Sri. Achalananda Dasaru
Original Name: Sri.
Period: 1500+
Place: Haiganpura Bangalore Distt.
Aradhana:
sri.Achalananda Dasaru (16th Century)
The period of Sri.Achalananda Dasaru is said to be the 9th century. However his compositions resemble those of the 16th century literatures. His place of domicile was Haiganpura in Bangalore District. He was an ardent devotee of "Lord Narasimha".
He toured whole of the country and propagated the Bhakti cult/Bhagavata Dharma. He toured barefoot while the idol of his Lord was carried in a nicely decorated palanquin. (Palaki). He used to sing the glory and virtues of the Lord by tuning Tamburi(also called as Tambruhi the meaning speak/sing of Him). The palanquin of the Lord was carried by the invisible Rudra Ganas and witnessing this miracle people became the ardent devotees/followers of Dasaru. While he was at Pandharapura he was blessed by the Lord Panduranga Vithala. Lord gave him the Darshana (the divine appearance) on one afternoon when Sri.Achalanand Dasaru was offering an Arghya(the religious and customary way of worship)to sun in the Chandrabhaga river. From that day all his compositions were dedicated to Achalananda Vithala.
Miracle:
While he was touring Nepal the prince of Nepal died of snake bite. The king of Nepal humbly prayed to Sri.Achalananda Dasaru to save his son. Dasaru by chanting Garuda mantra summoned the serpent and made to suck back the poison from the body of the prince and he was saved.
In his family the Mudduvithala, Gopinatha, Haridasa, Timmannadasa, and Panduranga were the famous Haridasas who propagated the Bhakti cult. After Sri.Achalananada Dasaru we are unable to trace the names of any famous Haridasas till 13th Century. Sri.Vijayadasaru(18th Century) in one of his compositions has stated that many Haridasas earlier to the era of Sri.Purandardasa(16th Century) have praised the Lord and has made a special reference of Shri. Achalananda Dasa and some names of Adya family. However we are unable to name any Haridasas of that period. - INFO from Dasashreshtraru blogspot.
*********
" ಶ್ರೀ ಹರಿದಾಸ ಸಾಹಿತ್ಯದ ಆದ್ಯರು ಶ್ರೀ ಅಚಲಾನಂದ ದಾಸರು "
ಬೆಂದ ಸಂಸಾರದಿ ಬಂದು
ಬಂದು ನೊಂದೆನೊ ।
ಇಂದೆನ್ನ ಸಲಹೋ
ಅಚಲಾನಂದವಿಠಲಾ ।।
ನಡುಗನ್ನಡ ಸಾಹಿತ್ಯದ ಎರಡು ಶಾಖೆಗಳೆಂದರೆ...
1. ವಚನ ಸಾಹಿತ್ಯ
2. ದಾಸ ಸಾಹಿತ್ಯ.
ತಾಳ - ತಂಬೂರಿ ಹಿಡಿದು ಶ್ರೀ ನಾರದ ಮಹರ್ಷಿಗಳು ಜಗನ್ನಾಥನಾದ ಶ್ರೀಮನ್ನಾರಾಯಣನ ನಾಮ ಸಂಕೀರ್ತನೆ ಮಾಡುತ್ತಿದ್ದ ಉಲ್ಲೇಖ ಕೀರ್ತನೆಗಳ ಪ್ರಾಚೀನತೆಗೆ ಸಾಕ್ಷಿಯಾಗಿವೆ.
ಶ್ರೀ ಅಚಲಾನಂದದಾಸರು ಬೆಂಗಳೂರು ಜಿಲ್ಲೆಯ ಹೈಗಣಪುರದವರು.
ಇವರ ವಂಶದವರು ಈಗಲೂ ತುಮಕೂರು ಜಿಲ್ಲೆಯ ತುರುವೇಕೆರೆಯಲ್ಲಿ ಇದ್ದಾರೆ.
