Sri Rayaru Raghavendra Swamy
ಪೂಜ್ಯಾಯ ರಾಘವೇಂದ್ರಾಯ ಸತ್ಯಧರ್ಮರತಾಯಚ |
ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ |
Raghavendra” – It is the name of Ramachandra Devaru:–
“Ra” – destroys mountains of sins “Ga” – provides deep devotion “vem” – speedy liberation from the cycle of life and death“dra” – removes all our daaridryaas (sadness)
- I Jyotishee – Shreegalu is shataayushee
- II Jyotishee – He will have 300 bright years
- III Jyotishee- He will have 700 years of life span
- As per the first his bouthika shareera will have 100 years;
- As per the second – his granthas will have 300 years of life span – i.e., his upadeshamrutha, grantha, will shine for 300+ years and
- As per the third – his vishesha sannidhana will be there for 700 years in the vrundavana, mruttika vrundavanas, etc., which is true even today. He is kalpavruksha kaamadhenu for all.
*********
- Doddadevaraja Wodeyar of Mysore State had honoured Sri Rayaru at mysore & gifted ‘Nallur’ or ‘Devarajapura’, a village at Sargur to the swamiji (Monday the 6th July, 1633) and also gifted diamond and other jewellery to Sri moolaramachandra
- Venkata Desai of Gadag honoured and gifted Kireetagiri village to Sri Rayaru
- Nawab of Savanur gifted Krishnapura to Sri Rayaru as token of reviving his died son due to snake bite.
- Shivaji got special blessing from Sri Rayaru at Kolhapur during his visit & won many battles to re-establish hindu rajya
- Ibrahim Adil Shah II of Bijapur gifted Shwetha chatra honour Sri Rayaru
- Siddhi Masoodkhan of Adoni who gifted Mantralaya grama
**************
info from http://sriraghavendraswami.blogspot.com/.
Marriage
Ordination into Sanyasa as Guru Raghavendra
Moksha of Smt. Saraswathi
Sri Sudheendra Tirtha Swamiji
Sri Yadavendra Tirtha and Sri Raghavendra Swami
Panchamuki
Jeeva Samadhi
Sloka by Sri. Appannacharya which is known to all madhwa-
Everyone is aware of Sri Raghavendra Teertharu (Sri Raghavendra Swamigalu or simply Rayaru), but many may be interested to read more on this great yatigalu.
ಕಾಮಧೇನು ತಾನೇನನ್ನು ಬಯಸದೇ ತನ್ನ ಬಳಿ ಬರುವ ಪ್ರತಿಯೊಂದು ಜೀವಿಯನ್ನು ಮಿತ್ರ,ಶತ್ರು, ಕುಲ, ಜಾತಿ, ಸಿರಿತನ,ಬಡತನ ಎನ್ನದೇ ಸಮಾನವಾಗಿ ಕಂಡು ಎಲ್ಲರಿಗೂ ಕೇಳಿದ್ದನ್ನು ಕೊಡುತ್ತದೆ.
ಹಾಗಾದರೆ ಅದೇ ತರಹ ಈ ಘೋರ ಕಲಿಯೂಗದಲ್ಲೂ ತನ್ನನ್ನೇ ಅರಸಿ ಬರುವ ಎಲ್ಲ ಭಕ್ತಾದಿಗಳಿಗೆ ಇಲ್ಲವೆನ್ನದೇ ಹರಿಸಿ ಹಾರೈಸಿ ಜೀವನೋದ್ಧಾರ ಮಾಡುವ ಕಾಮಧೇನು ಯಾರು? ಅವರೇ ಶ್ರೀರಾಘವೇಂದ್ರ ರಾಯರು .
ಎಲ್ಲ ಗುರುಗಳು ಫಲಪ್ರದಾಯಕರೇ ಆದರೂ ಕೂಡ ಶ್ರೀರಾಘವೇಂದ್ರರೇ ರಾಯರು ಎಂದು ಪ್ರಸಿದ್ಧ. ಎಲ್ಲ ಗುರುಗಳು ಭಕ್ತನ ನಿಷ್ಠೆ, ಪ್ರಯತ್ನ, ಗಾಂಭೀರ್ಯ ಪರೀಕ್ಷೆ ಮಾಡಿ ಪರೀಕ್ಷೆಯಲ್ಲಿ ಗೆದ್ದರೂ ಸೋತರೂ ಕೊನೆಗೆ ಕೈ ಬಿಡುವದಿಲ್ಲ. ಆದರೆ ರಾಘವೇಂದ್ರ ರಾಯರು ಮುಗ್ಧ ಜೀವಿಗಳು. ಒಳ್ಳೆಯವರು ಬಂದರೇ ಕೆಟ್ಟ ಯೋಚನೆಗಳ ಬಾರದಂತೆ , ಕೆಟ್ಟ ಕರ್ಮ ಮಾಡದಂತೆ ನೋಡಿಕೊಳ್ತಾರೆ. ಕೆಟ್ಟ ಜನ ಬಂದರೆ ಅವರಿಗೆ ಕೆಟ್ಟ ಬುದ್ಧಿ ಬಿಡಿಸಿ ಒಳ್ಳೆ ಮಾರ್ಗವನ್ನು ದಯಪಾಲಿಸುತ್ತಾರೆ. ಮಗು ಏನೇ ಕೇಳಿದರೂ ಇಲ್ಲವೆನ್ನದ ತಾಯಿ ಹೇಗೆ ಪ್ರೀತಿಯಿಂದ ಕೊಡುವಳೋ ಹಾಗೆಯೇ ಶ್ರೀರಾಘವೇಂದ್ರ ರಾಯರು ಬರುವ ಭಕ್ತಾದಿಗಳನ್ನು ಮಗುವಿನ ಹಾಗೆ ನೋಡಿ ಉದ್ಧರಿಸುತ್ತಾರೆ.
ಮಂತ್ರಾಲಯ ಪಾದಯಾತ್ರೆಗೆ ಹೋಗುವ ಭಕ್ತರೂ ಕೂಡ ರಾಯರಿಗೆ ಬಹಳ ಪ್ರೀತಿ ಪಾತ್ರರು. ಎಲ್ಲರಿಗೂ ಆ ಅವಕಾಶ ಸಿಗೋದಿಲ್ಲ. ಅದೊಂದು ಸ್ವರ್ಗಕ್ಕೆ ಹೋಗುವ ದಾರಿ ಇದ್ದಂತೆ. ಭಕ್ತ ಸದಾ ರಾಯರ ಭಜನೆ , ದೇವರ ನಾಮಸ್ಮರಣೆ ಮಾಡುತ್ತ ದಾರಿಯಲ್ಲಿ ಸಾಗುತ್ತಿರುತ್ತಾನೆ. ಇದೇ ಅಲ್ಲವೇ ಬಯಸಿ ಬಂದ ಭಾಗ್ಯ. ಅದರಲ್ಲೂ ಬಾಗಲಕೋಟ ಜಿಲ್ಲೆ ಈ ತರಹದ ವಿಷಯಗಳಲ್ಲಿ ರಾಯರ ಕಣ್ಣಿಗೆ ಕಂಡಿರುವುದು ಬಹಳ ಅದೃಷ್ಟಕರ. ಸರಿಸುಮಾರು ೪೫ ವರ್ಷಗಳಿಂದ ಸಾವಿರಾರು ಭಕ್ತಾದಿಗಳು ಪಾದಯಾತ್ರೆ ಹೋಗುತ್ತಾರೆ. ಆ ಕ್ಷಣಗಳು ಅವಿಸ್ಮರಣೀಯ. ಮೆಲಕು ಹಾಕಿದ ಮತ್ತು ಹಾಕುವ ಪಾದಯಾತ್ರಿಗಳಿಗೆ ಆ ಒಂದೊಂದು ಕ್ಷಣಗಳು ಮರೆಯಲು ಅಸಾಧ್ಯ.
ಹೀಗೆ ಬಾಗಲಕೋಟೆಯ ಹೆಸರಾಂತ ಗಾಯಕರಾದ ಶ್ರೀ ಜಯತೀರ್ಥ ನಾರಾಯಣ ತಾಸಗಾಂವ್ ಅವರು ಕೂಡ ಮಂತ್ರಾಲಯದ ರಾಯರನ್ನು ಕಾಣಲು ಪಾದಯಾತ್ರಿಯಾಗಿ ಹೊರಟಿದ್ದರು. ಆ ಕ್ಷಣದಲ್ಲಿ ಸುತ್ತ ನೆರೆದಿರುವ ಅನೇಕ ಸಹ ಪಾದಯಾತ್ರಿಗಳಿಗೆ ತಮ್ಮ ಸಂಗೀತ ರಸದೌತಣದ ಮುಖಾಂತರ ರಾಯರ ಬಗ್ಗೆ ಇರುವ ಭಕ್ತಿ ಹೆಚ್ಚಾಗುವಂತೆ , ರಾಯರ ಧ್ಯಾನ ಮಾಡುವಂತೆ ಮಾಡಿದರು.
