-Smt. Padma Sirish
-Smt. Padma Sirish
ಪರಮಪ್ರಿಯ ಶ್ರೀ ತಂದೆಮುದ್ದುಮೋಹನವಿಠಲರ ಸ್ಮರಣೆ
ಭಾಗ - 3.....
ಶ್ರೀ ಮುದ್ದುಮೋಹನವಿಠಲರ ಆದೇಶಾನುಸಾರ ಮರುದಿನ ತುಮಕೂರಿನ ವ್ಯಾಸರಾಜಮಠಕ್ಕೆ ಸೇರಿದ ಸುಬ್ಬರಾಯರನ್ನು ಕಂಡು ಶಿರದಮೇಲೆ ಹಸ್ತವನ್ನಿಟ್ಟು ತಮ್ಮ ಬಿಂಬಮೂರ್ತಿಯ ಸ್ಮರಣೆ ಮಾಡುತ್ತಾ ....
ತಂದೆಮುದ್ದುಮೋಹನವಿಲ ಸಲಹಬೇಕಿವನ
ಕಂದುಗೊರಳನ ಪ್ರಿಯನೆ ಅಭಿನಂದಿಪೆನು ಸತತ
ಎಂದು ಅಂಕಿತೋಪದೇಶವನ್ನು ಮಾಡಿದರು....
ಹೀಗೆ ಸುಬ್ಬರಾಯದಾಸರು ತಂದೆಮುದ್ದುಮೋಹನವಿಠಲ ರಾದರು... ಆವತ್ತಿನಿಂದ ಅವರಿಗೆ ತನ್ನ ಬಿಂಬಮೂರುತಿಯ ದರ್ಶನ ಪಡೆಯಲು ಉತ್ಸುಕರಾಗಿ ಮತ್ತೆ ಗಹೆಗಳಲ್ಲಿ ಹೋಗಿ ತಪಸ್ಸುಮಾಡತೊಡಗಿದರು.. ಸಂಸಾರದಚಿಂತೆ , ಮನೆಯ ಚಿಂತೆ ಯಾವುದೂ ಇಲ್ಲ .. ಸದಾ ರಾಮಗುಹೆಯ ಏಕಾಂತ ಸ್ಥಳದಲ್ಲಿರಲು ಆರಂಭಮಾಡಿದರು.. ಅಲ್ಲಿ ಬಾಣತೀರ್ಥವೆಂಬ ತೀರ್ಥವಿರುವುದರಿಂದ ಅವರ ಸ್ನಾನಸಂಧ್ಯಾದಿಗಳಿಗೆ ಪರಮಾನುಕೂಲವಾಗಿತು.... ಹೀಗೆ ಪರಮ ಕಠಿಣ ತಪಸ್ಸನ್ನಾಚರಿಂಚಿ ಯೋಗದ ಪರಮೋತ್ತುಂಗ ಸ್ಥಿತಿಯನ್ನು ಸೇರಿ, ಪರಮಾತ್ಮನನ್ನು ತಮ್ಮ ಗುರುಪ್ರಸಾದಿತ ಬಿಂಬರೂಪದಲ್ಲೇ ಕಾಣುವ ಮುಖಾಂತರ ಸಿದ್ಧಿಯನ್ನು ಪಡೆದರು... ನಂತರ ನರಸೀಪುರಕ್ಕೆ ಬಂದು ಸಂಸಾರದಲ್ಲಿದ್ದೇ ಸೇವೆಯನ್ನು ಮುಂದೆವರಿಸಲು ನಿಶ್ಚಯಿಸಿದರು... ಸ್ವಲ್ಪ ದಿನಗಳಲ್ಲಿ ತಂದೆತಾಯಿಯರ ಹಾಗೂ ತಮ್ಮ ಸ್ವರೂಪೋದ್ಧಾರಕರಾದ ಶ್ರೀ ಮುದ್ದುಮೋಹನವಿಠಲರ ವಿಯೋಗ ಉಂಟಾಗಿ ಅವರನ್ನು ವೇದನೆಗೆ ಗುರಿಮಾಡಿದರೂ, ಮುಂದಿನ ಕಾರ್ಯಗಳನ್ನು ಮನವರಿಕೆ ಮಾಡಿಕೊಂಡು ಜೀವನದಲಿ ಮುಂದೆವರೆಯಲು ನಿಶ್ಚಯಮಾಡಿಕೊಂಡರು. ಜೀವನ ಭೃತಿಗಾಗಿ ಬೆಂಗಳೂರಿನಲ್ಲಿ ಅನೇಕ ವ್ಯಾಪಾರಗಳನ್ನು ಮಾಡಿದರು. ಆದರೇ ಅವರು ಹಣಕ್ಕಿಂತಾ ಮನುಷ್ಯರ ಕಷ್ಟಕ್ಕೆ ಮಾನ್ಯತೆಯನ್ನು ಕೊಡುವುದರಿಂದ ವ್ಯಾಪಾರದಲ್ಲಿ ನಷ್ಟ ಉಂಟಾಗಿ ಮರಲಿ ನರಸೀಪುರಕ್ಕೆ ಬಂದು ಇನ್ಮೇಲೆ ಯಾವತ್ತೂ ಯಾವ ವ್ಯಾಪಾರ ಮಾಡುವದಲ್ಲ ನನ್ನ ಜೀವನ ದಾಸಸಾಹಿತ್ಯದಸೇವೆಯಲ್ಲಿದೆ ಎಂದೇ ನಿಶ್ಚಿತರಾಗಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ಯಾಯಿವಾರಕ್ಕೆ ಹೋಗುವಂತಾಗಿ ಆ ಬಂದ ಧಾನ್ಯ, ಹಣದಿಂದಲೇ ಜೀವನಮಾಡಲಾರಂಭಿಸಿದರು. ಮತ್ತೆ ಕರಿಗಿರಿಯ ನರಸಿಂಹನ ರಥೋತ್ಸವ, ನರಸಿಂಹ ಜಯಂತಿ ಇತ್ಯಾದಿ ವಿಶೇಷ ದಿನಗಳಲ್ಲಿ ಅಲ್ಲಿಗೆ ಹೋಗಿ ಜ್ಞಾನಸತ್ರಗಳನ್ನು ನಡೆಸುತ್ತಾ ಭಕ್ತಾದಿಗಳಿಗೆ ಶಾಸ್ತ್ರ ಹಾಗೂ ದಾಸ ಸಾಹಿತ್ಯದ ರುಚಿಯನ್ನುತೋರಿಸಲಾರಂಭಿಸಿದರು.... ಯಾಯಿವಾರದಲ್ಲಿ ಬಂದ ಹಣ, ಧಾನ್ಯಗಳಿಂದಲೇ ಆ ಜ್ಞಾನಸತ್ರಗಳು ನಡೆಯುತ್ತಿದ್ದವು... ದಿನ ದಿನ ಪ್ರವರ್ಥಮಾನವಾಗಿ ದಾಸರ ಉಪನ್ಯಾಸಾಮೃತ ವಾಕ್ಯಗಳನ್ನು ಕೇಳಲು ಬರುವ ಜನರು ಅಧಿಕರಾದರು... ಒಮ್ಮೆ ಹೀಗೇ ಲಕ್ಷ್ಮೀ ನರಸಿಂಹ ದೇವರ ರಥೋತ್ಸವಕ್ಕೆ ಕೋಲಾರದ, ಬಾಗೇಪಲ್ಲಿಯ ಶೇಷದಾಸರೆಂದೇ ಪ್ರಸಿದ್ಧರಾದ ದಾಸರು ಬಂದರು ಇವರು ಪರಮಾತ್ಮನ ಪ್ರೇರಣೆಯಿಂದ ಶೇಷವಿಠಲ ಎನ್ನುವ ಅಂಕಿತದಿಂದಲೇ ಕೃತಿರಚನೆ ಆಸುಕವನಾರೂಪವಾಗಿ ಮಾಡಿ ಪರಮಾತ್ಮನಿಗೆ ಸಮರ್ಪಣೆ ಮಾಡುತ್ತಿದ್ದರು ( ರಮಾ ಸಮುದ್ರನ ಕುಮಾರಿ ನಿನ್ನ ಸರಿಸಮಾನರಾರಮ್ಮ ಈ ಹಾಡಿನಿಂದ ಶ್ರೀ ಬಾಗೇಪಲ್ಲಿ ಶೇಷದಾಸರು ನಮಗೆ ಸುಪರಿಚಿತರೇ )
ಆದರೇ ಗುರುಮುಖೇನ ಉಪದೇಶವಾಗಲಿಲ್ಲೆಂದು ಬಾಧೆಪಡ್ತಿದ್ದರು... ಅಂತಾ ಶೇಷದಾಸರಿಗೆ ರಥೋತ್ಸವ ಸಮಯದಲ್ಲಿ ಶ್ರೀ ತಂದೆಮುದ್ದುಮೋಹನವಿಠಲರ ದರ್ಶನ ಒದಗಿ ಬಂದೀತು.. ಪರಮಾನಂದಭರಿತರಾದ ಶೇಷದಾಸರು ಇವರಿಂದಲೇ ಉಪದೇಶಪಡೆಯಬೇಕೆಂದು ನಿಶ್ಚಯಮಾಡಿಕೊಂಡು ದಾಸಾರ್ಯರ ಬಳಿ ಬಂದು ತಮಗೆ ಉಪದೇಶನೀಡಿ ಉದ್ಧರಿಸಬೇಕೆಂದು ಬೇಡಿಕೊಂಡರು... ಪರಮಾತ್ಮನ ಅನುಗ್ರಹ ಇಂಥಾ ಸಾತ್ವಿಕರಾದ ಶಿಷ್ಯರನ್ನು ಕಳಿಸಿದರೆಂದು ಆನಂದಪಟ್ಟ ಶ್ರೀ ತಂದೆ ಮುದ್ದುಮೋಹನವಿಠಲಾಂಕಿತರು ತಮ್ಮ ಗುರುಗಳ ಆಜ್ಞೆಯಂತೆ ದಾಸಪಂಥವನ್ನು ಮುಂದೆವರಿಸಲೆಂದು ಶ್ರೀ ಶೇಷದಾಸರನ್ನು ಕರೆದು ರಾಮದೇವರ ಬೆಟ್ಟದ ರಾಮಗುಹೆಗೆ ಕರೆದುಕೊಂಡು ಹೋಗಿ ಶೇಷದಾಸರ ಮಸ್ತಕದಮೇಲೆ ತಮ್ಮ ದಿವ್ಯ ಹಸ್ತವನ್ನಿಟ್ಟು ತಮ್ಮ ಬಿಂಬಮೂರ್ತಿಯ ಧ್ಯಾನ ಮಾಡುತ್ತಾ ಪ್ರಾಣನಾಥವಿಠಲ ಎಂದು ಅಂಕಿತ ಪ್ರದಾನಮಾಡಿದರು... ಆ ಸಂದರ್ಭದಲ್ಲಿ ಆಕಾಶದಿಂದ ದೇವ ದುಂದುಭಿಗಳು ಕೇಳಿಬಂದವೆನ್ನುವ ಪರಮಾಶ್ಚರ್ಯದ ವಿಷಯವನ್ನು ಶ್ರೀ ತಂದೆಮುದ್ದುಮೋಹನವಿಠಲರೇ ಸ್ವಯಂ ವಿವರಿಸಿದ್ದನ್ನು ಅವರ ಶಿಷ್ಯರಾದ ಶ್ರೀ ರಮಾಕಾಂತವಿಠಲರೂ, ಶ್ರೀ ಗುರುಗೋವಿಂದವಿಠಲರೂ ತಮ್ಮ ಪ್ರಕಾಶನವಾದ ಪರಮಪ್ರಿಯ ಸುಬ್ಬರಾಯದಾಸರು ಎನ್ನುವ ಪುಸ್ತಕದಲ್ಲಿ ಉಲ್ಲೇಖಮಾಡಿದ್ದಾರೆ...
ಹೀಗೆ ಮೊದಲ ಶಿಷ್ಯಪ್ರಾಪ್ತಿಯನಂತರ ಶೇಷದಾಸರ ಬಾವಮೈದುನರಾದ ವೆಂಕಟರಮಣ ಎಂಬುವರಿಗು ( ಸರ್ವೇಶವಿಠಲ ) ಎಂದು ಇರ್ಕಸಂದ್ರದ ಶ್ರೀ ವೇದವ್ಯಾಸಾಚಾರ್ಯರಿಗು ( ಸಿರಿಮೋಹನವಿಠಲ ) ಅಂಕಿತೋಪದೇಶವನ್ನು ಮಾಡುವ ಮುಖಾಂತರ ಸಜ್ಜನರಾದ ದಾಸ ಸಂಪತ್ತನ್ನು ಬೆಳೆಸುವ ಮುಖಾಂತರ ದಾಸ ಪಂಥವನ್ನು ಮುಂದೆವರಿಸಿದರು ....
ನಂತರದ ದಾಸರ ಪರಮಾದ್ಭುತ ಚರಿತ್ರೆಯನ್ನು ಮುಂದೆ ನೋಡೋಣ ಅಂತ ತಿಳಿಸುತ್ತಾ ಪರಮಪ್ರಿಯರ ಹಾಗೂ ಅವರ ಅವರಂತರ್ಯಾಮಿಯ ಅನುಗ್ರಹ ಇರಲೆಂದು ಬೇಡಿಕೊಳ್ಳುತ್ತಾ.... ಈ ಸಣ್ಣ ಸೇವಾ ಸುಮಮಾಲೆಯನ್ನು ಅಸ್ಮತ್ ಪತ್ಯಂತರ್ಗತ, ಗುರ್ವಂತರ್ಗತ ಶ್ರೀ ಭಾರತೀರಮಣ ಮುಖ್ಯಪ್ರಾಣಾಂತರ್ಗತ ಶ್ರೀ ಲಕ್ಷ್ಮೀ ವೆಂಕಟೇಶನ ಅಡಿದಾವರಗಳಲ್ಲಿ ಸಮರ್ಪಣೆ ಮಾಡುತ್ತಾ......
