Monday 1 July 2019

gopaladasa gopala dasaru 1762 uttanur pushya bahula ashtami ಗೋಪಾಲ ದಾಸರು











info from sumadhwaseva.com--->
Sri. Gopala dasaru
  • Place            –   Uttanoor
  • Janma Naama  –  Bhaaganna
  • Period            –   1722 to 1762 
  • (Born samvatsara Shubhakrut)
  • Place of Birth  –   Mosarukallu
  • (near Devadurga in Rayachur dist)
  • Parents         –      Murari Rayaru  & Venkamma
  • Brahmopadesha –  1727AD
  • Gotra            –      Haritsa Gotra
  • Brothers     –     Rangappa, Seenappa, Dasappa
  • Shishyaru  –  Helavanakatte Giriyamma, Dasappa (Guru Gopala Vittala)
  • Mantra siddi  – Gayatri mantra siddi
  • Amsha       –   Ganesha
  • Met Vijayadasaru – For the first time at Adavani in 1746AD near Mangarayana sannidhana
  • Kuladevate  –  Tirupati Venkatesha
  • His Childhood   –   Spent his childhood in poverty.  Spent time in telling fortune (Jyothishya)
  • Ankita         –    Initially “Venkatakrishna”
  •                  subsequently ” Gopala Vittala” (given by Vijayadasaru)
  • Ankita date      –  14.11.1746 AD

Gopaladasara punyadina – Pushya Krishna ashtami


  ಮಾರ್ಗಶಿರ ಶುಕ್ಲ ತ್ರಯೋದಶಿ
-ಶ್ರೀ ವಿಜಯದಾಸಾರ್ಯರು ಶ್ರೀ ಗೋಪಾಲದಾಸಾರ್ಯರಿಗೆ ಆಂಧ್ರದ ಆದವಾನಿಯ ಮಂಗರಾಯನ ದೇವಸ್ಥಾನದಲ್ಲಿ... ಇದೇ ಹನುಮದ್ ವ್ರತದ ಪವಿತ್ರವಾದ ದಿನದಲ್ಲಿ  ಅಂಕಿತೋಪದೇಶವನ್ನು ಮಾಡಿದ ಸುದಿನವು.

ಭಾ ಎಂದು ವಲಿಸಲು ಭಕುತಿ ಪುಟ್ಟಿಸುವನು ಶ್ರೀಯರಸ ಪಾದದಲಿ
 ಎಂದುಚ್ಚರಿಸಲು ಗಂಗಾಜನಕ ಭವತೋಯದಿಂ ತಡಿಗೊತ್ತುವ

ಣ್ಣ ಎಂದುಪಾಸನೆ ಮಾಡುವ ಸುಜನರ ಕಾಯಕ್ಲೇಶವ ಕಳೆದು |

             –  ಶ್ರೀ ವರದಗೋಪಾಲವಿಠಲದಾಸರು

It is because of Sri Gopaladasaru’s anugraha only that Sri Srinivasacharya became Jagannatha Dasaru and that the great grantha “Harikathamrutasaara” could be written.  
ಆಗತಾದಿತ್ರಿಕಾಲಜ್ಞಂ ಆಗಮಾರ್ಥವಿಶಾರದಂ | ತ್ಯಾಗಭೋಗಸಮಾಯುಕ್ತಂ ಭಾಗಣ್ಣಾರ್ಯಗುರುಂ ಭಜೇ |
“Agataadi trikaalajnaM” –  Sri Gopaladasaru had the siddhi of Gayatri Mantra.   He was well versed in Bhootakaala, Vartamaana kaala, and bhavishyat kaala jnaana with his aparoksha jnaana.  His early life was mostly utilised for telling Bhavishya of the people.
“Agamaartha vishaaradaM” –  Sri Gopaladasaru was well versed in Veda, Upanishat, and shaastra prameya and vedokta mantra siddhi and with this only, he could save the life of Jagannathadasaru.
“tyaaga bhoga samaayuktam” –   He had donated the 40 years of iife to Jagannatha dasaru and he thought that this tyaaga itself is Haripooja.  He was thinking tyaaga and bhoga in the same style. 
“Bhaagannaarya guruM bhajE”  – Sri Gopaladasaru’s birth name is Bhaganna and he was the guru for many many shishyaas.
 
ಗೋಪಪ್ರಕರಸಂಕಾಶಂ ಗೋಪಾಲಾರ್ಚನ ತತ್ಪರಂ |
ಗೋದೇವ ವಂದ್ಯಪಾದಾಬ್ಜಂ ಗೋಪಾಲಾಖ್ಯ ಗುರುಂ ಭಜೇ |
ಭೂಪಾಲನತಪಾದಾಬ್ಜಂ ಪಾಪಾಲಿಪರಿಹಾರಿಣಂ |
ಗೋಪಾಲದಾಸಮೀಡೇಹಂ ಗೋಪಾಲಹರಿದರ್ಶನಂ |

आगतादित्रिकालज्ञं आगमार्थविशारदं ।
त्यागभोगसमायुक्तं भागण्णार्यगुरुं भजे ।
भूपालनतपादाब्जं पापालिपरिहारिणं ।
गोपालदासमीडेहं गोपालहरिदर्शनं ।
गोपप्रकरसंकाशं गोपालार्चन तत्परं ।
गोदेव वंद्यपादाब्जं गोपालाख्य गुरुं भजे ।
Agataaditrikaalajnam aagamaarthavishaaradam | tyaagabhOgasamaayuktam bhaagaNNaaryagurum bhajE|gOpaprakarasankaasham gOpaalaarchana tatparam | gOdEva vandyapaadaabjam gOpaalaaKya gurum bhajE |bhUpaalanatapaadaabjam paapaaliparihaariNam | gOpaaladaasamIDEham gOpaalaharidarshanam |

  • Gopaladasaru practiced Brahmacharya throughout his life
  • Donation of jeeva  – Donates 40 years of his life to Sri  Srinivasacharya (Sri Jagannatha dasaru)  as per instructions  of Sri  Vijayadasaru in 1754AD by chanting “Dhanvantari” mantra .  At that time, Sri Gopaladasaru was 33 years old.
  • Famous keerthane– “Rathavanerida raaghavendra”, “Kotta Bidaradali Eshtu Dina Jeevisali” ;“Vairagya maarga Kelu”, “Aava rogavo yenage”, “yenna bhinnapa kelo dhanvantri”,  “mooru namava dharisida”, “baarayya ba ba bhakutara priya”, hyaange maaDalayya hogutide Ayushya

  • He was able to tell the details of 3 past Janmas.
  • He had shown Sun in the midnight to his shishyas.
  • Performed Gayathri Japa for two years under a Vata Vriksha in Sankapur
  • Wrote more than 1000 Keerthanas and Suladis. 
  • Gopaladasaru saved Sri PAnganama Timmannayya (Sri Venugopala Vittaladasaru) from apamrutyu
  • Contemporaries –  Sri Upendra Tirtharu, Sri Vadeendra Tirtharu, Sri Vasudendra Tirtharu, Sri Vasudendra Tirtharu, Sri Varadendra Tirtharu, Sri Satyavijaya Tirtharu, Sri Satyapriya Tirtharu, Sri Satyabodha Tirtharu, Sri Jagannatha Tirtharu, Sri Vyasarajaru, Sri Vijayadasaru, Sri Jagannatha Dasaru, Sri Mohanadasaru, Helavanakatte Giriyamma, Panganaama Timmannayya,  Gadvaala king Soma bhoopaala, etc..
  • He wrote Daaridrya parihaara sulaadi for helping poor vaishnavaas
  • JAgannatha daasaru did the stotra of Gopaladasaru as “gopaaladaasaraaya ninnaya paada ….”
  • Gopaladasru was blessed by Sri Satyabodha Tirtharu

know more

*******

info from dvaita.org--->


Sri Gopala Dasaru (1722-1762)
Murariraya and Venkamma were a poor brahmin couple living in village Mosarakallu in Raichur district of Karnataka. They were blessed with four sons - Bhaganna, Dasappa, Seenappa and Rangappa. When Rangappa was an infant, Murariraya died, leaving his family helpless and destitute. They were driven out of the village by their kinsmen. Venkamma moved with her children to Sankapura, another village. There also they could not find any shelter as the villagers offered them no help.
In the outskirts of Sankapura there was a dilapidated temple of Anjaneyaswamy. As the saying goes - God is the refuge of the helpless - Anjaneyaswamy gave them shelter! The mother and sons started to live there.
Venkamma used to go to the village for alms. Cakes became delicious dishes for the children. During the harvesting season, she was able to collect food-grains. One compassionate farmer donated them a piece of land and another farmer helped them cultivate it, yielding a bumper crop. But the village Karnam, accusing Venkamma of illegally utilisizing water from the Government Tank, confiscated the food grains. Actually, he was taking revenge against her for not working as a servant in his house. Venkamma begged him to show mercy but he drove her away mercilessly. Seeing his mother shedding tears, Bhaganna became angry and cursed the Karnam to remain childless and his tank to remain dry forever. Miraculously, Bhaganna's curses came true. The village Karnam dies childless and the tank remains dry even today!
Venkanna approached the village teacher and requested him to accept her sons as his students. The compassionate teacher agreed and started teaching them with affection. The three boys began learning enthusiastically.
After sometime, one householder in the village performed Bhaganna'a thread- ceremony along with that of his son. Bhaganna was initiated into the Gayathri-Mantra and decided to meditate on it, with his mother's encouragement. One day, when Bhaganna was meditating, a huge serpent entwined his body and put its hood above his head! Seeing this, people ran to Venkamma and brought her there. However, knowing the power of the Gayathri Mantra, Venkamma did not panic. Before their very eyes, the serpent uncoiled itself from Bhaganna's body and disappeared!
One day Bhaganna felt as if some unknown hand was writing the 'BhIjakshrAs' on his tongue. From that moment, he developed extraordinary powers like spontaneously composing songs, predicting the future, peering into the past of a person (going back to upto three births) etc. From then, a new chapter began in his life.
Bhaganna once visited Advani (Adoni), a town in Andhra where the famous saint Sri Vijaya Dasaru lived. Bhaganna who had heard many legends about him decided become his disciple. He wanted to be initiated into the Dasa order and enlightened by the famous saint. Sri Vijaya Dasa was happy to initiate him and give him the Ankitha of 'Gopala Vitthala'. From that day onwards Bhaganna became 'Gopala Dasa'. He travelled all over the country from Rameshwaram to Badari. He used to visit Tirumala every year for the 'Brahmostvam' of Lord Sri Venkateshwara.
There was a renowned scholar named Srinivasacharya in Manvi, in Raichur district. He did not like Haridasas and thought very poorly of Kannada dEvaranAmAs. He resented the popularity of Vijaya Dasa and Gopala Dasa.
Once when Sri Vijaya dAsa and Sri Gopala Dasa visited Manvi, a great feast was organized in their honor. Even though Srinivasa was absent at the feast, Sri Vijayadaasaru sent him a personal invitation to attend the feast. In order to avoid the feast Srinivasa sent a message saying that because of stomach problems he had already taken lunch. Sri Vijaya dAsa said "So be it!". From that day, Srinivasa developed intense stomach problems which grew worse by the day, finally reaching unbearable proportions. Srinivasa went to Tirupathi, Ghatikaachala and Mantralaya, performing intense Seva towards the Lord, Vaayu Devaru and Sri Raghavendra Swamigalu. None of this proved to be of any avail. Finally, at the end of his stay in Mantralaya he decided to commit suicide. That night, the epitome of mercy, Sri Raghavendra Swamigalu, appeared in his dream and told him that the cure for his problems lay in surrendering to Sri Vijaya dAsa and seeking his blessings. Srinivasa felt intense disgust at his own arrogance and rushed to Sri Vijaya dAsa, deeply regretting his behavior. Sri Vijaya dAsa welcomed him without rancor, gave him a cure right away, and directed him to Sri gOpAla dAsa who would be his swaroopa guru. Srinivasa went to Sri gOpAla dAsa and spent some time with him. He realized the greatness of both the dAsas and the fallacy of his own thinking.
Later, Sri gOpAla dAsa and Srinivasa visited Tirupathi, where another miracle happened. Due to a combination of his previous ill-health and the strain of travelling to Tirupathi, Srinivasa expired on Bhadrapada Shukla Navami. Then, Vijaya dAsa appeared in an astral form before gOpAla dAsa and directed him to donate 40 years of his life-span to Srinivasa and revive him. gOpAla dAsa immediately complied, and by the grace of the Lord, Srinivasa came back to life again.
Later, Gopala dAsa gave Haridaasa Deekshe to Srinivasa and directed him to Pandarapur for ankitha. Later Srinivasa became renowned as jagannAta dAsa.
This is the evidence of the sacrifice of Gopala Dasa. After warding off the stomach ache of Srinivasacharya, Gopala Dasa himself got that ailment and suffered the rest of his life from it.
It is said that even though Gopala Dasa had travelled all over India, and composed songs in Vittala's name, he had not visited Pandharapur. Once while he was in the forest looking for tuLasi, a horse-rider started chasing him. Finally, when he was unable to run any further, Dasaru gave up and surrendered to the rider, expecting the worst. The rider came near him and said 'Ale Nahi' and vanished (in Marati this means 'you did not come!"). After recovering his poise, Dasaru realized that the rider was none other than Panduranga Himself, complaining about Dasaru's failure to visit Pandharapur. He promptly visited Pandharapur and Udupi. How great must he have been, who was personally invited by the Lord! And what do you say about the compassion of the Lord who complains about His devotee's failure to visit Him!!
On the eighth day of the dark half of the lunar month of Pushya of the year Chitrabhanu, Gopaladasa performed panchamritabhsheka and Sahasaranamarchana to Lord Srinivasa in the temple and at his house. After that he sat in meditation and laid down his mortal body. His famous disciples were Vyasa Tatvagnya, Ajit swami.
Dasappa, Gopala dasa's brother was called Guru Gopal Dasa. He was a great seer. Seenappa Dasa too, was a seer and his fame spread far and wide.

gOpa prakara sankAsham gOpAlarchana tatparam
gOdEva vandya pAdArjam gOpAlaKhya gurum Bhaje

*********


Sri Gopala Dasa1722-1762BhagannaGopala Vittala; Venkata krishnaSri Vijaya RayaruUttanuruPushya Bahula Astamai

*******



Parampare: Sri Hari Dasaru

Successor of: Primary Desciple of Sri Vijayadasaru

Duration: 1717 to 1740 (end date is not confirmed becaue of the Ayushya Daana)



Summary:

· Born at Mosarukallu in 1717. Eldest of four sons, born to Sri Murari Raya (s/o Mudagallappa) and Smt Venkamma with Harithasa Gothra



· His brothers were Rangappa, Seenappa, Daasappa all his disciples, where Dasappa was his favourite, he used to compose Suladi with ankita naama of Guru Gopala vittala. Helavanahalli Giriyamma was another famous Shishye.



· Performed Gayatri Japa for two years under a Vata Vriksha in Sankapur

· He had seen worst of the worst childhood becaue of poverty and other ailments, and grew to be one of the richest Donors ever heard or seen.



· Spent time in telling fortune.



· Becomes Haridasa with the ankitha, “Gopaladasa”.



· Composed thousands of Keerthanas, Suladhis etc,



· Donates 40 years of his life to Sri Shreenivasacharya (Sri Jagannatha dasaru) on instruction from Sri Vijayadasaru. And shows the path to the dhaasa dheekashe.



· He thus became an “ aparokshajnaani as well as “Mahaathma”

· He was affectionately called BhagaNna and noted for “ Bhakthi Maarga” – Bakthiyalli Bhaganna

· One of his Miralces was to give the satisfaction of Laksha Brahmana Bhojana to the Gowda family near Mantralaya enroute to Uthanoor. Three Brothers accepted the Bhojana by the Gowda and blessed them with lots of goodies.

· He spent most of his time in Gadhwal Samsthana helping the King in his administration whenever required especially against Muslims invasion.

· Dasaru had visited all the three – Anna Brahma (Udupi Sri Krishna), Naada Brahma (Pandarapura Panduranga) and Kanchana Brahma (Tirupati Srinivasa). During his last visit to Tirupati, where he knew he cannot comeback again, he composed – “Poguvenu Baralare Marali Illi, Naaga Girivasa, Shreesha Eesha “

· Dasaru was an excellent Artist and painter as well, has done the Bhagavantha Viraat Roopa Darshana to his disciples.

* Spent his last days at Uttanur Venkatesha Devalaya and leaves this world as a great “Aparokshagnani.”

The Mysore University 'Adhyana Samsthe' has brought a beautiful book on him titled, Sri Gopala Daasara Krithigalu

*******

Composition and Kruthis :
Some of the famous compositions of Sri Gopala dasaru are –
o “Rathava Neridha Raghavendra", song in Mohana Raga sung by everybody on Thursdays in his or her home / Temples / Mutts.
o Vagathanadalli Sukhavilla
o Vyragya Maarga Kelu
o Agali Syrisalarevo Venugopala
o Aava Rogavo enage Deva Dhanwantri
o Kotta Bidaradali Eshtu Dina Jeevisali
· One of the other famous composition is for Sri Sathya Bodha Theertharu, while Srigalu wanted to test not just Dasaru but his brothers as well. They individually composed and integrated the Keerthane – Maaramadaghanna Sameera (Sri Gopala Dasaru), Muni Nimma Mahimeyannu (Sri Seenappa Dasaru) and Maaranapajaya kandu (Sri Daasappa Dasaru)




*******


He took haridAsa dIkshe from Shri vijaya dAsaru. He had 3 brothers who also were renowned haridAsAs. They were tandE gOpAla dAsaru, guru gOpAla dAsaru, varada gOpAla dAsaru. 


He has composed 100s of dEvara nAmAs, suLAdis, ugAbhOgas. 


He donated 40 years of his life to shri jagannAtha dAsaru, which enabled shri jagannAtha dAsaru to write the magnum opus harikathAmbruthasAra. Shri jagannAtha dAsaru has dedicated a complete chapter in harikathAmbruthasAra on shri gOpAla dAsaru, who is an amsha of Lord gaNEsha. 

Once when shri gOpAla dAsaru was traveling in  

area of shri heLavanakaTTe Giriamma, he met her and offered her an idol of vENugOpAla and also the mudrEs.
***********

ಪುಷ್ಯ ಬಹುಳ ಅಷ್ಟಮಿ ಭಕ್ತಿಯಲ್ಲಿ ಭಾಗಣ್ಣನೆಂದು ಖ್ಯಾತರಾದ  ಪ್ರಸಿದರಾದ  ಗಣಪತಿಯ ಅಂಶ ಸಂಭೂತರಾದ ಶ್ರೀಗೋಪಾಲದಾಸಾರ್ಯರ ಆರಾಧನ. 

ಜನ್ಮ ನಾಮ - ಭಾಗಣ್ಣ
ಜನ್ಮ ಸ್ಥಳ  - ಮೊಸರಕಲ್ಲು
ಕಾಲ - 1722-1762
ಸಮಕಾಲೀನ ದಾಸರು /ಯತಿಗಳು -
ವಿಜಯ ದಾಸರು ,ಜಗನ್ನಾಥ ದಾಸರು, ಶ್ರೀ ವಸುಧೇಂದ್ರತೀರ್ಥರು,ಶ್ರೀ ವರದೇಂದ್ರತೀರ್ಥರು,ಹಲವನಕಟ್ಟೆ ಗಿರಿಯಮ್ಮ
ಶ್ಲೋಕ : ಆಗತಾದಿತ್ರಿಕಾಲಜ್ಞಂ ಆಗಮಾರ್ಥವಿಶಾರದಂ | ತ್ಯಾಗಭೋಗಸಮಾಯುಕ್ತಂ ಭಾಗಣ್ಣಾರ್ಯಗುರುಂ ಭಜೇ |

ಗೋಪಪ್ರಕರಸಂಕಾಶಂ ಗೋಪಾಲಾರ್ಚನ ತತ್ಪರಂ |
ಗೋದೇವ ವಂದ್ಯಪಾದಾಬ್ಜಂ ಗೋಪಾಲಾಖ್ಯ ಗುರುಂ ಭಜೇ |
ಭೂಪಾಲನತಪಾದಾಬ್ಜಂ ಪಾಪಾಲಿಪರಿಹಾರಿಣಂ |
ಗೋಪಾಲದಾಸಮೀಡೇಹಂ ಗೋಪಾಲಹರಿದರ್ಶನಂ |

ಮೊಸರಕಲ್ಲು ಎಂಬ ಗ್ರಾಮದಲ್ಲಿ ಜನಿಸಿದ ಗೋಪಾಲದಾಸರು, ತಮ್ಮ ಜೀವನಕ್ಕಾಗಿ ಬಹಳ ಬಡತನದಲ್ಲೇ ಕಾಲ ಕಳೆಯುತ್ತಿದ್ದರು.  ಜ್ಯೋತಿಷ್ಯವನ್ನು ಬಹಳ ಚೆನ್ನಾಗಿ ತಿಳಿದಿದ್ದ ಇವರ ಶಕ್ತಿ ಎಷ್ಟಿತ್ತೆಂದರೆ ಯಾರದೇ ಜ್ಯೋತಿಷ್ಯವನ್ನು ಅವರ ಹಿಂದಿನ ಮೂರು ಜನ್ಮದ ವೃತ್ತಾಂತವನ್ನು ಹೇಳುವಷ್ಟು ಸಾಮರ್ಥ್ಯವಿತ್ತು.

ಶ್ರೀ ಶ್ರೀನಿವಾಸಾಚಾರ್ಯರಿಗೆ (ಜಗನ್ನಾಥದಾಸರಿಗೆ), ಅವರ ಜೀವಿತದ ೪೦ ವರ್ಷಗಳ ಆಯಸ್ಸನ್ನು ಶ್ರೀ ವಿಜಯರಾಯರ ಅಪ್ಪಣೆಯಂತೆ ದಾನವಾಗಿ ನೀಡಿದ ಮಹಾನುಭಾವರು ಶ್ರೀ ಗೋಪಾಲದಾಸರು.  ಒಮ್ಮೆ ಇವರು ತಮ್ಮ ಶಿಷ್ಯರಿಗೆ ಮಧ್ಯರಾತ್ರಿ ತಮ್ಮ ತಪೋಬಲಪ್ರಭಾವದಿಂದ ಸೂರ್ಯನನ್ನು ದರ್ಶನ ಮಾಡಿಸಿದ್ದರು.  ಸಾವಿರಾರು ಕೀರ್ತನೆಗಳನ್ನೂ ಸುಳಾದಿಗಳನ್ನೂ ರಚಿಸಿದ್ದಾರೆ.

