Monday 1 July 2019

ananda dasaru or kamalesh vittala dasaru 1780+ bhadrapada shukla dwadashi ಆನಂದ ದಾಸರು ಕಮಲೇಶ ವಿಠ್ಠಲ ದಾಸರು






bhAdrapada shuddha dwAdashi is the ArAdhane of shri surApura Ananda dAsaru with the ankita of kamalesha viTTala.

kamalEsha viTTala dAsaru

ArAdhane: bhAdrapada ahuddha dwAdashI
Original Name: Ananda Dasaru
Period: 18th century
Ankita: kamalEsha viTTala
Got ankita from: srIsha viTTala dAsaru (shishyaru of jagannAtha dAsarul
SwarUpa uddAraka gurugaLu: Ibharamapura appAvaru
Amsha: gandharva
Kakshe: 27

Ananda dAsaru was born in Cheekalaparavi and as he worked in Surapura he is also called Surapurada Ananda dAsaru. He had several shishyas and the prominent among them were Gundacharya, Guru Bheemesha viTTala, Madaka Shira bhIma dAsaru and kamalApathi  viTTala dAsaru.

He was an ardent devotee of rAyaru. He is the author of some of the most evocative and popular songs on Raghavendra Swamy.

kamalEsha viTTala dAsaru lived around 1780 in Surapura with his preceptor kEshava viTTala dAaru.

His krithis are highly popular for their literary, musical and philosophical content. 

Once Sri Ananda dAsaru was in Ganadhaalu at the Sanctum of Sri Panchamukhi prANa dEvaru for anushTAna for several days. Suddenly he remembered that next day was shrAvaNa krishNa dwitIya, the Aradhana of his beloved gurugaLu - Sri Raghavendra tIrtharu. He left for manthrAlaya and came to cross the river Tungabhadra. But Tungabhadra was overflowing and full of spate. He requested an oarsman to take him to Mantralaya. Owing to the spate and the force of the water the oarsman refused as it was unsafe. Sri Ananda dAsaru pleaded with the oarsman. After a lot of pressure the oarsman placed the boat into the river. After traveling for sometime, the water started entering the boat, though the oarsman struggled hard. Ananda dAsaru felt that his end had come but the strong desire to participate in the rAyara ArAdhana at Mantralaya could not be reduced even at this critical juncture. He started praying to rAyaru. 
At that time two Brahmins wearing only Koupeena came crossing the river, tied a rope to the boat and started pulling the boat. Ananda dAsaru was really surprised to see this. The oarsman was also surprised and expressed gratitude to this kind act of the two Brahmins. Sri AnandaDasaru reached the banks of Mantralaya. There he thanked them and asked the two Brahmins, "Who are you? What are your names? I am really grateful to you, you have really saved our lives". By hearing this, the two Brahmins replied that their names to be Raghappa and Vaadappa. They both said that in Mantralaya Sri Ibharamapura’s Appavaru and several Gnyanis had gathered and requested Ananda  dAsaru  to go to the maTa immediately and then disappeared. Ananda dAsaru   soon realized that the two Brahmins were none other than the Great Divine Saints of Sri Mantralaya - Sri Raghavendra tIrtharu and Sri Vadeendra tIrtharu. Tears rolled from his eyes. When he reached the maTa, Ibharampura’s Appavaru was there and welcomed him with a smile and said, "Oh dAsare, you have escaped the danger of being drowned in Tungabhadra by the Paramanugrha of Sri Raghavendra tIrtharu". Aparoksha Gnyani Ibharamapura’s Appavaru knew what had happened. 

Many of his kritis are sung even today and they are highly popular.

One of the most popular songs is barOnamma mAnege SrI rAghavEndra. Another song is Tunga  theera Virajam…..

The evergreen "karedare barabArade.." is another highly popular song. 

kamalEsha dAsa varada gOvindA gOvindA....

shri krishNArpaNamastu...
************
ಸುರಪುರದ ಆನಂದ ದಾಸರು

ಹೆಸರು : ಆನಂದ
ಜನ್ಮಸ್ಥಳ : ಚೀಕಲಪರ್ವಿ
ವಿದ್ಯಾ ಗುರುಗುಳು : ರಾಜಾಚಾರ್ಯ
ಅಂಕಿತ ಪ್ರದಾನ : ಶ್ರೀ ಶ್ರೀಶ ವಿಠಲರು
ಅಂಕಿತ : ಕಮಲೇಶ
ಸ್ವರೂಪೋದ್ಧರಾಕ ಗುರುಗಳು : ಶ್ರೀ ಅಪ್ಪಾವರು
ಆರಾಧನೆ : ಭಾದ್ರಪದ ಮಾಸ ಶುಕ್ಲಪಕ್ಷ , ದ್ವಾದಶಿ

ಕಮಲೇಶವಿಠಲಾಕಿಂತರಾದ ಸುರಪುರದ ಆನಂದ ದಾಸರು ಅಪರೋಕ್ಷ ಜ್ಞಾನಿಗಳದ  ಇಭರಾಮಪುರ ಶ್ರೀಅಪ್ಪಾವರ ಪ್ರಮುಖ ಶಿಷ್ಯರಲ್ಲಿ ಪ್ರಮುಖರು.

ದಾಸರಿಗೆ ಸ್ವರೂಪ ಜ್ಞಾನ :
ಶ್ರೀ ರಾಯರ ವೃಂದಾವನ ಸನ್ನಿಧಾನದಲ್ಲಿ ನಾದಾನುಸಂಧಾನ ಸುಖದಲ್ಲಿ ಶ್ರೀ ಆನಂದದಾಸರು ತಮ್ಮನೇ ತಾವು ಮರೆತು ಭಾವ ಸಮಾಧಿಯಲ್ಲಿದ್ದಾಗ; ಅಲ್ಲಿಗೆ ಶ್ರೀ ಅಪ್ಪಾವರ ಆಗಮಿಸುತ್ತಾರೆ.ಅಪರೋಕ್ಷ ಜ್ಞಾನಿಗಳಾದ ಶ್ರೀ ಅಪ್ಪಾವರು ದಾಸರಿಗೆ ಗಾನ ಗಂಧರ್ವನ ಸ್ವರೂಪದ ಅರಿವನ್ನುಂಟು ಮಾಡುತ್ತಾರೆ.

ಶ್ರೀ ಅಪ್ಪಾವರು : ಅಹುದೋ ಆನಂದಾ! ಗಾನ ಮಾಡುವುದು ನಿನ್ನ ಸ್ವರೂಪಕ್ಕೆ ಹತ್ತಿದ್ದು; ಇಲ್ಲೂ ಗಂಧರ್ವ! ಲೋಕದ ಗಂಧರ್ವನೇ ನೀನು ಎಂದು ಬೆನ್ನು ಚಪ್ಪರಿಸಿದಾಗಲೇ; ಬಹಿರ್ಮುಖರಾದ ದಾಸರನ್ನು ಶ್ರೀ ಅಪ್ಪಾವರು ಪುನಃ " ಈಗ ಆಯಿತೇ ನಿನ್ನ ಸ್ವರೂಪ ಜ್ಞಾನ! " ಎಂದರು.

ಶ್ರೀ ಆನಂದದಾಸರು :ಎಚ್ಚೆತ್ತು, ದಾಸರು ತನ್ನ ಸ್ವರೂಪವನ್ನು ತೋರಿಸಿದ ಅಪ್ಪಾವರ ಕಾಲಿಗೆ ಬಿದ್ದು ಆನಂದಾಶ್ರುಗಳಿಂದ ತನ್ನನ್ನು ಉದ್ಧರಿಸಬೇಕೆಂದು ಪ್ರಾರ್ಥಿಸಿಕೊಂಡರು.

ಶ್ರೀ ಅಪ್ಪಾವರು :ನಿನ್ನ ಸ್ವರೂಪವೇ ಅಂಥಾದ್ದೆಂದರೆ ನಿನ್ನ ಭಾಗ್ಯ ಎಲ್ಲರ ಪಾಲಿಗಿಲ್ಲ. ಎಲ್ಲಾರ ಶ್ರಮ ನಿನಗಿಲ್ಲ. ನಿನಗೆ ಇದೇ ದಾರಿಯಲ್ಲೇ ಶೀಘ್ರದಲ್ಲೇ ಭಗವದ್ದರ್ಶನವಾಗುವುದೆಂದರು.

ಶ್ರೀ ಆನಂದ ದಾಸರು ಉತ್ತರಿಸದೇ ಮನದಲ್ಲೇ ಶ್ರೀ ಅಪ್ಪಾವರ ಮಾತನ್ನು ಪುನಃ ಪುನಃ ಮನನ ಮಾಡಿಕೊಂಡರು. ಏಕಾಂತವನ್ನು ಬಯಸಿ ಕೆಲವು ಕಾಲ ಏಕಾಂತದಲ್ಲಿರಲು ಶ್ರೀ ಪಂಚಮುಖಿ ಪ್ರಾಣದೇವರ ಸನ್ನಿಧಿಯನ್ನು ಸೇರಿ ಅಲ್ಲಿ ತಮ್ಮ ಇಷ್ಟದೇವತೆ; ಕುಲದೇವತೆ; ಗುರೂಪದಿಷ್ಟ ದೇವತೆಯಾದ ಶ್ರೀ ನೃಸಿಂಹ ಮಂತ್ರೋಪಾಸನೆಯನ್ನು ಮಾಡಿದರು. ನೆನಸಿದಂತೆ ರೂಪ ದರ್ಶನ; ಗುಣ ಕ್ರಿಯಾನುಭಾವಗಳು ಶ್ರೀ ಆನಂದದಾಸರಿಗೆ ಆದವು.

ಆಗ ತಮ್ಮ ಸ್ವರೂಪೋದ್ಧಾರಕ ಗುರುಗಳಾದ ಶ್ರೀ ಅಪ್ಪಾವರು, ಶ್ರೀ ರಾಯರ ದಯಾಳುತ್ವವನ್ನು ಸ್ಮರಿಸುತ್ತಾ ಅವರ ಕಾಲದಲ್ಲಿ ಶ್ರೀ ರಾಯರ ಅಂತರಂಗ ಭಕ್ತರು ಹಾಗೂ ಅಪರೋಕ್ಷ ಜ್ಞಾನಿಗಳನು ಗುರುತಿಸಿ ಅವರ ಸ್ಮರಣೆ ಮಾಡುತ್ತಾರೆ.

ಶ್ರೀ ರಾಘವೇಂದ್ರರಾಯರ ಪಾದಾಂಬುಜ ।
ದಾರಾಧಕರ ಕೊಂಡಾಡಿರೋ ।। ಪಲ್ಲವಿ ।।

ನಾರಾಯಣ ನಾಮ ಪಾರಾಯಣರ । ಪಾ
ದಾರವಿಂದ ಸುಧಾ ರಸವ ಬೀರುವಾ ।। ಅ. ಪ ।।

ಅಲವಬೋಧ ಸತ್ಕುಲ ದೀಪರೆನಿಸಿದ ।
ಹುಲುಗಿಯ ನರಸಪ್ಪಾಚಾರ್ಯರ ।
ಕಲಿಯೊಳು ಕಲಿಕೃತ ಕಲ್ಮಶ ಕಳೆವೆ ।
ನಿರ್ಮಲ ರಾಯ್ಚೂರು ಕೃಷ್ಣಾಚಾರ್ಯರ ।।
ಇಳೆಯೊಳು ಚುಷಷ್ಠಿ ಕಳದಿ ನಿಪುಣರಾದ ।
ಯಳಮೇಲಿ ಹಯಗ್ರೀವಾಚಾರ್ಯರ ।
ಹಲವು ಸಜ್ಜನರೊಳು ತಿಳಿಸಿ ಕೊಳ್ಳದಲಿಪ್ಪ ।
ಬಲವಂತ ಯೋಗಿ ನಾರಾಯಣಾರ್ಯರ ।। 

ಧರಣಿದೇವರಿಗೆ ನಿರುತಾನ್ನವನೀವ ।
ವರ ಹರಿಹರ ಭೀಮಾಚಾರ್ಯರ ।
ಹರಿದಾಸರಿಗೆ ಮಂದಿರವಾದ ।
ಇಭರಾಂಪುರದಲ್ಲಿ ಮೆರೆವ ಕೃಷ್ಣಾಚಾರ್ಯರ ।।
ಶಿರಿಪಾದ ಪುತ್ರ ಪಂಡಿತರೊಳಗಗ್ರೇ ।
ಸರ ಶ್ರೀ ರಂಗದ ರಾಮಾಚಾರ್ಯರ ।
ಸುರಪುರ ಶ್ರೀ ನರಹರಿಯ ಪಾದಾಂಬುಜ ।
ಸಿರಿಯೊಳ್ಮೆರೆವ ಅಸ್ಮದ್ಗುರು ರಾಜಾಚಾರ್ಯರ ।।

ಶ್ರೀ ರಾಘವೇಂದ್ರರಾಯರ ಭೂಮಿಯೊಳವ ।
ಮಾಡಿದ ಆರಂಭದಿಂ ।
ದಾರಾರು ಬೃಂದಾವನ ಪೂಜಾ ಸ್ತೋತ್ರದಿಂ ।
ದಾರಾಧಿಸುವರಾನಂದದಿ ।।
ಸಾರ ಭಕ್ತರ ಪಾದಾರವಿಂದಕೆ । ನಮ ।
ಸ್ಕಾರ ಮಾಡಿರೋ ಸಾಷ್ಟಾಂಗದಿ ।
ಧೀರ ಶ್ರೀ ಕಮಲೇಶವಿಠ್ಠಲ ವಲಿದು ತನ್ನ ।
ಸಾರೂಪ್ಯವ ಕೊಟ್ಟು ಸಲಹುವ ಸಂತತಾ ।।

ಶ್ರೀ ಆನಂದದಾಸರ ಅಭಿವೃದ್ಧಿಯನ್ನು ನೋಡಿ ಸಂತೋಷ ಪಟ್ಟು ಸುರಪುರದ
ಮಹಾರಾಜನು ಕನಕಾಭಿಷೇಕ ಮಾಡಿದನು. ವನಪರ್ತಿ, ಗದ್ವಾಲ, ಕೊಲ್ಹಾಪುರ ಮತ್ತು ಮೈಸೂರು ಮಹಾರಾಜಾಸ್ಥಾನಗಳು ಹಾಗೂ ಸಂಗೀತ ಪ್ರವಚನಗಳು ರಾಜ ಮಹಾರಾಜರ, ಪಂಡಿತ ಪಾಮರರ, ಮಾನ್ಯ ಸಾಮಾನ್ಯರೆಲ್ಲರ ಮನಸ್ಸನ್ನು ಸೂರೆಗೊಂಡಿದ್ದವು. ಶ್ರೀ ಆನಂದದಾಸರಿಗೆ ಭಕ್ತಿ ಶ್ರದ್ದೆಗಳಿಂದ ಗೌರವ ಸಮರ್ಪಣೆ ಮಾಡಿದರು.


 ಸಂಗೀತ ಸರಸ್ವತೀ

ಹಿಂದೂಸ್ತಾನೀ, ಕರ್ನಾಟಕೀ ಸಂಗೀತ ಪದ್ಧತಿಗಳ ಮಧುರ ಸಂಗಮವು, ಅವರ ಕೀರ್ತನೆಗಳನ್ನು ಹೃದಯಂಗಮವಾಗಿಸುತ್ತಿದ್ದವು. ಭರತ ನಾಟ್ಯಕ್ಕೆ ಅನುಕೂಲವಾದ ಅನೇಕ ಭಾವ್ಯಾಭಿವ್ಯಂಜಕ ಮಟ್ಟು ಗಟ್ಟುಗಳನ್ನು ಅವರು ತಮ್ಮ ವಿವಿಧ ಜಾವಡಿಗಳಲ್ಲಿ ಸಂಗ್ರಹಿಸಿದ್ದರು.

 ಮೈಸೂರು ಸಂಸ್ಥಾನದಲ್ಲಿ ಕನಕಾಭಿಷೇಕ

ಮೈಸೂರಿನ ಮುಮ್ಮಡಿ ಕೃಷ್ಣರಾಜ ಒಡೆಯರು ಶ್ರೀ ಅನಂದದಾಸರನ್ನು ಅರಮನೆಗೆ ರಾಜ ಮರ್ಯಾದೆಯಿಂದ ಆಹ್ವಾನಿಸಿ ಆಸ್ಥಾನದಲ್ಲಿ ಅವರಿಂದ ಹರಿಕಥೆಗಳನ್ನು ಮಾಡಿಸಿ ಪರಮಾನಂದ ಪಟ್ಟು ಶ್ರೀ ದಾಸರ ಜ್ಞಾನ - ಭಕ್ತಿ - ಗಾನಗಳಿಗೆ ಮನಸೋತು ಶ್ರೀ ಆನಂದದಾಸರಿಗೆ ಸ್ವತಃ ಮಹಾರಾಜರೇ ಕನಕಾಭಿಷಕ ಮಾಡಿದರು.

ಕೊಲ್ಹಾಪುರ ಮಹಾರಾಜನಿಂದ ಸನ್ಮಾನಿತರಾಗಿ ನೇರವಾಗಿ ಜಗನ್ಮಾತೆಯಾದ ಮಹಾಲಕ್ಷ್ಮೀಯ ದರ್ಶನಾಕಾಂಕ್ಷಿಗಳಾಗಿ ಅಮ್ಮನ ಪರಮಾನುಗ್ರದಿಂದ ಆದ ಈ ರಾಜ ಸನ್ಮಾನಗಳನ್ನು ಕಂಡು ಹರ್ಷ ಪುಳಕಿತರಾಗಿ ಶ್ರೀ ಮಹಾಲಕ್ಷ್ಮಿಯ ಮುಂಭಾಗದಲ್ಲಿ ನಿಂತು..

ರಮಾ ಸಮುದ್ರನ ಕುಮಾರಿ ನಿನ್ನಯ ।
ಸಮಾನರ್ಯಾರಮ್ಮಾ ।। ಪಲ್ಲವಿ ।।
ಸುಮಾಸ್ತ್ರನಯ್ಯನೆದೆ ಸತತ । ಬ ।
ಹುಮಾನದಲಿ ಮೆರೆವ ಮಹಾ ಮಹಿಮಳೆ ।। ಅ. ಪ ।।
ಕನಕ ಮಂಡಿತ ಕುಟಿಲಾಳಕ ಜಾಲೇ । ಶ್ರೀ ಚಂ ।
ದನ ಕುಂಕುಮ ಕಸ್ತೂರಿ ತಿಲಕಾಂಕಿತ ಫಾಲೇ ।
ಮಣಿಮಯ ಕುಂಡಲ ಶೋಭಿತ ಕರ್ಣಕಪೋಲೇ । ಚಂಪಕ ।
ನನೆ ನಾಸಾಗ್ರದೊಳೊಗುವ ಮೌಕ್ತಿಕ ಲೋಲೇ ।। ಚರಣ ।।
ಮಿನುಗುವ ಮಾಣಿಕಮಣಿಧರ । ಪುಟದೊ ।
ಳಿನಿವರ ವಜ್ರದಿ ಕಣಿಗಳ ರಾಜಿ । ದ ।
ಶನಯುತ ಸ್ಮೇರಾನನ ಶುಭ ಕಾಂತಿಯಿಂ ।
ವನಜ ಭವನ ಮನೆಗೆ ಮಂಗಳಗರೆವ ।। ಚರಣ ।।
ಕೊರಳೊಳು ಪರಿಮಳ ಪರಿಪರಿ ಪುಷ್ಪದ ಮಾಲೆ । ಒಪ್ಪುವ ।
ರರಿರಾಜನ ಕರಡಿರುವಿಕೆ ಕರಗಳ ಲೀಲೇ ।
ಶರಣಾಗತ ಜನ ಪರಿಪಾಲನರತ ಶೀಲೇ । ಗಂಡನ ।
ಪರಿರಂಭಣ ಸಾಮ್ರಾಜ್ಯದ ಸುಖದನುಕೂಲೇ ।। ಚರಣ ।।
ಕರುಣಿಸಮ್ಮ ತಮ ಕರುಣಕಟಾಕ್ಷದ ।
ಸಿರಿಯ ಬೆಳಗಿನೊಳ್ ಪರಿಚಯಿಸುವ । ಸುಜ ।
ನಾರಾ ಚರಣಾಂಬುಜ ಪರಿಮಳದೊಳು । ಮನ ।
ವೆರಗಿಸುವುದು ಸೌಂದರ್ಯ ಶಿಕಾಮಣಿ ।। ಚರಣ ।।
ರಮಣೀಯ ವಿಮಲಾ ಕಮಲಾಯತದಳ ನೇತ್ರೇ । ಚಂಪಕ ।
ಸುಮದ ಸುವರ್ಣ ಪರಿಮಳದ ಸುಂದರ ಗಾತ್ರೇ ।
ಕಮಲಭವೇಂದ್ರಾದ್ಯಮರ ಮುನಿಗಣ ಸ್ತೋತ್ರೇ । ಶ್ರೀ ।
ಕಮಲೇಶವಿಠ್ಠಲರಾಯನ ಕರುಣಕೆ ಪಾತ್ರೇ ।। ಚರಣ ।।

 ರಾಯರ ಹಾಗೂ ವಾದೀಂದ್ರತೀರ್ಥರ ಅನುಗ್ರಹ

ದಾಸರು ಪಂಚಮುಖಿ ಮುಖ್ಯಪ್ರಾಣ ದೇವರ ಸೇವೆಗೆ ಮಂತ್ರಾಲಯ ಹತ್ತಿರದ ಗಾಣದಳದಲ್ಲಿ ಸೇವೆಗೆ ಬಂದಿರುತ್ತಾರೆ. ಶ್ರಾವಣ ಮಾಸ ಕೃಷ್ಣ ಪಕ್ಷ ರಾಯರ ಆರಾಧನೆಯ ಸಮಯ ರಾಯರ ದರ್ಶನಕೆ ದಾಸರು ಪಂಚಮುಖಿ ಇಂದ ಮಂತ್ರಾಲಯಕೆ ಹೊರಡಲು ಸಿದ್ದರಾಗುತ್ತಾರೆ. ನದಿಯಲ್ಲಿ ಪ್ರವಾಹ ದುಮಿಕ್ಕಿ ಹರಿತಿರೋ ಕೃಷ್ಣಾ ನದಿ. ಹರಿಗೋಲು ಹಾಕುವವನಿಗೆ ದಾಸರು ದಡ ಸೇರಿಸಲು ಕೇಳುತ್ತಾರೆ.  ಪ್ರವಾಹ ಇಡದರಿಂದ ಅಂಬಿಗ ಸೇರಿಸುವುದು ಕಷ್ಟಸಾಧ್ಯ ಮದ್ಯೆ ಪ್ರವಾಹ ಹೆಚ್ಚಿದರೆ ನಾನು ಜವಾಬ್ದಾರನಲ್ಲ ಅಂತ ಹೇಳಿ ಹೊರಡಲು ಸಿದ್ದರಾಗುತ್ತಾರೆ. ನದಿ ಮದ್ಯದಲ್ಲಿ ಪ್ರವಾಹ ಹೆಚ್ಚಿ ಹರಿಗೋಲು ಮುಲುಗಳು ಪ್ರಾರಂಭವಾಗುತ್ತದೆ. ಅಂಬಿಗ ಹರಿಗೋಲು ಬಿಟ್ಟು ಪ್ರವಾಹದಲ್ಲಿ ಈಗಿಕೊಂಡು ಹೋಗುತ್ತಾನೆ. ದಾಸರು ಆ ತಕ್ಷಣ ರಾಯರ ಪ್ರಾರ್ಥನೆ ಮಾಡುತ್ತಾರೆ. ನದಿ ದಡದಲ್ಲಿ ಇಬ್ಬರು ಕವಿಧಾರಿಗಳು ನದಿಯಲ್ಲಿ ಈಜಿ ದಾಸರನು ದಡಕ್ಕೆ ಸೇರಿಸುತ್ತಾರೆ. ದಾಸರು ಪ್ರಾಣವನ್ನು ಕಾಪಾಡಿದ ಅವರು ತಮ್ಮನ್ನು ರಾಘಪ್ಪ-ವಾಜಪ್ಪ ಅಂತ ಪರಿಚಯ ಮಾಡಿಕೊಂಡು ಅದೃಶ್ಯರಾಗುತ್ತಾರೆ.

