Tuesday 1 January 2019

ರಾಯರು 009 ಮಹಿಮೆ ರಾಘವೇಂದ್ರ ಸ್ವಾಮಿ rayaru 009 mahime raghavendra swamy


ರೋಗಹರ ಶ್ರೀ ರಾಘವೇಂದ್ರ

ಶ್ರೀ ರಾಮಚಂದ್ರಾಯ ನಮಃ.
ಶ್ರೀ ಹನುಮತೇ ನಮಃ.
ಶ್ರೀ ಗುರುಭ್ಯೋನಮಃ.
ಶ್ರೀ ರಾಘವೇಂದ್ರಾಯ ನಮಃ

ಶ್ರೀ ರಾಘವೇಂದ್ರ ಸ್ವಾಮಿಗಳು ಅಪಾರ ಕರುಣೆ, ಅನುಗ್ರಹ ತಮ್ಮ
ಭಕ್ತರ ಇಷ್ಟಾರ್ಥಗಳನ್ನು ನೇರವೇರಿಸುತ್ತಾ, ಮಂತ್ರಾಲಯದಲ್ಲಿ ರಾರಾಜಿಸುತ್ತಿರುವರು..

ಶ್ರೀ ಗುರುರಾಜ ರ ಅವತಾರ--

ಹಿಂದೆ ಶಂಖುಕರ್ಣನೆಂಬ ದೇವನು ಬ್ರಹ್ಮ ಶಾಪದಿಂದ ಭೂಮಿಯಲ್ಲಿ ಪ್ರಹ್ಲಾದ ನಾಗಿ ಹುಟ್ಟಿ ಭೂಭಾರ ಹರಣ ಮಾಡಿ,
ಮುಂದೆ ಕಲಿಯುಗದಲ್ಲಿ ಶ್ರೀ ರಾಮನನ್ನು ಸೇವಿಸಲು ಮಂತ್ರಾಲಯದ ಲ್ಲಿ ಶ್ರೀ ರಾಘವೇಂದ್ರ ಸ್ವಾಮಿ ಗಳಾಗಿ ಜನ್ಮವೆತ್ತಿದರು.

ಎರಡನೇ ಜನ್ಮದಲ್ಲಿ ವ್ಯಾಸರಾಯರು, ಜನ್ಮವೆತ್ತಿ  ಮೂರು ಅವತಾರಗಳನ್ನು ಎತ್ತಿ ಶಂಖುಕರ್ಣ ಜನ್ಮವೆತ್ತಿ  ದ್ವೈತ ಮತದ್ಧೋರ ಕಾರ್ಯಗಳನ್ನು
ಮಾಡಿದರು.

ಹರಿದಾಸರು ,ಅಪರೋಕ್ಷ ಜ್ಞಾನಿಗಳು ಆದ ವಿಜಯದಾಸರು
ತಮ್ಮ ಒಂದು ಸುಳಾದಿ ಯಲ್ಲಿ ಹೀಗೆ ವರ್ಣಿಸಿದ್ದಾರೆ.

ಹರಿಪಾದಕ್ಕೆರಗಿ ವರಪ್ರಹ್ಲಾದನು
ಎರಡೊಂದು ಮಾರ್ಗದಲ್ಲಿ ಕೃಷ್ಣನ
ಮೂರುತಿ/
ಪರಿಪರಿಯಲಿ  ಭಜಿಸಿ ಧನ್ಯನಾಗುವೆನೆನುತ ಸುರ ಮುನಿಗೆರಗಿ ನಿಂದಿರಲಾಗ ನಾರದ

ಕರುಣದಿಂದಲಿ ಉತ್ತರ ವ ಪೇಳದನಾಗ
ಧರೆಯೊಳು ಜನಿಸುವ ವರವ
 ಪಡೆದು ಇಪ್ಪ ಪರಮಭಾಗವತ
 ಶಿರೋಮಣಿಯೇ ನೀನು///

ಈ ಪವಿತ್ರವಾದ ಅವತಾರಗಳನ್ನು ತಾಳಿ ಮಂತ್ರಾಲಯದ ಲ್ಲಿ ಕಂಗೊಳಿಸುವ ಯತಿಶ್ರೇಷ್ಟ ರಾದ ಶ್ರೀ ರಾಘವೇಂದ್ರ ಸ್ವಾಮಿಗಳು
ಇಂದಿಗೂ ತಮ್ಮ ಭಕ್ತರಿಗೆ ಅನುಗ್ರಹ ಮಾಡುತ್ತಿದ್ದಾರೆ..

