श्रीरामचंद्रगुरवे नम: कारुण्यसिंधवे ।
info is from sumadhwaseva.com--->
Sri. Kambalur Ramachandra Theertha
Parampare: sOsale vyAsarAja maTa, #17
Period – 1575 to 1632 AD
Peeta Period – 1612 to 1632
Father – Sri Kuppacharya
Family – Pennathur family
Aradhana – Margashira Shudda Triteeya
gurugaLu: shri shripati tIrtharu
shishyaru: shri lakshmIvallabha tIrtharu (uttara adhikAri), shri narasimha oDeyaru (biDi sanyAsigaLu), shri ratnagarbha oDeyaru (biDi sanyAsigaLu)5th in succession after Sri Vyasarajaru
Parampare – Vyasaraja Mutt
Vrundavana @ Rayavellore in Arcot District of TN
Mruttika Vrundavana @ Tirumakoodalu
श्रीरामचंद्रगुरवेनम: कारुण्यसिंधवे।
ವಂದಾರುಕಲ್ಪತರವೇವಾದಿಕೈರವಭಾನವೇ |
ಶ್ರೀರಾಮಚಂದ್ರಗುರವೇನಮ: ಕಾರುಣ್ಯಸಿಂಧವೇ |
He is regarded as the “Sampradaya Pravarthakaru” of Sri Vyasaraja Mutt. He was a great scholar and a debater. He belongs to Kambaluru family (Sri Vibudendra Tirtharu also belong to the same family). His poorvikaas are from Coimbatore District in KavileeppaaLayaM village in SatyamangalaM Taluk.
Education – Sri Kambaluru Ramachandra Tirtharu, in his Srimannyaaya Sudha Tippani, has quoted that he has studied under Sri Vijayeendraru
पदवाक्यप्रमाणज्ञान् सौशील्याद्युपशोभितान् ।
विजयीन्द्रयतीन्द्राख्यान् सेवे विद्यागुरून्मम ॥
Mass conversion to Madhwa Philosophy – When he was sitting for Chaturmasya in Pennaatturu near Veluru, he had given Madhwa Deekshe to many Kannada speaking Brahmins and converted them to Madhwa philosophy. Still many such families are still living in Coimbatore District with the surname Pennatturu.
His works –
Srimannyaayasudha VyaaKyaa
Sri Jayatirtha’s Rugbhashya Teeka Vyaakyaa
AitarEya Bhaashya Teeka
TatvavivEka Teeka
Stopping of Big Rock – Raya Vellore –
During his stay once in Rayavellore, some miscreants unable to sustain the growth of Madhwa Shastra and his Vak Chaturya, tried to kill him by throwing a big stone on him, when he was doing japa. He realized that a big stone is being thrown, so he said “antaraale tista”. Immediately that rock stood there without falling on any body. Such was his tapashakthi. That is why that place which was called as Vellore is called as “Rayavellore” – Raya means “big stone”. The Rock which was stopped by swamiji is still can be seen near his Vrundavana.
Contemporaries – Sri Kambalur Ramachandra Tirtharu (1612-1632), Sri Vidyadeesha Tirtharu (1619-1631), Sri Vedanidhi Tirtharu (1631-1635), Sri Sudheendra Tirtharuy (1595-1623), Raghavendra Tirtharu (1623-1671)
“Madhwa Vijaya Nagara”
The area where his vrundavana is located is termed as “Madhwa Vijaya Nagara”, Vellore. Apart from Sri Kambalur Ramachandra Tirtharu, there are 8 more vrundavanas located in that place.
They are :
- Sri Vidyapathy Tirtharu.. ……..Sri Uttaradi Mutt
- Sri Sathyadiraja Tirtharu.. ……Sri Uttaradi Mutt
- Sri Sripati Tirtharu, Sri Vyasaraja Mutt
- Sri Kambaluru Ramachandra Tirtharu, Sri Vyasaraja Mutt
- Sri Raghavendra Swamigalu, Mruttika Vrundavana
- Sri Kesava Udayaru..Bidi Sanyasi, Shishyaru of Satyadiraja Tirtharu
- Sri Govinda Madhava Udayaru….. – do –
- Sri Bhoovaraga Udayaru….. …….. – do –
- Sri Raghunatha Udayaru….. – do –
info from madhwamrutha.org--->
Moola brindavanas situated in Tamilnadu
- Uttaradhi Mutt – 6
- Raghavendra Mutt – 7
- Vyasaraja Mutt – 9
- Sripadaraja Mutt – 15
- Other Brindavanas/Bidi sanyasigalu – 8
Vyasaraja Mutt
****
mArgashira shuddha tritIya is the ArAdhane of shri kambAlUr rAmachandra tIrtharu, sAmpradAya pravartakaru of sOsale vyAsarAja maTa.
The above sloka clearly shows his holiness Sri Kambalu Ramachandra Tirtha was direct vidyA shishya of shri vijayIndra tIrtharu.
He is said to be from Kavillipalayam, Sathyamangalam, Erode district. His holiness defeated many other philsophies and proved that Tatvavaadha is the ultimate true philosophy which will take all of us to Moksha, nothing else.
He is the sAmpradAyapravartakaru of sOsale vyAsarAja maTa. His contemporaries were Sri Vedavyasatirtha of Uttaradi Matha (till 1619 AD) and Sri Vidyadhisha tirtha (till 1631AD), who is considered as the sampradaya Pravarthaka of Sri Uttaradi maTa. In rAyara maTa parampare, they were Sri Sudhindra Tirtha (1596-1623 AD) and Sri Raghavendra tIrtha (1623- 1671AD).
His father was Kuppachar and grandfather Mushtiparimitha-Svarnamalankritha Venkata narasimhacharya. He was the eldest son and descendents of his younger brother Narasimha have continued the lineage. The family was associated with the village Kambalur in Kovalakunta taluk of Kurnool district of Andhra Pradesh at the time of Sri Ramachandra Tirtha. Apparently there were two villages called Chinna kambalur and Pedda kambalur. As the grandfather’s name indicates, he must have been honoured by gift of a large golden chain earlier – for his accomplishments.
Sri Raghavendra tIrtha had studied vyAkaraNa under Sri Ramachandra tirtha in his poorvashrama days and he has also shown the same specialty in his famous Parimala and other compositions.
Sri Kambaluru Ramachandratirtha was Telugu speaking and was a good organizer and effective speaker. He had conducted numerous disputations with rival schools and gained ascendancy or victory. One of his greatest achievements which is remembered even today is the mass conversion to Madhva faith of a large number of Karnataka Brahmin families in his own native district. This took place in Pennattur, at some distance from Vellore, where the Pontiff was staying for Chathurmasya. The converts adopted the name of the village where the conversion took place and flourish in Coimbatore district. Members of the family are still active in upholding the prestige of the SVM and celebrating his Aradhane, etc. It is believed that on this occasion 6000 persons became Madhvas and are known as Aravelus even today – who reside in Tamilnadu, Karnataka and Andhra, with the mother tongue as Kannada.
Sri Ramachandra Tirtha is reputed to have had a disciple going ahead announcing during his travels that a pot of cow dung mixed water was being carried. The disputants who oppose Dvaita vada are lying under our feet defeated. All disputants are welcome for debate, and those who lose will get the reward carried in the pot! Such was his staunch faith in his own system and confidence in himself. There is no doubt that during his time, a very large following was acquired by the Sri Matha in Andhra and Tamilnadu. It is also reported that he used to reduce the actual time taken for rituals like Puja etc, to the minimum and spend it on debates, compositions etc. He seems to have stated in reply to criticism in this regard – “Vagbommale bommalu” – Brahman of Upanishads is more in the study and mental assimilation than in simple rituals. He was universally respected for his scholarship, commitment to Tatvavada, his vast knowledge and authority in critical interpretations of earlier texts.
The same quality of unshakeable conviction had been displayed by him in his Poorvashrama days as shown in the following story: Once, he had gone to Tirupati for darshan of Lord Srinivasa. Due to big crowds as well as the visit of some privileged persons, he was unable to have his darshan even after waiting a long time and had to return disappointed. He composed a shloka “Aishwarya madamatthosi idaaneem maamupekshyase, vadeenaam kalahe praapthe ahameva gathisthava” and wrote it in apiece of paper and dropped it in front of the route being taken by the Uthsava Murthy. The shloka means that: Oh, Srinivasa, You are now conceited due to your wealth and hence ignoring me. But when you become the object of discussion amongst disputants, only I have to defend you.
The Lord immediately instructed the Mahanth to allow his special devotee in and gave him darshan. Such was his staunch faith in God!
Once during his travels, some people opposed to him and unable to defeat him in debate had arranged to kill him by dropping a big stone on his head as his entourage passed by. Though they made the attempt as planned, Sri Kambaluru Ramachandra tirtha, who realised the attempt, ordered the stone: “Antharaale Thista” (Stay, where you are, in mid-air) . The stone did not fall and hurt the great ascetic. Subsequently, he ordered the disciples to carry the stone with him and finally ordered that it should be placed on his Vrindavana, where it is even today. This incident showed that in addition to his great qualities as alearned scholar, he was also an Aparoksha Jnani and had the different siddhis attained by Yogic practices and Meditation on the Supreme Being.
