರಲ್ಲಿ ನಿವೇದಿಸಿಕೊಂಡಾಗ, ಗುರುಗಳೆಂದರು:
“ನೀನು ಪುಣ್ಯವಂತ. ಆದ್ದರಿಂದಲೇ ಹಯವದನ ನಿನಗೆ ದರ್ಶನ ವಿತ್ತಿದ್ದಾನೆ. ಇದರಿಂದ ನಿನಗೆ ತುಂಬ ಒಳ್ಳೆಯದಾಗುವುದು.”
ಹೀಗೆ ವಾದಿರಾಜರ ಗಾಢವಾದ ಭಕ್ತಿ, ಇದರಿಂದ ದೇವರು ಅವರಿಗೆ ಅನುಗ್ರಹ ಮಾಡಿದ್ದು ಇವನ್ನು ಕುರಿತು ಇಂದಿಗೂ ಜನರ ಬಾಯಲ್ಲಿ, ಸ್ಮರಣೆಯಲ್ಲಿ ಅನೇಕ ಕಥೆಗಳು ಉಳಿದುಬಂದಿವೆ.
K R PURAM RAYARA MUTT
****************
ವಾಧಿರಾಜರು ಭೂತವನ್ನು ಗೆದ್ದ ಮಹಿಮೆ
ಶ್ರೀ ವಾದಿರಾಜರು ಒಳ್ಳೆಯವರಿಗೆ ಸಹಾಯ ಮಾಡುತ್ತಿದ್ದರು, ಕೆಟ್ಟವರಿಗೆ ಶಿಕ್ಷಿಸುತ್ತಿದ್ದರು, ಅವರಿಗೆ ವಿಶೇಷ ಶಕ್ತಿ ಇತ್ತು ಎಂದು ಅನೇಕ ಸ್ವಾರಸ್ಯವಾದ ಕಥೆಗಳನ್ನು ಹೇಳುತ್ತಾರೆ. ಅವರು ಹಲವು ಪವಾಡಗಳನ್ನು ಮಾಡಿದರು ಎಂದೂ ಕಥೆಗಳಿವೆ. ಈ ಪವಾಡಗಳನ್ನು ಮಾಡಲು ಅವರಿಗೆ ಒಬ್ಬ ಭೂತರಾಜನ ಸಹಾಯವಿತ್ತು ಎಂದೂ ಹೇಳುತ್ತಾರೆ.
ನಾರಾಯಣಾಚಾರ್ಯ ಎಂಬ ಒಬ್ಬ ಶಿಷ್ಯ ಇವರ ಬಳಿ ವ್ಯಾಸಂಗಮಾಡಿ ದೊಡ್ಡ ವಿದ್ವಾಂಸನಾದನು. ಆದರೆ ಆತನಿಗೆ ವಿದ್ಯೆಯಿಂದ ವಿನಯ ಬರಲಿಲ್ಲ.
ಮದ ಅಧಿಕವಾಯಿತು. ಮಠಕ್ಕೆ ಯಾರು ಬಂದರೂ ಅವರ ಅವಮಾನ ಮಾಡುವುದೇ ಆತನಿಗೆ ಸಂತೋಷದ ಕೆಲಸ, ಎಲ್ಲರನ್ನೂ ಆಕ್ಷೇಪಿಸುವುದೇ ಒಂದು ಚಟ. ಇದು ಗುರುಗಳಾದ ವಾದಿರಾಜರ ಗಮನಕ್ಕೆ ಬಂದಿತ್ತು. ಅವನಿಗೆ ಬುದ್ಧಿ ಕಲಿಸಲು ಸರಿಯಾದ ಸಮಯಕ್ಕಾಗಿ ಅವರು ಮೌನದಿಂದ ಕಾಯುತ್ತಿದ್ದರು. ನಾರಾಯಣಾಚಾರ್ಯ ಸಾಕ್ಷಾತ್ ಗುರುಗಳನ್ನೂ ತೀಕ್ಣವಾಗಿ ಆಕ್ಷೇಪಣೆ ಮಾಡುತ್ತ ಬಂದನು. ಒಮ್ಮೆ ವ್ಯಾಸ ಮುನಿಗಳೆದುರಿಗೇ ವಾದಿರಾಜರನ್ನೇ ಈತ ನಿಂದಿಸಿದ. ಗುರುಗಳಿಗೆ ಈ ಅವಿಧೇಯ ದುಷ್ಟ ಶಿಷ್ಯನಿಗೆ ಶಿಕ್ಷೆಯಾಗಬೇಕು ಎನಿಸಿತು. ಅವನನ್ನು “ಬ್ರಹ್ಮ ರಾಕ್ಷಸನಾಗು” ಎಂದು ಶಪಿಸಿದರಂತೆ!
ಕಥೆ ಇಲ್ಲಿಗೆ ಮುಗಿಯಲಿಲ್ಲ; ಇನ್ನೂ ಇದೆ.
ನಾರಾಯಣಾಚಾರ್ಯ ಬ್ರಹ್ಮರಾಕ್ಷಸನಾದರೂ, ಹಿಂದಿನ ವಾಸನೆ ಆತನಿಗೆ ತಪ್ಪಲಿಲ್ಲ. ವಿಜಯನಗರದ ಹತ್ತಿರ ಬಂದು ದಾರಿಯಲ್ಲಿ ಮರದ ಮೇಲೆ ಈ ನಾರಾಯಣ ಬೊಮ್ಮರಕ್ಕಸ ಕುಳಿತ. ಆ ದಾರಿಯಲ್ಲಿ ಬಂದವರನ್ನೆಲ್ಲಾ ಹೆದರಿಸಿ ಅರ್ಥವಾಗದ ಒಂದು ಪ್ರಶ್ನೆಯನ್ನು ಘರ್ಜಿಸುತ್ತಿದ್ದನು. “ಆ ಕಾ ಮಾ ವೈ ಕೋ ನ ಸ್ನಾತಃ?” ಎಂಬುದು ಪ್ರಶ್ನೆ. ಈ ಪ್ರಶ್ನೆಯೇ ಯಾರಿಗೂ ಅರ್ಥವಾಗುತ್ತಿರಲಿಲ್ಲ. ಪ್ರಶ್ನೆಗೆ ಉತ್ತರ ಹೇಳಲಿಲ್ಲವೆಂಬ ನೆವದಿಂದ ಅವರನ್ನು ಪೀಡಿಸುತ್ತಿದ್ದನು. ಅನೇಕರು ರಕ್ತಕಾರಿ ಪ್ರಾಣ ಬಿಡುತ್ತಿದ್ದರು.
ಈ ವಿಷಯ ವಾದಿರಾಜರ ಕಿವಿಗೆ ಬಿದ್ದಿತು. ಈ ಬ್ರಹ್ಮ ರಾಕ್ಷಸನಿಂದ ಜನರನ್ನು ಕಾಪಾಡಬೇಕು ಎಂದು ಅವರು ಉದ್ದೇಶಪೂರ್ವಕವಾಗಿಯೇ ಆ ದಾರಿಯಲ್ಲಿ ಬಂದರು. ಅವರಿಗೂ ಆ ಘರ್ಜನೆ ಕೇಳಿತು, ವಾದಿರಾಜರು ಜ್ಞಾನಿಗಳು, ಈ ಶಿಷ್ಯನ ವೃತ್ತಾಂತವೆಲ್ಲಾ ಅವರಿಗೆ ತಿಳಿಯಿತು. ಅವರು ನಸುನಗುತ್ತ ಉತ್ತರಿಸಿದರು. ರಕ್ಕಸನ ಪ್ರಶ್ನೆ ಹೀಗೆ: “ಆಷಾಡ, ಕಾರ್ತೀಕ,ಮಾಘ ಮತ್ತು ವೈಶಾಖ ಮಾಸಗಳಲ್ಲಿ ಯಾರು ವಿಧಿಯ ಅನುಸಾರವಾಗಿ ಸ್ನಾನ ಮಾಡುವುದಿಲ್ಲ?” ಎಂದು. ವಾದಿರಾಜರು ಹೇಳಿದರು, “ನೀನೇ ಮಾಡುವುದಿಲ್ಲ” ಎಂದು! ತನ್ನ ಪ್ರಶ್ನೆಯನ್ನು ಅರ್ಥಮಾಡಿಕೊಂಡವರು ಯಾರು ಎಂದು ಬ್ರಹ್ಮರಾಕ್ಷಸ ಬೆರಗಾದ. ಅನಂತರ ಗುರುಗಳನ್ನು ಗುರುತಿಸಿ ಅವರಿಗೆ ಶರಣಾಗತನಾದ. “ನೀವು ಹೇಳಿದಂತೆ ಕೇಳಿಕೊಂಡಿರುತ್ತೇನೆ” ಎಂದು ಒಪ್ಪಿದ.
ಅಂದಿನಿಂದ ವಾದಿರಾಜರ ಪವಾಡಗಳು ಅಧಿಕವಾದವು. ಮಹಿಮೆ ಅಗಾಧವಾಯಿತು.
ಈಗಲೂ ಸೋದೆಯಲ್ಲಿ “ನಾರಾಯಣ ಭೂತ” ಎಂಬ ಭೂತದ ಪೂಜೆ ನಡೆಯುತ್ತದೆ. ಈ ನಾರಾಯಣ ಭೂತ ನಾರಾಯಣಾಚಾರ್ಯನೇ, ಗುರುಗಳ ದಯೆಯಿಂದ ಅವನ ಶಾಪ ಕಳೆಯಿತು, ಈಗ ಪೂಜೆ ನಡೆಯುತ್ತಿದೆ ಎಂದು ಹೇಳುತ್ತಾರೆ.**
ವಾಧಿರಾಜರಿಂದ ನೈವೇದ್ಯ , ಹಯಗ್ರೀವ ದೇವರ ಪೂಜೆ
ದೇವರೇ ವಿಷ ತಿಂದ
ವಾದಿರಾಜರು ದೇವರ ಅನುಗ್ರಹದಿಂದ ಉಳಿದುಕೊಂಡ ಕಥೆಯೂ ಬಹು ಸ್ವಾರಸ್ಯವಾಗಿದೆ. ವಾದಿರಾಜರ ಉಪಾಸನಾಮೂರ್ತಿ ಹಯವದನ ಮೂರ್ತಿ ಎಂದು ಆಗಲೇ ಹೇಳಿದೆಯಷ್ಟೆ. ಈ ಕುದುರೆ ಮುಖದ ದೇವರಿಗೆ ಅವರು ನಿತ್ಯವೂ ’ಮಡ್ಡಿ’ (ಹಯಗ್ರೀವ)ಯನ್ನು ನಿವೇದನೆ ಮಾಡುತ್ತಿದ್ದರು. ಒಂದು ದೊಡ್ಡ ಹರಿವಾಣದ ತುಂಬ ಈ ಭಕ್ಷ್ಯವನ್ನು ತುಂಬಿ ಅದನ್ನು ತಲೆಯ ಮೇಲಿಟ್ಟುಕೊಂಡು ಕುಳಿತು ಹಯವದನನನ್ನು ಸ್ಮರಿಸುತ್ತಿದ್ದರು. ಹಯವದನ ಸುಂದರವಾದ ಬಿಳಿಯ ಬಣ್ಣದ ಕುದುರೆಯ ರೂಪದಿಂದ ಬಂದು ವಾದಿರಾಜರ ಎರಡು ಭುಜಗಳ ಮೇಲೂ ತನ್ನೆರಡು ಮುಂಗಾಲುಗಳನ್ನು ಇರಿಸಿಕೊಂಡು ಅವರ ತಲೆಯ ಮೇಲಿದ್ದ ಹಯಗ್ರೀವವನ್ನು ಮೆಲ್ಲುತ್ತಿದ್ದನಂತೆ. ವಾದಿರಾಜರ ಈ ಭಂಗಿಯ ಚಿತ್ರವನ್ನು ಈಗಲೂ ಅನೇಕ ಕಡೆ ನೋಡಬಹುದು.
ತಟ್ಟೆಯಲ್ಲಿದ್ದ ಹಯಗ್ರೀವವನ್ನು ತಿಂದು ಭಕ್ತರಿಗಾಗಿ ಸ್ವಲ್ಪ ಪ್ರಸಾದವನ್ನು ಉಳಿಸುತ್ತಿದ್ದುದು ವಾಡಿಕೆಯಾಗಿತ್ತು. ಆದರೆ ಒಮ್ಮೆ ತಟ್ಟೆ ಪೂರ್ತಿ ಖಾಲಿಯಾಯಿತು. ನೆಕ್ಕಿ ನಿಕ್ಕಿ ಹಯಗ್ರೀವವನ್ನು ಪೂರೈಸಿಬಿಟ್ಟಿದ್ದ ಹಯವದನಸ್ವಾಮಿ. ಇಂದೇಕೆ ಪ್ರಸಾದ ದಯಪಾಲಿಸಲಿಲ್ಲ ದೊರೆ ಎಂದು ವಾದಿರಾಜರು ಚಿಂತಿಸಿದರು. ಅಂದು ಅವರಿಗೆ ಸ್ವಪ್ನ ಸೂಚನೆಯಾಯಿತು. ನಿನಗಾಗದವರು ಇಂದಿನ ನೈವೇದ್ಯದಲ್ಲಿ ವಿಷ ಹಾಕಿದ್ದುದರಿಂದ ನಾನೇ ಅದನ್ನು ಪೂರ್ತಿ ಸ್ವೀಕರಿಸಿದ್ದೇನೆ. ವಿಷದಿಂದ ಹಸಿರಾಗಿರುವ ನನ್ನ ಪ್ರತಿಮೆ ನಲವತ್ತೆಂಟು ದಿನಗಳ ’ಗುಳ್ಳ’ದ ನಿವೇದೆಯಿಂದ ಪರಿಹಾರವಾಗುತ್ತದೆ” ಎಂದು!
ಉಡುಪಿಯ ಬಳಿ ಒಂದು ಹಳ್ಳಿಯ ಭೂಮಿಯಲ್ಲಿ ಮಾತ್ರ ಬೆಳೆಯುವ ಈ ಕಾಯಿ ವಾದಿರಾಜಗುಳ್ಳ ಎಂದು ಈಗಲೂ ಪ್ರಸಿದ್ಧವಾಗಿದೆ. ವಾದಿರಾಜರು ಈ ಗುಳ್ಳದ ಕಾಯಿಯನ್ನು ದಿನವೂ ಅರ್ಪಿಸಿ ಪೂಜಿಸಿದರು. ತರುವಾಯ ಹಯವದನ ಮೂರ್ತಿಯ ಹಸಿರೆಲ್ಲ ಹೋಗಿ ಕಂಠದಲ್ಲಿ ಮಾತ್ರ ಹಸಿರು ಉಳಿಯಿತು.
ಶ್ರೀ ಹಯವದನ
ಈ ಹಯಗ್ರೀವ ಪ್ರತಿಮೆ ವಾದಿರಾಜರಲ್ಲಿ ಬಂದು ಸೇರಿದ್ದು ಕೂಡ ಒಂದು ಪವಾಡವೇ ಆಗಿದೆ.
ಅಕ್ಕಸಾಲಿಯೊಬ್ಬ ಗಣಪತಿಯ ವಿಗ್ರಹವನ್ನು ಮಾಡುವ ಉದ್ದೇಶದಿಂದ ಪಂಚಲೋಹ ಕಾಯಸಿ ಎರಕ ಹೊಯ್ದನು. ಆದರೆ ಅಚ್ಚು ಗಣಪತಿಯದೇ ಆಗಿದ್ದರೂ, ತೆಗೆದು ನೋಡಿದಾಗ ಅದು ಗಜಗ್ರೀವದ ಬದಲು ಹಯಗ್ರೀವ ಮೂರ್ತಿಯಾಗಿತ್ತು! ಅಕ್ಕಸಾಲಿಗ ಕೋಪಗೊಂಡು ಕೆಂಪಗೆ ಇನ್ನೂ ಬಿಸಿಯಲ್ಲೇ ಇದದ ಹಯಗ್ರೀವ ವಿಗ್ರಹವನ್ನು ಸುತ್ತಗೆಯಿಂದ ಜಜ್ಜತೊಡಗಿದನು. ಆದರೆ ಅದು ಆ ಏಟಿಗೆ ಸ್ವಲ್ಪವೂ ಬಗ್ಗಲಿಲ್ಲ!
ವಾಧಿರಾಜರು ರಾಜನನ್ನು ಉದ್ಧರಿಸಿದರು
ವಾದಿರಾಜರು ಉಡುಪಿಯಲ್ಲಿದ್ದವರು. ಸೋದೆಯಲ್ಲಿ ನೆಲೆಸಿದ ಕಾರಣ ಕಥೆಯೂ ಸ್ವಾರಸ್ಯವಾಗಿದೆ.
ಕಾರವಾರ ಜಿಲ್ಲೆಯ ಸಿರಸಿಗೆ ಹನ್ನೆರಡು ಮೈಲಿ ದೂರದಲ್ಲಿರುವ ಸೋಂದ ಮೂರು ಲಕ್ಷ ಪ್ರಜಾಸಂಖ್ಯೆಯ ಅರಸಪ್ಪನಾಯಕನ ರಾಜಧಾನಿಯಾಗಿತ್ತು. ಇದಕ್ಕೆ ಹತ್ತಿರವೇ ಶಾಲ್ಮಲೀ ನದಿ ಹರಿಯುತ್ತದೆ. ಸುತ್ತ ಮಲೆನಾಡಿನ ಪ್ರಕೃತಿ ಸೌಂದರ್ಯ ಮೆರೆಯುತ್ತದೆ.
ಅರಸಪ್ಪನಾಯಕ ನೆರೆಯ ರಾಜರೊಂದಿಗೆ ಒಮ್ಮೆ ಯುದ್ಧ ಮಾಡಬೇಕಾಯಿತು. ಯುದ್ಧದಲ್ಲಿ ಸೋತುಹೋದ. ಹೆಂಡತಿಯ ಸಮೇತ ಅರಣ್ಯದ ಪಾಲಾದನು.
ಕಾಡಿನಲ್ಲಿ ಅಲೆಯುತ್ತ ಬಂದ ಅರಸಪ್ಪ ಮಧ್ಯೆ ಒಂದೆಡೆ ಅಚ್ಚರಿಯಿಂದ ನಿಂತ.
ಮುಖದಲ್ಲಿ ತೇಜಸ್ಸು ತುಳುಕಾಡುತ್ತಿದ್ದ ಸನ್ಯಾಸಿಗಳೊಬ್ಬರು ತಪಸ್ಸು ಮಾಡುತ್ತಿದ್ದರು. ಅವರನ್ನು ನೋಡುತ್ತ ಅರಸಪ್ಪನಿಗೆ ಭಕ್ತಿ ಉಕ್ಕಿ ಬಂದಿತು. ಹೆಂಡತಿಯೊಡನೆ ಮುಂದೆ ಬಂದು ಅವರ ಪಾದಗಳಿಗೆ ನಮಸ್ಕರಿಸಿದ.
ತಪಸ್ಸು ಮಾಡುತ್ತಿದ್ದವರು ವಾದಿರಾಜರು. ಕಣ್ತೆರೆದು ನೋಡಿದರು. ಅರಸಪ್ಪ ತನ್ನ ಶೋಚನೀಯ ಸ್ಥತಿಯನ್ನು ಬಿನ್ನವಿಸಿಕೊಂಡ, ತನ್ನನ್ನು ಹೇಗಾದರೂ ಕಾಪಾಡಬೇಕೆಂದು ಕೇಳಿಕೊಂಡ.
ದುಷ್ಟ ಗುರುವಿನ ದುರುಪದೇಶದಿಂದ ಅರಸಪ್ಪ ಅನೇಕ ಅಯೋಗ್ಯ ಕಾರ್ಯಗಳನ್ನು ಮಾಡಿದ್ದ-ಅವೇ ಅವನ ಈ ದುಸ್ಥಿತಿಗೆ ಕಾರಣವೆಂದು ವಾದಿರಾಜರಿಗೆ ತಿಳಿಯಿತು. ಆದರೂ ತಮಗೆ ಶರಣಾಗತನಾದವನನ್ನು ರಕ್ಷಿಸುವುದು ಧರ್ಮ, ಅವನೂ ಪಶ್ಚಾತ್ತಾಪದಿಂದ ತುಂಬಿದ್ದಾನೆ. ಎನ್ನಿಸಿತು. ಮಂತ್ರಾಕ್ಷತೆಯನ್ನು ಕೊಟ್ಟು ಆಶೀರ್ವದಿಸಿ, “ಈಗ ಹೋಗಿ ಯುದ್ಧ ಮಾಡು, ವಿಜಯಿಯಾಗುವೆ” ಎಂದರು.
ಹಿಂದೆ ಬಲವಾದ ಸೈನ್ಯವನ್ನೆ ಕಟ್ಟಿಕೊಂಡು ಯುದ್ಧಕ್ಕೆ ಹೋಗಿದ್ದ ಅರಸಪ್ಪ. ಶಕ್ತಿವಂತರಾದ ಶತ್ರುಗಳ ಕೈಯಲ್ಲಿ ಸೋತಿದ್ದ. ಈಗ, ನಾಲ್ಕು ಕೆಂಪು ಮಂತ್ರಾಕ್ಷತೆ ಕಾಳನ್ನು ಕೈಯಲ್ಲಿ ಹಿಡಿದು ಯುದ್ಧಕ್ಕೆ ಹೋಗುವುದೇ?
ಮತ್ತೆ ಗುರುಗಳ ಮುಖ ಕಂಡು, ’ಅವರು ಹೇಳಿದುದೇ ನನಗೆ ಅಪ್ಪಣೆ’ ಎಂದುಕೊಂಡ.
ಒಬ್ಬನೇ ಯುದ್ಧಕ್ಕೆ ಹೊರಟ
ಅವನ ಬೇಡಿಕೆಯಿಲ್ಲದೇ ದೊಡ್ಡ ಅಶ್ವಸೇನೆಯೊಂದು ನೆಲದಿಂದ ಸಿಡಿದೆದ್ದು ಸಹಾಯಕ್ಕೆ ನಿಂತಿತು! ವಾದಿರಾಜರಿಗೆ ವಿಧೇಯನಾಗಿದ್ದ ಭೂತರಾಜನ ಬಳಗ ಅಶ್ವಗಳನ್ನು ಉಪಯೋಗಿಸಿಕೊಂಡು ಸೋದೆಯನ್ನಾಕ್ರಮಿಸಿದ್ದ ಶತ್ರು ಸೇನೆಯನ್ನು ಹೊಡೆದೋಡಿಸಿತು. ಅರಸಪ್ಪ ನಾಯಕನಿಗೆ ಪ್ರಯಾಸವಿಲ್ಲದೆಯೇ ರಾಜ್ಯವನ್ನು ಹಿಂತುರುಗಿಸಿ ಸೋದೆಯ ಕೆರೆಯೊಳಗೆ ಹೋಗಿ ಲೀನವಾಯಿತು!
ಅರಸಪ್ಪ ವಾದಿರಾಜರ ದಯೆಯಿಂದ ಹೀಗೆ ನಿರಾಯಾಸವಾಗಿ ತನ್ನ ರಾಜ್ಯವನ್ನು ಪಡೆದ. ಹೃದಯದಲ್ಲಿ ಭಕ್ತಿ ಮತ್ತು ಕೃತಜ್ಞತೆ ಉಕ್ಕಿದವು. ಅವರ ನೆಚ್ಚಿನ ಶಿಷ್ಯನಾದನು.
ನನ್ನನ್ನು ಉದ್ಧಾರ ಮಾಡಿ ತಾವು ಇಲ್ಲಿಯೆ ನಿಲ್ಲಬೇಕು. ತಮ್ಮ ಸೇವಕ ನಾನು. ನನ್ನದೆಲ್ಲವನ್ನೂ ತಮಗೆ ಧಾರೆ ಎರೆಯಲು ನಾನು ಸಿದ್ಧ ಎಂದು ಬೇಡಿ ನಮಸ್ಕರಿಸಿದ. ವಾದಿರಾಜರು ಒಪ್ಪ ಅಲ್ಲಿ ನಿಂತರು. ಸೋದೆಯಲ್ಲಿ ತಮ್ಮ ಮಠವೊಂದನ್ನು ಕಟ್ಟಸಿದರು.
ಹೀಗೆ ವಾದಿರಾಜರು ಸೋದೆಗೆ ಬಂದುದಕ್ಕೆ ಒಂದು ಕಥೆಯನ್ನು ಇಂದಿಗೂ ಜನ ಹೇಳುತ್ತಾರೆ. ಸೋದೆಯಲ್ಲಿ ’ಹಯಗ್ರೀವ ಸರೋವರ’ ಎಂಬ ಕೆರೆ ಇದೆ. ಭೂತರಾಜ ಇದೇ ಕೆರೆಯಲ್ಲಿ ಮಾಯವಾದದ್ದು ಎನ್ನುತ್ತಾರೆ.
ವಾಧಿರಾಜರಿಂದ ತ್ರಿವಿಕ್ರಮ ಪ್ರತಿಷ್ಠೆ ಗ್ರಂಥ ರಚನೆ
ವಾದಿರಾಜರು ಬದರೀ ಯಾತ್ರೆ ಮಾಡಿದರು. ಹಿಂತುರುಗಿ ಬಂದ ಮೇಲೆ 8ಸೋದೆಯನ್ನು ಪವಿತ್ರ ಕ್ಷೇತ್ರವನ್ನಾಗಿ ಮಾಡಬೇಕು ಎಂದು ತೋರಿತು. ಬದರಿಯಲ್ಲಿದ್ದ ಲಕ್ಷ್ಮೀ-ತ್ರಿವಿಕ್ರಮ ಮೂರ್ತಿಗಳನ್ನು ಶಿಲಾರಥ ಸಮೇತ ತರಿಸಿ ಕ್ರಿಸ್ತ ಶಕ ೧೫೮೨ರಲ್ಲಿ (ಶಾಲೀವಾಹನ ಶಕ ೧೫೦೪) ವೈಶಾಕ ಶುದ್ಧ ಪೂರ್ಣಿಮೆಯಂದು ಸೋದೆಯಲ್ಲಿ ಪ್ರತಿಷ್ಠೆ ಮಾಡಿದರು.
ವಾದಿರಾಜರು ಅರಸಪ್ಪನಿಗೆ ಮಂತ್ರಾಕ್ಷತೆ ಕೊಟ್ಟು ಆಶೀರ್ವದಿಸಿದರು.
ತ್ರಿವಿಕ್ರಮ ದೇವರ ರಥೋತ್ಸವವನ್ನು ಹದಿನೇಳು ವರ್ಷಗಳ ಕಾಲ ಅವರೇ ನೆರವೇರಿಸಿದರು. ಅದಲ್ಲದೆ ಆಕಾಶ ಗಂಗ, ಅಮೃತ ಗಂಗ, ಪಾತಾಳ ಗಂಗ, ಶೀತಲ ಗಂಗ ಮತ್ತು ಧವಳ ಗಂಗ ಎಂಬ ಹೆಸರಿನ ಪಂಚ ಗಂಗಾ ಪ್ರತಿಷ್ಠೆಯನ್ನು ಮಾಡಿ ಅಲ್ಲಿ ನೀರಿಗೆ ಯಾವಾಗಲೂ ಕೊರತೆಯಿಲ್ಲದಂತೆ ಮಾಡಿದರು. ಧವಳ ಗಂಗೆಯ ದಡಗಳಲ್ಲಿ ಈಶ್ವರ ಲಿಂಗ, ವೀಣಾಪಾಣೊ, ಮಾರುತಿ, ಕೊಳಲ ಕೃಷ್ಣರನ್ನು ಪ್ರತಿಷ್ಠಾಪಿಸಿದರು. ಮತ್ತೊಂದು ದಂಡೆಯಲ್ಲಿ ತಾವು ಪ್ರಪಂಚವನ್ನು ಬಿಡುವಾಗ ಪ್ರವೇಶ ಮಾಡಲು ಶಿಲಾ ವೃಂದವನವನ್ನು ನಿರ್ಮಾಣ ಮಾಡಿಸಿದರು. ಸೋದೆ ಕ್ಷೇತ್ರದಲ್ಲಿ ಶ್ವೇತದ್ವೀಪ, ಅನಂತಾಸನ ಮತ್ತು ವೈಕುಂಠ ಎಂಬ ಮೂರು ಭಾಗಗಳು; ಈ ಕ್ಷೇತ್ರ ಇಂದಗೂ ಪವಿತ್ರಾಗಿಯೂ ಪ್ರಶಾಂತವಾಗಿಯೂ ಇದೆ.
ಸಾಧನೆಗಳು
ವಾದಿರಾಜರು ತಮ್ಮ ಅನೇಕ ಅಪೂರ್ವ ಸಾಧನೆಗಳಿಂದ ಬಹು ಪ್ರಸಿದ್ಧರಾದರು. ಜನರಿಗೆ ಒಳ್ಳೆಯದಾಗಲಿ ಎಂದೇ ಅವರು ಅನೇಕ ಕೆಲಸಗಳನ್ನು ಮಾಡಿದರು. ೧೪೮೦ರಲ್ಲಿ ಹುಟ್ಟಿದ ಅವರು ಒಂದು ನೂರ ಇಪ್ಪತ್ತು ವರ್ಷಗಳು ಬಾಳಿದರು. ಅವರ ಜೀವನವೆಲ್ಲ ದೇವರ ಧ್ಯಾನ, ಪೂಜೆ, ಇತರರಿಗೆ ಒಳ್ಳೆಯ ದಾರಿ ತೋರಿಸುವುದು, ಕಷ್ಟದಲ್ಲಿರುವವರಿಗೆ ಸಹಾಯಮಾಡುವುದು ಇವುಗಳಲ್ಲಿಯೇ ಕಳೆಯಿತು. ಅವರ ವಿಷಯವಾಗಿ ಎಷ್ಟೋ ಕಥೆಗಳನ್ನು ಭಕ್ತರು ಹೇಳುತ್ತಾರೆ ಅನೇಕರ ಕಷ್ಟಗಳನ್ನು ಕಳೆದರು, ಕೆಟ್ಟವರ ಅಹಂಕಾರವನ್ನು ಮುರಿದರು ಎಂಬುದು ಈ ಕಥೆಗಳ ಹೂರಣ. ಬಹುಮಂದಿ ಶಿಷ್ಯರಿಗೆ ವಿದ್ಯೆ ಕಲಿಸಿದರು. ಅವರು ರಚಿಸಿದ ಗ್ರಂಥಗಳು ಸಂಖ್ಯೆಯಿಂದಲೂ, ಯೋಗ್ಯತೆಯಿಂದಲೂ ದೊಡ್ಡವು. ವಾದಿರಾಜರು ಬಹು ದೊಡ್ಡ ವಿದ್ವಾಂಸರಾಗಿದ್ದರು. ಸಂಸ್ಕೃತ-ಕನ್ನಡ ಎರಡೂ ಭಾಷೆಗಳಲ್ಲಿ ಸೊಗಸಾದ ಕೃತಿಗಳನ್ನು ರಚಿಸಿದ್ದಾರೆ.
ಸದ್ಗ್ರಂಥಗಳು
ಕನ್ನಡದಲ್ಲಿ ಲಕ್ಷ್ಮೀ ಶೋಭಾನೆ, ವೈಕುಂಠ ವರ್ಣನೆ, ಹರಿಭಕ್ತಿ ಲತಾ, ಗುಂಡಕ್ರಿಯೆ, ಸ್ವಪ್ನಪದ, ಮಹಾಭಾರತ ತಾತ್ಪರ್ಯ ನಿರ್ಣಯ ಟೀಕೆ, ಕೀರ್ತನೆಗಳನ್ನು ರಚಿಸಿದ್ದಾರೆ. ಸಂಸ್ಕೃತದಲ್ಲಿ ಯುಕ್ತಿಮಲ್ಲಿಕಾ, ರುಕ್ಮಿಣೀಶ ವಿಜಯ, ಭಾರತ ಲಕ್ಷಾಲಂಕಾರ, ಮಧ್ವಾಷ್ಟಕ, ಭೂಗೋಲ ನಿರ್ಣಯ, ಗುರ್ವರ್ಥ ದೀಪಿಕಾ, ಗುರುಭಾವ ಪ್ರಕಾಶಿಕಾ, ಕವಿಕದಂಬ ಕಂಠಭೂಷಾ, ಶ್ರೀ ಶ್ರೀಶಗುಣ ದರ್ಪಣ, ದುರ್ಗಾಸ್ತೋತ್ರ, ಶ್ರೀಕೃಷ್ಣ ಸ್ತುತಿ, ಶ್ರೀ ಲಕ್ಷ್ಮೀಸ್ತುತಿ, ದಶಾವತಾರ ಸ್ತೋತ್ರ, ಹಯಗ್ರೀವ ಸ್ತೋತ್ರ ಮುಂತಾದ ಕೃತಿಗಳು ಪ್ರಸಿದ್ಧವಾಗಿವೆ.
