Wednesday, 2 January 2019

ವಾದಿರಾಜ ಜಯಂತಿ vadiraja jayanthi or vardhanti magha shuddha dwadashi

ತಪೋ ವಿದ್ಯಾ ವಿರಕ್ತ್ಯಾದಿ ಸದ್ಘುಣೌ ಘಾಕರಾನಹಮ್ |
ವಾದಿರಾಜ ಗುರೂನ್ ವಂದೇ ಹಯಗ್ರೀವ ದಯಾಶ್ರಯನ್ ||

ಇಂದು ವಾದಿರಾಜ ಗುರುಸಾರ್ವಭೌಮರ ಜಯಂತಿ. ವಾದಿರಾಜರ ಬೃಂದಾವನವಿರುವ ಶಿರಸಿಯ ಸೋಂದಾ ವಾದಿರಾಜ ಮಠ, ಜನ್ಮಸ್ಥಳವಾದ ಕುಂದಾಪುರ ತಾಲೂಕಿನ ಹೂವಿನಕೆರೆ ಮಠ ಸಹಿತ ವಿವಿಧೆಡೆಗಳಲ್ಲಿ ಸಾವಿರಾರು ಮಂದಿ ಭಕ್ತರು ವಾದಿರಾಜರಿಗೆ ಶರಣಾಗಿ ಕೃತಾರ್ಥರಾದರು.

ಹದಿನೈದನೆಯ ಶತಮಾನದ ಅಂತ್ಯದಲ್ಲಿ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಹೂವಿನಕೆರೆ ಎಂಬ ಕುಗ್ರಾಮದಲ್ಲಿ ಜನಿಸಿದ ವಾದಿರಾಜರ ಪೂರ್ವಾಶ್ರಮದ ಹೆಸರು ಭೂವರಾಹ. ಇವರ ತಂದೆ ರಾಮಾಚಾರ್ಯರು ಹಾಗೂ ಮತ್ತು ತಾಯಿ ಸರಸ್ವತಿದೇವಿ.

ವಾದಿರಾಜ ಗುರುಗಳ ಜನ್ಮಸ್ಥಳ, ಈಗ ಇಲ್ಲಿ ವಾದಿರಾಜರ ಗುಡಿ ಇದೆ. ವಾದಿರಾಜರ ಶೀಲಾ ಮೂರ್ತಿ.

120 ವರ್ಷಗಳ ಕಾಲ ದೇಹಧಾರಿಯಾಗಿದ್ದ ವಾದಿರಾಜರ ಆರಾದ್ಯ ದೈವ ಹಯವದನ. ತಮ್ಮ ಎಂಟನೆಯ ವಯಸ್ಸಿನಲ್ಲಿ ಸನ್ಯಾಸಾಶ್ರಮವನ್ನು ಸ್ವೀಕರಿಸಿದ ವಾದಿರಾಜರು, ೧೧೨ ವರ್ಷಗಳ ಕಾಲ ಸನ್ಯಾಸಿಯಾಗಿದ್ದವರು. ಆರಂಭದಲ್ಲಿ ಉಡುಪಿಯನ್ನು ತಮ್ಮ ಸಾಧನಾ ತಾಣವನ್ನಾಗಿಸಿದ್ದ ವಾದಿರಾಜ ಗುರುಗಳು, ಬಲಿಕ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಸೋಂದಾ ಕ್ಷೇತ್ರಕ್ಕೆ ತೆರಳಿದವರು. ನಂತರ ಅಲ್ಲಿಯೇ ಬೃಂದಾವನಸ್ಥರಾದರು.

ನ್ನಡ ಮತ್ತು ಸಂಸ್ಕೃತ ಭಾಷೆಗಳಲ್ಲಿ ‘ಹಯವದನ’ ಎಂಬ ಕಾವ್ಯನಾಮದಲ್ಲಿ ಅನೇಕ ಮೇರು ಕೃತಿಗಳನ್ನು ರಚಿಸಿರುವ ವಾದಿರಾಜ ಗುರುಗಳ 343 ಕೀರ್ತನೆಗಳು ಇದುವರೆಗೆ ಲಭ್ಯವಾಗಿವೆ. ಇದರಲ್ಲಿ 9 ದೀರ್ಘ ಕೃತಿಗಳು.

ವಿಜಯನಗರ ಅರಸರು ವಾದಿರಾಜರನ್ನು ಸನ್ಮಾನಿಸುವ ಮೂಲಕ ಧನ್ಯತೆ ಅನುಭವಿಸಿದ್ದರು. ಅಂದು ‘ಕುಡುಮ’ ಎಂದು ಕರೆಯಲಾಗುತ್ತಿದ್ದ ಸ್ಥಳಕ್ಕೆ ‘ಧರ್ಮಸ್ಥಳ’ವೆಂದು ನಾಮಕರಣ ಮಾಡಿ, ಇಲ್ಲಿ ಅಣ್ಣಪ್ಪ ಪಂಜುರ್ಲಿ ದೈವವನ್ನು ಪ್ರತಿಷ್ಠಾಪನೆ ಮಾಡಿದವರು ವಾದಿರಾಜ ಗುರುಸಾರ್ವಭೌಮರು.

ವಾದಿರಾಜ ಗುರುಗಳು ರಚಿಸಿದ ಕೆಲವು ದೇವರನಾಮಗಳು

ಆವರೀತಿಯಿಂದ ನೀಯೆನ್ನ ಪಾಲಿಪೆ
ಕುದುರೆ ಬಂದಿದೆ,ಚೆಲುವ ಕುದುರೆ ಬಂದಿದೆ
ತಾಳುವಿಕೆಗಿಂತನ್ಯ ತಪವು ಇಲ್ಲ
ದವಳಗಂಗೆಯ ಗಂಗಾಧರ ಮಹಾಲಿಂಗ
ದುಮ್ಮಿ ಸಾಲೆನ್ನಿ
ನೀರೆ ತೋರೆಲೆ ನೀರೆ ತೋರೆಲೆ ನೀಲವರ್ಣದ ದೇವನ
ರಾಜಬೀದಿಯೊಳಗಿಂದ ಕಸ್ತೂರಿ ರಂಗ
ಲೋಕಭರಿತನೋ ರಂಗ
ವೇಣುನಾದಪ್ರಿಯ.
ವಾದಿರಾಜ ಗುರುಸಾರ್ವಭೌಮರ ಮೇಲೆ ರಚಿಸಲ್ಪಟ್ಟ ಹಾಡುಗಳು
ರಾಜರ ಭಾಗ್ಯವಿದು
ಕನ್ದಿ ಕನ್ದಿ ರಾಜರ ಕನ್ದಿ
ವಾದಿರಾಜರ ಗುರುಗಲಾದ ಮುಖ್ಯಪ್ರಾನ
ಮೇರು ಕೃತಿ

ಮಹಾಭಾರತ ಲಕ್ಷಾಲಂಕಾರ, ತೀರ್ಥ ಪ್ರಬಂಧ

ದೀರ್ಘ ಗೀತೆ
ಶ್ರೀ ಲಕ್ಷ್ಮೀ ಶೋಭಾನೆ (ಸೋಬಾನೆ)

ಇತರ ಕೃತಿಗಳು
ಆಧಿಕರಣ – ನಾಮಾವಳಿ
ಈಶಾವಸ್ಯೋಪನಿಷದ್ ಭಾಷ್ಯ ಟೀಕಾ ಪ್ರಕಾಶಿಕ
ಉಪನ್ಯಾಸಸಾರರತ್ನಮಾಲಾ
ಏಕಾದಶಿ ನಿರ್ಣಯ
ಕೇನೋಪನಿಷದ್ ಟೀಕಾ
ಗುಂಡ – ಕ್ರಿಯೆ
ತೈತ್ತೋರೀಯೋಪನಿಷದ್ ಟೀಕಾ
ನ್ಯಾಯ ರತ್ನಾವಲಿ
ಪಾಖಂಡ ಮತ ಖಂಡನಮ್
ಭಾವ -ಪ್ರಕಾಶಿಕ
ಭೂಗೋಳ ವರ್ಣನಮ್
ಯುಕ್ತಿಮಲ್ಲಿಕಾ
ರುಕ್ಮಿಣೀಶ ವಿಜಯ
ಲಕ್ಷಾಭರಣ ಟೀಕಾ
ವೈಕುಂಠ ವರ್ಣನೆ
ಸರಸಭಾರತಿ ವಿಲಾಸ
ಸ್ತೋತ್ರಗಳು
ಹಯಗ್ರೀವ ಸ್ತುತಿ
ಹಯಗ್ರೀವ ದಂಡಕಮ್
ಚಕ್ರ ಸ್ತುತಿ
ಪರಮ ಸ್ತುತಿ
ದಶಾವತಾರ ಸ್ತೋತ್ರಮ್
ವ್ಯಾಸ ಸ್ತುತಿ
ಋಣಮೋಚನ ಸ್ತೋತ್ರಮ್

*****

"ರಾಮಾಚಾರ್ಯರೇ!! ನಿಮ್ಮ ದಂಪತಿಗಳ ಸೇವೆ ಭಗವಂತನಿಗೆ ಮುಟ್ಟಿದೆ..
ಶ್ರೀ ಭೂವರಾಹನ ಅನುಗ್ರಹ ದಿಂದ,ನಿಮಗೊಬ್ಬ ಪುತ್ರ ಜನಿಸುತ್ತಾನೆ..ಆದರೆ
ಜನಿಸಿದ ಆ ಪುತ್ರ ನಮ್ಮ ಶ್ರೀ ಭೂವರಾಹನ ಸೇವೆ ಗಾಗಿ ಮತ್ತು ಸಂಸ್ಥಾನ ಆಳುವದಕ್ಕಾಗಿ ಮತ್ತು ಲೋಕದ ಜನರ ಉದ್ಧಾರಕ್ಕಾಗಿ ಅವನ ಅವತಾರ.ಇದು ಭಗವಂತನ ಸಂಕಲ್ಪ. ಮತ್ತು ಬಾಲಕನು ಹುಟ್ಟುವಾಗ ಭೂ ಸ್ಪರ್ಶವಾಗದಂತೆ ತಂದು ನಮಗೆ ಒಪ್ಪಿಸಬೇಕು".
ಶ್ರೀ ವಾಗೀಶತೀರ್ಥ ಗುರುಗಳ ಬಾಯಿಯಿಂದ ಬಂದ ಮಾತನ್ನು ಕೇಳಿ ದಂಪತಿಗಳಿಗೆ ಮಾತು ಬರದಾಯಿತು.
ಪುತ್ರ ಜನನವಾಗಬೇಕೆಂದು ದಂಪತಿಗಳು ಮಾಡದ ವ್ರತಗಳಿಲ್ಲ.ದೇವರಿಗೆ ಲಕ್ಷ ಆಭರಣ ಮಾಡಿಸುವೆ ಎಂದು ಅಂದುಕೊಂಡ ಹರಕೆ. ಇದಕ್ಕಾಗಿಯೇ?!!ಅಯ್ಯೋ ವಿಧಿಯೇ!!ಕೈಗೆ ಬಂದ ತುತ್ತು ಬಾಯಿಗೆ ಬರದಂತೆ ಆಯಿತಲ್ಲ.
ಪುತ್ರ ಜನನವಾಗುತ್ತದೆ ಎಂದು ಸಂತಸ ಪಡಬೇಕೊ ಅಥವಾ ಜನಿಸಿದ ಪುತ್ರ ಮಠಕ್ಕೆ ಒಪ್ಪಿಸಬೇಕಲ್ಲ ಎಂದು ದುಃಖ ಪಡಬೇಕೊ ತಿಳಿಯದೆ ಮನದೊಳಗಡೆ ಈ ರೀತಿ ವಿಚಾರ ಮಾಡುತ್ತಾ ಕುಳಿತರು ಆ ದಂಪತಿಗಳು.
ಜ್ಞಾನಿಗಳಾದ ಶ್ರೀ ವಾಗೀಶ ತೀರ್ಥ ರು 
ರಾಮಾಚಾರ್ಯರೇ!! ಏಕೆ ಅಷ್ಟು ಚಿಂತೆ ಮಾಡುತ್ತೀರಿ.
ಒಂದು ಕೆಲಸ ಮಾಡುವ.ನಿಮ್ಮ ಮಗ ನಿಮ್ಮ ಮನೆಯ ಒಳಗಡೆ ಜನಿಸಿದರೆ ನಿಮಗೆ ಸೇರಿದ್ದು.
ಮನೆಯ ಹೊರಗಡೆ ಜನಿಸಿದರೆ ನಮಗೆ ಸೇರಿದ್ದು.ನಿಮಗೆ ಒಪ್ಪಿಗೆಯೆ..ಎಂದಾಗ
ಆ ದಂಪತಿಗಳು ಯೋಚನೆ ಮಾಡಿ
ಎಲ್ಲಿ ಯಾದರು ಮಗು ಮನೆಯಲ್ಲಿ ಬಿಟ್ಟು ಹೊರಗಡೆ ಜನಿಸುವದೇ!!.ಹಾಗೇ ಆಗಲಿ ಎಂದು ಮಾತು ಕೊಟ್ಟು ಮನೆಗೆ ಬಂದರು.
ಶ್ರೀ ಹರಿಯ ಸೇವೆ ಮಾಡಿದ ಫಲ ಮತ್ತು ಗುರುಗಳ ವಾಣಿಯಂತೆ ಗೌರಿದೇವಿಯು ಗರ್ಭಿಣಿ ಯಾದಳು.ಹೆಂಡತಿಗೆ ಮನೆಯ ಹೆಬ್ಬಾಗಿಲು ಸಹ ಗಂಡ ದಾಟಿಸಲಿಲ್ಲ.
ನವ ಮಾಸ ತುಂಬಿತು.
ಅಂದು ಸಾಧನ ದ್ವಾದಶಿ.ಮಾಘಮಾಸದ ಶುಕ್ಲ ದ್ವಾದಶಿಯ ದಿನದಂದು ಬೇಗನೆ ಪೂಜಾದಿಗಳನ್ನು ಮುಗಿಸಿ ನಿಗದಿತ ಸಮಯದೊಳಗೆ ಪಾರಣೆ ಮಾಡಲು ಆಚಾರ್ಯರು ಭೋಜನಕ್ಕೆ ಕುಳಿತರು.ಪತಿಯ ಭೋಜನ ನಂತರ ಪತ್ನಿಯ ಭೋಜನದ ಪದ್ದತಿ ಗೌರಿದೇವಿಯದು.
ಹೀಗಿರುವಾಗ ಅವರ ಮನೆಯ ಮುಂದೆ ಬೆಳೆದು ನಿಂತ ಗದ್ದೆಯಲ್ಲಿ ಪೈರನ್ನು ತಿನ್ನಲು ಒಂದು ಆಕಳು ಕರುವಿನ ಸಮೇತ ಬಂದಿದೆ.ಗೌರಿದೇವಿಯು ನೋಡುತ್ತಾ ಪತಿಗೆ ಹೇಳುತ್ತಾರೆ.
ಇರುವ ಸ್ವಲ್ಪ ಬೆಳೆಗಳನ್ನು ತಿನ್ನಲು ಗೋವು ಬಂದಿದೆ.ಹೋಗಿ ಓಡಿಸಿ ಬರುತ್ತೇನೆ ಅಂತ.
 ರಾಮಾಚಾರ್ಯರು ಎಂದು ಗರ್ಭಿಣಿ ಪತ್ನಿಯನ್ನು ಹೊರಗಡೆ ಕಳುಹಿಸಿದ ವರಲ್ಲ.ದೈವ ಪ್ರೇರಣೆಯಿಂದ 
ಗೌರಿ !!ಒಂದು ಸಣ್ಣ ಕೋಲನ್ನು ತೆಗೆದುಕೊಂಡು ಹೋಗಿ ಓಡಿಸು.ತುಂಬಾ ದೂರ ಹೋಗಬೇಡ.ಬೇಗನೆ ಪಾರಣಿ ಮುಗಿಸಿ ಬರುತ್ತೇನೆ ಅಂತ ಹೇಳುತ್ತಾರೆ.
ಅದರಂತೆ ಸಣ್ಣ ಕೋಲನ್ನು ತೆಗೆದುಕೊಂಡು ಆಕಳನ್ನು ಓಡಿಸಲು ಬಂದಾಗ ಅದು ತಕ್ಷಣ ಮಾಯವಾಗುತ್ತದೆ. ಇದ್ದಕ್ಕಿದ್ದಂತೆ ಪ್ರಸವ ವಾಗುವ ಸೂಚನೆ ಕಾಣುತ್ತವೆ. ಹಾಗೆ ಒಂದು ಕಡೆ ಕುಳಿತಾಗ ಶ್ರೀ ವಾಗೀಶ ಗುರುಗಳ ಆಜ್ಞೆ ಯಂತೆ  ಸ್ತ್ರೀಯರು ಪ್ರಸವ ಮಾಡಿಸಲು ಅಲ್ಲಿ ಬಂದಿರುತ್ತಾರೆ. *ಗೌರಿದೇವಿಯು ಯಾವುದೇ ಪ್ರಸವ ವೇದನೆ ಇಲ್ಲದೇ ಸುಂದರವಾದ  ೩೨ಲಕ್ಷಣ ಭರಿತವಾದ ಮಗುವೊಂದಕ್ಕೆ ಜನ್ಮವಿತ್ತಳು...
ಅಂದು ಮಾಘ ಶುದ್ಧ ದ್ವಾದಶಿ.ಲಾತವ್ಯನಾಮಕ ಋಜುಗಳಾದ ಶ್ರೀ ವಾದಿರಾಜರು ಅವತರಿಸಿದ ಸುದಿನ.ಅವರೇ ನಮ್ಮ ಇಂದಿನ ಕಥಾ ನಾಯಕರು.
ಇದು ಯಾವುದು ರಾಮಾಚಾರ್ಯರು ತಿಳಿಯದು.ಬೇಗನೆ ಬಂದು ನೋಡುತ್ತಾರೆ. ಗೌರಿದೇವಿಯು ಗಂಡು ಮಗುವಿಗೆ ಜನ್ಮ ಕೊಟ್ಟಿದ್ದಾಳೆ.
ಜನಿಸಿದ ಮಗು ಭೂ ಸ್ಪರ್ಶವಾಗದೆ ಚಿನ್ನದ ಹರಿವಾಣದಲ್ಲಿ ಆ ಸ್ತ್ರೀಯರು ಕೈಯಲ್ಲಿ ಇದೆ.
ತಾಯಿ!! ನೀನೆಂತಹ ಪುಣ್ಯವತಿ.ಶ್ರೀ ವಾಗೀಶತೀರ್ಥ ರು ತಮ್ಮ ದಿವ್ಯ ಜ್ಞಾನ ದಿಂದ ವಿಷಯವನ್ನು ತಿಳಿದು ನಮಗೆ ಇಲ್ಲಿ ಕಳುಹಿಸಿದರು ಅಂತ  ಹೆಣ್ಣುಮಕ್ಕಳು ಹೇಳಿ ಶುದ್ದ ಸ್ನಾನವನ್ನು ಮಗುವಿಗೆ ಮಾಡಿಸಿ *ಪಲ್ಲಕ್ಕಿ ಒಳಗಡೆ ಚಿನ್ನದ ಹರಿವಾಣ ಸಮೇತವಾಗಿ ಕರೆದುಕೊಂಡು ಗುರುಗಳ ಬಳಿ ಬರುತ್ತಾರೆ.
ಇತ್ತ ಇನ್ನೊಂದು ಪಲ್ಲಕ್ಕಿ ಯಲ್ಲಿ ಗೌರಿದೇವಿಯನ್ನು ಮನೆಗೆ ತಲುಪಿಸುವ ರು.
ನಂತರ ಗುರುಗಳು ರಾಮಾಚಾರ್ಯರನ್ನು ಕರೆದು
ನೋಡಿದಿರಾ!!ಮಗು ನಿಮಗೆ ಸೇರಬೇಕು ಎಂದು ಗರ್ಭಿಣಿ ಯಾದ ನಿಮ್ಮ ಪತ್ನಿ ಯನ್ನು ಹೊರಗಡೆ ಸಹ ಕಳುಹಿಸಿದ ಹಾಗೆ ಪ್ರಯತ್ನ ಮಾಡಿದಿರಿ.ಆದರೂ ಭಗವಂತನ ಸಂಕಲ್ಪ. ಅದರಂತೆ ನಿಮ್ಮ ಪತ್ನಿಗೆ ಗದ್ದೆಯಲ್ಲಿ ಪ್ರಸವವಾಗುವಂತೆ ಆಯಿತು.ಇವನು ನಿಮ್ಮ ಮಗನಲ್ಲ ಶ್ರೀ ಭೂವರಾಹದೇವರ ಮಗ.ನಮಗೆ ಒಪ್ಪಿಸುವಿರಾ!! ಎಂದು ಕೇಳುತ್ತಾರೆ.
ನಂತರ ಪುತ್ರ ವಾತ್ಸಲ್ಯ ವನ್ನು ತೊರೆದು ಗುರುಗಳಿಗೆ ದಂಪತಿಗಳು ಇಬ್ಬರು ಮಗುವನ್ನು ಸಮರ್ಪಣೆ ಮಾಡಿದರು.
ಶ್ರೀ ವಾಗೀಶ ತೀರ್ಥ ಗುರುಗಳು ಆ ಮಗುವಿಗೆ ತೀರ್ಥ ಪ್ರೋಕ್ಷಣೆ ಮಾಡಿದಾಗ ತಕ್ಷಣ ಮಗುವು ತನ್ನ ಎರಡು ಕೈಗಳನ್ನು ಎತ್ತಿ ಜೋಡಿಸಿ ಅವರಿಗೆ ನಮಸ್ಕರಿಸಿ ತಾನು ಸಾಮಾನ್ಯ ಬಾಲಕನಲ್ಲವೆಂದು ಅಲ್ಲಿ ಇದ್ದ ಜನರಿಗೆ ತೋರಿಸಿತು.
ನಂತರ ಆ ಮಗುವಿಗೆ ಭೂವರಾಹ ಎಂದು ನಾಮಕರಣ ಮಾಡಲು ಹೇಳಿ ಕೆಲದಿನಗಳ ಕಾಲ ಬಾಲಕನ ಲೀಲೆಯಿಂದ ಸುಖವನ್ನು ಹೊಂದಿ,ನಂತರ ಮಗುವಿಗೆ ಮಾಡಬೇಕಾದ ಜಾತ ಕರ್ಮಗಳನ್ನು ಮಾಡಿ ಐದು ವರುಷದ ನಂತರ ನಮಗೆ ಒಪ್ಪಿಸಿ ಎಂದು ಹೇಳಿ‌ನಿತ್ಯವು ಭೂ ವರಾಹ ದೇವರಿಗೆ ಅಭಿಷೇಕ ಮಾಡಿದ ಗೋ ಕ್ಷೀರ ವನ್ನು ಮಗುವಿಗೆ ಕಳುಹಿಸುತ್ತಾಇದ್ದರು.
ಹೀಗೆ ನಮ್ಮ ಶ್ರೀ ವಾದಿರಾಜ ಗುರುಗಳ ಜನನದ ವೃತ್ತಾಂತ ವನ್ನು ನನಗೆ ತಿಳಿದಷ್ಟು ಒಪ್ಪಿಸುವ ಪುಟ್ಟ ಪ್ರಯತ್ನ.
ಶ್ರೀ ವಾದಿರಾಜರು ಅಂತರ್ಯಾಮಿಯಾದ ಆ ಹಯವದನನು ಪ್ರೀತಿಯಾಗಲಿ.
ಶ್ರೀ ಕೃಷ್ಣಾರ್ಪಣಮಸ್ತು.
🙏
 ಹನುಮೇಶ ನಮ್ಮ ಸಿರಿ ವಿಜಯವಿಠ್ಠಲ ತಾನು| 
ಮುನಿ ವಾದಿರಾಜರ ಸಾಮಾನ್ಯ ರೆಂತೆಂದು| ಎಣಿಸಿದವರನ್ನು ಘನವಾಗಿ ಶಿಕ್ಷಿಪ| 
ಇನತನುಜೋದ್ಬವ ಕೋಪದಿಂದ|

ವಾದಿರಾಜರ ಮಹಿಮೆಯನ್ನು ಕೊಂಡಾಡಿ ಅನುದಿನ ಸುಜನರು||

*********

ಮಾಘ ಶುದ್ಧ ದ್ವಾದಶಿ ಪರ್ವಕಾಲ
🌺🌺🌺🌺🌺🌺
ಭಾವೀ ಸಮೀರ
ಶ್ರೀ ವಾದಿರಾಜ ಗುರುಸಾರ್ವಭೌಮರ ಜನ್ಮ ದಿನ
🌺🌺🌺🌺🌺🌺
ಕಾಮಧೇನುರ್ಯಥಾಪೂರ್ವಂ ಸರ್ವಾಭೀಷ್ಟ ಫಲಪ್ರದಾ|
ತಥಾಕಲ್ವೌ ವಾದಿರಾಜ ಶ್ರೀಪಾದೌ ಅಭೀಷ್ಟದಸತಾಂ||

ಮಾಯೀಭವೈರಿಣೇ ಮಾಧ್ವರಾದ್ಧಾಂತ ವನಚಾರಿಣೇ|
ವಚೋನಕರಿಣೇ ಶ್ರೀಮದ್ವಾದಿರಾಜ ಕೇಸರಿಣೇ ನಮೋ ನಮಃ||

24.2.2021 ಶ್ರೀ ವಾದಿರಾಜರ ಜಯಂತಿ 
 article by bannanje govindacharya
ಶ್ರೀಮಧ್ವಾಚಾರ್ಯರ ಬಳಿಕ ತತ್ವವಾದದ ಪ್ರವರ್ತಕರಾಗಿ ಮೆರೆದು ಭಾರತದ ಭಕ್ತಿಪಂಥದ ಪರಂಪರೆಯಲ್ಲಿ ಎತ್ತರದ ಸ್ಥಾನ ಪಡೆದವರು ಶ್ರೀವಾದಿರಾಜರು. ಪರಮ ಧಾರ್ಮಿಕರಾಗಿ, ಸಾಮಾಜಿಕ ಸುಧಾರಕರಾಗಿ, ಐತಿಹಾಸಿಕ ಸಾಧಕರಾಗಿ ಬದುಕಿದ ಶ್ರೀವಾದಿರಾಜರ ಹೆಸರು ಉಡುಪಿಯ ಅಷ್ಟಮಠಗಳಲ್ಲೊಂದಾದ ಸೋದೆ ಮಠದೊಂದಿಗೇ ಒಂದಾಯಿತು. ಮಹಾನ್‌ಸಂತ ಶ್ರೀ ವಾದಿರಾಜರ ಸಾಧನೆಯನ್ನು ಸ್ಮರಿಸುವ ಲೇಖನವಿದು...
 