ಮಂತ್ರಾಲಯ ತಲುಪಿದ ದಾಸರು ಅಲ್ಲಿ ಅಪ್ಪಾವರು ಸೇರಿ ಹಲವು ಜ್ಞಾನಿಗಳ ಸಂಗಮವಿತ್ತು. ಅಪ್ಪಾವರು ದಾಸರನು ಕಂಡು ಅವರಿಗೆ ಬರಮಾಡಿಕೊಂಡು ಅವರ ಯೋಗಕ್ಷೇಮ ವಿಚಾರಿಸುತ್ತಾ ಪ್ರವಾಹ ಹೇಗೆ ಇತ್ತು ಅಂತ ಅಪ್ಪಾವರು ದಾಸರಿಗೆ ಕೇಳುತ್ತಾರೆ. ದಾಸರು ತಾವು ಪಾರಾದ ಪ್ರವಾಹ ಅಪ್ಪಾವರ ಜ್ಞಾನ ದೃಷ್ಟಿಗೆ ಬಂದಿದ್ದನು ನೋಡಿ ಆಶ್ಚರ್ಯವಾಗುತ್ತೆ. ಅಪ್ಪಾವರು ದಾಸರಿಗೆ ಪ್ರವಾಹದಲ್ಲಿ ಕಾಪಾಡಿದು ರಾಘಪ್ಪ-ವಾಜಪ್ಪ ಬೆರೆಯಾರು ಅಲ್ಲ ರಾಘವೇಂದ್ರ ಗುರುಸಾರ್ವಭೌಮರು ಹಾಗೂ ವಾದೀಂದ್ರತೀರ್ಥರು ಅಂತ ಹೇಳಿ ಅನುಗ್ರಹಿಸುತ್ತಾರೆ.

 ದಾಸರ ಶಿಷ್ಯ ಸಂಪತ್ತು :

ಶ್ರೀ ಮಡಕಶಿರದ ಭೀಮದಾಸರು - ಭೀಮೇಶವಿಠ್ಠಲ
ಶ್ರೀ ಕಮಲಾಪತಿದಾಸರು - ಕಮಲಾಪತಿವಿಠ್ಠಲ
ಶ್ರೀ ಜೋಶಿ ವೆಂಕಪ್ಪಾಚಾರ್ಯರು - ವೆಂಕಟೇಶವಿಠ್ಠಲ
ಶ್ರೀ ಹರಪನಹಳ್ಳಿ ರಾಮಾಚಾರ್ಯರು - ಇಂದಿರೇಶ
ಶ್ರೀ ಗುಂಡಾಚಾರ್ಯರು
ಶ್ರೀ ಬೇಲೂರು ವೆಂಕಟ ಸುಬ್ಬದಾಸರು
ಶ್ರೀ ಸುರಪುರದ ಪ್ರೇಮದಾಸರು
ಸಾಧ್ವೀ ತಂಗಮ್ಮನವರು ( ಇವರು ಶ್ರೀ  ಆನಂದ ದಾಸರ ಮಗಳು )