OM  SRI  RAGHVENDRAYA NAMAHA.

" ಸುಂದರ ಮೂರುತಿ ಗುರು ರಾಘವೇಂದ್ರರು "

( ಶ್ರೀ ಪ್ರಹ್ಲಾದ ವ್ಯಾಸ ಮುನಿಯೇ ಗುರು ರಾಘವೇಂದ್ರ )

ತಪ್ತಕಾಂಚನ ಸಂಕಾಶಂ ಅಕ್ಷಮಾಲಾ ಕಮಂಡಲು೦
ದೋರ್ಭ್ಯಾ೦ ದಧಾನಂ ಕಾಷಯವಸನಂ ರಾಮ ಮಾನಸಮ್ ।
ಯೋಗೀಂದ್ರತೀರ್ಥ ವಂದ್ಯಾಂಘ್ರಿಂ ತುಳಸೀ ಹಾರ ಭೂಷಿತಮ್
ಜ್ಞಾನ ಭಕ್ತಿ ತಪಃ ಪೂರ್ಣಂ ಧ್ಯಾಯೇದಿಷ್ಟಾರ್ಥ ಸಿದ್ಧಯೇ ।।

ಕಾದ ಬಂಗಾರದಂತೆ ಶರೀರ ಶೋಭೆಯಿಂದ ರಾಜಿಸುವವರೂ; ಎರಡು ಕರಗಳಲ್ಲಿ ಕಮಲಾಕ್ಷೆ ಮಾಲೆ - ಕಮಂಡಲುಗಳನ್ನು ಧರಿಸಿರುವವರೂ; ಕಾಷಾಯಾಂಬರ ಧಾರಿಗಳೂ; ಮನದಲ್ಲಿ ಶ್ರೀ ಮೂಲರಾಮ ವಿರಾಜಿತರೂ; ಶ್ರೀ ಯೋಗೀಂದ್ರತೀರ್ಥರಿಂದ ವಂದಿತ ಪಾದಾಬ್ಜರೂ; ತುಳಸೀ ಮಾಲೆಗಳಿಂದ ವಿಭೂಷಿತರೂ; ಶ್ರೀ ಭಗವದ್ಭಕ್ತಿ - ಜ್ಞಾನ - ತಪಸ್ಸುಗಳಿಂದ ಪರಿಪೂರ್ಣರೂ ಆದ ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮರನ್ನು ಇಷ್ಟಾರ್ಥ ಸಿದ್ಧಿಗಾಗಿ ಧ್ಯಾನಿಸಬೇಕು ಎಂದು ತಾತ್ಪರ್ಯ!!

ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮರು ಯೋಗಾಸನಾ ರೂಢರಾಗಿ ತಮ್ಮ ನಿರ್ಮಲವೂ ಪವಿತ್ರವೂ ಆದ ಹೃದಯ ಕಮಲದಲ್ಲಿ ಸರ್ವದಾ ಷಡ್ಗುಣೈಶ್ವರ್ಯ ಪೂರ್ಣನಾದ ಶ್ರೀಮನ್ನಾರಾಯಣನ ಅನಂತ ಮಹಿಮೆಗಳನ್ನು ಚಿಂತಿಸುತ್ತಾ ಆಢ್ಯರಾಗಿದ್ದಾರೆ.ಗುರುಗಳ ಕರಕಮಲಗಳಲ್ಲಿ ಕಮಂಡಲು ಮತ್ತು ವನಮಾಲೆಗಳು ವಿರಾಜಿಸುತ್ತಿವೆ.