He has written several works:
- Nyayasudha Vivruthi
- Vivruthi on Tatvavaprakashika of Sri Teekacharya
- Vivruthi on the Brahma Suthra Bhashya of shri MadhvAchArya
- Tippani to Srimadacharya’s Rig Bhashya
- Tippani on Mahabharata Tatparya Nirnaya
- Tippani on Srimad Bhagavatha
There is a Lakshmi Narayana Temple in a town called Panrutti in TN and the area is called Lakshmi Narayana Puram. Shri Kambalu Ramachandra Theertha Shripadangalavaru has installed the Lakshmi Narayana Vigraha along with Venugopal krishna Vigraha and Hanuman vigraha.
May shri kambAlUr rAmachandra tIrtharu bless us with jnAna, bhakti, vairAgya...
shri kambAlUr rAmachandra tIrtha guruvAntargata, shri vyAsarAja guruvAntargata, shri maharudradeva guruvAntargata, shri bhArathiramana mukhyaprANantargata, rukmiNi sathyabhAma pate shri mUla gOpAlakrishNa dEvara pAdAravindakke gOvindA gOvindA...
Shri krishNArpaNamastu...
*********
ಶ್ರೀಂ ಶ್ರೀ ಕಂ ಕಪಿಲಾಯ ನಮಃ
ವಂದಾರು ಕಲ್ವತರವೇ ವಾದಿ ಕೈರವ ಭಾನವೇ/
ಶ್ರೀರಾಮಚಂದ್ರಗುರವೇ ನಮಃ ಕಾರುಣ್ಯಸಿಂಧವೇ//
16ನೆಯ ಶತಮಾನದ ಪರಮ ಮಹಿಮಾನ್ವಿತ ಯತಿಗಳು, ಸೋಸಲೆ ಶ್ರೀ ವ್ಯಾಸರಾಜಮಠದ ಸಂಪ್ರದಾಯ ಪ್ರವರ್ತಕರೂ, ಶ್ರೀ ವಿಜಯೀಂದ್ರತೀರ್ಥರ ವಿದ್ಯಾ ಶಿಷ್ಯರು, ಶ್ರೀ ರಾಯರಿಗೂ ಪೂರ್ವಾಶ್ರಮದಲ್ಲಿ ವಿದ್ಯೆಯನ್ನು ಕಲಿಸಿದವರು, ಶ್ರೀಪತಿತೀರ್ಥರ ಶಿಷ್ಯರು, ಶ್ರೀ ಲಕ್ಷ್ಮೀ ವಲ್ಲಭತೀರ್ಥರ ಗುರುಗಳು, ಉತ್ತರಾದಿಮಠದ ಸಂಪ್ರದಾಯ ಪ್ರವರ್ತಕರಾದ ಶ್ರೀ ವಿದ್ಯಾಧೀಶರಿಗೂ ಗುರುಗಳಾದ, ವಾದಿಗಳ ಮದವಿಳಿಸಿದ ವಾದಿ ನಿಗ್ರಹರು, ಜ್ಞಾನಿಕುಲಾಗ್ರಗಣ್ಯರು,
ರಿಗ್ ಭಾಷ್ಯಕ್ಕೆ , ಶ್ರೀಮದ್ಭಾಗವತಕ್ಕೆ ಟಿಪ್ಪಣಿ ಬರೆದವರು, ನ್ಯಾಯಸುಧಾ ವಿವೃತ್ತಿ, ಬ್ರಹ್ಮಸೂತ್ರಕ್ಕೆ ವಿವೃತ್ತಿ ಮೊದಲಾದ ಶ್ರೇಷ್ಠ ಗ್ರಂಥಗಳನ್ನು ರಚನೆ ಮಾಡಿದವರೂ ಆದ ಶ್ರೀ ಕಂಬಾಲೂರು ರಾಮಚಂದ್ರತೀರ್ಥರ ಶುಭಸ್ಮರಣೆಗಳು.
-Smt. Padma Sirish
ನಾದನೀರಾಜನದಿಂ ದಾಸಸುರಭಿ
****
" ಶ್ರೀ ಕಂಬಾಲೂರು - 1 "
ಈದಿನ - ಮಾರ್ಗಶಿರ ಶುದ್ಧ ತೃತೀಯಾ ಗುರುವಾರ [ 17.12.2020 ] - ಶ್ರೀ ಕಂಬಾಲೂರು ಶ್ರೀ ರಾಮಚಂದ್ರ ತೀರ್ಥರ ಆರಾಧನಾ ಮಹೋತ್ಸವವು .....
ಶ್ರೀಮನ್ನ್ಯಾಯಸುಧಾ ಗ್ರಂಥಕ್ಕೆ ಟಿಪ್ಪಣಿ ಬರೆದು ವ್ಯಾಸ ಪೂಜೆಯನ್ನು ಮಾಡಿದ ಕೆಲವೇ ಪೀಠಾಧಿಪತಿ ಗಳಲ್ಲಿ ಶ್ರೀ ರಾಮಚಂದ್ರ ತೀರ್ಥರು ಅನ್ಯತಮರೂ ಮತ್ತು ಧನ್ಯತಮರು.
ಶ್ರೀ ಚಂದ್ರಿಕಾಚಾರ್ಯರಿಂದ 5ನೆಯವರು ಆದ ಶ್ರೀ ಕಂಬಾಲೂರೂ ರಾಮಚಂದ್ರ ತೀರ್ಥರು.
ಚತುಃ ಶಾಸ್ತ್ರದಲ್ಲಿ ಚತುರಸ್ರ ಪಾಂಡಿತ್ಯ ಉಳ್ಳ ಚತುರಮತಿ ಯತಿಗಳಾಗಿದ್ದರು.
ವಿದ್ವತ್ ಪತಿಗಳೂ ಆಗಿದ್ದರು.
ಶ್ರೀ ಶ್ರೀಗಳವರು ಬರೆದ ಶ್ರೀಮನ್ನ್ಯಾಯ ಸುಧಾ ಗ್ರಂಥದ " ಕಂಬಾಲು ಟಿಪ್ಪಣಿ " ಯು ಶಾಸ್ತ್ರ ಉದಧಿ ಎನ್ನು ಆಲೊಡನ ಮಾಡಲು ಸಮರ್ಥವಾದ ಅವರ ಮತಿ ಮಂಥಾಚಲದ ಮಂದರ ಮೈಮೆಯನ್ನು ಗುರುತರ ಗೈಮೆಯನ್ನು ಎತ್ತಿ ತೋರಿಸುತ್ತದೆ.
ಸುಧಾ ಗ್ರಂಥಕ್ಕೆ ಹತ್ತಿಪ್ಪತ್ತು ಟಿಪ್ಪಣಿಗಳು ಯಿದ್ದರೂ ಶ್ರೀ ರಾಮಚಂದ್ರ ತೀರ್ಥರ ಟಿಪ್ಪಣಿ ಯು ಯಾವುದರಿಂದಲೂ ಗತಾರ್ಥವಲ್ಲ.
ಯಾರೂ ಬಾರಿಸದೆ ಬಿಟ್ಟ ತಂತಿಯನ್ನೇ ಮಿಡಿವ ಜಾಣ್ಮೆಯು ಶ್ರೀ ರಾಮಚಂದ್ರ ತೀರ್ಥರಿಗೆ ಕರಗತವಾಗಿದೆ.
ಶ್ರೀ ಸುಧಾ ಗ್ರಂಥವನ್ನು ಓದುವ ಸಾಮಾನ್ಯ ಪಂಡಿತರು ಮುಗ್ಗರಿಸುವ ತಗ್ಗುಗಳು, ಕುಗ್ಗುವ ಕಗ್ಗಂಟುಗಳು ಯಾವವು, ಎಲ್ಲಿ ಎಂಬುದನ್ನು ಗುರುತಿಸಿ ಆ ಆ ಸ್ಥಳಗಳಲ್ಲಿ ಬೆಳಕಿನ ಸೆಳಕುಗಳನ್ನೂ ತೋರಿ ಜಟಿಲವಾದ ಗ್ರಂಥ ಗ್ರಂಥಿಗಳನ್ನು ಸರಳವಾಗಿ ಬಿಡಿಸುತ್ತಾ ಹೋಗುತ್ತಾರೆ ಶ್ರೀ ರಾಮಚಂದ್ರ ತೀರ್ಥರು.
ಶ್ರೀ ರಾಮಚಂದ್ರ ತೀರ್ಥರ ಟಿಪ್ಪಣಿ ಸರ್ವ ವಿದ್ವನ್ ಮಾನ್ಯವಾಗಿದೆ.