-Smt. Padma Sirish
ನಾದನೀರಾಜನದಿಂ ದಾಸಸುರಭಿ 🙏🏽***
ಪರಮಪ್ರಿಯ ಶ್ರೀ ತಂದೆಮುದ್ದುಮೋಹನವಿಠಲರ ಸ್ಮರಣೆ
ಭಾಗ - 4
ಹೀಗೆ ಪ್ರಥಮ ಶಿಷ್ಯರಾದ ಬಾಗೇಪಲ್ಲಿ ಶೇಷದಾಸರಿಗೆ ರಾಮದೇವರ ಗುಹೆಯಲ್ಲಿ ಅಂಕಿತೋಪದೇಶವನ್ನು ಮಾಡಿದ ಪರಮಾದ್ಭುತ ಸಂದರ್ಭವನ್ನು ನೋಡಿದ್ದಿವಿ.. ನಂತರದಲಿ ದಾಸರ ಜ್ಞಾನದ ಅರಿವು ಸುತ್ತಮುತ್ತಲಿನ ಎಲ್ಲಾ ಗ್ರಾಮದ ಜನರಿಗೂ ಗೊತ್ತಾಗಿ ಅವರ ಶಿಷ್ಯವರ್ಗ ಬೆಳೀತಾ ಹೋಗಿದೆ... ನಂತರ ದಾಸಸಾಹಿತ್ಯದ ಹಾಗೂ ಮಾಧ್ವತತ್ವಗಳನ್ನು, ಆಧ್ಯಾತ್ಮಿಕ ವಿಷಯಗಳನ್ನು ಜನರಿಗೆ ತಿಳಿಸಿ ಹೇಳಲೆಂದು ತಮ್ಮ ಆರಾಧ್ಯದೈವವಾದ ಕರಿಗಿರಿಯ ನರಸಿಂಹ ದೇವರ ಸನ್ನಿಧಾನದಲ್ಲೇನೇ ಜ್ಞಾನ -ಅನ್ನಸತ್ರಗಳನ್ನು ನಿರ್ವಹಣ ಮಾಡುತ್ತಿದ್ದರು. ಇವರ ಸಾಧನೆಗೆ ಪರಮಾತ್ಮನ ಅನುಗ್ರಹ ಹೇಗಿತ್ತು ಅಂದರೇ ಇವರ ಶಿಷ್ಯಸಂಪತ್ತಿನ ಒಬ್ಬರಾದ ದೇವರಾಯನದುರ್ಗದ ಶ್ಯಾನುಭೋಗರಾದ ಮಗ ಮಧ್ವ ನರಸಿಂಹಪ್ಪ ಎಂಬುವರು ಸ್ವಯಂ ಪ್ರೇಯಣೆಯಿಂದ ದೇವಸ್ಥಾನದ ಎಡಭಾಗದಲ್ಲಿದ್ದ ತಮ್ಮ ಸ್ಥಳವನ್ನು ದಾಸರ ಧಾರ್ಮಿಕ ಕಾರ್ಯಗಳಿಗೆ ಅಂತ ಕೊಟ್ಟರು.. ದಾಸಾರ್ಯರು ತುಂಬಾ ಸಂತುಷ್ಟರಾಗಿ ವಿಕಾರಿ ನಾಮ ಸಂವತ್ಸರದಲಿ ಒಂದು ಸಭಾ ನಿರ್ಮಾಣವನ್ನು ಮಾಡಿ ಅದಕ್ಕೆ ಶ್ರೀಮತ್ಸಮೀರ ಸಮಯಾನು ಪ್ರವೃತ್ತಿ ಸಭಾ/ದ್ವೈತಮತ ಸಿದ್ಧಾಂತೋನ್ನಾಹಿನಿ ಸಭಾ ಎಂದು ನಾಮಕರಣ ಮಾಡಿದರು. ಆದರೇ ಈ ಸಭಾ ಮುಂದೆ ದೇವರಾಯನದುರ್ಗದ ದಾಸಕೂಟ ಸಭಾ ಎಂದೇ ಪ್ರಸಿದ್ದಿ ಪಡೆದಿದೆ.... ವಿಶೇಷ ಸಂದರ್ಭದಲ್ಲಿ ಇಲ್ಲಿ ದಾಸರೂ ಮತ್ತೆ ಅವರ ಶಿಷ್ಯ ವರ್ಗ ಕೂಡಿ ಹರಿನಾಮಸಂಕೀರ್ತನಾದಿಗಳಿಂದ ಜ್ಞಾನಸತ್ರ ನಡೆಸುವದು ರೂಢಿಮಾಡಿಕೊಂಡರು... ಮುಂದೆ ಈ ಮಂಟಪದಲ್ಲಿ ದಾಸಾರ್ಯರು ಕದರಮಂಡಲಿಗೆಯಿಂದ ಹನುಮಪ್ಪನ (ಸುಂದರೇಶನ) ವಿಗ್ರಹ ತಂದು ಪ್ರತಿಷ್ಠ ಸಹಾ ಮಾಡಿದರು...
ಇದಾದನಂತರ ಶ್ರೀ ತಂದೆಮುದ್ದುಮೋಹನವಿಠಲರು ತಮ್ಮ ಶಿಷ್ಯರ ಹಾಗೂ ಭಕ್ತರ ಆಹ್ವಾನದಂತೆ ವಿವಿಧ ಊರುಗಳಲ್ಲಿ ಸಂಚಾರ ಪ್ರಾರಂಭ ಮಾಡಿದರು... ಆಯಾ ಊರುಗಳಲ್ಲಿ ಸದ್ಭಕ್ತರನ್ನು ಕಂಡು ಅಂಕಿತೋಪದೇಶವನ್ನು ಮಾಡುತ್ತಾ ಮುಂದೆವರೆದರು.. ಹೀಗೆ ಸಂಚಾರಮಾಡುವಾಗ ದಿಗ್ವಿಜಯ ಪ್ರಾಣದೇವರ ಪ್ರತೀಕವನ್ನು ತಮ್ಮ ಶಿಷ್ಯರಾದ ವೇದವ್ಯಾಸಾಚಾರ್ಯರು ಹೊತ್ತು ನಡೆಯುವಂತೆ ಮಾಡ್ತಿದ್ದರು... ಕಷ್ಟ ಹೇಳಲು ಬಂದ ಆರ್ತರ ಸಮಸ್ಯೆಗಳನ್ನು ಶ್ರೀ ವೇದವ್ಯಾಸಾಚಾರ್ಯರನ್ನು ಕೇಳಿ ಪರಿಹಾರವನ್ನು ತಿಳಿಸುತ್ತಿದ್ದರು (ಪ್ರಾಣದೇವರನ್ನು ಹೊತ್ತುವ ಶ್ರೀ ವೇದವ್ಯಾಸಾಚಾರ್ಯರ ಮುಖಾಂತರ ಮುಖ್ಯಪ್ರಾಣದೇವರೇ ಪರಿಷ್ಕಾರ ತೋರುತ್ತಿದ್ದರು) ಹೀಗೆ ದಾಸಾರ್ಯರು ತೋರಿದ ಮಹಿಮೆಗಳನ್ನು ಒಂದೆರಡು ಸ್ಮರಣೆ ಮಾಡೋಣ..
ಹೀಗೆ ಸಂಚಾರಮಾಡುತ್ತಾ ಕೊಡಿಗೇಹಳ್ಳಿ ನರಸಪ್ಪನವರ ಪುತ್ರರಾದ ಕೃಷ್ಣಪ್ಪನೆಂಬವರಿಗೆ ಸಹಿಸೋಕ್ಕೆ ಸಾಧ್ಯವಾಗದಂತೆ ಚಾತುರ್ಥಿಕ ಛಳಿ ಬರ್ತಿತ್ತು.... ಎಷ್ಟೇ ಔಷಧಿ ಬೆಳೆಸಿದರೂ ಗುಣವಾಗಲಿಲ್ಲ. ಇಂಥಾ ಸ್ಥಿತಿಯಲ್ಲಿ ಶ್ರೀ ದಾಸಾರ್ಯರಿಗೆ ಶರಣಾದ ಕೃಷ್ಣಪ್ಪನವರಿಗೆ ಪರಮಾತ್ಮನಿದ್ದಾನೆ ಚಿಂತಿಸಬೇಡಿ ಅಂತ ದಾಸಾರ್ಯರು ಅಭಯ ಕೊಟ್ಟು, ಒಂದು ತಂಬಿಗೆಯಲ್ಲಿ ಆಕಳ ಹಾಲು ತರಿಸಿ ತಮ್ಮ ಬಿಂಬಮೂರ್ತಿಗೆ ಸಮರ್ಪಣೆ ಮಾಡಿ ಧನ್ವಂತರೀರೂಪೀ ಪರಮಾತ್ಮನ ಧ್ಯಾನ ಮಾಡುತ್ತಾ ಆ ಹಾಲನ್ನು ತಾವೇ ಸ್ವಯಂ ಸ್ವೀಕಾರ ಮಾಡಿದರು. ಅಷ್ಟೇ ಕೃಷ್ಣಪ್ಪನವರಿಗೆ ಮುಂದೆ ಅವರ ಇಡೀ ಜೀವನದಲಿ ಈ ಚಾತುರ್ಥಿಕ ಛಳಿ ಮತ್ತೆ ಬಂದೇ ಇಲ್ಲ.....
ಇದೇ ಕೊಡಿಗೇಹಳ್ಳಿಯ ದಾಸಾರ್ಯರ ಭಕ್ತನಾದ ತಿಮ್ಮೆಗೌಡನೆಂಬ ವ್ಯವಸಾಯದಾರನಿದ್ದನು.. ಅವನು ದಾಸಾರ್ಯರ ಬಳಿ ಬಂದು ಸ್ವಾಮೀ - ನನ್ನಲ್ಲಿನ ಒಂದು ಹಸು ಹಾಲನ್ನು ಕೊಡದೇ ಬಂದವರನ್ನು ಹೊಡೆಯುತ್ತದೆ.. ದಯವಿಟ್ಟು ನೀವು ಒಮ್ಮೆ ಬಂದು ನೋಡಿ ಅಂದಾಗ ಶ್ರೀ ದಾಸಾರ್ಯರು ಅವರ ಮನೆಗೆ ಹೋಗಿ ನಗುತಾ ಆ ಹುಸುವಿನ ತಲೆಯ ಮೇಲೆ ತಮ್ಮ ಹಸ್ತವನ್ನು ಇಟ್ಟು ಮೃದುವಾಗಿ ಮೈದಡುವುತ್ತಾ ಯಾಕೆ ನಿರ್ದಯನಾದ್ಯೊ ಎಲೆ ಹರಿಯೇ ಶ್ರೀಕಾಂತ ಎನಮೇಲೆ ಎಳ್ಳಷ್ಟು ದಯವಿಲ್ಲ ಎಂದು ಹಾಡಿದರು.. ಆ ಭಕ್ತಿಪಾರವಶ್ಯದ ಕೀರ್ತನೆಗೆ ಪರಮಾತ್ಮನ ಅನುಗ್ರಹದಂತೆ ದಾಸರ ಆ ಸ್ಪರ್ಶ ಗೆ ಆ ಹಸು ಸಾಧುವಾಗಿತ್ತು.. ನಂತರ ಯಾರನ್ನೂ ಹೊಡಿಯದೇ ಸಮೃದ್ಧಿಯಾಗಿ ಹಾಲನ್ನು ನೀಡಲಾರಂಭಿಸಿತು... ಇದರಿಂದ ಪರಮಾನಂದದಿಂದ ಆ ತಿಮ್ಮೆಗೌಡನು ಸುಮಾರು ದಿನಗಳ ಕಾಲ ದೇವರ ಅಭಿಷೇಕಕ್ಕಾಗಿ ದಾಸಾರ್ಯರಿಗೆ ಹಾಲನ್ನು ತಂದುಕೊಡ್ತಿದ್ದನಂತೆ...
ಹೀಗೆ ಒಮ್ಮೆ ತಿಪಟೂರಿನಲ್ಲಿದ್ದ ತಮ್ಮ ಅಳಿಯಂದಿರಾದ (ಅಂದಹಾಗೆ ಈ ಮಧ್ಯದಲ್ಲೇ ದಾಸಾರ್ಯರ ಇಬ್ಬರೂ ಹೆಣ್ಣುಮಕ್ಕಳ ಮದುವೆಯೂ ಆಗಿರ್ತದೆ, ಮೊದಲನೇ ಮಗಳಿಗೆ ಶ್ರೀ ಮುದ್ದುಮೋಹನವಿಠಲರೇ ಸ್ವಪ್ನದಲ್ಲಿ ಸೂಕ್ತ ವರನನ್ನು ತೋರಿಸಿರ್ತಾರೆ ಸಹಾ) ಶ್ರೀಕೃಷ್ಣರಾಯರ ಮನೆಯಲ್ಲಿ ದಾಸಾರ್ಯರು ಸಂಚಾರನಿಮಿತ್ತ ಬಿಡಾರ ಮಾಡಿದಾಗ ಅವರ ಮನೆಯ ಹತ್ತಿರದ ಸಿಂಗ್ರಿ ನಂಜಪ್ಪ ಎನ್ನುವ ಸಾಹುಕಾರನ ಪತ್ನಿ ಸಹಿಸಲಾರದ ಹೊಟ್ಟೆನೋವಿನಿಂದ ಬಹಳ ಬಾಧೆಪಡ್ತಿದ್ದಳು... ತುಂಬಾ ಜನ ವೈದ್ಯರ ಬಳಿ ತೋರಿಸಿದರೂ ಏನೇನೂ ನಯವಾಗಲಿಲ್ಲ... ದಾಸಾರ್ಯರ ಮಹಿಮೆ ಕೇಳಿ ಆ ಸಾಹುಕಾರನು ದಾಸಾರ್ಯರಿಗೆ ತನ್ನ ಕಷ್ಟ ಹೇಳಿಕೊಂಡನು... ಆಗ ಸಾತ್ವಿಕಹೃದಯರಾದ ದಾಸಾರ್ಯರು ಪ್ರಾಣದೇವರನ್ನು ಹೊತ್ತಿದ ಶ್ರೀ ವೇದವ್ಯಾಸಾಚಾರ್ಯರ ಮುಖಾಂತರ ತರುಮೋಪಾಯವನ್ನು ತಿಳಿದು, ಆ ಸಾಹುಕಾರನಿಗೆ ಹನ್ನೆರಡು ದಿನಗಳ ಕಾಲ ಶ್ರೀ ಗೋಪಾಲದಾಸಾರ್ಯರಿಂದ ರಚಿಸಲ್ಪಟ್ಟ ಎನ್ನ ಬಿನ್ನಪ ಕೇಳು ಧನ್ವಂತ್ರಿ ದಯಮಾಡು ಈ ಹಾಡನ್ನು ಪಾರಾಯಣ ಮಾಡಲು ಹೇಳಿದರು .. ದಾಸಾರ್ಯರ ಸೂಚನೆಯಂತೇ ಹಾಗೇ ಮಾಡಿದ ಆ ಸಿಂಗ್ರಿ ನಂಜಪ್ಪನ ಪತ್ನಿಯ ಹೊಟ್ಟೆನೋವು ಮಾಯವಾಗೀತು... ಆಂಧ್ರಪ್ರದೇಶದ ,ಅನಂತಪುರದ ಮತ್ತೊಬ್ಬ ಭಕ್ತನ ಮಡದಿಗೂ ಮರಣಾವಸ್ಥೆಯಿಂದ ಪಾರುಮಾಡಿದರು ದಾಸಾರ್ಯರು ಶ್ರೀ ಗೋಪಾಲದಾಸಾರ್ಯರ ಕೃತಿಗಳು 16 ಸಲ ಭಕ್ತಿಪೂರ್ವಕವಾಗಿ ಪುನಶ್ಚರಣೆ ಮಾಡಿ ಎಂದು ಹೇಳಿ ಆಕೆಗೆ ಬಂದ ಆ ಮರಣದ ಗಂಡವನ್ನು ದೂರ ಮಾಡಿದರು ...
