Sri Vijaya Dasaru
- Birth Place – Cheekalaparvi, Manvi Taluk in Raichur District
- Birth Name – Dasappa (He was popularly called as Koosi maga daasappa)
- Period – 1682 – 1755
- Gotra – Bharadhwaja
- Amsha – Brugu Rushigalu
- His Niryaana place – Chippagiri (Bhaskara kshetra)
- (A Mandal in Kurnool District, Andrapradesh. It is twenty km from Alur and 7 km from Guntkal Railway station/bus stand)
- Previous Avathara – Guru Madhwapathi as son of Purandaradasaru
- Parents – Srinivasappa & Koosamma
- Brothers – Hayavadana Vittaladasaru, Ananda Dasaru
- Upanayana – 1690 AD
- Marriage in 1698 with Aralamma
- Children – 1 male child Sheshagiri
- Adopted son – Mohana (He found in Hampi. At that time the child was suffering severe desease, saved him and adopted that child and gave the name Mohana, who became Mohana Dasa subsequently
- Ankita – Vijaya Vittala by Purandaradasaru in Gaya (swapna labda) @ Kashi ManikarNika Ghat
- He did the pratistapane of Sri Venugopalakrishna in Chippagiri (popularly called as Bhaskara kshetra)
- He also did the pratistapane of Mukyaprana devaru which was found in a well at Chippagiri.
- Punyadina – 13.11.1755 – Yuva Samvatsara Karthika Shudda Dashami @ Chippagiri
- He got the anugraha of Sri Satyabodha Tirtharu in his 72nd year
ajnaanatimirachChEdaM buddhisaMpatpradaayakaM |
vijnaanavimalaM shaaMtaM vijayaaKya guruM bhajE|
ಅಜ್ಞಾನತಿಮಿರಚ್ಛೇದಂ ಬುದ್ಧಿಸಂಪತ್ಪ್ರದಾಯಕಂ |
ವಿಜ್ಞಾನವಿಮಲಂ ಶಾಂತಂ ವಿಜಯಾಖ್ಯ ಗುರುಂ ಭಜೇ|
अज्ञानतिमिरच्छेदं बुद्धिसंपत्प्रदायकं ।
विज्ञानविमलं शांतं विजयाख्य गुरुं भजे।
Compositions – He has composed 25000 + Devaranamas, Suladees, ugabogas.
Paramatha Khandana – At Kashi he defeated a Advaitha Vidwan named Ramashastri and he sought the Vaishnava Deekshe, which he obliged and took him to Vadeendra Tirtharu for taptamudradharana. Theertha yatre – He has done theertha kshetra yathre not less than 18 times during his life time and he has spent not less than 20 years of his for theertha yatra. “Saagi baarayya Bhavarogada vaidyane” –
Once he had gone to Tirupati during Brahmotsava, and was doing dhyana. The time for Rathotsava arrived but he could not go for the Rathotsava in time. The people started pulling the Chariot but it was not moving at all. Even elephants failed to pull the chariot forward. At that time Srinivasa entered one of the devotee’s body and told the public that one of the devotee has bound him and that is why the chariot is not moving. Then the people were searching for that man, and they found in Vijayadasaru and was brought in front of the Chariot. He composed a song starting “saagi barayya bhava rogada vaidyane” and the chariot started moving.
Tamburi – Purandaradasaru gave him a tamburi in his dream, but when he got up in the morning, he was surprised to find that the tamburi was real. That Tamburi is still available in Chippagiri. You can also find tala, Gopala butti in Chippagiri. In Chippagiri, there is a Vijayarayara Katte, which is a piligrimage.
Kalluru Subbannacharyaru –
He was a renowned Sudha Pandit. Alongwith his panditya, he has some prejudice for Vijayadasaru, as he was singing only Devaranamagalu without any Sanskrit Grantha. Once he was rendering Sudha Pravachana. Almost all the people from the place were invited except Vijayadasaru, because of Kalluru Subbannacharya’s prejudiced opinion about the Dasaru. He had thought the Dasaru and he devaranamas are nothing comparable to Great Granthaas. Those who are not well versed with Shastra Granthas were neglected.
For Sudha Mangala naivedya, “Mandige bhojana” was arranged, but the cook who had to do the Mandige never turned up. Vijayadasaru when he learnt that the cook has not turned up, went to the cooking hall and did the mandige for the entire people. After completing the cooking, Vijayadasaru, went to listen to the pravachana of Kalluru Subbannachar. On seeing Vijayadasaru, the anger in Subbannachar grown, and he teased that “you are an ordinary daasa, “koosi maga daasa”. You know only something about Kannada sahitya. What you can understand about Srimannyaya Sudha?”. Dasaru felt very sad about the teasing by acharyaru. Dasaru called an innocent man who was supplying water for the bhojana, (who was not even able to speak properly), and by putting his hand on that innocent man, he asked him to do the anuvadha of the Sudha, where Acharya had stopped. All of a sudden, that man did the pravachana of that portion of Sudha where Kalluru Subbannachar had stopped, that too in Sanskrit. As soon as he removed his hand from that man, that man went to normal status, and was an ordinary man only. Watching the incident, Kalluru Subbannacharya was shocked and went near Vijaya Dasaru to beg his pardon for his egotism and asked him to accept him as a shishya.
Ankita to Kalluru Subbannacharya – Sri Vijaya Dasaru told his shishya Venugopala Vittala Dasaru to give ankitha to Kalluru Subbannachar, and he was given the ankita “Vyasavittala”. With the ankitha prapthi, subbannachar prepared a stotra on Vijayadasaru, titled “Vijayarayara kavacha”, which starts like “smarisi badukiro, divya charanakeragiro”….
Jagannathadasaru & Vijayadasaru –
Sri Srinivasacharyaru, son of Karnika Narasimhacharya, had studied under Sri Balaramacharyaru (Sri Varadendra Thirtharu in his poorvashrama) and had a profound knowledge of Madhwa Shastra. He had done 108 times sudha mangala. Because of his great panditya in Sanskrit, he had least respect for Daasa parampare. Once Vijayadasaru had visited Srinivasacharyaru’s place. He had sent his shishya to invite Jagannatha Dasaru for Theerthaprasada. Srinivasachar agreed to come. After the pooja is over, Vijayadasaru, sent his disciple to call Srinivasaacharyaru for the bhojana, Srinivasacharya told that he suffering from Stomach pain, and could not come. Vijayadasaru did not say anything, said OK and had his Theertha prasada. After this incident, immediately Srinivasacharya developed severe stomach pain, which could not be controlled by any medicine. He was restless, not getting sleep at all, not able to eat anything. Day by day, the pain grew and it was untollerable. He went to Tirupathi, Mantralaya, Ghatakachala, everywhere in vain. Rayaru came in his dream and asked him to meet Vijayadasaru only for remedy. So, he came back to Vijayadasaru and sought his excuse for his ignoring Dasaru. Vijayadasaru immediately directed Gopaladasaru to give Ayurdana of 40 years. Gopaladasaru readily agreed and gave 40 years of his life to Srinivasacharyaru. Then Srinivasacharya got ankitha in Chandrabhaga river by Sri Purandaradasaru as “Jagannatha vittala”, and he never turned back, he went on to write Harikathamruthasara, and many many devotional songs, suladees, ugabogaas in Kannada and Sanskrit.
Suladi Dasaru –
As he has written so many suladees, he is popularly called as “Suladi Dasaru”. Some of his famous sulaadees are Kapila Suladi, Narasimha Suladi, Durga Suladi, Vayudevara Suladi, Haridasa Lakshana Suladi, Gurubhakuti Suladi, Hayagreeva Suladi, Dhanvantri Suladi, Parashurama Suladi, Vedavyasa Suladi, Naivedya Suladi, Habba Suladi, Mangalacharana Suladi, Mantra mahatmya Suladi, Stotra Suladi, Tatvabhimani Suladi, Taratamya Suladi, Srusti Prakarana Suladi, Upasana Suladi, Theerthakshetra suladi, Atmanivedana Suladi, Apattu parihara Suladi, Vyadhiparahira suladi, Apamrutyu parihara suladi, and many many more.
Shishyaas –
Bhaganna Dasaru (Gopaladasaru), Mohana dasaru (his adopted son) , Panganama Timmanna (Venugopala Vittala dasaru), Ramachandrappa (Ramachandra Vittaladasaru), Kondali Madhwacharya (Madhwesha Vittala Dasaru), Sheshagiri dasaru (Hayagreeva Vittala Dasaru), Modalakallu Sheshagiri dasaru (Guru Vijaya Vittala Dasaru),
Contemporaries –
Sri Satyabhinava Tirtharu, Sri Satyapoorna Tirtharu, Sri Satyabodharu, Sri Styavijaya Tirtharu, Sri Satyapriya Tirtharu, Sri Sumateendraru, Sri Upendra Tirtharu, Sri Vadeendraru, Sri Vasudendraru, Sri Vyasa Tatvagnaru, Divan Venkannapant, Jagannathadasaru, Prasanna Venkata Dasaru, Helavanakatte Giriyamma, etc
Life Saving by Vijaya Dasaru –
a) He gave two years of life to his son Sheshagiri.
b) He wrote an ugaboga “omdu kaiyali Kadga, ondu kaiyali halage” and saved Sri Gopaladasaru from the attack of terrorists.
c) Vijayadasaru knew that Mohanadasaru, had some apamrutyu. So he gave Mohanadasa’s wife some mantrakshate, and told her to do the smarana of Sriharivayu in time of difficulty. Vijayadasaru went to Theertha yatre. One day, Mohana dasaru, who was healthy, died all of a sudden in Cheekalaparavi. Seetamma remembered the words of Vijayadasaru during his departure to Rameshwara yatre, and did the stotra of Vijayadasaru. The surrounding people were demanding the body to be given for burial. In the mean time, Vijayadasaru went to Yamaloka directly and had a chat with Yamadharmaraja, where it was convinced that the life term of Mohanadasaru had not been completed, and by mistake they had taken the jeeva of Mohanadasaru instead of another person.
d) Once, Baagi Keshavaraya Desai, who had once served Vijayadasaru longback, by offering food during Dhanurmasa, was facing his death. His wife, when came to know that Vijayadasaru was staying in the Pranadevaru’s temple, in Cheekalaparavi, approached him. Immediately Vijayadasaru composed 15 ugabogaas, starting “Rudrantargata Narasimha mrutyu nivari”, etc., and gave him three years of his life to Baagi Keshavaraya. Came to know about the ayurdana by Vijayadasaru, Keshavaraya’s mother also offered her 10 years, which Vijayadasaru consented and made arrangements for Ayurdana of total 13 years to Baagi Keshavaraya (3 of dasaru + 10 of Keshavaraya’s mother).
e) Ayurdaana to Jagannathadasaru through Gopala Dasaru – When Jagannathadasaru had severe stomach problem, and was in the last stage of his life, Vijayadasaru ordered Gopaladasaru to give him 40 years of his life, which enabled Jagannathadasaru to have more life, and he wrote Harikathamruthasara, and many other granthas.
Vijayadasaru and Tirupati Timmappa –
Vijayadasaru had great devotion to Tirupati Timmappa and wrote many songs on Timmappa. He has written Suladi starting “venkateshana yatri entado varnisalu”, and “Venkatachala parvata mahime suladi”, and many suladees on Venkatachala parvata. “baabaa baabaa bakutara hrudaya mandira”, Saagi barayya bhavarogada vaidyane, “venkatesha mantra onde”, etc.
(Source many articles)
know more:-
Jeevana Charitre-Keerthane – click
Vijayadasaru – English – click
Devaranamagalu – 1 – click
Devaranamagalu – 2 – click
Suladigalu ::
Kapila Suladi – click
Kapila Suladi (Telugu , Tamil) – click
Narasimha Suladi – click
Chinte yaake – click
Sankyashastra Suladi – click
Naivedya, Haridasa Lakshana, Srinivasa, Habba Suladi – Kannada – click
Naivedya, Haridasa Lakshana, Srinivasa, Habba Suladi – Sanskrit – click
Naivedya, Haridasa Lakshana, Srinivasa, Habba Suladi – Telugu – click
Naivedya, Haridasa Lakshana, Srinivasa, Habba Suladi – Tamil – click
- (Kannada Suladees in different lipi)
Ugabogagalu ::
info from dvaita.org--->
Sri Sri Vijaya Dasaru (1682-1755)
Sri Vijaya Dasa is one of the most renowed scholars and philosophers in Dwaita philosophy as well Dasa Sahitya. He is revered as the spiritual heir of Sri Purandara Dasa. Vijaya means win and he is regarded as the one who knows how to win the heart of Hari and Hari Bhaktas, through his compositions.
Lineage : He is regarded as the reincarnation of Bruga Muni. It is believed that in KRutha Yuga he incarnated as a disciple of Naarada, in THretha YUga as a monkey called Suraleela, in DWapara YUga as a Yadava called Nikampana (Yadaava) and in Kali yuga as a calf and later as a brahmin. Bruga muni is also known as the tAratamya saint since he proclaimed that Hari was the highest and most powerful among all gods. etc.
Birth :
He was born in a very poor Brahmin family in Chekalaparvi of Manwi Taluk in Raichur District. His parents were Sri Srinivasappa and Kusamma. He went to Kashi (Varanasi) for four years for studies and later returned to his native land.
He married Aralamma at the age of 16 and had a troubled domestic life because of poverty. He want back to Kashi (Varanasi) after his parents' death. He became a renowned sanskrit scholar. One day he had a dream in which Sri Purandara Dasa appeared, initiated him into the order of Dasas and gave him the ankitha of 'Vijay Vittala'. From then on, he was known as Vijaya Dasa. His compositions were revered as holy.
Works :
He spent the rest of his life popularizing Dwaita concepts, the works of Srimadacharya and Hari Bhakti mala's. He has written about 25,000 Padya Sulyadi i.e *UGAHA BHOGHA* 's, his works are called kalasha's creations, Urasu's creations. In Kannada sahitya his literary works are regarded as second only to those of Sri Purandara Dasa. He is affectionately called Dasa Shresta, for his personality, knowledge and the brilliant disciples he left behind.
Miracles :
He prevented a woman from killing herself and her son. He looked after them as part of his family. Later that boy became his disciple and a very famous Haridasa called Mohana Dasa. It is said that Mohana Dasa had another close brush with death and it was again Sri VijayadAsa who saved him.
He gave rebirth to his own son from his life of 4 years and another 7 years from some body.
He went to Kashi thrice and during one of his visits, the Holy Ganges was in spate. He took a dip in the river and sat in padmasana over the flowing river, all without getting his clothes and body wet.
Sri Vijaydasaru demonstrated his amazing mystical powers by making a dimwit recite and explain JayatIrtha's Sriman NyAya Sudha in simple words (something which even very learned scholars find impossible to do).
Seeing his brilliance and scholarly attitude he has enormous followers and disciples. His followers include Sri Jagannatha Dasaru who has given the world with 'Harikathamrutha Sara', Sri Gopala Dasaru, Kallur Subramanya Charya etc.
He lived till the age of 79, showing the world the path to the peace and Hari bhakti through Dasa Sahitya.
Every year, during Karthika Shudda Navami, Dashmi and UtwanDwadashi his 'Aradhana' is celebrated in Chippgiri, which is about 3 miles from Guntakal. The location where the aradhana is celebrated is called 'Sri Vijaya Dasara Katte' (Vrundavana). Thousands of Madhwas attend and get his blessings.
Sri Gopala Dasaru, his chief disciple, constructed a temple for Anjaneya (Sri Mukhya Prana Devaru) in front of the 'Katte'. There is a pond close by called 'Vijaya Thirtha'. It is believed that during his third visit to Kashi, Sri Vijaya Dasaru brought Ganges and installed it in that pond, for the benefit of his disciples.
The old house where Sri Vijay dasaru lived Chippgiri has been preserved by his devotees, as also the Mahadeva and Srinivasa Temples that he used to visit. There is cave close by where the Sun god is supposed to have conducted penance.
It is believed that even to-day Sri Vijay Dasaru visits the spot in an astral form, takes bath in the Vijay Thirtha and cleans the Mukya Prana temple. One of the temple servants is supposed to have witnessed this miracle.
Sri Purandara daasa had a son called Madhwapathi. Purandara Dasa would visit the Sri Yanthrodaara Praana Devaru temple (Hanumantha) in Hampi and offer naivedya (divine offering) to the deity. Once, due to paucity of time, Sri Purandara Daasa asked Madhwapathi to do the naivedya. Madhwa pathi, who was a small boy, honestly believed that Hanumantha would literally eat the food offered to him. When this did not happen, the little boy became very upset and started punishing himself. To prevent this, Hanumantha appeared before him and actually ate the food, leaving behind a small portion as prasad. When Madhwa pathi returned home and related this incident to his parents, nobody believed him. To test the veracity of his story, Purandara dasa accompanied him the next day, and saw the miracle with his own eyes. He became ecstatic and told Madhwa pathi that he was very lucky to have obtained the grace of Hanumantha.
Sri Purandara dasa composed a total of 4,75,000 literary pieces (devaranamas, suladis, ugabhogas) in his lifetime. When Madhwapathi pointed out to his father he was 25,000 short of 500,000, Sri Purandara daasa told him that by the grace of Vijaya Vittala, he (Madhwapathi) would be reborn as a hari daasa in his next birth and make up the balance 25,000. Accordingly, Madhwapathi, the son of Sri Purandara daasa was reborn as Sri Vijaya daasa in his next birth and composed 25000 songs with the ankita(signature) of Sri Vijaya Vittala.
Overview of his Literature
Sri Vijaya Dasa composed many songs and Suladis. His style is very scholarly and full of words from Sanskrit. His thorough grasp of the Sastras is very evident in his works. His compositions are simple and lucid, replete with telling phrases and similies, like those of his master Sri Purandara Dasa. He was an ardent Vaisnava, extolling Madhva as the Saviour of mankind.
Sri Vijaya Dasa | 1682-1755 | Dasappa | Vijaya Vittala | Sri Purandara Dasa (swapna) | Chippagiri | Karthika Shudda Dashami |
******
ವಿಜಯದಾಸರು
ಕರ್ನಾಟಕ ಸಂಗೀತದ ಇತಿಹಾಸದಲ್ಲಿ ದಾಸಯುಗದ ಅಮೂಲ್ಯ ಕೊಡುಗೆಗಳಿಂದ, 15 ಮತ್ತು 16ನೇ ಶತಮಾನಗಳು “ಸುವರ್ಣ ಯುಗ”ಗಳಾಗಿ ಪರಿಣಮಿಸಿದವು. ಈ ಶತಮಾನದಲ್ಲಿ ಹರಿದಾಸ ಪಂಥದ ಶ್ರೀ ಪುರಂದರದಾಸರು, ಶ್ರೀ ಕನಕದಾಸರು ಮುಂತಾದ ದಾಸವರೇಣ್ಯರಿಂದ ಹರಿದಾಸ ಸಾಹಿತ್ಯ ಶ್ರೀಮಂತವಾಗಿ ಬೆಳೆಯಿತು. ಹರಿದಾಸ ಕೂಟದಲ್ಲಿ 18ನೇ ಶತಮಾನದ ಪ್ರಮುಖ ವಾಗ್ಗೇಯಕಾರರಲ್ಲಿ ಒಬ್ಬರು ಎಂದರೆ ವಿಜಯವಿಠಲರು. ಇವರು ಕರ್ನಾಟಕದ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಚೇಕಲಪರಿ ಎಂಬ ಗ್ರಾಮದವರು. ಶ್ರೀನಿವಾಸಪ್ಪ ಮತ್ತು ಕೂಸಮ್ಮ ಎಂಬ ಬಡ ಬ್ರಾಹ್ಮಣ ದಂಪತಿಗಳ ಹಿರಿಯ ಮಗನಾಗಿ 1683ರಲ್ಲಿ ಜನಿಸಿದರು. ಇವರ ಮೊದಲಿನ ಹೆಸರು ದಾಸಪ್ಪ. ಬಡತನದ ಬೇಗೆಯಲ್ಲಿ ಬೆಂದ ಇವರನ್ನು 'ಕೂಸಿ ಮಗ ದಾಸ' ಎಂದು ಹಗುರವಾಗಿ ಹೀಯಾಳಿಸಿ ಜನ ಕರೆಯುತ್ತಿದ್ದರು. ಈ ಅವಮಾನ ಮತ್ತು ಬಡತನದ ಬೇಗೆ ಸಹಿಸಲಾರದೇ ಚಿಕ್ಕ ವಯಸ್ಸಿನಲ್ಲಿಯೇ ದೇಶಾಂತರ ಹೊರಟು ಕಾಶಿ ಕ್ಷೇತ್ರಕ್ಕೆ ಬಂದರು. ಅಲ್ಲಿ ಹಲವಾರು ಸಾಧು ಸಂತರ ಸತ್ಸಹವಾಸ ಮಾಡಿ, ಪವಿತ್ರ ಗಂಗಾಸ್ನಾನ ಮಾಡುತ್ತಾ ವಿರಾಗಿಯಾಗಿ ಜೀವನ ಸಾಗಿಸುತ್ತಿದ್ದರು. ನಾಲ್ಕು ವರುಷಗಳ ನಂತರ ಸ್ವಂತ ಊರಿಗೆ ಮರಳಿದರು. ಅಲ್ಲಿ ಅವರಿಗೆ ಅರಳಮ್ಮ ಎಂಬುವರೊಡನೆ ವಿವಾಹವಾಯಿತು. ಅಲ್ಲಿ 16 ವರ್ಷಗಳ ಕಾಲ ಸಾಂಸಾರಿಕ ಬದುಕು ನಡೆಸಿದರು. ನಂತರ ತಮ್ಮ 32ನೇ ವಯಸ್ಸಿನಲ್ಲಿ ಈ ಜೀವನದ ಜಂಜಾಟಗಳನ್ನು ಸಹಿಸಲಾರದೇ ಮತ್ತೆ ಕಾಶಿ ಕ್ಷೇತ್ರಕ್ಕೆ ಹಿಂದಿರುಗಿದರು. ಗಯಾದಲ್ಲಿ ಹೆತ್ತವರ ಶ್ರಾದ್ಧ ಮಾಡಿ ಪಿತೃ ಋಣ ತೀರಿಸಿ ಸಾಧು ಸಂತರೊಂದಿಗೆ ಓಡಾಡುತ್ತಾ ನಿಷ್ಠೆಯಿಂದ ತಪಸ್ಸನ್ನಾಚರಿಸಿದರು. ಒಮ್ಮೆ ಇವರಿಗೆ ಸ್ವಪ್ನದಲ್ಲಿ ಕರ್ನಾಟಕ ಸಂಗೀತ ಪಿತಾಮಹ ಶ್ರೀ ಪುರಂದರ ದಾಸರು ದರ್ಶನ ನೀಡಿ, ಶ್ರೀ ವೇದವ್ಯಾಸರ ದರ್ಶನ ಮಾಡಿಸಿ “ವಿಜಯ” ಎಂಬ ಬೀಜಾಕ್ಷರವನ್ನು ಬರೆದು ಅನುಗ್ರಹಿಸಿದಂತಾಯಿತು. ಸ್ವಪ್ನಾವಸ್ಥೆಯಿಂದ ಜಾಗೃತಾವಸ್ಥೆಗೆ ಬಂದ ಆಕ್ಷಣವೇ ಇವರಲ್ಲಿ ಜ್ಞಾನ ಪ್ರಕಾಶವಾಯಿತು. ಗುರುಗಳ ಅನುಗ್ರಹದಿಂದ “ವಿಜಾಯದಾಸ”ರಾದ ಅವರು ಆಡಿದ ಪ್ರತಿ ಮಾತು ಹಾಡಾಗಿ ಹರಿಯಿತು. ಆಗ ಅವರ ರಚನೆಯೊಂದು ಹೀಗಿದೆ,
ಅಂತರಂಗದ ಕದವು ತೆರೆಯಿತಿಂದು
ಎಂತು ಪುಣ್ಯದ ಫಲವು ಪ್ರಾಪ್ತಿ ದೊರಕಿತೋ ಎನಗೆ|| |ಅಂತರಂಗದ|
ಸ್ವಮೂರ್ತಿಗಳ ಮಧ್ಯೆ ಸಚ್ಚಿದಾನಂದೈಕ ರವಿಧರೆಯರಿಂದಲಾಗಿಂಗಿತ್ವತಿ
ಕಮಲಾ ಜಾಜಿಗಳಿಂದ ಸ್ತುತಿಸಿಕೊಳ್ಳುತ ಹೃದಯ
ಕಮಲದ ಒಳಗಿರುವ ವಿಜಯವಿಠಲನ ಕಂಡೆ|| |ಅಂತರಂಗದ||
ಹೀಗೆ ಪುರಂದರ ದಾಸರ ಅನುಗ್ರಹದಿಂದಲೇ ವಾಗ್ಗೇಯಕಾರ ಸಾಮರ್ಥ್ಯವನ್ನು ಪಡೆದು , ಪುರಂದರ ದಾಸರನ್ನೇ ತಮ್ಮ ಮಾನಸಿಕ ಗುರುವಾಗಿ ಸ್ವೀಕರಿಸಿದವರು ಶ್ರೀ ವಿಜಯದಾಸರು. ಇವರ ಅಮೂಲ್ಯವಾದ ರಚನೆಗಳಿಂದಲೇ ಪುರಂದರ ದಾಸರ ಜೀವನವನ್ನು ಚಿತ್ರಿಸಲು ಸಾಧ್ಯವಾಯಿತು. ಇವರು ವಿಜಯ ವಿಠಲ ಎಂಬ ಅಂಕಿತದೊಡನೆ 25,000 ಕೃತಿಗಳನ್ನು ರಚಿಸಿ ಪುರಂದರರ 4,75,000 ರಚನೆಗಳನ್ನು 5,00,000ಕ್ಕೆ ಪೂರ್ಣಮಾಡಿದರೆಂದು ಪ್ರತೀತಿ ಇದೆ. ಇವರದ್ದು ಸುಮಾರು 1200 ರಚನೆಗಳ ಮಾತ್ರ ದೊರಕಿವೆ. ಅವುಗಳಲ್ಲಿ ಉಗಾಭೋಗಗಳು 70 ಆದರೆ ಸುಳಾದಿಗಳ ಸಂಖ್ಯೆ 580. ಹೀಗಾಗಿ ಇವರನ್ನು ಸುಳಾದಿ ವಿಜಯದಾಸರು ಎಂದು ಜನ ಗುರುತಿಸುತ್ತಿದ್ದರು. ಕಂಕಣಾಕಾರ ಸುಳಾದಿ, ಹಬ್ಬದ ಸುಳಾದಿ, ಹರಿದಾಸ ಲಕ್ಷಣ ಸುಳಾದಿ, ಶ್ರೀ ಕೃಷ್ಣ ಮಹಿಮೆಗಳನ್ನು ತಿಳಿಸುವ ಸುಳಾದಿ ಮುಂತಾದ ವಿಷಯಾಧಾರಿತ ಸುಳಾದಿಗಳನ್ನು ಹಾಡಿದ್ದಾರೆ. ವೇದ ಉಪನಿಷತ್ತಿನ ಸಾರವನ್ನೆಲ್ಲ ತಮ್ಮ ರಚನೆಗಳಲ್ಲಿ ಇಳಿಸಿದ್ದಾರೆ.
ಶ್ರೀ ಕೃಷ್ಣ ಪರಮಾತ್ಮನೆಂದರೆ ಅಪಾರ ಭಕ್ತಿ. ಅವನನ್ನು ಮುಟ್ಟಿ ಭಜಿಸುವ ಸೌಭಾಗ್ಯಕ್ಕಾಗಿ ಕೃಷ್ಣನನ್ನು ಹಾಡಿ ಕೊಂಡಾಡಿದರು.
ಕೃಷ್ಣಾ... ಕೃಷ್ಣಾ….
ಭಕ್ತಜನಪಾಲಕ
ಭಕ್ತಿ ಸುಖದಾಯಕ
ಮುಕ್ತೀಶ ದೀನಬಂಧು|| ||ಕೃಷ್ಣ||
ಯುಕ್ತಿಯಲಿ ನಿನ್ನಂಥ ದೇವರನು ನಾಕಾಣೆ|
ಸತ್ಯವತಿ ಸುತನೇ ಕಾಯೋ ಕೃಷ್ಣಾ ಕೃಷ್ಣಾ||ಭಕ್ತ||
ಆನಂದ ತೀರ್ಥಮುನಿಯ ದ್ಯಾನಿಪರ ಸಂಘ
ಆನಂದದಲಿ ನಿಲ್ಲಿಸೋ ಕೃಷ್ಣಾ ಕೃಷ್ಣಾ
ದೀನ ಗಣ ಮಂದಾರ ನೀನೆಂದು ನಂಬಿದೆನೋ
ಸಾನುರಾಗದಿ ಕಾಯೋ ಕೃಷ್ಣಾ ಕೃಷ್ಣಾ|| ಭಕ್ತ||
ಕೆಟ್ಟ ಜನರ ಸಂಘ ಇಷ್ಟು ದಿನವು ಮಾಡಿ
ನಷ್ಟವಾಗಿ ಪೋದೆನೋ ಕೃಷ್ಣಾ ಕೃಷ್ಣಾ
ಬೆಟ್ಟದೊಡೆಯನೆ ನಿನ್ನ ಮುಟ್ಟಿ ಭಜಿಸುವ ಭಾಗ್ಯ
ಇಷ್ಟಗಳ ಎನಗೆ ಕೊಡಿಸೋ ಕೃಷ್ಣಾ ಕೃಷ್ಣಾ||ಭಕ್ತ||
ವಿಜಯದಾಸರು ಪವಾಡ ಪುರುಷರಾಗಿ ಮೆರೆದ ದಂತಕಥೆಗಳು ಅನೇಕ ಇವೆ. ಅವುಗಳಲ್ಲಿ ಒಂದೆರಡನ್ನು ಇಲ್ಲಿ ನೋಡೋಣ
ಒಮ್ಮೆ ತಿರುಪತಿ ತಿರುಮಲೆಯಲ್ಲಿ ರಥೋತ್ಸವ. ಜನಜಂಗುಳಿಯೆಲ್ಲ ರಥದ ಮುಂದೆ ಕಿಕ್ಕಿರಿದಿದೆ. ಪೂಜೆ ಪುನಸ್ಕಾರಗಳಲ್ಲಾ ನಡೆಯುತ್ತಿದೆ. ಗೋವಿಂದ ನಾಮಸ್ಮರಣೆ ಎಲ್ಲೆಲ್ಲೂ ಕೇಳಿ ಬರುತ್ತಿದೆ. ನಂತರ ಭಕ್ತರೆಲ್ಲಾ ಸೇರಿ ರಥವನ್ನೆಳೆಯಲು ಪ್ರಾರಂಭಿಸಿದರು. ಆದರೆ ರಥದ ಚಕ್ರ ಒಂದರ್ಧ ಇಂಚಿನಷ್ಟೂ ಅಳ್ಳಾಡಲಿಲ್ಲ. ಜನಗಳಿಗೆ ಆಶ್ಚರ್ಯ. ತುಂಬಿದ ಜನರೆಲ್ಲಾ ರಥಕ್ಕೆ ಕಟ್ಟಿದ ಹಗ್ಗವನ್ನು ತಮ್ಮ ಶಕ್ತಿ ಮೀರಿ ಎಳೆಯುತ್ತಿದ್ದಾರೆ . ಕೊನೆಗೆ ಆನೆಗಳ ಕೈಯಲ್ಲಿ ಎಳೆಸಿದರೂ ರಥ ಜರುಗಲಿಲ್ಲ. ಆಗ ಯಾರೋ, “ಅಯ್ಯೋ ವಿಜಯದಾಸರು ಇಲ್ಲಿಲ್ಲ. ಅದಕ್ಕೆ ರಥ ಮುಂದೆ ಚಲಿಸುತ್ತಿಲ್ಲ.” ಎಂದು ಕೂಗಿದರು. ಆಗ ವಿಜಯದಾಸರನ್ನು ಹುಡುಕಿ ಕರೆತರಲು ಕೆಲವರು ಹೋದರಂತೆ. ಅವರನ್ನು ಅಲ್ಲಿ ಇಲ್ಲಿ ಹುಡುಕಿ ಅಂತೂ ತಿರುಪತಿ ದೇವಸ್ಥಾನದ ಗರ್ಭಗುಡಿಯಲ್ಲಿ ಕಂಡರು. ದೇವರ ಮುಂದೆ ಕುಳಿತು ಗೋವಿಂದನ ನಾಮಸ್ಮರಣೆಯಲ್ಲಿ ತಲ್ಲೀನರಾಗಿ ಹೋಗಿದ್ದರು ವಿಜಯದಾಸರು. ಅಲ್ಲಿ ಬಂದ ಜನ ಮೂಕವಿಸ್ಮಿತರಾಗಿ ಅಲ್ಲೇ ನಿಂತರು. ನಂತರ ಅವರನ್ನು ರಥ ಚಲಿಸುವಂತೆ ಮಾಡಬೇಕೆಂದು ಕೇಳಿಕೊಂಡರು. ಆಗ ಅವರು ರಥದ ಬಳಿ ಬಂದು “ಸಾಗಿಬಾರಯ್ಯಾ ಭವರೋಗ ವೈದ್ಯ” ಎಂದು ಕೂಗಿ ಕರೆದರಂತೆ. ಆಗ ರಚಿಸಿದ ಅವರ ರಚನೆ ಒಂದು ಹೀಗೆ ಇದೆ.
ಬಾಬಾ ಭಕುತರ ಹೃದಯ ಮಂದಿರ
ಬಾಬಾ ಜಗದೋದ್ಧಾರ
ಬಾಬಾ ವೆಂಕಟಾಚಲವಿಹಾರ
ಬಾಬಾ ಅನೇಕಾವತಾರ ನೀ ರಘುರಾ||ಬಾಬಾ||
ಧಕ್ಷ ಕಮಲಾಕ್ಷ ರಾಕ್ಷಸಕುಲಚಿತ್ತ
ಲಕ್ಷ್ಮಣಾಗ್ರಜ ಲಕ್ಷ್ಮಿ ವಾಸ್ನಾ
ಪಕ್ಷಿ ವಾಹನಾ ಪೂರ್ಣ ಲಕ್ಷಣ ಸರ್ವೇಶ
ಮೋಕ್ಷದಾಯಕ ಪಾಂಡವಪರ ಅಕ್ಷಯವಂತ
ಶುಕ್ಲಾಂಬರಧರ ಯಕ್ಷ ಪ್ರತ್ಯಕ್ಷದ ದೈವ
ಅಕ್ಷತನಾರೆರ ತಕ್ಷಣದಲಿ ತಂದ
ಅಕ್ಕರ ಪುರುಷ ಗೋವಿಂದ||ಬಾಬಾ||
ಬಂಗಾರ ರಥದೊಳು ಶೃಂಗಾರ ಪಾದ ಶ್ರೀ
ಮಂಗಳಾಂಗ ಕಾಳಿಂಗ ರಂಗ ನರಸಿಂಗ
ಅಂಗಾ ಸಜ್ಜನಕ ಸಾರಂಗ ರಥಾಂಗಪಾಣಿ
ಸಂಗನಿಸಂಗಮ ತಂದ ವಿಹಂಗ
ಪ್ರಬಂಧ ನಾಯಕ ಪರಿಪಾಲ,
ಸಂಗೀತ ಲೋಲ, ಗೋಪಾಂಗನೆಯರ
ಅಂತರಂಗ ಸಂತಾಪವಿದೂರ||ಬಾಬಾ||
ಭಕ್ತಾವತಾರದ ದೊರೆಯೇ ಹರಿಯೇ
ಧನ ಸಿರಿಯೇ ನಾನು ಮತ್ತೊಬ್ಬರನು ಹೀಗೆ ಕಾಣೆ
ನೃತ್ತರ ಸಂಗಡ ಓಡಾಡುವ ದೊರೆಯೇ
ಬೆನ್ನ ಹತ್ತಿ ಆಡುವ ಮರಿಯೇ
ಚಿತ್ತದೊಲ್ಲಭನಮ್ಮ ವಿಜಯ ವಿಠಲರೇ
ಯತ್ನ ನೋಡಲು ನಿನಗೆ ಸರಿಯೇ
ಅತ್ತಿತ್ತ ಹೋಗದೇ ಇತ್ತ ಬಾರಯ್ಯಾ
ಬೆನ್ಹತ್ತಿ ವೆಂಕಟ ದೊರೆಯೇ||ಬಾಬಾ||
ವಿಜಯದಾಸರು ಬೇಡಿದ ಮೇಲೆ ಇನ್ನು ರಥ ನಿಲ್ಲುವುದುಂಟೇ! ಕೂಡಿದ್ದ ಜನರ ಹರ್ಷೋದ್ಗಾರದೊಂದಿಗೆ ರಥ ಚಲಿಸಿಯೇ ಬಿಟ್ಟಿತು. ಹೀಗೆ ಅವರ ಅನೇಕ ಪವಾಡಗಳ ಬಗ್ಗೆ ಕಥೆಗಳು ಇವೆ. ಅವರ ಶಿಷ್ಯರಾದ ಶ್ರೀ ಮೋಹನದಾಸರಿಗೆ ಜೀವದಾನ ಮಾಡಿದ್ದು, ನೀರಡಿಕೆಯಿಂದ ಬಳಲುತ್ತಿದ್ದ ಕತ್ತೆಗೆ ತಮ್ಮ ಸ್ನಾನಕ್ಕೆಂದು ಇಟ್ಟುಕೊಂಡಿದ್ದ ನೀರನ್ನು ಕುಡಿಸಿ ನಂತರ ಚಿಲುಮೆಯಲ್ಲಿ ನೀರು ಬರುವಂತೆ ಮಾಡಿ ಆಹ್ನಿಕಗಳನ್ನು ಪೂರೈಸಿದುದು, ತನ್ನ ಪರಮಾಪ್ತ ಗೆಳೆಯರಾದ ಕೇಶವರಾಯರ ಮಗನನ್ನು ಬದುಕಿಸಿ ಅವರನ್ನು ಪುತ್ರ ಶೋಕದಿಂದ ಪಾರು ಮಾಡಿದುದು, ಹೀಗೆ ಹತ್ತು ಹಲವಾರು.
ಸಮಾಜದಿಂದ ಬಹಿಷ್ಕೃತಳಾದ ಶ್ರೀಮಂತ ಮಹಿಳೆಯ ಆತಿಥ್ಯ ಸ್ವೀಕರಿಸಿ, ಆಕೆಯ ಶವ ಸಂಸ್ಕಾರಗಳನ್ನು ತಾನೇ ನಿಂತು ಮಾಡಿದರು. ಇಂತಹಾ ಅನೇಕ ಬಗೆಗಳ ಜನಸೇವೆಯನ್ನೂ ಮಾಡಿದ್ದಾರೆ.
ಒಟ್ಟಿನಲ್ಲಿ ಹರಿದಾಸ ಸಾಹಿತ್ಯ ಚರಿತ್ರೆಯಲ್ಲಿ ಶ್ರೀ ವಿಜಯದಾಸರ ಕಾಲ ವಿಶೇಷ ಮಹತ್ವವನ್ನು ಪಡೆದಿದೆ. ಇವರು ತಮ್ಮ ಶಾಸ್ತ್ರ ಗರ್ಭಿತವಾದ ಸುಳಾದಿಗಳಲ್ಲಿ ಸ್ವಧರ್ಮ ನಿಷ್ಠೆಯನ್ನು ತೋರಿಸಿದ್ದಾರೆ. ಇವರ ರಚನೆಗಳಲ್ಲಿ ಮಾನವನ ನಿತ್ಯ ಜೀವನದ ಬಗ್ಗೆ ವಿಶ್ಲೇಷಣೆ ಇದೆ. ರಾಮಾಯಣ, ಮಹಾಭಾರತ ಹಾಗೂ ಪುರಾಣಾದಿಗಳ ವಸ್ತು ವಿಷಯಗಳ ಬಗ್ಗೆ ಉಲ್ಲೇಖಗಳಿವೆ. ಭಗವಂತನ ಲೀಲಾ ವಿನೋದಗಳ ಬಗ್ಗೆ ವೈವಿಧ್ಯಮಯ ಚಿತ್ರಣಗಳಿವೆ. ಇವರ ಇಬ್ಬರು ಪ್ರಮುಖ ಶಿಷ್ಯರು ಎಂದರೆ ದಾಸಪರಂಪರೆಯನ್ನು ಬೆಳೆಸಿದ ಮೋಹನದಾಸರು ಹಾಗೂ ಗೋಪಾಲದಾಸರು. ಇವರು 1755ರಲ್ಲಿ ದೇಹತ್ಯಾಗ ಮಾಡಿದರು.
**************
By Sreedhar
ಅಜ್ಞಾನ ತಿಮಿರಚ್ಛೇದಂ ಬುದ್ಧಿ ಸಂಪತ್ಪ್ರದಾಯಕಂ
ವಿಜ್ಞಾನ ವಿಮಲಂ ಶಾಂತಂ ವಿಜಯಾರ್ಯ ಗುರುಂ ಭಜೇ॥
ವೇದೇತಿಹಾಸ ಪುರಾಣಗಳ ಮಥಿತಾರ್ಥವದ ಈಶ ದಾಸರ ಸ್ವರೂಪ ಹಾಗೂ ಅನುಬಂಧ, ಇಬ್ಬರನ್ನು ಜೋಡಿಸುವ ಭಕ್ತಿಮಾರ್ಗವನ್ನು ಮೊದಲ ಬಾರಿಗೆ ಪ್ರಸ್ತುತಪಡಿಸಿದವರು ಶ್ರೀ ಮಧ್ವಾಚಾರ್ಯರು. ಇವರ ಸ್ಪೂರ್ತಿ, ಅನುಕರಣೆ, ಅನುಸರಣೆ, ಅನುಗ್ರಹಾದಿಗಳಿಂದ ಹುಟ್ಟಿದ್ದು ‘ಹರಿದಾಸ ಸಾಹಿತ್ಯ’. ಈ ಸಾಹಿತ್ಯವನ್ನು ಜಗತ್ತಿಗೆ ನೀಡಿದವರು ಹರಿದಾಸವರ್ಯರು. ಭವ್ಯತೆ ಸಾರಿದ ಮೊದಲ ಪ್ರವರ್ತಕರು ಶ್ರೀಪುರಂದರದಾಸರ ಬಳಿಕ ಐದು ಶತಮಾನಗಳ ಪರಂಪರೆಯುಳ್ಳ ಸಾಹಿತ್ಯದ ಕೇಂದ್ರಬಿಂದು ಶ್ರೀವಿಜಯದಾಸ (1682ರಿಂದ 1755)ರೆಂದರೆ ತಪ್ಪಾಗದು.
ತಾಳಿಕೋಟೆ ಯುದ್ಧದ ನಂತರ ಸಾಮಾಜಿಕ ವಿಘಟನೆಯಾದ ಸಂದರ್ಭದಲ್ಲಿ ಉದಯಿಸಿ ಹರಿದಾಸ ಚತುಷ್ಟಯರೆಂದು ಪ್ರಸಿದ್ಧರಾದ ಪುರುಷರಲ್ಲಿ ಎರಡನೆಯವರು ವಿಜಯದಾಸರು. ದಾಸರ ಜೀವನವೇ ಒಂದು ಅದ್ಭುತ ಪವಾಡದಂತಿದೆ. ಅತಿ ಬಡ ಜೀವನವನ್ನು ಸಾಗಿಸಿ ಅತಿ ಎತ್ತರಕ್ಕೆ ಬೆಳೆದ ಧೀಮಂತ ಪುರುಷರು. ನಿರರ್ಥಕ ಜೀವನವನ್ನು ಸಮರ್ಥ, ಸಾರ್ಥಕವನ್ನಾಗಿಸಿ, ಉನ್ನತ ಸ್ಥಾನ ಪಡೆದವರ ಪುಣ್ಯಸಾಧಕರಿವರು. ಜ್ಞಾನ ಭಕ್ತಿ ವೈರಾಗ್ಯ ಧುರೀಣರು. ಭೃಗು ಋಷಿ ಅಂಶ ಸಂಭೂತರೆಂದು ಪ್ರತೀತಿ.
ಹರಿದಾಸ ಬಂಧುಗಳಿಗೆಲ್ಲ ಇವರೇ ಶ್ರೀರಕ್ಷೆ. ಹರಿದಾಸ ಪರಂಪರೆಯ ರಾಜಹಂಸ. ಅವರ ಕೃತಿಗಳು ವರ್ಣರಂಜಿತ ರಂಗವಲ್ಲಿ ಹಾಕಿರುವ ಸಂಭ್ರಮದ ಆಗರ. ಅಧ್ಯಾತ್ಮಿಕ ಅಭ್ಯುದಯದ ಜೀವ ಸ್ವರ. ದಾಸಸಾಹಿತ್ಯಕ್ಕೆ ಸೈದ್ಧಾಂತಿಕ ಮಹತಿಯನ್ನು ತಂದುಕೊಟ್ಟ ಹಿರಿಮೆ ವಿಜಯದಾಸರದು. ರಸಸಿದ್ಧಿ ಮತ್ತು ವಾಕ್ಸಿದ್ಧಿಗಳಿಂದ ದ್ವೈತಸಿದ್ಧಾಂತದ ಶಾಸ್ತ್ರಪ್ರಮೇಯಗಳನ್ನು ಬರಿಯ ಒಣತತ್ವವಾಗಿ ಮಾತ್ರವೇ ಉಳಿಯಲು ಬಿಡದೆ ನಿತ್ಯಬದುಕಿನಲ್ಲಿ ಅನುಷ್ಠಾನವಾಗುವಂತೆ ಸಕಲರಿಗೂ ಆರ್ಥವಾಗುವ ರೀತಿಯಲ್ಲಿ ಅಭಿವ್ಯಕ್ತಿಸಿ ನವಮನ್ವಂತರವೊಂದನ್ನು ನಿರ್ಮಿಸಿದ ಮನೀಷಿಗಳು.
ಸುಳಾದಿದಾಸರೆಂದೆ ಪ್ರಖ್ಯಾತರಾದ ವಿಜಯದಾಸರು ಕೀರ್ತನೆ, ಉಗಾಭೋಗ, ಸುಳಾದಿಗಳು ಅವ್ಯಾಹತವಾಗಿ ಹೊರಹೊಮ್ಮಿಸುತ್ತಿದ್ದ ವಿಶ್ವಕೋಶವಾಗಿದ್ದರು. ಅವರು ವ್ಯಾಸಸಾಹಿತ್ಯ, ದಾಸಸಾಹಿತ್ಯಗಳೆಂಬ ಜೋಡಿಹಕ್ಕಿಗಳು ಬೀಡುಬಿಟ್ಟಿದ್ದ ಗೂಡು. ವಿಜಯದಾಸರಿಗೆ ಗುರುಕರುಣೆ ದೊರೆತ ಬಳಿಕ ಅಪಾರ ಐಶ್ವರ್ಯ ಹರಿದು ಬರಲು ಪ್ರಾರಂಭವಾಯಿತು. ಹಾಗೆಯೇ ಆಡಿದ ಮಾತು ಹಾಡಾಯಿತು. ನುಡಿದ ವಚನ ಆಶೀರ್ವಾದವಾಯಿತು.
ವಿಜಯನಗರ ಸಾಮ್ರಾಜ್ಯ ಯವನರ ದಾಳಿಗೀಡಾದ ನೂರು-ನೂರೈವತ್ತು ವರ್ಷಗಳ ಕಾಲ ದಾಸ ವಾಙ್ಮಯವಾಹಿನಿಯು ಗುಪ್ತಗಾಮಿನಿಯಾಗಿದ್ದು, ಅದನ್ನು ಪುನರುತ್ಥಾನಗೊಳಿಸಲು ಮಹಾಶಕ್ತಿಯೊಂಸ್ಮರಿಸಿ ಬದುಕಿರೋದು ಅವತರಿಸಿ ಇಂತಹ ಸನ್ನಿವೇಶದಲ್ಲಿ ಜನ್ಮವೆತ್ತಿದವರು ಭಕ್ತಿಯೋಗಿ ವಿಜಯದಾಸರು. ಪುರಂದರ, ಕನಕರಿಂದ ಭಕ್ತಿ ಭಾಗೀರಥಿಯಾಗಿ ಹರಿದು ಬಂದ ದಾಸಸಾಹಿತ್ಯದ ಪ್ರಥಮ ಘಟ್ಟವಾದರೆ, ದ್ವಿತೀಯ ಘಟ್ಟ ಪ್ರಾರಂಭವಾಗುವುದೇ ವಿಜಯದಾಸರಿಂದ; ದಾಸಸಾಹಿತ್ಯವನ್ನು ಪುನರುಜ್ಜೀವನ ಗೊಳಿಸಿದ್ದಲ್ಲದೆ ಹರಿದಾಸ ಪರಂಪರೆಯು ಇವತ್ತಿಗೂ ಅವಿಚ್ಛಿನ್ನವಾಗಿ ಹರಿದು ಬರುವಂತಾಗಿಸಿದ ಕೀರ್ತಿ ಇವರದ್ದು.
ದಾಸವಾಣಿಯ ಶಕ್ತಿ
ಶ್ರೀವ್ಯಾಸರಾಯರ ನಂತರ ಅಪಾರ ಶಿಷ್ಯವೃಂದವನ್ನು ಹೊಂದಿದ ಕೀರ್ತಿ ಶ್ರೀ ವಿಜಯದಾಸರಿಗೆ ಸಲ್ಲುತ್ತದೆ. ಜಗನ್ನಾಥದಾಸರಂತಹ ಪಂಡಿತರನ್ನು ರಂಗನೊಲಿದದಾಸರನ್ನಾಗಿ ಮಾಡಿ ಹರಿಕಥಾಮೃತಸಾರ ಬರೆಯುವಂತೆ ಮಾಡಿದ ಕೀರ್ತಿಶಾಲಿಗಳು. ಕೂಸಿಮಗದಾಸ ಸಮಾಜದ ನಿಂದನೆಗೆ ಪಾತ್ರರಾದ ದಾಸರು. ಪ್ರಕಾಂಡ ಪಂಡಿತರು, ವಿದ್ವನ್ಮಣಿಗಳು ಆದ ಕಲ್ಲೂರು ಸುಬ್ಬಣ್ಣಾಚಾರ್ಯರು, ಮಡಿವಂತಿಕೆಯ ಗಡಿದಾಟಿ ಹೊರಗೆ ಬಂದು ಶ್ರೀದಾಸರ ಶಿಷ್ಯರಾಗಿ ತನ್ಮೂಲಕ ಸಮಾಜಮುಖಿ ಜೀವನಕ್ಕೆ ಊರುಗೋಲಾದ ‘ಭಕ್ತಿ ಪಂಥ’ಕ್ಕೆ ವಿಶಿಷ್ಟ ಕೃತಿಗಳ ಮೂಲಕ ಕೊಡುಗೆ ನೀಡಿದ್ದರು.
ಪುರಂದರದಾಸರು ಪೂರೈಸಬೇಕಿದ್ದ ಐದು ಲಕ್ಷ ಕೃತಿಗಳಲ್ಲಿ ಇವರಿಗಾಗಿ ಇಪ್ಪತ್ತೈದು ಸಾವಿರ ಕೃತಿಗಳನ್ನು ಮೀಸಲಿಟ್ಟರೆಂಬ ಪ್ರತೀತಿ ಇದೆ. ಸಂಖ್ಯೆ ಹಾಗೂ ಸತ್ವದಲ್ಲಿ ಸಾಟಿಯಿಲ್ಲದ ಸಾಧನೆ ಮಾಡಿದ ಇವರ ಮಹತ್ವ ಎಂತಹವರಿಗೂ ಅಚ್ಚರಿಯನ್ನುಂಟುಮಾಡದಿರದು. ಅವರ ಕೃತಿಗಳು ನಮ್ಮೆಲ್ಲರ ಜ್ಞಾನದೀಪಿಕೆ. ಅವರ ಸಾಹಿತ್ಯಾಧ್ಯಯನ, ಸಾಧನ ಸೋಪಾನ ತದನುಸಂಧಾನ ಮೋಕ್ಷ ಮಾರ್ಗ ಪ್ರದೀಪನ. ‘‘ವಿ’ ಎಂದು ಜಪಿಸಿರಲು ವಿರುಕತಿ ದೊರಕುವುದು. ‘ಜ’ ಎನ್ನೆ ಜನನ ಮರಣ ನಾಶವು, ‘ಯ’ ಎನ್ನೆ ಎಲ್ಲದಿಕ್ಕಿಂತ ಭಕ್ತ್ಯಧಿವಿತ್ತು, ‘ರಾಯ’ ಎನ್ನೆ ರಾಯರಾಯನ ತೋರ್ಪುದು’ ಎಂಬ ಗೋಪಾಲದಾಸರ ವಾಣಿಯು, ಗುರುಭಕ್ತಿಯನ್ನು ವಿಜಯದಾಸರ ಶಕ್ತಿಯನ್ನು ಬಹಳ ಚೆನ್ನಾಗಿ ಮನವರಿಕೆ ಮಾಡಿಕೊಡುತ್ತದೆ.
ಸಮಕಾಲೀನ ಬದುಕಿನ ಸಂಕಟಗಳನ್ನು, ತಲ್ಲಣಗಳನ್ನು, ಸಾಮಾಜಿಕ ಪರಿಸ್ಥಿತಿಯನ್ನು ಅವರ ಕೃತಿಗಳಿಂದ ಅರಿಯಬಹುದು. ವ್ಯಕ್ತಿತ್ವದ ನಿರ್ಮಿತಿಯನ್ನು, ಮೌಲ್ಯಗಳ ಪಾತ್ರವನ್ನು ಸೂಕ್ಷ್ಮವಾಗಿ ಹಿಡಿದಿಟ್ಟಿದ್ದಾರೆ. ಧರ್ಮ ತತ್ವಜ್ಞಾನಗಳು ಆಡಂಬರ ಡಾಂಬಿಕತೆಯ ಮುಸುಕಿನಲ್ಲಿ ಮರೆಯಾಗಿದ್ದವು. ಇವೆರಡಕ್ಕೂ ಅಂಟಿದ ಜಿಡ್ಡನ್ನು ತೊಳೆದು ತಿಳಿಯಾಗಿಸಿದವರು ವಿಜಯದಾಸರು.
ಪುರಂದರದಾಸರು, ವಾದಿರಾಜ, ಕನಕದಾಸರೊಂದಿಗೆ ದಿವ್ಯ ಭವ್ಯವಾಗಿ ದಾಸಪರಂಪರೆಯ ಗುಡಿ ಕಟ್ಟಿದರೆ, ವಿಜಯದಾಸರು ಅದಕ್ಕೆ ಶಿಖರವಿಟ್ಟರು. ಗೋಪಾಲದಾಸರು ಕಳಸ ಏರಿಸಿದರು. ಅನಂತರ ಜಗನ್ನಾಥದಾಸರು ದಾಸಕೂಟದ ಘನತೆಗೌರವಗಳನ್ನು ಗಗನದೆತ್ತರಕ್ಕೆ ಎತ್ತಿಹಿಡಿದರು. ನಂತರದ ದಾಸವರೇಣ್ಯರು ಈ ದಾಸಪ್ರಾಸಾದವನ್ನು ತಮ್ಮ ವಿವಿಧ ವಾಙ್ಮಯ ಪ್ರಾಕಾರಗಳಿಂದ ಶೃಂಗರಿಸಿ ಅಲಂಕರಿಸಿದರು.
