Monday 1 July 2019

gurushreesha vittala dasaru kuntoji narasimha dasaru kampli dasaru 1846 margashira amavasya ಗುರುಶ್ರೀಶ ವಿಠ್ಠಲ ದಾಸರು ಕುಂಟೋಜಿ ದಾಸರು ಕಂಪ್ಲಿ ದಾಸರು,










shreesha vittala dasaru kuntoji narasimha dasaru kampli dasaru 1740 - 1846 margashira amavasya

mArgashirsha bahuLa amAvAsya is the ArAdhane of Shri guru srIsha viTTala dAsaru.

Original name: Narasimha
Father: Tamannarasaiah
Period: 1745 - 1820
Place of birth: kanakagiri
Ankita given by: shri shrIsha viTTala dAsaru

He belongs to the lineage of prAnEsha viTTala dAsaru, who was given Ankita by shri jagannaAtha dAsaru.

He has written several dEvaranAmAs.

Two of the very popular ones are:
1. bArO guru rAghavaendra...
2. guru madhwa rAyarige namO namO...

His ArAdhane is celebrated in a grand manner every year in kAmpli, by his vamshastarus and bhaktAs.
****


shri gurubyO namaha, Hari Om...


mArgashirsha bahuLa amAvAsya is the ArAdhane of Shri guru srIsha viTTala dAsaru.


Original name: Narasimha
Father: Tamannarasaiah
Period: 1745 - 1820
Place of birth: kanakagiri
Ankita given by: shri shrIsha viTTala dAsaru


He belongs to the lineage of prAnEsha viTTala dAsaru, who was given Ankita by shri jagannaAtha dAsaru.


He is one of the little known Haridasas of Karnataka. An ardent devotee of Raghavendra Swamy, he has some of the most memorable songs on Rayaru. Yet, his name does not ring a bell in the minds of people as he is not as well known as other Dasas.
He was a person who could perform miracles and he attributed the miracles to Vittala and Raghavendra Swamy. He once managed to transform the waters of Tungabhadra to ghee so that a religious event that was being held would ensure that naivedya and pooje went off smoothly.   
He lived for more than a hundred years. He was born in 1740 in Kanakagiri and he died in 1846. He is none other than Guru Shreesha Vittala Dasa and he was also called as Kuntogi Narasimha Dasa. He wrote under the ankita Guru Sheersha Vittala. 
His preceptor was Srisha Vittala Dasa who was also called as Hundekara Dasa.
He was called Kuntoji Narasimha as he was born due to the grace of  Lord Narasimha of Kanakachala. Kuntoji was a small village on the Tungabhadra where his father, Tamanna, spent several years.
Tamanna worked as a clerk and he later entrusted the job to Narasimha. One day, when Narasimha was asleep, Sri Hari appeared in his dreams and asked him  to stop working as a clerk.
Sri Hari then asked Narasimha to approach Jagannatha Dasa of Manvi and become his disciple.
Narasimha left for Manvi where Jagannatha Dasa resided. He met  Jagannatha Dasa and served him for 12 years. After that, he came to Kuntoji village and then came to Kampli where the house where he lived still exists.
One day, there was a religious function in Kampli and the family conducting the event had organised for supply of ghee from a neighbouring village. Unfortunately, the ghee did not arrive on time. When the priests conducting the ritual said the ghee was needed for pooje and naivedya, Narasimha Dasa went to the Tungabhadra and filled up a pot containing ragi with the water.
When the Dasa handed over the pot to the organisers of the event, it had turned into ghee. When the ghee from the neighbouring village came, he took a pot and of ghee and poured it back into the Tungabhadra.    
He then left for Kasi with other disciples. The boat they were travelling sank and all except Narasimha Dasa survived. He then saw a sanyasi sitting on the banks of the river. He gave a letter to the Sanyasi and requested him to deliver it to his village. The letter said all the people who had travelled in the boat had drowned.
Narasimha Dasa completed the Kashi Yatre but he never returned to Kampli.
 He composed the famous Stutiratnamala and his "Guru Madhwa Rayarige Namo NamO" is sung at the beginning of all bhajans and religious functions.


He was an ardent devotee of Raghavendra Swamy and he visited Mantralaya several times. His famous composition is where he invites Raghavendra Swamy to come to every house and bless the people is highly popular and it is sung in every house today. This composition is in Madyamavathi Raaga and it goes as “Baro Guru Raghavendra, Baraiah baa Baa Narahari Priyane Baa, Guru Shreesha Vitalanakaruna Patrane Bega Baa Guruvarane Parishoshisennanu Mareyadhale tava CharaNa Koteyal irisi Charambujavva ThoruthaTwarithadhali Ododi Baa Baa."


Another famous composition on Raghavendra Swamy is
“Nodale Manave Kondadu GurugaLa PaadavaEdu illavo PuNyake
NadOge Guru Raghavendra rayara SeveMadidhava Parama Dhanya-Maanya”.. 


The Guru Madhwa composition goes as follows:  
 Guru Madhwa Rayarige Namo Namo
Guru Madhwa Santatige Namo Namo
Sripadarajarige Guru Vyasarajarige
Guru Vadirajarige Namo Namo
Raghavendra Rayarige Vaikunta Dasarige
Purandara Dasarige Namo Namo
Guru Vijaya Dasarige Bhaganna Dasarige
Shri Ranga Valida Dasarige Namo Namo
Parama Vairagyashali Timmanna Dasarige
Hundeekara Dasarige Namo Namo
Guru Shrisha Vithalanna Parama Bhaktara Charana
Sarasija Yugagalige Namo Namo
His charama sloka   


Guru Shreesha maham vandhe GuruThathwa Vibhodhakam
Guhaashayam GuNaatheetham Bhaava yamtham  Mahaamathim ||


His ArAdhane is celebrated in a grand manner every year in kAmpli at the house where he resided, by his vamshastarus and bhaktAs. 


shri guru srIsha viTTala dAsa varada gOvindA gOvindA...


shri krishnArpaNamastu...
******
ಹೆಸರು : ಶ್ರೀ ನರಸಿಂಹ 

ತಂದೆ : ಶ್ರೀ ತಮ್ಮಣ್ಣರಸಯ್ಯ 

ಜನ್ಮ ಸ್ಥಳ : ಕನಕಗಿರಿ 

ಕಾಲ : ಕ್ರಿ ಶ 1745 - 1820 

ವಂಶ : ಷಾಷ್ಟೀಕ 

ಗೋತ್ರ : ಕೌಶಿಕ 

ಮನೆತನ : ಬೊಮ್ಮರಸ 

ಸ್ವರೂಪೋದ್ಧಾಕರು : ಶ್ರೀ ಬೃಹಸ್ಪತ್ಯಾಂಶ ಜಗನ್ನಾಥದಾಸರು 

ಕುಲ ಗುರುಗಳು : ಶ್ರೀ ರಾಘವೇಂದ್ರ ತೀರ್ಥ ಗುರುಸಾರ್ವಭೌಮರು 

ಅಂಕಿತೋಪದೇಶ : ಶ್ರೀ ಶ್ರೀಶವಿಠ್ಠಲರು 

ಅಂಕಿತ ನಾಮ : ಗುರು ಶ್ರೀಶ ವಿಠ್ಠಲ

***


ಶ್ರೀ ಗುರು ಶ್ರೀಶ ವಿಠ್ಠಲ ದಾಸರ ಚಿತ್ರ ಮತ್ತು ಅವರು ಉಪಯೋಗಿಸಿದ ತಂಬೂರಿ, ತಾಳ, ಹಾಗು ಗೋಪಾಲ ಬುಟ್ಟಿ,

ಇರುವ ಚಿತ್ರ👇

ತುಂಗಭದ್ರಾ ನದಿಯ ದಂಡೆಯ ಕಂಪ್ಲಿ ಎನ್ನುವ ಆ ಗ್ರಾಮದ ಒಬ್ಬರ ಮನೆಯಲ್ಲಿ ಧಾರ್ಮಿಕ ಮಂಗಳ ಕಾರ್ಯಕ್ರಮ.ದೇವರ ಪೂಜೆ ಮುಗಿದಿದೆ. ನೈವೇದ್ಯ ಸಮರ್ಪಣೆ ಯ ಸಮಯ.
ನೈವೇದ್ಯಕ್ಕೆ ಹಾಗು ನಂತರದ ಅನ್ನ ಸಂತರ್ಪಣೆಗೆ ತುಪ್ಪ ಇನ್ನೊಂದು ದಡದಿಂದ ಬರಬೇಕು. ನದಿ ತುಂಬಿ ಹರಿಯುತ್ತಾ ಇದೆ.ಎಲ್ಲರಿಗು ಆತಂಕ ಇನ್ನೂ ತುಪ್ಪ ಬರಲಿಲ್ಲ ಅಂತ.
ಮನೆಯ ಯಜಮಾನರು ಈ ಪರಿಸ್ಥಿತಿ ನೋಡಿದರು.
ಶಿಷ್ಯನಿಗೆ ಕರೆದು ತುಂಗಾ ನದಿಯಿಂದ ಒಂದು ಕೊಡ ನೀರು ತರಲು ಹೇಳಿದರು.ತಂದಂತಹ ನೀರಿನ ಕೊಡಕ್ಕೆ ಮಂತ್ರಾಕ್ಷತೆ ಹಾಕಿ ಅದರ ಮೇಲೆ  ಕೈ ಇಟ್ಟು ಅಭಿಮಾನಿ ದೇವತೆಗಳ ಆವಾಹನ  ಮಂತ್ರಗಳನ್ನು ಪಠಣೆ ಮಾಡಿ ಆ ನೀರನ್ನು ತುಪ್ಪ ವಾಗಿಸಿದರು.
ನೈವೇದ್ಯ ಭೋಜನ ಸಂತರ್ಪಣೆ ಆದ ಮೇಲೆ ತುಪ್ಪ ದವನು ಬಂದ.ಅವನು ತಂದ ತುಪ್ಪ ವನ್ನು ನದಿಗೆ ಸುರಿಯಲು ಯಜಮಾನರು ಶಿಷ್ಯ ನಿಗೆ ಆಜ್ಞೆ ಮಾಡುತ್ತಾರೆ.
ಅಷ್ಟು ತುಪ್ಪ ವನ್ನು ಸುರಿಯಲು ಕಾರಣವೇನು??ಅಂತ ಎಲ್ಲಾ ರು ಕೇಳುವರು.
ನದಿಯಿಂದ ನಾನು ತುಪ್ಪ ವನ್ನು ಸಾಲವಾಗಿ ಪಡೆದಿದ್ದೆ.ಅದನ್ನು ಮರಳಿಸಬೇಕು.ಎಂದು ಹೇಳಿದರು.
ಇನ್ನೊಂದು ಬಾರಿ ಮಾನವಿ ಜಗನ್ನಾಥ ದಾಸರು ತಮ್ಮ ಶಿಷ್ಯ ಪರಿವಾರದ ಜೊತೆಯಲ್ಲಿ ಭೂವೈಕುಂಠವೆನಿಸಿದ ತಿರುಪತಿ ಯಲ್ಲಿ ಶ್ರೀನಿವಾಸ ನ ದರುಶನ ಮಾಡಲು ಹೋಗಿದ್ದಾರೆ.
ತಕ್ಷಣ ತಮ್ಮ ಪ್ರೀತಿಪಾತ್ರ ಶಿಷ್ಯ ರಾದ ಕಂಪ್ಲಿಯ ಆ ಯಜಮಾನ ಇದ್ದರೆ ಚೆನ್ನಾಗಿ ಇತ್ತು ಅಂತ ಉಳಿದವರ ಮುಂದೆ ಹೇಳಿದಾಗ
ಕ್ಷಣಮಾತ್ರದಲ್ಲಿ ಅವರ ಮುಂದೆ ಬಂದು ನಿಂತರಂತೆ.
ಹೀಗೆ ಇಂತಹ ಮಹಿಮೆಯನ್ನು ಭಗವಂತನ ಅನುಗ್ರಹದಿಂದ ತೋರಿಸಿದ ಆ ಕಂಪ್ಲಿಯ ಯಜಮಾನ ಇಂದಿನ ಕಥಾನಾಯಕರು ಶ್ರೀ ಗುರು ಶ್ರೀಶ ವಿಠ್ಠಲ ದಾಸರು,ಕುಂಟೋಜಿ ದಾಸರು, ಕಂಪ್ಲಿ ದಾಸರು ಎನ್ನುವ ಹೆಸರಿನಲ್ಲಿ ಕರೆಸಿಕೊಂಡ ಮಹಾನುಭಾವರು.
ದಾಸರು ಪ್ರಸಿದ್ಧ ಕನಕಗಿರಿಯ ಒಂದು ಕರಣಿಕ ಮನೆತನದಲ್ಲಿ ಜನಿಸಿದರು. ನರಸಿಂಹ ಎಂಬ ಹೆಸರಿನಿಂದ ವಿದ್ಯಾಭ್ಯಾಸ ಎಲ್ಲಾ ನಡೆಯಿತು. ಮನೆತನದ ವೃತ್ತಿ ಯಾದ ಕರಣಿಕ ಕೆಲಸ ಮಾಡುತ್ತಾರೆ. ಬಂದಂತಹ ಅತಿಥಿಗಳಿಗೆ,ಧಾರ್ಮಿಕ ಕಾರ್ಯಗಳಿಗೆ ಹೇರಳ ಹಣವನ್ನು ಖರ್ಚು ಮಾಡುವುದನ್ನು ಕಂಡು ಅವರ ಮೇಲೆ ರಾಜಧನ ದುರುಪಯೋಗವಾಗಿದೆ ಅಂತ ಹೇಳಿ ಆರೋಪವನ್ನು ಹೊರಿಸಿ ಸೆರೆಮನೆಯಲ್ಲಿ ಇಡುತ್ತಾರೆ.
ಒಂದೆರಡು ದಿನಗಳ ನಂತರ ಭಗವಂತ ಕಾಣಿಸಿಕೊಂಡ 
ನನ್ನ ದಾಸನಾಗು ಎಂದುಹೇಳಿದ.
ಸೆರೆಯಲ್ಲಿ ಇರುವ ನಾನು ನಿನ್ನ ದಾಸನಾಗಲು ಹೇಗೆ ಸಾಧ್ಯ?? ಎನಲು 
ಮತ್ತೊಂದು ಬಾರಿ ಆ ಲೆಕ್ಕ ಪತ್ರದ ಪುಸ್ತಕಗಳನ್ನು ನೋಡಲು ರಾಜನಿಗೆ ಹೇಳು.ನೀನು ಬಂಧ ಮುಕ್ತ ನಾಗುವೆ.ನಂತರ ಜಗನ್ನಾಥ ದಾಸರ ಬಳಿ ಹೋಗಿ ಸೇವೆ ಮಾಡಿ ನಿನ್ನ ಜನ್ಮ ಸಾರ್ಥಕ ಮಾಡಿಕೊ ಎಂದು ಸ್ವಾಮಿ ಸೂಚನೆ ಕೊಡುತ್ತಾನೆ.
ಆ ನಂತರ ಅಧಿಕಾರಿಗಳು ಲೆಕ್ಕ ಪತ್ರ ನೋಡಲು ಎಲ್ಲಾ ಸರಿ ಇರುವದು ಕಂಡು ಇವರ ತಪ್ಪು ಇಲ್ಲ ಅಂತ ಹೇಳಿ ಬಿಡುಗಡೆ ಮಾಡುತ್ತಾರೆ.
ನಂತರ ಶ್ರೀ ಜಗನ್ನಾಥ ದಾಸರ ಬಳಿ ೧೨ವರುಷ ಸೇವೆಯನ್ನು ಮಾಡಿ ಊರಿಗೆ ಹೊರಡಲು ಅಪ್ಪಣೆ ಕೇಳಿದರು ದಾಸರು ಅಪ್ಪಣೆ ಕೊಡಲಿಲ್ಲ.
ಒಂದು ದಿನ ದಾಸರ ಕಾಲನ್ನು ಒತ್ತುವಾಗ ಇವರ ಕಣ್ಣಿನ ನೀರು ದಾಸರ ಕಾಲ ಮೇಲೆ ಬೀಳುತ್ತದೆ.
ತಕ್ಷಣ ಜಗನ್ನಾಥ ದಾಸರು ಎದ್ದು ಕುಳಿತು
ಮಗು!! ನಿನಗೆ ಅಪಮೃತ್ಯು ಬರಲಿದೆ ಅದನ್ನು ಪರಿಹಾರ ಮಾಡಿ ಕಳುಹಿಸುವ ಅಂತ ಅಂದುಕೊಂಡಿದ್ದೆ.ಭಗವಂತನ ಸಂಕಲ್ಪ. ನಿನಗೆ ಹೊರಡುವ ಆತುರ.ಶ್ರೀಶವಿಠ್ಠಲ ಅಂಕಿತ ಶ್ರೀ ಹುಂಡೇಕಾರ ದಾಸರು ನಿನ್ನ ನಿಯತ ಗುರುಗಳು.ಅವರಲ್ಲಿ ಹೋಗಿ ಅಂಕಿತ ಪಡೆದುಕೊ ಅಂತ ಹೇಳಿ ಅವರಿಗೆ ಒಂದು ಕೈ ಕೋಲನ್ನು  ಕೊಟ್ಟು
ದಾರಿಯಲ್ಲಿ ನಿನಗೆ ಸರ್ಪ ಬಂದು ಕಚ್ಚುತ್ತದೆ.ಈ ಕೋಲನ್ನು ಆ ಜಾಗದಲ್ಲಿ ಇಡು.ನಿನ್ನ ಅಪಮೃತ್ಯು ಪರಿಹಾರವಾಗುತ್ತದೆ ಅಂತ ಹೇಳಿ ಕಳುಹಿಸುತ್ತಾರೆ.
ನಂತರ ಅದರಂತೆ ತಮ್ಮ ಅಪಮೃತ್ಯುವನ್ನು ಕಳೆದುಕೊಂಡು ಹುಂಡೆಕಾರ ದಾಸರಿಂದ ಗುರು ಶ್ರೀಶ ವಿಠ್ಠಲ ಅಂತ ಅಂಕಿತ ವನ್ನು ಪಡೆದುಕೊಂಡು ಗಂಗಾವತಿ ಬಳಿಯ ಕುಂಟೋಜಿ ಎನ್ನುವ ಗ್ರಾಮದಲ್ಲಿ ವಾಸವಾಗಿದ್ದರು.
ಶತಾಯುಷಿಗಳಾಗಿದ್ದ ದಾಸರು ಜೀವಿತಕಾಲದ ಕೊನೆಯಲ್ಲಿ ಕುಟುಂಬ ವರ್ಗದ ಜೊತೆಯಲ್ಲಿ ಕಾಶಿಯಾತ್ರೆ ಹೊರಟರು. ಗಂಗಾನದಿ ದಾಟುವಾಗ  ನಾವೆ ಸಹಿತವಾಗಿ ಇಡೀ ಕುಟುಂಬ  ಮುಳುಗಿ ಹೋಗುತ್ತದೆ.ಒಳ್ಳೆಯ ಈಜುಗಾರರಾದ ದಾಸರು ನದಿಯನ್ನು ಈಜಿ ದಂಡೆಯನ್ನು ತಲುಪಿ ಎಲ್ಲಾ ವೃತ್ತಾಂತವನ್ನು ಬರೆದು  ತಾವು ಬದರಿಯತ್ತ ಪ್ರಯಾಣ ಮಾಡುವ ದಾಗಿ ಹೇಳಿ ಪತ್ರ ಮುಖೇನ ತಿಳಿಸಿ ಅದನ್ನು ಊರಿಗೆ ಮುಟ್ಟಲು ವ್ಯವಸ್ಥೆ ಮಾಡಿ ಬದರಿ ಕಡೆ ಪಯಣವನ್ನು ಬೆಳೆಸಿದರು.
ದಾಸರು ಬದರಿ ಕಡೆ ಹೋದ ದಿನದಂದು ಅವರ ಮನೆತನದವರು ಹಾಗು ಶಿಷ್ಯ ಮನೆತನದವರು ಆರಾಧನೆ ಮಾಡುತ್ತಾ ಬಂದಿದ್ದಾರೆ.
ಸಾಹಸಿ ಈಜುಗಾರರಾದ ದಾಸರು ತುಂಗಭದ್ರಾ ನದಿಯಲ್ಲಿ ಈಜುವಾಗ ಎದೆಗೆ ಸುಣ್ಣ ಹಚ್ಚಿ ಕೊಂಡು ಒಂದು ದಡದಿಂದ ಇನ್ನೊಂದು ದಡಕ್ಕೆ ಸುಣ್ಣ ನೀರಿಗೆ ತಾಕದಂತೆ ಸರಾಗವಾಗಿ ಈಜುತ್ತಿದ್ದರು.
🙏🙏
 ದಾಸರ ನೆರೆ ನಂಬಿರೋ|
ಗುರು ಶ್ರೀ ದಾಸರ ನೆರೆ ನಂಬಿರೋ
ದಾಸರ ಅಂತರ್ಯಾಮಿ ಇರುವ ಭಗವಂತನಿಗೆ ಸಮರ್ಪಣೆ ಮಾಡುತ್ತಾ ಶ್ರೀ ಕೃಷ್ಣಾರ್ಪಣಮಸ್ತು..
🙏ಅ.ವಿಜಯವಿಠ್ಠಲ🙏
*********