ವಾಧಿರಾಜರಿಂದ.ಧರ್ಮಸ್ಥಳದ ಜೀರ್ಣೋದ್ಧಾರ ,ಇತರ ಪೂಜಾ ವ್ಯವಸ್ಥೆ
ವ್ಯವಸ್ಥೆಯಲ್ಲಿ ಎತ್ತಿದ ಕೈ
ಕನ್ನಡನಾಡಿನ ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳ ಬಹಯ ಪ್ರಸಿದ್ಧವಾದ ಸ್ಥಳ. ಇಲ್ಲಿ ಮಂಜುನಾಥ ಸ್ವಾಮಿಯ ದೇವಾಲಯ ಇದೆ. ಪ್ರತಿನಿತ್ಯ ಸಾವಿರಾರು ಮಂದಿ ಯಾತ್ರಿಕರು ಬರುತ್ತಾರೆ. ಮಂಜುನಾಥ ಸ್ವಾಮಿಯನ್ನು ಇಲ್ಲಿ ಪ್ರತಿಷ್ಠಾಪಿಸಿದವರು ಶ್ರೀ ವಾದಿರಾಜರು. ಇಲ್ಲಿ ಪೂಜೆಗಳು ಸರಿಯಾಗಿ ನಡೆಯುವಂತೆ ವ್ಯವಸ್ಥೆ ಮಾಡಿದವರು ಅವರೇ. ಇಂದಿಗೂ ಈ ದೇವಾಲಯದಲ್ಲಿ ಪೂಜೆ ಮಾಡುವವರು ಮಾಧ್ವ ಅರ್ಚಕರೇ.
ವಾದಿರಾಜರು ಮಹಾ ತಪಸ್ವಿಗಳು, ಮಹಾವಿದ್ವಾಂಸರು. ದೇವಾಲಯ, ಮಠ ಮೊದಲಾದ ಸಂಸ್ಥೆಗಳು ಹೀಗೆ ನಡೆಯಬೇಕು ಎಂದು ಏರ್ಪಾಡು ಮಾಡುವುದರಲ್ಲಿಯೂ ಬಹು ಸಮರ್ಥರು. ಯಾವ ಕೆಲಸವಾದರೂ ಕ್ರಮವಾಗಿ, ಒಪ್ಪವಾಗಿ ನಡೆಯಬೇಕು. ಇದಕ್ಕೆ ವ್ಯವಸ್ಥೆ ಬೇಕು. ಯಾರು ಒಂದು ಕೆಲಸವನ್ನು ಮಾಡಬೇಕು, ಯಾವಾಗ ಮಾಡಬೇಕು, ಹೇಗೆ ಮಾಡಬೇಕು ಎಲ್ಲ ಸ್ಪಷ್ಟವಾಗಿರಬೇಕು. ಇಂತಹ ಏರ್ಪಾಟನ್ನು ಮಾಡುವುದರಲ್ಲಿ ವಾದಿರಾಜರು ಎತ್ತಿದ ಕೈ.
ಪರ್ಯಾಯೋತ್ಸವ
’ಪರ್ಯಾಯೋತ್ಸವ’ ಎಂದು ಕೇಳಿದ್ದೀರ?
ಉಡುಪಿಯಲ್ಲಿ ಶ್ರೀಕೃಷ್ಣನಿಗೆ ಎಂಟು ಮಠಗಳ ಸ್ವಾಮಿಗಳು ಪೂಜೆ ಮಾಡುತ್ತಾರೆ, ಪ್ರತಿ ಮಠದ ಯತಿಗಳು ಎರಡು ವರ್ಷ ಶ್ರೀ ಕೃಷ್ಣನ ಪೂಜೆ ಮಾಡಬೇಕು, ಸರದಿ ಪ್ರಕಾರ ಎಂಟು ಮಠಗಳವರೂ ಪೂಜೆ ನಡೆಸಬೇಕು (ಎಂದರೆ ಪ್ರತಿ ಮಠಕ್ಕೆ ಹದಿನಾಲ್ಕು ವರ್ಷಕ್ಕೆ ಒಂದು ಸಲ ಪೂಜೆ ನಡೆಸುವ ಅವಕಾಶ ಬರಬೇಕು.) ಎಂದು ಶ್ರೀ ವಾದಿರಾಜರು ವ್ಯವಸ್ಥೆ ಮಾಡಿದರು. ಸುಮಾರು ನಾಲ್ಕು ನೂರು ವರ್ಷಗಳ ಹಿಂದೆ ಅವರು ಹೇಳಿದಂತೆ ಇಂದೂ ನಡೆಯುತ್ತದೆ. ಎರಡು ವರ್ಷಕ್ಕೆ ಒಂದು ಸಲ ಒಬ್ಬ ಸ್ವಾಮಿಗಳು ಮತ್ತೊಬ್ಬರಿಗೆ ಶ್ರೀ ಕೃಷ್ಣನ ಪೂಜೆಯ ಕರ್ತವ್ಯವನ್ನು ವಹಿಸಿಕೊಡುತ್ತಾರೆ. ಇದು ಸಂಕ್ರಾಂತಿಯಾದ ಮೇಲೆ ಎರಡನೆಯ ಮತ್ತು ಮೂರನೆಯ ದಿನ ನಡೆಯುತ್ತದೆ. ಇದು ’ಪರ್ಯಾಯೋತ್ಸವ’.
ಯಾರೂ ಕೀಳಲ್ಲ
ಕೋಟ ಮತ್ತು ಕೋಟೇಶ್ವರ ಗ್ರಾಮಗಳಲ್ಲಿ ಬೇರೆ ಬೇರೆ ಜಾತಿಯವರಲ್ಲಿ ವಾದ ಹುಟ್ಟಿತು. ಜಗಳ ಬೆಳೆದು ಅನಾಹುತವಾಗುತ್ತದೆ ಎಂಬ ಸ್ಥಿತಿ ಬಂದಿತು. ಅದನ್ನು ತಿಳಿದ ವಾದಿರಾಜರು ಅಲ್ಲಿಗೆ ಹೋಗಿ ಅವರನ್ನು ಸಮಾಧಾನ ಮಾಡಿದರು. ಕೋಟೇಶ್ವರದಲ್ಲಿ ಕೀಳು ಎನ್ನಿಸಿದ್ದವರನ್ನು ತಮ್ಮ ಶಿಷ್ಯರನ್ನಾಗಿ ಮಾಡಿಕೊಂಡರು, ಅವರನ್ನು ಮೇಲಕ್ಕೆತ್ತಿದರು.
ಅಕ್ಷರ ಬಾರದೆ, ತುಳುಭಾಷೆ ಮಾತ್ರ ಬರುತ್ತಿದ್ದ ಹಿಂದುಳಿದ ’ಅಸ್ಪೃಶ್ಯರು’ ಕೆಲವರಿದ್ದರು. ವಾದಿರಾಜರು ಅವರಿಗಾಗಿ ತುಳುಭಾಷೆಯಲ್ಲಿಯೇ ದೇವರನಾಮಗಳನ್ನು ರಚಿಸಿದರು.
ಕನಕದಾಸರು ಬಹು ದೊಡ್ಡ ಭಕ್ತರು. ಅವರು ಕೀಳು ಕುಲದಲ್ಲಿ ಹುಟ್ಟಿದವರು ಎಂದು ಕೆಲವರು ಅವರನ್ನು ಗೌರವದಿಂದ ಕಾಣಲಿಲ್ಲ. ಅವರು ಉಡುಪಿಗೆ ಬಂದಾಗ ಅವರನ್ನು ದೂರ ಇಟ್ಟರು. ಇದು ವಾದಿರಾಜರಿಗೆ ತಿಳಿದಾಗ, ಅವರು ಕನಕದಾಸರನ್ನು ಕರೆಸಿ ಮಾತನಾಡಿದರು. ಇತರರಿಗೆ ಅವರ ಘನತೆಯನ್ನು ತಿಳಿಸಿಕೊಟ್ಟರು.
Sajjanamitra Santosh
K R PURAM RAYARA MUTT
*************
ಶ್ರೀ ವಾದಿರಾಜ ತೀರ್ಥರು
ದಕ್ಷಿಣಕನ್ನಡ ಜಿಲ್ಲಾ ಕು೦ದಾಪುರ ತಾಲ್ಲೂಕಿನ ಕೋಟೇಶ್ವರ ಕ್ಷೇತ್ರದಿ೦ದ ಪೂವ೯ಕ್ಕೆ ಶ೦ಕರನಾರಾಯಣಕ್ಕೆ ಹೋಗುವ ದಾರಿಯಲ್ಲಿ, ದಕ್ಷಿಣ ಪಾಶ್ವ೯ದಲ್ಲಿ ಹೂವಿನಕೆರೆಯ೦ಬ ಪ್ರದೇಶವಿದೆ. ಅಲ್ಲಿ ರಾಮಾಚಾಯ೯ರೆ೦ಬುವರು ತನ್ನ ಪತ್ನಿಯಾದ ಸರಸ್ವತಿಯೊ೦ದಿಗೆ ವಾಸವಾಗಿದ್ದರು. ಸರಸ್ವತಿಗೆ ಗೌರಿಯೆ೦ದು ಹೆಸರಿದ್ದಿತು. ಪುತ್ರಸ೦ತಾನವಿಲ್ಲದ ಈ ದ೦ಪತಿಗಳು ವಾಗೀಶತೀಥ೯ರನ್ನು ಪುತ್ರಸ೦ತಾನಕ್ಕಾಗಿ ಪ್ರಾಥಿ೯ಸಿದರು. ಸ್ವಾಮಿಗಳು ಫಲ, ಮ೦ತ್ರಾಕ್ಷತೆ ಕೊಟ್ಟು ಅನುಗ್ರಹಸಿದರು. ಆದರೆ ಹುಟ್ಟಿದ ಮಗುವನ್ನು ತಮ್ಮ ಮಠಕ್ಕೆ ಸನ್ಯಾಸದೀಕ್ಷೆಗಾಗಿ ಕೊಡಬೇಕೆ೦ದಾಗ ದ೦ಪತಿಗಳು ವ್ಯಥಿಥರಾದರು. ಅವರ ವ್ಯಥೆಯನ್ನು ತಿಳಿದು ಗುರುಗಳು "ನಿಮಗೆ ಹುಟ್ಟುವ ಮಗನು ನಮ್ಮ ಮಠದ ಸನ್ಯಾಸಿಯೇ ಆಗುವನು, ಆದರೂ ನಿಮ್ಮ ಅಪೇಕ್ಷೆ ಬೇರೆ ವಿಧವಾಗಿದೆ. ಅದ್ರುಷ್ಟ ಪರೀಕ್ಷೆ ಮಾಡೋಣ. ಹುಟ್ಟುವ ಶಿಶುವು ಮನೆಯೊಳಗೆ ಹುಟ್ಟಿದರೆ ನಿಮಗಿರಲಿ, ಮನೆಯ ಹೊರಗೆ ಜನಿಸಿದರೆ ದೇವರಿಗಿರಲಿ" ಅ೦ದರು. ಮು೦ದೆ ಸರಸ್ವತಿಯು ಗಭ್ರಿಣಿಯಾದಳು. ಗಭ್ರಿಣಿಯಾದ ಗೌರಿಗೆ ದೇವರ ದಶ೯ನದಲ್ಲಿ ಹರಿಕಥೆ ಕೇಳುವದರಲ್ಲಿಯೇ ಬಯಕೆಯು ಬೆಳೆಯಿತು.
ಶಾಲಿವಾಹನ ಶಕ ೧೪೦೨(ಕ್ರಿ.ಶ.೧೪೮೦) ಶಾವ೯ರಿ ಸ೦ವತ್ಸರದ ಮಾಘ ಶುದ್ದ ಸಾಧನ ದ್ವಾದಶಿ ರಾಮಾಚಾಯ೯ರು ಪಾರಣೆ ಮಾಡುತ್ತಿದ್ದಾಗ, ಮನೆಯ ಎದುರು ಇದ್ದ ಪೈರನ್ನು ಒ೦ದು ಹಸು ಬ೦ದು ಮೇಯಲಾರ೦ಭಿಸಿತು. ರಾಮಾಚಾಯ೯ರು ಅದುವರೆಗೂ ಮನೆಯಿ೦ದ ಹೊರಗೆ ಹೋಗದ೦ತೆ ತಡೆದಿದ್ದ ತು೦ಬು ಗಭಿ೯ಣಿ ಸರಸ್ವತಿಯನ್ನು ಕುರಿತು "ಸ್ವಲ್ಪ ಹಸುವನ್ನು ಓಡಿಸಿ ಬಾ" ಎ೦ದರು. ಮನೆಯಿ೦ದ ಸ್ವಲ್ಪ ದೂರದ ಗದ್ದೆಯ ಬಳಿಗೆ ಬ೦ದಾಗ, ಅದುವರೆಗೆ ಯಾವ ಸೂಚನೆಯೂ ಇಲ್ಲದೆ, ಆಗಲೇ ಗೌರಿಗೆ ಪ್ರಸವವೇದನೆಯು ಪ್ರಾರ೦ಭವಾಗಿ ಅವಳು ಪುತ್ರರತ್ನವನ್ನು ಮನೆಯ ಹೊರಗೆ ಪ್ರಸವಿಸಿದಳು ದೈವಸ೦ಕಲ್ಪವೇ ಪ್ರಬಲವೆ೦ದರಿತು ರಾಮಾಚಾಯ೯ರು ಮನಸ್ಸಿಗೆ ಸಮಾಧಾನ ತ೦ದುಕೊ೦ಡರು. ಆ ಗದ್ದೆಗೆ ಈಗಲು ಗೌರಿಗದ್ದೆಯ೦ದೆ ಹೆಸರಿದೆ. "ಭೂವರಾಹನ" ಅನುಗ್ರಹದಿ೦ದ ಹುಟ್ಟಿದ ಆ ಮಗುವಿಗೆ "ಭೂವರಾಹ" ಎ೦ದು ನಾಮಕರಣವಾಯಿತು. ಐದನೆಯ ವಷ೯ದಲ್ಲಿ ಉಪನಯನ ಮಾಡಿ ರಾಮಾಚಾಯ೯ರು "ನಮ್ಮ ಭಾಗ್ಯವಿಷ್ಟೇ" ಎ೦ದು ಯೋಚಿಸುತ್ತಾ ಮಗನನ್ನು ತ೦ದು ಶ್ರೀ ವಾಗಿಶತಿಥ೯ರಿಗೆ ಒಪ್ಪಿಸಿದರು.
ವಾಗಿಶತಿಥ೯ರ ಶಿಷ್ಯರಾದ ವಿದ್ಯಾನಿಧಿತೀಥ೯ರೆ೦ಬ ಬಿಡಿ ಸನ್ಯಾಸಿಗಳಲ್ಲಿ ಭೂವರಾಹನ ವಿದ್ಯಾಬ್ಯಾಸ ಪ್ರಾರ೦ಭವಾಯಿತು. ದೇವರಿಗೆ ನೀವೆದನೆ ಮಾಡದ ವಸ್ತು ತಿನ್ನುವುದಿಲ್ಲ ಎ೦ಬ ಸ೦ಕಲ್ಪ, ದೇವರ ನೋಟದ ಹೊರತು ಮತ್ತಾವ ನೋಟವು ಬೇಕಾಗಿಲ್ಲ ಎ೦ಬ ನಿಧಾ೯ರ. ಆಟವೆ೦ದರೆ ದೆವರಪೂಜೆಯ ಆಟ. ಹೀಗೆ ಭೂವರಾಹನ ಬಾಲ್ಯ ಕಳೆಯಿತು. ಎ೦ಟನೆಯ ವಷ೯ದಲ್ಲಿ ವಿರಕ್ತಿ, ಭಕ್ತಿ, ಉಪಾಸನಾಕ್ತಿಗಳಿ೦ದ ಕೂಡಿದ ಭೂವರಾಹನಿಗೆ ಶ್ರಿ ವಾಗಿಶತಿಥ೯ರು ಸನ್ಯಾಸವಿತ್ತರು. "ವಾದಿರಾಜ ತಿಥ೯" ಎ೦ದು ಕರೆದು ತಮ್ಮ ಸ೦ಸ್ಥಾನದ ಉತ್ತರಾಧಿಕಾರಿಯನ್ನಾಗಿ ಮಾಡಿದರು. ಸನ್ಯಾಸನ೦ತರದಲ್ಲಿ ಕೆಲವು ಕಾಲದ ವರೆಗೆ ಶ್ರೀ ವಾಗಿಶತಿಥ೯ರಲ್ಲಿ ವಿದ್ಯಾಬ್ಯಾಸ ಮು೦ದುವರೆಯೆತು.
ಶ್ರೀ ವಾದಿರಾಜರು ತೀಥ೯ಕ್ಷೇತ್ರ ಸ೦ಚಾರಕ್ಕಾಗಿ ಗುರುಗಳ ಅಪ್ಪಣೆಯನ್ನು ಪಡೆದು ಹೊರಟರು. ಆಗ ತನ್ನ ಅಗಲಿಕೆಯನ್ನು ಸಹಿಸಲಾರದ ತಾಯಿಗಾಗಿ ತನ್ನ ಆಕಾರದ ಒ೦ದು ಪ್ರತಿಮೆಯನ್ನು ಮಾಡಿಸಿಕೊಟ್ಟರು. ಶ್ರೀ ವಾದಿರಾಜರು ಪಶ್ಚಿಮ, ಉತ್ತರ, ಪೂರ್ವ, ದಕ್ಷಿಣ, ದಿಕ್ಕುಗಳಲ್ಲಿ ಕ್ರಮವಾಗಿ ಪಾದಚಾರಿಗಳಾಗಿ ಎರಡು ಬಾರಿ ಭಾರತದೇಶವನ್ನೆಲ್ಲಾ ಸ೦ಚರಿಸಿ, ತೀಥ೯ಯಾತ್ರೆ ಮಾಡಿದರು. ಆ ಸಮಯದಲ್ಲಿ ಅನೇಕ ದಿವ್ಯ ಮಹಿಮೆಗಳನ್ನು ತೋರಿಸಿದರು. ವಾದದಲ್ಲಿ ವಾದಿಗಳನ್ನು ಗೆದ್ದರು.
ಸ್ವಣ೯ಕಾರನೂಬ್ಬನು ಪ೦ಚಲೋಹದ ಗಣೇಶನನ್ನು ರಚಿಸುತ್ತಿದ್ದಾಗ ಆ ಗಣೇಶವಿಗ್ರಹವು ದೈವವಶಾತ್ ಸಲ್ಲಕ್ಷಣ ಭರಿತವಾದ ಹಯಗ್ರಿವಮೂತಿ೯ಯಾಯತು. ಆಗ ಅವನು ಪುನ: ಪುನ: ವಿಗ್ರಹವನ್ನು ಸುತ್ತಿಗೆಯಿ೦ದ ಹೊಡೆದು ಗಣೇಶನನ್ನಾಗಿ ಮಾಡಬೇಕೆ೦ದು ಬಹಳ ಪ್ರಯತ್ನ ಪಟ್ಟನು. ಎಷ್ಟು ಪ್ರಯತ್ನ ಪಟ್ಟರೂ ಸಾಧ್ಯವಾಗದೆ ಇದ್ದಾಗ ಆ ಪ್ರತಿಮೆಯನ್ನು ಒ೦ದು ಮೊಲೆಯಲ್ಲಿಟ್ಟು ಚಿ೦ತಾಕ್ರಾ೦ತನಾಗಿ ಸುಮ್ಮನಿದ್ದನು. ವಾದಿರಾಜರು ಅಕಸ್ಮಾತ್ತಾಗಿ ಆ ಊರಿಗೆ ಬ೦ದಿದ್ದಾಗ, ಒ೦ದು ರಾತ್ರಿ ಹಯಗ್ರಿವದೇವರು ಸ್ವಣ೯ಕಾರನ ಕನಸಿನಲ್ಲಿ ಬ೦ದು "ಇಲ್ಲಿಗೆ ಬ೦ದಿರುವ ಯತಿಗಳಿಗೆ ನನ್ನನ್ನು ಕೊಟ್ಟುಬಿಡು" ಎ೦ದು ಹೇಳಿದರು. ವಾದಿರಾಜರಿಗೂ ಸ್ವಪ್ನದಲ್ಲಿ ಹಯಗ್ರಿವದೇವರು ದಶ೯ನ ಕೊಟ್ಟು "ನಾನು ನಿನ್ನಿ೦ದ ಪೂಜೆಯನ್ನು ಸ್ವೀಕರಿಸಲು ಬರುವೆನು" ಎ೦ದರು. ಮರುದಿನ ಸ್ವಣ೯ಕಾರನು ಹಯಗ್ರಿವದೇವರನ್ನು ತ೦ದೊಪ್ಪಿಸಿದನು. ಆ ಪ್ರತಿಮೆಯನ್ನು ಸ೦ಸ್ಕರಿಸಿ, ಆವಾಹಿಸಿ ಪೊಜೆ ಮಾಡುತ್ತಾ ಇದ್ದರು. ಅವರ ಭಕ್ತಿಗೆ ಮೆಚ್ಹಿದ ಹಯಗ್ರಿವದೇವನು, ಅವರು ಕೊಟ್ಟ ಕಡಲೆಯ ಹೊರಣದ ಭಕ್ವ್ಯವನ್ನು ಕುದುರೆಯ ರೂಪದಿ೦ದ ಬ೦ದು ಮೆಲ್ಲುತ್ತಿದ್ದನು. ಹಯಗ್ರಿವದೇವರು ತನ್ನ ಮು೦ಗಾಲುಗಳನ್ನು ವಾದಿರಾಜರ ಹೆಗಲುಗಳಲ್ಲಿಟ್ಟು "ಹಯಗ್ರಿವ ಭಕ್ವ್ಯವನ್ನು" ಸ್ವೀಕರಿಸಿ ಸ್ವಲ್ಪ ಪ್ರಸಾದ ಉಳಿಸಿ ಹೋಗುತ್ತಿದ್ದರು.
ವಾದಿರಜರು ಪರಮಾತ್ಮನನ್ನು ಸ್ತುತಿಸುತ್ತಾ ಉಡುಪಿಯಲ್ಲಿ ಶ್ರೀಕ್ರಷ್ಣನ ಐದು ಪಯಾ೯ಯ ಪೊಜೆಗಳನ್ನು ಮಾಡಿ ಭಕ್ತಾನುಗ್ರಹ ಮಾಡುತ್ತಾ ೧೨೦ ವಷ೯ಗಳವರೆಗೂ ಅರೋಗ ಧ್ರಢಗಾತ್ರರಾಗಿ, ಭರತಖ೦ಡದಲ್ಲಿ ಭಕ್ತರ ಎದುರು ಕ೦ಗೊಳಿಸಿದರು.
ಉತ್ತಮಶ್ಲೋಕರಾದ ಶ್ರೀವಾದಿರಜರು ಉಡುಪಿ ಶ್ರೀಕ್ರಷ್ಣನ ಐದನೇಯ ಪಯಾ೯ಯವನ್ನು ತಮ್ಮ ಶಿಷ್ಯರಾದ ಶ್ರೀವೇದವೇದ್ಯತೀಥ೯ರನ್ನು ಕರೆದು "ನೀವು ಶ್ರೀಕ್ರಷ್ಣನ ಪಯಾ೯ಯ ಪೊಜೆಯನ್ನು ಮಾಡಿರಿ" ಎ೦ದರು. ಸೋದೆ ಅರಸನನ್ನು ಕರೆದು "ಸೋದೆಯಲ್ಲಿ ನಾವು ನಮ್ಮ ಪಯಾ೯ಯ ಪೊಜೆಯನ್ನು ಮಾಡುವೆವು" ಎ೦ದು ತಿಳಿಸಿದರು. ಪ್ರತಿ ವಷ೯ದ೦ತೆ ಶ್ರೀ ಶಾಲಿವಾಹನ ಶಕೆ ೧೫೨೨ ನೇ ಶಾವ೯ರಿ ಸ೦ವತ್ಸರದ ಫಾಲ್ಗುಣ ಮಾಸದ ಶುದ್ದ ನವಮಿಯ೦ದು ಶ್ರೀ ರಮಾ-ತ್ರಿವಿಕ್ರಮ ಉತ್ಸವವು ಪ್ರಾರ೦ಬಗೊ೦ಡಿತು. ನವಮಿಯ ದಿನ
ಭೇರಿತಾಡನ, ಮ್ರತಿಕಾಹರಣ ಪೂವ೯ಕ ಅ೦ಕುರಾರೋಪಣ, ದಶಮಿಯ ದಿನ ಧ್ವಜಾರೋಹಣ, ಧ್ವಜಬುತ್ತಿ, ರತ್ನಮ೦ಟಪೋತ್ಸವ, ಏಕಾದಶಿ ದಿನ ಸಿ೦ಹೋತ್ಸವ, ದ್ವಾದಶಿ ದಿನ ವಸ೦ತೋತ್ಸವ, ಗಜೋತ್ಸವ, ತ್ರಯೋದಶಿ ದಿನ ಶೇಷೋತ್ಸವ, ಚತುದ೯ಶಿಯ ದಿನ ಭೂತರಾಜರ ದ೦ಡೆ ಬಲಿ, ಗರುಡೋತ್ಸವ, ಹುಣ್ಣಿಮೆಯ ದಿನ ಬ್ರಹ್ಮ ರಧೋತ್ಸವ, ಶ್ರೀತ್ರಿವಿಕ್ರಮ ದೇವರಿಗೆ ಫಾಲ್ಗುಣ ಕ್ರಷ್ಣ ಪ್ರತಿಪದೆ ತಿಧಿಯಲ್ಲಿ ಶ್ರೀರಮಾದೇವಿಯೊ೦ದಿಗೆ ಕಲ್ಯಾಣೋತ್ಸವ, ಅವಭ್ರತ ಸ್ನಾನ, ಧ್ವಜಾರೋಹಣ, ನ೦ತರ ಉತ್ಸವ ಸಮಾಪ್ತಿಗೊಳಿಸಿದರು.
ಫಾಲ್ಗುಣ ಕ್ರಷ್ಣ ದ್ವಿತಿಯ ತಿಥಿಯಲ್ಲಿ ಶ್ರೀವಾದಿರಜರು ಎಲ್ಲಾ ಭಕ್ತರಿಗೂ ಮ೦ತ್ರಾಕ್ಷತೆಯನ್ನು ಅನುಗ್ರಹಿಸಿ ಮೊದಲೇ ಮಾಡಿಸಿಟ್ಟಿದ್ದ ಪ೦ಚವ್ರ೦ದಾವನಗಳ ಮಧ್ಯದಲ್ಲಿರುವ "ವ್ರ೦ದಾವನದ ಒಳಗೆ ನಾನು ಕುಳಿತು ಜಪಿಸುತ್ತಿರುವೆನು. ನನ್ನ ಕೈಯೊಳಗಿನ ಜಪ ಸರವು ಕೆಳಗೆ ಬಿದ್ದ ಕೂಡಲೆ ನನ್ನ ಸಮ್ಮುಖಕ್ಕೆ ಕಲ್ಲು ಮುಚ್ಹಿಬಿಡಿ" ಎ೦ದು ಅಪ್ಪಣೆಯಿತ್ತು ವ್ರ೦ದಾವನದೊಳಗೆ ಕುಳಿತು ಧ್ಯಾನಮಗ್ನರಾದರು. ಮರುದಿನ ಶಾಲಿವಾಹನ ಶಕ ೧೫೨೨ ನೇ ಶಾವ೯ರಿ ಫಾಲ್ಗುಣ ಕ್ರುಷ್ಣ ಪಕ್ಷ ತ್ರತಿಯ ಬುಧವಾರ ಸ್ವಾತಿ ನಕ್ಷತ್ರದಲ್ಲಿ ಶ್ರೀಮದ್ವಾದಿರತಿಥ೯ ಪರಮಹ೦ಸ ಕುಲತಿಲಕರ ಹಸ್ತದಿ೦ದ ಜಪಸರವು ಕೆಳಗೆ ಬಿದ್ದಿತು. ಕೂಡಲೇ ವ್ರ೦ದಾವನದ ಮುಚ್ಚಳವನ್ನು ಮುಚ್ಚಿದರು.
***************
ವಾದಿರಾಜರು
೧೨೦ ವರ್ಷಗಳ ಕಾಲ ದೃಷ್ಟಿಗೋಚರರಾಗಿ ಇದ್ದು, ಅಸದೃಶ ಪಾಂಡಿತ್ಯ ಹಾಗೂ ಗೃಂಥಗಳ ಮೂಲಕ ಮಾಧ್ವ ಹಾಗೂ ಕನ್ನಡ ಸಾಹಿತ್ಯ ಪ್ರಪಂಚವನ್ನು ಶ್ರೀಮಂತಗೊಳಿಸಿ, ದುರ್ವಾದಿಗಳನ್ನು ಸೋಲಿಸಿ, ಅತಿಮಾನುಷಲೀಲೆಗಳಿಂದ ಸುಜನರನ್ನು ಉದ್ಧರಿಸಿ, ರಾಜ-ಮಹಾರಾಜರುಗಳಿಂದ ಸಂಸೇವ್ಯರಾಗಿ, ಕರೆಯಲು ಬಂದ ದೇವದೂತರನ್ನು ಪುಷ್ಪಕವಿಮಾನ ಸಹಿತ ಮೂರುದಿವಸ ತಡೆದು ನಿಲ್ಲಿಸಿ, ಬದರಿಯಿಂದ ಬಂದ ಶ್ರೀ ರಮಾ-ತ್ರಿವಿಕ್ರಮ ದೇವರ ಪ್ರಥಮ ಬ್ರಹ್ಮರಥೋತ್ಸವವನ್ನು ವಿಜೃಂಭಣೆಯಿಂದ ನೆರವೇರಿಸಿ, ಸಶರೀರವಾಗಿ ಬೃಂದಾವನವನ್ನು ಪ್ರವೇಶಿಸಿ, ಮಧ್ವ ಪರಂಪರೆಯಲ್ಲಿ ಸಶರೀರವಾಗಿ ಬೃಂದಾವನವನ್ನು ಪ್ರವೇಶಿಸಿದ ಪ್ರಥಮ ಯತಿಶ್ರೇಷ್ಟರೆಂಬ ಕೀರ್ತಿಭಾಜನರಾಗಿ, ಭಕ್ತರಿಗೆ ಸೇವಿಸಲು ಅನುಕೂಲವಾಗಲೆಂದು ದೈವ ವಿಮಾನದಿಂದಲೇ ತಮ್ಮ ಸುವರ್ಣ ಪಾದುಕೆಗಳನ್ನೂ ಹಾಗೂ ಹೊದೆದಿದ್ದ ಕಾವಿ ಶಾಟಿಯನ್ನು ಅನುಗ್ರಹಿಸಿ, ನೆರೆದಿದ್ದ ಹತ್ತಾರು ಸಹಸ್ರ ಜನರಿಗೆ ದೇವವಿಮಾನದಲ್ಲಿ ತಾವು ದೇವದೂತರಿಂದ ಸಂಸೇವ್ಯರಾಗುತ್ತಾ ವೈಕುಂಠಕ್ಕೆ ಪಯಣಿಸುವ ದೃಶ್ಯವನ್ನು ವೀಕ್ಷಿಸುವ ಶಕ್ತಿಯನ್ನು ದಯಪಾಲಿಸಿ, ಒಂದಂಶದಿಂದ ಸೋದೆಯಲ್ಲಿನ ತಮ್ಮ ಮೂಲಬೃಂದಾವನದಲ್ಲಿ ವಿರಾಜಮಾನರಾಗಿದ್ದು ಇಂದಿಗೂ ನಂಬಿದ ಭಕ್ತರನ್ನು ಪೊರೆಯುತ್ತಿರುವ ಋಜುಗಣ ದೇವಶ್ರೇಷ್ಠರಾದ ಶ್ರೀ ವಾದಿರಾಜ ಗುರುಸಾರ್ವಭೌಮರ ಪವಿತ್ರ ಚರಣಾರವಿಂದಗಳಲ್ಲಿ ಶಿರವನ್ನಿಟ್ಟು, ಪವಿತ್ರವಾದ ಸದ್ಗುರು ಭಕ್ತಿ, ಜ್ಞಾನ, ವೈರಾಗ್ಯಗಳನ್ನು ಅನುಗ್ರಹಿಸಿ, ತಮ್ಮ ಪೂರ್ಣಾನುಗ್ರಹದಿಂದ ಸರ್ವಕಾಲದಲ್ಲೂ, ಸರ್ವಜನ್ಮದಲ್ಲೂ ಪೊರೆಯಿರಿ ಪ್ರಭೋ!, ಎಂದು ಪ್ರಾರ್ಥಿಸೋಣ!
॥ ಓಂ ಶ್ರೀ ವಾದಿರಾಜ ಗುರುಭ್ಯೋ ನಮಃ ॥
॥ ಓಂ ಶ್ರೀ ರಾಘವೇಂದ್ರಾಯ ನಮಃ ॥
***********
ಶ್ರೀ ಶ್ರೀಶಗುಣದರ್ಪಣ(ಶ್ರೀ ಮಹಾ ಲಷ್ಮಿದೇವಿ ಸ್ತುತಿ )
ಇದನ್ನು ಈಗಲೂ ಸೋದೆಯ ತ್ರಿವಿಕ್ರಮ ದೇವರ ಗುಡಿಯಲ್ಲಿರುಮ ಮಹಾಲಕ್ಷ್ಮೀ ದೇವಿಗೆ ಕುಂಕುಮಾರ್ಚನೆ ಮಾಡುವಾಗ ಪಠಿಸುವ ಪದ್ಧತಿಯಿದೆ.
ಇದು ರಚನೆಯಾದುದು ಒಂದು ವಿಶಿಷ್ಟ ಸನ್ನಿವೇಶದಲ್ಲಿ.