ಎಲ್ಲರೂ ತಮ್ಮ ಜೀವನದಲ್ಲಿ ಒಮ್ಮೆಯಾದರೂ ಮಂತ್ರಾಲಯಕ್ಕೆ ಪಾದಯಾತ್ರೆ ಮಾಡಲೇಬೇಕು.
ರೋಗಹರನೆ ಕೃಪಾಸಾಗರ ಶ್ರೀಗುರು ರಾಘವೇಂದ್ರ ಪರಿಪಾಲಿಸೋ.....
****************
ಶ್ರೀ ಗುರು ಸಾರ್ವಭೌಮ ರಾಘವೇಂದ್ರ ಸ್ವಾಮಿಗಳ ೩೩೯ ನೇ ಪಟ್ಟಾಭೀಷೇಕದ ಮತ್ತು ಶ್ರೀ ರಾಘವೇಂದ್ರ ಸ್ವಾಮಿಗಳ ವರ್ಧಂತಿ ೪೨೫ ನೇ ವರ್ಷದ ಸ್ಮರಣೆ ಯೊಂದಿಗೆ ನಮನಗಳು.
ಶ್ರೀ ರಾಘವೇಂದ್ರ ಗುರು ಸಾರ್ವಭೌಮರು (ಪ್ರಲ್ಹಾದ ಅಂಶ).
ಪೂಜ್ಯಾಯ ರಾಘವೇಂದ್ರಾಯ ಸತ್ಯ ಧರ್ಮ ರತಾಯಚ ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನುವೇ.//
ದೂರ್ವಾದಿಧ್ವಾಂತರವಯೇ ವೈಷ್ಣವೇಂದೀವರೇಂದವೇ/
ಶ್ರೀ ರಾಘವೇಂದ್ರ ಗುರುವೇ ನಮೋ ಅತ್ಯಂತ ದಯಾಲವೇ//.
ರಾಘವೇಂದ್ರ ಯತಿ ಸಾರ್ವಭೌಮ ದುರಿತಾಘದೂರ ತೇ ನಮೋ ನಮೋ/
ಮಾಗಧರಿಪುಮತ ಸಾಗರಮೀನ ಅಘನಾಶನ ನಮೋ ನಮೋ/
ಶ್ಲಾಘಿತ ಗುಣಗಣ ಸೂರಿ ಪ್ರಸಂಗ ಸದಾಗಮಜ್ಞ ತೇ
ನಮೋ ನಮೋ/
ಮೇಘಶ್ಯಾಮಲ ರಾಮಾರಾಧಕ ಅಮೋಘ ಬೋಧ ತೇ ನಮೋ ನಮೋ//.
ಶ್ರೀ ಸುಧೀಂದ್ರ ಕರಜಾತ ನಮೋ ನಮೋ/ಭೂಸುರ ನುತ ವಿಖ್ಯಾತ ನಮೋ ನಮೋ/
ದೇಶಿಕವರ ಸಂಸೇವ್ಯ ನಮೋ ನಮೋ/ದೋಷವಿವರ್ಜಿತ ಕವ್ಯ ನಮೋ ನಮೋ//.
(ಶ್ರೀ ಜಗನ್ನಾಥ ದಾಸರು)..
ಶ್ರೀ ಮಾಧ್ವ ಸಿದ್ಧಾಂತದ ಪತಾಕೆಯನ್ನು ವಿಶ್ವ ದಲ್ಲೆಡೆ ಹಾರಿಸಿ,ಮಾನವ ಕುಲದ ಉದ್ಧಾರಕ್ಕಾಗಿ ವೇದಾಂತ ಸಾಮ್ರಾಜ್ಯದ ಪಟ್ಟವನ್ನೇರಿ ಗುರು ಗಳಾದ ಶ್ರೀ ಸುಧೀಂದ್ರ ತೀರ್ಥ ರಿಂದ ಮಹಾ ವೈಭವ ದಿಂದ ಪಟ್ಟಾಭಿಷೇಕ ಮಹೋತ್ಸವವನ್ನು , ತಂಜಾವೂರಿನ ಮಹಾರಾಜರಿಂದ ಸಕಲ ಮರ್ಯಾದೆ ಗಳಿಂದ
ಶಾಲಿವಾಹನ ಶಕೆ ೧೫೪೫ ರುಧಿರೋದ್ಗಾರಿ ಸಂವತ್ಸರ
ಫಾಲ್ಗುಣ ಶುದ್ಧ ಬಿದಿಗೆ ಯಂದು ವೆಂಕಟನಾಥರು
ಶ್ರೀ "ರಾಘವೇಂದ್ರ ತೀರ್ಥ"ರೆಂಬ ಆಶ್ರಮ ನಾಮಕರಣದಿಂದ ಸಕಲ ರಾಜ ಮರ್ಯಾದೆ ಗಳ
ಸಮೇತ ಮಹಾ ಪಟ್ಟಾಭಿಷೇಕ ನಡೆದ ಸುದಿನ ಇಂದು.
ಇಂದಿನ ಶುಭ ದಿನವನ್ನು ಮತ್ತು ವರ್ಧಂತಿ ಮಹೋತ್ಸವ (ಜನ್ಮ ದಿನೋತ್ಸವ ವನ್ನು ಭಕ್ತಿ, ಶ್ರದ್ಧೆಗಳಿಂದ ಆಚರಿಸಿ ಶ್ರೀ ರಾಘವೇಂದ್ರ ಸ್ವಾಮಿಗಳ ಅನುಗ್ರಹ ವನ್ನು ಪಡೆದು ಧನ್ಯತೆ ಹೊಂದೋಣ.
ಶ್ರೀ ರಾಘವೇಂದ್ರಾಯ ನಮಃ.
*************
ದಿನಕರನುದಿಸಿದನೂ ಧರೆಯೋಳಗೆ....
ಮೂಲರೂಪದಿಂದ ಶಂಕುಕರ್ಣರಾಗಿ....
ಮುಂದೆ ಶ್ರೀ ಪ್ರಹ್ಲಾದರಾಜರಾಗಿ ಅವತರಿಸಿ
ಶ್ರೀ ನರಸಿಂಹ ದೇವರನ್ನು ಒಲಿಸಿಕೊಂಡು,
ಮತ್ತೊಂದು ಅವತಾರದಲ್ಲಿ
ಶ್ರೀ ಬಾಹ್ಲೀಕರಾಜರಾಗಿ ಮೇರೆದು...
ಭೂಲೋಕದಲ್ಲಿ
ಶ್ರೀ ವ್ಯಾಸರಾಜಗುರುಸಾರ್ವಭೌಮರಾಗಿ
ಮೂಲಗೋಪಾಲಕೃಷ್ಣನನ್ನು ಅರ್ಚಿಸಿ,
ಮತ್ತೊಮ್ಮೆ ರಾಮದೇವರ ಪೂಜೆಗೊಸ್ಕರ ಅವತರಿಸುವುದಷ್ಟಲ್ಲದಲೇ..
ಸಕಲ ಸಜ್ಜನರ ಉದ್ದಾರಕ್ಕಾಗಿ ಜನ್ಮತಾಳಿ,
ಅಂದು ನರಸಿಂಹ ದೇವರು ಪ್ರಹ್ಲಾದರಾಜರಿಗೆ ಮೋಕ್ಷವನ್ನು ಕೊಡುತ್ತೆನೆಂದು ಕರೆದಾಗ, ಪರಮಭಾಗವತೋತ್ತಮರಾದ
ಶ್ರೀ ಪ್ರಹ್ಲಾದರಾಜರು ನಾನೊಬ್ಬನೇ ಬರಲು ಸಾಧ್ಯವಿಲ್ಲ..
ನನ್ನ ಜೋತೆಗೆ ಸಕಲ ಸಜ್ಜನರಿಂದ ಸಾಧನೆಯನ್ನು ಮಾಡಿಸಿ ಅವರನ್ನು ಮೋಕ್ಷದ ಮಾರ್ಗಕ್ಕೆ ಹಚ್ಚುತ್ತೆನೆಂಬ ಮಾತಿಗೆ ಕಟಿಬದ್ಧರಾಗಿ ನಿಂತು,
ಕಲಿಯಿಗದಲ್ಲಿ ಸಕಲ ಸಜ್ಜನರ ಉದ್ಧಾರಕ್ಕಾಗಿ
ಕಲಿಯುಗದ ಕಾಮಧೇನುಗಳಾಗಿ ನಿಂತು,
ಅದ್ಯಾಪಿ ಇಂದಿಗೂ ಬೃಂದಾವನದಲ್ಲಿ ಇದ್ದುಕೊಂಡು
ಬೇಡಿಬಂದ ಭಕುತರ ಸಾತ್ವಿಕ ಬೇಡಿಕೆಗಳನ್ನು ಈಡೇರಿಸಿ ಅವರನ್ನು ಧರ್ಮ ಮಾರ್ಗಕ್ಕೆ ತರುತ್ತಾ ಅವರನ್ನು ಉದ್ಧರಿಸುತ್ತಿರುವ ಮಹಾನುಭಾವರಾದ ಜಗತ್ತಿನ ಏಕೈಕ ಗುರುಗಳೆಂದರೇ ಅವರೇ.....