ಪ್ರಾಚೀನಾಚಾರ್ಯರಾದ ಶ್ರೀಮದಾಚಾರ್ಯರು - ಶ್ರೀ ಪದ್ಮನಾಭತೀರ್ಥರು - ಶ್ರೀ ಜಯತೀರ್ಥರು - ಶ್ರೀ ರಾಜೇಂದ್ರತೀರ್ಥರು - ಶ್ರೀ ವಿಬುಧೇಂದ್ರತೀರ್ಥರು - ಶ್ರೀ ಶ್ರೀಪಾದರಾಜರು - ಶ್ರೀ ವ್ಯಾರಾಜರು - ಶ್ರೀ ವಿಜಯೀಂದ್ರತೀರ್ಥರು - ಶ್ರೀ ಸುಧೀಂದ್ರತೀರ್ಥರುಗಳು ಉಪದೇಶಿಸಿದ ವೈದಿಕ ದ್ವೈತ ಸಿದ್ಧಾಂತವನ್ನು ಉದ್ಧರಿಸುವುದರಲ್ಲಿ ಏಕೈಕ ದಕ್ಷರಾಗಿದ್ದಾರೆ ಕಲಿಯುಗದ ಕಲ್ಪವೃಕ್ಷ - ಕಾಮಧೇನುಗಳಾದ ಶ್ರೀ ಮಂತ್ರಾಲಯ ಪ್ರಭುಗಳು!!

OM  SRI  GURU  RAGHVENDRAYA  NAMAHA.
***

ಕರೆದರೆ ಬರಬಾರದೆ !

ಸುರಪುರದ ಆನಂದ ದಾಸರು ಪಂಚಮುಖಿ ಮುಖ್ಯಪ್ರಾಣ ದೇವರ ಸೇವೆಗೆ ಮಂತ್ರಾಲಯ ಹತ್ತಿರದ ಗಾಣದಳದಲ್ಲಿ ಸೇವೆಗೆ ಬಂದಿರುತ್ತಾರೆ. ಶ್ರಾವಣ ಮಾಸ ಕೃಷ್ಣ ಪಕ್ಷ ರಾಯರ ಆರಾಧನೆಯ ಸಮಯ ರಾಯರ ದರ್ಶನಕೆ ದಾಸರು ಪಂಚಮುಖಿ ಇಂದ ಮಂತ್ರಾಲಯಕೆ ಹೊರಡಲು ಸಿದ್ದರಾಗುತ್ತಾರೆ. ನದಿಯಲ್ಲಿ ಪ್ರವಾಹ ದುಮಿಕ್ಕಿ ಹರಿತಿರೋ ಕೃಷ್ಣಾ ನದಿ. ಹರಿಗೋಲು ಹಾಕುವವನಿಗೆ ದಾಸರು ದಡ ಸೇರಿಸಲು ಕೇಳುತ್ತಾರೆ.  ಪ್ರವಾಹ ಇಡದರಿಂದ ಅಂಬಿಗ ಸೇರಿಸುವುದು ಕಷ್ಟಸಾಧ್ಯ ಮದ್ಯೆ ಪ್ರವಾಹ ಹೆಚ್ಚಿದರೆ ನಾನು ಜವಾಬ್ದಾರನಲ್ಲ ಅಂತ ಹೇಳಿ ಹೊರಡಲು ಸಿದ್ದರಾಗುತ್ತಾರೆ. ನದಿ ಮದ್ಯದಲ್ಲಿ ಪ್ರವಾಹ ಹೆಚ್ಚಿ ಹರಿಗೋಲು ಮುಲುಗಳು ಪ್ರಾರಂಭವಾಗುತ್ತದೆ. ಅಂಬಿಗ ಹರಿಗೋಲು ಬಿಟ್ಟು ಪ್ರವಾಹದಲ್ಲಿ ಈಗಿಕೊಂಡು ಹೋಗುತ್ತಾನೆ. ದಾಸರು ಆ ತಕ್ಷಣ ರಾಯರ ಪ್ರಾರ್ಥನೆ ಮಾಡುತ್ತಾರೆ. ನದಿ ದಡದಲ್ಲಿ ಇಬ್ಬರು ಕವಿಧಾರಿಗಳು ನದಿಯಲ್ಲಿ ಈಜಿ ದಾಸರನು ದಡಕ್ಕೆ ಸೇರಿಸುತ್ತಾರೆ. ದಾಸರು ಪ್ರಾಣವನ್ನು ಕಾಪಾಡಿದ ಅವರು ತಮ್ಮನ್ನು ರಾಘಪ್ಪ-ವಾಜಪ್ಪ ಅಂತ ಪ್ರರಿಚಯ ಮಾಡಿಕೊಂಡು ಅದೃಶ್ಯರಾದರು. 