ಗೋಪಾಲದಾಸರಾಯ ನಿನ್ನಯ ಪಾದ
ನಾ ಪೊಂದಿದೆನೋ ನಿಶ್ಚಯ              | ಪ |
ಈ ಪೀಡಿಸುವ ತ್ರಯತಾಪಗಳೋಡಿಸಿ
ಕೈಪಿಡಿದೆನ್ನ ಕಾಪಾಡಿದ ಗುರುರಾಯ    | ಅ.ಪ |
ಘೋರವ್ಯಾಧಿಗಳ ನೋಡಿ ವಿಜಯರಾಯ
ಭೂರಿಕರುಣವ ಮಾಡಿ
ತೋರಿದವರೇ ಉದ್ಧಾರಕರೆಂದಂದಿ-
ನಾರಭ್ಯ ತವಪಾದ ಸೇರಿದೆ ಸಲಹೆಂದು
ಸೂರಿ ಜನಸಂಪ್ರಿಯ ಸುಗುಣೋ-
ದಾರ ದುರುಳನ ದೋಷನಿಚಯವ
ದೂರಗೈಸಿ ದಯಾಂಬುನಿಧೆ ನಿ-
ವಾರಿಸದೆ ಕರಪಿಡಿದಿ ಕರುಣದಿ         | ೧ |
ಅಪಮೃತ್ಯುವನು ತರಿದಿ ಎನ್ನೊಳಗಿದ್ದ
ಅಪರಾಧಗಳ ಮೆರೆದಿ
ಚಪಲಚಿತ್ತನೊಗೊಲಿದು ವಿಪುಲಮತಿಯನಿತ್ತು
ನಿಪುಣನೆಂದೆನಿಸಿದಿ ತಪಸಿಗಳಿಂದಲಿ
ಕೃಪಣವತ್ಸಲ ನಿನ್ನ ಕರುಣೆಗೆ
ಉಪಮೆಗಾಣೆನೊ ಬುಧರಿಂದ ಜಗದಾ-
ಧಿಪನ ಕಿಂಕರನೆನಿಸಿ ಮೆರೆಸುವ        | ೨ |
ಎನ್ನ ಪಾಲಿಸಿದಂದದಿ ಸಕಲಲಪ್ರ-
ಪನ್ನರ ಸಲಹೋ ಮೋದಿ
ಅನ್ಯರಿಗೀಪರಿ ಬಿನ್ನಪಗೈಯೆ ಜ-
ಗನ್ನಾಥವಿಠಲನ ಸನ್ನುತಿಸುವ ಧೀರ
ನಿನ್ನ ನಂಬಿದ ಜನರಿಗೆಲ್ಲಿಯ
ಬನ್ನವೋ ಭಕ್ತಾನುಕಂಪಿ ಶ-
ರಣ್ಯ ಬಂದೆನೋ ಈ ಸಮಯದಿ ಅ-
ಹರ್ನಿಶಿ ಧ್ಯಾನಿಸುವೆ ನಿನ್ನನು           | ೩ |

                    –   ಶ್ರೀ ಜಗನ್ನಾಥದಾಸರು
**********




info from sumadhwaseva.com--->


  • ಪುಷ್ಯ ಬಹುಳ ಅಷ್ಟಮಿ ಉತ್ತನೂರಿನ ಶ್ರೀ ಗೋಪಾಲದಾಸರ ಆರಾಧನ.  ಇವರು ಗಣಪತಿಯ ಅವತಾರ. ಇವರ ಕಾಲ 1722-1762.  ಮೊಸರಕಲ್ಲು ಎಂಬ ಗ್ರಾಮದಲ್ಲಿ ಜನಿಸಿದ ಗೋಪಾಲದಾಸರು, ತಮ್ಮ ಜೀವನಕ್ಕಾಗಿ ಬಹಳ ಬಡತನದಲ್ಲೇ ಕಾಲ ಕಳೆಯುತ್ತಿದ್ದರು.  ಜ್ಯೋತಿಷ್ಯವನ್ನು ಬಹಳ ಚೆನ್ನಾಗಿ ತಿಳಿದಿದ್ದ ಇವರ ಶಕ್ತಿ ಎಷ್ಟಿತ್ತೆಂದರೆ ಯಾರದೇ ಜ್ಯೋತಿಷ್ಯವನ್ನು ಅವರ ಹಿಂದಿನ ಮೂರು ಜನ್ಮದ ವೃತ್ತಾಂತವನ್ನು ಹೇಳುವಷ್ಟು ಸಾಮರ್ಥ್ಯವಿತ್ತು.

    ಶ್ರೀ ಶ್ರೀನಿವಾಸಾಚಾರ್ಯರಿಗೆ (ಜಗನ್ನಾಥದಾಸರಿಗೆ), ಅವರ ಜೀವಿತದ ೪೦ ವರ್ಷಗಳ ಆಯಸ್ಸನ್ನು ಶ್ರೀ ವಿಜಯರಾಯರ ಅಪ್ಪಣೆಯಂತೆ ದಾನವಾಗಿ ನೀಡಿದ ಮಹಾನುಭಾವರು ಶ್ರೀ ಗೋಪಾಲದಾಸರು.  ಒಮ್ಮೆ ಇವರು ತಮ್ಮ ಶಿಷ್ಯರಿಗೆ ಮಧ್ಯರಾತ್ರಿ ತಮ್ಮ ತಪೋಬಲಪ್ರಭಾವದಿಂದ ಸೂರ್ಯನನ್ನು ದರ್ಶನ ಮಾಡಿಸಿದ್ದರು.  ಸಾವಿರಾರು ಕೀರ್ತನೆಗಳನ್ನೂ ಸುಳಾದಿಗಳನ್ನೂ ರಚಿಸಿದ್ದಾರೆ.

    ಇವರ ಪ್ರಮುಖ ಕೀರ್ತನೆಗಳು – ರಥವಾನೇರಿದ ರಾಘವೇಂದ್ರ, ವೈರಾಗ್ಯ ಮಾರ್ಗ ಕೇಳು, ಆವ ರೋಗವೋ ಎನಗೆ ಧನ್ವಂತ್ರಿ, ಬಾರಯ್ಯ ಬಾ ಬಾ ಬಕುತರ ಪ್ರಿಯ, ಎನ್ನ ಭಿನ್ನಪ ಕೇಳೋ ಧನ್ವಂತ್ರಿ ದಯಮಾಡೊ, ಹ್ಯಾಂಗೆ ಮಾಡಲಯ್ಯ ಹೋಗುತಿದೆ ಆಯುಷ್ಯಇತ್ಯಾದಿ ಕೀರ್ತನೆಗಳು.

    ಇವರು ಉತ್ತನೂರಿನಲ್ಲಿ ಪುಷ್ಯ ಬಹುಳ ಅಷ್ಟಮಿ ತಮ್ಮ ಕೊನೆಯುಸಿರೆಳೆದರು


**********



[7:26 PM, 1/27/2019] +91 95358 37843: ಇಂದು,ಶ್ರೀ ಗೋಪಾಲ ದಾಸರ,ಪೂರ್ವಾರಾಧನೆ.. 💐




 ಇಂದುಶ್ರೀ ಗೋಪಾಲ ದಾಸರ ಆರಾಧನೆ.
ಒಮ್ಮೆ ಉತ್ತನೂರಿನಲ್ಲಿ ಶ್ರೀ ಗೋಪಾಲ ದಾಸರು ಸಾಯಂಕಾಲದ ಸಂಧ್ಯಾವಂದನೆ ಮುಗಿಸಿಕೊಂಡು, ಪಾರಾಯಣ ಮಾಡುತ್ತಾ ಕುಳಿತಿದ್ದರು.
ಅದೇ ಸಮಯದಲ್ಲಿ ಒಬ್ಬ ಸಾಧ್ವಿ ಮಣಿಯು ಅದೇ ತಾನೇ ಕರೆದ ಗೋವಿನ ಹಾಲನ್ನು ತೆಗೆದುಕೊಂಡು ದಾಸರ ಮನೆಗೆ ಬಂದಳು.
ಆಕೆಗೆ ಶ್ರೀ ಗೋಪಾಲ ದಾಸರ ದರುಶನ ಮಾಡಿ ಅವರಿಗೆ ಸಮರ್ಪಣೆ ಮಾಡಬೇಕು ಎಂಬ ಆಸೆ.
ದಾಸರು ಮನೆಯಲ್ಲಿ ಇಲ್ಲ ಊರ ಹೊರಗಡೆ ತೊರೆಯ ಬಳಿ  ಇದ್ದಾರೆ ಅಂತ ಅವರ ತಾಯಿಯವರು ಹೇಳಿದ್ದು ಕೇಳಿ ದಾಸರಿದ್ದ ಸ್ಥಳಕ್ಕೆ ಆ ಸಾಧ್ವಿಯು ಬರುತ್ತಾಳೆ.
ತಮ್ಮ ಸಾಯಂಕಾಲದ ಭಜನೆ ಪೂಜೆಯ ಸಮಯದಲ್ಲಿ ಈ ಗೋವಿನ ಹಾಲನ್ನು ವೆಂಕಟೇಶ್ವರ ನಿಗೆ ಸಮರ್ಪಣೆ ಮಾಡಿ ಅಂತ ಪ್ರಾರ್ಥನಾ ಮಾಡುತ್ತಾಳೆ.
ಕೆಲ ನಿಮಿಷ ಪಾತ್ರೆಯನ್ನು ಕೈಯಲ್ಲಿ ತೆಗೆದುಕೊಂಡು ದಾಸರು,ಭಗವಂತನ ಸ್ಮರಿಸುತ್ತಾ ಅಷ್ಟು ಹಾಲನ್ನು ತಾವು ಕುಳಿತ ಉಸುಕಿನಲ್ಲಿ ಚೆಲ್ಲಿ,ಅಲ್ಲಿ ಇದ್ದ ಆ ತೊರೆಯಲ್ಲಿ ಆ ಪಾತ್ರೆಯನ್ನು ತೊಳೆದು 
ಶ್ರೀನಿವಾಸ ನಿಗೆ ಸಮರ್ಪಣೆ ಆಯಿತವ್ವ!! ಸ್ವಾಮಿ ಪ್ರೀತಿಯಾಗಿದ್ದಾನೆ.ಪಾತ್ರೆಯನ್ನು ತೆಗೆದುಕೊಂಡು ಮನೆಗೆ ಹಿಂತಿರುಗು ಅಂತ ಹೇಳುತ್ತಾರೆ..
ದಾಸರ ಈ ಚರ್ಯೆಯನ್ನು ಕಂಡು ಆ ಹೆಣ್ಣು ಮಗಳು ಏನು ಮಾತನಾಡದೇ ಅಳಲು ಶುರು ಮಾಡುತ್ತಾಳೆ.
ಅವಾಗ್ಗೆ ಗೋಪಾಲ ದಾಸರು
ಏನವ್ವಾ!! ಯಾಕ ಅಳ್ತಾ ಇದ್ದೀ?? ಕಾರಣ ಹೇಳು!! ಅಂದಾಗ
ಅವಾಗ ಆ ಹೆಣ್ಣು ಮಗಳು 
ದಾಸರೇ!! ನಾನು ಬಹು ಭಕ್ತಿ ಇಂದ ಈ ಗೋ ಕ್ಷೀರ ವನ್ನು ಶ್ರೀ ವೆಂಕಟೇಶ್ವರ ನಿಗೆ ಜ್ಞಾನಿಗಳಾದ ತಮ್ಮಿಂದ ಅರ್ಪಿಸಬೇಕು ಅಂತ ತಂದೆ.
ತಾವು ನೋಡಿದರೆ ಈ ಮರಳಿನಲ್ಲಿ ಅದನ್ನು ಚೆಲ್ಲಿದಿರಿ!!.ನಿಜಕ್ಕೂ ಅದನ್ನು ನೋಡಿ ನನಗೆ ನಾನೆಷ್ಟು ಪಾಪಾತ್ಮಳು?? ನಾನು ತಂದ ಹಾಲನ್ನು ದಾಸರು ದೇವರಿಗೆ ಸಮರ್ಪಣೆ ಮಾಡದೇ ಉಸುಕಿನಲ್ಲಿ ಹಾಕಿದರುಅಂತ ಅನ್ನಿಸಿತು ಅಂತ ಅಳಲು ಶುರು ಮಾಡಿದಳು.
ತಕ್ಷಣ ದಾಸರು
ಅವ್ವಾ!! ಭಜನೆ  ಕಾಲದವರೆಗೆ ಕಾದು ಶ್ರೀ ಹರಿಗೆ ಯಾಕೆ ಸಮರ್ಪಣೆ ಮಾಡಬೇಕು??
ಈಗ ತಾನೇ ತಂದ ಬಿಸಿ ನೊರೆ ಹಾಲು ಇವಾಗಲೇ ಅರ್ಪಣೆ ಮಾಡಿದೆ. ಸ್ವಾಮಿಗೆ...
ದುಃಖ ಪಡಬೇಡ!!.ರಾತ್ರಿ ಭಜನೆ ಸಮಯದಲ್ಲಿ ಬಾ! ಅಂತ ಹೇಳಿ ಕಳಿಸುವರು
ಆದರೂ ಆ ಸಾಧ್ವಿ ಯ ಮನಸ್ಸಿನ ದುಗುಡ ತಪ್ಪಲಿಲ್ಲ.
ಸರಿಯಾದ ಸಮಯಕ್ಕೆ ಭಜನೆ ಗೆ ಉತ್ತನೂರಿನ ವೆಂಕಪ್ಪನ ಗುಡಿಗೆ ಬಂದಳು.
ಮಂಗಳಾರುತಿ ಸಮಯ.
ಶ್ರೀನಿವಾಸ ನಿಗೆ ಮಂಗಳಾರತಿ ಮಾಡಲು ಶ್ರೀ ಗೋಪಾಲ ದಾಸರು ಗರ್ಭಗುಡಿಯಲ್ಲಿ ಹೊಕ್ಕರು.
ಜನರ ಮಧ್ಯೆ ಕುಳಿತಿದ್ದ ಆ ಹೆಣ್ಣು ಮಗಳನ್ನು ಕರೆದು ಗರ್ಭಗುಡಿಯ ಹೊಸ್ತಿಲ ಮುಂದೆ ಕೂಡಿಸಿ ಸ್ವಾಮಿಯನ್ನು ನೋಡು!!
ಅಂತ ಹೇಳಿದರು*.
ಶ್ರೀನಿವಾಸನ ಮುಖವನ್ನು ನೋಡುತ್ತಾ ನಿಂತ ಆ ಹೆಣ್ಣು ಮಗಳಿಗೆ ದೇವರ ಮುಖದಿಂದ ಕ್ಷೀರ ಸೋರುವದನ್ನು ಕಂಡು ದಾಸರ ಬಗ್ಗೆ ತಪ್ಪು ತಿಳಿದ ಕಾರಣಕ್ಕಾಗಿ ಸ್ವಾಮಿ ಯ ಬಳಿ ತನ್ನ ಗಲ್ಲವನ್ನು ಬಡಿದುಕೊಂಡು ಗೋವಿಂದ! ಗೋವಿಂದಾ ಅಂತ  ನಾಮ ಸ್ಮರಣೆ ಮಾಡಿದಳು
ಇದನ್ನು ಪ್ರತ್ಯಕ್ಷವಾಗಿ ಕಂಡ 
ಶ್ರೀಗೋಪಾಲ ದಾಸರ ತಮ್ಮಂದಿರಾದ
ತಂದೆ ಗೋಪಾಲ ವಿಠ್ಠಲ ದಾಸರು ತಮ್ಮ ಕೃತಿಯಲ್ಲಿ ಹೇಳುತ್ತಾರೆ.


ತರುಣಿ ಕ್ಷೀರವ ತಂದು ಕೊಡುತಿರೆ
ಭರದಿ ಮರಳೊಳಗೆರದನು
ಮರಳಿ ಗುಡಿಯೊಳು ಬರುತಿರಲು ಅದ ಕರುಣಾನಿಧಿ ತಾ ತೋರ್ದನು

🙏

ಆರಾಧನೆ ಪ್ರವುಕ್ತ ಅವರ ಸ್ಮರಣೆ..


ಒಂದುದಿನ ಎಂದಿನಂತೆ ಉತ್ತನೂರಿನಲ್ಲಿ ಪ್ರಾತ:ಕಾಲದ ಸಂಧ್ಯಾವಂದನಾದಿಗಳನ್ನು ಮುಗಿಸಿ,ಶ್ರೀಹರಿಯ ಪೂಜೆಗೆ ಹೂ,ತುಳಸಿಗಳನ್ನು ಸಂಗ್ರಹಿಸಲು ತೆರಳುತ್ತಿದ್ದರು.ಸ್ವಲ್ಪ ದೂರ ಸಾಗಿದನಂತರ  ಇದ್ದಕಿದ್ದಂತೆ ಓರ್ವ ರಾಹುತ ಕುದರೆ ಯಮೇಲೆ ಕೂತು ಇವರ ಹಿಂದೆಯೇ ಬರಹತ್ತಿದನು ದೂರದಲ್ಲಿ ಬರುತ್ತಿರುವ ಕುದುರೆಯ ಓಟದ ಸದ್ದು ಕೇಳಿಸಿತು ಶ್ರೀದಾಸರಿಗೆ.ನಿಂತು-ತಿರುಗಿ ನೋಡಿದರು,ಈತನಾರೆಂದು ಶ್ರೀ ದಾಸಾರಿಗೆ ಅರ್ಥವಾಗಲಿಲ್ಲ!ಕುದರೆಯನ್ನು ವೇಗದಿಂದ ಇವರ ಹತ್ತಿರ ಬರತೊಡಗಿದ ಆ ರಾಹುತ.


ಹತ್ತಿರ ಬಂದ ಬಂದವನೇ ' ಆಲೇ ನಾಹೀ' ಎಂದು ಗಂಭೀರವಾಗಿ ಹೇಳಿ-ಕುದರೆಯನ್ನು ಮುಂದೆ ಓಡಿಸುತ್ತಿದ್ದಂತೆಯೇ ಅದೃಶ್ಯನಾದ.


ಇದೆ ಗುಂಗಿನಲ್ಲಿದ್ದ ಶ್ರೀ ದಾಸರು ತುಳಸಿ,ಪುಷ್ಪಗಳನ್ನು ಸಂಗ್ರಹಿಸಿಕೊಂಡು ಬಂದು,ತಮ್ಮ ದೇವರ ಮನೆಯಲ್ಲಿರಿಸಿ,ಶ್ರೀ ಹರಿಗೆ ನಮಿಸಿ,ಗುಡಿಗೆ ಬಂದರು.ಕುದರೆಯನ್ನೇರಿ ಬಂದವನಾರೆಂಬುದನ್ನು ಕಂಡುಹಿಡಿಯಲೇ ಬೇಕೆಂಬ ಹಂಬಲ ಹೆಚ್ಚಿತು.


 ಆ ಕುದುರೆ ತೇಜಸ್ಸು,ಆ ನಡೆ,ಆ ಗಾ೦ಭೀರ್ಯ ಮನುಷ್ಯಲೋಕದ ಕೂದರೆಯದಲ್ಲವೆಂಬುದನ್ನು ಅರಿತರು ಶ್ರೀ ದಾಸರು.ಅಂತೆಯೇ -ಆ ರಾಹುತ ಉಡುಗೆ-ತೊಡುಗೆಗಳನ್ನು ಆ ದೇಹದ ತೇಜಸ್ಸು,ಕುದುರೆಯನ್ನು ಬೆನ್ನಟ್ಟಿ ಓಡಿಸಿಕೊಂಡು ಬಂದು 'ಆಲೇ ನಾಹಿ' ಎಂದು ಕೇಳಿದ ಮಾತು(ಮರಾಠಿ ಮಾತು,ಅಂದರೆ 'ಇನ್ನು ಯಾಕೆ ಬಂದಿಲ್ಲ) ಗಂಭೀರಧ್ವನಿ ಇವುಗಳ ಸ್ಮರಣೆಬಂತು.ಹೊಳೆಯಿತು ಶ್ರೀ ಪಂಢರಿನಾಥ ಪಾಂಡುರಂಗನೆಂದೆ.ಆಗಲೇ ರಚಿಸಿದರು ಈ ಸುಳಾದಿಯನ್ನು ...


" ನೀಲಾಗುದಾರಿಯನೇರಿ ಶಾಲು ಸೊಂಟಕೆ ಸುತ್ತಿ"... 


ಆ ಸುಳಾದಿಯ ಒಂದು ಸಾಲಿನಲ್ಲಿ ಶ್ರೀ ದಾಸರು ಮೇಲಿನ ಘಟನೆಯನ್ನು ಸುಂದರವಾಗಿ ಧಾಕಲಿಸಿದ್ದಾರೆ.." ಪಲಾಯನದಿ ಅಶ್ವವೇರಿ ಒಲ್ಯಾಡಿಸುತ್ತ 'ಆಲೇ ನಾಹಿ' ಎಂದು ಹೇಳಿದವನಾರವ್ವ...


ಎಂಬುದಾಗಿ ಹಾಡಿ,' ನಾನಿನ್ನು ನಿನ್ನ ಕ್ಷೇತ್ರಕ್ಕೆ ಬರಲಿಲ್ಲವಾದರೂ,ಭಕ್ತ ವತ್ಸಲನಾದ,ದೇವಾ! ಪಂಢರಿರಾಯ! ನಾವಿರುವ ಸ್ಥಳಕ್ಕೆ ದಯಮಾಡಿ ಸಂದರ್ಶನವಿತ್ತು ಹರ್ಷಗೊಳಿಸಿದೆ,ನಿನ್ನ ಕ್ಷೇತ್ರಕ್ಕೆ ಬಂದು ಅಲ್ಲಿ ನಿನ್ನ ದರ್ಶನಮಾಡುವ ಸೌಭಾಗ್ಯವನ್ನು ಇವನಿಗೆ ಕರುಣಿಸಬೇಕೆಂಬ ದಯೆಯಿಂದ ಅಂದೆಯಾ 'ಆಲೇ ನಾಹಿ' ಎಂದು.ಕರುಣಾಸಾಗರ !ಎಂದರಂತೆ...! 


ಇದೇ ತರ ನಮ್ಮ ಶ್ರೀ ಪುರಂದರ ದಾಸರಿಗೆ,ಶ್ರೀ ವಿಜಯ ಪ್ರಭುಗಳಿಗೂ ಹಾಗು ಶ್ರೀ ಜಗನ್ನಾಥ ದಾಸಾರಿಗೆ ಆ ವಿಠೋಬಾ ಒಲಿದಿರುವ ಘಟನೆಗಳು ನಾವು ಕಾಣಬಹುದು..


ಇವರ ಪೂಜೆಯೇ ನಮ್ಮ ವಿಜಯರಾಯರ ಪೂಜೆ.
ಇವರ ದಯವೆ ವಿಜಯದಾಸರ ದಯವು|
ಇವರ ಕೊಂಡಾಡುವುದೇ ವಿಜಯರಾಯರ ಸ್ತೋತ್ರ
ಇವರೇ ಶ್ರೀವಿಜಯರಾಯರ ಮುಖ್ಯಪ್ರಾತಿಮೆ.


