Monday 1 July 2019

venugopala dasaru 1765 vaishakha shuddha dwiteeya ವೇಣುಗೋಪಾಲ ದಾಸರು


shri gurubyO namaha...hari Om....

vaishAka shudda dwitIya is the ArAdhane of shri vEnugOpAla dAsaru.

shri vEnugOpAla dAsaru:

gurugaLu: shri Vijaya dAsaru
Period: 1722 - 1765

He was a favorite of shri Vijaya dAsaru. He was previously known as diwan pangunAma timmaNNa dAsaru before he met vijaya dAsaru. He was also a good friend of shri gOpAla dAsaru. He was given the ankita in Adoni vijaya rAyara kaTTe by shri vijaya dAsaru. 

ವಿಜಯದಾಸಪದಾಸಕ್ತಮ್ ವಿಟಲೋಪಪದಸಂಯುತಮ್
ವೇಣುಗೋಪಾಲದಾಸಾಖ್ಯಂ
ದಾಸವರ್ಯಂಮಹಂಭಜೇ

shri vENugOpAla dAsa guruvAntargata, bhArathiramaNa mukhyaprANantargata rukmiNi sathyabhAma pate shri viTTala dEvara pAdAravindakke gOvindA gOvindA...

shri krishNArpaNamastu.

*************

info from dvaita.org--->


Sri Venugopala Dasaru (1728-1751)
Timmanna Dasa was called Venugopal Dasa. Venugopal Dasa was popularly known as Pangunamada Timmanna Dasa.
Timmanna Dasa was at Advani, now Adoni, and held a very high executive post under the sultanof Advani. He was diwan of the state. Later he was tired of worldy matters and renounced his diwanship. He sought Dasas discipleship.
It is believed that in his previous birth he was Vaikuntha Dasa and was in Belur. That was why he was called Pangunamada Timmanna Dasa. This name was givn to him by Vijya Dasa.
Timmanna Dasa wrote a number of songs under the Ankita, Venugopala Dasa. He is refered as Gopala Dasa. In his writings, style and thinking he belongs to Gopal Dasa group.

It is now believed that in the next birth Timmanna Dasa was born at Modalkal and is now known as Modalkal Shesha Dasa. 
****

shri vEnugOpAla dAsaru:

gurugaLu: shri Vijaya dAsaru
Period: 1722 - 1765

He was a favorite of shri Vijaya dAsaru. He was known as diwan pangunAma timmaNNa dAsaru before he met shri vijaya dAsaru. He was also a good friend of shri gOpAla dAsaru. He was given the ankita in Adoni vijaya rAyara kaTTe by shri vijaya dAsaru. 

ವಿಜಯದಾಸಪದಾಸಕ್ತಮ್ ವಿಟಲೋಪಪದಸಂಯುತಮ್
ವೇಣುಗೋಪಾಲದಾಸಾಖ್ಯಂ
ದಾಸವರ್ಯಂಮಹಂಭಜೇ

He was a steadfast devotee of shri bhAvisamIra VAdirAjara tIrtharu. He was previously born as shri vaikunTa dAsaru during the time of shri bhAvisamIra vAdirAjara tIrtharu. At that time, his bhakti in shri hari was so intense that shri hari himself appeared as a small boy and played with him. Shri vAdirAjaru noticed this and praised shri vaikunTa dAsaru in a dEvara nama. It goes like this - dAsOthama nIne, vaikunTa dAsOthamanu nInE.... 

