Monday 1 July 2019

helavana katte giriyamma helavana katte 1750 shravana shukla panchami ಹೆಳವನ ಕಟ್ಟೆ ಗಿರಿಯಮ್ಮ






info from FB madhwanet--->

Helavanakatte Giriamma

shrAvaNa shulka panchami, is also the ArAdhane of shri heLavanakaTTe giriamma, a great haridAsini.

Period: 1691 - 1750 (approximate)
RANGANATHA PADASAKTHAM RANGANATHASYA KINKAREEM |

GIRIAMMA PITHAM VANDE JNANA VAIRAGYA SIDDAYE ||

Haridasas of Karnataka were preachers of devotion to Sri Hari and made distinctive contribution to the religious life of Karnataka. They conveyed sacred truths in Kannada in a simple and clear style so as to be understood by common people. Of the four paths to Moksha, Karma, Jnana, Yoga and Bhakti, most of the Haridasas have recognized the last one, which was the easiest and fruitful in their lives. Of all the passions, the unappeased hunger for the heart of the Sri Hari, Bhakti, is ultimate.
While we have a long lineage of haridAsAs, starting right from shri narahari tIrtharu, we have had only 2 known and documented women haridAsAs. On is shri harpanahaLLi bhImavva (bhImEsha krishNa viTTala) and shri heLavanakaTTe giriamma (ranganAtha).
heLavanakaTTe giriamma's birthplace was Ranebennur. Father was Bhishtappa and Mother's name is not known.
She lost her parents at a very tender age and was brought up by her chikkappa & chikkamma. Though she is believed to have gotten married around 10-12 years of age, she convinced her husband and in-laws to go for a second marriage for her husband and she progressed to her sainthood with all her knowledge and interest.
When shri gOpAla dAsaru was traveling in that area, he met her and offered her an idol of vENugOpAla and also the mudrEs. She was composing dEvaranAmAs with the ankita heLavanakaTTe ranga.
When shri sumatIndra tIrtharu of rAyara maTa met her he identified the Rangoli like lines on her palm when administering the first tIrtha to her much against the wishes of elders present and broadcast that "Here is the yashOda who rocked the cradle of Jagath uddaAraNa".
Her sAdana sthaLa was the ranganAtha swAmy temple in heLavanakaTTE. The place is now known as kommAranahaLLi. It is near honnALi.
She has performed several miracles.
Once her mother-in-law wanted her to cook food, while there was no fire wood. Giriamma used her own legs as the fuel to cook food.
She brought back the sight to the prince of Punganoor. This is an interesting story. The price of Punganoor suddenly became blind in both eyes. He went to Tirupati and prayed Lord Venkatesha. The Lord appeared in his dream and mentioned that he would restore one eye and that the second eye would be restored by his devotee - shri giriamma. The princemet Giriamma and on hearing the story, she applied the "kADige" of the lamp that was in front of the Lord on the blind eye and restored the sight.
She prayed and got rains to the draught hit areas.
Giriamma brought back the life of a dead child during the jAthre of Ranganatha Swami at heLavanakaTTe. The father of the child, rangappa, was a devotee of ranganAtha and giriamma. He was from the adjacent village of dibbanahaLLi. This family came to known as "pavADadavaru" family. They have a ritual of taking Lord ranganAtha to their house every year after the jAtare and performing pUja. They do this to commemorate the miracle performed by Giriammanavaru for their family. The family still continues this ritual.
Giriamma laid down her mortal coils at Komaranahalli around 1750.
shri heLavana kaTTe giriamma guruvantargata, bhAratIramaNa mukhyaprAnantargata lakshmI pate shri heLavanakaTTe ranganAthana pAdAravindakke gOvindA, gOvindA...
shri krishnArpaNamastu...


*****

info from dvaita.org--->


Helevankatte Giriamma (Around 1750)

Helevanakatte Giriamma is known all over Karnataka for her exquisitely lyrical compositions Chandrahasa and Kaliya Mardhana. She was born in Ranibennur and was married to Tipparasa by her father Bistappa. She was a great devotee of Hari and always meditated on Ranganatha in the temple at Helavana Katte. She was dedicated to Ranga as Akka Mahadevi was to Chenna Mallikarjuna. In spite of the devotion of her husband to her, she withdrew from all worldly attachements and retreated to the serenity of Ranga Mantapa, where she by Rangavalli paintings, conjured up images of Balakrishna and his sport among the Gopis and fell into a state of samadhi. This was her daily habit and this provoked great hostility among her daily meditations and prayers through dancing and singing.

Giriamma like other great saints is reputed to have performed many miracles She built temples and consecrated them for the worship of Maruti and Ranganatha. She is unique among women who took to the vow of celibacy and lived a dedicated life devoted to hari.
********

Helavanakatte Giriyamma Around 1750 A.D

Helavanakatte Giriyamma was one of the Haridasa women the other being Harapanhally Bhimava who had Ankitha nama as "Bhimesha Krishna" , basically from Ranebennur of Dharwar district. She lived around early 18th Century and was having poorna anugraha of Sri Sumateendra Theertharu, Sri Gopala Dasaru and Sri Satyabodha Theertharu. 

Once Sri Sumateendra Theertharu (Sri Raghavendra swamy mutt, Third Theertharu after Rayaru) had come to Malebennur and stayed at Ranganatha Temple. Helavanakatte Giriyamma was a strong devotee of Ranganatha Swamy, she used to compose keerthanaas on him. As she was a lady and further she had no children, people were against her composing keerthanaas.

It was the Bhiksha day of Giriyamma. After the Mahapooja and Mangalarathi were over, the Sri Sumateendra Theertharu asked Giriyamma to come and take the Thirtha. Mataadhikari replied as she has no issues, she is not eligible to take Thirtha from the Sri Sumateendra Theertharu. But Sri Sumateendra Theertharu insisted that she must take the Thirtha. She came and stood stretching her right hand. The Sri Sumateendra Theertharu observing her hand said that Chakrapaaani, the Lord was her son, and her hand had the characteristic of Devaki, Her palms were that of Kausalya’s character, and requested her to show him Lord Balakrishna calling her Yashodhamma.

Giriyamma never used to take food without completing her daily routine of singing, performing pooja etc. She started putting rangoli reciting keerthanas on the Lord worshipping with turmeric-kumkum keeping the idol of Venugopala at the centre gifted by Sri Gopala Dasaru. Sri Sumateendra Theertharu who was sitting nearby happened to see the idol. He heard Giriyamma singing Keerthanaas in a melodious style. Venugopala was dancing making sounds from the tiny bells tied to his legs according to the tune from the flute. He was amazed. Giriyamma took that child in her waist and kept before the Sri Sumateendra Theertharu requesting him to give Mantrakshate to the child. Sri Sumateendra Theertharu was overwhelmed with “ Ananada Bhashpa” He said, “Kanaka Dasaru showed to Sri Vyaasarayaru the Paramaathma, Vaikunta Dasaru showed Paramaathma to Sri Vadhirajaru, Because of you, I also got the chance of looking at the heavenly manifestation of Venugopaala. Oh ! Mother, just like them I have had the Darshana of Baalakrishna because of you.

Sri Sumateendra Theertharu said “You are Yashodha, You are Kausalya, You are Anasuya”, 

Giriyamma said, that it was His Moola Raama and sang
Raama Shree Raghunandana|
madanakoti mohanaanga maadhava puNcharitha karuNaapaanga|| 
HeLavanakatte nilaya venkata shree ranga| 
sumatheendhra hRudhaya pankaja Bhrunga| 
sadhaanandha kadhana vikrama bhaahu 
Kothanda Dhuritha seetaaraama shree raghnandhana.|| 

Next day it was a day for Tapthamudra DhaaraNa. “Sudharshana Homa” was conducted and all had Mudradhaarane. When it was the turn of Giriyamma, the Sri Sumateendra Theertharu observing her stretched hands, said that Sri Hari had himself had done “Chakraankana” and he had no powers to do “Chakraankana” to her. He said not only those Bhakthas who had darshan of these hands had become pure , he was also fortunate to have been blessed” and thus praised Giriyamma.

Helavanakatte Giriyamma has her Ankitha nama as "Helavanakatte Ranga"
***

ಹರಿಭಕ್ತರ ಜೀವನದ ತಿರುವಿಗೆ ಹರಿದಾಸತ್ವದ ತಿಲಕ

ಹರಿದಾಸರ/ ಹರಿದಾಸಿಯರ ಜೀವನದಲ್ಲಿ ಹರಿದಾಸತ್ವ ಸ್ವೀಕಾರಕ್ಕೆಕಾರಣವಾದ ಪ್ರಮುಖ ಘಟನೆಗಳ ಬಗ್ಗೆ ತಿಳಿಯುವ ಪ್ರಯತ್ನದಲ್ಲಿ  ಶ್ರೇಷ್ಠ ಹರಿದಾಸಿ ಹೆಳವನಕಟ್ಟೆ ಗಿರಿಯಮ್ಮನವರ ಬಗ್ಗೆ ತಿಳಿಯುವ ಒಂದು ಪ್ರಯತ್ನ.

ಹೆಳವನಕಟ್ಟೆ ಗಿರಿಯಮ್ಮಹರೇಶ್ರೀನಿವಾಸ 🙏

ಹರಿದಾಸರ/ ಹರಿದಾಸಿಯರ ಜೀವನದಲ್ಲಿ ಹರಿದಾಸತ್ವ ಸ್ವೀಕಾರಕ್ಕೆಕಾರಣವಾದ ಪ್ರಮುಖ ಘಟನೆಗಳ ಬಗ್ಗೆ ತಿಳಿಯುವ ಪ್ರಯತ್ನದಲ್ಲಿ  ಶ್ರೇಷ್ಠ ಹರಿದಾಸಿ ಹೆಳವನಕಟ್ಟೆ ಗಿರಿಯಮ್ಮನವರ ಬಗ್ಗೆ ತಿಳಿಯುವ ಒಂದು ಪ್ರಯತ್ನ.

ಹೆಳವನಕಟ್ಟೆ ಗಿರಿಯಮ್ಮ
ಅಂಕಿತ:: ಹೆಳವನಕಟ್ಟೆ ರಂಗ, ಶ್ರೀಹರಿ ಪ್ರೇರಣೆಯಿಂದ
ದಾಸತ್ವಕ್ಕೆ ಅನುಗ್ರಹಿಸಿದ  ಗುರುಗಳು::ಶ್ರೀ ಗೋಪಾಲದಾಸರು

ಹರಿಭಕ್ತಿ ಪಂಥದ ಮಹಿಳಾ ಸಾಧಕರಲ್ಲಿ ಮುಂಚೂಣಿಯಲ್ಲಿರುವರೂ, ಲೌಕಿಕ ಸಂಕೋಲೆಗಳನ್ನು ಕಿತ್ತೊಗೆದು ಆಧ್ಯಾತ್ಮ ಪ್ರಪಂಚದ ಭಕ್ತಿಯ ಬೆಳಕಿನಲ್ಲಿ ಸಾಧನೆಗೈದವರೂ, ದಾಸ ಮಹಿಳೆಯರಲ್ಲಿ ಪ್ರಮುಖವಾಗಿ ಕಾಣಬರುವವರು "ಹೆಳವನಕಟ್ಟೆ ರಂಗ"
ಅಂಕಿತದ ಹೆಳವನಕಟ್ಟೆ ಗಿರಿಯಮ್ಮನವರು ಎಂಬುದು ಸರ್ವ ವಿದಿತವಾಗಿದೆ.

ಜನ್ಮಾಂತರದ ಸಂಸ್ಕಾರದ ಬಲದಿಂದ ಬಾಲ್ಯದಿಂದಲೇ ಲೌಕಿಕ ವಿಷಯಗಳಲ್ಲಿ ವಿರಕ್ತಿ,ಅಲೌಕಿಕ ಸಾಧನೆಯಲ್ಲಿ ಆಸಕ್ತಿ ಅವರದಾಗಿತ್ತು.ಬಾಲ್ಯದಲ್ಲೇ ಅವರು ಹೇಳುವ ಮಾತುಗಳು ಸತ್ಯ ವಚನಗಳಾಗಿರುತ್ತಿದ್ದವು.ಆಕೆಯ ಕರ ಸ್ಪರ್ಶವಾದರೆ ಮಕ್ಕಳು ಆರೋಗ್ಯವಂತರಾಗುತ್ತಿದ್ದರು.
ತಿರುಪತಿ ತಿಮ್ಮಪ್ಪನ ವರಪುತ್ರಿಯಾದ ಗಿರಿಯಮ್ಮನವರಿಗೆ ಸದಾ ಭಗವಂತನ ಧ್ಯಾನ ಪೂಜೆಗಳು ಅಲೌಕಿಕ ಆನಂದವನ್ನು ನೀಡುತ್ತಿದ್ದವು.

ಅಂದಿನ ಪದ್ಧತಿಯಂತೆ ಬಾಲ್ಯ ವಿವಾಹವಾದರೂ ಸಹ ಗಿರಿಯಮ್ಮ ತಾನು ಸಂಸಾರಿಯಾಗಲಾರೆ,ಸಂಸಾರ ಬಂಧನ ತಮಗೆ ಬೇಡವೆಂದು ಹೇಳುತ್ತಾರೆ. ನಂತರ ಹಿರಿಯರು, ಪತಿ,ಬಂಧುಗಳು  ವಿರೋಧಿಸಿದರೂ ಪ್ರೀತಿಯಿಂದ ಮಾತನಾಡಿ ಮನವೊಲಿಸಿ ತಮ್ಮ ಪತಿ ತಿಪ್ಪರಸನಿಗೆ ಇನ್ನೊಂದು ವಿವಾಹ ಮಾಡಿಸುತ್ತಾರೆ.ಅವರ ಸುಖ ಸಂಸಾರ ನೋಡಿ ನೆಮ್ಮದಿಯಿಂದ ತಮ್ಮ ಆಧ್ಯಾತ್ಮ
ಸಾಧನಾ ಮಾರ್ಗವನ್ನರಸಿ ಭಗವಂತನ ಸೇವಾ ನಿರತರಾಗುತ್ತಾರೆ ಗಿರಿಯಮ್ಮನವರು.

ಹೀಗೆ ವಿವಾಹವಾದರು ಸಂಸಾರ ಬಂಧನಕ್ಕೆ ಸಿಲುಕಿಕೊಳ್ಳದೆ ವಿರಾಗಿಣಿಯಾಗಿ,ಹರಿಭಕ್ತಿ ಪಾರಾಯಣಿಯಾಗಿ,ಸಮಾಜಕ್ಕೆ ಉಪಕಾರಿಯಾಗಿ
ಸಾಧನೆಗೈಯುತ್ತ ಜೀವನ ನಡೆಸುತ್ತಿದ್ದ ಗಿರಿಯಮ್ಮನವರ
ಜೀವನದಲ್ಲಿ ಅವರು ಅಂಕಿತ ಪಡೆದು ಹರಿದಾಸಿಯಾಗಲು ಕಾರಣವಾದ ಆ ಒಂದು ಪ್ರಮುಖ 
ತಿರುವಿನ ಘಟನೆಯನ್ನು ತಿಳಿಯೋಣ.

ಗಿರಿಯಮ್ಮನವರ ಆರಾಧ್ಯ ದೈವ ಮಲೆಬೆನ್ನೂರು ಸಮೀಪದ ಹೆಳವನಕಟ್ಟೆ ಶ್ರೀ ರಂಗನಾಥ ಸ್ವಾಮಿ. ಶ್ರೀ ರಂಗನಾಥನ ಸೇವೆ,ಧ್ಯಾನಗಳಲ್ಲಿ ಸದಾ ನಿರತರಾಗಿದ್ದು,ಕೃಷ್ಣನ ಬಾಲ ಲೀಲೆಗಳನ್ನು ರಂಗವಲ್ಲಿಯಲ್ಲಿ ಬಿಡಿಸಿ ಹಾಡುಗಳನ್ನು ಹೇಳುತ್ತ ಭಕ್ತಿ ಪರವಶರಾಗಿ ಪೂಜಿಸಿ ಆರಾಧಿಸುತ್ತಿದ್ದರು.

ಒಮ್ಮೆ ತೀರ್ಥಯಾತ್ರೆ ಮಾಡುತ್ತ ಶ್ರೀ ಗೋಪಾಲ ದಾಸರು ಹೆಳವನಕಟ್ಟೆ ರಂಗನಾಥ ಸ್ವಾಮಿಯ ದರ್ಶನಕ್ಕೆ ಬರುತ್ತಾರೆ.ರಂಗನಾಥ ಸ್ವಾಮಿ ದರ್ಶನ ಮಾಡುತ್ತಾರೆ.ಎಂದಿನಂತೆ ಅಂದೂ ಸಹ ಗಿರಿಯಮ್ಮನವರು ಅಲ್ಲಿ ದೇವಾಲಯದ ಪ್ರಾಕಾರದಲ್ಲಿ
ರಂಗವಲ್ಲಿಯಲ್ಲಿ ಬಾಲ ಗೋಪಾಲಕೃಷ್ಣನನ್ನು ಬಿಡಿಸಿ
ಪೂಜಿಸುತ್ತಿರುತ್ತಾರೆ.ಶ್ರೀ ಗೋಪಾಲ ದಾಸರೂ ಸಹ ಅವರೊಂದಿಗೆ ಆ ಬಾಲಗೋಪಾಲಕೃಷ್ಣನನ್ನು ಪೂಜಿಸುತ್ತಾರೆ. ಇಬ್ಬರೂ ಭಗವಂತನ ಪರಮ ಭಕ್ತರು.
ತನ್ನ ಭಕ್ತರ ಪೂಜೆಗೆ ಒಲಿದ ಗೋಪಾಲಕೃಷ್ಣ ಇಬ್ಬರಿಗೂ 
ನಿಜ ದರ್ಶನ ನೀಡಿ ಅನುಗ್ರಹಿಸುತ್ತಾನೆ.

ಶ್ರೀ ಗೋಪಾಲ ದಾಸರು ಗಿರಿಯಮ್ಮನವರ ಹರಿಭಕ್ತಿ,ವೈರಾಗ್ಯ ಭಾವಗಳನ್ನರಿತು ಸಂತೋಷಗೊಳ್ಳುತ್ತಾರೆ. ತಮಗೆ ದರ್ಶನ ನೀಡಿದ ಆ ಗೋಪಾಲಕೃಷ್ಣನ ರೂಪ ಪ್ರತೀಕವನ್ನು ಮಾಡಿಸಿ ಅದನ್ನು ಗಿರಿಯಮ್ಮನವರಿಗೆ ನೀಡಿ ಅನುಗ್ರಹಿಸುತ್ತಾರೆ.

ಹೀಗೆ ಶ್ರೀ ಗೋಪಾಲ ದಾಸರಿಂದ ದಾಸರಿಂದ ಅನುಗ್ರಹಿತರಾದ ಗಿರಿಯಮ್ಮನವರ ಜೀವನವು ಶ್ರೀಹರಿ ಸೇವೆಗೆ ಸಂಪೂರ್ಣವಾಗಿ ಮೀಸಲಾಗುತ್ತದೆ. ಗಿರಿಯಮ್ಮನವರು ರಂಗನಾಥನನ್ನು ಎಷ್ಟು ಭಕ್ತಿಯಿಂದ ಸೇವಿಸುತ್ತಾರೆಂದರೆ, ಅವರ ಶುದ್ಧ ಭಕ್ತಿಗೆ ಒಲಿದ ಭಕ್ತವತ್ಸಲನಾದ ಶ್ರೀಕೃಷ್ಣ ತನ್ನ ವಿವಿಧ ಬಾಲ ಲೀಲೆಗಳನ್ನು ಗಿರಿಯಮ್ಮನವರಿಗೆ ಆಡಿ
ತೋರಿಸುತ್ತಿದ್ದನಂತೆ.  ಗಿರಿಯಮ್ಮನವರು ಬಯಸಿ ಬೇಡಿದ ರೀತಿಯಲ್ಲಿ ದರ್ಶನವಿತ್ತು ಅನುಗ್ರಹಿಸುತ್ತಿದ್ದನಂತೆ. 

ಹೀಗೇ ತಾವು ನೋಡಿ ಆನಂದಿಸಿದ ಕೃಷ್ಣನ ಸುಂದರವಾದ ಬಾಲ ಲೀಲೆಗಳನ್ನು ಅನೇಕ ಕೀರ್ತನೆಗಳ ಮೂಲಕ  ಸ್ತುತಿಸಿ ಶ್ರೀಹರಿ ಪ್ರೇರಣೆಯಿಂದ ದೊರೆತ "ಹೆಳವನಕಟ್ಟೆ ರಂಗ ಅಂಕಿತದಲ್ಲಿ ರಚಿಸಿದ್ದಾರೆ. 

ದಶಾವತಾರವರ್ಣನೆ,ಭಾಗವತ,ರಾಮಾಯಣ,
ಮಹಾಭಾರತ ಕಥೆಗಳ ಆಧಾರಿತ ನೂರಾರು ಕೀರ್ತನೆಗಳನ್ನು, ಸುಳಾದಿಗಳನ್ನು,ಸಂಪ್ರದಾಯದ ಹಾಡುಗಳನ್ನು ರಚಿಸಿ ನೀಡಿ ದಾಸ ಸಾಹಿತ್ಯ ಭಂಡಾರವನ್ನು ಸಮೃದ್ಧಿಗೊಳಿಸಲು 
ಪ್ರಮುಖ ಪಾತ್ರವಹಿಸಿದ್ದಾರೆ.

ಹೀಗೆ ರಂಗವಲ್ಲಿಯಲ್ಲಿ ರಂಗನಾಥನನ್ನು ಕಂಡು ಆರಾಧಿಸಿದ ಗಿರಿಯಮ್ಮನವರಿಗೆ ತನ್ನ ದಾಸತ್ವ ನೀಡಿ
ತನ್ನ ದರ್ಶನವಿತ್ತು, ಭಕ್ತ ವತ್ಸಲನೆಂಬ ಬಿರುದು ಪೊತ್ತ 
ಭಗವಂತ ತನ್ನ ನಿಜ ಭಕ್ತಳಾದ ಗಿರಿಯಮ್ಮನವರನ್ನು ಅನುಗ್ರಹಿಸಿದ.

ಅಧಿಕ ಮಾಸದ ಪುಣ್ಯಕಾಲದಲ್ಲಿ ಶ್ರೇಷ್ಠ ಹರಿದಾಸಿ ಗಿರಿಯಮ್ಮನವರ ಮಹಿಮಾ ಸ್ಮರಣೆಯೊಂದಿಗೆ ನಮಿಸುತ್ತ, ಅವರ ಅಂತರ್ಗತ ಭಾರತೀರಮಣ ಮುಖ್ಯ ಪ್ರಾಣಾಂತರ್ಗತ ಮಾಸ ನಿಯಾಮಕ ಶ್ರೀ ಪದ್ಮಿನಿ ಪುರುಷೋತ್ತಮ ನಾಮಕ ಪರಮಾತ್ಮ ನಮ್ಮೆಲ್ಲರಿಗೂ ಜ್ಞಾನ ಭಕ್ತಿ ವೈರಾಗ್ಯಗಳನಿತ್ತು ಅನುಗ್ರಹಿಸಲಿ ಎಂದು ಪ್ರಾರ್ಥಿಸುತ್ತ, ಶ್ರೀಹರಿ ಪ್ರೇರಣೆಯಂತೆ ಯಥಾಮತಿ ಲೇಖನ ಸೇವೆಯನ್ನು ಶ್ರೀ ಮಧ್ವಾಂತರ್ಗತ ಶ್ರೀ ಕೃಷ್ಣನ ಪಾದಾರವಿಂದಗಳಲ್ಲಿ ಸಮರ್ಪಿಸುತ್ತಿದ್ದೇನೆ.
- ಶ್ರೀಮತಿ ಸುಜಾತಾ ರಾಘವೇಂದ್ರ
***

"💐 ಹೆಳವನಕಟ್ಟೆ ಗಿರಿಯಮ್ಮನವರು "💐
ನಾಗಪಂಚಮೀ ಸಾಧ್ವೀ ಹೆಳವನಕಟ್ಟೆ ಗಿರಿಯಮ್ಮನವರ ಆರಾಧನಾ ಮಹೋತ್ಸವ 
 ಕರ್ನಾಟಕದ " ಮೀರಾ " ಎಂದು ಹೆಸರಾದ ಸಾಧ್ವೀ ಹೆಳವನಕಟ್ಟೆ ಗಿರಿಯಮ್ಮನವರು ಹರಿಭಕ್ತಿಯ ಸಾಕಾರ ರೂಪವೇ ಆಗಿರುವರೆಂದು ವಿಮರ್ಶಕರು ಬಣ್ಣಿಸಿರುವರು. 

 ಹೇಳವನಕಟ್ಟೆ ಗಿರಿಯಮ್ಮನವರಗೆ ಅನುಗ್ರಹಿಸಿದ ಶ್ರೀ ಸುಮತೀಂದ್ರರು ..* 

ಒಮ್ಮೆ ಶ್ರೀ ಸುಮತೀಂದ್ರ ತೀರ್ಥರು ಮಲೇಬೆನ್ನೂರುಗೆ(ಆಗ ಧಾರವಾಡ ಜಿಲ್ಲೆ) ಆಗಮಿಸಿರುತ್ತಾರೆ,ಆಗಿನ ಸಂಪ್ರದಾಯಸ್ಥರು,ಗಿರಿಯಮ್ಮನನ್ನು ಬಂಜೆಯೆಂದು ಪರಿಗಣಿಸಿ,ಸ್ವಾಮಿಗಳೆದರು ಬರದಂತೆ ನಿರ್ಬಂಧ ಹಾಕಿದಾಗ ಅಪರೋಕ್ಷ ಜ್ಞಾನಿಗಳಾದ ಶ್ರೀ ಸುಮತೀಂದ್ರತೀರ್ಥರು ಗಿರಿಯಮ್ಮನನ್ನು ಕರೆಸಿ,ತೀರ್ಥ ನೀಡಿದರಂತೆ.ತೀರ್ಥ ಕೊಡುವಾಗ ,"ಯಾರು ಈಕೆಯನ್ನು ಬಂಜೆಯೆಂದು ಕರೆದದ್ದು?,ಇವರು ಬಾಲಕೃಷ್ಣನನ್ನು   ಆಡಿಸಿದ ಯಶೋದೆಯ ಕೈ".. ಎಂದು ಅನುಗ್ರಹಿಸಿದರಂತೆ..
ಅಂದಿನಿಂದ ಅವರನ್ನು ಯಶೋದಾದೇವಿಯ ಅಂಶಾವತರವೆಂದು ಪ್ರತೀತಿ ಬಂದಿದೆ.ಆ ನಂತರದಲ್ಲಿ ಗಿರಿಯಮನನ್ನು ವಿಶೇಷವಾಗಿ ಅನುಗ್ರಹಿಸಿದರು.

 ವಿಜಯದಾಸರ ಶಿಷ್ಯರು ಆದ ,ಭಕ್ತಿಯಲ್ಲಿ ಭಾಗಣ್ಣ ಎಂದೆ ಖ್ಯಾತರಾದ,ಅಪರೋಕ್ಷ ಜ್ಞಾನಿ ಗಳಾದ ಶ್ರೀ ಗೋಪಾಲದಾಸರು ಉಡುಪಿ ಯಾತ್ರಾಗೆ ಹೋಗುವಾಗ ಮಲೇಬೆನ್ನುರಿಗೆ ಆಗಮಿಸಿ ಗಿರಿಯಮ್ಮನವರಿಗೆ ಶ್ರೀ ಬಾಲ ಮೂರ್ತಿಯನ್ನು ಹಾಗೂ ಅಂಕಿತವನ್ನು ನೀಡಿದರಂತೆ,ಆ ನಂತರ ಆಕೆಗೆ "ಹೇಳವನಕಟ್ಟೆ ರಂಗ" ಎನ್ನುವ ಅಂಕಿತದಲ್ಲಿ ಅನೇಕ ಕೃತಿಗಳನ್ನು ರಚಿಸಿದ್ದಾರೆ ...


 ಕೊಮಾರನ ಹಳ್ಳಿಯ  ಲಕ್ಷ್ಮೀ ರಂಗನಾಥ ಸ್ವಾಮಿಯ ರಥೋತ್ಸವದ ಸಂದರ್ಭದಲ್ಲಿ ಉತ್ಸವ ಮೂರ್ತಿಯ ಆಭರಣವೊಂದನ್ನು ಗುಬ್ಬಚ್ಚಿಯೊಂದು ಹಾರಿಸಿಕೊಂಡು ಹೋದಾಗ ಹೊನ್ನು ತಾ ಗುಬ್ಬಿ ಹೊನ್ನು ತಾ ಎಂದು ಭಕ್ತಿಯಿಂದ ಗಿರಿಯಮ್ಮ ಹಾಡಿದ್ದಕ್ಕೆ ಗುಬ್ಬಿ ಹಾರವನ್ನು ಮರಳಿ ಅದೇ ಸ್ಥಾನಕ್ಕೆ ತಂದು ಇಟ್ಟಿತಂತೆ. 

 ಊರಿನಲ್ಲಿ ಕ್ಷಾಮ ತಲೆದೋರಿದ ಸಮಯದಲ್ಲಿ ದಯೆ ಮಾಡೊ ರಂಗ ನಿನ್ನ ಕರುಣೆ ಉಳಿಯದಿ ಲೋಕ ಎಂಬ ಕಿರ್ತನೆಯನ್ನು  ಹಾಡಿದಳು ಎಂಬ ಐತಿಹ್ಯ ಪ್ರಚಲಿತದಲ್ಲಿದೆ. 

" ರಾಜಕುಮಾರನ ಮೇಲೆ ಗಿರಿಯಮ್ಮ ಕೃಪಾ ದೃಷ್ಟಿ ".

 ಪುಂಗನೂರಿನ ರಾಜಕುಮಾರನಿಗೆ ಎಳೆಯ ವಯಸ್ಸಿನಲ್ಲಿಯೇ ಕಣ್ಣು ಹೋಗಿ ಗೋಳಾಡುತ್ತಿದ್ದನು. ಸಾಧ್ವೀ ಗಿರಿಯಮ್ಮನವರ ಮಹಿಮೆಯನ್ನು ತಿಳಿದ ಪುಂಗನೂರಿನ ರಾಜನು ಅವರನ್ನು ತನ್ನ ಮಗನಿಗೆ ದೃಷ್ಟಿ ಬರುವಂತೆ ಅನುಗ್ರಹ ಮಾಡಮ್ಮಾ ಎಂದು ಪ್ರಾರ್ಥಿಸಿ ಕೊಂಡಾಗ, ಸಾಧ್ವೀ ಗಿರಿಯಮ್ಮನವರು ತಾವು ದೇವರಿಗೆ ಹಚ್ಚುವ ದೀಪದ ಕಾಡಿಗೆಯನ್ನು ಲೇಪಿಸಿ ಆ ರಾಜಕುಮಾರನಿಗೆ ಕಣ್ಣು ಬರುವಂತೆ ಮಾಡಿದರು. 

 ಇಂಥಹಾ ಸಾಧ್ವೀ ಹೆಳವನಕಟ್ಟೆ ಗಿರಿಯಮ್ಮನವರು ದಾಸ ಸಾಹಿತ್ಯ ಕ್ಷೇತ್ರಕ್ಕೆ ಅತ್ಯದ್ಭುತವಾದ ಸೇವೆ ಸಲ್ಲಿಸಿ ಶ್ರಾವಣ ಶುದ್ಧ ಪಂಚಮೀ ( ನಾಗ ಪಂಚಮೀ ) ಕೋಮಾರನಹಳ್ಳಿ ತುಂಗಭದ್ರೆಯಲ್ಲಿ ಲೀನವಾಗಿ ಶ್ರೀ ರಂಗನಾಥನ ಧಾಮವನ್ನು ಸೇರಿದರು! 

ಪತಿವ್ರತೆಯರ ವ್ರತವ ಅಳಿದಂಥ ಕೈಗೆ
ಹಿತವಾಜಿಯನೇರಿ ಮರ್ದಿಸಿದ ಕೈಗೆ
ಪತಿ ಶಿರೋಮಣಿ ಲಕ್ಷ್ಮೀ ಕಾಂತನ ಕೈಗೆ
ಚತುರ ಹೆಳವನ ಕಟ್ಟೆ ರಂಗನ ಕೈಗೆ... ತಾ ಗುಬ್ಬಿ.. ತಾ ಗುಬ್ಬಿ...

ಹೊನ್ನು ತಾ ಗುಬ್ಬಿ ಹೊನ್ನು ತಾ
ಚಿನ್ಮಯ ಮೂರುತಿ ಚೆಲುವ ರಂಗನ ಕೈಗೆ
ಹೊನ್ನು ತಾ ಗುಬ್ಬಿ ಹೊನ್ನು ತಾ.....

ಹೇಳವನಕಟ್ಟಿ ರಂಗನಾಥ ಸ್ವಾಮಿ..👇👇
ಆ ಹೇಳವನಕಟ್ಟಿ ಶ್ರೀ ರಂಗನಾಥ ಸ್ವಾಮಿ ಎಲ್ಲರಿಗೂ ಅನುಗ್ರಹಿಸಲಿ...
🙏🏼🙏🏼ಶ್ರೀ ಕೃಷ್ಣಾರ್ಪಣಮಸ್ತು🙏🏼🙏🏼

