Tuesday 1 January 2019

ಮಧ್ವಾಚಾರ್ಯರು 05 madhwacharya 05


ಶ್ರೀ ಪದ್ಮನಾಭಾತೀರ್ಥರು ( ಶ್ರೀ ರಾಯರಮಠ, ಶ್ರೀ
ವ್ಯಾಸರಾಜಮಠ, ಶ್ರೀಶ್ರೀಪಾದರಾಜರ ಮಠಕ್ಕೆ ಸೇರಿದವರು)
ಶ್ರೀ ಹೃಷಿಕೇಶತೀರ್ಥರು - ಶ್ರೀ ಪಲಿಮಾರು ಮಠ
ಶ್ರೀ ನರಸಿಂಹತೀರ್ಥರು - ಶ್ರೀ ಅದಮಾರು ಮಠ
ಶ್ರೀ ಜನಾರ್ದನತೀರ್ಥರು - ಶ್ರೀ ಕೃಷ್ಣಾಪುರ ಮಠ
ಶ್ರೀ ಉಪೇಂದ್ರತೀರ್ಥರು - ಶ್ರೀ ಪುತ್ತಿಗೆ ಮಠ
ಶ್ರೀ ವಾಮನತೀರ್ಥರು - ಶ್ರೀ ಶಿರೂರು ಮಠ
ಶ್ರೀ ವಿಷ್ಣುತೀರ್ಥರು - ಶ್ರೀ ಸೋದೆ ಮಠ
ಶ್ರೀ ಶ್ರೀ ರಾಮತೀರ್ಥರು - ಶ್ರೀ ಕಾಣಿಯೂರು ಮಠ
ಶ್ರೀ ಅಧೋಕ್ಷಜತೀರ್ಥರು - ಶ್ರೀ ಪೇಜಾವರ ಮಠ
" ಸಂಸ್ಥಾನಗಳಿಗೆ ಕೊಟ್ಟ ಪ್ರತಿಮೆಗಳು "
ಈ ಪೆಸರಿಲೊಂಭತ್ತು ಮಂದಿ ರಘುಪತಿ ।
ಕಾಳೀ ಮಥನ ವಿಠ್ಠಲನೆರಡೆರಡು ।
ಭೂಪತಿ ನರಸಿಂಹ ವಿಠಲ ಹೀಗೆ ।
ಒಂಭತ್ತು ಮೂರ್ತಿಗಳ ಕೊಟ್ಟು ।।

ಪದುಮನಾಭರಿಗೆ ರಾಮನ ಕೊಟ್ಟು ।
ಸಕಲ ದೇಶವ ನಾಳಿ ಧನವ ತಾ ಯೆನುತಲಿ ।
ಅದರ ತರುವಾಯ ಹೃಷಿಕೇಶ ತೀರ್ಥರಿ ।
ಗೊಂದು ರಾಮ ಮೂರ್ತಿಯನು ಕೊಟ್ಟು ।।

ಬಧಜನಾರ್ಜಿಯ ನೃಸಿಂಹಾರ್ಯರಿಗೆ ।
ಕಾಳೀಯಮರ್ದನನಾದ ಶ್ರೀ ಕೃಷ್ಣಮೂರ್ತಿ ।
ಹೃದಯ ನಿರ್ಮಲ ಜನಾರ್ದನತೀರ್ಥರಿಗೆ ।
ಕಾಳೀ ಮಥನ ಶ್ರೀ ಕೃಷ್ಣಮೂರ್ತಿಯನು ಕೊಟ್ಟು ।।

ಯತಿವರ ಉಪೇಂದ್ರರಾಯರಿಗೆ ವಿಠಲನ ।
ವಾಮನ ತೀರ್ಥರಿಗೆ ವಿಠಲನಾ ।
ನಟ ಸುರದ್ರುಮ ವಿಷ್ಣುತೀರ್ಥರಿಗೆ ವರಾಹ ।
ಶ್ರೀ ರಾಮ ತೀರ್ಥರಿಗೆ ನರಸಿಂಹ ।।

ಅತಿ ಸುಗುಣ ಅಧೋಕ್ಷಜತೀರ್ಥರಿಗೆ ವಿಠಲ ।
ನಿಂತು ಒಂಭತ್ತು ಮೂರ್ತಿಗಳ ಕೊಟ್ಟು ।
ಕ್ಷಿತಿಯೊಳಗೆ ತ್ಯಾಪಪೇಹ ಪುರಸ್ಥ ।
ಪ್ರಾಣೇಶವಿಠ್ಠಲನ ಅರ್ಚನೆಗಿಟ್ಟರು ಕೇಳಿ ।।

ಶ್ರೀ ಪದ್ಮನಾಭತೀರ್ಥರು - ಶ್ರೀಮದಾಚಾರ್ಯ ಕರಾರ್ಚಿತ
ಶ್ರೀ ದಿಗ್ವಿಜಯರಾಮದೇವರು.
ಶ್ರೀ ಹೃಷಿಕೇಶತೀರ್ಥರು - ಶ್ರೀ ರಾಮದೇವರು
ಶ್ರೀ ನರಸಿಂಹತೀರ್ಥರು - ಶ್ರೀ ಕಲೀಯಮರ್ದನ ಕೃಷ್ಣ ದೇವರು
ಶ್ರೀ ಜನಾರ್ದನತೀರ್ಥರು - ಶ್ರೀ ಕಲೀಯಮರ್ದನ ಕೃಷ್ಣ ದೇವರು
ಶ್ರೀ ಉಪೇಂದ್ರತೀರ್ಥರು - ಶ್ರೀ ವಿಠ್ಠಲದೇವರು
ಶ್ರೀ ವಾಮನತೀರ್ಥರು - ಶ್ರೀ ವಿಠ್ಠಲದೇವರು
ಶ್ರೀ ವಿಷ್ಣುತೀರ್ಥರು - ಶ್ರೀ ಭೂವರಾಹದೇವರು
ಶ್ರೀ ರಾಮತೀರ್ಥರು - ಶ್ರೀ ನರಸಿಂಹದೇವರು
ಶ್ರೀ ಅಧೋಕ್ಷಜತೀರ್ಥರು - ಶ್ರೀ ವಿಠ್ಠಲದೇವರು

ಗ್ರಂಥಗಳು "
ಏಕಮೇವಾನ್ ದ್ವಿತಿಯೆಂಬ ಶ್ರುತ್ಯರ್ಥಗಳ ।
ನೇಕ ಭಾಷ್ಯ ಗ್ರಂಥಗಳ ಕಲ್ಪಿಸಿ ।
ಯೇಕವಿಂಶತಿ ಕುಮತ ಕಾಕುಮಾಯಿಗಳನ । ನಿ ।
ರಾಕರಿಸಿ ಹರಿಯೇ ಜಗಕೀಶನೆನಿಸಿ ।।
ಯೇಕಚಿತ್ತದಿ ತನ್ನ ನಂಬಿದ್ದ ಭಕ್ತರ್ಗೆ ಶೋಕಗಳ ನಾಶಗೈಸಿ ।
ಮಾಕಳತ್ರನ ಸದನನೋಕನಿಯ್ಯನ ತೋರು ।
ಆಖಣಾಶ್ಮ ಸಮ ಚರಣ ವ್ಯಾಕುಲವ ಪರಿಹರಿಸು ।।

" ಗೀತಾ ಪ್ರಸ್ಥಾನ ಗ್ರಂಥಗಳು "
ಗೀತಾ ಪ್ರಸ್ಥಾನದ ಮೇಲೆ ಎರಡು ಗ್ರಂಥಗಳನ್ನು ರಚಿಸಿದ್ದಾರೆ.
ಗೀತಾಭಾಷ್ಯಮ್ ಮತ್ತು ಗೀತಾತಾತ್ಪರ್ಯನಿರ್ಣಯಃ
" ಸೂತ್ರ ಪ್ರಸ್ಥಾನ ಗ್ರಂಥಗಳು "
ಸೂತ್ರಭಾಷ್ಯಮ್, ಅಣುಭಾಷ್ಯಮ್ , ಅನುವ್ಯಾಖ್ಯಾನಮ್,
ನ್ಯಾಯವಿವರಣಮ್
ಶ್ರೀ ಶಂಕರಾಚಾರ್ಯರೇ ಆಗಲೀ; ಶ್ರೀ ರಾಮಾನುಜಾಚಾರ್ಯ
ರೇ ಆಗಲೀ " ಅಣುಭಾಷ್ಯ " ದಂಥ " ಸಂಗ್ರಹ ಭಾಷ್ಯ "
ಬರೆದಿಲ್ಲ.
ಅಣುಭಾಷ್ಯ ಮತ್ತು ಅನುವ್ಯಾಖ್ಯಾನ ಎರಡೂ ಕೃತಿಗಳೂ
ಶ್ಲೋಕ ರೂಪದಲ್ಲಿವೆ. ಸೂತ್ರಗಳಿಗೆ ಅಲಂಕಾರ ಕೊಟ್ಟು ತತ್ತ್ವ
ಸಾಹಿತ್ಯಕ್ಕೆ ಶ್ಲೋಕ ರೂಪವಾಗಿ ಒದಗಿಸಿದ ಅದ್ವಿತೀಯ ಪ್ರತಿಭೆ
ಶ್ರೀಮದಾಚಾರ್ಯರದ್ದು.ಶ್ರೀ ಶಂಕರಾಚಾರ್ಯರು ಸೂತ್ರಕ್ಕೆ
ಒಂದೇ ಒಂದು ಭಾಷ್ಯ ರಚಿಸಿದ್ದಾರೆ.ಶ್ರೀ ರಾಮನಾಜಾಚಾರ್ಯರು
ಶ್ರೀಭಾಷ್ಯ, ವೇದಾಂತದೀಪ ಮತ್ತು ವೇದಾಂತಸಾರ ಎಂಬ
ಮೂರು ಕೃತಿಗಳನ್ನು ರಚಸಿದ್ದಾರೆ.
" ಉಪನಿಷತ್ ಪ್ರಸ್ಥಾನ ಗ್ರಂಥಗಳು "
ಉಪನಿಷತ್ ಪ್ರಸ್ಥಾನದಲ್ಲಿ ಪ್ರಧಾನವಾದ " ಹತ್ತು " ಉಪನಿಷತ್ತು
ಗಳಿಗೆ ಶ್ರೀಮದಾಚಾರ್ಯರು ಭಾಷ್ಯವನ್ನು ರಚಿಸಿದ್ದಾರೆ. ಅದರಲ್ಲೂ
ಒಂದು ವಿಶೇಷವುಂಟು. ಬಹುಪಾಲು ವಿದ್ವಾಂಸರು ಐತರೇಯೋ
ಪನಿಷತ್ತಿನ 3 ಅಧ್ಯಾಯಗಳಿಗೆ ಮಾತ್ರ ಟೀಕೆ ಬರೆದಿದ್ದರೇ
ಶ್ರೀಮನ್ಮಧ್ವಾಚಾರ್ಯರು ಐತರೇಯ ಅರಣ್ಯಕದ ಇಡೀ ಉಪ
ನಿಷತ್ಕಾಂಡಕ್ಕೆ ( 9 ಅಧ್ಯಾಯಗಳು ) ಭಾಷ್ಯ ರಚಿಸಿದ್ದಾರೆ.
ಐತರೇಯಭಾಷ್ಯಮ್ - ತೈತ್ತಿರೀಯಭಾಷ್ಯಮ್ - ಬೃಹದಾರಣ್ಯಕ
ಭಾಷ್ಯಮ್ - ಈಶಾವಾಸ್ಯಭಾಷ್ಯಮ್ - ಕಾಠಕೋಪನಿಷದ್ಭಾಷ್ಯಮ್ -
ಛಾಂದೋಗ್ಯಭಾಷ್ಯಮ್ - ಅಥರ್ವಣಭಾಷ್ಯಮ್ - ಮಾಂಡೂಕ್ಯ
ಭಾಷ್ಯಮ್ - ಷಟ್ಪ್ರಶ್ನಭಾಷ್ಯಮ್ - ತಲವಕಾರೋಪನಿಷದ್ಭಾಷ್ಯಮ್
- ಮಾಂಡೂಕೋಪನಿಷತ್ತಿನ ಮಧ್ಯದಲ್ಲಿ ಬರುವ ಶ್ಲೋಕಗಳನ್ನು
ಗೌಡಪಾದರ ಕಾರಿಕೆಗಳೆಂದು ತಪ್ಪಾಗಿ ಭ್ರಮಿಸಲಾಗುತ್ತಿದೆ.
ಆಚಾರ್ಯ ರಾಮಾನುಜರು ಇವು ಉಪನಿಷತ್ತಿನ ಭಾಗವೇ ಎಂದು
ಒಪ್ಪಿಕೊಂಡಿದ್ದಾರೆ.
ಆಚಾರ್ಯ ಮಧ್ವರಂತೂ ಈ ಮಂತ್ರಗಳಿಗೆ ಭಾಷ್ಯ ರಚಿಸಿ ಈ ತಪ್ಪು
ಕಲ್ಪನೆಯನ್ನು ತಿರಸ್ಕರಿಸಿದ್ದಾರೆ.
ಬ್ರಹ್ಮಾನಂದ ಮುಂತಾದ ಹಿರಿಯ ಅದ್ವೈತ ವಿದ್ವಾಸಂರೂ ಸಹ
ಇವು ಉಪನಿಷನ್ಮಂತ್ರಗಳೇ ಎಂದು ಒಪ್ಪಿಕೊಂಡಿರುವುದನ್ನು ಇಲ್ಲಿ
ಗಮನಿಸಬಹುದು.
" ಶ್ರುತಿ ಪ್ರಸ್ಥಾನ ಗ್ರಂಥಗಳು "
ಶ್ರುತಿ ಪ್ರಸ್ಥಾನದಲ್ಲಿ ಋಗ್ವೇದದ 40 ಸೂಕ್ತಗಳಿಗೆ ಅಧ್ಯಾತ್ಮದ ಅರ್ಥ
ಬರೆದು ಮಾರ್ಗದರ್ಶನ ಮಾಡಿದ್ದೂ ಅಲ್ಲದೇ, ಐತರೇಯ
ಬ್ರಾಹ್ಮಣದ ಕೆಲವು ಖಂಡಗಳಿಗೂ; ಅರಣ್ಯಕದ
ಮಹಾನ್ನಾಮ್ನೀಖಂಡಕ್ಕೂ ವ್ಯಾಖ್ಯಾನ ರಚಿಸಿ ಬ್ರಾಹ್ಮಣ - ಅರಣ್ಯಗಳ
ಸಮನ್ವಯದ ದಾರಿ ತೋರಿದ್ದಾರೆ.
ಋಗ್ಭಾಷ್ಯಮ್
" ಇತಿಹಾಸ ಗ್ರಂಥಗಳು "
ಇತಿಹಾಸ ಪುರಾಣಗಳ ಸಮನ್ವಯಕ್ಕಾಗಿ ಮಹಾಭಾರತ,
ಭಾಗವತಗಳ ಹೃದಯವನ್ನು ತೆರೆದು ತೋರುವ ಮೂಲ ಕೃತಿಗಳು.
ಮಹಾಭಾರತ ತಾತ್ಪರ್ಯ ನಿರ್ಣಯಃ - ಯಮಕ ಭಾರತಮ್ -
ಭಾಗವತತಾತ್ಪರ್ಯ ನಿರ್ಣಯಃ
" ಪ್ರಕರಣ ಗ್ರಂಥಗಳು "
ಪ್ರಮಾಣ ಪ್ರಮೇಯಗಳ ನಿಷ್ಕರ್ಷೆಗಾಗಿ ಪ್ರಕರಣ ಗ್ರಂಥಗಳು.
ಪ್ರಮಾಣಲಕ್ಷಣಮ್ - ಕಥಾಲಕ್ಷಣಮ್ - ಮಾಯಾವಾದಖಂಡನಮ್
- ಉಪಾಧಿಖಂಡನಮ್ - ಪ್ರಪಂಚಮಿಥ್ಯಾತ್ವಾನುಮಾನಖಂಡನಮ್
- ತತ್ತ್ವ ಸಂಖ್ಯಾನಮ್ - ತತ್ತ್ವ ವಿವೇಕಃ - ತತ್ತ್ವೋದ್ಯೋತಃ
- ಕರ್ಮನಿರ್ಣಯಃ
ವಿಷ್ಣುತತ್ತ್ವನಿರ್ಣಯಃ

