Monday 31 May 2021

a 98 dasaru ದಾಸರು

 




(ORIGINATOR OF DASA SAHITYA)


Know  the names of Dasaru and Yatigalu who composed Devaranama and promoted Dasa Sahitya. ಕನ್ನಡ ದಾಸ ಸಾಹಿತ್ಯ ಕ್ಷೇತ್ರದಲ್ಲಿ ವಿರಾಜಿಸಿ ದಾಸ ಸಾಹಿತ್ಯಕ್ಕೆ ಮೆರಗು ತಂದಂತಹ ದಾಸರು ಮತ್ತು ಯತಿಗಳು. On the left side names of dasaru is given. Wherever the names of dasa is underlined then please click that to know more about them.

11for details CLICK UNDERLINEDYEAROLD NAMEARADHANAANKITA
2ABHINAVAJANARDHANA VITTALA DASA PREMA DASA1800-1880Prema Dasaruabhinavajanardhana vittala
3ABHINAVAPRANESHARU /HANUMANTARAYA ARCHAKA1903-1978Hanumantharayaru Archakapushyabahulasaptamiabhinavapranesha vittala (swap)
4ABHINAVAPURANDARA DASA s/o PURANDARA DASA1500+Abhinavappa s/o P.dasaabhinavapurandara vittala
5ACHALANANDA TEERTHARU YATIYati1400 +achalananda vittala
6ACHINTYA VITTALARU1820+Subbarayaruachintya vittala
7ACHYUTA TEERTHARU YATIYati1400 +achyuta vittala
8AIHOLE VENKATESHARU1835-Bheemarao Raghavendra Kulkarniaihole venkatesha
9AMBABAIHaridasi1902-1943gopalakrishna vittala
10ANANDA DASA b/o VIJAYA DASA HAYAVADANA VITTARU1680+hayavadanavittala
11ANANDA DASA SURAPURA KAMALESHA VITTALA DASA1780-1840Ananda Dasabhadrapadashukladwadashikamalesha vittala
12ANANDA TEERTHARU YATIYati1400 +anandavittala
13ANANDA VITTALARU /KULKARNI RAMA RAO1869-1918Kulkarni Rama Raoashwijashukladwitheeyaananda vittala
14ANANDANANTA VITTALARU1800 +anandananta vittala
15ANANTA TEERTHARU YATIYati1400 +ananta vittala
16ANANTADREESHARU /GOKAVI ANANTACHARYA1770-1850Anantacharyaruananathadreesha
17APPAVARU IBHARAMAPURAYati1789-1869Ibharamapura Krishnacharyashravanashuklatriteeya
18ARALUMALLIGE PARTHASARATHI VACHASPATI1948+ -livingAralumallige Parthasarathi-parthasarathi vittala
19ARAVINDANABHA TEERTHARU YATIYati1400 +aravinda vittala
20BADARAYANA VITTALARU1734-1822badarayana vittala
21BAGEPALLI SHESHADASA1865- 1924Sheshagiribhadrapadashuklachaturdashiprananatha vittala, shesha vittala
22BALAKRISHNA VITTALARU1820+Balakrishnarayarubalakrishna vittala
23BALLIDA TEERTHARU YATIYati1400 +ballida vittala
24BELURU VENKATESHA DASARU1720+Belur Venkatadasavenkatesha vittala
25BHAGYANIDHI VITTALARUbhagyanidhi vittala
26BHEEMADASARU KEMBHAVI1900+Surendrarao Kulkarnishravanashukladashamikembhavi bheemanodeya
27BHEEMASHANKARARU1660-Guruppayyamahesh, gururama, eesha
28BHEEMESHA VITTALARU /MADAKASHIRA BHEEMADASA1750+bheemesha vittala
29BHUKANTA VITTALARU1800 +bhukanta vittala
30BHUPATI VITTALARUxxxx-1987Kakhandaki Ramacharyakarteekashuklachaturdashibhupati vittala
31BHUVARAHA RAGHUPATI VITTALARU1800+bhuvaraha raghupati vittala
32BODHAPATI TEERTHARU YATIYati1400 +bodhapati vittala
33CHANNAPATNA AHOBALA DASA1870-gurutulasirama
34CHANNASWAMI TEERTHARU YATIYati1400 +channaswami vittala
35CHATURA TEERTHARU YATIYati1400 +chatura vittala
36CHIDANANDA AVADHUTARUZhankappamaghabahulatrayodashichidananda
37DAMODARA DASA S/O JAGANNATHA DASA1750+tandejagannatha vittala
38DARIPANA TEERTHARU YATIYati1400 +daripana vittala
39DASIPACHANNA TEERTHARU YATIYati1400 +dasipachanna vittala
40DEVARAYA DASA s/o MAHIPATI DASA1620+Kakhandaki Devarayajyeshtashuklanavami
41DHANI VITTALARU1400 +dhani vittala
42DHANVANTRI VITTALARU1800 +dhanvantri vittala
43GADUGINA VEERANARAYANA1800 +gadugina veeranarayana
44GALAGALAI AVVAHaridasi1670-1760ramesha, raviarasa, srirama
45GANGAJANAKARU1800 +gangajanaka
46GARUDAVAHANA TEERTHARU YATIYati1400 +garudavahana lakshminarayana
47GARUDAVAHANA VITTALARU1820 +garudavahana vittala
48GOPALA DASA BHAGANNA1722-1762Bhagannapushyabahulaashtamigopala vittala, venkata krishna
49GOPALARYARUgopalarya
50GOPATI VITTALARUHarapanahalli Ramacharyagopati vittala
51GOPATIKRISHNA VITTALARUMudenur Acharyagopatikrishna
52GOPINATHA TEERTHARU YATIYati1400 +gopinathavittala
53GOPINATHA VITTALARU1820 +gopinatha vittala
54GOVINDA DASA HASIGYALU1873-1915Govindabhadrapadashuklapanchamigovinda vittala
55GOVINDA WODEYARU YATIYatixxxx-1534Govinda Teerthaphalgunabahulapanchamigurukrishna
56GUNDAMMAHaridasirukmineesha vittala
57GURU TEERTHARU YATIYati1400 +guruvittala
58GURUGOPALA DASA b/o GOPALA DASA1723-1764Dasappa b/o Gop.dasagurugopala vittala
59GURUGOVINDA VITTALA DASARU1894-1983margashirabahulaekadashigurugovinda vittala
60GURUGOVINDA VITTALARU1800 +gurugovinda vittala
61GURUINDIRESHARU1890 +Harapanahalli Ramacharyaguruindiresha
62GURUJAGANNATHA DASA SWAMIRAYACHARYA1837-1918Swamirayacharyaashwijabahulapratipadagurujagannatha vittala
63GURUMADHWAPATI DASA s/o PURANDARA DASA1500+Madhwapati s/o P.dasagurumadhwapati vittala
64GURUMADHWESHA VITTALARU1720+Kudli Madhwacharyagurumadhwesha vittala
65GURUMAHIPATI DASA KAKHANDAKI KRISHNA DASA1610-1685Krishna dasarumaghashukladwadashigurumahipati
66GURUPRANESHA DASA s/o PRANESHA DASA1785-1860Venkata Dasamaghabahulaamavasyagurupranesha vittala
67GURUPURANDARA DASA s/o PURANDARA DASA1500+Gururaya s/o P.dasagurupurandara vittala
68GURURAJA BENAKAL1900 +narahari
69GURURAJA VITTALARU1800 +gururaja vittala
70GURURAMA VITTALARU1850-1915Bagepalli SubramanyaGururama vittala
71GURUSHREESHA VITTALARU /KUNTOJI NARASIMHA DASA1740-1846Kuntogi Narasimha Dasamargashirabahulaamavasyagurushreesha vittala
72GURUSHYAMASUNDARA DASARitti Susheelendracharyagurushyamasundara
73GURUTANDEGOPALA VITTALARU1800 +gurutandegopala vittala
74GURUTANDEVARADAGOPALA VITTALARU1910+Kattemane Narasingarayagurutandevaradagopala vittala
75HALLERAAO KEMBHAVI1970+ livingkembhavi
76HANUMA DASA MANURU1900+pushyabahulatriteeya
77HANUMAYYANAVARU1800 +hanumayya
78HANUMESHA VITTALARU1854-hanumesha vittala
79HARAPANAHALLI BHEEMAVVAHaridasi1822-1903Bhimavvapushyashuklatrayodashibheemesha krishna (swapna)
80HARI TEERTHARU YATIYati1400 +hari vittala
81HARIDASA TEERTHARU YATIYati1400 +haridasa vittala
82HARIDASARATNAM GOPALA DASA1900+
83HARIKADALAGIRISHARU1800 +harikadalagirisha
84HAYAVADANA TEERTHARU YATIYati1400 +hayavadana vittala
85HELAVANAKATTE GIRIYAMMAHaridasixxxx-1750Giriyammashravanashuklapanchamihelvanakatte ranga
86HENNE RANGA DASA1800-1860Sadanandahenneranga vittala
87HONNALI VENKATA DASA1770-1865Honnali Dasaru Venkappacharyaruvenkata vittala
88HONNAPPA DASARUmaghabahulaashtami
89HOSAKERE CHIDAMBARAYYA
90IG HIREGOPALA KRISHNACHARYAvaishakhabahulaamavasyatandevasudeva vittala
91INDIRESHARU HUCHCHACHARYA1860-1945Huchchacharyarukarteekabahulapanchamiindiresha
92JAGANNATHA DASA1728-1809Srinivasacharyabhadrapadashuklanavamijagannatha vittala, panduranga vittala
93JAMBUKHANDI VADIRACHARYARU IBHAVARADA VITTALA DASA1842-1896Vadirajacharyashravanabahulatravyodashiibhavarada vittala
94JANAKIRAMANA1800 +janakiramana
95JANARDHANA DASA1780-1865Tirumaladasaryajanardhana vittala
96JAYA DASARU1800 +pushyashuklapournima
97JAYATEERTHARU YATI UMYatixxxx-1388Dondo Raghunatha Panthaashadabahulapanchamishreerama, shreejayarama
98JAYESHA VITTALARU1850-1932Attaji Venkata Raovaishakhabahuladwiteeyajayesha vittala
99JNANABODHAKARUjnanabodha
100JNANADAYAKA VITTALARU1820+Venkatarayarujnanadayaka vittala
101JOLADA HADAGI RAMA DASA1882-1938margashirabahuladashamishreerama
102KADARUNDALAGEESHARU1842-Srinivasa
103KADARUNDALAGI HANUMAYYANAVARU1775-1845Bheemacharyakadarundalagi hanumaiah
104KADRI NARASIMHARUTippannacharyakhadrinarasimha
105KALASADA SUNDARAMMAHaridasikalimardhanakrishna
106KAMALAPATI VITTALARUkamalapati vittala
107KAMALESHARU /RAJA S GURURAJACHARYARaja S Gururajacharyakamalesha
108KANAKA DASA1508-1606Thimmappa Nayakaneleyadikeshava
109KANTESHAPRIYARU1800 +kanteshapriya
110KAPILANKITARU1800 +kapilankita
111KARIGIRISHARU1800 +karigirisha
112KARIVARADA VITTALARU DODDABALLAPURA RAMADASA1900+Rama dasarupushyabahulatriteeyakarivarada vittala
113KARJAGI RAJAGOPALA DASArajagopaladasa
114KARKALADA VENKATARAMANARU
115KARKI KESHAVA DASA1900-1975Ishvara Keshava Bhattachannakeshava
116KARPARA NARAHARI DASA KOPPARA GIRIYACHARYA1896-1979Koppara Giriyacharyaruashadabahulatrayodashikarpara narahari (swapna)
117KARUNAKARA VITTALARU1820+Raghavendrarayarukarunakara vittala
118KATAGERI DASA ANANTARAYA BALACHARYA1900+ livingAnantacharya Balacharya Katageri
119KAVI LAKSHMEESHA1550-Lakshmeekanta Hebbaradevapura lakshmeekanta
120KAVI PARAMADEVA DASA1900+
121KELADI VENKANNA KAVINkeladiramesha
122KESHAVA VITTALARU1700+Kathval Subbanna Dasa(CHECK)bhadrapadashukladwadashikeshavavittala
123KHADRIDEVA1800 +khadrideva
124KOSALA PUREESHARUkosalapura
125KRISHNA TEERTHARU YATIYati1400 +krishna vittala
126KRISHNAVADHUTARU1835-1909shreemuddukrishnamaghashuklatriteeya
127KRISHNAVEDAVYASA VITTALARU1800 +krishnavedavyasa vittala
128KUPPERAYARU UKLI1900+padmanabha
129LAKSHMEE VITTALARU1750 +lakshmee vittala
130LAKSHMEEKANTA TEERTHARU YATIYati1400 +lakshmeekanta vittala
131LAKSHMEEPATI TEERTHARU YATIYati1400 +lakshmeepativittala
132LAKSHMEESHA DASARU1900 +Kurudi Raghavendracharyalakshmeesha vittala
133LAKSHMIPATI VITTALARU1760-1858Hanumaddasarulakshmipati vittala
134LAKUMEESHARU KURUDI RAGHAVENDRACHARYA1851-1929Kurudi Raghavendracharyakarteekabahuladwadashilakumeesha
135LOKAIKA TEERTHARU YATIYati1400 +lokaika vittala
136MADHAVA RAO UPPILI1918-2010bhadrapadabahulapratipada
137MADHAVA VITTALARU1800+Jatti Venkata Dasamadhava vittala
138MADHWACHARYRU MADHWA MUNI ANANDA TEERTHAYati1238-1317Vasudevamaghashuklanavamianandateertha
139MADHWANANDA VITTALARU1700+madwananda vittala
140MADHWAPATI TEERTHARU YATIYati1400 +madhwapativittala
141MADHWARAO RAICHUR1900+madhwamuni
142MADHWESHA VITTALARU1708-1800Madhwacharyarumadhwesha vittala
143MAHANIDHI VITTALARU1809-Mysuru Venkataramanadasamahanidhi vittala
144MAHIPATI DASA1611-1681Mahipathi Rayarukarteekabahulaamavasyamahipathi
145MANOHARA VITTALARU1703-1772Buraladinni Buddinni Monappanavarumanohara vittala
146MATOSHREE RANGAMMAHaridasibalakrishna
147MEDINIPATI VITTALARUmedinipati vittala
148MELUGIRI DASARU1900 +margashirabahulaashtami
149MODA VITTALARU1800 +moda vittala
150MOHANA DASA1728-1751Mohanajyeshtashuklashashtimohana vittala
151MOOLANARAYANARU1800 +moolanarayana
152MUDDU TEERTHARU YATIYati1400 +mudduvittala
153MUDDU VITTALARU /MEENAPPA1720+Meenappamuddu vittala
154MUDDUMOHANA DASA DODDABALLPURA1830-1898RaghavendraDoddaballapur dasakarteekabahulachaturdashimuddumohana vittala
155MUNDEWADI RAMA DASA1800+Rama dasaruashadabahulasaptami
156MURALI VINODA VITTALARU1912+Swamirajacharya Vaidyamuralevinoda vittala
157MUTHU VITTALARU1400 +muthu vittala
158NADA VITTALARU1700+nada vittala
159NAGARAJACHARYA1800 +jayarama vittala
160NAGARAJU HAVERI1900+ livingNagarajuvenkatanatha
161NAGASHAYANA VITTALARU1800 +nagashayana vittala
162NAGASHAYANARU1800 +nageshashayana
163NALINAKSHA TEERTHARU YATIYati1400 +nalinaksha vittala
164NARAHARI TEERTHARU UM YATI DASA SAHITYA ORIGINATORYati1263-1333Syama Shastripushyabahulasaptaminarahari, raghupati
165NARAHARI VITTALARU1880-1966Krishnacharyarunaraharivittala
166NARAKANTEERAVA TEERTHARU YATIYati1400 +narakanteerava vittala
167NARASAPPA DASA1890+anandapurna vittala
168NARASIMHA DASA f/o JAGANNATHA DASA1685-1765Narasimiha Dasamargashirabahulashashtinarasimha vittala
169NARASIMHA VITTALARU1900 +Kumbura Hanumantacharyanarasimhavittala
170NARAYANA TEERTHARU YATIYati1400 +narayana vittala
171NARSIMHA VITTALARU21800 +narasimha vittala2
172NIDAMBUR RAMADASA1898-1988Ramadasa Ballala
173ODEYAMOHANA VITTALARU1820+odeyamohana vittala
174OREBAI LAKSHMIDEVAMMA1865-1950narasimhavittala
175PANDHARINATHA VITTALARU1800 +pandharinatha vittala
176PANDURANGA RAYA KASABE1900+pandu vittala
177PANDURANGA VITTALARU1400 +panduranga vittala
178PARAMAPAVANA VITTALARU1820+Subbannaparamapavana vittala
179PARIPOORNA TEERTHARU YATIYati1400 +paripurna vittala
180PRADYUMNA TEERTHARU SAG.MUTT YATIYati1920-1975jyeshtabahulaamavasyanarahari
181PRAHLADAVARADA HARIVITTALARU1900+Raghavendrarayaprahladvarada srihari vittala
182PRANAPATI TEERTHARU YATIYati1400 +pranapativittala
183PRANAPATI VITTALARU SHATPURACHARYA YATIYati1850+Vasudevacharyaashwijashuklapanchamipranapativittala
184PRANESHA DASA1736-1822Yogeendra Rayaruashwijashuklasaptamipranesha vittala
185PRASANNASRINIVASA DASA1905-1995Purushottamacharyaashadashuklapournimaprasannashreenivasa
186PRASANNAVENKATA DASA1680-1752Venkappayabhadrapadashuklaekadashiprasannavenkata
187PRAYAGAVVAHaridasi1690+Bhagammaprayagavva
188PURANDARA DASA1480-1564Srinivasa Nayakapushyabahulaamavasyapurandara vittala
189RADHABAI1901-Rukminiraghavendra
190RAGHAVARYA ODEYARU1890-1956Raghavaaryarupushyabahulaekadashinadupuresha, katipuresha
191RAGHAVENDRA TEERTHARU RAYARU YATI RMYati1595-1671Venkatanathashravanabahuladwiteeyadheeravenugopala
192RAGHAVENDRACHARYA1900+gurumadhwa
193RAGHAVENDRACHARYA NAVALI1900+bhogapuresha
194RAGHUNATHA TEERTHARU SHESHACHANDRIKACHARYA YATI VMYati1700-1755ashadashuklachaturthiraghunatha
195RAGHUNATHA VITTALARU1800 +raghunatha vittala
196RAGHUPATI VITTALARU /TAMMANNA DASA1700-1785Raghavendracharyaraghupathi vittala
197RAGHURAMA VITTALARUxxxx-1972Swamirayacharyavaishakhabahulapanchamiraghurama vittala
198RAJAGOPALARURajagopalacharyarajagopala
199RAMA SUNDARA VITTALARU1736-1823ramasundara vittala
200RAMA VITTALA DASARU1916-1990Keertishesha Parvatikar
201RAMACHANDRA VITTALARU1800+ramachandra vittala
202RAMAKANTA VITTALARU1906-1983pushyabahulaekadashiramakantha vittala
203RAMAKRISHNA VITTALARU1400 +ramakrishna vittala
204RAMANA VITTALARU1820+ramana vittala
205RAMAPATI VITTALARU1830- 1900Ramanna Oor Balappanavaruxxxramapati vittala and venkata
206RAMARAYARU DR HERURU GANGAVATI1900+moolarama
207RAMASUNDARA VITTALARU1736-1823ramasundara vittala
208RANGA DASA1860-mahadevapuravasa
209RANGAPATI TEERTHARU YATIYati1400 +rangapati vittala
210RANGESHA VITTALARU1875-1954Sanjeevarayarangesha vittala
211RUKMANGADARU1532-phalguna?dwadashi
212RUKMANIPATI VITTALARUrukmanipati vittala
213RUKMINIBAI d/o PURANDARA DASAHaridasitandepurandara vittala
214SARASA BAIHaridasiramavallabha vittala
215SARASWATI BAI w/o PURANDARA DASAHaridasisiripurandara vittala
216SATYAVIJAYARU1906-1983Nagannacharyavaishakhashuklaekadashikarunasindhu vittala
217SEEMAMA1900+varadavittala
218SEETARAMA VITTALARU1800 +seetarama vittala
219SHANTIBAIHaridasishanti
220SHARADHIPURESHARU1800 +sharadhipuresha, varidheesha
221SHARANYA VITTALARU MURUGOD KRISHNA DASA1900+chaitrashuklachaturthisharanya vittala
222SHESHA DASA MODALAKALLU1817-1885Sheshappavaishakhashuklaashtamiguruvijaya vittala (Swapna)
223SHESHA VITTALARU1720-1796shesha vittala
224SHESHAGIRI DASA s/o VIJAYA DASA1720+Sheshagiribhadrapadashukladwiteeyahayagreeva vittala
225SHIRIPATI TEERTHARU YATIYati1400 +shreepati vittala
226SHIVARAMARUshivarama
227SHREE VITTALARU YATIYati1400 +shree vittala
228SHREEDA VITTALARU KARJAGI DASA SRIDA1741-1820Karjagi Dasappaashadashuklaekadashishreeda vittala
229SHREEDHARA PANDURANGA TEERTHARU YATIYati1400 +shreedaharapanduranga vittala
230SHREEDHARA VITTALARU1800+shreedhara vittala
231SHREEGANGAJANAKARU1800 +sirigangajanaka
232SHREEHARIVITTALESHARU1800 +shreeharivittalesha
233SHREEKANTA VITTALARU1800 +shreekanta, lakumeekanta
234SHREEKANTA VITTALARU DASA SRINIVASA MURTHY1900+Srinivasa Murthyashadabahulapanchami
235SHREEKARA TEERTHARU YATIYati1400 +
236SHREEKARA VITTALARU1900-1981Jagannathacharyarushreekara vittala
237SHREEKRISHNA VITTALARU1902-1963Bheemarayarushreekrishna vittala
238SHREENIDHI VITTALARU1800+Deepada Annayyacharyasrinidhi vittala
239SHREENIVASACHARYA KAKHANDAKI1900+harishreenivasa
240SHREEPADARAJARU YATI SRIPADARAJA MUTTYati1406-1511Lakshminarayanajyeshtashuklachaturdashirangavittala
241SHREEPATI VITTALARU1798-1870shreepati vittala
242SHREERAGHAVENDRARU1800 +shreeraghavendra
243SHREERAMA TEERTHARU YATIYati1400 +shreerama vittala
244SHREERANGA TEERTHARU YATIYati1400 +shreeranga vittala
245SHREESHA VITTALARU Hundekara Dasa Shrisha1721-1764Hundekara Dasashreesha vittala
246SHREESHAKESHAVA VITTALARU1740+Subbanna dasashreeshakeshava vittala
247SHREESHAPRANESHA VITTALARU1807-1892Rama Dasabhadrapadashuklaashtamishreeshapranesha vittala
248SHREESHAVENKATESHARU1900+Raghavendracharyaashwijashukladashamishreesha venkatesha
249SHREESHREENIVASARU1800 +shreeshreenivasa
250SHREEVARA VITTALARU1823-1873Ramachandra Raoshravanashukladwadashishreevara vittala
251SHREEVATSA VITTALARU1885-1944Subbannacharyarushreevatsa vittala
252SHYAMASUNDARA DASA1903-1956Manvi Gundacharyaruvaishakhashuklanavamishyamasundara (swapna)
253SHYAMASUNDARA DASA1800 +manidhal desaishyamasundara1
254SHYAMASUNDARA DASA1800 +kurudishyamasundara2
255SIRI TEERTHARU YATIYati1400 +
256SIRI VITTALARU NARAYANA RAYARU YATIYati1800+vaishakhashuklanavamisirivittala
257SIRIGURUTANDEVARADA VITTALARU1930+ashvinashuklanavamisirigurutndevarada vittala
258SIRINARAYANARU1800 +sirinarayana
259SIRIPATISULABHA TEERTHARU YATIYati1400 +shreepatisulabha vittala
260SIRIVARA RAMACHARYAvaishakhashuklaekadashi
261SIRIVATSANKITARU1900 +srivatsankita
262SOBAGU TEERTHARU YATIYati1400 +sobagu vittala
263SRIKRISHNA VITTALARU1902-1963Bheemarayarushreekrishna vittala
264SUDHAMA VITTALARU1800 +sudhama vittala
265SUKHANIDHI VITTALARU YERI NARAYANACHARYA1800+Yeri Narayanacharyamaghashukladwiteeyasukhanidhi vittala
266SULABHA TEERTHARU YATIYati1400 +sulabha vittala
267SULADI KUPPERAYARU1800-1945jyeshtashuklanavamipadmanabha
268SUNDARA TEERTHARU YATIYati1400 +
269SUNDARA VITTALARU GOREBALA HANUMANTARAY1893-1968Gorebalu Hanumantha Raopushyabahuladwadashisundara vittala
270SUNDARAMMAHaridasi1910+suresha vittala
271SWAMI TEERTHARU YATIYati1400 +swami vittala
272TANDEGOPALAVITTALARU b/o GOPALA DASA1726-1767Rangappa b/o Gop.dasatandegopala vittala
273TANDEMUDDUMOHANA VITTALARU1865-1940Subba Raochaitrashuklanavamitandemuddumohana vittala
274TANDESHREENARAHARI DASAtandeshreenarahari
275TANDESHREENIDHI VITTALARU1820+tandesrinidhi vittala
276TANDESHREEPATI VITTALARU1800-1890Venkata dasapushyashukladwiteeyatandeshreepati vittala
277TANDEVARADA VITTALARUSrinivasaryatandevarada vittala
278TANDEVARADAGOPALA VITTALARU1912-Prahlada Gowdarutandevaradagopala vittala
279TANDEVARADAGOPALA VITTALARUtandevaradagopala vittala
280TANDEVENKATESHA VITTALARU1907-1982Ramachandrarayaruashadabahulaashtamitandevenkatesha vittala, uragadrivasa vittala
281TIMMANNA TEERTHARU YATIYati1400 +timmanna vittala
282TIRUMALESHAHARI VITTALARU1800 +tirumaleshaharivittala
283TURADAGI TIMMAMMA SADHVI SHIROMANIHaridasi1705-1790maghashuklapratipada
284UDAYADREESHA VITTALARU1800 +udayadreesha vittala
285URAGADRI VITTALARU1871-1964Srinivasa Raokarteekabahuladwadashiuragadri vasa vittala, venkatesh vittala
286VADAVI BHEEMACHARYA1890+maruteesha vittala
287VADEENDRA TEERTHARU YATI RMYatixxxx-1750Srinivasacharyajyeshtashuklanavamivadeendrayati
288VADIRAJA TEERTHA YATI SODE MUTTYati1480-1600Bhoovaraha/Varahacharyaphalgunabahulatriteeyahayavadana
289VADIVANDYA TEERTHARU YATI SODE MUTTYatixxxx-1706ashvijashuklashashti
290VAGEESHA VITTALARU1820+Balajivageesha vittala
291VAIKUNTA TEERTHARUYati1480-1550Keshavacharya Iyengarvaikunta vittala, vaikuntakeshava, vaikuntapati, vaikuntagiri
292VAMANA VITTALARU1820 +vamana vittala
293VARADA TEERTHARU YATIYati1400 +varada vittala
294VARADA VITTALARU1872-1935Hanumantha Raokarteekashuklachaturdashivarada vittala
295VARADAGOPALA DASA b/o GOPALA DASA1724-1766Seenappa Dasa b/o Gop.Dasavaradagopala vittala
296VARADAJAYA VITTALARU1820+Sheshadasaruvaradajaya vittala
297VARADAPURANDARA DASA s/o PURANDARA DASA1500+Varadappa s/o P.dasavaradapurandara vittala
298VARADENDRA TEERTHA YATI RMYatixxxx-1785Balaramacharyaashadashuklashashtimoolarama, varadendrayati
299VARADENDRA VITTALARU1886-1960Venkatesha Halleraoshravanabahulaekadashivaradendra vittala
300VARADESHA VITTALARU1885-1918Swamirayaruashwijashuklatriteeyavaradesha vittala
301VARAHAHARI VITTALARUvarahahari vittala
302VARAHATIMMPPA /NEKKARA KRISHNA DASA1700+Nekkara Krishnadasavarahatimappa
303VARAVANI RAMARAYARU
304VARAVIKATA TEERTHARU YATIYati1400 +varavikata vittala
305VASUDEVAKRISHANA VITTALARU1800 +vasudevakrishna vittala
306VEDANIDHI TEERTHARU YATI SODE MUTTYatixxxx-1648phalgunabahulachaturdashi
307VEDAVEDYA TEERTHARU YATI SONDA MUTTYatixxxx-1616ashvijashukladwiteeya
308VENKATA DASAvasudevarya
309VENKATA RAOCsongs do not have ankita
310VENKATA VARADARYARU
311VENKATAPATI TEERTHARU YATIYati1400 +venkatapativittala
312VENKATARAMANA DASA1900 +sarvesha vittala
313VENKATESHA TEERTHARU YATIYati1400 +venkatavittala, venkateshavittala
314VENKATESHA VITTALARU1750 +venkatesha vittala
315VENKATESHA VITTALARU /RAGHAVENDRACHARYA GUDEBALLURU1900+Raghavendracharya Guddeballuruvenkatesha vittala
316VENKATESHARU1800 +venkatesha
317VENUGOPALA DASA1722-1765Panganama Timmannavaishakhashukladwiteeyavenugopala vittala
318VIBUDENDRA TEERTHARU YATI RMYatixxxx-1490Raghunatha BhattamargashirashukladashamiVibhudendra Rama
319VIDYAPAYONIDHI TEERTHARU YATI VMYati1969-1997Poornabodhacharyabhadrapadabahuladashami
320VIDYAPRASANNA TEERTHA YATI VMYatixxxx-1969margashirashuklapournimaprasanna
321VIDYARATNAKARA TEERTHARU YATI VMYati1865-1915Ahobalacharyavaishakhabahulanavami
322VIJAYA DASA1682-1755Dasappakarteekashukladashamivijaya vittala
323VIJAYALAKSHMI RAGHAVENDRACHARYAHaridasi1900+ livingmangalanga vittala
324VIJAYAMOHANA VITTALARU1820+-vijayamohana vittala
325VIJAYARAMACHANDRA VITTALARU1819-1872vaishakhashuklatriteeyavijayaramachandra vittala
326VIJAYASARATHI VITTALARU1820+vijayasarathi vittala
327VIJAYEENDRA TEERTHARU YATI RMYati1517-1614Vittalacharyajyeshtabahulatrayodashivijayeendrarama
328VISHWAPATI
329VISHWENDRA TEERTHARU YATI SODE MUTTYati1881-1943ahvinashuklanavamirajeshahayamukha
330VITTALA TEERTHARU YATIYati1400 +shreevittala
331VITTALA VYASARU1745-1810Bada Annayyacharyaruvittalavyasa
332VITTALESHARU1800 +vittalesha
333VYAGHRAPURI DASA1894-1975Yahpatyacharyaruvyaghrapuri
334VYASA VITTALARU KALLURU SUBBANNA1720-1815Kallur Subbanna Dasavyasa vittala
335VYASAPATI TEERTHARU YATIYati1400 +vyasapati vittala
336VYASARAJARU YATI VMYati1447-1539Yatirajaphalgunabahulachaturthishreekrishna, sirikrishna, krishna
337VYASATATWAJNA TEERTHA BIDISANYASI IGSWAMI YATI RMYati1704-1800I G Swami Venkataramacharyashravanabahulaashtamivasudeva vittala
338YADUGIRIYAMMAHaridasi1828-1908venkata, venkatakrishna
339YADUPATI TEERTHARU YATIYati1400 +yadupati vittala
340YERI SHESHACHARYAjyeshtashuklaashtami
341YERI VENKATESHACHARYAjyeshtashuklaashtamiyerivenkata
342YOGEENDRA TEERTHARU YATIYatixxxx-1688maghashukladashamiyogendra vittala, shreerama
343
344
345
346
347
348
349
350


