Monday, 1 July 2019

abhinava janardhana vittala dasaru 1800+ ಅಭಿನವ ಜನಾರ್ಧನ ವಿಠ್ಠಲ ದಾಸರು vaishakha bahula triteeya



Abhinava Janardhana Vittala Dasaru
Original Name: Sri. Prema Dasa Period: 1800+ Ankita: Abhinava Janardhana Vittala Preceptor: Sri. Janardhana Vittala Dasa Place: Manvi Aradhana:


" ಶ್ರೀ ಅಭಿನವ ಜನಾರ್ಧನ ವಿಠ್ಠಲ ಕಣ್ಣಲ್ಲಿ ಶ್ರೀ ನೃಸಿಂಹದೇವರು "
ಶ್ರೀ ಅಭಿನವ ಜನಾರ್ದನ ವಿಠ್ಠಲದಾಸರು ಶ್ರೀ ಗೋಪಾಲದಾಸರ ಶಿಷ್ಯ ಪರಂಪರೆಗೆ ಸೇರಿದವರು. 
ಶ್ರೀ ವಿಜಯರಾಯರು 
ಶ್ರೀ ಗೋಪಾಲದಾಸರು 
। 
ಶ್ರೀ ಗುರು ಗೋಪಾಲವಿಠ್ಠಲರು 
( ಇವರು ಶ್ರೀ ಗೋಪಾಲದಾಸರ ತಮ್ಮಂದಿರಾದ ಶ್ರೀ ಸೀನಪ್ಪದಾಸರು )
ಶ್ರೀ ಜನಾರ್ದನವಿಠ್ಠಲರು 
( ಶ್ರೀ ತಿರುಮಲದಾಸರು )
ಶ್ರೀ ಅಭಿನವ ಜನಾರ್ದನವಿಠ್ಠಲರು 
( ಸುರಪುರ ಶ್ರೀ ಪ್ರೇಮದಾಸರು )
               ***
ರಾಗ : ಶ್ರೀರಾಗ                           ತಾಳ : ಆದಿ 
ನರಸಿಂಹಾ ನರಸಿಂಹಾ ಕರುಣಾಕರ । ಮ ।
ದ್ದುರಿತ ನಿವಾರಣ ನರಸಿಂಹಾ                   ।। ಪಲ್ಲವಿ ।।
ಹುಡುಗನ ಮಾತಿಗೆ ವಡಿದು ಕಂಭದಲಿ ।
ಸಿಡಿಲಿನಂತೆ ಘುಡಿ ಘುಡಿಸುತ ಬಂದಾ          ।। ಚರಣ ।।
ಕಡು ಬಾಧಿಸುತಿಹ್ಯ ಕ್ರೂರ ದೈತ್ಯನಾ ।
ವಡಲ ಶೀಲಿ ಕರಳ ಮಾಲೆಯ ಹಾಕಿದ         ।। ಚರಣ ।।
ಸರಿಸಿಜಭವ ಮುಖ ಸುರರಾಕಾಶದಿ । 
ಹರುಷದಿಂದಲಿ ಪೂ ಮಳೆಯ ಗರೆದರು        ।। ಚರಣ ।।
ದಯಾ ಸಾಗರ ನಿನ್ನಯ ಪಾದ ಕಮಲ ।
ದ್ವಯ ಕೆರಗುವೇನೊ ದಯಮಾಡೆ ನನ್ನನು    ।। ಚರಣ ।।
ಘನ್ನ ತೇಜೋಮಯ ಘನ್ನ ರೂಪ । ಶ್ರೀ ।
ಘನ್ನ ಅಭಿನವಜನಾರ್ದನವಿಠ್ಠಲ ನರಸಿಂಹಾ   ।। ಚರಣ ।।
ಮೇಲ್ಕಂಡ ಚಿಕ್ಕ ಪದದಲ್ಲಿ ಶ್ರೀ ಅಭಿನವ ಜನಾರ್ದನ ವಿಠ್ಥಲರು ( ಶ್ರೀ ಪ್ರೇಮದಾಸರು, ಕ್ರಿ ಶ 1742 - 1822 ) ಶ್ರೀ ನೃಸಿಂಹ ಪ್ರಾದುರ್ಭಾವವನ್ನು ಸೆರೆ ಹಿಡಿದಿದ್ದಾರೆ. ಚಿಕ್ಕ ಕೃತಿಯಲ್ಲಿ ದೊಡ್ದ ಆಕೃತಿಯನ್ನು ವರ್ಣಿಸುವುದೇ ಹರಿದಾಸ ಸಾಹಿತ್ಯದ ಹಿರಿಮೆ!!