" ಆಚಾರ ಗ್ರಂಥಗಳು "
ಧರ್ಮಶಾಸ್ತ್ರದ ವ್ರತ - ಅನುಷ್ಠಾನಗಳ; ವಾಸ್ತುಶಿಲ್ಪ; ಮಂತ್ರ -
ತಂತ್ರಗಳ; ಗೃಹಸ್ಥ ಮತ್ತು ಸಂನ್ಯಾಸಿಗಳ ಆಚಾರ, ಧರ್ಮಗಳ
ಬಗ್ಗೆ ಮಾರ್ಗದರ್ಶನ ಮಾಡುವ ಗ್ರಂಥಗಳು.
ತಂತ್ರಸಾರಸಂಗ್ರಹಃ - ಸದಾಚಾರಸ್ಮೃತಿಃ - ಜಯಂತೀನಿರ್ಣಯಃ
- ಕೃಷ್ಣಾಮೃತಮಹಾರ್ಣವಃ - ಯತಿಪ್ರಣವಕಲ್ಪಃ -
ಸಂನ್ಯಾಸಪದ್ಧತಿ - ತಿಥಿನಿರ್ಣಯಃ
" ಸ್ತೋತ್ರ ಗ್ರಂಥಗಳು "
ನಖಸ್ತುತಿಃ - ದ್ವಾದಶಸ್ತೋತ್ರಮ್ - ಕಂದುಕಸ್ತುತಿಃ
" ಶ್ರೀಮದಾಚಾರ್ಯರ ಭಾಷವೇ ಪರಮ ಶ್ರೇಷ್ಠ ಭಾಷ್ಯ "
ಇಪ್ಪತ್ತೊಂದು ಕುಭಾಷ್ಯ ತಪ್ಪಾನೆ ಸೋಲಿಸಿದ ।
ಸರ್ಪಶಯನನ ವೊಲಿಸಿದಾ ಕೋಲೆ ।
ಸರ್ಪಶಯನನ ವೊಲಿಸಿದ ಗುರುಗಳ ।
ಟಪ್ಪನೆ ನೆನೆವೇನನುದಿನ ಕೋಲೆ ।।

21 ಕುಭಾಷ್ಯಗಳ ವಿವರ...
ಭಾರತೀವಿಜಯ, ಸಚ್ಚಿದಾನಂದ, ಬ್ರಹ್ಮಘೋಷ, ಶತಾನಂದ,
ಉಧ್ವರ್ತ, ವಿಜಯ, ರುದ್ರಭಟ್ಟ, ವಾಮನಿ, ಯಾದವಪ್ರಕಾಶ,
ರಾಮಾನುಜ, ಭರ್ತೃ ಪ್ರಪಂಚ, ದ್ರಾವಿಡ, ಬ್ರಹ್ಮದತ್ತಿ, ಭಾಸ್ಕರ,
ಪಿಶಾಚ, ವೃತ್ತಕಾರ, ವಿಜಯಭಟ್ಟ, ವಿಷ್ಣುಕ್ರಾಂತ, ವಾದೀಂದ್ರ,
ಮಾಧವದಾಸ, ಶಂಕರಭಾಷ್ಯ.
ನ್ಯಾಯ, ವೈಶೇಷಿಕ, ಸಾಂಖ್ಯ, ಯೋಗ, ಪೂರ್ವ ಮತ್ತು ಉತ್ತರ
ಮೀಮಾಂಸಾ.
ಶ್ರೀಮದ್ವೇದವ್ಯಾಸದೇವರು ಉತ್ತರ ಮೀಮಾಂಸಾ ಪ್ರವರ್ತಕರು.
ಬ್ರಹ್ಮ ಸೂತ್ರಗಳಿಗೆ ಮೇಲೆ ತಿಳಿಸಿದಂತೆ 21 ಜನ
ಆಚಾರ್ಯರುಗಳು ಭಾಷ್ಯವನ್ನು ಬರೆದರು.
ಇವರೆಲ್ಲರ ಭಾಷ್ಯಗಳನ್ನೂ ಖಂಡಿಸಿ ಶ್ರೀಮದಾಚಾರ್ಯರು 22ನೇ
ಭಾಷ್ಯವನ್ನು ರಚಿಸಿ...

" ಬ್ರಹ್ಮ ಸತ್ಯಂ ಜಗನ್ಮಿಥ್ಯಾ ಜೀವೋ ಬ್ರಹ್ಮೈವ ನಾಪರಃ "
ಎಂಬ ಮಾಯಾವಾದವನ್ನು ಶ್ರೀಮದಾನಂದತೀರ್ಥರು
ಖಂಡಿಸಿದರು.
ಗುರುವಮಧ್ವರಾಯರೇ ಹರಿದಾಸ್ಯವಿತ್ತು ।
ದ್ಧರಿಸುವರು ಸರ್ವಜ್ನರೂ ।
ಹರಿಪುರವಕಾಂಬದಕೆ ಪ್ರಥಮಾಂಗರೆಂದೆಮ್ಮ ।
ಹಿರಿಯರೆಲ್ಲ ಪೇಳ್ವರೂ ।।
ಅರಿ ಶಂಖ ಗದ ಪದ್ಮಧರ ಶೇಷಶಾಯಿ । ಶ್ರೀ ।
ಸಿರಿಪತಿಯ ಚರಣ ತೋರೋ ।
ಪರಮ ಕರುಣಾನಿಧಿ ವರ ವೃಕೋದರ ಅಸ್ಮದ್ ।
ಗುರುಗಳಂತರ್ಯಾಮಿ ನರಹರಿ ಪೊಂಡಿಸು ।।

ಮೇದಿನಿಯ ಮ್ಯಾಲುಳ್ಳ ಪಾಜಕ ಕ್ಷೇತ್ರದಲಿ ।
ಮೋದತೀರ್ಥರಾಗಿ ಅವತರಿಸಿದೆ ।
ಬಾದರಾಯಣ ಪ್ರಸಾದದಿಂದಲಿ ಚತುರ ।
ವೇದಗಳ ವಡನುಡಿಸಿದೆ ।।
ಆದಿಕಾರಣ ಕರ್ತ ನಾರಾಯಣೆಂದರುಹಿ ।
ದ್ವಾದಶ ಸ್ತೋತ್ರದಿಂದಲಿ ಸ್ತುತಿಸಿದೆ ।
ವೇದಗರ್ಭನ ಜನಕ ವೆಂಕಟವಿಠ್ಠಲನ ।
ಪಾದ ಮೂಲದಲಿಪ್ಪ ಪವನರಾಯರೇ ದಯದಿ ।।

ಮಾಘ ಶುದ್ಧ ನವಮೀ ಅದೃಶ್ಯರಾಗಿ ದೊಡ್ಡ ಬದರಿಗೆ ತೆರಳಿದರು.
( ಶ್ರೀ ವೇದವಾಸ್ಯದೇವರ ವಾಸ ಸ್ಥಾನವಾದ ಬರದಿಕಾಶ್ರಮಕ್ಕೆ )

" ಅದೃಶ್ಯತೋ ರೌಪ್ಯ ಪೀಠೇಸ್ತಿ ದೃಶ್ಯೋಸ್ತಿ ಬದರೀ ತಟೇ "
ಬ್ರಹ್ಮಾಂತಾ ಗುರವಃ ಸಾಕ್ಷಾದಿಷ್ಟಂ ದೈವಂ ಶ್ರಿಯಃ ಪತಿಃ ।
ಆಚಾರ್ಯಃ ಶ್ರೀಮದಾಚಾರ್ಯಾಸ್ಸಂತು ಮೇ ಜನ್ಮಜನ್ಮನೀ ।।

ನಮಸ್ತೇ ಪ್ರಾಣೇಶ ಪ್ರಣತ ವಿಭವಾಯಾವನಿಮಗಾ ।
ನಮಸ್ವಾಮೀನ್ ರಾಮ ಪ್ರಿಯತಮ ಹನುಮಾನ್ ಗುರುಗುಣ ।।
ನಮಸ್ತುಭ್ಯ೦ ಭೀಮ ಪ್ರಬಲತಮ ಕೃಷ್ಣೇಷ್ಟ ಭಗವನ್ ।
ನಮ ಶ್ರೀ ಮನ್ಮಧ್ವ ಪ್ರದಿಶ ಸದೃಶ೦ ಜಯ ಜಯ ।।
ಓಂ ಶ್ರೀ ನಾರಾಯಣಾಯ ನಮಃ.
ವಿಜಯ ದಶಮಿ ಹಬ್ಬದ ಮತ್ತು ' ವಿಶ್ವಗುರು ಆಚಾರ್ಯ
ಮಧ್ವ ಜಯಂತಿಯ ಪ್ರಯುಕ್ತ ಎಲ್ಲರಿಗೂ ಶುಭಾಶಯಗಳು
ಮತ್ತು ಶ್ರೀ ಆಚಾರ್ಯ ಮಧ್ವರ ಅನುಗ್ರಹ ದೊರಕಲಿ..
ಪೃಥ್ವಿ ಮಂಡಲ ಮಧ್ಯಸ್ತಾ ಪೂರ್ಣಬೋಧ ಮತಾನುಗಾಃ
ವೈಷ್ಣವಾನ್ವಿಷ್ಣು ಹೃದಯಃ ಸ್ತಾನ್ ನಮಸ್ತೇ ಗುರೂನ್ಮಮ//.
ನ ಮಾಧವಸಮೋ ದೇವಃ ನ ಚ ಮಧ್ಯಸಮೋ ಗುರುಃ
ನ ತದ್ವಾಕ್ಯಸಮಂ ಶಾಸ್ತ್ರಂ ನ ಚ ತಜ್ಞ ಸಮಃ ಪುಮಾನ್ //
ಅಭ್ರಮಂ ಭಂಗ ರಹಿತಂ ಅಜಡಂ ವಿಮಲಂ ಸದಾ/
ಆನಂದ ತೀರ್ಥ ಮತುಲಂ ಭಜೇ ತಾಪತ್ರಯಾಪಹಂ//
ಪ್ರಥಮೋ ಹನುಮನ್ನಾಮ
ದ್ವಿತೀಯೋ ಭೀಮಯೇವಚ
ಪೂರ್ಣಪ್ರಜ್ಞ ಸ್ತುತಿಯಸ್ತು
ಭಗವತ್ಕಾರ್ಯ ಸಾಧಕಃ.//
ವಾಯ್ವಂಶ ಸಂಭೂತರಾದ ಶ್ರೀ ಮಧ್ವಾಚಾರ್ಯ ರು
ಹರಿದಾಸ ಶ್ರೇಷ್ಠ ರು.
ಹನುಮ ,ಭೀಮ ಅವತಾರ ಗಳೆಲ್ಲಾ ಹರಿಸೇವೆಗಾಗಿಯೇ
ಮೀಸಲಾಗಿತ್ತು. ಅವರ ಜೀವನದ
ಪ್ರತಿ ಕ್ಷಣವೂ ,ಅವರ ದೇಹದ ಪ್ರತಿ ನರವೂ ಹರಿನಾಮ
ದಿಂದ ಕೂಡಿದ್ದು ,ಅವರ ನಡೆ ಯೆಲ್ಲಾ ಹರಿಸೇವೆ, ನುಡಿ
ಯೆಲ್ಲಾ ಹರಿಸ್ತ್ತೋತ್ರ ವಾಗಿದೆ.
ಶ್ರೀ ಆಚಾರ್ಯ ಮಧ್ವರ ಕಾಲಸುಮಾರು ಎಂಬತ್ತು ವರ್ಷಗಳು
ತಂದೆ ತಾಯಿ ಮಧ್ಯಗೇಹಭಟ್ಟರು ಮತ್ತು ವೇದವತಿ
ಮನೆತನ ನಡೆಲ್ಲಾಯ ಆಚಾರ್ಯ ಮಧ್ವರು ವಿಜಯದಶಮಿ