ಮೊದಲಿನಿಂದಲೂ ಶ್ರೀ ನೃಸಿಂಹದೇವರ ಉಪಾಸಕರಾದ ಇವರಿಗೆ " ಶ್ರೀ ನರಸಿಂಹ ದಾಸ " ರೆಂದು ಪೂರ್ವದಲ್ಲಿ ಹೆಸರಿದ್ದಿತು.
ಆದ್ಯ ಹರಿದಾಸರೆಂದರ್ಯಾರು?
ಆದ್ಯ ಹರಿದಾಸರುಗಳ ಕಾಲ ಶ್ರೀಮದಾಚಾರ್ಯರ ಮತ್ತು ಶ್ರೀ ಶ್ರೀಪಾದರಾಜರ ಕಾಲದ ಮಧ್ಯಭಾಗ. ಅಂದರೆ 14 - 15 ನೇ ಶತಮಾನ.
ಈ ಕಾಲದಲ್ಲಿ ಶ್ರೀ ಅಚಲಾನಂದದಾಸರೇ ಮೊದಲಾದ 60 ಜನ ಹರಿದಾಸರು ಬಾಳಿ ಬದುಕಿ ಹರಿದಾಸ ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತ ಗೊಳಿಸಿದ ಮಹಾನುಭಾವರುಗಳು.
ಶ್ರೀ ಅಚಲಾನಂದದಾಸರ ವದನಾರವಿಂದದಲ್ಲಿ ಹೊರಹೊಮ್ಮಿದ ಶ್ರೀ ಮಧ್ವಸ್ತುತಿ....
ರಾಗ : ಸಾವೇರಿ ತಾಳ : ತ್ರಿವಿಡಿ
ಈಡುಗಾಣೇನಯ್ಯಾ
ಜಗದೊಳಗೆ ಬೇಡಿದಿಷ್ಟವ ।
ಕೊಡುವ ಹನುಮ
ಭೀಮ ಮಧ್ವರಾಯ ।। ಪಲ್ಲವಿ ।।
ಅಷ್ಟ ದಿಕ್ಕಿನ ಭೂಪನಾಳಿದ
ದುಷ್ಟ ರಾವಣನ್ನ ಉರವನು ।
ದಿಟ್ಟಿಸಿ ನೋಡಿ ಸಮರದಲ್ಲಿ
ಮುಷ್ಠಿ ಪ್ರಹರವನ್ನೇ ಕೊಡಲು ।
ಕಷ್ಟದಿಂ ಮೂರ್ಛಂಗತನಾಗಿ ಎದೆ
ಹಿಟ್ಟಾಗಿ ಸ್ವರ್ಣ ತಟಾಕದಂತೆಸಿಯೆ । ಕಂ ।
ಗೆಟ್ಟು ಹತ್ತು ದಿಕ್ಕಿಗೆ ಓಡಿಸಿದೆ
ದಿಟ್ಟನಾಗಿ ನಿಂದೊ ರಣದಿ ಹನುಮಾ ।। ಚರಣ ।।
ನಾರದನು ಅಯೋಧ್ಯದಿ ಪೇಳಲು
ಶ್ರೀ ರಾಮ ಸೈನ್ಯ ಸಹಿತ ।
ವಾರಿಧಿಗಳನು ದಾಟಿ ವೇಗದಿ
ನೂರು ತತಿ ಅಸುರನ್ನ ಪಟ್ಟಣ ।
ದ್ವಾರ ಬಂಧಿಸಿ ಶಾಖ
ದ್ವಿಪದಲ್ಲಿದ್ದ ಅಸುರನ ಕಾಲಿಲೊದೆಯಲು ।
ವೀರ ವಿಭೀಷಣ ಸುಗ್ರೀವರ
ಪುಚ್ಛದಿ ತಾರಿಸಿದೆಯೋ ಸಮರ್ಥನಿನಗ ।। ಚರಣ ।।
ರುದ್ರ ಬ್ರಹ್ಮರ ವರಬಲದಲ್ಲ್ಯ-