ಶ್ರೀ ರಾಮಚಂದ್ರ ತೀರ್ಥರ ವಿಷಯದಲ್ಲಿ ಅವರ ಶ್ರೀ ವ್ಯಾಸರಾಜ ಸಂಸ್ಥಾನವನ್ನು ಆರೋಹಣ ಮಾಡಿದ ಶ್ರೀ ವಿದ್ಯಾ ಪ್ರಸನ್ನ ತೀರ್ಥ ಶ್ರೀಪಾದರು ಬರೆದ ಲೇಖನವು ಅತ್ಯಂತ ಮಾರ್ಮಿಕವೂ, ಸರ್ವ ವಿಷಯ ಸಂಗ್ರಾಹಕವೂ ಆಗಿರುವುದರಿಂದ ಅದನ್ನೇ ಇಲ್ಲಿ ಇಡಿ ಕಿಡಿಯಾಗಿ ಅವಿಕಲವಾಗಿ ಎತ್ತಿ ಕೊಡಲಾಗಿದೆ.
ವಂದಾರು ಕಲ್ಪತರವೇ
ವಾದಿ ಕೈರವ ಭಾನವೇ !
ಶ್ರೀ ರಾಮಚಂದ್ರ ಗುರುವೇ
ನಮಃ ಕಾರುಣ್ಯ ಸಿಂಧವೇ !!
ಮಾಧ್ವ ವೇದಾಂತ ಇತಿಹಾಸದಲ್ಲಿ ಶ್ರೀ ವ್ಯಾಸರಾಜ ಗುರು ಪರಂಪರೆಯ ಶ್ರೀ ಕಂಬಾಲೂ ರಾಮಚಂದ್ರ ತೀರ್ಥರ ಹೆಸರು ಅಜರಾಮರವಾದುದು.
ಇವರು ಶ್ರಿಮದಾ ಚಾರ್ಯರ ಮೂಲ ಮಹಾ ಪೀಠದಲ್ಲಿ 17ನೆಯವರಾಗಿಯು, ಶ್ರೀ ವ್ಯಾಸರಾಜರ ನಂತರ ಅವರ ಪೀಠದಲ್ಲಿ ಐದನಿಯವರಾಗಿಯು ಸರ್ವಜ್ಞ ಸಿಂಹಾಸನವನ್ನು ಅಲಂಕಾರ ಮಾಡಿದವರು.
ಇವರು 17ನೆ ಶತಮಾನದ ಆದಿ ಭಾಗದಲ್ಲಿ ಜೀವಿಸಿದ್ದರೆಂದು 1627ನೆ ಇಸವಿಯ ಗ್ರ್ಯಾo ಟಿ ನಿಂದ ತಿಳಿದು ಬರುತ್ತದೆ.
***
" ಕಂಬಾಲೂರು - 2 "
ಶ್ರೀ ರಾಮಚಂದ್ರ ತೀರ್ಥರು ಶ್ರೀಮನ್ ನ್ಯಾಯ ಸುಧಾಕ್ಕೆ ಟಿಪ್ಪಣಿ, ಋಗ್ ಭಾಷ್ಯಕ್ಕೇ ವಿವೃತ್ತಿ ಮುಂತಾದ ಉದ್ಗ್ರಂಥಗಳನ್ನು ರಚಿಸಿ ಜಿಜ್ಞಾಸುಗಳಿಗೆ ಮಹೋಪಕಾರ ಮಾಡಿದ್ದಾರೆ.
ಇವರು ಸಿದ್ಧಾಂತ ಪ್ರಚಾರ ದಲ್ಲಿಯೇ ತಮ್ಮ ಜೀವನವನ್ನು ಕಳೆದರು.
ಶ್ರೀ ಮಧ್ವ ಸಿದ್ಧಾಂತ ಸ್ಥಾಪನೆ, ವಿರೋಧಿಗಳ ಖಂಡನೆಯೇ ಇವರ ಜೀವನದ ಸಾರ ಸರ್ವಸ್ವ ಆಗಿತ್ತು.
ತಮ್ಮ ನಂತರವೂ ಸಜ್ಜನರಿಗೆ ಸರಿಯಾದ ಜ್ಞಾನ ಉಂಟಾಗಲು ಶ್ರೀ ಮನ್ನ್ಯಾಯ ಸುಧೆಗೆ ಟಿಪ್ಪಣಿಯನ್ನು ಬರೆದಿರುವರು.
ಈ ಗ್ರಂಥವು ಮುದ್ರಿತವಾಗಿರುತ್ತದೆ.
ಈ ಗ್ರಂಥವು ಸರಳ ಶೈಲಿ, ವ್ಯಾಖ್ಯಾನ ಪರಿಪಾ ಟಿ, ಅಲ್ಲಲ್ಲಿ ಪ್ರಸಕ್ತ ವಾಗಿರುವ ತರ್ಕ, ವ್ಯಾಕರಣ ಮೊದಲಾದ ಶಾಸ್ತ್ರ ಅಂತರ ಪ್ರಕ್ರಿಯೆಗಳ ವಿವರಣೆ ಮುಂತಾದವುಗಳಿಂದ ಕೂಡಿಕೊಂಡು ಶ್ರೇಷ್ಠ ಮಟ್ಟದ ವ್ಯಾಖ್ಯಾನ ಎಂದು ಲೋಕ ಪ್ರಸಿದ್ದ ಆಗಿದೆ.
ನ್ಯಾಯಸುಧಾಗೆ ಅನೇಕ ವ್ಯಾಖ್ಯಾನ ಗಳಿವೆ.
ಇತರ ವ್ಯಾಖ್ಯಾನಗಳಲ್ಲಿ ಸ್ಪಷ್ಟವಾಗಿ ವಿವರಿಸದಿರುವ ವಿಷಯಗಳು ಬಹಳವಾಗಿ ಈ ವ್ಯಾಖ್ಯಾನದಲ್ಲಿ ವಿವರಿಸಲ್ಪಟ್ಟಿದೆ.
ಅಷ್ಟೇ ಅಲ್ಲ ಕೆಲವೆಡೆಗಳಲ್ಲಿ ತಮ್ಮದೇ ಒಂದು ನೂತನ ಭಾವವನ್ನು ಮೂಲ ಗ್ರಂಥದಿಂದ ಹೊರಡಿಸಿ ಉಂಟಾಗ ಬಹುದಾದ ಆಕ್ಷೇಪಗಳನ್ನು ಪರಿಹರಿಸಿ ನ್ಯಾಯಸುಧಾ ಗ್ರಂಥದ ಗಾಂಭೀರ್ಯವನ್ನು ಎತ್ತಿ ತೋರಿಸಿದ್ದಾರೆ.
ಇವರ ವಿವರಣೆಯ ವೈಖರಿಯನ್ನು ಸ್ವಲ್ಪ ನೋಡೋಣ....
ಶ್ರೀ ರಾಮಚಂದ್ರ ತೀರ್ಥರ ಸಂಗಡವಾದ ಮಾಡಿ ಪರಾಜಿತರಾದ ಪರವಾದಿಗಳು ಇವರನ್ನೇ ನಾಶ ಮಾಡಬೇಕಂದು ಯೋಚಿಸಿ ಇವರು ತಪಸ್ಸು ಮಾಡುವಾಗ ದೊಡ್ಡ ಬಂಡೆಗಲ್ಲನ್ನು ಇವರ ಮೇಲೆಯೇ ಬೀಳುವಂತೆ ಮಾಡಿ ಪಲಾಯನ ಮಾಡಿದರು.
ಆ ಕಲ್ಲು ಗುರುಗಳ ತಲೆಯ ಮೇಲೆ ಬೀಳದೇ ಅವರನ್ನು ಕಚ್ಚಬೇಕೆಂದು ಬಂದ ಒಂದು ದೊಡ್ಡ ಸರ್ಪದ ಮೇಲೆ ಬಿದ್ದಿತು.
ಅದರಿಂದ ಆ ಸರ್ಪವು ಮೃತವಾಗಿ ಗುರುಗಳಿಗೆ ಏನೂ ಅಪಾಯವಾಗಲಿಲ್ಲ.
ಇದನ್ನು ನೋಡಿದ ಕೆಲವು ಶಿಷ್ಯರು ಆ ದುಷ್ಟರನ್ನು ಹಿಡಿದು ತಂದು ಅಧಿಕಾರಿಗಳಿಗೆ ಒಪ್ಪಿಸಬೇಕೆಂದಾಗ ಶ್ರೀ ಶ್ರೀಗಳವರು ಇವರು ನನಗೆ ಅಪಾಯ ಮಾಡಿಲ್ಲ.
ಅಪಾಯ ಮಾಡ ಬಂದ ಸರ್ಪವು ಇವರಿಂದ ನಾಶವಾಗಿದೆ.
ಇವರನ್ನು ಬಿಟ್ಟು ಬಿಡಿ ಎಂದು ಅಪ್ಪಣೆ ಮಾಡಿದರು.