ಮಂತ್ರಾಲಯ ತಲುಪಿದ ದಾಸರು ಅಲ್ಲಿ ಅಪ್ಪಾವರು ಸೇರಿ ಹಲವು ಜ್ಞಾನಿಗಳ ಸಂಗಮವಿತ್ತು. ಅಪ್ಪಾವರು ದಾಸರನು ಕಂಡು ಅವರಿಗೆ ಬರಮಾಡಿಕೊಂಡು ಅವರ ಯೋಗಕ್ಷೇಮ ವಿಚಾರಿಸುತ್ತಾ ಪ್ರವಾಹ ಹೇಗ್ ಇತ್ತು ಅಂತ ಅಪ್ಪಾವರು ದಾಸರಿಗೆ ಕೇಳುತ್ತಾರೆ. ದಾಸರು ತಾವು ಪಾರಾದ ಪ್ರವಾಹ ಅಪ್ಪಾವರ ಜ್ಞಾನ ದೃಷ್ಟಿಗೆ ಬಂದಿದ್ದನು ನೋಡಿ ಆಶ್ಚರ್ಯವಾಗುತ್ತೆ. ಅಪ್ಪಾವರು ದಾಸರಿಗೆ ಪ್ರವವದಲ್ಲಿ ಕಾಪಾಡಿದು ರಾಘಪ್ಪ-ವಾಜಪ್ಪ ಬೆರೆಯಾರು ಅಲ್ಲ ರಾಘವೇಂದ್ರ ಗುರುಸರ್ವಭೌಮರು ಹಾಗೂ ವಾದೀಂದ್ರತೀರ್ಥರು ಅಂತ ಹೇಳಿ ಅನುಗ್ರಹಿಸುತ್ತಾರೆ.

ಕರೆದರೆ ಬರಬಾರದೆ |
ಗುರುವರ ಶ್ರೀರಾಘವೇಂದ್ರ ||

ವರಮಂತ್ರಾಲಯ ಪುರಮಂದಿರ ತವ
ಚರಣ ಸೇವಕರು ಕರವ ಮುಗಿದು || 

ಹರಿದಾಸರು ಸುಸ್ವರ ಸಮ್ಮೇಳದಿ
ಪರವಶದಲಿ ಬಾಯ್ದೆರೆದು ಕೂಗಿ || 

ಭೂಸುರರೊಳಗೆ ಪ್ರಕಾಶ ಕೃಷ್ಣಾರ್ಯರು
ಹಾಸ ಮುಖದಿ ಅಭಿಲಾಷೆಯಿಂದ || 

ಪೂಶರಪಿತ ಕಮಲೇಶವಿಠ್ಠಲನ
ದಾಸಾಗ್ರೇಸರರೀ ಸಮಯದಿ || 

ಶ್ರೀ ಇಭರಾಮಪುರಾಧೀಶ
ವಿಷ್ಣುತೀರ್ಥಚಾರ್ಯ ಇಭರಾಮಪುರ
****
ರಾಯರ ಉಡುಪಿ ಯಾತ್ರೆ

 ಶ್ರೀ  ಗುರು ರಾಘವೇಂದ್ರಸ್ವಾಮಿಗಳವರ ಉಡುಪಿ ವಾಸ
🌺🙏🏻

 ಶ್ರೀರಾಘವೇಂದ್ರಸ್ವಾಮಿಗಳು ಶ್ರೀಮಧ್ವಾಚಾರ್ಯರ ಮೂಲ ಸ್ಥಳವಾದ ಉಡುಪಿಯಲ್ಲಿ ಶ್ರೀಕೃಷ್ಣನನ್ನು ಸಂದರ್ಶಿಸಿದ್ದು

