info is from sumadhwaseva.com--->
kArthIka krishNa amAvAsya,, was that ArAdhanE of shri mahipati dAsaru.
SRI MAHIPATI DASARU
ಜಗದ್ಗುರುಮ್ ಕೃಪಾಸಿಂಧುಮ್ ಶರಣಾಗತ ವತ್ಸಲಮ್
ಭಕ್ತಮಾನಸ ಸಂಚಾರಂ ಮಹೀಪತಿ ಗುರುಂ ಭಜೇ
ಸ್ವಭಕ್ಥಾನುಗ್ರಹಾರ್ಥಾಯ ಸಾಮೀಪ್ಯಾತ್ ಧ್ರುವಮಾಗಥಾನ್
ಮಹೀಪತಿಗುರೂನ್ ವಂದೇ ಸರ್ವವಿದ್ಯಾವಿಶಾರದಾನ್ |
जगद्गुरुम् कृपासिंधुम् शरणागत वत्सलम्
भक्तमानस संचारं महीपति गुरुं भजे
स्वभक्थानुग्रहार्थाय सामीप्यात् ध्रुवमागथान्
महीपतिगुरून् वंदे सर्वविद्याविशारदान् ।
Aradhana: Karthika krishNa Amavasye
Period: 1611 – 1681
Family: Kathavate
Guru: Kolhara Prahlad Krishnacharya
Father: Koneriraya
Education: His father
Employment: He worked as Accountant for the Nawaab for some time
Languages known: Kannada, Sanskrit, Hindi, Marathi, Urdu & Persian
Vyavahara naama: Mahipati Rayaru
Ankita:
Mahipati, ಮಹಿಪತಿ, ದೀನಮಹಿಪತಿ, ತರಳಮಹಿಪತಿ, ದಾನಮಹಿಪತಿ, ಮೂಢಮಹಿಪತಿ, ನರಕೀಟಕಮಹಿಪತಿ, ಬಾಲಕಮಹಿಪತಿ, ಪುತ್ರಮಹಿಪತಿ, ಮಹಿಪತಿಗುರು, ಮಹಿಪತಿತಂದೆ, ಮಹಿಪೆಮ್ಮ
brindAvana: Khakandaki
This place is famous for Shri. Mahipati Rayara Vrundaavana and the Aaradhane festival happens on Chchatti Amavasya of every year.
Upanyaasa in Urdu – Once Sri Mahipathi Dasaru was rendering upanyasa in a Nrusimha Temple in Vijapur. Hundreds of people were listening to his pravachana. At that time a minister of Adilshaha by name Khavaas Khan heard about the pravachana of Dasaru and requested him to come to his house and render the upanyasa, which the Dasaru readily agreed and did the pravachana in his house also in Urdu and Parsi language. It delighted all the Muslims as well.
know more:-
For devaranama – click here
Hrudaya Shuddavagade – click
ಮಹಿಪತಿದಾಸರ ಕೋಲು ಕೋಲೆನ್ನ ಕೋಲೆ – Kolu kolenna kole song by Mahipathi Dasaru – Click
info from dvaita.org--->
Sri Mahipathi Dasaru (1611-1681)
Sri Mahipathi Dasa was the son of Sri Koneri Rao, an orthodox and ardent devotee of Sri Hari.
When Koneri Rao wanted to perform the Upanayana of his son the astrologer who saw his horoscope predicted that Mahipathi would lead a royal life and become a sacred yogi.
Mahipathi continued his early education with his father and became a popular scholar like him. He became very fluent in Sanskrit, Marathi, Hindi, Kannada, Urdu and Persian. His philosophical discourses were very popular and attended by thousands.
One day, Khawas Khan a minister in Adil Shah's court was passing by the Narasimha Temple where Mahipathi Rao was conducting a discourse and saw thousands of people listening to the discourse. Khan listened for some time and liked what he heard. He wanted a discourse to be conducted in his house too. Mahipathi immediately agreed to do so.
The next day, Mahipathi conducted a discourse in Khan's house. He explained incidents from Bhagawatha, Ramayana etc in urdu and parsi, languages which the people in the house understood. His discourse was so well liked that it became a practice and henceforth discourses were conducted both in Khan's house and the temple. Many muslims, including mullas, attended his discourse and appreciated his knowledge and scholarly attitude.
Once, the Nawab's auditors were in a fix as they could not rectify a mistake in their accounts. Somebody suggested that Mahipathi should be consulted as he was good at accounts. When Mahipathi saw the accounts he immediately identified the mistake. The Nawab was very happy and appointed Mahipathi as his courtier. Eventually, Mahipathi's sincerity and hard-work made him the Diwan.
Mahipathi married a girl called Tirumala, and led a very simple and austere life, even though he could afford luxuries and comforts.
In Bijapur, there lived a brother and sister called Shahanunga and Shahanungi. They belonged to the Soophi sect and were very popular as they could predict the future. However, their existence and character seemed to something of a mystery as nobody knew where they lived, what they ate, or wore. They were very pious and respected by both Hindus and Muslims.
One day, Mahipathi was inspecting some construction work on the banks of a water tank. Shahanunga came there and was curious to know what Mahipathi had in his hand. Mahipathi told him that it was the Nawab' ring (raja mudra). Shahanunga begged Mahipathi to give the ring and upon receiving it, threw it into the the tank. Mahipathi was scared as the ring was a symbol of the Nawab's position and power, and could not be trifled with. So he pleaded with Shahanunga to retrieve the ring. Shahnunga asked his sister to get the ring. She immediately retrieved hundreds of identical rings from the water. The baffled Mahipathi could not identify the Nawab's ring and requested Shahanunga to help him, whereupon Shahanunga retrieved his ring and uttering the words 'mouthghaghana mouthghaghana throw this throw this' he disappeared.
Mahipathi could not understand Shahnunga's utterance [mouthghghana means smell of dead body] or its significance. After pondering about this for a while he gave up and decided to approach Shahnunga himself for an explanation. This was not easy as Shahnunga's whereabouts were difficult to predict. Finally, after great effort, Mahipathi finally met Shahnunga and prostrated before him, asking him to explain the significance and accept him (Mahipathi) as a disciple. Shahnunga told him to go to Bhaskar Swamy who was living in Saravada and take him as his preceptor.
After this Mahipathi decided give up his position and go to Bhaskar Swamy. Even though the Nawab was initially reluctant to let him go, he relented on hearing Mahipathi's goal, and wished him luck. Even Tirumala was happy with Mahipathi's decision and decided to accompany him to Sarawada.
Bhaskar Swamy was very famous in Karanataka and Maharashtra. Even though Sarawada was a small village, his presence attracted a number of devotees, turning Sarawada into a piligrimage centre.
Mahipathi and his wife went to Bhaskar Swamy for obtaining sacred and philosophical knowledge. Bhaskar Swamy accepted Mahipathi as his disciple and gave him upadEsha. He also blessed the couple to have illustrious children. Mahipathi and his wife stayed with Bhaskar Swamy for some time before going to their native place in Bijapur.
Later, Mahipathi went to Shapura village in Gulbarga district, where he selected the Sri Hanuman Temple on the banks of the Mandakini river as the setting for his activites. From then on, he became known as Mahipathi Dasa and composed many songs with the ankitha 'mahipathi'. He spent the rest of his life conducting philosophical discourses, bhajans and other devotional activites.
Sri Mahipathi Dasa had two sons - Devaraya and Krishnaraya. Devaraya chose the career of a warrior and became the leader of some small army. Krishnaraya followed in his father's footsteps and became a haridasa, and composed many songs.
sadvastuvina balagoMbekOle
kOlunikkuta banni bAlErellaru kUDi
myAlye maMdirada hAdEli kOle
myAlye maMdiradoLu bAlamukuMdatAnu
lOlyADuta oLagiddAne kOle
AdigiMtalyade hAdi anAdiyu
sAdhisa banni odaginnu kOle
sAdhisi baralikke sAdhyavAgutalyAde
bhEdisi nODi manadali kOle
kaNNinoLihya bOMbekANabaruttade
jANyEru nIvu tiLakoLLikOle
jANyEru nIvu kANade hOgabyADi
jANrisuthAne sadguru kOle
sadgurupAdake sadbhAvaviTTu nEvu
sadbhOdha kEli sAdhisi kOle
sAdhisi kELi nIvu budhajanaroDagUDi
caduratanadali ati byAge kOle
arahuveMda sIreyanuTTU kuravheMba kuppasali
iruvaMti puShTali muDidinnu kOle
muDidu baralu pUrNa oDigUDi barutAne
baDAvanA dAri balagoMbe kOle
balagoMbe sAdhanavu nelegODu mADabEku
valavhAMga tAne SrIhari kOle
SrIhari muMde nIvu sOhya tiLidubanni
sAhyamADuva ihaparake kOle
ihaparake dAta mahipatiswAmi
sahakAranobba SrIpatikOle
SrIpatistuti kODaDalikke pUrNa
bhukti muktiya nEDu tAne kOle||
******
ದಾಸರ ಹೆಸರು : ಕಾಖಂಡಕಿ ಶ್ರೀ ಮಹಿಪತಿರಾಯರು
ಜನ್ಮ ಸ್ಥಳ : ಐಗಳಿ(ಅಥಣಿ ತಾಲೂಕು: ಬೆಳಗಾವಿ ಜಿಲ್ಲೆ)
ತಂದೆ ಹೆಸರು : ಕೋನೇರಿರಾಯರು
ತಾಯಿ ಹೆಸರು : ಮಾಹಿತಿ ಲಭ್ಯವಿಲ್ಲ
ಕಾಲ : 1640 check
ಅಂಕಿತನಾಮ : ಮಹಿಪತಿ, ದೀನಮಹಿಪತಿ, ತರಳಮಹಿಪತಿ, ದಾನಮಹಿಪತಿ, ಮೂಢಮಹಿಪತಿ, ನರಕೀಟಕಮಹಿಪತಿ, ಬಾಲಕಮಹಿಪತಿ, ಪುತ್ರಮಹಿಪತಿ, ಮಹಿಪತಿಗುರು, ಮಹಿಪತಿತಂದೆ, ಮಹಿಪೆಮ್ಮ
ಲಭ್ಯ ಕೀರ್ತನೆಗಳ ಸಂಖ್ಯೆ : 850
ಗುರುವಿನ ಹೆಸರು : ಭಾಸ್ಕರಸ್ವಾಮಿಗಳು ( ಸಾರವಾಡ)
ರೂಪ : ಹರಿದಾಸರು
ಪೂರ್ವಾಶ್ರಮದ ಹೆಸರು : ಗುರುರಾಯರು
ಮಕ್ಕಳು: ಅವರ ಹೆಸರು : ಕೃಷ್ಣರಾಯರು, ದೇವರಾಯರು
ಕೀರ್ತನೆಗಳಲ್ಲದೆ ಇತರ ಲಭ್ಯ ಕೈತಿಗಳು : ಮಾಹಿತಿ ಲಭ್ಯವಿಲ್ಲ
ಪತಿ: ಪತ್ನಿಯ ಹೆಸರು : ತಿಮ್ಮವ್ವ
ಒಡಹುಟ್ಟಿದವರು : ಒಬ್ಬರಿದ್ದರು ಹೆಸರು ಗೊತ್ತಿಲ್ಲ
ವೃತ್ತಿ : ಪ್ರಾರಂಭದಲ್ಲಿ ಪುರಾಣಿಕ ವೃತ್ತಿ, ನಂತರ ಆದಿಲಶಾಹಿ ಆಸ್ಥಾನದಲ್ಲಿ ಅಧಿಕಾರ, ಅದನ್ನು ತ್ಯಾಗ ಮಾಡಿ ಹರಿದಾಸರಾದರು. ಕೊನೆಗೆ ಸಂನ್ಯಾಸ ಸ್ವೀಕಾರ ಮಾಡಿದರು.
ಕಾಲವಾದ ಸ್ಥಳ ಮತ್ತು ದಿನ : ಕ್ರಿ.ಶ. 1700 ರ ಕಾರ್ತೀಕ ಅಮಾವಾಸ್ಯದಂದು ಬಿಜಾಪುರ ಜಿಲ್ಲೆಯ ಮತ್ತು ದಿನ ಕೊಲ್ಹಾರದಲ್ಲಿ
ವೃಂದಾವನ ಇರುವ ಸ್ಥಳ : ಕಾಖಂಡಕಿ (ಬಿಜಾಪುರ ಜಿಲ್ಲೆ)
ಕೃತಿಯ ವೈಶಿಷ್ಟ್ಯ : ಧರ್ಮ ಸಮನ್ವಯದ ಸಂದೇಶ, ಮೂರೂವರೆ ಮೊಳದ ದೇಹ ಶುದ್ಧಿಯನ್ನು ಪಡೆಯದೆ ದ್ವೈತ ಅದ್ವೈತ ಎಂದು ಯಕೆ ಬಡಿದಾಡುತ್ತಿದ್ದೀ ಎಂದು ಕೇಳಿದರು. ನಮಕಾಳೀನ ಸಮಾಜರೊಂದಿಗೆ ಜಾತಿ ಮತಕುಲಗಳ ಭೇದವಿಲ್ಲದೆ ಬೆರೆದು ಅಕ್ಕೋನ್ನತಿಯ ಮಾರ್ಗವನ್ನು ತೋರಿದರು. ಧರ್ಮ ಹಾಗೂ ಸಂಸ್ಕøತಿಯನ್ನು ಪುನರುಜ್ಜೀವಿಸಿದರು.
ಇತರೆ : ಕನ್ನಡ ಭಾಷೆಯಲ್ಲಿ ಅಲ್ಲದೆ ಮರಾಠಿ ದರಾಣಿ ಉರ್ದು ಮತ್ತು ಬಹು ಭಾಷಾ ಕೃತಿಗಳನ್ನು ರಚಿಸಿದ್ದಾರೆ.
****
info from kannadasiri.in
ಮಹಿಪತಿರಾಯರು ವಿಜಾಪುರ ಜಿಲ್ಲೆಯ ಕಾಖಂಡಕಿ ಗ್ರಾಮದಲ್ಲಿ ನೆಲೆಸಿದವರು. ಮಧ್ಯಯುಗೀನ ಕಾಲದ ಮುಸಲ್ಮಾನರ ಅರಸೊತ್ತಿಗೆಯಲ್ಲಿ ಬಾಳಿದವರು.
14ನೇಯ ಶತಮಾನದ ಪ್ರಾರಂಭದಲ್ಲಿ ದೇವಗಿರಿ ಯಾದವರ ತರ್ದವಾಡಿ-1000ದ ಭಾಗವಾಗಿದ್ದ ವಿಜÁಪುರವು ಅನಂತರ ಮುಸ್ಲಿಮರಿಗೆ ಸೇರಿ 15ನೆಯ ಶತಮಾನದ ಉತ್ತರಾರ್ಧದಲ್ಲಿ ಬೀದರದಿಂದ ನಡೆಯುತ್ತಿದ್ದ ಬಹಮನಿ ರಾಜ್ಯದಲ್ಲಿಯ ಒಂದು ಸುಭೆಯಾಗಿತ್ತು. ಕ್ರಿ. ಶ. 1471 ರಲ್ಲಿ ಬಹಮನಿ ರಾಜ್ಯದ ಪ್ರಧಾನ ಮಂತ್ರಿ ಮಹಮೂದ ಗವಾನನ ವಧೆಯಾದಾಗ ರಾಜ್ಯದಲ್ಲಿ ತುಂಬ ಗಲಭೆಯಾಯಿತು. ಅದು ವಿಕೋಪಕ್ಕೆ ಹೋಗಿ ಅಹ್ಮದನಗರದ ಭೈರಿ ನಿಜಾಮಶಹನು ಬಂಡೆದ್ದು ಬಹಮನಿ ರಾಜ್ಯದಿಂದ ಹೊರಬಿದ್ದನು. ಅಹ್ಮದನಗರವನ್ನು ರಾಜಧಾನಿಯಾಗಿ ಮಾಡಿಕೊಂಡು ತನ್ನ ಸ್ವಾತಂತ್ರ್ಯವನ್ನು ಸಾರಿದನು. ಅಂದು ವಿಜಾಪುರದಲ್ಲಿ ರಾಜ್ಯಪಾಲನಾಗಿದ್ದ ತುರ್ಕ ವಂಶದ ಯುಸುಫಖಾನನು ಕೂಡ ನಿಜಾಮಶಾಹನ ದಾರಿಯಲ್ಲಿ ನಡೆದು ಕ್ರಿ.ಶ 1489ರಲ್ಲಿ ತನ್ನ ಸ್ವಾತಂತ್ರ್ಯವನ್ನು ಸಾರಿ ವಿಜಾಪುರದಲ್ಲಿ ಹೊಸ `ಆದಿಲಶಾಹಿ ರಾಜ್ಯವನ್ನು ಪ್ರಾರಂಭಿಸಿದನು.
ಯುಸುಫಖಾನನು (ಕ್ರಿ.ಶ.1489-1510) ವಿಜಾಪುರದಲ್ಲಿ ತನ್ನ ರಾಜ್ಯವನ್ನು ಪ್ರಾರಂಭಿಸಿದ ಮೇಲೆ, ಸಹ್ಯಾದ್ರಿ ಪರ್ವತದ ಒಂದು ಕೋಟೆಯಲ್ಲಿ ಸ್ವತಂತ್ರವಾಗಿ ರಾಜ್ಯ ನಿರ್ವಹಿಸುತ್ತಿದ್ದ ಮುಕುಂದರಾವ್ ಎಂಬ ಮರಾಠಾ ಸರದಾರನನ್ನು ಸೋಲಿಸಿ ಅವನ ತಂಗಿಯನ್ನು ಮದುವೆಯಾದನು. ಅವಳಿಗೆ `ಬೂಬೂಜಿ ಖಾನಮ್’ ಎಂದು ಹೆಸರನ್ನು ಇಟ್ಟಿದ್ದನು. ಇವರಿಬ್ಬರ ಸಂತತಿಯೇ ಮುಂದಿನ ದಿನಗಳಲ್ಲಿ ವಿಜಾಪುರ ರಾಜಧಾನಿಯಿಂದ ಆದಿಲಶಾಹಿ ರಾಜ್ಯವನ್ನು ಆಳಿತು.
ಕ್ರಿ.ಶ 1489 ರಿಂದ 1686 ರ ವರೆಗೆ ಸುಮಾರು ಎರಡು ಶತಕಗಳ ಕಾಲ ಬಾಳಿದ ಆದಿಲಶಾಹಿ ರಾಜಮನೆತನದಲ್ಲಿ ಎಂಟು ಬಾದಶಹರಾದರು. ಅವರಲ್ಲಿಯ ಕೊನೆಯ ಎರಡನೆಯ ಅಲಿ ಆದಿಲಶಹ (ಕ್ರಿ.ಶ.1656-1672) ಹಾಗೂ ಸಿಕಂದರ (ಕ್ರಿ.ಶ. 1672-1686) ಆದಿಲಶಹನ ಕಾಲದಲ್ಲಿ ಬದುಕಿ ಬಾಳಿದವರು ಮಹಿಪತಿರಾಯರು.
ಯುಸುಫಖಾನನು ವಿಜಾಪುರದಲ್ಲಿ ತನ್ನ ಸ್ವತಂತ್ರ ರಾಜ್ಯವನ್ನು ಪ್ರಾರಂಭಿಸುವ ಹೊತ್ತಿಗೆ ತುಂಗಭದ್ರೆಯ ದಡದಲ್ಲಿಯ ವಿಜಯನಗರ ಸಾಮ್ರಾಜ್ಯವು ತನ್ನ ಉಚ್ಛ್ರಾಯ ಸ್ಥಿತಿಯಲ್ಲಿ ಇದ್ದಿತು. ರಾಜಕೀಯ, ಸಾಮಾಜಿಕ, ಧಾರ್ಮಿಕ ರಂಗಗಳಲ್ಲಿ ತನ್ನದೇ ಆದ ವೈಶಿಷ್ಟ್ಯಗಳೊಂದಿಗೆ ಮೆರೆಯುತ್ತಿತ್ತು. ಸಾಹಿತ್ಯ, ಸಂಗೀತ ಶಿಲ್ಪಕಲೆಗಳು ಕೂಡ ಅಭಿವೃದ್ಧಿ ಹೊಂದಿದ್ದವು. ಅದರ ಪ್ರಭಾವ ಚಿಕ್ಕದಾಗಿದ್ದರೂ ವಿಜಾಪುರ ಆದಿಲಶಾಹಿ ರಾಜ್ಯದಲ್ಲಿ ಗಾಢವಾಗಿದ್ದಿತು.
ಹೆಂಡತಿ ಹಿಂದುವಾಗಿದ್ದರಿಂದ ಅವಳು ಮತಾಂತರಗೊಂಡಿದ್ದರೂ ಆಡಳಿತದಲ್ಲಿ ಹಿಂದುಗಳ ವಿಶೇಷತಃ ಮರಾಠಿ ಸರದಾರರು ಸ್ವ-ಇಚ್ಛೆಯಿಂದ ಪಾಲುಗೊಳ್ಳಲು ಸಾಧ್ಯವಾಯಿತು. ಹೀಗೆ ರಾಜ್ಯದ ಆಡಳಿತ ವಿಶೇಷವಾಗಿ ಸೈನ್ಯದಲ್ಲಿ ಒಂದೆಡೆ ಮರಾಠಿ ಸರದಾರರು ಸಹಾಯಕರಾಗಿದ್ದರೆ, ಸ್ಥಳೀಯ ಆಡಳಿತದಲ್ಲಿ ಕನ್ನಡ, ಮರಾಠಿ ಹಾಗು ತೆಲುಗು ಭಾಷೆಯ ಹಿಂದುಗಳು ಬಹು ಮುಖ್ಯ ಪಾತ್ರಗಳನ್ನು ವಹಿಸಿದ್ದರು. ಗ್ರಾಮಾಂತರ ಜನತೆಯ ಸಂಪರ್ಕ ಹೊಂದಲು ಸಳೀಯ ಭಾಷೆಯ ಜನರ ಸಂಪರ್ಕ ಹಾಗೂ ಸಹಕಾರ ಆಳುವವರಿಗೆ ಅವಶ್ಯವಾಗಿದ್ದುದು ಸಹಜವಾಗಿತ್ತು. ರಾಜ್ಯ ನಿರ್ವಹಣೆಗೆ ಕಂದಾಯ ವಸೂಲಿ ಬಹು ಮಹತ್ವದ್ದಾಗಿತ್ತು. ಅದನ್ನು ನಿರ್ವಹಿಸಲು ಬಹುತೇಕ ಜನ ಹಿಂದು ಬ್ರಾಹ್ಮಣರಿದ್ದರು. ಕಾರುಕೂನ ಕುಲಕರ್ಣೀಗಳಾಗಿದ್ದ ಅವರು ಕಂದಾಯ ವಸೂಲಿಯಲ್ಲಿ ಸಹಾಯಕರಾಗಿದ್ದರು. ಇವರುಗಳಲ್ಲಿ ಜಾಣರಾದವರು ರಾಜಧಾನಿಗೆ ಬಂದು ವಕೀಲರಾಗಿಯೋ, ಇಲ್ಲವೆ ರಾಯಭಾರಿಗಳಾಗಿಯೋ ಕಾರ್ಯನಿರ್ವಹಿಸುತ್ತಿದ್ದರು. ವಿಶೇಷÀತಃ ವಸೂಲಿಯ ಲೆಕ್ಕ ಪತ್ರಗಳನ್ನು ಇಡುವಲ್ಲಿ ಹಾಗು ತಪಶೀಲುಗಳನ್ನು ಬರೆದಿಡುವಲ್ಲಿ ನುರಿತವರಾದದ್ದರಿಂದ ಇವರಲ್ಲಿಯ ಅನೇಕ ಜನರು ರಾಜ್ಯ, ಪ್ರಾಂತ, ವಿಭಾಗ ಮಟ್ಟದ ಖಜಾನೆಗಳಲ್ಲಿ ಹಾಗು ಕಂದಾಯ ಇಲಾಖೆಗಳಲ್ಲಿ ಮೇಲಿನ ಸ್ಥಾನವನ್ನು ಹೊಂದಿದವರಾಗಿದ್ದರು. ಇಂಥ ಉನ್ನತ ಮಟ್ಟದ ಸ್ಥಾನವನ್ನು ಪಡೆದವರಲ್ಲಿ, ಮೂಲತಃ ಐಗಳಿಯ ಕುಲಕರ್ಣಿಗಳಾದ ಮಹಿಪತಿರಾಯರು ಖಜಾನೆಯ ಅಧಿಕಾರಿಗಳಾಗಿದ್ದರೆಂದೂ ನಂಬಲಾಗಿದೆ. ಅವರೆ ಮುಂದೆ ಕಾಖಂಡಕಿಯಲ್ಲಿ ನೆಲೆಸಿ `ಕಾಖಂಡಕಿ ಮಹಿಪತಿರಾಯ’ ರೆಂದು ಪ್ರಸಿದ್ಧರಾದರು.
ರಾಜಕೀಯ ಹಾಗೂ ಸಾಮಾಜಿಕ ಪರಿಸ್ಥಿತಿಯನ್ನು ಗಮನಿಸಿದರೆ ಆದಿಲಶಾಹಿ ರಾಜ್ಯದ ಆಡಳಿತದಲ್ಲಿ ಕೇವಲ ಮುಸಲ್ಮಾನರ ಕೈವಾಡವಿರಲಿಲ್ಲ ಎಂಬುದು ಗೊತ್ತಾಗುತ್ತದೆ. ಹಿಂದುಗಳು ಕೂಡ ಪ್ರಭಾವಯುತರಾಗಿದ್ದರು. ಆದ್ದರಿಂದ ಆಳುವ ಸುಲ್ತಾನರಿಗೆ ಮತ್ತು ಮುಸಲ್ಮಾನ ಅಧಿಕಾರಿಗಳಿಗೆ ತಮ್ಮ ಜಾತ್ಯಂಧತೆಯನ್ನಾಗಲಿ, ಧಾರ್ಮಿಕ ಅಸಹಿಷ್ಣುತೆಯನ್ನಾಗಲಿ ನೇರವಾಗಿ ತೋರಿಸಲು ಅವಕಾಶಗಳು ಕಡಿಮೆಯಾಗಿದ್ದವು. ಹಿಂದುಗಳು ಹಾಗು ಹಿಂದು ಧರ್ಮದ ಕುರಿತು ಸಹಾನುಭೂತಿಯುಳ್ಳವರಾಗಿದ್ದರು ಎನ್ನಬಹುದು. ಆದಿಲಶಾಹಿ ರಾಜ್ಯದಲ್ಲಿಯ ಅನೇಕ ಹಿಂದು ಗುಡಿಗುಂಡಾರಗಳಿಗೆ ಬಾದಶಹರು, ಇತರ ಉನ್ನತ ಅಧಿಕಾರಿಗಳು ನೀಡಿದ ದತ್ತಿಗಳ ನಿದರ್ಶನಗಳು ಇಂದಿಗೂ ಹೇರಳವಾಗಿ ದೊರೆಯುತ್ತವೆ. ಆದಾಗ್ಯೂ ಇಲ್ಲಿಯ ಹಿಂದುಗಳಿಗೆ ಧಾರ್ಮಿಕವಾಗಿ ಬಹು ಸೂಕ್ಷ್ಮಪರಿಸ್ಥಿತಿ ಇತ್ತು ಎಂಬುದರಲ್ಲಿ ಸಂದೇಹವಿಲ್ಲ. ಇಂಥ ಪರಿಸ್ಥಿತಿಯಲ್ಲಿ ಕೂಡ ಹಿಂದು ಸಾಧು-ಸಂತರು, ದಾಸರು, ಯೋಗಿಗಳು ತಾವು ಬದುಕಿ ಉಳಿದು ಹಿಂದು ಧರ್ಮವನ್ನು ಜೀವಂತವಾಗಿ ಇಡುವಲ್ಲಿ ಸಫಲರಾಗಿದ್ದರು-ಎಂಬುದು ಗಮನಿಸಬೇಕಾದ ಅಂಶವಾಗಿದೆ. ಜೊತೆಗೆ ಮುಸ್ಲಿಮರನ್ನೂ ತಮ್ಮತ್ತ ಆಕರ್ಷಿಸುವಲ್ಲಿ ಆಗೀಗ ಯಶಸ್ಸನ್ನು ಕಂಡಿದ್ದಾರೆ ಎಂಬುದೂ ಗಮನಾರ್ಹವಾಗಿದೆ. ಧಾರ್ಮಿಕ ರಂಗದಲ್ಲಿ ಕ್ರಾಂತಿಯಾಗಿರದಿದ್ದರೂ ಈ ವಲಯವನ್ನು ಒಂದು ರೀತಿಯಲ್ಲಿ ಸಮತೋಲವಾಗಿ ಇಡುವಲ್ಲಿ ಸಫಲರಾಗಿದ್ದಾರೆ. ಅದಕ್ಕಾಗಿ ಅವರು ಬಳಸಿದ ದಾರಿ ಈ ಮೊದಲೆ ಕರ್ನಾಟಕದಲ್ಲಿ ರೂಪುಗೊಂಡು ಬಳಕೆಯಲ್ಲಿದ್ದ ಭಕ್ತಿ ಮಾರ್ಗವೇ ಆಗಿತ್ತು. ಹಿಂದಿನ ಶರಣರ ದಾಸರ ಪರಂಪರೆಯನ್ನು ಕಾಯ್ದುಕೊಂಡು ಅದು ಮುಂದುವರೆಯುವಲ್ಲಿ ವಿಜಾಪುರದ ರುಕ್ಮಾಂಗದ ಪಂಡಿತರು, ಸಿಂದಗಿಯ ಭೀಮಾಶಂಕರÀರು ಮತ್ತು ಮಕ್ಕಳು, ಕಾಖಂಡಕಿಯ ಮಹಿಪತಿರಾಯರು ಮತ್ತು ಅವರ ಮಕ್ಕಳು, ಅಗರಖೇಡದ ಆದ್ಯರು, ಗಲಗಲಿ ಅವ್ವನವರು ಮತ್ತು ಪ್ರಯಾಗಾಬಾಯಿ ಮೊದಲಾದ ಸ್ತ್ರೀ ಪುರುಷರೆಲ್ಲ ಕಾರಣರಾಗಿದ್ದಾರೆ. ಈ ಒಬ್ಬೊಬ್ಬರೂ ವೈಯಕ್ತಿಕವಾಗಿ ತಮ್ಮ ಸಾಧನೆಯನ್ನು ಮುಂದುವರೆಸಿಕೊಂಡು ಜನಸಾಮಾನ್ಯರಲ್ಲಿ ಧರ್ಮ ಜಾಗೃತಿಯನ್ನು ಉಂಟು ಮಾಡಿದರು.