***
" ಶ್ರೀ ರಾಯರ ಕಾರುಣ್ಯ ಪಾತ್ರರು - ಶ್ರೀ ಅಭಿನವ ಜನಾರ್ದನ ವಿಠಲರು " ಗೆ, ಪೂಜ್ಯ ಶ್ರೀ ಸುಧೀಂದ್ರಚಾರ್ಯರು ಪ್ರಕಾಶಕರು ಶ್ರೀ ಸುಯಮೀ ರಾಘವೇಂದ್ರ ಸಂಶೋಧನಾ ಕೇಂದ್ರ ಸಾಹಿತ್ಯ ಸಾಮ್ರಾಜ್ಯ ಪ್ರಕಾಶನ ನಂಜನಗೂಡು - ಬೆಂಗಳೂರು! ಪೂಜ್ಯರೇ! ತಮ್ಮ ಸಂಶೋಧನಾ ಕೇಂದ್ರದಿಂದ " ಸಾಹಿತ್ಯ ಸಾಮ್ರಾಜ್ಯ - 148 " ನೇ ಕೃತಿ ಪುಷ್ಪ ಪುಷ್ಪ - ಶ್ರೀ ವಿಜಯದಾಸರ ಶಿಷ್ಯರಾದ ಶ್ರೀ ಅಭಿನವ ಜನಾರ್ದನ ವಿಠಲರು ರಚಿಸಿರುವ " ಮಂತ್ರಾಲಯ ವೈಶಿಷ್ಟ್ಯ - ಯಾತ್ರಾ ಫಲ " ಎಂಬ ಕೃತಿಯನ್ನು ಹೊರತಂದಿದ್ದು, ಆ ಕೃತಿಕಾರರ ವಿಳಾಸವನ್ನೇ ಬದಲಾಯಿಸಿ ಮುದ್ರಿಸಿರುವುದು ವಿಷಾದನೀಯ! ನಾನು, ಈ ಕುರಿತು ತಮ್ಮನ್ನು ವಿಚಾರಿಸಿದಾಗ ತಾವು " ಶ್ರೀ ಅಭಿನವ ಜನಾರ್ದನ ವಿಠಲ " ರ ಕುರಿತು ಮಾಹಿತಿಯನ್ನು ಕೊಟ್ಟವರು ಶ್ರೀ ಕೆ ಅಪ್ಪಣ್ಣಾಚಾರ್ಯರು ಎಂದು ತಿಳಿಸಿದ್ದು ಸರಿಯಷ್ಟೆ! ಅಲ್ಲದೆ ಆ ಪುಸ್ತಕದಲ್ಲಿ ಶ್ರೀ ಅಭಿನವ ಜನಾರ್ಧನ ವಿಠಲರ ಕುರಿತು ಸಂಗ್ರಹಕಾರರಾದ ಶ್ರೀ ಉಡುಪಿ ಕೃಷ್ಣಾಚಾರ್ಯರು ಕೊಟ್ಟ ತಪ್ಪು ಮಾಹಿತಿ ಹೀಗಿದೆ... 1. ಅಪರೋಕ್ಷ ಜ್ಞಾನಿಗಳಾದ ಶ್ರೀ ವಿಜಯದಾಸರ ಸಮಕಾಲೀನರು ಶ್ರೀ ಅಭಿನವ ಜನಾರ್ದನ ವಿಠಲರು. ಇವರ ಹೆಸರು ಪ್ರೇಮದಾಸರು. ಇವರಿಗೆ ಅಂಕಿತ ಕೊಟ್ಟವರು ಮತ್ತು ಗುರುಗಳು ಕಮಲೇಶ ವಿಠಲರು ( ಸುರಪುರದ ಆನಂದದಾಸರು! ಎಂದು ಬರೆದಿದ್ದಾರೆ. " ಖಂಡನೆ " ಸಂಗ್ರಹಕಾರರಾದ ಶ್ರೀ ಉಡುಪಿ ಕೃಷ್ಣಾಚಾರ್ಯರಿಗೆ ಶ್ರೀ ಹರಿದಾಸರ ಬಗ್ಗೆ ಸರಿಯಾದ ಮಾಹಿತಿಯಿಲ್ಲದೆ ಅಪರೋಕ್ಷ ಜ್ಞಾನಿಗಳೂ, ಶ್ರೀ ರಾಯರ ಅಂತರಂಗ ಭಕ್ತರೂ ಆದ ಶ್ರೀ ಅಭಿನವ ಜನಾರ್ಧನ ವಿಠಲರ ಬಗ್ಗೆ ತಮ್ಮ ಮನಸ್ಸಿಗೆ ಬಂದಂತೆ ಬರೆದದ್ದು ಖಂಡನೀಯ! ಶ್ರೀ ಗುರುಸಾರ್ವಭೌಮ ಸಂಸ್ಕೃತ ವಿದ್ಯಾಪೀಠದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅವರು ಶ್ರೀ ರಾಯರ ಅಂತರಂಗ ಭಕ್ತರ ಬಗ್ಗೆ " ಸುಳ್ಳಿನ ಮಾಹಿತಿ " ಕೊಟ್ಟು ಶ್ರೀ ಅಭಿನವ ಜನಾರ್ದನ ವಿಠಲರಿಗೆ ಅಗೌರವ ತೋರಿದ್ದಾರೆ!! " ಮಂಡನೆ " ಶ್ರೀ ಉಡುಪಿ ಕೃಷ್ಣಾಚಾರ್ಯರ ಮಾತನ್ನು ಖಂಡಿಸುತ್ತಾ ಈ ಕೆಳಗಿನ ವಿಷಯಗಳೊಂದಿಗೆ ಶ್ರೀ ಅಭಿನವ ಜನಾರ್ದನ ವಿಠಲರ ಪರಿಶುದ್ಧವಾದ ಚರಿತ್ರೆಯನ್ನು ನಾಡಿನ ಸಾಧು - ಸಜ್ಜನರೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. 1. ಶ್ರೀ ಅಭಿನವ ಜನಾರ್ದನ ವಿಠಲರು ಶ್ರೀ ವಿಜಯರಾಯರ ಸಮಕಾಲೀನರು ಅಲ್ಲ! ಕಾರಣ : - ಶ್ರೀ ವಿಜಯರಾಯರು ವೈಕುಂಠಯಾತ್ರೆ ಮಾಡಿದಾಗ ಶ್ರೀ ಪ್ರೇಮದಾಸರಿಗೆ ಅಂಕಿತವಾಗಿರಲಿಲ್ಲ ಹಾಗೂ ಅವರು 13 ವರ್ಷದ ಹುಡುಗ. ಶ್ರೀ ವಿಜಯರಾಯರ ಕಾಲ : ಕ್ರಿ ಶ : 1682 - 1755 ಶ್ರೀ ಅಭಿನವ ಜನಾರ್ದನ ವಿಠಲರ ಕಾಲ : ಕ್ರಿ ಶ 1742 - 1822 2. ಶ್ರೀ ಅಭಿನವ ಜನಾರ್ದನ ವಿಠಲರು ಶ್ರೀ ಗೋಪಾಲದಾಸರ ತಮ್ಮಂದಿರೂ, ಅಪರೋಕ್ಷ ಜ್ಞಾನಿಗಳೂ ಆದ ಶ್ರೀ ಗುರುಗೋಪಾಲದಾಸರ ಶಿಷ್ಯ ಪರಂಪರೆಗೆ ಸೇರಿದವರು. ಶ್ರೀ ಗುರುಗೋಪಾಲದಾಸರು