Tuesday 1 January 2019

vadirajaru 11 ವಾದಿರಾಜರು 11


Bhavi Sameera

Sri Vadiraja Teertha

Acharya Madhwa established the Dwaita philosophy in 13th Century. He installed Sri Krishna idol at Udupi and established 8 Mutts to worship Lord Krishna. These mutts followed a cyclic system of worshipping and administering the Sri Krishna mutt for every two months as instructed by Madhwacharya

Influenced by Dwaita philosophy, poorvashrama brother of Sri Madhwacharya  took sanyasa and became the first pontiff - Sri VishnuTeertharu, of one of the 8 mutts, Kumbhasi Mutt located at Kumbhasi near Udupi. In his lineage, was a pontiff by name Sri Vageesha Teertharu, who was in search of an able deciple who can carry the Dwaita flag and spread it across India.

A poor couple by name Ramacharya and Gowri of Kumbhasi were childless . They met Sri  Vageesha teertha. He blessed the couple and asked them to give their first child to the mutt, in case they were blessed with a baby boy. In the year 1480 on a Dwadashi day, Gowri delivered a baby boy in a field outside their house. Sri Vageesha teetharu heard the news and brought the baby to the mutt.

The baby boy had a very illuminating face, full of all the signs that His Guru was looking for. The baby was fed with the milk that was used for abhisheka of the Saligrama,daily. The boy was named as Bhooh Varaha. At a very tender age of 5 years, Bhooh Varaha was an expert in Sanskrit, Vedic knowledge . He was an extraordinary orator and had an unambiguous devotion towards Acharya Madhwa and Sri Hari.

Vageesha Teertharu, attracted by his  supernatural skills ordained him into Sanyasa at the age of 7 and named his as SRI VADIRAJA TEERTHA. This was the greatest moment for the Madhwa Philosophy. A star was born, whose fame was about to stay forever

Very soon Vageesha Teertha passed away and the young Swamiji became the head of the mutt. He approached Sri Vyasa Teetha, who was at Vijayanagara[Hampi] to bless him with the divine  knowledge of Dwaita. Vadirajaru completed his studies, under the guidance of Sri Vyasa rajaru at Hampi along with many of his contemporaries such as Sri Vijayendra Teertharu of Sri Raghavendra Swamy mutt.

Upon his return, the young swamiji took up the administration of the mutt. He attended his first paryaya and worshipped Lord Krishna.

He travelled across the country, visiting all the holy places. He started his journey from udupi, went to Dwaraka, then towards the North. It is said that He met Sri Vedavyasa and  Sri Madhwacharya at Badri and sought their blessings. He then moved towards, east and then to south. In South, at Triupati, when he was about to climb the hill, he saw the entire hill as Saligrama. Hence he decided to climb it through his knees . Such was his devotion to the Lord. He documented his journey as travelogue in Sanskrit, Teertha Prabhanda, which is referred as one of the most authentic historical document that deals with geography of all the places he visited at that time. He explains in detail, the philosophical importance of each of the Kshetra, the rivers

During his travel, he had debates with greatest of scholars of different schools of philosophies such as Advaita, Buddhism, Jainism etc and won all of them. He accepted many disciples, who after their defeat surrendered to the Dwaita Philosophy

Sri Vadiraja Teertha was a great author, an unmatched poet and an expert in Sanskrit, Kannada, Tulu and Konkani languages

He authored many books which are considered as gems in Dwaita philosophy.
1. Yukti Mallika
2. Sarasa Bharati Vilasa
3. Rukmineesha Vijaya are some of his greatest work explaining the tenants of Madhwacharya's teachings
Among them, Rukmineesha Vijaya is an extraordinary Sanskrit work that describes the beauty of Rukmini-The consort of Lord Krishna, Her marriage with Krishna and the slaying of Shishupala

This beautiful work was completed in just 18 days , that too while applying sandal wood paste  to his body everyday,at the time of lunch. It was written in Pune. When vadiraja teertha was in Pune, he heard about a book by name Shishupala Vadha, written by Magha Kavi. It was thought to be the most hailed book and was recognized by Peshwa of Pune. Vadiraja Teertha approached Magha Kavi and Peshwa. He said that he did not think that this book was worth of that respect, as the name itself glorifies the villain- Shishupala rather then the Hero-Lord Krishna. Magha Kavi challenged Him to write a book that can exceed his work on the same topic and thus was born Rukmineesha Vijaya. After reading the book Magha Kavi questioned as to how a sanyasi can describe a woman(Rukimini) so beautifully, without ever seeing or touching a woman in life. Sri Vadiraja teertha explains him with an example. Pleased by his explanation and influenced by the work, he admits that Rukmineesha Vijaya is the book that exceeds all other sanskrit work prevailing at that time.

Sri Vadirajaru also composed many works in praise of Lord such as Dashavtara Stuti - A sanskrit work that describes Lord Sri Hari's all 10 avtaras. It is a poem composed in Ashwa dhati , which when rendered has the notes similar to horse dance. Lord Sri Hari appeared in the form of a white Horse and danced infront of him, whenever this poem was recited by Sri Vadirajaru. It was his daily practice to offer a naivedya made of Horse gram and Jaggery to the Lord, who used to appear as horse,keep his front two legs on the shoulders of Sri Vadirajaru and eat the offering. A small amount was left which used to be Vadiraja Teertha's food.

He composed many devotional songs in Kannada. The most popular was Lakshmi shobhana. This song beautifully depicts Godess Lakshmi's marriage with Narayana. Soon after composing this song, a incident happened.  Sri Vadirajaru was invited for a marriage. On the marriage day, the bride died suddenly. Sri Vadirajaru sang this song and requested Lord to bless the bride with life again. Pleased by his devotion, Lord brought back life of the bride. Since then,  its a common practice to sing this song in marriage across Karnataka.
Through his songs in Kannada, Tulu and Konkani, he helped common people of all castes to understand Acharya Madhwa's teachings and bring them closer to God

As an able Administrator
Sri Vadiraja Teertha was not just a sanyasi but also an able administrator who contributed a lot for the Sri Krishna mutt at Udupi.
The Vijayanagara emperors made Ratnabhisheka to Vadirajaru. He used all the amount donated by emperors for the welfare of temple. He installed an idol of Madhwacharya at Madhwa's birth place Pajaka.
He also installed Lord Hanuman in Udupi.It is believed that he constructed a temple tower in memory of great Haridasa Sri Kanakadasaru which is known as Kanaka Gopura today
He was so courageous that he changed the paryaya of 8 mutts from 2 months to 2 years, which is followed even today
He reinstalled Lord Shiva at Kuduma village according to Vedic rituals and named it as Dharmasthala,  which is the most popular pilgrim center in Karnataka today

As a social reformer
There were a group of brahmins who were goldsmiths by profession. They were not treated on par with other Brahmins. Once a goldsmith from this community was making an idol of Ganesha. However it used to take the shape of Lord Hayagriva everyday. One day this gold smith visited Sri Vadiraja'mutt and told him about this incident.  Sri Vadirajaru accepted this idol and granted the whole goldsmith community the Vaishnava deeksha. Today this community is the largest follower of Vadiraj mutt
Apart from this, he gave vaishnava deeksha to many downtrodden people and helped them to lead a respectful life

Last years
After the collapse of Vijayanagara empire, he helped one Arsappa nayak of Sonda to regain his territory.  The king requested swamiji to build a mutt in Sonda forever. He accepted and with help of the king, built Rama Trivikrama temple
He gave away the sixth Paryaya in favour of the junior pontiff of the mutt and returned to Sonda. He installed lord Shiva at Sonda resembling Chandramoulishvara at Udupi, built Dhavalaganga like Madhwa Sarvora and installed lord krishna and Hanuman. In short
Sonda became a replica of Udupi
He ordered his deciples to build a Brundavana for himself.  After leading a meaningful life of 120 years (1480-1600)Sri Vadirajaru entered the brundavana alive and is till today blessing everybody
From a peethadipathi to a an excellent orator to an humble devotee to an extraordinary scholar to a social reformer....He touched all walks of life.There are no words that can ever describe Sri Vadiraja Teertha.

