Tuesday 1 January 2019

ಮಧ್ವಾಚಾರ್ಯರು 03 madhwacharya 03


ಮಧ್ವ ಜಯಂತಿಯ ಪ್ರಯುಕ್ತ ಶ್ರೀ ಮಧ್ವಾಚಾರ್ಯರ ಜನ್ಮ ಸ್ಥಳವಾದ ಪಾಜಕ ಕ್ಷೇತ್ರದಲ್ಲಿ ಪ್ರತಿ ವರ್ಷ ಪರ್ಯಾಯ ಮಠಾಧೀಶರಿಂದ ಮಹಾಪೂಜೆ ನೆರವೇರಿಸುತ್ತಾರೆ. ತತ್ಪೂರ್ವದಲ್ಲಿ, ಶ್ರೀವಾದಿರಾಜ ಗುರುಸಾರ್ವಭೌಮರಿಂದ ಪ್ರತಿಷ್ಠಾಪಿಸಲ್ಪಟ್ಟ ಮಧ್ವಾಚಾರ್ಯರ ಪ್ರತಿಮೆಗೆ ವಿಶೇಷ ಪಂಚಾಮೃತ ಅಭಿಷೇಕ ನೆರವೇರಿಸುತ್ತಾರೆ. ಬಳಿಕ ನೆರೆದಿದ್ದ ಭಕ್ತರಿಗೆ ಅನುಗ್ರಹ ಸಂದೇಶ ನೀಡುವುದು ವಾಡಿಕೆ. ಸಾಯಂಕಾಲ ಪಾಜಕ ಮಠದಿಂದ, ಮಣಿಮಂತ ನಾಮಕ ದೈತ್ಯನನ್ನು ಸಂಹರಿಸಿದ ಸ್ಥಳದವರೆಗೆ ಆಚಾರ್ಯ ಮಧ್ವರ ಸರ್ವಮೂಲ ಗ್ರಂಥಗಳ ಪಲ್ಲಕ್ಕಿ ಉತ್ಸವ ಪೂರ್ವಶಿಷ್ಟ ಸಂಪ್ರದಾಯದಂತೆ, ಭಕ್ತಜನರ ಉಪಸ್ಥಿತಿಯಲ್ಲಿ ನೆರವೇರಿಸುತ್ತಾರೆ.
**********

ಶ್ರೀಮದಾನಂದತೀರ್ಥರಿಂದ ರಚಿತವಾದ 37 (ಮೂವತ್ತೇಳು) ಗಂಥಗಳು ಸರ್ವಮೂಲಗ್ರಂಥಗಳೆಂದು ಕರೆಯಲ್ಪಡುತ್ತದೆ. 📚📖📔📚📖📔📚📖📔 01. ಗೀತಾಭಾಷ್ಯಮ್ ಶ್ರೀಮಧ್ಬಗವದ್ಗೀತೆಯ ವ್ಯಾಖ್ಯಾನ
02. ಗೀತಾತಾತ್ಪರ್ಯ ನಿರ್ಣಯಮ್ ಗೀತಾಭಾಷ್ಯದ ಪೂರಕ ಗ್ರಂಥ 03. ಬ್ರಹ್ಮಸೂತ್ರಭಾಷ್ಯಮ್ ಶ್ರೀವೇದವ್ಯಾಸಕೃತ ಬ್ರಹ್ಮ ಸೂತ್ರಗಳ ವ್ಯಾಖ್ಯಾನ 04. ಅಣುಭಾಷ್ಯಮ್ ಮೇಲಿನ ಸೂತ್ರಗಳ ಅಧೀಕರಣಾರ್ಥ 05. ಅಣುವ್ಯಾಖ್ಯಾನಮ್ ಅದ್ವೈತಾವಿಶಿಷ್ಟಾದ್ವೈತಗಳ ಖಂಡನೆ 06. ನ್ಯಾಯವಿವರಣಮ್ ಮೇಲಿನ ಸೂತ್ರಾದಿಕರಣಗಳ ಪೂರ್ವ ಪಕ್ಷ ಯುಕ್ತಿ, ಸಿದ್ಧಾಂತ ಯುಕ್ತಿ 07. ನರಸಿಂಹ ನಖಸ್ತುತಿಃ ಮೂಲ ಗ್ರಂಥ. ಶ್ರೀನರಸಿಂಹ ದೇವರ ನಖಸ್ತುತಿ 08. ಯಮಕಭಾರತಮ್ ಮೂಲ ಗ್ರಂಥ. ಪರಮಾತ್ಮನ ಸ್ತೋತ್ರ 09. ದ್ವಾದಶಸ್ತೋತ್ರಮ್ ಮೂಲ ಗ್ರಂಥ. ಪರಿಪರಿಯಿಂದ ಮಾಡಿದ ಪರಮಾತ್ಮನ ಪ್ರಾರ್ಥನೆ 10. ಕೃಷ್ಣಾಮೃತಮಹಾರ್ಣವಮ್ ಮೂಲ ಗ್ರಂಥ. ಭಗವದರ್ಚನೆ, ಸ್ಮರಣೆ, ಧ್ಯಾನ ಮತ್ತು ವ್ರತಾಚರಣೆ, ದಿನತ್ರಯ ನಿರ್ಣಯ, ಇತ್ಯಾದಿ, 11. ತಂತ್ರಸಾರ ಸಂಗ್ರಹಃ ಮೂಲ ಗ್ರಂಥ. ಮಂತ್ರೋದ್ಧಾರ, ದೇವತಾರ್ಚನಾವಿಧಿ, ಮೂರ್ತಿ ಪ್ರತಿಷ್ಠಾ 12. ಸದಾಚಾರಸ್ಮೃತಿಃ ಮೂಲ ಗ್ರಂಥ. ನಿತ್ಯ ಕರ್ಮಾಚಾರ 13. ಯತಿಪ್ರಣವ ಕಲ್ಪಮ್ ಮೂಲ ಗ್ರಂಥ. ಪ್ರಣವಾರ್ಥಪ್ರಕಾಶಕ, ಸನ್ಯಾಸಗ್ರಹಣವಿಧಿ 14. ಜಯಂತಿ ನಿರ್ಣಯಃ ಮೂಲ ಗ್ರಂಥ. ಶ್ರೀಕೃಷ್ಣನ ಅವತಾರವಾದ ಜಯಂತಿ ನಿರ್ಣಯ 15. ಭಾಗವತ ತಾತ್ಪರ್ಯ ನಿರ್ಣಯಃ ಮೂಲ ಗ್ರಂಥ. ಶ್ರೀಮದ್ಭಾಗವತದ ತಾತ್ಪರ್ಯಾರ್ಥ 16. ಭಾರತ ತಾತ್ಪರ್ಯ ನಿರ್ಣಯಃ ಮೂಲ ಗ್ರಂಥ. ಸಕಲ ಪುರಾಣಗಳ ಅರ್ಥ ನಿರ್ಣಾಯಕವಾದ್ದು 17. ಋಗ್ಭಾಷ್ಯಮ್ / ಸಂಹಿತಾಭಾಷ್ಯಮ್ ಸಂಹಿತೆಯಲ್ಲಿಯ ಋಕ್ಕುಗಳ ಅರ್ಥ, ಇದು ಎಲ್ಲ ವೇದಾರ್ಥಕ್ಕೆ ಮಾರ್ಗದರ್ಶಕವಾದದ್ದು 18. ಪ್ರಮಾಣಲಕ್ಷಣಮ್ ಮೂಲ ಗ್ರಂಥ. ಪ್ರತ್ಯಕ್ಷ, ಅನುಮಾನ, ಆಗಮ ಈ ಮೂರರ ಲಕ್ಷಣ 19. ಕಥಾಲಕ್ಷಣಮ್ ಮೂಲ ಗ್ರಂಥ. ವಾದಿಗಳ ಲಕ್ಷವಾದವನ್ನು ಮಾಡುವ ಬಗೆ ಹೇಳಿದೆ 20. ಉಪಾಧಿಖಂಡನಮ್ ಮೂಲ ಗ್ರಂಥ. ಬ್ರಹ್ಮನಿಗೆ ಉಪಾಧಿಯು ಹತ್ತಿರವಿರುವ ಕಾರಣ, ಜಗತ್ತು ಜಡಾತ್ಮ ಪ್ರಪಂಚವಾಗಿದೆಯೆಂಬುದಾಗಿ ಹೇಳುವ ಅದ್ವೈತರ ಮತದ ಖಂಡನವು. 