ಶ್ರೀ ದಾಸಾರ್ಯರ ಸೇವೆಯಲ್ಲಿ..


💐🙏🏼ಎಸ್.ವಿಜಯ ವಿಠ್ಠಲ🙏🏼💐

*******


ಶ್ರೀ ಗೋಪಾಲ ದಾಸರ ಆರಾಧನಾ ಪ್ರಯುಕ್ತ ಅವರು ರಚಿಸಿದ ವೈರಾಗ್ಯ ಸುಳಾದಿಯ ಬಗ್ಗೆ ವಿವರಣೆ.

ವೈರಾಗ್ಯ ಎಂದರೇನು?? ಅದರ ಬಗ್ಗೆ ದಾಸರು ಹೇಳುತ್ತಾರೆ.

ಆಯಾಸ ಬಡದೆ ಪರರ ಶ್ರೇಯಸ್ಸು ನೋಡಿ| ಶ್ರೀಯರಸ ನಿತ್ತನೆಂಬುದೆ ವೈರಾಗ್ಯ||
.
ನಿಜಕ್ಕೂ ಇವಾಗಿನ ಕಾಲಕ್ಕೆ ಸರಿಯಾಗಿ ದಾಸರು ಹೇಳಿದ್ದಾರೆ.
ಪರರ ಏಳಿಗೆ,ಸಂಪತ್ತು ಕಂಡು ಅವರ ಮೇಲೆ ಮಾತ್ಸರ್ಯಮಾಡಿ,ನಿತ್ಯ ವು ಸಂತೋಷವಾಗಿರದೇ ಮನಸ್ಸನ್ನು ಕೆಡಸಿಕೊಂಡು ಮನೆಯ ವಾತಾವರಣ ಮತ್ತು ಮನಸ್ಸು ಕೆಡಿಸಿಕೊಳ್ಳುವದು ಬೇಡ.
ಶ್ರೀಪಾದರಾಜರು ಹೇಳಿದ ಹಾಗೆ ಇಟ್ಟ್ಹಾಂಗೆ ಇರುವೆನು ಹರಿಯೆ
ಆ ತರಹದ ಮನೋಭಾವ ನಮ್ಮ ಒಳಗಡೆ ಬಂದರೆ ನಮ್ಮ ಸುತ್ತ ಮುತ್ತಲಿನ ವಾತಾವರಣ ಚೆನ್ನಾಗಿ ಇರುತ್ತದೆ.
ಇನ್ನೊಬ್ಬರ ಸುಖ,ಸಂತೋಷ,ಸಂಪತ್ತು ಕಂಡು ಮನಸ್ಸಿನ ಒಳಗಡೆ ಕುದಿಯುವ ಮನುಷ್ಯ ಅವನು ಸಮಾಜಕ್ಕೆ ಪ್ರಯೋಜನ ಅಲ್ಲ
.
ವೈರಾಗ್ಯ ವೆಂದರೆ ಎಲ್ಲಾ ಬಿಟ್ಟು ಅರಣ್ಯಕ್ಕೆ ಹೋಗಿ ಕೂಡುವದಲ್ಲ.
ಸಂಸಾರದ ಜವಾಬ್ದಾರಿ ಗಳಿಗೆ ಬೆನ್ನು ತೋರಿಸಿ ತನ್ನ ನಂಬಿ ಬಂದ ಹೆಂಡತಿ ಮಕ್ಕಳನ್ನು ಬೀದಿಗೆ ತಳ್ಳಿ ದೇಶ ಸುತ್ತುವದಲ್ಲ.

ಇನ್ನೊಂದು ಉದಾಹರಣೆ ಕೊಡುತ್ತಾರೆ ದಾಸರು.

ಇವಾಗ ಹಣವನ್ನು ಬಿಡುತ್ತೇವೆ.
 ಅಂತ ಕೆಲವರು ಹೇಳುತ್ತಾರೆ.

ಅದಕ್ಕೆ ದಾಸರು ಕೊಡುವ ಉಪಮೇಯ ಬಹು ಸುಂದರ.
ಧನ ಪರಿತ್ಯಾಗ ವನ್ನು ಮಾಡಿದಡಾಯಿತೆ|
ಘನವಾದ ವೈರಾಗ್ಯ ವಲ್ಲ ನೋಡಿ|
ಧನವ ಬಿಟ್ಟಿರುವ ದನಗಳು ಅನುದಿನ|
ಘನವೇನೋ ಇವಗೆ ಅವಕ್ಕೆ ನೋಡೋ||
ಹಣಕಾಸು ಬಳಕೆ ಮನುಷ್ಯ ವರ್ಗದ ವರಿಗೆ ಮಾತ್ರ. ಪ್ರಾಣಿಗಳು ಹಣದ ವ್ಯವಹಾರ ಮಾಡುವವೇ??
ಹಾಗಾದರೆ ಅವುಗಳನ್ನು ವೈರಾಗ್ಯ ಶಿಖಾಮಣಿ ಅಂತ ಹೇಳಬಹುದು ಅಲ್ಲವೇ??

ಮುಂದೆ ಹೇಳುತ್ತಾರೆ.
ಜನ ಮನೆಯ ಬಿಟ್ಟೇಕಾಂತದಲಿ ಕುಳಿತರಾಯಿತೆ|
ಘನವಾದ ವೈರಾಗ್ಯ ವಲ್ಲ ನೋಡಿ|
ಜನರ ಮನೆಯ ಬಿಟ್ಟಿರದೆ ಅನುಗಾಲ ಗೂಗೆಯು| ಘನವೆಂದು ಕರೆವರೆ ಜ್ಞಾನಿಗಳು.||

ಇವಾಗ ಗೂಬೆ ಸಹ ಮನೆ ಎಲ್ಲಾ ಬಿಟ್ಟು ಊರ ಹೊರಗಡೆ ಇರುವ ಪಾಳು ಬಿದ್ದ ಮನೆಯಲ್ಲಿ, ವೃಕ್ಷಗಳಲ್ಲಿ ವಾಸ ಮಾಡುತ್ತದೆ.. ಹಾಗಾದರೆ ಅದನ್ನು ವೈರಾಗ್ಯ ಶಿಖಾಮಣಿ ಅಂತ ಯಾರಾದರೂ ಹೇಳಲು ಸಾಧ್ಯವೇ??

ಹೀಗೆ ಅನೇಕ ಉದಾಹರಣೆ ಕೊಟ್ಟು ದಾಸರು ಕೊನೆಯಲ್ಲಿ ಹೇಳುತ್ತಾರೆ.

ನಿಜವಾದ ವೈರಾಗ್ಯ ಎಂದರೆ ಏನು ಅಂತ??

ಹೇಗೆ ಜನರು ಕಾಂಬ ಹಾಗೆವೆ| ಬಾಹಿರ ವೈರಾಗ್ಯ ವನ್ನು ಮಾಡೆ
ವೈರಾಗ್ಯ ವಲ್ಲವೋ|
ನಾಗಶಯನ ನಮ್ಮ ಗೋಪಾಲ ವಿಠ್ಠಲ| ಸಮ್ಮತಾಗಿ ಉಣಿಸಿದ್ದುಂಡು ಇಪ್ಪುದೇ ವೈರಾಗ್ಯ||
.
ಭಗವಂತನು ಏನು ಕೊಡುತ್ತಾನೆ ಅದರಲ್ಲಿ ತೃಪ್ತಿ ಹೊಂದಿ ಇರುವದೇ ನಿಜವಾದ ವೈರಾಗ್ಯ.
ಒಂದು ಬೇಡ ಅಂತ ಹೇಳಿ ಮತ್ತೊಂದು ಕಡೆ ಆಸೆ ಪಡುವದು ವೈರಾಗ್ಯ ವಲ್ಲ
ಅನ್ನುವ ದಾಸರಾಯರ ವಾಣಿ ಬಹಳ ಸುಂದರ.
🙏🙏🙏
ಇವರ ಪೂಜೆಯು ನಮ್ಮ ವಿಜಯರಾಯರ ಪೂಜೆ|

ಇವರ ದಯವೆ ನಮ್ಮ ವಿಜಯರಾಯರ ದಯವು|

ಇವರ ಕೊಂಡಾಡುವದೇ ವಿಜಯರಾಯರ ಸ್ತೋತ್ರ|

ಇವರೇ ಶ್ರೀ ವಿಜಯರಾಯರ ಮುಖ್ಯ ಪ್ರತಿಮಾ||

ಗೋಪಾಲ ದಾಸರಾಯರ ದಿವ್ಯ ಚರಣಗಳು| ಕಾಪಾಡಲೆನ್ನ ಸತತ
🙏
ಶ್ರೀ ಗೋಪಾಲ ದಾಸರ ಅಂತರ್ಯಾಮಿಯಾದ ಶ್ರೀ ಗೋಪಾಲ ವಿಠ್ಠಲ ಪ್ರೀತಿಯಾಗಲಿ.
ಶ್ರೀ ಕೃಷ್ಣಾರ್ಪಣಮಸ್ತು
🙏
ಗುರುಗಳಾದ ಶ್ರೀ ಗೋಪಾಲದಾಸರ ಕೃತಿಯ ಬಗ್ಗೆ ನನ್ನ ಅಲ್ಪಮತಿಗೆ ತಿಳಿದಷ್ಟು ಇಲ್ಲಿ ದಾಖಲು ಮಾಡುವ ಪುಟ್ಟ ಪ್ರಯತ್ನ.
ಏನಾದರು ತಪ್ಪು ಗಳು ಇದ್ದಲ್ಲಿ,
ಬಲ್ಲವರು  ಅದನ್ನು ತಿದ್ದಿ ಎನ್ನ ಉದ್ದರಿಸಬೇಕೆಂದು ಕಳಕಳಿಯ ವಿನಂತಿ.
🙏ಅ.ವಿಜಯವಿಠ್ಠಲ🙏
***********



ಶ್ರೀ ಗೋಪಾಲ ದಾಸರ ಆರಾಧನಾ
ಅದರ ಪ್ರಯುಕ್ತ ಅವರ ಮಹಿಮೆ ಯನ್ನು ತಿಳಿಸುವ ಪುಟ್ಟ ಪ್ರಯತ್ನ..


ಒಮ್ಮೆ ಸಂಚಾರಕ್ರಮದಲ್ಲಿ ಸಂಚಾರ ಮಾಡುತ್ತಾ ಶ್ರೀ ಗೋಪಾಲದಾಸರು ಒಂದು ಊರಿನಲ್ಲಿ ವಾಸ್ತವ್ಯ ಮಾಡುತ್ತಾರೆ.
ನಿತ್ಯವು ದೇವತಾಪೂಜೆ,ಬ್ರಾಹ್ಮಣರು ಸುವಾಸಿನಿಯರ ಭೋಜನ,ನಡೆಯುತ್ತಿತ್ತು.
ಇದನ್ನು ನೋಡಿದ ಕೆಲ ಕುಹಕಿಗಳು ಹೇಗಾದರೂ ದಾಸರಿಗೆ ಕೆಟ್ಟ ಹೆಸರು ತರಲು ಪ್ರಯತ್ನ ಪಟ್ಟರು.
ಒಂದು ದಿನ ದಾಸರು ಮುಂದಿನ ಊರಿಗೆ ಹೋಗಬೇಕು, ಹಾಗಾಗಿ ಆ ದಿನ ಆ ಊರಿನ ಎಲ್ಲರಿಗು ಭೋಜನಕ್ಕೆ ಆಹ್ವಾನ ನೀಡಿದ್ದಾರೆ.
ಇದೇ ಸಮಯದಲ್ಲಿ ಆ ಕುಹಕಿಗಳು ಅಲ್ಲಿ ಅಡಿಗೆಮಾಡುವವನನ್ನು ಒಲಿಸಿಕೊಂಡು ಅಂದಿನ ಪಲ್ಯ ಒಂದರಲ್ಲಿ ಹೆಚ್ಚಿನ ಪ್ರಮಾಣ ಉಪ್ಪು ಸೇರಿಸುವಲ್ಲಿ ಯಶಸ್ವಿಯಾದರು
ಮತ್ತು ದಾಸರು ಪೂಜೆ ಮಾಡುವ ಸಮಯದಲ್ಲಿ ಒಂದು ಕಡೆ ಏನು ತಿಳಿಯದ ಹಾಗೆ ಕುಳಿತು ಮುಂದೇನು ಆಗುವದು ಎಂಬ ನಿರೀಕ್ಷೆಯಲ್ಲಿ ಇದ್ದರು.
ಇತ್ತ ನೈವೇದ್ಯದ ಸಮಯ ಒಂದು ಕಡೆ ಭಕ್ತರೆಲ್ಲ ದ್ವಾದಶ ಸ್ತೋತ್ರ ಪಠಣ ನಡೆದಿದೆ.
ಅಡಿಗೆ ಮಾಡಿದ ಎಲ್ಲಾ ಪದಾರ್ಥಗಳನ್ನು ತಂದು ದಾಸರ ಮುಂದೆ ಇಟ್ಟಿದ್ದಾರೆ.
ತಕ್ಷಣ ದಾಸರು ಇನ್ನೊಂದು ಮಂಡಲವನ್ನು ಮಾಡಿ ಒಂದು ಪಾತ್ರೆಯಲ್ಲಿ ನೀರನ್ನು ತಂದಿಡಲಿಕ್ಕೆ ಹೇಳುತ್ತಾರೆ
ಇತ್ತ ದೇವತಾ ಪೂಜ,ನೈವೇದ್ಯ, ಎಲ್ಲ ಆಯಿತು.ಎಲ್ಲಾ ಜನರ ಭೋಜನ ಆಯಿತು.ಬಂದಂತಹ ಅನೇಕರು ಎಲ್ಲ ಪದಾರ್ಥಗಳನ್ನು ಹೊಗಳಿ,ವಿಶೇಷವಾಗಿ ಆ ಪಲ್ಯದ ರುಚಿಯನ್ನು ಹೊಗಳುವದನ್ನು ಕೇಳಿ ಆ ಕುಹಕಿಗಳಿಗೆ ಅತೀವ ಸಂಕಟವಾಯಿತು.
ತಾವು ಆ ಪಲ್ಯ ಭೋಜನಕ್ಕೆ ಹಾಕಿಸಿಕೊಂಡು ನೋಡಲು ಅದು ಅಪೂರ್ವ ರುಚಿ!!!.ಹೌಹಾರಿದರು.??
ಇತ್ತ ದಾಸರಾಯರು ಎಲ್ಲರೂ ಕೂತ ಕಡೆಗೆ ಬಂದು ಉಪಚಾರ ಮಾಡುತ್ತಾ ಆ ಕುಹಕಿಗಳ ಕಡೆ ಬರುತ್ತಾರೆ.ಅವರಿಗೆ  ದಾಸರನ್ನು ನೋಡಲು ಧೈರ್ಯ ಇಲ್ಲ.
ಅದೇ ಸಮಯದಲ್ಲಿ ಅವರು ಕುಡಿಯುವ ನೀರಿನ ಥಾಲಿ ಬರಿದಾಗುತ್ತಿರುವ.
ತಕ್ಷಣ ದಾಸರು 
ತಾವು ನೈವೇದ್ಯಕ್ಕೆ ಇಟ್ಟ ನೀರನ್ನು ತರಿಸಿ ಅವರಿಗೆ ಬಡಿಸಲು ಹೇಳಿದಾಗ ಆ ನೀರನ್ನು ಕುಡಿದ ಕುಹಕಿಗಳಿಗೆ ಅದು ವಿಪರೀತ ಉಪ್ಪು ಆಗಿರುವದು ಕಂಡು ಬಂತು.
ಆಗ ಅವರಿಗೆ ದಾಸರ ಮಹಿಮೆ ಅರಿವಾಯಿತು.
ದಾಸರು ಹೇಳುತ್ತಾರೆ. 
ನೀವು ಪಲ್ಯದಲ್ಲಿ ಉಪ್ಪು ಬೆರೆಸಿದಿರಿ,ನೈವೇದ್ಯ ಸಮಯದಲ್ಲಿ ಭಗವಂತನ ಅನುಗ್ರಹದಿಂದ ತಿಳಿಯಿತು.ತಕ್ಷಣ ನಾವು ಉಪ್ಪು ಅಭಿಮಾನಿಯಾದ ದೇವತೆ ನಿಋತಿ ಹಾಗು ಅವನ ಅಂತರ್ಗತ ನಾದ ಜನಾರ್ಧನನನ್ನು ಪ್ರಾರ್ಥಿಸಲಾಗಿ ಇದನ್ನು ಈ ನೀರಿನಲ್ಲಿ ತಂದಿಟ್ಟ ಆ ಸ್ವಾಮಿ ಅಂತ ಹೇಳಿದರು..
ದಾಸರಿಗೆ ಮಾಡಿದ ಅಪಚಾರ,ಅವರ ಮೇಲೆ ಭಗವಂತನ ಕಾರುಣ್ಯ ನೋಡಿ ಆ ಕುಹಕಿಗಳು ಅವರ ಬಳಿ ಬಂದು ಶರಣಾಗತರಾಗುತ್ತಾರೆ ಆಗ ದಾಸರು ಯಾವತ್ತೂ ಶ್ರೀ ಹರಿಯ ಭಕ್ತರಲ್ಲಿ ದ್ವೇಷ ಆಸೂಯೆಗಳನ್ನು ಮಾಡಬೇಡಿ ಅಂತ ಹೇಳಿ ಅವರನ್ನು ಕ್ಷಮಿಸಿ ಕಳುಹಿಸುತ್ತಾರೆ.
ಇದನ್ನೇ ಅವರ ಶಿಷ್ಯರಾದ ಹಾಗೂ ತಮ್ಮಂದಿರಾದ ರಂಗಪ್ಪದಾಸರು(ತಂದೆ ಗೋಪಾಲವಿಠ್ಠಲ)ಶ್ರೀ ಗೋಪಾಲದಾಸರ ಚರಿತ್ರೆ ಪದದಲ್ಲಿ ೩೯ ನೇ ಸಾಲಿನಲ್ಲಿ ಹೇಳುತ್ತಾರೆ.
ಇವರ ತುತಿಸಲು ಸೂತ ಶಾಕದಿ| 
ಲವಣವಧಿಕವ ಮಾಡಲು
ಲವಣಗತ ಜನಾರ್ಧನನಿಗರ್ಪಿಸೆ ಸವಿದು ಭುಂಜಿಸಿ ಪೊಗಳಲು||
..
ಭಜಿಸಿ ಬದುಕಿರೋ|....
ಭಜನಿ ಮಾಡುವ ವಿಜಯರಾಯರೆ| ನಿಜ ಗುರುಗಳೆಂದಿನಿಪನ||🙏
🙏ಅ.ವಿಜಯವಿಠ್ಠಲ 🙏
*****


 ಶ್ರೀ ಗೋಪಾಲ ದಾಸರ ಆರಾಧನಾ ಪ್ರಯುಕ್ತ ಅವರು ರಚಿಸಿದ ವೈರಾಗ್ಯ ಸುಳಾದಿಯ ಬಗ್ಗೆ ವಿವರಣೆ.


ವೈರಾಗ್ಯ ಎಂದರೇನು?? ಅದರ ಬಗ್ಗೆ ದಾಸರು ಹೇಳುತ್ತಾರೆ.


ಆಯಾಸ ಬಡದೆ ಪರರ ಶ್ರೇಯಸ್ಸು ನೋಡಿ| ಶ್ರೀಯರಸ ನಿತ್ತನೆಂಬುದೆ ವೈರಾಗ್ಯ||
.
ನಿಜಕ್ಕೂ ಇವಾಗಿನ ಕಾಲಕ್ಕೆ ಸರಿಯಾಗಿ ದಾಸರು ಹೇಳಿದ್ದಾರೆ.
ಪರರ ಏಳಿಗೆ,ಸಂಪತ್ತು ಕಂಡು ಅವರ ಮೇಲೆ ಮಾತ್ಸರ್ಯಮಾಡಿ,ನಿತ್ಯ ವು ಸಂತೋಷವಾಗಿರದೇ ಮನಸ್ಸನ್ನು ಕೆಡಸಿಕೊಂಡು ಮನೆಯ ವಾತಾವರಣ ಮತ್ತು ಮನಸ್ಸು ಕೆಡಿಸಿಕೊಳ್ಳುವದು ಬೇಡ.
ಶ್ರೀಪಾದರಾಜರು ಹೇಳಿದ ಹಾಗೆ ಇಟ್ಟ್ಹಾಂಗೆ ಇರುವೆನು ಹರಿಯೆ
ಆ ತರಹದ ಮನೋಭಾವ ನಮ್ಮ ಒಳಗಡೆ ಬಂದರೆ ನಮ್ಮ ಸುತ್ತ ಮುತ್ತಲಿನ ವಾತಾವರಣ ಚೆನ್ನಾಗಿ ಇರುತ್ತದೆ.
ಇನ್ನೊಬ್ಬರ ಸುಖ,ಸಂತೋಷ,ಸಂಪತ್ತು ಕಂಡು ಮನಸ್ಸಿನ ಒಳಗಡೆ ಕುದಿಯುವ ಮನುಷ್ಯ ಅವನು ಸಮಾಜಕ್ಕೆ ಪ್ರಯೋಜನ ಅಲ್ಲ
.
ವೈರಾಗ್ಯ ವೆಂದರೆ ಎಲ್ಲಾ ಬಿಟ್ಟು ಅರಣ್ಯಕ್ಕೆ ಹೋಗಿ ಕೂಡುವದಲ್ಲ.
ಸಂಸಾರದ ಜವಾಬ್ದಾರಿ ಗಳಿಗೆ ಬೆನ್ನು ತೋರಿಸಿ ತನ್ನ ನಂಬಿ ಬಂದ ಹೆಂಡತಿ ಮಕ್ಕಳನ್ನು ಬೀದಿಗೆ ತಳ್ಳಿ ದೇಶ ಸುತ್ತುವದಲ್ಲ.


ಇನ್ನೊಂದು ಉದಾಹರಣೆ ಕೊಡುತ್ತಾರೆ ದಾಸರು.


ಇವಾಗ ಹಣವನ್ನು ಬಿಡುತ್ತೇವೆ.
 ಅಂತ ಕೆಲವರು ಹೇಳುತ್ತಾರೆ.