ನೋಡಿ ನಮ್ಮ ಹಿರಿಯ ದಾಸಾರ್ಯರು ಪ್ರತಿಯೊಬ್ಬರೂ ಸುಮ್ಮನೆ ಕೃತಿರಚನೆ ಮಾಡುತ್ತಿರಲಿಲ್ಲ.... ಅದರಲ್ಲಿ ಪರಮಾತ್ಮನ ಪೂರ್ತಿ ಅನುಸಂಧಾನ ವಿರುವಂತೆ ಅವರ ರಚನೆ ಮಹತ್ವಪೂರ್ಣವಾಗಿ ಪರಮಾತ್ಮನಿಗೆ ಅತ್ಯಂತ ಪ್ರೀತಿಕರವಾಗುತ್ತಿತ್ತು... ಅಂಥಹಾ ಪದಗಳು ನಮಗೆ ಇವತ್ತಿಗೂ ದಾರಿದೀಪವೇ ಸರಿ... ಅಪರೋಕ್ಷಜ್ಙಾನಿಗಳಿಂದ ಅನುಗ್ರಹೀತವಾದ ಪದಗಳನ್ನು ಹಾಡುವ ಮುಖಾಂತರ ಅವರ ಸೇವೆಯನ್ನು, ಅವರ ಅಂತರ್ಯಾಮಿಯ ಅನುಗ್ರಹ ಪಡೆಯೋಣ ಎಂದು ಹಾರೈಸುವ ಮುಖಾಂತರ ಮುಂದೆ ಶ್ರೀ ತಂದೆಮುದ್ದುಮೋಹನವಿಠಲರ ಮಹತ್ವಪೂರ್ಣ ಚರಿತ್ರೆಯನ್ನು ಮುಂದೆವರಿಸೋಣ ಎಂದು ಬೇಡಿಕೊಳ್ಳುತ್ತಾ.....
ಇದೀಗ ದೇಶಕ್ಕೆ ಬಂದ ಆಪತ್ತನ್ನು ತಪ್ಪಿಸಲು ಸಹಾ ಶ್ರೀ ಗೋಪಾಲದಾಸಾರ್ಯರ ಎನ್ನ ಬಿನ್ನಪ ಕೇಳು ಧನ್ವಂತ್ರಿ ದಯಮಾಡು ಕೃತಿಯನ್ನು 16 ಸಲ, ದಿನಕ್ಕೆ ಪಾರಾಯಣ ಮಾಡೋಣ... ಆರೋಗ್ಯಭಾಗ್ಯವನ್ನು ಪಡಿಯೋಣ..
-Smt. Padma Sirish
ನಾದನೀರಾಜನದಿಂ ದಾಸಸುರಭಿ 🙏🏽***
ಪರಮಪ್ರಿಯ ತಂದೆಮುದ್ದುಮೋಹನವಿಠಲರ ಸ್ಮರಣೆ
ಭಾಗ - 05
ಶ್ರೀ ಗೋಪಾಲದಾಸಾರ್ಯರ ಎನ್ನ ಬಿನ್ನಪ ಕೇಳು ಧನ್ವಂತ್ರಿ ದಯಮಾಡು ಈ ಪದದ ಮಹತ್ವವನ್ನು, ಆ ಪದದಿಂದ ಶ್ರೀ ತಂದೆಮುದ್ದುಮೋಹನವಿಠಲರು ಸಂಕಟಗಳನ್ನು ದೂರಮಾಡಿದ ಮಾಹತ್ಮ್ಯಗಳನ್ನು ನಿನ್ನೆಯ ಭಾಗದಲ್ಲಿ ನೋಡಿದ್ದಿವಿ... ಹೀಗೇ ದಾಸರು ಉದ್ಯೋಗ ಕಳೆದುಕೊಂಡವರಿಗೆ ಉದ್ಯೋಗ ಕೊಡಿಸುವದು, ದೂರವಾದ ದಂಪತಿಗಳನ್ನು ಸೇರಿಸುವುದು ಹೀಗೆ ಬಹಳ ಉತ್ತಮ ತತ್ವಗಳನ್ನು ಸಜ್ಜನರಿಗೆ ಮನಗಾಣಿಸುವುದರಿಂದ ಅವರೆಲ್ಲರೂ ದಾಸರಿಗೆ ಪರಮಭಕ್ತರಾಗಿ ಅಂಕಿತೋಪದೇಶವನ್ನು ಪಡೆದರು..... 1900-1912 ರವರೆಗೂ ಪೂರ್ತಿ 12 ವರ್ಷಗಳ ಕಾಲ ದಾಸರು ಸಂಚಾರವನ್ನು ಮಾಡಿ ತಮ್ಮ ಬಹಳ ಜನ ಸಜ್ಜನರಿಗೆ ಅಂಕಿತೋಪದೇಶವನ್ನು ನೀಡಿ ಅಪಾರ ಶಿಷ್ಯಸಂಪತ್ತನ್ನ ಗಳಿಸಿದರು... ತಿರುಪತಿ, ಮಂತ್ರಾಲಯ, ಚಿಪ್ಪಗಿರಿ ಇತ್ಯಾದಿ ಪುಣ್ಯಕ್ಷೇತ್ರಗಳ ದರ್ಶನ ಪಡೆದು ಪರಮಾನಂದವನ್ಹೊಂದಿದರು...
ನಂತರದಲಿ ಕೊಡಿಗೇಹಳ್ಳಿಗೆ ಬಂದಾಗ ಅಲ್ಲಿಯ ಭಕ್ತರಿಂದಲೇ ಪ್ರಾಪ್ತವಾದಂತಹಾ ಪ್ರಾಣದೇವರ ಪ್ರತೀಕ ಅಕಸ್ಮಾತ್ತಾಗಿ ಅದೃಶ್ಯವಾದೀತು.. ಸ್ವಲ್ಪ ದಿನಗಳಲ್ಲಿ ಅವರ ಪ್ರೀತಿಯ ಶಿಷ್ಯರಾದ ಶ್ರೀ ವೇದವ್ಯಾಸಾಚಾರ್ಯರೂ ಪರಮಾತ್ಮನ ಸನ್ನಿಧಾನವನ್ನು ಸೇರಿದರು.. ಇವೆರಡು ಘಟನೆಗಳ ನಂತರ ಪ್ರವಾಸಕ್ಕೆ ಹೋಗಲು ಪರಮಾತ್ಮನ ಇಚ್ಛೆ ಆಗಿದ್ದಿಲ್ಲ... ಅಂತ ನೆನೆಸಿದ ದಾಸಾರ್ಯರು, ಇನ್ಮೇಲೆ ಒಂದೇ ಸ್ಥಳದಲ್ಲಿ ಮಧ್ವಶಾಸ್ತ್ರದ ತತ್ವಗಳನ್ನು ತಿಳಿಸುವ , ದಾಸಪಂಥವನ್ನು ಬೆಳೆಸಲು ನಿರ್ಧರಿಸಿದರು ದಾಸಾರ್ಯರು..
12 ವರ್ಷಗಳ ನಂತರ ಮತ್ತೆ ತಮ್ಮ ನರಸೀಪುರಕ್ಕೆ ತಿರುಗಿಬಂದ ದಾಸಾರ್ಯರು ಈ ಸಣ್ಣ ಹಳ್ಳಿಯಲ್ಲಿ ಕಿಂತಾ ಬೆಂಗಳೂರಂತಹಾ ಮಹಾನಗರದಲ್ಲಿ ಭಕ್ತಸಂದೋಹವೂ, ವಿದ್ವಜ್ಜನರ ಸಮಾಗಮವೂ ಆಗುವುದೆಂದು ನಿಶ್ಚಯಿಸಿ , ಬೆಂಗಳೂರಿನ ಕಲ್ಯಾಣನಗರಕ್ಕೆ ಬಂದು ವಾಸವಾಗಿದ್ದರು.. ದೇವರಾಯನದುರ್ಗದ ದಾಸಕೂಟವನ್ನು ಸ್ಥಾಪಿಸಿ, ಧಾರ್ಮಿಕ ಕಾರ್ಯಗಳನ್ನು ಮಾಡುವುದರ ಮುಖಾಂತರ ದಾಸಾರ್ಯರೂ ಸಹಾ ಬೆಂಗಳೂರಿನ ಜನರಿಗೆ ಸುಪರಿಚಿತರಾಗಿದ್ದರು.. ಆಗ ಮೈಸೂರು ಸಂಸ್ಥಾನದ ಅಧಿಕಾರಿಗಳಾದ ದಾಸರ ಪ್ರಿಯ ಮಿತ್ರರಾದ ಶ್ರೀ ಕರ್ಪೂರ ಶ್ರೀನಿವಾಸರಾಯರು ದಾಸಾರ್ಯರನ್ನು ತಮ್ಮ ಮನೆಯಲ್ಲೇ ವಾಸಮಾಡಲು ಬೇಡಿಕೊಂಡಾಗ ಚಾಮರಾಜಪೇಟದ ಅವರ ಮನೆಯಲ್ಲಿ ದಾಸಾರ್ಯರು ವಾಸಮಾಡುವುದಲ್ಲದೇ ಅಲ್ಲಿಗೆ ಹತ್ತಿರದ ತಮ್ಮ ಗುರುಗಳು ಶ್ರೀ ಚಿನ್ಚೊಳಿ ವೆಂಕಣ್ಣಾರ್ಯರಿಂದ ಪ್ರತಿಷ್ಠಿತ ಹನುಮಪ್ಪನ ದೇವಸ್ಥಾನದಲ್ಲಿ ತಮಗೆ ಪರಮಪ್ರಿಯವಾದ ಶ್ರೀ ಜಗನ್ನಾಥ ದಾಸಾರ್ಯರ ಶ್ರೀಮದ್ಹರಿಕಥಾಮೃತಸಾರ ಪ್ರವಚನವನ್ನು ಮಾಡುತ್ತಾ ಸಜ್ಜನರಿಗೆ ನಮ್ಮ ತತ್ವಗಳನ್ನು ತಿಳಿಸಿ ಹೇಳುತ್ತಿದ್ದರು... ನಂತರದಲಿ ಅವರ ಅಳಿಯಂದಿರಾದ ಶ್ರೀಕೃಷ್ಣರಾಯರು ಬೆಂಗಳೂರಿನ ವಿಶ್ವೇಶ್ವರಪುರದಲ್ಲಿ ಮನೆಯನ್ನು ಕಟ್ಟಿದರು.. ಆದರೂ ಉದ್ಯೋಗದ ನಿಮಿತ್ತ ಬೇರೇ ಊರಿಗೆ ಹೋಗುವ ಮುನ್ನ ದಾಸಾರ್ಯರನ್ನು ಅವರ ಮನೆಯಲ್ಲಿ ಬಂದಿರಲೆಂದು ಪ್ರಾರ್ಥಿಸಿದರು.. ಆ ಮನೆಗೆ ಆನಂದನಿಲಯ ಎಂದು ನಾಮಕರಣ ಮಾಡಿದ ದಾಸಾರ್ಯರು ಅಂದಿನಿಂದ ಅಲ್ಲೇ 18 ವರ್ಷಗಳ ಕಾಲ ಶ್ರೀಮದಾನಂದತೀರ್ಥ ಭಗವತ್ಪಾದಾಚಾರ್ಯರ ಗ್ರಂಥಗಳ ನಿರಂತರ ಪಾಠಪ್ರವಚನಾದಿಗಳನ್ನು ಮಾಡುತ್ತಿದ್ದರು .....
ಅವರ ಪ್ರವಚನಾ ಚಾತುರ್ಯ ಅದೆಷ್ಟು ಅದ್ಭುತ ಅಂದರೇ ಸಣ್ಣ ಮಗೂ ಗೆ ಸಹಾ ವಿಷಯದ ಅರಿವಾಗುವಂತಿದ್ದೀತು... ನಮ್ಮ ಮಧ್ವಶಾಸ್ತ್ರಕ್ಕೆ ಸಂಬಂಧಪಟ್ಟ ಗ್ರಂಥಗಳೇ ಅಲ್ಲದೇ ಕುರಾನ್, ಬೈಬಲ್ ಇತ್ಯಾದಿಗಳನ್ನೂ ಅವುಪೋಸನೆ ಮಾಡಿದರು... ಉಪನ್ಯಾಸ ಮಾಡುವಾಗ ಸಂಸ್ಕೃತ ಶ್ಲೋಕಗಳನ್ನು ತಕ್ಕ ದಾಸರ ಪದಗಳು ವಿವರಿಸಿ ಹೇಳುವ ಮುಖಾಂತರ ದಾಸರ ವಾಗ್ಚಾತುರ್ಯ ಕೇಳುಗರಿಗೆ ಪರಮಾನಂದವನ್ನು ನೀಡುತ್ತಿತ್ತು.. ದಾಸಾರ್ಯರು ಮಾಡುತ್ತಿರುವ ಪ್ರವಚನಾದಿಗಳನ್ನು ಮಂತ್ರಮುಗ್ಧರಾಗುವ ಜನ ಸಮೂಹ ಉತ್ಸವದ ವಾತಾವರಣವನ್ನು ತಲುಪಿಸುತ್ತಿತ್ತು....
ಶ್ರೀ ದಾಸಾರ್ಯರ ಪರಮಪ್ರಿಯ ಗ್ರಂಥವಾದ ಶ್ರೀಮದ್ಹರಿಕಥಾಮೃತ ಸಾರದ ಪಾರಾಯಣ, ಅಧ್ಯಯನ ನಾವೂ ಸದಾಕಾಲ ಮಾಡುವಂತಾಗಲೀ ಎಂದು ಶ್ರೀ ತಂದೆಮುದ್ದುಮೋಹನವಿಠಲರ ಅಂತರ್ಗತ ಭಾರತೀರಮಣ ಮುಖ್ಯಪ್ರಾಣಾಂತರ್ಗತ ಶ್ರೀ ಲಕ್ಷ್ಮೀ ವೆಂಕಟೇಶನನ್ನು ಪರಿಪರಿಯಲ್ಲಿ ಬೇಡಿಕೊಳ್ಳುತ್ತಾ....
-Smt. Padma Sirish
ನಾದನೀರಾಜನದಿಂ ದಾಸಸುರಭಿ***
ಅಂಕಿತೋಪದೇಶ ಪಡೆದು ನರಸೀಪುರದ ಸುಬ್ಬರಾಯರು ತಂದೆಮುದ್ದುಮೋಹನವಿಠಲದಾಸರಾಗಿ ಶಿಷ್ಯ ಸಂಪತ್ತನ್ನು ಬೆಳೆಸಲು ತಮ್ಮ ಗುರುಗಳಿಂದ ಆದೇಶ ಪಡೆದರು.
ಇನ್ನು ಮುಂದೆ ಉಪದೇಶ ಸಿದ್ಧಿಗಾಗಿ ದಾಸರ ತಪಶ್ಚರ್ಯೆ ಪ್ರಾರಂಭವಾಯಿತು. ದೇವರಾಯನ ದುರ್ಗದ ಸುತ್ತಮುತ್ತಲಿನ ಬೆಟ್ಟ ಗುಡ್ಡ ಗುಹೆಗಳಲ್ಲಿ ಧ್ಯಾನಾಸಕ್ತರಾಗಿರಲು ಪ್ರಾರಂಭಿಸಿದರು. ಶ್ರೀ ಲಕ್ಷ್ಮೀನರಸಿಂಹ ದೇವರಿಗೆ ಅಭಿಮುಖವಾಗಿರುವ ರಾಮದೇವರ ಬೆಟ್ಟದಲ್ಲಿರುವ ರಾಮಗುಹೆಯಲ್ಲಿ ದಾಸರಿಗೆ ತಪಸಿದ್ಧಿಯಾದಂತೆ ತೋರುತ್ತದೆ.