ವಿಜಯದಾಸರು ಆಯುಷ್ಯದ ಬಹುಭಾಗವನ್ನು ತೀರ್ಥಯಾತ್ರೆಗಳಲ್ಲೆ ಕಳೆದಿರುವರು. ಕ್ಷೇತ್ರ ಪರ್ಯಟನ ಹಿಂದಿನ ಕಾಲದಿಂದ ಬಂದದು. ವಿಜಯದಾಸರು ತಮ್ಮ ದಾಸ ಜೀವಿತದಲಿ ಪ್ರತಿವರ್ಷ ಆಷಾಢ ಶುದ್ಧ ಏಕಾದಶಿಯಂದು ಪಂಢರಾಪುರಕ್ಕೂ, ನವರಾತ್ರಿಯಲ್ಲಿ ತಿರುಪತಿಗೂ, ಮಧ್ವನವಮಿಗೆ ಉಡುಪಿಗೂ ಹೋಗುತ್ತಿದ್ದರಂತೆ. ಜತೆಗೆ ಭರತಖಂಡದ ಎಲ್ಲ ತೀರ್ಥಕ್ಷೇತ್ರಗಳನ್ನು ಎರಡು ಬಾರಿಯಾದರು ಸಂದರ್ಶಿಸಿದ್ದರೆಂದು ತಿಳಿದು ಬರುತ್ತದೆ. ವಿಜಯದಾಸರ ತೀರ್ಥಕ್ಷೇತ್ರ ಸುಳಾದಿಯು ವಾದಿರಾಜರ ತೀರ್ಥ ಪ್ರಬಂಧದಂತೆ ಕನ್ನಡ ದಾಸಸಾಹಿತ್ಯದ ತೀರ್ಥಪ್ರಬಂಧವೆಂದು ಪ್ರಖ್ಯಾತಿ ಪಡೆದಿದೆ.
ಆಂಧ್ರಪದೇಶದ ಗುಂತಕಲ್ಲಿನ ಸಮೀಪ ಭಾಸ್ಕರ ಕ್ಷೇತ್ರವೆನಿಸಿದ ಚಿಪ್ಪಗಿರಿ ತಪೋಭೂಮಿಯಲ್ಲಿ ಕಾರ್ತೀಕ ಶುದ್ದ ದಶಮಿಯಂದು ವೈಕುಂಠವಾಸಿಗಳಾಗಿ, ಈಗಲೂ ಅವರನ್ನು ನಂಬಿ ಬರುವ ಅನೇಕ ಭಕ್ತರ ಅಭಿಷ್ಟಗಳನ್ನು ಪೂರೈಸುವ ಪರಮ ಕಾರುಣ್ಯಮೂರ್ತಿಗಳಾದ ಭೃಗು ಅಂಶ ಸಂಭೂತರಾದ ಶ್ರೀದಾಸರಾಯರ ಆರಾಧನೆ ಚಲಪ್ರತಿಮೆಗಳಾದ ಭೂಸುರ ಭಕ್ತಕೋಟಿಯ ಅಧಿಷ್ಠಾನದಲ್ಲಿ ಅನ್ನ ಸಂತರ್ಪಣೆಯು ನಡೆಯಲಿದೆ.
ವಿಜಯಕವಚದ ವೈಶಿಷ್ಟ್ಯತೆ
‘ಸ್ಮರಿಸಿ ಬದುಕಿರೋ.. ದಿವ್ಯ ಚರಣಕೆರಗಿರೋ..’ ಕಲಿಯುಗದಲ್ಲಿ ನಾಮಸ್ಮರಣೆಗೆ ವಿಶೇಷ ಮಹತ್ವವಿದೆ. ಶ್ರೀಪಾದರಾಜ ವಿರಚಿತ ‘ಕೃತಯುಗದಲ್ಲಿ’ ಎಂಬ ಉಗಾಭೋಗವು ಇದಕ್ಕೆ ನಿದರ್ಶನ. ಹರಿಸ್ಮರಣೆಯಂತೆ, ಯತಿಶ್ರೇಷ್ಟರ, ಹರಿದಾಸರ ಅಷ್ಟೇ ಮಹತ್ವಪೂರ್ಣವಾದುದು. ಇಂತಹ ನಾಮಸ್ಮರಣೆಯ ಸಾಲಿನಲ್ಲಿ ‘ವಿಜಯಕವಚ’ವು ವಿಜಯದಾಸರ ಕೃತಿಗಳಲ್ಲೇ ಅತ್ಯಂತ ಶ್ರೇಷ್ಟವಾಗಿದೆ.
ಗುರುಸ್ತುತಿ ಮಂತ್ರತುಲ್ಯವಾಗಬೇಕಾದರೆ ಅದರಲ್ಲಿ ಗುರುಗಳ ಮಹಿಮಾಶಕ್ತಿ, ತಪೋಬಲ, ಶಿಷ್ಯನ ಮೇಲೆ ಕೃಪೆ, ಶಿಷ್ಯನ ದೃಢವಾದ ಶ್ರದ್ಧೆ, ಗುರುಭಕ್ತಿ ಇವೆಲ್ಲ ಮೇಳೈಸಿರಬೇಕು. ಆಗ ಗುರುವಿನ ಸುಪ್ರಸಾದ ಊರ್ಧ್ವಮುಖಿಯಾದ ಶಿಷ್ಯನೆಡೆ ಹರಿದು ಬರುತ್ತದೆ. ಅಂತಹ ಕೃತಿ ‘ವಿಜಯ ಕವಚ’. ವಿವಿದಾರ್ಥಗಳ ಬೆಳಕು ಹೊರ ಸೂಸುತ್ತ, ಈ ಸ್ತುತಿರತ್ನ ನಂಬಿದವರ ಕಾಮಧೇನು, ಕಲ್ಪವೃಕ್ಷ, ಚಿಂತಾಮಣಿ ಪಠಣೆ, ಚಿಂತನೆ, ಅನುಸಂಧಾನ, ಸಾಧನವೇ ವಿಜಯ ಕವಚ.
ಜನಸಾಮಾನ್ಯರಿಗೆ, ಹಲವು ಸ್ತೋತ್ರಗಳನ್ನು ಹೇಳಲು ಬಾರದವರಿಗೆ, ಅನಕ್ಷರಸ್ಥರು ಸಹ ಕಂಠಪಾಠ ಮಾಡಿ ಹಾಡುವಂತೆ ‘ವಿಜಯಕವಚ’ ರಚಿಸಿ ಮಹದುಪಕಾರ ಮಾಡಿದವರು ಶ್ರೀ ವ್ಯಾಸವಿಠ್ಠಲರು.
ದಿವ್ಯ ಚರಣಕ್ಕೆರಗಿರೋ|
ದುರಿತ ತರೆದು ಪೊರೆವ ವಿಜಯ ಗುರುಗಳೆಂಬರಾ||
ಶ್ರೀ ವಿಜಯರಾಯರ ಆರಾಧನೆಯ ಇನ್ನೂ ೬ ದಿನ. ಅದರ ಪ್ರಯುಕ್ತ ಅವರ ಮಹಿಮೆಯನ್ನು ತಿಳಿಸುವ ಪುಟ್ಟ ಪ್ರಯತ್ನ.
🙏🙏day3
ಒಮ್ಮೆ ಆದವಾನಿಯಲ್ಲಿ ದಿವಾನ್ ತಿಮ್ಮಣ್ಣ ನವರು ಜ್ಞಾನ ಸತ್ರವನ್ನು ಹಮ್ಮಿಕೊಂಡರು.ಅದಕ್ಕೆ ತಮ್ಮ ಗುರುಗಳಾದ ಶ್ರೀ ವಿಜಯದಾಸರು ಮತ್ತು ತಮ್ಮ ಪ್ರಿಯ ಮಿತ್ರರಾದ
ಶ್ರೀಗೋಪಾಲ ದಾಸರು ಮತ್ತು ಅವರ ತಮ್ಮಂದಿರಿಗೆ ಆಹ್ವಾನವನ್ನು ನೀಡುತ್ತಾರೆ.
ಅತೀ ವಿಜೃಂಭಣೆಯಿಂದ ಕಾರ್ಯಕ್ರಮ ಪ್ರಾರಂಭವಾಗುತ್ತದೆ. ದೈವಸಂಕಲ್ಪದಂತೆ ಆ ಊರಿಗೆ ಮಾರಿಕಾ ಉಪದ್ರವ ಹಬ್ಬಿತು. ಉತ್ಸವ ನಡೆಯುವದೋ ಇಲ್ಲವೋ ಎಂಬುದು ಎಲ್ಲಾ ರಿಗು ಆತಂಕವನ್ನು ಉಂಟು ಮಾಡಿತು.ಇತ್ತ ಪಂಗನಾಮ ತಿಮ್ಮಯ್ಯನವರು ಯಾವುದೇ ಕಾರಣದಿಂದ ಕಾರ್ಯಕ್ರಮ ನಿಲ್ಲುವುದಿಲ್ಲ ಎಂದು ತನ್ನ ಕಡೆಯವರಿಗೆ ಹೇಳುತ್ತಾರೆ.
ಪ್ರಾರಬ್ಧ ಕರ್ಮ ಯಾರನ್ನು ಬಿಡುವುದಿಲ್ಲ.
ಇದ್ದಕ್ಕಿದ್ದಂತೆ ಮಾರಿಕಾ ಉಪದ್ರವ ಕ್ಕೆ ಶ್ರೀ ತಿಮ್ಮಣ್ಣ ಯ್ಯನವರು ತುತ್ತಾದರು.
ಒಂದೆರಡು ದಿನದಲ್ಲಿ ಅವರ ವ್ಯಾಧಿ ಉಲ್ಬಣಗೊಂಡು ತಾವು ಇನ್ನೂ ಉಳಿಯುವ ದು ಕಠಿಣ ವೆಂದು ತಿಳಿದು ತಮ್ಮ ಗುರುಗಳಾದ ಶ್ರೀ ವಿಜಯದಾಸರನ್ನು ತಮ್ಮ ಸಮೀಪಕ್ಕೆ ದಯಮಾಡಲು ಪ್ರಾರ್ಥನೆ ಮಾಡಿ,ಅವರನ್ನು ಕರೆಯಿಸಿ
"ಗುರುಗಳೇ ,ತಾನಿನ್ನು ದೇಹತ್ಯಾಗ ಮಾಡುವ ಸ್ಥಿತಿಯಲ್ಲಿ ಇದ್ದೇನೆ.ಈ ಮಂಗಳ ಕಾರ್ಯವನ್ನು ಮುಗಿಸಿ ತಮ್ಮಿಂದ ಆಶೀರ್ವಾದ ತೆಗೆದುಕೊಳ್ಳುವ ಸುಯೋಗ ನನಗಿಲ್ಲ,
ತಮ್ಮ ಬಳಿ ಮೊರೆಹೋಗುವದು ಬಿಟ್ಟು ಬೇರೆ ಉಪಾಯವು ಇಲ್ಲ ವೇ ಇಲ್ಲ
ಎಂದು ಆರ್ತರಾಗಿ ಈ ಕೆಳಗಿನ ಕೃತಿ ರಚಿಸಿದರು.
ಕಾಯೊ ಕಾಯೊ ಕಾಯೋ| ಗುರು ವಿಜಯರಾಯ| ಕಾಯೊ ಕಾಯೊ ವರವೀಯೊ| ವಿಜಯ ಗುರುರಾಯ ನೀನಲ್ಲದೆ ಉಪಾಯವೆ ಯಿಲ್ಲ ||ಪ||
ಪಾಪಗಳೆಣಿಸದೆ ಪಾವನ ಮಾಳ್ಪದು|
ಶ್ರೀಪತಿ ಪಡೆದ ಸುರಾಪಗದಂತೆ ||1||
ದೂರ ನೀ ನೋಡಲು ಆರು ಯಿಲ್ಲವೊ ಗತಿ|
ಕಾರುಣ್ಯದಲಿ ನಿವಾರಿಸು ದುರಿತ||2||
ಸ್ವೀಕರ ಮಾಳ್ಪದು ನೀ ಕರಿಸದೆ |
ಬಲುವ್ಯಾಕುಲನಾಗಿಹೆ ನೀ ಕರುಣದಲಿ ||3|
ಪರಿಹರಿಸಲಿ ಸಲ್ಲ ಕರವಿಡಿ ಬ್ಯಾಗನೆ|
ಗುರುವೆ ನಿಮ್ಮಯ ಚರಣ ಸೇವಕನ ||4|
ನೀನಾಳುವರೊಳು ಈ ನರಮೂರ್ಖನು|
ಏನು ಅರಿಯೆ ಬಲು ದೀನವಾಗಿಹನೊ ||5|
ಆಲಸ ತಾಳದು ಪಾಲಿಸು ವೇಣು ಗೋಪಾಲ ವಿಠಲನ ಆಳು ಕೃಪಾಳೊ||6|
ಆದಿನ ಸಾಯಂಕಾಲ ಇವರ ರೋಗ ಉಲ್ಬಣವಾಗಿದ್ದನ್ನು ಕಂಡು ಶ್ರೀ ಗೋಪಾಲ ದಾಸರ ತಮ್ಮಂದಿರು ವಿಜಯದಾಸರ ಬಳಿ ಹೋಗಿ ಅರಿಕೆಮಾಡಿ ಅವರನ್ನು ಉಳಿಸಿಕೊಡಿರೆಂದು ಪ್ರಾರ್ಥನೆ ಮಾಡುತ್ತಾರೆ.
ಆ ಸಮಯದಲ್ಲಿ ಅಲ್ಲಿ ಇದ್ದ ಗೋಪಾಲ ದಾಸರು ಸಹ ಅವರಿಗೆ ಬಂದ ಅಪಮೃತ್ಯು ಪರಿಹಾರವನ್ನು ಮಾಡಲು ಭಗವಂತನ ಬಳಿ ಪ್ರಾರ್ಥನೆ ಮಾಡುತ್ತಾರೆ.
ಪರಮ ಕೃಪಾಳುಗಳಾದ ವಿಜಯದಾಸರು ಮುಂದೆ ಇವರಿಂದ ಅನೇಕ ಕಾರ್ಯಗಳು ನಡೆಯಬೇಕು ಮತ್ತು ಸಾಧನ ಜೀವಿ ಆದ್ದರಿಂದ ಉಳಿಸಿಕೊಡು ಎಂದು ತಮ್ಮ ಉಪಾಸ್ಯ ಮೂರುತಿಯಾದ ಶ್ರೀ ವಿಜಯವಿಠ್ಠಲನ ಬಳಿ ಪ್ರಾರ್ಥನೆ ರೂಪಕವಾಗಿ ಕೆಳಗಿನ ಸುಳಾದಿ ರಚನೆ ಮಾಡುತ್ತಾರೆ.
ನಂಬಿದೆ ಎಲೊ ಹರಿ ಅಂಬರರುಪಕಾರಿ|
ಬೆಂಬಲವಾಗು ಭವರೋಗ ನೀಗು|
ಡಿಂಬವುಳ್ಳವನ ಕ್ಲೇಶಬಡಿಸುವ| ಶೋಕವೆಂಬುದು ಕಾಣಿಸದಿರು|
ಕೈಯ್ಯ ತೋರು| ..
ನಂತರ ಮುಂದೆ ಹೇಳುತ್ತಾರೆ.
ಅಪಮೃತ್ಯು ಸಮೀಪಿಸಿದೆ| ಎನ್ನ ಅಪಹಾಸವಲ್ಲವೋ|
ಕೃಪೆಯಿಂದ ಲಿ ನೋಡು| ಪರಂಪರ ಮಹಿಮ|
ತಪಸಿಗಳ ಒಡೆಯ ಕಪಿ ವಿಜಯವಿಠ್ಠಲ|
ಉಪಶಮನ ಗೈಸೋ ಉಪಶಮನಗೈಸೋ|
ಜತೆ ತಪ್ಪದಂತೆ ಜತನವ ಮಾಡಿ|
ನಿಜ ಭಾಗವತರೊಳು ಇಡು ನಮ್ಮ ವಿಜಯವಿಠ್ಠಲ ದಕ್ಷ||
ಅವರ ತಲೆಯ ಮೇಲೆ ಕೈಯನ್ನು ಇಟ್ಟು ಸುಳಾದಿ ಮೂಲಕ ತಮ್ಮ ಉಪಾಸ್ಯ ಮೂರುತಿಯಾದ ಶ್ರೀ ವಿಜಯವಿಠ್ಠಲ ಬಳಿ ಪ್ರಾರ್ಥನೆ ಮುಗಿಸುತ್ತಿದ್ದಂತೆಯೇ ಎದ್ದು ಕುಳಿತರು ಶ್ರೀ ತಿಮ್ಮಣ್ಣಯ್ಯನವರು..
ಅವರಿಗೆ ಬಂದ ಅಪಮೃತ್ಯು ತಾನಾಗಿ ದೂರ ಓಡಿ ಹೋಗಿ ಅವರ ಮುಖದಲ್ಲಿ ಗೆಲುವು ಕಂಡು ಅಲ್ಲಿ ಇದ್ದ ಭಕ್ತ ಜನಕ್ಕೆ ಆದ ಆನಂದ ವರ್ಣಿಸಲು ಸಾಧ್ಯವಿಲ್ಲ.
ಮುಂದೆ ಉತ್ಸವವು ಬಹಳ ವಿಜೃಂಭಣೆಯಿಂದ ನಡೆಯಿತು.
ಆ ಉತ್ಸವ ಮುಗಿದ ಒಂದೆರಡು ದಿನದಲ್ಲಿ
ಶ್ರೀ ವಿಜಯದಾಸರ ಬಳಿ ತಿಮ್ಮಣ್ಣಯ್ಯನವರು ಬಂದು
"ಈ ದೇಹವನ್ನು ಇನ್ನೇನು ಬಿಟ್ಟು ಹೋಗಲು ಸಿದ್ದನಿದ್ದ ಶ್ರೀ ಪ್ರಾಣದೇವನನ್ನು ನನ್ನ ಹೃದಯವನ್ನು ಬಿಟ್ಟು ಹೋಗದಂತೆ ಆತನಲ್ಲಿ ಪ್ರಾರ್ಥನೆ ಮಾಡಿ ನನ್ನ ಉಳಿಸಿದಿರಿ".
"ಈ ಸವಿನೆನಪಿಗಾಗಿ ಮುಂದೆ ಬರುವ ನಮ್ಮವರಿಗೆ ಗೊಸ್ಕರವಾಗಿ ಆದವಾನಿಯಲ್ಲಿ ಪ್ರಾಣದೇವರ ಮೂರ್ತಿಯನ್ನು ಪ್ರತಿಷ್ಠಾಪಿಸಿ" ಎಂದು ಕೇಳಿ ಕೊಂಡರು.
ಅದರಂತೆಯೇ ಶುಭ ಮುಹೂರ್ತದಲ್ಲಿ ಶ್ರೀ ವಿಜಯದಾಸರ ಕೈಯಿಂದ ಪ್ರಾಣದೇವರು ಪ್ರತಿಷ್ಠಿತ ಆಯಿತು.
ಈ ಸ್ಥಳವೇ ವಿಜಯರಾಯ ಗುಡಿ ಎಂದು ಪ್ರಸಿದ್ಧ ವಾಗಿದೆ.
ಆದವಾನಿಯಲ್ಲಿ ಊರೊಳಗಡೆ ಇದೆ.
ರಾಯರ ವೃಂದಾವನ ಸಹ ಅಲ್ಲಿ ಇದೆ.
ಇಂದಿಗೂ ಅಲ್ಲಿ ಸೇವೆಯನ್ನು ಮಾಡಿ ಅನೇಕ ಜನ ತಮ್ಮ ತಮ್ಮ ಅಭೀಷ್ಟಗಳನ್ನು ಪಡೆದ ಅಸಂಖ್ಯ ಉದಾಹರಣೆ ಇದೆ.
ಶ್ರೀ ವಿಜಯದಾಸರ ಅಂತರ್ಗತನಾದ ಮಧ್ವವಲ್ಲಭನಾದ ಶ್ರೀ ವಿಜಯವಿಠ್ಠಲ ಪ್ರೀತಿಯಾಗಲಿ.
ಶ್ರೀ ಕೃಷ್ಣಾರ್ಪಣ ಮಸ್ತು🙏
ಇವರನ್ನು ಭಜಿಸಿದರೆ ,ಸೇವಿಸಿದರೆ ಅದರ ಫಲ ಏನು ಅಂತ ಮೋಹನದಾಸರು ಹೇಳುತ್ತಾರೆ.
ಪರಮಧನ್ಯರು ಧರಿಗೆ ಯಾದವ ರರಸ| ಪೊರೆವನು ಕರುಣದಲಿ|
ಭೂಸುರರ ಗುರು ದೊರೆ ಮರುತ ಪೊರೆವನು|
ಸುರರವರ ಕಾದಿಹರು ಯೆನಿಪರ||
|ಅವನಿಯೊಳಿವರನ ಒಲಿಸಿದರೆ| ಪಾವನನಾಗಿ ಪೋಗುವರು|
ಭುವನದೊಳು ಕವಿಗಳೆನಿಸುತ್ತಿಪ್ಪರು|
🙏ಅ.ವಿಜಯವಿಠ್ಠಲ🙏
[12:59 AM, 11/12/2018] +91 95358 37843: ಆಪತ್ತು ಪರಿಹಾರ !!!
ವಿಜಯರಾಯರ ಪಾದವ ನಿ ಭಜಿಸಿ ಬದುಕೆಲೊ ಮಾನವ...
ಶ್ರೀ ವಿಜಯ ದಾಸರ ಮಹಿಮೆ 1
ಶ್ರೀ ಹರಿಭಕ್ತರಿಗೆ ದುರ್ಜನರು ಬಗೆ ಬಗೆಯಿಂದ ಅಪಾಯಗಳನ್ನು ಮಾಡಿ/ಮಾಡಿಸುವದು ಪ್ರಾಚೀನಕಾಲದಿಂದ ನಡೆದು ಬಂದಿದೆ.ವಿಷಪ್ರಾಶನ ಮಾಡಿ ಸಜ್ಜನರಿಗೆ ಪ್ರಣಾಪಾಯ ಮಾಡುವ ಸಂಚುಗಳಲ್ಲಿ ಪ್ರಧಾನವಾದದ್ದು...
ಶ್ರೀ ಭೀಮಸೇನದೇವರಿಗೆ ದುರ್ಯೋಧನ ಕಾಲಕೂಟದಂತಹ ಮಹಾವಿಷವನ್ನೇ ಪ್ರಯೋಗಿಸಿ ಕೊಲ್ಲಲು ಪ್ರಯತ್ನಿಸಿದ್ದು ನಾವು ಮಹಾಭಾರತದಲ್ಲಿ ಕಾಣಬಹುದು..
ಪ್ರಹಲ್ಲಾದ ಬಗ್ಗೆ ಹಿರಣ್ಯಕಶಿಪು ಮಾಡಿದ ಅನೇಕ ವಿಷಪ್ರಾಶನವು ನಾವು ಭಾಗವತದಲ್ಲಿ ಕಾಣುತ್ತೇವೆ..
ಇತ್ತೀಚಿನ ದಿನಗಳಲ್ಲಿ ಶ್ರೀ ವ್ಯಾಸರಾಜರಿಗೆ,ಶ್ರೀ ವಾದಿರಾಜರಿಗೆ, ಶ್ರೀ ವಿಜಯೇಂದ್ರರಿಗೆ,ಶ್ರೀ ಸತ್ಯಭೋದರಿಗೆ,ಹೀಗೆ ವಿಷಪ್ರಯೋಗವಾಗಿದ್ದು ಅದನ್ನು ಅವರು ಶ್ರೀಹರಿಯ ಪರಾಮನುಗ್ರಹದಿಂದ ಪರಿಹರಿಸಿಕೊಂಡಿದ್ದು ನಾವುಗಳು ತಿಳಿಯಾಹುದು..
ಶ್ರೀ ವಿಜಯ ದಾಸರಿಗೂ ಇಂಥಹ ವಿಷಪ್ರಯೋಗ ನಡೆದು ಅದನ್ನು ದಾಸರು ಈ ಕೆಳಗಿನ ಸುಳಾದಿ ಯನ್ನು ರಚಿಸಿ ಶ್ರೀ ಹರಿಯನ್ನು ವಿಶೇಷವಾಗಿ ಸ್ತುತಿಸಿ ಸಂಪೂರ್ಣಗುಣಮುಖರಾದದನ್ನು ಕಾಣಬಹುದು..
ಶ್ರೀ ಭಗವಂತ,ಕರುಣಾಸಾಗರ ತನ್ನವರನ್ನು ಎಂದೂ ಕೈ ಬಿಡನು ಎಂಬುದಕ್ಕೆ ಇದು ನಿದರ್ಶನ.
*ಸೇರಿದೇನೋ ಬಂದು ಸಂಕಟದಲ್ಲಿ ನೊಂದು
ತಾರಿ ತುಟಿಯಾರಿ ದಾನವಾರಿ ಬಹು ದಿನದಲ್ಲಿ ಇದ್ದ ಭವರೋಗ ಹಿಂಗಿತು
ಸಹಿಷ್ಣು ವಿಜಯವಿಠ್ಠಲ ವೈದ್ಯನಿಂದಲಿ*
ಶ್ರೀ ದಾಸಾರ್ಯರ ಸೇವೆಯಲ್ಲಿ...
💐🙏🏼ವಿಜಯ ವಿಠ್ಠಲ..
ಶ್ರೀ ವಿಜಯರಾಯರಿಗೊಲಿದು ಚಿಪ್ಪಗಿರಿಗೆ ಬಂದ ಶ್ರೀ ವೇಣುಗೋಪಾಲಕೃಷ್ಣ "
( ಶ್ರೀ ವಿಜಯರಾಯರು ಚಂದಪ್ಪನ ಮೇಲೆ ತೋರಿದ ಕಾರುಣ್ಯ )
ಶ್ರೀ ವಿಜಯರಾಯರು ಚಿಪ್ಪಗಿರಿಯಲ್ಲಿ ಕುರುಬನಾದ ಚಂದಪ್ಪನಿಗೆ ಶ್ರೀ ವೇಣುಗೋಪಾಲನನ್ನು ತೋರಿಸಿ ಪರಮಾನುಗ್ರಹ ಮಾಡಿದ್ದಾರೆ. ಆ ಕುರಿತು ವಿವರ ಹೀಗಿದೆ...
ತಮ್ಮ ಅವತಾರ ಸಮಾಪ್ತಿ ಕಾಲ ಸಮೀಪಿಸಿತೆಂದು ಜ್ಞಾನಿವರೇಣ್ಯ ಶ್ರೀ ವಿಜಯರಾಯರು ದಿವ್ಯ ಜ್ಞಾನದಿಂದ ತಿಳಿದರು. ಭಗವದಾಜ್ಞೆಯಂತೆ ಒಂದು ದಿನ ಗ್ರಾಮದ ಪೂರ್ವ ಭಾಗಕ್ಕೆ ಆಕಸ್ಮಿಕವಾಗಿ ಹೊರಟರು.
ಅಲ್ಲಿ ದೊಡ್ಡ ದೊಡ್ಡ ವೃಕ್ಷಗಳಿವೆ. ಪರಮ ರಮಣೀಯವಾದ ಸ್ಥಳ. ಅಲ್ಲಿ ಒಂದು ಮಡುವು. ನೀರು ಚೆನ್ನಾಗಿ ಇದೆ. ದೈವ ಯೋಗದಿಂದ ಅಲ್ಲೇ ಸ್ನಾನ ಮಾಡಿ ವೃಕ್ಷದ ಕೆಳಗೆ ಆಹ್ನೀಕ ಮಾಡುತ್ತಾ ಕುಳಿತಿದ್ದಾರೆ. ಮಧ್ಯಾಹ್ನ ಸಮಯ. ಆಗ್ಗೆ ಅಲ್ಲಿಗೆ ಆ ಭೂಮಿಯನ್ನು ಸಾಗು ಮಾಡುವ ಕುರುಬನಾದ ಚಂದಪ್ಪನು ತನ್ನ ಕುರಿಗಳನ್ನು ಮೇಯಿಸಿಕೊಂಡು ನೀರು ಕುಡಿಸಲಿಕ್ಕೆ ಆ ಮಡುವಿಗೆ ಬಂದನು.
ಕುರಿಗಳಿಗೆ ನೀರು ಕುಡಿಸ ಹತ್ತಿದ್ದಾನೆ. ತನ್ನ ಸಾಂಕೇತಿಕ ಶಬ್ದಗಳಿಂದ ಬ್ಯಾ - ಬ್ಯಾ _ ಟರ - ಉಶ ಎಂದು ಕುರಿಗಳನ್ನು ಕರೆಯುತ್ತಿದ್ದಾನೆ. ಇದನ್ನು ನೋಡಿ ಶ್ರೀ ವಿಜಯರಾಯರಿಗೆ ಆನಂದವಾಯಿತು.
ಆಗ್ಗೆ ಶ್ರೀ ವಿಜಯರಾಯರು ತನ್ನ ಹೊಲದೊಳಗೆ ಗಿಡದ ದಡಿಯಲ್ಲಿ ಕುಳಿತು ಪೂಜಾ ಮಾಡುವವರನ್ನು ನೋಡಿ ಚಂದಪ್ಪನು ಬೆರಗಾದನು. ಆತನ ಚಿತ್ತ ವೃತ್ತಿಗಳೆಲ್ಲ ಶ್ರೀ ವಿಜಯರಾಯರ ಕಡೆಗೆ ಸಾಗಿದವು. ಯಾರೋ ಪುಣ್ಯ ಪುರುಷರಾದ ಮಹಾತ್ಮರಿರುವರು. ಅವರನ್ನು ನೋಡುವುದರಿಂದ ಎಷ್ಟು ಮನಸ್ಸಿಗೆ ಸಂತೋಷವಾಗಿದೆಯೆಂದು ಭಾವಿಸುವಾಗಲೇ ಶ್ರೀ ವಿಜಯರಾಯರ ಕೃಪಾ ದೃಷ್ಟಿ ಚಂದಪ್ಪನ ಮೇಲೆ ಬಿದ್ದಿತು.
ಅಪ್ಪಾ ಇಲ್ಲಿ ಬಾ ಎಂದು ಕರೆದೊಡನೆ, ಚಂದಪ್ಪನು ಕುರಿಗಳನ್ನೆಲ್ಲಾ ಬಿಟ್ಟು ಬಹು ಅವಸರದಿಂದ ಶ್ರೀ ದಾಸರಾಯರ ಕಡೆಗೆ ಸಾಗಿದನು. ಸಮೀಪಿಸಲು ಕಾಲೊಳಗಿನ ಕೆರಹು ದೂರ ಬಿಟ್ಟನು. ಕೈಯೊಳಗೆ ಉದ್ದದ ಬಡಿಗೆ ಇದೆ. ಚಣಾಲು ತೊಟ್ಟಾನೆ ಮೇಲೆ ಕಂಬಳಿ ಹೊತ್ತಿದ್ದಾನೆ. ತಲೆಯ ಮೇಲೆ ವಸ್ತ್ರವಿದೆ.
ಎಡಗೈಯ್ಯಲ್ಲಿರುವ ಸೇದುವ ಬತ್ತಿಯನ್ನು ಬಲಗೈಯಲ್ಲಿರುವ ಕೋಲನ್ನು ಬಿಸಾಡಿದನು. ಶ್ರೀ ದಾಸರಾಯರ ಸಮೀಪಕ್ಕೆ ಬಂದು ನೆಲದ ಮೇಲೆ ಉದ್ದಕ್ಕೆರಗಿ ಭಕ್ತಿಯಿಂದ ಶ್ರೀ ವಿಜಯರಾಯರಿಗೆ ನಮಸ್ಕಾರ ಮಾಡಿ ಕೈಜೋಡಿಸಿಕೊಂಡು ನಿಂತನು.
" ಶ್ರೀ ವಿಜಯರಾಯರು "
ನೀನ್ಯಾರು? ನಿನ್ನ ಹೆಸರೇನಪ್ಪಾ?
" ಚಂದಪ್ಪ "
ಸಾಮಿ! ನಾನು ಕುರುಬ. ಚಂದಪ್ಪನೆಂದು ನನ್ನ ಹೆಸರು!
" ಶ್ರೀ ವಿಜಯರಾಯರು "
ಈ ಹೊಲ ಯಾರದಪ್ಪಾ?
" ಚಂದಪ್ಪ "
ಸಾಮಿ ಈ 100 ಎಕರೆ ಇರುವ ಹೊಲ ನನ್ನದು. ನಾನೇ ಈ ಭೂಮಿ ಸೇದ್ಯ ಮಾಡುತ್ತೇನೆ!
" ಶ್ರೀ ವಿಜಯರಾಯರು "
ನೀರು ನಿಂತ ಮಡುವು ನಿನ್ನ ಹೊಲದಲ್ಲಿದೆಯೋ?
" ಚಂದಪ್ಪ "
ಹೌದು. ಮಾಸಾಮಿ! ಈ ಮಡುವು ಸಹ ನನ್ನ ಹೊಲದಲ್ಲಿದೆ. ಕಾರಣ ನನ್ನ ಕುರಿಗಳಿಗೆ ನೀರು ಕುಡಿಸುವ ಸಲುವಾಗಿ ಬಂದಿದ್ದೇನೆ. ಆದರೆ ತಾವು ಯಾರು? ಇಲ್ಲ್ಯಾಕೆ ಬಂದೀರಿ?
" ಶ್ರೀ ವಿಜಯರಾಯರು "
ಚಂದಪ್ಪ ನಾನು ದಾಸ! ದೇವರು ನಿನ್ನ ನೀರಿನ ಮಡುವಿನಲ್ಲಿರುವನು. ಅದಕ್ಕೆ ನಾನು ಬಂದು ನಿನ್ನ ಮಾಡುವಿನಲ್ಲೇ ಸ್ನಾನ ಮಾಡಿ ಇಲ್ಲೇ ಪೂಜೆ ಮಾಡುತ್ತೇನೆ!
" ಚಂದಪ್ಪ "
ಯಪ್ಪಾ! ದಾಸರೇ ನಾನು ದಿನಾ ಕುರಿಗಳಿಗೆ ನೀರು ಕುಡಿಸಾಕ ಬರತೀನಿ. ಹೊಲಾ ಮಾಡಿಕೊಂಡು ಇಲ್ಲೆ ಇರತೀನಿ. ಮಡುವಿನಲ್ಲಿ ಮೈ ತೊಳುಕೋತೀನಿ. ಎಷ್ಟೋ ವರ್ಸ ಆಗಾಕ ಬಂತು ಸಾಮಿ ನಾನು ನಿಮ್ಮ ದೇವರನ್ನು ನೋಡಿಲ್ಲ. ನೀವು ಹೇಳೋದು ಕರೆ ಕಾಣಾದಿಲ್ಲಪ್ಪಾ ಎಂದು ನುಡಿದನು.
" ಶ್ರೀ ವಿಜಯರಾಯರು "
ನಮ್ಮ ದೇವರು ನಿನಗೆ ಕಾಣುವುದಿಲ್ಲ. ನಾನು ನಿನಗೆ ತೋರಿಸುತ್ತೇನೆ. ಬಾ ನಡೆ ಚಂದಪ್ಪ ಎಂದು ಹೇಳಿದರು.
" ಚಂದಪ್ಪ "
ಬಾ ಯಪ್ಪಾ! ತಂದೆ ನಡೆ ನನಗೂ ಮಕ್ಕಳು ಮರಿ ಕಾಲಾಗ ಸಂಸಾರ ಬ್ಯಾಸರಿಕಾಗೇದ. ದೇವರನ್ನಾದರೂ ತೋರಿಸೋದು ಯಾರು?
" ಶ್ರೀ ವಿಜಯರಾಯರು "
ಎದ್ದು ನಡೆ ಚಂದಪ್ಪ ಎಂದು ಮಡುವಿನ ಹತ್ತಿರ ಬಂದು ಇಕೋ ನೋಡು ಚಂದಪ್ಪ ಈ ಮಡುವಿನ ನಡುವೆ ಸ್ವಲ್ಪ ಸಮೀಪದಲ್ಲೇ ನಮ್ಮ ದೇವರಿದ್ದಾನೆ ನೀನು ಮುಳುಗಿ ತೆಗೆಯಪ್ಪಾ!
" ಚಂದಪ್ಪ "
ಸಾಮಿ ಮುಳಗಾಕ ನೀರು ಏಟ ಅವ ಬಿದವಪ್ಪಾ ಟೊಂಕ ಮಟ ನೀರಿಲ್ಲ. ಬಿಡಪ್ಪ ಬಿಡು ತಲೆ ಮೇಲಿನ ಸುತ್ತಿದ ವಸ್ತ್ರವನ್ನು ತೆಗೆದು ಉಟ್ಟ ಚಲ್ಲಾಣ ಬಿಟ್ಟು ಕಂಬಳಿ ದಡಕ್ಕಿಟ್ಟನು.
" ಶ್ರೀ ವಿಜಯರಾಯರು "
ಇಕೋ ಚಂದಪ್ಪ ನೀನು ಹುಡುಕಿ ಶ್ರಮ ಪಡಬೇಡ. ನೋಡು ಇದೇ ಜಾಗದಾಗ ದೇವರಿದ್ದಾನೆ. ಮುಣುಗಿ ತೆಗೆಯೆಂದು ಈ ಸ್ಥಳಕ್ಕೆ ಬಂದು ಹರಳು ಒಗೆದು ತೋರಿಸಿದರು
" ಚಂದಪ್ಪ "
ಅಯ್ಯೋ ಯಪ್ಪಾ! ಏಟೋಸಾರೆ ಈ ಜಾಗದಾಗ ನೋಡೀವಿ ಬಿಡಪ್ಪ ಅಲ್ಲೇ ದೇವರೆಲ್ಲಿ?
" ಶ್ರೀ ವಿಜಯರಾಯರು "
ಈಗ ನೋಡು ನೋಡು ಚಂದಪ್ಪ ಒಂದು ಕರಿ ಕಲ್ಲು ಇದೆ ಅದನ್ನು ತೆಗೆಯಪ್ಪಾ!
" ಚಂದಪ್ಪ "
ಸಾಮಿ ದಾಸರೇ ನಾನು ನೀರಾಗ ಹೋಗಿ ವುಡುಕಿ ತೆಗಿತ್ತೀನಿ ನನ್ನ ಕುರಿಗಳು ಅತ್ತಾಗಿತ್ತಾಗಿ ವೋದಾವು ಬಡಗಿ ತೆಕ್ಕೆ೦ಡು ಕರೀರಿ.
" ಶ್ರೀ ವಿಜಯರಾಯರು "
ಹಾಗೆ ಆಗಲಪ್ಪಾ! ಎಂದು ಕುರಿಗಳನ್ನೆಲ್ಲಾ ಟರ ಟರ ಬ್ಯಾ ಬ್ಯಾ ಎಂದು ಅವನ ಮಾತಿನಿಂದಲೇ ಕರಿಯ ಹತ್ತಿದರು. ಮೇಲಿನ ಕುರಿಯೆಲ್ಲ ನೀರೊಳಗಿದ್ದ
ಕುರಿ = ತನ್ನ ಗುರುತಾದ ಹರಿಯನ್ನು
ಕುರಿ = ಉದ್ಧೇಶಿಸಿ ಬಾ ಬಾ
ಎಂದು ಕರಿಯ ಹತ್ತಿದವು. ಚಂದಪ್ಪ ನೀರೊಳಗೆ ಇಳಿದಾನೆ ದಾಸರು ತೋರಿಸಿದ ಸ್ಥಳಕ್ಕೆ ಹೋಗಿ ಹುಡುಕಾಡುವುದರಲ್ಲಿ ಒಂದು ಬಂಡೆ ಕಲ್ಲು ಕಾಲಿಗೆ ಹತ್ತಿತು.
" ಚಂದಪ್ಪ "
ಯಪ್ಪಾ ದಾಸರೇ! ಇಲ್ಲಿ ಒಂದು ಬಂಡೆಕಲ್ಲು ಇದೆ. ಎಷ್ಟೋ ಸಾರೆ ಕಾಲಿಗೆ ಹತ್ತಿದೆ. ನೋಡೀವಿ ದೇವರೆಲ್ಲಿ ಸಾಮಿ?
" ಶ್ರೀ ವಿಜಯರಾಯರು "
ಅಲ್ಲೋ ಚಂದಪ್ಪಾ! ನೀನು ನೀರೊಳಗೆ ಇರುವ ಬಂಡೆ ಮಾತ್ರ ನೋಡಿದ್ದಿ. ಸ್ವಲ್ಪ ಕಸವು ಹಾಕಿ ಆ ಬಂಡೆ ಮೇಲಕ್ಕೆ ತೆಗೆ. ಅದರಲ್ಲಿ ದೇವರು ಇರುವನು.
" ಚಂದಪ್ಪ "
ಹಾಗೆ ಆಗಲಪ್ಪಾ ಎಂದು ನೀರೊಳಗೆ ಮುಳಿಗಿದೆ ಕಸುವಿನಿಂದ ಆ ಬಂಡೆಯನ್ನು ಮೇಲಕ್ಕೆ ತೆಗೆವ. ನೋಡಪ್ಪಾ ನೋಡಿ ಬರಿ ಬಂಡಿ ದೇವರಲ್ಲಪ್ಪಾ?
" ಶ್ರೀ ವಿಜಯರಾಯರು "
ಚಂದಪ್ಪ ಅವಸರ ಬೇಡ. ಆ ಬಂಡೆಯನ್ನು ದಂಡೆಗೆ ತಾ ತಿರುಹಿ ನೋಡು ದೇವರು ಇದ್ದಾನೆ!
" ಚಂದಪ್ಪ "
ಮುದುಕನಾದರೂ ನೀರೊಳಗಿನಿಂದ ಬಂಡೆಯನ್ನು ಸಾಗಿಸಿ ದಂಡೆಗೆ ತಂದು ಆತುರದಿಂದ ಬಂಡೆಯನ್ನು ತಿರುಹಿ ನೋಡುತ್ತಾನೆ. ದಿವ್ಯವಾದ ಶ್ರೀ ವೇಣುಗೋಪಾಲಕೃಷ್ಣದೇವರ ವಿಗ್ರಹ ನೋಡಿದೊಡನೆ ಬೆರಗಾಗಿ ನಿಂತನು.
" ಶ್ರೀ ವಿಜಯರಾಯರು "
ನೀನು ಧನ್ಯನಪ್ಪಾ! ನಮ್ಮ ದೇವರನ್ನು ನಿನ್ನ ಹೊಲದ ಮಡುವಿನೊಳಗೆ ಕಾದಿಟ್ಟು ಇಂದು ನಮಗೆ ಕೊಟ್ಟಿಯೆಂದು ನುಡಿದರು. ಚಂದಪ್ಪನು ಮತ್ತು ಆಶ್ಚರ್ಯ ಪಟ್ಟು ಶ್ರೀ ದಾಸರು ದೊಡ್ಡವರಿದ್ದಾರೆಂದು ತಿಳಿದನು. ಶ್ರೀ ದಾಸರಲ್ಲಿ ಪರಮ ವಿಶ್ವಾಸ ಪುಟ್ಟಿತು ಆಗ್ಗೆ.
" ಚಂದಪ್ಪ "
ದಾಸಪ್ಪಾ! ನೀನು ಬಾಳಾ ದೊಡ್ಡಾತ. ನಮ್ಮ ದೇವರನ್ನು ತೋರಿಸಿದಿ. ದೇವರನ್ನು ಈ ಗಿಡದ ಬುಡದಾಗೆ ಇಡು. ನೀನೂ ಇಲ್ಲೇ ಇರು. ನಾನು ನಿತ್ಯ ಹಾಲು ತಂದುಕೊಡುತ್ತೇನೆಂ
ದು ಅಂದನು!
" ಶ್ರೀ ವಿಜಯರಾಯರು "
ಹಾಗೆ ಆಗಲಪ್ಪಾ! ಎಂದು ಮಣ್ಣು ಕೆಸರು ಹತ್ತಿದ ವಿಗ್ರಹವನ್ನು ಚೆನ್ನಾಗಿ ಪರಿಶೋಧಿಸಿದರು ಮತ್ತು ಆ ವಿಗ್ರಹವನ್ನು ಅಲ್ಲೇ ಪ್ರತಿಷ್ಠಾಪಿಸಿದರು.
ಚಂದಪ್ಪನು ತನ್ನ ಸರ್ವವೂ ದಾಸರೆಂದು ಭಾವಿಸಿದನು. ಅವನಿಗೆ ಮಂತ್ರೋಪದೇಶ ಮಾಡಿದರು. ಅವನ ಸಾಧನಕ್ಕೆ ಮಾರ್ಗವಾದೀತು.
ಯಾವ ಕುಲದವನಾದರೇನು?
ಯಾವ ಜಾತಿಯಾದರೇನು?
ಭಕ್ತಿಯು ಮುಖ್ಯ.
ಗುರುವಿನೊಲುಮೆ ಮುಖ್ಯ ಕಾರಣ.
ಚಂದಪ್ಪನು ಸಹ ಎಂಥ ಭಾಗ್ಯವಂತ. ಎಲ್ಲವೂ ದಾಸರ ಚರಣಕ್ಕೆ ಅರ್ಪಿಸಿ ಶ್ರೀ ದಾಸರಾಯರ ಸೇವೆಗೆ ನಿಂತು ಸಂಸಾರದಿಂದ ಬಿಡುಗಡೆ ಹೊಂದಿದ.
[11:33 PM, 11/13/2018] +91 95358 37843: ಶ್ರೀ ಗೋಪಾಲದಾಸರಿಗೆ ಅಂಕಿತ ಪ್ರಾಪ್ತಿ.. 💐
ವಿಜಯರಾಯರ ಪಾದವ ನಿ ಭಜಿಸಿ ಬದುಕೆಲೊ ಮಾನವ...
ಶ್ರೀ ವಿಜಯ ದಾಸರ ಮಹಿಮೆ 2
ಒಂದು ದಿನ,ಶ್ರೀವಿಜಯದಾಸರು,ಭಾಗಣ್ಣ ಜನರಿಗೆ ಭವಿಷ್ಯಹೇಳುವ ಸಮಯದಲ್ಲಿಯೇ,ತಾವು ಅಲ್ಲಿಗೆ ಹೋಗಿ ಕುಳಿತರು,ಶ್ರೀ ದಾಸರ ಸನ್ನಿಧಾನದಿಂದ ಭಾಗಣ್ಣನ ತೇಜಸ್ಸು ಸ್ವಲ್ಪ ಕುಂದಿದಂತಾಯ್ತು.ಭಾಗಣ್ಣನ ಭವಿಷ್ಯ ಹೇಳುವ ವ್ಯಾಪಾರ ನಿಂತಿತು.ಭಾಗಣ್ಣನಿಗೆ ಯಾವತ್ತೂ ಇಂತಹ ಅನುಭವವಾಗಿರಲಿಲ್ಲವಾದ್ದರಿಂದ ತ್ರಿವ ಗಾಭರಿಯಾಯಿತು.ಹೀಗೇಕೆ ಆಯಿತೆಂದು ಸುತ್ತಮುತ್ತ ನೋಡುವಾಗ, ಮಂದಹಾಸ ಮಾಡುತ್ತಿರುವ ಶ್ರೀ ದಾಸರ ದರ್ಶನವಾಯಿತು .ತಕ್ಷಣ ಜನ್ಮ ಜನಾಂತರದ ಸಂಸ್ಕರದಿಂದ ಶ್ರೀ ವಿಜಯದಾಸರಿದಲ್ಲಿ ತಾನಾಗಿ ಬಂದು ನಮಸ್ಕರಮಾಡಿ,ಸುಮ್ಮನೆ ನಿಂತಾಗ-' ಇದೇನು ಭಾಗಣ್ಣ ಅಂಗಡಿಬಿಚ್ಚಿಕೊಂಡು ಕುಳಿತಿದ್ದಿ,ಸಾಕುಮಾಡು ಈ ಕೆಲಸ' ಎಂದು ಹಿತೋಪದೇಶನುಡಿದರು. ದಾಸರ ಹಸ್ತಸ್ಪರ್ಶದಿಂದ ಭಾಗಣ್ಣನ ಭವಿಷ್ಯದ ಭಾಗ್ಯದ ಬಾಗಿಲುತೆರೆಯಿತು .ತಮ್ಮ ಸ್ವರೂಪೋದ್ಧಾರಕರು ತಾವಾಗಿಯೇ ದಾಯಮಾಡಿದ್ದಾರೆ ಎಂಬುದು ಹೊಳೆಯಿತು.ಶ್ರೀದಾಸರ ಪಾದದಲ್ಲಿ ತಲೆಬಾಗಿ ನಮಸ್ಕರಿಸಿ ಉದ್ಧರಿಸಲು ಬೇಡಿಕೊಂಡರು.ಭಾಗಣ್ಣನ ಪರಿಪಕ್ವ ಸ್ಥಿತಿಗಾಗಿ ಕಾಯುತ್ತಿದ್ದ ಶ್ರೀ ವಿಜಯದಾಸರು ಅಂಕಿತವನ್ನು ಸಮೀಪದಲ್ಲೇ ಶ್ರೀ ವ್ಯಾಸರಾಜರು ಪ್ರತಿಷ್ಠಿತ ಮಂಗರಾಯನ ಸನ್ನಿದಾನದಲ್ಲಿ ಶ್ರೀ ಗೋಪಾಲ ವಿಠ್ಠಲ ಎಂದು ಅಂಕಿತವಿತ್ತು-ಉಪದೇಶಿಸದರು
ಅಂಕಿತೋಪದೇಶ ಸಮಯದಲ್ಲಿ ಶ್ರೀ ವಿಜಯದಾಸರು ತಮ್ಮ ಬಿಂಬರೂಪಿಯಾದ 'ಶ್ರೀ ಗೋಪಾಲವಿಠ್ಠಲ'ನಲ್ಲಿ ಈ ರೀತಿ ಪ್ರಾರ್ಥಿಸಿದರು...
ಗೋಪಾಲವಿಠ್ಠಲ ನಿನ್ನ ಪೂಜೆಮಾಡುವೇನೋ
ಕಾಪಾಡು ಈ ಮಾತನು|
ಅಪಾರ ಜನುಮದಲ್ಲಿ* ಕೂಡಿದವನ ಮ್ಯಾಲೆ
ನೀ ಪ್ರೀತಿಯನು ಮಾಡಿ ನಿಜದಾಸರೊಳಗಿಡು|
ಗೋಪಾಲವಿಠ್ಠಲ! ಈ ಭಾಗಣ್ಣ ಅಪಾರಾಜನುಮಗಳಲ್ಲಿ ನನ್ನೊಂದಿಗೆ ಇದ್ದು, ನನ್ನ ಅಂತರ್ಯಾಮಿಯನ್ನು ಸೇವಿಸಿದವ, ಇವನು ನನ್ನವನಾದ್ದರಿಂದಲೇ ನೀನು ಈತನಲ್ಲಿ ವಿಶೇಷ ಪ್ರೀತಿಯನ್ನು ಅಭಿವ್ಯಕ್ತಗೊಳಿಸಿ,ನಿನ್ನ ನಿಜದಾಸರ ಸಂಗ-ಸಹವಾಸದಲ್ಲಿ ಈತನನ್ನು ಇರಿಸು ಎಂದು ಶ್ರೀ ವಿಜಯದಾಸರು ಪ್ರಾರ್ಥನೆ ಮಾಡಿದರು...
ಹೀಗೆ ಶ್ರೀ ವಿಜಯದಾಸರು ಭಾಗಣ್ಣನಿಗೆ 'ಗೋಪಾಲ ವಿಠ್ಠಲ' ಎಂಬ ಅಂಕಿತ ಪ್ರದಾನಮಾಡಿ ಆತನ ಮೇಲೆ ತಮ್ಮ ಕಾರುಣ್ಯವನ್ನು ಹೊರಹೊಮ್ಮಿಸಿದ ನಂತರ ಶ್ರೀ ಭಾಗಣ್ಣ 'ಗೋಪಾಲವಿಠ್ಠಲ'ರೆಂದೇ ಪ್ರಸಿದ್ದರಾದರು.
ಶ್ರೀ ವಿಜಯಪ್ರಭುಗಳಂಥ ಗುರುಗಳಲ್ಲಿ ಅಂಕಿತ ಪಡೆದ ಶ್ರೀ ಭಾಗಣ್ಣ ದಾಸರೆ ಧನ್ಯ....
ಬಲ್ಲಿದ ನೀನೊಂದು ರೂಪದಿ ಏನ್ನಲ್ಲಿ ವಿಜಯರಾಯ
ನಿಲ್ಲಿಸಿದ್ದಕ್ಕೆ ಎಲ್ಲ ಜನರು ಓಲೈಸೋರು ವಿಜಯರಾಯ..
ಶ್ರೀ ದಾಸಾರ್ಯರ ಸೇವೆಯಲ್ಲಿ...
💐🙏🏼ವಿಜಯ ವಿಠ್ಠಲ🙏🏼💐
[11:54 PM, 11/13/2018] +91 95358 37843: ಶ್ರೀ ವಿಜಯದಾಸರ ಮೇಲೆ ಶ್ರೀಹರಿಯ ಕೃಪೆ
°°°°°°°°°°°°°°°°°°°°°°°°°°°°°°°°°°°°°°°°°°°°°°°°°°°°°°°°°
ಹೇ ಶ್ರೀ ಹರಿ.ನಿನ್ನ ಒಲಿಮೆಯಾದರೆ ಸಮಸ್ತ ಜನರೂ ಮನ್ನಿಸುತ್ತಾರೆ
ಹೇ ಮಹರಾಯ ಇದು ನನ್ನ ಪುಣ್ಯದಿಂದ ನಡೆಯುವುದಲ್ಲ.ನೀನು ದಯಪಾಲಿಸಿದ್ದುದೇ ಸರ್ವಸಂಪತ್ತು ಮೊದಲಿಗೆ ಮಾಸಿದ ಹರಿದ ಅರಿವೆ ಸಹ ಕಾಣದವನಾಗಿದ್ದೆ.ಈಗ ನೀನು ಒಲಿಯಲು ಉಣ್ಣೆಶಹಲು ಶಕಲಾತಿಗಳು ನಾನಾ ಪರಿಯಿಂದು ದೊರೆಯುವುದು ನೋಡಿದರೆ ಆಶ್ಚರ್ಯವಾಗುತ್ತಿದೆ. ಹಿಂದೆ ಸಂಜೆ ತನಕ ಉಪವಾಸವಿದ್ದು ಸಣ್ಣ ಸವಟು ತುಂಬ ಅಂಬಲಿ ಕಾಣದೆ ಇದ್ದೆ.ಹೇ ಶ್ರೀ ಹರಿ! ಈಗ ನಾನಾ ವ್ಯಂಜನ ಪದಾರ್ಥಗಳು ಸ್ವಾದೋಪೇತ ರಸಾಯನ ಸವಿ ಪದಾರ್ಥ ಗಳನ್ನು ಉಣಿಸುತ್ತಿರುವಿಯಲ್ಲಾ! ಈ ಎಲ್ಲ ಅನುಭವಗಳನ್ನೆಲ್ಲಾ "ನಿನ್ನ ಒಲಿಮೆಯಿಂದ ನಿಖಿಳ ಜನರು ಬಂದು ಮನ್ನಿಸುವರೊ ಮಹಾರಾಯ" ಎಂಬ ದೇವರನಾಮದಲ್ಲಿ ತಾವು ವಿಜಯದಾಸರಾದ ಮೇಲೆ ರಚಿಸಿದ ದೇವರನಾಮದಲ್ಲಿ ವಿಸ್ತಾರವಾಗಿ ತಿಳಿಸಿದ್ದಾರೆ.