ವದ್ಧ್ಯನಾದ ಜರಾಸಂಧನ ।
ಅಧ್ವರ್ಯ ಲೀಲೆ ಪಶುವಿನಂದದಿ
ಮರ್ದಿಸಿ ದುಷ್ಟ ಖಳನ ಸೀಳ್ದೆ ।
ಬದ್ಧರಾದ ನೃಪರ ಬಿಡಿಸಿದೆ
ಅಧ್ವರ್ಯನಾಗಿ ಯಜ್ಞದಿ ನಿಂದೆ ।
ಯುದ್ಧದಲ್ಲಿ ದುರ್ಯೋಧನನ
ವದ್ದೆ ಪ್ರಸಿದ್ಧ ಭೀಮರಾಯ ನಿನಗ ।। ಚರಣ ।।
ವಾದಿ ಗಜಕೇ ಮೃಗೇಂದ್ರ
ವಾದಿ ವಾರಿಧಿ ವಡಬಾನಳ ಮಾಯಾ ।
ವಾದಿ ಪರ್ವತಕೆ ಕುಲಿಶ
ಬೇಧ ಮತಾಂಬುಧಿಗೆ ಚಂದ್ರ ।
ಮೋದದಿಂ ಕೃಷ್ಣ ಸೀತಾರಾಮ
ವೇದವ್ಯಾಸ ಅಷ್ಟವಾಳುಕ ಮುಷ್ಠಿ ತಂದೆ ।
ಸಾಧು ಜನರಿಗೆ ತತ್ತ್ವ ಬೋಧಿಸಿದೆ
ಮೇದಿನಿಯೊಳು ಮಧ್ವರಾಯ ನಿನಗ ।। ಚರಣ ।।
ಇಂದುಮುಖಿ ಸೀತೆಗೆ ಮುದ್ರಿಕಿನಿತ್ತು
ಬಂಧಿಸಿ ರಾಮನ್ನ ಕಥೆಯ ಪೇಳ್ದೆ ।
ಅಂದು ರೋಮಕೋಟಿ ಶಿವರ ಮಾಡೆ
ತಂದೆ ಪುರುಷ ಮೃಗವನ್ನ ।
ಛಂದದಿಂ ಮಣಿಮಂತ ದೈತ್ಯನ್ನ
ಕೊಂದು ಅಂದದಿಂ ಸೌಗಂಧಿಕವನು ।
ತಂದಿನಂದತೀರಥನಾದೆ ಅಚಲಾ-
ನಂದವಿಠಲನ ದಾಸ ನನಗ ।। ಚರಣ ।।
ಹಾಗೆಯೇ ಮತ್ತೊಂದು ಕೀರ್ತನೆಯಲ್ಲಿ...
ಕೇಳೋ ಜೀವನವೇ ನೀ
ಮಧ್ವಮತವ ನನುಸರಿಸಿ ।
ಶ್ರೀಲೋಲ ನಂಘ್ರಿಗಳ
ನೆನೆದು ಸುಖಿಸೋ ।।
ಎಂಬ ಶ್ರೀ ಅಚಲಾನಂದದಾಸರ ವಚನದಂತೆ ಅವರು ಶ್ರೀಮದಾಚಾರ್ಯರ ಅವತಾರವಾದ ಮೇಲೆ ದಾಸ ಸಾಹಿತ್ಯ ಕ್ಷೇತ್ರದಲ್ಲಿ ಇದ್ದರು ಎಂದು ಖಚಿತವಾಯಿತು.
ಶ್ರೀ ಅಚಲಾನಂದದಾಸರು ತಮ್ಮ ಪ್ರಚಂಡವಾದ ಶಿಷ್ಯ ಪರಿವಾರದೊಡನೆ ಪಾದಚಾರಿಗಳಾಗಿ ಪಂಢರಾಪುರಕ್ಕೆ ಬಂದು ಸೇವೆ ವಿಠಲನ ಮಾಡಿದರು.
ಅದರಿಂದ ಶ್ರೀ ಪಾಂಡುರಂಗನು ಪ್ರಸನ್ನನಾಗಿ ದರ್ಶನವಿತ್ತನು.