ವರ್ಷಗಳ ಕಾಲ ಈ ನೆಲದಲ್ಲಿ ನಡೆದಾಡಿ (ಕ್ರಿ.ಶ. ೧೪೮೦-೧೬೦೦) ಸ್ವೇಚ್ಛೆಯಿಂದ ದೇವಲೋಕಕ್ಕೆ ನಡೆದ ಮಹಾನ್‌ಯೋಗಿ, ಯೋಗಿಗಳ ರಾಜ ಶ್ರೀವಾದಿರಾಜರು.
 
ಆಚಾರ್ಯ ಮಧ್ವರಿಗೊಲಿದ ಕಡೆಗೋಲ ಕೃಷ್ಣ ನೆಲೆನಿಂತ ಉಡುಪಿಯ ಇತಿಹಾಸಕ್ಕೆ ಚಿನ್ನದ ಮೆರುಗನ್ನಿತ್ತವರು ಶ್ರೀ ವಾದಿರಾಜರು.
 
ಸಾಮಾಜಿಕ ಸುಧಾರಣೆಗಳ ಜತೆಗೆ ಅಧ್ಯಾತ್ಮದ ಬದುಕಿಗೊಂದು ಕಲಾತ್ಮಕತೆಯನ್ನಿತ್ತು ಲೌಕಿಕಕ್ಕೆ ಅಲೌಕಿಕದ ಬೆರಗನ್ನಿತ್ತವರು ಶ್ರೀವಾದಿರಾಜರು.
 
ಕನಕದಾಸರಿಗೊಲಿದು ಕೃಷ್ಣ ಅವರಿಗೆ ದರ್ಶನವಿತ್ತ ಗೋಡೆಯ ಬಿರುಕಿನಲ್ಲೆ ಕಿಂಡಿಯೊಂದನ್ನಿರಿಸಿ, ಅದನ್ನು "ಕನಕನ ಕಿಂಡಿ’ ಎಂದು ಕರೆದು, ಕೃಷ್ಣನ ಮೊದಲ "ಧೂಳಿ ದರ್ಶನ’ ಅದರ ಮೂಲಕವೆ ನಡೆಯಬೇಕು ಎಂಬ ಪದ್ಧತಿಯನ್ನು ಬಳಕೆಗೆ ತಂದು, ಕನಕ ಭಕ್ತಿಗೆ ಉಡುಪಿಯಲ್ಲೊಂದು ಐತಿಹಾಸಿಕ ದಾಖಲೆ ನಿರ್ಮಿಸಿದ ದೂರದರ್ಶಿ ಶ್ರೀವಾದಿರಾಜರು.
 
ಕನಕದಾಸರು ಕೃಷ್ಣನಿಗೆ ಗೆರಟೆಯಲ್ಲಿ ಅಂಬಲಿ ಅರ್ಪಿಸುತ್ತಿದ್ದರೆಂದು ಕೃಷ್ಣನ ನಿತ್ಯಪೂಜೆಯಲ್ಲಿ ಇಂದಿಗೂ "ಗೆರಟೆ ಗಂಜಿ’ ಸಮರ್ಪಣೆ ನಡೆಯುವಂತೆ ಏರ್ಪಡಿಸಿದ ಇತಿಹಾಸ ಪುರುಷ ಶ್ರೀವಾದಿರಾಜರು.
 
ವೇದಾಂತ ಸಾಮ್ರಾಜ್ಯದ ಸಂಕೇತವಾದ "ತೀರ್ಥ’ ಪದವನ್ನು ತೊರೆದು ಬರಿದೆ ಬಿಡಿ ಸಂನ್ಯಾಸಿಯಂತೆ "ವಾದಿರಾಜ’ರೆಂದೆ ಕರೆಸಿಕೊಂಡ ಮಹಾನ್‌ವಿರಕ್ತ ಶಿಖಾಮಣಿ ಶ್ರೀವಾದಿರಾಜರು.
 
ಹೂವಿನಕೆರೆಯಲ್ಲಿ ಅರಳಿ, ಜಗದಗಲಕ್ಕೆ ಕಂಪು ಬೀರಿದ ಬಂಗಾರದ ಹೂವು ಶ್ರೀವಾದಿರಾಜರು.
ದುಷ್ಟರಿಗೆ, ದುರಹಂಕಾರಿಗಳಿಗೆ ನಾಗರಹಾವು ಶ್ರೀವಾದಿರಾಜರು.
 
ಕನ್ನಡದಲ್ಲಿ ದೇವರ ನಾಮಗಳನ್ನು ಹೊಸೆದು ಮಡಿವಂತಿಕೆಯ ಬಾಯಲ್ಲಿ ಕನ್ನಡದ ಮಂತ್ರ ನುಡಿಸಿದವರು ಶ್ರೀವಾದಿರಾಜರು.
 
ಪ್ರತಿಯೊಂದು ಪೂಜೆಗೂ, ವೇದಮಂತ್ರಗಳ ಜತೆಗೆ, ಕನ್ನಡದ ಹಾಡುಗಳನ್ನು ಹೊಸೆದು, ಅದಕ್ಕೆ ಒಪ್ಪುವ ರಾಗಗಳನ್ನು ಬೆಸೆದು, ಅದನ್ನು ಹಾಡುವ ಭಾಗವತರ ಪರಂಪರೆಯನ್ನು ಹುಟ್ಟು ಹಾಕಿದವರು ಶ್ರೀವಾದಿರಾಜರು.
 
ಕೃಷ್ಣನ ಮುಂದೆ ತಾನೆ ಹಾಡುತ್ತ, ನಿರ್ಮಾಲ್ಯದ ತಟ್ಟೆ ತಲೆಯ ಮೇಲಿರಿಸಿ ನಾಟ್ಯವಾಡುವ ಪರಿಯನ್ನು ರೂಢಿಗೆ ತಂದ ಭಕ್ತ ಶಿರೋಮಣಿ ಶ್ರೀವಾದಿರಾಜರು.
 
ತತ್ವವಾದಿಗಳಿಗೆಲ್ಲ ರಾಜರಾಗಿ ಮೆರೆದವರು ಶ್ರೀವಾದಿರಾಜರು.
 
ಆದರೂ ಅವರು ತನ್ನ ಹೆಸರಿಗೆ ಹೊಸತೊಂದು ಅರ್ಥವನ್ನು ಹೇಳುತ್ತಾರೆ -
 
ವಾದೀ ಮಧೋ ಯಸ್ಯ ರಾಜಾ
ಸೋಽಹಂ ತಸ್ಯ ಕೃಪಾಬಲಾತ್‌|
ವಾದಿರಾಜೋ ನ ಸ್ವಶಕ್
ವೀಣೇವ ರಣಯಾಮಿ ತತ್‌||
 
(ಆಚಾರ್ಯ ಮಧ್ವರು ನಿಜವಾದ ವಾದಿಗಳು. ಅವರು ನನಗೆ ರಾಜ. ಅದಕೆಂದೆ ನಾನು ವಾದಿರಾಜ. ಇದು ಅವರ ಕೃಪೆಯ ಬಲ ಹೊರತು ನನ್ನ ಸ್ವಂತ ಸಾಮರ್ಥ್ಯವಲ್ಲ. ಅವರು ವೈಣಿಕ. ನಾನು ಅವರು ನುಡಿಸಿದಂತೆ ನುಡಿವ ವೀಣೆ.)
 
ವಿದ್ಯಾ ದದಾತಿ ವಿನಯಂ ಎಂಬ ಮಾತಿಗೆ ಬೇರೆ ನಿದರ್ಶನ ಬೇಕೆ? ದೊಡ್ಡವರ ಸೌಜನ್ಯಕ್ಕೆ ಸಾಟಿಯಿಲ್ಲ. ಸಣ್ಣವರು ದೊಡ್ಡಸ್ತಿಕೆಯ ನಾಟಕವಾಡುತ್ತಾರೆ. ದೊಡ್ಡವರು ಸಣ್ಣವರಿಗಿಂತ ಸಣ್ಣವರಾಗಿ, ಮಗುವಿಗಿಂತ ಮಗುವಾಗಿ ನಡೆದುಕೊಳ್ಳುತ್ತಾರೆ. ಈ "ಸಣ್ಣಸ್ತಿಕೆ’ಯೇ ದೊಡ್ಡಸ್ತಿಕೆಯ ದೊಡ್ಡ ಲಕ್ಷಣ.
 
ಧರ್ಮರಾಜನ ರಾಜಸೂಯದಲ್ಲಿ ಶ್ರೀಕೃಷ್ಣ , ಬಂದ ವಿಪ್ರರ ಕಾಲು ತೊಳೆಯುವ ಕಾಯಕಕ್ಕೆ ನಿಂತನಂತೆ. ಕೃಷ್ಣ ಭಕ್ತರಿಗೆ ಇದೊಂದು ಮಾದರಿ. ವಾದಿರಾಜರು ಇಂತ ಆದರ್ಶದ ಬದುಕನ್ನು ಬದುಕಿದವರು.
 
ಒಂಭತ್ತು ಶಿಷ್ಯರು 
 
ಆಚಾರ್ಯ ಮಧ್ವರ ಪರಂಪರೆಯನ್ನು ಮುಂದುವರಿಸಿದವರು, ಸಂನ್ಯಾಸಿ ಶಿಷ್ಯರಲ್ಲಿ ಪ್ರಮುಖರಾದವರು ಒಂಭತ್ತು ಮಂದಿ. ನಮಗೆ ಈಗ ದೊರೆತ ಆಧಾರದಂತೆ ಈ ಯತಿಗಳ ಸಂನ್ಯಾಸ ಕ್ರಮ ಹೀಗಿದೆ-
 
೧. ಶ್ರೀ ಹೃಷಿಕೇಶ ತೀರ್ಥರು
೨. ಶ್ರೀ ಪದ್ಮನಾಭ ತೀರ್ಥರು
೩. ಶ್ರೀ ಜನಾರ್ದನ ತೀರ್ಥರು
೪. ಶ್ರೀ ನರಹರಿ (ನರಸಿಂಹ) ತೀರ್ಥರು
೫. ಶ್ರೀ ಉಪೇಂದ್ರ ತೀರ್ಥರು
೬. ಶ್ರೀ ವಾಮನ ತೀರ್ಥರು
೭. ಶ್ರೀ ವಿಷ್ಣು ತೀರ್ಥರು
೮. ಶ್ರೀ ರಾಮತೀರ್ಥರು
೯. ಶ್ರೀ ಅಧೋಕ್ಷಜ ತೀರ್ಥರು
 
ಆಚಾರ್ಯ ಮಧ್ವರು ತನ್ನ ಒಂಭತ್ತು ಮಂದಿ ಸಂನ್ಯಾಸಿ ಶಿಷ್ಯರಿಗಿತ್ತ, ಆ ಶಿಷ್ಯರು ಪರಂಪರೆಯಿಂದ ಪೂಜಿಸುತ್ತ ಬಂದ ಒಂಭತ್ತು ಭಗವನ್ಮೂರ್ತಿಗಳಿಗೆ ನಮಸ್ಕಾರವಿರಲಿ
 
ಇದರಂತೆ ಅರ್ಚಾಮೂರ್ತಿಯನ್ನಿತ್ತ ಕ್ರಮ ಹೀಗಿದೆ-
 
ಶ್ರೀ ಹೃಷಿಕೇಶತೀರ್ಥ ಮತ್ತು ಪದ್ಮನಾಭ ತೀರ್ಥರಿಗೆ ರಘುಪತಿ ರಾಮ.
ಶ್ರೀ ಜನಾರ್ದನ ತೀರ್ಥ ಮತ್ತು ನರಹರಿ ತೀರ್ಥರಿಗೆ ಕಾಳಿಯಮಥನ ಕೃಷ್ಣ.
ಶ್ರೀ ಉಪೇಂದ್ರ ತೀರ್ಥ ಮತ್ತು ವಾಮನ ತೀರ್ಥರಿಗೆ ವಿಟೌಲ ಕೃಷ್ಣ.
ಶ್ರೀ ವಿಷ್ಣು ತೀರ್ಥರಿಗೆ ವರಾಹ.
ಶ್ರೀ ರಾಮತೀರ್ಥರಿಗೆ ನರಸಿಂಹ.
ಕೊನೆಯ ಶಿಷ್ಯ ಶ್ರೀ ಅಧೋಕ್ಷಜ ತೀರ್ಥರಿಗೆ ಪುನಃ ವಿಠಲ ಕೃಷ್ಣ .
 
ಈ ಒಂಭತ್ತು ಮಂದಿ ಸಂನ್ಯಾಸಿ ಶಿಷ್ಯರಲ್ಲಿ ಶ್ರೀ ಪದ್ಮನಾಭ ತೀರ್ಥರು ಘಟ್ಟದ ಮೇಲೆ ತತ್ವ ಪ್ರಸಾರಕ್ಕೆ ನಿಂತರು. ಉಳಿದ ಎಂಟು ಮಂದಿ ತೌಳವ ಮಂಡಲದಲ್ಲಿ ನೆಲೆ ನಿಂತರು. ಈ ಎಂಟು ಮಂದಿಯಲ್ಲಿ ಜನಾರ್ದನ ತೀರ್ಥರಿಗೆ ನರಹರಿ ತೀರ್ಥರಿಗಿಂತ ಮೊದಲು ಸಂನ್ಯಾಸವಾಗಿದ್ದರೂ ವೇದಾಂತ ಸಾಮ್ರಾಜ್ಯದಲ್ಲಿ ಮೊದಲು ನರಹರಿ ತೀರ್ಥರಿಗೆ ಪಟ್ಟಾಭಿಷೇಕವಾದಂತಿದೆ. ಹೀಗಾಗಿ, ಅಷ್ಟ ಮಠಗಳ ಅನುಕ್ರಮ ಹೀಗಾಯಿತು-
 
೧. ಶ್ರೀಹೃಷಿಕೇಶ ತೀರ್ಥರು
೨. ನರಹರಿ (ನರಸಿಂಹ) ತೀರ್ಥರು
೩. ಜನಾರ್ದನ ತೀರ್ಥರು
೪. ಉಪೇಂದ್ರ ತೀರ್ಥರು
೫. ವಾಮನ ತೀರ್ಥರು
೬. ವಿಷ್ಣು ತೀರ್ಥರು
೭. ರಾಮ ತೀರ್ಥರು
೮. ಅಧೋಕ್ಷಜ ತೀರ್ಥರು
 .
 
ಆಚಾರ್ಯರು ಇವರಿಗಿತ್ತ ಅರ್ಚಾಮೂರ್ತಿಗಳಲ್ಲು ಒಂದು ವೈಶಿಷ್ಟವಿದೆ. ಓಂಕಾರದ ನಾಕು ಅಕ್ಷರಗಳಿಗೆ (ಅಕಾರ, ಉಕಾರ, ಮಕಾರ, ನಾದ) ನಾಕು ಭಗವದ್ರೂಪಗಳು: ಕೃಷ್ಣ , ರಾಮ, ನರಸಿಂಹ ಮತ್ತು ವರಾಹ. ಜಯ-ವಿಜಯರ ಶಾಪಮೋಕ್ಷಕ್ಕಾಗಿ ಬಂದ ಭಗವದ್ರೂಪಗಳು. ಇವೇ ಓಂಕಾರೋಪಾಸಕರಾದ ಸಂನ್ಯಾಸಿಗಳಿಗೆ ಮುಖ್ಯ ಉಪಾಸ್ಯರೂಪಗಳು. ಅಕಾರೋಪಾಸಕರಿಗೆ ಕೃಷ್ಣರೂಪ (ಕಾಳಿಯ ಮಥನ ಮತ್ತು ವಿಠಲ), ಉಕಾರೋಪಾಸಕರಿಗೆ ರಾಮ, ಮಕಾರೋಪಾಸಕರಿಗೆ ನರಸಿಂಹ ಮತ್ತು ಓಂಕಾರದ ಉಪಾಸನೆಯಲ್ಲೆ ಸರ್ವೋತ್ಕೃಷ್ಟವಾದ ನಾದದ ಉಪಾಸಕರಿಗೆ ವರಾಹ.
 
ಹೀಗೆ, ಆಶ್ರಮದ ಅನುಕ್ರಮದಲ್ಲಿ ಆಚಾರ್ಯ ಮಧ್ವರ ಶಿಷ್ಯರಲ್ಲಿ ಮೊದಲಿಗರು ಉಕಾರವೇದ್ಯ ರಾಮೋಪಾಸಕರಾದ ಹೃಷೀಕೇಶ ತೀರ್ಥರು. ಯೋಗ್ಯತೆಯಲ್ಲಿ ಮೊದಲಿಗರು ನಾದವೇದ್ಯ ವರಾಹೋಪಾಸಕರಾದ ವಿಷ್ಣುತೀರ್ಥರು. ಅವರೇ ಶ್ರೀ ಸೋದೇ ಮಠದ ಮೂಲ ಯತಿಗಳು. ಆಚಾರ್ಯರ ತಮ್ಮನಾಗಿ ಜನಿಸಿದ ಮಹಾಭಾಗ್ಯಶಾಲಿಗಳು.
 
ಅಂದಿನಿಂದ ಸೋದೆ ಮಠದ ಪರಂಪರೆಯ ೨೦ನೆಯ ಯತಿಗಳಾದ ಶ್ರೀವಾದಿರಾಜರ ತನಕ ಶ್ರೀಕೃಷ್ಣನಿಗೆ ಎರಡು ತಿಂಗಳ ಪೂಜಾ ಪದ್ಧತಿ ಬಳಕೆಯಲ್ಲಿತ್ತು. ಶ್ರೀವಾದಿರಾಜರು ಎರಡು ವರ್ಷಗಳ ಪೂಜಾ ಪದ್ಧತಿಯನ್ನು ಆಚರಣೆಗೆ ತಂದು ಪರ್ಯಾಯ ಮಹೋತ್ಸವಕ್ಕೆ ದೇಶವ್ಯಾಪಿ ಮೆರಗು ನೀಡಿದರು.
 
ಸೋದೆ ಮಠದ ಮೊದಲ ಪರ್ಯಾಯ 
 
ಆದರೆ ಶ್ರೀವಾದಿರಾಜರು ತಾನೇ ಮೊದಲು ಪರ್ಯಾಯ ಪೀಠವನ್ನೇರಲಿಲ್ಲ. ಮೂಲ ಯತಿಗಳ ಜ್ಯೇಷ್ಠತೆಯ ಅನುಕ್ರಮಕ್ಕೆ ಅನುಗುಣವಾಗಿ ಪರ್ಯಾಯ ಕ್ರಮವನ್ನೇರ್ಪಡಿಸಿದರು. ಹೀಗಾಗಿ, ಪರ್ಯಾಯ ಚಕ್ರ ಪ್ರಾರಂಭವಾದದ್ದು ಫ‌ಲಿಮಾರು ಮಠದಿಂದ, ಕ್ರಿ.ಶ. ೧೫೨೨ರಲ್ಲಿ. ಅನಂತರ ಕ್ರಮಶಃ ಆರನೆಯವರಾಗಿ, ಶ್ರೀವಾದಿರಾಜರು ೧೫೩೨ರಲ್ಲಿ ತನ್ನ ಮೊದಲ ಪರ್ಯಾಯ ಮಹೋತ್ಸವವನ್ನಾಚರಿಸಿದರು. ಆಗ ಅವರಿಗೆ ೫೨ರ ಹರಯ.
 
೧೫೮೦ರಲ್ಲಿ ಅವರ ನಾಲ್ಕನೆಯ ಮತ್ತು ಕೊನೆಯ ಪರ್ಯಾಯ. ಅದು ಅವರ ಶತಮಾನೋತ್ಸವದ ಅಪೂರ್ವ ಪರ್ಯಾಯ ಕೂಡ. ನೂರು ತುಂಬಿದ ವಾದಿರಾಜರು ಕೃಷ್ಣನನ್ನು ಪೂಜಿಸುತ್ತ ಬೇಡಿಕೊಂಡ ಬಗೆ ಅನನ್ಯವಾದದ್ದು-
 
ಮಧ್ವಪ್ರತಿಷ್ಠಿತಂ ತ್ವಾಂ
ವಿಧ್ವಸ್ತಾಶೇಷಕುಜನಕುಲಮ್‌|
ಮೂಧಾ ಪ್ರಣಮ್ಯ ಯಾಚೇ
ತದ್‌ವಿರಚಯ ಯದ್ಧಿತಂ ಮಮಾದ್ಯ ಹರೇ ||
 
(ಮಧ್ವರಿಂದ ಪ್ರತಿಷ್ಠೆಗೊಂಡ ನಿನ್ನನ್ನು , ದುರ್ಜನರ ತಳಿಯನ್ನು ನಿಃಶೇಷವಾಗಿ ತರಿದ ನಿನ್ನನ್ನು , ತಲೆಬಾಗಿ ಮಣಿದು ಬೇಡಿಕೊಳ್ಳುತ್ತೇನೆ. ಓ ಶ್ರೀಹರಿಯೆ, ನನಗೆ ಯಾವುದು ಹಿತವೊ ಅದನ್ನು ಕರುಣಿಸು.)
 