ಒಮ್ಮೆ ಕಡುಬಡವನೊಬ್ಬ ವಾದಿರಾಜರ ಬಳಿಗೆ ಬಂದು ದುಃಖ ದೈನ್ಯಗಳಿಂದ ತನ್ನ ದಾರಿದ್ರ್ಯ ರೋಗಕ್ಕೆ ಲಕ್ಷ್ಮೀಸ್ತುತಿಯೇ ಚಿಕಿತ್ಸೆ ಎಂದು ತಿಳಿದರು. ತಾವೇ ಒಂದು ಸ್ತುತಿಯನ್ನು ರಚಿಸಿ, ಅವನಿಗೆ ಉಪದೇಶ ಮಾಡಿದರು. ’ಇದನ್ನು ಭಕ್ತಿಯಿಂದ ಪಾರಾಯಣ ಮಾಡು’ ಎಂದು ಅಪ್ಪಣೆ ಮಾಡಿದರು. ಶ್ರೀ ಶ್ರೀಶಗಣದರ್ಪಣವೆಂಬ ಈ ಲಕ್ಷ್ಮೀನರಾಯಣರ ಸ್ತೋತ್ರ ಸಂಪತ್ತನ್ನು ಕರುಣಿಸಿತು; ಭಕ್ತಿಯಿಂದ ಪಾರಾಯಣ ಮಾಡುತ್ತದದ ಅವನ ಸುತ್ತಲೂ ಬಂಗಾರದ ಮಳಯೇ ಸುರಿಯಿತು ಎಂದು ಹೇಳುತ್ತಾರೆ. ಇದರಿಂದ ವಾದಿರಾಜರ ಶಕ್ತಿ ಅಲ್ಲದೆ ಬಡವರಲ್ಲಿ ಅವರಿಗಿದ್ದ ಕರುಣೆಯೂ ತಿಳಿಯುತ್ತದೆ.
ಲಕ್ಷ್ಮೀಶೋಭಾನೆ ಎಂಬ ಅವರ ಕೃತಿ ಕನ್ನಡದಲ್ಲಿದೆ, ಇದು ಸತ್ತವರನ್ನೇ ಎತ್ತಿ ಬದುಕಿಸಿದ ಸಂಜೀವಿನಿ ಎಂದು ಪ್ರಸಿದ್ಧವಾಗಿದೆ.
ಅರಸಪ್ಪನಾಯಕನ ಅಳಿಯ ಸತ್ತುಹೋದ. ಆಗ ವಾದಿರಾಜರು ಲಕ್ಷ್ಮೀಶೋಭಾನೆಯನ್ನು ಹಾಡಿ ಲಕ್ಷ್ಮೀನಾರಾಯಣರನ್ನು ಪ್ರಾರ್ಥಿಸಿ, ಅವನನ್ನು ಬದುಕಿಸಿದರು ಎಂದು ಹೇಳುತ್ತಾರೆ. ಹೀಗೆ ಶ್ರೀ ವಾದಿರಾಜರ ಕೃತಿಗಳು ಒಂದೊಂದೂ ಮಹಮೆಯುಳ್ಳವಾಗಿವೆ.
ಎಸ್.ವಿಜಯ ವಿಠ್ಠಲ
************
ಶ್ರೀ ಹಯವದನ
ಶ್ರೀ ವಾದಿರಾಜರ ಆರಾಧನೆ ಅಂಗವಾಗಿ,ಸಣ್ಣ ಲೇಖನ.
ಈ ಹಯಗ್ರೀವ ಪ್ರತಿಮೆ ವಾದಿರಾಜರಲ್ಲಿ ಬಂದು ಸೇರಿದ್ದು ಕೂಡ ಒಂದು ಪವಾಡವೇ ಆಗಿದೆ.
ಅಕ್ಕಸಾಲಿಯೊಬ್ಬ ಗಣಪತಿಯ ವಿಗ್ರಹವನ್ನು ಮಾಡುವ ಉದ್ದೇಶದಿಂದ ಪಂಚಲೋಹ ಕಾಯಸಿ ಎರಕ ಹೊಯ್ದನು. ಆದರೆ ಅಚ್ಚು ಗಣಪತಿಯದೇ ಆಗಿದ್ದರೂ, ತೆಗೆದು ನೋಡಿದಾಗ ಅದು ಗಜಗ್ರೀವದ ಬದಲು ಹಯಗ್ರೀವ ಮೂರ್ತಿಯಾಗಿತ್ತು! ಅಕ್ಕಸಾಲಿಗ ಕೋಪಗೊಂಡು ಕೆಂಪಗೆ ಇನ್ನೂ ಬಿಸಿಯಲ್ಲೇ ಇದದ ಹಯಗ್ರೀವ ವಿಗ್ರಹವನ್ನು ಸುತ್ತಗೆಯಿಂದ ಜಜ್ಜತೊಡಗಿದನು . ಆದರೆ ಅದು ಆ ಏಟಿಗೆ ಸ್ವಲ್ಪವೂ ಬಗ್ಗಲಿಲ್ಲ!
ಹಯವದನ ಬಿಳಿಯ ಕುದುರೆಯ ರೂಪದಿಂದ ಬರುತ್ತಿದ್ದನಂತೆ.
“ ನನ್ನನ್ನು ವಾದಿರಾಜರಿಗೆ ಅರ್ಪಿಸು” ಎಂದು ಸೂಚನೆಯಾಯಿತು. ಮೆರವಣಿಗೆಯಿಂದ ಕೊಂಡೊಯ್ದು ಮಠಕ್ಕೆ ಒಪ್ಪಿಸಲು, ವಾದಿರಾಜರು ಭಕ್ತಿಯಿಂದ ಹಯವದನನನ್ನು ಬರಮಾಡಿಕೊಂಡು ಪೂಜಿಸಲು ಪ್ರಾರಂಭಿಸಿದರು.
ಆ ಸ್ವರ್ಣಕಾರ ಗುಂಪಿನವರೆಲ್ಲಾ ವಾದಿರಾಜರ ಶಿಷ್ಯರಾದರು. ಈಗಲೂ ಈ ವಂಶಸ್ಥರೆಲ್ಲಾ ಸೋಕೆ ಮಠದ ಶಿಷ್ಯರೇ ಆಗಿದ್ದಾರೆ.
ಈ ಹಯವದನ ವಾದಿರಾಜರ ಜೀವನದಲ್ಲಿ ಅನೇಕ ವಿಚಿತ್ರ ಲೀಲೆಗಳನ್ನು ತೋರಿದ್ದಾನೆ.
ಒಮ್ಮೆ ಪಂಢರಪುರದಲ್ಲಿ ಸ್ವಾಮಿಗಳು ಬಿಡಾರ ಮಾಡಿದಾಗ, ಹಯವದನ ದೇವದಿವ್ಯಾಶ್ವ ರೂಪದಲ್ಲಿ ಬಂದು ಹೊಲದಲ್ಲಿ ಕಡಲೆ ಪೈರನ್ನು ಮೇಯಲಾರಂಭಿಸಿದನಂತೆ. ಆ ಕುದುರೆಯನ್ನು ಹಿಡಿಯಲು ಜನ ಪ್ರಯತ್ನಪಟ್ಟರು. ಅದು ವಾದಿರಾಜರ ಬಿಡಾರದವರೆಗೂ ಬಂದು ಅದೃಶ್ಯವಾಯಿತು. ಆ ಹೊಲದೊಡೆಯ ಸ್ವಾಮಿಗಳಲ್ಲಿ ದೂರಿಕೊಂಡನು.
ವಾದಿರಾಜರು ನಮ್ಮ ಮಠದಲ್ಲಿ ಕುದುರೆಯಿಲ್ಲ ಎಂದರು. ಮರುದಿನ ಆ ಬಿಳಿ ಕುದುರೆ ಅದೇ ಹೊಲಕ್ಕೆ ದಾಳಿಯಿಟ್ಟತು . ಯಜಮಾನನೇ ಅಟ್ಟಿಸಿಕೊಂಡು ಬಂದನು. ಸ್ವಾಮಿಗಳ ಪೂಜೆ ನಡೆಯುವ ಕಾಲಕ್ಕೆ ಸರಿಯಾಗಿ ಬಂದು ಕುದುರೆಯು ಪೂಜೆಯನ್ನು ನೋಡುತ್ತ ಕುಳಿತಿದ್ದ ನೂರಾರು ಜನರನ್ನು ಭೇದಿಸಿಕೊಂಡು ಬಂದಿತು. ಪೂಜಾಪೀಠದಲ್ಲಿ ವಿರಾಜಮಾನಾಗಿದ್ದ ಹಯಗ್ರೀವ ಮೂರ್ತಿಯಲ್ಲಿ ಐಕ್ಯವಾದಂತೆ ಭಾಸವಾಯಿತು. ಜಮೀನ್ದಾರ ಈ ಅಚ್ಚರಿಯನ್ನು ವಾದಿರಾಜರಲ್ಲಿ ನಿವೇದಿಸಿಕೊಂಡಾಗ, ಗುರುಗಳೆಂದರು:
“ ನೀನು ಪುಣ್ಯವಂತ. ಆದ್ದರಿಂದಲೇ ಹಯವದನ ನಿನಗೆ ದರ್ಶನ ವಿತ್ತಿದ್ದಾನೆ. ಇದರಿಂದ ನಿನಗೆ ತುಂಬ ಒಳ್ಳೆಯದಾಗುವುದು.”
ಹೀಗೆ ವಾದಿರಾಜರ ಗಾಢವಾದ ಭಕ್ತಿ, ಇದರಿಂದ ದೇವರು ಅವರಿಗೆ ಅನುಗ್ರಹ ಮಾಡಿದ್ದು ಇವನ್ನು ಕುರಿತು ಇಂದಿಗೂ ಜನರ ಬಾಯಲ್ಲಿ , ಸ್ಮರಣೆಯಲ್ಲಿ ಅನೇಕ ಕಥೆಗಳು ಉಳಿದುಬಂದಿವೆ.
ಹಲ್ಲಣದೊಳಗೆ ನಿಲ್ಲದು ಕುದುರೆ
ಬೆಲ್ಲ ಕಡಲೆ ಮೆಲ್ವ ಕುದುರೆ|
ಫುಲ್ಲಭವನಿಗೊರೆದ ಕುದುರೆ
ಚೆಲ್ವ ಹಯವದನ ಕುದುರೆ...
ಕುದುರೆ ಬಂದಿದೆ ಚೆಲುವ ಕುದುರೆ ಬಂದಿದೆ |ಪ|
ವಾದಿರಾಜರಿಗೊಲಿದು ಬಂದು ಸ್ವಾದಿಪುರದಲ್ಲಿ ನಿಂದ...
ಎಸ್.ವಿಜಯ ವಿಠ್ಠಲ
********
ಪಶ್ಚಿಮದಲ್ಲಿ ಮುಖ್ಯಪ್ರಾಣ ದೇವರು, ಉತ್ತರದಲ್ಲಿ ವೇಣುಗೋಪಾಲದೇವರು, ಸಂತಾನ ಗೋಪಾಲಕೃಷ್ಣ, ವಾಯುವ್ಯದಲ್ಲಿ ಅನಂತೇಶ್ವರ, ಆಗ್ನೆಯದಲ್ಲಿ ಪಾತಾಳಗಂಗಾ, ಪೂರ್ವದಲ್ಲಿ ಪಂಚಬೃಂದಾವನಗಳ ಮಂದಿರ, ದಕ್ಷಿಣದಲ್ಲಿ ಚಂದ್ರಮೌಳೇಶ್ವರ
ಕಡೆಹಾಯಿಸುವರಿಲ್ಲ ಕಷ್ಟಪಟ್ಟೇನಲ್ಲ
ಕಣ್ಣೀರು ಬಿಡಲಿಲ್ಲ ಕಾಯಸುಖಪಡಲಿಲ್ಲ
ಉಣಹೋಗಿ ಬಾಯ ಮರೆತಂತಾಯಿತಲ್ಲ
ಬಡತನವು ಬಿಡಲಿಲ್ಲ ಭಂಗಪಟ್ಟೇನಲ್ಲ
ಗರುಡ ಸರ್ಪದ ಸ್ನೇಹದಂತಾಯಿತಲ್ಲ
ಎನ್ನ ಮನದುಬ್ಬಸವ ಸ್ವಾಮಿ ಶ್ರೀಹರಿಯೇ ಬಲ್ಲ
ಇನ್ನಾರಿಗುಸುರಲೋ ಶ್ರೀ ಹಯವದನರಾಯ |
ವಾದಿರಾಜರ ಜನ್ಮ ಸ್ಥಳ – ಹೂವಿನಕೆರೆ – ಕುಂಭಾಸಿಯಿಂದ 5 ಕಿಲೋಮೀಟರ್ ದೂರದಲ್ಲಿದೆ. ಕುಂಭಾಸಿಯಲ್ಲಿ ಗೌತಮ ಋಷಿಗಳು ಗಂಗಾ ಸನ್ನಿಧಾನವನ್ನು ತರಿಸಿದ್ದಾರೆಂದು ಪ್ರತೀತಿ.
*************
ಶ್ರೀ ಕ್ಷೇತ್ರ ಸೋಂದಾ ವಾದಿರಾಜ ಮಠದಿಂದ ಆರು ಕಿಲೋಮೀಟರ್ ದೂರದಲ್ಲಿನ ಅದ್ಭುತವಾದ ಪವಿತ್ರ ಕ್ಷೇತ್ರ ತಪೋವನ. ಇಡೀ ಭಾರತ ಖಂಡದ ಯತಿಗಳಲ್ಲಿ ಬೃಂದಾವನ ಹೊಂದಿದವರಲ್ಲಿ ಮೊದಲಿಗರಾದ ವಾದಿರಾಜ ಸ್ವಾಮಿಗಳು ತಪಸ್ಸು ಮಾಡಿದ ಪುಣ್ಯ ಪ್ರದೇಶವದು. ದೈವಾಂಶ ಸಂಭೂತರೂ ಮಹಾಪುರುಷರೂ ಆಗಿದ್ದ ವಾದಿರಾಜ ಶ್ರೀಗಳು ನಿತ್ಯ ಪೂಜೆ ಜಪ-ತಪ ಮಾಡುತ್ತಿದ್ದ ಸ್ಥಳವೇ ಈ ತಪೋವನ. ಈ ಪ್ರದೇಶಕ್ಕೆ ಸುಮಾರು ನಾಲ್ಕುನೂರು ವರ್ಷಗಳಷ್ಟು ಇತಿಹಾಸವಿದೆ. ಶಾಲ್ಮಲಾ ನದಿಯ ಪ್ರಶಾಂತ ಪರಿಸರ, ದಟ್ಟ ಕಾಡಿನ ನಡುವಿನ ಈ ಜಾಗ ಕೆಲವರಿಗೆ ಗೊತ್ತು ಹಲವರಿಗೆ ಗೊತ್ತಿಲ್ಲ. ಆದರೆ ಈ ತಪೋವನದ ಬಗ್ಗೆ ಇರುವ ಕೆಲವು ಇಂಟರೆಸ್ಟಿಂಗ್ ವಿಚಾರಗಳನ್ನ ತಿಳಿಸುವ ಪ್ರಯತ್ನವನ್ನು ನಾವು ಇಂದಿನ ಸಂಚಿಕೆಯಲ್ಲಿ ಕೊಡುತ್ತಿದ್ದೇವೆ.
ಸುತ್ತಲೂ ಕಾಡಿನಿಂದ ಆವೃತವಾಗಿರುವುದರಿಂದ ತಪೋವನಕ್ಕೆ ಬರಲು ಬಹಳಷ್ಟು ಜನರು ಹಿಂಜರಿಯುತ್ತಾರೆ. ಸರಿಯಾದ ನಾಮಫಲಕವಾಗಲಿ, ಸುಗಮವಾದ ರಸ್ತೆಯಾಗಲಿ ಇಲ್ಲ. ಈ ಪ್ರದೇಶಕ್ಕೆ ಬರುವುದಾದರೆ ಕಿಲೋಮೀಟರುಗಳಷ್ಟು ದೂರವನ್ನು ಕಾಲ್ನಡಿಗೆಯಲ್ಲಿಯೇ ಸಾಗಬೇಕು. ಸಾಯಂಕಾಲ ಆರು ಘಂಟೆಯ ನಂತರ ತಪೋವನ ಪ್ರದೇಶಕ್ಕೆ ಯಾರೂ ಹೋಗಬಾರದೆನ್ನುವ ಪ್ರತೀತಿ ಇದೆ. ಕಾಡು ಪ್ರಾಣಿಗಳಿಂದ ತೊಂದರೆಯಾಗಬಹುದು ಎನ್ನುವುದು ಒಂದು ಕಾರಣವಾದರೆ, ಇದು ಶಕ್ತಿಶಾಲಿ ಭೂತರಾಜ ಕ್ಷೇತ್ರವಾಗಿರುವುದೂ ಮತ್ತೊಂದು ಕಾರಣ. ತಪೋವನ ಕೇವಲ ಪುಣ್ಯ ಸ್ಥಳ ಮಾತ್ರವೇ ಅಲ್ಲ, ಸೈಸಗರ್ಿಕ ಹಚ್ಚಹಸಿರಿನಿಮದ ಹಾಗೂ ದೈವೀಶಕ್ತಿಯಿಂದ ಕೂಡಿರುವುದರಿಂದ ಮನಸ್ಸಿಗೆ ಮುದ, ಸುಖ, ಶಾಂತಿ, ನೆಮ್ಮದಿ, ಮನೋನಿಗ್ರಹ ಅರಸಿ ಬರುವ ಭಕ್ತರಿಗೆ ಸೂಕ್ತ ಸ್ಥಳವಿದು. ಶಾಲ್ಮಲಾ ನದಿಯಲ್ಲಿ ಪುಣ್ಯ ತೀರ್ಥ ಸ್ನಾನ ಮಾಡಿ ಪುನೀತರಾಗಲು ಮತ್ತು ಶ್ರೀ ವಾದಿರಾಜರ ಅನುಗ್ರಹ ಪಡೆಯಲು ತಪೋವನಕ್ಕೆ ಭೇಟಿ ನೀಡಲೇ ಬೇಕು. ಯಾವುದೇ ತೊಂದರೆಗಳಿದ್ದರೂ ಕೂಡಾ ಸೋಂದಾ ಮಠದಲ್ಲಿನ ಸೇವೆಯಿಂದ ಇಷ್ಟಾರ್ಥಗಳು ನೆರವೇರುತ್ತವೆ. ಮಳೆಗಾಲದಲ್ಲಿ ಇಲ್ಲಿ ಬರುವುದು ಅಸಾಧ್ಯ.
ತಪೋವನದಲ್ಲಿ ವಾದಿರಾಜ ಪೀಠವಿದೆ. ಶ್ರೀ ವಾದಿರಾಜರು ಸತತ ಹನ್ನೆರಡು ವರ್ಷಗಳ ಕಾಲ ಪ್ರತಿದಿನ ಬಂದು ಸ್ನಾನ, ಸಂಧ್ಯಾವಂದನೆಯನ್ನು ಮುಗಿಸಿಕೊಂಡು ಧ್ಯಾನಾಸಕ್ತರಾಗುತ್ತಿದ್ದರು. ಪೀಠದ ಪಕ್ಕದ ಬಂಡೆಯಲ್ಲಿ ಒರಳುಕಲ್ಲು ಇದೆ. ಅದು ಆ ಕಾಲದಲ್ಲಿ ಹಯಗ್ರೀವ ಪ್ರಸಾದ ತಯಾರಿಸಲು ರುಬ್ಬಿಕೊಳ್ಳಲು ಮಾಡಿಕೊಂಡ ವ್ಯವಸ್ಥೆಯಾಗಿತ್ತು. ವಾದಿರಾಜರ ಇಷ್ಟದೈವ ಹಯಗ್ರೀವ ದೇವರಿಗೆ ಇಲ್ಲಿಯೇ ಹಯಗ್ರೀವ ಮಾಡಿಕೊಂಡು ದೇವರಿಗೆ ಸಮಪರ್ಿಸಿ ಮಠಕ್ಕೆ ಮರಳುತ್ತಿದ್ದರು. ಮತ್ತೊಂದು ಬಂಡೆಯ ಮೇಲೆ ವಾದಿರಾಜರ ಪಾದ, ಹಯಗ್ರೀವ ದೇವರು, ಐದು ಲಿಂಗಗಳು ಹಾಗೂ ಒಂದು ನಂದಿಯ ಕೆತ್ತನೆಯ ಚಿತ್ರಣ ಕಾಣಬಹುದು. ಶ್ರೀ ಮಂಜುನಾಥೇಶ್ವರ, ವಿಶ್ವನಾಥ, ಮಹಾಬಲೇಶ್ವರ, ಅನಂತೇಶ್ವರ, ಚಂದ್ರಮೌಳೀಶ್ವರ ಅಲ್ಲಿರುವ ಐದು ಲಿಂಗಗಳು. ಇಲ್ಲೇ ಸ್ವಲ್ಪ ದೂರದಲ್ಲಿ ಶ್ರೀಗಳು ತಪಸ್ಸು ಮಾಡಿದ ಗುಹೆ, ಹನುಮನ ವಿಗ್ರಹ ಇದೆ. ಮತ್ತೊಂದು ಕಲ್ಲಿನ ಶಿಲಾ ಶಾಸನದ ಮೇಲೆ "ಶುಭಮಸ್ತು ಶಾಲಿವಾಹನ ಶಕ 1551 ಶ್ರೀಮುಖ ಸಂವತ್ಸರದ ವೇದನಿಧಿ ಶ್ರೀ ಪಾದಂಗಳು" ಎಂದು ಬರೆಯಲಾಗಿದೆ. ಅಂದರೆ ವೇದನದಿತೀರ್ಥರು- ಲಿಂಗಗಳು ಹಾಗೂ ನಂದಿಯ ಚಿತ್ರಗಳನ್ನು ಕೆತ್ತಿಸಿದ್ದಾಗಿ ಉಲ್ಲೇಖವಾಗಿರಬಹುದು. ಇನ್ನೊಂದು ಕಡೆಯಲ್ಲಿ ಶ್ರೀ ವಾದಿರಾಜರು ಕಡ್ಲೆ ಬೆಲ್ಲ ಹರಿವಾಣದಲ್ಲಿ ಇಟ್ಟುಕೊಂಡು ಪ್ರಸಾದ ತಯಾರಿಸಿದಾಗ ದೇವರೇ ಅಶ್ವದ ರೂಪದಲ್ಲಿ ಬಂದು ಸ್ವೀಕರಿಸುತ್ತಿದ್ದರು. ಅದರ ಕುರುಹಾಗಿ ಕಲ್ಲು ಬಂಡೆಯ ಮೇಲೆ ಕುದುರೆಯ ಕಾಲಿನ ಅಚ್ಚು ಇದ್ದು ಅದನ್ನು ಈಗಲೂ ಕಾಣಬಹುದಾಗಿದೆ.
ಈ ತಪೋವನದ ಮತ್ತೊಂದು ನಿಸರ್ಗನಿರ್ಮಿತ ಅಚ್ಚರಿಯೆಂದರೆ ಯತಿಗಳು ಸೂರ್ಯನಮಸ್ಕಾರ ಮಾಡುತ್ತಿದ್ದರು ಎನ್ನಲಾಗುವ ಜಾಗ. ಬಂಡೆಕಲ್ಲೊಂದು ಎಷ್ಟೋ ವರ್ಷಗಳಿಂದ ಸ್ವಲ್ಪವೂ ಸವಕಳಿಯಾಗದೇ ಒಬ್ಬರು ಆ ಕಲ್ಲಿನ ಒಳಗೆ ತೂರಿಕೊಂಡು ಹೊರಬರಬಹುದಾದಂತ ಕೆತ್ತನೆಯಲ್ಲಿದ್ದು ಪೂರ್ವಕ್ಕೆ ಸೂರ್ಯನು ಕಾಣುವಂತೆ ನಮಸ್ಕರಿಸಲು ಅನುವಾಗುವಂತೆ ಆಕಾರವನ್ನು ಹೊಂದಿದೆ. ವಾದಿರಾಜ ಸ್ವಾಮಿಗಳು ದಿನಂಪ್ರತಿ 21 ಸೂರ್ಯನಮಸ್ಕಾರ ಮಾಡುತ್ತಿದ್ದ ಜಾಗವದು. ಇಂದಿನ ಭಕ್ತರಿಗೆ ಏನಾದರೂ ಹೇಳಿಕೆಗಳಿದ್ದರೆ ನೀರನ್ನು ಪ್ರೋಕ್ಷಣೆ ಮಾಡಿಕೊಂಡು ಮನಸಿನಲ್ಲಿ ಪ್ರಾರ್ಥನೆ ಮಾಡಿ ಇಲ್ಲಿ ಬಂದು ಒಂದು ಸೂರ್ಯನಮಸ್ಕಾರ ಮಾಡಬೇಕು. ಬೇಡಿಕೆ ಈಡೇರಿದರೆ ಮರುವರ್ಷ ಎರಡು ನಮಸ್ಕಾರ ಮಾಡಬೇಕು ಎನ್ನುವ ಪ್ರತೀತಿ ಇದೆ.
ಹಾಗೆಯೇ ಯತಿಗಳು ಅಲ್ಪ ಉಪಹಾರ ಮಾಡಿದ ಜಾಗವಿದೆ. ಅಲ್ಲಿ ಕುಳಿತು ನಾಮಸ್ಮರಣೆ ಮಾಡಬೇಕು. ತಪಸ್ಸು ಮಾಡಿದ ಜಾಗವೂ ಇದೆ. ಆ ಭಾಗಕ್ಕೆ ಮುಖ ಮಾಡಿಕೊಂಡು ಕಣ್ಮುಚ್ಚಿ ಕುಳಿತುಕೊಂಡರೆ ಯಾವುದೇ ಆಲೋಚನೆಗಳಿಲ್ಲದ ಸುಂದರ ಪ್ರದೇಶದಲ್ಲಿ ವಿಹರಿಸುತ್ತಿರುವಂತೆ ಅನಿಸುತ್ತದೆ. ಒಂದು ರೀತಿಯ ಕಂಪನದ ಅನುಭವವಾಗುತ್ತದೆ. ಈ ತಪೋವನಕ್ಕೆ ಎಲ್ಲರಿಗೂ ಬರಲಾಗದು. . ಗುರುಗಳು ಕರೆಸಿಕೊಂಡರೆ ಮಾತ್ರ ಸಾಧ್ಯ. ಭೂತರಾಜರ ಮಹಿಮೆಯಿರುವ ಈ ಕ್ಷೇತ್ರದಲ್ಲಿ ಯಾವುದೇ ಅನೈತಿಕ ಕಾರ್ಯಗಳೂ ಆಗುವುದಿಲ್ಲ. ಪ್ರವಾಸಿಗರು ಸುಖವಾಗಿ ಬರುವಂತಹ ಜಾಗ ಇದಲ್ಲ್ಲ, ಬರಬೇಕೆಂದರೆ ಕಷ್ಟ ಪಟ್ಟು ಬರಬೇಕು. ಬೆಂಗಳೂರು, ಹುಬ್ಬಳ್ಳಿ ಭಾಗದ ಜನರೇ ಇಲ್ಲಿ ಜಾಸ್ತಿ ಬರುತ್ತಿರುತ್ತಾರೆ. ಈ ಪ್ರದೇಶದಲ್ಲಿ ಬರುವಾಗ ಶಾಲ್ಮಲಾ ನದಿಯು ಹರಿದು ಬರುವಾಗ ಅನೇಕ ಕಡೆಗಳಲ್ಲಿ ಹರಿದು ತಪೋವನದ ಬಳಿಯ ಒಂದು ಪ್ರದೇಶದಲ್ಲಿ ಮರದ ಬೇರುಗಳ ನಡುವಿನಿಂದ ಹರಿಯುತ್ತಾಳೆ. ಆ ನೈಸರ್ಗಿಕ ನೀರು ಕುಡಿದರೆ ಆಯಾಸವಾಗುವುದಿಲ್ಲ ಎನ್ನುವ ನಂಬಿಕೆ ಭಕ್ತರದ್ದು. ಆ ನೀರಿನಿಂದ ಮುಖವನ್ನು ತೊಳೆದರೆ ಮುಖದಲ್ಲಿನ ಸಣ್ಣಪುಟ್ಟ ಕಲೆಗಳು ತೊಲಗುತ್ತವೆ ಹಾಗೂ ಕಾಂತಿ ಹೆಚ್ಚಾಗುತ್ತದೆ ಎನ್ನಲಾಗುತ್ತದೆ.
ಈ ಸ್ಥಳದ ಕುರಿತಂತೆ ಅನೇಕ ನೈಜ ಪವಾಡಗಳ ನಡೆದಿವೆ. ಸ್ವಯಂ ಅನುಭವಿಸಿದ ಭಕ್ತರು ಇಲ್ಲಿ ನಮಗೆ ಸಿಗುತ್ತಾರೆ. ಕಾಡಿನಲ್ಲಿ ದಾರಿ ತಪ್ಪಿಸಿಕೊಂಡಿದ್ದಾಗ ನಾಯಿಯೊಂದು ದಾರಿ ತೋರಿಸಿದ ಅನುಭೂತಿ ಬಂದವರು, ಮಗು ಕಳೆದುಕೊಂಡಾಗ ಯತಿಗಳೇ ಮಗುವನ್ನು ಕಾಡಿನಿಂದ ಆಚೆ ಕರೆದುಕೊಂಡು ಬಿಟ್ಟಿದ್ದು ಹೀಗೆ ಹಲವಾರು ಘಟನೆಗಳ ಬಗ್ಗೆ ಅನುಭವಿಸಿದ ಸಾಕ್ಷಿದಾರರು ಕಾಣಸಿಗುತ್ತಾರೆ. ಒಮ್ಮೆ ಬಂದ ಭಕ್ತಾಧಿಗಳು ಮತ್ತೆ ಮತ್ತೆ ಈ ಪ್ರದೇಶಕ್ಕೆ ಬರಲು ಇಷ್ಟಪಡುತ್ತಾರೆ. ಅನೇಕ ಅಚ್ಚರಿಗಳ ಒಳಗೊಂಡಿರುವ, ಸೌಂದರ್ಯದಿಂದ ಕೂಡಿರುವ ಈ ತಪೋವನದ ಕುರಿತಂತೆ ಇರುವ ಸತ್ಯವೊಂದಿದೆ. ಎತ್ತಲೆತ್ತಲಿನಿಂದಲೋ ಬಂದು ಶ್ರೀ ವಾದಿರಾಜರು ತಪಸ್ಸು ಮಾಡಿದ ಜಾಗವೆಂದು ಹುಡುಕಿಕೊಂಡು ನೋಡಿ ಹೋಗುವ ಭಕ್ತರಿಗೆ, ಪ್ರವಾಸಿಗರಿಗೆ ಪರಿಚಿತವಾಗಿರುವ ತಪೋವನ ಸ್ಥಳವು ಶಿರಸಿಯ ಬಹುತೇಕರಿಗೆ ನೋಡಿ ಗೊತ್ತೇ ಇಲ್ಲವೆಂಬುದು ಆಶ್ಚರ್ಯವಾದರೂ ಸತ್ಯ.
**************
please CLICK 👇👇here
ವಾದಿರಾಜರು 02
ವಾದಿರಾಜ ಜಯಂತಿ
(received in WhatsApp)
ಕಲಿಯುಗದ ಮಾನವನ ಆಯುಷ್ಯ ಪ್ರಮಾಣ 120ವರ್ಷಗಳು. ಅಷ್ಟು ದಿನ ಬಾಳಿದವರು ಬಹಳ ವಿರಳ. ಇಂದಿನ ಕಥಾನಾಯಕರು ನೂರಿಪ್ಪತ್ತು ವರ್ಷ ಬಾಳಿ ತೋರಿಸಿದವರು. ಅಲ್ಲದೇ ಸಮಾಜದಲ್ಲಿ ಸುಧಾರಣೆ ಮಾಡಿದ ಕ್ರಾಂತಿಕಾರಿ ಎಂದರೆ ತಪ್ಪಲ್ಲ. ಉಡುಪಿಯ ಪರ್ಯಾಯ ಅವಧಿ ಬದಲಾವಣೆ, ಜೈನ ಮತ್ತು ಇತರೇ ರಾಜರು ಪ್ರಜೆಗಳ ನಡುವೆ ಸಾಮರಸ್ಯ ಮಾಡಿದವರು ಶ್ರೀ ವಾದಿರಾಜರು. ಸಂಭವಾಮಿ ಯುಗೇ ಯುಗೇ ಎಂಬ ಭಗವಾನ್ ಕೃಷ್ಣನ ನುಡಿ ಸತ್ಯಮಾಡಿ ತೋರಿಸಿದವರು. ಅತಿಮಾನುಷ ಪವಾಡಗಳನ್ನು ತೋರಿದವರು. ಧರ್ಮಸ್ಥಳ ದಲ್ಲಿ ನರಸಿಂಹ ಸಾಲಿಗ್ರಾಮ ಸ್ಥಾಪಿಸಿ ಭೂತಾರಾಧನೆಗೆ ಸಾತ್ವಿಕ ಕಳೆ ತಂದವರು ವಾದಿರಾಜರು. ಒಂದೇ ರಾತ್ರಿಯಲ್ಲಿ ಉತ್ತರ ಬದರಿಗೆ ಹೋಗಿ ತಾವು ಮಾಡಿದ ಬದಲಾವಣೆ ಮಾಧ್ವರಿಗೆ ಮತ್ತು ವ್ಯಾಸರಿಗೆ ಒಪ್ಪಿಸಿದ ಧೀರರು ವಾದಿರಾಜರು.