ನಮ್ಮ ರಾಯರು....
ಕ್ರಿ.ಶ 1595ನೇ ಮನ್ಮಥನಾಮ ಸಂವತ್ಸರದಲ್ಲಿ,
ಭುವನಗಿರಿಯಲ್ಲಿ,
ಗೌತಮ ಗೋತ್ರದ ವಂಶದಲ್ಲಿ,
ತಿಮ್ಮಣ್ಣಭಟ್ಟರ ಗೋಪಿಕಾಂಬೆಯರ ಪುತ್ರರಾಗಿ ಅವತರಿಸಿ,
ವೆಂಕಟನಾಥರೆಂಬ ಅಭಿದಾನದಿಂದ ಬೆಳೆದು,
ಸಕಲ ಶಾಸ್ತ್ರಗಳಲ್ಲಿ,
ಸಕಲ ವಿದ್ಯೆಗಳಲ್ಲಿ ಪಾರಂಗತರಾಗಿ,
ಮುಂದೇ ಶ್ರೀ ಸುಧೀಂದ್ರತೀರ್ಥರ ಗರಡಿಯಲ್ಲಿ ಪಳಗಿ
ಶ್ರೀ ಸುಧೀಂದ್ರತೀರ್ಥರು ಬಂದ
ಹಂಸನಾಮಕ ಪರಮಾತ್ಮನ ಸಾಕ್ಷಾತ್ ಪರಂಪರೆಯಲ್ಲಯೇ
ಜಗದ್ಗುರು ಶ್ರೀ ಮನ್ಮಧ್ವಾಚಾರ್ಯರ ಮೂಲ ಮಹಾ ವೇದಾಂತ ದಿಗ್ವಿಜಯ ವಿದ್ಯಾಸಿಂಹಾಸನದಲ್ಲಿ
ಶ್ರೀ ಪದ್ಮನಾಭತೀರ್ಥರು
ಶ್ರೀ ಜಯತೀರ್ಥರು
ಶ್ರೀ ವಿಬುಧೇಂದ್ರತೀರ್ಥರೇ ಮೊದಲಾದ
ಮಹಾಮಹೀಮರು ಬೆಳಗಿದ
ಸದ್ವೈಷ್ಣವ ಪರಂಪರೆಯಲ್ಲಿ
ಶ್ರೀ ಸುಧೀಂದ್ರತೀರ್ಥರಿಂದ ಪಟ್ಟಾಭಿಷಿಕ್ತರಾಗಿ
ಚತುರ್ಯುಗ ಮೂರ್ತಿ ಬ್ರಹ್ಮ ಕರಾರ್ಚಿತ
ಶ್ರೀರಾಮದೇವರ ಪರಮ ಮಂಗಲ ಪ್ರತಿಮೆಯನ್ನು ಅನವರತ ಪೂಜಿಸಿ,
ಸಕಲರಿಗೂ ಆರಾಧ್ಯರಾದ
ಜಗದ್ಗುರುಗಳೇನಿಸಿದ ತಪಸ್ವಿವರೇಣ್ಯರಾದ
ಶ್ರೀ ರಾಘವೇಂದ್ರ ಸ್ವಾಮಿಗಳ ವರ್ಧಂತಿಯ ಶುಭದಿನ..
ಶ್ರೀ ರಾಘವೇಂದ್ರ ಸ್ವಾಮಿಗಳು ಪೂರ್ವಾಶ್ರಮದಲ್ಲಿ
ಅರ್ಥಾತ್
ವೆಂಕಟನಾಥರಾಗಿದ್ದಾಗ
ಅನೇಕಾನೇಕ ತರಹದ ಕಷ್ಟನಷ್ಟಗಳು,
ಅವಮಾನ ಅಪಮಾನಗಳು
ಎಲ್ಲವನ್ನೂ ಅನುಭವಿಸಿ ಯಾವುದನ್ನೂ ಮತ್ತೊಬ್ಬರಿಗೆ ತೋರಿಸದೇ ಹಾಗೂ ಮತ್ತೊಬ್ಬರಿಗೆ ಧೇಹಿ ಎಂದು ಬೇಡದೆ ಬದುಕಿ ತೋರಿಸಿದ ಮಹಾನುಭಾವರು...
ಇಂದೂ
ಕಷ್ಟನಷ್ಟಗಳು,
ಅವಮಾನ ಅಪಮಾನಗಳು,
ತೋಂದರೆತಾಪತ್ರಯಗಳನ್ನು ಹೋತ್ತು ನಾವು ಅವರ ಬಳಿ ಹೋಗಿ ಭಕ್ತಿಯಿಂದ ನಿಶ್ಕಲ್ಮಶಭಾವದಿಂದ ಪರಿಹಾರ ಬೇಡಿದರೇ...
ಅದೆಲ್ಲವನ್ನೂ ದೂರ ಮಾಡಿ
ನಮ್ಮ ನಮ್ಮ ಯೋಗ್ಯತೆಗೆ ತಕ್ಕಂತೆ ನಮಗೆ ಬೇಕಾದ ಅವಕಾಶಗಳು,ಧನಧಾನ್ಯ,ಸಂಪತ್ತು
ಮಾನಸನ್ಮಾನಗಳು ಇವೆಲ್ಲವನ್ನೂ ಕೊಡುವುದರ ಜೋತೆಗೆ
ಗುರುಭಕ್ತಿ ಹರಿಭಕ್ತಿಯನ್ನು ಕರುಣಿಸುವ
ಕಲ್ಪವೃಕ್ಷ ಕಾಮಧೇನುಗಳು ನಮ್ಮ ರಾಯರು....
ಇಂತಹ ಮಹಾನುಭಾವರ,
ಮಹಾಮಹೀಮರ,
ಕರುಣಾಸಮುದ್ರರ
ಅನುಗ್ರಹ ಸದಾ ನಮ್ಮೆಲ್ಲರ ಮೇಲಾಗಲಿ ಜೋತೆಗೆ ಅವರಲ್ಲಿ ನಮ್ಮ ಭಕ್ತಿ ನಿರಂತರವಾಗಿರಲಿ ಎಂದು ಪ್ರಾರ್ಥನೆಯನ್ನು ಮಾಡೋಣ.....
ಗುರೋ ರಾಘವೇಂದ್ರ
- ಒಬ್ಬ ಜ್ಯೋತಿಷಿ – ಶ್ರೀಗಳವರು ಶತಾಯುಷಿಗಳು
- ಎರಡನೆಯವರು – ಶ್ರೀಗಳು ೩೦೦ ವರ್ಷಗಳ ಕಾಲ ಉಜ್ವಲವಾಗಿ ಬೆಳಗುತ್ತಾರೆ
- ಮೂರನೆವರು – ಶ್ರೀಗಳು ೭೦೦ ವರ್ಷಗಳ ಆಯುಷ್ಯವನ್ನು ಹೊಂದಿದ್ದಾರೆ.
-Smt.Padma Sirish
Rayaru – Charitre – click
Nadee Taratamya Stotra – with Meaning – click
ಮಹಾಭಾರತ ತಾತ್ಪರ್ಯ ನಿರ್ಣಯ ಭಾವಸಂಗ್ರಹ – ಅರ್ಥಸಹಿತ – click
Mahabharatha Tatparya Nirnaya (Sanskrit) – click
- Sarva Samarpana Gadyam – click
Devaranamagalu – Part I – click
Devaranamagalu – Part II – click
Rayara Mutt Parampare – click
ಶ್ರೀ ಕೃಷ್ಣ ಚಾರಿತ್ರ್ಯ ಮಂಜರಿ – ಅರ್ಥಸಹಿತ – click
Sri Krishna Charitrya Manjari – Sanskrit – click
- Krishna Chaaritrya Manjari – with English meaning – click
Sri Krishna Charitrya Manjari – Telugu, Tamil – click
ಶ್ರೀ ರಾಮಚಾರಿತ್ರ್ಯಮಂಜರಿ – ಅರ್ಥಸಹಿತ – click
Sri Ramacharitrya Manjari – Sanskrit, Tamil, Telugu – click
Sri Raghavendra Tirtha Krutiratnamalika Stotra – click
Sri Raghavendra Stotra – click
RAYARA GRANTHAGALU – click
Sri Raghavendra Mangalastakam – click
ಅಷ್ಟೋತ್ತರ ಜಪಕ್ರಮ – Ashtottara Japa Krama – Click
In English CLICK 👇👇below
rayaru 11 mahime
rayaru 12 mahime
rayaru 13 mahime
rayaru 14 mahime
rayaru 15 mahime
In Kannada CLICK 👇👇below
ರಾಯರು 00 ಮಹಿಮೆ ರಾಯರು 01 ಮಹಿಮೆ
ರಾಯರು 02 ಮಹಿಮೆ
ರಾಯರು 03 ಮಹಿಮೆ
ರಾಯರು 04 ಮಹಿಮೆ
ರಾಯರು 05 ಮಹಿಮೆ
ರಾಯರು 06 ಮಹಿಮೆ
ರಾಯರು 07 ಮಹಿಮೆ
ರಾಯರು 08 ಮಹಿಮೆ
ರಾಯರು 09 ಮಹಿಮೆ
******
bhadrapada krishna dwadashi
🌺🌺🌺🌺🌺🌺🌺
" ಶ್ರೀ ರಾಯರ ವೃಂದಾವನ - ಒಂದು ಚಿಂತನೆ "
🌺🌺🌺🌺🌺🌺🌺🌺
ಶ್ರೀ ಮಂತ್ರಾಲಯ ಪ್ರಭುಗಳ ಬೃಂದಾವನವನ್ನು ಮೂರು ಭಾಗಗಳಲ್ಲಿ ನೋಡಬಹುದು.