ನಿಷ್ಕಾಮರಾದ ಏಕಾಂತ ಭಕ್ತರು ಭಗವಂತನನ್ನು ಬೇಡುವ ಪರಿ ಇದು. ಇದು ಪ್ರಹ್ಲಾದ ಭಕ್ತಿ. ಭಗವಂತನಿಂದ ಐಹಿಕವಾದ ಏನನ್ನೂ ಬಯಸದ ನಿವ್ಯಾಜ ಭಕ್ತಿ.
 
ವಾದಿರಾಜರ ಶಿಷ್ಯ ವಾತ್ಸಲ್ಯವೂ ದೊಡ್ಡದು. ೧೫೯೬ರಲ್ಲಿ ಅವರ ೧೧೬ನೆಯ ವಯಸ್ಸಿನಲ್ಲಿ ಬಂದ ಐದನೆಯ ಪರ್ಯಾಯವನ್ನು ಆಗಲೆ ಮುಪ್ಪಿಗೆ ಹತ್ತಿರವಾದ ತನ್ನ ಶಿಷ್ಯನಿಂದ ಮಾಡಿಸಿ ತಾನು ಸೋದೆಯಲ್ಲಿ ನಿಂತರು.
 
ಲೋಕೋತ್ತರ ಚರಿತರು 
 
ವಾದಿರಾಜರ ವರ್ಣಮಯ ವ್ಯಕ್ತಿತ್ವ ಲೋಕೋತ್ತರವಾದದ್ದು. ಅವರು ಅನನ್ಯ ಸಮಾಜ ಸುಧಾರಕರು. ಅದ್ವಿತೀಯ ವಾಗ್ಮಿಗಳು. ಅದ್ಭುತ ಗ್ರಂಥಕಾರರು. ತುಳುನಾಡಿನ ಯತಿಗಳ ಪರಂಪರೆಯಲ್ಲಿ , ಕನ್ನಡ ಮತ್ತು ತುಳು ಭಾಷೆಗಳಲ್ಲಿ ಹಾಡುಗಳನ್ನು ಹೊಸೆದ ವಾಗ್ಗೇಯಕಾರರು. ವ್ಯಾಸಪಂಥ, ದಾಸಪಂಥ ಎರಡರಲ್ಲು ಆಚಾರ್ಯ ಪುರುಷರಾಗಿ ನಿಂತವರು. ಕನಕದಾಸರಂಥ ಹಿರಿಯ ಚೇತನವನ್ನು ಗುರುತಿಸಿ ಉಡುಪಿಯಲ್ಲಿ ಅವರಿಗೆ ನೆಲೆಯಿತ್ತು ಮನ್ನಣೆಯ ಮಣೆಯನ್ನಿತ್ತವರು.
 
ಶಾಸ್ತ್ರದಲ್ಲೂ , ಕಾವ್ಯದಲ್ಲೂ ಸವ್ಯಸಾಚಿಗಳಾದ ಅಪೂರ್ವ ಕವಿಮನೀಷಿಗಳು. ತುಳುನಾಡಿನಲ್ಲಿ ಇಬ್ಬರು ಮೊದಲ ಗೃಹಸ್ಥ ಕವಿಗಳು: ಶ್ರೀತ್ರಿವಿಕ್ರಮ ಪಂಡಿತರು ಮತ್ತು ನಾರಾಯಣ ಪಂಡಿತರು. ಇಬ್ಬರು ಮೊದಲ ಸಂನ್ಯಾಸಿ ಕವಿಗಳು ಶ್ರೀ ರಾಜರಾಜೇಶ್ವರರು ಮತ್ತು ಶ್ರೀವಾದಿರಾಜರು. (ಅನಂತರ ಸುಭದ್ರಾಹರಣವೆಂಬ ಮಹಾಕಾವ್ಯವೂ ಸೋದೆ ಮಠದ ಪರಂಪರೆಯಿಂದಲೇ ಬಂತು.)
 
ವಾದಿರಾಜರ ಕಾವ್ಯ ಶಾಸ್ತ್ರಮಯ ಮತ್ತು ಶಾಸ್ತ್ರ ಕಾವ್ಯಮಯ. ಸಂಸ್ಕೃತದಲ್ಲಿ ಮೊದಲ ಪ್ರವಾಸ ಸಾಹಿತ್ಯ ವೆಂಕಟಾಧ್ವರಿಯ ವಿಶ್ವಗುಣಾದರ್ಶ ಚಂಪೂ. ಎರಡನೆಯದು ಶ್ರೀವಾದಿರಾಜರ ತೀರ್ಥ ಪ್ರಬಂಧ. ಮೇರುಕೃತಿ: ಯುಕ್ತಿಮಲ್ಲಿಕೆ ಅವರ ಯುಕ್ತಿ ಮಲ್ಲಿಕೆ ವೇದಾಂತ ಪ್ರಪಂಚದಲ್ಲೆ ಸಾಟಿಯಿಲ್ಲದ ಮೇರು ಕೃತಿ. ಆದರೂ ಕಾವ್ಯಮಯವಾದ ಸುಂದರ ಪದ್ಯಗಳ ದಿವ್ಯ ಪ್ರಪಂಚ.

ಅವರ ಶಿಷ್ಯರೊಬ್ಬರು ಅವರ ಜೀವನ ಚರಿತ್ರೆಯನ್ನು ಬರೆದಿದ್ದಾರೆ: ವಿಶ್ವಪ್ರಿಯತೀರ್ಥವಿಲಾಸ. ಅವರ ಬದುಕಿನ ಅನೇಕ ಪವಾಡಗಳನ್ನು ಅದರಲ್ಲಿ ದಾಖಲಿಸಿದ್ದಾರೆ.
 
ವೃಂದಾವನಾಚಾರ್ಯರು ಕೊಚ್ಚಿಯ ರಾಜಮನೆತನದವರ ಜತೆ ವಾದ ಮಾಡಿ ವಿಜಯ ಪತಾಕೆ ಹಾರಿಸಿದರು ಇವರ ಪಾಂಡಿತ್ಯದಿಂದ. ಅದಕ್ಕಿಂತ ಹೆಚ್ಚಾಗಿ ಇವರ ಯೋಗಸಿದ್ಧಿಯಿಂದ ಪ್ರಭಾವಿತರಾದ ಆ ರಾಜಮನೆತನದವರು ಇವರಿಂದ ಮಾಧ್ವ ದೀಕ್ಷೆ ಪಡೆದರು. ಆದರೆ, ಆ ಸಂಪರ್ಕ ಮುಂದುವರಿಯಲಿಲ್ಲ ಎನ್ನುವುದು ದುರ್ದೈವದ ಸಂಗತಿ.
 
ಸಮಾಜಮುಖೀ ವಾದಿರಾಜರು 
 
ಹೀಗೆ ತಲೆಮಾರಿನುದ್ದಕ್ಕೆ ತನ್ನ ತಪಃ ಪ್ರಭಾವವನ್ನು ಬೀರಿದ ಮಹಾಮಹಿಮರು ಶ್ರೀವಾದಿರಾಜರು. ಕೊನೆಯದಾಗಿ ಅವರ ಸಮಾಜ ಸುಧಾರಣೆಯ ಕೆಲವು ಪ್ರಮುಖ ಅಂಶಗಳನ್ನು ಇಲ್ಲಿ ನೆನೆಯಬೇಕು. ವಿಶ್ವತೋಮುಖೀಯಾದ ವಾದಿರಾಜರು ಸಮಾಜಮುಖೀಯಾದ ಬಗೆ, ಸಮಾಜದ ಸಾಮರಸ್ಯಕ್ಕೆ ಅವರು ನೀಡಿದ ಕೊಡುಗೆ ಅನನ್ಯ.
 
ವಾದಿರಾಜ ಗುಳ್ಳ 
 
ಮಟ್ಟಿಯ ಬ್ರಾಹ್ಮಣರದು ಇನ್ನೊಂದೇ ಕಥೆ. ಯಾವುದೋ ಕ್ಷುದ್ರ ಕಾರಣಕ್ಕಾಗಿ ಪರಿಸರದ ಬ್ರಾಹ್ಮಣ ವರ್ಗ ಅವರನ್ನು ದೂರ ಇಟ್ಟಿತ್ತು.
 
ಗುಂಪನ್ನು ಒಡೆದು, ಜಗಳ ಮುಂದುವರಿಸಿ ಖುಶಿಪಡುವ ಕ್ಷುದ್ರ ಬುದ್ಧಿಯ ಮಂದಿಯನ್ನು ಸಮಾಜದಲ್ಲಿ ನಾವಿಂದೂ ನೋಡಬಹುದು. ಇಂಥವರು ಮಠಗಳಲ್ಲೂ ಸೇರಿಕೊಂಡು ತಮ್ಮ ಕೊಳಕು ಬುದ್ಧಿಯಿಂದ ಮಠದ ಪರಿಸರವನ್ನೂ ಕೆಡಿಸಿಬಿಡುತ್ತಾರೆ. ಪ್ರೀತಿಯ ಸಾಮರಸ್ಯವನ್ನು ಹಂಚಬೇಕಾದ ಮಠಗಳು ಇಂಥವರಿಂದ ಜಗಳದ ಕೇಂದ್ರಗಳಾಗಿ ಬಿಡುತ್ತವೆ. ಒಡಕಿನ ಬೀಜವನ್ನು ಬಿತ್ತುವ ಹೊಲಸು ಹೊಲಗಳಾಗಿ ಬಿಡುತ್ತವೆ.
 
ವಾದಿರಾಜರು ಇಂಥ ಕೊಳಕು ರಾಜಕೀಯ, ಮಠದ ಹತ್ತಿರ ಸುಳಿಯದಂತೆ ನೋಡಿಕೊಂಡರು. ಅವರು ಸಾಮರಸ್ಯದ ಸಂದೇಶವನ್ನು ಸಾರಿದರು. ಒಡೆದ ಬಗೆಯನ್ನು , ಮನೆಯನ್ನು ಒಂದುಗೂಡಿಸುವ ಹರಿಕಾರರಾದರು. ಅದಕೆಂದೆ ಅವರು ಮಟ್ಟಿಯ ಬ್ರಾಹ್ಮಣರನ್ನು ಮಡಿವಂತರ ತೆಕ್ಕೆಗೆ ಸೇರಿಸಿದರು. ಅಚ್ಚರಿಯೆಂದರೆ, ಆ ಕಾಲದಲ್ಲಿ ಅಭೋಜ್ಯವೆಂದು ನಂಬಲಾಗಿದ್ದ ಗುಳ್ಳದ ಬೀಜವನ್ನು ಅವರಿಗಿತ್ತು ಅದನ್ನು ಬೆಳೆಸುವಂತೆ ಪ್ರೋತ್ಸಾಹಿಸಿದರು. ಅವರು ಬೆಳೆದ ಗುಳ್ಳದ ರುಚಿಯಾದ ಹುಳಿಯನ್ನು ಶ್ರೀಕೃಷ್ಣನಿಗೆ ಸಮರ್ಪಿಸಿದರು. ಅಭೋಜ್ಯವಾಗಿದ್ದ ಗುಳ್ಳ (ಸಂಸ್ಕೃತದ ವೃಂತಾಕ) ವಾದಿರಾಜರಿಂದ ಭೋಜ್ಯವಾಯಿತು. ಪರ್ಯಾಯದ ಅಡುಗೆಯ ಅವಿಭಾಜ್ಯ ಅಂಗವಾಯಿತು. ಪಂಡಿತರು, ಧರ್ಮಶಾಸ್ತ್ರದಲ್ಲಿ ಹೊಸ ಅಮೆಂಡ್‌ಮೆಂಟ್‌ ಸೇರಿಸಿದರು. "ಬದನೆ ನಿಷಿದ್ಧವಾದರೂ ವಾದಿರಾಜ ಗುಳ್ಳ ತಿನ್ನಬಹುದು. ಏಕೆಂದರೆ ವಾದಿರಾಜರು ತನ್ನ ತಪೋಬಲದಿಂದ ಅದನ್ನು ಪಾವನಗೊಳಿಸಿದ್ದಾರೆ’.
 
ಮಟ್ಟಿಯ ಬ್ರಾಹ್ಮಣರು ಗೆದ್ದರು. ಮಟ್ಟಿಯ ಗುಳ್ಳವೂ ಗೆದ್ದಿತು. ವಾದಿರಾಜರ ಮನೋಬಲ-ತಪೋಬಲ ಎರಡೂ ಅನನ್ಯವಾದದ್ದು. ಸಂಪ್ರದಾಯವಾದಿಗಳ ಜತೆ ನವ್ಯ ಕವಿಗಳೂ ಹಾಡಿದರು -
 
ತಿನ್ನಬೇಡಿ ಗುಳ್ಳ
ತಿಂದರೆ ವಾದಿರಾಜಗುಳ್ಳ
***

ಶ್ರೀಂ ಶ್ರೀ ಕಂ ಕಪಿಲಾಯ ನಮಃ

ಭೀಷ್ಮದ್ವಾದಶಿಯ, ಭೀಮ ದ್ವಾದಶಿಯ ಶುಭಾಶಯಗಳು...

ಇಂದು ಶ್ರೀಮದಾಚಾರ್ಯರ ನೇರ ಶಿಷ್ಯರು, ಶ್ರೀಮದಾಚಾರ್ಯರಿಂದಲೇ ಶಾಸ್ತ್ರವನ್ನು ಓದಿದವರು, ಅವರಿಂದಲೇ ಪೀಠಾಧಿಪತ್ಯವನ್ನು ಸ್ವೀಕಾರ ಮಾಡಿದವರು,  ಅಷ್ಟ ಮಠದಲ್ಲಿನ ಪುತ್ತಿಗೆ ಮಠದ ಮೊದಲ ಯತಿಗಳು, ಶ್ರೀಮದಾಚಾರ್ಯರಿಂದಲೇ ವಿಠಲನ ಪ್ರತಿಮೆಯನ್ನು ಪಡೆದವರು, ಶ್ರೀಮದಾಚಾರ್ಯರ ಜೊತೆ ಇಡೀ ಭಾರತ ಯಾತ್ರೆಯನ್ನು ಮಾಡಿದವರೂ, ನಂತರ ಶ್ರೀ ಕವೀಂದ್ರತೀರ್ಥರಿಗೆ ಪೀಠವನ್ನು ನೀಡಿದವರೂ ಆದ ಶ್ರೀ ಉಪೇಂದ್ರತೀರ್ಥರ ಆರಾಧನಾ ಮಹೋತ್ಸವ ಕೃಷ್ಣಾ ನದೀತೀರದಲ್ಲಿ...

ಮತ್ತೆ...

ತಪೋವಿದ್ಯಾ ವಿರಕ್ತ್ಯಾದಿ ಸದ್ಗುಣೌ ಘಾಕರಾನಹಮ್/
ವಾದಿರಾಜ ಗುರೂನ್ ವಂದೇ ಹಯಗ್ರೀವ ದಯಾಶ್ರಯಾನ್//

 ತೀರ್ಥಪ್ರಬಂಧ, ಗುಂಡಕ್ರಿಯೆ, ರುಕ್ಮಿಣೀಶವಿಜಯ, ಯುಕ್ತಿಮಲ್ಲಿಕಾ ಮೊದಲಾದ ಅಪೂರ್ವ ಗ್ರಂಥ ಕರ್ತೃಗಳಾದ, ಲಾತವ್ಯರು, ಋಜುಗಣಸ್ಥರೂ, ಶ್ರೀಮಚ್ಚಂದ್ರಿಕಾಚಾರ್ಯರ ಪ್ರೀತಿಪಾತ್ರರು, ವ್ಯಾಸ-ದಾಸ ಸಾಹಿತ್ಯದ ಅಧಿನಾಯಕರೂ ಆದ ಪರಮ ಪರಮ ಮಹಿಮಾಶಾಲಿಗಳು, ಭಾವಿಸಮೀರರಾದ  ಶ್ರೀಮದ್ವಾದಿರಾಜತೀರ್ಥ ಗುರುಸಾರ್ವಭೌಮರು ಎಲ್ಲ ಸಜ್ಜನರ ಉದ್ಧಾರಕ್ಕಾಗಿ ಅವತರಣ ಮಾಡಿದ ದಿನ ಇದು. ಇವರ ಕುರಿತು ಮಾಧ್ವರು ಎನ್ನುವ ಯಾರಿಗೂಪರಿಚಯ ಮಾಡುವ ಆವಶ್ಯಕತೆಯೂ ಇಲ್ಲ ಅಲ್ಲವೇ?...

ಮತ್ತೆ 

ಸತ್ಯಧೀರಕರಾಬ್ಜೋತ್ಥ: ಜ್ಞಾನವೈರಾಗ್ಯಸಾಗರ:
ಸತ್ಯಜ್ಞಾನಾಖ್ಯತರಣಿ:  ಸ್ವಾಂತಧ್ವಾಂತಂ ನಿಕೃಂತತು //
ಶ್ರೀಮದುತ್ತರಾದಿ ಮಠದ 19ನೇ ಶತಮಾನದ ಶ್ರೇಷ್ಠ ಯತಿಗಳೂ, ಮಹಾ ಮಹಿಮೆಗಳನ್ನು ತೋರಿದ ಯತಿಗಳೂ, ಮಧ್ವಸಿದ್ಧಾಂತ ಅಭಿವೃದ್ಧಿಕಾರಿಣಿ ಸಭೆಯನ್ನು ಪ್ರಾರಂಭಿಸಿದವರೂ ಹಾಗೂ ತಮ್ಮ ವೃಂದಾವನ ಪ್ರವೇಶವನ್ನು ಮುಂದೇ ಅರಿತಂತಹಾ ಮಹಾನುಭಾವರೂ , ಶ್ರೀ ಸತ್ಯಧ್ಯಾನತೀರ್ಥರ ಗುರುಗಳೂ ಆದ ಶ್ರೀ ಸತ್ಯಜ್ಙಾನ ತೀರ್ಥರ  ಆರಾಧನೆಯೂ... 

ಹಾಗೆಯೇ

ಭಜಾಮಿ ಕೃಷ್ಣ ರಾಜಾನಾಂ ಭೂಪತೇಸ್ತನುಜಂ ವಿಭುಂ/ ಜ್ಞಾನೋಪದೇಶ ಕರ್ತಾರಂ ಸರ್ವದಾನಂದ ರೂಪಿಣಂ//

ಕಾಖಂಡಕಿ ಶ್ರೀ  ಮಹಿಪತಿದಾಸರ ಪುತ್ರರಾದ,  ಮಹಿಪತಿಸುತ,ಮಹಿಪತಿನಂದನ,ತರಳಮಹಿಪತಿ ಇತ್ಯಾದಿ ಅಂಕಿತಗಳಿಂದ ಅದ್ಭುತವಾದ ಕೃತಿಗಳನ್ನು ರಚನೆ ಮಾಡಿದ,  ತಂದೆಯಂತೆ ದಾಸ ಸಾಹಿತ್ಯದ ಉನ್ನತಿಗೆ ತಮ್ಮ ಸೇವೆಯನ್ನು ಮಾಡಿದವರಾದ, ಪರಮ ಶ್ರೇಷ್ಠ ದಾಸವರೇಣ್ಯರಾದ  ಶ್ರೀ ಕಾಖಂಡಕಿ ಕೃಷ್ಣದಾಸರ ಆರಾಧನೆಯೂ ಇಂದು...

ಇಂಥಾ ಮಹಾನುಭಾವರ ಸ್ಮರೆಣೆಯೇ ನಮ್ಮ ಜನ್ಮದ ಸಾರ್ಥಕ್ಯವೂ ಹೌದು.. ಈ ಎಲ್ಲಾ  ಮಹಾನುಭಾವರ ಅನುಗ್ರಹ ನಮ್ಮ ಎಲ್ಲರಮೇಲಿರಲಿ ಎಂದು ಅವರಲ್ಲಿ ಪ್ರಾರ್ಥನೆ ಮಾಡುತ್ತಾ ....

-Smt. Padma Sirish

ನಾದನೀರಾಜನದಿಂ ದಾಸಸುರಭಿ 🙏🏽
***

ತಪೋವಿದ್ಯಾ ವಿರಕ್ತ್ಯಾದಿ ಸದ್ಗುಣೌ ಘಾಕರಾನಹಮ್/

ವಾದಿರಾಜ ಗುರೂನ್ ವಂದೇ ಹಯಗ್ರೀವ ದಯಾಶ್ರಯಾನ್//

ಶಾಲಿವಾಹಸ್ಯಸುಶಕೇ ಪಕ್ಷಾಕಾಶಯುಗೇಂದುಕೆ|ಶಾರ್ವರೀವತ್ಸರೇ ಮಾಘೇ ಶುಕ್ಲದ್ವಾದಶಿಕಾತಿಥೌ|ಋಜುದೇವಃ ಸ ಲಾತವ್ಯೋ ಧರಣ್ಯಾಮವತೀರ್ಣವಾನ್|| 

(ಶ್ರೀರಾಮಚಂದ್ರಾಚಾರ್ಯ ವಿರಚಿತ  ಶ್ರೀವಾದಿರಾಜ ಗುರುವರ ಚರಿತಾಮೃತಮ್)

ಮನೆಯ ಒಳಗೆ ಜನಿಸಿದರೆ ಮಗು ನಿಮಗೆ,  ಮನೆಯಿಂದ ಹೊರಗಡೆ ಜನಿಸಿದರೆ  ಮಗು  ಮಠಕ್ಕೆ ಕೊಡಬೇಕು ಎಂದು ಷರತ್ತು ಹಾಕಿದ್ದರು ಶ್ರೀವಾಗೀಶ ತೀರ್ಥರು.  ಅವತರಿಸುತ್ತಿರುವ ಜ್ಞಾನಿಗಳ ಬಗ್ಗೆ ಮೊದಲೇ ತಿಳಿದಿದ್ದರಲ್ಲವೇ! ಬರಲಿರುವ ಜ್ಞಾನಿಯು ಕೇವಲ ಒಂದು  ಮನೆಗೆ ಸೀಮಿತನಾಗದೇ ಸಜ್ಜನ ಪ್ರಪಂಚದ ಮನವೆಂಬ ಮನೆಗೆ ಜ್ಞಾನವನ್ನು ಬಿತ್ತಿ, ಸಾಧನೆ ಮಾಡಿಸುವ ಸಾಧನಾಭಿಮಾನಿಗಳಲ್ಲವೇ! 

ಎಷ್ಟೇ ಮನುಷ್ಯ ಪ್ರಯತ್ನ ನಡೆಸಿ ಹತ್ತು ತಿಂಗಳು ಪ್ರಾಪ್ತವಾಗುವವರೆಗೂ ಹೊರಬರದೇ ಇದ್ದು, ಭಗವಂತನ ವಾಯುದೇವರ ಲೀಲೆಯಂತೆ, ಒಂದು  ಹಸುವು ಗದ್ದೆಯಲ್ಲಿ ಬೆಳೆದ  ಪೈರು  ತಿನ್ನುವುದನ್ನು ತಪ್ಪಿಸಲು ಮನೆ  ಹೊಸ್ತಿಲು ದಾಟಿ ಅಂಗಳದಿಂದಲೇ ಪ್ರಾರಂಭವಾಗುವ ಗದ್ದೆಗೆ ಸ್ವಲ್ಪ ದೂರ ಬಂದಳೋ ಇಲ್ಲವೋ ಆ ಸಾಧ್ವಿ, ಅಷ್ಟೇ..