ದಾಸಪ್ಪ ಚೀಕನಬರವಿಯಲ್ಲಿ ಸಂಸಾರ ನಡೆಸುತ್ತಿರುವಾಗ್ಗೆ ಕೆಲವು ಕಾಲ ಮೌನದಿಂದ ತಪಶ್ಚರ್ಯ ಮಾಡುತ್ತಿದ್ದರು.ಅಹಿಕ ಸುಖಸಂಪತ್ತನ್ನು ಎಂದೆಂದೂ ಬಯಸದ ದಾಸಪ್ಪ ನಿತ್ಯ ಪ್ರಾತಃ ಕಾಲಕ್ಕೆ ತಮ್ಮ ಸ್ನಾನನ್ಹೀಕ ಮುಗಿಸಿ ಹೊರಟು ಏಕಾಂತ ಸ್ಥಳದಲ್ಲಿ ತಪನ್ನಾಚರಿಸುತ್ತಾ ಇದ್ದು ಮುಸ್ಸಂಜೆ ವೇಳಗೆ ಮನೆಗೆ ಹಿಂತಿರುಗುತ್ತಿದ್ದರು.ಯಾವ ಲೌಕಿಕ ಗದ್ದಲವನ್ನೂ ಹಚ್ಚಿಕೊಂಡರಲಿಲ್ಲ..........ಒಂದು ದಿವಸ ಮಾಮೂಲಿ ನಂತೆ ತಪಸ್ಸಿಗಾಗಿ ಹೋಗಿದ್ದಾನೆ.ಮನೆಯಲ್ಲಿ ತಾಯಿ ಕೂಸಮ್ಮ ಮಾತ್ರ ಶ್ರೀಹರಿಧ್ಯಾನ ಮಾಡುತ್ತಾ ಮಗನ ಬರುವಿಕೆಯನ್ನು ನಿರೀಕ್ಷಿಸುತ್ತಾನೆ ಕುಳಿತಿದ್ದಾರೆ.ಅರಳಮ್ಮ ಸಮೀಪದ ತನ್ನ ಮಿತ್ರರ ಮನೆಗೆ ಹೋಗಿದ್ದಾಳೆ ಒಳ್ಳೆಯ ಮಧ್ಯಾಹ್ನದ ಸಮಯ ಬೀದಿಯಲ್ಲಿ ಯಾರ ಸುಳಿವೂ ಇಲ್ಲ.
ಆಗ್ಗೆ ಹೊರಗಿನ ಬಾಗಿಲು ಬಳಿ ಪೈಜಣ, ರುಳಿ,ಗೆಜ್ಜೆಗಳ ಸಪ್ಪಳವಾಯಿತು.ಮನೆಯ ಮುಂಬಾಗಿಲು ತೆಗೆದೇ ಇದ್ದುದರಿಂದ ಒಬ್ಬ ಸುಂದರ ಮುತ್ತೈದೆ ಒಳ್ಳೇ ಜರತಾರಿ ಪೀತಾಂಬರವನ್ನುಟ್ಟು ಕೈಯಲ್ಲಿ ಒಂದು ದೊಡ್ಡ ತಟ್ಟೆಯ ತುಂಬ ಸುಗಂಧೋಪೇತವಾದ ಪಕ್ವಾನ್ನವನ್ನು ಇಟ್ಟುಕೊಂಡು ಮತ್ತೊಂದು ಕೈಯಲ್ಲಿ ಕೇಸರೀ ನೀರು ತುಂಬಿದ್ದ ತಂಬಿಗೆ ಹಿಡಿದು ಬಾಗಿಲು ಬಳಿಗೆ ಬಂದು ಅಮ್ಮಾ ಎಂದು ಕೂಗುತ್ತಾ ದಾಸಪ್ಪ ಮನೆಯ ಒಳಗೆ ಬಂದಳು.ಈಕೆಯ ದರ್ಶನದಿಂದ ಆಶ್ಚರ್ಯಗೊಂಡ ಕೂಸಮ್ಮ ಆಕೆಯನ್ನು ಆದರದಿಂದ ಬರಮಾಡಿಕೊಂಡು "ನೀನ್ಯಾರಮ್ಮಾ" ಎಂದು ಕೇಳಿದಳು......ಆ ಮುತ್ತೈದೆಯಾದರೋ ತನ್ನ ಕೈಗಳಲ್ಲಿದ್ದುದನ್ನೆಲ್ಲಾ ಕೆಳಗೆ ಇಟ್ಟು ಕೂಸಮ್ಮಗೆ ಪ್ರಣಾಮಗೈದು,ನಾನೊ ಬ್ಬ. ದಾಸಿ ನಮ್ಮ ಪತಿಗಳು ನಾರಾಯಣರಾಯರು.ದಾಸಪ್ಪನ ಮಿತ್ರರು.ಇಂದು ಶ್ರೀ ಅಶ್ವತ್ಥ ನರಸಿಂಹ ದೇವರಿಗೆ ವಿಶೇಷ ಪೂಜೆ ನೈವೇಧ್ಯೆ ಮಾಡಿ ದಾಸಪ್ಪಗೂ ಊಟಕ್ಕೆ ಹೇಳಿದ್ದು ಇಷ್ಟು ಹೊತ್ತಾದರೂ ಅವರು ಬರಲಿಲ್ಲವಾಗಿ ಪ್ರಸಾದಗಳನ್ನೆಲ್ಲಾ ಈ ತಟ್ಟೆಯಲ್ಲಿ ಮುಚ್ಚಿ ಕಳುಹಿಸಿದ್ದಾರೆ.ತಂಬಿಗೆಯಲ್ಲಿ ನೀರು ಸಹ ಕಳುಹಿಸಿದ್ದಾರೆ.ದಯಮಾಡಿ ನೀವೆಲ್ಲರೂ ಸ್ವೀಕರಿಸಲು ಯಜಮಾನರು ತಿಳಿಸಿದ್ದಾರೆ.ನಾನು ಹೋಗಿ ಬರುತ್ತೇನೆ ಎಂದು ಕೂಸಮ್ಮಗೆ ನಮಸ್ಕರಿಸಿ ಹೊರೆಡಲುದ್ಯುಕ್ತಳಾದಾಗ ಆಶ್ಚರ್ಯಚಿಕಿತಳಾದ ಕೂಸಮ್ಮ ಮುತ್ತೈದೆಯನ್ನು ಕುರಿತು ನಿನ್ನ ಹೆಸರು ತಿಳಿಸಮ್ಮಾ ಯಾವ ಊರು, ಮುತ್ತೈದೆಯರು ಮನೆಗೆ ಬಂದರೆ ಕುಂಕುಮ ಹಚ್ಚಿಕೊಂಡು ಹೋಗಬೇಕೆಂದು ಕುಂಕುಮದ ಬಟ್ಟಲನ್ನು ಆಕೆಯ ಮುಂದೆ ಹಿಡಿದಳು.ಆಗ್ಗೆ ನನ್ನ ಹೆಸರು ಲಕ್ಷ್ಮಕ್ಕ ಎಂದು ಹೇಳಿ ಕುಂಕುಮ ಧಾರಣೆ ಮಾಡಿ ಹೊರಟೇಬಿಟ್ಟಳು.ಈ ವಿಚಿತ್ರ ಘಟನೆಯಿಂದ ಎಚ್ಚೆತ್ತುಕೊಳ್ಳಲು ಕೂಸಮ್ಮನಿಗಾದರೋ ಸ್ವಲ್ಪ ಸಮಯ ಹಿಡಿಯಿತು.ನಂತರ ಹೊರಗೆ ಹೋಗಿ ನೋಡುವಾಗ ಯಾರು ಕಾಣಲಿಲ್ಲ.ಆ ವೇಳೆಗೆ ಸೊಸೆ ಅರಳಮ್ಮ ವಾಪಸ್ಸಾದಳು.ಈ ಪದಾರ್ಥ ಗಳನ್ನು ಕಂಡು ಆಕೆಗೂ ಆಶ್ಚರ್ಯವಾಗಿ ಅತ್ತೆಯಿಂದ ನಡೆದ ಸಮಾಚಾರ ತಿಳಿದುಕೊಂಡು ದಾಸಪ್ಪ ತನಗಾಗಲೀ ತಮ್ಮ ತಾಯಿಗಾಗಲೀ ಇದರ ಬಗ್ಗೆ ಸುಳಿವೇಕೆ ಕೊಡಲಿಲ್ಲ.ಎಂದು ದಿಗ್ಭ್ರಾಂತ ಳಾದಳು.ಮತ್ತಷ್ಟು ಸಂಶಯಗ್ರಸ್ಥಳಾದ ಕೂಸಮ್ಮ ಕೂಡಲೇ ಅಶ್ಚತ್ಥ ಕಟ್ಟೆಗೆ ಹೋಗಿ ನೋಡಿದಾಗ ಸಂಶಯ ಮತ್ತಷ್ಟು ಗಂಭೀರವಾಯಿತು. ಕೆಲವು ಸಮಯದ ನಂತರ ತನ್ನ ಧ್ಯಾನ ತಪಸ್ಸುಗಳನ್ನು ಮುಗಿಸಿ ಮನೆಗೆ ಬಂದ ದಾಸಪ್ಪ ತಾಯಿಗೆ ನಮಸ್ಕರಿಸಿ ಈ ದಿನ ಮನೆಯಲ್ಲಿ ಎಂದೂ ಕಾಣದ ಸುವಾಸನೆ ಕಾರಣವೇನು ಎಂದು ತಾಯಿಯನ್ನು ಕೇಳಿದನು.ಕುತೂಹಲ ಭರಿತಳಾದ ಅರಳಮ್ಮನೂ ಸಹ ಸತ್ಯಾಂಶ ತಿಳಿಯಲು ಕಾತರಳಾಗಿ ಅತ್ತೆಯವರ ಉತ್ತರ ಕೇಳಲುತ್ಸಕಳಾಗಿ ಪತಿಯ ಪಕ್ಕದಲ್ಲೇ ಬಂದು ನಿಂತಳು.
ಕೂಸಮ್ಮ ಮಗನನ್ನು ಕುರಿತು ಅಪ್ಪಾ, ಯಾರೋ ನಿನ್ನ ಸ್ನೇಹಿತರಂತೆ ನಾರಾಯಣರಾಯರೆಂಬ ನಾಮ ಇಂದು ಆಶ್ವತ್ಥ ನರಸಿಂಹನಿಗೆ ವಿಶೇಷ ಪೂಜಾ ಮಾಡಲು ಬಂದಿದ್ದು ನಿನಗೂ ನಿನ್ನ ಬರುವಿಕೆಯನ್ನು ಎದುರುನೋಡಿ.ನೀನು ಬಾರದಿದ್ದುದರಿಂದ ಈ ಸಕಲ ಭೋಜನ ಪದಾರ್ಥಗಳೂ ಹಾಗೂ ಬೆಳ್ಳಿಯ ತಂಬಿಗೆಯಲ್ಲಿ ಗಂದೋಕವನ್ನೂ ಸಹ ಮಡದಿ ಲಕ್ಷ್ಮಕ್ಕನೊಡನೆ ಕಳುಹಿಸಿ ನಿನಗೆ ತಲುಪಿಸಲು ಕಳುಹಿಸಿದ್ದಾರೆ.ಆಕೆ ಇದೆಲ್ಲವನ್ನೂ ಜೋಪಾನವಾಗಿ ತಂದಿಟ್ಟು ನೀವೆಲ್ಲ ರೂ ಸ್ವೀಕರಿಸಬೇಕಂದು ಹೇಳಿ ವಾಪಸ್ಸಾದಳು.ಎಂದು ಕೂಸಮ್ಮ ತಿಳಿಸಿದರು.ಈ ವಿಚಾರವನ್ನು ಆಲಿಸಿದ ಅರಳಮ್ಮನಿಗೂ ಆಶ್ಚರ್ಯ.
ಈ ಪವಾಡಿದಿಂದ ಚಕಿತನಾದ ದಾಸಪ್ಪ ಮುಂದೆ ಹರಿಯಾಜ್ಞೆಯಿಂದ ವಿಜಯದಾಸರಾದಾಗ ಈ ಘಟನೆಯನ್ನು ನೆನೆಸಿಕೊಂಡು "ನಿನೋಲಿದದಕೆ ಸೌಖ್ಯವೆ| ರಂಗ| ನಾನೊಲ್ಲೆ ನಾನೊಲ್ಲ ಸರ್ವೇಶ |ಮಾನಸದಲಿ ನಿತ್ಯ ನೆರೆನಂಭಿದಂಥ| ಮಾನವನ ಕೂಡ ಮೌನವಾಗಿ ಪ್ಪರೆ" ಎಂಬ ಮೂರು ನುಡಿಯ ಸುಂದರ ದೇವರನಾಮವನ್ನು ರಚಿಸಿದ್ದಾರೆ ..
ಹೇ! ಹರಿಯೇ ವಿಷಯ ಭುಂಜನಗೈಸಿ ವೈರಾಗ್ಯವನ್ನು ಕೊಡುವ ಹರಿಯೇ ನಾನಾ ಷಡ್ರಸ್ನಾನ ಭೋಜನದ ಆಸೆ ಬಿಡಿಸಿ.ಒಡಲಿಗೋಸುಗವಾಗಿ ಎಂದಾದರೂ ನಿನ್ನ ನಾ ಪ್ರಾರ್ಥಿಸಿದ್ದೆನೆ? ಈ ಜಡರಸದಿಂದ ಅಡಿಗಡಿಗೆ ಅಜ್ಞಾನ ಹುಟ್ಟುವುದು.ಕಾರಣ ಇಹದ ಸೌಖ್ಯ ಕೊಡದೇ ನಿನ್ನ ಧ್ಯಾನ ಪಾಲಿಸಿ ಕಾಪಾಡು ಎಂದು ಪುನಃ ಪುನಃ ಮೊರೆ ಇಡುತ್ತಾ ಹೇ ಸ್ವಾಮಿ ಇದೇನು ನಿನ್ನ ಆಟ ಜನ, ಮಹಾಜನ ರಾಜ ಮರ್ಯಾದೆ,ಮನ್ನಣೆ ಇವೆಲ್ಲ ನನಗೆ ನಿನ್ನಾಣೆಯಾಗಿಯೂ ಬೇಡ ಕೊಡಬೇಡ ಮನೋ ವಾಚಾ ಕಾಯದಿಂದ ತ್ರಿಕರಣ ಶುದ್ದಿಯಿಂದ ಬೇಡಿಕೊಂಬೆ ಎಂದು ಹಂಬಲಿಸಿದರು.ಒಳ್ಳೆಯ ಮೃಷ್ಟಾನ್ನ ಬೆಳ್ಳಿ ತಂಬಿಗೆ ತಾಟು ದೊರಕಿತೆಂದು ದಾಸರು ಕಿಂಚಿತ್ತೂ ಹರ್ಷಪಡಲಿಲ್ಲ. ಇಹದ ಐಶ್ವರ್ಯವು ಮದಕ್ಕೆ ಕಾರಣ.ಇದರಿಂದ ಭಗವಂತನ ವಿಸ್ಮೃತಿ.ಪರೋಪಕಾರ ಹಾನಿ ಎಂದು ಪದೇ ಪದೇ ನೆನಪಿನಲ್ಲಿಟ್ಟು ನಡೆದರೆ ದಾಸರು ಒಲಿದು ಶ್ರೀಶನನ್ನು ತೋರಿಸುವರು.
ಇತಿ ವಿಜಯದಾಸಾರ್ತಂಗತ ಶ್ರೀ ಲಕ್ಷ್ಮೀನರಸಿಂಹ ಪ್ರಿಯತೋ ಭವತು ಮದ್ವಾತಂರ್ಗತ ಶ್ರೀಕೃಷ್ಣಾರ್ಪಣಮಸ್ತು......
ಈ ಒಂದು ಘಟನೆಯನ್ನು ದಾಸರು ನಮಗೆ ತಿಳಿಸುವ ಮೂಲಕ ಮಹದುಪಕಾರವನ್ನು ಮಾಡಿದ್ದಾರೆ.
🔸🙏ಹರೇ ಶ್ರೀನಿವಾಸಾ🔸🙏
ಜೈ ವಿಜಯರಾಯ
************
[10:33 PM, 1/17/2020] Karpara: ವಿಜಯರಾಯರ ದಾಸರು ಎಷ್ಟು ಕಷ್ಟಗಳನ್ನು ಅನುಭವಿಸಿದರೋ ಅದೆ ರೀತಿ ಊಟಕ್ಕೂ ಇಲ್ಲದೆ ಊರು ಬಿಟ್ಟು ಹೋದದ್ದು ಮನೆಯು ಇಲ್ಲದೆ ಗುಡಿಯಲ್ಲಿ ವಾಸ ತಮ್ಮಂದಿರು ಹಸಿವೆ ಯಿಂದ ಬಳಲುವಾಗ ತಾಯಿ ಕೊಟ್ಟ ಹುಣಸಿಮರದ ಚಿಗರು ಜಪ ಮುಗಿಸಿಬಂದು ಅಮ್ಮ ಇವತ್ತು ಕಡಬು ಅಥವಾ ಹೋಳಿಗೆ ಮಾಡುತ್ತಿ ಏನಮ್ಮಾ ಎಂದಾಗ ತಾಯಿ ಕರಳು ಕಿವಚಿ ಹಾಗೆ ಅನಬೇಡಪ್ಪ ಭಾಗಣ್ಣ ತಮ್ಮಂದಿರು ಹಸಿದಿದ್ದಾರೆ ಏನು ಕೊಡಲಿ ಎಂಬ ಚಿಂತೆ ನನಗಿದೆ ಎನ್ನುವದರಲ್ಲಿ ಯಾರೋ ಊರಲ್ಲಿಯವರು ಬಂದು ಅವ್ವ ನನಗೆ ಮೊಮ್ಮಗ ಹುಟ್ಟಿದ್ದಾನೆ ಹನುಮಂತ ದೇವರಿಗೆ ಎಡೆ ತೋರಿಸಿ ಮಕ್ಕಳಿಗೂ ಉಣಿಸು ಎಂದಾಗ ತಾಯಿಗೆ ಆದ ಆನಂದ ಭಾಗಣ್ಣ ನೀನು ನುಡಿದಂತೆ ಆಯಿತಲ್ಲೋ ಅಂದಾಗ ಅವರಿಂದ ಬರುವ ಉತ್ತರ ಏನು ಗೊತ್ತೇ ದೇವರೇ ಕೊಡುವವರು ಅವನೇ ನನ್ನಿಂದ ನುಡಿಸಿದಾ ನಾನು ನುಡಿದೆ ಅಷ್ಟೇ ಅವ್ವ ವಿಜಯರಾಯರು ತಮ್ಮ ರಚನೆ ಯಲ್ಲಿ ಸಂಜಿತನಕ ಇದ್ದು ಸಣ್ಣ ಸವಟಿ ನ ತುಂಬಾ ಗಂಜಿ ಕಾಣದೆ ಬಳಲಿದೆ ಹಬ್ಬ ಹರಿದಿನದಲ್ಲಿ ಹಣಕ್ಕಾಗಿ ಮುಂಗಡ ಕೇಳುವದು ಇಲ್ಲಾ ಎನ್ನುವದು ಯಾರಾದರೂ ಊಟಕ್ಕೆ ಬಂದರೆ ಇರಲಿಲ್ಲ ಒಳ್ಳೆಯವನು ಇವನ ಹತ್ತಿರ ಹಣ ಕೇಳೋಣ ಇವನಲ್ಲಿ ಬೇಡಾ ಎನ್ನದೆ ಮನೆ ನಡೆಸಲು ಎಲ್ಲರಲ್ಲೂ ಕೇಳುವದು ಅವನ ಅನುಗ್ರಹ ಆಯಿತೋ ಇದ್ದಲ್ಲಿಗೆ ಬಂದು ಬಿಡುತ್ತಿತ್ತು ಬಂದ ಕಾರ್ಯ ಮುಗಿಸಲು ಬಂದವರು ಇದೆಲ್ಲವನ್ನು ಆಡಿಸಿ ಒಳ್ಳೆಯ ಶಿಷ್ಯ ನನ್ನು ಪಡೆದು ಭಾಗಣ್ಣ ಋತ್ತಿ ಯನ್ನು ಬಿಡು gn
ಜ್ಞಾನ ದೃಷ್ಟಿಯಿಂದ ತಿಳಿದು ಅವರಿಗೆ ದಾಸ ದೀಕ್ಷೆ ನೀಡಿ ನಿನ್ನಿಂದ ದಾಸ ಸಾಹಿತ್ಯ ಬೆಳೆಯಲಿ ಎಂದಾಗ ದೀಕ್ಷೆಯಿಂದ ನಡೆದು ಮುಂದೆ ಶ್ರೀನಿವಾಸಾಚಾರ್ಯರಿಗೆ ಉದರ ರೋಗದಿಂದ ಬಳಲುತ್ತಿರಲು ಅವರಿಗೆ ಅಭಿಮಂತ್ರಿಸಿ ನೀಡಿದ ಭಕ್ರಿಯಿಂದ ಉದರ ರೋಗ ಹೋದಮೇಲೆ ಅವರಿಗೆ ತಮ್ಮ ಆಯುಷ್ಯವನ್ನು 40 ವರ್ಷ್ ದಾನಮಾಡಿ ಅವರಿಗೆ ದಾಸ ದೀಕ್ಷೆ ನೀಡಿ ಶ್ರೀನಿವಾಸಾಚಾರ್ಯರಿಗೆ ಜಗನ್ನಾಥ ವಿಠಲ ಎಂಬ ಅಂಕಿತ ದಿಂದ ಅನೇಕ ಪದ ಪದ್ಯ ಸುಳಾದಿ ರಚಿಸುವದಲ್ಲದೆ ಜನ ಸಾಮಾನ್ಯರು ಎಲ್ಲದರಲ್ಲಿಯೂ ತಾರತಮ್ಯ ವಿದೆ ಯಾರು ದೊಡ್ಡವರು ಅವರಿಕ್ಕಿಂತ ಚಿಕ್ಕವರು ಕಿಂಚಿತ್ತು ಅಧಿಕರು ಎಲ್ಲರಿಗೂ ತಿಳಿಯುವ ಹಾಗೆ ಹರಿಕಥಾಮೃತ ಸಾರ ವನ್ನು ಉಣಬಡಿಸಿದ ಪರಂಪರೆ ಇದು ಇವತ್ತಿಗೂ ದ್ವೈತ ಸಿದ್ಧಾಂತ ವನ್ನು ತಾರತಮ್ಯ ಜ್ಞಾನ ತಿಳಿದುಕೊಳ್ಳಲು ಸುಲಭವಾಗಿ ಕಲಿಯುಗದಲ್ಲಿ ಸ್ವಲ್ಪ ತಿಳಿದು ಮಾಡಿದರು ಇಮ್ಮಡಿಯಾಗಿ ನೀಡುವ ಸ್ವಾಮಿ ಸೇವೆ ಸದಾ ನೆನೆಯೋಣ ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯೋಣ ನಿತ್ಯ ಸಂಧ್ಯಾವಂದನೆ ಪೂಜೆ ವೈಷ್ಯದೇವ ತಿಳಿದಷ್ಟು ಮಾಡುವ ಪ್ರಯತ್ನ ಇಟ್ಟುಕೊಳ್ಳೋಣ ಮಂತ್ರ ಬರದಿದ್ದರೂ ಸರಿ ಬಿಡದೆ ಇದೆ ಹಾದಿಯಲ್ಲಿ ಸಾಗೋಣ ಕಷ್ಟಗಳು ಬಂದಾಗ ವಿಜಯದಾಸರ ಗೋಪಾಲದಾಸರ ಜಗನ್ನಾಥ ದಾಸರ ಸ್ಮರಣೆ ನಿರಂತರ ಮಾಡೋಣ ಹಣ ಬಂದಾಗ ಇವರೆಲ್ಲರ ಗುರುಗಳು ಪುರಂಧರದಾಸರ ಸ್ಮರಣೆ ಮಾಡೋಣ ಎಲ್ಲವನ್ನು ಬಿಟ್ಟು ದಾಸ ದೀಕ್ಷೆ ಗೆ ಮುಖ್ಯ ಕಾರಣ ಹರಿ ಎಂಬುದನ್ನು ಮರೆಯದಲೇ ಮಾಧವನ ನೆನೆಯೋಣ
ನಿಮ್ಮ ನರಸಿಂಹ ಬಿ ದೇಶಪಾಂಡೆ ಮುತ್ತಗಿ ೯೭೪೨೭೬೪೧೮೩
***********
vಶ್ರೀ ವಿಜಯದಾಸರು ಒಮ್ಮೆ ತಿರುಪತಿಗೆ ಬಂದು ಪುರಂದರದಾಸರ
ಮಂಟಪದಲ್ಲಿಳಿದರು.
ಶ್ರೀನಿವಾಸನ ಸ್ತೋತ್ತಗಳನ್ನು ಹಾಡಿದರು.
ಆಗ ಬ್ರಹ್ಮೋತ್ಸವದ ಕಾಲವಾದರಿಂದ ಗರ್ಭಾಂಕಣಕ್ಕೆ ಪ್ರವೇಶಿಸಿ
ದೇವರ ದರ್ಶನ ಮಾಡಲು ಅವಕಾಶ ದೊರೆಯದೆ ಎಲ್ಲರಿಗೂ
ತೊಂದರೆ ಯಾಗಿತ್ತು.
ಶ್ರೀನಿವಾಸನ ದರ್ಶನಕ್ಕೆ ಕಾದಿದ್ದ ಜನ ಸಮೂಹವನ್ನು ನೋಡಿ
ದೇವರನ್ನು ಉದ್ದೇಶಿಸಿ ಹೀಗೆ ಹಾಡಿದರು.
ನಿನ್ವ ದರುಶನಕೆ ಬಂದವನಲ್ಲವೋ ।ದೇವ।
ಪುಣ್ಯವಂತರ ದಿವ್ಯ ಚರಣ ನೋಡಲು ಬಂದೆ।।
ಎಲ್ಲೆಲ್ಲಿಯೂ ನಿನ್ನ ವ್ಯಾಪ್ತಿ ತಾನಾಗಿರಲು।
ಇಲ್ಲಿಗೆ ಬರುವ ಕಾರಣವ್ಯಾವುದೋ।
ಸೊಲ್ಲಿಗೆ ಸ್ಥಂಭದಲಿ ತೋರಿದ ಮಹಾಮಹಿಮ
ಎಲ್ಲಿಲ್ಲವೋ ನೀನು ಬಲ್ಲ ಭಕುತರಿಗೇ?//
ಕರೆದಾಗಲೇ ಓಡಿ ಬಂದೊದಗುವ ಸ್ವಾಮಿ।
ಮರಳಿ ಗಾವುದವೆಣಿಸಿ ಬರಲ್ಯಾತಕೆ?।
ನೆರೆ ನಂಬಿದವರಿಗಾವಲ್ಲಿ ಯಾದರೆ ಏನೋ
ಅರಿತವರ ಮನದಲಿ ನಲಿದಾಡುವ ಚೆಲುವ।।
ನೀನಿದ್ದ ಸ್ಥಾನದಲ್ಲಿ ಸಕಲ ಪುಣ್ಯ ಪುಣ್ಯಕ್ಷೇತ್ತ
ನೀನಿದ್ದ ಸ್ಥಾನದಲಿ ಸಕಲ ತೀರ್ಥ।
ನೀನಿದ್ದ ಸ್ಥಾನದಲಿ ಸರ್ವತಾತ್ವಿಕರುಂಟು
ನಾನಿಂತು ಬಂದದ್ದು ನಿನಗೆ ತಿಳಿಯದೆ ಸ್ವಾಮಿ।
ಎಂದು ಹಾಡಿದರು ಮತ್ತು ತಮಗೆ ದರ್ಶನ ಭಾಗ್ಯ ನೀಡಲಿಲ್ಲವೆಂಬುದಕ್ಕಾಗಿಯೋ ಎಂಬಂತೆ ಸ್ವಾಮಿಯನ್ನು
ಮೂದಲಿಸಿದಂತೆ ಈ ಕೆಳಗಿನ ಪದವನ್ನು ಹಾಡಿದರು.
ತೊಳಸದಕ್ಕಿಯ ತಿಂಬ ಕಿಲುಬು ತಳಿಗೆಯಲುಂಬ
ಕೊಳಗದಲ್ಲಿ ಹಣಗಳನು ಅಳಿಸಿಕೊಂಬ
ಇಲ್ಲ ತನಗೆಂದೊಬ್ಬ ಸುಳ್ಳು ಮಾತಾಡಿದರೆ
ಎಲ್ಲವನು ಕಸುಗೊಂಬ ಕಳ್ಳ ಧೊರೆಗೆ।।1//
ತನ್ನ ನೋಡುವೆವೆಂದು ಮುನ್ಮೂರ್ಗಾವುದ ಬಂದು
ತನ್ನ ಗುಡಿಯ ಪೊಕ್ಕ ಜನರಿಗೆಲ್ಲ
ಹೊನ್ನು ಹಣ ಕಸುಗೊಂಡು ತನ್ನ ದರುಶನವ ಕೊಡದೆ
ಬೆನ್ನೊಡೆಯ ಹೊಡೆಸುವಾ ಅನ್ಯಾಯಕಾರಿಗೆ।।2//
ಗಿಡ್ಡ ಹಾರುವನಾಗಿ ಶರಗೊಡ್ಡಿ ದಾನವ ಬೇಡಿ
ದುಡ್ಡು ಕಾಸುಗಳಿಗೆ ಕೈಯನೀಡಿ
ಅಡ್ಡಬಿದ್ದ ದಾಸರಿಗೆ ವಿಡ್ಡೂರಗಳೆ ಕಳೆದು
ದೊಡ್ಡವರ ಮಾಳ್ಪ ಶಿರಿ ವಿಜಯವಿಠಲಗೇ।।
ಜಯ ಮಂಗಳಂ।ನಿತ್ಯ ಶುಭಮಂಗಳಂ ।
ಎಂದು ಮಂಗಳಹಾಡಿ ತಮ್ಮ ಮಂಟಪಕ್ಕೆ ಬಂದರು.
ಆದಿನವೂ ದಾಸರಿಗೆ ಇತರರಂತೆ ದೇವರ ದರ್ಶನ ವಾಗಲಿಲ್ಲ.
ಮಾರನೇ ದಿನ ವಿಜಯದಶಮಿ।ಸ್ವಾಮಿಯ ಬ್ರಹ್ಮೋತ್ಸವ ರಥಾರೋಹಣವಾಗಿ ಲಕ್ಷಾಂತರ ಜನರು ಸೇರಿದ ಉತ್ಸವದಲ್ಲಿ
ರಥ ಮುಂದುವರಿಯಿತು.
ಭಗವಂತನ ದರ್ಶನವಿಲ್ಲದೇ ದಾಸರು ಭೋಜನವೂ ಇಲ್ಲ
ಅವರೊಂದಿಗೆ ಶಿಷ್ಯರೂ ಭೋಜನ ಮಾಡದೇ ಇದ್ದರು।
ಅವರೆಲ್ಲ ಪಾರಣೆ ಮಾಡೋಣವೆಂದು ದಾಸರನ್ನು ಆಗ್ರಹಿಸಿದಾಗ
ದಾಸರು “ಒಂದು ಚೀಟಿಯನ್ನು ಬರೆದು ಕೊಡುವೆ ಅದನ್ನು ರಥದ
ಬಳಿಹಾಕಿ ಬನ್ನಿ ಯೆಂದು ಚೀಟಿಯನ್ನು ಕೊಟ್ಟರು.
ಅದರಂತೆ ಶಿಷ್ಯರು ಚೀಟಿಯನ್ನು ರಥದ ಬಳಿ ಹಾಕಿದರು
ರಥವು ಮುಂದೆ ಕದಲದೆ ನಿಂತುಬಿಟ್ಟಿತು.
ಎಲ್ಲರೂ ಭಗವಂತನನ್ನು ಪ್ರಾರ್ಥಿಸಿದರು.ಕಾಲ ಮೀರುತ್ತಿದೆ
ರಥ ಸಾಗುತ್ತಿಲ್ಲ.
ಆಗ ಬಾಲಕನೊರ್ವನ ಮೇಲೆ ದೇವರ ಆವೇಶ ಬಂದು “ನನ್ನ
ದಾಸರನ್ನು ಕರೆ ತಂದರೆ ನಾನು ಬರುವೆನು”ಎಂದು ಆಜ್ಞೆಯಾಯಿತು.
ಆಗ ಮಹಂತರು ದಾಸರ್ಯಾರೆಂದು ಕಂಡು ಹಿಡಿದು ಸಕಲ ಮರ್ಯಾದೆಗಳೊಂದಿಗೆ ವಿಜಯದಾಸರನ್ನು ಪ್ರಾರ್ಥಿಸಿ ರಥದ ಬಳಿಗೆ ಕರೆತಂದರು.
ಆಗ ದಾಸರು ತಮ್ಮ ಮಾತಿಗೆ ಶ್ರೀಹರಿಯು ಮಾನವಿತ್ತನೆಂದು
ಸಾಗಿ ಬಾರಯ್ಯ ಭವ /ರೋಗದ ವೈದ್ಯನೆ।
ಬಾಗುವೆ ನಿನಗೆ ಚೆನ್ನಾಗಿ ಸ್ತುತಿಸಿ ಇಂದು।।
ಭಾಗೀರಥಿ ಪಿತ ಭಾಗವತರ ಸಂ।
ಯೋಗ ರಂಗ ಉರ/ಗಾಗಿರಿ ವೆಂಕಟ।।
ಎಂದು ಶ್ರೀನಿವಾಸನನ್ನು ಪ್ರಾರ್ಥಿಸಿದರು.ಆಗ ರಥವು ಯಾವ ಪ್ರಯತ್ನವಿಲ್ಲದೇ ಮುಂದೆ ಸಾಗಿತು.
ಜನರು ದಾಸರ ಮೇಲೆ ಶ್ರೀನಿವಾಸನ ಅನುಗ್ರಹವನ್ನು ನೋಡಿ
ಕೊಂಡಾಡಿದರು.
ಹೀಗೆ ಶ್ರೀ ವಿಜಯದಾಸರು ತಿರುಪತಿಯಲ್ಲಿದ್ದಾಗ ಅನೇಕ ಮಹಿಮೆಗಳು ನಡೆದವು
// ಶ್ರೀ ಹರಿ ಸಮರ್ಪಣೆ।।
********
" ವಿಜಯ ಗುರುಗಳ೦ಘ್ರಿ ಕಮಲ ಭಜನೆ ಮಾಡಿರೋ "
ಶ್ರೀ ವಿಜಯರಾಯರ ಆರಾಧನಾ ಮಹೋತ್ಸನ. ತನ್ನಿಮಿತ್ತ ಆರಾಧಾನಾ ವಿಶೇಷ ಲೇಖನ ಯಜ್ಞ
" ಶ್ರೀ ವ್ಯಾಸ ವಿಠಲಾಂಕಿತ ಕಲ್ಲೂರು ಸುಬ್ಬಣ್ಣಾಚಾರ್ಯ ವಿರಚಿತ - ಶ್ರೀ ವಿಜಯರಾಯರ ನಕ್ಷತ್ರ ಮಾಲಿಕಾ ಸ್ತೋತ್ರ "
ಸಂಸ್ಕೃತದ ಕಬ್ಬಿಣದ ಕಡಲೆಯ ರೂಪವಾದ ಪ್ರಮೇಯಗಳನ್ನು ವ್ಯಾಸ ಕೂಟ ಭಕ್ತಿಯ ಸೂತ್ರಗಳನ್ನು ಮಾರ್ಗದರ್ಶನ ಮಾಡಿಸಿತು. ದಾಸ ಕೂಟ ಅದೇ ಭಕ್ತಿ ರಸವನ್ನು ಸರಳ ಕನ್ನಡವಾದ ಜಾನಪದದ ಆಡು ಭಾಷೆಯಲ್ಲಿ ಪ್ರಮೇಯಭರಿತ ಪದಗಳನ್ನು ರಚಿಸಿ ಜನ ಸಾಮಾನ್ಯರಿಗೂ ತಲುಪುವಂತೆ ಮಾಡಿತು. ಇದುವೇ ಹರಿದಾಸ ಸಾಹಿತ್ಯದ ಹಿರಿಮೆ.
ದಾಸ ಕೂಟದ ಪ್ರವರ್ತಕರು ಸಾಕ್ಷಾತ್ ಶ್ರೀ ಹನುಮಂತದೆವರು. ( ಶ್ರೀ ಹನುಮ ಭೀಮ ಮಧ್ವರು )
ಶ್ರೀ ಮಧ್ವಾಚಾರ್ಯರಿಂದ ಪ್ರಾರಂಭವಾದ ಈ ಭಕ್ತಿ ಸಾಹಿತ್ಯವು ಶ್ರೀ ನರಹರಿತೀರ್ಥರಿಂದ ಹರಿದಾಸ ಪಂಥ ಪ್ರಾರಂಭವಾಯಿತು. ಇದರಿಂದ ಸರಳ ಕನ್ನಡ ಭಾಷೆಯ ಸಾಹಿತ್ಯ ಗಂಗೆಯ ಪ್ರವಾಹ ಪ್ರಾರಂಭವಾಯಿತು. ಮುಂದೆ ಈ ದಾಸ ಸಾಹಿತ್ಯ ಕ್ಷೇತ್ರವನ್ನು ಶ್ರೀ ಜಯತೀರ್ಥರು, ದಾಸ ಸಾಹಿತ್ಯದ ಆದ್ಯರು, ಶ್ರೀ ವಿಬುಧೇಂದ್ರತೀರ್ಥರು, ಶ್ರೀ ಶ್ರೀಪಾದರಾಜರು ಮತ್ತು ಶ್ರೀ ವ್ಯಾಸರಾಜರು ಮುಂದುವರೆಸಿದರು.
ಶ್ರೀ ವ್ಯಾಸರಾಜ ಗುರುಸಾರ್ವಭೌಮರು ಶ್ರೀ ಪುರಂದರದಾಸರು ಮತ್ತು ಶ್ರೀ ಕನಕದಾಸರೆಂಬ ಅನರ್ಘ್ಯ ರತ್ನಗಳನ್ನು ಕೊಟ್ಟು ಹರಿದಾಸ ಸಾಹಿತ್ಯ ಉಗಮಕ್ಕೆ ಕಾರಣರಾದರು. ಕನ್ನಡದಲ್ಲಿ ಭಕ್ತಿ ಸಾಹಿತ್ಯಕ್ಕೆ ಸೂಕ್ತ ಸ್ಥಾನವನ್ನು ಕಲ್ಪಿಸಿ ಕೊಟ್ಟವರು ಶ್ರೀ ಪುರಂದರದಾಸರು ಮತ್ತು ಶ್ರೀ ಕನಕದಾಸರು.
ಜಾನಪದ ಶೈಲಿಯಲ್ಲಿ ಪದ - ಪದ್ಯ - ಸುಳಾದಿ - ಉಗಾಭೋಗಗಳನ್ನು ರಚಿಸಿ ರಾಗಬದ್ಧವಾಗಿ ಹಾಡಿ ಸಂಗೀತವನ್ನೂ ಪ್ರಸಿದ್ಧಿಗೆ ತಂದರು.
ಇನ್ನು ಶ್ರೀ ವಿಜಯರಾಯರು ಮತ್ತು ಶಿಷ್ಯ ಪ್ರಶಿಷ್ಯರು ಹರಿದಾಸ ಸಾಹಿತ್ಯಕ್ಕೆ ನೀಡಿದ ಕೊಡುಗೆ ಅದ್ಭುತ.
ಶ್ರೀ ವಿಜಯರಾಯರ ಪ್ರೀತಿಯ ಶಿಷ್ಯರೂ, ಶ್ರೀ ಇಂದ್ರದೇವರ ಅಂಶ ಸಂಭೂತರೂ ಆದ ಶ್ರೀ ವೇಣುಗೋಪಾಲದಾಸರ ಶಿಷ್ಯರಾದ ಶ್ರೀ ವ್ಯಾಸವಿಠಲರ ತತ್ತ್ವ ಪ್ರಮೇಯ ಭರಿತವಾದ ಈ ರಚನೆಯನ್ನು ಪರಿಶುದ್ಧವಾದ ಮನಸ್ಸಿನಿಂದ ಅವಲೋಕಿಸಿ ಅವರು ಹಾಕಿ ಕೊಟ್ಟ ಮಾರ್ಗದಲ್ಲಿ ನಡೆಯುವ ಪ್ರಯತ್ನ ಮಾಡೋಣ.
ರಾಗ : ಸಾರಂಗ ತಾಳ : ಆದಿ
ಸ್ಮರಿಸಿ ಬದುಕಿರೋ ದಿವ್ಯ ಚರಣಕೆರಗಿರೋ ।
ದುರಿತ ತರಿದು ಪೊರೆವ ವಿಜಯಗುರುಳೆಂಬರ ।। ಪಲ್ಲವಿ ।।
ದಿವ್ಯ ಚರಣ = ದಿವ್ಯ ಪಾದ.
ಹಿನ್ನೆಲೆ :
ಶ್ರೀ ಹರಿಯ ಸರ್ವೋತ್ತಮತ್ವವನ್ನು ಪ್ರಕಟಿಸಲು ವೈಕುಂಠಕ್ಕೆ ಹೋದಾಗ ಶ್ರೀ ಭೃಗು ಮಹರ್ಷಿಗಳು ಶ್ರೀ ಹರಿಯ ವಕ್ಷಕ್ಕೆ ಒದ್ದಾಗ - ಎಚ್ಚೆತ್ತನಂತೆ ನಟಿಸುತ್ತಾ ಶ್ರೀ ಹರಿಯು...
ಆಹ ತೇ ಸ್ವಾಗತಂ ಬ್ರಹ್ಮನ್ನಿಷೀದಾತ
್ರಾಸನೇ ಕ್ಷಣಂ ।
ಅಜಾನತಾಮಾಗಸಂ ನಃ ಕ್ಷ೦ತುಮರ್ಹಸಿ ಮಾನದ ।।
ಪುನೀಹಿ ಸಹಲೋಕಂ ಮಾಂ ಲೋಕಪಾಲಾಶ್ಚಮದ್ಗತಮ್ ।
ಪಾದೋದಕೇನ ಭವತಸ್ತಿರ್ಥಾನಾ೦ ತೀರ್ಥಕಾರಿಣಾ ।।
ದಾಸರಾಯನ ದಯವ ಸೂಸಿ ಪಡೆದನಾ ।
ದೋಷರಹಿತನ ಸಂತೋಷಭರಿತನಾ ||1||
" ದೋಷ ರಹಿತನಾ "
ಶ್ರೀ ಹರಿಗೆ ಪಾದ ಪ್ರಹಾರ ಮಾಡಿದ ದೋಷದಿಂದ ದ್ವಾಪರ ಯುಗದಲ್ಲಿ ವ್ಯಾಧನಾಗಿ ಜನ್ಮ ತಾಳಿದರಲ್ಲದೇ, ಕಂಸನಲ್ಲಿ ಆವಿಷ್ಟರಾಗಿದ್ದು ಕಂಸನ ವಧೆಯ ನಂತರ ಶ್ರೀ ಕೃಷ್ಣನಲ್ಲಿ ಪ್ರವೇಶಿಸಿ ದೋಷ ಮುಕ್ತರಾಗಿದ್ದಾರೆ. ( ಕಂಸಾವಿಷ್ಟ: ಸ್ವಯಂ ಭೃಗು: )
ಜ್ಞಾನವಂತನ ಬಲು ನಿದಾನಿ ಶಂತನಾ ।
ಮಾನ್ಯವಂತನ ಬಹುವದನ್ಯದಾಂತನಾ ||2||
" ಜ್ಞಾನವಂತನಾ "
ಶ್ರೀ ವೇದವ್ಯಾಸರು ಸಾಕ್ಷಾತ್ ಶ್ರೀ ಭೃಗು ಮಹರ್ಷಿಗಳೇ ಮೊದಲಾದವರಿಗೆ ನಿರ್ಮಲವೂ, ಮಂಗಳಕರವೂ ಆದ ಜ್ಞಾನವನ್ನು ನೀಡಿ ಕರ್ಮಯೋಗಕ್ಕೆ ಪ್ರವರ್ತಕರನ್ನಾಗಿ ಮಾಡಿದ್ದಾರೆ. ( ಭೃಗ್ವಾದೀನ್ ಕರ್ಮಯೋಗಸ್ಯ ಜ್ಞಾನ೦ ದತ್ವಾsಮಲಂ ಶುಭಮ್ )
" ಬಲು ನಿದಾನಿ "
ನಿದಾನಂ ಕಾರಣೇವತ್ಸದಾಮಾದಿ ಕಾರಣೇ ಕ್ಷಯೇ ।
ನಿದಾನಂ ಕಾರಣೇ ರೋಗ ನಿರ್ಣಯೇ ವತ್ಸದಾಮನಿ ।।
1. ಶ್ರೀ ನಾರದಾಂಶ ಪುರಂದರದಾಸರ ನಂತರ " ಹರಿದಾಸ ಪಂಥ " ದ ಚಲನೆಗೆ ಇವರೇ ಕಾರಣರು.
2. ಶ್ರೀ ಸಹ್ಲಾದಾಂಶ ಜಗನ್ನಾಥದಾಸರಿಗೆ ಬಂದಿದ್ದ ಉದರ ವ್ಯಾಧಿಯನ್ನು ಶ್ರೀ ವಿಘ್ನೇಶ್ವರ ಅಂಶ ಸಂಭೂತರಾದ ಗೋಪಾಲದಾಸರನ್ನು ಮಾಧ್ಯಮವನ್ನಾಗಿ ಇಟ್ಟುಕೊಂಡು ವಾಸಿ ಮಾಡಿದ್ದಾರೆ.
3. ಛಾಗೀ ಕೇಶವರಾಯನಿಗೆ ಬಂದಿದ್ದ ವ್ಯಾಧಿಯನ್ನು ಪರಿಹರಿಸಿ ಆಯುರ್ದಾನ ಮಾಡಿ ಅಪಮೃತ್ಯು ಪರಿಹಾರ ಮಾಡಿದ್ದಾರೆ.
ಶಾಂತನ = ಅರಿಷಡ್ವರ್ಗಗಳ ನಿಗ್ರಹ ಉಳ್ಳವರು
ಮಾನ್ಯವಂತನಾ = ಪರಮ ಪೂಜ್ಯರು
ಬಹುವದಾನ್ಯ = ದಾನ ಧರ್ಮಗಳು ಮಾಡುವಲ್ಲಿ ಔದಾರ್ಯ
ದಾಂತನಾ = ಭಕ್ತರ ಕಾಮನೆಗಳನ್ನು ವಿಶೇಷ ದಾನ ಮಾಡುವ ಸ್ವಭಾವ ಉಳ್ಳವರು ( ದಾಂತಿಸ್ತು ದಮಥೋದಮಃ - ಅವದಾನಂ ಕರ್ಮವೃತ್ತಂ ಕಾಮ್ಯದಾನಂ ಪ್ರವಾರಣಮ್ )
ಹರಿಯ ಭಜಿಸುವ ನರಹರಿಯ ಯಜಿಸುವ ।
ದುರಿತ ತ್ಯಜಿಸುವ ಜನಕೆ ಹರುಷ ಸುರಿಸುವ ||3||
" ಹರಿಯ ಭಜಿಸುವ "
ಶ್ರೀ ಹರಿ ವಾಯುಗಳನ್ನು ಕ್ರಮವಾಗಿ ಸರ್ವೋತ್ತಮತ್ವೇನ - ಜೀವೋತ್ತಮತ್ವೇನ ಸೇವಿಸುವ - ತಪಸ್ಸನ್ನು ಮಾಡಿರುವ!
" ದುರಿತ ತ್ಯಜಿಸುವಾ "
ತಾವು ಸ್ವತಃ ಪಾಪಗಳಿಂದ ದೂರವಿದ್ದವರಾಗಿ ಭಕ್ತರ ಪಾಪಗಳು ತಾವಾಗಿಯೇ ಬಿಟ್ಟು ಹೋಗುವಂತೆ ಅನುಗ್ರಹಿಸುವ..
" ಜನಕೆ ಹರುಷ ಸುರಿಸುವಾ "
ತಮ್ಮ ಪಾದಾಶ್ರಿತರಾದವರನ್ನು ಸದಾ - ಸರ್ವ ದೇಶ ಕಾಲಗಳಲ್ಲಿಯೂ ಪೂರ್ಣ ಸುಖದಿಂದ ಇರುವಂತೆ ಮಾಡುವ ಕರುಣಾ ಸ್ವಭಾವದವರು.
ಮೋದ ಭರಿತನಾ ಪಂಚಭೇದವರಿತನಾ ।
ಸಾಧು ಚರಿತನಾ ಮನ ವಿಷಾದ ಮರೆತನಾ ||4||
ಮೋದ ಭರಿತನಾ = ಸರ್ವವನ್ನೂ ಶ್ರೀ ಹರಿಗೆ ಅರ್ಪಿಸಿ ಆನಂದ ಪಡುವವರು
" ಪಂಚ ಭೇದವರಿತನಾ "
1. ಜೀವ ಜೀವರ ಭೇದ
2. ಜಡ ಜಡಗಳ ಭೇದ
3. ಜೀವ ಜಡಗಳ ಭೇದ
4. ಜೀವ ಈಶ ಭೇದ
5. ಜಡ ಈಶ ಭೇದ
ಈ ಐದು ಭೇದಗಳನ್ನೂ ತಿಳಿದವರೂ ಮತ್ತು ತಿಳಿಸುವವರು.
ಸಾಧು ಚರಿತನಾ = ಸ್ವಭಾವದಿಂದಲೇ ಸ್ವತಃ ಸತ್ಪುರುಷರಾಗಿದ್ದು ಸತ್ಯಸಂಧರಾಗಿ, ಆರ್ತರಾದ ಸುಜನರಲ್ಲಿ ಕನಿಕರ ಉಳ್ಳವರಾಗಿ ರಕ್ಷಿಸುತ್ತಿದ್ದಾರೆ.
ಮನ ವಿಷಾದ ಮರೆತಾನಾ = ಮನಃ ಕ್ಲೇಶವನ್ನೂ, ನಿರಾಶೆಯನ್ನೂ ದೂರ ಮಾಡುವವರು.
ಇವರ ನಂಬಿದಾ ಜನಕೆ ಭವವಿದೆ೦ಬುದೂ ।
ಹವಣವಾಗದೋ ನಮ್ಮವರ ಮತವಿದೂ ||5||
ಹವಣವಾಗು = ಹಿತವಾಗು
ಪಾಪ ಕೋಟಿಯ ರಾಶಿ ಲೇಪವಾಗದೋ ।
ತಾಪ ಕಳೆವನೋ ಬಲು ದಯಾಪಯೋನಿಧಿ ||6||
ಸಂಖ್ಯೆಯಿಲ್ಲದ ಪಾಪಗಳೂ, ನಂಬಿದ ಭಕ್ತರಿಗೆ ಬಾಧ ಕೊಡದಂತೆ ಮಾಡುವರು. ತಾಪತ್ರಯಗಳಿಂದ ಆಗುವ ನೋವನ್ನೂ ಕೊಡದವರು.
ಕವನ ರೂಪದಿ ಹರಿಯ ಸ್ತವನ ಮಾಡಿದಾ ।
ಭುವನ ಬೇಡಿದ ಮಾಧವನ ನೋಡಿದಾ ||7||
ಕವನ = ಪದ್ಯ
ಸ್ತವನ = ಸ್ತುತಿ
ಭುವನ = ಭೂಮಿ
ಮಾಧವ = ಶ್ರೀ ಮಹಾಲಕ್ಷ್ಮೀ ಪತಿಯಾದ ಶ್ರೀ ಹರಿ.
1. ಬಲಿಯನ್ನು ಭೂಮಿದಾನ ಪಡೆದ ಶ್ರೀ ವಾಮನ ರೂಪಿ ಶ್ರೀ ಹರಿ
2. ವೇಕಂಟಾಚಲದಲ್ಲಿ ಶ್ರೀ ವರಾಹನನ್ನು ಭೂಮಿ ದಾನ ಬೇಡಿದ ಶ್ರೀಶ್ರೀನಿವಾಸ.
ರಂಗನೆಂದನ ಭವವು ಹಿಂಗಿತೆಂದನಾ ।
ಮಂಗಳಾಂಗನ ಅಂತರಂಗವರಿತನಾ ||8||
ರಂಗ = ಭಕ್ತರಲ್ಲಿ ನಿಂತು ಧ್ಯಾನ ಮಾಡಿಸುವವನು
ಮಂಗಳಾಂಗನಾ = ಮಂಗಳ ಸ್ವರೂಪಗಳಾದ ಜ್ಞಾನಾನಂದಗಳೇ ಶರೀರವಾಗಿ ಉಳ್ಳ ಶ್ರೀ ಹರಿ ಹಾಗೂ ಶ್ರೀ ವಾಯುದೇವರ
ಅಂತರಂಗ = ಮನಸ್ಸು
ಕಾಶಿ ನಗರದಲ್ಲಿದ್ದ ವ್ಯಾಸದೇವನಾ ದಯವ ।
ಸೂಸಿ ಪಡೆದನಾ ಉಲ್ಲಾಸತನದಲಿ ||9||
ಯೋಸೌ ಸರ್ವಗತೋ ವಿಷ್ಣು: ಚಿತ್ಸ್ವರೂಪೋನಿರಂಜನಃ ।
ಸ ಏವ ದ್ರವ ರೂಪೇಣ ಗಂಗಾಂಭೋನಾತ್ರ ಸಂಶಯಃ ।।
ಚಿಂತೆ ಬ್ಯಾಡಿರೋ ನಿಶ್ಚಿಂತರಾಗಿರೋ ।
ಶಾಂತ ಗುರುಗಳಾ ಪಾದವಾಂತು ನಂಬಿರೋ ||10||
ಚಿಂತೆ = ಇಷ್ಟವಾದುದು ದೊರೆಯದೆ
ಆಂತು = ಏನೇ ಆಡ್ಡಿ ಆತಂಕಗಳು ಬಂದಾಗ್ಯೂ
ಖೇದವಾಗದೋ ನಿಮಗೆ ಮೋದವಾಹುದೋ ।
ಸಾಧು ಗುರುಗಳ ದಿವ್ಯ ಪಾದ ನಂಬಿರೋ ||11||
ಶ್ರೀ ವಿಜಯರಾಯರ ದಿವ್ಯವಾದ ಪಾದಗಳನ್ನು ನಂಬಿದವರಿಗೆ ಮಾತ್ರ ಅವರ ಅನುಗ್ರಹಹವಾಗಿ ಸಾಧನಾ ಮಾರ್ಗದಲ್ಲಿ ದುಃಖ ದುಮ್ಮಾನಗಳೂ, ಕಷ್ಟಗಳೂ ದೂರಾಗಿ ಆನಂದವಾಗುವುದು.