💐🙏🏼ಎಸ್.ವಿಜಯ ವಿಠ್ಠಲ🙏🏼💐
*****

" ಸಾಧ್ವೀ ಹೆಳವನಕಟ್ಟೆ ಗಿರಿಯಮ್ಮನವರು "
( 15.08.18 ಬುಧವಾರ ನಾಗಪಂಚಮೀ " ಸಾಧ್ವೀ ಹೆಳವನಕಟ್ಟೆ ಗಿರಿಯಮ್ಮನವರ ಆರಾಧನಾ ಮಹೋತ್ಸವ )
" ಪ್ರಸ್ತಾವನೆ "
ಶ್ರೀ ವಾಯುದೇವರ ಮೂರನೇ ಅವತಾರಭೂತರಾದ ಶ್ರೀಮನ್ಮಧ್ವಾಚಾರ್ಯರು ವೇದ ಮತವನ್ನು ಪುನರುದ್ಧಾರ ಮಾಡಿದರು. ಕಂಡ ಕಂಡವರು ಭಾಷ್ಯ ಟೀಕಾದಿಗಳನ್ನು ಬರೆದು ಶ್ರೀ ಬಾದರಾಯಣರ ಭಾವಕ್ಕೆ ವಿರುದ್ಧವಾಗಿಯೇ ಪ್ರಸ್ಥಾನ ತ್ರಯಕ್ಕೆ ಅರ್ಥ ಹೇಳಿ, ಜನರೆಲ್ಲ ಅನರ್ಥಕ್ಕೆ ಗುರಿಯಾಗುವಂತೆ ಮಾಡಿದಾಗ ಶ್ರೀಮದಾನಂದತೀರ್ಥರು ಆ ಪ್ರಸ್ಥಾನ ತ್ರಯಕ್ಕೂ, ಭಾಷ್ಯ ಬರೆದು ಜಗತ್ತಿಗೆ ಯಥಾರ್ಥ ಮಾರ್ಗದರ್ಶನ ಮಾಡಿದರು.
ಮುಂದೆ  ಶ್ರೀ ನರಹರಿತೀರ್ಥರು ( ಶ್ರೀ ರಘುಪತಿ ), ಶ್ರೀ ಟೀಕಾಚಾರ್ಯರು ( ಶ್ರೀರಾಮ / ಜಯರಾಯ ), ಶ್ರೀ ವಿಬುಧೇಂದ್ರತೀರ್ಥರು ( ಶ್ರೀ ವಿಬುಧರಾಮ ), ಶ್ರೀ ಶ್ರೀಪಾದರಾಜರು ( ಶ್ರೀ ರಂಗವಿಠಲ ), ಶ್ರೀ ವ್ಯಾಸರಾಜರು ( ಶ್ರೀ ಸಿರಿಕೃಷ್ಣ ), ಶ್ರೀ ವಿಜಯೀ೦ದ್ರರು (  ಶ್ರೀ ವಿಜಯೀ೦ದ್ರರಾಮ ), ಶ್ರೀ ವಾದಿರಾಜರು ( ಶ್ರೀ ಹಯವದನ ), ಶ್ರೀ ರಾಘವೇಂದ್ರತೀರ್ಥರು ( ಶ್ರೀ ವೇಣುಗೋಪಾಲ ), ಶ್ರೀ ಯೋಗೀ೦ದ್ರತೀರ್ಥರು ( ಶ್ರೀರಾಮ ), ಶ್ರೀ ವಾದೀಂದ್ರತೀರ್ಥರು ( ಶ್ರೀ ವಾದೀಂದ್ರಯತಿ ), ಶ್ರೀ ವರದೇಂದ್ರತೀರ್ಥರು ( ಶ್ರೀ ವರದೇಂದ್ರಯತಿ ) ಶ್ರೀಮದಾಚಾರ್ಯರ ಆ ಭಾವವನ್ನು ಜನತೆಗೆ ತಿಳಿಯುವಂತೆ  ಸಂಸ್ಕೃತ ಸರಳ ಶೈಲಿಯಲ್ಲಿ ತಿಳಿಸಿ ಪರೋಪಕಾರ ಮಾಡಿದರು.
ಸಂಸ್ಕೃತ ಶಾಸ್ತ್ರ ತಿಳಿಯದ ಮಂದರಿಗೆ ಮೇಲ್ಕಂಡ ಯತಿಗಳೂ, ಶ್ರೀ ಪುರಂದರದಾಸರು, ಶ್ರೀ ಕನಕದಾಸರು, ಶ್ರೀ ವೈಕುಂಠದಾಸರು, ಶ್ರೀ ವಿಜಯರಾಯಾರೂ ಮತ್ತು ಶಿಷ್ಯ ಪ್ರಶಿಷ್ಯರೂ ಮೊದಲಾದ ದಾಸ ಧುರೀಣರು ಕನ್ನಡದಲ್ಲಿ ಅನೇಕ ಪದ - ಪದ್ಯ - ಸುಳಾದಿ - ಉಗಾಭೋಗಗಳ ಮೂಲಕ ದ್ವೈತ ವೇದಾಂತ ಶಾಸ್ತ್ರದ ತಿರುಳನ್ನು ತಿಳಿಸಿ ಭಕ್ತಿ ಭಾಗೀರಥಿಯ ಪ್ರವಾಹವು ಕರ್ನಾಟಕದಲ್ಲಿ ಎಂದಿಗೂ ಹರಿಗಡಿಯದಂತೆ ನೋಡಿಕೊಂಡರು.
ಈ ಹರಿದಾಸ ಸಾಹಿತ್ಯದ ಕನ್ನಡ ಪದ ಮತ್ತು ಅನೇಕ ಖಂಡ ಕಾವ್ಯಗಳಂತೆ ಪುರುಷರಂತೆ ಸ್ತ್ರೀಯರಲ್ಲಿಯೂ ಮಧ್ವ ಸಿದ್ಧಾಂತದ ಬಗ್ಗೆ ಭಕ್ತಿ ಶ್ರದ್ಧಾದರ ಬೆಳೆದು ಗೌರವ ಬುದ್ಧಿಯು ನಿರಂತರ ನೆಲೆಸುವಂತಾಯಿತು.
ಅಸಂಖ್ಯ ಪದ ಪದ್ಯಗಳು, ಅನೇಕ ಖಂಡ ಕಾವ್ಯಗಳು, ಅಪರಿಮಿತ ಉಗಾಭೋಗಗಳು, ಲೆಕ್ಕವಿಲ್ಲದಷ್ಟು ಸುಳಾದಿಗಳು ಹಾಗೂ ಕೀರ್ತನಗಳಿಂದ ಪ್ರಚಂಡ ಪ್ರಮಾಣದಲ್ಲಿ ಬೃಹದ್ಗಾತ್ರವಾದ ಬೆಳೆದು ನಿಂತ ಈ ಹರಿದಾಸ ವಾಜ್ಮಯವನ್ನು ಮುದ್ರಣ ಸೌಕರ್ಯವಿಲ್ಲದ ಆ ಕಾಲದಲ್ಲಿ ಅಳಿಯದಂತೆ ಉಳಿಸಿ ಬೆಳೆಸಿಕೊಂಡು ಇಂದಿನ ವರೆಗೂ ಅದನ್ನು ಅಕ್ಷತವಾಗಿ ರಕ್ಷಿಸಿದ ಶ್ರೇಯಸ್ಸು ಬಹುಮಟ್ಟಿಗೆ " ಮಾಧ್ವ ಮಹಿಳೆ " ಯರಿಗೆ ಸೇರುತ್ತದೆ.
ಪುರುಷರು ಲೌಕಿಕ ವಿದ್ಯೆ, ಉದ್ಯೋಗ, ಶಾಸ್ತ್ರ, ವೇದ ವೇದಾಂತಾದಿ ಅಧ್ಯಯನಗಳಲ್ಲಿ " ದಾಸ ಸಾಹಿತ್ಯ " ವನ್ನು ಕಡೆಗಣಿಸಿದರೂ ಹೆಣ್ಣು ಮಕ್ಕಳು ಮಾತ್ರ " ಅಪರೋಕ್ಷ ಜ್ಞಾನಿಗಳಾದ ದಾಸರಾಯರ ಪದ ಪದ್ಯಗಳನ್ನೇ ತಮ್ಮ ಜೀವನದ ಉಸಿರನ್ನಾಗಿ ಮಾಡಿಕೊಂಡಿದ್ದಾರೆ.
ಇಂದಿಗೂ ಮಾಧ್ವರ ಮನೆಯಲ್ಲಿ ದಾಸರ ಪದಗಳು ಬಾರದ ಹೆಣ್ಣು ಮಕ್ಕಳು ಹುಡುಕಿದರೂ ಸಿಗುವುದಿಲ್ಲವೆಂದರೆ ಅತಿಶಯೋಕ್ತಿಯಾಗಲಾರದು.
ಮಾಧ್ವ ಮಹಿಳೆಯರು ಹಿರಿಯರಾದ ಹಿಂದಿನ ದಾಸರಾಯರ ಕೀರ್ತನೆಗಳನ್ನು ತಾವೇ ಸಾಮೂಹಿಕವಾಗಿ ಗುಡಿ - ಗುಂಡಾರ, ಕಟ್ಟೆ - ಕೋಣೆಗಳಲ್ಲಿ ಅನ್ನುವುದು ಮಾತ್ರವಲ್ಲದೆ ತಾವೂ ಅಂತ ಭಕ್ತಿರಸ ಪ್ರಧಾನವಾದ ಆಧ್ಯಾತ್ಮಿಕ ಸಾಹಿತ್ಯವನ್ನು ಕನ್ನಡದಲ್ಲಿ ರಚನೆ ಮಾಡಿ ಮಾಧ್ವ ವಾಗ್ಮಯಕ್ಕೆ ಪರೋಪಕಾರಗೈದಿದ್ದಾರೆ.
ಚಮತ್ಕಾರಾನು ಪ್ರಣಿತವಾದ ಈ ವನಿತಾ ವಾಗ್ಮಯದ ಚಾತುರ್ಯ ಮಾಧುರ್ಯದಿಂದ ಆಕೃಷ್ಟರಾಗಿ ಸಾವಿರಾರು ನಾರಿಯರು ಇಂದಿಗೂ ಅವುಗಳನ್ನು ಕಂಠಪಾಠ ಮಾಡಿ, ಒಳ್ಳೆ ಸಂಸ್ಕಾರ ಪಡೆದು ಮಧ್ವ ಸಿದ್ಧಾಂತಾನುಸಾರವಾಗಿ ಭಕ್ತಿ ತತ್ತ್ವವನ್ನು ತಿಳಿದುಕೊಂಡು ಉಧೃತರಾಗುತ್ತಲಿದ್ದಾರೆ.
ಅಂಥಾ ಶ್ರೀ ಸರ್ವಜ್ಞರ ವಾಚನೀಯವಾದ ಹರಿದಾಸ ಸಾಹಿತ್ಯವನ್ನು ನಿರ್ಮಿಸಿದ ಕಾಮಿನಿಯರ ಹಲವು ಭವುಭಾಮಿನಿಯರ ಅನುಭಾವಿ ಪ್ರಭಾವಿಯಾದ ಪಾವನ ಜೀವನ ಚರಿತ್ರೆಯಲ್ಲಿ " ಸಾಧ್ವೀ ಹೆಳವನಕಟ್ಟೆ ಗಿರಿಯಮ್ಮನವರ " ಚರಿತ್ರೆಯನ್ನು ಅವರ ಆರಾಧನಾ ಶುಭ ಸಂದರ್ಭದಲ್ಲಿ ಅವಲೋಕಿಸುವ ಪ್ರಯತ್ನ ಮಾಡಿ ಅವರ ಅನುಗ್ರಹಕ್ಕೆ ಪಾತ್ರರಾಗೋಣ....
ಕರ್ನಾಟಕದ " ಮೀರಾ " ಎಂದು ಹೆಸರಾದ ಸಾಧ್ವೀ ಹೆಳವನಕಟ್ಟೆ ಗಿರಿಯಮ್ಮನವರು ಹರಿಭಕ್ತಿಯ ಸಾಕಾರ ರೂಪವೇ ಆಗಿರುವರೆಂದು ವಿಮರ್ಶಕರು ಬಣ್ಣಿಸಿರುವರು.
" ಹೆಳವನಕಟ್ಟೆಯ ಹಿನ್ನೆಲೆ "
ಹೆಳವನಕಟ್ಟೆ ಹರಿಹರ ತಾಲೂಕಿನ ಮಲೇಬೆನ್ನೂರಿನ ಹತ್ತಿರವಿರುವ ಪುಟ್ಟ ಪುಣ್ಯಕ್ಷೇತ್ರ. ಇಲ್ಲಿಯ ಕ್ಷೇತ್ರಾಧಿಪ ಶ್ರೀ ರಂಗನಾಥಸ್ವಾಮಿ. ಹಿಂದೆ ಅಲ್ಲಿನ ದಿಬ್ಬವೊಂದರಲ್ಲಿ ಹೆಳವನೊಬ್ಬ ವಾಸಿಸುತ್ತಿದ್ದನಂತೆ. ಆ ದಿಬ್ಬದ ಪಕ್ಕದಲ್ಲಿ ಹಳ್ಳವೊಂದಿತ್ತು. ಸುತ್ತಲಿನ ಜನರು ಆ ಹಳ್ಳದ ನೀರನ್ನೇ ಉಪಯೋಗಿಸುತ್ತಿದ್ದರು. ದನಕರುಗಳನ್ನು ಮೇಯಿಸಲು ಗೊಲ್ಲರು ಅಲ್ಲಿಗೆ ಬರುತ್ತಿದ್ದರು. ಹೆಳವ ಅವರೆಲ್ಲರಿಗೂ ದೇವರ ಕಥೆಯನ್ನು ಹೇಳುತ್ತಾ ಅವರೆಲ್ಲರ ವಿಶ್ವಾಸ ಗಳಿಸಿದ್ದ. ಬೇಸಿಗೆಯಲ್ಲೂ ಹಳ್ಳದ ನೀರು ಸಮೃದ್ಧವಾಗಿ ದೊರೆಯಬೇಕೆಂಬ ಉದ್ಧೇಶದಿಂದ ಹೆಳವ ಎಲ್ಲರ ನೆರವಿನಿಂದ ಕೆರೆಯೊಂದನ್ನು ನಿರ್ಮಿಸಿದ. ಆದ್ದರಿಂದ ಅದೇ " ಹೆಳವನಕಟ್ಟೆ " ಆಯಿತು.
ಒಮ್ಮೆ ಹಸುವೊಂದು ಹುತ್ತಕ್ಕೆ ಹಾಲು ಸುರಿಸುವುದನ್ನು ಕಂಡು ಅಲ್ಲಿಯ ಜನ ಕುತೂಹಲದಿಂದ ಅಗೆದು ನೋಡಲು ಶ್ರೀ ರಂಗನಾಥಸ್ವಾಮಿಯ ವಿಗ್ರಹವೊಂದು ಕಂಗೊಳಿಸುತ್ತಿತ್ತು. ತನ್ನ ಗೆಳೆಯರಾದ ಗೊಲ್ಲರ ಸಹಾಯದಿಂದ ಶ್ರೀ ರಂಗನಾಥಸ್ವಾಮಿಯನ್ನು ಹುತ್ತದಿಂದ ಹೊರ ತೆಗೆದ.
ಶ್ರೀ ರಂಗನಾಥನ ವಿಗ್ರಹಕ್ಕೆ ಹೊಂದಿಕೊಂಡಂತೆಯೇ ಮುದ್ದಾದ ಶಿವಲಿಂಗ ಮತ್ತು ಚತುರ್ಮುಖ ಬ್ರಹ್ಮದೇವರ ಮೂರ್ತಿಗಳು ಕಂಡವು. ಹೆಳವನು ಆ ಜನರ ಸಹಕಾರದೊಂದಿಗೆ ಗುಡಿಯನ್ನು ನಿರ್ಮಾಣ ಮಾಡಿ ದೇವರನ್ನು ಪ್ರತಿಷ್ಠಾಪಿಸಿದ. ಅಂದಿನಿಂದ ಈ ಸ್ಥಳವು ಶ್ರೀ ರಂಗನಾಥಸ್ವಾಮಿಯ ವಿಶೇಷ ಸನ್ನಿಧಾನದಿಂದ ಮಹತ್ವ ಪಡೆದು, ಇಷ್ಟಕ್ಕೆಲ್ಲಾ ಕಾರಣನಾದ ಹೆಳವನ ದೆಸೆಯಿಂದ ಈ ಪವಿತ್ರ ಕ್ಷೇತ್ರ " ಹೆಳವನಕಟ್ಟೆ " ಎಂದೇ ಪ್ರಸಿದ್ಧಿಯಾಯಿತು.
" ಸಾಧ್ವೀ ಗಿರಿಯಮ್ಮನವರ ಬಾಲ್ಯ - ವಿವಾಹ "
ಶ್ರೀ ಭೀಷ್ಟಪ್ಪ ಜೋಯಿಸ್ ದಂಪತಿಗಳಿಗೆ ಶ್ರೀ ರಂಗನಾಥನ ಹಾಗೂ ಕುಲದೇವತೆಯಾದ ಶ್ರೀ ಮೈಲಾರಲಿಂಗನ ಪರಮಾನುಗ್ರಹದಿಂದ ಹೆಣ್ಣು ಮಗುವಾಯಿತು. ಆ ಮಗು ಮೈಮೇಲೆಲ್ಲಾ ದೇವತಾ ಸ್ತ್ರೀಯರಿಗಿರುವಂತೆ ಶಂಖ - ಚಕ್ರಗಳ ಚಿಹ್ನೆಯಿಂದ ಶೋಭಾಯಮಾನವಾಗಿ, ಹಗಲವಾದ ಹಣೆ, ಹೊಳಪು ಕಣ್ಣುಗಳು, ನಗುಮುಖ, ಮುದ್ದಾದ ಆ ಮಗು ಬಹಳ ಸುಂದರವಾಗಿತ್ತು. ಆ ದಂಪತಿಗಳು ಆ ಸುಂದರ ಮಗುವಿಗೆ " ಗಿರಿಯಮ್ಮ " ಎಂದು ಹೆಸರಿಟ್ಟರು.
ಪ್ರಾಪ್ತ ವಯಸ್ಕಳಾದ ಗಿರಿಯಮ್ಮನವರಿಗೆ ಮಲೇಬೆನ್ನೂರಿನ ಶಾನುಭೋಗರಾದ ತಿಪ್ಪರಸನೊಡನೆ ವಿವಾಹ ಮಾಡಿಕೊಟ್ಟರು.
ಬಾಲ್ಯದಿಂದಲೇ ಭಕ್ತಿ ಮನಸ್ಸಿಗೆ ಅಂಟಿಕೊಂಡಿದ್ದೂ ಅಲ್ಲದೇ ವೈರಾಗ್ಯವೇ ಮೈಗೆ ಹಿಡಿದುಕೊಂಡಿತ್ತು. ಆದ್ದರಿಂದ ಸಾಧ್ವೀ ಗಿರಿಯಮ್ಮನವರು ವಿಷಯ ವಿಮುಖರಾಗಿ ಹೆಳವನಕಟ್ಟೆಯ ಶ್ರೀ ರಂಗನಾಥಸ್ವಾಮಿಯನ್ನು ಅನನ್ಯ ಭಕ್ತಿಯಿಂದ ಸೇವೆ ಮಾಡಿದರು.
ಶ್ರೀ ರಂಗನಾಥಸ್ವಾಮಿಯ ಸೇವೆಯಿಂದ ಶ್ರೀ ಹರಿಪ್ರಸಾದಾಂಕಿತದಿಂದ ಸಾಧ್ವೀ ಗಿರಿಯಮ್ಮನವರಿಗೆ ಒಳ್ಳೇ ತಿಳಿವು ಮೂಡಿ ಕವಿತಾ ಶಕ್ತಿಯೂ ಬಂದು ಅವಳು ಅನೇಕ ದೇವರ ನಾಮಗಳನ್ನೂ, ಕಾವ್ಯ ಕೃತಿಗಳನ್ನೂ ರಚಿಸಿದಳು!
ರಾಗ : ಕಾಂಬೋಧಿ ತಾಳ : ಝ೦ಪೆ
ಭಕ್ತಳ ಬನ್ನ ಪರಾಕು ಭಾಗ್ಯದ ನಿಧಿಯೇ ।। ಪಲ್ಲವಿ ।।
ನಿನ್ನ ನಂಬಿದೆ ನೀರಜಾಕ್ಷ ಪರಾಕು ।
ನಿನ್ನ ರನ್ನೆಯ ಒಲುಮೆ ಬೇಕು ಪರಾಕು ।
ಅನ್ಯರ ಸಂಗವನೊಲ್ಲೆ ಪರಾಕು ।
ಎನ್ನಪೇಕ್ಷೆಯ ಸಲಿಸೋ ಪರಾಕು ।। ಚರಣ ।।
ಶೇಷಶಯನ ಶ್ರೀನಿವಾಸ ಪರಾಕು ।
ಸಾಸಿರನಾಮದ ಒಡೆಯ ಪರಾಕು ।
ದೋಷ ದುರಿತ ಹರ ಸ್ವಾಮಿ ಪರಾಕು ।
ಭಾಷೆ ಪಾಲಿಪುದೆನ್ನ ವಾಸುದೇವ ಪರಾಕು ।। ಚರಣ ।।
ರತಿಪತಿಪಿತ ಮಾಧವನೆ ಪರಾಕು ।
ಅತಿರೂಪನೆ ಎನ್ನಯ್ಯನೆ ಪರಾಕು ।
ಹಿತವಿರಹಿತರ ಕಾಯೋ ಪರಾಕು ।
ಕರ್ತ ಹೆಳವನಕಟ್ಟೆರಂಗ ಪರಾಕು ।। ಚರಣ ।।
ಹೀಗೆ ಶ್ರೀ ರಂಗನಾಥಸ್ವಾಮಿಯ ನಿತ್ಯ ಭಕ್ತಿಯುಕ್ತವಾದ ನಿತ್ಯ ನಿರಂತರ ಸೇವೆಯಿಂದ ಸಾಧ್ವೀ ಗಿರಿಯಮ್ಮನವರಿಗೆ ಸಾಹಿತ್ಯ ರಸ ಸಿದ್ಧಿಯಾದರೆ, ಜೀವನದಲ್ಲಿ ವಾಕ್ಸಿದ್ಧಿಯೂ ಆಯಿತು. ಅವರಾಡಿದ ಒಂದೊಂದು ಮಾತು ವರದ ಸತ್ವವನ್ನು ಪಡೆದು ಸತ್ಯೋಕ್ತಿಯಾಗಿ ಪರಿಣಮಿಸತೊಡಗಿದವು.
" ರಾಜಕುಮಾರನ ಮೇಲೆ ಗಿರಿಯಮ್ಮ ಕೃಪಾ ದೃಷ್ಟಿ "