ಪರಶುರಾಮ ಕ್ಷೇತ್ರದಲ್ಲಿ ಉಡುಪಿ ಸಮೀಪ ಕುಂದಾಪುರದ ಬಳಿ ಕುಂಭಾಸಿ ಎಂಬ ಊರು ಇದೆ. ಆಚಾರ್ಯ ಮಧ್ವರು ಶ್ರೀ ಕೃಷ್ಣನ ಪೂಜೆಗಾಗಿ ಎಂಟು ಮಠ ಸ್ಥಾಪಿಸಿದರು. ಅದರಲ್ಲಿ ಕುಂಭಾಸಿ ಮಠವೂ ಒಂದು. ಈ ಮಠದ ಪರಂಪರೆಯಲ್ಲಿ ಶ್ರೀವಾದಿರಾಜರು ಸೊದೆಯಲ್ಲಿ ನೆಲೆಸಿದ್ದರಿಂದ ಈ ಮಠಕ್ಕೆ ಸೋದೆಮಠ ಎಂಬ ಹೆಸರು ಬಂದಿತು. ಮಹಾಭಾರತ ಕಾಲದಲ್ಲಿ ವನವಾಸಕ್ಕೆ ಪಾಂಡವರು ಬಂದಾಗ ಕುಂಭಾಸುರನೆಂಬ ರಾಕ್ಷಸನನ್ನು ಭೀಮಸೇನ ದೇವರು ಸಂಹಾರ ಮಾಡಿದ್ದರಿಂದ ಕುಂಭಾಸಿ ಎಂಬ ಹೆಸರು ಬಂದಿತು. ಈ ಗ್ರಾಮದ ಸಮೀಪ ಹೂವಿನಕೆರೆ ಗ್ರಾಮವಿದ್ದು ಅಲ್ಲಿ ಪಾಂಡವರು ಸ್ಥಾಪಿಸಿದ ಗಣಪತಿ ಗುಡಿ ಇದೆ. ಇಂಥ ಪವಿತ್ರ ಊರಿನಲ್ಲಿ ರಾಮಾಚಾರ್ಯ ಸರಸ್ವತಿ ದಂಪತಿಗಳು ಇರುತ್ತಿದ್ದರು.
********
by ಆಚಾರ್ಯ ನಾಗರಾಜು ಹಾವೇರಿ
ಗುರು ವಿಜಯ ಪ್ರತಿಷ್ಠಾನ
" ಶ್ರೀ ಭಾವಿಸಮೀರ - 1 "
" ಶ್ರೀ ಭಾವಿಸಮೀರ ಶ್ರೀಮದ್ವಾದಿರಾಜ ಗುರುಸಾರ್ವಭೌಮರು "
" ದಿನಾಂಕ : 24.02.2021 - ಶ್ರೀ ಶಾರ್ವರಿ ನಾಮ ಸಂವತ್ಸರ ಉತ್ತರಾಯಣ ಶಿಶಿರ ಋತು ಮಾಘ ಶುದ್ಧ ದ್ವಾದಶೀ ಬುಧವಾರ - ಶ್ರೀ ವಾದಿರಾಜ ಗುರುಸಾರ್ವಭೌಮರ ವರ್ಧಂತಿ ಮಹೋತ್ಸವ [ ಜನುಮ ದಿನ ] "
ರಾಗ : ಆನಂದಭೈರವಿ ತಾಳ : ರೂಪಕ
ಭಾವಿ ಭಾರತೀ ರಮಣ -
ಬಾ ಬ್ಯಾಗನೆ । ಕರು ।
ವಾರಿಧಿಯೆಂದು ಕರದೆ ।
ಭಾವಿಸಿ ಬೇಡಿದ ಭಕ್ತರ್ಗೆ ।
ನವರತ್ನ ರಾಷಿಗಳಿತ್ತಾದ್ದು ಬಲ್ಲೆ -
ತಡವ್ಯಾತಕೋ ।। ಪಲ್ಲವಿ ।।
ಭಾವಿ ರುದ್ರಗೆ ಕೊಟ್ಟಿ
ಭಾವಿ ಇಂದ್ರಗೆ ಕೊಟ್ಟೆ ।
ಭಾವಿ ರವಿಚಂದ್ರ-
ರಿಗಿತ್ತಿದೆಯೋ ।
ಭಾವ ಶುದ್ಧಿಯಿಂದ
ಬೇಡುವೆ । ನಾ ।।
ನೋರ್ವ ನಿನ ಪಾದಾ ।
ಸೇವಿಪ ದಾಸರಾ
ದಾಸರಣುಗ ಬಲ್ಲಿ ।। ಚರಣ ।।
ಅವರಿಗೆ ಕೊಟ್ಟಾಗೆ -
ಕೊಡುಯೆಂದು । ಬೇ ।
ಡುವನಲ್ಲೊ ಜಿನಸಿಗೊಂ-
ದೊಂದೇ ಕೊಡು ಯೆನಗೆ ।
ನವರತ್ನ ಮಾಲಿಯು ಕಟ್ಟಿ
ನಿನ ಕೊರಳಿಗೆ ।।
ಸವಿ ಮಾಡಿ ಹಾಕಿದೆ ।
ಇವು ಅಷ್ಟು ಕಟ್ಟಿ ನಿನ್ನ
ಪಾದಕೆ ಅರ್ಪಿಸಿದೆ ।
ದಿವಾನಿಶಿಯೊಳುಯಾ-
ದರದಿಂದ ನೋಡುವೆ ।। ಚರಣ ।।
ಕೃಷ್ಣವಿಠ್ಠಲ ಶ್ರೀನಿವಾಸನ ಗೃಹದಲ್ಲೇ ।
ಇದ್ದ ರತ್ನಗಳನಷ್ಟು ನೀ ವೈದಿದಿ ।
ಅಷ್ಟುರೂ ಪೇಳುವರು ಪಟ್ಟಣದವರೆಲ್ಲ ।।
ಕೊಟ್ಟರೊಳಿತು ಕಾಲು ।
ಕಟ್ಟಿಕೊಂಬುವೆ ಗುರುವೇ ।। ಚರಣ ।।
ಶ್ರೀ ವಾದಿರಜ ಗುರುಸಾರ್ವಭೌಮರ ಚರಿತ್ರೆಯನ್ನು ನೋಡುವ ಮುನ್ನ ಅವರ ಪೂರ್ವ ಇತಿಹಾಸದ ಬಗ್ಗೆ ಶುದ್ಧ ಮನಸ್ಸಿನಿಂದ ಅವಲೋಕಿಸೋಣ...
" ಶ್ರೀ ವಾದಿರಾಜರ ಶ್ರೀಮನ್ಮಧ್ವ ಸಾದೃಶ "
ಶ್ರೀ ವಾದಿರಾಜ ಗುರುಸಾರ್ವಭೌಮರ ವೃಂದಾವನವೇ ಅವರ ಮಧ್ವ ಸಾದೃಶವನ್ನು ಸೂಚಿಸುತ್ತದೆ.
ವೃಂದಾವನದಲ್ಲಿ ಶ್ರೀ ವಾದಿರಾಜರಿಗೆ ಸಮಾನವಾದ ಪೀಠ ಸ್ಥಾನದಲ್ಲಿ ಶ್ರೀಮನ್ಮಧ್ವಾಚಾರ್ಯರನ್ನು ತಾವೇ ಸ್ವತಃ ಪ್ರತಿಷ್ಠಾಪಿಸಿರುವುದು ಇದಕ್ಕೆ ಸಾಕ್ಷಿಯಾಗಿದೆ.
ಅವತಾರತ್ವೇನ ಜ್ಯೇಷ್ಠರಾದ ಶ್ರೀಮನ್ಮಧ್ವಾಚಾರ್ಯರ ಸಮ ಪೀಠದಲ್ಲಿ ಶ್ರೀ ವಾದಿರಾಜರು ಆಸೀನರಾಗಿರುವುದು ಅವರ ಮಧ್ವ ಸಾದೃಶ ಸೂಚಕವಾಗಿದೆ.
ಶ್ರೀ ವಾದಿರಾಜರು ತಮಗೆ ಪ್ರಸನ್ನನಾದ ಶ್ರೀ ಹಯಗ್ರೀವದೇವರ ಪ್ರತಿಮೆಯಂತೆ ಪ್ರತಿಮೆಗಳನ್ನು ಮಾಡಿಸಿ - ಪ್ರತಿಷ್ಠಿಸಿ 8 ಮಠಗಳಿಗೂ ನೀಡಿ ಅನುಗ್ರಹಿಸಿದ್ದಾರೆ.
ಅಂದಿನಿಂದ ಶ್ರೀ ಹಯಗ್ರೀವದೇವರ ಪ್ರತಿಮೆಯನ್ನು ಶ್ರೀಮನ್ಮಧ್ವಾಚಾರ್ಯರು ಆಯಾ ಮಠಗಳಿಗೆ ಕೊಟ್ಟ ಮೂಲ ಪ್ರತಿಮೆಗಳೊಡನೆ ಇಟ್ಟು ಪೂಜಿಸುತ್ತಿರುವುದು ಶ್ರೀ ವಾದಿರಾಜರ ಆಚಾರ್ಯ ಮಧ್ವರ ಸಾದೃಶಕ್ಕೆ ದ್ಯೋತಕವಾಗಿದೆ.
ಶ್ರೀಮನ್ಮಧ್ವಾಚಾರ್ಯರು ಬದರಿಕಾಶ್ರಮಕ್ಕೆ ತೆರಳಿ ಅಲ್ಲಿ ಶ್ರೀ ವೇದವ್ಯಾಸದೇವರಿಂದ ಉಪದಿಷ್ಟರಾಗಿ ಅವರ ಇಚ್ಛೆಯಂತೆ ದ್ವಾರಕೆಯಿಂದ ಬಂದ ಶ್ರೀ ಕೃಷ್ಣನ ಪ್ರತಿಮೆಯನ್ನು ಉಡುಪಿಯಲ್ಲಿ ಪ್ರತಿಷ್ಠಾಪಿಸಿದಂತೆ - ಶ್ರೀ ವಾದಿರಾಜರು ಕೂಡಾ ಬದರಿಕಾಶ್ರಮಕ್ಕೆ ತೆರಳಿ ಅಲ್ಲಿ ಶ್ರೀ ವೇದವ್ಯಾಸದೇವರಿಂದ ಉಪದಿಷ್ಟರಾಗಿ ಅವರ ಇಚ್ಛೆಯಂತೆ ಬದರಿಕಾಶ್ರಮದಿಂದ ಶ್ರೀ ತ್ರಿವಿಕ್ರಮದೇವರ ಪ್ರತಿಮೆಯನ್ನು ವಿಮಾನ ಸಹಿತವಾಗಿ ಶ್ರೀ ಭೂತರಾಜರಿಂದ ತರಿಸಿ ಶ್ರೀ ಕ್ಷೇತ್ರ ಸೋದಾಪುರ ( ಸೋದೆಯಲ್ಲಿ ) ದಲ್ಲಿ ಪ್ರತಿಷ್ಠಾಪಿಸಿದರು.
ಶ್ರೀ ಬ್ರಹ್ಮದೇವರು ತಿರುಕೋಯಿಲೂರುಯೆಂಬ ಊರಲ್ಲಿ ಶ್ರೀ ತ್ರಿವಿಕ್ರಮದೇವರನ್ನು ಪ್ರತಿಷ್ಠಾಪಿಸಿರುವಂತೆ - ಶ್ರೀ ವಾದಿರಾಜರು ಸೋದಾ ಕ್ಷೇತ್ರದಲಿ ಪ್ರತಿಷ್ಠಾಪಿಸಿರುವುದರಿಂದ ಶ್ರೀ ತ್ರಿವಿಕ್ರಮದೇವರ ಉಪಾಸನೆಯು ಋಜುಗಳಿಗೆ ಮಾತ್ರ ವಿಹಿತವಾದ್ದರಿಂದ ಇದು ಶ್ರೀ ವಾದಿರಾಜರ ಶ್ರೀ ಬ್ರಹ್ಮದೇವರ ಸಮತ್ವವನ್ನು ಸಾಧಿಸುತ್ತದೆ.
****
" ಶ್ರೀ ಭಾವಿಸಮೀರ - 2 "
" ಶ್ರೀ ವಾದಿರಾಜ ಗುರುಸಾರ್ವಭೌಮರ ಅವತಾರದ ಪೂರ್ವೇತಿಹಾಸ "
ಶ್ರೀ ವಾಯುದೇವರಂತೆ ಶ್ರೀ ಲಾತವ್ಯರೂ ಶ್ರೀ ಹಯಗ್ರೀವ ರೂಪಿ ಶ್ರೀ ಪರಮಾತ್ಮನ ಆಜ್ಞೆಯಂತೆ ಒಂದು ರೂಪದಿಂದ ಶ್ವೇತದ್ವೀಪದಲ್ಲಿರುತ್ತಾ ವಿಶ್ವ ರೂಪಿ ಶ್ರೀ ಹರಿ ಸೇವಾ ತತ್ಪರರಾಗ - ಮಹಾ ಜ್ಞಾನಿಗಳಾಗಿ - ದೇವೋತ್ತಮರಾಗಿ ವೇದ ಸಮುದಾಯವನ್ನೂ ವ್ಯಾಖ್ಯಾನ ಮಾಡುತ್ತಾ ಸರಿಯಾದ ತತ್ತ್ವಗಳನ್ನು ಬೋಧಿಸುತ್ತುರುವವರು.
ಆ ಶ್ರೀ ಲಾತವ್ಯರೇ ಒಂದು ರೂಪದಲ್ಲಿ ದ್ವಾಪರದಲ್ಲಿ ಶ್ರೀ ಹರಿಯ ಆಣತಿಯಿಂದ ಲೋಕಕ್ಕೆ ಶುದ್ಧ ಸದ್ಧರ್ಮಗಳನ್ನು ತಿಳಿಸುವುದಕ್ಕಾಗಿ ಬ್ರಾಹ್ಮಣ ರೂಪದಿಂದ ಅವತರಿಸಿದರು.
ಕುಂಡಿನಿ ನಗರದಲ್ಲಿದ್ದ ಶುದ್ಧ ವಂಶದ ಸದ್ಧರ್ಮನಿಷ್ಠನಾದ ಬ್ರಾಹ್ಮಣನು ನಿತ್ಯವೂ ಶ್ರೀ ಲಕ್ಷ್ಮೀನಾರಾಯಣರು ಪ್ರೀತಲಾಗರೆಂದು ಮಹಾ ತಪಸ್ಸನ್ನು ಮಾಡುತ್ತಾ ಅವರನ್ನು ಪ್ರಸನ್ನೀಕರಿಸಿದರು.
ಶ್ರೀ ಲಕ್ಸ್ಮೀನಾರಾಯಣರ ಪ್ರಸನ್ನತೆಯ ಫಲವಾಗಿ ಆ ಬ್ರಾಹ್ಮಣೋತ್ತಮನು " ಸುದೈವ " ನೆಂಬ ಪುತ್ರ ರತ್ನವನ್ನು ಪಡೆದನು.
ಈ ಪುತ್ರರತ್ನ ರೂಪದಿಂದ ಶ್ರೀ ಲಾತವ್ಯರೇ ಶ್ರೀ ಕೃಷ್ಣ ರುಕ್ಮಿಣಿಯರ ಸೇವೆಗಾಗಿ ಅವತರಿಸಿದರು.
ಆಗ ತಂದೆಯಿಂದ ವಿಧಿ ಪ್ರಕಾರವಾಗಿ ಉಪನಯನವಾಯಿತು.
ಯಾರಿಂದಲೂ ಸರಿಯಾಗಿ ಆಚರಿಸಲಾಗದ ಬ್ರಹ್ಮಚರ್ಯ ವ್ರತವನ್ನು ಕೈಗೊಂಡು ಜನರನ್ನು ಬೆರಗುಗೊಳಿಸ ತೊಡಗಿದರು.
ಆಗ ಇವರು ಅತ್ಯುತ್ತಮ ಅಧಿಕಾರಿ ಆದುದರಿಂದ ದ್ವಾಪರದಲ್ಲಿ ಶ್ರೀ ವೇದವ್ಯಾಸದೇವರು ಎಲ್ಲರ ಕಣ್ಣುಗಳಿಗೂ ಗೋಚರರಾಗಿ ಸಂಚರಿಸುತ್ತಿದ್ದರಿಂದ ಇವರು ಶ್ರೀ ವೇದವ್ಯಸದೇವರ ಶಿಷ್ಯರಾಗಿ ಸಕಲ ಶ್ರುತಿ ಸ್ಮೃತಿ ಪುರಾಣಗಳನ್ನು ಅಭ್ಯಾಸ ಮಾಡುತ್ತಾ ಅನಾದಿಯಿಂದಲೂ ತಮ್ಮಲ್ಲಿ ತುಂಬಿದ್ದ ಜ್ಞಾನವನ್ನು ಪುಷ್ಟೀಕರಿಸಿಕೊಂಡರು.
ಅದೇ ಸಮಯದಲ್ಲಿ ರುಕ್ಮಿಣೀದೇವಿಯನ್ನು ಪರಮ ಪುರುಷನಾದ ಶ್ರೀ ಕೃಷ್ಣನಿಗೆ ಧಾರೆಯೆರೆಯಬೇಕೆಂದು ಭೀಷ್ಮಕನು ಸಂಕಲ್ಪಿಸಿದನು.
ಆದರೆ ರುಗ್ಮಿಯು ತನ್ನ ತಂಗಿ ರುಕ್ಮಿಣಿಯನ್ನು ಶಿಶುಪಾಲನಿಗೆ ಕೊಟ್ಟು ವಿವಾಹ ಮಾಡಬೇಕೆಂದು ನಿಶ್ಚಯಿಸಿ; ಶ್ರೀ ಕೃಷ್ಣ ದ್ವೇಷಗಳಾದ ಸಾಲ್ವ, ಜರಾಸಂಧ ಮೊದಲಾದವರ ಸಹಾಯವನ್ನು ಪಡೆದು ವಿವಾಹ ದಿನವನ್ನು ನಿಶ್ಚೈಸಿ ಕಾರ್ಯವನ್ನು ಮುಂದುವರಿಸಿಯೇ ಬಿಟ್ಟನು.
ಹೀಗಿರಲು ರುಕ್ಮಿಣಿಯು ಶ್ರೀ ಕೃಷ್ಣನಿಂದ ಯಾವಾಗಲೂ ನಿತ್ಯ ವಿಯೋಗಿನಿಯಾಗಿದ್ದರೂ...
ಪ್ರಾಸೇ ನರೇಷು ಜನನೇ ನರವತ್ಪ್ರವೃತ್ತಿಃ ।
ಜ್ಞಾನಾದಿಗೂಹನಾಮಥಾsಧ್ಯಯನಾದಿರತ್ರ ।।
ಅಂದರೆ......
ದೇವತೆಗಳು ಭೂಲೋಕದಲ್ಲಿ ಅವತರಿಸಿವಾಗ ತಮ್ಮಲ್ಲಿ ಜ್ಞನಾದಿಗಳನ್ನಡಗಿಸಿ ಅಧ್ಯಯನಾದಿಗಳನ್ನು ಮಾಡುತ್ತಾ ಇರುವುದು ದೇವತೆಗಳ ಮಹಾ ಧರ್ಮ ಯೆಂದಿರುವ ಕಾರಣದಿಂದ ತಾನು ನಿತ್ಯ ಮುಕ್ತಳಾಗಿದ್ದರೂ; ಮನುಷ್ಯರನ್ನು ಅನುಕರಣೆ ಮಾಡುತ್ತಾ ನೋಡುವವರ ಮನಸ್ಸಿಗೆ ತನಗೆ ಶಿಶುಪಾಲನನ್ನು ಮದುವೆಯಾಗಲು ಇಷ್ಟವಿಲ್ಲ.
ಶ್ರೀ ಕೃಷ್ಣನೇ ನನಗೆ ವರನಾಗಬೇಕು.
ಅದಾಗುವ ಬಗೆ ಹೇಗೆ?
ಯೆಂಬುದನ್ನು ತೋರ್ಪಡಿಸುತ್ತಾ ದುಃಖ ದೂರಳಾದರೂ ದುಃಖಿಯಂತೆ ಚಿಂತಾತುರೆಯಾದಂತೆ ಕಾಣಿಸಿಕೊಂಡಳು.
ಪ್ರತಿನಿತ್ಯ ತಮ್ಮಿಂದ ಭಿಕ್ಷೆ ಸ್ವೀಕರಿಸುತ್ತಿದ್ದ ದೋಷ ರಹಿತನಾದ " ಸುದೈವ " ಬ್ರಾಹ್ಮಣನು ಅಲ್ಲಿಗೆ ಬರಲು ಆ ಬ್ರಾಹ್ಮಣನನ್ನು ಆದರಿಸಿ ಕೂಡಿಸಿಕೊಂಡು ರುಕ್ಮಿಣಿಯು ಶ್ರೀ ಕೃಷ್ಣನಿಗೊಂದು ಪತ್ರವನ್ನು ಬರೆದು ಆ ಬ್ರಾಹ್ಮಣನ ಕೈಯಲ್ಲಿತ್ತು....
" ಬ್ರಾಹ್ಮಣೋತ್ತಮ! ಇಂದೊಂದು ಕೆಲಸವನ್ನು ನೀನೀಗ ಮಾಡತಕ್ಕದ್ದಾಗಿದೆ ".
ಈ ಕಾರ್ಯ ಮಾಡಿದರೆ ನಿನಗೆ ಪುಣ್ಯರಾಶಿಯುಂಟಾಗುವುದು.
ನೀನಿಲ್ಲಿಂದ ಹೀಗೆಯೇ ಈ ಪತ್ರವನ್ನು ಹಿಡಿದುಕೊಂಡು ದ್ವಾರಕಾ ಪಟ್ಟಣಕ್ಕೆ ಹೋಗಿ ಶ್ರೀ ಕೃಷ್ಣ ಪರಮಾತ್ಮನನ್ನು ಸಂದರ್ಶಿಸಿ ನಾನು ಬರೆದು ಕೊಟ್ಟಿರುವ ಈ ಪತ್ರವನ್ನು ಶ್ರೀ ಕೃಷ್ಣನಿಗೆ ಅರ್ಪಿಸಬೇಕು.
*****
" ಶ್ರೀ ಭಾವಿಸಮೀರ - 3 "
ಇಲ್ಲಿಂದ ದ್ವಾರಕಾ ಪಟ್ಟಣವು ದೂರದಲ್ಲಿದ್ದರೂ ವಾಯುವೇಗದಿಂದ ಹೋಗಿ ಸೇರಲು ನಿನ್ನ ಹೊರತು ಇನ್ನ್ಯಾರಿಗೂ ಶಕ್ತಿಯಿಲ್ಲ.
ಆದ್ದರಿಂದ ಯಾರಿಗೂ ತಿಳಿಯದಂತೆ ವಾಯುವೇಗದಿಂದ ದ್ವಾರಕಾ ಪಟ್ಟಣಕ್ಕೆ ಹೋಗಿ ಶ್ರೀ ಕೃಷ್ಣನಿಗೆ ಪತ್ರವನ್ನೀಯುವುದಲ್ಲದೇ ಶಿಶುಪಾಲನೊಡನೆ ಈ ವಿವಾಹ ಕಾರ್ಯವು ಕೈಗೂಡದಂತೆ ನೀನು ಬಹಳ ಸಹಾಸವನ್ನು ಮಾಡಬೇಕು.
ಅನಂತರ ಅತಿ ಜಾಗ್ರತೆಯಿಂದ ಕಾರ್ಯವನ್ನು ಸಿದ್ಧಿಸಿಕೊಂಡು ಬೇಗನೆ ಹಿಂದುರುಗಿ ಬಂದು ನನಗೆ ತಿಳಿಸಬೇಕು ಹೊರಡು ಯೆಂದು ಅಜ್ಞಾಪಿಸಿದಳು ಎಂಬ ವಿಚಾರವು..
ಶ್ರೀ ಮದ್ಭಾಗವತದಲ್ಲಿ....
" ಕಶ್ಚಿತ್ ದ್ವಿಜವರ ಶ್ರೇಷ್ಠಃ "
ಶ್ರೀಮನ್ಮಹಾಭಾರತ ತಾತ್ಪರ್ಯ ನಿರ್ಣಯದಲ್ಲಿ...
" ದ್ವಿಜೋತ್ತಮಂ ಹರೇಃ ಪದೋಃ ಸಕಾಶಮ ಸ್ವಯೋಜಯತ್ "
ಶ್ರೀ ರುಕ್ಮಿಣೀಶ ವಿಜಯದಲ್ಲಿ.....
" ಅಜಯಾ ಪ್ರೇಷಿತಂ ಪತ್ರಂ ದ್ವಿಜಃ ಕಶ್ಚಿದುಪಾಹರತ್ "
ಆ ಬ್ರಾಹ್ಮಣನು ಮುಂದಿನ ಕಲ್ಪದಲ್ಲಿ ಶ್ರೀ ವಾಯುದೇವರ ಪದವಿಗೆ ಬರತಕ್ಕವನು ಆದ್ದರಿಂದ ಯಾರೂ ಅರಿಯದಂತೆ ಆ ವಿದರ್ಭ ದೇಶದಿಂದ ಹೊರಟು ಕ್ಷಣ ಮಾತ್ರದಿಂದ ದ್ವಾರಕಾ ಪಟ್ಟಣಕ್ಕೆ ಬಂದು ಶ್ರೀ ಕೃಷ್ಣನನ್ನು ನೋಡಿ ಆನಂದ ತುಂದಿಲನಾಗಿ ಕರ್ತವ್ಯ ಪರಾಜ್ಗ್ಮುಖನಾಗಿರುವಾಗ ಶ್ರೀ ಕೃಷ್ಣನು ತಾನು ಬ್ರಾಹ್ಮಣ ಪ್ರಿಯನೆಂಬುದನ್ನು ತನ್ನ ಆಚಾರದಿಂದ ತೋರಿಸುತ್ತಾ ಆಸನದಿಂದ ಎದ್ದು ಆ ಬ್ರಾಹ್ಮಣನನ್ನು ದಿವ್ಯಾಸನದಲ್ಲಿ ಕೋಡಿಸಿದನು.
ಅನಂತರ ದೇವತೆಗಳು ತನ್ನರ್ಚಿಸುವಂತೆ ಆ ಬ್ರಾಹ್ಮಣೊತ್ತಮನ ಸತ್ಕಾರವನ್ನು ಮಾಡಿದನು.
ಆಗ ಬ್ರಾಹ್ಮಣೊತ್ತಮನು ತಾನು ಬಂದ ಕಾರಣವನ್ನು ತಿಳಿಸಿ ರುಕ್ಮಿಣೀದೇವಿಯು ತನ್ನೊಡನೆ ಕೊಟ್ಟು ಕಳುಹಿಸಿದ ಪತ್ರವನ್ನು ಅರ್ಪಿಸಿದನು.
ಶ್ರೀ ಕೃಷ್ಣನು ಆ ಪತ್ರವನ್ನು ಆದರದಿಂದ ಓದಿ ಈ ಬ್ರಾಹ್ಮಣೊತ್ತಮನಲ್ಲಿರುವ ಉತ್ತಮ ಜ್ಞಾನ - ಧೈರ್ಯ - ಸ್ಥಿರತೆ - ವಿರಕ್ತಿಗಳನ್ನು ಕಂಡು ರಾಮಾವತಾರ ಕಾಲದಲ್ಲಿ ಶ್ರೀ ಹನುಮಂತನಲ್ಲಿರುವ ಗುಣಗಳಿಂದ ಶ್ರೀ ರಾಮನು ಸಂಪ್ರೀತನಾಗಿದ್ದಂತೆ ಈ ಬ್ರಾಹ್ಮಣೊತ್ತಮನಲ್ಲಿ ಸಂಪ್ರೀತನಾದನು.
ಅನಂತರ ಶ್ರೀ ಕೃಷ್ಣನು ತನ್ನ ದಿವ್ಯ ರಥವನ್ನು ಶೃಂಗರಿಸಿ ಉತ್ತಮ ಅಶ್ವಗಳನ್ನು ಕಟ್ಟಿಸಿ ಅತಿ ವೇಗದಿಂದ ಆ ಬ್ರಾಹ್ಮಣನೊಡನೆ ಕುಂಡಿನಪುರಕ್ಕೆ ಬಂದು ಸೇರಿದನು.
ಈ ಕಡೆ ರುಕ್ಮಿಣೀದೇವಿಯು ಲೋಕ ರೀತಿಯಿಂದ ಯೋಚಿಸುತ್ತಾ ಕ್ಷಣ ಕ್ಷಣಕ್ಕೂ ಬಾಗಿಲನ್ನು ನೋಡುತ್ತಾ ಬ್ರಾಹ್ಮಣನು ಬರುವುದನ್ನೇ ನಿರೀಕ್ಷಿಸಿ ಕೊಂಡಿದ್ದಳು ಮತ್ತು ಮದುವೆಯ ಮುಹೂರ್ತವೂ ಸನ್ನಿಹಿತವಾಗಿರುವುದು.
ನಾನು ಬ್ರಾಹ್ಮಣನನ್ನು ಮೊದಲು ಕಳಿಸಬಹುದಾಗಿತ್ತು.
ಹೋದ ಬ್ರಾಹ್ಮಣನು ಹಿಂದಿರುಗಿ ಬಂದಂತಿಲ್ಲ.
ಇದಕ್ಕೇನು ಕಾರಣ?
ಯೆಂದು ನಾನೆಷ್ಟು ಯೋಚಿಸಿದರೂ ತಿಳಿಯಲಾಗುವುದಿಲ್ಲ.
ಹೀಗೆ ವಾಯುವೇಗದಿಂದ ಹೋದ ಬ್ರಾಹ್ಮಣೋತ್ತಮರು ಮುಂದೆ ಬ್ರಹ್ಮ ಪದಾರ್ಹರೆಂದು ತಿಳಿದು ಬರುತ್ತದೆ ಮತ್ತು ಜ್ಞಾನ ಭಕ್ತಿ ವಿರಕ್ತಿಗಳು ಅತಿಶಯವಿದ್ದುದರಿಂದಲೂ; ಶ್ರೀ ವೇದವ್ಯಾಸರಿಂದಲೇ ಶಿಕ್ಷಿತರಾದುದರಿಂದಲೂ; ಋಜು ಗಣರೆನ್ದು ಖಚಿತವಾಗುತ್ತದೆ.
ಶ್ರೀ ಬ್ರಹ್ಮದೇವರಿಗೆ ಅವತಾರವಿಲ್ಲದ ಕಾರಣ ಈ ಬ್ರಾಹ್ಮಣನು ಶ್ರೀ ಬ್ರಹ್ಮದೇವರ ಅವತಾರ ಅಲ್ಲವೆಂಬುದು ಸಿದ್ಧವಾಗುತ್ತದೆ.
ಶ್ರುತಿ - ಸ್ಮೃತಿ ಸಿದ್ಧರಾದ ಹನುಮ ಭೀಮ ಮಧ್ವರೆಂಬ ಮೂರು ಅವತಾರಗಳ ಹೊರತಾದ ಅವತಾರಗಳು ಭೂಲೋಕದಲ್ಲಿ ಶ್ರೀ ವಾಯುದೇವರಿಗೆ ಪ್ರಸಿದ್ಧವಾಗಿಲ್ಲ.
ಆದುದರಿಂದ ಈ ಮಹಾತ್ಕಾರ್ಯ ಸಾಧಕರು ಶ್ರೀ ಲಾತವ್ಯರೇ ಯೆಂದು ಸಿದ್ಧವಾಗುತ್ತದೆ.
******
" ಶ್ರೀ ಭಾವಿಸಮೀರ - 4 "
" ಶ್ರೀ ವಾದಿರಾಜ ಗುರುಸಾರ್ವಭೌಮರು ಭಾವಿ ವಾಯುದೇವರು "
" ಪ್ರಮಾಣಗಳು "
" ಋಕ್ಸಂಹಿತಮ್ " ವಚನದಂತೆ...
ವಾದಿರಾಜಾಭಿದಂ ರೂಪಂ
ದಶಪ್ರಮತಿ ಸಂಜ್ಞಿತಮ್ ।।
" ಛಾಂದೋಗ್ಯಭಾಷ್ಯಮ್ "
ಗುಹ್ಯದೇಶಾ ಬ್ರಹ್ಮಪದೇ ಯೋ
ಯೋಗ್ಯಾ ಯೋಗ್ಯಾ ದೇವತಾ ಗುಣಾಃ ।
ಸರ್ವೇ ಗುಹ್ಯೋಪದೇಷ್ಟಾರಃ
ಸರ್ವೇಷಾಂ ಗುರುವೋ ಹಿ ತೇ ।।
" ಬ್ರಹ್ಮ ವೈವಸ್ವತ ಪುರಾಣ "....
ವ್ಯಾಸ ಸೇವಾರತೋ ನಿತ್ಯಂ
ವಾದಿರಾಜ ಋಜುರ್ಯತಿಃ ।।
" ಪದ್ಮ ಪುರಾಣ "...