ತಾಪ ತಡೆವನೋ ಬಂದ ಪಾಪ ಕಡಿವನೋ ।
ಶ್ರೀಪತಿಯ ಪಾದ ಸಮೀಪವಿಡುವನೋ ||12||
" ತಾಪ ತಡೆವನೋ "
ಆಧ್ಯಾತ್ಮಿಕ ( ದೇಹ ),
ಆದಿ ಭೌತಿಕ ( ಪಂಚ ಭೂತಗಳು )
ಆದಿ ದೈವಿಕ ( ಶನಿ - ರಾಹು - ಕೇತು ಮೊದಲಾದ ಗ್ರಹಗಳು ) ಎಂಬ ಮೂರು ವಿಧ ದುಃಖಗಳನ್ನೂ;
" ಬಂದ ಪಾಪ ಕಡೆವನೋ "
ಕಾಯಿಕ ( ಪ್ರಾಣಿಹಿಂಸೆ, ಕಳ್ಳತನ, ವ್ಯಭಿಚಾರ )
ವಾಚಿಕ ( ಕ್ರೂರ ಮಾತು, ಚಾಡಿ, ಸುಳ್ಳು, ಪರನಿಂದೆ )
ಮಾನಸಿಕ ( ವಂಚನೆ, ದ್ವೇಷ, ಪರವಸ್ತು ಅಪಹರಿಸುವ ಯೋಚನೆ ) ಮೊದಲಾದ ಪಾಪಗಳೂ ದೂರ ಮಾಡಿ ಶ್ರೀಪತಿಯಾದ ಶ್ರೀ ಹರಿಯ ಪಾದ ಚಿಂತನೆಯಲ್ಲಿಯೇ ಇರುವಂತೆ ಅನುಗ್ರಹ ಮಾಡುವರು.
ವೇದ ಓದಲು ಬರಿದೆ ವಾದ ಮಾಡಲೂ ।
ಹಾದಿಯಾಗದೋ ಬುಧರ ಪಾದ ನಂಬದೇ ||13||
ಶ್ರೀ ವಿಜಯರಾಯರು ತಮ್ಮ ದರ್ಶನ ಮಾತ್ರದಿಂದಲೇ ಭಕ್ತರನ್ನು ಪವಿತ್ರಗೊಳಿಸಿ ತತ್ ಕ್ಷಣವೇ ಶ್ರೀ ಹರಿಯ ಒಲಿಮೆ ಆಗುವಂತೆ ಅನುಗ್ರಹಿಸುವರು. ಈ ವಿಚಾರವನ್ನು ಶ್ರೀ ಜಗನ್ನಾಥದಾಸರು...
ಕೆಂಡ ಕಾಣದೆ ಮುಟ್ಟಿದರು । ಸರಿ ।
ಕಂಡು ಮುಟ್ಟಲು ದಹಿಸದಿಪ್ಪುದೆ ।
ಪುಂಡರೀಕ ದಳಾಯತಾಕ್ಷನ ವಿಮಲ ಪದಪದ್ಮ ।।
ಬಂಡುಣಿಗಳೆಂದೆನಿಪ ಭಕ್ತರ ।
ಹಿಂಡು ನೋಡಿದ ಮಾತ್ರದಲಿ । ತನು ।
ದಿಂಡುಗೆಡಹಿದ ನರನ ಪಾವನಮಾಳ್ಪರಾಕ್ಷಣದಿ ।। ಹ ಸಾ 13/12।।
ಗಂಗೆ ಮಿಂದರೆ ಮಲವು ಹಿಂಗಿತಲ್ಲದೇ ।
ರಂಗನೋಲಿಯನೋ ಭಕ್ತರ ಸಂಗ ದೊರೆಯದೇ ||14||
ಗುರುಗಳ ಅಂತರ್ಯಾಮಿಯಾದ ಹರಿಯೇ ತಾನಾಗಿ ಕರುಣೆಯಿಂದ ಅನುಗ್ರಹಿಸಬೇಕು. ಕೇವಲ ಸಾಧಕನಲ್ಲಿನ ವೇದ - ವೇದಾರ್ಥ ಜ್ಞಾನ; ವಾದ ಕೌಶಲ ಮೊದಲಾದವು ಮುಕ್ತಿಗೆ ಕಾರಣವಾಗಲಾರವು.
ಶ್ರೀ ವಿಜಯ ಗುರುಗಳಂಥಾ ಜ್ಞಾನಿಗಳ ಪಾದ ನಂಬದೇ - ಮುಕ್ತಿಗೆ ದಾರಿ ಎಲ್ಲಿದೆ? ಇಲ್ಲವೇ ಇಲ್ಲ ಎಂದು ತಾತ್ಪರ್ಯ!!
ಲೆಕ್ಕವಿಲ್ಲದೇ ದೇಶ ತುಕ್ಕಿ ಬಂದರೂ ।
ದುಃಖವಲ್ಲದೇ ಲೇಶ ಭಕುತಿ ದೊರಕದೋ ||15||
ಸುಮಧ್ವ ವಿಜಯ -( 1/5 )
ಮುಕುಂದ ಭಕ್ತೈ ಗುರು ಭಕ್ತಿ ಜಾಯೈ ।
ಧಾತ್ರಿಯೊಳಗುಳ್ಳಖಿಳ ತೀರ್ಥ ।
ಕ್ಷೇತ್ರ ಚರಿಸಿದರೇನು ಪಾತ್ರಾ ।
ಪಾತ್ರವರಿತನ್ನಾದಿ ದಾನವ ಮಾಡಿ ಫಲವೇನು ।।
ಗಾತ್ರ ನಿರ್ಮಲನಾಗಿ ಮಂತ್ರ ।
ಸ್ತೋತ್ರ ಪಠಿಸಿದರೇನು ಹರಿ । ಸ ।
ರ್ವತ್ರಗತೆನೆಂದರಿಯದಲೆ ತಾ ಕರ್ತೃಯೆಂಬುವನು ।। ಹ ಸಾ 10/14।।
ದಾನ ಮಾಡಲು ದಿವ್ಯ ಗಾನ ಪಾಡಲು।
ಜ್ಞಾನ ದೊರೆಯದೋ ಇವರಧೀನವಾಗದೇ ||16||
ಶ್ರೀ ವಿಜಯರಾಯರನ್ನು ತ್ರಿಕರಣ ಶುದ್ಧಿಯಿಂದ ನಂಬಿದರೆ ಸಾಕು ಅಂಥವರು ನಿಶ್ಚಯವಾಗಿ ಜ್ಞಾನವಂತರಾಗುವರು.
ನಿಷ್ಠೆಯಾತಕೆ ಕಂಡ ಕಷ್ಠವ್ಯಾತಕೆ ।
ದಿಟ್ಟ ಗುರುಗಳ ಪಾದ ಮುಟ್ಟಿ ಭಜಿಸಿರೋ ||17||
ನಿಷ್ಠೆ = ಶ್ರದ್ಧೆ
ಕಂಡ ಕಷ್ಟ = ನಾನಾ ವಿಧವಾದ ದೇಹ ಶೋಷಣೆ
ದಿಟ್ಟ = ಚಿತ್ತ ವಿಕಾರಕ್ಕೆ ಕಾರಣವಿದ್ದರೂ ಮನಸ್ಸು ಸ್ಥಿರವಾಗಿರುವ
ಗುರುಗಳ = ಶ್ರೀ ವಿಜಯರಾಯರ
ಪಾದ = ಪಾದಗಳನ್ನು
ಮುಟ್ಟಿ ಭಜಿಸಿರೋ = ಮನ ಮುಟ್ಟಿ ಭಜಿಸಿದರೆ ಎಲ್ಲಾ ಕಷ್ಟಗಳೂ ದೂರವಾಗಿ ಸಂತೋಷ ಉಂಟಾಗುವದು.
ಪೂಜೆ ಮಾಡಲು ಕಂಡ ಗೋಜು ಬೀಳಲೂ ।
ಬಿಜ ಮಾತಿನಾ ಫಲ ಸಹಜ ದೊರೆಯದೋ ||18||
ಗೋಜು = ತೊಂದರೆ
ಬೀಜ = ತತ್ತ್ವ ರಹಸ್ಯಗಳು
ಸಹಜ = ಸರಳವಾಗಿ
ಸುರರು ಎಲ್ಲರೂ ಇವರ ಕರವ ಪಿಡಿವರೋ ।
ತರಳರಂದದಿ ಹಿಂದೆ ತಿರುಗುತಿಪ್ಪರೋ ||19||
ಶ್ರೀ ವಿಜಯರಾಯರಿಗಿಂತ ಸ್ವರೂಪದಲ್ಲಿ ಅವರರಾದ ದೇವತೆಗಳು ತಮ್ಮನ್ನು ಸಾಧನಾ ಮಾರ್ಗದಲ್ಲಿ ಮುನ್ನಡೆಸಲು ಅವರ ಕೈಯನ್ನು ಹಿಡಿದು ಅವರ ಜೊತೆಗೂಡಿ ನಡೆಯುತ್ತಾರೆ.
" ತಂದೆಯ ಹಿಂದೆ ಬಾಲಕನು ತಿರುಗುವಂತೆ " ಶ್ರೀ ವಿಜಯರಾಯರನ್ನು ಎಲ್ಲೆಡೆ - ಯಾವಾಗಲೂ ಹಿಂಬಾಲಿಸುತ್ತಾರೆ.
ಗ್ರಹಗಳೆಲ್ಲವೂ ಇವರ್ಗೆ ಸಹಾಯ ಮಾಡುತಾ ।
ಅಹೊರತ್ರಿಲೀ ಸುಖದ ನಿವಹ ಕೊಡುವುವೋ ||20||
ಶ್ರೀ ವಿಜಯರಾಯರ ಪಾದ ನಂಬಿದ ಭಕ್ತರಿಗೆ ಯಾವ ಗ್ರಹಗಳಿಂದಲೂ ತೊಂದರೆ ಇಲ್ಲದೆ ಸುಖವನ್ನೇ ಕೊಡುತ್ತವೆ.
ಶ್ರೀದನಂಘ್ರಿ ಸರೋಜಯುಗಳೇ ।
ಕಾದಶಸ್ಥಾನಾತ್ಮದೊಳಗಿ ।
ಟ್ಟಾದರದಿ ಸಂತುತಿಸುವವರಿಗೆ ಈ ನವಗ್ರಹವು ।।
ಆದಿತೇಯರು ಸಂತತಾದಿ ।
ವ್ಯಾಧಿಗಳ ಪರಿಹರಿಸುತವರನು ।
ಕಾದು ಕೊಂಡಿಹರೆಲ್ಲರೊಂದ
ಾಗೀಶನಾಜ್ಞಯಲಿ ।। ಹ ಸಾ 10/2 ।।
ವ್ಯಾಧಿಬಾರದೋ ದೇಹ ಬಾಧೆ ತಟ್ಟದೋ।
ಆದಿದೇವನಾ ಸುಪ್ರಸಾದವಾಹುದೋ ||21||
ವ್ಯಾಧಿ = ರೋಗ
ಬಾಧೆ = ದುಃಖ
ಪತಿತಪಾಮರಾ ಮಂದಮತಿಗ ನಾ ಬಲೂ ।
ತುತಿಸಲಾಪೆನೇ ಇವರ ಅತಿಶಯಂಗಳಾ ||22||
ಪತಿತ = ಧರ್ಮದಿಂದ
ಪಾಮರ = ಮೂರ್ಖ
ಮಂದಮತಿ = ಆಲಸಿ
ಕರುಣದಿಂದಲೀ ಎಮ್ಮ ಪೋರೆವನಲ್ಲದೇ ।
ದುರಿತಕೊಟಿಯಾ ಬ್ಯಾಗ ತರಿವ ದಯದಲೀ ||23||
ದುರಿತ ಕೋಟಿ = ಪಾಪಗಳೆಂಬ ಕೋಟಿಗಳು
ಶ್ರೀ ವಿಜಯರಾಯರು...
ಚಿಂತಾರತುನ ನಿನ್ನ ಕರುಣವಲ್ಲವೇ । ಅ ।
ನಂತ ಸಾಧನೆ ನಾನಾ ಫಲ ಕೊಡುವವೆ ।
ಸಂತೋಷ ಮೂರುತಿ ವಿಜಯವಿಠಲ । ಸಕ ।
ಲಾಂತರ್ಯಾಮಿ ಸ್ವಾಮಿ ಭಕ್ತವತ್ಸಲ ದೇವ ।।
ಮಂದಮತಿಗಳು ಇವರ ಚೆಂದವರಿಯದೇ ।
ನಿಂದೆ ಮಾಡಲೂ ಭವದ ಬಂಧ ತಪ್ಪದೋ ||24||
ಚೆಂದ = ಗುಣ ಜ್ಯೇಷ್ಠತೆ
ಇಂದಿರಾಪತಿ ಇವರ ಮುಂದೆ ಕುಣಿವನೋ ।
ಅಂದ ವಚನವಾ ನಿಜಕೆ ತಂದು ಕೊಡುವನೋ ||25||
ಇಂದಿರಾಪತಿ = ಲಕ್ಷ್ಮೀಪತಿಯಾದ ಶ್ರೀಹರಿ
ನಿಜಕೆ = ಸ್ವಾನುಭವಕ್ಕೆ
ಉದಯ ಕಾಲದಿ ಈ ಪದವ ಪಠಿಸಲೂ ।
ಮದಡನಾರೂ ಜ್ಞಾನ ಉದಯವಾಹುದೋ ||26||
ಉದಯಕಾಲ = ಪ್ರಾತಃಕಾಲ
ಮದಡ = ಅಜ್ಞಾನಿಗೆ
ಜ್ಞಾನ ಉದಯವಾಹುದೋ = ಜ್ಞಾನ ಹುಟ್ಟುವುದು
ಸಟೆ ಇದಲ್ಲವೋ ವ್ಯಾಸವಿಠಲ ಬಲ್ಲನೋ ।
ಪಠಿಸ ಬಹುದಿದೋ ಕೇಳಿ ಕುಠಿಲರಹಿತರು ||27||
ಸಟೆ = ಸುಳ್ಳು
ಕುಠಿಲ = ವಂಚಕತನ
ಶ್ರೀ ವ್ಯಾಸ ವಿಠಲಾಂಕಿತ ವಿರಚಿತ ಶ್ರೀ ವಿಜಯದಾಸರ ನಕ್ಷತ್ರ ಮಾಲಿಕಾ ಸ್ತೋತ್ರ ಸಂಪೂರ್ಣವಾಯಿತು.
.
toಭಾವಿಸಮೀರವಾದಿರಾಜ ಗ್ರೂಪು.
ಶ್ರೀವ್ಯಾಸವಿಠ (ಕಲ್ಲೂರು ಸುಬ್ಬಣ್ಣಾಚಾರ್ಯ) ವಿರಚಿತ ವಿಜಯದಾಸರ ಕವಚ
ಶ್ರೀಹರಿ ಕೃಪೆ,ದಾಸರ ಮನೆಗೆ,ಶ್ರೀಮಹಾ ಲಷ್ಮಿದೇವಿಯರು. 💐💐
ಶ್ರೀ ವಿಜಯದಾಸರ ಮಹಿಮೆ 5
ಜಯಗಳು ಆಗಲಿ ಅಪಜಯಗಳು ಪೋಗಲಿ
ಜಯದೇವ ರಮಣ ಒಲಿಯಲಿ ಕೋಲೇ
ಜಯದೇವ ರಮಣ ಒಲಿಯಲಿಕೋಲೇ*
ನಮ್ಮ ವಿಜಯರಾಯ ರ ಕೀರ್ತಿ ಬೆಳೆಯಲಿ ಕೋಲೇ
ಶ್ರೀದಾಸರ ಜೀವನದಲ್ಲಿ ಹೀಗೊಂದು ಘಟನೆ ನಡೆಯಿತು. ಅಂದು ಎಂದಿನಂತೆ ಶ್ರೀದಾಸರು ತುಂಗಭದ್ರ ನದಿಯಲ್ಲಿ ಮಿಂದು ಅಲ್ಲಿಯ ಒಂದು ಶೀಲಾವೇದಿಕೆಯ ಮೇಲೆ ನಿತ್ಯಾನುಷ್ಠಾನನಿರತರಾಗಿದ್ದರು.ಮನೆಯಲ್ಲಿ ತಾಯಿ ಕುಸಮ್ಮ,ಪತ್ನಿ ಅರಳಮ್ಮ ದೈನಂದಿನ ಕಾರ್ಯದಲ್ಲಿ ತೊಡಹಿದ್ದರು.ಆಗ ಒಬ್ಬ ಲಕ್ಷಣ ವ್ಯಕ್ತಿತ್ವದ ಮುತ್ತೈದಿ ದಾಸರ ಮನೆಗೆ ಬಂದು ಅವರ ಮನೆಯವರಿಗೆ ಇತರ ನುಡಿದರಂತೆ,' ಅಮ್ಮ ನಾವು ನಾರಾಯಣರಾಯರ ಪತ್ನಿ,ಇಂದು ದಾಸರಿಗೆ ಔತಣಕ್ಕೆ ಹೇಳಿದ್ದೆವು,ಯಾಕೋ ಅವರು ಇನ್ನೂ ಬರಲಿಲ್ಲ,ಹಾದಿ ನೋಡಿ ಸಾಕಾಯಿತು .* ಅದಕ್ಕಾಗಿ ನಮ್ಮ ಯಜಮಾನರ ಅಪ್ಪಣೆಯಂತೆ ಅವರಿಗೆ ತಲುಪಿಸಬೇಕಾದದ್ದನ್ನು ತಂದಿರುವೆನು' ಎಂದು ಅಪಾರದ್ರವ್ಯವನ್ನು ಅಲ್ಲಿರಿಸಿ ಅಲ್ಲಿಂದ ಮರೆಯಾದಳು . ಮುಂದೆ ಸ್ವಲ್ಪ ಸಮಯದ ನಂತರ ದಾಸರು ಹಿಂದಿರುಗಿದರು.ತಾಯಿ ಕೂಸಮ್ಮ ವಿಷಯ ತಿಳಿಸಿ ' ಔತನಕ್ಕೆ ಮಾತುಕೊಟ್ಟು ತಪ್ಪಕೂಡದಿತ್ತು ' ಎಂದು ನುಡಿದರು.
ದಾಸರಿಗೆ ಪರಮಾಆಶ್ಚರ್ಯ ಅಂದು ಅವರಿಗೆ ಯಾರೂ ಔತಣಕ್ಕೆ ಕರೆನೀಡಿಯೇ ಇರಲಿಲ್ಲ,' ಇದೆಲ್ಲಾ ಎನು ?'ಎಂದು ಆಶ್ಚರ್ಯಚಕಿತರಾಗಿ ಅವರು ತಂದಿಟ್ಟ ಅಪಾರ ದ್ರವ್ಯರಾಶಿಯನ್ನು ಕಂಡರು.ಕೂಡಲೇ ಅವರಿಗೆ ಅದು ಶ್ರೀ ಲಷ್ಮಿ ನಾರಾಯಣರ ಲೀಲೆ ಎಂದು ತಿಳಿಯಿತು. ಸಂಪತ್ತು ರಾಶಿ ಬಂದದ್ದಕ್ಕೆ ಖುಷಿಯೆನಿಸಲಿಲ್ಲ,ಬದಲಿಗೆ ಈ ಮೂಲಕ ಸಾಧನೆಗೆ ಅಡ್ಡಿಯಾದೀತೆಂಬ ಆತಂಕ ಒದಗಿ ಕೂಡಲೇ ಶ್ರೀಹರಿಯನ್ನು ಪ್ರಾರ್ಥಿಸಿ ಕೊಂಡರು.
ನೀನೊಲಿದುದ್ದಕ್ಕಿ ಇಹ ಸೌಖ್ಯವೇ ಇನ್ನು
ನಾನೊಲ್ಲೆ ನಾನೊಲ್ಲೆ ಸರ್ವೇಶ||ಪ||
ನಿನ್ನನುರಾಗದಿ ಗತಿಯೆಂದು ನಂಬಿದ
ಮಾನವನ ಕೂಡ ಮೌನವಾಗಿಪ್ಪರೆ||ಅ. ಪ||
ಶ್ರೀ ದಾಸರು ಈ ಮೂಲಕ ದೋರಿದ ವ್ಯರಾಗ್ಯಭಾವ ಅಪೂರ್ವವಾದದ್ದು.ಶ್ರೀದಾಸರ ಈ ಮಾತಲ್ಲಿ ಅವರ ನಿರ್ಮಲವಾದ ಹರಿಭಕ್ತಿ ಕಾಣುತ್ತದೆ..
ಅವರ ಪ್ರಾರ್ಥನೆ ಮುಗಿಯುತ್ತಿದಂತೆಯೇ ಆ ಎಲ್ಲ ವಸ್ತುಗಳೂ ಹಾಗೆಯೇ ಮಾಯವಾದವಂತೆ.
*ಇವರ ಸ್ಮರಣೆಯು ಸ್ನಾನ
ಇವರ ಸ್ಮರಣೆಯು ಧ್ಯಾನ
ಇವರ ಸ್ಮರಣೆಯು ಅಮೃತಪಾನ
ಇವರ ಸ್ಮರಣೆಯು ಮಾಡೇ ಯುವತಿಗಕ್ಷಯವಿತ
ತ್ರಿವಿಕ್ರಮನೆ ಮುಂದೆ ನಿಲುವ-ನಲಿವ..
*
ವಿಜಯ ರಾಯರ ಪಾದವ ನೀ ಭಜಿಸಿ ಬದುಕೆಲೊ ಮಾನವ...
ಶ್ರೀ ದಾಸಾರ್ಯರ ಸೇವೆಯಲ್ಲಿ
💐🙏🏼ಎಸ್.ವಿಜಯ ವಿಠ್ಠಲ🙏🏼💐
ಸುಳಾದಿ ದಾಸರೆಂದೇ ಕರೆಯಿಸಿಕೊಳ್ಳುವ ಶ್ರೀ ವಿಜಯದಾಸಾರ್ಯರ ಆರಾಧನೆಯ ನಿಮಿತ್ತ ಅವರ ಕೃತಿಯ ನೆನೆಯೋಣ
🙏🏼1682 - 1755 ರ ಕಾಲಮಾನದ ಶ್ರೀ ವಿಜಯದಾಸರು 73 ವರ್ಷಗಳ ಸಾಧನೆ ಮಹೋನ್ನತವಾದದ್ದು.💐
🙏🏼 ಭೃಗುಋಷಿಗಳ ಅಂಶರಾದ ಇವರು ಹದಿನೈದನೆಯ ಕಕ್ಷಾಪನ್ನರು.💐
🙏🏼 ಮನೋವೇಗದಿಂದ ಕೈಲಾಸ, ಸತ್ಯಲೋಕ ಹಾಗೂ ವೈಕುಂಠವ ತೆರಳಿ ಶ್ರೀಹರಿಯೇ ಸರ್ವೋತ್ತಮ ದೇವರೆಂದು ಜಗತ್ತಿಗೆ ಸಾರಿದ ಯೋಗಸಿದ್ದ( ಭೃಗುಮಹರ್ಷಿ) ಮುನಿಪುಂಗರಿವರು💐
ಸ್ವರ್ಗನದಿಯ ತೀರದಲ್ಲಿ ಋಷಿಗಳು ನಡೆಸುತ್ತಿದ್ದ ಸತ್ರಯಾಗದಲ್ಲಿ ಪೂರ್ಣಾಹುತಿಯನ್ನು ಯಜ್ಞ ನಾಮಕ ಶ್ರೀಹರಿ ಗೆ ಸಮರ್ಪಿಸಿದವರು💐
🙏🏼 ತ್ರೇತಾಯುಗದಲ್ಲಿ ಸುರಲೀಲಾ ಎಂಬ ವಾನರನಾಗಿ
ಜನಿಸಿ ಶ್ರೀರಾಮದೇವರ ಹಾಗೂ ಹನುಮದೇವರ ಸೇವೆ ಮಾಡಿದವರು💐
🙏🏼ದ್ವಾಪರಯುಗದಲ್ಲಿ ನಿಕಂಪನೆಂಬ ಯಾದವನಾಗಿ ಜನಿಸಿ ಶ್ರೀಕೃಷ್ಣ ಹಾಗೂ ಭೀಮಸೇನ ರ ಕೃಪೆ ಹೊಂದಿದವರು💐
🙏🏼 ತೈತ್ತಿರೀಯೋಪನಿಷತ್ತಿನ ಮಂತ್ರದ್ರಷ್ಟಾರರು ಇವರು💐
🙏🏼ಪುರಂದರದಾಸರ ಪುತ್ರರಾಗಿ ಮಧ್ವಪತಿ ಯಾಗಿ ಜನಿಸಿದರು ಅಲ್ಲದೆ ಅವರ ಮನೆಯ ಹಸುವಿನ ಕರು ಪುರಂದರದಾಸರ*ಸಿದ್ದರು.💐
🙏🏼 ವಿಜಯದಾಸರಾಗಿ ಪುರಂದರದಾಸರ ಅಲಭ್ಯ ಕೃತಿ, ಕೀರ್ತನಾದಿಗಳ ಆವಿಷ್ಕರಿಸಿ ನಮ್ಮ ಸಾಹಿತ್ಯಲೋಕಕ್ಕೆ ಮಹಾ ಉಪಕಾರ ಮಾಡಿದ ಕೀರ್ತಿ ಈ ಮಹಾನುಭಾವ ರಿಗೆ ಸಲ್ಲಬೇಕು💐
🙏🏼ಪುರಂದರದಾಸರೋಪ್ಪನಿಷತ್ತಿಗೆ ಟೀಕಾ ರೂಪವಾಗಿ ತಮ್ಮ ಸುಳಾದಿಗಳಿಂದ ವ್ಯಾಖ್ಯಾನ ಬರೆದು ಪುರಂದರದಾಸರ ಸಾಹಿತ್ಯಕ್ಕೆ ಮತ್ತಷ್ಟು ಮೆರಗು ಕೊಟ್ಟರಿವರು.💐
🙏🏼ವ್ಯಾಸದಾಸ ಉಭಯ ವಾಙ್ಮಯದಲ್ಲಿ ಚರ್ಚಾಸ್ಪದ ವಿಷಯಗಳಿಗೆ ಇವರ ಪದ ಸುಳಾದಿಯಲ್ಲಿ ಅಡಗಿಸಿದ ಪ್ರಮೇಯ ಭಾಗಗಳಲ್ಲಿ ನಿರ್ಧಿಷ್ಟವಾಗಿ ಸಕಲ ಉದ್ದಾಮ ಪಂಡಿತರನ್ನು ತಲೆದೂಗಿಸುವಂತೆ ಮಾಡಿದವರಿವರು.💐
🙏🏼ಮಾನ್ವಿ ಬಳಿಯ ಚೀಕಲಪರವಿ ಯಲ್ಲಿ ಜನಿಸಿ ಕಾಶಿಯಲ್ಲಿ ಜ್ಞಾನ ಭಾಗ್ಯೋದಯ ಕಂಡು ಸ್ವಪ್ನದ್ವಾರಾ ಪುರಂದರದಾಸರ ಅನುಗ್ರಹ ಪಡೆದ ಮಹನೀಯರು💐
🙏🏼ದಶದಿಕ್ಕಿನಲೂ ಶಿಷ್ಯಸಂಗ್ರಹ, ಜ್ಞಾನೋದ್ದಾರ, ಕೃತಿ,ಕೀರ್ತನೆ, ಸುಳಾದಿ, ಉಗಾಭೋಗಗಳ ಪುಂಖಾನುಪುಂಕವಾಗಿ ಪಸರಿಸಿ ನಿಂತ, ನಡೆದ ಹಾದಿಗಳನ್ನು ತೀರ್ಥಕ್ಷೇತ್ರವಾಗಿಸಿದ ಮಹನೀಯರು
🙏🏼ಇಂದಿಗೂ ಚೀಕಲಪರ್ವಿಯಲ್ಲಿ ದಾಸಾರ್ಯರ ಮನೆ ಮತ್ತು ಅವರ ಸಾಣೇಕಲ್ಲು ಇದೆ, ಚಿಪ್ಪಗಿರಿಯಲ್ಲಿ ಇವರ ತಂಬೂರಿ, ತಾಳ ಇವೆ💐
🙏🏼ಆರಾಧನೆಯಲ್ಲದೆ ನಿತ್ಯವೂ ನೆನೆಯಬೇಕಾದವರು ಶ್ರೀ ವಿಜಯದಾಸರ ನೆನೆಸಿಕೊಂಡ ಮಾತ್ರಕ್ಕೇ ವಿಜಯ ದೊರಕುವುದು
ಜೈ ವಿಜಯರಾಯ
✍🏼ಸತ್ಯನರಹರಿವಿಠ್ಠಲ🙏🏼💐
ಓಂ ಶ್ರೀ ವಾಸುದೇವಾಯ ನಮಃ.
ಶ್ರೀ ವಿಜಯದಾಸರು.
ಅಜ್ಞಾನ ತಿಮಿರಾದಿತ್ಯಂ ಅತ್ಯಾನಂದ ಪದಪ್ರದಂ/
ವಿಜ್ಞಾನ ವಿಮಲಂ ಶ್ರೇಷ್ಠಂ ವಿಜಯಾರ್ಯ ಗುರುಂ ಭಜೇ//.
ನಿನ್ನ ಒಲುಮೆ ಯಿಂದ/ ನಿಖಿಳ ಜನರು ಬಂದು/
ಮನ್ನಿಸುವರೊ ಮಹಾರಾಯ//.
ಎನ್ನ ಪುಣ್ಯಗಳಿಂದ ಈ ಪರಿಯುಂಟೇನೋ/
ನಿನ್ನದೆ ಸಕಲ ಸಂಪತ್ತು//.
ಬಹಳ ಬಡತನ ದಿಂದ ಬಳಲುತ್ತಿದ್ದ ದಾಸಪ್ಪನಿಗೆ
ಹೆಚ್ಚಿನ ವಿದ್ಯಾಭ್ಯಾಸ ಆಗಲಿಲ್ಲ.
ಮುಂದೆ ಪ್ರಖ್ಯಾತ " ವಿಜಯದಾಸರು " ಎಂದೆನಿಸಿಕೊಂಡು ದೇವರ ಸುಳಾದಿ ಗಳನ್ನು ನೋಡಿದರೆ ಅವರು ಎಷ್ಟು ದೈನ್ಯಸ್ಥಿತಿ ಯಲ್ಲಿ ,ತಂದೆ ತಾಯಿ ಯರಿಗೆ ತಿಳಿಸದೇ ದೇಶಾಂತರ ಹೋಗಿದ್ದು ತಿಳಿಯುವುದು.
ಆದವಾನಿಯಲ್ಲಿ ತಹಸೀಲ್ದಾರನ ಮಗನ ಮದುವೆ.
ಆಡಂಬರದ ವಿವಾಹ. ನವಾಬ ನನ್ನು ಮನೆಗೆ ಕರೆದು
ಆದರೋಪಚಾರ ಮಾಡುವ ಸಡಗರದ ,ಸಂಭ್ರಮದ
ಮದುವೆ ಮನೆಗೆ ದಾಸಪ್ಪ ಮೃಷ್ಟಾನ್ನ ಭೋಜನ, ದಕ್ಷಿಣೆಗಳ ಆಸೆಗೆ ಹೋದರು.
ಸಾವಿರಾರು ಬ್ರಾಹ್ಮಣರು ! ಅವರಲ್ಲಿ ಒಬ್ಬ ನಾಗಿ ಊಟ ಕ್ಕೆ ಕುಳಿತನು.
ಬಡತನ ವಿದ್ದರೂ ದೃಢಕಾಯ ನಾದ ದಾಸಪ್ಪ ನನ್ಬು
ಎಲ್ಲರೂ " ಕೂಸೀ ಮಗ ದಾಸ' ಎಂದು ಕರೆಯುತ್ತಿದ್ದರು..
ಇನ್ನೇನು ಭೋಜನ ಕ್ಕೆ ಬಡಿಸುವ ಸಮಯ. ಅಲ್ಲಿಗೆ
ಬಂದ ತಹಸೀಲ್ದಾರ ರಾಘವೇಂದ್ರ ರಾಯ ಅಲ್ಲಿ ಬಂದು
ಜನರಿಗೆ ಹಂಚಲು ಗಂಧವನ್ನು ತೇಯಲು ಜನವನ್ನು ಹುಡುಕಿದನು.ಅಲ್ಲಿ ಕುಳಿತಿದ್ದ ದಾಸಪ್ಪನನ್ನು ಜಬರಿಸಿ
ಎಬ್ಬಿಸಿ ಗಂಧ ತೇಯಲು ಹೇಳಿದನು.
ಈ ಮಾತಿನಿಂದ ಅವಮಾನ ,ಮನೋವ್ಯಥೆಯುಂಟಾಗಿ
ನಿರ್ವಾಹ ವಿಲ್ಲದೇ ಗಂಧ ತೇಯಲು ಕುಳಿತನು.
ಎಷ್ಟು ಪಂಕ್ತಿ ಊಟ ವಾದರೂ ಅವನನ್ನು ಯಾರೂ ಕರೆಯಲಿಲ್ಲ.
ರಾತ್ರಿ ರಾಘವೇಂದ್ರ ರಾಯನು ನೋಡಿ ಮತ್ತೆ ಗದರಿಸಿ
ಹೊರ ದಬ್ಬಿದನು.
ಒಂದು ತುತ್ತು ಅನ್ನಕ್ಕಾಗಿ ಎಷ್ಟು ಅವಮಾನ ಶ್ರೀ ಹರೇ
ಎಂದು ದುಃಖಿಸುತ್ತಾ ,ಎಲ್ಲಿಯೂ ಜಾಗಸಿಗದೇ ಬೆಳಗಾಗುವ ಸಮಯದಲ್ಲಿ ' ಛಾಗಿಗೆ' ಬಂದನು
ಅಲ್ಲಿ ಕುಲಕರ್ಣಿ ಕೇಶವರಾಯನ ಭೆಟ್ಟಿ ಯಾಯಿತು.
ತಮ್ಮ ಮನೆಗೆ ಕರೆದುಕೊಂಡು ಹೋಗಿ ಭೋಜನ ಮಾಡಿಸಿದನು.ದಕ್ಷಣೆ ಕೊಟ್ಟು ಕಳಿಸಿದನು.
ದಾಸಪ್ಪ ನು ತಹಸೀಲ್ದಾರನನೆಯಲ್ಲಿ ಆದ ಅವಮಾನ ವನ್ನು ನೆನೆದು ,ದುಃಖಪಡುತ್ತಾ ತಂದೆ ತಾಯಿ ಯರಿಗೆ ತಿಳಿಸದೆ ಉತ್ತರ ಕಡೆ ಯಾತ್ರೆ ಹೋದನು.
ಪುನಃ ಹದಿನಾರು ವರ್ಷಗಳ ನಂತರ ಚೀಕಲಪರವಿಗೆ ಬಂದನು.ತಂದೆ ತಾಯಿಯರು ಮಗನನ್ನು ನೋಡಿ ಸಂತೋಷ ಭರಿತರಾಗಿ ,ಅರಳಮ್ಮ ಎಂಬ ಕನ್ಯೆಯೊಂದಿಗೆ ವಿವಾಹ ಮಾಡಿದರು..
ಪತ್ನಿಯೊಂದಿಗೆ ೧೬ ವರ್ಷ ಸಂಸಾರ ಮಾಡಿದ ದಾಸಪ್ಪ ತಂದೆ ತಾಯಿ ಯರು ಮೃತರಾದ ಮೇಲೆ ಪುನಃ ಕಾಶೀಯಾತ್ರೆಗೆ ಹೋದರು.
ಅಲ್ಲಿಯೇ ಇದ್ದ ಛತ್ತದಲ್ಲಿ ಊಟ,ನಿದ್ರೆ ಮಾಡುತ್ತಾ ಹರಿಯ ದ್ಯಾನದಲ್ಲಿದ್ದ ದಾಸಪ್ಪ ನಿಗೆ ಒಂದು ರಾತ್ರಿ
ಸ್ವಪ್ನ ದಲ್ಲಿ ಶ್ರೀಹರಿಯು ಪುರಂದರ ದಾಸರ ರೂಪದಲ್ಲಿ ಬಂದು ದಾಸಪ್ಪ ನನ್ನು ಎಬ್ಬಿಸಿ ವ್ಯಾಸಕಾಶಿಗೆ ಕರೆದೊಯ್ದು ವೇದವ್ಯಾಸ ರ ದರ್ಶನ ಮಾಡಿಸಿ ಇಂದಿನಿಂದ ನೀನು ಹರಿದಾಸ ನಾದೆಯೆಂದು ಆತನ
ನಾಲಿಗೆಯ ಮೇಲೆ " ವಿಜಯ " ಎಂಬ ಬೀಜಾಕ್ಷರ ಗಳನ್ನು ಬರೆದನು.
ಸ್ವಪ್ನದಲ್ಲಿ ಯೇ ದಾಸಪ್ಪ ನು ದಾಸರೂಪಿ ಭಗವಂತನಿಗೂ ವೇದವ್ಯಾಸ ರಿಗೂ ವಂದನೆ ಮಾಡಿದನು.
ಅಂದಿನಿಂದ ದಾಸಪ್ಪ ನ ದೃಷ್ಟಿ ಯೇ ಬದಲಾಗಿ ಆಡಿದ ಮಾತೂ ಹಾಡಾಯಿತು.
ಕಾಶಿರಾಜನು ಅವರನ್ನು ಕರೆಯಿಸಿ ಪುರಸ್ಕಾರ ಮಾಡಿದನು.
ಭಗವಂತನ ಅನುಗ್ರಹ ವಾದ ಮೇಲೆ ಕೇಳುವುದೇನು?
ಹೀಗೆ ಎಲ್ಲವನ್ನೂ ಧ್ಯಾನಿಸಿಕೊಂಡು ಎಲ್ಲಾ ಭಗವಂತನ ದಯೆಯೆಂದು ,ಕೇಶವರಾಯನ ಮನೆಯ ಹುಗ್ಗಿ ಯನ್ನು ,ಉಪಕಾರವನ್ನು ಸ್ಮರಿಸಿಕೊಂಡು ಹಾಡಿದ ಹಾಡು!
ನಿನ್ನ ಒಲುಮೆ ಯಿಂದ /ನಿಖಿಳ ಜನರು ಬಂದು/
ಮನ್ನಿಸುವರೊ ಮಹರಾಯಾ/
ಎನ್ನ ಪುಣ್ಯ ಗಳಿಂದ ಈ ಪರಿಯುಂಟೇನೋ/
ನಿನ್ನದೇ ಸಕಲ ಸಂಪತ್ತೂ//
ಸಂಜೆ ತನಕ ಇದ್ದು ಸಣ್ಣ ಸೌಟು ತುಂಬ
ಗಂಜಿ ಕಾಣದೆ ಬಳಲಿದೆನೋ/ ಹಿಂದೆ//
ವ್ಯಂಜನ ನಾನಾ ಸುಭಕ್ಷ್ಯ ಭೋಜ್ಯಂಗಳ
ಭುಂಜಿಸುವುದು ಮತ್ತೇನೋ//
---
ವೈದಿಕ ವೃತ್ತಿ ಯ ಕೊಡುವಗೆ ಲೌಕಿಕ
ವೈದಿಸುವುದು ಬಲು ಖ್ಯಾತೇ//
ಮೈದುನಗೊಲಿದ ಶ್ರೀ ವಿಜಯ ವಿಠಲ ನಿನ್ನ
ಪಾದಸಾಕ್ಷಿ ಅನುಭವವೋ//
ಎಂಬುದಾಗಿ ಪರಮಾತ್ಮನನ್ನು ಸ್ತೋತ್ರ ಮಾಡಿದರು.
ಸಕಲವೂ ಹರಿ ಚಿತ್ತ//
ಶ್ರೀ ವಿಜಯ ದಾಸರ ಅಂತಿಮ ದಿನಗಳು!!
ಇಂದು ಶ್ರೀ ವಿಜಯ ದಾಸರ ಮಧ್ಯಾರಾಧನೆ!!!
ಜಯಗಳು ಆಗಲಿ ಅಪಜಯಗಳು ಪೋಗಲಿ
ಜಯದೇವ ರಮಣ ಒಲಿಯಲಿ ಕೋಲೇ
ಜಯದೇವ ರಮಣ ಒಲಿಯಲಿ ಕೋಲೇ
ನಮ್ಮ ವಿಜಯರಾಯ ರ ಕೀರ್ತಿ ಬೆಳೆಯಲಿ ಕೋಲೇ
ಅದು ಯುವ ನಾಮ ಸಂವತ್ಸರ ಶ್ರೀ ವಿಜಯದಾಸರಿಗೆ ಅಂದಿಗೆ 73 ವರ್ಷಗಳು ಕಳೆದಿದ್ದವು .ಅಂದು ಕಾರ್ತಿಕ ಮಾಸದ ಶುಕ್ಲ ಪಕ್ಷದ ದಶಮಿ ದಿನ ಗುರುವಾರವಾಗಿತ್ತು. ಎಂದಿನಂತೆ ಶ್ರೀ ದಾಸರು ಪ್ರಾತಃ ನೇಮನಿಷ್ಠ ಗಳನ್ನು ಹಾಗೂ ದೇವರ ಪೂಜಾದಿಗಳನ್ನು ಪೂರೈಸಿದರು.ಆಪ್ತರಿಗೆಲ್ಲಾ ತಾವು ಇಹಲೋಕದ ವ್ಯಾಪಾರವನ್ನು ಮುಗಿಸುವ ವೇಳೆ ಬಂದಿದೆ ಎಂಬ ಸೂಚನೆಯನ್ನು ನೀಡಿದರು.
ಶ್ರೀ ಭಾಗಣ್ಣ ದಾಸರು,ಕಲ್ಲುರೂ ಸುಬ್ಬಣ್ಣದಾಸರು,ಶ್ರೀ ಮೋಹನ ದಾಸರು,ಶ್ರೀ ಜಗನ್ನಾಥ ದಾಸರು ಮೊದಲಾದ ಶ್ರೀ ದಾಸರ ಪ್ರಮುಖ ಶಿಷ್ಯರೆಲ್ಲ ಉಪಸ್ಥಿತರಿದ್ದರು .
ಶ್ರೀ ಭಾಗಣ್ಣಾದಾಸರನ್ನು ಕರೆದು ತಮಗೆ ಒಲಿದುಬಂದಿದ್ದ ಶ್ರೀ ವಿಜಯವಿಠ್ಠಲ ಪ್ರತಿಮೆಯನ್ನು ಅನುಗ್ರಹಿಸಿದರು.
ಶ್ರೀ ದಾಸರು ಧ್ಯಾನಕ್ಕೆ ಕುಳಿತರು,ಆಗ ಮತ್ತೊಮ್ಮೆ ಶ್ರೀ ಪುರಂದರದಾಸರ ರೂಪದಲ್ಲಿ ಚಂದ್ರನಂತೆ ವಿಜಯ ವಿಠ್ಠಲ ಸಂದರ್ಧನ ನೀಡಿದ.ಆ ಆನಂದ ಸಂದರ್ಭದಲ್ಲಿ ಅವರಿಂದ ಈ ಕೆಳಗಿನ ಸುಳಾದಿಯನ್ನು ರಚಿಸಿದರು.
*ದಾಸ ಪುರಂದರನ ಪಾದವನು ಪೊಂದಿದೆನು
ಎಸು ಜನ್ಮದ ಪುಣ್ಯರಾಶಿ ಫಲಿಸಿತೋ ಎನಗೆ* ...💐
ಶ್ರೀ ದಾಸರ ಅವತಾರಗಳ ಚಿಂತನೆ!!! 🙏🏼
ಸುರಲೀಲನಾಗಿ ನಿಕಂಪನೆಂದೇನಿಸಿ ದ್ವಾಪರದಲ್ಲಿ ಜನಿಸಿ ಕೆಲವು ದಿನ ಬಿಡದೆ
ತರುವಾಯ ವರ ಕಲಿಯುಗದಲ್ಲಿ ಈಗ ಜನನ-ಮರಣವಾಗುತ್ತ ಬಂದು ಧರೆಯೊಳಗೆ ಮೆರೆದು
ಹರಿ ಕೃಪೆಯಿಂದಲಿ ಇವರು ಸದನದೊಳಗೆ ತುರುಕರುವು ಆಗಿ ಜನಿಸಿದೆ ಸುಕೃತದಿಂದ ಸಿರಿಪತಿಸ್ಥ ವಿಷ್ಣು ನಮ್ಮ ವಿಜಯ ವಿಠ್ಠಲನ್ನ ದಾಸರು ಪೆಳುವ ಕವನ ಎರಗಳು ಕರ್ಣಕ್ಕೆ...
ಇದರಿಂದತಿಳಿದು ಬರುವಂತೆ ಅವರು ಮೂಲತಃ ನಾರದ ಮುನಿಯ ಶಿಷ್ಯರು, ಕೃತಯುಗದಲ್ಲಿ ಸುರಲಿಲಾ ಎಂಬ ಕಪಿಯಾಗಿಯೂ ದ್ವಾಪರದಲ್ಲಿ ನಿಕಂಪನ ಎಂಬ ಯಾದವನಾಗಿಯೂ ಶ್ರೀಹರಿಸೇವೆ ಮಾಡಿದ್ದರು, ಶ್ರೀ ಪುರಂದರದಾಸರ ಮನೆಯಲ್ಲಿ ಕರುವಾಗಿ ಜನಿಸಿ ಬಳಿಕ ಅವರ ಪುತ್ರನೂ ಆಗಿ ಜನಿಸಿದರು.ಶ್ರೀ ಪುರಂದರದಾಸರ ಪುತ್ರರೊಬ್ಬರಲ್ಲಾದ ಮಧ್ವಾಪತಿದಾಸರಿ ಇವರೇ ಎಂದು ಪ್ರತೀತಿ.
ಶ್ರೀ ವಿಜಯರಾಯರ ಚಿಕಲಪರ್ವಿ/ಚಿಪ್ಪಗಿರಿ ಸಾಧನಾ ಭೂಮಿ ಎಂಬುದಾಗಿ ಪ್ರಸಿದ್ಧವಾಗಿ ವೈಷ್ಣವರ ಪವಿತ್ರ ತೀರ್ಥಕ್ಷೇತ್ರಗಳಲ್ಲೊಂದಾಗಿವೆ ..
ಇಂದಿರಾಪತಿ ಇವರ ಮುಂದೆ ಕುಣಿವನೋ
ಅಂದ ವಚನವಾ ನಿಜಕೆ ತಂದುಕೊಡುವನೋ...
ಕೋಟಿಗಾದರು ನಿನ್ನ ನಾಮ ಒಂದೇ ಸಾಕು.
ದಾಟಿಸುವುದು ಭಾವಸಾಗರವ ಬುತಕಟನದಲಿ ಹರಿದಾಸನದರೆ
ತೋಟವಿಲ್ಲದೆ ಮೋಟಿ ಎತ್ತಿದಂತೆ
ನೀಟಾಗದು ಕಾಣೋ ಎಂದಿಗು ಯಮಭಟರ
ಕಾಟ ತಪ್ಪದು ಕಾಶಿಯೊಳಗಿದ್ದರು
ಹಾಟಕಾಂಬರಧರ ವಿಜಯವಿಠ್ಠಲರೇಯ
ನಾಟಿಸು ನಿನ್ನ ಚರಣದಲಿ ಎನ್ನ ಮನಸ.
ಮಧ್ಯಾರಾಧನೆಯ ಈ ಶುಭ ಸಮಯದಲ್ಲಿ ನಾವೆಲ್ಲೂರು ಒಂದು ಪ್ರತಿಜ್ಞೆ ಮಾಡೋಣ ,ಮುಂದಿನ ಶ್ರೀದಾಸರ ಆರಾಧನೆ ಕಾಲಕ್ಕೆ ಅವರ ಪಂಚಾರತ್ನ ಸುಳಾದಿಗಳನ್ನ/ಇನ್ನು ಇತರೆ ಸುಳಾದಿಗಳನ್ನ(ಸಾಧ್ಯವಾದಷ್ಟು)ಅವರ ಕರುಣಾ ಕವಚವಾದರು ಅರ್ಥಸಹಿತ ಕಂಠಪಾಠ ಮಾಡೋಣ.....🙏🏼
ಶ್ರೀ ದಾಸಾರ್ಯರ ಸೇವೆಯಲ್ಲಿ...
💐🙏🏼ಎಸ್.ವಿಜಯ ವಿಠ್ಠಲ🙏🏼💐
ಇಂದು ಶ್ರೀ ವಿಜಯ ಪ್ರಭುಗಳ ಉತ್ತರ ಆರಾಧನೆ
ಅಜ್ಞಾನ ತಿಮಿರಚ್ಛೇದಂ ಬುದ್ದಿ ಸಂಪತ್ತು ಪ್ರದಾಯಕಂ|
ವಿಜ್ಞಾನ ವಿಮಲಂ ಶಾಂತಂ
ವಿಜಯಾಖ್ಯ ಗುರುಂ ಭಜೇ||
ಅಜ್ಞಾನ ಎನ್ನುವ ಕತ್ತಲನ್ನು ಛೇದನ ಮಾಡಿ, ಬುದ್ದಿ ಸಂಪತ್ತು ಕೊಡುವ, ವಿಜ್ಞಾನ ವಿಮಲ ಶಾಂತರಾದ, ಭಜಿಸಿದರೆ ನಮಗೆ ಶಾಂತತೆಯನ್ನು ಕೊಡುವ ವಿಜಯದಾಸರ ನ್ನು ಭಜಿಸುವೆ.
🙏🙏
ಈ ನಾಲ್ಕು ಶ್ಲೋಕಗಳ ಚಿಂತನೆ ದಾಸರ ಅನುಗ್ರಹದಿಂದ ನನ್ನ ಅಲ್ಪಮತಿಗೆ ಬಂದಿದ್ದು..🙏
ಮಾನವಿ ಶ್ರೀನಿವಾಸ ಆಚಾರ್ಯ ರಿಗೆ ಬಹು ದೊಡ್ಡ ಪಂಡಿತ ಎನ್ನುವ ಅಹಂಕಾರ.
ಔತಣವನ್ನು ನೀಡಲು, ಆಹ್ವಾನವನ್ನು ಕೊಡಲು
ಎದುರಿಗೆ ಬಂದವರಾರು ಅನ್ನುವ ಜ್ಞಾನ ಇಲ್ಲದ, ಅಜ್ಞಾನ ದ ಪ್ರದರ್ಶನ ಆಗಿದೆ
ಬಂದವರು ಸಾಮಾನ್ಯರಲ್ಲ,
ಭೃಗುಋಷಿಗಳು ಮಾನುಷ ರೂಪದಿಂದ ಧರೆಯೊಳಗೆ ಹರಿಯ ಸೇವೆಗಾಗಿ ಅವತಾರ ಮಾಡಿದ್ದು ಅನ್ನುವದು ಸಹ ತಿಳಿಯದೇ ಹೋಯಿತು.
.ಅವರು ಸುಧಾಪಂಡಿತರಲ್ಲ,ಶಾಸ್ತ್ರ ಅಧ್ಯಯನ ಆಗಿಲ್ಲ. ಕಾಲಿಗೆ ಗೆಜ್ಜೆ ಕಟ್ಟಿಕೊಂಡು ಕುಣಿಯುವ ದಾಸರು ಎನ್ನುವ ಉದಾಸೀನ ಭಾವ.!!
ಆದರು ಅವರು ಕೊಟ್ಟ ಆಹ್ವಾನವನ್ನು
ಒಲ್ಲದ ಮನಸ್ಸಿನಿಂದ ನೋಡೋಣ ಬರುತ್ತೇನೆ ಅಂತ ಹೇಳಿ ಕಳುಹಿಸಿ ದ್ದಾರೆ.
ಮರುದಿನ ಭೋಜನ ಸಮಯದಲ್ಲಿ ಅವರ ಶಿಷ್ಯರಾದ ಭಾಗಣ್ಣದಾಸರು ಊಟಕ್ಕೆ ಸಮಯವಾಯಿತು ಬನ್ನಿ ಅಂತ ಹೇಳಿದಾಗ .
ಒಳಗಡೆ ಇಂದ ಊಟದ ಸಮಯ ಮೀರಿದರೆ,
ತಡವಾದರೆ ಉದರಶೂಲೆ ಬರುತ್ತದೆ ಹಾಗಾಗಿ ಊಟವಾಯಿತು ಅಂತ ಶಿಷ್ಯರ ಮುಖಾಂತರ ಹೇಳಿ ಕಳುಹಿಸುತ್ತಾರೆ.
ಕರೆಯಬಂದವರು ಸಾಮಾನ್ಯ ರಲ್ಲ.
ಗಣಪತಿಯ ಅಂಶವಾದ ಗೋಪಾಲ ದಾಸರು..
ದೊಡ್ಡ ವರು,ಜ್ಞಾನಿಗಳನ್ನು ತಿರಸ್ಕರಿಸಿದ ಫಲ,ಅಹಂಕಾರದಿಂದ ವರ್ತನೆ ಮಾಡಿದ ಫಲ,
ಸುಳ್ಳು ಹೇಳಿದ ಫಲ
ನಿಜವಾಗಿಯೂ ಉದರ ಶೂಲೆ ಆರಂಭವಾಯಿತು. ಎಷ್ಟು ಔಷಧೀಯ ಉಪಚಾರ ವಾದರು ಕಡಿಮೆ ಆಗಲಿಲ್ಲ.ಸಾಧನೆಗೆ ಅಡ್ಡ ವಾಯಿತು ರೋಗ..!
ಕೊನೆಗೆ ರಾಯರು ಮತ್ತು ಮುಖ್ಯ ಪ್ರಾಣದೇವರ ಸೂಚನೆಯಂತೆ ಶ್ರೀ ವಿಜಯದಾಸರ ಬಳಿ ಆಗಮನ...
ಇವರು ಎಂತಹವರು,ಎಷ್ಟು ದೊಡ್ಡವರು ಅನ್ನುವ ಜ್ಞಾನ ಅವಾಗ ರಾಯರಿಂದ ತಿಳಿದು ಬಂದಿದೆ..
ಅವರಲ್ಲಿ ಮೊದಲು ಇದ್ದ ಅಹಂಕಾರ ಸಹಿತವಾದ ಅಜ್ಞಾನ ಎನ್ನುವ ಕತ್ತಲನ್ನು ಛೇದನ ಮಾಡಿದವರು ನಮ್ಮ ವಿಜಯಪ್ರಭುಗಳು.
|ಬುದ್ದಿ ಸಂಪತ್ತು ಪ್ರದಾಯಕಂ
ಅವರನ್ನು ಗೋಪಾಲ ದಾಸರ ಬಳಿ ಕಳುಹಿಸಿ ಅವರೇ ನಿಮ್ಮ ಉದ್ದಾರಕರು ಅಂತ ಹೇಳಿ,ಅವರ ಬಳಿ ಕಳುಹಿಸಿ
ಸೂಕ್ಷ್ಮ ರೂಪದಿಂದ ಉತ್ತನೂರಿಗೆ ಗೋಪಾಲ ದಾಸರ ಬಳಿ ಹೋಗಿ ಹೇಳುತ್ತಾರೆ.