ಪುಂಗನೂರಿನ ರಾಜಕುಮಾರನಿಗೆ ಎಳೆಯ ವಯಸ್ಸಿನಲ್ಲಿಯೇ ಕಣ್ಣು ಹೋಗಿ ಗೋಳಾಡುತ್ತಿದ್ದನು. ಸಾಧ್ವೀ ಗಿರಿಯಮ್ಮನವರ ಮಹಿಮೆಯನ್ನು ತಿಳಿದ ಪುಂಗನೂರಿನ ರಾಜನು ಅವರನ್ನು ತನ್ನ ಮಗನಿಗೆ ದೃಷ್ಟಿ ಬರುವಂತೆ ಅನುಗ್ರಹ ಮಾಡಮ್ಮಾ ಎಂದು ಪ್ರಾರ್ಥಿಸಿ ಕೊಂಡಾಗ, ಸಾಧ್ವೀ ಗಿರಿಯಮ್ಮನವರು ತಾವು ದೇವರಿಗೆ ಹಚ್ಚುವ ದೀಪದ ಕಾಡಿಗೆಯನ್ನು ಲೇಪಿಸಿ ಆ ರಾಜಕುಮಾರನಿಗೆ ಕಣ್ಣು ಬರುವಂತೆ ಮಾಡಿದರು.
" ಬರಗಾಲ ನಿವಾರಣೆ "
ನಾಡಿಗೆ ಭೀಕರ ಬರ ಬಂದು ಮಳೆಯಿಲ್ಲದೆ ಜನ ಕಂಗಾಲಾಗಿ ಕೈಕಾಲುಗೆಟ್ಟಾಗ ಸಾಧ್ವೀ ಗಿರಿಯಮ್ಮ ಶ್ರೀ ರಂಗನಾಥಸ್ವಾಮಿಯಲ್ಲಿ...
ಪ್ರಾರ್ಥನಾ ಸುಳಾದಿ...
ಮಳೆಯ ದಯ ಮಾಡೋ ರಂಗ ನಿಮ್ಮ ಕರುಣೆ ತಪ್ಪಿದರೆ । ಉಳಿಯದೋ ಲೋಕ ಪಶು ಜಾತಿ । ಹುಲ್ಲೇ ಸಾರಂಗ ಮೃಗಗಳು । ಬಹಳ ಹಸಿದು ಬಾಯಾರಿ ಬತ್ತಿದ ಕೆರೆಗೆ ಬಂದು ತೃಷೆಯಡಗದೇ । ತಲ್ಲಣಿಸಿ ಮೂರ್ಛೆಗೊಂಡು ದೆಸೆ ದೆಸೆಗೆ ಬಾಯ್ಬಿಡುವವಯ್ಯ ಹರಿಯೇ ।।
ಸಂದು ಹೋದವು ಜ್ಯೇಷ್ಠ ಆಷಾಢ ಶ್ರಾವಣ । ಬಂದಿದೆ ಭಾದ್ರಪದ ಮಾಸವೀಗ । ಇಂದು ಪುರಂದರಗೆ ಹೇಳಿ ವೃಷ್ಟಿಯ ತರಿಸೋ । ಸಂದೇಹವ್ಯಾಕೆ ಹೆಳವನಕಟ್ಟೆಯ ರಂಗ ।।
ಎಂದು ಪ್ರಾರ್ಥಿಸಿದಾಗ ಶ್ರೀ ರಂಗನಾಥಸ್ವಾಮಿಯ ಪರಮಾನುಗ್ರಹದಿಂದ ಸಮೃದ್ಧ ಮಳೆಯಾಗಿ ಬೆಳೆ ಬಂದು ನಾಡಿನ ಜನ ಸುಖ ಸಂತೋಷದಿಂದ ಬದುಕುವಂತೆ ಮಾಡಿದರು.
" ಶ್ರೀ ಸುಮತೀಂದ್ರತೀರ್ಥರ ಪರಮಾನುಗ್ರಹ "
ಸಾಕ್ಷಾತ್ ಹಂಸನಾಮಕ ಪರಮಾತ್ಮನಿಂದ ಅವಿಚ್ಚಿನ್ನವಾಗಿ ನಡೆದು ಬಂದ ಸತ್ಪರಂಪರೆಯಾದ ಜಗದ್ಗುರು ಶ್ರೀಮನ್ಮಧ್ವಾಚಾರ್ಯರ ಮೂಲ ಮಹಾ ಸಂಸ್ಥಾನಾಧೀಶ್ವರರಾದ ಶ್ರೀ ರಾಘವೇಂದ್ರಸ್ವಾಮಿಗಳ ಮಠದ ಶ್ರೀ ಸುಮತೀಂದ್ರತೀರ್ಥರು ಸಂಚಾರ ಕ್ರಮದಲ್ಲಿ ಮಲೇಬೆನ್ನೂರಿಗೆ ದಿಗ್ವಿಜಯ ಮಾಡಿದರು. ಸಾಧ್ವೀ ಗಿರಿಯಮ್ಮನವರ ಹರಿಭಕ್ತಿ - ಗುರುಭಕ್ತಿ - ತಪಃ ಪ್ರಭಾವವನ್ನು ಕಂಡು ಪುಳಕಿತರಾದರು.
ಶ್ರೀ ಸುಮತೀಂದ್ರತೀರ್ಥರು ಸಂಸ್ಥಾನ ಪೂಜೆಯನ್ನು ಮಾಡುವಾಗ ಶ್ರೀ ಬ್ರಹ್ಮ ಕರಾರ್ಚಿತ ಮೂಲರಾಮ - ಶ್ರೀಮದಾಚಾರ್ಯರ ಕರಾರ್ಚಿತ ದಿಗ್ವಿಜಯರಾಮ - ಶ್ರೀ ಜಯತೀರ್ಥರ ಕರಾರ್ಚಿತ ಶ್ರೀ ಜಯರಾಮದೇವರನ್ನು ಕಂಡು ಹೃದಯ ತುಂಬಿದ ಸಾಧ್ವೀ ಗಿರಿಯಮ್ಮನವರು ಭಕ್ತಿ ಪಾರವಶ್ಯದಿಂದ...
ರಾಗ : ಶಂಕರಾಭರಣ ತಾಳ : ತ್ರಿವಿಡಿ
ರಾಮ ಶ್ರೀ ರಘುನಂದನ ಶರಣು । ಸಾರ್ವ ।
ಭೌಮ ಭೂಸುರ ವಂದ್ಯ ।। ಪಲ್ಲವಿ ।।
ಸೋಮಶೇಖರ ಮಿತ್ರ ಕಾಮಿತ ಫಲದಾತ ।
ಕಾಮಧೇನು ವಿಶ್ವ ಭೀಮ ಸನ್ನುತ ಸೀತಾ ।। ಆ. ಪ ।।
ಕ್ರೂರ ದಾನವ ಸಂಹಾರ ಕೌಸಲ್ಯಾ ಕುಮಾರ । ಭೂ ।
ಭಾರ ಹರ ಭಜಕ ಜನೋದ್ಧಾರ ವೇದಾಂತಸಾರ ।
ಚಾರುವದನ ಮಣಿ ಹಾರ ಕುಂಡಲಧರ ।
ವೀರ ರಾಘವ ವಿಶ್ವಾಧಾರ ಕರುಣಿಸು ಸೀತಾ ।। ಚರಣ ।।
ಪಾಪ ರಹಿತ ಪಾವನ ಚರಿತ ಅಹಲ್ಯಾ ।
ಶಾಪ ಹರಣ ದಿವ್ಯ ರೂಪ ರಮಾರಮಣ ।
ತಾಪ ವಿಚ್ಛೇದನ ತಾಮಸ ಗುಣ ಹರಣ । ದ ।
ಯಾ ಪರಬ್ರಹ್ಮ ಸ್ವರೂಪ ಮೂರುತಿ ಸೀತಾ ।। ಚರಣ ।।
ಮದನಕೋಟಿ ಮೋಹನಾಂಗ ಮಾಧವ ಪುಣ್ಯಚರಿತ ।
ಕರುಣಾಪಾಂಗ ಹೆಳವನಕಟ್ಟೆ ರಂಗಯ್ಯ ।
ಸದಾನಂದ ಸುಮತೀಂದ್ರ ।
ಹೃದಯಾಬ್ಜ ಭೃಂಗ ।
ಕದನ ವಿಕ್ರಮ ಬಾಹು ಕೋದಂಡಧೃತ ಸೀತಾ ।। ಚರಣ ।।
ಎಂದು ಸ್ತೋತ್ರ ಮಾಡಿದಾಗ ಸ್ವಯಂ ಶ್ರೀ ರಾಮನೇ ಶಿಶು ರೂಪದಲ್ಲಿ ಸಾಧ್ವೀ ಗಿರಿಯಮ್ಮನವರ ಬಳಿಗೆ ಬಂದನೆಂದು ಎಲ್ಲರಿಗೂ ಅರಿವಾಯಿತು. ಸಾಧ್ವೀ ಗಿರಿಯಮ್ಮನವರ ತಾಯ್ತನಕ್ಕೆ ಸರಿಸಾಟಿಯಿಲ್ಲವೆಂದು ಎಲ್ಲರೂ ಕೊಂಡಾಡಿದರು.
ಸಾಧ್ವೀ ಗಿರಿಯಮ್ಮನವರು ಶ್ರೀ ಸುಮತೀಂದ್ರತೀರ್ಥರಲ್ಲಿ ತಪ್ತ ಮುದ್ರಾಧಾರಣೆಯನ್ನು ಕೊಡಬೇಕೆಂದು ಪ್ರಾರ್ಥಿಸಲು " ಶ್ರೀ ಹರಿಯೇ ಚಕ್ರಾಂಕನ ಮಾಡಿರುವ ನಿನ್ನಂಥವಳಿಗೆ ಚಕ್ರಾಂಕನ ಮಾಡುವ ಅಧಿಕಾರ ನಮಗೆಲ್ಲಿದೆಯಮ್ಮಾ? ಎಂದು ಶ್ರೀಗಳವರು ನುಡಿದರು!!
" ಶ್ರೀ ಸುಮತೀಂದ್ರತೀರ್ಥರಿಗೆ ಮಲೇಬೆನ್ನೂರಿನ ಶ್ಯಾನುಭೋಗರ ಮನೆಯಲ್ಲಿ ಭಿಕ್ಷೆ "
ಹೆಳವನಕಟ್ಟೆಯಾ ಸಾಧ್ವೀ ಗಿರಿಯಮ್ಮನವರ ಭಕ್ತಿಗೆ ಪ್ರಸನ್ನನಾಗಿ ಸಾಕ್ಷಾತ್ ಶ್ರೀಕೃಷ್ಣ ಪರಮಾತ್ಮನೇ ಅವರ ಕೈ ಕೂಸಾಗಿ ತೊಡೆಯ ಮೇಲಾಡುತ್ತಿದ್ದನಂತೆ.
ರಾಗ : ಸಾವೇರಿ ತಾಳ : ಆದಿ
ಶ್ರೀರಂಗ ಶ್ಯಾಮಲ ಕೋಮಲಾಂಗ ।
ಕ್ರೂರ ರಕ್ಕಸ ಕುಲ ನಿವಾರಣ ।
ನಾರದಾದಿ ವಂದ್ಯನೇ ।। ಪಲ್ಲವಿ ।।
ಮಾಣಿಕ್ಯ ಮೌಕ್ತಿಕ ಹಾರ ಧೀರ ।
ವಾಣೀಪತಿ ಪಿತ ವನಜ ನೇತ್ರನೇ ।
ವಾಣಿ ಬಾಹೊತ್ತಂಡದಿ ।।
ಚಾಣೂರ ಮರ್ದನ ಚಿದಾನಂದ ।
ವೇಣುನಾದ ಪ್ರಿಯ ದೇವನೇ ।
ಇನ ಕುಲಾಂಬುಧಿ ಚಂದ್ರನೇ ।। ಚರಣ ।।
ಅಕ್ರೂರ ಅಂಬರೀಷ ವರದ ।
ನಕ್ರ ಬಂಧನ ನಾಗಸ್ತ್ರೀ ರಕ್ಷಕ ।
ಚಕ್ರಧರ ಮುಕುಂದನೇ ।।
ರುಕ್ಮಿಣೀ ವಲ್ಲಭ ವಾಸುದೇವ ।
ಶಕ್ರ ಶಶಿಧರ ಶೇಷ ಸನ್ನುತ ।
ಸಕಲ ಲೋಕೋತ್ಪತ್ಯನೇ ।। ಚರಣ ।।
ನಿತ್ಯಾನಂದನೆ ನಿಗಮಗೋಚರನೆ ।
ಸತ್ಯಭಾಮೆ ಶ್ರೀ ಮನೋಹರ ।
ಮದನ ಶ್ರೀ ಗೋಪಾಲನೆ ।।
ಭಕ್ತವತ್ಸಲ ಭಯ ನಿವಾರಣ ।
ಕರ್ತು ಹೆಳವನಕಟ್ಟೆ ರಂಗನೇ ಕೃಪಾಂಗನೆ ।। ಚರಣ ।।
ಆದರೆ ಇಂಥಾ ಸಾಧ್ವೀಮಣಿಯ ಸಿದ್ಧಿ ಶುದ್ಧಿಗಳನ್ನು ಕಂಡು ಕರುಬುವ ಕಡು ಖಲರಿಗೆ ಆಗೇನು ಕೊರತೆ ಇರಲಿಲ್ಲ. ಸಾಧ್ವೀ ಗಿರಿಯಮ್ಮನಿಗೆ ಮಕ್ಕಳಾಗಿಲ್ಲವೆಂದು ಆ ಊರಿನಲ್ಲಿಯ ಜನರು ಅವರ ಕೈಯಿಂದ ಉಣ್ಣುತ್ತಿರಲಿಲ್ಲ.
ಶ್ರೀ ಸುಮತೀಂದ್ರತೀರ್ಥರು ಹೆಳವನಕಟ್ಟೆಯಲ್ಲಿರುವಾಗ ಮಲೇಬೆನ್ನೂರಿನ ಶ್ಯಾನುಭೋಗರ ಮನೆಯಲ್ಲಿ ಭಿಕ್ಷೆ ಏರ್ಪಾಟು ಆಯಿತು. ಸಂಸ್ಥಾನ ಪೂಜೆ ಮುಗಿದನಂತರ ತೀರ್ಥ ಕೊಡುವಾಗ ಅಪರೋಕ್ಷ ಜ್ಞಾನಿಗಳಾದ ಶ್ರೀಗಳವರು ಗಿರಿಯಮ್ಮ ಎಲ್ಲಿ ಎಂದು ಕೇಳಿದರು. ಆಗ ಮಠಾಧಿಕಾರಿಯೂ ಬಂದು..
" ಸ್ವಾಮೀ! ಅವಳು ಬಂಜೆ ಮತ್ತು ಹಲವಾರು ದೋಷಗಳು ಅವಳಲ್ಲಿವೆ. ತೀರ್ಥ ಸಾಗಲಿ "
ಎಂದು ಹೇಳಿದ!!
ಅದಕ್ಕೆ ಶ್ರೀ ಸುಮತೀಂದ್ರತೀರ್ಥರು...
ಏನೇ ಇರಲಿ ಇಂದು ಗಿರಿಯಮ್ಮನಿಗೆ ಮೊದಲು ತೀರ್ಥ ಎಂದರು. ಗಿರಿಯಮ್ಮ ಬಂದು ತೀರ್ಥಕ್ಕೆ ಕೈ ಒಡ್ಡಿದಳು. ಅದನ್ನು ನೋಡಿ ಶ್ರೀಗಳವರು...
ಚಕ್ರಪಾಣಿಯೇ ಮಗನಾಗಿರುವಾಗ ಇವಳು ಬಂಜೆಯೇ! ದೇವರನ್ನು ಎತ್ತಿ ಮುದ್ದಾಡಿ ಮಗುವನ್ನಾಗಿಸಿ ಲಾಲಿ ಮಾಡಿಸುವ ಇವಳ ಯೋಗ್ಯತೆ ಯಾರಿಗಿದೆ? ಎಣ್ಸು ಹೇಳಿ ಮೊದಲು ತೀರ್ಥವನ್ನು ಗಿರಿಯಮ್ಮನಿಗೆ ಕೊಟ್ಟರು!!
" ಸಾಧ್ವೀ ಗಿರಿಯಮ್ಮನವರ ಕೃತಿಗಳ ವೈಶಿಷ್ಟ್ಯ "
ಸಾಧ್ವೀ ಗಿರಿಯಮ್ಮನವರ ಕೃತಿಗಳಲ್ಲಿ ಬರುವ ಪಾತ್ರಗಳು ವೈವಿಧ್ಯತೆಯಿಂದ ಕೂಡಿರುತ್ತವೆ. ಒಂದರಂತೆ ಒಂದಲ್ಲ. ಮುಖ್ಯವಾಗಿ ಸ್ತ್ರೀ ಪಾತ್ರಗಳನ್ನು ಬಹು ಸಹಜವಾಗಿ ನಿರೂಪಿಸಿದ್ದಾರೆ. ಹೆಣ್ಣಿನ ಮನಸ್ಸಿನ ಆಸೆ, ಆಕಾಂಕ್ಷೆ, ನಿರೀಕ್ಷೆ, ಆಕೆಯ ಬದುಕಿನ ನೋವು - ನಲಿವು, ಸಮಾಜ ಆಕೆಯನ್ನು ಕಾಣುವ ರೀತಿ ಇವೆಲ್ಲವನ್ನೂ ಹೆಣ್ಣಿನ ಕೋಮಲ ಅಂತಃಕರಣದಿಂದ ತನ್ಮಯಳಾಗಿ ಚಿತ್ರಸಿದ್ದಾರೆ.
ಹೆಣ್ಣಿನ ಮುಖ್ಯ ಹಂತಗಳಾಗಿ ಬರುವ ಮದುವೆ, ಬಸಿರು, ಶ್ರೀಮಂತ, ತಾಯ್ತನ, ಪತಿ ಪ್ರೇಮ, ಪುತ್ರ ವಾತ್ಸಲ್ಯ ಮುಂತಾದವುಗಳನ್ನು ಆ ಸಂದರ್ಭಗಳಲ್ಲಿ ನಡೆಸುವ ಸಂಪ್ರದಾಯ - ಆಚರಣೆ - ವಿಧಿ - ವಿಧಾನಗಳನ್ನು ಬಹು ವಿಸ್ತಾರವಾಗಿ ಪರಿಚಯಿಸಿದ್ದಾರೆ!
" ಶ್ರೀ ಗೋಪಾಲದಾಸರ ಆಗಮನ "
ಹೀಗಿರುವಾಗ ಒಂದೊಮ್ಮೆ ಶ್ರೀ ಗೋಪಾಲದಾಸರು ಮಲೇಬೆನ್ನೂರಿಗೆ ಬಂದಾಗ ಸಾಧ್ವೀ ಗಿರಿಯಮ್ಮನವರು ರಂಗವಲ್ಲಿಯಲ್ಲಿ ಚಿತ್ರಿಸಿದ ಶ್ರೀ ರಂಗನಾಥನ ಕಂಡು ಆಶ್ಚರ್ಯ ಪಟ್ಟು, ತಮಗೆ ಒಲಿದು ಬಂದ ಶ್ರೀ ಗೋಪಾಲಕೃಷ್ಣನ ವಿಗ್ರಹವನ್ನು ಕೊಟ್ಟು ಅನುಗ್ರಹಿಸಿದರು. ಅಂದಿನಿಂದ ಶ್ರೀ ಗಿರಿಯಮ್ಮನವರ ಜೀವನ ಕ್ರಮವೇ ಬದಲಾಗಿ ಅವರ ವದನಾರವಿಂದದಲ್ಲಿ ಗೋವಿಂದ ನಾಮ ಸಂಕೀರ್ತನ ಕವಿತಾ ಝರಿ ಹರಿಯ ತೊಡಗಿತು.
" ಸಾಹಿತ್ಯ ಕ್ಷೇತ್ರದಲ್ಲಿ ಸಾಧ್ವೀ ಗಿರಿಯಮ್ಮನವರದು ವಿಶಿಷ್ಟವಾದ ಸ್ಥಾನ "
ಸಾಹಿತ್ಯ ಕ್ಷೇತ್ರದಲ್ಲಿ ಮುಖ್ಯವಾಗಿ ಗುರುತಿಸಲ್ಪಟ್ಟ ಕವಯಿತ್ರಿಯರು ಮೂವರು. ಅವರಲ್ಲಿ ಸಾಧ್ವೀ ಗಿರಿಯಮ್ಮನವರು ವಿಶಿಷ್ಟ ಹಾಗೂ ವೈಶಿಷ್ಟ್ಯ ಪೂರ್ಣವಾದ ಸ್ಥಾನವನ್ನು ಪಡೆದಿದ್ದಾರೆ.
೧. ಸಾಧ್ವೀ ಅಕ್ಕ ಮಹಾದೇವಿ
೨. ಸಾಧ್ವೀ ಸಂಚಿ ಹೊನ್ನಮ್ಮ
೩. ಸಾಧ್ವೀ ಹೆಳವನಕಟ್ಟೆ ಗಿರಿಯಮ್ಮ
ಅನೇಕ ಪವಾಡ - ಪ್ರಭಾವಗಳನ್ನು ತೋರಿಸಿ ಭಗವಾನ್ಮಾಹಾತ್ಮ್ಯವನ್ನೂ, ಭಕ್ತರ ಯೋಗ್ಯತೆಗಳನ್ನೂ ಜಗತ್ತಿನ ನಿದರ್ಶನಕ್ಕೆ ತಂದುಕೊಟ್ಟ ಸಾಧ್ವೀ ಗಿರಿಯಮ್ಮನವರು ದಾಸ ಸಾಹಿತ್ಯ ಕ್ಷೇತ್ರದಲ್ಲಿ ವನಿತಾ ವಿಭಾಗವು ವಿಶಿಷ್ಟ ಮಾನ ಮನ್ನಣೆ ಪಡೆಯುವಂತೆ ಮಾಡಿದ್ದಾರೆ.
" ಸಾಧ್ವೀ ಗಿರಿಯಮ್ಮನವರ ಕೃತಿಗಳು "
ಸಾಧ್ವೀ ಗಿರಿಯಮ್ಮನವರ ಕೀರ್ತನೆಗಳಲ್ಲಿ ಭಕ್ತಿ ಪೂರ್ಣವಾದ ದೇವತಾ ಸ್ತುತಿ, ಆತ್ಮ ನಿವೇದನೆ, ಲೋಕ ನೀತಿಗಳಿವೆ.
ಸಾಧ್ವೀ ಗಿರಿಯಮ್ಮನವರ ಒಂದೇ ಒಂದು ಉಗಾಭೋಗ ಬಿಟ್ಟರೆ ಎಲ್ಲಾ ಸಾಹಿತ್ಯವೂ ಪಲ್ಲವಿ - ಅನುಪಲ್ಲವಿ ನುಡಿಗಳುಳ್ಳ ಕೀರ್ತನೆಗಳು.
ಭಗವಂತನ ಕೀರ್ತನೆಗಳಲ್ಲಿ ಮಧುರ ಹಾಗೂ ವಾತ್ಸಲ್ಯ ಭಾವವನ್ನೂ, ಆತನ ಅಪಾರ ಶಕ್ತಿಯಲ್ಲಿ ನಂಬಿಕೆ, ನಂಬಿದವರನ್ನು ಕಾವ ಅವನ ಕಾರುಣ್ಯವನ್ನೂ ಸಾಧ್ವೀ ಗಿರಿಯಮ್ಮನವರು ಬಗೆ ಬಗೆಯಾಗಿ ವರ್ಣಿಸಿದ್ದಾರೆ.