Do visit sonda and seek his blessings

Sri Krishnarpanamastu
***
ಶ್ರೀ ವಾದಿರಾಜರು (recd in whatsapp) ಉಡುಪಿಯ ಅಷ್ಟಮಠಗಲ್ಲೊಂದಾದ ಸೋದೆ ಮಠದ ಪೀಠಾರೋಹಣ ಮಾಡಿ 120 ವರ್ಷಗಳ ಕಾಲ ಜೀವಿಸಿದ ಪುಣ್ಯ ಪುರುಷರು ಶ್ರೀವಾದಿರಾಜ ಗುರು ಸಾರ್ವಭೌಮರು .ಕನ್ನಡ ಭಾಷೆಯಲ್ಲಿ ಭಾಗವತ ಧರ್ಮವನ್ನು ಪ್ರಚಾರಮಾಡಿದ ಯತಿಗಳಲ್ಲಿ ಶ್ರೀವಾದಿರಾಜರು ನಾಲ್ಕನೇಯವರು.ಶ್ರೀಮದಾಚಾರ್ಯರ ನಂತರ ಇವರ ಹೆಸರು ಬಹು ಸನ್ಮಾನ್ಯವಾಗಿದೆ .ದೊಡ್ಡ ಗ್ರಂಥಕರ್ತರು , ವಾದಿನಿಗ್ರಹ ಮಾಡಿದ ಪಂಡಿತರು .ರುಕ್ಮಿಣೀಶ ವಿಜಯ ತೀರ್ಥ ಪ್ರಬಂಧಗಳಂಥ ಸರಸ ಕಾವ್ಯಗಳನ್ನೂ ಕನ್ನಡದಲ್ಲಿ ಸಾವಿರಾರು ದೇವರನಾಮಗಳನ್ನೂ ರಚಿಸಿದವರು. ಯುಕ್ತಿಮಲ್ಲಿಕೆ ಇವರ ಸ್ವತಂತ್ರ ಗ್ರಂಥಗಳಲ್ಲೊoದು .ಯುಕ್ತಿ ಬಲದಿಂದ ಸಿದ್ಧಾಂತ ಸ್ಥಾಪನೆ ಮಾಡುವುದರಲ್ಲಿ ಇವರಿಗೆ ಸದೃಶರು ಇನ್ನೊಬ್ಬರಿಲ್ಲ . ಇವರ ಚರಿತ್ರೆಯಲ್ಲಿ ಅಸಾಧಾರಣ ಸಂಗತಿಗಳು ಕಂಡುಬರುತ್ತವೆ . ಶ್ರೀಮದಾಚಾರ್ಯರ ತಮ್ಮಂದಿರಾದ ಶ್ರೀವಿಷ್ಣು ತೀರ್ಥರು ಉಡುಪಿಯ ಅಷ್ಟಮಠಗಳಲ್ಲಿ ಸ್ವಾದಿ ಮಠದ ಮೂಲ ಪುರುಷರು .ಈ ಪರಂಪರೆಯಲ್ಲಿ ಹದಿನೇಳನೇ ಯತಿಗಳು ಶ್ರೀವಾಗೀಶ ತೀರ್ಥರು .ತಮ್ಮ ಪೀಠಕ್ಕೆ ಒಬ್ಬ ಉತ್ತರಾಧಿಕಾರಿಯ ಶೋಧನೆಯಲ್ಲಿರುವಾಗ, ಒಮ್ಮೆ ದಕ್ಷಿಣ ಕನ್ನಡ ಜಿಲ್ಲೆಯ ಕುಂಭಾಸಿಯ ಬಳಿ ಹೂವಿನಕೆರೆಯೆಂಬ ಗ್ರಾಮ ಅಲ್ಲಿ ದೇವರ ರಾಮಭಟ್ಟನೆಂಬ ವಿದ್ಯಾವಂತ ಬ್ರಾಹ್ಮಣ, ಆತನ ಹೆಂಡತಿ ಗೌರಿದೇವಿ.ಗೌರಿದೇವಿ ತನಗೆ ಮೊದಲು ಪುತ್ರ ಸಂತಾನವಾದರೆ ದೇವರಿಗೆ ಲಕ್ಷಾಭರಣ ಮಾಡಿಸುವ ಹರಕೆ ಮಾಡಿದ್ದಳು .ಹೀಗಿರುವಾಗ ಅದೇ ಸಮಯಕ್ಕೆ ಆ ಗ್ರಾಮಕ್ಕೆ ಆಗಮಿಸಿದ ಶ್ರೀವಾಗೀಶತೀರ್ಥರ ಬಳಿ ಬಂದು ನಮಸ್ಕಾರ ಮಾಡಿದಾಗ ಅಮ್ಮಾ ನಿನಗೆ ಪ್ರಥಮತಃ ಪುತ್ರ ಸಂತಾನವಾಗುವದು ಅವನು ಮಾತ್ರ ನಮ್ಮವನಾಗುವನು ಎಂದು ಆಶೀರ್ವಾದ ಮಾಡಿದರು . ಅವಳಿಗೆ ಸ್ವಾಮಿಗಳ ಮಾತು ಕೇಳಿ ದಿಗ್ಭ್ರಮೆಯಾಯಿತು .ನನ್ನಸಂಕಲ್ಪ ಇವರಿಗೆ ಹೇಗೆ ತಿಳಿಯಿತು ಎಂಬ ಸಂದೇಹ ಉಂಟಾಯಿತು. 6:53 pm 2 ಗೌರಮ್ಮ ಆರು ತಿಂಗಳು ಗರ್ಭಿಣಿಯಾಗಿದ್ದಾಗ ಸ್ವಾಮಿಗಳು ತೀರ್ಥಪ್ರಸಾದಕ್ಕೆ ಮಠಕ್ಕೆ ಬರಲು ಸಂದೇಶ ಕಳುಹಿಸಿದರು . ತೀರ್ಥ ಪ್ರಸಾದವಾಯ್ತು , ಚಿಂತಾಕ್ರಾಂತನಾಗಿದ್ದ ಭಟ್ಟರನ್ನು ಕರೆದು , ಏನೋ ಚಿಂತಿಸುತ್ತಿರುವಂತಿದೆ ಎಂದಾಗ ಏನೂ ಇಲ್ಲವೆಂದು ಸುಮ್ಮನಾದ .ಸ್ವಾಮಿಗಳು ಕಣ್ಣು ಹೋಗುವಷ್ಟು ಕಾಡಿಗೆಏಕೆ ? ಮಗು ನಿನ್ನ ಮನೆಯಲ್ಲಿ ಹುಟ್ಟಿದರೆ ನಿನ್ನದು , ಮನೆಯ ಹೊರಗೆ ಹುಟ್ಟಿದರೆ ಅದು ನಮ್ಮ ಮಠಕ್ಕೆ ಸೇರುತ್ತದೆ ಎಂದರು .ಅಂದಿನಿಂದಲೇ ಭಟ್ಟರು ಗೌರಮ್ಮನನ್ನು ಮನೆಯ ಬಾಗಿಲಿಂದಾಚೆ ಹೋಗದಂತೆ ಕಟ್ಟಪ್ಪಣೆ ಮಾಡಿದ ಗೌರಮ್ಮನಿಗೂ ಅದು ಇಷ್ಟವಾಗಿದ್ದುದರಿಂದ ಹೊಸ್ತಿಲು ದಾಟುತ್ತಿರಲಿಲ್ಲ .ನವಮಾಸ ತುಂಬುವ ಕಾಲಕ್ಕೆ ಸರಿಯಾಗಿ ಒಂದು ಸಾಧನೆ ದ್ವಾದಶಿದಿನ ಭಟ್ಟರು ಸಕಾಲಕ್ಕೆ ಪಾರಣೆಗೆ ಕುಳಿತರು .ಅಷ್ಟು ಹೊತ್ತಿಗೆ ಸರಿಯಾಗಿ ಮನೆಯ ಹಿಂದಿನ ಭಟ್ಟರ ಗದ್ದೆಗೆ ಹಸು ಒಂದು ನುಗ್ಗಿತು .ತಿಂದು ತುಳಿದು ಗದ್ದೆಯನ್ನು ಕೆಡಿಸುವದೆಂದು ಗೌರಮ್ಮನು ದನಗಳನ್ನು ಓಡಿಸಲು ಹೊರಟಳು ,ನಡೆದ ಆಯಾಸ, ಮೇಲಾಗಿ ಪ್ರಸವ ವೇದನೆ ಪ್ರಾರಂಭವಾಗಿ ಮೈ ಬೆವರಿ ಕಣ್ಣಿಗೆ ಕತ್ತಲು ಕವಿದು ಒಂದು ಮರದಡಿಯಲ್ಲಿ ಕುಳಿತು ವಿಶ್ರಮಿಸಿಕೊಂಡು ಮನೆಗೆ ಬರಬೇಕೆನ್ನುವಷ್ಟರಲ್ಲಿ ಪ್ರಸವವಾಯಿತು .ಪುತ್ರ ಸಂತಾನವಾಯಿತೆಂಬ ಸಂತೋಷಕ್ಕಿಂತ ಮನೆಯ ಹೊರಗೆ ಜನನವಾಯಿತಲ್ಲ ಎಂಬ ವ್ಯಾಕುಲವೇ ಅಧಿಕವಾಯಿತು . 6:53 pm 3 ಭಗವದಿಚ್ಛೆಯೆಂದು ಭಟ್ಟರು ತಟಸ್ಥರಾದರು . ವಾಗೀಶರಿಗೆ ವಿಷಯ ತಿಳಿದು ಸಂತೋಷಗೊಂಡರು ಮಗುವನ್ನು ಹರಿವಾಣದಲ್ಲಿಟ್ಟು ತರುವಂತೆ ಹೇಳಿಕಳಿಸಿದರು .ದ್ವಾತ್ರಿoಶಲ್ಲಕ್ಷಣೋಪೇತನಾದ ಈ ಶಿಶುವು ಮನುಷ್ಯಮಾತ್ರನಲ್ಲವೆಂದರುಹಿ ನೋಡಿದೆಯಾ ಭಗವದಿಚ್ಛೆ ಹೇಗಿದೆ, ಸಾಧನೆಯ ದ್ವಾದಶಿ ದಿನ ಅದಿತಿಯ ಗರ್ಭದಲ್ಲಿ ವಾಮನನುದಿಸಿದಂತೆ ಗೌರಿದೇವಿಯರುದರದಲ್ಲಿ ಭೂ ವರಹನುದಿಸಿದನು ಎಂದರು ವಾಗೀಶರು .ಇದು ನಿಮ್ಮ ಮಗನಲ್ಲವಷ್ಟೆ ! ದೇವರ ಮಗನಷ್ಟೆ ! ಎಂದರು .ಮಗುವಿಗೆ ಭೂವರಾಹನೆಂದು ನಾಮಕರಣ ಮಾಡುವಂತೆ ಆದೇಶಿಸಿದರು .ಬಾಲಕನಿಗೆ ಕಾಲಕಾಲದಲ್ಲಿ ಚೌಲ ಉಪನಯನಗಳಾದವು .ಹಯಗ್ರೀವ ಮಂತ್ರ ಉಪದೇಶ ಗುರುಗಳಿಂದ ಪಡೆದು ತಪಶ್ಚರ್ಯದಿಂದ ಸಿದ್ಧಿಪಡೆದರು .ವಾಗೀಶರು ಒಮ್ಮೆ ಎಲ್ಲ ಶಿಷ್ಯರನ್ನು ಸೇರಿಸಿ ವಿವಿಧ ಫಲಗಳನ್ನು ವಸ್ತ್ರಗಳನ್ನು ಸಲಾಗಿಡಿಸಿ ನಿಮಗೆ ಬೇಕಾದುದನ್ನು ತೆಗೆದುಕೊಳ್ಳಬಹುದೆಂದು ಹೇಳಿದಾಗ ಭುವರಾಹನ ಹೊರತಾಗಿ ಎಲ್ಲರೂ ತಮಗೆ ಬೇಕಾದುದನ್ನು ತೆಗೆದುಕೊಂಡರು.ಭುವರಾಹನು ಮಾತ್ರ ಏನೂ ಬೇಡಲಿಲ್ಲ .ನಿನಗೆ ಬೇಕಾದ್ದನ್ನು ಕೇಳು ಎಂದು ಗುರುಗಳು ಹೇಳಿದಾಗ ಸ್ವಾಮಿ " ಗುರುಭಕುತಿಬೇಕು l ಹಿರಿಯರ ಕರುಣಬೇಕು l ಹರಿಕಥೆಗಳ ನಿತ್ಯ ಕೇಳುತಿರಬೇಕು l ವಿರಕುತಿಬೇಕು l ವಿಷ್ಣುವಿನಾರಾಧನೆಬೇಕು l ವರಮಂತ್ರ ಜಪಬೇಕು l ತಪಬೇಕು ಪರಗತಿಗೆ l ಶಿರಿ ಹಯವದನನ ಪರಮಾನುಗ್ರಹಬೇಕು l ವಿಷಯನಿಗ್ರಹಬೇಕು l ಎಂದು ನುಡಿದನು .
4
ಇದು ಪೂರ್ವಾಶ್ರಮದಲ್ಲಿ ರಚಿಸಿದ ವಾದಿರಾಜರ ಪ್ರಥಮ ಉಗಾಭೋಗ . ಹಯಗ್ರೀವೋಪಾಸಕರಾಗಿದ್ದರಿಂದ ' "ಹಯವದನ"ವೆಂದು ಅಂಕಿತ ಮಾಡಿದರು .ದಿನಗಳು ಕಳೆದಂತೆ ಭೂವರನು ಮಠದಲ್ಲಿಯೇ ವಾಸಮಾಡಿದನು .ಭೂವರಾಹಾನಿಗೆ ಸಂನ್ಯಾಸ ನೀಡುವರೆಂದು ತಿಳಿದು ತಂದೆ ಯತಿಗಳಿಗೆ ಮುಂದೇನು ಗತಿ ಎಂದು ಆತಂಕಗೊಂಡರು .ಆಗ ಸ್ವಾಮಿಗಳು ನಿಮಗೆ ಮತ್ತೊಬ್ಬ ಮಗನ ಜನನವಾಗುವವರೆಗೆ ಭೂವರಾನಿಗೆ ಸಂನ್ಯಾಸ ಕೊಡುವುದಿಲ್ಲವೆಂದು ಅಭಯವಿತ್ತರು .ದೈವಯೋಗದಿಂದ ಭಟ್ಟನಿಗೆ ಮತ್ತೆ ಪುತ್ರೋತ್ಸವವಾಗಿ , ಒಂದು ಸುಮುಹೂರ್ತದಲ್ಲಿ ಭೂವರನಿಗೆ ಸಂನ್ಯಾಸ ದೀಕ್ಷೆಯಿತ್ತು  'ವಾದಿರಾಜ ' ಎಂದು ನಾಮಕರಣ ಮಾಡಿದರು .
    ವಾಗೀಶತೀರ್ಥರು ವೃಂದಾವನಸ್ಥರಾದ ತರುವಾಯ ವಾದಿರಾಜರು ಸಂಸ್ಥಾನ ಸಹಿತವಾಗಿ ವಿಜಯನಗರಕ್ಕೆ ಬಂದರು . ಅಲ್ಲಿ ವ್ಯಾಸರಾಜರು ಸಂನ್ಯಾಸಿಗಳಿಗೆ ಪ್ರತ್ಯೇಕ ತರಗತಿ ಮಾಡಿ ಪಾಠಮಾಡುತ್ತಿದ್ದರು . ವಾದಿರಾಜರಿಗೆ  ವಿಷ್ಣು ತೀರ್ಥರೊಂದಿಗೆ ( ವಿಜಯಿoದ್ರರು ) ಪಾಠ ಪ್ರಾರಂಭವಾಯಿತು .ವ್ಯಾಸರಾಜರ ಉಪದೇಶಕ್ರಮ , ವಾದಿಗಳೊಡನೆ ವಾದಿಸುವ ಕ್ರಮಗಳನ್ನು ವಾದಿರಾಜರು ಚೆನ್ನಾಗಿ ಗ್ರಹಿಸಿದರು .ಇವರ ಪ್ರೌಢಿಮೆಯನ್ನು ಕಂಡು ವಿಜಯನಗರದ ಕೃಷ್ಣದೇವರಾಯನು ಇವರಿಗೆ _ "ಪ್ರಸಂಗಾಭರಣತೀರ್ಥ " ರೆಂಬ ಗೌರವನಾಮದಿಂದ ಕರೆದನು .ವಾಲಿಯ ಭಂಡಾರವೆಂಬ ಸ್ಥಳದಲ್ಲಿ ಬಹಳ ಗುಪ್ತಧನವಿದೆಯೆಂದು ವಾದಿರಾಜರು ಆ ಸ್ಥಳವನ್ನು ಶೋಧನೆ ಮಾಡಿಸಿದಾಗ ಅಲ್ಲಿ ಎರಡು ಸುಂದರ ವಿಗ್ರಹಗಳು ಮತ್ತು ಅಪರಿಮಿತ ದ್ರವ್ಯರಾಶಿ ಕರಗತವಾಯಿತು .ದ್ರವ್ಯರಾಶಿಯನ್ನು ಕೃಷ್ಣದೇವರಾಯನಿಗೆ ಒಪ್ಪಿಸಿ ವಿಗ್ರಗಳನ್ನು ತಮ್ಮ ಮಠದಲ್ಲಿಟ್ಟುಕೊಂಡರು .ರಾಮವಿಠಲರೆಂಬ ಮೂರ್ತಿಗಳು ಇಂದಿಗೂ ಮಠದಲ್ಲಿ  ಪೂಜೆಗೊಳ್ಳುತ್ತಿವೆ .ವ್ಯಾಸರಾಜರಲ್ಲಿ ತಮ್ಮ ವ್ಯಾಸಂಗವನ್ನು ಮುಗಿಸಿ ಅವರಿಂದ ವ್ಯಾಸ ಮುಷ್ಠಿಯನ್ನು ಪಡೆದು ಮುಂದೆ ಉಡುಪಿಗೆ ಪ್ರಯಾಣ ಮಾಡಿದರು.
6:53 pm
5
 ಉಡುಪಿಯಲ್ಲಿ ಶ್ರೀಮಧ್ವಾಚಾರ್ಯರು ಶ್ರೀಕೃಷ್ಣನನ್ನು ಪ್ರತಿಷ್ಠಾಪಿಸಿ ಶ್ರೀಕೃಷ್ಣನ ಪೂಜೆಗಾಗಿ ನಿಯಮಿತರಾದ ಎಂಟು ಯತಿಗಳ ಪ್ರತ್ಯೇಕ ಸಂಸ್ಥಾನಗಳಾದವು .ಆ ಕಾಲದಲ್ಲಿ ಅಷ್ಟಮಠದ ಯತಿಗಳು ಎರೆಡೆರಡು ತಿಂಗಳು ಶ್ರೀಕೃಷ್ಣನ ಪೂಜೆಯನ್ನು ಸರದಿಯಾಗಿ ನಡೆಯುಸುವ ಪದ್ಧತಿಯಿತ್ತು .ವಾದಿರಾಜರು ಉಳಿದ ಎಲ್ಲಾ ಮಠಾಧೀಶರ ಅನುಮತಿಯೊಂದಿಗೆ ಎರಡು ತಿಂಗಳ ಪೂಜಾಪದ್ಧತಿಯನ್ನು ಎರಡು ವರ್ಷಗಳಿಗೇರಿಸಿದರು .ಪೂಜಾಕಾಲದಲ್ಲಿ ಭಾಗವತರ ಭಜನಾ ಪದ್ಧತಿಯನ್ನು ಜಾರಿಗೆ ತಂದರು . ರಾತ್ರಿ ಪೂಜೆಯನಂತರ ಭಾಗವತರೊಡನೆ ಯತಿಗಳೂ ಕಲೆತು ಭಜನೆ ಮಾಡುವುದನ್ನು ಆಚರಣೆಗೆ ತಂದರು  
    ಉತ್ತರ ಕನ್ನಡ ಜಿಲ್ಲೆಯಲ್ಲಿ ಸ್ವರ್ಣಾಕರನೊಬ್ಬನು ಗಣಪತಿಯ ವಿಗ್ರಹ ಮಾಡಬೇಕೆಂದು ಪಂಚಲೋಹಗಳನ್ನು ಕಾಯಿಸಿ ಎರಕಹೊಯ್ದು ಅಚ್ಚನ್ನು ತೆಗೆದು ನೋಡಲು ಅದು ಹಯಗ್ರೀವ ವಿಗ್ರಹವಾಗಿತ್ತು .ಈ ವಿಗ್ರಹವನ್ನು ವಾದಿರಾಜರಿಗೆ ಕೊಡಲು ಸ್ವಪ್ನವಾಗಿ ಅದನ್ನು ಶ್ರೀವಾದಿರಾಜರಿಗೆ ತಂದು  ಒಪ್ಪಿಸಿದನು .ಹೀಗಾಗಿ ಅಲ್ಲಿಯ ಸ್ವರ್ಣಕಾರರಿಗೆಲ್ಲಾ ತಾವೇ ಗುರುಗಳಾಗಬೇಕೆಂದು ಬೇಡಿಕೊಂಡಾಗ ಅವರಿಗೆ ಚಕ್ರಾಂಕನಮಾಡಿ ಭಾಗವತ ಧರ್ಮದಲ್ಲಿ ದೀಕ್ಷೆಕೊಟ್ಟರು .ಅದೇ ರೀತಿ ಕೋಟೇಶ್ವರರನ್ನೂ ತಮ್ಮ ಮಠದ ಶಿಷ್ಯರನ್ನಾಗಿ ಸ್ವೀಕರಿಸಿದರು .
