Sri. Honnali Venkatadasaru
Original Name: Sri. Venkappacharya
Period: 1770-1865
Ankita: Venkata Vittala
Preceptor: Sri. Vijaya dasaru
Place: Honnali
Aradhana:
********
ನಮ್ಮ ಪ್ರಾತಃಸ್ಮರಣೀಯರಾದ ಹರಿದಾಸರು
ಶ್ರೀ ಹೊನ್ನಾಳಿ ವೆಂಕಟದಾಸರು
ಇತ್ತೀಚೆಗೆ ಎಲ್ಲಾಕಡೆ ಒಂದು ಅತ್ಯದ್ಭುತ ಸಾಹಿತ್ಯದ ಕೃತಿ ಓಡಾಡ್ತಿದೆ. ಎಲ್ಲೆಡೆಯೂ ಅದೇ ಕೃತಿ, ಎಲ್ಲರ ಬಾಯಲ್ಲಿಯೂ ಅದೇ ಕೃತಿ... ಅದೇ ಅನಾದಿಕಾಲದ ಋಣಾನುಬಂಧ ಮನ ನಿನ್ನಲಿ ನಿಲ್ಲಿಸೋ ಮಾಧವಾ ಎನ್ನುವ ಕೃತಿ... ಕೃತಿ ಹಾಡ್ತಿವಿ, ಕೇಳ್ತಿರ್ತಿವಿ, ಯಾರು ಈ ದಾಸಾರ್ಯರು ಅಂದರೆ ತುಂಬಾ ಜನರಿಗೆ ಗೊತ್ತಿಲ್ಲ... ಹೀಗಾಗಿ ನನಗೆ ತಿಳಿದ ಅತ್ಯಲ್ಪ ಮಾಹಿತಿಯನ್ನು ಹಂಚಿಕೊಳ್ಳುವ ಸಣ್ಣ ಪ್ರಯತ್ನ....
ವೆಂಕಟವಿಠಲ ಅಂಕಿತದಲ್ಲಿನ ಈ ಕೃತಿಯ ರಚನಾಕಾರರೇ ಇಂದಿನ ನಮ್ಮ ಪ್ರಾತಃಸ್ಮರಣೀಯರಾದ ಹರಿದಾಸರು , ಶ್ರೀ ಹೊನ್ನಾಳಿ ವೆಂಕಟದಾಸರು .
ಹೊನ್ನಾಳಿ ಅಂದರೆನೇ ನಮಗೆ ನೆನಪಾಗುವುದು ಎರಡನೇ ಮಂತ್ರಾಲಯ ಎಂದೇ ಪ್ರಸಿದ್ದವಾದ ರಾಯರ ವೃಂದಾವನ..... ಮಂತ್ರಾಲಯದ ಮೂಲ ವೃಂದಾವನದ ನಂತರ , ಮೊದಲ ಮೃತ್ತಿಕಾ ವೃಂದಾವನ ಆದದ್ದು ಹೊನ್ನಾಳಿಯಲ್ಲೇನೇ ಎಂದು ಹಿರಿಯರ ಮಾತು... ಇದನ್ನು ಅಣುಮಂತ್ರಾಲಯ ಅಂತಲೇ ಕರಿತಾರೆ.. ಅಲ್ಲದೇ ಅಲ್ಲಿ ರಾಯರ ಪವಿತ್ರ ಸನ್ನಿಧಾನವಿದ್ದು, ಭಕ್ತರ ಕಷ್ಮಲಗಳನ್ನು ಪರಿಹಾರಮಾಡ್ತಿರುವುದು ಇಂದಿಗೂ ಎಲ್ಲರ ಅನುಭವದ ಮಾತುಗಳಲ್ಲಿ ನಾವು ಕೇಳ್ತಾನೇ ಇದ್ದೆವೆ...
ಇಂತಹಾ ಪವಿತ್ರವಾದ ಕ್ಷೇತ್ರದಲ್ಲಿ ಜನಿಸಿದ ಶ್ರೀ ವೆಂಕಟದಾಸರು, ವಿಜಯದಾಸಾರ್ಯರ ಸಾಕ್ಷಾತ್ ಶಿಷ್ಯರು... ವಿಜಯದಾಸಾರ್ಯರ ಪರಮಾನುಗ್ರಹಪಾತ್ರರಾಗಿರುವವರು... ಭೃಗು ಅಂಶಜರ ಪರಮಾನುಗ್ರಹ ಇವರ ರಚನೆಗಳಲ್ಲಿ ಅದೆಷ್ಟು ಅದ್ಭುತರೀತಿಯಲ್ಲಿ ಕಾಣಿಸುತ್ತದೆ ಎನ್ನುವುದು ನಮಗೆ ವಿದಿತವೇ...