||ಬಿಡದೆ ರಮಾ ಕಳತ್ರನ ದಾಸ ವರ್ಗಕೆ ನಮಿಪೆ ನನವರತ||
🙏🙏🙏🙏
ಬೆಳಗಿನ ಜಾವ ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು, ಪಡಸಾಲೆಯಲ್ಲಿ ಕುಳಿತು ಹಿರಿಯರಿಂದ ತಮ್ಮ ಮನೆತನಕ್ಕೆ ಅನುಗ್ರಹ ಪೂರ್ವಕಾಗಿ ಬಂದ ಆ ತಂಬೂರಿಯನ್ನು ಬಾರಿಸುತ್ತಾ, ದೇವರ ನಾಮವನ್ನು  ಆ ಹಿರಿಯರು ಹೇಳುತ್ತಾ  ಇದ್ದರೆ,ಕೊಟ್ಟಿಗೆಯಲ್ಲಿ ಇರುವ ದನಕರುಗಳು ಇವರನ್ನು ನೋಡುತ್ತಾ ಕತ್ತನ್ನು ಅಲುಗಾಡಿಸುತ್ತಾ ನಿಲ್ಲುತ್ತಾ ಇದ್ದವು.
ಭಗವಂತನ ಭಕ್ತರಾದ ಅವರು ಸದಾ ಭಗವಂತನ ಸೇವೆ, ಪಾರಾಯಣ ಗಳನ್ನು ಮಾಡುತ್ತಾ,ನಿತ್ಯ ಶ್ರೀ ಜಗನ್ನಾಥ ದಾಸರ ಮೇರು ಕೃತಿಯಾದ ಶ್ರೀ ಮದ್ ಹರಿಕಥಾಮೃತಸಾರವನ್ನು ಪಠಣೆ ಮಾಡುತ್ತಾ ಎಲ್ಲ ಆಸಕ್ತಿ ಉಳ್ಳವರಿಗೆ ಅದರ ತತ್ವ ವನ್ನು ಹೇಳುತ್ತಾ ಇರುವ ಆ ಹಿರಿಯರಿಗೆ ಕಾಶಿಯಾತ್ರೆ ಮಾಡಬೇಕೆಂಬ ಆಸೆ ಇತ್ತು..
ತನ್ನ ನಿಜಭಕ್ತರ ಮನಸ್ಸನ್ನು ಅರಿತವನು ಭಗವಂತ. 
ಅದಕ್ಕೆ ಅನುಕೂಲ ಮಾಡಿಕೊಟ್ಟನು. ಅವರ ಊರಿನ ಒಂದು ಕುಟುಂಬ ಕಾಶಿಯಾತ್ರೆ ಮಾಡಲು ಸಿದ್ದ ವಾಗಿತ್ತು. ಆ ಕುಟುಂಬದ ಯಜಮಾನನಿಗೆ  ಭಗವಂತನ ಭಕ್ತರಾದ ಸದಾ ಶ್ರೀ ಹರಿಕಥಾಮೃತಸಾರ ಪಾರಾಯಣ ಮಾಡುವ ಹಿರಿಯರನ್ನು ಕಾಶಿಯಾತ್ರೆಗೆ ಕರೆದು ಕೊಂಡು ಹೋಗಬೇಕು ಎಂಬುದು ಬಹಳ ಅಭಿಲಾಷೆ ಮತ್ತು ಆಸೆ.
"ನೀವು ಹಿರಿಯರು. ನಮ್ಮ ಜೊತೆಯಲ್ಲಿ ಬರಲೇಬೇಕು.ನಿಮ್ಮ ಸನ್ನಿಧಿಯಲ್ಲಿ ಹೋಗುವದು ನಮಗೆ ಆಶೀರ್ವಾದ ಇದ್ದಹಾಗೆ.ಎಂದು ಬಹುವಾಗಿ ಕೇಳಿಕೊಂಡರು.
ಆ ಹಿರಿಯರು ಭಗವಂತನ ಕಾರುಣ್ಯ ಮತ್ತು ಲೀಲೆ ಯನ್ನು ಸ್ಮರಿಸುತ್ತಾ ಹೊರಡಲು ಸಿದ್ದರಾದರು.
ಮಕ್ಕಳು ಚಿಕ್ಕವು.ಅವರನ್ನು ತಮ್ಮ ಮಾವನವರ ಮನೆಗೆ ಕಳುಹಿಸಿ ಕೊಟ್ಟರು.ಅವರಿಗೆ ಅವಾಗಲೇ ಪತ್ನಿ ವಿಯೋಗ ಉಂಟಾಗಿತ್ತು.
ಊರಿಗೆ ಹೊರಡುವ ದಿನ ಮಕ್ಕಳನ್ನು  ಎತ್ತಿನ ಬಂಡಿಯಲ್ಲಿ ಕೂಡಿಸಿ  ಊರಿಗೆ ಕಳುಹಿಸಿದ್ದಾರೆ.
ದೊಡ್ಡ ಅಂಕಣದ ಮನೆ.ದೇವರ ಮನೆಯಲ್ಲಿ ಮನೆ ದೇವರಿಗೆ ನಮಸ್ಕರಿಸಿ  ತಾವು ನಿತ್ಯ ನುಡಿಸುವ ಆ ದಾಸರ ತಂಬೂರಿಗೆ ನಮಸ್ಕರಿಸಿ,ಪ್ರಯಾಣಕ್ಕೆ ಅಪ್ಪಣೆ ಮತ್ತು ಆಶೀರ್ವಾದ ಕೇಳಿ,ದೇವರ ಮನೆ,ಅಡಿಗೆ ಮನೆ ಬಾಗಿಲನ್ನು ಚಿಲಕ ಹಾಕಿ ಪಡಸಾಲೆಗೆ ಬಂದಿದ್ದಾರೆ.
ಇದ್ದಕ್ಕಿದ್ದಂತೆ ಒಂದು ಧ್ವನಿ ಕೇಳಿಸಿತು.

"ಪಾತ್ರರ ಸಂಗಡ ಯಾತ್ರೆಯ ಚರಿಸಿ| ವಿಧಾತೃ ಪಿತನ ಗುಣ ಪೊಗಳುತಲಿರುವದೇ| ಫಲವಿದು ಬಾಳ್ದುದಕೆ|

ಎನ್ನುವ ಶ್ರೀ ಮಾನವಿ ಪ್ರಭುಗಳ ರಚನೆಯನ್ನು ಯಾರೋ ಸುಶ್ರಾವ್ಯವಾಗಿ ಹಾಡಿದ್ದು ಇವರ ಕಿವಿಗೆ ಬಿತ್ತು.ಸುತ್ತ ಮುತ್ತ ನೋಡಿದಾಗ ಯಾರು ಇಲ್ಲ.ಹಗಲಿನ ಹೊತ್ತು. ಭ್ರಮೆ ಸಹ ಅಲ್ಲ.ಆ ಧ್ವನಿ ಬಹಳ ಸ್ಪಷ್ಟವಾಗಿ  ದೇವರ ಮನೆಯಿಂದ ಕೇಳಿ ಬರುತ್ತಿದೆ.

ಲಗುಬಗೆಯಿಂದ ದೇವರ ಮನೆಯ ಬಾಗಿಲನ್ನು ತೆಗೆದರೆ ತಕ್ಷಣ ಆ ಧ್ವನಿ ನಿಂತಿದೆ.
ನಿತ್ಯ ತಾವು ಬಾರಿಸುವ ದಾಸರ ಸನ್ನಿಧಾನ ಉಳ್ಳ ತಂಬೂರಿ ಇಂದ ಆ ಧ್ವನಿ ಬಂದಿದ್ದು ಕೇಳಿ ಅವರಿಗೆ ಬಹು ಆನಂದ ವಾಗಿದೆ.

ತಾವು ದಿನವೂ ಬೆಳಗಿನ ಜಾವ ಶ್ರೀ ಜಗನ್ನಾಥ ದಾಸರ ಪದಗಳನ್ನು ಹೇಳುತ್ತಾ, ಯಾರ ತಂಬೂರಿ ಯನ್ನು ಮೀಟುತ್ತಾ ಹೇಳುತ್ತಾ ಇದ್ದರು ಅದೇ ತಂಬೂರಿ ಇಂದ ಆ ಧ್ವನಿ ಬಂದಿದ್ದು ಕೇಳಿ ಆನಂದ ವಾಗಿದೆ.
ಹೀಗೆ ಆ ತಂಬೂರಿಯಲ್ಲಿ ನಿಂತು  ಅನುಗ್ರಹ ಮಾಡಿದ ದಾಸರೇ ಶ್ರೀ ಗುರುಶ್ರೀಶ ವಿಠ್ಠಲ ದಾಸರು.ಮತ್ತು ಅವರ ಯಾತ್ರೆಗೆ ಆಶೀರ್ವಾದ ಮಾಡಲು ಹೇಳಿದವಾಣಿ ಎಂದು ಅವರಿಗೆ ಖಚಿತವಾಯಿತು.

ಆ ತಂಬೂರಿ ಯಾರದ್ದು ಎಂದರೆ "ಕಂಪ್ಲಿ ದಾಸರು,ಕುಂಟೋಜಿ ದಾಸರು,ಮತ್ತು ಶ್ರೀ ಗುರು ಶ್ರೀಶ ವಿಠ್ಠಲ ದಾಸರೆಂದು ಕರೆಸಿಕೊಂಡು ಶ್ರೀ ಜಗನ್ನಾಥ ದಾಸರ ಸೇವೆಯನ್ನು ಮಾಡಿ ಅವರ ಅನುಗ್ರಹ ದಿಂದ ತಮಗೆ ಬಂದ ಅಪಮೃತ್ಯುವನ್ನು ಕಳೆದುಕೊಂಡ ಮಹಾನುಭಾವರು.
ಮತ್ತು ಶ್ರೀ ಹರಿಕಥಾಮೃತ ಸಾರಕ್ಕೆ ಫಲ ಶೃತಿ ಬರೆದ ಮಹಾನುಭಾವರು".
ಮತ್ತು 

ಆ ಹಿರಿಯರು ಯಾರೆಂದರೆ "ತೆಗ್ಗಿಹಾಳ್ ಶ್ರೀ ಗುರು ಭೀಮಾಚಾರ್ಯರು."
ಪ್ರಾತಃ ಸ್ಮರಣೀಯರು.

ತಾತನವರಿಗೆ ಅವಸಾನ ಕಾಲ ಸಮೀಪಿಸಿತು.
ಒಂದು ದಿನ ಮಧ್ಯಾಹ್ನದ ಸಮಯದಲ್ಲಿ ತಮ್ಮ  ಹೊರಡುವ ಸಮಯ ಬಂದಿದೆ ಎಂದು ಅವರಿಗೆ ತಿಳಿಯಿತು.
ತಮ್ಮ ಪುತ್ರ ಕೃಷ್ಣಾಚಾರ್ಯರನ್ನು ಕರೆದು  
"ನನ್ನ ಎದುರಿಗೆ ನಾಲ್ಕು ಜನ ನಾಮ ಮುದ್ರೆ ಗಳನ್ನು ಧರಿಸಿದ ವೈಷ್ಣವರು ಬಂದು ನಿಂತಿದ್ದಾರೆ.ನನ್ನನ್ನು ಕರೆದುಕೊಂಡು ಹೋಗಲು ಬಂದಿದ್ದೇವೆ ಎಂದು ಹೇಳುತ್ತಾ ಇದ್ದಾರೆ.ಹೆಣ್ಣು ಮಕ್ಕಳಿಗೆ ವಿಷಯ ಮುಟ್ಟಿಸು ಎಂದು ಹೇಳಿ ಕೆಲ ಸಮಯದಲ್ಲಿ ದೇಹತ್ಯಾಗ ಮಾಡಿದರು... 
ಇದು ನಡೆದದ್ದು 1952 ನೇ ಇಸ್ವಿಯಲ್ಲಿ.
ಶುದ್ಧ ಸಾತ್ವಿಕ ಜೀವನ ವನ್ನು ನಡೆಸಿದ ತಾತನವರು ತಾವು ಬಂದ ಕಾರ್ಯವನ್ನು ಮುಗಿಸಿ ಭಗವಂತನ ಪಾದವನ್ನು ಸೇರಿದರು.
ಇಂತಹ ಭಗವಂತನ ಭಕ್ತರ ಸ್ಮರಣೆ ಕಿಂಚಿತ್ತೂ ನಮ್ಮ ಪಾಪ ಕಳೆಯುವದು ಎನ್ನುವುದಕ್ಕೆ ಯಾವ ಸಂದೇಹ ಸಂಶಯವಿಲ್ಲ.
🙏ಶ್ರೀ ಕೃಷ್ಣಾರ್ಪಣಮಸ್ತು🙏
ಈ ವಿಷಯವನ್ನು ಅವರ ಮೊಮ್ಮಕ್ಕಳು ಆದ ವೈದ್ಯರಾಗಿದ್ದ ಶ್ರೀವೆಂಕಣ್ಣ ಅಚಾರ್ಯ ಜಹಗೀರ್ದಾರ. ಇತ್ತೀಚಿಗೆ ಅವರ ಮನೆಗೆ ತಂಬೂರಿ ದರುಶನ ಮಾಡಿಕೊಳ್ಳುವದಕ್ಕೆ ಹೋದಾಗ ನನಗೆ ಹೇಳಿದ್ದು.

ಯಾವ ತಂಬೂರಿ ಇಂದ ಧ್ವನಿ ಬಂದಿತ್ತು ,ಮತ್ತು ಶ್ರೀ ಗುರು ಶ್ರೀಶ ವಿಠ್ಠಲ ದಾಸರು ಒಂದಂಶದಿಂದ ಸನ್ನಿಧಾನ ಉಳ್ಳ ಆ ತಂಬೂರಿ, ಮತ್ತು ದಾಸರ ಗೋಪಾಳಬುಟ್ಟಿ,ತಾಳಗಳು ಇವಾಗಲು ಅವರ ಮನೆಯಲ್ಲಿ ಇದೆ.
ಶ್ರೀ ಗುರು ಶ್ರೀಶ ವಿಠ್ಠಲ ದಾಸರಿಗೆ ನಮೋ ನಮಃ
****************

ಶ್ರೀ ಗುರುಶ್ರೀಶವಿಟ್ಠಲದಾಸರ ಕಿರುಪರಿಚಯ : 


ರಾಯಚೂರು ಜಿಲ್ಲೆಯ ಗಂಗಾವತಿ ತಾಲೂಕಿನ ಕನಕಗಿರಿ ಗ್ರಾಮದಲ್ಲಿ ಜನಿಸಿದ ಶ್ರೀನರಸಿಂಹದಾಸರು , ಶ್ರೀಜಗನ್ನಾಥದಾಸರಲ್ಲಿ 12 ವರ್ಷ ಶಿಷ್ಯತ್ವ ವಹಿಸಿ ಅವರನ್ನು ಸೇವಿಸಿದರು. ಗುರುಗಳು ಅನುಗ್ರಹಿಸಿ , ಅವರ ಆಜ್ಞೆಯ ಪ್ರಕಾರ ಶ್ರೀ ಶ್ರೀಶವಿಠಲಾಂಕಿತ ಹುಂಡೇಕಾರ ದಾಸರಿಂದ  " ಗುರುಶ್ರೀಶವಿಠಲ " ಎಂಬ ಅಂಕಿತ ಪಡೆದರು. ಗಂಗಾವತಿ ತಾಲೂಕಿನ ಕುಂಟೋಜಿ ಎಂಬ ಗ್ರಾಮದಲ್ಲಿ ಇದ್ದುದರಿಂದ ಇವರಿಗೆ ಕುಂಟೋಜಿ ದಾಸರೆಂದೂ ಕರೆಯುವರು . ಇವರು 6 ಸುಳಾದಿಗಳನ್ನು ರಚಿಸಿದ್ದಾರೆ. ಸಂಖ್ಯೆ ಕಡಿಮೆಯಾದರೂ ಅಸಂಖ್ಯ ಅಂತಃಶಕ್ತಿ ಈ ಸುಳಾದಿಗಳಲ್ಲಿ ಅಡಗಿದೆ.

ಶ್ರೀ ಗುರುಶ್ರೀಶವಿಟ್ಠಲದಾಸರಿಂದ ರಚಿತವಾದ ಶ್ರೀಗುರುರಾಜರ ಸ್ತೋತ್ರಪದ " ಬಾರೊ ಗುರುರಾಘವೇಂದ್ರ " ಮತ್ತು ಶ್ರೀಶ್ರೀನಿವಾಸ ದೇವರ ನಕ್ಷತ್ರಮಾಲಿಕಾ " ಸ್ತುತಿರತ್ನಮಾಲಾ - ಶ್ರೀನಿವಾಸ ದಯಾನಿಧೆ " ಎಂಬ ಪದ ಅಬಾಲ ವೃದ್ಧರಿಗೂ ಪರಿಚಿತವಾದುದು
*********

ಶ್ರೀಂ ಶ್ರೀ ಕಂ ಕಪಿಲಾಯ ನಮಃ 

ಸಪ್ತರಾತ್ರಂ ಕೃಷ್ಣವೇಣ್ಯಾ ಮುಷಿತ್ವಾ ಪುನರುತ್ಥಿತಮ್/ 
ಜಿತಾಮಿತ್ರ ಗುರುಮ್ ವಂದೇ
ವಿಭುದೇಂದ್ರ ಕರೋದ್ಭವಮ್//
 15ನೇ ಶತಮಾನದ ಮಹಾನ್  ಯತಿಗಳೂ,  ರುದ್ರಾಂಶ ಸಂಭೂತರೂ, ಶ್ರೀ ವಿಭುದೇಂದ್ರತೀರ್ಥರ ಕರಕಮಲ ಸಂಜಾತರು, ಶ್ರೀ ರಘುನಂದನ ತೀರ್ಥರ ಗುರುಗಳು,  ಘೋರವಾದ ಕೃಷ್ಣಾ ನದಿಯ ಪ್ರವಾಹವನ್ನು ಸಹಾ ಏಳು ದಿನದಕಾಲ ತಡೆದುನಿಂತವರು, ಸ್ವಯಂ ತಾವೇ ನರಸಿಂಹ ದೇವರಿಗೆ ನೈವೇದ್ಯ ನೀಡುತ್ತಿದ್ದ ಮಹಾನುಭಾವರಾದ, ನಾಮ ಸ್ಮರಣೆ ಮಾತ್ರದಲಿ ನಮ್ಮನ್ನು ಕಾಯುವ, ತಾವು ಕುಳಿತು ಶಿಷ್ಯರಿಗೆ ಪಾಠಮಾಡುತ್ತಿದ್ದ ಗೋನದ ವೃಕ್ಷದಲ್ಲಿ ಇದ್ದು ಇಂದಿಗೂ ಪೂಜೆಗಳನ್ನು ಸ್ವೀಕಾರ  ಮಾಡುತ್ತಿರುವ,  ಶ್ರೀ ಜಿತಾಮಿತ್ರತೀರ್ಥರ ಆರಾಧನೆ ಇಂದಿನಿಂದ ಮೂರು ದಿನಗಳು ನಡೆಯುತ್ತದೆ, (ರಾಯಚೂರು) ... 

ಹಾಗೆಯೇ....

