Tuesday 1 January 2019

ವಾದಿರಾಜರು 02 vadirajaru 02



ಗುರುಮಖಿಲಗುಣಜ್ಞಂ ಸದ್ಗುಣೈಕಾಧಿವಾಸಂ |
ಶಮದಮಪರಿನಿಷ್ಠಂ ಸತ್ವನಿಷ್ಠಂ ವರಿಷ್ಠಮ್ ||
ಸಕಲಸುಜನಶಿಷ್ಟಂ ನಿತ್ಯನಿರ್ಧೂತ ಕಷ್ಟಂ |
ಹಯಮುಖಪದನಿಷ್ಠಂ ಮಾಂ ಭಜಂತು ಪ್ರಪನ್ನಾಃ ||
*****



ಮಾಘ ಶುದ್ಧ ದ್ವಾದಶಿ ವಾದಿರಾಜರಸ್ವಾಮಿಗಳು ಅವತರಿಸಿದ ದಿನ ಈ ಮಹಾನುಭಾವರು ಹುಟ್ಟುತ್ತಲೆ ಮಹಿಮೆ ತೋರಿಸಿದ ಮಹಾನುಭಾವರು ಇವತ್ತಿಗು ತೋರಿಸುತ್ತಿದ್ದಾರೆಹ. ಇವರ ಪೂರ್ವಾಶ್ರಮದ ತಂದೆ ತಾಯಿಗಳು  ರಾಮಾಚಾರ್ಯ ಹಾಗೂ ಗೌರಿದೇವಿ ಇದ್ದದ್ದು ಕುಂದಾಪುರ ಸಮೀಪದ ಆನೆಗುಡ್ಡೆ ಮದುವೆ ಆಗಿ ತುಂಬಾ ವರ್ಷಗಳು ಕಳೆದರೂ ಮಕ್ಕಳು ಆಗದೆ ಪರಿತಪಿಸಿದರು ಆವಾಗ ಅಲ್ಲಿಗೆ ಶ್ರೀ ವಾಗೀಶ ತೀರ್ಥರು ಚಾತುರ್ಮಾಸ್ಯ ವ್ರತ ಕೈಗೊಳ್ಳಬೇಕು ಅಂತ ಬಂದರು ಈ ದಂಪತಿಗಳು ಅವರನ್ನು ಪ್ರಾರ್ಥಿಸಿದರು ಆವಾಗ ಶ್ರೀವಾಗೀಶ ತೀರ್ಥರು ಹೇಳಿದರು ನಿಮಗೆ ಮಗು ಆಗುತ್ತದೆ ಆದರೆ ಅದನ್ನ ನಮಗೆ ಕೊಡಬೇಕು ಅಂತ ಹೇಳಿದರು ದಂಪತಿಗಳ ಮನಸ್ಸಿಗೆ ದುಃಖ ಆಗಬಾರದು ಅಂತ ಶ್ರೀವಾಗೀಶ ತೀರ್ಥರು ಹೇಳಿದರು ಮಗು ಮನೆಯ ಹೊರಗೆ ಹುಟ್ಟಿದರೆ ಅದು ನಮಗೆ ಸೇರಿದ್ದು ಒಳಗೆ ಹುಟ್ಟಿದರೆ ನಿಮಗೆ ಸೇರಿದ್ದು ತುಂಬಾ ಎಚ್ಚರಿಕೆ ವಹಿಸಿದರು ಗರ್ಭಿಣಿ ಮನೆಯ ಆಚೆ ಕಾಲೆ ಹಾಕದಹಾಗೆ ನೋಡಿಕೊಂಡರು ಒಂದು ಮಾಘ ಶುದ್ಧ ದ್ವಾದಶಿ ಸಾಧನ ದ್ವಾದಶಿ ಊಟಕ್ಕೆ ಕೂತಿದಾರೆ ಒಂದು ಗೋವು ಬಂದು ಬೆಳೆದ ಬೆಳೆಯನ್ನೆಲ್ಲಾ ತಿಂತಾ ಇತ್ತು ಇವರು ಅದನ್ನ ಓಡಿಸಲು ಹೋದರು ಅಲ್ಲೆ ಇವರಿಗೆ ಹೆರಿಗೆ ಆಯಿತು ದೇವರ ಸಂಕಲ್ಪ ಅಂತ ಮಗುವನ್ನ ಮಠಕ್ಕೆ ಕೊಟ್ಟರು ಬಂಗಾರದ ತಟ್ಟೆಯಲ್ಲಿ ಮಗುವನ್ನು ಮಠಕ್ಕೆ ತಂದರು ಶ್ರೀವಾಗೀಶ ತೀರ್ಥರೆ ಸ್ವತಃ ತಾವೇ ಮಗುವಿನ ಮೈ ತೊಳೆದರು ಭೂವರಾಹ ಅಂತ ನಾಮಕರಣ ಮಾಡಿದರು ನಿತ್ಯ ಆಚಾರ್ಯರು ವಿಷ್ಣುತೀರ್ಥರಿಗೆ ಕೊಟ್ಟ ಭೂವರಾಹ ದೇವರ ಪ್ರತಿಮೆಗೆ ಅಭಿಷೇಕ ಮಾಡಿದ ಹಾಲನ್ನೆ ಕುಡಿದು ಬೆಳೆದರು ಮುಂದೆ ೫ ವರ್ಷಕ್ಕೆ ಉಪನಯನ ೮ ವರ್ಷಕ್ಕೆ ಸನ್ಯಾಸ ದೀಕ್ಷೆ ಕೊಟ್ಟು ಶ್ರೀವಾದಿರಾಜತೀರ್ಥರು ಅಂತ ನಾಮಕರಣ ಮಾಡಿದರು ಮುಂದೆ ದಾಖಲೆಗಳ ಸರಮಾಲೆ ಮಾಡಿ ೧೨೦ ವರ್ಷಗಳ ಕಾಲ ಬದುಕಿ ಸೋದೆಯಲ್ಲಿ ಜೀವಂತವಾಗಿ ವೃಂದಾವನಸ್ಥರಾದರು.

ತಮ್ಮ ವಿಶ್ವತೋಮುಖವಾದ ವೈದುಷ್ಯದಿಂದ ವಿದ್ವದ್ವರೇಣ್ಯರಾದ ಶ್ರೀವಾದಿರಾಜಗುರುಸಾರ್ವಭೌಮರ ಜಯಂತಿಯ ಪರ್ವಕಾಲ ಮಾಘ ಶುದ್ಧ ದ್ವಾದಶಿ. ಶ್ರೀಹಯಗ್ರೀವ, ಶ್ರೀತ್ರಿವಿಕ್ರಮರೂಪೀ ಶ್ರೀಹರಿಯ ಅನನ್ಯವಾದ ಉಪಾಸನೆಯಿಂದ, ಯುಕ್ತಿಮಲ್ಲಿಕಾ, ರುಗ್ಮಿಣೀಶವಿಜಯ, ಗುರ್ವರ್ಥದೀಪಿಕಾ, ತೀರ್ಥಪ್ರಬಂಧ ಮೊದಲಾದ ಸಂಸ್ಕ್ರತಗ್ರಂಥಗಳು, ವೈಕುಂಠವರ್ಣನೆ, ಅವತಾರತ್ರಯಮಧ್ವಸುವ್ವಾಲಿ, ಲಕ್ಷ್ಮೀಶೋಭಾನೆ ಸೇರಿದಂತೆ ಅನೇಕ ಕನ್ನಡಕೃತಿಗಳು, ಅಸಂಖ್ಯಾತಸ್ತೋತ್ರಗಳು, ತುಳುವಿನಲ್ಲಿ ಕೃತಿರಚನೆ, ಉಡುಪಿಯಲ್ಲಿ ಪರ್ಯಾಯದ ಪುನರ್ ವ್ಯವಸ್ಥೆ, ತಮ್ಮ ಅಸದೃಶ ತಪ:ಶಕ್ತಿಯಿಂದ ಆರ್ತರನ್ನು ಪೊರೆಯುವ ದೀಕ್ಷೆ, 120 ವರ್ಷಗಳು ಭುವಿಯಲ್ಲಿ ಇರುವ ಪ್ರತಿದಿನವೂ, ಸಶರೀರವಾಗಿ ಬೃಂದಾವನ ಪ್ರವೇಶ ಮಾಡಿದ ನಂತರವೂ ತಮ್ಮ ಹರಿ ಭಕ್ತಿಯಿಂದ, ಅನನ್ಯವಾದ ತಪೋಬಲದಿಂದ ಭಕ್ತರನ್ನು ಪೊರೆಯುತ್ತಿರುವ ಭಾವೀಸಮೀರ ಶ್ರೀವಾದಿರಾಜ ಪ್ರಭೋ ಪಾಹಿಮಾಂ, ರಕ್ಷಮಾಂ

ಕೋಲಹಯಾಸ್ಯ ಪಾದ ಜಲಜ ಮಧುಪ
ಅಲವಬೋಧ ಮತಜಲಧಿ ಉಡುಪ 
ಸಲಹೋ ನಿತ್ಯ ವಾದಿರಾಜ ಮುನಿಪ II
ಶ್ರೀಲಕುಮೀಶನ ಲಕ್ಷಾಲಂಕಾರದಿ
ಅಲಂಕರಿಸಿ ಮೆರೆದೆ ಮನಿವರ
ಕಳೆಯೋ ಮನದ ವ್ಯಾಕುಲವI
ಸುಖತೀರ್ಥರರುಹಿದ ಮುಕುತಿಶಾಸ್ತ್ರವ 
ಯುಕುತಿಮಲ್ಲಿಕೆಯಲಿ ಸಾಧಿಸಿ
ಕಾಕುಮತಿಗಳ ಜರಿದೆ ಸೂಕರಾಸ್ಯನ ದಯದಿI

ಶ್ರೀಮಧ್ವಮುನಿಗಳು ಪ್ರತಿಪಾದಿಸಿದ ಶ್ರೀವೇದವ್ಯಾಸ ಸಮ್ಮತವಾದ ತತ್ತ್ವವಾದವನ್ನು ದಿಗಂತ ವಿಶ್ರಾಂತವಾಗಿಸಿದ ಮಹಾನುಭಾವರಲ್ಲಿ ಶ್ರೀವಾದಿರಾಜಗುರುಸಾರ್ವಭೌಮರು ಮೂರ್ಧನ್ಯರು. ಗಂಗಾಸಲಿಲ ಪ್ರವಾಹದಂತೆ ನಿರರ್ಗಳವಾದ ತಮ್ಮ ವಾಗ್ವೈಖರಿಯಿಂದ ಸಂಸ್ಕೃತ, ಕನ್ನಡ ಭಾಷೆಗಳೆರಡರಲ್ಲೂ ಅನ್ಯಾದೃಶ ಸಾಧನೆಯನ್ನು ಮಾಡಿದ ಮಹಾನುಭಾವರು ಶ್ರೀರಾಜರು. ತಮ್ಮ ಯುಕ್ತಿಮಲ್ಲಿಕಾ, ಸರಸಭಾರತೀ ವಿಲಾಸ, ತೀರ್ಥಪ್ರಬಂಧ, ರುಗ್ಮಿಣೀಶವಿಜಯ, ಹರಿಭಕ್ತಿಲತಾ, ಉಪನಿಷದ್ಭಾಷ್ಯ ಟೀಕಾ, ಅಸಂಖ್ಯಾತ ಸ್ತೋತ್ರಗಳು, ವೈಕುಂಠ ವರ್ಣನೆ, ಗುಂಡಕ್ರಿಯೆ, ಲಕ್ಷ್ಮೀ ಶೋಭಾನೆ, ಅವತಾರತ್ರಯ ಸುವ್ವಾಲಿ ಮೊದಲಾದ ಕನ್ನಡದ ದೀರ್ಘಕೃತಿಗಳು, ಕನ್ನಡದಲ್ಲಿ ರಚಿಸಿದ ಅಮೂಲ್ಯ ಕೃತಿಗಳ ಮೂಲಕ ವಾಙ್ಮಯ ಲೋಕದ ಮಹಾತಪಸ್ವಿಗಳೆಸಿಸಿದ ಶ್ರೀವಾದಿರಾಜರು ಭಕ್ತರ ಪಾಲಿನ ಕಾಮಧೇನು, ಶ್ರೀಹಯಾಸ್ಯನನ್ನು ಅನುಪಮರೀತಿಯಲ್ಲಿ ಒಲಿಸಿ ಸೋದೆಕ್ಷೇತ್ರದಲ್ಲಿ ನೆಲೆನಿಂತ ಭಾವೀಸಮೀರ ಶ್ರೀವಾದಿರಾಜಗುರುಸಾರ್ವಭೌಮರು ಭೂಮಿಯಲ್ಲಿ ಅವತರಿಸಿದ ಪರಮಪವಿತ್ರವಾದ ದಿನ ಮಾಘ ಶುದ್ಧ ದ್ವಾದಶಿ.
ಕುದುರೆಯ ವದನನ ಮುದದಿ ಭಜಿಪ
ಮೋದಮುನಿಯ ಮತ ಮಹೋದಧಿಗೆ 
ವಿಧುವಿನಂದದಿ ರಾಜಿಪ
ವಾದಿರಾಜ ಗುರುವೆ ಪದದ್ವಂದ್ವಗಳಿಗೆರಗುವೆ 
ಖೇದಕಳೆದು ಶ್ರೀದನಂಘ್ರಿ ಧ್ಯಾನವನ್ನು 
ಹೃದಯದೊಳಗೆ ಕರುಣಿಸೋII
**************