6:53 pm
6
    ವಾದಿರಾಜರು ತಮ್ಮ ಪ್ರಥಮ ಪರ್ಯಾಯವನ್ನು ಮುಗಿಸ ದೇಶ ಸಂಚಾರ ಹೊರಟರು .ಇವರು ಸಂಚರಿಸಿದ ಕ್ಷೇತ್ರಗಳ ಮಹಿಮೆಯನ್ನು ತೀರ್ಥ ಪ್ರಬಂಧವೆಂಬ ಗ್ರಂಥದಲ್ಲಿ ಕ್ರೋಢೀಕರಿಸಿರುವರು .ಪ್ರಥಮ ಸಂಚಾರದಲ್ಲಿ ಮಾಡಿದ ವರ್ಣನೆಗಳು ಮಾತ್ರ ಈ ಗ್ರಂಥದಲ್ಲಿವೆ .ಮತ್ತೆ ಅನೇಕಬಾರಿ ಸಂಚಾರ ಮಾಡಿದ ವಿವರಗಳು ಈ ಗ್ರಂಥದಲ್ಲಿಲ್ಲ.
    ವಾದಿರಾಜರು ಒಮ್ಮೆ ಪುಣೆಯಲ್ಲಿ ಚಾತುರ್ಮಾಸಕ್ಕೆ ಕುಳಿತಾಗ ವಿದ್ವತ್ಸಭೆಯಲ್ಲಿ ಶ್ರೇಷ್ಠ ಕಾವ್ಯವ್ಯಾವುದು ಎಂದು ತೀರ್ಮಾನವಾಗುವ ಸಮಯಕ್ಕೆ ಸರಿಯಾಗಿ ರುಕ್ಮಿಣೀಶ ವಿಜಯವು ಪಂಡಿತರ ಕರಗತವಾಯಿತು .ಅದುವರೆಗೆ ಮಾಘ ಮಹಾ ಕಾವ್ಯವೇ ಶ್ರೇಷ್ಠ ಕಾವ್ಯವಾಗಿತ್ತು .ವಾದಿರಾಜರು ರಚಿಸಿದ ರುಕ್ಮಿಣೀಶ ವಿಜಯ ಬರುತ್ತಲೇ ರುಕ್ಮಿಣೀಶವಿಜಯವೇ ಶ್ರೇಷ್ಠಕಾವ್ಯವೆಂದು ತೀರ್ಮಾನಿಸಿ ಅದನ್ನು ಆನೆಯಮೇಲಿಟ್ಟು ಮೆರವಣಿಗೆ ಮಾಡಿ ಗ್ರಂಥಕರ್ತರಿಗೆ ಬಹುಮಾನವನ್ನು ಕಳುಹಿಸಿದರು 
    ವಾದಿರಾಜರು ಹಯಗ್ರೀವೋಪಾಸಕರಾದಾಗಿನಿಂದ ಪ್ರತಿನಿತ್ಯವೂ ಒಂದು ಹರಿವಾಣದಲ್ಲಿ ಕಡಲೆಯ ಹೂರಣಮಾಡಿಸಿ ಅದನ್ನು ತಲೆಯಮೇಲಿಟ್ಟುಕೊಂಡು ಏಕಾಂತ ಸ್ಥಳದಲ್ಲಿ ಕುಳಿತು ಧ್ಯಾನಮಾಡುತ್ತಿದ್ದರು .ಹಯಗ್ರೀವ ರೂಪಿ ಪರಮಾತ್ಮನು ದಿವ್ಯ ಶ್ವೇತಾಶ್ವ ರೂಪದಿಂದ ದರ್ಶನವಿತ್ತು ತನ್ನೆರಡೂ ಖುರಗಳನ್ನು ವಾದಿರಾಜರ ಹೆಗಲಮೇಲಿಟ್ಟು ಹರಿವಾಣದಲ್ಲಿನ ಹೂರಣವನ್ನು ಸ್ವೀಕರಿಸುತ್ತಿದ್ದರು . ಒಂದು ದಿನ ಪಂಢರಪುರದ ಜಮೀನ್ದಾರನ ಹೊಲದಲ್ಲಿ ದಿವ್ಯಾಶ್ವವೊಂದು ಮೇಯುತ್ತಿರಲು ಯಜಮಾನನು ಅದನ್ನು ಹಿಡಿಯಬೇಕೆಂದು ಓಡಿಸಿಕೊಂಡು ಬಂದನು ಆ ಅಶ್ವವು ವಾದಿರಾಜರ ಮಠಕ್ಕೆ  ಬಂದು ಅಲ್ಲಿ ಅದೃಶ್ಯ ವಾಯಿತು.ಹಾಗಾದರೆ ಇದು ವಾದಿರಾಜರ ಮಠಕ್ಕೆ ಸೇರಿದ್ದೆಂದು , ಸ್ವಾಮಿಗಳೇ ತಮ್ಮ ಕುದುರೆಯು ನಮ್ಮ ಹೊಲವನ್ನು ಹಾಳುಮಾಡಿದೆ ಅದರನಷ್ಟವನ್ನು ಕೊಡಿಸಬೇಕೆಂದು ಕೇಳಿದನು .ಸ್ವಾಮಿಗಳು ಅಯ್ಯಾ ನೀನು ಸುಕೃ ತಶಾಲಿಯಾದ್ದರಿಂದ ನಿನಗೆ ಹಯಮುಖನ ದರ್ಶನವಾಯಿತು .ಅವನ ಕೃಪೆಯಿಂದ ನಿನ್ನ ಹೊಲದಲ್ಲಿ ಸಹಸ್ರ ಮಾಡಿಯಾಗಿ ಫಲವಾಗುವದು ನಾಳೆ ಬೇಕಾದರೆ ಪರಿಕ್ಷೆಮಾಡು ಎಂದರು.ಮಾರನೆಯದಿನ ಪ್ರಾತಃಕಾಲ ಜಮೀನ್ದಾರನು ಕುತೂಹಲದಿಂದ ಹೊಲಕ್ಕೆ ಹೋದನು .ಎಲ್ಲೆಲ್ಲಿ ಕುದುರೆ ಮೇಯ್ದಿತ್ತೋ ಆ ಸ್ಥಳಗಳಲ್ಲಿ ಕಡಲೆಯ ಗಿಡಗಳು ಬಂಗಾರದ ಕಡಲೆಯ ಕಾಳುಗಳು ಕಂಗೊಳಿಸುದವು .ಜಮೀನ್ದಾರನು ತನಗೆ ಬಂಗಾರ ದೊರೆಯಿತೆಂಬ ಸಂತೋಷಕ್ಕಿಂತ ತಾನು ಬೆಳೆದ ಚಣಕವು ಭಾಗವದರ್ಪಿತವಾಯಿತೆಂದು ಭಕ್ತಿಯಿಂದ ಆ ಹೊಲವನ್ನೇ ವಾದಿರಾಜರಿಗೆ ದಾನಮಾಡಿದನು .
7 ಪ್ರಯಾಗಕ್ಷೇತ್ರದಲ್ಲಿ ರಾಜರು ಬ್ರಹ್ಮದೇವರ ಸಂಧ್ಯಾಮಠದಲ್ಲಿ ಕೆಲವು ಕಾಲ ತಪಶ್ಚರ್ಯದಲ್ಲಿದ್ದರು , ಅವರು ಮಾಡಿದ ವ್ಯಾಸೋಪಾಸನೆಯ ಫಲವಾಗಿ ಸಾಕ್ಷಾತ್ ವೇದವ್ಯಾಸರು ಪ್ರತ್ಯಕ್ಷರಾದರು ಆಗಲೇ ಪರವಶರಾಗಿ ಮಧ್ವಾoತರ್ಗತ ವೇದವ್ಯಾಸಾ l ಕಾಯೋ ಶುದ್ಧ "ಮೂರುತಿಯೆ ಸರ್ವೇಶಾ ಶ್ರದ್ಧೆಯಿಂದಲಿ ನಿಮ್ಮ ಭಜಿಸುವ ಮನುಜರಿಗೆ ಬುದ್ಧ್ಯಾದಿಗಳಕೊಟ್ಟುದ್ಧರಿಸೋ ದೇವರ ದೇವ" ಎಂದು ವೇದಾವ್ಯಾಸರ ಸ್ತೋತ್ರವನ್ನು ರಚಿಸಿದರು . ವಾದಿರಾಜರ ಬಳಿ ನಾರಾಯಣಾಚಾರ್ಯನೆಂಬ ಶಿಷ್ಯನೊಬ್ಬನಿದ್ದ.ವಾದಿರಾಜರಿಂದಲೇ ಶಸ್ತ್ರಾಭ್ಯಾಸ ಮಾಡಿದ .ಪಾಂಡಿತ್ಯದಮದದಿಂದ ಕಂಡ ಕಂಡವರೊಡನೆ ವಾದಮಾಡಿ ಅವರ ತೇಜೋಭಂಗ ಮಾಡುತ್ತಿದ್ದ .ಗುರುನಿಂದೆ ಮಾಡಲೂ ಹಿಂಜರಿಯುತ್ತಿದ್ದಿಲ್ಲ . ಒಂದು ದಿನ ವ್ಯಾಸರಾಜರೊಡನೆ ಭಿಕ್ಷಾ ಸ್ವೀಕಾರಮಾಡಬೇಕಾಗಿ ಬಂದ ಅವಸರದಲ್ಲಿ ತಮ್ಮ ಆಹ್ನಿಕವನ್ನು ಸಂಕ್ಷೇಪಮಾಡಬೇಕಾಯಿತು .ನಾರಾಯಣಾಚಾರ್ಯನು ಇದನ್ನೇ ಬಲು ದೊಡ್ಡದನ್ನಾಗಿ ಮಾಡಿ ಮನಬಂದಂತೆ ರಾಜರನ್ನು ನಿಂದಿಸಿದನು. ಬಹುಕಾಲದಿಂದ ಅವರನ್ನು ಕ್ಷಮಿಸುತ್ತಿದ್ದ ರಾಜರಿಗೆ ಅವರ ಮಾತನ್ನು ಸಹಿಸುವದಾಗಲಿಲ್ಲ ನೀನು ಬ್ರಹ್ಮರಾಕ್ಷಸನಾಗೆಂದು ಶಾಪವಿತ್ತರು . ಕೂಡಲೇ ನಾರಾಯಣಾಚಾರ್ಯನು ಬ್ರಹ್ಮರಾಕ್ಷಸನಾಗಿ ಒಂದು ಅರಣ್ಯ ಪ್ರದೇಶದಲ್ಲಿ ಒಂದು ಮರವನ್ನಾಶ್ರಯಿಸಿ ಅಲ್ಲಿ ಸಂಚರಿಸುವ ಜನರಿಗೆ ಬಾಧಿಸತೊಡಗಿದನು . ಅಲ್ಲಿ ಬಂದು ಹೋಗುವ ಜನರಿಗೆ " ಆ ಕಾ ಮಾ ವೈ ಕೋನ ಸ್ನಾತಃ ? ಎಂದು ಪ್ರಶ್ನೆ ಮಾಡುತ್ತಿದ್ದ ಉತ್ತರ ಕೊಡದ ಜನರನ್ನು ಪೀಡಿಸತೊಡಗಿದನು .ಹೀಗಿರಲು ಒಮ್ಮೆ ವಾದಿರಾಜರು ಅದೇ ಮಾರ್ಗವಾಗಿ ಸಂಚರಿಸುತ್ತ ಬಂದರು .ಬ್ರಹ್ಮರಾಕ್ಷಸ ಎಂದಿನಂತೆ ಸೌಮ್ಯರೂಪದಿಂದ ರಾಜರ ಮುಂದೆ ಬಂದು ನಿಂತು ಅದೇ ಪ್ರಶ್ನೆಯನ್ನು ಮಾಡಿದ ಬ್ರಹ್ಮರಾಕ್ಷನ ದುರ್ಗತಿಯನ್ನು ರಾಜರು ಕನಿಕರದಿಂದ ನೋಡಿ " ರoಢಾಪುತ್ರ l ತ್ವಂ ನ ಸ್ನಾತಃ " ಎಂದು ಉತ್ತರಿಸಿದರು . 6:53 pm 8 ಈ ಪ್ರಶ್ನೆಯ ಅರ್ಥ ಹೀಗಿದೆ ಆ =ಆಷಾಢ | ಕಾ = ಕಾರ್ತೀಕ | ಈ ಮಾಸಗಳಲ್ಲಿ ಮಹಾತೀರ್ಥಗಳಲ್ಲಿ ಮ = ಮಾಘ | ಯಾರು ಸ್ನಾನ ಮಾಡುವದಿಲ್ಲ ? ವೈ = ವೈಶಾಖ | ಉತ್ತರ :- " ರಂಢಾ ಪುತ್ರ ! ತ್ವಂ ಸ್ನಾತಃ " ವಾದಿರಾಜರು ಬ್ರಹ್ಮರಾಕ್ಷಸನನನ್ನು ಕುರಿತು " ವೇದಧರ್ಮಕ್ಕೊಳಪಟ್ಟವರೆಲ್ಲರೂ ತೀರ್ಥೋದಕದಲ್ಲಿ ಸ್ನಾನ ಮಾಡುವರು .ಜಲಸ್ಪರ್ಶಕ್ಕೂ ಯೋಗ್ಯನಲ್ಲದ ಬ್ರಹ್ಮರಾಕ್ಷಸನಾದ " ರಂಡೇ ಮಗನೇ , ನೀನೆ ಸ್ನಾನ ಮಾಡುವುದಿಲ್ಲ ಎಂದರು . ಅನಂತರ ಬ್ರಹ್ಮರಾಕ್ಷಸನು ರಾಜರನ್ನು ವಾಕ್ಯಾರ್ಥಕ್ಕೆ ಬನ್ನಿರೆಂದು ಅಡ್ಡಗಟ್ಟಿದನು .ವಾಕ್ಯಾರ್ಥದಲ್ಲಿ ನಾನು ಸೋತರೆ ನಿಮ್ಮ ಮೆನೆಯನ್ನು ಹೊರುವೆ ನೀವು ಸೋತರೆ ನಿಮ್ಮನ್ನೇ ಭಕ್ಷಿಸುವೆ ಎಂದನು . ವಾಕ್ಯಾರ್ಥದಲ್ಲಿ ಬ್ರಹ್ಮರಾಕ್ಷಸನು ಸೋತು ರಾಜರ ಮೆನೆಯನ್ನು ಹೊರಲು ಒಪ್ಪುಕೊಂಡನು . ವಾದಿರಾಜರು ಸಂಚಾರತ್ವೇನ ಒಮ್ಮೆ ಧರ್ಮಸ್ಥಳ ಮಾರ್ಗವಾಗಿ ಬರುತ್ತಿದ್ದರು .ಅಲ್ಲಿನ ಸ್ಥಳಿಕರು ವಾದಿರಾಜರನ್ನು ಕಂಡು ಅಲ್ಲಿ ತಮ್ಮ ಪೂಜೆಯಾಗಬೇಕೆಂದು ಪ್ರಾರ್ಥಿಸಿಕೊಂಡರು .ಇದು ಭೂತಕ್ಷೇತ್ರವಾಗಿದ್ದು ಪೂಜೆಗೆ ಪವಿತ್ರಸ್ಥಾನವಲ್ಲವೆಂದು ಸ್ವಾಮಿಗಳು ಸಮ್ಮತಿಸಲಿಲ್ಲ . ಕೊನೆಗೆ ಅಲ್ಲಿಯ ಸಜ್ಜನರ ಒತ್ತಾಯಕ್ಕೆ ಮಣಿದು ಕದರಿಯ ದೇವಾಲಯದಲ್ಲಿದ್ದ ಮಂಜುನಾಥದೇವರನ್ನು ತರಿಸಿ ಯಂತ್ರ ಸ್ಥಾಪನೆ ಮಾಡಿ ಮಹಾಪೂಜಾದಿಗಳನ್ನು ನಡೆಸಿದರು .ಅಂದಿನಿಂದ ಆ ಕ್ಷೇತ್ರವು ಪರಮ ಪಾವನ ಕ್ಷೇತ್ರವೆನಿಸಿತು . 6:53 pm 9 ವಾದಿರಾಜರ ತಾಯಿ ಗೌರಿದೇವಿಯು ತನಗೆ ಪ್ರಥಮತಃ ಪುತ್ರನಾದರೆ ಲಕ್ಷಾಭರಣ ಸೇವೆ ಮಾಡುವೆನೆಂದು ದೇವರಿಗೆ ಹರಕೆ ಮಾಡಿಕೊಂಡಿದ್ದಳೆಂಬ ಸಂಗತಿಯನ್ನು ಹಿಂದೆಯೇ ತಿಳಿಸಿದೆಯಷ್ಟೆ ! ಆಕೆಯ ಹರಕೆಯನ್ನು ತೀರಿಸಬೇಕೆಂದು ಜ್ಞಾಪಿಸಲು ವಾದಿರಾಜರ ಬಳಿಗೆ ಬಂದಳು .ತನ್ನ ಹರಕೆಯ ವಿಷಯವನ್ನು ಜ್ಞಾಪಿಸಿದಾಗ , ವಾದಿರಾಜರು ತಾಯಿ ನೀನು ಕೇಳುವುದಕ್ಕೆ ಮುಂಚೆಯೇ ನಾನು ವೇದವ್ಯಾಸರ ಆಜ್ಞೆಯಂತೆ ಮಹಾಭಾರತಕ್ಕೆ ಲಕ್ಷಾಲಂಕಾರವೆಂಬ ಟೀಕೆಯನ್ನು ಬರೆದು ಆ ಸೇವೆಯನ್ನು ಸಲ್ಲಿಸುವ ಮೂಲಕ ನಿನ್ನ ಹರಕೆ ತೀರಿತು ಎಂದರು .ತಾವು ಯಾತ್ರೆಮಾಡಿದ ಸಕಲ ತೀರ್ಥಕ್ಷೇತ್ರಗಳಲ್ಲೂ ನಿನಗೆ ಪುಣ್ಯವನ್ನು ಧಾರೆಯೆರೆದಿರುವೆನು ಎಂದು ಹೇಳುವ ಮೂಲಕ ತಮ್ಮ ತಾಯಿಗೆ ಮೋಕ್ಷದ ದಾರಿಯನ್ನು ಸರಳಗೊಳಿಸಿದರು . ವಾದಿರಾಜರ ಪವಾಡಗಳನ್ನು ಎಷ್ಟು ಹೇಳಿದರೂ ಮುಗಿಯುವುದೇ ಇಲ್ಲ .ಗ್ರಂಥ ವಿಸ್ತಾರ ಭಯದಿಂದ ಇಲ್ಲಿಗೆ ನಿಲ್ಲಿಸುವೆ .ಅವರು ರಚಿಸಿದ ಗ್ರಂಥಗಳ ಬಗ್ಗೆ ಹೇಳದಿದ್ದರೆ ಅವರ ಜೀವನ ಚರಿತ್ರೆ ಪೂರ್ತಿಯಾದುವುದಿಲ್ಲ . ವಾದಿರಾಜರು ಅನೇಕ ಸಂಸ್ಕೃತ ಕನ್ನಡ ಭಾಷೆಯಲ್ಲಿ ಅನೇಕಗ್ರಂಥಗಳನ್ನು ರಚಿಸಿರುವರು .ಅದರ ವಿವರ ಹೀಗಿದೆ 1 ಸಂಸ್ಕೃತ ಗ್ರಂಥಗಳು :- 1 ಗುರುರಾಜಿಯಾ ಸುಧಾ ಟಿಪ್ಪಣಿ 2 ತತ್ತ್ವಪ್ರಕಾಶಿಕ ಟಿಪ್ಪಣಿ 3 ತಾತ್ಪರ್ಯ ನಿರ್ಣಯ ಟಿಪ್ಪಣಿ 4 ತಂತ್ರಸಾರ ಟೀಕಾ 5 ಗುರ್ವರ್ಥ ದೀಪಿಕಾ 6 ಪ್ರಮೇಯ ಸಂಗ್ರಹ 7 ಯುಕ್ತಿಮಲ್ಲಿಕಾ 8 ಸರಸಭಾರತಿ ವಿಲಾಸ 9 ಭಗವದ್ಗೀತಾ ಟಿಪ್ಪಣಿ 10 ತೀರ್ಥಪ್ರಬಂಧ 11 ಮಹಾಭಾರತ ಟಿಪ್ಪಣಿ 12 ರುಕ್ಮಿಣೀಶ ವಿಜಯ 13 ಪಾಷಂಡಮತ ಖಂಡನ 14 ಏಕಾದಶಿ ನಿರ್ಣಯ 15 ಸಂಕಲ್ಪ ಪದ್ಧತಿ 16 ಕೃಷ್ಣಾಷ್ಟಕ ಮೊದಲಾದ ಐವತ್ತು ಬಿಡಿ ಸ್ತೋತ್ರಗಳು 2 ಕನ್ನಡ ಗ್ರಂಥಗಳು :- 1 ಕನ್ನಡ ತಾತ್ಪರ್ಯ ನಿರ್ಣಯ 2 ವೈಕುಂಠ ವರ್ಣನೆ 3 ಗುಂಡಕ್ರಿಯಾ 4 ಲಕ್ಷ್ಮಿ ಶೋಭಾನೆ 5 ಸ್ವಪ್ನ ಗದ್ಯ 6 ಭ್ರಮರ ಗೀತಾ 7 ಸಾವಿರಾರು ದೇವರ ನಾಮಗಳು ಹಾಗೂ ಸುಳಾದಿಗಳು ಇತ್ಯಾದಿ .
***
ಭವರೋಗಗಳ ನಿವಾರಣೆಗೆ ಶ್ರೀವಾದಿರಾಜ ರಚಿತ ದಿವ್ಯಮಂತ್ರ ಪಠಿಸಿ