ಮಹಿಪತಿರಾಯರ ಚರಿತ್ರೆ
ಬೆಳಗಾವಿ ಜಿಲ್ಲೆಯ ಆಥಣಿ ತಾಲೂಕಿನ ಐಗಳಿ ಎಂಬ ಗ್ರಾಮದಲ್ಲಿ 17ನೆಯ ಶತಮಾನದ ಮಧ್ಯದಲ್ಲಿ ಮೌನಭಾರ್ಗವ ಗೋತ್ರದ ಕೋನೇರಿರಾಯನೆಂಬ ವೈಷ್ಣವ ಬ್ರಾಹ್ಮಣನಿದ್ದನು. ಅವನಿಗೆ ಇಬ್ಬರು ಗಂಡು ಮಕ್ಕಳು. ಹಿರಿಯವನಿಗೆ ವೆಂಕಟೇಶನೆಂದೂ ಕಿರಿಯವನಿಗೆ ಗುರುರಾಯನೆಂದೂ ಹೆಸರನ್ನಿಟ್ಟಿದ್ದರು. ಗಂಡ-ಹೆಂಡತಿ, ಇಬ್ಬರು ಮಕ್ಕಳ ಉದರ ನಿರ್ವಹಣೆ ಹಾಗು ಮಕ್ಕಳ ಮುಂದಿನ ಶಿಕ್ಷಣಕ್ಕಾಗಿ ಅವರು ಊರು ಬಿಟ್ಟು ಹತ್ತಿರದಲ್ಲಿಯ ಆದಿಲಶಾಹಿ ಅರಸರ ರಾಜಧಾನಿ ವಿಜಾಪುರ ನಗರಕ್ಕೆ ಬಂದು ನೆಲೆಸಿದರು. ಸಮಕಾಲೀನ ವಿಶ್ವದ ದೊಡ್ಡನಗರ ವಿಜಾಪುರವು ವಿದ್ಯಾಪುರವೆಂದು ಹೆಸರಾಗಿತ್ತು. ಆಗ ವಿಜಾಪುರದಲ್ಲಿ ಮಹ್ಮದ ಆದಿಲಶಹನು (ಕ್ರಿ.ಶ 1626-1656) ರಾಜ್ಯವಾಳುತ್ತಿದ್ದನು. ಬಾದಶಹನ ಆಸ್ಥಾನದಲ್ಲಿ ಮುರಾರಿಪಂತ, ಶಹಾಜಿ ಭೋಸಲೆ ಮೊದಲಾದ ಹಿಂದುಗಳು ಪ್ರಭಾವಯುತರಾಗಿದ್ದರು. ಕೋನೇರಿರಾಯ ತನ್ನ ಪೌರಾಣಿಕ ವೃತ್ತಿಯಿಂದ ಈ ಜನರ ಒಲವನ್ನು ಗಳಿಸಿ ಕುಟುಂಬದ ಪಾಲನೆ-ಪೋಷಣೆಯ ಭಾರವನ್ನು ಹಗುರು ಮಾಡಿಕೊಂಡಿದ್ದನು.
ಮಕ್ಕಳಿಬ್ಬರೂ ತಂದೆಯ ಕಣ್ಣರಿಕೆಯಲ್ಲಿ ಬೆಳೆದು ವಿದ್ಯಾಭ್ಯಾಸವನ್ನು ಪಡೆದರು. ಹಿರಿಯಮಗ ವೆಂಕಟೇಶನು ಕುಲದ ಕರ್ಣಿಕ ವೃತ್ತಿಯನ್ನು ಹಾಗು ಅಲ್ಲಿಯ ವೆಂಕಟೇಶ ದೇವರ ಅರ್ಚಕ ವೃತ್ತಿಯನ್ನು ಮುಂದುವರಿಸಿಕೊಂಡು ಹೋಗಲು ಐಗಳಿಗೆ ಬಂದು ನೆಲೆಸಿದನು. ಈ ಕುಲಕರ್ಣಿಗಳ ಮನೆತನ ಇಂದಿಗೂ ಐಗಳಿಯಲ್ಲಿ ಮುಂದುವರಿದಿದೆ. ಕಿರಿಯ ಮಗ ಗುರುರಾಯನು ತಂದೆ-ತಾಯಿಗಳೊಂದಿಗೆ ವಿಜಾಪುರದಲ್ಲಿಯೇ ಉಳಿದನು. ರಾಮಾಯಣ, ಮಹಾಭಾರತ, ಭಾಗವತ ಗ್ರಂಥಗಳ ಅಭ್ಯಾಸದ ಜೊತೆಗೆ ಸಾಹಿತ್ಯದಲ್ಲಿಯೂ ಗುರುರಾಯನಿಗೆ ಆಸಕ್ತಿ ಇದ್ದಿತು. ಮಧುರ ಕಂಠ, ನಿರರ್ಗಳ ವಾಕ್ ಸರಣಿ, ಗುರುರಾಯನು ಹೇಳುತ್ತಲಿದ್ದರೆ ಕೇಳುಗರು ಮಂತ್ರಮುಗ್ಧರಾಗಿ ಕುಳಿತು ಕೊಳ್ಳುತ್ತಿದ್ದರು. ಹರಿಕಥೆ ಆತನ ಮೆಚ್ಚಿಗೆಯ ವಿಷಯವಾಗಿತ್ತು. ಸುಶ್ರಾವ್ಯ ಹರಿಕಥೆಯಿಂದಾಗಿ ಆತ ಬಹುಬೇಗ ಜನಪ್ರಿಯನಾದನು.
ಕೋನೇರಿರಾಯನ ಪರಿಚಿತ ಹಿಂದು ಸರದಾರನೊಬ್ಬನ ಮುಖಾಂತರ ಗುರುರಾಯನು ಪ್ರಾರಂಭದಲ್ಲಿ ಖವಾಸಖಾನ ಎಂಬ ಹಬಶೀ ಸರದಾರನ ಹತ್ತಿರ ಕರ್ಣಿಕ ವೃತ್ತಿಯನ್ನು ಕೈಗೊಂಡನು. ಅಂದಿನ ರಾಜ್ಯದಲ್ಲಿ ಖವಾಸಖಾನನು ದಖಣೀ ಸರದಾರರ ಮುಖ್ಯಸ್ಥನಾಗಿದ್ದನಲ್ಲದೆ ರಾಜ್ಯದಲ್ಲಿ ತುಂಬ ಪ್ರಭಾವಶಾಲಿ ವ್ಯಕ್ತಿಯಾಗಿದ್ದನು. ಅದಾಗಿ ಮಹ್ಮದ ಆದಿಲಶಹನ ಅಂತ್ಯವಾಗಿ ಅವನ ಮಗ ಎರಡನೆಯ ಅಲಿ ಆದಿಲಶಹನು ರಾಜ್ಯವಾಳುತ್ತಿದ್ದನು. ಗುರುರಾಯನ ಕೆಲಸದಲ್ಲಿಯ ಚಾಕಚಕ್ಯತೆ ಜಾಣತನ ಖವಾಸಖಾನನಿಗೆ ತುಂಬ ಪ್ರಿಯವಾಗಿತ್ತು. ಕೆಲವೇ ದಿನಗಳಲ್ಲಿ ಆತ ಖವಾಸಖಾನನ ಆಪ್ತ ಸಹಾಯಕರಲ್ಲಿ ಒಬ್ಬನಾದನು.
ಗುರುರಾಯನಿಗೆ ಚಿಕ್ಕಂದಿನಿಂದ ಆಧ್ಯಾತ್ಮದ ಕಡೆಗೆ ಒಲವು ಹೆಚ್ಚು. ಮಾಧ್ವ ಸಂಪ್ರದಾಯದ ಮನೆಯಾದ್ದರಿಂದ ಮನೆಯಲ್ಲಿ ನಿತ್ಯ ನೇಮಗಳನ್ನು ತೀರಿಸಿಕೊಂಡು, ಪಾರಾಯಣ, ಜಪ, ತಪಗಳನ್ನು ತಪ್ಪದೆ ಮಾಡುತ್ತಿದ್ದನು. ಮದುವೆಯಾಯಿತು. ಹೊನವಾಡದ ದೇಶಪಾಂಡೆ ಅವರ ಮನೆತನದ ಕನ್ಯೆ ಹೆಸರು ತಿರುಮಲಾಬಾಯಿ, ತಿಮ್ಮವ್ವ ಎಂದು ಕರೆಯುತ್ತಿದ್ದರು. ಗಂಡನ ದಿನ ನಿತ್ಯದ ಧ್ಯಾನ, ಜಪ-ತಪ, ಅಭ್ಯಾಸ, ರಾಜಕಾರಣ, ಅನ್ನಸಂತರ್ಪಣೆ, ಕೀರ್ತನೆ, ಪ್ರವಚನ ಎಲ್ಲದರಲ್ಲೂ ಸಹಾಯ ನೀಡಿದಳು. ತಾನೂ ಉಪಾಸನೆಯಲ್ಲಿ ನಿರತಳಾದಳು. ಅವಳ ಉಪಾಸನೆಯ ಫಲವೆಂಬಂತೆ ಗಂಡನ ಅಂತಸ್ತು ಮರ್ಯಾದೆ ದಿನದಿಂದ ದಿನಕ್ಕೆ ಪ್ರವರ್ಧಮಾನವಾಗತೊಡಗಿತು. ಖವಾಸಖಾನನ ಮುಖಾಂತರ ಬಾದಶಹನ ಪರಿಚಯವಾಗಿ ಗಂಡನ ಸೇವೆ ರಾಜದರಬಾರದಲ್ಲಿ ಪ್ರಾರಂಭವಾಯಿತು. ಕರ್ಣಿಕ ಗುರುರಾಯ `ಅಖ್ತಿಯಾರ್ ಗುರುರಾವ್ ಆದರು.
ದಿನದಂತೆ ಅಂದು ರಾಯರು ಮನೆಯಿಂದ ರಾಜದರಬಾರಕ್ಕೆ ಬರುತ್ತಿದ್ದರು. ದಾರಿಯಲ್ಲಿ ಒಬ್ಬ ಬತ್ತಲೆ ಫಕೀರ ಅವರನ್ನು ಕಂಡು ಹತ್ತಿರ ಕರೆದನು. ಅವನ ಹೆಸರು `ನಂಗಾಶಾಹ, ಆತ ಸೂಫಿ ಪಂಥದ ಫಕೀರನಾಗಿದ್ದನು. ಬಹುತೇಕ ಸಮಯ ಸಮಾಧಿ ಸ್ಥಿತಿಯಲ್ಲಿ ಇರುತ್ತಿದ್ದನು. ಬೆತ್ತಲೆಯಾಗಿ ತಿರುಗುತ್ತಿದ್ದನು. ಅವನು ರಾಯರನ್ನು ಹತ್ತಿರ ಕರೆದು ಒಂದು ಗಳಿಗೆ ಕುಳಿತುಕೊಳ್ಳಲು ಹೇಳಿದನು. ರಾಯರಿಗೆ ಉಭಯ ಸಂಕಟಕ್ಕಿದ್ದುಕೊಂಡಿತು. ಆತನನ್ನು ತಿರಸ್ಕರಿಸಿ ಮುಂದೆಯೂ ಹೋಗರು. ನಿಂತರೆ ಏನು ರಾದ್ಧಾಂತವೋ? ಆತನಿಗೆ ವಾಕ್ ಸಿದ್ಧಿ ಇತ್ತೆಂದು ಕೇಳಿದ್ದರು. ಏನಾದರೂ ಅಂದು ಬಿಟ್ಟರೆ ? ಎಂದೆಲ್ಲ ಮನದಲ್ಲಿ ವಿಚಾರಿಸುತ್ತಿದ್ದಂತೆ ಮತ್ತೆ ಆ ಫಕೀರ ಬಾರಲ್ಲ, ಅಷ್ಟ್ಯಾಕೆ ಚಿಂತೆ? ಎಂದ. ಅನಿವಾರ್ಯವಾಗಿ ಹತ್ತಿರ ಹೋಗಿ ಕುಳಿತರು. ನಂಗಾಶಾಹ ರಾಯರನ್ನು ಒಂದು ಕ್ಷಣ ರತ್ನ ಪರೀಕ್ಷಕನಂತೆ ದಿಟ್ಟಿಸಿ ನೋಡಿದ ಅವರ ಬೆರಳಿನಲ್ಲಿದ್ದ ಪವಿತ್ರದ ಉಂಗುರವನ್ನು ದಿಟ್ಟಿಸಿ ತನ್ನ ಕೈಯಿಂದ ಅದನು ಕಿತ್ತು ತೆಗೆದುಕೊಂಡನು. ರಾಯರು ಮೌನ ವಿಸ್ಮಿತರಾಗಿ ಫಕೀರನನ್ನು ನೋಡುತ್ತ ಕುಳಿತುಕೊಂಡರು. ಕೈಯಲ್ಲಿ ತೆಗೆದುಕೊಂಡು ಪವಿತ್ರದ ಉಂಗುರವನ್ನು ಮೇಲೆ ಕೆಳಗೆ ಒಂದೆರಡು ಬಾರಿ ತಿರುಗಿಸಿ ನೋಡುತ್ತ ತುಸು ಹೊತ್ತು ಫಕೀರ ಸುಮ್ಮನೆ ಕುಳಿತನು. ಮತ್ತೆ ಒಮ್ಮೆಲೆ, ಇದು ``ವಿಷಯ ಸೂತ್ರ ಎನ್ನುತ್ತ ಎದ್ದು ನಿಂತು ಎದುರಿನ ಕಂದಕದಲ್ಲಿ ಆ ಉಂಗುರವನ್ನು ಒಗೆದು ಬಿಟ್ಟನು. ವಾಸ್ತವದಲ್ಲಿ ಅದು ಪವಿತ್ರದ ಉಂಗುರವಾಗಿರದೆ ರಾಜ ಮೋಹರಿನ ಉಂಗುರವಾಗಿತ್ತು. ಆಶ್ರ್ಚಯದಿಂದ ಫಕೀರನ ಮುಖವನ್ನು ಕಕ-ಮಕ ನೋಡುತ್ತ ನಿಂತು ಬಿಟ್ಟರು. ರಾಜಮೊಹರನ್ನು ಬಿಟ್ಟು ದರಬಾರಿಗೆ ಹೋಗುವ ಬಗೆ ಹೇಗೆ? ದೈನ್ಯದಿಂದ ಒಂದು ಸಲ ಫಕೀರನ ಕಡೆಗೆ ನೋಡಿದರು. ಆತ ಇವರನ್ನು ನೋಡಿ ಬಿದ್ದು-ಬಿದ್ದು ನಗಹತ್ತಿದನು. ರಾಯರು ಹುಚ್ಚನಂತೆ ಅವನನ್ನು ನೋಡುತ್ತ ನಿಂತರು. ನಗು-ನಗುತ್ತಲಿದ್ದ ನಂಗಾಶಾಹ ಒಮ್ಮೆಲೇ ಗಂಭೀರನಾಗಿ `ಇನ್ನೂ ನಿನಗೆ ಆ ಉಂಗುರದ ಮೋಹವೆ?ಎಂದು ಕೇಳುತ್ತ ಮತ್ತೆ ಸರಿ-ನಿಲ್ಲು ತಂದು ಕೊಡುತ್ತೇನೆ ಎನ್ನುತ್ತ ಎದುರಿನ ಕಂದಕದಲ್ಲಿ ಟಣ್ಣನೆ ಜಿಗಿದು ಬಿಟ್ಟನು. ಒಂದು ಮುಳುಗು ಹಾಕಿ, ಮುಷ್ಟಿತುಂಬ ಉಂಗುರಗಳನ್ನು ತಂದು ರಾಯರ ಎದುರಿಗೆ ಮುಷ್ಟಿ ಬಿಚ್ಚಿ ನಿಂತು `ತೆಗೆದುಕೊ ನಿನ್ನ ಉಂಗುರವನ್ನು ಎಂದನು ರಾಯರಿಗೆ ಆಶ್ಚರ್ಯವಾಯಿತು. ಒಂದೇ ತರದ ಉಂಗುರಗಳು ಎಲ್ಲವು ರಾಜ ಮೊಹರಗಳೇ ! ಒಮ್ಮೆ ಫಕೀರನ ಮುಖವನ್ನು ಇನ್ನೊಮ್ಮೆ ಅವನ ಕೈಯಲ್ಲಿದ್ದ ಉಂಗುರಗಳ ಕಡೆಗೆ ನೋಡಹತ್ತಿದರು. `ತಕ್ಕೊಳ್ಳಯ್ಯ ಹಾಗೇನು ಮುಖ ನೋಡ್ತಿ ಎಂದು ಫಕೀರ ಗದರಿಸಿದಾಗ ಒಂದು ಕ್ಷಣ ರಾಯರ ಮೈ ರೋಮಾಂಚನಗೊಂಡಿತು. ತಮ್ಮ ಉಂಗುರವನ್ನು ಗುರುತಿಸುವುದು ಸಾಧ್ಯವಾಗಲೊಲ್ಲದು. ದೇಹ ಸ್ಮøತಿ ತಪ್ಪುತ್ತಿದೆ ಎಂದು ಭಾಸವಾಗ ಹತ್ತಿತು, ಸಾವರಿಸಿಕೊಂಡು ಮರುಕ್ಷಣದ ರಾಯರೇ ಬೇರೆಯಾದರು. ಸತ್, ಚಿತ್, ಆನಂದ ಎಂಬ ಮೂರು ಶಬ್ದಗಳು ಬೇರೆಯಾಗಿದ್ದರೂ `ಸಚ್ಚಿದಾನಂದ ಎಂಬ ಪದ ಒಂದೇ ಎಂಬ ಅಖಂಡತ್ವದ ಅರಿವಾಯಿತು. ರಾಯರ ಅe್ಞÁನದ ಸೂತ್ರ ಹರಿದು ಹೋಯಿತು. ಹೃದಯದಲ್ಲಿ e್ಞÁನದ ಮೊಳಕೆ ಒಡೆಯಿತು. ದಿಗ್ಗನೆ ಬಂದು ನಂಗಾಶಾಹನ ಕಾಲುಗಳನ್ನು ಹಿಡಿದುಕೊಳ್ಳಲು ಮುಂದೆ ಬಂದರು. ಆದರೆ ಫಕೀರ ಅದಕ್ಕೆ ಆಸ್ಪದವನ್ನೆ ಕೊಡಲಿಲ್ಲ. ಹಿಂದೆ ಸರಿದು ಹೇಳಿದನು.
`ಛೀ ನನ್ನ ಕಾಲು ಹಿಡಿಯಬೇಡ, ನಾನು ಯವನ, ನೀನು ಶುದ್ಧ ಬ್ರಾಹ್ಮಣ, ನಿನ್ನಿಂದ ನಮಸ್ಕಾರ ಮಾಡಿಸಿ ಕೊಳ್ಳುವುದು ನನಗೆ ಯೋಗ್ಯವಲ್ಲ, ನಿನ್ನ ಮನದ ಬಾಗಿಲು ತೆರೆದಿದೆ, ನಿನಗೊಬ್ಬ ಯೋಗ್ಯ ಗುರುವಿನ ಅವಶ್ಯಕತೆ ಇದೆ, ಸಾರವಾಡಕ್ಕೆ ಹೋಗು ಅಲ್ಲಿ ಭಾಸ್ಕರ ಸ್ವಾಮಿಗಳಿದ್ದಾರೆ ಅವರು ನಿನಗೆ ಯೋಗ್ಯ ಗುರು ಎಂದು ಹೇಳಿದನು.
ಅವನ ಮಾತು ಕೇಳಿ ರಾಯರು ಮ್ಲಾನವದನರಾಗಿ ಮನೆಯ ದಾರಿ ಹಿಡಿದರು. ಮನೆಗೆ ಬಂದಾಗ ಹೆಂಡತಿ ಮನೆಯಲ್ಲಿಲ್ಲ. ಕೇಳಿದರೆ ಮಂದಿರಕ್ಕೆ ಹೋಗಿರುವುದಾಗಿ ತಿಳಿಯಿತು. ಸಾಯಂಕಾಲ ತಿಮ್ಮವ್ವ ಮನೆಗೆ ಬಂದಾಗ ಗಂಡ ಮನೆಯಲ್ಲಿದ್ದುದನ್ನು ಕಂಡು ಹೆದರಿದಳು. ತನ್ನ ಹುಳುಕು ಹೊರಬಿತ್ತೆಂಬ ಅಂಜಿಕೆ ಅವಳದು. ರಾಯರಿಗೆ ಅದರ ಪರಿವೆ ಇರಲಿಲ್ಲ. `ಅದೇನು ಅಂಥ ಮಂದಿರ, ಸಾಯಂಕಾಲದವರೆಗೆ? ಬೆಳಿಗ್ಗೆ ಹೋದವಳು ಈಗ ಬರುವುದೆ? ಎಂದು ಕೇಳಿದಾಗ ತನ್ನ ಗಂಡ ಇಂದು ದರಬಾರದ ಕೆಲಸಕ್ಕೆ ಹೋಗಿರಲಿಲ್ಲ ವೆಂಬುದು ತಿಳಿದು ಇನ್ನಷ್ಟು ಗಾಬರಿಯಾದಳು. ಹೆಂಡತಿಗೆ ತಮ್ಮ ಅಂದಿನ ಅನುಭವ ಹೇಳುವ ತವಕ ರಾಯರಿಗೆ, ಅದನ್ನು ಕೇಳುತ್ತಿದ್ದಂತೆ ತಿಮ್ಮವ್ವನಿಗೆ ಆಶ್ಚರ್ಯ, ಸಂತೋಷ, ಉದ್ವೇಗ ಎಲ್ಲವೂ ಒಮ್ಮೆಲೆ ಆದಂತಾಗಿ ಏನು ಹೇಳಬೇಕೆಂದು ತಿಳಿಯದೆ ಕ್ಷಣಹೊತ್ತು ಸುಮ್ಮನೆ ನಿಂತಳು.
ವಾಸ್ತವದಲ್ಲಿ ತಿಮ್ಮವ್ವ ಸಾರವಾಡದ ಭಾಸ್ಕರ ಸ್ವಾಮಿಗಳ ಹತ್ತಿರ ಹೋಗ ಹತ್ತಿ ಆರು ತಿಂಗಳುಗಳಾಗಿದ್ದುವು. ಹಲವು ದೇವರ ಹರಕೆ ಹೊತ್ತರೂ ಮಕ್ಕಳಾಗದಿದ್ದಾಗ ಯಾರದೋ ಮಾತು ಕೇಳಿ, ಭಾಸ್ಕರ ಸ್ವಾಮಿಗಳು ದೊಡ್ಡ ಯೋಗಿಗಳು, ಅವರ ಆಶೀರ್ವಾದದಿಂದ, ಸಂತಾನ ಭಾಗ್ಯವಾದೀತೆಂಬ ಆಶೆಯಿಂದ ಅವಳು ಸಾರವಾಡಕ್ಕೆ ಹೋಗುತ್ತಿದ್ದಳು. ಆದರೆ ಗುರುಗಳ ದರ್ಶನವಾಗಿರಲಿಲ್ಲ. ಅಂದೇ ಗುರುಗಳ ದರ್ಶನವಾಗಿ `ಸತಿ-ಪತಿ’ ಸಹಿತವಾಗಿ ಬನ್ನಿ ಎಂದು ಹೇಳಿದ್ದರು. ಗಂಡನಿಗೆ ಹೇಳಿ ಮರುದಿನ ಅವರನ್ನೂ ಕರೆದುಕೊಂಡು ಹೋಗಬೇಕೆಂಬ ವಿಚಾರದೊಂದಿಗೆ ಮನೆಗೆ ಬಂದಾಗ ಗಂಡ ತಾನೆಯೇ ಮರುದಿನ ಸಾರವಾಡಕ್ಕೆ ಹೋಗಬೇಕೆಂಬ ವಿಷಯ ತಿಳಿಸಿದಾಗ ಅವಳ ಆನಂದಕ್ಕೆ ಮಿತಿ ಇರಲಿಲ್ಲ.
ಅವರ ಚರಿತ್ರೆಯಲ್ಲಿ ಬರುವಂತೆ ನಂಗಾಶಾಹನ ಭೇಟಿ, ಉಂಗುರದ ಸಂಗತಿ, ಅಂದೇ ತಿಮ್ಮವ್ವನಿಗೆ ಭಾಸ್ಕರಸ್ವಾಮಿಗಳ ದರ್ಶನ, ನಂಗಾಶಾಹನೂ ಭಾಸ್ಕರ ಸ್ವಾಮಿಗಳ ಹತ್ತಿರ ಹೋಗು ಎಂದು ರಾಯರಿಗೆ ಹೇಳಿದ್ದು, ಇವುಗಳೆಲ್ಲ ಒಂದು ರೀತಿ ಪವಾಡದಂತೆ ಎನಿಸಿದರೂ ಇಂಥ ಯಾವುದೋ ಒಂದು ಸನ್ನಿವೇಶದಲ್ಲಿ ರಾಯರ ಮನಸ್ಸು ಪರಿವರ್ತಿತವಾಗಿ ಅವರು ಸಾರವಾಡದ ಭಾಸ್ಕರ ಸ್ವಾಮಿಗಳ ಹತ್ತಿರ ಹೋದರು. ಅಥವಾ ಯಾವುದೋ ಒಂದು ಸಂದರ್ಭದಲ್ಲಿ ಭಾಸ್ಕರ ಸ್ವಾಮಿಗಳಿಗೂ, ರಾಯರಿಗೂ ಮುಖಾ-ಮುಖಿ ಭೆಟ್ಟಿಯಾದಾಗ ರಾಯರು ಭಾಸ್ಕರ ಸ್ವಾಮಿಗಳಿಂದ ಆಕರ್ಷಿತರಾಗಿ ಅವರ ಸಂಪರ್ಕವನ್ನು ಪಡೆದಿರಬೇಕು.