ಸಾಧ್ವೀ ಗಿರಿಯಮ್ಮನವರದ್ದು ಮಾತೃ ವಾತ್ಸಲ್ಯದ ಮಮತೆ ತುಂಬಿದ ಮನಸ್ಸು. ಆಕೆ ಕೌಸಲ್ಯಾ - ಯಶೋದೆ ಎಂದು ಭಾವಿಸಿ ಶ್ರೀ ಪರಮಾತ್ಮನನ್ನು ಮಗನೆಂದು ಲಾಲಿಸಿ; ಶ್ರೀ ಕೃಷ್ಣನ ಬಾಲ ಲೀಲೆಗಳನ್ನೂ ಹಾಗೂ ಕೀರ್ತನೆಗಳಲ್ಲಿ ದಶಾವತಾರಗಳನ್ನೂ ಬಹು ಸುಂದರವಾಗಿ ವಾತ್ಸಲ್ಯ ಭಾವದಿಂದ ಹಾದಿ ಹೊಗಳುತ್ತಾ ಶ್ರೀ ಕೃಷ್ಣನನ್ನು ನಾನಾ ಪರಿಯಿಂದ ಆರಾಧಿಸಿದವರು.
ಹೀಗೆ ಚಿಕ್ಕ ಚಿಕ್ಕ ಮಾತುಗಳಲ್ಲಿ ಹಾಗೂ ದೀರ್ಘ ಕೃತಿಗಳಲ್ಲೂ ರೀ ಪರಮಾತ್ಮನನ್ನು ಸ್ತುತಿಸುವ ಸಂದರ್ಭದಲ್ಲೂ ದಶಾವತಾರವನ್ನು ಸಾಧ್ವೀ ಗಿರಿಯಮ್ಮನವರು ಸೂಚಿಸಿದ್ದಾರೆ ಮತ್ತು ದಶಾವತಾರದಂತೆ ರಾಮಾಯಣ - ಮಹಾಭಾರತ - ಶ್ರೀಮದ್ಭಾಗವತಗಳಲ್ಲಿನ ಘಟನೆಗಳನ್ನು ಸಂದರ್ಭಯೋಚಿತವಾಗಿ ಸಾಧ್ವೀ ಗಿರಿಯಮ್ಮನವರು ಬಿಡಿಸಿದ್ದಾರೆ!!
ಸಾಧ್ವೀ ಗಿರಿಯಮ್ಮನವರಿಂದ ಬರೆಯಲ್ಪಟ್ಟ ಸೀತಾಕಲ್ಯಾಣ, ಚಂದ್ರಹಾಸ ಚರಿತ್ರೆ, ಶಂಕರ ಗಂಡನ ಹಾಡು, ಕೃಷ್ಣ ಕೊರವಂಜಿ, ಗಿಳಿ ಪಾರಿಜಾತ, ಗಜೇಂದ್ರ ಮೋಕ್ಷ ಮೊದಲಾದ ದೀರ್ಘ ಕಾವ್ಯಗಳನ್ನು ರಚಿಸುವುದರೊಂದಿಗೆ ಪದ ಪದ್ಯಗಳನ್ನು ರಚಿಸಿ ಹರಿದಾಸ ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸಿದ್ದಾರೆ ಹಾಗೂ ಕೃತಿಗಳೂ ಒಂದೊಂದು ರಸ ಘಟ್ಟಗಳೇ ಆಗಿ ಕಂಗೊಳಿಸುತ್ತವೆ.
" ಬ್ರಹ್ಮ ಕೊರವಂಜಿ " ಕಂಸನ ಬಂದಿಖಾನೆಯಲ್ಲಿದ್ದ ದೇವಕಿಯ ದುಃಖವನ್ನು ಕಡಿಮೆ ಮಾಡಲಿಕ್ಕಾಗಿಯೇ ಪರಮಾತ್ಮನು ಕೊರವಂಜಿಯ ವೇಷ ತಳೆದು ಕೃಷ್ಣಾವತಾರದ ಕಥೆ ಹೇಳಿ ಕಂಸನ ಮೃತ್ಯುವನ್ನು ಸಾರಿ ಆ ತಾಯಿಯನ್ನು ಸಮಾಧಾನ ಪಡಿಸುತ್ತಾನೆ.
" ಲವ ಕುಶರ ಕಾಳಗ "
ಗಿರಿಯಮ್ಮನವರು ಲವಕುಶರ ಕವಯಿತ್ರಿಯ ಕಲ್ಪನೆಯು ಗರಿಗೆಗರಿ ರಾಮಾಯಣದ ಉತ್ತರಕಾಂಡದ ಕಥೆಗೆ ಹೊಸ ರೂಪವನ್ನೇ ಕೊಟ್ಟಿದೆ. ಕೊಟ್ಟ ಅಪಶಬ್ದದಿಂದ ರಾಮನು ಸೀತೆಯನ್ನು ಕಾಡಿಗಟ್ಟಿದ ಸನ್ನಿವೇಶವನ್ನು ಬದಲಿಸಿ ಅದನ್ನು ಇನ್ನೊಂದು ರೀತಿಯಲ್ಲಿ ಹೇಳಲಾಗಿದೆ.
ಮುಂದೆ ಸೀತೆಯಿಂದ ಜನಿಸಿದ ಲವ ಕುಶರು ರಾಮನ ಯಜ್ಞಾಶ್ವವನ್ನು ಕಟ್ಟಿ ಹಾಕಿದಾಗ ರಾಮನಿಗೂ, ಅವರಿಗೂ ಯುದ್ಧವಾಗಿ ವಾಲ್ಮೀಕೀ ಮಹರ್ಷಿಗಳು ಆ ತಂದೆ ಮಕ್ಕಳನ್ನೂ ಸೀತೆಯನ್ನೂ ಒಂದು ಗೂಡಿಸುವರು. ಈ ಕಾವ್ಯವು ಅತ್ಯಂತ ಹೃದಯಂಗಮವಾಗಿದೆ.
" ಉದ್ದಾಲಕನ ಹಾಡು "
ಇದು ೫೦೦ ಪದ್ಯಗಳ ದೀರ್ಘವಾದ ಕಾವ್ಯವಾಗಿದ್ದು ಕಲ್ಪನಾ ರಮಣೀಯತೆಯಿಂದ ವಿಶಿಷ್ಟವಾದ ಸೊಬಗುಗಾರಿಕೆಯನ್ನು ಪಡೆದಿದೆ.
ಕನ್ನಡದಲ್ಲಿ ಶ್ರೀ ಕನಕದಾಸರ ನಂತರ ದಾಸ ಸಾಹಿತ್ಯ ಮತ್ತು ಕಾವ್ಯ ಕ್ಷೇತ್ರ ಎರಡರಲ್ಲೂ ಸರಿಯಾಗಿ ಕೃಷಿ ಮಾಡಿ ಕವಿತೆ - ಕೀರ್ತನೆಗಳನ್ನು ಬರೆದ ಕಾಲವೇ ಕೆಲವು ಕವಯಿತ್ರಿಗಳಲ್ಲಿ ಸಾಧ್ವೀ ಗಿರಿಯಮ್ಮನವರೇ ಅಗ್ರಣೀ ಆಗಿದ್ದಾರೆ.
" ತುಂಗಭದ್ರೆಯಲ್ಲಿ ಲೀನ "
ಸಾಧ್ವೀ ಗಿರಿಯಮ್ಮನವರು ಪುಣ್ಯ ಕ್ಷೇತ್ರಗಳ ಸಂದರ್ಶನ ಮಾಡುತ್ತಾ ದಾಗಿನಗಟ್ಟೆ ಶ್ರೀ ನರಸಿಂಹಸ್ವಾಮಿಯ ಪರಮ ಪವಿತ್ರವಾದ ಸನ್ನಿಧಾನಕ್ಕೆ ಬಂದು...
ರಾಗ : ಧನ್ಯಾಸಿ ತಾಳ : ಮಿಶ್ರಛಾಪು
ಶ್ರೀ ನರಸಿಂಹದೇವ ಶರಣಾಗತ ರಕ್ಷಕನೆ ।
ದಾನವಾರಿ ಸುಭಕ್ತಾಧೀನ ಮೂರುತಿಯೆ ।। ಪಲ್ಲವಿ ।।
ಹರಿ ತನ್ನ ದೈವವೆಂದು ಸ್ಮರಿಸುತಿರಲು ಬಾಲ ।
ನಿರವ ಕಾಣದೆ ದುಷ್ಟ ಹಿರಣ್ಯಾಕಾಸುರನು ।
ಪರಿ ಪರಿ ಹಿಂಸಿಸೆ ಮೊರೆದು ಕೋಪದೊಳೆದ್ದು ।
ತರಳಗೊಲಿದೆ ಬಹು ಕರುಣಾನಿಧಿಯೇ ।। ಚರಣ ।।
ಛಿಟಿಛಿಟಿಲೆಂದಾರ್ಭಟಿಸಿ ಕಂಭವು ಸಿಡಿಯೇ ।
ಕಟಿಕಟಿ ಮಸೆದಗ್ನಿ ನಿಟ್ಟುಸಿರಿನಿಂ ಹಲ್ಗಳ ।
ಕಟಕಟ ಕಡಿವುತುಬ್ಬನ ತೋರಿ ನಿಂದ ।
ಕಠಿಣ ಮೂರುತಿಯೇ ।। ಚರಣ ।।
ಕೊಬ್ಬಿದ ಹಿರಣ್ಯಕನೊಬ್ಬ ಮುರಿವೆನೆಂದು ।
ಹೆಬ್ಬಾಗಿಲೊಳು ಸಂಜೆ ಮಬ್ಬಿನಲಿ ದನುಜನ ।
ಗರ್ಭವ ನಖದಿಂದ ಇಬ್ಭಾಗವನು ಮಾಡಿ ।
ಹೆಬ್ಬಿದ ಕರುಳನು ಹರುಷದಿ ಧರಿಸಿದೆ ।। ಚರಣ ।।
ಭೀತರಾದ ಸುರವ್ರಾತ ಪ್ರಾರ್ಥಿಸೆ ಬಹು ।
ಪ್ರೀತಿಯ ಭಕ್ತನ ಮಾತನು ಮನ್ನಿಸಿ । ಅತಿ ।
ಶಾಂತನಾಗಿ ಸಂತೋಷ ಪಡಿಸಿದ । ಆ ।
ನಾಥ ರಕ್ಷಕನೇ ಕಾತರವಳಿದೆ ।। ಚರಣ ।।
ಖಳನ ಮರ್ದಿಸಿ ಬಹು ಇಳೆಯ ಪಾಲಿಸಿದೆ ।
ನಳಿನ ಸಂಭವಗೆ ಬಲು ಹರುಷವನಿತ್ತೆ ।
ಹೆಳವನಕಟ್ಟೆ ಶ್ರೀ ರಂಗ ದ್ಯಾಗಿನಗಟ್ಟೆ ।
ನೆಲೆವಾಸ ಕಂಬದ ನರಸಿಂಹದೇವಾ ।। ಚರಣ ।।
ಎಂದು ಪ್ರಾರ್ಥಿಸಿ ಧ್ಯಾನಾಸಕ್ತರಾಗಿದ್ದಾಗ " ಕೊಮ್ಮಾರಗಟ್ಟೆಗೆ ಹೋಗು ಅಲ್ಲಿ ಮಾರುತಿಯ ದರ್ಶನವಾಗುತ್ತದೆ " ಎಂದು ಶ್ರೀ ನೃಸಿಂಹನು ಸೂಚಿಸಿದನು.
ಅದರಂತೆ ಸಾಧ್ವೀ ಗಿರಿಯಮ್ಮನವರು ಕಮ್ಮಾರಗಟ್ಟೆಗೆ ಬಂದರು. ತುಂಬಿ ಹರಿಯುತ್ತಿದ್ದ ತುಂಗಭದ್ರಾ ನದಿಯನ್ನೂ; ನಯನ ಮನೋಹರವಾಗಿ ಕಂಗೊಳಿಸುತ್ತಿದ್ದ ನಿಸರ್ಗ ಸೊಬಗನ್ನು ಕಂಡು ಸಾಧ್ವೀ ಗಿರಿಯಮ್ಮನವರ ಭಾವುಕ ಮನಸ್ಸು ಆನಂದಪಟ್ಟಿತು. ಸಹಜ ಭಕ್ತೆಯಾದ ಅವರು ಅಂತರ್ಮುಖಿಯಾದರು.
ರಾಗ : ಪಹಡಿ ತಾಳ : ಆದಿ
ಏನಿದು ಬಯಲ ಪಾಶ ನೋಡಿದರಿಲ್ಲ ।
ಏನು ಹುರುಡುಗಾಣೆನೋ ।
ನಾನಾ ಜನ್ಮದಿ ಬಂದು ಹೊಂದಲಾರೆನೋ ನಿನ್ನ ।
ಧ್ಯಾನವ ಕೊಡೊ ಅಭಿಮಾನದೊಡೆಯ ರಂಗ ।। ಪಲ್ಲವಿ ।।
ನೀರಬೊಬ್ಬಳಿಯಂದದಿ ದೇಹವ ನೆಚ್ಚಿ ।
ದೂರು ಹೊತ್ತೆನು ಹರಿಯೇ ।
ಯಾರು ಎನಗೆ । ಸರಿಯಿಲ್ಲನೆಂಬಹಂ ।।
ಕಾರ ಪ್ರಪಂಚದ ಬಂಧನದೊಳು ಸಿಲುಕಿ ನೊಂದೆನೋ ।
ಹರಿ ನಿಮ್ಮ ನಾಮವ ನೆನಿಯದ ।
ಎಂದೆಂದಿಗೆನಗಿತ್ತು ಸದ್ಗತಿ ತೋರೋ ।। ಆ. ಪ ।।
ಬಡವರಾಧಾರಿ ಕೇಳೋ ಸಂಸಾರದ ।
ಮಾಡುವಿನೊಳಗೆ ಧುಮುಕಿ ।
ಕಡೆಹಾಯಿಸೋ ಕೈ ಪಿಡಿದು ಕೃಪೆಯೊಳೆನ್ನ ।
ದಡವ ಸೇರಿಸೋ ಜಗದೊಡೆಯ ಶ್ರೀ ರಂಗಯ್ಯ ।। ಚರಣ ।।
ಸುತ್ತೆಲ್ಲ ಬಂಧು ಬಳಗ ನವ ಮಾಸದಿ ।
ಹೊತ್ತು ಪಡೆದ ಜನನಿ ।
ಪುತ್ರ ಸಹೋದರರ ಘಳಿಗ್ಯಗಲಲಾರದೆ ।
ಮತ್ತೆ ಯಮನವರೊಯ್ವಾಗ ಯಾರು ಸಂಗಡಯಿಲ್ಲ ।। ಚರಣ ।।
ಆಸೆಯೆಂಬುದು ಬಿಡದು ಈ ಭುವನದೊಳ್ ।
ಲೇಸುಗಾಣೆನು ಹರಿಯೇ ।
ಭಾಷೆಯ ಕೊಡು ಮುಂದೆ ಜನುಮ ಬಾರದ ಹಾಗೆ ।
ಈಶ ಸನ್ನುತ ಹೆಳವನಕಟ್ಟೆ ರಂಗಯ್ಯ ।। ಚರಣ ।।
ಎಂದು ಪ್ರಾರ್ಥಿಸುತ್ತಾ ಮಾರುತಿಯ ದರ್ಶನಕ್ಕಾಗಿ ಹಂಬಲಿಸುತ್ತಾ ನಿಂತಿದ್ದ ಸಾಧ್ವೀ ಗಿರಿಯಮ್ಮನವರಿಗೆ ಎದುರಿಗಿದ್ದ ದೊಡ್ಡದಾದ ಹುಣಿಸೇಮರದ ಮೇಲೆ ಚಿಕ್ಕದಾದ ಕಪಿಯೊಂದು ಕುಳಿತಿರುವುದು ಕಂಡು ಬಂದಿತು. ಆಕೆ ನೋಡುತ್ತಿದ್ದಂತೆಯೇ ಆ ಕಪಿ ಕೆಳಗೆ ಜಿಗಿದು ಬೃಹದಾಕಾರವಾಗಿ ಬೆಳೆದು ನಿಂತಿತು. ಕ್ಷಣ ಮಾತ್ರದಲ್ಲಿ ಶ್ರೀ ಮಾರುತಿಯ ದಿವ್ಯ ಭವ್ಯ ರೂಪ ಗೋಚರವಾಯಿತು.
ಸಕಲ ಜೀವರಲ್ಲಿ ಅನವರತ ಶ್ವಾಸ ಜಪಗಳನ್ನು ಮಾಡುತ್ತಾ ಶ್ರೀ ಮುಖ್ಯಪ್ರಾಣನಾಗಿ ಮೆರೆಯುತ್ತಿರುವ ಜೀವೋತ್ತಮರನ್ನು ಕಂಡು ಸಾಧ್ವೀ ಗಿರಿಯಮ್ಮನವರು ಪುಳಕಿತರಾದರು.
ದರ್ಶನ ನೀಡಿ ಅನುಗ್ರಹಿಸಿದ ಶ್ರೀ ಮಾರುತಿಯ ಮೂರುತಿಯೊಂದನ್ನು ಅಲ್ಲಿ ಪ್ರತಿಷ್ಠಾಪಿಸಿ ಮನದಣಿಯೆ ಆತನನ್ನು ಆರಾಧಿಸಿದರು. ಶ್ರಾವಣ ಶುದ್ಧ ಪಂಚಮಿಯ ದಿವಸ ಶುದ್ಧ ಮನದಿಂದ ಪೂರ್ಣ ಪ್ರವಾಹವಿದ್ದ ತಂಗಭದ್ರಾ ನದಿಯ ಕಡೆಗೆ ನಡೆದರು. ನೋಡು ನೋಡುತ್ತಿದ್ದಂತೆಯೇ ನದಿಯೊಳಗೆ ಮುಂದೆ ಸಾಗಿ ಕ್ರಮೇಣ ಕಲರವ ಗೈಯುತ್ತಾ ಹರಿಯುತ್ತಿದ್ದ ತುಂಗಭದ್ರೆಯ ಪರಮ ಪಾವನ ತರಂಗಗಳಲ್ಲಿ ಸಾಧ್ವೀ ಗಿರಿಯಮ್ಮನವರು ಲೀನವಾಗಿ ಹೋದರು!!
" ಉಪ ಸಂಹಾರ "
ಸಾಧ್ವೀ ಗಿರಿಯಮ್ಮನವರ ದೇವರ ನಾಮಗಳಲ್ಲಿ ಗಜೇಂದ್ರನ ಮೊರೆಯಿದೆ. ದ್ರೌಪದಿಯ ಕರೆಯಿದೆ. ಧ್ರುವನ ಕರುಣೆಯ ಕೂಗಿದೆ. ಪ್ರಹ್ಲಾದನ ಆತ್ಮ ನಿವೇದನೆಯಿದೆ. ನಾರದರ ಭಕ್ತಿಯ ಉದ್ರೇಕವಿದೆ. ಪುಂಡರೀಕನ ಆರ್ತತೆಯಿದೆ. ಆದುದರಿಂದ ಸಾಧ್ವೀ ಗಿರಿಯಮ್ಮನವರು ಕೆರೆದಾಗೆಲ್ಲ ಕಣ್ಣು ತೆರೆದಿದ್ದಾನೆ ಕರುಣೆಯ ಕೈವಾರಿಯಾದ ಜಗದೀಶ್ವರನು!!
ಕನ್ನಡದಲ್ಲಿ ಕನಕದಾಸರ ನಂತರ ದಾಸ ಸಾಹಿತ್ಯ ಹಾಗೂ ಕಾವ್ಯ ಕ್ಷೇತ್ರ ಎರಡರಲ್ಲಿ ಸರಿಯಾಗಿ ಕೃಷಿ ಮಾಡಿ ಕವಿತೆ, ಕೀರ್ತನೆಗಳೆರಡನ್ನೂ ಬರೆದ ಕೆಲವೇ ಹರಿದಾಸರಲ್ಲಿ ಸಾಧ್ವೀ ಗಿರಿಯಮ್ಮನವರು ಅಗ್ರಣೀ ಆಗಿದ್ದಾರೆ.
ಹೆಣ್ಣು ಮಕ್ಕಳಲ್ಲಿಯಂತೂ ಹೀಗೆ ಶ್ರೇಷ್ಠ ಕಾವ್ಯ ಕರ್ತ್ರಿಯಾಗಿಯೂ, ಅನೇಕ ಕೀರ್ತನೆಗಳ ರಚಯಿತ್ರಯೂ ಆದ ಕಲ್ಪನಾ ಕುಶಲ ಕವಿ ಕಾಮಿನಿ ಎಂದರೆ ಪ್ರಾಯಃ ಸಾಧ್ವೀ ಗಿರಿಯಮ್ಮನರೊಬ್ಬರೇ ಎಂದು ತೋರುತ್ತದೆ.
ಒಟ್ಟಿನಲ್ಲಿ ಸಾಧ್ವೀ ಗಿರಿಯಮ್ಮನವರ ಕೃತಿಗಳನ್ನು ನೋಡಿದಾಗ ಅಲ್ಲಿ ತಾತ್ವಿಕ ವಿಚಾರಗಳಾಗಲೀ, ಮತೀಯ ಜಿಜ್ಞಾಸೆಗಳಾಗಲೀ, ಶುಷ್ಕ ತರ್ಕವಾಗಲೀ ಕಂಡು ಬರದೇ; ಭಕ್ತೆಯೊಬ್ಬಳ ನಿರ್ಮಲ ಹೃದಯದಿಂದ ಸಹಜವಾಗಿ ಹೊರಹೊಮ್ಮಿದ ಕಾವ್ಯಾತ್ಮಕ - ಭಾವನಾತ್ಮಕ ಅಂತರಂಗದ ಕರೆ ಕೇಳಿ ಬರುತ್ತದೆ.
ಇಂಥಹಾ ಸಾಧ್ವೀ ಹೆಳವನಕಟ್ಟೆ ಗಿರಿಯಮ್ಮನವರು ದಾಸ ಸಾಹಿತ್ಯ ಕ್ಷೇತ್ರಕ್ಕೆ ಅತ್ಯದ್ಭುತವಾದ ಸೇವೆ ಸಲ್ಲಿಸಿ ಶ್ರಾವಣ ಶುದ್ಧ ಪಂಚಮೀ ( ನಾಗ ಪಂಚಮೀ ) ಕೋಮಾರನಹಳ್ಳಿ ತುಂಗಭದ್ರೆಯಲ್ಲಿ ಲೀನವಾಗಿ ಶ್ರೀ ರಂಗನಾಥನ ಧಾಮವನ್ನು ಸೇರಿದರು!!
ಆಚಾರ್ಯ ನಾಗರಾಜು ಹಾವೇರಿ
ಗುರು ವಿಜಯ ಪ್ರತಿಷ್ಠಾನ
****