೧. ಕೂರ್ಮಾಸನದಿಂದ ಹಿಡಿದು ವಸ್ತ್ರವನ್ನುಡಿಸುವ ಸ್ಥಳದವರೆಗೂ ಇರುವುದು ಮೊದಲನೆಯ ಭಾಗ.
ಇದರಲ್ಲಿ ೯ ಉಪಭಾಗಗಳಿವೆ. ಅವುಗಳು...
೧. ಪರಮಪುರುಷ ೨. ಆಧಾರ ರೂಪಿಣಿ ಶಕ್ತಿ ೩. ವಿಷ್ಣು, ಕೂರ್ಮ ೪. ವಿಷ್ಣು ಕೂರ್ಮ ೫. ವಾಯು ಕೂರ್ಮ ೬. ಆದಿಶೇಷ ೭. ಭೂಮಿ ೮. ಕ್ಷೀರಸಾಗರ ೯. ಶೇತದ್ವೀಪ
೨. ಬೃಂದಾವನದ ಮಧ್ಯ ಭಾಗದಿಂದ ತೆನೆಗಳ ವರೆಗಿನದ್ದು ಎರಡನೆಯ ಭಾಗ.
ಇಂದು ಬೃಂದಾವನದಲ್ಲಿ ನಾಮ ಹಾಗೂ ಕಣ್ಣು ಮೂಗು ಇತ್ಯಾದಿ ಹಚ್ಚುವ ಭಾಗದಿಂದ ಕೂಡಿಕೊಂಡು ೬ ತೆನೆಗಳ ವರೆಗೂ ಇರುವ ಭಾಗವು ಮಂಟಪಕ್ಕೆ ಪ್ರತಿ ರೂಪವಾಗಿದೆ.
೩. ತೆನೆಗಳಿಂದ ಕೂಡಿದ ಭಾಗ ಮೂರನೆಯ ಭಾಗ.
ಇದು ೬ ಊರ್ಧ್ವ ಲೋಕಗಳಿಗೆ ಪ್ರತಿ ರೂಪವಾಗಿದೆ. ಭೂಲೋಕದ ಮೇಲೆ...
೧. ಭುವರ್ಲೋಕ
೨. ಸ್ವರ್ಗಲೋಕ
೩. ಮಹಾಲೋಕ
೪. ಜನೋಲೋಕ
೫. ತಪೋಲೋಕ
೬. ಸತ್ಯಲೋಕ
ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮರು ಸತ್ಯಲೋಕದಿಂದಲೇ ಭುವಿಗಿಳಿದು ಬಂದ ಕಲ್ಪವೃಕ್ಷ - ಕಾಮಧೇನು.
ಶ್ರೀಮಂತ್ರಾಲಯ ಪ್ರಭುಗಳ ಬೃಂದಾವನದಲ್ಲಿರುವ ೭೧೩ ಸಾಲಿಗ್ರಾಮಗಳು ಪೀಠ ಪೂಜೆಯಲ್ಲಿ ಬರುವ ಭಗವಂತನ ಹಾಗೂ ಅವನ ಪರಿವಾರ ದೇವತೆಗಳಿಗೆ ಸೂಚಿತವಾಗಿವೆ.
ಶ್ರೀ ಗುರುಸಾರ್ವಭೌಮರು ಬ್ರಹ್ಮಾಂಡ - ಹರಿಮಂದಿರ - ಪೀಠಗಳಿಗೆ ಪ್ರತಿರೂಪವೆನಿಸಿದ, ಸುಂದರ ಬೃಂದಾವನದ ಕೆಳ ಭಾಗದಲ್ಲಿ ಕುಳಿತಿದ್ದಾರೆ. ಇದರಿಂದ ಶ್ರೀ ಗುರುರಾಜರ ಬೃಂದಾವನ ಶ್ರೀ ಹರಿಯ ಮಂದಿರವೇ ಆಗಿದೆ.
" ಶ್ರೀ ಗುರುರಾಜರ ಬೃಂದಾವನದಲ್ಲಿರುವ ಭಗವದ್ರೂಪಗಳು "
ಶ್ರೀ ವಿಜಯರಾಯರು...
**ರಾಮ ನರಹರಿ ಕೃಷ್ಣ ಕೃಷ್ಣರ ।
ನೇಮದಿಂದೀ ಮೂರ್ತಿಗಳ ಪದ ।*
ತಾಮರಸ ಭಜನೆಯನು ಮಾಳ್ಪರು ।
ಕೋಮಲಾಂಗರು ಕಠಿಣ ಪರವಾದಿ ।।*
ಹಾಗೆಯೇ...
ಅಲವಬೋಧ ಮಿಕ್ಕಾದ ಮಹ । ಮುನಿ ।
ಗಳು ಸಾಂಶದಿ ಒಂದು ರೂಪದಿ ।
ನೆಲೆಯಾಗಿ ನಿತ್ಯದಲಿ ಯಿಪ್ಪರು ।
ಒಲಿಸಿ ಕೊಳುತಲಿ ಹರಿಯ ಗುಣಗಳ ।।
ಶ್ರೀ ಗೋಪಾಲದಾಸರು....
ನರಹರಿ ರಾಮ ಕೃಷ್ಣ ಸಿರಿ ವೇದವ್ಯಾಸ ।
ಎರಡೆರಡು ನಾಲುಕು ಹರಿ ಮೂರ್ತಿಗಳು ।
ಪರಿವಾರ ಸಹಿತವಾಗಿ ಸಿರಿ ಸಹಿತ ನಿಂದು ।
ಸುರಗುರು ಮಧ್ವಾಚಾರ್ಯರೇ ಮೊದಲಾಗಿ ।
ತರವಾಯದಲ್ಲಿನ್ನು ತಾರತಮ್ಯಾನುಸಾರ ।
ಪರಿಪರಿ ಯತಿಗಳು ಯಿರುತಿಪ್ಪವರಿಲ್ಲಿ ।।
ಶ್ರೀ ವೆಂಕಟವಿಠಲರು...
ಸತ್ಯಾಧಿ ಗುಣಸಿಂಧು ವೆಂಕಟವಿಠಲನ್ನ ।
ನಿತ್ಯ ಸನ್ನಿಧಿಯಿಂದ ನಿರುತ ಪೂಜೆಯಗೊಂಬ ।
ಬೃಂದಾವನ ನೋಡಿರೋ ।।
ಶ್ರೀ ಗುರು ಜಗನ್ನಾಥದಾಸರು...
ಶ್ರೀ ನಾರಸಿಂಹ ಯದುವೀರ ರಘುತ್ತಮಾಖ್ಯ ।
ವಾಶಿಷ್ಠಕೃಷ್ಣ ಹಯತುಂಡ ಪದಾಬ್ಜಭೃಂಗ ।।
ಹಾಗೆಯೇ ಇನ್ನೊಂದು ಪದ್ಯದಲ್ಲಿ ಶ್ರೀ ಗುರು ಜಗನ್ನಾಥದಾಸರು...
ಶ್ರೀವರನುತಾ ಚಕ್ರ ರೂಪದಿ ।
ಜೀವೋತ್ತಮ ಪ್ರಾಣದೇವನು ।
ಸಾವಿರಾಸ್ಯನೇ ರಾಯರೆಂದು ಸುರರು ನಿಂತಿಹರು ।।
ಅಲವಬೋಧ ಸುತೀರ್ಥ ಮುನಿಗಳು ।
ಹಲವು ಕಾಲದಿ ನಿಂತು ಜನರಘ ।
ವಳಿದು ಕೀರುತಿಯಿತ್ತು ಲೋಕ ವಿಖ್ಯಾತಿ ಮಾಡಿದರು ।।
ಎಲ್ಲ ಕಾಲದಿ ಪ್ರಾಣ ಲಕುಮೀ ।
ನಲ್ಲ ನಿನ್ನೊಳು ನಿಂತು । ಕಾರ್ಯಗ ।
ಲೆಲ್ಲ ತಾನೇ ಮಾಡಿ ಕೀರ್ತಿಯು ನಿನಗೆ ಕೊಡುತಿಪ್ಪ ।।
ಶ್ರೀ ಕನಕಾದ್ರಿವಿಠಲರು...