ಶ್ರೀಮದಾಚಾರ್ಯರ ಸಾಕ್ಷಾತ್ ಶಿಷ್ಯರಾದ ಶ್ರೀ ನರಹರಿತೀರ್ಥರು [ ಅಂಕಿತ : ರಘುಪತಿ ] ಶ್ರೀಮದಾಚಾರ್ಯರ ಆದೇಶದಂತೆ - ಅವರೇ ನಿರ್ದೇಶಿಸಿದಂತೆ ಭಕ್ತಿ ಪ್ರಧಾನವಾದ ಗೇಯ - ಗೀತೆ ಪದ್ಧತಿಯನ್ನು ದೇಶ ಭಾಷೆಯಾದ ಕನ್ನಡಕ್ಕೂ ಅನ್ವಯಿಸುವಂತೆ ಮಾಡಿ " ದಾಸ ಪಂಥ " ದ  " ದಿವ್ಯ ಭವ್ಯ ಮಂದಿರ " ಕ್ಕೆ ಶಂಕುಸ್ಥಾಪನೆ ಮಾಡಿದರು.

ಶ್ರೀ ಜಯತೀರ್ಥರು [ ಶ್ರೀ ರಾಮ / ಜಯರಾಮ ] - ಶ್ರೀ ವಿಬುಧೇಂದ್ರತೀರ್ಥರು [ ವಿಬುಧರಾಮ ] - ಶ್ರೀ ಶ್ರೀಪಾದರಾಜರು [ ಅಂಕಿತ : ರಂಗವಿಠ್ಠಲ ] ಹಾಗೂ ಶ್ರೀ ವ್ಯಾಸರಾಜರು [ ಅಂಕಿತ : ಶ್ರೀ ಕೃಷ್ಣ / ಸಿರಿಕೃಷ್ಣ ] ಆ " ದಿವ್ಯ ಭವ್ಯ ಮಂದಿರ " ಕ್ಕೆ ಭದ್ರ ಬುನಾದಿ ಹಾಕಿದರು.

ಶ್ರೀ ಗೋವಿಂದ ಒಡೆಯರು [ ಅಂಕಿತ : ಗುರುಮುದ್ದುಕೃಷ್ಣ ] - ಶ್ರೀ ವಿಜಯೀ೦ದ್ರತೀರ್ಥರು [  ಅಂಕಿತ : ವಿಜಯೀ೦ದ್ರರಾಮ ] - ಶ್ರೀ ಶ್ರೀ ವಾದಿರಾಜರು [ ಅಂಕಿತ : ಹಯವದನ ] - ಶ್ರೀ ಪುರಂದರದಾಸರು [ ಅಂಕಿತ : ಪುರಂದರವಿಠ್ಠಲ ] - ಶ್ರೀ ಕನಕದಾಸರು - [  ಅಂಕಿತ : ನೆಲೆಯಾದಿಕೇಶವ / ಬಾಡದಾದಿಕೇಶವ ]  - ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮ [ ಅಂಕಿತ : ವೇಣುಗೋಪಾಲ ] ರೇ ಮೊದಲಾದ ಮಹನೀಯರು ದಿವ್ಯ ಭವ್ಯವಾಗಿ ಈ " ದಾಸ ಪಂಥದ ಗುಡಿ " ಕಟ್ಟಿದರೆ -

ಮುಂದೆ ಶ್ರೀ ವಿಜಯದಾಸರು [  ಅಂಕಿತ :  ವಿಜಯವಿಠ್ಠಲ ] - ಶ್ರೀ ಐಜಿ ವೇಂಕಟರಾಮಾಚಾರ್ಯರು [ ಅಂಕಿತ : ವಾಸುದೇವವಿಠ್ಠಲ ] - ಶ್ರೀ ಗೋಪಾಲದಾಸರು [ ಅಂಕಿತ :  ಗೋಪಾಲವಿಠ್ಠಲ ] " ಕಳಸ " ಏರಿಸಿದರು.