ಶ್ರೀ ಪಾಂಡುರಂಗನ ದರ್ಶನ ಆನಂದವು ಅಚಲವಾಗಿ ಉಳಿಯಲಿ ಎಂಬ ಹಿರಿಯಾಶೆಯಿಂದ ಇವರು " ಅಚಲಾನಂದವಿಠಲ " ಎಂದು ಅಂಕಿತವನ್ನಿಟ್ಟುಕೊಂಡು ಅಚ್ಛ ಕನ್ನಡದಲ್ಲಿ ಕೃತಿಗಳನ್ನು ರಚಿಸಿದ್ದಾರೆ.
ರಾಗ : ಕಾಂಬೋಧಿ ತಾಳ : ಆದಿ
ಪುಂಡಲೀಕ ದಳ ನಯನ ।
ಪುಂಡಲೀಕ ವರದ ವಿಠಲ ನಿಮ್ಮ ।
ಕೊಂಡಾಡಲಳವೆ ಪಾಂಡುರಂಗರಾಯ ।। ಪಲ್ಲವಿ ।।
ಹದಿನಾಲ್ಕು ಲೋಕವನ್ನು ನಿನ್ನ ।
ಉದರದಲ್ಲಿ ತಾಳಿದಂಗೆ ।
ಸುದತಿ ರುಕ್ಮಿಣಿ ತನ್ನ ಕುಚಗಳಿಂದ ।
ಚದುರೆ ನಿನ್ನ ಎತ್ತಿ ಕುಣಿದ ।
ಪದುಮಾಕ್ಷಿ । ಬ ।
ಲ್ಲಿದಳೋ ನೀ ಬಲ್ಲಿದನೋ ।। ಚರಣ ।।
ಭೂಮಿ ಈರಡಿ ಮಾಡಿ ।
ವ್ಯೋಮಕೊಂದು ಪದವಿತ್ತೇ ।
ರೋಮ ರೋಮದಲಿ ಬ್ರಹ್ಮರುದ್ರರಿರಲು ।
ಸ್ವಾಮಿ ನಿನ್ನ ಪ್ರೆಮ್ಮ ತಾಳ್ದ ।
ಕೋಮಲಾಂಗಿ ಬಲ್ಲಿದಳೋ
ನೀ ಬಲ್ಲಿದನೋ ।। ಚರಣ ।।
ಶೃಂಗಾರವಾದ ನಿನ್ನ ।
ಮಂಗಳ ಶ್ರೀಪಾದವನ್ನು ।
ಹಿಂಗದೆ ಭಜಿಸುವ ಸಲಿಗೆಯಿತ್ತೆಯೋ ।
ರಂಗಾ ಅಚಲಾನಂದವಿಠಲ ನಿನ್ನ ।
ಸಂಗ ಸುಖಿ ಬಲ್ಲಿದಳೋ ।
ನೀ ಬಲ್ಲಿದೆಯೋ ।। ಚರಣ ।।
" ಸಂಚಾರ - ಮಾನ ಸಮ್ಮಾನ "
ನೇಪಾಳದ ಮಹಾರಾಜನೂ, ಕರ್ನಾಟಕದ ರಾಷ್ಟ್ರ ಕೂಟದ ವಂಶದ ಅರಸರು ಸರೀ ಅಚಲಾನಂದದಾಸರ ಶಿಷ್ಯರಾಗಿದ್ದರು.
ರಾಜರು ಇವರಿಗೆ ತುರುವೇಕೆರೆ ಮೊದಲಾದ 12 ಗ್ರಾಮಗಳ ಜಹಗೀರನ್ನು ಹಾಕಿ ಕೊಟ್ಟರು.
" ಶ್ರೀ ಅಚಲಾನಂದದಾಸರ ಸಂತತಿ "
ಶ್ರೀ ಅಚಲಾನಂದದಾಸರು ಮೂಲತಃ " ಅದ್ವೈತಿಗಳು ".