ಸ್ವಾಮಿ ನಿಮ್ಮರಿದೇನೆಂದು ಸುಮಹಾ ವೃಂದಾವನದ ।
ಆ ಮೂಲಾಗ್ರದಲಿ ಅಣು ಮಹದ್ರೂಪಾನಂತ ವಿಶ್ವ ದಾಸ್ಯೆಕೂಡಿ ।
ಶ್ರೀ ಮಹಾಲಕ್ಷ್ಮೀಕಾಂತ ತುರ್ಯ ಶಿರದ ಮೇಲೆ ।
ರಾಮ ವಿಶ್ವಾದಿ ಸುರರು ತೆನೆ ಕಂಕಣದಿ ಋಷಿಗಳು ।
ಆ ಮಹಾ ಹೃದ್ದೇಶದಿ ಪಿತ್ರಾದಿಗಳು । ಈ ।
ನೇಮದಿ ಕೆಳ ಕಂಕಣದಿ ಗಂಧರ್ವರು ।
ಈ ಮಾಡಗಳಲ್ಲಿ ಕ್ಷಿತಿಪರು ಪೀಠಾದಲ್ಲಿ ।
ಸ್ವಾಮಿ ಕಮಲಾಭಾದಿ ಯತಿಗಳು ।
ಸಮಸ್ತ ದಾಸರಿಹರು ವೇದಿಕದಿ ಪ್ರಾಕಾರದಲ್ಲಿ ।
ಭೂಮಿ ಸುರರು ಅಂಗಳದಿ ।
ಶೀಮೆ ರಾಯರು ಅನೇಕ ಶಾಖಸ್ತ ।
ರೋಮಾಂಚನರಾಗಿ ಕೈಯೆತ್ತಿ ತುತಿಪರೋ ।
ಶ್ರೀಮಂತ ಗುರು ರಾಘವೇಂದ್ರಂತರ್ಯಾಮಿ ।
ಶ್ರೀಮಂತ ಕನಕಾದ್ರಿವಿಠಲ ।
ನೀ ಮರೆಯದೆ ಜ್ಞಾನ ಶುದ್ಧಿಯ ನೀಯೋಗಿ ।।
ಹೀಗೆ ಶ್ರೀ ಭಗವಂತನ ವಿಭೂತಿ ರೂಪಗಳಿಂದಲೂ, ಶ್ರೀ ವಾಯುದೇವರ ನಿತ್ಯಾವೇಶದಿಂದಲೂ; ಶ್ರೀಮದಾಚಾರ್ಯರೇ ಮೊದಲಾದ ಯತಿವರೇಣ್ಯರ ಸನ್ನಿಧಾನದಿಂದಲೂ ಕೂಡಿರುವವರು ಶ್ರೀ ಗುರುರಾಜ ಗುರುಸಾರ್ವಭೌಮರು!!
ಮೇಲ್ಕಂಡ ಪದ್ಯಗಳಿಗನುಗುಣವಾಗಿ ಧಾರವಾಡದ ನಿವಾಸಿಗಳಾದ ಶ್ರೀ ಅರವಿಂದ ಕುಲಕರ್ಣಿಯವರು ತಮ್ಮ ೭೫ನೇ ವಯಸ್ಸಿನಲ್ಲಿ ಶ್ರೀ ರಾಯರ ವೃಂದಾವನವನ್ನು ಚಿತ್ರಿಸಿದ್ದು ಶ್ರೀ ರಾಯರು ಬೃಂದಾವನದ ಮುಂದೆ ಕುಳಿತಿದ್ದಾರೆ. ಅದರಲ್ಲಿ ಶ್ರೀ ಶ್ರೀನಿವಾಸ - ಶ್ರೀ ನರಸಿಂಹ - ಶ್ರೀ ರಾಮ - ಶ್ರೀ ಪಂಚಮುಖಿ ಪ್ರಾಣದೇವರು - ಶ್ರೀ ಕೃಷ್ಣ ಮತ್ತು ಕಾಮಧೇನುವನ್ನು ಚಿತ್ರಿಸಿದ್ದಾರೆ.
*೧. ಶ್ರೀ ಶ್ರೀನಿವಾಸದೇವರು. ಶ್ರೀ ಶ್ರೀನಿವಾಸನ ಪರಮಾನುಗ್ರಹದಿಂದಲೇ ಶ್ರೀ ರಾಯರ ಅವತಾರ.
*
ಗುರುರಾಜರು! ಜಗದ್ವಿಖ್ಯಾತವಾದ ಗೌತಮ ಗೋತ್ರದಲ್ಲಿ ಮಂಗಳಕರವಾದ ಷಾಷ್ಠಿಕ ವಂಶದಲ್ಲಿ ಖ್ಯಾತ ನಾಮರಾದ ಶ್ರೀ ವೀಣಾ ತಿಮ್ಮಣ್ಣಭಟ್ಟರು, ಸಾಧ್ವೀ ಗೋಪಿಕಾಂಬಾ ದಂಪತಿಗಳ ತಪಸ್ಸಿಗೆ ಮೆಚ್ಚಿ ಶ್ರೀ ಶ್ರೀನಿವಾಸನು...
" ತಿಮ್ಮಣ್ಣಾ! ನೀನು ನನಗೆ ಆಹ್ಲಾದವನ್ನುಂಟು ಮಾಡಿದ್ಯಾ! ನಿನಗೆ ಪ್ರಹ್ಲಾದನನ್ನೇ ಕೊಡುತ್ತೇನೆಂದೂ, ಲೋಕ ಪೂಜ್ಯನಾದ, ನನ್ನ ಭಕ್ತಾಗ್ರಣಿಯಾದ ಸತ್ಪುತ್ರನನ್ನು ಕೊಡುತ್ತೇನೆ "
ಯೆಂದು ವರವಿತ್ತು ಅನುಗ್ರಹಿಸಿದನು. ಆದ್ದರಿಂದಲೇ ಲೋಕ ವಿಲೋಕ್ಷಕನಾದ ರಮಾಪತಿಯ ವರದಿಂದ ಅವತರಿಸಿದ ಶ್ರೀ ರಾಯರು ಪರಮ ಪಾವನ ಮೂರ್ತಿಗಳಾಗಿದ್ದಾರೆ.
ಅಂತೆಯೇ, ಶ್ರೀ ರಾಯರು ಗರುಡವಾಹನನಾದ, ವೈಕುಂಠ ಪತಿಯಾದ ಶ್ರೀಲಕ್ಷ್ಮೀನಾರಾಯರಣನ ಕರುಣೆಯಿಂದ ಲಬ್ಧವಾದ ಧರ್ಮ - ಅರ್ಥ - ಕಾಮ - ಮೋಕ್ಷಗಳೆಂಬ ಚತುರ್ವಿಧ ಶುಭಾರ್ಥಗಳುಳ್ಳವರಾಗಿದ್ದಾರೆ ( ಶ್ರೀ ರಾಘವೇಂದ್ರೋ ಹರಿಪಾದಕಂಜ ನಿಷೇವಣಾಲಬ್ಧ ಸಮಸ್ತ ಸಂಪತ್ ).
ಇಷ್ಟೇ ಅಲ್ಲ, ತಮ್ಮನ್ನು ಆಶ್ರಯಿಸಿದ ಭಕ್ತ ಜನರಿಗೆ ಶ್ರೀ ಹರಿಯ ವರ ಬಲದಿಂದ, ಅನುಗ್ರಹದಿಂದ ನಾಲ್ಕು ವಿಧ ಪುರುಷಾರ್ಥಗಳನ್ನು ( ಮೋಕ್ಷವನ್ನು ) ಕೊಡಲೂ ಸಮರ್ಥರಾಗಿದ್ದಾರೆ.
ಅಗಮ್ಯ ಮಹಿಮರೂ, ಭಗವತಾಗ್ರಣಿಗಳೂ ಆದ್ದರಿಂದಲೇ, ಇಂದ್ರನ ಅಮರಾವತಿಯಲ್ಲಿ ದೇವತೆಗಳೂ ಸಹ ಶ್ರೀ ರಾಯರ ಅಮರ ಚರಿತ್ರೆಯ ಕೀರ್ತಿಯನ್ನು ಗಾನ ಮಾಡುತ್ತಿದ್ದಾರೆ ( ಕೀರ್ತಿಂ ವಿಶುದ್ಧಾಂ ಸರಲೋಕ ಗೀತಾಮ್ - (ಶ್ರೀಮದ್ಭಾಗವತಮ್ )
ಶ್ರೀ ಗುರು ಜಗನ್ನಾಥದಾಸರು...
ಏನು ಪುಣ್ಯವೋ ನಿನ್ನ ವಶದಲಿ ।
ಶ್ರೀನಿವಾಸನು ಸತತ ಯಿಪ್ಪನು ।
ನೀನೆ ಲೋಕತ್ರಯದಿ ಧನ್ಯನು ಮಾನ್ಯ ಸುರರಿಂದ ।।
೨. ಶ್ರೀ ನರಸಿಂಹದೇವರು.
