Daasarendare Purandara Daasarayya 1480 - 1564
ಪುರಂದರಗುರುಂ ವಂದೇ ದಾಸಶ್ರೇಷ್ಟಂ ದಯಾನಿಧಿಂ |
ಪುರಂದರ ಗುರುಂ ವಂದೇ ದಾಸಶ್ರೇಷ್ಠಂ ದಯಾನಿಧಿಂ ||
Character –
Madhukara Vrutti –
Contemporaries –
********
info from dvaita.org--->
*******
Sri Purandara Dasa | 1480-1564 | Srinivasa Nayaka | Purandara Vittala | Sri Vyaasa raja | Hampi | Pushya Bahula Amavasya |
*******
info from sumadhwaseva.com--->
ಪುರಂದರ ದಾಸರ ಸಂಕ್ಷಿಪ್ತ ಮಾಹಿತಿ
- ದಾಸರ ಕಾಲ – 1480 – 1564
- ಗೋತ್ರ – ವಸಿಷ್ಟ ಗೋತ್ರ
- ವೇದ ಶಾಖ – ಯಜುರ್ವೇದ
- ಕುಲದೈವ – ತಿರುಪತಿ ವೆಂಕಟರಮಣ
- ತಂದೆ – ಶ್ರೀ ವರದಪ್ಪ ನಾಯಕ
- ಮೂಲಸ್ಥಳ – ಪುರಂದರಘಡ
- ತಂದೆಯ ವೃತ್ತಿ- ರತ್ನಪುಡಿ ವ್ಯಾಪಾರ
- ಜನ್ಮನಾಮ – ಶ್ರೀನಿವಾಸ
- ಧರ್ಮಪತ್ನಿ – ಸರಸ್ವತಿಬಾಯಿ
- ಮಕ್ಕಳು – ನಾಲ್ಕು (ವರದಪ್ಪ, ಗುರುರಾಯ, ಅಭಿನವಪ್ಪ, ಮಧ್ವಪತಿ)
- ಇವರನ್ನು ಜನರು ಕರೆಯುತ್ತಿದುದು – ನವಕೋಟಿ ನಾರಾಯಣ
- ಇವರ ಪರಿವರ್ತನೆ – ಶ್ರೀಹರಿಯಿಂದ (ವೃದ್ಧ ಬ್ರಾಹ್ಮಣವೇಶದಿಂದ)
- ವೃದ್ಧ ಬ್ರಾಹ್ಮಣ ಯಾಚಿಸಿದ್ದು – ಮಗನ ಉಪನಯನಕ್ಕೆ ಸಹಾಯ
- ಬ್ರಾಹ್ಮಣ ಅಲೆದಾಡಿದ ಕಾಲ – ೬ ತಿಂಗಳ
- ಶ್ರೀನಿವಾಸ ನಾಯಕ ನೀಡಿದ್ದು – ಒಂದು ಸವಕಲು ನಾಣ್ಯ
- ಸರಸ್ವತೀಬಾಯಿಗೆ ಬ್ರಾಹ್ಮಣ ನೀಡಿದ್ದು – ಮೂಗುತಿ
- ವಿಷಪಾನ ಮಾಡಲು ಹೋದ ಸರಸ್ವತಿಬಾಯಿಗೆ ಮೂಗುತಿ ಸಿಕ್ಕಿದ್ದು – ವಿಷದ ಬಟ್ಟಲಿನಲ್ಲಿ
- ದಾಸವೃತ್ತಿಗೆ ಕಾರಣ – ಭಗವಂತನ ಲೀಲೆ, ವೈರಾಗ್ಯ – ಶ್ರೀಹರಿಯಲ್ಲಿ ಭಕ್ತಿ, ಸಂಸಾರದಲ್ಲಿ ವಿರಕ್ತಿ
- ಮುಂದಿನ ವೃತ್ತಿ – ಮಧುಕರವೃತ್ತಿ
- ದಾಸದೀಕ್ಷೆ ನೀಡಿದ್ದು – ಶ್ರೀ ವ್ಯಾಸರಾಯರು
- ಲಭ್ಯವಾದ ಅಂಕಿತ – ಪುರಂದರವಿಠಲ
- ಮಧುಕರವೃತ್ತಿಯ ಮತ್ತೊಂದು ಹೆಸರು – ಗೋಪಾಳ, ಯಾಯಾವಾರ
- ಪುರಂದರ ದಾಸರ ಮಕ್ಕಳ ಅಂಕಿತಗಳು – ವರದ ಪುರಂದರ ವಿಠಲ (ವರದಪ್ಪ), ಗುರುಪುರಂದರ (ಗುರುರಾಯ), ಅಭಿನವಪುರಂದರ (ಅಭಿನವಪ್ಪ), ಗುರುಮಧ್ವಪತಿವಿಠಲ (ಮಧ್ವಪತಿ).
- ಪುರಂದರದಾಸರ ಆರಾಧ್ಯ ದೈವ – ಪಾಂಡುರಂಗ
- ಅನುಸರಿಸಿದ ಸಿದ್ಧಾಂತ – ಮಧ್ವಸಿದ್ಧಾಂತ
- ವ್ಯಾಸರಾಜರು ದಾಸರ ಕೃತಿಗಳಿಗೆ ನೀಡಿದ ಗೌರವ – “ಪುರಂದರೋಪನಿಷತ್”
- ಸಂಗೀತ ಪ್ರಪಂಚದಲ್ಲಿ ಪುರಂದರ ದಾಸರ ಗೌರವ – ಕರ್ನಾಟಕ ಸಂಗೀತ ಪಿತಾಮಹ
- ದಾಸರೆಂದರೆ ಪುರಂದರದಾಸರಯ್ಯ ಎಂದವರು – ಶ್ರೀ ವ್ಯಾಸರಾಜರು
- ಸಮಕಾಲೀನರು – ಶ್ರೀ ವ್ಯಾಸರಾಜರು, ಶ್ರೀ ವಿಜಯೀಂದ್ರರು, ಶ್ರೀ ವಾದಿರಾಜರು, ಶ್ರೀ ಸುರೇಂದ್ರರು, ಶ್ರೀ ರಘುನಾಥರು, ಶ್ರೀ ರಘುವರ್ಯರು, ಶ್ರೀ ಕನಕದಾಸರು, ಶ್ರೀ ವೈಕುಂಟದಾಸರು, ಶ್ರೀಕೃಷ್ಣದೇವರಾಯ, ಅಣ್ಣಮಾಚಾರ್ಯ ಮುಂತಾದವರು.
- ಇಹಲೋಕ ತ್ಯಜಿಸಿದ ದಿನ – ರಕ್ತಾಕ್ಷಿ ಸಂವತ್ಸರ (೧೫೬೪), ಪುಷ್ಯಮಾಸ, ಅಮಾವಾಸ್ಯ, ಭಾನುವಾರ.
- ದಾಸರ ಮೂಲ – ನಾರದರು
- ದಾಸರು ಕೊನೆಯ ದಿನ ವಾಸಿಸಿದ ಸ್ಥಳ – ಹಂಪಿ
- ದಾಸರು ಸ್ವಪ್ನದಲ್ಲಿ ಅಂಕಿತ ನೀಡಿದ್ದು – ವಿಜಯದಾಸರಿಗೆ
- ದಾಸರ ಒಟ್ಟು ಕೃತಿಗಳು – ಅಂದಾಜು ೪೨೫೦೦೦
- ದಾಸರ ಸಾಹಿತ್ಯ ಪ್ರಕಾರಗಳು – ಸರಳೆವರಸೆ, ಕೀರ್ತನೆ, ಉಗಾಭೋಗ, ಸುಳಾದಿ, ಗದ್ಯ, ಇತ್ಯಾದಿ
- ಉಪಲಬ್ದ ಕೃತಿಗಳು – ಸುಮಾರು ೨೦೦೦
ವಹವ್ವಾರೆ ಮೆಣಸಿನಕಾಯಿ
ಒಣರೊಟ್ಟಿಗೆ ತಂದೆನೊ ತಾಯಿ | ಪ |
ಹುಟ್ಟುತಲಿ ಹಸಿರಾಗುತ ಕಂಡೆ
ನಟ್ಟನಡುವೆ ಕೆಂಪಾಗುತ ಕಂಡೆ
ಕಟ್ಟೆರಾಯನ ಬಹುರುಚಿಯೆಂಬೆ | ೧ |
ಒಂದೆರಡೆರದರೆ ಬಹುರುಚಿಯೆಂಬೆ
ಮೇಲೆರಡೆರೆದರೆ ಬಹು ಖಾರೆಂಬೆ ಅದೂ
ಎರಡೆರೆದರೆ ಅತಿ ಖಾರೆಂಬೆ | ೨ |
ಬಡವರಿಗೆಲ್ಲ ನಿನ್ನಾಧಾರ
ಅಡಿಗೆ ಊಟಕೆ ನಿನ್ನಾಸಾರ
ಬಾಯಲಿ ಕಡಿದರೆ ಬೆಂಕಿಯ ಖಾರ
ಪುರಂದರ ವಿಠಲನನೆನೆಯೋದುಭಾರ | ೩ |
ಶ್ರೀ ಪುರಂದರದಾಸರು (೧೪೮೦ – ೧೫೬೪)[೧] ಕರ್ನಾಟಕ ಸಂಗೀತ ಪದ್ಧತಿಯ ಪಿತಾಮಹ ಎಂದು ಹೆಸರಾದವರು. ದಾಸ ಪದ್ಧತಿಯ ಅನೇಕ ಪ್ರಮುಖರಲ್ಲಿ ಮುಖ್ಯವಾಗಿ ಪುರಂದರದಾಸ, ಶ್ರೀಪಾದರಾಯ, ಕನಕದಾಸ, ಜಗನ್ನಾಥದಾಸ, ವಿಜಯದಾಸ ಮತ್ತು ಕಮಲೇಶ ವಿಠ್ಠಲ ಮೊದಲಾದವರು ಸಂಗೀತದ ಮೂಲಕ ಭಕ್ತಿಮಾರ್ಗವನ್ನು ಬೋಧಿಸಿದವರು. ಪುರಂದರದಾಸರ ಎಲ್ಲ ಕೀರ್ತನೆಗಳು ಪುರಂದರ ವಿಠ್ಠಲನನ್ನು (ವಿಷ್ಣು) ನಮಿಸುತ್ತಾ ಕೊನೆಗೊಳ್ಳುತ್ತವೆ. ಸಾವಿರಾರು ಕೀರ್ತನೆಗಳನ್ನು ರಚಿಸಿದ ಪುರಂದರದಾಸರ ಸುಮಾರು ೧೦೦೦ ಕೀರ್ತನೆಗಳು ಇಂದಿಗೂ ಉಳಿದಿವೆ.
ದಾಸರ ಕಾಲ – 1480 – 1564
ಗೋತ್ರ – ವಸಿಷ್ಟ ಗೋತ್ರ
ವೇದ ಶಾಖ – ಯಜುರ್ವೇದ
ಕುಲದೈವ – ತಿರುಪತಿ ವೆಂಕಟರಮಣ
ತಂದೆ – ಶ್ರೀ ವರದಪ್ಪ ನಾಯಕ
ಮೂಲಸ್ಥಳ – ಪುರಂದರಘಡ
ತಂದೆಯ ವೃತ್ತಿ- ರತ್ನಪುಡಿ ವ್ಯಾಪಾರ
ಜನ್ಮನಾಮ – ಶ್ರೀನಿವಾಸ, ಶ್ರೀನಿವಾಸ ನಾಯಕ
ಧರ್ಮಪತ್ನಿ – ಸರಸ್ವತಿಬಾಯಿ
ಮಕ್ಕಳು – ನಾಲ್ಕು (ವರದಪ್ಪ, ಗುರುರಾಯ, ಅಭಿನವಪ್ಪ, ಮಧ್ವಪತಿ)
ಇವರನ್ನು ಜನರು ಕರೆಯುತ್ತಿದುದು – ನವಕೋಟಿ ನಾರಾಯಣ
ಇವರ ಪರಿವರ್ತನೆ – ಶ್ರೀಹರಿಯಿಂದ (ವೃದ್ಧ ಬ್ರಾಹ್ಮಣವೇಶದಿಂದ)
ವೃದ್ಧ ಬ್ರಾಹ್ಮಣ ಯಾಚಿಸಿದ್ದು – ಮಗನ ಉಪನಯನಕ್ಕೆ ಸಹಾಯ
ಬ್ರಾಹ್ಮಣ ಅಲೆದಾಡಿದ ಕಾಲ – ೬ ತಿಂಗಳ
ಶ್ರೀನಿವಾಸ ನಾಯಕ ನೀಡಿದ್ದು – ಒಂದು ಸವಕಲು ನಾಣ್ಯ
ಸರಸ್ವತೀಬಾಯಿಗೆ ಬ್ರಾಹ್ಮಣ ನೀಡಿದ್ದು – ಮೂಗುತಿ
ವಿಷಪಾನ ಮಾಡಲು ಹೋದ ಸರಸ್ವತಿಬಾಯಿಗೆ ಮೂಗುತಿ ಸಿಕ್ಕಿದ್ದು – ವಿಷದ ಬಟ್ಟಲಿನಲ್ಲಿ
ದಾಸವೃತ್ತಿಗೆ ಕಾರಣ – ಭಗವಂತನ ಲೀಲೆ, ವೈರಾಗ್ಯ – ಶ್ರೀಹರಿಯಲ್ಲಿ ಭಕ್ತಿ, ಸಂಸಾರದಲ್ಲಿ ವಿರಕ್ತಿ
ಮುಂದಿನ ವೃತ್ತಿ – ಮಧುಕರವೃತ್ತಿ
ಮಧುಕರವೃತ್ತಿಯ ಮತ್ತೊಂದು ಹೆಸರು – ಗೋಪಾಳ, ಯಾಯಾವಾರ
ದಾಸದೀಕ್ಷೆ ನೀಡಿದ್ದು – ಶ್ರೀ ವ್ಯಾಸರಾಯರು
ಲಭ್ಯವಾದ ಅಂಕಿತ – ಪುರಂದರವಿಠಲ
ಪುರಂದರದಾಸರ ಆರಾಧ್ಯ ದೈವ – ಪಾಂಡುರಂಗ
ಅನುಸರಿಸಿದ ಸಿದ್ಧಾಂತ – ಮಧ್ವಸಿದ್ಧಾಂತ
ಇಹಲೋಕ ತ್ಯಜಿಸಿದ ದಿನ – ರಕ್ತಾಕ್ಷಿ ಸಂವತ್ಸರ (೧೫೬೪), ಪುಷ್ಯಮಾಸ, ಅಮಾವಾಸ್ಯ, ಭಾನುವಾರ.
ದಾಸರ ಮೂಲ – ನಾರದರು
ದಾಸರು ಕೊನೆಯ ದಿನ ವಾಸಿಸಿದ ಸ್ಥಳ – ಹಂಪಿ
ದಾಸರು ಸ್ವಪ್ನದಲ್ಲಿ ಅಂಕಿತ ನೀಡಿದ್ದು – ವಿಜಯದಾಸರಿಗೆ
ದಾಸರ ಒಟ್ಟು ಕೃತಿಗಳು – ಅಂದಾಜು ೪೨೫೦೦೦
ದಾಸರ ಸಾಹಿತ್ಯ ಪ್ರಕಾರಗಳು – ಸರಳೆವರಸೆ, ಕೀರ್ತನೆ, ಉಗಾಭೋಗ, ಸುಳಾದಿ, ಗದ್ಯ, ಇತ್ಯಾದಿ
ಸಂಗೀತ ಪ್ರಪಂಚದಲ್ಲಿ ಪುರಂದರ ದಾಸರ ಗೌರವ – ಕರ್ನಾಟಕ ಸಂಗೀತ ಪಿತಾಮಹ
ದಾಸರೆಂದರೆ ಪುರಂದರದಾಸರಯ್ಯ ಎಂದವರು – ಶ್ರೀ ವ್ಯಾಸರಾಜರು
ಪುರಂದರ ದಾಸರ ಮಕ್ಕಳ ಅಂಕಿತಗಳು – ವರದ ಪುರಂದರ ವಿಠಲ (ವರದಪ್ಪ), ಗುರುಪುರಂದರ (ಗುರುರಾಯ), ಅಭಿನವಪುರಂದರ (ಅಭಿನವಪ್ಪ), ಗುರುಮಧ್ವಪತಿವಿಠಲ (ಮಧ್ವಪತಿ).
ಸಮಕಾಲೀನರು – ಶ್ರೀ ವ್ಯಾಸರಾಜರು, ಶ್ರೀ ವಿಜಯೀಂದ್ರರು, ಶ್ರೀ ವಾದಿರಾಜರು, ಶ್ರೀ ಸುರೇಂದ್ರರು, ಶ್ರೀ ರಘುನಾಥರು, ಶ್ರೀ ರಘುವರ್ಯರು, ಶ್ರೀ ಕನಕದಾಸರು, ಶ್ರೀ ವೈಕುಂಟದಾಸರು, ಶ್ರೀಕೃಷ್ಣದೇವರಾಯ, ಅಣ್ಣಮಾಚಾರ್ಯ ಮುಂತಾದವರು.
ಭಾರತದ ವೇದ ಸಾಹಿತ್ಯ ಕ್ಕೆ ಸಮಾನವಾದ ಮತ್ತೊಂದು ಸಾಹಿತ್ಯ ವೆಂದರೆ ಅದು ದಾಸಸಾಹಿತ್ಯ.ವಿಶಾಲವಾದ ಮನೋಜ್ಞವಾದ ಈ ದಾಸಸಾಹಿತ್ಯಾಕಾಶ ದಲ್ಲಿ ಮಿನುಗುತ್ತಿರುವ ನಕ್ಷತ್ರ ಪುರಂದರ ದಾಸರು
ಹರಿದಾಸ ರಲ್ಲಿ ಅಗ್ರಗಣ್ಯ ರಾಗಿರುವ ಪುರಂದರದಾಸರು ಕನ್ನಡ ನಾಡಿನಲ್ಲಿ ಪಂಡಿತರಿಂದ ಪಾಮರರವರೆಗೂ ಜನಪ್ರಿಯ ಹೆಸರು,ಇವರ ಕೀರ್ತನೆಗಳನ್ನು ಕೇಳದ ಕನ್ನಡಿಗನು ಇಲ್ಲವೇ ಇಲ್ಲ ಎಂದು ಹೇಳಬಹುದು.