shri vaikunTa dAsaru wanted to know the swarUpa of shri vAdirAjaru. Shri vAdirAjaru tells him that it would not be possible in his current birth. He would be born again as pangunAma timmaNNa dAsaru and would get the ankita of vENugOpAla viTTala. He would then extol the swarUpa of shri vAdirAjaru. 
*****
ಶ್ರೀ ವಿಜಯದಾಸಾರ್ಯರ ಪರಮ ಕಾರುಣ್ಯಕ್ಕೆ ಪಾತ್ರರಾದ, (ಹಿಂದೆ ಶ್ರೀ ಪಂಗನಾಮ ತಿಮ್ಮಣ್ಣದಾಸರಾದ- ಶ್ರೀ ವೈಕುಂಠದಾಸರು, ಇವರೇ ಮುಂದೆ ಮೊದಲಕಲ್ಲು ಶೇಷದಾಸರೂ ಹೌದು) ಆಗಿನ ಕಾಲದಲ್ಲಿ ಆದವಾನಿಯ ದೀವಾನರಾಗಿದ್ದರೂ, ಶ್ರೀ ವಿಜಯದಾಸಾರ್ಯರ ಕಾರುಣ್ಯದಂತೆ ವೈರಾಗ್ಯವನ್ನು ತಾಳಿ, ಪರಮಾತ್ಮನ ನಿತ್ಯ ಸೇವೆಯಲ್ಲಿ ನಿರತರಾಗಿ, ಪದ, ಪದ್ಯ ಸುಳಾದಿಗಳನ್ನು ರಚಿಸಿ ಸಜ್ಜನರ ಸಾಧನೆಗೆ ಹಾದಿಯನ್ನು ತೋರಿಸಿದವರಾದ, ಶಕ್ತಿಯಲ್ಲಿ ತಿಮ್ಮಣ್ಣ ಎಂದೇ ಹೆಸರಾದವರಾದ ಶ್ರೀ *ವೇಣುಗೋಪಾಲದಾಸಾರ್ಯರ ಮಧ್ಯಾರಾಧನಾ
***

ದಾಸರ ಹೆಸರು: ವೇಣುಗೋಪಾಲದಾಸರು
ಜನ್ಮ ಸ್ಥಳ: ಅದವಾನಿ
ತಂದೆ ಹೆಸರು: ರುಕ್ಮಣ್ಣ
ತಾಯಿ ಹೆಸರು: ಮಾಹಿತಿ ಲಭ್ಯವಿಲ್ಲ
ಕಾಲ: 1732 - 
ಅಂಕಿತನಾಮ: ವೇಣುಗೋಪಾಲವಿಠಲ
ಲಭ್ಯ ಕೀರ್ತನೆಗಳ ಸಂಖ್ಯೆ : 27
ಗುರುವಿನ ಹೆಸರು: ವಿಜಯದಾಸರು
ಆಶ್ರಯ: ಅದವಾನಿಯನನಾಬ ಬಸಾಲತ್ಜಂಗ್
ಪೂರ್ವಾಶ್ರಮದ ಹೆಸರು: ತಿಮ್ಮಣ್ಣ
ಮಕ್ಕಳು: ಅವರ ಹೆಸರು: ವಾಸಪ್ಪ ಎಂಬ ಮಗ - ಇವನನ್ನು ಇಸ್ಲಾಂಧರ್ಮಕ್ಕೆ ಮತಾಂತರ ಮಾಡಿಸಲಾಗಿತ್ತು.
ವೃತ್ತಿ: ಅದವಾನಿಯ ನವಾಬನ ಆಸ್ಥಾನದಲ್ಲಿ ದಿವಾನ
ಕಾಲವಾದ ಸ್ಥಳ ಮತ್ತು ದಿನ: ಮಲಗವೇಲಿಯೆಂಬ ಗ್ರಾಮ
********


