Monday, 1 July 2019

varada vittala dasaru kavithala 1935 karteeka shukla chaturdashi ವರದ ವಿಠ್ಠಲ ದಾಸರು

.
Sri. Varada Vittala Dasaru
Original Name: Sri Hunamantha Rao
Period: 1872 - 1935
Ankita: Varada Vittala
Preceptor: Sri. Guru Jagannatha Vittala Dasa
Place: Kavithala

Aradhana: Karthika Shudda Chaturdashi
ಶ್ರೀ ವರದವಿಠಲದಾಸಾರ್ಯರ ಆರಾಧನ ಪರ್ವಕಾಲ  ಕಾರ್ತೀಕ ಶುಕ್ಲ ಚತುರ್ದಶಿ  ಕಿಂಚಿತ್  ಸ್ಮರಣೆ 🙏🙏

ಗುರುಪೂರ್ವ ಜಗನ್ನಾಥ 
ದಾಸಾರ್ಯಪಾದಸೇವಕಮ್|
ಕೌತಾಳಪುರ ವಾಸ್ತವ್ಯಮ್
ವಂದೇ ವರದವಿಠಲಮ್||

ಎಂದು ಶ್ರೀ ಗುರುಜಗನ್ನಾಥ ದಾಸಾರ್ಯರ ಶಿಷ್ಯವರ್ಗದಲ್ಲಿ ಕೊಂಡಾಡಲ್ಪಡುವವರು ಶ್ರೀಕರಣಂ ಹನುಮಂತರಾಯರು (ವರದ ವಿಠಲ ದಾಸವರ್ಯರು).(ಕ್ರೀ.ಶ. 1872- 1935). ಆದವಾನಿ ಪಟ್ಟಣಕ್ಕೇ ಪಶ್ಚಿಮಕ್ಕೇ 30 ಕಿ.ಮಿ. ದೂರದಲ್ಲಿ ಕೌತಾಳ ಗ್ರಾಮವಿದ್ದು ಅದು ಶ್ರೀ ಅವಧೂತ ರಂಗಯ್ಯನವರೆಂಬ ಮಹಾತ್ಮರ ದಿವ್ಯ ಸನ್ನಿಧಾನ ವಿಶೇಷದಿಂದ ಕೂಡಿದ್ದಾಗಿ ಧರ್ಮಕ್ಕೆ ತವರೂರಾಗಿತ್ತು. ಆ ಗ್ರಾಮಕ್ಕೇ ಶ್ರೀಕರಣಂ ಹನುಮಂತರಾಯರು   ಕರಣಿಕರಾಗಿದ್ದರು. ದುಷ್ಕರ್ಮವಶಾತ್, ಹನುಮಂತರಾಯರು ಪ್ರಬಲವ್ಯಾಧಿ ಪೀಡಿತರಾಗಿ, ಮಾಡಿದ ಅನೇಕ ಪ್ರಯತ್ನಗಳು ವಿಫಲವಾದವು. ಯಾವ ಔಷದವೂ ಪ್ರಭಾವ ಬೀರಲಿಲ್ಲ. ಎಲ್ಲರೂ ಹನುಮಂತರಾಯರನ್ನು ಕೈಬಿಟ್ಟರು. ದಿಕ್ಕುತೋಚದಾಯಿತು. ಹನುಮಂತರಾಯರ ಪತ್ನಿ ವೆಂಕಮ್ಮ ಮೋದಲಕಲ್ ಶ್ರೀ ಶೇಷದಾಸರ (ಶ್ರೀ ಗುರು ವಿಜಯವಿಠಲಾಂಕಿತರ)  ಮಮ್ಮೊಗಳು. ಸಂಕಟ ಪರಿಸ್ಥಿತಿ ಬಂದಾಗ ವೆಂಕಮ್ಮ ತಮ್ಮ ತಾತನವರಾದ ಶ್ರೀ ಶೇಷದಾಸರನ್ನು ಮೋರೆಹೋದಾಗ, ವಿರುಪಾಪುರದಲ್ಲಿರುವ ಶ್ರೀ ಗುರುಜಗನ್ನಾಥ ದಾಸಾರ್ಯರನ್ನು ಮೊರೆಹೊಕ್ಕರೇ ಹನುಮಂತರಾಯರು ಉಳಿಯಬಹುದೆಂದು ತಿಳಿಸುತ್ತಾರೆ. ಅದರಂತೇ ವೆಂಕಮ್ಮ ವಿರೂಪಾಪುರದಲ್ಲಿ ವಾಸಿಸುತ್ತಿರುವ ಶ್ರೀ ಗುರುಜಗನ್ನಾಥ ದಾಸಾರ್ಯರ ಪಾದಕ್ಕೆ ಶಿರಬಾಗಿ ತನ್ನ ಮಾಂಗಲ್ಯವನ್ನು ಕಾಪಾಡಬೇಕೆಂದು ಬೇಡಿದಳು. ಕಾರುಣ್ಯಮೂರ್ತೀಗಳಾದ ಶ್ರೀ ದಾಸಾರ್ಯರು ವೆಂಕಮ್ಮಳ ಪ್ರಾರ್ಥನೆ ಮೇರೆಗೆ ಶ್ರೀ ಗುರುರಾಜರನ್ನು ಕರೆದುಕೊಂಡು ಕೌತಾಳಕ್ಕೆ ಪ್ರಯಾಣಬೆಳೆಸಿದರು. "ಷಷ್ಟಧಿಶತತ್ರಯರೋಗಹಂತ"ರೆಂದು ಖ್ಯಾತಿಯುಳ್ಳ ಶ್ರೀ ಗುರುರಾಜರನ್ನು  
ಶ್ರೀ ಗುರುಜಗನ್ನಾಥದಾಸಾರ್ಯರು 