ಅತ್ಯಂತ ಲೋಭಿಯೂ ಜಿಪುಣಾಗ್ರೇಸರಾಗಿದ್ದ ಶ್ರೀನಿವಾಸನಾಯಕರು ಧನಾರ್ಜನೆಯೇ ಸರ್ವಸ್ವ ಎಂದು ತಿಳಿದಿದ್ದರು,ಧರ್ಮ ಸ್ವಭಾವದವಳು ಸ್ಸನ್ನಡೆತೆಯ ಪತ್ನಿ ಮತ್ತು ಭಗವಂತ ನ ಪ್ರೇರಣೆಯಿಂದ ಎಲ್ಲವನ್ನೂ ತ್ಯಜಿಸಿ ಯೋಗಿಯಾಗಿ ದಾಸರಾದರು.
ಇವರು ಕರ್ನಾಟಕ ಸಂಗೀತ ಕ್ಷೇತ್ರ ಕ್ಕೆ ಕೊಟ್ಟಿರುವ ಕೊಡುಗೆ ಅಗಾಧ.ಸಂಗೀತ ವಿದ್ಯಾರ್ಥಿ ಗಳಿಗೆ ಪ್ರಾರಂಭಿಕ ಅಭ್ಯಾಸಗಳನ್ನೂ ಪಿಳ್ಳಾರಿ ಗೀತೆ ಗಳು ಉಗಾಭೋಗ ಗಳು ಸುಮಾರು 4 ಲಕ್ಷ 75000 ಕ್ಕೂ ಅಧಿಕ ಕೀರ್ತನೆ ಗಳನ್ನು ರಚಿಸಿ ಕರ್ನಾಟಕ ಸಂಗೀತ ಪಿತಾಮಹ ಎನಿಸಿದ್ದಾರೆ .
ದಾಸರು ಸಕಲರಿಗೂ ಅರ್ಥವಾಗುವ ಸರಳ ಭಾಷೆ ಯಲ್ಲಿ ಗೀತೆ ಗಳನ್ನೂ ರಚಿಸಿರುವುದೇ ಅಲ್ಲದೆ ಗೀತೆ ಗಳಲ್ಲಿ ಭಕ್ತಿ ಪರವಶತೆ, ದೈವದ ಮಹತ್ವ ಕೃಷ್ಣನ ಲೀಲೆಗಳು ಸ್ಥಳ ಮಹಿಮೆಗಳನ್ನು ಒಳಗೊಂಡಿದೆ .ಅಷ್ಟೇ ಅಲ್ಲ ಅವರ ಗೀತೆ ಗಳಲ್ಲಿ ಸಮಾಜದ ಅಂಕು ಡೊಂಕು ಗಳನ್ನು ತಿದ್ದುವ, ಡಾಂಭಿಕ ಆಚರಣೆಗಳನ್ನು ಧಿಕ್ಕರಿಸುವ ಸ್ವಾರ್ಥ ಲೋಭ ಗಳನ್ನು ಖಂಡಿಸುವಂತೆ ಸ್ವಾರಸ್ಯಕರವಾಗಿ ಹೊರಹೊಮ್ಮಿದೆ .
ಅವರ ಆರಾಧ್ಯ ದೈವ ಕೃಷ್ಣಾ ಶಾಂತ ಹಾಸ್ಯ ಶೃಂಗಾರ ಸಖ್ಯ ಮಧುರ ವಾತ್ಸಲ್ಯ ಭಾವ ವನ್ನು ತಾವು ಅನುಭವಿಸಿ ನಮಗೂ ಉಣಬಡಿಸಿ ಗಂಧರ್ವ ಲೋಕದಲ್ಲಿ ವಿಹರಿಸುವಂತೆ ಮಾಡಿದ್ದಾರೆ.
ಕಲಿಯುಗ ದಲ್ಲಿ ಭಕ್ತಿಯ ಪ್ರಾಧಾನ್ಯತೆಯನ್ನು ಪ್ರತಿಪಾದಿಸುತ್ತ,ವೇದಾಂತ ಸಾರವನ್ನು ತಿಳಿಸುತ್ತಾ,ಪ್ರತಿ ವ್ಯಕ್ತಿಗೂ ಅನುಭವಕ್ಕೆ ನಿಲುಕುವ ವಾಸ್ತವ ಸಂಗತಿಗಳನ್ನು ತಲುಪಿಸುತ್ತಾ,
ದಾಸರ ಗುರುಗಳಾದ ಶ್ರೀ ವ್ಯಾಸರಾಯರು ತಮ್ಮ ಶಿಷ್ಯ ನ ಬಗ್ಗೆ ದಾಸರೆಂದರೆ ಪುರಂದರ ದಾಸರಯ್ಯ ಎಂದು ಹಾಡಿ ಹೊಗಳಿದರೆ
ಪುರಂದರ ವಿಠ್ಠಲಾ ಎಂಬ ಅಂಕಿತ ದಿಂದ ಲೋಕ ಸಂಚರಿಸುತ್ತ ಅವರ ಬಾಯಲ್ಲಿ ಹೊರಹೊಮ್ಮಿದ ಗೀತೆ ಗಳೆಲ್ಲಾ ಅನರ್ಘ್ಯ ಮುತ್ತು ರತ್ನ ಗಳಾಗಿವೆ.
ದಾಸೋತ್ತಮರ ವಿಶೇಷ ಮಹಿಮೆಗಳ
*****
by- -following article is by ಅನಿರುದ್ಧ ಭಟ್ ಹಟ್ಟಿಕುದ್ರು
ಸುಳ್ಳು ನಮ್ಮಲ್ ಇಲ್ಲವಯ್ಯ, ಸುಳ್ಳೇ ನಮ್ಮನೆ ದೇವರು...
ನಮ್ಮ ಮೇಲೆ ದೇವರ ಉಪಕಾರವು ಅನಂತವಾದದ್ದು.ಎಷ್ಟು ಹೇಳಿದರೂ ತೀರಲಾಗದು.ದೇವರು ನಮಗಾಗಿ ಭಾಗವತ,
ಮಹಾಭಾರತ,ಬ್ರಹ್ಮಸೂತ್ರಗಳನ್ನು ತಾನೇ ಖುದ್ದಾಗಿ ರಚಿಸಿ ಕೊಟ್ಟನು.ಋಷಿ ಮುನಿಗಳೆಲ್ಲಾ ಅದನ್ನು ಸಾರಿದರು.ಮಹಾ ಮಹಾಜ್ಞಾನಿಗಳು ಅವುಗಳನ್ನು ಮೇಲಕ್ಕೆತ್ತಿ ತತ್ವೋಪದೇಶವನ್ನು ಮಾಡಿದರು.ಅಷ್ಟಕ್ಕೂ ಆ ತತ್ವಗಳು ನಮ್ಮ ಮತೀಯ ಅಂಗಳವನ್ನು ಕಾಣಲಿಲ್ಲ.ಮತ್ತೆ ದೇವರು ಆ ಭಾಗವತಾದಿಗಳ ಜೊತೆಗೆ ಅಬುದ್ಧಿಗಳಾದ ನಮ್ಮ ಅನುಕೂಲಕ್ಕಾಗಿ ಸರಳವಾದ(ಶಾಸ್ತ್ರದ ವಿಮರ್ಶೆಗಿಂತಲು ಸರಳವಾದ) ಹಾಗು ಸಾಹಿತ್ಯ ಭರಿತವಾದ ವಾಙ್ಮಯವನ್ನು ಹುಟ್ಟು ಹಾಕಲು ಆಲೋಚಿಸಿದ.ಆ ವಾಙ್ಮಯವನ್ನು ಹುಟ್ಟು ಹಾಕಲು ಹಾಗು ಅದರ ಮೂಲಕ ತತ್ವೋಪದೇಶದ ಕಾರ್ಯಕ್ಕಾಗಿ ಪುರಂದರ ದಾಸರೇ ಮೊದಲಾದ ಮಹಾಮಹಿಮರನ್ನು ಧರೆಗಿಳಿಸಿದನು.ಅವರಿಂದ ಹುಟ್ಟಿದ ಆ ವಾಙ್ಮಯವೇ ಇಂದು ದಾಸ ಸಾಹಿತ್ಯವೆಂಬ ಹೆಸರನ್ನು ಪಡೆದು ದೇಶದುದ್ದಕ್ಕೂ ಪಸರಿಸಿ ಜನರನ್ನು ದೇವರ ಬಳಿಯಲ್ಲಿ ಕೊಂಡೊಯ್ಯಲು ಕಾರಣವಾಗಿದೆ.ಇದು ದೇವರ ಅನಂತ ಉಪಕಾರದಲ್ಲಿ ಒಂದಾದ ಉಪಕಾರವಾಗಿದೆ.
"ನವಕೋಟಿ ನಾರಾಯಣ"
ಪುರಂದರದಾಸರು ತಮ್ಮ ಜೀವನದಲ್ಲಿ ಸಂಪತ್ತನ್ನು ತ್ಯಜಿಸುವದು ಹೇಗೆಂದು ತೋರಿಸಿ ಕೊಟ್ಟವರು.ಇಂದಿನ ಕಾಲಕ್ಕೆ ಕೋಟಿ ರೂಪಾಯಿ ಎಂದು ಹೇಳಿದ ಕೂಡಲೇ ಬಾಯಿತೆಗೆಯುವ ಅವಸ್ಥೆ ಇದೆ.ಆದರೆ ಅಂದೆ ಪುರಂದರ ದಾಸರು ಒಂಬತ್ತು ಕೊಟ್ಟಿಯ ವಾರಸುಗಾರರಾಗಿದ್ದರು.ನಾವಾಗಿದ್ದರೆ ಅದನ್ನು ತ್ಯಜಿಸುವ ಪ್ರಸಕ್ತಿಯೇ ಇಲ್ಲ.ವಿರಕ್ತರಾದ ಪುರಂದರದಾಸರು ಕಿಂಚಿತ್ತೂ ಸಂಪತ್ತನ್ನು ಲೆಕ್ಕಿಸದೆ... ಕೃಷ್ಣಾರ್ಪಣವೆಂದು ಹೇಳಿ ಸಾಧನೆಯ ಮಾರ್ಗಕ್ಕೆ ಕಾಲಿಟ್ಟರು.ಎಲ್ಲಿಯವರೆಗೆ ನಮ್ಮಲ್ಲಿ ಭಕ್ತಿ ಶ್ರದ್ಧೆಗಳಿರುತ್ತವೆಯೋ ಅಲ್ಲಿಯವರೆಗೆ ಧರ್ಮವು ನಮ್ಮನ್ನು ಬದಲಾಯಿಸುತ್ತದೆ... ಯಾವಾಗ ಅವೆರಡೂ ನಮ್ಮಿಂದ ದೂರಾಗುತ್ತವೆಯೋ ಅಂದಿನಿಂದ ನಾವು ಧರ್ಮವನ್ನು ಬದಲಾಯಿಸುತ್ತೇವೆ.ಇದೇ ವಸ್ತುಸ್ಥಿತಿ.ಪುರಂದರದಾಸರಲ್ಲಿ ಭಕ್ತಿ , ಶ್ರದ್ಧೆಗಳು ಅತಿಹೆಚ್ಚಾಗಿ ಇರೋಣದರಿಂದ ಧರ್ಮವು ಅವರನ್ನು ಎಲ್ಲವೂ ತ್ಯಜಿಸಿ ವೈರಾಗ್ಯವನ್ನು ಹೊಂದುವಂತೆ ಮಾಡಿತು.ಆ ವೈರಾಗ್ಯವು ಅವರಿಂದ ಭಗವಂತನ ವೈಭವೋಪೇತವಾದ ಗುಣಗಳ ವರ್ಣಿಸುವ ಹಲವಾರು ಕೃತಿಗಳು ಹೊರಬರಲು ಮುಖ್ಯವಾದ ಭೂಮಿಕೆಯನ್ನು ಹೊಂದಿತು.ಅಪಾರವಾದ ಸಂಪತ್ತಿನ ಅರಸುಗಳಾಗಿದ್ದರಿಂದ ಅವರಿಗೆನವಕೋಟಿ ನಾರಾಯಣಎಂದು ಅಂದು ಕರೆದರೆ... ನಾರಾಯಣನ ಕೋಟ್ಯಾಂತರ ಭಕ್ತರಿಗೆ
ನವೀನವಾದ ಭಕ್ತಿಯ ಮಾರ್ಗವನ್ನು ಹಾಕಿ ಕೊಟ್ಟಿದ್ದರಿಂದ ಇಂದಿಗೂ ಅವರುನವಕೋಟಿ ನಾರಾಯಣರೇ.
"ದಾಸರೆಂದರೆ ಪುರಂದರದಾಸರಯ್ಯ"
ಸಾಧಾರಣವಾಗಿ ಹಿರಿಯರಾದ ಜ್ಞಾನಿಗಳನ್ನು ಕಿರಿಯರು ಸ್ತುತಿಸುವ ಪದ್ದತಿಯು ನಡೆದು ಬಂದಿದೆ.ಆದರೆ ಪುರಂದರದಾಸರ ಮಹಿಮೆಯಲ್ಲಿ ಇದು ವ್ಯತಿರೇಕವಾಗಿದೆ.ಮಧ್ವ ಸಿದ್ಧಾಂತವೆಂಬ ಆಕಾಶದಲ್ಲಿ ಧ್ರುವತಾರೆಯಂತೆ ಇರುವ ವ್ಯಾಸರಾಜರು ಪುರಂದರದಾಸರ ಬಗ್ಗೆ ಹೇಳುವಾಗದಾಸರೆಂದರೆ ಪುರಂದರದಾಸರಯ್ಯ ಎಂದು ಮುಕ್ತ ಕಂಠದಿಂದ ಹೇಳುತ್ತಾರೆ.ಇದರ ಅರ್ಥ ಪುರಂದರದಾಸರು ವ್ಯಾಸರಾಜರಿಗಿಂತಲು ಉತ್ತಮರೆಂದು ಅರ್ಥವಲ್ಲ.ಕಿಂತು... ಅಂತಹ ವ್ಯಾಸರಾಜರಿಗೂ ಪುರಂದರದಾಸರ ಜ್ಞಾನ,ಭಕ್ತಿ , ವೈರಾಗ್ಯಗಳ ಪರಿಯು ಮನಮುಟ್ಟಿತ್ತು.ಅಂತೆಯೇ ವ್ಯಾಸರಾಜರಿಂದ ಆ ಮಾತು ಹೊರಹೊಮ್ಮಿತು.
ಗೆಳೆಯರೆ ಇಂದು ಆ ಮಹಾನುಭಾವರಾದ ಪುರಂದರದಾಸರ ಆರಾಧನೆ.ಹಾಗಾಗಿ ಎಂದೆಂದೂ ನಾವೆಲ್ಲರೂ ಭಕ್ತಿಯಿಂದ ದೇವರ ಗುಣಗಾನ ಮಾಡುವಂತಾಗಲೆಂದು ಕರುಣಿಸಬೇಕೆಂದು ಪರಿಪರಿಯಾಗಿ ಆ ಮಹಾಗುರುಗಳಾದ ಪುರಂದರದಾಸರಲ್ಲಿ ಕೇಳಿಕೊಳ್ಳೋಣ.
***************
ದಾಸ ದಾಸೋಹಂ
----------------------------
ದೇವಾಲಯಕ್ಕೆ ಹೋಗಿ, ದೇವರನ್ನು ಭಕ್ತಿಯಿಂದ ನೋಡಿ, ಅವನಿಗೆ ನಮ್ಮ ಕೋರಿಕೆಗಳನ್ನು ಕೇಳಿ, ಪಡೆದ ಉಪಕಾರಕ್ಕೆ ಧನ್ಯವಾದಗಳನ್ನು ಸಲ್ಲಿಸಿ, ಕೃತಾರ್ಥರಾದಂತೆ ಮರಳಿ ಬರುವವರು ಬಹುಪಾಲು ನಾವು. ನಮಗೆ ದೇವರು ಅಲ್ಲೇ ಇರಬೇಕು. ನಮ್ಮೊಡನೆ, ನಮ್ಮೊಡಲಿಗೆ ಬಾ ಎಂದು ಯಾವತ್ತೂ ಕರೆಯುವುದಿಲ್ಲ ನಾವು. ತಿರುಪತಿಯಲ್ಲಿ ಶ್ರೀ ಪುರಂದರದಾಸರಾಯರು ಹೊರಗೆ ಕಂಡ ವೆಂಕಟೇಶನನ್ನು ತಮ್ಮ ಒಳಗೆ ಕರೆಯುವ ಸುಂದರ ದಾಸರ ಪದ ಇದು.
ಬಾರಯ್ಯ ವೆಂಕಟರಮಣ ನೀನೆನಗೆ
ಧಾರುಣಿಯೊಳು ನಿನ್ನ ಮೂರುತಿ ತೋರುತ||
ಮನದಲ್ಲಿ ಮಂಟಪ ನಿರ್ಮಿಸಿ, ತಮ್ಮ ಸರ್ವಸ್ವವನ್ನು ಅವನಿಗೆ ಅರ್ಪಿಸಿ ಕರೆಯುತ್ತಾರೆ. ಅಹಂ, ತರ್ಕ ಇವುಗಳ ನೆಲೆಯಾದ ಶಿರವನ್ನು ಅವನ ಪಾದಗಳಲ್ಲಿ ಅರ್ಪಿಸುತ್ತಾರೆ.