ಗುರುಶ್ರೀಶ ಮಹಮ್ ವಂದೇ ಗುರು ತತ್ವ ವಿಭೋದಕಮ್/
ಗುಹಾತಿಶಯಂ ಗುಣಾತೀತಂ ಭಾವಯಂತಂ ಮಹಾಮತಿಮ್//

17ನೇ ಶತಮಾನದ  ಪರಮ ಶ್ರೇಷ್ಠ ದಾಸಾರ್ಯರು, ಹುಂಡೇಕಾರ ದಾಸರ ಶಿಷ್ಯರು, ನರಸಿಂಹ ದೇವರ ಸ್ವಪ್ನಸೂಚನೆಯಂತೆ ಶ್ರೀ ಮಾನವಿ ಪ್ರಭುಗಳ ಬಳಿ 12 ವರ್ಷಗಳ ಕಾಲ ಸೇವೆಯನು ಮಾಡಿದವರೂ, ಸೇವಾ ಫಲಿತವಾಗಿ ಜಗನ್ನಾಥ ದಾಸರಿಂದ ಒಂದು ಕೋಲನ್ನು ಅನುಗ್ರಹೀತರಾಗಿ, ಆ ಕೋಲಿನಿಂದ ತಮ್ಮ ಅಪಮೃತ್ಯುವನ್ನು ಪರಿಹರಿಸಿಕೊಂಡ, ನಂತರದಲ್ಲಿ ಶ್ರೀ  ಹುಂಡೇಕಾರ ದಾಸರಲ್ಲಿ ಶಿಷ್ಯತ್ವ ವಹಿಸಿ  ಅಂಕಿತೋಪದೇಶವನ್ನು ಪಡೆದ,   ನಂತರದಲಿ ಕುಂಟೋಜಿ ಗ್ರಾಮದಲಿ ವಾಸಮಾಡಿಕೊಂಡು, ಕುಂಟೋಜಿ ದಾಸರೆಂದೇ ಪ್ರಸಿದ್ಧರಾದ, ತಮ್ಮ ಸ್ವರೂಪೋದ್ಧಾರಕರಾದ ಶ್ರೀ ಮಾನವಿ ಪ್ರಭುಗಳ ಮೇರು ಕೃತಿಯಾದ ಶ್ರೀಮದ್ಹರಿಕಥಾಮೃತಸಾರಕ್ಕೆ ಫಲಶೃತಿಯನ್ನು ರಚನೆ ಮಾಡುವುದಲ್ಲದೇ , 4 ಸುಳಾದಿಗಳನ್ನು, 30 ಮೇಲೆ ಕೃತಿಗಳನ್ನು ರಚನೆ ಮಾಡಿ ನಮಗೆ ಅನುಗ್ರಹ ಮಾಡಿದ ಶ್ರೀ ಗುರುಶ್ರೀಶವಿಠಲರ ಆರಾಧನೆ  ಇಂದಿನಿಂದ ಮೂರು ದಿನ..ಅವರ ಕೃತಿಗಳಾದ
 ಬಾರೋ ಗುರುರಾಘವೇಂದ್ರ, ಬಾರಯ್ಯ ಬಾಬಾ 
ಸ್ತುತಿರತ್ನಮಾಲಾ ಎಂದೇ ಕರೆಯಲ್ಪಡುವ ಭಾನುಕೋಟಿತೇಜ ಲಾವಣ್ಯಮೂರುತಿ ಶ್ರೀ ವೆಂಕಟೇಶನೆ ನಮೋ ನಮೋ ಶ್ರೀನಿವಾಸಾ ದಯಾನಿಧೆ  ಹಾಗೇ
ತಾರತಮ್ಯ ಸ್ತುತಿಯಾಗಲಿ ನಮ್ಮ ದಿನನಿತ್ಯ ಹಾಡುಗಳು ಎಂಬುದರಲ್ಲಿ ಲವಲೀಶವಾದರೂ ಸಂದೇಹವಿಲ್ಲ ಅಂದರೆ ಅತಿಶಯೋಕ್ತಿಯಲ್ಲ..

ಶ್ರೀ ಜಿತಾಮಿತ್ರತೀರ್ಥರ
ಶ್ರೀ ಗುರುಶ್ರೀಶವಿಠಲರ ಅನುಗ್ರಹ,  ಆಶೀರ್ವಾದಗಳು ಸಜ್ಜನರಮೇಲೆ ಸದಾಕಾಲವಿರಲೆಂದು ಅವರಲ್ಲಿ ಪ್ರಾರ್ಥನೆ ಮಾಡುತ್ತಾ...

-Smt. Padma Sirish

ನಾದನೀರಾಜನದಿಂ ದಾಸಸುರಭಿ 🙏🏽
***


 ಏಸು ಬಲವಿರಲೇನು ಎಲೆ ಮನವೇ|
ವಾಸರೋಸರ ಗುರು ಶ್ರೀಶ ರಾಯರ ಸ್ಮರಿಸು||
✍️ತುಂಗಭದ್ರಾ ನದಿಯ ದಂಡೆಯ ಕಂಪ್ಲಿ ಎನ್ನುವ ಆ ಗ್ರಾಮದ ಒಬ್ಬರ ಮನೆಯಲ್ಲಿ ಧಾರ್ಮಿಕ ಮಂಗಳ ಕಾರ್ಯಕ್ರಮ.ದೇವರ ಪೂಜೆ ಮುಗಿದಿದೆ. ನೈವೇದ್ಯ ಸಮರ್ಪಣೆ ಯ ಸಮಯ.
ನೈವೇದ್ಯಕ್ಕೆ ಹಾಗು ನಂತರದ ಅನ್ನ ಸಂತರ್ಪಣೆಗೆ ತುಪ್ಪ ಇನ್ನೊಂದು ದಡದಿಂದ ಬರಬೇಕು. ನದಿ ತುಂಬಿ ಹರಿಯುತ್ತಾ ಇದೆ.ಎಲ್ಲರಿಗು ಆತಂಕ ಇನ್ನೂ ತುಪ್ಪ ಬರಲಿಲ್ಲ ಅಂತ.
ಮನೆಯ ಯಜಮಾನರು ಈ ಪರಿಸ್ಥಿತಿ ನೋಡಿದರು.
ಶಿಷ್ಯನಿಗೆ ಕರೆದು ತುಂಗಾ ನದಿಯಿಂದ ಒಂದು ಕೊಡ ನೀರು ತರಲು ಹೇಳಿದರು.ತಂದಂತಹ ನೀರಿನ ಕೊಡಕ್ಕೆ ಮಂತ್ರಾಕ್ಷತೆ ಹಾಕಿ ಅದರ ಮೇಲೆ  ಕೈ ಇಟ್ಟು ಅಭಿಮಾನಿ ದೇವತೆಗಳ ಆವಾಹನ  ಮಂತ್ರಗಳನ್ನು ಪಠಣೆ ಮಾಡಿ ಆ ನೀರನ್ನು ತುಪ್ಪ ವಾಗಿಸಿದರು.
ನೈವೇದ್ಯ ಭೋಜನ ಸಂತರ್ಪಣೆ ಆದ ಮೇಲೆ ತುಪ್ಪ ದವನು ಬಂದ.ಅವನು ತಂದ ತುಪ್ಪ ವನ್ನು ನದಿಗೆ ಸುರಿಯಲು ಯಜಮಾನರು ಶಿಷ್ಯ ನಿಗೆ ಆಜ್ಞೆ ಮಾಡುತ್ತಾರೆ.
ಅಷ್ಟು ತುಪ್ಪ ವನ್ನು ಸುರಿಯಲು ಕಾರಣವೇನು??ಅಂತ ಎಲ್ಲಾ ರು ಕೇಳುವರು.
"ನದಿಯಿಂದ ನಾನು ತುಪ್ಪ ವನ್ನು ಸಾಲವಾಗಿ ಪಡೆದಿದ್ದೆ.ಅದನ್ನು ಮರಳಿಸಬೇಕು.ಎಂದು ಹೇಳಿದರು"...
ಇನ್ನೊಂದು ಬಾರಿ ಮಾನವಿ ಶ್ರೀಜಗನ್ನಾಥ ದಾಸರು ತಮ್ಮ ಶಿಷ್ಯ ಪರಿವಾರದ ಜೊತೆಯಲ್ಲಿ ಭೂವೈಕುಂಠವೆನಿಸಿದ ತಿರುಪತಿ ಯಲ್ಲಿ ಶ್ರೀನಿವಾಸ ನ ದರುಶನ ಮಾಡಲು ಹೋಗಿದ್ದಾರೆ.
"ತಕ್ಷಣ ತಮ್ಮ ಪ್ರೀತಿಪಾತ್ರ ಶಿಷ್ಯ ರಾದ ಕಂಪ್ಲಿಯ ಆ ಯಜಮಾನ ಇದ್ದರೆ ಚೆನ್ನಾಗಿ ಇತ್ತು ಅಂತ ಉಳಿದವರ ಮುಂದೆ ಹೇಳಿದಾಗ
ಕ್ಷಣಮಾತ್ರದಲ್ಲಿ ಅವರ ಮುಂದೆ ಬಂದು ನಿಂತರಂತೆ"...
ಹೀಗೆ ಇಂತಹ ಮಹಿಮೆಯನ್ನು "ಭಗವಂತನ ಅನುಗ್ರಹದಿಂದ ತೋರಿಸಿದ ಆ ಕಂಪ್ಲಿಯ ಯಜಮಾನ ಇಂದಿನ ಆರಾಧನಾ ಕಥಾನಾಯಕರು ಆದ ಶ್ರೀ ಗುರು ಶ್ರೀಶವಿಠ್ಠಲ ದಾಸರು,ಕುಂಟೋಜಿ ದಾಸರು, ಕಂಪ್ಲಿ ದಾಸರು ಎನ್ನುವ ಹೆಸರಿನಲ್ಲಿ ಕರೆಸಿಕೊಂಡ ಮಹಾನುಭಾವರು."..
ದಾಸರು ಪ್ರಸಿದ್ಧ ಕನಕಗಿರಿಯ ಒಂದು ಕರಣಿಕ ಮನೆತನದಲ್ಲಿ ಜನಿಸಿದರು. ನರಸಿಂಹ ಎಂಬ ಹೆಸರಿನಿಂದ ವಿದ್ಯಾಭ್ಯಾಸ ಎಲ್ಲಾ ನಡೆಯಿತು. ಮನೆತನದ ವೃತ್ತಿ ಯಾದ ಕರಣಿಕ ಕೆಲಸ ಮಾಡುತ್ತಾರೆ. ಬಂದಂತಹ ಅತಿಥಿಗಳಿಗೆ,ಧಾರ್ಮಿಕ ಕಾರ್ಯಗಳಿಗೆ ಹೇರಳ ಹಣವನ್ನು ಖರ್ಚು ಮಾಡುವುದನ್ನು ಕಂಡು ಅವರ ಮೇಲೆ ರಾಜಧನ ದುರುಪಯೋಗವಾಗಿದೆ ಅಂತ ಹೇಳಿ ಆರೋಪವನ್ನು ಹೊರಿಸಿ ಸೆರೆಮನೆಯಲ್ಲಿ ಇಡುತ್ತಾರೆ.
ಒಂದೆರಡು ದಿನಗಳ ನಂತರ ಭಗವಂತ ಕಾಣಿಸಿಕೊಂಡ.. 
"ನನ್ನ ದಾಸನಾಗು" ಎಂದುಹೇಳಿದ.
"ಸೆರೆಯಲ್ಲಿ ಇರುವ ನಾನು ನಿನ್ನ ದಾಸನಾಗಲು ಹೇಗೆ ಸಾಧ್ಯ??" ಎನಲು 
"ಮತ್ತೊಂದು ಬಾರಿ ಆ ಲೆಕ್ಕ ಪತ್ರದ ಪುಸ್ತಕಗಳನ್ನು ನೋಡಲು ರಾಜನಿಗೆ ಹೇಳು.ನೀನು ಬಂಧ ಮುಕ್ತ ನಾಗುವೆ.ನಂತರ ಜಗನ್ನಾಥ ದಾಸರ ಬಳಿ ಹೋಗಿ ಸೇವೆ ಮಾಡಿ ನಿನ್ನ ಜನ್ಮ ಸಾರ್ಥಕ ಮಾಡಿಕೊ" ಎಂದು ಸ್ವಾಮಿ ಸೂಚನೆ ಕೊಡುತ್ತಾನೆ...
ಆ ನಂತರ ಅಧಿಕಾರಿಗಳು ಲೆಕ್ಕ ಪತ್ರ ನೋಡಲು ಎಲ್ಲಾ ಸರಿ ಇರುವದು ಕಂಡು ಇವರ ತಪ್ಪು ಇಲ್ಲ ಅಂತ ಹೇಳಿ ಬಿಡುಗಡೆ ಮಾಡುತ್ತಾರೆ.
ನಂತರ ಶ್ರೀ ಜಗನ್ನಾಥ ದಾಸರ ಬಳಿ ೧೨ವರುಷ ಸೇವೆಯನ್ನು ಮಾಡಿ ಊರಿಗೆ ಹೊರಡಲು ಅಪ್ಪಣೆ ಕೇಳಿದರು ದಾಸರು ಅಪ್ಪಣೆ ಕೊಡಲಿಲ್ಲ...
ಒಂದು ದಿನ ದಾಸರ ಕಾಲನ್ನು ಒತ್ತುವಾಗ ಇವರ ಕಣ್ಣಿನ ನೀರು ದಾಸರ ಕಾಲ ಮೇಲೆ ಬೀಳುತ್ತದೆ.
ತಕ್ಷಣ ಶ್ರೀಜಗನ್ನಾಥ ದಾಸರು ಎದ್ದು ಕುಳಿತು..
"'ಮಗು!! ನಿನಗೆ ಅಪಮೃತ್ಯು ಬರಲಿದೆ ಅದನ್ನು ಪರಿಹಾರ ಮಾಡಿ ಕಳುಹಿಸುವ ಅಂತ ಅಂದುಕೊಂಡಿದ್ದೆ.ಭಗವಂತನ ಸಂಕಲ್ಪ. ನಿನಗೆ ಹೊರಡುವ ಆತುರ.ಶ್ರೀಶವಿಠ್ಠಲ ಅಂಕಿತ ಶ್ರೀ ಹುಂಡೇಕಾರ ದಾಸರು ನಿನ್ನ ನಿಯತ ಗುರುಗಳು.ಅವರಲ್ಲಿ ಹೋಗಿ ಅಂಕಿತ ಪಡೆದುಕೊ" ಅಂತ ಹೇಳಿ "ಅವರಿಗೆ ಒಂದು ಕೈ ಕೋಲನ್ನು  ಕೊಟ್ಟುದಾರಿಯಲ್ಲಿ ನಿನಗೆ ಸರ್ಪ ಬಂದು ಕಚ್ಚುತ್ತದೆ.ಈ ಕೋಲನ್ನು ಆ ಜಾಗದಲ್ಲಿ ಇಡು.ನಿನ್ನ ಅಪಮೃತ್ಯು ಪರಿಹಾರವಾಗುತ್ತದೆ" ಅಂತ ಹೇಳಿ ಕಳುಹಿಸುತ್ತಾರೆ.
ನಂತರ ಅದರಂತೆ ತಮ್ಮ "ಅಪಮೃತ್ಯುವನ್ನು ಕಳೆದುಕೊಂಡು ಹುಂಡೆಕಾರ ದಾಸರಿಂದ ಗುರು ಶ್ರೀಶ ವಿಠ್ಠಲ ಅಂತ ಅಂಕಿತ ವನ್ನು ಪಡೆದುಕೊಂಡು" ಗಂಗಾವತಿ ಬಳಿಯ ಕುಂಟೋಜಿ ಎನ್ನುವ ಗ್ರಾಮದಲ್ಲಿ ವಾಸವಾಗಿದ್ದರು.
ಶತಾಯುಷಿಗಳಾಗಿದ್ದ ದಾಸರು ಜೀವಿತಕಾಲದ ಕೊನೆಯಲ್ಲಿ ಕುಟುಂಬ ವರ್ಗದ ಜೊತೆಯಲ್ಲಿ ಕಾಶಿಯಾತ್ರೆ ಹೊರಟರು. "ಗಂಗಾನದಿ ದಾಟುವಾಗ  ನಾವೆ ಸಹಿತವಾಗಿ ಇಡೀ ಕುಟುಂಬ  ಮುಳುಗಿ ಹೋಗುತ್ತದೆ.ಒಳ್ಳೆಯ ಈಜುಗಾರರಾದ ದಾಸರು ನದಿಯನ್ನು ಈಜಿ ದಂಡೆಯನ್ನು ತಲುಪಿ ಎಲ್ಲಾ ವೃತ್ತಾಂತವನ್ನು ಬರೆದು  ತಾವು ಬದರಿಯತ್ತ ಪ್ರಯಾಣ ಮಾಡುವ ದಾಗಿ ಹೇಳಿ ಪತ್ರ ಮುಖೇನ ತಿಳಿಸಿ ಅದನ್ನು ಊರಿಗೆ ಮುಟ್ಟಲು ವ್ಯವಸ್ಥೆ ಮಾಡಿ ಬದರಿ ಕಡೆ ಪಯಣವನ್ನು ಬೆಳೆಸಿದರು."
ದಾಸರು ಬದರಿ ಕಡೆ ಹೋದ ದಿನ ಮಾರ್ಗಶಿರ ಅಮವಾಸ್ಯೆದಿನ..ಹಾಗಾಗಿ ಆ ಶುಭದಿನದಂದು ಅವರ ಮನೆತನದವರು ಹಾಗು ಶಿಷ್ಯ ಮನೆತನದವರು ಆರಾಧನೆ ಮಾಡುತ್ತಾ ಬಂದಿದ್ದಾರೆ...
ಸಾಹಸಿ ಈಜುಗಾರರಾದ ದಾಸರು ತುಂಗಭದ್ರಾ ನದಿಯಲ್ಲಿ ಈಜುವಾಗ ಎದೆಗೆ ಸುಣ್ಣ ಹಚ್ಚಿ ಕೊಂಡು ಒಂದು ದಡದಿಂದ ಇನ್ನೊಂದು ದಡಕ್ಕೆ ಸುಣ್ಣ ನೀರಿಗೆ ತಾಕದಂತೆ ಸರಾಗವಾಗಿ ಈಜುತ್ತಿದ್ದರು...
ಗುರು ಶ್ರೀಶ ದಾಸರ 
 ಅಂತರ್ಯಾಮಿಯಾದ ಗುರು ಶ್ರೀಶ ವಿಠ್ಠಲ ರೂಪಿ ಭಗವಂತನಿಗೆ ಸಮರ್ಪಣೆ ಮಾಡುತ್ತಾ 
 🙏ಶ್ರೀಕೃಷ್ಣಾರ್ಪಣಮಸ್ತು🙏..
ದಾಸರ ನೆರೆ ನಂಬಿರೋ|
ಗುರು ಶ್ರೀಶದಾಸರ ನೆರೆ ನಂಬಿರೋ||
🙏ಶ್ರೀ ಕಪಿಲಾಯ ನಮಃ🙏
*******