ನಂತರ ಬಂದ ಶ್ರೀ ಜಗನ್ನಾಥದಾಸರು [ ಅಂಕಿತ :  ಜಗನ್ನಾಥವಿಠ್ಠಲ ] ಮತ್ತು ಅವರ ಪ್ರಿಯ ಶಿಷ್ಯರಾದ ಶ್ರೀ ಪ್ರಾಣೇಶದಾಸರು [ ಅಂಕಿತ :  ಪ್ರಾಣೇಶವಿಠ್ಠಲ ] ಈ " ದಿವ್ಯ ಭವ್ಯ ಹರಿದಾಸ ಮಂದಿರ " ಕ್ಕೆ " ಗೋಪುರ " ವನ್ನು ನಿರ್ಮಿಸಿ - ದಾಸಕೂಟದ  ಗೌರವ ಘನತೆಗಳನ್ನು ಆಕಾಶದೆತ್ತರಕ್ಕೆ ಬೆಳೆಸಿ - ಈ ದಿವ್ಯ ಭವ್ಯ ಹರಿ ದಾಸ ಪರಂಪರೆಯನ್ನು ಶ್ರೀಮಂತಗೊಳಿಸಿದರು.

ತದನಂತರದಲ್ಲಿ ಬಂದ ಹರಿದಾಸರುಗಳು ತಮ್ಮ ಪದ - ಪದ್ಯ - ಸುಳಾದಿ - ಉಗಾಭೋಗ - ವೃತ್ತನಾಮ - ಜಾವಳಿ - ಲಾವಣಿ ಮೊದಲಾದವುಗಳಿಂದ " ಹರಿದಾಸ ಮಂದಿರವನ್ನು ಶೃಂಗರಿಸಿ ಅಲಂಕರಿಸುತ್ತಲೇ " ಬಂದಿದ್ದಾರೆ.

***

From ನರಹರಿ ಸುಮಧ್ವ on 1 Nov 2021  

 ಕನ್ನಡ ಸಾಹಿತ್ಯಕ್ಕೆ ಮಾಧ್ವ ಪರಂಪರೆಯ ಕಾಣಿಕೆ 

 ಆಚಾರ್ಯ ಮಧ್ವರು ಹನ್ನೆರಡನೇ ಶತಮಾನದಲ್ಲಿ ನೆಲೆಸಿದ್ದು ಉಡುಪಿಯಲ್ಲಿ.  ಸುಂದರ ಸೊಬಗಿನ ಆ ಉಡುಪಿಯಲ್ಲಿ ಕಡುಗೋಲು ಕೃಷ್ಣನ ಪ್ರತಿಮೆಯ ಪ್ರತಿಷ್ಠಾಪಿಸಿ, ಅಷ್ಟಮಠಗಳ ಯತಿಗಳು ಮತ್ತು ಪದ್ಮನಾಭಾದಿ ಯತಿಗಳ ಸಮೂಹವನ್ನೇ ನೀಡಿ ಧರ್ಮ ಪ್ರಚಾರ ಮಾಡಲು ಆರಂಭಿಸಿದರು.  

ಹರಿದಾಸ ಸಾಹಿತ್ಯದ ಮೂಲ ಪುರುಷರು ಶ್ರೀ  ಮಧ್ವಾಚಾರ್ಯರು  ಎಂದೇ  ಹೇಳಬಹುದು. ಕನ್ನಡದಲ್ಲಿ ಆಚಾರ್ಯರು ಯಾವ ಕೃತಿಗಳನ್ನೂ ರಚಿಸದಿದ್ದರೂ ಅವರ ಪ್ರಭಾವಕ್ಕೆ ಸಿಕ್ಕ ಅವರ ನೇರ ಶಿಷ್ಯರಾದ ನರಹರಿ ತೀರ್ಥರು ಕನ್ನಡದಲ್ಲಿ ಮೊದಲ ದೇವರನಾಮವನ್ನು ರಚಿಸಿದರು

ಆಚಾರ್ಯ ಮಧ್ವರ ನೇರ ಶಿಷ್ಯರಲ್ಲಿ ಒಬ್ಬರಾದ ಹಂಪಿಯಲ್ಲಿ ವಿರಾಜಮಾನರಾಗಿರುವ ಶ್ರೀ ನರಹರಿ ತೀರ್ಥರು "ಹರಿಯೇ ಇದು ಸರಿಯೇ",. "ಎಂತು ಮರುಳಾದೆ ಹರಿಯೇ" " ತಿಳಿಕೋ ನಿನ್ನೊಳಗೆ ನೀನೇ" ಮುಂತಾದ ಕೃತಿಗಳ ಮೂಲಕ ದಾಸಸಾಹಿತ್ಯಕ್ಕೆ ಬುನಾದಿ ಹಾಕಿದರು.

ಕಾಗಿಣೀತೀರ ಮಳಖೇಡ ನಿವಾಸಿ ಅಕ್ಷೋಭ್ಯರ ತನಯ ಶ್ರೀ ಜಯತೀರ್ಥರೂ ಸಮಗ್ರ ಆಚಾರ್ಯರ ಸರ್ವಮೂಲ ಟೀಕೆಯನ್ನು ದೇವಭಾಷೆಯಲ್ಲಿ ಬರೆದರೂ , "ರಾಮವಿಠಲ" ಅಂಕಿತದಲ್ಲಿ "ನೀಲ ಮೇಘ ಶ್ಯಾಮನ ಕೋಮಲಾಂಗನ ಕಂಡೆ"  ಎಂಬ ಕೃತಿಯ ರಚಿಸಿದ್ದಾರೆ.

ಅಕಸ್ಮಾತ್ ಕನ್ನಡದಲ್ಲಿ ಮಾತನಾಡಿದರೆ ಮೈಲಿಗೆಯಾಯಿತು ಎಂದು ಕೊಂಡು, ಮತ್ತೆ ಸ್ನಾನ ಮಾಡಿ  ತಮ್ಮ ಕಾರ್ಯಗಳನ್ನು ಮುಂದುವರೆಸುತ್ತಿದ್ದ  ಕಾಲದಲ್ಲಿ ಆಚಾರ್ಯ  ಕರಾರ್ಚಿತ ವಿಗ್ರಹಗಳನ್ನು ಮುಟ್ಟಿ ಪೂಜೆ ಮಾಡಿ , ಕನ್ನಡದಲ್ಲಿ ದೇವರನಾಮ ಗಳನ್ನು ರಚಿಸುವ ಸಂಕಲ್ಪ ಮಾಡಿದ್ದು ಆಗಿನ ಕಾಲಕ್ಕೆ ಒಂದು ಸಾಹಸವೇ ಸರಿ.  ಶ್ರೀ ಶ್ರೀಪಾದರಾಜರು "ರಂಗವಿಠಲ" ಅಂಕಿತದಿಂದ ನೂರಾರು ದೇವರ ನಾಮಗಳು, ಉಗಾಭೋಗಗಳನ್ನು ರಚಿಸಿದ್ದಾರೆ.  ಅಲ್ಲಿಯವರೆಗೂ ಸಂಸ್ಕೃತ ಕೃತಿಗಳನ್ನು ಮಾತ್ರ ಅಧ್ಯಯನ ಪಾರಾಯಣ ಮಾಡುವ ಪರಿಪಾಠವನ್ನು ದೂರವಿಕ್ಕಿ ಭಕುತಿಯಲಿ ಗಾಯನ ಮಾಡುವವರೂ ಧರ್ಮಗಳನ್ನು ಅರಿಯಬಹುದು ಎಂದು ತಿಳಿಸಿದರು.   ಮಕ್ಕಳ ಆಡುಭಾಷೆಯಲ್ಲಿ "ಪೋಪು ಹೋಗೋಣ ಬಾರೋ" ಕೃತಿ ಅಮೋಘವಾಗಿದೆ, ಹಲವಾರು ಸುಳಾದಿಗಳನ್ನೂ ರಚಿಸಿದ್ದಾರೆ.  ಶ್ರೀಪಾದರಾಜ ಮಠದಿಂದ "ರಂಗವಿಠಲ" ಮಾಸಿಕ ಪ್ರಕಟಣೆಯಾಗುತ್ತಿದೆ.

 ಶ್ರೀ ವ್ಯಾಸರಾಜರು ಇದೇ ಮಾರ್ಗದಲ್ಲಿ ಮುಂದುವರಿದು ತಾವೂ ನೂರಾರು ಕೀರ್ತನೆಗಳನ್ನು ರಚಿಸಿ ಪುರಂದರದಾಸರು ಮತ್ತು ಕನಕದಾಸರಿಗೆ ದಾಸ ದೀಕ್ಷೆ ಇತ್ತು ಸಾವಿರಾರು ದೇವರನಾಮಗಳನ್ನು ಪ್ರಚರಪಡಿಸಿದರು.   ವ್ಯಾಸರಾಯರು ಕನ್ನಡ ದೇವರನಾಮಗಳನ್ನು ರಚಿಸಿದ್ದಲ್ಲದೆ,  ಚಂದ್ರಿಕಾ, ತರ್ಕತಾಂಡವಾದಿ ಹಲವಾರು ಕೃತಿಗಳನ್ನು ರಚಿಸಿ ಆಚಾರ್ಯ ಮಧ್ವರ ಸಿದ್ಧಾಂತವನ್ನು ಎತ್ತಿ ಹಿಡಿದಿದ್ದಾರೆ.  ಇದೇ ರೀತಿ ವ್ಯಾಸರಾಜ ಮಠದ ಮೂಲಕ "ತತ್ವಚಂದ್ರಿಕಾ" ಎಂಬ ಮಾಸಿಕ ಪ್ರಕಟಣೆಯಾಗುತ್ತಿದೆ.

ಇದೇ ರೀತಿ ಸೋಂದಾ ಶ್ರೀ ವಾದಿರಾಜ ಶ್ರೀಪಾದರು ಹಲವು ಕನ್ನಡ ಗ್ರಂಥಗಳನ್ನು, ದೇವರನಾಮಗಳನ್ನು ರಚಿಸಿ ಉಪಕರಿಸಿದ್ದಾರೆ,. ಅವರ ಲಕ್ಷ್ಮೀ ಶೋಭಾನೆ ಅತ್ಯಂತ ಮಂಗಳಕರವೆಂದು ಪ್ರಸಿದ್ಧಿ ಪಡೆದಿದೆ ಮತ್ತು ಯಾವುದೇ ಶುಭಕಾರ್ಯಗಳಲ್ಲಿ ಪಾರಾಯಣ ಮಾಡುವ ಪರಿಯಿದೆ.   ವಾದಿರಾಜರು ಪ್ರತಿಯೊಬ್ಬ ದೇವತೆಗಳ ಬಗ್ಗೆಯೂ ಕೃತಿಗಳನ್ನು ರಚಿಸಿದ್ದಾರೆ.

 ಶ್ರೀ ವಿಜಯೇಂದ್ರ ತೀರ್ಥರು ,- "ವಿಜಯೇಂದ್ರ ರಾಮ" ಅಂಕಿತದಲ್ಲಿ ರಚಿಸಿದ್ದಾರೆ.  

 ವ್ಯಾಸತತ್ವಜ್ಞ ತೀರ್ಥರು - "ವಾಸುದೇವ ವಿಠಲ" ಅಂಕಿತದಲ್ಲಿ ಕೃತಿಗಳನ್ನು ರಚಿಸಿದ್ದಾರೆ.

 ಶ್ರೀ ರಾಘವೇಂದ್ರ ಸ್ವಾಮಿಗಳು ಧೀರ ವೇಣುಗೋಪಾಲ ಅಂಕಿತದಲ್ಲಿ  "ಇಂದು ಎನಗೆ ಗೋವಿಂದ", ಮತ್ತು ಸುಳಾದಿಗಳ ರಚಿಸಿದ್ದಾರೆ.

 ಶ್ರೀ ವಿದ್ಯಾರತ್ನಾಕರ ತೀರ್ಥರು ಹಲವು ಕೃತಿಗಳನ್ನು ರಚಿಸಿದ್ದಾರೆ.

 ಶ್ರೀ ಪ್ರಸನ್ನ ತೀರ್ಥರು ನೂರಾರು ದೇವರನಾಮಗಳು ರಚಿಸಿದ್ದಾರೆ.  

ಪ್ರಸ್ತುತ ಶ್ರೀ ಭಂಡಾರಕೇರಿ ಶ್ರೀ ವಿದ್ಯೇಶ ತೀರ್ಥರೂ ನೂರಾರು ಕನ್ನಡ ಕೃತಿಗಳನ್ನು ರಚಿಸಿದ್ದಾರೆ.

ಪ್ರಾತಃ:ಸ್ಮರಣೀಯ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ತಮ್ಮ ಸಂಸ್ಥೆಯ ಮೂಲಕ ಹಲವಾರು ಸಂಸ್ಕೃತ ಗ್ರಂಥಗಳನ್ನು ಕನ್ನಡಕ್ಕೆ ತಮ್ಮ ಶಿಷ್ಯರ ಮೂಲಕ ಅನುವಾದಿಸಿ ಪ್ರಕಟಿಸಿ ಅನುಕೂಲ ಮಾಡಿದ್ದಾರೆ. ಜೊತೆಗೆ ಹಲವಾರು ವರ್ಷಗಳಿಂದ "ತತ್ವವಾದ" ಎಂಬ ಮಾಸಿಕ ಪ್ರಕಟಣೆಯಾಗುತ್ತಿದೆ.

ಪರಮಪೂಜ್ಯ ಶ್ರೀ ಸತ್ಯಾತ್ಮತೀರ್ಥರು ವಿಶ್ವಮಧ್ವ ಮಹಾಪರಿಷತ್ ಮೂಲಕ ನೂರಾರು ಕೃತಿಗಳನ್ನು ಕನ್ನಡಕ್ಕೆ ತಂದಿದ್ದಾರೆ.  ತಮ್ಮ ಶಿಷ್ಯರ ಮೂಲಕ ಹಲವಾರು ಕನ್ನಡ ಕೃತಿಗಳನ್ನು ಹೊರತಂದಿದ್ದಾರೆ ಜೊತೆಗೆ "ಶ್ರೀ ಸುಧಾ" ಎಂಬ ಹೆಸರಿನಿಂದ ಮಾಸಿಕವನ್ನು ಪ್ರಕಟಿಸುತ್ತಿದ್ದಾರೆ .

ಪರಮಪೂಜ್ಯ ಶ್ರೀ ಸುಬುಧೇಂದ್ರತೀರ್ಥರು ಮಂತ್ರಾಲಯ ಮಠದ ಆಶ್ರಯದಲ್ಲಿ ಸಮಗ್ರ ರಾಯರ ಗ್ರಂಥಗಳನ್ನೂ ಕನ್ನಡಕ್ಕೆ ತಂದಿದ್ದಾರೆ, ಅವರ ಕನ್ನಡ ಸೇವೆ ಅನರ್ಘ್ಯ.  ಅಲ್ಲದೆ ದಾಸಸಾಹಿತ್ಯಕ್ಕೆ ಒತ್ತು ಕೊಡುವ ನಿಟ್ಟಿನಲ್ಲಿ ಮಂತ್ರಾಲಯದಲ್ಲಿ ವಿಶೇಷ ದಾಸಕೂಟಗಳನ್ನೂ, ಭಜನಾ ಮಂಡಳಿಗಳನ್ನೂ ಪ್ರೋತ್ಸಾಹಿಸಿದ್ದಾರೆ.   ಅದರಲ್ಲೂ ಹೆಚ್ಚಾಗಿ ಮಹಿಳೆಯರ ಭಜನಾ ಮಂಡಳಿಗಳನ್ನೂ ಉತ್ತೇಜಿಸಿ ದಾಸಸಾಹಿತ್ಯ ಪ್ರಚಾರಕ್ಕೆ ಭದ್ರ ಬುನಾದಿ ಹಾಕಿದ್ದಾರೆ.  ಜೊತೆಗೆ ಮಂತ್ರಾಲಯ ಮಠದಿಂದ "ಗುರು ಸಾರ್ವಭೌಮ" ಮಾಸಿಕವೂ ನಿರಂತರ ಪ್ರಕಟಣೆಯಾಗುತ್ತಿದೆ.

ಇದೇ ರೀತಿ ಪರಮಪೂಜ್ಯ ಶ್ರೀ ಫಲಿಮಾರು ವಿದ್ಯಾಧೀಶ ತೀರ್ಥರೂ ಕೂಡ ಕನ್ನಡದಲ್ಲಿ ತಮ್ಮ ಸಂಸ್ಥೆಯ ಮೂಲಕ ಹಲವಾರು ಕನ್ನಡ ಕೃತಿಗಳನ್ನು ರಚಿಸಿದ್ದಾರೆ.  ಜೊತೆಗೆ "ಸರ್ವಮೂಲ" ಎಂಬ ಮಾಸಿಕವನ್ನು ತಂದಿದ್ದಾರೆ.

ಇನ್ನು ದಾಸರುಗಳ ಪೈಕಿ ಅಗ್ರಗಣ್ಯರು  ಶ್ರೀ ಪುರಂದರದಾಸರು - ನಾಲ್ಕು ಲಕ್ಷಕ್ಕೂ ಹೆಚ್ಚಿನ ದೇವರನಾಮಗಳನ್ನು,  ಉಗಾಭೋಗಗಳನ್ನು, ಮುಂಡಿಗೆಗಳು, ಸುಳಾದಿಗಳನ್ನೂ ರಚಿಸಿದ್ದಾರೆ, ಕರ್ನಾಟಕ ಸಂಗೀತ ಪಿತಾಮಹನೆನೆಸಿ,  ಶ್ರೀ ವ್ಯಾಸರಾಯರಿಂದ ಅವರ ಕೀರ್ತನೆಗಳು "ಪುರಂದರೋಪನಿಷತ್" ಎಂದು ಆಚಾರ್ಯ ಮಧ್ವರ "ಸರ್ವಮೂಲ"ದೊಂದಿಗೆ ಗೌರವಿಸಲ್ಪಟ್ಟಿದೆ.