ಗಿರಿಯಮ್ಮನ ಜೀವನ ವಿಚಾರ

ಹರಿದಾಸ ಪರಂಪರೆಯಲ್ಲಿ ಕೃತಿ ರಚನೆ ಮಾಡಿದ ಮಹಿಳೆಯರಲ್ಲಿ ಹೆÀಳವನಕಟ್ಟೆ ಗಿರಿಯಮ್ಮನ ಸ್ಥಾನ ಬಹು ಎತ್ತರದ್ದು. ಈಕೆಯ ಜನ್ಮಸ್ಥಳ ಧಾರವಾಡ ಜಿಲ್ಲೆಯ ರಾಣಿ ಬೆನ್ನೂರು. ತಂದೆಯ ಹೆಸರು ಭೀಷ್ಮಪ್ಪ ಜೋಯಿಸರು. ಹುಟ್ಟಿದ ದಿನಾಂಕವಾಗಲಿ, ಎಷ್ಟು ವರ್ಷ ಬದುಕಿದ್ದಳೆಂಬ ಬಗ್ಗೆಯಾಗಲಿ, ಖಚಿತ ಮಾಹಿತಿ ದೊರೆಯುವುದಿಲ್ಲ. ಆದರೆ ಈವÀರೆಗೆ ಬಂದಿರುವ ಆಕೆಗೆ ಸಂಬಂಧ ಪಟ್ಟ ಕೃತಿಗಳು ಹಾಗೂ ಲೇಖನಗಳ ಆಧಾರದಿಂದ ಆಕೆ ಬದುಕಿದ್ದ ಕಾಲವನ್ನು ಊಹಿಸಬಹುದಾಗಿದೆ. ಶ್ರೀ ರಾಘವೇಂದ್ರ ಮಠಾಧೀಶರಾಗಿದ್ದ ಶ್ರೀ ಸುಮತೀಂದ್ರ ತೀರ್ಥರನ್ನು ಮತ್ತು ಉತ್ತರಾದಿ ಮಠಾಧೀಶರಾಗಿದ್ದ ಶ್ರೀ ಸತ್ಯಬೋಧ ತೀರ್ಥರನ್ನು ತನ್ನ ಕೃತಿಗಳಲ್ಲಿ ಉಲ್ಲೇಖಿಸಿರುವುದರಿಂದಲೂ ಹಾಗೂ ಶ್ರೀ ಗೋಪಾಲದಾಸರಿಂದ ಬಾಲಗೋಪಾಲನ ಮೂರ್ತಿಯನ್ನು, ಮುದ್ರಿಕೆಯನ್ನು ಪಡೆದು ಅನುಗ್ರಹಿತಳಾಗಿದ್ದಳೆಂದು ತಿಳಿದು ಬರುವುದರಿಂದಲೂ 'ಚಂದ್ರಹಾಸನ ಕಥೆ’ಯಲ್ಲಿ ಲಕ್ಷ್ಮೀಶ ಕವಿ ತನ್ನ ಜೈಮಿನಿ ಭಾರತದಲ್ಲಿ ಹೇಳಿದ ಚಂದ್ರಹಾಸನ ಕಥೆಯನ್ನೇ 'ಚರಿತೆಯ ಮಾಡಿ ವರ್ಣಿಸುವೆ’ ಎಂದು ಹೇಳಿಕೊಂಡಿರುವುದರಿಂದಲೂ ಈಕೆ ಲಕ್ಷ್ಮೀಶನ ಕಾಲವಾದ ಸುಮಾರು ಕ್ರಿ.ಶ.1700 ಅನಂತರದಲ್ಲಿ ಇದ್ದಳೆಂಬುದು ಖಚಿತ. ಸುಮತೀಂದ್ರ ತೀರ್ಥರ ಕಾಲ ಕ್ರಿ.ಶ.1691 ರಿಂದ 1725. ಸತ್ಯಬೋಧರ ಕಾಲ ಕ್ರಿ.ಶ.1744 ರಿಂದ 1793. ಗೋಪಾಲದಾಸರ ಕಾಲ ಕ್ರಿ.ಶ. 1721 ರಿಂದ 1763. ಇವೆಲ್ಲವನ್ನು ಗಮನಿಸಿದಾಗ ಒಟ್ಟಿನಲ್ಲಿ ಈಕೆ 18ನೆಯ ಶತಮಾನದ ಪೂರ್ವಾಧರ್Àದಲ್ಲಿ ಬದುಕಿದ್ದಳೆಂದು ಹೇಳಬಹುದು.

ಗಿರಿಯಮ್ಮನ ಜೀವನ ಚರಿತ್ರೆ ಬಹಳಷ್ಟು ಪವಾಡಗಳಿಂದ ವರ್ಣರಂಜಿತ-ವಾಗಿದೆ. ಸತ್ಯಾಂಶಗಳನ್ನು ಅವುಗಳಿಂದ ಹುಡುಕಿ ತೆಗೆಯಬೇಕಾಗಿದೆ. ಅಲ್ಲೊಮ್ಮೆ ಇಲ್ಲೊಮ್ಮೆ ಕ್ವಚ್ಚಿತ್ತಾಗಿ ದೊರೆಯುವ ಕೆಲವು ಎಳೆಗಳನ್ನು ಬಿಟ್ಟರೆ ಗಿರಿಯಮ್ಮ ತನ್ನ ಕೃತಿಗಳಲ್ಲಿ ಸ್ವಂತ ಬದುಕಿನ ವಿವರಗಳನ್ನು ನೀಡಿಲ್ಲ. ಆಕೆ ನೀಡಿರುವ ಸೂಚನೆಯ ಎಳೆಗಳ ಆಧಾರದಿಂದ ಆಕೆಯ ಬದುಕಿನ ಚಿತ್ರವನ್ನು ನೇಯಬೇಕಾಗಿದೆ.

ತಂದೆ ತಾಯೆಂಬುದನು ನಾನೊಂದು

ಗುರುತವನರಿಯೆ ನಿಮ್ಮ ಕಂದಳೆನಿಸಿ ಕಡೆಹಾಯಿಸೊ ಹೆಳವನಕಟ್ಟೆ ರಂಗ

ಎಂದು ಹೇಳಿರುವುದನ್ನು ನೋಡಿದರೆ ಆಕೆಗೆ ಚಿಕ್ಕಂದಿನಲ್ಲೇ ಹೆತ್ತವರನ್ನು ಕಳೆದುಕೊಂಡ ತಬ್ಬಲಿತನದ ಯಾತನೆ ತೀವ್ರವಾಗಿ ತಟ್ಟಿರಬೇಕು ಎನಿಸುತ್ತದೆ. ಚಿಕ್ಕಪ್ಪನ ಆಶ್ರಯದಲ್ಲಿ ಬೆಳೆದ ಹುಡುಗಿ, ಹರಿಯೇ ತನ್ನ ಬದುಕಿನ ಆಧಾರ ಎಂಬ ದೃಢ ವಿಶ್ವಾಸದಿಂದ ಹಾಗೂ ಮನೆಯ ಪರಿಸರದ ಪ್ರಭಾವದಿಂದ ದೈವಭಕ್ತಳಾಗಿ ರೂಪುಗೊಂಡಿರಬೇಕು. ಆಗಿನ ಕಾಲದ ರೂಢಿಯಂತೆ, 10-12 ವರ್ಷಕ್ಕೇ ಹರಿಹರ ತಾಲ್ಲೂಕಿನ ಮಲೆಬೆನ್ನೂರಿನ ಶಾನುಭೋಗ ಕೃಷ್ಣಪ್ಪನವರ ಮಗ ತಿಪ್ಪರಸನೊಂದಿಗೆ ಗಿರಿಯಮ್ಮನ ಮದುವೆ ನಡೆಯಿತು. ಸಂಸಾರದಲ್ಲಿ ಆಸಕ್ತಿ ಇಲ್ಲದ ಗಿರಿಯಮ್ಮ ವಿರಕ್ತಳಾಗಿ ಸ್ವಲ್ಪ ಕಾಲದಲ್ಲೇ ತನ್ನ ನಿಲುವನ್ನು ಅತ್ತೆ ಮಾವಂದಿರಿಗೂ ಪತಿಗೂ ತಿಳಿಸಿ ಗಂಡನಿಗೆ ಮತ್ತೊಂದು ಮದುವೆ ಮಾಡಿಸಿ ಮನೆಯಲ್ಲಿ ತನ್ನ ಕರ್ತವ್ಯಗಳನ್ನು ನಿರ್ವಹಿಸುತ್ತಾ, ಉಳಿದ ಸಮಯವನ್ನು ಭಗವಂತನ ಸ್ಮರಣೆಯಲ್ಲೂ ಸಾಹಿತ್ಯ ರಚನೆಯಲ್ಲೂ ಕಳೆಯುತ್ತಿದ್ದಳು.

ಹೆಳವನಕಟ್ಟೆ ಎಂಬುದು ಮಲೆಬೆನ್ನೂರಿನ ಹತ್ತಿರ ಇರುವ ಒಂದು ರಂಗನಾಥ ಕ್ಷೇತ್ರ. ಹಿಂದೆ ಅಲ್ಲಿನ ದಿಬ್ಬವೊಂದರಲ್ಲಿ ಹೆಳವನೊಬ್ಬ ವಾಸಿಸುತ್ತಿದ್ದನಂತೆ. ದಿಬ್ಬದ ಪಕ್ಕದಲ್ಲಿ ಹಳ್ಳವೊಂದಿತ್ತು. ಸುತ್ತಲಿನ ಜನ ಅದರ ನೀರನ್ನೆ ಉಪಯೋಗಿಸುತ್ತಿದ್ದರು. ದನಕರುಗಳನ್ನು ಮೇಯಿಸಲು ಗೊಲ್ಲರು ಅಲ್ಲಿಗೆ ಬರುತ್ತಿದ್ದರು. ಹೆÀಳವ ಅವರಿಗೆಲ್ಲ ದೇವರಕತೆ ಹೇಳುತ್ತಾ ಅವರ ವಿಶ್ವಾಸಗಳಿಸಿದ್ದ. ಬೇಸಿಗೆಯಲ್ಲೂ ಹಳ್ಳದ ನೀರು ಸಮೃದ್ಧವಾಗಿ ದೊರೆಯಬೇಕೆಂಬ ಉದ್ದೇಶದಿಂದ ಹೆಳವ ಎಲ್ಲರ ನೆರೆವಿನಿಂದ ಕೆರೆಯೊಂದನ್ನು ನಿರ್ಮಿಸಿದ. ಅದೇ ಹೆಳವನಕಟ್ಟೆ ಆಯಿತು. ಒಮ್ಮೆ ಹಸುವೊಂದು ಹುತ್ತಕ್ಕೆ ಹಾಲು ಸುರಿಸುವುದನ್ನು ಕಂಡು ಕುತೂಹಲದಿಂದ ಅಗೆದು ನೋಡಲು ರಂಗನಾಥಸ್ವಾಮಿಯ ವಿಗ್ರಹವೊಂದು ದೊರೆಯಿತು. ಅದನ್ನು ಅಲ್ಲಿ ಪ್ರತಿಷ್ಠಾಪಿಸಿ ಅದೊಂದು ರಂಗನಾಥನ ಕ್ಷೇತ್ರವಾಗುವಂತೆ ಮಾಡಿದರು.

ಗಿರಿಯಮ್ಮ ಈ ರಂಗನಾಥ ಕ್ಷೇತ್ರದಿಂದ ತುಂಬಾ ಪ್ರಭಾವಿತಳಾದಳು. ‘ಹೆಳವನಕಟ್ಟೆ ರಂಗ' ಅವಳ ಅಂಕಿತವಾಯಿತು. ಕೆಲವೊಮ್ಮ ‘ಹೆಳವನಕಟ್ಟೆ ವೆಂಕಟ' ಎಂಬ ಅಂಕಿತವನ್ನು ಆಕೆ ಬಳಸಿದ್ದಾಳೆ. ಮುಂದೆ ಆಕೆ ಹೆಳವನಕಟ್ಟೆ ಗಿರಿಯಮ್ಮ ಎಂದೇ ಖ್ಯಾತಳಾದಳು.

ಗಿರಿಯಮ್ಮನ ಬಗೆಗೆ ಅನೇಕ ಪವಾಡದ ಕತೆಗಳು ಪ್ರಚಾರದಲ್ಲಿವೆ. ವಿವಾಹವಾದ ಮೇಲೆ ತಿಪ್ಪರಸ ಮಲಗುವ ಕೋಣೆಗೆ ಹೋದಾಗ ಗಿರಿಯಮ್ಮನನ್ನು ಘಟಸರ್ಪವೊಂದು ಸುತ್ತಿಕೊಂಡಿರುವಂತೆ ಕಂಡು ಆತ ಗೌರವಭಕ್ತಿಗಳಿಂದ ಆಕೆಗೆ ತಲೆಬಾಗಿದ್ದು, ಪುಂಗನೂರಿನ ರಾಜಕುಮಾರನಿಗೆ ಕಣ್ಣು ಬರಿಸಿದ್ದು, ಕ್ಷಾಮ ಬಂದಾಗ ಮಳೆ ತರಿಸಿದ್ದು, ಸತ್ತಮಗುವನ್ನು ಬದಿಕಿಸಿದ್ದು, ಕಳೆದು ಹೋದ ಉಂಗುರವನ್ನು ಗುಬ್ಬಿಯಿಂದ ಮರಳಿ ಪಡೆದದ್ದು, ಕೃಷ್ಣವೇಣಿ ನದಿ ದಾರಿ ಬಿಟ್ಟಿದ್ದು, ಸಮತೀಂದ್ರ ಸ್ವಾಮಿಗಳು ಆಕೆಯ ಹಿರಿಮೆಯನ್ನು ಅರಿತು ಮೊದಲು ತೀರ್ಥಕೊಟ್ಟಿದ್ದು ಹೀಗೆ ಆಕೆಯ ಸುತ್ತ ಹಬ್ಬಿರುವ ಕಥೆಗಳು ಅವಳನ್ನ ಮಹಾತ್ಮಳನ್ನಾಗಿಸಿದೆ. ಆಕೆ ರಾಧಿಕೆಯ ಅವತಾರವೆಂದು ಭಾವಿಸಿದ್ದ ಜನ ಅವಳನ್ನು ಭಕ್ತಿ ಗೌರವಗಳಿಂದ ‘ಅಮ್ಮನವರು' ಎಂದೇ ಕರೆಯುತ್ತಿದ್ದರಂತೆ. ಆಕೆಯ ಮಹಿಮೆಯನ್ನು ಕೇಳಿ ಆಂಗ್ಲ ಸರದಾರನೊಬ್ಬ ಆಕೆಯ ದರ್ಶನಕ್ಕೆ ಬಂದು ಶಾನುಭೋಗರ ಮನೆತನಕ್ಕೆ ‘ದೇಶಪಾಂಡೆ' ಎಂಬ ಬಿರುದನ್ನಿತ್ತು, ಆ ಗ್ರಾಮದ ಸ್ವತ್ತು ವೃತ್ತಿಗಳನ್ನು ಅನುಭವಿಸುವ ಸನ್ನದನ್ನು ಕೊಟ್ಟುದಾಗಿ ತಿಳಿಯುತ್ತದೆ.