ಅಂದಿನಿಂದ ಇವರು ಆ ಕಲ್ಲನ್ನು ತಮ್ಮ ಸಂಗಡ ಸಂಚಾರದಲ್ಲಿ ಒಯ್ಯುತ್ತಿದ್ದರಂತೆ.
***
" ಕಂಬಾಲೂರು - 3 "
ಶ್ರೀ ಕಂಬಾಲೂರು ರಾಮಚಂದ್ರ ತೀರ್ಥರ ಮಧ್ಯಾರಧನೆ....
ಶ್ರೀ ಕುಂಡಲಗಿರಿ ಆಚಾರ್ಯರು " ನ್ಯಾಯ ಸುಧಾ ಟಿಪ್ಪಣಿ " ಯಲ್ಲಿ......
ಸ್ವಾದಿಮಾನo ಸುಧಾಯಾ
ಯಃಸಮ್ಯಜ್ಞಾ ಪಿತವಾನ್ ಭುವಿ ।
ರಾಮಚಂದ್ರ ಗುರುಂ ನೌಮಿ
ವಿದ್ವನ್ ಮುಕುಟ ಮಂಡನಮ್ ।।
ಇಹ ಲೋಕದಲ್ಲಿ ತಮ್ಮ ವ್ಯಾಪಾರ ಸಾಧನೆಗಳು ಪೂರ್ಣವಾದಾಗ ತಾವು ವೃಂದಾವನಸ್ಥರಾಗುವ ಮುಂಚೆ ಶಿಷ್ಯರನ್ನು ಕರೆದು ನನ್ನಲ್ಲಿ ಭಗವದನುಗ್ರಹವು ಎಷ್ಟಿತ್ತೆಂಬುದರ ಚಿಹ್ನೆಯಾಗಿ ತಾವು ಕಾಲವಾದ ಮೇಲೆಯೂ ತಮ್ಮ ವೃಂದಾವನದ ಮೇಲ ಈ ಕಲ್ಲನ್ನು ಇಡಬೇಕೆಂದು ಆಜ್ಞೆ ಮಾಡಿದರು.
ಆ ಕಲ್ಲನ್ನು ಈಗಲೂ ಇವರ ವೃಂದಾವನದ ಮೇಲೆ ನೋಡಬಹುದು.
ಶ್ರೀ ಕಂಬಾಲೂರು ರಾಮಚಂದ್ರ ತೀರ್ಥರ ವೃಂದಾವನವು ಆರ್ಕಾಟ್ ಜಿಲ್ಲೆಯ ಪಯಸ್ವಿನೀ ನದೀ ತೀರದ ರಾಯವೇಲೂರಿನಲ್ಲಿ ತಮ್ಮ ಸಾಕ್ಷಾತ್ ಗುರುಗಳಾದ ಶ್ರೀ ಶ್ರೀಪತಿ ತೀರ್ಥರ ವೃಂದಾವನದ ಸಮೀಪದಲ್ಲಿರುತ್ತದೆ.
ಶ್ರೀ ರಾಮಚಂದ್ರ ತೀರ್ಥರು ಮಾರ್ಗಶಿರ ಶುದ್ಧ ತೃತೀಯಾ ವೃಂದಾವನಸ್ಥರಾಗಿರುವರು.
ಇವರ ಆರಾಧನೆಯು ಇಲ್ಲಿ ಪ್ರತಿವರ್ಷ ಬಹು ವೈಭವದಿಂದ ನಡೆಯುತ್ತದೆ.
ಸಹಸ್ರಾರು ಭಕ್ತರು ನಿತ್ಯವೂ ಇವರ ವೃಂದಾವನ ಸೇವೆ ಮಾಡಿ ಕೃತಾರ್ಥರಾಗುತ್ತಲಿದ್ದಾರೆ.
ಶ್ರೀಮದಾನಂದತೀರ್ಥ ಭಗವತ್ಪಾದಾಚಾರ್ಯರ ಮೂಲ ಮಹಾ ಸಂಸ್ಥಾನವಾದ ಶ್ರೀ ವ್ಯಾಸರಾಜ ಮಠದ ಕೀರ್ತಿ ಧ್ವಜವನ್ನು ಅತ್ಯುನ್ನತದಲ್ಲಿ ಹಾರಿಸಿದ ಮಹನೀಯರಲ್ಲಿ ಶ್ರೀ ಕಂಬಾಲೂರು ರಾಮಚಂದ್ರ ತೀರ್ಥರು ಅಗ್ರಗಣ್ಯ ಸ್ಥಾನವನ್ನು ಪಡೆದು, ಮುಕ್ತಿ ಭಾಜನರಾದ ಯತಿವರೇಣ್ಯರಿವರು ಎಂಬುದರಲ್ಲಿ ಅತಿಶಯೋಕ್ತಿ ಇಲ್ಲ.
ಆಪಾದ ಮೌಲಿ ಪರ್ಯಂತಂ
ಗುರೂಣಾ೦ ಆಕೃತಿಂ ಸ್ಮರೇತ್ ।
ತೇನವಿಘ್ನಾಃ ಪ್ರಣಶ್ಯಂತಿ
ಸಿದ್ಧ್ಯಂತಿ ಚ ಮನೋರಥಾ: ।।
***
" ಕಂಬಾಲೂರು - 4 "
" ಸಾಕ್ಷಾತ್ ಹಂಸನಾಮಕ ಪರಮಾತ್ಮನಿಂದ ಅವಿಚ್ಛಿನ್ನವಾಗಿ ನಡೆದು ಬಂದ ಜಗದ್ಗುರು ಶ್ರೀಮನ್ಮಧ್ವಾಚಾರ್ಯರ ಮೂಲ ಮಹಾ ಸಂಸ್ಥಾನಾಧೀಶ್ವರರಾದ ಶ್ರೀ ವ್ಯಾಸರಾಜ ಮಠದ ಪೀಠಾಧಿಪತಿಗಳಾದ ಶ್ರೀ ಕಂಬಾಲೂರು ರಾಮಚಂದ್ರತೀರ್ಥರ ಆರಾಧನಾ ಮಹೋತ್ಸವ "
" ಸಂಕ್ಷಿಪ್ತ ಚರಿತ್ರೆ "
ಹೆಸರು : ಶ್ರೀ ರಾಮಚಂದ್ರಾಚಾರ್ಯರು
ತಂದೆ : ಶ್ರೀ ಕೃಷ್ಣಾಚಾರ್ಯರು
ಜನ್ಮಸ್ಥಳ : ಕಂಬಾಲು
ಈ ಕಂಬಾಲು ಗ್ರಾಮವು ಕಂಬಾಲೂರು ಎಂದು ಪ್ರಸಿದ್ಧವಾಗಿದೆ.
ಇದು ಆಂಧ್ರಪ್ರದೇಶದ ಕರ್ನೂಲು ಜಿಲ್ಲೆಯ ರುದ್ರವರಂ ಮಂಡಲಕ್ಕೆ ಸೇರಿದೆ.
ಕಾಲ : ಕ್ರಿ ಶ 1612 - 1635
ವಿದ್ಯಾ ಗುರುಗಳು :
ಋಜು ಪದಸ್ಥ 96ನೇ ಋಜುಗಳಾದ ಶ್ರೀ ವ್ಯಕ್ತರ ಅಂಶ ಸಂಭೂತರಾದ ಶ್ರೀ ವಿಜಯೀ೦ದ್ರ ತೀರ್ಥರು
ಶ್ರೀ ಕಂಬಾಲೂರು ರಾಮಚಂದ್ರ ತೀರ್ಥರು ತಮ್ಮ ವಿದ್ಯಾ ಗುರುಗಳನ್ನು " ಶ್ರೀಮನ್ನ್ಯಾಯಸುಧಾ ಟಿಪ್ಪಣಿ " ಯಲ್ಲಿ...
ಪದವಾಕ್ಯ ಪ್ರಮಾಣಜ್ಞಾನ್
ಸೌಶೀಲ್ಯಾದ್ಯುಪಶೋಭಿತಾನ್ ।
ವಿಜಯೀ೦ದ್ರ ಯತೀಂದ್ರಾಖ್ಯಾನ್
ಸೇವೇ ವಿದ್ಯಾ ಗುರೂನ್ ಮಮ ।।
ಆಶ್ರಮ ಗುರುಗಳು : ಶ್ರೀ ಶ್ರೀಪತಿ ತೀರ್ಥರು
" ವಿದ್ಯಾ ಶಿಷ್ಯರು "
ಶ್ರೀ ವಾನಿವಾಲ ನರಸಿಂಹಾಚಾರ್ಯರು
ಶ್ರೀ ವೇಂಕಟನಾಥಾಚಾರ್ಯರು ( ಶ್ರೀ ರಾಘವೇಂದ್ರತೀರ್ಥರು )
ಶ್ರೀಮುಷ್ಣದಲ್ಲಿ ಕೆಲ ದಿನಗಳ ಕಾಲ ವಾಸವಾಗಿದ್ದ ಸಂದರ್ಭದಲ್ಲಿ ಶ್ರೀ ಕಂಬಾಲೂರು ರಾಮಚಂದ್ರ ತೀರ್ಥರ ಬಳಿ ಪೂರ್ವಾಶ್ರಮದಲ್ಲಿ ಕೆಲವು ದಿನಗಳು ಅಧ್ಯಯನ ಮಾಡಿದರು.