21. ಮಾಯಾವಾದಖಂಡನಮ್ ಮೂಲ ಗ್ರಂಥ, ಜಗತ್ತು ಮಾಯೆಯಿಂದ ಮುಂದೋರುವದೆಂಬ ಅದೋಅವೈತರ ಮತ ಖಂಡನೆ 22. ಮಿಥ್ಯಾತ್ವಾನುಮಾನಖಂಡನಮ್ ಮೂಲ ಗ್ರಂಥ. ಜಗತ್ತು ಸುಳ್ಳೆಂದು ಹೇಳುವುದರ ಖಂಡನೆ 23. ತತ್ವಸಂಖ್ಯಾನಮ್ ಮೂಲ ಗ್ರಂಥ. ಸ್ವತಂತ್ರ - ಅಸ್ವತಂತ್ರವೆಂಬ ಎರಡು ತತ್ವಗಳ ವಿಚಾರ 24. ತತ್ವವಿವೇಕಃ ಮೂಲ ಗ್ರಂಥ. ಸ್ವತಂತ್ರ - ಅಸ್ವತಂತ್ರವೆಂಬ ಎರಡು ತತ್ವಗಳ ವಿಚಾರಕ್ಕೆ ಅನುಕೂಲಕರವಾದ ಪ್ರಮಾಣಗಳು. 25. ತತ್ವೋದ್ಯೋತಮ್ ಮೂಲ ಗ್ರಂಥ. ಭೇದಸಾದನೆ 26. ಕರ್ಮನಿರ್ಣಯಃ ಮೂಲ ಗ್ರಂಥ. ಯಜ್ಞಯಾಗಾದಿ ಕರ್ಮಗಳಲ್ಲಿ ಋಕ್ಕುಗಳ ಸಂಯೋಜನೆ 27. ವಿಷ್ಣುತತ್ವನಿರ್ಣಯಮ್ ಮೂಲ ಗ್ರಂಥ. ವೇದದ ಅಪೌರುಷೇಯತ್ವ, ಬಿಂಬ ಪ್ರತಿಬಿಂಬಾದಿ ವಿಷಯಗಳು. ಪರಮತ ಖಂಡನ 28. ಐತರೇಯಭಾಷ್ಯಮ್ ಮಹಿದಾಸರೂಪಿಯಾದ ಪರಮಾತ್ಮನು ಲಕ್ಷ್ಮಿಗೆ ಋಗ್ವೇದದ ಅರ್ಥವನ್ನು ಹೇಳಿದ ವಿವರ 29. ತೈತರೀಯಭಾಷ್ಯಮ್ ಅನಿರುದ್ಧ ಮುಂತಾದ ಪಂಚರೂಪಗಳ ವಿಷಯೋಪದೇಶವನ್ನು ವರುಣನು ತನ್ನ ಮಗನಾದ ಭೃಗುಋಷಿಗೆ ಹೇಳಿದ್ದರ ವಿವರ 30. ಬೃಹದಾರಣ್ಯಕ ಭಾಷ್ಯಮ್ ಅಶ್ವಮೇಧಾದಿ ಯಜ್ಞಗಳಲ್ಲಿ ಪ್ರವರ್ತಕನಾದ ದೇವರ ಮಹಿಮೆಯ ವಿವರ 31. ಈಶಾವಾಸ್ಯಭಾಷ್ಯಮ್ ಸ್ವಾಯಂಭುವ ಮನುವಿನ ದೌಹಿತ್ರನಾಗಿ ಅವತಾರ ಮಾಡಿದ ಯಜ್ಞನಾಮಕ ಪರಮಾತ್ಮನು ರಾಕ್ಷಸರಿಂದ ತ್ರಸ್ತನಾದ ಸ್ವಾಯಂಭುವನನ್ನು