ಕರೆದರೆ ಬರಬಾರದೆ |
ಗುರುವರ ಶ್ರೀರಾಘವೇಂದ್ರ ||

ವರಮಂತ್ರಾಲಯ ಪುರಮಂದಿರ ತವ
ಚರಣ ಸೇವಕರು ಕರವ ಮುಗಿದು ||

ಹರಿದಾಸರು ಸುಸ್ವರ ಸಮ್ಮೇಳದಿ
ಪರವಶದಲಿ ಬಾಯ್ದೆರೆದು ಕೂಗಿ ||

ಭೂಸುರರೊಳಗೆ ಪ್ರಕಾಶ ಕೃಷ್ಣಾರ್ಯರು
ಹಾಸ ಮುಖದಿ ಅಭಿಲಾಷೆಯಿಂದ ||

ಪೂಶರಪಿತ ಕಮಲೇಶವಿಠ್ಠಲನ
ದಾಸಾಗ್ರೇಸರರೀ ಸಮಯದಿ ||
 ಶ್ರೀ ಇಭರಾಮಪುರಾಧೀಶ
*****

."  ಕಮಲೇಶವಿಠಲಾಂಕಿತ ಸುರಪುರದ ಶ್ರೀ ಆನಂದದಾಸರು " ಮತ್ತು ಶ್ರೀ ಕಮಲೇಶಾ೦ಕಿತ ಶ್ರೀ ರಾಜಾ ಎಸ್ ಗುರುರಾಜಾಚಾರ್ಯರು " - ಒಂದು ಅಧ್ಯಯನ
" ಶ್ರೀ ರಾಘವೇಂದ್ರ ತೀರ್ಥ ಗುರುಸಾರ್ವಭೌಮರ ಪರಮಾನುಗ್ರ ಪಾತ್ರರಾದ ಶ್ರೀ ಗಾನ ಗಂಧರ್ವ ಸುರಪುರದ ಶ್ರೀ ಆನಂದದಾಸರು "
ರಂಗ ಒಲಿದ ದಾಸರಾಯರಾದ ಶ್ರೀ ಸಹ್ಲಾದಾಂಶ ಶ್ರೀ ಜಗನ್ನಾಥದಾಸರ ಶಿಷ್ಯ ಪರಂಪರೆಯಲ್ಲಿ ಬಂದವರು ಸುರಪುರದ ಶ್ರೀ ಅನಂದದಾಸರು.
ಶ್ರೀ ಜಗನ್ನಾಥದಾಸರು
ಶ್ರೀ ಶ್ರೀಶ ವಿಠ್ಠಲರು
ಸುರಪುರದ ಶ್ರೀ ಆನಂದದಾಸರು
" ಸುರಪುರದ ಶ್ರೀ ಆನಂದದಾಸರ ಸಂಕ್ಷಿಪ್ತ ಚರಿತ್ರೆ "
ಹೆಸರು : ಆನಂದ
ಜನ್ಮಸ್ಥಳ : ಚೀಕಲಪರವಿ
ತಮ್ಮ : ಶೇಷ
ವಿದ್ಯಾ ಗುರುಗಳು : ಶ್ರೀ ರಾಜಾಚಾರ್ಯರು
ಅಂಕಿತೋಪದೇಶ ಗುರುಗಳು : ಶ್ರೀ ಶ್ರೀಶ ವಿಠ್ಠಲರು
ಅಂಕಿತ : ಕಮಲೇಶವಿಠ್ಠಲ
ಸ್ವರೂಪೋದ್ಧಾರಕ ಗುರುಗಳು : ಇಭ್ರಾಮಪುರ ಶ್ರೀ ಅಪ್ಪಾರವರು
ಅಂಶ : ಗಂಧರ್ವ ( ಗಾಯನ ಮಾಡತಕ್ಕವರು )
" ಶ್ರೀ ಕಮಲೇಶವಿಠ್ಠಲಾಂಕಿತದಲ್ಲಿ ಪ್ರಪ್ರಥಮ ರಚನೆ "
ರಾಗ : ಕೇದಾರಗೌಳ ತಾಳ : ಆಟ
ಬ್ರಹ್ಮಣ್ಯದೇವನೆಂಬುವ ।
ಮಹಾ ಬಿರುದು ನಿನಗೆ ಸಲ್ಲುವುದಯ್ಯ ।
ಬ್ರಹ್ಮ ರುದ್ರಾದ್ಯರುಗಳು ದೈವವೆಂದ । ಹಮ್ಮಿನಿಂ ।
ದ ಹೊಡೆದಾಡುವರು ಬರಿದೆ ।। ಪಲ್ಲವಿ ।।
ಹಿಂದೆ ಸರಯು ತೀರದೋಳ್ ಮಹಾಪುರ ।
ವೃಂದವೆಲ್ಲ ಕೋಡಿ ಸರ್ವೇಶ್ವರ ।
ಸಂದೇಹ ತಿಳಿಸಲು ಭೃಗು ಮುನಿಗಳಿಗ೦ದೆ ಆಜ್ಞೆ ಮಾಡಿ ।। ಚರಣ ।।
ಮಂದಜಾಸನೇಂದು ಧರರ ಪರಿಭಾವದಿಂದ ।
ಬೆಂದು ನಿನ್ನ ಸನ್ನಿಧಾನಕ್ಕೆ ಬಂದು । ಪಾದ ।
ದಿಂದೊದೆಯ ಲಭಿವಂದನಂ ।
ಗೈದು ಘಳಿಸಿದೆ ಪರ ।। ಚರಣ ।।
ರಾಜಸೂಯ ಯಾಗದೊಳ್ ಮಹಾ । ಮಹ ।
ರಾಜ ಸಂದಣಿಯಲಿ । ಆಗ್ರ ।
ಪೂಜಾಯತಾರ್ಥದಿಂದ ಗಾಂಗೇಯ ಸಮ್ಮುಖದಲಿ ।। ಚರಣ ।।
ಆವದೇವಗಿಲ್ಲ ಶಕುತಿ ಬ್ರಹ್ಮ । ಕುಲಾವ ।
ಮಾನದಿಂದ ಪೇಳ್ದುದನು ಕೇಳ್ ।
ಕಾವ ಕಮಲೇಶವಿಠ್ಠಲ ನ । ಪ್ರತ್ಯ ।
ಕ್ಷಾವ ಲೋಕನದಲಿ ಧನ್ಯನಾದೆ ।। ಚರಣ ।।
ಕಕ್ಷೆ : 27
" ದಾಸರ ಶಿಷ್ಯ ಸಂಪತ್ತು "
ಶ್ರೀ ಮಡಕಶಿರದ ಭೀಮದಾಸರು - ಭೀಮೇಶವಿಠ್ಠಲ
ಶ್ರೀ ಕಮಲಾಪತಿದಾಸರು - ಕಮಲಾಪತಿವಿಠ್ಠಲ
ಶ್ರೀ ಜೋಶಿ ವೆಂಕಪ್ಪಾಚಾರ್ಯರು - ವೆಂಕಟೇಶವಿಠ್ಠಲ
ಶ್ರೀ ಹರಪನಹಳ್ಳಿ ರಾಮಾಚಾರ್ಯರು - ಇಂದಿರೇಶ
ಶ್ರೀ ಗುಂಡಾಚಾರ್ಯರು
ಶ್ರೀ ಬೇಲೂರು ವೆಂಕಟ ಸುಬ್ಬದಾಸರು
ಶ್ರೀ ಸುರಪುರದ ಪ್ರೇಮದಾಸರು
ಸಾಧ್ವೀ ತಂಗಮ್ಮನವರು ( ಇವರು ಶ್ರೀ ಆನದದಾಸರ ಮಗಳು )
" ನಿರ್ಯಾಣ "
ಅನಾಯಾಸೇನ ಮರಣಂ ವಿನಾ ದೈನ್ನೇನ ಜೀವನಂ ।
ಅನಾರಾಧಿತ ಗೋವಿಂದ ಚರಣಸ್ಯೋ ಭಯಂಕುತಃ ।।
ಎಂಬ ಶ್ಲೋಕವು ಶ್ರೀ ಆನಂದದಾಸರಿಗಾಗಿಯೇ ರಚಿತವಾಯಿತೋ ಎಂಬಂತೆ ಶ್ರೀ ಆನಂದದಾಸರ ಅಂತಿಮ ಕಾಲವೂ ಆನಂದಮಯವಾಗಿತ್ತಂತೆ.
ಸುರಪುರದ ಶ್ರೀ ಗೋಪಾಲಕೃಷ್ಣ ದೇವಾಲಯದಲ್ಲಿ ನೂರಾರು ಜನರ ಸಮ್ಮೇಳನದಲ್ಲಿ ಶ್ರೀ ಆನಂದದಾಸರು ಕೀರ್ತನೆ ಮಾಡುತ್ತಿದ್ದಾಗ " ಭಾದ್ರಪದ ಶುದ್ಧ ದ್ವಾದಶೀ ". ಅಂದಿನ ಕಥಾ ವಸ್ತುವು " ವಾಮನಾವತಾರ " ವಾಗಿತ್ತು.
ಬಲಿರಾಜನಿಗೆ ಸುತಲ ಲೋಕ ಕೊಟ್ಟು ಪಟ್ಟಾಭಿಷೇಕವಾಗಿದೆ. " ಮುಂದಿನ ಮನ್ವಂತರದಲ್ಲಿ ಆಶ್ರಯದಿಂದ ನೀನೇ ಇಂದ್ರನಾಗುವಿ; ಈಗ ಮತ್ತೇನು ಬೇಡುವೆ ಬೇಡು " ಎಂದು ತ್ರಿವಿಕ್ರಮನ ಆಜ್ಞೆಯಾಯಿತು.
ಭಕ್ತ ಬಲಿರಾಜನು " ಇನ್ನು ಬೇಡುವುದೇನಿದೆ ಮಹಾ ಪ್ರಭೋ " ಎಂದು...
ರಾಗ : ಬೇಹಾಗ್ ತಾಳ : ಆದಿ
ಬೇಡುವುದೇನ ಭಾವ ವಿಮೋಚನ ।। ಪಲ್ಲವಿ ।।
ಆವ ಸಾಧನಕೆ ಆವುದು ಕಡೆ ತವ ।
ಪಾವನ ಪಾದವ ಸೇವೆ ದೊರೆತ ಮೇಲೆ ।। ಚರಣ ।।
ಅಮರೇಶನ ಪದ ಭ್ರಮಿಸಿದುದಕೆ । ಸಿರಿ ।
ಕಮಲೇಶವಿಠ್ಠಲನೆ ನಮಗೆ ದೊರೆತ ಮೇಲೆ ।। ಚರಣ ।।
ಎಂದು ಪ್ರಾರ್ಥಿಸಿದನೆಂದು ಶ್ರೀ ಆನಂದದಾಸರು ಹಾಡುತ್ತಿದ್ದಾರೆ. ಆ ಆನಂದ ಪರವಶರಾಗಿ ಹಾಡುತ್ತಿದ್ದ ಸಂದರ್ಭದಲ್ಲೇ ಶ್ರೀ ಆನಂದದಾಸರ ಇಹಲೋಕ ವ್ಯಾಪಾರ ನಿಂತು ಹೋಯಿತು. ಸುಖವಾಗಿ ಯಾವುದೇ ಸಂಕಟಗಳನ್ನು ಅನುಭವಿಸದೇ ದೇವ ಸ್ತುತಿಯೊಂದಿಗೆ ನಿರ್ಯಾಣ ಹೊಂದಿದ ಸುದೈವಿಗಳು ಶ್ರೀ ಸುರಪುರದ ಆನಂದದಾಸರು!!
" ಉಪ ಸಂಹಾರ "
ಶ್ರೀ ಆನಂದದಾಸರ ಕೀರ್ತನೆಗಳಲ್ಲಿ ದೇವತಾ ವರ್ಣನೆಯು ಶ್ರೀ ಹರಿಯ ಮಹಾ ಮಹಿಮೆಯೊಡನೆ ಒಳ್ಳೇ ಕಲಾತ್ಮಕವಾಗಿ ಆವಿಷ್ಕಾರವನ್ನು ಪಡೆದಿದೆ.
ಭಗವದ್ಗೀತೆಯ ೧೮ ಅಧ್ಯಾಯಗಳನ್ನೂ ಮೂರು ಷಟ್ಕವಾಗಿ ವಿಂಗಡಿಸಿ " ಕೀರ್ತನಗೀತೆ " ಎಂಬ ಹೆಸರಿನಿಂದ ಶ್ರೀ ಆನಂದದಾಸರು ಬರೆದಿದ್ದಾರೆ. ಈ ಕೀರ್ತನ ಗೀತೆಯ ಕನ್ನಡೀಕರಣದ ಕ್ರಮವೂ ಕೂಡಾ ತೀರಾ ಹೊಸ ರೀತಿಯಲ್ಲಿ ಆಗಿದೆಯೆಂದು ಹೇಳಬಹುದು.
ಸಂಸ್ಕೃತ ಭಗವದ್ಗೀತೆಯ ಪ್ರತಿ ಅಧ್ಯಾಯದ ಸಾರವನ್ನು ಮೊದಲು " ಎರಡು ಪದಗಳು ಅನಂತರ ಕೆಲವು ಆರ್ಯ ವೃತ್ತದ ಪದ್ಯಗಳು. ಅದಾದ ಬಳಿಕ ಉಳಿದ ಭಾಗದಲ್ಲಿ ಕನ್ನಡದ ದೇಶಿ ಛಂಧಸ್ಸಾದ ಷಟ್ಪದಿಗಳು ". ಈ ಕ್ರಮದಿಂದ ಸುಂದರ ಬಂಧುರವಾಗಿ ನಿರೂಪಿಸುತ್ತಾ ಹೋಗುತ್ತಾರೆ.
ಈ ಕೀರ್ತನೆಗಳಲ್ಲಿ ಬರುವ ಶ್ರೀ ಹರಿಯ ವಿಶ್ವರೂಪ ವರ್ಣನೆಯಂತೂ ಪ್ರೌಢ ಕನ್ನಡದ ಲಲಿತ ದಂಡಕದಲ್ಲಿ ಶ್ರೀ ರಾಮಾನುಜಾಚಾರ್ಯರ ವೈಕುಂಠ ಗದ್ಯದಂತೆ ಪ್ರಸನ್ನ ಮನೋಹರವಾಗಿ ಮೊಳಗಿದೆ.
ಶ್ರೀ ದಾಸರಲ್ಲಿ ನಾದಿಷ್ಠತೆ, ಛಾ೦ದಿಷ್ಟತೆ, ರಾಗಿಷ್ಠತೆಗಳು ಭಗವನ್ನಿಷ್ಟೆಯೊಡನೆ ಬೆರೆತು ಮಿಶ್ರ ಮಾಧುರಿಯ ಅಪೂರ್ವ ಮಾದರಿಯನ್ನು ಒದಗಿಸಿದೆ.ಸುಮಾರು ೩೫೦ಕ್ಕೂ ಅಧಿಕ ಪದ - ಪದ್ಯ - ಸುಳಾದಿಗಳನ್ನು ರಚಿಸಿ ಹರಿದಾಸ ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸಿದ್ದಾರೆ.
                     ***********
" ಶ್ರೀ ರಾಯರ ಕಾರುಣ್ಯ ಪಾತ್ರರು ಕೀರ್ತಿಶೇಷ ಶ್ರೀ ರಾಜಾ ಎಸ್ ಗುರುರಾಜಾಚಾರ್ಯರು "
"  ಶ್ರೀ ರಾಜಾ ಎಸ್ ಗುರುರಾಜಾಚಾರ್ಯ ಸಂಕ್ಷಿಪ್ತ ಚರಿತ್ರೆ "
ಹೆಸರು : ಶ್ರೀ ಎಸ್ ಗುರುರಾಜಾಚಾರ್ಯ
ತಂದೆ : ಶ್ರೀ ಶ್ರೀನಿವಾಸಮೂರ್ತ್ಯಾಚಾರ್ಯರು ( ಮುಂದೆ ಶ್ರೀರಾಯರ ಪೀಠವನ್ನು ಅಲಂಕರಿಸಿದ ಶ್ರೀ ಸುಯಮೀ೦ದ್ರತೀರ್ಥರು )
ತಾಯಿ : ಸಾಧ್ವೀ ವೃಂದಾವನಮ್ಮ
ಜನ್ಮಸ್ಥಳ : ನಂಜನಗೂಡು
ಕಾಲ : ಕ್ರಿ ಶ 1921 - 2003
ಧರ್ಮಪತ್ನಿ : ಸಾಧ್ವೀ ಕಮಲಾಬಾಯಿ
ಮಕ್ಕಳು : ಶ್ರೀ ಕೃಷ್ಣಗುಂಡಾಚಾರ್ಯರು, ಶ್ರೀ ಸುಧೀಂದ್ರಾಚಾರ್ಯರು, ಶಶಿಪ್ರಭಾ, ಗೀರ್ವಾಣಿ
ವಿದ್ಯಾ ಗುರುಗಳು :
ಶ್ರೀ ಎಲತ್ತೂರು ಕೃಷ್ಣಾಚಾರ್ಯರು, ಶ್ರೀ ದೊಡ್ಡಬಳ್ಳಾಪುರಂ ವಾಸುದೇವಾಚಾರ್ಯರು, ಶ್ರೀ ಆಚಾರ್ಯ ವೆಂಕೋಬಾಚಾರ್ಯರು, ಶ್ರೀ ತಿರುವಾದಿ ವಿಜಯೀ೦ದ್ರಾಚಾರ್ಯರು 
ಅಂಕಿತೋಪದೇಶ ಗುರುಗಳು : ಕಾಣಿಯೂರು ಮಠಾಧೀಶರಾದ ಶ್ರೀ ವಿದ್ಯಾಸಮುದ್ರತೀರ್ಥರು 
ಅಂಕಿತ : ಕಮಲೇಶ
ಕುಲ ಗುರುಗಳು : ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮರು
ವೇದಾಂತ :
ಮದ್ರಾಸ್ ಪ್ರೆಸಿಡೆನ್ಸಿಯಿಂದ " ವೇದಾಂತ ಶಿರೋಮಣಿ " ಯಲ್ಲಿ " 1st Rank " ( 696/700 )
ಪ್ರಶಸ್ತಿ :
1. ಶ್ರೀ ರಾಘವೇಂದ್ರಾನುಗ್ರಹ ಪ್ರಶಸ್ತಿ
2. ವಿದ್ಯಾ ವಾಚಸ್ಪತಿ
3.ವಿದ್ಯಾರತ್ನಂ
4.ವಿದ್ಯಾಧಿರಾಜ
5.ಶ್ರೀ ರಾಘವೇಂದ್ರ ಗುರುವಂಶ ಭೂಷಣ
6. ಸರಸ್ವತಿ ಕಂಠಾಭರಣ
7. ರಾಷ್ಟ್ರ ಪಶಸ್ತಿ ( ರಾಷ್ಟ್ರಪತಿಯವರಿಂದ ) " Certificate of Honour " ( 1998 )
8. ಕರ್ನಾಟಕ ರಾಜ್ಯ ಪ್ರಶಸ್ತಿ
9.ಸಾಹಿತ್ಯಾಲಂಕಾರ ಭೂಷಣ
ಹೀಗೆ ಹಲವಾರು ಪ್ರಶಸ್ತಿಗಳ ಭಾಜನರಾಗಿದ್ದಾರೆ.
" ಅನುವಾದ ಗ್ರಂಥಗಳು "
ಶ್ರೀ ರಾಮಾಚಾರಿತ್ರ್ಯಮಂಜರೀ
ಶ್ರೀ ಕೃಷ್ಣಚಾರಿತ್ರ್ಯಮಂಜರೀ
ಮಹಾಭಾರತ ತಾತ್ಪರ್ಯ ನಿರ್ಣಯ
ಗುರುಗುಣಸ್ತವನ
ದಶಾವತಾರಸ್ತುತಿ
ಶ್ರೀ ನೃಸಿಂಹ ಸ್ತುತಿ
ಶ್ರೀ ವಿಜಯೀ೦ದ್ರತೀರ್ಥರಿಂದ ರಚಿತವಾದ ಗ್ರಂಥಗಳಲ್ಲಿ ೫೦ಕ್ಕೂ ಅಧಿಕ ಗ್ರಂಥಗಳು, ಶ್ರೀ ಸುಧೀಂದ್ರತೀರ್ಥರ ೧೦ಕ್ಕೂ ಅಧಿಕ ಗ್ರಂಥಗಳು, ಶ್ರೀ ರಾಯರ ೩೦ ಕ್ಕೂ ಅಧಿಕ ಗ್ರಂಥಗಳನ್ನು ಪ್ರಪ್ರಥಮವಾಗಿ ಸಂಸ್ಕೃತ - ಕನ್ನಡದಲ್ಲಿ ಅನುವಾದ ಮಾಡಿ ಮುದ್ರಿಸಿದ ಕೀರ್ತಿ ಶ್ರೀ ರಾಜಾ ಎಸ್ ಗುರುರಾಜಾಚಾರ್ಯರಿಗೆ ಸಲ್ಲುತ್ತದೆ.
" ಉಪ ಸಂಹಾರ "
ಸಂಸ್ಕೃತದ ಕಬ್ಬಿಣದ ಕಡಲೆಯ ರೂಪವಾದ ಪ್ರಮೇಯಗಳನ್ನು ವ್ಯಾಸ ಕೂಟ ಭಕ್ತಿಯ ಸೂತ್ರಗಳನ್ನು ಮಾರ್ಗದರ್ಶನ ಮಾಡಿಸಿತು. ದಾಸ ಕೂಟ ಅದೇ ಭಕ್ತಿ ರಸವನ್ನು ಸರಳ ಕನ್ನಡವಾದ ಜಾನಪದದ ಆಡು ಭಾಷೆಯಲ್ಲಿ ಪ್ರಮೇಯಭರಿತ ಪದಗಳನ್ನು ರಚಿಸಿ ಜನ ಸಾಮಾನ್ಯರಿಗೂ ತಲುಪುವಂತೆ ಮಾಡಿತು. ಇದುವೇ ಹರಿದಾಸ ಸಾಹಿತ್ಯದ ಹಿರಿಮೆ. 
ದಾಸ ಕೂಟದ ಪ್ರವರ್ತಕರು ಸಾಕ್ಷಾತ್ ಶ್ರೀ ಹನುಮಂತದೆವರು. ( ಶ್ರೀ ಹನುಮ ಭೀಮ ಮಧ್ವರು )
ಶ್ರೀ ಮಧ್ವಾಚಾರ್ಯರಿಂದ ಪ್ರಾರಂಭವಾದ ಈ ಭಕ್ತಿ ಸಾಹಿತ್ಯವು ಶ್ರೀ ನರಹರಿತೀರ್ಥರಿಂದ ಹರಿದಾಸ ಪಂಥ ಪ್ರಾರಂಭವಾಯಿತು. ಇದರಿಂದ ಸರಳ ಕನ್ನಡ ಭಾಷೆಯ ಸಾಹಿತ್ಯ ಗಂಗೆಯ ಪ್ರವಾಹ ಪ್ರಾರಂಭವಾಯಿತು. ಮುಂದೆ ಈ ದಾಸ ಸಾಹಿತ್ಯ ಕ್ಷೇತ್ರವನ್ನು ಶ್ರೀ ಜಯತೀರ್ಥರು, ಶ್ರೀ ವಿಬುಧೇಂದ್ರತೀರ್ಥರು ದಾಸ ಸಾಹಿತ್ಯದ ಆದ್ಯರು, ಶ್ರೀ ಶ್ರೀಪಾದರಾಜರು ಮತ್ತು ಶ್ರೀ ವ್ಯಾಸರಾಜರು ಮುಂದುವರೆಸಿದರು. 
ಶ್ರೀ ವ್ಯಾಸರಾಜ ಗುರುಸಾರ್ವಭೌಮರು ಶ್ರೀ ಪುರಂದರದಾಸರು ಮತ್ತು ಶ್ರೀ ಕನಕದಾಸರೆಂಬ ಅನರ್ಘ್ಯ ರತ್ನಗಳನ್ನು ಕೊಟ್ಟು ಹರಿದಾಸ ಸಾಹಿತ್ಯ ಉಗಮಕ್ಕೆ ಕಾರಣರಾದರು. ಕನ್ನಡದಲ್ಲಿ ಭಕ್ತಿ ಸಾಹಿತ್ಯಕ್ಕೆ ಸೂಕ್ತ ಸ್ಥಾನವನ್ನು ಕಲ್ಪಿಸಿ ಕೊಟ್ಟವರು ಶ್ರೀ ಪುರಂದರದಾಸರು ಮತ್ತು ಶ್ರೀ ಕನಕದಾಸರು.
ಜಾನಪದ ಶೈಲಿಯಲ್ಲಿ ಪದ - ಪದ್ಯ - ಸುಳಾದಿ - ಉಗಾಭೋಗಗಳನ್ನು ರಚಿಸಿ ರಾಗಬದ್ಧವಾಗಿ ಹಾಡಿ ಸಂಗೀತವನ್ನೂ ಪ್ರಸಿದ್ಧಿಗೆ ತಂದರು. 
ಇನ್ನು ಶ್ರೀ ವಿಜಯರಾಯರು ಮತ್ತು ಶಿಷ್ಯ ಪ್ರಶಿಷ್ಯರು ಹರಿದಾಸ ಸಾಹಿತ್ಯಕ್ಕೆ ನೀಡಿದ ಕೊಡುಗೆ ಅದ್ಭುತ. ಈ ಹರಿದಾಸ ಸಾಹಿತ್ಯ ಪಂಥದಲ್ಲಿ ನಮ್ಮ ಇಂದಿನ ಕಥಾ ನಾಯಕರಲ್ಲೊಬ್ಬರಾದ ಶ್ರೀ ರಾಜಾ ಎಸ್ ಗುರುರಾಜಾಚಾರ್ಯರು ಸಂಸ್ಕೃತ - ಕನ್ನಡ ಭಾಷಾ ಕೋವಿದರು.
ಕಮಲೇಶಾ೦ಕಿತದಲ್ಲಿ ಸುಮಾರು ೩೦೦ಕ್ಕೂ ಅಧಿಕ ಶ್ರೀ ಹರಿವಾಯು ರಾಯರ ಕೃತಿಗಳನ್ನು ರಚಿಸಿದ್ದಾರೆ. ಶ್ರೀ ಆಚಾರ್ಯರ ಭಾಷೆ ಸುಂದರವಾಗಿದೆ. ಶೈಲಿ ಓಜಸ್ವಿಯಾಗಿದೆ. 
ಉದಾ :
೧. ಏಕೆ ವೃಂದಾವನದಿ ನೆಲೆಸಿರುವೆ ಗುರುವೇ.....
ರಾಗ : ರಾಗಮಾಲಿಕಾ     ತಾಳ : ಝ೦ಪೆ
ಏಕೆ ಬೃಂದಾವನದಿ ನೆಲೆಸಿರುವೆ ಗುರುವೇ ।
ನಾಕ ವಿಲಸಿತ ಕೀರ್ತೇ ಲಾವಣ್ಯ ಮೂರ್ತೇ ।। ಪಲ್ಲವಿ ।।
ಶ್ರೀಕಾಂತನೊಲಿಸಿದುದು ಸಾಕಾಗಲಿಲ್ಲೆಂದು ।
ಏಕಾಂತ ಬಯಸಿದೆಯ ರಾಘವೇಂದ್ರಾರ್ಯ ।। ಅ ಪ ।।
ಹಿಂದೆ ನಿನಗಾಗಿ ನರಹರಿಯು ಸ್ತ೦ಭದಿ ಬಂದ ।
ಮುಂದೆ ನಂದನ ಕಂದ ನಿನ್ನೆದುರು ಕುಣಿದ ।
ಒಂದು ಕ್ಷಣ ನಿನ್ನ ಬಿಟ್ಟಿರದ ಹರಿ ನಲಿಯುತಿರೆ ।
ಇಂದಾರ ಒಲಿಸಲೆಂದಿಲ್ಲಿ ತಪ ಗೈಯುತಿಹೆ  ।। ಚರಣ ।।
ಇಷ್ಟವಿಲ್ಲದೆ ರಾಜ್ಯವಾಳಿ ಬಹು ವರ್ಷಗಳು ।
ಶಿಷ್ಟ ನೀ ಬಹು ಬಳಲಿ ಆಯಾಸಗೊಂಡೆಯಾ ।
ದುಷ್ಟ ವಾದಿಗಳ ವಾಗ್ಯುದ್ಧದಲಿ ಜಯಿಸುತಲಿ ।
ಶ್ರೇಷ್ಠ ಗ್ರಂಥವ ಬರೆದು ಬರೆದುಬೇಸರ ವಾಯ್ತೇ ।। ಚರಣ ।।
ಪರಿಪರಿಯ ಅಭೀಷ್ಟಗಳ ನೀಡೆಂದು ಜನ ಕಾಡೆ ।
ವರವಿತ್ತು ಸಾಕಾಯ್ತೇ ಕಮಲೇಶದಾಸ ।
ಧರೆಗೆ ಮರೆಯಾಗಿ ವೃಂದಾವನವ ಸೇರಿದೊಡೆ ।
ಚರಣದಾಸರು ನಿನ್ನ ಬಿಡುವರೇನಯ್ಯ  ।। ಚರಣ ।।
೨. ತುಂಗಾತೀರ ವಿರಾಜಂ ಭಜಮನ..... 
ರಾಗ : ಮಲಯಮಾರುತ       ತಾಳ : ಆದಿ
ತುಂಗಾತೀರ ವಿರಾಜಂ । ಶ್ರೀ ಗುರು ।
ರಾಘವೇಂದ್ರ ಯತಿರಾಜಂ ಭಜಮನಃ     ।। ಪಲ್ಲವಿ ।।
ಮಂಗಳಕರ ಮಂತ್ರಾಲಯ ವಾಸಂ ।
ಶೃಂಗಾರಾನನ ವಿಲಸಿತ ಹಾಸಂ           ।। ಚರಣ ।।
ಕರಧೃತ ದಂಡ ಕಮಂಡಲು ಮಾಲಂ ।
ಸುರಚಿರ ಚೇಲಂ ಧೃತಮಣಿ ಮಾಲಂ     ।। ಚರಣ ।।
ನಿರುಪಮ ಸುಂದರ ಕಾಯಸುಶೀಲಂ ।
ವರ ಕಮಲೇಶಾರ್ಪಿತ ನಿಜ ಸಕಲಂ      ।। ಚರಣ ।।
೩. ಮಂತ್ರಾಲಯದೊಳು ರಾಜಿಪನಾರೇ .....
ರಾಗ : ಭೀಮಪಲಾಸ್         ತಾಳ : ಆದಿ
ಮಂತ್ರಾಲಯದೊಳು ರಾಜಿಪನಾರೆ ।
ಸಂತರ ಒಡೆಯನ ನೋಡುವ ಬಾರೆ - ಪಾಡುವ ಬಾರೆ ।। ಪಲ್ಲವಿ ।।
ಇಂದ್ರ ನೀಲಮಣಿ ಕಾಂತಿಯಂತೆಸೆಯುವ ।
ಬೃಂದಾವನ ಸನ್ಮಂದಿರನಾರೆ - ಚಂದಿರನಾರೆ ।
ಎಂದಿಗೂ ಕುಂದದ ಮಹಿಮ ಮುನೀಂದ್ರನು ।
ವಂದಿತ ಶ್ರೀ ರಾಘವೇಂದ್ರ ಕಣಮ್ಮ - ಚಂದ್ರಕಣಮ್ಮ ।। ಚರಣ ।।
ಗಂಧ ತುಲಸೀ ಮಾಲಾ ದಂಡ ಕಮಂಡಲು ।
ಸುಂದರ ಕಷಾಯ ವಸನನಾರೆ ಸಖೀ ವಸನನಾರೆ ।
ವಂದಿತ ಕನ್ನಡ ರಾಯನಘವ ತರಿದು ।
ಚಂದ್ರಿಕೆ ರಚಿಸಿದ ವ್ಯಾಸಮುನೀಂದ್ರನೇ - ವ್ಯಾಸಯತೀಂದ್ರ ।। ಚರಣ ।।
ಚಂದದಿ ಮಣಿಮಯ ಮಕುಟವ ಧರಿಸಿಹ ।
ಸುಂದರ ಬಾಲಕ ಇವನಾರೆ ಸಖೀ ಇವನಾರೆ ।
ತಂದೆ ಅಸಿಹಿರಿದು ಕಮಲೇಶನ ತೋರೆನೆ ।
ಮುಕುಂದನ ತೋರಿದ ಬಾಲ ಪ್ರಹ್ಲಾದನೇ - ಬಾಲ ಪ್ರಹ್ಲಾದ ।। ಚರಣ ।।
ಗಾಯನಕ್ಕೆ ಯೋಗ್ಯವಾದ, ಬಹುತೇಕ ಸಂಗೀತ ಪ್ರಕಾರಗಳಿಗೆ ಹೊಂದಿಕೊಳ್ಳುವ ಶ್ರೀ ಆಚಾರ್ಯರ ಕೀರ್ತನೆಗಳನ್ನು ಸಹೃದಯತೆಯಿಂದ ಸಂಗೀತ ವಿದ್ವಾಂಸರೆಲ್ಲಾ ಹಾಡುತ್ತಾ ಬಂದರೆ ಸಂಸ್ಕೃತ ಮತ್ತು ಕನ್ನಡದ ನೂರಾರು ಕೀರ್ತನೆಗಳು ಪ್ರಚಾರವಾಗಿ ಜನಪ್ರಿಯವಾಗಬಲ್ಲವು.
ಶ್ರೀ ರಾಜಾ ಎಸ್ ಗುರುರಾಜಾಚಾರ್ಯರು ಕವಿ ಹೃದಯಿಗಳು ಮಾತ್ರವಲ್ಲ ಕಲಾ ಹೃದಯಿಗಳೂ ಹೌದು! ರಸಬದ್ಧವಾದ ಸುಸ್ವರ ಸಂಗೀತವನ್ನವರು ಆಲಿಸುವಾಗ ಅವರ ಅಂತರಂಗದ ಸಂತಸ, ಅವರ ಮುಗ್ಧ ಮಂದಹಾಸದಲ್ಲಿ ಮಿನುಗುತ್ತದೆ. ಅವರ ಕಣ್ಣಂಚಿನಲ್ಲಿ ಹನಿಯಾಗಿ ಮಿಂಚುತ್ತದೆ.
೧೯೪೫ರಲ್ಲಿ ಶ್ರೀ ಸುಯಮೀ೦ದ್ರತೀರ್ಥರ ಆಜ್ಞಾನುಸಾರ " ಪರಿಮಳ ಸಂಶೋಧನ ಮತ್ತು ಪ್ರಕಾಶನ ಮಂದಿರ " ಪ್ರಾರಂಭ ಮಾಡಿ ಸುಮಾರು ೨೦೦ಕ್ಕೂ ಅಧಿಕ ಶ್ರೀಮದಾಚಾರ್ಯರ, ಶ್ರೀ ವಿಜಯೀ೦ದ್ರತೀರ್ಥರ, ಶ್ರೀ ಸುಧೀಂದ್ರತೀರ್ಥರ ಮತ್ತು ಶ್ರೀ ರಾಘವೇಂದ್ರತೀರ್ಥರ ಗ್ರಂಥಗಳನ್ನು ಸಂಸ್ಕೃತ ಮತ್ತು ಕನ್ನಡ ಭಾಷೆಯಲ್ಲಿ ಅನುವಾದ ಮಾಡಿ ಮುದ್ರಿಸಿ ಮಾಧ್ವರಿಗೆ ಉಪಕಾರ ಮಾಡಿದ್ದಾರೆ.
ಶ್ರೀ ರಾಜಾ ಎಸ್ ಗುರುರಾಜಾಚಾರ್ಯರ ಕಾವ್ಯದಲ್ಲಿ ಅರ್ಥಾನುಗುಣವಾದ ಪ್ರಾಸದ ಕಿಂಕಿಣಿ ನಾದವು ಹಿತಮಿತವಾಗಿ ಕಂಡು ಬರುತ್ತವೆ.
ಇವರ ಕಾವ್ಯದಲ್ಲಿ ಹೊಸ ಕಲ್ಪನೆ, ಶೈಲಿಯ ಸೊಬಗುನೊಂದಿಗೆ ಸರಳತೆ ಸಹಜದೊಂದಿಗೆ ಓದುವವರಿಗೆ ಮೋದ ತಂದು ಕೊಡುತ್ತದೆ.
ಕಲಿಯುಗ ಕಲ್ಪತರು ಮತ್ತು ಅಜೇಯ ವಿಜಯೀ೦ದ್ರರು ಕಥಾ ವಸ್ತು ಹಳೇದಾದರೂ ಕವಿ ಪ್ರಜ್ಞೆಯು ಕಲ್ಪನೆಯ ವೈಚಿತ್ರ್ಯದಿಂದ ಹೊಸತನವನ್ನು ಸಾಧಿಸಿ ತೋರಿಸಿದೆ.
ಪೂಜ್ಯ ಶ್ರೀ ಆಚಾರ್ಯರು ಸಾಹಿತ್ಯ - ಸಂಗೀತ - ಗ್ರಂಥಾನುವಾದ - ಕೃತಿ ರಚನೆ - ಸಂಪಾದನೆ ಮುಂತಾದ ವಿಷಯಗಳಲ್ಲಿ ಅತ್ಯದ್ಭುತವಾಗಿ ಕೃಷಿ ಮಾಡಿ 2003ರಲ್ಲಿ ಸ್ವರ್ಗಸ್ಥರಾದರು!!
ವಿಶೇಷ ವಿಚಾರ :
" ಶ್ರೀ ಕಮಲೇಶವಿಠ್ಠಲರು "
ಶ್ರೀ ರಾಯರ, ಶ್ರೀ ಇಭ್ರಾಮಪುರ ಅಪ್ಪಾವರ ಅಂತರಂಗ ಭಕ್ತರೂ, ಕಾರುಣ್ಯಪಾತ್ರರೂ, ಇಬ್ಬರನ್ನೂ ಕಣ್ಣಾರೆ ಕಂಡ ಪೂತಾತ್ಮರಾದ ಶ್ರೀ ಕಮಲೇಶವಿಠ್ಠಲಾಂಕಿತ ಗಾನಗಂಧರ್ವ  ಸುರಪುರದ ಶ್ರೀ ಆನಂದದಾಸರು ಚೀಕಲಪರವಿಯಲ್ಲಿ ಅವತಾರ ಮಾಡಿ ಶ್ರೀ ಜಗನ್ನಾಥದಾಸರ ಪ್ರೀತಿಯ ಶಿಷ್ಯರಾದ ಶ್ರೀ ಶ್ರೀಶ ವಿಠ್ಠಲರಿಂದ  " ಕಮಲೇಶವಿಠ್ಠಲ " ಎಂಬ ಅಂಕಿತವನ್ನು ಪಡೆದು ಸುಂದರ ಪದ - ಪದ್ಯಗಳನ್ನು ರಚಿಸಿ ಹರಿದಾಸ ಸಾಹಿತ್ಯಕ್ಕೆ ವಿಶಿಷ್ಟವಾದ ಸೇವೆಸಲ್ಲಿಸಿ " ಸುರಪುರದ ಶ್ರೀ ಗೋಪಾಲಕೃಷ್ಣ ದೇವರ " ಗುಡಿಯಲ್ಲಿ ತಮ್ಮ ಇಹಲೋಕ ವ್ಯಾಪಾರವನ್ನು ಮುಗಿಸಿ ತಮ್ಮ ಸ್ವಸ್ಥಾನವಾದ " ಗಂಧರ್ವಲೋಕ " ಕ್ಕೆ ಪ್ರಯಾಣ ಬೆಳೆಸಿದ ಮಹಿಮಾನ್ವಿತರು!!   
" ಶ್ರೀ ಕಮಲೇಶದಾಸರು "
ಶ್ರೀ ರಾಯರ ಅಂತರಂಗ ಭಕ್ತರೂ, ಶ್ರೀ ವಿದ್ಯಾಸಮುದ್ರತೀರ್ಥರಿಂದ " ಕಮಲೇಶ " ಎಂಬ ಅಂಕಿತವನ್ನು ಪಡೆದ ಶ್ರೀ ರಾಜಾ ಎಸ್ ಗುರುರಾಜಾಚಾರ್ಯರು ನಂಜನಗೂಡಿನಲ್ಲಿ ಜನಿಸಿ, ದ್ವೈತ ವೇದಾಂತದಲ್ಲಿ ಶ್ರೇಷ್ಠ ಪಾಂಡಿತ್ಯವನ್ನು ಸಂಪಾದಿಸಿ, ಶ್ರೀ ಹರಿ ವಾಯು ಗುರುಗಳು ಮೆಚ್ಚುವ ಹಾಗೆ ಸುಮಾರು ೨೦೦ಕ್ಕೂ ಶ್ರೀ ವಿಜಯೀ೦ದ್ರ - ಶ್ರೀ ಸುಧೀಂದ್ರ - ಶ್ರೀ ರಾಯರಗಳನ್ನೂ ಮತ್ತು ಮಧ್ವ ಗ್ರಂಥಗಳನ್ನು ಸಂಸ್ಕೃತ - ಕನ್ನಡ ಭಾಷೆಯಲ್ಲ ಅನುವಾದಿಸಿ ಮುದ್ರಿಸಿ ಸಾರಸ್ವತ ಲೋಕಕ್ಕೆ ಮಹದುಪಕಾರ ಮಾಡಿದ್ದಾರೆ. ಜೊತೆಗೆ ೩೦೦ಕ್ಕೂ ಅಧಿಕ ಪದ - ಪದ್ಯಗಳನ್ನು ರಚಿಸಿ " ಹರಿದಾಸ ಸಾಹಿತ್ಯ " ಕ್ಕೂ, ಮಾಧ್ವ ಗ್ರಂಥಗಳನ್ನು ಮುದ್ರಿಸಿ " ವ್ಯಾಸ ಸಾಹಿತ್ಯ " ಕ್ಕೂ ತಮ್ಮ ವಿಶಿಷ್ಟ ಕೊಡುಗೆಯನ್ನು ನೀಡಿ ಕ್ರಿ ಶ 2003 ರಲ್ಲಿ ಸ್ವರ್ಗಸ್ಥರಾದರು!!
ಆದ್ದರಿಂದ ಮೇಲ್ಕಂಡ ವಿಷಯಗಳನ್ವಯ ಹರಿದಾಸದ್ವಯರು ಬೇರೆ ಬೇರೆ ಎಂದು ಸ್ಪಷ್ಟವಾಗುತ್ತದೆ.
by ಆಚಾರ್ಯ ನಾಗರಾಜು ಹಾವೇರಿ
     ಗುರು ವಿಜಯ ಪ್ರತಿಷ್ಠಾನ
****



Sri Kamalesha Vittala Dasa1780Ananda DasaKamalesha VittalaSri Keshava Vittala DasaSurapuraBhadrapada Shudda Dwadashi

Kamalesha Vittala Dasa 
or Ananda Dasa
Aradhana Bhadrapada Shudda Dwadashi
Guru  Shreesha Vittala