by ಆಚಾರ್ಯ ನಾಗರಾಜು ಹಾವೇರಿ
ಗುರು ವಿಜಯ ಪ್ರತಿಷ್ಠಾನ
" ಶ್ರೀ ಕುಂಟೋಜಿ ದಾಸರು - 1 "
" ದಿನಾಂಕ :  13.01.2021 - ಮಾರ್ಗಶಿರ ಬಹುಳ ಅಮಾವಾಸ್ಯೆ ಬುಧವಾರ - ಶ್ರೀ ಗುರು ಶ್ರೀಶ ವಿಠ್ಠಲದಾಸರ ಆರಾಧನಾ ಮಹೋತ್ಸವ "
ಗುರು ಶ್ರೀಶ ಮಹಂ ವಂದೇ
ಗುರು ತತ್ತ್ವ ವಿಬೋಧಕಮ್ ।
ಗುಹಾಶಯಂ ಗುಣಾತೀತಂ
ಭಾವಯಂತಂ ಮಹಾಮತಿಮ್ ।।
ಶ್ರೀ ಜಗನ್ನಾಥದಾಸರ ಶಿಷ್ಯ ವರ್ಗದಲ್ಲಿ ಶ್ರೀ ಪ್ರಾಣೇಶ ದಾಸರ ನಂತರದಲ್ಲಿ ಶ್ರೀ ಶ್ರೀದ ವಿಠ್ಠಲರಿಗೆ ವಿಶಿಷ್ಟ ಸ್ಥಾನವಿದೆ.
ನಂತರ ಶ್ರೀ ಶ್ರೀಶವಿಠ್ಠಲರದು.
ಅವರ ಶಿಷ್ಯರೇ ಶ್ರೀ ಗುರು ಶ್ರೀಶವಿಠ್ಠಲರು.
ದಾಸರ ನೆರೆನಂಬಿರೋ । ಗುರು ।
ಶ್ರೀಶ ದಾಸರ ನೇರೆನಂಬಿರೋ ।
ದಾಸರ ನೆರೆ ನಂಬಿ -
ಲೇಸು ಪೊಂಡಿಸಿ ಮನದ ।
ಕ್ಲೇಶವ ಕಳದಭಿಲಾಷೆ -
ಪೂರೈಸುವ ।। ಪಲ್ಲವಿ ।।
ಸುರಧೇನು ಮನೆಯೊಳಗಿರಲು
ಮಜ್ಜಿಗೆ ಬಯಸಿ ।
ಪರರಲ್ಲಿ ಪೋಗಿ ಬಾಯಿ
ತೆರೆವುದ್ಯಾತಕೆ ಹರಿ ।। ಚರಣ ।।
ಅಕ್ಷಯಾತ್ಮ ಕಲ್ಪವೃಕ್ಷ ತಾನಿರುತಿರೆ ।
ಕುಕ್ಷಿಗೋಸುಗ ಪೋಗಿ
ಭಿಕ್ಷಾ ಬೇಡುವುದ್ಯಾಕೆ ।। ಚರಣ ।।
ಸಂತತಾ ಕೈಯೊಳು
ಚಿಂತಾಮಣಿಯು ಯಿರಲು ।
ಭ್ರಾಂತನಾಗಿ ಅನ್ಯ ಚಿಂತೆ
ಮಾಡುವದ್ಯಾತಕೆ ।। ಚರಣ ।।
ಸುರನದಿ ಮನೆ ಮುಂದೆ
ಪರಿಯಲು ಉದಕಕೆ ।
ವರತಿಯಾತೆಗುವಾ ಬ್ಯಾ-
ಸರದ ಧಾವತಿಯಾಕೆ ।। ಚರಣ ।।
ತುತುಪದ್ಯಾತಕೆ ಬಳರಾ
ಪ್ರತಿದಿನದಲಿ । ಲಕ್ಷ್ಮೀ ।
ಪತಿವಿಠ್ಠಲನ ಪಾದಾ-
ಶ್ರಿತರೆ ಭಕುತಿಯಲಿ ।। ಚರಣ ।।
" ಶ್ರೀ ಗುರು ಶ್ರೀಶ ವಿಠ್ಠಲ ದಾಸರ ಸಂಕ್ಷಿಪ್ತ ಮಾಹಿತಿ "
ಹೆಸರು : ಶ್ರೀ ನರಸಿಂಹ
ತಂದೆ : ಶ್ರೀ ತಮ್ಮಣ್ಣರಸಯ್ಯ
ಜನ್ಮ ಸ್ಥಳ : ಕನಕಗಿರಿ
ಕಾಲ : ಕ್ರಿ ಶ 1745 - 1820
ವಂಶ : ಷಾಷ್ಟೀಕ
ಗೋತ್ರ : ಕೌಶಿಕ
ಮನೆತನ : ಬೊಮ್ಮರಸ
ಸ್ವರೂಪೋದ್ಧಾಕರು : ಶ್ರೀ ಬೃಹಸ್ಪತ್ಯಾಂಶ ಜಗನ್ನಾಥದಾಸರು
ಅಂಕಿತೋಪದೇಶ : ಶ್ರೀ ಶ್ರೀಶವಿಠ್ಠಲರು
ಅಂಕಿತ ನಾಮ : ಗುರು ಶ್ರೀಶ ವಿಠ್ಠಲ
ಆರಾಧನೆ : ಮಾರ್ಗಶೀರ್ಷ ಬಹುಳ ಅಮಾವಾಸ್ಯೆ
" ಷಾಷ್ಟೀಕವಂಶ "
ಕನಕಗಿರಿಯ ಶ್ಯಾನುಭೋಗ ಮನೆತನದ ಪುರುಷ ಬೊಮ್ಮರಸಯ್ಯ ಎಂಬುವರ ವಂಶದಲ್ಲಿ ಶ್ರೀ ಗುರು ಶ್ರೀಶ ವಿಠ್ಠಲರು ಅವತರಿಸಿದರು.
" ಜನನ ಮತ್ತು ವೃತ್ತಿ "
ಷಾಷ್ಟೀಕ ವಂಶದ ಮನೆತನದ ಗೌರವಾದಿಗಳನ್ನು ಕಾಪಾಡಿಕೊಂಡು ಬಂದ ಶ್ರೀ ತಮ್ಮಣ್ಣರಸಯ್ಯ ಅವರಿಗೆ ಕ್ರಿ ಶ 1745 ರಲ್ಲಿ ಪುತ್ರ ಸಂತಾನವಾಯಿತು.
ಮಗುವಿಗೆ ಕ್ಷೇತ್ರ ದೇವತೆಯಾದ ಶ್ರೀನರಸಿಂಹದೇವರ ಹೆಸರನ್ನೇ ಇಟ್ಟರು.
ಶುಕ್ಲ ಪಕ್ಷದ ಚಂದ್ರನಂತೆ ಕಂಗೊಳಿಸುತ್ತಿರುವ ಮಗನಿಗೆ ಅಕ್ಷರಾಭ್ಯಾಸ - ಉಪನಯನ ಮಾಡಿ ಪ್ರಾಥಮಿಕ ವಿದ್ಯೆಯನ್ನು ತಂದೆಯವರಲ್ಲಿಯೇ ಅಧ್ಯಯನ ಮಾಡಿದರು.
ಪ್ರಾಪ್ತ ವಯಸ್ಕರಾದ ಮೇಲೆ ಶ್ರೀ ನರಸಿಂಹನು ಅನುವಂಶೀಕ ವೃತ್ತಿಯಲ್ಲಿ ಮಂದುವರೆದರು.
ಪ್ರಸಂಗವಶಾತ್ ಇವರಿಗೆ ಈ ವೃತ್ತಿಯು ಪ್ರತಿಕೂಲವಾಗಿ ಪರಿಣಮಿಸಿ ಕಾರಾಗೃಹ ವಾಸವಾಯಿತು.
***
" ಶ್ರೀ ಕುಂಟೋಜಿ ದಾಸರು - 2 " 
" ಶ್ರೀ ನೃಸಿಂಹದೇವರ ಸ್ವಪ್ನ ಸೂಚನೆ "
ರಾಗ : ಪೂರ್ವೀ  ತಾಳ : ತ್ರಿವಿಡಿ 
ಬಾರೋ ಶ್ರೀ ನರಹರಿಯೇ ।
ಭವ  ಬಂಧ ಮೋಚಕ 
ಬಾ ಬಾ ಬಾ ।। ಪಲ್ಲವಿ ।।
ನಂದ ಗೋಪನ 
ಕಂದ ಹರಿ ಮುಕುಂದಾ ।
ಸುಂದರ ಮಂಧರೋದ್ಧರ ಧಾರಾ ।
ಸಿಂಧುಶಯನ ಗೋ-
ವಿಂದ ಇಂದಿನಾ ।
ಮಂದಮತಿಗೆ ಸ್ವಾನಂದವೀಯಲು 
ಬಾ ಬಾ ಬಾ ।। ಅ ಪ ।।
ಗಾಡಾಂಧಕಾರದೊಳು 
ಸ್ವೇಚ್ಛೆಯಲಿ ನಾ ।
ಕಿಡಿಗೇಡಿ ಜೀವನಾನಾಗಲು ।
ನೀಡದಂದಲಿಪ್ಪ 
ಲಿಂಗದೊಳಾಡು ।।
ತಾಡುತ ದೂಡಿ ಯೆನ್ನೆನು ।
ಬೇಡಿಗೊಳಿಸಿ ಕಾಡೊಳಟ್ಟದಿ ।
ನಾಡ ರಕ್ಷಿಪ ಗಾಡಿಕಾರನೇ ।। ಚರಣ ।।
ಏಸು ಜನ್ಮಗಳ್ಹೋದವೋ 
ಈ ವಿಧದಿ  । ಮು ।
ನ್ನೇಸು ಜನ್ಮಗಳು ಳಿದವೋ ।
ದಾಸ ನೀನಿಹೆ ಕ್ಲೇಶದಿಂದಲಿ ।।
ಘಾಸಿಯಾಗುವೆ ಮೋಸ ಮಾಡದೆ ।
ಶ್ರೀಶ ನೀ ಭವ ಪಾಶ । ಕಡದೆ ।
ನ್ನಾಶೆ ಪೂರ್ತಿಸೋ 
ವಾಸುದೇವನೇ ।। ಚರಣ ।।
ಪ್ರಾರಬ್ಧವದು ಯಾವುದೋ 
ನಿನ್ನಿಚ್ಛೆಯಿಲ್ಲದೆ ।
ಬೇರಿಹುದಲ್ಲವದು ।
ದಾರಿಗಾಣೆನೋ 
ದೂರ ನೋಡದೆ ।।
ಪಾರ ಮಾಡ್ವದನಂತ 
ಮಹಿಮನೆ ।
ಸೇರಿಸೆನ್ನ ರಮೇಶ ಪಾದಕೆ ।
ಮಾರಪಿತ ಗುರು -
ಶ್ರೀಶ ವಿಠ್ಠಲ।। ಚರಣ ।।
ನರಸಿಂಹಯ್ಯ ಕಾರಾಗೃಹದಲ್ಲಿರುವಾಗ ಶ್ರೀ ನರಸಿಂಹಯ್ಯನಿಗೆ ಸ್ವಪ್ನದಲ್ಲಿ ಶ್ರೀ ಜಗನ್ನಾಥದಾಸರನ್ನು ಆಶ್ರಯಿಸಿ ನನ್ನ ದಾಸನಾಗೆಂದು ಶ್ರೀ ನರಸಿಂಹದೇವರು ಸೂಚಿಸಿದರು. 
ಶ್ಯಾನುಭೋಗ ನರಸಿಂಹಯ್ಯನು ಶ್ರೀ ನರಹರಿಯಾ ಆಜ್ಞೆಯಂತೆ ನಡೆಯಲು ಸಂಕಲ್ಪ ಮಾಡಿದುದೇ ತಡ ಆತ ಬಂಧ ಮುಕ್ತನಾದ.
***
" ಶ್ರೀ ಕುಂಟೋಜಿ ದಾಸರು - 3 " 
" ಶ್ರೀ ಬೃಹಸ್ಪತ್ಯಾಂಶ  ಜಗನ್ನಾಥದಾಸರ ಸೇವೆ " 
ಶ್ರೀ ನರಸಿಂಹಯ್ಯ ಶ್ರೀ ಜಗನ್ನಾಥದಾಸರಿದ್ದಲ್ಲಿಗೆ ಬಂದು ಸೇವೆಗೆ ನಿಂತನು. 
ಕಲ್ಪವೃಕ್ಷದ ನೆರಳಿನಲ್ಲಿ ಬಾಳುವವರಿಗೆ ಅದಾವ ತಾಪವು ತಾನೇ ಬಾಧಿಸಿತು? 
ಶ್ರೀ ಜಗನ್ನಾಥದಾಸರ ಸೇವೆಯಲ್ಲಿ 12 ವರ್ಷಗಳು ಉರುಳಿದವು. 
" ಶ್ರೀ ಜಗನ್ನಾಥದಾಸರ ಕರುಣ್ಯಾಭಯ ಪ್ರಧಾನ " 
ಹೀಗೆ ಶ್ರೀ ಜಗನ್ನಾಥದಾಸರ ಸೇವೆ ಮಾಡುತ್ತಿರುವ ಸಂದರ್ಭದಲ್ಲಿ ಒಂದುದಿನ ಶ್ರೀ ದಾಸಾರ್ಯರ ಪಾದವನ್ನು ಒತ್ತುತ್ತಿರುವಾಗ ಶ್ರೀ ನರಸಿಂಹಯ್ಯನ ಕಣ್ಣುಗಳಿಂದ ಉದುರಿದ ಬಿಂದುಗಳು ಶ್ರೀ ಜಗನ್ನಾಥದಾಸರ ಪಾದವನ್ನು ಸೋಂಕಿದವು. 
ತಕ್ಷಣವೇ ಶ್ರೀ ದಾಸಾರ್ಯರು ಅಂತಃಕಾರಣದಿಂದ ಆತನ ತಲೆಯ ಮೇಲೆ ಹಸ್ತವನ್ನಿಟ್ಟು ಇಂದಿಗೆ ನಿನ್ನ ಸೇವೆ ಮುಗಿಯಿತು. 
ನಿನಗೆ ಬರಲಿದ್ದ ಸರ್ಪ ಕಂಟಕವನ್ನು ಪರಿಹರಿಸಲಿಕ್ಕೆ ಇದುವರೆಗೂ ನಾನು ನಿನ್ನನ್ನು ಇಲ್ಲಿಯೇ ಇಟ್ಟುಕೊಂಡಿದ್ದೆ. 
ಆ ಅಪಮೃತ್ಯುವು ಈಗ ಹಿಮ್ಮೊಗವಾಯಿತು. 
ನಿನ್ನ ರಕ್ಷಣಾರ್ಥವಾಗಿ ಈ ಕೋಲನ್ನು ಕೊಟ್ಟಿದ್ದೇವೆ. 
ಸರ್ಪವು ನಿನ್ನನ್ನು ಕಚ್ಚುವುದು. 
ಆಗ ನೀನು ಈ ಕೋಲನ್ನು ಕಚ್ಚಿದ ಸ್ಥಳಕ್ಕೆ ಇಟ್ಟು ಬಿಡು. 
ವಿಷ ನಿವಾರಣೆಯಾಗುವುದು 
ಎಂದು ಹೇಳಿ ಅಭಯ ಪ್ರಧಾನ ಮಾಡಿ ಕಳುಹಿಸಿದರು. 
ಕೊನೆಗೊಂದು ದಿನ ಶ್ರೀ ನರಸಿಂಹಯ್ಯನಿಗೆ ಸರ್ಪ ದಂಶನವಾಗಿ ಕೂಡಲೇ ಶ್ರೀ ಜಗನ್ನಾಥದಾಸರು ಹೇಳಿದಂತೆ ಮಾಡಲಾಗಿ ಒದಗಿದ್ದ ಅಪಮೃತ್ಯುವು ಸಂಪೂರ್ಣವಾಗಿ ನಿವಾರಣೆಯಾಯಿತು.
" ಅಂಕಿತ ಪ್ರಧಾನ " 
ಶ್ರೀ ಜಗನ್ನಾಥದಾಸರು ಈ ಶ್ರೀ ನರಸಿಂಹಯ್ಯನನ್ನು ತಮ್ಮ ಶಿಷ್ಯರಾದ ಶ್ರೀ ಹುಂಡೇಕಾರ ( ಶ್ರೀ ಶ್ರೀಶವಿಠ್ಠಲ ) ದಾಸರಲ್ಲಿ ಕಳುಹಿಸಿದರು. 
ಆಗ ಶ್ರೀ ಶ್ರೀಶವಿಠ್ಠಲರು ಶ್ರೀ ಜಗನ್ನಾಥದಾಸರ ಆಜ್ಞೆಯಂತೆ " ಗುರು ಶ್ರೀಶವಿಠ್ಠಲ " ಎಂದು ಅಂಕಿತೋಪದೇಶವನ್ನು ಕೊಟ್ಟು ಅನುಗ್ರಹಿಸಿದರು.
" ಶ್ರೀ ಜಗನ್ನಾಥದಾಸರ ಸಂದರ್ಶನ " 
ಶ್ರೀ ಶ್ರೀಶವಿಠ್ಠಲರಿಂದ ಅಂಕಿತವನ್ನು ಪಡೆದು ತಮ್ಮ ಸ್ವರೂಪೋದ್ಧಾರಕ ಗುರುಗಳಾದ ಶ್ರೀ ಜಗನ್ನಾಥದಾಸರ ಸನ್ನಿಧಾನಕ್ಕೆ ಬಂದು ಭಕ್ತಿ ಶ್ರದ್ಧೆಗಳಿಂದ ಅವರ ಸೇವೆಯನ್ನು ಮಾಡಿ ಅವರನ್ನು ಸ್ತೋತ್ರ ಮಾಡುತ್ತಿದ್ದಾರೆ. 
ಎಂತು ಪೊಗಳಲಿ 
ಜಗನ್ನಾಥದಾಸರನ ।
ಕಂತುಪಿತ ಒಲಿದವರನ 
ಅಂತರಂಗದಿ ಪೊಳೆವ ।। ಪಲ್ಲವಿ ।। 
ಶ್ರೀ ರಮಾದೇವಿ ಪತಿಯೊಡನೆ 
ಇವರಲಿ ನಿಂತು ।
ಈರೆರಡು ದೇಹ ಅವ್ಯಕ್ತ ಸಹಿತ ।
ಆರು ನಾಲಕು ತತ್ತ್ವದ-
ಭಿಮಾನಿಗಳ ಕೂಡಿ ।
ಮೂರು ಗುಣ ಕಾರ್ಯಗಳ ಮಾಡಿ 
ತೋರ್ಪರು ಸುಖವ ।। ಚರಣ ।। 
ಚತುರಮುಖ ವಾಯು 
ನಿಜ ಸತಿಯರಿಂದೊಡಗೂಡಿ ।
ಇತರ ದೇವತೆಗಳು ಸತತ ಇದ್ದು ।
ವಿಹಿತ ಮಹಿಮನ 
ಸೇವಿಸುತಲಿ ಸುಜ್ಞಾನವನು ।
ಹಿತದಿಂದಲಿವರಿಗಿತ್ತತಿ 
ತೋಷ ಪಡಿಸುವರು ।। ಚರಣ ।। 
ಕರಣ ಮಾನಿಗಳು ಶಿವ ಇಂದ್ರ  
ಸೂರ್ಯರು ತಾವು ।
ಇವರಧೀಷ್ಠಾನದಲಿ 
ಹರಿಯನರ್ಚಿಸೀ ।
ಸುರ ನರರ ತರತಮವ 
ಪಂಚಭೇದವನರುಪಿ ।
ಹರಿದಾಸ್ಯವನು ಇತ್ತು ಅರ 
ದೂರವೆನಿಸುವರಾ ।। ಚರಣ ।। 
ಈ ಪರಿ ನಿರಂತರದಿ 
ಅಪಾದಮೌಳಿ । ತವ ।
ಕಾಪಯೋಜಜ 
ಮುಖರ ರೂಪಗಳಲಿ ।
ಆ ಪರಮ ಪುರುಷನ 
ಸುವ್ಯಾಪಾರ ನೋಡುತಲಿ ।
ಅಪಾರ ಮಹಿಮನ 
ಸ್ವರೂಪ ಸ್ಮರಿಸುತಲಿ ।। ಚರಣ ।। 
ಈ ಸುಮನಸರ ಮಹಿಮೆ 
ಸೋಸಿನಲಿ ತಿಳಿದವರ ।
ದಾಸನಾದವನ ಅಘ  
ನಾಶವಹುದು ।
ಕಾಸಿನಾಶೆಗೆ ನರರ 
ದಾಸನಾದವನು । ಗುರು ।
ಶ್ರೀಶವಿಠ್ಠಲನ ನಿಜ 
ದಾಸರನು ಬಲ್ಲನೆ ।। ಚರಣ ।।
***
" ಶ್ರೀ ಕುಂಟೋಜಿದಾಸರು - 4 " 
 " ಶ್ರೀ ರಾಯರ ಮಹಿಮಾ ವೈಭವದ ವರ್ಣನೆ " 
ಶ್ರೀ ಗುರು ಶ್ರೀಶ ವಿಠ್ಠಲರು ತಮ್ಮ ಸ್ವರೂಪೋದ್ಧಾರಕ ಗುರುಗಳಾದ ಶ್ರೀ ಜಗನ್ನಾಥದಾಸರ ಅಪ್ಪಣೆ ಪಡೆದು - ಕಲಿಯುಗದ ಕಲ್ಪವೃಕ್ಷ ಕಾಮಧೇನುವೆಂದು ಜಗತ್ಪ್ರಸಿದ್ಧರಾದ ಶ್ರೀ ಪ್ರಹ್ಲಾದ - ಶ್ರೀ ಬಾಹ್ಲೀಕ - ಶ್ರೀ ವ್ಯಾಸರಾಜಾವತಾರಿಗಳಾದ ಶ್ರೀ ರಾಘವೇಂದ್ರ ತೀರ್ಥ ಗುರುಸಾರ್ವಭೌಮರ ಬೃಂದಾವನದ ಮುಂದೆ ನಿಂತು ಅವರ ವೃಂದಾವನವನ್ನೇ ತದೇಕ ಚಿತ್ತದಿಂದ ನೋಡುತ್ತಾ ...... 
ಆನಂದಾತಿಶಯದಿಂದ ಹೃದಯ ತುಂಬಿ ಶ್ರೀ ರಾಯರ ಕಾರುಣ್ಯವನ್ನು ಅತ್ಯಂತ ಮನೋಜ್ಞವಾಗಿ ವರ್ಣಿಸಿದ್ದಾರೆ. 
ರಾಗ : ಮೋಹನ ತಾಳ : ಝಂಪೆ 
ನೋಡಲೇ ಮನವೇ 
ಕೊಂಡಾಡು ಗುರುಗಳ ಪಾದ ।
ಈಡುಯಿಲ್ಲವೋ ಪುಣ್ಯಕೆ ।। ಪಲ್ಲವಿ ।। 
ನಾಡೊಳಗೆ ಗುರು 
ರಾಘವೇಂದ್ರರಾಯರ ಸೇವೆ ।
ಮಾಡಿದವ ಪರಮ 
ಧನ್ಯ । ಮಾನ್ಯ ।। ಅ. ಪ ।। 
ನಿಷ್ಠೆಯಿಂದಲಿ ಸ್ಮರಿಸೆ 
ಕಷ್ಟಗಳು ದೂರ । ಮನೋ ।
 ಭೀಷ್ಟಗಳ ಪೂರೈಸುವರೋ ।
 ಅಷ್ಟ ಸೌಭಾಗ್ಯವನೆ 
ಕೊಟ್ಟು ಸುಜನರಿಗೆ । ಶ್ರೀ ।
 ವಿಷ್ಣು ದಾಸ್ಯವ 
ತೋರ್ಪರೋ ।।
 ದೃಷ್ಠಿಯಿಂದಲಿ 
ನೋಡಲನೇಕ ಜನ್ಮದ ಪಾಪ ।
ಬಿಟ್ಟು ಪೋಪವೋ ಕ್ಷಣದಲಿ ।
ಎಷ್ಟು ಹೇಳಲಿ ಇವರ 
ನಿಷ್ಠ ಮಹಾತ್ಮ್ಯೇಯನು ।
ದುಷ್ಟರಿಗೆ ದೊರೆಯದಿವರ 
ಸೇವಾ ।। ಚರಣ ।। 
ಹಲವು ಕ್ಷೇತ್ರಗಳೇಕೆ 
ಹಲವು ತೀರ್ಥಗಳೇಕೆ ।
ಫಲ ಸುಲಭದಲ್ಲಿರಲು ।
ಬಲವು ಇದ್ದದ್ದರೊಳು 
ಪ್ರದಕ್ಷಿಣೆ ಸುಪದಜಲ ।
ತಲೆಯಲ್ಲಿ ಧರಿಸಿ ನಿತ್ಯ ।।
ಮಲ ರಹಿತನು ಆಗಿ 
ದಂಡ ಪ್ರಣಾಮವ ಮಾಡೆ ।
ಒಲಿವರು ಕರುಣದಲಿ ಬೇಗ ।
ಜಲಜನಾಭನು ನಾಲ್ಕು 
ರೂಪದಿಂದಿವರಲ್ಲಿ ।
ಸಿಲುಕಿ ಪೂಜೆಗೊಂಬ 
ಸತತಾ । ಮೋಕ್ಷದಾತಾ ।। ಚರಣ ।। 
ಹರಿದಾಸರಿದ್ದ ಸ್ಥಳ ವರ 
ಕಾಶಿ ಮೊದಲಾದ ।
ಕುರುಕ್ಷೇತ್ರಕಿಂತಧಿಕವೋ ।
ಸುರ ಋಷಿ ಮುನಿಗಳು 
ಇಲ್ಲಿಹರು ವೈಕುಂಠ ।
ಸರಿಮಿಗಿಲು ಎಂದೆನಿಪುದೋ ।।
ಪರಮ ಸುಜ್ಞಾನಿಗಳಗೀ 
ಫಲವು ದೊರಕುವುದು ।
ತರತಮದಿ ಇತರ ಜನಕೆ ।
ಗುರು ಶ್ರೀಶವಿಠ್ಠಲನು 
ಇವರ ರೂಪ ನಾಮದಲಿ ।
ಪರಿಪರಿಯ ವರವಗರೆವಾ । 
ಪೊರೆವಾ ।। ಚರಣ ।। 
ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮರ ಬೃಂದಾವನದ ಮುಂದೆ ನಿಂತಿರುವ ಶ್ರೀ ದಾಸರ ಕಣ್ಣಲ್ಲಿ ಆನಂದ ಭಾಷ್ಪ ಸುರಿಯುತ್ತಿದೆ. 
ಶ್ರೀ ಗುರುರಾಜರ ಮಹಿಮೆಯನ್ನು ಎಷ್ಟು ಹೊಗಳಿದರೂ ಸಾಲದೇ ಆನಂದೋದ್ರೇಕದಿಂದ ಪುನಃ ಪುನಃ ಸ್ತೋತ್ರ ಮಾಡುತ್ತಿದ್ದಾರೆ. 
ಸೂಜಿಗಲ್ಲಿನಂತೆ ಪ್ರತಿಯೊಬ್ಬರ ಮನಸ್ಸನ್ನು ಆಕರ್ಷಿಸುವ ದೈವೀ ಶಕ್ತಿ ಶ್ರೀ ಗುರುಸಾರ್ವಭೌಮರದಲ್ಲವೇ! 
ರಾಗ : ಮಧ್ಯಮಾವತಿ ತಾಳ : ಅಟ 
ಬಾರೋ ಗುರು ರಾಘವೇಂದ್ರ ।
ಬಾರಯ್ಯ ಬಾ ಬಾ ಬಾರೋ 
ಗುರು ರಾಘವೇಂದ್ರ ।। ಪಲ್ಲವಿ ।। 
ಹಿಂದೂ ಮುಂದಿಲ್ಲೆನಗೆ ನೀ ಗತಿ ।
ಯೆಂದು ನಂಬಿದೆ ನಿನ್ನ ಪಾದವ ।
ಬಂಧನವ ಬಿಡಿಸೆನ್ನ ಕರ ಪಿಡಿ ।
ನಂದ ಕಂದ ಮುಕುಂದ ಬಂಧು ।। ಅ. ಪ ।। 
ಸೇವಕನೆಲೋ ನಾನು 
ಧಾವಿಸಿ ಬಂದೆನು ।
ಸೇವೆ ನೀಡೆಲೋ ನೀನು ।
ಸೇವಕನ ಸೇವಯನು ಸೇವಿಸಿ ।।
ಸೇವ್ಯ ಸೇವಕ 
ಭಾವವೀಯುತ ।
ಠಾವುಗಾಣಿಸಿ ಪೊರೆಯೊ 
ಧರೆಯೊಳು ।
ಪಾವನಾತ್ಮಕ ಕಾವ 
ಕರುಣಿ ।। ಚರಣ ।। 
ಕರೆದರೆ ಬರುವಿಯೆಂದು 
ಸಾರುವುದು ಡಂಗುರ ।
ತ್ವರಿತದಿ ಒದಗೋ ಬಂದು ।
ಜರಿಯ ಬೇಡವೋ 
ಬರಿದೆ ನಿನ್ನಯ ।।
ವಿರಹ ತಾಳದೆ 
ಮನದಿ ಕೊರಗುವೆ ।
ಹರಿ ಸ್ಮರಣೆಯ 
ನಿರುತದಲಿ ಯೆನಗೆ ।
ಹರುಷದಲಿ ನೀ ನಿರುತ 
ಕೊಡುತಲಿ ।। ಚರಣ ।। 
ನರಹರಿ ಪ್ರಿಯನೇ ಬಾ 
ಗುರು ಶ್ರೀಶವಿಠ್ಠಲನ ।
ಕರುಣಾ ಪಾತ್ರನೆ 
ಬೇಗ ಬಾ ।
ಗುರುವರನೆ 
ಪೋಷಿಸೆನ್ನನ್ನು ।।
ಮರೆಯದಲೆ ತವ 
ಚರ ಕೋಟಿಯಲಿರಿಸಿ ।
ಚರಣಾಂಬುಜಾವಾ ತೋರುತ ।
ತ್ವರಿತದಲಿ ಓಡೋಡಿ 
ಬಾ ಬಾ ।। ಚರಣ ।।
***
" ಶ್ರೀ ಕುಂಟೋಜಿದಾಸರು - 5 "
 " ಶ್ರೀ ಗುರು ಶ್ರೀಶ ವಿಠ್ಠಲರ ರಚನೆಗಳು " 
ಶ್ರೀ ಗುರು ಶ್ರೀಶ ವಿಠ್ಠಲರು ಶ್ರೀ ಜಗನ್ನಾಥದಾಸರು ಇತ್ತ ಕೋಲನ್ನೇ ವೈಕುಂಠಕ್ಕೆ ಊರುಗೋಲನ್ನಾಗಿ ಹಿಡಿದು; ತಮ್ಮ ನೀತ ಗುರುಗಳಾದ ಶ್ರೀ ಶ್ರೀಶವಿಠ್ಠಲರಿತ್ತ ತಂಬೂರಿಯನ್ನು ಧರಿಸಿಕೊಂಡು ತುಂಗಭದ್ರಾ ನದೀ ತೀರದ ಕುಂಟೋಜಿಯಲ್ಲಿ ಕೆಲವು ಕಾಲ ವಾಸ ಮಾಡಿ ಬಹಳಾ ಜನರನ್ನುದ್ಧರಿಸಿದರು. 
ಶ್ರೀ ಗುರು ಶ್ರೀಶವಿಠ್ಠಲರು 30 ಪದಗಳನ್ನೂ; 4 ಸುಳಾದಿಗಳನ್ನೂ, ಹರಿಕಥಾಮೃತಸಾರಕ್ಕೆ ಫಲಶ್ರುತಿಯನ್ನು, ಪ್ರಮೇಯ ರತ್ನಮಾಲಾ ರಚಿಸಿದ್ದಾರೆ. 
ಅದರಲ್ಲಿ " ಸ್ತುತಿರತ್ನ ಮಾಲಾ ಸ್ತೋತ್ರ " ಪ್ರಸಿದ್ಧಿಯಾಗಿದೆ. 
ರಾಗ : ಮೋಹನಕಲ್ಯಾಣಿ ರಾಗ : ಅಟ್ಟ 
ಶ್ರೀನಿವಾಸ ದಯಾನಿಧೇ ।। ಪಲ್ಲವಿ ।। 
ಭಾನುಕೋಟಿತೇಜ ಲಾವಣ್ಯ ಮೂರುತಿ ।
ಶ್ರೀ ವೆಂಕಟೇಶಗೆ ನಮೋ ನಮೋ ।। ಚರಣ ।। 
ಶೇಷಾಚಲ ನಿವಾಸ ದೋಷ ದೂರನೇ । ಭಕುತ ।
ಪೋಷಕ ಶ್ರೀಕಾಂತ ನಮೋ ನಮೋ ।। ಚರಣ ।। 
ಖಗರಾಜ ವಾಹನ ಜಗದೊಡೆಯನೆ ನಿನ್ನ ।
ಅಗಣಿತ ಮಹಿಮೆಗ ನಮೋ ನಮೋ
ಶ್ರೀನಿವಾಸಾ ದಯಾನಿಧೇ ।। ಚರಣ ।। 
ನೀಲಮೇಘಶ್ಯಾಮ ಪಾಲಸಾಗರ ಶಯನ ।
ಶ್ರೀ ಲಕುಮೀಶನೆ ನಮೋ ನಮೋ
ಶ್ರೀನಿವಾಸಾ ದಯಾನಿಧೇ ।। ಚರಣ ।। 
ಶಂಖ ಚಕ್ರಧರ ವೆಂಕಟರಮಣ । ಅಕ ।
ಳಂಕ ಮೂರುತಿ ದೇವ ನಮೋ ನಮೋ
ಶ್ರೀನಿವಾಸಾ ದಯಾನಿಧೇ ।। ಚರಣ ।। 
ಪನ್ನಂಗಶಯನ ನಿನ್ನಂಥ ದೇವರು ।
ಇನ್ನುಂಟೆ ಅಜಭವಸುರ ವಂದ್ಯ ನಮೋ ನಮೋ
ಶ್ರೀನಿವಾಸಾ ದಯಾನಿಧೇ ।। ಚರಣ ।।
ಸೃಷ್ಟಿಯಿಲ್ಲದೆಲೆ ಒತ್ತಟ್ಟಿದಿದ್ದವರನ್ನು ।
ಸೃಷ್ಟಿಸಿ ಜೀವರನ್ನು ಸಲಹುವೀ ।
ಶ್ರೀನಿವಾಸಾ ದಯಾನಿಧೇ ।। ಚರಣ ।। 
ತನುಮನಕರಣಗಳನ್ನು ಕೊಟ್ಟು ।
ಅನಿಮಿಷರನು ಅಭಿಮಾನಿಗಳೆನಿಸಿದೀ ।
ಶ್ರೀನಿವಾಸಾ ದಯಾನಿಧೇ ।। ಚರಣ ।। 
ದೀನವತ್ಸಲ ನಿನ್ನಧೀನದೊಳಗಿಟ್ಟು ।
ಜ್ಞಾನ ಕರ್ಮಗಳ ಮಾಡಿಸಿದೆಯೋ ।
ಶ್ರೀನಿವಾಸಾ ದಯಾನಿಧೇ ।। ಚರಣ ।। 
ಕ್ಷಣ ಬಿಡದಲೆ ಭಕ್ತ ಜನರ ರಕ್ಷಿಸುವಿ । ದು ।
ರ್ಜನರಿಗೆ ದುರ್ಲಭ ನೆನಿಸುವೀ ।
ಶ್ರೀನಿವಾಸಾ ದಯಾನಿಧೇ ।। ಚರಣ ।। 
ವೈಷಮ್ಯ ನೈರ್ಘ್ರುಣ್ಯ ಲೇಶವಿಲ್ಲದವರು ।
ಪಾಸನದಂತೆ ಫಲಗಳೀವಿ ।
ಶ್ರೀನಿವಾಸಾ ದಯಾನಿಧೇ ।। ಚರಣ ।। 
ಒಂದೇ ರೂಪದಿ ಬಹು ಮಂದಿರದೊಳಿದ್ದು ।
ಬಂಧ ಮೋಕ್ಷಪ್ರದ ನೆನಿಸುವೀ ।
ಶ್ರೀನಿವಾಸಾ ದಯಾನಿಧೇ ।। ಚರಣ ।। 
ಜ್ಞಾನಿಗಳರಸ ಅಜ್ಞಾನಿಗಳೊಳು ನಾ । ಅ ।
ಜ್ಞಾನಿ ಸುಜ್ಞಾನವ ಪಾಲಿಸೋ ।
ಶ್ರೀನಿವಾಸಾ ದಯಾನಿಧೇ ।। ಚರಣ ।। 
ನಂಬಿದೆ ನಿನ್ನ ಬಿಂಬ ಮೂರುತಿ ಯೆನ್ನ ।
ಡಿಂಬದೊಳಗೆ ಪೊಳೆ ಅನುದಿನಾ ।
ಶ್ರೀನಿವಾಸಾ ದಯಾನಿಧೇ ।। ಚರಣ ।। 
ನಿನ್ನ ಹೊರತು ಎನಗನ್ಯರಿಂದೇನಯ್ಯಾ ।
ನಿನ್ನ ಸ್ತುತಿಪ ಸುಖಕ್ಕೆಣೆಗಾಣೆ ।
ಶ್ರೀನಿವಾಸಾ ದಯಾನಿಧೇ ।। ಚರಣ ।। 
ಘನ್ನ ಮಹಿಮಾ ಎನಗಿನ್ನೊಂದು ಬಯಕಿಲ್ಲ ।
ನಿನ್ನ ಧ್ಯಾನದೊಳಿಡು ಮರೆಯದೇ ।
ಶ್ರೀನಿವಾಸಾ ದಯಾನಿಧೇ ।। ಚರಣ ।। 
ದುರ್ಜನ ಸಂಗ ವಿವರ್ಜ ಮಾಡಿಸಿ ಸಾಧು ।
ಸಜ್ಜನರ ಸೇವೆಯೊಳಗಿಡೋ ।
ಶ್ರೀನಿವಾಸಾ ದಯಾನಿಧೇ ।। ಚರಣ ।। 
ಏಸು ಜನ್ಮಗಳೀಯೋ ಲೇಸು ಚಿಂತಯು ಇಲ್ಲ ।
ದಾಸನೆಂದೆನಿಸೋ ದಾಸ್ಯವನಿತ್ತು ।
ಶ್ರೀನಿವಾಸಾ ದಯಾನಿಧೇ ।। ಚರಣ ।। 
ಎನ್ನಪ್ಪ ಎನ್ನಣ್ಣ ಎನ್ನ ಕಾಯುವ ದೇವ ।
ನಿನ್ನ ವಿಸ್ಮರಣೆಯ ಕೊಡದಿರೋ ।
ಶ್ರೀನಿವಾಸಾ ದಯಾನಿಧೇ ।। ಚರಣ ।। 
ಮನಸಿನ ಚಂಚಲವನು ತೊಲಗಿಸಿ ಪಾದ ।
ವನಜದಲ್ಲಿರಿಸಯ್ಯ ಜಿತವಾಗಿ ।
ಶ್ರೀನಿವಾಸಾ ದಯಾನಿಧೇ ।। ಚರಣ ।। 
ಕಾರಣಗಳಿಂದ ಚರಿಸುವ ಆ ವಿಷಯ । ಶ್ರೀ ।
ಹರಿ ನಿನ್ನ ಸೇವೆಯಾಗಲಿ ಸ್ವಾಮೀ ।
ಶ್ರೀನಿವಾಸಾ ದಯಾನಿಧೇ ।। ಚರಣ ।। 
ಹರಿಯು ಸರ್ವೋತ್ತಮ ಸುರರೆಲ್ಲ ದಾಸರು ।
ತಾರತಮ ಭೇದ ಜ್ಞಾನವನೀಯೋ ।
ಶ್ರೀನಿವಾಸಾ ದಯಾನಿಧೇ ।। ಚರಣ ।। 
ಬುದ್ಧಿ ಪೂರ್ವಕ ಗುರು ಮಧ್ವಮತ । ತಿಳಿ ।
ದಿದ್ದವನೆ ಜ್ಞಾನ ವೃದ್ಧನೋ ।
ಶ್ರೀನಿವಾಸಾ ದಯಾನಿಧೇ ।। ಚರಣ ।। 
ಗುರುಗಳ ಕರುಣ ಸುಸ್ಥಿರವಾಗಿದ್ದವರಿಗೆ ।
ಹರಿ ನಿನ್ನ ಅನುಗ್ರಹವಾಗ್ವದೋ ।। ಚರಣ ।। 
ನಿನ್ನ ಚಿತ್ತಕ್ಕೆ ಬಂದದ್ದೆನ್ನ ಚಿತ್ತಕೆ ಬರಲಿ ।
ಅನ್ಯಥ ಬಯಕೆಯ ಕೊಡದಿರೋ ।
ಶ್ರೀನಿವಾಸಾ ದಯಾನಿಧೇ ।। ಚರಣ ।। 
ನಿನ್ನವರಲ್ಲದೆ ಅನ್ಯರು ಬಲ್ಲರೆ ।
ಘನ್ನ ಮಾತಿನ ಸುಖಸವಿಯನ್ನು ।
ಶ್ರೀನಿವಾಸಾ ದಯಾನಿಧೇ ।। ಚರಣ ।। 
ಸ್ತುತಿರತ್ನಮಾಲಾ ಸಂಸ್ತುತಿಸಿ ಹಿಗ್ಗುವರಿಗೆ ।
ಪ್ರತಿದಿನ ಸುಖ ಅಭಿವೃದ್ಧಿಯೋ ।
ಶ್ರೀನಿವಾಸಾ ದಯಾನಿಧೇ ।। ಚರಣ ।। 
ಗುರುಗಳು ಮಧ್ವರಾಯರು ಮೂರು ಲೋಕಕ್ಕೆ ।
ಧೊರೆ ಗುರು ಶ್ರೀಶ ವಿಠ್ಠಲ ನಮೋ ನಮೋ ।
ಶ್ರೀನಿವಾಸಾ ದಯಾನಿಧೇ ।। ಚರಣ ।।
***
" ಶ್ರೀ ಕುಂಟೋಜಿದಾಸರು - 6 "
" ಶ್ರೀ ಹರಿಕಥಾಮೃತಸಾರದ ಫಲ ಶ್ರುತಿ "
ಶ್ರೀ ಗುರು ಶ್ರೀಶ ವಿಠ್ಠಲದಾಸರು ಶ್ರೀ ಶ್ರೀದ ವಿಠ್ಠಲರು ಬರೆದ ಶ್ರೀ ಹರಿಕಥಾಮೃತಸಾರ ಫಲ ಶ್ರುತಿಗೆ ಸಾಕ್ಷಿಯಾಗಿ ಮೂರು ಪದ್ಯಗಳನ್ನು ರಚಿಸಿದ್ದಾರೆ.
ದಾಸವರ್ಯರ ದಾಸ ಕರ್ಜಗಿ ।
ದಾಸರೆಂಬರ ಈ ಸುವಾಕ್ಯವು ।
ದಾಸಿನವ ಮಾಡದಿರಿ
ಶ್ರೀ ಹರಿದಾಸರಾದವರು ।।
ಕಾಶಿ ಮೊದಲಾದ ಸುಕ್ಷೇತ್ರದಿ ।
ವಾಸ ಮಾಡಲು ಈ ಸುಜನಾ ಸಹ ।
ವಾಸ ಫಲ ದೊರಕುವುದೇ
ಶೋಧಘೀಸೇ ಸಕಲ ಶಾಸ್ತ್ರದಲಿ ।। 1 ।।
ಶ್ರೀ ಜಗನ್ನಾಥದಾಸರ ದಾಸರಾದ ಕರ್ಜಗಿದಾಸರು ( ಶ್ರೀ ಶ್ರೀದವಿಠ್ಠಲರು ) ಎಂಬುವರ ಈ ಶ್ರೇಷ್ಠ ವಾಕ್ಯಗಳನ್ನು ಶ್ರೀ ಹರಿದಾಸರಾದವರು ಉದಾಸೀನ ಮಾಡಬಾರದು. ಸಕಲ ಶಾಸ್ತ್ರಗಳನ್ನು ಪರಿಶೀಲಿಸಿದರೂ; ಕಾಶಿ ಮೊದಲಾದ ಸುಕ್ಷೇತ್ರಗಳಲ್ಲಿ ವಾಸ ಮಾಡಿದರೂ ಇಂಥಹಾ ಸಜ್ಜನರ ಸಹವಾಸ ಫಲ ಲಭಿಸುವುದೇ?
ಶ್ರೀವರನ ದಾಸರಿಗೆ ಭಕುತಿಯಲಿ ।
ಸೇವಕನು ನಾನೆಂದು ಪೇಳುವ ।
ಜೀವನವೇ ಸುಜ್ಜೀವಿ ಆವ
ಹರಿದಾಸನೆಂದರಿದು ।।
ಆವನಾದರು ಆದಿಯಲಿ ಇದನು ।
ಭಾವ ಶುದ್ಧದಿ ಓದಿ ಬರೆಯಲು ।
ಕಾವನಯ್ಯನು ಕರುಣಿಸುವನು
ಸಾದಾವಕಾಲದಲಿ ।। 2 ।।
ಲಕ್ಷ್ಮೀಪತಿಯಾದ ಶ್ರೀ ಹರಿಯು ದಾಸರಿಗೆ ಭಕ್ತಿಯಿಂದ ನಾನು ಸೇವಕ ಎಂದು ಹೇಳುವ ಜೀವನು ಸುಜೀವಿ.
ಅವನು ಹರಿದಾಸನು ಎಂದು ತಿಳಿದು ಯಾವನಾದರೂ ಮೊದಲಿಗೆ ಇದನ್ನು ಶುದ್ಧ ಮನಸ್ಸಿನಿಂದ ಓದಿ ಬರೆಯಲು ಕಾಯುವವರ ಒಡೆಯನಾದ ಶ್ರೀ ಹರಿಯು ಎಲ್ಲಾ ಕಾಲಗಳಲ್ಲಿಯೂ ಸದಾ ಕರುಣಿಸುವಾ!!
ಹರಿಕಥಾಮೃತಸಾರ ನೋಡುವ ।
ಪರಮ ಭಕ್ತರ ಜ್ಞಾನ ದೃಷ್ಟಿಗೆ ।
ವರ ಸುಲೋಚನದಂತೆ
ಇಪ್ಪವು ಈಸು ಪದ್ಯಗಳು ।।
ಅರಸಿಕರಿಗಿದು ಪೇಳಲಾಗದು ।
ಮುರಹರನ ದಾಸರಿಗೆ ತಪ್ಪದೆ ।
ಹರುಷ ಸುರಿಸುವನಿಹಪರದಿ
ಗುರುಶ್ರೀಶವಿಠ್ಠಲನು ।। 3 ।।
ಶ್ರೀ ಹರಿಕಥಾಮೃತಸಾರವನ್ನು ಅಧ್ಯಯನ ಮಾಡುವ ಪರಮ ಭಕ್ತರ ಜ್ಞಾನ ದೃಷ್ಟಿಗೆ ಈ ಫಲ ಶ್ರುತಿ ಸಂಧಿಯ ಪದ್ಯಗಳು ಶ್ರೇಷ್ಠವಾದ " ಕನ್ನಡಕ " ದಂತೆ ಇರುವವು.
ಇವುಗಳನ್ನು ಅರಸಿಕರಿಗೆ ಹೇಳಕೂಡದು.
ಶ್ರೀ ಹರಿಯ ದಾಸರಿಗೆ ತಪ್ಪದೇ ಹೇಳಬೇಕು.
ಹಾಗೆ ಮಾಡಿದರೆ ಶ್ರೀ ಗುರು ಶ್ರೀಶವಿಠ್ಠಲನಾದ ಶ್ರೀ ಹರಿಯು ಇಹ ಪರಗಳಲ್ಲಿ ಆನಂದವನ್ನು ಸುರಿಸುವನು.
ಶ್ರೀ ಗುರು ಶ್ರೀಶ ವಿಠ್ಠಲರ ರಚನೆಗಳು....
" ಅವತಾರ ಸಮಾಪ್ತಿ "
ಶ್ರೀ ಗುರು ಶ್ರೀಶ ವಿಠ್ಠಲ ದಾಸರು ಕಂಪ್ಲಿಯಿಂದ ಕಾಶಿ ಯಾತ್ರೆಗೆ ಹೋದರು.
ಗಂಗಾ ನದಿಯನ್ನು ದಾಟುವಾಗ ದೋಣಿಯು ಮುಗುಚಿ ಶ್ರೀ ಗುರು ಶ್ರೀಶದಾಸರೊಬ್ಬರನ್ನುಳಿದು ಎಲ್ಲರೂ ನೀರು ಪಾಲಾದರು.
ಶ್ರೀ ದಾಸರಿಗೆ ಏನೆನ್ನಿಸಿತೋ ಏನೋ ಅವರು ತಮ್ಮ ಕೈ ಕೋಲನ್ನು ಮತ್ತು ತಂಬೂರಿಯನ್ನು ಮಾತ್ರ ಪರಿಚಿತಸ್ಥರಿಗಿತ್ತು ತಮ್ಮ ವಂಶೀಕರಿಗೆ ಅದನ್ನು ತಲುಪಿಸಲು ಹೇಳಿದರು ಮತ್ತು ಕಾಶಿಯಿಂದ ಬದರಿಕಾಶ್ರಮಕ್ಕೆ ತೆರಳಿದವರು ಮತ್ತೆ ಬರಲೇಯಿಲ್ಲ.
ತಂಬೂರಿ ಮತ್ತು ಕೊಳಲು ತಲುಪಿದ ದಿನವೇ ಅವರ ಪುಣ್ಯ ದಿನವಾಗಿ ಉಳಿಯಿತು.
( ಶ್ರೀ ದಾಸಾರ್ಯರ ತಂಬೂರಿ ಈಗ ಶಕ್ತಿನಗರದಲ್ಲಿ ಶ್ರೀ ಗುರುರಾಜರಾಯ ವೈದ್ಯ ಎಂಬುವರ ಮನೆಯಲ್ಲಿದೆ )
ರಾಗ : ಕಲ್ಯಾಣಿ ತಾಳ : ತ್ರಿಪುಟ
ಏಸು ಜನ್ಮದ ಫಲವೋ ಈ ಗುರು ಕರುಣಾ ।
ಏಸು ಜನ್ಮದ ಫಲವೋ ।। ಪಲ್ಲವಿ ।।
ಏಸು ಜನ್ಮದ ಫಲ ।
ಲೇಸೂ ಸೂರಿ ಗುರು ।
ಶ್ರೀಶರಾಯರ ಕರುಣಾ ।
ಸೂಸಿದ ಸುಖವೆನಗೆ ।। ಅ. ಪ ।।
ಕೇವಲ ದ್ರವವಾರಿ ವತ್ಸ
ತನ್ನಯ ನಿಹಾ ।
ಗೋವಿನ ಕಾಣದೆ
ಪುಡುಕುತಿರೆ ।
ಆ ವ್ಯಾಳ್ಯೆ ಸುರಧೇನು
ತಾನೆ ಒದಗಿ ಬಂದು ।
ಸಾವಧಾನದಿ ಮೊಲಿಯಾನುಣಿಸಿ
ಸಂತೈಸಿದಂತೆ ।। ಚರಣ ।।
ಬ್ಯಾಸಿಗಿ ಬಿಸಿಲಿಂದ ಸಂತಪ್ತನಾಗಿ ನಿ ।
ಶ್ವಾಸಾವೈದುವ ಸಮಯದಲ್ಲಿ ಮತ್ತೆ ।
ಭೂಸುರ ರೂಪದಿ ಕಲ್ಪವೃಕ್ಷವೇ ಬಂದು ।
ಲೇಸಾದ ಉದಕ ಪೂರೈಸಿ ನೆಲಳಿತ್ತಂತೆ ।। ಚರಣ ।।
ಪರಮ ದರಿದ್ರನೋರ್ವನು ದೇಶದೇಶವಾ ।
ತಿರುಗುತಿರಲು ಚಿಂತಾಮಣಿಯು ತಾನೆ ।
ಭರದಿಂದ ಕೈಯಲ್ಲಿವೊದಗಿ ತಾ ಬಂದಂತೆ ।
ಸಿರಿ ಲಕ್ಷ್ಮೀಪತಿ ವಿಠ್ಠಲ ಪರನೆಂದು ಅರುಹಿದ ।। ಚರಣ ।।
" ಉಪ ಸಂಹಾರ "
ಶ್ರೀ ಗುರು ಶ್ರೀಶ ವಿಠ್ಠಲ ದಾಸರು ಹರಿದಾಸ ಪರಂಪರೆಯ ವೃಕ್ಷವನ್ನು ಪೋಷಿಸಿ ಬೆಳೆಸಿದ್ದಾರೆ.
ಕುಂಟೋಜಿಯಲ್ಲಿ ಶ್ರೀ ಗುರು ಶ್ರೀಶವಿಠ್ಠಲ ದಾಸರು ಜಪ - ತಪ - ಅನುಷ್ಠಾನ ಮಾಡಿದ ಕಟ್ಟೆಗೆ ಈಗಲೂ ದಾಸರ ಕಟ್ಟೆಯೆಂದು ಕರೆಯುತ್ತಾರೆ.
ಆ ಕಟ್ಟೆಗೆ ಭಕ್ತಿಯಿಂದ ಪ್ರದಕ್ಷಿಣೆ ನಮಸ್ಕಾರ ಮಾಡಿ ಭಕ್ತ ಜನರು ಇಷ್ಟಾರ್ಥಗಳನ್ನು ಪಡೆಯುತ್ತಿದ್ದಾರೆ .
ಗುರು ಶ್ರೀಶ ಮಹಂ ವಂದೇ
ಗುರು ತತ್ತ್ವ ವಿಬೋಧಕಮ್ ।
ಗುಹಾಶಯಂ ಗುಣಾತೀತಂ
ಭಾವಯಂತಂ ಮಹಾಮತಿಮ್ ।।
by ಆಚಾರ್ಯ ನಾಗರಾಜು ಹಾವೇರಿ
     ಗುರು ವಿಜಯ ಪ್ರತಿಷ್ಠಾನ
******