"ರಾಮಾಚಾರ್ಯರೇ!! ನಿಮ್ಮ ದಂಪತಿಗಳ ಸೇವೆ ಭಗವಂತನಿಗೆ ಮುಟ್ಟಿದೆ..
ಶ್ರೀ ಭೂವರಾಹನ ಅನುಗ್ರಹ ದಿಂದ,ನಿಮಗೊಬ್ಬ ಪುತ್ರ ಜನಿಸುತ್ತಾನೆ..ಆದರೆ
ಜನಿಸಿದ ಆ ಪುತ್ರ ನಮ್ಮ ಶ್ರೀ ಭೂವರಾಹನ ಸೇವೆ ಗಾಗಿ ಮತ್ತು ಸಂಸ್ಥಾನ ಆಳುವದಕ್ಕಾಗಿ ಮತ್ತು ಲೋಕದ ಜನರ ಉದ್ಧಾರಕ್ಕಾಗಿ ಅವನ ಅವತಾರ.ಇದು ಭಗವಂತನ ಸಂಕಲ್ಪ. ಮತ್ತು ಬಾಲಕನು ಹುಟ್ಟುವಾಗ ಭೂ ಸ್ಪರ್ಶವಾಗದಂತೆ ತಂದು ನಮಗೆ ಒಪ್ಪಿಸಬೇಕು".
ಶ್ರೀ ವಾಗೀಶತೀರ್ಥ ಗುರುಗಳ ಬಾಯಿಯಿಂದ ಬಂದ ಮಾತನ್ನು ಕೇಳಿ ದಂಪತಿಗಳಿಗೆ ಮಾತು ಬರದಾಯಿತು.
ಪುತ್ರ ಜನನವಾಗಬೇಕೆಂದು ದಂಪತಿಗಳು ಮಾಡದ ವ್ರತಗಳಿಲ್ಲ.ದೇವರಿಗೆ ಲಕ್ಷ ಆಭರಣ ಮಾಡಿಸುವೆ ಎಂದು ಅಂದುಕೊಂಡ ಹರಕೆ. ಇದಕ್ಕಾಗಿಯೇ?!!
ಅಯ್ಯೋ!! ವಿಧಿಯೇ!!ಕೈಗೆ ಬಂದ ತುತ್ತು ಬಾಯಿಗೆ ಬರದಂತೆ ಆಯಿತಲ್ಲ.
ಪುತ್ರ ಜನನವಾಗುತ್ತದೆ ಎಂದು ಸಂತಸ ಪಡಬೇಕೊ, ಅಥವಾ 
ಜನಿಸಿದ ಪುತ್ರನನ್ನು ಮಠಕ್ಕೆ ಒಪ್ಪಿಸಬೇಕಲ್ಲ ಎಂದು ದುಃಖ ಪಡಬೇಕೊ??
ಒಂದು ತಿಳಿಯದೆ ಮನದೊಳಗಡೆ ಈ ರೀತಿ ವಿಚಾರ ಮಾಡುತ್ತಾ ಕುಳಿತರು ಆ ದಂಪತಿಗಳು.
ಜ್ಞಾನಿಗಳಾದ ಶ್ರೀ ವಾಗೀಶ ತೀರ್ಥರು 
ರಾಮಾಚಾರ್ಯರೇ!! ಏಕೆ ಅಷ್ಟು ಚಿಂತೆ ಮಾಡುತ್ತೀರಿ..ಒಂದು ಕೆಲಸ ಮಾಡುವ.ನಿಮ್ಮ ಮಗ ನಿಮ್ಮ ಮನೆಯ ಒಳಗಡೆ ಜನಿಸಿದರೆ ನಿಮಗೆ ಸೇರಿದ್ದು..ಮನೆಯ ಹೊರಗಡೆ ಜನಿಸಿದರೆ ನಮಗೆ ಸೇರಿದ್ದು.ನಿಮಗೆ ಒಪ್ಪಿಗೆಯೆ.."..ಎಂದಾಗ
ಆ ದಂಪತಿಗಳು ಯೋಚನೆ ಮಾಡಿ
ಎಲ್ಲಿಯಾದರು ಮಗು ಮನೆಯಲ್ಲಿ ಬಿಟ್ಟು ಹೊರಗಡೆ ಜನಿಸುವದೇ!!.ಹಾಗೇ ಆಗಲಿ ಎಂದು ಮಾತು ಕೊಟ್ಟು ಮನೆಗೆ ಬಂದರು.
ಶ್ರೀ ಹರಿಯ ಸೇವೆ ಮಾಡಿದ ಫಲ ಮತ್ತು ಗುರುಗಳ ವಾಣಿಯಂತೆ ಗೌರಿದೇವಿಯು ಗರ್ಭಿಣಿ ಯಾದಳು.ಹೆಂಡತಿಗೆ ಮನೆಯ ಹೆಬ್ಬಾಗಿಲು ಸಹ ಆಚಾರ್ಯರು ದಾಟಿಸಲಿಲ್ಲ.
ನವ ಮಾಸ ತುಂಬಿತು.
ಅಂದು ಸಾಧನ ದ್ವಾದಶಿ.ಮಾಘಮಾಸದ ಶುಕ್ಲ ದ್ವಾದಶಿಯ ದಿನದಂದು ಬೇಗನೆ ಪೂಜಾದಿಗಳನ್ನು ಮುಗಿಸಿ ನಿಗದಿತ ಸಮಯದೊಳಗೆ ಪಾರಣೆ ಮಾಡಲು ಆಚಾರ್ಯರು ಭೋಜನಕ್ಕೆ ಕುಳಿತರು.ಪತಿಯ ಭೋಜನ ನಂತರ ಪತ್ನಿಯ ಭೋಜನದ ಪದ್ದತಿ ಗೌರಿದೇವಿಯದು.
ಹೀಗಿರುವಾಗ ಅವರ ಮನೆಯ ಮುಂದೆ ಬೆಳೆದು ನಿಂತ ಗದ್ದೆಯಲ್ಲಿ ಪೈರನ್ನು ತಿನ್ನಲು ಒಂದು ಆಕಳು ಕರುವಿನ ಸಮೇತ ಬಂದಿದೆ.ಗೌರಿದೇವಿಯು ನೋಡುತ್ತಾ ಪತಿಗೆ ಹೇಳುತ್ತಾರೆ.
ಇರುವ ಸ್ವಲ್ಪ ಬೆಳೆಗಳನ್ನು ತಿನ್ನಲು ಗೋವು ಬಂದಿದೆ.ಹೋಗಿ ಓಡಿಸಿ ಬರುತ್ತೇನೆ ಅಂತ.
ರಾಮಾಚಾರ್ಯರು ಎಂದು ಗರ್ಭಿಣಿ ಪತ್ನಿಯನ್ನು ಹೊರಗಡೆ ಕಳುಹಿಸಿದ ವರಲ್ಲ.ದೈವ ಪ್ರೇರಣೆಯಿಂದ 
ಗೌರಿ !!ಒಂದು ಸಣ್ಣ ಕೋಲನ್ನು ತೆಗೆದುಕೊಂಡು ಹೋಗಿ ಓಡಿಸು.ತುಂಬಾ ದೂರ ಹೋಗಬೇಡ.ಬೇಗನೆ ಪಾರಣಿ ಮುಗಿಸಿ ಬರುತ್ತೇನೆ ಅಂತ ಹೇಳುತ್ತಾರೆ.
ಅದರಂತೆ ಸಣ್ಣ ಕೋಲನ್ನು ತೆಗೆದುಕೊಂಡು ಆಕಳನ್ನು ಓಡಿಸಲು ಬಂದಾಗ ಅದು ತಕ್ಷಣ ಮಾಯವಾಗುತ್ತದೆ. ಇದ್ದಕ್ಕಿದ್ದಂತೆ ಪ್ರಸವ ವಾಗುವ ಸೂಚನೆ ಕಾಣುತ್ತವೆ. ಹಾಗೆ ಒಂದು ಕಡೆ ಕುಳಿತಾಗ ಶ್ರೀ ವಾಗೀಶ ಗುರುಗಳ ಆಜ್ಞೆ ಯಂತೆ  ಸ್ತ್ರೀಯರು ಪ್ರಸವ ಮಾಡಿಸಲು ಅಲ್ಲಿ ಬಂದಿರುತ್ತಾರೆ. ಗೌರಿದೇವಿಯು ಯಾವುದೇ ಪ್ರಸವ ವೇದನೆ ಇಲ್ಲದೇ ಸುಂದರವಾದ  ೩೨ಲಕ್ಷಣ ಭರಿತವಾದ ಮಗುವೊಂದಕ್ಕೆ ಜನ್ಮವಿತ್ತಳು...
ಅಂದು ಮಾಘ ಶುದ್ಧ ದ್ವಾದಶಿ.ಲಾತವ್ಯನಾಮಕ ಋಜುಗಳಾದ ಶ್ರೀ ವಾದಿರಾಜರು ಅವತರಿಸಿದ ಸುದಿನ.ಅವರೇ ನಮ್ಮ ಇಂದಿನ ಕಥಾ ನಾಯಕರು.
ಇದು ಯಾವುದು ರಾಮಾಚಾರ್ಯರು ತಿಳಿಯದು.ಬೇಗನೆ ಬಂದು ನೋಡುತ್ತಾರೆ. ಗೌರಿದೇವಿಯು ಗಂಡು ಮಗುವಿಗೆ ಜನ್ಮ ಕೊಟ್ಟಿದ್ದಾಳೆ.
ಜನಿಸಿದ ಮಗು ಭೂ ಸ್ಪರ್ಶವಾಗದೆ ಚಿನ್ನದ ಹರಿವಾಣದಲ್ಲಿ ಆ ಸ್ತ್ರೀಯರ ಕೈಯಲ್ಲಿ ಇದೆ..
ತಾಯಿ!! ನೀನೆಂತಹ ಪುಣ್ಯವತಿ.ಶ್ರೀ ವಾಗೀಶತೀರ್ಥ ರು ತಮ್ಮ ದಿವ್ಯ ಜ್ಞಾನ ದಿಂದ ವಿಷಯವನ್ನು ತಿಳಿದು ನಮಗೆ ಇಲ್ಲಿ ಕಳುಹಿಸಿದರು ಅಂತ  ಹೆಣ್ಣುಮಕ್ಕಳು ಹೇಳಿ ಶುದ್ದ ಸ್ನಾನವನ್ನು ಮಗುವಿಗೆ ಮಾಡಿಸಿ, ಪಲ್ಲಕ್ಕಿ ಒಳಗಡೆ ಚಿನ್ನದ ಹರಿವಾಣ ಸಮೇತವಾಗಿ ಕರೆದುಕೊಂಡು ಗುರುಗಳ ಬಳಿ ಬರುತ್ತಾರೆ..
ಇತ್ತ ಇನ್ನೊಂದು ಪಲ್ಲಕ್ಕಿ ಯಲ್ಲಿ ಗೌರಿದೇವಿಯನ್ನು ಮನೆಗೆ ತಲುಪಿಸುವರು.
ನಂತರ ಗುರುಗಳು ರಾಮಾಚಾರ್ಯರನ್ನು ಕರೆದು
ನೋಡಿದಿರಾ!!ಮಗು ನಿಮಗೆ ಸೇರಬೇಕು ಎಂದು ಗರ್ಭಿಣಿ ಯಾದ ನಿಮ್ಮ ಪತ್ನಿ ಯನ್ನು ಹೊರಗಡೆ ಸಹ ಕಳುಹಿಸಿದ ಹಾಗೆ ಪ್ರಯತ್ನ ಮಾಡಿದಿರಿ.ಆದರೂ ಭಗವಂತನ ಸಂಕಲ್ಪ. ಅದರಂತೆ ನಿಮ್ಮ ಪತ್ನಿಗೆ ಗದ್ದೆಯಲ್ಲಿ ಪ್ರಸವವಾಗುವಂತೆ ಆಯಿತು.ಇವನು ನಿಮ್ಮ ಮಗನಲ್ಲ. ಶ್ರೀ ಭೂವರಾಹದೇವರ ಮಗ.ನಮಗೆ ಒಪ್ಪಿಸುವಿರಾ!! ಎಂದು ಕೇಳುತ್ತಾರೆ.
ನಂತರ ಪುತ್ರ ವಾತ್ಸಲ್ಯ ವನ್ನು ತೊರೆದು ಗುರುಗಳಿಗೆ ದಂಪತಿಗಳು ಇಬ್ಬರು ಮಗುವನ್ನು ಸಮರ್ಪಣೆ ಮಾಡಿದರು.
ಶ್ರೀ ವಾಗೀಶ ತೀರ್ಥ ಗುರುಗಳು
ನಂತರ ಆ ಮಗುವಿಗೆ ಭೂವರಾಹ ಎಂದು ನಾಮಕರಣ ಮಾಡಲು ಹೇಳಿ ಕೆಲದಿನಗಳ ಕಾಲ ಬಾಲಕನ ಲೀಲೆಯಿಂದ ಸುಖವನ್ನು ಹೊಂದಿ,ನಂತರ ಮಗುವಿಗೆ ಮಾಡಬೇಕಾದ ಜಾತ ಕರ್ಮಗಳನ್ನು ಮಾಡಿ ಐದು ವರುಷದ ನಂತರ ನಮಗೆ ಒಪ್ಪಿಸಿ ಎಂದು ಹೇಳಿ‌
ನಿತ್ಯವು ಭೂವರಾಹ ದೇವರಿಗೆ ಅಭಿಷೇಕ ಮಾಡಿದ ಗೋ ಕ್ಷೀರ ವನ್ನು ಮಗುವಿಗೆ ಕಳುಹಿಸುತ್ತಾಇದ್ದರು.
ಹೀಗೆ ನಮ್ಮ ಶ್ರೀ ವಾದಿರಾಜ ಗುರುಗಳ ಜನನದ ವೃತ್ತಾಂತ ವನ್ನು ನನಗೆ ತಿಳಿದಷ್ಟು ಒಪ್ಪಿಸುವ ಪುಟ್ಟ ಪ್ರಯತ್ನ.
ಶ್ರೀ ವಾದಿರಾಜರು ಅಂತರ್ಯಾಮಿಯಾದ ಆ ಹಯವದನನು ಪ್ರೀತಿಯಾಗಲಿ.
ಶ್ರೀ ಕೃಷ್ಣಾರ್ಪಣಮಸ್ತು.
************

ವಾಧಿರಾಜರಿಂದ

ರುಕ್ಮಿಣೀಶ ವಿಜಯ, ಶ್ರೀಶಗುಣದರ್ಪಣ, ತಾಯಿಯ ಹರಕೆಯ ಲಕ್ಷಾಭರಣ ಗ್ರಂಥ ರಚನೆ

ವಾದಿರಾಜರ ಗ್ರಂಥಗಳಲ್ಲಿಲ ಮಾತುಗಳ ಸೊಗಸು ವಿಶಿಷ್ಟ ಗುಣ. ಹಯಗ್ರೀವ ದೇವರಲ್ಲಿ ವಾದಿರಾಜರಿಗೆ ತುಂಬಾ ಭಕ್ತಿ. ಅಶ್ವಧಾಟಿಯಲ್ಲಿ ಅವರು ರಚಿಸಿರುವ ಅನೇಕ ಕೃತಿಗಳನ್ನು ಹೇಳುತ್ತಿದ್ದರೆ-ಹಾಡುತ್ತಿದ್ದರೆ ಕೇಳುವವರ ಮನಸ್ಸಿನಲ್ಲಿ ಭಕ್ತಿ ಉಕ್ಕುತ್ತದೆ. ಸಾಮಾನ್ಯ ಜನರ ಮನಸ್ಸಿಗೆ ತಟ್ಟುವ ಹಾಗೆ ಸುಂದರವಾದ ಕೃತಿಗಳನ್ನು ಅವರು ಬರೆದರು; ಪಂಡಿತರು ಮೆಚ್ಚುವಂತೆಯೂ ಕಾವ್ಯವನ್ನು ಬರೆಯುವ ಶಕ್ತಿ ಅವರಿಗಿತ್ತು. ಅವರ ರುಕ್ಮಿಣೀಶ ವಿಜಯ ಎಂಬ ಕಾವ್ಯವನ್ನು ಮಹಾ ವಿದ್ವಾಂಸರೂ ಮೆಚ್ಚುತ್ತಾರೆ. ಇದನ್ನು ಅವರು ಬರೆದುದನ್ನು ಕುರಿತೇ ಒಂದು ಕಥೆ ಇದೆ.

ಮಾಘ ಎಂಬ ಕವಿ ಶಿಶುಪಾಲ ವಧೆ ಎಂಬ ಕಾವ್ಯವನ್ನು ಬರೆದ. ಶ್ರೀಕೃಷ್ಣನು ಶಿಶುಪಾಲನನ್ನು ಕೊಂದು ರುಕ್ಮಿಣಿಯನ್ನು ಮದುವೆಯಾದದ್ದು ಇದರ ಕಥೆ. ಇದನ್ನು ಅನೇಕ ವಿದ್ವಾಂಸರು ಹೊಗಳಿದರು. ಪೂನಾ ನಗರದಲ್ಲಿ ಈ ಕಾವ್ಯವನ್ನು ಆನೆಯ ಮೇಲಿಟ್ಟು ಮೆರವಣಿಗೆ ಮಾಡಿ ಗೌರವಿಸಲು ಏರ್ಪಾಟಾಗಿತ್ತು. ವಾದಿರಾಜರು ” ಈ ಕಾವ್ಯದಲ್ಲಿ ಅನೇಕ ದೋಷಗಳಿವೆ” ಎಂದರು. ಹಲವರಿಗೆ ಕೋಪ ಬಂದಿತು: ಇದಕ್ಕಿಂತ ಒಳ್ಳೆಯ ಕಾವ್ಯ ಇವರು ಬರೆಯಬಲ್ಲರೆ? ಎಂದು ಆಕ್ಷೇಪಣೆ ಮಾಡಿದರು. ವಾದಿರಾಜರು ಅದೇ ಕಥೆಯನ್ನು ತೆಗೆದುಕೊಂಡು ಸುಂದರವಾದ ಕಾವ್ಯ ಬರೆದರು. ಅಲ್ಲದೆ, ’ಶಿಶುಪಾಲವಧೆ’ ಎಂಬ ಹೆಸರಿನಲ್ಲಿ ಸಾವಿನ ಪ್ರಸ್ತಾಪ ಇದೆ: ಶ್ರೀಕೃಷ್ಣನ ಮದುವೆಯ ಕಥೆಯ ಹೆಸರಿನಲ್ಲಿ ಇದು ಬೇಡ ಎಂದು ರುಕ್ಮಿಣೀಶ ವಿಜಯ ಎಂದು ಮಂಗಳವನ್ನು ಸೂಚಿಸುವ ಹೆಸರನ್ನು ಕೊಟ್ಟರು. ಹದಿನೇಳೇ ದಿನಗಳಲ್ಲಿ ಕಾವ್ಯವನ್ನು ಮುಗಿಸಿದರು. ಇಲ್ಲಿ ಒಂದು ಸೊಗಸೆಂದರೆ ಒಂದೇ ವಾಕ್ಯಕ್ಕೆ ಬೇರೆ ಬೇರೆ ಅರ್ಥಗಳು ಇರುತ್ತವೆ ವಾಕ್ಯ ಓದಿದಾಗ ಈ ಹಲವು ಅರ್ಥಗಳು ಮನಸ್ಸಿಗೆ ಬರುತ್ತವೆ. ಪೂನಾ ನಗರದ ವಿದ್ವನ್ಮಣಿಗಳು ಅದನ್ನು ಪರಿಶೀಲಿಸಿ ತಲೆದೂಗಿ ಅದಕ್ಕೆ ವಿಶೇಷ ಮರ್ಯಾದೆಯನ್ನು ಮಾಡಿದರು. ಈ ಕಾವ್ಯ ವಾದಿರಾಜರು ಎಂತಹ ದೊಡ್ಡ ಕವಿಗಳು, ಅವರ ಭಕ್ತಿ ಎಷ್ಟು ಆಳವಾದದ್ದು ಎಂಬುದನ್ನು ತೋರಿಸುತ್ತದೆ.

ಮಹಾಭಾರತ ಲಕ್ಷಾಲಂಕಾರವೆಂಬ ಗ್ರಂಥ ಅಪೂರ್ವ ಇತಿಹಾಸ ಉಳ್ಳದ್ದಾಗಿದೆ. ತಾಯಿ ಗೌರಮ್ಮ ಗಂಡು ಮಗು ಹುಟ್ಟಿದರೆ ಭೂವರಾಹ ಸ್ವಾಮಿಗೆ ಲಕ್ಷಾಲಂಕಾರ ಮಾಡಿಸಿ ಸಮರ್ಪಿಸುವೆನೆಂದು ಹರಕೆ ಹೊತ್ತಿದ್ದಳಷ್ಟೆ? ಹರಕೆ ನಡೆಸಲು ಸಾಧ್ಯವೇ ಎಂಬ ಆಲೋಚನೆಯೇ ಮಾಡಲಿಲ್ಲ. ಮಗುವಿನ ಆಸೆಯಿಂದ ಮಾಡಿಕೊಂಡ ಹರಕೆಯಿದು. ದೇವರಿಗೆ ಲಕ್ಷಾಭರಣ ಮಾಡಿಸುವ ಚೈತನ್ಯ ಆ ಕುಟುಂಬಕ್ಕಿರಲಿಲ್ಲ. ಅದು ಹಾಗೇ ಉಳಿದಿತ್ತು. ಮಗ ಬಹು ಪ್ರಸಿದ್ಧ ಪಂಡಿತಾದ, ದೊಡ್ಡ ಪೀಠಾಧಿಪತಿಯಾದ, ಮಹಿಮಾವಂತನಾದ. ತಾಯಿಗೆ ಆದ ಸಂತೋಷ ಅಷ್ಟಿಷ್ಟಲ್ಲ. ಆಗ ತನ್ನ ಬಹು ದಿನಗಳಿಂದ ಉಳಿದಿದ್ದಲ ಹರಕೆಯ ವಿಷಯವನ್ನು ಮಗನಲ್ಲಿ ಹೇಳಿಕೊಂಡಳು. ವಾದಿರಾಜರು ಅಪೂರ್ವ ಶ್ರೇಷ್ಠ ರೀತಿಯಲ್ಲಿ ತಾಯಿಯ ಹರಕೆಯನ್ನು ಸಲ್ಲಿಸಿಕೊಟ್ಟರು.

ಮಹಾಭಾರತದಲ್ಲಿ ದೊಡ್ಡ ವಿದ್ವಾಂಸರಿಗೂ ಅರ್ಥವಾಗದ ಕೆಲವು ಭಾಗಗಳಿವೆ. ವಾದಿರಾಜರು ಈ ಭಾಗಗಳು ಅರ್ಥವಾಗುವಂತೆ ಒಂದು ಗ್ರಂಥವನ್ನೆ ಬರೆದು, ಅದನ್ನೇ ಭೂವರಾಹ ಸ್ವಾಮಿಗೆ ಅರ್ಪಿಸಿದರು. ಭಾರತವನ್ನು ಬರೆದ ಶ್ರೀ ವೇದವ್ಯಾಸರ ಹೃದಯವನ್ನು ಹೊರಗೆಡಹುವ ‌ಗ್ರಂಥವಾಯಿತು ಇದು. ವಾದಿರಾಜರು ಲಕ್ಷ ಆಭರಣಗಳನ್ನು ಮಾಡಿ ದೇವರಿಗೆ ಒಪ್ಪಸಬಹುದಾಗಿತ್ತು. ಆ ಶಕ್ತಿ ಅವರಿಗೆ ಇತ್ತು. ಅವರ ಕಾಲಕ್ಕೆ ಅವರ ಮಠ ಸಂಪತ್ತಿನಿಂದ ತುಂಬಿತ್ತು. ಎಷ್ಟೋ ಆಭರಣಗಳನ್ನು ಮಾಡಿಸಿ ಹಯವದನನನ್ನೂ ಭೂವರಾಹನನ್ನೂ ಅಲಂಕರಿಸಿ ಪೂಜಿಸಿದ್ದರು. ಆದರೆ ಮಹಾಭಾರತದಂತಹ ಬಹು ಪವಿತ್ರ ಗ್ರಂಥ ಜನರಿಗೆ ಅರ್ಥವಾಗುವಂತೆ ಮಾಡಿದರೆ ದೇವರಿಗೂ ಸಂತೋಷ, ಲಕ್ಷ ಆಭರಣಕ್ಕಿಂತ ಇಂತಹ ಸೇವೆಯಿಂದಲೇ ಭಗವಂತನಿಗೆ ತೃಪ್ತಿ ಎನ್ನಿಸಿತು ಅವರಿಗೆ. ಇವರ ಸೇವೆ ಹೊಸ ರೀತಿಯದು, ಜ್ಞಾನವೇ ಬೆಳಕು, ಜ್ಞಾನಕ್ಕೆ ಸಮಾನವಾದುದಿಲ್ಲ ಎಂಬುದನ್ನು ತೋರಿಸಿಕೊಡುವ ಸೇವೆ.

ಶ್ರೀ ಶ್ರೀಶಗುಣದರ್ಪಣ ಎಂಬುದು ಮಹಾಲಕ್ಷ್ಮೀ ಸ್ತುತಿ.ಇದನ್ನು ಈಗಲೂ ಸೋದೆಯ ತ್ರಿವಿಕ್ರಮ ದೇವರ ಗುಡಿಯಲ್ಲಿರುಮ ಮಹಾಲಕ್ಷ್ಮೀ ದೇವಿಗೆ ಕುಂಕುಮಾರ್ಚನೆ ಮಾಡುವಾಗ ಪಠಿಸುವ ಪದ್ಧತಿಯಿದೆ.


ಇದು ರಚನೆಯಾದುದು ಒಂದು ವಿಶಿಷ್ಟ ಸನ್ನಿವೇಶದಲ್ಲಿ. ಒಮ್ಮೆ ಕಡುಬಡವನೊಬ್ಬ ವಾದಿರಾಜರ ಬಳಿಗೆ ಬಂದು ದುಃಖ ದೈನ್ಯಗಳಿಂದ ತನ್ನ ದಾರಿದ್ರ್ಯ ರೋಗಕ್ಕೆ ಲಕ್ಷ್ಮೀಸ್ತುತಿಯೇ ಚಿಕಿತ್ಸೆ ಎಂದು ತಿಳಿದರು.  ತಾವೇ ಒಂದು ಸ್ತುತಿಯನ್ನು ರಚಿಸಿ, ಅವನಿಗೆ ಉಪದೇಶ ಮಾಡಿದರು. ’ಇದನ್ನು ಭಕ್ತಿಯಿಂದ ಪಾರಾಯಣ ಮಾಡು’ ಎಂದು ಅಪ್ಪಣೆ ಮಾಡಿದರು. ಶ್ರೀ ಶ್ರೀಶಗಣದರ್ಪಣವೆಂಬ ಈ ಲಕ್ಷ್ಮೀನರಾಯಣರ ಸ್ತೋತ್ರ ಸಂಪತ್ತನ್ನು ಕರುಣಿಸಿತು; ಭಕ್ತಿಯಿಂದ ಪಾರಾಯಣ ಮಾಡುತ್ತದದ ಅವನ ಸುತ್ತಲೂ ಬಂಗಾರದ ಮಳಯೇ ಸುರಿಯಿತು ಎಂದು ಹೇಳುತ್ತಾರೆ. ಇದರಿಂದ ವಾದಿರಾಜರ ಶಕ್ತಿ ಅಲ್ಲದೆ ಬಡವರಲ್ಲಿ ಅವರಿಗಿದ್ದ ಕರುಣೆಯೂ ತಿಳಿಯುತ್ತದೆ.
***************

ವಾದಿರಾಜರಿಂದ ತಿರುಪತಿ ದರ್ಶನ

ಸುಮಾರು ನಾಲ್ಕು ನೂರು ವರ್ಷಗಳ ಹಿಂದೆ ನಡೆದ  ಒಂದು ಸಂಗತಿ ಇದು.

ನಮ್ಮ ಕನ್ನಡ ನಾಡಿನಲ್ಲಿ ಉಡುಪಿಯ ಹೆಸರನ್ನು ಯಾರು ಕೇಳಿಲ್ಲ? ಅದು ಪ್ರಸಿದ್ಧ ಯಾತ್ರಾಸ್ಥಳ. ಅಲ್ಲಿನ ಶ್ರೀಕೃಷ್ಣನ ದೇವಾಲಯಕ್ಕೆ ಭಾರತದ ಮೂಲೆ ಮೂಲೆಯಿಂದ ಅಪಾರ ಜನ ಬರುತ್ತಾರೆ.

ಶ್ರೀಕೃಷ್ಣನ ಪೂಜೆಯನ್ನು  ಎಂಟು ಮಠಗಳ ಸ್ವಾಮಿಗಳು ಮಾಡುತ್ತಾರೆ. ಶ್ರೀಕೃಷ್ಣನ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿದವರು ಶ್ರೀ ಆನಂದತೀರ್ಥರು; ಇವರನ್ನು ಮಧ್ವಾಚಾರ್ಯರು ಎಂದೂ ಕರೆಯುತ್ತಾರೆ.

ಶ್ರೀ ಮಧ್ವಾಚಾರ್ಯರಿಗೆ ಶ್ರೀ ಕೃಷ್ಣನ ಪೂಜೆ ಎಂದೆಂದಿಗೂ ನಡೆದುಕೊಂಡು ಬರಬೇಕು ಎಂದು ಅಪೇಕ್ಷೆ. ಇದಕ್ಕಾಗಿ ಎಂಟು ಮಠಗಳನ್ನು  ಸ್ಥಾಪಿಸಿದರು. ಇವುಗಳಲ್ಲಿ ಒಂದು ’ಸೋದೆ ಮಠ’ ಎಂಬುದು.

ಸುಮಾರು ನಾಲ್ಕು ನೂರು ವರ್ಷಗಳ ಹಿಂದೆ ಈ ಮಠದಲ್ಲಿ ಒಬ್ಬ ಸ್ವಾಮಿಗಳಿದ್ದರು.

ತಿರುಪತಿಯ ಹೆಸರು ಕೇಳಿದ್ದೀರಲ್ಲ? ಉಡುಪಿಯ ಹಾಗೆಯೇ ಬಹು ಪ್ರಸಿದ್ಧವಾದ ಯಾತ್ರೆಯ ಸ್ಥಳ ಇಲ್ಲಿನ ಶ್ರೀ ವೆಂಕಟೇಶ್ವರ ದೇವಾಲಯವೂ ಭಾರತದಲ್ಲೆಲ್ಲ ಪ್ರಸಿದ್ಧ. ಇಲ್ಲಿಗೂ ಸಾವಿರಾರು ಜನ ಭಕ್ತರು ಬರುತ್ತಾರೆ. ಸೋದೆ ಮಠದ ಯತಿಗಳು ಶ್ರೀ ವೆಂಕಟೇಶ್ವರನ ದರ್ಶನಕ್ಕಾಗಿ ತಿರುಪತಿಗೆ ಬಂದರು.

ಶ್ರೀ ವೆಂಕಟೇಶ್ವರನ ದೇವಸ್ಥಾನ ಬೆಟ್ಟದ ಮೇಲಿದೆ. ಯತಿಗಳು ದೂರದಿಂದ ಮೊದಲನೆಯ ಬಾರಿ ಬೆಟ್ಟವನ್ನು ನೋಡಿದಾಗ ಅದು ಸಾಲಿಗ್ರಾಮದ ಹಾಗೆ ಕಂಡಿತಂತೆ. ಸಾಲಿಗ್ರಾಮ ಶಿಲೆ ವಿಷ್ಣುವಿನ ಭಕ್ತರಿಗೆ ತುಂಬ ಪವಿತ್ರ.

ಯತಿಗಳಿಗೆ ಚಿಂತೆಯಾಯಿತು. ಸಾಲಿಗ್ರಾಮದ ಮೇಲೆ ಕಾಲಿಟ್ಟು ಹತ್ತುವುದು ಎಷ್ಟು ಅಪಚಾರ! ದೊಡ್ಡ ತಪ್ಪು! ಆದರೆ ಬೆಟ್ಟ ಹತ್ತದೆ ಶ್ರೀ ವೆಂಕಟೇಶ್ವರನ ದರ್ಶನ ಆಗುವಂತಿಲ್ಲ. ಬೆಟ್ಟವನ್ನು ಅಂಬೆಗಾಲಿಡುವ ಮಗುವಿನ ಹಾಗೆ ಮೊಳಕಾಲಿನಲ್ಲಿ ಹತ್ತಿದರಂತೆ ಯತಿಗಳು.

ಅನಂತರ ದೇವಸ್ಥಾನಕ್ಕೆ ಹೋಗಿ, ಶ್ರೀ ವೆಂಕಟೇಶ್ವರನ ದರ್ಶನ ಮಾಡಿದರು.  ಸಾಲಿಗ್ರಾಮಹ ಮಾಲೆಯನ್ನೆ ದೇವರಿಗೆ ಅರ್ಪಿಸಿದರು.


ಆಗ ಅವರು ಶ್ರೀ ವೆಂಕಟೇಶ್ವರನ ಮೂರ್ತಿಗೆ ಸಮರ್ಪಿಸಿದ ಮಾಲೆಯನ್ನು ಈಗಲೂ ಕಾಣಬಹುದು.
***************


ಶ್ರೀ ಲಕ್ಷ್ಮೀ ಹಯಗ್ರೀವಾಯ ನಮಃ.
ಶ್ರೀ ಗುರುಭ್ಯೋ ನಮಃ.
ಶ್ರೀ ವಾದಿರಾಜಾಯ ನಮಃ.
ಶ್ರೀ ಭೂತರಾಜಾಯ ನಮಃ.

ವ್ಯಾಸಾಯ ಭವನಾಶಾಯ ಶ್ರೀಶಾಯ ಗುಣರಾಶಾಯೇ
ಹೃದ್ಯಾಯ ಶುದ್ಧ ವಿದ್ಯಾಯ ಮಧ್ವಾಯ ಚ ನಮೋ ನಮಃ.

ತಪೋ ವಿದ್ಯಾ ವಿರಕ್ತ್ಯಾದಿ ಸದ್ಗುಣೌಘಾಕರನಹಮ್ ವಾದಿರಾಜ ಗುರೂನ್ವಂದೇ ಹಯಗ್ರೀವ ದಯಾಶ್ರಯಾನ್.

ನಿತ್ಯ ಮಾಲಿಕೆಯಲ್ಲಿ ಶುಭ ದಿನ ಶುಭ ವಾರದಂದು ಭಾವೀ ಸಮೀರ ವಾದಿರಾಜರು.

