Friday, 31 December 2021

dheerendra teertharu 1785 matha rayara mutt yati 25 phalguna shukla trayodashi ಧೀರೇಂದ್ರ ತೀರ್ಥರು






info from sumadhwaseva.com--->

Shri gurubyO namaha…
Today, phAlguNa shulka trayOdashi, is the ArAdhane of shri dhIrEndra tIrtharu of rAyara maTa. 


pUrvAshrama name: shri jayarAmAchArya

Father: shri vAdIndra tIrtharu
Ashrama jEshTaru: shri varadENdra tIrtharu and shri bhuvanEndra tIrtharu

vidyA shishyaru: shri bhuvanEndra tIrtharu
Aradhana: phAlguNa shukla trayOdashi

sanyAsa: 1775
brindAvana: 1785 hosaritti, near Haveri 
river: varada banks 

ಧರಣೀಮಂಡಲೇ ಖ್ಯಾತಂ ಧೈರ್ಯಾದಿಗುಣಬೃಂಹಿತಂ |
ಧಿಕೃತಾಶೇಷವಾದೀಭಂ ಧೀರಸಿಂಹಗುರುಂ ಭಜೇ |
        धरणीमंडले ख्यातं धैर्यादिगुणबृंहितं ।

        धिकृताशेषवादीभं धीरसिंहगुरुं भजे ।

dharanImandalEkyaataM dhairyaadiguNabruMhitaM |

dikRutaashEShavaadIbhaM dhIrasiMhaguruM bhajE |


Sri Dheerendra Tirtha was a great pandit.  He is the poorvashrama son of Sri Vadeendra Tirtharu.  Initially Sri Jayaramacharya was not interested in sanyasa.  He was touring all over the country with the main intention of dharma prachara, paata, pravachana, etc.  Sri Vadheendra Tirtha used to tell Sri Jayaramacharya was repeatedly telling him to have vairagya through sanyasa.    Sri Vasudhendra Tirtharu who took ashrama from Sri Vadheendra Tirtha knew the mind of his guru that Sri Jayaramacharya shall become a sanyasi, he wanted to give ashrama to him.  But during his vrundavana pravesha time, Sri Jayaramacharya was on tour and he could not be informed as such, he was not given the ashrama.

Sri Vasudendra Tirtharu gave ashrama to Sri Varadendra Tirtharu in 1761.  During Sri Varadendra Tirtharu’s tour in Pune, Sri Jayaramacharya was also there alongwith the guru and he had officially informed the public that Sri Jayaramacharya will be his uttaradhikari.
Unfortunately, even during Sri Varadendra Tirtha’s vrundavana pravesha time also, Sri Jayaramacharya was not available near him, he was on tour.  So, he initiated sanyasa to his poorvashrama brother Sri Lakshminarayanacharya and named him as Sri Bhuvanendra Tirtha, and told him to do the adhyayana under Sri Jayaramacharya.  Sri Varadendra Tirtharu had told Sri Bhuvanendra Tirtharu that his gurugalu Sri Vadheendra Tirtharu wanted Sri Dheerendra Tirtharu to become a sanyasi.
How he took ashrama – When he returned back, Sri Bhuvanendra Tirtharu was already given the sanyasa.  Sri Jayaramacharya, who was instructed by Sri Vadheendra Tirtharu to take sanyasa, didn’t liked to disturb the parampare of Rayara Mutt, so he directly went to Kumbakona and took sanyasa in front of Sri Vijayeendra Tirtharu.
By this time, Sri Bhuvanendra Tirtharu, sent his shishyas all around in search of Jayaramacharya, and he came to know that Jayaramacharya had become Sri Dheerendra Thirtha in front of Sri Vijayendra Tirtharu at Kumbakonam.  Sri Bhuvanendra Tirtharu went to Dheerendra Tirtharu and requested him to take charge of the Mantralaya Matha peethadhipathva, which he did only for a few days, doing the Ramachandra Devara pooja and entrusted the peetadhipathva to Bhuvanendra Tirtharu only.
Sri Dheerendra Tirtharu taught Sri Bhuvanendra Tirtharu and after some time he went to Ritti, which was at that time a Lingayat province, and settled there.  Sri Jagannatha Dasaru also visited him frequently to Ritti and Sri Satyabodha Tirtharu also used to join him regularly and were very close.
It is said that Sri Jagannatha Dasaru composed Harikathamruthasara at Ritti in the sannidhana of Sri Dheerendra Tirtharu only.
Sri Dheerendra Tirtharu had the blessings of Rayaru and he had blessed many during his period and even after his vrundavana pravesha at Ritti on the banks of the river Varada.    There we can find a very spacious Mantralaya Branch premises.
Granthas written –
  1. NarayanOpanishat Vyakyana
  2. Yajnikopanishat Vyakyana
  3. Vishayavakya sangraha:
  4. Manyusooktha Vyakyana
  5. AmbhruNIsooktha Vyakyana
  6. GuruguNastavana Vyakyana
  7. Balitta sooktha Vyakyana
  8. Sri Raghavendra Stotra Vyakyana
  9. Karakavaadaartha:


********

read more here-->


*******

info from FB madhwanet--->
JayarAmAchArya was not ordinary. His scholarship was excellent. He had acquired versatility in all Shastras, besides being pUrvAshrama son of shri vAdIndra tIrtha. Appreciating such excellence of his scholarship, his father shri vAdIndra tIrtha was confident that if he ever became the head of the maTa, the maTa would achieve great prosperity and fame. But Jayaramacharya had no inclination towards sanyAsa. He was interested in debates, literary works, conducting classes and holding discourses. He had written commentary on Gurugunastavana, his father’s composition. With a view to kindle his inclination towards renunciation, shri vAdIndra tIrtha had expressed to him, “These will not put you onto the path of salvation, renunciation in the right sense counts very much”. 

As vasudEndra tIrtha, on whom vAdIndra tIrtha had bestowed sanyAsa, knew the mind of his guru, he had decided that Jayaramacharya only should succeed him. But it was not possible for him to give sanyAsa to Jayaramacharya as the latter was unavailable towards his end days. So, he ordained his pUrvAshrama brother as varadEndra tIrtha.

During the last days of Varadendra tIrtha also, Jayaramacharya was unavailable at the maTa. Therefore, under such compelling circumstances, Swamiji had to bestow sanyAsa on his pUrvAshrama younger brother, Lakshminarayanacharya, as bhuvanEndra tIrtha. Swamiji advised, “You should study the Shastras under Jayaramacharya only. Treat him with utmost respect, this enhances the honour of the maTa”.
After shri vAradEndra tIrtha departed from his mortal abode, Jayaramacharya recollected what his father had advised. When he went to Kumbhakonam for a darshan of VijayIndra tIrtha’s Brindavan, he felt that he was urged to take sanyAsa. Accordingly he took sanyAsa before the Brindavana. When bhuvanEndra tIrtha, who adorned the pITa was planning to send for Jayaramacharya, he was given to understand that Jayaramacharya had already taken sanyAsa and had become dhIrEndra tIrtha. He hurried to dhIrEndra tIrthA’s place and entrusted mahAsamsthAna to him. Shri dhIrEndra tIrtha after worshipping mUla rAma for some time returned the idol to bhuvanEndra tIrtha. It was DhIrEndra tIrtha under whom bhuvanEndratIrtha studied the Shastras completely. Though dhIrEndra tIrtha did not aspire to be the pontiff of the maTa, wherever he went, the regular pUja and other rituals of the maTa were marked by the same ardour and glory. Once the swamiji came to village Ritti in Haveri Taluk. The majority of people there were Lingayats. Nevertheless, owing to his ascetic powers, the swamiji was greatly revered. As that village, on the banks of the river Varada, was found conducive, the swamiji settled down there itself for some time. Shri JagannAtha dasaru also came there. Shri sathyabodha tIrtharu of uttarAdi maTa was also staying in the vicinity.
Shri dhIrEndra tIrtha then set off on a journey and reached Maharashtra. At Satara, palace officials greatly honoured the swamiji there. The swamiji had unprecedented welcome at Pune. The Peshwa who had great respect for swamiji’s scholarship in his pUrvAshrama extended a very warm welcome, played host at the palace, gave many presents and gifted lands and estates to him. The swamiji performed the pUja and offered Hasthodhaka to the Brindavan of shri varadEndra tIrtha whom he regarded as his guru. After staying there for some period, he returned to Ritti travelling through MantrAlaya where he had the darshan of Sri Gururaja.
After sometime, swamiji’s end neared and it was at Ritti where he reached his heavenly abode. As bhuvanEndra tIrtha was on a distant tour, it was not possible to subject the mortal remains of the swamiji to ‘Kalakarshana’ and install his Brindavana. However, seven years after the swamiji was laid to rest, a devotee of his had a dream to exhume his mortal remains. Accordingly he exhumed swamiji’s mortal remains for ‘Kalakarshana’. However, what people saw was a miracle. The sandal paste, Akshatha and Tulsi garland which he had worn had remained as fresh as they were seven years back. It looked so fresh that his mortal remains were decorated just then. This spectacle astonished all the devotees. As ordained by the swamiji in his dream, his mortal remains were taken from the centre of the village to the banks of the river Varada and his brindavana was installed there itself. Sri Gururaja has assured that with his amsha coming to exist in the Brindavan of shri dhIrEndra tIrtha, he would fulfil the wishes of the devotees. There is no doubt that the swamiji with the absolute blessings of Sri Gururaja is a greatly honoured soul.
His works:

1. Commentary on guruguNastavana

2. kArakavada
3. Commentary on Narayanopanishad
4. Commentary on Manyusooktha in favour of Lord Narasimha
5. Vishayavakya Sangraha

Shri dhIrEndra tIrtha guruvantargata, rAghavEndra tIrtha guruvantargata, bhAratiramaNa mukhyaprANAntargata, sItApatE shri mUla rAma dEvara pAdaravindakke gOvinda, gOvinda…

Shri krishNArpaNamastu…

*******

Sri Dhirendratirtha is known to have authored a number of works. He entered Brindavana at Hosaritti on Phalguna, Sukla Trayodasi (1785 A.D.)


-following is from Dr.V.R.Panchamuki


Sri Dhirendratirtha is the eighth pontiff from Sri Raghavendratirtha in the lineage of Sri Padmanabhatirtha. In his purvashrama, his name was Sri Jayaramacharya and he is the greatgrandson of Sri Lakshminarayanacharya, who is the son of Sri Raghavendratirtha in his purvashrama. The lineage runs as follows.


Sri Raghavendratirtha
(Sri Venkatanathacharaya in Purvashrama)
           |
Sri Lakshmi Narayanacharya
       |
Sri Purushottamacharya
       |
Sri Srinivasacharya
(SriVadindratirtha)
       |
Sri Jayaramacharya
(Sri Dhirendratirtha)


Sri Raghavendratirtha, consecrated Sri Venkannacharya, grandson of Sri Gururajacharya (who is the elder brother of Sri Raghavendratirtha in his purvashrama) at the Peetham and named him as Sri Yogindra Tirtha (1671 - 1688 A.D.). Thereafter, three brothers of Sri Yogindratirtha, Sri Vasudevacharya, Sri Muddu Venkannacharya and Sri Vijayeendracharya came to the peetham in that order, with the respective names of Sri Surindratirtha (1688 - 1692 A.D.), Sri Sumatindratirtha (1692 - 1725 A.D.) and Sri Upendratirtha (1725 - 1728 A.D). It is well known that Sri Sumatindratirtha was the pontif for 33 Years (1692- 1725 A.D.) and was famous for his erudite scholarship and contributions in the form of various works such as Bhavaratnakosha - commentary on Prameya Dipika which is the Tika of Jayatirtha on the Gita Bhashya of Sri Madhwacharya.


After Sri Upendratirtha, Sri Srinivasacharya greatgrandson of Sri Raghavendratirtha came to the peetham in the name of Sri Vadindratirtha, After Sri Vadindratirtha, his purvashrama cousin brothers, Sri Purushottamacharya, and Sri Balaramacharya came to the peetham, in that order, in the respective names of Sri Vasudhendratirtha and Sri Varadendratirtha. After Sri Varadendratirtha we have Sri Dhirendratirtha coming to the peetham of Maha Samsthan. Thus Dhirendratirtha belongs to the direct lineage of Sri Raghawendratirtha both in the purvashrama and also in peethaparampara. Sri Dhirendratirtha was an erudite scholar in Nyaya, Vyakarana and Vedanta. In his purvashrama (Sri Jayaramacharya) he conducted the philosophical debate with Prabhune Ramasastry of Pune when Sri Varadendratirtha was engaged in the dispute - discourse (Vada) with the latter. It is authentically documented that Sri Ramasastry accepted his defeat and surrendered his whole palatial house and property, in recognition of the victory of Sri Varadendratirtha. Sri Dhirendratirtha is known to have authored a number of works.Unfortunately only some ofthese are available today. His works


viShayavAkyArthasaMgrahaH
kArakavAdaH
nArayaNOpaniShadvyAkhyA
puruShasUktavyAkhyA
manyusUktavyAkhyA
lakShmIsUktavyAkhyA
aMbraNIsuktavyAkhyA
guruguNastavanaTIkA
etc.,
stand testimony to the erudite scholarship of this great saint philosopher. Sri Dhirendratirtha was known for his renunciation and detatchment from wordly affairs. After performing puja of Mula Rama in the samsthana for some time, he relinquished the responsibility of the samsthana in favour of his disciple Sri Bhuvanendratirtha, and resigned himselffor doing tapasya at Hosartitti on the banks of the Varada river. He entered Brindavana at Hosaritti on Phalguna, Sukla Trayodasi (1785 A.D.). Those who perform seva at the sannidhi of Sri Dhirendratirtha Brindavan, receive the blessings and grant of boons just in the same manner as with the seva done at the sannidhi ofSri Raghawendratirtha at Sri Mantralayam.


-from History of Dvaita School of Philosophy


He was the pUrvashrama son of Vadindra and a very distinguished scholar in shastras. He is said to have participated in the debate between Varadendra and PrabhuNe Shastri. Later he became Sannyasin; but he did not succeed to the PiTa. He is the author of five works :


1. ac.on Vadindra's Gurugunastava which has been printed,
2.kAraka vAda and
glosses on
3.nArayaNOpanishad
4. manyusUkta
5.vishayavAkya-Sangraha


He passed away at Ritti near Haveri.
**************

ಫಾಲ್ಗುಣ ಶುದ್ಧ ತ್ರಯೋದಶಿ- ಶ್ರೀಮಧ್ವಭಗವತ್ಪಾದರ- ಶ್ರೀರಾಘವೇಂದ್ರಸ್ವಾಮಿಗಳ ಪರಮಪವಿತ್ರವಾದ ಪರಂಪರೆಯನ್ನು ಬೆಳಗಿದ ಶ್ರೀಧೀರೇಂದ್ರತೀರ್ಥಶ್ರೀಪಾದಂಗಳವರ ಆರಾಧನೆ. ಹೊಸರಿತ್ತಿಯಲ್ಲಿ ನೆಲೆ ನಿಂತು ಆಶ್ರಿತರನ್ನು ಸಲಹುತ್ತಿರುವ ಶ್ರೀಧೀರೇಂದ್ರತೀರ್ಥರು ಮಾಧ್ವವಾಙ್ಮಯಕ್ಕೆ ನೀಡಿದ ಕೊಡುಗೆಯೂ ಅನನ್ಯ. ನಾರಾಯಣೋಪನಿಷತ್ ವ್ಯಾಖ್ಯಾನಮ್, ಯಾಜ್ಞಿಕೋಪನಿಷತ್ ವ್ಯಾಖ್ಯಾನಮ್, ಮನ್ಯುಸೂಕ್ತ ವ್ಯಾಖ್ಯಾನಮ್, ಅಂಭ್ರಿಣೀಸೂಕ್ತ ವ್ಯಾಖ್ಯಾನಮ್, ಬಳಿತ್ಥಾಸೂಕ್ತ ವ್ಯಾಖ್ಯಾನಮ್, ಗುರುಗುಣಸ್ತವನ ವ್ಯಾಖ್ಯಾನಮ್, ವಿಷಯವಾಕ್ಯ ಸಂಗ್ರಹ: ( ಬ್ರಹ್ಮಸೂತ್ರಾಧಿಕರಣ ವಿಷಯ ವಾಕ್ಯಾರ್ಥಸಂಗ್ರಹ:) ಶ್ರೀರಾಘವೇಂದ್ರಸೋತ್ರವ್ಯಾಖ್ಯಾನ, ಕಾರಕವಾದಾರ್ಥ: ಮೊದಲಾದ ಮೌಲಿಕ ಕೃತಿಗಳನ್ನು ರಚಿಸಿ ವಿದ್ಯಾಪರಂಪರೆಯನ್ನು ಬೆಳಗಿದ ಶ್ರೀಧೀರೇಂದ್ರತೀರ್ಥರು ವೈಯಕ್ತಿಕವಾಗಿ ನನಗೆ ಮಾಡಿದ ಅನುಗ್ರಹವನ್ನು ದಾಖಲಿಸುವುದು ಗುರುಗಳ ಕಾರುಣ್ಯವನ್ನು ಸ್ಮರಿಸುವ ಒಂದು ಪ್ರಯತ್ನವೆಂದು ಭಾವಿಸುತ್ತೇನೆ.