ವಿಳಂಬಿ ನಾಮ ಸಂವತ್ಸರ ಕ್ರಿ. ಶ.೧೨೦೦-ರಲ್ಲಿ ಜನನ ವಾಯಿತು.
ಪೂರ್ವಾಶ್ರಮದ ಹೆಸರು ವಾಸುದೇವ .
ಅವರು ಮಗುವಾಗಿದ್ದಾಗಲೇ ಅನೇಕ ಮಹಿಮೆ ಗಳನ್ನು
ತೋರಿಸಿ ,ತಾವು ವಾಯುದೇವರ ಅಂಶವೆಂದು ಪ್ರಮಾಣಿಸಿದರು.
ಅವರ ಜನನ ಕಾಲದಲ್ಲಿಮಂಗಳ ಘೋಷಗಳು, ದೇವ
ದುಂಧುಭಿ ಗಳು ಮೊಳಗಿದವು.
ಬಡತನದಲ್ಲಿ ಇದ್ದ ಮಧ್ಯಗೇಹ ಭಟ್ಟರಿಗೆ ವಾಸುದೇವನ
ಪೋಷಣೆಗೆ ಮೂಡಿಲ್ಲಾಯ ಮನೆತನದ ಚಿಟ್ಟಾಡಿ ಬೀಳು
ಬಲ್ಲಾಳ ಎಂಬ ಶ್ರೀಮಂತ ರು ಗೋದಾನ ಮಾಡಿದರು.
ವಾಸುದೇವ ನು ಮುಖ್ಯ ಪ್ರಾಣನ ಅವತಾರ .ಅಸಾಮಾನ್ಯ
ಶಕ್ತಿಯನ್ನು ಹೊಂದಿದ್ದ ಮಗುವಾಗಿದ್ದನು.
ಒಮ್ಮೆ ಹಸಿವಿನಿಂದ ಅಳುತ್ತಿದ್ದಾಗ ಅವರ ಅಕ್ಕ ಬೇಯಿಸಿದ
ಹುರುಳಿಯನ್ನು ತಿನ್ನಲು ಕೊಟ್ಟು ಸಂತೈಸಿದ್ದಳು.
ಹುರುಳಿತಿನ್ನುವ ಮೂಲಕ ಹುರುಳಿಲ್ಲದ ಮತಗಳನ್ನು
ಸದೆಬಡೆದನು.
ಒಂದು ವರ್ಷದ ಮಗುವಾಗಿದ್ದಾಗ ಎತ್ತಿನ ಬಾಲವನ್ನು ಹಿಡಿದು
ಕಾಡಿನಲ್ಲಿ ಕಣ್ಮರೆಯಾಗಿದ್ದನು.
ಜ್ಞಾನದ ಸಂಕೇತ ವಾದ ವಾಸುದೇವ ನು ಧರ್ಮಸೂಕ್ಷ್ಮ ವೆಂಬ
ಎತ್ತಿನ ಬಾಲವನ್ನು ಹಿಡಿದು ,ವೃಷಭ ರೂಪದ ಇಂದ್ರದೇವರಿಗೆ
ಪಾಠಹೇಳಿ
ಅದನ್ನು ಟೀಕಾಕೃತ್ಪಾದರನ್ನಾಗಿ ಮಾಡಿಸುವ ಸೂಚನೆ ಯಾಗಿತ್ತು.
ಮುಂದೆ " ತೋಟಂತಿಲ್ಲಾಯರ ಗುರುಕುಲ" ವನ್ನು ಸೇರಿ
ವಿದ್ಯಾಭ್ಯಾಸ ಮುಂದುವರಿಸಿ, ಗುರುಕುಲದಿಂದ
ನಿರ್ಗಮಿಸುವ ವೇಳೆಯಲ್ಲಿ ಗುರುಗಳಿಗೆ ಗುರುದಕ್ಷಣೆಯಾಗಿ "
ಐತರೇಯ ಶ್ರುತಿಯ ಅರ್ಥವನ್ನು
ವಿವರಿಸಿ ಜ್ಞಾನ ಸಂದೇಶ" ವನ್ನು ನೀಡಿದರು.
ನಂತರ ಆಚಾರ ವಿಚಾರಗಳನ್ನು ಪುನರುಜ್ಜೀವನ ಗೊಳಿಸಲು ,
ಸಂನ್ಯಾಸವನ್ನು ಸ್ವೀಕರಿಸಲು
ನಿರ್ಧಾರ ಮಾಡಿದರು.
ಮುಂದೆ ಸೋದರ ಜನಿಸಿದಾಗ ಹತ್ತು ವರ್ಷಗಳ ಬಾಲಕ
ವಾಸುದೇವ ಸನ್ಯಾಸ ಆಶ್ರಮ ವನ್ನು ಸ್ವೀಕರಿಸಿ
ವೈಷ್ಣವ ಮತದ ಸಿದ್ಧಾಂತದ ಪ್ರಚಾರಕ್ಕೆ ಸಿದ್ದರಾದರು.
ಅಚ್ಯುತಪ್ರೇಕ್ಷರು ವಾಸುದೇವ ನಿಗೆ ಸನ್ಯಾಸ ದೀಕ್ಷೆ ಕೊಟ್ಟ
ಗುರುಗಳು.
ಆಚಾರ್ಯರ ಮೊದಲ ಶಾಸ್ತ್ರ ದ ಕೃತಿ
" ಗೀತಾಭಾಷ್ಯ".
ನಂತರ ಬ್ರಹ್ಮ ಸೂತ್ರ, ಮಹಾಭಾರತ ತಾತ್ಪರ್ಯ ನಿರ್ಣಯ,
ತತ್ವನಿರ್ಣಯ, ಹರಿಯೇ ಸರ್ವೋತ್ತಮ ನೆಂದು ಸಾರಿದ
ಅನೇಕ ಕೃತಿ ಗಳನ್ನು ರಚಿಸಿ ಮಧ್ವಸಿಧ್ದಾಂತದ ಪ್ರಚಾರ ಮಾಡಿದರು.
ಅವರ ಕೃತಿ ಗಳಲ್ಲಿ " ಮಧ್ವವಿಜಯ" ,ಉಪನಿಷದ್ ಗಳು
ಪ್ರಮುಖ ವಾಗಿವೆ.
ಮಾಘ ಮಾಸದ ಶುಧ್ಧ ನವಮಿ ಕ್ರಿ.ಶ.೧೨೮೦ರಲ್ಲಿ ಬದರಿ
ಯಾತ್ರೆಗೆ ಹೋಗಿ ಅಲ್ಲಿಯೇ ಈಗಲೂ
ಅದೃಶ್ಯ ರೂಪದಲ್ಲಿ ಇದ್ದು ಭಕ್ತಾದಿಗಳಿಗೆ ಅನುಗ್ರಹಿಸುತ್ತಿದ್ದಾರೆ.
ಹರಿ ಸರ್ವೋತ್ತಮ ವಾಯು ಜೀವೋತ್ತಮ.
ಜನುಮ ಜನುಮದಲಿ ಎನಗಿರಲಿ/
ಹನುಮ ಭೀಮ ಮಧ್ವ ಮುನಿಗಳ ಸೇವೆಯು//
ಒಂದು ಬಾರೀ ಸ್ಮರಣೆ ಸಾಲದೇ ಮಧ್ವರಾಯರ
/./ಶ್ರೀ ಕೃಷ್ಣಾರ್ಪಣ ಮಸ್ತು/// ಮಧ್ವೇಶಾರ್ಪಣ ಮಸ್ತು//
यततोऽपि हरेः पदसंस्मरणे ।
सकलं ह्यघमाशु लयं व्रजति ।।
स्मरतस्तु विमुक्तिपदं परमं ।
स्फुटमेष्यति तत्किमपाक्रियते ।।
ಯತತೋಪಿ ಹರೇಃ ಪದಸಂಸ್ಮರಣೇ |
ಸಕಲಂ ಹ್ಯಘಮಾಶು ಲಯಂ ವ್ರಜತಿ ||
ಸ್ಮರತಸ್ತು ವಿಮುಕ್ತಿಪದಂ ಪರಮಂ |
ಸ್ಫುಟಮೇಷ್ಯತಿ ತತ್ಕಿಮಪಾಕ್ರಿಯತೇ ||
पदच्छेदः पदपरिचयशास्त्रं च ।
यततः - तकारान्तपुल्लिङ्गस्य यतत् शब्दस्य षष्ठीविभक्तेः
एकवचनान्तं पदमिदम् ।
अपि - अव्ययमिदम् ।
हरेः - इकारान्तपुल्लिङ्गस्य हरि शब्दस्य षष्ठीविभक्तेः
एकवचनान्तं पदमिदम् ।
पदसंस्मरणे - अकारान्तनपुंसकलिङ्गस्य पदसंस्मरण शब्दस्य
सप्तमीविभक्तेः एकवचनान्तं पदमिदम् ।
पादयोः सम्यक् स्मरणम् पदसंस्मरणम् ।
सकलम् - अकारान्तनपुंसकलिङ्गस्य सकल शब्दस्य
प्रथमाविभक्तेः एकवचनान्तं पदमिदम् । 
हि - अव्ययमिदम् ।
अघम् - अकारान्तनपुंसकलिङ्गस्य अघ शब्दस्य
प्रथमाविभक्तेः एकवचनान्तं पदमिदम् । 
आशु - अव्ययमिदम् ।
लयम् - अकारान्तनपुंसकलिङ्गस्य लय शब्दस्य प्रथमाविभक्तेः
एकवचनान्तं पदमिदम् ।
व्रजति - व्रज गतौ इति धातोः सकर्मकस्य कर्तरीप्रयोगस्य
परस्मैपदिनः वर्तमानकालस्य लट् लकारस्य प्रथमपुरुषस्य
एकवचनान्तं क्रियापदमिदम् ।
स्मरतः - तकारान्तपुल्लिङ्गस्य स्मरत् शब्दस्य षष्ठीविभक्तेः
एकवचनान्तं पदमिदम् ।
तु - अव्ययमिदम् ।
विमुक्तिपदम् - अकारान्तनपुंसकलिङ्गस्य विमुक्तिपद शब्दस्य
प्रथमाविभक्तेः एकवचनान्तं पदमिदम् ।
विशेषेण जीवन्मरणचक्रात् मुक्तिः विमुक्तिः । तस्याः विमुक्तेः
पदं विमुक्तिपदम् अर्थात् मोक्षम् इत्यर्थः ।
परमम् - अकारान्तनपुंसकलिङ्गस्य परम शब्दस्य प्रथमाविभक्तेः
एकवचनान्तं पदमिदम् ।
स्फुटम् - अकारान्तनपुंसकलिङ्गस्य स्फुट शब्दस्य प्रथमाविभक्तेः
एकवचनान्तं पदमिदम् ।
एष्यति - आङ् उपसर्गपूर्वकस्य इण गतौ इति धातोः सकर्मकस्य
कर्तरीप्रयोगस्य परस्मैपदिनः भविष्यत्कालस्य लृट् लकारस्य
प्रथमपुरुषस्य एकवचनान्तं क्रियापदमिदम् । 
तत् - दकारान्तनपुंसकलिङ्गस्य तद् शब्दस्य प्रथमाविभक्तेः
एकवचनान्तं सर्वनामसंज्ञकं पदमिदम् । 
किम् - मकारान्तनपुंसकलिङ्गस्य किम् शब्दस्य प्रथमाविभक्तेः
एकवचनान्तं सर्वनामसंज्ञकं पदमिदम् ।
अपाक्रियते - अप तथा आङ् इति उपसर्गपूर्वकस्य डुकृञ्
करणे इति धातोः सकर्मकस्य कर्मणिप्रयोगस्य आत्मनेपदिनः
वर्तमानकालस्य प्रथमपुरुषस्य एकवचनान्तं क्रियापदमिदम् ।
अन्वयः (संस्कृतवाक्यरचनापद्धतिः)
हरेः पदसंस्मरणे यततः अपि सकलं अघं आशु हि लयं व्रजति ।
स्मरतः तु परमं विमुक्तिपदं स्फुटं एष्यति । तथापि तत्
किं अपाक्रियते...??? 
ಕನ್ನಡದಲ್ಲಿ ಪ್ರತಿಪದಾರ್ಥ ಮತ್ತು ವಿವರಣೆ:
ಹರೇಃ - ಶ್ರೀಮನ್ಮಹಾವಿಷ್ಣುವಿನ 
ಪದ - ಪಾದದ್ವಯಗಳ
ಸಂಸ್ಮರಣೆ - ನೆನೆಯುವ ವಿಷಯದಲ್ಲಿ 
ಯತತಃ - ಪ್ರಯತ್ನಿಸುವವನಿಗೆ
ಅಪಿ - ಕೂಡ
ಸಕಲಮ್ - ಎಲ್ಲ ಬಗೆಯಾದ
ಅಘಮ್ - ಪಾಪ ಅಥವಾ ದುಃಖವು
ಆಶು ಹಿ - ಬೇಗನೇ
ಲಯಮ್ - ನಾಶವನ್ನು
ವ್ರಜತಿ - ಹೊಂದುತ್ತದೆ.
ಸ್ಮರತಃ ತು - ಪಾದಸ್ಮರಣೆಮಾಡುವವನಿಗಾದರೂ
ಪರಮಮ್ - ಉತ್ತಮವಾದ
ವಿಮುಕ್ತಿಪದಮ್ - ಜನನಮರಣ ಚಕ್ರದಿಂದ ಶಾಶ್ವತ ಮುಕ್ತಿಯು
ಸ್ಫುಟಮ್ - ಸ್ಪಷ್ಟವಾಗಿ
ಏಷ್ಯತಿ - ದೊರಕುವುದು.
ತಥಾಪಿ - ಹಾಗಿದ್ದರೂ ಕೂಡ
ತತ್ - ಆ ಹರಿಪಾದಸ್ಮರಣೆಯು
ಕಿಮ್ - ಏಕೆ
ಅಪಾಕ್ರಿಯತೇ - ಬಿಡಲ್ಪಡುತ್ತದೆ...??
ವಿವರಣೆ:
13 ನೇ ಶತಮಾನದ ದ್ವೈತಮತಪ್ರತಿಷ್ಠಾಪನಾಚಾರ್ಯರಾದ
ಶ್ರೀಮನ್ಮಧ್ವಾಚಾರ್ಯರ ಕರಕಮಲಗಳಿಂದ ವಿರಚಿತವಾದ
ಭಗವಂತನ ಸಗುಣತ್ವ, ಸಾಕಾರತ್ವ, ಶಕ್ತಿ, ಕಾರುಣ್ಯ,
ರೂಪ, ಒಲಿಸಿಕೊಳ್ಳುವ ಬಗೆ ಇವೆಲ್ಲವುಗಳನ್ನೂ ಒಳಗೊಂಡ
ಪುಟ್ಟ ಹಾಗೂ ಅಪಾರಜ್ಞಾನಯುಕ್ತವಾದ ಗ್ರಂಥವಾದ
"ದ್ವಾದಶಸ್ತೋತ್ರಾಣಿ" ಎಂಬ ಕಾವ್ಯಗ್ರಂಥದ ಮೂರನೇ
ಅಧ್ಯಾಯದ ಮೂರನೇ ಶ್ಲೋಕವಿದು. 
ಭೂಮಿಯಲ್ಲಿ ಹುಟ್ಚಿದ ಪ್ರತಿಯೊಂದು ಜೀವಿಯ ಗುರಿಯು
ಈ ಜೀವನ ಮರಣ ಚಕ್ರದಿಂದ ಶಾಶ್ವತವಾದ ಮುಕ್ತಿಯನ್ನು
ಪಡೆಯುವುದೇ ಆಗಿದೆ. ಆ ಉತ್ತಮವಾದ ಮೋಕ್ಷವನ್ನು
ಪಡೆಯಲು ಜೀವಿಯು ಶ್ರೀಮನ್ಮಹಾವಿಷ್ಣುವಿನ ಪಾದಸ್ಮರಣೆ
ಯನ್ನು ಮಾಡಲೇಬೇಕು. ಕೇವಲ ಶ್ರೀಹರಿಯ ಪಾದಗಳನ್ನು
ಸ್ಮರಿಸುವ ವಿಷಯದಲ್ಲಿ ಪ್ರಯತ್ನಿಸಿದರೂ ಸಾಕು, ಜೀವಿಯ
ಸಕಲ ಪಾಪಗಳೂ ನಾಶಹೊಂದುತ್ತವೆ. ಸ್ಮರಣೆಯಾದರೆ
ಮೋಕ್ಷವೇ ಸಿಗುತ್ತದೆ. ಲೌಕಿಕ ಆನಂದವೂ ಜೊತೆಯಾಗಿ
ಇದ್ದೇ ಇರುತ್ತದೆ. ಹಾಗಿದ್ದರೂ ಈ ಹರಿಪಾದಸ್ಮರಣೆಯು
ಜೀವಗಳಿಂದ ಏಕೆ ಮರೆಯಲ್ಪಡುತ್ತದೆ...??
ಏಕೆಂದರೆ ಜೀವಿಗಳಾದ ನಮ್ಮ ಮನಸ್ಸಿನಲ್ಲಿ ಕಲಿಯ
ಮಾಯೆಯ ಛಾಯೆಯು ಕವಿದು ಬುದ್ಧಿ ಹಾಗೂ
ಮನಸ್ಸುಗಳನ್ನು ಬೇರೇ ಬೇರೇ ಮಾಡಿರುತ್ತದೆ. ಈ ರೀತಿ ಕಲಿಯ
ಮಾಯೆಯನ್ನು ಕಳೆದು ಜೀವಿಗೆ ಸತ್ಕರ್ಮಗಳ ಫಲವನ್ನು
ದೊರಕಿಸಿಕೊಡುವುದು ಹರಿಪಾದಸ್ಮರಣೆ. ಈ ಹರಿಪಾದಸ್ಮರಣೆ
ಯನ್ನು ಹೇಗೆ ಮಾಡುವುದು...?? ಸ್ಮರಣೆಯನ್ನು ಮಾಡ
ಬೇಕಾದರೆ ಆ ವಸ್ತುವಿನ ಜ್ಞಾನವಾದರೂ ನಮ್ಮ ಮನಸ್ಸಿಗೆ
ಇರಬೇಡವೇ...?? ಹಾಗಾದರೆ ಆ ಪಾದವೆಂಬ ವಸ್ತು ಹೇಗಿದೆ
ಎಂಬ ಪ್ರಶ್ನೆಗೆ ಉತ್ತರವನ್ನು ಆಚಾರ್ಯಮಧ್ವರು ತಮ್ಮ ಇದೇ
ಕೃತಿಯ ಹತ್ತನೇಯ ಅಧ್ಯಾಯದಲ್ಲಿ "ಹರಿಗಾಥಾ" ಎಂಬಲ್ಲಿ
ಈ ರೀತಿ ಪಾದಗಳನ್ನು ವರ್ಣಿಸಿದ್ದಾರೆ...
ತರುಣಾದಿತ್ಯಸವರ್ಣಕಚರಣಾಬ್ಜಾಮಲಕೀರ್ತೇ |
ಕರುಣಾಪೂರ್ಣ ವರಪ್ರದ ಚರಿತಂ ಜ್ಞಾಪಯ ಮೇ ತೇ ||
ಸಲಿಲಪ್ರೋತ್ಥಸರಾಗಕಮಣಿವರ್ಣೋಚ್ಚನಖಾದೇ |
ಕರುಣಾಪೂರ್ಣ ವರಪ್ರದ ಚರಿತಂ ಜ್ಞಾಪಯ ಮೇ ತೇ ||
ಎಂದರೆ ಹೇ ಮಹಾವಿಷ್ಣುವೇ, ಕರುಣಾಪೂರ್ಣನೇ, ವರಪ್ರದನೇ,
ಆಗತಾನೇ ಉದಯಿಸಿದ ಸೂರ್ಯನ ಸಮಾನವಾದ ಕಾಂತಿಯಿಂದ
ಕೀರ್ತಿಸುವ ಕಮಲದಂತಹ ಪಾದವುಳ್ಳವನೇ, ಕಮಲದ ಹೂವಿನ
ಹಾಗೂ ಪದ್ಮರಾಗ ಮುಂತಾದ ಮಣಿಗಳ ಬಣ್ಣಕ್ಕೆ ಸದೃಶವಾದ
ಉಗುರುಳ್ಳ ಬೆರಳುಗಳುಳ್ಳವನೇ, ನಿನ್ನ ಮತ್ಸ್ಯಾದಿ ಅವತಾರಗಳ
ಕಥೆಗಳನ್ನು ಕೇಳುವುದರಲ್ಲಿ ನನ್ನನ್ನು ನಿಯೋಜಿಸು.
ಹೀಗೇ ಪ್ರತಿಯೊಬ್ಬ ಮಾನವನಿಗೂ ಹರಿಪಾದಗಳ ರೂಪವರ್ಣನೆ
ಯಾಗಲೆಂದು ಇಂತಹ ಸರಳವಾದ ಶ್ಲೋಕಗಳನ್ನು ಈ
ಉದ್ಗ್ರಂಥದಲ್ಲಿ ವಿವರಿಸಿ ಆ ಪಾದಗಳ ಸ್ಮರಣೆಯಿಂದಾಗುವ
ಲಾಭವನ್ನೂ ವರ್ಣಿಸಿದ್ದಾರೆ.
ಇದೇ ರೀತಿ ಶ್ರೀಹರಿಯ ಪಾದಗಳನ್ನು  ವರ್ಣಿಸಿರುವ, ಶ್ರೀಜಗನ್ನಾಥ
ದಾಸವರ್ಯರು ರಚಿಸಿದ ಕಾವ್ಯವನ್ನು ಕೆಲವು ದಿನಗಳ ಹಿಂದೆ
ಪೋಸ್ಟ್ ಮಾಡಲಾಗಿದೆ. ನಿಮ್ಮ ಅವಗಾಹನೆಗಾಗಿ ಇಲ್ಲಿ
ಕಾವ್ಯವನ್ನು ಬರೆಯಲಾಗಿದೆ.
ಅರುಣಾಬ್ಜೂಪಮಚಾರು |
ಚರಣಾಂಗುಲಿ ನಖರ ||
ತರುಣೇಂದು ಛವಿ ತಿರ-|
ಸ್ಕರಿಸುವ ಪ್ರಖರ ||
ಕಿರುಗೆಜ್ಜೆ ಕಡಗ ನೂ-|
ಪುರ ಪೆಂಡೆ ಶಫರ |
ತೆರೆ ಜಂಘೆ ಜಾನು ಭಾ-|
ಸುರ ರತ್ನ ಮುಕುರ ||
ಹೀಗೇ ಆಚಾರ್ಯಮಧ್ವರಿಂದ ಹಿಡಿದು ಅನೇಕ ಮಹಾ
ಮಹಿಮರು ಶ್ರೀಹರಿಯ ಸೌಂದರ್ಯಯವನ್ನು ತಮ್ಮದೇ
ಆದ ಶೈಲಿಯಲ್ಲಿ ವರ್ಣಿಸಿ ಆ ಹರಿಯ ಪಾದಸ್ಮರಣೆಯು
ಸದ್ಭಕ್ತರಿಗೆ ದೊರಕಿ ಅದರಿಂದ ಆಯಾ ಭಕ್ತರಿಗೆ ಮೋಕ್ಷಾದಿ
ಪಾರಮಾರ್ಥಿಕವೂ ಹಾಗೂ ಸಂಪದಾದಿ ಲೌಕಿಕ ಸುಖಗಳೂ
ಲಭಿಸಲಿ ಎಂಬ ಉದ್ದೇಶದಿಂದ ಈ ರೀತಿ ಶ್ರಮಿಸಿರುತ್ತಾರೆ. 
ಪ್ರಸ್ತುತ ಚರ್ಚಿತವಾದ ಶ್ಲೋಕವು ಸಂಸ್ಕೃತಭಾಷೆಯಲ್ಲಿಯೇ
ಕಠಿಣವಾದ "ತೋಟಕ" ಎಂಬ ಛಂದಸ್ಸಿನಲ್ಲಿ ರಚಿತವಾಗಿದೆ.
ಪ್ರತಿಪಾದದಲ್ಲಿಯೂ 12 ಅಕ್ಷರವುಳ್ಳ ಈ ಶ್ಲೋಕದಲ್ಲಿ
ಗಾಯನಯೋಗ್ಯವಾಗುವಂತೇ ಹಾಗೂ ಓದುಗರ ಮನಕ್ಕೆ
ಆನಂದವಾಗುವಂತೇ ರಚಿಸಿ ಭಕ್ತರಿಗೆ ಉಪಯೋಗವಾಗುವಂತೇ
ಶ್ರೀಮದಾನಂದತೀರ್ಥರು ರಚಿಸಿದ್ದಾರೆ.
ಶ್ರೀಹಯವದನಪಾದಾರವಿಂದಾರ್ಪಣಮಸ್ತು ||

ಪ್ರಥಮೋ ಹನುಮನ್ನಾಮ
ದ್ವಿತೀಯ ಭೀಮಯೇವಚ 
ಪೂರ್ಣಪ್ರಜ್ಞ ಸ್ತುತಿಯಸ್ತು
ಭಗವತ್ಕಾರ್ಯ ಸಾಧಕಃ.
ಶ್ರೀ ಮದಾನಂದತೀರ್ಥ ಭಗವತ್ಪಾದಾಚಾರ್ಯ ಮಧ್ವರು
ಮತ್ತು ಶ್ರೀ ಭಾವಿಸಮೀರ ವಾದಿರಾಜರು 
ಶ್ರೀ ಮನ್ನಾರಾಯಣ ಮತ್ತು ಹಯಗ್ರೀವ ದೇವರ ಆಜ್ಞೆ ಯ
ಮೇರೆಗೆ ಭೂಲೋಕದಲ್ಲಿ ಅವತರಿಸಿ " ಶ್ರೀ ಹರಿಯ ಮಹಿಮೆ
ಮತ್ತು ಸ್ವತಂತ್ರ ನೆಂದು ವಿಶ್ವಕ್ಕೆ ಸಾರಿ ಮಾಧ್ವ ಸಿಧ್ದಾಂತ ದ
ಪ್ರಚಾರ ಮಾಡಿ ವಿಶ್ವ ಗುರುಗಳೆಂದು ಪ್ರಖ್ಯಾತ ರಾದ
ಮಹಾಪುರುಷರು.
ಇಬ್ಬರೂ ತುಳು ನಾಡಿನಲ್ಲಿ ಯೇ ( ಪರಶುರಾಮ ಕ್ಷೇತ್ರದಲ್ಲಿ
ಜನಿಸಿದರು).
ಆಚಾರ್ಯ ಮಧ್ವರು ಎಂಬತ್ತು ವರ್ಷಗಳು ಗೋಚರವಾಗಿದ್ದರೆ ,
ಶ್ರೀ ವಾದಿರಾಜ ತೀರ್ಥರು ನೂರ ಇಪ್ಪತ್ತು ವರ್ಷಗಳ. ಕಾಲ
ಗೋಚರವಾಗಿ ಭಕ್ತರ ನ್ನು ಅನುಗ್ರಹಿಸುತ್ತಿದ್ದರು.
ಇಬ್ಬರೂ ತಮಗೊಬ್ಬ ಸೋದರ ಜನಿಸಿದ ಮೇಲೆ ಸನ್ಯಾಸತ್ವ
ವನ್ನು ಸ್ವೀಕರಿಸಿ ದವರು.
ಆಚಾರ್ಯ ಮಧ್ವರು ಬದರೀಯಲ್ಲಿ ೪೮ ದಿನಗಳ ಕಾಲ ಕಾಷ್ಡ
ಮೌನ ವ್ರತ ಮಾಡಿದರೆ 
ಶ್ರೀ ವಾದಿರಾಜ ಸ್ವಾಮಿಗಳು ಆರುತಿಂಗಳು ಅಲ್ಲಿ ತಪಸ್ಸು
ಮಾಡಿದರು.
ಇವರ ಮಾಧ್ವ ವೇದಾಂತ ಗ್ರಂಥಗಳು
ಆಚಾರ್ಯ ಮಧ್ವರು ಅಣು ವ್ಯಾಖ್ಯಾನ ( ೨೦೦೦ ಶ್ಲೋಕ
ಗಳ ವೇದಾಂತ ಗ್ರಂಥ)