ನಮೋ ನಮೋ ಶ್ರೀ ವಾದಿರಾಜ/ನಮೋ ನಮೋ ಶ್ರೀ ಸ್ವಾದಿ ರಾಜ//
ನಮೋ ನಮೋ ರವಿಕೋಟಿ ತೇಜ/ನಮೋ ನಮೋ ಗುರು ರಾಜಾಧಿರಾಜ//.
ನೆಲಸುತ ಸ್ವಾದೀ ಕ್ಷೇತ್ರ ದಿ ಗುರುವೇ ಒಲಿಯುತ
ಭಕ್ತಗಭೀಷ್ಟವ ಕೊಡುವೆ/
ನೂರು ವರುಷ ಕೂ ಮೀರಿ ಪ್ರವಾಸ/ ಮೂರು ಬಾರಿ ಸುತ್ತುತ ದೇಶ
ಭಾರತದೇಶಕೆ ನೀಡ್ಯುಪದೇಶ/ಸಾರಿದೆ ಹರಿ ಸರ್ವೋತ್ತಮ ಈಶ//
ವಿಷ್ಣು ತತ್ವ ಪ್ರಕಾಶವಾದಿರಾಜ /ಕೃಷ್ಣ ಪೂಜಕವಾದಿರಾಜ/ಇಷ್ಟರ ಸಲುಹುವ ವಾದಿರಾಜ//
ನಾರಳಗ್ರಾಮದ ನಾರಾಯಣ ಶಿಷ್ಯರ/ಪಾರ ವಿದ್ಯಾ ಮದದಲಿ ಮೆರೆಯೆ
ಮೀರಿ ಗುರು ಗಳ ಗರ್ವದಿ ಜರಿಯೆ/ಕಾರುಣ್ಯದಿ ನೀನವನುದ್ಧರಿಸೆ//
ರೋಷದಿನಾಗ ಇಲಿಯುಟ್ಟಿಬರೆ/ಮೂಷಿಕ ಭಯದಿ
ನಿಮ್ಮ ಶ್ರಯ ಪಡೆಯೇ//
ದೋಹರಿಸುತ ಸರ್ಪನದಂಡಕೆ ಕಳುಹಿ/ಪೋಷಿಸಿ ಇಲಿಗೆ ಅಭಯವನಿತ್ತೆ//
ಹಯಮುಖ ಭಜಕ ಭಕ್ತಸಖ/ಭಯನಿವಾರಕ ವಾದಿರಾಜ/
ಜಯಪ್ರದಾಯಕ ಭಕ್ತಪೋಷಕ/ದಯವನು ಕರುಣಿಸೊ ಶ್ರೀ ಗುರುರಾಜ//
ಪಂಚಶರಪಿತ ಹಯಮುಖಗೆ /ಪಂಚಪಾಂಡವ ರಕ್ಷಕಗೆ
ಪಂಚಚರ್ಯಾದಿ ಪೂಜೆ ಯ ಸಲ್ಲಿಸಿ/
ಪಂಚ ವೃಂದಾವನ ದೊಳು ಮೆರೆದೆ//
ತೀರ್ಥ ಪ್ರಬಂಧ ಯುಕ್ತಿ ಮಲ್ಲಿಕಾ/ವರಲಕ್ಷಾಂಕಾರ/
ಪಾರ್ಥಸಾರಥಿ ದಯದಲಿ ರಚಿಸಿ/ಕೀರ್ತಿ ಪಡೆದ
ದಯಾಕರ//
ಭೂತರಾಜರ ಕದಿರೆಗೆ ಕಳುಹಿಸಿ/ಖ್ಯಾತ ತ್ರಿವಿಕ್ರಮ ಮೂರ್ತಿ ಯ ತರಿಸಿ
ರೀತಿ ಯಿಂದಲಿ ಮೂರ್ತಿ ಪ್ರತಿಷ್ಟಿಸಿ ದ್ವೀತಿಯ ಬದರಿಯ ಸೃಷ್ಟಿಸಿದೆ//
ಮಂಗಳವಾಗಲಿ ನರಹರಿ ಗೆ /ಮಂಗಳವಾಗಲಿ ಇಂದಿರೆಗೆ/ಅಂಗಜಪಿತಸುತ ಚತುರಾನನಗೆ /
ಮಂಗಳವಾಗಲಿ ಸರಸತಿಗೆ//
ಜಯ ಜಯ ಸಮಸ್ತ ದಿವಿಜರಿಗೆ/ಜಯ ಜಯ ಮಂಗಳ ಸಕಲರಿಗೆ//

//ಶ್ರೀ ಕೃಷ್ಣಾರ್ಪಣ ಮಸ್ತು//
***********

ಲಕ್ಷ್ಮೀ ಶೋಭಾನೆ ರಚನೆ

ವಾಧಿರಾಜರ ವೃಂದಾವನ

ಲಕ್ಷ್ಮೀಶೋಭಾನೆ ಎಂಬ ಅವರ ಕೃತಿ ಕನ್ನಡದಲ್ಲಿದೆ, ಇದು ಸತ್ತವರನ್ನೇ ಎತ್ತಿ ಬದುಕಿಸಿದ ಸಂಜೀವಿನಿ ಎಂದು ಪ್ರಸಿದ್ಧವಾಗಿದೆ.

ಅರಸಪ್ಪನಾಯಕನ ಅಳಿಯ ಸತ್ತುಹೋದ. ಆಗ ವಾದಿರಾಜರು ಲಕ್ಷ್ಮೀಶೋಭಾನೆಯನ್ನು ಹಾಡಿ ಲಕ್ಷ್ಮೀನಾರಾಯಣರನ್ನು ಪ್ರಾರ್ಥಿಸಿ, ಅವನನ್ನು ಬದುಕಿಸಿದರು ಎಂದು ಹೇಳುತ್ತಾರೆ. ದೇವತೆಗಳೂ ರಾಕ್ಷಸರೂ ಸಮುದ್ರವನ್ನು ಕಡೆದರು; ಸಮುದ್ರದಿಂದ ಲಕ್ಷ್ಮೀದೇವಿ ಎದ್ದು ಬಂದಳು ಎಂಬ ಕಥೆ ಶ್ರೀಬದ್ಭಾಗವತದಲ್ಲಿ ಬರುತ್ತದೆ. ನೂರೆಂಟು ನುಡಿಗಳ ಈ ಶೋಭಾನೆ ಹಾಡು ಬಹಳ ಸರಳವಾದ ರೀತಿಯಲ್ಲಿ ಈ ಅಮೃತ ಮಂಥನ ಕಥೆಯನ್ನು ನಿರೂಪಿಸುತ್ತದೆ. ಶ್ರೀದೇವಿಯ ಈ ಸ್ತ್ರೋತ್ರವನ್ನು ಮಾಡಿದ ವಧೂವರರಿಗೆ ಲಕ್ಷ್ಮೀದೇವಿ ದೀರ್ಘ ಆಯುಸ್ಸನ್ನು ಕರುಣಿಸುತ್ತಾಳೆ ಎಂಬ ನಂಬಿಕೆ ಇದೆ. ಹೀಗೆ ಶ್ರೀ ವಾದಿರಾಜರ ಕೃತಿಗಳು ಒಂದೊಂದೂ ಮಹಮೆಯುಳ್ಳವಾಗಿವೆ.

ಆ ಕಾಲದಲ್ಲಿ ವಿಜಯನಗರಕ್ಕೆ ವೆಂಕಟಪತಿ ಎನ್ನುವವನು ರಾಜ. ಅವನ ಆಸ್ಥಾನದಲ್ಲಿ ಅನೇಕರು ಮಹಾಪಂಡಿತರು ಇದ್ದರು. ಒಮ್ಮೆ ರಾಜನು, ಆ ಪಂಡಿತರ ಜೊತೆಗೆ ವಾದ ಮಾಡುವಂತೆ ವಾದಿರಾಜರನ್ನು ಪ್ರಾರ್ಥಿಸಿದ. ಇದ್ದಕ್ಕಿದ್ದ ಹಾಗೆ ಈ ಪ್ರಾರ್ಥನೆ ಬಂದಿತು. ಆದರೂ ವಾದಿರಾಜರು ಅವರೆಲ್ಲರನ್ನೂ ಸೋಲಿಸಿದರು. ರಾಜ ಅವರ ಬುದ್ಧಿಶಕ್ತಿಯನ್ನು ಮೆಚ್ಚಿಕೊಂಡು, ಅವರಿಗೆ ’ಪ್ರಸಂಗಾಭರಣ ತೀರ್ಥರು’ ಎಂದು ಬಿರುದನ್ನು ಸಮರ್ಪಿಸಿದ. ಆ ಕಾಲದಲ್ಲಿ ದೆಹಲಿಯಲ್ಲಿ ಆಳುತ್ತಿದ್ದ ಮೊಘಲ್ ಚಕ್ರವರ್ತಿ ಬಾಬರನೂ ವಾದಿರಾಜರಿಗೆ ಗೌರಮ ಸಲ್ಲಿಸಿದ.

ವೃಂದಾವನ

ಇಷ್ಟೆಲ್ಲಾ ಅಪೂರ್ವ ಅನರ್ಘ್ಯ ಕಾರ್ಯಗಳನ್ನು ಸಾಧಿಸಿ ಮಹಾಮಹಿಮರಾದ ಶ್ರೀ ವಾದಿರಾಜರು ನೂರಿಪ್ಪತ್ತು ವರ್ಷಗಳಷ್ಟು ದೀರ್ಘ ಕಾಲ ಭೂಮಿಯ ಮೇಲೆ ವಾಸವಾಗಿದ್ದು ಬಹು ಜನರನ್ನು ಉದ್ಧರಿಸಿದರು. ಸಶರೀರರಾಗಿ ಕ್ರಿಸ್ತ ಶಕ ೧೮೦೦ರಲ್ಲಿ ಫಾಲ್ಗುಣ ಬಹುಳ ತೃತೀಯ ದಿನದಂದು ವೃಂದಾವನ ಪ್ರವೇಶ ಮಾಡಿದರು.


ಅವರು ವೃಂದಾವನದಲ್ಲಿ ಕುಳಿತು ಮುನ್ನೂರ ಎಪ್ಪತ್ತೆರಡು ವರ್ಷಗಳು ಕಳೆದುಹೋಗಿವೆ. ಈಗಲೂ ಭಕ್ತರು ತಮ್ಮ ಕಷ್ಟಗಳ ಪರಿಹಾರಕ್ಕಾಗಿ ಅವರ ವೃಂದಾವನಕ್ಕೆ ಪೂಜೆ ಸಲ್ಲಿಸುತ್ತಾರೆ. ವೃಂದಾವನದ ಹೊರವಲಯದ ಪಕ್ಕದಲ್ಲೇ ಭೂತರಾಜರ ಗುಡಿಯಿದೆ. ಅವರು ತಪಸ್ಸು ಮಾಡುತ್ತಿದ್ದ ಸ್ಥಳ ಈಗಲೂ ’ತಪೋವನ’ ಎಂದು ಪ್ರಸಿದ್ಧವಾಗಿದೆ. ಸಾವಿರಾರು ಮಂದಿ ಭಕ್ತರು ಈ ಸ್ಥಳಗಳನ್ನು ಸಂದರ್ಶಿಸಿ ಪುನೀತರಾಗಿ ಬರುತ್ತಾರೆ. ಸೋದೆ ಒಂದು ಶಾಂತಿಯ ತವರಾಗಿದೆ.
***************


ಓಂ ಶ್ರೀ ಹಯಗ್ರೀವಾಯ ನಮಃ
ಶ್ರೀ ಗುರುಭ್ಯೋನಮಃ.
ಶ್ರೀ ಭಾವಿಸಮೀರ ವಾದಿರಾಜಾಯ ನಮಃ.

ಶ್ರೀ ವಾದಿರಾಜ ತೀರ್ಥ ಸ್ವಾಮಿಗಳು ಮುಂದೆ ವಾಯು ಪದವಿಗೆ ಬರುವ ಮಹಾತ್ಮರೆಂದು ವರ್ಣನೆ ಮಾಡುವರು.

ಶ್ರೀ ಭಾವಿಸಮೀರ ವಾದಿರಾಜರು ರಚಿಸಿರುವ ವಾಯುಗದ್ಯ ಅತ್ಯಂತ ಜ್ಞಾನ ಪ್ರದವಾಗಿದೆ.ಅಪೂರ್ವ ವಾದ ಈ ಜ್ಞಾನ ಪ್ರದವಾದ, ಫಲದಾಯಕವಾದ ಸ್ತೋತ್ರ ವನ್ನು ಪಾರಾಯಣ ಮಾಡಿದರೆ ಉತ್ತರೋತ್ತರ ಅಭಿವೃದ್ಧಿ ಯಾಗುವುದರಲ್ಲಿ ಸಂಶಯವಿಲ್ಲ,!
ಶ್ರೀ ವಾದಿರಾಜ ಗುರು ಸಾರ್ವಭೌಮಕೃತ  ಶ್ರೀ ವಾಯುಗದ್ಯಮ್ .

ಭಾರತೀ ರಮಣಂ ವಾಯುಂ ಕಾರಣಂ ಸರ್ವ ಸಂಪದಾಂ/
ತಾರಕಂ ಭವ ಪಾಥೋದೇರ್ನಾರಾಯಣ ಪರಂ ನಮಃ //.

ಶ್ರೀ ವಾಯು ದೇವರು ಭಾರತೀ ದೇವಿಯ ಪತಿಯಾಗಿ, ಸಂಸಾರ ಸಾಗರ ವನ್ನು ದಾಟಿಸಬಲ್ಲ ಪರಮ ವೈಷ್ಣವರಾಗಿದ್ದಾರೆ.ಇಂತಹ ವಾಯುದೇವರಿಗೆ ನಮಸ್ಕಾರ ಗಳು.

ಓಂ ಶ್ರೀ ಮತೇ ಧರ್ಮ ಜ್ಞಾನ ವೈರಾಗ್ಯಾದಿ ಗುಣವತೇ--
ಶಿವ ಶೇಷ ಖಗೇಶ ಮುಖಾಮರ ಸಮಾರಾಧಿತ
ಚರಣ ಸರೋರುಹಾಯ-- ರಿಪುದುಸ್ಸಹಾಯ--
ಪಂಚಬಾಣ ತೂಣೀರ ನಿಭ ಜಂಘಾಯ//೧//

ಜ್ಞಾನ ,ವೈರಾಗ್ಯ ,ಐಶ್ವರ್ಯಾದಿ ಗುಣಭರಿತರಿಗೆ ನಮಸ್ಕಾರ.
ಶಿವ, ಶೇಷ ,ಗರುಡಾದಿ ದೇವತೆಗಳಿಂದ ವಂದಿತರಾದ ಮಹಾಬಲ ಪ್ರಾಣನಿಗೆ ನಮಸ್ಕಾರ.

೨---

ಪರಾಕೃತ ಪರಮೋತ್ಸಾಹ ವರ್ಜಿತಾತಿರಿಕ್ತ ದೋಷ ಸಂಘಾಯ /
ಹಸ್ತಿ ಹಸ್ತ ಮಶಸ್ತೋರುದ್ವಯಾಯ /
ಭಗವತ್ ಪ್ರೀತ್ಯರ್ಥ
ಜ್ಞಾನ ಶೋಕಭಯಾಯ ಸ್ವಚ್ಛ ಕೌಶೇಯ ಪಟಿ ಕಟಿ ಸೂತ್ರಾಭಿರಾಮ ತಟಿ ತಟಾಯ //೨//

ದೋಷದೂರನಾಗಿ ,ಸುಂದರ ಹಾಗೂ ಸದೃಢವಾದ ಬಾಹುಗಳಿಂದ ,ಭಗವಂತನ ಸೇವೆಗಾಗಿ ಸದಾ ಸಿದ್ಧರಾದ ಪೀತಾಂಬರಾಲಂಕೃತ ವಾಯುದೇವರಿಗೆ ನಮಸ್ಕಾರ ಗಳು..