ದಾಸರ ಅವಧೂತ ಚರ್ಯೆ ದೀಕ್ಷಾ ನಂತರ ಇನ್ನೂ ಉತ್ಕಟವಾಯಿತು. ವೈರಾಗ್ಯದ ಲಕ್ಷಣಗಳು ಎದ್ದು ಕಾಣಲು ಪ್ರಾರಂಭಿಸಿದವು. ದಾಸರಿಗೆ ಸುಮಾರು 34-35 ವಯಸ್ಸಿದ್ದಾಗ ತಂದೆಯವರು ತೀರಿಕೊಂಡರು. ಸ್ವಲ್ಪಕಾಲದ ನಂತರ ತಾಯಿಯವರೂ ತೀರಿಕೊಂಡರು. ಈ ಸಮಯಕ್ಕೆ ದಾಸರಿಗೆ ಇಬ್ಬರು ಹೆಣ್ಣು ಮಕ್ಕಳು ಮತ್ತು ಇಬ್ಬರು ಗಂಡುಮಕ್ಕಳಾಗಿದ್ದರು.
ತಂದೆಯವರು ಕಾಲವಾದ ನಂತರ ದಾಸರು ಪಿತ್ರಾರ್ಜಿತ ಆಸ್ತಿಯ ಆಧಾರದ ಮೇಲೆ ಉದರಂಭರಣಕ್ಕಾಗಿ ಕೆಲವು ಕಾಲ ನರಸೀಪುರದಲ್ಲೇ ಲೇವಾದÉೀವಿ, ಚಿಕ್ಕಪುಟ್ಟ ವ್ಯಾಪಾರ ಇತ್ಯಾದಿಗಳಲ್ಲಿ ತೊಡಗಿದರು. ಈ ಸಂಬಂಧದಲ್ಲಿ ಬೆಂಗಳೂರು ಪಟ್ಟಣಕ್ಕೆ ಹೋಗಿ ಬಂದು ಮಾಡುತ್ತಿದ್ದರು. ಸ್ವಲ್ಪ ಕಾಲದ ನಂತರ ಬೆಂಗಳೂರು ಮಂಡೀಪೇಟೆಯಲ್ಲೇ ಒಂದು ದಿನಸಿ ಅಂಗಡಿ ತೆರೆದರು. 'ವ್ಯಾಪಾರಿ ಬುದ್ಧಿ' ಇಲ್ಲದ ಇವರ ವಿಚಿತ್ರ ವಹಿವಾಟುಗಳ ಕಾರಣದಿಂದ ಕೆಲವು ಕಾಲದ ನಂತರ ದಿನಸಿ ವ್ಯಾಪಾರ ನಿಲ್ಲಿಸಬೇಕಾಯಿತು. ನಂತರ ಜವಳಿ, ಹೊಗೆಸೊಪ್ಪು ಅಡಿಕೆ ಇತ್ಯಾದಿ ವ್ಯಾಪಾರಗಳಲ್ಲಿ ತೊಡಗಿ ಎಲ್ಲದರಲ್ಲೂ ನಷ್ಟ ಅನುಭವಿಸಿದರು. ಏತನ್ಮಧ್ಯೆ ಇಬ್ಬರು ಹೆಣ್ಣು ಮಕ್ಕಳ ಲಗ್ನಗಳನ್ನು ಮಾಡಿದರು.
ದಾಸರು ಬೆಂಗಳೂರಿಗೆ ಬಂದು ನೆಲೆಸಿದ ನಂತರವೂ ಪ್ರತಿ ವರ್µವೂ ತಪ್ಪದೆ ದೇವರಾಯನದುರ್ಗದ ಶ್ರೀಲಕ್ಷ್ಮೀನರಸಿಂಹನ ರಥೋತ್ಸವಕ್ಕೆ ಹೋಗಿಬರುತ್ತಿದ್ದರು.
ರಥೋತ್ಸವ ಕಾಲದÀಲ್ಲಿ ದಾಸ ದೀಕ್ಷಾ ವೇಷ_ಭೂಷಣಗಳಿಂದ&ಟಿbsಠಿ;ಅಲಂಕೃತರಾಗಿ ತಂಬೂರಿ, ತಾಳ, ಚಿಟಿಕೆಗಳನ್ನು ಹಿಡಿದು ಭಾವಪರವಶರಾಗಿ ನರ್ತನ ಸೇವೆ ಸಲ್ಲಿಸುವ ದಾಸರು ಒಬ್ಬ ವಿಭೂತಿಪುರುಷರಾಗಿ ಕಾಣುತ್ತಿದ್ದು ಅವರಿಗೆ ಅನೇಕರು ಅಭಿಮಾನಿಗಳಾದರು. ದಾಸ ಪಂಥವನ್ನು ಪುನರುಜ್ಜೀವನಗೊಳಿಸಿ ಪ್ರಬಲಗೊಳಿಸಬೇಕೆಂದಿದ್ದ ದಾಸರು ಅಭಿಮಾನಿಗಳ ಇಷ್ಟ ಪ್ರಕಾರ, ಭಕ್ತರೊಬ್ಬರು ದೇವರಾಯನದುರ್ಗದ ಕರಿಗಿರಿ ಕ್ಷೇತ್ರದ ಶ್ರೀ ಭೋಗಾನರಸಿಂಹನ ದೇವಸ್ಥಾನಕ್ಕೆ ಸಮೀಪದಲ್ಲಿ ದಾನವಾಗಿ ಕೊಟ್ಟ ನಿವೇಶನವನ್ನು ಪಡೆದು ಕ್ರಿ.ಶ.1900 ವಿಕಾರಿ ಸಂವತ್ಸರದಲ್ಲಿ 'ಶ್ರೀಮತ್ಸಮೀರ ಸಮಯಾನುಪ್ರವೃತ್ತಿ ಸಭಾ' ಅಥವಾ 'ದ್ವೈತಮತ ಸಿದ್ಧಾಂತೋನ್ನಾಹಿನಿ ಸಭಾ' ಎಂಬ ಸಂಸ್ಥೆಯನ್ನು ಸ್ಥಾಪಿಸಿದರು. ಕಾಲಕ್ರಮದಲ್ಲಿ ಇದು 'ದೇವರಾಯನ ದುರ್ಗದ ದಾಸಕೂಟ ಸಭಾ' ಎಂದು ಪ್ರಸಿದ್ಧವಾಯಿತು.
ಇನ್ನು ಮುಂದೆ ದಾಸರಾಯರ ದಾಸಪಂಥದ ಕಾರ್ಯ ಚಟುವಟಿಕೆಗಳಿಗೆ ಕರಿಗಿರಿ ಕ್ಷೇತ್ರವೇ ಕೇಂದ್ರವಾಯಿತು. ಕರಿಗಿರಿ ಕ್ಷೇತ್ರವು ಪುರಾಣ ಪ್ರಸಿದ್ಧವಾಗಿದ್ದು ಶ್ರೀ ಗುರುಪುರಂದರದಾಸರು ಸಹ ಈ ಕ್ಷೇತ್ರದ ಮಹಿಮೆಯನ್ನು ತಮ್ಮ ಒಂದು ಪದದಲ್ಲಿ ಕೊಂಡಾಡಿದ್ದಾರೆ.
ರಥೋತ್ಸವ ಕಾಲದಲ್ಲಿ ಬರುವ ಭಕ್ತಾದಿಗಳಿಗೆ ಅನ್ನೋದಕಗಳ ದಾನ ಮಾಡಲು ಇತರ ಅನೇಕ ಮಹನೀಯರುಗಳಂತೆ ದಾಸರೂ ಸಹ ತಮ್ಮದೇ ಆದ 'ದಾಸರ ಕೊಪ್ಪಲ'ನ್ನು ಸ್ಥಾಪಿಸಿದರು.
ರಥೋತ್ಸವಕ್ಕೆ ಸುಮಾರು ಒಂದು ತಿಂಗಳು ಮುಂಚಿತವಾಗಿ, ಒಂದು ದಿನ ಬಾಗೇಪಲ್ಲಿಯ ಹೆಸರಾಂತ ಹರಿಕಥಾ ಕೀರ್ತನಕಾರರಾದ ಶೇಷದಾಸರು ಸಂಚಾರ ಮಾರ್ಗವಾಗಿ ದೇವರಾಯನದುರ್ಗಕ್ಕೆ ಬಂದರು. ಅವರ ಅಸಾಧಾರಣ ವ್ಯಕ್ತಿತ್ವವನ್ನು ಅರಿತಿದ್ದ ಸುಬ್ಬರಾಯದಾಸರು ಇವರೇ ತಮ್ಮ ಪ್ರಪ್ರಥಮ ಶಿಷ್ಯರಾಗಲು ಅತ್ಯಂತ ಯೋಗ್ಯರೆಂದು ನಿರ್ಣಯಿಸಿ ಶೇಷದಾಸರಿಗೆ ಅಂಕಿತೋಪದೇಶವಾಗಿಲ್ಲವೆಂಬುದನ್ನು ವಿಚಾರಿಸಿ ಉಪದೇಶ ಪಡೆಯಬೇಕಾಗಿ ಸೂಚಿಸಿದರು. ಶೇಷದಾಸರು ಹಾಗೆ ಅಂಕಿತೋಪದೇಶ ಕೊಡುವ ಯೋಗ್ಯ ಗುರುಗಳನ್ನು ತೋರಿಸಿದಲ್ಲಿ ತಾವು ಸಿದ್ಧರಿರುವುದಾಗಿ ತಿಳಿಸಿ ಸುಬ್ಬರಾಯದಾಸರ ಮಹತ್ವವನ್ನರಿತು ಅವರಿಂದಲೇ ಉಪದೇಶ ಯಾಚಿಸಿದರು.
ಮಾರನೆಯ ದಿನ ಎಂದರೆ ಪ್ಲವನಾಮ ಸಂವತ್ಸರದ ಮಾಘ ಶುದ್ಧ ದಶಮಿ ಸೋಮವಾರ ಶುಭ ಮುಹೂರ್ತದಲ್ಲಿ ರಾಮಗುಹೆಯಲ್ಲಿ ಶೇಷದಾಸರಿಗೆ ಶ್ರೀ ತಂದೆ ಮುದ್ದುಮೋಹನದಾಸರಿಂದ 'ಪ್ರಾಣನಾಥ ವಿಠಲ' ಎಂಬ ಅಂಕಿತವು ವಿಧ್ತ್ಯುಕ್ತವಾಗಿ ಕೊಡಲ್ಪಟ್ಟಿತು. ಅಂಕಿತನಾಮವನ್ನು ಇದೇ ಸಂಪುಟದ ಶ್ರೀ ಬಾಗೇಪಲ್ಲಿ ಶೇಷದಾಸರ ಪದಗಳು ಎಂಬ ಭಾಗದಲ್ಲಿ ಕಾಣಬಹುದು. ಶ್ರೀ ಶೇಷದಾಸರು ಇದಕ್ಕೆ ಮುಂಚಿತವಾಗಿಯೇ ‘ಶÉೀಷವಿಠಲ’ ಎಂಬ ಮುದ್ರಿಕೆಯಿಂದ ಅನೇಕ ಪದಗಳನ್ನು ರಚಿಸಿದ್ದರು.
ಶ್ರೀ ಶೇಷದಾಸರ ಅಂಕಿತ ಸ್ವೀಕಾರದಿಂದ ಪ್ರಭಾವಿತರಾಗಿ ಅವರ ಭಾವಮೈದುನರಾದ ವೆಂಕಟರಮಣದಾಸರೂ ಸಹ ಸುಬ್ಬರಾಯ ದಾಸರಲ್ಲಿ ಪ್ರಾರ್ಥನೆ ಮಾಡಿ 'ಸರ್ವೇಶವಿಠಲ' ಎಂಬ ಅಂಕಿತ ಪಡೆದರು. ಮುಂದಿನ ತಿಂಗಳಿನಲ್ಲೇ ಜರುಗಿದ ರಥೋತ್ಸವದಲ್ಲಿ ಸುಬ್ಬರಾಯ ದಾಸರು 'ದಾಸಕೂಟ ಸಭೆ'&ಟಿbsಠಿ;ಯನ್ನು ನೂತನ ಶಿಷ್ಯರಿಂದÀಲೂ, ಭಕ್ತವೃಂದದಿಂದಲೂ ಕೂಡಿ ನೆರವೇರಿಸಿದರು.
ದಾಸರು ದಾಸಧರ್ಮದ ಪ್ರಸಾರ ಮತ್ತು ಶಿಷ್ಯ ಸಂಗ್ರಹಣೆಗಾಗಿ ಅನೇಕ ಪ್ರವಾಸಗಳನ್ನು ಕೈಗೊಂಡರು. ಮೊದಲ ಪ್ರವಾಸವನ್ನು ನರಸೀಪುರಕ್ಕೆ ಸಮೀಪದಲ್ಲಿದ್ದು ತಮ್ಮ ಅನೇಕ ಶಿಷ್ಯರು ಮತ್ತು ತಮ್ಮ ಅಭಿಮಾನಿಗಳಿದ್ದ ಕೊಡಿಗೇಹಳ್ಳಿಯಿಂದ ಪ್ರಾರಂಭಿಸಿದರು. ದಾಸರಿಂದ ಈ ಮೊದಲೇ 'ಆನಂದಪೂರ್ಣವಿಠಲ' ಎಂಬ ಅಂಕಿತವನ್ನು ಪಡೆದಿದ್ದ ನರಸಪ್ಪನವರು ಆ ಊರಿನ ಗಣ್ಯರಲ್ಲೊಬ್ಬರು. ಅವರು ತಮ್ಮ ಮನವನ್ನು ಕಾಡುತ್ತಿದ್ದ ಚಾತುರ್ಥಿಕ ಚಳಿಯನ್ನು ನಿವಾರಿಸುವಂತೆ ದಾಸರನ್ನೂ ಪ್ರಾರ್ಥಿಸಿದರು. ದಾಸರು ಆಗತಾನೆ ಕರೆದ ಒಂದು ತಂಬಿಗೆ ಹಾಲನ್ನು ತರುವಂತೆ ಹೇಳಿ ತಾವೇ ಕುಡಿದರು. ಚಳಿರೋಗವನ್ನು ನಿವಾರಿಸಿದರು. ನಂತರ ಕೊಡಿಗೇಹಳ್ಳಿಯ ಭಕ್ತರು ಕೊಟ್ಟ ಲೋಹದ ಒಂದು ಪ್ರಾಣ ದೇವರ ಪ್ರತಿಮೆಯನ್ನು ಪಡೆದು ದಾಸರು ತಮ್ಮ ಪ್ರವಾಸವನ್ನು ಮುಂದುವರೆಸಿದರು.