ಬರಹ:ಪಿ.ಲಾತವ್ಯ ಆಚಾರ್ಯ
ಉಡುಪಿ.

ಧನ್ವಂತರೀ ವಿದ್ಯೆಯಲ್ಲೂ ಸಿದ್ಧಿಸಾಧಕರೆನಿಸಿದ್ದ ಭಾವಿಸಮೀರಶ್ರೀವಾದಿರಾಜಗುರುಸಾರ್ವಭೌಮರು ವಿವಿಧ ದೈಹಿಕ-ಮಾನಸಿಕ ಖಾಯಿಲೆಗಳ ಹಾಗೂ ಇನ್ನಿತರ ಇಹಪರ ಸಮಸ್ಯೆಗಳ ನಿವಾರಣೆಗಾಗಿ ಮಂತ್ರತುಲ್ಯವಾದ ಸಂಜಿವಿನೀ ಸನ್ನಿಧಿಯನ್ನೊಳಗೊಂಡ ವ್ಯಾಧಿ ನಿವಾರಣಾ ಸ್ತುತಿಗಳನ್ನು ರಚಿಸಿದ್ದಾರೆ.ಕಳೆದ ಕೆಲವು ಶತಮಾನಗಳಿಂದ ಸಹಸ್ರಾರು ಭಕ್ತರು ಈ ಸ್ತುತಿಗಳನ್ನು ಶ್ರದ್ದಾ-ಭಕ್ತಿಯಿಂದ ಪಠಿಸಿ ವ್ಯಾಧಿಯಿಂದ ಮುಕ್ತರಾದ ವಿಚಾರ ಎಲ್ಲೆಡೆ ಜನಜನಿತವಾಗಿದೆ.