Ananda Dasaru on Rayaru


One of the important Dasas who lived and preached in the erstwhile Raichur district is Kamalesha Vittala Dasa.
He is known by several names and among them is Surapurada Ananda Dasaru. He had his ankita from Srisha Vittala his guru.
He was born in Cheekalaparavi and as he worked in Surpur he is also called Surapurada Dasa. He has several shishyas or disciples and the prominent among them were Gundacharya, Guru Bheemesha Vittala, Madaka Shira Bheema Dasaru and  Kamalapathi Vittalaru.
He is the author of some of the most evocative and popular songs on Raghavendra Swamy.
Kamalesha Vittaladasa lived around 1780 in Surapura with his preceptor Keshava Vittala Dasa.
His original name was Ananda Dasa. His aradhana is celebrated on Bhadrapada Shudda Dwadashi. Like the other Haridasas, he too has composed in Kannada. He was an extraordinary scholar in music and his ankita was Shri Kamalesha Vittala.
His krithis are highly popular for their literary, musical and philosophical content. He was helped in crossing the turbulent Tungabhadra by none other than Rayaru himself.
Rayaru came as Raghappa and his great grandson, Vadindra Theerta as Vadappa and they helped the boat on which this dasa was sitting to reach the shore of Mantralaya safely.
When Ananda Dasa reached he Brindavana, he found Ibharampura Appa sitting there. Appa turned to him and told him that he had reached Mantralaya safely, thanks to Rayaru and his Vadindra Theertha.
Many of his kritis are sung even today and they are highly popular.
One of the most popular songs is barOnamma mAnege SrIrAghavEMdra
Another song is Tunga  theera Virajam…..
Tunga theeravirajam bhajamana


Raghavendra guru rajam bhajamana


Mangala kara mantralayavasam


sringaranana rajithahasam


Raghavendra guru rajam bhajamana


Karadritha dhanda kamandalu malam


suruchira chelam dhrita mani malam


Raghavendra guru rajam bhajamana


Nirupama sundara kaya susheelam


Varakamalesha pita nija sakalam


Raghavendra guru rajam bhajamana”

The evergreen Karedare is another highly popular song.  
“karedare barabarade
guru Raghavendra
vara mantralaya pura mandira
tava carana sevakaru karava mugidu || 1||
haridasaru susvara sammeladi
paravashadali bayteredu koogi ||2||
pusharapita kamalesha vithalana dasagresaru ee samayadi ||3||
Other popular songs include Enu Karuneyo Guru Raghavendra, Gururaja Gurusarvabhouma, Idu Enachchari, Jiya neenallade and Edu Baruthare Nodi.
Another charming composition is:
“charanara Surabhoja GuruRaja ||
Vara Mantralaya Pura Mandira Tava


Sundara Munindra Bhaskara Samateja||1||


Kamitharthagala Kamadhenuvina


Nema Miri Koduva Maharaja ||2||


Bhesha Koti Sankarshanada


Kamalesha Vittalana Dasane Sahaja” ||3||



Another is
Eke bRuMdAvanadi nelesiruve guruvE


nAkavilasitagIte lAvaNyamUrte |


SrIkAMtanolisidudu sAkAgalilleMdu


EkAMta bayasideyA SrI rAGavEMdrA ||


hiMde ninagAgi narahariyu kaMbadi baMda


muMde na0dana kaMda ninneduru kuNida


oMdu kShaNa biTTirade hariyu naliyutire


inyAra olisaleMdu tapagaiyutiruve ||1||


iShTavillada rAjyavALi bahu varShagaLu


SrEShTha nI bahu AyAsagoMDeyA


duShTavAdigaLa vAgyuddhadali jayisutali


SrEShTha graMthava baredu baredu sAkAyte ||2||


pari pari aBiShTagaLa nIDeMdu jana kADe


varavittu sAkAyte kamalESa dAsa


dharege mareyAgi bRuMdAvana sEridoDe


caraNa dAsaru ninna biDuvarEnayyA ||3||


Advertisements








above info is from 

ಇಂದು ಶ್ರೀ ಅಪ್ಪಾವರ ಪ್ರಮುಖ ಶಿಷ್ಯರಲ್ಲಿ ಒಬ್ಬರಾದ , ಶ್ರೀ ರಾಘವೇಂದ್ರ ಗುರುಸಾವ್ರಭೌಮರ ಅಂತರಂಗ ಭಕ್ತರು , ಅಪರೋಕ್ಷ ಜ್ಞಾನಿಗಳಾದ, ಗಂಧರ್ವರ ಅಂಶರಾದ ಶ್ರೀ ಸುರಪುರದ ಆನಂದ ದಾಸರ(ಕಮಲೇಶ ವಿಠ್ಠಲ ಅಂಕಿತ)ಆರಾಧನೆ..
"ಶ್ರೀ ರಾಯರ - ಶ್ರೀ ಅಪ್ಪಾವರ ಕಾರುಣ್ಯ ಪಾತ್ರರು ಶ್ರೀ ಸುರಪುರದ ಆನಂದದಾಸರು"
[ ಶ್ರೀ ಇಭರಾಮಪುರ ಕೃಷ್ಣಾಚಾರ್ಯರಿಂದ ಸ್ವರೂಪ ಜ್ಞಾನ ]
ಶ್ರೀ ರಾಯರ ವೃಂದಾವನ ಸನ್ನಿಧಾನದಲ್ಲಿ ನಾದಾನುಸಂಧಾನ ಸುಖದಲ್ಲಿ ಶ್ರೀ ಆನಂದದಾಸರು ತಮ್ಮನೇ ತಾವು ಮರೆತು ಭಾವ ಸಮಧಿಯಲ್ಲಿದ್ದಾಗ; ಅಲ್ಲಿಗೆ ಶ್ರೀ ಇಭರಾಮಪುರ ಕೃಷ್ಣಾಚಾರ್ಯರು ಆಗಮಿಸಿದರು. ಆಚಾರ್ಯರನ್ನು ಗೌರವ ಪೂರ್ವಕ ಮತ್ತು ಪ್ರೀತಿಯಿಂದ " ಅಪ್ಪಾವರು " ಎಂದು ಕರೆಯಲು ವಾಡಿಕೆ.
ಅಪರೋಕ್ಷ ಜ್ಞಾನಿಗಳಾದ ಶ್ರೀ ಅಪ್ಪಾವರು ದಾಸರಿಗೆ ಗಾನ ಗಂಧರ್ವನ ಸ್ವರೂಪದ ಅರಿವನ್ನುಂಟು ಮಾಡಲು..
" ಶ್ರೀ ಅಪ್ಪಾವರು "
ಅಹುದೋ ಆನಂದಾ! ಗಾನ ಮಾಡುವುದು ನಿನ್ನ ಸ್ವರೂಪಕ್ಕೆ ಹತ್ತಿದ್ದು; ಇಲ್ಲೂ ಗಂಧರ್ವ! ಲೋಕದ ಗಂಧರ್ವನೇ ನೀನು ಎಂದು ಬೆನ್ನು ಚಪ್ಪರಿಸಿದಾಗಲೇ; ಬಹಿರ್ಮುಖರಾದ ದಾಸರನ್ನು ಶ್ರೀ ಅಪ್ಪಾವರು ಪುನಃ " ಈಗ ಆಯಿತೇ ನಿನ್ನ ಸ್ವರೂಪ ಜ್ಞಾನ! " ಎಂದರು.
" ಶ್ರೀ ಆನಂದದಾಸರು "
ಎಚ್ಚೆತ್ತು, ದಾಸರು ತನ್ನ ಸ್ವರೂಪವನ್ನು ತೋರಿಸಿದ ಆಚಾರ್ಯರ ಕಾಲಿಗೆ ಬಿದ್ದವರೇ ಆನಂದಾಶ್ರುಗಳಿಂದ ತನ್ನನ್ನು ಉದ್ಧರಿಸಬೇಕೆಂದು ಪ್ರಾರ್ಥಿಸಿಕೊಂಡರು.
" ಶ್ರೀ ಅಪ್ಪಾವರು "
ನಿನ್ನ ಸ್ವರೂಪವೇ ಅಂಥಾದ್ದೆಂದರೆ ನಿನ್ನ ಭಾಗ್ಯ ಎಲ್ಲರ ಪಾಲಿಗಿಲ್ಲ. ಎಲ್ಲಾರ ಶ್ರಮ ನಿನಗಿಲ್ಲ. ನಿನಗೆ ಇದೇ ದಾರಿಯಲ್ಲೇ ಕ್ಷಿಪ್ರದಲ್ಲೇ ಭಗವದ್ದರ್ಶನವಾಗುವುದೆಂದರು.
ಶ್ರೀ ಆನಂದ ದಾಸರು ಉತ್ತರಿಸದೇ ಮನದಲ್ಲೇ ಶ್ರೀ ಅಪ್ಪಾವರ ಮಾತನ್ನು ಪುನಃ ಪುನಃ ಮನನ ಮಾಡಿಕೊಂಡರು. ಏಕಾಂತವನ್ನು ಬಯಸಿದವರೇ ಕೆಲವು ಕಾಲ ಏಕಾಂತದಲ್ಲಿರಲು ಶ್ರೀ ಪಂಚಮುಖಿ ಪ್ರಾಣದೇವರ ಸನ್ನಿಧಿಯನ್ನು ಸೇರಿ ಅಲ್ಲಿ ತಮ್ಮ ಇಷ್ಟದೇವತೆ; ಕುಲದೇವತೆ; ಗುರೂಪದಿಷ್ಟ ದೇವತೆಯಾದ ಶ್ರೀ ನೃಸಿಂಹ ಮಂತ್ರೋಪಾಸನೆಯನ್ನು ಮಾಡಿದರು. ನೆನಸಿದಂತೆ ರೂಪ ದರ್ಶನ; ಗುಣ ಕ್ರಿಯಾನುಭಾವಗಳು ಶ್ರೀ ಆನಂದದಾಸರಿಗೆ ಆದವು.
ಆಗ ತಮ್ಮ ಸ್ವರೂಪೋದ್ಧಾರಕ ಗುರುಗಳನ್ನೂ, ಶ್ರೀ ರಾಯರ ದಯಾಳುತ್ವವನ್ನು ಸ್ಮರಿಸುತ್ತಾ..
ರಾಗ : ಭೂಪಾಲಿ ತಾಳ : ಅಟ್ಟ
ಶ್ರೀ ರಾಘವೇಂದ್ರರಾಯರ ಪಾದಾಂಬುಜ ।
ದಾರಾಧಕರ ಕೊಂಡಾಡಿರೋ ।। ಪಲ್ಲವಿ ।।
ನಾರಾಯಣ ನಾಮ ಪಾರಾಯಣರ । ಪಾ ।
ದಾರವಿಂದ ಸುಧಾ ರಸವ ಬೀರುವಾ ।। ಅ. ಪ ।।
ಅಲವಬೋಧ ಸತ್ಕುಲ ದೀಪರೆನಿಸಿದ ।
ಹುಲುಗಿಯ ನರಸಪ್ಪಾಚಾರ್ಯರ ।
ಕಲಿಯೊಳು ಕಲಿಕೃತ ಕಲ್ಮಶ ಕಳೆವೆ । ನಿ ।
ರ್ಮಲ ರಾಯ್ಚೂರು ಕೃಷ್ಣಾಚಾರ್ಯರ ।।
ಇಳೆಯೊಳು ಚುಷಷ್ಠಿ ಕಳದಿ ನಿಪುಣರಾದ ।
ಯಳಮೇಲಿ ಹಯಗ್ರೀವಾಚಾರ್ಯರ ।
ಹಲವು ಸಜ್ಜನರೊಳು ತಿಳಿಸಿ ಕೊಳ್ಳದಲಿಪ್ಪ ।
ಬಲವಂತ ಯೋಗಿ ನಾರಾಯಣಾರ್ಯರ ।। ಚರಣ ।।
ಧರಣಿದೇವರಿಗೆ ನಿರುತಾನ್ನವನೀವ ।
ವರ ಹರಿಹರ ಭೀಮಾಚಾರ್ಯರ ।
ಹರಿದಾಸರಿಗೆ ಮಂದಿರವಾದ । ಇಭರಾಂ ।
ಪುರದಲ್ಲಿ ಮೆರೆವ ಕೃಷ್ಣಾಚಾರ್ಯರ ।।
ಶಿರಿಪಾದ ಪುತ್ರ ಪಂಡಿತರೊಳಗಗ್ರೇ ।
ಸರ ಶ್ರೀ ರಂಗದ ರಾಮಾಚಾರ್ಯರ ।
ಸುರಪುರ ಶ್ರೀ ನರಹರಿಯ ಪಾದಾಂಬುಜ ।
ಸಿರಿಯೊಳ್ಮೆರೆವ ಅಸ್ಮದ್ಗುರು ರಾಜಾಚಾರ್ಯರ ।। ಚರಣ ।।
ಶ್ರೀ ರಾಘವೇಂದ್ರರಾಯರ ಭೂಮಿಯೊಳವ ।
ಮಾಡಿದ ಆರಂಭದಿಂ ।
ದಾರಾರು ಬೃಂದಾವನ ಪೂಜಾ ಸ್ತೋತ್ರದಿಂ ।
ದಾರಾಧಿಸುವರಾನಂದದಿ ।।
ಸಾರ ಭಕ್ತರ ಪಾದಾರವಿಂದಕೆ । ನಮ ।
ಸ್ಕಾರ ಮಾಡಿರೋ ಸಾಷ್ಟಾಂಗದಿ ।
ಧೀರ ಶ್ರೀ ಕಮಲೇಶವಿಠ್ಠಲ ವಲಿದು ತನ್ನ ।
ಸಾರೂಪ್ಯವ ಕೊಟ್ಟು ಸಲಹುವ ಸಂತತಾ ।। ಚರಣ ।।
ಎಂದು ತಮ್ಮ ಉದ್ಧಾರಕ ಗುರುಗಳನ್ನೂ, ಸ್ವರೂಪೋದ್ಧಾರಕ ಗುರುಗಳನ್ನೂ, ತಮ್ಮ ವಿದ್ಯಾ ಗುರುಗಳನ್ನೂ, ಅಂದಿನ ಕಾಲದ ಜ್ಞಾನಿಗಳನ್ನೂ ಮತ್ತು ತಮ್ಮ ಉಪಾಸ್ಯಮೂರ್ತಿಯಾದ ಶ್ರೀ ನರಸಿಂಹನನ್ನು ಸ್ತೋತ್ರ ಮಾಡಿದ ದಾಸರನ್ನು ಕುರಿತು..
" ಶ್ರೀ ಅಪ್ಪಾವರು "
ಏನು ಆನಂದಾ! ನಮ್ಮ ಹಾಡನ್ನೇ ಹಾಡಿಬಿಟ್ಟಿಯಲ್ಲಾ?
" ಶ್ರೀ ಆನಂದದಾಸರು "
ಪುಣ್ಯ ಶ್ಲೋಕರು ತಾವಾದ್ದರಿಂದ ನಾಮ ಸ್ಮರಣೆ ಮಾತ್ರ ಮಾಡಿದೆ ಅಷ್ಟೇ! ಎಂದ ದಾಸರನ್ನು ಪುನಃ ..
" ಶ್ರೀ ಅಪ್ಪಾವರು "
ನೀನೆನಪ್ಪಾ ಗಂಧರ್ವ! ಎಂದರು.ತುಂಗಭದ್ರೆಯ ಪ್ರವಾಹದಿಂದ ಪಾರಾಗಿ ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮರನ್ನು ಪ್ರತ್ಯಕ್ಷ ದರ್ಶನ ಮಾಡಿದ ದಿನದಿಂದ ಅನುಭವಿಸುವ ಧ್ಯಾನಾನಂದವು ಬಿಂಬಾಪರೋಕ್ಷದ ಆನಂದವಾಯಿತು.

ಶ್ರೀ ಆನಂದದಾಸರು ಅಪರೋಕ್ಷ ಜ್ಞಾನಿಗಳಾದರು. ಸಕಲ ಅವರಿಗೆ ಕರತಲಾಮಲಕವಾಯಿತು. ಅಧಿಕಾರ ವಾಣಿಯಿಂದಾಡುವ ಮಾತುಗಳೆಲ್ಲಾ ಸತ್ಯವಾದವು! ಹಿಂದಿನ ಕೀರ್ತನೆಗಳಲ್ಲಿ ಗಾನ ಬಹಳವಾಗಿದ್ದರೆ, ಇಂದಿನ ಕೀರ್ತನೆಗಳಲ್ಲಿ ತತ್ತ್ವಜ್ಞಾನ ಬಹಳವಾಗಿದೆ.



.

 ಶ್ರೀ ಸುರಪುರದ ಆನಂದ ದಾಸರ(ಕಮಲೇಶ ವಿಠ್ಠಲ ಅಂಕಿತ)ಆರಾಧನೆ..

ಆರಾಧನೆ ಪ್ರಯುಕ್ತ ಅವರ ಜೀವನದಲ್ಲಾದ ಒಂದು ಘಟನೆ... 

ಆನಂದದಾಸರು ಶ್ರೀ ಪಂಚಮುಖಿ ಕ್ಷೇತ್ರದಿಂದ ಹೊರಟು ಮಂತ್ರಾಲಯದ ತುಂಗಭದ್ರಾ ನದಿಯ ಆಚೆಯ ದಡದಲ್ಲಿ ನಿಂತು ಶ್ರೀ ರಾಯರನ್ನು ಪ್ರಾರ್ಥಿಸುತ್ತಿದ್ದಾರೆ. ಶ್ರಾವಣ ಮಾಸದ ಮಳೆಗಾಲವಾದ್ದರಿಂದ ತುಂಗಭದ್ರೆಯು ತುಂಬಿ ಹರಿಯುತ್ತಿದ್ದಾಳೆ. ಮೇಲಾಗಿ ಮಳೆಯ ರಭಸ ಹೆಚ್ಚಾಗಿತ್ತು. ಆದರೆ ಶ್ರೀ ದಾಸರು ಮಾತ್ರ ಶ್ರೀರಾಯರ ದರ್ಶನಕ್ಕೆ ಹೋಗಲೇ ಬೇಕೆಂದು ದೃಢ ನಿಶ್ಚಯ ಮಾಡಿದ್ದರು. ಹಾಗಾದರೆ ಹೋಗುವುದೆಂತು ಎಂದು ನೋಡುತ್ತಾ ಅಲ್ಲಿಯೇ ಇದ್ದ ಅಂಬಿಗರನ್ನು ಕರೆದು ಈ ರೀತಿ ನುಡಿದರು.
ಶ್ರೀ ಆನಂದ ದಾಸರು :
ಅಯ್ಯಾ! ನಾವು ಶ್ರೀ ರಾಯರ ದರ್ಶನಕ್ಕೆ ಹೋಗಬೇಕಾಗಿದೆ. ಹರಿಗೋಲನ್ನು ಹಾಕಿವಿರಾ..?
ಅಂಬಿಗರು :
ದಾಸರೇ! ಈಗ ಹರಿಗೋಲು ಹಾಕುವುದು ಸುಲಭವಲ್ಲ! ಸ್ವಲ್ಪ ಮಳೆ ಕಡಿಮೆ ಆಗಲಿ ನೋಡೋಣ. ಸ್ವಲ್ಪ ಹೊತ್ತಿನಲ್ಲಿಯೇ ಮಳೆಯು ಕಡಿಮೆಯಾಯಿತು.
ಶ್ರೀ ದಾಸರು :
ಅಯ್ಯಾ! ಮಳೆ ನಿಂತಿತು ಹೋಗೋಣವೇ?
ಅಂಬಿಗರು :
ಸ್ವಾಮೀ! ನೀವು ಬ್ರಾಹ್ಮಣರು. ನೀರಿನ ಪ್ರವಾಹ ಅತಿಯಾಗಿದ್ದು, ಅಕಸ್ಮಾತ್ತಾಗಿ ಹರಿಗೋಲಿಗೆ ಏನಾದರೂ ಆದರೆ ನಿಮಗೆ ಈಜಲು ಬರುವುದಿಲ್ಲ. ಆದ್ದರಿಂದ ಮಂತ್ರಾಲಯದ ಆಚೆ ದಡಕ್ಕೆ ಹೋಗಲು ಸಾಧ್ಯವಿಲ್ಲ ಎಂದರು.
ಶ್ರೀ ದಾಸರು :
ಶ್ರೀ ರಾಯರ ದರ್ಶನ ಮಾಡಲೇಬೇಕು ಎಂದು ನಿರ್ಧಾರ ಮಾಡಿ, ಅಂಬಿಗರನ್ನು ಕರೆದು ಹರಿಗೋಲನ್ನು ಹತ್ತಿಯೇ ಬಿಟ್ಟರು. ನೀರಿನ ಪ್ರವಾಹದ ವೇಗಕ್ಕೆ ಹರಿಗೋಲು ಮುಳುಗುವ ಸಂಭವ ಹೆಚ್ಚಾಗಿದೆ. ಅದನ್ನು ಕಂಡು ಭಕ್ತಿಯಿಂದ ಶ್ರೀ ದಾಸರು ಶ್ರೀ ರಾಯರನ್ನು ಕರೆಯುತ್ತಿದ್ದಾರೆ.

ಕರೆದರೆ ಬರಬಾರದೇ ।। ಪಲ್ಲವಿ ।।
ವರ ಮಂತ್ರಾಲಯ ಪುರ ಮಂದಿರ ತವ ।
ಚರಣ ಸೇವಕರು ಕರವ ಮುಗಿದು ।। ಚರಣ ।।
ಹರಿದಾಸರು ಸುಸ್ವರ ಸಮ್ಮೇಳದಿ ।
ಪರವಶದಲಿ ಬಾಯ್ತೆರೆದು ಕೂಗೀ ।। ಚರಣ ।।
ಪೂಶರಪಿಟಾ ಕಮಲೇಶವಿಠ್ಠಲನ ।
ದಾಸಾಗ್ರೇಸರರು ಈ ಸಮಯದಿ ।। ಚರಣ ।


ಎಂದು ಕೂಗಿದಾಗ ಸಾಕ್ಷಾತ್ ಶ್ರೀ ರಾಯರು ಮತ್ತು ಶ್ರೀ ವಾದೀಂದ್ರರು ಪುಟ್ಟ ಬಾಲಕರ ರೂಪದಲ್ಲಿ ಬಂದು ಹರಿಗೋಲನ್ನು ಮತ್ತು ಶ್ರೀ ದಾಸರನ್ನು ರಕ್ಷಿಸಿದರು. ಆಗ ದಾಸರು ಬಾಲಕರನ್ನು ಉದ್ಧೇಶಿಸಿ " ಯಾರಪ್ಪಾ! ನೀವುಗಳು.. " ಎಂದು ಕೇಳಿದರೆ.. 
ಅದಕ್ಕೆ ಶ್ರೀ ರಾಯರು " ಮಂಚಾಲೆ ರಾಘಪ್ಪಾ ! ವಾದಪ್ಪಾ ಮಂಚಾಲೆ ..! ಎಂದು ಹೇಳಿ ಹರಿಗೋಲಿನಿಂದ ಇಳಿದು ಹೊರಟು ಹೋದರು.
ಶ್ರೀ ಆನಂದದಾಸರು ತುಂಗಭದ್ರೆಯಲ್ಲಿ ಮಿಂದು ಭಕ್ತಿಭಾವದಿಂದ ಬಾಲಕರನ್ನು ಹುಡುಕುತ್ತಾ ಶ್ರೀರಾಯರ ಸನ್ನಿಧಿಗೆ ಬಂದರು. ಅಲ್ಲಿ ಬಾಲಕರು ಕಾಣಲಿಲ್ಲ. ನೇರವಾಗಿ ಶ್ರೀ ರಾಯರ ವೃಂದಾವನದ ಮುಂಭಾಗದಲ್ಲಿ ಬಂದು ನಿಂತು ತದೇಕ ದೃಷ್ಟಿಯಿಂದ ನೋಡುತ್ತಾ ನಿಂತಿದ್ದಾರೆ. ಆ ಸಂದರ್ಭದಲ್ಲಿ ಶ್ರೀ ವೃಂದಾವನದಲ್ಲಿ ಅಚ್ಛರಿಯಾದ ಚಿತ್ರಗಳು ಕಂಡು ಬಂದವು. ಬಾಲಕನ ರೂಪದಲ್ಲಿ ಶ್ರೀ ರಾಯರು ಕಂಡು ಬಂದದ್ದನ್ನು ನೋಡಿ ಶ್ರೀ ರಾಯರ ಭಕ್ತರ ಮೇಲಿರುವ ಕಾರುಣ್ಯವನ್ನು ನೆನೆದು ನೆನೆದು ಕಣ್ಣಿನಲ್ಲಿ ನೀರು ತಂದುಕೊಂಡರು...