"ಈ ಜೀವಿ ಸಾಮಾನ್ಯ ಜೀವಿಯಲ್ಲ.ಹರಿಯ ಸೇವೆ ಮಾಡಲು ಅವತಾರ ಮಾಡಿದ್ದು.ಪ್ರಾರಬ್ಧ ಅನುಸಾರ, ಅವನ ಆಯುಸ್ಸು ಮುಗಿಯುವ ಹಂತದಲ್ಲಿ ಇದೆ.ನಿನ್ನ ಆಯುಸ್ಸು ನಲ್ಲಿ ೪೦ವರುಷ ಆಯುಸ್ಸು ಅವನಿಗೆ ದಾನ ಮಾಡು ಎಂದು"
ಗುರುಗಳ ಮಾತಿನಂತೆ ತಮ್ಮ ಆಯುಸ್ಸು,ಜ್ಞಾನ ಎನ್ನುವ ಸಂಪತ್ತು ಶ್ರೀನಿವಾಸ ಆಚಾರ್ಯ ರಿಗೆ ದಾನ ಮಾಡಿ ಅವರಿಂದ ಮುಂದೆ ಮಹಾ ಗ್ರಂಥ ವಾದ ಶ್ರೀ ಹರಿಕಥಾಮೃತ ಸಾರ ಬರೆಯಲು ಈ ಸಂಪತ್ತು ಸಹಾಯ ವಾಯಿತು....
ಶ್ರೀವಿಜಯದಾಸರ ಮತ್ತು ಗೋಪಾಲ ದಾಸರ ಆಶೀರ್ವಾದ ಬಲದಿಂದ ಅವರ ಬುದ್ದಿ ಹಾಗು ಆಯುಸ್ಸು ಸಂಪತ್ತು ಬೆಳೆಯಿತು*.
ಅದಕ್ಕಿಂತ ಮುಂಚೆ ಇದ್ದ ಅಹಂಕಾರದಿಂದ ಕೂಡಿದ ಅಜ್ಞಾನವೆಂಬ ಕತ್ತಲೆಯನ್ನು ಕಳೆದು ಜ್ಞಾನ ವನ್ನು ನೀಡಿದವರು ನಮ್ಮ ವಿಜಯದಾಸರು..
|ವಿಜ್ಞಾನ ವಿಮಲಂ ಶಾಂತಂ|
ಯಾವುದೇ ದ್ವೇಷವನ್ನು ಮಾಡದೇ ತಮ್ಮ ಬಳಿ ಬಂದ ಶ್ರೀನಿವಾಸ ಆಚಾರ್ಯರನ್ನು ಕ್ಷಮಿಸಿ, ಅವರನ್ನು ಗೋಪಾಲ ದಾಸರ ಬಳಿ ಕಳುಹಿಸಿ ಉದ್ದಾರ ಮಾಡಿದ ಮಹಾನುಭಾವರು.
ನಾವಾದರೆ ಹಿಂದೆ ನಮಗೆ ಬೈಯ್ದ ಕಾರಣ ಇಂದು ಹೀಗೆ ಒದ್ದಾಡುತ್ತಾ ಇದ್ದಿ.ಹೀಗೆ ಅನುಭವಿಸು ಅನ್ನುವ ವ್ಯಂಗ್ಯ ಭರಿತ ಮಾತುಗಳನ್ನು ನಮಗೆ ನಿಂದನೆ ಮಾಡಿದ ವ್ಯಕ್ತಿಯ ಮೇಲೆ ಆಡುತ್ತೇವೆ..
ಕೂಸಿ ಮಗ ದಾಸ ಎನ್ನುವ ಮಾತು ಶ್ರೀನಿವಾಸ ಆಚಾರ್ಯರಿಂದ ಹಿಂದೆ ಬಂದರು ಸಹ ವಿಜಯದಾಸರು ವ್ಯಾಕುಲರಾಗಲಿಲ್ಲ.
ಶ್ರೀನಿವಾಸ ಆಚಾರ್ಯ!! ನಿಮ್ಮ ಮಾತು ನಿಜ.ನನ್ನ ತಾಯಿ ಕೂಸಮ್ಮ.ನನ್ನ ಹೆಸರು ದಾಸಪ್ಪ
ಹಾಗಾಗಿ ಅದನ್ನು ನೀವು ಕರೆದಿದ್ದು.
ಅಂತ ಹಿಂದೆ
ಅವರಾಡಿದ ನಿಂದನೆ ಮಾತನ್ನು ಗಣನೆಗೆ ತಾರದೆ,ಯಾವುದೇ ಕೋಪ ತಾಪಗಳನ್ನು ತೋರಿಸದೇ ಶಾಂತತೆಯಿಂದ ಅವರನ್ನು ಉದ್ದಾರ ಮಾಡಿದವರು ನಮ್ಮ ವಿಜಯಪ್ರಭುಗಳು.
ಯಾವ ಜ್ಞಾನ ಮದದಿಂದ ಅಹಂಕಾರದಿಂದ ವರ್ತಿಸಿದ
ಶ್ರೀನಿವಾಸಾಚಾರ್ಯ ಅಂದರೆ ಶ್ರೀ ಅಂದರೆ ಸಂಪತ್ತು. ಅವರ ಬಳಿ ಲೌಕಿಕ ಸಂಪತ್ತು ಜೊತೆಗೆ ಮೇಲೆ ಕಾಣಿಸಿದ ಅಹಂಕಾರ, ಅಜ್ಞಾನೆಂಬ ಕತ್ತಲೆಯ ಸಂಪತ್ತು ಅವರಲ್ಲಿ ನಿವಾಸ ಆಗಿತ್ತು.
ಅಂತಹ ಸಂಪತ್ತು ಕಳೆದು ಅವರನ್ನು ಜಗನ್ನಾಥನ ದಾಸರನ್ನಾಗಿ ಮಾಡಿದವರು ನಮ್ಮ ವಿಜಯದಾಸರು..
|ವಿಜಯಾಖ್ಯ ಗುರುಂ ಭಜೇ.|
ವಿಜಯದಾಸರೇ!! ಸಹ ಅಜ್ಞಾನ, ಅಹಂಕಾರ, ದಿಂದ ತಿಳಿದೋ ತಿಳಿಯದೇ ಜ್ಞಾನಿಗಳು, ದೊಡ್ಡವರು ಅಂದರೆ ವಯಸ್ಸಿನಲ್ಲಿ, ಜ್ಞಾನ ದಲ್ಲಿ, ಹರಿಭಕ್ತರು ಯಾರಿದ್ದಾರೆ
ಇಂತಹ ನಮಗಿಂತ ಹಿರಿಯರಾದವರನ್ನ ನಿಂದನೆ ಮಾಡಿದ ಅದರ ಫಲದಿಂದ ನಮಗೆ ಸಹ ಅನೇಕರೋಗಗಳು ಬರುತ್ತವೆ...
ಅವರಿಗೆ ಇದ್ದು ದು ಉದರಶೂಲೆ ಮಾತ್ರ...
ನಮಗೆಲ್ಲ ಹಲವಾರು.ಅಂತಹ ಅನೇಕ ರೋಗಗಳು ನಮ್ಮ ಸಾಧನೆಗೆ ಉಪದ್ರವ ವಾಗಿವೆ...
ಆ ಎಲ್ಲಾ ರೋಗ ಗಳನ್ನು ನಿಮ್ಮ ಶಿಷ್ಯರಾದ ಶ್ರೀ ಗೋಪಾಲ ದಾಸರ ಮುಖಾಂತರ ನಿಮ್ಮ ಅಂತರ್ಯಾಮಿಯಾಗಿ ಇರುವ ಮಧ್ವ ವಲ್ಲಭನಾದ ಶ್ರೀ ವಿಜಯವಿಠ್ಠಲ ನ ದಯದಿಂದ ನಮಗೆ ಸಹ ಕಳೆದು ನಮ್ಮನ್ನು ಸಹ ಜಗನ್ನಾಥನ ದಾಸರನ್ನಾಗಿ ಮಾಡಿ.
ಇದೇ ನಮ್ಮ ಪ್ರಾರ್ಥನೆ ಆಗಲಿ ....
ಅಂತಹ ವಿಜಯದಾಸರು ಎಂಬ ಗುರುಗಳನ್ನು ನಿತ್ಯ ಭಜಿಸೋಣ
🙏🙏
ಜಯಗಳು ಆಗಲಿ| ಅಪಜಯಗಳು ಪೋಗಲಿ|
ಜಯದೇವಿ ರಮಣ ಒಲಿಯಲಿ ಕೋಲೇ||
ಜಯದೇವಿ ರಮಣ ಒಲಿಯಲಿ|
ನಮ್ಮ ವಿಜಯರಾಯರ ಕೀರ್ತಿ ಬೆಳೆಯಲಿ ಕೋಲೆ||
🙏ಶ್ರೀ ಕೃಷ್ಣಾರ್ಪಣ ಮಸ್ತು🙏
🙏ಅ.ವಿಜಯ ವಿಠ್ಠಲ.
***********
ಸ್ಮರಿಸಿ ಬದುಕಿರೊ
ದಿವ್ಯ ಚರಣಕ್ಕೆರಗಿರೋ|
ದುರಿತ ತರೆದು ಪೊರೆವ ವಿಜಯ ಗುರುಗಳೆಂಬರಾ||
🙏🙏
ಒಮ್ಮೆ ಆದವಾನಿಯಲ್ಲಿ ದಿವಾನ್ ತಿಮ್ಮಣ್ಣ ನವರು ಜ್ಞಾನ ಸತ್ರವನ್ನು ಹಮ್ಮಿಕೊಂಡರು.ಅದಕ್ಕೆ ತಮ್ಮ ಗುರುಗಳಾದ ಶ್ರೀ ವಿಜಯದಾಸರು ಮತ್ತು ತಮ್ಮ ಪ್ರಿಯ ಮಿತ್ರರಾದ
ಶ್ರೀಗೋಪಾಲ ದಾಸರು ಮತ್ತು ಅವರ ತಮ್ಮಂದಿರಿಗೆ ಆಹ್ವಾನವನ್ನು ನೀಡುತ್ತಾರೆ.
ಅತೀ ವಿಜೃಂಭಣೆಯಿಂದ ಕಾರ್ಯಕ್ರಮ ಪ್ರಾರಂಭವಾಗುತ್ತದೆ. ದೈವಸಂಕಲ್ಪದಂತೆ ಆ ಊರಿಗೆ ಮಾರಿಕಾ ಉಪದ್ರವ ಹಬ್ಬಿತು. ಉತ್ಸವ ನಡೆಯುವದೋ ಇಲ್ಲವೋ ಎಂಬುದು ಎಲ್ಲಾ ರಿಗು ಆತಂಕವನ್ನು ಉಂಟು ಮಾಡಿತು.ಇತ್ತ ಪಂಗನಾಮ ತಿಮ್ಮಯ್ಯನವರು ಯಾವುದೇ ಕಾರಣದಿಂದ ಕಾರ್ಯಕ್ರಮ ನಿಲ್ಲುವುದಿಲ್ಲ ಎಂದು ತನ್ನ ಕಡೆಯವರಿಗೆ ಹೇಳುತ್ತಾರೆ.
ಪ್ರಾರಬ್ಧ ಕರ್ಮ ಯಾರನ್ನು ಬಿಡುವುದಿಲ್ಲ..
ಇದ್ದಕ್ಕಿದ್ದಂತೆ ಮಾರಿಕಾ ಉಪದ್ರವ ಕ್ಕೆ ಶ್ರೀ ತಿಮ್ಮಣ್ಣ ಯ್ಯನವರು ತುತ್ತಾದರು.
ಒಂದೆರಡು ದಿನದಲ್ಲಿ ಅವರ ವ್ಯಾಧಿ ಉಲ್ಬಣಗೊಂಡು ತಾವು ಇನ್ನೂ ಉಳಿಯುವ ದು ಕಠಿಣ ವೆಂದು ತಿಳಿದು ತಮ್ಮ ಗುರುಗಳಾದ ಶ್ರೀ ವಿಜಯದಾಸರನ್ನು ತಮ್ಮ ಸಮೀಪಕ್ಕೆ ದಯಮಾಡಲು ಪ್ರಾರ್ಥನೆ ಮಾಡಿ,ಅವರನ್ನು ಕರೆಯಿಸಿ
"ಗುರುಗಳೇ ,ತಾನಿನ್ನು ದೇಹತ್ಯಾಗ ಮಾಡುವ ಸ್ಥಿತಿಯಲ್ಲಿ ಇದ್ದೇನೆ.ಈ ಮಂಗಳ ಕಾರ್ಯವನ್ನು ಮುಗಿಸಿ ತಮ್ಮಿಂದ ಆಶೀರ್ವಾದ ತೆಗೆದುಕೊಳ್ಳುವ ಸುಯೋಗ ನನಗಿಲ್ಲ...😢,
ತಮ್ಮ ಬಳಿ ಮೊರೆಹೋಗುವದು ಬಿಟ್ಟು ಬೇರೆ ಉಪಾಯವು ಇಲ್ಲ ವೇ ಇಲ್ಲ..
ಎಂದು ಆರ್ತರಾಗಿ ಈ ಕೆಳಗಿನ ಕೃತಿ ರಚಿಸಿದರು.
ಕಾಯೊ ಕಾಯೊ ಕಾಯೋ| ಗುರು ವಿಜಯರಾಯ| ಕಾಯೊ ಕಾಯೊ ವರವೀಯೊ|
ವಿಜಯ ಗುರುರಾಯ ನೀನಲ್ಲದೆ ಉಪಾಯವೆ ಯಿಲ್ಲ ||ಪ||
ಪಾಪಗಳೆಣಿಸದೆ ಪಾವನ ಮಾಳ್ಪದು|
ಶ್ರೀಪತಿ ಪಡೆದ ಸುರಾಪಗದಂತೆ ||1||
ದೂರ ನೀ ನೋಡಲು ಆರು ಯಿಲ್ಲವೊ ಗತಿ|
ಕಾರುಣ್ಯದಲಿ ನಿವಾರಿಸು ದುರಿತ||2||
ಸ್ವೀಕರ ಮಾಳ್ಪದು ನೀ ಕರಿಸದೆ |
ಬಲುವ್ಯಾಕುಲನಾಗಿಹೆ ನೀ ಕರುಣದಲಿ ||3|
ಪರಿಹರಿಸಲಿ ಸಲ್ಲ ಕರವಿಡಿ ಬ್ಯಾಗನೆ|
ಗುರುವೆ ನಿಮ್ಮಯ ಚರಣ ಸೇವಕನ ||4|
ನೀನಾಳುವರೊಳು ಈ ನರಮೂರ್ಖನು|
ಏನು ಅರಿಯೆ ಬಲು ದೀನವಾಗಿಹನೊ ||5|
ಆಲಸ ತಾಳದು ಪಾಲಿಸು ವೇಣು ಗೋಪಾಲ ವಿಠಲನ ಆಳು ಕೃಪಾಳೊ||6|
ಆದಿನ ಸಾಯಂಕಾಲ ಇವರ ರೋಗ ಉಲ್ಬಣವಾಗಿದ್ದನ್ನು ಕಂಡು ಶ್ರೀ ಗೋಪಾಲ ದಾಸರ ತಮ್ಮಂದಿರು ವಿಜಯದಾಸರ ಬಳಿ ಹೋಗಿ ಅರಿಕೆಮಾಡಿ ಅವರನ್ನು ಉಳಿಸಿಕೊಡಿರೆಂದು ಪ್ರಾರ್ಥನೆ ಮಾಡುತ್ತಾರೆ.
ಆ ಸಮಯದಲ್ಲಿ ಅಲ್ಲಿ ಇದ್ದ ಶ್ರೀಗೋಪಾಲದಾಸರು ಸಹ ಅವರಿಗೆ ಬಂದ ಅಪಮೃತ್ಯು ಪರಿಹಾರವನ್ನು ಮಾಡಲು ಭಗವಂತನ ಬಳಿ ಪ್ರಾರ್ಥನೆ ಮಾಡುತ್ತಾರೆ.
ಪರಮ ಕೃಪಾಳುಗಳಾದ ಶ್ರೀವಿಜಯದಾಸರು ಮುಂದೆ ಇವರಿಂದ ಅನೇಕ ಕಾರ್ಯಗಳು ನಡೆಯಬೇಕು ಮತ್ತು ಸಾಧನ ಜೀವಿ ಆದ್ದರಿಂದ ಉಳಿಸಿಕೊಡು.. ಎಂದು ತಮ್ಮ ಉಪಾಸ್ಯ ಮೂರುತಿಯಾದ ಶ್ರೀ ವಿಜಯವಿಠ್ಠಲನ ಬಳಿ ಪ್ರಾರ್ಥನೆ ರೂಪಕವಾಗಿ ಕೆಳಗಿನ ಸುಳಾದಿ ರಚನೆ ಮಾಡುತ್ತಾರೆ.
"ನಂಬಿದೆ ಎಲೊ ಹರಿ ಅಂಬರರುಪಕಾರಿ|
ಬೆಂಬಲವಾಗು ಭವರೋಗ ನೀಗು|
ಡಿಂಬವುಳ್ಳವನ ಕ್ಲೇಶಬಡಿಸುವ| ಶೋಕವೆಂಬುದು ಕಾಣಿಸದಿರು|
ಕೈಯ್ಯ ತೋರು..| .".
ನಂತರ ಮುಂದೆ ಹೇಳುತ್ತಾರೆ.
ಅಪಮೃತ್ಯು ಸಮೀಪಿಸಿದೆ| ಎನ್ನ ಅಪಹಾಸವಲ್ಲವೋ|
ಕೃಪೆಯಿಂದಲಿ ನೋಡು| ಪರಂಪರ ಮಹಿಮ|
ತಪಸಿಗಳ ಒಡೆಯ ಕಪಿ ವಿಜಯವಿಠ್ಠಲ|
ಉಪಶಮನ ಗೈಸೋ ಉಪಶಮನಗೈಸೋ|
ಜತೆ ತಪ್ಪದಂತೆ ಜತನವ ಮಾಡಿ|
ನಿಜ ಭಾಗವತರೊಳು ಇಡು ನಮ್ಮ ವಿಜಯವಿಠ್ಠಲ ದಕ್ಷ||
ಅವರ ತಲೆಯ ಮೇಲೆ ಕೈಯನ್ನು ಇಟ್ಟು ಸುಳಾದಿ ಮೂಲಕ ತಮ್ಮ ಉಪಾಸ್ಯ ಮೂರುತಿಯಾದ ಶ್ರೀ ವಿಜಯವಿಠ್ಠಲ ಬಳಿ ಪ್ರಾರ್ಥನೆ ಮುಗಿಸುತ್ತಿದ್ದಂತೆಯೇ ಎದ್ದು ಕುಳಿತರು ಶ್ರೀ ತಿಮ್ಮಣ್ಣಯ್ಯನವರು..
ಅವರಿಗೆ ಬಂದ ಅಪಮೃತ್ಯು ತಾನಾಗಿ ದೂರ ಓಡಿ ಹೋಗಿ ಅವರ ಮುಖದಲ್ಲಿ ಗೆಲುವು ಕಂಡು ಅಲ್ಲಿ ಇದ್ದ ಭಕ್ತ ಜನಕ್ಕೆ ಆದ ಆನಂದ ವರ್ಣಿಸಲು ಸಾಧ್ಯವಿಲ್ಲ.
ಮುಂದೆ ಉತ್ಸವವು ಬಹಳ ವಿಜೃಂಭಣೆಯಿಂದ ನಡೆಯಿತು.
ಆ ಉತ್ಸವ ಮುಗಿದ ಒಂದೆರಡು ದಿನದಲ್ಲಿ
ಶ್ರೀ ವಿಜಯದಾಸರ ಬಳಿ ತಿಮ್ಮಣ್ಣಯ್ಯನವರು ಬಂದು
"ಈ ದೇಹವನ್ನು ಇನ್ನೇನು ಬಿಟ್ಟು ಹೋಗಲು ಸಿದ್ದನಿದ್ದ ಶ್ರೀ ಪ್ರಾಣದೇವನನ್ನು ನನ್ನ ಹೃದಯವನ್ನು ಬಿಟ್ಟು ಹೋಗದಂತೆ ಆತನಲ್ಲಿ ಪ್ರಾರ್ಥನೆ ಮಾಡಿ ನನ್ನ ಉಳಿಸಿದಿರಿ.".
"ಈ ಸವಿನೆನಪಿಗಾಗಿ ಮುಂದೆ ಬರುವ ನಮ್ಮವರಿಗೆ ಗೊಸ್ಕರವಾಗಿ ಆದವಾನಿಯಲ್ಲಿ ಪ್ರಾಣದೇವರ ಮೂರ್ತಿಯನ್ನು ಪ್ರತಿಷ್ಠಾಪಿಸಿ" ಎಂದು ಕೇಳಿ ಕೊಂಡರು..
ಅದರಂತೆಯೇ ಶುಭ ಮುಹೂರ್ತದಲ್ಲಿ ಶ್ರೀ ವಿಜಯದಾಸರ ಕೈಯಿಂದ ಪ್ರಾಣದೇವರು ಪ್ರತಿಷ್ಠಿತ ಆಯಿತು.
ಈ ಸ್ಥಳವೇ ವಿಜಯರಾಯ ಗುಡಿ ಎಂದು ಪ್ರಸಿದ್ಧ ವಾಗಿದೆ.
ಆದವಾನಿಯಲ್ಲಿ ಊರೊಳಗಡೆ ಇದೆ.
🙏ಶ್ರೀ ಕೃಷ್ಣಾರ್ಪಣ ಮಸ್ತು🙏
ಎನ್ನಂತ ಪಾಪಿಷ್ಟ ಇನ್ನಿಲ್ಲ ಧರೆಯೊಳಗೆ|
ನಿನ್ನಂತ ಕರುಣಿ ಇಲ್ಲ|
ಘನ್ನ ಸಂಸಾರದೊಳು ಬವಣೆ ಬಂದಿಟ್ಟಿದರೆ|
ನಿನ್ನ ಕೃಪೆ ಒಂದೇ ಇರಲಿ||
ಚೆನ್ನ ಗುರು ವಿಜಯರಾಯರ ಪೊಂದಿದವನೆಂದು|
ಮನ್ನಿಸಬೇಕು ಕರುಣಿ|
ಸನ್ನುತಂಘ್ರಿಯ ರಮಣ ವ್ಯಾಸವಿಠ್ಠಲ|
ಮಧ್ವಮುನಿಗೊಲಿದ ಉಡುಪಿ ವಾಸ ಶ್ರೀಶಾ||
🙏.ಅ.ವಿಜಯ ವಿಠ್ಠಲ🙏
ಒಮ್ಮೆ ಶ್ರೀವಿಜಯದಾಸರು ಮಂತ್ರಾಲಯಕ್ಕೆ ಬಂದಿದ್ದಾರೆ.
ಶ್ರೀಗುರುರಾಯರ ವೃಂದಾವನದೆದುರು ನಿಂತು ಕಣ್ಣು ತುಂಬಾ ಬೃಂದಾವನವನ್ನು ನೋಡಿದಾಗ ಅಲ್ಲಿ ಕಂಡಿದ್ದು ಅವರಿಗೇ ಬರೇ ಕಲ್ಲಿನ ಬೃಂದಾವನವಲ್ಲ.
ಅದೊಂದು ದೇವತಾ ಸಭೆ.ಶ್ರೀ ಮಧ್ವಾಚಾರ್ಯರು ಅಲ್ಲಿ ಸಭೆಯ ಅಧ್ಯಕ್ಷರು..
ಅವರ ನಂತರ ಬಂದ ಅನೇಕ ಮುನಿಗಳು ಒಂದಂಶದಿಂದ ಅಲ್ಲಿದ್ದು,ಹಿರಿಯರಿಂದ ತತ್ವದ ವಿಚಾರವನ್ನು ಮಾಡುತ್ತಾ ಭಗವಂತನ ಗುಣಗಳನ್ನು, ಅವರಿಂದ ಉಪದೇಶವನ್ನು ಪಡೆಯುತ್ತಾ,ಅಜ್ಞಾನ ವೆಂಬ ಕತ್ತಲನ್ನು ಪರಿಹರಿಸುವ ದಿವ್ಯ ಸನ್ನಿವೇಶ..
ಶ್ರೀಮಧ್ವಾಚಾರ್ಯರೇ ಮೊದಲಾದ ಅನೇಕ ಮಹಾನುಭಾವರು ಬೃಂದಾವನದಲ್ಲಿದ್ದು ಶ್ರೀರಾಘವೇಂದ್ರರಿಗೆ ತತ್ವ ಉಪದೇಶವನ್ನು ಮಾಡುತ್ತಾರೆ..
ರಾಯರು ಅವರಿಗಿಂತ ಯೋಗ್ಯತೆ ಯಲ್ಲಿ ಕಡಿಮೆ ಯಾದವರಿಗೆ ಆ ಉಪದೇಶವನ್ನು ಅವರಿಗೆ ಮಾಡುತ್ತಾರೆ..
ಇದನ್ನೇ ಶ್ರೀವಿಜಯದಾಸರು ಹೇಳುತ್ತಾರೆ.
ಅಲವಬೋದಮಿಕ್ಕಾದ ಮುನಿಗಳು|
ಸಾಂಶರು ಒಂದು ರೂಪದಿ| ನೆಲೆಯಾಗಿ ನಿತ್ಯ ದಲ್ಲಿಪ್ಪರು|
ಒಲಿಸಿಕೊಳುತಲಿ ಹರಿಯ ಗುಣಗಳ |
ತಿಳಿದು ತಿಳಿಸುತ, ತಮ್ಮ ತಮ್ಮಗಿಂದಧಿಕರಲಿ| ಉಪದೇಶ ಮಾರ್ಗದಿಂದ| ಕಲಿಯುಗದೊಳಗಿದೇ ಕೇವಲ ಕತ್ತಲೆಯ| ಪರಿಹರಿಸುವ ಸೊಬಗು ಸಂತತ||
ನೋಡಿದೆ ಗುರುಗಳ ನೋಡಿದೆ||.
ನೋಡಿದೆ ಗುರುಗಳ ನೋಡಿದೆ|
🙏🙏
ದೇವಾಂಶರಾಗಿ ತುಂಗಾ ತೀರದಿ ನಿಂದು|
ಸೇವೆ ಭೂಸುರರಿಂದ ಬಹು ಕೊಳ್ಳುತ|
ಭಾವಜನಯ್ಯ ಗೋಪಾಲ ವಿಠ್ಠಲನ್ನ|
ಸೇವಿಸುತಿಹ ಯತಿ ಕುಲ ಶಿಖಾಮಣಿಯಾದ|
ಗುರು ರಾಘವೇಂದ್ರರ ಚರಣ|
ಕಮಲವನ್ನು ಸ್ಮರಿಸುವ ಮನುಜರಿಗೆ||
🙏ಶ್ರೀ ಕೃಷ್ಣಾರ್ಪಣ ಮಸ್ತು🙏
ಮಂತ್ರಾಲಯ ನಿವಾಸ| ಸಂತಾಪ ಪರಿಹರಿಸಿ ಕೊಡು ಎನಗೆ ಲೇಸ|
******
ಮೂರನೇ ಬಾರಿಗೆ ಶ್ರೀ ವಿಜಯದಾಸರು ಕಾಶಿಯಾತ್ರಿಗೆ ಅತಿ ವೈಭವದೊಡನೆ ಶಿಷ್ಯರ,ಪರಿವಾರದ ಜೊತೆ ಹೊರಟರು.ಮಾರ್ಗಮಧ್ಯದಲ್ಲಿ ಅನೇಕ,ರಾಜ ಮಹಾರಾಜ ರಿಂದ ಮನ್ನಣೆಯನ್ನು ಪಡೆಯುತ್ತಾ, ದೀನ ಜನರನ್ನು ಉದ್ಧರಿಸುತ್ತಾ,ಶ್ರೀಹರಿಯ ಮಹಿಮೆಯನ್ನು ಸಾರುತ್ತಾ ಕಾಶಿಗೆ ಪಯಣಿಸಿ, ಗಂಗಾಸ್ನಾನ ಮಾಡಿ,ಗಯಾ ಕ್ಷೇತ್ರದಲ್ಲಿಹೋಗಿ ಪಿತೃಕಾರ್ಯವನ್ನು ಮಾಡಿ ಮತ್ತೆ ಕಾಶಿಗೆ ತಿರುಗಿ ಬಂದು ಕೆಲ ಕಾಲ ಅಲ್ಲಿ ಉಳಿದು ಕೊಂಡರು.
ಒಂದು ದಿನ ಶ್ರೀವಿಜಯದಾಸರು ಗಂಗಾಸ್ನಾನ ಮಾಡಿ ಊರ್ಧ್ವಪುಂಡ್ರಗಳಾದಿಗಳನ್ನು ಧರಿಸಿಕೊಂಡು ಆಹ್ನೀಕಕ್ಕೆ ಕುಳಿತ ಸಮಯ...
ಗಂಗೆ ತುಂಬಿ ಪ್ರಶಾಂತವಾಗಿ ಹರಿಯುತ್ತಾ ಇದ್ದಾಳೆ. ಸಾವಿರಾರು ಜನ ಯಾತ್ರಿಕರ ಸಮ್ಮಿಲನ. ಅನೇಕರು ತಮ್ಮ ಕಾರ್ಯಗಳನ್ನು ಮಾಡುತ್ತಾ ಇದ್ದಾರೆ.ದಾಸರ ಭಕ್ತರು ದಾಸರನ್ನು ನೋಡುತ್ತ ಕುಳಿತಿದ್ದಾರೆ.
ಗಂಗಾನದಿಯ ದಡದಲ್ಲಿ ಕುಳಿತು ಗಂಗೆಯ ಮಹಿಮೆಯನ್ನುಚಿಂತನೆ ಮಾಡುತ್ತಾ ದಾಸರು ಕುಳಿತಿದ್ದಾರೆ..
ಪ್ರಳಯಕಾಲದಲ್ಲಿ ಮತ್ಸ್ಯ ರೂಪಿ ಪರಮಾತ್ಮನನ್ನು ವರುಣದೇವರು ಉದರದಲ್ಲಿ ಧರಿಸಿದರು..
ಆ ಸ್ವಾಮಿಯು ಇಲ್ಲಿ ಗಂಗೆಯಲ್ಲಿ ವರುಣದೇವನೊಡನೆ ವಿರಾಜಿಸಿದನು..
ತನ್ನ ಪತಿಯೊಡನೆ ಆ ಮತ್ಸ್ಯ ರೂಪಿ ಪರಮಾತ್ಮನನ್ನು ಧರಿಸಿದ ಗಂಗೆಯು ಮತ್ಸ್ಯೋದರಿ ಎನಿಸಿದಳು.
ಈ ಸ್ಥಳದಲ್ಲಿ ಪರ್ವಕಾಲದಲ್ಲಿ ಅನೇಕಾನೇಕ ದೇವತೆಗಳು ಸ್ನಾನಕ್ಕಾಗಿ ಇಲ್ಲಿ ಬರುತ್ತಾರೆ. ಎಂದು ಅಲ್ಲಿ ನ ಮಹಿಮೆಯನ್ನು ಚಿಂತಿಸಿ
ಗಂಗೆ ಸನ್ಮಂಗಳಾಂಗೆ ರಂಗನಂಘ್ರಿಯ ಸಂಗೆ|...
ಅನನುತ ವಿಜಯವಿಠ್ಠಲನ ಮನಸಿನಲಿ ನೆನೆಸುವ ಸಾಧನ ಕೊಡು ವಿರಜೆ||
ಎನ್ನುವ ಕೃತಿಯನ್ನು ರಚನೆ ಮಾಡಿದರು.
ಆ ಸಮಯದಲ್ಲಿ
ಶ್ರೀ ಗಂಗಾದೇವಿಯು ನಮ್ಮಪ್ಪನಾದ ಆ ಶ್ರೀಹರಿಯ ಪರಮಭಕ್ತರಾದ ಭೃಗುಋಷಿಗಳುಇಂದು
ಶ್ರೀ ವಿಜಯದಾಸರ ರೂಪಿನಲ್ಲಿ,ಎನ್ನ ಮನಿಗೆ ಬಂದಿರುವರು.ನನ್ನ ಭಾಗ್ಯ ದೊಡ್ಡದು!!. ನಾನು ಅವರ ಸಂಗದಿಂದ ಪುನೀತಳಾದೆ,ಅಂತ ಬಹಳ ಆನಂದದಿಂದ ಹಾಗೆ ಉಕ್ಕೇರಿ ದಾಸರ ಮೇಲೆ ಬಂದು ಉದಕ ಸುರಿಯಲು
ಶ್ರೀ ವಿಜಯದಾಸರ ವಸ್ತ್ರಗಳು ತೊಯ್ಯಲಿಲ್ಲ.ನಾಮ ಮುದ್ರೆಗಳು ಕೆಡಲಿಲ್ಲ.ಅವಾಗ ಗಂಗಾದೇವಿ ಸುಂದರವಾದ ಸ್ತ್ರೀ ರೂಪಧಾರಣೆ ಮಾಡಿ,ಸರ್ವಾಭರಣದಿಂದ ಅಲಂಕೃತ ಳಾಗಿ ದಾಸರ ಸಮೀಪಕ್ಕೆ ಬಂದು, ಮನುಜ ವೇಷ ಧಾರಿಗಳಾದ ಶ್ರೀ ವಿಜಯದಾಸರನ್ನು ಪೂಜಾ ಸಾಮಗ್ರಿ ಗಳಿಂದ ಪೂಜಿಸಿದಳು..
ದಾಸರನ್ನು ಪೂಜಿಸಿದ ನಂತರ ಗಂಗಾದೇವಿ ತಿರುಗಿ ತಾನು ಹೇಗೆ ಬಂದಳೋ ಹಾಗೇ ತಿರುಗಿ ಹೋದಳು.
ಸಕಲ ಸಜ್ಜನರಿಗೆಲ್ಲ ಗಂಗಾದೇವಿಯ ಪ್ರತ್ಯಕ್ಷ ದರುಶನವನ್ನು ದಾಸರು ಮಾಡಿಸಿ ಆನಂದ ಪಟ್ಟರು.
ಎಲ್ಲಾ ಯಾತ್ರಿಕರು,ಶಿಷ್ಯರು ನಮ್ಮ ಅಹೋಭಾಗ್ಯ!!.ಏಕ ಕಾಲಕ್ಕೆ ಶ್ರೀಹರಿಯ ಮಗಳು ಮತ್ತು ಅವನ ಭಕುತರ ದರುಶನ ಅಂತ ಬಾರಿ ಬಾರಿಗೆ ದಾಸರಿಗೆ ನಮಸ್ಕಾರ ಮಾಡಿದರು.
ತನಗಿಂತಲು ಉತ್ತಮರಾದ ಭಗವದ್ಭಕ್ತರು ಮನೆಗೆ ಬರಲು,ಭಕ್ತರಿಗೆ ಎಷ್ಟು ಆನಂದವೋ!!
(ಶ್ರೀಗಂಗಾದೇವಿಯು ೨೦ನೆಯ ಕಕ್ಷ ,ಶ್ರೀಭೃಗು ಋಷಿಗಳು ೧೫ನೆಯ ಕಕ್ಷ).
ಹಿಂದೆ ನಮ್ಮಪ್ಪ ಆ ಶ್ರೀಹರಿಯು ಸರ್ವೋತ್ತಮ ನೆಂದು ಸಾರಿದ,ಇಂದು ಈ ಕಲಿಯುಗದಲ್ಲಿ ಮನುಜ ವೇಷಧಾರಿಗಳಾಗಿ, ಆ ಹರಿಯನ್ನು ಪಾಡುತ್ತಾ,ಸ್ತುತಿಸುತ್ತಾ,ಸಜ್ಜನರನ್ನು ಉದ್ದಾರ ಮಾಡುತ್ತಾ ಇರುವ ದಾಸರ ಸಂದರುಶನ ಎನಗಾಯಿತೆಂದು ಪ್ರತ್ಯಕ್ಷ ರೂಪಧಾರಣೆ ಮಾಡಿ ಅವರನ್ನು ಪೂಜಿಸಿದಳು.
ಅಂದು ದಾಸರ ಜೊತೆಯಲ್ಲಿ ಇದ್ದ ಅವರ ತಮ್ಮಂದಿರು ಆದ ಶ್ರೀಆನಂದ ದಾಸರು
ತೃತಿಯ ಕಾಶೀಯಾತ್ರೆ ಮಾಡ ಬಂದಾಗ| ಉನ್ನತವಾಗಿ ನಭಗಂಗೆ ಉಕ್ಕೇರಿ ಗಗನಕ್ಕೆ| ಅತಿಶಯದಿ ಬಂದು ಮತ್ಸ್ಯೊದರಿಯ ನಾಮದಲ್ಲಿ ಪ್ರತಿ ಇಲ್ಲ ದಂತೆ ತೋರೆ||
ಶ್ರೀಗೋಪಾಲದಾಸರು ಈ ಘಟನೆಯನ್ನುನೋಡಿ,ದಾಸರ ಮಹಿಮೆಯನ್ನು ವರ್ಣಿಸುತ್ತಾರೆ.
ಸ್ವಚ್ಛವಾಗಿ ಗಂಗಾತೀರವ ವಾಸಮಾಡಿ ನಿಚ್ಚಾಗಿ ಶ್ರೀ ವಿಜಯರಾಯ|
ಹೆಚ್ಚಾದ ಪರ್ವಣೆ ಮಚ್ಚೊದರಿಯ ತೋರ್ದೆ ವಿಚಿತ್ರವಿಜಯರಾಯ||
ಶ್ರೀ ವಿಜಯಪ್ರಭುಗಳ ಅಂತರ್ಯಾಮಿಯಾದ ಮಧ್ವ ವಲ್ಲಭನಾದ ಶ್ರೀ ವಿಜಯವಿಠ್ಠಲನು ಪ್ರೀತಿಯಾಗಲಿ
ಶ್ರೀ ಕೃಷ್ಣಾರ್ಪಣಮಸ್ತು
ಅ.ವಿಜಯವಿಠ್ಠಲ
**********
Art by Murali from Shimoga

ಓಂ ಶ್ರೀ ಹರಿಯೇ ನಮಃ.
ಶ್ರೀ ಗುರುಭ್ಯೋನಮಃ.
ಶ್ರೀ ಗುರುಭ್ಯೋನಮಃ.
ಅಪಾದಮೌಲಿ ಪರ್ಯಂತಂ ಗುರೂಣಾಮಾಕೃತಿ ಸ್ಮರೇತ್/
ತೇನ ವಿಘ್ನಾಃ ಪ್ರಣಶ್ಯಂತಿ ಸಿಧ್ತಂತಿ ಚ ಮನೋರಥಾಃ//.
ಸಕಲ ಹರಿದಾಸ ರಿಗೂ ಅನಂತ ನಮನಗಳು.
ಶ್ರೀ ವಿಜಯದಾಸರ ಆರಾಧನೆ ಪ್ರಯುಕ್ತ ಕೆಲವು ರಸಪ್ರಶ್ನೋತ್ತರಗಳು.
ಸುಳಾದಿ ದಾಸರೆಂದೇ ಪ್ರಖ್ಯಾತ ರಾದ ವಿಜಯದಾಸರು
ಪಂಚರತ್ನ ಸುಳಾದಿ ಗಳನ್ನು ರಚಿಸಿದರು.
ಪಂಚರತ್ನ ಸುಳಾದಿ ಗಳನ್ನು ರಚಿಸಿದರು.
ಅಜ್ಞಾನ ತಿಮಿರಚ್ಛೇದಂ ಬುದ್ಧಿ ಸಂಪ್ರತ್ಪ್ರದಾಯಕಂ/
ವಿಜ್ಞಾನ ವಿಮಲಂ ಶಾಂತಂ ವಿಜಯಾಖ್ಯ ಗುರು ಭಜೇ//
ವಿಜ್ಞಾನ ವಿಮಲಂ ಶಾಂತಂ ವಿಜಯಾಖ್ಯ ಗುರು ಭಜೇ//
ಶ್ರೀ ವಿಜಯದಾಸರನ್ನು ಕುರಿತು ,ಅವರ ಜೀವನದ ಮಖ್ಯ ಘಟನೆ ಗಳ ರಸಪ್ರಶ್ನೆಗಳು.
೧-- ವಿಜಯದಾಸರ ಜನನ ಸ್ಥಳ ಮತ್ತು ತಂದೆ ತಾಯಿ ಯವರು ಯಾರು.?
ಉತ್ತರ-- ರಾಯಚೂರು ಜಿಲ್ಲೆಯ ಮಾನವಿ ತಾಲ್ಲೂಕಿನ
ಚೀಕಲಪರವಿ.
ಚೀಕಲಪರವಿ.
ತಂದೆ --- ಶ್ರೀನಿವಾಸಪ್ಪ
ತಾಯಿ - ಕೂಸಮ್ಮ.
ತಾಯಿ - ಕೂಸಮ್ಮ.
ದಾಸರ ಪೂರ್ವಾಶ್ರಮದ ಹೆಸರು ಏನು?
ಉತ್ತರ-- ದಾಸಪ್ಪ.
೨-ವಿಜಯದಾಸರ ಪತ್ನಿಯ ಹೆಸರು ಏನು ?
ಉತ್ತರ-- ಅರಳಮ್ಮ
೩- ದಾಸರು ಯಾರಿಂದ ಅಂಕಿತ ನಾಮ ಪಡೆದರು.?
ಉತ್ತರ-ಸ್ವಪ್ನದಲ್ಲಿ ಶ್ರೀ ಪುರಂದರ ದಾಸರಿಂದ " ವಿಜಯ ವಿಠಲ"ಅಂಕಿತ ವನ್ನು ಪಡೆದರು.
೪--ವಿಜಯದಾಸರು ಶ್ರೀ ಪುರಂದರ ದಾಸರನ್ನು ಕುರಿತು ಹಾಡಿ ಹೊಗಳಿದ್ದಾರೆ.?
ಗುರು ಪುರಂದರ ದಾಸ ರೆ ನಿಮ್ಮ ಚರಣ ಕಮಲವ ನಂಬಿದೆ/
ಗರುವ ರಹಿತನ ಮಾಡಿ ಎನ್ನನು ಪೊರೆವ ಭಾರವು ನಿಮ್ಮದೇ//
ಗರುವ ರಹಿತನ ಮಾಡಿ ಎನ್ನನು ಪೊರೆವ ಭಾರವು ನಿಮ್ಮದೇ//
೫--ವಿಜಯದಾಸರು ಯಾರ ಅಂಶವೆಂದು ಪ್ರತೀತಿ?.
ಉತ್ತರ--ಭೃಗು ಮುನಿಯ ಅಂಶ ( ಅವತಾರ).
೬--ವಿಜಯದಾಸರು ಎಷ್ಟು ವರ್ಷಗಳ ಕಾಲ ಜೀವಿಸಿದ್ದು ಹರಿದಾಸ ಸಾಹಿತ್ಯ ವನ್ನು ಪ್ರಚಾರ ಮಾಡಿದರು?
ಉತ್ತರ--೭೩ ವರ್ಷಗಳ ಕಾಲ ಜೀವಿಸಿದ್ದರು.
೭--ವಿಜಯ ದಾಸರ ಆರಾಧನೆ ಎಲ್ಲಿ ಮತ್ತು ಎಂದು
ಆಚರಿಸುತ್ತಾರೆ.?
ಆಚರಿಸುತ್ತಾರೆ.?
ಉತ್ತರ--- ಚಿಪ್ಪಗಿರಿ ( ಆಂಧ್ರಪ್ರದೇಶದ ಗುಂತಕಲ್ ಹತ್ತಿರ) ಕಾರ್ತೀಕ ಶುಧ್ದ ದಶಮಿ ಯೆಂದು ಆಚರಿಸಲಾಗುತ್ತದೆ.
೮--+ಕಲ್ಲೂರು ಸುಬ್ಬಣ್ಣಾಚಾರ್ಯರು ವಿಜಯದಾಸರನ್ನು ರಚಿಸಿದ ಕೀರ್ತನೆಯಾವುದು?
ಅದಕ್ಕೆ ಏನೆಂದು ಕರೆವರು.?
ಅದಕ್ಕೆ ಏನೆಂದು ಕರೆವರು.?
ಉತ್ತರ--ಸ್ಮರಿಸಿ ಬದುಕಿರೋ ದಿವ್ಯ ಚರಣ ಕೆರಗಿರೋ
ದುರಿತ ತರಿದು ಪೊರೆವ ವಿಜಯಗುರುಗಳೆಂಬರ //
ಈ ಸ್ತೋತ್ರ ಕ್ಕೆ " ವಿಜಯ ಕವಚ" ಎಂದು ಕರೆವರು.
೯--ದಾಸರು ದೇವರನ್ನು ಭಕ್ತ ಪರಾಧೀನ ಎಂದು
ವರ್ಣಿಸಿದ ಕೀರ್ತನೆ ಯಾವುದು.?
ವರ್ಣಿಸಿದ ಕೀರ್ತನೆ ಯಾವುದು.?
ಉತ್ತರ --ಭಕುತ ಜನ ಮುಂದೆ ನೀನವರ ಹಿಂದೆ
ಯಕುತಿ ಕೈ ಗೊಳ್ಳದೋಗಯಾ ಗದಾಧರನೆ//
ಕಟ್ಟೆರಡು ಬಿಗಿದು ನದಿಸೂಸಿ ಪರಿಯು ತಿರಲು
ಕಟ್ಟಲೆಯಲಿ ಹರಿಗೋಲ ಹಾಕಿ //
ನೆಟ್ಟನೆ ಆಚೆಗೀಚಗೆ ಪೋಗಿ ಬರುವಾಗ //
ಹುಟ್ಟುಮುಂದಲ್ಲದೇ ಹರಿಗೋಲು ಮುಂದೇನು//
ಕಾಳೆ ಹೆಗ್ಗಾಳೆ ದುಂಧುಭಿ ಭೇರಿ ತಮಟೆ ನಿ
ಸ್ಸಾಳೆ ನಾನಾ ವಾದ್ಯ ಘೋಷಂಗಳು//
ಸಾಲಾಗಿ ಬಳಿವಿಡಿದು ಸಂಭ್ರಮದಿ ಬರುವಾಗ
ಆಳುಮುಂದಲದೆ ಅರಸು ತಾ ಮುಂದೇನು//
ಉತ್ಸಾಹ ವಾಹನದಿ ಬೀದಿ ಮೆರೆಯುತಿರಲು
ಸತ್ಸಂಗತಿಗೆ ಹರಿದಾಸರಲ್ಲದ ಭಕ್ತ/
ಸತ್ಸಂಗತಿಗೆ ಹರಿದಾಸರಲ್ಲದ ಭಕ್ತ/
ವತ್ಸಲ ಸಿರಿ ವಿಜಯ ವಿಠಲ ವೆಂಕಟಾಚಲ
ವತ್ಸ ಮುಂದಲ್ಲದೆ ಧೇನು ತಾ ಮುಂದೇನು //.
ವತ್ಸ ಮುಂದಲ್ಲದೆ ಧೇನು ತಾ ಮುಂದೇನು //.
೯-ಪುರಂದರ ದಾಸರ ನಂತರ ಅತಿ ಹೆಚ್ಚು ಸುಳಾದಿಗಳನ್ನು ಬರೆದವರು ಯಾರು?
ಉತ್ತರ --ವಿಜಯದಾಸರು.
//ಶ್ರೀ ಹರಿ ಸಮರ್ಪಣೆ/
" ನಿನ್ನ ಚಿತ್ತಕ್ಕೆ ಬಂದುದು ಮಾಡು ಸರ್ವೇಶಾ
ಎನ್ನ ಸ್ವಾತಂತ್ರ್ಯ ಲವ ಮಾತ್ರ ಉಂಟೇ ಸ್ವಾಮಿ".
ಎನ್ನ ಸ್ವಾತಂತ್ರ್ಯ ಲವ ಮಾತ್ರ ಉಂಟೇ ಸ್ವಾಮಿ".
( ವಿಜಯ ದಾಸರು.))
(ಲೇಖಕರು:ರಾಘವೇ೦ದ್ರ.ಪಡಸಲಗಿ)
ವಿಜಯರಾಯರ ಕರುಣೆ.
ಅಜ್ಜ್ಯಾನ೦ ತಿಮ್ಮಿರಛೇದ೦ ಬುದ್ಧಿ ಸ೦ಪತ್ ಪ್ರದಾಯಕ೦|
ವಿಜ್ಜ್ಯಾನ೦ ವಿಮಲ೦ ಶಾ೦ತ೦ ವಿಜಾಯಾಕ್ಯ೦ ಗುರು೦ ಭಜೆ||
ವಿಜಯರಾಯರ ಪಾದ ನಿಜವಾಗಿ ನ೦ಬಲು ಅಜನ ಪಿತ ತಾನೆ ಒಲಿವಾ|
ವಿಜರಾಯರ ಪುಣ್ಯದಿನದ೦ದು ಆ ಮಹಾಭಾವರನ್ನು ಸ್ಮರಿಸಿ ಅವರ ಅನುಗ್ರಹವನ್ನು ಸ೦ಪಾದಿಸುವಾ.
ಅ೦ದು ಈಗಿನ ರಾಯಚೂರ ಜಿಲ್ಹೆಯ ಕಲ್ಲೂರ ಗ್ರಾಮದಲ್ಲಿ ಸ೦ಭ್ರಮವೂ ಸ೦ಭ್ರಮ..ಕಾರಣ ಪ್ರಸಿಧ್ಧ ಪ೦ಡಿತರಾದ ಶ್ರೀಕಲ್ಲೂರ ಸುಬ್ಬಣ್ಣಾಚಾಯ೯ ರಿ೦ದ ಶ್ರೀಮನ್ನ್ಯಾಯ ಸುಧಾಮ೦ಗಳ.ಕಲ್ಲೂರ ಗ್ರಾಮ ನವ ವಧುವಿನ೦ತೆ ಶ್ರೀ೦ಗಾರವಾಗಿದೆ. ಸುಧಾ ಪ೦ಡಿತರು ಹಾಗೂ ಸುಬ್ಬಣ್ಣಾಚಾಯ೯ರ ಶಿಷ್ಯರು ತ೦ಡೂಪತ೦ಡವಾಗಿ ಕಲ್ಲೂರಿಗೆ ಬರುತ್ತಲಿದ್ದಾರೆ. ಆಗಿನ ಕಾಲದಲ್ಲಿ ಈಗಿನ ಹಾಗೆ ಪ್ರಯಾಣಕ್ಕೆ ಯಾವದೇ ಸೌಲಭ್ಯವಿರಲಿಲ್ಲಾ. ಎಲ್ಲರೂ ಪಾದಯಾತ್ರೆಯಿ೦ದ ನಡೆದುಕೊ೦ಡೆ ಬರಬೇಕಾಗಿತ್ತು. ಅನುಕೂಲ ವಿದ್ದವರು ಕುದರೆಯ ಮೇಲೆ, ಎತ್ತಿನ ಬ೦ಡಿಯಲ್ಲಿ ಪ್ರಯಾಣಿಸುತ್ತಿದ್ದರು. ಸುಬ್ಬಣ್ಣಾಚಾಯ೯ರ ಮನೆಯಲ್ಲಿ ಬರುವ ಅತಿಥಿಗಳಿಗೆ ಸರಿಯಾದ ಉಪಚಾರ ಮಾಡಲು ವ್ಯವಸ್ಥೆ ಮಾಡಲಾಗಿದೆ. ಎತ್ತರ ಮೇಲೆ ವ್ಯಾಸ ಪೀಠವನ್ನು ನಿಮಿ೯ಸಲಾಗಿದೆ. ಎಲ್ಲರೂ ತಮಗೆ ನಿಗದಿಪಡಿಸಿದ ಕಾರ್ಯಗಳಲ್ಲಿ ನಿರತರಾಗಿದ್ದಾರೆ. ಎಲ್ಲೆಡೆಯಲ್ಲಿಯೂ ಸ೦ತೋಷದ ವಾತಾವರಣ ಕ೦ಗೂಳಿಸುತ್ತಿದೆ.
ಆದರೆ ಪಾಕಶಾಲೆಯ ಮೇಲ್ವಿಚಾರಕರು ಬಹಳೇ ವ್ಯಾಕುಲರಾಗಿದ್ದಾರೆ. ಕಾರಣ ಮ೦ಡಿಗೆ ಮಾಡುವ ಅಡಿಗೆಯವರು ಇನ್ನೂ ಬ೦ದಿರಲಿಲ್ಲಾ. ಪ್ರತಿ ಶ್ರೀಮನ್ನ್ಯಾಯಸುಧಾ ಮ೦ಗಳದಲ್ಲಿ ಮ೦ಡಿಗೆಯ ನೇವಿದ್ಯ ಮಾಡಿ ಎಲ್ಲರಿಗೂ ಪ್ರಸಾದ ರೂಪವಾವಿ ಭೋಜನದಲ್ಲಿ ಬಡಿಸಲಾಗುತ್ತಿತ್ತು. ಇದು ನಡೆದು ಬ೦ದ ಸ೦ಪ್ರಾದಾಯ. ಆಗಿನ ಕಾಲದಲ್ಲಿ ಸರಿಯಾದ ಸ೦ಪಕ೯ ಸಾಧನಗಳು ಇರಲಿಲ್ಲಾ, ಜನರ ಮುಖಾ೦ತರವೇ ಸ೦ದೇಶವನ್ನು ಕಳಿಸಲಾಗಿತ್ತಿತ್ತು.ಈ ವರೆಗೂ ಯಾವದೇ ಸ೦ದೇಶ ಬ೦ದಿರಲಿಲ್ಲಾ. ಕಲ್ಲೂರಿನಲ್ಲಿ ಮ೦ಡಿಗೆ ಮಾಡುವ ಅಡಿಗೆಯವರು ಯಾರೂ ಇರಲಿಲ್ಲಾ ಇದೇ ವ್ಯಾಕುಲಕ್ಕೆ ಕಾರಣವಾಗಿತ್ತು ಬೇರೆ ಊರಿ೦ದ ಯಾರನ್ನೂ ಕರೆಸಲು ಸಮಯವಿರಲಿಲ್ಲಾ. ಈ ವಿಷಯವನ್ನು ಸುಬ್ಬಣ್ಣಾಚಾಯ೯ರರಿಗೆ ತಿಳುಸುದಕ್ಕೂ ಧಯ೯ವಿರಲಿಲ್ಲಾ. ಮೇಲ್ವಿಚಾರಕರೆ ಬಹಳೇ ಚಿ೦ತಾಕ್ರಾ೦ತರಾಗಿದ್ದರು. ಪ್ರತಿ ಕ್ಷಣ ಪಾಕಶಾಲೆಯಿ೦ದ ಹೊರಗೆ ಬ೦ದು ಗೊತ್ತು ಮಾಡಿದ ಅಡಿಗೆಯವರ ಪ್ರತಿಕ್ಷೆ ಮಾಡಿ ನಿರಾಶೆಯಿ೦ದ ಪಾಕಶಾಲೆಗೆ ಮರಳುತ್ತಿದ್ದರು.