ಶ್ರೀ ನೃಸಿಂಹನು ಕ್ಷೇತ್ರ ಮಂತ್ರಾಲಯದ ಕ್ಷೇತ್ರಪಾಲಕ. ಶ್ರೀ ರಾಯರಲ್ಲಿ ನೃಸಿಂಹ ರೂಪದಿಂದ ಶ್ರೀ ಹರಿಯು ಭಕ್ತರ ದುರಿತಗಳನ್ನು ನಾಶ ಮಾಡುತ್ತಾನೆ.
೩. ಶ್ರೀ ರಾಮ. ಶ್ರೀರಾಮನು ಶ್ರೀ ರಾಯರ ಆರಾಧ್ಯ ದೈವ. ಶ್ರೀ ರಾಘವೇಂದ್ರ ನಾಮ ಶ್ರೀ ರಾಮನ ದ್ವಾದಶ ನಾಮಗಳಲ್ಲಿ ಒಂದು. ಅಂತೆಯೇ ಶ್ರೀ ವಾಮನ ಅವತಾರ ಕಾಲದಲ್ಲಿಯೇ ಶ್ರೀ ವಾಮನ ರೂಪಿ ಶ್ರೀ ಹರಿಯು ಶ್ರೀ ರಾಯರಿಗೆ " ರಾಘವೇಂದ್ರ " ಎಂದು ನಾಮಕರಣ ಮಾಡಿದ್ದಾನೆ. ಹೆಚ್ಚಿನ ವಿಷಯಗಳಿಗೆ ವಾಮನ ಪುರಾಣ ನೋಡುವುದು!!
ಶ್ರೀ ರಾಘವನೇ ಉಪಾಸ್ಯ ಮೂರ್ತಿಯಾಗುಳ್ಳ ಅಂದರೆ ಶ್ರೀಮೂಲರಾಮೋಪಾಸಕರೇ ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮರು.
ಶ್ರೀ ಶಂಖುಕರ್ಣರೆಂಬ ಕರ್ಮಜ ದೇವತೆಯು ನಾಲ್ಕು ಅವತಾರಗಳನ್ನೆತ್ತಿ, ಶ್ರೀ ಹರಿಭಕ್ತಿ - ಭಾಗವತ ಧರ್ಮ - ಸಜ್ಜನೋದ್ಧಾರ - ತತ್ತ್ವ ಪ್ರಸಾರಗಳನ್ನು ನೆರವೇರಿಸಿ ಲೋಕ ವಿಖ್ಯಾತರಾದರೆಂದೂ, ಆ ಶ್ರೀ ಶಂಖುಕರ್ಣರ ನಾಲ್ಕು ಅವತಾರಗಳು ಕ್ರಮವಾಗಿ...
೧. ಕೃತ ಯುಗದಲ್ಲಿ " ಶ್ರೀ ಪ್ರಹ್ಲಾದರಾಜ " ರಾಗಿಯೂ;
೨. ದ್ವಾಪರದಲ್ಲಿ " ಶ್ರೀ ಬಾಹ್ಲೀಕರಾಜ " ರಾಗಿಯೂ;
ಮಹಾ ಭಾರತ ತಾತ್ಪರ್ಯ ನಿರ್ಣಯದಲ್ಲಿ ಶ್ರೀಮದಾಚಾರ್ಯರು...
ಬಾಹ್ಲೀಕೋರಾಜ ಸತ್ತಮಃ ಹಿರಣ್ಯಕಶಿಪೋ ಪುತ್ರ: ।
ಪ್ರಹ್ಲಾದೋ ಭಗವತ್ಪ್ರಿಯಃ ವಾಯೂನಾ ಚ ಸಮಾವಿಷ್ಟ: ।।
ಶ್ರೀ ಅಭಿನವ ಜನಾರ್ಧನವಿಠಲರು..
ಮೊದಲು ಹಿರಣ್ಯಕಶಿಪುನರಸಿಯ ।
ಉದರದಲಿ ಸಂಭವಿಸಿದ ।
ಅದರ ತರುವಾಯದಲಿ ಬಾಹ್ಲೀಕ ಅಧಿಪನೆಂದೆನಿಸಿ ।।
ಶ್ರೀ ರಮಾಪತಿವಿಠಲರು...
ಈತನೇ ಪ್ರಹ್ಲಾದನು ಆಹ್ಲಾದಕರನು ಶೂರ ಬಾಹ್ಲೀಕನೆನಿಸಿದ ।।
ಈ ಕಲಿಯುಗದಲ್ಲಿ.....
೩. ಶ್ರೀ ವ್ಯಾಸರಾಜ ಗುರುಸಾರ್ವಭೌಮರಾಗಿಯೂ; ೪ನೇ ಹಾಗೂ ಕೊನೆಯ ಅವತಾರವೇ ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮರು!!
ಶ್ರೀ ಗೋಪಾಲದಾಸರು...
ಪ್ರಥಮ ಪ್ರಹ್ಲಾದ ವ್ಯಾಸಮುನಿಯೇ ರಾಘವೇಂದ್ರ ಯತಿಯೇ ।।
ಶ್ರೀ ಜಗನ್ನಾಥದಾಸರು...
ವ್ಯಾಸರಾಯ ನೆನಿಸಿ ನೃಪನಾ ।
ಕ್ಲೇಶ ಕಳೆದವನೇ ಬಾರೋ ।
ಶ್ರೀ ಸುಧೀಂದ್ರರ ಕರ ಸಂಜಾತ ।
ವಾಸುದೇವಾರ್ಚಕನೇ ಬಾರೋ ।।
ಶ್ರೀ ಪ್ರಾಣೇಶದಾಸರು....
ರಾಯರ ನೋಡಿರೈ ಗುರುರಾಯರ ಪಾಡಿರೈ ।
ಸಿರಿ ಪ್ರಹ್ಲಾದ ವರ ಬಾಹ್ಲೀಕ ಗುರು ವ್ಯಾಸ ರಾಘವೇಂದ್ರ ।।
ಶ್ರೀ ರಾಮನು ಶ್ರೀ ರಾಯರಲ್ಲಿ ಶ್ರೀರಾಮ ರೂಪದಿಂದ ಶ್ರೀ ಹರಿಯು ನಿರ್ಗತಿಕರಿಗೆ ಗತಿಯನ್ನುಂಟು ಮಾಡುವನು.
೩. ಶ್ರೀ ಕೃಷ್ಣನು ಶ್ರೀ ರಾಯರಲ್ಲಿ ಶ್ರೀ ಕೃಷ್ಣ ರೂಪದಿಂದ ಶ್ರೀ ಹರಿಯು ಭಕ್ತರ ಸಕಲ ಮನೋಭೀಷ್ಟಗಳನ್ನು ಪೂರೈಸುತ್ತಾನೆ.
೪. " ಶ್ರೀ ಪಂಚಮುಖಿ ಪ್ರಾಣದೇವರು " . ಶ್ರೀ ರಾಯರು ಶ್ರೀ ವಾಯುದೇವರ ನಿತ್ಯಾವೇಶಯುಕ್ತರು.
ವಾಯುನಾ ಚ ಸಮಾವಿಷ್ಟ: ಮಹಾಬಲ ಸಮನ್ವಿತಃ ।।
೫. " ಕಾಮಧೇನು "
ಶ್ರೀ ಅಪ್ಪಣ್ಣಾಚಾರ್ಯರು...
ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ ।।
ಶ್ರೀ ಗುರು ಗೋಪಾಲದಾಸರು...
ಗುರುವೇ ಕಾಮಿತ ತರುವೇ ತ್ರಿಕಾಲಜ್ಞ ।
ವರಯೋಗಿ ಅನಘ ನಿ:ಸ್ಸಂಗ ।।
ಶ್ರೀ ಜಗನ್ನಾಥದಾಸರು...
ಕಾಮಧೇನುವಿನಂತೆ ಇಪ್ಪ ಗುರುವರನ । ಸಾರ್ವ ।
ಭೌಮ ಸುಧಿಯೀ೦ದ್ರ ಸುತ ರಾಘವೇಂದ್ರ ।।
ಶ್ರೀ ರಾಮಚಂದ್ರವಿಠಲರು...
ಸುರತರುವೆ ನಿರುತದಲಿ ಎನ್ನನು ।
ಪೊರೆಯೊ ಬಾರಿಂದೆರವು ಮಾಡದೆ ।
ಕರೆದು ಕೈ ಪಿಡಿಯೋ ಯೆನ್ನ ಶ್ರೀ ರಾಘವೇಂದ್ರ ।।
ಅಂಥಾ ಮಹಾ ಮಹಿಮರಾದ ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮರು ಸರ್ವರನ್ನೂ ಸರ್ವ ಕಾಲಗಳಲ್ಲಿಯೂ ರಕ್ಷಿಸಲೆಂದು ಪ್ರಾರ್ಥಿಸೋಣ....