ಪರಿ ಪರಿ ಅಭಿಷ್ಟಗಳ ನೀಡೆಂದು ಜನ ಕಾಡೆ
ವರವಿತ್ತು ಸಾಕಾಯ್ತೆ ಕಮಲೇಶ ದಾಸ
ಧರೆಗೆ ಮರೆಯಾಗಿ ಬೃಂದಾವನ ಸೇರಿದೊಡೆ
ಚರಣ ದಾಸರು ನಿನ್ನ ಬಿಡುವರೇನಯ್ಯಾ....

ಶ್ರೀ ದಾಸಾರ್ಯರ ಸೇವೆಯಲ್ಲಿ....


💐🙏🏼ಎಸ್.ವಿಜಯ ವಿಠ್ಠಲ🙏🏼💐
*********

" ಶ್ರೀ ಸುರಪುರ  - 1 "
" ಶ್ರೀ ರಾಘವೇಂದ್ರ ತೀರ್ಥ ಗುರುಸಾರ್ವಭೌಮರ ಪರಮಾನುಗ್ರ ಪಾತ್ರರಾದ ಶ್ರೀ ಗಾನ ಗಂಧರ್ವ ಸುರಪುರದ ಶ್ರೀ ಆನಂದದಾಸರು "
" ದಿನಾಂಕ : 30.08.2020 ಭಾನುವಾರ " ಗಾನ ಗಂಧರ್ವ " ಶ್ರೀ ಸುರಪುರ ಆನಂದ ದಾಸರ ಆರಾಧನಾ ಮಹೋತ್ಸವ; ಸುರಪುರ. "
ರಂಗ ಒಲಿದ ದಾಸರಾಯರಾದ ಶ್ರೀ ಬೃಹಸ್ಪತ್ಯಾಚಾರ್ಯರ ಅಂಶ ಸಂಭೂತರಾದ ಜಗನ್ನಾಥದಾಸರ ಶಿಷ್ಯ ಪರಂಪರೆಯಲ್ಲಿ ಬಂದವರು ಸುರಪುರದ ಶ್ರೀ ಅನಂದದಾಸರು.
ಶ್ರೀ ಜಗನ್ನಾಥದಾಸರು
ಶ್ರೀ ಶ್ರೀಶ ವಿಠ್ಠಲರು
ಸುರಪುರದ ಶ್ರೀ ಆನಂದದಾಸರು
" ಸುರಪುರದ ಶ್ರೀ ಆನಂದದಾಸರ ಸಂಕ್ಷಿಪ್ತ ಚರಿತ್ರೆ "
ಹೆಸರು : ಶ್ರೀ ಆನಂದದಾಸರು
ಜನ್ಮಸ್ಥಳ : ಚೀಕಲಪರವಿ
ತಮ್ಮ : ಶೇಷ
ವಿದ್ಯಾ ಗುರುಗಳು : ಶ್ರೀ ರಾಜಾಚಾರ್ಯರು
ಅಂಕಿತೋಪದೇಶ ಗುರುಗಳು : ಶ್ರೀ ಶ್ರೀಶ ವಿಠ್ಠಲರು
ಅಂಕಿತ : ಕಮಲೇಶವಿಠ್ಠಲ
" ಸ್ವರೂಪೋದ್ಧಾರಕ ಗುರುಗಳು "
ಇಭ್ರಾಮಪುರ ಶ್ರೀ ಅಪ್ಪಾರವರು
ಅಂಶ : ಗಂಧರ್ವ ( ಗಾಯನ ಮಾಡತಕ್ಕವರು )
ಕಕ್ಷೆ : 27
ಹರಿಪದ ಸೇರಿದ ಸ್ಥಳ : ಸುರಪುರ
ಆರಾಧನಾ ದಿನ : ಭಾದ್ರಪದ ಶುದ್ಧ ದ್ವಾದಶೀ
" ಜನನ ಮತ್ತು ವಿದ್ಯಾಭ್ಯಾಸ "
ಶ್ರೀ ವಿಜಯರಾಯರ ತಪೋಭೂಮಿಯಾದ ಚೀಕಲಪರವಿಯಲ್ಲಿ ಜನಿಸಿದ ಆನಂದ; ತಮ್ಮ ಚಿಕ್ಕ ವಯಸ್ಸಿನಲ್ಲಿಯೇ ತಂದೆ ತಾಯಿಗಳ ವಿಯೋಗದಿಂದ ವಿದ್ಯಾರ್ಜನೆಗಾಗಿ ತನ್ನ ತಮ್ಮನೊಂದಿಗೆ ಸುರಪುರಕ್ಕೆ ಬಂದು ಪಂಡಿತ ರಾಜಾಚಾರ್ಯರ ಪಾದಕ್ಕೆ ಬಿದ್ದು ಅವರ ನೆರವಿನಿಂದ ಆ ಸಹೋದರರ ಪ್ರೌಢ ವಿದ್ಯಾಭ್ಯಾಸ ಪ್ರಾರಂಭವಾಯಿತು.
ಅವರಲ್ಲಿ ದ್ವೈತ ವೇದಾಂತದಲ್ಲಿ ವಿದ್ವತ್ತನ್ನು ಪಡೆದರು.
" ಗಾನ ಗಂಧರ್ವ "
ಶ್ರೀ ಆನಂದದಾಸರು, ಶ್ರೀ ರಾಜಾಚಾರ್ಯರಲ್ಲಿ ವೇದಾಂತ ಅಭ್ಯಾಸ ಮಾಡುತ್ತಿದ್ದಾಗ ಇವರ ಕಂಠ ಮಾಧುರ್ಯವನ್ನು ಕೇಳಿ " ಕಂಠ ವೀಣೆಯ " ರೆಂಬ ಖ್ಯಾತಿ ಪಡೆದಿದ್ದ ಶ್ರೀ ವೈಷ್ಣವ ಮತಸ್ಥ ಗಾನ ಪಂಡಿತರು ಶ್ರೀ ಆನಂದದಾಸರಿಗೆ ಬಲವಂತವಾಗಿ ಗಾನ ವಿದ್ಯೆಯನ್ನು ಕಲಿಸಿದರು.
ಹೇಳಿ ಕೇಳಿ ಶ್ರೀ ಆನಂದದಾಸರು ಮೊದಲೇ ಗಂಧರ್ವಾಂಶರು.
ಆದುದರಿಂದ ಶ್ರೀ ಆನಂದದಾಸರಿಗೆ ಗಾನ ವಿದ್ಯೆ ಕರತಲಾಮಲಕವಾಯಿತು.
" ರಾಜ ಮರ್ಯಾದೆ "
ಶ್ರೀ ಆನಂದದಾಸರ ವಿದ್ಯಾ ಮತ್ತು ಗಾನ ಪಾಂಡಿತ್ಯವನ್ನು ಕೇಳಿ ಸುರಪುರದ ಮಹಾರಾಜನು ರಾಜ ಮರ್ಯಾದೆಯೊಂದಿಗೆ ಆನಂದನನ್ನು ರಾಜಾಸ್ಥಾನಕ್ಕೆ ಆಹ್ವಾನಿಸಿ ತನ್ನ ಅರಮನೆಯ ಆಸ್ಥಾನ ಸಂಗೀತ ವಿದ್ವಾಂಸನನ್ನಾಗಿ ನೇಮಿಸಿ ಗೌರವಿಸಿದನು.
ಅಂದಿನಿಂದ ಶ್ರೀ ಆನಂದದಾಸರು ಸುರಪುರದ ರಾಣಿಯೊಂದಿಗೆ ಅಲ್ಲಿಯ ದಾಸೀ ವರ್ಗಕ್ಕೆ ಸಂಗೀತಾಭ್ಯಾಸವನ್ನು ಮಾಡಿಸಲು ಪ್ರಾರಂಭಿಸಿದನು.
ಇದನ್ನು ಕಂಡು ಶ್ರೀ ರಾಜಾಚಾರ್ಯರಿಗೆ ಸಂತೋಷದೊಂದಿಗೆ ಎಲ್ಲಿ ಶ್ರೀ ಆನಂದದಾಸರು ಅಡ್ಡ ದಾರಿ ಹಿಡಿಯುತ್ತಾರೋ  ಎಂಬ ಭಯವೂ ಆವರಿಸಿತು.
" ಶ್ರೀ ಶ್ರೀಶ ವಿಠ್ಠಲರ ಸಮಾಗಮ "
ಶ್ರೀ ಶ್ರೀಶವಿಠ್ಠಲರು ಸಂಚಾರ ಕ್ರಮದಲ್ಲಿ ಸುರಪುರಕ್ಕೆ ದಿಗ್ವಿಜಯ ಮಾಡಿಸಿದರು.
ಸುರಪುರದ ಮಹಾರಾಜನು ರಾಜ ಮರ್ಯಾದೆಯೊಂದಿಗೆ ಶ್ರೀ ಶ್ರೀಶವಿಠ್ಠಲರನ್ನು ಬರ ಮಾಡಿಕೊಂಡನು.
ರಾಜನ ಆಸ್ಥಾನದಲ್ಲಿ ಅಂದು ನಡೆದ ಶ್ರೀ ದಾಸರ ಕೀರ್ತನೆಗಳು ಶ್ರೀ ಆನಂದದಾಸರ ಮನಸ್ಸಿನ ಮೇಲೆ ಬಹಳ ಪರಿಣಾಮವನ್ನುಂಟು ಮಾಡಿತು.
ಶ್ರೀ ಶ್ರೀಶವಿಠ್ಠಲರ ಕೀರ್ತನ ಶ್ರವಣದಿಂದ ಶ್ರೀ ಆನಂದದಾಸರ ಮನಸ್ಸು ಅಲ್ಲೋಲ ಕಲ್ಲೋಲವಾಯಿತು.
" ಕೀರ್ತನವು ಭಗ್ನ
ಮನೋರಥರ ಭಿಕ್ಷಾ ವೃತ್ತಿ "
ಎಂಬ ತಪ್ಪು ತಿಳುವಳಿಕೆ ದೂರವಾಯಿತು.
ವಿಷಯಾನಂದದಲ್ಲಿ ಹಿಗ್ಗುತ್ತಿದ್ದ ಶ್ರೀ ಆನಂದದಾಸರ ಮನಸ್ಸು ಬ್ರಹ್ಮಾನಂದ, ಆತ್ಮಾನಂದ ಎಂದು ಕರೆಯಿಸಿಕೊಳ್ಳುವ ಭಾಗವನ್ನಾಮಾನಂದವನ್ನು ಹೊಂದುವುದಕ್ಕೆ ಹಾತೊರೆಯತೊಡಗಿತು.
ವಿದ್ವಾಂಸರು ಬಯಸಿದಂತೆ ಕೀರ್ತನಕಾರನಾಗಬೇಕು - ಕೀರ್ತನೆ ಮಾಡಬೇಕೆಂಬ ಬಯಕೆ ಆನಂದನಲ್ಲು೦ಟಾಯಿತು.
" ಶ್ರೀ ಶ್ರೀಶ ವಿಠ್ಠಲರಲ್ಲಿ ಆನಂದನ ಪ್ರಾರ್ಥನೆ "
ಶ್ರೀ ಆನಂದದಾಸರು ತನ್ನ ವಿದ್ಯಾ ಗುರುಗಳಾದ ಶ್ರೀ ರಾಜಾಚಾರ್ಯರ ಮನೆಯಲ್ಲಿ ನಡೆದ ಶ್ರೀ ದಾಸರ ಕೀರ್ತನಕ್ಕೆ ರಾಗ ರಚನೆ ಮಾಡಿದ ಆನಂದನನ್ನು ಕಂಡು ತಂಬೂರಿ ಮೀಟುತ್ತಿದ್ದ ಆನಂದನನ್ನು ಶ್ರೀ ರಾಜಾಚಾರ್ಯರು ಶಿಷ್ಯನನ್ನು ಹೊಗಳುತ್ತಾ ಪದಕ್ಕೆ ಅಂಕಿತವನ್ನು ಪಡೆಯುವಂತೆ ಪ್ರೋತ್ಸಾಹಿಸಲು ಆನಂದನು ಶ್ರೀ ಶ್ರೀಶವಿಠ್ಠಲರಲ್ಲಿ ಅಂಕಿತೋಪದೇಶ ಪ್ರಸಾದವನ್ನು ದಯಪಾಲಿಸಬೇಕೆಂದು ಪ್ರಾರ್ಥಿಸಿಕೊಂಡನು.
" ಬ್ರಹ್ಮ ವಿದ್ಯೋಪದೇಶ "
ಶ್ರೀ ಆನಂದದಾಸರ ಭಕ್ತಿಗೆ ಅಭಿಮುಕ್ತವಾದ ಮನಃ ಪರಿಪಕ್ವತೆಯನ್ನು ಕಂಡು ಶ್ರೀ ಶ್ರೀಶವಿಠ್ಠಲರು ಆನಂದನಿಗೆ ಬ್ರಹ್ಮ ವಿದ್ಯೋಪದೇಶವನ್ನು ಮಾಡಿದರು.
ವೈರಾಗ್ಯ ಮತ್ತು ನಾಮ ಸ್ಮರಣೆಯನ್ನು ಬೋಧಿಸಿದರು.
" ಅಂಕಿತ ಪ್ರದಾನ "
ಶ್ರೀ ಶ್ರೀಶವಿಠ್ಠಲರು ತಾವು ಸುರಪುರಕ್ಕೆ ಬಂದದ್ದು ಸಫಲವಾಯಿತೆಂಬ ತೃಪ್ತಿಯೊಂದಿಗೆ ಶ್ರೀ ಆನಂದದಾಸರಂಥಾ ಶಿಷ್ಯ ದೊರೆತ ಮೇಲೆ ಶ್ರೀ ದಾಸರು ಬಹಳ ಸಂತೋಷ ಪಟ್ಟು, ಆನಂದನನ್ನು ಪ್ರೀತಿಯಿಂದ ಹರಿಸುತ್ತಾ ಒಂದು ಶುಭ ಮುಹೂರ್ತದಲ್ಲಿ ಅಂಕಿತವನ್ನು ಕೊಡಲು ನಿಶ್ಚಯಿಸಿದರು.
ಶ್ರೀ ಆನಂದದಾಸರನ್ನು ಭದ್ರ ಪೀಠದ ಮೇಲೆ ಕುಳ್ಳಿರಿಸಿ ತಮ್ಮ ಬಿಂಬಮೂರ್ತಿಯನ್ನು ಆವಾಯಿಸುತ್ತಾ ಶ್ರೀ ದಾಸಾರ್ಯರು ಶ್ರೀ ಆನಂದದಾಸರಿಗೆ " ಕಮಲೇಶವಿಠ್ಠಲ " ಎಂದು ಅಂಕಿತವನ್ನಿತ್ತು; ಅಂದಿನಿಂದಲೇ ಕೀರ್ತನೆ ರಚನೆ ಮತ್ತು ಕೀರ್ತನ ಸೇವೆಯನ್ನು ಪ್ರಾರಂಭಿಸಬೇಕೆಂದು ಆಹ್ವಾನಿಸಿದರು.
ಅಂದಿನಿಂದ ಈ ಗಾನ ಗಂಧರ್ವರ ಜೀವನದಲ್ಲಿ ಹೊಸ ಅಧ್ಯಾಯವೇ ಪ್ರಾರಂಭವಾಯಿತು.
ವೈರಾಗ್ಯವೇ ಅವರ ಸೌಭಾಗ್ಯವಾಯಿತು.
ಧ್ಯಾನವೇ ಅವರ ಗಾನವಾಯಿತು.
ಸಂತತ ಹರಿಕಥಾ ಕೀರ್ತನವೇ ಅವರ ನಿತ್ಯ ಕರ್ತವ್ಯವಾಯಿತು.
" ಶ್ರೀ ಕಮಲೇಶವಿಠ್ಠಲಾಂಕಿತದಲ್ಲಿ ಪ್ರಪ್ರಥಮ ರಚನೆ "
ರಾಗ : ಕೇದಾರಗೌಳ ತಾಳ : ಆಟ
ಬ್ರಹ್ಮಣ್ಯದೇವನೆಂಬುವ ।
ಮಹಾ ಬಿರುದು
ನಿನಗೆ ಸಲ್ಲುವುದಯ್ಯ ।
ಬ್ರಹ್ಮ ರುದ್ರಾದ್ಯರುಗಳು
ದೈವವೆಂದ । ಹಮ್ಮಿನಿಂ ।
ದ ಹೊಡೆದಾಡುವರು
ಬರಿದೆ ।। ಪಲ್ಲವಿ ।।
ಹಿಂದೆ ಸರಯು
ತೀರದೋಳ್ ಮಹಾಪುರ ।
ವೃಂದವೆಲ್ಲ
ಕೋಡಿ ಸರ್ವೇಶ್ವರ ।
ಸಂದೇಹ ತಿಳಿಸಲು ಭೃಗು
ಮುನಿಗಳಿಗ೦ದೆ ಆಜ್ಞೆ ಮಾಡಿ ।। ಚರಣ ।।
ಮಂದಜಾಸನೇಂದು
ಧರರ ಪರಿಭಾವದಿಂದ ।
ಬೆಂದು ನಿನ್ನ ಸನ್ನಿಧಾನಕ್ಕೆ
ಬಂದು । ಪಾದ ।
ದಿಂದೊದೆಯ ಲಭಿವಂದನಂ ।
ಗೈದು ಘಳಿಸಿದೆ ಪರ ।। ಚರಣ ।।
ರಾಜಸೂಯ ಯಾಗದೊಳ್
ಮಹಾ । ಮಹ ।
ರಾಜ ಸಂದಣಿಯಲಿ । ಆಗ್ರ ।
ಪೂಜಾಯತಾರ್ಥದಿಂದ
ಗಾಂಗೇಯ ಸಮ್ಮುಖದಲಿ ।। ಚರಣ ।।
ಆವದೇವಗಿಲ್ಲ ಶಕುತಿ
ಬ್ರಹ್ಮ । ಕುಲಾವ ।
ಮಾನದಿಂದ ಪೇಳ್ದುದನು ಕೇಳ್ ।
ಕಾವ ಕಮಲೇಶವಿಠ್ಠಲ ನ । ಪ್ರತ್ಯ ।
ಕ್ಷಾವ ಲೋಕನದಲಿ
ಧನ್ಯನಾದೆ ।। ಚರಣ ।।
ಶ್ರೀ ಆನಂದದಾಸರ ಕೀರ್ತನೆಯ  ಕಾವ್ಯ ಝರಿ ರಾಜಾಸ್ಥಾನದಲ್ಲಿ ಬಹುಮುಖವಾಗಿ ಶ್ರುತವಾಯಿತು.
ಅಂದಿನಿಂದ ಶ್ರೀ ಆನಂದನು ಶ್ರೀ ಆನಂದದಾಸರಾಗಿ ಪ್ರಸಿದ್ದರಾದರು.
" ಮಾನ ಸಮ್ಮಾನಗಳು "
ಸಂಗೀತದಲ್ಲಿ ಘನ ಪಂಡಿತರೂ, ದ್ವೈತ ವೇದಾಂತದಲ್ಲಿ ಅಪ್ರತಿಮ ವಿದ್ವಾಂಸರೂ ಆದ ಶ್ರೀ ಆನಂದದಾಸರ ಬೋಧನವೂ ಭಾವಪೂರ್ಣವೂ, ಭಕ್ತಿ ಭರಿತವೂ ಆದ ಹರಿಕಥೆಗಳಿಗೆ ಅವರ ಕಿನ್ನರ ಕಂಠದ ಮಧುರ ನಾದಶ್ರೀಯೂ ಸೇರಿ ಅದೊಂದು ನಾಟಕದಂತೆ ಜನರಿಗೆ ರಂಜಕ ರೋಚಕವಾಗಿರುತ್ತಿತ್ತು.
ಶ್ರೀ ಆನಂದದಾಸರ ಅಭಿವೃದ್ಧಿಯನ್ನು ನೋಡಿ ಸಂತೋಷ ಪಟ್ಟು ಸುರಪುರದ ಮಹಾರಾಜನು ಕನಕಾಭಿಷೇಕ ಮಾಡಿದನು.
ವನಪರ್ತಿ, ಗದ್ವಾಲ, ಕೊಲ್ಹಾಪುರ ಮತ್ತು ಮೈಸೂರು ಮಹಾರಾಜಾಸ್ಥಾನಗಳು ಹಾಗೂ ಸಂಗೀತ ಪ್ರವಚನಗಳು ರಾಜ ಮಹಾರಾಜರ, ಪಂಡಿತ ಪಾಮರರ, ಮಾನ್ಯ ಸಾಮಾನ್ಯರೆಲ್ಲರ ಮನಸ್ಸನ್ನು ಸೂರೆಗೊಂಡಿದ್ದವು.
ಶ್ರೀ ಆನಂದದಾಸರಿಗೆ ಭಕ್ತಿ ಶ್ರದ್ದೆಗಳಿಂದ ಗೌರವ ಸಮರ್ಪಣೆ ಮಾಡಿದರು.
****
"  ಶ್ರೀ ಸುರಪುರ - 2 " 
" ಸಂಗೀತ ಸರಸ್ವತೀ " 
ಹಿಂದೂಸ್ತಾನೀ, ಕರ್ನಾಟಕೀ ಸಂಗೀತ ಪದ್ಧತಿಗಳ ಮಧುರ ಸಂಗಮವು, ಅವರ ಕೀರ್ತನೆಗಳನ್ನು ಹೃದಯಂಗಮವಾಗಿಸುತ್ತಿದ್ದವು. 
ಭರತ ನಾಟ್ಯಕ್ಕೆ ಅನುಕೂಲವಾದ ಅನೇಕ ಭಾವ್ಯಾಭಿವ್ಯಂಜಕ ಮಟ್ಟು ಗಟ್ಟುಗಳನ್ನು ಅವರು ತಮ್ಮ ವಿವಿಧ ಜಾವಡಿಗಳಲ್ಲಿ ಸಂಗ್ರಹಿಸಿದ್ದರು. 
ಶ್ರೀ ಆನಂದದಾಸರ ಜಾವಡಿಗಳ ಜಾಡಿನಲ್ಲಿ ಹಾಡುವವರೂ, ಸರಿಯಾದ ಅಭಿನಯ ನೀಡುವವರೂ ಆ ಕಲೆಯೇ ಲುಪ್ತವಾಗಿ ಹೋಗಿರುವುದರಿಂದ ಯಾರೂ ಈಗ ದೊರಕುವದಿಲ್ಲ.
" ಶ್ರೀ ಕ್ಷೇತ್ರ ಕೊಲ್ಹಾಪುರದಲ್ಲಿ ಶ್ರೀ ಆನಂದದಾಸರು "
ಕೊಲ್ಹಾಪುರ ಮಹಾರಾಜನಿಂದ ಸನ್ಮಾನಿತರಾಗಿ ನೇರವಾಗಿ ಜಗನ್ಮಾತೆಯಾದ ಮಹಾಲಕ್ಷ್ಮೀಯ ದರ್ಶನಾಕಾಂಕ್ಷಿಗಳಾಗಿ ಅಮ್ಮನ ಪರಮಾನುಗ್ರದಿಂದ ಆದ ಈ ರಾಜ ಸನ್ಮಾನಗಳನ್ನು ಕಂಡು ಹರ್ಷ ಪುಳಕಿತರಾಗಿ ಶ್ರೀ ಮಹಾಲಕ್ಷ್ಮಿಯ ಮುಂಭಾಗದಲ್ಲಿ ನಿಂತು.. 