ಪ್ರವಾಸಕಾಲದಲ್ಲಿ ಪ್ರತಿದಿನ ದಾಸದೀಕ್ಷೆಯ ಬಾಹ್ಯಾಲಂಕಾರಗಳಿಂದ ಎಂದರೆ ತಲೆಗೆ ಕಾವಿ ಶಾಟಿಯನ್ನು ಸುತ್ತಿ, ಕಾಲಿಗೆ ಗೆಜ್ಜೆ ಕಟ್ಟಿಕೊಂಡು ಕೈಯಲ್ಲಿ ತಂಬೂರಿ, ತಾಳ, ಚಿಟಿಕೆಗಳನ್ನು ಹಿಡಿದು ಬೀದಿ ಬೀದಿಗಳಲ್ಲಿ ಭಜನೆ ಮಾಡುತ್ತ ಹೋಗುವುದು ದಾಸರ ಯಾಯವಾರದ ಕ್ರಮವಾಗಿತ್ತು. ಶಿಷ್ಯನೊಬ್ಬನು ಕೊಡಿಗೇಹಳ್ಳಿಯಲ್ಲಿ ದೊರೆತಿದ್ದ ಪ್ರಾಣದೇವರ ಪ್ರತೀಕವನ್ನು ಎದೆಯ ಮೇಲೆ ತಗಲು ಹಾಕಿಕೊಂಡು ಮುಂದೆ ಹೋಗುತ್ತಿದ್ದು, ಮಿಕ್ಕವರೆಲ್ಲರೂ ಹಿಂದೆ, ದಾಸರ ಜೊತೆಯಲ್ಲಿ ಭಜನೆ ಮಾಡುತ್ತ ಹೋಗುತ್ತಿದ್ದರು. ಭಕ್ತಾದಿಗಳು ಸ್ವಪ್ರೇರಣೆಯಿಂದ ತಂದುಕೊಟ್ಟ ಧಾನ್ಯ ಮೊದಲಾದವುಗಳನ್ನು ಮಾತ್ರ ಸ್ವೀಕರಿಸುತ್ತಿದ್ದರು. ಯಾಯವಾರ ಮುಗಿದ ನಂತರ ಬಿಡಾರಕ್ಕೆ ಬಂದು ಸ್ನಾನ ಪೂಜಾದಿಗಳನ್ನು ಮುಗಿಸಿ ಭಕ್ತಜನರಿಗೆ, ಭೋಜನ ಮಾಡಿಸಿದ ನಂತರವೇ ತಾವು ಊಟ ಮಾಡುತ್ತಿದ್ದರು. ಸಾಂತ್ವನವನ್ನು ಅರಸಿ ಬಂದ ¨sಕ್ತರಿಗೆ ತಾವು ನೇರವಾಗಿ ಏನನ್ನೂ ಹೇಳದೆ ಪ್ರಾಣ ಪ್ರತೀಕವನ್ನು ಹೊತ್ತ ಶಿಷ್ಯನ ಮೂಲಕವೇ ತಿಳಿಸಬೇಕಾದ್ದನ್ನು ತಿಳಿಸಿ ಅನುಗ್ರಹಿಸುತ್ತಿದ್ದರು. ಈ ರೀತಿ ಆರ್ತರಿಗೆ ನೆರವು ನೀಡಿದ ಅನೇಕ ಪ್ರಸಂಗಗಳು ಪವಾಡಗಳೆಂಬಂತೆ ಪ್ರಚಲಿತವಾಗಿವೆ. ದಾಸರು ಕ್ರಿ.ಶ.1904 ರಿಂದ 1912ರವರೆಗೆ ಬೇರೆ ಬೇರೆ ಹಂತಗಳಲ್ಲಿ ಕರ್ನಾಟಕ, ಆಂಧ್ರ ಮೊದಲಾದ ಪ್ರದೇಶಗಳಲ್ಲಿ ಪ್ರವಾಸ ಮಾಡಿ ದಾಸ ಧರ್ಮಪ್ರಚಾರ, ಶಿಷ್ಯ ಸಂಗ್ರಹಣೆ ಮತ್ತು ಜಾತಿ ಮತಗಳನ್ನು ಪರಿಗಣಿಸದೆ ಅರಸಿ ಬಂದವರೆಲ್ಲರಿಗೂ ಅಂಕಿತೋಪದೇಶ ಇತ್ಯಾದಿಗಳನ್ನು ಮಾಡಿದರು.
ದಾಸರು ಶಿವಮೊಗ್ಗಾ, ಉಡುಪಿ ಮುಂತಾದ ಊರುಗಳಲ್ಲಿ ಸಹ ಮನಃಪೂರ್ವಕವಾಗಿ ಮೆಚ್ಚುವಂತೆ ಶ್ರೀ ಜಗನ್ನಾಥದಾಸರ ಹರಿಕಥಾಮೃತಸಾರದ ಅನುವಾದ ಮಾಡಿದರು. ಉಡುಪಿಯಲ್ಲಿ ಅಷ್ಟಮಠದ ಯತಿಗಳಿಂದ ಸನ್ಮಾನಿತರಾದರು. ಹೊಸಪೇಟೆಯಲ್ಲಿ ವಿಶೇಷವಾಗಿ ಹರಿಕಥಾ ಪ್ರಸಂಗಗಳು ಜರುಗಿದವು. ಅವರು ಧಾರ್ಮಿಕ ಉಪನ್ಯಾಸಗಳಲ್ಲಿ ಶಿವಶರಣರ ಸಾಹಿತ್ಯ, ಕುರಾನ್, ಬೈಬಲ್ ಇವುಗಳಿಂದಲೂ ಸಹ ವಿಷಯಗಳನ್ನು ಉಲ್ಲೇಖಿಸುತ್ತಿದ್ದದ್ದು ಒಂದು ವೈಶಿಷ್ಟ್ಯವಾಗಿತ್ತು.
ಕ್ರಿ.ಶ.1909ರ ಕಾರ್ತೀಕ ಬಹುಳ ಚತುರ್ದಶಿ ತಮ್ಮ ಗುರುಗಳಾದ ಮುದ್ದುಮೋಹನದಾಸರ ಆರಾಧನೆಯನ್ನು ಗುರುಸ್ಥಾನವಾದ ದೊಡ್ಡಬಳ್ಳಾಪುರದಲ್ಲಿ ಆಚರಿಸಿ ಅಲ್ಲಿಂದ ತಿರುಪತಿ ಕ್ಷೇತ್ರಕ್ಕೆ ತೆರಳಿದರು. ಅಲ್ಲಿ 'ಇಂದಿರೇಶ ವಿಠಲ'ಅಂಕಿತರಾದ ಪಾಂಡುರಂಗೀ ಹುಚ್ಚಾಚಾರ್ಯರೆಂಬ ಪ್ರಸಿದ್ಧ ಹರಿದಾಸರು ಅನ್ನಸತ್ರಾದಿಗಳನ್ನು ನಡೆಸಿಕೊಂಡು ಶ್ರೀ ಶ್ರೀನಿವಾಸನ ಸೇವೆಯಲ್ಲಿ ನಿರತರಾಗಿದ್ದರು. ದಾಸರು ಅವರನ್ನು ಸಂದರ್ಶಿಸಿ ಅವರಿಂದ ಆದರಾತಿಥ್ಯಗಳನ್ನು ಸ್ವೀಕರಿಸಿದರು.
ಕ್ರಿ.ಶ.1912ರ ಸುಮಾರಿನಲ್ಲಿ ಕೊಡಿಗೇಹಳ್ಳಿಗೆ ಶಿಷ್ಯರ ಆಹ್ವಾನದ ಮೇರೆಗೆ ಬಂದರು. ಈ ಸಂದರ್ಭದಲ್ಲಿ ಅದೇ ಊರಿನವರಿಂದಲೇ ಹಿಂದೆ ಕೊಡಲ್ಪಟ್ಟಿದ್ದ ಪ್ರಾಣದೇವರ ಪ್ರತಿಮೆಯು ಹಿಂದಿನ ದಿನ ಪೂಜೆ ಮಾಡಿಟ್ಟಿದ್ದು ಮಾರನೆ ದಿನ ಕಾಣದಾಯಿತು. ತಮ್ಮ ಸಂಚಾರಗಳನ್ನು ನಿಲ್ಲಿಸಲು ಇದು ಭಗವಂತನ ಸೂಚನೆಯೆಂದು ತಿಳಿದು ದಾಸರು ಹಿಂದಿನಂತೆ ಪ್ರವಾಸ ಮಾಡುವುದನ್ನು ನಿಲ್ಲಿಸಿ ತಮ್ಮ ಸ್ವಗ್ರಾಮವಾದ ನರಸೀಪುರಕ್ಕೆ ಹಿಂತಿರುಗಿದರು. ಪ್ರವಾಸಗಳಲ್ಲಿ ಸಂಗ್ರಹಿಸಿದ ಹಣದ ಒಂದು ಭಾಗವನ್ನು ಪುದುವಟ್ಟಾಗಿ ಇಟ್ಟು ಕರಿಗಿರಿ ಶ್ರೀ ಲಕ್ಷ್ಮೀ ನರಸಿಂಹನಿಗೆ ನಿರಂತರವಾಗಿ ಪ್ರತಿ ಶನಿವಾರ ದಾಸಕೂಟ ಸಭಾ ಹೆಸರಿನಲ್ಲಿ ಒಂದು ಸೇವೆ ನಡೆಯುವಂತೆ ಮಾಡಿದರು.
ದಾಸರು ತಮ್ಮ ದಾಸ ಪಂಥ ಪುನರುಜ್ಜೀವನ ಕಾರ್ಯವನ್ನು ನರಸೀಪುರಕ್ಕಿಂತ ಬೆಂಗಳೂರು ನಗರದಲ್ಲಿದ್ದು ಹೆಚ್ಚು ವ್ಯಾಪಕವಾಗಿ ನಡೆಸ-ಬಹುದೆಂದು ತೀರ್ಮಾನಿಸಿ ತಮ್ಮ ಅಳಿದುಳಿದ ಆಸ್ತಿ ಪಾಸ್ತಿಗಳನ್ನು ವಿಲೇವಾರಿ ಮಾಡಿ ಕ್ರಿ.ಶ.1912ರಲ್ಲಿ ಬೆಂಗಳೂರು ಪಟ್ಟಣ ಸೇರಿದರು. ಈ ಹೊತ್ತಿಗಾಗಲೇ ಅವರಿಗೆ ಬೆಂಗಳೂರಿನ ಗಣ್ಯವ್ಯಕ್ತಿಗಳೂ ಭಗವದ್ಭಕ್ತರುಗಳೂ ಆದ ರಾಜಸಭಾ-ಭೂಷಣ ಕರ್ಪೂರ ಶ್ರೀನಿವಾಸರಾಯರು, ದೇಶಮುಖಿ ರಾಮರಾಯರು, ಬಿ.ಡಿ. ರಾಘವೇಂದ್ರರಾಯರು, ಬೇಲಿ ಶ್ರೀನಿವಾಸರಾಯರು, ಅಣ್ಣು ರಾಮರಾಯರು ಮುಂತಾದವರ ಪರಿಚಯವಾಗಿತ್ತು.
ಕರ್ಪೂರ ಶ್ರೀನಿವಾಸರಾಯರು ಚಾಮರಾಜಪೇಟೆಯಲ್ಲಿ ತಮ್ಮ ಮನೆಯ ಒಂದು ಭಾಗವನ್ನು ದಾಸರಿಗೆ ವಾಸಕ್ಕೆ ಬಿಟ್ಟುಕೊಟ್ಟರು. ಸಮೀಪದಲ್ಲಿಯೇ ದಾಸರ ವಿದ್ಯಾಗುರುಗಳಾಗಿದ್ದ ಚಿಂಚೋಳಿ ವೆಂಕಣ್ಣಾಚಾರ್ಯರಿಂದ ಸ್ಥಾಪಿಸಲ್ಪಟ್ಟ ಪ್ರಾಣದೇವರ ಗುಡಿಯಿದ್ದು ದಾಸರು ಪ್ರತಿ ದಿನ ಸಂಜೆ ಶ್ರೀ ಹರಿಕಥಾಮೃತಸಾರದ ಅನುವಾದ ಮತ್ತು ಇತರ ಪುರಾಣ ಪ್ರವಚನಗಳನ್ನು ಅಲ್ಲಿ ನಡೆಸುತ್ತಿದ್ದರು. ಅವರ ಪ್ರವಚನಗಳು ಅಖಂಡ ಶಾಸ್ತ್ರಸಾರಗಳಾಗಿರುತ್ತಿದ್ದು ಪಂಡಿತರಿಂದಲೂ, ಪಾಮರರಿಂದಲೂ ಏಕರೀತಿಯಲ್ಲಿ ಮಾನ್ಯವಾಗಿದ್ದವು. ಅನೇಕ ಭಕ್ತರುಗಳು ಇವರನ್ನು ತಮ್ಮ ಮನೆಗಳಿಗೆ ಕರೆಸಿ ಪುರಾಣ ಪ್ರವಚನ ಮಾಡಿಸುತ್ತಿದ್ದರು. ಚಾಮರಾಜಪೇಟೆಯಲ್ಲಿಯೇ ದಾಸರು ವಾಸಗೃಹಗಳನ್ನು ಅನೇಕ ಸಲ ಬದಲಾಯಿಸಿದರು. ಬೆಂಗಳೂರಿನ ಅನೇಕ ಬಡಾವಣೆಗಳಲ್ಲಿ ಸುಮಾರು ಹತ್ತು ವರ್ಷಕಾಲ ಪುರಾಣ ಪ್ರವಚನUಳನ್ನು ಮುಂದುವರೆಸಿದರು.
ಇದÉೀ ಕಾಲದಲ್ಲಿ ಅನೇಕ ದ್ವೈತ ಸಿದ್ಧಾಂತ ಗ್ರಂಥಗಳನ್ನು ಶೇಖರಿಸುವುದರ ಜೊತೆಗೆ ಜಿe್ಞÁಸೆಗೆ ಅನುಕೂಲವಾಗುವ ಅನೇಕ ಅನ್ಯಮತ ಗ್ರಂಥಗಳನ್ನೂ ಸಹ ಸಂಗ್ರಹಿಸಿ ಅಧ್ಯಯನ ಮಾಡಿದರು.