 ಕೆಲವು ವರ್ಷಗಳ ಹಿಂದೆ ಸೋದೆಯಿಂದ ಬೆಂಗಳೂರಿಗೆ ಮರಳುವ ಸಂದರ್ಭದಲ್ಲಿ ರಿತ್ತಿ ಕ್ಷೇತ್ರದಲ್ಲಿ ವಿರಾಜಮಾನರಾದ ಶ್ರೀ ಧೀರೇಂದ್ರರ ದರ್ಶನ ಪಡೆಯುವ ಉದ್ದೇಶದಿಂದ ನನ್ನ ತಂದೆ, ಸೋದರಮಾವ, ಪತ್ನಿ, ಮಗಳೊಂದಿಗೆ ರಿತ್ತಿಗೆ ಹೋಗಿದ್ದೆ. ಮಧ್ಯಾಹ್ನ ರಿತ್ತಿಯಲ್ಲಿ ತೀರ್ಥಪ್ರಸಾದ ಸ್ವೀಕರಿಸುವ ಉದ್ದೇಶದಿಂದ, ಆಲ್ಲಿದ್ದ ಅಧಿಕಾರಿಗಳೊಂದಿಗೆ ಪರಿಚಯವಿದ್ದ ನನ್ನ ಅಕ್ಕನ ಮಗನಿಗೆ ಅಧಿಕಾರಿಗಳಿಗೆ ಫೋನ್ ಮಾಡಿ ತಿಳಿಸುವಂತೆ ಹೇಳಿದ್ದೆ. ನಾವು ರಿತ್ತಿಗೆ ಹೋಗಿ ವಿಚಾರಿಸಿದ ಸಂದರ್ಭದಲ್ಲಿ ಪರಿಚಯವಿದ್ದ ಅಧಿಕಾರಿ ಇರಲಿಲ್ಲ- ಆದರೆ ಅಲ್ಲಿದ್ದ ಆರ್ಚಕರು, ಸಿಬ್ಬಂದಿ ಯಾವ ಅಧಿಕಾರಿಗೆ ತಿಳಿಸಬೇಕೆಂದು ನನ್ನ ಅಕ್ಕನ ಮಗನಿಗೆ ತಿಳಿಸಿದ್ದೆನೊ ಆ  ಅಧಿಕಾರಿ ಫೋನ್ ಮಾಡಿ ಬೆಂಗಳೂರಿನ ಐದಾರು ಜನಕ್ಕೆ ತೀರ್ಥಪ್ರಸಾದಕ್ಕೆ ವ್ಯವಸ್ಥೆ ಮಾಡುವಂತೆ ತಿಳಿಸಿದ್ದಾರೆ ಎಂದು ಶ್ರೀಗುರುರಾಜರ, ಶ್ರೀ ಧೀರೇಂದ್ರರ ಸನ್ನಿಧಿಯಲ್ಲಿ ತೀರ್ಥಪ್ರಸಾದಕ್ಕೆ ವ್ಯವಸ್ಥೆ ಮಾಡಿದರು. ನಾನು ಹಾವೇರಿಯಲ್ಲಿ, ಬೆಂಗಳೂರಿನಲ್ಲಿದ್ದ ನನ್ನ ಅಕ್ಕನ ಮಗನಿಗೆ ಫೋನ್ ಮಾಡಿ ತೀರ್ಥಪ್ರಸಾದವಾಯಿತು. ಅವನಿಗೆ ಪರಿಚಯವಿದ್ದ ಅಧಿಕಾರಿಗೆ ಕೃತಜ್ಞತೆ ತಿಳಿಸು ಎಂದು ಹೇಳಿದಾಗ, ಅವನು "ಅಯ್ಯೋ ನಾನು ಕೆಲಸದ ಕಾರಣದಿಂದ  ವ್ಯವಸ್ಥಾಪಕರಿಗೆ ತಿಳಿಸುವುದು ಮರೆತು ಹೋಗಿಬಿಟ್ಟೆ" ಎಂದ- ಒಂದು ಕ್ಷಣ ರೋಮಾಂಚನ- ನಾವಲ್ಲದೇ ಬೇರೆ ಯಾರೂ ಅಂದು ರಿತ್ತಿಗೆ ಆ ಸಮಯದಲ್ಲಿ ಹೋಗಿರಲಿಲ್ಲ, ಐದು ಜನರಿಗೆ ತೀರ್ಥಪ್ರಸಾದಕ್ಕೆ ವ್ಯವಸ್ಥೆ ಮಾಡು ಎಂದು ಫೋನ್ ಮಾಡುವಂತೆ ಆ ಅಧಿಕಾರಿಗೆ ತಿಳಿಸಿದವರು ಯಾರು? ನನ್ನ ಅಕ್ಕನ ಮಗ ತಾನು ಹೇಳೇ ಇಲ್ಲವೆಂದು ಹೇಳುತ್ತಿದ್ದಾನೆ. ಗುರುರಾಜರ, ಧೀರೇಂದ್ರರ ಅನುಗ್ರಹಕ್ಕೆ ಪಾತ್ರರಾದ ಆ ಕ್ಷಣವನ್ನು ನೆನೆದರೆ ಮನ ತುಂಬಿ ಬರುತ್ತದೆ.
**************

ಶ್ರೀ ಧೀರೇಂದ್ರ ತೀರ್ಥರ ಚರಿತ್ರೆ
🌺🌺🌺🌺🌺🌺🌺
ಗೌಡನು ತನ್ನ ಧರ್ಮದ ಅಹಂಕಾರದಲ್ಲಿ ಗುರುಗಳು ಕಾಲರಾಗಿ ಆರೇಳು ವರ್ಷಗಳಾದವು. ಅವರ ದೇಹ ಕೊಳೆತಿರುತ್ತದೆ. ಎಂದು ವಾದಿಸಿ ಕೊನೆಗೆ ಒಂದು ಸವಾಲು ಹಾಕಿದನು.  ಒಂದು ವೇಳೆ ಗುರುಗಳ ದೇಹ ಮೊದಲಿನಂತಿದ್ದರೆ ನಾನು ಮಠಕ್ಕೆ ಸ್ಥಳ ಕೊಡುವೆ. ಇಲ್ಲದಿದ್ದರೆ ನೀವು ಮತಾಂತರ ಆಗಬೇಕು ಎಂದನು.  ವಿಪ್ರ ಸಮುದಾಯಕ್ಕೆಬಿಸಿ ತುಪ್ಪ ದಂತಾಯಿತು. ಗುರುಗಳ ಮೇಲೆ ನಂಬಿಕೆ ವಿಶ್ವಾಸ ಇಟ್ಟು ಸರಿ ಎಂದು ಮುಂದಿನ ಕಾರ್ಯಕ್ಕೆ ಅಣಿಯಾದರು.  ಗೌಡನನ್ನು ಮೊದಲು ಮಾಡಿ ಎಲ್ಲರಿಗೂ ಆಶ್ಚರ್ಯ ಕಾದು ಕುಳಿತಿತ್ತು. ಗುರುಗಳ ಮೈಮೇಲಿನ ಗಂಧ ಅಕ್ಷತೆ ಒಣಗಿರಲಿಲ್ಲ.  ತುಳಸೀ ಹಾರ ಹಸಿರಾಗಿ ಇಟ್ಟು. ದೇಹ ವಿಕಾರ ಆಗಿರಲಿಲ್ಲ.  ಗೌಡ ತನ್ನ ಮಾತಿಗೆ ಮರ್ಯಾದೆ ಕೊಟ್ಟು ಗುರುಗಳ ವೃಂದಾವನಕ್ಕೆ ಜಾಗ ಕೊಟ್ಟನು.  ಅಲ್ಲದೆ ತನ್ನಲ್ಲಿದ್ದ ಬ್ರಾಹ್ಮಣ ದ್ವೇಷ ಮರೆತು ಮಿತ್ರನಂತಾದನು.  ಇಂದಿಗೂ ಹೊಸರಿತ್ತಿ ಗ್ರಾಮದಲ್ಲಿ ಗುರುಗಳ ವಿಷಯದಲ್ಲಿ ವೀರಶೈವ ಜನಾಂಗದವರು ಒಂದಾಗಿ ಬ್ರಾಹ್ಮಣರ ಸಂಗಡ ಕೂಡಿಕೊಂಡು ಆರಾಧನೆ ಆಚರಿಸುತ್ತಾ ಬಂದಿದ್ದಾರೆ. 

ಧಿರೇಂದ್ರರ ವೃಂದಾವನ ಆದಮೇಲೆ ಎಷ್ಟೋ ಪವಾಡಗಳು ಆಗಿವೆ.  ಭಕ್ತರ ಅಭೀಷ್ಟೆಗಳನ್ನು ನೆರವೇರಿಸಿದ್ದಾರೆ.  ಇದರಿಂದ ಧಿರೇಂದ್ರರ ಮಹಿಮೆ ಬೆಳೆಯುತ್ತಾ ಬಂದಿದೆ. ಶ್ರೀ ಧಿರೇಂದ್ರರು ಶ್ರೀ ರಾಘವೇಂದ್ರರ ಪರಮ ಭಕ್ತರು. ಇಂದಿಗೂ ಹೊಸರಿತ್ತಿಯಲ್ಲಿ ರಾಘವೇಂದ್ರ ಸ್ತೋತ್ರ ಪಠಿಸುತ್ತ ಎಲ್ಲ ಪೂಜೆ ನಡೆಯುತ್ತವೆ.
ಅಂದಾಜು ಮೂವತ್ತು ನಲವತ್ತು ವರ್ಷ ಗಳ ಹಿಂದಿನ ಸಂಗತಿ ಇರಬಹುದು.  ರಿತ್ತಿಯಲ್ಲಿ ಶ್ರೀ ಬಾಗಲಕೋಟಿ ಶೀನಪ್ಪ ಎಂಬ ಭಕ್ತರು ಇದ್ದರು.  ಊರಿಗೆ ನಾಯಕರಂತೆಯೂ ಇದ್ದರು.  ಒಂದುಸಲ ಬದರಿ ಯಾತ್ರೆಗೆ ಹೋದಾಗ ಅವರಿಗೆ ಆಯಾಸದಿಂದ ಜ್ವರದ ಭಾದೆ ಆಯಿತು.  ಔಷಧೋಪಚಾರ ನಡೆಯಿತು.  ಗುಣಮುಖರಾಗಲಿಲ್ಲ.  ಏನು ಮಾಡಬೇಕೆಂಬುದು ತಿಳಿಯಲಿಲ್ಲಾ. ಗುರುಗಳನ್ನು ನೆನೆದು ಮಲಗಿದರು. ಸ್ವಪ್ನದಲ್ಲಿ ಗುರುಗಳು ಕಾಣಿಸಿಕೊಂಡು ನಿನ್ನ ಮಕ್ಕಳು ನನ್ನ ಮಠಕ್ಕೆ ಬಂದಿಲ್ಲ ಬರಲು ಹೇಳು ನಿನಗೆ ಗುಣವಾಗುವದು ಎಂದು ಹೇಳಿದಂತಾಯಿತು.  ಬೆಳಿಗ್ಗೆ ಎದ್ದು ಮೊದಲು ದೂರವಾಣಿ ಮಾಡಿ ಮಕ್ಕಳಿಗೆ ವಿಷಯ ತಿಳಿಸಿದರು.  ಮಕ್ಕಳು ಮಠಕ್ಕೆ ಬಂದು ಸೇವೆ ಮಾಡಿದರು. ಇಟ್ಟ ಬದರಿಯಲ್ಲಿ ತಂದೆ ಗುಣಮುಖರಾಗಿ ಮನೆಗೆ ಬಂದರು. ಎಲ್ಲರಿಗೂ ಗುರುಗಳ ಬಗ್ಗೆ ಭಕ್ತಿ ನಂಬಿಕೆ ಇನ್ನು ಹೆಚ್ಚು ಬೆಳೆದು ಮಹಿಮೆ ಪ್ರಚಾರವಾಯಿತು.   
ಗುರುಗಳ ಅಂತರ್ಗತ ಭಾ. ಮು. ಅಂ. ಹಯಗ್ರೀವ ದೇವರು ಸಕಲರಿಗೂ ಆಯುರಾರೋಗ್ಯ ಕೊಡಲೆಂದು ಪ್ರಾರ್ಥನೆ ಮಾಡಿಕೊಳ್ಳುತ್ತೇನೆ.
*******