******

दुर्वादीभविध्वंसन-।
कण्ठीरवमहर्निशम् ।।
वन्दिताङ्घ्रियुगं सद्भिः ।
वादिराजं नतोऽस्म्यहम् ।।

ದುರ್ವಾದೀಭವಿಧ್ವಂಸನ -|
ಕಂಠೀರವಮಹರ್ನಿಶಮ್ ||
ವಂದಿತಾಂಘ್ರಿಯುಗಂ ಸದ್ಭಿಃ |
ವಾದಿರಾಜಂ ನತೋऽಸ್ಮ್ಯಹಮ್ ||

durvAdIbhavidhwamsana-/
kanThIravamaharnisham //
vanditAnghriyugam sadbhih /
vAdirAjam natOsmyaham //

पदच्छेदः पदपरिचयशास्त्रं च ।

ಪದಚ್ಛೇದ ಮತ್ತು ಪದಪರಿಚಯಶಾಸ್ತ್ರ |

WORD DIVISION AND ETYMOLOGY: 

दुर्वादीभविध्वंसनकण्ठीरवम्, अहर्निशम्, वन्दिताङ्घ्रियुगम्, सद्भिः, वादिराजम्, नतः, अस्मि, अहम् ।

दुर्वादीभविध्वंसनकण्ठीरवम् - अकारान्तपुल्लिङ्गस्य दुर्वादीभविध्वंसनकण्ठीरव शब्दस्य द्वितिया विभक्तेः एकवचनान्तं पदमिदम् ।

दुष्टाः च ते वादिनः च दुर्वादिनः । दुर्वादिनः एव इभाः दुर्वादीभाः । दुर्वादीभानां विध्वंसनं दुर्वादीभविध्वंसनम् । दुर्वादीभविध्वंसने कण्ठीरवः 

अहर्निशम् - अव्ययमिदम् ।

अन्वयः अन्वयार्थानि :-

अहं दुर्वादीभविध्वंसनकण्ठीरवं सद्भिः वन्दिताङ्घ्रियुगं वादिराजं अहर्निशं नतः अस्मि ।

हिंदी में प्रतिपदार्थ व अन्वय: 

अहम् - मैं 

दुर्वादीभविध्वंसनकण्ठीरवम् - बुरे उपदेश करने वाले अभिप्राय जैसे मदमत्त हाथियों को विध्वंस करने में सिंह के समान सक्षम

सद्भिः - सज्जन लोगों से

वन्दिताङ्घ्रियुगम् - नमस्कृत चरणकमल वाले

वादिराजम् - श्रीमद्वादिराजतीर्थजी को 

अहर्निशम् - दिन-रात

नतः अस्मि - प्रणाम करता हूँ ।

इस यतीन्द्र जी का नाम वादिराज है, जो की अन्वर्थक यानि अर्थ का अनुसरण करती है । श्रीमद्वादिराजतीर्थ जी ने अनेक बुरे अभिप्राय प्रकट करने वाले पंडितों को जो मदमत्त हाथियों जैसे अपने शास्त्रविद्या के बूते पर घमंड करते थे, उन को आसानी से ऐसे हराया करते थे जैसे सिंह मदमत्त हाथियों का विनाश करता है । ऐसे श्रीमद्वादिराजतीर्थजी के चरणकमल को मैं दिन रात स्मरण करते हुए प्रणाम करता हूँ जिन पादपद्मों को सदैव सज्जन लोग प्रणाम करते हैं ।

ಪ್ರತಿಪದಾರ್ಥ ಮತ್ತು ಅನ್ವಯ:

ಅಹಮ್ - ನಾನು

ದುರ್ವಾದೀಭವಿಧ್ವಂಸನಕಂಠೀರವಮ್ - ದುರ್ಮತಗಳನ್ನು ಪ್ರಸಾರಿಸುವ ಮದೋನ್ಮತ್ತಗಜಗಳಂತಿರುವ ದುರ್ವಾದಿಗಳಿಗೆ ವಿನಾಶವನ್ನುಂಟುಮಾಡುವ ಸಿಂಹದಂತಿರುವ

ಸದ್ಭಿಃ - ಸಜ್ಜನರಿಂದ

ವಂದಿತಾಂಘ್ರಿಯುಗಮ್ - ನಮಸ್ಕರಿಸಲ್ಪಟ್ಟ ಪಾದಪದ್ಮಗಳುಳ್ಳ

ವಾದಿರಾಜಮ್ - ಶ್ರೀಮದ್ವಾದಿರಾಜತೀರ್ಥರನ್ನು

ಅಹರ್ನಿಶಮ್ - ದಿನರಾತ್ರಿಯೂ

ನತಃ ಅಸ್ಮಿ - ನಮಸ್ಕರಿಸುತ್ತೇನೆ.

ಶ್ರೀಮದ್ವಾದಿರಾಜತೀರ್ಥರು ಅನೇಕ ದುರ್ವಾದಿಗಳನ್ನು ಖಂಡಿಸಿದ್ದಾರೆ. ಕಾಡಿನಲ್ಲಿ ಮದೋನ್ಮತ್ತವಾದ ಆನೆಯನ್ನು ಸಿಂಹವು ಹೇಗೆ ವಿನಾಶಮಾಡುವುದೋ, ಹಾಗೆಯೇ ವೇದಾಂತಾರಣ್ಯದಲ್ಲಿ ಕೆಟ್ಟ ಅಭಿಪ್ರಾಯಗಳನ್ನು ಪ್ರಕಟಪಡಿಸುತ್ತ ಮದೋನ್ಮತ್ತ ಆನೆಗಳಂತೇ ವರ್ತಿಸುತ್ತಿದ್ದ ದುರ್ವಾದಿಗಳನ್ನು ಶ್ರೀಮದ್ವಾದಿರಾಜತೀರ್ಥಯತಿಗಳು ವಾದದಲ್ಲಿ ಸೋಲಿಸಿದ್ದಾರೆ. ಸಿಂಹವು ಹೇಗೆ ಮದೋನ್ಮತ್ತ ಆನೆಗಳನ್ನು ಸೋಲಿಸುತ್ತದೆಯೋ ಹಾಗೆ, ಇಂತಹ ಸಜ್ಜನರಿಂದ ವಂದಿತಪಾದಪದ್ಮರಾದ ಶ್ರೀಮದ್ವಾದಿರಾಜತೀರ್ಥರ ಪಾದಪದ್ಮಗಳನ್ನು ದಿನರಾತ್ರಿ ನಾನು ವಂದಿಸುತ್ತೇನೆ.

MEANING :

I salute the lotus feet of HH Shri Vadirajateertharu, who -
defeats or destroys the bad opinions pleaders as like a lion destroys or defeats intoxicated elephants,

is saluted always by the good people or devotees.

ಓಂ ಶ್ರೀಮದ್ಧಯವದನಾಂತರ್ಗತ ಶ್ರೀವಾದಿರಾಜತೀರ್ಥಯತಿನೇ ನಮಃ ||

ॐ श्रीमद्धयवदनान्तर्गतश्रीमद्वादिराजतीर्थयतिने नमः ।‍।
ಜ್ಞಾನಾನಂದ ಮಯಂ ದೇವಂ
ನಿರ್ಮಲಂ ಸ್ಫಟಿಕಾಕೃತಿಂ
ಆಧಾರಂ ಸರ್ವವಿದ್ಯಾನಾಂ
ಹಯಗ್ರೀವಂ ಉಪಾಸ್ಮಹೇ.
*************


ಪ್ರಥಮೋ ಹನುಮನ್ನಾಮ
ದ್ವಿತೀಯ ಭೀಮಯೇವಚ 
ಪೂರ್ಣಪ್ರಜ್ಞ ಸ್ತುತಿಯಸ್ತು
ಭಗವತ್ಕಾರ್ಯ ಸಾಧಕಃ.
ಶ್ರೀ ಮದಾನಂದತೀರ್ಥ ಭಗವತ್ಪಾದಾಚಾರ್ಯ ಮಧ್ವರು ಮತ್ತು ಶ್ರೀ ಭಾವಿಸಮೀರ ವಾದಿರಾಜರು 
ಶ್ರೀ ಮನ್ನಾರಾಯಣ ಮತ್ತು ಹಯಗ್ರೀವ ದೇವರ ಆಜ್ಞೆ ಯ ಮೇರೆಗೆ ಭೂಲೋಕದಲ್ಲಿ ಅವತರಿಸಿ " ಶ್ರೀ ಹರಿಯ ಮಹಿಮೆ ಮತ್ತು ಸ್ವತಂತ್ರ ನೆಂದು ವಿಶ್ವಕ್ಕೆ ಸಾರಿ ಮಾಧ್ವ ಸಿಧ್ದಾಂತ ದ ಪ್ರಚಾರ ಮಾಡಿ ವಿಶ್ವ ಗುರುಗಳೆಂದು ಪ್ರಖ್ಯಾತ ರಾದ ಮಹಾಪುರುಷರು.
ಇಬ್ಬರೂ ತುಳು ನಾಡಿನಲ್ಲಿ ಯೇ ( ಪರಶುರಾಮ ಕ್ಷೇತ್ರದಲ್ಲಿ ಜನಿಸಿದರು).
ಆಚಾರ್ಯ ಮಧ್ವರು ಎಂಬತ್ತು ವರ್ಷಗಳು ಗೋಚರವಾಗಿದ್ದರೆ ,ಶ್ರೀ ವಾದಿರಾಜ ತೀರ್ಥರು ನೂರ ಇಪ್ಪತ್ತು ವರ್ಷಗಳ. ಕಾಲ ಗೋಚರವಾಗಿ ಭಕ್ತರ ನ್ನು ಅನುಗ್ರಹಿಸುತ್ತಿದ್ದರು.
ಇಬ್ಬರೂ ತಮಗೊಬ್ಬ ಸೋದರ ಜನಿಸಿದ ಮೇಲೆ ಸನ್ಯಾಸತ್ವ ವನ್ನು ಸ್ವೀಕರಿಸಿ ದವರು.
ಆಚಾರ್ಯ ಮಧ್ವರು ಬದರೀಯಲ್ಲಿ ೪೮ ದಿನಗಳ ಕಾಲ ಕಾಷ್ಡ ಮೌನ ವ್ರತ ಮಾಡಿದರೆ 
ಶ್ರೀ ವಾದಿರಾಜ ಸ್ವಾಮಿಗಳು ಆರುತಿಂಗಳು ಅಲ್ಲಿ ತಪಸ್ಸು ಮಾಡಿದರು.
ಇವರ ಮಾಧ್ವ ವೇದಾಂತ ಗ್ರಂಥಗಳು
ಆಚಾರ್ಯ ಮಧ್ವರು ಅಣು ವ್ಯಾಖ್ಯಾನ ( ೨೦೦೦ ಶ್ಲೋಕ ಗಳ ವೇದಾಂತ ಗ್ರಂಥ)
.ಶ್ರೀ ವಾದಿರಾಜರು " ಯುಕ್ತಿಮಲ್ಲಿಕಾ" ೫೩೦೦ಶ್ಲೋಕಗಳ ವೇದಾಂತ ಗ್ರಂಥಗಳು.
ಆಚಾರ್ಯ ಮಧ್ವರು " ಮಹಾಭಾರತ ತಾತ್ಪರ್ಯ ನಿರ್ಣಯ " ಎಂಬ ಉತ್ಕೃಷ್ಟ ಗ್ರಂಥವನ್ನು ರಚಿಸಿದರೆ
ಶ್ರೀ ವಾದಿರಾಜ ಸ್ವಾಮಿಗಳು " ಮಹಾಭಾರತ ಲಕ್ಷಾಲಂಕಾರ : ಮಹಾ ಗ್ರಂಥ ರಚನೆ ಮಾಡಿದರು.
ಶ್ರೀ ಕೃಷ್ಣನ ಮಹಿಮೆಯನ್ನು ಹೊಗಳಿ ಮಹಾಕಾವ್ಯವನ್ನು ಆಚಾರ್ಯ ಮಧ್ವರು " ಯಮಕ ಭಾರತ "ವನ್ನು ರಚಿಸಿದರೆ ,ಶ್ರೀ ವಾದಿರಾಜ ಸ್ವಾಮಿಗಳು " ರುಕ್ಮಣೀಶ ವಿಜಯ"ವನ್ನು ರಚಿಸಿದ್ದಾರೆ.
ಈಗಲೂ ಆಚಾರ್ಯ ಮಧ್ವರು ಮತ್ತು ಶ್ರೀ ವಾದಿರಾಜರು ಉತ್ತರ ಬದರೀ ಯಲ್ಲಿ ವೇದವ್ಯಾಸ ಮಹರ್ಷಿಗಳ ಶಾಸ್ತ್ರ ಶ್ರವಣ ಮಾಡುತ್ತಿರುವ ಯತಿ ಶ್ರೇಷ್ಠ ರು.
ಉಡುಪಿ ಯಲ್ಲಿ ಶ್ರೀ ಕೃಷ್ಣ ಮಠ ಆಚಾರ್ಯ ಮಧ್ವರು ಸ್ಥಾಪಿಸಿದರೆ , ಸೋದೆಯಲ್ಲಿ ಶ್ರೀ ತ್ರಿವಿಕ್ರಮ ದೇವಾಲಯ ವನ್ನು ಶ್ರೀ ಭಾವಿಸಮೀರ ವಾದಿರಾಜರು ಸ್ತಾಪಿಸಿದರು.

*********


ಶ್ರೀ ವಾದಿರಾಜರು.

ತಪೋ ವಿದ್ಯಾ ವಿರಕ್ತ್ಯಾದಿ ಸದ್ಗುಣೌಘಾಕರನಹಮ್ ವಾದಿರಾಜ ಗುರೂನ್ವಂದೇ ಹಯಗ್ರೀವ ದಯಾಶ್ರಯಾನ್.

ಆಗಮ್ಯ ಮಹಿಮರಾದ ಶ್ರೀ ವಾದಿರಾಜರು ಇಂದಿಗೂ ತಮ್ಮ ಭಕ್ತರನ್ನು ಅನುಗ್ರಹಿಸುತ್ತಿದ್ದಾರೆ.

ಶ್ರೀ ವಾದಿರಾಜರ ಅನುಗ್ರಹ ದಿಂದ ಅನೇಕರು  ಕುಷ್ಟ ಅಪಸ್ಮಾರ ಮೊದಲಾದ ಭಯಂಕರ ವ್ಯಾಧಿಗಳ ಬಾಧೆ ಯಿಂದ ಮುಕ್ತರಾಗಿದ್ದಾರೆ.

ಬಡವ ಬಲ್ಲಿದ ರೆಂಬ ಭೇದವಿಲ್ಲದೆ ಪರೋಪಕಾರ ದೃಷ್ಟಿಯಿಂದ ಸರ್ವರಿಗೂ ಅನುಕೂಲ ಮಾಡಿಕೊಟ್ಟಿದ್ದಾರೆ.

ಒಮ್ಮೆ ಹಂಪೆಯ ಅರಸ ಅಚ್ಯುತರಾಯನಿಗೆ  ಮಹಾ ಪ್ರಬಲ ವ್ಯಾಧಿ ಯೊಂದು ಬಾಧಿಸಿತು.

ಅರಮನೆಯ ವೈದ್ಯರು ಪ್ರಯತ್ನಿಸಿದರೂ ಎಲ್ಲಾ ವ್ಯರ್ಥ ವಾಯಿತು.ಹೊರಗಿನ ವೈದ್ಯಕೀಯ ಚಿಕಿತ್ಸೆ ನಡೆದರೂ ಫಲಕಾರಿಯಾಗದೆ ಕೈ ಬಿಡುವ ಸಮಯ ಬಂದಿತು.

ಆಗ ಗುರುಗಳ ಕೃಪೆಗಾಗಿ ವಾದಿರಾಜ ದಿಲ್ಲಿ ಬಂದು ಮೊರೆ ಯಿಟ್ಟನು.

ಆಗ ಶ್ರೀ ವಾದಿರಾಜರು ಧನ್ವಂತ್ರಿ ಯನ್ನು ಧ್ಯಾನಿಸುತ್ತಾ ಮಂತ್ರೋಚ್ಚಾರಣೆ ಮಾಡುತ್ತಾ ಅಭಿಮಂತ್ರಿಸಿದ ಜಲವನ್ನು ಪಾನಮಾಡಲು ಕೊಟ್ಟರು.

ದೃಢವಾದ ನಂಬಿಕೆ, ಭಕ್ತಿ ಯಿಂದ ಅಚ್ಯುತರಾಯನು ಜಲಪಾನ ಮಾಡಿದಾಗ ಅವನ ರೋಗ ವು ಮಾಯವಾಗಿ ಎಂದಿನಂತೆ ಆರೋಗ್ಯ ವನ್ನು ಹೊಂದಿದನು.

ಗುರು ಗಳಲ್ಲಿ ಅತ್ಯಂತ ಭಕ್ತಿ ಉಳ್ಳವನಾಗಿ ಅವರಿಗೆ ರಾಜಮರ್ಯಾದೆ ಯನ್ನು ಬಿರುದನ್ನು ಕೊಟ್ಟು ಗೌರವಿಸಿದನು.

ಹೀಗೆ ಶ್ರೀ ವಾದಿರಾಜರ ಮಹಿಮೆ ಗಳನ್ನು ಅನೇಕ ರೀತಿಯಲ್ಲಿ ತಿಳಿಯಬಹುದು.