ಶ್ರೀ ಕನಕದಾಸರು - ಜಾತಿಯಲ್ಲಿ ಕುರುಬನಾಗಿ ಹುಟ್ಟಿದರೂ ಶ್ರೀ ವ್ಯಾಸರಾಜರಿಂದ ಅತ್ಯುನ್ನತ ಗೌರವ ಮತ್ತು ದಾಸಧೀಕ್ಷೆ ಪಡೆದು, ಪುರಂದರದಾಸರ ಜೊತೆಗೆ ಹೆಚ್ಚಿನ ಸಂಖ್ಯೆಯಲ್ಲಿ ದೇವರನಾಮಗಳನ್ನು ರಚಿಸಿದ್ದಾರೆ.  ಅವರ ಕೃತಿಗಳು ಕಬ್ಬಿಣದ ಕಡಲೆಯಿದ್ದಂತೆ.  ಅವರ ಪದ ಜೋಡಣೆ, ಸಾಹಿತ್ಯ ಚಿಂತನೆ ಶೈಲಿ, ಮುಂಡಿಗೆಗಳನ್ನು ಅರ್ಥಮಾಡಿಕೊಳ್ಳಲು ವ್ಯಾಸಸಾಹಿತ್ಯದ ಆಸರೆ ಕೂಡ ಬೇಕು.  ಅವರು ಪ್ರತಿಯೊಂದು ಪದದಲ್ಲೂ ವಿಶೇಷ ಅರ್ಥಗಳನ್ನು ಹುಡುಕುವಂತೆ ಮಾಡುತ್ತಾರೆ.  "ಅಂಧಕನನುಜನ ಕಂದನ ತಂದೆಯ", "ಬಾಗಿಲನು ತೆರೆದು ಸೇವೆಯನು ಕೊಡೊ ಹರಿಯೆ",  "ನೀ ಮಾಯೆಯೊಳಗೊ ನಿನ್ನೊಳು ಮಾಯೆಯೊ", "ಕುಲ ಕುಲ ಕುಲವೆಂದು ಹೊಡೆದಾಡದಿರಿ",.  "ಏನೆ ಮನವಿತ್ತೆ ಲಲಿತಾಂಗಿ"  ಇತ್ಯಾದಿ ಹಲವಾರು ಗಂಭೀರ ಅರ್ಥಗರ್ಭಿತ ಸಾಹಿತ್ಯ ರಚಿಸಿದ್ದಾರೆ.  ಅವರ ಅಂಕಿತ  "ಕಾಗಿನೆಲೆ ಆದಿ ಕೇಶವ".  ಇವರ ಇತರ ಪ್ರಸಿದ್ಧ ಕೃತಿಗಳು - ಮೋಹನತರಂಗಿಣಿ, ನಳಚರಿತ್ರೆ, ಮುಂಡಿಗೆ, ಹರಿಭಕ್ತಿಸಾರ, ರಾಮಧಾನ್ಯ ಚರಿತ್ರೆ, ದಂಡಕಗಳು, ಉಗಾಭೋಗ, ಸುಳಾದಿಗಳು, ಇತ್ಯಾದಿ.

 ಕುಮಾರವ್ಯಾಸರು ಇಡೀ ಮಹಾಭಾರತವನ್ನು ಕನ್ನಡದಲ್ಲಿ  ಕಾವ್ಯಮಯವಾಗಿ ನೀಡಿದ್ದಾರೆ.

 ಶ್ರೀ ಪ್ರಸನ್ನ ವೆಂಕಟ ದಾಸರು - ಪ್ರಸನ್ನ ವೆಂಕಟ ಅಂಕಿತದಿಂದ ಸಾಕಷ್ಟು ಕೀರ್ತನೆಗಳನ್ನು ರಚಿಸಿದ್ದಾರೆ.  ಇವರ ವಿಶೇಷತೆಯೆಂದರೆ ಕ್ಲಿಷ್ಟ ಪದಲಾಲಿತ್ಯದ  ಕೀರ್ತನೆಗಳು ಅಷ್ಟು ಸುಲಭವಾಗಿ ಅರ್ಥವಾಗುವುದು ಕಠಿಣ. 

 ವಿಜಯದಾಸರು - ೨೫೦೦೦ಕ್ಕೂ ಹೆಚ್ಚು ಕೀರ್ತನೆಗಳು, ಸುಳಾದಿಗಳು, ಮುಂಡಿಗೆ, ಉಗಾಭೋಗ, ಇತ್ಯಾದಿ  ಪ್ರತಿಯೊಂದು ವಿಷಯದಲ್ಲೂ ಸುಳಾದಿಗಳನ್ಧು ರಚಿಸಿದ್ದಾರೆ - ಹಬ್ಬ ಸುಳಾದಿ, ನೈವೇದ್ಯ ಸುಳಾದಿ, ಧನ್ವಂತರಿ ಸುಳಾದಿ, ಇತ್ಯಾದಿ ಹಲವಾರು.

 ಗೋಪಾಲದಾಸರು - ಜಗನ್ನಾಥದಾಸರಿಗೆ ವಿಜಯದಾಸರ ಆಜ್ಞೆಯಂತೆ ಆಯುರ್ದಾನ ಮಾಡಿದ್ದಲ್ಲದೆ, ಹಲವಾರು ಕೀರ್ತನೆಗಳು ರಚಿಸಿದ್ದಾರೆ.

 ಜಗನ್ನಾಥದಾಸರು - ಹರಿಕಥಾಮೃತಸಾರ, ತತ್ವಸುವ್ವಾಲಿ, ದೇವರನಾಮಗಳು, ಉಗಾಭೋಗ, ಇತ್ಯಾದಿ

 ಮೋಹನದಾಸರು - ಕೋಲುಪದ ಎಂಬ ದೀರ್ಘ ಕೃತಿ ಮತ್ತು ಹಲವಾರು ದೇವರನಾಮಗಳನ್ನು ನೀಡಿದ್ದಾರೆ.

ಇದಲ್ಲದೆ ಇನ್ನೂ ಹಲವಾರು ದಾಸಶ್ರೇಷ್ಟರು ಇದ್ದಾರೆ

ಪ್ರಾಣೇಶದಾಸರು, ಗುರು ಪ್ರಾಣೇಶದಾಸರು, ಗುರುಗೋಪಾಲದಾಸರು, ಗುರು ಜಗನ್ನಾಥದಾಸರು,  ಮಹಿಪತಿದಾಸರು, ಮೊದಲಕಲ್ಲು ಶೇಷದಾಸರು, ಗುರುಪುರಂದರ ದಾಸರು, ತಂದೆ ಪುರಂದರದಾಸರು, ಶ್ಯಾಮಸುಂದರ ದಾಸರು, ವರದೇಶವಿಠಲರು, ಭೂಪತಿವಿಠಲದಾಸರು,  ಕಾಖಂಡಕಿ ಕೃಷ್ಣ ದಾಸರು, ಶ್ರೀದವಿಠಲದಾಸರು,  ಅಚಲಾನಂದ ದಾಸರು, ಶ್ರೀ ಪ್ರಸನ್ನ ಶ್ರೀನಿವಾಸ ದಾಸರು, ವೇಣುಗೋಪಾಲ ದಾಸರು, ಶ್ರೀ ಗೋವಿಂದ ವಿಠಲ ದಾಸರು, ಮೈಸೂರಿನ ಸುಬ್ಬರಾಯರು, ಗುರುಗೋವಿಂದ ವಿಠಲ ದಾಸರು, ವರದವಿಠಲದಾಸರು, ಉರಗಾದ್ರಿವಿಠಲದಾಸರು, ಅಸ್ಕಿಹಾಳ ಗೋವಿಂದದಾಸರು, ಸದಾನಂದ ದಾಸರು, ಅಹೋಬಲ ದಾಸರು, ಹನುಮೇಶವಿಠಲದಾಸರು, ಅಭಿನವ ಜನಾರ್ಧನ ವಿಠಲದಾಸರು, ಗೋಕಾವಿ ಅನಂತಾಧೀಶರು, ಜಯೇಶವಿಠಲದಾಸರು, ಜನಾರ್ಧನವಿಠಲದಾಸರು, ಕಾರ್ಪರ ನರಸಿಂಹ ದಾಸರು ಶ್ರೀಪತಿವಿಠಲದಾಸರು, ಶ್ರೀವಿಠಲ ದಾಸರು, ಭೂಪತಿವಿಠಲದಾಸರು, ರಂಗೇಶವಿಠಲದಾಸರು, ತುಳಸಿರಾಮದಾಸರು, ಹೆಳವನಕಟ್ಟೆ ಗಿರಿಯಮ್ಮ, ಹರಪನಹಳ್ಳಿ ಭೀಮವ್ವ, ನಂಜನಗೂಡು ತಿರುಮಲಾಂಬ, ಗಲಗಲಿ ಅವ್ವ, ಯದುಗಿರಿಯಮ್ಮ.

ಶ್ರೀ ತಿರುಪತಿ ದಾಸಸಾಹಿತ್ಯ ಪ್ರಾಜೆಕ್ಟಿನ ವಿಶೇಷ ಅಧಿಕಾರಿಗಳಾಗಿದ್ದಾಗ ತಮ್ಮ ಸಂಘಟನಾ ಚಾತುರ್ಯದಿಂದ  ಅಪ್ಪಣ್ಣಾಚಾರ್ಯರು  ಮಹಿಳಾ ಭಜನಾ ಮಂಡಳಿಗಳನ್ನೂ ಬೆಳೆಸಿದ ಪ್ರಮುಖರು. 

ಶ್ರೀ ಚತುರ್ವೇದಿ ವೇದವ್ಯಾಸಾಚಾರ್ಯರು ನೂರಾರು ವಿಶಿಷ್ಟ ದಾಸಸಾಹಿತ್ಯದ ವಿಶೇಷ ಅರ್ಥಗಳನ್ನು ಬಿಡಿಸಿ ಸುಲಭವಾಗಿ ಅರ್ಥವಾಗುವಂತೆ ಮಾಡಿದ್ದಾರೆ.  

ಶ್ರೀ ಅರಳುಮಲ್ಲಿಗೆ ಪಾರ್ಥಸಾರಥಿ ಅವರು ತಮ್ಮ ವಾಗ್ವೈಖರಿಯಿಂದ ಮತ್ತು ಶ್ರೀ ಹ.ರಾ. ನಾಗರಾಜಾಚಾರ್ಯರು ವಿಶಿಷ್ಟ ಸಂಗ್ರಹಗಳಿಂದ, ಮತ್ತು ಶ್ರೀಮತಿ ಸುಧಾ ಆದಿಶೇಷ್ ಅವರು ಹರಿಕಥಾಮೃತಸಾರದಲ್ಲಿ  ಡಾಕ್ಟರೇಟ್ ಪಡೆದಿದ್ದಾರೆ.

ರಾವ್ಸ ಕಲೆಕ್ಷನ್.ಬ್ಲಾಗಸ್ಪಾಟ್,  ಸುಮಧ್ವಸೇವಾ.ಕಾಂ,  ದಾಸಸಾಹಿತ್ಯ.ನೆಟ್,  ಮುಂತಾದ ಹಲವಾರು ವೆಬ್ಸೈಟ್ಗಳು ಕೀರ್ತನೆ ಸಂಗ್ರಹದಲ್ಲಿ ತೊಡಗಿವೆ.   

ಇಂದು ಕರ್ನಾಟಕ ರಾಜ್ಯೋತ್ಸವ ಸಂಭ್ರಮದಲ್ಲಿ ಮಾಧ್ವ ವಾಜ್ಮಯ ಪ್ರಪಂಚವನ್ನು ಯಥಾಶಕ್ತಿ ನೆನೆದಿದ್ದೇನೆ.  

ಇಷ್ಟೆ ಅಲ್ಲ, ಇನ್ನೂ ಹಲವಾರು .ಸಂಗ್ರಹಕಾರರೂ, ಚಿಂತನಕಾರರೂ, ಉಪನ್ಯಾಸಕರು, ಇದ್ದಾರೆ.   ಇತ್ತೀಚೆಗೆ ಫೇಸ್ಬುಕ್ ಲೈವ್ ಮೂಲಕ ದೇವರನಾಮ ಗಾಯನಗಳೂ ನಡೆಯುತ್ತಿದೆ.  