ಮನವೆಂಬ ಮಂಟಪ ನಿನಗೆ ಹಾಕಿ ಎನ್ನ
ತನುವನೊಪ್ಪಿಸಿ ಕೈಯ ಮುಗಿವೆನಯ್ಯ
ವನಜಜಭವಸುರ ಮುನಿಗಳು ಭಜಿಸುವ
ಘನಮಹಿಮನೆ ಪಾದಕೆರಗಲೆನ್ನ ಶಿರ
ಕುಂಡಲಿನಿಯ ಶೇಷ ಸಹಸ್ರಾರದಲ್ಲಿ ಹೆಡೆ ಬಿಚ್ಚಿ ನಿಂತಾಗ ಭಗವಂತನ ಸಾಕ್ಷಾತ್ಕಾರ ಸಾಧ್ಯ. ಅದಕೆಂದೇ ಭುಜಂಗಶಯನನ್ನು ಅವನ ದರ್ಶನದ ಉತ್ಸವವನ್ನು ಒಳಗಣ್ಣಿಗೆ ನೀಡೆಂದು ಪ್ರಾರ್ಥಿಸುತ್ತಾರೆ.
ಲಿಂಗದೇಹವೆಂಬ ಪವಳಿ ಶೃಂಗರಿಸಿ
ಅಂಗವ ನಿನಗೆ ಕಾಣಿಕೆಯ ನೀಡುವೆ ||
ಮಂಗಳಮೂರುತಿ ಅಂಗನೆ ಸಹಿತ- ಭು
ಜಂಗಶಯನ ಎನ್ನ ಕಂಗಳುತ್ಸವವೀಯೊ
ಸಕಲ ದಿವ್ಯಾಲಂಕಾರ ಭೂಷಿತನಾದ (ಸಕಲ ಗುಣಪೂರ್ಣ) ಹರಿಯನ್ನು ತಮ್ಮ ಹೃದಯದಲ್ಲಿ ಸ್ಥಾಪಿಸಲು ಬಯಸುತ್ತಾರೆ.
ಕಡಗ ಕಿರುಗೆಜ್ಜೆ ಪೆಂಡೆಗಳಿಂದಲೊಪ್ಪುವ
ಉಡುಗೆ ಪೀತಾಂಬರತರಳಕೌಸ್ತುಭ||
ಪಿಡಿದ ಶಂಖ ಚಕ್ರ ಕರ್ಣಕುಂಡಲದಿಂದ
ಕಡಲಶಯನ ಎನ್ನ ಹೃದಯದೊಳಗೆ ನಿಲ್ಲೊ
ಗರುಡ ಗಮನನಾಗಿ ಬೇಗ ಬಂದು ನನಗೆ ಸದಾ ಅಹಂಕಾರವಿಲ್ಲದ ದಾಸ ಭಾವ ನೀಡು ಎಂದು ಬೇಡುತ್ತಾರೆ.
ಒಡೆಯ ನೀನೆನಗೆ ಅನಾದಿ ಕಾಲದಿಂದ
ಬಡವನು ನಾನಿನ್ನ ದಾಸನಯ್ಯ ||
ಕಡುಕರುಣದಿಂದ ದಾಸತ್ವ ನೀಡು ಗ-
ರುಡಗಮನನೆ ವೆಂಕಟೇಶ ಎನ್ನ ಮನಕೆ
ಈ ದೇಹರಥದಲ್ಲಿ ಬರಿ ಪರಮಾತ್ಮನೊಬ್ಬನೇ ಅಲ್ಲ, ಇಡೀ ಅಭಿಮಾನಿ ದೇವತೆಗಳ ಕುಟುಂಬವೇ ಇದೆ, ಅವರಲ್ಲಿನ ಅವನ ವಿಭೂತಿ ರೂಪ ನೆನೆದು ಕರೆಯುತ್ತಾರೆ.
ಬರಿಮನೆಯಲ್ಲವು ಪರಿವಾರವು ಉಂಟು
ಪರಮಪುರುಷ ನಿನ್ನ ರೂಪಗಳುಂಟು ||
ಸಿರಿದೇವಿ ಸಹಿತದಿಪುರಂದರವಿಠಲನೆ ಕರುಣದಿಂದಲಿ ಮನ್ಮಂದಿರದೊಳಗೆ
ಸದಾ ಕಾಲ ಸರ್ವತ್ರ ಅವನನ್ನು ಕಾಣಲಾಗದಿದ್ದರೂ, ನಮ್ಮ ಹೃದಯಮಂಟಪಕ್ಕೆ ಅವನ ಕರೆದು ಮಾನಸ ಪೂಜೆಯಂತಿರುವ ಧ್ಯಾನದ ಪ್ರಾಮುಖ್ಯತೆ ಸಾರಿದ ದಾಸರಾಯರ ನೆನೆದು ಪಾವನವಾಗೋಣ.
🙏🏼 ಶ್ರೀ ಪುರಂದರವಿಠ್ಠಲ ಪ್ರೀತೋಸ್ತು
****************
ದಾಸರ ಪದಗಳಲ್ಲಿ ಭಕ್ಷ್ಯಭೋಜ್ಯಗಳು !
ದಾಸರೆಂದರೆ ಪುರಂದರ ದಾಸರಯ್ಯಾ....
ಕೃಷ್ಣನ ಗುಣಗಾನದ ನೆಪದಲ್ಲಿ ದಾಸರು ಬೆಣ್ಣೆ, ಹಾಲು, ತುಪ್ಪ, ಮೊಸರು ಮೊದಲಾದ ಹೈನು ಪದಾರ್ಥಗಳನ್ನು ತಮ್ಮ ಪದಗಳಲ್ಲಿ ಯಥೇಷ್ಟ ಬಳಸಿದ್ದಾರೆ. ಎಷ್ಟೆಂದರೆ ಪರಮಾತ್ಮನು ಒಂದು ವೇಳೆ cholesterol conscious ಅಗಿದ್ದಿದ್ದರೆ ದಾಸರಿಗೆ ಸಾಕು ನಿಲ್ಲಿಸು, ನಾನು ಡಯಟ್‌ನಲ್ಲಿದ್ದೇನೆ ಎಂದು ಕನಸಲ್ಲಾದರೂ ಬಂದು ಎಚ್ಚರಿಸುತ್ತಿದ್ದುದು ಗ್ಯಾರಂಟಿ. ಹಾಗೆ ಮಾಡಲಿಲ್ಲ ನಮ್ಮ ಪುಣ್ಯ. ಪುರಂದರದಾಸರು ಮತ್ತೂ ಮತ್ತೂ ಬೆಣ್ಣೆ ಹಚ್ಚಿದರು, ತುಪ್ಪ ಸುರಿದರು. ರುಚಿರುಚಿ ಯಾದ ಕೀರ್ತನೆಗಳನ್ನು ರಚಿಸಿದರು. ಅವೆಲ್ಲ ಈ ಲೇಖನಕ್ಕೆ ಕಚ್ಚಾ ಸಾಮಗ್ರಿಯಾದುವು.
ಪಾಯಸದೊಂದಿಗೆ ನಾವು ಸಾಂಪ್ರದಾಯಿಕ ಊಟ ಶುರುಮಾಡಿದಂತೆ ಮೊದಲು ಪಾಯಸದ ವಿಷಯ ನೋಡೋಣ. ಮಾಡು ಸಿಕ್ಕದಲ್ಲಾ ಮಾಡಿನ ಗೂಡು ಸಿಕ್ಕದಲ್ಲಾ... ಹಾಡಿನಲ್ಲಿ ಪುರಂದರದಾಸರು, ‘ಮುಪ್ಪು ಬಂದಿತಲ್ಲಾ ಪಾಯಸ ತಪ್ಪದೆ ಉಣಲಿಲ್ಲ... ತುಪ್ಪದ ಬಿಂದಿಗೆ ತಿಪ್ಪೆ ಮೇಲೆ ಧೊಪ್ಪನೆ ಬಿತ್ತಲ್ಲ...! ’ ಎಂದಿದ್ದಾರೆ. ಅದಕ್ಕಿಂತಲೂ ‘ರಾಮನಾಮ ಪಾಯಸಕ್ಕೆ ಕೃಷ್ಣನಾಮ ಸಕ್ಕರೆ ವಿಠಲನಾಮ ತುಪ್ಪವ ಬೆರೆಸಿ ಬಾಯ ಚಪ್ಪರಿಸಿರೋ...’ ಹಾಡನ್ನೇ ತೆಗೆದುಕೊಳ್ಳಿ. ಅದರ ಚರಣಗಳಲ್ಲಿ ಪಾಯಸ ತಯಾರಿಯ ವರ್ಣನೆ ಎಷ್ಟು ಸೊಗಸಾಗಿದೆ! ಒಮ್ಮನ ಗೋಧಿಯ ತಂದು ವೈರಾಗ್ಯ ಕಲ್ಲಲಿ ಬೀಸಿ... ಸುಮ್ಮನೆ ಸಜ್ಜಿಗೆ ತೆಗೆದು ಕಮ್ಮನೆ ಶಾವಿಗೆ ಹೊಸೆದು... ಹೃದಯವೆಂಬೊ ಮಡಿಕೆಯಲ್ಲಿ ಭಾವ ಎಂಬ ಹೆಸರನ್ನಿಟ್ಟು... ಬುದ್ಧಿಯಿಂದ ಪಾಕ ಮಾಡಿ ಹರಿವಾಣಕೆ ಬಡಿಸಿಕೊಂಡು... ತಿನ್ನಬೇಕಂತೆ ಪಾಯಸವನ್ನು.
ಮುಖ್ಯವಾದುದು ಅತಿರಸ ಮತ್ತು ಅಪ್ಪ. ‘ತಿರುಪತಿ ವೆಂಕಟರಮಣ ನಿನಗೇತಕೆ ಬಾರದು ಕರುಣ...’ ಕೃತಿಯಲ್ಲಿ ವರ್ಣಿಸಿದಂತೆ ಅಪ್ಪ-ಅತಿರಸಗಳನ್ನು ಮೆದ್ದ ಸ್ವಾಮಿ ಅಸುರರನ್ನು ಕಾಲಲ್ಲೇ ಒದ್ದನಂತೆ! ‘ಓಡಿ ಬಾರೈ ವೈಕುಂಠಪತಿ ನಿನ್ನ ನೋಡುವೆ ಮನದಣಿ ನಾ...’ ಹಾಡಿನಲ್ಲೂ ದಾಸರು ವೈಕುಂಠಪತಿಗೆ ಎಣ್ಣೋರಿಗತಿರಸ ದಧಿ ಘೃತವೋ ರಂಗ ಎನ್ನಯ್ಯ ನಿನಗೆ ಕೊಡುವೆ ಬಾರೊ... ಎನ್ನುತ್ತಾರೆ. ಅತಿರಸ ಎಂದರೆ ಅಕ್ಕಿಹಿಟ್ಟಿಗೆ ಬೆಲ್ಲದಪಾಕ ಸೇರಿಸಿ ಬಾಳೆ ಎಲೆ ಅಥವಾ ಪ್ಲಾಸ್ಟಿಕ್ ಮೇಲೆ ಕೈಯಿಂದ ತಟ್ಟಿ ಅದನ್ನು ತುಪ್ಪದಲ್ಲಿ ಕರಿದು ಮಾಡುವ ಒಂದು ಕಜ್ಜಾಯ. ಅಪ್ಪ ಅಂದರೆ ಗೊತ್ತಲ್ಲ , ಏಳು ತೂತು (groove)ಗಳುಳ್ಳ ಕಾವಲಿಯಲ್ಲಿ ದೋಸೆಹಿಟ್ಟಿನದಂಥದನ್ನು ಹಾಕಿ ಮಾಡುವ ರುಚಿರುಚಿ ತಿಂಡಿ.
ಅಪ್ಪ-ಅತಿರಸದಂತೆ ಹೋಳಿಗೆ ಕೂಡ ಗೊತ್ತು ದಾಸರಿಗೆ. ಹೋಳಿಗೆ ಮಾಡುವಾಗಿನ ಕಣಕವನ್ನಲ್ಲವೇ ಅವರು ‘ಕಣಕ ಕುಟ್ಟೋವಲ್ಲಿಗೆ ಹೋಗಿ ಇಣುಕಿ ಇಣುಕಿ ನೋಡಿದಿರಿ....’ (ಡೊಂಕುಬಾಲದ ನಾಯಕರೆ ನೀವೇನಾಟವ ಆಡಿದಿರಿ... ಪದ್ಯದಲ್ಲಿ) ಉಲ್ಲೇಖಿಸಿದ್ದು ? ಆ ಹಾಡು ನಿಜವಾಗಿಯೂ ನಾಯಿಗಳನ್ನುದ್ದೇಶಿಸಿ ಬರೆದದ್ದೋ ಎಂದೇ ಅನುಮಾನ ಬರುತ್ತದೆ. ಅದರಲ್ಲೇ, ಹುಗ್ಗಿ ಮಾಡೊವಲ್ಲಿಗೆ ಹೋಗಿ ಸೌಟಿಂದ ಬಡಿಸಿಕೊಂಡು (ಅಂದ್ರೆ ಬಡಿತ ತಿಂದು) ಬಂದಿರಿ ಎಂದು ನಾಯಿಗಳ ಬಗ್ಗೆ ಮರುಕಪಡುತ್ತಾರೆ ದಾಸರು. ‘ಬಡಿಸಿಕೊಂಡು’ ಎನ್ನುವಲ್ಲಿನ wordplay ಗಮನಿಸಿ.
ಮಾನವ ಕಂಡ ಆಧುನಿಕತೆಯಲ್ಲಿ ಮೊದಲು ಬೆಲ್ಲ ಆಮೇಲೆ ಸಕ್ಕರೆ ತಯಾರಿ/ಬಳಕೆ ಬಂದದ್ದಿರಬಹುದು ಎಂದು ನಾವೆಣಿಸುತ್ತೇವೆ. ಆದರೆ ಪುರಂದರದಾಸರು ಬೆಲ್ಲಕ್ಕಿಂತ ಸಕ್ಕರೆಯನ್ನೇ ಜಾಸ್ತಿ ಉಪಯೋಗಿಸೋದು. ಭಾಗ್ಯದ ಲಕ್ಷ್ಮಿಯ ಶುಕ್ರವಾರದ ಪೂಜೆಯ ವೇಳೆಗೆ ಸಕ್ಕರೆ-ತುಪ್ಪದ ಕಾಲುವೆಯನ್ನೇ ಹರಿಸುತ್ತಾರವರು. ಆ ಕಾಲುವೆ ಹೇಗಿರಬಹುದು? ತುಂಗಭದ್ರಾ ಎಡದಂಡೆ ಕಾಲುವೆ ಅಥವಾ ಮೇಲ್ದಂಡೆ ಕಾಲುವೆಯಂತಿರಬಹುದೇ? just for imagination! ಇನ್ನೊಂದು ಮಾತು. ಕಾಲುವೆಗಳಲ್ಲಿ ತುಪ್ಪವನ್ನು ಹರಿಸಿದ ದಾಸರಿಗೆ ಆವಾಗಲೇ ಗೊತ್ತಿತ್ತೋ ಏನೊ ಮುಂದೆ ಏಡುಕೊಂಡಲವಾಡ ವೆಂಕಟರಮಣನ (ತಿರುಪತಿ) ಲಡ್ಡುಪ್ರಸಾದ ತಯಾರಿಗೆ ನಮ್ಮ ಕರ್ನಾಟಕದಿಂದಲೇ ನಂದಿನಿ ತುಪ್ಪ ಸರಬರಾಜು ಆಗುತ್ತದೆಯೆಂಬುದು. ತುಪ್ಪ-ಸಕ್ಕರೆಗಳಂತೆಯೇ ಕಲ್ಲುಸಕ್ಕರೆಯನ್ನೂ ಧಾರಾಳ ಪ್ರಮೋಟ್ ಮಾಡಿದ್ದಾರೆ ದಾಸರು. ‘ಕಲ್ಲುಸಕ್ಕರೆ ಕೊಳ್ಳಿರೊ...’ ಹಾಡಿನಲ್ಲಿ ಪುಲ್ಲಲೋಚನ ಶ್ರೀಕೃಷ್ಣ ನಾಮವೇ ಕಲ್ಲುಸಕ್ಕರೆಯಿದ್ದಂತೆ ಎಂದಿದ್ದಾರೆ.
ಸಿಹಿಯನ್ನಷ್ಟೇ ತಿನಿಸಿದ್ದೇ ಪುರಂದರದಾಸರು? ಖಂಡಿತವಾಗಿಯೂ ಅಲ್ಲ ! ‘ನೈವೇದ್ಯವ ಕೊಳ್ಳೊ ನಾರಾಯಣಸ್ವಾಮಿ ದಿವ್ಯ ಷಡುರಸಾನ್ನವಿಟ್ಟನೊ...’ ಎಂಬ ಹಾಡಿನಲ್ಲಿ ಅವರು ಫುಲ್ ಮೆನು ಡಿಸ್ಪ್ಲೇ ಮಾಡಿದ್ದಾರೆ. ಮೇಲಾಗಿ ಈ ರಸಪಾಕವನ್ನು ಸ್ವತಃ ಭೂದೇವಿ-ರಮಾದೇವಿಯರೇ ಸ್ವಹಸ್ತದಿಂದ ಮಾಡಿದ್ದೆಂದೂ ವರ್ಣಿಸಿದ್ದಾರೆ.