" ಶ್ರೀ ಧೀರೇಂದ್ರ - 1 "
" ಶ್ರೀ ರಾಯರ ಉಭಯ ವಂಶಾಬ್ಧಿ ಚಂದ್ರಮರೂ, ತಪೋನಿಧಿಗಳೂ; ಅಗಮ್ಯ ಮಹಿಮರೂ ಶ್ರೀ ಧೀರೇಂದ್ರತೀರ್ಥರು "
" ದಿನಾಂಕ : 26.03.2021 ಶುಕ್ರವಾರ ಶ್ರೀ ಧೀರೇಂದ್ರತೀರ್ಥರ ಆರಾಧನಾ ಮಹೋತ್ಸವ "
ರಚನೆ : 
ಕೀರ್ತಿಶೇಷ ಪೂಜ್ಯ ಶ್ರೀ ರಾಜಗೋಪಾಲಾಚಾರ್ಯರು., ಮಂತ್ರಾಲಯ - ಮೈಸೂರು 
ರಾಗ : ಮೋಹನ ತಾಳ : ಆದಿ 
ನೀರೇ ನೀ ನೋಡಿದ್ಯಾ ।
ನೀರಜ ಗಂಧೆ ನೀರೇ -
ನೀ ಕೇಳಿದ್ಯಾ ।। ಪಲ್ಲವಿ ।।
ಧಾರುಣಿಯೊಳ್ವರದಾ ।
ತೀರ ರಿತ್ತಿಯೊಳಿರ್ದಾ ।
ಧೀರೇಂದ್ರರ ಚರುತ್ಕ್ರುತಿ ।
ಚಾರು ಚಮತ್ಕೃತಿ ।। ಅ ಪ ।।
ಅಸ್ಮದಂತೀ ದೇಹವು -
ಶಾಶ್ವತವಲ್ಲ ।
ನಶ್ವರವಾಗಿಹುದೂ -
ಪ್ರಾಂತಕೆ ಕ್ರಿಮಿ । ವಿ ।
ಡ್ಮಸ್ಮಿ ಸಂಜ್ಞಿತ-
ವಾಗೋದೂ ಅರದರೇನು ।।
ಸುಸ್ಮಿತನನು ಸಸ್ವಲ್ಪ -
ಕಶ್ಮಲಾಗದ । ರವಿ ।
ರಶ್ಮಿ ಯಂತೋಳೇ ಯುವ ।
ವಿಸ್ಮಯ ಮಾತುಗಳು ।। ಚರಣ ।।
ಇನ್ನು ದಾರಿಂದಲೀ -
ಸಾಧ್ಯವಾಗದ ।
ಮನ್ಯು ಸೂಕ್ತ -
ಮುಂತಾದಾ ನಾರಾಯಣ ।
ಪನ್ನ ರುಕ್ವ್ಯಾಖ್ಯಾನವಾ -
ಮಾಡೀ ಮುದದಿ ।।
ಮನ್ಯು ರಹಿತರಾಗಿ -
ಸಂನ್ಯಾಸಾ ಧರಿಶೀದಾ ।
ಧನ್ಯರು ಧರೆಯೊಳು -
ಮಾನ್ಯ ಮಹಿಮೆಗಳು ।। ಚರಣ ।।
ಪಾಲಕ ರಾಜಗೋಪಾಲನ -
ದಯದಿಂದಾ ।
ಏಳು ವರುಷ ಭೂಮಿಯಲೀ -
ವಾಸವ ಮಾಡಿ ।
ಬಾಳಿದಾನಂದದಲಿ -
ಮೇಲಕೆ ತೆಗೆಯೇ ।।
ಫಾಲಲಾಕ್ಷತಾ ಗಂಧಾ -
ಮೇಯಿಕಟ್ಟಿನ ಶಾಠಿ ।
ಮೂಲಗುಂದದಿ ತುಳಸೀ -
ಮಾಲೆ ಹ್ಯಾಗಿಹುದೆಂದು ।। ಚರಣ ।। 
ಶ್ರೀ ರಾಘವೇಂದ್ರತೀರ್ಥರ ಪೂರ್ವಾಶ್ರಮ ವಂಶೋದ್ಭವರೂ - ಮಹಾ ಸಂಸ್ಥಾನಾಧಿಪತಿಗಳೂ - ಚತುಃಶಾಸ್ತ್ರ ಪಂಡಿತರೂ - ಅನೇಕ ಸದ್ಗ್ರಂಥಗಳನ್ನು ರಚಿಸಿ ಪಾಠ ಪ್ರವಚನ, -  ಶ್ರೀ ಮನ್ಮೂಲರಾಮಾರ್ಚನಗಳಿಂದ ವಿಖ್ಯಾತರೂ - ವರದಾ ನದೀ ತೀರದಲ್ಲಿರುವ ಪರಮ ಪವಿತ್ರವಾದ ಶ್ರೀ ಕ್ಷೇತ್ರ ರಿತ್ತಿಯ ಮೂಲ ವೃಂದಾವನದಲ್ಲಿ ವಿರಾಜಮಾನರಾದವರು ಶ್ರೀ ಧೀರೇಂದ್ರತೀರ್ಥರು. 
ಮಹಾ ತಪಸ್ವಿಗಳಾದ ಮುನಿಶ್ರೇಷ್ಠರೂ - ಸಾಂದ್ರವಾದ ಮಂಗಳಕರ ಗುಣಗಳಿಂದ ರಾರಾಜಿಸುತ್ತಿರುವ - ಜ್ಞಾನಿ ನಾಯಕರಾದ - ಮಹಾತ್ಮರಿಂದ ಸೇವಿತರಾದ ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮರ ಉಭಯ ವಂಶಾಬ್ಧಿ ಚಂದ್ರಮರಾದ ಶ್ರೀ ವಾದೀಂದ್ರತೀರ್ಥರ ಪೂರ್ವಾಶ್ರಮ ಸತ್ಪುತ್ರರಾದ - ಭೂಸುರರಿಗೆ ಪ್ರಭುಗಳಾದ - ಪೂನಾ - ಸಾತಾರ ಮೊದಲಾದ ಭೂಪಾಲರಿಂದ ವಂದ್ಯರಾದ - ಅಸದೃಶ ಮಹಿಮೆಗಳಿಂದ ಬೆಳಗುವ ಸತ್ಕೀರ್ತಿ ಚಂದ್ರಮರಾದವರು ಶ್ರೀ ರಿತ್ತಿಯ ಮುನಿಪುಂಗವರು ಶ್ರೀ ಧೀರೇಂದ್ರತೀರ್ಥರು. 
ಶ್ರೀ ಧೀರೇಂದ್ರತೀರ್ಥರು ಪ್ರೌಢವಾದ ನ್ಯಾಯ ಶಾಸ್ತ್ರದಲ್ಲಿ ಕಣಾದಮುನಿ - ದುರ್ವಾದಿಗಳನ್ನು ಗೆಲ್ಲುವುದರಲ್ಲಿ ಆಚಾರ್ಯ ಮಧ್ವರು -  ಸಂನ್ಯಾಸದಲ್ಲಿ ಸನಕಮುನಿ -  ಅತಿಶಯ ಕೌಶಲ ಮತ್ತು 64 ಕಲೆಗಳಲ್ಲಿ ಬೃಹಸ್ಪತ್ಯಾಚಾರ್ಯರು - ಉತ್ಕ್ರುಷ್ಠವಾದ ಧೈರ್ಯ ಮತ್ತು ಸ್ಥೈರ್ಯ  ಮೊದಲಾದ ಗುಣಗಳಲ್ಲಿ ಮೇರುಪರ್ವತ - ದಾನ ಮಾಡುವುದರಲ್ಲಿ ಕಲ್ಪವೃಕ್ಷದಂತೆ ಇದ್ದಾರೆಂದೂ ಉತ್ತರಾದಿಮಠದ ಶ್ರೀ ಸಾತಾರಿ ಆಚಾರ್ಯರು ತಮ್ನಿಂದ ರಚಿತವಾದ " ಶ್ರೀ ಧೀರೇಂದ್ರಾಷ್ಟಕ " ದಲ್ಲಿ ವಿವರಿಸಿದ್ದಾರೆ. 
ಶ್ರೀ ಮಹಾಲಕ್ಷ್ಮೀಪತಿಯಾದ ಶ್ರೀಮನ್ನಾರಾಯಣನಂತೆ ಜ್ಞಾನ - ಭಕ್ತಿ - ವೈರಾಗ್ಯ ಪ್ರದಾತರೂ - ಶ್ರೀ ಚತುರ್ಮುಖ ಬ್ರಹ್ಮದೇವರಂತೆ ವಾಣೀವಿಲಾಸಾಸ್ಪದರೂ - ಶ್ರೀ ಮಹಾರುದ್ರದೇವರಂತೆ ಶಾಸ್ತ್ರ ಕೋವಿದ ಸಮೂಹವೆಂಬ ಪ್ರಮಥಗಣವನ್ನು ನಿರ್ಮಿಸಿ ಸಲಹುವವರೂ - ಶ್ರೀ ಸೂರ್ಯದೇವನಂತೆ ಸತ್ಪುರುಷರೆಂಬ ಚಕ್ರವಾಕ ಪಕ್ಷಿಗಳಿಗೆ ಆನಂದದಾಯಕರೂ - ಸುಧೆಯನ್ನುಣಿಸಿದ ಶ್ರೀ ದೇವೇಂದ್ರನಂತೆ ನ್ಯಾಯಸುಧೆಯನ್ನುಣಿಸಿದವರೂ - ಚಂದ್ರನಂತೆ ಷೋಡಷ ಕಲಾ ಪೂರ್ಣರೂ ಆದ  ಶ್ರೀ ಶ್ರೀ ಧೀರೇಂದ್ರತೀರ್ಥರನ್ನು ಅಭೀಷ್ಟಗಳನ್ನು ಕೊಡಲೆಂದು ಪ್ರಾರ್ಥಿಸಿದ್ದಾರೆ. 
ಇಂತಹಾ ಯತಿವರೇಣ್ಯರ ಉಪನ್ಯಾಸ ವೈಖರಿ - ಗ್ರಂಥ ರಚನಾ ಕೌಶಲ - ಪರವಾದಿ ಜಯ - ಮಹಾ ಸಂಸ್ಥಾನದ ನಿರ್ವಾಹಣೆ - ಸಂಸ್ಥಾನ ಪೂಜೆ - ಸಂಚಾರ ಇತ್ಯಾದಿಗಳನ್ನು ಮನೋಜ್ಞವಾಗಿ ವರ್ಣಿಸಿ ಇಂಥಾ ಗುರುಗಳನ್ನು ಮನೋಭೀಷ್ಟಗಳನ್ನು ಪೂರೈಸುವಂತೆ ಪ್ರಾರ್ಥಿಸಿದ್ದಾರೆ.
******