.ಶ್ರೀ ವಾದಿರಾಜರು " ಯುಕ್ತಿಮಲ್ಲಿಕಾ" ೫೩೦೦ಶ್ಲೋಕಗಳ
ವೇದಾಂತ ಗ್ರಂಥಗಳು.
ಆಚಾರ್ಯ ಮಧ್ವರು " ಮಹಾಭಾರತ ತಾತ್ಪರ್ಯ ನಿರ್ಣಯ "
ಎಂಬ ಉತ್ಕೃಷ್ಟ ಗ್ರಂಥವನ್ನು ರಚಿಸಿದರೆ
ಶ್ರೀ ವಾದಿರಾಜ ಸ್ವಾಮಿಗಳು " ಮಹಾಭಾರತ ಲಕ್ಷಾಲಂಕಾರ :
ಮಹಾ ಗ್ರಂಥ ರಚನೆ ಮಾಡಿದರು.
ಶ್ರೀ ಕೃಷ್ಣನ ಮಹಿಮೆಯನ್ನು ಹೊಗಳಿ ಮಹಾಕಾವ್ಯವನ್ನು
ಆಚಾರ್ಯ ಮಧ್ವರು " ಯಮಕ ಭಾರತ "ವನ್ನು ರಚಿಸಿದರೆ ,
ಶ್ರೀ ವಾದಿರಾಜ ಸ್ವಾಮಿಗಳು " ರುಕ್ಮಣೀಶ ವಿಜಯ"ವನ್ನು
ರಚಿಸಿದ್ದಾರೆ.
ಈಗಲೂ ಆಚಾರ್ಯ ಮಧ್ವರು ಮತ್ತು ಶ್ರೀ ವಾದಿರಾಜರು ಉತ್ತರ
ಬದರೀ ಯಲ್ಲಿ ವೇದವ್ಯಾಸ ಮಹರ್ಷಿಗಳ ಶಾಸ್ತ್ರ ಶ್ರವಣ
ಮಾಡುತ್ತಿರುವ ಯತಿ ಶ್ರೇಷ್ಠ ರು.
ಉಡುಪಿ ಯಲ್ಲಿ ಶ್ರೀ ಕೃಷ್ಣ ಮಠ ಆಚಾರ್ಯ ಮಧ್ವರು
ಸ್ಥಾಪಿಸಿದರೆ , ಸೋದೆಯಲ್ಲಿ ಶ್ರೀ ತ್ರಿವಿಕ್ರಮ ದೇವಾಲಯ ವನ್ನು
ಶ್ರೀ ಭಾವಿಸಮೀರ ವಾದಿರಾಜರು ಸ್ತಾಪಿಸಿದರು.
********


ದೇವರೆಂದರೆ ತಿರುಪತಿ ತಿಮ್ಮಪ್ಪ ಗುರುಗಳೆಂದರೆ ಮಂತ್ರಾಲಯದ ರಾಯರು ಎಂಬುದು ಶ್ರೀಸಾಮಾನ್ಯರ ನಂಬಿಕೆ. ಕಲಿಯುಗದಲ್ಲಿ ಭಕ್ತರ ಉದ್ಧಾರಕ್ಕಾಗಿ ಅವತಾರ ತಾಳಿದ ಈ ಮಹಾಮಹಿಮರಿಬ್ಬರೂ ಭಕ್ತರಾಭಿಷ್ಟವನ್ನು ಈಡೇರಿಸುವಲ್ಲಿ ಕಂಕಣಬದ್ಧರು ಎಂಬ ಪ್ರತೀತಿ. ಮಂತ್ರಾಲಯವನ್ನು ಕೇಂದ್ರವನ್ನಾಗಿ ಮಾಡಿಕೊಂಢೂ ಹರಿಭಕ್ತಿಯನ್ನು ಉಪದೇಶಿಸುತ್ತಾ ನೊಂದವರಿಗೆ ಮಾರ್ಗದರ್ಶನಗೈಯ್ಯುವರೆಂಬ ಅಚಲ ನಂಬಿಕೆ.

ಮಂತ್ರಾಲಯ ಸುಕ್ಷೇತ್ರ ನಿವಾಸಿಗಳಾದ ಶ್ರೀ ರಾಘವೇಂದ್ರ ತೀರ್ಥರ ಮಹಿಮಾ ಜಗದ್ವಿಖ್ಯಾತವಾಗಿದೆ. ಈ ಮಹನೀಯರನ್ನು ಎಲ್ಲ ದಾಸ ಶ್ರೇಷ್ಠರು ಭಕ್ತಿಯಿಂದ ಕೊಂಡಾಡಿದ್ದಾರೆ. ಶ್ರೀ ವಿಜಯದಾಸರು, ಶ್ರೀ ಗೋಪಾಲದಾಸರು, ಶ್ರೀ ಜಗನ್ನಾಥದಾಸರು, ಶ್ರೀ ಮಧ್ವೇಶ ವಿಠಲದಾಸರು, ಶ್ರೀದವಿಠಲರು, ಗುರು ಶ್ರೀಶವಿಠಲರು, ಅಭಿನವ ಜನಾರ್ಧನ ವಿಠಲರೇ ಮೊದಲಾದ ದಾಸಾರ್ಯರು ಗುರುರಾಜರ ಮಹಿಮಾ, ಗ್ರಂಥರಚನೆ, ಪೂಜಾವೈಭವ, ವಾದಿ ದಿಗ್ವಿಜಯ, ಭಕ್ತಕಾರುಣ್ಯ ಮೊದಲಾದ ವಿಷಯಗಳನ್ನು ತಮ್ಮ ಕೃತಿಗಳಲ್ಲಿ ಅದ್ಭುತವಾಗಿ ವರ್ಣಿಸಿದ್ದಾರೆ. ಈ ಕೀರ್ತನೆಗಳು ಇಂದಿಗೂ ಭಕ್ತಜನರ ನಾಲಿಗೆಯ ಮೇಲೆ ನಲಿದಾಡುತ್ತಿವೆ.

ಶ್ರೀ ರಾಘವೇಂದ್ರ ಸ್ವಾಮಿಗಳ ನಂತರ ಬಂದಂತಹ ಪ್ರಮುಖ ಹರಿದಾಸರಲ್ಲಿ ಶ್ರೀವಿಜಯದಾಸರು, ಶ್ರೀಜಗನ್ನಾಥದಾಸರು, ಶ್ರೀಗೋಪಾಲದಾಸರು ಇನ್ನು ಅನೇಕ ದಾಸರು ರಾಯರನ್ನು ಭಕ್ತಿಯಿಂದ ಕೊಂಡಾಡಿದ್ದಾರೆ. ಎಲ್ಲರೂ ಒಂದೊಂದು ಕೃತಿಯ ಮೂಲಕ ಸ್ತೋತ್ರಗೈದು ಆರಾಧಿಸಿದ್ದಾರೆ. ಶ್ರೀ ರಾಘವೇಂದ್ರಸ್ವಾಮಿಗಳು ದ್ವಿತೀಯ ಘಟ್ಟದ ದಾಸಸಾಹಿತ್ಯದ ಕೇಂದ್ರ ಬಿಂದು.

ವಿಜಯದಾಸರಿಂದ ಮೊದಲ್ಗೊಂಡು ಇಂದಿನವರೆಗೆ ಅವರನ್ನು ಸ್ಮರಿಸದಿರುವ ಹರಿದಾಸರೇ ಇಲ್ಲವೆಂದರೆ ತಪ್ಪಲ್ಲ. ಮಾಧ್ವಯತಿಗಳಲ್ಲಿ ಇವರನ್ನು ಕುರಿತು 350ಕ್ಕೂ ಹೆಚ್ಚು ಕೀರ್ತನೆಗಳು ರಚಿತವಾಗಿವೆ. ವಿಜಯದಾಸರು ರಾಘವೇಂದ್ರಸ್ವಾಮಿಗಳನ್ನು ಕುರಿತು 6 ಹಾಡುಗಳನ್ನು ಹಾಡಿದ್ದಾರೆ. ಇಂತಹ ಅಪೂರ್ವ ದಾಸ ಸಾಹಿತ್ಯದ ಭಂಡಾರದಿಂದ, ಗುರುರಾಜರನ್ನು ಕುರಿತು ರಚಿಸಿದ ಕೆಲವು ಪ್ರಸಿದ್ಧ ಕೃತಿಗಳನ್ನು ಈ ವರ್ಷದ ಗುರುರಾಜರ ಆರಾಧನಾ ಮಹೋತ್ಸವದ ಸಂದರ್ಭದಲ್ಲಿ ಸಂಗ್ರಹಿಸಿ ಪ್ರಕಟಿಸಲಾಗಿದೆ.

ದಾಸವರೇಣ್ಯರ ಭಕ್ತಿ ಸಂಪುಟದಲ್ಲಿ ಕಂಡ ಗುರು ಸಾರ್ವಭೌಮರುಇಂದು ಎನಗೆ ಗೋವಿಂದಶ್ರೀ ರಾಘವೇಂದ್ರ ತೀರ್ಥರು ಉಡುಪಿ ಶ್ರೀ ಕೃಷ್ಣನಲ್ಲಿ ತಮ್ಮ ಅಂತರಂಗವನ್ನು ತೋಡಿಕೊಂಡು, ವೇದಪ್ರತಿಪಾದ್ಯನದ ಅವನನ್ನು ಭಕ್ತಿಯಿಂದ ಸ್ತೋತ್ರ ಮಾಡಿರುವ ಸುಪ್ರಸಿದ್ದ ಕೃತಿ.

ರಥವಾನೇರಿದ ರಾಘವೇಂದ್ರ | ರಾಯಗುಣಸಾಂದ್ರ ||ಪ||

ಸತ್ವಮಾರ್ಗದಲಿ ಸತತ ಸೇವಿಪರಿಗೆ
ಹಿತದಿಂದಲಿ ಮನೋರಥವ ಕೊಡುವೆನೆಂದು || ಅ.ಪ||
ಚತುರದಿಕ್ಕು ವಿದಿಕ್ಕುಗಳಲ್ಲಿ | ಸ್ಮರಿಸುವ ಜನರಲ್ಲಿ
ಮಿತಿಯಿಲ್ಲದೆ ಬಂದಾಲೈಸುತಲಿ | ವರವ ಬೇಡುತಲಿ||
ನುತಿಸುತ ಪರಿಪರಿ ನತರಾಗಿಹರಿಗೆ
ಗತಿಯ ಕೊಡದೆ ಸರ್ವಥ ಬಿಡೆನೆಂದು || 1 ||
ಅತುಳ ಮಹಿಮನು ಆ ದಿನದಲ್ಲಿ | ದಿತಿಜವಂಶದಲ್ಲಿ
ಉತುಪತ್ತಿಯಾಗಿ ಉಚಿತದಲ್ಲಿ | ಉತ್ತಮಮತಿಯಲ್ಲಿ ||
ಅತಿಶಯವಿರುತಿರೆ ಪಿತನಬಾಧೆ ಮ
ನ್ಮಥ ಪಿತನೊಲಿಸಿದ ಜಿತಕರಣದಲಿ || 2 ||
ಪ್ರಥಮ ಪ್ರಹ್ಲಾದ ವ್ಯಾಸಮಿನಿಯೆ| ಯತಿರಾಘವೇಂದ್ರ
ಪತಿತೋದ್ಧಾರಿ ಪಾವನಕಾರಿಯೆ| ಕೈ ಮುಗಿವೆನು ಧೊರೆಯೆ ||
ಕ್ಷಿತಿಯೊಳು ಗೋಪಾಲ ವಿಠಲನ ನೆನೆಯುತ
ಮಂತ್ರಾಲಯದೊಳು ಶುಭವ ಕೊಡುವೆನೆಂದು || 3 ||

ಶ್ರೀ ‘ವಿಠ್ಠಲೇಶ’ ಅಂಕಿತರಾದ ಶ್ರೀ ವಿಠೋಬಾಚಾರ್ಯ ವೈದ್ಯರವರು ಶ್ರೀರಾಯರ ಪರಮ ಭಕ್ತರು ಹಾಗೂ ವಿಶೇಷ ಅನುಗ್ರಹ ಪಾತ್ರರು. ಅವರು ಕೋರಿ ಕರೆವೆ ಗುರು ಶ್ರೀರಾಘವೇಂದ್ರನೆ ಕೃತಿಯಲ್ಲಿ ಗುರುರಾಘವೇಂದ್ರರ ಪಾದ ಕಮಲಗಳಲ್ಲಿ ಭಕ್ತಿಯಿಂದ ನಮಿಸಿ, ಮಂತ್ರಾಲಯ ಮಂದಿರರಾದ ಗುರುರಾಜರನ್ನು ಹೃತ್ಪೂರ್ವಕವಾಗಿ ಆಹ್ವಾನಿಸಿದ್ದಾರೆ.