ತದಾ ತತ್ರೈವ ಸುಷವೇ ಭಾಸ್ಕರಪ್ರಭಮಾತ್ಮಜಮ್ 

 ಗದ್ದೆಯಲ್ಲಿಯೇ ಸೂರ್ಯನಂತೆ ಪ್ರಕಾಶಮಾನನಾದ ಮಗುವನ್ನು ಹೆತ್ತಳು. 

ಮೇಲಿನ ಶ್ಲೋಕದಲ್ಲಿ ತಿಳಿಸಿದಂತೆ ಆ ಸುದಿನವು 1402ನೇ ಶಾಲಿವಾಹನ ಶಕೆ  1480 ಕ್ರಿ.ಶ. ಶಾರ್ವರಿ ಸಂವತ್ಸರದ ಮಾಘ ಶುದ್ಧ ದ್ವಾದಶಿ ( ಸಾಧನಾ ದ್ವಾದಶಿ) ತಿಥಿಯಾಗಿದ್ದು, 

ಭಾವಿ ಮಧ್ವರಾದ ಶ್ರೀವಾದಿರಾಜರು ಅವತರಿಸಿದ ಪರ್ವಕಾಲ.

 ತೀರ್ಥಪ್ರಬಂಧ, ಗುಂಡಕ್ರಿಯೆ, ರುಕ್ಮಿಣೀಶವಿಜಯ, ಯುಕ್ತಿಮಲ್ಲಿಕಾ ಮೊದಲಾದ ಅಪೂರ್ವ ಗ್ರಂಥ ಕರ್ತೃಗಳಾದ, ಲಾತವ್ಯರು, ಋಜುಗಣಸ್ಥರೂ, ಶ್ರೀಮಚ್ಚಂದ್ರಿಕಾಚಾರ್ಯರ ಪ್ರೀತಿಪಾತ್ರರು, ವ್ಯಾಸ-ದಾಸ ಸಾಹಿತ್ಯದ ಅಧಿನಾಯಕರೂ ಆದ ಪರಮ ಪರಮ ಮಹಿಮಾಶಾಲಿಗಳು, ಭಾವಿಸಮೀರರಾದ  ಶ್ರೀಮದ್ವಾದಿರಾಜತೀರ್ಥ ಗುರುಸಾರ್ವಭೌಮರು ಎಲ್ಲ ಸಜ್ಜನರ ಉದ್ಧಾರಕ್ಕಾಗಿ ಅವತರಣ ಮಾಡಿದ ಈ ಪರಮಪವಿತ್ರವಾದ ದಿನದಲ್ಲಿ ಅವರ ಸ್ಮರಣೆಯನ್ನು ಬಿಡದೆ ಮಾಡೋಣ..

 ‌(received in WhatsApp)

****

ಮಾಘ ಶುದ್ಧ ದ್ವಾದಶಿ, 

 ಭಾವೀಸಮೀರ ಶ್ರೀ ಮದ್ ವಾದಿರಾಜ ಗುರುಸಾರ್ವಭೌಮರ ಜಯಂತಿ 

ಶ್ರೀ ವಾದಿರಾಜರ ವರ್ಧಂತಿಯ ಪುಣ್ಯ ದಿನದಂದು, ವಾದಿರಾಜ ಗುರುಸಾರ್ವಭೌಮರ ಬಗ್ಗೆ ಬನ್ನಂಜೆಯವರು ಬರೆದ ಒಂದು ಹಳೆಯ ಲೇಖನ. 

ವಿಶ್ವತೋಮುಖಿ ವಾದಿರಾಜರು 

ಲೇಖನ - ಡಾ. ಬನ್ನಂಜೆ ಗೋವಿಂದಾಚಾರ್ಯ

ಶ್ರೀಮಧ್ವಾಚಾರ್ಯರ ಬಳಿಕ ತತ್ವವಾದದ ಪ್ರವರ್ತಕರಾಗಿ ಮೆರೆದು ಭಾರತದ ಭಕ್ತಿಪಂಥದ ಪರಂಪರೆಯಲ್ಲಿ ಎತ್ತರದ ಸ್ಥಾನ ಪಡೆದವರು ಶ್ರೀವಾದಿರಾಜರು. ಪರಮ ಧಾರ್ಮಿಕರಾಗಿ, ಸಾಮಾಜಿಕ ಸುಧಾರಕರಾಗಿ, ಐತಿಹಾಸಿಕ ಸಾಧಕರಾಗಿ ಬದುಕಿದ ಶ್ರೀವಾದಿರಾಜರ ಹೆಸರು ಉಡುಪಿಯ ಅಷ್ಟಮಠಗಳಲ್ಲೊಂದಾದ ಸೋದೆ ಮಠದೊಂದಿಗೇ ಒಂದಾಯಿತು. ಮಹಾನ್‌ಸಂತ ಶ್ರೀ ವಾದಿರಾಜರ ಸಾಧನೆಯನ್ನು ಸ್ಮರಿಸುವ ಲೇಖನವಿದು...

ವರ್ಷಗಳ ಕಾಲ ಈ ನೆಲದಲ್ಲಿ ನಡೆದಾಡಿ (ಕ್ರಿ.ಶ. ೧೪೮೦-೧೬೦೦) ಸ್ವೇಚ್ಛೆಯಿಂದ ದೇವಲೋಕಕ್ಕೆ ನಡೆದ ಮಹಾನ್‌ಯೋಗಿ, ಯೋಗಿಗಳ ರಾಜ ಶ್ರೀವಾದಿರಾಜರು.

 ಆಚಾರ್ಯ ಮಧ್ವರಿಗೊಲಿದ ಕಡೆಗೋಲ ಕೃಷ್ಣ ನೆಲೆನಿಂತ ಉಡುಪಿಯ ಇತಿಹಾಸಕ್ಕೆ ಚಿನ್ನದ ಮೆರುಗನ್ನಿತ್ತವರು ಶ್ರೀ ವಾದಿರಾಜರು. 

ಸಾಮಾಜಿಕ ಸುಧಾರಣೆಗಳ ಜತೆಗೆ ಅಧ್ಯಾತ್ಮದ ಬದುಕಿಗೊಂದು ಕಲಾತ್ಮಕತೆಯನ್ನಿತ್ತು ಲೌಕಿಕಕ್ಕೆ ಅಲೌಕಿಕದ ಬೆರಗನ್ನಿತ್ತವರು ಶ್ರೀವಾದಿರಾಜರು.

ಕನಕದಾಸರಿಗೊಲಿದು ಕೃಷ್ಣ ಅವರಿಗೆ ದರ್ಶನವಿತ್ತ ಗೋಡೆಯ ಬಿರುಕಿನಲ್ಲೆ ಕಿಂಡಿಯೊಂದನ್ನಿರಿಸಿ, ಅದನ್ನು "ಕನಕನ ಕಿಂಡಿ’ ಎಂದು ಕರೆದು, ಕೃಷ್ಣನ ಮೊದಲ "ಧೂಳಿ ದರ್ಶನ’ ಅದರ ಮೂಲಕವೆ ನಡೆಯಬೇಕು ಎಂಬ ಪದ್ಧತಿಯನ್ನು ಬಳಕೆಗೆ ತಂದು, ಕನಕ ಭಕ್ತಿಗೆ ಉಡುಪಿಯಲ್ಲೊಂದು ಐತಿಹಾಸಿಕ ದಾಖಲೆ ನಿರ್ಮಿಸಿದ ದೂರದರ್ಶಿ ಶ್ರೀವಾದಿರಾಜರು. 

ಕನಕದಾಸರು ಕೃಷ್ಣನಿಗೆ ಗೆರಟೆಯಲ್ಲಿ ಅಂಬಲಿ ಅರ್ಪಿಸುತ್ತಿದ್ದರೆಂದು ಕೃಷ್ಣನ ನಿತ್ಯಪೂಜೆಯಲ್ಲಿ ಇಂದಿಗೂ "ಗೆರಟೆ ಗಂಜಿ’ ಸಮರ್ಪಣೆ ನಡೆಯುವಂತೆ ಏರ್ಪಡಿಸಿದ ಇತಿಹಾಸ ಪುರುಷ ಶ್ರೀವಾದಿರಾಜರು.

ವೇದಾಂತ ಸಾಮ್ರಾಜ್ಯದ ಸಂಕೇತವಾದ "ತೀರ್ಥ’ ಪದವನ್ನು ತೊರೆದು ಬರಿದೆ ಬಿಡಿ ಸಂನ್ಯಾಸಿಯಂತೆ "ವಾದಿರಾಜ’ರೆಂದೆ ಕರೆಸಿಕೊಂಡ ಮಹಾನ್‌ವಿರಕ್ತ ಶಿಖಾಮಣಿ ಶ್ರೀವಾದಿರಾಜರು.

ಹೂವಿನಕೆರೆಯಲ್ಲಿ ಅರಳಿ, ಜಗದಗಲಕ್ಕೆ ಕಂಪು ಬೀರಿದ ಬಂಗಾರದ ಹೂವು ಶ್ರೀವಾದಿರಾಜರು.

ದುಷ್ಟರಿಗೆ, ದುರಹಂಕಾರಿಗಳಿಗೆ ನಾಗರಹಾವು ಶ್ರೀವಾದಿರಾಜರು. 

ಕನ್ನಡದಲ್ಲಿ ದೇವರ ನಾಮಗಳನ್ನು ಹೊಸೆದು ಮಡಿವಂತಿಕೆಯ ಬಾಯಲ್ಲಿ ಕನ್ನಡದ ಮಂತ್ರ ನುಡಿಸಿದವರು ಶ್ರೀವಾದಿರಾಜರು. 

ಪ್ರತಿಯೊಂದು ಪೂಜೆಗೂ, ವೇದಮಂತ್ರಗಳ ಜತೆಗೆ, ಕನ್ನಡದ ಹಾಡುಗಳನ್ನು ಹೊಸೆದು, ಅದಕ್ಕೆ ಒಪ್ಪುವ ರಾಗಗಳನ್ನು ಬೆಸೆದು, ಅದನ್ನು ಹಾಡುವ ಭಾಗವತರ ಪರಂಪರೆಯನ್ನು ಹುಟ್ಟು ಹಾಕಿದವರು ಶ್ರೀವಾದಿರಾಜರು.

ಕೃಷ್ಣನ ಮುಂದೆ ತಾನೆ ಹಾಡುತ್ತ, ನಿರ್ಮಾಲ್ಯದ ತಟ್ಟೆ ತಲೆಯ ಮೇಲಿರಿಸಿ ನಾಟ್ಯವಾಡುವ ಪರಿಯನ್ನು ರೂಢಿಗೆ ತಂದ ಭಕ್ತ ಶಿರೋಮಣಿ ಶ್ರೀವಾದಿರಾಜರು.

ತತ್ವವಾದಿಗಳಿಗೆಲ್ಲ ರಾಜರಾಗಿ ಮೆರೆದವರು ಶ್ರೀವಾದಿರಾಜರು. 

ಆದರೂ ಅವರು ತನ್ನ ಹೆಸರಿಗೆ ಹೊಸತೊಂದು ಅರ್ಥವನ್ನು ಹೇಳುತ್ತಾರೆ -

ವಾದೀ ಮಧೋ ಯಸ್ಯ ರಾಜಾ

ಸೋಽಹಂ ತಸ್ಯ ಕೃಪಾಬಲಾತ್‌|

ವಾದಿರಾಜೋ ನ ಸ್ವಶಕ್

ವೀಣೇವ ರಣಯಾಮಿ ತತ್‌|| 

(ಆಚಾರ್ಯ ಮಧ್ವರು ನಿಜವಾದ ವಾದಿಗಳು. ಅವರು ನನಗೆ ರಾಜ. ಅದಕೆಂದೆ ನಾನು ವಾದಿರಾಜ. ಇದು ಅವರ ಕೃಪೆಯ ಬಲ ಹೊರತು ನನ್ನ ಸ್ವಂತ ಸಾಮರ್ಥ್ಯವಲ್ಲ. ಅವರು ವೈಣಿಕ. ನಾನು ಅವರು ನುಡಿಸಿದಂತೆ ನುಡಿವ ವೀಣೆ.) 

ವಿದ್ಯಾ ದದಾತಿ ವಿನಯಂ ಎಂಬ ಮಾತಿಗೆ ಬೇರೆ ನಿದರ್ಶನ ಬೇಕೆ? ದೊಡ್ಡವರ ಸೌಜನ್ಯಕ್ಕೆ ಸಾಟಿಯಿಲ್ಲ. ಸಣ್ಣವರು ದೊಡ್ಡಸ್ತಿಕೆಯ ನಾಟಕವಾಡುತ್ತಾರೆ. ದೊಡ್ಡವರು ಸಣ್ಣವರಿಗಿಂತ ಸಣ್ಣವರಾಗಿ, ಮಗುವಿಗಿಂತ ಮಗುವಾಗಿ ನಡೆದುಕೊಳ್ಳುತ್ತಾರೆ. ಈ "ಸಣ್ಣಸ್ತಿಕೆ’ಯೇ ದೊಡ್ಡಸ್ತಿಕೆಯ ದೊಡ್ಡ ಲಕ್ಷಣ. 

ಧರ್ಮರಾಜನ ರಾಜಸೂಯದಲ್ಲಿ ಶ್ರೀಕೃಷ್ಣ , ಬಂದ ವಿಪ್ರರ ಕಾಲು ತೊಳೆಯುವ ಕಾಯಕಕ್ಕೆ ನಿಂತನಂತೆ. ಕೃಷ್ಣ ಭಕ್ತರಿಗೆ ಇದೊಂದು ಮಾದರಿ. ವಾದಿರಾಜರು ಇಂತ ಆದರ್ಶದ ಬದುಕನ್ನು ಬದುಕಿದವರು. 

ಒಂಭತ್ತು ಶಿಷ್ಯರು  

ಆಚಾರ್ಯ ಮಧ್ವರ ಪರಂಪರೆಯನ್ನು ಮುಂದುವರಿಸಿದವರು, ಸಂನ್ಯಾಸಿ ಶಿಷ್ಯರಲ್ಲಿ ಪ್ರಮುಖರಾದವರು ಒಂಭತ್ತು ಮಂದಿ. ನಮಗೆ ಈಗ ದೊರೆತ ಆಧಾರದಂತೆ ಈ ಯತಿಗಳ ಸಂನ್ಯಾಸ ಕ್ರಮ ಹೀಗಿದೆ- 

೧. ಶ್ರೀ ಹೃಷಿಕೇಶ ತೀರ್ಥರು

೨. ಶ್ರೀ ಪದ್ಮನಾಭ ತೀರ್ಥರು

೩. ಶ್ರೀ ಜನಾರ್ದನ ತೀರ್ಥರು

೪. ಶ್ರೀ ನರಹರಿ (ನರಸಿಂಹ) ತೀರ್ಥರು

೫. ಶ್ರೀ ಉಪೇಂದ್ರ ತೀರ್ಥರು

೬. ಶ್ರೀ ವಾಮನ ತೀರ್ಥರು

೭. ಶ್ರೀ ವಿಷ್ಣು ತೀರ್ಥರು

೮. ಶ್ರೀ ರಾಮತೀರ್ಥರು

೯. ಶ್ರೀ ಅಧೋಕ್ಷಜ ತೀರ್ಥರು

ಈ ಕೆಳಗಿನ ಪದ್ಯ ಈ ಕ್ರಮಕ್ಕೆ ಪೂರಕವಾಗಿದೆ-

ರಘುಪೌ ಕಾಳಿಯಮಥನೌ

ಸುವಿಠಲೌ ಸೂಕರಂ ನೃಸಿಂಹಂ ಚ |

ಅನ್ಯಂ ವಿಠಲಮಗಣಿತ-

ಮತಿಶಿಷ್ಯೆಃ ಪೂಜಿತಾನ್‌ನಮಾಮಿ ಸದಾ ||

ಆಚಾರ್ಯ ಮಧ್ವರು ತನ್ನ ಒಂಭತ್ತು ಮಂದಿ ಸಂನ್ಯಾಸಿ ಶಿಷ್ಯರಿಗಿತ್ತ, ಆ ಶಿಷ್ಯರು ಪರಂಪರೆಯಿಂದ ಪೂಜಿಸುತ್ತ ಬಂದ ಒಂಭತ್ತು ಭಗವನ್ಮೂರ್ತಿಗಳಿಗೆ ನಮಸ್ಕಾರವಿರಲಿ ಎನ್ನುತ್ತದೆ ಈ ಪದ್ಯ.

ಇದರಂತೆ ಅರ್ಚಾಮೂರ್ತಿಯನ್ನಿತ್ತ ಕ್ರಮ ಹೀಗಿದೆ-

ಶ್ರೀ ಹೃಷಿಕೇಶತೀರ್ಥ ಮತ್ತು ಪದ್ಮನಾಭ ತೀರ್ಥರಿಗೆ ರಘುಪತಿ ರಾಮ.

ಶ್ರೀ ಜನಾರ್ದನ ತೀರ್ಥ ಮತ್ತು ನರಹರಿ ತೀರ್ಥರಿಗೆ ಕಾಳಿಯಮಥನ ಕೃಷ್ಣ.

ಶ್ರೀ ಉಪೇಂದ್ರ ತೀರ್ಥ ಮತ್ತು ವಾಮನ ತೀರ್ಥರಿಗೆ ವಿಟೌಲ ಕೃಷ್ಣ.

ಶ್ರೀ ವಿಷ್ಣು ತೀರ್ಥರಿಗೆ ವರಾಹ.

ಶ್ರೀ ರಾಮತೀರ್ಥರಿಗೆ ನರಸಿಂಹ.

ಕೊನೆಯ ಶಿಷ್ಯ ಶ್ರೀ ಅಧೋಕ್ಷಜ ತೀರ್ಥರಿಗೆ ಪುನಃ ವಿಠಲ ಕೃಷ್ಣ . 

ಈ ಒಂಭತ್ತು ಮಂದಿ ಸಂನ್ಯಾಸಿ ಶಿಷ್ಯರಲ್ಲಿ ಶ್ರೀ ಪದ್ಮನಾಭ ತೀರ್ಥರು ಘಟ್ಟದ ಮೇಲೆ ತತ್ವ ಪ್ರಸಾರಕ್ಕೆ ನಿಂತರು. ಉಳಿದ ಎಂಟು ಮಂದಿ ತೌಳವ ಮಂಡಲದಲ್ಲಿ ನೆಲೆ ನಿಂತರು. ಈ ಎಂಟು ಮಂದಿಯಲ್ಲಿ ಜನಾರ್ದನ ತೀರ್ಥರಿಗೆ ನರಹರಿ ತೀರ್ಥರಿಗಿಂತ ಮೊದಲು ಸಂನ್ಯಾಸವಾಗಿದ್ದರೂ ವೇದಾಂತ ಸಾಮ್ರಾಜ್ಯದಲ್ಲಿ ಮೊದಲು ನರಹರಿ ತೀರ್ಥರಿಗೆ ಪಟ್ಟಾಭಿಷೇಕವಾದಂತಿದೆ. ಹೀಗಾಗಿ, ಅಷ್ಟ ಮಠಗಳ ಅನುಕ್ರಮ ಹೀಗಾಯಿತು- 

೧. ಶ್ರೀಹೃಷಿಕೇಶ ತೀರ್ಥರು

೨. ನರಹರಿ (ನರಸಿಂಹ) ತೀರ್ಥರು

೩. ಜನಾರ್ದನ ತೀರ್ಥರು

೪. ಉಪೇಂದ್ರ ತೀರ್ಥರು

೫. ವಾಮನ ತೀರ್ಥರು

೬. ವಿಷ್ಣು ತೀರ್ಥರು

೭. ರಾಮ ತೀರ್ಥರು

೮. ಅಧೋಕ್ಷಜ ತೀರ್ಥರು

ನರಹರಿ ತೀರ್ಥರನ್ನು ನಾರಾಯಣ ಪಂಡಿತರು ಮಧ್ವ ವಿಜಯದಲ್ಲಿ "ನರಸಿಂಹ ಪದಾಧಾರಾಃ’ ಎಂದು ಬಣ್ಣಿಸಿದ್ದರಿಂದ ಮುಂದೆ ಅವರು ನರಸಿಂಹ ತೀರ್ಥರೆಂದೆ ಖ್ಯಾತರಾದರು.

ಈ ನರಹರಿ ತೀರ್ಥರು ಉಡುಪಿಯಲ್ಲಿದ್ದು , ಆಚಾರ್ಯ ಮಧ್ವರ ಮಾರ್ಗದರ್ಶನದಲ್ಲಿ ಯಕ್ಷಗಾನದಿ - ಬಯಲಾಟದ ಕಲಾ ಪ್ರಕಾರವನ್ನು ಬಳಕೆಗೆ ತಂದರು. ಇದೇ ಮುಂದೆ ಆಂಧ್ರದಲ್ಲಿ "ಕೂಚಿಪುಡಿ’ಯಾಗಿ ಬೆಳೆದು ಬಂದು, ಮೂಲತಃ ಆಂಧ್ರದವರಾದ ಶ್ರೀ ನರಹರಿ ತೀರ್ಥರು ಅನಂತರ ಪದ್ಮನಾಭ ತೀರ್ಥರ ಪರಂಪರೆಯನ್ನು ಮುಂದುವರಿಸಿದರು. 

ಕೆಳಗಿನ ಪದ್ಯ ಈ ಅನುಕ್ರಮವನ್ನು ನಿರೂಪಿಸುತ್ತದೆ- 

ವಂದೇ ಹೃಷೀಕೇಶಮಥೋ ನೃಸಿಂಹಂ

ಜನಾರ್ದನಂ ಚಿಂತಯ ಧೀರುಪೇಂದ್ರಮ್‌|

ಶ್ರೀ ವಾಮನಂ ಸಂಸ್ಮರ ವಿಷ್ಣುಮೇಮಿ

ಶ್ರೀರಾಮಮಂಚೇ-ಹಮಧೋಕ್ಷಜಂ ಚ ||

ಆಚಾರ್ಯರು ಇವರಿಗಿತ್ತ ಅರ್ಚಾಮೂರ್ತಿಗಳಲ್ಲು ಒಂದು ವೈಶಿಷ್ಟವಿದೆ. ಓಂಕಾರದ ನಾಕು ಅಕ್ಷರಗಳಿಗೆ (ಅಕಾರ, ಉಕಾರ, ಮಕಾರ, ನಾದ) ನಾಕು ಭಗವದ್ರೂಪಗಳು: ಕೃಷ್ಣ , ರಾಮ, ನರಸಿಂಹ ಮತ್ತು ವರಾಹ. ಜಯ-ವಿಜಯರ ಶಾಪಮೋಕ್ಷಕ್ಕಾಗಿ ಬಂದ ಭಗವದ್ರೂಪಗಳು. ಇವೇ ಓಂಕಾರೋಪಾಸಕರಾದ ಸಂನ್ಯಾಸಿಗಳಿಗೆ ಮುಖ್ಯ ಉಪಾಸ್ಯರೂಪಗಳು. ಅಕಾರೋಪಾಸಕರಿಗೆ ಕೃಷ್ಣರೂಪ (ಕಾಳಿಯ ಮಥನ ಮತ್ತು ವಿಠಲ), ಉಕಾರೋಪಾಸಕರಿಗೆ ರಾಮ, ಮಕಾರೋಪಾಸಕರಿಗೆ ನರಸಿಂಹ ಮತ್ತು ಓಂಕಾರದ ಉಪಾಸನೆಯಲ್ಲೆ ಸರ್ವೋತ್ಕೃಷ್ಟವಾದ ನಾದದ ಉಪಾಸಕರಿಗೆ ವರಾಹ.