ಗಿರಿಯಮ್ಮ ತನ್ನ ಕೊನೆಯ ದಿನಗಳಲ್ಲಿ ಮೈಲಾರ, ಕೊಕ್ಕನೂರು, ಗೋಕರ್ಣ, ಪಿಳ್ಳಂಗಿರಿ ಮುಂತಾದ ಸ್ಥಳಗಳಿಗೆ ಯಾತ್ರೆ ಮಾಡಿ, ಹೊನ್ನಾಳಿಗೆ ಸಮೀಪದಲ್ಲಿರುವ ಕಮ್ಮಾರಕಟ್ಟೆಯಲ್ಲಿ ಮಾರುತಿಯ ದರ್ಶನ ಮಾಡಿ ಶ್ರಾವಣ ಶುದ್ಧ ಪಂಚಮಿಯಂದು ತುಂಗಭದ್ರೆಯ ಪೂರ್ಣ ಪ್ರವಾಹದಲ್ಲಿ ಅದೃಶ್ಯಳಾದಳೆಂದು ಹೇಳುತ್ತಾರೆ. ಹಲವು ವರ್ಷಗಳ ಹಿಂದೆ ರಾಣಿಬೆನ್ನೂರು ಸುತ್ತಮುತ್ತ ಗಿರಿಯಮ್ಮನ ಚರಿತ್ರೆಯನ್ನು ಹಾಡಿನ ರೂಪದಲ್ಲಿ ಹೇಳುತ್ತಿದ್ದರೆಂದೂ ‘ಹೆÀಳವನಕಟ್ಟೆ ಗಿರಿಯಮ್ಮ' ಎಂಬ ದೊಡ್ಡಾಟವನ್ನು ಆಡುತ್ತಿದ್ದರೆಂದೂ ಕೆಲವರು ನೆನಪಿಸಿಕೊಳ್ಳುತ್ತಾರೆ. ತಮ್ಮ ಪಾಲಿಗೆ ದೇವಿಯಂತಿದ್ದ ಗಿರಿಯಮ್ಮನಿಗಾಗಿ ಭಕ್ತರು ರಂಗನಾಥಸ್ವಾಮಿಯ ದೇವಾಲಯದ ಆವರಣದಲ್ಲೇ ಆಕೆಗೂ ಒಂದು ಗುಡಿಯನ್ನು ಕಟ್ಟಿ ಪೂಜಿಸುತ್ತ ಬಂದಿರುವುದು ಆಕೆಯ ಹಿರಿಮೆಯನ್ನು, ಆಕೆ ಏರಿದ ಎತ್ತರವನ್ನು ತೋರಿಸುತ್ತದೆ.

ಹಾಡುಗಳು ಃ ಗಿರಿಯಮ್ಮನ ಹಾಡುಗಳಲ್ಲಿ ಭಕ್ತಿಪೂರ್ಣವಾದ ದೇವ-ದೇವತಾ ಸ್ತುತಿಗಳು, ಆತ್ಮನಿವೇದನೆ, ಲೋಕನೀತಿ ಇತ್ಯಾದಿಗಳು ಇವೆ. ಒಂದೇ ಒಂದು ಉಗಾಭೋಗವನ್ನು ಬಿಟ್ಟರೆ ಉಳಿದವುಗಳೆಲ್ಲಾ ಪಲ್ಲವಿ, ಅನುಪಲ್ಲವಿ ನುಡಿಗಳನ್ನುಳ್ಳ ಕೀರ್ತನೆಗಳು. ಒಂದೆರಡರಲ್ಲಿ ಪಲ್ಲವಿ ಇಲ್ಲದಿರುವುದು, ನುಡಿಗಳ ಸಂಖ್ಯೆ ಸಮನಾಗಿ ಇರುವುದು ಕಂಡು ಬರುತ್ತದೆ.

ಭಗವಂತನ ಸಂಕೀರ್ತನೆಯಲ್ಲಿ ಮಧುರಭಾವ ಮತ್ತು ವಾತ್ಸಲ್ಯಭಾವವನ್ನು, ಆತನ ಅಪಾರ ಶಕ್ತಿಯಲ್ಲಿ ನಂಬಿಕೆಯನ್ನು, ನಂಬಿದವರನ್ನು ಕಾವ ಅವನ ಕಾರುಣ್ಯವನ್ನು ಗಿರಿಯಮ್ಮ ಬಗೆ ಬಗೆಯಾಗಿ ಬಣ್ಣಿಸಿದ್ದಾಳೆ.

'ಇಂದು ನೀ ಕರದು ತಾರೆ ಬೇಗನೆ ಪೋಗಿ' ಎಂಬ ಹಾಡಿನಲ್ಲಿ ಚೆನ್ನ ವೆಂಕಟರಾಯನ ಕರೆತಂದರೆ ಹರಳುಂಗುರ, ಕಂಠಮಾಲೆ ಇತ್ಯಾದಿ ಕೊಡುವುದಾಗಿ ತನ್ನ ಸಖಿಯಲ್ಲಿ ಬೇಡಿಕೊಳ್ಳುತ್ತಾಳೆ. ‘ತಾರಮ್ಮ ಶ್ರೀ ರಂಗಧಾಮನ ತಂದು ತೋರಮ್ಮ’ ಎಂದು ರಂಗನಾಥನಿಗಾಗಿ ಹಂಬಲಿಸಿದರೆ ‘ಯಾಕೆ ಬಾರನಕ್ಕಯ್ಯ' ಎಂಬ ಹಾಡಿನಲ್ಲಿ ದಶಾವತಾರಗಳನ್ನು ಬಣ್ಣಿಸುತ್ತಾ ಪ್ರಿಯತಮನ ಬರುವಿಕೆಗಾಗಿ ಕಳವಳಿಸುವ ಪರಿ ಮತ್ತಷ್ಟು ಮನಮುಟ್ಟುತ್ತದೆ. ‘ಏನ ಹೇಳಲಿ ಕೃಷ್ಣನ ಗುಣವಾ' ಎಂಬುದರಲ್ಲಿ ಕೃಷ್ಣನ ಪುಂಡುತನದ ಪರಿ ಚಿತ್ರಿಸಿದ್ದಾಳೆ. ‘ಹ್ಯಾಂಗಿರಲಿಂನು ರಂಗನ ಬಿಟ್ಟಿನ್ಯ, ಎಂಬ ಹಾಡಿನಲ್ಲಿ ಹೆಳವನಕಟ್ಟೆ ರಂಗನನ್ನು ಬಿಟ್ಟಿರಲಾರದ ತನ್ನ ಅಳಲನ್ನು ಗಿರಿಯಮ್ಮ ತೋಡಿಕೊಂಡಿದ್ದಾಳೆ.

ಗಿರಿಯಮ್ಮನದ್ದು ಮಾತೃವಾತ್ಸಲ್ಯದ ಮಮತೆ ತುಂಬಿದ ಮನಸ್ಸು. ಆ ಪರಮಾತ್ಮನನ್ನೇ ಮಗುವೆಂದು ಭಾವಿಸಿ ಲಾಲಿಸಿದವಳು ಆಕೆ. ಯಶೋದೆಯಾಗಿ, ಕೌಸಲ್ಯೆಯಾಗಿ ತನ್ನನ್ನು ಪರಿಭಾವಿಸಿಕೊಂಡವಳು. 'ಕರೆದಳು ತನ್ನ ಮಗನ ಯಶೋದೆ' ‘ನೆರೆದು ಗೋಪಿಯರೆಲ್ಲರು ಕೃಷ್ಣಯ್ಯನ' ‘ಮಕ್ಕಳ ಮಾಣಿಕವೆ ಮೋಹಂವಾ' 'ಯಾಕೆ ದೂರುವಿರೆಂಮ ಬಾಲನಾ' ಮುಂತಾದ ಹಾಡುಗಳು ಕೃಷ್ಣನ ಬಾಲಲೀಲೆಗಳನ್ನು ಹೇಳುವುದರೊಂದಿಗೆ ಗಿರಿಯಮ್ಮ ವಾತ್ಸಲ್ಯಭಾವದಿಂದ ಪರಮಾತ್ಮನನ್ನು ಆರಾಧಿಸಿದ ಬಗೆಯನ್ನು ಹೇಳುತ್ತವೆ.

ಗಿರಿಯಮ್ಮನ ಹಾಡುಗಳಲ್ಲಿ ದಶಾವತಾರದ ವಿವರಗಳು ಬಹು ಸುಂದರವಾಗಿ ಮೂಡಿ ಬಂದಿವೆ. ‘ಏನ ಹೇಳಲಿ ಈತನಿರವ’ ‘ಇಂಥಾವಗ್ಹ್ಯಾಂಗೆ ಮನಸೋತೆ' ‘ಹೊನ್ನ ತಾ ಗುಬಿ’್ಬ ‘ಹೊನ್ನ ತಾ' ‘ಮೂರು ಜಗವ ಕುಣಿಸುವಂಥ ಗಾರುಡಿಗ ಇವದಾರಕ್ಕ' ಮುಂತಾದ ಹಾಡುಗಳಲ್ಲಿ ಹರಿಯ ದಶಾವತಾರದ ಸ್ಮರಣೆ ಸೊಗಸಾಗಿ ಹೊರಹೊಮ್ಮಿದೆ.

'ಹೊಳೆವ ಮೈಯ್ಯವ ಕಲ್ಲಹೊರುವಕಡಲೊಳಾಡುವ ತಿಳಿಯ ಎರಡಂಗನೆ ತಿರಿವ ಪರಶುವಿಡಿವ ಕೋಡಗ ಕುಲವನಾಳುವ ಗೋವಕಾಯ್ವ ಕಾಂತೆಯರ ವ್ರತವ ನಳಿವ ಅಶ್ವವನೇರಿ ಮೆರೆವ .....’

ಹೀಗೆ ಚಿಕ್ಕ ಚಿಕ್ಕ ಮಾತುಗಳಲ್ಲೇ ದಶಾವತಾರವನ್ನು ಕವಯತ್ರಿ ಸೂಚಿಸಿದ್ದಾಳೆ. ಈ ದೀರ್ಘ ಕೃತಿಗಳಲ್ಲೂ ಪರಮಾತ್ಮನ ಸ್ತುತಿ ಮಾಡಬೇಕಾದ ಸಂದರ್ಭಗಳಲ್ಲೆಲ್ಲಾ ಪದೇ ಪದೇ ಗಿರಿಯಮ್ಮ ದಶಾವತಾರ ಸ್ತುತಿ ಮಾಡಿದ್ದಾಳೆ.

ದಶಾವತಾರದಂತೆಯೇ ರಾಮಾಯಣ, ಮಹಾಭಾರತ, ಭಾಗವತಗಳಲ್ಲಿನ ಘಟನೆಗಳನ್ನು ಸಂದರ್ಭೋಚಿತವಾಗಿ ಗಿರಿಯಮ್ಮ ಬಳಸಿದ್ದಾಳೆ. ‘ರಾಮ ಶ್ರೀ ರಘುನಂದನ ಶರಣು' ಎಂಬ ಹಾಡಿನಲ್ಲಿ ರಾಮಾವತಾರದ ಸ್ತುತಿ ಇದ್ದರೆ ‘ಶ್ರೀ ನರಸಿಂಹ ದೇವ ಶರಣರಕ್ಷಕನೆ' ಎಂಬುದರಲ್ಲಿ ನರಸಿಂಹಾವತಾರದ ವರ್ಣನೆ ಇದೆ. ಗಜೇಂದ್ರ, ಧೃವ, ಪ್ರಹ್ಲಾದ, ಅಜಮಿಳ ಮುಂತಾದ ಭಕ್ತರ ಕತೆಗಳು ಅಲ್ಲಲ್ಲಿ ಪ್ರಸ್ತಾಪಗೊಂಡಿವೆ.

ಹರಿದಾಸರೆಲ್ಲರೂ ಸಾಮಾನ್ಯವಾಗಿ ಪ್ರಾಣದೇವರ ಅವತಾರತ್ರಯರೆಂದು ಹೇಳುವ ಹನುಮ, ಭೀಮ, ಮಧ್ವರ ಸ್ತುತಿ ಮಾಡಿರುವುದು ಕಂಡು ಬರುತ್ತದೆ. ಆದರೆ ಗಿರಿಯಮ್ಮ ಹನುಮನನ್ನು ಕುರಿತು ಮಾತ್ರ ಹಾಡಿದ್ದಾಳೆ. ‘ಈತ ಅಂಜನೆ ಸುತನು ಭೀಮರಾಯ' ಮತ್ತು ‘ಭೀಮ ಹೋ ಭಲಾರೆ ನಿಸ್ಸೀಮ' ಎಂಬ ಎರಡು ಹಾಡುಗಳ ಪ್ರಾರಾಂಭದಲ್ಲೇ ಭೀಮನ ಹೆಸರಿದ್ದರೂ ಇಡೀ ಹಾಡಿನಲ್ಲಿ ಭೀಮನ ಪರಾಕ್ರಮವನ್ನು ಹೇಳುವ ಯಾವ ಘಟನೆಯೂ ಇಲ್ಲದೆ ಕೇವಲ ರಾಮಾಯಣದಲ್ಲಿ ಬರುವ ಹನುಮನ ಸಾಹಸಗಳನ್ನು ಮಾತ್ರ ಪ್ರಸ್ತಾಪಿಸಲಾಗಿದೆ. ಉಳಿದ ಹಾಡಿನಲ್ಲಿ ಎಲ್ಲಿಯೂ ಮಧ್ವರ ಪ್ರಸ್ತಾಪ ಇಲ್ಲ.

ಗಿರಿಯಮ್ಮನ ತವರೂರಿನ ಆರಾಧ್ಯ ದೈವ ಮೈಲಾರ ಲಿಂಗ. ಹಾಗಾಗಿ ಗಿರಿಯಮ್ಮ ರಂಗ ಮತ್ತು ಲಿಂಗರಿಬ್ಬರನ್ನು ಸ್ತುತಿಸಿದ್ದಾಳೆ. ‘ಈತ ರಂಗನಾದ ಹರಿಯು ಆತ ಲಿಂಗನಾದ ಹರನು' ಮತ್ತು ‘ಈತ ಲಿಂಗದೇವ ಶಿವನು ಆತ ರಂಗಧಾಮ ವಿಷ್ಣು' ಎಂಬ ಹಾಡುಗಳು ಹರಿಹರರ ಸಮನ್ವಯವನ್ನು ಸಾರುವ ಗಿರಿಯಮ್ಮನ ವಿಶಿಷ್ಟ ಮನೋಭಾವವನ್ನು ಪ್ರಕಟಿಸುತ್ತವೆ. ನೀಲಗಿರಿಲಿಂಗನನ್ನು ಮಧುರಭಾವದಿಂದ ಸ್ತುತಿಸುವ ‘ಬಾರನ್ಯಾತಕೆ ನೀರೆ ನೀ ಕರೆತಾರೆ'. ಶಿವಸ್ತುತಿಯಾದ ‘ವಿಶ್ವಪತಿ ಇಂದುಶೇಖರ ಸುರಮಸ್ತಕಮಣಿ' ಎಂಬ ಹಾಡುಗಳು ಹಾಗೂ ಏಕನಾಥೆಯ ಸ್ತುತಿಗಳು ಗಿರಿಯಮ್ಮನ ಸಮಭಾವದ ನಿಲುವನ್ನು ದೃಢೀಕರಿಸುತ್ತದೆ.

ದೇವದೇವತೆಗಳ ಸ್ತುತಿಗಳನ್ನು ಬಿಟ್ಟರೆ ಆತ್ಮನಿವೇದನೆಯ ಹಾಡುಗಳು ಗಿರಿಯಮ್ಮನಲ್ಲಿ ಮುಖ್ಯವಾಗುತ್ತವೆ. ‘ಎಂದು ಕಾಹುವೆ ಎನ್ನ ಮನೋಹರ' ‘ಏನಿದು ಬಯಲಪಾಶ' ‘ಕಡೆಗಣ್ಣಲಿ ನೋಡದಿರೆನ್ನಯ್ಯ' ‘ಪಾಪಿಯೊಲು ನಾ ಬಂದೆ ಪರದೇಶಿನಾನಾದೆ' ಮುಂತಾದ ಹಾಡುಗಳು ಜೀವಿ ಬದುಕಿನ ಮೂಸೆಯಲ್ಲಿ ಬೆಂದು ನೊಂದು, ಬಳಲಿ ಮೊರೆ ಇಡುವ ಪರಿಯನ್ನು ಬಿಂಬಿಸಿದರೆ, ‘ಕಾಯೊ ಕರುಣಾಕರನೆ ನೀಯೆನ್ನಾ' ‘ನಂಬಿದೆ ನಂಬಿದೆ ಅಂಬುಜಾಕ್ಷನೆ' ‘ನಿನ್ನ ನಂಬಿದವರ ಕಾಯೊ' ಇತ್ಯಾದಿ ಕೀರ್ತನೆಗಳು ಭಗವಂತ ನಂಬಿದವರನ್ನು ರಕ್ಷಿಸುತ್ತಾನೆ ಎಂಬ ವಿಶ್ವಾಸವನ್ನು ಪ್ರಕಟಿಸುತ್ತವೆ. ‘ಆರಿಗಾದರು ಪೂರ್ವದ ಕಟ್ಟಳೆಯು' ‘ಯಾಕೆ ಮರುಳಾದೆ ಹೀಗೆ ಎಲೆಮನವೆ' ಎಂಬಂತಹ ಹಾಡುಗಳು ಲೋಕ ನೀತಿಯನ್ನು ಹೇಳುತ್ತವೆÉ.