" ಶ್ರೀ ರಾಯರ ಅಂತರಂಗ ಭಕ್ತರೂ - ಶ್ರೀ ವಿಜಯರಾಯರ ಕಾರುಣ್ಯಪಾತ್ರರೂ - ಶ್ರೀ ಗೋಪಾಲದಾಸರ ಆಪ್ತ ಮಿತ್ರರೂ ಆದ ಆದವಾನಿಯ ಶ್ರೀ ವೇಣುಗೋಪಾಲವಿಠ್ಠಲಾಂಕಿತ ದಿವಾನ್ ಶ್ರೀ ಪಂಗನಾಮ ತಿಮ್ಮಣ್ಣ ದಾಸರು "
ರಾಘವೇಂದ್ರ ಗುರುರಾಯರ -
ನಂಬಿದೇನೋ ।
ಯತಿವರ ಸುರದೇನೋ ।। ಪಲ್ಲವಿ ।।
.... ವರ ಸುಧೀಂದ್ರ ಕರಕಮಲದಿ ಸಂಜಾತ । ರಾಘವೇಂದ್ರ ವಿಖ್ಯಾತ । ಹರಿ ಸರ್ವೋತ್ತಮನೆಂಬ ಗ್ರಂಥಕೆ ಕರ್ತಾ । ಬಂದ ಜನರಿಗೆ ಮಾತಾ । ಎಲ್ಲರೊಂದೇ ಎಂಬ ಜನರನ್ನು ಗೆಲಿದಾತಾ । ವೃಂದಾವನದಿ ನಿಂತ ಭಕ್ತ ಜನರಿಷ್ಟಾರ್ಥವ ಕೊಡುವಾತಾ । ಹರಿ ಚರಣವ ಕಂಡಾತಾ । ವರವೃದ್ಧ ತನು ವೇಷದಿ ಮೆರೆದಾತಾ । ಜಯರಾಯರಿಗೆ ಪ್ರೀತಾ । ವೇಣು ಗೋಪಾಲವಿಠ್ಠಲನ ನಿಜ ದೂತಾ । ಹೊಂದಿದವರಿಗೆ ತಾತಾ ।। 3 ।।
" ಈದಿನ - ದಿನಾಂಕ :13.05.2021 ಗುರುವಾರ - ಪ್ಲವ ನಾಮ ಸಂವತ್ಸರ ಉತ್ತರಾಯಣ ವಸಂತ ಋತು ವೈಶಾಖ ಶುದ್ಧ ದ್ವಿತೀಯಾ - ಶ್ರೀ ಇಂದ್ರದೇವರ ಅಂಶ ಸಂಭೂತರಾದ ಶ್ರೀ ವೇಣುಗೋಪಾಲದಾಸರ ಆರಾಧನಾ ಮಹೋತ್ಸವ - ಆದವಾನಿ [ ಕರ್ನೂಲು ಜಿಲ್ಲೆ, ಆಂಧ್ರಪ್ರದೇಶ ] " 
" ಶ್ರೀ ಪಂಗನಾಮದ ತಿಮ್ಮಣ್ಣದಾಸರ ಸಂಕ್ಷಿಪ್ತ ಮಾಹಿತಿ "
ವಿಜಯದಾಸ ಪದಾಸಕ್ತಮ್ 
ವಿಠಲೋಪಪದ ಸಂಯುತಮ್ ।
ವೇಣುಗೋಪಾಲದಾಸಾಖ್ಯಂ
ದಾಸವರ್ಯಂ ಮಹಂಭಜೇ ।।
" ಹೆಸರು "
ಶ್ರೀ ಪಂಗನಾಮ ತಿಮ್ಮಣ್ಣದಾಸಾರ್ಯರು
ಕಾಲ: 
ಕ್ರೀ. ಶ . 1722-1768
" ಅಂಕಿತ " 
ಶ್ರೀ ವೇಣುಗೋಪಾಲವಿಠ್ಠಲ
" ಅಂಕಿತೋಪದೇಶ "
ಶ್ರೀ ವಿಜಯದಾಸರು 