ಅದಕ್ಕೆ ದಾಸರು ಕೊಡುವ ಉಪಮೇಯ ಬಹು ಸುಂದರ.
ಧನ ಪರಿತ್ಯಾಗ ವನ್ನು ಮಾಡಿದಡಾಯಿತೆ|
ಘನವಾದ ವೈರಾಗ್ಯ ವಲ್ಲ ನೋಡಿ|
ಧನವ ಬಿಟ್ಟಿರುವ ದನಗಳು ಅನುದಿನ|
ಘನವೇನೋ ಇವಗೆ ಅವಕ್ಕೆ ನೋಡೋ||
ಹಣಕಾಸು ಬಳಕೆ ಮನುಷ್ಯ ವರ್ಗದ ವರಿಗೆ ಮಾತ್ರ. ಪ್ರಾಣಿಗಳು ಹಣದ ವ್ಯವಹಾರ ಮಾಡುವವೇ??
ಹಾಗಾದರೆ ಅವುಗಳನ್ನು ವೈರಾಗ್ಯ ಶಿಖಾಮಣಿ ಅಂತ ಹೇಳಬಹುದು ಅಲ್ಲವೇ??


ಮುಂದೆ ಹೇಳುತ್ತಾರೆ.
ಜನ ಮನೆಯ ಬಿಟ್ಟೇಕಾಂತದಲಿ ಕುಳಿತರಾಯಿತೆ|
ಘನವಾದ ವೈರಾಗ್ಯ ವಲ್ಲ ನೋಡಿ|
ಜನರ ಮನೆಯ ಬಿಟ್ಟಿರದೆ ಅನುಗಾಲ ಗೂಗೆಯು| ಘನವೆಂದು ಕರೆವರೆ ಜ್ಞಾನಿಗಳು.||


ಇವಾಗ ಗೂಬೆ ಸಹ ಮನೆ ಎಲ್ಲಾ ಬಿಟ್ಟು ಊರ ಹೊರಗಡೆ ಇರುವ ಪಾಳು ಬಿದ್ದ ಮನೆಯಲ್ಲಿ, ವೃಕ್ಷಗಳಲ್ಲಿ ವಾಸ ಮಾಡುತ್ತದೆ.. ಹಾಗಾದರೆ ಅದನ್ನು ವೈರಾಗ್ಯ ಶಿಖಾಮಣಿ ಅಂತ ಯಾರಾದರೂ ಹೇಳಲು ಸಾಧ್ಯವೇ??


ಹೀಗೆ ಅನೇಕ ಉದಾಹರಣೆ ಕೊಟ್ಟು ದಾಸರು ಕೊನೆಯಲ್ಲಿ ಹೇಳುತ್ತಾರೆ.


ನಿಜವಾದ ವೈರಾಗ್ಯ ಎಂದರೆ ಏನು ಅಂತ??


ಹೇಗೆ ಜನರು ಕಾಂಬ ಹಾಗೆವೆ| ಬಾಹಿರ ವೈರಾಗ್ಯ ವನ್ನು ಮಾಡೆ
ವೈರಾಗ್ಯ ವಲ್ಲವೋ|
ನಾಗಶಯನ ನಮ್ಮ ಗೋಪಾಲ ವಿಠ್ಠಲ| ಸಮ್ಮತಾಗಿ ಉಣಿಸಿದ್ದುಂಡು ಇಪ್ಪುದೇ ವೈರಾಗ್ಯ||
.
ಭಗವಂತನು ಏನು ಕೊಡುತ್ತಾನೆ ಅದರಲ್ಲಿ ತೃಪ್ತಿ ಹೊಂದಿ ಇರುವದೇ ನಿಜವಾದ ವೈರಾಗ್ಯ.
ಒಂದು ಬೇಡ ಅಂತ ಹೇಳಿ ಮತ್ತೊಂದು ಕಡೆ ಆಸೆ ಪಡುವದು ವೈರಾಗ್ಯ ವಲ್ಲ
ಅನ್ನುವ ದಾಸರಾಯರ ವಾಣಿ ಬಹಳ ಸುಂದರ.
🙏🙏🙏
ಇವರ ಪೂಜೆಯು ನಮ್ಮ ವಿಜಯರಾಯರ ಪೂಜೆ|


ಇವರ ದಯವೆ ನಮ್ಮ ವಿಜಯರಾಯರ ದಯವು|


ಇವರ ಕೊಂಡಾಡುವದೇ ವಿಜಯರಾಯರ ಸ್ತೋತ್ರ|


ಇವರೇ ಶ್ರೀ ವಿಜಯರಾಯರ ಮುಖ್ಯ ಪ್ರತಿಮಾ||


ಗೋಪಾಲ ದಾಸರಾಯರ ದಿವ್ಯ ಚರಣಗಳು| ಕಾಪಾಡಲೆನ್ನ ಸತತ
🙏
ಶ್ರೀ ಗೋಪಾಲ ದಾಸರ ಅಂತರ್ಯಾಮಿಯಾದ ಶ್ರೀ ಗೋಪಾಲ ವಿಠ್ಠಲ ಪ್ರೀತಿಯಾಗಲಿ.
ಶ್ರೀ ಕೃಷ್ಣಾರ್ಪಣಮಸ್ತು
🙏
ಗುರುಗಳಾದ ಶ್ರೀ ಗೋಪಾಲದಾಸರ ಕೃತಿಯ ಬಗ್ಗೆ ನನ್ನ ಅಲ್ಪಮತಿಗೆ ತಿಳಿದಷ್ಟು ಇಲ್ಲಿ ದಾಖಲು ಮಾಡುವ ಪುಟ್ಟ ಪ್ರಯತ್ನ.
ಏನಾದರು ತಪ್ಪು ಗಳು ಇದ್ದಲ್ಲಿ,
ಬಲ್ಲವರು  ಅದನ್ನು ತಿದ್ದಿ ಎನ್ನ ಉದ್ದರಿಸಬೇಕೆಂದು ಕಳಕಳಿಯ ವಿನಂತಿ.
🙏ಅ.ವಿಜಯವಿಠ್ಠಲ🙏

******

*


ಶ್ರೀ ಗೋಪಾಲ ದಾಸರ ಚರಿತ್ರೆ


ತಮ್ಮ ಗುರುಗಳನ್ನು ತಿರಸ್ಕರಿಸಿದ ಶ್ರೀನಿವಾಸ ಆಚಾರ್ಯರು ತಮ್ಮ ಮನೆಗೆ ತಮ್ಮ ಗುರುಗಳ ಆಜ್ಞೆ ಯಂತೆ ಬಂದಾಗ ಅವರಲ್ಲಿ ಕ್ಷಮೆ ಯನ್ನು ಕೇಳಿದಾಗ ಅವರನ್ನು ಶ್ರೀ ಗೋಪಾಲ ದಾಸರು ನಿಂದಿಸಿದಿರೆ??
ಇಲ್ಲ..
ಹಿಂದೆ ನಮ್ಮ ಗುರುಗಳಾದ ಶ್ರೀ ವಿಜಯದಾಸರನ್ನು ಹೀಗಳಿಸಿದ ಇಂದು ಅವರ ಮಾತಿನಂತೆ ನಮ್ಮ ಮನೆಗೆ ಯಾಕೆ ಬಂದಿದ್ದೀರಿ??
ಅಂತ ಮಾತನಾಡಿದರೇ??
ಸರ್ವತ್ರ ಇಲ್ಲ..
ಶ್ರೀ ಗೋಪಾಲ ದಾಸರ ಹಿರಿಮೆ ಗೊತ್ತಾಗುವುದು ಈ ಘಟನೆ ಯಲ್ಲಿ..
ನಮ್ಮ ಗುರುಗಳಾದ ಶ್ರೀ ವಿಜಯದಾಸರು ಅವರನ್ನು ಕ್ಷಮಿಸಿ ಇಲ್ಲಿ ಕಳುಹಿಸಿದ ಮೇಲೆ ನನ್ನ ದೇನು??
ನನ್ನ ಅಸಮಧಾನ ಏನಿದ್ದರು ನಮ್ಮ ಗುರುಗಳ ನಿಂದನೆ ಯನ್ನು ಕೇಳಿದ್ದು ಹೊರತಾಗಿ ಬೇರೆ ಅಲ್ಲ.
ಅಂತಹ ನಿಂದನೆ ಮಾಡಿದ ಆಚಾರ್ಯ ರನ್ನು ಶ್ರೀ ವಿಜಯದಾಸರು ಕ್ಷಮಿಸಿ ದ ಮೇಲೆ ಅದೇ ದಾರಿಯಲ್ಲಿ ನಡೆಯುವದು ಶಿಷ್ಯ ನ ಕರ್ತವ್ಯ ಹೊರತಾಗಿ ಬೇರೆ ದಾರಿಯಲ್ಲಿ ನಡೆಯುವದು ಸರಿ ಅಲ್ಲ ಅಂತ ಜಗತ್ತಿನ ಎಲ್ಲ ಜನರಿಗು ತೋರಿಸಿಕೊಟ್ಟ ಮಹಾನುಭಾವರು ನಮ್ಮ ಶ್ರೀ ಗೋಪಾಲ ದಾಸರು
.
ಮನಸ್ಸಿನ ಒಳಗಡೆ ಎಳ್ಳು ಕಾಳಿನಷ್ಟು ಸಹ ಯಾವ ತರಹದ ಆಲೋಚನೆ ಮಾಡದೆ ಅವರನ್ನು ಉದ್ದರಿಸುವ ಕೆಲಸಕ್ಕೆ ಶ್ರೀ ಗೋಪಾಲ ದಾಸರು ಮುಂದಾಗುತ್ತಾರೆ
.
ತಮ್ಮ ನಲವತ್ತು ವರುಷಗಳ ಆಯಸ್ಸು ದಾನ ಮಾಡುತ್ತಾರೆ ಅದು ತಮ್ಮ ಗುರುಗಳಾದ ಶ್ರೀ ವಿಜಯಪ್ರಭುಗಳ ಮಾತಿನಂತೆ.
ಮನೆ,ಧನ,ಧಾನ್ಯ, ವಸ್ತ್ರ, ಒಡವೆ,ಹೊಲ ಕೊಟ್ಟ ದಾನಿಗಳನ್ನು ನೋಡಿರುತ್ತೇವೆ.
ಆದರೆ ಇವು ಎಲ್ಲಕ್ಕಿಂತ ಮಿಗಿಲು ಆಯುಸ್ಸು.
ಆಯಸ್ಸು ಇದ್ದರೆ ಅನ್ನಕ್ಕೆ ಕೊರತಿಲ್ಲ.ಆಯುಷ್ಯ ಇದ್ದರೆ ಇವೆಲ್ಲವೂ ದುಡಿದು ಸಂಪಾದಿಸಬಹುದು.
ಆದರೆ ಇಂತಹ ಯಾವ ಆಲೋಚನೆ ಯನ್ನು ಮನಸ್ಸಿನ ಒಳಗಡೆ ತಾರದೇ ತಮ್ಮ ಆಯುಷ್ಯ ದಾನ ಮಾಡಿದ ಮಹಾನುಭಾವರು ನಮ್ಮ ಶ್ರೀ ಗೋಪಾಲ ದಾಸರು.
ವೈದ್ಯನ ಕೆಲಸ ಮಾಡಿ ಅವರಿಗೆ ಬಂದ ಕಾಯಿಲೆ ಯನ್ನು ಕಳೆಯುತ್ತಾರೆ.
ತಮ್ಮ ಈ ಪ್ರಯತ್ನಕ್ಕೆ ಶ್ರೀ ಹರಿಯ ಕಾರುಣ್ಯ ಇರಲೆಂದು ಎಲ್ಲಾ ಕಾರ್ಯವನ್ನು ಅವನಿಗೆ ಸಮರ್ಪಿತ ಮಾಡಿ

ಎನ್ನ ಬಿನ್ನಪ ಕೇಳು ದೇವ ಧನ್ವಂತ್ರಿ
ಅಂತ ಕೃತಿ ರಚನೆಯನ್ನು ಮಾಡಿ
ಕೊನೆಯಲ್ಲಿ ಹೇಳುತ್ತಾರೆ..
ಎನ್ನ ಮಾತಲ್ಲವಿದು ಎನ್ನ ಹಿರಿಯರ ಮಾತು
ಅಂದರೆ 
ನಮ್ಮ ಗುರುಗಳಾದ ನಮ್ಮ ಹಿರಿಯರಾದ ಶ್ರೀ ವಿಜಯದಾಸರು ಹೇಳಿದ ಮಾತು
ಇದನ್ನು ನಡೆಸಿಕೊಡು ಅಂತ ವಿನೀತರಾಗಿ ಭಗವಂತನ ಹತ್ತಿರ ಕೇಳುತ್ತಾರೆ


ಅಹೋ!!!ಎಂತಹ ಗುರುಭಕ್ತಿ!!
ಇಂತಹ ಶಿಷ್ಯ ರನ್ನು ಕಾಣಲು ಇಂದಿನ ಪ್ರಪಂಚದಲ್ಲಿ ಸಾಧ್ಯವಿಲ್ಲ*.
ಇಂತಹ ಮಹಿಮಾ ಶಕ್ತರಾದ ಶ್ರೀ ಗೋಪಾಲ ದಾಸರ ಸ್ಮರಣೆ ನಮ್ಮ ಅನೇಕ ಜನ್ಮಗಳ ಪುಣ್ಯ ದ ಫಲ.


ಜ್ಞಾನಿಗಳ, ಭಗವಂತನ ಭಕ್ತರ ಸ್ಮರಣೆ ಮಾಡುವದು ನಿತ್ಯ ಅವಶ್ಯಕ.
ಇಂತಹ ಪರಮ ಭಾಗವತರನು ಕೊಂಡಾಡುವದು ಪ್ರತಿದಿನವು
🙏🙏🙏
ಗೋಪಾಲ ದಾಸರಾಯ ನಿನ್ನಯ ಪಾದ ನಾ ಪೊಂದಿದೆನು ನಿಶ್ಚಯ
🙏ಅ.ವಿಜಯವಿಠ್ಠಲ🙏

******

*|ಶ್ರೀ ಗೋಪಾಲ ದಾಸರ ಮಹಿಮೆ|
ಒಮ್ಮೆ ಶ್ರೀಗೋಪಾಲದಾಸರು ಉಡುಪಿಯ ಕೃಷ್ಣನ ದರುಶನ ಪಡೆದು,ಉತ್ತನೂರಿಗೆ ಹಿಂತಿರುಗುವಾಗ ಮಾರ್ಗಮಧ್ಯದಲ್ಲಿ  ಬರುವ ಒಂದು ಅಗ್ರಹಾರದಲ್ಲಿರುವ ಪ್ರಾಣದೇವರ ಗುಡಿಯಲ್ಲಿ  ವಾಸ್ತ್ಯವ್ಯ ಮಾಡುತ್ತಾರೆ. 
ನಿತ್ಯ ಯಾಯಿವಾರ,ಪ್ರಾಣದೇವರ ಪೂಜೆ,ಭಜನೆ,ಹಿತೋಪದೇಶ ನೆರೆದ ಸಜ್ಜನರಿಗೆ..
ಹೀಗೆ ಕೆಲದಿನಗಳು ಕಳೆದವು.
ಆ ಅಗ್ರಹಾರದಲ್ಲಿ ಒಬ್ಬ ಬಡ ಬ್ರಾಹ್ಮಣ, ಸಂಸಾರದ ಭಾರವನ್ನು ಹೊರಲಾರದ ನಿತ್ಯ ಊಟಕ್ಕೆ ಕಷ್ಟ. ದಾಸರು ಇದ್ದ ಸಮಯದಲ್ಲಿ ಮನೆ ಮಂದಿಯಲ್ಲಿ ಅಲ್ಲಿ ಬಂದು ತೀರ್ಥಪ್ರಸಾದ ಸ್ವೀಕರಿಸಿ ಹೋಗುತ್ತಾ ಇರುತ್ತಾರೆ.
ದಾಸರಲ್ಲಿ ತನ್ನ ಬಡತನದ ಬೇಗೆಯನ್ನು ತೋಡಿಕೊಳ್ಳಬೇಕೆಂಬ ಹಂಬಲ,ಆದರು ಸಂಕೋಚ,ಆದರು ಬಹು ಧೈರ್ಯದಿಂದ ದಾಸರ ಬಳಿ ಬಂದು ತನ್ನ ಕಷ್ಟ ವನ್ನೆಲ್ಲ ಹೇಳಿಕೊಂಡು ಅವರ ಕಾಲಿಗೆ ಬೀಳುತ್ತಾನೆ.
ದಯಾಮಯಿಯಾದ ದಾಸರು ಅವನನ್ನು ಎಬ್ಬಿಸಿ ಇವನ ಬಡತನದ ಪರಿಯನ್ನು ಕಂಡು ,ಇವನ ದಾರಿದ್ರ್ಯ ನಿವಾರಣೆಗೆ ಭಗವಂತನಲ್ಲಿ ಪ್ರಾರ್ಥನೆ ಮಾಡುತ್ತಾರೆ.
ನಂತರ ತಮ್ಮ ಆತ್ಮೋದ್ದಾರಕ ಗುರುಗಳಾದ ಶ್ರೀವಿಜಯದಾಸರನ್ನು ಸ್ಮರಣೆ ಮಾಡಿ ಅವನಿಗೆ ಆಗಲೇ ಒಂದು ದಾರಿದ್ರ್ಯ ಹರಣ ಸುಳಾದಿ ರಚನೆ ಮಾಡಿ,ಉಪದೇಶ ಮಾಡಿ,ನಿತ್ಯದಲ್ಲು ಭಕ್ತಿಯಿಂದ ಪಠಣೆ ಮಾಡಲು ಆದೇಶ ಮಾಡುತ್ತಾರೆ.
ಆ ಸುಳಾದಿ ಹೀಗಿದೆ.
ನಿನ್ನ ಸತಿಯಳಾದ ಸಿರಿಯ ಪದವಿಯ ನೋಡು|
ನಿನ್ನ ಮಗನಾದ ಅಜನ ಪದವಿಯ ನೋಡು|
.....
ಪೊಡವಿಯೊಳಗೆ ಇನ್ನು ನಿನಗೆ ಸರಿ ಆರಿಲ್ಲ|
ನಿನ್ನ ದಾಸರ ದ್ವಾರವನ್ನು ಕಾಯ್ವರ ಮನೆ ಕುನ್ನಿಎಂದೆನಿಸೆನ್ನ ಗೋಪಾಲವಿಠ್ಠಲ|
ಆ ಸುಳಾದಿ ಯಲ್ಲಿ ದಾಸರು ಭಗವಂತನ ಪರಿವಾರದವರ ಎಲ್ಲಾ ರ ಹೆಸರನ್ನು ಹೇಳಿ ಇವರನ್ನೆಲ್ಲ ಸೃಷ್ಟಿ ಮಾಡಿದವನು ನೀನೆ, ನನ್ನ ಸಹ ಸೃಷ್ಟಿ ಮಾಡಿದವನು ನೀನೆ ಕೊಟ್ಟವನು ನೀನೆ,
ತಾಯಿಗೆ ಅನಂತ ಮಕ್ಕಳು ಇದ್ದರೆ ಭೇದ ಮಾಡುವಳೇ??ಇಲ್ಲ.
ಮತ್ತು 
ಇವರೆಲ್ಲರೂ ನಿನಗೆ ಏನು ಕೊಟ್ಟರು??ಮತ್ತೆ ನಾನು ನಿನಗೆ ಏನು ಕೊಡಲಾರದೆ ಹೋದೆ??..
ನಿನ್ನ ಬೇಡುವ ಸಲಿಗೆ ನನಗೆ ಹೇಗೆ ಬಂತು ಅಂತ ಕೇಳುತ್ತೀಯಾ??
ನಿನ್ನ ವರು ತೋರಿದ ದಾರಿ.
(ಎನ್ನೊಡಯಗೆ ಎನ್ನೊಡಲನು ತೋರುವೆ ಎನ್ನುವ ಪುರಂದರ ದಾಸರವಾಣಿ.)
ನಿಂಗ ಯಾಕೆ ಕೇಳುತ್ತೀನಿ ಅಂದರೆ ಹಣ್ಣಿದ್ದ ಗಿಡಕ್ಕೆ ಎಲ್ಲಾ ರು ಹಂಬಲಿಸುವರು ಅದರಂತೆ ನೀನು ಕೇಳಿದ್ದು ಕೊಡುವಿ ಅದಕ್ಕೆ ನಿನ್ನ ಕೇಳುವುದು ಅಂತ ಹೇಳುತ್ತಾರೆ.
"ಹದಿನಾಲ್ಕು ಲೋಕಕ್ಕೆ ನೀನೆ ಧೊರೆ ಅದಕ್ಕೆ ನಿನಗೆ ಕೇಳುವೆ."
"ನಿನ್ನಂತೆ ಸಾಕುವರು ಇನ್ನೊಬ್ಬ ರಿಲ್ಲ ದೇವ".
"ಧರೆಯೊಳಗೆ  ಸರೋವರದಲ್ಲಿ ಅರಳುವ ಕಮಲಕ್ಕೆ ಬೇರೆಬೇರೆ ಸೂರ್ಯ ಇದ್ದಾನೆಯೇ."
ಬಹಳ ಸುಂದರವಾಗಿ ಭಗವಂತನ ಮಹಿಮೆಯನ್ನು ದಾಸರು ವರ್ಣನೆ ಮಾಡುತ್ತಾರೆ.
ಹೀಗೆ ಆ ಸುಳಾದಿ ಪಠಣೆಯನ್ನು ನಿಷ್ಠೆಯಿಂದ ಮಾಡಿದ ಆ ಬ್ರಾಹ್ಮಣ ನಿಗೆ ಕೆಲದಿನಗಳ ನಂತರ 
"ಒಂದು ದಿನ ಸ್ವಪ್ನದಲ್ಲಿ ಸರ್ವ ಲಕ್ಷಣ ಭರಿತಳಾದ,ಸರ್ವಾಭರಣ ಭೂಷಿತಳಾದ ಒಬ್ಬ ಮುತ್ತೈದೆ ಬಂದು ನಿನ್ನ ಪೂರ್ವಿಕರು ಹೂತಿಟ್ಟ ನಿಧಿ ಇಲ್ಲಿಇದೆ.ಅದನ್ನು ತೆಗೆದುಕೊಂಡು ಬಹು ಸುಖದಿಂದ ಬಾಳು ಅಂತ" ಸ್ಥಳವನ್ನು ತೋರಿಸಿ ಮಾಯವಾಗುತ್ತಾಳೆ.
ನಂತರ ಎದ್ದು ಆ ಬ್ರಾಹ್ಮಣ ದಾಸರನ್ನು ಮನದಲ್ಲಿ ನೆನೆದು ಭೂಗತವಾಗಿದ್ದ ನಿಧಿಯನ್ನು ಪಡೆಯುತ್ತಾನೆ.
ಇದು ಶ್ರೀಗೋಪಾಲದಾಸರ ಮಹಿಮೆ,ಮತ್ತು ಅವರಲ್ಲಿ ನಿಂತು ಶ್ರೀವಿಜಯಪ್ರಭುಗಳು ತೋರಿಸಿದ ಭಗವಂತನ ಲೀಲೆ.
ಅಪರೋಕ್ಷ ಜ್ಞಾನಿಗಳಾದ ಶ್ರೀಗೋಪಾಲದಾಸರ ಈ ಸುಳಾದಿಯನ್ನು  ಭಕ್ತಿ ಶ್ರದ್ದೆಯಿಂದ ಪಾರಾಯಣ ಮಾಡಿ,ಶ್ರೀಹರಿ ವಾಯುಗುರುಗಳ ಸೇವೆ ಮಾಡಿ ಅದರ ಫಲವನ್ನು ಪಡೆದವರನ್ನು ಕಾಣಬಹುದು..
ಭಗವಂತನು ತನ್ನ ಭಕ್ತರಲ್ಲಿ ನಿಂತು ತಾನೇ ಮಾಡಿಸುವ ಈ ಲೀಲೆ ಬಹು ವಿಚಿತ್ರ ಮತ್ತು ಅಗಾಧ..
🙏ಶ್ರೀ ಕೃಷ್ಣಾರ್ಪಣಮಸ್ತು🙏 
ಇವರ ಪೂಜೆಯೆ ನಮ್ಮ ವಿಜಯರಾಯರ ಪೂಜೆ|
ಇವರ ದಯೆವೆ ನಮ್ಮ ವಿಜಯರಾಯರ ದಯವು|
ಇವರ ಕೊಂಡಾಡುವದೇ ವಿಜಯರಾಯರ ಸ್ತೋತ್ರ|
ಇವರೆ ಶ್ರೀ ವಿಜಯರಾಯರ ಪ್ರತಿಮಾ
🙏ಅ.ವಿಜಯವಿಠ್ಠಲ🙏
****