ದಾಸರು ಆಗಾಗ್ಗೆ ತಿರುಪತಿಗೆ ಹೋಗುತ್ತಿದ್ದು ಒಂದು ಸಲ ಅಲ್ಲಿ ಮಧ್ವಸಿದ್ಧಾಂತೋನ್ನಾಹಿನೀ ಸಭೆಯಲ್ಲಿ ದಾಸ ಸಾಹಿತ್ಯದ ವಿಷಯವಾಗಿ ಪರೀಕ್ಷೆಗೆ ಒಳಗಾಗಲು ಹೋಗಿದ್ದರು. ಪರೀಕ್ಷಕರು, ದಾಸರಿಂದ 'ಹರಿದಾಮೋದರವಿಠಲ' ಎಂಬ ಅಂಕಿತ ಪಡೆದ ಮುಳಬಾಗಿಲಿನ ಅಚ್ಚಪ್ಪದಾಸರೆಂಬುವರಾಗಿದ್ದರು. ಗುರುಗಳನ್ನು ನೋಡಿ ಪರೀಕ್ಷಕರಿಗೆ ದಿಕ್ಕು ತೋರದಂತಾಯಿತು. ಶಿಷ್ಯರು ದಾಸರಿಗೆ ನಮಸ್ಕಾರ ಮಾಡಿ ತಮ್ಮ ಸ್ಥಾನವನ್ನು ಬಿಟ್ಟುಕೊಟ್ಟು ಅದನ್ನು ಅಲಂಕರಿಸಬೇಕೆಂದು ಪ್ರಾರ್ಥಿಸಿದರು. ದಾಸರು ಒಪ್ಪದೆ ಪರೀಕ್ಷಕರು ತಮಗೆ ನಿಯತವಾದ ಕಾರ್ಯವನ್ನು ನಡೆಸಬೇಕೆÀಂದು ತಿಳಿಸಿದರು. ವಿಷಯವು ಸಭೆಗಾಗಿ ದಯಮಾಡಿಸಿದ್ದ ಉತ್ತರಾದಿ ಮಠಾಧೀಶರಾದ ಶ್ರೀ ಸತ್ಯಧ್ಯಾನ ತೀರ್ಥ ಶ್ರೀಪಾದಂಗಳವರ ಗಮನಕ್ಕೆ ಹೋಯಿತು. ಶ್ರೀಪಾದಂಗಳವರು ಹಿಂದೊಮ್ಮೆ ಒಂದು ಜಿe್ಞÁಸಾಸ್ಪದವಾದ ಪ್ರಮೇಯದ ಬಗ್ಗೆ ದಾಸರು ಅನೇಕ ಶಾಸ್ತ್ರ ಗ್ರಂಥಗಳನ್ನೂ ಶ್ರೀವಿಜಯದಾಸರ ವಚನಗಳನ್ನೂ ಎಡೆತಡೆಯಿಲ್ಲದೆ ಉದಾಹರಿಸುತ್ತಾ ಪಂಡಿತರುಗಳು ಕೂಡ ಒಪ್ಪುವಂತೆ ಉಪನ್ಯಾಸ ಮಾಡಿದ್ದನ್ನು ಪ್ರತ್ಯಕ್ಷ ಕೇಳಿ ಮೆಚ್ಚಿಕೊಂಡಿದ್ದರು. ಆದ್ದರಿಂದ ಪ್ರಸಕ್ತ ಪ್ರಸಂಗವು ಅವರ ಗಮನಕ್ಕೆ ಬಂದ ಕೂಡಲೆ ದಾಸರನ್ನು ಸಭೆಯ ದಾಸ ಸಾಹಿತ್ಯ ಪರೀಕ್ಷೆಗೆ ಅಧ್ಯಕ್ಷರನ್ನಾಗಿಯೂ ಸಭೆಯ ಧರ್ಮದರ್ಶಿಗಳಾಗಿಯೂ ನೇಮಿಸಿದರು. ದಾಸರು ಕ್ರಿ.ಶ.1932ರವರೆಗೆ ಈ ರೀತಿ ಧರ್ಮದರ್ಶಿಗಳಾಗಿದ್ದರು.
ದಾಸರ ಅಳಿಯಂದಿರಾದ ಕೃಷ್ಣಮೂರ್ತಿರಾಯರೆಂಬುವರು ಬೆಂಗಳೂರು ವಿಶ್ವೇಶ್ವರಪುರದ ರಾಮಐಯ್ಯಂಗಾರ್ ರಸ್ತೆಯಲ್ಲಿ ಹೊಸ ಮನೆ ಕಟ್ಟಿಸಿದ್ದು ಅಲ್ಲಿ ವಾಸಿಸುವಂತೆ ದಾಸರನ್ನು ಪ್ರಾರ್ಥಿಸಿ ತಾವು ಕೆಲಸದ ಪ್ರಯುಕ್ತ ಬೇರೆ ಊರಿಗೆ ಹೋದರು. ದಾಸರು ಆ ಮನೆಗೆ 'ಆನಂದ ನಿಲಯ'ವೆಂದು ನಾಮಕರಣ ಮಾಡಿ ಮುಂದೆ ತಮ್ಮ ಎಲ್ಲಾ ಚಟುವಟಿಕೆಗಳಿಗೂ ಅದನ್ನು ಕೇಂದ್ರ ಸ್ಥಾನವನ್ನಾಗಿ ಮಾಡಿಕೊಂಡರು.
ದಾಸರ ಸರಳತೆ, ಸಾರ್ವಜನಿಕರಿಗೆ ಒಪ್ಪಿಗೆಯಾಗುವಂಥ ಬೋಧನ ಕ್ರಮ ಇವುಗಳನ್ನು ಗುರುತಿಸಿ ಬೆಂಗಳೂರು ಸೆಂಟ್ರಲ್ ಜೈಲಿನ ಅಧಿಕಾರಿಗಳು ಇವರನ್ನು ಖೈದಿಗಳ ಉದ್ಧಾರಕ್ಕಾಗಿ ವಾರಕೊಮ್ಮೆ ಧರ್ಮ, ನೀತಿ ಇತ್ಯಾದಿಗಳ ಬಗ್ಗೆ ಉಪನ್ಯಾಸ ಮಾಡಲು ನೇಮಿಸಿದರು. ಇದು ಕ್ರಿ.ಶ.1926ರಿಂದ ದಾಸರು ಅಂತ್ಯಕಾಲದಲ್ಲಿ ಬೆಂಗಳೂರು ಬಿಟ್ಟು ದೇವರಾಯದುರ್ಗಕ್ಕೆ ಹೋಗುವವರೆಗೆ ನಡೆಯಿತು. ಅನೇಕ ಖೈದಿಗಳು ದಾಸರ ಉಪದೇಶದಿಂದ ಉದ್ಧಾರವಾಗಿದ್ದಾರೆ.
ದಾಸರು ಅನೇಕ ಅಭಿಮಾನಿಗಳ ಮತ್ತು ಭಕ್ತರ ಅಪೇಕ್ಷೆಯಂತೆ ತಮ್ಮ ಉಪದೇಶವು ಹೆಚ್ಚು ವ್ಯಾಪಕವಾಗಿ ಊರೂರಿಗೂ ಮುಟ್ಟುವಂತೆ ಒಂದು ಅತ್ಯಲ್ಪ ಬೆಲೆಯ ಮಾಸ ಪತ್ರಿಕೆಯನ್ನು ಸ್ಥಾಪಿಸಲಿಚ್ಛಿಸಿ ಪ್ರಪ್ರಥಮವಾಗಿ ಪ್ರಭವನಾಮ ಸಂವತ್ಸರದ (ಕ್ರಿ.ಶ.1927) ಚೈತ್ರ ಶುದ್ಧ ಪ್ರತಿಪದೆ ದಿನ 'ಪರಮಾರ್ಥ ಚಂದ್ರೋದಯ' ಎಂಬ ಮಾಸಪತ್ರಿಕೆ ಹೊರತಂದರು. ಪತ್ರಿಕೆÉಯಲ್ಲಿ ಎಲ್ಲ ಮತದವರಿಗೂ ಉಪಯುಕ್ತವಾದ ಲೇಖನಗಳು ಪ್ರಕಟವಾಗುತ್ತಿದ್ದವು.
ಕ್ರಿ.ಶ. 1927-28ರಲ್ಲಿ ಬೆಂಗಳೂರು ಗುಂಡೋಪಂತ ಛತ್ರದಲ್ಲಿ ಬಿಡಾರ ಮಾಡಿದ್ದ ಉಡುಪಿಯ ಶ್ರೀ ಪುತ್ತಿಗೆಮಠದ ಶ್ರೀ ಸುಧೀಂದ್ರತೀರ್ಥ ಶ್ರೀಪಾದಂಗಳವರು ದಾಸರ ಹರಿಕಥಾಮೃತಸಾರದ ಅನುವಾದ ಕೇಳಿ ಸಂತೋಷಪಟ್ಟು 'ಪರಮಪ್ರಿಯ' ಎಂಬ ಬಿರುದನ್ನು ದಯಪಾಲಿಸಿದರು. ದಾಸರು ಇಂದಿನವರೆಗೂ ಆ ಬಿರುದಿನಿಂದಲೇ ಗುರುತಿಸಲ್ಪಡುವವರಾಗಿದ್ದಾರೆ.
ಕಾರ್ಯ ವಿಸ್ತರಣೆಗಾಗಿ ದಾಸರು ಪುನಃ ಸಂಚಾರ ಕೈಗೊಂಡು ಹೋದಲ್ಲೆಲ್ಲಾ ಶಿಷ್ಯರನ್ನು ಕೂಡಿಸಿ ಅಂಕಿತೋಪದೇಶ ನೀಡಿದರು. ಹೀಗೆ ಅರಸೀಕೆರೆ, ಶಿವಮೊಗ್ಗ, ಉಡುಪಿ ಇವುಗಳಿಗೆ ಭೇಟಿಯಿತ್ತರು. ಉಡುಪಿಯಲ್ಲಿ ಅಷ್ಟ ಮಠಾಧೀಶರುಗಳಿಂದ ಸನ್ಮಾನಿತರಾದರು. ಹಿಂದೆ ಬಿರುದನ್ನು ದಯಪಾಲಿಸಿದ್ದ ಶ್ರೀ ಪುತ್ತಿಗೆ ಮಠದ ಶ್ರೀ ಪಾದಂಗಳವರು ಇತರ ಯತಿಗಳಿಗೆ ದಾಸರನ್ನು ಪರಿಚಯಿಸಿ ಬೀಳ್ಕೊಡುವಾಗ e್ಞÁಪಕಾರ್ಥವಾಗಿ ಒಂದು ದಂಡವನ್ನು ಪೂಜೆಗಾಗಿ ಕೊಟ್ಟರು. ಆ ದಂಡವು ವಿಶೇಷ ಮಹಿಮೆಯುಳ್ಳದ್ದೆಂದು ಅನೇಕರ ಅನುಭವಕ್ಕೆ ಬಂದಂತಿದೆ.
ದಾಸರು ಉಡುಪಿಯಿಂದ ಬೆಂಗಳೂರಿಗೆ ಹಿಂತಿರುಗಿದ ಒಂದು ವರ್ಷದ ನಂತರ ಚಿತ್ರದುರ್ಗದ ಕಡೆಗೆ ಹೊರಟರು.
ಚಿತ್ರದುರ್ಗದ ಸದಾಚಾರ ಸಂಪನ್ನರಾದ ಭಜನೆ ಶ್ರೀನಿವಾಸರಾಯರು ನಾರ್ಮಲ್ ಸ್ಕೂಲ್‍ನ ನಿವೃತ್ತ ಉಪಾಧ್ಯಾಯರು. ತಿರುಪತಿ ಶ್ರೀನಿವಾಸನ ಭಕ್ತರು. ಏಕಾದಶಿ ಜಾಗರಣೆ ಇತ್ಯಾದಿಗಳನ್ನು ಆಚರಿಸುತ್ತಿದ್ದರು. 'ವೆಂಕಟೇಶ' ಮುದ್ರಿಕೆಯಿಂದ ನೂರಾರು ದೇವರ ನಾಮಗಳನ್ನು ರಚಿಸಿದ್ದರು. ದಾಸರು ತಮ್ಮ ಕಾರ್ಯವನ್ನು ಮುಂದುವರೆಸಲು ತಮಗೆ ಸರಿಯಾದ ಉತ್ತರಾಧಿಕಾರಿಯೆಂದು ಗುರುತಿಸಿ ಶ್ರೀನಿವಾಸರಾಯರನ್ನು ನೋಡಲು ತಾವೇ ಅವರ ಮನೆಗೆ ಹೋಗಿ ಅಂಕಿತೋಪದೇಶ ಮಾಡಲು ಬಂದಿರುವುದಾಗಿ ತಿಳಿಸಿದರು. ಆದರೆ ಶ್ರೀನಿವಾಸರಾಯರು ಕೂಡಲೆ ಸಮ್ಮತಿಸಲಿಲ್ಲ. ಹಿಂದೆಂದÀೂ ಪರಿಚಯವಿರದ ದಾಸರು, ಶ್ರೀನಿವಾಸರಾಯರು ಬಹಳ ಹಿಂದೆ ತಮ್ಮ ಪದವೊಂದರಲ್ಲಿ e್ಞÁನಗುರು ಮತ್ತು ಅಂಕಿತಗಳ ಪ್ರಾಪ್ತಿಗಾಗಿ ಹಂಬಲಿಸಿರುವುದನ್ನು ನೆನಪಿಸಲು ಆಶ್ಚರ್ಯಭರಿತರಾಗಿ, ದಾಸರು ಅಪರೋಕ್ಷ e್ಞÁನಿಗಳೇ ಆಗಿರಬೇಕೆಂದು ತೀರ್ಮಾನಿಸಿ ಅವರ ಪೀಳಿಗೆಯ ಬಗ್ಗೆ ವಿವರಗಳನ್ನು ಪಡೆದ ನಂತರ ಅಂಕಿತ ಪಡೆಯಲು ಒಪ್ಪಿ ಒಂದು ಶುಭ ಮುಹೂರ್ತದಲ್ಲಿ 'ಉರಗಾದ್ರಿವಾಸವಿಠಲ' ಎಂಬ ಅಂಕಿತ ಪಡೆದರು. ಅಂಕಿತನಾಮವನ್ನು 'ಉರಗಾದ್ರಿವಾಸ ವಿಠಲ ದಾಸ'ರ ಸಂಪುಟದಲ್ಲಿ ಕಾಣಬಹುದು. ಶ್ರೀ ಶ್ರೀನಿವಾಸರಾಯರು ಈ ಸಂದರ್ಭದಲ್ಲಿ ಮಾಡಿದ ಗುರುಸ್ತೋತ್ರವನ್ನೂ ಅದೇ ಸಂಪುಟದಲ್ಲಿ ಕಾಣಬಹುದು.
ದಾಸರು 11-9-1932ರಂದು ಚಿತ್ರದುರ್ಗದಲ್ಲಿ 'ಪರಮ ಪ್ರಿಯ ದಾಸ ಮಂಡಳಿ' ಎಂಬ ಸಂಘವನ್ನು ಸ್ಥಾಪಿಸಿದರು. ಶ್ರೀ ಶ್ರೀನಿವಾಸರಾಯರು ತಮ್ಮ ಗುರುಗಳ ಆದೇಶದಂತೆ ದಾಸ ಪೀಳಿಗೆಯನ್ನು ಬೆಳೆಸಲು ಗುರು ಸೇವಾರ್ಥ ನೂರಾರು ಶಿಷ್ಯರುಗಳಿಗೆ ಅಂಕಿತೋಪದೇಶ ಮಾಡಿ ತುಂಬು ಜೀವನ ನಡೆಸಿ ತಮ್ಮ 93ನೇ ವಯಸ್ಸಿನಲ್ಲಿ ಕ್ರೋಧಿನಾಮ ಸಂವತ್ಸರದ ಕಾರ್ತೀಕ ಬಹುಳ ದ್ವಾದಶಿ ಸೋಮವಾರ (ಕ್ರಿ.ಶ. 30-11-1964) ದೇಹಬಿಟ್ಟರು.