ಕಥನಾತ್ಮಕವಾದ ಎರಡು ವಿಶಿಷ್ಟ ಹಾಡುಗಳನ್ನು ಗಿರಿಯಮ್ಮ ರಚಿಸಿದ್ದಾಳೆ. ‘ಪಾರಿಜಾತ' ಮತ್ತು ‘ಅಜಾಮಿಳನ ಮೋಕ್ಷ' ಭಾಗವತದಲ್ಲಿ ಬರುವ ವಸ್ತು ಇವುಗಳಗೆ ಆಧಾರ. ್ ಶ್ಲೋಕ ಹಾಗೂ 9 ಪದಗಳಲ್ಲಿ ರಚಿತವಾಗಿರುವ ‘ಪಾರಿಜಾತ' ಸತ್ಯಭಾಮೆಯ ಸವತಿ ಮಾತ್ಸರ್ಯವನ್ನು, ಕೃಷ್ಣನ ಪತ್ನೀ ಪ್ರೇಮವನ್ನು ವ್ಯಕ್ತಗೊಳಿಸುತ್ತದೆ. ಕೃಷ್ಣನ ಓಲಗಕ್ಕೆ ನಾರದ ಪಾರಿಜಾತದ ಪುಷ್ಪ ತರುತ್ತಾನೆ. ಪುಷ್ಪ ಯಾರಿಗೆ ? ಎಂದು ಕೃಷ್ಣ ಕೇಳಲು ರುಕ್ಮಿಣಿಗೆ ಎಂದು ನಾರದ ಹೇಳುತ್ತಾನೆ. ವಿಷಯ ತಿಳಿದ ಭಾಮೆ ‘ಎದೆ ದಿಗಿಲೆಂದು ಭುಗಿ ಭುಗಿಲೆಂದು ಮನದಲ್ಲಿ' ನೋಯುತ್ತಾಳೆ. ‘ನೆಚ್ಚಿ ಇದ್ದೆನೆ ಎನ್ನೊಳು ವಂಚಿಸಿದನೆ' ಎಂದು ಕೊರಗುತ್ತಾಳೆ. ‘ಬಾರದಿದ್ದರೆ ಪ್ರಾಣ ಉಳಿಯದು' ಎಂದು ವಿರಹದಿಂದ ಪರಿತಪಿಸುತ್ತಾಳೆ. ‘ಹೆಣ್ಣು ಜನ್ಮದ ಬಾಳು ಯಾತಕೆ ಹೇಳು' ಎಂದು ನಿಟ್ಟುಸಿರು ಬಿಡುತ್ತಾಳೆ. ಆಕೆಯ ದುಃಖ ನಿರಾಶೆಗಳು ನಿಧಾನವಾಗಿ ಕೋಪವಾಗಿ ಮಾರ್ಪಡುತ್ತವೆ. ‘ಎಲ್ಲರೊಡನೆ ಕೋಪಿಸುತ ತೊಟ್ಟತೊಡಿಗೆ ಈಡಾಡುತ’ ಮಂಚದಲ್ಲಿ ಒರಗುತ್ತಾಳೆ. ಕೃಷ್ಣನಿಗೂ ಸತ್ಯಭಾಮೆಯ ಬಗ್ಗೆ ಅಳುಕು ಇದ್ದೇ ಇದೆ. ಆತ ಆತಂಕದಿಂದಲೇ ಸತ್ಯಭಾಮೆಯಲ್ಲಿಗೆ ಬರುತ್ತಾನೆ. ಪಾರಿಜಾತದ ಮರವನ್ನೆ ತಂದು ನಿಲ್ಲಿಸುವ ಭರವಸೆ ನೀಡಿ ಸಮಾಧಾನ ಮಾಡುತ್ತಾನೆ. ಸತ್ಯಭಾಮೆಯ ದುಃಖ, ಕೋಪತಾಪಗಳು ಬಹು ಚೆನ್ನಾಗಿ, ಸಹಜವಾಗಿ ಮೂಡಿ ಬಂದಿದೆ.

ಅಜಾಮಿಳನಂಥ ಪಾಪಿ ಕೂಡ ಒಂದೇ ಒಂದು ಬಾರಿ, ಆಕಸ್ಮಿಕವಾಗಿ ತನ್ನ ಮಗನನ್ನು ‘ನಾರಗ' ಎಂದು ಕರೆದ ಮಾತ್ರಕ್ಕೆ ಸದ್ಗತಿಯನ್ನು ಪಡೆದನೆಂದರೆ ಆ ನಾಮದ ಮಹಿಮೆ ಎಷ್ಟು ಎಂಬುದನ್ನು ಗಿರಿಯಮ್ಮ ‘ನಾರಾಯಣಯೆಂಬೊ’ ನಾಮವ ನೆನೆದರೆ ಹಾರಿ ಹೋಹುದು ಜನ್ಮಜನ್ಮದ ಪಾಪಗಳು' ಎಂಬ 15 ನುಡಿಗಳ ಹಾಡಿನಲ್ಲಿ ವಿವರಿಸಿದ್ದಾಳೆ. ಸಮಿದೆ ತರಲು ಹೋದ ಅಜಾಮಿಳ ಅಂತ್ಯಜಳನ್ನು ಕಂಡು ಕಾಮುಕನಾಗಿ ಅವಳ ಸೆರಗು ಹಿಡಿದು ‘ನಿಲ್ಲು ನಿಲ್ಲೆಲೆ ಕಾಂತೆ ನಿನಗೊಲಿದೆ' ಎನ್ನುತ್ತಾನೆ. ‘ಎಲೊ ವಿಪ್ರ ಕೇಳು ನಾವು ಕುಲಹೀನರು' ಎಂದು ಆಕೆ ತಮ್ಮ ಮನೆಯ ಪರಿಸರವನ್ನು ವರ್ಣಿಸಿ ಹೇಳುತ್ತಾ¼.É ಆದರೂ ಕೇಳದೆ ಅಜಾಮಿಳ ‘ನಿನ್ನೊಡನೆ ---- ಸುಖದಲ್ಲಿ ಇಹೆನೆಂಬ ಛಲವೊಂದೆ ಎನಗೆ' ಎನ್ನುತ್ತಾನೆ. ಆಗ ಆಕೆ ‘ಚಿತ್ತವೆನ್ನಲ್ಲಿ ಇದ್ದರೆ ಹೋಗಿ ನೀ ಎನ್ನ ಹೆತ್ತ ತಂದೆಯ ಕೇಳು' ಎನ್ನುತ್ತಾಳೆ. ಅಜಾಮಿಳ ಆಕೆಯ ತಂದೆಯಲ್ಲಿಗೆ ಹೋಗಿ ಕೇಳಿದಾಗ ಆತ ‘ಉತ್ತಮದ ಕುಲವನೀಡಾಡಿ ನೀ ಪಾತಕದ ಮೊತ್ತ ಕೊಳಗಾಗದಿರೊ' ಎನ್ನುತ್ತಾನೆ. ಯಾರ ಮಾತನ್ನು ಕೇಳದೆ ಅಜಾಮಿಳ ತಾನು ಬಯಸಿದ ಹೆಣ್ಣ ಮದುವೆಯಾಗಿ ಹತ್ತು ಮಕ್ಕಳನ್ನು ಪಡೆಯುತ್ತಾನೆ. ಅಂತ್ಯಕಾಲದಲ್ಲಿ ಯಮನ ಆಳುಗಳು ಬಂದಾಗ ‘ಗÀಡಗಡನೆ ನಡುಗಿ ಕಂಗೆಟ್ಟು ಅಜಾಮಿಳ ತಾನು ಪಡೆದ ಮಗನ ನಾರಗನೆಂದು' ಕರೆಯುತ್ತಾನೆ. ಹರಿಭಟರು ಬರುತ್ತಾರೆ. ಅವರಿಗೂ ಯಮಭಟರಿಗೂ ವಾದವಿವಾದ ನಡೆದು ಕೊನೆಗೆ ಅಜಾಮಿಳ ಹರಿಭಟರೊಂದಿಗೆ ವೈಕುಂಠಕ್ಕೆ ಹೋಗುತ್ತಾನೆ. ಹೀಗೆ ‘ಜಲಜನಾಭನ ದಿವ್ಯನಾಮವನು ನೆನೆದರೆ ಕುಲಕೋಟಿ ದೋಷಗಳಿಲ್ಲ' ಎಂಬುದನ್ನು ಗಿರಿಯಮ್ಮ ಈ ಹಾಡಿನಲ್ಲಿ ಸಾರಿ ಹೇಳಿದ್ದಾಳೆ. ಉದ್ದಕ್ಕೂ ಬರುವ ಸಂಭಾಷಣೆಗಳು ಹಾಡಿಗೆ ನಾಟಕೀಯತೆಯನ್ನು ತಂದು ಕೊಟ್ಟಿವೆÉ.

ಗಿರಿಯಮ್ಮನ ಹಿರಿಮೆ, ಮಹಿಮೆಗಳಿಂದ ನಡೆದುವೆಂದು ಹೇಳುವ ಅನೇಕ ಪವಾಡಗಳ ಸಂದರ್ಭಗಳನ್ನು ಹಿನ್ನೆಲೆಯಾಗಿ ಉಳ್ಳ ಹಲವು ಹಾಡುಗಳು ದೊರೆತಿವೆ. ಉದಾಹರಣೆಗೆ ‘ತೋರಬಾರದೆ ನಿಮ್ಮ ಚರಿತೆಯನು' ‘ಹೊನ್ನುತಾ ಗುಬ್ಬಿ ಹೊನ್ನು ತಾ' ‘ಬಟ್ಟೆಯ ನೆವದಿಂದ ಬಂದು' 'ಮಳೆಯ ದಯಮಾಡೊ ರಂಗಯ್ಯ' ಇತ್ಯಾದಿ.

ಒಟ್ಟಿನಲ್ಲಿ ಈಕೆಯ ಕೀರ್ತನೆಗಳನ್ನು ನೋಡುವಾಗ ಅಲ್ಲಿ ತಾತ್ತ್ವಿಕ ವಿಚಾರಗಳಾಗಲಿ, ಮತೀಯ ಜಿಙÁ್ಞಸೆಗಳಾಗಲಿ, ಶುಷ್ಕ ತರ್ಕಗಳಾಗಲಿ ಕಂಡು ಬರದೆ, ಭಕ್ತೆಯೊಬ್ಬಳ ನಿರ್ಮಲಹೃದಯದಿಂದ ಸಹಜವಾಗಿ ಹೊರ ಹೊಮ್ಮಿದ ಕಾವ್ಯಾತ್ಮಕವಾದ, ಭಾವಪೂರ್ಣವಾದ, ಅಂತರಂಗದ ಕರೆ ಕೇಳಿ ಬರುತ್ತದೆ.

ದೀರ್ಘಕೃತಿಗಳು

1. ಉದ್ದಾಳಿಕನ ಕಥೆ :ಸಾಂಗತ್ಯದ ಮಟ್ಟಿನಲ್ಲಿರುವ ದೀರ್ಘ ಕೃತಿ ಇದು. ವಿಧಿ ಮನುಷ್ಯನನ್ನು ಹೇಗೆ ಆಡಿಸುತ್ತದೆ ಎಂಬುದನ್ನು ನಿರೂಪಿಸುವ ಕಥಾನಕ. ಬಾಲ್ಯದಲ್ಲಿಯೇ ತಂದೆ ತಾಯಿಯನ್ನು ಕಳೆದುಕೊಂಡ ಉದ್ದಾಳಿಕ ವಿರಾಗಿಯಾಗಿ ತಪಸ್ಸಿಗೆ ತೊಡಗುತ್ತಾನೆ. ಅರವತ್ತು ಸಾವಿರ ವರ್ಷ ಅಜಹರಿಹರರನ್ನು ಮೆಚ್ಚಿಸಲು ತಪಸ್ಸು ಮಾಡುತ್ತಾನೆ. ಇತ್ತ ಕೌಸಲ್ಯ ದೇಶದಲ್ಲಿ ರಘುರಾಯನಿಗೆ ಅಜಭೂಪನೆಂಬ ಮಗನೂ ಚಂದ್ರಾವತಿಯೆಂಬ ಮಗಳು ಹುಟ್ಟುತ್ತಾರೆ. ಕೌಶಿಕ ಮುನಿ ಸಂಚಾರ ಮಾಡುತ್ತಾ ಯಮಲೋಕಕ್ಕೆ ಬಂದಾಗ ನರಕದಲ್ಲಿ ‘ಓತಿನ ಬಾಯ ಮೂಷಕದಂತೆ' ಮಿಡುಕುತ್ತಿದ್ದ ಉದ್ದಾಳಿಕನ ಪಿತೃಗಳು ಕಾಣಿಸುತ್ತಾರೆ. ಸಂತತಿ ಇಲ್ಲದೆ ಸದ್ಗತಿಯಿಲ್ಲ. ಹಾಗಾಗಿ ನಮಗೆ ಈ ಸ್ಥಿತಿ ಬಂದಿದೆ. ನೀವು ಉದ್ದಾಳಿಕನಿಗೆ ಇದನ್ನು ತಿಳಿಸಿ ಎಂದು ಹೇಳುತ್ತಾರೆ. ಉದ್ದಾಳಿಕ ಪ್ರಾರಬ್ಧವನ್ನು ಬರೆದ ವಿಧಿಯನ್ನೇ ಕೇಳುತ್ತೇನೆ ಎಂದು ಬ್ರಹ್ಮನನ್ನು ಕೇಳುತ್ತಾನೆ. ನಿನಗೆ ಮದುವೆಯಾಗಿ ಮಗ ಜನಿಸುತ್ತಾನೆ ಎಂದು ಬ್ರಹ್ಮ ಹೇಳಿದಾಗ ಉದ್ದಾಳಿಕ ಸಂದೇಹದಿಂದ 'ಜರೆ ಅಡರಿ ನೆರೆಪರಿಗಳು ಬಂದವು ಸಡಲಿದವು ದಂತಪಂಕ್ತಿ ಕೊಡುವರಾರು ಕರ್ನಿಕೆ----’ ಎಂದು ಪ್ರಶ್ನಿಸುತ್ತಾನೆ. ಆಗ ಬ್ರಹ್ಮ ‘ಪುತ್ರ ಹುಟ್ಟಿದ ಏಳು ವರುಷಕ್ಕೆ ಪತ್ನಿಯು ದೃಷ್ಟಿಗೋಚರಕೆ ಬೀಳುವಳು’ ಎಂದು ನುಡಿದು ಕನ್ಯೆ ಯಾರು ಎಲ್ಲಿರುವಳು ಇತ್ಯಾದಿ ವಿವರ ತಿಳಿಸುತ್ತಾನೆ.

ಇದೊಂದನ್ನೂ ತಿಳಿಯದೆ ಸಖಿಯರೊಂದಿಗೆ ಜಲಕ್ರೀಡೆಯಾಡಲು ಬಂದ ಚಂದ್ರಾವತಿ ಏಳು ಗಾವುದ ದೂರದ ಮೇಲಿಂದ ಉದ್ದಾಳಿಕನು ತೇಲಿಬಿಟ್ಟ ಕಮಲವನ್ನು ಆಘ್ರಾಣಿಸಿ ಗರ್ಭಿಣಿಯಾಗುತ್ತಾಳೆ. ಮಾನಕ್ಕೆ ಹೆದರಿ ತಂದೆ-ತಾಯಿಗಳು ಅವಳನ್ನು ಕಾಡುಪಾಲು ಮಾಡುತ್ತಾರೆ. ಮುನಿಯೊಬ್ಬನ ಪೋಷಣೆಯಲ್ಲಿ ಆಕೆಗೆ ಗಂಡು ಮಗು ಜನಿಸುತ್ತದೆ. ಮೂಗಿನಿಂದ ಜನಿಸಿದ ಮಗುವಿಗೆ ನಾಶಿಕೇತು ಎಂದು ನಾಮಕರಣವಾಗುತ್ತದೆ. ತಂದೆ ಇಲ್ಲದ ಮಗುವನ್ನು ಸಾಕಲಾರದೆ ಚಂದ್ರಾವತಿ ಮಗುವನ್ನು ನೀರಿನಲ್ಲಿ ತೇಲಿಬಿಡುತ್ತಾಳೆ. ಆ ಮಗು ಉದ್ದಾಳಿಕನಿಗೆ ದೊರೆಯುತ್ತದೆ. ವಿಧಿಯ ಕೃಪೆಯಿಂದ ಏಳು ವರ್ಷಗಳ ಬಳಿಕ ಪತಿ, ಪತ್ನಿ, ಪುತ್ರರ ಸಮಾಗಮವಾಗುತ್ತದೆ.

ಚಂದ್ರಾವತಿ ಗೆಳತಿಯರೊಂದಿಗೆ ನೀರಾಟಕ್ಕೆ ಹೊರಟ ಸಂಭ್ರಮ, ಜಲಕ್ರೀಡೆಯ ಪರಿ ಇವುಗಳನ್ನು ಗಿರಿಯಮ್ಮ ಬಹು ಉತ್ಸಾಹದಿಂದ ವರ್ಣಿಸಿದ್ದಾಳೆ. ಜಲಕ್ರೀಡೆ ಮುಗಿಸಿ ಬಂದ ಕೆಲದಿನದ ಮೇಲೆ ಚಂದ್ರಾವತಿ

‘ಮಂಚದಿಂದಿಳಿಯಳು ಮಂಡೆಯ ಕಟ್ಟಳು ದುಂಡು ಮಲ್ಲಿಗೆಯ ಮುಡಿಯಳು ಖಂಡಸಕ್ಕರೆ

ನೊರೆಹಾಲು ಪರಮಾನ್ನವ ಕಂಡರೆ ಮುಖ ದಿರುಹುವಳು'

ವಿಷಯ ತಿಳಿದ ಚಂದ್ರಾವತಿಯ ತಾಯಿ ಓಡಿಬಂದು ಮಗಳನ್ನು ಬಿಗಿದಪ್ಪಿ ದುಗುಡವೇನು ಎಂದು ವಿಚಾರಿಸುತ್ತಾಳೆ.

‘ಬೆಚ್ಚಿದಳೊ ಜಲಧೀಲಿ ಕುಮಾರಿಯು ದೃಷ್ಟಿತಾಕಿತೊ ಬಹುಜನರ' ಎಂದೆಲ್ಲಾ ಚಿಂತಿಸಿ ಹರಕೆ ಹೊರುತ್ತ್ತಾಳೆ. ತಾಯ ಹೃದಯದ ಮಮತೆ ಆತಂಕಗಳು ಬಹು ಸಹಜವಾಗಿ ಇಲ್ಲಿ ವ್ಯಕ್ತವಾಗಿದೆ. ಕಡೆಗೂ ಮಗಳು ಗರ್ಭಿಣಿ ಎಂದು ತಿಳಿಯುತ್ತದೆ. ಗಂಡುನೊಣವೂ ಸುಳಿಯದಿರುವಾಗ ಇದು ಆದದ್ದು ಹೇಗೆ ಎಂದು ಯಾರಿಗೂ ತಿಳಿಯುವುದಿಲ್ಲ. ರಾಜನಂತೂ ‘ನೀಗುವೆ ಹರಣವ ಎನುತ ಕೈಯಲಗನು ನೀಡಿದ ತನ್ನ ಮಸ್ತಕಕೆ' ಕಡೆಗೆ ಅಪವಾದಕ್ಕೆ ಹೆದರಿ ಊಳಿಗದವರನು ಕರೆದು ‘ಅರಣ್ಯದಿ ಶಿರವರಿದು ಬನ್ನಿ' ಎಂದು ಆಜ್ಞೆ ಮಾಡುತ್ತಾನೆ. 
****



Helavanakatte GiriyammaAround 1750GiriyammaHelvanakatte RangaHelvanakatte Ranga (swapna)Komarana HalliNot Known

1 comment:

  1. ನಾನು ವಿಜಯವಿಠ್ಠಲ್ ಜೋಶಿ ಗಂಗಾವತಿ ಇಂದು ಮಧ್ಯಾನ್ಹ ವಿಶ್ರಾಂತಿ ಪಡೆಯುವಾಗ ದಾಸರ ನೋಡಿದ ಅನುಭವವಾಯಿತು ಆದ ಕಾರಣ ಅವರ ದರ್ಶನ ಪಡೆಯ ಬೇಕೆಂಬ ಹಂಬಲವಾಗಿದೆ

    ReplyDelete