ತತ್ಪೂರ್ವಮಸ್ಯ ವಂಶೇ ತು
ಋಜುಸ್ಥೋಹಿ ಸುರೇಶ್ವರಃ ।
ವಾದಿರಾಜಯತಿರ್ಭೂತ್ವಾ
ಚೈತದ್ವಿಸ್ತಾರಯಿಶ್ಯತಿ ।।
" ಸ್ಕಾಂದ ಪುರಾಣ "
ಸಹೋರೂಪಸ್ಯ ದೇವಸ್ಯ
ಲಾತವ್ಯಸ್ಯ ಬಲಾತ್ಮಕಮ್ ।
ರೂಪತ್ರಯಾವತಾರಯ
ನಿಹಿತಂ ಹರಿಣಾ ಸ್ವಯಮ್ ।।
ಅಂಡಾದ್ಬಹಿಃ ಸ್ಥಿತಂ ಮೂಲಂ
ಸತ್ಯಲೋಕಸ್ಥಿತಂ ಮಹತ್ ।
ಗೃಹೀತ್ವಾ ರುಕ್ಮಿಣೀಪತ್ರಂ
ಕೃಷ್ಣಾ೦ತಿಕಮುಪಾಗತಮ್ ।
ವಾದಿರಾಜಭಿದು ಚೇತಿ
ಮೂಲಭೇದ ವಿವರ್ಜಿತಮ್ ।।
ಶ್ರೀ ಲಾತವ್ಯರೆಂಬ ಋಜು ದೇವತೆಯು ಬ್ರಹ್ಮಾಂಡದ ಹೊರಗೆ ಬಲ ಜ್ಞಾನಾತ್ಮಕವಾದ ಮೂಲ ಸ್ವರೂಪದಿಂದ ಶ್ರೀ ಹರಿ ಸೇವೆ ಮಾಡುತ್ತಾರೆ.
ಒಂದಾವತಾರದಿಂದ ಸತ್ಯಲೋಕದಲ್ಲಿರುವವರೂ; ಎರಡನೆಯ ಅವತಾರದಿಂದ ರುಕ್ಮಿಣೀ ಪತ್ರವನ್ನು ಶ್ರೀ ಕೃಷ್ಣನಿಗೆ ತಂದು ಒಪ್ಪಿಸಿದವರೂ; ಶ್ರೀ ವಾದಿರಾಜರೆಂಬ ಅವತಾರದಿಂದ ಶ್ರೀಮಧ್ವಮತೋದ್ಧಾರಕರೂ ಆಗಿರುವರೆಂದು ತಾತ್ಪರ್ಯ!
" ವಾಮನ ಪುರಾಣ "
ವಾಯುಸ್ಥಾನ ಸಮಾರೋಪ
ಯೋಗ್ಯೋಯಂ ಯತಿ ರೂಪವಾನ್ ।
ಆಕಲ್ಪಂ ಬ್ರಹ್ಮಣ
ಕೃಷ್ಣಾ ಪ್ರಸಾದೈಕ ಭಾಜನಂ
ಕೃಷ್ಣಾರ್ಚಕೋ ಯತಿರ್ಭೂತ್ವಾ
ವಾದಿರಾಜೋವದಿಷ್ಯತಿ ।।
ಶ್ರೀ ಲಾತವ್ಯರೆಂಬ ಋಜು ದೇವತೆಯ ದೇಹ 32 ಸತ್ಪುರುಷ ಲಕ್ಷಣಗಳಿಂದ ಕೂಡಿದುದಾಗಿ ಪ್ರತಿಯುಗದಲ್ಲಿಯೂ ಕ್ಲುಪ್ತವಾಗಿದೆ.
*****
" ಶ್ರೀ ಭಾವಿಸಮೀರ - 5 "
" ಗರುಡಪುರಾಣ " ದನ್ವಯ...
ಯಾವತ್ ಜ್ಞಾನಂ ಚಾಸ್ತಿ ಮೇ
ವಾಸುದೇವೇ ತಾವತ್ ಜ್ಞಾನಂ
ವಾಯುದೇವಸ್ಯ ಚಾಸ್ತಿ ।
ಯಾವತ್ ಜ್ಞಾನಂ ವಾಯುದೇವಸ್ಯ
ಚಾಸ್ತಿ ತಾವತ್ ಜ್ಞಾನಂ
ಚಾಸ್ತಿ ವೈತದ್ರುಜೋನಾಮ್ ।।
ಅಂದರೆ....
ಚತುರ್ಮುಖ ಬ್ರಹ್ಮ ನೆನಿಸಿದ ನನಗೆ - ಶ್ರೀ ವಾಸುದೇವನ ವಿಷಯದಲ್ಲಿದ್ದಷ್ಟು ಜ್ಞಾನವು ವಾಯುದೇವರಿಗೂ ಇರುವುದು.
ಶ್ರೀ ವಾಯುದೇವರಿಗಿದ್ದಷ್ಟು ಜ್ಞಾನವು ಸಕಲ ಋಜುಗಳಿಗೂ ಇರುವುದು ಎಂಬ ಅರ್ಥವನ್ನು ಸೂಚಿಸುವ ಪ್ರಮಾಣ ವಚನದಂತೆ ಶ್ರೀ ವಾಯುದೇವರಂತೆ ಈ ಶ್ರೀ ಲಾತವ್ಯರೂ ಸಮರ್ಥರು.
ನನ್ನ ಪ್ರೀತಿಪಾತ್ರರೂ ಆದ್ದರಿಂದ ಪ್ರಾಕೃತ ಕಾರ್ಯಕ್ಕೆ ಅವರಿಗೆ ಆಜ್ನಾಪಿಸುವುದು ಉಚಿತವೆಂದು ಯೋಚಿಸಿ ಶ್ರೀ ಬ್ರಹ್ಮ ವಾಯುಗಳ ವೈಭವವನ್ನು ಈ ಲಾತವ್ಯರಿಗೆ ಕೊಡಿಸಿದನು.
ಅನಂತರ ಶ್ವೇತದ್ವೀಪದಲ್ಲಿ ಬ್ರಹ್ಮಾದಿಗಳಿಂದ ಕೂಡಿದ ಹಯಾಸ್ಯನು ಮಹೋತ್ಸವವನ್ನು ನಡೆಸಿ ಪ್ರಸನ್ನ ದೃಷ್ಟಿಯಿಂದ ಮಂದಸ್ಮಿತ ವದನನಾಗಿ ಲಾತವ್ಯ ಋಜುವನ್ನು ನೋಡುತ್ತಾ ಕರುಣೆಯನ್ನು ಬೀರುತ್ತಾ ಸಮೀಪಕ್ಕೆ ಕರೆದು....
ಲಾತವ್ಯನೇ!
ಪ್ರಪಂಚದಲ್ಲಿರತಕ್ಕ ಸಾತ್ವಿಕ ಪ್ರಕೃತಿಯ ಜನರು ದುಷ್ಟ ದೈತ್ಯರ ಉಪಟಳದಿಂದ ಕಂಗೆಟ್ಟಿರುವರು.
ಆದುದರಿಂದ ನೀನು ಭೂಲೋಕದಲ್ಲಿ ಅವತರಿಸಿ ಶರ್ವನ ವರದಿಂದ ಗರ್ವಿತರಾದ ದುಷ್ಟರನ್ನು ನಿಗ್ರಹಿಸಿ ಅವರ ದುರ್ಮತಗಳನ್ನು ದೂಷಿಸಿ ಸದ್ಗ್ರಂಥಗಳ ರಚನೆಯಿಂದ ಇಂದಿರಾಪತಿಯ ಗುಣಗಳು ಜನರಿಗೆ ಸರಿಯಾಗಿ ತಿಳಿಯುವಂತೆ ಮಾಡಿ ವಾಯುದೇವರು ಸ್ಥಾಪಿಸಿರುವ ವೇದಾಂತ ಸಾಮ್ರಾಜ್ಯವನ್ನು ವಿಸ್ತರಿಸು.
ಭಕ್ತ ಜನರಿಗೆ ಮುಕ್ತಿ ಮಾರ್ಗವನ್ನು ತೋರಿಸು.
ಇದರಿಂದ ನನಗೆ ಪ್ರೀತಿಯಾಗುವುದು ಎಂದು ಆಜ್ಞಾಪಿಸಿದನು.
ಈ ತರದ ಶ್ರೀ ಹರಿ ಆಜ್ಞೆಯನ್ನು ಕೇಳಿದ ಶ್ರೀ ಲಾತವ್ಯರು ಪೂರ್ಣ ಸದ್ಭಾಕ್ತಿಯಿಂದ ಶಿರದಲ್ಲಿ ಅಂಜಲಿಯನ್ನು ಜೋಡಿಸಿ ಆಜ್ಞೆಯನ್ನು ಧರಿಸಿಕೊಂಡರು.
ಆಗ ವೇದಾಂತ ವಿದ್ಯೆಯ ರಕ್ಷಣೆಗೋಸ್ಕರ ಮಹಾ ವೈಭವದಿಂದ ಶ್ರೀ ಲಾತವ್ಯರಿಗೆ ಶ್ರೀ ಬ್ರಹ್ಮ ವಾಯುಗಳ ಸೇರಿ ಪಟ್ಟಾಭಿಷೇಕವನ್ನು ಮಾಡಿದರು.ಅನಂತರ ಶ್ರೀ ಲಾತವ್ಯರು ತನ್ನಂತರಂಗದಲ್ಲಿ ಶ್ರೀ ಹಯಗ್ರೀವ ರೂಪವನ್ನು ವಿಶೇಷವಾಗಿ ಧ್ಯಾನಿಸುತ್ತಾ ಭಕ್ತಿ ಪೂರ್ವಕವಾಗಿ ಶ್ರೀ ಹರಿಗೆ ಸಾಷ್ಟಾಂಗವೆರಗಿ ಶ್ರೀ ಹರಿಯ ವಿಶೇಷ ಕೃಪೆಗೆ ಪಾತ್ರರಾಗಿ ಶ್ರೀ ಹರಿಯಾಜ್ಞೆಯಂತೆ ಸ್ವಧರ್ಮದ ಅನುಷ್ಠಾನದಲ್ಲಿ ಭೂಮಿಯಲ್ಲಿ ಅವತರಿಸಲು ಸಂಕಲ್ಪಿಸಿದರು.
ಶ್ರೀ ಹಯಗ್ರೀವನು ತಮ್ಮ ಮೇಲೆ ತೋರಿದ ಕಾರುಣ್ಯವನ್ನು ಸ್ಮರಿಸುತ್ತಾ ತಮ್ಮ ಉಪಾಸ್ಯಮೂರ್ತಿಯಾದ ಶ್ರೀ ಹಯಗ್ರೀವನ ದಶಾವತಾರಗಳನ್ನೂ ಶ್ರೀ ವಾದಿರಾಜರು ಹೀಗೆ ವರ್ಣಿಸಿದ್ದಾರೆ.
" ಹರಿಪ್ರಸಾದಾಂಕಿತ : ಹಯವದನ "
ರಾಗ : ಶಂಕರಾಭರಣ ತಾಳ : ಆದಿ
ಕೊಂಡಾಡಲಳವೇ
ನಿನ್ನಯ ಕೀರ್ತಿ । ಭೂ ।
ಮಂಡಲದೊಳಗೆ
ಹಯಗ್ರೀವ ಮೂರ್ತಿ ।। ಪಲ್ಲವಿ ।।
ವೇದಂಗಳ ಜಲದಿಂದ
ತಂದೆ । ನೀ ।
ಪೋದ ಗಿರಿಯ ಬೆನ್ನೊ-
ಳಾಂತು ನಿಂತೆ ।
ಮೇದಿನಿಯ ಕದ್ದೊ-
ಯ್ದನಾ ಕೊಂದೆ । ಸಂ ।
ವಾದದಿಂದ ಕಂಬ-
ದಿಂದಲಿ ಬಂದೆ ।। ಚರಣ ।।
ಚರಣಾಗ್ರದಲಿ ನದಿಯನು
ಪೆತ್ತೆ ತೀಕ್ಷ್ಣ ।
ಪರಶು ಪಿಡಿದು
ಬಾಹುಜರ ಕಿತ್ತೆ ।
ನೆರೆ ನಂಬಿದಗೆ
ಸ್ಥಿರ ಪಟ್ಟವನಿತ್ತೆ । ದೊಡ್ಡ ।
ದುರುಳ ಕಾಳಿಂಗನ
ಶಿರದಿ ನಿಂತೆ ।। ಚರಣ ।।
ಪತಿವ್ರತೆಯರ
ಮಾನ ಭೇದನ ।
ಚತುರ ತುರಗವೇರಿ
ನಲಿವನ ।
ಕ್ಷಿತಿಯೊಳುತ್ತಮ
ವಾದಿರಾಜನ ಸ್ವಾಮಿ ।
ಸತತ ರಕ್ಷಿಪ ಶ್ರೀ
ಹಯವದನ ।। ಚರಣ ।।
*****
" ಶ್ರೀ ಭಾವಿಸಮೀರ - 6 "
" ಬ್ರಹ್ಮ ಪದವಿಯ ಯೋಗ್ಯರಾದವರು ಶ್ರೀ ವಾದಿರಾಜ ಗುರುಸಾರ್ವಭೌಮರು "
ಸತ್ಯಲೋಕದ ರಾಜಧಾನಿಯೂ ವೈಜಯಂತೀಪುರವು.
ಶ್ರೀ ಚತುರ್ಮುಖ ಬ್ರಹ್ಮದೇವರೇ ಸತ್ಯಲೋಕೇಶರು.
ಶ್ರೀ ವಾದಿರಾಜರು ಋಜುಗುಣಸ್ಥರಾಗಿದ್ದು ಬ್ರಹ್ಮ ಪದ ಯೋಗ್ಯರಾದುದರಿಂದ ಅವರು ನೆಲೆಸಿದ ಸ್ಥಳವನ್ನು ಸತ್ಯಲೋಕವೆಂದು ಅವರ ಸಾನಿಧ್ಯ ವಿಶೇಷದಿಂದ ಭಾವಿಸಬೇಕು.
ಋಜುಗುಣಸ್ಥರೆಂದರೆ...
ಬ್ರಹ್ಮತ್ವ ಯೋಗ್ಯ ಜೀವಾಸ್ತು
ಋಜುವೋ ನಾಮ ಕೀರ್ತಿತಾ ।
ಅನಾದಿ ಕಾಲತಃ ಸರ್ವೇ
ದೋಷಹೀನಾ ಗುಣಾಧಿಕಃ ।
ಪ್ರಾಣಸ್ಯನಾsಸುರಾವೇಶಃ
ಆಖಣಾಶ್ಮ ಸಮೋಹಿಸಃ ।।
ಯೆಂಬ ಪ್ರಮಾಣದಂತೆ ಸೃಷ್ಠಿಗೆ ಬಂದ ಋಜುಗುಣಸ್ಥರು 100 ಕಲ್ಪ ಗುಣಸ್ಥರಾಗಿದ್ದು - 01 ನೇ ಕಲ್ಪದಿಂದ " ಕಲ್ಕಿ " ಯೆಂಬ ಹೆಸರಿನಿಂದಾರಾಂಭಿಸಿ - 96ನೇ ಕಲ್ಪದಲ್ಲಿ " ವ್ಯಕ್ತವ್ಯ " ರೆಂದೂ - 97 ನೇ ಕಲ್ಪದಲ್ಲಿ " ಗವ್ಯ " ನಾಮದ ವರೆಗೆ ಬೇರೇ ಬೇರೇ ಹೆಸರುಗಳನ್ನು ಹೊಂದುತ್ತಾ; - 98ರಲ್ಲಿ " ಲಾತವ್ಯರು " ಎಂದೂ - 99ರಲ್ಲಿ " ವಾಯು " ವೆಂದೂ - 100ನೇ ಕಲ್ಪದಲ್ಲಿ " ಬ್ರಹ್ಮ " ನೆಂದೂ ಕರೆಯಲ್ಪಡುತ್ತಾರೆ.
100 ಕಲ್ಪಗಳು ಮುಗಿದ ತರುವಾಯ ಕೊನೆಯದಾದ ಬ್ರಹ್ಮ ಪದವಿಯಿಂದ ಮುಕ್ತರಾಗುತ್ತಾರೆ.
ಇವರಿಗೆ ಸೃಷ್ಟ್ಯಾರಬ್ಧ ಮೋಕ್ಷ ಪರ್ಯಂತವಾಗಿ ಜ್ಞಾನ ವೃದ್ಧಿಯೇ ಹೊರತಾಗಿ ತಿರೋಧಾನ ಇರುವುದಿಲ್ಲ.
ಈ ಸಾಲಿಗೆ ಸೇರಿದವರು ಶ್ರೀ ವಾದಿರಾಜರು.
" ಶ್ರೀ ವಾಮನ ಪುರಾಣೋಕ್ತ ಋಜು ನಾಮಾವಲಿ: " ಯಲ್ಲಿ....
ವ್ಯಕ್ತವ್ಯಶ್ಚೈವ ಗವ್ಯಶ್ಚ ಲಾತವ್ಯಶ್ಚ ತಥೈವ ಚ ।
ವಾಯುಶ್ಚೈವ ತಥಾ ಬ್ರಹ್ಮೇತ್ಯೇವಂ ಪಂಚಾಶದೀರಿತಾ: ।।
ಈ ಧರೆಗಿಳಿದ ಕಾಮಧೇನುಗಳೆಂಬ ಋಜುಗಳು...
1. ಶ್ರೀ ವಿಬುಧೇಂದ್ರ ತೀರ್ಥರು ಮತ್ತು ಶ್ರೀ ವಿಜಯೀ೦ದ್ರ ತೀರ್ಥರು ಋಜು ೯೬ನೇ ಪದಸ್ಥ " ಶ್ರೀ ವ್ಯಕ್ತವ್ಯ " ರೆಂದು ಪ್ರಖ್ಯಾತರು.
2. ಶ್ರೀ ವೇದನಿಧಿ ತೀರ್ಥರು ಋಜು ೯೭ನೇ ಪದಸ್ಥ " ಶ್ರೀ ಗವ್ಯ " ರೆಂದು ಪ್ರಖ್ಯಾತರು.
3. ಶ್ರೀ ವಾದಿರಾಜ ತೀರ್ಥರು ಋಜು ೯೮ನೇ ಪದಸ್ಥ " ಶ್ರೀ ಲಾತವ್ಯ " ರೆಂದೂ - ಭಾವಿಸಮೀರರೆಂದೂ ಪ್ರಖ್ಯಾತರು.
4. ಶ್ರೀ ಹನುಮಂತದೇವರು - ಶ್ರೀ ಭೀಮಸೇನದೇವರು - ಶ್ರೀಮನ್ಮಧ್ವಾಚಾರ್ಯರು ಋಜು ೯೯ನೇ ಪದಸ್ಥ " ಶ್ರೀ ವಾಯುದೇವ " ರೆಂದು - ಭಾವಿ ಬ್ರಹ್ಮರೆಂದೂ ಪ್ರಖ್ಯಾತರು.
by ಆಚಾರ್ಯ ನಾಗರಾಜು ಹಾವೇರಿ
ಗುರು ವಿಜಯ ಪ್ರತಿಷ್ಠಾನ
****
ಭಗವಂತನಲ್ಲಿ ನಮ್ಮ ಪ್ರಾರ್ಥನೆ ಏನಿರಬೇಕು?
(ಶ್ರೀ ವಾದಿರಾಜರ ಕಿವಿ ಮಾತು)
ಸಾಧಕರಾದ ಜೀವರು ನಿತ್ಯ ಜೀವನದಲ್ಲಿ ನಿಷಿದ್ಧವಾದ ಕರ್ಮಗಳನ್ನು ಬಿಟ್ಟು ನಿಷಿದ್ಧವಲ್ಲದ, ಭಗವಂತನಿಗೆ ಪ್ರೀತಿಕರ ಕರ್ಮಗಳನ್ನು ಆಚರಿಸಿ(ಭಗವಂತನಲ್ಲಿ) ಅರ್ಪಿಸಬೇಕು. ಈ ಕರ್ಮಗಳನ್ನು ಭಗವಂತನೇ ಮಾಡಿ ಮಾಡಿಸುವನಾದ್ದರಿಂದ ಅವನಲ್ಲಿ ನಾವು ಕೆಲವೊಂದು ಪ್ರಾರ್ಥನೆಗಳನ್ನು ಸಲ್ಲಿಸಬೇಕು. ಶ್ರೀ ವಾದಿರಾಜ ಪೂಜ್ಯಚರಣರು ಈ ಪ್ರಾರ್ಥನೆಗಳ ಪಟ್ಟಿಯನ್ನು ತಮ್ಮ ಪ್ರಾರ್ಥನಾದಶಕ ವೆಂಬ ಸ್ತೋತ್ರದಲ್ಲಿ ತೋರಿಸಿಕೊಟ್ಟಿದ್ದಾರೆ. ಇವುಗಳ ಸಂಗ್ರಹ ಇಲ್ಲಿದೆ:
1. ಭಗವಂತನೇ! ಅಯೋಗ್ಯ ವಿಷಯಗಳಲ್ಲಿ ನನ್ನ ಮನಸ್ಸು ಹರಿದು ಹೋಗದಂತೆ ಮಾಡು. ನನ್ನ ಮನಸ್ಸಿನ ಚಂಚಲತೆಯನ್ನು ನಾಶಮಾಡು. ದುರಾಶೆಯನ್ನು ದೂರಮಾಡು.
2. ನನಗೆ ದುರ್ಬುದ್ಧಿಯನ್ನು ಎಂದಿಗೂ ಕೊಡಬೇಡ. ದುಃಶಾಸ್ತ್ರಗಳಲ್ಲಿ ಆಸಕ್ತಿಯನ್ನು ಹುಟ್ಟಿಸಬೇಡ. ನನ್ನಲ್ಲಿರುವ ದುರಭಿಮಾನವನ್ನು ಕಳೆದುಬಿಡು. ದುಸ್ಸಂಗದಿಂದ ನನ್ನನ್ನು ದೂರವಿಡು.
3. ದುರ್ಜನರ ಸಂಪರ್ಕ ಆಗದಂತೆ ಮಾಡು. ದುಷ್ಕರ್ಮಗಳನ್ನೆಲ್ಲ ನಾಶಮಾಡು. ವ್ಯರ್ಥವಾದ ಲೋಕಸಂಚಾರದಿಂದ ನನ್ನ ಕಾಲುಗಳು ದೂರವಿರಲಿ. ಪರಸ್ತ್ರೀಯರನ್ನು ಕಾಮುಕ ದೃಷ್ಟಿಯಿಂದ ನೋಡುವಂತೆ- ನನ್ನ ಕಣ್ಣುಗಳನ್ನು ನಿಯೋಜಿಸಬೇಡ.
4. ನನ್ನ ಕೈಗಳು ದುಷ್ಟರಿಂದ ಬರುವ ಅನ್ಯಾಯದ ದ್ರವ್ಯವನ್ನು ಸ್ವೀಕರಿಸುವಂತೆ ಪ್ರೇರಿಸಬೇಡ. ನನ್ನ ಇಂದ್ರಿಯಗಳು, ಅಗಮ್ಯಗಮನವನ್ನು ಮಾಡದಂತೆ ಆಗಲಿ. ನನ್ನ ಮೂಗು ಹೇಯವಾದ ವಿಷಯಗಳನ್ನು ಮೂಸದಂತೆ ಮಾಡು.
5. ನನ್ನ ನಾಲಿಗೆ ಹಾಳು ಹರಟೆ ಹೊಡೆಯದಂತೆ ಮತ್ತು ನಿಷಿದ್ಧ ಅನ್ನವನ್ನು ತಿನ್ನದಂತೆ ಮಾಡು. ನನ್ನ ಕಿವಿಗಳೆರಡೂ ಕೆಟ್ಟ ಸುದ್ಧಿ ಹಾಗೂ ದುಷ್ಟಶಬ್ದಗಳನ್ನು ಕೇಳದಂತೆ ಮಾಡು.
6. ನನ್ನ ಮನಸ್ಸು ನಿನ್ನ ಇಚ್ಛೆಯಂತೆ ಯೋಗ್ಯ ವಿಷಯದಲ್ಲಿ ಪ್ರವೃತ್ತವಾಗಲಿ. ಅನಾಯಾಸವಾಗಿ ನಿನ್ನಿಂದ ಕೊಡಲ್ಪಟ್ಟದ್ದರಲ್ಲಿ ಸಂತೃಪ್ತಿಹೊಂದಲಿ. ಅದು ಚಂಚಲರಹಿತವಾಗಿ ನಿನ್ನಲ್ಲೇ ನೆಟ್ಟಿರಲಿ.
7. ನನಗೆ ಒಳ್ಳೆಯ ಜ್ಞಾನವನ್ನು ನೀಡು. ಸಚ್ಛಾಸ್ತ್ರಗಳ ಪುನಃ ಪುನಃ ಅಭ್ಯಾಸ, ಆವರ್ತನೆಗಳನ್ನು ಮಾಡುವಲ್ಲಿ ನನಗೆ ಯಾವಾಗಲೂ ಆಸಕ್ತಿ ನೀಡು. ಸತ್ಸಂಗ ಹಾಗೂ ಸತ್ಕಾರ್ಯಗಳನ್ನು ನನ್ನಿಂದ ಆಗುತ್ತಿರುವಂತೆ ಮಾಡು. ನನ್ನ ಪಾದಗಳೆರಡೂ ನಿನ್ನ ಅಧಿಷ್ಠಾನಗಳೆನಿಸಿದ ಪುಣ್ಯಕ್ಷೇತ್ರಗಳ ಯಾತ್ರೆಗೈಯುವಂತೆ ಮಾಡು.
8. ನನ್ನ ಕಿವಿಗಳು ಶ್ರೀಮಧ್ವರ ಶಾಸ್ತ್ರಗಳನ್ನು ಕೇಳುವಂತೆ ಪ್ರೇರಿಸಿ, ಅದರಲ್ಲಿ ನಿಯೋಜಿಸು. ಹಯಗ್ರೀವ ಸ್ವಾಮಿಯೇ ನನ್ನ ಎರಡೂ ಕಣ್ಣುಗಳನ್ನು ನಿನ್ನ ದರ್ಶನ ಕೊಂಬುವುದರಲ್ಲಿ ನಿಯೋಜಿತವಾಗಲಿ.
9. ನನ್ನ ಕೈಗಳೆರಡು ನಿನ್ನ ಪೂಜೆ ಹಾಗೂ ಮಧ್ವಶಾಸ್ತ್ರದ ಲೇಖನದಲ್ಲಿ ತೊಡಗುವಂತೆ ಮಾಡು. ನನ್ನ ನಾಲಿಗೆ ನಿನ್ನ ಗುಣಕಥನ, ನಾಮಸ್ಮರಣ ಹಾಗೂ ನಿನ್ನ ನೈವೇದ್ಯವನ್ನೇ ಉಣ್ಣುವಂತೆ ಮಾಡು.
10. ನನ್ನ ಮೂಗು ನಿನಗೆ ಅರ್ಪಿಸಿದ ನಿರ್ಮಾಲ್ಯ, ಗಂಧ,ತುಳಸಿ, ಹೂಗಳನ್ನು ಆಘ್ರಾಣಿಸಲಿ. ನನ್ನ ತಲೆ ನಿನ್ನ ಪಾದಗಳಿಗೆ ನಮಸ್ಕರಿಸಲಿ. ನನಗೆ ನಿನ್ನ ಜ್ಞಾನ, ನಿನ್ನಲ್ಲಿ ಭಕ್ತಿ ಹಾಗೂ ಇವುಗಳಿಗೆ ಬಾಧಕವಾಗದಂತೆ -ಪಶು,ಪುತ್ರ, ಸಂಪತ್ತುಗಳನ್ನು
ಕೊಡು.
ಹೀಗೆ ನಿತ್ಯದಲ್ಲಿ ಯಾರು ಮುಂಜಾನೆ, ಮಧ್ಯಾಹ್ನ ಹಾಗೂ ಸಾಯಂಕಾಲಗಳಲ್ಲಿ ಪ್ರಾರ್ಥನೆಯನ್ನು ಸಲ್ಲಿಸುವರೋ ಅವರಿಗೆ ಶ್ರೀಹಯಗ್ರೀವರೂಪಿ ಭಗವಂತನು ಎಲ್ಲ ಇಷ್ಟಾರ್ಥಗಳನ್ನಿತ್ತು ಸರ್ವದಾ ರಕ್ಷಣೆ ಮಾಡುತ್ತಾನೆ.
ಕೃಪೆ: ಶ್ರೀ ಶ್ರೀನಿವಾಸ ಸು.ಮಠದ ಇವರ ಭಗವತ್ತತ್ತ್ವ ಚಿಂತನೆಯಿಂದ.
**
ಮಾಘ ಶುದ್ಧ ದ್ವಾದಶಿ,
ಭಾವೀಸಮೀರ ಶ್ರೀ ಮದ್ ವಾದಿರಾಜ ಗುರುಸಾರ್ವಭೌಮರ ಜಯಂತಿ
ಶ್ರೀ ವಾದಿರಾಜರ ವರ್ಧಂತಿಯ ಪುಣ್ಯ ದಿನದಂದು, ವಾದಿರಾಜ ಗುರುಸಾರ್ವಭೌಮರ ಬಗ್ಗೆ ಬನ್ನಂಜೆಯವರು ಬರೆದ ಒಂದು ಹಳೆಯ ಲೇಖನ.
ವಿಶ್ವತೋಮುಖಿ ವಾದಿರಾಜರು
- ಲೇಖನ - ಡಾ. ಬನ್ನಂಜೆ ಗೋವಿಂದಾಚಾರ್ಯ
ಶ್ರೀಮಧ್ವಾಚಾರ್ಯರ ಬಳಿಕ ತತ್ವವಾದದ ಪ್ರವರ್ತಕರಾಗಿ ಮೆರೆದು ಭಾರತದ ಭಕ್ತಿಪಂಥದ ಪರಂಪರೆಯಲ್ಲಿ ಎತ್ತರದ ಸ್ಥಾನ ಪಡೆದವರು ಶ್ರೀವಾದಿರಾಜರು. ಪರಮ ಧಾರ್ಮಿಕರಾಗಿ, ಸಾಮಾಜಿಕ ಸುಧಾರಕರಾಗಿ, ಐತಿಹಾಸಿಕ ಸಾಧಕರಾಗಿ ಬದುಕಿದ ಶ್ರೀವಾದಿರಾಜರ ಹೆಸರು ಉಡುಪಿಯ ಅಷ್ಟಮಠಗಳಲ್ಲೊಂದಾದ ಸೋದೆ ಮಠದೊಂದಿಗೇ ಒಂದಾಯಿತು. ಮಹಾನ್‌ಸಂತ ಶ್ರೀ ವಾದಿರಾಜರ ಸಾಧನೆಯನ್ನು ಸ್ಮರಿಸುವ ಲೇಖನವಿದು...
ವರ್ಷಗಳ ಕಾಲ ಈ ನೆಲದಲ್ಲಿ ನಡೆದಾಡಿ (ಕ್ರಿ.ಶ. ೧೪೮೦-೧೬೦೦) ಸ್ವೇಚ್ಛೆಯಿಂದ ದೇವಲೋಕಕ್ಕೆ ನಡೆದ ಮಹಾನ್‌ಯೋಗಿ, ಯೋಗಿಗಳ ರಾಜ ಶ್ರೀವಾದಿರಾಜರು.
ಆಚಾರ್ಯ ಮಧ್ವರಿಗೊಲಿದ ಕಡೆಗೋಲ ಕೃಷ್ಣ ನೆಲೆನಿಂತ ಉಡುಪಿಯ ಇತಿಹಾಸಕ್ಕೆ ಚಿನ್ನದ ಮೆರುಗನ್ನಿತ್ತವರು ಶ್ರೀ ವಾದಿರಾಜರು.
ಸಾಮಾಜಿಕ ಸುಧಾರಣೆಗಳ ಜತೆಗೆ ಅಧ್ಯಾತ್ಮದ ಬದುಕಿಗೊಂದು ಕಲಾತ್ಮಕತೆಯನ್ನಿತ್ತು ಲೌಕಿಕಕ್ಕೆ ಅಲೌಕಿಕದ ಬೆರಗನ್ನಿತ್ತವರು ಶ್ರೀವಾದಿರಾಜರು.
ಕನಕದಾಸರಿಗೊಲಿದು ಕೃಷ್ಣ ಅವರಿಗೆ ದರ್ಶನವಿತ್ತ ಗೋಡೆಯ ಬಿರುಕಿನಲ್ಲೆ ಕಿಂಡಿಯೊಂದನ್ನಿರಿಸಿ, ಅದನ್ನು "ಕನಕನ ಕಿಂಡಿ’ ಎಂದು ಕರೆದು, ಕೃಷ್ಣನ ಮೊದಲ "ಧೂಳಿ ದರ್ಶನ’ ಅದರ ಮೂಲಕವೆ ನಡೆಯಬೇಕು ಎಂಬ ಪದ್ಧತಿಯನ್ನು ಬಳಕೆಗೆ ತಂದು, ಕನಕ ಭಕ್ತಿಗೆ ಉಡುಪಿಯಲ್ಲೊಂದು ಐತಿಹಾಸಿಕ ದಾಖಲೆ ನಿರ್ಮಿಸಿದ ದೂರದರ್ಶಿ ಶ್ರೀವಾದಿರಾಜರು.
ಕನಕದಾಸರು ಕೃಷ್ಣನಿಗೆ ಗೆರಟೆಯಲ್ಲಿ ಅಂಬಲಿ ಅರ್ಪಿಸುತ್ತಿದ್ದರೆಂದು ಕೃಷ್ಣನ ನಿತ್ಯಪೂಜೆಯಲ್ಲಿ ಇಂದಿಗೂ "ಗೆರಟೆ ಗಂಜಿ’ ಸಮರ್ಪಣೆ ನಡೆಯುವಂತೆ ಏರ್ಪಡಿಸಿದ ಇತಿಹಾಸ ಪುರುಷ ಶ್ರೀವಾದಿರಾಜರು.