ರಾಗ : ಅರಭಿ ತಾಳ : ಆದಿ 
ರಾಮಾ ಸಮುದ್ರನ 
ಕುಮಾರಿ ನಿನ್ನಯ । 
ಸಮಾನರ್ಯಾರಮ್ಮಾ ।। ಪಲ್ಲವಿ ।। 
ಸುಮಾಸ್ತ್ರನಯ್ಯನೆದೆ 
ಸತತ । ಬ । 
ಹುಮಾನದಲಿ ಮೆರೆವ 
ಮಹಾ ಮಹಿಮಳೆ ।। ಅ. ಪ ।। 
ಕನಕ ಮಂಡಿತ ಕುಟಿಲಾಳಕ 
ಜಾಲೇ । ಶ್ರೀ ಚಂ । 
ದನ ಕುಂಕುಮ ಕಸ್ತೂರಿ 
ತಿಲಕಾಂಕಿತ ಫಾಲೇ । 
ಮಣಿಮಯ ಕುಂಡಲ ಶೋಭಿತ 
ಕರ್ಣಕಪೋಲೇ । ಚಂಪಕ । 
ನನೆ ನಾಸಾಗ್ರದೊಳೊಗುವ 
ಮೌಕ್ತಿಕ ಲೋಲೇ ।। ಚರಣ ।। 
ಮಿನುಗುವ ಮಾಣಿಕ-
ಮಣಿಧರ । ಪುಟದೊ । 
ಳಿನಿವರ ವಜ್ರದಿ 
ಕಣಿಗಳ ರಾಜಿ । ದ । 
ಶನಯುತ ಸ್ಮೇರಾನನ 
ಶುಭ ಕಾಂತಿಯಿಂ । 
ವನಜ ಭವನ ಮನೆಗೆ 
ಮಂಗಳಗರೆವ ।। ಚರಣ ।। 
ಕೊರಳೊಳು ಪರಿಮಳ ಪರಿಪರಿ 
ಪುಷ್ಪದ ಮಾಲೆ । ಒಪ್ಪುವ । 
ರರಿರಾಜನ ಕರಡಿರುವಿಕೆ 
ಕರಗಳ ಲೀಲೇ । 
ಶರಣಾಗತ ಜನ ಪರಿಪಾಲನರತ 
ಶೀಲೇ । ಗಂಡನ । 
ಪರಿರಂಭಣ ಸಾಮ್ರಾಜ್ಯದ 
ಸುಖದನುಕೂಲೇ ।। ಚರಣ ।। 
ಕರುಣಿಸಮ್ಮ ತಮ 
ಕರುಣಕಟಾಕ್ಷದ । 
ಸಿರಿಯ ಬೆಳಗಿನೊಳ್ 
ಪರಿಚಯಿಸುವ । ಸುಜ । 
ನರ ಚರಣಾಂಬುಜ 
ಪರಿಮಳದೊಳು । ಮನ । 
ವೆರಗಿಸುವುದು ಸೌಂದರ್ಯ
ಶಿಖಾಮಣಿ ।। ಚರಣ ।। 
ರಮಣೀಯ ವಿಮಲಾ 
ಕಮಲಾಯತದಳ ನೇತ್ರೇ । ಚಂಪಕ । 
ಸುಮದ ಸುವರ್ಣ 
ಪರಿಮಳದ ಸುಂದರ ಗಾತ್ರೇ । 
ಕಮಲಭವೇಂದ್ರಾದ್ಯಮರ 
ಮುನಿಗಣ ಸ್ತೋತ್ರೇ । ಶ್ರೀ । 
ಕಮಲೇಶವಿಠ್ಠಲರಾಯನ 
ಕರುಣಕೆ ಪಾತ್ರೇ ।। ಚರಣ ।। 
ಮತ್ತೊಂದು ಕೃತಿಯಲ್ಲಿ.... 
ವರ್ಣಿಸಲೆನ್ನಿಂದಲಳವೇ 
ಕೊಲ್ಹಾಪುರದ ಲಕ್ಷ್ಮೀಯ ।। ಪಲ್ಲವಿ ।। 
ದಂತ ದಾಳಿಂಬವು ಸಂಪಿಗೆ 
ನಾಸಿಕವು ಕುಂಕುಮ ಫಣಿಯೊಳು ।
ಶಂಖಾನಂದದಿ ಕೊರಳು 
ಮಿಂಚಿನಂತೆ ಹೊಳೆಯುವಳು ।। ಚರಣ ।।
ಕನಕ ಖಚಿತದ ಗೊಂಬೆ ಗಿರಿ 
ಶೇಷಧರಿ ಎಂಬೆ ಜಗಕೆಲ್ಲ ।
ನೀ ಅಂಬೆ ಪಾಲಿಸೆ ಜಗದಂಬೆ 
ಲೋಕ ಸುಂದರಿ ಅಂಬೆ ।। ಚರಣ ।।
ಸರಿಗೆ ನಾಗ ಮುರಿಗೆ ಸರಗಳೆಲ್ಲವ 
ಧರಿಸಿ ಕೊರಳಲ್ಲಡ್ಡಿಕೆ ಧರಿಸಿ ।
ಹರಡಿ ಹಿಂಬಳೆಗಳು ಬೆರಳ
ಲ್ಲುಂಗುರ ಹೊಳೆಯೆ ।। ಚರಣ ।।
ಕರಿಯಾ ಸೊಂಡಿಲಾಕಾರ 
ಧರಿಸಿದ ಹೆರಳು ಬಂ-
ಗಾರ ಭುಜಂಗ ।
ನಂದದಿ ಹೆರಳು ಕಂಗಾಳಾಧಾಳವು 
ತಿಂಗಳ ಮುಖ ಕಮಲ ।। ಚರಣ ।।
ಸರ್ಪ ಶಯನನ ರಾಣಿ ಮುತ್ತಿನ 
ಕಟ್ಟಾಣಿ ಭಕ್ತರ ಚಿಂತಾಮಣಿ ।
ಸುಪ್ಪಾಣಿ ಅರಗಿಣಿ 
ನಿತ್ಯ ಮಂಗಳ ವೇಣಿ ।। ಚರಣ ।।
ಮರುಗ ಮಲ್ಲಿಗೆ ಜಾಜಿ 
ಸುರಗಿ ಸೇವಂತಿಗೆಯು 
ಶಿರದಲಿ ಮುಡಿದ ।
ಮಾಲೆಗಳು ಬಡನಡು 
ಬಳಕುತ್ತಾ ಮುಡಿದ 
ಮಲ್ಲಿಗೆ ಉದುರೆ ।। ಚರಣ ।।
ಕಂದರ್ಪ ಜನಕನ ರಾಣಿ 
ಕಾಲಲ್ಲಿ ಋಳಿ ಪೈಜಾಣಿ । ಕಾ ।
ಲುಂಗುರಗಳು ಪಿಲ್ಲೆ ಕ
ಮಲೇಶವಿಠ್ಠಲನ 
ರಾಣಿಯೆ ನಿನ್ನನ್ನು ।। ಚರಣ ।।
ಎಂತಾ ಅದ್ಭುತ ಸರಳ ಸುಂದರವಾಗಿ ಜಗನ್ಮಾತೆಯ ವರ್ಣನೆಯನ್ನು ಶ್ರೀ ಸುರಪುರದ ಆನಂದದಾಸರ ವದನಾರವಿಂದದಲ್ಲಿ ಹೊರಹೊಮ್ಮಿದೆ. 
ಇದು ಹರಿದಾಸರ ಹಿರಿಮೆ
***
" ಶ್ರೀ ಸುರಪುರ - 3 "
" ಮೈಸೂರು ಸಂಸ್ಥಾನದಲ್ಲಿ ಕನಕಾಭಿಷೇಕ "
ಮೈಸೂರಿನ ಮುಮ್ಮಡಿ ಕೃಷ್ಣರಾಜ ಒಡೆಯರು ಶ್ರೀ ಅನಂದದಾಸರನ್ನು ಅರಮನೆಗೆ ರಾಜ ಮರ್ಯಾದೆಯಿಂದ ಆಹ್ವಾನಿಸಿ ಆಸ್ಥಾನದಲ್ಲಿ ಅವರಿಂದ ಹರಿಕಥೆಗಳನ್ನು ಮಾಡಿಸಿ ಪರಮಾನಂದ ಪಟ್ಟು ಶ್ರೀ ದಾಸರ ಜ್ಞಾನ - ಭಕ್ತಿ - ಗಾನಗಳಿಗೆ ಮನಸೋತು ಶ್ರೀ ಆನಂದದಾಸರಿಗೆ ಸ್ವತಃ ಮಹಾರಾಜರೇ ಕನಕಾಭಿಷಕ ಮಾಡಿದರು.
ಶ್ರೀ ಆನಂದದಾಸರು ಮೈಸೂರಲ್ಲಿದ್ದಾಗ ರಚಸಿದ ಶ್ರೀ ಲಕ್ಷ್ಮೀದೇವಿಯರ ಸ್ತೋತ್ರ.....
ಕರುಣದಿ ಕಣ್ಣು ತೆರೆಯೇ ।
ಬಾರಮ್ಮಾ ಸಿರಿಯೇ ।। ಪಲ್ಲವಿ ।।
ಧರಣಿಯೊಳಗೆ ಸುಂದರತರ । ಕೊಲ್ಹಾ ।
ಪುರ ಸಿಂಹಾಸನದಿ 
ಮೆರೆವ ಧೊರೆಯ ।। ಅ ಪ ।।
ವಿಧಿ ಭವಾದಿಗಳ ಸದನದೊಳಗೆ । ಅ ।
ಭ್ಯುದಯ ಕಟಾಕ್ಷದ 
ಸುಧೆಯವಗರೆಯ ।। ಚರಣ ।।
ಸುಂದರಾನನರವಿಂದದ ಮಲ್ಲಿಗೆ ।
ಮಂದಹಾಸ ಮಕರಂದ 
ಸುರಿಯೆ ।। ಚರಣ ।।
ಕಡು ಬೆಡಗಿನ ನಿನ್ನಡಿ-
ದಾವರೆಗಳ ।
ಬಿಡದೆ ಭಜಿಪ ವರ ಕೊಡು 
ಸುಂದರಿಯೆ ।। ಚರಣ ।।
ಬಡವರಭೀಷ್ಟೆಯ 
ಕೊಡುವಳೆಂದು ಬಡ ।
ಬಡಿಸಿ ಬಂದೆ ನೊನ್ನೊಡಲಿನ 
ಮೊರೆಯೆ ।। ಚರಣ ।।
ಕೊಟ್ಟರೆ ಕಮಲೇಶ-
ವಿಠ್ಠಲರಾಯನ ।
ಪಟ್ಟದರಸಿಯೆಂಬ 
ಕಟ್ಟಳೆ ಬರೆಯೆ ।। ಚರಣ ।।
***
" ಶ್ರೀ ಸುರಪುರ - 4 "
" ಶ್ರೀ ಪಂಚಮುಖಿ ಪ್ರಾಣದೇವರ ಸನ್ನಿಧಿಯಲ್ಲಿ ಶ್ರೀ ಆನಂದದಾಸರು "
ಶ್ರೀ ದಾಸಾರ್ಯರಿಗೆ ಎಲ್ಲಾ ಲೌಕಿಕ ಭೋಗ ಭಾಗ್ಯಗಳಲ್ಲಿ ಎಂದೋ ಉಪರತಿ ಹುಟ್ಟಿತ್ತು.
ವೈರಾಗ್ಯವು ಭಗವನ್ನಿಷ್ಠೇಯೊಂದಿಗೆ ಅವರ ಅಂತರಂಗದ ಕದ ಕಟ್ಟಿತ್ತು.
ಎಲ್ಲಾ ಲೌಕಿಕ ವೈಭವ ಗೌರವಗಳನ್ನು ತೊರೆದು ಶ್ರೀ ಇಭರಾಮಪುರದ ಅಪ್ಪಾವರ ಸನ್ನಿಧಿಗೆ ಬಂದರು.
ಶ್ರೀ ಆಚಾರ್ಯರು ದಾಸರಿಗೆ ಏಕಾಂತ ಭಕ್ತಿಯ ರಹಸ್ಯ ಮಾರ್ಗವನ್ನು ತಿಳಿಸಿಕೊಟ್ಟರು.
" ಶ್ರೀ ಪಂಚಮುಖಿ ಪ್ರಾಣದೇವರ ಸನ್ನಿಧಿಯಲ್ಲಿ ಶ್ರೀ ಆನಂದದಾಸರು..... "
ರಾಗ : ದೇವಗಾಂಧಾರಿ ತಾಳ : ಆದಿ
ವಾಯುನಂದನ ವಾರಿಧಿ ಬಂಧನ ।। ಪಲ್ಲವಿ ।।
ಸಿರಿಯರಸನ ಗುಣ ಗಾಯನಲೋಲ । ತದೀ ।
ಯರ ಸೇವೆ ದಯವನು ಸೂಸಿ ।। ಚರಣ ।।
ಮರ್ಕಟವರ ತರುಣಾರ್ಕನಿಭಾನನ ।
ಶರ್ಕರಾಕ್ಷ ದೇವರ್ಕಳ ವಂದ್ಯನ ।। ಚರಣ ।।
ರಾಕ್ಷಸರೊಳಗಧ್ಯಕ್ಷ ಕುಮಾರನ ।
ಮೋಕ್ಷಗೈದು ಬಲಾದಕ್ಷ ನೆನಿಸಿದ ।। ಚರಣ ।।
ದುರ್ಯೋಧನನ ಕಾರ್ಯಾವ ಮಾಡಿಸಿ ।
ವೀರ್ಯವಂತರೊಳು ವರಯ ನೆನಿಸಿದ ।। ಚರಣ ।।
ಅದ್ವೈತಿಗಳ ಧ್ವಂಸ ಮಾಡಿದ ।
ಮಧ್ವ ಮತಾಬ್ಧಿ ವಿವರ್ಧನ ಚಂದ್ರ ।। ಚರಣ ।।
ಈಶಾದ್ಯಮರರ ಮಹಾ ಸುಖದ । ಶ್ರೀ ಕಮ ।
ಲೇಶವಿಠ್ಠಲ ದಾಸೋತ್ತಮ ।। ಚರಣ ।।
ಮತ್ತೊಂದು ಕೃತಿಯಲ್ಲಿ....
ಚೆಲುವರಾಯ ಆಂಜನೇಯನ ನೋಡುವ ಬಾರೆ ।। ಪಲ್ಲವಿ ।।
ಮಂಜುಳ ಮುರಳೀಧರನ ಶ್ರೀಪದ ।
ಕಂಜಾಶ್ರಯದೊಳು ರಂಜಿಸುತ ನೆಲೆಸಿಹ ।। ಅ ಪ ।।
ಮಣಿಗಣರಾಜಿತ
ಕಾಂಚನದ ಕಿರೀಟ ।
ಫಣಿಯಲೆಸೆವ ತಿಲಕದ ಥಾಟಾ ।
ಕನಕಕುಂಡಲ ಕಪೋಲ ಕಾಂತಿಯು ।
ಕರುಣಾ ಕಟಾಕ್ಷದಾನ ಪ್ರಸನ್ನ
ಮೂರ್ತಿಯು ।। ಚರಣ ।।
ಕಂಧರದೊಳೆಸೆವ ನವ ಜಾಂಬೂ ।
ನರ ಮಣಿಹಾರ ಗುಣ । ಗಂ ।
ಭೀರ ಕರಾಗ್ರಗಳಲಿ ತನ್ನನು ।
ನಂಬಿದವರ ಮನದ
ಹಂಬಲವನು ಸಲಿಸುವ ।। ಚರಣ ।।
ವೀರ ಮುಡಿಯುಲುಡುದಾರ
ಕನಕ । ಮಂ ।
ಮಂಜೀರಾ ಪದಗಳತಿ ಶೋಭೆಯಲಿ ।
ಸಾರಿದವರಿಗೆ ಶ್ರೀ ಕಮಲೇಶವಿಠ್ಠಲನು ।
ದಾರ ಕರುಣಾರಸ ಸೂರೆಗರೆವಾ ।। ಚರಣ ।।
ಶ್ರೀ ಆನಂದದಾಸರಿಗೆ ಶ್ರೀ ಪರಮಾತ್ಮನನ್ನು ಕಾಣಬೇಕೆಂಬ ಹಂಬಲದಿಂದ ಅವನ ಮಗನ ಪರಮ ಪವಿತ್ರವಾದ ಸನ್ನಿಧಾನಕ್ಕೆ ಬಂದು ಸೇವೆಯನ್ನು ಪ್ರಾರಂಭಿಸಿದರು.
ಪ್ರತಿದಿನವೂ ಶ್ರೀ ಮುಖ್ಯಪ್ರಾಣದೇವರನ್ನು ಮಧು ಅಭಿಷೇಕದಿಂದ ಅರ್ಚಿಸಿ, ಪೂಜಿಸಿ, ಸೇವೆಗೈದು, ಶ್ರಾವಣ ಮಾಸವಾದ್ದರಿಂದ ಶ್ರೀ ರಾಘವೇಂದ್ರ ತೀರ್ಥ ಗುರುಸಾರ್ವಭೌಮರ ದರ್ಶನಾಕಾಂಕ್ಷಿಗಳಾಗಿ ಶ್ರೀ ಆನಂದದಾಸರು ಶ್ರೀ ಕ್ಷೇತ್ರ ಮಂತ್ರಾಲಯಕ್ಕೆ ಪ್ರಯಾಣ ಬೆಳೆಸಿದರು.
***
" ಶ್ರೀ ಸುರಪುರ - 5 " 
" ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮರ ಕಾರುಣ್ಯ " 
ಶ್ರೀ ಕ್ಷೇತ್ರ ಮಂತ್ರಾಲಯದ ಕ್ಷೇತ್ರ ದೇವತೆ ಸಾಕ್ಷಾತ್ ಶ್ರೀ ಹರಿಯ ಮಡದಿ, ಜಗನ್ಮಾತೆಯಾದ ಶ್ರೀ ಮಹಾಲಕ್ಷ್ಮೀ. ಕ್ಷೇತ್ರಪಾಕಲ ಸಾಕ್ಷಾತ್ ಶ್ರೀ ನೃಸಿಂಹದೇವರು. 
ಮಂತ್ರಾಲಯದಲ್ಲಿ ನೆಲೆಯಾಗಿನಿಂತ ಜಗನ್ಮಾತೆಯನ್ನು ಲಕ್ಷ್ಮೀಯೆಂತಲೂ - ದುರ್ಗೆಯಂತಲೂ - ಮಂತ್ರಾಲಯಾಂಬಿಕೆಯಂತಲೂ - ಮಂಚಾಲಮ್ಮಯೆಂತಲೂ ಕರೆಯುವುದುಂಟು. 
ಪೂರ್ವದಲ್ಲಿ ಈ ಗ್ರಾಮಕ್ಕೆ " ಮಂಚಾಲೆ " ಎಂಬ ಹೆಸರಿದ್ದಿತು. 
ಮುಂದೆ ಶ್ರೀ ರಾಘವೇಂದ್ರ ತೀರ್ಥ ಗುರುಸಾರ್ವಭೌಮರು ಮಂಚಾಲೆ ಗ್ರಾಮದಲ್ಲಿ ನೆಲೆಸಿದ್ದು, ಅಲ್ಲಿ ನಿತ್ಯ ವೇದ ಮಂತ್ರಗಳಿಂದ - ವಾದ್ಯ ವೈಭವಗಳಿಂದ ಶ್ರೀ ಹರಿಯ ಆರಾಧನೆಯು ನಡೆಯುವ ಕ್ಷೆತ್ರವಾದ್ದರಿಂದ ಇದು ಮಂತ್ರಾಲಯ ಕ್ಷೇತ್ರವೆಂದು ಪ್ರಸಿದ್ಧವಾಯಿತು. 
ಜಾತಿ, ಮತ, ಕುಲ, ದೇಶ ಪಂಥಗಳ ಭೇದವಿಲ್ಲದೇ ತಮ್ಮನ್ನು ನಂಬಿ ಬಂದ ಭಕ್ತರಿಗೆ ಮನಃ ಶಾಂತಿ, ಸಮಾಧಾನ, ಸಂತೃಪ್ತಿ, ಸೌಭಾಗ್ಯಗಳನ್ನು ನೀಡುತ್ತಿರುವ ಕಲಿಯುಗದ ಕಲ್ಪವೃಕ್ಷ - ಕಾಮಧೇನುವೆಂದೇ ಜಗತ್ಪ್ರಸಿದ್ಧವಾದ ಮಂತ್ರಾಲಯ ಪ್ರಭುಗಳ ನೆಲೆಬೀಡು. 
ಅಂತೆಯೇ " ದೇವರೆಂದರೆ ತಿರುಪತಿ ತಿಮ್ಮಪ್ಪ - ಗುರುಗಳೆಂದರೆ ಮಂಚಾಲೆ ರಾಘಪ್ಪ ಎಂದೇ ಪ್ರಸಿದ್ಧಿ!! 
ಸತ್ಯ ಲೋಕಾಧಿಪತಿಗಳ ಭಕ್ತರೂ, ಪರಿಶುದ್ಧ ಭಾಗವತಾಧರ್ಮರತರೂ ಆದ ಶ್ರೀ ವಾಯುದೇವರ ನಿತ್ಯಾsವೇಶಯುಕ್ತರೂ, ಶ್ರೀ ಲಕ್ಷ್ಮೀನಾರಾಯಣರ ನಿತ್ಯ ಸನ್ನಿಧಾನಯುಕ್ತರಾಗಿ ಮಹಾ ಮಹಿಮಾನ್ವಿತರಾದ ಶ್ರೀ ರಾಘವೇಂದ್ರತೀರ್ಥರು ಇರುವ ಸ್ಥಳದಲ್ಲಿ ಮಹಿಮೆಗಳು ( ಪವಾಡಗಳು ) ನಡೆದಿವೆ, ನಡೆಯುತ್ತಿದೆ ಮತ್ತು ನಡೆಯುತ್ತಲೇ ಇರುತ್ತದೆ. 
ಇದಕ್ಕೆ ಕಾರಣ ಶ್ರೀ ಲಕ್ಷ್ಮೀನಾರಾಯಣರ ನಿತ್ಯ ಸನ್ನಿಧಾನಯುಕ್ತರೂ - ಶ್ರೀ ವಾಯುದೇವರ ನಿತ್ಯಾವೇಶಯುಕ್ತರಾದ್ದರಿಂದ ಶ್ರೀ ಹರಿಯು ರಾಮ - ನರಹರಿ - ಕೃಷ್ಣ - ವೇದವ್ಯಾಸ - ನಾರಾಯಣನೆಂಬ ಪಂಚರೂಪಗಳಲ್ಲಿ ಶ್ರೀ ರಾಯರ ವೃಂದಾವನದಲ್ಲಿ ನಿತ್ಯ ಸನ್ನಿಹಿತನಾಗಿದ್ದಾನೆ. 
ಅಂದಮೇಲೆ ಈ ಮಂತ್ರಾಲಯ ಕ್ಷೇತ್ರವು " ಸುರಪನಾಲಯ " ( ಇಂದ್ರಲೋಕವನ್ನು ಅಂದರೆ ಸ್ವರ್ಗವನ್ನು ) ವನ್ನು ನಾಚಿಸುವಂತೆ ಮಾಡಿ ಮೆರೆಯುತ್ತಿದೆ. 