    ಶ್ರೀರಾಘವೇಂದ್ರ ಸ್ವಾಮಿಗಳು ಶಿಷ್ಯೋದ್ಧಾರಕ್ಕಾಗಿ ಸಂಚಾರ ಮಾಡುತ್ತಾ ಭಕ್ತಜನೋದ್ಧಾರ, ದೀನ-ದಲಿತರ ಕಲ್ಯಾಣ ಮಾಡುತ್ತಾ ಮಹಿಮೆಗಳಿಂದ ಎಲ್ಲರ ವಾಂಛಿತಗಳನ್ನು ಪೂರೈಸುತ್ತಾ ದಕ್ಷಿಣ ದೇಶದ ಸಂಚಾರ ಮುಗಿಸಿ, ದಕ್ಷಿಣ ಕನ್ನಡ ಜಿಲ್ಲೆಯ ಕಡೆಗೆ ಹೊರಟು ವಿಷ್ಣುಮಂಗಲಕ್ಕೆ ಬಂದು ಅಲ್ಲಿ ಹರಿಯನ್ನು ಆರಾಧಿಸಿ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಬಂದರು. ಸೇವಿಸುವ ಭಕ್ತರ ಕುಷ್ಟಾದಿ ರೋಗಗಳನ್ನು ಕಳೆಯುವ ಸುಬ್ರಹ್ಮಣ್ಯನನ್ನು ಭಕ್ತಿಯಿಂದ ಆರಾಧಿಸಿದರು. ತಪಸ್ವಿಗಳಾದ ಶ್ರೀರಾಘವೇಂದ್ರಸ್ವಾಮಿಗಳು ದ್ವೈತಮತದ  ಮೂಲಸ್ಥಾನವೆನಿಸಿರುವ ಶ್ರೀಉಡುಪಿ ಕ್ಷೇತ್ರಕ್ಕೆ ದಯ ಮಾಡಿಸುತ್ತಿರುವ ವಿಚಾರ ಅರಿತ ಆಗಿನ ಸೋದೆ ಮಠಾಧೀಶರು ಅವರಿಗೆ  ಭವ್ಯ ಸ್ವಾಗತ ಮಾಡಿದರು. ಕನಕನಕಿಂಡಿಯ ಎದುರು ಇರುವ ಮಠವನ್ನು ಸುಣ್ಣ ಬಣ್ಣ ಗಳಿಂದ ಅಲಂಕರಿಸಲಾಯಿತು ಏಳು ಮಠದ ಪೀಠಾಧೀಶರೊಡನೆ ಸೇರಿ ಸೋದೆಯ ಪೀಠಾಧೀಶರು ಶ್ರೀರಾಘವೇಂದ್ರ ಸ್ವಾಮಿಗಳವರಿಗೆ ಭವ್ಯವಾಗಿ ಸ್ವಾಗತಿಸಿದರು ಜಗನ್ಮೋಹನನಾದ ಶ್ರೀಕೃಷ್ಣನನ್ನು ಕಂಡೊಡನೆ ಶ್ರೀಗಳವರು ನಮಸ್ಕಾರ ಮಾಡಿ ಮೈಮರೆತು ದರ್ಶನದಲ್ಲಿ ತಲ್ಲೀನರಾದರು. ಧನಕನಕ ವಸ್ತ್ರಾದಿಗಳನ್ನು ಸಮರ್ಪಿಸಿ ಒಂದು ವಾರ ಕಾಲ ಶ್ರೀಕೃಷ್ಣನಿಗೆ ಸಕಲ ಉತ್ಸವಗಳನ್ನು ನೆರವೇರಿಸಲು ಪರ್ಯಾಯ ಪೀಠಾಧಿಪತಿಗಳಿಗೆ ಧನವನ್ನು ಕೊಟ್ಟರು. ಏಳು ದಿನಗಳ ಕಾಲ ಶ್ರೀಗಳವರ ಹೆಸರಿನಲ್ಲಿ ಸಪ್ತರಾತ್ರೋತ್ಸವವು ಶ್ರೀಕೃಷ್ಣನಿಗೆ ವಿಜೃಂಭಣೆಯಿಂದ ನಡೆಯಿತು . ವಿದ್ಯಾದೇವಿಯ ಆದೇಶದಂತೆ ಶ್ರೀರಾಘವೇಂದ್ರ ಸ್ವಾಮಿಗಳವರು ದ್ವೈತಸಿದ್ಧಾಂತದ ಉಗಮ ಸ್ಥಾನವಾದ ಉಡುಪಿಯೇ ಗ್ರಂಥರಚನೆಗೆ ಯೋಗ್ಯ ಸ್ಥಳವೆಂದು ಯೋಚಿಸಿದರು. ಒಂದು ಶುಭ ಸಮಯದಲ್ಲಿ ತತ್ವಚಂದ್ರಿಕಾಕ್ಕೆ ಪ್ರಕಾಶವನ್ನು ಬ್ರಹ್ಮಸೂತ್ರಗಳ ಅರ್ಥವನ್ನು ನೇರವಾಗಿಯೇ ತಿಳಿಸುವ ತಂತ್ರದೀಪಿಕಾವನ್ನೂ, ಬ್ರಹ್ಮಸೂತ್ರ ಅಧಿಕರಣಗಳ ಅರ್ಥವನ್ನು ತಾತ್ಪರ್ಯ ರೂಪವಾಗಿ ತಿಳಿಸುವ ನ್ಯಾಯ ಮುಕ್ತಾವಳಿಯನ್ನು ರಚಿಸಿದರು. ಈ ರೀತಿ ಮಹಾನ್ ಗ್ರಂಥಗಳನ್ನು ರಚಿಸಿ ಶ್ರೀಕೃಷ್ಣನಿಗೆ ಅರ್ಪಿಸಿ ವಿದ್ಯಾದೇವಿಯ ಆದೇಶವನ್ನು ಪೂರ್ಣ ಮಾಡಿದರು. ಗ್ರಂಥ ರಚನೆಯಿಂದ ಶ್ರೀ ರಾಘವೇಂದ್ರ ಸ್ವಾಮಿಗಳ ಕೀರ್ತಿ ದಶದಿಕ್ಕುಗಳಿಗೂ ವ್ಯಾಪಿಸಿತು. ಎಲ್ಲ ಭಗವದ್ರೂಪಗಳನ್ನು ಅವರು ಧ್ಯಾನ - ಉಪಾಸನೆ ಮಾಡುತ್ತಿದ್ದರೂ ಅವರಿಗೆ ಶ್ರೀಕೃಷ್ಣ ರೂಪದಲ್ಲಿ ವಿಶೇಷ ಪ್ರೇಮಗಳು ಇರುತ್ತಿದ್ದವು. ಆದ್ದರಿಂದ ಧ್ಯಾನಕ್ಕೆ ಕುಳಿತರ ಗಂಟೆಗಟ್ಟಲೆ ಮೈಮರೆತು ಬಿಡುತ್ತಿದ್ದರು. ಹೀಗೆ ಕುಳಿತಿರುವಾಗ ಒಂದು ಸಾರಿ ಶ್ರೀಕೃಷ್ಣನ ಕಾಲಿನ ಗೆಜ್ಜೆನಾದ ಕೇಳಿಸಿತು. ಕೆಲ ಸಮಯದ ಬಳಿಕ ಕೊಳಲಿನ ನಾದ ಗುಡಿಯ ಒಳಗಡೆಯಿಂದ ಅಲೆಅಲೆಯಾಗಿ ಹೊರ ಹೊಮ್ಮುವುದು ಕೇಳಿಸಿತು. ಆ ನಾದ ಕಿವಿಯನ್ನು ಪ್ರವೇಶಿಸಿದೊಡನೆ ರೋಮಾಂಚನವಾಗಿ ಅವ್ಯಕ್ತವಾದ ಅಮಿತಾನಂದಾನುಭವವಾಗುತ್ತಿತ್ತು. ಒಂದು ದಿನ ದೃಢ ಸಂಕಲ್ಪ ಮಾಡಿ ಶ್ರೀಕೃಷ್ಣನ ಮಂದಿರದ ಮುಂದಿನ ಮಂಟಪದಲ್ಲಿ ಕುಳಿತು ವಿವಿಧ ರೀತಿಯಲ್ಲಿ ಮುರುಳೀಲೋಲನನ್ನು ತಮ್ಮ ಹೃದಯದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳವರು ಧ್ಯಾನಿಸುತ್ತಾ ಕುಳಿತಿದ್ದಾರೆ. ಅವರಿಗೆ ನೀಲಮೇಘ ಶ್ಯಾಮನು ದರ್ಶನವಿತ್ತಿದ್ದಾನೆ. ಅಲೌಕಿಕ ಅದ್ಭುತ ಸೌಂದರ್ಯವನ್ನು ಒಳಗಣ್ಣಿನಿಂದ ಮೈಮರೆತು ನೋಡುತಿದ್ದಂತೆ ರೂಪ ಕಣ್ಮರೆಯಾಯಿತು. ಪುನಃ ಎಷ್ಟು ಪ್ರಯತ್ನಿಸಿ ಧ್ಯಾನಕ್ಕೆ ಇಳಿದರೂ ಆ ರೂಪ ಕಾಣಲೇ ಇಲ್ಲ ಆಗ ವಿರಹ ತಾಳಲಾರದೆ ಬಳಲಿ ಕಣ್ತೆರೆದರು. ಮತ್ತೆ ಗರ್ಭಗುಡಿಯಿಂದ ಕೊಳಲಿನ ನಾದ ಅಲೆಅಲೆಯಾಗಿ ತೇಲಿ ಬಂತು, ಮಧ್ಯೆ ಗೆಜ್ಜೆನಾದವೂ ನುಡಿಸುತ್ತಿದ್ದ ಕಿವಿಯನ್ನು ಮುದಗೊಳಿಸುತ್ತಿದೆ ಹೊರತು ಅಷ್ಟಾದರೂ ಶ್ರೀಕೃಷ್ಣನ ರೂಪ ಕಣ್ಣಿಗೆ ಕಾಣುತ್ತಿಲ್ಲ. ಪಾದಗಳಿಂದ “ ಹೇ | ವಾಸುದೇವ ! ಇದೇನು ನಿನ್ನ ಲೀಲೆ ! ಒಳಗೂ ಕಣ್ಮರೆಯಾದೆ ! ಹೊರಗೂ ಕಾಣದೆ ಕಣ್ಣ ಮುಚ್ಚಾಲೆ ಆಡುತ್ತಿರುವೆಯಾ ? ” ಎಂದು ಕಣ್ಣಿನಿಂದ ಅಶ್ರುಧಾರೆಯಾಗಿ ಹರಿಯುತ್ತಿರಲು, ' ಮುರಳೀ ಮೋಹನ ದಯಮಾಡು ದೃಗ್ಗೋಚರನಾಗು ” ಎಂದು ಪ್ರಾರ್ಥಿಸುತ್ತಾ ಪಕ್ಕದಲ್ಲಿ ವೀಣೆಯನ್ನು ಎತ್ತಿಕೊಂಡು ಭೈರವಿ ರಾಗವನ್ನು ಆಲಾಪನೆ ಮಾಡುತ್ತಾ ನುಡಿಸತೊಡಗಿದರು. ಹೃದಯದ್ರವಿಸುವ ಆ ರಾಗದಿಂದ ಅವರ ವದನದಿಂದ ಒಂದು ಅಮರ ಕೃತಿಯು ಹೊರಹೊಮ್ಮಿ ಬರಲು ಆರಂಭಿಸಿತು-