ಶ್ರೀರಾಯರು ಅಪಾರ ಕರುಣಾಶಾಲಿಗಳು. ಮಗುವಿನ ಮೊರೆಕೇಳಿ ಧಾವಿಸಿ ಬರುವ ಮಾತೆಯಂತೆ ಭಕ್ತರ ಪ್ರಾರ್ಥನೆಗೆ ಧಾವಿಸಿ ಬರುವ ಶ್ರೀ ರಾಘವೇಂದ್ರರನ್ನು “ಮಧ್ವೇಶ ವಿಠ್ಠಲ” ದಾಸರು ಬಂದಾನು ರಾಘವೇಂದ್ರ ಇಂದಿಲ್ಲಿಗೆ ಕೃತಿಯಲ್ಲಿ ಹೃದಯಂಗಮವಾಗಿ ವರ್ಣಿಸಿದ್ದಾರೆ.

ನೋಡಿದೆ- ಗುರುಗಳ -ನೋಡಿದೆ ಶ್ರೀ ವಿಜಯವಿಠಲನ ವಿಶೇಷ ಅನುಗ್ರಹಕ್ಕೆ ಪಾತ್ರರಾದ, “ಇಂದಿರಾಪತಿ ಇವರ ಮುಂದೆ ಕುಣಿವನು” ಎಂದು ಸ್ತುತಿಸಿಕೊಂಡ, ಪ್ರಾತ ಸ್ಮರಣಿಯರಾದ ಶ್ರೀ ವಿಜಯದಾಸರು ಶ್ರೀ ಗುರುರಾಜರ ಪರಮಭಕ್ತರು. ಶ್ರೀ ವಿಜಯರಾಯರು ರಾಯರ ಬೃಂದಾವನ ದರ್ಶನಮಾಡಿ, ಆನಂದಪುಳಕಿತರಾಗಿ ರಾಯರ ಬೃಂದಾವನದಲ್ಲಿ ಸನ್ನಿಹಿತವಾಗಿರುವ ಭಗದ್ರೂಪಗಳೂ, ಆನಂದ ತೀರ್ಥರೇ ಮೊದಲಾದ ಸಕಲ ಗುರುಗಳು ಹಾಗೂ ಮಂತ್ರಾಲಯ ಕ್ಷೇತ್ರದ ವೈಭವವನ್ನು ನೋಡಿದೆ ಗುರುಗಳ -ನೋಡಿದೆ ದೇವರನಾಮದಲ್ಲಿ ವಿಸ್ತಾರವಾಗಿ ಕೊಂಡಾಡಿದ್ದಾರೆ.

ನೋಡೆಲೆ ಮನವೇ ಕೊಂಡಾಡು ಗುರುಗಳ ಪಾದ ಗುರುರಾಜರ ಪಾದ ಭಜನೆ ಮಾಡಿದವರ ಪುಣ್ಯಕ್ಕೆ ಎಣಿಯೇ ಇಲ್ಲ. ಅವರೇ ಧನ್ಯರು, ಮಾನ್ಯರು ಗುರುರಾಜರ ಸನ್ನಿಧಾನದಲ್ಲಿ ಸರ್ವದಾ ಹರಿ ವಾಯುಗಳ ಸನ್ನಿಧಾನ, ಸಕಲ ಋಷಿಗಳ, ತೀರ್ಥಗಳ ಸನ್ನಿಧಾನ. ಕಾಶಿ, ಕುರುಕ್ಷೇತ್ರ ಮೊದಲಾದ ಪುಣ್ಯಸ್ಥಳಗಳ ದರ್ಶನದಿಂದ ಬರುವ ಫಲ ರಾಯರ ಬೃಂದಾವನ ಸೇವೆಯಿಂದ ಲಭ್ಯ. ಶ್ರೀಹರಿಯೇ ರಾಘವೇಂದ್ರರ ರೂಪದಿಂದ ಸಕಲ ಭಕ್ತರ ಮನೋಭೀಷ್ಯಗಳನ್ನು ಈಡೇರಿಸುತ್ತಿದ್ದಾನೆಂದು ಕೊಂಡಾಡಿದ್ದಾರೆ. ನೋಡೆಲೆ ಮನವೆ ಕೊಂಡಾದು ಗುರುಗಳ ಪಾದ ಈಡು ಇಲ್ಲವೋ ಪುಣ್ಯಕ್ಕೆ ಕೃತಿಯಲ್ಲಿ “ಗುರು ಶ್ರೀಶವಿಠಲ” ದಾಸರು.

ಗುರುರಾಘವೇಂದ್ರರ ಚರಣಕಮಲವನ್ನು ಸ್ಮರಿಸುವ ಮನುಜರಿಗೆ ಶ್ರೀಪರಿಮಳಾಚಾರ್ಯರ ಪಾದ ಕಮಲಗಳ ಸ್ಮರಣೆಮಾಡಿದ ಭಕ್ತರ ಸಕಲ ವಿಧ ಪಾಪಗಳು ಸಿಂಹವನ್ನು ಕಂಡ ಆನೆಯಂತೆ ಓಡಿಹೋಗುವುದು. ಮಧ್ವಮತಾಂಬುಧಿ ಚಂದ್ರರೂ, ಅಪೇಕ್ಷಿತ ಪ್ರದಾತರೂ ಹರಿಸರ್ವೋತ್ತಮತ್ವ, ಪಂಚಭೇದ, ತಾರತಮ್ಯ ಮೊದಲಾದ ಮಧ್ವಸಿದ್ಧಾಂತ ಸಾಧಕರೂ ಆದ ಶ್ರೀ ಗುರುರಾಜರನ್ನು, “ಭಕ್ತಿಯಲಿ ಭಾಗಣ್ಣ” ಎಂದು ಖ್ಯಾತರಾದ ಶ್ರೀ ಗೋಪಾಲದಾಸರು ಈ ಗುರುರಾಘವೇಂದ್ರರ ಚರಣಕಮಲವನ್ನು ಸ್ಮರಿಸುವ ಮನುಜರಿಗೆ ಕೃತಿಯಲ್ಲಿ ಭಕ್ತಿಯಿಂದ ಕೊಂಡಾಡಿದ್ದಾರೆ.

ರಥವಾನೇರಿದ ರಾಘವೇಂದ್ರ ಶ್ರೀ ರಾಘವೇಂದ್ರರಿಗೆ ನಡೆಯುವ ಅನೇಕ ಉತ್ಸವಗಳಲ್ಲಿ ರಥೋತ್ಸವ ಮುಖ್ಯವಾದುದು. ರಜತರಥಾರೂಢರಾಗಿ ವೈಭವದಿಂದ ಬರುವ ಶ್ರೀ ಗುರುರಾಜರ ದರ್ಶನವೇ ಮಹಾಭಾಗ್ಯ. ಆದರೆ ಪರಮ ವೈರಾಗ್ಯಶಾಲಿಗಳಾದ ಗುರುರಾಜರಿಗೆ ಈ ಯಾವ ಉತ್ಸವಗಳ ಅಪೇಕ್ಷೆಯಿಲ್ಲ. ರಾಯರು ರಥವೇರಿದ್ದು, ಸನ್ಮಾರ್ಗದಲ್ಲಿ ನಡೆವ ಸಜ್ಜನರಿಗೆ ಮನೋರಥವನ್ನು ಕೊಡುವೆನೆಂದು ಸೂಚಿಸಲು ಮಾತ್ರವೆಂದು ಶ್ರೀ ಗೋಪಾಲದಾಸರು ಈ ಕೃತಿಯಲ್ಲಿ ಸೊಗಸಾಗಿ ಚಿತ್ರಿಸಿದ್ದಾರೆ.

ರಾಗ – ಮಧ್ಯಮಾವತಿ ತಾಳ- ಆದಿತಾಳ
ರಥವಾನೇರಿದ ರಾಘವೇಂದ್ರ | ರಾಯಗುಣಸಾಂದ್ರ ||ಪ||
ಸತ್ವಮಾರ್ಗದಲಿ ಸತತ ಸೇವಿಪರಿಗೆ
ಹಿತದಿಂದಲಿ ಮನೋರಥವ ಕೊಡುವೆನೆಂದು || ಅ.ಪ||
ಚತುರದಿಕ್ಕು ವಿದಿಕ್ಕುಗಳಲ್ಲಿ | ಸ್ಮರಿಸುವ ಜನರಲ್ಲಿ
ಮಿತಿಯಿಲ್ಲದೆ ಬಂದಾಲೈಸುತಲಿ | ವರವ ಬೇಡುತಲಿ||
ನುತಿಸುತ ಪರಿಪರಿ ನತರಾಗಿಹರಿಗೆ
ಗತಿಯ ಕೊಡದೆ ಸರ್ವಥ ಬಿಡೆನೆಂದು || 1 ||
ಅತುಳ ಮಹಿಮನು ಆ ದಿನದಲ್ಲಿ | ದಿತಿಜವಂಶದಲ್ಲಿ
ಉತುಪತ್ತಿಯಾಗಿ ಉಚಿತದಲ್ಲಿ | ಉತ್ತಮಮತಿಯಲ್ಲಿ ||
ಅತಿಶಯವಿರುತಿರೆ ಪಿತನಬಾಧೆ ಮ
ನ್ಮಥ ಪಿತನೊಲಿಸಿದ ಜಿತಕರಣದಲಿ || 2 ||
ಪ್ರಥಮ ಪ್ರಹ್ಲಾದ ವ್ಯಾಸಮಿನಿಯೆ | ಯತಿರಾಘವೇಂದ್ರ
ಪತಿತೋದ್ಧಾರಿ ಪಾವನಕಾರಿಯೆ | ಕೈ ಮುಗಿವೆನು ಧೊರೆಯೆ ||
ಕ್ಷಿತಿಯೊಳು ಗೋಪಾಲ ವಿಠಲನ ನೆನೆಯುತ
ಮಂತ್ರಾಲಯದೊಳು ಶುಭವ ಕೊಡುವೆನೆಂದು || 3 ||

ಅನ್ಯಾಕೆ ಧೇನಿಸಲಿ | ಅನ್ಯಾಕೆ ಚಿಂತಿಸಲಿ ಭವಸಾಗರವನ್ನು ಶ್ರೀಹರಿಯ ಅನುಗ್ರಹದಿಂದ ಅನಾಯಾಸವಾಗಿ ದಾಟಿಸುವ ಶ್ರೀ ರಾಘವೇಂದ್ರರು ಇರುವಾಗ ಬೇರೆ ಗುರುಗಳ ಚಿಂತೆ ಏಕೆ? ಧ್ಯಾನವೇಕೆ? ಭಕ್ತಿಯಿಂದ ಭಜಿಸುವವರಿಗೆ ಸನ್ಮಾರ್ಗದ ದಾರಿ ತೋರಿಸುವ ಈ ಮಹಾಮಹಿಮರ ಸೇವಾಭಾಗ್ಯ ಅನೇಕ ಜನ್ಮದ ಸುಕೃತದಿಂದ ಮಾತ್ರ ಲಭ್ಯವೆಂದು ಸ್ತೋತ್ರ ಮಾಡಿದ್ದಾರೆ ‘ವಾಸುದೇವ ವಿಠಲ’ ಅಂಕಿತರಾದ ಶ್ರೀ ವ್ಯಾಸತತ್ವಜ್ಞರು.

ಗುರುವರ್ಯರನು ಭಜಿಸೋ ಶ್ರೀ ವ್ಯಾಸರಾಜ ವಿದ್ಯಾ ಕರ್ನಾಟಕ ಸಿಂಹಾಸನಾಧಿಶ್ವರರಾಗಿದ್ದ ಕೀರ್ತಿಶೇಷ ಶ್ರೀ ವಿದ್ಯಾಪ್ರಸನ್ನತೀರ್ಥರು ಶ್ರೀ ರಾಘವೇಂದ್ರ ಗುರುವರ್ಯರನ್ನು ಸುತ್ತಿಸಿ ರಚಿಸಿರುವ ಈ ದೇವರನಾಮದಲ್ಲಿ ಗುರುರಾಜರ ಅವತಾರತ್ರಯ ವರ್ಣನೆ ಸುಂದರವಾಗಿ ಮೂಡಿ ಬಂದಿದೆ.