ಹೀಗೆ, ಆಶ್ರಮದ ಅನುಕ್ರಮದಲ್ಲಿ ಆಚಾರ್ಯ ಮಧ್ವರ ಶಿಷ್ಯರಲ್ಲಿ ಮೊದಲಿಗರು ಉಕಾರವೇದ್ಯ ರಾಮೋಪಾಸಕರಾದ ಹೃಷೀಕೇಶ ತೀರ್ಥರು. ಯೋಗ್ಯತೆಯಲ್ಲಿ ಮೊದಲಿಗರು ನಾದವೇದ್ಯ ವರಾಹೋಪಾಸಕರಾದ ವಿಷ್ಣುತೀರ್ಥರು. ಅವರೇ ಶ್ರೀ ಸೋದೇ ಮಠದ ಮೂಲ ಯತಿಗಳು. ಆಚಾರ್ಯರ ತಮ್ಮನಾಗಿ ಜನಿಸಿದ ಮಹಾಭಾಗ್ಯಶಾಲಿಗಳು. 

ಅಂದಿನಿಂದ ಸೋದೆ ಮಠದ ಪರಂಪರೆಯ ೨೦ನೆಯ ಯತಿಗಳಾದ ಶ್ರೀವಾದಿರಾಜರ ತನಕ ಶ್ರೀಕೃಷ್ಣನಿಗೆ ಎರಡು ತಿಂಗಳ ಪೂಜಾ ಪದ್ಧತಿ ಬಳಕೆಯಲ್ಲಿತ್ತು. ಶ್ರೀವಾದಿರಾಜರು ಎರಡು ವರ್ಷಗಳ ಪೂಜಾ ಪದ್ಧತಿಯನ್ನು ಆಚರಣೆಗೆ ತಂದು ಪರ್ಯಾಯ ಮಹೋತ್ಸವಕ್ಕೆ ದೇಶವ್ಯಾಪಿ ಮೆರಗು ನೀಡಿದರು. 

ಸೋದೆ ಮಠದ ಮೊದಲ ಪರ್ಯಾಯ 

ಆದರೆ ಶ್ರೀವಾದಿರಾಜರು ತಾನೇ ಮೊದಲು ಪರ್ಯಾಯ ಪೀಠವನ್ನೇರಲಿಲ್ಲ. ಮೂಲ ಯತಿಗಳ ಜ್ಯೇಷ್ಠತೆಯ ಅನುಕ್ರಮಕ್ಕೆ ಅನುಗುಣವಾಗಿ ಪರ್ಯಾಯ ಕ್ರಮವನ್ನೇರ್ಪಡಿಸಿದರು. ಹೀಗಾಗಿ, ಪರ್ಯಾಯ ಚಕ್ರ ಪ್ರಾರಂಭವಾದದ್ದು ಫ‌ಲಿಮಾರು ಮಠದಿಂದ, ಕ್ರಿ.ಶ. ೧೫೨೨ರಲ್ಲಿ. ಅನಂತರ ಕ್ರಮಶಃ ಆರನೆಯವರಾಗಿ, ಶ್ರೀವಾದಿರಾಜರು ೧೫೩೨ರಲ್ಲಿ ತನ್ನ ಮೊದಲ ಪರ್ಯಾಯ ಮಹೋತ್ಸವವನ್ನಾಚರಿಸಿದರು. ಆಗ ಅವರಿಗೆ ೫೨ರ ಹರಯ.

೧೫೮೦ರಲ್ಲಿ ಅವರ ನಾಲ್ಕನೆಯ ಮತ್ತು ಕೊನೆಯ ಪರ್ಯಾಯ. ಅದು ಅವರ ಶತಮಾನೋತ್ಸವದ ಅಪೂರ್ವ ಪರ್ಯಾಯ ಕೂಡ. ನೂರು ತುಂಬಿದ ವಾದಿರಾಜರು ಕೃಷ್ಣನನ್ನು ಪೂಜಿಸುತ್ತ ಬೇಡಿಕೊಂಡ ಬಗೆ ಅನನ್ಯವಾದದ್ದು-

 ಮಧ್ವಪ್ರತಿಷ್ಠಿತಂ ತ್ವಾಂ

ವಿಧ್ವಸ್ತಾಶೇಷಕುಜನಕುಲಮ್‌|

ಮೂಧಾ ಪ್ರಣಮ್ಯ ಯಾಚೇ

ತದ್‌ವಿರಚಯ ಯದ್ಧಿತಂ ಮಮಾದ್ಯ ಹರೇ ||

(ಮಧ್ವರಿಂದ ಪ್ರತಿಷ್ಠೆಗೊಂಡ ನಿನ್ನನ್ನು , ದುರ್ಜನರ ತಳಿಯನ್ನು ನಿಃಶೇಷವಾಗಿ ತರಿದ ನಿನ್ನನ್ನು , ತಲೆಬಾಗಿ ಮಣಿದು ಬೇಡಿಕೊಳ್ಳುತ್ತೇನೆ. ಓ ಶ್ರೀಹರಿಯೆ, ನನಗೆ ಯಾವುದು ಹಿತವೊ ಅದನ್ನು ಕರುಣಿಸು.)

ನಿಷ್ಕಾಮರಾದ ಏಕಾಂತ ಭಕ್ತರು ಭಗವಂತನನ್ನು ಬೇಡುವ ಪರಿ ಇದು. ಇದು ಪ್ರಹ್ಲಾದ ಭಕ್ತಿ. ಭಗವಂತನಿಂದ ಐಹಿಕವಾದ ಏನನ್ನೂ ಬಯಸದ ನಿವ್ಯಾಜ ಭಕ್ತಿ.

ವಾದಿರಾಜರ ಶಿಷ್ಯ ವಾತ್ಸಲ್ಯವೂ ದೊಡ್ಡದು. ೧೫೯೬ರಲ್ಲಿ ಅವರ ೧೧೬ನೆಯ ವಯಸ್ಸಿನಲ್ಲಿ ಬಂದ ಐದನೆಯ ಪರ್ಯಾಯವನ್ನು ಆಗಲೆ ಮುಪ್ಪಿಗೆ ಹತ್ತಿರವಾದ ತನ್ನ ಶಿಷ್ಯನಿಂದ ಮಾಡಿಸಿ ತಾನು ಸೋದೆಯಲ್ಲಿ ನಿಂತರು.

ಲೋಕೋತ್ತರ ಚರಿತರು 

ವಾದಿರಾಜರ ವರ್ಣಮಯ ವ್ಯಕ್ತಿತ್ವ ಲೋಕೋತ್ತರವಾದದ್ದು. ಅವರು ಅನನ್ಯ ಸಮಾಜ ಸುಧಾರಕರು. ಅದ್ವಿತೀಯ ವಾಗ್ಮಿಗಳು. ಅದ್ಭುತ ಗ್ರಂಥಕಾರರು. ತುಳುನಾಡಿನ ಯತಿಗಳ ಪರಂಪರೆಯಲ್ಲಿ , ಕನ್ನಡ ಮತ್ತು ತುಳು ಭಾಷೆಗಳಲ್ಲಿ ಹಾಡುಗಳನ್ನು ಹೊಸೆದ ವಾಗ್ಗೇಯಕಾರರು. ವ್ಯಾಸಪಂಥ, ದಾಸಪಂಥ ಎರಡರಲ್ಲು ಆಚಾರ್ಯ ಪುರುಷರಾಗಿ ನಿಂತವರು. ಕನಕದಾಸರಂಥ ಹಿರಿಯ ಚೇತನವನ್ನು ಗುರುತಿಸಿ ಉಡುಪಿಯಲ್ಲಿ ಅವರಿಗೆ ನೆಲೆಯಿತ್ತು ಮನ್ನಣೆಯ ಮಣೆಯನ್ನಿತ್ತವರು. 

ಶಾಸ್ತ್ರದಲ್ಲೂ , ಕಾವ್ಯದಲ್ಲೂ ಸವ್ಯಸಾಚಿಗಳಾದ ಅಪೂರ್ವ ಕವಿಮನೀಷಿಗಳು. ತುಳುನಾಡಿನಲ್ಲಿ ಇಬ್ಬರು ಮೊದಲ ಗೃಹಸ್ಥ ಕವಿಗಳು: ಶ್ರೀತ್ರಿವಿಕ್ರಮ ಪಂಡಿತರು ಮತ್ತು ನಾರಾಯಣ ಪಂಡಿತರು. ಇಬ್ಬರು ಮೊದಲ ಸಂನ್ಯಾಸಿ ಕವಿಗಳು ಶ್ರೀ ರಾಜರಾಜೇಶ್ವರರು ಮತ್ತು ಶ್ರೀವಾದಿರಾಜರು. (ಅನಂತರ ಸುಭದ್ರಾಹರಣವೆಂಬ ಮಹಾಕಾವ್ಯವೂ ಸೋದೆ ಮಠದ ಪರಂಪರೆಯಿಂದಲೇ ಬಂತು.)

ವಾದಿರಾಜರ ಕಾವ್ಯ ಶಾಸ್ತ್ರಮಯ ಮತ್ತು ಶಾಸ್ತ್ರ ಕಾವ್ಯಮಯ. ಸಂಸ್ಕೃತದಲ್ಲಿ ಮೊದಲ ಪ್ರವಾಸ ಸಾಹಿತ್ಯ ವೆಂಕಟಾಧ್ವರಿಯ ವಿಶ್ವಗುಣಾದರ್ಶ ಚಂಪೂ. ಎರಡನೆಯದು ಶ್ರೀವಾದಿರಾಜರ ತೀರ್ಥ ಪ್ರಬಂಧ. ಮೇರುಕೃತಿ: ಯುಕ್ತಿಮಲ್ಲಿಕೆ ಅವರ ಯುಕ್ತಿ ಮಲ್ಲಿಕೆ ವೇದಾಂತ ಪ್ರಪಂಚದಲ್ಲೆ ಸಾಟಿಯಿಲ್ಲದ ಮೇರು ಕೃತಿ. ಆದರೂ ಕಾವ್ಯಮಯವಾದ ಸುಂದರ ಪದ್ಯಗಳ ದಿವ್ಯ ಪ್ರಪಂಚ.

ಅದರ ಹಿರಿಮೆಯನ್ನರಿಯದೆ ಕೀಳು ದರ್ಜೆಯ ಇತರ ಕೃತಿಗಳ ಜತೆಗೆ ಅದನ್ನು ಹೋಲಿಸಿ ನೋಡುವ ಪಂಡಿತಂಮನ್ಯರನ್ನು ಅವರು ಹೀಗೆ ಗೇಲಿಮಾಡುತ್ತಾರೆ-

 ತುಲಯಾ ಮಲಯಾದ್ರುತ್ಥ

ಚಂದನೇನೇಂಧನಂ ಖಲಃ |

ಸಮಂ ಸಮಂತಾತ್‌ಕುರುತೇ

ಗ್ರಂಥೌ ಗಂಧಂ ಕರೋತಿ ಕಃ ||

(ಮಲಯಗಿರಿಯಲ್ಲಿ ಬೆಳೆದ ಗಂಧದ ಕೊರಡನ್ನು ಕಟ್ಟಿಗೆಯ ತುಂಡಿನೊಡನೆ ಒಂದೇ ತಟ್ಟೆಯಲ್ಲಿಟ್ಟು ತೂಗುವ ತಿಳಿಗೇಡಿಯಿರಬಹುದು. ಆದರೆ ಕಟ್ಟಿಗೆಯ ತುಂಡಿನಲ್ಲಿ ಕಂಪು ಎಲ್ಲಿಂದ ಬರಬೇಕು?)

ತನ್ನ ಕೃತಿ ಗಂಧದ ಕೊರಡಿನಂತೆ ಕಂಪು ನೀಡುವಂಥದು. ಇತರ ಬರಡು ಗ್ರಂಥಗಳು ಅದರ ಮುಂದೆ ತಲೆಯೆತ್ತಿ ನಿಲ್ಲಬಲ್ಲವೆ ಎಂದು ಕೇಳುವ ಶ್ರೀ ವಾದಿರಾಜರ ಆತ್ಮವಿಶ್ವಾಸದ ಈ ನುಡಿ ಅದ್ಭುತವಾದದ್ದು. ಇದಕ್ಕೆ ವಿರುದ್ಧವಾಗಿ ತನ್ನ ಕೃತಿಯ ಬಗ್ಗೆ ತನಗೆ ಆತ್ಮವಿಶ್ವಾಸವಿಲ್ಲ ಎಂದು ಮಹಾಕವಿ ಕಾಳಿದಾಸ ಅಳುಕುತ್ತಾನೆ: "ಆತ್ಮನ್ಯಪ್ರತ್ಯಯಂ ಚೇತಃ’. 

ಒಮ್ಮೆ ವಾದಿರಾಜರು ಯಾತ್ರೆ ಮಾಡುತ್ತ ಒಂದು ರಾಜ್ಯದಲ್ಲಿ ತಂಗಿದರು. ಅಲ್ಲಿಯ ದೊರೆ ಕುಹಕಿಗಳ ಪಿತೂರಿಗೆ ಬಲಿಯಾಗಿ ವಾದಿರಾಜರನ್ನು ಸ್ವಾಗತಿಸಿ ಅರಮನೆಗೆ ಕರೆದು ಸತ್ಕರಿಸಲಿಲ್ಲ. ಆ ದುರ್ದೈವಿ ದೊರೆಯ ಬಗೆಗೆ ವಾದಿರಾಜರ ಚಾಟಿಯೇಟಿನಂಥ ಮಾತು ಮರೆಯಲಾಗದ್ದು -

ತಾರ್ಣೇ ವೌಕಸಿ ಪಾರ್ಣೇವಾ

ತಾಪಸೋ ಭೂಪ ಸೋ-ವಸತ್‌|

ತಿಥೌ ತೇ-ತಿಥಿರೇತದ್ವದ್‌

ವಿದ್ವಾನ್‌ಕ್ವಾಗಣ್ಯಪುಣ್ಯದಃ ||

 (ಅಯ್ನಾ ದೊರೆ, ಆ ತಪಸ್ವಿ ಯತಿ ಹುಲ್ಲ ಜೋಪಡಿಯಲ್ಲೋ ಎಲೆಮನೆಯಲ್ಲೋ ಹಾಯಾಗಿ ನೆಲಸಿದನು. ನಿನ್ನ ಅನಾದರದಿಂದ ಅವನಿಗೇನೂ ತೊಂದರೆಯಾಗಲಿಲ್ಲ. ಆದರೆ ಇಂಥ ಪುಣ್ಯತಿಥಿಯಲ್ಲಿ , ಎಣೆಯಿರದಷ್ಟು ಪುಣ್ಯ ಕಟ್ಟಿಕೊಡಬಲ್ಲ ವಿದ್ವಾಂಸರಾದ ಇಂಥ ಅತಿಥಿಯನ್ನು ಸತ್ಕರಿಸುವ ಭಾಗ್ಯ ಇನ್ನೆಲ್ಲಿ ನಿನಗೆ?)

ಕಳೆದುಕೊಂಡೆಯಲ್ಲೋ ಬದುಕಿನಲ್ಲೊಂದು ಅಪೂರ್ವ ಅವಕಾಶವನ್ನು? ಮುಚ್ಚಿಬಿಟ್ಟೆಯಲ್ಲೋ ಶಾಶ್ವತವಾಗಿ ಭಾಗ್ಯದ ಬಾಗಿಲನ್ನು?- ಹೀಗೆ ಹಂಗಿಸುತ್ತಾರೆ ವಾದಿರಾಜರು ಕುರುಡು ಕಾಂಚಾಣದ ಮದದಿಂದ ಕುರುಡಾದ ಮಂದಿಯನ್ನು ! ಅವರ ಈ ಸಾತ್ವಿಕ ಕ್ರೋಧದ ಹಿಂದೆ ಮಡುಗಟ್ಟಿರುವ ಅಪಾರ ಕಾರುಣ್ಯವನ್ನು ಗುರುತಿಸಬೇಕು. ಇದು ತಾಯಿ ಮಕ್ಕಳನ್ನು ಗದರುವ ಧಾಟಿ.

ಶಾಸ್ತ್ರದ ಸವಿಯನ್ನು ಒಮ್ಮೆಲೆ ಸವಿಯಲಾಗದ ಮುಗ್ಧರನ್ನು ವಾದಿರಾಜರು ಹೀಗೆ ಸಂತೈಸುತ್ತಾರೆ-

ಅಧುನಾ ವಿಧುನಾ ರುದ್ಧಂ

ಮಧು ನಾ-ಸೀನ್ಮಧುವ್ರತ |

ಉದಿತೇ ಮುದಿತೇ-ಬೆಜ್ ಸ್ಯಾತ್‌

ಅದಿತೇರ್ವಿದಿತೇ ಸುತೇ | 

(ಎಲೆ ಜೇನರಸುವ ದುಂಬಿಯೆ, ಈಗ ಇರುಳಾಯಿತು. ಚಂದ್ರನಿಂದಾಗಿ ತಾವರೆ ಮುದುಡಿತು. ನಿನಗೀಗ ಜೇನು ಸಿಗಲಿಕ್ಕಿಲ್ಲ. ನಿರಾಶೆ ಬೇಡ. ಅದಿತಿಯ ಹೆಸರಾಂತ ಮಗ, ಆದಿತ್ಯ ಮೂಡಿಬರಲಿದ್ದಾನೆ. ಆಗ ತಾವರೆ ಅರಳುತ್ತದೆ. ಆಗ ನೀನು ಅದರ ಜೇನನ್ನು ಸವಿಯಬಲ್ಲೆ. 

ಇದು ವಾದಿರಾಜರ ಮಾತಿನ ಮೋಡಿ. ಶಬ್ದಗಳು ಅವರ ಮುಂದೆ ಕುಣಿಯುತ್ತವೆ. ಅವರ ನಾಲಿಗೆಯ ರಂಗಸ್ಥಳದಲ್ಲಿ ವಾಗೆವಿ ನಲಿಯುತ್ತಾಳೆ. ಅರ್ಥಗಳು ನುಡಿಯ ಬೆನ್ನುಹತ್ತುತ್ತವೆ. ಭವಭೂತಿ ನುಡಿದಂತೆ "ವಾಚಮಥೋ-ನುಧಾವತಿ’, ಮಾತೆಲ್ಲ ಜ್ಯೋತಿಯಾಗಿ ಬೆಳಗುತ್ತದೆ.

ಅಧ್ಯಾತ್ಮದ ಸಿರಿ ಸೊಬಗುಳ್ಳ

ಸಾಹಿತ್ಯದ ಬರಿ ಬೆರಗುಳ್ಳ

ವಾದಿರಾಜರ ಮಾತು ರಸಗುಲ್ಲ

ಯೋಗ ಸಿದ್ಧರ ಪ್ರತಿಷ್ಠೆ

ಈ ಸಂದರ್ಭದಲ್ಲಿ ಒಂದು ಸಂಗತಿ ನೆನಪಾಗುತ್ತಿದೆ - ಶ್ರೀಕೃಷ್ಣನ ಸನ್ನಿಧಿಯಲ್ಲಿ ಮುಖ್ಯಪ್ರಾಣನ ಪ್ರತಿಮೆಯನ್ನು ಸ್ಥಾಪಿಸಿದವರು ಶ್ರೀವಾದಿರಾಜರು. ಶಿಥಿಲವಾದ ಅದರ ಗುಡಿಯನ್ನು ಜೀರ್ಣೋದ್ಧಾರಗೊಳಿಸುವ ಎತ್ತುಗಡೆ ನಡೆದಿತ್ತು - ನಾಕು ದಶಕಗಳ ಹಿಂದೆ.

ಅದಕ್ಕಾಗಿ ಮುಖ್ಯಪ್ರಾಣನ ವಿಗ್ರಹವನ್ನು ಸ್ಥಳಾಂತರಗೊಳಿಸಬೇಕು. ಎಲ್ಲ ಯತಿಗಳೂ ಸೇರಿ ಅಷ್ಟಮಂಗಲ ಪ್ರಶ್ನೆಯಿರಿಸಿದರು. ನಾನೂ ಅಲ್ಲಿದ್ದೆ. ಆಗ ಜ್ಯೋತಿಷಿ ಪುದುವಾಳರು ನುಡಿದ ಮಾತು ಈಗಲೂ ನನ್ನ ಕಿವಿಯಲ್ಲಿ ಗುನುಗುತ್ತಿದೆ. "ಇದನ್ನು ಚಲನೆಗೊಳಿಸಿ ಮತ್ತೆ ಪ್ರತಿಷ್ಠೆ ಮಾಡಿದರೆ ಹಿಂದಿನ ಸನ್ನಿಧಾನ ಮತ್ತೆ ಬರದು’.

ಆಗ ಒಂದು ಪ್ರಶ್ನೆ ಬಂತು. ಎಲ್ಲ ಕಡೆಯೂ ಜೀರ್ಣೋದ್ಧಾರ ಮಾಡುವಾಗ ಪ್ರತಿಮೆಯ ಸ್ಥಳಾಂತರ ಸಹಜಕ್ರಿಯೆ ಇಲ್ಲಿ ಮಾತ್ರ ಏಕೆ ಸಲ್ಲದು?

ಅದಕ್ಕೆ ಪುದುವಾಳರು ಶ್ಲೋಕಾಧಾರ ಸಹಿತ ನೀಡಿದ ಉತ್ತರ: "ಇದು ಎಲ್ಲ ವಿಗ್ರಹಗಳಂತಲ್ಲ. ಇದನ್ನು ಸ್ಥಾಪಿಸಿದವರು ಯೋಗ ಸಿದ್ಧರು. ಮತ್ತೆ ಅಂಥದೇ ಸನ್ನಿಧಾನ ಬರಬೇಕಾದರೆ ಪುನಃಪ್ರತಿಷ್ಠೆ ಮಾಡುವವರೂ ಹಾಗೆಯೇ ಯೋಗಸಿದ್ಧರಿರಬೇಕು. ಆದರೆ ಅಂಥ ಯೋಗಸಿದ್ಧರು ಈಗ ಯಾರೂ ಕಾಣಿಸುತ್ತಿಲ್ಲ’.

ಅನಂತರ ಜೀರ್ಣೋದ್ಧಾರದ ಯೋಜನೆಯನ್ನೆ ಕೈಬಿಡಲಾಯಿತು. ಆ ಶಿಥಿಲವಾದ ಹಳೆಯ ಗರ್ಭಗುಡಿಯಲ್ಲೆ ಮುಖ್ಯಪ್ರಾಣ ಪೂಜೆಗೊಳ್ಳುತ್ತಿದ್ದಾನೆ. ಶ್ರೀವಾದಿರಾಜರ ಯೋಗ ಮಹಿಮೆಗೆ ಇದೊಂದು ಅರ್ವಾಚೀನ ಪುರಾವೆ. ಅದಕೆಂದೆ ಭಾವುಕರು ವಾದಿರಾಜರನ್ನು ಗುರುರಾಜರೆಂದು ಕರೆದರು; ಗುರುಸಾರ್ವಭೌಮರೆಂದು ಕೊಂಡಾಡಿದರು.