" ಅಂಕಿತ ಪ್ರದಾನ ಪದ "
ರಾಗ : ಕಲ್ಯಾಣಿ   ತಾಳ : ಆದಿ 
ವೇಣುಗೋಪಾಲ ವಿಠ್ಠಲರೇಯಾ ।
ನಿನ್ನ ಪಾದರೇಣು -
ನಂಬಿದ ಮಾನವಾ ।
ಏನು ಅರಿಯದಲಿಪ್ಪ -
ನೀನೊಲಿದು ಕರುಣದಲಿ ।
ಜ್ಞಾನ ಭಕುತಿಯನು -
ಕೊಡುವದು ಸ್ವಾಮಿ ।। ಪಲ್ಲವಿ ।।
... ಓರ್ವನ ಪೆಸರುಗೊಂಡು -
ಪೇಳಲೇತಕೆ ಇನ್ನು ।
ಸರ್ವರನು ವಿಧದಲಿ ।
ಊರ್ವಿಯೊಳಗೆಯಿಟ್ಟು ಉದ್ಧರಿಸೆ ।
ಉರು ಕಾಲ ನಿರ್ವ್ಯಾಜದವನ ಮಾಡಿ ।।
ಸರ್ವರ ಗೋಸುಗ ನಾನು -
ತುತಿಸಿ ಯೋಗ್ಯರಿಗೆ ।
ಸರ್ವದಾ ಕೃಪೆ ಮಾಡೆಂದು ।
ಸರ್ವರಾಧಾರಿ ಸಿರಿ -
ವಿಜಯ ವಿಠ್ಠಲ ನಿನ್ನ ।
ಶರ್ವ ತುತಿಸಿ ಕಾಣ ನಾನೊಬ್ಬ
ಪೊಗಳುವೆನೆ ।। 3 ।।
" ಆಪ್ತ ಮಿತ್ರರು "
ಶ್ರೀ ಗೋಪಾಲದಾಸರು 
" ಸಮಕಾಲೀನ ಹರಿದಾಸರು "
ಶ್ರೀ ಹಯವದನವಿಠ್ಠಲರು [ ಶ್ರೀ ಆನಂದದಾಸರು, ಶ್ರೀ ವಿಜಯರಾಯರ ತಮ್ಮಂದಿರು ] - ಶ್ರೀ ಮೋಹನದಾಸರು - ಶ್ರೀ ವೇಂಕಟೇಶ ವಿಠ್ಠಲರು [ ಶ್ರೀ ಬೇಲೂರು ವೆಂಕಟದಾಸರು ] - ಶ್ರೀ ವೆಂಕಟವಿಠ್ಠಲರು [ ಶ್ರೀ ಹೊನ್ನಾಳಿ ವೆಂಕಪ್ಪಾಚಾರ್ಯರು ] - ಶ್ರೀ ಮುದ್ದುವಿಠ್ಠಲರು [ ಶ್ರೀ ಮೀನಪ್ಪ ದಾಸರು ] - ಶ್ರೀ ಗುರು ಮಧ್ವ್ವೇಶವಿಠ್ಠಲರು [ ಕೂಡ್ಲಿ ಶ್ರೀ ಮಧ್ವಾಚಾರ್ಯರು ] 
" ಶಿಷ್ಯರು "
ಶ್ರೀ ವ್ಯಾಸವಿಠ್ಠಲರು [ ಶ್ರೀ ಕಲ್ಲೂರು ಸುಬ್ಬಣ್ಣದಾಸರು ] - ಶ್ರೀ ರಾಮಚಂದ್ರ ವಿಠ್ಠಲರು - ಶ್ರೀ ಗುರು ವೇಣುಗೋಪಾಲವಿಠ್ಠಲರು - ಶ್ರೀ ತಂದೆ ವೇಣುಗೋಪಾಲವಿಠ್ಠಲರು - ಶ್ರೀ ಶಿರಿ ವೇಣುಗೋಪಾಲ ವಿಠ್ಠಲರು 
" ಶ್ರೀ ವೇಣು ಗೋಪಾಲದಾಸರಿಗೆ ಬಂದ ಅಪಮೃತ್ಯು ಪರಿಹಾರ "
ಶ್ರೀ ವೇಣುಗೋಪಾಲದಾಸರು ತಮಗೆ ಬಂದ ಅಪಮೃತ್ಯುವನ್ನು ಪರಿಹರಿಸಿಯೆಂದು ಆಪತ್ಕಾಲ ಮಿತ್ರರೂ - ತಮ್ಮ ಪ್ರೀತಿಯ ಗುರುಗಳಾದ ಶ್ರೀ ವಿಜಯರಾಯರಲ್ಲಿ ಹೀಗೆ ಪ್ರಾರ್ಥಿಸಿದರು. 
ಕರುಣವ ಮಾಡೋ ।
ಶರಣರ ಪ್ರೇಮಿ ।
ಕರುಣವ ಮಾಡೋ ।।
ಅರುಣ ನಿಭನೆ ಗುರು ।
ಕರುಣವ ಮಾಡೋ ।। 
ನಿನ್ನ ನಂಬಿದ ನರಗೆ ।
ಅನ್ಯ ರಾಶಿಗಳೇನೋ ।
ಚನ್ನ ಗುರು ವಿಜಯರಾಯ ।।
ಬನ್ನ ಬಡುವೆನೋ ಜೀಯಾ ।
ಘನ್ನ ಭವದೊಳು ಶಿಲುಕಿ ।
ಇನ್ನು ಕಡೆ ಹಾಯ್ಸೊ ಬೇಗ ।।
ಎಂದು ಮತ್ತೊಂದು ಪ್ರಾರ್ಥನಾ ಸ್ತೋತ್ರದಲ್ಲಿ..... 
ಕಾಯೋ ವಿಜಯರಾಯ ।
ಕಾಯೋ ಕಾಯೋ ಗುರು ವಿಜಯರಾಯ ।
ಕಾಯೋ ಕಾಯೋ ವರವೀಯೊ -
ವಿಜಯ ಗುರು ।
ರಾಯ ನೀನಲ್ಲದೆ ಉಪಾಯವೆ ಇಲ್ಲ ।। ಪಲ್ಲವಿ ।।
.... ಆಲಸ ತಾಳದು ಪಾಲಿಸು । ವೇಣು ಗೋ ।
ಪಾಲವಿಠ್ಠಲನ ಆಳು ಕೃಪಾಳು ।।
ಯೆಂದು ಪ್ರಾರ್ಥಿಸಿದಾಗ.... 
ಶ್ರೀ ವಿಜಯರಾಯರು ಶ್ರೀ ವೇಣುಗೋಪಾಲದಾಸರ ಪ್ರಾರ್ಥನೆಯನ್ನು ಮನ್ನಿಸಿ - ಅವರಿಗೆ ಬಂದ ಅಪಮೃತ್ಯುವನ್ನು ಪರಿಹರಿಸು ಎಂದು... 
ನಂಬಿದೆ ಎಲೋ ಹರಿ । ಅಂಬರ ರೂಪಕಾರಿ । ಬೆಂಬಲನಾಗು ಭವರೋಗವ ನೀಗು ।। 
ಯೆಂಬ ಸುಳಾದಿಯಲ್ಲಿ.... 
ಅಪಮೃತ್ಯು ಸಾಮಿಸಿದೆ ಇನ್ನು ಅಪಹಾಸವಲ್ಲವೋ । ಕೃಪೆಯಿಂದಲಿ ನೋಡು ಅಪರಂ ಪರಮ ಮಹಿಮ । ತಾಪಸಿಗಳ ಒಡೆಯಾ ಕಪಿ ವಿಜಯ ವಿಠ್ಠಲ ಉಪಶಮನಗೈಸೋ ।।
ಜತೆಯಲ್ಲಿ.... 
ಜತೆ ತಪ್ಪದಂತೆ ಜತನವ ಮಾಡಿ  ನಿಜ ಭಾಗ । ವತರೊಳಿಡು ನಮ್ಮ ವಿಜಯ ವಿಠ್ಠಲ ದಕ್ಷ ।।