ಚಿಂತಾಖಂಡನ ಸ್ತೋತ್ರಂ
ಸೃಷ್ಟಿ-ಸ್ಥಿತಿ-ಲಯದ ಸೊಗಸನ್ನು ಆಧ್ಯಾತ್ಮಿಕವಾಗಿ ಬಣ್ಣಿಸಿ ನಿತ್ಯ ಸತ್ಯವನ್ನು ತಿಳಿಹೇಳಿ ಸರ್ವರಕ್ಷಕನಾದ ಭಗವಂತನ ಸ್ವರೂಪ ಹಾಗೆಯೇ ಸುಖ-ದುಃಖವನ್ನು ಸಮಾನವಾಗಿ ಸ್ವೀಕರಿಸುತ್ತಾ ಬದುಕನ್ನು ಪಾರಮಾರ್ಥಿಕವಾಗಿ ದೇವರ ಪಾದಕಮಲಗಳಿಗೆ ಹೇಗೆ ಅರ್ಪಿಸಬೇಕು ಎಂಬ ನಿರೂಪಣೆ ಈ ಸ್ತೋತ್ರದ-ಹಂದರ.ಈ ಸ್ತೋತ್ರದ ಪಠಣವು ಯಾವುದೇ ತರಹದ ಮನೋವ್ಯಾಧಿಗೆ ರಾಮಬಾಣ.
 
ಯಯಾ ತೇ ಧರ್ಮಕಾಮೌ ಚ ಯಯಾ ತೇ ವ್ಯರ್ಥಮಾಜನಿ |
ಕಿಂ ತಯಾ ಚಿಂತಯಾ ಜೀವ ಹಂತಾಹಂತಾಽಫಲಾ ತವ || ೧ ||

ಸುಖಮೀಶೇಚ್ಛಯಾ ನೃಣಾಂ ದುಃಖಂ ಚಾಪಿ ತದಿಚ್ಛಯಾ |
ನ ಸ್ವೇಚ್ಛಯಾ ಭವೇತ್ಕಿಂಚದ್ದಂತಾಹಂತಾಽಫಲಾ ತವ || ೨ ||

ಅದತೋ ಮದತೋಽಂಧಸ್ಯ ಜಿಹ್ವಾಂ ಬಹ್ವಾಶಿನೋ ನರ |
ಸಂತಃ ಖಾದಂತಿ ದಂತಾಸ್ತೇ ಹಂತಾಹಂತಾಽಫಲಾ ತವ || ೩ ||

ಮಹತ್ವೇ ತೇ ಯದಾಽಽಕಾಂಕ್ಷಾ ಮಹತ್ವೇವ ಭಯಂ ತದಾ |
ಜೀವ ಕಿಂ ಜೀವನಾರ್ಥೇಽತಶ್ಚಿಂತಯಾ ಚಿಂತಯಾಽಚ್ಯುತಮ್ || ೪ ||

ಮಹಾಪದ್ಯಾಗತಾಯಾಂ ಹಿ ಮಹಾಪದ್ಯಾರ್ಥಿನೋಽಧುನಾ |
ಹರಿಣಾ ಸ್ವೈರಿಣಾ ತ್ರಾತಾಃ ಕಿಂ ನ ಖಿನ್ನಕೃಪಾಲುನಾ || ೫ ||

ಮಮತಾ ಯೇಷು ತೇ ನಿತ್ಯಮಮತಾಸ್ತೇಽತ ಏವ ಹಿ |
ಅಹಂತಾ ಯತ್ರ ತೇ ಜೀವ ನ ಹಂತಾ ತಸ್ಯ ಕಿಂ ಯಮಃ || ೬ ||

ನ ಸ್ವೇಶಾಂ ಸ್ವೇಚ್ಛಯಾs ಕಾರ್ಶೀತ್ಕಷ್ಟಂ ವಾಽತ್ಯಕ್ರಮೀದಿಹ |
ನರೋ ವಾಽಪ್ಯಥವಾ ನಾರೀ ಸುರೋ ವಾಽಪ್ಯಸುರೋಽಪಿ ವಾ || ೭ ||

ಸ್ವೇಷ್ಟಾನಾಪ್ತ್ಯಾ ರೋದನೇನ ರುದ್ರೋs ರುದದಿತಿ ಶೃತಿಃ |
ನರ್ತೇ ತ್ವತ್ಕ್ರಿಯತೇ ಕಿಂಚಿದಿತ್ಯಾಹಾನ್ಯಾಚ್ಯುತಂ ಪ್ರಭುಮ್ || ೮ ||

ಪಾರ್ಥಾನ್ಪಾರ್ಥಸತೀಮಾರ್ತಾಂ ಹರಂ ಭಸ್ಮಾಸುರಾರ್ದಿತಮ್ |
ವಿರೋಚನಸ್ಯ ಪಿತರಂ ಕಃ ಕಷ್ಟಾತ್ಪ್ರಾಗ್ವ್ಯಮೋಚಯತ್ || ೯ ||

ಶತ್ರವೋ ಯಾಂತಿ ಮಿತ್ರತ್ವಂ ಮಿತ್ರೇ ಮಿತ್ರೇ ಸತಾಂ ಹರೌ |
ಮಿತ್ರಾಣ್ಯೇವ ಚ ಶತ್ರುತ್ವಂ ಶತ್ರೌ ಶತ್ರೌ ಸುರದ್ವಿಷಾಮ್ || ೧೦ ||

ಪಿತುರ್ವಧೇ ಪುತ್ರ ಏವ ಕಾರಣಂ ಪ್ರಾಗಭೂದಿತಿ |
ಕಿಂ ನ ಶ್ರುತಂ ಸರ್ಪವೈರೀ ಸರ್ಪಸ್ಯೈವಾಭಯಂಕರಃ || ೧೧ ||

ದುಃಖಾಸ್ಪೃಷ್ಟೋ ಹರಿಸ್ತ್ವೇಕೋ ದುಃಖಸ್ಪೃಷ್ಟಾಸ್ತತೋಽಪರೇ |
ಅತೋ ನ ಭೀತೋ ದುಃಖೇಭ್ಯೋ ಭವಾನುಭವಧೀರಧೀಃ || ೧೨ ||

ಸುಖಸ್ಯಾನಂತರಂ ದುಃಖಂ ದುಃಖಸ್ಯಾನಂತರಂ ಸುಖಮ್ |
ಇತಿ ಯನ್ನಿಯಮಸ್ತಸ್ಮಾನ್ನಿಯಮೇ ನಿಯಮಂ ಕುರು || ೧೩ ||

ಅತೋ ದುರಂತಯಾ ಸ್ವಾಂತಚಿಂತಯಾ ಕಿಂ ಚಿದಂತಯಾ |
ಹಯಾನನಂ ದಯಾಸಿಂಧುಂ ಸ್ಮರ ಸ್ಮರದಭೀಷ್ಟದಮ್ || ೧೪ ||

ಆಚತುರ್ದಶಾಮಾದ್ವರ್ಷಾಧ್ಯಾ ಚಿಂತಾ ಹೃದಿ ದೇಹಿನಾಮ್ |
ವಾದಿರಾಜೋ ಯತಿಸ್ತಸ್ಯಾಃ ಖಂಡನಾಯೇದಮಭ್ಯಧಾತ್ || ೧೫ ||

!! ಇತಿ ಶ್ರೀಮದ್ವಾದಿರಾಜ ಪೂಜ್ಯಚರಣವಿರಚಿತಂ ಚಿಂತಾಖಂಡನ ಸ್ತೋತ್ರಮ್ ಸಂಪೂರ್ಣಮ್ ||

ಸತ್ಸಂತಾನಾರ್ಥ ಸ್ತೋತ್ರಂ
ಸಂತಾನ ರಹಿತರಿಗಾಗಿ ರಚಿಸಿರುವ ಸತ್ಸಂತಾನಾರ್ಥ ಸ್ತೋತ್ರದ ಮಹಿಮೆಯಿಂದ ಸಾವಿರಾರು ಭಕ್ತರಿಗೆ ಸಂತಾನ ಭಾಗ್ಯವು ಅನುಗ್ರಹವಾಗಿದೆ.

II ಅಶ್ವತ್ಥದೇವ ಸಕಲೇಷ್ಟದ ದೇವದೇವ
ಭೂದೇವವಂದಿತಪದ ಪ್ರದದಾಸ್ಯಭೀಷ್ಟಮ್
ವೇದೈಕವೇದ್ಯ ಸುಜನಾಬ್ಧಿಸುಪೂರ್ಣಚಂದ್ರ
ಭಕ್ತಾಭಯಪ್ರದ ಸುಪುತ್ರಮಪುತ್ರಿಣಾಂ ಚ I

ಮಮ ವೃಂದಾವನಂ ಧೀಮನ್ ಕಂದಾಶನಮದಾಂಜನಮ್
ಸದಾನಂದಂ ದದಾನೀತಿ ವದತ್ಕಂರ್ಮದಿನಾಮಭೂತ್ I

ಅತ: ಕರ್ಮಂಧಿಭಿರ್ವಂದ್ಯಂ ವಂಧ್ಯಾನಂದದಂ ಬುಧ
ಗಂಧದ್ವಾರಾನಂದದಂ ಚ ಮುಕುಂದಸ್ಯಾಪಿ ನಂದನ I

ನಂದನ ಸ್ಯಂದನಾಕಾರೇ ಮಮ ವೃಂದಾವನೇsನಿಶಮ್
ವಂದನಂ ನಂದನಾರ್ಥ ಯೇ ಕುರ್ವಂತು ಗುಣನಂದಿನ: I

II ಇತಿ ಶ್ರೀ ಸತ್ಸಂತಾನಾರ್ಥ ಸ್ತೋತ್ರ ಸಂಪೂರ್ಣಂ II

ಕೃಷ್ಣ ಸ್ತುತಿ
ದೃಷ್ಟಿದೋಷ ನಿವಾರಣೆಗಾಗಿ ಬರೆಯಲ್ಪಟ್ಟ ಕೃಷ್ಣಸ್ತುತಿಯು ಅಂಧತ್ವವನ್ನು ನಿವಾರಿಸಿ ಆನಂದವನ್ನು ಕರುಣಿಸುವ ಅಪೂರ್ವ ಸ್ತೋತ್ರರತ್ನ.
ಶ್ರೀವಾದಿರಾಜರ ಕಾಲದಲ್ಲಿ ಭಕ್ತನೋರ್ವನು ಎಷ್ಟೇ ಔಷಧಿ ನಡೆಸಿದರೂ ಕಣ್ಣುನೋವು ಹಾಗೂ ಅಂಧತ್ವ ಉಪಶಮನವಾಗಲ್ಲಿಲ್ಲ.ಕೊನೆಗೆ ಶ್ರೀವಾದಿರಾಜರ ಬಳಿ ಬರಲು ಶ್ರೀರಾಜರು ಕೃಷ್ಣಸ್ತುತಿಯಿಂದ ನಿತ್ಯ ಪುರಶ್ಚರಣೆ ನಡೆಸುವಂತೆ ತಿಳಿಸಿದರು.ಭಕ್ತನು ಈ ಪುರಶ್ಚರಣೆಯನ್ನು ಸಲ್ಲಿಸಿ ಎರಡೂ ಕಣ್ಣುಗಳನ್ನು ಪಡೆದನು.ತದನಂತರ ಶ್ರೀವಾದಿರಾಜರ ಪರಂಪರೆಯ ಯತಿಗಳಾದ ವೃಂದಾವನಾಚಾರ್ಯರ  ಕಾಲದಲ್ಲಿ ಹಿರಿಯರೊಬ್ಬರಿಗೆ ಶ್ರೀಕೃಷ್ಣನ ಪ್ರತಿಮೆ ಕಾಣುತ್ತಿರಲಿಲ್ಲ.ಅವರು ವೃಂದಾವನಾಚಾರ್ಯರ ಬಳಿಬಂದು ತಮ್ಮ ನೋವನ್ನು.ಹೇಳಿಕೊಂಡರು.ವೃಂದಾವನಾಚಾರ್ಯರು ನಿತ್ಯ ಸಹಸ್ರಭಾರೀ ಕೃಷ್ಣಸ್ತುತಿಯ ಪುರಶ್ಚರಣೆ ನಡೆಸುವಂತೆ ತಿಳಿಸಿದರು.೪೮ ದಿನಗಳಲ್ಲಿ ಕೃಷ್ಣಸ್ತುತಿಯ ನಿರಂತರ ಪಠಣದಿಂದ ದೃಷ್ಟಿದ್ವಯಗಳನ್ನು ಮತ್ತೆ ಪಡೆದ ರೋಚಕ ಘಟನೆ ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ.