ವಾದಿರಾಜಯತಿರಾಜರಿಗುಳ್ಳ

ಯೋಗಸಿದ್ಧಿ - ಸಮೃದ್ಧಿಯ ಬಳ್ಳ

ಯಾರಿಗು ಅಳೆವುದಕಳವಲ್ಲ 

ವೃಂದಾವನಾಚಾರ್ಯರು 

ವಾದಿರಾಜರ ಅನುಗ್ರಹಕ್ಕೆ ಪಾತ್ರರಾದ ಇನ್ನೊಬ್ಬ ಮಹಾನ್‌ಯತಿಗಳು ಸೋದೆಮಠದ ಪರಂಪರೆಯಲ್ಲೆ ಬಂದ ವೃಂದಾವನಾಚಾರ್ಯರು. ಈಗಣ ಯತಿಗಳಿಗಿಂತ ಐದು ತಲೆ ಹಿಂದಿನವರು. ಇವರ ನಿಜನಾಮಧೇಯ ವಿಶ್ವಪ್ರಿಯ ತೀರ್ಥರು. ವಾದಿರಾಜರ ವೃಂದಾವನದ ಮುಂದೆಯೆ ಇವರು ಸ್ವಯಂ ಶಾಸ್ತ್ರಾಧ್ಯಯನ ಮಾಡಿ ಮಹಾನ್‌ವಿದ್ವಾಂಸರಾದರು. ಅದಕ್ಕೆಂದೆ ವೃಂದಾವನಾಚಾರ್ಯರೆಂದೇ ಖ್ಯಾತರಾದರು. ವೃಂದಾವನವೆ ಇವರಿಗೆ ಶಾಸ್ತ್ರರಹಸ್ಯವನ್ನರುಹಿದ ಆಚಾರ್ಯ. ಇವರು ವಾದಿರಾಜರ ಅನುಗ್ರಹದಿಂದ ಯೋಗಸಿದ್ಧರೂ ಆಗಿದ್ದರು.

ಅವರ ಶಿಷ್ಯರೊಬ್ಬರು ಅವರ ಜೀವನ ಚರಿತ್ರೆಯನ್ನು ಬರೆದಿದ್ದಾರೆ: ವಿಶ್ವಪ್ರಿಯತೀರ್ಥವಿಲಾಸ. ಅವರ ಬದುಕಿನ ಅನೇಕ ಪವಾಡಗಳನ್ನು ಅದರಲ್ಲಿ ದಾಖಲಿಸಿದ್ದಾರೆ.

ವೃಂದಾವನಾಚಾರ್ಯರು ಕೊಚ್ಚಿಯ ರಾಜಮನೆತನದವರ ಜತೆ ವಾದ ಮಾಡಿ ವಿಜಯ ಪತಾಕೆ ಹಾರಿಸಿದರು ಇವರ ಪಾಂಡಿತ್ಯದಿಂದ. ಅದಕ್ಕಿಂತ ಹೆಚ್ಚಾಗಿ ಇವರ ಯೋಗಸಿದ್ಧಿಯಿಂದ ಪ್ರಭಾವಿತರಾದ ಆ ರಾಜಮನೆತನದವರು ಇವರಿಂದ ಮಾಧ್ವ ದೀಕ್ಷೆ ಪಡೆದರು. ಆದರೆ, ಆ ಸಂಪರ್ಕ ಮುಂದುವರಿಯಲಿಲ್ಲ ಎನ್ನುವುದು ದುರ್ದೈವದ ಸಂಗತಿ.

ವಿಶ್ವೋತ್ತಮರು 

ಈಗಣ ಯತಿಗಳ ಸಾಕ್ಷಾದ್‌ಗುರುಗಳಾದ ಶ್ರೀ ವಿಶ್ವೋತ್ತಮ ತೀರ್ಥರು ಸಾತ್ವಿಕತೆಯ ಸಾಕಾರಮೂರ್ತಿಯಾಗಿದ್ದರು. ನನ್ನ ವೈಯಕ್ತಿಕ ಅನುಭವವೊಂದನ್ನು ಇಲ್ಲಿ ಉಲ್ಲೇಖೀಸಬೇಕು.

ಒಂದು ಪ್ರಸಂಗದಲ್ಲಿ , ವಿಶ್ವೋತ್ತಮ ತೀರ್ಥರ ನಿಲುವಿಗೆ ವಿರುದ್ಧವಾಗಿ ನಾನು ನ್ಯಾಯಾಲಯದಲ್ಲಿ ಸಾಕ್ಷಿ ಹೇಳಿದೆ. ನನ್ನ ನಿಲುವಿಗೆ ಕೋರ್ಟಿನಲ್ಲಿ ಜಯ ಸಿಕ್ಕಿತು. ಅನಂತರ ಬಹಳ ಕಾಲ ನಾನು ವಿಶ್ವೋತ್ತಮರನ್ನು ಭೇಟಿಯಾಗಲಿಲ್ಲ - ನನ್ನ ನಿಲುವಿನಿಂದ ಅವರಿಗೆ ನೋವಾಗಿರಬಹುದು ಎಂದು ಭಾವಿಸಿ.

ಒಮ್ಮೆ ಅವರಿಂದಲೇ ಅನಿರೀಕ್ಷಿತವಾಗಿ ಕರೆ ಬಂತು. "ತಕ್ಷಣ ಭೇಟಿಯಾಗಬೇಕು’ ಎಂದು ಹೇಳಿ ಕಳಿಸಿದರು. ನಾನು ಮಠಕ್ಕೆ ಹೋದೆ. ಅವರು ಕೇಳಿದ ಮೊದಲ ಪ್ರಶ್ನೆ: "ಏಕೆ ಮಠಕ್ಕೆ ಬರುವುದನ್ನು ಬಿಟ್ಟಿರಿ? ನಿಮ್ಮಂಥ ವಿದ್ವಾಂಸರು ದೂರ ನಿಂತರೆ ಈ ಮಠಗಳು ಇರುವುದಕ್ಕೆ ಏನರ್ಥ?’

ವಿಸ್ಮಿತನಾಗಿ ನಾನೆಂದೆ : "ಸ್ವಾಮಿ, ತಮ್ಮ ನಿಲುವಿಗೆ ವಿರುದ್ಧವಾಗಿ ನಾನು ಸಾಕ್ಷಿ ಹೇಳಿದ್ದೆ. ಅದರಿಂದ ತಮಗೆ ನೋವಾಗಿರಬಹುದು ಎಂದು ದೂರ ನಿಂತೆ, ಅಷ್ಟೆ’.

ಅದಕ್ಕೆ ಅವರ ಪ್ರತಿಕ್ರಿಯೆ ಅದ್ಭುತವಾಗಿತು : "ನನಗೆ ನೋವಾಗಲಿಲ್ಲ. ನಿಮ್ಮ ನಿಲುವು ಇಷ್ಟವಾಯಿತು. ಮುಖಕ್ಕೆ ತಕ್ಕ ಮಾತನಾಡುವ ವಿದ್ವಾಂಸರು ಬೇಕಾದಷ್ಟು ಮಂದಿ ಇದ್ದಾರೆ. ಯಾರ ದಾಕ್ಷಿಣ್ಯಕ್ಕೂ ಬಲಿಯಾಗದೆ ಸತ್ಯವನ್ನು ನಿಷ್ಠುರವಾಗಿ ಹೇಳುವ ನಿಮ್ಮಂಥ ವಿದ್ವಾಂಸರೆ ನನಗೆ ಇಷ್ಟ’. ವಾದಿರಾಜರ ಪೂರ್ಣಾನುಗ್ರಹಕ್ಕೆ ಪಾತ್ರರಾದ ಅವರಂಥವರು ಮಾತ್ರವೆ ಇಂಥ ಮಾತನ್ನಾಡಬಲ್ಲರು. ಅವರು ನಿಜವಾಗಿ ವಿಶ್ವೋತ್ತಮರು.

ಸಮಾಜಮುಖೀ ವಾದಿರಾಜರು 

ಹೀಗೆ ತಲೆಮಾರಿನುದ್ದಕ್ಕೆ ತನ್ನ ತಪಃ ಪ್ರಭಾವವನ್ನು ಬೀರಿದ ಮಹಾಮಹಿಮರು ಶ್ರೀವಾದಿರಾಜರು. ಕೊನೆಯದಾಗಿ ಅವರ ಸಮಾಜ ಸುಧಾರಣೆಯ ಕೆಲವು ಪ್ರಮುಖ ಅಂಶಗಳನ್ನು ಇಲ್ಲಿ ನೆನೆಯಬೇಕು. ವಿಶ್ವತೋಮುಖೀಯಾದ ವಾದಿರಾಜರು ಸಮಾಜಮುಖೀಯಾದ ಬಗೆ, ಸಮಾಜದ ಸಾಮರಸ್ಯಕ್ಕೆ ಅವರು ನೀಡಿದ ಕೊಡುಗೆ ಅನನ್ಯ.

ಸ್ವರ್ಣಕಾರರಾದ ದೈವಜ್ಞ ಬ್ರಾಹ್ಮಣರು ವಾದಿರಾಜರ ತಪಃಶಕ್ತಿಯಿಂದ ಪ್ರಭಾವಿತರಾಗಿ ಅವರ ಶಿಷ್ಯರಾದರು. ಇಡಿಯ ದೈವಜ್ಞ ಬ್ರಾಹ್ಮಣ ಜನಾಂಗ ವಾದಿರಾಜರ ಅನನ್ಯ ಅನುಯಾಯಿಗಳಾದರು. ವಾದಿರಾಜರು ಅವರಿಗೆ ಮಾಧ್ವ ದೀಕ್ಷೆ ನೀಡಿದರು. ಇದು ಆ ಕಾಲದಲ್ಲಿ ಘಟಿಸಿದ ಒಂದು ಮಹಣ್ತೀದ ಸಂಗತಿ. ಇಡಿಯ ಒಂದು ಜನಾಂಗವನ್ನು ಮಾಧ್ವ ಸಂಪ್ರದಾಯದ ತೆಕ್ಕೆಗೆ ಒಳಪಡಿಸಿದ್ದು ಒಂದು ದೈವೀ ಘಟನೆ.

ಹಾಗೆಯೆ ಕೋಟೇಶ್ವರದ ಬ್ರಾಹ್ಮಣರು. ಅವರೂ ಮೂಲತಃ ಕೋಟದ ಸ್ಮಾರ್ತ ಪರಂಪರೆಗೆ ಸೇರಿದವರು. ಕೋಟದವರಂತೆ ತಮಗೂ ಗುರುಮಠವಿಲ್ಲ ಎಂದು ನಂಬಿ ಬದುಕಿದವರು. ಇಡಿಯ ಗ್ರಾಮಕ್ಕೆ ಗ್ರಾಮವೆ ಈ ನಂಬಿಕೆಗೆ ವಿರುದ್ಧವಾಗಿ ಸಿಡಿದೆದ್ದಿತು. ತಮಗೊಬ್ಬ ಮಾರ್ಗದರ್ಶಕ ಗುರು ಬೇಕು ಎಂದು ನಿರ್ಧರಿಸಿತು. ಪರಿಣಾಮವಾಗಿ ಕೋಟೇಶ್ವರದ ಸಮಗ್ರ ಮಂದಿ ಸ್ಮಾರ್ತ ಸಂಪ್ರದಾಯವನ್ನು ತೊರೆದು, ವಾದಿರಾಜರ ವ್ಯಕ್ತಿತ್ವದಿಂದ ಪ್ರಭಾವಿತರಾಗಿ ವಾದಿರಾಜರ ಶಿಷ್ಯರಾಗಿ ಮಾಧ್ವ ದೀಕ್ಷೆಯನ್ನು ಪಡೆದರು.

ವಾದಿರಾಜ ಗುಳ್ಳ 

ಮಟ್ಟಿಯ ಬ್ರಾಹ್ಮಣರದು ಇನ್ನೊಂದೇ ಕಥೆ. ಯಾವುದೋ ಕ್ಷುದ್ರ ಕಾರಣಕ್ಕಾಗಿ ಪರಿಸರದ ಬ್ರಾಹ್ಮಣ ವರ್ಗ ಅವರನ್ನು ದೂರ ಇಟ್ಟಿತ್ತು.

ಗುಂಪನ್ನು ಒಡೆದು, ಜಗಳ ಮುಂದುವರಿಸಿ ಖುಶಿಪಡುವ ಕ್ಷುದ್ರ ಬುದ್ಧಿಯ ಮಂದಿಯನ್ನು ಸಮಾಜದಲ್ಲಿ ನಾವಿಂದೂ ನೋಡಬಹುದು. ಇಂಥವರು ಮಠಗಳಲ್ಲೂ ಸೇರಿಕೊಂಡು ತಮ್ಮ ಕೊಳಕು ಬುದ್ಧಿಯಿಂದ ಮಠದ ಪರಿಸರವನ್ನೂ ಕೆಡಿಸಿಬಿಡುತ್ತಾರೆ. ಪ್ರೀತಿಯ ಸಾಮರಸ್ಯವನ್ನು ಹಂಚಬೇಕಾದ ಮಠಗಳು ಇಂಥವರಿಂದ ಜಗಳದ ಕೇಂದ್ರಗಳಾಗಿ ಬಿಡುತ್ತವೆ. ಒಡಕಿನ ಬೀಜವನ್ನು ಬಿತ್ತುವ ಹೊಲಸು ಹೊಲಗಳಾಗಿ ಬಿಡುತ್ತವೆ.

ವಾದಿರಾಜರು ಇಂಥ ಕೊಳಕು ರಾಜಕೀಯ, ಮಠದ ಹತ್ತಿರ ಸುಳಿಯದಂತೆ ನೋಡಿಕೊಂಡರು. ಅವರು ಸಾಮರಸ್ಯದ ಸಂದೇಶವನ್ನು ಸಾರಿದರು. ಒಡೆದ ಬಗೆಯನ್ನು , ಮನೆಯನ್ನು ಒಂದುಗೂಡಿಸುವ ಹರಿಕಾರರಾದರು. ಅದಕೆಂದೆ ಅವರು ಮಟ್ಟಿಯ ಬ್ರಾಹ್ಮಣರನ್ನು ಮಡಿವಂತರ ತೆಕ್ಕೆಗೆ ಸೇರಿಸಿದರು. ಅಚ್ಚರಿಯೆಂದರೆ, ಆ ಕಾಲದಲ್ಲಿ ಅಭೋಜ್ಯವೆಂದು ನಂಬಲಾಗಿದ್ದ ಗುಳ್ಳದ ಬೀಜವನ್ನು ಅವರಿಗಿತ್ತು ಅದನ್ನು ಬೆಳೆಸುವಂತೆ ಪ್ರೋತ್ಸಾಹಿಸಿದರು. ಅವರು ಬೆಳೆದ ಗುಳ್ಳದ ರುಚಿಯಾದ ಹುಳಿಯನ್ನು ಶ್ರೀಕೃಷ್ಣನಿಗೆ ಸಮರ್ಪಿಸಿದರು. ಅಭೋಜ್ಯವಾಗಿದ್ದ ಗುಳ್ಳ (ಸಂಸ್ಕೃತದ ವೃಂತಾಕ) ವಾದಿರಾಜರಿಂದ ಭೋಜ್ಯವಾಯಿತು. ಪರ್ಯಾಯದ ಅಡುಗೆಯ ಅವಿಭಾಜ್ಯ ಅಂಗವಾಯಿತು. ಪಂಡಿತರು, ಧರ್ಮಶಾಸ್ತ್ರದಲ್ಲಿ ಹೊಸ ಅಮೆಂಡ್‌ಮೆಂಟ್‌ ಸೇರಿಸಿದರು. "ಬದನೆ ನಿಷಿದ್ಧವಾದರೂ ವಾದಿರಾಜ ಗುಳ್ಳ ತಿನ್ನಬಹುದು. ಏಕೆಂದರೆ ವಾದಿರಾಜರು ತನ್ನ ತಪೋಬಲದಿಂದ ಅದನ್ನು ಪಾವನಗೊಳಿಸಿದ್ದಾರೆ’.

ಮಟ್ಟಿಯ ಬ್ರಾಹ್ಮಣರು ಗೆದ್ದರು. ಮಟ್ಟಿಯ ಗುಳ್ಳವೂ ಗೆದ್ದಿತು. ವಾದಿರಾಜರ ಮನೋಬಲ-ತಪೋಬಲ ಎರಡೂ ಅನನ್ಯವಾದದ್ದು. ಸಂಪ್ರದಾಯವಾದಿಗಳ ಜತೆ ನವ್ಯ ಕವಿಗಳೂ ಹಾಡಿದರು -

ತಿನ್ನಬೇಡಿ ಗುಳ್ಳ

ತಿಂದರೆ ವಾದಿರಾಜಗುಳ್ಳ

***

ಒಂದು ಸಾರಿ ಶ್ರೀವಾದಿರಾಜತೀರ್ಥರು (1480 ರಿಂದ 1600) ಸಂಚಾರ ಮಾಡುತ್ತ ಪಂಢರಪುರಕ್ಕೆ ಬಂದರು. ಅಲ್ಲಿ ಒಂದು ದೇವಾಲಯದಲ್ಲಿ ದಿನವೂ ಪೂಜೆ ಮಾಡುತ್ತಾ ತಂಗಿದ್ದರು. ದಿನವೂ ಪೂಜೆ ಮಾಡುತ್ತಾ ಇರುವಾಗ ಮಂದಿರದಿಂದ ಶ್ವೇತ ಬಣ್ಣದ ಕುದುರೆಯೊಂದು ಹೊರಗೆ ಬಂದು ಪಕ್ಕದ ಹೊಲದಲ್ಲಿ ಬೆಳೆದಿರುವ ಕಡಲೆಯನ್ನು ತಿನ್ನುತ್ತಿತ್ತು. ಹೊಲದ ಮಾಲಿಕನಿಗೆ ಕಡಲೆಯ ಪೈರು ಕಡಿಮೆಯಾಗುತ್ತಿರುವುದು ಗಮನಕ್ಕೆ ಬಂತು. ಒಂದು ದಿನ ಕಾವಲಿಗೆ ಕುಳಿತ ಮಾಲಿಕನು ಕುದುರೆಯು ಕಡಲೆಯನ್ನು ತಿನ್ನುತ್ತಿರುವುದನ್ನು ನೋಡಿ ಅದನ್ನು ಹಿಂಬಾಲಿಸಿಕೊಂಡು ಹೋದನು. ಕುದುರೆಯು ಶ್ರೀವಾದಿರಾಜರು ಪೂಜಿಸುತ್ತಿರುವ ಮಂದಿರದಲ್ಲಿ ಬಂದು ಅದೃಶ್ಯವಾಯಿತು. ಮಾಲಿಕನು ಸ್ವಾಮಿಗಳಿಗೆ ಇದನ್ನು ವಿವರಿಸಿದನು. ಯತಿಗಳಿಗೆ ಕುದುರೆಯು ಬೇರೇ ಯಾರೂ ಅಲ್ಲ, ಶ್ರೀಹಯವದನ ನಾಮಕ ಪರಮಾತ್ಮನೇ ಎಂದು ತಿಳಿಯಿತು. ಶ್ರೀವಾದಿರಾಜತೀರ್ಥರು ಮಾಲಿಕನ ಜೊತೆ ಆತನ ಹೊಲವನ್ನು ನೋಡಲು ಹೋದರು. ದಾರಿಯಲ್ಲಿ ಯತಿಗಳು "ಅಶ್ವಧಾಟಿ" ಎಂಬ ಛಂದಸ್ಸಿನಿಂದ ಯುಕ್ತವಾದ ದಶಾವತಾರ ಸ್ತುತಿ ಎಂಬ ಸಂಸ್ಕೃತಕಾವ್ಯವನ್ನು ರಚಿಸಿದರು. 

ಹೊಲವನ್ನು ತಲುಪಿ ಅಲ್ಲಿ ನೋಡಿದಾಗ ಹೊಲದಲ್ಲಿ ಕುದುರೆಯು ತಿಂದಿದ್ದ ಕಡಲೆಯ ಪೈರು ಬಂಗಾರದ್ದಾಗಿತ್ತು. ಹೊಲದ ಮಾಲಿಕನು ಯತಿಗಳಿಗೆ ಸಾಷ್ಟಾಂಗವೆರಗಿ ತನ್ನ ಹೊಲವನ್ನು ಯತಿಗಳ ಪಾದಾರವಿಂದಗಳಿಗೆ ಅರ್ಪಿಸಿದನು. ಯತಿಗಳು ಅದನ್ನು ಸ್ವೀಕರಿಸದೇ ಹೊಲದಲ್ಲಿ ಬೆಳೆಯುವ ಕಡಲೆಯ ಒಂದು ಭಾಗವನ್ನು ಮಾತ್ರ ಹೊಲದ ಮಾಲಿಕನಿಗೆ ಸೋದೆಯ ವಾದಿರಾಜಮಠಕ್ಕೆ ಒಪ್ಪಿಸಲು ಸೂಚಿಸಿದರು. 

ಯತಿಗಳು ಅಂದಿನಿಂದ ಶ್ರೀಹಯವದನ ದೇವರಿಗೆ ಪ್ರತಿದಿನ ಕಡಲೆಬೇಳೆಯಿಂದ ತಯಾರಿಸಿದ ಹಯಗ್ರೀವ ಮಡ್ಡಿಯನ್ನು ತಾವೇ ತಯಾರಿಸಿ ಬಾಣಲೆಯನ್ನು ತಮ್ಮ ತಲೆಯ ಮೇಲೆ ಇಟ್ಟುಕೊಂಡು ಶ್ರೀಹಯವದನ ದೇವರಿಗೆ ನಿತ್ಯವೂ ನೈವೇದ್ಯವನ್ನು ಕೊಡುತ್ತ ಬಂದರು. ಶ್ರೀಹಯವದನ ದೇವರೂ ಕೂಡ ಕುದುರೆಯ ರೂಪದಲ್ಲಿ ಬಂದು ಶ್ರೀವಾದಿರಾಜತೀರ್ಥರ ತಲೆಯ ಮೇಲೆ ಇರುವ ಹಯಗ್ರೀವವನ್ನು ಅವರ ಭುಜಗಳ ಮೇಲೆ ಕಾಲುಗಳನ್ನು ಇಟ್ಟು ತಿನ್ನಲು ಪ್ರಾರಂಭಿಸಿದರು. ಇಂದಿಗೂ ಸಹ ಶ್ರೀವಾದಿರಾಜತೀರ್ಥರ ಮೂಲ ವೃಂದಾವನವಿರುವ ಸೋದೆಯಲ್ಲಿ ಹಯಗ್ರೀವಮಡ್ಡಿಯನ್ನು ತಯಾರಿಸಲು ಬೇಕಾದ ಕಡಲೆಬೇಳೆಯು ಪಂಢರಪುರದ ಅದೇ ಹೊಲದಿಂದಲೇ ಬರುತ್ತದೆ. ಪ್ರತಿದಿನವೂ ಸೋದೆಯಲ್ಲಿ ನಿವಾಸವಾಗಿರುವ ಶ್ರೀಹಯವದನ ದೇವರಿಗೆ ಹಯಗ್ರೀವದ ನೈವೇದ್ಯವನ್ನು ಮಾಡಲಾಗುತ್ತದೆ.