ಅರವತ್ತು ಶಾಕ ಲವಣ ಶಾಕ ಮೊದಲಾದ । ಸರಸ ಮೊಸರು ಬುತ್ತಿ ಚಿತ್ರಾನ್ನವೋ
ಪರಮ ಮಂಗಳ ಅಪ್ಪವು ಅತಿರಸ । ಹರುಷದಿಂದಲಿಯಿಟ್ಟ ಹೊಸ ತುಪ್ಪವೋ
ಹಿಡೆಯಂಬೊಡೆ ದಧಿವಡೆಯು ತಿಂಥಿಣಿ । ಒಡೆಯ ಎಡಗೆ ಒಡನೆ ಬಡಿಸಿದ
ದೃಢವಾದ ಪದಾರ್ಥಗಳನೆಲ್ಲ ಇಡಿಸಿದೆ । ಒಡೆಯ ಶ್ರೀ ಪುರಂದರ ವಿಠಲನೆ ಉಣ್ಣೊ
ಅಂದರೆ ಚಿತ್ರಾನ್ನ, ಬುತ್ತಿಯನ್ನ, ಮೊಸರನ್ನ, ಆಂಬೊಡೆ, ದಹಿವಡಾ (ತೈರ್‌ವಡೆ) ಇತ್ಯಾದಿ ಕುಕ್ಕಿಸಿದ್ದಾರೆ ಪುರಂದರದಾಸರು. ಇನ್ನೂ ಒಂದು ಸ್ವಾರಸ್ಯಕರ ಸಂಗತಿಯೆಂದರೆ, ಭಾರತದಲ್ಲಿ ಪ್ರಪ್ರಥಮವಾಗಿ ಅಡಿಗೆಯಲ್ಲಿ ಮೆಣಸಿನ ಉಪಯೋಗ ಉಲ್ಲೇಖವಾಗಿರುವು
ವಹವ್ವಾರೆ ಮೆಣಸಿನಕಾಯಿ
ಒಣರೊಟ್ಟಿಗೆ ತಂದೆನೊ ತಾಯಿ ||ಪ||
ಹುಟ್ಟುತಲಿ ಹಸಿರಾಗುತ ಕಂಡೆ
ನಟ್ಟನಡುವೆ ಕೆಂಪಾಗುತ ಕಂಡೆ
ಕಟ್ಟೆರಾಯನ ಬಹುರುಚಿಯೆಂಬೆ ||೧||
ಒಂದೆರಡೆರದರೆ ಬಹುರುಚಿಯೆಂಬೆ
ಮೇಲೆರಡೆರೆದರೆ ಬಹು ಖಾರೆಂಬೆ ಅದೂ
ಎರಡರೆದರೆ ಅತಿ ಖಾರೆಂಬೆ ||೨||
ಬಡವರಿಗೆಲ್ಲ ನಿನ್ನಾಧಾರ
ಅಡಿಗೆ ಊಟಕೆ ನಿನ್ನಾಸಾರ
ಬಾಯಲಿ ಕಡಿದರೆ ಬೆಂಕಿಯ ಖಾರ
ಪುರಂದರ ವಿಠಲನ ನೆನೆಯೋದು ಭಾರ ||೩||
ಭಗವಂತನಿಗೆ ಅರ್ಪಣೆಗೋಸ್ಕರ ಮಾತ್ರವಲ್ಲದೆ ಭಕ್ತಾದಿಗಳ ಬದುಕಿಗೆ ಬೆಳಕಾಗುವಂತೆ ಬರೆದ ಹಿತನುಡಿಯ ಪದಗಳಲ್ಲೂ ದಾಸರು ತಿಂಡಿತಿನಿಸನ್ನು ಉಲ್ಲೇಖಿಸಿದ್ದಾರೆ. ಅಂಥವುಗಳ ಪೈಕಿ ಒಂದೆರಡನ್ನು ಅವಲೋಕಿಸೋಣ.
ಜಿಪುಣಬುದ್ಧಿಯವರನ್ನು ಮೂದಲಿಸುತ್ತ ದಾಸರು ‘ಹುಗ್ಗಿಯ ತುಪ್ಪವು ಮನೆಯಾಳಗಿರಲಿಕ್ಕೆ ಗುಗ್ಗುರಿಯನ್ನವ ತಿಂದ್ಯಲ್ಲ ಪ್ರಾಣಿ... ಹತ್ತು ಸಾವಿರ ಹೊನ್ನು ತಿಪ್ಪೇಲಿ ಹೂಳಿಟ್ಟು ಮತ್ತೆ ಉಪ್ಪಿಲ್ಲದೆ ಉಂಡ್ಯಲ್ಲೊ ಪ್ರಾಣಿ...’ ಎಂದಿದ್ದಾರೆ - ‘ಹರಿ ಕೊಟ್ಟ ಕಾಲಕ್ಕೆ ಉಣಲಿಲ್ಲ ಹರಿ ಕೊಡದ ಕಾಲಕ್ಕೆ ಬಾಯಿ ಬಿಡುವಲ್ಲೊ ಪ್ರಾಣಿ...’ ಎಂಬ ಕೃತಿಯಲ್ಲಿ. ಇಂಥ ಜಿಪುಣರು ನಮ್ಮ-ನಿಮ್ಮ ದೈನಂದಿನ ವ್ಯವಹಾರಗಳಲ್ಲೂ ಬೇಕಾದಷ್ಟು ಮಂದಿ ಸಿಗುತ್ತಾರಲ್ಲವೆ? ಇದ್ದಾಗ ಅದನ್ನು ಅನುಭವಿಸಿ ಆನಂದಿಸದೆ ಅದಿಲ್ಲ ಇದಿಲ್ಲ ಎಂದು ಪರಿತಪಿಸುವ ಅಳುಮುಂಜಿಗಳಿಗೇನು ಕೊರತೆಯಿದೆಯೇ? ಇರುವುದನು ಬಿಟ್ಟು ಇಲ್ಲದುದರ ಕಡೆ ತುಡಿತ.... ಅಡಿಗರು ಅಡಿಗೆ ಮಾಡಿ ನಮಗೆ ಬಡಿಸಿದ್ದೂ ಅದೇ ತತ್ವವನ್ನಲ್ಲವೇ?
ಸರ್ವಜನ ಸುಖಿನೋಭವಂತು ಕೃಷ್ಣಾರ್ಪಣಮಸ್ತು
**************
ಶ್ರೀ ಪುರಂದರ ದಾಸರ ಒಂದು ಅರ್ಥ ಪೂರ್ಣ ಸುಂದರ ಕೃತಿ.
ವಿಜಯನಗರದ ಅರಸರಾದ ಶ್ರೀ ಕೃಷ್ಣದೇವರಾಯ ರಿಗೆ
ಹೇಳಿದ ಉಪದೇಶ.
ಪುರಂದರ ದಾಸರ ಕಾಲದಲ್ಲಿ ಶ್ರೀ ಕೃಷ್ಣ ದೇವರಾಯ ನು
ವಿಜಯನಗರದ ಸಾರ್ವಭೌಮ ನಾಗಿ ಆಸ್ಥಾನದಲ್ಲಿ ಅನೇಕ ವಿದ್ವಾಂಸರ ಆಶ್ರಯ ದಾತನಾಗಿದ್ದು ಸಂಗೀತ, ಸಾಹಿತ್ಯ ಗಳಿಗೆ ಪ್ರೋತ್ಸಾಹ ನೀಡುತ್ತಿದ್ದನು.
ನವಕೋಟಿ ನಾರಾಯಣ ನೆಂದು ಹೆಸರು ಪಡೆದ ಶ್ರೀನಿವಾಸ ನಾಯಕ ರು ತಮ್ಮ ಸರ್ವಸ್ವವನ್ನೂ ತ್ಯಾಗ ಮಾಡಿ ಪುರಂದರ ದಾಸರು ಎಂಬ ಹೆಸರಿನಲ್ಲಿ
ಹರಿದಾಸ ರಾಗಿದ್ದು ಮಹಾರಾಜನಿಗೆ ತಿಳಿದು ಆಶ್ಚರ್ಯಕರ ವಾಯಿತು.
ಅವರ ಮಹಿಮೆ ಯನ್ನು,,ಅವರ ವೈಭವವನ್ನು ನೋಡಬೇಕೆಂಬ ಆಸೆ ಯಿಂದ ಶ್ರೀ ವ್ಯಾಸರಾಯರ ಮಠಕ್ಕೆ ಬಂದನು
ಅದೇ ಸಮಯದಲ್ಲಿ ವ್ಯಾಸರಾಯರು, ಕನಕದಾಸರು, ಪುರಂದರ ದಾಸರು ಭಜನೆಯಲ್ಲಿ ಮಗ್ನರಾಗಿದ್ದರು.
ಮಹಾರಾಜನು ಅಲ್ಲಿಗೆ ಬಂದಿದ್ದನ್ನು ನೋಡಿ ಜನರು ದೂರ ದೂರ ಕ್ಕೆ ಸರಿಯುವುದನ್ನು ನೋಡಿ ರಾಜನು
ಗದ್ದಲೆ ಮಾಡಬೇಡಿ ಎಂದು ಸಂಜ್ಞೆಯಿಂದ ತಿಳಿಸಿ ಸ್ವಾಮಿ ಗಳಿಗೆ ನಮಸ್ಕರಿಸಿ ಅಲ್ಲಿಯೇ ಕುಳಿತು ಕೊಂಡನು.
ಭಜನೆಯಲ್ಲಿ ಮಗ್ನರಾಗಿದ್ದ ದಾಸರು ಗಳು ಭಾವಸಮಾಧಿ ಯಿಂದ ಹೊರಗೆ ಬಂದು ಮಹಾರಾಜನನ್ನು ಕಂಡು ಇದೇನು ಇತ್ತ ಬಂದಿರುವುದು ಎಂದು ಕೇಳಿದಾಗ ಸುಕೃತ ದಿಂದಲೇ ತಮ್ಮ ದರ್ಶನ ವಾಯಿತು.ಎಂದು ಹೇಳಿದಾಗ ವ್ಯಾಸ ರಾಯರು
"ನೋಡಿದಿರಾ ನಮ್ಮ ದಾಸರನ್ನು"
ಎಂದು ಕೇಳಿದರು.
ಹೀಗೆ ಸಮಯೋಚಿತ ವಾದ ಸಂಭಾಷಣೆ ಗಳನ್ನು ಮಾಡಿ ಶ್ರೀ ಪುರಂದರ ದಾಸರ ನ್ನು ತಮ್ಮ ಅರಮನೆಗೆ ಕರೆದುಕೊಂಡು ಅವರ ಅನುಭವ ಗಳನ್ನು ಕೇಳಿ ಆನಂದಿಸಿದನು.
ಆಗ ದಾಸರು ಮಹಾರಾಜನೊಡನೆ ವಿನೋದದಿಂದ
ಇದು ನಮ್ಮ ಭಾಗ್ಯವೊ ನಿಮ್ಮ ಭಾಗ್ಯವೋ ಎಂದು ಕೇಳಿದರು.
ನಿಮ್ಮ ಭಾಗ್ಯ ದೊಡ್ಡದೋ ನಮ್ಮ ಭಾಗ್ಯ ದೊಡ್ಡದೋ//
ಸುಮ್ಮನೆ ಇಬ್ಬರು ಕೂಡಿ ಸಾಟಿ ಮಾಡಿ ನೋಡುವ//
ಸರಕು ತುಪ್ಪ ದವಸ ಧಾನ್ಯ/ ಸವೆದೀತೆಂಬ ಚಿಂತೆ ಯುಂಟು/
ಹರಿ ನಾಮಾಮೃತಕೆ ಇನ್ನು ಯಾವ ಚಿಂತೆ ಯಿಲ್ಲವಯ್ಯಾ/೧//
ವ್ಯಾಪಾರ ಉದ್ಯೋಗ ಗಳಿಗಿನ್ನು/ಅಪಾರ ಅಂಜಿಕೆ ಯುಂಟು/
ಗೋಪಾಳ ಬೇಡುವುದಕ್ಕೆ ಆರ ಅಂಜಿಕೆ ಯಿಲ್ಲವೊ//೨//
/
ಹೆಣ್ಣು ಹೊನ್ನು ಮಣ್ಣು ಗಳಿಗೆ ಕಣ್ಣಿಡುವರಂಜಿಕೆಯುಂಟು/ಪನ್ನಗಶಯನ ನಾಮಕೆ
ಆರ ಅಂಜಿಕೆ ಯಿಲ್ಲವೊ//೩///
ಕಡಗ ಕಂಠ ಮಾಲೆಗಿನ್ನು ತುಡುಗರ ಅಂಜಿಕೆ ಯುಂಟು/
ಅಡವಿ ತುಲಸೀ ಮಾಲೆಗಿನ್ನು ಯಾರ ಅಂಜಿಕೆ ಯಿಲ್ಲವೊ//೪//
ನಿಮ್ಮ ಭಾಗ್ಯ ಲಕ್ಷ್ಮಿದೇವಿ ನಮ್ಮ ಭಾಗ್ಯ ನಾರಾಯಣ
ನಮ್ಮ ನಿಮ್ಮ ಭಾಗ್ಯ ದೊಡೆಯ ಶ್ರೀ ಪುರಂದರ ವಿಠ್ಠಲನ ಒಮ್ಮನದಿ ಸ್ಮರಿಸುವುದಕ್ಕೆ ಆರ ಅಂಜಿಕೆ ಯಿಲ್ಲವೊ//೫//.
ಎಂದು ವೈರಾಗ್ಯದ ಹಾಡನ್ನು ಹಾಡಿದಾಗ ರಾಜನಿಗೆ ಸಂತೋಷ ವಾಗಿ ಅವರನ್ನು ಸತ್ಕರಿಸಿ ಅನೇಕ ವಸ್ತ್ರ, ಆಭರಣಗಳನ್ನು ಕೊಟ್ಟನು
ದಾಸರು ರಾಜನ ಭಕ್ತಿ ಯನ್ನು ಹೊಗಳಿ, ರಾಜನಿಂದ ಬಂದ ವಸ್ತುಗಳನ್ನು ಅಲ್ಲಿನ ಬಡವರಿಗೆ ದಾನ ಮಾಡಿ ದರು.
ಈ ವಿಷಯ ರಾಜನಿಗೆ ತಿಳಿದು ಮತ್ತೊಮ್ಮೆ ಅವರನ್ನು ಭೇಟಿ ಮಾಡಿದಾಗ ತಾವು ಕೊಟ್ಟ ವಸ್ತ್ರ ಆಭರಣ ಗಳು
ಅವರ ಗೌರವಕ್ಕೆ ಸಾಲದಾಯಿತೆಂದು ಶಂಕಿಸಿ ಅವರನ್ನು ವಿಚಾರಿಸಿದಾಗ "ತಾವು ಕೊಟ್ಟ ಬಹುಮಾನ ಶ್ರೀಹರಿಗೆ ಸಮರ್ಪಣೆ ಯಾಗಿದೆ.
ಅವುಗಳನ್ನು ನಾನು ಧರಿಸಿದ್ದರೆ ಶ್ರೀ ಹರಿ ಗೆ ಅಷ್ಟು ಪ್ರೀತಿ ಯಾಗುತ್ತಿರಲಿಲ್ಲ"
ಎಂದು ಹೇಳಿದಾಗ ಶ್ರೀ ಕೃಷ್ಣ ದೇವರಾಯ ನಿಗೆ ಶ್ರೀ ಪುರಂದರ ದಾಸರಲ್ಲಿ ಅಧಿಕ ಗೌರವವುಂಟಾಯಿತು.
//ಶ್ರೀ ಹರಿ ಸಮರ್ಪಣೆ//.
************
-Smt. Padma Sirish
-Smt. Padma Sirish
ಪುರಂದರೋಪನಿಷತ್
ಚಿಂತನ....✍.......by ಶ್ರೀಸುಗುಣವಿಠಲ.
ಮಾಲಿಕೆ: 1
🌷🌳🌷🌳🌷🌷🌳🌷🌳🌷
ಮನ್ಮನೋಭೀಷ್ಟ ವರದಂ ಸರ್ವಾಭೀಷ್ಟ ಫಲಪ್ರದಮ್|
ಪುರಂದರಗುರಂ ವಂದೇ ದಾಸಶ್ರೇಷ್ಠಂ ದಯಾನಿಧಿಮ್||
ಹರಿದಾಸ ಸಾಹಿತ್ಯ ಪ್ರಪಂಚದಲ್ಲಿ ಭಕ್ತಿ ಸಾಹಿತ್ಯಕ್ಕೆ ವಿಶಿಷ್ಟ ಸ್ಥಾನವಿದೆ. ಶ್ರೀಲಕುಮಿದೇವಿ ಆದಿಯಾಗಿ ...ಸಮಸ್ತ ಜೀವರು ಶ್ರೀಹರಿಯ ಅನುಗ್ರಹ ಪ್ರಾಪ್ತಿಗಾಗಿ...ದಾಸತ್ವದ ಮೂಲಕ ತಮ್ಮ ಭಕ್ತಿಯನ್ನು ಸಮರ್ಪಿಸುವ ನಿಟ್ಟಿನಲ್ಲಿ...ಸಂಸ್ಕೃತಿ-ಸಂಗೀತ-ಸಾಹಿತ್ಯ -ಸತ್ಪಂಥದ ಸುಪಥದಲ್ಲಿ ಸಾಗುತ್ತಾ.. ಮುಮುಕ್ಷುಗಳು ಸಾಧನೆಯ ಮಾರ್ಗವನ್ನು ಕ್ರಮಿಸುವುದು ಒಂದು ಉತ್ತಮ ಸಾಧನವಾಗಿದೆ.
ಈ ದಿಸೆಯಲ್ಲಿ...
ಶ್ರೀಮದಾನಂದ ತೀರ್ಥರಿಂದ ಸ್ಪೂರ್ತಿ ಹೊಂದಿ ಅವರ ನಂತರ ಬಂದ ಜ್ಞಾನಿವರೇಣ್ಯರು , ಯತಿವರೇಣ್ಯರು.. ದಾಸಶ್ರೇಷ್ಟರು...ಮುಂತಾದ ಮಹನೀಯರುಗಳು ತೋರಿದ ಮಾರ್ಗ ಮಾಡಿದ ಕೃಷಿ, ಸಾಹಿತ್ಯಸರಸ್ವತಿಗೆ ಉಪಮೆ, ರೂಪಕ, ಯಮಕ, ಮುಂತಾದ ಕಾವ್ಯ ಕೃತಿಗಳು, ದೈವದತ್ತವಾದ ಸಹಜ ಪ್ರತಿಭೆಯುಳ್ಳ ಕವಿತಾಶಕ್ತಿ ಮೈಗೂಡಿಸಿಕೊಂಡು ಭಗವಂತನ ವಿಶೇಷ ಅನುಗ್ರಹಕ್ಕೆ ಪಾತ್ರರಾಗಿ ಸಕಲ ಸಜ್ಜನರನ್ನು ಆ ನಿಟ್ಟಿನಲ್ಲಿ ಕರೆದೊಯ್ಯಲು ..ಭುವಿಗೆ ಬಂದ ಮಹನೀಯರುಗಳೇ ಹರಿದಾಸವರೇಣ್ಯರುಗಳಲ್ಲಿ ಪ್ರಮುಖರಾದಾವರು
ಶ್ರೀಪುರಂದರ ದಾಸವರೇಣ್ಯರು.