ಎಲ್ಲರ ಹೆಸರು ಇಲ್ಲಿ ನನ್ನ ನೆನಪಿನಲ್ಲಿ ಬರದೇ ಇರಬಹುದು.  ಅವರೆಲ್ಲರನ್ನೂ ಸ್ಮರಿಸೋಣ

ಹರೇ ಶ್ರೀನಿವಾಸ

ನರಹರಿ ಸುಮಧ್ವ, ಸುಮಧ್ವಸೇವಾ

end

***


from acharya Nagaraju Haveri
" ಹರಿದಾಸ ಸಾಹಿತ್ಯದಲ್ಲಿ ಮಾಧ್ವ ಯತಿಗಳು "
ದ್ವೈತ ವಾಜ್ಮಯದಲ್ಲಿ ಯತಿಗಳ ಸೇವೆ ಪರಮಾದ್ಭುತ. ಯತಿಗಳ ಹೆಸರು ಮತ್ತು ಅವರ ಅಂಕಿತವನ್ನು ಅವರ ಹೆಸರಿನ ಮುಂದೆ ಬ್ರಾಕೆಟ್ ನಲ್ಲಿ ಅವರ ಅಂಕಿತ ನಾಮವನ್ನು ಕೊಡಲಾಗಿದೆ.
೧. ಶ್ರೀಮದಾಚಾರ್ಯರು ( ಆನಂದತೀರ್ಥ )
೨. ಶ್ರೀ ನರಹರಿತೀರ್ಥರು ( ರಘುಪತಿ )
೩. ಶ್ರೀ ಜಯತೀರ್ಥರು ( ಶ್ರೀರಾಮ / ಶ್ರೀ ಜಯರಾಮ )
೧. ಶ್ರೀ ನರಸಿಂಹತೀರ್ಥರು ( ನರಸಿಂಹ ವಿಠಲ )
೨. ಶ್ರೀ ವೈಕುಂಠತೀರ್ಥರು ( ವೈಕುಂಠವಿಠಲ )
೩. ಶ್ರೀ ನರಹರಿತೀರ್ಥರು ( ನರಹರಿವಿಠಲ )
೪. ಶ್ರೀ ಯೋಗೀ೦ದ್ರತೀರ್ಥರು ( ಯೋಗೀ೦ದ್ರವಿಠಲ )
೫. ಶ್ರೀ ಸಿರಿತೀರ್ಥರು ( ಸಿರಿವಿಠಲ )
೬. ಶ್ರೀ ಸುಲಭಾತೀರ್ಥರು ( ಸುಲಭವಿಠಲ )
೭. ಶ್ರೀ ಸೊಬಗುತೀರ್ಥರು ( ಸೊಬಗುವಿಠಲ )
೮. ಶ್ರೀ ವರದತೀರ್ಥರು ( ವರದವಿಠಲ )
೯. ಶ್ರೀ ಅಚಲಾನಂದತೀರ್ಥರು ( ಅಚಲಾನಂದವಿಠಲ )
೧೦. ಶ್ರೀ ಅರವಿಂದನಾಭತೀರ್ಥರು ( ಅರವಿಂದವಿಠಲ )
೧೧. ಶ್ರೀ ಹರಿತೀರ್ಥರು ( ಹರಿವಿಠಲ )
೧೨. ಶ್ರೀ ವ್ಯಾಸಪತಿ ತೀರ್ಥರು ( ವ್ಯಾಸಪತಿವಿಠಲ )
೧೩. ಶ್ರೀ ಕೃಷ್ಣತೀರ್ಥರು ( ಕೃಷ್ಣವಿಠಲ )
೧೪. ಶ್ರೀ ವರವಿಕಟತೀರ್ಥರು ( ವರವಿಕಟವಿಠಲ )
೧೫. ಶ್ರೀ ದಾಸಿಪಚನ್ನತೀರ್ಥರು ( ದಾಸಿಪಚನ್ನವಿಠಲ )
೧೬. ಶ್ರೀ ಸಿರಿಪತಿಸುಲಭ ತೀರ್ಥರು ( ಸಿರಿಪತಿಸುಲಭವಿಠಲ )
೧೭. ಶ್ರೀ ಶ್ರೀಕರತೀರ್ಥರು ( ಶ್ರೀಕರವಿಠಲ )
೧೮. ಶ್ರೀರಂಗತೀರ್ಥರು ( ಶ್ರೀರಂಗವಿಠಲ )
೧೯. ಶ್ರೀ ಸುಂದರತೀರ್ಥರು ( ಸುಂದರವಿಠಲ )
೨೦. ಶ್ರೀ ಬೋಧಪತಿತೀರ್ಥರು ( ಬೋಧಪತಿವಿಠಲ )
೨೧. ಶ್ರೀ ಗುರುತೀರ್ಥರು ( ಗುರುವಿಠಲ )
೨೨. ಶ್ರೀ ಅಚ್ಯುತತೀರ್ಥರು ( ಅಚ್ಯುತವಿಠಲ )
೨೩. ಶ್ರೀ ಚತುರತೀರ್ಥರು ( ಚತುರವಿಠಲ )
೨೪. ಶ್ರೀ ಮಧ್ವಪತಿತೀರ್ಥರು ( ಮಧ್ವಪತಿವಿಠಲ )
೨೫. ಶ್ರೀ ಗರುಡವಾಹನತೀರ್ಥರು ( ಗರುಡವಾಹನ ಲಕ್ಷ್ಮೀನಾರಾಯಣ )
೨೬. ಶ್ರೀ ಮುದ್ದುತೀರ್ಥರು ( ಮುದ್ದುವಿಠಲ )
೨೭. ಶ್ರೀ ಪರಿಪೂರ್ಣತೀರ್ಥರು ( ಪರಿಪೂರ್ಣವಿಠಲ )
೨೮. ಶ್ರೀ ಅನಂತತೀರ್ಥರು ( ಅನಂತವಿಠಲ )
೨೯. ಶ್ರೀ ದಾರಿಪನತೀರ್ಥರು ( ದಾರಿಪನವಿಠಲ )
೩೦. ಶ್ರೀಧರ ಪಾಂಡುರಂಗತೀರ್ಥರು ( ಶ್ರೀಧರಪಾಂಡುರಂಗವಿಠಲ
೩೧.  ಶ್ರೀ ಆನಂದತೀರ್ಥರು ( ಆನಂದವಿಠಲ )
೩೨. ಶ್ರೀ ರಂಗಪತಿತೀರ್ಥರು ( ರಂಗಪತಿವಿಠಲ )
೩೩. ಶ್ರೀ ಚನ್ನಸ್ವಾಮಿತೀರ್ಥರು ( ಚನ್ನಸ್ವಾಮಿವಿಠಲ )
೩೪. ಶ್ರೀ ಗೋಪಿನಾಥತೀರ್ಥರು ( ಗೋಪಿನಾಥವಿಠಲ )
೩೫. ಶ್ರೀ ಲಕ್ಷ್ಮೀಪತಿತೀರ್ಥರು ( ಲಕ್ಷ್ಮೀಪತಿವಿಠಲ )
೩೬. ಶ್ರೀ ವೆಂಕಟೇಶತೀರ್ಥರು ( ವೆಂಕಟೇಶವಿಠಲ )
೩೭. ಶ್ರೀ ರಾಮತೀರ್ಥರು ( ಶ್ರೀ ರಾಮವಿಠಲ )
೩೮. ಶ್ರೀ ಹರಿದಾಸತೀರ್ಥರು ( ಹರಿದಾಸವಿಠಲ )
೩೯. ಶ್ರೀ ತಿಮ್ಮಣ್ಣತೀರ್ಥರು ( ತಿಮ್ಮಣ್ಣವಿಠಲ )
೪೦. ಶ್ರೀ ಸ್ವಾಮಿತೀರ್ಥರು ( ಸ್ವಾಮಿವಿಠಲ )
೪೧. ಶ್ರೀ ಯದುಪತಿತೀರ್ಥರು ( ಯದುಪತಿವಿಠಲ )
೪೨. ಶ್ರೀ ವೆಂಕಟಪತಿತೀರ್ಥರು ( ವೆಂಕಟಪತಿವಿಠಲ )
೪೩. ಶ್ರೀ ಶಿರಿಪತಿತೀರ್ಥರು ( ಶಿರಿಪತಿವಿಠಲ )
೪೪. ಶ್ರೀ ಲೋಕೈಕತೀರ್ಥರು ( ಲೋಕೈಕವಿಠಲ )
೪೫. ಶ್ರೀ ನಳಿನಾಕ್ಷತೀರ್ಥರು ( ನಳಿನಾಕ್ಷವಿಠಲ )
೪೬. ಶ್ರೀ ಲಕ್ಷ್ಮೀಕಾಂತತೀರ್ಥರು ( ಲಕ್ಷ್ಮೀಕಾಂತವಿಠಲ )
೪೭. ಶ್ರೀ ವಿಠಲತೀರ್ಥರು ( ಶ್ರೀವಿಠಲ )
೪೮. ಶ್ರೀ ಬಲ್ಲಿದವಿತೀರ್ಥರು ( ಬಲ್ಲಿದವಿಠಲ )
೪೯. ಶ್ರೀ ನಾರಾಯಣತೀರ್ಥರು ( ನಾರಾಯಣವಿಠಲ )
೫೦. ಶ್ರೀ ನರಕಂಠೀರವತೀರ್ಥರು ( ನರಕಂಠೀರವವಿಠಲ )
೫೧. ಶ್ರೀ ಪ್ರಾಣಪತಿತೀರ್ಥರು ( ಪ್ರಾಣಪತಿವಿಠಲ )
೫೨. ಶ್ರೀ ಹಯವದನತೀರ್ಥರು ( ಹಯವದನವಿಠಲ )
೧. ಶ್ರೀ ವಿಬುಧೇಂದ್ರತೀರ್ಥರು ( ವಿಬುಧೇಂದ್ರರಾಮ )
೨. ಶ್ರೀ ಶ್ರೀಪಾದರಾಜರು ( ರಂಗವಿಠಲ )
೩. ಶ್ರೀ ವ್ಯಾಸರಾಜರು ( ಶ್ರೀಕೃಷ್ಣ / ಸಿರಿಕೃಷ್ಣ )
೪. ಶ್ರೀ ವಾದಿರಾಜರು ( ಹಯವದನ )
೫. ಶ್ರೀ ವಿಜಯೀ೦ದ್ರರು ( ವಿಜಯೀ೦ದ್ರರಾಮ )
೬. ಶ್ರೀ ಗೋವಿಂದ ಒಡೆಯರು ( ಗುರುಕೃಷ್ಣ )
7. ಶ್ರೀ ವೇದವೇದ್ಯತೀರ್ಥರು 
8. ಶ್ರೀ ವೇದನಿಧಿತೀರ್ಥರು 
9. ವಾದಿವಂದ್ಯತೀರ್ಥರು  
೧೦. ಶ್ರೀ ರಾಘವೇಂದ್ರತೀರ್ಥರು ( ವೇಣುಗೋಪಾಲ )
೧೧. ಶ್ರೀ ಯೋಗೀ೦ದ್ರತೀರ್ಥರು ( ಶ್ರೀರಾಮ )
೧೨. ಶ್ರೀ ವಾದೀಂದ್ರತೀರ್ಥರು ( ವಾದೀಂದ್ರಯತಿ )
೧೩. ಶ್ರೀ ರಘುನಾಥತೀರ್ಥರು ( ರಘುನಾಥ ) ವ್ಯಾಸರಾಜ ಮಠ
೧೪. ಶ್ರೀ ವರದೇಂದ್ರತೀರ್ಥರು ( ವರದೇಂದ್ರಯತಿ )
೧೫. ಶ್ರೀ ವ್ಯಾಸತತ್ತ್ವಜ್ಞತೀರ್ಥರು
೧೬. ಶ್ರೀ ರಾಜೇಶ ಹಯಮುಖ
೧೭. ಶ್ರೀ ವಿದ್ಯಾರತ್ನಾಕರತೀರ್ಥರು
೧೮. ಶ್ರೀ ವಿದ್ಯಾಪ್ರಸನ್ನತೀರ್ಥರು
೧೯. ಶ್ರೀ ವಿದ್ಯಾಪಯೋನಿಧಿತೀರ್ಥರು
by ಆಚಾರ್ಯ ನಾಗರಾಜು ಹಾವೇರಿ
    ಗುರು ವಿಜಯ ಪ್ರತಿಷ್ಠಾನ

***
from acharya Nagaraju Haveri
" ಹರಿದಾಸ ಸಾಹಿತ್ಯ - ಒಂದು ಚಿಂತನೆ "
ದ್ವೈತ ಸಿದ್ಧಾಂತ ಪ್ರತಿಪಾದಕರಾದ ಶ್ರೀಮನ್ಮಧ್ವಾಚಾರ್ಯರು ತಮ್ಮ " ದ್ವಾದಶ ಸ್ತೋತ್ರ " ದ ಮೂಲಕ ಹರಿದಾಸ ಸಾಹಿತ್ಯಕ್ಕೆ ಮೂಲ ಪ್ರೆರಕರಾಗಿದ್ದಾರೆ.

ಪ್ರಥಮ ಘಟ್ಟ -  " ದಾಸ ಸಾಹಿತ್ಯದ ಸುವರ್ಣಯುಗ " 

ಕನ್ನಡದಲ್ಲಿ ಕೀರ್ತನೆಗಳನ್ನು ರಚಿಸುವ ಕಾರ್ಯ ಅವರ ಶಿಷ್ಯರಾದ ಶ್ರೀ ನರಹರಿ ತೀರ್ಥರಿಂದ ಪ್ರಾರಂಭವಾಯಿತು. 
ಶ್ರೀ ನರಹರಿ ತೀರ್ಥರ ಅಂಕಿತ " ರಘುಪತಿ " ಮತ್ತು " ನರಹರಿ ". 
ದಾಸ ಸಾಹಿತ್ಯವಾಹಿನಿ ಶ್ರೀ ನರಹರಿತೀರ್ಥರಿಂದ ಸೆಲೆಯೊಡೆಯಿತಾದರೂ ಮುಂದೆ ಅದು ಪ್ರತಿಕೂಲ ರಾಜಕೀಯ, ಸಾಮಾಜಿಕ ಪರಿಸ್ಥಿತಿಯಿಂದಾಗಿ ಅದು ಬತ್ತಿ ಹೋಗುವ ಪರಿಸ್ಥಿತಿಯನ್ನು ತಲುಪಿತು. ಅಂಥಹಾ ಸಂದರ್ಭದಲ್ಲಿ 60 ಜನ " ಆದ್ಯ " ರಿಂದ ದಾಸ ಸಾಹಿತ್ಯದ ಪರಿಸ್ಥಿತಿ ಸುಧಾರಿಸಿತು. ಈ ಕುರಿತು ಶ್ರೀ ವಿಜಯರಾಯರು ಸ್ಪಷ್ಟವಾಗಿ ತಿಳಿಸಿದ್ದಾರೆ.
ದಾಸ ಸಾಹಿತ್ಯ ವಾಹಿನಿಯು ಶ್ರೀ ನರಹರಿತೀರ್ಥರಲ್ಲಿ ಉಗಮವಾಯಿತಾದರೂ ಅದು ತನ್ನ ಆಳ, ವೈಶಾಲ್ಯತೆಗಳನ್ನು ಪಡೆದುಕೊಂಡಿದ್ದು ಶ್ರೀ ಶ್ರೀಪಾದರಾಜರಲ್ಲಿ. 
ಶ್ರೀ ಶ್ರೀಪಾದರಾಜರ ಅಂಕಿತ " ಶ್ರೀ ರಂಗವಿಠ್ಠಲ ". 
ಇವರು ಪದ, ಪದ್ಯ, ಸುಳಾದಿ, ಭ್ರಮರಗೀತೆ, ವೇಣು ಗೀತೆ, ಗೋಪಿ ಗೀತೆ, ಲಕ್ಷ್ಮೀನರಸಿಂಹ ಪ್ರಾದುರ್ಭಾವ ಮೊದಲಾದುವು ಭಕ್ತಿರಸ ಪೂರ್ಣವಾಗಿವೆ. 
ಶ್ರೀ ಶ್ರೀಪಾದರಾಜರ ವಿದ್ಯಾ ಶಿಷ್ಯರೇ ಶ್ರೀ ವ್ಯಾಸರಾಜರು. ಶ್ರೀ ವ್ಯಾಸರಾಜರು ಹರಿದಾಸ ಸಾಹಿತ್ಯ ಕ್ಷೇತ್ರದಲ್ಲಿ ವಿಶೇಷ ಸ್ಥಾನವನ್ನು ಪಡೆದಿದ್ದಾರೆ. ಶ್ರೀ ಶ್ರೀಪಾದರಾಜರಿಂದ ವಿವಿಧ ರೂಪಗಳಲ್ಲಿ ಜನ್ಮ ತಾಳಿದ  ದಾಸ ಸಾಹಿತ್ಯವು ಶ್ರೀ ವ್ಯಾಸರಾಜರಿಂದ ಅಭಿವೃದ್ಧಿ ಹೊಂದಿತು. 
ಶ್ರೀ ವ್ಯಾಸರಾಜರ ಅಂಕಿತ " ಸಿರಿಕೃಷ್ಣ " ಮತ್ತು " ಶ್ರೀ ಕೃಷ್ಣ "
ಸಂಸ್ಕೃತದಲ್ಲಿ " ವ್ಯಾಸತ್ರಯಗಳು " ಶ್ರೀ ವ್ಯಾಸರಾಜರ ಪಾಂಡಿತ್ಯಕ್ಕೆ ಸಾಕ್ಷಿಯಾಗಿದೆ. ಪ್ರೌಢ ವಿದ್ವಾಂಸರೂ, ಮಠಾಧಿಪತಿಗಳೂ, ರಾಜಗುರುಗಳೂ ಆಗಿದ್ದ ಶ್ರೀ ವ್ಯಾಸರಾಜರು " ವ್ಯಾಸಕೂಟ - ದಾಸಕೂಟ " ದ ಸಂರಕ್ಷಕರಾಗಿದ್ದರು. 
" ವ್ಯಾಸಕೂಟ "
ಶ್ರೀ ವೇದವ್ಯಾಸ ಪ್ರಣೀತ ಮೂಲ ಸಂಸ್ಕೃತ ಗ್ರಂಥಗಳಿಗೆ ಟೀಕೆ ಟಿಪ್ಪಣಿಗಳನ್ನು, ವ್ಯಾಖ್ಯಾನಗಳನ್ನು ರಚಿಸುವ ಪಂಡಿತರು " ವ್ಯಾಸಕೂಟ " ಕ್ಕೆ ಸೇರಿದವರು.
" ದಾಸಕೂಟ "
ಅವುಗಳ ( ವ್ಯಾಸ ಸಾಹಿತ್ಯದ ) ತತ್ತ್ವವನ್ನೂ, ಸಾರವನ್ನು ಸರಳವಾಗಿ ಕನ್ನಡದಲ್ಲಿ ಸಂಗೀತದ ಮೂಲಕ ಬೋಧಿಸಿದವರು " ದಾಸಕೂಟ " ದವರೆನಿಸುವರು. 
ಶ್ರೀ ವ್ಯಾಸರಾಜ ಗುರುಸಾರ್ವಭೌಮರು ಈ ಎರಡಕ್ಕೂ ಅಧ್ವರ್ಯುಗಳಾಗಿದ್ದಾರೆ. 
ಶ್ರೀ ವ್ಯಾಸರಾಜರ ವಿದ್ಯಾ ಶಿಷ್ಯರಾದ ಶ್ರೀ ಭಾವಿಸಮೀರ ವಾದಿರಾಜರ ಮೂಲಕ ಹರಿದಾಸ ಸಾಹಿತ್ಯದ ಕಾರ್ಯ ಕ್ಷೇತ್ರವು ಮತ್ತಷ್ಟು ವಿಸ್ತಾರವಾಯಿತು. 
ಇವರ ಅಂಕಿತ " ಹಯವದನ ". 
ಇವರು ಸಂಸ್ಕೃತದಲ್ಲಿ 50ಕ್ಕೂ ಹೆಚ್ಚು ಗ್ರಂಥಗಳನ್ನೂ, ಕನ್ನಡದಲ್ಲಿ ಪದ - ಪದ್ಯ - ಸುಳಾದಿ - ಉಗಾಭೋಗಗಳನ್ನು ರಚಿಸಿದ್ದಾರೆ. " ಸುವ್ವಾಲಿ " ಗಳಂಥಾ ಜಾನಪದ ಪ್ರಕಾರಗಳು ಸಹಾ ಶ್ರೀ ವಾದಿರಾಜರಿಂದ ಮೆಲ್ಲಮೆಲ್ಲನೆ ದಾಸ ಸಾಹಿತ್ಯದಲ್ಲಿ ಸೇರಲಾರಂಭಿಸಿದವು. ಇದರಿಂದ ದಾಸ ಸಾಹಿತ್ಯದಲ್ಲಿ ಜಾನಪದೀಯ ವಿವಿಧ ಅಂಶಗಳನ್ನು ಅಡಕಗೊಳಿಸಿದ ಶ್ರೀ ಪುರಂದರದಾಸರು, ಶ್ರೀ ಕನಕದಾಸರಂಥವರಿಗೆ ಪ್ರೇರಣೆಯೂ ದೊರಯಿತು. 
ಹರಿದಾಸ ಸಾಹಿತ್ಯವು ಶ್ರೀ ವಾದಿರಾಜರಿಂದ ಸಮೃದ್ಧವಾದುದಲ್ಲದೇ ವಿವಿಧ ದೀರ್ಘ ಮತ್ತು ಲಘು ಕೃತಿಗಳನ್ನು ಪಡೆಯುವ ಮೂಲಕ ಶಾಸ್ತ್ರ ಜ್ಞಾನ ಮತ್ತು ಸಾಹಿತ್ಯಗಳ ವೈಭವ - ವೈವಿಧ್ಯಗಳಿಂದ ಬೀಗುವಂಥಾಯಿತು. 
ಈ ಮೇಲ್ಕಂಡ ಯತಿತ್ರಯರ ಪರಿಶ್ರಮ, ಸಾಧನೆಗಳ ಫಲವಾಗಿ ಹರಿದಾಸ ಸಾಹಿತ್ಯ ಒಂದು ಹಂತಕ್ಕೆ ಬಂದು ನಿಂತಾಗ ಆ ಹಂತವನ್ನು ಅಭಿವೃದ್ಧಿ ಪಡಿಸಿದ ಸಾಧನೆಯ ಶ್ರೇಯಸ್ಸು ಶ್ರೀ ಪುರಂದರದಾಸರಿಗೆ ಮತ್ತು ಶ್ರೀ ಕನಕದಾಸರಿಗೆ ಸೇರುತ್ತದೆ. 
ಶ್ರೀ ಪುರಂದರದಾಸರು ಪದ - ಪದ್ಯ - ಸುಳಾದಿ - ಉಗಾಭೋಗ - ಲಕ್ಷ್ಯ ಗೀತೆಗಳನ್ನು ರಚಿಸುವುದರೊಂದಿಗೆ ದಾಸ ಸಾಹಿತ್ಯಕ್ಕೆ, ಸಂಗೀತಕ್ಕೆ " ತವನಿಧಿ " ಎನಿಸಿ " ಕರ್ನಾಟಕ ಸಿಂಗೀತ ಪಿತಾಮಹ " ನೆನಿಸಿದರು. 
ಶ್ರೀ ಪುರಂದರದಾಸರ ಅಂಕಿತ " ಪುರಂದರ ವಿಠ್ಠಲ "
ಶ್ರೀ ಪುರಂದರದಾಸರು ದ್ವೈತ ಸಿದ್ಧಾಂತವನ್ನು ಪ್ರಚುರಗೊಳಿಸಲು " ಬುಡುಬುಡಿಕೆ ಪದ " " ಲಾವಣಿ " ಯಂಥಹಾ " ಜಾನಪದ ಮಟ್ಟುಗಳ " ನ್ನು ಧಾರಾಳವಾಗಿ ಬಳಸಿಕೊಂಡರು. 
ಶ್ರೀ ಪುರಂದರದಾಸರ ಮತ್ತೊಂದು ಮಹತ್ವಪೂರ್ಣವಾದ ಸಾಧನೆಯೆಂದರೆ " ವೇದಾಂತ ಮತ್ತು ಶ್ರೀ ಸಾಮಾನ್ಯ " ರನ್ನು ಬೆಸೆದುದು. ಇದರ ಫಲವಾಗಿ ದಾಸ ಸಾಹಿತ್ಯ ಜನ ಸಾಮಾನ್ಯರನ್ನು ತಲುಪುವಂಥಾಯಿತು. 
ಶ್ರೀ ಪುರಂದರದಾಸರ ಶಿಷ್ಯರು..
ಶ್ರೀ ಪುರಂದರದಾಸರ ಧರ್ಮಪತ್ನಿಯಾದ ಸಾಧ್ವೀ ಸರಸ್ವತೀಬಾಯಿ - ಸಿರಿ ಪುರಂದರವಿಠ್ಠಲ
ಶ್ರೀ ವರದಪ್ಪ ಪುರಂದರದಾಸರು
ಶ್ರೀ ಗುರು ಪುರಂದರದಾಸರು
ಶ್ರೀ ಅಭಿನವ ಪುರಂದರದಾಸರು
ಶ್ರೀ ಮಧ್ವಪತಿವಿಠ್ಠಲ ( ಇವರ ಮುಂದಿನ ಅವತಾರವೇ ಶ್ರೀ ವಿಜಯರಾಯರು )
ಶ್ರೀ ಪುರಂದರದಾಸರ ಮಗಳು - ಸಾಧ್ವೀ ರುಕ್ಮಿಣೀಬಾಯಿ - ತಂದೆ ಪುರಂದರ ವಿಠ್ಠಲ
ಶ್ರೀ ಕನಕದಾಸರು ತಮ್ಮ ವಿಶಿಷ್ಟ ವ್ಯಕ್ತಿತ್ವ, ಕ್ರಾಂತಿಕಾರಿ ಧೋರಣೆ ಹಾಗೂ ಕಾವ್ಯ ಶಕ್ತಿಗಳಿಂದ ದಾಸ ಸಾಹಿತ್ಯ ಕ್ಷೇತ್ರದಲ್ಲೇ ವಿಶಿಷ್ಟಸ್ಥಾನ ಪಡೆದವರು ಶ್ರೀ ಕನಕದಾಸರು. 
ಶ್ರೀ ಕನಕದಾಸರ ಅಂಕಿತ " ಕಾಗಿನೆಲೆಯಾದಿಕೇಶವ "
ಶ್ರೀ ಕನಕದಾಸರು ಕೀರ್ತನೆಗಳ ಜೊತೆಗೆ ಹರಿಭಕ್ತಿಸಾರ, ಮೋಹನ ತರಂಗಿಣೀ, ನಳಚರಿತ್ರೆ, ರಾಮಧ್ಯಾನ್ಯಚರಿತೆಗಳಂಥಹಾ ಕಾವ್ಯಗಳನ್ನೂ ರಚಿಸಿದ್ದಾರೆ.
ಒಗಟಿನಂತಿರುವ " ಮುಂಡಿಗೆ " ಎಂಬ ಹೊಸ ಪ್ರಾಕಾರವನ್ನು ದಾಸ ಸಾಹಿತ್ಯದಲ್ಲಿ ಸಮಾವೇಶಗೊಳಿಸಿದ ಶ್ರೀ ಕನಕದಾಸರು " ಡೊಳ್ಳಿನ ಹಾಡು, ಕಣ ಪದ ರಚನೆಯಿಂದ ಜಾನಪದ ಸೊಗಡನ್ನು " ಸೇರಿಸಿದರು. 
ಈ ಪ್ರಥಮ ಘಟ್ಟವು " ದಾಸ ಸಾಹಿತ್ಯದ ಸುವರ್ಣಯುಗ " ಎನಿಸಿಕೊಂಡಿತು.
 