ಸ್ವಲ್ಪ ಸಮಯದ ನ೦ತರ ಒಬ್ಬ ಅಡಿಗೆಯವರು ಬರುದನ್ನು ಕ೦ಡು ಅವನ್ನು ಆದರದಿ೦ದ ಬರಮಾಡಿಕೊ೦ಡು ಎಲ್ಲ ವಿಷಯನ್ನು ತಿಳಿಸಿದರು. ಬ೦ದ ಅಡಿಗೆಯರು ತಾವು ಮ೦ಡಿಗೆ ಮಾಡಲಿಕ್ಕಾಗಿಯೇ ಬ೦ದಿರುವದಾಗಿ ಹೇಳಿದರು. ಇತ್ತ ಕಡೆಗೆ ಸುಬ್ಬಣಾಚಯ೯ರ ಶ್ರೀಮನ್ ನ್ಯಾಯಸುಧಾ ಪ್ರಾರ೦ಭವಾಯಿತು. ಅಷ್ಟರಲ್ಲಿಯೇ ಮ೦ಡಿಗೆ ಮಾಡಿ ಮುಗಿಸಿ ಆ ಅಡಿಗೆಯವರು ಆಚಾಯ೯ರ ಅನುವಾದ ಪ್ರವಚನ ಕೇಳಲು ಬ೦ದು ಸಾಮಾನ್ಯ ಜನರ ಮಧ್ಧೆ ಕುಳಿತು ಕೂ೦ಡರು. ಸುಧಾ ಅನುವಾದದಲ್ಲಿ ಸುಬ್ಬಣ್ಣಾಚಾಯ೯ ಬಹಳೇ ಪ್ರಸಿದ್ದರು ಹಾಗು ಪರಿಣಿತರು. ನಿರಗ೯ಳವಾಗಿ ಅನುವಾದ ಪ್ರವಚನ ಸಾಗುತ್ತಲಿದೆ .ಅನೇಕ ಉದಾಹರಣೆ ಹಾಗೂ ಪ್ರಸಿದ್ದ ಟಿಪ್ಪಣಿ ಕಾರರ ಅಥ೯ವನ್ನು ಬಹಳೇ ಮನಮುಟ್ಟುವಹಾಗೆ ಹೇಳುತ್ತಿದ್ದಾರೆ. ಎಲ್ಲ ಶೋತ್ರಗಳು ಎಕ ಚಿತ್ತದಿ೦ದಾ ಶ್ರವಣ ಮಾಡುತ್ತಲಿದ್ದಾರೆ. ಆಚಾಯ೯ರಿರೆ ಒ೦ದು ಶೋಕ್ಲದ ಅಥ೯ ಸರಿಯಾಗಿ ಹೇಳಲು ಹೊಳೆಯಲೊಲ್ಲದು. ಆಚಾಯ೯ರ ಪ್ರವಚನ ಅಲ್ಲಿಯೇ ನಿ೦ತು ಬಿಟ್ಟಿತು. ಎಲ್ಲಡೆ ನಿಶಬ್ದ.
ಆಗ ಮ೦ಡಿಗೆ ಮಾಡಲು ಬ೦ದ್ದಿದ ಅಡಿಗೆಯವರು ಅಲ್ಲಿಯೇ ನೀರನ್ನು ತರುತ್ತಿದ್ದವನನ್ನು ಕರೆದು ಆಚಯ೯ರಿಗೆ ಅಥ೯ವಾದ ಶೋಕ್ಲದ ಅನುವಾದ ಮಾಡಲು ಹೇಳಿದರು. ಆ ನೀರಿನವನೋ ಶು೦ಭ ಅವನು ಸ್ವಾಮಿ ನನಗೆ ಸರಿಯಾಗಿ ನನ್ನ ಗೋತ್ರ, ಪ್ರವರ ಗೋತ್ತಿಲ್ಲ ಸ೦ಧ್ಯವ೦ದಯೊ ಸಹಾ ಸರಿಯಾಗಿ ಬರುವದಿಲ್ಲಾ ನಾನು ಅವಿಧ್ಯಾವ೦ತ ಎ೦ದು ಹೇಳಿದಾ. ಅದಕ್ಕೆ ಆ ಅಡಿಗೆಯವರು ನಿನಗೆ ಬರುತ್ತದೆ ಆ ಶ್ಲೋಕಕ್ಕೆ ಯಾದವಾಯ೯ರ ಟಿಪ್ಪಣಿ ಹೇಳು ಎ೦ದು ಅವನ ತಲೆಯ ಮೇಲೆ ತಮ್ಮ ಹಸ್ತವನ್ನು ಇಟ್ಟರು. ತತ್ ಕ್ಷಣವೇ ಅವನು ನಿರಗ೯ವಾಳಿ ಅನುವಾದ ಮಾಡಿದಾ. ವ್ಯಾಸ ಪೀಠದಲ್ಲಿ ಕುಳಿತ ಆಚಾಯ೯ರು ಆಶ್ಚಯ೯ ಚಕಿತರಾದರು. ಅಷ್ಟರಲ್ಲಿ ಎಲ್ಲರ ದೃಷ್ಟಿಯೂ ಅಡಿಗೆಯರ ಕಡೆಗೆ ತಿರುಗಿತು. ಬಹಳ ಜನರಿಗೆ ಅಡಿಗೆಯರು ಬೇರೆ ಯಾರೂ ಅಲ್ಲ ಮಹಾನುಭಾವರಾದ ವಿಜಯರಾಯರು ಎ೦ದು ತಿಳಿಯಿತು. ಎಲ್ಲರೂ ಬ೦ದು ವಿಜಯರಾಯರ ಪಾದಗಳಿಗೆ ನಮಸ್ಕರಿಸಿದರು. ಆಚಾಯ೯ರು ವ್ಯಾಸ ಪೀಠದಿ೦ದ ಇಳಿದು ಬ೦ದು ವಿಜಯರಾಯರ ಪಾದಕ್ಕೆರಿಗಿ ಅವರಲ್ಲಿ ಕ್ಷಮಾಪಣೆ ಕೇಳಿದರು ಮತ್ತು ತಮ್ಮ ತಪ್ಪನ್ನು ಕ್ಷಮಿಸಿ ತಮಗೆ ದಾಸ ದೀಕ್ಷೆಯನ್ನು ಅನುಗ್ರಹಿಸಬೇಕೆ೦ದು ಬಹಳ ವಿನಮ್ರದಿ೦ದ ಬೇಡಿಕೂ೦ಡರು.
ಸುಬ್ಬಣ್ಣಾಚಯ೯ರು ಯಾವಾಗಲೂ ವಿಜಯರಯರಾಯರ ಅವಹೇಳನ ಮಾಡಿತ್ತಿದ್ದರು.ದಾಸರಿಗೆ ಯಾವ ಶಾಸ್ತಗಳ ಪರಿಚಯವಿಲ್ಲಾ ಕೇವಲ ಕನ್ನಡದಲ್ಲಿ ಹಾಡುಗಳನ್ನು ಹೇಳುತ್ತಾರೆ ಎ೦ದು ಯಾಗಲೂ ಹೇಳುತ್ತಿದ್ದರು. ಒಬ್ಬ ಅವಿದ್ಯಾವ೦ತನಿ೦ದ ಸುಧಾ ಅನುವಾದ ಕೇವಲ ಅವರ ಸ್ಪಶ೯ದಿ೦ದಾ ಸಾಧ್ಯವಾದದ್ದನ್ನು ಕೇಳಿ ವಿಜಯರಾಯರ ಯೋಗ್ಯತೆ ಆಚಾಯ೯ರಿರೆ ಒ೦ದು ಕ್ಷಣದಲ್ಲಿ ಗೊತ್ತಾಯಿತು. ಆಚಾಯ೯ರು ಮತ್ತೆ ಕ್ಷಮೆ ಯಾಚಿಸುತ್ತಾ ನಾನು ತಮ್ಮನ್ನು ಅವಹೇಳನ ಮಾಡಿದಾಗ್ಯೂ ತಾವು ಮ೦ಗಳಕ್ಕೆ ಆಮ೦ತ್ರಣ ಇಲ್ಲಾದಾಗ್ಯೂ ಇಲ್ಲಿಗೆ ಆಗಮಿಸಿ ಅಡುಗೆಯವರಾಗಿ ಮ೦ಡಗೆ ಮಾಡಿದ್ದಿರಿ ಅದಕ್ಕೆ ವಿಜಯರಾಯರು ನಾನು ಹರಿದಾಸ ಇಲ್ಲಿ ಬ೦ದಿರುವ ಭಗವದ್ ಭಕ್ತರಿಗೆ ತೀಥ೯ ಪ್ರಸಾದ ದಲ್ಲಿ ತೊ೦ದರೆಯಾಗಬಾರದು ಹಾಗೂ ತಾವು ಪ್ರತಿ ಮ೦ಗಳಕ್ಕೆ ಶ್ರೀಹರಿವಾಯುಗಳಿಗೆ ಸಮಪ೯ಣೆ ಮಾಡುವ ಮ೦ಡಿಗೆ ತಪ್ಪಬಾರದು ಅದಕ್ಕೆ ಬ೦ದಿದ್ದೇನೆ . ವಿಜಯರಾಯರಿಗೆ ಭಗವದ್ ಭಕ್ತರಮೇಲೆ ಬಹಳೆ ಪ್ರೀತಿ. ಅದಕ್ಕೆ ತಿರುಪತಿ ಶ್ರೀನಿವಾಸನಿಗೆ ನಿನ್ನ ನೋಡಲು ಬರಲಿಲ್ಲಾ ನಿನ್ನ ಭಕ್ತರನ್ನು ನೋಡಲು ಬ೦ದಿದ್ದೇನೆ ಎ೦ದಿದ್ದಾರೆ.
ಆಚಾಯ೯ರು ವಿಜಯರಾಯರ ಪಾದಗಳನ್ನು ತಮ್ಮ ಪಶ್ಚಾತ್ತಾಪದ ಅಶ್ರುಗಳಿ೦ದ ತೊಳೆದರು ಮತ್ತು ಹರಿದಾಸ ದೀಕ್ಷೆ ನೀಡುವ೦ತೆ ಪ್ರಾಥಿ೯ಸಿದರು. ಆದಕ್ಕೆ ವಿಜಯರಾಯರು ಇಲ್ಲಾ ಶ್ರೀಹರಿ ಇಛ್ಛೆ ನಿಮಗೆ ನಮ್ಮ ಶೀಷ್ಯ ಭಾಗಣ್ಣ (ಗೋಪಾಲ ದಾಸರು) ದೀಕ್ಷೆ ಕೂಡುತ್ತಾರೆ ಎ೦ದು ಹೇಳಿದರು.ಕಲ್ಲೂರ ಸುಬ್ಬಣ್ಣಾಚಾಯ೯ರೇ "ವ್ಯಾಸ ವಿಠ್ಠಲ " ಎ೦ಬ ಆ೦ಕಿತ ಪಡೆದು ಪ್ರಸಿದ್ಧರಾದರು. ಅವರು ರಚಿಸಿದ "ವಿಜಯ ಕವಚ" ವನ್ನು ಪ್ರತಿ ದಿವಸ ಪಠಿಸದ ಮಾಧ್ವರೇ ಇಲ್ಲಾ. ವಿಜಯದಾಸರನ್ನು ಆಗಿನ ಕಾಲದಲ್ಲಿಯೂ ಅವರ ಯೊಗ್ಯತೆ ತಿಳಿಯದೆ ಅವರನ್ನು ಅಪಮಾನ, ಅವಮಾನ ಮಾಡಿದ ಅನೇಕರನ್ನು ಉದ್ಧಸಿದ್ದಾರೆ. ಅವರನ್ನು ಅಜ್ದಾನಿಗಳು "ಕೂಸಿ ಮಗ ದಾಸ" ಎ೦ದು ಮೂದಲಿಸುತ್ತಿದ್ದರು. ವಿಜಯರಾಯರು ಕರುಣಾಸಾಗರರು ಎಲ್ಲರನ್ನೂ ಉದ್ಧರಿದರು. ಕಲ್ಲೂರ ಸುಬ್ಬಣ್ಣಾಚಯ೯ರ ದು ಒ೦ದು ಉದಾಹರಣೆ.
ವಿಜಯರಾಯರ ಕಾರುಣ್ಯದಿ೦ದ ಉದ್ದಾರಗೂ೦ಡ ಮಹಾನುಭಾವರು
ಛಾಗಿ ಕೇಶವರಾಯ
ಭಾಗಣ್ಣ (ಗೋಪಾಲ ದಾಸರು)
ಕಲ್ಲೂರ ಸುಬ್ಬಣ್ಣಾಚಾಯ೯ರು (ವ್ಯಾಸ ವಿಠ್ಠಲ ದಾಸರು)
ಮಾನವಿ ಶ್ರೀನಿವಾಸ ಆಚಾಯ೯ರರು( ಜಗನ್ನಾಥ ದಾಸರು)
ಶ್ರೀವರದೇ೦ದ್ರಸ್ವಾಮಿಗಳಲ್ಲಿ ವ್ಯಾಸ೦ಗಮಾಡಿ ಮಧ್ವಸಿಧ್ಧಾ೦ತದಲ್ಲಿ ಮಹಾ ಪ೦ಡಿತರೆ೦ದು ಪ್ರಸಿದ್ದಿ ಪಡೆದವರು. ಇ೦ಥ ಮಹಾನುಭಾವರಿಗೂ ಪ್ರಾರಬ್ದ ಕಮ೯ವಶಾತ್ ಶ್ರೀವಿಜಯರಾಯರ ಸ್ವೋತ್ತಮಾಪಚಾರವೆ೦ಬ ಮಾಹಾಪರಾಧವು ಸ೦ಘಟಿಸಿ ಶ್ರೀವಿಜಯರಾಯರಲ್ಲಿ ಕ್ಷಮೆಯಾಚಿಸಿದಾಗ ಆಗ ಅವರ ಶಿಷ್ಯರಾದ ಶ್ರೀಗೋಪಾಲದಾಸರು ಅಭಿಮ೦ತ್ರಿಸಿದ ಜೋಳದ ಭಕ್ರಿಯನ್ನು ಕೊಟ್ಟು ಅವರ ರೋಗ ಪರಿಹಾರ ಮಾಡಿ ತಮ್ಮ ಗುರುಗಳ ಆಜ್ಞೆಯ೦ತೆ ತಮ್ಮ ೪೦ ವಷ೯ ಆಯಸ್ಸುನ್ನು ದಾನ ಮಾಡಿದರು.ಮಾಹಾನುಭಾವರಾದ ಶ್ರೀವಿಜಯರಾಯರ ಅನುಗ್ರಹದಿ೦ದ ಶ್ರೀಗೋಪಾಲದಾಸರು ಕೃಪೆಮಾಡಿ ಸೂಚಿಸಿದ೦ತೆ ಪಾ೦ಡುರ೦ಗ ಸನ್ನಿಧಿಯಲ್ಲಿ "ಶ್ರೀ ಜಗನ್ನಾಥ ವಿಠ್ಥ ಲ" ಎ೦ಬ ಅ೦ಕಿತವನ್ನು ಪಡೆದು ಹರಿಕಥಾಮೃತಸಾರ ವನ್ನು ರಚಿಸಿದರು.ಹರಿಕಥಾಮೃತಸಾರವನ್ನು ಶ್ರೀ ಜಗನ್ನಾಥದಾಸರು ರಚಿಸಿದ ಕನ್ನಡದ ಶ್ರೀ ಸುಧಾ ಎ೦ದು ಪರಿಗಣಿಸಲಾಗಿದೆ.
ಸಾಕು ಮಕ್ಕಳಾದ ಮೋಹನ ದಾಸರು.
ರೋಗ ಪೀಡಿದವಾದ ಮಗುವನ್ನು ಚಕ್ರತೀಥ೯ದಲ್ಲಿ ತನ್ನ ಸಮೇತ ಮುಳಗಲು ಸಿದ್ಧಳಾದ ತಾಯಿಗೆ ಸ್ವಾ೦ತನ ಹೇಳಿ ಆ ಸಣ್ಣ ಕೂಸನ್ನು ತಮ್ಮ ಸಾಕು ಮಗನ್ನಾಗಿ ಪಾಲಿಸಿ, ಲಾಲಿಸಿ, ಅವರನ್ನು ಸಮಾಜಕ್ಕೆ ಅಪರೋಕ್ಷದ್ಯಾನಿಯನ್ನು ಮಾಡಿ ಅವರ ಅಪಮೃತ್ಯು ಪರಿಹರಿಸಿ ಅವರ ವ೦ಶವು ಮು೦ದುವರೆಯಲು ಅನುಗ್ರಹ ಮಾಡಿದರು.ಅವರೇ ಮೋಹನ ದಾಸರು.ಅವರ ವ೦ಶಜರು ಈಗಲೂ ಇದ್ದಾರೆ.
ವಿಜಯರಾಯರ ಕಾರುಣ್ಯ ಇಷ್ಟೇ ಎ೦ದು ಹೇಳಲು ಸಾಧ್ಯವಿಲ್ಲಾ.ಸ್ವತಃ ವ್ಯಾಸ ವಿಠ್ಠಲ ದಾಸರೆ ತಮ್ಮ "ವಿಜಯ ಕವಚ" ದಲ್ಲಿ ,
"ಪತಿತಪಾಮರಾ ಮಂದಮತಿಯೂ ನಾ ಬಲೂ
ತುತಿಸಲಾಪೇನೆ ಇವರ ಅತಿಶಯ೦ಗಳಾ"
ಎ೦ದು ಹೇಳಿದ್ದಾರೆ. ಅಲ್ಪನಾದ ನನಗೆ ಅವರ ಮಹಿಮೆ ತಿಳಿಯುವದಾದರು ಹೇಗೆ. ಈ ಲೇಖನದಲ್ಲಿ ನನ್ನ ತಪ್ಪುಗಳು ಇದ್ದಲ್ಲಿ ದಯವಿಟ್ಟು ನನ್ನ ಗಮನಕ್ಕೆ ತಿಳಿಸಿರಿ ಆ ತಪ್ಪನ್ನು ಸರಿ ಪಡಿಸಲಾಗುವದು.
ವಿಜಯ ಕವಚ
ಸ್ಮರಿಸಿ ಬದುಕಿರೋ ದಿವ್ಯ ಚರಣ ಕೆರಗಿರೋ
ದುರಿತ ತರಿದು ಪೂರೆವ ವಿಜಯಗುರುಳೆ೦ಬರ ||ಪ||
ದಾಸರಾಯನಾ ದಯವ ಸೂಸಿ ಪಡೆದನಾ
ದೋಷ ರಹಿತನಾ ಸಂತೋಷ ಭರಿತನಾ ||೧||
ಜ್ಞಾನವ೦ತನಾ ಬಲು ನಿಧಾನಿಶಾ೦ತನಾ
ಮಾನ್ಯವ೦ತನಾ ಬಹುವ ದಾನ್ಯದಾ೦ತನಾ ||೨||
ಹರಿಯ ಭಜಿಸುವ ನರಹರಿಯ ಯಜಿಸುವ
ದುರಿತ ತ್ಯಜಿಸುವ ಜನಕೆ ಹರುಷ ಸುರುಸುವ ||೩||
ಮೋದ ಭರಿತನಾ ಪಂಚ ಭೇದವರಿತನಾ
ಸಾಧು ಚರಿತನಾ ಮನವಿಷಾದ ಮರೆತನಾ ||೪||
ಇವರ ನಂಬಿದ ಜನಕೆ ಭವವಿದೆ೦ಬುದು
ಹವಣವಾಗದೋ ನಮ್ಮವರ ಮತವಿದು ||೫||
ಪಾಪಕೋಟಿಯಾ ರಾಶಿ ಲೇಪವಾಗದೋ
ತಾಪಕಳೆವನೋ ಬಲು ದಯಾಪಯೋನಿಧಿ ||೬||
ಕವನ ರೂಪದಿ ಹರಿಯಸ್ತವನ ಮಾಡಿದಾ
ಭುವನ ಬೇಡಿದ ಮಾಧವನ ನೋಡಿದಾ ||೭||
ರಂಗನೆ೦ದರೆ ಭವವು ಹಿಂಗಿತೆ೦ದನ
ಮಂಗಳಾ೦ಗನಾ ಅಂತರಂಗವರಿತನ ||೮||
ಕಾಶಿನಗರದಲ್ಲಿದ್ದ ವ್ಯಾಸದೇವನ ದಯವ
ಸೂಸಿಪಡೆದನಾ ಉಲ್ಲಾಸತನದಲೀ ||೯||
ಚಿಂತೆ ಬ್ಯಾಡಿರೋ ನಿಶ್ಚಿ೦ತರಾಗಿರೋ
ಶಾಂತ ಗುರುಗಳಾ ಪಾದವಾ೦ತು ನಂಬಿರೋ ||೧೦||
ಖೇದವಾಗದೋ ನಿಮಗೆ ಮೋದ ವಾಹುದೋ
ಆದಿದೇವನಾ ಸುಪ್ರಸಾದ ವಾಹುದೋ ||೧೧||
ತಾಪ ತಡೆವನೂ ಬಂದ ಪಾಪ ಕಡಿವನೂ
ಶ್ರೀಪತಿಯ ಪಾದ ಸಮೀಪವಿಡುವನೂ ||೧೨||
ಗಂಗೆ ಮಿಂದರೆ ಮಲವು ಹಿ೦ಗಿತಲ್ಲದೆ
ರಂಗ ನೋಲಿಯನೂ ಭಕುತರ ಸಂಗದೊರೆಯದೆ||೧೩||
ವೇದ ಓದಲೂ ಬರಿದೆ ವಾದಮಾಡಲೂ
ಹಾದಿಯಾಗದೂ ಬುಧರಪಾದ ನಂಬದೆ ||೧೪||
ಲೆಕ್ಕವಿಲ್ಲದಾ ದೇಶ ತುಕ್ಕಿ ಬಂದರೂ
ದುಃಖವಲ್ಲದೆ ಲೇಶ ಭಕುತಿ ದೂರಕದೂ ||೧೫||
ದಾನ ಮಾಡಲೂ ದಿವ್ಯಗಾನ ಪಾಡಲೂ
ಜ್ಞಾನ ದೊರೆಯದೋ ಇವರಾಧಿನವಾಗದೇ ||೧೬||
ಇಷ್ಟಿ ( ಯಜ್ಞ ) ಯಾತಕೆ ಕಂಡ ಕಷ್ಟ ವ್ಯಾತಕೆ
ದಿಟ್ಟ ಗುರುಗಳ ಪಾದ ಮುಟ್ಟಿ ಭಜಿಸಿರೋ ||೧೭||
ಪೂಜೆ ಮಾಡಲೋ ಕಂಡ ಗೋಜು ಬಿಳಲು
ಬೀಜ ಮಾತಿನ ಫಲ ಸಹಜದೂರಕದೋ ||೧೮||
ಸುರರು ಎಲ್ಲರೊ ಇವರ ಕರವ ಪಿಡಿವರೂ
ತರಳ ರ೦ದದಿ ಹಿಂದೆ ತಿರುಗುತಿಪ್ಪರು ||೧೯||
ಗ್ರಹಗಳೆಲ್ಲವೂ ಇವಗೆ೯ ಸಹಾಯ ಮಾಡುತಾ
ಆಹೋ ರಾತ್ರಿಲಿ ಸುಖದ ನಿವಹ ಕೂಡುವವೂ ||೨೦||
ವ್ಯಾಧಿಬಾರದೋ ದೇಹ ಬಾಧೆ ತಟ್ಟದೋ
ಆದಿದೇವನಾ ಸುಪ್ರಸಾದ ವಾಹುದೋ ||೨೧||
ಪತಿತಪಾಮರಾ ಮಂದಮತಿಯೂ ನಾ ಬಲೂ
ತುತಿಸಲಾಪೇನೆ ಇವರ ಅತಿಶಯ೦ಗಳಾ ||೨೨||
ಕರುಣದಿ೦ದಲಿ ಎಮ್ಮ ಪೋರೆವನಲ್ಲದೆ
ದುರಿತ ಕೋಟಿಯಾ ಭಾಗ್ಯ ತರಿವದಯದಲೀ ||೨೩||
ಮಂದ ಮತಿಗಳು ಇವರ ಚಂದವರಿಯದೇ
ನಿಂದಿಸುವರು ಭವದ ತಪ್ಪದೋ ||೨೪||
ಇಂದಿರಾಪತಿ ಇವರ ಮು೦ದೆ ಕುಣಿವನೂ
ಅಂದವಚನವಾ ನಿಜಕೆ ತಂದು ತೋಪ೯ನು ||೨೫||
ಉದಯಕಾಲದಿ ಈ ಪದವ ಪಠಿಸಲೂ
ಮದಡನಾದರೂ ಜ್ಞಾನ ಉದಯವಾಹುದೋ ||೨೬||
ಸಟೆ ಯಿದಲ್ಲವೂ ವ್ಯಾಸ ವಿಠಲ ಬಲ್ಲನು
ಪಠಿಸಬಹುದಿದೂ ಕೇಳಿ ಕುಟಿಲ ರಹಿತರು ||೨೭||
||ಶ್ರೀಕೃಷ್ಣಾರ್ಪಣಮಸ್ತು||
ಇತಿ ಶ್ರೀವ್ಯಾಸವಿಠ (ಕಲ್ಲೂರು ಸುಬ್ಬಣ್ಣಾಚಾರ್ಯ) ವಿರಚಿತ ವಿಜಯದಾಸರ ಕವಚ ಸಾಮಾಪ್ತವಾಯಿತು |
*******
*******
ವಿಜಯರಾಯರ ಪಾದ ನಿಜವಾಗಿ ಭಜಿಸಲು
ಅಜನ ಪಿತ ತಾನೆ ಒಲಿವ-
ಶ್ರೀಮಧ್ವಭಗವತ್ಪಾದರಿಂದ ಪ್ರೇರಿತವಾಗಿ, ಶ್ರೀನರಹರಿತೀರ್ಥರಿಂದ ಪ್ರವರ್ತಿತವಾದ ಕರ್ನಾಟಕ ಹರಿದಾಸ ಸಾಹಿತ್ಯಪರಂಪರೆಯಲ್ಲಿ ಶ್ರೀವಿಜಯದಾಸಾರ್ಯರದು ಅತ್ಯಂತ ಮಹತ್ತ್ವದ ಸ್ಥಾನ. ದಾಸಸಾಹಿತ್ಯದ ಮೊದಲ ಘಟ್ಟದಲ್ಲಿ ಶ್ರೀ ಶ್ರೀಪಾದರಾಜರು, ಶ್ರೀವ್ಯಾಸರಾಜರು, ಶ್ರೀವಾದಿರಾಜರು, ಶ್ರೀಪುರಂದರದಾಸರು, ಶ್ರೀಕನಕದಾಸರು ತಮ್ಮ ಅನುಪಮವಾದ ಕೃತಿಗಳಿಂದ ಕನ್ನಡಭಾಷೆಗೆ ಸಂಸ್ಕೃತ ಸಮಪೀಠವನ್ನು ನೀಡಿ, ಕನ್ನಡದ ಪುಣ್ಯಮಣ್ಣಿಗೆ ಶ್ರೀಹರಿಯ ವೈಕುಂಠವನ್ನೇ ಕರೆತಂದು ಇಲ್ಲೇ ವೈಕುಂಠ ಕಾಣಿರೋ ಎಂದು ತೋರಿದರೆ, ದ್ವಿತೀಯ ಘಟ್ಟದಲ್ಲಿ ಹರಿದಾಸಸಾಹಿತ್ಯಪರಂಪರೆಗೆ ಅಧ್ವರ್ಯುವಾಗಿ ಮುನ್ನೆಡೆಸಿದ ಮಹಾನುಭಾವರು ಶ್ರೀವಿಜಯದಾಸರು. ತಮ್ಮ ವ್ಯಕ್ತಿತ್ವದ ಹಿರಿಮೆಯಿಂದ ಶ್ರೀಗೋಪಾಲದಾಸರು, ಶ್ರೀಮೋಹನದಾಸರು, ಶ್ರೀಜಗನ್ನಾಥದಾಸರು, ಶ್ರೀಕಲ್ಲೂರು ಸುಬ್ಬಣ್ನಾಚಾರ್ಯರು, ಶ್ರೀದಿವಾನ ತಿಮ್ಮಣ್ನನವರು, ಶ್ರೀಆನಂದದಾಸರೇ ಮೊದಲಾದ ಹರಿದಾಸವರೇಣ್ಯರಿಗೆ ಗುರು, ಪರಮಗುರುಸ್ಥಾನೀಯರಾಗಿ ಮಹತ್ತರವಾದ ಸಾಧನೆಗೆ ಕಾರಣೀಭೂತರಾದರು. ಶ್ರೀನಿವಾಸಾಚಾರ್ಯರಿಗೆ (ಶ್ರೀಜಗನ್ನಾಥದಾಸರು) ಶ್ರೀಗೋಪಾಲದಾಸರಿಂದ ಆಯುರ್ದಾನದಂತಹ ಅಪೂರ್ವವಾದಂತಹ ದಾನವನ್ನು ಮಾಡಿಸಿ, ಶ್ರೀಜಗನ್ನಾಥದಾಸರಿಂದ ಹರಿಕಥಾಮೃತಸಾರದಂತಹ ಮಧ್ವಸಿದ್ಧಾಂತ ಸಾರರೂಪವಾದ ಕೃತಿಯ ರಚನೆಗೆ ಪ್ರೇರಣೆ ನೀಡಿ, ಛಾಗಿ ಕೇಶವರಾಯರಂತಹ ಸಜ್ಜೀವರನ್ನು ತಾವೇ ಉದ್ಧರಿಸಿ, ಕಾಶೀಯಾತ್ರೆಯ ಸಂದರ್ಭದಲ್ಲಿ ಕತ್ತೆಯಂತಹ ಪ್ರಾಣಿಗೂ ತಮ್ಮ ಜೀವಕಾರುಣ್ಯವನ್ನು ತೋರಿ, ಮೋಹನದಾಸರ ಜೀವನವನ್ನು ಉದ್ಧರಿಸಿ ಅದ್ಯಪಿ ಚಿಪ್ಪಗಿರಿಯಲ್ಲಿ ನೆಲೆಸಿ ಆಶ್ರಿತರನ್ನು ಅನುಗ್ರಹಿಸುತ್ತಾ, ಶ್ರೀಮಾಧವ-ಮಧ್ವ ಮಾರ್ಗವನ್ನು ತೋರುತ್ತಿರುವ ಮಹಿಮೆ ಒಂದೆಡೆಯಾದರೆ, ತಮ್ಮ ಅಪೂರ್ವವಾದಂತಹ ಸಾಹಿತ್ಯದಿಂದ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ ಹಿರಿಮೆ ಮತ್ತೊಂದೆಡೆ.
" ಸುಖತೀರ್ಥಮುನಿಯ ಮನಕನುಕೂಲ ಸಚ್ಛಾಸ್ತ್ರ
ನಿಕರಗಳ ಕವನ ರೂಪದಲಿ ರಚಿಸಿ
ಭಕುತರಿಗೆ ಸನ್ಮಾರ್ಗ ತೋರಿ ಸಂತೋಷದಲಿ
ವಿಖನಸಾರ್ಚಿತ ಜಗನ್ನಾಥವಿಠಲನ ಪದಕೆ' ಎಂದು ಶ್ರೀಜಗನ್ನಾಥದಾಸಾರ್ಯರು ನುಡಿದಂತೆ ತಮ್ಮ ತತ್ತ್ವಗರ್ಭಿತವಾದ, ಭಕ್ತಿಭರಿತವಾದ ಪದ, ಉಗಾಭೋಗ, ಸುಳಾದಿಗಳಿಂದ ಸಾಹಿತ್ಯಲೋಕದಲ್ಲಿ ಚಿರಸ್ಥಾಯಿಯಾದವರು ಶ್ರೀವಿಜಯದಾಸರು. ಸಿದ್ಧಾಂತದ ಸೂಕ್ಷ್ಮಾತಿಸೂಕ್ಷ್ಮವಿಚಾರಗಳನ್ನೂ, ಸರಳವಾದ ಅಷ್ಟೇ ಗಂಭೀರವಾದ ಕೃತಿಗಳಲ್ಲಿ ವಿವರಿಸಿ, ಶ್ರೀಮಧ್ವಭಗವತ್ಪಾದರ ಸಿದ್ಧಾಂತ ಕನ್ನಡದ ಮನೆ ಮನೆಗೆ ತಲುಪುವಂತೆ ಮಾಡಿದ ಮಹನೀಯರು ಶ್ರೀವಿಜಯದಾಸರು. ಸುಳಾದಿದಾಸರೆಂದೇ ಖ್ಯಾತರಾದ ಶ್ರೀವಿಜಯಪ್ರಭುಗಳು ರಚಿಸಿದ ತೀರ್ಥಕ್ಷೇತ್ರ ಸುಳಾದಿಗಳಂತೂ ಶ್ರೀವಾದಿರಾಜ ಶ್ರೀಮಚ್ಚರಣರ ತೀರ್ಥಪ್ರಬಂಧದಂತೆ ತೀರ್ಥಕ್ಷೇತ್ರಗಳ ಮಹಿಮೆಗಳನ್ನು ವರ್ಣಿಸುವ ಅಪೂರ್ವಕೃತಿಗಳು. ಜನ್ಮಸ್ಥಳ ಚೀಕಲಪರವಿ, ತಮ್ಮ ಅವತಾರ ಸಮಾಪ್ತಿ ಮಾಡಿದ ಚಿಪ್ಪಗಿರಿ ಎರಡೂ ಕ್ಷೇತ್ರಗಳಲ್ಲಿಯೂ ತಮ್ಮ ಮಹಿಮೆಯನ್ನು ಪ್ರಕಟಗೊಳಿಸುತ್ತಿರುವ ಶ್ರೀವಿಜಯದಾಸಾರ್ಯರ ಪುಣ್ಯಸ್ಮರಣೆ ಅವರ ಆರಾಧನೆಯ ಪರ್ವಕಾಲದಲ್ಲಿ ನಮಗೆ ಶ್ರೀದಾಸಾರ್ಯರೇ ಅನುಗ್ರಹಿಸಲಿ,ಶ್ರೀವಿಜಯದಾಸಾರ್ಯರ ಅಂತರ್ಯಾಮಿ, ಶ್ರೀಪುರಂದರ ದಾಸಾರ್ಯರ ಅಂತರ್ಯಾಮಿ, ಶ್ರೀ ಮಧ್ವಾಂತರ್ಗತ ಶ್ರೀವಿಜಯವಿಠಲ ಸರ್ವರನ್ನೂ ಅನುಗ್ರಹಿಸಲಿ - ಶ್ರೀದಾಸಾರ್ಯರೇ ಪ್ರಾರ್ಥಿಸಿದಂತೆ- 'ಸದಾ ಎನ್ನ ಹೃದಯದಲ್ಲಿ ವಾಸ ಮಾಡೋ ಶ್ರೀಹರಿ' ಎಂದು ಪ್ರಾರ್ಥಿಸೋಣ.
ಒಲುಮೆ
ವಿಜಯ ದಾಸರ ಸ್ಮರಣೆ
ಕೂಸಿ ಮಗ ದಾಸಪ್ಪ ಎಂದು ಪ್ರಸಿದ್ಧ. ಬಾಲ್ಯದಿಂದಲೇ ಕಡು ಬಡತನ ಸಿದ್ಧ.
ತಾಯಿ, ಮಗ ಸಂಜೆವರೆಗೆ ತಿರಗಿದರೂ ಹೊಟ್ಟೆಗೆ ಹಿಟ್ಟಿಲ್ಲದ ದಿನಗಳು.
ಬಾಯ್ದೆರೆದು ಕೇಳಿದರೂ ಕೈಗೊಂದು ಕಾಸಿಲ್ಲ. ದುಡಿದರೂ ಇಲ್ಲ, ದಣಿದರೂ ಇಲ್ಲ.
ಹೊಸ ವಸ್ತ್ರ ಕನಸು. ಹಳೆಯ ಹರಿದ ವಸ್ತ್ರವೇ ಭೂಷಣ.
ಹೆಂಡತಿ ಜೊತೆ ಊಟ ದೂರ. ಅವಳೊಬ್ಬಳಿಗೆ ಊಟಕ್ಕೆ ಹಾಕುವದೂ ಕಠಿಣತರ.
ಕಾಡುವ ಬಡತನ.
ದಾಸಪ್ಪ ಬೇಸತ್ತ. ಮನೆ ಬಿಟ್ಟ. ಊರೂ ಬಿಟ್ಟ.
ಗೊತ್ತು ಗುರಿ ಇಲ್ಲದ ಪಯಣ. ನಡೆದಿದ್ದೇ ದಾರಿ, ಮುಟ್ಟಿದ್ದೇ ಊರು.
ದಾಸಪ್ಪನಿಗೆ ಗುರಿ ಗೊತ್ತಿರಲಿಕ್ಕಿಲ್ಲ.
ಆದರೆ ಈಶಪ್ಪನಿಗೆ ಗೊತ್ತಿತ್ತು.
ದೊಡ್ಡ ಯೋಗ್ಯತೆ ದಾಸಪ್ಪನದು.
ಜಗದೀಶಪ್ಪ ತನ್ನ ಸನ್ನಿಧಿ ಕಾಶಿಗೇ ದಾಸಪ್ಪ
ನನ್ನು ಕರೆತಂದ.
ದಾಸಪ್ಪನ ಅಧ್ಯಾತ್ಮ ಭಾಗ್ಯದ ಬಾಗಿಲು ತೆರೆಯಿತು. ಕಾಶಿ ವಿಶ್ವೇಶ್ವರನ ಅನುಗ್ರಹ,
ಶ್ರೀ ಹರಿ ಬಿಂದುಮಾಧವನ ಪ್ರಸಾದ,
ವಿಠ್ಠಲನ ಅಪರೋಕ್ಷ -
ಇನ್ನೇನು ಇನ್ನೇನು!
ವಿಜಯವಿಠ್ಠಲನ ದರುಶನವಾಯಿತು.
'ನಿನ್ನ ಕಂಡು ಧನ್ಯನಾದೆ ವಿಠ್ಠಲಾ' ಎಂದರು.
ಲೌಕಿಕದ ಮೇಲೆ ವಿಜಯ ಹೊಂದಿದರು.
ವಿಜಯದಾಸರಾದರು.
ಮಸ್ತಕದಲ್ಲಿ ಮಧ್ವ ಶಾಸ್ತ್ರ.
ಕಂಗಳಲ್ಲಿ ಶ್ರೀ ರಂಗ
ನಾಲಿಗೆ ಮೇಲೆ ಸರಸ್ವತಿ.
ಹೃದಯದಲ್ಲಿ ವಿಠ್ಠಲ.
ಅಂತಃಕರಣದಲ್ಲಿ ತುಂಬು ಭಕ್ತಿ.
ಕೈಯಲ್ಲಿ ತಂಬೂರಿ. ಕಾಲಲ್ಲಿ ಗೆಜ್ಜೆ.
ಡಂಗುರ ಸಾರಿದರು ಹರಿಮಹಾತ್ಮೆ.
ವಿಜಯದಾಸರು ನಡೆದಾಡಿದ್ದೆಲ್ಲ ತೀರ್ಥಯಾತ್ರೆ ಆಯಿತು. ಮಾಡಿದ್ದೆಲ್ಲ ಹರಿಪೂಜೆ. ಮಾತನಾಡಿದ್ದೆಲ್ಲ ಮಾಧವನ ಮಹಿಮೆ. ದೇವರ ನಾಮ. ಶಾಸ್ತ್ರದ ತಾತ್ಪರ್ಯ
ವಾಯಿತು.
ನೋಡಿದ್ದೆಲ್ಲ ಹರಿರೂಪ. ಉಂಡಿದ್ದು ಹರಿ ನೈವೇದ್ಯ. ಜೀವನ ಪರಮಾತ್ಮಮಯವಾಯಿ ತು.
ದಾಸರು ಬಂದಲ್ಲೆಲ್ಲ ಬರಗಾಲ ಮಾಯ. ಮಳೆಬೆಳೆ ಸುಭಿಕ್ಷ್ಯ. ಜ್ಞಾನ ಮಯ. ಸುಖಕಾಲ.
ಅವರು ಅಂದದ್ದು ಅಂದಂತೆ ನಡೆಯುತ್ತಿತ್ತು.
ನಡೆಯುವದನ್ನು ಮೊದಲೇ ಅನ್ನುತ್ತಿದ್ದರು.
ಬೇಡಿ ಬಂದವರಿಗೆ ಕಷ್ಟ ಪರಿಹಾರ. ಬಯಸಿ ಬಂದವರಿಗೆ ಸುಖ ಪ್ರಾಪ್ತಿ. ಎಲ್ಲರಿಗೂ ಅಧ್ಯಾತದ ಉನ್ನತಿ.
ನೂರಾರು ಸುಜನ ಶಿಷ್ಯರಾದರು. ಅನೆಕಾನೇಕರು ದಾಸದೀಕ್ಷೆ ಪಡೆದರು.
ಹರಿದಾಸ ಸಾಹಿತ್ಯ, ಪಂಥ, ವೈಭವ ಶಿಖರಕ್ಕೇರಿ ದವು.
ವಿಠ್ಠಲನ ಒಲುಮೆಯಾದವನಿಗೆ ಏನು ತಾನೇ ಅಲಭ್ಯ?
ಸುಜನರು ಹಿಂಡುಹಿಂಡಾಗಿ ದಾಸರ ಹಿಂಬಾಲಿ ಸಿದರು. ತಮ್ಮ ತಮ್ಮ ಊರಿಗೆ ಆಹ್ವಾನಿಸಿ ಕರೆದೊಯ್ಯುವರು.
ಎಲ್ಲೆಡೆಗೆ ಸನ್ಮಾನ, ಸತ್ಕಾರ ಶಾಲು ಶಕಲಾತಿ.
ನೂರಾರು ಸಜ್ಜನರ ಜೊತೆ ಭೂರಿ ಸಹಭೋಜ ನ. ಅಪಾರ ಸಂಪತ್ತು. ಆ ಭಾರಿ ವೈಭವ ಕಣ್ಣಿಗೇ ಹಬ್ಬ! ದೈವಾನುಗ್ರಹ ದಾಸರಿಗೆ.
ಸಂಚರಿಸುತ್ತ ಬಂದರು ಮರಳಿ ತಮ್ಮ ಊರಿಗೆ
ಆಗ ಯಾವ ಊರು ದಾಸಪ್ಪನನ್ನು ಹೊರಗೆ ಹಾಕಿತ್ತೋ ಅದೇ ಊರು ಈಗ ವಿಜಯದಾಸರನ್ನು ಭವ್ಯವಾಗಿ ಸ್ವಾಗತಿಸಿತು.
ಅದೇ ಬಂಧುಗಳ ಮನೆಗೆ ಬಂದರು ದಾಸರು.
ಮಧ್ಯಾನ್ಹ ಸಹಸ್ರಬ್ರಹ್ಮ ಭೋಜನ. ನೂರೆಂಟು ಭಕ್ಷ್ಯಭೋಜ್ಯಗಳು.
ವೈಭವ ತುಂಬಿ ತುಳುಕು ತ್ತಿತ್ತು.
ಊಟಕ್ಕೆ ಕುಳಿತ ದಾಸರಿಗೆ ಪೂರ್ವದ ಸ್ಮರಣೆ.
ಇದೇ ಮನೆಯಲ್ಲಿ. ತಾನು ತನ್ನ ತಾಯಿ. ಹೇಳಿದ ಕೆಲಸ ಮಾಡಿದೆವು.
ತುತ್ತಿಗಾಗಿ ತೊತ್ತಾಗಿ ಸಂಜೆವರೆಗೆ ಕಾದೆವು. ಹೊಟ್ಟೆಗೆ ಒಂದು ಸೌಟು ಗಂಜಿ ಸಿಗಲಿಲ್ಲ ಸ್ವಾಮಿ.
ಇಂದು ನೋಡು ಈ ಪರಿ ಕಂಡರಿಯದ ವೈಭವ!
ಎದುರಿಗೆ ನೋಡುತ್ತಾರೆ -
ವಿಜಯವಿಠ್ಠಲ. ತುಂಟ ನಗುಮೊಗ.
ಆಗ ಅದನ್ನು ಕೊಟ್ಟವನು ನಾನೇ.
ಈಗ ಇದನ್ನು ಇಟ್ಟವನೂ ನಾನೇ ಎನ್ನುವಂತಿತ್ತು.
ಬಿಟ್ಟಾರೆಯೇ ದಾಸರು. ಹಾಡಿನಿಂದ ಕಟ್ಟಿ ಹಾಕಿದರು ಹರಿಯನ್ನು!
ಭಕ್ತಿ ಭಾವದಿಂದ ಸ್ತುತಿಸಿ ಸಂತಸ ಪಟ್ಟರು.
'ನಿನ್ನ ಒಲುಮೆಯಿಂದ ನಿಖಿಳ ಜನರು ಬಂದು
ಮನ್ನಿಸುವರೋ!'
ಹೇ, ದೇವರದೇವ
ಏನಿದು ನಿನ್ನ ಲೀಲೆ! ವೈಚಿತ್ರ್ಯ. ವೈಭವ!
ಇಲ್ಲದ್ದು ಕಂಡಿದ್ದೆ. ಇದ್ದದ್ದು ಕಂಡಿರುವೆ.
ಅಂದು -
ಹಸಿದ ಹೊಟ್ಟೆ, ಹರಕು ಬಟ್ಟೆ, ಬಾಯಿ ಬಿಟ್ಟು ಬೇಡಿ ಕೆಟ್ಟೆ.
ಇಂದು -
ಭೂರಿ ಅಶನ ಭಾರೀ ವಸನ. ತುಂಬು ಧನ. ಏನುಂಟು ಏನಿಲ್ಲ ಸ್ವಾಮೀ.
ಯಾತರ ಪ್ರಾಪ್ತಿ ಇದು?
ಈ ಪರಿ ಪುಣ್ಯ ನನ್ನದುಂಟೇ?
ಇಲ್ಲ ಮತ್ತೆ ಅಲ್ಲ.
ಬರಿಗಾಲು, ಬರಿಹೊಟ್ಟೆ, ಬರಿ ಮೈ ನನ್ನ ಯೋಗ್ಯತೆ.
ತುಂಬಿತುಳುಕುವ ಈ ವೈಭವ ನಿನ್ನ ಒಲುಮೆ.
ಬಂದು ಮನ್ನಿಸುವ ಜನ ನಿನ್ನದಯ್ಯಾ ಸ್ವಾಮಿ.
ನೀ ಕೊಟ್ಟರೆ ಉಂಟು.
ಇಲ್ಲದಿರೆ ಇಲ್ಲ.
ಸೂತ್ರದ ಬೊಂಬೆ ನಾವು.
ಸೂತ್ರಧಾರ ನೀನು.
ನಿನ್ನ ಇಚ್ಛೆಯಂತೆಯೇ ಜಗದ ಆಟ.
ನಿನ್ನ ಪರಿಯ ಯೋಚಿಸಿ ನೋಡಲು ಸೋಜಿಗವಾಗುತ್ತದೆ.
'ಸ್ವಾಮಿ, ವಾಚೋ ನಿವರ್ತಂತೆ'
ನಿನ್ನ ಹೇಳಲು ಹೋದ ಶಬ್ದಗಳು ಸೋತು ಮರಳಿದವು.
ಸರ್ವಶಬ್ದ ವಾಚ್ಯನೂ ಹೌದು,ವಾಚ್ಯಾತೀತನೂ
ಹೌದು ಸ್ವಾಮಿ ನೀನು.
ಇಂಥ ಜಗತ್ತಿಗೇ ಸೋಜಿಗವಾಗಿರುವ ಸೋಜಿಗ ನಾಮಕ, ಸೋಜಿಗಕಾರಕ ಸೋಜಿಗಮಯ ಪ್ರಭು ನಿನಗೆ ಸಹಸ್ರ ಶಿ ಸಾ ನಮಸ್ಕಾರಗಳು.
ನಿನ್ನ ಒಲುಮೆ ಸದಾ ಇರಲಿ ನಮಗೆ.
ಶ್ರೀ ಕೃಷ್ಣಾರ್ಪಣಮಸ್ತು
By Dr V R Desai.
ವಿಜಯ ದಾಸರ ಸ್ಮರಣೆ
ಕೂಸಿ ಮಗ ದಾಸಪ್ಪ ಎಂದು ಪ್ರಸಿದ್ಧ. ಬಾಲ್ಯದಿಂದಲೇ ಕಡು ಬಡತನ ಸಿದ್ಧ.
ತಾಯಿ, ಮಗ ಸಂಜೆವರೆಗೆ ತಿರಗಿದರೂ ಹೊಟ್ಟೆಗೆ ಹಿಟ್ಟಿಲ್ಲದ ದಿನಗಳು.
ಬಾಯ್ದೆರೆದು ಕೇಳಿದರೂ ಕೈಗೊಂದು ಕಾಸಿಲ್ಲ. ದುಡಿದರೂ ಇಲ್ಲ, ದಣಿದರೂ ಇಲ್ಲ.
ಹೊಸ ವಸ್ತ್ರ ಕನಸು. ಹಳೆಯ ಹರಿದ ವಸ್ತ್ರವೇ ಭೂಷಣ.
ಹೆಂಡತಿ ಜೊತೆ ಊಟ ದೂರ. ಅವಳೊಬ್ಬಳಿಗೆ ಊಟಕ್ಕೆ ಹಾಕುವದೂ ಕಠಿಣತರ.
ಕಾಡುವ ಬಡತನ.
ದಾಸಪ್ಪ ಬೇಸತ್ತ. ಮನೆ ಬಿಟ್ಟ. ಊರೂ ಬಿಟ್ಟ.
ಗೊತ್ತು ಗುರಿ ಇಲ್ಲದ ಪಯಣ. ನಡೆದಿದ್ದೇ ದಾರಿ, ಮುಟ್ಟಿದ್ದೇ ಊರು.
ದಾಸಪ್ಪನಿಗೆ ಗುರಿ ಗೊತ್ತಿರಲಿಕ್ಕಿಲ್ಲ.
ಆದರೆ ಈಶಪ್ಪನಿಗೆ ಗೊತ್ತಿತ್ತು.
ದೊಡ್ಡ ಯೋಗ್ಯತೆ ದಾಸಪ್ಪನದು.
ಜಗದೀಶಪ್ಪ ತನ್ನ ಸನ್ನಿಧಿ ಕಾಶಿಗೇ ದಾಸಪ್ಪ
ನನ್ನು ಕರೆತಂದ.
ದಾಸಪ್ಪನ ಅಧ್ಯಾತ್ಮ ಭಾಗ್ಯದ ಬಾಗಿಲು ತೆರೆಯಿತು. ಕಾಶಿ ವಿಶ್ವೇಶ್ವರನ ಅನುಗ್ರಹ,
ಶ್ರೀ ಹರಿ ಬಿಂದುಮಾಧವನ ಪ್ರಸಾದ,
ವಿಠ್ಠಲನ ಅಪರೋಕ್ಷ -
ಇನ್ನೇನು ಇನ್ನೇನು!
ವಿಜಯವಿಠ್ಠಲನ ದರುಶನವಾಯಿತು.
'ನಿನ್ನ ಕಂಡು ಧನ್ಯನಾದೆ ವಿಠ್ಠಲಾ' ಎಂದರು.
ಲೌಕಿಕದ ಮೇಲೆ ವಿಜಯ ಹೊಂದಿದರು.
ವಿಜಯದಾಸರಾದರು.
ಮಸ್ತಕದಲ್ಲಿ ಮಧ್ವ ಶಾಸ್ತ್ರ.
ಕಂಗಳಲ್ಲಿ ಶ್ರೀ ರಂಗ
ನಾಲಿಗೆ ಮೇಲೆ ಸರಸ್ವತಿ.
ಹೃದಯದಲ್ಲಿ ವಿಠ್ಠಲ.
ಅಂತಃಕರಣದಲ್ಲಿ ತುಂಬು ಭಕ್ತಿ.
ಕೈಯಲ್ಲಿ ತಂಬೂರಿ. ಕಾಲಲ್ಲಿ ಗೆಜ್ಜೆ.
ಡಂಗುರ ಸಾರಿದರು ಹರಿಮಹಾತ್ಮೆ.
ವಿಜಯದಾಸರು ನಡೆದಾಡಿದ್ದೆಲ್ಲ ತೀರ್ಥಯಾತ್ರೆ ಆಯಿತು. ಮಾಡಿದ್ದೆಲ್ಲ ಹರಿಪೂಜೆ. ಮಾತನಾಡಿದ್ದೆಲ್ಲ ಮಾಧವನ ಮಹಿಮೆ. ದೇವರ ನಾಮ. ಶಾಸ್ತ್ರದ ತಾತ್ಪರ್ಯ
ವಾಯಿತು.
ನೋಡಿದ್ದೆಲ್ಲ ಹರಿರೂಪ. ಉಂಡಿದ್ದು ಹರಿ ನೈವೇದ್ಯ. ಜೀವನ ಪರಮಾತ್ಮಮಯವಾಯಿ ತು.
ದಾಸರು ಬಂದಲ್ಲೆಲ್ಲ ಬರಗಾಲ ಮಾಯ. ಮಳೆಬೆಳೆ ಸುಭಿಕ್ಷ್ಯ. ಜ್ಞಾನ ಮಯ. ಸುಖಕಾಲ.
ಅವರು ಅಂದದ್ದು ಅಂದಂತೆ ನಡೆಯುತ್ತಿತ್ತು.
ನಡೆಯುವದನ್ನು ಮೊದಲೇ ಅನ್ನುತ್ತಿದ್ದರು.
ಬೇಡಿ ಬಂದವರಿಗೆ ಕಷ್ಟ ಪರಿಹಾರ. ಬಯಸಿ ಬಂದವರಿಗೆ ಸುಖ ಪ್ರಾಪ್ತಿ. ಎಲ್ಲರಿಗೂ ಅಧ್ಯಾತದ ಉನ್ನತಿ.
ನೂರಾರು ಸುಜನ ಶಿಷ್ಯರಾದರು. ಅನೆಕಾನೇಕರು ದಾಸದೀಕ್ಷೆ ಪಡೆದರು.
ಹರಿದಾಸ ಸಾಹಿತ್ಯ, ಪಂಥ, ವೈಭವ ಶಿಖರಕ್ಕೇರಿ ದವು.
ವಿಠ್ಠಲನ ಒಲುಮೆಯಾದವನಿಗೆ ಏನು ತಾನೇ ಅಲಭ್ಯ?
ಸುಜನರು ಹಿಂಡುಹಿಂಡಾಗಿ ದಾಸರ ಹಿಂಬಾಲಿ ಸಿದರು. ತಮ್ಮ ತಮ್ಮ ಊರಿಗೆ ಆಹ್ವಾನಿಸಿ ಕರೆದೊಯ್ಯುವರು.
ಎಲ್ಲೆಡೆಗೆ ಸನ್ಮಾನ, ಸತ್ಕಾರ ಶಾಲು ಶಕಲಾತಿ.
ನೂರಾರು ಸಜ್ಜನರ ಜೊತೆ ಭೂರಿ ಸಹಭೋಜ ನ. ಅಪಾರ ಸಂಪತ್ತು. ಆ ಭಾರಿ ವೈಭವ ಕಣ್ಣಿಗೇ ಹಬ್ಬ! ದೈವಾನುಗ್ರಹ ದಾಸರಿಗೆ.