ಇಂದು ಎನಗೆ ಗೋವಿಂದ ನಿನ್ನ ಪಾದಾರ |
ವಿಂದವ ತೊರೋ ಮುಕುಂದನೆ || ಪ ||

 ಸುಂದರ ವದನನೆ ನಂದಗೋಪನ ಕಂದ |
 ಮಂದರೋದ್ದಾರ ಆನಂದ ಇಂದಿರಾ ರಮಣ ||ಅ.ಪ ||

ನೊಂದೆನಯ್ಯ ಭವಬಂಧನದೊಳು ಸಿಲುಕಿ |
ಮುಂದೆ ದಾರಿ ಕಾಣದೆ ಕುಂದಿದೆ ಜಗದೊಳು|

ಕಂದನು ಎಂದೆನ್ನ ಕುಂದುಗಳೆಣಿಸದೆ | 
ತಂದೆ ಕಾಯೊ ಕೃಷ್ಣ ಕಂದರ್ಪ ಜನಕನೆ ॥೧II

 ಮೂಢತನದಿ ಬಹು ಹೇಡಿ ಜೀವ ನಾನಾಗಿ |
 ದೃಢಭಕುತಿಯನು ಮಾಡಲಿಲ್ಲವೊ ಹರಿಯೆ |
ನೋಡಲಿಲ್ಲವೊ ನಿನ್ನ ಪಾಡಲಿಲ್ಲವೊ ಮಹಿಮೆ |
ಗಾಡಿಕಾರ ಕೃಷ್ಣ ಬೇಡಿಕೊಂಬೆನೋ ನಿನ್ನ॥೨॥