ಭಗವದ್ದಾಸರ ಜತೆ ತಪ್ಪದಂತೆ ಮಾಡಿ ಸಲಹೆಂದು ಶ್ರೀ ವಿಜಯರಾಯರು ಪ್ರಾರ್ಥಿಸುವುದಲ್ಲದೆ - ಗೋಪಾಲದಾಸರು ಶ್ರೀ ಹರಿಯನ್ನು ಪ್ರಾರ್ಥಿಸಿ ವೇಣುದಾಸನ್ನ ಪ್ರಾಣ ರಕ್ಷಿಸೆಂದು ಆಜ್ಞೆಯಿತ್ತರು. 
ಶ್ರೀ ಗುರು ವಚನದಂತೆ.... 
ಕಾರ್ತೀಕ ಬಹುಳ ಚತುರ್ದಶೀ ಗುರುವಾರ - ಚಿ ।। ಪಂಗನಾಮದ ತಿಮ್ಮಣ್ಣನಿಗೆ ಆಯುರಾರೋಗ್ಯ ಗುರುಗಳ ಕರುಣದಿಂದ ಮಂಗಳವಾಗಲಿ ಎಂದು ಶ್ರೀ ವೇಣು ಗೋಪಾಲ ದಸಾರ ಬಿಂಬನನ್ನು ಪ್ರಾರ್ಥಿಸಿದರು. 
ವೇಣು ಗೋಪಾಲ ವಿಠ್ಠಲ -
ದಾತ ಮಹಾಪ್ರಭುವೆ ।
ನಾ ಬೇಡುವೆನು ವರವ ।
ಪ್ರಾಣಿ ಈತಗೆ ಬಂದ ಹಾನಿ -
ಹಿಂದಕೆ ಮಾಡಿ ।
ಕ್ಷೋಣಿಯೊಳು ನಿಲಿಸಿ -
ಸಲಹೋ ಸ್ವಾಮಿ ।। ಪಲ್ಲವಿ ।।
.... ಪ್ರಾರ್ಥಿಸದೆ ನಿನ್ನ ಭಕುತನ ಅರ್ತಿಯನು ಮನದಲಿ । ಕರ್ತುಯಾದುದರಿಂದಲೀ । ಕೀರ್ತಿ ನಿನ್ನನು ಭಕುತ ಸ್ವಾರ್ಥನೆಂದಾ ಬಿರಿದು । ವ್ಯರ್ಥ ಅನ್ಯರಿಗೆ ತುತಿಸೆ ।। ಕರ್ತು ನೀನಾಗಿ ತಾನಿಂದು ಮಾಡಿಸುವಂಥ । ಸತ್ಕರ್ಮಗಳು ಉಂಟು । ಪಾರ್ಥಸಖ ಚಲುವ ಗೋಪಾಲ ವಿಠ್ಠಲ । ಅಪ । ಮೃತ್ಯು ಪರಿಹರಿಸಿನ್ನು ಭಕುತನ್ನ ಸಲಹೋ ।। 5 ।।
ಈ ವಿಷಯವನ್ನೇ ಶ್ರೀ ತಂದೆ ಗೋಪಾಲದಾಸರು - ಶ್ರೀ ಗೋಪಾಲದಾಸರ ಸ್ತೋತ್ರ ಪದದಲ್ಲಿ ..... 
ಪ್ರಾಣಸಖಗಪಮೃತ್ಯು ಬರುತಿರೆ ।
ವೇಣು ಗೋಪಾಲ ಕೃಷ್ಣನಾ ।
ನಾನಾ ಪರಿಯಲಿ ಪ್ರಾರ್ಥಿಸಿ ।
ಇನ್ನು ಹಾನಿ ಹಿಂದಕೆ ಮಾಡ್ದನಾ ।। 85 ।।
ಎಂದು ಕೊಂಡಾಡಿರುವರು. 
ಈ ಪ್ರಕಾರ ಶ್ರೀ ವಿಜಯರಾಯರು - ಶ್ರೀ ಗೋಪಾಲದಾಸರ ದ್ವಾರ ಮಹಿಮೆಯನ್ನು ತೋರಿ " ಶ್ರೀ ವೇಣು ಗೋಪಾಲ ದಾಸರ ಅಪಮೃತ್ಯು " ಪರಿಹರಿಸಿದರು. 