ಸಂಚರಿಸುತ್ತ ಬಂದರು ಮರಳಿ ತಮ್ಮ ಊರಿಗೆ
ಆಗ ಯಾವ ಊರು ದಾಸಪ್ಪನನ್ನು ಹೊರಗೆ ಹಾಕಿತ್ತೋ ಅದೇ ಊರು ಈಗ ವಿಜಯದಾಸರನ್ನು ಭವ್ಯವಾಗಿ ಸ್ವಾಗತಿಸಿತು.
ಅದೇ ಬಂಧುಗಳ ಮನೆಗೆ ಬಂದರು ದಾಸರು.
ಮಧ್ಯಾನ್ಹ ಸಹಸ್ರಬ್ರಹ್ಮ ಭೋಜನ. ನೂರೆಂಟು ಭಕ್ಷ್ಯಭೋಜ್ಯಗಳು.
ವೈಭವ ತುಂಬಿ ತುಳುಕು ತ್ತಿತ್ತು.
ಊಟಕ್ಕೆ ಕುಳಿತ ದಾಸರಿಗೆ ಪೂರ್ವದ ಸ್ಮರಣೆ.
ಇದೇ ಮನೆಯಲ್ಲಿ. ತಾನು ತನ್ನ ತಾಯಿ. ಹೇಳಿದ ಕೆಲಸ ಮಾಡಿದೆವು.
ತುತ್ತಿಗಾಗಿ ತೊತ್ತಾಗಿ ಸಂಜೆವರೆಗೆ ಕಾದೆವು. ಹೊಟ್ಟೆಗೆ ಒಂದು ಸೌಟು ಗಂಜಿ ಸಿಗಲಿಲ್ಲ ಸ್ವಾಮಿ.
ಇಂದು ನೋಡು ಈ ಪರಿ ಕಂಡರಿಯದ ವೈಭವ!
ಎದುರಿಗೆ ನೋಡುತ್ತಾರೆ -
ವಿಜಯವಿಠ್ಠಲ. ತುಂಟ ನಗುಮೊಗ.
ಆಗ ಅದನ್ನು ಕೊಟ್ಟವನು ನಾನೇ.
ಈಗ ಇದನ್ನು ಇಟ್ಟವನೂ ನಾನೇ ಎನ್ನುವಂತಿತ್ತು.
ಬಿಟ್ಟಾರೆಯೇ ದಾಸರು. ಹಾಡಿನಿಂದ ಕಟ್ಟಿ ಹಾಕಿದರು ಹರಿಯನ್ನು!
ಭಕ್ತಿ ಭಾವದಿಂದ ಸ್ತುತಿಸಿ ಸಂತಸ ಪಟ್ಟರು.
'ನಿನ್ನ ಒಲುಮೆಯಿಂದ ನಿಖಿಳ ಜನರು ಬಂದು
ಮನ್ನಿಸುವರೋ!'
ಹೇ, ದೇವರದೇವ
ಏನಿದು ನಿನ್ನ ಲೀಲೆ! ವೈಚಿತ್ರ್ಯ. ವೈಭವ!
ಇಲ್ಲದ್ದು ಕಂಡಿದ್ದೆ. ಇದ್ದದ್ದು ಕಂಡಿರುವೆ.
ಅಂದು -
ಹಸಿದ ಹೊಟ್ಟೆ, ಹರಕು ಬಟ್ಟೆ, ಬಾಯಿ ಬಿಟ್ಟು ಬೇಡಿ ಕೆಟ್ಟೆ.
ಇಂದು -
ಭೂರಿ ಅಶನ ಭಾರೀ ವಸನ. ತುಂಬು ಧನ. ಏನುಂಟು ಏನಿಲ್ಲ ಸ್ವಾಮೀ.
ಯಾತರ ಪ್ರಾಪ್ತಿ ಇದು?
ಈ ಪರಿ ಪುಣ್ಯ ನನ್ನದುಂಟೇ?
ಇಲ್ಲ ಮತ್ತೆ ಅಲ್ಲ.
ಬರಿಗಾಲು, ಬರಿಹೊಟ್ಟೆ, ಬರಿ ಮೈ ನನ್ನ ಯೋಗ್ಯತೆ.
ತುಂಬಿತುಳುಕುವ ಈ ವೈಭವ ನಿನ್ನ ಒಲುಮೆ.
ಬಂದು ಮನ್ನಿಸುವ ಜನ ನಿನ್ನದಯ್ಯಾ ಸ್ವಾಮಿ.
ನೀ ಕೊಟ್ಟರೆ ಉಂಟು.
ಇಲ್ಲದಿರೆ ಇಲ್ಲ.
ಸೂತ್ರದ ಬೊಂಬೆ ನಾವು.
ಸೂತ್ರಧಾರ ನೀನು.
ನಿನ್ನ ಇಚ್ಛೆಯಂತೆಯೇ ಜಗದ ಆಟ.
ನಿನ್ನ ಪರಿಯ ಯೋಚಿಸಿ ನೋಡಲು ಸೋಜಿಗವಾಗುತ್ತದೆ.
'ಸ್ವಾಮಿ, ವಾಚೋ ನಿವರ್ತಂತೆ'
ನಿನ್ನ ಹೇಳಲು ಹೋದ ಶಬ್ದಗಳು ಸೋತು ಮರಳಿದವು.
ಸರ್ವಶಬ್ದ ವಾಚ್ಯನೂ ಹೌದು,ವಾಚ್ಯಾತೀತನೂ
ಹೌದು ಸ್ವಾಮಿ ನೀನು.
ಇಂಥ ಜಗತ್ತಿಗೇ ಸೋಜಿಗವಾಗಿರುವ ಸೋಜಿಗ ನಾಮಕ, ಸೋಜಿಗಕಾರಕ ಸೋಜಿಗಮಯ ಪ್ರಭು ನಿನಗೆ ಸಹಸ್ರ ಶಿ ಸಾ ನಮಸ್ಕಾರಗಳು.
ನಿನ್ನ ಒಲುಮೆ ಸದಾ ಇರಲಿ ನಮಗೆ.
ಶ್ರೀ ಕೃಷ್ಣಾರ್ಪಣಮಸ್ತು
By Dr V R Desai.
ಶ್ರೀ ವಿಜಯದಾಸರ ಮಹಿಮೆ 5
ಜಯಗಳು ಆಗಲಿ ಅಪಜಯಗಳು ಪೋಗಲಿ
ಜಯದೇವ ರಮಣ ಒಲಿಯಲಿ ಕೋಲೇ
ಜಯದೇವ ರಮಣ ಒಲಿಯಲಿಕೋಲೇ*
ನಮ್ಮ ವಿಜಯರಾಯ ರ ಕೀರ್ತಿ ಬೆಳೆಯಲಿ ಕೋಲೇ
ಶ್ರೀದಾಸರ ಜೀವನದಲ್ಲಿ ಹೀಗೊಂದು ಘಟನೆ ನಡೆಯಿತು. ಅಂದು ಎಂದಿನಂತೆ ಶ್ರೀದಾಸರು ತುಂಗಭದ್ರ ನದಿಯಲ್ಲಿ ಮಿಂದು ಅಲ್ಲಿಯ ಒಂದು ಶೀಲಾವೇದಿಕೆಯ ಮೇಲೆ ನಿತ್ಯಾನುಷ್ಠಾನನಿರತರಾಗಿದ್ದರು.ಮನೆಯಲ್ಲಿ ತಾಯಿ ಕುಸಮ್ಮ,ಪತ್ನಿ ಅರಳಮ್ಮ ದೈನಂದಿನ ಕಾರ್ಯದಲ್ಲಿ ತೊಡಹಿದ್ದರು.ಆಗ ಒಬ್ಬ ಲಕ್ಷಣ ವ್ಯಕ್ತಿತ್ವದ ಮುತ್ತೈದಿ ದಾಸರ ಮನೆಗೆ ಬಂದು ಅವರ ಮನೆಯವರಿಗೆ ಇತರ ನುಡಿದರಂತೆ,' ಅಮ್ಮ ನಾವು ನಾರಾಯಣರಾಯರ ಪತ್ನಿ,ಇಂದು ದಾಸರಿಗೆ ಔತಣಕ್ಕೆ ಹೇಳಿದ್ದೆವು,ಯಾಕೋ ಅವರು ಇನ್ನೂ ಬರಲಿಲ್ಲ,ಹಾದಿ ನೋಡಿ ಸಾಕಾಯಿತು .* ಅದಕ್ಕಾಗಿ ನಮ್ಮ ಯಜಮಾನರ ಅಪ್ಪಣೆಯಂತೆ ಅವರಿಗೆ ತಲುಪಿಸಬೇಕಾದದ್ದನ್ನು ತಂದಿರುವೆನು' ಎಂದು ಅಪಾರದ್ರವ್ಯವನ್ನು ಅಲ್ಲಿರಿಸಿ ಅಲ್ಲಿಂದ ಮರೆಯಾದಳು . ಮುಂದೆ ಸ್ವಲ್ಪ ಸಮಯದ ನಂತರ ದಾಸರು ಹಿಂದಿರುಗಿದರು.ತಾಯಿ ಕೂಸಮ್ಮ ವಿಷಯ ತಿಳಿಸಿ ' ಔತನಕ್ಕೆ ಮಾತುಕೊಟ್ಟು ತಪ್ಪಕೂಡದಿತ್ತು ' ಎಂದು ನುಡಿದರು.
ದಾಸರಿಗೆ ಪರಮಾಆಶ್ಚರ್ಯ ಅಂದು ಅವರಿಗೆ ಯಾರೂ ಔತಣಕ್ಕೆ ಕರೆನೀಡಿಯೇ ಇರಲಿಲ್ಲ,' ಇದೆಲ್ಲಾ ಎನು ?'ಎಂದು ಆಶ್ಚರ್ಯಚಕಿತರಾಗಿ ಅವರು ತಂದಿಟ್ಟ ಅಪಾರ ದ್ರವ್ಯರಾಶಿಯನ್ನು ಕಂಡರು.ಕೂಡಲೇ ಅವರಿಗೆ ಅದು ಶ್ರೀ ಲಷ್ಮಿ ನಾರಾಯಣರ ಲೀಲೆ ಎಂದು ತಿಳಿಯಿತು. ಸಂಪತ್ತು ರಾಶಿ ಬಂದದ್ದಕ್ಕೆ ಖುಷಿಯೆನಿಸಲಿಲ್ಲ,ಬದಲಿಗೆ ಈ ಮೂಲಕ ಸಾಧನೆಗೆ ಅಡ್ಡಿಯಾದೀತೆಂಬ ಆತಂಕ ಒದಗಿ ಕೂಡಲೇ ಶ್ರೀಹರಿಯನ್ನು ಪ್ರಾರ್ಥಿಸಿ ಕೊಂಡರು.
ನೀನೊಲಿದುದ್ದಕ್ಕಿ ಇಹ ಸೌಖ್ಯವೇ ಇನ್ನು
ನಾನೊಲ್ಲೆ ನಾನೊಲ್ಲೆ ಸರ್ವೇಶ||ಪ||
ನಿನ್ನನುರಾಗದಿ ಗತಿಯೆಂದು ನಂಬಿದ
ಮಾನವನ ಕೂಡ ಮೌನವಾಗಿಪ್ಪರೆ||ಅ. ಪ||
ಶ್ರೀ ದಾಸರು ಈ ಮೂಲಕ ದೋರಿದ ವ್ಯರಾಗ್ಯಭಾವ ಅಪೂರ್ವವಾದದ್ದು.ಶ್ರೀದಾಸರ ಈ ಮಾತಲ್ಲಿ ಅವರ ನಿರ್ಮಲವಾದ ಹರಿಭಕ್ತಿ ಕಾಣುತ್ತದೆ..
ಅವರ ಪ್ರಾರ್ಥನೆ ಮುಗಿಯುತ್ತಿದಂತೆಯೇ ಆ ಎಲ್ಲ ವಸ್ತುಗಳೂ ಹಾಗೆಯೇ ಮಾಯವಾದವಂತೆ.
*ಇವರ ಸ್ಮರಣೆಯು ಸ್ನಾನ
ಇವರ ಸ್ಮರಣೆಯು ಧ್ಯಾನ
ಇವರ ಸ್ಮರಣೆಯು ಅಮೃತಪಾನ
ಇವರ ಸ್ಮರಣೆಯು ಮಾಡೇ ಯುವತಿಗಕ್ಷಯವಿತ
ತ್ರಿವಿಕ್ರಮನೆ ಮುಂದೆ ನಿಲುವ-ನಲಿವ..
*
ವಿಜಯ ರಾಯರ ಪಾದವ ನೀ ಭಜಿಸಿ ಬದುಕೆಲೊ ಮಾನವ...
ಶ್ರೀ ದಾಸಾರ್ಯರ ಸೇವೆಯಲ್ಲಿ
💐🙏🏼ಎಸ್.ವಿಜಯ ವಿಠ್ಠಲ🙏🏼💐
ಸುಳಾದಿ ದಾಸರೆಂದೇ ಕರೆಯಿಸಿಕೊಳ್ಳುವ ಶ್ರೀ ವಿಜಯದಾಸಾರ್ಯರ ಆರಾಧನೆಯ ನಿಮಿತ್ತ ಅವರ ಕೃತಿಯ ನೆನೆಯೋಣ
🙏🏼1682 - 1755 ರ ಕಾಲಮಾನದ ಶ್ರೀ ವಿಜಯದಾಸರು 73 ವರ್ಷಗಳ ಸಾಧನೆ ಮಹೋನ್ನತವಾದದ್ದು.💐
🙏🏼 ಭೃಗುಋಷಿಗಳ ಅಂಶರಾದ ಇವರು ಹದಿನೈದನೆಯ ಕಕ್ಷಾಪನ್ನರು.💐
🙏🏼 ಮನೋವೇಗದಿಂದ ಕೈಲಾಸ, ಸತ್ಯಲೋಕ ಹಾಗೂ ವೈಕುಂಠವ ತೆರಳಿ ಶ್ರೀಹರಿಯೇ ಸರ್ವೋತ್ತಮ ದೇವರೆಂದು ಜಗತ್ತಿಗೆ ಸಾರಿದ ಯೋಗಸಿದ್ದ( ಭೃಗುಮಹರ್ಷಿ) ಮುನಿಪುಂಗರಿವರು💐
ಸ್ವರ್ಗನದಿಯ ತೀರದಲ್ಲಿ ಋಷಿಗಳು ನಡೆಸುತ್ತಿದ್ದ ಸತ್ರಯಾಗದಲ್ಲಿ ಪೂರ್ಣಾಹುತಿಯನ್ನು ಯಜ್ಞ ನಾಮಕ ಶ್ರೀಹರಿ ಗೆ ಸಮರ್ಪಿಸಿದವರು💐
🙏🏼 ತ್ರೇತಾಯುಗದಲ್ಲಿ ಸುರಲೀಲಾ ಎಂಬ ವಾನರನಾಗಿ
ಜನಿಸಿ ಶ್ರೀರಾಮದೇವರ ಹಾಗೂ ಹನುಮದೇವರ ಸೇವೆ ಮಾಡಿದವರು💐
🙏🏼ದ್ವಾಪರಯುಗದಲ್ಲಿ ನಿಕಂಪನೆಂಬ ಯಾದವನಾಗಿ ಜನಿಸಿ ಶ್ರೀಕೃಷ್ಣ ಹಾಗೂ ಭೀಮಸೇನ ರ ಕೃಪೆ ಹೊಂದಿದವರು💐
🙏🏼 ತೈತ್ತಿರೀಯೋಪನಿಷತ್ತಿನ ಮಂತ್ರದ್ರಷ್ಟಾರರು ಇವರು💐
🙏🏼ಪುರಂದರದಾಸರ ಪುತ್ರರಾಗಿ ಮಧ್ವಪತಿ ಯಾಗಿ ಜನಿಸಿದರು ಅಲ್ಲದೆ ಅವರ ಮನೆಯ ಹಸುವಿನ ಕರು ಪುರಂದರದಾಸರ*ಸಿದ್ದರು.💐
🙏🏼 ವಿಜಯದಾಸರಾಗಿ ಪುರಂದರದಾಸರ ಅಲಭ್ಯ ಕೃತಿ, ಕೀರ್ತನಾದಿಗಳ ಆವಿಷ್ಕರಿಸಿ ನಮ್ಮ ಸಾಹಿತ್ಯಲೋಕಕ್ಕೆ ಮಹಾ ಉಪಕಾರ ಮಾಡಿದ ಕೀರ್ತಿ ಈ ಮಹಾನುಭಾವ ರಿಗೆ ಸಲ್ಲಬೇಕು💐
🙏🏼ಪುರಂದರದಾಸರೋಪ್ಪನಿಷತ್ತಿಗೆ ಟೀಕಾ ರೂಪವಾಗಿ ತಮ್ಮ ಸುಳಾದಿಗಳಿಂದ ವ್ಯಾಖ್ಯಾನ ಬರೆದು ಪುರಂದರದಾಸರ ಸಾಹಿತ್ಯಕ್ಕೆ ಮತ್ತಷ್ಟು ಮೆರಗು ಕೊಟ್ಟರಿವರು.💐
🙏🏼ವ್ಯಾಸದಾಸ ಉಭಯ ವಾಙ್ಮಯದಲ್ಲಿ ಚರ್ಚಾಸ್ಪದ ವಿಷಯಗಳಿಗೆ ಇವರ ಪದ ಸುಳಾದಿಯಲ್ಲಿ ಅಡಗಿಸಿದ ಪ್ರಮೇಯ ಭಾಗಗಳಲ್ಲಿ ನಿರ್ಧಿಷ್ಟವಾಗಿ ಸಕಲ ಉದ್ದಾಮ ಪಂಡಿತರನ್ನು ತಲೆದೂಗಿಸುವಂತೆ ಮಾಡಿದವರಿವರು.💐
🙏🏼ಮಾನ್ವಿ ಬಳಿಯ ಚೀಕಲಪರವಿ ಯಲ್ಲಿ ಜನಿಸಿ ಕಾಶಿಯಲ್ಲಿ ಜ್ಞಾನ ಭಾಗ್ಯೋದಯ ಕಂಡು ಸ್ವಪ್ನದ್ವಾರಾ ಪುರಂದರದಾಸರ ಅನುಗ್ರಹ ಪಡೆದ ಮಹನೀಯರು💐
🙏🏼ದಶದಿಕ್ಕಿನಲೂ ಶಿಷ್ಯಸಂಗ್ರಹ, ಜ್ಞಾನೋದ್ದಾರ, ಕೃತಿ,ಕೀರ್ತನೆ, ಸುಳಾದಿ, ಉಗಾಭೋಗಗಳ ಪುಂಖಾನುಪುಂಕವಾಗಿ ಪಸರಿಸಿ ನಿಂತ, ನಡೆದ ಹಾದಿಗಳನ್ನು ತೀರ್ಥಕ್ಷೇತ್ರವಾಗಿಸಿದ ಮಹನೀಯರು
🙏🏼ಇಂದಿಗೂ ಚೀಕಲಪರ್ವಿಯಲ್ಲಿ ದಾಸಾರ್ಯರ ಮನೆ ಮತ್ತು ಅವರ ಸಾಣೇಕಲ್ಲು ಇದೆ, ಚಿಪ್ಪಗಿರಿಯಲ್ಲಿ ಇವರ ತಂಬೂರಿ, ತಾಳ ಇವೆ💐
🙏🏼ಆರಾಧನೆಯಲ್ಲದೆ ನಿತ್ಯವೂ ನೆನೆಯಬೇಕಾದವರು ಶ್ರೀ ವಿಜಯದಾಸರ ನೆನೆಸಿಕೊಂಡ ಮಾತ್ರಕ್ಕೇ ವಿಜಯ ದೊರಕುವುದು
ಜೈ ವಿಜಯರಾಯ
✍🏼ಸತ್ಯನರಹರಿವಿಠ್ಠಲ🙏🏼💐
ಓಂ ಶ್ರೀ ವಾಸುದೇವಾಯ ನಮಃ.
ಶ್ರೀ ವಿಜಯದಾಸರು.
ಅಜ್ಞಾನ ತಿಮಿರಾದಿತ್ಯಂ ಅತ್ಯಾನಂದ ಪದಪ್ರದಂ/
ವಿಜ್ಞಾನ ವಿಮಲಂ ಶ್ರೇಷ್ಠಂ ವಿಜಯಾರ್ಯ ಗುರುಂ ಭಜೇ//.
ನಿನ್ನ ಒಲುಮೆ ಯಿಂದ/ ನಿಖಿಳ ಜನರು ಬಂದು/
ಮನ್ನಿಸುವರೊ ಮಹಾರಾಯ//.
ಎನ್ನ ಪುಣ್ಯಗಳಿಂದ ಈ ಪರಿಯುಂಟೇನೋ/
ನಿನ್ನದೆ ಸಕಲ ಸಂಪತ್ತು//.
ಬಹಳ ಬಡತನ ದಿಂದ ಬಳಲುತ್ತಿದ್ದ ದಾಸಪ್ಪನಿಗೆ
ಹೆಚ್ಚಿನ ವಿದ್ಯಾಭ್ಯಾಸ ಆಗಲಿಲ್ಲ.
ಮುಂದೆ ಪ್ರಖ್ಯಾತ " ವಿಜಯದಾಸರು " ಎಂದೆನಿಸಿಕೊಂಡು ದೇವರ ಸುಳಾದಿ ಗಳನ್ನು ನೋಡಿದರೆ ಅವರು ಎಷ್ಟು ದೈನ್ಯಸ್ಥಿತಿ ಯಲ್ಲಿ ,ತಂದೆ ತಾಯಿ ಯರಿಗೆ ತಿಳಿಸದೇ ದೇಶಾಂತರ ಹೋಗಿದ್ದು ತಿಳಿಯುವುದು.
ಆದವಾನಿಯಲ್ಲಿ ತಹಸೀಲ್ದಾರನ ಮಗನ ಮದುವೆ.
ಆಡಂಬರದ ವಿವಾಹ. ನವಾಬ ನನ್ನು ಮನೆಗೆ ಕರೆದು
ಆದರೋಪಚಾರ ಮಾಡುವ ಸಡಗರದ ,ಸಂಭ್ರಮದ
ಮದುವೆ ಮನೆಗೆ ದಾಸಪ್ಪ ಮೃಷ್ಟಾನ್ನ ಭೋಜನ, ದಕ್ಷಿಣೆಗಳ ಆಸೆಗೆ ಹೋದರು.
ಸಾವಿರಾರು ಬ್ರಾಹ್ಮಣರು ! ಅವರಲ್ಲಿ ಒಬ್ಬ ನಾಗಿ ಊಟ ಕ್ಕೆ ಕುಳಿತನು.
ಬಡತನ ವಿದ್ದರೂ ದೃಢಕಾಯ ನಾದ ದಾಸಪ್ಪ ನನ್ಬು
ಎಲ್ಲರೂ " ಕೂಸೀ ಮಗ ದಾಸ' ಎಂದು ಕರೆಯುತ್ತಿದ್ದರು..
ಇನ್ನೇನು ಭೋಜನ ಕ್ಕೆ ಬಡಿಸುವ ಸಮಯ. ಅಲ್ಲಿಗೆ
ಬಂದ ತಹಸೀಲ್ದಾರ ರಾಘವೇಂದ್ರ ರಾಯ ಅಲ್ಲಿ ಬಂದು
ಜನರಿಗೆ ಹಂಚಲು ಗಂಧವನ್ನು ತೇಯಲು ಜನವನ್ನು ಹುಡುಕಿದನು.ಅಲ್ಲಿ ಕುಳಿತಿದ್ದ ದಾಸಪ್ಪನನ್ನು ಜಬರಿಸಿ
ಎಬ್ಬಿಸಿ ಗಂಧ ತೇಯಲು ಹೇಳಿದನು.
ಈ ಮಾತಿನಿಂದ ಅವಮಾನ ,ಮನೋವ್ಯಥೆಯುಂಟಾಗಿ
ನಿರ್ವಾಹ ವಿಲ್ಲದೇ ಗಂಧ ತೇಯಲು ಕುಳಿತನು.
ಎಷ್ಟು ಪಂಕ್ತಿ ಊಟ ವಾದರೂ ಅವನನ್ನು ಯಾರೂ ಕರೆಯಲಿಲ್ಲ.
ರಾತ್ರಿ ರಾಘವೇಂದ್ರ ರಾಯನು ನೋಡಿ ಮತ್ತೆ ಗದರಿಸಿ
ಹೊರ ದಬ್ಬಿದನು.
ಒಂದು ತುತ್ತು ಅನ್ನಕ್ಕಾಗಿ ಎಷ್ಟು ಅವಮಾನ ಶ್ರೀ ಹರೇ
ಎಂದು ದುಃಖಿಸುತ್ತಾ ,ಎಲ್ಲಿಯೂ ಜಾಗಸಿಗದೇ ಬೆಳಗಾಗುವ ಸಮಯದಲ್ಲಿ ' ಛಾಗಿಗೆ' ಬಂದನು
ಅಲ್ಲಿ ಕುಲಕರ್ಣಿ ಕೇಶವರಾಯನ ಭೆಟ್ಟಿ ಯಾಯಿತು.
ತಮ್ಮ ಮನೆಗೆ ಕರೆದುಕೊಂಡು ಹೋಗಿ ಭೋಜನ ಮಾಡಿಸಿದನು.ದಕ್ಷಣೆ ಕೊಟ್ಟು ಕಳಿಸಿದನು.
ದಾಸಪ್ಪ ನು ತಹಸೀಲ್ದಾರನನೆಯಲ್ಲಿ ಆದ ಅವಮಾನ ವನ್ನು ನೆನೆದು ,ದುಃಖಪಡುತ್ತಾ ತಂದೆ ತಾಯಿ ಯರಿಗೆ ತಿಳಿಸದೆ ಉತ್ತರ ಕಡೆ ಯಾತ್ರೆ ಹೋದನು.
ಪುನಃ ಹದಿನಾರು ವರ್ಷಗಳ ನಂತರ ಚೀಕಲಪರವಿಗೆ ಬಂದನು.ತಂದೆ ತಾಯಿಯರು ಮಗನನ್ನು ನೋಡಿ ಸಂತೋಷ ಭರಿತರಾಗಿ ,ಅರಳಮ್ಮ ಎಂಬ ಕನ್ಯೆಯೊಂದಿಗೆ ವಿವಾಹ ಮಾಡಿದರು..
ಪತ್ನಿಯೊಂದಿಗೆ ೧೬ ವರ್ಷ ಸಂಸಾರ ಮಾಡಿದ ದಾಸಪ್ಪ ತಂದೆ ತಾಯಿ ಯರು ಮೃತರಾದ ಮೇಲೆ ಪುನಃ ಕಾಶೀಯಾತ್ರೆಗೆ ಹೋದರು.
ಅಲ್ಲಿಯೇ ಇದ್ದ ಛತ್ತದಲ್ಲಿ ಊಟ,ನಿದ್ರೆ ಮಾಡುತ್ತಾ ಹರಿಯ ದ್ಯಾನದಲ್ಲಿದ್ದ ದಾಸಪ್ಪ ನಿಗೆ ಒಂದು ರಾತ್ರಿ
ಸ್ವಪ್ನ ದಲ್ಲಿ ಶ್ರೀಹರಿಯು ಪುರಂದರ ದಾಸರ ರೂಪದಲ್ಲಿ ಬಂದು ದಾಸಪ್ಪ ನನ್ನು ಎಬ್ಬಿಸಿ ವ್ಯಾಸಕಾಶಿಗೆ ಕರೆದೊಯ್ದು ವೇದವ್ಯಾಸ ರ ದರ್ಶನ ಮಾಡಿಸಿ ಇಂದಿನಿಂದ ನೀನು ಹರಿದಾಸ ನಾದೆಯೆಂದು ಆತನ
ನಾಲಿಗೆಯ ಮೇಲೆ " ವಿಜಯ " ಎಂಬ ಬೀಜಾಕ್ಷರ ಗಳನ್ನು ಬರೆದನು.
ಸ್ವಪ್ನದಲ್ಲಿ ಯೇ ದಾಸಪ್ಪ ನು ದಾಸರೂಪಿ ಭಗವಂತನಿಗೂ ವೇದವ್ಯಾಸ ರಿಗೂ ವಂದನೆ ಮಾಡಿದನು.
ಅಂದಿನಿಂದ ದಾಸಪ್ಪ ನ ದೃಷ್ಟಿ ಯೇ ಬದಲಾಗಿ ಆಡಿದ ಮಾತೂ ಹಾಡಾಯಿತು.
ಕಾಶಿರಾಜನು ಅವರನ್ನು ಕರೆಯಿಸಿ ಪುರಸ್ಕಾರ ಮಾಡಿದನು.
ಭಗವಂತನ ಅನುಗ್ರಹ ವಾದ ಮೇಲೆ ಕೇಳುವುದೇನು?
ಹೀಗೆ ಎಲ್ಲವನ್ನೂ ಧ್ಯಾನಿಸಿಕೊಂಡು ಎಲ್ಲಾ ಭಗವಂತನ ದಯೆಯೆಂದು ,ಕೇಶವರಾಯನ ಮನೆಯ ಹುಗ್ಗಿ ಯನ್ನು ,ಉಪಕಾರವನ್ನು ಸ್ಮರಿಸಿಕೊಂಡು ಹಾಡಿದ ಹಾಡು!
ನಿನ್ನ ಒಲುಮೆ ಯಿಂದ /ನಿಖಿಳ ಜನರು ಬಂದು/
ಮನ್ನಿಸುವರೊ ಮಹರಾಯಾ/
ಎನ್ನ ಪುಣ್ಯ ಗಳಿಂದ ಈ ಪರಿಯುಂಟೇನೋ/
ನಿನ್ನದೇ ಸಕಲ ಸಂಪತ್ತೂ//
ಸಂಜೆ ತನಕ ಇದ್ದು ಸಣ್ಣ ಸೌಟು ತುಂಬ
ಗಂಜಿ ಕಾಣದೆ ಬಳಲಿದೆನೋ/ ಹಿಂದೆ//
ವ್ಯಂಜನ ನಾನಾ ಸುಭಕ್ಷ್ಯ ಭೋಜ್ಯಂಗಳ
ಭುಂಜಿಸುವುದು ಮತ್ತೇನೋ//
---
ವೈದಿಕ ವೃತ್ತಿ ಯ ಕೊಡುವಗೆ ಲೌಕಿಕ
ವೈದಿಸುವುದು ಬಲು ಖ್ಯಾತೇ//
ಮೈದುನಗೊಲಿದ ಶ್ರೀ ವಿಜಯ ವಿಠಲ ನಿನ್ನ
ಪಾದಸಾಕ್ಷಿ ಅನುಭವವೋ//
ಎಂಬುದಾಗಿ ಪರಮಾತ್ಮನನ್ನು ಸ್ತೋತ್ರ ಮಾಡಿದರು.
ಸಕಲವೂ ಹರಿ ಚಿತ್ತ//
ಶ್ರೀ ವಿಜಯ ದಾಸರ ಅಂತಿಮ ದಿನಗಳು!!
ಇಂದು ಶ್ರೀ ವಿಜಯ ದಾಸರ ಮಧ್ಯಾರಾಧನೆ!!!
ಜಯಗಳು ಆಗಲಿ ಅಪಜಯಗಳು ಪೋಗಲಿ
ಜಯದೇವ ರಮಣ ಒಲಿಯಲಿ ಕೋಲೇ
ಜಯದೇವ ರಮಣ ಒಲಿಯಲಿ ಕೋಲೇ
ನಮ್ಮ ವಿಜಯರಾಯ ರ ಕೀರ್ತಿ ಬೆಳೆಯಲಿ ಕೋಲೇ
ಅದು ಯುವ ನಾಮ ಸಂವತ್ಸರ ಶ್ರೀ ವಿಜಯದಾಸರಿಗೆ ಅಂದಿಗೆ 73 ವರ್ಷಗಳು ಕಳೆದಿದ್ದವು .ಅಂದು ಕಾರ್ತಿಕ ಮಾಸದ ಶುಕ್ಲ ಪಕ್ಷದ ದಶಮಿ ದಿನ ಗುರುವಾರವಾಗಿತ್ತು. ಎಂದಿನಂತೆ ಶ್ರೀ ದಾಸರು ಪ್ರಾತಃ ನೇಮನಿಷ್ಠ ಗಳನ್ನು ಹಾಗೂ ದೇವರ ಪೂಜಾದಿಗಳನ್ನು ಪೂರೈಸಿದರು.ಆಪ್ತರಿಗೆಲ್ಲಾ ತಾವು ಇಹಲೋಕದ ವ್ಯಾಪಾರವನ್ನು ಮುಗಿಸುವ ವೇಳೆ ಬಂದಿದೆ ಎಂಬ ಸೂಚನೆಯನ್ನು ನೀಡಿದರು.
ಶ್ರೀ ಭಾಗಣ್ಣ ದಾಸರು,ಕಲ್ಲುರೂ ಸುಬ್ಬಣ್ಣದಾಸರು,ಶ್ರೀ ಮೋಹನ ದಾಸರು,ಶ್ರೀ ಜಗನ್ನಾಥ ದಾಸರು ಮೊದಲಾದ ಶ್ರೀ ದಾಸರ ಪ್ರಮುಖ ಶಿಷ್ಯರೆಲ್ಲ ಉಪಸ್ಥಿತರಿದ್ದರು .
ಶ್ರೀ ಭಾಗಣ್ಣಾದಾಸರನ್ನು ಕರೆದು ತಮಗೆ ಒಲಿದುಬಂದಿದ್ದ ಶ್ರೀ ವಿಜಯವಿಠ್ಠಲ ಪ್ರತಿಮೆಯನ್ನು ಅನುಗ್ರಹಿಸಿದರು.
ಶ್ರೀ ದಾಸರು ಧ್ಯಾನಕ್ಕೆ ಕುಳಿತರು,ಆಗ ಮತ್ತೊಮ್ಮೆ ಶ್ರೀ ಪುರಂದರದಾಸರ ರೂಪದಲ್ಲಿ ಚಂದ್ರನಂತೆ ವಿಜಯ ವಿಠ್ಠಲ ಸಂದರ್ಧನ ನೀಡಿದ.ಆ ಆನಂದ ಸಂದರ್ಭದಲ್ಲಿ ಅವರಿಂದ ಈ ಕೆಳಗಿನ ಸುಳಾದಿಯನ್ನು ರಚಿಸಿದರು.
*ದಾಸ ಪುರಂದರನ ಪಾದವನು ಪೊಂದಿದೆನು
ಎಸು ಜನ್ಮದ ಪುಣ್ಯರಾಶಿ ಫಲಿಸಿತೋ ಎನಗೆ* ...💐
ಶ್ರೀ ದಾಸರ ಅವತಾರಗಳ ಚಿಂತನೆ!!! 🙏🏼
ಸುರಲೀಲನಾಗಿ ನಿಕಂಪನೆಂದೇನಿಸಿ ದ್ವಾಪರದಲ್ಲಿ ಜನಿಸಿ ಕೆಲವು ದಿನ ಬಿಡದೆ
ತರುವಾಯ ವರ ಕಲಿಯುಗದಲ್ಲಿ ಈಗ ಜನನ-ಮರಣವಾಗುತ್ತ ಬಂದು ಧರೆಯೊಳಗೆ ಮೆರೆದು
ಹರಿ ಕೃಪೆಯಿಂದಲಿ ಇವರು ಸದನದೊಳಗೆ ತುರುಕರುವು ಆಗಿ ಜನಿಸಿದೆ ಸುಕೃತದಿಂದ ಸಿರಿಪತಿಸ್ಥ ವಿಷ್ಣು ನಮ್ಮ ವಿಜಯ ವಿಠ್ಠಲನ್ನ ದಾಸರು ಪೆಳುವ ಕವನ ಎರಗಳು ಕರ್ಣಕ್ಕೆ...
ಇದರಿಂದತಿಳಿದು ಬರುವಂತೆ ಅವರು ಮೂಲತಃ ನಾರದ ಮುನಿಯ ಶಿಷ್ಯರು, ಕೃತಯುಗದಲ್ಲಿ ಸುರಲಿಲಾ ಎಂಬ ಕಪಿಯಾಗಿಯೂ ದ್ವಾಪರದಲ್ಲಿ ನಿಕಂಪನ ಎಂಬ ಯಾದವನಾಗಿಯೂ ಶ್ರೀಹರಿಸೇವೆ ಮಾಡಿದ್ದರು, ಶ್ರೀ ಪುರಂದರದಾಸರ ಮನೆಯಲ್ಲಿ ಕರುವಾಗಿ ಜನಿಸಿ ಬಳಿಕ ಅವರ ಪುತ್ರನೂ ಆಗಿ ಜನಿಸಿದರು.ಶ್ರೀ ಪುರಂದರದಾಸರ ಪುತ್ರರೊಬ್ಬರಲ್ಲಾದ ಮಧ್ವಾಪತಿದಾಸರಿ ಇವರೇ ಎಂದು ಪ್ರತೀತಿ.
ಶ್ರೀ ವಿಜಯರಾಯರ ಚಿಕಲಪರ್ವಿ/ಚಿಪ್ಪಗಿರಿ ಸಾಧನಾ ಭೂಮಿ ಎಂಬುದಾಗಿ ಪ್ರಸಿದ್ಧವಾಗಿ ವೈಷ್ಣವರ ಪವಿತ್ರ ತೀರ್ಥಕ್ಷೇತ್ರಗಳಲ್ಲೊಂದಾಗಿವೆ ..
ಇಂದಿರಾಪತಿ ಇವರ ಮುಂದೆ ಕುಣಿವನೋ
ಅಂದ ವಚನವಾ ನಿಜಕೆ ತಂದುಕೊಡುವನೋ...
ಕೋಟಿಗಾದರು ನಿನ್ನ ನಾಮ ಒಂದೇ ಸಾಕು.
ದಾಟಿಸುವುದು ಭಾವಸಾಗರವ ಬುತಕಟನದಲಿ ಹರಿದಾಸನದರೆ
ತೋಟವಿಲ್ಲದೆ ಮೋಟಿ ಎತ್ತಿದಂತೆ
ನೀಟಾಗದು ಕಾಣೋ ಎಂದಿಗು ಯಮಭಟರ
ಕಾಟ ತಪ್ಪದು ಕಾಶಿಯೊಳಗಿದ್ದರು
ಹಾಟಕಾಂಬರಧರ ವಿಜಯವಿಠ್ಠಲರೇಯ
ನಾಟಿಸು ನಿನ್ನ ಚರಣದಲಿ ಎನ್ನ ಮನಸ.
ಮಧ್ಯಾರಾಧನೆಯ ಈ ಶುಭ ಸಮಯದಲ್ಲಿ ನಾವೆಲ್ಲೂರು ಒಂದು ಪ್ರತಿಜ್ಞೆ ಮಾಡೋಣ ,ಮುಂದಿನ ಶ್ರೀದಾಸರ ಆರಾಧನೆ ಕಾಲಕ್ಕೆ ಅವರ ಪಂಚಾರತ್ನ ಸುಳಾದಿಗಳನ್ನ/ಇನ್ನು ಇತರೆ ಸುಳಾದಿಗಳನ್ನ(ಸಾಧ್ಯವಾದಷ್ಟು)ಅವರ ಕರುಣಾ ಕವಚವಾದರು ಅರ್ಥಸಹಿತ ಕಂಠಪಾಠ ಮಾಡೋಣ.....🙏🏼
ಶ್ರೀ ದಾಸಾರ್ಯರ ಸೇವೆಯಲ್ಲಿ...
💐🙏🏼ಎಸ್.ವಿಜಯ ವಿಠ್ಠಲ🙏🏼💐
ಇಂದು ಶ್ರೀ ವಿಜಯ ಪ್ರಭುಗಳ ಉತ್ತರ ಆರಾಧನೆ
ಅಜ್ಞಾನ ತಿಮಿರಚ್ಛೇದಂ ಬುದ್ದಿ ಸಂಪತ್ತು ಪ್ರದಾಯಕಂ|
ವಿಜ್ಞಾನ ವಿಮಲಂ ಶಾಂತಂ
ವಿಜಯಾಖ್ಯ ಗುರುಂ ಭಜೇ||
ಅಜ್ಞಾನ ಎನ್ನುವ ಕತ್ತಲನ್ನು ಛೇದನ ಮಾಡಿ, ಬುದ್ದಿ ಸಂಪತ್ತು ಕೊಡುವ, ವಿಜ್ಞಾನ ವಿಮಲ ಶಾಂತರಾದ, ಭಜಿಸಿದರೆ ನಮಗೆ ಶಾಂತತೆಯನ್ನು ಕೊಡುವ ವಿಜಯದಾಸರ ನ್ನು ಭಜಿಸುವೆ.
🙏🙏
ಈ ನಾಲ್ಕು ಶ್ಲೋಕಗಳ ಚಿಂತನೆ ದಾಸರ ಅನುಗ್ರಹದಿಂದ ನನ್ನ ಅಲ್ಪಮತಿಗೆ ಬಂದಿದ್ದು..🙏
ಮಾನವಿ ಶ್ರೀನಿವಾಸ ಆಚಾರ್ಯ ರಿಗೆ ಬಹು ದೊಡ್ಡ ಪಂಡಿತ ಎನ್ನುವ ಅಹಂಕಾರ.
ಔತಣವನ್ನು ನೀಡಲು, ಆಹ್ವಾನವನ್ನು ಕೊಡಲು
ಎದುರಿಗೆ ಬಂದವರಾರು ಅನ್ನುವ ಜ್ಞಾನ ಇಲ್ಲದ, ಅಜ್ಞಾನ ದ ಪ್ರದರ್ಶನ ಆಗಿದೆ
ಬಂದವರು ಸಾಮಾನ್ಯರಲ್ಲ,
ಭೃಗುಋಷಿಗಳು ಮಾನುಷ ರೂಪದಿಂದ ಧರೆಯೊಳಗೆ ಹರಿಯ ಸೇವೆಗಾಗಿ ಅವತಾರ ಮಾಡಿದ್ದು ಅನ್ನುವದು ಸಹ ತಿಳಿಯದೇ ಹೋಯಿತು.
.ಅವರು ಸುಧಾಪಂಡಿತರಲ್ಲ,ಶಾಸ್ತ್ರ ಅಧ್ಯಯನ ಆಗಿಲ್ಲ. ಕಾಲಿಗೆ ಗೆಜ್ಜೆ ಕಟ್ಟಿಕೊಂಡು ಕುಣಿಯುವ ದಾಸರು ಎನ್ನುವ ಉದಾಸೀನ ಭಾವ.!!
ಆದರು ಅವರು ಕೊಟ್ಟ ಆಹ್ವಾನವನ್ನು
ಒಲ್ಲದ ಮನಸ್ಸಿನಿಂದ ನೋಡೋಣ ಬರುತ್ತೇನೆ ಅಂತ ಹೇಳಿ ಕಳುಹಿಸಿ ದ್ದಾರೆ.
ಮರುದಿನ ಭೋಜನ ಸಮಯದಲ್ಲಿ ಅವರ ಶಿಷ್ಯರಾದ ಭಾಗಣ್ಣದಾಸರು ಊಟಕ್ಕೆ ಸಮಯವಾಯಿತು ಬನ್ನಿ ಅಂತ ಹೇಳಿದಾಗ .
ಒಳಗಡೆ ಇಂದ ಊಟದ ಸಮಯ ಮೀರಿದರೆ,
ತಡವಾದರೆ ಉದರಶೂಲೆ ಬರುತ್ತದೆ ಹಾಗಾಗಿ ಊಟವಾಯಿತು ಅಂತ ಶಿಷ್ಯರ ಮುಖಾಂತರ ಹೇಳಿ ಕಳುಹಿಸುತ್ತಾರೆ.
ಕರೆಯಬಂದವರು ಸಾಮಾನ್ಯ ರಲ್ಲ.
ಗಣಪತಿಯ ಅಂಶವಾದ ಗೋಪಾಲ ದಾಸರು..
ದೊಡ್ಡ ವರು,ಜ್ಞಾನಿಗಳನ್ನು ತಿರಸ್ಕರಿಸಿದ ಫಲ,ಅಹಂಕಾರದಿಂದ ವರ್ತನೆ ಮಾಡಿದ ಫಲ,
ಸುಳ್ಳು ಹೇಳಿದ ಫಲ
ನಿಜವಾಗಿಯೂ ಉದರ ಶೂಲೆ ಆರಂಭವಾಯಿತು. ಎಷ್ಟು ಔಷಧೀಯ ಉಪಚಾರ ವಾದರು ಕಡಿಮೆ ಆಗಲಿಲ್ಲ.ಸಾಧನೆಗೆ ಅಡ್ಡ ವಾಯಿತು ರೋಗ..!
ಕೊನೆಗೆ ರಾಯರು ಮತ್ತು ಮುಖ್ಯ ಪ್ರಾಣದೇವರ ಸೂಚನೆಯಂತೆ ಶ್ರೀ ವಿಜಯದಾಸರ ಬಳಿ ಆಗಮನ...
ಇವರು ಎಂತಹವರು,ಎಷ್ಟು ದೊಡ್ಡವರು ಅನ್ನುವ ಜ್ಞಾನ ಅವಾಗ ರಾಯರಿಂದ ತಿಳಿದು ಬಂದಿದೆ..
ಅವರಲ್ಲಿ ಮೊದಲು ಇದ್ದ ಅಹಂಕಾರ ಸಹಿತವಾದ ಅಜ್ಞಾನ ಎನ್ನುವ ಕತ್ತಲನ್ನು ಛೇದನ ಮಾಡಿದವರು ನಮ್ಮ ವಿಜಯಪ್ರಭುಗಳು.
|ಬುದ್ದಿ ಸಂಪತ್ತು ಪ್ರದಾಯಕಂ
ಅವರನ್ನು ಗೋಪಾಲ ದಾಸರ ಬಳಿ ಕಳುಹಿಸಿ ಅವರೇ ನಿಮ್ಮ ಉದ್ದಾರಕರು ಅಂತ ಹೇಳಿ,ಅವರ ಬಳಿ ಕಳುಹಿಸಿ
ಸೂಕ್ಷ್ಮ ರೂಪದಿಂದ ಉತ್ತನೂರಿಗೆ ಗೋಪಾಲ ದಾಸರ ಬಳಿ ಹೋಗಿ ಹೇಳುತ್ತಾರೆ.
"ಈ ಜೀವಿ ಸಾಮಾನ್ಯ ಜೀವಿಯಲ್ಲ.ಹರಿಯ ಸೇವೆ ಮಾಡಲು ಅವತಾರ ಮಾಡಿದ್ದು.ಪ್ರಾರಬ್ಧ ಅನುಸಾರ, ಅವನ ಆಯುಸ್ಸು ಮುಗಿಯುವ ಹಂತದಲ್ಲಿ ಇದೆ.ನಿನ್ನ ಆಯುಸ್ಸು ನಲ್ಲಿ ೪೦ವರುಷ ಆಯುಸ್ಸು ಅವನಿಗೆ ದಾನ ಮಾಡು ಎಂದು"
ಗುರುಗಳ ಮಾತಿನಂತೆ ತಮ್ಮ ಆಯುಸ್ಸು,ಜ್ಞಾನ ಎನ್ನುವ ಸಂಪತ್ತು ಶ್ರೀನಿವಾಸ ಆಚಾರ್ಯ ರಿಗೆ ದಾನ ಮಾಡಿ ಅವರಿಂದ ಮುಂದೆ ಮಹಾ ಗ್ರಂಥ ವಾದ ಶ್ರೀ ಹರಿಕಥಾಮೃತ ಸಾರ ಬರೆಯಲು ಈ ಸಂಪತ್ತು ಸಹಾಯ ವಾಯಿತು....
ಶ್ರೀವಿಜಯದಾಸರ ಮತ್ತು ಗೋಪಾಲ ದಾಸರ ಆಶೀರ್ವಾದ ಬಲದಿಂದ ಅವರ ಬುದ್ದಿ ಹಾಗು ಆಯುಸ್ಸು ಸಂಪತ್ತು ಬೆಳೆಯಿತು*.
ಅದಕ್ಕಿಂತ ಮುಂಚೆ ಇದ್ದ ಅಹಂಕಾರದಿಂದ ಕೂಡಿದ ಅಜ್ಞಾನವೆಂಬ ಕತ್ತಲೆಯನ್ನು ಕಳೆದು ಜ್ಞಾನ ವನ್ನು ನೀಡಿದವರು ನಮ್ಮ ವಿಜಯದಾಸರು..
|ವಿಜ್ಞಾನ ವಿಮಲಂ ಶಾಂತಂ|
ಯಾವುದೇ ದ್ವೇಷವನ್ನು ಮಾಡದೇ ತಮ್ಮ ಬಳಿ ಬಂದ ಶ್ರೀನಿವಾಸ ಆಚಾರ್ಯರನ್ನು ಕ್ಷಮಿಸಿ, ಅವರನ್ನು ಗೋಪಾಲ ದಾಸರ ಬಳಿ ಕಳುಹಿಸಿ ಉದ್ದಾರ ಮಾಡಿದ ಮಹಾನುಭಾವರು.
ನಾವಾದರೆ ಹಿಂದೆ ನಮಗೆ ಬೈಯ್ದ ಕಾರಣ ಇಂದು ಹೀಗೆ ಒದ್ದಾಡುತ್ತಾ ಇದ್ದಿ.ಹೀಗೆ ಅನುಭವಿಸು ಅನ್ನುವ ವ್ಯಂಗ್ಯ ಭರಿತ ಮಾತುಗಳನ್ನು ನಮಗೆ ನಿಂದನೆ ಮಾಡಿದ ವ್ಯಕ್ತಿಯ ಮೇಲೆ ಆಡುತ್ತೇವೆ..
ಕೂಸಿ ಮಗ ದಾಸ ಎನ್ನುವ ಮಾತು ಶ್ರೀನಿವಾಸ ಆಚಾರ್ಯರಿಂದ ಹಿಂದೆ ಬಂದರು ಸಹ ವಿಜಯದಾಸರು ವ್ಯಾಕುಲರಾಗಲಿಲ್ಲ.
ಶ್ರೀನಿವಾಸ ಆಚಾರ್ಯ!! ನಿಮ್ಮ ಮಾತು ನಿಜ.ನನ್ನ ತಾಯಿ ಕೂಸಮ್ಮ.ನನ್ನ ಹೆಸರು ದಾಸಪ್ಪ
ಹಾಗಾಗಿ ಅದನ್ನು ನೀವು ಕರೆದಿದ್ದು.
ಅಂತ ಹಿಂದೆ
ಅವರಾಡಿದ ನಿಂದನೆ ಮಾತನ್ನು ಗಣನೆಗೆ ತಾರದೆ,ಯಾವುದೇ ಕೋಪ ತಾಪಗಳನ್ನು ತೋರಿಸದೇ ಶಾಂತತೆಯಿಂದ ಅವರನ್ನು ಉದ್ದಾರ ಮಾಡಿದವರು ನಮ್ಮ ವಿಜಯಪ್ರಭುಗಳು.
ಯಾವ ಜ್ಞಾನ ಮದದಿಂದ ಅಹಂಕಾರದಿಂದ ವರ್ತಿಸಿದ
ಶ್ರೀನಿವಾಸಾಚಾರ್ಯ ಅಂದರೆ ಶ್ರೀ ಅಂದರೆ ಸಂಪತ್ತು. ಅವರ ಬಳಿ ಲೌಕಿಕ ಸಂಪತ್ತು ಜೊತೆಗೆ ಮೇಲೆ ಕಾಣಿಸಿದ ಅಹಂಕಾರ, ಅಜ್ಞಾನೆಂಬ ಕತ್ತಲೆಯ ಸಂಪತ್ತು ಅವರಲ್ಲಿ ನಿವಾಸ ಆಗಿತ್ತು.
ಅಂತಹ ಸಂಪತ್ತು ಕಳೆದು ಅವರನ್ನು ಜಗನ್ನಾಥನ ದಾಸರನ್ನಾಗಿ ಮಾಡಿದವರು ನಮ್ಮ ವಿಜಯದಾಸರು..
|ವಿಜಯಾಖ್ಯ ಗುರುಂ ಭಜೇ.|
ವಿಜಯದಾಸರೇ!! ಸಹ ಅಜ್ಞಾನ, ಅಹಂಕಾರ, ದಿಂದ ತಿಳಿದೋ ತಿಳಿಯದೇ ಜ್ಞಾನಿಗಳು, ದೊಡ್ಡವರು ಅಂದರೆ ವಯಸ್ಸಿನಲ್ಲಿ, ಜ್ಞಾನ ದಲ್ಲಿ, ಹರಿಭಕ್ತರು ಯಾರಿದ್ದಾರೆ
ಇಂತಹ ನಮಗಿಂತ ಹಿರಿಯರಾದವರನ್ನ ನಿಂದನೆ ಮಾಡಿದ ಅದರ ಫಲದಿಂದ ನಮಗೆ ಸಹ ಅನೇಕರೋಗಗಳು ಬರುತ್ತವೆ...
ಅವರಿಗೆ ಇದ್ದು ದು ಉದರಶೂಲೆ ಮಾತ್ರ...
ನಮಗೆಲ್ಲ ಹಲವಾರು.ಅಂತಹ ಅನೇಕ ರೋಗಗಳು ನಮ್ಮ ಸಾಧನೆಗೆ ಉಪದ್ರವ ವಾಗಿವೆ...
ಆ ಎಲ್ಲಾ ರೋಗ ಗಳನ್ನು ನಿಮ್ಮ ಶಿಷ್ಯರಾದ ಶ್ರೀ ಗೋಪಾಲ ದಾಸರ ಮುಖಾಂತರ ನಿಮ್ಮ ಅಂತರ್ಯಾಮಿಯಾಗಿ ಇರುವ ಮಧ್ವ ವಲ್ಲಭನಾದ ಶ್ರೀ ವಿಜಯವಿಠ್ಠಲ ನ ದಯದಿಂದ ನಮಗೆ ಸಹ ಕಳೆದು ನಮ್ಮನ್ನು ಸಹ ಜಗನ್ನಾಥನ ದಾಸರನ್ನಾಗಿ ಮಾಡಿ.
ಇದೇ ನಮ್ಮ ಪ್ರಾರ್ಥನೆ ಆಗಲಿ ....
ಅಂತಹ ವಿಜಯದಾಸರು ಎಂಬ ಗುರುಗಳನ್ನು ನಿತ್ಯ ಭಜಿಸೋಣ
🙏🙏
ಜಯಗಳು ಆಗಲಿ| ಅಪಜಯಗಳು ಪೋಗಲಿ|
ಜಯದೇವಿ ರಮಣ ಒಲಿಯಲಿ ಕೋಲೇ||
ಜಯದೇವಿ ರಮಣ ಒಲಿಯಲಿ|
ನಮ್ಮ ವಿಜಯರಾಯರ ಕೀರ್ತಿ ಬೆಳೆಯಲಿ ಕೋಲೆ||
🙏ಶ್ರೀ ಕೃಷ್ಣಾರ್ಪಣ ಮಸ್ತು🙏
🙏ಅ.ವಿಜಯ ವಿಠ್ಠಲ.
***********
ಶ್ರೀ ವಿಜಯರಾಯರು ಬರೆದ ವಿಶಿಷ್ಟ ತೀರ್ಥಕ್ಷೇತ್ರ ಮತ್ತು ಇದರ ಫಲಶ್ರುತಿ ಅಮೋಘ...