ಶ್ರೀ ಆನಂದದಾಸರು ಶ್ರೀ ಪಂಚಮುಖಿ ಕ್ಷೇತ್ರದಿಂದ ಹೊರಟು ಮಂತ್ರಾಲಯದ ತುಂಗಭದ್ರಾ ನದಿಯ ಆಚೆಯ ದಡದಲ್ಲಿ ನಿಂತು ಶ್ರೀ ರಾಯರನ್ನು ಪ್ರಾರ್ಥಿಸುತ್ತಿದ್ದಾರೆ. 
ಶ್ರಾವಣ ಮಾಸದ ಮಳೆಗಾಲವಾದ್ದರಿಂದ ತುಂಗಭದ್ರೆಯು ತುಂಬಿ ಹರಿಯುತ್ತಿದ್ದಾಳೆ. 
ಮೇಲಾಗಿ ಮಳೆಯ ರಭಸ ಹೆಚ್ಚಾಗಿತ್ತು. 
ಆದರೆ ಶ್ರೀ ದಾಸರು ಮಾತ್ರ ಶ್ರೀರಾಯರ ದರ್ಶನಕ್ಕೆ ಹೋಗಲೇ ಬೇಕೆಂದು ದೃಢ ನಿಶ್ಚಯ ಮಾಡಿದ್ದರು. 
ಹಾಗಾದರೆ ಹೋಗುವುದೆಂತು ಎಂದು ನೋಡುತ್ತಾ ಅಲ್ಲಿಯೇ ಇದ್ದ ಅಂಬಿಗರನ್ನು ಕರೆದು ಈ ರೀತಿ ನುಡಿದರು. 
ಶ್ರೀ ಆನಂದ ದಾಸರು :
ಅಯ್ಯಾ! 
ನಾವು ಶ್ರೀ ರಾಯರ ದರ್ಶನಕ್ಕೆ ಹೋಗಬೇಕಾಗಿದೆ. 
ಹರಿಗೋಲನ್ನು ಹಾಕಿವಿರಾ..? 
ಅಂಬಿಗರು :
ದಾಸರೇ! 
ಈಗ ಹರಿಗೋಲು ಹಾಕುವುದು ಸುಲಭವಲ್ಲ! 
ಸ್ವಲ್ಪ ಮಳೆ ಕಡಿಮೆ ಆಗಲಿ ನೋಡೋಣ. 
ಸ್ವಲ್ಪ ಹೊತ್ತಿನಲ್ಲಿಯೇ ಮಳೆಯು ಕಡಿಮೆಯಾಯಿತು. 
ಶ್ರೀ ದಾಸರು :
ಅಯ್ಯಾ! 
ಮಳೆ ನಿಂತಿತು ಹೋಗೋಣವೇ? 
ಅಂಬಿಗರು :
ದಾಸರೇ! 
ನೀವು ಬ್ರಾಹ್ಮಣರು. 
ನೀರಿನ ಪ್ರವಾಹ ಅತಿಯಾಗಿದ್ದು - ಅಕಸ್ಮಾತ್ತಾಗಿ ಹರಿಗೋಲಿಗೆ ಏನಾದರೂ ಆದರೆ ನಿಮಗೆ ಈಜಲು ಬರುವುದಿಲ್ಲ. 
ಆದ್ದರಿಂದ ಮಂತ್ರಾಲಯದ ಆಚೆ ದಡಕ್ಕೆ ಹೋಗಲು ಸಾಧ್ಯವಿಲ್ಲ ಎಂದರು. 
ಶ್ರೀ ದಾಸರು :
ಶ್ರೀ ರಾಯರ ದರ್ಶನ ಮಾಡಲೇಬೇಕು ಎಂದು ನಿರ್ಧಾರ ಮಾಡಿ, ಅಂಬಿಗರನ್ನು ಕರೆದು ಹರಿಗೋಲನ್ನು ಹತ್ತಿಯೇ ಬಿಟ್ಟರು. 
ನೀರಿನ ಪ್ರವಾಹದ ವೇಗಕ್ಕೆ ಹರಿಗೋಲು ಮುಳುಗುವ ಸಂಭವ ಹೆಚ್ಚಾಗಿದೆ. 
ಅದನ್ನು ಕಂಡು ಭಕ್ತಿಯಿಂದ ಶ್ರೀ ದಾಸರು ಶ್ರೀ ರಾಯರನ್ನು ಕರೆಯುತ್ತಿದ್ದಾರೆ. 
ರಾಗ : ಕಮಾಚ್ ತಾಳ : ಆದಿ 
ಕರೆದರೆ ಬರಬಾರದೇ ।। ಪಲ್ಲವಿ ।। 
ವರ ಮಂತ್ರಾಲಯ 
ಪುರ ಮಂದಿರ ತವ ।
ಚರಣ ಸೇವಕರು 
ಕರವ ಮುಗಿದು ।। ಚರಣ ।। 
ಹರಿದಾಸರು ಸು-
ಸ್ವರ ಸಮ್ಮೇಳದಿ ।
ಪರವಶದಲಿ ಬಾ-
ಯ್ತೆರೆದು ಕೂಗೀ ।। ಚರಣ ।। 
ಪೂಶರಪಿಟಾ ಕಮ-
ಲೇಶವಿಠ್ಠಲನ ।
ದಾಸಾಗ್ರೇಸರರು 
ಈ ಸಮಯದಿ ।। ಚರಣ ।। 
ಎಂದು ಕೂಗಿದಾಗ ಸಾಕ್ಷಾತ್ ಶ್ರೀ ರಾಯರು ಮತ್ತು ಶ್ರೀ ವಾದೀಂದ್ರರು ಪುಟ್ಟ ಬಾಲಕರ ರೂಪದಲ್ಲಿ ಬಂದು ಹರಿಗೋಲನ್ನು ಮತ್ತು ಶ್ರೀ ದಾಸರನ್ನು ರಕ್ಷಿಸಿದರು. 
ಆಗ ದಾಸರು ಬಾಲಕರನ್ನು ಉದ್ಧೇಶಿಸಿ....
" ಯಾರಪ್ಪಾ! ನೀವುಗಳು.. " 
ಎಂದು ಕೇಳಿದರೆ.. 
ಅದಕ್ಕೆ ಶ್ರೀ ರಾಯರು...
" ಮಂಚಾಲೆ ರಾಘಪ್ಪಾ! ವಾದಪ್ಪಾ ಮಂಚಾಲೆ..! 
ಎಂದು ಹೇಳಿ ಹರಿಗೋಲಿನಿಂದ ಇಳಿದು ಹೊರಟು ಹೋದರು. 
ಶ್ರೀ ಆನಂದದಾಸರು ತುಂಗಭದ್ರೆಯಲ್ಲಿ ಮಿಂದು ಭಕ್ತಿಭಾವದಿಂದ ಬಾಲಕರನ್ನು ಹುಡುಕುತ್ತಾ ಶ್ರೀರಾಯರ ಸನ್ನಿಧಿಗೆ ಬಂದರು. 
ಅಲ್ಲಿ ಬಾಲಕರು ಕಾಣಲಿಲ್ಲ. 
ನೇರವಾಗಿ ಶ್ರೀ ರಾಯರ ವೃಂದಾವನದ ಮುಂಭಾಗದಲ್ಲಿ ಬಂದು ನಿಂತು ತದೇಕ ದೃಷ್ಟಿಯಿಂದ ನೋಡುತ್ತಾ ನಿಂತಿದ್ದಾರೆ. 
ಆ ಸಂದರ್ಭದಲ್ಲಿ ಶ್ರೀ ವೃಂದಾವನದಲ್ಲಿ ಅಚ್ಛರಿಯಾದ ಚಿತ್ರಗಳು ಕಂಡು ಬಂದವು. 
ಬಾಲಕನ ರೂಪದಲ್ಲಿ ಶ್ರೀ ರಾಯರು ಕಂಡು ಬಂದದ್ದನ್ನು ನೋಡಿ ಶ್ರೀ ರಾಯರ ಭಕ್ತರ ಮೇಲಿರುವ ಕಾರುಣ್ಯವನ್ನು ನೆನೆದು ನೆನೆದು ಧಾರಾಕಾರವಾಗಿ ಕಣ್ಣಿನಲ್ಲಿ ನೀರು ಹರಿಯುತ್ತಿದೆ. 
ಶ್ರೀ ಆನಂದದಾಸರು ಶ್ರೀ ರಾಯರು ತಮ್ಮ ಮೇಲೆ ತೋರಿದ ಕಾರುಣ್ಯವನ್ನು ನೆನೆದು ಆನಂದಬಾಷ್ಪ ಸುರಿಸುತ್ತಾ.... 
ಶ್ರೀ ರಾಘವೇಂದ್ರ 
ಬಾರೈ ಮುನೀಂದ್ರ ।
ಮೊರೆಯಿಡುವೆ  
ನಿನ್ನೊಳು ದೇವಾ ।। ಪಲ್ಲವಿ ।।
ತುಂಗಾ ತೀರದಿ 
ನೆಲೆಸಿರುವಾತ ।
ಬಂದ ಭಕ್ತರಿಗೆ ಫಲವನ್ನೇ 
ನೀಡುವ ।। ಚರಣ ।।
ಮಗುವೆಂದು ಬಗೆದು 
ಅಪರಾಧ ಕ್ಷಮಿಸಿ ।
ಅಲ್ಪಮಾತಿಗೆ 
ಕಲ್ಪನೆ ನೀಡು ।। ಚರಣ ।।
ಕಮಲೇಶವಿಠ್ಠಲ 
ಸೇವೆಯ ಮಾಡಿ ।
ಬಂದ ಭಕ್ತರಿಗೆ 
ವರವನ್ನೆ ನೀಡು ।। ಚರಣ ।।    
ಶ್ರೀ ರಾಯರ ದಯಾಳುತ್ವವನ್ನು ಆನಂದಾತಿಶಯದಿಂದ ಶ್ರೀ ರಾಯರನ್ನು ಈ ರೀತಿ ಸ್ತುತಿಸಿದರು. 
ರಾಗ : ಬೇಹಾಗ್ ತಾಳ : ಆದಿ
ಶರಣರ ಸುರಭೂಜ ಗುರುರಾಜ ।। ಪಲ್ಲವಿ ।। 
ವರ ಮಂತ್ರಾಲಯ ಪುರ ಮಂದಿರ । ಸುಂ ।
ದರ ಮುನೀಂದ್ರ ಭಾಸ್ಕರ ಸಮ ತೇಜಾ ।। ಚರಣ ।। 
ಕಾಮಿತಾರ್ಥಗಳ ಕಾಮಧೇನುವಿನ ।
ಸೀಮೆ ಮೀರಿ ಕೊಡುವ ಮಹರಾಜಾ ।। ಚರಣ ।। 
ಭೇಷಕೋಟಿ ಸಂಕಾಶನಾದ । ಕಮ ।
ಲೇಶ ವಿಠ್ಠಲನ ದಾಸನೆ ಸಹಜಾ ।। ಚರಣ ।। 
ಎಂದು ಕೊಂಡಾಡಿ ಮೈಮನಗಳು ದಣಿಯುವವರೆಗೂ ಶ್ರೀ ಆನಂದದಾಸರು " ಓಂ ಶ್ರೀ ರಾಘವೇಂದ್ರಾಯ ನಮಃ ಓಂ " ಎಂದು ಅಷ್ಟಾಕ್ಷರ ಮಂತ್ರವನ್ನು ಉಚ್ಛರಿಸುತ್ತಾ ಪ್ರದಕ್ಷಿಣೆ ನಮಸ್ಕಾರಗಳನ್ನು ಹಾಕಿದರು.
ಅಷ್ಟರಲ್ಲೇ ಅಲ್ಲಿಗೆ ಬಂದ ಇಭರಾಮಪುರ ಶ್ರೀ ಕೃಷ್ಣಾಚಾರ್ಯರು..
 ಏನೋ ಆನಂದಾ! 
ಪ್ರವಾಹದಿಂದ ಪಾರಾದೆಯಾ? 
ಶ್ರೀ ರಾಯರ ದರ್ಶನವಾಯಿತಾ? 
ಎಂದು ಕೇಳಿದಾಗ......
***
" ಶ್ರೀ ಸುರಪುರ - 6 "
ಪರಮಾಶ್ಚರ್ಯ ದಾಸರಿಗೆ!
ದಾಸರು ಸತ್ಪುರುಷರ ಚರಣಗಳಿಗೆ ವಂದಿಸುತ್ತಾ ಎಲ್ಲವೂ ಶ್ರೀ ರಾಯರ ಮತ್ತು ತಮ್ಮ ಚರಣಾನುಗ್ರಹದಿಂದ ಆಯಿತು ಎಂದು ವಿನೀತರಾಗಿ ನುಡಿದರು.
" ಶ್ರೀ ಇಭರಾಮಪುರ ಕೃಷ್ಣಾಚಾರ್ಯರಿಂದ ಸ್ವರೂಪ ಜ್ಞಾನ "
ಶ್ರೀ ರಾಯರ ವೃಂದಾವನ ಸನ್ನಿಧಾನದಲ್ಲಿ ನಾದಾನುಸಂಧಾನ ಸುಖದಲ್ಲಿ ಶ್ರೀ ಆನಂದದಾಸರು ತಮ್ಮನೇ ತಾವು ಮರೆತು ಭಾವ ಸಮಧಿಯಲ್ಲಿದ್ದಾಗ; ಅಲ್ಲಿಗೆ ಶ್ರೀ ಇಭರಾಮಪುರ ಕೃಷ್ಣಾಚಾರ್ಯರು ಆಗಮಿಸಿದರು.
ಆಚಾರ್ಯರನ್ನು ಗೌರವ ಪೂರ್ವಕ ಮತ್ತು ಪ್ರೀತಿಯಿಂದ " ಅಪ್ಪಾವರು " ಎಂದು ಕರೆಯಲು ವಾಡಿಕೆ.
ಅಪರೋಕ್ಷ ಜ್ಞಾನಿಗಳಾದ ಶ್ರೀ ಅಪ್ಪಾವರು ದಾಸರಿಗೆ ಗಾನ ಗಂಧರ್ವನ ಸ್ವರೂಪದ ಅರಿವನ್ನುಂಟು ಮಾಡಲು..
ಶ್ರೀ ಅಪ್ಪಾವರು :
ಅಹುದೋ ಆನಂದಾ! ಗಾನ ಮಾಡುವುದು ನಿನ್ನ ಸ್ವರೂಪಕ್ಕೆ ಹತ್ತಿದ್ದು; ಇಲ್ಲೂ ಗಂಧರ್ವ!
ಲೋಕದ ಗಂಧರ್ವನೇ ನೀನು ಎಂದು ಬೆನ್ನು ಚಪ್ಪರಿಸಿದಾಗಲೇ; ಬಹಿರ್ಮುಖರಾದ ದಾಸರನ್ನು ಶ್ರೀ ಅಪ್ಪಾವರು ಪುನಃ " ಈಗ ಆಯಿತೇ ನಿನ್ನ ಸ್ವರೂಪ ಜ್ಞಾನ! " ಎಂದರು.
ಶ್ರೀ ಆನಂದದಾಸರು :
ಎಚ್ಚೆತ್ತು, ದಾಸರು ತನ್ನ ಸ್ವರೂಪವನ್ನು ತೋರಿಸಿದ ಆಚಾರ್ಯರ ಕಾಲಿಗೆ ಬಿದ್ದವರೇ ಆನಂದಾಶ್ರುಗಳಿಂದ ತನ್ನನ್ನು ಉದ್ಧರಿಸಬೇಕೆಂದು ಪ್ರಾರ್ಥಿಸಿಕೊಂಡರು.
ಶ್ರೀ ಅಪ್ಪಾವರು :
ನಿನ್ನ ಸ್ವರೂಪವೇ ಅಂಥಾದ್ದೆಂದರೆ ನಿನ್ನ ಭಾಗ್ಯ ಎಲ್ಲರ ಪಾಲಿಗಿಲ್ಲ.
ಎಲ್ಲಾರ ಶ್ರಮ ನಿನಗಿಲ್ಲ.
ನಿನಗೆ ಇದೇ ದಾರಿಯಲ್ಲೇ ಕ್ಷಿಪ್ರದಲ್ಲೇ ಭಗವದ್ದರ್ಶನವಾಗುವುದೆಂದರು.
ಶ್ರೀ ಆನಂದ ದಾಸರು :
ಉತ್ತರಿಸದೇ ಮನದಲ್ಲೇ ಶ್ರೀ ಅಪ್ಪವರ ಮಾತನ್ನು ಪುನಃ ಪುನಃ ಮನನ ಮಾಡಿಕೊಂಡರು.
ಏಕಾಂತವನ್ನು ಬಯಸಿದವರೇ ಕೆಲವು ಕಾಲ ಏಕಾಂತದಲ್ಲಿರಲು ಶ್ರೀ ಪಂಚಮುಖಿ ಪ್ರಾಣದೇವರ ಸನ್ನಿಧಿಯನ್ನು ಸೇರಿ ಅಲ್ಲಿ ತಮ್ಮ ಇಷ್ಟದೇವತೆ; ಕುಲದೇವತೆ; ಗುರೂಪದಿಷ್ಟ ದೇವತೆಯಾದ ಶ್ರೀ ನೃಸಿಂಹ ಮಂತ್ರೋಪಾಸನೆಯನ್ನು ಮಾಡಿದರು.
ನೆನಸಿದಂತೆ ರೂಪ ದರ್ಶನ; ಗುಣ ಕ್ರಿಯಾನುಭಾವಗಳು ಶ್ರೀ ಆನಂದದಾಸರಿಗೆ ಆದವು.
ಆಗ ತಮ್ಮ ಸ್ವರೂಪೋದ್ಧಾರಕ ಗುರುಗಳನ್ನೂ, ಶ್ರೀ ರಾಯರ ದಯಾಳುತ್ವವನ್ನು ಸ್ಮರಿಸುತ್ತಾ..
ರಾಗ : ಭೂಪಾಲಿ ತಾಳ : ಅಟ್ಟ
ಶ್ರೀ ರಾಘವೇಂದ್ರರಾಯರ ಪಾದಾಂಬುಜ ।
ದಾರಾಧಕರ ಕೊಂಡಾಡಿರೋ ।। ಪಲ್ಲವಿ ।।
ನಾರಾಯಣ ನಾಮ ಪಾರಾಯಣರ । ಪಾ ।
ದಾರವಿಂದ ಸುಧಾ ರಸವ ಬೀರುವಾ ।। ಅ. ಪ ।।
ಅಲವಬೋಧ ಸತ್ಕುಲ ದೀಪರೆನಿಸಿದ ।
ಹುಲುಗಿಯ ನರಸಪ್ಪಾಚಾರ್ಯರ ।
ಕಲಿಯೊಳು ಕಲಿಕೃತ ಕಲ್ಮಶ ಕಳೆವೆ । ನಿ ।
ರ್ಮಲ ರಾಯ್ಚೂರು ಕೃಷ್ಣಾಚಾರ್ಯರ ।।
ಇಳೆಯೊಳು ಚುಷಷ್ಠಿ ಕಳದಿ ನಿಪುಣರಾದ ।
ಯಳಮೇಲಿ ಹಯಗ್ರೀವಾಚಾರ್ಯರ ।
ಹಲವು ಸಜ್ಜನರೊಳು ತಿಳಿಸಿ ಕೊಳ್ಳದಲಿಪ್ಪ ।
ಬಲವಂತ ಯೋಗಿ ನಾರಾಯಣಾರ್ಯರ ।। ಚರಣ ।।
ಧರಣಿದೇವರಿಗೆ ನಿರುತಾನ್ನವನೀವ ।
ವರ ಹರಿಹರ ಭೀಮಾಚಾರ್ಯರ ।
ಹರಿದಾಸರಿಗೆ ಮಂದಿರವಾದ । ಇಭರಾಂ ।
ಪುರದಲ್ಲಿ ಮೆರೆವ ಕೃಷ್ಣಾಚಾರ್ಯರ ।।
ಶಿರಿಪಾದ ಪುತ್ರ ಪಂಡಿತರೊಳಗಗ್ರೇ ।
ಸರ ಶ್ರೀ ರಂಗದ ರಾಮಾಚಾರ್ಯರ ।
ಸುರಪುರ ಶ್ರೀ ನರಹರಿಯ ಪಾದಾಂಬುಜ ।
ಸಿರಿಯೊಳ್ಮೆರೆವ ಅಸ್ಮದ್ಗುರು ರಾಜಾಚಾರ್ಯರ ।। ಚರಣ ।।
ಶ್ರೀ ರಾಘವೇಂದ್ರರಾಯರ ಭೂಮಿಯೊಳವ ।
ಮಾಡಿದ ಆರಂಭದಿಂ ।
ದಾರಾರು ಬೃಂದಾವನ ಪೂಜಾ ಸ್ತೋತ್ರದಿಂ ।
ದಾರಾಧಿಸುವರಾನಂದದಿ ।।
ಸಾರ ಭಕ್ತರ ಪಾದಾರವಿಂದಕೆ । ನಮ ।
ಸ್ಕಾರ ಮಾಡಿರೋ ಸಾಷ್ಟಾಂಗದಿ ।
ಧೀರ ಶ್ರೀ ಕಮಲೇಶವಿಠ್ಠಲ ವಲಿದು ತನ್ನ ।
ಸಾರೂಪ್ಯವ ಕೊಟ್ಟು ಸಲಹುವ ಸಂತತಾ ।। ಚರಣ ।।
ಎಂದು ತಮ್ಮ ಉದ್ಧಾರಕ ಗುರುಗಳನ್ನೂ - ಸ್ವರೂಪೋದ್ಧಾರಕ ಗುರುಗಳನ್ನೂ - ತಮ್ಮ ವಿದ್ಯಾ ಗುರುಗಳನ್ನೂ - ಅಂದಿನ ಕಾಲದ ಜ್ಞಾನಿಗಳನ್ನೂ ಮತ್ತು ತಮ್ಮ ಉಪಾಸ್ಯಮೂರ್ತಿಯಾದ ಶ್ರೀ ನರಸಿಂಹನನ್ನು ಸ್ತೋತ್ರ ಮಾಡಿದ ದಾಸರನ್ನು ಕುರಿತು..
ಶ್ರೀ ಅಪ್ಪವರು :
ಏನು ಆನಂದಾ!
ನಮ್ಮ ಹಾಡನ್ನೇ ಹಾಡಿಬಿಟ್ಟಿಯಲ್ಲಾ?
ಶ್ರೀ ಆನಂದದಾಸರು :
ಪುಣ್ಯ ಶ್ಲೋಕರು ತಾವಾದ್ದರಿಂದ ನಾಮ ಸ್ಮರಣೆ ಮಾತ್ರ ಮಾಡಿದೆ ಅಷ್ಟೇ!
ಎಂದ ದಾಸರನ್ನು ಪುನಃ ..
ಶ್ರೀ ಅಪ್ಪಾವರು :
ನೀನೆನಪ್ಪಾ ಗಂಧರ್ವ!
ಎಂದರು.