ಭಾಸ್ಕರ ಸ್ವಾಮಿಗಳ ಕುರಿತು ಹೆಚ್ಚಿನ ವಿವರಗಳು ದೊರೆಯುವುದಿಲ್ಲ. ಅವರು ಇಂದಿನ ಮುಧೋಳ ತಾಲೂಕಿನ ಲೋಕಾಪುರದಲ್ಲಿ ಇದ್ದರು. ಅಲ್ಲಿಂದ ಸಾರವಾಡಕ್ಕೆ ಸ್ವ-ಇಚ್ಛೆಯಿಂದ ಬಂದು ನೆಲೆಸಿದರು ಎಂಬುದಾಗಿ ರಾಯರ ಕುರಿತಾದ ಒಂದು ಅಪೂರ್ಣ ಮರಾಠಿ ಓವಿ ಬದ್ಧ ಕಾವ್ಯ ಹೇಳುತ್ತದೆ. ಅವರ ಮೂಲ ಸ್ಥಳ, ಗುರುಪರಂಪರೆ, ಮತ, ಪಂಥ, ಸಾಧನೆ, ಸಿದ್ಧಿ ಇವುಗಳ ಕುರಿತು ಏನನ್ನೂ ತಿಳಿಯುವುದು ಸಾಧ್ಯವಾಗಿಲ್ಲ. ಹೀಗಾಗಿ ಮಹಿಪತಿರಾಯರ ಗುರುಪರಂಪರೆಯನ್ನೂ ಭಾಸ್ಕರ ಸ್ವಾಮಿಗಳಿಂದಲೇ ಪ್ರಾರಂಭಿಸಬೇಕಾಗುತ್ತದೆ.
ಮರುದಿನ ರಾಯರು ಬಾದಶಹನ ಅಪ್ಪಣೆ ಪಡೆದು ಸಕುಟುಂಬರಾಗಿ ಸಾರವಾಡಕ್ಕೆ ಹೋದರು. ಅವರು ಸ್ವಾಮಿಗಳ ಆಶ್ರಮಕ್ಕೆ ಹೋದಾಗ ಸ್ವಾಮಿಗಳು ಸಮಾಧಿ ಸ್ಥಿತಿಯಲ್ಲಿದ್ದರು. ಸ್ವಾಮಿಗಳ ದರ್ಶನಕ್ಕಾಗಿ ಕಾಯುತ್ತ ತುಸು ಹೊತ್ತು ಹೊರಗೆಯೇ ನಿಂತರು. ಭಾಸ್ಕರ ಸ್ವಾಮಿಗಳು ಸಹಜ ಸ್ಥಿತಿಗೆ ಬಂದನಂತರ, ರಾಯರು ಸಕುಟುಂಬರಾಗಿ ದರ್ಶನಾಪೇಕ್ಷಿಗಳಾಗಿ ಬಂದ ವಿಷಯವನ್ನು ಸೇವಕರು ಹೇಳಿದರು. ಅವರನ್ನು ಒಳಗೆ ಕರೆದುಕೊಂಡು ಬರಲು ಸ್ವಾಮಿಗಳು ಅಪ್ಪಣೆ ಕೊಡಿಸಿದರು. ರಾಯರು ಹಾಗೂ ಅವರ ಹೆಂಡತಿ ಇಬ್ಬರೂ ಒಳಗೆ ಬಂದು ಸ್ವಾಮಿಗಳಿಗೆ ಶಿರಸಾಷ್ಟಾಂಗ ನಮಸ್ಕಾರ ಮಾಡಿದರು. ಸ್ವಾಮಿಗಳು ಸಸ್ಮಿತವದನರಾಗಿ ರಾಯರನ್ನು ಎಬ್ಬಿಸುತ್ತ,
`ನಾವು ಬಂದು ಆರು ತಿಂಗಳುಗಳ ಮೇಲಾಯಿತು ! ನಿಮಗೆ ಬರುವುದಾಗಲಿಲ್ಲವಲ್ಲ ! ಇಂದು ಅಕಸ್ಮಾತ್ತಾಗಿ ನಂಗಾಶಾಹನಿಂದಾಗಿ ಆ ಗಳಿಗೆ ಬಂದಿತಲ್ಲವೆ?’, ಎಂದು ಕೇಳಿದಾಗ ರಾಯರ ಮೈ ಜುಮ್ ಎಂದಿತು. ರಾಯರು ಮತ್ತೆ ಅಡ್ಡ ಬಿದ್ದು `ಸ್ವಾಮಿ ನಾನು ಅಪರಾಧಿ ಪಾಮರನು, ನೀವು ಕರುಣಿಸಿ ನನ್ನನ್ನು ಉದ್ಧರಿಸಬೇಕು’ ಎಂದು ಅನನ್ಯವಾಗಿ ಭಾಸ್ಕರ ಸ್ವಾಮಿಗಳನ್ನು ಪ್ರಾರ್ಥಿಸಲು ಅವರು ರಾಯರನ್ನು ಹತ್ತಿರ ಕರೆದು ಕುಳ್ಳಿರಿಸಿಕೊಂಡರು. ಪ್ರಸನ್ನರಾದ ಗುರುಗಳು ರಾಯರ ಮಸ್ತಕದ ಮೇಲೆ ಕ್ಷಣ ಹೊತ್ತು ತಮ್ಮ ಹಸ್ತವನ್ನಿಟ್ಟರು. ಅದಾಗಲೇ ನಂಗಾಶಾಹನಿಂದ ಹೊತ್ತಿದ್ದ e್ಞÁನದ ಕಿಡಿಯು ಜ್ವಾಲೆಯಾಗಿ-ಕೋಟಿಸೂರ್ಯರ ಪ್ರಭೆಯಾಗಿ ಸಚ್ಚಿದಾನಂದನ ದರ್ಶನವನ್ನು ಮಾಡಿಸಿತು. ಆ ಅಪರೂಪದ ಘಟನೆಯನ್ನು ರಾಯರು ತಮ್ಮ ಒಂದು ಪದದಲ್ಲಿ ಸುಂದರವಾಗಿ ನಿರೂಪಿಸಿದ್ದಾರೆ. `ಇಂದೆನ್ನ ಜನ್ಮ ಪಾವನವಾಯಿತು, ತಂದೆ ಶ್ರೀ ಗುರುಗಳ ಚರಣ ದರುಶನದಿಂದ’ ಎಂದು ಪ್ರಾರಂಭವಾಗುವ 6 ನುಡಿಗಳ ಕೀರ್ತನೆಯಲ್ಲಿ ಗುರುಗಳ ದಯದಿಂದ ತಮಗೆ ಸಾಕ್ಷಾತ್ಕಾರವಾದ ಬಗೆಯನ್ನು ವಿವರಿಸಿದ್ದಾರೆ. ಕೊನೆಯ ನುಡಿಯಲ್ಲಿ,
``ಭಾಸ್ಕರ ಸ್ವಾಮಿಯು ಕರುಣಾಳು ಮೂರ್ತಿಯು
ಮೂಢ ಮಹಿಪತಿಯ ಕೃಪಾಂಬುಧಿಯು
ಕರುಣದಭಯ ಹಸ್ತವನು ಶಿರಸದಲಿಡಲಾಗಿ
ಧನ್ಯನಾದೆನು ಸತಿಪತಿ ಸಹಿತವಾಗಿನ್ನು’’
ಎಂದು ಹೇಳುತ್ತಾರೆ. ಬಹುಶಃ ಇದುವೆ ರಾಯರ ಮೊದಲ ಕೃತಿಯಾಗಿರಬೇಕು. ತಮ್ಮ ಗುರುಗಳನ್ನು ಕಂಡು ರಚಿಸಿದ ಪ್ರಥಮ ಕೀರ್ತನೆಯೂ ಆಗಿರಬೇಕು. ಅಂದಿನಿಂದ `ಮಹಿಪತಿ’ ಎಂಬ ಅಂಕಿತದಿಂದ ತಮ್ಮ ಅನುಭವಗಳನ್ನು ಕೀರ್ತನೆಯ ರೂಪದಲ್ಲಿ ಹೇಳಲು ಪ್ರಾರಂಭಿಸಿರಬೇಕು. ಆದರೆ `ಮಹಿಪತಿ’ ಎಂಬ ಅಂಕಿತವನ್ನು ಭಾಸ್ಕರಸ್ವಾಮಿಗಳು ನೀಡಿದರೆ ? ಅಥವಾ ತಾವೆ ಸ್ವತಃ ಉಪಯೋಗಿಸಿದರೆ ಎಂಬ ಕುರಿತು ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಚಾರಿತ್ರಿಕವಾಗಿ ಅವರು ಭಾಸ್ಕರಸ್ವಾಮಿಗಳನ್ನು ಕಂಡದ್ದನ್ನು ಹಾಗೂ ಅವರಿಂದಲೇ `ಧನ್ಯನಾದೆನು’ ಎಂದುದನ್ನು ಈ ಕೀರ್ತನೆ ಸ್ಪಷ್ಟಪಡಿಸುತ್ತದೆ.
ಹೀಗೆ ಪ್ರಥಮ ದರ್ಶನದಲ್ಲಿಯೇ ಗುರುಗಳಾದ ಭಾಸ್ಕರ ಸ್ವಾಮಿಗಳು ಮಹಿಪತಿರಾಯರನ್ನು ತಮ್ಮ ಶಿಷ್ಯನನ್ನಾಗಿ ಸ್ವೀಕರಿಸಿದ್ದಲ್ಲದೆ ಬ್ರಹ್ಮ ಸಾಕ್ಷಾತ್ಕಾರವನ್ನೂ ಮಾಡಿಸಿದರು. ಅದರಂತೆ ಅವರ ಹೆಂಡತಿ ತಿಮ್ಮವ್ವಳಿಗೆ `ಜಗಪ್ರಸಿದ್ಧ’ ರಾದ ಪುತ್ರದ್ವಯರ ವರವನ್ನೂ ಕೊಟ್ಟರೆಂದು ಅವರ ಕುರಿತಾದ ಚರಿತ್ರೆಯಲ್ಲಿ ಬರುತ್ತದೆ.
ಗುರುಗಳ ಅನುಗ್ರಹಕ್ಕೆ ಪಾತ್ರರಾದ ಮಹಿಪತಿರಾಯರು ಬಾದಶಹನ ಸೇವೆಯನ್ನು ತ್ಯಜಿಸಿ ಸತಿ-ಪತಿ ಸಹಿತವಾಗಿ ಸಾರವಾಡಕ್ಕೆಯೇ ಹೋಗಿ ಗುರುಗಳ ಹತ್ತಿರ ಇರಹತ್ತಿದರು. ಆವರೆಗೆ ಗಳಿಸಿದ್ದ ಸಂಪತ್ತನ್ನೆಲ್ಲ ಬಡ ಬಗ್ಗರಿಗೆ ದಾನ ಮಾಡಿ ಬಿಟ್ಟರು.ಸಾರವಾಡದಲ್ಲಿ ಯೋಗ ನಿರತರಾಗಿ ನಿರಂತರ ಬ್ರಹ್ಮ ಸಾಕ್ಷಾತ್ಕಾರದ ಸಾಧನೆಯಲ್ಲಿ ತೊಡಗಿದರು.`ಹನ್ನೆರಡು ವರುಷಗಳಲ್ಲಿ ಮುಗಿಯುವಂಥ ಯೋಗ ಸಾಧನೆಯನ್ನು ಅವರು ಹನ್ನೊಂದು ತಿಂಗಳುಗಳಲ್ಲಿ ಮುಗಿಸಿದರು, ಮತ್ತು ಅದರಿಂದಾಗಿ ಅವರು ವಿವಿಧ ಸಿದ್ಧಿಗಳನ್ನು, ದಿವ್ಯ ಅನುಭವಗಳನ್ನೂ ಪಡೆದರು.
ಶಿಷ್ಯನ ಸಿದ್ಧಿಯನ್ನು ಕಂಡು ಭಾಸ್ಕರಸ್ವಾಮಿಗಳು ಸಂತೋಷಪಟ್ಟರು. ಗುರು ಸನ್ನಿಧಾನದಲ್ಲಿಯೇ ಉಳಿಯಬೇಕೆಂದು ಶಿಷ್ಯ ಅಪೇಕ್ಷಿಸಿದರೂ, ಅವರಿಂದ ಜನರ ಉದ್ಧಾರವಾಗಬೇಕೆಂಬ ದೃಷ್ಟಿಯಿಂದ ಸಾರವಾಡದಿಂದ ಹೋಗಲು ಅನುಮತಿಯನ್ನು ನೀಡಿದರು. ಮಹಿಪತಿರಾಯರು ತಮ್ಮ ಪತ್ನಿಯೊಂದಿಗೆ ತಿರುಗಿ ವಿಜಾಪುರಕ್ಕೆ ಬಂದರು. ತಮ್ಮ ಸಾಧನೆಯನ್ನು ಮುಂದುವರೆಸಿದರು. ಶಿಷ್ಯರಿಗೆ ಯೋಗ ಶಾಸ್ತ್ರವನ್ನು ಕಲಿಸುವಲ್ಲಿ ಮಾರ್ಗದರ್ಶಕರಾದರು. ಜನ ಸಾಮಾನ್ಯರುಗಳಲ್ಲಿ ಭಗವಂತನ ಕುರಿತಾಗಿ ಭಕ್ತಿಯನ್ನು ಬೆಳೆಸುವಲ್ಲಿ ನಿರತರಾದರು.
`ಕೊಟ್ಟರ್ಹಿಡಿಯಲಿಲ್ಲ ಓರ್ವರ ಧನವು | ಪೂರ್ವದ ಸಂಗ್ರಹವು |
ಮುಟ್ಟಲಲ್ಲೆ ವ್ರಯವಾಗುತಿಹುದು ಧನವು | ಸತಿಸುತ ಪರಿವಾರವು |
ಬಿಟ್ಟಗಲದೆ ಸೇವೆಯ ಮಾಡುವ ಜನವು | ಭಕ್ತರ ಸಮುದಾಯವು |
ದಟ್ಟಿಸಿ ಮನೆಯೊಳಗಾಗುದು ಪ್ರತಿದಿನವು | ಮೃಷ್ಟಾನ್ನ ಭೋಜನವು |’
ಎಂದು ಅವರ ಮರಿಮಗ ಶ್ರೀಪತಿತನುಜರು ತಮ್ಮ ಮುತ್ತಜ್ಜನ ದಿನಚರಿಯನ್ನು ಚಿತ್ರಿಸಿದ್ದಾರೆ.
ಸಾರವಾಡದಿಂದ ವಿಜಾಪುರಕ್ಕೆ ಬಂದು ನೆಲೆಸಿದ ಮೇಲೆ ವರುಷಾರು ತಿಂಗುಳಗಳಲ್ಲಿ ಅವರಿಗೆ ಪುತ್ರಸಂತಾನ ಲಾಭವೂ ಆಯಿತು. ಗೋಕುಲಾಷ್ಟಮಿಯ ದಿನ ರಾಯರ ಹೆಂಡತಿ ತಿಮ್ಮವ್ವ, ಅವಳಿ-ಜವಳಿ ಮುದ್ದಾದ ಎರಡು ಗಂಡು ಮಕ್ಕಳಿಗೆ ಜನ್ಮವಿತ್ತಳು. ಒಬ್ಬನಿಗೆ ದೇವರಾಯನೆಂದು ಇನ್ನೊಬ್ಬನಿಗೆ ಕೃಷ್ಣರಾಯನೆಂದು ಹೆಸರಿಟ್ಟರು.
ವಿಜಾಪುರದಲ್ಲಿ ರಾಜಕೀಯ ಅಸ್ಥಿರತೆ ಸಂಭವಿಸುವವರೆಗೂ ಮಹಿಪತಿರಾಯರು ನಗರದಲ್ಲಿಯೇ ಉಳಿದಿರಬೇಕು. ತಮ್ಮ ಸಾಧನೆಯಲ್ಲಿ ನಿರತರಾಗಿದ್ದರಿಂದ ರಾಜಕಾರಣದ ಸಂಬಂಧವನ್ನು ಅವರು ಆ ಮೊದಲೇ ಕಳಚಿಕೊಂಡಿದ್ದರು. ಜಾತಿ, ಮತ, ಪಂಥಗಳ ಭೇದವಿಲ್ಲದೆ ಪರಮಾತ್ಮನ ಕುರಿತು ಚಿಂತಿಸುವವರೆಲ್ಲ ಒಂದೇ ಜಾತಿಯವರು, ಮನುಷ್ಯಕುಲ ಒಂದು ಎಂಬ ಭಾವನೆಯಿಂದ ಅವರು ಎಲ್ಲರೊಡನೆ ಹೊಂದಿಕೊಂಡಿದ್ದರು. ಆಧ್ಯಾತ್ಮ ಸಾಧನೆಗೆ, ಚರ್ಚೆಗೆ ಅವರ ಹತ್ತಿರ ಎಲ್ಲ ಮತದವರೂ ಬರುತ್ತಿದ್ದರು. ಸೂಫಿ ಸಂತರು, ಅವಧೂತರು, ಶೈವರು, ವೈಷ್ಣವರಾದಿಯಾಗಿ ಎಲ್ಲ ಮತದವರೂ, ಕನ್ನಡ, ಮರಾಠಿ, ತೆಲುಗು, ದಖಣಿ ಉರ್ದು ಭಾಷೆಯವರೂ ಅವರ ಹತ್ತಿರ ಬರುತ್ತಿದ್ದರು. ಅಂತೆಯೇ ಅವರು ನಾಲ್ಕು ಭಾಷೆಗಳನ್ನು ಉಪಯೋಗಿಸಿ ರಚಿಸಿದ ಒಂದು ಕೀರ್ತನೆಯಲ್ಲಿ
`ಸಮಜೋ ಭಾಯಿ, ಸಕುನಾ ಚಾರೋ ಖುದಾಕಾ
ತೆಲುಗು ಕನ್ನಡ ತುರುಕಾರೇ ವಂದೇ ಸುಖ’
ಎಂದು ಹೇಳುತ್ತ ಭಾಷೆ ಬೇರೆಯಾದರೇನು ? ಅಂತಿಮ ಗುರಿ ಒಂದೇ ಎಂಬುದು ಅವರ ಸಂದೇಶವಾಗಿತ್ತು.
ಕ್ರಿ.ಶ. 1686 ರಲ್ಲಿ ಔರಂಗಜೇಬನು ವಿಜಾಪುರವನ್ನು ವಶಪಡಿಸಿಕೊಂಡು ದೆಹಲಿಯ ಮೊಗಲ ರಾಜ್ಯಕ್ಕೆ ಸೇರಿಸಿದನು. ಅದರ ಬೆನ್ನ ಹಿಂದೆಯೇ ಬಂದ ಮೂರು ವರುಷಗಳ ಬರಗಾಲ, ಪ್ಲೇಗ ಬೇನೆಗಳಿಂದ ನಗರವು ತತ್ತರಿಸಿತು. ಆ ದಿನಗಳಲ್ಲಿ ಮಹಿಪತಿರಾಯರು ಕಲಬುರ್ಗಿ ಜಿಲ್ಲೆಯ ಶಾಹಪುರಕ್ಕೆ ಹೋಗಿ ನೆಲೆಸಿದರು. ಮೂರು ವರುಷಗಳ ಅನಂತರ ಅವರು ತಿರುಗಿ ವಿಜಾಪುರಕ್ಕೆ ಬಂದಾಗ ಕಾಖಂಡಕಿ ಗ್ರಾಮದ ಜನರು ಬಂದು ತಮ್ಮ ಊರಲ್ಲಿಯೇ ಇರಲು ಆಮಂತ್ರಣ ನೀಡಿದರು. ಗ್ರಾಮದ ಪಟೇಲರು ಊರ ಮುಂದಿನ ತಮ್ಮ ತೋಟವನ್ನು ಕೊಟ್ಟರು. ಅಲ್ಲಿಯೇ ಒಂದು ಶಮೀವೃಕ್ಷದ ಅಡಿಭಾಗವನ್ನು ತಮ್ಮ ಅನುಷ್ಠಾನಕ್ಕಾಗಿ ಗೊತ್ತುಪಡಿಸಿ ದಿನದ ಬಹುಭಾಗವನ್ನು ಅಲ್ಲಿಯೇ ಕಳೆಯ ಹತ್ತಿದರು. [ಕಾಖಂಡಕಿ ಗ್ರಾಮವು ವಿಜಾಪುರದಿಂದ ದಕ್ಷಿಣಕ್ಕೆ 30 ಕಿ.ಮಿ ಅಂತರದಲ್ಲಿದೆ.]
ಇಬ್ಬರು ಮಕ್ಕಳಲ್ಲಿ ದೇವರಾಯನು ಕ್ಷಾತ್ರತೇಜದಿಂದ ಜಾಲವಾದಿಯ ದೇಸಗತಿಯನ್ನು ಸಂಪಾದಿಸಿ ಅಲ್ಲಿಯೇ ಉಳಿದನು. ಕೃಷ್ಣರಾಯನು ತಂದೆಯ ದಾರಿಯನ್ನು ತುಳಿದು ಆಧ್ಯಾತ್ಮ ಚಿಂತನೆ ಮಾಡುತ್ತ, ತಂದೆಯಿಂದಲೆ ದೀಕ್ಷೆ ಪಡೆದು ಹರಿದಾಸರಾಗಿ ಕಾಖಂಡಕಿಯಲ್ಲಿಯೇ ಉಳಿದರು. ಉಭಯ ಮನೆತನಗಳು ಇಂದಿಗೂ ಜೀವಂತವಾಗಿ ನಡೆದುಕೊಂಡು ಬಂದಿವೆ.
ಮಹಿಪತಿರಾಯರ ಸಾಧನೆ, ಸಿಧ್ದಿಗಳಿಂದಾಗಿ ಅವರು ಆ ಕಾಲದಲ್ಲಿ ತುಂಬ ಪ್ರಸಿದ್ಧರಾಗಿದ್ದರೆಂದು ಕಾಣುತ್ತದೆ. ಪುಣೆಯ ಅರ್ಕೀವ್ಹದಲ್ಲಿ, ವಿಜಾಪುರ ತಾಲೂಕು ಕಂದಾಯ ಕಚೇರಿಯಲ್ಲಿ ದೊರೆಯುವ ದಾಖಲೆಗಳಲ್ಲಿ ಶ್ರೀಮಹಿಪತಿಸ್ವಾಮಿ ಸಂಸ್ಥಾನ ಎಂದು ಕರೆದಿದೆ. ಹಲವಾರು ಸರದಾರರು. ದೇಸಾಯಿ, ದೇಶಮುಖರು ಅವರಿಗೆ ವಿವಿಧ ಗ್ರಾಮಗಳಲ್ಲಿ ಭೂಮಿಯನ್ನು ದಾನವಾಗಿ ನೀಡಿದ ಉಲ್ಲೇಖಗಳೂ ಇವೆ. ಕಾಖಂಡಕಿ ಗ್ರಾಮವಲ್ಲದೆ ಮುಳವಾಡ, ಸಾರವಾಡ, ಮಸೂತಿ, ಹೊನಗನಹಳ್ಳಿ ಕೊಲ್ಹಾರ, ಬಸವನ ಬಾಗೇವಾಡಿ ಮುಂತಾದ ವಿಜಾಪುರ ಜಿಲ್ಲೆಯ ಗ್ರಾಮಗಳಲ್ಲಿ ಅಲ್ಲದೆ ದೂರದ ಬಂಕಾಪುರದಲ್ಲಿಯೂ ಅವರ ಹೆಸರಿನಲ್ಲಿ ಜಮೀನು ದಾಖಲೆಗಳಿವೆ. ಅವುಗಳೆಲ್ಲ ಶ್ರೀ ಮಹಿಪತಿಸ್ವಾಮಿ ಸಂಸ್ಥಾನಕ್ಕೆ ಸೇರಿದ್ದವುಗಳೆಂದು ಈ ದಾಖಲೆಗಳು ಹೇಳುತ್ತವೆ
ಕಾಖಂಡಕಿಯ ಮಹಿಪತಿರಾಯರು ಸುಮಾರು 65 ವರುಷ ಬಾಳಿ-ಬದುಕಿ ಕೊಲ್ಹಾರದ ಕೃಷ್ಣೆಯ ದಡದಲ್ಲಿ ಕಾರ್ತೀಕ ಮಾಸದ ಅಮಾವಾಸ್ಯೆಯಂದು ಕಾಲವಾದರು. ಅವರ ಇಚ್ಛೆಯಂತೆ ಕಾಖಂಡಕಿಯಲ್ಲಿ ಅವರ ಸ್ಮರಣಾರ್ಥವಾಗಿ ವೃಂದಾವನವನ್ನು ಕಟ್ಟಲಾಯಿತು. ಅವರು ದೇಹವಿಟ್ಟ ಕೊಲ್ಹಾರದ ಕೃಷ್ಣೆಯ ದಡದಲ್ಲೂ ಒಂದು ವೃಂದಾವನ ಇದೆ.
ಕಾಖಂಡಕಿ ಮಹಿಪತಿರಾಯರ ಬದುಕು ಹಾಗು ಬರಹಗಳ ಕುರಿತು ಸಲ್ಲಿಸಿದ ಮಹಾಪ್ರಬಂಧದಲ್ಲಿ ಅವರ ಕಾಲವನ್ನು ಸುಧೀರ್ಘ ಚರ್ಚೆಯ ಅನಂತರ ಈ ರೀತಿಯಾಗಿ ನಿರ್ದೇಶಿಸಲಾಗಿದೆ.1
ಮಹಿಪತಿರಾಯರ ಜನನ ಕ್ರಿ.ಶ. ಸು 1640
ಖವಾಸಖಾನನ ಹತ್ತಿರ ಕರ್ಣಿಕ ' 1658-59
ಬಾದಶಹನ ಭೆಟ್ಟಿ ಪ್ರೀತ್ಯಾದರ ' 1660
ಭಾಸ್ಕರ ಸ್ವಾಮಿಗಳ ಅನುಗ್ರಹ ' 1670
ಅವಳಿ ಮಕ್ಕಳ ಜನನ ' 1672-73
ಶಾಹಪುರ (ಕಲುಬುರ್ಗಿ)ವಾಸ ' 1686-89
ಕಾಖಂಡಕಿಗೆ ಆಗಮನ ' 1690
ಮರಣ `` 1705
ಕೃತಿಗಳು
ಮಹಿಪತಿರಾಯರು ಕನ್ನಡ, ಮರಾಠಿ, ದಖಣಿ ಉರ್ದು ಭಾಷೆಗಳಲ್ಲದೆ ಮಿಶ್ರಭಾಷೆಗಳಲ್ಲೂ ಕೃತಿಗಳನ್ನು ರಚಿಸಿದ್ದಾರೆ. ಅವುಗಳ ಒಟ್ಟು ಸಂಖ್ಯೆಯನ್ನು 754 ಎಂದು ಈ ವರೆಗೆ ಗುರುತಿಸಲಾಗಿದೆ.1 ಅವುಗಳಲ್ಲಿ ಕನ್ನಡದ ಕೃತಿಗಳನ್ನು 685 ಎಂದು ಹೇಳಲಾಗಿದೆ. ಈ ಸಂಗ್ರಹವನ್ನು ಸಂಪಾದಿಸುವಾಗ ಇನ್ನಷ್ಟು ಕೀರ್ತನೆಗಳು ದೊರೆತಿದ್ದು ಇಲ್ಲಿ ಒಟ್ಟು 703 ಕೃತಿಗಳನ್ನು ಪ್ರಕಟಿಸಲಾಗಿದೆ. ಕರ್ನಾಟಕ ಹರಿದಾಸರ ಕೃತಿಗಳಲ್ಲಿ ಈ ವರೆಗೆ ದೊರೆತ ವೈಯಕ್ತಿಕ ಸಂಖ್ಯೆಯಲ್ಲಿ ಇದು ಅಧಿಕವಾಗಿದೆ.