ಸುಬ್ಬರಾಯದಾಸರು ಚಿತ್ರದುರ್ಗದಿಂದ ಹೊರಟು ಹರಿಹರದಲ್ಲಿ ಅನೇಕ ಭಕ್ತರಿಗೆ ಅಂಕಿತೋಪದೇಶ ಮಾಡಿ ರಾಣಿಬೆನ್ನೂರು ಸಮೀಪದ ಕದರುಮಂಡಲಗಿಗೆ ಬಂದರು. ಕದರುಮಂಡಲಗಿಯಲ್ಲಿ ಜನಮೇಜಯನಿಂದ ಪ್ರತಿಷ್ಠಿತವೆಂದು ಪ್ರತೀತಿಯಿದ್ದು, ಕಾಂತೇಶನೆಂದು ಪ್ರಸಿದ್ಧವಾಗಿರುವ ಎತ್ತರವಾದ ಒಂದು ಪ್ರಾಣದೇವರ ಶಿಲಾ ಪ್ರತೀಕವಿರುವ ದೇವಸ್ಥಾನ ಇದೆ. ಇದು ಮಹಾ ಜಾಗ್ರತ ಸ್ಥಳವೆನಿಸಿದೆ. ಕಾಂತೇಶನು ಅನೇಕ ಹರಿದಾಸರುಗಳಿಂದ ಸ್ತೋತ್ರ ಮಾಡಿಸಿಕೊಂಡಿದ್ದಾನೆ.
ದಾಸರು ಕಾರ್ತೀಕ ಶುದ್ಧ ದಶಮಿ ದಿನ ವಿಜಯದಾಸರ ಆರಾಧನೆಯನ್ನು ಆಚರಿಸಿ ಮಾರನೆಯದಿನ ಜಾತಿ ಮತ ಭೇದವಿಲ್ಲದೆ ಭಕ್ತರುಗಳಿಗೆ ಅಂಕಿತೋಪದೇಶ ಮಾಡಿ ರಾತ್ರಿ ಭಜನೆ, ಜಾಗರ ಮರುದಿನ ಉತ್ಥಾನದ್ವಾದಶಿ ಉತ್ಸವಗಳನ್ನು ಆಚರಿಸಿದರು. ಈ ಕಾರ್ಯಕ್ರಮಗಳಲ್ಲಿ ಸ್ಥಳೀಯ ಮುಖಂಡರಾಗಿ ಭಾಗವಹಿಸಿದವರಲ್ಲಿ ದಾಸರ ಶಿಷ್ಯರಾದ 'ಮಾರುತೀಶವಿಠಲ' ಅಂಕಿತರಾದ ವಡವಿ ಭೀಮಾಚಾರ್ಯರು ಮುಖ್ಯರು. ದಾಸರು ತಮ್ಮ ಕದರುಮಂಡಲಗಿಯ ಭೇಟೆಯ ನೆನಪಿಗಾಗಿ ದೇವಸ್ಥಾನದಲ್ಲಿ ಶಿಲಾ ಸ್ತಂಭ ಸ್ಥಾಪಿಸಿ ನಿರಂತರ ದೀವಿಗೆ ಬೆಳಗುವಂತೆ ಏರ್ಪಾಡು ಮಾಡಿ ಬೆಂಗಳೂರಿಗೆ ಹಿಂತಿರುಗಿದರು.
ಶಿಷ್ಯರಾದ ರಮಾಕಾಂತ ದಾಸರಿಗೆ ಬಹಳ ಕಾಲದ ನಂತರ ಕಾಂತೇಶನ ದಯ ಮತ್ತು ಗುರುಗಳ ಪರಮಾನುಗ್ರಹದಿಂದ ಪುತ್ರೋತ್ಸವವಾಗಿದ್ದು ಅವರ ಪ್ರಾರ್ಥನೆಯ ಮೇರೆಗೆ ದಾಸರು ಕದರುಮಂಡಲಗಿಗೆ ಎರಡನೇ ಸಲ ಭೇಟಿಯಿತ್ತು ಮಗುವಿನ ನಾಮಕರಣಾದಿಗಳಲ್ಲಿ ಭಾಗವಹಿಸಿದರು.
ಕಾಂತೇಶನಿಂದ ಪ್ರಭಾವಿತರಾದ ದಾಸರು ಅದೇ ಸ್ಥಳದಿಂದ ಒಂದು ಪ್ರಾಣದೇವರ ಪ್ರತೀಕವನ್ನು ತಮ್ಮ ಸ್ಥಳಕ್ಕೆ ತೆಗೆದುಕೊಂಡು ಹೋಗಬೇಕೆಂದು ಬಯಸಿ ಮೂರನೆ ಬಾರಿ ಕದರುಮಂಡಲಗಿಗೆ ಹೋದರು. ಅಲ್ಲಿ ಭರಮಣ್ಣನೆಂಬ ಶಿಷ್ಯನ ಮೂಲಕ ಸುತ್ತಮುತ್ತಲಿರುವ ಗುಡ್ಡಗಾಡುಗಳಲ್ಲಿ ಹುಡುಕಿಸಿ ಸುಮಾರು 2 ಅಡಿ ಎತ್ತರವಿರುವ ಪ್ರಾಣದೇವರ ಒಂದು ಶಿಲಾ ಪ್ರತೀಕವನ್ನು ತರಿಸಿ ಅದನ್ನು ಬೆಂಗಳೂರಿನ ‘ಆನಂದನಿಲಯ’ಕ್ಕೆ ತಂದರು.
ದಾವಣಗೆರೆ ಸಮೀಪದ ಆನಗೋಡಿನ ಶಾನಭೋಗರೂ ದಾಸರ ಶಿಷ್ಯರೂ ಆದ ಸುಖತೀರ್ಥರಾಯರಿಗೆ ಪುರಂದರದಾಸರು ತಮ್ಮೂರಿಗೆ ಸಂಚಾರಾರ್ಥವಾಗಿ ಬಂದು ಹೋಗಿದ್ದರೆಂದು ಸ್ವಪ್ನಸೂಚನೆಯಾಗಿದ್ದರಿಂದ ಪುರಂದರದಾಸರ ಪುಣ್ಯದಿನವನ್ನು ಪ್ರಮಾಥಿ ಸಂವತ್ಸರದ ಪುಷ್ಯ ಬಹುಳ ಅಮಾವಾಸ್ಯೆ 20-1-1939ರಂದು ಆಚÀರಿಸಲು ದಾಸರನ್ನು ಆಹ್ವಾನಿಸಿ ಕರೆಸಿದರು. ದಾಸರು ಅನೇಕ ಕುರುಹುಗಳನ್ನು ತೋರಿಸುವುದರ ಮೂಲಕ ಹಿಂದೆ ಪುರಂದರದಾಸರು ವಿಜಯನಗರದ ರಾಜರು ಮತ್ತು ಆನೆಯ ಸೈನ್ಯದೊಂದಿಗೆ ಆನಗೋಡಿಗೆ ಬಂದಿದ್ದರೆಂದೂ (sorry, incomplete) (received in WhatsApp)
ತಂದೆಮುದ್ದುಮೋಹನವಿಠಲದಾಸರು
(ಪರಮಪ್ರಿಯ ಸುಬ್ಬರಾಯದಾಸರು)
ಕ್ರಿ.ಶ.19ನೇ ಶತಮಾನದ ಉತ್ತರಾರ್ಧದಲ್ಲಿ ಅಂಧಕಾರವಡರುವಂತಿದ್ದ ಹರಿದಾಸ ಪಂಥದ ಬಾನಿನಲ್ಲಿ ಪ್ರಖರ ಸೂರ್ಯನಂತೆ ಉದಯಿಸಿದವರು ದೇವರಾಯನದುರ್ಗದ 'ಪರಮಪ್ರಿಯ' ಸುಬ್ಬರಾಯದಾಸರು.
ತುಮಕೂರಿನ ಬಳಿಯಿರುವ ಕರಿಗಿರಿ ಕ್ಷೇತ್ರವೆಂದು ಪ್ರಸಿದ್ಧವಾದ ದೇವ-ರಾಯನದುರ್ಗದ ಸಮೀಪ ನರಸೀಪುರ ಗ್ರಾಮದಲ್ಲಿ ಸತ್ಕುಲ ಪ್ರಸೂತರೂ, ಮಾಧ್ವ ವೈಷ್ಣವ ಷಾಷ್ಠಿಕ ವಂಶೀಕರೂ, ಭಾರದ್ವಾಜ ಗೋತ್ರೋತ್ಪನ್ನರೂ, ಶ್ರೀ ಅಬ್ಬೂರು ಕುಂದÁಪುರ ಶ್ರೀ ವ್ಯಾಸರಾಜ ಮಠದ ಶಿಷ್ಯರೂ ಆದ ಶೇಷಪ್ಪ ಮತ್ತು ಲಕ್ಷ್ಮೀದೇವಮ್ಮ (ವೆಂಕಟನರಸಮ್ಮನೆಂದೂ ಸಹ ಹೆಸರಿತ್ತು) ಎಂಬ ದಂಪತಿಗಳು ಸತ್ಕರ್ಮನಿರತರಾಗಿ ವಾಸಿಸುತ್ತಿದ್ದರು. ಬಹುಕಾಲ ಪುತ್ರ ಸಂತಾನವಿಲ್ಲದೆ, ದೊಡ್ಡಬಳ್ಳಾಪುರದ ಸಮೀಪದ ಘಾಟಿ ಸುಬ್ರಹ್ಮಣ್ಯನ ಸೇವೆಯ ನಂತರ ಶಾ.ಶ.1787 (ಕ್ರಿ.ಶ.1865) ಕ್ರೋಧನ ಸಂವತ್ಸರದ ಶ್ರಾವಣ ಶುದ್ಧ ಚತುರ್ಥಿ ಭಾನುವಾರ ಶ್ರವಣ ನಕ್ಷತ್ರದಲ್ಲಿ ಪುತ್ರ ಸಂತಾನವಾಯಿತು. ಶಿಶುವಿಗೆ ಸುಬ್ಬರಾಯನೆಂದು ನಾಮಕರಣವಾಯಿತು. ಇವರ ಭವಿಷ್ಯವು ಉಜ್ವಲವಾಗಿರು-ವುದೆಂಬುದರ ದ್ಯೋತಕವೋ ಎಂಬಂತೆ ಶಿಶುವಿನ ತೊಟ್ಟಿಲಿನ ಮೇಲೆ ಘಟ ಸರ್ಪವೊಂದು ಹೆಡೆಯಾಡಿಸಿ ಹೋಯಿತಂತೆ.
ಸುಬ್ಬರಾಯರು ಬಾಲ್ಯದಿಂದಲೇ ಎತ್ತರ ದೇಹವುಳ್ಳವರೂ, ದೃಢಕಾಯರೂ, ಆಜಾನುಬಾಹುಗಳೂ ಆಗಿ ಬೆಳೆಯುತ್ತಿದ್ದರು. ಮಾತಾಪಿತೃಗಳು, ಶಿವಮೊಗ್ಗದಲ್ಲಿ ಬಿಡಾರ ಮಾಡಿದ್ದ ತಮ್ಮ ಗುರುಗಳಾದ ಶ್ರೀ ಲಕ್ಷ್ಮೀಪ್ರಿಯಶ್ರೀಪಾದಂಗಳವರಲ್ಲಿಗೆ ಹೋಗಿ ಬಾಲಕನಿಗೆ ಅಕ್ಷರಾಭ್ಯಾಸ ಇತ್ಯಾದಿ ಸಂಸ್ಕಾರಗಳನ್ನು ಮಾಡಿಸಿದರು. ಶ್ರೀಗಳವರು ಬಾಲಕನ ಚಟುವಟಿಕೆಯನ್ನು ಮೆಚ್ಚಿ ಕೆಲಕಾಲ ಅವನನ್ನು ತಮ್ಮ ಸಣ್ಣಪುಟ್ಟ ಸೇವಾಕಾರ್ಯಗಳಲ್ಲಿ ತೊಡಗಿಸಿದರು. ಕೆಲವು ಕಾಲದ ನಂತರ ಸಂಚಾರಾರ್ಥ ಶ್ರೀ ಪಾದಂಗಳವರು ಶಿವಮೊಗ್ಗಾದಿಂದ ಶ್ರೀ ಚೆನ್ನಕೇಶವ ಕ್ಷೇತ್ರವಾದ ಬೇಲೂರಿಗೆ ತೆರಳಿ ಅಲ್ಲಿ ವಾಸ್ತವ್ಯ ಮಾಡಿದರು. ಜೊತೆಯಲ್ಲೇ ಇದ್ದ ಶೇಷಪ್ಪ ದಂಪತಿಗಳು ಬಾಲಕನಿಗೆ ಎಂಟನೇ ವರ್ಷವಾಗುತ್ತಿರಲು ಶ್ರೀಗಳವರ ಆದೇಶದಂತೆ ಅವರ ಸನ್ನಿಧಿಯಲ್ಲೇ ಉಪನಯನ ಸಂಸ್ಕಾರವನ್ನು ಮುಗಿಸಿಕೊಂಡು ತಮ್ಮೂರಾದ ನರಸೀಪುರಕ್ಕೆ ಹಿಂತಿರುಗಿದರು.
ಸುಬ್ಬರಾಯರು ಪ್ರಾಥಮಿಕ ವಿದ್ಯಾಭ್ಯಾಸ ಮಾಡುತ್ತಿದ್ದಾಗ ಜೊತೆಯಲ್ಲಿ ವಿವಿಧ ಆಟಗಳಲ್ಲಿ ಸಹ ಪಟುತ್ವ ಪಡೆದಿದ್ದರು. ಒಂದೆರಡು ವರ್ಷಗಳು ಹೀಗೆ ಕಳೆದ ಮೇಲೆ ತಮ್ಮ ಸಂಬಂಧಿಕರಿದ್ದ ಕಾನಕಾನಹಳ್ಳಿಗೆ ಹೋಗಿ ಅಲ್ಲಿ ತಮ್ಮ ವಿದ್ಯಾಭ್ಯಾಸ ಮುಂದುವರೆಸಿದರು.