ಯದಿ ದಿಶಸಿ ನಯನಪಟುತಾಂ ತರ್ಹಿ ಭವಚ್ಚರಣಕಮಲಸೇವಾಯೈ |
ಆಯಾಸ್ಯಾಮಿ ದಯಾಲೋ ಕೃಷ್ಣ ನ ಚೇತ್ಪೂಜಯಾಮಿ ಕಥಮಂಧಃ || ೧ ||

ಸಂಭಾವಿತಸ್ಯ ಪುಂಸೋ ಮರಣಾದತಿರಿಚ್ಯತೇ ಕಿಲಾಕೀರ್ತಿಃ |
ಇತಿ ಗೀತಾಸು ಹಿ ಗೀತಂ ಭವತಾ ಭವತಾಪತಿಮಿರರವೇ || ೨ ||

ನಾನಾಪರಾಧಶತಕಂ ಹೀನೇ ಯದ್ಯಸ್ತಿ ಕೃಷ್ಣ ಮಯಿ ಮತ್ತೇ |
ದೀನಾನಾಮುದ್ಧರ್ತ್ರಾ ಕ್ಷಂತವ್ಯಂ ತತ್ ಕ್ಷಮಾವತಾ ಭವತಾ || ೩ ||

ಕುಂತಲಸಂತತಿಲಸಿತಂ ಚೂಡಾತ್ರಯಶೋಭಿಮೌಲಿಭಾಗಮಹಮ್ |
ಶತಪತ್ರಪತ್ರನೇತ್ರಂ ಶಶಿವದನಂ ಪ್ರತಿದಿನಂ ದಿದೃಕ್ಷಾಮಿ || ೪ ||

ಕುಂಡಲಮಂಡಿತಗಂಡಂ ಕಂಬುಗ್ರೀವಂ ಮನೋರಮೋರಸ್ಕಮ್ |
ದಂಡಂ ದಾಮ ಚ ದಧತಂ ಪಾಂಡವಸಖಮರ್ಚ್ಯಮರ್ಚಯಾಮಿ ಕದಾ || ೫ ||

ರಮ್ಯತಮೋದರಜಘನಂ ಕಮ್ರೋರುಂ ವೃತ್ತಜಾನುಯುಗಜಂಘಮ್ |
ರಕ್ತಾಬ್ಜಸದೃಶಪಾದಂ ಹಸ್ತಾಭ್ಯಾಂ ತ್ವಾಽರ್ಚಯಾಮಿ ಸದಯ ಕದಾ || ೬ ||

ದೋಷಾತಿದೂರಂ ಶುಭಗುಣರಾಶಿಂ ದಾಸೀಕೃತಾಖಿಲಾನಿಮಿಷಮ್ |
ಭೂಷಣಭೂಷಿತಗಾತ್ರಂ ನೇತ್ರಾಭ್ಯಾಂ ಚಿತ್ರಚರಿತ ವೀಕ್ಷೇ ತ್ವಾಮ್ || ೭ ||

ಮಧ್ವಪ್ರತಿಷ್ಠಿತಂ ತ್ವಾಂ ವಿಧ್ವಸ್ತಾಶೇಷಕುಜನಕುಲಮ್ |
ಮೂರ್ಧ್ನಾ ಪ್ರಣಮ್ಯ ಯಾಚೇ ತದ್ವಿರಚಯ ಯದ್ಧಿತಂ ಮಮಾದ್ಯ ಹರೇ || ೮ ||

ಸ್ತುತಿಮಿತಿ ಪುಣ್ಯಕಥನ ತೇ ಪ್ರಥಿತಕೃತೇ ವಾದಿರಾಜಯತಿರಕೃತ |
ಸತತಂ ಪಠತಾಂ ಹಿ ಸತಾಮತಿವಿಶದಾಂ ದೇಹಿ ಕೃಷ್ಣ ವಿತತಮತಿಮ್ || ೯ ||

|| ಇತಿ ಶ್ರೀಮದ್ವಾದಿರಾಜಪೂಜ್ಯಚರಣವಿರಚಿತಾ ಕೃಷ್ಣಸ್ತುತಿಃ ಸಮಾಪ್ತಾ ||

ಮಧ್ವಮುನಿ ಪ್ರತಾಪಾಷ್ಠಕಮ್
ಈ ಕೃತಿಯ ಪಠಣದಿಂದ ಶಾಶ್ವತವಾಗಿ ಜ್ವರದ ಬಾಧೆಯಿಂದ ಮುಕ್ತಿದೊರಕುತ್ತದೆ.ನೂರಾರು ಭಕ್ತರು ಶ್ರೀವಾದಿರಾಜರ ದಿವ್ಯಮಂತ್ರಗಳನ್ನು ಪಠಿಸಿ ಜ್ವರದ ಬಾಧೆಯಿಂದ ಮುಕ್ತರಾಗುತ್ತಿರುವ ಘಟನೆಗಳು ಇಂದಿಗೂ ಜರುಗುತ್ತಿವೆ.ಒಮ್ಮೆ ಶ್ರೀವಾದಿರಾಜರು ದ್ವಾರಕಾ ಕ್ಷೇತ್ರಕ್ಕೆ ತೀರ್ಥಯಾತ್ರೆಗೆ ಸಾಗುವ ಸಂದರ್ಭದಲ್ಲಿ ಆರುತಿಂಗಳು ಉಪಾವಾಸದಲ್ಲಿದ್ದು ಕೃಷ್ಣಧ್ಯಾನ ಮಾಡುತ್ತಿರುವ ಸಂದರ್ಭದಲ್ಲಿ ಈ ಕೃತಿಯನ್ನು ರಚಿಸಿದ್ದರು. ಶ್ರೀಕೃಷ್ಣ ಯತಿಗಳು ಎಂಬವರು ತೀವ್ರಜ್ವರದಲ್ಲಿದ್ದಾಗ ಅವರಿಗೆ ಶ್ರೀವಾದಿರಾಜರ ಮಧ್ವಮುನಿಪ್ರತಾಪಾಷ್ಟಕಮ್  ಕೃತಿಯನ್ನು ಪಠಿಸುವಂತೆ ಸ್ವಪ್ನ ಸೂಚನೆಯಾಯಿತು.ಅಂತೆಯೇಈ ಮಂತ್ರ ಪಠಿಸಲು ರೋಗ ಸಂಪೂರ್ಣ ನಿವಾರಣೆಯಾಯಿತು.ಇಂದಿಗೂ ಅನೇಕರು ಶ್ರೀದೇವರ ತೀರ್ಥವನ್ನು ಹಿಡಿದುಕೊಂಡು ಈ ಮಂತ್ರ ಪಠಿಸಿ ತೀರ್ಥವನ್ನು ಸ್ವೀಕರಿಸಿ ಜ್ವರವನ್ನು ಉಪಶಮನ ಮಾಡಿಕೊಳ್ಳುತ್ತಿದ್ದಾರೆ.

II ಕ್ವಚಿತ್ಸುರಾನ್ ಶಾಸ್ತಿ ಸುರಾಂಗನಾ: ಕ್ವಚಿತ್
ಕ್ವಚಿಚ್ಚ ಗಂಧರ್ವಪತೀನೃಷೀನ್ ಕ್ವಚಿತ್
ಕ್ವಚಿತ್ಪಿತೃನ್ ಕ್ವಾಪಿ ನೃಪಾನ್ನರಾನ್ ಕ್ವಚಿಚ್ಚುಭಾನಯಂ ಮಧ್ವಮುನಿ: ಪ್ರತಾಪವಾನ್I

ಕ್ವಚಿತ್ಪ್ರಭುಂ ಸ್ತೌತಿ ಸಮೀಕ್ಷತೇ ಕ್ವಚಿತ್
ಕ್ವಚಿತ್ಸ್ಮರನ್ನೃತ್ಯತಿ ಗಾಯತಿ ಕ್ವಚಿತ್
ಕ್ವಚಿತ್ತಮಾರಾಧಯತೀಶ್ವರಂ ಕ್ವಚಿನ್ನಮತ್ಯಯಂ ಮಧ್ವಮುನಿ: ಪ್ರತಾಪವಾನ್I

ಕ್ವಚಿದ್ಧರೇರ್ಜೀವಜಡಾತಿಭಿನ್ನತಾಂ ಕ್ವಚಿತ್ಪ್ರಭೋ: ಸರ್ವಗುಣೈಶ್ಚ ಪೂರ್ಣತಾಮ್
ಕ್ವಚಿಚ್ಚ ತಸ್ಯಾಖಿಲದೋಷಶೂನ್ಯತಾಂ ವದತ್ಯಯಂ ಮಧ್ವಮುನಿ: ಪ್ರತಾಪವಾನ್ I

ಕ್ವಚಿಚ್ಚ ವಿಷ್ಣೋರುರುಚಿತ್ರರೂಪತಾಂ ಕ್ವಚಿಚ್ಚ ಮುಕ್ತಾಖಿಲಜೀವಯಂತೃತಾಮ್
ಕ್ವಚಿಚ್ಚ ತಸ್ಯಾವ್ಯಯಚಿನ್ಮಯಾಕೃತಿಂ ವ್ಯನಕ್ತ್ಯಯಂ ಮಧ್ವಮುನಿ: ಪ್ರತಾಪವಾನ್ I

ಕ್ವಚಿತ್ ಸ್ಮೃತೀ: ಕ್ವಾಪಿ ಪುರಾಣಸಂಹಿತಾ: ಪ್ರವಕ್ತಿಸೂತ್ರಂ ಕ್ವಚಿದಾಗಮೋಕ್ತಿಭಿ:
ಕ್ವಚಿಚ್ಚ ಧರ್ಮಂಚರತಿ ಕ್ವಚಿಚ್ಚ ತಂ ಬ್ರವೀತ್ಯಯಂ ಮಧ್ವಮುನಿ: ಪ್ರತಾಪವಾನ್ I

ಕ್ವಚಿಚ್ಚ ಚಾರ್ವಾಕಕಣಾದಗೌತಮಪ್ರಭಾಕರಾದ್ವೃತಿತಥಾಗತಾದಿಕೈ: 
ಕೃತಂ ಮತಂ ಯುಕ್ತಿಶತೈರ್ವಿಖಂಡಯನ್ ವಿಭಾತ್ಯಯಂ ಮಧ್ವಮುನಿ: ಪ್ರತಾಪವಾನ್ I

ಪರಾನ್ಪರಾಭಾವಯತಿ ಕ್ವಚಿತ್ಕ್ವಚಿನ್ನಿಜಾನ್ಕಥಾಯಾಂ ಕುಶಲೀಕರೋತ್ಯಯಮ್
ಕ್ವಚಿದ್ಬುಧಾನ್ವೈಷ್ಣವ ಮಾರ್ಗಮಾಗತಾನ್ ಪುನಾತ್ಯಯಂ ಮಧ್ವಮುನಿ: ಪ್ರತಾಪವಾನ್I

ಕ್ವಚಿತ್ಸಮಸ್ತಾಗಮನಿರ್ಣಯೋದಿತಾ: ಕೃತೀ ವ್ಯಾಕುರುತೇ ಸಭಾಂತರೇ
ಪ್ರಹೃಷ್ಟರೋಮಾ ನೃಹರೌ ಕ್ವಚಿನ್ಮನೋ ಯುನಕ್ತ್ಯಯಂ ಮಧ್ವಮುನಿ: ಪ್ರತಾಪವಾನ್I

ಇದಂ ಪ್ರತಾಪಾಷ್ಟಕಮಚ್ಯುತಪ್ರಿಯ ಶ್ರುತಿಪ್ರತೀತಾಮಲಮಧ್ವಯೋಗಿನ:I

ಯತಿಸ್ತದೀಯೋsಕೃತ ವಾದಿರಾಜ ಉದಾರಧೀಸ್ತಸ್ಯ ಕೃಪಾಫಲಪ್ತಯೇI

IIಇತಿ ಶ್ರೀ ವಾದಿರಾಜ ಪೂಜ್ಯ ಚಾರಣ ವಿರಚಿತಂ ಮಧ್ವಮುನಿ ಪ್ರತಾಪಾಷ್ಟಕಮ್ ಸಂಪೂರ್ಣಂII

ವ್ಯಾಸಸ್ತುತಿ:
ನಮ್ಮ ನುಡಿಗಳನ್ನು ಅರ್ಥಪೂರ್ಣ ಹಾಗೂ ಸತ್ವಯುತವನ್ನಾಗಿ ಅನುಗ್ರಹಿಸುವ ಸ್ತೋತ್ರ ಮಂಜರಿ.ವಾಕ್ ಸಂಬಂಧ ಏನೇ ದೋಷಗಳಿದ್ದರೂ ಇದರ ನಿವಾರಣೆಗಾಗಿ ಶ್ರೀವಾದಿರಾಜರು ರಚಿಸಿರುವ ಶ್ರೀವ್ಯಾಸಸ್ತುತಿಯ ಪಠಣ ವಾಕ್ ಸಿದ್ಧಿಗೆ ಉತ್ಕೃಷ್ಟಮಂತ್ರ ಎಂದು ಅಪರೋಕ್ಷ ಜ್ಞಾನಿಗಳು ಈ-ಮಂತ್ರವನ್ನು ವಿಶೇಷವಾಗಿ ಕೊಂಡಾಡಿದ್ದಾರೆ.