ವೇದಾಂತ ಸಾಮ್ರಾಜ್ಯದ ಸಂಕೇತವಾದ "ತೀರ್ಥ’ ಪದವನ್ನು ತೊರೆದು ಬರಿದೆ ಬಿಡಿ ಸಂನ್ಯಾಸಿಯಂತೆ "ವಾದಿರಾಜ’ರೆಂದೆ ಕರೆಸಿಕೊಂಡ ಮಹಾನ್‌ವಿರಕ್ತ ಶಿಖಾಮಣಿ ಶ್ರೀವಾದಿರಾಜರು.
ಹೂವಿನಕೆರೆಯಲ್ಲಿ ಅರಳಿ, ಜಗದಗಲಕ್ಕೆ ಕಂಪು ಬೀರಿದ ಬಂಗಾರದ ಹೂವು ಶ್ರೀವಾದಿರಾಜರು.
ದುಷ್ಟರಿಗೆ, ದುರಹಂಕಾರಿಗಳಿಗೆ ನಾಗರಹಾವು ಶ್ರೀವಾದಿರಾಜರು.
ಕನ್ನಡದಲ್ಲಿ ದೇವರ ನಾಮಗಳನ್ನು ಹೊಸೆದು ಮಡಿವಂತಿಕೆಯ ಬಾಯಲ್ಲಿ ಕನ್ನಡದ ಮಂತ್ರ ನುಡಿಸಿದವರು ಶ್ರೀವಾದಿರಾಜರು.
ಪ್ರತಿಯೊಂದು ಪೂಜೆಗೂ, ವೇದಮಂತ್ರಗಳ ಜತೆಗೆ, ಕನ್ನಡದ ಹಾಡುಗಳನ್ನು ಹೊಸೆದು, ಅದಕ್ಕೆ ಒಪ್ಪುವ ರಾಗಗಳನ್ನು ಬೆಸೆದು, ಅದನ್ನು ಹಾಡುವ ಭಾಗವತರ ಪರಂಪರೆಯನ್ನು ಹುಟ್ಟು ಹಾಕಿದವರು ಶ್ರೀವಾದಿರಾಜರು.
ಕೃಷ್ಣನ ಮುಂದೆ ತಾನೆ ಹಾಡುತ್ತ, ನಿರ್ಮಾಲ್ಯದ ತಟ್ಟೆ ತಲೆಯ ಮೇಲಿರಿಸಿ ನಾಟ್ಯವಾಡುವ ಪರಿಯನ್ನು ರೂಢಿಗೆ ತಂದ ಭಕ್ತ ಶಿರೋಮಣಿ ಶ್ರೀವಾದಿರಾಜರು.
ತತ್ವವಾದಿಗಳಿಗೆಲ್ಲ ರಾಜರಾಗಿ ಮೆರೆದವರು ಶ್ರೀವಾದಿರಾಜರು.
ಆದರೂ ಅವರು ತನ್ನ ಹೆಸರಿಗೆ ಹೊಸತೊಂದು ಅರ್ಥವನ್ನು ಹೇಳುತ್ತಾರೆ -
ವಾದೀ ಮಧೋ ಯಸ್ಯ ರಾಜಾ
ಸೋಽಹಂ ತಸ್ಯ ಕೃಪಾಬಲಾತ್|
ವಾದಿರಾಜೋ ನ ಸ್ವಶಕ್
ವೀಣೇವ ರಣಯಾಮಿ ತತ್||
(ಆಚಾರ್ಯ ಮಧ್ವರು ನಿಜವಾದ ವಾದಿಗಳು. ಅವರು ನನಗೆ ರಾಜ. ಅದಕೆಂದೆ ನಾನು ವಾದಿರಾಜ. ಇದು ಅವರ ಕೃಪೆಯ ಬಲ ಹೊರತು ನನ್ನ ಸ್ವಂತ ಸಾಮರ್ಥ್ಯವಲ್ಲ. ಅವರು ವೈಣಿಕ. ನಾನು ಅವರು ನುಡಿಸಿದಂತೆ ನುಡಿವ ವೀಣೆ.)
ವಿದ್ಯಾ ದದಾತಿ ವಿನಯಂ ಎಂಬ ಮಾತಿಗೆ ಬೇರೆ ನಿದರ್ಶನ ಬೇಕೆ? ದೊಡ್ಡವರ ಸೌಜನ್ಯಕ್ಕೆ ಸಾಟಿಯಿಲ್ಲ. ಸಣ್ಣವರು ದೊಡ್ಡಸ್ತಿಕೆಯ ನಾಟಕವಾಡುತ್ತಾರೆ. ದೊಡ್ಡವರು ಸಣ್ಣವರಿಗಿಂತ ಸಣ್ಣವರಾಗಿ, ಮಗುವಿಗಿಂತ ಮಗುವಾಗಿ ನಡೆದುಕೊಳ್ಳುತ್ತಾರೆ. ಈ "ಸಣ್ಣಸ್ತಿಕೆ’ಯೇ ದೊಡ್ಡಸ್ತಿಕೆಯ ದೊಡ್ಡ ಲಕ್ಷಣ.
ಧರ್ಮರಾಜನ ರಾಜಸೂಯದಲ್ಲಿ ಶ್ರೀಕೃಷ್ಣ , ಬಂದ ವಿಪ್ರರ ಕಾಲು ತೊಳೆಯುವ ಕಾಯಕಕ್ಕೆ ನಿಂತನಂತೆ. ಕೃಷ್ಣ ಭಕ್ತರಿಗೆ ಇದೊಂದು ಮಾದರಿ. ವಾದಿರಾಜರು ಇಂತ ಆದರ್ಶದ ಬದುಕನ್ನು ಬದುಕಿದವರು.
ಒಂಭತ್ತು ಶಿಷ್ಯರು
ಆಚಾರ್ಯ ಮಧ್ವರ ಪರಂಪರೆಯನ್ನು ಮುಂದುವರಿಸಿದವರು, ಸಂನ್ಯಾಸಿ ಶಿಷ್ಯರಲ್ಲಿ ಪ್ರಮುಖರಾದವರು ಒಂಭತ್ತು ಮಂದಿ. ನಮಗೆ ಈಗ ದೊರೆತ ಆಧಾರದಂತೆ ಈ ಯತಿಗಳ ಸಂನ್ಯಾಸ ಕ್ರಮ ಹೀಗಿದೆ-
೧. ಶ್ರೀ ಹೃಷಿಕೇಶ ತೀರ್ಥರು
೨. ಶ್ರೀ ಪದ್ಮನಾಭ ತೀರ್ಥರು
೩. ಶ್ರೀ ಜನಾರ್ದನ ತೀರ್ಥರು
೪. ಶ್ರೀ ನರಹರಿ (ನರಸಿಂಹ) ತೀರ್ಥರು
೫. ಶ್ರೀ ಉಪೇಂದ್ರ ತೀರ್ಥರು
೬. ಶ್ರೀ ವಾಮನ ತೀರ್ಥರು
೭. ಶ್ರೀ ವಿಷ್ಣು ತೀರ್ಥರು
೮. ಶ್ರೀ ರಾಮತೀರ್ಥರು
೯. ಶ್ರೀ ಅಧೋಕ್ಷಜ ತೀರ್ಥರು
ಈ ಕೆಳಗಿನ ಪದ್ಯ ಈ ಕ್ರಮಕ್ಕೆ ಪೂರಕವಾಗಿದೆ-
ರಘುಪೌ ಕಾಳಿಯಮಥನೌ
ಸುವಿಠಲೌ ಸೂಕರಂ ನೃಸಿಂಹಂ ಚ |
ಅನ್ಯಂ ವಿಠಲಮಗಣಿತ-
ಮತಿಶಿಷ್ಯೆಃ ಪೂಜಿತಾನ್‌ನಮಾಮಿ ಸದಾ ||
ಆಚಾರ್ಯ ಮಧ್ವರು ತನ್ನ ಒಂಭತ್ತು ಮಂದಿ ಸಂನ್ಯಾಸಿ ಶಿಷ್ಯರಿಗಿತ್ತ, ಆ ಶಿಷ್ಯರು ಪರಂಪರೆಯಿಂದ ಪೂಜಿಸುತ್ತ ಬಂದ ಒಂಭತ್ತು ಭಗವನ್ಮೂರ್ತಿಗಳಿಗೆ ನಮಸ್ಕಾರವಿರಲಿ ಎನ್ನುತ್ತದೆ ಈ ಪದ್ಯ.
ಇದರಂತೆ ಅರ್ಚಾಮೂರ್ತಿಯನ್ನಿತ್ತ ಕ್ರಮ ಹೀಗಿದೆ-
ಶ್ರೀ ಹೃಷಿಕೇಶತೀರ್ಥ ಮತ್ತು ಪದ್ಮನಾಭ ತೀರ್ಥರಿಗೆ ರಘುಪತಿ ರಾಮ.
ಶ್ರೀ ಜನಾರ್ದನ ತೀರ್ಥ ಮತ್ತು ನರಹರಿ ತೀರ್ಥರಿಗೆ ಕಾಳಿಯಮಥನ ಕೃಷ್ಣ.
ಶ್ರೀ ಉಪೇಂದ್ರ ತೀರ್ಥ ಮತ್ತು ವಾಮನ ತೀರ್ಥರಿಗೆ ವಿಟೌಲ ಕೃಷ್ಣ.
ಶ್ರೀ ವಿಷ್ಣು ತೀರ್ಥರಿಗೆ ವರಾಹ.
ಶ್ರೀ ರಾಮತೀರ್ಥರಿಗೆ ನರಸಿಂಹ.
ಕೊನೆಯ ಶಿಷ್ಯ ಶ್ರೀ ಅಧೋಕ್ಷಜ ತೀರ್ಥರಿಗೆ ಪುನಃ ವಿಠಲ ಕೃಷ್ಣ .
ಈ ಒಂಭತ್ತು ಮಂದಿ ಸಂನ್ಯಾಸಿ ಶಿಷ್ಯರಲ್ಲಿ ಶ್ರೀ ಪದ್ಮನಾಭ ತೀರ್ಥರು ಘಟ್ಟದ ಮೇಲೆ ತತ್ವ ಪ್ರಸಾರಕ್ಕೆ ನಿಂತರು. ಉಳಿದ ಎಂಟು ಮಂದಿ ತೌಳವ ಮಂಡಲದಲ್ಲಿ ನೆಲೆ ನಿಂತರು. ಈ ಎಂಟು ಮಂದಿಯಲ್ಲಿ ಜನಾರ್ದನ ತೀರ್ಥರಿಗೆ ನರಹರಿ ತೀರ್ಥರಿಗಿಂತ ಮೊದಲು ಸಂನ್ಯಾಸವಾಗಿದ್ದರೂ ವೇದಾಂತ ಸಾಮ್ರಾಜ್ಯದಲ್ಲಿ ಮೊದಲು ನರಹರಿ ತೀರ್ಥರಿಗೆ ಪಟ್ಟಾಭಿಷೇಕವಾದಂತಿದೆ. ಹೀಗಾಗಿ, ಅಷ್ಟ ಮಠಗಳ ಅನುಕ್ರಮ ಹೀಗಾಯಿತು-
೧. ಶ್ರೀಹೃಷಿಕೇಶ ತೀರ್ಥರು
೨. ನರಹರಿ (ನರಸಿಂಹ) ತೀರ್ಥರು
೩. ಜನಾರ್ದನ ತೀರ್ಥರು
೪. ಉಪೇಂದ್ರ ತೀರ್ಥರು
೫. ವಾಮನ ತೀರ್ಥರು
೬. ವಿಷ್ಣು ತೀರ್ಥರು
೭. ರಾಮ ತೀರ್ಥರು
೮. ಅಧೋಕ್ಷಜ ತೀರ್ಥರು
ನರಹರಿ ತೀರ್ಥರನ್ನು ನಾರಾಯಣ ಪಂಡಿತರು ಮಧ್ವ ವಿಜಯದಲ್ಲಿ "ನರಸಿಂಹ ಪದಾಧಾರಾಃ’ ಎಂದು ಬಣ್ಣಿಸಿದ್ದರಿಂದ ಮುಂದೆ ಅವರು ನರಸಿಂಹ ತೀರ್ಥರೆಂದೆ ಖ್ಯಾತರಾದರು.
ಈ ನರಹರಿ ತೀರ್ಥರು ಉಡುಪಿಯಲ್ಲಿದ್ದು , ಆಚಾರ್ಯ ಮಧ್ವರ ಮಾರ್ಗದರ್ಶನದಲ್ಲಿ ಯಕ್ಷಗಾನದಿ - ಬಯಲಾಟದ ಕಲಾ ಪ್ರಕಾರವನ್ನು ಬಳಕೆಗೆ ತಂದರು. ಇದೇ ಮುಂದೆ ಆಂಧ್ರದಲ್ಲಿ "ಕೂಚಿಪುಡಿ’ಯಾಗಿ ಬೆಳೆದು ಬಂದು, ಮೂಲತಃ ಆಂಧ್ರದವರಾದ ಶ್ರೀ ನರಹರಿ ತೀರ್ಥರು ಅನಂತರ ಪದ್ಮನಾಭ ತೀರ್ಥರ ಪರಂಪರೆಯನ್ನು ಮುಂದುವರಿಸಿದರು.
ಕೆಳಗಿನ ಪದ್ಯ ಈ ಅನುಕ್ರಮವನ್ನು ನಿರೂಪಿಸುತ್ತದೆ-
ವಂದೇ ಹೃಷೀಕೇಶಮಥೋ ನೃಸಿಂಹಂ
ಜನಾರ್ದನಂ ಚಿಂತಯ ಧೀರುಪೇಂದ್ರಮ್|
ಶ್ರೀ ವಾಮನಂ ಸಂಸ್ಮರ ವಿಷ್ಣುಮೇಮಿ
ಶ್ರೀರಾಮಮಂಚೇ-ಹಮಧೋಕ್ಷಜಂ ಚ ||
ಆಚಾರ್ಯರು ಇವರಿಗಿತ್ತ ಅರ್ಚಾಮೂರ್ತಿಗಳಲ್ಲು ಒಂದು ವೈಶಿಷ್ಟವಿದೆ. ಓಂಕಾರದ ನಾಕು ಅಕ್ಷರಗಳಿಗೆ (ಅಕಾರ, ಉಕಾರ, ಮಕಾರ, ನಾದ) ನಾಕು ಭಗವದ್ರೂಪಗಳು: ಕೃಷ್ಣ , ರಾಮ, ನರಸಿಂಹ ಮತ್ತು ವರಾಹ. ಜಯ-ವಿಜಯರ ಶಾಪಮೋಕ್ಷಕ್ಕಾಗಿ ಬಂದ ಭಗವದ್ರೂಪಗಳು. ಇವೇ ಓಂಕಾರೋಪಾಸಕರಾದ ಸಂನ್ಯಾಸಿಗಳಿಗೆ ಮುಖ್ಯ ಉಪಾಸ್ಯರೂಪಗಳು. ಅಕಾರೋಪಾಸಕರಿಗೆ ಕೃಷ್ಣರೂಪ (ಕಾಳಿಯ ಮಥನ ಮತ್ತು ವಿಠಲ), ಉಕಾರೋಪಾಸಕರಿಗೆ ರಾಮ, ಮಕಾರೋಪಾಸಕರಿಗೆ ನರಸಿಂಹ ಮತ್ತು ಓಂಕಾರದ ಉಪಾಸನೆಯಲ್ಲೆ ಸರ್ವೋತ್ಕೃಷ್ಟವಾದ ನಾದದ ಉಪಾಸಕರಿಗೆ ವರಾಹ.
ಹೀಗೆ, ಆಶ್ರಮದ ಅನುಕ್ರಮದಲ್ಲಿ ಆಚಾರ್ಯ ಮಧ್ವರ ಶಿಷ್ಯರಲ್ಲಿ ಮೊದಲಿಗರು ಉಕಾರವೇದ್ಯ ರಾಮೋಪಾಸಕರಾದ ಹೃಷೀಕೇಶ ತೀರ್ಥರು. ಯೋಗ್ಯತೆಯಲ್ಲಿ ಮೊದಲಿಗರು ನಾದವೇದ್ಯ ವರಾಹೋಪಾಸಕರಾದ ವಿಷ್ಣುತೀರ್ಥರು. ಅವರೇ ಶ್ರೀ ಸೋದೇ ಮಠದ ಮೂಲ ಯತಿಗಳು. ಆಚಾರ್ಯರ ತಮ್ಮನಾಗಿ ಜನಿಸಿದ ಮಹಾಭಾಗ್ಯಶಾಲಿಗಳು.
ಅಂದಿನಿಂದ ಸೋದೆ ಮಠದ ಪರಂಪರೆಯ ೨೦ನೆಯ ಯತಿಗಳಾದ ಶ್ರೀವಾದಿರಾಜರ ತನಕ ಶ್ರೀಕೃಷ್ಣನಿಗೆ ಎರಡು ತಿಂಗಳ ಪೂಜಾ ಪದ್ಧತಿ ಬಳಕೆಯಲ್ಲಿತ್ತು. ಶ್ರೀವಾದಿರಾಜರು ಎರಡು ವರ್ಷಗಳ ಪೂಜಾ ಪದ್ಧತಿಯನ್ನು ಆಚರಣೆಗೆ ತಂದು ಪರ್ಯಾಯ ಮಹೋತ್ಸವಕ್ಕೆ ದೇಶವ್ಯಾಪಿ ಮೆರಗು ನೀಡಿದರು.
ಸೋದೆ ಮಠದ ಮೊದಲ ಪರ್ಯಾಯ
ಆದರೆ ಶ್ರೀವಾದಿರಾಜರು ತಾನೇ ಮೊದಲು ಪರ್ಯಾಯ ಪೀಠವನ್ನೇರಲಿಲ್ಲ. ಮೂಲ ಯತಿಗಳ ಜ್ಯೇಷ್ಠತೆಯ ಅನುಕ್ರಮಕ್ಕೆ ಅನುಗುಣವಾಗಿ ಪರ್ಯಾಯ ಕ್ರಮವನ್ನೇರ್ಪಡಿಸಿದರು. ಹೀಗಾಗಿ, ಪರ್ಯಾಯ ಚಕ್ರ ಪ್ರಾರಂಭವಾದದ್ದು ಫಲಿಮಾರು ಮಠದಿಂದ, ಕ್ರಿ.ಶ. ೧೫೨೨ರಲ್ಲಿ. ಅನಂತರ ಕ್ರಮಶಃ ಆರನೆಯವರಾಗಿ, ಶ್ರೀವಾದಿರಾಜರು ೧೫೩೨ರಲ್ಲಿ ತನ್ನ ಮೊದಲ ಪರ್ಯಾಯ ಮಹೋತ್ಸವವನ್ನಾಚರಿಸಿದರು. ಆಗ ಅವರಿಗೆ ೫೨ರ ಹರಯ.
೧೫೮೦ರಲ್ಲಿ ಅವರ ನಾಲ್ಕನೆಯ ಮತ್ತು ಕೊನೆಯ ಪರ್ಯಾಯ. ಅದು ಅವರ ಶತಮಾನೋತ್ಸವದ ಅಪೂರ್ವ ಪರ್ಯಾಯ ಕೂಡ. ನೂರು ತುಂಬಿದ ವಾದಿರಾಜರು ಕೃಷ್ಣನನ್ನು ಪೂಜಿಸುತ್ತ ಬೇಡಿಕೊಂಡ ಬಗೆ ಅನನ್ಯವಾದದ್ದು-
ಮಧ್ವಪ್ರತಿಷ್ಠಿತಂ ತ್ವಾಂ
ವಿಧ್ವಸ್ತಾಶೇಷಕುಜನಕುಲಮ್|
ಮೂಧಾ ಪ್ರಣಮ್ಯ ಯಾಚೇ
ತದ್‌ವಿರಚಯ ಯದ್ಧಿತಂ ಮಮಾದ್ಯ ಹರೇ ||
(ಮಧ್ವರಿಂದ ಪ್ರತಿಷ್ಠೆಗೊಂಡ ನಿನ್ನನ್ನು , ದುರ್ಜನರ ತಳಿಯನ್ನು ನಿಃಶೇಷವಾಗಿ ತರಿದ ನಿನ್ನನ್ನು , ತಲೆಬಾಗಿ ಮಣಿದು ಬೇಡಿಕೊಳ್ಳುತ್ತೇನೆ. ಓ ಶ್ರೀಹರಿಯೆ, ನನಗೆ ಯಾವುದು ಹಿತವೊ ಅದನ್ನು ಕರುಣಿಸು.)
ನಿಷ್ಕಾಮರಾದ ಏಕಾಂತ ಭಕ್ತರು ಭಗವಂತನನ್ನು ಬೇಡುವ ಪರಿ ಇದು. ಇದು ಪ್ರಹ್ಲಾದ ಭಕ್ತಿ. ಭಗವಂತನಿಂದ ಐಹಿಕವಾದ ಏನನ್ನೂ ಬಯಸದ ನಿವ್ಯಾಜ ಭಕ್ತಿ.
ವಾದಿರಾಜರ ಶಿಷ್ಯ ವಾತ್ಸಲ್ಯವೂ ದೊಡ್ಡದು. ೧೫೯೬ರಲ್ಲಿ ಅವರ ೧೧೬ನೆಯ ವಯಸ್ಸಿನಲ್ಲಿ ಬಂದ ಐದನೆಯ ಪರ್ಯಾಯವನ್ನು ಆಗಲೆ ಮುಪ್ಪಿಗೆ ಹತ್ತಿರವಾದ ತನ್ನ ಶಿಷ್ಯನಿಂದ ಮಾಡಿಸಿ ತಾನು ಸೋದೆಯಲ್ಲಿ ನಿಂತರು.
ಲೋಕೋತ್ತರ ಚರಿತರು
ವಾದಿರಾಜರ ವರ್ಣಮಯ ವ್ಯಕ್ತಿತ್ವ ಲೋಕೋತ್ತರವಾದದ್ದು. ಅವರು ಅನನ್ಯ ಸಮಾಜ ಸುಧಾರಕರು. ಅದ್ವಿತೀಯ ವಾಗ್ಮಿಗಳು. ಅದ್ಭುತ ಗ್ರಂಥಕಾರರು. ತುಳುನಾಡಿನ ಯತಿಗಳ ಪರಂಪರೆಯಲ್ಲಿ , ಕನ್ನಡ ಮತ್ತು ತುಳು ಭಾಷೆಗಳಲ್ಲಿ ಹಾಡುಗಳನ್ನು ಹೊಸೆದ ವಾಗ್ಗೇಯಕಾರರು. ವ್ಯಾಸಪಂಥ, ದಾಸಪಂಥ ಎರಡರಲ್ಲು ಆಚಾರ್ಯ ಪುರುಷರಾಗಿ ನಿಂತವರು. ಕನಕದಾಸರಂಥ ಹಿರಿಯ ಚೇತನವನ್ನು ಗುರುತಿಸಿ ಉಡುಪಿಯಲ್ಲಿ ಅವರಿಗೆ ನೆಲೆಯಿತ್ತು ಮನ್ನಣೆಯ ಮಣೆಯನ್ನಿತ್ತವರು.
ಶಾಸ್ತ್ರದಲ್ಲೂ , ಕಾವ್ಯದಲ್ಲೂ ಸವ್ಯಸಾಚಿಗಳಾದ ಅಪೂರ್ವ ಕವಿಮನೀಷಿಗಳು. ತುಳುನಾಡಿನಲ್ಲಿ ಇಬ್ಬರು ಮೊದಲ ಗೃಹಸ್ಥ ಕವಿಗಳು: ಶ್ರೀತ್ರಿವಿಕ್ರಮ ಪಂಡಿತರು ಮತ್ತು ನಾರಾಯಣ ಪಂಡಿತರು. ಇಬ್ಬರು ಮೊದಲ ಸಂನ್ಯಾಸಿ ಕವಿಗಳು ಶ್ರೀ ರಾಜರಾಜೇಶ್ವರರು ಮತ್ತು ಶ್ರೀವಾದಿರಾಜರು. (ಅನಂತರ ಸುಭದ್ರಾಹರಣವೆಂಬ ಮಹಾಕಾವ್ಯವೂ ಸೋದೆ ಮಠದ ಪರಂಪರೆಯಿಂದಲೇ ಬಂತು.)
ವಾದಿರಾಜರ ಕಾವ್ಯ ಶಾಸ್ತ್ರಮಯ ಮತ್ತು ಶಾಸ್ತ್ರ ಕಾವ್ಯಮಯ. ಸಂಸ್ಕೃತದಲ್ಲಿ ಮೊದಲ ಪ್ರವಾಸ ಸಾಹಿತ್ಯ ವೆಂಕಟಾಧ್ವರಿಯ ವಿಶ್ವಗುಣಾದರ್ಶ ಚಂಪೂ. ಎರಡನೆಯದು ಶ್ರೀವಾದಿರಾಜರ ತೀರ್ಥ ಪ್ರಬಂಧ. ಮೇರುಕೃತಿ: ಯುಕ್ತಿಮಲ್ಲಿಕೆ ಅವರ ಯುಕ್ತಿ ಮಲ್ಲಿಕೆ ವೇದಾಂತ ಪ್ರಪಂಚದಲ್ಲೆ ಸಾಟಿಯಿಲ್ಲದ ಮೇರು ಕೃತಿ. ಆದರೂ ಕಾವ್ಯಮಯವಾದ ಸುಂದರ ಪದ್ಯಗಳ ದಿವ್ಯ ಪ್ರಪಂಚ.
ಅದರ ಹಿರಿಮೆಯನ್ನರಿಯದೆ ಕೀಳು ದರ್ಜೆಯ ಇತರ ಕೃತಿಗಳ ಜತೆಗೆ ಅದನ್ನು ಹೋಲಿಸಿ ನೋಡುವ ಪಂಡಿತಂಮನ್ಯರನ್ನು ಅವರು ಹೀಗೆ ಗೇಲಿಮಾಡುತ್ತಾರೆ-
ತುಲಯಾ ಮಲಯಾದ್ರುತ್ಥ
ಚಂದನೇನೇಂಧನಂ ಖಲಃ |
ಸಮಂ ಸಮಂತಾತ್‌ಕುರುತೇ
ಗ್ರಂಥೌ ಗಂಧಂ ಕರೋತಿ ಕಃ ||
(ಮಲಯಗಿರಿಯಲ್ಲಿ ಬೆಳೆದ ಗಂಧದ ಕೊರಡನ್ನು ಕಟ್ಟಿಗೆಯ ತುಂಡಿನೊಡನೆ ಒಂದೇ ತಟ್ಟೆಯಲ್ಲಿಟ್ಟು ತೂಗುವ ತಿಳಿಗೇಡಿಯಿರಬಹುದು. ಆದರೆ ಕಟ್ಟಿಗೆಯ ತುಂಡಿನಲ್ಲಿ ಕಂಪು ಎಲ್ಲಿಂದ ಬರಬೇಕು?)
ತನ್ನ ಕೃತಿ ಗಂಧದ ಕೊರಡಿನಂತೆ ಕಂಪು ನೀಡುವಂಥದು. ಇತರ ಬರಡು ಗ್ರಂಥಗಳು ಅದರ ಮುಂದೆ ತಲೆಯೆತ್ತಿ ನಿಲ್ಲಬಲ್ಲವೆ ಎಂದು ಕೇಳುವ ಶ್ರೀ ವಾದಿರಾಜರ ಆತ್ಮವಿಶ್ವಾಸದ ಈ ನುಡಿ ಅದ್ಭುತವಾದದ್ದು. ಇದಕ್ಕೆ ವಿರುದ್ಧವಾಗಿ ತನ್ನ ಕೃತಿಯ ಬಗ್ಗೆ ತನಗೆ ಆತ್ಮವಿಶ್ವಾಸವಿಲ್ಲ ಎಂದು ಮಹಾಕವಿ ಕಾಳಿದಾಸ ಅಳುಕುತ್ತಾನೆ: "ಆತ್ಮನ್ಯಪ್ರತ್ಯಯಂ ಚೇತಃ’.
ಒಮ್ಮೆ ವಾದಿರಾಜರು ಯಾತ್ರೆ ಮಾಡುತ್ತ ಒಂದು ರಾಜ್ಯದಲ್ಲಿ ತಂಗಿದರು. ಅಲ್ಲಿಯ ದೊರೆ ಕುಹಕಿಗಳ ಪಿತೂರಿಗೆ ಬಲಿಯಾಗಿ ವಾದಿರಾಜರನ್ನು ಸ್ವಾಗತಿಸಿ ಅರಮನೆಗೆ ಕರೆದು ಸತ್ಕರಿಸಲಿಲ್ಲ. ಆ ದುರ್ದೈವಿ ದೊರೆಯ ಬಗೆಗೆ ವಾದಿರಾಜರ ಚಾಟಿಯೇಟಿನಂಥ ಮಾತು ಮರೆಯಲಾಗದ್ದು -
ತಾರ್ಣೇ ವೌಕಸಿ ಪಾರ್ಣೇವಾ
ತಾಪಸೋ ಭೂಪ ಸೋ-ವಸತ್|
ತಿಥೌ ತೇ-ತಿಥಿರೇತದ್ವದ್
ವಿದ್ವಾನ್‌ಕ್ವಾಗಣ್ಯಪುಣ್ಯದಃ ||
(ಅಯ್ನಾ ದೊರೆ, ಆ ತಪಸ್ವಿ ಯತಿ ಹುಲ್ಲ ಜೋಪಡಿಯಲ್ಲೋ ಎಲೆಮನೆಯಲ್ಲೋ ಹಾಯಾಗಿ ನೆಲಸಿದನು. ನಿನ್ನ ಅನಾದರದಿಂದ ಅವನಿಗೇನೂ ತೊಂದರೆಯಾಗಲಿಲ್ಲ. ಆದರೆ ಇಂಥ ಪುಣ್ಯತಿಥಿಯಲ್ಲಿ , ಎಣೆಯಿರದಷ್ಟು ಪುಣ್ಯ ಕಟ್ಟಿಕೊಡಬಲ್ಲ ವಿದ್ವಾಂಸರಾದ ಇಂಥ ಅತಿಥಿಯನ್ನು ಸತ್ಕರಿಸುವ ಭಾಗ್ಯ ಇನ್ನೆಲ್ಲಿ ನಿನಗೆ?)
ಕಳೆದುಕೊಂಡೆಯಲ್ಲೋ ಬದುಕಿನಲ್ಲೊಂದು ಅಪೂರ್ವ ಅವಕಾಶವನ್ನು? ಮುಚ್ಚಿಬಿಟ್ಟೆಯಲ್ಲೋ ಶಾಶ್ವತವಾಗಿ ಭಾಗ್ಯದ ಬಾಗಿಲನ್ನು?- ಹೀಗೆ ಹಂಗಿಸುತ್ತಾರೆ ವಾದಿರಾಜರು ಕುರುಡು ಕಾಂಚಾಣದ ಮದದಿಂದ ಕುರುಡಾದ ಮಂದಿಯನ್ನು ! ಅವರ ಈ ಸಾತ್ವಿಕ ಕ್ರೋಧದ ಹಿಂದೆ ಮಡುಗಟ್ಟಿರುವ ಅಪಾರ ಕಾರುಣ್ಯವನ್ನು ಗುರುತಿಸಬೇಕು. ಇದು ತಾಯಿ ಮಕ್ಕಳನ್ನು ಗದರುವ ಧಾಟಿ.
ಶಾಸ್ತ್ರದ ಸವಿಯನ್ನು ಒಮ್ಮೆಲೆ ಸವಿಯಲಾಗದ ಮುಗ್ಧರನ್ನು ವಾದಿರಾಜರು ಹೀಗೆ ಸಂತೈಸುತ್ತಾರೆ-
ಅಧುನಾ ವಿಧುನಾ ರುದ್ಧಂ
ಮಧು ನಾ-ಸೀನ್ಮಧುವ್ರತ |
ಉದಿತೇ ಮುದಿತೇ-ಬೆಜ್ ಸ್ಯಾತ್
ಅದಿತೇರ್ವಿದಿತೇ ಸುತೇ |
(ಎಲೆ ಜೇನರಸುವ ದುಂಬಿಯೆ, ಈಗ ಇರುಳಾಯಿತು. ಚಂದ್ರನಿಂದಾಗಿ ತಾವರೆ ಮುದುಡಿತು. ನಿನಗೀಗ ಜೇನು ಸಿಗಲಿಕ್ಕಿಲ್ಲ. ನಿರಾಶೆ ಬೇಡ. ಅದಿತಿಯ ಹೆಸರಾಂತ ಮಗ, ಆದಿತ್ಯ ಮೂಡಿಬರಲಿದ್ದಾನೆ. ಆಗ ತಾವರೆ ಅರಳುತ್ತದೆ. ಆಗ ನೀನು ಅದರ ಜೇನನ್ನು ಸವಿಯಬಲ್ಲೆ.
ಇದು ವಾದಿರಾಜರ ಮಾತಿನ ಮೋಡಿ. ಶಬ್ದಗಳು ಅವರ ಮುಂದೆ ಕುಣಿಯುತ್ತವೆ. ಅವರ ನಾಲಿಗೆಯ ರಂಗಸ್ಥಳದಲ್ಲಿ ವಾಗೆವಿ ನಲಿಯುತ್ತಾಳೆ. ಅರ್ಥಗಳು ನುಡಿಯ ಬೆನ್ನುಹತ್ತುತ್ತವೆ. ಭವಭೂತಿ ನುಡಿದಂತೆ "ವಾಚಮಥೋ-ನುಧಾವತಿ’, ಮಾತೆಲ್ಲ ಜ್ಯೋತಿಯಾಗಿ ಬೆಳಗುತ್ತದೆ.