" ಶ್ರೀ ಧೀರೇಂದ್ರ - 2 "
ಶ್ರೀ ಧೀರೇಂದ್ರತೀರ್ಥರ ಅಗಣಿತ ಮಹಿಮೆಯನ್ನು ಶ್ರೀ ಅಹ್ಲಾದಾಂಶ ಶ್ರೀ ಗುರು ಜಗನ್ನಾಥದಾಸರು ಪರಮ ಅದ್ಭುತವಾಗಿ ವರ್ಣಿಸಿದ್ದಾರೆ. 
ತಾಳ : ರೇಗುಪ್ತಿ   ತಾಳ : ಆದಿ 
ವರದಾ ತೀರದಿ ಶೋಭಿಪ । ಯತಿ ।
ವರನ್ಯಾರೇ ಪೇಳಮ್ಮಯ್ಯಾ ।। ಪಲ್ಲವಿ ।।
ತ್ವರದಿ ಭಕುತರ ದುರಿತವ ತರಿದತಿ ।
ತ್ವರದಿ ಪಾಲಿಪಾ ಧೀರೇಂದ್ರ ಕಾಣಮ್ಮಾ  ।। ಅ. ಪ ।।
ಸುಂದರ ತಮ ವೃಂದಾವನ ಶುಭತರ ।
ಮಂದಿರಗತನ್ಯಾರೇ ಪೇಳಮ್ಮಯ್ಯಾ ।
ನಂದದಿ ಮಹಜನ ಸಂದಣಿ ಮಧ್ಯದಿ ।
ಚಂದಿರ ತೆರದಿಹನ್ಯಾರೇ ಪೇಳಮ್ಮಯ್ಯಾ ।।
ಇಂದಿರಪತಿ ಗುಣ ವೃಂದವ ಭಜಿಸುತ ।
ನಂದದಿ ಶೋಭಿಪನ್ಯಾರೇ ಪೇಳಮ್ಮಯ್ಯಾ ।
ಅಂಧ ಬದಿರರ ವೃಂದಗಳಿಗಿಷ್ಟವ ।
ನಿಂದು ನೀಡುವ ವಾದೀಂದ್ರರ ತನುಜ ।। ಚರಣ ।।
ಮೂಢ ಮತಿಯನು ಓಡಿಸಿ ಜನರಿಗೆ ।
ಗಾಢ ಭಕುತಿಯನು ನೋಡಮ್ಮಯ್ಯಾ ।
ಬೇಡುವ ಭಕುತರು ಮಾಡುವ ಸೇವೆಗೆ ।
ನೀಡುವ ವರಗಳನ್ಯಾರೇ ನೋಡಮ್ಮಯ್ಯಾ ।।
ಪಾಡುವ ದಾಸರು ಬೇಡುವ ಇಷ್ಟವ ।
ನೀಡುವದಿನ್ಯಾರೇ ನೋಡಮ್ಮಯ್ಯಾ ।
ರೂಢಿಯೊಳಗೆ ಇಷ್ಟ ನೀಡುವ ವಿಷಯದಿ ।
ಜೋಡುಗಾಣೆನಾ ನೋಡಮ್ಮಯ್ಯಾ  ।। ಚರಣ ।।
ಭೂತ ಪೀಡೆ ಮಹ ಪ್ರೇತ ಪಿಶಾಚಿಯ ।
ವ್ರಾತಗಳು ಬಲು ನೋಡಮ್ಮಯ್ಯಾ ।
ಭೀತಿ ಬಡುತ ಮಹ ಆತುರದಲಿ ಈ ।
ಭೂತಳ ಬಿಡುತಿಹವೋ ನೋಡಮ್ಮಯ್ಯಾ ।
ಯಾತುಧಾನಗಣ ಈತನ ನಾಮದ ।। 
ಭೀತಿಗೆ ಪೋಗುತಿಹದು ನೋಡಮ್ಮಯ್ಯಾ ।
ತಾತನ ತೆರದಲಿ ಈತನು ನಿಜಪದ ।
ದೂತರ ಪೊರೆವನು ನೋಡಮ್ಮಯ್ಯಾ ।
ದಾತ ಗುರು ಜಗನ್ನಾಥವಿಠ್ಠಲಗೆ ।
ಪ್ರೀತ ಜನರೊಳು ಪ್ರೀತನೀತನಮ್ಮಾ ।। ಚರಣ ।।
ಹೆಸರು : 
ವಿದ್ವಾನ್ ಶ್ರೀ ಜಯರಾಮಾಚಾರ್ಯರು 
ತಂದೆ : 
ವಿದ್ವಾನ್ ಶ್ರೀ ಶ್ರೀನಿವಾಸಾಚಾರ್ಯರು ( ಶ್ರೀ ವಾದೀಂದ್ರತೀರ್ಥರು )
ಆಶ್ರಮ ಗುರುಗಳು :  
ಶ್ರೀ ವಸುಧೇಂದ್ರತೀರ್ಥರು 
ಪ್ರಮಾಣ :
" ಶ್ರೀ ಧೀರೇಂದ್ರತೀರ್ಥ ವಿರಚಿತ ಶ್ರೀ ಮಹಾನಾರಾಯಣೋಪನಿಷತ್ ವ್ಯಾಖ್ಯಾನ ".... 
ಶ್ರೀ ವಾದೀಂದ್ರ ಗುರು೦ಸ್ತ್ರಯೀ 
ಸಕಲಾಸವ್ಚಾಸ್ತ್ರಾರ್ಥ ಸಂವರ್ಣನ 
ಪ್ರಖ್ಯಾತ ಪ್ರತಿಭಾನ್ ಪ್ರಣಮ್ಯ 
ವಸುಧೇಂದ್ರಾರ್ಯಶ್ಚ ತಚ್ಛಿಶ್ಯಕಾನ್ ।
ಧೀರೇಂದ್ರೋ ಯತಿರಾದರೇಣ 
ಕೃಪಯಾ ತೇಷಾ೦ ಲಸತ್ತತ್ವವಿದ್ 
ರೀತ್ಯಾ ವ್ಯಾಕರವಾಣ್ಯಥೋಪನಿಷದಂ 
ನಾರಾಯಣೀಯಾಮಹಮ್ ।।
ವಿಶೇಷ ವಿಚಾರ..  
ಕ್ರಿ ಶ 1760 ರಲ್ಲಿ ಶ್ರೀ ವಸುಧೇಂದ್ರತೀರ್ಥರಿಂದ ತುರ್ಯಾಶ್ರಮ ಮತ್ತು ನಾಮಕರಣ ಮಾಡಿಸಿಕೊಂಡು - ಶ್ರೀ ವರದೇಂದ್ರತೀರ್ಥರಿಂದ ಉತ್ತರಾಧಿಕಾರಿತ್ವವನ್ನು ಪಡೆದು ಸಂಸ್ಥಾನವನ್ನು ಆಳಿದರು. 
ವೇದಾಂತ ಸಾಮ್ರಾಜ್ಯಾಧಿಕಾರ : 
ಆಷಾಢ ಶುದ್ಧ ಪಂಚಮೀಯಿಂದ 
ಫಾಲ್ಗುಣ ಶುದ್ಧ ತ್ರಯೋದಶೀ ( 1785 )
ಕಾಲ : ಕ್ರಿ ಶ 1760 - 1785 
ಉತ್ತರಾಧಿಕಾರಿಗಳು : 
ಶ್ರೀ ಭುವನೇಂದ್ರತೀರ್ಥರು 
ಸಮಕಾಲೀನ ಯತಿಗಳು : 
ಶ್ರೀ ಸತ್ಯಬೋಧತೀರ್ಥರು
ಸಮಕಾಲೀನ ಹರಿದಾಸರು : 
ಶ್ರೀ ಗುರು - ಶ್ರೀ ವರದ - ಶ್ರೀ ತಂದೆ ಗೋಪಾಲದಾಸರುಗಳು; ಶ್ರೀ ಜಗನ್ನಾಥದಾಸರು; ಶ್ರೀ ಪ್ರಾಣೇಶದಾಸರು; ಶ್ರೀ ಶ್ರೀದವಿಠಲರು; ಶ್ರೀ ಶ್ರೀಶವಿಠಲರು; ಶ್ರೀ ಗುರು ಶ್ರೀಶವಿಠಲರು; ಶ್ರೀ ಮನೋಹರವಿಠಲರು ಮೊದಲಾದವರು!!
*******
" ಶ್ರೀ ಧೀರೇಂದ್ರ - 3 "
ಗ್ರಂಥಗಳು :
1. ನಾರಾಯಣೋಪನಿಷತ್ ವ್ಯಾಖ್ಯಾನಮ್
2. ಯಾಜ್ಞಿಕೋಪನಿಷತ್ ವ್ಯಾಖ್ಯಾನಮ್
3. ವಿಷಯ ವಾಕ್ಯ ಸಂಗ್ರಹಃ 
( ಬ್ರಹ್ಮಸೂತ್ರಾಧಿಕರಣ ವಿಷಯ ವಾಕ್ಯಾರ್ಥ ಸಂಗ್ರಹಃ ) 
4. ಮನ್ಯುಸೂಕ್ತವ್ಯಾಖ್ಯಾನಮ್ 
( ಶ್ರೀ ನೃಸಿಂಹದೇವರ ಪರವಾದ ವ್ಯಾಖ್ಯಾನ )
5. ಶ್ರೀ ಪುರುಷ ಸೂಕ್ತ ವ್ಯಾಖ್ಯಾನಮ್
6. ಶ್ರೀ ಸೂಕ್ತ ವ್ಯಾಖ್ಯಾನಮ್
7. ಅಂಭ್ರಣೀ ಸೂಕ್ತ ವ್ಯಾಖ್ಯಾನಮ್  
8. ಬಳಿತ್ಥಾ ಸೂಕ್ತ ವ್ಯಾಖ್ಯಾನಮ್
9. ಕಾರಕವಾದಾರ್ಥಃ 
10. ಶ್ರೀ ರಾಘವೇಂದ್ರಸ್ತೋತ್ರ ವ್ಯಾಖ್ಯಾನಮ್
11. ಗುರುಗುಣಸ್ತವನ ವ್ಯಾಖ್ಯಾನಮ್ 
12. ಶ್ರೀಮನ್ನ್ಯಾಯಸುಧಾ ವ್ಯಾಖ್ಯಾನಮ್
13. ಸ್ವಾಮಿ ಭಕ್ತ್ಯರ್ಥ ನಿರ್ಣಯಃ 
14. ಐತರೇಯೋಪನಿಷತ್ ವ್ಯಾಖ್ಯಾನಮ್ 
ವೃಂದಾವನ : 
ಶ್ರೀ ಕ್ಷೇತ್ರ ಹೊಸರಿತ್ತಿ 
ಆರಾಧನೆ : 
ಫಾಲ್ಗುಣ ಶುದ್ಧ ತ್ರಯೋದಶೀ 
ಶ್ರೀ ಭುವನೇಂದ್ರತೀರ್ಥರು... 
ಧರಣೀ ಮಂಡಲೇಖ್ಯಾತಂ 
ಧೈರ್ಯಾದಿ ಗುಣ ಬೃಂಹಿತಮ್ ।
ಧಿಕ್ಕೃತಾಶೇಷವಾದೀಭಂ 
ಧೀರಸಿಂಹ ಗುರುಂಭಜೇ ।।
ಭೂಮಂಡಲದಲ್ಲಿ ವಿಖ್ಯಾತರಾದ - ಧೈರ್ಯಸ್ಥೈರ್ಯೌದಾರ್ಯ ಗಾಂಭೀರ್ಯಾದಿ ಗುಣಗಳಿಂದ ವಿಜೃಂಭಿತರಾದ - ಪ್ರತಿವಾದಿಗಳೆಂಬ ಗಜಗಳನ್ನು ಧಿಕ್ಕರಿಸುವ ಸಿಂಹದಂತಿರುವ ಶ್ರೀ ಧೀರೇಂದ್ರತೀರ್ಥರೆಂಬ ಗುರುವರೇಣ್ಯರನ್ನು ನಾನು ಭಕ್ತಿ ಪೂರ್ವಕವಾಗಿ ನಮಸ್ಕರಿಸುತ್ತೇನೆ!! 
ಆಚಾರ್ಯ ನಾಗರಾಜು ಹಾವೇರಿ " ವೆಂಕಟನಾಥ "  ಮುದ್ರಿಕೆಯಲ್ಲಿ.... 
ವರದಾ ನದಿ ತೀರದೀ ಶೋಭಿಪ -
ಯತಿವರನ್ಯಾರೇ ಪೇಳಮ್ಮಾ ।
ಗುರು ಸುಧೀಂದ್ರ ಸುತ ಗುರು-
ರಾಯರ ಸನ್ನಿಧಾನ ಪಾತ್ರಾ ।
ಧೀರೇಂದ್ರ ಯತಿ -
ನೋಡಮ್ಮಯ್ಯಾ ।।
ನಾರಾಯಣೋಪನಿಷ-
ದ್ವ್ಯಾಖ್ಯಾನ ಮನ್ಯುಸೂಕ್ತ ।
ಗುರುಗುಣಸತ್ವವನ -
ವಿಷಯವಾಕ್ಯ ಸಂಗ್ರಹ ।
ಗುರುಸ್ತೋತ್ರ ಅಂಭ್ರಣೀ-
ಸೂಕ್ತಕೆ ವ್ಯಾಖ್ಯಾನ ।
ವಿರಚಿಸಿದ ಧೀರೇಂದ್ರ -
ವಸುಧೇಂದ್ರ ಪುತ್ರ ಕಾಣಮ್ಮಾ ।।
ಧರಣಿಯಲಿ ಗುರುರಾಘವೇಂದ್ರ -
ವಂಶದಿ ಜನಿಸಿ । ಭೂ ।
ಸುರರ ವಂದ್ಯ ವಾದೀಂದ್ರ -
ಪೌತ್ರ ಕಾಣಮ್ಮಾ ।
ಗುರು ಜಯಾರ್ಯರ -
ಸುಧಾಕ್ಕೆ ವ್ಯಾಖ್ಯಾನ ರಚಿಸಿ ।
ಧರಣಿಯಲ್ಲಿ ಖ್ಯಾತರಾದ ಧೀರೇಂದ್ರ -
ಯತೀಂದ್ರನು ನಮ್ಮ -
ಧೀರ  ಶ್ರೀ ವೆಂಕಟನಾಥನ 
ದೂತನು ಕಾಣಮ್ಮ ।।
by acharya nagaraju haveri, ಗುರು ವಿಜಯ ಪ್ರತಿಷ್ಠಾನ
*********
ಧೀರೇಂದ್ರ ತೀರ್ಥರ ಚರಿತ್ರೆ