||ಬಿಡದೆ ರಮಾ ಕಳತ್ರನ ದಾಸ ವರ್ಗಕೆ ನಮಿಪೆ ನನವರತ||
🙏🙏🙏🙏
ಬೆಳಗಿನ ಜಾವ ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು, ಪಡಸಾಲೆಯಲ್ಲಿ ಕುಳಿತು ಹಿರಿಯರಿಂದ ತಮ್ಮ ಮನೆತನಕ್ಕೆ ಅನುಗ್ರಹ ಪೂರ್ವಕಾಗಿ ಬಂದ ಆ ತಂಬೂರಿಯನ್ನು ಬಾರಿಸುತ್ತಾ, ದೇವರ ನಾಮವನ್ನು  ಆ ಹಿರಿಯರು ಹೇಳುತ್ತಾ  ಇದ್ದರೆ,ಕೊಟ್ಟಿಗೆಯಲ್ಲಿ ಇರುವ ದನಕರುಗಳು ಇವರನ್ನು ನೋಡುತ್ತಾ ಕತ್ತನ್ನು ಅಲುಗಾಡಿಸುತ್ತಾ ನಿಲ್ಲುತ್ತಾ ಇದ್ದವು.
ಭಗವಂತನ ಭಕ್ತರಾದ ಅವರು ಸದಾ ಭಗವಂತನ ಸೇವೆ, ಪಾರಾಯಣ ಗಳನ್ನು ಮಾಡುತ್ತಾ,ನಿತ್ಯ ಶ್ರೀ ಜಗನ್ನಾಥ ದಾಸರ ಮೇರು ಕೃತಿಯಾದ ಶ್ರೀ ಮದ್ ಹರಿಕಥಾಮೃತಸಾರವನ್ನು ಪಠಣೆ ಮಾಡುತ್ತಾ ಎಲ್ಲ ಆಸಕ್ತಿ ಉಳ್ಳವರಿಗೆ ಅದರ ತತ್ವ ವನ್ನು ಹೇಳುತ್ತಾ ಇರುವ ಆ ಹಿರಿಯರಿಗೆ ಕಾಶಿಯಾತ್ರೆ ಮಾಡಬೇಕೆಂಬ ಆಸೆ ಇತ್ತು..
ತನ್ನ ನಿಜಭಕ್ತರ ಮನಸ್ಸನ್ನು ಅರಿತವನು ಭಗವಂತ. 
ಅದಕ್ಕೆ ಅನುಕೂಲ ಮಾಡಿಕೊಟ್ಟನು. ಅವರ ಊರಿನ ಒಂದು ಕುಟುಂಬ ಕಾಶಿಯಾತ್ರೆ ಮಾಡಲು ಸಿದ್ದ ವಾಗಿತ್ತು. ಆ ಕುಟುಂಬದ ಯಜಮಾನನಿಗೆ  ಭಗವಂತನ ಭಕ್ತರಾದ ಸದಾ ಶ್ರೀ ಹರಿಕಥಾಮೃತಸಾರ ಪಾರಾಯಣ ಮಾಡುವ ಹಿರಿಯರನ್ನು ಕಾಶಿಯಾತ್ರೆಗೆ ಕರೆದು ಕೊಂಡು ಹೋಗಬೇಕು ಎಂಬುದು ಬಹಳ ಅಭಿಲಾಷೆ ಮತ್ತು ಆಸೆ.
"ನೀವು ಹಿರಿಯರು. ನಮ್ಮ ಜೊತೆಯಲ್ಲಿ ಬರಲೇಬೇಕು.ನಿಮ್ಮ ಸನ್ನಿಧಿಯಲ್ಲಿ ಹೋಗುವದು ನಮಗೆ ಆಶೀರ್ವಾದ ಇದ್ದಹಾಗೆ.ಎಂದು ಬಹುವಾಗಿ ಕೇಳಿಕೊಂಡರು.
ಆ ಹಿರಿಯರು ಭಗವಂತನ ಕಾರುಣ್ಯ ಮತ್ತು ಲೀಲೆ ಯನ್ನು ಸ್ಮರಿಸುತ್ತಾ ಹೊರಡಲು ಸಿದ್ದರಾದರು.
ಮಕ್ಕಳು ಚಿಕ್ಕವು.ಅವರನ್ನು ತಮ್ಮ ಮಾವನವರ ಮನೆಗೆ ಕಳುಹಿಸಿ ಕೊಟ್ಟರು.ಅವರಿಗೆ ಅವಾಗಲೇ ಪತ್ನಿ ವಿಯೋಗ ಉಂಟಾಗಿತ್ತು.
ಊರಿಗೆ ಹೊರಡುವ ದಿನ ಮಕ್ಕಳನ್ನು  ಎತ್ತಿನ ಬಂಡಿಯಲ್ಲಿ ಕೂಡಿಸಿ  ಊರಿಗೆ ಕಳುಹಿಸಿದ್ದಾರೆ.
ದೊಡ್ಡ ಅಂಕಣದ ಮನೆ.ದೇವರ ಮನೆಯಲ್ಲಿ ಮನೆ ದೇವರಿಗೆ ನಮಸ್ಕರಿಸಿ  ತಾವು ನಿತ್ಯ ನುಡಿಸುವ ಆ ದಾಸರ ತಂಬೂರಿಗೆ ನಮಸ್ಕರಿಸಿ,ಪ್ರಯಾಣಕ್ಕೆ ಅಪ್ಪಣೆ ಮತ್ತು ಆಶೀರ್ವಾದ ಕೇಳಿ,ದೇವರ ಮನೆ,ಅಡಿಗೆ ಮನೆ ಬಾಗಿಲನ್ನು ಚಿಲಕ ಹಾಕಿ ಪಡಸಾಲೆಗೆ ಬಂದಿದ್ದಾರೆ.
ಇದ್ದಕ್ಕಿದ್ದಂತೆ ಒಂದು ಧ್ವನಿ ಕೇಳಿಸಿತು.