ಶ್ರೀ ದಾಸಾರ್ಯರ ತಂದೆತಾಯಿಗಳ ಮಾಹಿತಿ ನನಗೆ ಸಿಗಲಿಲ್ಲ.. ಇವರು 17ನೇ ಶತಮಾನದವರು... ಇವರ ಜನ್ಮನಾಮ ವೆಂಕಪ್ಪಾಚಾರ್ಯರು. ಶ್ರೀ ಜಗನ್ನಾಥದಾಸರ ಒಡನಾಡಿಗಳಾಗಿದ್ದವರು ಶ್ರೀ ಹೊನ್ನಾಳಿ ವೆಂಕಟದಾಸರು...
ಇವರ ಸಮಕಾಲೀನರು ಅಂದ್ರೆ ವಿಜಯದಾಸಾರ್ಯರ ಅನುಜರಾದ ಹಯವದನವಿಠಲರು, ಶ್ರೀ ಗೋಪಾಲದಾಸಾರ್ಯರು, ವೆಂಕಟೇಶವಿಠಲ ಅಂಕಿತಸ್ಥರಾದ ಶ್ರೀ ಬೇಲೂರು ವೆಂಕಟದಾಸರು, ಶ್ರೀ ವೇಣುಗೋಪಾಲವಿಠಲರು, ಮೊದಲಾದ ಪ್ರಮುಖ ದಾಸಾರ್ಯರು ಇದ್ದಾರೆ...
ಶ್ರೀ ವಿಜಯದಾಸಾರ್ಯರ ಪರಮಾನುಗ್ರಹದ ಫಲವಾಗಿ ಅಪರೋಕ್ಷಜ್ಞಾನವನ್ನು ಪಡೆದ ಶ್ರೀ ಹೊನ್ನಾಳಿ ವೆಂಕಟದಾಸರು ಅತ್ಯಂತ ಪ್ರಮೇಯಗರ್ಭಿತವಾದ, ತತ್ವಗಳನ್ನು ಅಡಗಿಸಿ ಕೃತಿ ರಚನೆ ಮಾಡಿದ್ದಾರೆ.. ಇವರು ರಚನೆ ಮಾಡಿದ ಕೃತಿಗಳನ್ನು ಶ್ರೀ ವಿಜಯದಾಸಾರ್ಯರ ಸಾಕುಮಗ, ಮಾಂಡವ್ಯಾಂಶಜರಾದ ಶ್ರೀ ಮೋಹನದಾಸಾರ್ಯರು ತಮ್ಮ ಸ್ವಹಸ್ತಗಳಿಂದ ಬರೆದು ಇಟ್ಟಿದ್ದಾರೆ... ಈ ಹಸ್ತಪ್ರತಿಯ ದರ್ಶನ ನಾವು ಇಂದಿಗೂ ಚಿಪ್ಪಗಿರಿಯ ಶ್ರೀ ವಿಜಯದಾಸಾರ್ಯರ ಕಟ್ಟಿಯಲ್ಲಿ ಮಾಡಬಹುದು...
ಶ್ರೀ ಹೊನ್ನಾಳಿ ವೆಂಕಟದಾಸರು ರಾಯರ ಪರಮ ಭಕ್ತರು.. ರಾಯರನ್ನು ಸದಾ ಆರಾಧನೆ ಮಾಡುತ್ತಿರುವವರು... ಒಮ್ಮೆ
ಶ್ರೀ ವಿಜಯದಾಸಾರ್ಯರು ವೆಂಕಟದಾಸರನ್ನು ಕರೆದುಕೊಂಡು ರಾಯರ ದರ್ಶನಕ್ಕೆ ಮಂತ್ರಾಲಯಕ್ಕೆ ಹೋಗಿರುತ್ತಾರೆ. ಆಗ ವರಹಜೆಯಾದ ತುಂಗಭದ್ರೆಯಲ್ಲಿ ಮಿಂದೇಳಿ, ರಾಯರ ವೃಂದಾವನ ಮುಂದೆ ನಿಂತು , ಹಾಗೆಯೇ ವೃಂದಾವನವನ್ನು ನೋಡುತ್ತಾ, ಭಕ್ತ್ಯುದ್ರೇಕದಿಂದ ಸ್ತೋತ್ರ ಮಾಡಿ, ರಾಯರ ಕಾರುಣ್ಯವನ್ನು ಸ್ತುತಿಸುತ್ತಾರೆ...