"ಭಕ್ತಿಯಲಿ ಭಾಗಣ್ಣ" ರೆಂದೆ ಪ್ರಖ್ಯಾತರಾದ ಶ್ರೀಗೋಪಾಲದಾಸರು ಎಲ್ಲ ಜ್ಞಾನಿಗಳ ಮೆಚ್ಚುಗೆಗೆ ಪಾತ್ರರೂ, ಗಣೇಶಾಂಷರೆಂದು ವಿಖ್ಯಾತರೂ.
ಕೇವಲ ನಾಲ್ವತ್ತು ವರ್ಷಗಳಷ್ಟೇ ಭೂಲೋಕದಲ್ಲಿ ವಾಸಿಸಿದವರು. ಬಾಲ್ಯದಲ್ಲೇ * ವೇದಮಾತೆಯಾದ ಗಾಯತ್ರೀಮಂತ್ರಸಿದ್ದಿ* ಹೊಂದಿ,ಉತ್ತನೂರಿಲ್ಲಿ ವಿರಾಜಮಾನನಾದ ತಮ್ಮ ಆರಾಧ್ಯದೈವ ಶ್ರೀನಿವಾಸನನ್ನು ಶ್ರೇಷ್ಟಭಕ್ತಿಯಿಂದ ಒಲಿಸಿಕೊಂಡು,
" ವೆಂಕಟಕೃಷ್ಣ" ಎಂಬ ಅಂಕಿತದಿಂದ ಪದಗಳನ್ನು ಹಾಡಿ, ನರ್ತಿಸಿ ಸಿರಿರಮಣನ ಸಂಪೂರ್ಣ ಅನುಗ್ರಹವನ್ನು ಗಳಿಸಿಕೊಂಡವರು ಭಾಗಣ್ಣ ದಾಸರು. ತದನಂತರ ಸಿದ್ಧಪುರುಷರಾಗಿ ಜನರಿಗೆ ಭವಿಷ್ಯಹೇಳುವ ಕಾರ್ಯದಲ್ಲಿ ತೊಡಗಿದ್ದರು. ಇಂಥಹ ಕಾರ್ಯದಲ್ಲಿ
ಹೆಚ್ಚಿನ ಸಮಯವವನ್ನು ಬಳಸುತಿದ್ದ ಸಂದರ್ಭದಲ್ಲೇ ಭೃಗು ವಂಶ ಸಂಭೂತರಾದ ಶ್ರೀ ವಿಜಯದಾಸರ ಕೃಪಾಕಟಾಕ್ಷಕ್ಕೆ ಪಾತ್ರರಾಗಿ, ಅವರಿಂದ
 " ಗೋಪಾಲವಿಠಲ" ಎಂಬ ಅಂಕಿತವನ್ನು,  ಸದುಪದೇಶವನ್ನು ಪಡೆದ ಭಾಗ್ಯವಂತರು.
ಕಾಲಕ್ರಮೇಣ ಬ್ರಹ್ಮಚಾರಿ ಗೋಪಾಲದಾಸರು ಹರಿದಾಸಪಂಥದಲ್ಲಿ ವಿಶಿಷ್ಟ ಸ್ಥಾನ ಗಳಿಸಿ, ತಮ್ಮ ಸ್ವರೂಪೋದ್ಧಾರಕರಾದ ವಿಜಯದಾಸರ ಪಾದ ವಿಮಲ ಸರಸಿಜಭೃಂಗರಾಗಿ ಅವರ  ಪ್ರತಿನಿಧಿಯಾಗಿ ವಿರಾಜಿಸಿದರು.

ಹರಿದಾಸ ಪಂಥಕ್ಕೆ ಶ್ರೀಗೋಪಾಲದಾಸರ ವಿಶಿಷ್ಟ ಕೊಡುಗೆಯೆಂದರೆ:
೧. ತಮ್ಮ ಗುರುಗಳಾದ ವಿಜಯದಾಸರ ಆಜ್ಞಾನುಸಾರ ತಮ್ಮ ೪೦ ವರುಷ ಆಯಸ್ಸನ್ನು ಶ್ರೀಜಗನ್ನಾಥದಾಸರಿಗೆ ನೀಡಿ,ಅವರಿಂದ. ದ್ವೈತ ಸಾಹಿತ್ಯಕ್ಕೆ   ಅಸಾಧಾರಣ ಸೇವೆ ಮಾಡಲು ದೈವಸಂಕಲ್ಪದಂತೆ ಅಣಿಮಾಡಿಕೊಟ್ಟು, ತಮ್ಮ ಅಸೀಮ,ಅಸಾಧಾರಣ ಗುರು ಭಕ್ತಿ ತೋರಿದ ಮಹಾನುಭಾವರು.
೨. ಹೆಳವನಕಟ್ಟೆ ಗಿರಿಯಮ್ಮನವರಿಗೆ ವಿಶೇಷ ಅನುಗ್ರಹ ದಯಪಾಲಿಸಿ, ಗಿರಿಯಮ್ಮನವರು ಹರಿದಾಸಪಂಥದ ವಿಶಿಷ್ಟ ಮಹಿಳೆಯಾಗಿ ರೂಪುಗೊಳ್ಳಲು ಕಾರಣರಾದರು.

೩. ತಮ್ಮ ತಮ್ಮಂದಿರಾದ ರಂಗಪ್ಪ,
ದಾಸಪ್ಪ ಮತ್ತು ಸೀನಪ್ಪ ಇವರಿಗೆ ಅಂಕಿತ ದಯಪಾಲಿಸಿ ಅವರುಗಳು ದಾಸ ಸಾಹಿತ್ಯಕ್ಕೆ ವಿಪುಲ ಸಾಹಿತ್ಯ ಸೇವೆ ಸಲ್ಲಿಸಲು ಕಾರಣಿಭೂತರಾದರು.

"ಹರೇ ಶ್ರೀನಿವಾಸ"
*******



info from sumadhwaseva.com--->

ಹರಿದಾಸ ಚತುಷ್ಟಯ ಪುರುಷ ತೃತೀಯ ರಾದ|
ತುರುಪಾಲ ದಾಸರ ಚರಿತೆ
ತಿಳಿದಷ್ಟು ಬರೆಯುವೆ|
ಶಿರಿ ಹರಿ ಮರುತರ ದಯದಿಂದ|
ಗುರು ವರದೇಂದ್ರರ ಪರಮಾನುಗ್ರಹದಿಂದ|
ವರದೇಶದಾಸರ ಕರುಣದಿಂದ|
*****


 ಶ್ರೀ ಗೋಪಾಲ ದಾಸರ ಆರಾಧನೆ  ಇನ್ನು ೭ ದಿನ ಅದರ ಪ್ರಯುಕ್ತ.
ಒಮ್ಮೆ ಉತ್ತನೂರಿನಲ್ಲಿ ಶ್ರೀ ಗೋಪಾಲ ದಾಸರು ಸಾಯಂಕಾಲದ ಸಂಧ್ಯಾವಂದನೆ ಮುಗಿಸಿಕೊಂಡು, ಪಾರಾಯಣ ಮಾಡುತ್ತಾ ಕುಳಿತಿದ್ದರು.
ಅದೇ ಸಮಯದಲ್ಲಿ ಒಬ್ಬ ಸಾಧ್ವಿ ಮಣಿಯು ಅದೇ ತಾನೇ ಕರೆದ ಗೋವಿನ ಹಾಲನ್ನು ತೆಗೆದುಕೊಂಡು ದಾಸರ ಮನೆಗೆ ಬಂದಳು.
ಆಕೆಗೆ ಶ್ರೀ ಗೋಪಾಲ ದಾಸರ ದರುಶನ ಮಾಡಿ ಅವರಿಗೆ ಸಮರ್ಪಣೆ ಮಾಡಬೇಕು ಎಂಬ ಆಸೆ.
ದಾಸರು ಮನೆಯಲ್ಲಿ ಇಲ್ಲ ಊರ ಹೊರಗಡೆ ತೊರೆಯ ಬಳಿ  ಇದ್ದಾರೆ ಅಂತ ಅವರ ತಾಯಿಯವರು ಹೇಳಿದ್ದು ಕೇಳಿ ದಾಸರಿದ್ದ ಸ್ಥಳಕ್ಕೆ ಆ ಸಾಧ್ವಿಯು ಬರುತ್ತಾಳೆ.
ತಮ್ಮ ಸಾಯಂಕಾಲದ ಭಜನೆ ಪೂಜೆಯ ಸಮಯದಲ್ಲಿ ಈ ಗೋವಿನ ಹಾಲನ್ನು ವೆಂಕಟೇಶ್ವರ ನಿಗೆ ಸಮರ್ಪಣೆ ಮಾಡಿ ಅಂತ ಪ್ರಾರ್ಥನಾ ಮಾಡುತ್ತಾಳೆ.
ಕೆಲ ನಿಮಿಷ ಪಾತ್ರೆಯನ್ನು ಕೈಯಲ್ಲಿ ತೆಗೆದುಕೊಂಡು ದಾಸರು,ಭಗವಂತನ ಸ್ಮರಿಸುತ್ತಾ ಅಷ್ಟು ಹಾಲನ್ನು ತಾವು ಕುಳಿತ ಉಸುಕಿನಲ್ಲಿ ಚೆಲ್ಲಿ,ಅಲ್ಲಿ ಇದ್ದ ಆ ತೊರೆಯಲ್ಲಿ ಆ ಪಾತ್ರೆಯನ್ನು ತೊಳೆದು 
"ಶ್ರೀನಿವಾಸನಿಗೆ ಸಮರ್ಪಣೆ ಆಯಿತವ್ವ!! ಸ್ವಾಮಿ ಪ್ರೀತಿಯಾಗಿದ್ದಾನೆ.ಪಾತ್ರೆಯನ್ನು ತೆಗೆದುಕೊಂಡು ಮನೆಗೆ ಹಿಂತಿರುಗು " ಅಂತ ಹೇಳುತ್ತಾರೆ..
ದಾಸರ ಈ ಚರ್ಯೆಯನ್ನು ಕಂಡು ಆ ಹೆಣ್ಣು ಮಗಳು ಏನು ಮಾತನಾಡದೇ ಅಳಲು ಶುರು ಮಾಡುತ್ತಾಳೆ.
ಅವಾಗ್ಗೆ ಗೋಪಾಲ ದಾಸರು
"ಏನವ್ವಾ!! ಯಾಕ ಅಳ್ತಾ ಇದ್ದೀ?? ಕಾರಣ ಹೇಳು!!" ಅಂದಾಗ
ಅವಾಗ ಆ ಹೆಣ್ಣು ಮಗಳು 
"ದಾಸರೇ!! ನಾನು ಬಹು ಭಕ್ತಿ ಇಂದ ಈ ಗೋ ಕ್ಷೀರ ವನ್ನು ಶ್ರೀ ವೆಂಕಟೇಶ್ವರ ನಿಗೆ ಜ್ಞಾನಿಗಳಾದ ತಮ್ಮಿಂದ ಅರ್ಪಿಸಬೇಕು ಅಂತ ತಂದೆ.
ತಾವು ನೋಡಿದರೆ ಈ ಮರಳಿನಲ್ಲಿ ಅದನ್ನು ಚೆಲ್ಲಿದಿರಿ!!.ನಿಜಕ್ಕೂ ಅದನ್ನು ನೋಡಿ ನನಗೆ ನಾನೆಷ್ಟು ಪಾಪಾತ್ಮಳು?? ನಾನು ತಂದ ಹಾಲನ್ನು ದಾಸರು ದೇವರಿಗೆ ಸಮರ್ಪಣೆ ಮಾಡದೇ ಉಸುಕಿನಲ್ಲಿ ಹಾಕಿದರುಅಂತ ಅನ್ನಿಸಿತು". ಅಂತ ಅಳಲು ಶುರು ಮಾಡಿದಳು.
ತಕ್ಷಣ ದಾಸರು
"ಅವ್ವಾ!! ಭಜನೆ  ಕಾಲದವರೆಗೆ ಕಾದು ಶ್ರೀ ಹರಿಗೆ ಯಾಕೆ ಸಮರ್ಪಣೆ ಮಾಡಬೇಕು??..
ಈಗ ತಾನೇ ತಂದ ಬಿಸಿ ನೊರೆ ಹಾಲು ಇವಾಗಲೇ ಅರ್ಪಣೆ ಮಾಡಿದೆ. ಸ್ವಾಮಿಗೆ...
ದುಃಖ ಪಡಬೇಡ!!.ರಾತ್ರಿ ಭಜನೆ ಸಮಯದಲ್ಲಿ ಬಾ!'" ಅಂತ ಹೇಳಿ ಕಳಿಸುವರು
ಆದರೂ ಆ ಸಾಧ್ವಿ ಯ ಮನಸ್ಸಿನ ದುಗುಡ ತಪ್ಪಲಿಲ್ಲ.
ಸರಿಯಾದ ಸಮಯಕ್ಕೆ ಭಜನೆ ಗೆ ಉತ್ತನೂರಿನ ವೆಂಕಪ್ಪನ ಗುಡಿಗೆ ಬಂದಳು.
ಮಂಗಳಾರುತಿ ಸಮಯ.
ಶ್ರೀನಿವಾಸ ನಿಗೆ ಮಂಗಳಾರತಿ ಮಾಡಲು ಶ್ರೀ ಗೋಪಾಲ ದಾಸರು ಗರ್ಭಗುಡಿಯಲ್ಲಿ ಹೊಕ್ಕರು.
ಜನರ ಮಧ್ಯೆ ಕುಳಿತಿದ್ದ ಆ ಹೆಣ್ಣು ಮಗಳನ್ನು ಕರೆದು ಗರ್ಭಗುಡಿಯ ಹೊಸ್ತಿಲ ಮುಂದೆ ಕೂಡಿಸಿ "ಸ್ವಾಮಿಯನ್ನು ನೋಡು!!"
ಅಂತ ಹೇಳಿದರು.
ಶ್ರೀನಿವಾಸನ ಮುಖವನ್ನು ನೋಡುತ್ತಾ ನಿಂತ ಆ ಹೆಣ್ಣು ಮಗಳಿಗೆ ದೇವರ ಮುಖದಿಂದ ಕ್ಷೀರ ಸೋರುವದನ್ನು ಕಂಡು ದಾಸರ ಬಗ್ಗೆ ತಪ್ಪು ತಿಳಿದ ಕಾರಣಕ್ಕಾಗಿ ಸ್ವಾಮಿ ಯ ಬಳಿ ತನ್ನ ಗಲ್ಲವನ್ನು ಬಡಿದುಕೊಂಡು "ಗೋವಿಂದ! ಗೋವಿಂದಾ" ಅಂತ  ನಾಮ ಸ್ಮರಣೆ ಮಾಡಿದಳು..
ಇದನ್ನು ಪ್ರತ್ಯಕ್ಷವಾಗಿ ಕಂಡ 
ಶ್ರೀಗೋಪಾಲ ದಾಸರ ತಮ್ಮಂದಿರಾದ
ತಂದೆ ಗೋಪಾಲ ವಿಠ್ಠಲ ದಾಸರು ತಮ್ಮ ಕೃತಿಯಲ್ಲಿ ಹೇಳುತ್ತಾರೆ.
ತರುಣಿ ಕ್ಷೀರವ ತಂದು ಕೊಡುತಿರೆ|ಭರದಿ ಮರಳೊಳಗೆರದನು|
ಮರಳಿ ಗುಡಿಯೊಳು ಬರುತಿರಲು| ಅದ ಕರುಣಾನಿಧಿ ತಾ ತೋರ್ದನು||
ಶ್ರೀ ಹರಿಯು ತನ್ನ ಭಕ್ತರಲ್ಲಿ ನಿಂತು ತಾನು ಮಾಡುವ ಈ ಲೀಲೆ ಬಹು ವಿಚಿತ್ರ.  ಬಹುಅಗಾಧ...
ಅವರಿಗೆ ಲೋಕದಲ್ಲಿ ಹೆಸರನ್ನು ತರಿಸಲೋಸುಗ ಮಾಡುವ ಅವನ ಲೀಲೆ ಅರಿಯಲು ಯಾರಿಗು ಸಾಧ್ಯ ವಿಲ್ಲ.
ಅರಿಯದ ಪಾಮರರು ನಿಂದನೆ ಮಾಡಿ ನರಕವಾಸಿಗಳಾಗುವರು.
🙏ಶ್ರೀ ಕೃಷ್ಣಾರ್ಪಣಮಸ್ತು🙏
ಇವರ ಪೂಜೆಯು ನಮ್ಮ ವಿಜಯರಾಯರ ಪೂಜೆ|
ಇವರ ದಯವೆ ನಮ್ಮ ವಿಜಯರಾಯರ ದಯವು|
ಇವರ ಕೊಂಡಾಡುವದೇ ವಿಜಯರಾಯರ ಸ್ತೋತ್ರ|
ಇವರೇ ಶ್ರೀ ವಿಜಯರಾಯರ ಮುಖ್ಯ ಪ್ರತಿಮಾ||
ಗೋಪಾಲ ದಾಸರಾಯರ ದಿವ್ಯ ಚರಣಗಳು| ಕಾಪಾಡಲೆನ್ನ ಸತತ||

🙏ಅ.ವಿಜಯವಿಠ್ಠಲ🙏
**********
ಹರಿದಾಸ ಚತುಷ್ಟಯ ಪುರುಷ ತೃತೀಯ ರಾದ|
ತುರುಪಾಲ ದಾಸರ ಚರಿತೆ
ತಿಳಿದಷ್ಟು ಬರೆಯುವೆ|
ಶಿರಿ ಹರಿ ಮರುತರ ದಯದಿಂದ|
ಗುರು ವರದೇಂದ್ರರ ಪರಮಾನುಗ್ರಹದಿಂದ|
ವರದೇಶದಾಸರ ಕರುಣದಿಂದ|
🙏
ಇಂದು ಶ್ರೀ ಗೋಪಾಲದಾಸರಆರಾಧನಾ ದಿನ.
ಅದರ ನಿಮಿತ್ತವಾಗಿ ಅವರ ಸ್ಮರಣೆ.
🙏✍
ಒಮ್ಮೆ ಶ್ರೀ ಗೋಪಾಲ ದಾಸರು ತಮ್ಮ ಸಹೋದರ ರಾದ ಶ್ರೀ ಶೀನಪ್ಪದಾಸರನ್ನು ಕರೆದು "ಶೀನಪ್ಪಾ! ನೀನು ಕಂಚಿ ಕ್ಷೇತ್ರಕ್ಕೆ ಹೋಗಿ ಅಲ್ಲಿ ಇರುವ ಶ್ರೀ ವರದರಾಜ ಸ್ವಾಮಿಯ ಸೇವೆ ಯನ್ನು ಮಾಡಿ ಅವನ ಅನುಗ್ರಹ ವನ್ನು ಪಡೆದುಕೊಂಡು ಬಾ" ಎಂದು ಕಳುಹಿಸಿದರು.
ತಕ್ಷಣ ಶೀನಪ್ಪದಾಸರು ಅಣ್ಣನ ಮಾತಿನಂತೆ ಕಂಚಿ ಕ್ಷೇತ್ರಕ್ಕೆ ಆಗಮಿಸಿ
ಶ್ರೀ ವರದರಾಜ ಸ್ವಾಮಿಯ ಸುಂದರ ಮೂರುತಿಯನ್ನು ನೋಡಿ ಬಹು ವಿಧವಾಗಿ ವರ್ಣನೆ ಮಾಡುತ್ತಾರೆ...
ತಕ್ಷಣ ವೇ ಒಂದು ಕೃತಿಯನ್ನು ರಚನೆ ಮಾಡಿ ಸ್ವಾಮಿಯಲ್ಲಿ ಪ್ರಾರ್ಥನೆ ಮಾಡುತ್ತಾ ಇರುವಾಗ ಅಲ್ಲಿ ಇದ್ದ ಅರ್ಚಕರು ಶ್ರೀ ವರದರಾಜನಿಗೆ ಮಂಗಳಾರತಿ ಮಾಡಲು ಆರಂಭಿಸಿದರು.
ಆಚಾರ್ಯರು ಅಂದು ಅಚಾತುರ್ಯವಾಗಿ ಅಂದು ದೇವರ ದೀಪವನ್ನು ಸ್ವಾಮಿಯ ವಿಗ್ರಹ ಸಮೀಪ ಇಟ್ಟುಬಿಟ್ಟಿದ್ದ ರಿಂದ ದೇವದೇವನಿಗೆ ಉಡಿಸಿದ ವಸ್ತ್ರಕ್ಕೆ ದೀಪ ಸೋಕಿ ಬೆಂಕಿ ಹತ್ತಿಕೊಂಡಿತು..
.
ಇದೇ ವೇಳೆಗೆ
 ವೇಣಿಸೋಮಾಪುರದಲ್ಲಿ ಶ್ರೀ ಗೋಪಾಲ ದಾಸರು ತಮ್ಮ ಸಹೋದರರ ಹಾಗು ಶಿಷ್ಯ ಜನರ ಜೊತೆಯಲ್ಲಿ ತುಂಗಭದ್ರಾ ನದಿಯಲ್ಲಿ ಮಿಂದು ಆಹ್ನೀಕ ತತ್ಪರರಾಗಿ ಕುಳಿತಿದ್ದರು..
ಮುಸುಕು ಇಟ್ಟು ಜಪ ಮಾಡುತ್ತಾ ಇದ್ದ ಶ್ರೀ ಗೋಪಾಲ ದಾಸರು ತಕ್ಷಣ ಮುಸುಕು ತೆಗೆದು ಹಸನ್ಮುಖರಾಗಿ ತಮ್ಮ ಎರಡು ಕೈಗಳನ್ನು ಉಜ್ಜತೊಡಗಿದರು...
ಒಂದೆರಡು ನಿಮಿಷಗಳ ನಂತರ ಮತ್ತೆ ಮುಸುಕು ಹೊದ್ದುಕೊಂಡು ಜಪ ಮಾಡಲು ಆರಂಭಿಸಿದರು..
.
ಇತ್ತ ಕಂಚಿಯಲ್ಲಿ ಶೀನಪ್ಪ ದಾಸರು ನೋಡುತ್ತಾರೆ..!!. ಅವರ ಎದುರು ಗಡೆ ಶ್ರೀ ಗೋಪಾಲ ದಾಸರು ಬಂದು ನಿಂತು  ಬೆಂಕಿ ಹತ್ತಿದ ವಸ್ತ್ರಕ್ಕೆ  ತಮ್ಮ ಎರಡು ಕೈಗಳಿಂದ ಅದನ್ನು ಉಜ್ಜಿ ಆರಿಸಿದ್ದನ್ನು ಕಂಡರು...
ಬಹಳ ಸಂತೋಷ ಮತ್ತು ಆಶ್ಚರ್ಯದಿಂದ ಅಣ್ಣಾ!!ಭಾಗಣ್ಣಾ!!ಅಂತ ಕರೆಯುವ ಒಳಗಡೆ ದಾಸರು ಮಾಯವಾಗಿದ್ದರು...
ನಂತರ ಅಲ್ಲಿ ಸೇವೆಯನ್ನು ಮುಗಿಸಿಕೊಂಡು ಉತ್ತನೂರಿಗೆ ಬಂದು ಉಳಿದ ಸಹೋದರರಿಗೆ ಭಾಗಣ್ಣ ಬಂದು ದೇವರ ವಸ್ತ್ರಕ್ಕೆ ಹತ್ತಿದ ಬೆಂಕಿ ಆರಿಸಿದ ಘಟನೆಯನ್ನು ಹೇಳುತ್ತಾರೆ.
ಇದನ್ನು ಎಲ್ಲವನ್ನೂ ನೋಡಿದ ಮತ್ತು ಕೇಳಿದ ಜನ ದಾಸರ ಬಳಿಗೆ ಬಂದು ಭಯ ಭಕ್ತಿ ಇಂದ ಅವರಿಗೆ ನಮಸ್ಕಾರ ಮಾಡುತ್ತಾರೆ.