ಉದ್ದಾಮ ಪಂಡಿತರು ಪುಣೆಯ  ಪೇಶ್ವೇಯ ಮಂತ್ರಿಯ ಮನೆಯನ್ನೇ ತಮ್ಮದಾಗಿಸಿಕೊಂಡ ಮತ್ತು ಶ್ರೀ ವರದೇಂದ್ರ ಶ್ರೀಗಳವರ ಬಲಗೈ ಬಂಟ ರಾಗಿದ್ದ ಮಹಾನುಭಾವರೇ ಇಂದಿನ ಕಥಾನಾಯಕರು.  ಶ್ರೀ ಧೀರೇಂದ್ರ ತೀರ್ಥರು.  
ಇವರ ಪೂರ್ವಾಶ್ರಮದ ಹೆಸರು ಜಯರಾಮಾಚಾರ್ಯ. ವರದೇಂದ್ರರು ಮತ್ತು ತಮ್ಮ ತೀ. ರೂಪರಲ್ಲಿ  ನ್ಯಾಯಶಾಸ್ತ್ರ, ಮೀಮಾಂಸೆ, ವ್ಯಾಕರಣ, ತತ್ವ, ಸುಧಾ ಓದಿ ಉದ್ದಾಮ ಪಂಡಿತರೆನಿಸಿದ್ದರು.  ವಿದ್ಯೆಯ ಸಂಗಡ ವೈರಾಗ್ಯವು ಇತ್ತು.  ಪಾಠ ಪ್ರವಚನಗಳಲ್ಲಿ ಮೊದಲಿನಿಂದಲೂ ಆಸಕ್ತಿ ಇತ್ತು.  ವರದೇಂದ್ರರಿಗೆ ಮೇಲಿಂದಮೇಲೆ ಸನ್ಯಾಸ ದೀಕ್ಷೆಗಾಗಿ ಕೇಳುತ್ತಿದ್ದರು.  ಆದರೆ ವರದೇಂದ್ರರು ಒಪ್ಪಿದ್ದಿಲ್ಲ.
ಒಂದುಸಲ ವರದೇಂದ್ರರು ಪುಣೆಯಲ್ಲಿ ವಾಸವಾಗಿದ್ದಾಗ ಅಲ್ಲಿಯ ಪೇಶ್ವೇಯ  ಮಂತ್ರಿ ರಾಮಾಶಾಸ್ತ್ರಿ ಎಂಬವನು ಸ್ವತಃ ಗುರುಗಳ ಸಂಗಡ ವಾಕ್ಯಾರ್ಥಕ್ಕೆ ಇಳಿದನು.  ಅಲ್ಲದೇ  ತನ್ನ ಅರಮನೆಯನ್ನೇ ಪಣಕ್ಕೆ ಇಟ್ಟನು.  ವಾದದಲ್ಲಿ ಅವನು ಗೆಲ್ಲುವ ಸ್ಥಿತಿಗೆ ಬಂದ.  ಗುರುಗಳಿಗೆ ದಿಕ್ಕು ತೋಚದಂತಾಯಿತು.  ಆಗ ಪಕ್ಕದಲ್ಲಿ ಕುಳಿತ ಜಯರಾಮಚಾರ್ಯರು ಗುಗಳಿಂದ ಅಪ್ಪಣೆ ಪಡೆದು ಶಾಸ್ತ್ರಿಯನ್ನು ನಿರುತ್ತರನನ್ನಾಗಿ ಮಾಡಿ ಅವನ ಅರಮನೆಯನ್ನು ಗುರುಗಳಿಗೆ ಸಮರ್ಪಿಸಿದರು.  ಹೀಗೆ ಮಧ್ವ ಸಿದ್ಧಾಂತ ಸ್ಥಾಪಿಸಿದರು.  ಇಷ್ಟಾದರೂ ಗುರುಗಳು ಸನ್ಯಾಸ ಕೊಡಲಿಲ್ಲ.  ಆಚಾರ್ಯರು ತಮಗೆ ಪೀಠಾಧಿಪತ್ಯ ಬೇಡ ಎಂದರೂ ಒಪ್ಪಿಗೆ ಸಿಗಲಿಲ್ಲ.  ಆಚಾರ್ಯರು ಧೈರ್ಯದಿಂದ ಕುಂಭಕೋಣಕ್ಕೆ ಬಂದು ಶ್ರೀ  ವಿಜಯೆಂದ್ರರ ವೃಂದಾವನದ ಮುಂದೆ ಕಾಯಿ ಇಟ್ಟು ಸನ್ಯಾಸ ಸ್ವೀಕಾರ ಮಾಡಿದರು.  ಈ ಒಂದು ಧೈರ್ಯ ದಿಂದ ಅವರನ್ನು ಅನುಯಾಯಿಗಳು ಧೀರೇಂದ್ರ ತೀರ್ಥರೆಂದು ಕರೆದರು.  ರಾಯರ ಮಠದ ಬಿಡಿ ಸನ್ಯಾಸಿಗಳಾದರು.  ಏಳು ವರ್ಷ ಸನ್ಯಾಸಿಗಳಾಗಿ ಜೀವನ ನಡೆಸಿದರು.  ಎಷ್ಟೋ ಜನರಿಗೆ ಪಾಠಹೇಳಿ ಮಧ್ವ ಮತ ಪ್ರಚಾರ ಮಾಡಿದರು.  
ಈಗಿನ ಹಾವೇರಿ ಜಿಲ್ಲೆಯ ಹೊಸರಿತ್ತಿ ಗ್ರಾಮದಲ್ಲಿಫಾಲ್ಗುಣ ಶುದ್ಧ ತ್ರಯೋದಶಿ ದಿನ ಹರಿಪಾದ ಸೇರಿದರು.  ಬಿಡಿ ಸನ್ಯಾಸಿ ಆಗಿದ್ದರಿಂದ ಅವರ ವೃಂದಾವನ ಮಾಡಲು ಯಾರು ಮುಂದೆ ಬರಲಿಲ್ಲ. ಏಳು ಎಂಟು  ವರ್ಷಗಳ ನಂತರ ಧಿರೇಂದ್ರರು ಒಬ್ಬ ಬ್ರಾಹ್ಮಣನ ಕನಸಿನಲ್ಲಿ ಗೌಡರ ಮನೆಯ ತಿಪ್ಪೆಯಲ್ಲಿ ತಮ್ಮ ದೇಹವಿದೆ, ಅದನ್ನು ಹೊರತೆಗೆದು ವೃಂದಾವನ ಮಾಡಲು ಹೇಳಿದರು.  ಬ್ರಾಹ್ಮಣ ಸಮಾಜದವರು ಗೌಡನಿಗೆ ನಿಜ ಸಂಗತಿ ತಿಳಿಸಿದರು. ಆಗಿನ ಕಾಲದ ಸಮಾಜದಲ್ಲಿ ವೀರಶೈವರು ಬ್ರಾಹ್ಮಣ ವಿರೋಧಿ ಭಾವನೆ ಹೊಂದಿದ್ದರು. ಊರ ಗೌಡನು ವೀರಶೈವ ಆಗಿದ್ದನು.