ಶ್ರೀಶಂ ವಿಚಿತ್ರಕವಿತಾರಸಪೂರಿತಾಶಂ ಶ್ರೀಶಂಕರೋರಗಖಗೇಂದ್ರಹೃದಬ್ಜವಾಸಮ್
ಆಶಂಕಮಾನಜನತೃಪ್ತಿಕರೋಕ್ತಿಹಾಸಂ ವ್ಯಾಸಂ ನತೋsಸ್ಮಿ ಹರಿತೋಪಲಸನ್ನಿಕಾಶಮ್ I

ವೇದಾಂತಸೂತ್ರಪವನೋದ್ಧೃತಪಂಚವೇದಾಮೋದಾಂಶತೋಷಿತ ಸುರರ್ಷಿನರಾದಿಭೇದಾಮ್
ಬೋಧಾಂಬುಜಾತಲಸಿತಾಂ ಸರಸೀಮಗಾಧಾಂ ಶ್ರೀದಾಂ ಶ್ರೀತೋsಸ್ಮಿ ಶುಕತಾತಪದಾಮಖೇದಾಮ್ I

ದ್ವೈಪಾಯನೋ ಜಯತಿ ಯನ್ನಿಜಶಕ್ತಿದೀಪ: ಪಾಪಾಭಿವರ್ಧಿತಕುವಾದಿತಮಿಸ್ರತಾಪ: 
ಪಾಪಾಖ್ಯದುರ್ಭಗದಶಾಕೃತತೀವ್ರ ಕೋಪ: ಪಾಪಾದ್ಭುತೌಷಧಿರಗೇ ಶ್ವಸನಾಂಶರೂಪ: I

ಇಂದ್ರಾದಿದೈವತಹೃದಾಖ್ಯಚಕೋರಚಂದ್ರಾಮಂದಾಂಶುಕಲ್ಪಶುಭಜಲ್ಪಿತಪುಷ್ಪವೃಂದ:
ವೃಂದಾರಕಾಂಘ್ರ್ಯುಪಲತಾಗಣರತ್ನಸಾಂದ್ರೋ ಮಂದಾಯ ಮೇ ಫಲತು ಕೃಷ್ಣತರು: ಫಲಂ ದ್ರಾಕ್ I

ಮಾತಾ ಹಿತೇವ ಪರಿರಕ್ಷತಿ ಯೇನ ಗೀತಾ ಗೀತಾಗ್ರ್ಯಭಾರತಪುರಾಣಕೃತಾsವಿಗೀತಾ
ವಾತಾಂಶುಮಧ್ವವರದ: ಸ ಗಿರೋ ಮಮೈತಾ: ಖ್ಯಾತಾ: ಪರಾಶರಸುತೋ ವಿದಧಾತು ಧಾತಾ I

ಪಾರಂ ಭವಾಖ್ಯಜಲಧೇರ್ಭುವನೈಕಸಾರಂ ಸ್ವೈರಂ ಕೃತೋರುವಿಧವೇದಪಥ: ಪ್ರಚಾರಮ್
ಆರಿಂಜತಾಮರಜನಂ ಸುಖಚಿಚ್ಛರೀರಂ ಧೀರಂ ಸ್ಮರಾಮಿ ಹೃದಿ ಸತ್ಯವತೀಕುಮಾರಮ್ I

ಭಾವಾಶ್ರಿತಂ ಯಮನುಸೃತ್ಯ ಭಜಂತಿ ದೇವಾ: ಸೇವಾರತಾಶ್ಚ ಮುನಯ: ಕವಯೋ ನೃದೇವಾ:
ಯೋ ವಾಸುದೇವವಪುರಸ್ಯ ಮಹಾನುಭಾವಾಂಚ್ಛ್ರೀಬಾದರಾಯಣಹರೇರ್ನ ಗೃಣೀತ ಕೋ ವಾ I

ಜ್ಞಾನಂ ಪ್ರದೇಹಿ ಭವದಾಗವಾರ್ಧ್ಯಧೀನಂ ಶ್ರೀನಂದಸೂನುಪದಭಕ್ತಿನದೀನಿದಾನಮ್
ಆನಂದತೀರ್ಥವರದೋಚ್ಚಮಹಾಧ್ವನೀನಂ ದೀನಂ ಬದರ್ಯಧಿಪತೇ ಕುರು ಮಾಮಮಾನಮ್ I

ವಾಸಿಷ್ಠವಂಶತಿಲಕಸ್ಯ ಹರೇರ್ಮನೋಜ್ಞಂ ದೋಷೌಘಖಂಡನವಿಶಾರದಮಷ್ಟಕಂ ಯೇ
ದಾಸಾ: ಪಠಂತ್ಯನುದಿನಂ ಭುವಿ ವಾದಿರಾಜಧೀಸಂಭವಂ ಪರಿಭವೋ ನ ದಿಶಾಸು ತೇಷಾಮ್ I

II ಇತಿ ಶ್ರೀ ವಾದಿರಾಜಪೂಜ್ಯಚರಣವಿರಚಿತಾ ವ್ಯಾಸ ಸ್ತುತಿ: ಸಂಪೂರ್ಣಾ II

ಶ್ರೀಹರ್ಯಷ್ಠಕಮ್
ಅಂತರ್ಬಹಿರ್ ಶತ್ರುಭಾದೆಗಳ ದೂರೀಕರಿಸಲು ರಚಿತವಾದ ನರಸಿಂಹ ದೇವರ ಉಗ್ರರೂಪದ ಮಹಿಮೆಯ ಶ್ರೀಹರ್ಯಷ್ಠಕಮ್ ಪಠಣದಿಂದ ಸಮಸ್ತ ಶತ್ರುಭೀತಿಗಳು ಮುಕ್ತವಾಗುತ್ತವೆ.ಈ ಸ್ತುತಿಯ ಮಹಿಮೆಗೆ ಸಂಬಂಧಿಸಿ ಅನೇಕ ಘಟನಾವಳಿಗಳು ಸಂಭವಿಸಿವೆ.

ಸ್ವಮುದ್ಧರ್ತುಂ ಹರೇ ವೇತ್ತಿ ಕಿಂ ಕುಪೇ ಪತಿತಃ ಪಶುಃ |
ಕ್ಷಿಪನ್ನಂಘ್ರಿಂ ಮುಹು:ಕ್ರಂದನ್ ಕೃಪಾಂ ಜನಯತಿ ಪ್ರಭೋ ||

ಅನಿಚ್ಛತೋsಪಿ ತಸ್ಯಾಜ್ಞಸ್ಯಾಂಗಂ ಕುಕ್ಷಿಂ ಚ ದಾಮಭಿಃ |
ಶನೈರ್ನಿಬಧ್ಯ ಸ್ವಜನೈರ್ಹರೇ ಹರೇ ಸ ಪರಮುದ್ಧರೇತ್ ||

ಸ ಹರೇ ಲಾಲಯೇತ್ಪಂಕಂ ಕ್ಷಾಲಯೇತ್ಪಾಲಯೇತ್ತ್ರಣೈಃ |
ಶಮಯೇ ದೌಷಧೈರ್ಮಂತ್ರೈಃ ಸ್ವಗೋಷ್ಠಸ್ತಸ್ಯ ವೇದನಾಮ್ ||
ತಥಾ ನರಪಶೋರೀಶ  ಭವಕೂಪೇsರ್ದಿತಸ್ಯ ಮೇ |
ಹರೇ ಪರಿಹರಾಶೇಷ ಕ್ಲೇಶಂ ಕೇಶಿಘ್ನ ಕೇಶವ ||
ಮಾಮ್ ಹಿ ಜೀವನ್ಮೃತಂ ಕರ್ತುಂ ಯತಂತೇ ಪರಿತಃ ಖಿಲಾಃ |
ತಾನ್ನಿಹತ್ಯಾ ಹರೇ ಶೀಘ್ರಂ ಸೇವಾಯಾಂ ತೇ ನಿಯುಂಕ್ಷ್ವ ಮಾಮ್ ||
ಕಾಮಾದ್ಯಾಂತರ ಶತ್ರುಭ್ಯೋ ಬಾಹ್ಯ ಶತ್ರುಭ್ಯ ಏವ ಚ |
ಭೀತಂ ಹರೇsಸುರಾದ್ಭೀತ ಪ್ರಹ್ಲಾದಹ್ಲಾದ ಪಾಹಿ ಮಾಮ್. ||
ಅಧೀನ್ವ್ಯಾಧೀನರೀನ್ ರಾಜ್ನೋ ದ್ರೋಹಿಣೋsನ್ಯಾಂಶ್ಚ ದುರ್ಜನಾನ್ |
ಕ್ಷಿಪ್ರಂ ನಾಶಯ ಸರ್ವಜ್ಞ ಸರ್ವಶಕ್ತೇ ಹರೇ ಮಮ ||
ಕಲಿಂ ಖಂಡಯ ತದ್ಭೃತ್ಯಾನ್ ದಂಡಯಾssಶು ಹರೇ ಮಮ |
ಮನಶ್ಯೋಧಯ ಸತ್ತತ್ತ್ವಂ ಬೋಧಯೇಷ್ಟo ಪ್ರಸಾದಯ ||
ವಾದಿರಾಜಯತಿಪ್ರೋಕ್ತಮೇ ವಂ ಹರ್ಯಷ್ಟಕಂ ನವಮ್ |
ಪಠನ್ನೃಸಿಂಹ ಕೃಪಯಾ ರಿಪುನ್ಸಂಹರತಿ ಕ್ಷಣಾತ್ || 

ಶ್ರೀಶ್ರೀಶಗುಣದರ್ಪಣ
ಆರ್ಥಿಕ ಬಾಧೆ ಹಾಗೂ ದಾರಿದ್ರ್ಯನಿರ್ಮೂಲನಕ್ಕಾಗಿ ಶ್ರೀವಾದಿರಾಜರಿಂದ ಮೂಡಿಬಂದ ಶ್ರೀಶಗುಣದರ್ಪಣವಂತೂ ಯಾವುದೇ ತೆರನಾದ ಬಡತನವಿದ್ದರೂ ತೊಡೆದುಹಾಕುವ ಬ್ರಹ್ಮಾಸ್ತ್ರ ಎಂದು ಜ್ಞಾನಿಗಳು ಈ ಕೃತಿಯನ್ನು ಹೃತ್ಪೂರ್ವಕವಾಗಿ ಸ್ಮರಿಸುತ್ತಾರೆ.
ವಿಜಯನಗರ ಸಾಮ್ರಾಜ್ಯದ ಬೊಕ್ಕಸ ಬರಿದಾಗಿದ್ದ ಸಂದರ್ಭದಲ್ಲಿ ಆಗಿನ ಅರಸನಾಗಿದ್ದ ಅಚ್ಯುತರಾಯನು ತೀವ್ರ ಚಿಂತೆಯಲ್ಲಿದ್ದ.ಆ ಸಂದರ್ಭದಲ್ಲಿ ವಿಜಯನಗರ ಸಂಸ್ಥಾನಕ್ಕೆ ಆಗಮಿಸಿದ ಶ್ರೀವಾದಿರಾಜರು ಸಾಮ್ರಾಜ್ಯದ ಪರಿಸ್ಥಿತಿ ಹಾಗೂ ಅಚ್ಯುತರಾಯ ಅರಸನ ನೋವನ್ನು ತಿಳಿದುಕೊಂಡರು.ಅರಸನ ಪ್ರಾರ್ಥನೆಯ ಮೇರೆಗೆ ಶ್ರೀಶಗುಣದರ್ಪಣ ಮಂತ್ರವನ್ನು ಅರಸನಿಗೆ ಉಪದೇಶಿಸಿ ಬರಿದಾಗಿದ್ದ ಬೊಕ್ಕಸವನ್ನು ಶ್ರೀವಾದಿರಾಜರು ಮತ್ತೆ ತುಂಬಿಸಿದ ಘಟನೆ ಶ್ರೀವಾದಿರಾಜರ ಅಪೂರ್ವ ಮಹಿಮೆಯ ಕೃತಿಗಳಲ್ಲಿ ದಾಖಲಾಗಿದೆ.

ಯಾ-ಸುಗಂಧಾಸ್ಯನಾಸಾದಿ-ನವದ್ವಾರಾಽಖಿಲೇನ ಯಾ |
ದುರಾಧರ್ಷಾ ಸರ್ವಸಸ್ಯೋದಯಾರ್ಥಂ ಯಾ ಕರೀಷಿಣೀ || ೧ ||

ಯಾ ನಿತ್ಯಪುಷ್ಟಾ ಸರ್ವಾಂಗೈಃ ಸೌಂದರ್ಯಾದಿಗುಣೈರಪಿ |
ಈಶ್ವರೀಂ ಸರ್ವಭೂತಾನಾಂ ತಾಮಿಹೋಪಹ್ವಯೇ ಶ್ರಿಯಮ್ || ೨ ||

ಮಾತರ್ಲಕ್ಷ್ಮಿ ನಮಸ್ತುಭ್ಯಂ ಮಾಧವಪ್ರಿಯಮಾನಿನಿ |
ಯುವಾಂ ವಿಶ್ವಸ್ಯ ಪಿತರಾವಿತರೇತರಯೋಗಿನೌ || ೩ ||

ಸಮನಾ ಕಿಲ ಮಾತಸ್ತ್ವಮಮುನಾ ತತಯೋಗಿನೀ |
ಮಮ ನಾಥೇನ ದೇವಶ್ಚ ವಿಮನಾಶ್ಚ ನ ಸ ತ್ವಯಿ || ೪ ||

ತ್ವಂ ವೇದಮಾನಿನೀ ವೇದವೇದ್ಯಃ ಕಿಲ ಸ ತೇ ಪ್ರಿಯಃ |
ತ್ವಂ ಮೂಲಪ್ರಕೃತಿರ್ದೇವೀ ಸ ಚಾದಿಪುರುಷಃ ಕಿಲ || ೫ ||

ಯಸ್ತ್ವಾಮುರಸಿ ಧತ್ತೇಽಂಬ ಕೌಸ್ತುಭದ್ಯುತಿಭಾಸಿತೇ |
ಸತ್ವಾಂ ನೈವಾಚ್ಯುತಃ ಸರ್ವಸ್ಯಾತ್ಯಯೇ ಸತ್ಯಪಿ ತ್ಯಜೇತ್ || ೬ ||