ತುಂಗಭದ್ರಾ ತಟದಲ್ಲಿ ಕುಳಿತ ಶ್ರೀ ಗೋಪಾಲ ದಾಸರಿಗೆ ಕಂಚಿಯಲ್ಲಿ ಶ್ರೀ ವರದರಾಜ ಸ್ವಾಮಿಯ ವಸ್ತ್ರ ದೀಪ ಸೋಕಿ ಉರಿಯತೊಡಗಿದಾಗ ಅಲ್ಲಿ ಹೋಗಿ ಅದನ್ನು ಆರಿಸಿಬಂದದ್ದು..
ಮತ್ತು 
ಇನ್ನೊಂದು ರೂಪದಿಂದ ಅಲ್ಲಿ ಕುಳಿತು ಜಪ ತಪಗಳನ್ನು ಮಾಡುತ್ತಾ ಕುಳಿತುಇರುವುದು 
ಇವು ದಾಸರ ಅಣಿಮಾದಿ ಸಿದ್ದಿಯ ಸಾಧನೆಯನ್ನು ತೋರಿಸುತ್ತದೆ.
ಸಾಂಶರಾದ ದೇವತೆಗಳಿಗೆ ಯಾವುದು ಅಸಾಧ್ಯವಲ್ಲ.
ಸಾಂಶರು ಅಂದರೆ ಏಕಕಾಲದಲ್ಲಿ ಎಲ್ಲಾ ಕಡೆ ಪ್ರಕಟವಾಗುವದು...
ಇಂತಹ ಮಹಿಮೆಯನ್ನು ಭಗವಂತನ ಅನುಗ್ರಹದಿಂದ ತೋರಿಸಿದ ಶ್ರೀ ಗೋಪಾಲ ದಾಸರನ್ನು ಅವರ ಸಹೋದರರು ಈ ರೀತಿಯಲ್ಲಿ ಸ್ತೋತ್ರ ಮಾಡುತ್ತಾರೆ...

ವಸುಧಿಪತಿ ಕಂಚಿ ವರದ ರಾಜನ ವಸನ ದೀಪಕೆ ಸೋಂಕಲು|
ಮುಸುಕು ತೊರೆದು ತುಂಗ ನದಿಯಲು ನಸು ನಗುತಲದವರೆಸಲು||
🙏🙏
ಶ್ರೀ ಗೋಪಾಲ ದಾಸರ ಅಂತರ್ಯಾಮಿಯಾದ ಶ್ರೀ ಗೋಪಾಲ ವಿಠ್ಠಲ ಪ್ರೀತಿಯಾಗಲಿ
ಶ್ರೀ ಕೃಷ್ಣಾರ್ಪಣಮಸ್ತು🙏
ಎಲ್ಲಾ ಸಜ್ಜನರು ಇಂತರ ಪರಮ ಭಗವಂತನ ಭಕ್ತರ ಚರಿತ್ರೆ ಕೇಳಿ ಸಂತೋಷ ಪಡಲಿ

🙏ಅ.ವಿಜಯವಿಠ್ಠಲ🙏
*******

|ಲೇಸಾಗಿ ಭಜಿಸುವೆ ಗೋಪಾಲ ದಾಸರ|
|ಶ್ರೀ ಗೋಪಾಲ ದಾಸರ ಪೂರ್ವ ಆರಾಧನಾ ಇಂದು||.
ಅದರ ಪ್ರಯುಕ್ತ ಅವರ ಮಹಿಮೆ ಯನ್ನು ತಿಳಿಸುವ ಪುಟ್ಟ ಪ್ರಯತ್ನ..
🙏🙏🙏
ಒಮ್ಮೆ ಸಂಚಾರಕ್ರಮದಲ್ಲಿ ಸಂಚಾರ ಮಾಡುತ್ತಾ ಶ್ರೀ ಗೋಪಾಲದಾಸರು ಒಂದು ಊರಿನಲ್ಲಿ ವಾಸ್ತವ್ಯ ಮಾಡುತ್ತಾರೆ.
ನಿತ್ಯವು ದೇವತಾಪೂಜೆ,ಬ್ರಾಹ್ಮಣರು ಸುವಾಸಿನಿಯರ ಭೋಜನ,ನಡೆಯುತ್ತಿತ್ತು.
ಇದನ್ನು ನೋಡಿದ ಕೆಲ ಕುಹಕಿಗಳು ಹೇಗಾದರೂ ದಾಸರಿಗೆ ಕೆಟ್ಟ ಹೆಸರು ತರಲು ಪ್ರಯತ್ನ ಪಟ್ಟರು.
ಒಂದು ದಿನ ದಾಸರು ಮುಂದಿನ ಊರಿಗೆ ಹೋಗಬೇಕು, ಹಾಗಾಗಿ ಆ ದಿನ ಆ ಊರಿನ ಎಲ್ಲರಿಗು ಭೋಜನಕ್ಕೆ ಆಹ್ವಾನ ನೀಡಿದ್ದಾರೆ.
ಇದೇ ಸಮಯದಲ್ಲಿ ಆ ಕುಹಕಿಗಳು ಅಲ್ಲಿ ಅಡಿಗೆಮಾಡುವವನನ್ನು ಒಲಿಸಿಕೊಂಡು ಅಂದಿನ ಪಲ್ಯ ಒಂದರಲ್ಲಿ ಹೆಚ್ಚಿನ ಪ್ರಮಾಣ ಉಪ್ಪು ಸೇರಿಸುವಲ್ಲಿ ಯಶಸ್ವಿಯಾದರು..
ಮತ್ತು ದಾಸರು ಪೂಜೆ ಮಾಡುವ ಸಮಯದಲ್ಲಿ ಒಂದು ಕಡೆ ಏನು ತಿಳಿಯದ ಹಾಗೆ ಕುಳಿತು ಮುಂದೇನು ಆಗುವದು ಎಂಬ ನಿರೀಕ್ಷೆಯಲ್ಲಿ ಇದ್ದರು.
ಇತ್ತ ನೈವೇದ್ಯದ ಸಮಯ ಒಂದು ಕಡೆ ಭಕ್ತರೆಲ್ಲ ದ್ವಾದಶ ಸ್ತೋತ್ರ ಪಠಣ ನಡೆದಿದೆ.
ಅಡಿಗೆ ಮಾಡಿದ ಎಲ್ಲಾ ಪದಾರ್ಥಗಳನ್ನು ತಂದು ದಾಸರ ಮುಂದೆ ಇಟ್ಟಿದ್ದಾರೆ..
ತಕ್ಷಣ ದಾಸರು ಇನ್ನೊಂದು ಮಂಡಲವನ್ನು ಮಾಡಿ ಒಂದು ಪಾತ್ರೆಯಲ್ಲಿ ನೀರನ್ನು ತಂದಿಡಲಿಕ್ಕೆ ಹೇಳುತ್ತಾರೆ.
ಇತ್ತ ದೇವತಾ ಪೂಜ,ನೈವೇದ್ಯ, ಎಲ್ಲ ಆಯಿತು.ಎಲ್ಲಾ ಜನರ ಭೋಜನ ಆಯಿತು.ಬಂದಂತಹ ಅನೇಕರು ಎಲ್ಲ ಪದಾರ್ಥಗಳನ್ನು ಹೊಗಳಿ,ವಿಶೇಷವಾಗಿ ಆ ಪಲ್ಯದ ರುಚಿಯನ್ನು ಹೊಗಳುವದನ್ನು ಕೇಳಿ ಆ ಕುಹಕಿಗಳಿಗೆ ಅತೀವ ಸಂಕಟವಾಯಿತು.
ತಾವು ಆ ಪಲ್ಯ ಭೋಜನಕ್ಕೆ ಹಾಕಿಸಿಕೊಂಡು ನೋಡಲು ಅದು ಅಪೂರ್ವ ರುಚಿ!!!.ಹೌಹಾರಿದರು.??
ಇತ್ತ ದಾಸರಾಯರು ಎಲ್ಲರೂ ಕೂತ ಕಡೆಗೆ ಬಂದು ಉಪಚಾರ ಮಾಡುತ್ತಾ ಆ ಕುಹಕಿಗಳ ಕಡೆ ಬರುತ್ತಾರೆ.ಅವರಿಗೆ  ದಾಸರನ್ನು ನೋಡಲು ಧೈರ್ಯ ಇಲ್ಲ.
ಅದೇ ಸಮಯದಲ್ಲಿ ಅವರು ಕುಡಿಯುವ ನೀರಿನ ಥಾಲಿ ಬರಿದಾಗುತ್ತಿರುವದನ್ನು ಕಂಡು.
ತಕ್ಷಣ ದಾಸರು 
ತಾವು ನೈವೇದ್ಯಕ್ಕೆ ಇಟ್ಟ ನೀರನ್ನು ತರಿಸಿ ಅವರಿಗೆ ಬಡಿಸಲು ಹೇಳಿದಾಗ, ಆ ನೀರನ್ನು ಕುಡಿದ ಕುಹಕಿಗಳಿಗೆ ಅದು ವಿಪರೀತ ಉಪ್ಪು ಆಗಿರುವದು ಕಂಡು ಬಂತು...
ಆಗ ಅವರಿಗೆ ದಾಸರ ಮಹಿಮೆ ಅರಿವಾಯಿತು.
ದಾಸರು ಹೇಳುತ್ತಾರೆ. 
"ನೀವು ಪಲ್ಯದಲ್ಲಿ ಉಪ್ಪು ಬೆರೆಸಿದಿರಿ.ನೈವೇದ್ಯ ಸಮಯದಲ್ಲಿ ಭಗವಂತನ ಅನುಗ್ರಹದಿಂದ ತಿಳಿಯಿತು.ತಕ್ಷಣ ನಾವು ಉಪ್ಪು ಅಭಿಮಾನಿಯಾದ ದೇವತೆ ನಿಋತಿ ಹಾಗು ಅವನ ಅಂತರ್ಗತ ನಾದ ಜನಾರ್ಧನನನ್ನು ಪ್ರಾರ್ಥಿಸಲಾಗಿ ಇದನ್ನು ಈ ನೀರಿನಲ್ಲಿ ತಂದಿಟ್ಟ ಆ ಸ್ವಾಮಿ ಅಂತ ಹೇಳಿದರು...
ದಾಸರಿಗೆ ಮಾಡಿದ ಅಪಚಾರ,ಅವರ ಮೇಲೆ ಭಗವಂತನ ಕಾರುಣ್ಯ ನೋಡಿ ಆ ಕುಹಕಿಗಳು ಅವರ ಬಳಿ ಬಂದು ಶರಣಾಗತರಾಗುತ್ತಾರೆ. ಆಗ ದಾಸರು 
"ಯಾವತ್ತೂ ಶ್ರೀ ಹರಿಯ ಭಕ್ತರಲ್ಲಿ ದ್ವೇಷ ಆಸೂಯೆಗಳನ್ನು ಮಾಡಬೇಡಿ" ಅಂತ ಹೇಳಿ ಅವರನ್ನು ಕ್ಷಮಿಸಿ ಕಳುಹಿಸುತ್ತಾರೆ.
🙏ಶ್ರೀ ಕೃಷ್ಣಾರ್ಪಣಮಸ್ತು🙏
ಇದನ್ನೇ ಅವರ ಶಿಷ್ಯರಾದ ಹಾಗೂ ತಮ್ಮಂದಿರಾದ ರಂಗಪ್ಪದಾಸರು(ತಂದೆ ಗೋಪಾಲವಿಠ್ಠಲ)ಶ್ರೀ ಗೋಪಾಲದಾಸರ ಚರಿತ್ರೆ ಪದದಲ್ಲಿ ೩೯ ನೇ ಸಾಲಿನಲ್ಲಿ ಹೇಳುತ್ತಾರೆ.
ಇವರ ತುತಿಸಲು ಸೂತ ಶಾಕದಿ| 
ಲವಣವಧಿಕವ ಮಾಡಲು
ಲವಣಗತ ಜನಾರ್ಧನನಿಗರ್ಪಿಸೆ ಸವಿದು ಭುಂಜಿಸಿ ಪೊಗಳಲು||
..
ಭಜಿಸಿ ಬದುಕಿರೋ|....
ಭಜನಿ ಮಾಡುವ ವಿಜಯರಾಯರೆ| ನಿಜ ಗುರುಗಳೆಂದಿನಿಪನ||🙏

🙏ಅ.ವಿಜಯವಿಠ್ಠಲ 🙏
********
ಶ್ರೀ ಕೃಷ್ಣಾಯ ನಮಃ.
ಕೃಷ್ಣಂ ವಂದೇ ಜಗದ್ಗುರುಮ್.

ಕೃಷ್ಣಾಯ ವಾಸುದೇವಾಯ ಹರಯೇ ಪರಮಾತ್ಮನೇ ಪ್ರಣತ ಕ್ಲೇಶನಾಶಾಯ ಗೋವಿಂದಾಯ ನಮೋ ನಮಃ.

ಭಗವಂತನಲ್ಲಿ ಭಕ್ತನು ಪ್ರಾರ್ಥನೆ ಮಾಡಿ ಹರಿ ಚಿತ್ತ ಕ್ಕೆ ಬಂದುದೇ ಸತ್ಯ.

ಶ್ರೀ ಹರಿ ನಮಗೇನು ನೀಡುವನೋ ಅದನ್ನು ಭಕ್ತಿಯಿಂದ  ಸ್ವೀಕರಿಸಿ ಅದನ್ನೇ ನಮ್ಮ ಭಾಗ್ಯವೆಂದು ತಿಳಿದು ಕೊಳ್ಳಬೇಕು.

ನಿನ್ನ ಚಿತ್ತ ಎನ್ನ ಭಾಗ್ಯ  ಇನ್ನೊಬ್ಬರೆನಗೆ ಇಲ್ಲ
ಮನ್ನಣೆ ಅಮನ್ನಣೆ ನಿನ್ನದೋ ಸರ್ವೇಶನೇ

ಬೆನ್ನು ಕೊಟ್ಟೆನೊ ನಿನಗೆ ಎನ್ನ ಏನನ್ನ ಮಾಡು
ಕಣ್ಣಲಿ ಕಂಡ್ಯಾ ಅಷ್ಟು ಎನ್ನ ಕೇಳೋಣ ನಿನ್ನ/

ಬಣ್ಣಿಸಿ ನಿನ್ನ ನಾನು ಘನ್ನ ಬೇಡುವುದಿಲ್ಲ
ನನ್ನದೆಂಬೊ ಅಹಂಕಾರ ವನ್ನು ಬಿಡಿಸೋ ದೇವಾ//

ಎನ್ನ ಸಂಕಲ್ಪವೆಲ್ಲಾ ನಿನ್ನ ಅಧೀನ ವಯ್ಯಾ
ನಿನ್ನ ಸಂಕಲ್ಪಕ್ಕಿನ್ನು ಛಿನ್ನ ಭಿನ್ನ ಗಳಿಲ್ಲ

ನಿನ್ನಿಚ್ಛೆ ನೀ ಪ್ರೇರಕ ನಿನ್ನದೊ ಎನ್ನಭಾರಾ
ಇನ್ನು ಮುಂದೆ ಎಂದೆಂದು ಇನ್ನಿದೆ ಸಿದ್ಧವಯ್ಯಾ

ಇನ್ನೊಂದು ನಾನರಿಯೆ ಎನ್ನೊಡೆಯನೆ ಕೇಳು/
ಮುನ್ನ ವಾಚಾ ಕಾಮದಿ ಇನ್ನು ಹೀಗೆ ಹಾರೈಸಿ/

ಬಿನ್ನಹ ಮಾಡಿದೆ ನಿನ್ನ ನಿಲಿಸಿ ಕೊಂಡು
ಚಿನುಮಯ ಮೂರುತಿ ಗೋಪಾಲ ವಿಠಲ
ನಿನ್ನ ಬೇಡುವನಲ್ಲ ಧನ್ಯರಿಗಾಲ್ಪರಿಯೆ//

ಕಾಣದವನೆ ನಿನ್ನ ಕಂಡದ್ದು ಹಾರೈಸುವ
ಕಾಣುವ ಬಿಡ ನಿನ್ನ ಗೋಪಾಲ ವಿಠಲ//.

(ಶ್ರೀ ಗೋಪಾಲ ದಾಸರು ರಚಿಸಿದ ಸುಳಾದಿ ).

//ಶ್ರೀ ಹರಿ ಸಮರ್ಪಣೆ//.
*********

ದಾಸೋತ್ತಮನೆ ದಯಾಪರ ಹರಿಗಾ-
ಭಾಸಕ ಭಕುತರ ಪೋಷ್ಯನೆ ಯೆನಗೆ ನೀ 
ಈ ಶರೀರದಿ ಪ್ರಕಾಶ ಮಾಡಿ ಜ್ಞಾನ
ಮಾಸದೆ ಭಗವದುಪಾಸನೆ ಮಾಡಿಸೋ

ಹನುಮದ್ವ್ರತದ ಶುಭಾಶಯಗಳು... 
ಪರಮಾತ್ಮನ ದಾಸ ಅಂದರೇ ಹೇಗಿರಬೇಕು ಎನ್ನುವುದನ್ನು ತೋರಿಸಿಕೊಡಲು ಅವತಾರತ್ರಯದಲ್ಲಿ ನಮಗಾಗಿ ಬಂದ ವಾಯುಜೀವೋತ್ತಮರ ಕೃಪೆ ನಮ್ಮ ಎಲ್ಲರ ಮೇಲಿರಲೆಂದೂ ಹಾರೈಸುತ್ತಾ....

ಇವತ್ತು ಮತ್ತೊಂದು ವಿಶೇಷ...

ಶ್ರೀ ವಿಜಯದಾಸಾರ್ಯರು ಶ್ರೀ ಗೋಪಾಲದಾಸಾರ್ಯರಿಗೆ ಆಂಧ್ರದ ಆದವಾನಿಯ ಮಂಗರಾಯನ ದೇವಸ್ಥಾನದಲ್ಲಿ... ಇದೇ ಹನುಮದ್ ವ್ರತದ ಪವಿತ್ರವಾದ ದಿನದಲ್ಲಿ  ಅಂಕಿತೋಪದೇಶವನ್ನು ಮಾಡಿದ ಸುದಿನವು.. (ಶ್ರೀ ವಿಜಯಪ್ರಭುಗಳ ಜೀವನ ಚರಿತ್ರೆಯಲ್ಲಿ ನಾವು ಈಗಾಗಲೇ ಕೇಳಿದ್ದೇವೆ)

ಪರಮ ಶ್ರೇಷ್ಠ ದಾಸ ದ್ವಯರ ಕಾರುಣ್ಯ ನಮ್ಮ ಎಲ್ಲರ ಮೇಲೆ ಸದಾ ಸದಾ ಇರಲಿ ಎಂದು ಪ್ರಾರ್ಥನೆ ಮಾಡುತ್ತಾ..

ಮುಖ್ಯಪ್ರಾಣದೇವರ ಅವತಾರತ್ರಯದ ಕೃತಿಗಳು ಹಾಡುವ ಮುಖಾಂತರ ಭಾರತೀರಮಣ ಮುಖ್ಯಪ್ರಾಣಾಂತರ್ಗತ ಶ್ರೀಹರಿಯ ಸೇವೆಯನ್ನು ನಮ್ಮಿಂದ ಪರಮಾತ್ಮನು ಮಾಡಿಸಲೀ ಎಂದು ಪ್ರಾರ್ಥನೆ ಮಾಡುತ್ತಾ...