ಗೌಡನು ತನ್ನ ಧರ್ಮದ ಅಹಂಕಾರದಲ್ಲಿ ಗುರುಗಳು ಕಾಲರಾಗಿ ಆರೇಳು ವರ್ಷಗಳಾದವು. ಅವರ ದೇಹ ಕೊಳೆತಿರುತ್ತದೆ. ಎಂದು ವಾದಿಸಿ ಕೊನೆಗೆ ಒಂದು ಸವಾಲು ಹಾಕಿದನು.  ಒಂದು ವೇಳೆ ಗುರುಗಳ ದೇಹ ಮೊದಲಿನಂತಿದ್ದರೆ ನಾನು ಮಠಕ್ಕೆ ಸ್ಥಳ ಕೊಡುವೆ. ಇಲ್ಲದಿದ್ದರೆ ನೀವು ಮತಾಂತರ ಆಗಬೇಕು ಎಂದನು.  ವಿಪ್ರ ಸಮುದಾಯಕ್ಕೆ ಬಿಸಿ ತುಪ್ಪ ದಂತಾಯಿತು. ಗುರುಗಳ ಮೇಲೆ ನಂಬಿಕೆ ವಿಶ್ವಾಸ ಇಟ್ಟು ಸರಿ ಎಂದು ಮುಂದಿನ ಕಾರ್ಯಕ್ಕೆ ಅಣಿಯಾದರು.  ಗೌಡನನ್ನು ಮೊದಲು ಮಾಡಿ ಎಲ್ಲರಿಗೂ ಆಶ್ಚರ್ಯ ಕಾದು ಕುಳಿತಿತ್ತು. ಗುರುಗಳ ಮೈಮೇಲಿನ ಗಂಧ ಅಕ್ಷತೆ ಒಣಗಿರಲಿಲ್ಲ.  ತುಳಸೀ ಹಾರ ಹಸಿರಾಗಿ ಇತ್ತು. ದೇಹ ವಿಕಾರ ಆಗಿರಲಿಲ್ಲ.  ಗೌಡ ತನ್ನ ಮಾತಿಗೆ ಮರ್ಯಾದೆ ಕೊಟ್ಟು ಗುರುಗಳ ವೃಂದಾವನಕ್ಕೆ ಜಾಗ ಕೊಟ್ಟನು.  ಅಲ್ಲದೆ ತನ್ನಲ್ಲಿದ್ದ ಬ್ರಾಹ್ಮಣ ದ್ವೇಷ ಮರೆತು ಮಿತ್ರನಂತಾದನು.  ಇಂದಿಗೂ ಹೊಸರಿತ್ತಿ ಗ್ರಾಮದಲ್ಲಿ ಗುರುಗಳ ವಿಷಯದಲ್ಲಿ ವೀರಶೈವ ಜನಾಂಗದವರು ಒಂದಾಗಿ ಬ್ರಾಹ್ಮಣರ ಸಂಗಡ ಕೂಡಿಕೊಂಡು ಆರಾಧನೆ ಆಚರಿಸುತ್ತಾ ಬಂದಿದ್ದಾರೆ. 
ಧಿರೇಂದ್ರರ ವೃಂದಾವನ ಆದ ಮೇಲೆ ಎಷ್ಟೋ ಪವಾಡಗಳು ಆಗಿವೆ.  ಭಕ್ತರ ಅಭೀಷ್ಟಗಳನ್ನು ನೆರವೇರಿಸಿದ್ದಾರೆ.  ಇದರಿಂದ ಧಿರೇಂದ್ರರ ಮಹಿಮೆ ಬೆಳೆಯುತ್ತಾ ಬಂದಿದೆ. ಶ್ರೀ ಧೀರೇಂದ್ರರು ಶ್ರೀ ರಾಘವೇಂದ್ರರ ಪರಮ ಭಕ್ತರು. ಇಂದಿಗೂ ಹೊಸರಿತ್ತಿಯಲ್ಲಿ ರಾಘವೇಂದ್ರ ಸ್ತೋತ್ರ ಪಠಿಸುತ್ತಾ ಎಲ್ಲ ಪೂಜೆ ನಡೆಯುತ್ತವೆ.
ಅಂದಾಜು ಮೂವತ್ತು ನಲವತ್ತು ವರ್ಷ ಗಳ ಹಿಂದಿನ ಸಂಗತಿ ಇರಬಹುದು.  ರಿತ್ತಿಯಲ್ಲಿ ಶ್ರೀ ಬಾಗಲಕೋಟಿ ಶೀನಪ್ಪ ಎಂಬ ಭಕ್ತರು ಇದ್ದರು.  ಊರಿಗೆ ನಾಯಕರಂತೆಯೂ ಇದ್ದರು.  ಒಂದು ಸಲ ಬದರಿ ಯಾತ್ರೆಗೆ ಹೋದಾಗ ಅವರಿಗೆ ಆಯಾಸದಿಂದ ಜ್ವರದ ಭಾದೆ ಆಯಿತು.  ಔಷಧೋಪಚಾರ ನಡೆಯಿತು.  ಗುಣಮುಖರಾಗಲಿಲ್ಲ.  ಏನು ಮಾಡಬೇಕೆಂಬುದು ತಿಳಿಯಲಿಲ್ಲ. ಗುರುಗಳನ್ನು ನೆನೆದು ಮಲಗಿದರು. ಸ್ವಪ್ನದಲ್ಲಿ ಗುರುಗಳು ಕಾಣಿಸಿಕೊಂಡು ನಿನ್ನ ಮಕ್ಕಳು ನನ್ನ ಮಠಕ್ಕೆ ಬಂದಿಲ್ಲ ಬರಲು ಹೇಳು ನಿನಗೆ ಗುಣವಾಗುವುದು ಎಂದು ಹೇಳಿದಂತಾಯಿತು.  ಬೆಳಿಗ್ಗೆ ಎದ್ದು ಮೊದಲು ದೂರವಾಣಿ ಮಾಡಿ ಮಕ್ಕಳಿಗೆ ವಿಷಯ ತಿಳಿಸಿದರು.  ಮಕ್ಕಳು ಮಠಕ್ಕೆ ಬಂದು ಸೇವೆ ಮಾಡಿದರು. ಇತ್ತ ಬದರಿಯಲ್ಲಿ ತಂದೆ ಗುಣಮುಖರಾಗಿ ಮನೆಗೆ ಬಂದರು. ಎಲ್ಲರಿಗೂ ಗುರುಗಳ ಬಗ್ಗೆ ಭಕ್ತಿ ನಂಬಿಕೆ ಇನ್ನೂ ಹೆಚ್ಚು ಬೆಳೆದು ಮಹಿಮೆ ಪ್ರಚಾರವಾಯಿತು.   
ಮಾಧ್ವ ವಾಙ್ಮಯ ಪ್ರಪಂಚಕ್ಕೆ ಧೀರೇಂದ್ರರ ಕೊಡುಗೆ ಅಪಾರ. ನಾರಾಯಣೋಪನಿಷತ್ತಿನ ವ್ಯಾಖ್ಯಾನ, ಯಾಜ್ಞಿಕೋಪನಿಷತ್ ವ್ಯಾಖ್ಯಾನ, ಮನ್ಯುಸೂಕ್ತ ವ್ಯಾಖ್ಯಾನ, ಅಂಬೃಣೀ ಸೂಕ್ತ ವ್ಯಾಖ್ಯಾನ, ಬಳಿತ್ಥಾ ಸೂಕ್ತ ವ್ಯಾಖ್ಯಾನ, ಗುರುಗುಣ ಸ್ತನ ವ್ಯಾಖ್ಯಾನ, ವಿಷಯವಾಕ್ಯ ಸಂಗ್ರಹ(ಬ್ರಹ್ಮಸೂತ್ರಾಧಿಕರಣ ವಿಷಯ ವಾಕ್ಯಾರ್ಥಸಂಗ್ರಹಃ) ಶ್ರೀ ರಾಘವೇಂದ್ರ ಸೋತ್ರ ವ್ಯಾಖ್ಯಾನ, ಕಾರಕ ವಾಕ್ಯಾರ್ಥ ಮುಂತಾದ ಕೃತಿ ರತ್ನಗಳಿಂದ ಶ್ರೀಮದಾಚಾರ್ಯರ ಅಂತರ್ಯಾಮಿ ಲಕ್ಷ್ಮೀ ಹಯಗ್ರೀವ ದೇವರ ಸೇವೆ ಇವರಿಂದ ನಡೆದಿದೆ. ಇವರ ಅನುಗ್ರಹವು ಸಕಲ ಸಜ್ಜನ ಸಮಾಜಕ್ಕೆ ಸದಾ ಇರಲೆಂದು ಪ್ರಾರ್ಥಿಸುತ್ತಾ,,,,,, 
ಶ್ರೀಮಧ್ವೇಶಾರ್ಪಣಮಸ್ತು