ಮಹಿಪತಿರಾಯರ ಮನೆತನದಲ್ಲಿ ಅವರ ಅನಂತರ ಸುಮಾರು ನಾಲ್ಕು ತಲೆಮಾರುಗಳವರೆಗೆ ಸಾಹಿತ್ಯ ರಚನೆ ನಡೆದದ್ದು ಕಂಡು ಬರುತ್ತದೆ. ಅವುಗಳಲ್ಲೆಲ್ಲ ಮಹಿಪತಿ ಅಂಕಿತವನ್ನೆ ವಿವಿಧ ಸಂಬಂಧವಾಚಕ ಪದದಲ್ಲಿ ಬಳಸಲಾಗಿದೆ. ಹೀಗೆ ದೊರೆತ ಒಟ್ಟು 54 ಅಂಕಿತಗಳಲ್ಲಿ 14 ಅಂಕಿತಗಳನ್ನು ಮಾತ್ರ ಮಹಿಪತಿರಾಯರ ಅಂಕಿತವೆಂದು ಗ್ರಹಿಸಲಾಗಿದೆ.2 ಅವುಗಳು-
'ಮಹಿಪತಿ, ದೀನಮಹಿಪತಿ, ತರಳಮಹಿಪತಿ, ದಾಸಮಹಿಪತಿ, ಮೂಢಮಹಿಪತಿ, ನರಕೀಟಕಮಹಿಪತಿ, ಬಾಲಕಮಹಿಪತಿ, ಚಿಣ್ಣಮಹಿಪತಿ, ಕಂದಮಹಿಪತಿ, ಚಿಣ್ಣಕಿಂಕರಮಹಿಪತಿ, ಪುತ್ರಮಹಿಪತಿ, ಮಹಿಪತಿಗುರು, ಮಹಿಪತಿತಂದೆ, ಮಹಿಪೆಮ್ಮ.'
ಹೀಗೆ ಸುಮಾರು 14 ಅಂಕಿತಗಳಿಂದ ಮಹಿಪತಿರಾಯರು ಕೃತಿಗಳನ್ನು ರಚಿಸಿದ್ದಾರೆ.
ಕೃತಿಗಳ ವೈಶಿಷ್ಟ್ಯ
ಮಹಿಪತಿರಾಯರು ಬಹು ಭಾಷಾ ವಿಶಾರದರಾಗಿದ್ದರು. ಸಹಜವಾಗಿ ಆ ಭಾಷೆಗಳಲ್ಲಿಯ ಭಕ್ತಿ ಸಾಹಿತ್ಯವನ್ನು ಅವರು ಅಭ್ಯಸಿಸಿದವರಾಗಿದ್ದರು. ಮಹಾರಾಷ್ಟ್ರದಲ್ಲಿಯ ಮಹಾನುಭಾವ, ಭಾಗವತ, ಅವಧೂತ ಸಂಪ್ರದಾಯಗಳು ಹಾಗು ಮುಸ್ಲಿಮರಿಂದ ಪ್ರಚಲಿತದಲ್ಲಿದ್ದ ಸೂಫಿ ಸಂಪ್ರದಾಯ, ಕರ್ನಾಟಕದ ವೀರಶೈವ ಶರಣ ಸಾಹಿತ್ಯಗಳನ್ನು ಅವರು ಓದಿಕೊಂಡಿದ್ದರು. ಆದ್ದರಿಂದ ಅವರ ಅನೇಕ ಕೃತಿಗಳಲ್ಲಿ ಈ ಎಲ್ಲ ಸಂಪ್ರದಾಯಗಳ ಪಾರಿಭಾಷಿಕ ಪದಗಳು ಕಂಡು ಬರುವುದು ಸಹಜವಾಗಿದೆ `ನೇತಿ-ನೇತಿ’ ಸೋಹಂ, ‘ಸರ್ವಂ ಖಲು ಬ್ರಹ್ಮ ಇದಂ’ ಇತ್ಯಾದಿ ಅದ್ವೈತ ಪರ ಶ್ರುತಿ ವಚನಗಳೂ ಇವರ ಕೃತಿಗಳಲ್ಲಿ ಕಂಡು ಬರುವಂತೆ, ನಿರ್ಗುಣ ನಿರಾಕಾರ ಶೂನ್ಯ, ಬಯಲು, ನಿರ್ಬಯಲು, ಇತ್ಯಾದಿ ಪದ ಪ್ರಯೋಗಗಳಿಗೂ ಕೊರತೆ ಇಲ್ಲ. ಅದರಿಂದಾಗಿ ಹಲವರು ಇವರ ಸಂಪ್ರದಾಯವನ್ನು ಗುರುತಿಸುವಲ್ಲಿ ಭಿನ್ನ ಅಭಿಪ್ರಾಯಗಳನ್ನು ತಾಳುವಂತಾಗಿದೆ. ಅವರ ಕೃತಿಗಳಿಗೆ ಮಹಾರಾಷ್ಟ್ರದ ಅನುಭಾವ ಪರಂಪರೆ ಮತ್ತು ಅದ್ವೈತ ಭಕ್ತಿಯ ವ್ಯಾಖ್ಯಾನ ಮಾಡಿದ್ದು ಇದೆ. ಅದನ್ನು ಮೊದಲು ಪ್ರಾರಂಭಿಸಿದವರು ಖ್ಯಾತ ಅನುಭಾವಿ ತತe್ಞÁನಿ ಗುರುದೇವ ಅರ್.ಡಿ. ರಾನಡೆ ಅವರು ತಮ್ಮ ಸುಪ್ರಸಿದ್ಧ ಗ್ರಂಥ `ಕನ್ನಡ ಸಂತರ ಪಾರಮಾಥ್ ಮಾರ್ಗ’ (ಪಾಥವೇ ಟು ಗಾಡ್ ಇನ್ ಕನ್ನಡ ಲಿಟರೇಚರ) ದಲ್ಲಿ ನಿರೂಪಿಸಿದರು. ಮುಂದಿನ ದಿನಗಳಲ್ಲಿ ಅವರ ಶಿಷ್ಯರೆಲ್ಲರೂ ಮಹಿಪತಿರಾಯರ ಕೃತಿಗಳಿಗೆ ಅವಧೂತಪರವಾದ ವಿವರಣೆಗಳನ್ನು ಕೊಟ್ಟರು.
ಮಹಿಪತಿರಾಯರ ಮನೆತನದವರೇ ಆದ ಹರಿದಾಸ ಶ್ರೀಪತಯ್ಯನವರು ರಾಯರ ಆಧ್ಯಾತ್ಮ ದೃಷ್ಟಿ ಮಾಧ್ವಪರವಾದದ್ದು ಎಂದರು. ಮೈಸೂರು ವಿಶ್ವವಿದ್ಯಾಲಯವು ರಾಯರ ಕೃತಿಗಳನ್ನು ಸಂಪಾದಿಸಿ ಪ್ರಕಟಿಸುವಾಗ ಪ್ರಸ್ತಾವನೆಯಲ್ಲಿ ಅವರ ಸ್ವಾನುಭವ, ಸಿದ್ಧಿಗಳನ್ನು ಎತ್ತಿ ಹಿಡಿದು ದ್ವೈತ ಸಂಪ್ರದಾಯವೇ ರಾಯರ ಕೀರ್ತನೆಗಳ ತಳಹದಿ ಎಂಬುದನ್ನು ಹಿತಮಿತವಾಗಿ ಹೇಳಿದರು.
ಹೀಗೆ ಹಲವಾರು ವಿದ್ವಾಂಸರು ತಮ್ಮ-ತಮ್ಮ ಸಂಪ್ರದಾಯಗಳಂತೆ, ತಾವು ನಂಬಿದ ಶ್ರದ್ಧೆಯ ಬೆಳಕಿನಲ್ಲಿ ಮಹಿಪತಿರಾಯರಂಥ ಮಹಾತ್ಮರ ಯೋಗಿಗಳ ತಮಗೆ ಅನುಕೂಲವಾಗುವಂಥ ಅವರ ಕೆಲವು ಕೃತಿಗಳನ್ನು ಆಯ್ದುಕೊಂಡು ಅರ್ಥೈಸಲು ಪ್ರಯತ್ನಿಸಿದರು. ಅದು ಅವರವರು ಕಂಡುಕೊಂಡ ದೃಷ್ಟಿ. ಅದರಲ್ಲಿ ಅವರ ತಪ್ಪೇನೂ ಇಲ್ಲ. ಅದಕ್ಕೆ ಅವರು ಸ್ವತಂತ್ರರು. ಆದರೆ ಅದುವೆ ಅಂತಿಮ ನಿರ್ಣಯವಾಗಲಾರದೆಂಬುದೇ ರಾಯರ ಕೃತಿಗಳ ವೈಶಿಷ್ಟ್ಯವಾಗಿದೆ.
ಮಹಿಪತಿರಾಯರ ಕೃತಿಗಳನ್ನು ಅವಲೋಕಿಸುವಾಗ ಮೇಲಿನ ಅಭಿಪ್ರಾಯಗಳನ್ನು ಪುಷ್ಟೀಕರಿಸುವಂಥ ಅನೇಕ ಸಮಸ್ಯೆಗಳು ಪ್ರತಿ ಹೆಜ್ಜೆ-ಹೆಜ್ಜೆಗೂ ಬರುತ್ತವೆ. ದ್ವೈತವೂ ಇದೆ. ಅದ್ವೈತವೂ ಇದೆ. ದ್ವೈತ-ಅದ್ವೈತ ಎರಡೂ ಇಲ್ಲ. ಅದನ್ನು ರಾಯರು ತಮ್ಮ ಒಂದು ಕೃತಿಯಲ್ಲಿ ಸ್ಪಷ್ಟವಾಗಿಯೆ ಹೇಳಿದ್ದಾರೆ.
`ದ್ವೈತ ಅದ್ವೈತ ಎಂದು ಹೊಡೆದಾಡದಿರೋ ಪ್ರಾಣಿ
ಚೇತಿಸಿ ಬ್ಯಾರಿಹ ವಸ್ತುಕಾಣಿಎಂದು ಈ ಸಮಸ್ಯೆಯನ್ನು ಬಗೆಹರಿಸಿದ್ದಾರೆ.
ಮನೆತನದಿಂದ ಮಹಿಪತಿರಾಯರು ಮಾಧ್ವ-ವೈಷ್ಣವ ಸಂಪ್ರದಾಯಕ್ಕೆ ಸೇರಿದವರು. ವಂಶ ಪಾರಂಪರ್ಯವಾಗಿ ಮಧ್ವ ಮತ ತತ್ವಗಳಲ್ಲಿ ಅಚಲವಾದ ನಂಬುಗೆಯನ್ನು ಇಟ್ಟವರು. ಅದರಿಂದಾಗಿ ವಾಸ್ತವದಲ್ಲಿ ಮಹಿಪತಿರಾಯರು ಕೂಡ ವಿಷ್ಣು ಸರ್ವೋತ್ತುಮತ್ವ, ಲಕ್ಷ್ಮೀದೇವಿಯು ಪ್ರಕೃತಿ ನಿಯಾಮಕಳು, ಜಗತ್ತು ಪಾರಮಾರ್ಥಿಕ, ಸತ್ಯ ಮುಕ್ತಿ-ನೈಜ ಸುಖಾನುಭವ ಹಾಗು ಮುಕ್ತಿಗೆ ನಿರ್ಮಲವಾದ ಭಕ್ತಿಯೇ ಮುಖ್ಯ ಸಾಧನವೆಂದು ನಂಬಿದ್ದರು. ಅವುಗಳನ್ನು ಅವರು ತಮ್ಮ ಕೃತಿಗಳಲ್ಲಿ ಹಲವಾರು ಸಲ ಪ್ರತಿಪಾದಿಸಿದ್ದಾರೆ.
ಶ್ರೀ ಹರಿಯು ಮಾಧ್ವರ ಇಷ್ಟದೈವ ಅವನು ಸರ್ವೋತ್ತುಮನು. ಸ್ವತಂತ್ರನು ಹರಿಸರ್ವೋತ್ತುಮತ್ವವು ಮಧ್ವಾಚಾರ್ಯರ ಉಪದೇಶದ ತಿರುಳು.
ಶ್ರುಣುತಾಮಲ ಸತ್ಯವಚಃ ಪರಮಂ |ಶಪಥೇರಿತ ಮುಚ್ಚ್ರಿತ ಬಾಹು ಯುಗಂ |ನಹರೇಃ ಪರಮೋಃ ನಹರೇಃ ಸದೃಶಃ |ಪರಮಃ ಸತು ಸರ್ವ ಚಿದಾತ್ಮಗಣಾತ್ ||
ಎಂದು ಮಧ್ವಾಚಾರ್ಯರು ಇದನ್ನು ತಮ್ಮ ದ್ವಾದಶ ಸ್ತೋತ್ರದಲ್ಲಿ ಸಾರಿ ಹೇಳಿದ್ದಾರೆ. ಶ್ರೀ ಹರಿಗಿಂತ ಉತ್ತಮನಿಲ್ಲ, ಅವನಿಗೆ ಸಮನಾದವರು ಯಾರೂ ಇಲ್ಲ. ಎಲ್ಲ ಜೀವರಾಶಿಗಿಂತ ಅವನು ಉತ್ತುಮನು ಎಂದು ನಾನು ಎರಡೂ ಕೈಗಳನೆÀ್ನತ್ತಿ ಶಪಥ ಮಾಡುತ್ತ ಪರಮ ಸತ್ಯವಾದ ಈ ಮಾತನ್ನು ಹೇಳುತ್ತೇನೆ ಕೇಳಿ ಎಂದು ಅವರು ಹೇಳಿದ್ದಾರೆ.
ಇದನ್ನೇ ಮಹಿಪತಿರಾಯರು ಏಳು ನುಡಿಗಳ ತಮ್ಮ ಒಂದು ನಿಡಿದಾದ ಕೃತಿಯಲ್ಲಿ ಸುಂದರವಾಗಿ ನಿರೂಪಿಸುತ್ತಾರೆ.
`ಹರಿ ಹರಿ ಹರಿ ಹರಿ ಹರಿಯೆನಬೇಕುಹರಿಸ್ಮರಣೆಯೊಳನುದಿನವಿರಬೇಕು ||ಎಂದು ಪ್ರಾರಂಭವಾಗುವ ಧ್ರುವ ಪದದ ಕೀರ್ತನೆಯಲ್ಲಿ
``ಹರಿಯೇ ಶ್ರೀ ಪರಬ್ರಹ್ಮೆನಬೇಕು |ಹರಿ ಪರಂದೈವ ವೆಂದರಿಬೇಕು |ಹರಿಯೇ ತಾ ಮನ ದೈವವೆನಬೇಕು |ಹರಿ ಋಷಿ ಮುನಿ ಕುಲಗೋತ್ರವೆನಬೇಕು ||'
ಎನ್ನುತ್ತಾರೆ. ಹರಿಯೇ ಪರಬ್ರಹ್ಮ, ಹರಿಯೇ ಪರಂದೈವ ಹರಿಯೇ ತಾಯಿತಂದೆ ಬಂಧು-ಬಳಗ, ಆಪ್ತ ಮಿತ್ರರು ಸಲಹುವ ದೊರೆ, ಸುಖ ಸೌಖ್ಯದ ಸಿರಿ ಹರಿಯೇ ಸರ್ವೋತ್ತುಮ ಸ್ವಾಮಿ ಸಕಲ ತಾ ಧರ್ಮವೂ ಹರಿಯೇ, ಶ್ರೀ ಪರಮಾತ್ಮ ಎಂದು ಹೇಳುತ್ತ ಕೊನೆಯಲ್ಲಿ
'ಹರಿ ಬಾಹ್ಯಾಂತರೇಕೋಮಯವೆನಬೇಕು|ಹರಿ ಸಕಲವು ವ್ಯಾಪಕವೆನಬೇಕು|ಹರಿಯೇ ಶ್ರೀ ಪರಮಾತ್ಮನೆನಬೇಕು|ಹರಿ ಮಹಿಪತಿ ಸದ್ಗತಿಯೆನಬೇಕು||'
ಎಂದು ಹೇಳುತ್ತಾರೆ. ಅವರ ಒಟ್ಟಿನ ಕೃತಿಗಳಲ್ಲಿ ಮುನ್ನೂರಕ್ಕಿಂತ ಅಧಿಕ ಕೃತಿಗಳು ಹರಿಗುರುಗಳ ಮಹಿಮೆಗೆ ಮೀಸಲಾಗಿವೆ.
ಆದರೆ ರಾಯರ ಕೃತಿಗಳಿಗೆ ಇದೊಂದೇ ಮುಖ ಇರಲಿಲ್ಲ. ಅವರು ತಮ್ಮ ಸಾಧನೆಗೆ ಬಳಸಿದ್ದು ಯೋಗ ಮಾರ್ಗ. ಈ ಸಾಧಕನ ಜೀವನ ಮಾತ್ರ ಭಾಸ್ಕರ ಸ್ವಾಮಿಗಳಿಂದ ಪ್ರಾರಂಭವಾದದ್ದು, ಅವರ ಅನುಗ್ರಹವೇ ಅದಕ್ಕೆ ಕಾರಣವಾಯಿತು. ಆದ್ದರಿಂದ ಸಾಧನ ಮಾರ್ಗದಲ್ಲಿಯ ವಿವಿಧ ಹಂತಗಳಲ್ಲಿಯ ಸಾಧಕನ ಸ್ವರೂಪ ಆ ಯೋಗ ಮಾರ್ಗದ್ದೇ ಆಗಿದೆ. ಮಾರ್ಗ ಮಧ್ಯದಲ್ಲಿ ದ್ವೈತ ಅದ್ವೈತಗಳ ತಳಕು ಇಲ್ಲ. ನಾಮಸ್ಮರಣೆ, ಜಪ, ತಂತ್ರಯೋಗ ಹಾಗು ರಾಜಯೋಗದ ಅನುಭವಗಳನ್ನು ಅವರು ಅದ್ಭುತವಾಗಿ ವರ್ಣಿಸುತ್ತಾರೆ.
ಹರಿದಾಸರ ಪರಂಪರೆಯಲ್ಲಿ ಕಂಡು ಬರದ ರೀತಿಯಲ್ಲಿ ಕೆಲವೊಮ್ಮೆ ಗುರುವಿನ ವರ್ಣನೆ, ಗುರು ತತ್ವದ ಮಹತ್ವವನ್ನು ಬಿತ್ತರಿಸಿದ್ದಾರೆ ಎಂದು ಅನಿಸಬಹುದು. ಉಳಿದ ಯಾವ ಹರಿದಾಸರೂ ತಮ್ಮ ಕೃತಿಗಳಲ್ಲಿ ಉಲ್ಲೇಖಿಸಿರದ ದತ್ತಾತ್ರಯನ ಕುರಿತಾದ ಕೀರ್ತನೆಗಳನ್ನೂ ರಾಯರು ರಚಿಸಿದ್ದಾರೆ. ಉಳಿದ ಹರಿದಾಸರು ವಿಷ್ಣು ಭಕ್ತಿ, ಭಕ್ತಿಯ ಅನುಭವಗಳನ್ನು ಜೊತೆಗೆ ತಮ್ಮ ಸಾಧನ ಮಾರ್ಗದ ಕಿಂಚಿತ್ ದರ್ಶನವನ್ನು ಮಾಡಿಸಿದ್ದಾರೆ. ಮಹಿಪತಿರಾಯರು ಯೋಗ ಮಾರ್ಗದ ವಿಶಿಷ್ಟ ಅನುಭವಗಳನ್ನು ಸವಿವರವಾಗಿ ತಮ್ಮ ಕೃತಿಗಳಲ್ಲಿ ವ್ಯಕ್ತಪಡಿಸಿದರು. ಆದ್ದರಿಂದ ಮಹಿಪತಿರಾಯರು ಕೇವಲ ಹರಿದಾಸರೆಂದಾಗಲೀ, ಯೋಗಿಗಳೆಂದಾಗಲೀ, ತಂತ್ರಸಾಧಕರೆಂದಾಗಲೀ, ಮಹಾ ಭಕ್ತರೆಂದಾಗಲೀ ಪರಿಗಣಿಸಲು ಬರುವುದಿಲ್ಲ. ಅವರು ಈ ಎಲ್ಲವುಗಳು ಆಗಿದ್ದರು ಮತ್ತು ಸಮಕಾಲೀನದಲ್ಲಿ ಸಾಧ್ಯವಿದ್ದ ಎಲ್ಲ ಮಾರ್ಗಗಳಿಂದಲೂ ಆಧ್ಯಾತ್ಮ ಸಾಧನೆ ಮಾಡಿ ಅದ್ಭುತ ಸಿದ್ಧಿಗಳನ್ನು ಪಡೆದವರಾಗಿದ್ದರು. ಈ ದೃಷ್ಟಿಯಿಂದ ಅವರ ಸಾಧನ ಮಾರ್ಗವು ಸಂಕೀರ್ಣವಾದದ್ದು. ಅಂತೆಯೇ ಕರ್ನಾಟಕದ ಅಷ್ಟೇ ಏಕೆ ವಿಶ್ವದ ಅನುಭಾವಿಗಳಲ್ಲಿ ಮಹಿಪತಿರಾಯರ ಸ್ಥಾನವು ವಿಶಿಷ್ಟವಾದದ್ದು ಎಂದು ಗುರುದೇವರಾನಡೆ ಅವರು ಬಾಯ್ತುಂಬ ಹೊಗಳುತ್ತಾರೆ.
ಶೈಲಿ
ಮಹಿಪತಿರಾಯರು ಮೂಲತಃ ಹಿರಿಯ ಅನುಭಾವಿಗಳು, ಸಾಧಕರು, ಸಿದ್ಧರು, ಯೋಗಿಗಳು, ತಮ್ಮ ಬದುಕಿನಲ್ಲಿ ಸಾರ್ಥಕತೆಯನ್ನು ಪಡೆದವರು, ಅವರು ಕವಿಗಳಾಗಬೇಕೆಂದು ಕೃತಿಗಳನ್ನು ರಚಿಸಿದವರಲ್ಲ. ಪರಮಾತ್ಮನನ್ನು ಕಾಣುವ ಹಂಬಲ ಉಳ್ಳವರು ಆದ್ದರಿಂದಲೇ ತಮ್ಮ ಒಂದು ಕೃತಿಯಲ್ಲಿ ಸ್ಪಷ್ಟವಾಗಿ ತಮ್ಮ ರಚನೆಗಳ ಬಗ್ಗೆ ಹೇಳಿಕೊಂಡಿದ್ದಾರೆ.
`ಸರ್ವೋತ್ತಮನ ಸ್ತುತಿಗೆ ಸರಿಬೆಸದಕ್ಷರ ದೆಣಿಕ್ಯಾಕೆ |ಯತಿಗಣ ಪ್ರಾಸವ್ಯಾಕೆ ಸ್ತುತಿಸ್ತವನ ಕೊಂಡಾಡಲಿಕ್ಕೆ |ಹಿತದೋರದು ಮಿತಿ ಮಾಡಲಿಕ್ಕೆ ಅತಿ ಶೋಧಿಸಲಿಕ್ಕೆ |ಮುಕ್ತಿಗೆ ಬದ್ದವೆಂದೆಂದೊ ಉತ್ತಮರುಪೇಕ್ಷಿಸರೆಂದೂನೆತ್ತಿಲಿಟ್ಟು ಕೊಂಬರು ಬಂದು ಅತಿಪ್ರೀತಿಲೆ ನಿಂದು ||
ಎಂದು ಹೇಳುತ್ತಾರೆ. ಅನುಭಾವಿಗಳ ದಾರಿಯಿಲ್ಲಯ ವನಶ್ರೀಯಂತೆ ಅವರ ಕಾವ್ಯಸಂಪತ್ತಿದೆ. ಅವುಗಳಿಗೆ ಮೂಲ ಪ್ರೇರಣೆ ಅವರ ಅನುಭವ ಹಾಗು ಸಾಧನೆಯೇ ಆಗಿದೆ. ಒಂದೊಂದು ಸಾಧನೆ, ಸಿದ್ಧಿಯ ಅನಂತರ ಪಡೆದ ಅಮೃತ ಶಾಂತಿಯನ್ನು ಅವರು ತಮ್ಮ ಕೃತಿಗಳಲಿ ಪ್ರಕಟಿಸಿದ್ದಾರೆ. ಗಿಡ ಬಳ್ಳಿಗಳಿಗೆ ಚಿಗುರು, ಹೂವು, ಕಾಯಿ, ಹಣ್ಣುಗಳಾಗುವಷ್ಟು ಸಹಜ-ಸ್ವಾಭಾವಿಕವಾಗಿ ಈ ಕೃತಿಗಳ ಸೃಷ್ಟಿಯಿದೆ. ಹೇಳಬೇಕೆಂಬ ಉತ್ಕಟ ಆಕಾಂಕ್ಷೆಯಲ್ಲಿ ಕಾವ್ಯ ಹೊರಹೊಮ್ಮುತ್ತದೆ. ಅಲ್ಲಿ ಯತಿ, ಗಣ, ಪ್ರಾಸಗಳು ಅಭ್ಯಾಸವಿಲ್ಲದೆಯೇ ಕೆಲವೊಮ್ಮೆ ಅವುಗಳು ಬಂದಿರುತ್ತವೆ.
<ಈಔಓಖಿ ಜಿಚಿಛಿe='ಓuಜi ಂಞs
****
ಮಹಿಪತಿದಾಸ
ಕಾಲ – 1611 – 1681
ವಂಶ ಕಥವಾಟೆ
ಗುರುಗಳು – ಕೊಲ್ಹಾರ ಪ್ರಹ್ಲಾದ ಕೃಷ್ಣಾಚಾರ್ಯ
ತಂದೆ – ಕೊನೇರಿರಾಯರು
ವೃತ್ತಿ – ನವಾಬರ ಬಳಿ ಲೆಕ್ಕಿಗನಾಗಿ ಸ್ವಲ್ಪ ಕಾಲ
ತಿಳಿದ ಭಾಷೆಗಳು – ಕನ್ನಡ, ಸಂಸ್ಕೃತ, ಹಿಂದಿ, ಮರಾಠಿ, ಉರ್ದು ಮತ್ತು ಪಾರ್ಸಿ
ವ್ಯವಹಾರ ನಾಮ – ಮಹಿಪತಿ ರಾಯರು – ಮಹಿಪತಿ ದಾಸರು
ಅಂಕಿತ – ಮಹಿಪತಿ
ಸ್ಥಳ – ಕಾಖಂಡಕಿ
ಮಹಿಪತಿದಾಸರ ವೃಂದಾವನ ಆದಂಥ ವಿಷಯ : (ಸಂಗ್ರಹ – ಪವನ್ ಹರಿದಾಸ್)
ಮಹಿಪತಿದಾಸರಿಗೆ ತಮ್ಮ ಅವಸಾನ ಕಾಲ ಸಮೀಪವಾಗಿದೆಯೆಂದು ತಿಳಿಯಿತು. ಆಗ ಕುಲಗುರುಗಳಾದ ಕೊಲ್ಹಾರದ ಕೃಷ್ಣಾಚಾರ್ಯರನ್ನು ನೋಡಬೇಕೆಂಬ ಆಸೆಯಾಯಿತು. ಅವರು ಈ ವಿಷಯವನ್ನು ತಮ್ಮ ಹಿರಿಯ ಮಗನಾದ ದೇವರಾಯನಿಗೆ ಕೃಷ್ಣರಾಯರಿಂದ ಸುದ್ಡಿ ಕಳಿಸಿ, ತಾವು ಕೃಷ್ಣರಾಯರಿಂದ ಕೂಡಿಕೊಂಡು ಕೊಲ್ಹಾರಕ್ಕೆ ತೆರಳಿ ಅಲ್ಲಿ 6 ದಿನಗಳಿದ್ದು ಸರಿಯಾಗಿ 7ನೆ ದಿನ ಪ್ರಾಪ್ತಿಯಾಗಲು ಕೃಷ್ಣಾನದಿ ಸ್ನಾನ ಮಾಡಿಕೊಂಡು ಅನುಷ್ಟಾನಕ್ಕೆ ಕುಳಿತವರೇ ತಮ್ಮ ದೇಹತ್ಯಾಗವನ್ನು ಮಾಡಿದರು.