ಓಂ ಶ್ರೀಹಯಾನನಾಯ ನಮಃ ||

एक बार श्रीवादिराजतीर्थयति जी (1480 से 1600) देश संचार करते करते पंढरपुर नगर में चले गये । वहाँ के एक मंदिर में यति जी ने नित्य पूजापाठ का कार्य शुरु किया । प्रतिदिन सुबह पूजा करते समय उस मंदिर से एक सफेद घोडा बाहर निकलकर पास के एक खेत में उगे हुए चनें खाता रहता था । पूजा समाप्त होने पर पुनः मंदिर में लौट कर अदृश्य हो जाता रहता था । खेत के मालिक ने एक दिन खेत जा कर देखा तो उस के चने के पौधें काट कर भूमी पर गिरे दिखायी दिये । उस ने स्वयं खेत की रक्षा के लिये बैठने का निर्णय लिया । 

अगले दिन जब खेत के मालिक सुबह पहरा दे रहा था, तब पुनः एक सफेद घोडा वहाँ चनें खाता हुआ दिखायी दिया । खेत के मालिक ने घोडे को नहीं मारा, परं तु जब घोडा लौट कर मंदिर की ओर गया तो वह मंदिर में गया और यति जी से प्रार्थना किया कि उन के घोडे ने उस के खेत में उगे हुए चनें और पौधों को खा लिया है । यति जी को दिव्यदृष्टि से पता चला कि वह घोडा उन का स्वामी श्रीहयवदन जी ही है, उन्हों ने खेत के मालिक से कितना चना और पौधा नुक्सान हुआ है वह दिखाने को कहा । मालिक यति जी को अपने खेत की ओर ले जा रहा था । तभी यति जी मार्ग में अपने प्रिय श्रीहयवदन जी तथा श्रीमन्महाविष्णु जी की गुणगान से भरे दशावतारस्तुति नाम के एक अद्वितीय गीतकाव्य की रचना की । 

जब यति और मालिक खेत पर पहुंचे तो मालिक के होश उड गये । जहाँ जहाँ घोडे ने खेत में उगे हुए चनें तथा पौधे खाये थें, वहाँ वहाँ उन के स्थान पर सोने के चनें तथा पौधें दिखायी दिये । मालिक झट से यति जी के चरणों पर गिरा तथा अपने संपूर्ण खेत यति जी के हाथों सौंप दिया । यति जी ने खेत लेने से इनकार किया, बदले में उस खेत में उगनेवाले चनें को कर्नाटक के शिरसी नाम के नगर के पास स्थित सोंदा नाम के क्षेत्र में हर वर्ष भेजने का आदेश दिया । 

तब से प्रतिदिन श्रीवादिराजतीर्थ जी अपने भगवान श्रीहयवदन जी को चनें तथा गूड से मिश्रित मधुर खाद्य जिसे "मड्डी" कहते हैं उस का भोग तयार कर के पात्र को अपने सर पर रखकर श्रीहयवदन जी को खिलाना शुरु किया । श्रीहयवदन नामक महाविष्णु जी भी प्रतिदिन अपने भक्त श्रीवादिराजयति जी के करकमलों से तयार किये गये मड्डी के भोग को उन के कंधों पर अपने पांव रखकर स्वीकार करना शुरु किया । जब तक यति जी भूलोक पर रहें तब तक उन्हों ने प्रतिदिन इसी तरह अपने प्रिय भगवान श्रीहयवदन जी को भोग चढाया । 

ॐ श्रीहयाननाय नमः ।।

***

ಆಚಾರ-ವಿಚಾರ ಭಾಗ

ವಾದಿರಾಜರು

 ಕನ್ನಡ ಹರಿದಾಸ ಸಾಹಿತ್ಯದ ಧೀಮಂತ ಹರಿಕಾರರೂ,ವೇದಾಂತ ವಾಙ್ಮಯದ ಮೇರುವೂ,ಆಶು ಕವಿಗಳೂ, ಉಕ್ತಿ ಚತುರರೂ, ಚತುಃಷಷ್ಠಿ ವಿದ್ಯಾವಿಶಾರದರೂ, ಮಾನವ ಆಯುಷ್ಯದ ಪರಿಪೂರ್ಣ ಕಾಲಾವಧಿ ಬಾಳಿ ತೋರಿದ ಸಂತರೂ,ನಿರಂತರ ಹಯಗ್ರೀವೋಪಾಸಕರೂ ಆದ ಉಡುಪಿಯ ಅಷ್ಟಮಠಗಳಲ್ಲೊಂದಾದ ವಿಷ್ಣು ತೀರ್ಥರ ಸತ್ಪರಂಪರಾಗತ ಸೋದೇ ಮಠದ ಸರ್ವಾಂಗೀಣ ಉದ್ಧಾರ ಕರ್ತರೂ, ಶ್ರೀಕೃಷ್ಣಪರಮಾತ್ಮನ ರಜತ ಪೀಠಪುರ ಸನ್ನಿಧಿಯಲ್ಲಿ ದ್ವಂದ್ವ ಮಠಗಳನ್ನು ಮಾಡಿ ಪರ್ಯಾಯಾವಧಿಯನ್ನು ಎರಡು ವರುಷಗಳಿಗೇರಿಸಿ ವಿಶೇಷ ಅನುಕೂಲತೆ ಮಾಡಿದ ಕ್ರಾಂತಿಕಾರರೂ ಆದ ವಾದಿರಾಜ ಗುರು ಸಾರ್ವಭೌಮರಿಗೆ ಆರಾಧನಾಂಗಭೂತವಾದ ವಾಕ್ಕುಸುಮಾಂಜಲಿ. ಉಡುಪಿಯ ಶ್ರೀಕೃಷ್ಣನ ಪೂಜಾ ಪರಿಸರದಲ್ಲಿ ಕನ್ನಡದ ಸರಳ ಸುಂದರ ಕೀರ್ತನೆಗಳನ್ನು ಹಾಡುವ ಸತ್ಸಂಪ್ರದಾಯವನ್ನು ಸಮರ್ಥವಾಗಿ ಪ್ರಾರಂಭಿಸಿದ ಪ್ರವರ್ತಕ ಮನೀಷಿಗಳು ವಾದಿರಾಜರು. ಭಗವಂತನ ದಶಾವತಾರದ ವರ್ಣನೆಯನ್ನು ವೈವಿಧ್ಯಪೂರ್ಣವಾಗಿ ವಿಶಿಷ್ಟಶೈಲಿಯಲ್ಲಿ ಬಿತ್ತರಿಸುವ ವಾದಿರಾಜರ ಕೃತಿಗಳ ಚಮತ್ಕಾರ ಅಪೂರ್ವ. ಲೀಲಾಜಾಲವಾಗಿ ಹೊಸ ಬೀಸಿನಲ್ಲಿ ಸುಂದರ ಸುಮನೋಹರವಾಗಿ ಕಾವ್ಯಕಲೆಯನ್ನು ಅವರು ಅರಳಿಸುವ ಪರಿ ಅನನ್ಯ. 

ಪುರಂದರದಾಸರು, ವ್ಯಾಸರಾಜರು, ಕನಕದಾಸರು ಮುಂತಾದವರ ಸಮಕಾಲೀನರಾಗಿದ್ದು ಉಡುಪಿಯ ಶ್ರೀಕೃಷ್ಣನ ಸೇವೆಯಲ್ಲಿ ಪರಿವ್ರಾಜಕರಾಗಿ ಪರಮ ಪೂಜ್ಯರೆನಿಸಿದರು. ತಾವಿದ್ದ ಪರಿಸರದಲ್ಲೆಲ್ಲಾ ಧಾರ್ಮಿಕ ಜಾಗೃತಿಯ ನವಚೇತನವನ್ನು ಮೂಡಿಸಿ ದಾರ್ಶನಿಕ ಧೃವತಾರೆಗಳೆನಿಸಿದರು. ಉಪಾಸ್ಯಮೂರ್ತಿ ಹಯಗ್ರೀವ ದೇವರ ಮಹಿಮಾತಿಶಯಗಳನ್ನು ಕಂಡು 'ಹಯವದನ' ಅಂಕಿತದಿಂದ ಸಹಸ್ರ ಸಹಸ್ರ ಕೀರ್ತನೆಗಳನ್ನು ಕನ್ನಡ ಜನರ, ಭಗವದ್ಭಕ್ತರ ಒಡಲಿಗೆ ಹಾಕಿದ ಪುಣ್ಯಪುರುಷರು ಶ್ರೀ ವಾದಿರಾಜರು. ದಾಸ-ವ್ಯಾಸ ಪರಂಪರೆಗಳ ಅದ್ಭುತ ಪ್ರತಿಭೆ ಪಾಂಡಿತ್ಯಗಳ ಮಹಾನ್‌ ಪ್ರತೀಕವಾಗಿದ್ದ ವಾದಿರಾಜರು ಕನ್ನಡ ಹಾಗೂ ತುಳು ಭಾಷೆಯಲ್ಲಿ ಕೀರ್ತನೆ ಹಾಗೂ ಪಾಡ್ದನಗಳನ್ನು ಜನ ಸಾಮಾನ್ಯರ ಆತ್ಮೋದ್ಧಾರಕ್ಕಾಗಿ ರಚಿಸಿ, ತಾವೇ ಅವನ್ನು ಹಾಡಿ, ಹಾಡಿಸಿ, ಶತಮಾನಗಳ ಕಾಲ ಜನ ಸಮುದಾಯವನ್ನು ತಣಿಸುತ್ತಿರುವ ಯತಿಶ್ರೇಷ್ಠರು. ಇವರ ಸುಳಾದಿ, ಉಗಾಭೋಗ, ದೇವರ ನಾಮಗಳು ದಿವ್ಯ ಭಾವಗೀತೆಯ ಸೊಬಗಿನಲ್ಲಿ ಸಂಚಾರಿಯಾಗುತ್ತವೆ.ಯಾಗುತ್ತಿವೆ, ತತ್ವಭೋದಕ ದಿವ್ಯಾಮೃತವಾಗಿ ಅವು ಪರಿಣಮಿಸಿವೆ. ತಪಸ್ಸು, ವಿದ್ಯೆ, ವಿರಕ್ತಿ, ಭಗವದ್ಭಕ್ತಿ, ಹಾಗೂ ವಾತ್ಸಲ್ಯಗಳಿಂದ ಯತಿಶ್ರೇಷ್ಠರೆನ್ನಿಸಿದ ವಾದಿರಾಜರು ಕನ್ನಡ ಸಂಸ್ಕೃತಿಗೆ, ಸಾಹಿತ್ಯ ಸಂಗೀತಗಳಿಗೆ, ದರ್ಶನಕ್ಕೆ, ಸಮಾಜದ ಸಂಘಟನೆಗೆ, ಸದಾಚಾರದ ಸಾಮೂಹಿಕ ಪುನರುದ್ದೀಪನಕ್ಕೆ ಸಲ್ಲಿಸಿರುವ ಸೇವೆ ಚಿರಸ್ಮರಣೀಯ. ಸಾಮಾಜಿಕ ಪ್ರಜ್ಞೆ ಹಾಗೂ ಸಮಾಜದ ಬಗ್ಗೆ ಅಪಾರ ಕಳಕಳಿಯನ್ನು ತಮ್ಮ ಕೃತಿಗಳಿಂದ, ಕಾರ್ಯಗಳಿಂದ ಮೆರೆದಿರುವ ವಾದಿರಾಜರು ವಾಸ್ತವ ಪ್ರಜ್ಞೆಯೆಡೆಗೆ ಜನರನ್ನು ಕರೆದೊಯ್ಯುವುದರಲ್ಲಿ ನಿಷ್ಣಾತರು.ಮತ್ತು ಎಂದೂ ಹಿಂತಿರುಗಿದವರಲ್ಲ.ಭಗವನ್ನಾಮಸ್ಮರಣೆ ಮನುಷ್ಯನಿಗೆ ಉತ್ತಮ ಹಿನ್ನೆಲೆಯನ್ನು ನಿರ್ಮಿಸಬಲ್ಲುದೆಂದು ಹೇಳಿ 'ಪ್ರಾತಃ ಕಾಲದಲ್ಲೆದ್ದು ಪಾರ್ಥಸಾರಥಿಯನು ಪ್ರೀತೀಲಿ ನೆನೆದರೆ ಪ್ರೀತನಾಗುವ ಹರಿ, ಮಾತು ಮಾತಿಗೆ ಕೇಶವ ನಾರಾಯಣ ಮಾಧವ ಎನಬಾರದೆ' ಎಂಬ ಸಂದೇಶ ನೀಡಿದವರು. ಅವರ ದಶಾವತಾರ ವರ್ಣನೆಗಳಂತೂ ಭಗವಂತನ ಹತ್ತವತಾರಗಳ ಮುತ್ತಿನ ಮಣಿಹಾರ. ದಶಾವತಾರದ ಕಾವ್ಯರಚನೆಗೆ ಕೈಯಿಟ್ಟೊಡನೆಯೇ ಸ್ವಾದಿಯ ವಾದಿರಾಜರು ಮೈಮರೆಯುತ್ತಾರೆ. ಕಾವ್ಯಸರಸ್ವತಿ ಗೆಜ್ಜೆ ಕಟ್ಟಿಕೊಂಡು ಅವರ ಭಾವಕ್ಕೆ ತಕ್ಕಂತೆ ಹೆಜ್ಜೆ ಹಾಕುತ್ತಾ ನರ್ತಿಸುವ ನಾದ ವೈಖರಿ ಅಸಾಧಾರಣ. ವೈದಿಕ ಸಂಸ್ಕೃತಿಯ ಪುನರುತ್ಥಾನದಲ್ಲಿ ವಾದಿರಾಜರ ಪಾತ್ರ ಬಹಳ ಹಿರಿದು. ತತ್ವಜ್ಞಾನದ ಪ್ರಸಾರ. ವೈಷ್ಣವ ಸಿದ್ಧಾಂತದ ಪ್ರಬಲ ಪ್ರತಿಷ್ಠಾಪನೆಯಲ್ಲಿ ಅದ್ಭುತ ಕ್ರಿಯಾಶಕ್ತಿಯಾದವರು ವಾದಿರಾಜರು. ತಪಶ್ಯಕ್ತಿ, ಮಂತ್ರಸಿದ್ಧಿ ಹಾಗೂ ನಿಶ್ಚಿತ ತತ್ವಜ್ಞಾನಗಳ ತ್ರಿವೇಣಿ ಸಂಗಮವಾಗಿದ್ದ ವಾದಿರಾಜರಿಗೆ ರಾಜ ಮಹಾರಾಜರುಗಳೇ ನಾ ಮುಂದು ತಾ ಮುಂದು ಎಂದು ಬಂದು ಸೇವೆ ಮಾಡುತ್ತಿದ್ದರು. ಸೋದೆಯ ಅರಸಪ್ಪ ನಾಯಕನಿಗಂತೂ ವಾದಿರಾಜರೇ ಸರ್ವಸ್ವ. ವಾದಿರಾಜರನ್ನು ಅನೇಕ ಸಾಮ್ರಾಟ ಸಾಮಂತರುಗಳು ಪ್ರಸಂಗಾಭರಣತೀರ್ಥ, ಷಡ್ದರ್ಶನ ಷಣ್ಮುಖ, ಸರ್ವಜ್ಞಕಲ್ಪ, ಕವಿಕುಲತಿಲಕ ಮುಂತಾದ ಮಹತ್ವದ ಪ್ರಶಸ್ತಿ ಗೌರವಗಳನ್ನು ನೀಡಿ ಗೌರವಿಸಿದರು. ಗೋವೆಯ ದೈವಜ್ಞ ಬ್ರಾಹ್ಮಣರನ್ನು ಅವರ ಸ್ವರೂಪ ಗ್ರಹಿಸಿ ಮುದ್ರಾಧಾರಣೆ ಮಾಡಿ ಚಕ್ರಾಂಕನ ನೀಡಿ ಮಾಧ್ವ ತತ್ವಜ್ಞಾನದ ಮುಮುಕ್ಷ ಗಳಾಗುವಂತೆ  ಅನುಗ್ರಹಿಸಿದರು. ಧರ್ಮಸ್ಥಳ ಮುಂತಾದೆಡೆಗಳಲ್ಲಿ ಈಶ್ವರನನ್ನು ಅರ್ಚಿಸಿ ಪ್ರತಿಷ್ಠಾಪನೆ ಮಾಡಿದ ಇವರ ಸಾಧನೆಯು ವೈಷ್ಣವರು ಶಿವದ್ವೇಷಿಗಳೆಂಬ ಭ್ರಮೆಯನ್ನು ಸಂಪೂರ್ಣ ನಿವಾರಿಸಿತು. ಇವರು ಪಾಠ ಪ್ರವಚನಗಳನ್ನು ನಿರಂತರ ನಡೆಸಿ ಸಿದ್ಧಾಂತ ಪರಂಪರೆಯನ್ನು ಮುಂದುವರೆಸಬಲ್ಲ ಅನೇಕ ಶಿಷ್ಯರನ್ನು ಅರಳಿಸಿದರು. ಇವರ ಸೋದರರೂ ಆನಂತರ ಭಂಡಾರಕೇರಿ ಪೀಠವನ್ನಲಂಕರಿಸಿದವರೂ, ಇವರ ಯುಕ್ತಿಮಲ್ಲಿಕಾ ಗ್ರಂಥಕ್ಕೆ ಟೀಕೆ ಬರೆದವರೂ ಆದ ಸುರೋತ್ತಮತೀರ್ಥರು; ಇವರ ರುಕ್ಮಿಣೀಶವಿಜಯ, ತೀರ್ಥಪ್ರಬಂಧಗಳಿಗೆ ಉತ್ಕೃಷ್ಟ ವ್ಯಾಖ್ಯಾನಗಳನ್ನು ಬರೆದಿರುವ ನಾರಾಯಣಾಚಾರ್ಯರು; ಇವರ ಜೀವನಚರಿತ್ರೆಯನ್ನು ಹೃದಯಂಗಮವಾಗಿ ಚಿತ್ರಿಸಿರುವ ವೃತ್ತರತ್ನ ಸಂಗ್ರಹಕಾರ ರಘುನಾಥಾಚಾರ್ಯರೂ ಈ ಪರಂಪರೆಯಲ್ಲಿ ಪಲ್ಲವಿಸಿದರು.ಶಾಸ್ತ್ರೀಯ ಸಾಹಿತ್ಯದ ಇತಿಹಾಸದಲ್ಲಿ ಮುಖ್ಯ ಮೈಲಿಗಲ್ಲಾಗಿರುವ 'ಯುಕ್ತಿಮಲ್ಲಿಕಾ' ವಾದಿರಾಜರ ಶಾಸ್ತ್ರಪ್ರಭುತ್ವ ಹಾಗೂ ಸಾಹಿತ್ಯಪಟುತ್ವಗಳ ಎತ್ತರ - ಬಿತ್ತರಗಳನ್ನು ದಿಟ್ಟವಾಗಿ ಮೂಡಿಸುವ ಕೃತಿ. ಶ್ರೀಮನ್ನ್ಯಾಯಸುಧಾ ಹಾಗೂ ತತ್ವಪ್ರಕಾಶಿಕಾ ಕೃತಿಗಳಿಗೆ ವಾದಿರಾಜರು ಬರೆದಿರುವ 'ಗುರ್ವರ್ಥದೀಪಿಕೆ' ಎಂಬ ಟೀಕಾಗ್ರಂಥ ವೇದಾಂತಸಾರದ ರಹಸ್ಯಗಳನ್ನೆಲ್ಲಾ, ಸುಧಾ ಪ್ರಮೇಯಗಳನ್ನೆಲ್ಲಾ ಸಂಪೂರ್ಣ ತಿಳಿಸಿ ಕೊಡುವ ಸುಂದರ ಗ್ರಂಥ. ಅನಂದತೀರ್ಥರ ಜ್ಞಾನ ದಿಗಂತಗಳಿಗೆ ಹಿಡಿದಿಟ್ಟ ಕನ್ನಡಿಯಂತೆ ಕಂಗೊಳಿಸುತ್ತಿರುವ ವಾದಿರಾಜರ 'ಮಹಾಭಾರತ ತಾತ್ಪರ್ಯನಿರ್ಣಯ'ದ ಟಿಪ್ಪಣಿ ಸರಳತೆಯ ಸಾಕ್ಷಾತ್ಕಾರ. ವಾದಿರಾಜರ ವೇದವೇದಾಂತಗಳ ವಿಕ್ರಮದ ಬೌದ್ಧಿಕ ಹಿರಿಮೆಗೆ ಹಾಗೂ ಅವರ ವಾದಕೌಶಲ್ಯ ವಾಗ್ವೈಖರೀ, ವಿಷಯ ವಿನ್ಯಾಸ ಪಾಟವಗಳಿಗೆ ನಿತ್ಯ ನಿದರ್ಶನವೆನ್ನಿಸುವಂತಹ ಕೃತಿಗಳು - 'ಸರಸಭಾರತೀವಿಲಾಸ' ಹಾಗೂ 'ತೀರ್ಥಪ್ರಬಂಧ'. 

ವಾದಿರಾಜರು ಪ್ರಯಾಗದಲ್ಲಿರುವ ಬ್ರಹ್ಮದೇವರ ಸಂಧ್ಯಾಮಂಟಪದಲ್ಲಿ ಧ್ಯಾನಪುಳಕಿತ ಮೂರ್ತಿಗಳಾಗಿ ಮೈಮರೆತು ಕುಳಿತಿದ್ದಾಗ ವೇದವ್ಯಾಸದೇವರೇ ಅವರಿಗೆ ದರ್ಶನವಿತ್ತು ವಾದಿರಾಜರ ತಾಯಿ ಹರಿಸಿಕೊಂಡಿದ್ದ ಲಕ್ಷಾಲಂಕಾರವನ್ನು ಹೇಳಿ, ಮಹಾಭಾರತದ ಲಕ್ಷ ಶ್ಲೋಕಗಳ ಕಠಿಣ ತಾತ್ಪರ್ಯವನ್ನು ವಿವರಿಸಿ ಬರೆದು ಅರ್ಪಿಸಿದರೆ ಆ ಹರಕೆ ತೀರಿದಂತಾಗುವುದೆಂದು ನುಡಿದರು. ಆಗ ವಾದಿರಾಜರು ವ್ಯಾಸಭಾರತದ ಹಿನ್ನೆಲೆಯಲ್ಲಿ ಕೋಶಗಳನ್ನು ತಮ್ಮದೇ ಆದ ನಿರೂಪಣ ನೈಪುಣ್ಯದಿಂದ 'ಲಕ್ಷಾಲಂಕಾರ'ವಾಗಿ ರಚಿಸಿ ಉಡುಪಿಗೆ ಬಂದು ಶ್ರೀಕೃಷ್ಣನಿಗೆ ಸಮರ್ಪಣ ಮಾಡಿದ ವಾದಿರಾಜರು ಪ್ರಾತಃಸ್ಮರಣೀಯರಾಗಿದ್ದಾರೆ. 

ಭೂಯಿಷ್ಠಾಂತೇ ನಮ ಉಕ್ತಿಂ ವಧೇಮ.