ರಾಯರ ಭಾಗ್ಯವಿದು ಶ್ರೀ ರಾಘವೇಂದ್ರ ರಾಯರ ಭಾಗ್ಯವಿದು ಎನ್ನುವ ಕೃತಿ, ಹೀಗೆ ರಾಯರ ಸ್ತೋತ್ರ ಪದಗಳು, ಗಣೇಶನಸ್ತುತಿ, ಪರಮಾತ್ಮನ ಕುರಿತಾದ ಪದಗಳು, ವೈರಾಗ್ಯ ಪದಗಳು, ಸತ್ಯಬೋಧರ, ಸತ್ಯನಾಥರ ಸ್ತುತಿಗಳು ಇತ್ಯಾದಿ ಕೃತಿಗಳು ರಚನೆ ಮಾಡಿದ್ದಾರೆ...
ನಮ್ಮೆಲ್ಲರಿಗೂ ತುಂಬಾ ಇಷ್ಟವಾದ ಪದ ನಿನ್ಹೊರೆತು ಪೊರೆವವರನು ನಾನರಿಯೆ ಹರಿಯೆ ಈ ಪರಮಾದ್ಭುತ ಕೃತಿಯೂ ವೆಂಕಟದಾಸರ ರಚನೆಯೇನೇ..
ಸುಮಾರು 300 ಕ್ಕೂ ಹೆಚ್ಚಿನ ಕೃತಿಗಳು ರಚನೆ ಮಾಡಿದ ಶ್ರೀ ಹೊನ್ನಾಳಿ ವೆಂಕಟದಾಸರ ಪೂರ್ಣ ಚರಿತ್ರೆಯ ಸಂಶೋಧನೆ ಆಗಬೇಕಿದೆ... ಅವರ ಅನುಗ್ರಹ ಇದ್ದಲ್ಲಿ ಮಾಹಿತಿ ದೊರುಕುವ ಸಾಧ್ಯತೆ ಇದೆ..... ನಮ್ಮ ಪ್ರಸ್ತುತ ಕರ್ತವ್ಯವೆಂದರೆ ದಾಸರ ಸ್ಮರಣೆ, ಅವರ ಕೃತಿಗಳು ಹಾಡಿ, ಅನುಸಂಧಾನ ಮಾಡಿಕೊಳ್ಳುವುದು ಅಷ್ಟೇ.. ಅಂತಹಾ ಪರಮ ಚೇತನರಿಗೆ ಶಿರಬಾಗಿ ಮನಃಪೂರ್ವಕವಾಗಿ ನಮಸ್ಕಾರ ಸುಮಮಾಲೆಯನ್ನು ಸಮರ್ಪಣೆ ಮಾಡುತ್ತಾ... ದಾಸರ ಪರಮಾನುಗ್ರಹ ಸದಾ ನಮಗಿರಲೆಂದು ಅವರಲ್ಲಿ ಪ್ರಾರ್ಥನೆ ಮಾಡುತ್ತಾ...
ದಯವಿಟ್ಟು ಇವರ ಕುರಿತಾದ ಮಾಹಿತಿ ಇದ್ದರೆ ದಯವಿಟ್ಟು ಹಂಚಿಕೊಳ್ಳಲು ವಿನಂತಿ
ಪದ್ಮ ಶಿರೀಷ - +916360104951
ಪತ್ಯಂತರ್ಗತ
ಗುರ್ವಂತರ್ಗತ
ಭಾರತೀರಮಣ ಮುಖ್ಯಪ್ರಾಣಾಂತರ್ಗತ
ಶ್ರೀ ಕೃಷ್ಣಾರ್ಪಣಮಸ್ತು
-Smt. Padma Sirish
ನಾದನೀರಾಜನದಿಂ ದಾಸಸುರಭಿ
***
No comments:
Post a Comment