 ‌(received in WhatsApp)

***


ಶ್ರೀ ವಿಠ್ಠಲ ಪ್ರಸೀದ
ಇಂದು ಶ್ರೀ  ರಾಯರ  ಮಠದ   ಶ್ರೀ ಧೀರೇಂದ್ರ ತೀರ್ಥರ ಮಧ್ಯಾರಾಧನೆ
ಶ್ರೀ ಗುರುರಾಜರ ಪೂರ್ವಾಶ್ರಮದ ಮರಿಮಗ   ಶ್ರೀನಿವಾಸಚಾರ್ಯರು   ಶ್ರೀ ವಾದೀಂದ್ರ  ತೀರ್ಥರಾಗಿ  ಗುರುಗುಣ ಸ್ತವನ ರಚಿಸಿದ್ದು ಎಲ್ಲರಿಗೂ ತಿಳಿದಿದ್ದೇ.
ಇವರ ಪೂರ್ವಾಶ್ರಮ  ಪುತ್ರರಾದ ಜಯರಾಮಾಚಾರ್ಯರೆ ಮುಂದೆ ಸಂಸ್ಥಾನದಲ್ಲಿ ರಾರಾಜಿಸಿ  ಶ್ರೀಧೀರೇಂದ್ರ  ತೀರ್ಥರೇನಿಸಿದರು.
ಶ್ರೀ ವಾದೀಂದ್ರ ತೀರ್ಥರ ಪೂರ್ವಾಶ್ರಮ   ಸೋದರರ ಮೂರುಜನ ಮಕ್ಕಳು ಕ್ರಮವಾಗಿ ವಸುದೇಂದ್ರರು, ವರದೇಂದ್ರರು, ಭುವನೇಂದ್ರರು  ಗುರುರಾಜರ ಪರಂಪರೆಯಲ್ಲಿ ಬೆಳಗಿದಮೇಲೆ,  ಶ್ರೀ ವಿಜಯೀಂದ್ರರ ಬೃಂದಾವನ ಸಮ್ಮುಖದಲ್ಲಿ ಆಶ್ರಮ ಸ್ವೀಕರಿಸಿದರು. ಆ ಸಮಯದಲ್ಲಿ ಪೀಠದಲ್ಲಿ ರಾರಾಜಿಸುತ್ತಿದ್ದ ಶ್ರೀ ಭುವನೇಂದ್ರರಿಂದ  ಮಹಾ ಸಂಸ್ಥಾನ ಸ್ವೀಕರಿಸಿದವರು.  ಇಂದಿನ ಆರಾಧನೆ ಮಾಡಿಸಿಕೊಳ್ಳುತ್ತಿರುವ ಶ್ರೀಧೀರೇಂದ್ರರು.
ಪೂರ್ವಾಶ್ರಮದಲ್ಲೇ ಶ್ರೀ ವರದೇಂದ್ರಸ್ವಾಮಿಗಳ  ಸಮ್ಮುಖದಲ್ಲಿ ಅಸಾಧಾರಣ ಪಾಂಡಿತ್ಯದಿಂದ ಬೆಳಗಿ ಮಠ ಕ್ಕೇ  ಕೀರ್ತಿ ತಂದವರು.
ಪೇಶ್ವೆ ಗಳು ಒಳಗೊಂಡಂತೆ ಗಣ್ಯ ವ್ಯಕ್ತಿಗಳಿಂದ ಗೌರವ ಸಂಪಾದಿಸಿದರು. ಅನೇಕ ಪುಣ್ಯಕ್ಷೇತ್ರ ದರ್ಶನ ಮಾಡುತ್ತಾ 
ಮಂತ್ರಾಲಯದಲ್ಲಿ ಗುರುರಾಜರ ದರ್ಶನ ನಂತರ  ಹೊಸ ರಿತ್ತಿಗೆ ಬಂದರು ಅಲ್ಲಿ ಅವರು  ಹರಿಪಾದ ಸೇರಿದರು.
ಶ್ರೀ ಭುವನೇಂದ್ರರು  ಆ ಸಮಯದಲ್ಲಿ ಸಮೀಪದಲ್ಲಿರಲಿಲ್ಲ.
ಸ್ವಾಮಿಗಳ ದೇಹವು ಏಳುವರ್ಷದನಂತರ ಕಳಾಕರ್ಷಣೆಗಾಗಿ  ದೇಹವನ್ನು ಹೊರತೆಗೆದಾಗ  ಏಳುವರ್ಷದ ಹಿಂದೆ ಗಂಧಾಕ್ಷತೆ, ತುಳಸಿಮಾಲೆ ಆಗ ಹಚ್ಚಿದಂತೆ ಇತ್ತು.
ಮುಂದೆ ವರದಾ ನದಿ  ತೀರದಲ್ಲಿ ರಿತ್ತಿಯಲ್ಲಿ ಬೃಂದಾವನ ನಿರ್ಮಿತವಾಯಿತು.
ಅದ್ಭುತ  ಪಾಂಡಿತ್ಯದಿಂದ ಶೋಭಿಸಿದ್ದ  ಸ್ವಾಮಿಗಳು ಅನೇಕ ಗ್ರಂಥಗಳನ್ನು ರಚಿಸಿದ್ದಾರೆ.
ಶ್ರೀ ವಾದೀಂದ್ರ  ತೀರ್ಥರ 1)ಗುರುಗುಣ ಸ್ತವನಕ್ಕೆ  ವ್ಯಾಖ್ಯಾನ,            2)ಕಾರಕವಾದ , 3)ನಾರಾಯಣೋಪನಿಷತ್ ವ್ಯಾಖ್ಯಾನ,  
4) ಮನ್ಯುಸೂಕ್ತಕ್ಕೆ ನರಸಿಂಹ ಪರ ವ್ಯಾಖ್ಯಾನ
5) ವಿಷಯ ವಾಖ್ಯ ಸಂಗ್ರಹ
ಇವುಗಳು ಅವರ ಗ್ರಂಥಗಳು.
ಫಾಲ್ಗುಣ  ಶುದ್ಧ ತ್ರಯೋದಶಿಯ ಆರಾಧನೆಯಂದು   ಶ್ರೀ ಧೀರೇಂದ್ರ  ತೀರ್ಥರನ್ನು  ಧರಣೀಮಂಡಲೇಖ್ಯಾತಂ ಧೈರ್ಯಾದಿಗುಣಬೃಂಹಿತಂ
 ದಿಕ್ಕ್ರತಾಶೇಷವಾಧೀಭಂ
   ಧೀರಸಿಂಹಗುರುಂಭಜೇ 
ಎಂದು ಭಜಿಸಿ  ಗುರುರಾಜರ ಪರಮಾನುಗ್ರಹಕ್ಕೆ ಪಾತ್ರರಾದ ಯತಿಗಳಿಗೆ ತಲೆ ಬಾಗೋಣ.
        ನಾಹಂ ಕರ್ತಾ ಹರಿಃ ಕರ್ತಾ
        ಶ್ರೀ ಕೃಷ್ಣಾರ್ಪಣಮಸ್ತು
-prasadacharya
***



***

No comments:

Post a Comment