ದೇವಿ ತ್ವಂ ಲಲನಾರತ್ನಂ ದೇವೋಽಸೌ ಪುರುಷೋತ್ತಮಃ |
ಯುವಾಂ ಯುವಾನೌ ಸತತಂ ಯುವಯೋರ್ನ ವಯೋಽಧಿಕಃ || ೭ ||

ತ್ವಂ ಪದ್ಮಿನೀಪದ್ಮವಕ್ತ್ರಾ ಪದ್ಮಾಕ್ಷೀ ಪದ್ಮವಿಷ್ಟರಾ |
ಪದ್ಮದ್ವಯಧರಾ ಪದ್ಮ ಕೋಶೋದ್ಯತ್‍ಸ್ತನಶೋಭನಾ || ೮ ||

ಪದ್ಮಹಸ್ತಾ ಪದ್ಮಪಾದಾ ಪದ್ಮನಾಭಮನಃಪ್ರಿಯಾ |
ಪದ್ಮೋದ್ಭವಸ್ಯ ಜನನೀ ಪದ್ಮಾ ಚ ವರವರ್ಣಿನೀ || ೯ ||

ಅಂಬಾಂ ಪೀತಾಂಬರಶ್ರೋಣೀಂ ಲಂಬಾಲಕಲಸನ್ಮುಖೀಂ |
ಬಿಂಬಾಧರೋಷ್ಠೀಂ ಕಸ್ತೂರಿ-ಜಂಬಾಲತಿಲಕಾಂ ಭಜೇ || ೧೦ ||

ರತ್ನೋದ್ದೀಪ್ತಸುಮಾಂಗಲ್ಯ-ಸೂತ್ರಾವೃತಶಿರೋಧರಾಮ್ |
ಕುಂಡಲಪ್ರಭಯೋದ್ದಂಡ-ಗಂಡಮಂಡಲಮಂಡಿತಾಮ್ || ೧೧ ||

ಕುಚಕಂಚುಕ ಸಂಚಾರಿ-ಹಾರನಿಷ್ಕಮನೋಹರಾಮ್ |
ಕಾಂಚೀ-ಕಿಂಕಿಣಿ-ಮಂಜೀರ-ಕಂಕಣಾದ್ಯೈರಲಂಕೃತಾಮ್ || ೧೨ ||

ಸುವರ್ಣಮಂಟಪೇ ರತ್ನಚಿತ್ರಸಿಂಹಾಸನೋತ್ತಮೇ |
ನಮಾಮಿ ಹರಿಣಾ ಸಾಕಮಿಂದಿರಾಂ ಕೃತಮಂದಿರಾಮ್ || ೧೩ ||

ಬ್ರಹ್ಮಾದ್ಯಾ ವಿಬುಧಶ್ರೇಷ್ಠಾಃ ಬ್ರಹ್ಮಾಣ್ಯಾದ್ಯಾಃ ಸುರಾಂಗನಾಃ |
ಯಾಂ ಪೂಜಯಂತೇ ಸೇವಂತೇ ಸಾ ಮಾಂ ಪಾತು ರಮಾ ಸದಾ || ೧೪ ||

ಸರ್ವಾಲಂಕಾರ ಭರಿತೌ ಸರ್ವಜ್ಞೌ ಸರ್ವಸದ್ಗುಣೌ |
ಶರ್ವಾದಿಸರ್ವಭಕ್ತೌಘ ಸರ್ವಸರ್ವಸ್ವದಾಯಕೌ || ೧೫ ||

ಸುಮುಖೌ ಸುಂದರತನೌ ಸುನಾಸೌ ಸುಖಚಿತ್ತನೂ |
ಸುರಾರಾಧಿತಪಾದಾಬ್ಜೌ ರಮಾನಾರಾಯಣೌ ಸ್ತುಮಃ || ೧೬ ||

ಚತುಷ್ಕಪರ್ದಾ ಯಾ ದೇವೀ ಚತುರಾಸ್ಯಾದಿಭಿಃ ಸ್ತುತಾ |
ಚತುರ್ವೇದೋದಿತಗುಣಾ ಚತುರ್ಮೂರ್ತೇರ್ಹರೇಃ ಪ್ರಿಯಾ || ೧೭ ||

ಘೃತಪ್ರತೀಕಾಂ ತಾಂ ನಿತ್ಯಂ ಘೃತಪೂರ್ಣಾನ್ನದಾಯಿನೀಮ್ |
ಯಥೇಷ್ಟವಿತ್ತದಾತ್ರೀಂ ಚ ನತೋಽಸ್ಮ್ಯಭಯದಾಂ ಶ್ರಿಯಮ್ || ೧೮ ||

ವಾದಿರಾಜೇನ ರಚಿತಂ ಶ್ರೀಶ್ರೀಶಗುಣದರ್ಪಣಮ್ |
ಇಮಂ ಸ್ತವಂ ಪಠನ್ ಮರ್ತ್ಯಃ ಶ್ರೀಮಾನ್ ಸ್ಯಾನ್ನಾತ್ರ ಸಂಶಯಃ || ೧೯ ||

|| ಇತಿ ಶ್ರೀವಾದಿರಾಜಯತಿಕೃತಂ ಶ್ರೀಶ್ರೀಶಗುಣದರ್ಪಣ ಸ್ತೋತ್ರಂ ಸಂಪೂರ್ಣಮ್ ||

ಋಣಮೋಚನ ಸ್ತೋತ್ರ
ದೇವಋಣ,ಋಷಿಋಣ ಪಿತೃಋಣ ಮತ್ತು ವಿವಿಧ ಋಣಗಳಿಂದ ಮುಕ್ತರಾಗಲು ರಚಿಸಿರುವ ಋಣಮೋಚನಸ್ತೋತ್ರದ ನಿತ್ಯ ಪಠಣವು ಎಲ್ಲಾ ಋಣಗಳಿಂದ ಮನುಷ್ಯನನ್ನು ಬಂಧಮುಕ್ತಗೊಳಿಸಿ ಸಾರ್ಥಕ ಬದುಕಿನತ್ತ ಕರೆದೊಯ್ಯುತ್ತದೆ. ಮುಖ್ಯವಾಗಿ ಭಗವಂತನ ಆರಾಧನೆ,ಬ್ರಹ್ಮಯಜ್ಞ ಹಾಗೂ ಪಿತೃಗಳ ಆರಾಧನೆಯಲ್ಲಿ ತಿಳಿದೋ ತಿಳಿಯದೆಯೋ ಸಂಭವಿಸುವ ಅಚಾತುರ್ಯಗಳಿಗೆ ನರಸಿಂಹದೇವರ ಮೂಲಕ ಪ್ರಾರ್ಥಿಸಿ ಋಣಪರಿಹಾರ ಮಾಡಿಕೊಳ್ಳಲು ರೂಪಿತವಾಗಿರುವ ಅಪರೂಪದ ಸ್ತೋತ್ರ.

ದೇವತಾಕಾರ್ಯಸಿಧ್ಯರ್ಥಂ ಸಭಾಸ್ತಂಭಸಮುದ್ಭವಮ್ |
ಶ್ರೀನೃಸಿಂಹಂ ಮಹಾವೀರಂ ನಮಾಮಿ ಋಣಮುಕ್ತಯೇ || ೧ ||

ಲಕ್ಷ್ಮ್ಯಾಲಿಂಗಿತವಾಮಾಂಗಂ ಭಕ್ತಾನಾಂ ವರದಾಯಕಮ್ |
ಶ್ರೀನೃಸಿಂಹಂ ಮಹಾವೀರಂ ನಮಾಮಿ ಋಣಮುಕ್ತಯೇ || ೨ ||

ಆಂತ್ರಮಾಲಾಧರಂ ಶಂಖಚಕ್ರಾಬ್ಜಾಯುಧಧಾರಿಣಮ್ |
ಶ್ರೀನೃಸಿಂಹಂ ಮಹಾವೀರಂ ನಮಾಮಿ ಋಣಮುಕ್ತಯೇ || ೩ ||

ಸ್ಮರಣಾತ್ಸರ್ವಪಾಪಘ್ನಂ ಕದ್ರೂಜವಿಷನಾಶನಮ್ |
ಶ್ರೀನೃಸಿಂಹಂ ಮಹಾವೀರಂ ನಮಾಮಿ ಋಣಮುಕ್ತಯೇ || ೪ ||

ಸಿಂಹನಾದೇನ ಮಹತಾ ದಿಗ್ದಂತಿಭಯನಾಶನಮ್ |
ಶ್ರೀನೃಸಿಂಹಂ ಮಹಾವೀರಂ ನಮಾಮಿ ಋಣಮುಕ್ತಯೇ || ೫ ||

ಪ್ರಹ್ಲಾದವರದಂ ಶ್ರೀಶಂ ದೈತ್ಯೇಶ್ವರವಿದಾರಣಮ್ |
ಶ್ರೀನೃಸಿಂಹಂ ಮಹಾವೀರಂ ನಮಾಮಿ ಋಣಮುಕ್ತಯೇ || ೬ ||

ಕ್ರೂರಗ್ರಹೈಃ ಪೀಡಿತಾನಾಂ ಭಕ್ತಾನಾಭಯಪ್ರದಮ್ |
ಶ್ರೀನೃಸಿಂಹಂ ಮಹಾವೀರಂ ನಮಾಮಿ ಋಣಮುಕ್ತಯೇ || ೭ ||

ವೇದವೇದಾಂತಯಜ್ಞೇಶಂ ಬ್ರಹ್ಮರುದ್ರಾದಿವಂದಿತಮ್ |
ಶ್ರೀನೃಸಿಂಹಂ ಮಹಾವೀರಂ ನಮಾಮಿ ಋಣಮುಕ್ತಯೇ || ೮ ||

ಯ ಇದಂ ಪಠತೇ ನಿತ್ಯಮೃಣಮೋಚನಸಂಜ್ಞಿತಮ್ |
ಅನೃಣೀ ಜಾಯತೇ ಸದ್ಯೋ ಧನಂ ಶೀಘ್ರಮವಾಪ್ನುಯಾತ್ || ೯ ||

|| ಇತಿ ಶ್ರೀಮದ್ವಾದಿರಾಜಪೂಜ್ಯಚರಣವಿರಚಿತಂ ನೃಸಿಂಹಪುರಾಣೋಕ್ತ ಋಣಮೋಚನಸ್ತೋತ್ರಂ ಸಂಪೂರ್ಣಮ್ ||

ಆತ್ಮೀಯರೇ ಮನುಕುಲದ ಕಲ್ಯಾಣಕ್ಕಾಗಿ ಸಂಜೀವಿನಿಯಂತಹ ಅನೇಕ ಕೃತಿರತ್ನಗಳು ಶ್ರೀವಾದಿರಾಜರಿಂದ ಅರ್ಪಿಸಲ್ಪಟ್ಟಿವೆ.
ಇಷ್ಟಾರ್ಥಸಿದ್ಧಿಗಾಗಿ,ಅಶಕ್ತರ ಅನುಕೂಲಕ್ಕಾಗಿ ಸುಲಭ ಸುಂದರ ಸಿದ್ದಿಸಾಧಕ ಸ್ತೋತ್ರರತ್ನಗಳನ್ನು ತಮ್ಮ ದಿವ್ಯಶಕ್ತಿಯಿಂದ ರಚಿಸಿದವರು ಶ್ರೀವಾದಿರಾಜರು. ಇಷ್ಟಪ್ರಾಪ್ತಿಯ ಅನಿಷ್ಟನಿವೃತ್ತಿಯ ನವಮಾರ್ಗವನ್ನು ದರ್ಶಿಸಿ ಭಕ್ತರನ್ನು ಉದ್ದರಿಸುತ್ತಿರುವ ಭಾವೀಸಮೀರಶ್ರೀವಾದಿರಾಜರ ಪಾದಕಮಲಗಳಿಗೆ ಕೋಟಿ-ಕೋಟಿ ಸಾಷ್ಟಾಂಗ ಪ್ರಣಾಮಗಳು.

ಆತ್ಮೀಯ ಭಗವದ್ಭಕ್ತರೇ, ಶ್ರೀವಾದಿರಾಜಯತಿ ವಿರಚಿತ ದಿವ್ಯಮಂತ್ರ ಪಠಿಸಿ ಭವರೋಗಗಳಿಂದ ಮುಕ್ತರಾಗಿ. ಶ್ರೀರಾಜರ ಕರುಣೆಗೆ ಪಾತ್ರರಾಗಿ.

ಪ್ರಿಯ ಓದುಗ ಮಿತ್ರರೇ, ಶ್ರೀಭೂವರಾಹ,ಶ್ರೀಹಯಗ್ರೀವ ದೇವರ,ಶ್ರೀವಾದಿರಾಜಗುರುಸಾರ್ವಭೌಮರ ಶ್ರೀಭೂತರಾಜರ ವಿಶೇಷ ಅನುಗ್ರಹವು ಸದಾ ಎಲ್ಲರಿಗೂ ಕರುಣವಾಗುತ್ತಿರಲಿ ಎಂದು ಶ್ರೀವಾದಿರಾಜರ ಆರಾಧನೆಯ ಪರ್ವಕಾಲದಲ್ಲಿ ಭಕ್ತಿಪೂರ್ವಕವಾಗಿ ವಿಶೇಷ ಪ್ರಾರ್ಥನೆ.
ಪ್ರೀತೋಸ್ತು ಕೃಷ್ಣಪ್ರಭುಃ
ಬರಹ:ಪಿ.ಲಾತವ್ಯ ಆಚಾರ್ಯ ಉಡುಪಿ.
****

No comments:

Post a Comment