ಅಧ್ಯಾತ್ಮದ ಸಿರಿ ಸೊಬಗುಳ್ಳ
ಸಾಹಿತ್ಯದ ಬರಿ ಬೆರಗುಳ್ಳ
ವಾದಿರಾಜರ ಮಾತು ರಸಗುಲ್ಲ
ಯೋಗ ಸಿದ್ಧರ ಪ್ರತಿಷ್ಠೆ
ಈ ಸಂದರ್ಭದಲ್ಲಿ ಒಂದು ಸಂಗತಿ ನೆನಪಾಗುತ್ತಿದೆ - ಶ್ರೀಕೃಷ್ಣನ ಸನ್ನಿಧಿಯಲ್ಲಿ ಮುಖ್ಯಪ್ರಾಣನ ಪ್ರತಿಮೆಯನ್ನು ಸ್ಥಾಪಿಸಿದವರು ಶ್ರೀವಾದಿರಾಜರು. ಶಿಥಿಲವಾದ ಅದರ ಗುಡಿಯನ್ನು ಜೀರ್ಣೋದ್ಧಾರಗೊಳಿಸುವ ಎತ್ತುಗಡೆ ನಡೆದಿತ್ತು - ನಾಕು ದಶಕಗಳ ಹಿಂದೆ.
ಅದಕ್ಕಾಗಿ ಮುಖ್ಯಪ್ರಾಣನ ವಿಗ್ರಹವನ್ನು ಸ್ಥಳಾಂತರಗೊಳಿಸಬೇಕು. ಎಲ್ಲ ಯತಿಗಳೂ ಸೇರಿ ಅಷ್ಟಮಂಗಲ ಪ್ರಶ್ನೆಯಿರಿಸಿದರು. ನಾನೂ ಅಲ್ಲಿದ್ದೆ. ಆಗ ಜ್ಯೋತಿಷಿ ಪುದುವಾಳರು ನುಡಿದ ಮಾತು ಈಗಲೂ ನನ್ನ ಕಿವಿಯಲ್ಲಿ ಗುನುಗುತ್ತಿದೆ. "ಇದನ್ನು ಚಲನೆಗೊಳಿಸಿ ಮತ್ತೆ ಪ್ರತಿಷ್ಠೆ ಮಾಡಿದರೆ ಹಿಂದಿನ ಸನ್ನಿಧಾನ ಮತ್ತೆ ಬರದು’.
ಆಗ ಒಂದು ಪ್ರಶ್ನೆ ಬಂತು. ಎಲ್ಲ ಕಡೆಯೂ ಜೀರ್ಣೋದ್ಧಾರ ಮಾಡುವಾಗ ಪ್ರತಿಮೆಯ ಸ್ಥಳಾಂತರ ಸಹಜಕ್ರಿಯೆ ಇಲ್ಲಿ ಮಾತ್ರ ಏಕೆ ಸಲ್ಲದು?
ಅದಕ್ಕೆ ಪುದುವಾಳರು ಶ್ಲೋಕಾಧಾರ ಸಹಿತ ನೀಡಿದ ಉತ್ತರ: "ಇದು ಎಲ್ಲ ವಿಗ್ರಹಗಳಂತಲ್ಲ. ಇದನ್ನು ಸ್ಥಾಪಿಸಿದವರು ಯೋಗ ಸಿದ್ಧರು. ಮತ್ತೆ ಅಂಥದೇ ಸನ್ನಿಧಾನ ಬರಬೇಕಾದರೆ ಪುನಃಪ್ರತಿಷ್ಠೆ ಮಾಡುವವರೂ ಹಾಗೆಯೇ ಯೋಗಸಿದ್ಧರಿರಬೇಕು. ಆದರೆ ಅಂಥ ಯೋಗಸಿದ್ಧರು ಈಗ ಯಾರೂ ಕಾಣಿಸುತ್ತಿಲ್ಲ’.
ಅನಂತರ ಜೀರ್ಣೋದ್ಧಾರದ ಯೋಜನೆಯನ್ನೆ ಕೈಬಿಡಲಾಯಿತು. ಆ ಶಿಥಿಲವಾದ ಹಳೆಯ ಗರ್ಭಗುಡಿಯಲ್ಲೆ ಮುಖ್ಯಪ್ರಾಣ ಪೂಜೆಗೊಳ್ಳುತ್ತಿದ್ದಾನೆ. ಶ್ರೀವಾದಿರಾಜರ ಯೋಗ ಮಹಿಮೆಗೆ ಇದೊಂದು ಅರ್ವಾಚೀನ ಪುರಾವೆ. ಅದಕೆಂದೆ ಭಾವುಕರು ವಾದಿರಾಜರನ್ನು ಗುರುರಾಜರೆಂದು ಕರೆದರು; ಗುರುಸಾರ್ವಭೌಮರೆಂದು ಕೊಂಡಾಡಿದರು.
ವಾದಿರಾಜಯತಿರಾಜರಿಗುಳ್ಳ
ಯೋಗಸಿದ್ಧಿ - ಸಮೃದ್ಧಿಯ ಬಳ್ಳ
ಯಾರಿಗು ಅಳೆವುದಕಳವಲ್ಲ
ವೃಂದಾವನಾಚಾರ್ಯರು
ವಾದಿರಾಜರ ಅನುಗ್ರಹಕ್ಕೆ ಪಾತ್ರರಾದ ಇನ್ನೊಬ್ಬ ಮಹಾನ್‌ಯತಿಗಳು ಸೋದೆಮಠದ ಪರಂಪರೆಯಲ್ಲೆ ಬಂದ ವೃಂದಾವನಾಚಾರ್ಯರು. ಈಗಣ ಯತಿಗಳಿಗಿಂತ ಐದು ತಲೆ ಹಿಂದಿನವರು. ಇವರ ನಿಜನಾಮಧೇಯ ವಿಶ್ವಪ್ರಿಯ ತೀರ್ಥರು. ವಾದಿರಾಜರ ವೃಂದಾವನದ ಮುಂದೆಯೆ ಇವರು ಸ್ವಯಂ ಶಾಸ್ತ್ರಾಧ್ಯಯನ ಮಾಡಿ ಮಹಾನ್‌ವಿದ್ವಾಂಸರಾದರು. ಅದಕ್ಕೆಂದೆ ವೃಂದಾವನಾಚಾರ್ಯರೆಂದೇ ಖ್ಯಾತರಾದರು. ವೃಂದಾವನವೆ ಇವರಿಗೆ ಶಾಸ್ತ್ರರಹಸ್ಯವನ್ನರುಹಿದ ಆಚಾರ್ಯ. ಇವರು ವಾದಿರಾಜರ ಅನುಗ್ರಹದಿಂದ ಯೋಗಸಿದ್ಧರೂ ಆಗಿದ್ದರು.
ಅವರ ಶಿಷ್ಯರೊಬ್ಬರು ಅವರ ಜೀವನ ಚರಿತ್ರೆಯನ್ನು ಬರೆದಿದ್ದಾರೆ: ವಿಶ್ವಪ್ರಿಯತೀರ್ಥವಿಲಾಸ. ಅವರ ಬದುಕಿನ ಅನೇಕ ಪವಾಡಗಳನ್ನು ಅದರಲ್ಲಿ ದಾಖಲಿಸಿದ್ದಾರೆ.
ವೃಂದಾವನಾಚಾರ್ಯರು ಕೊಚ್ಚಿಯ ರಾಜಮನೆತನದವರ ಜತೆ ವಾದ ಮಾಡಿ ವಿಜಯ ಪತಾಕೆ ಹಾರಿಸಿದರು ಇವರ ಪಾಂಡಿತ್ಯದಿಂದ. ಅದಕ್ಕಿಂತ ಹೆಚ್ಚಾಗಿ ಇವರ ಯೋಗಸಿದ್ಧಿಯಿಂದ ಪ್ರಭಾವಿತರಾದ ಆ ರಾಜಮನೆತನದವರು ಇವರಿಂದ ಮಾಧ್ವ ದೀಕ್ಷೆ ಪಡೆದರು. ಆದರೆ, ಆ ಸಂಪರ್ಕ ಮುಂದುವರಿಯಲಿಲ್ಲ ಎನ್ನುವುದು ದುರ್ದೈವದ ಸಂಗತಿ.
ವಿಶ್ವೋತ್ತಮರು
ಈಗಣ ಯತಿಗಳ ಸಾಕ್ಷಾದ್‌ಗುರುಗಳಾದ ಶ್ರೀ ವಿಶ್ವೋತ್ತಮ ತೀರ್ಥರು ಸಾತ್ವಿಕತೆಯ ಸಾಕಾರಮೂರ್ತಿಯಾಗಿದ್ದರು. ನನ್ನ ವೈಯಕ್ತಿಕ ಅನುಭವವೊಂದನ್ನು ಇಲ್ಲಿ ಉಲ್ಲೇಖೀಸಬೇಕು.
ಒಂದು ಪ್ರಸಂಗದಲ್ಲಿ , ವಿಶ್ವೋತ್ತಮ ತೀರ್ಥರ ನಿಲುವಿಗೆ ವಿರುದ್ಧವಾಗಿ ನಾನು ನ್ಯಾಯಾಲಯದಲ್ಲಿ ಸಾಕ್ಷಿ ಹೇಳಿದೆ. ನನ್ನ ನಿಲುವಿಗೆ ಕೋರ್ಟಿನಲ್ಲಿ ಜಯ ಸಿಕ್ಕಿತು. ಅನಂತರ ಬಹಳ ಕಾಲ ನಾನು ವಿಶ್ವೋತ್ತಮರನ್ನು ಭೇಟಿಯಾಗಲಿಲ್ಲ - ನನ್ನ ನಿಲುವಿನಿಂದ ಅವರಿಗೆ ನೋವಾಗಿರಬಹುದು ಎಂದು ಭಾವಿಸಿ.
ಒಮ್ಮೆ ಅವರಿಂದಲೇ ಅನಿರೀಕ್ಷಿತವಾಗಿ ಕರೆ ಬಂತು. "ತಕ್ಷಣ ಭೇಟಿಯಾಗಬೇಕು’ ಎಂದು ಹೇಳಿ ಕಳಿಸಿದರು. ನಾನು ಮಠಕ್ಕೆ ಹೋದೆ. ಅವರು ಕೇಳಿದ ಮೊದಲ ಪ್ರಶ್ನೆ: "ಏಕೆ ಮಠಕ್ಕೆ ಬರುವುದನ್ನು ಬಿಟ್ಟಿರಿ? ನಿಮ್ಮಂಥ ವಿದ್ವಾಂಸರು ದೂರ ನಿಂತರೆ ಈ ಮಠಗಳು ಇರುವುದಕ್ಕೆ ಏನರ್ಥ?’
ವಿಸ್ಮಿತನಾಗಿ ನಾನೆಂದೆ : "ಸ್ವಾಮಿ, ತಮ್ಮ ನಿಲುವಿಗೆ ವಿರುದ್ಧವಾಗಿ ನಾನು ಸಾಕ್ಷಿ ಹೇಳಿದ್ದೆ. ಅದರಿಂದ ತಮಗೆ ನೋವಾಗಿರಬಹುದು ಎಂದು ದೂರ ನಿಂತೆ, ಅಷ್ಟೆ’.
ಅದಕ್ಕೆ ಅವರ ಪ್ರತಿಕ್ರಿಯೆ ಅದ್ಭುತವಾಗಿತು : "ನನಗೆ ನೋವಾಗಲಿಲ್ಲ. ನಿಮ್ಮ ನಿಲುವು ಇಷ್ಟವಾಯಿತು. ಮುಖಕ್ಕೆ ತಕ್ಕ ಮಾತನಾಡುವ ವಿದ್ವಾಂಸರು ಬೇಕಾದಷ್ಟು ಮಂದಿ ಇದ್ದಾರೆ. ಯಾರ ದಾಕ್ಷಿಣ್ಯಕ್ಕೂ ಬಲಿಯಾಗದೆ ಸತ್ಯವನ್ನು ನಿಷ್ಠುರವಾಗಿ ಹೇಳುವ ನಿಮ್ಮಂಥ ವಿದ್ವಾಂಸರೆ ನನಗೆ ಇಷ್ಟ’. ವಾದಿರಾಜರ ಪೂರ್ಣಾನುಗ್ರಹಕ್ಕೆ ಪಾತ್ರರಾದ ಅವರಂಥವರು ಮಾತ್ರವೆ ಇಂಥ ಮಾತನ್ನಾಡಬಲ್ಲರು. ಅವರು ನಿಜವಾಗಿ ವಿಶ್ವೋತ್ತಮರು.
ಸಮಾಜಮುಖೀ ವಾದಿರಾಜರು
ಹೀಗೆ ತಲೆಮಾರಿನುದ್ದಕ್ಕೆ ತನ್ನ ತಪಃ ಪ್ರಭಾವವನ್ನು ಬೀರಿದ ಮಹಾಮಹಿಮರು ಶ್ರೀವಾದಿರಾಜರು. ಕೊನೆಯದಾಗಿ ಅವರ ಸಮಾಜ ಸುಧಾರಣೆಯ ಕೆಲವು ಪ್ರಮುಖ ಅಂಶಗಳನ್ನು ಇಲ್ಲಿ ನೆನೆಯಬೇಕು. ವಿಶ್ವತೋಮುಖೀಯಾದ ವಾದಿರಾಜರು ಸಮಾಜಮುಖೀಯಾದ ಬಗೆ, ಸಮಾಜದ ಸಾಮರಸ್ಯಕ್ಕೆ ಅವರು ನೀಡಿದ ಕೊಡುಗೆ ಅನನ್ಯ.
ಸ್ವರ್ಣಕಾರರಾದ ದೈವಜ್ಞ ಬ್ರಾಹ್ಮಣರು ವಾದಿರಾಜರ ತಪಃಶಕ್ತಿಯಿಂದ ಪ್ರಭಾವಿತರಾಗಿ ಅವರ ಶಿಷ್ಯರಾದರು. ಇಡಿಯ ದೈವಜ್ಞ ಬ್ರಾಹ್ಮಣ ಜನಾಂಗ ವಾದಿರಾಜರ ಅನನ್ಯ ಅನುಯಾಯಿಗಳಾದರು. ವಾದಿರಾಜರು ಅವರಿಗೆ ಮಾಧ್ವ ದೀಕ್ಷೆ ನೀಡಿದರು. ಇದು ಆ ಕಾಲದಲ್ಲಿ ಘಟಿಸಿದ ಒಂದು ಮಹಣ್ತೀದ ಸಂಗತಿ. ಇಡಿಯ ಒಂದು ಜನಾಂಗವನ್ನು ಮಾಧ್ವ ಸಂಪ್ರದಾಯದ ತೆಕ್ಕೆಗೆ ಒಳಪಡಿಸಿದ್ದು ಒಂದು ದೈವೀ ಘಟನೆ.
ಹಾಗೆಯೆ ಕೋಟೇಶ್ವರದ ಬ್ರಾಹ್ಮಣರು. ಅವರೂ ಮೂಲತಃ ಕೋಟದ ಸ್ಮಾರ್ತ ಪರಂಪರೆಗೆ ಸೇರಿದವರು. ಕೋಟದವರಂತೆ ತಮಗೂ ಗುರುಮಠವಿಲ್ಲ ಎಂದು ನಂಬಿ ಬದುಕಿದವರು. ಇಡಿಯ ಗ್ರಾಮಕ್ಕೆ ಗ್ರಾಮವೆ ಈ ನಂಬಿಕೆಗೆ ವಿರುದ್ಧವಾಗಿ ಸಿಡಿದೆದ್ದಿತು. ತಮಗೊಬ್ಬ ಮಾರ್ಗದರ್ಶಕ ಗುರು ಬೇಕು ಎಂದು ನಿರ್ಧರಿಸಿತು. ಪರಿಣಾಮವಾಗಿ ಕೋಟೇಶ್ವರದ ಸಮಗ್ರ ಮಂದಿ ಸ್ಮಾರ್ತ ಸಂಪ್ರದಾಯವನ್ನು ತೊರೆದು, ವಾದಿರಾಜರ ವ್ಯಕ್ತಿತ್ವದಿಂದ ಪ್ರಭಾವಿತರಾಗಿ ವಾದಿರಾಜರ ಶಿಷ್ಯರಾಗಿ ಮಾಧ್ವ ದೀಕ್ಷೆಯನ್ನು ಪಡೆದರು.
ವಾದಿರಾಜ ಗುಳ್ಳ
ಮಟ್ಟಿಯ ಬ್ರಾಹ್ಮಣರದು ಇನ್ನೊಂದೇ ಕಥೆ. ಯಾವುದೋ ಕ್ಷುದ್ರ ಕಾರಣಕ್ಕಾಗಿ ಪರಿಸರದ ಬ್ರಾಹ್ಮಣ ವರ್ಗ ಅವರನ್ನು ದೂರ ಇಟ್ಟಿತ್ತು.
ಗುಂಪನ್ನು ಒಡೆದು, ಜಗಳ ಮುಂದುವರಿಸಿ ಖುಶಿಪಡುವ ಕ್ಷುದ್ರ ಬುದ್ಧಿಯ ಮಂದಿಯನ್ನು ಸಮಾಜದಲ್ಲಿ ನಾವಿಂದೂ ನೋಡಬಹುದು. ಇಂಥವರು ಮಠಗಳಲ್ಲೂ ಸೇರಿಕೊಂಡು ತಮ್ಮ ಕೊಳಕು ಬುದ್ಧಿಯಿಂದ ಮಠದ ಪರಿಸರವನ್ನೂ ಕೆಡಿಸಿಬಿಡುತ್ತಾರೆ. ಪ್ರೀತಿಯ ಸಾಮರಸ್ಯವನ್ನು ಹಂಚಬೇಕಾದ ಮಠಗಳು ಇಂಥವರಿಂದ ಜಗಳದ ಕೇಂದ್ರಗಳಾಗಿ ಬಿಡುತ್ತವೆ. ಒಡಕಿನ ಬೀಜವನ್ನು ಬಿತ್ತುವ ಹೊಲಸು ಹೊಲಗಳಾಗಿ ಬಿಡುತ್ತವೆ.
ವಾದಿರಾಜರು ಇಂಥ ಕೊಳಕು ರಾಜಕೀಯ, ಮಠದ ಹತ್ತಿರ ಸುಳಿಯದಂತೆ ನೋಡಿಕೊಂಡರು. ಅವರು ಸಾಮರಸ್ಯದ ಸಂದೇಶವನ್ನು ಸಾರಿದರು. ಒಡೆದ ಬಗೆಯನ್ನು , ಮನೆಯನ್ನು ಒಂದುಗೂಡಿಸುವ ಹರಿಕಾರರಾದರು. ಅದಕೆಂದೆ ಅವರು ಮಟ್ಟಿಯ ಬ್ರಾಹ್ಮಣರನ್ನು ಮಡಿವಂತರ ತೆಕ್ಕೆಗೆ ಸೇರಿಸಿದರು. ಅಚ್ಚರಿಯೆಂದರೆ, ಆ ಕಾಲದಲ್ಲಿ ಅಭೋಜ್ಯವೆಂದು ನಂಬಲಾಗಿದ್ದ ಗುಳ್ಳದ ಬೀಜವನ್ನು ಅವರಿಗಿತ್ತು ಅದನ್ನು ಬೆಳೆಸುವಂತೆ ಪ್ರೋತ್ಸಾಹಿಸಿದರು. ಅವರು ಬೆಳೆದ ಗುಳ್ಳದ ರುಚಿಯಾದ ಹುಳಿಯನ್ನು ಶ್ರೀಕೃಷ್ಣನಿಗೆ ಸಮರ್ಪಿಸಿದರು. ಅಭೋಜ್ಯವಾಗಿದ್ದ ಗುಳ್ಳ (ಸಂಸ್ಕೃತದ ವೃಂತಾಕ) ವಾದಿರಾಜರಿಂದ ಭೋಜ್ಯವಾಯಿತು. ಪರ್ಯಾಯದ ಅಡುಗೆಯ ಅವಿಭಾಜ್ಯ ಅಂಗವಾಯಿತು. ಪಂಡಿತರು, ಧರ್ಮಶಾಸ್ತ್ರದಲ್ಲಿ ಹೊಸ ಅಮೆಂಡ್‌ಮೆಂಟ್ ಸೇರಿಸಿದರು. "ಬದನೆ ನಿಷಿದ್ಧವಾದರೂ ವಾದಿರಾಜ ಗುಳ್ಳ ತಿನ್ನಬಹುದು. ಏಕೆಂದರೆ ವಾದಿರಾಜರು ತನ್ನ ತಪೋಬಲದಿಂದ ಅದನ್ನು ಪಾವನಗೊಳಿಸಿದ್ದಾರೆ’.
ಮಟ್ಟಿಯ ಬ್ರಾಹ್ಮಣರು ಗೆದ್ದರು. ಮಟ್ಟಿಯ ಗುಳ್ಳವೂ ಗೆದ್ದಿತು. ವಾದಿರಾಜರ ಮನೋಬಲ-ತಪೋಬಲ ಎರಡೂ ಅನನ್ಯವಾದದ್ದು. ಸಂಪ್ರದಾಯವಾದಿಗಳ ಜತೆ ನವ್ಯ ಕವಿಗಳೂ ಹಾಡಿದರು -
ತಿನ್ನಬೇಡಿ ಗುಳ್ಳ
ತಿಂದರೆ ವಾದಿರಾಜಗುಳ್ಳ
***
ಶ್ರೀವಾದಿರಾಜಗುರುಸ್ತುತಿಯನ್ನು ವಿರಚಿಸಿದ ಶ್ರೀವೇದವೇದ್ಯತೀರ್ಥರು ಶ್ರೀವಾದಿರಾಜತೀರ್ಥಯತಿಗಳ ಆಶ್ರಮ ಶಿಷ್ಯರು. ಶ್ರೀವಾದಿರಾಜತೀರ್ಥರು 1600 ನೇ ಇಸ್ವಿಯಲ್ಲಿ ವೈಕುಂಠಕ್ಕೆ ಪ್ರಯಾಣ ಬೆಳೆಸಿದರು. ಶ್ರೀವಾದಿರಾಜತೀರ್ಥರು ಮೂಕ ಶಿಷ್ಯನೊಬ್ಬನಿಂದ ಬರೆಯಿಸಿದ ಶ್ರೀಸ್ವಾಪ್ನವೃಂದಾವನಾಖ್ಯಾನದಲ್ಲಿ ತಿಳಿಸಿದಂತೇ ಅವರ ದೇಹವು ವೃಂದಾವನದಲ್ಲಿ ಇಂದಿಗೂ ಜೀವಂತವಾಗಿಯೇ ಇದೆ ಎಂಬ ವಿಷಯದ ಬಗ್ಗೆ ಶ್ರೀವೇದವೇದ್ಯತೀರ್ಥರು ಕುತೂಹಲಗೊಂಡು ಶ್ರೀವಾದಿರಾಜರ ವೃಂದಾವನದ ಮುಂದೆ ನಿಂತು ಅವರನ್ನು ನೋಡಲಿಚ್ಛೆಯುಳ್ಳವರಾಗಿ ಪ್ರಾರ್ಥನೆ ಮಾಡಿಕೊಂಡರು. ಅಂದು ರಾತ್ರಿ ಕನಸಿನಲ್ಲಿ ಶ್ರೀವಾದಿರಾಜರು ಕಾಣಿಸಿಕೊಂಡು ಮರುದಿನ ಮುಂಜಾನೆ ಶುದ್ಧಸ್ನಾನಾದಿಗಳನ್ನು ಮುಗಿಸಿ ಒದ್ದೆ ಬಟ್ಟಿಯಲ್ಲಿ ಬಾ ಎಂದು ವೇದವೇದ್ಯರಿಗೆ ಆಜ್ಞೆ ಮಾಡಿದರು.
ಮರುದಿನ ಪ್ರಾತಃಕಾಲ ಶ್ರೀವೇದವೇದ್ಯತೀರ್ಥರು ಗುರುಗಳ ಆಜ್ಞೆಯಂತೇ ಒದ್ದೆ ಬಟ್ಟೆಯಲ್ಲಿ ವೃಂದಾವನದ ಮುಂದೆ ಬಂದು ನಿಂತರು. ಶ್ರೀವಾದಿರಾಜರು ತಮ್ಮ ಶಿಷ್ಯರಾದ ಭೂತರಾಜರಿಗೆ ತಮ್ಮ ವೃಂದಾವನದ ಮೇಲೆ ಹಾಸಿರುವ ಕಲ್ಲನ್ನು ತೆರೆಯಲು ಸೂಚಿಸಿದರು. ಭೂತರಾಜರು ಕಲ್ಲನ್ನು ಸರಿಸಿದಾಗ ಶ್ರೀವೇದವೇದ್ಯರನ್ನು ಕರೆದು ತಮ್ಮ ಸಾಕ್ಷಾತ್ ದರ್ಶನವನ್ನು ದಯಪಾಲಿಸಿದರು. ಎರಡು ನಿಮಿಷಗಳ ದರ್ಶನದ ನಂತರ ಮತ್ತೆ ಭೂತರಾಜರಿಗೆ ಆಜ್ಞಾಪಿಸಿ ವೃಂದಾವನದ ಕಲ್ಲನ್ನು ಮುಚ್ಚಿಸಿ ಮತ್ತೆ ಧ್ಯಾನಮಗ್ನರಾದರು.
ಶ್ರೀವಾದಿರಾಜರು ಋಜುದೇವತೆಗಳು. ಋಜು ದೇವತೆಗಳಿಗೆ ಸಾಮಾನ್ಯ ನರರ ದೇಹದಲ್ಲಿದ್ದಂತೇ ರಜೋರುಧಿರ ಮುಂತಾದವುಗಳು ಇರುವುದಿಲ್ಲ, ಹೀಗಾಗಿ ಅವರ ಪ್ರಾಕೃತಶರೀರವು ಅವರ ಆತ್ಮವು ಅವರ ಶರೀರವನ್ನು ತ್ಯಜಿಸಿದಾಗಲೂ ಹಾಗೇ ಇತ್ತು.
ಶ್ರೀವೇದವೇದ್ಯರು ತಮ್ಮ ಗುರುಗಳನ್ನು ವೃಂದಾವನದಲ್ಲಿ ನೋಡಿದ್ದಂತೆಯೇ ಇರುವ ಚಿತ್ರವನ್ನು ಬರೆಯಿಸಿದರು. ಅದೇ ಚಿತ್ರದ ಮರುಚಿತ್ರಣವೇ ಈ ಕೆಳಗಿನ ಚಿತ್ರ ಎಂದು ಇಲ್ಲಿ ಕೊಡಲಾಗಿದೆ.
ಕಲಿಯುಗದ ಮನುಷ್ಯನ ಆಯುಷ್ಯವಾದ 120 ವರ್ಷಗಳನ್ನು ಭೂಮಿಯಲ್ಲಿ ಕಳೆದು ಇಂದಿಗೂ ಶ್ರೀವಾದಿರಾಜಯತಿಗಳು ಸಶರೀರರಾಗಿ ಸೋದೆಯಲ್ಲಿ ಇರುವ ವೃಂದಾವನದಲ್ಲಿ ಇಂದಿಗೂ ಇದ್ದು ಭಕ್ತರ ಅಭೀಷ್ಟಗಳನ್ನು ಕಾಮಧೇನು ಕಲ್ಪವೃಕ್ಷ ಮತ್ತು ಚಿಂತಾಮಣಿಗಳಂತೇ ಪೂರೈಸುತ್ತಿದ್ದಾರೆ. ಆತ್ಮರೂಪದಿಂದ ಪುಷ್ಪಕವಿಮಾನವನ್ನೇರಿ ಇಂದಿಗೂ ಶ್ರೀಹಯವದನನ ನಿವಾಸವಾದ ಶ್ವೇತದ್ವೀಪದಲ್ಲಿ ಶ್ರೀಹಯವದನ ದೇವರ ಸೇವೆಯನ್ನು ಮಾಡುತ್ತಿದ್ದಾರೆ.
ಓಂ ನಮೋ ಭಗವತೇ ಹಯಾನನಾಯ||
****
ವಾದಿರಾಜರು
ಕನ್ನಡ ಹರಿದಾಸ ಸಾಹಿತ್ಯದ ಧೀಮಂತ ಹರಿಕಾರರೂ,ವೇದಾಂತ ವಾಙ್ಮಯದ ಮೇರುವೂ,ಆಶು ಕವಿಗಳೂ, ಉಕ್ತಿ ಚತುರರೂ, ಚತುಃಷಷ್ಠಿ ವಿದ್ಯಾವಿಶಾರದರೂ, ಮಾನವ ಆಯುಷ್ಯದ ಪರಿಪೂರ್ಣ ಕಾಲಾವಧಿ ಬಾಳಿ ತೋರಿದ ಸಂತರೂ,ನಿರಂತರ ಹಯಗ್ರೀವೋಪಾಸಕರೂ ಆದ ಉಡುಪಿಯ ಅಷ್ಟಮಠಗಳಲ್ಲೊಂದಾದ ವಿಷ್ಣು ತೀರ್ಥರ ಸತ್ಪರಂಪರಾಗತ ಸೋದೇ ಮಠದ ಸರ್ವಾಂಗೀಣ ಉದ್ಧಾರ ಕರ್ತರೂ, ಶ್ರೀಕೃಷ್ಣಪರಮಾತ್ಮನ ರಜತ ಪೀಠಪುರ ಸನ್ನಿಧಿಯಲ್ಲಿ ದ್ವಂದ್ವ ಮಠಗಳನ್ನು ಮಾಡಿ ಪರ್ಯಾಯಾವಧಿಯನ್ನು ಎರಡು ವರುಷಗಳಿಗೇರಿಸಿ ವಿಶೇಷ ಅನುಕೂಲತೆ ಮಾಡಿದ ಕ್ರಾಂತಿಕಾರರೂ ಆದ ವಾದಿರಾಜ ಗುರು ಸಾರ್ವಭೌಮರಿಗೆ ಆರಾಧನಾಂಗಭೂತವಾದ ವಾಕ್ಕುಸುಮಾಂಜಲಿ. ಉಡುಪಿಯ ಶ್ರೀಕೃಷ್ಣನ ಪೂಜಾ ಪರಿಸರದಲ್ಲಿ ಕನ್ನಡದ ಸರಳ ಸುಂದರ ಕೀರ್ತನೆಗಳನ್ನು ಹಾಡುವ ಸತ್ಸಂಪ್ರದಾಯವನ್ನು ಸಮರ್ಥವಾಗಿ ಪ್ರಾರಂಭಿಸಿದ ಪ್ರವರ್ತಕ ಮನೀಷಿಗಳು ವಾದಿರಾಜರು. ಭಗವಂತನ ದಶಾವತಾರದ ವರ್ಣನೆಯನ್ನು ವೈವಿಧ್ಯಪೂರ್ಣವಾಗಿ ವಿಶಿಷ್ಟಶೈಲಿಯಲ್ಲಿ ಬಿತ್ತರಿಸುವ ವಾದಿರಾಜರ ಕೃತಿಗಳ ಚಮತ್ಕಾರ ಅಪೂರ್ವ. ಲೀಲಾಜಾಲವಾಗಿ ಹೊಸ ಬೀಸಿನಲ್ಲಿ ಸುಂದರ ಸುಮನೋಹರವಾಗಿ ಕಾವ್ಯಕಲೆಯನ್ನು ಅವರು ಅರಳಿಸುವ ಪರಿ ಅನನ್ಯ.