ಕಾಮಧೇನುರ್ಯಥಾಪೂರ್ವಂ

ಸರ್ವಾಭೀಷ್ಟವರಪ್ರಧಾ

ತಥಾ ಕಲೌ ವಾದಿರಾಜ

ಶ್ರೀಪಾದೋಭೀಷ್ಟದಃ ಸತಾಮ್

ಶ್ರೀಮಧ್ವೇಶಾರ್ಪಣಮಸ್ತು

****

ಮಾಘ ಶುದ್ಧ ದ್ವಾದಶಿ  ಭಾವಿ ಸಮೀರ ವಾದಿರಾಜ ಗುರುಸಾರ್ವಭೌಮರು ಅವತಾರ ಮಾಡಿದ ಸುದಿನ.    ಜಯ ಮಂಗಳಂ ನಿತ್ಯ ಶುಭ ಮಂಗಳಂ.  ಮಂಗಳಂ  ಹಯವದನ ಪದಕಂಜ ಮಧುಪನಿಗೆ ಮಂಗಳಂ ವಾಗ್ವಜ್ರಧಾರನಿಗೆ ಮಂಗಳಂ  ವಾಗೀಶ ಕರಸಂಜಾತನಿಗೆ ಮಂಗಳಂ ಗುರುವಾದಿರಾಜ ರಾಯರಿಗೆ. ಜಯ ಮಂಗಳಂ ನಿತ್ಯ ಶುಭ ಮಂಗಳಂ  ಮಂಗಳಾಕಾರನಿಗೆ ವನೆಹಿತ ಗುಣವಂತನಿಗೆ ಕಂಜದಳ ನೇತ್ರನಿಗೆ ಕಾಮರಿಗೆ ಅಂಜನೇಯ. ಸುತಮತಗೆ ಅನುಕೂಲವಾದವಗೆ ಕುಂಜರಗಮನ ಯತಿಸಾ್ರವಬೌಮರಿಗೆ. ಜಯ ಮಂಗಳಂ ನಿತ್ಯ ಶುಭ ಮಂಗಳಂ  ಪರಿ ಪರಿ ಚರಿತ್ರನಿಗೆ ಪರಿಪೂರ್ಣ ಚಿತ್ಸುಖಗೆ ಪರಮ ಹಂಸಾಚಾರ್ಯ ಪದವೀವಗೆ ಶರಣಜನ ಪಾಲಕೆಗೆ ಸದ್ಧರ್ಮನಿರತನಿಗೆ ಉರಗ ಭೂಷಣನಂತೆ ಊರ್ವಿಯೊಳು ಮೆರೆವವಗೆ. ಜಯ ಮಂಗಳಂ ನಿತ್ಯ ಶುಭ ಮಂಗಳಂ  ವಿದ್ವದಾಧಾರನಿಗೆ ವಿಜಿತಾರಿವರ್ಗನಿಗೆ ಅದ್ವೈತ ಮತ ಹರಗೆ ಆಶ್ಚರ್ಯಗೆ ಊರ್ಧ್ವ ಪುಂಡ್ರಾಂಕಿತಗೆ ಉತ್ಕೃಷ್ಟ ತೇಜನಿಗೆ ಮುದ್ದು ಹಯವದನ್ನ ಮುದದಿಂದ ನೆನವರಿಗೆ. ಜಯ ಮಂಗಳಂ ನಿತ್ಯ ಶುಭ ಮಂಗಳಂ  ಶ್ರೀ 

-by ಇಭರಾಮಪುರಾಧೀಶ

***

Pancha Vrundavana – Vrundavana at Sonda
ತಪೋ ವಿದ್ಯಾ ವಿರಕ್ತ್ಯಾದಿ ಸದ್ಘುಣೌ ಘಾಕರಾನಹಮ್ |
ವಾದಿರಾಜ ಗುರೂನ್ ವಂದೇ ಹಯಗ್ರೀವ ದಯಾಶ್ರಯನ್ ||
ಕಾಮಧೇನು ಯಥಾಪೂರ್ವಮ್ ಸರ್ವಾಭೀಷ್ಟಫಲಪ್ರದಾ |
ತಥಾ ಖಲೌ ವಾದಿರಾಜ: ಶ್ರೀಪಾದೋ ಅಭೀಷ್ಟದ:ಸತಾಮ್||
ಮಾತಾ ರಾಜಾ ಮತ್ಪಿತಾ ವಾದಿರಾಜೋ  ಭ್ರಾತಾ ರಾಜಾ ಮತ್ಸಖಾ ವಾದಿರಾಜ:|
ಸರ್ವಸ್ವಂ ಮೇ ವಾದಿರಾಜೋ ದಯಾಳು: ನಾನ್ಯದ್ದೈವಂ ನೈವ ಜಾನೇ ನ ಜಾನೇ |

ಪಂಚವೃಂದಾವನಗಳಲ್ಲಿ ಯಾವ ದೇವರ ಸನ್ನಿಧಾನವಿದೆ.  –
ಪಂಚವೃಂದಾವನದ ಸುತ್ತಲೂ ಬ್ರಹ್ಮದೇವರು, ಮುಖ್ಯಪ್ರಾಣದೇವರು, ಮಹಾವಿಷ್ಣು, ಮಹರುದ್ರದೇವರು, ಮಧ್ಯದಲ್ಲಿ ವಾದಿರಾಜರು ಇದ್ದಾರೆ.  

ಮಧ್ಯ ವೃಂದಾವನದ ಮುಂಭಾಗದಲ್ಲಿ ಶ್ರೀ ಹಯಗ್ರೀವದೇವರು, ಸುತ್ತಲೂ ರಾಮ, ಕೃಷ್ಣ, ವೇದವ್ಯಾಸರ ಸನ್ನಿಧಿಯಿದೆ. ಬೃಂದಾವನದ ಮಧ್ಯದಲ್ಲಿ ವಾದಿರಾಜರು, ಪ್ರದಕ್ಷಿಣೆ ಆಕಾರದಲ್ಲಿ ಹನುಮ, ಭೀಮ, ಮಧ್ವರು ಇದ್ದಾರೆ. ಉಪವೃಂದಾವನದಲ್ಲಿ ಮತ್ಸ್ಯ, ಕೂರ್ಮ, ವರಾಹ, ನರಸಿಂಹ, ವಾಮನ, ಪರಶುರಾಮ-ಶ್ರೀರಾಮರು, ಕೃಷ್ಣ, ಬುದ್ಧ, ಕಲ್ಕಿ ಮೂರ್ತಿಗಳಿವೆ.  ಈ ಎಲ್ಲ ದೇವತೆಗಳನ್ನೂ ಧ್ಯಾನಿಸುತ್ತಾ ವಾದಿರಾಜರು ಹಯಗ್ರೀವ ಭೂವರಾಹ ಸನ್ನಿಹ ಮಧ್ಯ ವೃಂದಾವನದಲ್ಲಿ ಸನ್ನಿಹಿತರಾಗಿರುತ್ತಾರೆ.

ವಾದಿರಾಜರ ಜನ್ಮ ಸ್ಥಳ –  ಹೂವಿನಕೆರೆ  – ಕುಂಭಾಸಿಯಿಂದ 5 ಕಿಲೋಮೀಟರ್ ದೂರದಲ್ಲಿದೆ.  ಕುಂಭಾಸಿಯಲ್ಲಿ ಗೌತಮ ಋಷಿಗಳು ಗಂಗಾ ಸನ್ನಿಧಾನವನ್ನು ತರಿಸಿದ್ದಾರೆಂದು ಪ್ರತೀತಿ.  

ಕುಂಭಾಸಿ ಕ್ಷೇತ್ರ – ಕುಂಭ + ಅಸಿ = ಕುಂಭಾಸಿ .  ಕುಂಭ = ಅಸುರ, ಅಸಿ – ಖಡ್ಗ.  ಇದು ಹಿಂದೆ ಭೀಮಸೇನ ದೇವರು ಕುಂಭ ಎಂಬ ಅಸುರನನ್ನು ಖಡ್ಗದಿಂದ ಸಂಹರಿಸಿದ ಸ್ಥಳ .    

ಜನ್ಮದಿನ – ಶಾರ್ವರಿ ಸಂವತ್ಸರ ಮಾಘ ಶುದ್ಧ ದ್ವಾದಶಿ

ಜನ್ಮ ನಕ್ಷತ್ರ – ಸ್ವಾತಿ

ಜನ್ಮಸ್ಥಳ – ಕುಂಭಾಸಿ ಬಳಿಯ ಹೂವಿನಕೆರೆ (ಕುಂಭಾಸಿಯಿಂದ ೫ ಕಿಲೋಮೀಟರ್)

ಜನ್ಮನಾಮ – ಭೂವರಾಹ

ತಂದೆ ತಾಯಿ – ರಾಮಾಚಾರ್ಯರು (ದೇವಭಟ್ಟ) ಮತ್ತು ಗೌರೀದೇವಿ

ಮಾಘ ಶುದ್ದ ದ್ವಾದಶೀ, ಶ್ರೀಭೀಮಸೇನ ದೇವರು ಅವತಾರ ಮಾಡಿದ ಪುಣ್ಯದಿನ ಹಾಗೂ ಶ್ರೀವಾದಿರಾಜಗುರು ಸಾರ್ವಭೌಮರು ಅವತರಿಸಿದ ಪರ್ವಕಾಲ - ಈ ಸಂದರ್ಭದಲ್ಲಿ ಶ್ರೀವಾದಿರಾಜ ಗುರುಸಾರ್ವಭೌಮರ ಪುಣ್ಯಸ್ಮರಣೆ 

ಪರಾಶರಮುನಿಯ ಪುತ್ರತ್ವೇನ ವೇದವ್ಯಾಸರೂಪದಿಂದ ಪ್ರಕಟಗೊಂಡ ಪರಾತ್ಪರನಿಗೆ ಸಮ್ಮತವಾದಂತಹ ಸಿದ್ಧಾಂತವನ್ನು ಪೃಥ್ವಿಯಲ್ಲಿ ಪ್ರಚುರಪಡಿಸುವ ವ್ಯಾಜದಿಂದ ಪಡುಗಡಲದಡದ ಪುಟ್ಟಹಳ್ಳಿ ಪಾಜಕದಲ್ಲಿ ಪವಮಾನ ಪ್ರಾದುರ್ಭಾವಗೊಂಡ. ಪೂರ್ಣಪ್ರಜ್ಞಾಭಿದಾನದಿಂದ ಪವನದೇವ ಪ್ರಚುರಪಡಿಸಿದ ಪರಮಮಾಂಗಲೀಕವಾದ ಶಾಸ್ತ್ರವನ್ನು ತಮ್ಮ ಟೀಕಾ, ಟಿಪ್ಪಣಿ, ವ್ಯಾಖ್ಯಾನಗಳಿಂದ ಜನರ ಹೃದಯಸ್ಥಗೊಳಿಸಿದ ಪುಣ್ಯಚರಿತರ ಪಂಕ್ತಿಯಲ್ಲಿ 'ಪ್ರಸಂಗಾಭರಣತೀರ್ಥ' ರೆಂದು ಪ್ರಖ್ಯಾತರಾದ ಶ್ರೀವಾದಿರಾಜ ಶ್ರೀಮಚ್ಚರಣರು ಪ್ರಧಾನವಾಗಿ ಪೂಜನೀಯರಾದ ಪಾವನಾತ್ಮರು. ಮಧ್ವಾನುಜ ಶ್ರೀವಿಷ್ಣುತೀರ್ಥರ ಪರಮಪವಿತ್ರವಾದಂತಹ ಪರಂಪರೆಯಲ್ಲಿ ಬಂದು, ಶ್ರೀವಾಗೀಶತೀರ್ಥರಿಂದ ತುರೀಯಾಶ್ರಮವನ್ನು ಹೊಂದಿ
"ವಾದಿ ಮಧ್ವೋ ಯಸ್ಯ ರಾಜಾ ಸೋSಹಂ ತಸ್ಯ ಕೃಪಾಬಲಾತ್, ವಾದಿರಾಜೋ ನ ಸ್ವಶಕ್ತ್ಯಾ ವೀಣೇವ ರಣಯಾಮಿ ತತ್" ಎಂದು ತಾವು ಪೂರ್ಣಪ್ರಮತಿಗಳು ನುಡಿಸುವ ವೀಣೆಯೆಂದು ವಿನಯವನ್ನು ಮೆರೆದು, ಪೂರ್ಣಪ್ರಜ್ಞರು ಬೀಜಾವಾಪನೆಮಾಡಿದ ಶಾಸ್ತ್ರವನ್ನು ಹೆಮ್ಮರವಾಗಿ ಬೆಳೆಸಿದರು. ಓರ್ವ ಮಹಾನ್ ಯತಿಯಾಗಿ, ಮಹಾಕವಿಯಾಗಿ, ಸಮಾಜಸುಧಾರಕರಾಗಿ, ಕ್ರಾಂತದೃಷ್ಟಿಯ ಮಹಾತಪಸ್ವಿಯಾಗಿ ಶ್ರೀವಾದಿರಾಜರು ಮಾಧ್ವ ವಾಙ್ಮಯಕ್ಕೆ, ಭಾರತೀಯ ಸಾಂಸ್ಕೃತಿಕ ಪರಂಪರೆಗೆ ನೀಡಿದಂತಹ ಕೊಡುಗೆ ಅನ್ಯಾದೃಶ. ಗಂಗಾಸಲಿಲ ಪ್ರವಾಹದಂತೆ ನಿರರ್ಗಳವಾದ ತಮ್ಮ ವಾಗ್ವೈಖರಿಯಿಂದ ಸಂಸ್ಕೃತ, ಕನ್ನಡ ಭಾಷೆಗಳೆರಡರಲ್ಲೂ ಅಸದೃಶ ಸಾಧನೆಯನ್ನು ಮಾಡಿದ ಮಹಾನುಭಾವರು ಶ್ರೀರಾಜರು. ತಮ್ಮ ಯುಕ್ತಿಮಲ್ಲಿಕಾ, ಸರಸಭಾರತೀ ವಿಲಾಸ, ತೀರ್ಥಪ್ರಬಂಧ, ರುಗ್ಮಿಣೀಶವಿಜಯ, ಹರಿಭಕ್ತಿಲತಾ, ಉಪನಿಷದ್ಭಾಷ್ಯ ಟೀಕಾ, ಅಸಂಖ್ಯಾತ ಸ್ತೋತ್ರಗಳು, ವೈಕುಂಠ ವರ್ಣನೆ, ಗುಂಡಕ್ರಿಯೆ, ಲಕ್ಷ್ಮೀ ಶೋಭಾನೆ, ಅವತಾರತ್ರಯ ಸುವ್ವಾಲಿ ಮೊದಲಾದ ಕನ್ನಡದ ದೀರ್ಘಕೃತಿಗಳು, ಕನ್ನಡದಲ್ಲಿ ರಚಿಸಿದ ಅಮೂಲ್ಯ ಕೃತಿಗಳ ಮೂಲಕ ವಾಙ್ಮಯ ಲೋಕದ ಮಹಾತಪಸ್ವಿಗಳೆಸಿಸಿದ ಶ್ರೀವಾದಿರಾಜರು ಭಕ್ತರ ಪಾಲಿನ ಕಾಮಧೇನು. ಮಾಧ್ವ ಯತಿಪರಂಪರೆಯಲ್ಲಿ 'ಮಹಾಕಾವ್ಯ' ವೊಂದರ ರಚನೆಗೆ ನಾಂದಿ ಹಾಡಿದ ಶ್ರೀವಾದಿರಾಜರು ಪುಣೆಯಲ್ಲಿ ಮಾಘಕವಿಯ 'ಶಿಶುಪಾಲವಧ' ವೆಂಬ ವಿದ್ವನ್ಮಾನ್ಯಕಾವ್ಯವನ್ನೂ ಮೀರಿಸುವ, ಸಕಲ ಕಾವ್ಯಲಕ್ಷಣಗಳಿಂದ ಭರಿತವಾದ 'ರುಗ್ಮಿಣೀಶವಿಜಯ' ವೆಂಬ ಪರಮಮಾಂಗಲೀಕ ವಾದಂತಹ ಕೃತಿಯನ್ನು ರಚಿಸಿ ತಮ್ಮ ಪ್ರತಿಭೆಯ ವಿರಾಡ್ರೂಪವನ್ನು ಪ್ರಕಟಗೊಳಿಸಿದರು. ಅಪೂರ್ವವಾದಂತಹ ಅಧ್ಯಾತ್ಮಿಕ ಪ್ರವಾಸಕಥನ 'ತೀರ್ಥಪ್ರಬಂಧ' ದ ರಚನೆ, ವಿಶ್ವಗುರುಶ್ರೀ ಮಧ್ವರ ಮಹೋನ್ನತ ಕೃತಿ 'ಭಾಗವತತಾತ್ಪರ್ಯನಿರ್ಣಯ' ದ ಭಾವವನ್ನು ಪ್ರಕಾಶಗೊಳಿಸುವ 'ಭಾವ ಪ್ರಕಾಶಿಕಾ' ಶ್ರೀಟೀಕಾಕೃತ್ಪಾದರ ಆಂತರ್ಯವನ್ನು ಪ್ರಕಟಗೊಳಿಸುವ 'ನ್ಯಾಯಸುಧಾ ಗುರ್ವರ್ಥದೀಪಿಕಾ', 'ತತ್ತ್ವಪ್ರಕಾಶಿಕಾ ಗುರ್ವರ್ಥದೀಪಿಕಾ' ಕೃತಿಗಳು, ಮಹಾಭಾರತದ ಅತ್ಯಂತ ಕಠಿಣವಾದಂತಹ ಪದಗಳ ಅರ್ಥವಿವರಣೆಗಾಗಿ 'ಲಕ್ಷಾಲಂಕಾರ', ಶಾಸ್ತ್ರಪ್ರಮೇಯಗಳನ್ನು ಏಕತ್ರಪೋಣಿಸಿ, ವೇದಾಂತಕ್ಕೆ ಕಾವ್ಯದ ಮೆರುಗನ್ನು ನೀಡಿದ 'ಯುಕ್ತಿಮಲ್ಲಿಕಾ', ಮುಖ್ಯಪ್ರಾಣನ ಮಹಿಮೆಯನ್ನು ಸಾರುವ 'ಸರಸಭಾರತೀವಿಲಾಸ', ಸಂಸ್ಕೃತಭಾಷೆಯಲ್ಲಿ ಅನೇಕ ಸುಂದರವಾದಂತಹ ಸ್ತ್ರೋತ್ರಗಳ ರಚನೆ, ಕನ್ನಡಭಾಷೆಯಲ್ಲಿ ಭಕ್ತಿ, ಕಾವ್ಯ ಗುಣ ಭರಿತವಾದ ತಮಗೆ ಒಲಿದು ಬಂದ 'ಹಯವದನ' ಅಂಕಿತದಲ್ಲಿ ಅಸಂಖ್ಯ ದೇವರನಾಮಗಳ ರಚನೆ, ನಿಮ್ನ ವರ್ಗದವರಲ್ಲಿಯೂ ಭಕ್ತಿಭಾವದ ಜಾಗರಣಕ್ಕಾಗಿ ತುಳುಭಾಷೆಯಲ್ಲಿ ಕೃತಿರಚನೆ, ಉಡುಪಿಯ ಪರ್ಯಾಯದ ಪುನರ್ ವ್ಯವಸ್ಥೆ, ಧರ್ಮಸ್ಥಳದಲ್ಲಿ ಶ್ರೀಮಂಜುನಾಥದ ಪ್ರತಿಷ್ಠಾಪನೆ ಹೀಗೆ ಎಲ್ಲದರಲ್ಲಿಯೂ ಶ್ರೀವಾದಿರಾಜಗುರುಸಾರ್ವಭೌಮರದು ಭೌಮವ್ಯಕ್ತಿತ್ವ. ಪೂರ್ಣಪ್ರಜ್ಞರ ಜನ್ಮಭೂಮಿ ಪಾಜಕದಲ್ಲಿ ವಿಶ್ವಗುರುಗಳ ಪಾದಚಿಹ್ನೆಗಳಿರುವ ಸ್ಥಳದಲ್ಲಿ 'ಮಧ್ವ' ಪ್ರತೀಕದ ಪ್ರತಿಷ್ಠಾಪನೆ, ಉಡುಪಿಯ ಶ್ರೀಕೃಷ್ಣಸಾನ್ನಿಧ್ಯದಲ್ಲಿ ಮುಖ್ಯಪ್ರಾಣ, ಮಧ್ವರ, ಗರುಡ ಪ್ರತಿಷ್ಠಾಪನೆ ಹೀಗೆ ತಮ್ಮ ಪ್ರತಿಯೊಂದು ಕಾರ್ಯವನ್ನೂ ಶ್ರೀಕೃಷ್ಣ, ಮುಖ್ಯಪ್ರಾಣರ ಮಹಿಮಾಪ್ರಸರಣಕ್ಕೆ ಮುಡಿಪಾಗಿರಿಸಿದ ಮಹನೀಯ ವಾದಿರಾಜರಿಗೆ ಒಲಿದು, ಅಕ್ಕಸಾಲಿ ಗಜಮುಖನ ಎರಕವನ್ನು ಹೊಯ್ದರೂ, ಶ್ರೀಹರಿ ಹಯಮುಖನಾಗಿಯೇ ಪ್ರಕಟಗೊಂಡ.
ಅಭೋಜ್ಯವಾಗಿದ್ದ ಬದನೆಕಾಯಿಯ ಒಂದು ಪ್ರಭೇದವನ್ನು (ಮಟ್ಟುಗುಳ್ಳ) ಶ್ರೀಹರಿಗೆ ನಿವೇದನ ಮಾಡಿ ತಮ್ಮ ಹೆಸರನ್ನೇ ಅದಕ್ಕೆ ಅನುಗ್ರಹಿಸಿ ವಿಖ್ಯಾತ 'ವಾದಿರಾಜಗುಳ್ಳ' ವನ್ನಾಗಿ ಮಾಡಿದ ಮಹಾ ಮುನಿಪುಂಗವ. ಮಟ್ಟಿಯ ಬ್ರಾಹ್ಮಣರಿಗೆ ಸಾಮಾಜಿಕ ಸ್ಥಾನಮಾನವನ್ನು ದಯಪಾಲಿಸಿದ ದಯಾನಿಧಿ. ಭಕ್ಷ್ಯದ ಹೆಸರಿನಲ್ಲಿಯೂ ಭಗವಂತನ ನಾಮಸ್ಮರಣೆ ಯಾಗಬೇಕೆಂಬ ಮಹದುದ್ದೇಶದಿಂದ ಕಡಲೆ-ಬೆಲ್ಲದ ಹೂರಣಕ್ಕೆ 'ಹಯಗ್ರೀವ' ವೆಂಬ ಹೆಸರನ್ನು ಇರಿಸಿ, ತಮ್ಮ ಪ್ರತಿಯೊಂದು ಕ್ರಿಯೆಯೂ ಭಗವನ್ಮುಖ ವೆಂದು ತೋರಿದ ತಪೋನಿಧಿ. ಸೋದೆಯ ಪುಣ್ಯಪರಿಸರ ದಲ್ಲಿ ಶ್ರೀರಾಮ-ಹನುಮಂತ, ಶ್ರೀಕೃಷ್ಣ-ಭೀಮಸೇನ, ಶ್ರೀವೇದವ್ಯಾಸ-ಮಧ್ವರ ವಿಶೇಷ ಸಾನ್ನಿಧ್ಯವಿರುವ, ಶ್ರೀಹರಿಯು ದಶಾವತಾರಗಳಿಂದ ವಿರಾಜಿಸುವ ಪಂಚವೃಂದಾವನಸ್ಥಿತರಾಗಿ, ತಮ್ಮ ಪ್ರೀತಿಯ ಶಿಷ್ಯಭೂತರಾಜರೊಂದಿಗೆ ತಮ್ಮನ್ನು ಆಶ್ರಯಿಸಿದವರ ದುಗುಡವನ್ನು ಕಳೆಯುತ್ತಾ, ತನ್ಮೂಲಕ ಭಕ್ತರಿಗೆ ಶ್ರೀಹರಿಯ, ಮಧ್ವರ ಪಥದ ಪ್ರದರ್ಶಕರಾಗಿರುವ ಪಾವನ ಚರಿತರು ಶ್ರೀವಾದಿರಾಜಗುರು ಸಾರ್ವಭೌಮರು
ಕುದುರೆಯ ವದನನ ಮುದದಿ ಭಜಿಪ
ಮೋದಮುನಿಯ ಮತ ಮಹೋದಧಿಗೆ
ವಿಧುವಿನಂದದಿ ರಾಜಿಪ
ವಾದಿರಾಜ ಗುರುವೆ ಪದದ್ವಂದ್ವಗಳಿಗೆರಗುವೆ
ಖೇದಕಳೆದು ಶ್ರೀದನಂಘ್ರಿ ಧ್ಯಾನವನ್ನು
ಹೃದಯದೊಳಗೆ ಕರುಣಿಸೋII
- by ವೇಣುಗೋಪಾಲ ಬಿ.ಎನ್.
***

No comments:

Post a Comment