ವಾದಿರಾಜ ಮುನಿಪ/ಹಯಮುಖ ಪಾದ ಕಮಲ ಮಧುಪ//

ನೀ ದಯದಿಂದಲಿ ತವ ಪಾದ ಧ್ಯಾನ ವನು ಆದರದಲಿ
ಕೊಟ್ಟಾದರಿಸೆನ್ನನು//

ವಾದಿರಾಜ ಗುರು ನೀ ದಯಮಾಡದೆ/ಈ ದುರಿತ ಗಳ ನಿವಾರಿಪರಾರೋ//

ಶ್ರೀ ಹರಿ ಸಮರ್ಪಣೆ.
*************

ಶ್ರೀ ವಾದಿರಾಜರು ತಪಗೈದಿರುವ ಪುಣ್ಯಸ್ಥಳ ಶಿರಸಿ ಬಳಿಯಿರುವ #ಸೊಂದಾ ಅಥವಾ #ಸೋದೆ#ವಾದಿರಾಜ ಮಠ ಭಕ್ತರಿಗೆ ಮಾತ್ರವಲ್ಲ ಪರಿಸರವನ್ನು ಪ್ರೇಮಿಸುವವರಿಗೆ ಮಲೆನಾಡ ಮಡಿಲಲ್ಲಿರುವ ಅದ್ಭುತ ತಾಣ. ನಗರದಿಂದ ದೂರ, ಪ್ರಕೃತಿಗೆ ಹತ್ತಿರವಾಗಿರುವ ಈ ತಪೋಭೂಮಿ ಕರ್ನಾಟಕ ಮಾತ್ರವಲ್ಲ ದೇಶದ ಎಲ್ಲೆಡೆಯಿಂದ ಪ್ರವಾಸಿಗರನ್ನು ಸೆಳೆಯುತ್ತಿದೆ.ಶಾಲ್ಮಲಾ ನದಿ ಹರಿಯುತ್ತಿರವ ನೈಸರ್ಗಿಕವಾಗಿ ರಮ್ಯ ಮನೋಹರವಾಗಿರುವ ಈ ಪುಣ್ಯಕ್ಷೇತ್ರ ಕ್ರಿ.ಶ.1555ರಿ೦ದ 1598ರಲ್ಲಿ ವಿಜಯನಗರದ ಸಾಮ೦ತರಾಜ ಅರಸಪ್ಪನಾಯಕನ ಆಳ್ವಿಕೆಗೆ ಸೇರಿತ್ತು. ಭಾವೀ ಸಮೀರರಾದ #ಶ್ರೀವಾದಿರಾಜರು ತಪಗೈದು, ಸ್ಥಳವನ್ನು ಪುನೀತಗೊಳಿಸಿ ಪುಣ್ಯಕ್ಷೇತ್ರವನ್ನಾಗಿ ಮಾಡಿದರು ಎನ್ನುವುದು ಪ್ರತೀತಿ.

ಬೆಂಗಳೂರಿನಿಂದ 450 ಕಿ.ಮೀ. ಮತ್ತು ಉತ್ತರ ಕನ್ನಡ ಜಿಲ್ಲೆಯ ಶಿರಸಿ ಪಟ್ಟಣದಿ೦ದ 25 ಕಿಲೋ ಮೀಟರ್ ದೂರದಲ್ಲಿ ಈ ಕ್ಷೇತ್ರವಿದೆ. ಕ್ಷೇತ್ರವನ್ನು #ಸೊಂದ ಅಥವಾ #ಸೋದೆ ಎಂದು ಕೂಡಾ ಕರೆಯುವರು. ಇಲ್ಲಿ ಮೂರು ಮಠಗಳು ಇರುತ್ತವೆ. ಶ್ರೀವಾದಿರಾಜರ ಮಠ, ಶ್ರೀ ಜೈನಮಠ ಮತ್ತು ಶ್ರೀ ಸ್ವಣ೯ವಲ್ಲಿಮಠವಿರುವ ತ್ರಿವಳಿ ಮಠಗಳ ಸ೦ಗಮವೇ ಸೋದೆ.
ಪುರಾಣ : ಶಾವ೯ರಿ ಫಾಲ್ಗುಣ ಕ್ರಷ್ಣ ಪಕ್ಷ ತೃತೀಯ ಶಾಲಿವಾಹನ ಶಕ 1522ನೇ ಬುಧವಾರ ಸ್ವಾತಿ ನಕ್ಷತ್ರದಲ್ಲಿ ಶ್ರೀ ವಾದಿರಾಜರು ಮೂದಲೇ ನಿಮಾ೯ಣಗೊ೦ಡು ಪೂಜಿತವಾದ ಪ೦ಚವೃಂದಾವನಗಳಲ್ಲಿ ಶ್ರೀಹಯಗ್ರೀವ ದೇವರನ್ನು ಹಾಗೂ #ಶ್ರೀವೇದವ್ಯಾಸ ದೇವರನ್ನು ಆರಾಧಿಸುತ್ತಾ, ಮಧ್ಯ ವೃ೦ದಾವನದಲ್ಲಿ ಪ್ರವೇಶಮಾಡಿ ಕುಳಿತರು. ತಮ್ಮ ಕೈಯಲ್ಲಿರುವ ಜಪಮಣಿ ಸರಿದಾಡುವುದು ನಿ೦ತಕೂಡಲೇ ಮು೦ಭಾಗದ ಶಿಲೆಯನ್ನು ಮುಚ್ಚಲು ಅಪ್ಪಣೆಯಿತ್ತು ವೃಂದಾವನದೊಳಗೆ ಕುಳಿತು ಧ್ಯಾನಮಗ್ನರಾದರು. ಮರುದಿನ ಶಾಲಿವಾಹನ ಶಕ 1522ನೇ ಶಾವ೯ರಿ ಫಾಲ್ಗುಣ ಕೃಷ್ಣ ಪಕ್ಷ ತೃತೀಯ ಬುಧವಾರ ಸ್ವಾತಿ ನಕ್ಷತ್ರದಲ್ಲಿ ಶ್ರೀಮದ್ವಾದಿರತೀಥ೯ ಪರಮಹ೦ಸ ಕುಲತಿಲಕರ ಹಸ್ತದಿ೦ದ ಜಪಸರವು ಕೆಳಗೆ ಬಿದ್ದಿತು. ಕೂಡಲೇ ವೃಂದಾವನದ ಮುಚ್ಚಳವನ್ನು ಮುಚ್ಚಲಾಯಿತು.
ಆಗ ಮಿ೦ಚುವ ವಿಮಾನದಲ್ಲಿ ಶ್ರೀಗಳು ಕುಳಿತಕೂಡಲೇ ಅದು ಮೇಲಕ್ಕೇರಲಾರ೦ಭಿಸಿತು. ಭಕ್ತವೃಂದದ ಆತ೯ಧ್ವನಿ ಆಲಿಸಿದ ಶ್ರೀಗಳು ಕರುಣೆಯಿ೦ದ ಪಾದುಕೆಗಳನ್ನು ಮತ್ತು ತಾವು ಹೊದ್ದುಕೊ೦ಡಿರುವ ಶಾಟಿಯನ್ನು ಭಕ್ತರ ಕಡೆಗೆ ಹಾಕಿ "ನಾನು ಇಲ್ಲಿಯೆ ವೃಂದಾವನದಲ್ಲಿ ಸನ್ನಿಹಿತರಾಗಿ, ಶ್ರೀಭೂತರಾಜರ ಸೇವೆ ಕೈಗೊ೦ಡು, ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುತ್ತೇನೆ" ಎ೦ದು ಹೇಳಿ ವಿಮಾನದ ಜೊತೆ ಕಣ್ಮರೆಯಾದರೆನ್ನುವುದು ಕ್ಷೇತ್ರದ ಇತಿಹಾಸ.
ಕ್ಷೇತ್ರದ ಕಾರಣಿಕ ಎಂದರೆ ಕ್ಷೇತ್ರವನ್ನು ಮುನ್ನಡೆಸುತ್ತಿದೆ ಎಂದು ನಂಬಲಾಗುವ ದೈವಶಕ್ತಿ "ಶ್ರೀ ಭೂತರಾಜರು". ಮಾರ್ಚ್ ತಿಂಗಳಲ್ಲಿ ಹೋಳಿ ಹುಣ್ಣಿಮೆ ಸಂದರ್ಭದಲ್ಲಿ ಇಲ್ಲಿ ಮೂರು ದಿನಗಳ ಆರಾಧನೆ ಕೂಡ ಇರುತ್ತದೆ. ಮಠದಲ್ಲಿ ಊಟ ಇಲ್ಲದಿದ್ದರೆ ಭಟ್ಟರ ಮನೆಯಲ್ಲಿ ಸಂಮೃದ್ಧ ಭೋಜನ ಸಿಗುತ್ತದೆ. ಉಡುಪಿಯ ಅಷ್ಠ ಮಠಗಳಲ್ಲಿ ಸೋದೆ ಮಠ ಕೂಡ ಒಂದು.
ಪ್ರೇಕ್ಷಣೀಯ ಸ್ಥಳಗಳು : ಶಿರಸಿಯಲ್ಲಿಯೇ ಸರ್ವಾಭಿಷ್ಟ ಸಿದ್ಧಿಸುವ ಶಿರಸಿ ಮಾರಿಕಾಂಬಾ ದೇವಿಯ ದೇವಸ್ಥಾನವಿದೆ. ಫೆಬ್ರವರಿಯಲ್ಲಿ ಇಲ್ಲಿ 9 ದಿನಗಳ ಉತ್ಸವವಿರುತ್ತದೆ. ಶಿರಸಿಯ ಸುತ್ತಮುತ್ತ ಅನೇಕ ಪ್ರೇಕ್ಷಣೀಯ ಸ್ಥಳಗಳಿವೆ. ಸಾವಿರ ಲಿಂಗಗಳಿರುವ ಸಹಸ್ರಲಿಂಗ ನೋಡತಕ್ಕ ರಮಣೀಯ ಸ್ಥಳ. ಶಿರಸಿಯಿಂದ ಕೇವಲ 45 ಕಿ.ಮೀ. ದೂರದಲ್ಲಿರುವ ಪಶ್ಚಿಮಘಟ್ಟದಲ್ಲಿರುವ ಯಾಣ ಚಾರಣಿಗರಿಗೆ ಹೇಳಿ ಮಾಡಿದ ಸ್ಥಳ. ಸೊಂದೆಗಾಗಲಿ ಯಾಣಕ್ಕಾಗಲಿ ಶಿರಸಿಯಿಂದ ತಲುಪಲು ಸಾಕಷ್ಟು ರಾಜ್ಯ ಸಾರಿಗೆ ಬಸ್ ಮತ್ತು ಖಾಸಗಿ ವಾಹನಗಳ ಸೌಕರ್ಯವಿದೆ.
ಸೋದೆಮಠದ ವಿಳಾಸ:
ಸೋದೆ ಶ್ರೀವಾದಿರಾಜ ಮಠ
ಶಿರಸಿ ತಾಲೂಕ್, ಉತ್ತರ ಕನ್ನಡ ಜಿಲ್ಲೆ
ದೂರವಾಣಿ : 08384 279685


Vijayadashami in Sonda




links to know more:

*****
ಶ್ರೀ ವಾದಿರಾಜಯತಿವರ ಕೃತಿ
'ಪಂಚಭೇದಪ್ರಾರಂಭ'-

ಶ್ರೀಮನ್ಮಧ್ವಸಿದ್ಧಾಂತ ಸಾರಭೂತ ಪ್ರಮೇಯವಾಗಿದ್ದಂಥಾ ಪಂಚಭೇದ ಪ್ರಕಾರ ದೊಡ್ಡವರಿಂದ ಸಂಪ್ರದಾಯ ಪೂರ್ವಕವಾಗಿ ಬಂದಂಥಾದ್ದು, ಸರ್ವ ಸಜ್ಜನರಿಗೆ ಸಮ್ಮತವಾದದ್ದು, ಸದ್ವೈಷ್ಣವರು ಯಥಾಶಕ್ತ್ಯನುಸಾರವಾಗಿ ತಿಳಿದುಕೊಳ್ಳತಕ್ಕದ್ದು.

೧. ಜೀವೇಶ್ವರ ಭೇದಪ್ರಕಾರ:-
ಈಶ್ವರನ ಸ್ವರೂಪ ಸ್ವಭಾವ ಎಂಥಾದ್ದು ಎಂದರೆ - ಆನಾದಿನಿತ್ಯ, ಅಪ್ರಚ್ಛನ್ನ, ಸರ್ವತಂತ್ರ ಸ್ವತಂತ್ರ, ಸರ್ವಜ್ಞ, ಸರ್ವ ಜಗದತೀತ, ಸ್ವಪ್ರಕಾಶ, ನಿತ್ಯನಿರ್ದೋಷ, ರಮಾದಿ ಜಗತ್ತಿನ ಉತ್ಪತ್ತಿ, ಸ್ಥಿತಿ, ಲಯಾದಿ ಕಾರಣ, ಜ್ಞಾನಾನಂದಾದಿ ಬಲವೀರ‍್ಯಪೂರ್ಣ, ರಮಾದಿ ಅಸ್ವತಂತ್ರ ಜಗತ್ಕರ್ತು, ಅನಂತಾನಂತಗುಣ ರೂಪಾತ್ಮಕ ಸ್ವರೂಪ, ಕ್ಶೀರಾಬ್ದಿಶಾಯಿತ್ವ ಇವು ಈಶ್ವರನ ವಿಶ್ವಗತ ಧರ್ಮಗಳು.

ಜೀವನ ಧರ್ಮವು ಅಸ್ವತಂತ್ರನು, ಅಜ್ಞಾನಿಯು, ಅನೇಕವಿಧ ಜನ್ಮಕರ್ಮ ಸುಖದುಃಖ ಭೋಗಿ, ಸ್ವಪರವಾದಂಥ ಜ್ಞಾನಶೂನ್ಯನು, ಸರ್ವದಾ ಅಯೋಗ್ಯ ವಿಷಯಾಸಕ್ತನು, ಸ್ವಾರ್ಥಪರನು, ಜನನ ಮರಣ ವ್ಯಾಧಿ ಸಹಿತನು, ಪರಮಾತ್ಮನ ವಿಷಯಜ್ಞಾನ ಭಕ್ತಿ ವೈರಾಗ್ಯವರ್ಜಿತನು, ಪ್ರತಿಕ್ಷಣಶಃ ಅನಂತ ಅಪರಾಧ ಉಳ್ಳವನೆಂದು ನೋಡಿಕೊಂಡು ಜೀವ ಸರ್ವದಾ ದೇವರಿಂದ ಶಿಕ್ಷಾರ್ಹನು, ತನ್ನಿಂದ ಸ್ವೋತ್ತುಮರ ಅಧೀನದಲ್ಲಿ ಸರ್ವದಾ ಪ್ರಾಕೃತ ಅಪ್ರಾಕೃತ ಆವರಣ ವಿಶಿಷ್ಟನು.  ಇಂಥಾ ಅಜ್ಞಾನಿ ಜೀವನಿಗೂ ಪರಮಾತ್ಮನಿಗೂ ಅಭೇದ ಕೂಡದಾಗಿ ಭೇದವೇ ಸಿದ್ಧವು.

೨. ಜೀವ ಜೀವರ ಭೇದಪ್ರಕಾರ:-
ಬ್ರಹ್ಮಾದಿಗಳಿಂದ ಹಿಡಿದು ತೃಣ ಜೀವರ ಪರ‍್ಯಂತ ಮುಕ್ತಿಯೋಗ್ಯ ಜೀವರಾಶಿಗಳು ಐದು ಪ್ರಕಾರ.  (೧) ದೇವತೆಗಳು (೩) ಋಷಿಗಳು (೩) ಪಿತೃಗಳು (೪) ಭೂಪಾಲಕರು ಮತ್ತು (೫) ಮನುಷ್ಯೋತ್ತಮರು, ಒಳಗೆ ಈ ಪ್ರಕಾರ ಪಂಚಭೇದದ ಬ್ರಹ್ಮಾದಿಗಳಿಂದ ಹಿಡಿದು ದೇವಗಂಧರ್ವರ ಪರ‍್ಯಂತ ಸಾಂಶ ಜೀವರು.  ಉಳಿದ ಮನುಷ್ಯಗಂಧರ್ವರಲಾಗಾಯಿತು ತೃಣ ಜೀವಿ ಪರ‍್ಯಂತ ನಿರಂಶರು.  ಈ ಪ್ರಕಾರ ಮುಕ್ತಿ ಯೋಗ್ಯ ಜೀವರಾಶಿಗಳು.