ಲೇಕಕರಿಗೆ ನನ್ನ ಅನಂತ ನಮನಗಳು
******
..QUIZ on. Sri Raghavendra Tirtharu 🕉🔔
1. Which is the birth place of Rayaru
Tanjavore
Bhuvanagiri
Kumbakona
2. Which is the moola roopa of Rayaru?
Shanku Karna
Kumba Karna
Maha Karna
3. In which of Rayaru's previous Avatara Sripadarajaru was his Vidya Gurugalu?
Raghavendra Tirtharu
Bahleeka Rajaru
Vyasarajaru
4. Which was the janma gotra of Rayaru?
Vishwamitra
Vasista
Gautama
5. Who is the father of Rayaru?
Kanakachala Bhattaru
Timmanna Bhattaru
Madhyageha Bhattaru
6. What was the duty of Shanku Karna?
To sing praising songs;
To bring Flowers for Brahma's puja;
To dance to the tune of Gandarvaru
7. What made Shankukarna to delay in bringing the flowers?
He was not well;
He was attracted by Apsara Dances and was delayed;
He was attracted by the Sangeetha of Saraswathi and was deeply involved in the music, and got some delay
8. Which is the Kakshya of Shanku Karna?
19
16
15
9. With Whose anugraha Thimmanna Dampatigalu, got Venkatanatha?
Ahobala Narasimha
Tirupathi Timmappa
Sriranga Ranganatha
10. In which samvatsara Rayaru was born?
Vikruti
Virodhi
Manmatha
11. What is the birth day of Rayaru?
Phalguna Shudda Saptami
Vaishaka Shudda saptami
Shravana Bahula Bidige
12. Who gave him his higher education?
Vijayeendra Tirtharu
Sudheendra Tirtharu
Surendra Tirtharu
13. Who looked after him after his parent's death?
His brother in law
His father in law
His uncle
14. What was his wife's name?
Lakshmi
Saraswathi
Savitri
15. What is the name of the Veena used by Rayaru?
Mahati
Tumburu
Vagdevi
16. Who composed Raghavendra Vijaya?
Lakshminarayanacharya
Narayanacharya
Lakshmikantacharya
17. Which is the sanyasashrama taken day?
Vaishaka Shudda dwiteeya
Palguna Shudda dwiteeya
Phalguna Shudda triteeta
18. In which place he took sanyashrama?
Mantralaya
Tanjore
Kumbakona
19. Whom did Sudheendraru gave ashrama before Rayaru?
Yadavaryaru
Yadavendraru
Yadunandanaru
20. What is the ashrama nama of Rayaru?
Raghavendra Tirtharu
Gururajaru
Parimalarayaru
21. Who is his ashrama shishyaru?
Yadavendra Tirtharu
Yogeendra Tirtharu
Yogananda Tirtharu
22. In which samvatsara, he entered Vrundavana?
Vikruti
Virodhi
Sukruthi
23. Vyakyana for Upanishat by Rayaru is called as?____
Khandana
Mandana
Khandartha
24. Name of Tippani for Sudha Grantha?____
Nyayamrutha
Parimala
Chandrika
25. Who had done yagna at Manchale, long back?
Bahleeka Rajaru
Dharmarajaru
Prahladarajaru
26. For whom did Rayaru ordered the Vrundavana made for him to be reserved?
Varadendraru
Vadeendraru
Yogeendraru
27. What is the importance of the rock which Rayaru choosed for his Vrundavana?
Hanumanta Devaru had sat on that rock
Ramachandra Devaru had sat on that rock on his way to Seethanveshana
It had the sannidhana of Prahladarajaru
28. Which is the ankita of Rayaru?
Venu Gopala
dheera venu gopala
Dheera gopala
29. In Appannacharya's kruthi - Rayara Astottara - whose words are "Saakshee Hayaasyotrahi"?
Appannacharya
Rayaru
Hayagreeva Devaru
30. Who gave him the title "Mahabhashyacharya"?
Sudheendra Tirtharu
Vijayeendra Tirtharu
Appannacharya
31. Which is the vyakyana grantha written in his poorvashrama?
Anu Madhwa Vijaya
Tantradeepika
Parimala
32. In which place he wrote Tantradeepika, Parimala, Chandrika prakasha?
Pandarapura
Tirupathi
Udupi
*33. Whom did Rayaru predicted to write vyaakyana for his granthas?*0
Vadheendra Tirtharu
Sumatheendra Tirtharu
Sujayeendra Tirtharu
35. What are the works by Rayaru called?
Bhavabodha
Bhava Deepa
Bhava Ranjani
36. Which god is worshipped in Rayara Mutt as Moola Devaru?
Rama
Krishna
Vedavyasa
37. Who got the anugraha of Rayaru by just chanting the name of Raghavendra? during his period.
Venkanna
Appanna
Ramanna
38. Who composed the song "Yaake MookanaadeyO guruvE"
Jagannatha Dasaru
Vijaya Dasaru
Guru Jagannatha Dasaru
39. Who composed Gurugunastavana?
Varadendraru
Rayaru
Vadeendraru
40. How many adhyaayas does Raghavendra Vijaya has?_
10
12
16
41. Who gave sesame (sasuve) to Rayaru during Chaturmasya?
Kanakadasaru
Appannacharyaru
Bidarahalli Srinivasa thirtharu
##WhatsApp uplods
ರಾಘವೇಂದ್ರ ಸ್ವಾಮಿಗಳ ಕುರಿತು ಪ್ರಶ್ನೋತ್ತರಗಳು :
1. ರಾಯರ ಮೂಲ ರೂಪ ಯಾವುದು ?
ಉತ್ತರ : ಶಂಖುಕರ್ಣ
2. ರಾಯರ ಮೂಲರೂಪಕ್ಕೆ ಶಪಿಸಿದವರಾರು?
ಉತ್ತರ : ಬ್ರಹ್ಮ ದೇವರು
3. ಶಂಖುಕರ್ಣನಿಗೆ ಶಾಪ ನೀಡಲು ಕಾರಣ ?
ಉತ್ತರ : ದೇವರ ಪೂಜೆಗೆ ಪುಷ್ಪ ತಡವಾಗಿ ತಂದಿದ್ದು.
4. ಶಂಖುಕರ್ಣ ಯಾವ ದೇವತೆ ?
ಉತ್ತರ : ಕರ್ಮಜದೇವತೆ (19ನೇ ಕಕ್ಷ್ಯ)
5. ಮೊದಲನೇ ಅವತಾರ ಯಾವುದು ?
ಉತ್ತರ : ಪ್ರಹ್ಲಾದರಾಜರು
6. ಎರಡನೇ ಅವತಾರ ಯಾವುದು ?
ಉತ್ತರ : ಬ್ಲಾಹೀಕ ರಾಜರು
7. ಮೊದಲನೇ ಅವತಾರದಲ್ಲಿ ಪರಮಾತ್ಮನ ಯಾವ ರೂಪವ ಕಂಡರು ?
ಉತ್ತರ : ನರಸಿಂಹಾವತಾರ
8. ಎರಡನೇ ಅವತಾರದಲ್ಲಿ ವಾಯುದೇವರ ಯಾವ ರೂಪ ಕಂಡರು ?
ಉತ್ತರ : ಭೀಮಾವತಾರ
9. ಮೂರನೇ ಅವತಾರ ಯಾವುದು ?
ಉತ್ತರ : ವ್ಯಾಸರಾಯರು
10. ರಾಯರ ತಂದೆ ಯಾರು ?
ಉತ್ತರ : ವೀಣಾ ತಿಮ್ಮಣ್ಣ ಭಟ್ಟರು
11. ರಾಯರ ಜನ್ಮನಾಮವೇನು ?
ಉತ್ತರ : ವೆಂಕಟನಾಥ
12. ರಾಯರ ಗೋತ್ರ ಯಾವುದು ?
ಉತ್ತರ : ಗೌತಮ ಗೋತ್ರ
13. ರಾಯರ ತಂದೆತಾಯಿ ಯಾರ ಸೇವೆ ಮಾಡಿ ರಾಯರನ್ನು ಪಡೆದರು ?
ಉತ್ತರ : ತಿರುಪತಿ ತಿಮ್ಮಪ್ಪ
14. ರಾಯರ ಜನ್ಮಸ್ಥಳ ಯಾವುದು ?
ಉತ್ತರ : ಕುಂಭಕೋಣಂ ಹತ್ತಿರ ಭುವನಗಿರಿಯಲ್ಲಿ
15. ರಾಯರ ವೃಂದಾವನ ಎಲ್ಲಿದೆ ?
ಉತ್ತರ : ಮಂತ್ರಾಲಯದಲ್ಲಿ
16. ರಾಯರ ಮಠದ ಪ್ರಸ್ತುತ ಪೀಠಾಧಿಪತಿಗಳು ಯಾರು ?
ಉತ್ತರ : ಸುಬುದೇಂದ್ರ ತೀರ್ಥರು
17. ರಾಯರ ಜನ್ಮ ನಕ್ಷತ್ರ ಯಾವುದು ?
ಉತ್ತರ : ಮೃಗಶಿರ
18. ರಾಯರ ಜನ್ಮ ದಿನ ಎಂದು ?