ಪುರಂದರದಾಸರು, ವ್ಯಾಸರಾಜರು, ಕನಕದಾಸರು ಮುಂತಾದವರ ಸಮಕಾಲೀನರಾಗಿದ್ದು ಉಡುಪಿಯ ಶ್ರೀಕೃಷ್ಣನ ಸೇವೆಯಲ್ಲಿ ಪರಿವ್ರಾಜಕರಾಗಿ ಪರಮ ಪೂಜ್ಯರೆನಿಸಿದರು. ತಾವಿದ್ದ ಪರಿಸರದಲ್ಲೆಲ್ಲಾ ಧಾರ್ಮಿಕ ಜಾಗೃತಿಯ ನವಚೇತನವನ್ನು ಮೂಡಿಸಿ ದಾರ್ಶನಿಕ ಧೃವತಾರೆಗಳೆನಿಸಿದರು. ಉಪಾಸ್ಯಮೂರ್ತಿ ಹಯಗ್ರೀವ ದೇವರ ಮಹಿಮಾತಿಶಯಗಳನ್ನು ಕಂಡು 'ಹಯವದನ' ಅಂಕಿತದಿಂದ ಸಹಸ್ರ ಸಹಸ್ರ ಕೀರ್ತನೆಗಳನ್ನು ಕನ್ನಡ ಜನರ, ಭಗವದ್ಭಕ್ತರ ಒಡಲಿಗೆ ಹಾಕಿದ ಪುಣ್ಯಪುರುಷರು ಶ್ರೀ ವಾದಿರಾಜರು. ದಾಸ-ವ್ಯಾಸ ಪರಂಪರೆಗಳ ಅದ್ಭುತ ಪ್ರತಿಭೆ ಪಾಂಡಿತ್ಯಗಳ ಮಹಾನ್ ಪ್ರತೀಕವಾಗಿದ್ದ ವಾದಿರಾಜರು ಕನ್ನಡ ಹಾಗೂ ತುಳು ಭಾಷೆಯಲ್ಲಿ ಕೀರ್ತನೆ ಹಾಗೂ ಪಾಡ್ದನಗಳನ್ನು ಜನ ಸಾಮಾನ್ಯರ ಆತ್ಮೋದ್ಧಾರಕ್ಕಾಗಿ ರಚಿಸಿ, ತಾವೇ ಅವನ್ನು ಹಾಡಿ, ಹಾಡಿಸಿ, ಶತಮಾನಗಳ ಕಾಲ ಜನ ಸಮುದಾಯವನ್ನು ತಣಿಸುತ್ತಿರುವ ಯತಿಶ್ರೇಷ್ಠರು. ಇವರ ಸುಳಾದಿ, ಉಗಾಭೋಗ, ದೇವರ ನಾಮಗಳು ದಿವ್ಯ ಭಾವಗೀತೆಯ ಸೊಬಗಿನಲ್ಲಿ ಸಂಚಾರಿಯಾಗುತ್ತವೆ.ಯಾಗುತ್ತಿವೆ, ತತ್ವಭೋದಕ ದಿವ್ಯಾಮೃತವಾಗಿ ಅವು ಪರಿಣಮಿಸಿವೆ. ತಪಸ್ಸು, ವಿದ್ಯೆ, ವಿರಕ್ತಿ, ಭಗವದ್ಭಕ್ತಿ, ಹಾಗೂ ವಾತ್ಸಲ್ಯಗಳಿಂದ ಯತಿಶ್ರೇಷ್ಠರೆನ್ನಿಸಿದ ವಾದಿರಾಜರು ಕನ್ನಡ ಸಂಸ್ಕೃತಿಗೆ, ಸಾಹಿತ್ಯ ಸಂಗೀತಗಳಿಗೆ, ದರ್ಶನಕ್ಕೆ, ಸಮಾಜದ ಸಂಘಟನೆಗೆ, ಸದಾಚಾರದ ಸಾಮೂಹಿಕ ಪುನರುದ್ದೀಪನಕ್ಕೆ ಸಲ್ಲಿಸಿರುವ ಸೇವೆ ಚಿರಸ್ಮರಣೀಯ. ಸಾಮಾಜಿಕ ಪ್ರಜ್ಞೆ ಹಾಗೂ ಸಮಾಜದ ಬಗ್ಗೆ ಅಪಾರ ಕಳಕಳಿಯನ್ನು ತಮ್ಮ ಕೃತಿಗಳಿಂದ, ಕಾರ್ಯಗಳಿಂದ ಮೆರೆದಿರುವ ವಾದಿರಾಜರು ವಾಸ್ತವ ಪ್ರಜ್ಞೆಯೆಡೆಗೆ ಜನರನ್ನು ಕರೆದೊಯ್ಯುವುದರಲ್ಲಿ ನಿಷ್ಣಾತರು.ಮತ್ತು ಎಂದೂ ಹಿಂತಿರುಗಿದವರಲ್ಲ.ಭಗವನ್ನಾಮಸ್ಮರಣೆ ಮನುಷ್ಯನಿಗೆ ಉತ್ತಮ ಹಿನ್ನೆಲೆಯನ್ನು ನಿರ್ಮಿಸಬಲ್ಲುದೆಂದು ಹೇಳಿ 'ಪ್ರಾತಃ ಕಾಲದಲ್ಲೆದ್ದು ಪಾರ್ಥಸಾರಥಿಯನು ಪ್ರೀತೀಲಿ ನೆನೆದರೆ ಪ್ರೀತನಾಗುವ ಹರಿ, ಮಾತು ಮಾತಿಗೆ ಕೇಶವ ನಾರಾಯಣ ಮಾಧವ ಎನಬಾರದೆ' ಎಂಬ ಸಂದೇಶ ನೀಡಿದವರು. ಅವರ ದಶಾವತಾರ ವರ್ಣನೆಗಳಂತೂ ಭಗವಂತನ ಹತ್ತವತಾರಗಳ ಮುತ್ತಿನ ಮಣಿಹಾರ. ದಶಾವತಾರದ ಕಾವ್ಯರಚನೆಗೆ ಕೈಯಿಟ್ಟೊಡನೆಯೇ ಸ್ವಾದಿಯ ವಾದಿರಾಜರು ಮೈಮರೆಯುತ್ತಾರೆ. ಕಾವ್ಯಸರಸ್ವತಿ ಗೆಜ್ಜೆ ಕಟ್ಟಿಕೊಂಡು ಅವರ ಭಾವಕ್ಕೆ ತಕ್ಕಂತೆ ಹೆಜ್ಜೆ ಹಾಕುತ್ತಾ ನರ್ತಿಸುವ ನಾದ ವೈಖರಿ ಅಸಾಧಾರಣ. ವೈದಿಕ ಸಂಸ್ಕೃತಿಯ ಪುನರುತ್ಥಾನದಲ್ಲಿ ವಾದಿರಾಜರ ಪಾತ್ರ ಬಹಳ ಹಿರಿದು. ತತ್ವಜ್ಞಾನದ ಪ್ರಸಾರ. ವೈಷ್ಣವ ಸಿದ್ಧಾಂತದ ಪ್ರಬಲ ಪ್ರತಿಷ್ಠಾಪನೆಯಲ್ಲಿ ಅದ್ಭುತ ಕ್ರಿಯಾಶಕ್ತಿಯಾದವರು ವಾದಿರಾಜರು. ತಪಶ್ಯಕ್ತಿ, ಮಂತ್ರಸಿದ್ಧಿ ಹಾಗೂ ನಿಶ್ಚಿತ ತತ್ವಜ್ಞಾನಗಳ ತ್ರಿವೇಣಿ ಸಂಗಮವಾಗಿದ್ದ ವಾದಿರಾಜರಿಗೆ ರಾಜ ಮಹಾರಾಜರುಗಳೇ ನಾ ಮುಂದು ತಾ ಮುಂದು ಎಂದು ಬಂದು ಸೇವೆ ಮಾಡುತ್ತಿದ್ದರು. ಸೋದೆಯ ಅರಸಪ್ಪ ನಾಯಕನಿಗಂತೂ ವಾದಿರಾಜರೇ ಸರ್ವಸ್ವ. ವಾದಿರಾಜರನ್ನು ಅನೇಕ ಸಾಮ್ರಾಟ ಸಾಮಂತರುಗಳು ಪ್ರಸಂಗಾಭರಣತೀರ್ಥ, ಷಡ್ದರ್ಶನ ಷಣ್ಮುಖ, ಸರ್ವಜ್ಞಕಲ್ಪ, ಕವಿಕುಲತಿಲಕ ಮುಂತಾದ ಮಹತ್ವದ ಪ್ರಶಸ್ತಿ ಗೌರವಗಳನ್ನು ನೀಡಿ ಗೌರವಿಸಿದರು. ಗೋವೆಯ ದೈವಜ್ಞ ಬ್ರಾಹ್ಮಣರನ್ನು ಅವರ ಸ್ವರೂಪ ಗ್ರಹಿಸಿ ಮುದ್ರಾಧಾರಣೆ ಮಾಡಿ ಚಕ್ರಾಂಕನ ನೀಡಿ ಮಾಧ್ವ ತತ್ವಜ್ಞಾನದ ಮುಮುಕ್ಷ ಗಳಾಗುವಂತೆ ಅನುಗ್ರಹಿಸಿದರು. ಧರ್ಮಸ್ಥಳ ಮುಂತಾದೆಡೆಗಳಲ್ಲಿ ಈಶ್ವರನನ್ನು ಅರ್ಚಿಸಿ ಪ್ರತಿಷ್ಠಾಪನೆ ಮಾಡಿದ ಇವರ ಸಾಧನೆಯು ವೈಷ್ಣವರು ಶಿವದ್ವೇಷಿಗಳೆಂಬ ಭ್ರಮೆಯನ್ನು ಸಂಪೂರ್ಣ ನಿವಾರಿಸಿತು. ಇವರು ಪಾಠ ಪ್ರವಚನಗಳನ್ನು ನಿರಂತರ ನಡೆಸಿ ಸಿದ್ಧಾಂತ ಪರಂಪರೆಯನ್ನು ಮುಂದುವರೆಸಬಲ್ಲ ಅನೇಕ ಶಿಷ್ಯರನ್ನು ಅರಳಿಸಿದರು. ಇವರ ಸೋದರರೂ ಆನಂತರ ಭಂಡಾರಕೇರಿ ಪೀಠವನ್ನಲಂಕರಿಸಿದವರೂ, ಇವರ ಯುಕ್ತಿಮಲ್ಲಿಕಾ ಗ್ರಂಥಕ್ಕೆ ಟೀಕೆ ಬರೆದವರೂ ಆದ ಸುರೋತ್ತಮತೀರ್ಥರು; ಇವರ ರುಕ್ಮಿಣೀಶವಿಜಯ, ತೀರ್ಥಪ್ರಬಂಧಗಳಿಗೆ ಉತ್ಕೃಷ್ಟ ವ್ಯಾಖ್ಯಾನಗಳನ್ನು ಬರೆದಿರುವ ನಾರಾಯಣಾಚಾರ್ಯರು; ಇವರ ಜೀವನಚರಿತ್ರೆಯನ್ನು ಹೃದಯಂಗಮವಾಗಿ ಚಿತ್ರಿಸಿರುವ ವೃತ್ತರತ್ನ ಸಂಗ್ರಹಕಾರ ರಘುನಾಥಾಚಾರ್ಯರೂ ಈ ಪರಂಪರೆಯಲ್ಲಿ ಪಲ್ಲವಿಸಿದರು.ಶಾಸ್ತ್ರೀಯ ಸಾಹಿತ್ಯದ ಇತಿಹಾಸದಲ್ಲಿ ಮುಖ್ಯ ಮೈಲಿಗಲ್ಲಾಗಿರುವ 'ಯುಕ್ತಿಮಲ್ಲಿಕಾ' ವಾದಿರಾಜರ ಶಾಸ್ತ್ರಪ್ರಭುತ್ವ ಹಾಗೂ ಸಾಹಿತ್ಯಪಟುತ್ವಗಳ ಎತ್ತರ - ಬಿತ್ತರಗಳನ್ನು ದಿಟ್ಟವಾಗಿ ಮೂಡಿಸುವ ಕೃತಿ. ಶ್ರೀಮನ್ನ್ಯಾಯಸುಧಾ ಹಾಗೂ ತತ್ವಪ್ರಕಾಶಿಕಾ ಕೃತಿಗಳಿಗೆ ವಾದಿರಾಜರು ಬರೆದಿರುವ 'ಗುರ್ವರ್ಥದೀಪಿಕೆ' ಎಂಬ ಟೀಕಾಗ್ರಂಥ ವೇದಾಂತಸಾರದ ರಹಸ್ಯಗಳನ್ನೆಲ್ಲಾ, ಸುಧಾ ಪ್ರಮೇಯಗಳನ್ನೆಲ್ಲಾ ಸಂಪೂರ್ಣ ತಿಳಿಸಿ ಕೊಡುವ ಸುಂದರ ಗ್ರಂಥ. ಅನಂದತೀರ್ಥರ ಜ್ಞಾನ ದಿಗಂತಗಳಿಗೆ ಹಿಡಿದಿಟ್ಟ ಕನ್ನಡಿಯಂತೆ ಕಂಗೊಳಿಸುತ್ತಿರುವ ವಾದಿರಾಜರ 'ಮಹಾಭಾರತ ತಾತ್ಪರ್ಯನಿರ್ಣಯ'ದ ಟಿಪ್ಪಣಿ ಸರಳತೆಯ ಸಾಕ್ಷಾತ್ಕಾರ. ವಾದಿರಾಜರ ವೇದವೇದಾಂತಗಳ ವಿಕ್ರಮದ ಬೌದ್ಧಿಕ ಹಿರಿಮೆಗೆ ಹಾಗೂ ಅವರ ವಾದಕೌಶಲ್ಯ ವಾಗ್ವೈಖರೀ, ವಿಷಯ ವಿನ್ಯಾಸ ಪಾಟವಗಳಿಗೆ ನಿತ್ಯ ನಿದರ್ಶನವೆನ್ನಿಸುವಂತಹ ಕೃತಿಗಳು - 'ಸರಸಭಾರತೀವಿಲಾಸ' ಹಾಗೂ 'ತೀರ್ಥಪ್ರಬಂಧ'.
ವಾದಿರಾಜರು ಪ್ರಯಾಗದಲ್ಲಿರುವ ಬ್ರಹ್ಮದೇವರ ಸಂಧ್ಯಾಮಂಟಪದಲ್ಲಿ ಧ್ಯಾನಪುಳಕಿತ ಮೂರ್ತಿಗಳಾಗಿ ಮೈಮರೆತು ಕುಳಿತಿದ್ದಾಗ ವೇದವ್ಯಾಸದೇವರೇ ಅವರಿಗೆ ದರ್ಶನವಿತ್ತು ವಾದಿರಾಜರ ತಾಯಿ ಹರಿಸಿಕೊಂಡಿದ್ದ ಲಕ್ಷಾಲಂಕಾರವನ್ನು ಹೇಳಿ, ಮಹಾಭಾರತದ ಲಕ್ಷ ಶ್ಲೋಕಗಳ ಕಠಿಣ ತಾತ್ಪರ್ಯವನ್ನು ವಿವರಿಸಿ ಬರೆದು ಅರ್ಪಿಸಿದರೆ ಆ ಹರಕೆ ತೀರಿದಂತಾಗುವುದೆಂದು ನುಡಿದರು. ಆಗ ವಾದಿರಾಜರು ವ್ಯಾಸಭಾರತದ ಹಿನ್ನೆಲೆಯಲ್ಲಿ ಕೋಶಗಳನ್ನು ತಮ್ಮದೇ ಆದ ನಿರೂಪಣ ನೈಪುಣ್ಯದಿಂದ 'ಲಕ್ಷಾಲಂಕಾರ'ವಾಗಿ ರಚಿಸಿ ಉಡುಪಿಗೆ ಬಂದು ಶ್ರೀಕೃಷ್ಣನಿಗೆ ಸಮರ್ಪಣ ಮಾಡಿದ ವಾದಿರಾಜರು ಪ್ರಾತಃಸ್ಮರಣೀಯರಾಗಿದ್ದಾರೆ.
ಭೂಯಿಷ್ಠಾಂತೇ ನಮ ಉಕ್ತಿಂ ವಧೇಮ.
ಕಾಮಧೇನುರ್ಯಥಾಪೂರ್ವಂ
ಸರ್ವಾಭೀಷ್ಟವರಪ್ರಧಾ
ತಥಾ ಕಲೌ ವಾದಿರಾಜ
ಶ್ರೀಪಾದೋಭೀಷ್ಟದಃ ಸತಾಮ್
ಶ್ರೀಮಧ್ವೇಶಾರ್ಪಣಮಸ್ತು
***
ಒಂದು ಸಾರಿ ಶ್ರೀವಾದಿರಾಜತೀರ್ಥರು (1480 ರಿಂದ 1600) ಸಂಚಾರ ಮಾಡುತ್ತ ಪಂಢರಪುರಕ್ಕೆ ಬಂದರು. ಅಲ್ಲಿ ಒಂದು ದೇವಾಲಯದಲ್ಲಿ ದಿನವೂ ಪೂಜೆ ಮಾಡುತ್ತಾ ತಂಗಿದ್ದರು. ದಿನವೂ ಪೂಜೆ ಮಾಡುತ್ತಾ ಇರುವಾಗ ಮಂದಿರದಿಂದ ಶ್ವೇತ ಬಣ್ಣದ ಕುದುರೆಯೊಂದು ಹೊರಗೆ ಬಂದು ಪಕ್ಕದ ಹೊಲದಲ್ಲಿ ಬೆಳೆದಿರುವ ಕಡಲೆಯನ್ನು ತಿನ್ನುತ್ತಿತ್ತು. ಹೊಲದ ಮಾಲಿಕನಿಗೆ ಕಡಲೆಯ ಪೈರು ಕಡಿಮೆಯಾಗುತ್ತಿರುವುದು ಗಮನಕ್ಕೆ ಬಂತು. ಒಂದು ದಿನ ಕಾವಲಿಗೆ ಕುಳಿತ ಮಾಲಿಕನು ಕುದುರೆಯು ಕಡಲೆಯನ್ನು ತಿನ್ನುತ್ತಿರುವುದನ್ನು ನೋಡಿ ಅದನ್ನು ಹಿಂಬಾಲಿಸಿಕೊಂಡು ಹೋದನು. ಕುದುರೆಯು ಶ್ರೀವಾದಿರಾಜರು ಪೂಜಿಸುತ್ತಿರುವ ಮಂದಿರದಲ್ಲಿ ಬಂದು ಅದೃಶ್ಯವಾಯಿತು. ಮಾಲಿಕನು ಸ್ವಾಮಿಗಳಿಗೆ ಇದನ್ನು ವಿವರಿಸಿದನು. ಯತಿಗಳಿಗೆ ಕುದುರೆಯು ಬೇರೇ ಯಾರೂ ಅಲ್ಲ, ಶ್ರೀಹಯವದನ ನಾಮಕ ಪರಮಾತ್ಮನೇ ಎಂದು ತಿಳಿಯಿತು. ಶ್ರೀವಾದಿರಾಜತೀರ್ಥರು ಮಾಲಿಕನ ಜೊತೆ ಆತನ ಹೊಲವನ್ನು ನೋಡಲು ಹೋದರು. ದಾರಿಯಲ್ಲಿ ಯತಿಗಳು "ಅಶ್ವಧಾಟಿ" ಎಂಬ ಛಂದಸ್ಸಿನಿಂದ ಯುಕ್ತವಾದ ದಶಾವತಾರ ಸ್ತುತಿ ಎಂಬ ಸಂಸ್ಕೃತಕಾವ್ಯವನ್ನು ರಚಿಸಿದರು.
ಹೊಲವನ್ನು ತಲುಪಿ ಅಲ್ಲಿ ನೋಡಿದಾಗ ಹೊಲದಲ್ಲಿ ಕುದುರೆಯು ತಿಂದಿದ್ದ ಕಡಲೆಯ ಪೈರು ಬಂಗಾರದ್ದಾಗಿತ್ತು. ಹೊಲದ ಮಾಲಿಕನು ಯತಿಗಳಿಗೆ ಸಾಷ್ಟಾಂಗವೆರಗಿ ತನ್ನ ಹೊಲವನ್ನು ಯತಿಗಳ ಪಾದಾರವಿಂದಗಳಿಗೆ ಅರ್ಪಿಸಿದನು. ಯತಿಗಳು ಅದನ್ನು ಸ್ವೀಕರಿಸದೇ ಹೊಲದಲ್ಲಿ ಬೆಳೆಯುವ ಕಡಲೆಯ ಒಂದು ಭಾಗವನ್ನು ಮಾತ್ರ ಹೊಲದ ಮಾಲಿಕನಿಗೆ ಸೋದೆಯ ವಾದಿರಾಜಮಠಕ್ಕೆ ಒಪ್ಪಿಸಲು ಸೂಚಿಸಿದರು.
ಯತಿಗಳು ಅಂದಿನಿಂದ ಶ್ರೀಹಯವದನ ದೇವರಿಗೆ ಪ್ರತಿದಿನ ಕಡಲೆಬೇಳೆಯಿಂದ ತಯಾರಿಸಿದ ಹಯಗ್ರೀವ ಮಡ್ಡಿಯನ್ನು ತಾವೇ ತಯಾರಿಸಿ ಬಾಣಲೆಯನ್ನು ತಮ್ಮ ತಲೆಯ ಮೇಲೆ ಇಟ್ಟುಕೊಂಡು ಶ್ರೀಹಯವದನ ದೇವರಿಗೆ ನಿತ್ಯವೂ ನೈವೇದ್ಯವನ್ನು ಕೊಡುತ್ತ ಬಂದರು. ಶ್ರೀಹಯವದನ ದೇವರೂ ಕೂಡ ಕುದುರೆಯ ರೂಪದಲ್ಲಿ ಬಂದು ಶ್ರೀವಾದಿರಾಜತೀರ್ಥರ ತಲೆಯ ಮೇಲೆ ಇರುವ ಹಯಗ್ರೀವವನ್ನು ಅವರ ಭುಜಗಳ ಮೇಲೆ ಕಾಲುಗಳನ್ನು ಇಟ್ಟು ತಿನ್ನಲು ಪ್ರಾರಂಭಿಸಿದರು. ಇಂದಿಗೂ ಸಹ ಶ್ರೀವಾದಿರಾಜತೀರ್ಥರ ಮೂಲ ವೃಂದಾವನವಿರುವ ಸೋದೆಯಲ್ಲಿ ಹಯಗ್ರೀವಮಡ್ಡಿಯನ್ನು ತಯಾರಿಸಲು ಬೇಕಾದ ಕಡಲೆಬೇಳೆಯು ಪಂಢರಪುರದ ಅದೇ ಹೊಲದಿಂದಲೇ ಬರುತ್ತದೆ. ಪ್ರತಿದಿನವೂ ಸೋದೆಯಲ್ಲಿ ನಿವಾಸವಾಗಿರುವ ಶ್ರೀಹಯವದನ ದೇವರಿಗೆ ಹಯಗ್ರೀವದ ನೈವೇದ್ಯವನ್ನು ಮಾಡಲಾಗುತ್ತದೆ.
ಓಂ ಶ್ರೀಹಯಾನನಾಯ ನಮಃ ||
एक बार श्रीवादिराजतीर्थयति जी (1480 से 1600) देश संचार करते करते पंढरपुर नगर में चले गये । वहाँ के एक मंदिर में यति जी ने नित्य पूजापाठ का कार्य शुरु किया । प्रतिदिन सुबह पूजा करते समय उस मंदिर से एक सफेद घोडा बाहर निकलकर पास के एक खेत में उगे हुए चनें खाता रहता था । पूजा समाप्त होने पर पुनः मंदिर में लौट कर अदृश्य हो जाता रहता था । खेत के मालिक ने एक दिन खेत जा कर देखा तो उस के चने के पौधें काट कर भूमी पर गिरे दिखायी दिये । उस ने स्वयं खेत की रक्षा के लिये बैठने का निर्णय लिया ।
अगले दिन जब खेत के मालिक सुबह पहरा दे रहा था, तब पुनः एक सफेद घोडा वहाँ चनें खाता हुआ दिखायी दिया । खेत के मालिक ने घोडे को नहीं मारा, परं तु जब घोडा लौट कर मंदिर की ओर गया तो वह मंदिर में गया और यति जी से प्रार्थना किया कि उन के घोडे ने उस के खेत में उगे हुए चनें और पौधों को खा लिया है । यति जी को दिव्यदृष्टि से पता चला कि वह घोडा उन का स्वामी श्रीहयवदन जी ही है, उन्हों ने खेत के मालिक से कितना चना और पौधा नुक्सान हुआ है वह दिखाने को कहा । मालिक यति जी को अपने खेत की ओर ले जा रहा था । तभी यति जी मार्ग में अपने प्रिय श्रीहयवदन जी तथा श्रीमन्महाविष्णु जी की गुणगान से भरे दशावतारस्तुति नाम के एक अद्वितीय गीतकाव्य की रचना की ।
जब यति और मालिक खेत पर पहुंचे तो मालिक के होश उड गये । जहाँ जहाँ घोडे ने खेत में उगे हुए चनें तथा पौधे खाये थें, वहाँ वहाँ उन के स्थान पर सोने के चनें तथा पौधें दिखायी दिये । मालिक झट से यति जी के चरणों पर गिरा तथा अपने संपूर्ण खेत यति जी के हाथों सौंप दिया । यति जी ने खेत लेने से इनकार किया, बदले में उस खेत में उगनेवाले चनें को कर्नाटक के शिरसी नाम के नगर के पास स्थित सोंदा नाम के क्षेत्र में हर वर्ष भेजने का आदेश दिया ।
तब से प्रतिदिन श्रीवादिराजतीर्थ जी अपने भगवान श्रीहयवदन जी को चनें तथा गूड से मिश्रित मधुर खाद्य जिसे "मड्डी" कहते हैं उस का भोग तयार कर के पात्र को अपने सर पर रखकर श्रीहयवदन जी को खिलाना शुरु किया । श्रीहयवदन नामक महाविष्णु जी भी प्रतिदिन अपने भक्त श्रीवादिराजयति जी के करकमलों से तयार किये गये मड्डी के भोग को उन के कंधों पर अपने पांव रखकर स्वीकार करना शुरु किया । जब तक यति जी भूलोक पर रहें तब तक उन्हों ने प्रतिदिन इसी तरह अपने प्रिय भगवान श्रीहयवदन जी को भोग चढाया ।
ॐ श्रीहयाननाय नमः ।।
***
ಸೊಂದಾ ಪುರದ ನಿವಾಸಿಗಳಾದ ಭಕ್ತರ ಬೇಡಿದ ಇಷ್ಟಾರ್ಥಗಳನ್ನು ವಿಶೇಷವಾಗಿ ಅನುಗ್ರಹಿಸಿ, ಸುಮಾರು 112 ವರ್ಷ ಸಂಪೂರ್ಣ ಸನ್ಯಾಸ ಜೀವನ, 120 ವರ್ಷ ಪೂರ್ಣ ಜೀವನ ನಡೆಸಿ ಸಶರಿರ ಪಂಚ ವೃಂದಾವನದಲ್ಲಿ ವಿರಾಜಮಾನ ರಾಗಿರುವ, ಅಷ್ಟ ಮಠಗಳು ಮತ್ತು ಉಡುಪಿಯ ಅಭಿವೃದ್ದಿಯನ್ನು ಮಾಡಿದ, ಭಾವಿಸಮೀರರಾದ ಶ್ರೀ ಶ್ರೀ ವಾದಿರಾಜ ಗುರುಸಾರ್ವ ಭೌಮರ ಆರಾಧನ ಮಹೋತ್ಸವ.
ವಾದಿರಾಜರು ರಚಿಸಿರುವ ಗ್ರಂಥಗಳು-
೧. ರುಕ್ಮಿಣೀಶ ವಿಜಯ
೨. ತೀರ್ಥ ಪ್ರಭಂದ
೩. ಸ್ವಪ್ನ ವೃಂದಾವನಾಕ್ಯಾನ
೪. ಸರಸ ಭಾರತಿ ವಿಲಾಸ
೫. ಕವಿ ಕದಂಬ ಕಂಠಭೂಷಣ
೬. ಮಹಾಭಾರತ ಲಕ್ಷಾಲಂಕರ ಟೀಕಾ
೭. ತಲವಕಾರೋಪನಿಷದ್ ಭಾಷ್ಯ ಟೀಕಾ
೮. ತೈತ್ತಿರೀಯೋಪನಿಷತ್ ಭಾಷ್ಯ ಟೀಕಾ
೯. ಕಾಠಕೋಪನಿಷತ್ ಭಾಷ್ಯ ಟೀಕಾ
೧೦. ಅಥರ್ವಣೋಪನಿಷತ್ ಭಾಷ್ಯ ಟೀಕಾ
೧೧. ಮಂಡೂಕೋಪನಿಷತ್ ಭಾಷ್ಯ ಟೀಕಾ
೧೨. ತಂತ್ರಸಾರ ಟೀಕಾ
೧೩. ಮಹಾಭಾರತ ಪ್ರಸ್ಥಾನ
೧೪. ಷಟ್ಪ್ರಷ್ಣೋಪನಿಷತ್ ಭಾಷ್ಯ ಟೀಕಾ ಟಿಪ್ಪಣಿ
೧೫. ಮಹಾಭಾರತ ತಾತ್ಪರ್ಯ ನಿರ್ಣಯ ಭಾವ ಪ್ರಕಾಶಿಕ
೧೬. ತತ್ವಪ್ರಕಾಶಿಕ ಗುರುವಾರ್ಥ ದೀಪಿಕಾ
೧೭. ಈಶಾವಾಸ್ಯೋಪನಿಷತ್ ಭಾಷ್ಯ ಟೀಕಾ ಪ್ರಕಾಶನ
೧೮. ಗೀತಾ ಭಾಷ್ಯ ಟಿಪ್ಪಣಿ
೧೯. ನ್ಯಾಯಸುಧಾ ಗುರುವಾರ್ಥ ದೀಪಿಕಾ
೨೦. ಯುಕ್ತಿ ಮಲ್ಲಿಕಾ
ಸ್ತೋತ್ರಗಳು
೧. ರಮೇಶ ಸ್ತುತಿ
೨. ದಶಾವತಾರ ಸ್ತೋತ್ರ
೩. ದಶಾವತಾರ ಸ್ತುತಿ
೪. ಹಯವದನ ಅಷ್ಟಕ
೫. ನರಹರಿ ಅಷ್ಟಕ
೬. ರೌಪ್ಯ ಪೀಠ ಕೃಷ್ಣ ಸ್ತುತಿ
೭. ಹಯಗ್ರೀವ ಪಂಚಕ
೮. ಹಯಗ್ರೀವ ಧ್ಯಾನ ಪ್ರಕರಣ
೯. ಹಯಗ್ರೀವ ಸ್ತುತಿ
೧೦. ಹಯಗ್ರೀವ ಸಂಪದ ಸ್ತೋತ್ರ
೧೧. ಶ್ರೀ ಕೃಷ್ಣ ಸ್ತವನ
೧೨. ಧೀ ಶುದ್ದಿ ಸ್ತೋತ್ರ
೧೩. ವರಾಹ ಹಯವದನ ಸ್ತೋತ್ರ
೧೪. ಆಪಾದ ಸ್ತೋತ್ರಂ
೧೫. ಉಕ್ತಿ ಪ್ರಯುಕ್ತಿ ಸ್ತೋತ್ರಂ
೧೬. ಅಕ್ಷ ಪಂಚಕಂ
೧೭. ವರಾಹ ಪಂಚಕಂ
೧೮. ಶ್ರೀರಾಮ ಕವಚಂ
೧೯. ಶ್ರೀರಾಮ ದಶಕಂ
೨೦. ಶ್ರೀರಾಮ ಪಂಚಕಂ
೨೧. ಅವತಾರತ್ರಯ ಸ್ತೋತ್ರಂ
೨೨. ಸ್ವಪ್ನ ಪದ್ಯಂ
೨೩. ವೇದವ್ಯಾಸ ವರ್ಣನಮ್
೨೪. ವೇದವ್ಯಾಸ ಸ್ತೋತ್ರಂ
೨೫. ಶ್ಲೋಕತ್ರಯಂ
೨೬. ಚತುರ್ವಿಂಷಷ್ಟಿ ಮೂರ್ತಿ ಭೇದ ಸ್ತೋತ್ರಂ
೨೭. ವೇಂಕಟೇಶ ಮಂಗಳಾಷ್ಟಕಂ
೨೮. ಋಣ ವಿಮೋಚನ ಸ್ತೋತ್ರ
೨೯. ಪ್ರಾಥನ ದಶಕಂ
೩೦. ವಿಷ್ಣು ಸ್ತುತಿ
೩೧. ತ್ರಿವಿಕ್ರಮ ಸ್ತೋತ್ರ
೩೨. ಹರ್ಯಾಷ್ಟಕ
೩೨. ಹಯಸ್ಯ ದಶಕ
೩೩. ನವಗ್ರಹ ಸ್ತುತಿ
೩೪. ಹರಿಭಕ್ತ್ಯಾಷ್ಟಕ
೩೫. ಗುರು ಸ್ತುತಿ
೩೬. ಹಿತೋಪದೇಶಂ
೩೭. ಶ್ರೀಪಾದರಾಜಾಷ್ಟಕಂ
೩೮. ದುರ್ಗಾ ಸ್ತವನ
೩೯. ಮಧ್ವಾಷ್ಟಕಂ
೪೦. ವಿಭೀಷಣ ಹನುಮದ್ ಸಂವಾದ ರೂಪ ವಾಯುಸ್ತುತಿ
೪೧. ಅಷ್ಟಮಹಿಷಿ ಯುಕ್ತ ಕೃಷ್ಣ ಸ್ತೋತ್ರಂ
೪೨. ಮಧ್ವಮುನಿ ಪ್ರಾತಪಷ್ಟಕ
ಕನ್ನಡ ಕೃತಿಗಳು
೧. ವೈಕುಂಠ ವರ್ಣನೆ
೨. ಲಕ್ಷ್ಮೀ ಶೋಭಾನೆ
೩. ಕೀಚಕ ವಧ
೪. ನಮಸ್ಕಾರ ಸ್ತೋತ್ರ
೫. ನೈವೆದ್ಯ ಪ್ರಕರಣ
೬. ಸ್ವಪನ ಪದ
೭. ನಾರದ ಕೊರವಂಜಿ
೮. ಭಾಗವತ ಸಾರ ಕೀರ್ತನ
೯. ಸ್ವಪ್ನ ಗದ್ಯ
೧೦. ಭ್ರಮರ ಗೀತೆ
೧೧. ಗುಂಡ ಕ್ರಿಯೆ
೧೨. ಪಂಚಭೇದ ಪ್ರಾರಂಭ
೧೩. ಕೆಲವು ಉಗಾಭೋಗಗಳು
ತಪೋ ವಿದ್ಯಾ ವಿರಕ್ತ್ಯಾದಿ ಸದ್ಘುಣೌ ಘಾಕರಾನಹಮ್|
ವಾದಿರಾಜ ಗುರೂನ್ ವಂದೇ ಹಯಗ್ರೀವ ದಯಾಶ್ರಯನ್ |🙏🙏🙏
ತಪೋ ವಿದ್ಯಾ ವಿರಕ್ತ್ಯಾದಿ ಸದ್ಘುಣೌ ಘಾಕರಾನಹಮ್ |
ವಾದಿರಾಜ ಗುರೂನ್ ವಂದೇ ಹಯಗ್ರೀವ ದಯಾಶ್ರಯನ್ ||
***
Om Sri vadiraja ya na maha: 🌹
ReplyDelete