ತುಂಗಭದ್ರೆಯ ಪ್ರವಾಹದಿಂದ ಪಾರಾಗಿ ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮರನ್ನು ಪ್ರತ್ಯಕ್ಷ ದರ್ಶನ ಮಾಡಿದ ದಿನದಿಂದ ಅನುಭವಿಸುವ ಧ್ಯಾನಾನಂದವು ಬಿಂಬಾಪರೋಕ್ಷದ ಆನಂದವಾಯಿತು.
ಶ್ರೀ ಆನಂದದಾಸರು ಅಪರೋಕ್ಷ ಜ್ಞಾನಿಗಳಾದರು.
ಸಕಲ ಅವರಿಗೆ ಕರತಲಾಮಲಕವಾಯಿತು.
ಅಧಿಕಾರ ವಾಣಿಯಿಂದಾಡುವ ಮಾತುಗಳೆಲ್ಲಾ ಸತ್ಯವಾದವು!
ಹಿಂದಿನ ಕೀರ್ತನೆಗಳಲ್ಲಿ ಗಾನ ಬಹಳವಾಗಿದ್ದರೆ - ಇಂದಿನ ಕೀರ್ತನೆಗಳಲ್ಲಿ ತತ್ತ್ವಜ್ಞಾನ ಬಹಳವಾಗಿದೆ.
***
" ಶ್ರೀ ಸುರಪುರ  - 7 " 
" ದಾಸರ ಶಿಷ್ಯ ಸಂಪತ್ತು " 
ಶ್ರೀ ಮಡಕಶಿರದ ಭೀಮದಾಸರು - ಭೀಮೇಶವಿಠ್ಠಲ
ಶ್ರೀ ಕಮಲಾಪತಿದಾಸರು - ಕಮಲಾಪತಿವಿಠ್ಠಲ
ಶ್ರೀ ಜೋಶಿ ವೆಂಕಪ್ಪಾಚಾರ್ಯರು - ವೆಂಕಟೇಶವಿಠ್ಠಲ
ಶ್ರೀ ಹರಪನಹಳ್ಳಿ ರಾಮಾಚಾರ್ಯರು - ಇಂದಿರೇಶ
ಶ್ರೀ ಗುಂಡಾಚಾರ್ಯರು
ಶ್ರೀ ಬೇಲೂರು ವೆಂಕಟ ಸುಬ್ಬದಾಸರು
ಶ್ರೀ ಸುರಪುರದ ಪ್ರೇಮದಾಸರು
ಸಾಧ್ವೀ ತಂಗಮ್ಮನವರು ( ಇವರು ಶ್ರೀ ಆನದದಾಸರ ಮಗಳು ) 
" ನಿರ್ಯಾಣ " 
ಅನಾಯಾಸೇನ ಮರಣಂ 
ವಿನಾ ದೈನ್ನೇನ ಜೀವನಂ ।
ಅನಾರಾಧಿತ ಗೋವಿಂದ 
ಚರಣಸ್ಯೋ ಭಯಂಕುತಃ ।। 
ಎಂಬ ಶ್ಲೋಕವು ಶ್ರೀ ಆನಂದದಾಸರಿಗಾಗಿಯೇ ರಚಿತವಾಯಿತೋ ಎಂಬಂತೆ ಶ್ರೀ ಆನಂದದಾಸರ ಅಂತಿಮ ಕಾಲವೂ ಆನಂದಮಯವಾಗಿತ್ತಂತೆ. 
ಸುರಪುರದ ಶ್ರೀ ಗೋಪಾಲಕೃಷ್ಣ ದೇವಾಲಯದಲ್ಲಿ ನೂರಾರು ಜನರ ಸಮ್ಮೇಳನದಲ್ಲಿ ಶ್ರೀ ಆನಂದದಾಸರು ಕೀರ್ತನೆ ಮಾಡುತ್ತಿದ್ದಾಗ " ಭಾದ್ರಪದ ಶುದ್ಧ ದ್ವಾದಶೀ ". 
ಅಂದಿನ ಕಥಾ ವಸ್ತುವು " ವಾಮನಾವತಾರ " ವಾಗಿತ್ತು. 
ಬಲಿರಾಜನಿಗೆ ಸುತಲ ಲೋಕ ಕೊಟ್ಟು ಪಟ್ಟಾಭಿಷೇಕವಾಗಿದೆ. 
" ಮುಂದಿನ ಮನ್ವಂತರದಲ್ಲಿ ಆಶ್ರಯದಿಂದ ನೀನೇ ಇಂದ್ರನಾಗುವಿ; ಈಗ ಮತ್ತೇನು ಬೇಡುವೆ ಬೇಡು " ಎಂದು ತ್ರಿವಿಕ್ರಮನ ಆಜ್ಞೆಯಾಯಿತು. 
ಭಕ್ತ ಬಲಿರಾಜನು...
" ಇನ್ನು ಬೇಡುವುದೇನಿದೆ ಮಹಾ ಪ್ರಭೋ " 
ಎಂದು... 
ರಾಗ : ಬೇಹಾಗ್ ತಾಳ : ಆದಿ 
ಬೇಡುವುದೇನ ಭಾವ 
ವಿಮೋಚನ ।। ಪಲ್ಲವಿ ।। 
ಆವ ಸಾಧನಕೆ 
ಆವುದು ಕಡೆ ತವ ।
ಪಾವನ ಪಾದವ ಸೇವೆ 
ದೊರೆತ ಮೇಲೆ ।। ಚರಣ ।।
 ಅಮರೇಶನ ಪದ 
ಭ್ರಮಿಸಿದುದಕೆ । ಸಿರಿ ।
ಕಮಲೇಶವಿಠ್ಠಲನೆ ನಮಗೆ 
ದೊರೆತ ಮೇಲೆ ।। ಚರಣ ।। 
ಎಂದು ಪ್ರಾರ್ಥಿಸಿದನೆಂದು ಶ್ರೀ ಆನಂದದಾಸರು ಹಾಡುತ್ತಿದ್ದಾರೆ. 
ಆ ಆನಂದ ಪರವಶರಾಗಿ ಹಾಡುತ್ತಿದ್ದ ಸಂದರ್ಭದಲ್ಲೇ ಶ್ರೀ ಆನಂದದಾಸರ ಇಹಲೋಕ ವ್ಯಾಪಾರ ನಿಂತು ಹೋಯಿತು. 
ಸುಖವಾಗಿ ಯಾವುದೇ ಸಂಕಟಗಳನ್ನು ಅನುಭವಿಸದೇ ದೇವ ಸ್ತುತಿಯೊಂದಿಗೆ ನಿರ್ಯಾಣ ಹೊಂದಿದ ಸುದೈವಿಗಳು ಶ್ರೀ ಸುರಪುರದ ಆನಂದದಾಸರು!! 
" ಉಪ ಸಂಹಾರ " 
ಶ್ರೀ ಆನಂದದಾಸರ ಕೀರ್ತನೆಗಳಲ್ಲಿ ದೇವತಾ ವರ್ಣನೆಯು ಶ್ರೀ ಹರಿಯ ಮಹಾ ಮಹಿಮೆಯೊಡನೆ ಒಳ್ಳೇ ಕಲಾತ್ಮಕವಾಗಿ ಆವಿಷ್ಕಾರವನ್ನು ಪಡೆದಿದೆ. 
ಭಗವದ್ಗೀತೆಯ 18 ಅಧ್ಯಾಯಗಳನ್ನೂ ಮೂರು ಷಟ್ಕವಾಗಿ ವಿಂಗಡಿಸಿ " ಕೀರ್ತನಗೀತೆ " ಎಂಬ ಹೆಸರಿನಿಂದ ಶ್ರೀ ಆನಂದದಾಸರು ಬರೆದಿದ್ದಾರೆ. 
ಈ ಕೀರ್ತನ ಗೀತೆಯ ಕನ್ನಡೀಕರಣದ ಕ್ರಮವೂ ಕೂಡಾ ತೀರಾ ಹೊಸ ರೀತಿಯಲ್ಲಿ ಆಗಿದೆಯೆಂದು ಹೇಳಬಹುದು. 
ಸಂಸ್ಕೃತ ಭಗವದ್ಗೀತೆಯ ಪ್ರತಿ ಅಧ್ಯಾಯದ ಸಾರವನ್ನು ಮೊದಲು " ಎರಡು ಪದಗಳು ಅನಂತರ ಕೆಲವು ಆರ್ಯ ವೃತ್ತದ ಪದ್ಯಗಳು. 
ಅದಾದ ಬಳಿಕ ಉಳಿದ ಭಾಗದಲ್ಲಿ ಕನ್ನಡದ ದೇಶಿ ಛಂಧಸ್ಸಾದ ಷಟ್ಪದಿಗಳು "
ಈ ಕ್ರಮದಿಂದ ಸುಂದರ ಬಂಧುರವಾಗಿ ನಿರೂಪಿಸುತ್ತಾ ಹೋಗುತ್ತಾರೆ. 
ಈ ಕೀರ್ತನೆಗಳಲ್ಲಿ ಬರುವ ಶ್ರೀ ಹರಿಯ ವಿಶ್ವರೂಪ ವರ್ಣನೆಯಂತೂ ಪ್ರೌಢ ಕನ್ನಡದ ಲಲಿತ ದಂಡಕದಲ್ಲಿ ಶ್ರೀ ರಾಮಾನುಜಾಚಾರ್ಯರ ವೈಕುಂಠ ಗದ್ಯದಂತೆ ಪ್ರಸನ್ನ ಮನೋಹರವಾಗಿ ಮೊಳಗಿದೆ. 
ಶ್ರೀ ದಾಸರಲ್ಲಿ ನಾದಿಷ್ಠತೆ, ಛಾ೦ದಿಷ್ಟತೆ, ರಾಗಿಷ್ಠತೆಗಳು ಭಗವನ್ನಿಷ್ಟೆಯೊಡನೆ ಬೆರೆತು ಮಿಶ್ರ ಮಾಧುರಿಯ ಅಪೂರ್ವ ಮಾದರಿಯನ್ನು ಒದಗಿಸಿದೆ. 
ಮಂತ್ರಾಲಯಾಧೀಶರ ದಾಸ ದಾಸ ದಾಸರ ದಾಸ
ಆಚಾರ್ಯ ನಾಗರಾಜು ಹಾವೇರಿ
ಗುರು ವಿಜಯ ಪ್ರತಿಷ್ಠಾನ
***
" ಶ್ರೀ ಸುರಪುರ - 8 "
" ಶ್ರೀ ಸುರಪುರ ಆನಂದದಾಸರ ಮಧ್ಯಾರಾಧನೆ ವಿಶೇಷ "
" ಶ್ರೀ ಮಡಕಶಿರ ಭೀಮದಾಸರು "
ಶ್ರೀ ಮಡಕಶಿರ ಭೀಮದಾಸರು  ಮೈಸೂರಿನಲ್ಲಿ ಅಧ್ಯಯನ ಮಾಡುತ್ತಿದ್ದಾಗ  ಪುಣೆಯ ಶ್ರೀ ತ್ರ್ಯ೦ಬಕ ಶಾಸ್ತ್ರಿಗಳು ಬಂದರು.
ಶ್ರೀ ಕೃಷ್ಣರಾಜ ಒಡೆಯರು ಶ್ರೀ ತ್ರ್ಯ೦ಬಕ ಶಾಸ್ತ್ರಿಗಳಿಗೆ ಅದ್ಭುತವಾದ ಸ್ವಾಗತ ಸತ್ಕಾರ ಮಾಡಿ ಶಾಸ್ತ್ರಿಗಳ ಮೇಲೆ ಸುವರ್ಣ ವೃಷ್ಟಿಯನ್ನೇ ಸುರಿಸಿದರು
ಶ್ರೀ ತ್ರ್ಯ೦ಬಕ ಶಾಸ್ತ್ರಿಗಳಿಗೆ ರಾಜ ದರ್ಬಾರಿನಲ್ಲಿ ಆದ ಗೌರವವನ್ನು ಕಂಡು ಈ  ಶ್ರೀ ಭೀಮಾಚಾರ್ಯರಲ್ಲಿ ಹೇಯ ಹುಟ್ಟಿತಂತೆ. 
ತಾವೂ ಅಂಥಾ ಪಾಂಡಿತ್ಯವನ್ನು ಸಂಪಾದಿಸಿ ರಾಜ ಮನ್ನಣೆಯನ್ನು ಪಡೆಯಬೇಕೆಂದು ಅವರು ಪಾದಚಾರಿಗಳಾಗಿಯೇ ಬಂಗಾಳಕ್ಕೆ ಹೋಗಿ " ನವದ್ವೀಪ " ದಲ್ಲಿ " ನವೀನ ತರ್ಕ ಶಾಸ್ತ್ರ " ವನ್ನು ಅಧ್ಯಯನ ಮಾಡಿದರು.
ಶ್ರೀ ಭೀಮಾಚಾರ್ಯರು ಪ್ರಗಾಢ ಪಂಡಿತರಾದರು. ಹಿಂದಿ - ಬಂಗಾಲಿ ಭಾಷೆಯ ಪರಿಚಯದೊಂದಿಗೆ ಉತ್ತರ ದೇಶದ ಚೈತನ್ಯ ಪಂಥೀಯ ಭಕ್ತಿಯುಕ್ತವಾದ ಸಂಕೀರ್ತನ ಪದ್ಧತಿಯು   ಶ್ರೀ ಭೀಮಾಚಾರ್ಯರ ಮೇಲೆ ವಿಲಕ್ಷಣ ಪರಿಣಾಮ ಮಾಡಿತು.
ವಿದ್ಯಾಧ್ಯಯನವೆಲ್ಲಾ ಮುಗಿಸಿ ಮಹಾ ವಿದ್ವಾಂಸರೆನಿಸಿ ಅದೇ ರಾಜ ಮಹಾರಾಜರಿತ್ತ ಶಾಲು ಶಕಲಾತಿಗಳನ್ನು ಧರಿಸಿ ತಮ್ಮ ಬಿರಿದು ಬಾವಲಿಗಳನ್ನು ಮೆರಿಸುತ್ತ ಬಳ್ಳಾರಿಗೆ ಬಂದರು.
ಶ್ರೀ ಭೀಮಾಚಾರ್ಯರ ವಿಲಕ್ಷಣ ಶಾಸ್ತ್ರ ಪಾಂಡಿತ್ಯ, ರಾಜ ಗೌರವ, ಜಯಪತ್ರ, ಪ್ರಮಾಣ ಪತ್ರಗಳನ್ನು ನೋಡಿ ಬಳ್ಳಾರಿಯ ನಾಗರೀಕರೆಲ್ಲರೂ ಹೆಮ್ಮೆಗೊಂಡು ಅವರ ಮದುವೆ ಮಾಡಿದರು.
ಶ್ರೀ ಭೀಮಾಚಾರ್ಯರ ಸಂಸಾರ ಬೆಳೆದ ಬಳಿಕ ಸಂಸಾರಕ್ಕೆ ಚಿಂತೆಯಾಗತೊಡಗಿತು. 
ಬಡತನದಲ್ಲಿದ್ದರೂ ಪಾಂಡಿತ್ಯದ ಮದದಿಂದ ಬೀಗಿ ನಡೆಯುತ್ತಿದ್ದ ಶ್ರೀ ಭೀಮಾಚಾರ್ಯರು ನಿರ್ವಾಹವಿಲ್ಲದೆ ಒಬ್ಬ ವಕೀನ ಕಡೆಗೆ ದೇಶಾವರಿಗೆ ಹೋಗಿದ್ದರು. 
ಅವನು ಮೂರು ಪೈಸೆ ದೇಶಾವರಿಯನ್ನಿತ್ತ. " ಇಷ್ಟೇ ಮಾತ್ರವೇ ನನ್ನ ಪಾಂಡಿತ್ಯಕ್ಕೆ ಬೆಲೆ " ಎಂದಂದು ಶ್ರೀ ಭೀಮಾಚಾರ್ಯರು ಅವನು ಕೊಟ್ಟ ಪುಡಿಕಾಸು ಅಲ್ಲಿಯೇ ಇಟ್ಟು ಶ್ರೀ ಸುರಪುರ ಆನಂದದಾಸರಿಂದ ದಾಸ ದೀಕ್ಷೆ ತೊಟ್ಟು ತಂಬೂರಿ ಹಿಡಿದು ಹೊರಟರು.
ಶ್ರೀ ಸುರಪುರ ಆನಂದದಾಸರಿಂದ " ಭೀಮೇಶ ವಿಠ್ಠಲ " ಎಂಬ ಅಂಕಿತವನ್ನು ಪಡೆದು ಅನೇಕ ಪದ ಪದ್ಯಗಳನ್ನು ರಚಿಸಿದರು.
ಶ್ರೀ ಭೀಮೇಶ ವಿಠ್ಠಲರ ಕವಿತೆಗಳಲ್ಲಿ ಗುರುಗಳಾದ ಶ್ರೀ ಸುರಪುರ ಆನಂದದಾಸರ ಜಾಡು, ಜಾಣ್ಮೆಗಳು ಮೈದೋರಿದೆ.
ಶ್ರೀ ಭೀಮೇಶ ವಿಠ್ಠಲರು ಹಲವು ಆಖ್ಯಾನಗಳನ್ನೂ, ಬಿಡಿ ದೇವರ ನಾಮಗಳನ್ನೂ ರಚಿಸಿದ್ದಾರೆ.
ಸಂಸ್ಕೃತದ ಉದ್ಧಾಮ ಪಂಡಿತರಾಗಿದ್ದರೂ, ತಿರುಳುಗನ್ನಡ ಶೈಲಿಯಲ್ಲಿ ಮನೋಜ್ಞ ಕೀರ್ತನೆಗಳನ್ನು ಕಟ್ಟುವುದು ಶ್ರೀ ಭೀಮೇಶ ವಿಠ್ಠಲರ ವೈಶಿಷ್ಟ್ಯವಾಗಿದೆ.
ದ್ರಾಕ್ಷಾ ಪಾಕದಲ್ಲಿ ಸಂಸ್ಕೃತದ ಪುರಾಣ, ಉಪನಿಷತ್ತುಗಳ ಸಾರವನ್ನೆಲ್ಲಾ ಕನ್ನಡೀಕರಿಸುವ ಹದ ಹವಣಗಳು ಶ್ರೀ ಭೀಮೇಶ ವಿಠ್ಠಲರಲ್ಲಿ ಅನ್ಯಾದೃಶ್ಯವಾಗಿದೆ.
ಆಂಧ್ರ ಪ್ರದೇಶದಲ್ಲೂ, ಕರ್ನಾಟಕದಲ್ಲೂ ಶ್ರೀ ಭೀಮೇಶ ವಿಠ್ಠಲರ ಹೆಸರು ಪ್ರಸಿದ್ಧವಾಗಿದೆ.
ರಾಗ : ಶಂಕರಾಭರಣ        ತಾಳ : ಆದಿ
ರಾಘವೇಂದ್ರ ಗುರುರಾಯ ಯನ್ನ । ಪಾ ।
ಪೌಘಗಳೆಣಿಸದೆ ಪಾಲಿಸೋ ।। ಪಲ್ಲವಿ ।।
ನಾಗಶಯನನಣುಗನೇ ವಂದಿಪೆ । ಅನು ।
ರಾಗದಿ ಹರಿಯನು ತೋರಿಸು ।। ಅ. ಪ ।।
ಹೀನ ವಿಷಯಗಳ ನೋಡುತ ಮನದಲಿ ।
ಧ್ಯಾನವಗೊಳಿಸದೆ ಪೋಷಿಸು ।। ಚರಣ ।।
ಬುಧರ ಚರಣಗಳ ನಮಿಸುತಲನುದಿನ ।
ಮುದವ ಬಡುವ ಪಥವ ತೋರಿಸೋ ।। ಚರಣ ।।
ನೀಚರ ಮನೆ ಮೃಷ್ಟಾನ್ನವ ತ್ಯಜಿಸುತ ।
ಯಾಚನೆ ಮಾಡಿಸುವದೇ ಲೇಸೋ ।। ಚರಣ ।।
ಕುನರ ಜೀವಿಯ ಬಿಡಿಸುತ ಭಕುತರ ಮನೆ ।
ಶುನಕನ ಮಾಡುತ ಪಾಲಿಸೋ ।।
ಬಾಲನ ಬಿಂನಪ ಭೀಮೇಶ ವಿಠ್ಠಲನ ।
ಶೀಲ ಬಲ್ಲ ಗುರು ಲಾಲಿಸೋ ।। ಚರಣ ।।
ರಾಗ : ಮೋಹನ      ತಾಳ : ಆದಿ
ಬೇಡುವೆ ನಿನ್ನ ಕೊಡು ವರವನ್ನ ।। ಪಲ್ಲವಿ ।।
ಬೇಡುವೆ ಭಕುತರ ಬೀಡೋಳು ನಿನ್ನ । ಕೊಂ ।
ಡಾಡುವೆ ರಥದೊಳಗಾಡುವೆ ವಿಭುವೆ ನಾ ।। ಚರಣ ।।
ಇಂದ್ರನ ವಿಭವ ಸುಧೀಂದ್ರ ತನುಜ । ರಾಘ ।
ವೇಂದ್ರ ಗುರುವೇ ಕಮಲೇಂದ್ರನ ಕೃಪೆಯ ನಾ ।। ಚರಣ ।।
ವರ ಭೀಮೇಶ ವಿಠ್ಠಲನರಿದವರೊಳು । ನಾ ।
ಪರ ನೆನುತಲಿ ನಿನ್ನ ಚರಣವ ಸ್ತುತಿಸಿ ನಾ ।। ಚರಣ ।।
ಶ್ರೀ ಭೀಮೇಶ ವಿಠ್ಠಲರಲ್ಲಿ ನಾದಿಷ್ಠತೆ, ಛಾ೦ದಿಷ್ಟತೆ, ರಾಗಿಷ್ಠತೆಗಳು ಭಗವನ್ನಿಷ್ಟೆಯೊಡನೆ ಬೆರೆತು ಮಿಶ್ರ ಮಾಧುರಿಯ ಅಪೂರ್ವ ಮಾದರಿಯನ್ನು ಒದಗಿಸಿದೆ.
ಸುಮಾರು 200 ಕ್ಕೂ ಅಧಿಕ ಪದ - ಪದ್ಯ - ಸುಳಾದಿಗಳನ್ನು ರಚಿಸಿ ಹರಿದಾಸ ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸಿದ್ದಾರೆ.
by ಆಚಾರ್ಯ ನಾಗರಾಜು ಹಾವೇರಿ
    ಗುರು ವಿಜಯ ಪ್ರತಿಷ್ಠಾನ
******






1 comment:

  1. ಆನಂದದಾಸರು ರಚಿಸಿದ ಮಂಗಳಂ ಸರ್ವೇಶಮಹಾರಮಣ ದುರಿತಾಪಹರಣ ತುಂಗ ವಿಕ್ರಮ ನಮಿಪೆ ನಿನ ಚರಣ ಇದ್ದರೆ ಹಾಕಿ

    ReplyDelete