ಇವರ ಸಂತತಿಯಲ್ಲಿ ಬಂದ ಮುದ್ದುವಿಠಲ, ಗೋಪಿನಾಥವಿಠಲ, ಹರಿದಾಸ ವಿಠಲ, ತಿಮ್ಮಣ್ಣದಾಸ, ಪಾಂಡುರಂಗವಿಠಲ ದಾಸರೆಂಬುವರು ಹರಿದಾಸರಾಗಿ ಬೆಳೆದರು.
ಮುಂದೆ ಶ್ರೀ ಅಚಲಾನಂದದಾಸರು ರೂಢಿಗೆ ತಂದ ವೈಷ್ಣವ ಸಂಪ್ರದಾಯ, ಗೋಪಿಚಂದನ - ಮುದ್ರಾಧಾರಣೆ ಮಾಡಿಕೊಂಡಿದ್ದು, ಅವರ ವಂಶೀಕರೂ ಈ ಆಚಾರವನ್ನು ಪಾಲಿಸಿಕೊಂಡು ಬರುತ್ತಿರುವುದು ಗಮನಾರ್ಹ.
ಶ್ರೀ ಅಚಲಾನಂದದಾಸರಿಂದ ಬಂದ ಶ್ರೀ ನರಸಿಂಹ - ಶ್ರೀ ವಿಠಲದೇವರ ವಿಗ್ರಹಗಳನ್ನು ಪ್ರತ್ಯೇಕವಾದ ದೇವಾಲಯದಲ್ಲಿಟ್ಟು ಪರ್ಯಾಯಸ್ಥರಂತೆ ಒಂದೊಂದು ಮನೆಯವರು ಸರದಿ ಪ್ರಕಾರ ದೇವತಾರ್ಚನೆಯನ್ನು ಮಠಾಧಿಪತಿಗಳ ಮಾದರಿಯಲ್ಲೇ ಮುಂದುವರೆಸಿಕೊಂಡು ಬಂದಿದ್ದಾರೆ.
ಶ್ರೀ ಅಚಲಾನಂದದಾಸರು ಈ ಕೆಳಕಂಡ ಪದ್ಯ ಮತ್ತು ಸುಳಾದಿಗಳು ಹೀಗಿವೆ...
3. ನೋಡಿದರೆ ನೋಡು ಮಾತಾಡು ತಾಯಿಗಳೆಂದು ।
4. ಶರಣ ರಕ್ಷಕನೆಂಬ ಬಿರುದಿನಾ ಸ್ವಾಮಿ ನಿನ್ನ ಸಾರಿದೆ ।
5. ಸಂಗದೊಳಿರಿಸೆನ್ನ ಸುಜ್ಜನ ಸಂಗದೊಳಿರೆಸೆನ್ನ ।
6. ಶ್ರೀ ಕೃಷ್ಣನ್ನ ನೆನೆವೆನೆ ।
8. ನಳಿನಾಕ್ಷಿ ಕರೆದು ತಾರೆ ನಾರಾಯಣನ ।
ಶ್ರೀ ಅಚಲಾನಂದಾಸರು ನಮ್ಮ ಪರವಾಗಿ ಶ್ರೀ ಹರಿಯನ್ನು ಪ್ರಾರ್ಥಿಸಿದ ವಿವರ ಹೀಗಿದೆ....