ಶ್ರೀ ಹರಿಯೊಲಿದ ಮೇಲೆ ಏನುಂಟು ಏನಿಲ್ಲ !
ಮೂವರು ದೇವಾಂಶ ಸಂಭೂತರು - ಮರುಳು ಮಾನವರಲ್ಲ " ಶ್ರೀ ವಿಜಯರಾಯರು ಶ್ರೀ ಗೋಪಾಲದಾಸರ ದ್ವಾರವೇ " ಅನುಗ್ರಹ ಮಾಡುತ್ತಾರೆ. 
ಶ್ರೀ ವಿಜಯರಾಯರು [ ಶ್ರೀ ಭೃಗು ಮಹರ್ಷಿಗಳ ಅವತಾರ ]
ಶ್ರೀ ಗೋಪಾಲದಾಸರು [ ಶ್ರೀ ಗಣೇಶನ ಅವತಾರ ]
ಶ್ರೀ ವೇಣುಗೋಪಾಲದಾಸರು [ ಶ್ರೀ ಇಂದ್ರದೇವರ ಅವತಾರ ]
" ಕೃತಿಗಳು "
ಪದಗಳು - 37
ಸುಳಾದಿಗಳು - 12
" ಆರಾಧನೆ: "
ವೈಶಾಖ ಶುಕ್ಲ ದ್ವಿತಿಯ
ಆಚಾರ್ಯ ನಾಗರಾಜು ಹಾವೇರಿ.... 
ರಾಘವೇಂದ್ರ ಪದಾಸಕ್ತ0 
ವಿಜಯಾರ್ಯ ಸುಸೇವಕಮ್ ।
ಗೋಪಾಲಾಖ್ಯ ಸಖ೦ ವಂದೇ 
ವೇಣುದಾಸ ಗುರುಂ ಭಜೇ ।।
" ವೇಂಕಟನಾಥ " ಮುದ್ರಿಕೆಯಲ್ಲಿ.... 
ಆದವಾನಿ ಪುರ ವಾಸಾ ।
ಮುದದಿ ಪಾಲಿಸೊ -
ಜೀಯಾ ।। ಪಲ್ಲವಿ ।।
ನಾಕೇಶನವತಾರನೆ 
ನಾಕುಬೀದಿಯ ಜ್ಞಾನ ಕೊಟ್ಟು ।
ನಾಕ ಋಷಿ ವೊಲುಮೆ ಪಡೆದ -
ವಿಜಯದಾಸರ -
ಕಾರುಣ್ಯಪಾತ್ರ ।। ಚರಣ ।।
ಗೋಪಾಲದಾರ್ಯರ -
ಪ್ರಿಯ ಸಖನೇ । ವೇಣು ।
ಗೋಪಾಲ ವಿಠಲನೇ -
ಕೈಪಿಡಿದು ಸಲಹೋ ।। ಚರಣ ।।
ವ್ಯಾಸವಿಠಲಗಂಕಿತವ -
ನಿತ್ತ ಧೊರೆಯೇ । ವೇದ ।
ವ್ಯಾಸ ವೇಂಕಟನಾಥನ -
ಭಕ್ತಾಗ್ರಣಿ ವೇಣುಗೋಪಾಲದಾಸರೆ ।। ಚರಣ ।।
" ವಿವರಣೆ "
ನಾಕೇಶ = ಶ್ರೀ ಇಂದ್ರದೇವರು 
ನಾಕು ಬೀದಿಯ ಜ್ಞಾನ = ನಾಲ್ಕು [ ಚತುರ್ವೇದ ] ವೇದಗಳ ಜ್ಞಾನ 
ನಾಕ ಋಷಿ = ಶ್ರೀ ನಾರದ ಮಹರ್ಷಿಗಳು 
- ಆಚಾರ್ಯ ನಾಗರಾಜು ಹಾವೇರಿ  ಗುರು ವಿಜಯ ಪ್ರತಿಷ್ಠಾನ
******