ಹರಿ ಸರ್ವೋತ್ತಮ ವಾಯು ಜೀವೋತ್ತಮ 

ಜೈ ವಿಜಯರಾಯ
ಭಾಗಣ್ಣಾರ್ಯ ಗುರುಮ್ ಭಜೇ 
 -Smt. Padma Sirish
ನಾದನೀರಾಜನದಿಂ ದಾಸಸುರಭಿ🙏🏽
***


2021 aradhana






ಗುರುಗಳ ಮನೋಭಾವವನ್ನು ಅರಿತ ತ್ಯಾಗಮೂರ್ತಿ ಶ್ರೀ ಗೋಪಾಲದಾಸರು :-
"ಗುರುರೇವ ಪರೋ ಧರ್ಮೋ" ಎನ್ನುವ ಉಕ್ತಿಗೆ ಭಕ್ತಿಯಿಂದ ನಡೆದುಕೊಂಡು ತಮ್ಮ ಸ್ವರೂಪೋದ್ಧಾರಕ ಗುರುಗಳಾದ ಶ್ರೀ ವಿಜಯದಾಸರ ಮನಸ್ಸಿನ ಭಾವನೆಯನ್ನರಿತ ಮಹಾಮಹೀಮರು,ಸಾಧನೋಪಯುಕ್ತವಾದ ಮಾನವ ಶರೀರ ಉತ್ತಮವಾದ ವೈಷ್ಣವ ದೀಕ್ಷೆ, ಭಗವಂತನನ್ನು ಒಲಿಸಿಕೊಂಡ ಶ್ರೀ ವೇಳೆ ವಿಜಯದಾಸರಂತ ಗುರುಗಳ ಪ್ರಾಪ್ತಿ,ಉತ್ತಮವಾದ ಸ್ವಸಿದ್ಧಾಂತದ ಜ್ಞಾನ, ಗಾಯತ್ರಿ ಮಂತ್ರ ತಪ್ಪಸ್ಸಿನ ಸಿದ್ಧಿಯ ಶಕ್ತಿ,ಹರಿಯ ಕೊಂಡಾಡುವಲ್ಲಿ ಕಾಲಿಗೆ ಗಜ್ಜೆ ಕಟ್ಟಿ ತಂಬೂರಿ ಮಿಟುತ ವಿಠ್ಠಲನ ಮನಗೆದ್ದ ದಾಸವರೇಣ್ಯರು,ಕಷ್ಟದ ಜೀವನದಲ್ಲಿಯೂ ಸದಚಾರತೆಯನ್ನು ಬಿಡದೆ ಸತ್ಕರ್ಮಾಚರಣೆ ಮೂಲಕ ಮುಂದೆ ಎಲ್ಲಾ ವಿಧದ ಆಧ್ಯಾತ್ಮಿಕ ಸಂಪತ್ತಿನಗಳನ್ನು ಪಡೆದು ದಾಸ ಸಾಹಿತ್ಯದಿಂದ ಶ್ರೀಹರಿಯ ಪಾರಮ್ಯವನ್ನು ತಮ್ಮ ಕೀರ್ತನೆಗಳ ಮೂಲಕ ಸಾರುತ್ತ ಸಾಧನೆಗಾಗಿ ಗುರುಗಳ ಆದೇಶದಂತೆ ತಮ್ಮ 40 ವರ್ಷ ಆಯುಷ್ಯವನ್ನು ಶ್ರೀ ಶ್ರೀನಿವಾಸಾಚಾರ್ಯರಿಗೆ ದಾನ ಮಾಡಿ ದಾಸ ಸಾಹಿತ್ಯಕ್ಕೆ ಶ್ರೀ ಜಗನ್ನಾಥದಾಸರನ್ನಾಗಿ ಮಾಡಿ ಮಹತ್ತರ ಕೊಡುಗೆ ನೀಡಿದ ಮಹಾತ್ಮರು ಶ್ರೀ ಗೋಪಾಲದಾಸರು.

ಜಗನ್ನಾಥ ದಾಸರೇ ಹೇಳುವಂತೆ "ಅಪಮೃತ್ಯುವಿನ ತರಿದೆ,,," ಎನ್ನುವಲ್ಲಿ ಶ್ರೀ ಗೋಪಾಲದಾಸರ ಮೂಲಕ ಹಿಂದೆ ಶ್ರೀನಿವಾಸಚಾರ್ಯನಾಗಿದ್ದಾಗ ಸೋತ್ತಮರಲ್ಲಿ ಮಾಡಿದ ಅಪರಾಧದಿಂದ ಅನಾರೋಗ್ಯದಿಂದ (ವ್ಯಾಧಿರೂಪದಿಂದ) ಬಳಲುತ್ತಿದ್ದೆ ಕಂಡ ಕಂಡ ಕ್ಷೇತ್ರಗಳ ದರ್ಶನ ಮಾಡಿದರು ವ್ಯಾಧಿನಾವಾರಣೆಯಾಗದೆ ಶ್ರೀ ವಿಜಯದಾಸರಲ್ಲಿ ಬಂದು ಶರಣಾದಾಗ ವಿಜಯದಾಸರು ಉತ್ತನೂರಿನ ಶ್ರೀ ಗೋಪಾಲದಾಸರಲ್ಲಿಗೆ ಕಳುಹಿಸಿದಾಗ ಶ್ರೀನಿವಾಸಾಚಾರ್ಯರಿಂದ ಮುಂದೆ ದಾಸ ಸಾಹಿತ್ಯಕ್ಕೆ ಸಲ್ಲಬೇಕಾದ ಸೇವೆಯ ಮರ್ಮವನ್ನು ಶ್ರೀ ವಿಜಯದಾಸರ ಮೂಲಜ  ಅರಿತ ಶ್ರೀ ಗೋಪಾಲದಾಸರು ಗುರುಗಳ ಆಜ್ಞೆಯನ್ನು ಶಿರಸಾವಹಿಸಿ ಶ್ರೀನಿವಾದೇವರ ಸನ್ನಿಧಿಯಲ್ಲಿ "ಎನ್ನ ಭಿನ್ನಪವ ಕೇಳು ಧನ್ವಂತ್ರಿ ದಯಮಾಡು ! ಸಣ್ಣವನು ಇವ ಕೇವಲ !! " ಎಂದು ಧನ್ವಂತ್ರಿ ನಾಮಕ ಹರಿಯಲ್ಲಿ ಭಕ್ತಿಯಿಂದ " ನಿನ್ನ ಸಂಕಲ್ಪ ಭಕ್ತರ ಪೋಷಕನೆಂಬ ಘನ್ನ ಬಿರಿದಿನ್ನು ಉಳಹೋ ಸಲಹೋ." ಎಂದು  ಪ್ರಾರ್ಥಿಸುತ್ತ ಭಕ್ರಿಯಲ್ಲಿ ತಮ್ಮ ಆಯುಷ್ಯದ 40 ವರ್ಷವನ್ನು ಶ್ರೀನಿವಾಸಾಚಾರ್ಯರಿಗೆ ಧಾರೆಯರೆದ ಶ್ರೀ ಗೋಪಾಲದಾಸರು ಧನ್ಯರು ಮಾನ್ಯರು.

ಸಾಧನೆಗಾಗಿ ಆರ್ಯುದಾನವ ಮಾಡಿ ಹರಿಯ ಕಥಾಮೃತ ಸಾರವನ್ನು ಜಗತ್ತಿನ ಜನರಿಗೆ ಉಣಬಡಿಸಿದ ಶ್ರೀ ಜಗನ್ನಾಥದಾರಂತಹ ಮಹೀಮರನ್ನು ದಾಸಸಾಹಿತ್ಯಕ್ಕೆ ನೀಡಿದ ಶ್ರೀ ಗೋಪಾಲದಾಸರ ಚರಣಕಮಲಗಳಲ್ಲಿ ನಮಿಸುತ್ತಾ ನಮ್ಮಲ್ಲಿಯೂ ಕರುಣೆ ತೋರಿ ನಮ್ಮ ಇರುವ ಆಯುಷ್ಯವನ್ನು ವ್ಯರ್ಥ ಮಾಡಿಸದೆ ನಮ್ಮಿಂದಲೂ ಸಾಧನೆ ಮಾಡಿಸಲೆಂದು ಎಂದು ಭಿನ್ನಹ.
🙏🏻🙏🏻🙏🏻✍️ಶ್ರೀಕಾಂತ .ಲಿಂಗಸುಗೂರ
******
ಹರಿದಾಸ ಚತುಷ್ಟಯ ಪುರುಷ ತೃತೀಯ ರಾದ|
ತುರುಪಾಲ ದಾಸರ ಚರಿತೆ
ತಿಳಿದಷ್ಟು ಬರೆಯುವೆ|
ಶಿರಿ ಹರಿ ಮರುತರ ದಯದಿಂದ|
ಗುರು ವರದೇಂದ್ರರ ಪರಮಾನುಗ್ರಹದಿಂದ|
ವರದೇಶದಾಸರ ಕರುಣದಿಂದ|
🙏🙏
 ಶ್ರೀ ಗೋಪಾಲ ದಾಸರ ಪೂರ್ವಾರಾಧನೆ ಈ ದಿನ ಅದರ ಪ್ರಯುಕ್ತ.
ಒಮ್ಮೆ ಉತ್ತನೂರಿನಲ್ಲಿ ಶ್ರೀ ಗೋಪಾಲ ದಾಸರು ಸಾಯಂಕಾಲದ ಸಂಧ್ಯಾವಂದನೆ ಮುಗಿಸಿಕೊಂಡು, ಪಾರಾಯಣ ಮಾಡುತ್ತಾ ಕುಳಿತಿದ್ದರು.
ಅದೇ ಸಮಯದಲ್ಲಿ ಒಬ್ಬ ಸಾಧ್ವಿ ಮಣಿಯು ಅದೇ ತಾನೇ ಕರೆದ ಗೋವಿನ ಹಾಲನ್ನು ತೆಗೆದುಕೊಂಡು ದಾಸರ ಮನೆಗೆ ಬಂದಳು.
ಆಕೆಗೆ ಶ್ರೀ ಗೋಪಾಲ ದಾಸರ ದರುಶನ ಮಾಡಿ ಅವರಿಗೆ ಸಮರ್ಪಣೆ ಮಾಡಬೇಕು ಎಂಬ ಆಸೆ.
ದಾಸರು ಮನೆಯಲ್ಲಿ ಇಲ್ಲ ಊರ ಹೊರಗಡೆ ತೊರೆಯ ಬಳಿ  ಇದ್ದಾರೆ ಅಂತ ಅವರ ತಾಯಿಯವರು ಹೇಳಿದ್ದು ಕೇಳಿ ದಾಸರಿದ್ದ ಸ್ಥಳಕ್ಕೆ ಆ ಸಾಧ್ವಿಯು ಬರುತ್ತಾಳೆ.
ತಮ್ಮ ಸಾಯಂಕಾಲದ ಭಜನೆ ಪೂಜೆಯ ಸಮಯದಲ್ಲಿ ಈ ಗೋವಿನ ಹಾಲನ್ನು ವೆಂಕಟೇಶ್ವರ ನಿಗೆ ಸಮರ್ಪಣೆ ಮಾಡಿ ಅಂತ ಪ್ರಾರ್ಥನಾ ಮಾಡುತ್ತಾಳೆ.
ಕೆಲ ನಿಮಿಷ ಪಾತ್ರೆಯನ್ನು ಕೈಯಲ್ಲಿ ತೆಗೆದುಕೊಂಡು ದಾಸರು,ಭಗವಂತನ ಸ್ಮರಿಸುತ್ತಾ ಅಷ್ಟು ಹಾಲನ್ನು ತಾವು ಕುಳಿತ ಉಸುಕಿನಲ್ಲಿ ಚೆಲ್ಲಿ,ಅಲ್ಲಿ ಇದ್ದ ಆ ತೊರೆಯಲ್ಲಿ ಆ ಪಾತ್ರೆಯನ್ನು ತೊಳೆದು 
"ಶ್ರೀನಿವಾಸನಿಗೆ ಸಮರ್ಪಣೆ ಆಯಿತವ್ವ!! ಸ್ವಾಮಿ ಪ್ರೀತಿಯಾಗಿದ್ದಾನೆ.ಪಾತ್ರೆಯನ್ನು ತೆಗೆದುಕೊಂಡು ಮನೆಗೆ ಹಿಂತಿರುಗು " ಅಂತ ಹೇಳುತ್ತಾರೆ..
ದಾಸರ ಈ ಚರ್ಯೆಯನ್ನು ಕಂಡು ಆ ಹೆಣ್ಣು ಮಗಳು ಏನು ಮಾತನಾಡದೇ ಅಳಲು ಶುರು ಮಾಡುತ್ತಾಳೆ.
ಅವಾಗ್ಗೆ ಗೋಪಾಲ ದಾಸರು
"ಏನವ್ವಾ!! ಯಾಕ ಅಳ್ತಾ ಇದ್ದೀ?? ಕಾರಣ ಹೇಳು!!" ಅಂದಾಗ
ಅವಾಗ ಆ ಹೆಣ್ಣು ಮಗಳು 
"ದಾಸರೇ!! ನಾನು ಬಹು ಭಕ್ತಿ ಇಂದ ಈ ಗೋ ಕ್ಷೀರ ವನ್ನು ಶ್ರೀ ವೆಂಕಟೇಶ್ವರ ನಿಗೆ ಜ್ಞಾನಿಗಳಾದ ತಮ್ಮಿಂದ ಅರ್ಪಿಸಬೇಕು ಅಂತ ತಂದೆ.
ತಾವು ನೋಡಿದರೆ ಈ ಮರಳಿನಲ್ಲಿ ಅದನ್ನು ಚೆಲ್ಲಿದಿರಿ!!.ನಿಜಕ್ಕೂ ಅದನ್ನು ನೋಡಿ ನನಗೆ ನಾನೆಷ್ಟು ಪಾಪಾತ್ಮಳು?? ನಾನು ತಂದ ಹಾಲನ್ನು ದಾಸರು ದೇವರಿಗೆ ಸಮರ್ಪಣೆ ಮಾಡದೇ ಉಸುಕಿನಲ್ಲಿ ಹಾಕಿದರುಅಂತ ಅನ್ನಿಸಿತು". ಅಂತ ಅಳಲು ಶುರು ಮಾಡಿದಳು.
ತಕ್ಷಣ ದಾಸರು
"ಅವ್ವಾ!! ಭಜನೆ  ಕಾಲದವರೆಗೆ ಕಾದು ಶ್ರೀ ಹರಿಗೆ ಯಾಕೆ ಸಮರ್ಪಣೆ ಮಾಡಬೇಕು??..
ಈಗ ತಾನೇ ತಂದ ಬಿಸಿ ನೊರೆ ಹಾಲು ಇವಾಗಲೇ ಅರ್ಪಣೆ ಮಾಡಿದೆ. ಸ್ವಾಮಿಗೆ...
ದುಃಖ ಪಡಬೇಡ!!.ರಾತ್ರಿ ಭಜನೆ ಸಮಯದಲ್ಲಿ ಬಾ!'" ಅಂತ ಹೇಳಿ ಕಳಿಸುವರು
ಆದರೂ ಆ ಸಾಧ್ವಿ ಯ ಮನಸ್ಸಿನ ದುಗುಡ ತಪ್ಪಲಿಲ್ಲ.
ಸರಿಯಾದ ಸಮಯಕ್ಕೆ ಭಜನೆ ಗೆ ಉತ್ತನೂರಿನ ವೆಂಕಪ್ಪನ ಗುಡಿಗೆ ಬಂದಳು.
ಮಂಗಳಾರುತಿ ಸಮಯ.
ಶ್ರೀನಿವಾಸ ನಿಗೆ ಮಂಗಳಾರತಿ ಮಾಡಲು ಶ್ರೀ ಗೋಪಾಲ ದಾಸರು ಗರ್ಭಗುಡಿಯಲ್ಲಿ ಹೊಕ್ಕರು.
ಜನರ ಮಧ್ಯೆ ಕುಳಿತಿದ್ದ ಆ ಹೆಣ್ಣು ಮಗಳನ್ನು ಕರೆದು ಗರ್ಭಗುಡಿಯ ಹೊಸ್ತಿಲ ಮುಂದೆ ಕೂಡಿಸಿ "ಸ್ವಾಮಿಯನ್ನು ನೋಡು!!"
ಅಂತ ಹೇಳಿದರು.
ಶ್ರೀನಿವಾಸನ ಮುಖವನ್ನು ನೋಡುತ್ತಾ ನಿಂತ ಆ ಹೆಣ್ಣು ಮಗಳಿಗೆ ದೇವರ ಮುಖದಿಂದ ಕ್ಷೀರ ಸೋರುವದನ್ನು ಕಂಡು ದಾಸರ ಬಗ್ಗೆ ತಪ್ಪು ತಿಳಿದ ಕಾರಣಕ್ಕಾಗಿ ಸ್ವಾಮಿ ಯ ಬಳಿ ತನ್ನ ಗಲ್ಲವನ್ನು ಬಡಿದುಕೊಂಡು "ಗೋವಿಂದ! ಗೋವಿಂದಾ" ಅಂತ  ನಾಮ ಸ್ಮರಣೆ ಮಾಡಿದಳು..
ಇದನ್ನು ಪ್ರತ್ಯಕ್ಷವಾಗಿ ಕಂಡ 
ಶ್ರೀಗೋಪಾಲ ದಾಸರ ತಮ್ಮಂದಿರಾದ
ತಂದೆ ಗೋಪಾಲ ವಿಠ್ಠಲ ದಾಸರು ತಮ್ಮ ಕೃತಿಯಲ್ಲಿ ಹೇಳುತ್ತಾರೆ.👇👇
"ತರುಣಿ ಕ್ಷೀರವ ತಂದು ಕೊಡುತಿರೆ|ಭರದಿ ಮರಳೊಳಗೆರದನು|
ಮರಳಿ ಗುಡಿಯೊಳು ಬರುತಿರಲು| ಅದ ಕರುಣಾನಿಧಿ ತಾ ತೋರ್ದನು||"
ಶ್ರೀ ಹರಿಯು ತನ್ನ ಭಕ್ತರಲ್ಲಿ ನಿಂತು ತಾನು ಮಾಡುವ ಈ ಲೀಲೆ ಬಹು ವಿಚಿತ್ರ.  ಬಹುಅಗಾಧ...
ಅವರಿಗೆ ಲೋಕದಲ್ಲಿ ಹೆಸರನ್ನು ತರಿಸಲೋಸುಗ ಮಾಡುವ ಅವನ ಲೀಲೆ ಅರಿಯಲು ಯಾರಿಗು ಸಾಧ್ಯ ವಿಲ್ಲ.
ಅರಿಯದ ಪಾಮರರು ನಿಂದನೆ ಮಾಡಿ ನರಕವಾಸಿಗಳಾಗುವರು.
🙏ಶ್ರೀ ಕೃಷ್ಣಾರ್ಪಣಮಸ್ತು🙏
ಇವರ ಪೂಜೆಯು ನಮ್ಮ ವಿಜಯರಾಯರ ಪೂಜೆ|
ಇವರ ದಯವೆ ನಮ್ಮ ವಿಜಯರಾಯರ ದಯವು|
ಇವರ ಕೊಂಡಾಡುವದೇ ವಿಜಯರಾಯರ ಸ್ತೋತ್ರ|
ಇವರೇ ಶ್ರೀ ವಿಜಯರಾಯರ ಮುಖ್ಯ ಪ್ರತಿಮಾ||
ಗೋಪಾಲ ದಾಸರಾಯರ ದಿವ್ಯ ಚರಣಗಳು| ಕಾಪಾಡಲೆನ್ನ ಸತತ||
🙏ಶ್ರೀ ಕಪಿಲಾಯ ನಮಃ🙏
*****
2021 ಗೋಪಾಲದಾಸರ ಆರಾಧನೆ,
ಮಸರಕಲ್ ತಾ. ದೇವದುರ್ಗ
ಜಿ. ರಾಯಚೂರ
ಇವತ್ತು ಭಕ್ರಿ ನೈವೇದ್ಯ ವಿಶೇಷ