ದೇವತಾ ಪ್ರತಿಸ್ಥಾಪನೆ....
೧ ಶ್ರೀಮುಷ್ಣದಲ್ಲಿ ಶ್ರೀ ಶ್ರೀ ಲಕ್ಷ್ಮೀ ನರಸಿಂಹದೇವರು ೨. ಶ್ರೀ ಲಕ್ಷ್ಮೀನಾರಾಯಣದೇವರು ( ಕಡಲೂರು ಜಿಲ್ಲೆಯಲ್ಲಿ )
" ವೈಷ್ಣವ ದೀಕ್ಷೆ "
ವೇಲೂರಿನ ಬಳಿಯಿರುವ " ಪೆನ್ನತ್ತೂರು " ಗ್ರಾಮದಲ್ಲಿ ಶ್ರೀ ಕಂಬಾಲೂರು ರಾಮಚಂದ್ರ ತೀರ್ಥರಿಂದ ಸುಮಾರು 6000 ಅದ್ವೈತ ಮತಾನುಯಾಯಿಗಳು " ಮಾಧ್ವ ದೀಕ್ಷೆ " ಯನ್ನು ಪಡೆದರು.
" ಗ್ರಂಥಗಳು "
" ಶ್ರೀಮನ್ನ್ಯಾಯಸುಧಾ ಟಿಪ್ಪಣಿ "
ಆದಿ :ಕಲ್ಯಾಣ ಗುಣ ಪೂರ್ಣಾಯ
ಕಾಮಿತಾರ್ಥ ಪ್ರಾದಾಯಿನೇ ।
ಕಂಜಜಾದೀಡ್ಯಪಾದಾಯ
ಕಮಲಾಪತಯೇ ನಮಃ ।।
ಅಂತ್ಯ :
ಕಲ್ಯಾಣಪೂರ್ಣ: ಕರುಣಾನಿವಾಸಃ
ಕರ್ತೇಂದಿರಾದೇ: ಕಮಲಾಯತಾಕ್ಷ: ।
ಪ್ರೀಣಾತು ನಿತ್ಯಂ ಪರಮಃ
ಶ್ರುತೀಡ್ಯ:ಶ್ರೀ ಮುಕ್ತನಾಥ: ಶ್ರಿತ ಪಾರಿಜಾತಃ ।।
" ಋಗ್ಭಾಷ್ಯ ಟೀಕಾ ವಿವೃತ್ತಿ "
ಆದಿ
ಕಲ್ಯಾಣ ಗುಣ ಪೂರ್ಣಾಯ
ಕಂಜಜಾದಿ ಪ್ರಸೂತಯೇ ।
ಶ್ರೀಮಧ್ವದೇಶಿಕೇಷ್ಟಾಯ
ಶ್ರೀ ವರಾಹಾಯ ತೇ ನಮಃ ।।
ಅಂತ್ಯ...
ಇತಿ ಶ್ರೀಮತ್ ಪರಮಹಂಸ ಪರಿವ್ರಾಜಕಾಚಾರ್ಯ ಸರ್ವತಂತ್ರ ಸ್ವತಂತ್ರ ಶ್ರೀ ವ್ಯಾಸತೀರ್ಥ ಮುನಿವರ್ಯ ಪೌತ್ರ ಶ್ರೀ ಶ್ರೀಪತಿತೀರ್ಥ ಪೂಜ್ಯ ಪಾದಾನಾ೦ ಶಿಷ್ಯೇಣ ರಾಮಚಂದ್ರ ಭಿಕ್ಷುಣಾ ಕೃತಯಾ೦ ಶ್ರೀಮದ್ರುಗ್ಭಾಷ್ಯ ಟೀಕಾ ವಿವೃತೌ ದ್ವಿತೀಯಾಧ್ಯಾಯಃ ।।
ತಾತ್ಪರ್ಯ ಚಂದ್ರಿಕಾ ಟಿಪ್ಪಣಿ -
ತತ್ತ್ವ ಪ್ರಕಾಶಿಕಾ ವಿವೃತ್ತಿ
ಏಕಾದಶೀ ನಿರ್ಣಯ
ಐತರೇಯ ಭಾಷ್ಯ ಟೀಕಾ
ತತ್ತ್ವವಿವೇಕ ಟೀಕಾ ಟಿಪ್ಪಣಿ
ವಿಷ್ಣು ಸಂಹಿತಾ ವ್ಯಾಖ್ಯಾನ
ಪ್ರಮಾಣ ಪದ್ಧತಿ ವ್ಯಾಖ್ಯಾನ
ವಂದಾರು ಕಲ್ಪತರವೇ
ವಾದಿ ಕೈರವ ಭಾನವೇ !
ಶ್ರೀ ರಾಮಚಂದ್ರ ಗುರುವೇ
ನಮಃ ಕಾರುಣ್ಯ ಸಿಂಧವೇ !!
ಶ್ರೀ ಕಂಬಾಲೂರು ರಾಮಚಂದ್ರ ತೀರ್ಥರ ಚತುಶ್ಯಾಸ್ತ್ರ ಪಾಂಡಿತ್ಯ ಮತ್ತು ವಾಕ್ಯಾರ್ಥದಲ್ಲಿಯ ಪ್ರತಿಭೆಗಳನ್ನು ಕಂಡು ಪರವಾದಿಗಳು [ ಮಾಯವಾದಿಗಳು ] ಇವರೊಡನೆ ವಾದ ಮಾಡಲು ಅಂಜಿ ಚದುರಿ ಹೋಗುತ್ತಿದ್ದರು.
ಇವರು ಸಿಂಹದ ಗುಹೆ ಪ್ರವೇಶಿಸಿ ಸಿಂಹವನ್ನು ಹೊರಗೆ ತಂದು ಮರ್ದಿಸುವಂತೆ ಪ್ರೌಢ ವಾದಿಗಳ ಸ್ಥಳಕ್ಕೆ ಅವರೇ ಹೋಗಿ ವಾದಿಗಳನ್ನು ಕೆರಳಿಸಿ ಅವರೊಡನೆ ವಾದ ಮಾಡಿ ಪರಾಜಯಗೊಳಿಸಿ ಮಧ್ವ ಮತದ ಜಯಧ್ವಜವನ್ನು ಸರ್ವತ್ರ ಹಾರಾಡಿಸುತ್ತಿದ್ದರು.
ಅಂಥಾ ಮಹಾ ಮಹಿಮರು.
ಇವರು ಸಂಚಾರ ಕಾಲದಲ್ಲಿ ಶ್ರೀ ಮಠದ ಬಿರುದುಗಳ ಜೊತೆಯಲ್ಲಿ - ಸೆಗಣಿ ನೀರನ್ನು ತುಂಬಿಸಿ ಕಸ ಪೊರಕೆಯನ್ನು ಜೊತೆಗೊಳಿಸಿ ಒಬ್ಬ ಶಿಷ್ಯರಿಂದ " ವಾದಿಗಳು ವಾದಕ್ಕೆ ಬರಲಿ, ವಾದದಲ್ಲಿ ಸೋತರೆ ಸೆಗಣಿ ನೀರು ಕಸ ಪೂರೆಕೆಯ ಬಹುಮಾನ " ವೆಂದು ಘೋಷಿಸುತ್ತಿದ್ದರಂತೆ.
' ನಹಿ ಜ್ಞಾನೇನ ಸದೃಶಂ ಪವಿತ್ರಮಿಹವಿದ್ಯತೇ "
ಜ್ಞಾನ ಯಜ್ಞಕ್ಕೆ ಸಮಾನವಾದ ಯಜ್ಞವಿಲ್ಲ.
ಇದೆ ಭಗವಂತನ ಪ್ರಸಾದಕ್ಕೆ ಸಹಾಯಕವೆಂಬ ಮಾತಿಗೆ ಇವರೇ ನಿದರ್ಶನರಾಗಿದ್ದರೆಂದು ತಿಳಿದು ಬರುತ್ತದೆ.