ದಾಸಸಾಹಿತ್ಯದ ಕೇಂದ್ರಬಿಂದುವಾಗಿ ಧೃವತಾರೆಯಂತೆ ಮಿನುಗುತ್ತಿರುವ ಭೂತಾರೆ.."ಶ್ರೀಪುರಂದರದಾಸರು".
ಮಾನವರಲ್ಲಿ ಕೋಟಿಕೋಟಿಗಳಲ್ಲಿ ಒಬ್ಬರಾಗಿ, ಅಂದಿನಿಂದ ಇಂದಿನವರೆಗೂ ಜನಮನದ ಅಂತರಾಳದಲ್ಲಿ ನೆಲೆಸಿ, ಹರಿದಾಸಸಾಹಿತ್ಯದ ಉಸಿರಾಗಿ, ಪರಂಪರೆಯ ಪ್ರವರ್ತಕರಾಗಿ, ಸಂಗೀತ ಸಾಮ್ರಾಜ್ಯದ ಅಧಿಪತಿಗಳಾಗಿ, ಸಂಸ್ಕೃತಿ, ಸಾಹಿತ್ಯ ಉಳಿಸಿ, ಬೆಳೆಸಿ, ಶ್ರೀಹರಿಯ ಶ್ರೇಷ್ಠ ದಾಸರೆನಿಸಿ, ಭಕ್ತಿಪಂಥದ ಪಥಿಕರಾಗಿ, ಈ ಸತ್ಪಂಥದ ಮಾರ್ಗದರ್ಶಕರಾದ ವಿಭೂತಿ ಪುರುಷರೇ...
ಶ್ರೀಪುರಂದರ ದಾಸರು".
ಪ್ರಹ್ಲಾದಾವತಾರಿಗಳಾದ ಶ್ರೀವ್ಯಾಸರಾಜ ಗುರುಸಾರ್ವಭೌಮರಿಂದಲೇ....
ದಾಸರೆಂದರೇ ಪುರಂದರದಾಸರಯ್ಯ....ಎಂದೆನಿಸಿಕೊಂಡ ,ಗುರುಗಳಿಂದಲೇ ಪ್ರಶಂಸಿಸಲ್ಪಟ್ಟ ಅವರ ಪೂರ್ಣಾನುಗ್ರಹಕ್ಕೆ ಪಾತ್ರರಾದ ಶ್ರೀಪುರಂದದಾಸರ ಜೀವನ ಅವರ ಆದರ್ಶಗಳು ಅನುಕರಿಣೀಯವಾಗಿವೆ.
ಸಂಸ್ಕೃತ ಭಾಷಾ ಜ್ಞಾನವಿಲ್ಲದ ಲಕ್ಷಾವಧಿ ಜನರಿಗೆ ವೇದ, ಉಪನಿಷತ್, ಪುರಾಣಗಳ, ಇತಿಹಾಸದ, ಅರ್ಥವನ್ನು ಸಲಭವಾದ ಸರಳಕನ್ನಡ ಪದದಲ್ಲಿ ರಚಿಸಿ ,ಮಾನವಧರ್ಮ&ಮಧ್ವಮತಪ್ರಚಾರವೇ ತಮ್ಮ ಕರ್ತವ್ಯವನ್ನಾಗಿಸಿ, ಲಕ್ಷಗಟ್ಟಲೆ ಕೃತಿಗಳನ್ನು ರಚಿಸಿ ನೀಡುವುದರ ಮೂಲಕ ಸಕಲಸಜ್ಜನರ ಆಧ್ಯಾತ್ಮಿಕ ಸಾಧನೆಗೆ ಹಾದಿ ತೋರಿದ ಲೋಕೋಪಕಾರವನ್ನು ಮಾಡಿದ ..ಶ್ರೀಪುರಂದರ ದಾಸರ ಕೃತಿಗಳನ್ನು ಗುರುಗಳಾದ ಶ್ರೀವ್ಯಾಸರಾಜರು
"ಪುರಂದರೋಪನಿಷತ್" ಎಂದು ಘೋಷಿಸಿ ಮಾನ್ಯಮಾಡಿದ್ದಾರೆ.
ಅಬಾಲವೃದ್ಧರಿಗೂ ಅರ್ಥವಾಗುವಂತೆ ಸದಾಚಾರ ಸಂಪತ್ತನ್ನು ಆಚಾರ್ಯ ಮಧ್ವರ ಸಿದ್ಧಾಂತವನ್ನು ಪ್ರಮೇಯಗಳನ್ನು, ವೇದಾಂತ ವಿಚಾರಗಳನ್ನೂ ತಮ್ಮ ಕೃತಿಯಲ್ಲಿ ಸೆರೆಹಿಡಿದು ಸುಂದರವಾಗಿ ವರ್ಣಿಸಿ ಲೋಕೋಪಕಾರ ಮಾಡಿದ್ದಾರೆ.
ಮನ್ಮನೋಭೀಷ್ಟವರದಂ".....
ಇದರ ಯಥಾಮತಿ ಚಿಂತನ ನೋಡುವುದಾದರೇ..
ಅರ್ಥೇ ನಾರಾಯಣೋ ದೇವಃ ಸರ್ವಮನ್ಯತ್ ತದರ್ಥಕಂ"...ಎಂಬ ಆಚಾರ್ಯರ ಉಕ್ತಿಯಂತೆ ಜ್ಞಾನಿಗಳು ಯಾವುದೇ ಐಹಿಕ ವರಗಳನ್ನು ಯಾಚಿಸದೇ ಕೇವಲ ಶ್ರೀಹರಿಯನ್ನೆ ಬೇಡುತ್ತಾರೆ.ಅಂತಹ ಜ್ಞಾನಿಗಳ ಅಪೇಕ್ಷಿತವಾದ ವರ ನಾಮಕ ಪರಮಾತ್ಮನ ದರ್ಶನ ಭಾಗ್ಯವನ್ನು ಕರುಣಿಸುತ್ತಾರಾದ್ದರಿಂದ
ಮನೋಭೀಷ್ಟವರದರು....ಇದನ್ನೆ ಶ್ರೀವಿಜಯದಾಸರು...
ಗುರುಪುರಂದರ ದಾಸರ ನೆರೆನಂಬಲು, ನಿರುತಕಲತು ವಿಜಯವಿಠಲ ಒಲಿವ"..ಎಂದಿದ್ದಾರೇ.
ಸಮ್ಯಕ್ ಜ್ಞಾನವದಾಚಾರ್ಯಾತ್ ಮುಚ್ಯತೇ ಪುರುಷೋಭವಾತ್(ವಾಮನ ಪುರಾಣ).
ದ ಮಾತಿನಂತೆ ಸಮೀಚಿನ ಜ್ಞಾನವುಳ್ಳ ಆಚಾರ್ಯರಾದ ಗುರುಗಳ ಉಪದೇಶ, ಅನುಗ್ರಹವು ಮುಮುಕ್ಷುವಿಗೆ ಸಾಧಕನಿಗೆ ಮುಕ್ತಿ ಹೊಂದಲು ಅವಶ್ಯ ....ಈ ದಿಸೆಯಲ್ಲಿ ..
ಸ್ವೋತ್ತಮಾ ಗುರುವಃ ಪ್ರೋಕ್ತಾಃ..ನಮಗಿಂತ ಉತ್ತಮರೆಲ್ಲಾ ನಮಗೆ ಗುರುಗಳೇ ಆಗಿರುವರು... ಎಂಬ ಸಧ್ಭಾವನೆಯೊಂದಿಗೆ ..ನಮ್ಮ ವೃತ್ತಿ-ಪ್ರವೃತ್ತಿಗಳನ್ನು ಬೆಳಿಸಿಕೊಂಡು ...ಯಾವುದೇ ಸಜ್ಜನರಿಗೆ ..ಕಾಯಾವಾಚಾ ಮನಸಾ ...ನೋವುನೀಡದಂತೇ ..ನಿತ್ಯ ನಿರಂತರವಾಗಿ ಹರಿವಾಯುಗುರು ದಾಸವರೇಣ್ಯರ ಸೇವೆ ಮಾಡುವಂತ ಸೌಭಾಗ್ಯವನ್ನು ಪುರಂದರದಾಸವರೇಣ್ಯರು ಅನುಗ್ರಹಿಸಲಿ ಎಂಬ ಯಥಾಮತಿ ಚಿಂತನ ದೊಂದಿಗೆ ಪತ್ಯಂತರ್ಗತ ಪುರಂದರದಾಸಾರ್ಯರಂತರ್ಗತ ಗುರುಗಳಂತರ್ಗತ ಭಾರತೀರಮಣ ಮುಖ್ಯಪ್ರಾಣಾಂತರ್ಗತ ಶ್ರೀಸುಗುಣವಿಠಲಾರ್ಪಣಮಸ್ತು.
***
ಚಿಂತನ....✍........
ಶ್ರೀಸುಗುಣವಿಠಲ.
ಸಂಚಿಕೆ: 2
🙏🌹🙏🌹🙏🌹🙏🌹🙏🌹
ಸರ್ವಾಭೀಷ್ಟಫಲಪ್ರದಂ....
ಅನಂತಕೋಟಿ ಬ್ರಹ್ಮಾಂಡನಾಯಕನಾದ ಭಗವಂತನು ಅಷ್ಟಕತೃತ್ವವನ್ನು ಹೊಂದಿದ ಸರ್ವಸ್ವತಂತ್ರ ಸಾರ್ವಭೌಮನಾಗಿದ್ದೂ..ನಮ್ಮಗಳ ಇರುವಿಕೆಗೆ ,ಸಕಲ ಕಾರ್ಯಗಳಿಗೂ ಅವನೇ ಕಾರ್ಯಕಾರಣನಾಗಿದ್ದಾನೆ.ಈ ಸಂಸಾರವೆಂಬ ಭವಸಾಗರದಲ್ಲಿ ಮುಳುಗಿಸಬಲ್ಲಾ/ತೇಲಿಸಬಲ್ಲಾ ಏಕೋತ್ತಮ ದೈವನಾಗಿದ್ದಾನೆ..ಹಾಗಾಗಿ ಅವನ ಕಾರುಣ್ಯ ಅನುಗ್ರಹ ಸಂಪಾದನೆಯೇ..ಪ್ರಣಿಯೊಬ್ಬ ಸಾಧಕನ ಪರಮೋಚ್ಛ ಗುರಿ.
ಆಪ್ತಕಾಮಸ್ಯಕಾಸ್ಪೃಹಾ..ಎಂಬಂತೆ ಅವನಿಗೆ ಯಾರಿಂದಲೂ ಲವಲೇಶವೂ ಏನೂ ಆಗಬೇಕಾದ್ದಿಲ್ಲಾ.ಸಜ್ಜನರನ್ನುದ್ಧರಿಸಲೆಂದೇ ಅವತಾರವೆತ್ತಿದ ಶ್ರೀಹರಿಯ ಕಾರುಣ್ಯ ಅಪಾರ .ಶ್ರೀಮದಾಚಾರ್ಯರು "ಕರುಣಾಪೂರ್ಣ ವರಪ್ರದಚರಿತಂ ಜ್ಞಾಪಯಮೇತೇ"..ಎಂದಂತೆ ಅವನೇ ಕರುಣಾಸಿಂಧು.ವರದರಾಜನಾಗಿದ್ದಾನೆ...ಈ ದಿಸೆಯಲ್ಲಿ .ನಮ್ಮ ಕಥಾನಾಯಕರಾದ ಶ್ರೀಪುರಂದರದಾಸರು..ಇಂಥ ಭಗವಂತನನ್ನು ಪಡೆಯುವಲ್ಲಿ ಸಾಧಕರಿಗೆ ಸಧ್ಭುದ್ಧಿಯನ್ನು ಕಲ್ಪಿಸಿ, ಸತ್ಕಾರ್ಯಗಳನ್ನು ಮಾಡಿಸಿ, ಸನ್ಮಾರ್ಗವನ್ನು ತೋರಿಸಿ, ಸತ್ಚಿಂತನೆಗಳನ್ನು ನೀಡಿ...ಲೋಕದ ರೀತಿ ನೀತಿಗಳನ್ನು ತಿಳಿಹೇಳುವುದರ ಮೂಲಕ ...ನಮಗೆಲ್ಲಾ ಸರ್ವಾಭೀಷ್ಟಪ್ರದರಾಗಿದ್ದಾರೆ.
೨ .."ಹಣ್ಣುಬಂದಿದೆ ಕೊಳ್ಳಿರೋ..."ಎಂದು ಸಜ್ಜನರ ಮನೆಮನಗಳಿಗೆ ಭಾಗವತದ ಶುಕ ಮುನಿಗಳು ಕಚ್ಚಿದ ಭಕ್ತಿಯ ನವರಸಭರಿತ ಹಣ್ಣನ್ನು..ತಲುಪಿಸುವರಾದ್ದರಿಂದ...ಇವರು ಸರ್ವಾಭೀಷ್ಟಫಲಪ್ರದರು
.ತಾರತಮ್ಯೋಪೇತ ಉಪಾಸನೆಯನ್ನು...ಜಗತ್ಸತ್ಯತ್ವವನ್ನು ..ಪಂಚಭೇಧತ್ವವನ್ನು ಶ್ರೀಹರಿಯ ಸರ್ವೋತ್ತಮತ್ವವನ್ನು ಸತ್ಯಜಗತಿದು ಪಂಚಭೇಧವು ನಿತ್ಯ ಶ್ರೀಗೋವಿಂದನ ಕೃತ್ಯವರಿತು ತಾರತಮ್ಯದಿ ಕೃಷ್ಣನಧಿಕೆಂದು ಸಾರಿರೈ... ಎಂದು ಸಾರುವುದರ ಮೂಲಕ ..ಈಶ-ದಾಸತ್ವದ ಭಾವವನ್ನು..
ದಾಸನ್ನ ಮಾಡಿಕೋ ಎನ್ನಾ....ಸ್ವಾಮಿ ಸಾಸಿರ ನಾಮದ ವೇಂಕಟರಮಣ.... ಎಂಬುದರ ಮೂಲಕ ಜಗತ್ತಿಗೇಭಕತರು ಭಗವಂತನನ್ನು ಬೇಡುವ ಕ್ರಮವನ್ನು ಅರುಹಿ ಸಾಧನಾ ಸುಫಥಕ್ಕೆ.ಹಚ್ಚಿ...ಸಾಧನೆಗೈಯಿಸುವುದರ ಮೂಲಕ ..ಸಂಸಾರದ ಜನ್ಮಾಂತರದ ಭವಬಂಧನಗಳನ್ನು ದಾಟಿಸುವ ತಮ್ಮ ಉಪದೇಶಗಂತಿರುವ ಕೃತಿಗಳಿಂದ ಪುಣ್ಯಫಲವನ್ನು ತಂದುಕೊಡವವರಾದ್ದರಿಂದ
ಸರ್ವಾಭೀಷ್ಟಫಲಪ್ರದರಾಗಿದ್ದಾರೆ.
೨..ಪುರಂದರ ಗುರುಂ ವಂದೇ....
ಸಾಧಕನಿಗೆ ಗುರುಪ್ರಸಾದವು ಅತ್ಯಂತ ಮುಖ್ಯ. ಪರಮಾತ್ಮನ ಸಾಕ್ಷಾತ್ಕಾರಕ್ಕೆ ,ಬಿಂಬಾಪರೋಕ್ಷಕ್ಕೇ ಗುರುವಿನ ಅನುಗ್ರಹ ಬೇಕೇಬೇಕು.ಮುಕ್ತಿಗೆ ಗುರುಪ್ರಸಾದಕ್ಕಿಂತ ಬಲವಾದ ಮತ್ತೊಂದು ಸಾಧನವಿಲ್ಲಾ
ಗುರುಪ್ರಸಾದೋ ಬಲವಾನ್ ನ ತಸ್ಮಾತ್ ಬಲವತ್ತರ ಸಾಧನಂ..
ಅದಕ್ಕಾಗಿ ....ಪುರಂದರದಾಸರು ...
ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ.....ಎಂಬ ಅಧ್ಭುತ ಕೃತಿಯ ಮೂಲಕ ...ಪುರಂದರ ವಿಠಲನ ಸಾರ ಸಾರುವ ಮಹಿಮೆಗಳ ತೋರಬಲ್ಲಾ..ಸಧ್ಗುರುವಿನ ..ಮಹಿಮೆಯನ್ನು ಸಾರುವ ....ಸಕಲ ಸಜ್ಜನ ಸಧ್ಭಕ್ತರಿಗೆ...."ಪುರಂದರ ಗುರುಂ ..ವಂದೇ"..ಎನಿಸಿದ್ದಾರೆ.
* ಗುರುಪುರಂದರದಾಸರೆನೆಗೆ ದಾಸತ್ವ ನೀಡೋ ಕ್ರಮ ಕರುಣದಿಂದಲಿ ವ್ಯಾಸಕಾಶಿಯಲ್ಲಿ ಹರುಷದಿ ಮನಮುಟ್ಟಿ ಪೇಳಿದ್ದೆ ಪೇಳುವೆನು....ಎಂಬ ಕೃತಿಯಲ್ಲಿ ಶ್ರೀವಿಜಯದಾಸರು ..