 "ಗುರುರಾಜ ಗುರುಸಾರ್ವಭೌಮ..
.. .. ..
 ಕರುಣಸಾಗರನೆಂದು ಚರಣವ ನಂಬಿದೆ ಶರಣನಪಾಲಿಸು ಕರುಣಿಯೇ" ಎಂದು ಶ್ರೀಗುರುಸಾರ್ವಭೌಮರನ್ನು  ೨೬ನುಡಿಯ ಕೀರ್ತನೆಯಿಂದ ಪ್ರಾರ್ಥಿಸಿ,   ಹನುಮಂತ ರಾಯರ ಪ್ರಬಲ ವ್ಯಾಧಿಯನ್ನು  ಪರಿಹರಿಸಿದರು. 

ಅಪಮೃತ್ಯುಪರಿಹಾರವಾಗಿ ಪುನರ್ಜನ್ಮ ಪಡೆದ ಹನುಮಂತರಾಯರು, ಶ್ರೀ ದಾಸಾರ್ಯರ ಉಪದೇಶಾಮೃತ ಪಡೆದು, ಧನ್ಯರಾಗಿ ಹರಿದಾಸದೀಕ್ಷೆಯನ್ನು ಹೊಂದಿ ವರದವಿಠಲದಾಸರಾಗಿ ಪ್ರಸಿದ್ಧಿಪಡೆದರು.

ತಮ್ಮ ಉಪದೇಶಾಮೃತದಿಂದ ಉಧೃತರಾದ  ಶ್ರೀವರದವಿಠಲರ ಶಿರಸ್ಸಿನಮೇಲೇ ತಮ್ಮ ಅಮೃತಹಸ್ತವಿಟ್ಟು ಶ್ರೀ ಗುರುರಾಜರನ್ನು "ಇವನ ಪೋರೆಯೇ ನಿನಗೆ ಖ್ಯಾತಿ ಭುವನ ದೋಳಗೆ ಬಪ್ಪೊದಯ್ಯ ದೂತಜನಪಾಲ ಗುರುಜಗನ್ನಾಥವಿಠಲ ತಾನೆ ಪ್ರೀತ ನಾಗುವನು" ಎಂದು ಪ್ರಾರ್ಥಿಸಿ, 