ಇವರು ದೇವರ ಪೂಜಾದಿಗಳನ್ನು ಸಂಕೋಚ ಮಾಡಿ ಆ ಸಮಯವನ್ನು ಶಾಸ್ತ್ರ ಪ್ರವಚನಕ್ಕೆ ಮೀಸಲಾಗಿಟ್ಟಿದ್ದರಿಂದ ಅಜ್ಞ ಶಿಷ್ಯರಲ್ಲಿ ಹುಟ್ಟಿದ ದೇವತಾರ್ಚನೆಯ ಸಂಕೋಚದ ಆಕ್ಷೇಪಣೆಯನ್ನು ಇವರು ಆಂಧ್ರ ಭಾಷೆಯಲ್ಲಿ ಮಾತನಾಡುತ್ತಿದ್ದರಿಂದ
" ವಾಗ್ಬೊಮ್ಮಲೇ ಬೊಮ್ಮಲು "
ಎಂದು ಹೇಳಿ ಲೋಹ ಪ್ರತಿಮೆಗಳಿಗಿಂತಾ " ವಾಗ್ " ರೂಪವಾದ ಅಂದರೆ " ಪ್ರವಚನ ರೂಪವಾದ ಪ್ರತಿಮೆ " ಯಲ್ಲಿ ಭಾಗವದಾರಾಧನೆಯು ಶ್ರೇಷ್ಠವೆಂದರುಹಿ ಪರಿಹರಿಸಿದರು.
ಇವರು ಪೂರ್ವಾಶ್ರಮದಲ್ಲಿ ತೆಲುಗು ಭಾಷೆಯಲ್ಲಿ ಮಾತನಾಡುತ್ತಿದ್ದ ವೈಷ್ಣವ ಪಂಗಡಕ್ಕೆ ಸೇರಿದವರು ಆಗಿದ್ದರು.
ಪೂರ್ವಾಶ್ರಮದಲ್ಲಿಯೂ ಕೂಡಾ ಉದ್ಧಾಮ ಪಂಡಿತರಾಗಿ, ಪ್ರವಚನ, ವಾದಿ ನಿಗ್ರಹದಿಂದ ಪ್ರಖ್ಯಾತರಾಗಿ ಶ್ರೀ ಹರಿ ಸರ್ವೋತ್ತಮತ್ವ ಜ್ಞಾನದಲ್ಲಿ ದೃಢವಾದ ನಂಬಿಕೆಯಿಂದ ಹರಿಯನುಗ್ರಹಕ್ಕೆ ವಿಶೇಷವಾಗಿ ಪಾತ್ರರಾಗಿದ್ದರು.
ತಿರುಪತಿಯ ಶ್ರೀ ಶ್ರೀನಿವಾಸನಲ್ಲಿ ಇವರಿಗೆ ನಿಶ್ಚಲ ಭಕ್ತಿಯಿತ್ತು.
ಪೂರ್ವಾಶ್ರಮದಲ್ಲಿ ಇವರು ಒಂದು ಸಲ ನವರಾತ್ರಿಯಲ್ಲಿ ತಿರುಪತಿ ಶ್ರೀ ಶ್ರೀನಿವಾಸನ ದರ್ಶನಕ್ಕೆ ಹೋದರು.
ಜನ ಸಂದಣಿಯಲ್ಲಿ ಇವರಿಗೆ ದೇವರ ದರ್ಶನವಾಗುವ ಅವಕಾಶವೇ ಸಿಗಲಿಲ್ಲ.
ಎಷ್ಟು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ.
ಆಗ ಇವರು ಹೊರಗೆ ಬಂದು ಭಕ್ತಿ ಪಾರವಶ್ಯದಿಂದ ಆಪಾತತಃ ಅಪೇಕ್ಷ ರೂಪವಾದ ಅಂತಃ ಭಕ್ತಿ ಪಾರವಶ್ಯ ದ್ಯೋತಕವಾದ ಸ್ತೋತ್ರ ಮಾಡಿದರು.
ಐಶ್ವರ್ಯ ಮದಮತ್ತೋಸ್ತಿ
ಇದನೀಂ ಮಾಂ ಉಪೇಕ್ಷಸೇ ।
ವಾದಿನಾ೦ ಕಲಹೇ ಪ್ರಾಪ್ತೆ
ಅಹಮೇವ ಗತಿಸ್ತವ ।।
ಎಂದು ನುಡಿದಿರುವುದು ಇವರ ಪಾಂಡಿತ್ಯದ ಕೆಚ್ಚು, ವಾದಿ ನಿಗ್ರಹ ಸಾಮರ್ಥ್ಯ ಮತ್ತು ತಾವು ಭಗವತ್ಪ್ರಸಾದಕ್ಕೆ ಪಾತ್ರರೆಂಬ ದ್ರಢ ನಂಬಿಕೆಯನ್ನು ಸ್ಪಷ್ಟ ಪಡಿಸುತ್ತದೆ.
ಇವರ ಅನುಸಂಧಾನದಂತೆ ಕ್ಷಿಪ್ರದಲ್ಲಿ ಶ್ರೀ ಶ್ರೀನಿವಾಸನು ಅರ್ಚಕನಲ್ಲಿ ಆವೇಶ ಬಂದು ಹೇಳಿದ ಪ್ರಕಾರ ದೇವಸ್ಥಾನದ ಅಧಿಕಾರಿಗಳು ಹೊರಗೆ ಬಂದು ಇವರನ್ನು ಗುರುತಿಸಿ ದೇವರ ದರ್ಶನ ಮಾಡಿಸಿ ಬಹು ವಿನಯದಿಂದ ಬೀಳ್ಕೊಟ್ಟರು.
" ಪೆನ್ನತ್ತೂರು "
ಎಂಬ ದೊಡ್ಡ ಬ್ರಾಹ್ಮಣರ ಗುಂಪು ಇವರ ಕಾಲದಲ್ಲಿ ಇವರ ಮಹಿಮೆಗೆ ಮಾರುಹೋಗಿ ಶ್ರೀ ಶ್ರೀಗಳವರಿಂದ ತಪ್ತ ಮುದ್ರಾದಿಗಳನ್ನು ಸ್ವೀಕರಿಸಿ ವೈಷ್ಣವರಾಗಿ ಇಂದಿಗೂ ಶ್ರೀಮಠದ ಶಿಷ್ಯರಾಗಿದ್ದಾರೆ.
by ಆಚಾರ್ಯ ನಾಗರಾಜು ಹಾವೇರಿ
ಗುರು ವಿಜಯ ಪ್ರತಿಷ್ಠಾನ
***
year 2021
ಶ್ರೀಂ ಶ್ರೀ ಕಂ ಕಪಿಲಾಯ ನಮಃ
ಮಾರ್ಗಶಿರ ಶುಕ್ಲ ತೃತೀಯಾ
ವಂದಾರು ಕಲ್ವತರವೇ ವಾದಿ ಕೈರವ ಭಾನವೇ/
ಶ್ರೀರಾಮಚಂದ್ರಗುರವೇ ನಮಃ ಕಾರುಣ್ಯಸಿಂಧವೇ//
ಶ್ರೀಮಧ್ವಭಾಷ್ಯಾಣಿ ಜಯಾರ್ಯಟೀಕಾ ಶ್ರೀ ವ್ಯಾಸತೀರ್ಥಾರ್ಯನಿಬಂಧನಾನಿ|ಶ್ರೀರಾಮಚಂದ್ರಾರ್ಯ ಕೃತಪ್ರಬಂಧಾಃ ಕುರ್ವಂತು ಸರ್ವೇ ಮಮ ಸುಪ್ರಭಾತಮ್
( ಶ್ರೀ ಲಕ್ಷ್ಮೀವಲ್ಲಭತೀರ್ಥ ಕೃತ ಪ್ರಭಾತಪಂಚಕಸ್ತೋತ್ರ)
ಯೇ ರಾಮಚಂದ್ರ ಮುನಿರಾಜಪದಾಂಬುಜಾತ ವಿನ್ಯಸ್ತಮಾನಸರೋಜ ವಿರಾಜಮಾನಾಃ|ತದ್ದಿವ್ಯಕೀರ್ತಿ ವಶವರ್ತಿವಚೋವಿಲಾಸಾಸ್ತೇ ವೈಷ್ಣವಾ ಭುವನಮಾಶು ಪವಿತ್ರಯಂತಿ ( ಶ್ರೀಲಕ್ಷ್ಮೀವಲ್ಲಭತೀರ್ಥ ಕೃತ ಪಂಚವೈಷ್ಣವರತ್ನ ಸ್ತೋತ್ರ)
ಯನ್ನಾಮಸ್ಮರಣಂ ಲೋಕೇ ಪ್ರತಿವಾದೀಭಕೇಸರಿ|ತಂ ನೌಮಿ ರಾಮಚಂದ್ರಾಖ್ಯಂ ಭಿಕ್ಷುಮಕ್ಷೋಭ್ಯದೇಶಿಕಮ್
(ಶ್ರೀ ಲಕ್ಷ್ಮೀನಾಥ ತೀರ್ಥರು- ನ್ಯಾಯಾಮೃತವ್ಯಾಖ್ಯಾನ)
ಯನ್ನಾಮಕೀರ್ತನಾದೇವ ಭಿದ್ಯತೇ ವಿದುಷಾಂ ಮನಃ| ರಾಮಚಂದ್ರಗುರೂನ್ ವಂದೇ ಸರ್ವಶಾಸ್ತ್ರವಿಶಾರದಾನ್ ( ಶ್ರೀಲಕ್ಷ್ಮೀನಾಥ ತೀರ್ಥರು- ತಾತ್ಪರ್ಯಚಂದ್ರಿಕಾಸುಬೋಧಿನಿ)
ದ್ವೈತವೇದಾಂತದ ಟಿಪ್ಪಣಿ ವಾಙ್ಮಯಕ್ಕೆ ಉತ್ಕೃಷ್ಟ ಕೊಡುಗೆ ನೀಡಿದ ಮಹನೀಯರು, ಉತ್ತಮ ವಾದಕೋವಿದರು, ಮಹಾತಪಸ್ವಿಗಳು,ಏಕಕಾಲದಲ್ಲಿ ಆರು ಸಾವಿರ ಜನರಿಗೆ ವೈಷ್ಣವದೀಕ್ಷೆಯನ್ನು ನೀಡಿದ (ಈ ಆರು ಸಾವಿರ ಜನರೇ ಆರುವೇಲುಗಳು ಎಂದು ಕರೆಸಿಕೊಳ್ಳುವ ಪಂಗಡದವರು)
ನ್ಯಾಯಸುಧಾ ಟಿಪ್ಪಣೀ, ಶ್ರೀಋಗ್ಭಾಷ್ಯಟೀಕಾವಿವೃತಿ, ತಾತ್ಪರ್ಯಚಂದ್ರಿಕಾ ಟಿಪ್ಪಣಿ, ತತ್ವಪ್ರಕಾಶಿಕಾವಿವೃತಿ, ಏಕಾದಶೀನಿರ್ಣಯ, ಐತರೇಯಭಾಷ್ಯಟೀಕಾ, ತತ್ವವಿವೇಕಟೀಕಾಟಿಪ್ಪಣಿ,ವಿಷ್ಣುಸಂಹಿತಾ ವ್ಯಾಖ್ಯಾನ ಗ್ರಂಥಗಳನ್ನು ರಚಿಸಿದವರೂ..