|ಲೇಸಾಗಿ ಭಜಿಸುವೆ ಗೋಪಾಲ ದಾಸರ||
✍️ಒಮ್ಮೆ ಶ್ರೀ ಗೋಪಾಲ ದಾಸರು ತಮ್ಮ ಸಹೋದರ ರಾದ ಶ್ರೀ ಶೀನಪ್ಪದಾಸರನ್ನು ಕರೆದು "ಶೀನಪ್ಪಾ! ನೀನು ಕಂಚಿ ಕ್ಷೇತ್ರಕ್ಕೆ ಹೋಗಿ ಅಲ್ಲಿ ಇರುವ ಶ್ರೀ ವರದರಾಜ ಸ್ವಾಮಿಯ ಸೇವೆ ಯನ್ನು ಮಾಡಿ ಅವನ ಅನುಗ್ರಹ ವನ್ನು ಪಡೆದುಕೊಂಡು ಬಾ" ಎಂದು ಕಳುಹಿಸಿದರು.
ತಕ್ಷಣ ಶೀನಪ್ಪದಾಸರು ಅಣ್ಣನ ಮಾತಿನಂತೆ ಕಂಚಿ ಕ್ಷೇತ್ರಕ್ಕೆ ಆಗಮಿಸಿ
ಶ್ರೀ ವರದರಾಜ ಸ್ವಾಮಿಯ ಸುಂದರ ಮೂರುತಿಯನ್ನು ನೋಡಿ ಬಹು ವಿಧವಾಗಿ ವರ್ಣನೆ ಮಾಡುತ್ತಾರೆ...
ತಕ್ಷಣ ವೇ ಒಂದು ಕೃತಿಯನ್ನು ರಚನೆ ಮಾಡಿ ಸ್ವಾಮಿಯಲ್ಲಿ ಪ್ರಾರ್ಥನೆ ಮಾಡುತ್ತಾ ಇರುವಾಗ ಅಲ್ಲಿ ಇದ್ದ ಅರ್ಚಕರು ಶ್ರೀ ವರದರಾಜನಿಗೆ ಮಂಗಳಾರತಿ ಮಾಡಲು ಆರಂಭಿಸಿದರು.
ಆಚಾರ್ಯರು ಅಂದು ಅಚಾತುರ್ಯವಾಗಿ ಅಂದು ದೇವರ ದೀಪವನ್ನು ಸ್ವಾಮಿಯ ವಿಗ್ರಹ ಸಮೀಪ ಇಟ್ಟುಬಿಟ್ಟಿದ್ದ ರಿಂದ ದೇವದೇವನಿಗೆ ಉಡಿಸಿದ ವಸ್ತ್ರಕ್ಕೆ ದೀಪ ಸೋಕಿ ಬೆಂಕಿ ಹತ್ತಿಕೊಂಡಿತು..
ಇದೇ ವೇಳೆಗೆ
 ವೇಣಿಸೋಮಾಪುರದಲ್ಲಿ ಶ್ರೀ ಗೋಪಾಲ ದಾಸರು ತಮ್ಮ ಸಹೋದರರ ಹಾಗು ಶಿಷ್ಯ ಜನರ ಜೊತೆಯಲ್ಲಿ ತುಂಗಭದ್ರಾ ನದಿಯಲ್ಲಿ ಮಿಂದು ಆಹ್ನೀಕ ತತ್ಪರರಾಗಿ ಕುಳಿತಿದ್ದರು..
ಮುಸುಕು ಇಟ್ಟು ಜಪ ಮಾಡುತ್ತಾ ಇದ್ದ ಶ್ರೀ ಗೋಪಾಲ ದಾಸರು ತಕ್ಷಣ ಮುಸುಕು ತೆಗೆದು ಹಸನ್ಮುಖರಾಗಿ ತಮ್ಮ ಎರಡು ಕೈಗಳನ್ನು ಉಜ್ಜತೊಡಗಿದರು...
ಒಂದೆರಡು ನಿಮಿಷಗಳ ನಂತರ ಮತ್ತೆ ಮುಸುಕು ಹೊದ್ದುಕೊಂಡು ಜಪ ಮಾಡಲು ಆರಂಭಿಸಿದರು..
ಇತ್ತ ಕಂಚಿಯಲ್ಲಿ ಶೀನಪ್ಪ ದಾಸರು ನೋಡುತ್ತಾರೆ..!!. ಅವರ ಎದುರು ಗಡೆ ಶ್ರೀ ಗೋಪಾಲ ದಾಸರು ಬಂದು ನಿಂತು  ಬೆಂಕಿ ಹತ್ತಿದ ವಸ್ತ್ರಕ್ಕೆ  ತಮ್ಮ ಎರಡು ಕೈಗಳಿಂದ ಅದನ್ನು ಉಜ್ಜಿ ಆರಿಸಿದ್ದನ್ನು ಕಂಡರು...
ಬಹಳ ಸಂತೋಷ ಮತ್ತು ಆಶ್ಚರ್ಯದಿಂದ ಅಣ್ಣಾ!!ಭಾಗಣ್ಣಾ!!ಅಂತ ಕರೆಯುವ ಒಳಗಡೆ ದಾಸರು ಮಾಯವಾಗಿದ್ದರು...
ನಂತರ ಅಲ್ಲಿ ಸೇವೆಯನ್ನು ಮುಗಿಸಿಕೊಂಡು ಉತ್ತನೂರಿಗೆ ಬಂದು ಉಳಿದ ಸಹೋದರರಿಗೆ ಭಾಗಣ್ಣ ಬಂದು ದೇವರ ವಸ್ತ್ರಕ್ಕೆ ಹತ್ತಿದ ಬೆಂಕಿ ಆರಿಸಿದ ಘಟನೆಯನ್ನು ಹೇಳುತ್ತಾರೆ.
ಇದನ್ನು ಎಲ್ಲವನ್ನೂ ನೋಡಿದ ಮತ್ತು ಕೇಳಿದ ಜನ ದಾಸರ ಬಳಿಗೆ ಬಂದು ಭಯ ಭಕ್ತಿ ಇಂದ ಅವರಿಗೆ ನಮಸ್ಕಾರ ಮಾಡುತ್ತಾರೆ.
ತುಂಗಭದ್ರಾ ತಟದಲ್ಲಿ ಕುಳಿತ ಶ್ರೀ ಗೋಪಾಲ ದಾಸರಿಗೆ ಕಂಚಿಯಲ್ಲಿ ಶ್ರೀ ವರದರಾಜ ಸ್ವಾಮಿಯ ವಸ್ತ್ರ ದೀಪ ಸೋಕಿ ಉರಿಯತೊಡಗಿದಾಗ ಅಲ್ಲಿ ಹೋಗಿ ಅದನ್ನು ಆರಿಸಿಬಂದದ್ದು..
ಮತ್ತು 
ಇನ್ನೊಂದು ರೂಪದಿಂದ ಅಲ್ಲಿ ಕುಳಿತು ಜಪ ತಪಗಳನ್ನು ಮಾಡುತ್ತಾ ಕುಳಿತುಇರುವುದು 
ಇವು ದಾಸರ ಅಣಿಮಾದಿ ಸಿದ್ದಿಯ ಸಾಧನೆಯನ್ನು ತೋರಿಸುತ್ತದೆ.
ಸಾಂಶರಾದ ದೇವತೆಗಳಿಗೆ ಯಾವುದು ಅಸಾಧ್ಯವಲ್ಲ.
ಸಾಂಶರು ಅಂದರೆ ಏಕಕಾಲದಲ್ಲಿ ಎಲ್ಲಾ ಕಡೆ ಪ್ರಕಟವಾಗುವದು...
ಇಂತಹ ಮಹಿಮೆಯನ್ನು ಭಗವಂತನ ಅನುಗ್ರಹದಿಂದ ತೋರಿಸಿದ ಶ್ರೀ ಗೋಪಾಲ ದಾಸರನ್ನು ಅವರ ಸಹೋದರರು ಈ ರೀತಿಯಲ್ಲಿ ಸ್ತೋತ್ರ ಮಾಡುತ್ತಾರೆ...
👇👇
ವಸುಧಿಪತಿ ಕಂಚಿ ವರದ ರಾಜನ ವಸನ ದೀಪಕೆ ಸೋಂಕಲು|
ಮುಸುಕು ತೊರೆದು ತುಂಗ ನದಿಯಲು ನಸು ನಗುತಲದವರೆಸಲು||
🙏ಶ್ರೀ ಕೃಷ್ಣಾರ್ಪಣಮಸ್ತು🙏
ಇವರ ಕೊಂಡಾಡುವದೇ ವಿಜಯರಾಯರ ಸ್ತೋತ್ರ|
ಇವರೇ ಶ್ರೀ ವಿಜಯರಾಯರ ಮುಖ್ಯ ಪ್ರತಿಮಾ|
🙏ಶ್ರೀ ಕೃಷ್ಣಾಯ ನಮಃ🙏
******



ಫಾಲ್ಗುಣ ಹುಣ್ಣಿಮೆ
ಶ್ರೀಂ ಶ್ರೀ ಕಂ ಕಪಿಲಾಯ ನಮಃ

ಹೋಳಿ ಹಬ್ಬದ ಶುಭಾಶಯಗಳು.  ನಮ್ಮ ಎಲ್ಲ ಕಷ್ಟಗಳು, ಮನಸಿನ ಕಷ್ಮಲಗಳು ಈ ಕಾಮಣ್ಣ ಹಬ್ಬದ ಬೆಂಕಿಯಲ್ಲಿ ಬಿದ್ದು ಭಸ್ಮವಾಗಲಿ , ಪರಮಾತ್ಮನ ಅನುಗ್ರಹದಂತೆ ಸರಿಯಾದ ಸಾಧನೆಯ ಹಾದಿಯನ್ನು ನಾವೆಲ್ಲಾ  ಹಿಡಿಯುವಂತಾಗಲಿ....

ಹಾಗೆಯೇ

ನೈವೇದ್ಯಗವಿಷಂ ರಾಮೇ ವೀಕ್ಷ್ಯ ತದ್ಭುಕ್ತಿಭಾಗ್ ಗುರು: /
ಯೋದರ್ಶಯದ್ರವಿಂ ರಾತ್ರೌ ಸತ್ಯಬೋಧೋಸ್ತು ಮೇ ಮುದೇ /

ಇಂದು ಶ್ರೀಮದುತ್ತರಾದಿಮಠದ, 17ನೇ ಶತಮಾನದ ಯತಿಗಳಾದ, ಮಹಾ ಮಹಿಮಾ ಸಂಪನ್ನರೂ, ವೈರಾಗ್ಯ ಗುಣ ಸಂಪನ್ನರೂ, ಮಹಾ ವಿರಕ್ತರೂ, ತಪೋನಿಧಿಗಳೂ, ನರಸಿಂಹ ದೇವರನ್ನು ಒಲಿಸಿಕೊಂಡವರು, ನಡುರಾತ್ರಿಯಲಿ ಸೂರ್ಯನ ತೋರಿದ ತೇಜೋಸಂಪನ್ನರೂ, ಪರಮಶ್ರೇಷ್ಠ ಹರಿದಾಸರೆಲ್ಲರಿಂದಲೂ ಸ್ತುತಿಸಲ್ಪಟ್ಟಂತಹಾ, ಮಾರ್ಕಂಡೇಯಾಂಶಜರಾದ ಸವಣೂರು ಶ್ರೀ ಶ್ರೀ ಸತ್ಯಬೋಧ ತೀರ್ಥರ  ಪೂರ್ವಾರಾಧನೆಯ  ಶುಭಸ್ಮರಣೆಗಳು.....

ಹಾಗೇ

ವೈರಾಗ್ಯ ಮೂರ್ಥನ್ಯರು, ಗಣೇಂಶಾಂಶ ಸಂಭೂತರೂ, ಭಕ್ತಿಯಲಿ ಭಾಗಣ್ಣ ಎಂದೇ ಪ್ರಖ್ಯಾತರಾದ ಶ್ರೀ ಗೋಪಾಲದಾಸರ ಅವತಾರ ಮಾಡಿದ ಸುದಿನ ಇಂದು ...ಶ್ರೀ  ಮಹಾನ್ ದಾಸರ ಹಾದಿಯಲ್ಲಿ ನಡೆದು ಪರಮಾತ್ಮನ ಕಾರುಣ್ಯಕ್ಕೆ ಪಾತ್ರರಾಗೋಣ, ದೇಶಕ್ಕೆ ಬಂದಿರುವ ಕಷ್ಟದ ಪರಿಹಾರಕ್ಕಾಗಿ ಶ್ರೀ ಗೋಪಾಲದಾಸಾರ್ಯರು ಮಾಡಿದ ಧನ್ವಂತರೀ ರೂಪೀ ಪರಮಾತ್ಮನ ಕೃತಿಯನ್ನು ಪಾರಾಯಣ ಮಾಡೋಣ.... ಎಂದು ಬೇಡಿಕೊಳ್ಳುತ್ತಾ....

-Smt. Padma Sirish

ನಾದನೀರಾಜನದಿಂ ದಾಸಸುರಭಿ 🙏🏽
*****

ದಾಸರ ಹೆಸರು: ಗೋಪಾಲದಾಸರು
ಜನ್ಮ ಸ್ಥಳ: ಮಸರುಕಲ್ಲು (ದೇವದುರ್ಗತಾಲೂಕು)
ತಂದೆ ಹೆಸರು: ಮುರಾರಿ
ತಾಯಿ ಹೆಸರು: ವೆಂಕಮ್ಮ
ಕಾಲ: 1721 - 1899
ಅಂಕಿತನಾಮ: ಗೋಪಾಲವಿಠಲ
ಲಭ್ಯ ಕೀರ್ತನೆಗಳ ಸಂಖ್ಯೆ: 183
ಗುರುವಿನ ಹೆಸರು: ವಿಜಯದಾಸರು
ಪೂರ್ವಾಶ್ರಮದ ಹೆಸರು: ಭಾಗಣ್ಣ
ಒಡಹುಟ್ಟಿದವರು: ದಾಸಪ್ಪ, ಸೀನಪ್ಪ, ರಂಗಪ್ಪ (ತಮ್ಮಂದಿರು ಮೂವರೂ ಹರಿದಾಸರು)
ಕಾಲವಾದ ಸ್ಥಳ ಮತ್ತು ದಿನ: 1763 ಪುಷ್ಯಬಹುಳ ಅಷ್ಟಮಿ ಸ್ಥಳ : ಉತ್ತನೂರು
ಕೃತಿಯ ವೈಶಿಷ್ಟ್ಯ: ಇವರ ಕೃತಿಗಳು ಕೇವಲ ಸ್ತುತಿಪರಗಳಾಗಿರದೆ ತಾತ್ವಿಕ ಪ್ರತಿವಾರದನೆಯ ರಚನೆಗಳೂ ಆಗಿವೆ. ಭಕ್ತಿಯ ಸಾಧನೆುಂದ ಮಾನವ ಜನ್ಮವನ್ನು ಸಾರ್ಥಕಪಡಿಸಿಕೊಳ್ಳಬೇಕೆಂಬನಿಲುವು ಕೀರ್ತನೆಗಳಲ್ಲಿ ವ್ಯಕ್ತವಾಗಿದೆ.

****

ಶ್ರೀ ವಿಠ್ಠಲ ಪ್ರಸೀದ
  ವಿಜಯನಗರ ಸಾಮ್ರಾಜ್ಯ ಭಗ್ನವಾಗುವುದಕ್ಕೆ ಮುನ್ನ ದಾಸವರೇಣ್ಯರಾದ  ಪುರಂದರ  ದಾಸರು ವೈಕುಂಠ ವಾಸಿಗಳಾದರು.
ಶ್ರೀ ಪುರಂದರ ದಾಸರನಂತರ  ಶತಮಾನ ಕಾಲ  ದಾಸ ಸಾಹಿತ್ಯ  ಮೇರುಗನ್ನು ಕಳೆದುಕೊಂಡಿತ್ತು. ತಮ್ಮ ಶಿಷ್ಯರನ್ನು  ಮತ್ತೆ ಉದ್ದೀಪಿಸಿ ದಾಸ ಸಾಹಿತ್ಯದ  ಪುನಃ ಉಗಮಕ್ಕೆ ಕಾರಣರಾದವರು  ಶ್ರೀ ರಾಘವೇಂದ್ರ ಗುರು ಸಾರ್ವಭೌಮರು.
ಶ್ರೀ ವಿಜಯದಾಸರು, ಶ್ರೀ ಗೋಪಾಲ ದಾಸರು, ಶ್ರೀ ಜಗನ್ನಾಥ  ದಾಸರುಗಳು  ಶ್ರೀರಾಯರಿಂದ  ಪ್ರೇರಿತರಾಗಿ ಭಕ್ತಿ ಗಂಗೆಯನ್ನು ಹರಿಸಿದವರು.
ಅವರಲ್ಲಿ ಶ್ರೀ ವಿಜಯ ದಾಸರ ಕೂಟದಲ್ಲಿ ವಿಶೇಷವಾಗಿ  ಗುರುತಿಸಿ ಕೊಂಡವರು  ಇಂದಿನ ಆರಾಧನೆಯ ನಾಯಕರು.
ರಾಯಚೂರು ಜಿಲ್ಲೆಯ ದೇವದುರ್ಗದ  ಗ್ರಾಮ ಮೊಸರುಕಲ್ಲಿನವರು. ಮುರಾರಿರಾಯ ವೆಂಕಮ್ಮ ದಂಪತಿಗಳ ಪುತ್ರ. ಬಾಗಣ್ಣ  ಎನ್ನುವ ನಾಮಧೇಯ. ತೀರಾ ಬಡತನ.  ತಾಯಿ ಮತ್ತು ತಮ್ಮಂದಿರೊಡನೆ  ಹುಟ್ಟೂರು ತ್ಯಜಿಸಿ ಉತ್ತನೂರಿಗೆ  ಪಯಣ.
ಪ್ರಾಣದೇವರ ಗುಡಿಯಲ್ಲಿದ್ದು  ಏಕಾಗ್ರತೆಯಿಂದ  ವಿಶೇಷ ಧ್ಯಾನಾದಿಗಳಲ್ಲಿ ಮಗ್ನರಾಗಿ ಗಾಯತ್ರಿ ಮಂತ್ರವನ್ನು ಸಿದ್ದಿಸಿಕೊಂಡರು. ಗಾಯತ್ರಿಯ ಪೂರ್ಣ ಅನುಗ್ರಹವಾಗಿ  ಅವರು ಆಡಿದ ಮಾತುಗಳೇಲ್ಲಾ  ನಿಜವಾಗುವಂತಾಯಿತು. ಪ್ರಾಣದೇವರ ಆಶ್ರಯ ತೆಗೆದುಕೊಂಡರೆ ಸುಮ್ಮನೆಯೇ. ಅವರ ಕೀರ್ತಿ  ಸುತ್ತಲೂ ಪಸರಿಸಿ  ಗದ್ವಾಲ ಸಂಸ್ಥಾನದ ದೊರೆ ರಾಜರಾಮ ನ ತನಕ ಮುಟ್ಟಿತು.
ದೊರೆ ಖುದ್ದು ಬಂದು ಭವಿಷ್ಯವಾಣಿಯನ್ನು ಆಲಿಸಿದ. ಭಾಗಣ್ಣನ ವಾಕ್ ಶಕ್ತಿಗೆ ಬೆರಗಾಗಿ ಧನಕನಕ ವಸ್ತು ವಾಹನ (ಕುದುರೆ )ಗಳನ್ನು ಸಮರ್ಪಿಸಿದ.
 ಮುಂದೆ ಭಾಗಣ್ಣ ಆದವಾನಿಯ ದೀವಾನ್ ತಿಮ್ಮಣ್ಣನವರ ಬಳಿ ಇದ್ದಾಗ "ವೆಂಕಟ ಕೃಷ್ಣ "ಎಂಬ ಅಂಕಿತದಿಂದ  ಕೃತಿ ರಚನೆ ಮಾಡಿದ್ದಾರೆ. ಮುಂದೆ                 ವಿಜಯದಾಸರ  ಅನುಗ್ರಹದಿಂದ ಗೋಪಾಲವಿಠ್ಠಲ ಎಂಬ ಅಂಕಿತ ಪ್ರಾಪ್ತವಾಯಿತು.
 ಈ ಅಂಕಿತದಿಂದ ಅನೇಕ  ಕೀರ್ತನೆಗಳನ್ನು, ಸುಳಾದಿಗಳನ್ನು  ರಚಿಸಿದರು. ತಮ್ಮ ಸೋದರರಿಗೆ ದಾಸದೀಕ್ಷೆ ನೀಡಿ ನೂರಾರು  ಜನರನ್ನು ದಾಸಮಾರ್ಗದಲ್ಲಿ        ಕರೆದೋಯ್ದರು.
    ಕನ್ನಡ ಶ್ರೀಮನ್ಯಾಯಸುಧ ಎಂದು  ಕರೆಸಿಕೊಳ್ಳುವ  ಶ್ರೀ ಹರಿಕಥಾಮೃತ ಸಾರ ರಚಿಸಿದ ಜಗನ್ನಾಥ ದಾಸರಿಗೆ ತಮ್ಮ ಆಯುಷ್ಯದ ನಲ್ವತ್ತು ವರ್ಷ ದಾನಮಾಡಿದ ತ್ಯಾಗಮೂರ್ತಿಗಳು.
ಹೆಳವನ ಕಟ್ಟೆ  ಗಿರಿಯಮ್ಮ ನವರಿಗೆ, ಆಕೆ ಹಾಕಿದ್ದ ರಂಗವಲ್ಲಿಯಲ್ಲಿ ಶ್ರೀಕೃಷ್ಣನನ್ನು ತೋರಿದವರು.
ಜ್ಞಾನಿ ವೆಂಕಟರಾಮಾಚಾರ್ಯರಿಗೆ  ವಾಸುದೇವ ವಿಠ್ಠಲ ಎಂಬ ಅಂಕಿತನೀಡಿದವರು. ಮುಂದೆ  ಅವರೇ  ಶ್ರೀ ವ್ಯಾಸ ತತ್ವಜ್ಞರು.
ಅನೇಕ ತೀರ್ಥಯಾತ್ರೆಗಳನ್ನು ಶಿಷ್ಯರ ಜೊತೆ ಮಾಡಿದಾಗ ಫಂಡರಾಪುರದವಿಠ್ಠಲ  ಕುದುರೆಸವಾರನಾಗಿ ಬಂದು 'ತನ್ನ ದರ್ಶನಕ್ಕೆ ಬರುವುದಿಲ್ಲವೇ' ಎಂದಾಗ ಫಂಡರಾಪುರಕ್ಕೂ ಭೇಟಿನೀಡುತ್ತಾರೆ.
ಇದಲ್ಲದೇ  ಅದ್ಭುತ ಕಲಾವಿದರು ಗೋಪಾಲದಾಸರು.  ಬ್ರಹ್ಮಾಂಡದ  ಚಿತ್ರಪಟವನ್ನು  ಪ್ರಮಾಣಬದ್ದವಾಗಿ ರಚಿಸಿದವರು. ಶ್ರೀ ವಿಜಯದಾಸರ ಕಂಕಣ ಸುಳಾದಿಯನ್ನು             ಚಕ್ರಾಬ್ಜ  ಮಂಡಲದೊಳಿಟ್ಟು ಬೀಜಾಕ್ಷರ  ಯಥಾಸ್ಥಾನದೊಳಿಟ್ಟು  ಉಪಾಸನೆಗೆ ಭಕ್ತವೃಂದಕ್ಕೆ ಅನುವು ಮಾಡಿಕೊಟ್ಟವರು ಮಹಾನುಭಾವರಾದ  ಗೋಪಾಲದಾಸರು. ಅದಲ್ಲದೆ   ತಂತ್ರಸಾರೋಕ್ತವಾಗಿ  ಭಗವದ್ ಮೂರ್ತಿಯನ್ನು ನಿರ್ಮಿಸಿ  ಪೂಜಿಸುತ್ತಿದ್ದರು.
ಇಷ್ಟೆಲ್ಲಾ  ಪ್ರತಿಭೆಯಿಂದ ಕೂಡಿದ ತನ್ನ ಭಕ್ತರಿಗೆ ಭಗವಂತ ಸುಖ ಪ್ರಾರಬ್ಧಯೋಗ ಕೊಟ್ಟಿದ್ದ.
ಶ್ರೀ ರಾಘವೇಂದ್ರ ಸ್ವಾಮಿಗಳ ಪರಮ ಭಕ್ತರಾಗಿದ್ದ ಅವರು  ರಚಿಸಿದ " ರಥಾವಾನೇರಿದ ರಾಘವೇಂದ್ರ - ರಾಯ ಗುಣ ಸಾಂದ್ರ ಬಹು ಪ್ರಸಿದ್ಧವಾದ  ಕೀರ್ತನೆ. ರಾಯರ ಮೂರೂ ಅವತಾರಗಳನ್ನು ಈ ಕೃತಿಯಲ್ಲಿ ಸ್ಮರಿಸಿದ್ದಾರೆ. ಇಂಥಾ ಭಕ್ತವರೇಣ್ಯ
ಭಕ್ತಿಯಲ್ಲಿ ಭಾಗಣ್ಣ ಎಂಬ     ಬಿರುದಾಂಕಿತಾರಾದ ಶ್ರೀ ಗೋಪಾಲದಾಸರ ಆರಾಧನೆ ಇಂದು
ಆ ಕುರಿತಾಗಿ   ಭಕ್ತಿಯ ಸ್ಮರಣೆ
       ನಾಹಾಂ ಕರ್ತಾ ಹರಿಃ ಕರ್ತಾ ಶ್ರೀಗೋಪಾಲ ವಿಠ್ಠಲಾರ್ಪಣಾಮಸ್ತು
****




No comments:

Post a Comment