ಘನವಾದ ತೈತ್ತರೀಯದಲ್ಲಿ ಪೇಳಿದ ಶಾಂತಿ ಮನದಿ ಪೇಳಿಸುತ್ತಾ ತತ್ವಗಳ ಅನುವಾಗಿ ತಿಳಿಸುತ್ತಾ ಶ್ರೀನಿವಾಸನ ಪಾದನರುಹ ತೋರಬಹುದು ನಂಬಿದವರಿಗೆ...ಪಾದಪೂರೈಸುತ ಮೋದಸಂಸ್ಕೃತವೆಂದು ಸಾರದಲಿ ಪಠಿಸಿ, ಭೂಧರ ವಿಜಯವಿಠಲನ್ನಾ ಪಾದವನೆ ಕಾಂಬುವುದು ಸತ್ಯ ಸತ್ಯ....ಎಂಬುದಾಗಿ ತಿಳಿಸಿದಂತೆ ಸ್ವಪ್ನದ್ವಾರಾ ಶ್ರೀವಿಜಯದಾಸರಿಗೆ ತೈತ್ತರೀಯ ಶಾಂತಿಮಂತ್ರ ಸಮೇತವಾಗಿ ಆಚಾರ್ಯರ ಸರ್ವಮೂಲಸಾರವನ್ನು ಉಪದೇಶಿಸಿ, ವಿಜಯವಿಠಲ ಅಂಕಿತ ಪ್ರದಾನ ಮಾಡಿ ತಾವು ರಚಿಸಿ ಉಳಿದ ೨೫೦೦೦ ಕೃತಗಳನ್ನು ರಚಿಸಲು ಆಜ್ಞಾಪಿಸಿ ಜಗತ್ತಿಗೇ ವಿಜಯದಾಸರನ್ನು ಕರುಣಿಸಿದ...*ಮಹಾಗುರುಗಳು
ಶ್ರೀಪುರಂದರದಾಸರು......!! ಇಂಥ ಗುರುಗಳ ತೋರಿದ ಸತ್ಪಥದ ಚಿಂತನೆಯನ್ನು ನಿತ್ಯ ನಿರಂತವಾಗಿ . ಬೆಳೆಸಿ ಉಳಿಸಿ ಕೊಂಡು ಹೋಗುವ ಸೌಭಾಗ್ಯವನ್ನು ನಮಗೆಲ್ಲಾ ಕರುಣಿಸಲಿ ..ಎಂಬ ಯಥಾಮತಿ ಚಿಂತನದೊಂದಿಗೆ ಪತ್ಯಂತರ್ಗತ ಶ್ರೀಪುರಂಜರದಾಸಾಂತರ್ಗತ ಗುರುವಂತರ್ಗತ ಭಾರತೀರಮಣ ಮುಖ್ಯಪ್ರಾಣಾಂತರ್ಗತ ಶ್ರೀಸುಗುಣವಿಠಲಾರ್ಪಣಮಸ್ತು
**
ಶ್ರೀಸುಗುಣವಿಠಲ.
,ಮಾಲಿಕೆ: 3
🌺🌲🌺🌲🌺🌲🌺🌲🌺🌲
ದಾಸಶ್ರೇಷ್ಠಂ ದಯಾನಿಧಿಂ.......
ದಾಸಸಾಹಿತ್ಯಕ್ಕೆ ಸೊಗಡು ತುಂಬಿದ ಯತಿಶ್ರೇಷ್ಠರಾಗಲೀ.ದಾಸಶ್ರೇಷ್ಠರಾಗಲೀ ಕಣ್ಣಿಗೆ ಕಾಣಿಸದಿದ್ದರೂ ಅವರ ಸಂದೇಶಗಳು ಕೃತಿಗಳೂ ನಮ್ಮ ನಿತ್ಯಜೀವನದಲ್ಲಿ ಹಾಸುಹೊಕ್ಕಾಗಿವೆ.ಹಾಗೂ ನಮ್ಮ ಉದ್ಧಾರಕ್ಕೆ ಪೂರಕವೂ ಆಗಿವೆ.
ದಾಸಸಾಹಿತ್ಯ ಯಾರೂ ಹುಟ್ಟು ಹಾಕಿದುದಲ್ಲಾ..ಭಗವಂತನ ಹರಿಸರ್ವೋತ್ತಮತ್ವದೊಂದಿಗೇ..ಹುಟ್ಟಿ ಬಂದಿದ್ದಾಗಿದೆ.ತಾರತಮ್ಯವಿಲ್ಲದಿದ್ದರೇ ಶ್ರೇಷ್ಠತ್ವ&ಸರ್ವೋತ್ತಮತ್ವ ಪ್ರಕಾಶಕ್ಕೆ ಬರುವಂತೆಯೇ ಇಲ್ಲಾ. ಶ್ರೀಲಕ್ಷ್ಮೀದೇವಿ ಆದಿಯಾಗಿ ಶ್ರೀಮದಾಚಾರ್ಯರ ಮೂರು ಅವತಾರಗಳೂ ದಾಸತ್ವದ ಶ್ರೇಷ್ಠತೆಯ ಪ್ರತಿಪಾದಕವೇ ಆಗಿವೆ. ಅದರಲ್ಲೂ ಯತಿಗಳಾಗಿ ವ್ಯಾಸರ ಸೇವೆ ಮಾಡಿ ದಾಸತ್ವದ ಅರ್ಥವನ್ನು ತಿಳಿಸಲೋಸುಗವೋ ಎಂಬಂತೇ.....ಆಚಾರ್ಯ ಮಧ್ವರ ಅವತಾರವೂ ಪೂರಕವಾಗಿದೆ...
ಶ್ರೀಮಧ್ವಃ ಕಲ್ಪವೃಕ್ಷಸ್ತು ಜಯಾರ್ಯಃ ಕಾಮಧುಕ್ ಸ್ಮೃತಃ|
ಚಿಂತಾಮಣಿಸ್ತು ವ್ಯಾಸಾರ್ಯಃ ಮುನಿತ್ರಯ ಮುದಾಹೃತಮ್||
(ಶ್ರೀಮುಷ್ಣಮಹಾತ್ಮೆ)
ಎಂಬುದನ್ನು ಗಮನಿಸಿದಾಗ.ದಾಸಸಾಹಿತ್ಯದ ಮೂಲ ತಿಳಿಯುತ್ತದೆ.
"ದಾಸಸಾಹಿತ್ಯ" ಈ ಪಂಚಾಕ್ಷರಿಯ ಮೊದಲೆರಡು ವರ್ಣಗಳಿಂದ
ದಾಸ ಶಬ್ದವು ಅಂಕೆಗಳಲ್ಲಿ..
೩೭..ನ್ನು ಸೂಚಿಸುವ ಪದವಾಗಿದೆ.
ತ,ಥ,ದ...(೩)
ಯ,ರ,ಲ,ವ,ಶ ಷ,ಸ,(೭)
ಇದನ್ನು ಸೂಚಿಸುವುದರ ಮೂಲಕ ಶ್ರೀಮದಾಚಾರ್ಯರ ಸರ್ವಮೂಲಮೂವತ್ತೇಳು ಗ್ರಂಥಗಳ ಅಮೃತಸಾರವೇ ಎಂಬುದು ಗಮನಾರ್ಹ!!.
ಇವುಗಳನ್ನು ಲೋಕ ಜನತೆಗೆ ಸಾರಲು ಹೊರಟ ಮಹನೀಯರೇ...
ಪೂತಾತ್ಮಶ್ರೀಪುರಂದರದಾಸರು...ನಮ್ಮ ಕಥಾನಾಯಕರು.!.
ಪ್ರತಿನಿತ್ಯವೂ ದಾಸರದು ಯಾಯವಾರದ ಜೀವನ ..*ಮಧುಕರ ವೃತ್ತಿ ಎನ್ನದೂ.......ಎಂಬಂತೆ...ಕಡು ಭಕ್ತಿವೈರಾಗ್ಯದ ಗಣಿಯಾಗಿದ್ದರಿಂದಲೇ ..ಅವರ ಗುರುಗಳಿಂದಲೇ...ಪ್ರಶಂಸಿಸಿಕೊಂಡ ಮಹಾದಾಸಶ್ರೇಷ್ಠರು!!
ನೀತಿಯೆಲ್ಲವನರಿತು ನಿಗಮ ವೇದ್ಯನ ನಿತ್ಯ ವಾತಸುತನಲ್ಲಿಹನ ವರ್ಣಿಸುತಲೀ...
ಗೀತನರ್ತನದಿಂದ ಕೃಷ್ಣನ್ನ ಪೂಜಿಸುವ "ಪೂತಾತ್ಮ"ಪುರಂದರದಾಸರಿವರಯ್ಯಾ.... ಎಂಬ ಶ್ರೀವ್ಯಾಸರಾಜರಿಂದ ಮಾತು ಇವರ ದಾಸಶ್ರೇಷ್ಠತ್ವವನ್ನು ಅರಿಯಬಹುದು.
ದಯಾನಿಧಿಂ.......
ಶ್ರೀಪುರಂದರದಾಸರ ರ ಶಿಷ್ಯಾಗ್ರೇಸರರಾದ ಶ್ರೀವಿಜಯದಾಸರು ಒಂದು ಉದಯರಾಗದಲ್ಲಿ ಇವರ ಸಂಪೂರ್ಣಚರಿತ್ರೆಯನ್ನು ಒಂಬತ್ತು ನುಡಿಗಳಲ್ಲಿ.ಸೆರೆಹಿಡಿದಿದ್ದಾರೆ...
ಬಂದದುರಿತವಿನಾಶನಾ....... ಇದರ ಪ್ರಕಾರ ಶ್ರೀರಮಣನ ಸಭೆಯಲ್ಲಿ ಭಗವಂತ ಇವರ ಗಾಯನಕ್ಕೆ ಮೆಚ್ಚಿ ವರವಧಿಕ ಬೇಡೆನಲು..ಕಲಿ ಹೆಚ್ಚಿದ ಯುಗದಲ್ಲಿ ಸೊಲ್ಲಿಸುವೆ ಕೀರ್ತಿಗಳ ಬಿಚ್ಚಿ ತೋರಿಸುವೆನೆಂದ .. ಇಂಥ ದಯಾಳುಗಳು ಶ್ರೀಪುರಂದರದಾಸರು.ಕಲಿಯುಗದ ದೋಷಕ್ಕೊಳಗಾದ ಸುಜನ ರಕ್ಷಿಸಿ..ಅವರ ಉದ್ಧಾರಕ್ಕಾಗಿ ಭಗವದಾಜ್ಞೆಯಿಂದ ಅವತರಿಸಿದ
ನಾರದಮಹಾಮುನಿಗಳು ತಾವು ರಚಿಸಿದ ಭಕ್ತಿಸೂತ್ರಗಳನ್ನು (ನಾರದಭಕ್ತಿಸೂತ್ರ) ಆಚರಣೆಗೆ ತರಲು ಪುರಂದರದಾಸರಾಗಿ ಜನ್ಮತಳೆದವರು...ಶ್ರೀಪುರಂದರದಾಸರು.!!..
ತಾವು ಒಬ್ಬರೇ ಸಾಧನ ಪಂಥವನ್ನು ಹಿಡಿಯದೇ..ಹೆಂಡತಿ ,ಮಕ್ಕಳು, ತಮ್ಮಂದಿರು,, ತನುಸಂಬಂಧಿಗಳು, ಮನಸಂಬಂಧಿಗಳು, ನೆರೆಹೊರೆಯವರು,,ಅಷ್ಟೇ ಅಲ್ಲದೇ....ಇಡೀ ಮಾನವ ಜನಾಂಗವನ್ನೆ ತಮ್ಮ ಸತ್ಸಾಧನೆಯ ಪಂಥಕ್ಕೇ ಕರೆದೊಯ್ಯವ &ಕೇವಲ ಸ್ಮರಣೆಮಾತ್ರದಿಂದಲೇ ಸಂಸಾರ ಭಯವನ್ನೂ ಸರ್ವಾಭಿಷ್ಠಗಳನ್ನು ದಯಪಾಲಿಸಿ...ತಮ್ಮ ಮಂತ್ರತುಲ್ಯವಾದ ಅಧ್ಭುತ ಕೃತಿಗಳ ಮೂಲಕ ಮಾರ್ಗದರ್ಶನವನ್ನು ಮಾಡುವುದರ ಮೂಲಕ
ಶ್ರೀಪುರಂದರಗುರುಂ ವಂದೇ ದಾಸಶ್ರೇಷ್ಠ ದಯಾನಿಧಿಂ....ಎಂಬ ಅನ್ವರ್ಥಕ್ಕೇ ಆದರ್ಶಪ್ರಾಯರಾಗಿ ಅಂದು-ಇಂದು-ಎಂದೆಂದೂ ....ಜನಮನದಲ್ಲಿ ಜ್ಞಾನಭಕ್ತಿ ವೈರಾಗ್ಯ ಮೂರ್ತಿಯಾಗಿ ನಿತ್ಯ ನಿರಂತರವಾಗಿ ಕಂಗೊಳಿಸುತ್ತಿದ್ದಾರೇ..
ಇಂಥವರ ಸ್ಮರಣೆಯೇ ಪಾಪಪರಿಹಾರಿಕವಾಗಿದೆ.
ಹೀಗೇ ಪ್ರಸಿದ್ಧವಾದ ಶ್ರೀಪುರಂದರದಾಸರ ಚರಮಶ್ಲೋಕದ ಅರ್ಥಾನುಸಂಧಾನ&ಚಿಂತನವನ್ನು ಮನಸ್ಸಿಗೆ ತಂದು ಕೊಂಡು ಯಥಾಮತಿ ಅವರ ಕೃತಿಗಳ ವೈಶಿಷ್ಟ್ಯವನ್ನು ತಿಳಿಯುವ ಪ್ರಯತ್ನವನ್ನು ಮಾಡೋಣ....ಎಂಬುದರೊಂದಿಗೆ...ಪತ್ಯಂತರ್ಗತ ಪುರಂದರದಾಸರ್ಯಾಂತರ್ಗತ ಗುರುವಂತರ್ಗತ ಭಾರತೀರಮಣಮುಖ್ಯಪ್ರಾಣಾಂತರ್ಗತಶ್ರೀಸುಗುಣವಿಠಲಾರ್ಪಣಮಸ್ತು.
***
ಪುರಂದರೋಪನಿಷತ್ -
ಚಿಂತನ....✍........
ಶ್ರೀಸುಗುಣವಿಠಲ
ಮಾಲಿಕೆ: 4
🌷🌳🌷🌳🌷🌳🌷🌳🌷🌳
ಆಚಾರ್ಯವಾನ್ ಪುರುಷೋವೇದ
ಗುರುಪ್ರಸಾದೋ ಬಲವಾನ್ ನ ತಸ್ಮಾದ್ ಬಲವತ್ತರಂ||{ಭಾಷ್ಯ}
ಸುಪ್ರಸನ್ನರಾಗಿ ಆಚಾರ್ಯರು ದಯಪಾಲಿಸಿದ ವಿದ್ಯೆಯೇ ಫಲದಾಯಕವಾದುದು.ಸಾಧಕನಿಗೆ ಗುರುಪ್ರಸಾದವು ಅತ್ಯಂತ ಮುಖ್ಯವಾಗಿದ್ದೂ ಪರಮಾತ್ಮನ ಸಾಕ್ಷಾತ್ಕಾರಕ್ಕೆ ಬಿಂಬಪರೋಕ್ಷಕ್ಕೆ ಗುರುವಿನ ಅನುಗ್ರಹ ಬೇಕೇಬೇಕು.ಮುಕ್ತಿಗೆ ಗುರುಪ್ರಸಾದಕ್ಕಿಂತ ಬಲವಾದ ಮತ್ತೊಂದು ಸಾಧನವಿಲ್ಲ....
ಈ ದಿಸೆಯಲ್ಲಿ...ಹರಿದಾಸಸಾಹಿತ್ಯದಲ್ಲಿ ಶ್ರೀಪುರಂದರು ಒಂದು ಸಲಗವಿದ್ದಂತೆ!.ಅವರು ಕನ್ನಡ ನಾಡು ವಿಶ್ವಕ್ಕೆ ಕೊಟ್ಟ ಕೊಡುಗೆಯ ಪಾತ್ರ ಅಪಾರವಾಗಿಯು ಅಧ್ಭುತವಾದ ವಿಚಾರಧಾರೆಯ ಸಂಗಮವೇ ಆಗಿದೆ.. ಗುರುವಿನ ವಿಚಾರವನ್ನು ಅವರ ದೃಷ್ಠಿಯಲ್ಲಿ ವಿವೇಚಿಸುವುದಾದರೇ... ಕೇವಲ ವರ್ಣಮಾತ್ರ ಕಲಿಸಿದಾತ ಗುರುವಾಗಿರದೇ.....
ಸಂಸಾರ ಭವಸಾಗರದ ಭವಬಂಧನದಿಂದ ..ಶಾಶ್ವತವಾಗಿ ಉದ್ಧಾರದ ಮುಕುತಿಯ ಸುಪಥಕ್ಕೆ ಹಚ್ಚುವವರೇ ನಿಜವಾದ ಗುರು! ...ಎಂಬ ನೈತಿಕ ಎಚ್ಚರವನ್ನು ಮನೆಮನೆಗೆ ಮುಟ್ಟಿಸುವ ಅಂದಿನ ಕರ್ನಾಟಕದ ಜನಪದಕ್ಕೆ ..ಇಂದಿನ &ಮುಂದಿನ ಜನಾಂಗಕ್ಕೇ ಜನತಾಶಿಕ್ಷಣ ನೀಡುವ ಗೆಜ್ಜೆಕಟ್ಟಿ ದಿಟ್ಟ ಹೆಜ್ಜೆಯನಿಟ್ಟ ದಾಸಾರ್ಯರು ಶ್ರೀಪುರಂದರರು.! ಈ ದಿಸೆಯಲ್ಲಿ ಒಂದು ಹಂತದಲ್ಲಿ ..ತಮ್ಮ ಗುರುಗಳಾದ ಶ್ರೀವ್ಯಾಸರಾಜರ ಮಡಿವಂತ ಪಂಡಿತ ಶಿಷ್ಯರನ್ನೂ ಎದುರುಹಾಕಿಕೊಳ್ಳಲು ಅಂಜಲಿಲ್ಲಾ.!
*ಪಿಂಡಾಂಡದೊಳಗಿನ ಗಂಡನ ಕಾಣದೇ |ಮುಂಡೆಯರಾದರು ಪಂಡಿತರೆಲ್ಲಾ||..ಎಂದು ಡಾಣಾ ಡಂಗೂರವಾಗಿ ಅವರು ಹೇಳಿದರು.