ಗುರುವರ್ಯರನು ಭಜಿಸೋ ರಾಘವೇಂದ್ರ |
ಗುರುವರ್ಯರನು ಭಜಿಸೋ ||
ವೃಂದಾವನದಲಿ ರಾಜಿಪಯರಿವರನ್ಯಾರೇ?
ತುಂಗಭದ್ರಾ ತೀರದ ಮಂತ್ರಾಲಯ ಸುಕ್ಷೇತ್ರದಲ್ಲಿ ದಿವ್ಯ ಬೃಂದಾವನದಲ್ಲಿ ವಿರಾಜಮಾನರಾಗಿರುವ ಶ್ರೀ ರಾಯರ ಮಹಿಮೆಗಳನ್ನು ಇಬ್ಬರು ನಾರಿಮಣಿಯರ ಸಂಭಾಷಣೆಯ ಮೂಲಕ “ ಶ್ರೀಪತಿ ವಿಠಲ” ದಾಸರು ಸುಂದರವಾಗಿ ವೃಂದಾವನದಲಿ ರಾಜಿಪ ಯತಿವರನ್ಯಾರೇ ಪೇಳಮ್ಮಯ್ಯ ಕೃತಿಯಲ್ಲಿ ಚಿತ್ರಿಸಿದ್ದಾರೆ.
ಏಕೆ ಮೂಕನಾದ್ಯೋ? ಗುರುವೇ
ಶ್ರೀ ಜಗನ್ನಾಥದಾಸರು ಶ್ರೀಪ್ರಹ್ಲಾರಾಜರ ಅನುಜರಾದ ಶ್ರೀ ಸಹ್ಲಾದ ರಾಜರ ಅವತಾರರೆಂದು ಐತಿಹ್ಯವಿದೆ. ಶ್ರೀ ಜಗನ್ನಾಥದಾಸರು ಶ್ರೀ ಗುರುರಾಜರ ಸಂಗಡ ಸಾಕ್ಷಾತ್ತಾಗಿ ಮಾತನಾಡುತ್ತಿದ್ದರಂತೆ. ಕೆಲವು ಕುಹಕಿಗಳು ಇದನ್ನು ಪರೀಕ್ಷಿಸಲು ಪ್ರಯತ್ನಿಸಿದ ದಿನ ರಾಯರು ಜಗನ್ನಾಥದಾಸರೊಡನೆ ಮಾತನಾಡಲೇ ಇಲ್ಲ. ಆ ಸಂದರ್ಭದಲ್ಲಿ ದಾಸರು ಭಕ್ತಿಪರವಶರಾಗಿ ರಾಯರನ್ನು ಪಾರ್ಥಿಸಿ ರಚಿಸಿದ ಕೃತಿ.
ರಾಗ: ಸಿಂಹೇಂದ್ರ ಮಧ್ಯಮ ತಾಳ:
ಏಕೆ ಮೂಕನಾದ್ಯೋ ಗುರುವೇ ಏಕೆ ಮೂಕನಾದ್ಯೋ ||ಪ||
ಏಕೆ ಮೂಕನಾದಿ ನೀನು | ಲೋಕಪಾಲಕನೆ ಎನ್ನ
ಸಾಕುವರ್ಯಾರಯ್ಯ | ಶ್ರೀಕರ ರಾಘವೇಂದ್ರ ||ಅ.ಪ||
ಹಿಂದಕ್ಕೆ ನೀ ಎನ್ನ | ಮುಂದೆ ಸುಳಿದಾಡಿದೆ
ಮಂದಿಯೊಳಗೆನ್ನ | ಮಂದನ್ನ ಮಾಡಿ ಈಗ
||1||
ಬೇಕಾಗದಿದ್ದರಿನ್ನು | ಏಕೆ ಕೈಯನು ಪಿಡಿದೆ
ಕಾಕುಜನರೊಳೆನ್ನ | ನೂಕಿಬಿಟ್ಟು ನೀನು
||2||
ಈಗ ಪಾಲಿಸದಿರೆ | ಯೋಗಿ ಕುಲವರ್ಯ
ರಾಘವೇಂದ್ರನೆ ಭವ | ಸಾಗುವದ್ಹ್ಯಾಗಯ್ಯ
||3||
ನಿನ್ನಂಥ ಕರುಣಿಲ್ಲ | ಎನ್ನಂಥ ಕೃಪಣಿಲ್ಲ
ಘನ್ನ ಮಹಿಮ ನೀ | ಎನ್ನನು ಬಿಟ್ಟೀಗ
||4||
ಜನನಿಯು ನೀ ಎನಗೆ | ಎನ್ನ ಜನಕನಯ್ಯ
ಮನ್ನಿಸೋ ನೀನಿತ್ಯ | ಅನನ್ಯ ಶರಣನೆ
||5||
ಎಂದಿಗಾದರು ನಿನ್ನ | ಪೊಂದಿಕೊಂಡವನಲ್ಲೋ
ಇಂದು ನೀ ಬಿಟ್ಟರೆನ್ನ | ಮುಂದೆ ಕಾಯುವರ್ಯಾರೋ ||6||
ನಾಥನು ನೀನು ಆ | ನಾಥನು ನಾನಯ್ಯ
ಪಾತಕರಿರಿ ಜಗ | ನ್ನಾಥ ವಿಠ್ಠಲದಾಸ
||7||
ರೋಗಹರನೆ ಕೃಪಾಸಾಗರ
‘ಜಗನ್ನಾಥ ವಿಠಲ’ ಅಂಕಿತರಾದ ಶ್ರೀ ಜಗನ್ನಾಥದಾಸರು ಈ ಕೃತಿಯಲ್ಲಿ, ದುರ್ವಾದಿಗಳೆಂಬ ಕತ್ತಲೆಗೆ ಸೂರ್ಯನಂತಿರುವ ಶ್ರೀ ರಾಘವೇಂದ್ರರನ್ನು, ನಿನ್ನ ಪಾದಸೇವಕರ ಸಹವಾಸವನ್ನು ಕೊಟ್ಟು ಪರಿಪಾಲಿಸೆಂದು ಭಕ್ತಿಯಿಂದ ಪ್ರಾರ್ಥಿಸಿದ್ದಾರೆ.
ರಾಗ: ಬೇಹಾಗ್ ತಾಳ: ಆದಿತಾಳ
ರೋಗಹರನೆ ಕೃಪಾಸಾಗರ ಶ್ರೀ ಗುರು
ರಾಘವೇಂದ್ರ ಪರಿಪಾಲಿಸೋ
||ಪ||
ಸಂತತ ದುರ್ವಾದಿಧ್ವಾಂತ ದಿವಾಕರ
ಸಂತವಿನುತ ಮಾತ ಲಾಲಿಸೋ
||1||
ಪಾವನಗಾತ್ರ -ಭೂದೇವವರೆನೆ ತವ
ಸೇವಕ ಜನರೊಳಗಾಡಿಸೋ
||2||
ಘನ್ನ ಮಹಿಮ ಜಗನ್ನಾಥ ವಿಠಲಪ್ರಿಯ
ನಿನ್ನಾರಾಧನೆ ಮಾಡಿಸೋ
||3||
ಬಂದದ್ದೆಲ್ಲಾ ಬರಲಿ | ರಾಘವೇಂದ್ರರ ದಯವಿರಲಿ ಶ್ರೀ ಗುರುರಾಜರು ಅಪೇಕ್ಷಿತ ಪ್ರದಾತರು. ಭಕ್ತಜನರ ಅಭೀಷ್ಠಗಳನ್ನು ಕಲ್ಪವೃಕ್ಷ, ಕಾಮಧೇನುವಿನಂತೆ ಈಡೇರಿಸುತ್ತಿರುವ ಶ್ರೀರಾಯರ ಸೇವೆಗಾಗಿ ಲಕ್ಷಾಂತರ ಮಂದಿ ಭಕ್ತರು ಮಂತ್ರಾಲಯ ಕ್ಷೇತ್ರಕ್ಕೆ ಧಾವಿಸಿ ಬರುತ್ತಾರೆ. ರಾಯರು ಭಕ್ತರಿಗೆ ಅನುಗ್ರಹ ಮಾಡುವ ವಿವಿಧ ಪರಿಯನ್ನು “ಶ್ರೀ ಅಭಿನವ ಜನಾರ್ಧನ ವಿಠಲ” ಅಂಕಿತರಾದ ಶ್ರೀ ಪ್ರೇಮದಾಸರು ಮನೋಜ್ಞವಾಗಿ ಬಂದದ್ದೆಲ್ಲ ಬರಲೀ | ರಾಘವೇಂದ್ರರ ದಯವಿರಲಿ ವರ್ಣಿಸಿದ್ದಾರೆ.

ಯತಿವರ ನಿಮ್ಮನು ಸುತ್ತಿಪ ಜನರು ಶ್ರೀ ರಾಘವೇಂದ್ರರು ಕೇವಲ ಪವಾಡ ಪುರುಷರಲ್ಲ. ಶ್ರೀ ಮಧ್ವಸಿದ್ಧಾಂತದ ಪ್ರಚಾರಕರು ಅವರು. ದಶಪ್ರಮತಿಗಳ , ಜಯರಾಯರ ಸೇವೆಯನ್ನು ವಿಶೇಷವಾಗಿ ಮಾಡಿ, ತತ್ವಮಂಜರಿ, ಗೀತಾವಿವೃತ್ತಿ, ಪರಿವiಳಾದಿ ಉತ್ತಮ ಗ್ರಂಥಗಳನ್ನು ರಚಿಸಿದ ಶ್ರೀ ಗುರುರಾಜರ ಸೇವೆಯನ್ನು ಮಾಡಿದವರು ಸದ್ಗತಿಯನ್ನು ಹೊಂದುವುದರಲ್ಲಿ ಸಂದೇಹವಿಲ್ಲವೆಂದು ಸಾರಿದ್ದಾರೆ ಶ್ರೀ ಶ್ರೀ ವಿದ್ಯಾ ಪ್ರಸನ್ನತೀರ್ಥ ಶ್ರೀ ಪಾದಂಗಳವರು.

ಪಾದವನು ಕಂಡು ಪಾವನನಾದೆನೋ ಶ್ರೀ ಗುರುರಾಜರ ಪಾದದರ್ಶನದಿಂದ ಪತಿತನೂ ಪಾವನನಾಗುತ್ತಾನೆ. ಶ್ರೀ ಸುಧೀಂದ್ರತೀರ್ಥರ ವರಕುಮಾರಕರಾದ ಇವರ ಪಾದಸ್ಮರಣೆಯಿಂದ ಇಹಪರ ಸುಖವು ಲಭ್ಯವೆಂದು ಹಾಗೂ ಇಂತಹ ಪರಮಕರುಣಾಳುವಿಗೆ ಸರಿಸಾಟಿಯಾದ ಮತ್ತೊಬ್ಬರನ್ನು ಕಾಣೆನೆಂದು ದೃಢ ವಿಶ್ವಾಸದಿಂದ ಪೊಗಳುತ್ತಾರೆ ‘ಜನಾರ್ಧನ ವಿಠಲ’ ದಾಸರು.

ಕರುಣಿಗಳೊಳಗೆಣೆಗಾಣೆ ನಿನಗೆ ಮಂಚಾಲೆ ರಾಯರು ಅಪಾರ ಕರುಣಾಶಾಲಿಗಳು. ಭಕ್ತರ ತಪ್ಪನ್ನು ಮನ್ನಿಸಿ ಅವರನ್ನು ಉದ್ಧಾರ ಮಾಡುವ ಮಹಾಮಹಿಮರು. ಭಕ್ತಿಯಿಂದ ನೀವೇ ಗತಿಯೆಂದು ಭಜಿಸುವ ಸಜ್ಜನರ ಪಾಪಗಳನ್ನು ಕಳೆದು ಸಂತೈಸುವ ಗುರುಗಳು. ವರಹಜೆಯ ನದಿ ತೀರದಲ್ಲಿ ವಿರಾಜಮಾನರಾಗಿ ಮಧುಸೂಧನ ಪಾದಕಲಮಲದ ದುಂಬಿಯಂತಿರುವ ಗುರುರಾಜರಿಗೆ ಸಮರಾದ ಕರುಣಾಶಾಲಿಗಳು ಇನ್ನೊಬ್ಬರಿಲ್ಲೆಂದು ಶ್ರೀ ಜಗನ್ನಾಥದಾಸರು ಕರುಣಿಗಳೊಳಗೆಣೆಗಾಣೆ ನಿನಗೆ ಸದ್ಗುರುವರ ರಾಘವೇಂದ್ರ ಕರುಣಿಗಳೊಳಗೆಣೆಗಾಣೆ ನಿನಗೆ ಕೃತಿಯಲ್ಲಿ ಕೊಂಡಾಡಿದ್ದಾರೆ.

ಪೊಂದಿ ಬದುಕಿರೋ ರಾಘವೇಂದ್ರರಾಯರ “ನಂಬಿದ ಭಕ್ತರನ್ನು ಬಿಡದೆ ಕಾಪಾಡುವ ಬದ್ಧ ದೀಕ್ಷರಾಗಿರುವ ಶ್ರೀ ರಾಘವೇಂದ್ರರಾಯರನ್ನು ಏಕ ಚಿತ್ತದಿಂದ ಭಜಿಸಿ ಬದುಕಿರಿ. ಅವರು ಕರುಣೆಯಿಂದ ನಮ್ಮನ್ನು ಪೊರೆಯುತ್ತಾರೆ. ಜಗನ್ನಾಥವಿಠಲನ ಪ್ರೀತಿ ಪಾತ್ರರಾದ ಶ್ರೀ ರಾಘವೇಂದ್ರರನ್ನು ಅನುದಿನದಲಿ ಬಿಡದೆ ಭಜಿಸಿ” ಎಂದು ಸಾರಿ ಸಾರಿ ಹೇಳುತ್ತಾರೆ ಶ್ರೀ ಜಗನ್ನಾಥದಾಸರು.
ರಾಘವೇಂದ್ರ ಗುರುರಾಯರ ಸೇವಿಸಿರೋ “ದಾಶರಥಿಯ ದಾಸರೂ, ಶ್ರೀ ಸಮೀರಮತ ಸಂಸ್ಥಾಪಕರೂ ಆದ ಶ್ರೀ ರಾಘವೇಂದ್ರರಾಯರ ಸೇವಿಸಿ ಸೌಖ್ಯದಿಂದ ಜೀವಿಸಿರಿ. ಮಂದಭಾಗ್ಯರಿಗೆ ಇವರ ಸೇವೆ ದುರ್ಲಭ, ಭಕ್ತರ ಪ್ರಾರ್ಥನೆಗೆ ಧಾವಿಸಿ ಬರುವ ಇವರ ಸಂದರ್ಶನ ಮಹಾಪಾಪನಾಶಕ” ಎಂದು ಈ ಕೃತಿಯಲ್ಲಿ ಭಕ್ತಿಯಿಂದ ಕೊಂಡಾಡಿದ್ದಾರೆ “ಶ್ರೀದವಿಠಲ’ ಅಂಕಿತರಾದ ಕರ್ಜಗಿ ದಾಸರಾಯರು.
ಶ್ರೀ ರಾಘವೇಂದ್ರರಿಗೆ ಮಂಗಳವಾಗಲಿ, ಶ್ರೀ ಸುಧೀಂದ್ರರ ತನಯಗೆ ಮಂಗಳವಾಗಲಿ. ಭಕ್ತ ಜನರ ಈಪ್ಸಿತ ಅಭೀಷ್ಟ ಸಲಿಸುವ ಮುನಿಶ್ರೇಷ್ಠಗೆ ಮಂಗಳವಾಗಲಿ ಎಂದು ಹಾರೈಸಿದ್ದಾರೆ ಶ್ರೀ ಜಗನ್ನಾಥದಾಸರು.