ಪುತ್ರದ್ವಯರಿಬ್ಬರು ಉತ್ತರಕ್ರಿಯೆಗಳನ್ನು ಮುಗಿಸಿ ಅಸ್ತಿಸಂಚಯನ ಮಾಡುತ್ತಿದ್ದಾಗ ಕೈಯಲ್ಲಿ ಹಿಡಿದ ಅಸ್ಥಿಗಳು ನೀರಾಗಿ ಹೋದವು. ಮತ್ತು ಅಶರೀರ ವಾಣಿಯಾಯಿತಂತೆ “ಮಗು ಚಿಂತಿಸಬೇಡ ಇವುಗಳು ಗಂಗೆಯಲ್ಲಿ ವಿಸರ್ಜನಗೊಂಡಿವೆ” ಎಂದು ಹೇಳಿದರಂತೆ. ನಂತರ ಕೃಷ್ಣರಾಯರಿಗೆ ಸಮಾಧಾನವಾಗದಿದ್ದುದನ್ನು ತಿಳಿದು ಮುಂದುವರೆಸಿ , ನಾನು ಕಾಖಂಡಕಿಯಲ್ಲಿ ಅನುಷ್ಥಾನಕ್ಕೆ ಕುಳಿತುಕೊಳ್ಳುತ್ತಿದ್ದ ಶಮೀವೃಕ್ಷದ ಕೆಳಗೆ ಹನ್ನೆರಡು ಸಾಲಿಗ್ರಾಮಗಳಿವೆ ಅವುಗಳನ್ನು ತೆಗೆದು ಅದೇ ಜಾಗದಲ್ಲಿ ನನ್ನ ವೃಂದಾವನವನ್ನು ನಿರ್ಮಿಸು ಎಂದು ಹೇಳಿದರಂತೆ.
ಈಗಿರುವ ವೃಂದಾವನವು ಒಂದು ಕ್ಷೇತ್ರ ಶಾಲಿಗ್ರಮಗಳ ಸನ್ನಿಧಿಯಿರುವಂತಾಗಿದೆ. ತಂದೆಯ ಆಜ್ಞೆಯಂತೆಯೇ ಕಾಖಂಡಕಿಗೆ ಬಂದು ಅವರು ಅನುಷ್ಠಾನ ಮಾಡುತ್ತಿದ್ದ ಹೊಲದಲ್ಲಿ ಬಂದು ವೃಂದಾವನ ನಿರ್ಮಿಸಬೇಕೆನ್ನುತ್ತಿರುವಾಗ ಹೊಲದ ಮಾಲೀಕನಾದ ಗೌಡನು ಅದಕ್ಕೆ ಒಪ್ಪಲಿಲ್ಲ. ಚಿಂತಾಕ್ರಾಂತರಾಗಿ ಕೃಷ್ಣರಾಯರು ಅಲ್ಲಿಯೇ ನಿಂತಾಗ ಸೇವಕನೊಬ್ಬ ಓಡಿಬಂದು ಗೌಡನ ಪುತ್ರನು ತೀರಿಕೊಂಡ ವಿಷಯ ತಿಳಿಸಿದ. ದುಖಿತನಾದ ಗೌಡನು ನಿಮ್ಮ ತಂದೆಯು ಮೊರದೆಪ್ಪನ ಹೆಂಡತಿಯನ್ನು ಬದುಕಿಸಿದಂತೆ, ನೀವು ನನ್ನ ಮಗನನ್ನು ಬದುಕಿಸಿ ಎಂದು ಹೇಳಿದರು ರಾಯರು, ನನ್ನ ತಂದೆ ಪವಾಡಗಳನ್ನು ಮಾಡಬೇಡ ಎಂದು ಆಜ್ಞೆ ನೀಡಿದ್ದಾರೆ. ಆದ್ದರಿಂದ ನಾನು ಬದುಕಿಸಲಾರೆ, ಇನ್ನು ನಾಲ್ಕು ತಲೆಮಾರು ದತ್ತುಪುತ್ರರಿಂದಲೇ ವಂಶ ಬೆಳೆದು ನಂತರ ನಿಮ್ಮ ಸಂತತಿಯಿಂದಲೇ ವೃದ್ಧಿಯಾಗುತ್ತದೆಂದು, ಸಂಪತ್ಭರಿತ ಜೀವನ ನಡೆಸುವಿರೆಂದು, ದಾಸರ ಸೇವೆ ಮಾಡುವಂತೆ ತಿಳಿಸಿದರು. ಅವನ ಹೊಲವನ್ನು ದಾಸರಿಗೆನೀಡಿದ ಗೌಡರ ಮನೆತನ ಇಂದಿಗೂ ಆರಾಧನೆ ಸಮಯದಲ್ಲಿ ತುಂಬಾ ಸೇವೆ ಗೈಯುತ್ತಾರೆ. ಈಗ ವೃಂದಾವನವು ಅದೇ ಹೊಲದಲ್ಲಿ ಪ್ರತಿಷ್ಥಾಪನೆಗೊಂಡಿದೆ. ವೃಂದಾವನ ಸಾನ್ನಿಧ್ಯ ಸಾಕ್ಷಿಗಾಗಿ ಒಮ್ಮೆ ಕೃಷ್ಣರಾಯರು “ವೃಂದಾವನೀದೇವಿ ತಂದೆ ಮಹೀಪತಿಯ ಪಾದವ ತೋರೆ”ಎಂದು ಹಾಡಲು ಸಾಕ್ಷಾತ್ ಮಹಿಪತಿರಾಯರು ವೃಂದಾವನದಿಂದ ತಮ್ಮ ಪಾದುಕೆಗಳನ್ನು ನೀಡಿದ್ದಾರೆ. ಅವುಗಳು ಇಂದಿಗೂ ಪೂಜೆಗೊಳ್ಳುತ್ತಿವೆ.
**********
Story of brindAvana construction
As shri mahipati dAsaru neared his mortal end, he wanted to wanted his kula gurugaLu - shri kUlhArada krishNachAryaru. He left for kUlhAra with his younger son, shri krishNAchArya. After spending 6 days at kUlhAra, he left his mortal body on the 7th day morning, after doing snAna in Krishna river and while sitting for his anushTana.
Post the rituals, when shri krishNachArya was holding the "ashes", they turned into water. At the same time, there was an "asharIra vANi" that the ashes have merged into Ganga. It was the voice of shri mahipati dAsaru. Mahipati dAsaru continued to say that there is shami vrisha in khAkhanDaki, at the spot where he used to do his anushTAna. Underneath that tree, there were 12 sAligrAmAs, which should be taken out and a brindAvana to be constructed for him at the same spot.
shri krishNAchArya wanted to follow the orders. But the owner of that land refused to give him the land. At that time, the owner got a message that his son had died. He requested krishNAchArya to revive him with his spiritual powers just like his father, shri mahipati dAsaru had done for someone else. shri krishNAchArya refused saying that his father had ordered him to not perform any miracles. However, he predicted that the owner's family would have to live with adopted children for 4 generations and then would beget a child of their own and would prosper. The family still exists in the village and participates in the ArAdhanE of shri mahipati dAsaru even today.
Some of the songs composed by dAsaru
1. Kolu Kolenna Kole https://www.youtube.com/watch?v=BS-psSvATsw
2. Enna Paaliso Karunaakara https://www.youtube.com/watch?v=ZbEqCu9c80E
3. Indu Kande Chanara (6th song in the album) https://www.youtube.com/watch?v=U9Nofrguw8Q&hd=1
4. Sakalavenage Neene https://www.youtube.com/watch…
shri krishAarpaNamastu...
Sources:
1. Shri Guru Raghavendran on Facebook.
********
೨)ಮಂದಾಕಿನಿ ತೀರ್ಥ ಎಲ್ಲಿದೆ?
೩)ಮಂದಾಕಿನಿ ತಟದಲ್ಲಿ ಮಹಿಪತಿದಾಸರು ಪ್ರತಿಷ್ಠಾಪಿಸಿದ ಮೂರ್ತಿ ಯಾವುದು?
೪)ಮಹಿಪತಿದಾಸರು ಎಷ್ಟು ವರ್ಷಗಳ ಕಾಲ ಮಂದಾಕಿನಿ ತಟದಲ್ಲಿ ತಪವನ್ನಾಚರಿಸಿದರು?
೫)ಮಹಪತಿದಾಸರು ಯಾವ ಗ್ರಾಮವನ್ನು ತಮ್ಮ ಕಾರ್ಯಕ್ಷೇತ್ರವನ್ನಾಗಿ ಆಚರಿಸಿಕೊಂಡರು?
The Dewan who became a Dasa
He was an accountant in the Adil Shahi Kingdom of Bijapur. A master of Urdu, Persian and Kannada, he rose to become one of the most famous Haridasa saints of the era.
One day, he was giving a discourse on the NarasimhaTemple in Bijapur where he was staying. Bijapur then was under the Adil Shahis and it was perhaps the most prominent city of South India.
A leading commander of Bijapur and one of its noblemen, Khawas Khan, happened to pass by the Narasimha temple. Attracted by the sonorous voice, he halted and found that a discourse was being delivered at the temple.
He invited the Haridasa to come to his house and deliver a similar religious discourse. The Haridasa gladly accepted and went to the mansion of Khawas Khan. The Haridasa gave an excellent discourse in Urdu and Persian language. Khawas Khan and his family members were stunned by the scholarship of the Dasa and his mastery over the languages.
This Haridasa was none other than Mahipati Dasa (1611-1681) who worked as an accountant for some time before plunging into the Haridasa movement.
When Mahipathi Dasa conducted a discourse in Khan’s house, he spoke on the incidents from Bhagavatha, Ramayana and other texts. His discourse was so well liked that it became a practice and later on to conduct them in both Khan’s house and the Narasimha Temple. Many Muslims, including mullas, attended his discourse and appreciated it.
Mahapati Dasa’s guru was Kolhar Prahalada Krishnacharya. Mahipati belonged to the famous Kathavate family of Kakandiki, a small village near Bijapur.
He was the son of Koneri Rao, an orthodox Madhwa, and even as a young man, he learnt several languages. He was extremely proficient in Kannada, Sanskrit, Hindi, Marathi, Urdu and Persian. He came under the influence of Bhaskar Yogi, an Adwaita scholar, of north Karnataka.
He wrote with the Ankita Mahapati and his song Kolu Kolena Kole is famous to this day.
Once, the accountants of the Kingdom were in difficulty, as they could not rectify a mistake in their accounts. Someone suggested that Mahipathi Rao could be asked to look into the accounts as he was a known expert in accounting. Mahipathi verified the accounts, identified the error and set it right.
Mahipathi then was appointed as Manager of Accounts Department. Eventually, he rose to become the Dewan of the province.
Mahipathi then married Tirumala and led a very simple and austere life, even though he could afford luxuries and comforts. He was man of simple tastes add devoted to his work. It was two Sufi saints of Bijapur who sent him to Bhaskar Swamy.
The Sufi saints were a brother and sister called Shah Nunga and Shah Nungi. They were very popular in the city of Bijapur and elsewhere. They could predict the future and even perform miracles.
However, they lived a mysterious life and nobody knew where or how they lived. They wore rags and spoke in riddles. As they were highly pious, they were respected by both Hindus and Muslims.
One day, Mahipathi was inspecting some construction work on the banks of Begum Talab, a water tank in Bijapur. (This tank still exists). Shah Nunga appeared suddenly at the Talab and he saw a ring in the hand of Mahipati.
He was curious to know what the ring was. Mahipati told the Sufi saint that it was the royal sign or Ring (raja mudra) and that he had it in his possession as he was the Dewan of the province.
Shah Nunga took the ring from Mahipati and threw it in the Begum talab. Mahipathi was shocked and he realised that he would be in trouble if the ring was not found. As it was a symbol of royal power and prestige, it could not be trifled with.
Mahipati pleaded with Shah Nunga to retrieve the ring. Shah Nunga then turned to his sister, Shan Nungi, who had come to the Begum Talab, and asked her to get the ring.
Shah Nungi immediately jumped into the tank and came up with hundreds of rings, all bearing the royal sign. She then handed over the rings to Mahipati who failed to identify the original.
Mahipati then again requested Shah Nunga to help him identify the original ring. Shah Nunga retrieved the original ring and said, “Maut kaa ghan” (smell of stinking body). So saying, both he and his sister disappeared from the Begum Talab.
Mahipathi could not understand Shah Nunga’s utterance. He kepton thinking about it. He then approached Shah Nunga himself for an explanation of the words “Maut Kaa ghan”.
Shah Nunga asked Mahipati to approach Bhaskara Swamy, who was then staying in Sarvada, a small village. “Accept him as your guru”, he said. Mahipati then decided to renounce the post of Dewan. Both he and his wife then came to Sarwada where they met Bhaskara Swamy.
Bhaskar Swamy accepted Mahipathi as his disciple and gave him Upadesha. He also blessed the couple, saying that they would have illustrious children. Mahipathi and his wife stayed with Bhaskar Swamy for some time before going to their native place near Bijapur.
Later, Mahipathi went to Shahpura village in Gulbarga district. He made the Hanuman Temple here his home for carrying spiritual activities.
Mahipati has written scores of devaranamas and they are all full of devotion and sincerity to God.
His kolu song goes as follows:
Kolu kolenna kole | kolu cinnada kole | kole || pa||
Shikshisi nigamacora, raakshasana kondu |
Rakshisi vedanuluhida kole |
Rakshisi vedanuluhida kshitiyolu
Matsyaavataarana balagombe kole || 1 ||
Dharmavanaliyalaagi marmava taalida karmahara
Shreemoortiya kole |
Karmahara shreemoortiyu dhareya potta
Koormaavataarana balagombe kole||2||
Dhareya kaddasurana kore daadimda seeli | hore
Hoydaadida narahari kole |
Hore hoydaadida narahari dhareya gedda
Varahaavataarana balagombe kole ||3||
Tarala pralhaadanaagi durula daityana kondu
Karalu vanamaale dharisidda kole |
Karalu vana maale dharisidda narahari
Narasimhaa avataaranna balagombe kole ||4||
Nemisi mooru paada bhoomiya bedidaa |
Hemmeya taa pariharisidda kole |
Hemmeya taa pariharisidda
Braahmananaagi|vaamanaavataranna balagombe kole ||5||
Aagneya meerade agrajara shira |
Sheeghrradimdali iluhida kole |
Sheeghrradimdali iluhida shiravannu bhaargava
Raamana balagombe kole || 6 ||
Kaamadi seeteyanoyda taamarasadavana
Kondu|nema sthaapisida ileyolu kole|
Nema sthaapisida ileyolu shyaamavarna |
Raamana balagombe kole || 7 ||
Dushta daityaranella kutti maduhida | nettane
Giriya ettida kole |
Nettane giriyanettida bottile
Krushnaavataaranna balagombe kole || 8 ||
Kaddu tripura pokku idda satiyara vruta | siddiya
Taanu alidaanu kole |
Siddiya taanu alidaanu buddiyali
Bouddhaavataaranna balagombe kole || 9 ||
Malla maanyaranella hallu muriyalaagi | nalla
Tejiya-nerida kole |
Nalla tejiya- nerida ballidanaagi kalkyaavataarana
Balagombe kole || 10 ||
Vastu paraatpara vistaara toralaagi |
Hattaavataarava dharisida kole |
Hattaavataarava dharisida mahipati
Antaraatmanna balagombe kole || 11 ||
*****
*ಮಹಿಪತಿದಾಸರ ಜೀವನ ಚರಿತ್ರೆ*
ಇಲ್ಲಿಯವರೆಗೆ👇ಸಂಚಿಕೆ -೧೧ ದಿ. 17-12-2018
ಹದಿನೇಳನೆಯ ಶತಮಾನದಲ್ಲಿ ವಿಜಾಪುರ ಪ್ರಾಂತದಲ್ಲಿ ಮರಾಠಿಯ ಪ್ರಭಾವ ಸಾಕಷ್ಟು ಪ್ರಮಾಣದಲ್ಲಿ ಇದ್ದಿತು. ಮಹಿಪತಿರಾಯರು ಹಲವು ಮರಾಠಿ ಪದ್ಯಗಳನ್ನು ಕೂಡ ರಚಿಸಿದರು. ಒಂದು ಮಾತ್ರ ಇಲ್ಲಿ ಕೊಟ್ಟಿದೆ.
*📋ಸಂಚಿಕೆ -೧೨ ದಿ.19-12-2018*
‘‘ದತ್ತ ದಿಗಂಬರ ತೂಚಿ ಮಾಝಾ ಗುರು!
ಜಾಣಾತೊ ನಿರ್ಧಾರ ಸ್ವಾಮಿ ಮಾಝಾ!
ದತ್ತ ಮಾಝ ಮಾತಾ ದತ್ತ ಮಾಝಾ ಪಿತಾ!
ಮಹಿಪತೀಚಾ ದಾತಾ ದತ್ತ ಏಕು’’ ||
ಮಹಿಪತಿರಾಯರ ಪದ್ಯಗಳಲ್ಲಿ ದಶಾವತಾರದ ಕೋಲಿನ ಪದ, ಪುಗುಡಿಯ ಆಟ, ಶ್ರೀರಾಮೇಶ್ವರಸ್ತವನ, ಭಾಗೀರಥಿ ಸ್ತೋತ್ರ, ದಶಾವತಾರ ಲೀಲೆ, ಭಾಗವತ ಸ್ತೋತ್ರ ಇವೇ ಮೊದಲಾದ ಕೃತಿಗಳು ಉತ್ತಮವಾಗಿವೆ.
ಕನ್ನಡನಾಡಿನ ದಾಸಪರಂಪರೆಯಲ್ಲಿ ಇವರ ಕೊಡುಗೆ ವಿಶಿಷ್ಟವಾದುದು. ನಮ್ಮ ನಾಡಿನ ಯಾವ ದಾಸರೂ ಬಳಸದಿದ್ದ ತ್ರಿಭಾಷಾ ಸೂತ್ರವನ್ನು ಆಧರಿಸಿಕೊಂಡು ಕನ್ನಡ-ಮರಾಠಿ-ಉರ್ದು ಭಾಷೆಗಳನ್ನು ತ್ರಿವೇಣಿ ಸಂಗಮದಂತೆ ಏಕತ್ರಗೊಳಿಸಿ ಪದ್ಯವನ್ನು ರಚಿಸಿದ್ದಾರೆ. ಮಾದರಿಗಾಗಿ ಒಂದು ಪದ್ಯವನ್ನು ಇಲ್ಲಿ ಕೊಡಲಾಗಿದೆ.
ರಾಗ-ಕೇದಾರ; ತಾಳ-ಆದಿ
ಬಾಟ ಪಕಡೊ ಸೀದಾ| ನಫಡೇ ತೇಥೆ ಬಾಧಾ|
ಇದುವೆ ಗುರು ನಿಜ ಬೋಧ| ಸ್ವಸುಖ
ಸಮ್ಮತವಾದಾ ||ಪ||
ಬಂದಗೀಕರ್ತಾ ಕರಕೇ ಝೂಟಾ| ತಿಳಿಯದು
ನಿಜ ಘನದಾಟಾ|
ಮರ್ಮನ-ಕಳತಾ ಕರಣೇಖೋಟಾ| ಕೇಳಿ ಶ್ರೀ
ಗುರುವಿಗೆ ನೀಟಾ ||೧||
ಜಾನ ಭೂಜಕರ ಚಲನಾ ಭಾಯಿ | ಲಕ್ಷಲಾವುನೀ
ಗುರು ಪಾಯಿ|
ಇದು ಎಲ್ಲರಿಗೂ ದೋರುದೇನಯ್ಯ| ಹೇ ಸಮರೆs
ವಿರಲಾ ಕೋಯಿ ||೨||
ತಿಳಿದುನೋಡಿ ಶ್ರೀಗುರು ಕೃಪೆಯಿಂದ | ಹುವಾ
ಖುದಾಕಾ ಬಂದಾ|
ಮಹೀಪತಿಗಾಯಿತು ಬಲು ಆನಂದಾ|
ಹರೀಮ್ಹಣಾ ಗೋವಿಂದಾ ||೩||
*ಇನ್ನೂ ಬೆಳಗುತ್ತಿರುವ ದೀಪ*
ಮಹಿಪತಿರಾಯರ ಜೀವನ ತುಂಬಾ ಕುತೂಹಲ ಕಾರಿಯಾದದ್ದು. ತಂದೆ ಹೇಳಿಕೊಳ್ಳುವಂತಹ ಶ್ರೀಮಂತರಲ್ಲ, ಅಧಿಕಾರವಿದ್ದವರಲ್ಲ. ವೈದಿಕ ವೃತ್ತಿಯಲ್ಲಿ ಗೌರವವಾಗಿ ಸಾತ್ವಿಕ ಜೀವನ ನಡೆಸುತ್ತಿದ್ದರು. ವೈದಿಕ ವೃತ್ತಿಯಲ್ಲಿಯೇ ಜೀವನವನ್ನು ಪ್ರಾರಂಭಿಸಿದ ಮಹಿಪತಿ ರಾಯರಿಗೆ ಅದೃಷ್ಟ ಒಲಿಯಿತು. ಅಧಿಕಾರ, ಹಣ, ಅಂತಸ್ತು, ರಾಜ್ಯದ ಪ್ರಭುವಿನ ಆತ್ಮೀಯತೆ ಎಲ್ಲ ತಾನಾಗಿ ಬಂದವು. ಇಷ್ಟಾದರೂ ಯಾವುದಕ್ಕೂ ಹೆಮ್ಮೆ ಪಡದೆ, ಯಾವುದಕ್ಕೂ ಅಂಟಿಕೊಳ್ಳದೆ ಬಾಳಿ, ಯಾವ ವ್ಯಥೆಯೂ ಇಲ್ಲದೆ ತಾನಾಗಿ ಒಂದು ಗಳಿಗೆಯಲ್ಲಿ ಉನ್ನತ ಅಂತಸ್ತು-ಅಧಿಕಾರಗಳನ್ನು ಬಿಟ್ಟು ಕೈತೊಳೆದ ಪುಣ್ಯಪುರುಷರು ಇವರು. ಇಂಥವರೇ ಗುರುಗಳಾಗಲು, ಇತರರಿಗೆ ಉಪದೇಶ ಮಾಡಲು ಯೋಗ್ಯರಾದವರು. ಶ್ರೇಷ್ಠ ವೈದಿಕರು, ವಿದ್ವಾಂಸರು, ಮುಸ್ಲಿಮ್ ಅಧಿಕಾರಿಗಳ ಮನೆಯಲ್ಲಿ ಪ್ರವಚನ ಮಾಡಿದರು, ಬಾದಶಹನ ನಂಬಿಕೆ ಗಳಿಸಿದರು, ಮುಸ್ಲಿಮ್ ಪುಣ್ಯಚೇತನರಿಂದ ಮಾರ್ಗದರ್ಶನ ಪಡೆದರು, ಭಾಸ್ಕರ ಸ್ವಾಮಿಗಳ ಅನುಗ್ರಹ ಗಳಿಸಿದರು. ಹಿರಿಮೆ-ನಿರ್ಮಲ ಜೀವನ-ಭಕ್ತಿಗಳನ್ನು ಜಾತಿಮತಗಳ ಎಲ್ಲೆಗಳ ಗೆರೆಗಳು ಸೆರೆಹಿಡಿದಿಡಲಾರವು ಎಂಬುದಕ್ಕೆ ಮಹಿಪತಿರಾಯರ ಜೀವನ-ರೀತಿಗಳು ಉಜ್ವಲ ನಿದರ್ಶನ.
ಮಹಿಪತಿದಾಸರು ಕಾಲವಾಗಿ ಇಂದಿಗೆ ಮೂರು ನೂರು ವರ್ಷವು ಸಮೀಪಿಸುತ್ತಲಿವೆ. ಆದರೂ ಸಹ ಈ ಮಹಾನುಭಾವರು ಬೆಳಗಿಸಿದ ಅನುಭಾವ ಪಂಥದ ಬೆಳಕು ಸಾಧಕರಿಗೆ ದಾರಿದೀಪವಾಗಿ ಇಂದಿಗೂ ಬೆಳಗುತ್ತಲಿದೆ.
ಮಹಿಪತಿದಾಸರ ಜೀವನ ಚರಿತ್ರೆ ಸಂಗ್ರಹ ಮಾಹಿತಿ ಒದಗಿಸಿದ್ದು ಎಲ್ಲಾ ಹಾರಿದಾಸ ಬಂಧುಗಳು ದಾಸರ ಮಹಾತ್ಮೆ ಓದಿದ್ದರಿ ಎಂದು ತಿಳಿಯುತ್ತಾ ಧನ್ಯವಾದಗಳೊಂದಿಗೆ ಸಂಗ್ರಹ ಲೇಖನ ಇಂದು ಮುಕ್ತಾಯಮಾಡಿದ್ದೇವೆ.
ಧನ್ಯವಾದಗಳು
ಗಿರೀಶ ಕುಲಕರ್ಣಿ ಕೊಪ್ಪಳ
ಸಪ್ತಸ್ವರ ಸಮೂಹ
ಮೊ: 96634 23447
ಮಹಿಪತಿದಾಸರ ಜೀವನ ಚರಿತ್ರೆ
ದಿನಾಂಕ: 15-12-2018*
ಒಂದು ದಿನ ದಾಸರು ತಮ್ಮ ಮಕ್ಕಳನ್ನು ಕರೆದು ಸ್ನಾನ ಸಂಧ್ಯಾದಿಗಳನ್ನು ಮುಗಿಸಿ, ಶುಚಿರ್ಭೂತರಾಗಿ ಬರುವಂತೆ ಹೇಳಿದರು. ತಮ್ಮ ಸಮ್ಮುಖದಲ್ಲಿ ಇರಿಸಲಾಗಿದ್ದ ತಾಳ-ತಂಬೂರಿ-ಖಡ್ಗ-ಲೇಖನಿ, ಇವುಗಳಲ್ಲಿ ಯಾವುದು ಇಷ್ಟವೊ ಅದನ್ನು ಎತ್ತಿಕೊಳ್ಳುವಂತೆ ಆ ಹುಡುಗರಿಗೆ ಹೇಳಿದರು. ಕೃಷ್ಣರಾಯರು ತಾಳ-ತಂಬೂರಿಗಳನ್ನು ತೆಗೆದುಕೊಂಡರು; ದೇವರಾಯರು ಖಡ್ಗ-ಲೇಖನಿಯನ್ನು ಕೈಗೆತ್ತಿಕೊಂಡರು. ಆದುದರಿಂದಾಗಿ ದೇವರಾಯರು ದೇಸಾಯಿ ಮನೆತನದವರಾದರು; ಕೃಷ್ಣರಾಯರು ಹರಿದಾಸ ಪಂಥವನ್ನು ಸ್ವೀಕರಿಸಿದರು. ಹೀಗೆ ದಾಸರ ಸಂತಾನದಲ್ಲಿ ಬ್ರಹ್ಮತೇಜ ಹಾಗೂ ಕ್ಷಾತ್ರ ತೇಜಗಳು ಹರಿದು ಬರುವಂತಾದವು. ಮಕ್ಕಳಲ್ಲಾದ ಈ ಪರಿವರ್ತನೆಯನ್ನು ಕಂಡು ತುಕ್ಕವ್ವ ಹಾಗೂ ತಿರುಮಲಾದೇವಿ ಇವರಿಗೆ ಸಮಾಧಾನವೆನಿಸಿತು.