ಅವರ ಅಧ್ಭುತವಾದ ಸರ್ವಕಾಲಿಕ ಸತ್ಯವಾದ ಸರ್ವ ಜನಜನಿತವಾದ ಗುರುವಿನ ಮಹತ್ವವನ್ನು ಸಾರುವ ಒಂದು ಕೃತಿಯ ಯಥಾಮತಿ ಚಿಂತನದ ಪ್ರಯತ್ನವನ್ನು ಮಾಡೋಣ.
ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ||ಪ||
ಶ್ರೀಮಧ್ವಸಂಪ್ರದಾಯದಲ್ಲಿ ಶ್ರೀಹಂಸನಾಮಕ ಭಗವಂತನಾದಶ್ರೀನಾರಾಯಣನೇ ಮೂಲಗುರು!
ನಾರಾಯಣಂ ಸುರಗುರಂ ಜಗದೇಕನಾಥಂ ಭಕ್ತಪ್ರಿಯಂ ಸಕಲ ಲೋಕ ನಮಸ್ಕೃತಂಚ...
ಶ್ರೀಹರಿ ಬ್ರಹ್ಮದೇವರಿಗೆ ತತ್ವೋಪದೇಶಮಾಡಿ ಮೊದಲ ಗುರುವಾದ.ರುದ್ರದೇವರಿಗೆ ಪರಮಗುರುವಾದರು, ಇತರ ದೇವಾದಿದೇವತೆಗಳಿಗೆ ಆದಿಗುರುವಾದರೇ ..ಮಾನುಷೋತ್ತಮರಿಗೆ ಮೂಲಗುರುವಾದನು.ಸಕಲ ಜೀವರಾಶಿಗಳ ಅಂತರ್ಯಾಮಿಯಾಗಿ ಮೂಲೇಶಾತ್ಮಕ ಬಿಂಬ ರೂಪಿ ಪರಮಾತ್ಮನೇ ಸ್ವರೂಪೋದ್ಧಾರಕನಾಗಿರುವ
ಮೂಲಗುರು!.
ಪರಿಪರಿಶಾಸ್ತ್ರವನೋದಿದರೇನು ವ್ಯರ್ಥವಾಯಿತು ಭಕುತಿ||ಅ.ಪ||
ಆರುಶಾಸ್ತ್ರವನೋದಿದರಿಲ್ಲ ಮುರಾರು ಪುರಾಣವ ಮುಗಿಸಿದರಿಲ್ಲಾ|*
ಸಾರಿಸಜ್ಜನ ಸಂಗವ ಮಾಡದೇ ಧೀರನಾಗಿ ತಾ ಮೆರೆದರೆ ಇಲ್ಲಾ||೧||
ಅನುಪಲ್ಲವಿಯಲ್ಲಿನ ವಿಚಾರವನ್ನು ವಿಸ್ತರಿಸುತ್ತಾ...ಜೊತೆಗೆ ಗುರುವಿನ ಕಿಂಚಿತ್ ಸುಳಿವನ್ನು ಸಂಗಸಹವಾಸದ ಮಹತ್ವದ ಪಾತ್ರವನ್ನು ಅದರೊಂದಿಗೆ ಅಧ್ಯಯನ ಮಾಡಿ ತಿಳಿಯಬೇಕಾದ ಪುಟ್ಟ ಗ್ರಂಥಾಲಯದಂತೆ ಅವುಗಳ ಪಟ್ಟಿಯನ್ನೇ ಆರು&ಮೂರಾರು ಎಂಬ ಪುಟ್ಟ ಪದಗಳಲ್ಲಿ ಸೆರೆಹಿಡಿದು ಲೋಕಕ್ಕೆ ಗುರುವಿನ ಮಹತ್ತನ್ನು ತಿಳಿಸುತ್ತಿರುವ ದಾಸಾರ್ಯರ ಕೃತಿ ಕೌಶಲವು ಅಮೋಘ ಅದ್ವಿತೀಯವಾದದ್ದು.
ಆರುಶಾಸ್ತ್ರಗಳು:
ಅಂದರೆ ಷಡ್ಡರ್ಶನಗಳು, ಸಾಂಖ್ಯ, ಯೋಗ, ವೈಶೇಷಿಕ, ಮೀಮಾಂಸೆ,&ವೇದಾಂತ.ಇವುಗಳ ಜೊತೆಗೆ
ಮೂರಾರು(೩×೬=೧೮) ಪುರಾಣಗಳು
ಬ್ರಾಹ್ಮ, ಪಾದ್ಮ, ವೈಷ್ಣವ, ಶೈವ, ಲಿಂಗ, ಗರುಡ, ನಾರದೀಯ,ಭಾಗವತ,ಆಗ್ನೇಯ, ಸ್ಕಾಂದ, ಭವಿಷ್ಯ, ಬ್ರಹ್ಮವೈವರ್ತ, ಮಾರ್ಕಂಡೇಯ, ವಾಮನ, ವರಾಹ, ಮತ್ಸ್ಯ, ಕೂರ್ಮ, &ಬ್ರಹ್ಮಾಂಡ.
ಇವಿಷ್ಟನ್ನೂ ನಾವು
*ಸಾರಿ ಸಜ್ಜನ ಸಂಗಮಾಡಿ ...ಮೂಲಗುರುವನ್ನರಿತೂ...
ದಾಸಾನೆನಿಸೋ ಎನ್ನಾ....ಶ್ರೀನಿವಾಸಾ ಕ್ಷಮಿಸೋ...ಎನ್ನಾ.... ಎಂಬ ದಾಸವಾಣಿಯಂತೇ...
ಸಂಗವಾಗಲೀ ಸಾಧು ಸಂಗವಾಗಲೀ ಸಂಗದಿಂದ ಲಿಂಗದೇಹ ಭಂಗವಾಗಲೀ.... ಎಂಬ ಭಗವತ್ ತತ್ವವನ್ನರಿತು ಮಹಾತ್ಮ್ಯಾ ಜ್ಞಾನಪೂರ್ವಕವಾಗಿ ಯಥಾಮತಿಯಾಗಿ
ಈಶ-ದಾಸ ಎಂಬ ಸಧ್ಭಾವನೆಯಿಂದ ಭಗವಂತನ ದಾಸನಾದಾಗ ಮಾತ್ರ ಈ ಮೇಲಿನ ಎಲ್ಲಾ ಕಾರ್ಯಗಳಿಗೂ ಭಗವಂತ ಪೂರ್ಣಫಲ ನೀಡುತ್ತಾನೆ.ಗುರುವಾಗಿ ಸದಾ ಅನುಗ್ರಹಿಸುತ್ತಾನೆ ..ಎಂಬ ಧನಾತ್ಮಕವಾದ ಚಿಂತನೆಯನ್ನು ಮೈಗೂಡಿಕೊಂಡು ಸಾಧನಾಪರರಾಗಲು ಅತೀ ಸೂಕ್ಷ್ಮವಾಗಭಗವಂತನ ರಹಸ್ಯ ಅಮೋಘ ತತ್ವವನ್ನು ಈ ಕೃತಿಯ ಒಳನೋಟದಲ್ಲಿ ಶ್ರೀಪುರಂದರದಾಸಾರ್ಯರು ಹುದುಗಿಸಿಟ್ಟಿದ್ದಾರೆ!. ಭಕ್ತಿ ಸೂತ್ರಗಳನ್ನು ಹಾಕಿಕೊಟ್ಟ ನಾರಾದಾಂಶರಲ್ಲವೇ ...!? ಅವನ್ನೇ ತಮ್ಮ ಕೃತಿಗಳಲ್ಲಿ ಹಾಸುಹೊಕ್ಕಾಗಿಸಿ...ನಮಗೆಲ್ಲಾ ಭಗವಂತನಲ್ಲಿ ಮಾಡಬೇಕಾದ ಭಕ್ತಿಯ ಪರಿಯನ್ನು ಪರಿಚಯಿಸಿ...ಪ್ರಕ್ರಿಯೆಗೊಳಿಸಲೋಸುಗ ಭುವಿಯಲ್ಲಿ ಅವತರಿಸಿದ ಪೂತಾತ್ಮಗುರುವರ್ಯರು
ಶ್ರೀಪುರಂದರದಾಸರು....ಎಂಬ ಯಥಾಮತಿ ಚಿಂತನದೊಂದಿಗೆ..
ಪತ್ಯಂತರ್ಗತ ಶ್ರೀಪುರಂದರದಾಸಾಂತರ್ಗತ ಗುರುಗಳಂತಂರ್ಗತ ಭಾರತೀರಮಣ ಮುಖ್ಯಪ್ರಾಣಾಂತರ್ಗತ ಶ್ರೀಸುಗುಣವಿಠಲಾರ್ಪಣಮಸ್ತು.
***
ಪುರಂದರೋಪನಿಷತ್🙏🌹
ಚಿಂತನ....✍..............
ಶ್ರೀಸುಗುಣವಿಠಲ.
ಮಾಲಿಕೆ: 5
🦚🦜🦚🦜🦚🦜🦚🦜🦚🦜🦚🦜🦚🦜
ನಾರಿಯ ಭೋಗ ಅಳಿಸಿದರಿಲ್ಲ| ಶರೀರಕೆ ಸುಖವ ಬಿಡಿಸಿದರಿಲ್ಲ|
ನಾರದ ವರದ ಪುರಂದರವಿಠಲನ
ಮರೆಯದೆ ಮನದೊಳು ಬೆರೆಯುವ ತನಕ||೩||
....................................
ಸಕಲ ಜೀವರ ಸಾಧನೆಗೆ ಅವರ ದೇಶ ,ಕಾಲ, ಯೋಗ್ಯತೆಯನ್ನನ್ನುಸರಿಸಿ ಜ್ಞಾನವನ್ನು ಭೋಧಿಸುವ ಅಧಿಕಾರ ವರ್ಗವೆಂದರೆ ಅದು "ಶ್ರೀಮನ್ಮಧ್ವಾಚಾರ್ಯರು&ಅವರ ಪರಂಪರೆಯಲ್ಲಿ ಬಂದವರು ಎಂಬುದು ದಾಸಾರ್ಯರ ಶ್ರದ್ಧೆ.ಅವರೇ ತಮ್ಮ ಮತ್ತೊಂದು ಕೃತಿಯಲ್ಲಿ "ಪುರಂದರವಿಠಲನ ಪೂರ್ಣಭಕ್ತರೆಂಬ ಈ ರಘುನಾಥತೀರ್ಥರು ಎಷ್ಟು ಪುಣ್ಯವಂತರು" ...ಎಂದು ಶ್ರೀಮಧ್ವಾಚಾರ್ಯರ ನೇರ ಪರಂಪರೆಯಲ್ಲಿ ಬಂದ ಬಂದ ಶ್ರೀರಘುನಾಥತೀರ್ಥರನ್ನು ಪುರಂದರವಿಠಲನ ಪೂರ್ಣ ಭಕ್ತರು ಎನ್ನುತ್ತಾರೆ..ಹೀಗೇ ಅವರ ಚಿಂತನಾ ಲಹರಿಯಲ್ಲಿ ವಿಹರಿಸುತ್ತಿದ್ದರೇ..ಅಧ್ಭುತವಾದ ಭಗವತ್ ತತ್ವಗಳು ಗೋಚರಿಸುತ್ತವೆ.
ನ ಹಿ ಪಾಪಾನಿ ಕರ್ಮಾಣಿ ಶುದ್ಧ್ಯಂತ್ಯನಶನಾದಿಭಿಃ|
ಸೀದಂತ್ಯನಶನಾದೇವ ಮಾಂಸಶೋಣಿತ ಲೇಪನಃ||
(ಭಾರತ)
ಕೇವಲ ಭೋಜನವನ್ನು ತ್ಯಜಿಸುವುದರಿಂದಲೇ ಪಾಪಕರ್ಮಗಳು ತೊಲಗಿ ಶುದ್ಧನಾಗುವುದಿಲ್ಲ.ಆಹಾರ ವನ್ನು ತ್ಯಜಿಸುವುದರಿಂದ ರಕ್ತಮಾಂಸಗಳಿಂದ ಕೂಡಿದ ದೇಹ ಕ್ಷೀಣಿಸುವುದಷ್ಟೇ..
ಆದರೇ ಇಲ್ಲಿ ಪ್ರಾಧಾನ್ಯತೆ ಕೊಡಬೇಕಾಗಿರುವುದು ಜ್ಞಾನ ಭಕ್ತಿ ವೈರಾಗ್ಯಯುಕ್ತವಾದ ಭಗವಂತನ ಉಪಾಸನೆಯೆಂಬ ಉಪವಾಸವೇ ಫ್ರಾಧಾನ್ಯ!
ಜ್ಞಾನೇನೈವ ಪರಂ ಪದಮ್...
ಜ್ಞಾನದಿಂದಲೇ ಮೋಕ್ಷವೆಂಬದನ್ನರಿತು ಆ ದಿಸೆಯಲ್ಲಿ ಮಹಾಭಾರತದ
ಅಜ್ಞಾತಂ ಕರ್ಮಾಣಿ ಕೃತ್ವಾ......ಎಂಬ ಶ್ಲೋಕದ ಭಾವದಂತೆ ಹೇಳುವುದಾದರೇ ಜ್ಞಾನವಿಲ್ಲದೇ ಮಾಡಿದ ಕರ್ಮದಿಂದ ಆಯಾಸವೇ ಹೊರತು ಮತ್ತೇನೂ ಪ್ರಯೋಜನವಿಲ್ಲಾ.ಭಗವಧ್ಭಕ್ತಿ ಇಲ್ಲದವನ ಅಗ್ನಿಹೋತ್ರಾದಿ ಕರ್ಮಗಳೂ ಪಾಪವನ್ನು ನಾಶಮಾಡುವುದಿಲ್ಲ.
ನಾರದರ ಭಕ್ತಿಗೆ ಸರಿಸಾಟಿಯಿಲ್ಲ.ಅವರ ಭಕ್ತಿ ಸೂತ್ರಗಳ ಹಾದಿಯಂತೆ ನಮ್ಮೆಲ್ಲರ ಮೂಲಗುರು ನಮ್ಮೊಳಗೇ ಇರುವ ಮೂಲೇಶಾತ್ಮಕ ಭಗವಂತನನ್ನು ಕಾಣುವ ಮಾರ್ಗವನ್ನು ನಾವೆಲ್ಲರೂ ಹನುಮನ ಮನೆಯವರು(ಪ್ರಸನ್ನತೀರ್ಥರ ಕೃತಿಯಂತೆ)..ಆಗಿ ಮಧ್ವಸಿದ್ಧಾಂತದನ್ವಯವಾಗಿ ...ತಾರತಮ್ಯೋಪೇತವಾಗಿ ಜ್ಞಾನ ಭಕ್ತಿವೈರಾಗ್ಯಾದಿಗಳ ಮೂಲಕ ಭಗವಂತನ ಕಾಣುವ ಪ್ರಯತ್ನ ಮಾಡಬೇಕೂ ..ಇದನ್ನು ಬಿಟ್ಟು ನಾರಿಯ ಭೋಗ, ಶರೀರಕೆ ಸುಖ, ತೊರೆದ ಮಾತ್ರದಿಂದ ಯಾವುದೇ ಪ್ರಯೋಜನ ವಿಲ್ಲಾ..
ಇಲ್ಲಿ ನಾವು ಇನ್ನೊಂದೂ ಅನುಸಂಧಾನವನ್ನು ...ಮಾಡುವುದಾದರೇ ..ಭಗವಂತ ನಮಗೆ ಈ ಇಹ ಲೋಕದಲ್ಲಿ ತಾನಾಗಿಯೇ ನೀಡಿದ ಸಕಲ ಸೌಭಾಗ್ಯ ಸುಖಭೋಗಾದಿಗಳನ್ನು ..ಅವನ ಕಾರುಣ್ಯವನ್ನು ಸ್ಮರಿಸುತ್ತಾ...ಅವನೀಗೇ ಭಗವದರ್ಪಣ ಬುದ್ಧಿಯಿಂದ ಅರ್ಪಿಸಿದಲ್ಲಿ...
ಕೆರೆಯ ನೀರನು ಕೆರೆಗೆ ಚೆಲ್ಲಿ..... ಎಂಬಂತೆ ನಮ್ಮ ಜನ್ಮಸಾರ್ಥಕ್ಯವನ್ನು ಹೊಂದಲು ಸಾಧ್ಯ!
ನಂದೇನದೋ ಸ್ವಾಮಿ ನಿಂದೇ ಇದೆಲ್ಲವೂ... ಎಂಬ ನಿತ್ಯ ನಿರಂತರ ಅನುಸಂಧಾನ ನಮ್ಮಲ್ಲಿ ಜಾಗ್ರತವಾಗಿರಿಸಿಕೊಂಡೂ..ಭಾಗವತಧರ್ಮಾ(೩೦) ನುಷ್ಟಪರರಾಗಿ ಭಗವಂತನನ್ನ ಕಾಣುವ ತವಕವು ಒಬ್ಬ ಪ್ರಿಯಕರ ಪ್ರಿಯತಮೆಯನ್ನು ಕಾಣುವತವಕಕಿಂತ ಅತಿ ಹೆಚ್ಚು ಅರ್ಥಾತ್ ತನ್ನನ್ನು ತಾನುಪ್ರೀತಿಸುವುದಕ್ಕಿಂತ ಹೆಚ್ಚಾಗಿಭಗವಂತನನ್ನು ಪ್ರೀತಿಸುವ ಮನೋಭಾವ ನಮ್ಮಲ್ಲಿ ಬೆಳೆಸಿಕೊಳ್ಳಬೇಕೂ..ಇದು ಬರಲು ಹೇಗೇ ಸಾಧ್ಯ! ? ಎಂದಾಗ...ನಮ್ಮ ವಾಸ್ತವ ಸತ್ಯತ್ವವನ್ನು ಅರಿಯಬೇಕು.ಯಾವುದು ಶಾಶ್ವತ ?ಯಾವುದು ಅಶಾಶ್ವತ?