ಶ್ರೀ ತಿರುಮಲದಾಸರಿಗೆ " ಶ್ರೀ ಜನಾರ್ದನ ವಿಠಲ " ಎಂದು ಯಾಕಿಂತದೊಂದಿಗೆ ದಾಸ ದೀಕ್ಷೆ ಕೊಟ್ಟಿದ್ದಾರೆ. ಆ ಅಂಕಿತ ಪದ ಹೀಗಿದೆ... ರಾಗ : ಕಾಂಬೋಧಿ ತಾಳ : ಝ೦ಪೆ ಶ್ರೀ ಜನಾರ್ದನವಿಠಲ ಶೃಂಗಾರ ಪರಿಪೂರ್ಣ । ಅಜಭವಾಮರೇಂದ್ರ ಸೇವ್ಯಾ । ನೈಜ ಭಾವದಿ ನಮಿಸಿ ಬೇಡಿದವನಿಗೆ ವರವ । ನಿಜವಾಗಿ ಪಾಲಿಸುವೆನೆಂದು ದಯದಲಿ ಬಂದ್ಯಾ ।। ಪಲ್ಲವಿ ।। ವೇಣುಗೋಪಾಲದಾಸರು ಕರುಣಾವನೆ ಮಾಡಿ । ಪಾಣಿ ಪಿಡಿದದ್ದು ನೋಡಿ । ಕ್ಷೋಣಿಯೊಳುಳ್ಳಂಥ ತೀರ್ಥ ಯಾತ್ರಾದಿಗಳ । ಸ್ನಾನಾದಿ ಫಲವ ನೀಡಿ । ವಾಣಿ ಅರಸಾನಿಂದ ತೃಣ ಜೀವ ಪರಿಯಂತ । ಮೇಣು ತಾರತಮ್ಯ ನೋಡಿ । ಅನಾಜ್ಞದವನೆಂದು ಅತಿ ಮಮತೆಯಿಂದಲಿ । ನೀನೆ ವ್ಯಕ್ತವಾಗಿ ನಿಂತು ಉದ್ಧರಿಪುದಕೆ ।। ಚರಣ ।। ಮಾನ ಮಮತೆಯೆಂಬ ಹೀನ ಅಹಂಕಾರವನು । ಹಾನಿ ಮಾಡುವೆ ನೆನುತಲಿ । ಜ್ಞಾನ ಭಕುತಿಯ ಕೊಟ್ಟು ಧ್ಯಾನ ಮಾರ್ಗವ ತೋರಿ । ಪ್ರಾಣನಾ ಪಾದದಲಿ । ಆನಂದ ಉಂಬದಕೆ ಅತಿ ವೇಗ ಪೊಂದಿಸಿ । ಶೀಲ ಸ್ವಭಾವದಲಿ । ಭಾನು ಕೋಟಿ ತೇಜ ಭಕುತ ಜನರಾಧಾರಿ । ಧೇನುವತ್ಸಲನ ಪೊರೆವ ಪರಿಯಂತೆ ದಯದಲಿ ।। ಚರಣ ।। ಮನ್ಮಥ ನಾಮ ಸಂವತ್ಸರಾ ಮಾಘ ಶುದ್ಧ ಬಿದಿಗಿ । ಮಂಗಳವಾರದಲ್ಲಿ । ಮನ್ಮನೋಭೀಷ್ಟೆಯನು ಕೊಡಲು ಗುರುಗೋಪಾಲ । ದಾಸರ ಮುಖದಲಿ । ಸನ್ಮಾನದಲ್ಲಿ ಸಂಗೀತ ನಾಮ ಸ್ಮರಣೆ । ಎನ್ನು ಪೇಳುಪೇ ನೆನುತಲಿ । ಚಿನ್ಮಯನೇ ಪುನ್ನಾಡಿಯೊಳಗೆ ಪೊಳವೇನೆಂದು । ಘನ್ನ ಕರುಣಾದಿ ಬಂದ್ಯಾ ಶ್ರೀ ಜನಾರ್ದನವಿಠಲ ।। ಚರಣ ।। ಎಂದು ಅಂಕಿಂತದೊಂದಿಗೆ ಶ್ರೀ ಗುರುಗೋಪಾಲದಾಸರು ಶ್ರೀ ತಿರುಮಲದಾಸರಿಗೆ ದಾಸ ದೀಕ್ಷೆ ನೀಡಿದರು. ಇವರ ಪ್ರೀತಿಯ ಶಿಷ್ಯರೇ ಶ್ರೀ ಅಭಿನವ ಜನಾರ್ದನ ವಿಠಲರು. ಶ್ರೀ ಗುರುಗೋಪಾಲದಾಸರ ಶಿಷ್ಯರಾದ ಶ್ರೀ ಜನಾರ್ದನವಿಠಲರು ಶ್ರೀ ಪ್ರೇಮದಾಸರಿಗೆ " ಹೇವಳ೦ಬಿ ನಾಮ ಸಂವತ್ಸರ ವೈಶಾಖ ಶುದ್ಧ ದ್ವಿತೀಯ ಶುಕ್ರವಾರದಂದು " ಅಭಿನವ ಜನಾರ್ದನ ವಿಠಲ " ಎಂಬ ಅಂಕಿತದೊಂದಿಗೆ ದಾಸ ದೀಕ್ಷೆ ಕೊಟ್ಟರು. ಆ ಅಂಕಿತ ಪದ ಹೀಗಿದೆ... ರಾಗ : ಕಾಂಬೋಧಿ ತಾಳ : ಝ೦ಪೆ ಅಭಿನವ ಜನಾರ್ದನ ವಿಠಲ ಯೆನ್ನ । ಗಭೀರ ವಚನವ ಲಾಲಿಸೈಯ್ಯಾ ಗಮನಕದಿ ವೇಗ ।। ಪಲ್ಲವಿ ।। ಒಡಿಯ ನೀನಹುದೆಂದು ಅಡಿಗಡಿಗೆ ಚರಣಗಳ । ಬಿಡದೆ ನಂಬಿಕೊಂಡು ಪೊಡವಿಯೊಳಗೆ । ನಡತಿವಂತರ ಕೂಡ ಬಿಡದೆ ಆಡುವ ನರಗ । ಪಡಿನಾಮ ಅಮೃತವನೇ ಪಾಲಿಸಿ ರಕ್ಷಿಪುದು ।। ಚರಣ ।। ಅಪರಾಧವೆಣಿಸದಲೇ ಅಪವರ್ಗದಾ ಜನರ । ನಿಪುಣರನ ಮಾಡುವಾ ನೀತಿವಂತಾ । ಕಪಟ ಕುಚೇಷ್ಟಗಳ ಪ್ರಕಟ ಬಾಹ್ಯಾಂತರದಿ । ವಪುವಿಲಿದ್ದದು ಕಳೆದು ಉಪಜೀವ್ಯ ನೀನಾಗಿ ।। ಚರಣ ।। ಶ್ರೀ ಗುರು ಗೋಪಾಲ ದಾಸರಾಯರ ಪಾದ । ಜಾಗುರೂಕದಿ೦ದ ಭಜಿಸಿ ಜಗದಿ । ಯೋಗನೆಸಗಲಿ ಮನಕೆ ಯೋಗೀಶ ಭಕ್ತಿಯಲಿ । ಭಾಗೀರಥಿ ಪಿತ ಜನಾರ್ದನವಿಠಲೈಯ್ಯಾ ।। ಚರಣ ।। ಶ್ರೀ ಅಭಿನವ ಜನಾರ್ದನ ವಿಠಲರು ಶ್ರೀ ಜನಾರ್ದನವಿಠಲರಿಂದ ಅಂಕಿಂತ ಪಡೆದು ಅನೇಕ ಪದ - ಪದ್ಯ - ಸುಳಾದಿಗಳನ್ನು ರಚಿಸಿ ಹರಿದಾಸ ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸಿದ್ದಾರೆ! ವಿಶೇಷ ವಿಚಾರ : ಶ್ರೀ ಕಮಲೇಶವಿಠಲರು ಶ್ರೀ ಜಗನ್ನಾಥದಾಸರ ಶಿಷ್ಯ ಪರಂಪರೆಯೆಲ್ಲಿ ಬಂದವರು. ಇವರು ಶ್ರೀ ಜಗನ್ನಾಥದಾಸರ ಪ್ರೀತಿಯ ಶಿಷ್ಯರಾದ ಶ್ರೀಶವಿಠಲರಿಂದ " ಕಮಲೇಶವಿಠಲ " ಎಂಬ ಅಂಕಿತವನ್ನು ಪಡೆದವರು ಶ್ರೀ ಕಮಲೇಶವಿಠಲರ ಶಿಷ್ಯ ಪರಂಪರೆ ಹೀಗಿದೆ.... " ದಾಸರ ಶಿಷ್ಯ ಸಂಪತ್ತು " ಶ್ರೀ ಮಡಕಶಿರದ ಭೀಮದಾಸರು - ಭೀಮೇಶವಿಠ್ಠಲ ಶ್ರೀ ಕಮಲಾಪತಿದಾಸರು - ಕಮಲಾಪತಿವಿಠ್ಠಲ ಶ್ರೀ ಜೋಶಿ ವೆಂಕಪ್ಪಾಚಾರ್ಯರು - ವೆಂಕಟೇಶವಿಠ್ಠಲ ಶ್ರೀ ಹರಪನಹಳ್ಳಿ ರಾಮಾಚಾರ್ಯರು - ಇಂದಿರೇಶ ಶ್ರೀ ಗುಂಡಾಚಾರ್ಯರು ಶ್ರೀ ಬೇಲೂರು ವೆಂಕಟ ಸುಬ್ಬದಾಸರು ಶ್ರೀ ಸುರಪುರದ ಪ್ರೇಮದಾಸರು ಸಾಧ್ವೀ ತಂಗಮ್ಮನವರು ( ಇವರು ಶ್ರೀ ಆನದದಾಸರ ಮಗಳು ) ಆದ್ದರಿಂದ ಮೇಲ್ಕಂಡ ವಿಷಯಗಳನ್ವಯ ಶ್ರೀ ಅಭಿನವ ಜನಾರ್ದನ ವಿಠಲರು ಶ್ರೀ ಕಮಲೇಶವಿಠಲ ಶಿಷ್ಯರೂ ಅಲ್ಲ ಮತ್ತು ಅವರಿಂದ ಅಂಕಿತವನ್ನೂ ಪಡೆದಿಲ್ಲ!! ಅಂದಮೇಲೆ ಶ್ರೀ ಉಡುಪಿ ಕೃಷ್ಣಾಚಾರ್ಯರಿಗೆ ಸರಿಯಾದ ಹರಿದಾಸರು ಹಾಗೂ ದಾಸ ಸಾಹಿತ್ಯದ ಜ್ಞಾನದ ಕೊರತೆ ಎದ್ದು ಕಾಣುತ್ತಿದೆ. ದಯಮಾಡಿ ಶ್ರೀ ಉಡುಪಿ ಕೃಷ್ಣಾಚಾರ್ಯರು ಅಪರೋಕ್ಷ ಜ್ಞಾನಿಗಳಾದ ಹರಿದಾಸರ ಬಗ್ಗೆ ಸಜ್ಜನರಿಗೆ ತಪ್ಪು ಸಂದೇಶವನ್ನು ಕೊಡಬಾರದೆಂದೂ, ನಿಯತ ಗುರುಗಳಿಂದ ಹರಿದಾಸರು ಮತ್ತು ಅವರ ಸಾಹಿತ್ಯದ ಬಗ್ಗೆ ಅಧ್ಯಯನ ಮಾಡಲೇಬೇಕಾದ ಅವಶ್ಯಕತೆ ಶ್ರೀ ಉಡುಪಿ ಕೃಷ್ಣಾಚಾರ್ಯರಿಗೆ ಇದೆ. ಈ ನಿಟ್ಟಿನಲ್ಲಿ ಅವರು ಅಧ್ಯಯನ ಮಾಡುವಂತಾಗಲಿ!! " ಪ್ರಕಾಶಕರಿಗೆ..... " ಪೂಜ್ಯ ಸುಧೀಂದ್ರಚಾರ್ಯರೇ! ಶ್ರೀ ಉಡುಪಿ ಕೃಷ್ಣಾಚಾರ್ಯರಂಥಾ ಟೊಳ್ಳಿನವರನ್ನು ಬಿಟ್ಟು, ಜ್ಞಾನಿಗಳೂ, ವಿದ್ಯಾವಂತರು ನಾಡಿನಲ್ಲಿ ಅನೇಕ ದಾಸ ಸಾಹಿತ್ಯ ಧುರೀಣರು ಇದ್ದಾರೆ. ಅಂಥವರ ಸಹಾಯ ತಾವು ಪಡೆದುಕೊಂಡು ಶ್ರೀ ರಾಯರ ಅಂತರಂಗ ಭಕ್ತರಾದ ಹರಿದಾಸರ ಅಪ್ರಕಟಿತ ಸಾಹಿತ್ಯವನ್ನು ಪ್ರಕಟಿಸಬೇಕೆಂದು ತಮ್ಮಲ್ಲಿ ಸವಿನಯ ಮನವಿ!! ಸಜ್ಜನರ ಮಾಹಿತಿಗಾಗಿ... " ಮಂತ್ರಾಲಯ ವೈಶಿಷ್ಟ್ಯ - ಯಾತ್ರಾ ಫಲ " ಪುಸ್ತಕದಲ್ಲಿ ಮುದ್ರಿತವಾದ ಸಂಗ್ರಹಕಾರರಾದ ಶ್ರೀ ಉಡುಪಿ ಕೃಷ್ಣಾಚಾರ್ಯರ ಮಾಡುಗಳನ್ನು ಲಗತ್ತಿಸಲಾಗಿದೆ.
by ಆಚಾರ್ಯ ನಾಗರಾಜು ಹಾವೇರಿ
ಗುರು ವಿಜಯ ಪ್ರತಿಷ್ಠಾನ
***


ಶ್ರೀ ಗುರುಗೋಪಾಲದಾಸಾರ್ಯರ ಶಿಷ್ಯರಾದ ಶ್ರೀ ಜನಾರ್ದನ ವಿಠಲರು, ತಮ್ಮ ಪ್ರೀತಿಯ ಶಿಷ್ಯರಾದ ಪ್ರೇಮದಾಸರಿಗೆ ಅಭಿನವಜನಾರ್ದನವಿಠಲ ಎನ್ನುವ ಅಂಕಿತವನ್ನು ಪ್ರದಾನ ಮಾಡಿದ ಸುದಿನ.Vaishakha bahula triteeya.

-Smt. Padma Sirish

ನಾದನೀರಾಜನದಿಂ ದಾಸಸುರಭಿ 🙏🏽
*******


Sri Abhinava Janardhana Vittala Dasa1800Prema DasaAbhinava Janardhana VittalaSri Janardhana Vittala DasaNot KnownNot Known




No comments:

Post a Comment