"ಪಾತ್ರರ ಸಂಗಡ ಯಾತ್ರೆಯ ಚರಿಸಿ| ವಿಧಾತೃ ಪಿತನ ಗುಣ ಪೊಗಳುತಲಿರುವದೇ| ಫಲವಿದು ಬಾಳ್ದುದಕೆ|

ಎನ್ನುವ ಶ್ರೀ ಮಾನವಿ ಪ್ರಭುಗಳ ರಚನೆಯನ್ನು ಯಾರೋ ಸುಶ್ರಾವ್ಯವಾಗಿ ಹಾಡಿದ್ದು ಇವರ ಕಿವಿಗೆ ಬಿತ್ತು.ಸುತ್ತ ಮುತ್ತ ನೋಡಿದಾಗ ಯಾರು ಇಲ್ಲ.ಹಗಲಿನ ಹೊತ್ತು. ಭ್ರಮೆ ಸಹ ಅಲ್ಲ.ಆ ಧ್ವನಿ ಬಹಳ ಸ್ಪಷ್ಟವಾಗಿ  ದೇವರ ಮನೆಯಿಂದ ಕೇಳಿ ಬರುತ್ತಿದೆ.

ಲಗುಬಗೆಯಿಂದ ದೇವರ ಮನೆಯ ಬಾಗಿಲನ್ನು ತೆಗೆದರೆ ತಕ್ಷಣ ಆ ಧ್ವನಿ ನಿಂತಿದೆ.
ನಿತ್ಯ ತಾವು ಬಾರಿಸುವ ದಾಸರ ಸನ್ನಿಧಾನ ಉಳ್ಳ ತಂಬೂರಿ ಇಂದ ಆ ಧ್ವನಿ ಬಂದಿದ್ದು ಕೇಳಿ ಅವರಿಗೆ ಬಹು ಆನಂದ ವಾಗಿದೆ.

ತಾವು ದಿನವೂ ಬೆಳಗಿನ ಜಾವ ಶ್ರೀ ಜಗನ್ನಾಥ ದಾಸರ ಪದಗಳನ್ನು ಹೇಳುತ್ತಾ, ಯಾರ ತಂಬೂರಿ ಯನ್ನು ಮೀಟುತ್ತಾ ಹೇಳುತ್ತಾ ಇದ್ದರು ಅದೇ ತಂಬೂರಿ ಇಂದ ಆ ಧ್ವನಿ ಬಂದಿದ್ದು ಕೇಳಿ ಆನಂದ ವಾಗಿದೆ.
ಹೀಗೆ ಆ ತಂಬೂರಿಯಲ್ಲಿ ನಿಂತು  ಅನುಗ್ರಹ ಮಾಡಿದ ದಾಸರೇ ಶ್ರೀ ಗುರುಶ್ರೀಶ ವಿಠ್ಠಲ ದಾಸರು.ಮತ್ತು ಅವರ ಯಾತ್ರೆಗೆ ಆಶೀರ್ವಾದ ಮಾಡಲು ಹೇಳಿದವಾಣಿ ಎಂದು ಅವರಿಗೆ ಖಚಿತವಾಯಿತು.

ಆ ತಂಬೂರಿ ಯಾರದ್ದು ಎಂದರೆ "ಕಂಪ್ಲಿ ದಾಸರು,ಕುಂಟೋಜಿ ದಾಸರು,ಮತ್ತು ಶ್ರೀ ಗುರು ಶ್ರೀಶ ವಿಠ್ಠಲ ದಾಸರೆಂದು ಕರೆಸಿಕೊಂಡು ಶ್ರೀ ಜಗನ್ನಾಥ ದಾಸರ ಸೇವೆಯನ್ನು ಮಾಡಿ ಅವರ ಅನುಗ್ರಹ ದಿಂದ ತಮಗೆ ಬಂದ ಅಪಮೃತ್ಯುವನ್ನು ಕಳೆದುಕೊಂಡ ಮಹಾನುಭಾವರು.
ಮತ್ತು ಶ್ರೀ ಹರಿಕಥಾಮೃತ ಸಾರಕ್ಕೆ ಫಲ ಶೃತಿ ಬರೆದ ಮಹಾನುಭಾವರು".
ಮತ್ತು 

ಆ ಹಿರಿಯರು ಯಾರೆಂದರೆ "ತೆಗ್ಗಿಹಾಳ್ ಶ್ರೀ ಗುರು ಭೀಮಾಚಾರ್ಯರು."
ಪ್ರಾತಃ ಸ್ಮರಣೀಯರು.