ಉತ್ತರ : ಫಾಲ್ಗುಣ ಶುದ್ಧ ಸಪ್ತಮಿ
19. ರಾಯರ ಜನ್ಮ ಸಂವತ್ಸರ
ಉತ್ತರ : ಮನ್ಮಥ ನಾಮ ಸಂವತ್ಸರ 1595 AD ಶಾಲೀವಾಹನ ಶಕ 1518
20. ರಾಯರ ಅಕ್ಷರಾಭ್ಯಾಸವಾದ ವರ್ಷ ಯಾವುದು?
ಉತ್ತರ : ಕ್ರಿ.ಶಕ 1600 (ಶಾಲೀವಾಹನ ಶಕ 1520)
21. ರಾಯರ ಉಪನಯನವಾದ ವರ್ಷ ಯಾವುದು?
ಉತ್ತರ : 1606 AD (ಶಾಲೀವಾಹನ ಶಕ 1526)
22. ರಾಯರ ಆಶ್ರಮ ದಿನ ಎಂದು ?
ಉತ್ತರ : ಫಾಲ್ಗುಣ ಶುದ್ಧ ಬಿದಿಗೆ
23. ರಾಯರ ವೃಂದಾವನ ಪ್ರವೇಶದ ದಿನ ಎಂದು ?
ಉತ್ತರ : ಶ್ರಾವಣ ಬಹುಳ ಬಿದಿಗೆ ಶುಕ್ರವಾರ
24..ರಾಯರ ಗುರುಕುಲ ವಾಸ ಎಲ್ಲಿ ?
ಉತ್ತರ : ಕಾವೇರಿ ಪಟ್ಟನಂ
25. ರಾಯರ ಆಶ್ರಮ ಸ್ಥಳ ಎಲ್ಲಿ ?
ಉತ್ತರ : ತಂಜಾವೂರು
26 ರಾಯರು ಯಾವ ವಾದನದಲ್ಲಿ ಕುಶಲರಾಗಿದ್ದರು ?
ಉತ್ತರ : ವೀಣಾವಾದನದಲ್ಲಿ
27. ರಾಯರು ಉಪಯೋಗಿಸುತ್ತಿದ್ದ ವೀಣೆ ಹೆಸರು?
ಉತ್ತರ : ವಾಗ್ದೇವಿ
28 ರಾಯರ ಆರಂಭಿಕ ವಿದ್ಯಾ ಗುರುಗಳು ಯಾರು ?
ಉತ್ತರ : ರಾಯರ ಅಣ್ಣನಾದ ಗುರುರಾಜಾಚಾರ್ಯರಿಂದ ಹಾಗೂ ಭಾವನವರಾದ ಲಕ್ಷ್ಮೀನರಸಿಂಹಾಚಾರ್ಯರ ಬಳಿ
29. ರಾಯರ ಹೆಚ್ಚಿನ ವಿದ್ಯಾಭ್ಯಾಸ ಯಾರಲ್ಲಿ ?
ಉತ್ತರ : ವಿಜಯೀಂದ್ರತೀರ್ಥರ ಹಾಗೂ ಸುಧೀಂದ್ರ ತೀರ್ಥರ ಬಳಿ.
30. ರಾಯರ ಆಶ್ರಮ ಗುರುಗಳು ಯಾರು ?
ಉತ್ತರ : ಸುಧೀಂದ್ರ ತೀರ್ಥರು.
31. ರಾಯರ ಆಶ್ರಮ ನಾಮವೇನು ?
ಉತ್ತರ : ರಾಘವೇಂದ್ರ ತೀರ್ಥರು
32. ರಾಯರ ಆಶ್ರಮ ಶಿಷ್ಯರಾರು ?
ಉತ್ತರ : ಯೋಗೀಂದ್ರತೀರ್ಥರು
33. ರಾಯರ ಪರಿಮಳ ಗ್ರಂಥ ಯಾವುದರ ವ್ಯಾಖ್ಯಾನ ?
ಉತ್ತರ : ಶ್ರೀಮನ್ಯಾಯಸುಧಾ
34. ರಾಯರ ಕೃತಿ ರಾಮಾಯಣದ ಸಂಕ್ಷಿಪ್ತ ಗ್ರಂಥ ಯಾವುದು ?
ಉತ್ತರ : ರಾಮಚಾರಿತ್ರ್ಯ ಮಂಜರಿ
35. ಕೃಷ್ಣಾವತಾರದ ಬಗ್ಗೆ ರಚಿಸಿದ ಕೃತಿ ?
ಉತ್ತರ : ಕೃಷ್ಣ ಚಾರಿತ್ರ್ಯ ಮಂಜರಿ
36. ರಾಯರ ಗ್ರಂಥಗಳನ್ನು ಏನೆಂದು ಕರೆಯುತ್ತಾರೆ ?
ಉತ್ತರ : ಭಾವದೀಪ
37 ರಾಯರ ಅಂಕಿತವೇನು ?
ಉತ್ತರ : ಧೀರ ವೇಣುಗೋಪಾಲ.
38 ನದಿಗಳ ತಾರತಮ್ಯ ಬಗ್ಗೆ ರಾಯರ ಸ್ತೋತ್ರ ?
ಉತ್ತರ : ನದಿ ತಾರತಮ್ಯ ಸ್ತೋತ್ರ
39. ಉಪನಿಷತ್ತುಗಳಿಗೆ ರಾಯರು ರಚಿಸಿದ ವ್ಯಾಖ್ಯಾನವನ್ನು ಏನೆನ್ನುತ್ತಾರೆ ?
ಉತ್ತರ : ಖಂಡಾರ್ಥ
40. ರಾಯರು ಪೂರ್ವಾಶ್ರಮದಲ್ಲಿ ರಚಿಸಿದ ಗ್ರಂಥ ?
ಉತ್ತರ : ಪ್ರಮೇಯ ನವಮಾಲಿಕಾ
(ಅಣುಮಧ್ವವಿಜಯ)
41. ರಾಯರ ಅಷ್ಟೋತ್ತರ ರಚಿಸಿದವರಾರು ?
ಉತ್ತರ : ಅಪ್ಪಣ್ಣಾಚಾರ್ಯರು.
42. ಮಂತ್ರಾಲಯ ಗ್ರಾಮದೇವತೆ ಯಾರು?
ಉತ್ತರ : ಮಂಚಾಲಮ್ಳ
43. "ಅಣುಭಾಷ್ಯ" ಗ್ರಂಥಕ್ಕೆ ರಾಯರ ವ್ಯಾಖ್ಯಾನ ಯಾವುದು ?
ಉತ್ತರ : ತತ್ವಮಂಜರಿ
44. ರಾಯರ ಅಷ್ಟೋತ್ತರಕ್ಕೆ ರಾಯರು ಕಡೆಯಲ್ಲಿ ಹೇಳಿದ ವಾಕ್ಯ ಯಾವುದು ?
ಉತ್ತರ : ಸಾಕ್ಷಿ ಹಯಾಸ್ಯೋತ್ರಹಿ
45. ಮಂಚಾಲೆ ಯಾವ ಕ್ಷೇತ್ರವೆಂದು ಪ್ರಸಿದ್ಧಿ ?
ಉತ್ತರ : ಪ್ರಹ್ಲಾದರಾಜರು ತಪಸ್ಸು ಮಾಡಿದ ಸ್ಥಳ
46. ರಾಯರು ರಚಿಸಿದ ಮಹಾಭಾರತ ಸಂಬಂಧಿ ಗ್ರಂಥ ಯಾವುದು?
ಉತ್ತರ : ಭಾವಸಂಗ್ರಹ:
47.ವ್ಯಾಸರಾಜರ ತಾತ್ಪರ್ಯ ಚಂದ್ರಿಕಾ ಗ್ರಂಥದ ವ್ಯಾಖ್ಯಾನ ಯಾವುದು ?
ಉತ್ತರ : ಚಂದ್ರಿಕಾ ಪ್ರಕಾಶ
48. ರಾಯರು ಚಾತುರ್ಮಾಸ್ಯ ವ್ರತದಲ್ಲಿ ಉಪಯೋಗಿಸದ ಯಾವ ಪದಾರ್ಥವನ್ನು ಕನಕದಾಸರ ಅವತಾರದ ರೂಪದಿಂದ ಸ್ವೀಕರಿಸಿದರು ?
ಉತ್ತರ : ಸಾಸಿವೆ
49. ರಾಯರಿಗೆ ಚಾತುರ್ಮಾಸ್ಯ ವ್ರತದಲ್ಲಿ ಸ್ವೀಕರಿಸದ ಸಾಸಿವೆಯನ್ನು ನೀಡಿದವರಾರು ?
ಉತ್ತರ : ಕನಕದಾಸರು
50. ರಾಘವೇಂದ್ರ ಸ್ವಾಮಿಗಳ ಉತ್ತರಾಧಿಕಾರಿಗಳು ಯಾರು?
ಉತ್ತರ ; ಶ್ರೀ ಯೋಗೀಂದ್ರ ತೀರ್ಥರು
ಸಂಗ್ರಹ : ನರಹರಿ ಸುಮಧ್ವ
***
No comments:
Post a Comment