ನೀನೆ ಇಲ್ಲೆಂದು ವಾದಿಸೆ ನಾನೇ ಗತಿಯು ನಿನಗೆ|ಎಂದು ನಿಂದಾಸ್ತುತಿಯನ್ನು ಮಾಡಿ| ಶ್ರೀನಿವಾಸನ ದರ್ಶನ ಸಿರಿಯ ಪಡೆದ| ವೀರವೈಷ್ಣವ ಕರ್ಮಂದಿವರರು ಇವರು|ಜ್ಞಾನಸಾಗರ ಮಾಧವನ ಪ್ರಿಯತಮರು
( ಪ್ರಸ್ತುತ ಶ್ರೀಮಾಧವತೀರ್ಥ ಸಂಸ್ಥಾನದ ಪೀಠಾಧಿಪತಿಗಳಾದ ಶ್ರೀವಿದ್ಯಾಸಾಗರ ಮಾಧವತೀರ್ಥರು ಶ್ರೀಕಂಬಾಲೂರು ರಾಮಚಂದ್ರತೀರ್ಥರ ಕುರಿತು ರಚಿಸಿದ ಕೀರ್ತನೆ - ಪೂರ್ವಾಶ್ರಮದಲ್ಲಿ ಶ್ರೀಕಂಬಾಲೂರು ರಾಮಚಂದ್ರತೀರ್ಥರ ಪೂರ್ವಾಶ್ರಮದ ವಂಶಸ್ಥರು)
16ನೆಯ ಶತಮಾನದ ಪರಮ ಮಹಿಮಾನ್ವಿತ ಯತಿಗಳು, ಸೋಸಲೆ ಶ್ರೀ ವ್ಯಾಸರಾಜಮಠದ ಸಂಪ್ರದಾಯ ಪ್ರವರ್ತಕರೂ, ಶ್ರೀ ವಿಜಯೀಂದ್ರತೀರ್ಥರ ವಿದ್ಯಾ ಶಿಷ್ಯರು, ಶ್ರೀ ರಾಯರಿಗೂ ಪೂರ್ವಾಶ್ರಮದಲ್ಲಿ ವಿದ್ಯೆಯನ್ನು ಕಲಿಸಿದವರು, ಶ್ರೀಪತಿತೀರ್ಥರ ಶಿಷ್ಯರು, ಶ್ರೀ ಲಕ್ಷ್ಮೀ ವಲ್ಲಭತೀರ್ಥರ ಗುರುಗಳು, ವಾದಿಗಳ ಮದವಿಳಿಸಿದ ವಾದಿ ನಿಗ್ರಹರು, ಜ್ಞಾನಿಕುಲಾಗ್ರಗಣ್ಯರು,
ಋಗ್ ಭಾಷ್ಯಕ್ಕೆ , ಶ್ರೀಮದ್ಭಾಗವತಕ್ಕೆ ಟಿಪ್ಪಣಿ ಬರೆದವರು, ನ್ಯಾಯಸುಧಾ ವಿವೃತ್ತಿ, ಬ್ರಹ್ಮಸೂತ್ರಕ್ಕೆ ವಿವೃತ್ತಿ ಮೊದಲಾದ ಶ್ರೇಷ್ಠ ಗ್ರಂಥಗಳನ್ನು ರಚನೆ ಮಾಡಿದವರೂ ಆದ ಶ್ರೀ ಕಂಬಾಲೂರು ರಾಮಚಂದ್ರತೀರ್ಥರ ಮಧ್ಯಾರಾಧನೆ ರಾಯವೇಲೂರಿನಲ್ಲಿ.
ವಂದಾರು ಕಲ್ವತರವೇ ವಾದಿ ಕೈರವ ಭಾನವೇ/
ಶ್ರೀರಾಮಚಂದ್ರಗುರವೇ ನಮಃ ಕಾರುಣ್ಯಸಿಂಧವೇ//
ಶಬ್ದೇ ತರ್ಕೇ ಚ ವೇದಾಂತೇ ಭಾಟ್ಟೇ ಪ್ರಾಭಾಕರೇ ತಥಾ| ರಾಮಚಂದ್ರಗುರೋಸ್ತುಲ್ಯಃ ಕೋ ನು ವಾ ವರ್ತತೇ ಭುವಿ ( ಶ್ರೀ ಲಕ್ಷ್ಮೀನಾಥ ತೀರ್ಥರು- ತರ್ಕತಂಡವ ವ್ಯಾಖ್ಯಾನ)
ಇತಿ ಶ್ರೀಮತ್ಪರಮಹಂಸ ಪರಿವ್ರಾಜಕಾರ್ಯಾಣಾಂ ಯತಿಕುಲತಿಲಯತಿರಾಜರಾಜಯತಿ ಸಾರ್ವಭೌಮಾನಾಂ ಶ್ರೀವ್ಯಾಸತೀರ್ಥಪೂಜ್ಯಪಾದಾನಾಂ ಪರಮಾನುಗ್ರಹಹೇಣ ಸರ್ವಾವನಿಪತಿಸಭಾಸು ವಿಷ್ಣೋಃ ಸರ್ವೋತ್ತಮತ್ವಸ್ಥಾಪನೇನ ದಿಗಂತಕೀರ್ತಿಸಂಪನ್ನಾನಾಂ ಶ್ರೀರಾಮಚಂದ್ರಪೂಜ್ಯಪಾದಾನಾಂ ದಯಯಾ.. (ಶ್ರೀಲಕ್ಷ್ಮೀನಾಥ ಕೃತ ತಾತ್ಪರ್ಯಚಂದ್ರಿಕಾಸುಬೋಧಿನೀ)
ಸಾದ್ವಿಮಾನಂ ಸುಧಾಯಾ ಯಃ ಸಮ್ಯಜ್ಙ್ಞಾಪಿತವಾನ್ ಭುವಿ| ರಾಮಚಂದ್ರ ಗುರುಂ ನೌಮಿ ವಿದ್ವನ್ಮುಕುಟಮಂಡನಮ್ (ಶ್ರೀಕುಂಡಲಗಿರಿ ಆಚಾರ್ಯರು- ನ್ಯಾಯಸುಧಾಟಿಪ್ಪಣೀ)
ಪೂರ್ಣಬೋಧಗುರೂನ್ ವಂದೇ ಜಯಾರ್ಯಾನ್ ವ್ಯಾಸದೇಶಿಕಾನ್|ರಾಮಚಂದ್ರಗುರೂನಾರ್ಯಾನ್ ಲಕ್ಷ್ಮೀನಾಥಗುರೂನಪಿ ( ಶ್ರೀಜಗನ್ನಾಥತೀರ್ಥಕೃತ ಭಾಷ್ಯದೀಪಿಕಾ)
ಹೀಗೆ ಅನೇಕ ಜ್ಞಾನಿ ವರೇಣ್ಯರಿಂದ ಸ್ತುತಿಸಲ್ಪಟ್ಟ ಮಹಾತಪಸ್ವಿಗಳು ಶ್ರೀಕಂಬಾಲೂರು ರಾಮಚಂದ್ರ ತೀರ್ಥರು. ಶ್ರೀವ್ಯಾಸರಾಜರ ಅನಂತರ ಐದನೆಯವರಾಗಿ ಪೀಠವನ್ನಾಳಿದ ಶ್ರೀಗಳವರಲ್ಲಿ ಸರ್ವತಂತ್ರ ಸ್ವತಂತ್ರ ಎಂಬ ಬಿರುದು ಅರ್ಥವತ್ತಾಗಿತ್ತು.