*ಮುರುಡೆಪ್ಪನ ಭಕ್ತಿ*
ಮಹಿಪತಿರಾಯರು ಕಾಖಂಡಕಿ ಗ್ರಾಮಕ್ಕೆ ಬಂದು ವಾಸಮಾಡತೊಡಗಿದಂದಿನಿಂದ ಗ್ರಾಮನಿವಾಸಿ ಮುರುಡೆಪ್ಪನು ಅವರ ಸೇವೆಯಲ್ಲಿ ನಿರತನಾಗಿದ್ದನು. ರಾಯರಲ್ಲಿ ಆತನಿಗೆ ತುಂಬ ಭಕ್ತಿ. ಹೀಗಿರುವಾಗ ಒಂದು ಸಲ ಮುರಡಪ್ಪನ ಪತ್ನಿಗೆ ವಿಪರೀತ ಕಾಯಿಲೆಯಾಯಿತು. ಸನ್ನಿಪಾತ ಜ್ವರದಿಂದ ಬಳಸತೊಡಗಿದರು. ತುಕ್ಕವ್ವ-ತಿರುಮಲಾದೇವಿ ಪ್ರತಿದಿನವೂ ಅವಳ ಆರೋಗ್ಯ ನೋಡಿಕೊಳ್ಳಲು ಔಷದೋಪಚಾರವನ್ನು ನಡೆಸಲು ಮುರುಡೆಪ್ಪನ ಮನೆಗೆ ಹೋಗಿಬರುತ್ತಿದ್ದರು. ಹೀಗಿದ್ದರೂ ಸಹ ದಿನದಿಂದ ದಿನಕ್ಕೆ ರೋಗವು ಉಲ್ಬಣವಾಗುತ್ತ ಸಾಗಿತು. ಆದರೆ ಮುರುಡೆಪ್ಪನು ಮಾತ್ರ ವಿಚಲಿತನಾಗದೇ ರಾಯರ ಸೇವೆಯಲ್ಲಿಯೇ ನಿರತನಾಗಿದ್ದನು. ರಾಯರು ಅನೇಕ ಸಲ ಆತನಿಗೆ ಹೆಂಡತಿಯ ಆರೋಗ್ಯದತ್ತ ಗಮನವೀಯಬೇಕೆಂದು ಹೇಳಿದರು. ಆಗ *'‘ಸ್ವಾಮಿ, ಗುರುಸೇವೆಗಿಂತ ಪತ್ನಿಯ ಸೇವೆ ಹೆಚ್ಚಿನದಲ್ಲ. ಅವಳನ್ನು ಬದುಕಿಸುವ ಭಾರ ತಮ್ಮ ಮೇಲಿರುವಾಗ ನಾನೇಕೆ ಚಿಂತಿಸಲಿ!’’* ಎಂದು ಸ್ತಿತಪ್ರಜ್ಞನಾಗಿ ತನ್ನ ಕೆಲಸದಲ್ಲಿ ನಿರತನಾಗುತ್ತಿದ್ದನು. ಗಾಬರಿಯಾದ ತುಕ್ಕವ್ವನು *‘‘ಮಹಿಪತಿ, ಮುರುಡೆಪ್ಪನ ಪತ್ನಿ ಬದುಕಲಾರಳು’’* ಎಂದು ಹೇಳಿದಾಗ ದಾಸರು *‘‘ಸತ್ತರೆ ಬದುಕುವಳು, ಬದುಕಿದರೆ ಸಾಯುವಳು’’* ಎಂದು ಹೇಳಿ ತಮ್ಮ ಮೈಮೇಲಿನ ಉತ್ತರೀಯವನ್ನು ತೆಗೆದು ರೋಗಿಯ ಮೈಮೇಲೆ ಹೊದಿಸುವಂತೆ ಹೇಳಿದರು. ಇದರಿಂದಾಗಿ ಮುರುಡೆಪ್ಪನ ಹೆಂಡತಿ ಕೆಲವೇ ದಿನಗಳಲ್ಲಿ ಆರೋಗ್ಯ ಹೊಂದಿ ಬದುಕಿಕೊಂಡಳಂತೆ. *ದಾಸರಾಯರು ತಮ್ಮ ಆಯುಷ್ಯದ ಕೆಲಭಾಗವನ್ನೇ ಆ ಸಾಧ್ವಿಗೆ ಧಾರೆಯೆರೆದರೆಂದು ಹೇಳುತ್ತಾರೆ.*
ಆಗರ್ಭ ಶ್ರೀಮಂತರ ಮಗಳಾಗಿ ಜನಿಸಿ ನಿಷ್ಠಾವಂತ ಭಗವದ್ಭಕ್ತರ ಪತ್ನಿಯಾಗಿ ಅವರ ಬಾಳಿನೊಂದಿಗೆ ಒಂದಾಗಿ ಬೆರೆತು *ಸಾರ್ಥಕ ಜೀವನ ನಡೆಸಿದ ತಿರುಮಲಾದೇವಿಯು ಆಕಸ್ಮಿಕವಾಗಿ ಒಂದುದಿನ ಪತಿಯ ಸಾನ್ನಿಧ್ಯದಲ್ಲಿ ಮರಣಹೊಂದಿದಳು.* ಮಾತೃವಿಯೋಗದಿಂದ ಮಕ್ಕಳಿಬ್ಬರ ಮನಸ್ಸಿನ ಮೇಲೆ ತುಂಬ ಪರಿಣಾಮವಾಯಿತು. ತಬ್ಬಲಿಗಳಾದ ಅವರಿಬ್ಬರೂ ತಂದೆಯಂತೆ ಏಕಾಂತ ಜೀವಿಗಳಾಗತೊಡಗಿದರು.
********
ಶ್ರೀ ಮಹಿಪತಿದಾಸರ ವೃಂದಾವನ ಆದಂಥ ವಿಷಯ 💐ಮಹಿಪತಿದಾಸರಿಗೆ ತಮ್ಮ ಅವಸಾನ ಕಾಲ ಸಮೀಪವಾಗಿದೆಯೆಂದು ತಿಳಿಯಿತು. ಆಗ ಕುಲಗುರುಗಳಾದ ಕೊಲ್ಹಾರದ ಕೃಷ್ಣಾಚಾರ್ಯರನ್ನು ನೋಡಬೇಕೆಂಬ ಆಸೆಯಾಯಿತು. ಅವರು ಈ ವಿಷಯವನ್ನು ತಮ್ಮ ಹಿರಿಯ ಮಗನಾದ ದೇವರಾಯನಿಗೆ ಕೃಷ್ಣರಾಯರಿಂದ ಸುದ್ಡಿ ಕಳಿಸಿ, ತಾವು ಕೃಷ್ಣರಾಯರಿಂದ ಕೂಡಿಕೊಂಡು ಕೊಲ್ಹಾರಕ್ಕೆ ತೆರಳಿ ಅಲ್ಲಿ 6 ದಿನಗಳಿದ್ದು ಸರಿಯಾಗಿ 7ನೆ ದಿನ ಪ್ರಾಪ್ತಿಯಾಗಲು ಕೃಷ್ಣಾನದಿ ಸ್ನಾನ ಮಾಡಿಕೊಂಡು ಅನುಷ್ಟಾನಕ್ಕೆ ಕುಳಿತವರೇ ತಮ್ಮ ದೇಹತ್ಯಾಗವನ್ನು ಮಾಡಿದರು.
ಪುತ್ರದ್ವಯರಿಬ್ಬರು ಉತ್ತರಕ್ರಿಯೆಗಳನ್ನು ಮುಗಿಸಿ ಅಸ್ತಿಸಂಚಯನ ಮಾಡುತ್ತಿದ್ದಾಗ ಕೈಯಲ್ಲಿ ಹಿಡಿದ ಅಸ್ಥಿಗಳು ನೀರಾಗಿ ಹೋದವು. ಮತ್ತು ಅಶರೀರ ವಾಣಿಯಾಯಿತಂತೆ “ ಮಗು ಚಿಂತಿಸಬೇಡ ಇವುಗಳು ಗಂಗೆಯಲ್ಲಿ ವಿಸರ್ಜನಗೊಂಡಿವೆ ” ಎಂದು ಹೇಳಿದರಂತೆ. ನಂತರ ಕೃಷ್ಣರಾಯರಿಗೆ ಸಮಾಧಾನವಾಗದಿದ್ದುದನ್ನು ತಿಳಿದು ಮುಂದುವರೆಸಿ , ನಾನು ಕಾಖಂಡಕಿಯಲ್ಲಿ ಅನುಷ್ಥಾನಕ್ಕೆ ಕುಳಿತುಕೊಳ್ಳುತ್ತಿದ್ದ ಶಮೀವೃಕ್ಷದ ಕೆಳಗೆ ಹನ್ನೆರಡು ಸಾಲಿಗ್ರಾಮಗಳಿವೆ ಅವುಗಳನ್ನು ತೆಗೆದು ಅದೇ ಜಾಗದಲ್ಲಿ ನನ್ನ ವೃಂದಾವನವನ್ನು ನಿರ್ಮಿಸು ಎಂದು ಹೇಳಿದರಂತೆ .
ಈಗಿರುವ ವೃಂದಾವನವು ಒಂದು ಕ್ಷೇತ್ರ ಶಾಲಿಗ್ರಮಗಳ ಸನ್ನಿಧಿಯಿರುವಂತಾಗಿದೆ. ತಂದೆಯ ಆಜ್ಞೆಯಂತೆಯೇ ಕಾಖಂಡಕಿಗೆ ಬಂದು ಅವರು ಅನುಷ್ಠಾನ ಮಾಡುತ್ತಿದ್ದ ಹೊಲದಲ್ಲಿ ಬಂದು ವೃಂದಾವನ ನಿರ್ಮಿಸಬೇಕೆನ್ನುತ್ತಿರುವಾಗ ಹೊಲದ ಮಾಲೀಕನಾದ ಗೌಡನು ಅದಕ್ಕೆ ಒಪ್ಪಲಿಲ್ಲ. ಚಿಂತಾಕ್ರಾಂತರಾಗಿ ಕೃಷ್ಣರಾಯರು ಅಲ್ಲಿಯೇ ನಿಂತಾಗ ಸೇವಕನೊಬ್ಬ ಓಡಿಬಂದು ಗೌಡನ ಪುತ್ರನು ತೀರಿಕೊಂಡ ವಿಷಯ ತಿಳಿಸಿದ. ದುಖಿತನಾದ ಗೌಡನು ನಿಮ್ಮ ತಂದೆಯು ಮೊರದೆಪ್ಪನ ಹೆಂಡತಿಯನ್ನು ಬದುಕಿಸಿದಂತೆ, ನೀವು ನನ್ನ ಮಗನನ್ನು ಬದುಕಿಸಿ ಎಂದು ಹೇಳಿದರು ರಾಯರು, ನನ್ನ ತಂದೆ ಪವಾಡಗಳನ್ನು ಮಾಡಬೇಡ ಎಂದು ಆಜ್ಞೆ ನೀಡಿದ್ದಾರೆ. ಆದ್ದರಿಂದ ನಾನು ಬದುಕಿಸಲಾರೆ, ಇನ್ನು ನಾಲ್ಕು ತಲೆಮಾರು ದತ್ತುಪುತ್ರರಿಂದಲೇ ವಂಶ ಬೆಳೆದು ನಂತರ ನಿಮ್ಮ ಸಂತತಿಯಿಂದಲೇ ವೃದ್ಧಿಯಾಗುತ್ತದೆಂದು, ಸಂಪತ್ಭರಿತ ಜೀವನ ನಡೆಸುವಿರೆಂದು, ದಾಸರ ಸೇವೆ ಮಾಡುವಂತೆ ತಿಳಿಸಿದರು. ಅವನ ಹೊಲವನ್ನು ದಾಸರಿಗೆನೀಡಿದ ಗೌಡರ ಮನೆತನ ಇಂದಿಗೂ ಆರಾಧನೆ ಸಮಯದಲ್ಲಿ ತುಂಬಾ ಸೇವೆ ಗೈಯುತ್ತಾರೆ. ಈಗ ವೃಂದಾವನವು ಅದೇ ಹೊಲದಲ್ಲಿ ಪ್ರತಿಷ್ಥಾಪನೆಗೊಂಡಿದೆ. ವೃಂದಾವನ ಸಾನ್ನಿಧ್ಯ ಸಾಕ್ಷಿಗಾಗಿ ಒಮ್ಮೆ ಕೃಷ್ಣರಾಯರು “ ವೃಂದಾವನೀದೇವಿ ತಂದೆ ಮಹೀಪತಿಯ ಪಾದವ ತೋರೆ ” ಎಂದು ಹಾಡಲು ಸಾಕ್ಷಾತ್ ಮಹಿಪತಿರಾಯರು ವೃಂದಾವನದಿಂದ ತಮ್ಮ ಪಾದುಕೆಗಳನ್ನು ನೀಡಿದ್ದಾರೆ. ಅವುಗಳು ಇಂದಿಗೂ ಪೂಜೆಗೊಳ್ಳುತ್ತಿವೆ.
ಮಾಹಿತಿ ಋಣ:ಸುಮಧ್ವ ಸೇವ ಹಾಗೂ ಪವನ್ ಹರಿದಾಸ್.
ಶ್ರೀ ಗುರುಗಳ ಸೇವೆಯಲ್ಲಿ.
💐ವಿಜಯ ವಿಠ್ಠಲ
******
Sri Mahipathi Dasa | 1611-1681 | Mahipathi Rayaru | Mahipathi | Saravadada Bhaskara Swamy | Kakhadike | Karthika Bahula Amavasya |
*******
by Nagaraju Haveri
14 December 2020 ·
" ಶ್ರೀ ಮಹೀಪತಿ - 1 "
" ದಿನಾಂಕ : 14.12.2020 ಸೋಮವಾರ - ಕಾರ್ತೀಕ ಬಹುಳ ಅಮಾವಾಸ್ಯೆ - ಶ್ರೀ ರುದ್ರದೇವರ ಅಂಶ ಸಂಭೂತರಾದ ಮಹೀಪತಿ ದಾಸರ ಆರಾಧನಾ ಮಹೋತ್ಸವ., ಕಾಖಂಡಕೀ "
ಜಗದ್ಗುರು ಕೃಪಾಸಿಂಧುಂ
ಶರಣಾಗತ ವತ್ಸಲಂ ।
ಭಕ್ತ ಮಾನಸ ಸಂಚಾರಂ
ಮಹೀಪತಿ ಗುರುಂ ಭಜೇ ।।
" ಸಂಕ್ಷಿಪ್ತ ಚರಿತ್ರೆ "
ಹೆಸರು :
ಶ್ರೀ ಗುರುರಾಯರು
ತಂದೆ :
ಶ್ರೀ ಕೋನೇರಿರಾಯರು
ಜನ್ಮ ಸ್ಥಳ :
ಐಗಳಿ - ಬೆಳಗಾವಿ ಜಿಲ್ಲೆ
ಕಾಲ :
ಕ್ರಿ ಶ 1611 - 1681
ಸ್ವರೂಪೋದ್ಧಾರಕ ಗುರುಗಳು :
ಶ್ರೀ ಭಾಸ್ಕರ ಸ್ವಾಮಿಗಳು
ಅಂಶ :
ಶ್ರೀ ಮಹಾರುದ್ರದೇವರು
ಕಕ್ಷೆ : 5
ಪ್ರಮಾಣ :
ಏನು ಕೌತುಕವೋ ಮಹೀಪತಿರಾಯರದು । ಘನ ಮಹಿಮೆ ತಿಳಿಯದು । ಮೋಹ ಶಾಸ್ತ್ರಗಳ ರಚಿಸಲು । ಬೇಕೆಂ । ದು ಹರಿಯಾಜ್ಞೆಯನರಿದು ।। ಈ ।। ಮಹಿಯೊಳವತರಿಸಿ ಬಂದನೆಂದು ರುದ್ರಾಂಶನೆ ಅಹುದು । ಪದ್ಯ ಪದ್ಯಗಳಾಲಿ ಅತಿ ಗೂಢ । ಅರ್ಥವಿಹುದು ಮೂಢರಿಗೆ ತಿಳಿಯದದು ।।
ಅಂಕಿತ :
ಶ್ರೀ ಹರಿ ಪ್ರಸಾದಾಂಕಿತ " ಮಹೀಪತಿ "
ಶಿಷ್ಯರು :
ಶ್ರೀ ಮಹೀಪತಿದಾಸರ ಮಕ್ಕಳಾದ ಶ್ರೀ ಕೃಷ್ಣರಾಯರು ( ಶ್ರೀ ಮಹೀಪತಿ ಸುತ )
17ನೇ ಶತಮಾನದಲ್ಲಿ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಐಗಳಿಯಲ್ಲಿ ಶ್ರೀ ಕೋನೇರಿರಾಯರೆಂಬ ವೈಷ್ಣವ ಬ್ರಾಹ್ಮಣರಿದ್ದರು.
ಅವರಿಗೆ ವೆಂಕಟೇಶ ಹಾಗೂ ಗುರುರಾಯ ( ಇವರೇ ಮುಂದೆ ಶ್ರ ಮಹೀಪತಿದಾಸರೆಂದು ಜಗತ್ಪ್ರಸಿದ್ಧರಾದರು ) ರೆಂಬ ಇಬ್ಬರು ಮಕ್ಕಳು.
ಆ ಕಾಲದಲ್ಲಿ ವಿಜಾಪುರವನ್ನು ಮಹ್ಮದ್ ಆದೀಲಶಾಹನು ರಾಜ್ಯವಾಳುತ್ತಿದ್ದನು.
ಅವನ ಆಸ್ಥಾನದಲ್ಲಿ ಮುರಾರಿಪಂತ, ಶಹಾಜಿ ಭೋಸಲೇ ಎಂಬುವ ಹಿಂದೂಗಳು ಅತ್ಯಂತ ಪ್ರಭಾವಶಾಲಿಗಳಾಗಿ ಉನ್ನತ ಹುದ್ದೆಯಲ್ಲಿದ್ದರು.
ಶ್ರೀ ಕೋನೇರಿರಾಯರು ತಮ್ಮ ವೃತ್ತಿಯಿಂದ ಮೇಲ್ಕಂಡವರ ಮನ್ನಣೆ ಪಡೆದು ಜೀವನವನ್ನು ಸಾಗಿಸುತ್ತಿದ್ದರು.
ಮಕ್ಕಳಿಬ್ಬರೂ ಶ್ರೀ ಕೋನೇರಿರಾಯರಿಂದಲೇ ವಿದ್ಯಾಭ್ಯಾಸವನ್ನು ಪಡೆದರು.
ಹಿರಿಯ ಮಗನಾದ ವೆಂಕಟೇಶನು ಕುಲದ ಕರಣಿಕ ವೃತ್ತಿಯನ್ನೂ ಹಾಗೂ ಐಗೊಳಿಗೆ ಬಂದು ಶ್ರೀ ವೆಂಕಟೇಶದೇವರ ಅರ್ಚಕ ವೃತ್ತಿಯನ್ನೂ ಮುಂದುವರೆಸಿದರು.
ಕಿರಿಯ ಮಗನಾದ ಗುರುರಾಯರು ಮಾತ್ರ ತಂದೆ ತಾಯಿಗಳ ಜೊತೆಯಲ್ಲಿ ವಿಜಾಪುರದಲ್ಲಿ ಉಳಿದುಕೊಂಡರು.
ರಾಮಾಯಣ, ಮಹಾಭಾರತ, ಶ್ರೀಮದ್ಭಾಗವತ ಗ್ರಂಥಗಳ ಅಭ್ಯಾಸದ ಜೊತೆಗೆ ಸಾಹಿತ್ಯ ರಚನೆಯಲ್ಲಿಯೂ ಆಸಕ್ತಿಯಿತ್ತು.
ಮಧುವಾದ ಕಂಠ, ನಿರರ್ಗಳವಾದ ವಾಕ್ಸರಣಿ ಗುರುರಾಯರು ಹಾಡುಗಳನ್ನು ಹಾಡುತ್ತಿದ್ದರೆ ಕೇಳುಗರನ್ನು ಮಂತ್ರ ಮುಗ್ಧರನ್ನಾಗಿ ಮಾಡುತ್ತಿತ್ತು.
ಹರಿಕಥೆಯು ಅವರ ಪಂಚಪ್ರಾಣ.
ಸುಶ್ರಾವ್ಯವಾಗಿ ಹರಿಕಥೆ ಹೇಳುವುದರೊಂದಿಗೆ ಗುರುರಾಯರು ಜನಪ್ರಿಯರಾಗಿದ್ದರು.
" ವಿವಾಹ "
ಹೊನವಾಡದ ದೇಶಪಾಂಡೆ ಮನತನದ ತಿರುಮಲಾಬಾಯಿಯೊಂದಿಗೆ ಗುರುರಾಯರಿಗೆ ಮಾಡುವೆ ಆಯಿತು.
ಧ್ಯಾನ - ಜಪ - ಅಭ್ಯಾಸ - ರಾಜಕಾರಣ - ಅನ್ನಸಂತರ್ಪಣೆ - ಕೀರ್ತನೆ - ಪ್ರವಚನ ಎಲ್ಲದರಲ್ಲೂ ಆ ಸಾಧ್ವೀಮಣಿಯು ಶ್ರೀ ಗುರುರಾಯರಿಗೆ ಸಹಾಯಕಳಾಗಿದ್ದಳು.
ತಾನೂ ಉಪಾಸನೆಯಲ್ಲಿ ನಿರುತಳಾಗಿದ್ದಳು.
ಆ ಸಾಧ್ವೀಯ ಉಪಾಸನೆಯ ಫಲವೆಂದರೆ ಗಂಡನ ಅಂತಸ್ತು,
ಮರ್ಯಾದೆ ದಿನದಿಂದ ದಿನಕ್ಕೆ ಪ್ರವರ್ಧಮಾನವಾಯಿತು.
ವಿಜಾಪುರದ ದಖಣೀ ಸರದಾಸರ ಮುಖ್ಯಸ್ಥನಾದ ಖವಾಸಖಾನನ ಮುಖಾಂತರ ಬಾದಶಹನ ಪರಿಚಯವಾಗಿ ಶ್ರೀ ಗುರುರಾಯರ ಸೇವೆ ರಾಜ ದರ್ಬಾರದಲ್ಲಿ ಪ್ರಾರಂಭವಾಯಿತು.
ಕರಣಿಕ ಗುರುರಾಯ " ಅಕ್ಹ್ತಿಯಾರ್ ರುರಾವ್ " ಆದರು
***
" ಶ್ರೀ ಮಹೀಪತಿ - 2 "
" ಜ್ಞಾನದ ಅರಿವು "
ಪ್ರತಿದಿನದಂತೆ ಶ್ರೀ ಗುರುರಾಯರು ಮನೆಯಿಂದ ರಾಜದರ್ಬಾರಿಗೆ ಬರುತ್ತಿದ್ದರು.
ದಾರಿಯಲ್ಲಿ ಒಬ್ಬ ಫಕೀರ ಅವರನ್ನು ಕಂಡು ಹತ್ತಿರ ಕರೆದನು.
ಆತನ ಹೆಸರು " ನಂಗಾಶಾಹ ".
ಆತ ಸೂಫಿ ಪಂಥಕ್ಕೆ ಸೇರಿದ ಫಕೀರ.
ಬೆತ್ತಲೆಯಾಗಿ ತಿರುಗುತ್ತಿದ್ದನು.
ಅವನು ಶ್ರೀ ರಗುರಾಯರನ್ನು ಹತ್ತಿರ ಕರೆದು ಒಂದು ಘಳಿಗೆ ಕುಳಿತು ಕೊಳ್ಳುವಂತೆ ಹೇಳಿದನು.
ಶ್ರೀ ಗುರುರಾಯರು ಉಭಯ ಸಂಕಟಕೊಳ್ಳಗಾದರು.
ಕಾರಣ ಆ ಫಕೀರನು ವಾಕ್ಸಿದ್ಧಿಯನ್ನು ಹೊಂದಿದ್ದನು.
ಆದ್ದರಿಂದ ಆ ಫಕೀರನು ಏನಾದರೂ ಅಂದುಬಿಟ್ಟರೆ ಎಂದು ಮನಸ್ಸಿನಲ್ಲಿಯೇ ವಿಚಾರ ಮಾಡಹತ್ತಿದರು .
ಆ ಫಕೀರ " ಬಾ ಅಷ್ಟೇಕೆ ಚಿಂತೆ? ಎಂದ.
ಅನಿವಾರ್ಯವಾಗಿ ಹತ್ತಿರ ಹೋಗಿ ಕುಳಿತರು.
ಫಕೀರ ಶ್ರೀ ಗುರುರಾಯರನ್ನು ಪರೀಕ್ಷಿಸಿ ದಿಟ್ಟಿಸಿ ನೋಡಿದ.
ಅವರ ಕೈಯಲ್ಲಿದ್ದ ಪವಿತ್ರದ ಉಂಗುರವನ್ನು ತನ್ನ ಕೈಯಿಂದ ಕಿತ್ತುಕೊಂಡು ಅದನ್ನು ಮೇಲೆ ಕೆಳಗೆ ತಿರುಗಿಸಿ ನೋಡುತ್ತಾ ಸ್ವಲ್ಪ ಕಾಲ ಫಕೀರನು ಸುಮ್ಮನೆ ಕುಳಿತನು.
ಇದು " ವಿಷಯ ಸೂತ್ರ " ಎನ್ನುತ್ತಾ ಎದ್ದು ನಿಂತು ಎದುರಿನಲ್ಲಿದ್ದ ಕಂದಕದಲ್ಲಿ ಆ ಉಂಗುರವನ್ನು ಎಸೆದನು.
ವಾಸ್ತವವಾಗಿ ಅದು ಪವಿತ್ರ ಉಂಗುರವಾಗದೆ ರಾಜ ಮೊಹರಿನ ಉಂಗುರವಾಗಿತ್ತು.
ಶ್ರೀ ಗುರುರಾಯರು ಫಕೀರನ ಮುಖವನ್ನು ನೋಡುತ್ತಾ ನಿಂತು ಬಿಟ್ಟರು.
ರಾಜ ಮೊಹರನ್ನು ಬಿಟ್ಟು ರಾಜ ದರ್ಬಾರಿಗೆ ಹೋಗುವುದು ಹೇಗೆ?
ದೈನ್ಯದಿಂದ ಫಕೀರನ ಕಡೆಗೆ ಒಂದು ಸಲ ನೋಡಿದರು.
ಅವರ ಪರಿಸ್ಥಿತಿಯನ್ನು ಕಂಡು ಫಕೀರನು ನಗ ಹತ್ತಿದನು.
ನಗುತ್ತಿದ್ದ ಆ ಫಕೀರನು ಗಂಭೀರವಾಗಿ...
ಇನ್ನೂ ನಿನಗೆ ಆ ಉಂಗುರದ ಮೋಹವೇ?
ಎಂದು ಕೇಳುತ್ತಾ ಸರಿ ಹಾಗಾದರೆ ತಂದು ಕೊಡುತ್ತೇನೆಂದು ಆ ಕಂದುಕದಲ್ಲಿ ಜಿಗಿದು ನೀರಿನಲ್ಲಿ ಮುಳುಗಿ ಒಂದು ಮುಷ್ಟಿತುಂಬಾ ಉಂಗುರವನ್ನು ತಂದು ಶ್ರೀ ಗುರುರಾಯರ ಮುಂದೆ ಮುಷ್ಟಿಯನ್ನು ಬಿಚ್ಚಿ ತೆಗೆದುಕೋ ನಿನ್ನ ಉಂಗುರವನ್ನು " ಎಂದನು.
ಅದನ್ನು ನೋಡಿ ಆಶ್ಚರ್ಯವಾಯಿತು.
ಕಾರಣ ಎಲ್ಲವೂ ರಾಜ ಮೊಹರಿನ ಉಂಗರಗಳು. ಶ್ರೀ ಗುರುರಾಯರು ತಮ್ಮ ಉಂಗುರವನ್ನು ಗುರುತಿಸಲಾಗದೇ ರೋಮಾಂಚನಗೊಂಡರು.
ಆಗ ಅವರಿಗೆ ಸಚ್ಚಿದಾನಂದದ ಅರಿವಾಯಿತು.
ಶ್ರೀ ಗುರುರಾಯರ ಅಜ್ಞಾನದ ಸೂತ್ರ ಹರಿದು ಹೋಯಿತು.
ಹೃದಯದಲ್ಲಿ ಜ್ಞಾನದ ಮೊಳಕೆ ಹೊಡೆಯಿತು.
ತಕ್ಷಣ ಶ್ರೀ ಗುರುರಾಯರು ಫಕೀರನ ಕಾಲುಗಳನ್ನು ಹಿಡಿದು ಕೊಳ್ಳಲು ಬಂದಾಗ ಫಕೀರನು ಅದಕ್ಕೆ ಆಸ್ಪದ ಕೊಡಲಿಲ್ಲ.
ಹಿಂದಕ್ಕೆ ಸರಿದು ನಿಂತು ಹೇಳಿದನು.
ಛೇ! ನನ್ನ ಕಾಲು ಹಿಡಿಯ ಬೇಡ.
ನಾನು ಯವನ.
ನೀನು ಶುದ್ಧ ಮಾಧ್ವ ಬ್ರಾಹ್ಮಣ.
ನಿನ್ನಿಂದ ನಮಸ್ಕಾರ ,ಮಾಡಿಸಿ ಕೊಳ್ಳುವ ಯೋಗ್ಯ ನಾನಲ್ಲ.
ನಿನ್ನ ಮನದ ಬಾಗಿಲು ತೆರೆದಿದೆ.