"ಇನ್ನೇನು ಭಯವಿಲ್ಲ ನಿನಗೆ
ಘನ್ನಗುರುವರವಾದ ಭಜಿಸೊ ಮನದೊಳಗೇ ||ಪ||

ಬನ್ನಗೊಳಿಸುವಾ ವ್ಯಾಧಿ
ಮುನ್ನಬಾರದೋ ಮಗುವೇ ||ಅ.ಪ.||

ಆವ ಜನ್ಮದ ಕರ್ಮ ಶೇಷದಲಿಂದ
ಈ ವಿಧದ ವ್ಯಾಧಿ ಸಂಭವಿಸಿತಲ್ಲಾ
ಕೋವಿದೋತ್ತಮರಪಾದ ಸೇವೆಸತ್ಕಾರದಿಂದಲೇ
ತಾವಕನು ನೀನೆಂದು ಗುರುರಾಯ ಪೂರೆವಾ || ೧ ||

ಏನು ಕರುಣವೋ ಗುರುವರಗೆ ನಿನ್ನಲಿ
ನೀನೇನು ಧನ್ಯನೋ ಈ ಲೋಕದಲ್ಲೀ
ದೀನಭಾವವ ನೋಡಿ ದೀನವತ್ಸಲ ಬಂದು
ತಾನೆ ಕರುಣದಿ ಪೂರೆದ ಮೇಲೇ||೨||

ಅರಿಯದಿಹ ನರರಿಗಾಶ್ಚರ್ಯ ತೋರಲೋಸುಗದಿ
ಮರೆಯದಂತೆ ಮನಕೆ ಕುರುಹು ಮಾಡಿ
ಧರಯೊಳಗೀ ಗುರುವರಗೆ ಸರಿಯಿಲ್ಲ
ಗುರುಜಗನ್ನಾಥವಿಠಲ ತಾನೇ ಬಲ್ಲಾ|| "

 ಎಂದು ಅಭಯಪ್ರದಾನ ಮಾಡಿದರು.
ಪುನರ್ಜನ್ಮ ಪಡೆದ ಹನುಮಂತರಾಯರು, ಶ್ರೀ ದಾಸಾರ್ಯರ ಉಪದೇಶಾಮೃತ ಪಡೆದು, ಧನ್ಯರಾಗಿ ಹರಿದಾಸದೀಕ್ಷೆಯನ್ನು ಹೊಂದಿ ವರದವಿಠಲದಾಸರಾಗಿ ಪ್ರಸಿದ್ಧಿಪಡೆದರು.