ತಾನಲ್ಲಾ...ತನ್ನದಲ್ಲಾ ಆಸೆ ತರವಲ್ಲಾ..ಮುಂದೆ ಬಾಹೋದಲ್ಲಾ.....ದಾಸನಾಗೋ ವಿಶೇಷನಾಗೋ......ಎಂಬ ದಾಸಾರ್ಯರ ಎಚ್ಚರಿಕೆ ಗಂಟೆಗೆ ಕಿಗೊಡಬೇಕೂ..ಈ ಸಾಧನ ಶರೀರಕೊಟ್ಟ ಭಗವಂತನ ಅಪಾರ ಕಾರುಣ್ಯ ಸ್ಮರಣೆಗೆ ತಂದುಕೊಳ್ಳಬೇಕೂ..ನಮ್ಮ ಅಸ್ವಾಂತ್ರ್ಯ ಅಸಹಾಯಕತೆ...ಪರಾಧೀನತೆ ಅರಿತೂ ಭಗವಂತನ ಸರ್ವೋತ್ತಮತ್ವ ಕ್ಷಣಕನಂತ ಅಪರಾಧ ಮಾಡುವ ನಮ್ಮಲ್ಲಿ
ಭಿನ್ನಹಕೆ ಬಾಯಿಲ್ಲವಯ್ಯಾ...ಅನಂತ ಅಫರಾಧ ಎನ್ನಲ್ಲಿ ಇರಲಾಗಿ.....ಎಂಬ ಮನೋಭಾವ ಹೊಂದಿ ..ಜೀವಿಯ ಜೀವನದ ವಾಸ್ತವತೆಯನ್ನ
ಅಲ್ಲಿದೇ ನಮ್ಮನೇ ಇಲ್ಲಿ ಬಂದೆ ಸುಮ್ಮನೆ....
ಎಂಬಂತೇ..ಅರಿತೂ ಅರಿಷಡ್ವರ್ಗಗಳ ಧಾಳಿಗೆ ಬಲಿಯಾಗದೇ ಶಾಶ್ವತ ಸುಖ ಮೋಕ್ಷದೆಡೆಗೆ ತನುಮನವನ್ನು ಸಿದ್ಧಗೊಳಿಸಿಕೊಂಡು
ಪ್ರಾಣಪತಿ ಹೃದಯಾಬ್ಜ ಮಂಟಪ ಧ್ಯಾನಗೋಚರನಾಗಿ ಕಣ್ಣಿಗೇ ಕಾಣಿಸುವೇ ಶ್ರೀರಂಗವಿಠಲ...ಎಂಬ ಶ್ರಿಪಾದರಾಜರ ವಾಣಿಯಂತೆ ...ಹರಿವಾಯುಗುರುಗಳ ಪ್ರೇರಣಾನುಸಾರವಾಗಿ ಸತ್ಪಥದಲ್ಲಿ ಸಾಗಿ ....
*ದಾಸ ದಾಸರ ದಾಸಾನುದಾಸರಾಗಿ ...ಭಗವಂತನೆಂಬ ಮೂಲಗುರುವಿಗೆ ಗುಲಾಮರಾಗುವ ಮೂಲಕ ಆ ಭಗವಂತನ ಪರಂಧಾಮವನ್ನು ಹೊಂದುವ ಸೌಭಾಗ್ಯವನ್ನು ಹೊಂದುವಂತಾಗಲಿ ಎಂಬ ಯಥಾಮತಿ ಅರ್ಥಾನುಸಂಧಾನ&ಚಿಂತನವನ್ನು ಪುರಂದರದಾಸಾರ್ಯಂತರ್ಗತ ಗುರುಗಳಂತರ್ಗತ ಭಾರತೀರಮಣ ಮುಖ್ಯಪ್ರಾಣಾಂತರ್ಗತ ಶ್ರೀಸುಗುಣವಿಠಲಾರ್ಪಣಮಸ್ತು.
***
ಪುರಂದರೋಪನಿಷತ್🙏🌹
ಚಿಂತನ.....✍...........
ಶ್ರೀಸುಗುಣವಿಠಲ
ಮಾಲಿಕೆ:6
🦜🦜🦜🦜🦜🦜🦜
ಆಗಮಗಳ ಸಾರ ದಾಸರ ಕೃತಿಗಳಲ್ಲಿ....
ಸಕಲ ಚೇತನಾ ಚೇತನ ಪ್ರಪಂಚವನ್ನು ಮುಖ್ಯವಾಗಿ ವಿಭಾಗಿಸುವುದಾದರೇ ಸರ್ವ ಸ್ವತಂತ್ರ್ಯನಾದ ಭಗವಂತನಾದ ಶ್ರೀವಿಷ್ಣು &ಅವನ ಆಧಿನದಲ್ಲಿರುವ ಸಕಲ ಚೇತನಾಚೇತನ ಜಗತ್ತು .ತದ್ವಿಷ್ಣೋಃ ಪರಮಂ.......(ಋಗ್ವೇದ ೧-೨೨-೨೦)..
ವಿಭುತ್ವಾತ್..ವಿಷ್ಣುರುಚ್ಯತೇ...(ಕೂರ್ಮಪುರಾಣ..೪೮-೧೧)
ವಿಷ್ಣು-- ವಿ=ವಿಷಷ್ಟ, ಪೂರ್ಣ *ಷ=ಚೇಷ್ಟಕ,
ಣ=ಸುಖ,
ಉ= ಸ್ವಾಭಾವಿಕ ಸಹಜವಾಗಿಯೇ ಸರ್ವವ್ಯಾಪ್ತ ಸರ್ವಪ್ರೇರಕ, ಸುಖಾದಿ ಸಕಲಗುಣಪರಿಪೂರ್ಣ.ಅರ್ಥಾತ್...
ಜಗತ್ತಿನೆಲ್ಲೆಡೆ ಪ್ರವೇಶಿಸಿ, ಅಣುರೇಣುತೃಣಕಾಷ್ಟ ಪರಿಪೂರ್ಣನಾಗಿ ಸರ್ವತ್ರವ್ಯಾಪ್ತನಾದವನು
ವಿಷ್ಣು
ಸನಾತನಾದ ಪರಮಾತ್ಮನುಸರ್ವವೇದಗಳಿಂದ ಸ್ತುತಿಸಲ್ಪಟ್ಟಿದ್ದಾನೆ.ಸರ್ವೋತ್ತಮನಾದ ವಿಷ್ಣು ಸರ್ವರಿಗೂ ಪರಮ ಆಶ್ರಯನಾಗಿದ್ದಾನೆ .ಎಂಬುದುಶಾಸ್ತ್ರಗಳ &ಸರ್ವಜ್ಞಾನಿಗಳ ಮಾತು!.
ಇದೇ ಸಾರವನ್ನು ಜಗತ್ತಿಗೇ ತಮ್ಮ ಹಲವಾರು ಕೃತಿಗಳ ಮೂಲಕ ಸಾಮಾನ್ಯರ ಜನಮನಕ್ಕೂ ತಲುಪುವ ರೀತಿಯಲ್ಲಿ ಮನೆಮನೆಯಲ್ಲೂ ಮನಮನದಲ್ಲೂ ಉತ್ತಿ ಬಿತ್ತಿ ಬೆಳೆಸಿದವರು ಪುರಂದರದಾಸರು.!.ಅಂದು-ಇಂದು-ಎಂದೆಂದಿಗೂ ಸರ್ವಕಾಲಿಗ ಜಗತ್ ಸತ್ಯವನ್ನು ವೇದೋಪನಿಷತ್ಗಳ ಸಾರವನ್ನು ತಮ್ಮ ಕೃತಿಗಳಲ್ಲಿ ಸೆರೆಹಿಡಿದು ಸಮಸ್ತ ಮಾನವ ಸಮಾಜಕ್ಕೆ ಹಂಚಿದ
ಪೂತಾತ್ಮರು ನಮ್ಮ ಪುರಂದರದಾಸರು!!.
ಅವುಗಳ ವೈಶಿಷ್ಟ್ಯದ ಸವಿಯನ್ನು ಸವಿಯುವ ಪ್ರಯತ್ನವನ್ನು ಯಥಾಮತಿಯಾಗಿ ನಾವು ಮಾಡುವುದಾದರೇ....
ವಿದಿತ ದೈವಗಳೆಲ್ಲಾ ವಿಷ್ಣುವಿನ ಹಿಂದೆ....
ಎಂಬ ಕೃತಿಯಲ್ಲಿ ..ವಿಷ್ಣುವಿನ ಸರ್ವೋತ್ತಮತ್ವವನ್ನು, ಶ್ರೇಷ್ಠವಾಗಿ ದಿಟ್ಟತನದಿಂದ ಗಟ್ಟಿಯಾಗಿ...ಪ್ರತಿಜ್ಞಾರೂಪದಲ್ಲಿ ಪ್ರತಿಪಾದನೆ ಮಾಡಿದ್ದಾರೆ.
*ಹಾವಿನಹೆಡೆಯನ್ನಾದರೂ ಹಿಡಿದು ಹೇಳಬಯಸುವಲ್ಲಿ ದಾಸರ ಹರಿಸರ್ವೋತ್ತಮತ್ವದ ಜ್ಞಾನದಲ್ಲಿನ ಧೃಢತೆ ಕಣ್ಣೆದುರು ಸ್ಪುಟವಾಗಿ ನಿಲ್ಲುತ್ತದೆ.
ಇದಕೆ ತಪ್ಪಿದರೇ ನಾ ಫಣಿಫಣವ ಪಿಡಿವೆ....ಎಂಬಮಾತು.. ಅದೇ ಕಾಲದ ಶ್ರೀವಾದಿರಾಜ ಗುರುಸಾರ್ವಭೌಮರಂತ ಜ್ಞಾನಿವರೇಣ್ಯರ *ಯುಕ್ತಿಮಲ್ಲಿಕಾ, ಶೃತಿತತ್ವಪ್ರಕಾಶಾದಿ ಶಾಸ್ತ್ರ ಗ್ರಂಥಾದಿಗಳಲ್ಲಿ ಇದೇ ವಿಚಾರವಾಗಿ ಪೂರಕ ವಿಮರ್ಶೆ ಮಾಡಿ ಪ್ರತಿಪಾದಿಸಿರುವುದನ್ನು ಕಾಣುತ್ತೇವೆ.
ಸರ್ವದೇವತೆಗಳಲ್ಲಿ ವಿಷ್ಣು, ತೀರ್ಥಗಳಲ್ಲಿ ಸಾಲಿಗ್ರಾಮ, ವೃಕ್ಷಾದಿಗಳಲ್ಲಿ ತುಳಸಿ, ದ್ರವ್ಯಗಳಲ್ಲಿ ವಿದ್ಯೆ, ಮತಗಳಲ್ಲಿ ಮಧ್ವಮತ , ಶ್ರೇಷ್ಠವೆಂದು ಘಂಟಾಘೋಷವಾಗಿ ಸಾರಿದ್ದಾರೆ ದಾಸಾರ್ಯರು.!.
ದೇವ ಬಂದಾ ನಮ್ಮ ಸ್ವಾಮಿ ಬಂದಾನೋ ದೇವರ ದೇವ ಶಿಖಾಮಣಿ ಬಂದಾನೋ.....ಎಂಬುದಾಗಿ,
ಅಂದೇ ನಿರ್ಣಯಿಸಿದರು ಕಾಣೋ..ಇಂದಿರಾಪತಿ ಪರದೈವವೆಂದು....*ಎಂಬ ದೇವರನಾಮದಲ್ಲಿ ಭಾಗವತದ ಎರಡನೇ ಸ್ಕಂದದ ೫ನೇ ಅಧ್ಯಾಯದಲ್ಲಿ ಬ್ರಹ್ಮದೇವರು ನಾರದರಿಗೆ ಹರಿಸರ್ವೋತ್ತಮತೆಯನ್ನು ಉಪದೇಶಿಸಿದ ಬಗ್ಗೆ ಉಲ್ಲೇಖಿಸಿದ್ದಾರೆ..ಇಲ್ಲಿ ನಾರದರು ಬ್ರಹ್ಮದೇವರನ್ನೇ ಸಕಲ ಸೃಷ್ಠಿಕರ್ತರೆಂದು ಭಾಸವಾಗು ವಂತೆ ಪ್ರಶ್ನಿಸಿದಾಗ..ಅವರ ಮುಗ್ಧ ಪ್ರಶ್ನೆಗೆ ..ಉತ್ತರವನ್ನು ಕೊಡುತ್ತಾ..ಸಮಸ್ತ ಸೃಷ್ಠಿ ಸ್ಥಿತಿ ಲಯಾದಿಗಳೆಲ್ಲವೂ ಶ್ರೀಹರಿಯಿಂದಲೇ ನಡೆಯುತ್ತಿದ್ದೂ ಅವನೇ ಸರ್ವೋತ್ತಮನೆಂದು ನಿರೂಪಿಸಿರುವುದನ್ನೇ ಈ ಕೃತಿಯಲ್ಲಿ ನಿರೂಪಿಸಿದ್ದಾರೆ..ದಾಸಾರ್ಯರು.!.
ಬ್ರಹ್ಮದೇವರ ಮಾತನ್ನು ನೋಡುವುದಾದರೇ...
ನಮಸ್ತಸ್ಮೈ..ಭಗವತೇವಾಸುದೇವಾಯ.....೫-೧೨.
ವಾಸುದೇವಾತ್ ಪರೋ ಬ್ರಹ್ಮನ್ ......೧೧-೧೪-೧೫
ಹೀಗೇ ದಾಸರ ಹಾರ್ದ ಅರ್ಥವಾಗಬೇಕಾದರೇ ಭಾಗವತಾದಿ ವೇದೋಪನಿಷತ್ಗಳ ಮೂಲಗ್ರಂಥಗಳ ಪರಿಜ್ಞಾನ ಅವಶ್ಯ. ಕೇವಲ ಕನ್ನಡ ಭಾಷಾ ಜ್ಞಾನ ಸಾಲದು!.
ಕೂಸಿನ ಕಂಡೀರಾ ಜ್ಞಾನಿಗಳೆಲ್ಲಾ..ಕೂಸಿನ ಕಂಡೀರಾ... ಎಂಬ ಕೃತಿಯಲ್ಲಿ..ಭಗವಂತನ ಸಾನ್ನಿಧ್ಯ, ತೇಜಸ್ತ್ವ, ಸರ್ವಜ್ಞತ್ವ, ವ್ಯಾಪಕತ್ವ, ಸಮಸ್ತವಿಚಾರಗಳನ್ನು ಅರುಹುವ ಅಧ್ಭುತವಾದ ಕೃತಿಯಾಗಿದೆ.
ಅಲ್ಲಿ ನೋಡಲು ರಾಮ ಇಲ್ಲಿ ನೋಡಲು ರಾಮ ಎಲ್ಲೆಲ್ಲಿ ನೋಡಿದರಲ್ಲೇ ಶ್ರೀರಾಮ.... .ಎಂಬ ಕೃತಿಯಲ್ಲಿ.. ಖರದೂಷಣಾದಿಗಳನ್ನು ಸಂಹರಿಸಲು ಶ್ರೀರಾಮದೇವರು ಅವರಿಗೆ ಒಬ್ಬೊಬ್ಬರಿಗೂ ಒಬ್ಬೊಬ್ಬ ರಾಮನಾಗಿ ತೋರಿದ ಮಹಿಮೆ ...ನಿರೂಪಿಸುವುದರ ಮೂಲಕ....
ಸ ಏವ ಸರ್ವತ್ರ ಚ ದೃಶ್ಯಮಾನೋ ವಿದಿಕ್ಷು ದಿಕ್ಷು ಪ್ರಜಹಾರ ಸರ್ವಶಃ(೮--೧೮೩)..ಹೀಗೆ ದಾಸರು ಮೂಲಗ್ರಂಥಗಳನ್ನು ಯಥಾವತ್ತಾಗಿ ಅನುವಾದ ಮಾಡಿ ಅದರ ಸವಿಯನ್ನು ನಮಗೆಲ್ಲಾ ಉಣಬಡಿಸಿದ್ದಾರೆ.!.
ನರಸಿಂಹ ಮಂತ್ರವೊಂದಿರಲು ಸಾಕೂ ದುರಿತಕೋಟಿಯ ತರಿದು ಭಾಗ್ಯವನೆ ಕೊಡುವ......
ಎಂಬ ಕೃತಿಯ ಮೂಲಕ
ನೃಸಿಂಹಾದಿಕಮನ್ಯಚ್ಚ ದುರಿತಾದಿ ನಿವೃತ್ತಯೇ.....ಎಂಬ
ಬ್ರಹ್ಮಸೂತ್ರದ ಭಾವವನ್ನು ಅರುಹಿದ್ದಾರೆ.
ಇಂಥ ಅನೇಕ ಪ್ರಮೇಯ ಮೂಲಗ್ರಂಥಗಳ ಭಾವವನ್ನು ಸಾರವನ್ನು ಸರಳ ಸವಿಗನ್ನಡದ ಕೃತಿಗಳಲ್ಲಿ ಸಾಮಾನ್ಯರಿಗೂ ಅರಿಯುವಂತೆ ಲಕ್ಷಾದಿ ಕೃತಿಗಳ ಮೂಲಕ ಎಂದೆಂದಿಗು ಜನಮನದಲ್ಲಿ ಶಾಶ್ವತನೆಲೆಯಾಗಿ ನಿಂತ ಪುರಂದರದಾಸರ ಅನುಗ್ರಹನ್ನು ಸದಾ ಪ್ರಾರ್ಥಿಸುವುದರ ಮೂಲಕ ಭಗವತ್ ತತ್ವವನ್ನು ತಿಳಿಯುವ ಪ್ರಯತ್ನದ ನಾವೆಲ್ಲಾ ಸಾಗುವಂತಾಗಲೀ ಎಂಬ ಯಥಾಮತಿ ಚಿಂತನ ದೊಂದಿಗೆ ಶ್ರೀ ಪುರಂದರದಾಸಾಂತರ್ಗತ ಗುರುವಂತರ್ಗತ ಭಾರತೀರಮಣ ಮುಖ್ಯಪ್ರಾಣಾಂತರ್ಗತ ಶ್ರೀಸುಗುಣವಿಠಲಾರ್ಪಣಮಸ್ತು.
***
No comments:
Post a Comment