ರಾಗ : ಹಂಸಾನಂದೀ ತಾಳ : ಆದಿ
ನಾನಾ ಯೋನಿಗಳಲ್ಲಿ ।
ನಾನಾ ಜನ್ಮವೆತ್ತಿ ।
ನಾನೂ ತಿರುಗಲಾರೆನೊ ।। ಪಲ್ಲವಿ ।।
ಶ್ರೀನಿವಾಸನೆ ನಿನ್ನ ಸೇರಿದ । ಮ್ಯಾಲು ।
ದಾಸೀನ ಮಾಡುವರೇನೋ ಗೋವಿಂದ ।। ಅ ಪ ।।
ತಂದೆಯ ಉದರದೊಳ್
ತ್ರೈಮಾಸವು -
ಶುಕ್ರ ಇಂದ್ರಿಯನಾಗಿದ್ದೆನೋ ।
ಅಂದಾದಿ ಜನನಿಯ । ಜಠ ।
ರಾದಿ ಶೋಣಿತದಿಂದ
ಪಿಂಡವು ಆದೇನೊ ।
ಕುಂದಾದೆ ಮಾಸ
ನಾಲ್ಕಾದ ಪಲ್ಲವ
ಯುವದಿಂದ ಬೆಳೆಯುತಲಿದ್ದೆನೊ ।
ಸಂಧಿಸೆ ಸಪ್ತ ಮಾಸವು ।
ಗುಲಗೋ ।
ತ್ರದಿ ಬಂದಿದ್ದೆಣಿಸುತುದ್ದೇನೋ ।। ಚರಣ ।।
ನರದ ಸಂಕೋಲೆ
ಮಾಂಸದ ಚೀಲ
ಬೆಲೆಯೊಳು ನರಳಿ
ಕೋಟಲೆಗೊಂಡೆನೋ ।
ಪರಿಪರಿಯಲಿ ಬಂದ
ಪಾಪ ಪುಣ್ಯಗಳ
ಪಿರಿದು ಚಿಂತಿಸುತ್ತಿದ್ದೆನೋ ।
ನೆರೆ ಅಷ್ಟ ಮಾಸದೊಳ್
ರಾಶಿ ತೋಷದಿಂದ
ಕರೆ ಕಷ್ಟಗೊಳುತ್ತಿದ್ದೆನೋ ।
ಇರುತಿರೆ ನವ ಮಾಸ ಕಳಿಯೇ
ವಾಯುವಿನಿಂದ ಧರೆಗೆ
ಪತನವಾದೆನೋ ಗೋವಿಂದ ।। ಚರಣ ।।
ಮಾಂಸ ಮಲದಿ
ಮೊರದಿ ಮಲಗಿ
ನೊಣನ ಘಾಸಿ
ಪಡುತಲಿದ್ದೆನೋ ।
ಹೇಸಾದ ಹಸಿದು
ಬೆರಳು ಬಾಯೊಳಗಿಟ್ಟು
ತೋಷಪೆ ದುಃಖಿಪೆನೋ ।
ತೋಷಿಸಿ ಬಾಲೆ
ದುರ್ಬಲೆನ್ನುತ್ತಾ
ಲೋಹ ಕಾಶಿ ಹಚ್ಚುತಿಹಳೋ ।
ಈಸು ಭವಣಿಯ ಗರ್ಭದಿ
ಜನ್ಮಗಳ ನಾಸಾರವೆತ್ತಿದೆನೋ ।। ಚರಣ ।।
ಬಾಲ ತನದಿ ಬಲು ವಿದದಾಟವ
ತೋರಿ ಮೇಲಾಗಿರುತ್ತಿದ್ದೆನೋ ।
ಲೇಲೆಯಿಂದಲಿ ಪುಳು ಮೃಗ
ಪಕ್ಷಿ ಮಾರ್ಜಾಲ ಘಾತಕನಾಗಿದ್ದೇನೋ ।
ಖೂಳ ತಾನರಿದು ದುಷ್ಕೃತ್ಯವ
ಮಾಡಿಯೇ ದಾಳಿಗೀಡಾಗಿದ್ದೆನೋ ।
ಹೇಳಬಾರದ ಪಾಪವ ಮಾಡಿ
ನರಕದ ಪಾಳೆಯ ಕ್ರೀಡಾದೆನೋ ।। ಚರಣ ।।
ಹೀಗಿರುತಿರೆ ಮುಂಜಿ
ಮದುವೆಗಳೆಲ್ಲವೂ
ಆಗಿ ಬಾಳುತಲಿದ್ದೆನೋ ।
ಸೋಗಿಗಣ್ಣಿನ ಸುದತಿಯ ಕಂಡು
ಜ್ಞಾನವ ನೀಗಿ
ಬಾಳುತ್ತಲಿದ್ದೆನೋ ।
ರೋಗವಿಲ್ಲದೆ ನರಳುವನಂತೆ