ತಾತನವರಿಗೆ ಅವಸಾನ ಕಾಲ ಸಮೀಪಿಸಿತು.
ಒಂದು ದಿನ ಮಧ್ಯಾಹ್ನದ ಸಮಯದಲ್ಲಿ ತಮ್ಮ  ಹೊರಡುವ ಸಮಯ ಬಂದಿದೆ ಎಂದು ಅವರಿಗೆ ತಿಳಿಯಿತು.
ತಮ್ಮ ಪುತ್ರ ಕೃಷ್ಣಾಚಾರ್ಯರನ್ನು ಕರೆದು  
"ನನ್ನ ಎದುರಿಗೆ ನಾಲ್ಕು ಜನ ನಾಮ ಮುದ್ರೆ ಗಳನ್ನು ಧರಿಸಿದ ವೈಷ್ಣವರು ಬಂದು ನಿಂತಿದ್ದಾರೆ.ನನ್ನನ್ನು ಕರೆದುಕೊಂಡು ಹೋಗಲು ಬಂದಿದ್ದೇವೆ ಎಂದು ಹೇಳುತ್ತಾ ಇದ್ದಾರೆ.ಹೆಣ್ಣು ಮಕ್ಕಳಿಗೆ ವಿಷಯ ಮುಟ್ಟಿಸು ಎಂದು ಹೇಳಿ ಕೆಲ ಸಮಯದಲ್ಲಿ ದೇಹತ್ಯಾಗ ಮಾಡಿದರು... 
ಇದು ನಡೆದದ್ದು 1952 ನೇ ಇಸ್ವಿಯಲ್ಲಿ.
ಶುದ್ಧ ಸಾತ್ವಿಕ ಜೀವನ ವನ್ನು ನಡೆಸಿದ ತಾತನವರು ತಾವು ಬಂದ ಕಾರ್ಯವನ್ನು ಮುಗಿಸಿ ಭಗವಂತನ ಪಾದವನ್ನು ಸೇರಿದರು.
ಇಂತಹ ಭಗವಂತನ ಭಕ್ತರ ಸ್ಮರಣೆ ಕಿಂಚಿತ್ತೂ ನಮ್ಮ ಪಾಪ ಕಳೆಯುವದು ಎನ್ನುವುದಕ್ಕೆ ಯಾವ ಸಂದೇಹ ಸಂಶಯವಿಲ್ಲ.
🙏ಶ್ರೀ ಕೃಷ್ಣಾರ್ಪಣಮಸ್ತು🙏
ಈ ವಿಷಯವನ್ನು ಅವರ ಮೊಮ್ಮಕ್ಕಳು ಆದ ವೈದ್ಯರಾಗಿದ್ದ ಶ್ರೀವೆಂಕಣ್ಣ ಅಚಾರ್ಯ ಜಹಗೀರ್ದಾರ. ಇತ್ತೀಚಿಗೆ ಅವರ ಮನೆಗೆ ತಂಬೂರಿ ದರುಶನ ಮಾಡಿಕೊಳ್ಳುವದಕ್ಕೆ ಹೋದಾಗ ನನಗೆ ಹೇಳಿದ್ದು.

ಯಾವ ತಂಬೂರಿ ಇಂದ ಧ್ವನಿ ಬಂದಿತ್ತು ,ಮತ್ತು ಶ್ರೀ ಗುರು ಶ್ರೀಶ ವಿಠ್ಠಲ ದಾಸರು ಒಂದಂಶದಿಂದ ಸನ್ನಿಧಾನ ಉಳ್ಳ ಆ ತಂಬೂರಿ, ಮತ್ತು ದಾಸರ ಗೋಪಾಳಬುಟ್ಟಿ,ತಾಳಗಳು ಇವಾಗಲು ಅವರ ಮನೆಯಲ್ಲಿ ಇದೆ.
🙏🙏
ಶ್ರೀ ಕುಂಟೋಜಿ ದಾಸರ ತಂಬೂರಿ ಚಿತ್ರ ಕೆಳಗೆ ಹಾಕಿದ್ದೇನೆ.
🙏ಶ್ರೀ ಗುರು ಶ್ರೀಶ ವಿಠ್ಠಲ ದಾಸರಿಗೆ ನಮೋ ನಮಃ🙏

 ‌(received in WhatsApp)

***




****


ದಾಸರ ನೆರೆ ನಂಬಿರೊ|
ಗುರು ಶ್ರೀಶ ದಾಸರ ನೆರೆ ನಂಬಿರೋ|||
✍️ಶ್ರೀ ಗುರು ಶ್ರೀಶ ವಿಠ್ಠಲ ದಾಸರ ತಂಬೂರಿ ಮತ್ತು ಗೋಪಾಳ ಬುಟ್ಟಿ.
ಶ್ರೀಕಂಪ್ಲಿ ದಾಸರು,ಶ್ರೀ ಕುಂಟೋಜಿ ದಾಸರು ಎಂದು ಪ್ರಸಿದ್ಧ ಹೊಂದಿದ ಮಹಾನುಭಾವ ರು.
ಇಂದು ಅವರ ಪೂರ್ವ ಆರಾಧನ ಪ್ರಯುಕ್ತ ದರುಶನ..ಒಂದಂಶದಿಂದ ತಂಬೂರಿ ಯಲ್ಲಿದ್ದು ನಂಬಿದವರ ಪೊರೆಯುವ ಪರಮ ಕರುಣಾಳುಗಳು.
108 ವರ್ಷ ಕಾಲ ತುಂಬು ಜೀವನ ನಡೆಸಿ ಮಾರ್ಗಶಿರ  ಬಹುಳ ಅಮಾವಾಸ್ಯೆಯಂದು ಬದರಿ ಕಡೆ ಪಯಣ ಬೆಳೆಸಿದರು. ಅಂದಿನಿಂದ ಇಂದಿನವರೆಗುಅದೇ ತಿಥಿ ಯಲ್ಲಿ ಆರಾಧನಾ ನಡೆಯುತ್ತದೆ.
||ತಿಥಿ ವಾರ ನಕ್ಷತ್ರ ಯೋಗ ಕರಣಗಳು ಅಭಿಮತವಾದ ಒಂಭತ್ತು ಗ್ರಹಗಳಿನ್ನು|
ಸತತ ಶುಭರಾಶಿಯಲ್ಲಿರಲಿಲ್ಲದಿದ್ದರು|
ಗುರು ಸ್ಮೃತಿ ಯಿಂದ ಸಕಲ ಶುಭಗಲಿವುತುಲಿಹವು|
ಎಂದು ಶ್ರೀ ಲಕ್ಷ್ಮೀ ಪತಿದಾಸರು ತಮ್ಮ ಗುರುಗಳಾದ ಶ್ರೀ ಗುರು ಶ್ರೀಶ ವಿಠ್ಠಲ ದಾಸರನ್ನು ಕೊಂಡಾಡಿದ್ದಾರೆ.
ನಾನಾ ಗ್ರಹ ದೋಷಗಳನ್ನು ಪರಿಹಾರ ಮಾಡ ಬಲ್ಲವರು ಗುರು ಶ್ರೀಶ ವಿಠ್ಠಲ ದಾಸರು.
*****
ಶ್ರೀ ನರಸಿಂಹ ದೇವರ ಪರಮಾನುಗ್ರಹ ಪಡೆದವರು, ಶ್ರೀ ರಾಯರ ಪರಮಕಾರುಣ್ಯ ಪಾತ್ರರೂ, ಶ್ರೀ ಮಾನವಿ ಪ್ರಭುಗಳ ಬಳಿ 12 ವರ್ಷ ಸೇವೆಯನ್ನು ಮಾಡಿ, ಅಪಮೃತ್ಯುವಿನಿಂದ ಪಾರಾಗಿ, ಶ್ರೀ ಶ್ರೀಶವಿಠಲರಿಂದ (ಶ್ರೀ ಹುಂಡೇಕಾರದಾಸರು) ಉಪದೇಶವನ್ನು ಪಡೆದು, ಪರಮಾದ್ಭುತವಾದ ಪದ ಪದ್ಯ ಸುಳಾದಿಗಳನ್ನು ರಚಿಸಿ, ಸದಾ ಪರಮಾತ್ಮನ ನಾಮ ಸ್ಮರಣೆಯಲ್ಲಿ ತಲ್ಲೀನರಾದ ಮಹಾನ್ ದಾಸವರೇಣ್ಯರು ಶ್ರೀ ಗುರುಶ್ರೀಶವಿಠಲರ ಮಧ್ಯಾರಾಧನೆಯ ಶುಭಸ್ಮರಣೆಗಳು
***

ಶ್ರೀಗುರುಶ್ರೀಶವಿಠಲರು🙏
...ಸ್ಮರಣಾ ಚಿಂತನಾ...
✍️...ಶ್ರೀಸುಗುಣವಿಠಲ..
🌹🌻🌹🌻🌹
ಮಹಾತ್ಮ್ಯ ಜ್ಞಾನ ಪೂರ್ವಸ್ತು ಸುದೃಢಃ ಸರ್ವತೋಧಿಕಃ |ಸ್ನೇಹೋ ಭಕ್ತಿರಿತಿ ಪ್ರೋಕ್ತಸ್ತಯಾ ಮುಕ್ತಿರ್ನ ಚಾನ್ಯಥಾ ||
{ಶ್ರೀಮಧ್ವಾಚಾರ್ಯರು} 
ಕೀರ್ತನೆ ಮಾತ್ರದಿ ಕಲಿಯುಗದಿ ಮುಕುತಿಯ‌ನೀವ ಪುರಂದರವಿಠಲ..(ಶ್ರೀಪುರಂದರ ದಾಸರು) .
ಮೇಲಿನ ಉಕ್ತಿಗಳಂತೆ ಕನ್ನಡ ಸಾಹಿತ್ಯದ ಹರಿವಿನಲ್ಲಿ ಒಂದಾದ “ಹರಿದಾಸ ಸಾಹಿತ್ಯ” ಮೂಲಪ್ರೇರಣೆ ಇಹಪರಸಾಧನೆಗಳ ಮೂಲ ರುವಾರಿ..ಅದು ಭಕ್ತಿ
ಭಗವಂತ ಜ್ಞಾನಪೂರ್ವಕವಾದ ಭಕ್ತಿಗೆ ಗೋಚರ! ನಮ್ಮ ಕರ್ನಾಟಕವು ಭಕ್ತಿ ಸಂಪ್ರದಾಯಗಳ ತವರೂರು.  ವೇದೋಪನಿಷತ್ಗಳ ಕಾಲದಿಂದಲೂ ಭಕ್ತಿಯ ಹಿರಿಮೆ ಪ್ರತಿಪಾದಿತವಾಗಿದ್ದರೂ‌ಅದನ್ನೇ ಪ್ರಧಾನ ಸೂತ್ರವಾಗಿ ಅಂಗೀಕರಿಸಿ ಭಕ್ತಿಪಂಥಗಳನ್ನು ಸ್ಥಾಪಿಸಿದಹಿರಿಮೆ- ಗರಿಮೆ ದಕ್ಷಿಣ ಭಾರತೀಯರಿಗೆ ಸಲ್ಲುತ್ತದೆ.
“ಉತ್ಪನ್ನಾ ದ್ರಾವಿಡೇ ಸಾಹಂ (ಭಕ್ತಿ) ಕರ್ಣಾಟಕೇ ಗತಾ ಕ್ವಚಿತ್ ಕ್ವಚಿತ್ ...ಎಂಬ ಭಾಗವತ ವಾಣಿಯಂತೇ..ಕರ್ನಾಟಕದ ಜೀವನಾಡಿ ಭಕ್ತಿ ..ಇದರಡಿಯಲ್ಲೇ..ಆಚಾರ್ಯ ಮಧ್ವರು ತಮ್ಮ ಸಿದ್ಧಾಂತದಲ್ಲಿ ಈಶ-ದಾಸ ಭಾವನೆಗೆ ಮಹತ್ವದ ಸ್ಥಾನ ನೀಡಿರುವುದರಿಂದ ಈ ಕನ್ನಡದ ಹರಿದಾಸರ ರಚನೆಗಳಲ್ಲಿ ನಾವು ಸಾಕಾರ ಸ್ವರೂಪನಾದ ಭಗವಂತನ ಆರಾಧನೆಯನ್ನು ಹಾಗೂ “ದಾಸೋಹಂ ಕೋಸಲೇಂದ್ರಸ್ಯ”..ಎಂಬ ಹನಮಂತ ದೇವರ ವಾಣಿಯಂತೆ  ,ಹರಿದಾಸ್ಯದ ಶ್ರೇಷ್ಠತೆಯನ್ನು ಸ್ಪಷ್ಟವಾಗಿ ಕಾಣುತ್ತೇವೆ.ಇಂಥ ಚೇತೋಹಾರಿಯಾದ ಹರಿದಾಸತ್ವವು &ಹರಿದಾಸ ಸಾಹಿತ್ಯವೂ ಚಾರಿತ್ರಿಕವಾಗಿಯೂ..ವಿವಿಧ ಮಜಲುಗಳಲ್ಲಿ ತನ್ನ ಹರಿವನ್ನು ವ್ಯಾಪಿಸುತ್ತಾ..ಬಂದು “ಜನರೊಳಿದ್ದು ಜನಿಸುವ ಜಗದುದರ ತಾನು..”..ಎಂಬ ಶ್ರೀ ಜಗನ್ನಾಥದಾಸರ ಹರಿಕಥಾಮೃತಸಾರದ ವಾಣಿಯಂತೆ.”.ಜನತಾ ಜನಾರ್ಧನನ” ಸೇವೆ ಮಾಡುತ್ತಾ ಬಂದಿದೆ.
ಇನ್ನು ಹರಿದಾಸ ಸಾಹಿತ್ಯದ ವಿವಿದ ಹಂತಗಳನ್ನು ನೋಡುವುದಾದರೇ...........
೧..ಶ್ರೀಮಧ್ವಾಚಾರ್ಯರು, ಅವರ ಶಿಷ್ಯ ನರಹರಿತೀರ್ಥರು, ಜಯತೀರ್ಥರು, ಹನ್ನೆರಡು -ಹದಿಮೂರನೇ ಶತಮಾನದಲ್ಲಿ..ಹರಿಭಕ್ತಿ,ಉಪಾಸನೆ,  ಹರಿದಾಸ್ಯ ..ಇವೇ ಮೊದಲಾದುವುಗಳನ್ನು ಲೌಕಿಕ ವಚನಗಳಿಂದ ಜನತೆಗೆ ಉಪದೇಶಿಸಿದರು... ..ಇದು ಮೊದಲನೇ ಘಟ್ಟ.೨..ಶ್ರೀಪಾದರಾಜರಿಂದ -ಪುರಂದರ -ಕನಕದಾಸರ ವರೆಗಿನ ಕಾಲವು ..ಎರಡನೇ ಘಟ್ಟ..ಎಂತಲೂ.
೩..ಶ್ರೀವಿಜಯದಾಸರು &ಅವರ ಶಿಷ್ಯ ಪರಂಪರೆಯ ಅವಧಿಯನ್ನು  ಮೂರನೇ ಘಟ್ಟ ಎಂತಲೂ..ಹಾಗೂ ಪ್ರಾಣೇಶದಾಸರಿಂದ ಮೊದಲ್ಗೊಂಡು ಉಳಿದ ಹರಿದಾಸ ವೃಂದದವರು ಕೈಗೊಂಡ ಕಾರ್ಯವನ್ನು “ನಾಲ್ಕನೇ ಘಟ್ಟ” ವೆಂತಲೂ ಅರಿಯಬಹುದು.
ಈ ದಿಸೆಯಲ್ಲಿ ..
ಕರ್ನಾಟಕದ ಹರಿದಾಸ ಸಾಹಿತ್ಯದಲ್ಲಿ ಬಳ್ಳಾರಿ&ರಾಯಚೂರ್ ಜಿಲ್ಲೆಗಳು ದಾಸಸಾಹಿತ್ಯದ ತವರೂರುಗಳೆನ್ನಬಹುದು.
ಈ ದಿಸೆಯಲ್ಲಿ 
ಮೂಲತಃ ರಾಯಚೂರು ಜಿಲ್ಲೆಯವರಾಗಿದ್ದು ನಂತರ ಬಳ್ಳಾರಿ  (ಪ್ರಸ್ತುತ ವಿಜಯನಗರ)
ಜಿಲ್ಲೆಯ “ಪಾಂಡಪ್ಪ” ಮನೆಯಲ್ಲಿ ನೆಲೆಸಿ ಕಂಪ್ಲಿಯನ್ನೇ ತಮ್ಮ ಸಾಧನೆಯ ಕ್ಷೇತ್ರವನ್ನಾಗಿ  ಮಾಡಿಕೊಂಡು “ಗುರುಶ್ರೀಶವಿಠಲ” ಅಂಕಿತದಿಂದ ಕೀರ್ತನೆ ಸುಳಾದಿ, ಉಗಾಭೋಗ ರಚಿಸಿ ಹರಿದಾಸ ಕೈಂಕರ್ಯವನ್ನು ಮುಂದುವರಿಸಿದ ಮಹನೀಯರು..ಇಂದಿನ ಕಥಾನಾಯಕರು..ಶ್ರೀಗುರುಶ್ರೀಶವಿಠಲ ದಾಸರು..ಇವರಿಗೆ “ಶ್ರೀ ಕುಂಟೋಜಿದಾಸರು ,ಶ್ರೀಕಂಪ್ಲಿದಾಸರು...ಎಂದೇ ಈ ಭಾಗಗಳಲ್ಲಿ ಪ್ರಸಿದ್ಧರಾಗಿದ್ದಾರೆ.
ಇವರ ಜೀವನ ಚರಿತ್ರೆಯ ಸಂಕ್ಷಿಪ್ತ ಮಾಹಿತಿ....ನೋಡುವುದಾದರೇ.......
ಇವರ ಹೆಸರು: ಶ್ರೀನರಸಿಂಹದಾಸರು.ಗಂಗಾವತಿ ತಾಲ್ಲೂಕಿನ “ಕನಕಗಿರಿ” ಇವರ ಜನ್ಮಸ್ಥಳ.ಕರುಣಿಕ ಮನೆತನದಲ್ಲಿ ಜನಿಸಿ.ಕೆಲ ಕಾಲ ವೃತ್ತಿಯಲ್ಲಿ ನಿರತರಾಗಿ ಜೀವನದ ಕಷ್ಟ-ಸುಖಗಳ ನಡುವೆ ಕಾಲಾಂತರದಲ್ಲಿ  ಶ್ರೀಹರಿಯ‌ಇಚ್ಚೆಯಿಂದ ವೈರಾಗ್ಯ ಹೊಂದಿ ತಮ್ಮ ಮಧ್ಯ ವಯಸ್ಸಿನಲ್ಲಿ ಅಪರೋಕ್ಷಜ್ಞಾನಿಗಳಾದ  “ಹರಿಕಥಾಮೃತಸಾರ” ದ ಕತೃಗಳೂ ಆದ ಮಾನ್ವಿಯ "ಶ್ರೀಜಗನ್ನಾಥದಾಸರಲ್ಲಿ" ೧೨ವರುಷಗಳ ಸೇವೆ ಸಲ್ಲಿಸಿ ಅವರ ಆದೇಶದಂತೆ “ಶ್ರೀಶವಿಠಲಾಂಕಿತ” ರಾದ ಶ್ರೀಹುಂಡೇಕಾರದಾಸರಲ್ಲಿ (ಹುಕ್ಕೇರಿದಾಸಪ್ಪ) ಗುರುಶ್ರೀಶವಿಠಲ ಅಂಕಿತ ಪಡೆದು  ಹಲವಾರು ಕೀರ್ತನೆ ಉಗಾಭೋಗ, ಸುಳಾದಿಗಳನ್ನು ರಚಿಸುತ್ತಾ ಗಂಗಾವತಿ ತಾಲ್ಲೂಕಿನ “ಕುಂಟೋಜಿ” ಯಲ್ಲಿ ಕೆಲವು ಕಾಲ ನೆಲೆಸಿದ್ದರು.ಪ್ರಯುಕ್ತ ಅವರಿಗೆ “ಕುಂಟೋಜಿದಾಸರೆಂಬ” ಹೆಸರು ಬಂದಿರಬಹುದು.ಮುಂದೆ ಹೊಸಪೇಟೆ ತಾಲ್ಲೂಕಿನ ಐತಿಹಾಸಿಕ ಸ್ಥಳವಾದ “ಕಂಪ್ಲಿ” ಯಲ್ಲಿ ಜೀವಿತದ ಉಳಿದ ಭಾಗವನ್ನು ಕಳೆದು “ಕಂಪ್ಲಿದಾಸ” ರೆಂದು ಹೆಸರಾದರು‌. ಕಂಪ್ಲಿಯಲ್ಲಿ ಇಂದಿಗೂ ಅವರು ನೆಲೆಸಿದ್ದ ಮನೆ,ಅವರು ಪೂಜಿಸಿದ ಶ್ರೀಭೂಸಮೇತ, ಶ್ರೀನಿವಾಸದೇವರಪ್ರತಿಮೆಗಳು, ಇವರ ವಂಶೀಕರಲ್ಲಿವೆ 
ಇವರು ಜೀವನದಲ್ಲಿ ಹಲವಾರು ಭಗವಂತನ ಕಾರುಣ್ಯರೂಪದ ಅನುಭವಗಳು  ಸ್ವಪ್ನಸದೃಶಗಳು,  ,ಮಹಿಮೆಗಳು ಸಾಕಷ್ಟು ಕಂಡುಬರುತ್ತವೆ. ಇಂಥ ಮಹಿಮೋಪೇತರಾದ ಜ್ಞಾನಿವರ್ಯರನ್ನೂ, ಹರಿದಾಸಶ್ರೇಷ್ಠರನ್ನು ಪಡೆದ ನಾವುಗಳೇ ಧನ್ಯರು.
by ✍️...ಶ್ರೀಸುಗುಣವಿಠಲ.
***
🙏ಶ್ರೀಗುರುಶ್ರೀಶವಿಠಲರು🙏
ಸ್ಮರಣ-ಚಿಂತನ
✍️...ಶ್ರೀಸುಗುಣವಿಠಲ.