" ದ್ವಿತೀಯ ಘಟ್ಟದ ಮೂಲ ಸ್ಫೂರ್ತಿ - ಪ್ರೇರಕ ಶಕ್ತಿ " ಶ್ರೀ ಮಂತ್ರಾಲಯ ಪ್ರಭುಗಳು "
ವಿಜಯ ನಗರ ಸಾಮ್ರಾಜ್ಯದ ಕಾಲದಲ್ಲಿ ತನ್ನ ಕೀರ್ತಿಯ ಉತ್ತುಂಗ ಶಿಖರಕ್ಕೆ ಏರಿದ್ದ ಹರಿದಾಸ ಸಾಹಿತ್ಯವು ಆ ಸಾಮ್ರಾಜ್ಯ ಪತನಾನಂತರ ತನ್ನ ಅವನತಿಯತ್ತ ನಡೆಯಿತು. ಆ ಸಂದರ್ಭದಲ್ಲಿ ಶ್ರೀ ಮಹೀಪತಿದಾಸರ ಕೀರ್ತನೆಗಳ ಮೂಲಕ ದಾಸ ಸಾಹಿತ್ಯಕ್ಕೆ ಜ್ಯೋತಿ ನಂದಾದೀಪವಾಗಿ ಮುಂದುವರೆಯಿತೆನ್ನಬಹುದು!
ಇಂತಹಾ ಸಮಯದಲ್ಲಿ ಹರಿದಾಸ ಸಾಹಿತ್ಯಕ್ಕೆ ಮತ್ತೆ ಚಾಲನೆ ದೊರೆತುದು " ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮರಿಂದ. 
ಶ್ರೀ ರಾಘವೇಂದ್ರತೀರ್ಥರು ಪಂಡಿತರೂ, ಮಠಾಧಿಪತಿಗಳೂ, ಯೋಗಿಗಳೂ ಆಗಿದ್ದ ಇವರ ಪ್ರಭಾವ ದೇಶದೆಲ್ಲೆಡೆ ಹರಡಿತು. 
ಶ್ರೀ ವ್ಯಾಸರಾಜರಂತೆಯೇ ಶ್ರೀ ರಾಘವೇಂದ್ರತೀರ್ಥರೂ " ವ್ಯಾಸಕೂಟ - ದಾಸಕೂಟ " ಗಳೆರಡನ್ನೂ ಉಜ್ಜೀವನಗೊಳಿಸಿದರು. 
ಶ್ರೀ ರಾಘವೇಂದ್ರತೀರ್ಥರು ದಾಸ ಸಾಹಿತ್ಯದ ಮೊದಲ ಮತ್ತು ಎರಡನೆಯ ಘಟ್ಟಗಳಿಗೆ ಸಂಪರ್ಕ ಸೇತುವೆಯಾದರು. 
ಶ್ರೀ ರಾಯರ ಅಂಕಿತ " ವೇಣುಗೋಪಾಲ "
ಮಂತ್ರಾಲಯದ ಸುತ್ತಮುತ್ತ ಇವರ ಪ್ರಭಾವ ದಟ್ಟವಾಗಿ ಹರಡುತ್ತಿದ್ದಂತೆಯೇ ಹರಿದಾಸರಿಗೆ ಸ್ಫೂರ್ತಿಯೂ ಇದರೊಂದಿಗೆ ಉಕ್ಕಿ ಹರಿಯಿತು. 
ಮೊದಲ ಹರಿದಾಸ ಪಂಥದ ಕೇಂದ್ರವು ಹಂಪಿಯಲ್ಲಿದ್ದುದು  ( ಇದರ ಮೇಲ್ವಿಚಾರಕರು ಶ್ರೀ ವ್ಯಾಸರಾಜ ಗುರುಸಾರ್ವಭೌಮರು ); ಈ ಮಂತ್ರಾಲಯದಲ್ಲಿ - ಚಿಪ್ಪಗಿರಿ - ಉತ್ತನೂರು - ಮಾನ್ವಿ - ರಾಯಚೂರು - ಲಿಂಗಸೂಗೂರು ಮೊದಲಾದ ಊರುಗಳಲ್ಲಿ ನಿಂತಿತು. ಇದರಿಂದ ಅಲ್ಲಲ್ಲಿ ಹರಿದಾಸರು ಹುಟ್ಟಿದರು. 
ಶ್ರೀ ರಾಘವೇಂದ್ರತೀರ್ಥರಿಂದ ಪುನರುಜ್ಜೀವನ ಪಡೆದು ಚಾಲನೆಗೊಂಡ ಈ ಹರಿದಾಸ ಸಾಹಿತ್ಯ ಕ್ಷೇತ್ರವನ್ನು ಅಕ್ಷರಶಃ ಮುಂದುವರೆಸಿದವರು ಶ್ರೀ ವಿಜಯರಾಯರು. 
ಇವರ ಅಂಕಿತ " ವಿಜಯವಿಠ್ಠಲ "
ಶ್ರೀ ವಿಜಯರಾಯರು ಶ್ರೀ ಪುರಂದರದಾಸರಿಂದ ಸ್ವಪ್ನಾಂಕಿತರಾಗಿ " ವಿಜಯ ವಿಠಲ " ನೆಂಬ ಅಂಕಿತದಲ್ಲಿ ಕೃತಿಗಳನ್ನು ರಚಿಸಿದರು.
ಶ್ರೀ ಭಾವಿಸಮೀರ ವಾದಿರಾಜರ ಮೂಲಕ ಶಾಸ್ತ್ರ ಜ್ಞಾನ ವೈಭವವನ್ನು ಪಡೆದು, ಶಾಸ್ತ್ರೀಯವಾಗಿ - ಸೈದ್ಧಾಂತಿಕವಾಗಿ ಮಹತ್ವದ ತಿರುವು ಪಡೆದಿದ್ದ ಹರಿದಾಸ ಸಾಹಿತ್ಯವು ಶ್ರೀ ವಿಜಯದಾಸರಿಂದ ಮತ್ತಷ್ಟು ವೈಭವಯುತವಾಯಿತು!
ಅಂದು ಭಾವನಾ ಪ್ರಧಾನವಾಗಿ ಹರಿದು ಬಂದ ಹರಿದಾಸ ಸಾಹಿತ್ಯವು ಇಂದು ಬುದ್ಧಿ ಪ್ರಧಾನವಾಗಿ ಪಾಂಡಿತ್ಯದ ಪರಿಣಿತಿಯಲ್ಲಿ ಜನಮನದ ಅನಿಸಿಕೆಯಲ್ಲಿ ತನ್ನ ಪ್ರಚಾರ ಕಾರ್ಯದ ಕೃತಕೃತ್ಯೆಯನ್ನು ಪಡೆಯಿತು!
ತತ್ತ್ವ ನಿಬಿಡ ಸುಳಾದಿಗಳನ್ನೇ ಹೆಚ್ಚಾಗಿ ರಚಿಸಿ " ಸುಳಾದಿ ದಾಸ " ರೆಂದೇ ಜಗತ್ಪ್ರಸಿದ್ಧರಾದವರು ಶ್ರೀ ವಿಜಯರಾಯರು.
ದ್ವೈತ ಸಿದ್ಧಾಂತದ ಮತ್ತೂ ಕೆಲವು ವಿಶ್ಲೇಷಣಾತ್ಮಕ ತತ್ತ್ವ ಸೂಕ್ಷ್ಮಗಳ ಹರಿದಾಸ ಸಾಹಿತ್ಯವು ಹೊರ ಬರಲು ಶ್ರೀ ವಿಜಯರಾಯರು ಕಾರಣರಾದರು.
ಶ್ರೀ ವಿಜಯರಾಯರ ಸಮಕಾಲೀನರಾದ ಶ್ರೀ ಪ್ರಸನ್ನ ವೇಂಕಟದಾಸರು ಹರಿದಾಸ ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಕೊಡುಗೆಯೂ ಗಮನಾರ್ಹವಾಗಿದೆ.
ಶ್ರೀ ವಿಜಯರಾಯರ ಶಿಷ್ಯ ಪ್ರಶಿಷ್ಯರಲ್ಲಿ..
ಶ್ರೀ ವಿಜಯರಾಯರ ಶಿಷ್ಯರು..
ಶ್ರೀ ಹಯವದನವಿಠ್ಠಲರು ( ಶ್ರೀ ವಿಜಯರಾಯರ ತಮ್ಮ )
ಶ್ರೀ ಮೋಹನದಾಸರು - ಮೋಹನವಿಠ್ಠಲ
ಶ್ರೀ ಪಂಗನಾಮದ ತಿಮ್ಮಣ್ಣದಾಸರು - ವೇಣುಗೋಪಾಲವಿಠ್ಠಲ
ಶ್ರೀ ವಿಜಯರಾಯರ ಶಿಷ್ಯರಾದ ಶ್ರೀ ಗೋಪಾಲದಾಸರು ತಮ್ಮ ಕೃತಿಗಳಿಂದ ಹರಿದಾಸ ಸಾಹಿತ್ಯದಲ್ಲಿ ವಿಶಿಷ್ಟ ಸ್ಥಾವನ್ನು ಪಡೆದಿದ್ದಾರೆ.
ಶ್ರೀ ಗೋಪಾಲದಾಸರು ಸಾಹಿತ್ಯದಂತೆಯೇ ಸಂಗೀತ, ನರ್ತನ ಮತ್ತು ಚಿತ್ರ ಕಲೆಗಳನ್ನೂ ಬಳಸಿಕೊಂಡಿದ್ದು ವಿಶೇಷ ಸಂಗತಿ!
ಶ್ರೀ ಗೋಪಾಲದಾಸರು ತಮ್ಮ ಜೊತೆಗೆ ಈ ಕೆಳಕಂಡವರನ್ನೂ ದಾಸ ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಸಿದರು.
ಶ್ರೀ ಐಜಿ ವೆಂಕಟರಾಮಾಚಾರ್ಯರು - ವಾಸುದೇವವಿಠ್ಠಲ ( ಶ್ರೀ ವ್ಯಾಸತತ್ತ್ವಜ್ಞತೀರ್ಥರು )
ಶ್ರೀ ಶ್ರೀನಿವಾಸಾಚಾಯರು - ಜಗನ್ನಾಥವಿಠ್ಠಲ
" ಶ್ರೀ ಗೋಪಾಲದಾಸ ತಮ್ಮಂದಿರಾದ.. "
ಶ್ರೀ ಸೀನಪ್ಪದಾಸರು - ವರದ ಗೋಪಾಲವಿಠ್ಠಲ
ಶ್ರೀ ದಾಸಪ್ಪ ದಾಸರು - ಗುರು ಗೋಪಾಲವಿಠ್ಠಲ
ಶ್ರೀ ರಂಗಪ್ಪ ದಾಸರು - ತಂದೆ ಗೋಪಾಲವಿಠ್ಠಲ
ಶ್ರೀ ಪಂಗನಾಮದ ತಿಮ್ಮಣ್ಣದಾಸರು - ವೇಣುಗೋಪಾಲವಿಠ್ಠಲರ ಶಿಷ್ಯರು
ಶ್ರೀ ನರಸಿಂಹದಾಸರು - ನರಸಿಂಹವಿಠ್ಠಲ ( ಶ್ರೀ ಜಗನ್ನಾಥದಾಸರ ತಂದೆ )
ಶ್ರೀ ಕಲ್ಲೂರು ಸುಬ್ಬಣ್ಣಾಚಾರ್ಯರು - ವ್ಯಾಸವಿಠ್ಠಲ ( ಶ್ರೀ ವಿಜಯಕವಚ ರಚಿಸಿದವರು )
" ಶ್ರೀ ಜಗನ್ನಾಥ ಶಿಷ್ಯರಲ್ಲಿ ಪ್ರಮುಖರು
ಶ್ರೀ ದಾಮೋದರದಾಸರು -  ತಂದೆ ಜಗನ್ನಾಥವಿಠ್ಠಲ ( ಇವರು ಶ್ರೀ ಜಗನ್ನಾಥ ಮಕ್ಕಳು )
ಶ್ರೀ  ಪ್ರಾಣೇಶ ದಾಸರು - ಪ್ರಾಣೇಶ ವಿಠ್ಠಲ
ಶ್ರೀ ಕರ್ಜಗಿ ದಾಸಪ್ಪ - ಶ್ರೀದ ವಿಠ್ಠಲ
ಶ್ರೀ ಹುಂಡೇಕಾರದಾಸರು - ಶ್ರೀಶ ವಿಠ್ಠಲರು ( ಇವರ ಶಿಷ್ಯರೇ ಶ್ರೀ ಸುರಪುರದ ಆನಂದದಾಸರು )
ಶ್ರೀ ಕುಂಟೋಜಿ ನರಸಿಂಹ ದಾಸರು - " ಶ್ರೀ ಗುರು ಶ್ರೀಶವಿಠ್ಠಲ ", ಶ್ರೀ ವೆಂಕಟೇಶವಿಠ್ಠಲ " ಶ್ರೀ ಲಕ್ಷ್ಮೀ ವಿಠ್ಠಲ ಮೊದಲಾವರು ಇವರ ಶಿಷ್ಯರು!!
ಬುದ್ದಿನ್ನಿ ಶ್ರೀ ನಾರಪ್ಪನವರು - ಶ್ರೀ ಮನೋಹರವಿಠ್ಠಲ ( ಶ್ರೀ ಜಗನ್ನಾಥದಾಸರ ಸಮಕಾಲೀನರು )
ಶ್ರೀ ಸೋಮಪುರದ ಪ್ರೇಮದಾಸರು - ಅಭಿನವ ಜನಾರ್ದನವಿಠ್ಠಲ
ಶ್ರೀ ಗುರು ಪ್ರಾಣೇಶವಿಠ್ಠಲ, ಶ್ರೀ ಶ್ರೀಶ ಪ್ರಾಣೇಶ ವಿಠ್ಠಲ
" ಶ್ರೀ ಗುರು ಜಗನ್ನಾಥ ವಿಠ್ಠಲರ ಶಿಷ್ಯ  ಸಂಪತ್ತು "
ಶ್ರೀ ವರದ ವಿಠ್ಠಲರು - ಶ್ರೀ ಕರಣಂ ಹನುಮಂತರಾಯರು
ಶ್ರೀ ವರದೇಶವಿಠ್ಠಲರು
ಶ್ರೀ ಆನಂದ ವಿಠ್ಠಲರು
ಶ್ರೀ ವರದೇಂದ್ರ ವಿಠ್ಠಲರು
ಶ್ರೀ ಸುಂದರವಿಠ್ಠಲರು
ಶ್ರೀ  ಮೊದಲಕಲ್ಲು  ಶೇಷದಾಸರು
" ಹರಿದಾಸಿನಿಯರು "
ಹೆಳವನಕಟ್ಟೆ ಗಿರಿಯಮ್ಮ - ಹೆಳವನಕಟ್ಟೆ ರಂಗ
ಗಲಗಲಿ ಅವ್ವ - ಅಂಕಿತ " ಶ್ರೀ ರಮೇಶ "
ಗಲಗಲಿ ಅವ್ವನರ ಶಿಷ್ಯೆ - ಭಾಗಮ್ಮ " ಪ್ರಯಾಗವ್ವ "
ಹರಪನಹಳ್ಳಿ ಭೀಮವ್ವ - ಭೀಮೇಶ ಕೃಷ್ಣ