ಇವರ ಹೊರತು ರಾಜಸ ಜೀವರು ಮೂರು ಪ್ರಕಾರ, ಸ್ವರ್ಗಪ್ರಚುರರು, ನಿರಯಪ್ರಚುರರು, ಭೂಪ್ರಚುರರು.  ತ್ರಿವಿಧ ನಿತ್ಯ ಸಂಸಾರಿಗಳಿಗೆ ತಾರತಮ್ಯ ಜ್ಞಾನವಿಲ್ಲ, ಪಂಚಭೇದ ಜ್ಞಾನವಿಲ್ಲ, ದೇವರ ಸೃಷ್ಟ್ಯಾದಿ ಅಷ್ಟಕರ್ತೃತ್ವದ ಜ್ಞಾನವಿಲ್ಲ, ಲಿಂಗಭಂಗ ಉಂಟು, ವಿರಜಾ ನದಿ ಸ್ನಾನವಿಲ್ಲ, ವಾಸುದೇವ ಮೂರ್ತಿ ದರ್ಶನವಿಲ್ಲ, ಧಾಮತ್ರಯದ ಪ್ರವೇಶವಿಲ್ಲ, ತಾರಕಬ್ರಹ್ಮ ಉಪದೇಶವಿಲ್ಲ.  ಉಳಿದ ಸಾತ್ವಿಕ ತಾಮಸ ಜನರಿಂದ ಭಿನ್ನ ಜೀವರು = ರಾಜಸರು = ನಿತ್ಯಸಂಸಾರಿಗಳೆಂದು ತಿಳಿಯತಕ್ಕದ್ದು.

ಉಭಯ ಜೀವರಾಶಿಗಳಿಂದ ಹೊರತು ಸಾತ್ವಿಕ ರಾಜಸರಿಂದ ಭಿನ್ನರಾದಂಥ ತಮೋಯೋಗ್ಯ ಜೀವರಾಶಿಗಳು ಚತುರ್ವಿಧರು (೧) ಕಲಿ, ವಿಪ್ರಚಿತ್, ಜರಾಸಂಧ, ಕಾಲನೇಮಿ ಇವರೇ ಮೊದಲಾಗಿ ಉಳ್ಳಂಥ ದೈತ್ಯ ಶ್ರೇಷ್ಠರ ಪಕ್ಷ ಒಂದು (೨) ಮತ್ತು ವಿಷ್ಣು ವೈಷ್ಣವರುಗಳ ದ್ವೇಷಿಗಳಾದಂಥ ದೈತ್ಯ ಮಧ್ಯಮರು ಜೀವೇಶ್ವರ ಅಭೇದ ಜ್ಞಾನ, ಪ್ರತ್ಯಕ್ಷವಾದಂಥಾ ಜಗನ್ಮಿಥ್ಯಾಜ್ಞಾನಸಹಿತರು, (೩) ನವ ವಿಧ ದ್ವೇಷಗಳುಳ್ಳಂಥ ಪಿಶಾಚ ಅಧಮ ದೈತ್ಯರು, (೪) ತ್ರಿವಿಧರಿಗೂ ಭೃತ್ಯಭಾವ ಉಳ್ಳಂಥ ಮನುಷ್ಯಾಧಮರು.  ಈ ಪ್ರಕಾರ ತಮೋಯೋಗ್ಯ ಜೀವರಾಶಿಗಳು ಚತುರ್ವಿಧರು [ದೈತ್ಯರು, ರಾಕ್ಷಸರು, ಪಿಶಾಚಿಗಳು, ಮರ್ತ್ಯಾಧಮರು].

ಹೀಗೆ ಸಾತ್ವಿಕ, ರಾಜಸ, ತಾಮಸ ಜನರಿಂದ ಪರತ್ಪರ ಜೀವ ಜೀವರ ಭೇದ ಒಂದು.

೩. ಜೀವಜಡದ ಭೇದ ಪ್ರಕಾರ:-
ಜೀವರಿಗೆ ತಮ್ಮ ಯೋಗ್ಯತಾ ಕರ್ಮಾನುಸಾರವಾಗಿ ಪರಮಾತ್ಮನಿಂದ ಪ್ರಾಪ್ತಿಯಾದಂಥ ಸುಖದುಃಖ ಅನುಭವ, ಪಾಪ ಪುಣ್ಯ ಲೇಪ, ಸ್ವರ್ಗ ಸೌಖ್ಯ, ನರಕ ಯಾತನ ಈ ಪ್ರಕಾರ ಸುಗತಿ ದುರ್ಗತಿ ಉಂಟು, ತ್ರಿವಿಧರಿಗೂ ತ್ರಿವಿಧ ಜ್ಞಾನ, ಭಕ್ತಿ, ವೈರಾಗ್ಯ ಉಂಟು.  ಇದು ಜೀವ ಧರ್ಮವು.  ಈ ಪ್ರಕಾರ ಇಷ್ಟು ಬಗೆಯ ಜೀವರಿಂದ ಭೇದವಾದಂಥಾ ಜಡಗಳಿಗೆ ಸುಖದುಃಖ ಅನುಭವ, ಪಾಪ ಪುಣ್ಯ ಲೇಪ ಇಲ್ಲದ ಕಾರಣ ಜೀವರಿಂದ ಜಡಗಳಿಗೆ ಭೇಧವೇ ಸಿದ್ಧ.

೪. ಜಡ ಜಡದ ಭೇದ ಪ್ರಕಾರ:-
ನಿತ್ಯ ಜಡ, ನಿತ್ಯಾನಿತ್ಯ ಜಡ, ಅನಿತ್ಯ ಜಡ ಎಂದು ಮೂರು ಪ್ರಕಾರ.  ಪ್ರಾಕೃತ ಜಡ, ವಿಕೃತ ಜಡ, ವೈಕೃತ ಜಡ ಇದರ ವಿವೇಕ.
ಅನಾದಿ ನಿತ್ಯ ಅಪ್ರಚ್ಛನ್ನವಾದಂಥ ಅವ್ಯಾಕೃತಾಕಾಶ; ಅನಾದಿ ನಿತ್ಯ ಅಪ್ರಚ್ಛನ್ನವಾದಂಥ ಅನಂತಾನಂತ ವೇದಗಳು; ಅನಾದಿ ನಿತ್ಯ ಅಪ್ರಚ್ಛನ್ನವಾದಂಥ ಪಂಚಾಶತ್ ವರ್ಣಗಳು ಈ ಮೂರು ನಿತ್ಯ ಜಡ.
ಅನಿತ್ಯಜಡ ಮೂರು ಪ್ರಕಾರ.  ಪ್ರಾಕೃತ ಜಡ, ವಿಕೃತ ಜಡ, ವೈಕೃತ ಜಡ ಇದರ ವಿವೇಕ.

ಪ್ರಾಕೃತ ಜಡ.  ಬ್ರಹ್ಮಾಂಡದ ಹೊರಗಿನ ಅಸಂಸೃಷ್ಟವಾದಂಥ ದಶಾವರಣ [೧ ಉದಕ, ೨ ತೇಜ, ೩ ವಾಯು, ೪ ಆಕಾಶ, ೫ ಅಹಂಕಾರ, ೬ ಮಹತ್ತತ್ವ, ೭-೯ ಗುಣತ್ರಯ, ೧೦ ಅವ್ಯಾಕೃತಾಕಾಶ]

ವಿಕೃತ ಜಡ. ಚತುರ್ವಿಂಶತಿ ತತ್ವಾತ್ಮಕವಾದಂಥ, ತೇಜೋಮಯವಾದಂಥ, ಸುವರ್ಣಾತ್ಮಕವಾದಂಥ, ಪಂಚಾಶತ್ ಕೋಟಿ ಯೋಜನ ಔನ್ನತ್ಯವುಳ್ಳಂಥ ಬ್ರಹ್ಮಾಂಡ.

ವೈಕೃತ ಜಡ.  ಬ್ರಹ್ಮಾಂಡದ ವಳಗಿನ ಚತುರ್ವಿಂಶತಿ ಭವನ, ಪಂಚಾಶತ್ ಕೋಟಿ ಯೋಜನ ಭೂಮಂಡಲ, ಸಪ್ತ ಸಮುದ್ರ, ಸಪ್ತದ್ವೀಪ, ಮೇರು ಮಂದರಾದಿ ಲೋಕಾಲೋಕ ಪರ್ವತಗಳು, ಸುವರ್ಣ ಭೂಮಿ, ಘನೋದಕ ಇವೇ ಮೊದಲಾಗಿ ಉಳ್ಳಂಥಾದ್ದು.

ಷರಾ:- ಇದರಲ್ಲಿ ವೈಕುಂಠಾದಿ ಧಾಮತ್ರಯತಮಸ್ಸು ಕೂಡಾ ಇದೆ.

।। ಶ್ರೀ ಕೃಷ್ಣಾರ್ಪಣಮಸ್ತು ।।
******************

ದಟ್ಟ ಕಾಡಿನ ನಟ್ಟ ನಡುವಿನ ರಮಣೀಯ 'ತಪೋವನ'
🌺🌺🌺🌺🌺🌺
 ಶ್ರೀ ಕ್ಷೇತ್ರ ಸೋಂದಾ ವಾದಿರಾಜ ಮಠದಿಂದ ಆರು ಕಿಲೋಮೀಟರ್ ದೂರದಲ್ಲಿನ ಅದ್ಭುತವಾದ ಪವಿತ್ರ ಕ್ಷೇತ್ರ ತಪೋವನ. ಇಡೀ ಭಾರತ ಖಂಡದ ಯತಿಗಳಲ್ಲಿ ಬೃಂದಾವನ ಹೊಂದಿದವರಲ್ಲಿ ಮೊದಲಿಗರಾದ ವಾದಿರಾಜ ಸ್ವಾಮಿಗಳು ತಪಸ್ಸು ಮಾಡಿದ ಪುಣ್ಯ ಪ್ರದೇಶವದು. ದೈವಾಂಶ ಸಂಭೂತರೂ ಮಹಾಪುರುಷರೂ ಆಗಿದ್ದ ವಾದಿರಾಜ ಶ್ರೀಗಳು ನಿತ್ಯ ಪೂಜೆ ಜಪ-ತಪ ಮಾಡುತ್ತಿದ್ದ ಸ್ಥಳವೇ ಈ ತಪೋವನ. ಈ ಪ್ರದೇಶಕ್ಕೆ ಸುಮಾರು ನಾಲ್ಕುನೂರು ವರ್ಷಗಳಷ್ಟು ಇತಿಹಾಸವಿದೆ. ಶಾಲ್ಮಲಾ ನದಿಯ ಪ್ರಶಾಂತ ಪರಿಸರ, ದಟ್ಟ ಕಾಡಿನ ನಡುವಿನ ಈ ಜಾಗ ಕೆಲವರಿಗೆ ಗೊತ್ತು ಹಲವರಿಗೆ ಗೊತ್ತಿಲ್ಲ. ಆದರೆ ಈ ತಪೋವನದ ಬಗ್ಗೆ ಇರುವ ಕೆಲವು ಇಂಟರೆಸ್ಟಿಂಗ್ ವಿಚಾರಗಳನ್ನ ತಿಳಿಸುವ ಪ್ರಯತ್ನವನ್ನು ನಾವು ಇಂದಿನ ಸಂಚಿಕೆಯಲ್ಲಿ ಕೊಡುತ್ತಿದ್ದೇವೆ.
 
ಸುತ್ತಲೂ ಕಾಡಿನಿಂದ ಆವೃತವಾಗಿರುವುದರಿಂದ ತಪೋವನಕ್ಕೆ ಬರಲು ಬಹಳಷ್ಟು ಜನರು ಹಿಂಜರಿಯುತ್ತಾರೆ. ಸರಿಯಾದ ನಾಮಫಲಕವಾಗಲಿ, ಸುಗಮವಾದ ರಸ್ತೆಯಾಗಲಿ ಇಲ್ಲ. ಈ ಪ್ರದೇಶಕ್ಕೆ ಬರುವುದಾದರೆ ಕಿಲೋಮೀಟರುಗಳಷ್ಟು ದೂರವನ್ನು ಕಾಲ್ನಡಿಗೆಯಲ್ಲಿಯೇ ಸಾಗಬೇಕು. ಸಾಯಂಕಾಲ ಆರು ಘಂಟೆಯ ನಂತರ ತಪೋವನ ಪ್ರದೇಶಕ್ಕೆ ಯಾರೂ ಹೋಗಬಾರದೆನ್ನುವ ಪ್ರತೀತಿ ಇದೆ. ಕಾಡು ಪ್ರಾಣಿಗಳಿಂದ ತೊಂದರೆಯಾಗಬಹುದು ಎನ್ನುವುದು ಒಂದು ಕಾರಣವಾದರೆ, ಇದು ಶಕ್ತಿಶಾಲಿ ಭೂತರಾಜ ಕ್ಷೇತ್ರವಾಗಿರುವುದೂ ಮತ್ತೊಂದು ಕಾರಣ. ತಪೋವನ ಕೇವಲ ಪುಣ್ಯ ಸ್ಥಳ ಮಾತ್ರವೇ ಅಲ್ಲ, ಸೈಸಗರ್ಿಕ ಹಚ್ಚಹಸಿರಿನಿಮದ ಹಾಗೂ ದೈವೀಶಕ್ತಿಯಿಂದ ಕೂಡಿರುವುದರಿಂದ ಮನಸ್ಸಿಗೆ ಮುದ, ಸುಖ, ಶಾಂತಿ, ನೆಮ್ಮದಿ, ಮನೋನಿಗ್ರಹ ಅರಸಿ ಬರುವ ಭಕ್ತರಿಗೆ ಸೂಕ್ತ ಸ್ಥಳವಿದು. ಶಾಲ್ಮಲಾ ನದಿಯಲ್ಲಿ ಪುಣ್ಯ ತೀರ್ಥ ಸ್ನಾನ ಮಾಡಿ ಪುನೀತರಾಗಲು ಮತ್ತು ಶ್ರೀ ವಾದಿರಾಜರ ಅನುಗ್ರಹ ಪಡೆಯಲು ತಪೋವನಕ್ಕೆ ಭೇಟಿ ನೀಡಲೇ ಬೇಕು. ಯಾವುದೇ ತೊಂದರೆಗಳಿದ್ದರೂ ಕೂಡಾ ಸೋಂದಾ ಮಠದಲ್ಲಿನ ಸೇವೆಯಿಂದ ಇಷ್ಟಾರ್ಥಗಳು ನೆರವೇರುತ್ತವೆ. ಮಳೆಗಾಲದಲ್ಲಿ ಇಲ್ಲಿ ಬರುವುದು ಅಸಾಧ್ಯ.