ಲೌಕಿಕ ವಿದ್ಯೆಯಲ್ಲಿ ಮುಂದುವರಿದು, ಯೌವ್ವನದಲ್ಲಿ ಕಾಲಿಡುವ ವೇಳೆಗೆ ಸುಬ್ಬರಾಯರು ತಮ್ಮೂರಾದ ನರಸೀಪುರಕ್ಕೆ ಹಿಂತಿರುಗಿದರು. ಸುಮಾರು 14 ವರ್ಷ ವಯಸ್ಕರಾಗಿದ್ದ ಅವರಿಗೆ, ತಂದೆ ತಾಯಿಗಳು ಊರಿನಲ್ಲಿದ್ದ ಒಬ್ಬ ಅನುರೂಪಳಾದ ಅಚ್ಚಮ್ಮ ಎಂಬ ಕನ್ಯೆಯನ್ನು ತಂದು ವಿವಾಹ ಮಾಡಿದರು. ಗೃಹಸ್ಥರಾದ ಮೇಲೆ ಸುಬ್ಬರಾಯರು ಒಂದೆರಡು ವರ್ಷಗಳು ನರಸೀಪುರದಲ್ಲೇ ಇದ್ದು ಆಗಿನ ಕಾಲದ ಕೂಲಿಮಠ ಇತ್ಯಾದಿಗಳಲ್ಲಿ ಚಿಕ್ಕಮಕ್ಕಳಿಗೆ ಪಾಠ ಹೇಳಿ ಕೊಡುತ್ತಿದ್ದರು. ಈ ಸಮಯದಲ್ಲಿ ಅವರ ಮನಸ್ಸು ಆಧ್ಯಾತ್ಮದ ಕಡೆ ಒಲಿಯಿತು. ಇದರ ಪರಿಣಾಮವಾಗಿ ಅವರ ವರ್ತನೆಯೂ ಬದಲಾಯಿಸತೊಡಗಿತು.
ಶ್ರೀ ಜಗನ್ನಾಥದಾಸರು ತಮ್ಮ 'ರಂಗ ನಿನ್ನ ಕೊಂಡಾಡುವ ಮಂಗಳಾತ್ಮರ' ಎಂಬ ಪದದಲ್ಲಿ ಸೂಚಿಸಿರುವ 'ನಗುವರೋ ರೋದಿಸುವರೋ ನಾಟ್ಯವಾಡುವರೊ' ಎಂಬಿತ್ಯಾದಿ ಭಾಗವತ ಲಕ್ಷಣಗಳು ಸುಬ್ಬರಾಯರಲ್ಲಿ ಕಂಡುಬರಲಾರಂಭಿಸಿದವು. ಅವಧೂತನಂತೆ ಕಾಡು ಬೆಟ್ಟಗಳಲ್ಲಿ ತಿರುಗುವುದು, ದೇಹ ಆಹಾರ ಇತ್ಯಾದಿಗಳ ಬಗ್ಗೆ ಉದಾಸೀನಭಾವ-ಹೀಗೆ ಹುಚ್ಚನಂತೆ ನಡೆದುಕೊಳ್ಳುತ್ತಿದ್ದರು.
ಕಾಲಕ್ರಮದಲ್ಲಿ ಸುಬ್ಬರಾಯರಿಗೆ ಶಾಸ್ತ್ರಜ್ಞಾನ ಸಂಪಾದಿಸಬೇಕೆಂಬ ಹಂಬಲ ಉಂಟಾಗಿ ತಮ್ಮ 17ನೇ ವಯಸ್ಸಿನಲ್ಲಿ ಬೆಂಗಳೂರಿಗೆ ಬಂದು ಚಾಮರಾಜಪೇಟೆಯಲ್ಲಿದ್ದ ಶಾಸ್ತ್ರಸಂಪನ್ನರೆಂದು ಹೆಸರಾಂತ ಶ್ರೀ ಚಿಂಚೋಳಿ ವೆಂಕಣ್ಣಾಚಾರ್ಯರೆಂಬುವರಲ್ಲಿ ಶಾಸ್ತ್ರಾಭ್ಯಾಸ ಆರಂಭಿಸಿ ಯಾಯವಾರದಿಂದ ಜೀವಿಸುತ್ತಿದ್ದರು. ಶಾಸ್ತ್ರಾಭ್ಯಾಸ ಮುಗಿದ ನಂತರ ಕೆಲವು ಕಾಲ ಬೆಂಗಳೂರು, ಮೈಸೂರು, ನಂಜನಗೂಡು ಇತ್ಯಾದಿಗಳಲ್ಲಿ ಸಂಚಾರ ಮಾಡಿ ನರಸೀಪುರಕ್ಕೆ ಹಿಂತಿರುಗಿದರು.
ಸ್ವಗ್ರಾಮಕ್ಕೆ ಹಿಂತಿರುಗಿದ ನಂತರ ಅವರ ಅವಧೂತ ಚರ್ಯೆ ಪ್ರಬಲ-ವಾಗತೊಡಗಿತು. ಶ್ರೀ ವಿಜಯದಾಸಾದಿ ಅಪರೋಕ್ಷ e್ಞÁನಿಗಳ ಚರಿತ್ರೆಯಿಂದ ಪ್ರಭಾವಿತರಾಗಿ ಆತ್ಮೋನ್ನತಿ ಪಡೆಯಲು ಆಶಿಸಿದರು. ಗುಡ್ಡಗಾಡುಗಳಲ್ಲಿ ಹುಚ್ಚನಂತೆ ಅಲೆಯುವುದು, ನಿದ್ರಾಹಾರಗಳಿಲ್ಲದೆ ದಿನಗಟ್ಟಲೆ ಧ್ಯಾನಾಸಕ್ತನಾಗಿರುವುದು, ಎಲ್ಲಿ ಏನು ಸೊಪ್ಪು, ಗೆಡ್ಡೆ ಗೆಣಸು ಹಣ್ಣು ಸಿಕ್ಕರೆ ಅದನ್ನೇ ತಿಂದುಕೊಂಡಿರುವುದು, ಕೌಪೀನ ಧರಿಸಿ ತಲೆಯನ್ನು ಜಟೆಯಾಗಿಸಿ, ಭಸ್ಮಧಾರಿಗಳಾಗಿ, ಬೀದಿ ಬೀದಿ ಅಲೆಯುವುದು ಇತ್ಯಾದಿಗಳು ಪ್ರಾರಂಭವಾದವು. ಹೀಗಿರಲು ಯುವಕನ ನಡವಳಿಕೆಯನ್ನು ಬದÀಲಿಸುವ ಉದ್ದೇಶದಿಂದ ತÀಂದೆತಾಯಿಗಳು ನಿಷೇಕ ಮುಹೂರ್ತ ನಡೆಸಿ ದಂಪತಿಗಳನ್ನು ಸೇರಿಸಿದರು. ಆದರೂ ಸುಬ್ಬರಾಯರು ಅತಿಮಿತ ಆಸಕ್ತರಾಗಿದ್ದು ಗೃಹಸ್ಥಾಶ್ರಮವನ್ನು ಪಾಲಿಸುತ್ತಿದ್ದರು.
ಈ ಸಮಯದಲ್ಲಿ ಸುಬ್ಬರಾಯರಿಗೆ ದಾಸದೀಕ್ಷೆ ಪಡೆಯಬೇಕೆಂದೂ ತದಂಗವಾಗಿ ಒಂದು ತಂಬೂರಿ ಸಂಪಾದಿಸಬೇಕೆಂದೂ ಆಸೆ ಆಯಿತು. ತÀಂದೆಯವರಿಂದ ಆ ಅಭಿಪ್ರಾಯಕ್ಕೆ ಪುರಸ್ಕಾರ ಧನ ಸಹಾಯಗಳು ದೊರೆಯದೆ ಪ್ರಾಸಂಗಿಕವಾಗಿ ಒಬ್ಬ ಪರಿಚಿತ ಮಹಿಳೆಯಿಂದ ದೊರೆತ ಆಭರಣ ಒಂದನ್ನು ಒತ್ತೆಯಿಟ್ಟು ಒಂದು ತಂಬೂರಿಯನ್ನು ಕೊಂಡುಕೊಂಡರು.
ಕರಿಗಿರಿ ಕ್ಷೇತ್ರವೆಂದು ಪ್ರಸಿದ್ಧವಾದ ದೇವರಾಯನದುರ್ಗದಲ್ಲಿ ಶ್ರೀ ನರಸಿಂಹ ದೇವರ ರಥೋತ್ಸವ ನಡೆಯುವ ಶ್ರೀ ಫಾಲ್ಗುಣ ಮಾಸ. ಸುಬ್ಬರಾಯರು ಸಹ ಉತ್ಸವದಲ್ಲಿ ಭಾಗವಹಿಸಲು ತಂಬೂರಿ ಸಹಿತ ಯಾತ್ರಿಕರಾಗಿ ಹೊರಟರು. ರಥೋತ್ಸವ ಕಾಲದಲ್ಲಿ ಒಬ್ಬ ಬ್ರಾಹ್ಮಣನ ಸಮಾಗಮವಾಗಿ, ಇದುವರೆಗೆ ಅಂಕಿತ ಪ್ರಾಪ್ತಿ ಇಲ್ಲದ ಸುಬ್ಬರಾಯರಿಗೆ ದೊಡ್ಡಬಳ್ಳಾಪುರದ ದಾಸರೆಂದು ಪ್ರಸಿದ್ಧರಾಗಿ ಕ್ಷೇತ್ರ ಪರ್ಯಟನೆಯಲ್ಲಿರುವ ಮಹಿಮಾವಂತರೇ ಗುರುಗಳೆಂತಲೂ, ಅವರು ದೊರೆತಲ್ಲಿ ಅವರಿಂದ ಅಂಕಿತೋಪದೇಶ ಪಡೆಯಬೇಕೆಂತಲೂ ಸೂಚಿಸಿ ನಂತರ ಅವನÀು ಕಾಣದಾದನು. ರಥೋತ್ಸವವು ಮುಗಿದು ಅಲ್ಲಿಂದ ಮುಂದೆ ಗುರುಗಳ ಅನ್ವೇಷಣೆ ಪ್ರಾರಂಭವಾಯಿತು.
ಇದೇ ಸಮಯದಲ್ಲಿ ಸುಬ್ಬರಾಯರ ಪತ್ನಿಯ ಸೀಮಂತ ಸಂಸ್ಕಾರದ ಕಾರ್ಯಕ್ರಮಗಳು ಜರುಗುತ್ತಿದ್ದು ದೊಡ್ಡಬಳ್ಳಾಪುರದ ರಾಘವೇಂದ್ರದಾಸರು ನರಸೀಪುರಕ್ಕೆ ಸಂಚಾರ ಕ್ರಮದಲ್ಲಿ ಆಗಮಿಸಿದರು. ಅವರು ಇಬ್ಬರು ಶಿಷ್ಯರ ಸಮೇತ ಕುದುರೆಯ ಮೇಲೆ ಬಂದಿದ್ದು ಕೃಷ್ಣಾಜಿನದ ಕಸೆ ಅಂಗಿ, ಕೃಷ್ಣಾಜಿನದ್ದೇ ಕುಲಾವಿ, ಹೆಗಲ ಮೇಲೆ ತಗಲು ಹಾಕಿಕೊಳ್ಳಲು ಅನುಕೂಲವಾಗುವಂತೆ ಕೊನೆಗಳಲ್ಲಿ ಕಬ್ಬಿಣದ ಬಳೆಗಳನ್ನು ಜೋಡಿಸಿದ್ದ ಐದು ತಂತಿಗಳ ತಂಬೂರಿ ಇವುಗಳನ್ನು ಧರಿಸಿದ್ದರು. ಸುಬ್ಬರಾಯರÀು ತಮಗೆ ಗುರುಗಳು ದೊರಕಿದರೆಂದು ಆನಂದಪುಳಕಿತರಾಗಿ ಅಂಕಿತೋಪದೇಶವನ್ನೂ, ದಾಸ ದೀಕ್ಷೆಯನ್ನೂ ದಯಪಾಲಿಸಬೇಕೆಂದು ಪ್ರಾರ್ಥಿಸಿದರು. ಗುರುಗಳ ಸೇವೆ ಮಾಡಿದ ನಂತರವೇ ಉಚಿತ ಕಾಲದಲ್ಲಿ ಅದು ದೊರೆಯುವುದೆಂದು ದಾಸರು ಸುಬ್ಬರಾಯರನ್ನು ಸಮಾಧಾನಗೊಳಿಸಿ ಅವರಲ್ಲಿ ಆ ದಿನ ಆದರಾತಿಥ್ಯಗಳನ್ನು ಪಡೆದು ಮಾರನೆಯ ಬೆಳಿಗ್ಗೆ ಸಂಚಾರ ಮುಂದುವರಿಸಲು ಸಿದ್ಥರಾದರು. ದಾಸರು ಕುದುರೆಯನ್ನೇರಿ ಶಿಷ್ಯರೊಂದಿಗೆ ಹೊರಟಾಗ ಸುಬ್ಬರಾಯರು ದಾರಿ ತೋರಿಸಲು ಜೊತೆಯಲ್ಲಿ ಹೊರಟರು. ಹೆದ್ದಾರಿ ತಲುಪಿದ ಕೂಡಲೇ ದಾಸರು ಸುಬ್ಬರಾಯರಿಗೆ ಇನ್ನು ಹಿಂತಿರುಗಬಹುದೆಂದು ಸೂಚಿಸಿದರು. ಸುಬ್ಬರಾಯರು ಅತೀವ ವೇದನೆಯಿಂದ ದೀಕ್ಷಾರ್ಥವಾಗಿ ದಾಸರನ್ನು ಅಂಗಲಾಚಿ ಬೇಡಿಕೊಂಡರು. ದಾಸರು ಸಮಾಧಾನ ಮಾಡಲು ಕುದುರೆಯಿಂದಿಳಿದ ಕೂಡಲೇ ಸುಬ್ಬರಾಯರು ದಾಸರ ಕಾಲನ್ನು ಗಟ್ಟಿಯಾಗಿ ಹಿಡಿದು ಕಂಬನಿಗರೆದು ಶಿಷ್ಯತ್ವ ಬೇಡಿದರು. ಹಿಂದಿನ ರಾತ್ರಿ ಮಾರ್ಗಾಯಾಸ ಪರಿಹಾರಾರ್ಥ ತಮ್ಮ ಪಾದಸೇವೆ ಮಾಡಿ ಈಗಾಗಲೇ ಅರ್ಹತೆಯನ್ನು ಸಂಪಾದಿಸಿದ್ದ ಸುಬ್ಬರಾಯರನ್ನು ಇನ್ನು ಹೆಚ್ಚು ಪರೀಕ್ಷೆಗೆ ಒಳಪಡಿಸಲಿಚ್ಛಿಸದೆ, ಮಾರನೆ ದಿನ ತುಮಕೂರಿನ ವ್ಯಾಸರಾಯ ಮಠಕ್ಕೆ ಬರಬೇಕಾಗಿ ಆದÉೀಶಿಸಿ ಪ್ರಯಾಣ ಮುಂದುವರೆಸಿದರು.
ಆದೇಶದಂತೆ ಬಂದ ಸುಬ್ಬರಾಯರಿಗೆ ಶ್ರೀ ಮುದ್ದುಮೋಹನದಾಸರು ಶುಭ ಮುಹೂರ್ತದಲ್ಲಿ ವಿಧ್ಯುಕ್ತವಾಗಿ ತತ್ವೋಪದೇಶ ಮಾಡಿ 'ತಂದೆ ಮುದ್ದುಮೋಹನವಿಠಲ' ಎಂಬ ಅಂಕಿತ ಪ್ರದಾನ ಮಾಡಿದರು. ಅಂಕಿತನಾಮ ಈ ರೀತಿ ಇದೆ.
Sri Tande Muddu Mohana Vittala Dasa | 1865-1940 | Subba Rao | Tande Muddu Mohana | Sri Muddu Mohana Dasa | Karigiri | Chaitra Shudda Navami |
No comments:
Post a Comment