ದಾಸ ಸಾಹಿತ್ಯದ ಒಲವೇಕೆ?
ಅಷ್ಟಕ್ಕೂ ಮಠ ದಾಸ ಸಾಹಿತ್ಯದ ಕುರಿತು ಈ ಪರಿಯ ಒಲವು ಬೆಳೆಸಿಕೊಳ್ಳಲು ಕಾರಣವೇನು? ಎಂಬ ಪ್ರಶ್ನೆ ನಿಮ್ಮ ಮನಸ್ಸಿನಲ್ಲಿ ಮೂಡಿರಬಹುದು. ದಾಸ ಸಾಹಿತ್ಯ ಪರಂಪರೆಯಲ್ಲಿ ಮಂತ್ರಾಲಯ ರಾಘವೇಂದ್ರಸ್ವಾಮಿಗಳ ಮಠಕ್ಕೆ ಬಹುದೊಡ್ಡ ಗೌರವವಿದೆ. ದಾಸರು ಮತ್ತು ಮಠದ ನಡುವೆ ಇರುವುದು ಸುಮಾರು ಮೂರು ಶತಮಾನಗಳ ಬಾಂಧವ್ಯ. ಆ ಪರಂಪರೆಯನ್ನು ಮಠ ಈಗಲೂ ಉಳಿಸಿಕೊಳ್ಳುವುದರ ಜೊತೆಗೆ ಬೆಸುಗೆಯನ್ನು ಮತ್ತಷ್ಟು ಗಟ್ಟಿಗೊಳಿಸುವ ಪ್ರಯತ್ನ ನಡೆಸುತ್ತಿದೆ.

ರಾಘವೇಂದ್ರಸ್ವಾಮಿಗಳ ಮೇಲೆ ಮೊದಲು ಕೀರ್ತನೆ ಹಾಡಿದವರು ಜಗನ್ನಾಥ ದಾಸರು. ಅವರ ನಂತರ ಬಂದ ಗೋಪಾಲ ದಾಸ, ಪ್ರಾಣೇಶ ದಾಸ, ಗುರು ಜಗನ್ನಾಥ ದಾಸ, ಶೇಷದಾಸ, ಕುಂಟೋಜಿ ದಾಸ ಮೊದಲಾದವರು ಕೂಡ ರಾಯರ ಕುರಿತು ಕೀರ್ತನೆಗಳನ್ನು ರಚಿಸಿ ಹಾಡಿದ್ದಾರೆ. ರಾಯರ ಕುರಿತಾದ 1,000ಕ್ಕಿಂತ ಹೆಚ್ಚಿನ ಕೀರ್ತನೆಗಳು, ಸುಳಾದಿಗಳು ಉಪಲಬ್ಧವಿವೆ.

ದಾಸ ಪರಂಪರೆಯ ದೀಕ್ಷೆ ಪಡೆದವರು ಮಂತ್ರಾಲಯ ರಾಯರ ಮಠಕ್ಕೆ ತೆರಳಿ ಬೃಂದಾವನ ದರ್ಶನ ಮಾಡಿಕೊಂಡು ಪೀಠಾಧಿಪತಿಗಳ ಆಶೀರ್ವಾದ ಪಡೆಯುವುದು ಬೆಳೆದು ಬಂದಿರುವ ವಾಡಿಕೆ. ಮಠದ ಪರಂಪರೆಯಲ್ಲಿ ಬಂದ ಎಲ್ಲ ಸ್ವಾಮಿಜಿಗಳೂ ಜಾತಿ, ಮತ ಬೇಧವಿಲ್ಲದೆ ದಾಸರನ್ನು ಗೌರವಿಸಿ ಅನುಗ್ರಹಿಸುತ್ತ ಬಂದಿದ್ದಾರೆ.

ಈಗಿನ ಪೀಠಾಧಿಪತಿ ಸುಭುದೇಂದ್ರತೀರ್ಥ ಸ್ವಾಮೀಜಿ ಉಳಿದವರಿಗಿಂತ ಸ್ವಲ್ಪ ಹೆಚ್ಚಿನ ಪ್ರಮಾಣದಲ್ಲಿಯೇ ದಾಸ ಸಾಹಿತ್ಯಕ್ಕೆ ಉತ್ತೇಜನ ನೀಡುವ ಕೆಲಸ ಮಾಡುತ್ತಿದ್ದಾರೆ. ಹೀಗಾಗಿಯೇ ಮಠ ದಾಸ ಸಾಹಿತ್ಯ ಕ್ಷೇತ್ರದಲ್ಲಿನ ಮಿನುಗು ತಾರೆಯಾಗಿ ಕಂಗೋಳಿಸುತ್ತಿದೆ.

‘ದಾಸ ಸಾಹಿತ್ಯ ಅಧ್ಯಯನ ಕೇಂದ್ರ ನಾಡಿಗೆ ಬಹುದೊಡ್ಡ ಕೊಡುಗೆಯಾಗಬೇಕು. ಆಕರ ಗ್ರಂಥಗಳು, ಹಸ್ತಪ್ರತಿಗಳು, ಪರಿಕರಗಳು ಸೇರಿದಂತೆ ದಾಸ ಸಾಹಿತ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿ ಒಂದೇ ಕಡೆ ಲಭಿಸುವಂತಾಗಬೇಕು. ದಾಸ ಸಾಹಿತ್ಯ ಅಧ್ಯಯನ ಮತ್ತು ಸಂಶೋಧನಾಕಾಂಕ್ಷಿಗಳಿಗೆ ಇದೊಂದು ಜ್ಞಾನ ಭಂಡಾರವಾಗಬೇಕು’ ಎಂಬ ಮಹತ್ವಾಕಾಂಕ್ಷಿಯನ್ನು ನಿರ್ದೇಶಕರಾದ ಕೆ ಅಪ್ಪಣ್ಣಾಚಾರ್ಯರು ಇರಿಸಿಕೊಂಡಿದ್ದಾರೆ.
*********

ಉಡುಪಿಯ ಶ್ರೀ ಕೃಷ್ಣನ ಬಗ್ಗೆ ನಿಮಗೆಷ್ಟು ಗೊತ್ತು......

ದಕ್ಷಿಣ ಭಾರತದ ಪ್ರಸಿದ್ದ ಕೃಷ್ಣನ ಕ್ಷೇತ್ರದಲ್ಲಿ ಕಡೆಗೋಲು ಕೃಷ್ಣನ ಉಡುಪಿಯೂ ಒಂದು
ಭಗವಾನ್ ಶ್ರೀ ಕೃಷ್ಣ ನೆಲೆಸಿದ ಅತಿ ಪುರಾತನ ಜಗತ್ಪ್ರಸಿದ್ದ ಕೃಷ್ಣ ದೇವಾಲಯವಿದು

ಕುರುಕ್ಷೇತ್ರ ಯುದ್ದದ ನಂತರದ ದಿನಗಳು. 
ಶ್ರೀ ಕೃಷ್ಣನು ದ್ವಾರಕೆಯ ಮಹಾರಾಜ.. 

ತನ್ನ ಹೆತ್ತತಾಯಿ ದೇವಕಿ ಗೆ ತನ್ನ ಮಗನ ಬಾಲ ಲೀಲೆಗಳನ್ನು ನೋಡುವ ಮನಸ್ಸಾಯಿತಂತೆ 
ಸಾಕು ತಾಯಿ ಯಶೋಧೆ ಕೃಷ್ಣನ  ಮದುವೆ ಹೇಗೆ ನೋಡಿರುವುದಿಲ್ಲವೋ ಹಾಗೇ ದೇವಕಿ ಭಗವಂತನ ಬಾಲ್ಯಲೀಲೆಗಳನ್ನು ನೋಡಿರುವುದಿಲ್ಲ ಆವತ್ತು ಮೊಸರು ಕಡಿಯುತ್ತಿದ್ದ ದೇವಕಿಗೆ ಅದೆಂತದೋ ಬಯಕೆ ತನ್ನ ಮಗನ ಬಾಲ ಲೀಲೆಗಳನ್ನು ಕಣ್ಣಾರೆ ನೋಡಬೇಕೆಂದು ಅದನ್ನು ಕೇಳಿದ ಶ್ರೀ ಕೃಷ್ಣ ತನ್ನ ತಾಯಿಯ ಆಸೆಯಂತೆ ಬಾಲಕೃಷ್ಣನಾಗಿ ತಾಯಿ ಮೊಸರು ಕಡೆಯುತ್ತಿದ್ದ ಕಡೆಗೋಲು ಮತ್ತು ಹಗ್ಗ ಹಿಡಿದು ಕೊಂಡು ತನ್ನ ಗೋಕುಲ ದ ಬಾಲ ಲೀಲೆಗಳನ್ನು ತೋರಿಸುತ್ತಾನೆ  ದೇವಕಿಯ ಆಸೆಯನ್ನು ಪೂರೈಸುತ್ತಾನೆ.

ಇದನ್ನೆಲ್ಲ ಬಾಗಿಲ ಬದಿಯಲ್ಲಿ ನೋಡುತ್ತಿದ್ದ ರುಕ್ಮಿಣಿ ಗೆ ತನ್ನ ಗಂಡನ  ಬಾಲಲೀಲೆಗಳನ್ನು ನೋಡಿ ವಿಶ್ವಕರ್ಮನಲ್ಲಿ ಅಂತಹುದೇ ಸಾಲಿಗ್ರಾಮದ ಮೂರ್ತಿ ಮಾಡಿಸಿ ಪೂಜಿಸುತ್ತಾಳೆ ಮುಂದೆ ದ್ವಾಪರ ಯುಗದ ಅಂತ್ಯದಲ್ಲಿ ದ್ವಾರಕೆ ಮುಳುಗುವ ಸಮಯದಲ್ಲಿ ರುಕ್ಮಿಣಿ ಆ ಮುದ್ದಾದ ಮೂರ್ತಿಯನ್ನು (ಗೋಪಿಚಂದನ) ಮಣ್ಣಿನ ಮುದ್ದೆಯಲ್ಲಿ ಮೂರ್ತಿಯನ್ನು ಬಚ್ಚಿಡುತ್ತಾಳೆ

ಮುಂದೆ ದ್ವಾರಕೆಯಲ್ಲಿ ಮುತ್ತುಗಳು ಹೇರಳವಾಗಿ ಸಿಗುತ್ತಿದ್ದಾಗ ವ್ಯಾಪಾರಿಗಳು ಹಡಗಿನಲ್ಲಿ ಸರಕುಗಳನ್ನು ಹೇರಿಕೊಂಡು ಬರುವಾಗ ಕಡಿಮೆ ತೂಕದ ಮುತ್ತುಗಳು ಹಡಗು ಗಾಳಿಗೆ ಸಿಲುಕಬಾರದೆಂದು ಸಮುದ್ರದ ದಂಡೆಯಲ್ಲಿನ ಮಣ್ಣಿನ ಮುದ್ದೆಯನ್ನು ಹಡಗಿಗೆ ತುಂಬಿಸುತ್ತಾರೆ ಅದರಲ್ಲಿ ಭಗವಂತನ ಮೂರ್ತಿಯೂ ಇರುತ್ತದೆ ಆ ಹಡಗು ದಕ್ಷಿಣ ಭಾರತದ ಕಡೆ ಬರುವಾಗ ಉಡುಪಿಯ ಮಲ್ಪೆಯ ಸಮೀಪ ಭಯಂಕರ ಬಿರುಗಾಳಿಗೆ ಸಿಲುಕಿ ಹಡಗು ಮುಳುಗುತ್ತದೆ...  ಮಧ್ವಾಚಾರ್ಯರು  ಮಾರ್ಗಶಿರ ಮಾಸದ ಎಳ್ಳಮವಾಸ್ಯೆಯ ಸ್ನಾನಕ್ಕೆ ಬಂದಾಗ ತಮ್ಮ ಶಲ್ಯ ಬೀಸಿ ಸಮುದ್ರವನ್ನು ಶಾಂತ ಮಾಡುತ್ತಾರೆ. ತ್ರಿಕಾಲ ಜ್ಞಾನಿಗಳಾದ ಮಧ್ವಾಚಾರ್ಯರಿಗೆ ಶ್ರೀ ಕಷ್ಣನ ಆಗಮನ ಮೊದಲೇ ತಿಳಿದಿದ್ದರಿಂದ ಅದರಲ್ಲಿ ಬಂದಿದ್ದ ಕಡೆಗೋಲು ಕೃಷ್ಣನ ಮೂರ್ತಿಯನ್ನು ತಂದು ಉಡುಪಿಯಲ್ಲಿ ಪೂಜಿಸುತ್ತಾರೆ ಮುಂದೆ ಎಂಟು ಬಾಲಯತಿಗಳನ್ನು ನೇಮಿಸಿ ಪೂಜೆಯ ಕೈಂಕರ್ಯಗಳನ್ನು ಒಪ್ಪಿಸುತ್ತಾರೆ  ಅದೇ ಪೊಡವಿಗೊಡೆಯ ಉಡುಪಿಯ ಭಗವಂತನ ಪುಣ್ಯ ನೆಲೆಯಾಗುತ್ತದೆ.

ಇಂದಿಗೂ ಕಡೆಗೋಲು ಶ್ರೀ  ಕೃಷ್ಣನನ್ನು ಅಷ್ಟ ಮಠದ ಯತಿಗಳು ಪೂಜಿಸುತ್ತಾ ಬರುತ್ತಿದ್ದಾರೆ ದೇವಕಿಗೆ ದರ್ಶನ‌ ನೀಡಿದ ರೂಪದಲ್ಲೇ ಒಂದು ಕೈಯ್ಯಲ್ಲಿ ಕಡೆಗೋಲು ಇನ್ನೊಂದು ಕೈಯ್ಯಲ್ಲಿ ಹಗ್ಗ ಹಿಡಿದು ತಲೆಗೆ ಜುಟ್ಟು ಕಟ್ಟಿದ ಮುದ್ದಾದ ಬಾಲ ಕೃಷ್ಣ ಉಡುಪಿಯಲ್ಲಿ ದರ್ಶನ ಕೊಡುತ್ತಿದ್ದಾನೆ ಮತ್ತು ಈ ಜಗತ್ತನ್ನು ಉದ್ದರಿಸುತ್ತಿದ್ದಾನೆ.......!

ಕೃಷ್ಣಂ ವಂದೇ ಜಗದ್ಗುರು
***


*******

No comments:

Post a Comment