ಶ್ರೀಗುರುಶ್ರೀಶದಾಸರ ಕೃತಿಗಳ  ಯಥಾಮತಿ ವಿಶ್ಲೇಷಣೆ
*ಯತ್ ಪಲಂ ತಪಸಾ ನೈತಿ  ನ ಯೋಗೇನ ಸಮಾಧಿನಾ |ತತ್ ಫಲಂ ಲಭತೇ ಧೀಮಾನ್ ಕಲೌ ಕೇಶವ ಕೀರ್ತನಾತ್  ||{ಪದ್ಮಪುರಾಣ}  ದ ವಾಣಿಯಂತೆ....
ಕಠಿಣ ತಪಸ್ಸು ಯೋಗ, ಧ್ಯಾನಸಾಧನೆಗಳಿಗೂ ಸಿಗದ ಲಾಭವನ್ನು ಕಲಿಯುಗದಲ್ಲಿ ಕೇವಲ ದೇವರ ನಾಮಸ್ಮರಣೆಯಿಂದ ಪಡೆಯಬಹುದು. ಕಲಿಯ ಮಲವನ್ನು ತೊಳೆದುಕೊಳ್ಳಲು  ಹರಿನಾಮಸ್ಮರಣೆಯೊಂದೇ ಮದ್ದು... ಈದಿಸೆಯಲ್ಲಿ ಸಾಧು ಸಜ್ಜನರ ಉದ್ಧಾರಕ್ಕಾಗಿ ಅವತರಿಸಿದ ದಾಸವರೇಣ್ಯರು ಈ ಅಂಶವನ್ನೇ ಸಾರತ್ತಾ...ತನ್ಮೂಲಕ ಭಗವಂತನ ಜ್ಞಾನಕ್ಕಾಗಿ..ವೇದೋಪನಿಷತ್ ಗಳ ಸಾರವನ್ನು ತಮ್ಮ ಹರಿದಾಸ ಸಾಹಿತ್ಯದಲ್ಲಿ ಸರೆಹಿಡಿದು..ಮುಮುಕ್ಷುಗಳ ಮೋಕ್ಷಸಾಧನೆಗೆ...ಸಾಧನ ಸೋಪಾನಗಳನ್ನು ಹಾಕಿಕೊಟ್ಟು ಜ್ಞಾನ ಸುಧೆಯ‌ಸವಿಯನ್ನು ನಮಗೆ ಲ್ಲಾ ಉಣಬಡಿಸಿದ್ದಾರೆ.. ಇಂಥವರಲ್ಲಿ ನಮ್ಮ “ಗುರುಶ್ರೀಶವಿಠಲ” ದಾಸರು  ತಮ್ಮ ಉಗಾಭೋಗಗಳು, ಸುಳಾದಿ ,ಕೀರ್ತನೆಗಳು..ಸರಳ- ಸುಂದರ, ಭಾವನಾತ್ಮಕ ಜ್ಞಾನಾತ್ಮಕವಾಗಿ ಹೊರಹೊಮ್ಮಿರುವುದು..ನಮ್ಮೆಲ್ಲರ ಅಹೋಭಾಗ್ಯವೇ ಸರಿ.!.
ಈ ದಿಸೆಯಲ್ಲಿ ಅವರ ಕೆಲವು ಕೃತಿಗಳ ಕೆಲ ಸಾಲುಗಳ ಯಥಾಮತಿ  ಕಿಂಚಿತ್  ಅವಲೋಕನ ಮಾಡುವುದರರೊಂದಿಗೆ ದಾಸಾರ್ಯರು ಅವುಗಳ ಮೂಲಕ ನಮ್ಮಗೆ ಅರುಹಿದ ಭಗವತ್ ತತ್ವವನ್ನು ಯಥಾಯೋಗ್ಗತಾನುಸಾರ ಅರಿಯುವ ಪ್ರಯತ್ನ ಮಾಡೋಣ...
~೧..ಮಾನವನ ಮನಸ್ಸು ಅತ್ಯಂತ‌ಚಂಚಲವಾಗಿ ...
“ಮನಯೇವ ಮನುಷ್ಯಾಣಾಂ..ಕಾರಣಂ..ಬಂಧಮೋಕ್ಷಯೋ..ಎಂಬಂತೆ ಬಂಧಕ್ಕೂ -ಮೋಕ್ಷಕ್ಕೂ ಮನಸ್ಸೇ ಕಾರಣ..ಇದರ ಧೃಢತೆ ಬಹಳ‌ಮುಖ್ಯ.ಇದನ್ನು ಸಾಧಿಸಲು ಪರಮಾತ್ಮನ ಧ್ಯಾನಕ್ಕೆ ಮೊರೆಹೋಗಬೇಕು.ಅಂತೆಯೇ..ದಾಸರು ತಮ್ಮ ಬಿನ್ನಹವನ್ನು ಭಗವಂತನಾದ ಶ್ರೀನಿವಾಸನ ಮುಂದೆ  ಬಿನ್ನವಿಸುತ್ತಾ....
ಶ್ರೀನಿವಾಸನೆ ಏನು ಬೇಡಲಿ ನಿನ್ನ ಧ್ಯಾನದೊಳಿರಿಸೆನ್ನಾ..ನಾನಾ ವಿಷಯದಿ ಪೋಗಲೀಸದೆ  ಮನಸು ನಿನ್ನಲೇ ನಿಲಿಸು...... ಎಂದು ಕೇಳಿಕೊಂಡು..
ಶ್ರೀಶ ನಿನ್ನ ನಿಜದಾಸ ಸಹವಾಸದಲ್ಲಿರಿಸೋ ಈಶ.....ಎಂದು ಆತನಲ್ಲಿ ಬೇಡಿಕೊಂಡಿದ್ದಾರೆ‌.
ಮತ್ತೊಂದು ಕೀರ್ತನೆಯಲ್ಲಿ ನಾನು ನನ್ನದು ಎಂಬ ಅಹಂಕಾರ -ಮಮಕಾರಾದಿಗಳಿಂದ ವೃಥಾ ಹೊತ್ತು ಕಳೆಯುವುದನ್ನು ಅಲ್ಲಗಳೆಯುತ್ತಾ....ಹೋಗುತದೆ ಹೊತ್ತು ಬರಿದೆ ವೃಥಾ ಶ್ರೀಹರಿ ಹರಿ ಎನದೇ.... ಎಂದು ಹೇಳಿ ನಮ್ಮನ್ನು ಎಚ್ಚರಿಸಿದ್ದಾರೆ.
ಶ್ರೀಹರಿಯ ಚರಣ ಮರೆಯದಿರು ಮನವೇ....ಎಂದು ಒಂದೆಡೆ ಹೇಳಿದರೇ...
ನಂಬು ನಂಬೆಲೊ ಮನವೆ ಶ್ರೀಹರಿಯ ಚರಣ........ಎಂದು ಮತ್ತೊಂದೆಡೆ ಹೇಳಿ “ಹರಿಸರ್ವೋತ್ತಮತ್ವವನ್ನು ಪ್ರತಿಪಾದಿಸಿದ್ದಾರೆ.ಇಂಥ ಶ್ರೀಹರಿಗೆ...ದಾಸನಾಗೋ ಮನವೇ ಶ್ರೀಹರಿಯ ದಾಸನಾಗೋ  ..ದಾಸನಾಗಿ ವಿಷಯದಾಸೆಗೆ ಸಿಲ್ಕಿ ನೀ ಮೋಸಹೋಗಿ ನರದಾಸನಾಗದೇ........ ಎಂದು ಬದುಕಲು ಹೇಳುತ್ತಾರೆ.ಪ್ರಸ್ತುತ ದಾಸರು ಮೊದಲು ನರದಾಸರಾಗಿದ್ದುಆಗ ಪಟ್ಟ ನೋವುಗಳ ಅನುಭವವಿದ್ದರಿಂದ ನಮಗೂ ಅದರ ಮರ್ಮವನ್ನರುಹುತ್ತಾ..ಅವನ್ನೆಲ್ಲಾ ಬಿಟ್ಟು ವೈರಾಗ್ಯ ತಾಳಿದ ಅವರು ಶ್ರೀಹರಿಯ ದಾಸರಾಗಿ ಭಕ್ತಿಯ ತನ್ಮಯತೆಯಲ್ಲಿ ಸಾಧನೆ ಗೈಯುತ್ತಾ ಅದರ ಭಕ್ತಿ ಜ್ಞಾನಾನಂದವನ್ನು ಜನರಲ್ಲಿ ಮೂಡಿಸಲು ಪ್ರಯತ್ನಿಸಿದ್ದಾರೆ ತಮ್ಮ ಕೃತಿಗಳ ಮೂಲಕ.!
ನಾರಾಯಣ ಗೋವಿಂದ...... ಎಂಬ ಕೃತಿಯಲ್ಲಿ “ನವವಿಧ ಭಕುತಿ” ಯನ್ನು ಅತ್ಯಂತ ಹೃದಯಂಗಮವಾಗಿ ಪ್ರತಿಪಾದಿಸಿದ್ದಾರೆ.ಕರ್ಮವೆಂದರದಾವದೋ ಸ್ವಧರ್ಮ ಮರ್ಮವ ಮೀಟುವದೋ  ..... ಎಂಬ ಕೀರ್ತನೆಯಿಂದ ಕರ್ಮದ ಮರ್ಮವನ್ನು  ಅತ್ಯಂತ ಮಾರ್ಮಿಕವಾಗಿ ಮನಗಾಣಿಸಿದ್ದಾರೆ.
ತಿರುಪತಿಯ ತಿಮ್ಮಪ್ಪನನ್ನು ಕುರಿತ ೨೭ ನಡಿಗಳ “ಸ್ತುತಿರತ್ನಮಾಲಾ” ಭಾನುಕೋಟಿತೇಜಲಾವಣ್ಯ ಮೂರುತಿ...ಹರಿಸರ್ವೋತ್ತಮತ್ವವನ್ನು ಸಾರುವ ಚಿರಪರಿಚಿತ‌ ಕೀರ್ತನೆಯಾಗಿದೆ.
ಇದೇ ಮಾದರಿಯಲ್ಲಿ ಪಾಂಡುರಂಗನ ವೈಭವವನ್ನು ಕಂಡೆ ಪಂಢರಿರಾಯನ.. ಪುಂಡಲೀಕವರದನ...... ಕೃತಿಯಲ್ಲಿ ಸರೆಹಿಡಿದು ಕಣ್ಮನ ತಣಿಸಿದ್ದಾರೆ.
“ದೇವರೆಂದರೆ ತಿರುಪತಿಯ ತಿಮ್ಮಪ್ಪ..ಗುರುಗಳೆಂದರೆ ಮಂಚಾಲೆ ರಾಘಪ್ಪ” ಎಂಬ ಜನಜನಿತ ವಾಣಿಯಂತೆ..ರಾಯರ ಮೇಲಿನ ಇವರ ಕೃತಿಗಳು ಭಕ್ತಿಭಾವಗಳ ಪರಾಕಾಷ್ಠೆಯನ್ನು ಮೀರಿಸುತ್ತಾ..ಸರ್ವರ ಮನಮಂದಿರದಲ್ಲಿ ಅಚ್ಚಳಿಯದೆ ಸ್ಥಿರವಾಗಿ..ಜನಪ್ರಿಯತೆಯನ್ನು ಗಳಿಸಿ. ನಿಂತಿವೆ..ಬಾರೋ ಗುರುರಾಘವೇಂದ್ರ..ಬಾರಯ್ಯ ಬಾಬಾ....& ನೋಡಲೇ ಮನವೇ ಕೊಂಡಾಡುಗುರುಗಳ ಪಾದ ಈಡು ಇಲ್ಲವೋ ಪುಣ್ಯಕೇ..ಎಂಬ ಅಧ್ಭುತ ಕೀರ್ತನೆಗಳು..ಭಕ್ತವೃಂದವನ್ನು ಭಕ್ತಿಸಾಗರದಲ್ಲಿ ತೇಲಾಡಿಸುತ್ತವೆ.ಶ್ರೀದಾಸರ  ದೇವರ ಗುರುಗಳ ಬಗ್ಗೆ ನಂಬಿಕೆ ಇಟ್ಟು ಕೊಂಡವರು ಪರಮಾತ್ಮನ ನಾಮದ ಬಲದಿಂದಲೇ ವಿಶ್ವವನ್ನೆಲ್ಲಾ ಗೆಲ್ಲಬಹುದು ಎಂಬ ಧೃಢ ಆತ್ಮವಿಶ್ವಾಸ ದಾಸಾರ್ಯರದ್ದು.ಹಾಗಾಗಿ...ಹರಿನಾಮ ನಡಿನುಡಿಗೆ ಮರೆಯದಲೆ ಸ್ಮರಿಸು.....ಕರೆದು ಪೊರೆವ ಗುರುಶ್ರೀಶವಿಠಲನು....ಎಂದು ಹರಿನಾಮದ ಮಹಿಮೆಯನ್ನು ಸಾರಿದ್ದಾರೆ.
ಎಂತು ಪೊಗಳಲಿ ಜಗನ್ನಾಥದೋಸರನ ಕಂತುಪಿತ ಒಲಿದವರ ಅಂತರಂಗದಿ ಪೊಳೆವ... ಎಂದು ಶ್ರೀಜಗನ್ನಾಥದಾಸರನ್ನು..ಮಧ್ವಾಚಾರ್ಯರರಿಂದ ಮೊದಲ್ಗೊಂಡು ಗುರುಪರಂಪರೆಯನ್ನು ಸ್ಮರಿಸಿದ್ದಾರೆ..
ಗುರುಮಧ್ವರಾಯರಿಗೆ ನಮೋ ನಮೋ...ಗುರುಮಧ್ವಸಂತತಿಗೆ ನಮೋನಮೋ.. ಇದು ಎಲ್ಲಾ ಭಜನಾಮಂಡಲಿಯವರ ತಾರತಮ್ಯದ ಗುರುಸ್ಮರಣ ಕೀರ್ತನೆಯೇ ಆಗಿದೆ.!.
ಇನ್ನು ಉಗಾಭೋಗಗಳು, ಸುಳಾದಿಗಳಲ್ಲಿ ಮಧ್ವಮತದ ದರ್ಶನ, ಭಗವತ್ ತತ್ವ, ಸಾಧನಾಮಾರ್ಗಗಳು,ನಾಮ ಮಹಿಮೆ,ಹರಿಗುರುಸ್ಮರಣೆ, ಆತ್ಮನಿವೇದನೆ, ನವವಿಧಭಕ್ತಿಯ ಮಹತ್ವ, ಜೀವನಾನುಭವದ ಗಾಂಭೀರ್ಯದ ಆಂತರ್ಯ, ಮೃದುಮನದಿಂದ ಮೂಡಿಬಂದ ಮಲ್ಲಿಗೆಯಂಥ ಮಧುರವಾಣಿಯ ಹಿತೋಪದೇಶಗಳು ಅನುಭವದ ವಿಚಾರಧಾರೆಗಳು ಅಧ್ಭುತ ಕೃತಿಗಳಾಗಿವೆ.ಹೀಗೆ ಉಪಲಬ್ಧವಿರುವ “ಗುರುಶ್ರೀಶವಿಠಲ” ಅಂಕಿತದ ಇವರ ಕೃತಿಗಳನ್ನು ಅವಲೋಕಿಸಿದಾಗ..ದಾಸಾರ್ಯರು ಸಾಧಿಸಿದ ಭಗವಂತನ ಅಪಾರ ಕಾರುಣ್ಯ, ಭಗವದನುಗ್ರಹ ಜ್ಞಾನ ಭಕ್ತಿ ವೈರಾಗ್ಯಗಳ ತ್ರಿವೇಣಿಸಂಗಮ,! ಸಾಧನೆಯ ಹಾದಿಯನ್ನು ಸಾಧಿಸಿ”ಅಪರೋಕ್ಷಜ್ಞಾನಿ” ಗಳೆನಿಸಿರುವುದನ್ನು ಕಾಣುತ್ತೇವೆ.ಇವರಿಂದ ಅಂಕಿತ ಪಡೆದ  “ಲಕ್ಷ್ಮೀಪತಿವಿಠಲ” ದಾಸರು .
ದಾಸರ ನೆರೆನಂಬರೋ..ಗುರುಶ್ರೀಶದಾಸರ ನೆರೆನಂಬಿರೋ...ಎಂದು ಒಂದೆಡೆ ಸ್ತುತಿಸಿದರೆ, ಏಸುಜನ್ಮದ ಫಲವೋ ಈ ಗುರು ಕರು ಣಾ...ಎಂದು ಮತ್ತೊಂದೆಡೆ ಹಾಡಿ..ತಮ್ಮ ಮೇಲೆ ಅನುಗ್ರಹಿಸಿದ ದಾಸಾರ್ಯರನ್ನು ತಮ್ಮ ಕೃತಿಗಳ ಮೂಲಕ ಕೊಂಡಾಡಿದ್ದಾರೆ.ಹೀಗೆ ಉತ್ತರೋತ್ತರ  ಕಾಲೀನ ಕನ್ನಡ ಹರಿದಾಸ ಸಾಹಿತ್ಯದಲ್ಲಿ ಅಪರೋಕ್ಷಜ್ಞಾನಿಗಳೆನಿಸಿ, ಹರಿದಾಸಪರಂಪರೆಗೆ  ತಮ್ಮ ಹಲವಾರು ಕೃತಿಗಳ ಕಾಣಿಕೆ ನೀಡಿ ನಮಗೆಲ್ಲಾ ಪರಮಾನುಗ್ರಹ ಮಾಡಿದ್ದಾರೆ..ಇಂಥ ದಾಸಾರ್ಯರ ಕೃತಿಗಳ ಶ್ರವಣ, ಪಠಣ, ಪಾರಾಯಣ, ಮನನ, ವಾಚನ..ಮಾಡುವ ಮಾನವರೇ ಧನ್ಯ ಇಂಥ ಸೇವಾಭಾಗ್ಯ ಸದಾ ಭಗವಂತ ಅನುಗ್ರಹಿಸಲೆಂದು “ಶ್ರೀಸುಗುಣವಿಠಲ* ನಲ್ಲಿ ಪ್ರಾರ್ಥಸುತ್ತಾ..ಈ ಯಥಾಮತಿ ಸ್ಮರಣಚಿಂತನವನ್ನು ಪತ್ಯಂತರ್ಗತ ದಾಸಾರ್ಯರಂತರ್ಗತ ಗುರುಗಳಂತರ್ಗತ ಭಾರತೀರಮಣ ಮುಖ್ಯಪ್ರಾಣಾಂತರ್ಗತ ಕುಲಧೈವ  ಶ್ರೀ ಕ್ಷೇತ್ರ ಒಳಬಳ್ಳಾರಿ ಶ್ರೀ ಲಕ್ಷ್ಮೀರಂಗನಾಥನಲ್ಲಿ ಸಮರ್ಪಿಸುತ್ತೇನೆ.
ಶ್ರೀಸುಗುಣವಿಠಲಾರ್ಪಣಮಸ್ತು 
ಶ್ರೀಕೃಷ್ಣಾರ್ಪಣಮಸ್ತು.
by ✍️...ಶ್ರೀಸುಗುಣವಿಠಲ..
***

ಶ್ರೀ ಗುರುಶ್ರೀಶವಿಠಲದಾಸರ ಸುಳಾದಿಗಳು 

1. ಶ್ರೀನಿವಾಸನೆ ನಿನಗೇನು ಬಿನ್ನೈಸಲೋ
2. ಶ್ರೀನಿವಾಸನೆ ಪೂರ್ಣ ಜ್ಞಾನನಂದನೆ ಸ್ವಾಮಿ
3. ಮನವೇ ಮರಿಯದಿರು ವನಜನಾಭನ ನಾಮ
4. ನಮೊ ನಮೊ ಶ್ರೀಹರಿಯೆ 
5. ಶ್ರೀಪತಿಯೆ ಎನ್ನ ಆಪನಿತು ನಾ ಬೇಡುವೆ
6. ಹರಿಯೆ ಉದ್ಧರಿಸೆನ್ನ ಪರಮಪುರುಷ ಧೊರಿಯೆ
****

2 comments:

  1. how to find their house in kampi? any leads pls.

    ReplyDelete
  2. Kampli, near Bellary is a very small town. Raghavendra Swamy Temple is there. Finding temple will not be a problem. And then any brahmin should be able to guide.

    ReplyDelete