ಧಾರುಣಿಯೋಳು ಭೂಭಾರಜೀವ ನಾನಾಗಿ |
ದಾರಿ ತಪ್ಪಿ ನಡೆದೆ ಸೇರಿದೆ ಕುಜನರ
ಆರೂ ಕಾಯುವರಿಲ್ಲ ಸಾರಿದೆ ನಿನಗಯ್ಯಾ ।
ಧೀರ ವೇಣುಗೋಪಾಲ ಪಾರುಗಾಣಿಸೋ ಹರಿಯೇ ॥೩॥

                ಈ ಗೀತೆಯ ಒಂದು ನುಡಿಯನ್ನು ವೀಣೆಯಲ್ಲಿ ಮೂರು ಕಾಲಗಳಲ್ಲಿ ನುಡಿಸುತ್ತಿದ್ದಂತೆ ಶ್ರೀಕೃಷ್ಣನು ತನ್ನ ಬಾಲಮನೋಹರ ರೂಪದಿಂದ ದರ್ಶನವಿತ್ತು. ತನ್ನ ಪುಟ್ಟ ಪಾದಗಳಿಂದ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದಾನೆ. ಮೂರನೇ ಕಾಲದಲ್ಲಿ ಶೃತಿಯನ್ನು ಹೊರಡಿಸುತ್ತಾ ಮೈಮರೆತು ಆತನ ನರ್ತನವನ್ನು ನೋಡುತ್ತಿದ್ದಾರೆ. ಎಷ್ಟು ಹೊತ್ತಾದರೂ ಅವರು ನಿಲ್ಲಿಸದಿದ್ದಾಗ ಶ್ರೀಕೃಷ್ಣನ ಪುಟ್ಟ ಬಾಯಿಯಿಂದ ವೀಣಾ ಇಂಚರವನ್ನು ನಾಚಿಸುವ ಧ್ವನಿಯು ಹೊರಹೊಮ್ಮಿತು. ಅಬ್ಬಾ ! ಬಹಳ ಹೊತ್ತು ಕುಣಿಸಿಬಿಟ್ಟೆ ! ನೋಡು ! ಕಾಲು ನೋಯುತ್ತಿದೆ. ಆಗ ಗುರುಗಳು - ನಿನ್ನ ಪುಟ್ಟ ಪಾದಗಳನ್ನು ಕೊಡು ಎಂದು , ಆ ಪುಟ್ಟದಾಗಿ ಮೈದೋರಿದ ದೇವನ ಪಾದಗಳನ್ನು ಹಿಡಿದು ತೊಡೆಯ ಮೇಲಿಟ್ಟು ಒತ್ತುತ್ತಿದ್ದಾರೆ. ಆ ಪಾದ ಸ್ಪರ್ಶದಿಂದ ಗುರುಗಳು ರೋಮಾಂಚನ ಹೊಂದಿ ಪರವಶರಾದರು. ಹೀಗೆ ಎಷ್ಟೋ ಹೊತ್ತು ಸೇವೆ ಮಾಡುತ್ತಾ ಮೈಮರೆತು ಕುಳಿತಿದ್ದ ಶ್ರೀರಾಘವೇಂದ್ರ ಸ್ವಾಮಿಗಳ ಭಕ್ತಿಗೆ ವಶನಾದ ಕೃಷ್ಣನು- ನನ್ನ ಸಂಕಲ್ಪದಂತೆ ಅವತರಿಸಿರುವೆ ! ಯತಿರಾಜ ! ನನ್ನ ಮೂರ್ತಿಯನ್ನು ತಯಾರು ಮಾಡಿಕೊ- ಯಾವಾಗಲೂ ನಿನ್ನ ಬಳಿಯಲ್ಲೇ ಇದ್ದು ನೀನು ಮಾಡುವ ಲೋಕಕಲ್ಯಾಣ ಕಾರ್ಯಕ್ಕೆ ನಿನಗೆ ಸಂಪೂರ್ಣ ಅನುಗ್ರಹ ಮಾಡುತ್ತೇನೆ, ಜಗದಜನತೆಯ ಕಷ್ಟಗಳನ್ನು ಕಳೆದು ಸದಾ ಒಳ್ಳೆಯದನ್ನು ಮಾಡುತ್ತಾ ಕೀರ್ತಿಹೊಂದು ಎಂದು ಆಜ್ಞಾಪಿಸಿ ಅದೃಶ್ಯನಾದನು...

ಓಂ  ಗುರು ಶ್ರೀರಾಘವೇಂದ್ರಾಯ ನಮಃ
***

No comments:

Post a Comment