ಕಾಮದ ಬ್ಯಾಗೆಯೊಳ್
ಬೆಂಡಾದೆನೋ ।
ಆಗಲು ಪುತ್ರ ಬಾಂಧವಿರಿಗೋಸುಗ
ಭವ ಸಾಗರದೊಳು ಬಿದ್ದೆನೋ ।। ಚರಣ ।।
ಬಾಲ್ಯ ಯೌವನವಳಿದು
ವಾರ್ಧಿಕ್ಯೆವಡಿಸೆ
ಬಹು ಬೀಳಾಗಿರುತ್ತಿದ್ದೆನೊ ।
ಕಾಲು ಕೈಗಳು ಕುಗ್ಗಿ ಕಂಗಾಳು
ಕ್ಷಯವೇರಿ ಬೀಳುತೇಳುತಲಿದ್ದೆನೋ ।
ನಾಲಿಗೆ ಉಡುಗಿ ನರಗಳೆಲ್ಲ
ಸಡಲೇರಿ ಬಾಳಾಗಿರುತ್ತಿದ್ದೆನೊ ।
ಹಾಲು ಕೋಟಿಗೆ ತಲೆಯನು ಕೊಟ್ಟು
ಕಾದುವ ಮೂರಾನಂದದಿ ಇದ್ದೆನೊ ।। ಚರಣ ।।
ಪುಟ್ಟಿ ಸಾಕಿದ ಸುತ
ಸುದತಿಯರಿಗೆ
ಸಹ ನಿಷ್ಠವೆನಿಸಿಕೊಂಡೆನು ।
ಬಿಟ್ಟು ಪ್ರಾಣವ ಕಡೆಗಾಗಲು
ಶವವೆಂದು ಮುಟ್ಟಾರೆನಿಸಿಕೊಂಡೆನೊ ।
ಅಟ್ಟಾಡವಿಯೊಳಿಟ್ಟು
ಕಾಗೆ ದೇಹವ
ಕೊಟ್ಟು ತಿನಿಸುತ್ತಿದ್ದಾರೋ ।
ಕೆಟ್ಟ ಪಾಶದೊಳೆಮನಾಳುಗಳೆನ್ನನು
ಅಟ್ಟ ಸೆಳೆಯುತ್ತಿದ್ದರೋ ।। ಚರಣ ।।
ಹಾದಿಯೊಳ್ ಪಿಡಿಯೆ
ವೈತರಣಿಯೊಳ್
ಮುಳುಗಿಸೆ ವೇದನ
ಪಡುತ್ತಿದ್ದೇನೊ ।
ಕಾದ ಕಾವಲಿ ಉಕ್ಕಿನ ಕಂಬ
ಕೀವಿನ ಸ್ವೇದ
ಕುಂದದಿ ಬಿದ್ದೆನೊ ।
ಭೇದವಿಲ್ಲದ ಪರ್ವತ
ಗುಹ್ಯ ಮೊದಲಾದ
ಛೇದನಿ ಬಿಡುತ್ತಿದ್ದೆನೊ ।
ವಾದಿಸಿ ಹಿರಿಯರೊಳ್
ಮೀರಿ ನಡೆದು
ಯಮಬಾಧೆಗೆ
ಗುರಿಯಾದೆನೋ ।। ಚರಣ ।।
ಎಷ್ಟೆಂದು ಕಳೆಯಬಹುದು
ನರಕದೊಳಿಂತು
ಕಷ್ಟ ಪಡುತ್ತಲಿದ್ದೆನೋ ।
ದಿಟ್ಟ ಮೂರುತಿ ನಿಮ್ಮ
ಪಾದವ ಸ್ಮರಿಸದೆ
ಇಷ್ಟು ಜನ್ಮದಿ ಬಂದೆನೋ ।
ಇಷ್ಟರಮ್ಯಾಲಿನ್ನು
ನೀನಾದರೂ ಕೈಯ
ಬಿಟ್ಟಿರುಳಿಯಲಾರೆನೋ ।
ಸೃಷ್ಟಿಯೊಳ್ ತುರುಗಿರಿ ವಾಸ
ಅಚಲಾನಂದ ವಿಠಲ ಸಲಹೋ ಯೆನ್ನ ।।
ಮೇಲ್ಕಂಡ ಪದ್ಯದಲ್ಲಿ ಶ್ರೀ ಅಚಲಾನಂದದಾಸರು ಜೀವನು ಪಡುವ ಕಷ್ಟಗಳನ್ನು ಕಣ್ಣಿನೆ ಕಣ್ಣಿಗೆ ಕಾಣುವಂತೆ ಅತ್ಯಂತ ಮನೋಜ್ಞವಾಗಿಯೂ, ಸರಲ ಸುಂದರವಾಗಿಯೂ ವರ್ಣಿಸಿ, ಪ್ರತಿಯೊಬ್ಬ ಜೀವಿಯನ್ನು ಎಚ್ಚ್ಚರಿಸಿದ್ದಾರೆ !!