ನಿನಗೆ ಒಬ್ಬ ಯೋಗ್ಯ ಗುರುವಿನ ಅವಶ್ಯಕತೆ ಇದೆ.
ಸಾರವಾಡಕ್ಕೆ ಹೋಗು ಅಲ್ಲಿ ಶ್ರೀ ಭಾಸ್ಕರ ಸ್ವಾಮಿಗಳು ಇದ್ದಾರೆ.
ಅವರೇ ನಿನಗೆ ಯೋಗ್ಯ ಗುರು " ಎಂದು ಹೇಳಿದನು.
" ಶ್ರೀ ಭಾಸ್ಕರ ಸ್ವಾಮಿಗಳ ದರ್ಶನ ಹಾಗೂ ಶ್ರೀ ಹರಿಯ ವರ ಪ್ರಸಾದಾಂಕಿತ - " ಮಹೀಪತಿ "
ಫಕೀರನ ಭೇಟಿ, ಉಂಗರದ ವಿಷಯ, ಆ ದಿನವೇ ತಿರುಮಲಬಾಯಿಗೆ ಶ್ರೀ ಭಾಸ್ಕರ ಸ್ವಾಮಿಗಳ ದರ್ಶನ.
ಆ ದಿನವೇ ....
( ತಿರುಮಲಬಾಯಿಯವರು ಅದೇ ದಿನ ಸಾರವಾಡಕ್ಕೆ ಶ್ರೀ ಭಾಸ್ಕರ ಶ್ರೀ ಭಾಸ್ಕರ ಸ್ವಾಮಿಗಳ ದರ್ಶನಕ್ಕೆ ಹೋಗಿ ಬಂದಿರುತ್ತಾರೆ.
ಆಗ ಶ್ರೀ ಸ್ವಾಮಿಗಳು, ನಿಮ್ಮ ಪತಿಯೊಂದಿಗೆ ಬನ್ನಿ ಎಂದು ಅಪ್ಪಣೆ ಕೊಟ್ಟಿರುತ್ತಾರೆ ).
ಫಕೀರನು ಶ್ರೀ ಭಾಸ್ಕರ ಸ್ವಾಮಿಗಳ ಹತ್ತಿರ ಹೋಗು ಎಂದು ಹೇಳುವುದೂ, ಇವುಗಳೆಲ್ಲವೂ ಪವಾಡದಂತೆ ಎನಿಸಿದರೂ ಯಾವುದೋ ಒಂದು ಸನ್ನಿವೇಶದಲ್ಲಿ ಶ್ರೀ ಗುರುರಾಯರ ಮನಸ್ಸು ಪರಿವರ್ತನೆ ಹೊಂದಿ ಅವರು ಸಾರವಾಡಕ್ಕೆ ಶ್ರೀ ಭಾಸ್ಕರ ಸ್ವಾಮಿಗಳ ಹತ್ತಿರ ಹೋದರು.
ಶ್ರೀ ಭಾಸ್ಕರ ಸ್ವಾಮಿಗಳಿಂದ ಆಕರ್ಷಿತರಾದರು.
ಶ್ರೀ ಗುರುರಾಯರು ಶ್ರೀ ಭಾಸ್ಕರ ಸ್ವಾಮಿಗಳ ದರ್ಷನಾಕಾಂಕ್ಷಿಗಳಾಗಿ ಕುಟುಂಬದೊಂದಿಗೆ ಸಾರವಾಡಕ್ಕೆ ಬಂದರು.
ಆ ಸಂದರ್ಭದಲ್ಲಿ ಶ್ರೀ ಭಾಸ್ಕರ ಸ್ವಾಮಿಗಳು ಸಮಾಧಿ ಸ್ಥಿತಿಯಲ್ಲಿದ್ದರು.
ಕೆಲ ಸಮಯದ ನಂತರ ಶ್ರೀ ಭಾಸ್ಕರ ಸ್ವಾಮಿಗಳು ಸಹಜ ಸ್ಥಿತಿಗೆ ಬಂದ ಮೇಲೆ ಶ್ರೀ ಗುರುರಾಯರು ಬಂದ ವಿಷಯವನ್ನು ಕೇಳಿ ಅವರನ್ನು ಕರೆದು ತರಲು ಶ್ರೀ ಸ್ವಾಮಿಗಳು ಅಪ್ಪಣೆ ಕೊಡಿಸಿದರು.
ಶ್ರೀ ಗುರುರಾಯರು ಕುಟುಂಬ ಸಹಿತರಾಗಿ ಬಂದು ಶ್ರೀ ಸ್ವಾಮಿಗಳಿಗೆ ಶಿ।। ಸಾ ।। ದಂಡ ಪ್ರಣಾಮಗಳನ್ನು ಮಾಡಿದರು.
ನಾವು ಬಂದು ಆರು ತಿಂಗಳು ಮೇಲಾಯಿತು.
ನಿಮಗೆ ನಮ್ಮನ್ನು ನೋಡಲು ಬರುವುದಾಗಲಿಲ್ಲವಲ್ಲ.
ಇಂದು ಅಕಸ್ಮಾತ್ತಾಗಿ ಫಕೀರನಿಂದಾಗಿ ಆ ಶುಭ ಘಳಿಗೆ ಬಂದಿತಲ್ಲವೇ - ಎಂದು ಕೇಳಿದಾಗ ಶ್ರೀ ಗುರುರಾಯರ ಮೈ ರೋಮಾಂಚನವಾಯಿತು.
***
" ಶ್ರೀ ಮಹೀಪತಿ - 3 "
ಶ್ರೀ ಗುರುರಾಯರು ಪುನಃ ನಮಸ್ಕರಿಸಿ....
ಸ್ವಾಮೀ !
ನಾನು ಅಪರಾಧಿ. ಪಾಮರನು.
ತಾವು ಕರುಣಿಸಿ ನನ್ನನ್ನು ಉದ್ಧರಿಸಬೇಕು ಎಂದು ಶ್ರೀ ಭಾಸ್ಕರ ಸ್ವಾಮಿಗಳನ್ನು ಪ್ರಾರ್ಥಿಸಿಕೊಂಡಾಗ.....
ಹತ್ತಿರ ಕೂಡಿಸಿ ಕೊಂಡು ಪ್ರಸನ್ನರಾಗಿ ಶ್ರೀ ಗುರುರಾಯರ ತಲೆಯ ಮೇಲೆ ತಮ್ಮ ಅಮೃತಮಯವಾದ ಹಸ್ತವನ್ನಿಟ್ಟು ಫಕೀರನು ಹಚ್ಚಿದ ಜ್ಞಾನದ ಬೆಳಕು ಕೊಟಿ ಸೂರ್ಯ ಪ್ರಕಾಶವಾಗಿ ಸಚ್ಚಿದಾನಂದನಾದ ಶ್ರೀ ಹರಿಯ ದರ್ಶನ ಮಾಡಿಸಿತು.
ಆ ಕ್ಷಣ ಅವರ ವದನಾರವಿಂದದಲ್ಲಿ....
ಇಂದೆನ್ನ ಜನ್ಮ ಪಾವನ ವಾಯಿತು ।
ತಂದೆ ಶ್ರೀ ಗುರು ನಿಮ್ಮ
ಚರಣ ದರುಶನದಿ ।। ಪಲ್ಲವಿ ।।
ಅರ್ಕ ಮಂಡಲಗಳು
ರವಿ ಶಶಿ ಕಿರಣವು ।
ಝಳ ಝಳಿಸುವ ಪ್ರಭೆ ನೋಡಿ
ಅನಿಮಿಷದಾ ದೃಷ್ಟಿಲೆನ್ನ ।
ಲಕ್ಷ್ಮಿಯೊಳು ಸಾಕ್ಷಾತ್ವಸ್ತು
ಗತಿತು ನಿಮ್ಮ ।
ಪ್ರಕಾಶವನು ಕಂಡ೦-
ಧತ್ವಗಳು ।। ಚರಣ ।।
ಓಂಕಾರ ಮೊದಲಾದ
ದ್ವಾದಶ ನಾದದಾ ।
ಭೇದದಾ ಘೋಷವನು
ಕೇಳಿನ್ನೀ ದೃಶ್ಯದಾ ಕರ್ಣಲೆನ್ನಾ ।
ಲಯ ಲೇಲೆಯೊಳು ಸಾದೃಶ್ಯ
ಮೂರ್ತಿಯು ನಿಮ್ಮ ।
ಶ್ರುತಿಗಳು ಕೇಳಿ ಬಧಿ-
ರತವಾಗಳಿದಿನ್ನು ।। ಚರಣ ।।
ಇಪ್ಪತ್ತೊಂದು ಸಾವಿರ
ಆರು ನೂರುದಾ ।
ಜಪವನ್ನು ತಿಳಿದು
ಪ್ರಣಮ್ಯಲೆನ್ನ ।
ಸುಷುಮ್ನದೊಳು
ಪ್ರಾಣೇಶ ಮೂರ್ತಿ ನಿಮ್ಮ ।
ಮಂತ್ರವನ್ನು ತಿಳಿದು
ಪಿಶಾಚತ್ವ ಕಳೆದಿನ್ನು ।। ಚರಣ ।।
ಸ್ತುತಿ ಸ್ತೌತ್ಯ ಸ್ಮರಿಸುವ
ದಿವ್ಯ ನಾಮಾಮೃತವ ।
ನುಡಿದು ಪಯಸ್ವಿನೀ
ಜಿಹ್ವೆಲೆನ್ನ ।
ಸ್ಮರಣೆ ಚಿಂತನೆಯೊಳು
ಸ್ಥುರಣ ಮೂರ್ತಿ ನಿಮ್ಮ ।
ಸ್ಮರಿತ ಗತಿವರಿತು
ಮೂಕತ್ವ ಕಳೆದಿನ್ನು ।। ಚರಣ ।।
ಚಿನ್ಮಯ ಚಿದ್ರೂಪ
ಕಂಡು ಬೆರಗಾಗಿ ಮನ ।
ಭ್ರಾಂತಿ ಅಜ್ಞಾನವನ್ನು
ಜರಿಯಲೆನ್ನ ।
ಏಕೋದೇವ ಈತ
ವಿಶ್ವಾತ್ಮ ಹಂಸನೆಂದು ।
ಸಂದೇಹ ಸಂಕಲ್ಪ
ಬಾಧೆಯಾಗಳದಿನ್ನು ।। ಚರಣ ।।
ಭುಕ್ತಿ ಮುಕ್ತಿ ಉದಾರಿ
ಆತ್ಮದಲಿ ಸಾರಿ ದಾರಿ ।
ನಿಜ ಬೋಧಾಮೃತ
ಬೆರೆದು ತಾರಿಸಲೆನ್ನ ।
ಗರ್ಭಪಾಶದ ಬಲಿಯು
ಹರಿದು ಧರೆಯೊಳಿನ್ನು ।
ಉತ್ಪತ್ತಿ ಸ್ಥಿತಿ ಲಯದ
ಬೀಜವನ್ನು ಹುರಿದಿನ್ನು ।। ಚರಣ ।।
ಭಾಸ್ಕರ ಸ್ವಾಮಿಯ
ಕಾರುಣಾಳು ಮೂರ್ತಿಯ ।
ಮೂಢ ಮಹೀಪತಿಯ
ಕೃಪಾಂಬುಧಿಯು । ಕರು ।
ನದಭಯ ಹಸ್ತವನು
ಶಿರದಲ್ಲಿಡಲಾಗಿ ।
ಧನ್ಯನಾದೆನು ಸತಿಪತಿ
ಸಹಿತವಾಗಿನ್ನು ।।
ಎಂಬ ಸುಂದರವಾದ ವಿಶೇಷಾರ್ಥಗಳಿಂದ ಕೂಡಿದ ಸ್ತೋತ್ರ ಪದವು ಹೊರ ಹೊಮ್ಮಿತು.
ಅಂದಿನಿಂದ " ಮಹೀಪತಿ " ಎಂಬ ಅಂಕಿತದಿಂದ ಸಂಸ್ಕೃತ - ಕನ್ನಡ - ಮರಾಠಿಗಳಲ್ಲಿ ಅನೇಕ ಪದ - ಪದ್ಯ - ಉಗಾಭೋಗಗಳನ್ನು ರಚಿಸಿ ಶ್ರೀ ಹರಿದಾಸ ಸಾಹಿತವನ್ನು ಶ್ರೀಮಂತಗೊಳಿಸಿದರು.
ಮುಂದೆ ಸಂಚಾರ ಕ್ರಮದಲ್ಲಿ ಕ್ಷೇತ್ರ ಸಂದರ್ಶನ ಮಾಡುತ್ತಾ " ಕಾಖಂಡಕೀ " ಗೆ ಬಂದು ನೆಲೆಸಿದರು.
ಶ್ರೀ ಮಹೀಪತಿದಾಸರಿಗೆ ಇಬ್ಬರು ಮಕ್ಕಳಿದ್ದರು.
ಅದರಲ್ಲಿ ದೇವರಾಯನು ಕ್ಷಾತ್ರ ತೇಜದಿನ್ದ ಜಾಲವಾಡಿಯ ದೇಸಗತಿಯನ್ನು ಸಂಪಾದಿಸಿ ಅಲ್ಲೇ ಉಳಿದನು.
ಕೃಷ್ಣರಾಯನು ತಂದೆಯ ಹಾದಿಯನ್ನಿಡಿದು ಆಧ್ಯಾತ್ಮ ಚಿಂತನೆ ಮಾಡುತ್ತಾ, ತಂದೆಯಿಂದಲೇ ದಾಸ ದೀಕ್ಷೆಯನ್ನು ಪಡೆದು ಕಾಖಂಡಿಕೀಯಲ್ಲಿಯೇ ಉಳಿದರು.
ಶ್ರೀ ಮಹೀಪತಿದಾಸರು ಸಾಧನೆ, ಸಿದ್ಧಿಗಳಿಂದಾಗಿ ಅವರು ಆ ಕಾಲದಲ್ಲಿ ತುಂಬಾ ಪ್ರಸಿದ್ಧರಾಗಿದ್ದರು.
ಶ್ರೀ ಮಹೀಪತಿದಾಸರು ಎಷ್ಟು ಪ್ರಸಿದ್ಧಿ ಎಂದರೆ ಅಂದಿನ ಸರ್ಕಾರದ ಕಂದಾಯ ದಾಖಲೆಗಳಲ್ಲಿ " ಶ್ರೀ ಮಹೀಪತಿ ಸ್ವಾಮಿ ಸಂಸ್ಥಾನ " ಎಂದು ಬರೆಯಲ್ಪಟ್ಟಿದೆ.
ಶ್ರೀ ಮಹೀಪತಿದಾಸರಿಗೆ ಕಾಖಂಡಕೀ ಗ್ರಾಮವಲ್ಲದೇ, ಸಾರವಾಡ, ಮುಳವಾಡ, ಮಸೂತಿ, ಹೊನಗನ ಹಳ್ಳಿ, ಕೊಲ್ಹಾರ, ಬಸವನ ಬಾಗೇವಾಡಿ, ಬಂಕಾಪುರದಲ್ಲಿ ಭೂಮಿಯನ್ನು ದಾನವಾಗಿ ಕೊಟ್ಟಿದ್ದಾರೆ.
ಅವುಗಳೆಲ್ಲವೂ ಶ್ರೀ ಮಹೀಪತಿ ಸ್ವಾಮಿ ಸಂಸ್ಥಾನಕ್ಕೆ ಸೇರಿದ್ದವುಗಳೆಂದು ಈ ದಾಖಲೆಗಳು ಹೇಳುತ್ತವೆ.
ಶ್ರೀ ಮಹೀಪತಿದಾಸರು ಕಾರ್ತೀಕ ಬಹುಳ ಅಮಾವಾಸ್ಯೆಯೆಂದು ಕಾಖಂಡಕೀಯಲ್ಲಿ ಹರಿಪಾದ ಸೇರಿದರು.
ರಾಯರ ನೋಡಿರೈ ಮಹೀಪತಿ-
ರಾಯರ ಪಾಡಿರೈ ।। ಪಲ್ಲವಿ ।।
ರಾಯರ ನೋಡುತ
ಪಾಡುತ ಭಕುತಿಯ ।
ಮಾಡಲು ಬೇಡಿದ
ವರಗಳ ಕೊಡುವಾ ।। ಚರಣ ।।
ತಂದೆಯ ನೋಡಿರೈ
ಮಹೀಪತಿ ಕಂದನ ಪಾಡಿರೈ ।
ಕುಂದುಗಳೆಣಿಸದೆ
ಬಂದು ಭಕುತ ಜನ ।
ವೃಂದವ ಪೊರೆಯುವ
ತಂದೆ ಮಹೀಪತಿ ।। ಚರಣ ।।
ಭೋಗಿಯ ನೋಡಿರೈ
ತಾಮಸ ಯೋಗಿಯ ಪಾಡಿರೈ ।
ತ್ಯಾಗರಾಜ ಭೂಪತಿವಿಠ್ಠಲ ಪ್ರಿಯ ।
ಭೋಗಿ ಭೂಷಣಾ೦ಕ
ವೈಷ್ಣವಾಗ್ರಣೀ ।। ಚರಣ ।।
ಶ್ರೀ ಮಹೀಪತಿದಾಸರ ರಚನೆಯಲ್ಲಿ....
702 ಪದಗಳು
1 ಮಿಶ್ರಭಾಷಾ ಪದ
2 ಮುಂಡಿಗೆಗಳು
6 ಉಗಾಭೋಗಗಳು
ದೊರಿತಿವೆ - ಇದುವೇ ನಮ್ಮ ಭಾಗ್ಯ...... !!!!
ಸ್ವಭಕ್ತಾನುಗ್ರಹಾರ್ಥಾಯ
ಸಾಮೀಪ್ಯಾತ್ ಧ್ರುವಮಾಗಥಾನ್ ।
ಮಹೀಪತಿ ಗುರೂನ್ವಂದೇ
ಸರ್ವ ವಿದ್ಯಾ ವಿಶಾರದಾನ್ ।।
by ಆಚಾರ್ಯ ನಾಗರಾಜು ಹಾವೇರಿ
ಗುರು ವಿಜಯ ಪ್ರತಿಷ್ಠಾನ
*****
" ಈದಿನ ಶ್ರೀ ರುದ್ರದೇವರ ಅಂಶ ಸಂಭೂತರಾದ ಶ್ರೀ ಮಹೀಪತಿದಾಸರ ಆರಾಧನಾ ಮಹೋತ್ಸವ- ಕೊಲ್ಹಾರ - ವಿಜಾಪುರ ಜಿಲ್ಲೆ "
ಶ್ರೀ ಮಹೀಪತಿದಾಸರು ದ್ವೈತ ಮತಕ್ಕೆ ಸೇರಿದ ಹರಿದಾಸರು.
ಶ್ರೀ ಮಹೀಪತಿ ದಾಸರ ಕೃತಿಗಳೆಲ್ಲವೂ ಶ್ರೀ ಹರಿಯ ಸರ್ವೋತ್ತಮತ್ವ ಪ್ರತಿಪಾದಕ ಕೃತಿಗಳು.
ಹರಿ ಭಕುತರ ದರುಶನವು ಅತಿ ಹರುಷವು ಧ್ರುವ । ಹರಿ ನೆನೆವರಾ ನೆರಿಯು ನಿಧಾನದಾ ಕೆರೆಯು । ಹರಿ ಸ್ಮರಿಸುವರ ಮರಿಯು ವಜ್ರವರಿಯು । ಹರಿ ಭಜಿಸುವರ ಸರಿಯು ನಿಜ ಘನಾತ್ಮದ ಝರಿಯು । ಹರಿ ಮಹಿಪರ ಕರಿಯು ಪರಮಾನಂದದ ತೆರಿಯು । ಹರಿ ಶರಣರ ನುಡಿಯು ಕರುಣದಮೃತ ಧ್ವನಿಯು । ಹರಿಯದಾಸರ ನಡೆಯು ನಿಲಕಡೆಯು ।
ಹರಿ ಭಕ್ತರಿದ್ದೆಡೆಯು ಪುಣ್ಯಕ್ಷೇತ್ರದ ತಡಿಯು । ಹರಿಮಹಿಮರ ಕಡಿಯು ಕ್ಯಾದಿಗ್ಹೊಡಿಯು । ಹರಿಭಕ್ತರ ಸಂಗ ಸ್ನಾನಗಂಗ ತುಂಗ । ಹರಿ ಮಹಿಮರ ಅಂಗ ಅಂತರಂಗ । ಹರಿ ಪರಮಾನಂದ ಗುರು ಕರುಣಾಕೃಪಾಂಗ ।ತರಳ ಮಹಿಪತಿ ಭವಭಯವು ಭಂಗ ।।
" ಶ್ರೀ ಹರಿ ಸರ್ವೋತ್ತಮಃ - ಶ್ರೀ ವಾಯು ಜೀವೋತ್ತಮಃ " ಯೆಂಬ ದ್ವೈತ ಸಿದ್ಧಾಂತ ಸಾರವೇ ಶ್ರೀ ಮಹೀಪತಿ ದಾಸರ ಕೃತಿಗಳ ಜೀವಾಳ.
ಶ್ರೀ ಮಹೀಪತೀ ದಾಸರ ಆರಾಧನಾ ಮಹೋತ್ಸವದ ಸಂದರ್ಭದಲ್ಲಿ ಅವರ ಒಂದೆರಡು ಕೃತಿಗಳನ್ನು ಅವಲೋಕಿಸುವ ಪ್ರಯತ್ನ ಮಾಡೋಣ...
ಶ್ರೀ ಕನಕದಾಸರ ನಂತರ - ಶ್ರೀ ಮಹೀಪತಿ ದಾಸರು ಅನೇಕ [ 14 ] ಅಂಕಿತದಲ್ಲಿ ಕೃತಿ ರಚನೆ ಮಾಡಿದ್ದು - ಅಂಕಿತಗಳು ಹೀಗಿವೆ...
" ಮಹೀಪತಿ - ದೀನ ಮಹೀಪತಿ - ತರಳ ಮಹೀಪತಿ - ದಾನ ಮಹೀಪತಿ - ನರ ಕೀಟಕ ಮಹೀಪತಿ - ಬಾಲಕ ಮಹೀಪತಿ - ಪುತ್ರ ಮಹೀಪತಿ - ಮಹೀಪತಿ ಗುರು - ಮಹೀಪತಿ ತಂದೆ - ಮಹೀಪೆಮ್ಮ "
ಮೊದಲಾದ ಅಂಕಿತದಲ್ಲಿ....
ಸಂಸ್ಕೃತ - ಕನ್ನಡ - ಮರಾಠಿ - ದರಾಣಿ - ಉರ್ದು - ಪಾರ್ಸಿ ಭಾಷೆಗಳಲ್ಲಿ ಸುಮಾರು 700 ಕ್ಕೂ ಅಧಿಕ ಕೃತಿಗಳನ್ನು ರಚಿಸಿದ ಮಹಾನುಭಾವರು.
ಶ್ರೀ ಮಹೀಪತಿ ದಾಸರು -
ಪರಮ ವೈಷ್ಣವೋತ್ತಮರೂ - ಶ್ರೀ ಹರಿಯ ಮೊಮ್ಮಕ್ಕಳೂ ಆದ ಶ್ರೀ ಮಹಾರುದ್ರದೇವರ ಅವತಾರರು.
ಶ್ರೀ ಮಹೀಪತಿ ದಾಸರು...
ಹರಿಯನರಿಯದ ಜನುಮ ।
ಧರೆಯೊಳಗಧರ್ಮಾಧರ್ಮ ।
ಹರಿಯ ನೆನೆಯದ
ನರನು ಪಾಮರನು ।।
ಯೆಂಬ ಕೃತಿಯಲ್ಲಿ......
" ಹರಿಗೆ ವಂದಿಸದ ಹಣೆಯು ಹುಳುಕು ಮಣಿಯು "
ದಂಥಾ ಅಪರೂಪದ ದೃಷ್ಟಾಂತವನ್ನು ಕೊಡುತ್ತಾರೆ.
ಭಾಷೆ - ಪ್ರಾಸ - ಲಯ - ಅಲಂಕಾರದ ದೃಷ್ಟಿಯಿಂದ ಇವರ ರಚನೆಗಳು ಬಹಳ ಉತ್ತಮವಾಗಿವೆ.
" ಹರಿಕಥೆಯು ಕೇಳದ ಕಿವಿಯು ಹಾಳು ಗವಿಯು "
ದಂಥ ಅರ್ಥ ಪೂರ್ಣ ಸಾಲುಗಳು ಈ ಕೀರ್ತನೆಯಲ್ಲಿ ಕಂಡು ಬರುತ್ತದೆ.