ತಪೋವನದಲ್ಲಿ ವಾದಿರಾಜ ಪೀಠವಿದೆ. ಶ್ರೀ ವಾದಿರಾಜರು ಸತತ ಹನ್ನೆರಡು ವರ್ಷಗಳ ಕಾಲ ಪ್ರತಿದಿನ ಬಂದು ಸ್ನಾನ, ಸಂಧ್ಯಾವಂದನೆಯನ್ನು ಮುಗಿಸಿಕೊಂಡು ಧ್ಯಾನಾಸಕ್ತರಾಗುತ್ತಿದ್ದರು. ಪೀಠದ ಪಕ್ಕದ ಬಂಡೆಯಲ್ಲಿ ಒರಳುಕಲ್ಲು ಇದೆ. ಅದು ಆ ಕಾಲದಲ್ಲಿ ಹಯಗ್ರೀವ ಪ್ರಸಾದ ತಯಾರಿಸಲು ರುಬ್ಬಿಕೊಳ್ಳಲು ಮಾಡಿಕೊಂಡ ವ್ಯವಸ್ಥೆಯಾಗಿತ್ತು. ವಾದಿರಾಜರ ಇಷ್ಟದೈವ ಹಯಗ್ರೀವ ದೇವರಿಗೆ ಇಲ್ಲಿಯೇ ಹಯಗ್ರೀವ ಮಾಡಿಕೊಂಡು ದೇವರಿಗೆ ಸಮಪರ್ಿಸಿ ಮಠಕ್ಕೆ ಮರಳುತ್ತಿದ್ದರು. ಮತ್ತೊಂದು ಬಂಡೆಯ ಮೇಲೆ ವಾದಿರಾಜರ ಪಾದ, ಹಯಗ್ರೀವ ದೇವರು, ಐದು ಲಿಂಗಗಳು ಹಾಗೂ ಒಂದು ನಂದಿಯ ಕೆತ್ತನೆಯ ಚಿತ್ರಣ ಕಾಣಬಹುದು. ಶ್ರೀ ಮಂಜುನಾಥೇಶ್ವರ, ವಿಶ್ವನಾಥ, ಮಹಾಬಲೇಶ್ವರ, ಅನಂತೇಶ್ವರ, ಚಂದ್ರಮೌಳೀಶ್ವರ ಅಲ್ಲಿರುವ ಐದು ಲಿಂಗಗಳು. ಇಲ್ಲೇ ಸ್ವಲ್ಪ ದೂರದಲ್ಲಿ ಶ್ರೀಗಳು ತಪಸ್ಸು ಮಾಡಿದ ಗುಹೆ, ಹನುಮನ ವಿಗ್ರಹ ಇದೆ. ಮತ್ತೊಂದು ಕಲ್ಲಿನ ಶಿಲಾ ಶಾಸನದ ಮೇಲೆ "ಶುಭಮಸ್ತು ಶಾಲಿವಾಹನ ಶಕ 1551 ಶ್ರೀಮುಖ ಸಂವತ್ಸರದ ವೇದನಿಧಿ ಶ್ರೀ ಪಾದಂಗಳು" ಎಂದು ಬರೆಯಲಾಗಿದೆ. ಅಂದರೆ ವೇದನದಿತೀರ್ಥರು-  ಲಿಂಗಗಳು ಹಾಗೂ ನಂದಿಯ ಚಿತ್ರಗಳನ್ನು ಕೆತ್ತಿಸಿದ್ದಾಗಿ ಉಲ್ಲೇಖವಾಗಿರಬಹುದು. ಇನ್ನೊಂದು ಕಡೆಯಲ್ಲಿ ಶ್ರೀ ವಾದಿರಾಜರು ಕಡ್ಲೆ ಬೆಲ್ಲ ಹರಿವಾಣದಲ್ಲಿ ಇಟ್ಟುಕೊಂಡು ಪ್ರಸಾದ ತಯಾರಿಸಿದಾಗ ದೇವರೇ ಅಶ್ವದ ರೂಪದಲ್ಲಿ ಬಂದು ಸ್ವೀಕರಿಸುತ್ತಿದ್ದರು. ಅದರ ಕುರುಹಾಗಿ ಕಲ್ಲು ಬಂಡೆಯ ಮೇಲೆ ಕುದುರೆಯ ಕಾಲಿನ ಅಚ್ಚು ಇದ್ದು ಅದನ್ನು ಈಗಲೂ ಕಾಣಬಹುದಾಗಿದೆ.

ಈ ತಪೋವನದ ಮತ್ತೊಂದು ನಿಸರ್ಗನಿರ್ಮಿತ ಅಚ್ಚರಿಯೆಂದರೆ ಯತಿಗಳು ಸೂರ್ಯನಮಸ್ಕಾರ ಮಾಡುತ್ತಿದ್ದರು ಎನ್ನಲಾಗುವ ಜಾಗ. ಬಂಡೆಕಲ್ಲೊಂದು ಎಷ್ಟೋ ವರ್ಷಗಳಿಂದ ಸ್ವಲ್ಪವೂ ಸವಕಳಿಯಾಗದೇ ಒಬ್ಬರು ಆ ಕಲ್ಲಿನ ಒಳಗೆ ತೂರಿಕೊಂಡು ಹೊರಬರಬಹುದಾದಂತ ಕೆತ್ತನೆಯಲ್ಲಿದ್ದು ಪೂರ್ವಕ್ಕೆ ಸೂರ್ಯನು ಕಾಣುವಂತೆ ನಮಸ್ಕರಿಸಲು ಅನುವಾಗುವಂತೆ ಆಕಾರವನ್ನು ಹೊಂದಿದೆ. ವಾದಿರಾಜ ಸ್ವಾಮಿಗಳು ದಿನಂಪ್ರತಿ 21 ಸೂರ್ಯನಮಸ್ಕಾರ ಮಾಡುತ್ತಿದ್ದ ಜಾಗವದು. ಇಂದಿನ ಭಕ್ತರಿಗೆ ಏನಾದರೂ ಹೇಳಿಕೆಗಳಿದ್ದರೆ ನೀರನ್ನು ಪ್ರೋಕ್ಷಣೆ ಮಾಡಿಕೊಂಡು ಮನಸಿನಲ್ಲಿ ಪ್ರಾರ್ಥನೆ ಮಾಡಿ ಇಲ್ಲಿ ಬಂದು ಒಂದು ಸೂರ್ಯನಮಸ್ಕಾರ ಮಾಡಬೇಕು. ಬೇಡಿಕೆ ಈಡೇರಿದರೆ ಮರುವರ್ಷ ಎರಡು ನಮಸ್ಕಾರ ಮಾಡಬೇಕು ಎನ್ನುವ ಪ್ರತೀತಿ ಇದೆ. 
ಹಾಗೆಯೇ ಯತಿಗಳು ಅಲ್ಪ ಉಪಹಾರ ಮಾಡಿದ ಜಾಗವಿದೆ. ಅಲ್ಲಿ ಕುಳಿತು ನಾಮಸ್ಮರಣೆ ಮಾಡಬೇಕು. ತಪಸ್ಸು ಮಾಡಿದ ಜಾಗವೂ ಇದೆ. ಆ ಭಾಗಕ್ಕೆ ಮುಖ ಮಾಡಿಕೊಂಡು ಕಣ್ಮುಚ್ಚಿ ಕುಳಿತುಕೊಂಡರೆ ಯಾವುದೇ ಆಲೋಚನೆಗಳಿಲ್ಲದ ಸುಂದರ ಪ್ರದೇಶದಲ್ಲಿ ವಿಹರಿಸುತ್ತಿರುವಂತೆ ಅನಿಸುತ್ತದೆ. ಒಂದು ರೀತಿಯ ಕಂಪನದ ಅನುಭವವಾಗುತ್ತದೆ. ಈ ತಪೋವನಕ್ಕೆ ಎಲ್ಲರಿಗೂ ಬರಲಾಗದು. . ಗುರುಗಳು ಕರೆಸಿಕೊಂಡರೆ ಮಾತ್ರ ಸಾಧ್ಯ. ಭೂತರಾಜರ ಮಹಿಮೆಯಿರುವ ಈ ಕ್ಷೇತ್ರದಲ್ಲಿ ಯಾವುದೇ ಅನೈತಿಕ ಕಾರ್ಯಗಳೂ ಆಗುವುದಿಲ್ಲ. ಪ್ರವಾಸಿಗರು ಸುಖವಾಗಿ ಬರುವಂತಹ ಜಾಗ ಇದಲ್ಲ್ಲ,  ಬರಬೇಕೆಂದರೆ ಕಷ್ಟ ಪಟ್ಟು ಬರಬೇಕು. ಬೆಂಗಳೂರು, ಹುಬ್ಬಳ್ಳಿ ಭಾಗದ ಜನರೇ ಇಲ್ಲಿ ಜಾಸ್ತಿ ಬರುತ್ತಿರುತ್ತಾರೆ. ಈ ಪ್ರದೇಶದಲ್ಲಿ ಬರುವಾಗ ಶಾಲ್ಮಲಾ ನದಿಯು ಹರಿದು ಬರುವಾಗ ಅನೇಕ ಕಡೆಗಳಲ್ಲಿ ಹರಿದು ತಪೋವನದ ಬಳಿಯ ಒಂದು ಪ್ರದೇಶದಲ್ಲಿ ಮರದ ಬೇರುಗಳ ನಡುವಿನಿಂದ ಹರಿಯುತ್ತಾಳೆ. ಆ ನೈಸರ್ಗಿಕ ನೀರು ಕುಡಿದರೆ ಆಯಾಸವಾಗುವುದಿಲ್ಲ ಎನ್ನುವ ನಂಬಿಕೆ ಭಕ್ತರದ್ದು. ಆ ನೀರಿನಿಂದ ಮುಖವನ್ನು ತೊಳೆದರೆ ಮುಖದಲ್ಲಿನ ಸಣ್ಣಪುಟ್ಟ ಕಲೆಗಳು ತೊಲಗುತ್ತವೆ ಹಾಗೂ ಕಾಂತಿ ಹೆಚ್ಚಾಗುತ್ತದೆ ಎನ್ನಲಾಗುತ್ತದೆ.
 
ಈ ಸ್ಥಳದ ಕುರಿತಂತೆ ಅನೇಕ ನೈಜ ಪವಾಡಗಳ ನಡೆದಿವೆ. ಸ್ವಯಂ ಅನುಭವಿಸಿದ ಭಕ್ತರು ಇಲ್ಲಿ ನಮಗೆ ಸಿಗುತ್ತಾರೆ. ಕಾಡಿನಲ್ಲಿ ದಾರಿ ತಪ್ಪಿಸಿಕೊಂಡಿದ್ದಾಗ ನಾಯಿಯೊಂದು ದಾರಿ ತೋರಿಸಿದ ಅನುಭೂತಿ ಬಂದವರು, ಮಗು ಕಳೆದುಕೊಂಡಾಗ ಯತಿಗಳೇ ಮಗುವನ್ನು ಕಾಡಿನಿಂದ ಆಚೆ ಕರೆದುಕೊಂಡು ಬಿಟ್ಟಿದ್ದು ಹೀಗೆ ಹಲವಾರು ಘಟನೆಗಳ ಬಗ್ಗೆ ಅನುಭವಿಸಿದ ಸಾಕ್ಷಿದಾರರು ಕಾಣಸಿಗುತ್ತಾರೆ. ಒಮ್ಮೆ ಬಂದ ಭಕ್ತಾಧಿಗಳು ಮತ್ತೆ ಮತ್ತೆ ಈ ಪ್ರದೇಶಕ್ಕೆ ಬರಲು ಇಷ್ಟಪಡುತ್ತಾರೆ. ಅನೇಕ ಅಚ್ಚರಿಗಳ ಒಳಗೊಂಡಿರುವ, ಸೌಂದರ್ಯದಿಂದ ಕೂಡಿರುವ ಈ ತಪೋವನದ ಕುರಿತಂತೆ ಇರುವ ಸತ್ಯವೊಂದಿದೆ. ಎತ್ತಲೆತ್ತಲಿನಿಂದಲೋ ಬಂದು ಶ್ರೀ ವಾದಿರಾಜರು ತಪಸ್ಸು ಮಾಡಿದ ಜಾಗವೆಂದು ಹುಡುಕಿಕೊಂಡು ನೋಡಿ ಹೋಗುವ ಭಕ್ತರಿಗೆ, ಪ್ರವಾಸಿಗರಿಗೆ ಪರಿಚಿತವಾಗಿರುವ ತಪೋವನ ಸ್ಥಳವು ಶಿರಸಿಯ ಬಹುತೇಕರಿಗೆ ನೋಡಿ ಗೊತ್ತೇ ಇಲ್ಲವೆಂಬುದು ಆಶ್ಚರ್ಯವಾದರೂ ಸತ್ಯ.
***


ಮಟ್ಟು ಗುಳ್ಳ
'ಮಟ್ಟು ಗುಳ್ಳ"ಉಡುಪಿ ತಾಲ್ಲೂಕಿನ ಮಟ್ಟು ಸುತ್ತಮುತ್ತ ಬೆಳೆಯುವ ಬದನೆಗೆ ವಿಶಿಷ್ಟ ರುಚಿ. ಮಟ್ಟು ಗುಳ್ಳ (mattu gulla ) ಎಂದೇ ಹೆಸರಾದ ಈ ಬದನೆ ಕರಾವಳಿಯ ಉದ್ದಗಲದಲ್ಲಿ ಜನಪ್ರಿಯವಾಗಿದೆ. ಉಡುಪಿ ತಾಲ್ಲೂಕಿನ ಮಟ್ಟು ಗ್ರಾಮದ ಸುತ್ತಮುತ್ತ ಬೆಳೆಯುವ ವಿಶಿಷ್ಟ ರುಚಿಯ ಬದನೆ ಮಟ್ಟು ಗುಳ್ಳ’ ಎಂದೇ ಹೆಸರುವಾಸಿ. ಕಟಪಾಡಿ ಬಳಿಯ ಮಟ್ಟು ಪ್ರದೇಶದಲ್ಲಿ ಬೆಳೆಯುವ ಗುಳ್ಳ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳ ಬೇರೆಡೆಯೂ ಬೆಳೆದರೂ ಮಟ್ಟು ಗುಳ್ಳದ ರುಚಿ ಅವಕ್ಕಿಲ್ಲ. ಮಾರುಕಟ್ಟೆಯಲ್ಲಿ ಮಟ್ಟು ಗುಳ್ಳಕ್ಕೆ ಬೇಡಿಕೆ ಹೆಚ್ಚು. ಮಳೆಗಾಲದಲ್ಲಿ ನೆರೆಯೊಂದಿಗೆ ಕೊಚ್ಚಿಕೊಂಡು ಬರುವ ಫಲವತ್ತಾದ ಮಣ್ಣಿನ ಮಣ್ಣು ಗದ್ದೆಗಳಲ್ಲಿ ನಿಲ್ಲುವುದರಿಂದ ಇಲ್ಲಿ ಗುಳ್ಳ ಸಮೃದ್ಧವಾಗಿ ಬೆಳೆಯುತ್ತದೆ. ಉಡುಪಿ ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ನೂರಾರು ಎಕರೆಗಳಲ್ಲಿ ಇದೇ ತಳಿಯ ಬದನೆ ಬೆಳೆದು ಅವನ್ನೇ ಮಟ್ಟು ಗುಳ್ಳ ಎಂದು ಹೇಳಿ ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಮಾರಾಟ ಮಾಡುವವರೂ ಇದ್ದಾರೆ
ಹಿನ್ನೆಲೆ
ಮಟ್ಟು ಗುಳ್ಳಕ್ಕೆ ನಾಲ್ಕೈದು ಶತಮಾನಗಳ ಹಿನ್ನೆಲೆ ಇದೆ. ಉಡುಪಿಯ ವಾದಿರಾಜ ಮಠದ ಕುದುರೆಗೆ ವಿಷಪ್ರಾಶನವಾದಾಗ ಭಾಗವನ್ ಕೃಷ್ಣ ,ವಾದಿರಾಜ ಸ್ವಾಮಿಯ ಕನಸಿನಲ್ಲಿ ಬಂದು ಬಂಗಾಳ ಕೊಲ್ಲಿಯಿಂದ ಮಟ್ಟು ಗುಳ್ಳ ಬದನೆಯ ಬೀಜ ತಂದು ಅದನ್ನು ಉಡುಪಿ ತಾಲೂಕಿನ ಮಟ್ಟು ಗ್ರಾಮದ ರೈತರಿಗೆ ನೀಡಿ ಅವರ ಕೈಯಿಂದ ಬೆಳೆದ ಬದನೆಯ ನೈವೇದ್ಯ ವನ್ನು ಕುದುರೆಗೆ ತಿನ್ನಿಸಿದರೆ ಕುದುರೆ ಹಿಂದಿನ ಸ್ತಿತಿಗೆ ಮರಳುತ್ತದೆ ಎಂಬ ಆಜ್ಞೆಯಾಗಿ ಅದರಂತೆ ಮಾಡಲು ಕುದುರೆ ಯಥಾ ಸ್ತಿತಿಗೆ ಮರಳಿತು.ನಂತರದ ದಿನಗಳಿಂದ ಈ ಊರಿನಲ್ಲಿ ಈ ತಳಿಯನ್ನು ಬೆಳೆಸಲಾಯಿತು ಎಂಬ ಪ್ರತೀತಿ ಇದೆ. ಗುಳ್ಳದ ಬೀಜಗಳನ್ನು ರೈತರಿಗೆ ಪ್ರಸಾದ ರೂಪದಲ್ಲಿ ವಿತರಿಸಿದರು ಎನ್ನುವ ಪ್ರತೀತಿ ಇದೆ. ಮಟ್ಟುಗುಳ್ಳದಿಂದ ಮಾಡಿದ ವಿಶೇಷ ಖಾದ್ಯಗಳನ್ನು ಉಡುಪಿ ಪರ್ಯಾಯ ಪೀಠಾರೋಹಣ ಉತ್ಸವದ ಸಂದರ್ಭದಲ್ಲಿ ಬಳಸುವ ಸಂಪ್ರದಾಯ ಇದೆ
ಕಮಲಾತನಯ (ಕಾಪು ಲಕ್ಷ್ಮೀಕಾಂತ ತಂತ್ರಿ )
******

No comments:

Post a Comment