" ಸುಳಾದಿ "
1. ಥೋರಮಲ್ಲಿಗೆಯ ದುರುಬಿನ ಜೋಲೆಯಾದ.....
2. ರಂಗಾ ನಿನ್ನ ಎಡದುಂಗುಟದುಗುರುನು.....
3. ಕಾಮ ಕೆಂಗೆಡಿಸುತಲಿದೆ ಕ್ರೋಧ ಬಾಧಿಸುತಿದೆ.....
4. ಹಿಂದಣ ಜನ್ಮ ಜನ್ಮಾಂತರದಿ ಮಾಡಿದಘವ....
ಶ್ರೀ ಅಚಲಾನಂದದಾಸರ 8 ಪದ್ಯಗಳೂ, 4 ಸುಳಾದಿಗಳೂ ಮಾತ್ರ ದೊರೆತಿವೆ.
ಶ್ರೀ ಅಚಲಾನಂದದಾಸರ ಪದ್ಯಗಳಲ್ಲಿ ಕಾವ್ಯದ ಗುಣಗಳೆನ್ನೆಲ್ಲ ಸಾಂಪ್ರದಾಯಿಕತೆಯು ಮರೆಮಾಡಿದೆ.
ಬಳಿಸದ ಉಪಮೆ, ಸರ್ವ ಸಾಧಾರಣವಾದ ಹಳೆಯ ಪ್ರಾಸಗಳು, ಅಂಥ ಭಾವದ ಕಾವನ್ನಾಗಲೀ, ಬೇರಾವ ರಸವನ್ನಾಗಲೀ ಹುಟ್ಟಿಸದೆ ಭಕ್ತಿ ಜನನದಲ್ಲಿ ಕೃತಕೃತ್ಯತೆಯನ್ನು ಕಂಡಿದೆ. ಆದರೂ ಅಲ್ಲಲ್ಲಿ ಪ್ರತಿಭೆ ಮಿಂಚಾಡದೆ ಇಲ್ಲ.
ಕೊಡಲಿಬೇಕು ಪಾಪದ ಬೇರ ಕಡಿವಡೆ ।
ಕೊಡಲಿಬೇಕು ಗುರು ಹಿರಿಯರ ಕೈಯಲ್ಲಿ ।
ಕೊಡಲಿಬೇಕು ಸತ್ಪಾತ್ರರಿದ್ದೆಡೆಯಲಿ ।।
ಕೊಡಲಿಲ್ಲ ಕೊಡಲಿಲ್ಲ ಕೊಡಲಿಲ್ಲದವಗೆ ।
ಕೊಡಲಿಲ್ಲ ಯೆನ್ನ ವಡೆಯ ।
ಕೇಳೋ ಅಚಲಾನಂದವಿಠಲ ।।
by ಆಚಾರ್ಯ ನಾಗರಾಜು ಹಾವೇರಿ
ಗುರು ವಿಜಯ ಪ್ರತಿಷ್ಠಾನ
***
No comments:
Post a Comment