1) ಇಂದಿನ ದಿನ ಸುದಿನವಿದು ನೋಡಿ । ತಂದೆ ಸದ್ಗುರು ಕೀರ್ತಿಯ ಕೊಂಡಾಡಿ ಧ್ರುವ । ಸಾರ್ಥಕವಾಯಿತು ಜನ್ಮಕ ಬಂದು । ಕರ್ತು ಸದ್ಗುರು ಕರುಣವ ಪಡೆದಿಂದು । ಮತ್ರ್ಯವು ಮಾಯಾ ನೋಹದಸಂದು । ಆರ್ಥಿ ಆಯಿತು ಮನದೊಳು ನಮಗಿಂದು । ಕೇಳಿದೆವು ಹರಿನಾಮದ ಘೋಷ । ಹೊಳೆಯಿತು ಮನದೊಳು ಅತಿ ಉಲ್ಹಾಸ । ಕಳೆದೆವು ಕತ್ತಲೆ ಅಜ್ಞಾನದ ದೋಷ । ಬೆಳಗಾಯಿತು ಗುರುe್ಞÁನ ಪ್ರಕಾಶ । ಸೇವಿಸಿ ಸದ್ಗುರು ನಾಮಸುರಸ । ಆಯಿತು ಮನ ಚಿದ್ಭನ ಸಮರಸ ಹೋಯಿತು ಭವಭಯದ ತಾ ಕ್ಲೇಶ । ಮಹಿಪತಿಗಾಯಿತು ಅತಿ ಸಂತೋಷ ।।
2) ದೇವ ನೀನಹುದೈ ಭುವನತ್ರಯದ ಜೀವ । ಭಾವಿಕರಿಗೆ ಕಾವ ಶ್ರೀ ವಾಸುದೇವ ಧ್ರುವ । ದೇವಕಿಯ ಕಂದ ದೈತ್ಯಾರಿ ಶ್ರೀ ಗೋವಿಂದ । ಮಾವ ಕಂಸನ ಕೊಂದ ಮಾಧವ ಮುಕುಂದ । ಮದನ ಮೋಹನಮೂರ್ತಿ ಯದುಕುಲೋದ್ಭವ ಕೀರ್ತಿ । ಆದಿ ಪಾಂಡವ ಸಾರ್ಥಿ ಬುಧಜನರ ಸ್ಪೂರ್ತಿ । ಶರಣ ಜನರಾಭಣ ಸಿರಿಲೋಲನೆ ಪೂರ್ಣ। ತರಳ ಮಹಿಪತಿಸ್ವಾಮಿ ಘನಕರಣ ।।
3) ನಡಿ ನೋಡುವ ಮನವೆ ಹರಿಯ ಧ್ರುವ । ಬೇಡಿಕೊಂಬುವೆ ಜೀವದ ಧೊರಿಯ । ಕೂಡಿ ಕೊಂಬುವ ಪ್ರಾಣದ ಸಿರಿಯ । ಇಡಾಪಿಂಗಳ ಮಧ್ಯ ನಡುವ । ಜಾಡೆ ಪಿಡಿದು ಕೂಡಿಕೊಂಬುವ । ದೃಢ ಪಿಡಿದು ಷಡಚಕ್ರ ಸೋಪಾನವೇರಿ । ಗೂಢವಾಗಿಹ್ಯ ನಿಜ ನೋಡುವ । ಬ್ರಹ್ಮಾನಂದ ಸುಖಸಾಮ್ರಾಜ್ಯವಾಗಿಹ್ಯ । ನಿರ್ಮನದಲಿ ಬೆರೆದಾಡುವ ।
ಸಹಸ್ರದಳದಲಿಹ್ಯ ಮಹಿಪತಿಸ್ವಾಮಿಯ । ಸೋಹ್ಯ ತಿಳಿದು ಸುಖದಲಿರುವ ।।
4) ಹರಿಯನರಿಯದಿಹ್ಯ ನರ ಜನ್ಮವ್ಯಾಕೆ । ಪರಬ್ರಹ್ಮವರಿಯದ ಬರೆ ಬ್ರಾಹ್ಮಣವ್ಯಾಕೆ ಧ್ರುವ । ಹರಿಃ ಓಂ ತತ್ಸದಿತಿಯೆಂಬ ಶ್ರೀ ಹರಿ ವಾಕ್ಯವರಿಯದೆ । ಬರುದೆ ಶ್ರೀ ಹರಿ ಶ್ರೀ ಹರಿಯಂದೊದರುವದ್ಯಾಕೆ । ಏಕಾಂಶೇನ ಸ್ಥಿತೋ ಜಗತ ಎಂಬ ವಾಕ್ಯವರಿಯದೆ । ನಾಲ್ಕಾರು ವೇದಶಾಸ್ತ್ರವೋದಿ ಕೇಳುವದ್ಯಾಕೆ । ಯದಾದಿತ್ಯ ಗತಂ ತೇಜೋ ಜಗದ್ಭಾಸಯತೇಖಿಳಂ । ಎಂಬ ವಾಕ್ಯವರಿಯದೆ । ಹದಿನೆಂಟು ಪುರಾಣ ಕೇಳಿ ಹೇಳುವದ್ಯಾಕೆ । ಮಮೈವಾಂಶೋ ಜೀವಲೋಕೇ ಜೀವಭೂತ: ಸನಾತನ ಎಂಬ ವಾಕ್ಯವರಿಯದೆ । ನಾನಾ ವ್ರತಾಚಾರ ಸಂನ್ಯಾಸ ಕೈಕೊಂಬುದ್ಯಾಕೆ । ಸುದರ್ಶನ ಮಹಾಜ್ವಾಲಾ ಕೋಟಿಸೂರ್ಯ ಸಮಪ್ರಭ ಎಂಬ ವಾಕ್ಯವರಿಯದೆ । ಸೀಳಿ ಸುದರ್ಶನಗಳ ಪೂಜಿ ಮಾಡುವದ್ಯಾಕೆ । ಮಂತ್ರ ಪ್ರಣಮ್ಯವರಿಯದೆ ತಂತ್ರ ಮಂತ್ರಸರವ್ಯಾಕೆ । ಅಂತರಾತ್ಮವರಿಯದೆ ತರ್ಕಭೇದಗಳ್ಯಾಕೆ । ವಿಶ್ವವ್ಯಾಪಕ ಗುರು ಭಾಸ್ಕರಮೂರ್ತಿ ಶ್ರೀಪಾದ ವಿಡದಿಹ ಮಹಿಪತಿಗೆ ಭವಪಾಶದಂಜಿಕಿನ್ಯಾಕೆ ।।
5) ಧರ್ಮ ದೊಡ್ಡದಯ್ಯ ನಿಮ್ಮ ಸ್ವಾಮಿ ಸದ್ಗುರುರಾಯ । ಬ್ರಹ್ಮಾನಂದ ವಸ್ತು ನೀನೆ ಸಮಸ್ತ ಜನಪ್ರಿಯ ಧ್ರುವ । ಮೊರೆಯನಿಟ್ಟ ಧ್ರುವಗೆ ನೀನು ಕೊಟ್ಟ್ಯೋ ಪದ ಆಢಳ । ಕರಿಯ ಮೊರೆಯ ಕೇಳಿ ನೀನು ಸೆರಿಯ ಬಿಡಿಸಿದ್ಯೊ ದಯಾಳು । ಶರಣು ಹೊಕ್ಕ ತರಳಗಿನ್ನು ಪಡದ್ಯೊ ಪ್ರಾಣ ನಿಶ್ಚಳ । ಸ್ಮರಣೆಗೊದಗಿ ಬಂದ್ಯೊ ಪಾಂಡವರಿಗೆ ತಾತ್ಕಾಳ । ಮೊರೆಯನಿಟ್ಟ ದ್ರೌಪದಿಗೆ ವಸ್ತ್ರ ಪೂರಿಸಿದ್ಯೊ ಪೂರ್ಣ । ಧರೆಯೊಳು ಶಿಲೆಯಾಗಿದ್ದ ಸತಿಗೆ ಮಾಡಿದ್ಯೊ ಉದ್ದರಣ । ಪರಿ ಪರಿ ಹೊರೆವ ಪೂರ್ಣ ಭಕ್ತರ ಪ್ರಾಣ ವರ್ಣಿಸಲಾಗದೊ ನಿಮ್ಮ ದಯವೃತ್ತಿ ನಿಜಗುಣ । ದೇಶಿಕರ ದೇವ ನೀನೆ ವಾಸುದೇವ ನಿಶ್ಚಯ । ಭಾಸ್ಕರ ಕೋಟಿ ತೇಜ ಭಾಸುತಿಹ ನಿಮ್ಮ ದಯ । ಲೇಸಾಗಿ ಪಾಲಿಸೊ ಪೂರ್ಣ ದಾಸ ಮಹಿಪತಿಯ । ವಿಶ್ವದೊಳಾನಂದದಿಂದ ರಕ್ಷಿಸುವ ನಿಮ್ಮ ಭಯ ।।
6 )ದ್ವೈತ ಅದ್ವೈತೆಂದು ಹೊಡದಾಡದಿರೊ ಪ್ರಾಣಿ । ಚೇತಿಸಿ ಬ್ಯಾರಿಹ ವಸ್ತುಗಾಣಿ ಧ್ರುವ । ದ್ವೈತ ಎನಲಿಕ್ಕೆ ತಾಂ ಆದೆವೆ ಅದ್ವೈತ । ಅದ್ವೈತ ಎನಲಿಕ್ಕೆ ಅದೆನೆ ತಾಂ ದ್ವೈತ । ಹಿಂದು ಮುಂದಾಗಿ ಆಡಿಸುತಿಹ್ಯ ನಿಜಖೂನ । ಎಂದಿಗಾದರು ತಿಳಿಯಗುಡದು ಪೂರ್ಣ । ಅತಿಸೂಕ್ಷ್ಮ ತಿಳುವಾದರಲ್ಲೆ ಬಿದ್ದದ ಮಲಕು । ನೇತಿ ನೇತೆಂದು ಸಾರುತಿದೆ ಶ್ರುತಿ ಇದಕೆ ತಿಳಿಕೊ । ದ್ವೈತ ಎಂದವನೆ ತಾಂ ಪರಮ ವೈಷ್ಣವನಲ್ಲ, । ಅ । ದ್ವೈತನೆಂದವನೆ ತಾನು ಪರಮ ಸ್ಮಾರ್ತನಲ್ಲ । ಸ್ಮಾರ್ತ ವೈಷ್ಣವ ಮತ ಗುರು ಮಧ್ವಮುನಿಬಲ್ । ಅರ್ತು ಸ್ಥಾಪಿಸುವದು ಮನುಜಗಲ್ಲ । ಮೂರುವರಿ ಮೊಳದ ದೇಹದ ಶುದ್ಧಿ ನಿನಗಿಲ್ಲ । ದೋರುವರೆ ತರ್ಕಸ್ಯಾಡುವ ಸೊಲ್ಲ । ದ್ವೈತ ಅದ್ವೈತಕ ಬ್ಯಾರಿಹ ಗುರುಗುಟ್ಟು ।
ಚಿತ್ತ ಶುದ್ದಾಗಿ ಮಹಿಪತಿಯ ಮುಟ್ಟು ।।
7) ದೇಹದ ಒಳಗಿಹ್ಯ ದೇವರ ತಿಳಿದಿಹ ಆತನೆ ದೇಹಾತೀತನು । ತನ್ನೊಳು ಪರಬ್ರಹ್ಮ ವಸ್ತುವನರಿದಿಹ । ಆತನೇ ಶ್ರೀಹರಿಭಕ್ತನು ಮಾ । ಅಂಗದೊಳಗೆ ಪ್ರಾಣ ಲಿಂಗವು ತಿಳಿದಿಹ ಆತನೆ । ಲಿಂಗವಂತನು ಮಾ । ಷಟಸ್ಥಳ ಶೋಧಿಸಿ ಸಾಧಿಸಿ । ತಿಳದಿಹ ಆತನೆ ಶೀಲವಂತನು । ಶುದ್ಧಾತ್ಮ ಶಿವತತ್ವ ಸೂತ್ರವ । ತಿಳದಿಹ ಆತನೆ ಶಿವಭಕ್ತನು । ಷಡಚಕ್ರ ಕಳೆಗಳ ನೆಲೆಗಳ । ತಿಳದಿಹ ಆತನೆ ದೃಢ ನಿರ್ವಾಣೆಯು । ಬ್ರಹ್ಮಾಂಡ ಧುಮುಕಿ ಪಿಂಡಾಂಡ ತಿಳದಿಹ ಆತನೆ ಮಹಾಪಂಡಿತನು । ಪರಾಪಶ್ಯಂತಿ ಮಧ್ಯಮ ವೈಖರಿ ತಿಳದಿಹ ಆತನೆ ಆಚಾರ ನಿಷ್ಠನು । ಐದು ತತ್ವದ ಗತಿಗಳ ತಿಳದಿಹ ಆತನೆ ಮಹಾ ವೈದಿಕನು । ಪಂಚ ಮುದ್ರೆಯ ಸ್ಥಾನವು ತಿಳದಿಹ ಆತನೆ ಸುಬ್ರಾಹ್ಮಣನು । ಅರುವಿನ ಖೂನ ಮರೆವವು ತಿಳದಿಹ ಆತನೆ ಗುರುವೆಂದರುವದು । ಹಸುವಿ ನಿದ್ರಿಗಳು ಶಮೆದಮೆವಾಗಿಹ ಆತನೆ ಸಿದ್ದ ಶರಣನು । ನೋಡುವ ನೋಟವು ಪರುಷವು ಆಗಿಹ ಆತನೆ ಮಹಾ ಸತ್ಪುರುಷನು । ಕರದಲಿ ಪರಬ್ರಹ್ಮ ನೆಲೆಯನು ತಿಳದಿಹ ಆತನೆ ವರಗುರು ಮೂರ್ತಿಯು । ಉತ್ಪತ್ತಿ ಸ್ಥಿತಿಲಯ ತಾರಿಸುತಿಹನು ಆತನೆ ಅವತಾರ ಮಹಿಮನು । ನಾದ ಬಿಂದು ಕಳೆ ಸಾಧಿಸಿ ದೋರವ ಆತನೆ ಸಾಧು ಸಂತನು । ಸದ್ಗತಿ ಮುಕ್ತಿಯು ಸಾಧಿಸಿದೋರುವ ಆತನೆ ಸದ್ಗುರು ಮೂರ್ತಿಯು । ಈ ಸುಪರಿಯಲಿಹ ಸರಿಗೊಪ್ಪುತಿಹ್ಯ ಆತನೆ ಮಹಾ ಜ್ಞಾನಿ ಪುರುಷನು । ಮಿಕ್ಕ ಲೋಕಕವಿನ್ನು ಹುರುಳಿಲ್ಲದಿಹರು ಮರುಳಮಂಕ ಮನುಜರು । ಗುರುವಿಗೆ ನರನಲ್ಲವೆಂದು ತಾ ತಿಳದಿಹ ಆತನೆ ಶ್ರೀ ಗುರುದಾಸನು । ಭಾಸ್ಕರಮೂರ್ತಿ ಶ್ರೀಪಾದವು ತಿಳದಿಹ ಮಹಿಪತಿ ಭವನಾಶವಾಯಿತು ।।
😎 ನಿಗಮ ಗೋಚರಾನಂತ ಮಹಿಮ ಶ್ರೀದೇವ । ಸಗುಣ ನಿರ್ಗುಣನಾಗಿ ತೋರುವ । ಸುಗಮಲಿಹ್ಯ ಸುಖದಾಯಕ ಧ್ರುವ । ಅಗಣಿತ ಗುಣಗಮ್ಯನುಪಮ ಶ್ರೀನಾಥ । ನಿಗಮ ತಂದು ನೀ ಪ್ರಕಟದೋರಿದೆ ನಗವು ಬೆನ್ನಿಲಿ ತಾಳಿದೆ । ಮಗುಟ ಮಣಿ ಮುಕುಂದ ಮಾಧವ । ಶ್ರೀ ಕಾಂತ ಜಗವನುಳಹಿದೆ । ನೆಗಹಿದಾಡಿಲೆ ಭಗತಗೊಲಿದು ನೀ ಕಾಯಿದೆ ।
ಹರಿ ಸರ್ವೋತ್ತಮ ಪರಮಪುರಷ ಶ್ರೀ ವೇಷಧರಿ ಮೂರಡಿ ಮಾಡಿದೆ ನೀ ಪರಶುಧರನಾಗ್ಯಾಡಿದೆ । ಪರಿಪರ್ಯಾಡುವಾ ನಂದಸ್ವರೂಪ ಶ್ರೀಧರ ಶರಣ ರಕ್ಷಕನಾಗಿ ನೇಮದಿ ತುರುಗಳನ ನೀ ಕಾಯಿದೆ । ಕರುಣಸಾಗರ ಸಾಮಜ ಪ್ರಿಯ ಶ್ರೀನಿಧೆ । ಬರಿಯ ಬತ್ತಲೆಯಾಗಿ ಸುಳಿದು ನೀ ಏರಿ । ಹಯವನು ತೋರುವೆ । ಸರಸಿಜೋಧ್ಬವನುತ ಸಿರಿಲೋಲ ಎನ್ನಯ । ತರಳ ಮಹಿಪತಿ ಹೊರಿಯೊ ಅನುದಿನ । ಸೂರ್ಯಕೋಟಿ ಪ್ರಕಾಶನೆ ।।
9) ನಾರಾಯಣ ನರಹರಿ ನಾರದಪ್ರಿಯ । ನರಸುರಮುನಿ ವರದಾಯಕ ಧ್ರುವ । ವೇದ ಕದ್ದೊಯ್ದವನ ಮರ್ದಿಸಲಿಕ್ಕೆ । ಸಾಧಿಸಿ ಬಂದ್ಯೊ ಮಚ್ಛರೂಪನೆ । ಮಾಧವ ನೀ ಬಂದು ಕೂರ್ಮನಾಗಿ ನಿಂದು । ಮೇದಿನಿಯ ಭಾರವ ತಾಳಿದೆ । ಧರೆಯ ಕದ್ದಸುರನ ಕೋರದಾಡಿಂದ ಸೀಳಿ । ವರಾಹರೂಪಬಂದು ದೋರಿದೆ । ಹಿರಣ್ಯಕಶ್ಯಪ ವಿದಾರಣ ಮಾಡಿ ನೀ । ತರಳ ಪ್ರಲ್ಹಾದನ ರಕ್ಷಿಸಿದೆ । ಬ್ರಾಹ್ಮಣನಾಗಿ ಬಂದು ಬಲಿಯ ಮನೆಯ ಮುಂದೆ । ವಾಮನ ರೂಪವದೋರಿದೆ । ನೇಮದಿಂದಲಿ ಪಿತನಾಜ್ಞೆಯ ನಡೆಸಲು ಸ್ವಾಮಿ ಭಾರ್ಗವರೂಪ ತಾಳಿದೆ । ದೇವತೆಗಳ ಸ್ಥಾಪಿಸಲಿಕ್ಕೆ ಬಂದು ದೈತ್ಯ । ರಾವಣನ ಕೊಂದ್ಯೊ ಶ್ರೀರಾಮ ನೀ । ದೇವಕಿ ಉದರದಲಿ ಜನಿಸಿ ಬಂದು ಕೃಷ್ಣ । ಗೋವಳರನ್ನು ಪ್ರತಿಪಾಲಿಸಿದೆ । ಪತಿವ್ರತೆಗಳ ವ್ರತ ಅಳಿಯಲಿಕ್ಕಾಗಿ ಬಂದು । ಸುಳಹುದೋರಿದೂ ಬೌದ್ದ್ಯರೂಪನೆ । ಹತ್ತಿ ಕುದರಿಯ ಒತ್ತಿ ಆಳಲಿಕ್ಕೆ । ಮತ್ತೆ ಬಂದೆಯ ಕಲ್ಕಿರೂಪನೆ । ಹತ್ತವತಾರ ಧರಿಸಿ ಬಂದು ಕ್ಷಿತಿಯೊಳ । ಪತಿತರ ಪಾವನಗೈಸಿದೆ । ಭಕ್ತ ಜನರುದ್ದರಿಸಲಿಕ್ಕೆ ಬಂದು । ಕ್ತಿಪರಾಕ್ರಮದೋರಿದೆ । ಸಾವಿರ ನಾಮದೊಡೆಯ ಸ್ವಾಮಿ ನೀ ಬಂದು । ಭಾವಿಸುವರೊಡನೆ ಕೂಡಿದೆ । ಭವಭಂಧನ ತಾರಿಸಿ ಮಹಿಪತಿಯ ಪ್ರಾಣ । ಪಾವನ ನೀ ಮಾಡಿದೆ ।।
10) ಮಂದರಧರ ಮಾಧವ ಶ್ರೀಹರಿ ಮುಕುಂದ ಬಾರೊ । ಸುಂದರ ವದನನೆ ನಂದ ಯಶೋದೆಯ ಕಂದ ಬಾರೊ । ಕಂದರ್ಪ ಕೋಟಿ ಲಾವಣ್ಯದಲೊಪ್ಪುವಾನಂದ ಬಾರೊ । ವಂದಿತ ತ್ರೈಲೋಕ್ಯ ಇಂದಿರಾಪತಿ ದೀನಬಂಧು ಬಾರೊ । ಗರುಡವಾಹನ ಗೋವಿಂದ ಗೋಪಾಲ ಶ್ರೀಕೃಷ್ಣ ಬಾರೊ । ಸರಸಿಜೋದ್ಭವನುತ ಸಿರಿಯ ಲೋಲನೆ ಪರಿಪೂರ್ಣ ಬಾರೊ । ಶರಣರಕ್ಷಕ ಸದಾ ಸಾಮಜವರದ ಸದ್ಗುಣ ಬಾರೊ । ವರ ಶಿರೋಮಣಿ ಮುನಿಜನರ ಸ್ವಹಿತ ಸುಭೂಷಣ ಬಾರೊ । ಅನಾಥರನುಕೂಲಾಗುವ ಘನದಾಗರ ಬಾರೊ । ಅನುಭವಿಗಳ ಅನುಭವದ ಸುಖಸಾಗರ ಬಾರೊ । ಭಾನುಕೋಟಿ ತೇಜ ಭಕ್ತಜನ ಸಹಕಾರ ಬಾರೊ । ದೀನಮಹಿಪತಿ ಸ್ವಾಮಿ ನೀನೆ ಎನ್ನ ಮನೋಹರ ಬಾರೊ ।।
ಮೇಲ್ಕಂಡ ಪದ್ಯಗಳಲ್ಲಿ ಶ್ರೀ ಮಹೀಪತಿ ದಾಸರು ಶ್ರೀ ಹರಿಯ ಸರ್ವೋತ್ತಮತ್ವ ಹಾಗೂ ಶ್ರೀ ವಾಯು ಜೀವೋತ್ತಮತ್ವವನ್ನು ಎಳೆ ಎಳೆಯಾಗಿ ಬಿಡಿಸಿ ಹೇಳಿದ ರೀತಿ ಅತ್ಯಂತ ವೈಶಿಷ್ಟ್ಯ ಪೂರ್ಣವಾಗಿದೆ.
ಅಲ್ಲದೇ - ದ್ವೈತ ಮತವನ್ನೂ - ಶ್ರೀ ಮಧ್ವಾಚಾರ್ಯರ ವೈಭವವನ್ನು ಅತ್ಯಂತ ಮನೋಜ್ಞವಾಗಿಯೂ - ಬಹು ಸರಳ ಸುಂದರವಾಗಿಯೂ ವರ್ಣಿಸಿದ್ದಾರೆ.
ಶ್ರೀ ಮಧ್ವ ಶಾಸ್ತ್ರವನ್ನು - ಅಂದರೆ...
ದ್ವೈತ ವೇದಾಂತವನ್ನು ತಿಳಿದವನು ಮಾತ್ರ ಪರತತ್ತ್ವ ತಿಳಿದು ಮೋಕ್ಷವನ್ನು ಹೊಂದುವ ಅರ್ಹತೆಯನ್ನು ಪಡೆಯುತ್ತಾನೆಂದು ಸ್ಪಷ್ಟ ಪಡಿಸಿದ್ದಾರೆ.
ಶ್ರೀ ಮಹೀಪತಿ ದಾಸರು ಶ್ರೀ ರಾಘವೇಂದ್ರತೀರ್ಥರ ಸಮಕಾಲೀನರೂ ಹಾಗೂ ಶ್ರೀ ರಾಯರು ಬಿಜಾಪುರಕ್ಕೆ ದಿಗ್ವಿಜಯ ಮಾಡಿಸಿದ್ದಾಗೆ ಕಣ್ಣಾರೆ ಕಂಡ ಮಹಾತ್ಮರು
***
" ಈದಿನ ಶ್ರೀ ರುದ್ರದೇವರ ಅಂಶ ಸಂಭೂತರಾದ ಶ್ರೀ ಮಹೀಪತಿ ದಾಸರ ಆರಾಧನಾ ಮಹೋತ್ಸವ - ಕೊಲ್ಹಾರ, ವಿಜಾಪುರ ಜಿಲ್ಲೆ "
ಜಗದ್ಗುರು0 ಕೃಪಾಸಿಂಧು0
ಶರಣಾಗತ ವತ್ಸಲಮ್ ।
ಭಕ್ತಮಾನಸ ಸಂಚಾರಂ
ಮಹೀಪತಿ ಗುರುಂ ಭಜೇ ।।
ಸ್ವಭಕ್ಥಾನುಗ್ರಹಾರ್ಥಾಯ
ಸಾಮೀಪ್ಯಾತ್ ಧ್ರುವಮಾಗಥಾನ್ ।
ಮಹೀಪತಿಗುರೂನ್ ವಂದೇ
ಸರ್ವವಿದ್ಯಾವಿಶಾರದಾನ್ ।।
जगद्गुरुम् कृपासिंधुम्
शरणागत वत्सलम् ।
भक्तमानस संचारं
महीपति गुरुं भजे ।।
स्वभक्थानुग्रहार्थाय
सामीप्यात् ध्रुवमागथान् ।
महीपतिगुरून् वंदे
सर्वविद्याविशारदान् ।।
" ಶ್ರೀ ಮಹೀಪತಿ ದಾಸರ ಮಹಿಮೆ "
ಗುರ್ಲ್ಬರ್ಗಾದ ದೇಶಮುಖ್ ಮನೆತನದ ಸಾಧ್ವೀ ತಿರುಮಲಾದೇವಿಯವರನ್ನು ವಿವಾಹವಾದರು.
ಶಹಾಪುರದಲ್ಲಿ ಶ್ರೀ ಮುಖ್ಯಪ್ರಾಣದೇವರನ್ನು ಪ್ರತಿಷ್ಠಾಪಿಸಿದರು.
ಶಹಾಪುರದಲ್ಲಿದ್ದಾಗ ಒಮ್ಮೆ ಇವರನ್ನು ಪರೀಕ್ಷಿಸಲು ಕೆಲವರು ಮಾಂಸದ ತುಂಡುಗಳನ್ನು ಮುಚ್ಚಿಟ್ಟುಕೊಂಡು ತರುತ್ತಾರೆ.
ದೇವರಿಗೆ ನೈವೇದ್ಯ ಮಾಡಲು ಪ್ರಾರ್ಥಿಸುತ್ತಾರೆ.
ಭಗವಂತನನ್ನು ಧ್ಯಾನಿಸಿ ಅಭಿಮಂತ್ರಿಸಿದ ಜಲವನ್ನು ಪ್ರೋಕ್ಷಿಸಿ - ಮೇಲಿನ ಬಟ್ಟೆಯನ್ನು ಸರಿಸಲು ಹೇಳಿದಾಗ - ಬಟ್ಟೆ ಸರಿಸಿ ನೋಡಲು ಅವು ಮಾವಿನ ಹಣ್ಣುಗಳ ಹೋಳುಗಳಾಗಿರುತ್ತವೆ.
ಇಂಥಾ ಘಟನೆಗಳು ಎಲ್ಲಾ ಅಪರೋಕ್ಷ ಜ್ಞಾನಿಗಳ ಬದುಕಲ್ಲಿ
ಹೇರಳವಾಗಿ ಕಂಡು ಬರುತ್ತವೆ.
" ಕಾಖಂಡಿಕಿಯಲ್ಲಿ ವಾಸ "
ಶ್ರೀ ಮಹೀಪತಿ ದಾಸರು - ಶಹಾಪುರದಿಂದ ಕಾಖಂಡಿಕಿಗೆ ಬಂದು ನೆಲೆಸುತ್ತಾರೆ.
ತಮ್ಮ ಜೀವಿತದ ಕೊನೆಯವರೆಗೂ ಅಲ್ಲೇ ನೆಲೆಸಿದ್ದ ಶ್ರೀ ಮಹೀಪತಿ
ದಾಸರು " ಕೊಲ್ಹಾರದಲ್ಲಿ ಕ್ರಿ ಶ 1681ರ ಕಾರ್ತೀಕ ಬಹುಳ ಅಮಾವಾಸ್ಯೆಯಂದು ವೈಕುಂಠಕ್ಕೆ ಪ್ರಯಾಣ ಬೆಳೆಸುತ್ತಾರೆ.
ಶ್ರೀ ಹರಿದಾಸ ಸಾಹಿತ್ಯಕ್ಕೆ ವಿಜಾಪುರ ಜಿಲ್ಲೆಯ ಶ್ರೇಷ್ಠ ಕಾಣಿಕೆಯಾಗಿ ಶ್ರೀ ಮಹೀಪತಿ ದಾಸರನ್ನು ಗುರುತಿಸಲಾಗುತ್ತದೆ.
ಸಂಸ್ಕೃತ - ಕನ್ನಡ - ಮರಾಠಿ - ದರಾಣಿ - ಉರ್ದು - ತೆಲುಗು - ಪಾರ್ಸಿ ಭಾಷೆಗಳಲ್ಲಿ ಕೃತಿಗಳನ್ನು ರಚಿಸಿರುವ ವೈಶಿಷ್ಟ್ಯ ಇವರದಾಗಿದೆ.
ಶ್ರೀ ಮಹೀಪತಿ ದಾಸರ ಅಪ್ಪಣೆಯಂತೆ 108 ಸಾಲಿಗ್ರಾಮಗಳ ಪರಮ ಪವಿತ್ರವಾದ ಸನ್ನಿಧಿಯಲ್ಲಿ ವೃಂದಾವನ ನಿರ್ಮಿಸಿದ್ದು ಇಂದಿಗೂ ಶ್ರೀ ದಾಸವರ್ಯರ ಆರಾಧನೆಯು ಅತ್ಯಂತ ವೈಭವದಿಂದ ನೆರವೇರುತ್ತದೆ.
ಕ್ರಿ ಶ 1611 - 1681 ರ ವರೆಗೆ 70 ವರ್ಷಗಳ ಕಾಲ ಜೀವಿಸಿದ್ದ ಶ್ರೀ ಮಹೀಪತಿ ದಾಸರು " ಕಾಖಂಡಕಿ " ದಾಸರೆಂದೇ ಜಗತ್ಪ್ರಸಿದ್ಧರಾಗಿದ್ದಾರೆ.
ಆಚಾರ್ಯ ನಾಗರಾಜು ಹಾವೇರಿ....
ಯೆನ್ನ ಮನದಾಶೆ ಪೂರೈಸೋ ।
ಘನ್ನ ಮಹಿಮನೆ ಇಂದುಧರಾಂಶನೇ ।
ಮುನ್ನ ಮಾಡಿದ ಪಾಪ ಪರಹರಿಸಿ ಸಲಹೋ ।
ಪನ್ನಗಶಯನ ವೇಂಕಟನಾಥನ ಪೌತ್ರ
ಮಹೀಪತಿದಾಸಾರ್ಯ ।।
by ಆಚಾರ್ಯ ನಾಗರಾಜು ಹಾವೇರಿ
ಗುರು ವಿಜಯ ಪ್ರತಿಷ್ಠಾನ
***
No comments:
Post a Comment