ಶ್ರೀವೇಣುಗೋಪಾಲವಿಠಲದಾಸವರ್ಯಮಹಂಭಜೇ  
ಶ್ರೀ ವಿಜಯದಾಸಾರ್ಯರ ಪ್ರಿಯಶಿಷ್ಯರು, ಶ್ರೀ ಗೋಪಾಲದಾಸವರ್ಯರ ಪ್ರಿಯಮಿತ್ರರು ಮತ್ತು "ಶಕ್ತಿಯಲಿ ತಿಮ್ಮಣ್ಣ" ಎಂದು ಖ್ಯಾತಿಯಾದ ಆದವಾನಿಯ ವೇಣುಗೋಪಾಲವಿಠಲಾಂಕಿತ ದಿವಾನ್ ಶ್ರೀ ಪಂಗನಾಮ ತಿಮ್ಮಣ್ಣ ದಾಸಾರ್ಯರು (ಕೀ. ಶ. 1722-1765) ಆರಾಧನೆ: ವೈಶಾಖ ಶುಕ್ಲ ದ್ವಿತಿಯ

ವಿಜಯದಾಸಪದಾಸಕ್ತಮ್ ವಿಟಲೋಪಪದಸಂಯುತಮ್ |
ವೇಣುಗೋಪಾಲದಾಸಾಖ್ಯಂ ದಾಸವರ್ಯಂಮಹಂಭಜೇ ||

ವೇಣುಗೋಪಾಲವಿಠಲಾಂಕಿತ ಶ್ರೀ ಪಂಗನಾಮ ತಿಮ್ಮಣ್ಣ ದಾಸಾರ್ಯರ ಉಪಾಸ್ಯ *ಶ್ರೀಮಾಧವದೇವರು, ವೆಂಕಣ್ಣಪೇಟೆ, ಆದವಾನಿ, ಕರ್ನೂಲ್ ಜಿಲ್ಲಾ ಆಂಧ್ರಪ್ರದೇಶ.... ಪಂಗನಾಮ ತಿಮ್ಮಣ್ಣದಾಸಾರ್ಯರ ಅಪಮೃತ್ಯು ಪರಿಹಾರಮಾಡಿದ ಸವಿನೆನಪಿಗಾಗಿ ಶ್ರೀ ವಿಜಯದಾಸಾರ್ಯರಿಂದ ಪ್ರತಿಷ್ಟಿತ ಶ್ರೀ ಮುಖ್ಯಪ್ರಾಣದೇವರು, ವಿಜಯರಾಯರಕಟ್ಟಿ, ಆದವಾನಿ 


|| nAham kartA hariH kartA ||
*******
ವಿಜಯದಾಸಪದಾಸಕ್ತಮ್ ವಿಟಲೋಪಪದಸಂಯುತಮ್/
ವೇಣುಗೋಪಾಲದಾಸಾಖ್ಯಂ ದಾಸವರ್ಯಂಮಹಂಭಜೇ//
ಇಂದು 
ಶ್ರೀ ವಿಜಯದಾಸಾರ್ಯರ ಪರಮ ಕಾರುಣ್ಯಕ್ಕೆ ಪಾತ್ರರಾದ, (ಹಿಂದೆ ಶ್ರೀ ಪಂಗನಾಮ ತಿಮ್ಮಣ್ಣದಾಸರಾದ- ಶ್ರೀ ವೈಕುಂಠದಾಸರು, ಇವರೇ ಮುಂದೆ ಮೊದಲಕಲ್ಲು ಶೇಷದಾಸರೂ ಹೌದು) ಆಗಿನ ಕಾಲದಲ್ಲಿ ಆದವಾನಿಯ ದೀವಾನರಾಗಿದ್ದರೂ, ಶ್ರೀ ವಿಜಯದಾಸಾರ್ಯರ ಕಾರುಣ್ಯದಂತೆ ವೈರಾಗ್ಯವನ್ನು ತಾಳಿ, ಪರಮಾತ್ಮನ ನಿತ್ಯ ಸೇವೆಯಲ್ಲಿ ನಿರತರಾಗಿ, ಪದ, ಪದ್ಯ ಸುಳಾದಿಗಳನ್ನು ರಚಿಸಿ ಸಜ್ಜನರ ಸಾಧನೆಗೆ ಹಾದಿಯನ್ನು ತೋರಿಸಿದವರಾದ, ಶಕ್ತಿಯಲ್ಲಿ ತಿಮ್ಮಣ್ಣ ಎಂದೇ ಹೆಸರಾದವರಾದ ಶ್ರೀ ವೇಣುಗೋಪಾಲದಾಸಾರ್ಯರ ಮಧ್ಯಾರಾಧನಾ ಮಹೋತ್ಸವವು.
******

No comments:

Post a Comment