" ಮುಂದುವರೆದ ಹರಿದಾಸ ಸಾಹಿತ್ಯ ಪರಂಪರೆ - "
ಶ್ರೀ ಶೇಖ್ ಬಡೇಸಾಬರು - ಅಂಕಿತ " ರಾಮದಾಸ "
ಶ್ರೀ ಗಿರಿಯಾಚಾರ್ಯರು " ಕಾರ್ಪರ ನರಹರಿ "
ಶ್ರೀ ರಾಘವಾಚಾರ್ಯರು " ನಡುಪುರೇಶ "
" ಶ್ರೀ ಅಸ್ಕಿಹಾಳ ಗೋವಿಂದದಾಸರು "
" ಶ್ರೀ ಶ್ಯಾಮಸುಂದರದಾಸರು "
ಶ್ರೀ ಕುರಡಿ ರಾಘವೇಂದ್ರ ಚಾರ್ಯರು " ಶ್ರೀ ಲಕ್ಷ್ಮೀಶ ದಾಸರು "
ಶ್ರೀ ಅಭಿನವ ಪ್ರಾಣೇಶ ವಿಠ್ಠಲ 
ಶ್ರೀ ಸುಳಾದಿ ಕುಪ್ಪೇರಾಯರು
ಶ್ರೀ ಕಸಬೆ ಪಾಂಡುರಂಗರಾಯರು ( ಪಾಂಡುವಿಠ್ಠಲ )
ಶ್ರೀ ನವಲಿಯ ಪಂ. ರಾಘವೇಂದ್ರಾಚಾರ್ಯರು ( ಭೋಗಾಪುರೇಶ )
ಶ್ರೀ ರಾಘವೇಂದ್ರಾಚಾರ್ಯ ( ಗುರುಮಧ್ವ )
ಶ್ರೀ ಕಾಖಂಡಕಿ ಶ್ರೀನಿವಾಸಾಚಾರ್ಯ ( ಹರಿ ಶ್ರೀನಿವಾಸ )
ಶ್ರೀ ಗುಡೇಬಲ್ಲೋರು ರಾಘವೇಂದ್ರಾಚಾರ್ಯ ( ಶ್ರೀ ವೆಂಕಟೇಶವಿಠ್ಠಲ )
ಶ್ರೀ ಉಕ್ಲಿ ಕುಪ್ಪೇರಾಯರು ( ಪದ್ಮನಾಭ )
ಶ್ರೀ ಡಾ॥ ಹೇರೂರು ರಾಮರಾಯರು, ಗಂಗಾವತಿ ( ಮೂಲರಾಮ )
ಶ್ರೀ ಸೀಮಾಮ ( ವರದವಿಠ್ಠಲ )
ಶ್ರೀ  ಮಧ್ವರಾವ್, ವಕೀಲರು, ರಾಯಚೂರು ( ಮಧ್ವಮುನಿ )
ಶ್ರೀ ಗುರುರಾಜ ಬೆಣಕಲ್ ( ನರಹರಿ )
13ನೇ ಶತಮಾನದಲ್ಲಿ ಪ್ರಾರಂಭವಾದ ಈ ಹರಿದಾಸ ಸಾಹಿತ್ಯ ಗಂಗೆ ಇಂದಿನ ವರೆಗೂ ಹರಿದು ಬಂದು ವಿಶ್ವ ಸಾಹಿತ್ಯವಾಗಿ ಪ್ರಸಿದ್ಧಿ ಪಡೆದಿದೆ. ಇದುವೇ ಹರಿದಾಸ ಸಾಹಿತ್ಯದ ಹಿರಿಮೆ.
ಈ ಹರಿದಾಸ ಪರಂಪರೆ ಆಗಾಧವಾಗಿದೆ. ಆ ಪರಂಪರೆಯಲ್ಲಿ ಬಂದ ಕೆಲವು ಹರಿದಾಸರುಗಳನ್ನು ಮಾತ್ರ ಉಲ್ಲೇಖಿಸಿದ್ದೇನೆ.
by ಆಚಾರ್ಯ ನಾಗರಾಜು ಹಾವೇರಿ
     ಗುರು ವಿಜಯ ಪ್ರತಿಷ್ಠಾನ
***

ಶ್ರೀ ವಿಜಯರಾಯರ ( ಕ್ರಿ ಶ 1687 - 1755 ) -
 ಶಿಷ್ಯ ಸಂಪತ್ತು " 
1. ಶ್ರೀ ಆನಂದದಾಸರು 
( ಶ್ರೀ ವಿಜಯರಾಯರ ತಮ್ಮಂದಿರು ) - ಹಯವದನವಿಠ್ಠಲ
2. ಶ್ರೀ ಭಾಗಣ್ಣದಾಸರು - ಗೋಪಾಲವಿಠ್ಠಲ
3. ಶ್ರೀ ಮೋಹನಪ್ಪಾದಾಸರು - ಮೋಹನವಿಠ್ಠಲ
4. ಶ್ರೀ ಪಂಗನಾಮದ ತಿಮ್ಮಣ್ಣದಾಸರು - ವೇಣುಗೋಪಾಲವಿಠ್ಠಲ
5. ಶ್ರೀ ಬೇಲೂರು ವೆಂಕಟದಾಸರು - ವೆಂಕಟೇಶವಿಠ್ಠಲ
6. ಶ್ರೀ ಹೊನ್ನಾಳಿ ವೆಂಕಪ್ಪಾಚಾರ್ಯ - ವೆಂಕಟವಿಠ್ಠಲ
7. ಶ್ರೀ ಮೀನಪ್ಪದಾಸರು - ಮುದ್ದುವಿಠ್ಠಲ
8. ಶ್ರೀ ಕೂಡ್ಲಿ ಮಧ್ವಾಚಾರ್ಯರು - ಗುರು ಮಧ್ವೇಶವಿಠ್ಠಲ
9. ಶ್ರೀ ಶೇಷಗಿರಿದಾಸರು ( ಶ್ರೀ ವಿಜಯರಾಯರ ಮಗ ) - ಹಯಗ್ರೀವವಿಠ್ಠಲ
10. ಶ್ರೀ ವಿಜಯಸಾರಥಿದಾಸರು - ವಿಜಯಸಾರಥಿವಿಠ್ಠಲ
11. ಶ್ರೀ ಮೊದಲಕಲ್ಲು ಶೇಷದಾಸರಿಗೆ ಸ್ವಪ್ನಾ೦ಕಿತ - ಗುರು ವಿಜಯವಿಠ್ಠಲ
**

ಈ ಕೆಳಕಂಡ ಶಿಷ್ಯರಿಗೆ ಅಂಕಿತವನ್ನು ಶ್ರೀ ಮುದ್ದುಮೋಹನದಾಸರು (during the period from 1850+ till 1898)ಅಂಕಿತೋಪದೇಶ ನೀಡಿದ್ದಾರೆ. 
ಶ್ರೀ ಅಚಿಂತ್ಯವಿಠ್ಥಲ ( ಶ್ರೀ ಸುಬ್ಬರಾಯದಾಸರು )
ಶ್ರೀ ಬಾಲಕೃಷ್ಣವಿಠ್ಠಲ ( ಶ್ರೀ ಬಾಲಕೃಷ್ಣರಾಯರು )
ಶ್ರೀ ಕರುಣಾಕರ ವಿಠ್ಠಲ ( ಶ್ರೀ ರಾಘವೇಂದ್ರದಾಸರು )
ಶ್ರೀ ವಿಜಯಮೋಹನ ವಿಠ್ಠಲ 
ಶ್ರೀ ಗರುಡವಾಮನ ವಿಠ್ಠಲ 
ಶ್ರೀ ವಾಮನ ವಿಠ್ಠಲ 
ಶ್ರೀ ಗೋಪಿನಾಥ ವಿಠ್ಠಲ 
ಶ್ರೀ ವಿಜಯಸಾರಥಿ ವಿಠ್ಠಲ 
ಶ್ರೀ ರಮಣ ವಿಠ್ಠಲ 
ಶ್ರೀ ಒಡೆಯ ಮೋಹನ ವಿಠ್ಠಲ 
ಶ್ರೀ ಕರಿವರದವಿಠ್ಠಲ ( ಶ್ರೀ ರಾಮದಾಸರು )
ಶ್ರೀ ವರದ ಜಯವಿಠ್ಠಲ ( ಶ್ರೀ ಶೇಷದಾಸರು ) 
ಶ್ರೀ ಜ್ಞಾನದಾಯಕವಿಠ್ಥಲ ( ಶ್ರೀ ವೇಂಕಟರಾಯರು )
ಶ್ರೀ ಪರಮಪಾವನವಿಠ್ಠಲ ( ಶ್ರೀ ಸುಬ್ಬಣ್ಣ )
ಶ್ರೀ ವಾಗೀಶವಿಠ್ಥಲ ( ಶ್ರೀ ಬಾಳಾಜಿ ) 
ಮೇಲ್ಕಂಡವರಿಗೆ ಪರಮಾತ್ಮನ ದಿವ್ಯ ಅಂಕಿತವನ್ನಿತ್ತು, ಪರತತ್ತ್ವ ಮಾರ್ಗ ತೋರಿ ದಾಸ ದೀಕ್ಷೆ ನೀಡಿ ಭಕ್ತಿ ಪಂಥವನ್ನು ಮುಂದುವರೆಸಿದರು. 
ಸುಮಾರು ಶ್ರೀ ಮುದ್ದುಮೋಹನವಿಠ್ಠಲರು 19 ಜನರಿಗೆ ಅಂಕಿತ ಕೊಟ್ಟಿದ್ದು ಅದರಲ್ಲಿ 10 ಮಾತ್ರ ಸಿಕ್ಕಿವೆ.
***

Some additional information are here below:

Purandara Dasa's wife, Saraswati Bai - 
Ankita SIRIPURANDARA VITTALA
Purandara Dasa's Daughter, Rukmini Bai - 
Ankita TANDEPURANDARA VITTALA
Purandara dasaru's 4 sons  ಪುರಂದರ ದಾಸರ ಮಕ್ಕಳ ಅಂಕಿತ 
ವರದಪ್ಪ s/o Purandara dasa     
ಅಂಕಿತ   ವರದ ಪುರಂದರ ವಿಠಲ 
ಗುರುರಾಯ s/o Purandara dasa 
ಅಂಕಿತ   ಗುರುಪುರಂದರ
ಅಭಿನವಪ್ಪ  s/o Purandara dasa 
ಅಂಕಿತ   ಅಭಿನವಪುರಂದರ 
ಮಧ್ವಪತಿ  s/o Purandara dasa   
ಅಂಕಿತ    ಗುರುಮಧ್ವಪತಿವಿಠಲ
******

Gopaladasaru from Uttanur (gopala vittala ankita) had three brothers who also wrote dasa krutis. Gopaladasaru was called Bhaganna, his brothers were Seenappa, Daasappa and Rangappa. All lived during Satyabodha Teertha (Uttaradi Mutt ashrama 1744 to 1783 at Savanur, near Hubli). 

Seenappa brother of Gopala dasa 
ಅಂಕಿತ varada gopala vittala
Daasappa brother of Gopala dasa 
ಅಂಕಿತ guru gopala vittala
Rangappa brother of Gopala dasa 
ಅಂಕಿತ tande gopala vittala
******

from prasadacharya

ಎಲ್ಲಾ ದಾಸರ ಅಂಕಿತ ವಿಠಲ ಅಂತಾ ಬರಲು ಮೂಲ ಪ್ರೆರೆಣೆ ಏನು ?

ಶಾಸ್ತ್ರದಲ್ಲಿ ಆದಿ ಅನಾದಿಕಾಲದಿಂದಲೂ ವಿಠಲ ನಾಮ ಭಗವಂತನಿಗೆ ಇದ್ದೆ ಇದೆ ವಿದಜ್ಞಾನೇ... ಅಂತ ಸಂಸ್ಕೃತದಲ್ಲಿ ಧಾತು ಇದೆ , ವಿಠ್ ಅಂದ್ರೆ ಜ್ಞಾನ ಲ ಅಂದ್ರೆ ನಿಧಿ ಅಂತ ಅರ್ಥ , ವಿಠ್ಠಲ ಅಂದ್ರೆ ಜ್ಞಾನಾನಂದಾದಿಗುಣಗಳ ನಿಧಿ ಅಂತ ಅರ್ಥ , ವಂದೇ ಗೋವಿಂದಮಾನಂದ ಜ್ಞಾನದೇಹಂ ಪತಿಂ ಶ್ರಿಯಃ... ಯಾವನು ಜ್ಞಾನಾನಂದಾದಿಗುಣಗಳನ್ನೇ ದೇಹವಾಗಿ ಉಳ್ಳವನೋ ಅವನೇ ವಿಠ್ಠಲ . 

    ಅವರವರ ಯೊಗ್ಯತೆಗೆ ಅನುಸಾರವಾಗಿ ಜ್ಞಾನಾನಂದಾದಿಗಳನ್ನು ಕರುಣಿಸುವವನಾದ್ದರಿಂದ ಆತನಿಗೆ ವಿಠ್ಠಲ ಅಂತಲೇ ಹೆಸರಿದೆ, ಬ್ರಹ್ಮ ವಿದಾಪ್ನೋತಿ.... ಎಂಬ ವೇದೋಕ್ತಿಯಲ್ಲಿ ವಿಠ್ಠಲ ಶಬ್ದಸೂಚಕವಾದ ವಿದ್ ಎಂಬ ಶಬ್ದ ಬಂದಿದೆ.  ಹೀಗೆ ಈ ವಿಠ್ಠಲ ಎಂಬ ಹೆಸರು ಪರಮಾತ್ಮನಿಗೆ ವೇದಗಳಿಂದಲೇ ಸ್ತೋತ್ರ ಮಾಡಲ್ಪಟ್ಟ ನಾಮವಾಗಿದೆ. ಕಲಿಯುಗದಲ್ಲಿ ನಮಗೆ ಮೂರು ಕ್ಷೇತ್ರಗಳು ಪ್ರಸಿದ್ಧವಾಗಿವೆ ತಿರುಪತಿ ತಿಮ್ಮಪ್ಪ ಕಾಂಚನ ಬ್ರಹ್ಮ,  ಉಡುಪಿಯ ಕೃಷ್ಣ ಅನ್ನಬ್ರಹ್ಮ,  ಸಂಗೀತ ಗಾಯನಕ್ಕೆ ಒಲಿಯುವವನು ನಾದಬ್ರಹ್ಮ ಶ್ರೀ ಪಂಡರಾಪುರದ ಪಾಂಡುರಂಗವಿಠಲ ಹೀಗಾಗಿ ನಮ್ಮ ಹರಿದಾಸರ ಗಾಯನಕ್ಕೆ ಒಲಿದು ಅವರ ಗಾನಾಮೃತಕ್ಕೆ ಸಂತಸಪಟ್ಟು ನರ್ತನೆ ಮಾಡುವವನಾದ್ದರಿಂದ, ಅಲ್ಲದೇ ಗಾಯನದಿಂದಲೆ ಭಗವಂತನ ಕುರಿತಾದ ಸರಿಯಾದ ಜ್ಞಾನವನ್ನು ನೀಡುವಂತಹವನೂ ಆದ್ದರಿಂದ ವಿಠಲ ಎನ್ನುವ ಪದ ಸುಮಾರು ದಾಸರೆಲ್ಲರಿಗೆ ಅಂಕಿತನಾಮದ ಜೊತೆಗೆ ಸೇರ್ಪಡಿಯಾಗಿದೆ ..

ಅವರವರ ಬಿಂಬನ ಚಿಂತನೆಯನ್ನ ಮಾಡಿ ಅವರವರ ಗುರೂಗಳು ವಿಠಲ ಎನ್ನುವ ನಾದಬ್ರಹ್ಮನ ಹೆಸರಿನಿಂದಲೆ ಅಂಕಿತವನ್ನು ನೀಡುವುದುಂಡು.  ಅದು ನೇರವಾಗಿಯೂ, ಸ್ವಪ್ನದಲ್ಲಾದರೂ ಸರಿ.. 