ಅವರು ಸಂಚರಿಸುವಾಗ ದ್ವೈತ ಸಿದ್ಧಾಂತದ ವಿರೋಧಿಗಳಾದ ದುರ್ವಾದಿಗಳೆಲ್ಲರೂ ಶ್ರೀಗಳವರ ಕಾಲ್ಕೆಳಗೆ ಸಿಕ್ಕಿ ನರಳುತ್ತಿರುವರು;ಯಾರು ಬೇಕಾದರೂ ಬಂದು ವಾದದಲ್ಲಿ ಜಯಿಸಿ ಬಿಡಿಸಿಕೊಳ್ಳಬಹುದು ಎಂಬುದಾಗಿ ಅವರ ಭೃತ್ಯರು ಸಾರುತ್ತಿದ್ದರೆಂದಮೇಲೆ ಅವರಿಗಿದ್ದ ಆಳವಾದ ಜ್ಞಾನ, ವಿದ್ವತ್ತು ಮತ್ತು ವಾದಕೌಶಲತೆ ಎಷ್ಟಿರಬೇಡ!!
ಗ್ರಂಥರಚನೆಯಲ್ಲೂ ಮಹಾದ್ಭುತ ಸಾಮರ್ಥ್ಯವನ್ನು ಹೊಂದಿದ ಶ್ರೀಗಳವರು ಶ್ರೀಮನ್ಯಾಯಸುಧಾ ವ್ಯಾಖ್ಯಾನದಲ್ಲಿ , ಇತರ ವ್ಯಾಖ್ಯಾನಗಳಲ್ಲಿ ಸ್ಪಷ್ಟವಾಗಿ ವಿವರಿಸದಿರುವ ವಿಷಯಗಳನ್ನು ಹೇರಳವಾಗಿ ತಮ್ಮ ವ್ಯಾಖ್ಯಾನದಲ್ಲಿ ತಿಳಿಸುವುದರ ಜೊತೆಗೆ ತಮ್ಮದೇ ಒಂದು ನೂತನ ಭಾವವನ್ನು ಮೂಲಗ್ರಂಥದಿಂದ ತೆಗೆದುಕೊಂಡು ಅನೇಕ ಆಕ್ಷೇಪಗಳನ್ನು ಪರಿಹರಿಸಿ ನ್ಯಾಯಸುಧಾ ಗ್ರಂಥದ ಗಾಂಭೀರ್ಯತೆಯನ್ನು ತಿಳಿಸಿದ್ದಾರೆ.
ಪ್ರತಿವಾದಿಗಳೊಂದಿಗೆ ವಾದ ಮಾಡುವ ಅವಕಾಶವಿದ್ದಾಗ ದೇವರ ಪೂಜೆಯನ್ನು ಸಂಕೋಚಗೊಳಿಸುತ್ತಿದ್ದ ಶ್ರೀರಾಮಚಂದ್ರತೀರ್ಥರು, ಅರ್ಥಮಾಡಿಕೊಳ್ಳದ ಕೆಲವರು ಆಕ್ಷೇಪಿಸಿದಾಗ ವಾಗ್ಬೊಮ್ಮಲೇ ಬೊಮ್ಮಲು ( ವಾಗ್ಬ್ರಹ್ಮವೇ ಬ್ರಹ್ಮ) ಎಂದು ಉತ್ತರಿಸುತ್ತಿದ್ದರು.
ಪೂರ್ವಾಶ್ರಮದಿಂದ ಮಹಾ ತಪಸ್ಸನ್ನುಳ್ಳ, ಮಹಾ ಜ್ಞಾನಿಗಳಾದ ಇವರು ಒಮ್ಮೆ ತಿಮ್ಮಪ್ಪನ ದರ್ಶನಕ್ಕೆ ಹೋದಾಗ ದರ್ಶನವು ಆಗದೇ, ಸ್ವಲ್ಪ ಅವಹೇಳನಕ್ಕೆ ಗುರಿಯಾದಾಗ, ಆ ಕ್ಷಣದಲ್ಲಿ ಅವರು ತಿಮ್ಮಪ್ಪನ ಕುರಿತು ಐಶ್ವರ್ತಮದಮತ್ತಃ ಸನ್ನಿದಾನೀಂ ಮಾಮುಪೇಕ್ಷಸೇ|ವಾದೀನಾ ಕಲಹೇ ಪ್ರಾಪ್ತೇ ಹ್ಯಹಮೇವ ಗತಿಸ್ತವ
(ಎಲೈ ಶ್ರೀನಿವಾಸ, ಐಶ್ವರ್ಯದ ಮದದಿಂದಾಗಿ ನೀನೀಗ ನನ್ನನ್ನು ಕಡೆಗಣಿಸಿಸುತ್ತಿರುವಿ. ಆದರೆ ವಾದಿಗಳೊಂದಿಗೆ ಚರ್ಚೆ ನಡೆದಾಗ ನಿನಗೆ ನಾನೇ ಗತಿ) ಎಂದು ನಿಂದಾ ಸ್ತುತಿ ರಚಿಸಿದರು. ನಂತರ ಸ್ವಾಮಿಯೇ ತನ್ನ ಭಕ್ತರಾದ ಇವರನ್ನು ಸೂಚನೆಕೊಟ್ಟು ದರ್ಶನ ಒಳಗೆ ಕರೆಸಿಕೊಂಡ. ಇದು ಅವರ ಭಕ್ತಿಗೆ ದ್ಯೋತಕ.
ಶ್ರೀಗಳವರು ಶ್ರೀಮುಷ್ಣಕ್ಷೇತ್ರದಲ್ಲಿ ಶ್ರೀಲಕ್ಷ್ಮೀನರಸಿಂಹ ದೇವರನ್ನು, ತಮಿಳುನಾಡಿನ ಕಡಲ್ಲೂರು ಜಿಲ್ಲೆಯ ಪನ್ ರುಟಿ ತಾಲೂಕಿನ ಗ್ರಾಮವೊಂದರಲ್ಲಿ ಶ್ರೀಲಕ್ಷ್ಮೀನಾರಾಯಣ ದೇವರನ್ನು ಪ್ರತಿಷ್ಠಾಪಿಸಿದ್ದಾರೆ. ಆ ಊರು ಅಂದಿನಿಂದ ಲಕ್ಷ್ಮೀನಾರಾಯಣಪುರಂ ಎಂದೇ ಪ್ರಸಿದ್ಧಿ ಪಡೆದಿದೆ.
ಕುಂಭಕೋಣದಲ್ಲಿ ಕೃಷ್ಣಶಾಸ್ತ್ರಿ ಎಂಬ ವಾದಿಯೊಂದಿಗೆ ಸೋತವರು ಮಠತ್ಯಾಗ ಮಾಡಬೇಕು ಎನ್ನುವ ಷರತ್ತಿನೊಂದಿಗೆ ವಾದ ಮಾಡಿ, ಪರಾಭವಗೊಳಿಸಿ, ಕರಾರಿನಂತೆ ಪರವಾದಿಗಳು ತಮ್ಮ ಮಠವನ್ನು ಶ್ರೀಗಳವರಿಗೆ ಒಪ್ಪಿಸಿದ. ಅದೇ ಸ್ಥಳವೇ ಮುಂದೆ ವ್ಯಾಸರಾಜ ಮಠದ ಕೇಂದ್ರಸ್ಥಾನವಾಯಿತು.
ಹೀಗೆ ಸರ್ವತೋಮುಖದಿಂದ ಸಾಧನೆಗಳನ್ನು ಮಾಡಿದ ಮಹಾ ಜ್ಞಾನಿಗಳಾದ, ಶ್ರೀನ್ಮೂಲಗೋಪಾಕ ಕೃಷ್ಣ,ಪಟ್ಟಾಭಿರಾಮ,ಶ್ರೀವೇದವ್ಯಾಸ, ಶ್ರೀಲಕ್ಷ್ಮೀನಾರಸಿಂಹನ ಆರಾಧಕರಾದ ಶ್ರೀರಾಮಚಂದ್ರ ತೀರ್ಥರ ಉತ್ತರ ಆರಾಧನೆಯ ಶುಭಸ್ಮರಣೆಗಳು
-Smt. Padma Sirish
ನಾದನೀರಾಜನದಿಂ ದಾಸಸುರಭಿ
***
श्रीरामचंद्रगुरवे नम: कारुण्यसिंधवे ।
No comments:
Post a Comment