ರಕ್ಷಿಸಿದ ಬಗೆ 32. ಕಾಠಕಭಾಷ್ಯಮ್ ಉದ್ಧಾಲಕ ಮುನಿಯು ತನ್ನ ಮಗನಾದ ನಚೀಕೇತನಿಗೆ ಭಗವತ್ತತ್ವಗಳನ್ನು ಹೇಳಿದ ವಿವರ 33. ಛಾಂದೋಗ್ಯಭಾಷ್ಯಮ್ ಲಕ್ಷ್ಮೀದೇವಿಯು ಸಾಮವೇದದಿಂದ ಪರಮಾತ್ಮನನ್ನು ಸ್ತುತಿಸಿದ್ದು, ಪ್ರಾಣದೇವರ ಮತ್ತು ಪರಮಾತ್ಮನ ಮಹಾತ್ಮೆಗಳು, ದೇವತೆಗಳ ತಾರತಮ್ಯಾದಿಗಳ ವಿವರ 34. ಅಥರ್ವಣ ಭಾಷ್ಯಮ್ ಅಂಗಿರಸ ಋಷಿಗಳು ಶೌನಕರಿಗೆ ಪರಾಪರ ವಿದ್ಯೆಯನ್ನು ಉಪದೇಶ ಮಾಡಿದ್ದರ ವಿವರ 35. ಮಾಂಡುಕ್ಯಭಾಷ್ಯಮ್ ವರುಣನು ಮಂಡೂಕ ರೂಪವನ್ನು ತೆಗೆದುಕೊಂಡು ಜಾಗ್ರತಾವಸ್ಥಾ ಪ್ರೇರಕನಾದ ವಿಶ್ವನಾಮಕ ಪರಮಾತ್ಮನನ್ನೂ, ಸ್ವಪ್ನಾವಸ್ಥೆಯ ತೈಜಸನನ್ನೂ, ಸುಷುಪ್ತಿಯ ಪ್ರಾಜ್ಞನನ್ನೂ ಸ್ತುತಿಸಿದುದರ ವಿವರ 36. ಷಟ್ ಪ್ರಶ್ನಭಾಷ್ಯಮ್ ಪಿಪ್ಪಲಾದಿ ಋಷಿಯು ತನ್ನ ಶಿಷ್ಯರಿಗೆ ಪ್ರಶ್ನೋತ್ತರ ರೂಪದಿಂದ ಉಪದೇಶ ಮಾಡಿದ್ದರ ವಿವರ 37. ತಲವಕಾರೋಪನಿಷದ್ಭಾಷ್ಯಮ್ ಯಕ್ಷರೂಪಿಯಾದ ಪರಮಾತ್ಮನು ದೇವತೆಗಳಿಗೆ ಮಾಡಿದ ಉಪದೇಶದ ವಿವರ ಮತ್ತು ಉಮಾದೇವಿಯಿಂದ ಇಂದ್ರನಿಗೆ ಸಿಕ್ಕ ಭಗವದ್ವಾಕ್ಯೋಪದೇಶದ ವಿವರ.
************** ಇವಲ್ಲದರ ಮೊದಲು, ಅಂದರೆ ಯತ್ಯಾಶ್ರಮಕ್ಕೂ ಮೊದಲು ಬಾಲಕ ವಾಸುದೇವನಾಗಿದ್ದಾಗ ಚೆಂಡಾಟವಾಡುತ್ತಿರುವಾಗ ರಚಿಸಿದ ಕಂದುಕಸ್ತುತಿಃ (38) ಶ್ರೀಕೃಷ್ಣಪರಮಾತ್ಮನ ಸ್ತುತಿ. ಬಿಲ್ವಮಂಗಲಸಾದು (39) ಕೇವಲ ಏಳು ಅಕ್ಷರದ ಗ್ರಂಥ
**************

No comments:

Post a Comment