ಶ್ರೀಮದಾಚಾರ್ಯರು ಸಹ ವಿಠಲ ಮೂರ್ತಿಯನ್ನು ಅರ್ಚನೆ ಮಾಡಿ, ತಮ್ಮ  ಶ್ರೀ ಪೇಜಾವರ,  ಪುತ್ತಿಗೆ,  ಶಿರೂರು ಮಠದ ಶಿಷ್ಯರಿಗೆ ನೀಡಿದವರಾಗಿದ್ದಾರೆ. ಶ್ರೀ ಉತ್ತರಾದಿಮಠದಲ್ಲಿಯೂ ಶ್ರೀಮದಕ್ಷ್ಯೋಭ್ಯತೀರ್ಥ ಕರಾರ್ಚಿತ ವಿಠಲನ ಪ್ರತಿಮೆ ಇದೆ. ಶ್ರೀ ಶ್ರೀಪಾದರಾಜರಿಗೂ ಒಲಿದವನು ರಂಗವಿಠಲನಾದ ವಿಠಲನೇ ಅಲ್ಲವೇ..

ಹೀಗೆ ಸಂಗೀತ ಗಾಯನಕ್ಕೆ ಒಲಿದು ಹಾಡಿನ ಮೂಲಕವೂ ಪರಮಾತ್ಮನನ್ನು ತಿಳಿದು ಜ್ಞಾನ ಪಡೆಯುವುದನ್ನು ಸೂಚಿಸುವಂತಲೇ ಅವರವರ ಬಿಂಬಮೂರ್ತಿಯ ಜೊತೆ ನಾದಬ್ರಹ್ಮನಾದ ವಿಠಲನನ್ನು ಸೇರಿಸಿಯೇ ಹರಿದಾಸರ ಅಂಕಿತನಾಮವಾಗಿದೆ.

end

****

ದಾಸ ಸಾಹಿತ್ಯದ ವ್ಯಾಪ್ತಿ ಅತ್ಯಂತ ವಿಸ್ತಾರವಾದುದು. ಶ್ರೀ ಪುರಂದರದಾಸರೊಬ್ಬರೇ 475000 ಪದ - ಪದ್ಯ - ಸುಳಾದಿ - ಉಗಾಭೋಗಗಳನ್ನು ರಚಿಸಿದ್ದಾರೆ.

ಈ ಹರಿದಾಸ ಸಾಹಿತ್ಯ ಕ್ಷೇತ್ರದಲ್ಲಿ ಅನೇಕ ಪೀಠಸ್ಥ ಯತಿಗಳೂ ಇದ್ದಾರೆ. ಹರಿದಾಸರೆಲ್ಲರೂ ಮಾಧ್ವ ಸಂಪ್ರದಾಯಕ್ಕೆ ಸೇರಿದವರು.

ಈ ಹರಿದಾಸ ಸಾಹಿತ್ಯದಲ್ಲಿ ವೇದ - ಉಪನಿಷತ್ತುಗಳಲ್ಲಿ ಉಕ್ತವಾದ ಪರಬ್ರಹ್ಮ ಮತ್ತು ಜಗತ್ತನ್ನು ಕುರಿತಾದ ವಿಷಯ; ಹರಿಭಕ್ತಿಯನ್ನು ತಿಳಿಸುವ ಪುರಾಣ ಕಥೆಗಳೂ; ಲೋಕ ವ್ಯವಹಾರದ ನೀತಿ ನಿಯಮಗಳೂ ಅಡಕವಾಗಿವೆ.

ವಿಸ್ತಾರ ಕಾಲದ ಹರಿದಾಸರು ಶಾಸ್ತ್ರ ಸಂಪನ್ನತೆಗೆ ಹೆಚ್ಚು ಪ್ರಾಶಸ್ತ್ಯವನ್ನು ನೀಡಿದರು. ಸಂಪ್ರದಾಯ ಆಚರಣೆಗೆ ಒಟ್ಟು ಕೊಟ್ಟರು. ಈ ಸಾಹಿತ್ಯ ಉಗಮ ಬೆಳವಣಿಗೆಯನ್ನು ಈ ರೀತಿ ಹೇಳುತ್ತಾರೆ.

" ಕನ್ನಡ ನಾಡಿನಲ್ಲಿ 600 ವರ್ಷಗಳ ಹಿಂದೆ ಸಣ್ಣದೊಂದು ತೊರೆಯಾಗಿ ಹರಿಯ ತೊಡಗಿದ ಹರಿದಾಸ ಪಂಥ ಮುಂದೆ ಮಹಾ ನದಿಯಾಯಿತು. ಅದರಿಂದ ಇಲ್ಲಿನ ನೆಲವೆಲ್ಲಾ ಫಲವತ್ತಾಯಿತು. ಕಾಲ ಕ್ರಮದಲ್ಲಿ ನದಿಯು ಸೀಳಿ ಸೀಳಾಗಿ ಒಡೆದು ನಾಡಿನ ಸಂಸ್ಕೃತಿ ಸಾಗರದಲ್ಲಿ ಸೇರಿತು. 475 ವರ್ಷಗಳ ಹಿಂದೆ ಶ್ರೀ ಪುರಂದರದಾಸರ ಕಾಲದಲ್ಲಿ ಇದು ಪ್ರವಾಹವಾಗಿಯೇ ಹರಿದಿತ್ತು. 15 - 16 ನೇ ಶತಮಾನದಲ್ಲಿ ಅದರ ಓಟವೂ, ವಿಸ್ತಾರವೂ ಹಿಗ್ಗಿತು. ಅನಂತರ ನದಿಯ ರಭಸವು ಕಡಿಮೆಯಾದರೂ, ಬರಗಾಲದಲ್ಲಿ ಬತ್ತದೆ ನೆಲವನ್ನು ಬಗೆದರೆ ಹೊರ ಬರುವ ಝರಿಯಂತೆ ಅಲ್ಲಲ್ಲಿ ಆಗಾಗ ಅಷ್ಟಷ್ಟು ಉಳಿದೇ ಬಂದಿತು ".

ಜನ ಬಳಕೆಯ ಭಾಷೆಯನ್ನು ಕಾವ್ಯದ ಮತ್ತು ತತ್ತ್ವ ದರ್ಶನದ ಉನ್ನತ ವಿಚಾರಗಳನ್ನು ಹೇಳಲಿಕ್ಕೆ ಬಳಸಿರುವುದನ್ನು ಕಾಣುತ್ತೇವೆ. ಕನ್ನಡ ಭಾಷೆಯನ್ನು ಅನಾವರಣ ಮಾಡಿದೆ. ಕನ್ನಡವನ್ನು ಮೈಲಿಗೆ ಮಾತೆಂದು ತೆಗಳದೇ ಈ ಭಾಷೆಯಲ್ಲಿಯೇ ಪರಮಾತ್ಮನನ್ನು ಕೀರ್ತಿಸಿದರು. ಲೋಕಕ್ಕೆ ಉಪದೇಶ ಮಾತಿನಲ್ಲಿ ಹರಿದಾಸರ ಕನ್ನಡ ಭಾಷಾ ಪ್ರೇಮದೊಂದಿಗೆ ಅದನ್ನೇ ಬಳಸುವ ಅನಿವಾರ್ಯತೆಯನ್ನು ಕಾಣಬಹುದು.

ಹರಿದಾಸರ ಪರಿಶ್ರಮದಿಂದ " ಕನ್ನಡವು ಸಂಗೀತ ಭಾಷೆಯಾಯಿತು - ತಂಬೂರಿ ಪ್ರತಿಭೆಯ ವಿಕಾಸಕ್ಕೆ ಎಡೆಯಾಯಿತು ".

ವಿಸ್ತಾರ ಕಾಲದ ಹರಿದಾಸ ಸಾಹಿತ್ಯವು " ಮಧ್ವ ಸಿದ್ಧಾಂತದ ಗಹನ ತತ್ತ್ವಗಳನ್ನೂ, ಸೂಕ್ಷ್ಮಾತಿಸೂಕ್ಷ್ಮ ಪ್ರಮೇಯಗಳನ್ನೂ ತಿಳಿಗನ್ನಡದಲ್ಲಿ ಮೂಡಿಸುವ ಪ್ರಯತ್ನ " ಮಾಡಿತು.

****


Recent Madhwa Poets/Dasa

ವಿದ್ಯಾವಾಚಸ್ಪತಿ 
ಡಾ. ಅರಳುಮಲ್ಲಿಗೆ ಪಾರ್ಥಸಾರಥಿ, Bengaluru (B 1948)
ಅಂಕಿತ ಪಾರ್ಥಸಾರಥಿ ವಿಠಲ
Compiled and published ಹರಿದಾಸರ 10000 ಹಾಡುಗಳು
First person to get doctrate in Bhagavadgita
 
****
Recent Madhwa Poets/Dasa
Sri.Acharya Nagaraju Haveri, Bengaluru - engineer .ಅಂಕಿತ ವೇಂಕಟನಾಥ know more -->click Nagaraju Haveri

2021 picture

***


Recent Madhwa Poets/Singers
Smt Gangubai Hanagal (DECEASED)(1913-2009)
****
Recent Madhwa Poets/Singers
Sri Dr. Bhimsen Joshi, Pune (DECEASED)(1922-2011)

****
Recent Madhwa Poets/Singers
Sri Pandit Madhava Gudi, Dharawad (DECEASED)(1941-2011)

****
Recent Madhwa Poets/Singers
Sri Dr. Vidyabhushana, Udupi (B 1952)

****
Recent Madhwa Poets/Singers
Sri Putturu Narasimha Naik (B-1958)

****
Recent Madhwa Poets/Singers
Sri Anantha Kulkarni, Bagalakot 
2021 picture

****
Recent Madhwa Poets/Singers
Sri Sheshagiridasa, Raichur 
2021 picture

****
Recent Madhwa Poets/Singers
Sri mysuru Ramachandra, Mysore 
2021 picture

****
Recent Madhwa Poets/Singers
Sri ಕೃಷ್ಣ ಹುನುಗುಂದ      ಅಂಕಿತ  ಅಜನಪಿತ ವಿಠ್ಠಲ 
2021 picture

****

Recent Madhwa Poets/Singers
Sri Hallerao Kembhavi, Kembhavi 
2021 picture

****
Recent Madhwa Poets/Singers
Sri Vidwan Sumukh Moudgalya, Mysuru Composer and Singer
2021 picture


***
Recent Madhwa Poets/Singers
Dr.NGವಿಜಯಲಕ್ಷ್ಮಿ ರಾಘವೇಂದ್ರಾಚಾರ್ಯ 
(ದಾಸಸಾಹಿತ್ಯದಲ್ಲಿ MA.PHD ಅಂಕಿತ ಮಂಗಳಾಂಗಹರಿವಿಠಲ
2021 picture

****

Recent Madhwa Poets/Singers
Mrs. Nandini Sripad, Bengaluru +91 9972445032
ನಂದಿನಿ ಶ್ರೀಪಾದ್Great grand daughter of ಶ್ರೀನಾಥವಿಠಲ ankita of ಮೂರ್ತ ರಾಯರು (desciple of Jayesha Vittalaru)
Listen and/or learn 500+ Suladi through this link. 
     listen learn suladi  ಸುಳಾದಿ ಕಲಿಯಲು ಕೇಳಲು ಲಿಂಕ್ಸ್
2021 picture

****
Recent Madhwa Poets/Singers
Dr.Smt. Deepika Pandurangi, Mysuru
2022 picture


*****  AND MANY MANY MORE


info from:  Haridasa Sahitya (seven) WOMEN POETS
ARCHIVE | DECEMBER 3, 2013
There have been a lot of focus and innumerable articles on Haridasas of Karnataka and their invaluable contribution to the growth and development of Bhakti movement in Karnataka.

The Haridasas were essentially Vaishnavas and all of them, irrespective of the region they came from and their

social and economic status, adhered to the tenets of Madhwacharya, the saint-philosopher, and propounded his Dwaitha or theory of dualism.

The Haridasas had an enormous impact on the life and times of society and people like Purandara Dasa, Kanaka Dasa, Vijaya Dasa and Jagannatha Dasa held the mirror of literature to society so that it could rectify its failings.

While there are hundreds of Haridasas and they are practically from every region in the State from Achalananda Dasa of the eighth century in Bangalore to Purandara Dasa in Hampi, Vijaya Dasa in Raichur and Mahipati Dasa in Bijapur, the role of women poets or Haridasis has not received the attention that these remarkable women deserve.

The composition of these poet-composers is simple, touching and musical. Yet, and this is really intriguing, they are the product of  those whose world revolved around domesticity of homes, and more specifically, to the kitchen.

These women poets rose above the mundane and stitched a high place in the literary field. Many of them had to face problems of a typical Brahmin household such as superstition, tradition, rigidity and in cases domestic strife. But these women overcame all odds and today they are a force to reckon with and a shining example of what women can do in times of adversity.

A shining example of resilience and strength of will power is Galgali Avva. Born in 1670, she was just 12 when she was married off to a 95-year-old man. Her marriage lasted exactly eight days and she was widowed on the ninth.

As was the practice in those days, Avva had to tonsure her hair and observe the stringent practice of widowhood. However, her five grown up step-sons, all of them scholars, taught her to read and write, and Avva who soon gave expression to her literary talent,  became a composer, writing under the ankita Rama.

Today we are fortunate in possessing 261 of her songs and some of them like “Bheegara Haadu,”  describes a ritual in a typical Brahmin wedding. In “Sringara Tara Tamya”, she gives a vivid and evocative description of various ornaments worn by a woman. She then becomes philosophical and says of all the ornaments, the only two worth possessing and which are ever lasting are bhakti and gnana.

In “Muyyada Haadu”, she writes about the exchange of gifts during Gowri puja. Ironically, she would not have been allowed for the pooje as she was a widow. She died in 1760.

Harapanahalli Bheemava (1823-1902) was eleven years of age when she was married off to 45-year-old Muniappa. Widowed young, she spent all her time writing devaranamas and songs. In Krishna’s Rasa Leela, she speaks of more than 70 types of saris.

Halavanakatte Giriyamma, who lived in the early 18th century, was another poet-composer who wanted out of marriage. She was bold enough to ask her husband to release her from marriage.

She was given the ankita Bheemesha Krishna by Purandara Dasa in her dream.

Yadugiriamma (1828-1908)  is another notable woman poet. She was a polyglot and she knew Telugu, Sanskrit, Tamil and Kannada.

She has composed kritis under the pen name Venkata about the temples at Melkote, Tirupati and Srirangam.

Nanjangud Thirumalamba, married at the age of 10, was widowed at 14 and she learnt to read and write Kannada, Telugu and Tamil all by herself.

This doughty lady started a journal in 1916 and even published 28 books. In one of her stories, a woman reforms her philandering husband, who then apologises to her. She died in 1982.

Nidaguraki Jeevu Bai and Oravayi Lakshmi Devi were also well-known poet-composers as were Kalasada Sundaramma, Gandamma, Radha Bai, Nadigara Santhi Bai, Amba Bai, Saraswathi Bai.

Purandara Dasa’s wife, Saraswathi, and Raghavendra Swamy’s mother, Gopikamba, were also composers of repute, but their compositions are lost forever. However, the first woman of note to write about Hari was Madhwacharya’s sister known as Kalyani Devi.

The Acharya’s sister was known to have authored  three works in Snaskrit- Krishna Stotra, Anu Vayustuti and Laghu Taratamya Stotra.

All the three books  an important part of the Sanksrit writing during the Hoysala period.   

Her Laghu Taratamya Stotra is about the Taratamya of gods and here she faithfully follows her brother in placing Vishnu above all other gods. The rest of the Gods come later.   

Both Anu Vayu Stuti and Laghu Taratamya Stotra deal with the gradation of gods and they place Hari at the top, with the rest of the gods following him.

The third work-Krishna Stotra- as the name itself suggests, is a work on Krishna. Kalyani Devi composed it after seeing the Krishna idol her brother consecrated in Udupi-the Sri Krishna Temple.

The Krishna Stotra comprises eight verses and it was first printed from Kumbakonam. It is out of print now. However, apart from these three works, nothing else is known about her.

Another Kalyani Devi that we come across almost during the same period is the sister of Trivikrama Panditacharya.

She too wrote a short composition on Vayu, extolling his virtues and referring to the three incarnations of Hanuman, Bheema and Madhwa. This work too is called Laghu Vayu Stuti. It is in six verses. It is a short composition of  22 lines with five paragraphs of four lines each and the last paragraph has just two lines.

The Stuti is a short work. Here, Kalyani Devi praises Vayu and his incarnation. She uses a constant refrain in the second line of each verse- “Anandatheertha mahamunirajam govinda bhakta shikhamanimide”

Researchers says there are more than 250 women poet-composers. Some of them include  Bhagamma ( Her ankita was Prayagavva), Turadagi Timmamma, Tulasabai (ankita-Sundarabai), Nadigara Shantibai, Radhabai (ankita-Venkatavitala Raghavendra), Sarasabai, Namagiriyamma, Rangamma, Gundamma ( Rukmaneeshavittala), Ambabai (Gopalakrishna Vittala), Venkatasubbamma (Venkatasubbi), Muliya Mukaambikaamma,  Chechamma (Sheshakka), Kamalabai  (Gurujayesha Vittala), Saraswati Bai (Sri Srinivasa) and others.

Researchers and scholars have been able to identify more than 250 Haridasis. Yet, their contribution remains largely unknown except for a few like Harapanahalli Bheemavva, Helevanakate Giriamma, Yadugiriamma and Nanjangud Tirulamba. It is time that women composers too were given their due and their contributions recognised.

This entry was posted by Govt. on December 3, 2013, in Uncategorized.

*********


****



village of classical artists - rudrapatna village near Hassan


List of Dasaru and links
Know details on Dasaru 


***