ಶ್ರೀ ವರದವಿಠಲದಾಸರು ಅನೇಕ ಕೃತಿಗಳನ್ನು  ಮಾಡಿ ಹರಿದಾಸಸಾಹಿತ್ಯಕ್ಕೆ ತಮ್ಮದೇ ಆದ ವಿಶಿಷ್ಟಕೊಡುಗೆಯನ್ನು  ನೀಡಿದ್ದಾರೆ.ತಮ್ಮ ಯಾವಜ್ಜೀವನ ಪರ್ಯಂತ ಶ್ರೀ ಗುರು ಜಗನ್ನಾಥ ದಾಸಾರ್ಯರನ್ನು ಸೇವಿಸಿ ಕೃತಾರ್ಥರಾಗಿದ್ದಾರೆ. ಗುರುಗಳ ಜ್ಞಾನ ಕಾರ್ಯದಲ್ಲಿ ತಮ್ಮ ಸಹಾಯಸಹಕಾರ ಗಳನ್ನು ಒದಗಿಸಿದ್ದಾರೆ. ಜ್ಞಾನಪಿಪಾಸುಗಳಿಗೇ ಸೂರ್ಯನಂತೇ ಭಾಸಮಾನವಾದ, ಕ್ರೀ.ಶ.1908ರಲ್ಲಿ ಶ್ರೀ ಗುರುಜಗನ್ನಾಥ ದಾಸಾರ್ಯರು ಪ್ರಾರಂಭಿಸಿದ "ತತ್ವ ಪ್ರಕಾಶಿಕಾ" ಎಂಬುವ ಪತ್ರಿಕೆಯನ್ನು ಬಳ್ಳಾರಿಯಲ್ಲಿ ಮುದ್ರಣಮಾಡಿಸಿ ಪ್ರಕಾಶನಮಾಡುವ ಕಾರ್ಯದಲ್ಲಿ ಶ್ರೀ ವರದವಿಠಲಾರ್ಯರ ಪಾತ್ರ ಮಹತ್ತರ ವಾದದ್ದು. ಅಂದಿನ ಕಾಲದಲ್ಲಿ ಆಚಾರ್ಯ ಮಧ್ವರ ತತ್ವವಾದ ಭೂಷಿತವಾಗಿ ಅನೇಕ ಪ್ರೌಢಗ್ರಂಥಗಳ ಮೂಲ, ವ್ಯಾಖ್ಯಾನ ವಿಶೇಷಗಳಿಂದ ಕೂಡಿದ ತತ್ವ ಪ್ರಕಾಶಿಕಾ ಪತ್ರಿಕೆ ಪ್ರೌಢಪಂಡಿತರ ಪ್ರಶಂಸೆಗೆ ಪಾತ್ರವಾಗಿ ಪ್ರಸಿದ್ಧಿಪಡೆದಿತ್ತು.

ಶ್ರೀ ಗುರುಜಗನ್ನಾಥದಾಸಾರ್ಯರ ನೆರಳಿ ನಂತೆಯಿದ್ದು  ಭಕ್ತಿಯಿಂದ ವಿಶೇಷಸೇವಾ ಗೈದವರು ಶ್ರೀ ವರದವಿಠಲದಾಸಾರ್ಯ ರೆಂದರೇ ತಪ್ಪಾಗಲಾರದು. ಕೊನೆಗೆ, ಶ್ರೀಗುರುಜಗನ್ನಾಥ ದಾಸವರ್ಯರು ತಮ್ಮ ಲೌಕಿಕಯಾತ್ರೆ ಪರಿಸಮಾಪ್ತಿ ಮಾಡಿದಾಗ, ಅವರ ಮಕ್ಕಳಾದ ಶ್ರೀ ರಾಘವೇಂದ್ರಾ ಚಾರ್ಯರು ದೂರಪ್ರದೇಶದಲ್ಲಿದ್ದ ಕಾರಣ, ಪ್ರೀತಿಯ ಶಿಷ್ಯರಾದ ಶ್ರೀ ವರದವಿಠಲ ದಾಸರು  ತಮ್ಮ ಆತ್ಮೋದ್ಧಾರಕರಾದ ಶ್ರೀ ಗುರುಗಳ ಅಂತ್ಯಸಂಸ್ಕಾರಗಳ   ಮಹಾಯಜ್ಞ ವನ್ನು ಸ್ವತಃ ನಿಂತು ಮಾಡಿದ ಭಾಗ್ಯ ಪಡೆದಿದ್ದಾರೆ. ಇಂತಹ ಮಹನೀಯರ ಸ್ಮರಣೆ ಪುಣ್ಯದಾಯಕವಾಗಿದೆ.
by ✍️ त्रिविक्रम प्रह्लादाचार्यः
***

Sri Varada Vittala Dasa1872-1935Hanumantha RaoVarada VittalaSri Guru Jagannatha Vittala DasaKavithalaKarthika Shudda Chaturdashi





No comments:

Post a Comment