ಪುಣ್ಯ ಕ್ಷೇತ್ರವ ಸ್ಮರಿಸಿ ಧನ್ಯರಾಗಿರೋ ||pa||
ನಿಮ್ಮ | ಮುನ್ನೆ ಮಿಕ್ಕಾದಘ ಮಹ ಅನ್ಯಾಯ ಅಳಿದು ಅನು
ಗುಣ್ಯದಲ್ಲಿರೆ ಭವದಾರಣ್ಯ ದಹಿಸುವದು
ಕಾರುಣ್ಯನಿಧಿ ಹರಿ ಒಲಿವಾ ||a.pa||
ಶೇಷಪರ್ವತ ಗರುಡಾದ್ರಿ ಶ್ರೀ ಶೈಲ ಪ್ರಭಾಸ
ಕ್ಷೇತ್ರ ಮಧುರೆ ಗೋಕುಲ ವೃಂದಾವನ
ನಾಸಿಕ ತ್ರಿಯಂಬಕ ಮುದ್ಗಲಕ್ಷೇತ್ರ ಪರಾಶರ ಮಗನಾಶ್ರಮ
ತೋಷದಲಿ ತೋತಾದ್ರಿ ಕುಂಭಘೋಣ
ವಾರಣಾಸಿ ಭಾರದ್ವಾಜ ಕ್ಷೇತ್ರ ಅರುಣಾಚಲ
ದೋಷವರ್ಜಿತ ಝಲ್ಲಿಕಾರಣ್ಯ ಸೇತು
ದರ್ಭಶಯನ ಮಧ್ಯಾರ್ಜುನ ||1||
ಸುಂದರ ಸಿಲಾಚಯ ಜಂಬುಕೇಶ್ವರ ಮಹಾನಂದಿ
ಚಿದಂಬರ ವೀರ ರಾಘವ ದೇವ
ಸ್ಕಂದ ನಿಬ್ಬಣಸ್ವಾಮಿ ಕಾರ್ತಿಕ ಖಗಶೇಷ ನಂದ ಯೇಕಾಂಬರೇಶ
ಅಂದವಾದ ಛಾಯ ಅಳಕಾಪುರಿ ಕ್ಷೇತ್ರ
ಮಂದಾಕಿನಿ ಇಪ್ಪ ಸಾಗರ ಯಯಾತಿಗಿರಿ
ಮಂದಮತಿ ಕಳೆವ ಘನಗಿರಿ ಕ್ಷೇತ್ರ ಧರ್ಮಪುರಿ
ಒಂದೊಂದು ಕೋಟೀಶ್ವರಾ ||2||
ಶ್ರೀರಂಗ ಹಸ್ತ ಸಿರಿ ಪಾಂಡುರಂಗ ಕ್ಷೇತ್ರ
ದ್ವಾರಕಾ ಸಿಂಹಾದ್ರಿ ನೀಲಕಂಠನಿಧಿ
ಚಾರು ಗಯ ಚಂಪಕಾರುಣ್ಯ ಪಂಪಾಕ್ಷೇತ್ರ
ವೀರ ನಾರಾಯಣವೋ
ಕಾರುಣ್ಯ ಮಾಳ್ಪ ರಾಮನ ನಗರಿಯು ಮಾಯ
ಕೇದಾರ ಕುರುಕ್ಷೇತ್ರ
ಕೂರ್ಮನಿಧಿ ಸಾರಿದ ಬರುವ ಪುರುಷೋತ್ರಮ
ಪುಷ್ಕರ ಕ್ಷೇತ್ರ ಮಾರಕಾಪುರಿ ಚನ್ನಾ ||3||
ಉದಯಗಿರಿ ರಾಮನಾಥಪುರ ಕಾವೇರಿ
ಉದ್ಭವ ಆದಿ ಅನಂತ ಬಲಕ್ಷೇತ್ರ
ಪದುಮನಾಭ ಪುಂಡರೀಕಾಕ್ಷ ವಿಂಧ್ಯಾದ್ರಿ
ಸುಧಿಯೆಂದು ಕನ್ಯಾಕುಮಾರಿ
ಮಧುರಿ ಅಳಗಿರಿ ತಿಮ್ಮ ಬೇಲೂರಿ ಚೆನ್ನಿಗ
ಮುದದಿ ಮಹಂಕಾಳಿ ಹಸ್ತಿಪಳಿನಾಥ
ಕದಿರಿ ಮಂಗಳ ಗಿರಿತೋರವೀಯ ನರಸಿಂಗ
ಪದ ಮುರಳಿ ತ್ರಿವಿಕ್ರಮ ||4||
ಹರಿಹರ ಗಂಗಾಸಾಗರ ಕಪಿಲಕ್ಷೇತ್ರ ನಿರುಪಮಾದಿ
ಕೂರ್ಮ ನೆಲ್ಲನಪ
ತಿರುಪತಿ ಶೂರ್ಪಾಲಿ ಮಾಬಲೇಶ್ವರ ಭದ್ರಾಚಲ
ಧರಣೀಧರ ಚಾಪವಾಣಿ
ಪರಿಶುದ್ಧ ಭಕ್ತವತ್ಸಲ ಗೌರಿ ವಯ್ಯಾರ ವರಸಾರ
ಕ್ಷೇತ್ರ ಶ್ರೀನಿವಾಸನೆದ ನಿಧಿ
ಪರಮ ಸುಂದರ ಮನ್ನಾರಸ್ವಾಮಿ ಘನಶಾಮವರ
ಗೌರೀ ಮನೋಹರ ||5||
ಶಂಕರನಾರಾಯಣ ಉತ್ತಮರು ಗೋಕರ್ಣ
ಶಂಕರನ ಕ್ಷೇತ್ರ ಗೋಗರ್ಭ ಶೇತುವನ
ಶಂಖಮುಖಿ ಗಜೇಂದ್ರಮೋಕ್ಷ
ಗಜಾರಣ್ಯ ಓಂಕಾರನಾಥ ದೇವಾ
ಪಂಕಜಾಸದನ ಶಿಯ್ಯಾಳಿ ವೈದ್ಯನಾಥ ಠಂಕಾಳಾಂತರ
ವೇದಿ ಗೋಪಾಲನಿಧಿ
ಬಿಂಕದಲಿ ಯಿಪ್ಪ ಚಿಂತಾಮಣಿ ನರಸಿಂಹ
ಅಲಂಕಾರ ಮುಕ್ತಿ ಕ್ಷೇತ್ರ ||6||
ಸಂತಾನಗೋಪಾಲ ತಿಶಿಖ್ರಿನಾರಾಯಣ ಅನಂತಗಿರಿ
ಮಳೂರಪ್ರಮೇಯ ಶಿವಾ
ಅಂತಕನಗೆ ದ್ವಾಪುರತೀರ್ಥ ನಿವರ್ತಿ ಅಂತು ಆದಿಶ್ರೀರಂಗ
ಇಂತು ಪಾನಕ್ಷೇತ್ರ ವಾತಗಿರಿ ನೀಲಾದ್ರಿ ಸಂತು
ನೀಲಾರಣ್ಯ ರಾಜವನ ನೈಮಿಷ
ಕಾಂತರದಕ್ಷ ವನಶಿದ್ಧ ವಟಪುಷ್ಪಗಿರಿ ಕಂತುಹರ ನಂಜು ಭೋಕ್ತ ||7||
ಕೂಲ ಪರ್ವತ ಕಣ್ವಮುನಿಕ್ಷೇತ್ರ ಪಿನಾಕಿಮಾಲಿ
ಅಂದದಲಿಯಿಪ್ಪ ನಿಧಿ ಮಾಧವಸ್ವಾಮಿ
ಮೇಲು ಘಟಿಕಾಚಲ ಬದರಿ ನರಸಿಂಹ ರವಿಸೇತು ಗಣ ಮುಕ್ತೇಶ್ವರ
ಕಾಲದೂತ ಗೆದ್ದ ಕ್ಷೇತ್ರ ಭವಾನಿಗುಡಿ ವ್ಯಾಳನಿಧಿ
ಮಹಾಲಕುಮಿ ರಘುನಾಥ ಶಿವಗಂಗೆ
ಬಾಲಕೃಷ್ಣ ಕ್ಷೇತ್ರ ಕರವೀರ ಪುರ ವಿಶಾಲ ವಿಹಂಗಕ್ಷೇತ್ರ ||8||
ದೇಶದೊಳಗುಳ್ಳ ಪುಣ್ಯ ಕ್ಷೇತ್ರಗಳು ಯೆಣಿಸಿ
ಪೇಳಿದುದಕ್ಕೆ ಆರಿಗೆ ಅಳವಲ್ಲ
ಪ್ರದೋಷ ಕಾಲದಲಿ ಪ್ರಭಾತ ಕಾಲದಲಿ
ನೆನಸೋದು ಮಾನವರು
ಮೀಸಲಾಮನದಲ್ಲಿ ಅನಂತ ಜನುಮದ ದೋಷ ವಿ-
ನಾಶ ವಿಜಯವಿಠ್ಠಲ ಬಂದು ಲೇಸಾಗಿ
ಪಾಲಿಸುವ ಕುಲಕೋಟಿಗಳ||9||
Punya kshetrava smarisi dhanyaragiro ||pa||
Nimma | munne mikkadaga maha anyaya alidu anu
Gunyadallire bavadaranya dahisuvadu
Karunyanidhi hari oliva ||a.pa||
Seshaparvata garudadri sri Saila prabasa
Kshetra madhure gokula vrundavana
Nasika triyambaka mudgalakshetra parasara maganasrama
Toshadali totadri kumbagona
Varanasi baradvaja kshetra arunacala
Doshavarjita jallikaranya setu
Darbasayana madhyarjuna ||1||
Sundara silacaya jambukesvara mahanamdi
Chidambara vira ragava deva
Skanda nibbanasvami kartika kagasesha namda yekambaresa
Andavada caya alakapuri kshetra
Mandakini ippa sagara yayatigiri
Mandamati kaleva Ganagiri kshetra dharmapuri
Ondondu kotisvara ||2||
Sriranga hasta siri panduranga kshetra
Dvaraka simhadri nilakanthanidhi
Caru gaya champakarunya pampakshetra
Vira narayanavo
Karunya malpa ramana nagariyu maya
Kedara kurukshetra
Kurmanidhi sarida baruva purushotrama
Pushkara kshetra marakapuri canna ||3||
Udayagiri ramanathapura kaveri
Udbava Adi ananta balakshetra
Padumanaba pundarikaksha vimdhyadri
Sudhiyendu kanyakumari
Madhuri alagiri timma beluri cenniga
Mudadi mahankali hastipalinatha
Kadiri mangala giritoraviya narasimga
Pada murali trivikrama ||4||
Harihara gangasagara kapilakshetra nirupamadi
Kurma nellanapa
Tirupati surpali mabalesvara badracala
Dharanidhara capavani
Parisuddha Baktavatsala gauri vayyara varasara
Kshetra srinivasaneda nidhi
Parama sundara mannarasvami ganasamavara
Gauri manohara ||5||
Sankaranarayana uttamaru gokarna
Sankarana kshetra gogarba setuvana
Sankamuki gajendramoksha
Gajaranya omkaranatha deva
Pankajasadana siyyali vaidyanatha thankalantara
Vedi gopalanidhi
Binkadali yippa chintamani narasimha
Alankara mukti kshetra ||6||
Santanagopala tisikrinarayana anantagiri
Maluraprameya siva
Antakanage dvapuratirtha nivarti antu adisriranga
Intu panakshetra vatagiri niladri santu
Nilaranya rajavana naimisha
Kantaradaksha vanasiddha vatapushpagiri kantuhara nanju bokta ||7||
Kula parvata kanvamunikshetra pinakimali
Andadaliyippa nidhi madhavasvami
Melu gatikacala badari narasimha ravisetu gana muktesvara
Kaladuta gedda kshetra bavanigudi vyalanidhi
Mahalakumi ragunatha Sivagange
Balakrushna kshetra karavira pura visala vihangakshetra ||8||
Desadolagulla punya kshetragalu yenisi
Pelidudakke Arige alavalla
Pradosha kaladali prabata kaladali
Nenasodu manavaru
Misalamanadalli ananta janumada dosha vi-
Nasa vijayaviththala bandu lesagi
Palisuva kulakotigala||9||
*****
ದಿವ್ಯ ಚರಣಕ್ಕೆರಗಿರೋ|
ದುರಿತ ತರೆದು ಪೊರೆವ ವಿಜಯ ಗುರುಗಳೆಂಬರಾ||
🙏🙏
ಒಮ್ಮೆ ಆದವಾನಿಯಲ್ಲಿ ದಿವಾನ್ ತಿಮ್ಮಣ್ಣ ನವರು ಜ್ಞಾನ ಸತ್ರವನ್ನು ಹಮ್ಮಿಕೊಂಡರು.ಅದಕ್ಕೆ ತಮ್ಮ ಗುರುಗಳಾದ ಶ್ರೀ ವಿಜಯದಾಸರು ಮತ್ತು ತಮ್ಮ ಪ್ರಿಯ ಮಿತ್ರರಾದ
ಶ್ರೀಗೋಪಾಲ ದಾಸರು ಮತ್ತು ಅವರ ತಮ್ಮಂದಿರಿಗೆ ಆಹ್ವಾನವನ್ನು ನೀಡುತ್ತಾರೆ.
ಅತೀ ವಿಜೃಂಭಣೆಯಿಂದ ಕಾರ್ಯಕ್ರಮ ಪ್ರಾರಂಭವಾಗುತ್ತದೆ. ದೈವಸಂಕಲ್ಪದಂತೆ ಆ ಊರಿಗೆ ಮಾರಿಕಾ ಉಪದ್ರವ ಹಬ್ಬಿತು. ಉತ್ಸವ ನಡೆಯುವದೋ ಇಲ್ಲವೋ ಎಂಬುದು ಎಲ್ಲಾ ರಿಗು ಆತಂಕವನ್ನು ಉಂಟು ಮಾಡಿತು.ಇತ್ತ ಪಂಗನಾಮ ತಿಮ್ಮಯ್ಯನವರು ಯಾವುದೇ ಕಾರಣದಿಂದ ಕಾರ್ಯಕ್ರಮ ನಿಲ್ಲುವುದಿಲ್ಲ ಎಂದು ತನ್ನ ಕಡೆಯವರಿಗೆ ಹೇಳುತ್ತಾರೆ.
ಪ್ರಾರಬ್ಧ ಕರ್ಮ ಯಾರನ್ನು ಬಿಡುವುದಿಲ್ಲ..
ಇದ್ದಕ್ಕಿದ್ದಂತೆ ಮಾರಿಕಾ ಉಪದ್ರವ ಕ್ಕೆ ಶ್ರೀ ತಿಮ್ಮಣ್ಣ ಯ್ಯನವರು ತುತ್ತಾದರು.
ಒಂದೆರಡು ದಿನದಲ್ಲಿ ಅವರ ವ್ಯಾಧಿ ಉಲ್ಬಣಗೊಂಡು ತಾವು ಇನ್ನೂ ಉಳಿಯುವ ದು ಕಠಿಣ ವೆಂದು ತಿಳಿದು ತಮ್ಮ ಗುರುಗಳಾದ ಶ್ರೀ ವಿಜಯದಾಸರನ್ನು ತಮ್ಮ ಸಮೀಪಕ್ಕೆ ದಯಮಾಡಲು ಪ್ರಾರ್ಥನೆ ಮಾಡಿ,ಅವರನ್ನು ಕರೆಯಿಸಿ
"ಗುರುಗಳೇ ,ತಾನಿನ್ನು ದೇಹತ್ಯಾಗ ಮಾಡುವ ಸ್ಥಿತಿಯಲ್ಲಿ ಇದ್ದೇನೆ.ಈ ಮಂಗಳ ಕಾರ್ಯವನ್ನು ಮುಗಿಸಿ ತಮ್ಮಿಂದ ಆಶೀರ್ವಾದ ತೆಗೆದುಕೊಳ್ಳುವ ಸುಯೋಗ ನನಗಿಲ್ಲ...😢,
ತಮ್ಮ ಬಳಿ ಮೊರೆಹೋಗುವದು ಬಿಟ್ಟು ಬೇರೆ ಉಪಾಯವು ಇಲ್ಲ ವೇ ಇಲ್ಲ..
ಎಂದು ಆರ್ತರಾಗಿ ಈ ಕೆಳಗಿನ ಕೃತಿ ರಚಿಸಿದರು.
ಕಾಯೊ ಕಾಯೊ ಕಾಯೋ| ಗುರು ವಿಜಯರಾಯ| ಕಾಯೊ ಕಾಯೊ ವರವೀಯೊ|
ವಿಜಯ ಗುರುರಾಯ ನೀನಲ್ಲದೆ ಉಪಾಯವೆ ಯಿಲ್ಲ ||ಪ||
ಪಾಪಗಳೆಣಿಸದೆ ಪಾವನ ಮಾಳ್ಪದು|
ಶ್ರೀಪತಿ ಪಡೆದ ಸುರಾಪಗದಂತೆ ||1||
ದೂರ ನೀ ನೋಡಲು ಆರು ಯಿಲ್ಲವೊ ಗತಿ|
ಕಾರುಣ್ಯದಲಿ ನಿವಾರಿಸು ದುರಿತ||2||
ಸ್ವೀಕರ ಮಾಳ್ಪದು ನೀ ಕರಿಸದೆ |
ಬಲುವ್ಯಾಕುಲನಾಗಿಹೆ ನೀ ಕರುಣದಲಿ ||3|
ಪರಿಹರಿಸಲಿ ಸಲ್ಲ ಕರವಿಡಿ ಬ್ಯಾಗನೆ|
ಗುರುವೆ ನಿಮ್ಮಯ ಚರಣ ಸೇವಕನ ||4|
ನೀನಾಳುವರೊಳು ಈ ನರಮೂರ್ಖನು|
ಏನು ಅರಿಯೆ ಬಲು ದೀನವಾಗಿಹನೊ ||5|
ಆಲಸ ತಾಳದು ಪಾಲಿಸು ವೇಣು ಗೋಪಾಲ ವಿಠಲನ ಆಳು ಕೃಪಾಳೊ||6|
ಆದಿನ ಸಾಯಂಕಾಲ ಇವರ ರೋಗ ಉಲ್ಬಣವಾಗಿದ್ದನ್ನು ಕಂಡು ಶ್ರೀ ಗೋಪಾಲ ದಾಸರ ತಮ್ಮಂದಿರು ವಿಜಯದಾಸರ ಬಳಿ ಹೋಗಿ ಅರಿಕೆಮಾಡಿ ಅವರನ್ನು ಉಳಿಸಿಕೊಡಿರೆಂದು ಪ್ರಾರ್ಥನೆ ಮಾಡುತ್ತಾರೆ.
ಆ ಸಮಯದಲ್ಲಿ ಅಲ್ಲಿ ಇದ್ದ ಶ್ರೀಗೋಪಾಲದಾಸರು ಸಹ ಅವರಿಗೆ ಬಂದ ಅಪಮೃತ್ಯು ಪರಿಹಾರವನ್ನು ಮಾಡಲು ಭಗವಂತನ ಬಳಿ ಪ್ರಾರ್ಥನೆ ಮಾಡುತ್ತಾರೆ.
ಪರಮ ಕೃಪಾಳುಗಳಾದ ಶ್ರೀವಿಜಯದಾಸರು ಮುಂದೆ ಇವರಿಂದ ಅನೇಕ ಕಾರ್ಯಗಳು ನಡೆಯಬೇಕು ಮತ್ತು ಸಾಧನ ಜೀವಿ ಆದ್ದರಿಂದ ಉಳಿಸಿಕೊಡು.. ಎಂದು ತಮ್ಮ ಉಪಾಸ್ಯ ಮೂರುತಿಯಾದ ಶ್ರೀ ವಿಜಯವಿಠ್ಠಲನ ಬಳಿ ಪ್ರಾರ್ಥನೆ ರೂಪಕವಾಗಿ ಕೆಳಗಿನ ಸುಳಾದಿ ರಚನೆ ಮಾಡುತ್ತಾರೆ.
"ನಂಬಿದೆ ಎಲೊ ಹರಿ ಅಂಬರರುಪಕಾರಿ|
ಬೆಂಬಲವಾಗು ಭವರೋಗ ನೀಗು|
ಡಿಂಬವುಳ್ಳವನ ಕ್ಲೇಶಬಡಿಸುವ| ಶೋಕವೆಂಬುದು ಕಾಣಿಸದಿರು|
ಕೈಯ್ಯ ತೋರು..| .".
ನಂತರ ಮುಂದೆ ಹೇಳುತ್ತಾರೆ.
ಅಪಮೃತ್ಯು ಸಮೀಪಿಸಿದೆ| ಎನ್ನ ಅಪಹಾಸವಲ್ಲವೋ|
ಕೃಪೆಯಿಂದಲಿ ನೋಡು| ಪರಂಪರ ಮಹಿಮ|
ತಪಸಿಗಳ ಒಡೆಯ ಕಪಿ ವಿಜಯವಿಠ್ಠಲ|
ಉಪಶಮನ ಗೈಸೋ ಉಪಶಮನಗೈಸೋ|
ಜತೆ ತಪ್ಪದಂತೆ ಜತನವ ಮಾಡಿ|
ನಿಜ ಭಾಗವತರೊಳು ಇಡು ನಮ್ಮ ವಿಜಯವಿಠ್ಠಲ ದಕ್ಷ||
ಅವರ ತಲೆಯ ಮೇಲೆ ಕೈಯನ್ನು ಇಟ್ಟು ಸುಳಾದಿ ಮೂಲಕ ತಮ್ಮ ಉಪಾಸ್ಯ ಮೂರುತಿಯಾದ ಶ್ರೀ ವಿಜಯವಿಠ್ಠಲ ಬಳಿ ಪ್ರಾರ್ಥನೆ ಮುಗಿಸುತ್ತಿದ್ದಂತೆಯೇ ಎದ್ದು ಕುಳಿತರು ಶ್ರೀ ತಿಮ್ಮಣ್ಣಯ್ಯನವರು..
ಅವರಿಗೆ ಬಂದ ಅಪಮೃತ್ಯು ತಾನಾಗಿ ದೂರ ಓಡಿ ಹೋಗಿ ಅವರ ಮುಖದಲ್ಲಿ ಗೆಲುವು ಕಂಡು ಅಲ್ಲಿ ಇದ್ದ ಭಕ್ತ ಜನಕ್ಕೆ ಆದ ಆನಂದ ವರ್ಣಿಸಲು ಸಾಧ್ಯವಿಲ್ಲ.
ಮುಂದೆ ಉತ್ಸವವು ಬಹಳ ವಿಜೃಂಭಣೆಯಿಂದ ನಡೆಯಿತು.
ಆ ಉತ್ಸವ ಮುಗಿದ ಒಂದೆರಡು ದಿನದಲ್ಲಿ
ಶ್ರೀ ವಿಜಯದಾಸರ ಬಳಿ ತಿಮ್ಮಣ್ಣಯ್ಯನವರು ಬಂದು
"ಈ ದೇಹವನ್ನು ಇನ್ನೇನು ಬಿಟ್ಟು ಹೋಗಲು ಸಿದ್ದನಿದ್ದ ಶ್ರೀ ಪ್ರಾಣದೇವನನ್ನು ನನ್ನ ಹೃದಯವನ್ನು ಬಿಟ್ಟು ಹೋಗದಂತೆ ಆತನಲ್ಲಿ ಪ್ರಾರ್ಥನೆ ಮಾಡಿ ನನ್ನ ಉಳಿಸಿದಿರಿ.".
"ಈ ಸವಿನೆನಪಿಗಾಗಿ ಮುಂದೆ ಬರುವ ನಮ್ಮವರಿಗೆ ಗೊಸ್ಕರವಾಗಿ ಆದವಾನಿಯಲ್ಲಿ ಪ್ರಾಣದೇವರ ಮೂರ್ತಿಯನ್ನು ಪ್ರತಿಷ್ಠಾಪಿಸಿ" ಎಂದು ಕೇಳಿ ಕೊಂಡರು..
ಅದರಂತೆಯೇ ಶುಭ ಮುಹೂರ್ತದಲ್ಲಿ ಶ್ರೀ ವಿಜಯದಾಸರ ಕೈಯಿಂದ ಪ್ರಾಣದೇವರು ಪ್ರತಿಷ್ಠಿತ ಆಯಿತು.
ಈ ಸ್ಥಳವೇ ವಿಜಯರಾಯ ಗುಡಿ ಎಂದು ಪ್ರಸಿದ್ಧ ವಾಗಿದೆ.
ಆದವಾನಿಯಲ್ಲಿ ಊರೊಳಗಡೆ ಇದೆ.
🙏ಶ್ರೀ ಕೃಷ್ಣಾರ್ಪಣ ಮಸ್ತು🙏
ಎನ್ನಂತ ಪಾಪಿಷ್ಟ ಇನ್ನಿಲ್ಲ ಧರೆಯೊಳಗೆ|
ನಿನ್ನಂತ ಕರುಣಿ ಇಲ್ಲ|
ಘನ್ನ ಸಂಸಾರದೊಳು ಬವಣೆ ಬಂದಿಟ್ಟಿದರೆ|
ನಿನ್ನ ಕೃಪೆ ಒಂದೇ ಇರಲಿ||
ಚೆನ್ನ ಗುರು ವಿಜಯರಾಯರ ಪೊಂದಿದವನೆಂದು|
ಮನ್ನಿಸಬೇಕು ಕರುಣಿ|
ಸನ್ನುತಂಘ್ರಿಯ ರಮಣ ವ್ಯಾಸವಿಠ್ಠಲ|
ಮಧ್ವಮುನಿಗೊಲಿದ ಉಡುಪಿ ವಾಸ ಶ್ರೀಶಾ||
🙏.ಅ.ವಿಜಯ ವಿಠ್ಠಲ🙏
**
ಶ್ರೀಗುರುರಾಯರ ವೃಂದಾವನದೆದುರು ನಿಂತು ಕಣ್ಣು ತುಂಬಾ ಬೃಂದಾವನವನ್ನು ನೋಡಿದಾಗ ಅಲ್ಲಿ ಕಂಡಿದ್ದು ಅವರಿಗೇ ಬರೇ ಕಲ್ಲಿನ ಬೃಂದಾವನವಲ್ಲ.
ಅದೊಂದು ದೇವತಾ ಸಭೆ.ಶ್ರೀ ಮಧ್ವಾಚಾರ್ಯರು ಅಲ್ಲಿ ಸಭೆಯ ಅಧ್ಯಕ್ಷರು..
ಅವರ ನಂತರ ಬಂದ ಅನೇಕ ಮುನಿಗಳು ಒಂದಂಶದಿಂದ ಅಲ್ಲಿದ್ದು,ಹಿರಿಯರಿಂದ ತತ್ವದ ವಿಚಾರವನ್ನು ಮಾಡುತ್ತಾ ಭಗವಂತನ ಗುಣಗಳನ್ನು, ಅವರಿಂದ ಉಪದೇಶವನ್ನು ಪಡೆಯುತ್ತಾ,ಅಜ್ಞಾನ ವೆಂಬ ಕತ್ತಲನ್ನು ಪರಿಹರಿಸುವ ದಿವ್ಯ ಸನ್ನಿವೇಶ..
ಶ್ರೀಮಧ್ವಾಚಾರ್ಯರೇ ಮೊದಲಾದ ಅನೇಕ ಮಹಾನುಭಾವರು ಬೃಂದಾವನದಲ್ಲಿದ್ದು ಶ್ರೀರಾಘವೇಂದ್ರರಿಗೆ ತತ್ವ ಉಪದೇಶವನ್ನು ಮಾಡುತ್ತಾರೆ..
ರಾಯರು ಅವರಿಗಿಂತ ಯೋಗ್ಯತೆ ಯಲ್ಲಿ ಕಡಿಮೆ ಯಾದವರಿಗೆ ಆ ಉಪದೇಶವನ್ನು ಅವರಿಗೆ ಮಾಡುತ್ತಾರೆ..
ಇದನ್ನೇ ಶ್ರೀವಿಜಯದಾಸರು ಹೇಳುತ್ತಾರೆ.
ಅಲವಬೋದಮಿಕ್ಕಾದ ಮುನಿಗಳು|
ಸಾಂಶರು ಒಂದು ರೂಪದಿ| ನೆಲೆಯಾಗಿ ನಿತ್ಯ ದಲ್ಲಿಪ್ಪರು|
ಒಲಿಸಿಕೊಳುತಲಿ ಹರಿಯ ಗುಣಗಳ |
ತಿಳಿದು ತಿಳಿಸುತ, ತಮ್ಮ ತಮ್ಮಗಿಂದಧಿಕರಲಿ| ಉಪದೇಶ ಮಾರ್ಗದಿಂದ| ಕಲಿಯುಗದೊಳಗಿದೇ ಕೇವಲ ಕತ್ತಲೆಯ| ಪರಿಹರಿಸುವ ಸೊಬಗು ಸಂತತ||
ನೋಡಿದೆ ಗುರುಗಳ ನೋಡಿದೆ||.
ನೋಡಿದೆ ಗುರುಗಳ ನೋಡಿದೆ|
🙏🙏
ದೇವಾಂಶರಾಗಿ ತುಂಗಾ ತೀರದಿ ನಿಂದು|
ಸೇವೆ ಭೂಸುರರಿಂದ ಬಹು ಕೊಳ್ಳುತ|
ಭಾವಜನಯ್ಯ ಗೋಪಾಲ ವಿಠ್ಠಲನ್ನ|
ಸೇವಿಸುತಿಹ ಯತಿ ಕುಲ ಶಿಖಾಮಣಿಯಾದ|
ಗುರು ರಾಘವೇಂದ್ರರ ಚರಣ|
ಕಮಲವನ್ನು ಸ್ಮರಿಸುವ ಮನುಜರಿಗೆ||
🙏ಶ್ರೀ ಕೃಷ್ಣಾರ್ಪಣ ಮಸ್ತು🙏
ಮಂತ್ರಾಲಯ ನಿವಾಸ| ಸಂತಾಪ ಪರಿಹರಿಸಿ ಕೊಡು ಎನಗೆ ಲೇಸ|
******
ಮೂರನೇ ಬಾರಿಗೆ ಶ್ರೀ ವಿಜಯದಾಸರು ಕಾಶಿಯಾತ್ರಿಗೆ ಅತಿ ವೈಭವದೊಡನೆ ಶಿಷ್ಯರ,ಪರಿವಾರದ ಜೊತೆ ಹೊರಟರು.ಮಾರ್ಗಮಧ್ಯದಲ್ಲಿ ಅನೇಕ,ರಾಜ ಮಹಾರಾಜ ರಿಂದ ಮನ್ನಣೆಯನ್ನು ಪಡೆಯುತ್ತಾ, ದೀನ ಜನರನ್ನು ಉದ್ಧರಿಸುತ್ತಾ,ಶ್ರೀಹರಿಯ ಮಹಿಮೆಯನ್ನು ಸಾರುತ್ತಾ ಕಾಶಿಗೆ ಪಯಣಿಸಿ, ಗಂಗಾಸ್ನಾನ ಮಾಡಿ,ಗಯಾ ಕ್ಷೇತ್ರದಲ್ಲಿಹೋಗಿ ಪಿತೃಕಾರ್ಯವನ್ನು ಮಾಡಿ ಮತ್ತೆ ಕಾಶಿಗೆ ತಿರುಗಿ ಬಂದು ಕೆಲ ಕಾಲ ಅಲ್ಲಿ ಉಳಿದು ಕೊಂಡರು.
ಒಂದು ದಿನ ಶ್ರೀವಿಜಯದಾಸರು ಗಂಗಾಸ್ನಾನ ಮಾಡಿ ಊರ್ಧ್ವಪುಂಡ್ರಗಳಾದಿಗಳನ್ನು ಧರಿಸಿಕೊಂಡು ಆಹ್ನೀಕಕ್ಕೆ ಕುಳಿತ ಸಮಯ...
ಗಂಗೆ ತುಂಬಿ ಪ್ರಶಾಂತವಾಗಿ ಹರಿಯುತ್ತಾ ಇದ್ದಾಳೆ. ಸಾವಿರಾರು ಜನ ಯಾತ್ರಿಕರ ಸಮ್ಮಿಲನ. ಅನೇಕರು ತಮ್ಮ ಕಾರ್ಯಗಳನ್ನು ಮಾಡುತ್ತಾ ಇದ್ದಾರೆ.ದಾಸರ ಭಕ್ತರು ದಾಸರನ್ನು ನೋಡುತ್ತ ಕುಳಿತಿದ್ದಾರೆ.
ಗಂಗಾನದಿಯ ದಡದಲ್ಲಿ ಕುಳಿತು ಗಂಗೆಯ ಮಹಿಮೆಯನ್ನುಚಿಂತನೆ ಮಾಡುತ್ತಾ ದಾಸರು ಕುಳಿತಿದ್ದಾರೆ..
ಪ್ರಳಯಕಾಲದಲ್ಲಿ ಮತ್ಸ್ಯ ರೂಪಿ ಪರಮಾತ್ಮನನ್ನು ವರುಣದೇವರು ಉದರದಲ್ಲಿ ಧರಿಸಿದರು..
ಆ ಸ್ವಾಮಿಯು ಇಲ್ಲಿ ಗಂಗೆಯಲ್ಲಿ ವರುಣದೇವನೊಡನೆ ವಿರಾಜಿಸಿದನು..
ತನ್ನ ಪತಿಯೊಡನೆ ಆ ಮತ್ಸ್ಯ ರೂಪಿ ಪರಮಾತ್ಮನನ್ನು ಧರಿಸಿದ ಗಂಗೆಯು ಮತ್ಸ್ಯೋದರಿ ಎನಿಸಿದಳು.
ಈ ಸ್ಥಳದಲ್ಲಿ ಪರ್ವಕಾಲದಲ್ಲಿ ಅನೇಕಾನೇಕ ದೇವತೆಗಳು ಸ್ನಾನಕ್ಕಾಗಿ ಇಲ್ಲಿ ಬರುತ್ತಾರೆ. ಎಂದು ಅಲ್ಲಿ ನ ಮಹಿಮೆಯನ್ನು ಚಿಂತಿಸಿ
ಗಂಗೆ ಸನ್ಮಂಗಳಾಂಗೆ ರಂಗನಂಘ್ರಿಯ ಸಂಗೆ|...
ಅನನುತ ವಿಜಯವಿಠ್ಠಲನ ಮನಸಿನಲಿ ನೆನೆಸುವ ಸಾಧನ ಕೊಡು ವಿರಜೆ||
ಎನ್ನುವ ಕೃತಿಯನ್ನು ರಚನೆ ಮಾಡಿದರು.
ಆ ಸಮಯದಲ್ಲಿ
ಶ್ರೀ ಗಂಗಾದೇವಿಯು ನಮ್ಮಪ್ಪನಾದ ಆ ಶ್ರೀಹರಿಯ ಪರಮಭಕ್ತರಾದ ಭೃಗುಋಷಿಗಳುಇಂದು
ಶ್ರೀ ವಿಜಯದಾಸರ ರೂಪಿನಲ್ಲಿ,ಎನ್ನ ಮನಿಗೆ ಬಂದಿರುವರು.ನನ್ನ ಭಾಗ್ಯ ದೊಡ್ಡದು!!. ನಾನು ಅವರ ಸಂಗದಿಂದ ಪುನೀತಳಾದೆ,ಅಂತ ಬಹಳ ಆನಂದದಿಂದ ಹಾಗೆ ಉಕ್ಕೇರಿ ದಾಸರ ಮೇಲೆ ಬಂದು ಉದಕ ಸುರಿಯಲು
ಶ್ರೀ ವಿಜಯದಾಸರ ವಸ್ತ್ರಗಳು ತೊಯ್ಯಲಿಲ್ಲ.ನಾಮ ಮುದ್ರೆಗಳು ಕೆಡಲಿಲ್ಲ.ಅವಾಗ ಗಂಗಾದೇವಿ ಸುಂದರವಾದ ಸ್ತ್ರೀ ರೂಪಧಾರಣೆ ಮಾಡಿ,ಸರ್ವಾಭರಣದಿಂದ ಅಲಂಕೃತ ಳಾಗಿ ದಾಸರ ಸಮೀಪಕ್ಕೆ ಬಂದು, ಮನುಜ ವೇಷ ಧಾರಿಗಳಾದ ಶ್ರೀ ವಿಜಯದಾಸರನ್ನು ಪೂಜಾ ಸಾಮಗ್ರಿ ಗಳಿಂದ ಪೂಜಿಸಿದಳು..
ದಾಸರನ್ನು ಪೂಜಿಸಿದ ನಂತರ ಗಂಗಾದೇವಿ ತಿರುಗಿ ತಾನು ಹೇಗೆ ಬಂದಳೋ ಹಾಗೇ ತಿರುಗಿ ಹೋದಳು.
ಸಕಲ ಸಜ್ಜನರಿಗೆಲ್ಲ ಗಂಗಾದೇವಿಯ ಪ್ರತ್ಯಕ್ಷ ದರುಶನವನ್ನು ದಾಸರು ಮಾಡಿಸಿ ಆನಂದ ಪಟ್ಟರು.
ಎಲ್ಲಾ ಯಾತ್ರಿಕರು,ಶಿಷ್ಯರು ನಮ್ಮ ಅಹೋಭಾಗ್ಯ!!.ಏಕ ಕಾಲಕ್ಕೆ ಶ್ರೀಹರಿಯ ಮಗಳು ಮತ್ತು ಅವನ ಭಕುತರ ದರುಶನ ಅಂತ ಬಾರಿ ಬಾರಿಗೆ ದಾಸರಿಗೆ ನಮಸ್ಕಾರ ಮಾಡಿದರು.
ತನಗಿಂತಲು ಉತ್ತಮರಾದ ಭಗವದ್ಭಕ್ತರು ಮನೆಗೆ ಬರಲು,ಭಕ್ತರಿಗೆ ಎಷ್ಟು ಆನಂದವೋ!!
(ಶ್ರೀಗಂಗಾದೇವಿಯು ೨೦ನೆಯ ಕಕ್ಷ ,ಶ್ರೀಭೃಗು ಋಷಿಗಳು ೧೫ನೆಯ ಕಕ್ಷ).
ಹಿಂದೆ ನಮ್ಮಪ್ಪ ಆ ಶ್ರೀಹರಿಯು ಸರ್ವೋತ್ತಮ ನೆಂದು ಸಾರಿದ,ಇಂದು ಈ ಕಲಿಯುಗದಲ್ಲಿ ಮನುಜ ವೇಷಧಾರಿಗಳಾಗಿ, ಆ ಹರಿಯನ್ನು ಪಾಡುತ್ತಾ,ಸ್ತುತಿಸುತ್ತಾ,ಸಜ್ಜನರನ್ನು ಉದ್ದಾರ ಮಾಡುತ್ತಾ ಇರುವ ದಾಸರ ಸಂದರುಶನ ಎನಗಾಯಿತೆಂದು ಪ್ರತ್ಯಕ್ಷ ರೂಪಧಾರಣೆ ಮಾಡಿ ಅವರನ್ನು ಪೂಜಿಸಿದಳು.
ಅಂದು ದಾಸರ ಜೊತೆಯಲ್ಲಿ ಇದ್ದ ಅವರ ತಮ್ಮಂದಿರು ಆದ ಶ್ರೀಆನಂದ ದಾಸರು
ತೃತಿಯ ಕಾಶೀಯಾತ್ರೆ ಮಾಡ ಬಂದಾಗ| ಉನ್ನತವಾಗಿ ನಭಗಂಗೆ ಉಕ್ಕೇರಿ ಗಗನಕ್ಕೆ| ಅತಿಶಯದಿ ಬಂದು ಮತ್ಸ್ಯೊದರಿಯ ನಾಮದಲ್ಲಿ ಪ್ರತಿ ಇಲ್ಲ ದಂತೆ ತೋರೆ||
ಶ್ರೀಗೋಪಾಲದಾಸರು ಈ ಘಟನೆಯನ್ನುನೋಡಿ,ದಾಸರ ಮಹಿಮೆಯನ್ನು ವರ್ಣಿಸುತ್ತಾರೆ.
ಸ್ವಚ್ಛವಾಗಿ ಗಂಗಾತೀರವ ವಾಸಮಾಡಿ ನಿಚ್ಚಾಗಿ ಶ್ರೀ ವಿಜಯರಾಯ|
ಹೆಚ್ಚಾದ ಪರ್ವಣೆ ಮಚ್ಚೊದರಿಯ ತೋರ್ದೆ ವಿಚಿತ್ರವಿಜಯರಾಯ||
ಶ್ರೀ ವಿಜಯಪ್ರಭುಗಳ ಅಂತರ್ಯಾಮಿಯಾದ ಮಧ್ವ ವಲ್ಲಭನಾದ ಶ್ರೀ ವಿಜಯವಿಠ್ಠಲನು ಪ್ರೀತಿಯಾಗಲಿ
ಶ್ರೀ ಕೃಷ್ಣಾರ್ಪಣಮಸ್ತು
ಅ.ವಿಜಯವಿಠ್ಠಲ
**********
vijayadaasara ugaaboga
ಇವು ಮಡಿಯಲ್ಲ
ವಸುಧಿ ಸುರರ ಕಂಡು ಬೈದರೆ ಮಡಿಯಲ್ಲ
ಹುಸಿಯ ನುಡಿವಂಗೆ ಯಾವದೂ ಮಡಿಯಲ್ಲ
ಅಸುರ ಕರ್ಮವನು ಆಚರಿಸಲು ಮಡಿಯಲ್ಲ
ವಾಕುಬದ್ಧವಿಲ್ಲದವನಿಗೆ ಮಡಿಯಲ್ಲ
ಗುರುಗಳ ನಮಿಸದಿರೆ ಮಡಿಯಲ್ಲ
ದುರುಳ ಜನರ ಸಂಗವಿರೆ ಮಡಿಯಲ್ಲ
ಕೋಪದವನ ಸಂಗಡಲಿರೆ ಮಡಿಯಲ್ಲ
ಶ್ರೀಪತಿ ವಿಜಯವಿಠಲನೊಲಿಯದಿರೆ ಮಡಿಯಲ್ಲ.
*************
ಶ್ರೀ ವಿಜಯ ದಾಸರ ಮಹಿಮೆ 3
ಒಮ್ಮೆ ಶ್ರೀದಾಸರು ಗಂಗಾಸ್ನಾನ ಕ್ಕೆಂದು ಸಹಕುಟುಂಬರಾಗಿ ತೆರಳಲು ಸಕಲಸಿದ್ಧತೆಗಳನ್ನು ಮಾಡಿಕೊಂಡಿದ್ದರು.ಆಗ ಅವರ ಪತ್ನಿ ಅರಳಮ್ಮನವರು ಇದ್ದಕಿದ್ದಂತೆಯೇ ವಿಚಿತ್ರ ಜ್ವರಕ್ಕೆ ತುತ್ತಾದರು.
ಒಂದು ದಿನವೂ ಯಾವ ಕಾರಣಕ್ಕೂ ನೈವೇದ್ಯದಿ ಪೂಜಾಕೈಂಕರ್ಯವನ್ನು ತಪ್ಪದೇ ನಡೆಸಿಕೊಂಡು ಬಂದಿದ್ದ ಅವರಿಗೆ ಅದು ಆಘಾತವೆನ್ನಿಸಿತ್ತು.ಪುರುಷರಿಗೆ ದೇವಪೂಜೆ ವಿಹಿತವಾಗಿರುವಂತೆ ಸ್ತ್ರೀಯರಿಗೆ ದೇವರ ನೈವೇದ್ಯಕ್ಕೆ ಪಾಕಕಾರ್ಯ ವಿಹಿತವಾಗಿದೆ .
ಸಾಕ್ಷಾತ್ ದ್ರೌಪದಿದೇವಿ ಪ್ರತಿನಿತ್ಯ ಶ್ರೀಹರಿಯ ನೈವೇದ್ಯಕ್ಕೆ ಪಾಕ ಸಿದ್ದಪಡಿಸಿ ಶ್ರೀ ಭೀಮಸೇನದೇವರ ಪೂಜಕಾರ್ಯದಲ್ಲಿ ಸೇವೆ ಸಲ್ಲಿಸುತ್ತಿದ್ದ ವಿವರ ಶ್ರೀ ಸುಮಧ್ವವಿಜಯಾದಿಗಳಲ್ಲಿ ನಾವು ತಿಳಿಯಬಹುದು .ಇಂಥಹ ಧರ್ಮದೇವತೆಯಂತಿದ್ದ ಅರಳಮ್ಮನವರಿಗೆ ಜ್ವರದಿಂದಾಗಿ ಧರ್ಮಲೋಪವಾಗುವ ಭಯ ಕಂಗೆಡಿಸಿತು.
ಅದರೊಂದಿಗೆ ಗಂಗಾಸ್ನಾನದ ಯೋಗವೂ ತಪ್ಪುವ ಭಯವೂ ಸೇರಿ ಅವರ ದುಃಖ ಮಿತಿಮಿರಿತು.ಶ್ರೀ ದಾಸರು ಆ ವಿಘ್ನವನ್ನು ಆ ಭಾವವಂತನಲ್ಲಿ ನೀವೇದಿಸಿಕೊಂಡು, ಆ ಜ್ವರ ವನ್ನು ಪರಿಹರಿಸಲು ಪ್ರಾರ್ಥಿಸಿಕೊಂಡರು.
ಕೂಡಲೇ ಶ್ರೀ ದಾಸರು ದಯಮಾಡೋ ಎನ್ನೋಡಯಾ ದಾಸಿಗೊಲಿದು' ಎಂಬ ಈ ಕೆಳಗಿನ ಸುಳಾದಿಯನ್ನು ರಚಿಸಿ ಶ್ರೀಹರಿಯನ್ನು ಪ್ರಾರ್ಥಿಸಿದರು...
"ದಯಮಾಡೋ ಎನ್ನೋಡೆಯಾ ದಾಸಿಗೊಲಿದು ಇಂದು.ಭಯವ ಪರಿಹರಿಸಿ ವೇಗದಿಂದಲಿ ಬಿಡದೆ ...
ಅಟ್ಟಿದೆ ನಿನ್ನ ನಾಮಗಳಿಂದ ಮಾಹವ್ಯಾದಿ
ವಿಠ್ಠಲ ವಿಠ್ಠಲ, ವಿಜಯವಿಠ್ಠಲ ಕರುಣಿ"..
ನಿಮ್ಮ ಪುಣ್ಯದ ಶೇಷವಿನ್ನು ಉoಬೆವು ನಾವು ಬಣ್ಣಿಪೇ ವಿಜಯರಾಯ
ಎಮ್ಮ ಸಾಮರ್ಥ್ಯವು ನಿಮ್ಮ ದೆಂದಿಗು ವಿಜಯರಾಯ||
ಶ್ರೀ ದಾಸಾರ್ಯರ ಸೇವೆಯಲ್ಲಿ
ವಿಜಯ ವಿಠ್ಠಲ
***********
bhadrapada shukla bidige ಶ್ರೀ ವಿಜಯದಾಸರ ಮಕ್ಕಳಾದ ಶ್ರೀ ಶೇಷಗಿರಿದಾಸರ ಆರಾಧನಾ ದಿನ. ಅವರ ಬಗ್ಗೆ ಹೆಚ್ಚಿನ ಪ್ರಚಲಿತ ವಿಲ್ಲ.
ಶ್ರೀ ವಿಜಯ ವಿಠ್ಠಲನ ಅನುಗ್ರಹದಿಂದ ಜನಿಸಿದ ಒಬ್ಬ ಉತ್ತಮವಾದ ಸಾಂಶ ಜೀವ ಶ್ರೀವಿಜಯದಾಸರಲ್ಲಿ ಜನಿಸಿದ ಕೂಸು ಇಂದಿನ ಕಥಾ ನಾಯಕರು.
ಶ್ರೀ ವಿಜಯದಾಸರು ತಮ್ಮ ಕುಲದೈವವಾದ ಶೇಷಾಚಲವಾಸನಾದ ಆ ಸ್ವಾಮಿಯ ಹೆಸರನ್ನೇ ತಮ್ಮ ಮಗನಿಗೆ ಶೇಷಗಿರಿ ದಾಸ ಅಂತ ನಾಮಕರಣ ವನ್ನು ಮಾಡಿದರು.
ಕೆಲ ಕಾಲದ ನಂತರ ಅವರು ಬೆಳೆದು ದೊಡ್ಡವರಾದ ಮೇಲೆ ಅವರಿಗೆ ಇದ್ದಕ್ಕಿದ್ದಂತೆ ದೇಹಾಲಸ್ಯವಾಗುತ್ತದೆ.ವ್ಯಾಧಿ ಮಿತಿ ಮೀರಿತು.
ಇದನ್ನು ಕಂಡ ಅರಳಮ್ಮನವರು ಬಹು ವ್ಯಸನಗೊಂಡು ಚಿಂತಿತರಾಗಿ ದಾಸರ ಬಳಿಗೆ ಬಂದು
ನಮ್ಮ ಮಗ ಶೇಷಗಿರಿ ಇಷ್ಟು ದೇಹಾಲಸ್ಯದಿಂದ ಇದ್ದಾಗ ನೀವು ನಿಮ್ಮ ಪಾಡಿಗೆ ಇರುವದು ಸರಿಯೇ!! ಅವನ ಆರೋಗ್ಯ ದ ಬಗ್ಗೆ ಸ್ವಾಮಿಯ ಬಳಿ ಪ್ರಾರ್ಥನೆ ಮಾಡಿ ಅಂತ ಮೊರೆ ಇಡುತ್ತಾರೆ.
ತಕ್ಷಣ ಶ್ರೀ ವಿಜಯದಾಸರು ಮಗನ ಬಳಿ ಬಂದು ನೋಡಿದಾಗ
ಪ್ರಬಲ ಕರ್ಮ ಇವನಿಗೆ ಬೆನ್ನು ಹತ್ತಿದೆ.ಅದರ ನಿವಾರಣೆಗೆ ಶ್ರೀಹರಿಯ ಕರುಣ ಬೇಡುವದು ಬಿಟ್ಟು ಬೇರೆ ಯಾವ ಔಷಧ ಉಪಚಾರ ಗಳಿಂದ ಆಗದು ಅಂತ ಅವರಿಗೆ ತಿಳಿಯುತ್ತದೆ.
ತಕ್ಷಣ ತಮ್ಮ ಮಗನ ಅಪಮೃತ್ಯು ಪರಿಹಾರಕ್ಕಾಗಿ ಒಂದು ಸುಳಾದಿ ಯನ್ನು ರಚನೆಯನ್ನು ಮಾಡಿ ತಮ್ಮ ಉಪಾಸ್ಯ ಮೂರುತಿಯಾದ ಶ್ರೀ ವಿಜಯವಿಠ್ಠಲನಲ್ಲಿ ಪ್ರಾರ್ಥನೆ ಮಾಡುತ್ತಾರೆ.
ಆ ಸುಳಾದಿ ಹೀಗಿದೆ.👇
ಹಗರಣ ಮಾಡದಿರು ಹರಿಯೆ| ನಿನಗೆ ಕರವ ಮುಗಿದು ಬೇಡಿಕೊಂಬೆ| ಭಕ್ತ ಜನರ ಬಗೆಬಗೆಯಿಂದ ಬಂದ ಕ್ಲೇಶ ಕಳೆದು| ನಂಬಿಗೆ ಇತ್ತು ಪಾಲಿಸುವ ಗುಣವಾರಿಧಿ||..
ಅಂತ ರಚನೆಯನ್ನು ಮಾಡಿ ಅದರಲ್ಲಿ ಹೇಳುತ್ತಾರೆ ತಮ್ಮ ಮಗನ ಬಗ್ಗೆ. ಆ ಜೀವಿ ಎಂತಹದ್ದು ಅಂತ.
ಉದ್ದವನ್ನ ಶಾಪದಿಂದ ಮುಕ್ತನಮಾಡಿ| ಉದ್ದರಿಸಿದೆ ತತ್ವವ ಉಪದೇಶಿಸಿ|
ಶುದ್ದ ವೈಷ್ಣವನಿವ| ನಿರ್ಮತ್ಸರದವ| ಮಧ್ವರಾಯರ ಪಾದ ಪದ್ಮವೆ ಪೊಂದಿದ ತದ್ದಾಸರ ದಾಸ ಭೃತ್ಯನೆನಿಪನಿವ||
ಶ್ರದ್ಧೆ ಯುಳ್ಳವನಿವ| ಸೌಮ್ಯಗುಣದವ ಸಿದ್ದಾಂತ| ಪ್ರಮೇಯಗಳ ಪದ್ದತಿ ಬಲ್ಲವ|
ಉದ್ದಂಡನಲ್ಲವೋ| ಕರ್ಮನಿಷ್ಟನಿವ|
ಕ್ಷುದ್ರ ನಾದರೆ ನಾ ನಿನಗೆ ಪ್ರಾರ್ಥಿಸುವನೆ||
ಅಂತ ಕೇಳಿಕೊಂಡರು.
ಆದರು ಸಹ ಅವರ ಆರೋಗ್ಯ ಸುಧಾರಣೆ ಆಗಲಿಲ್ಲ
ತಕ್ಷಣ ಎರಡು ಉಗಾಭೋಗ ಗಳನ್ನು ರಚಿಸಿ ಆ ಶ್ರೀ ಹರಿಗೆ ಒಪ್ಪಿಸಿ ,
ಸ್ವಾಮಿ!! ಸಣ್ಣವನು ಇವನು ವಿವಾಹವಾಗಿದೆ .ಇವನೊಬ್ಬನೇ ಮಗ.ನನ್ನವಳ ಕೊರಗು ಸೊಸೆಯ ದುಃಖ ನೋಡಲಾಗದು.ನನಗೆ ನೀನು ಕೊಟ್ಟ ತಿಳುವಳಿಕೆ ಎಲ್ಲಡಿಗಿತು ಏನೋ ನಿನ್ನ ಬಂಧ ಶಕುತಿಯನ್ನು ಮೀರಿದವರನ್ನು ನಾ ಕಂಡಿಲ್ಲ ಹರಿಯೇ ಇನ್ನೂ ಇವನಿಗೆ ಆಯುಷ್ಯ ಇಲ್ಲ. ಆದುದರಿಂದ ನನ್ನ ಆಯುಸ್ಸಿನಲ್ಲಿ ಎರಡು ವರ್ಷ ಇವನಿಗೆ ಧಾರೆ ಎರೆದಿದ್ದೇನೆ..
ಉಳಿಸು ಇವನನ್ನು ಎಂದು ಆ ವಿಜಯವಿಠ್ಠಲನಲ್ಲಿ ಮೊರೆ ಇಟ್ಟರು.
ಮರುದಿನದಿಂದಲೆ ಶೇಷಗಿರಿ ದಾಸರ ಆರೋಗ್ಯ ಸುಧಾರಣೆ ಆಯಿತು.
ಮುಂದೆ ಎರಡು ವರುಷದ ನಂತರ ಶ್ರಾವಣಮಾಸ ಬಂದಾಗ ತಮ್ಮ ಕುಟುಂಬದ ಜೊತೆಗೂಡಿ ಶ್ರೀರಂಗಪಟ್ಟಣ ಕ್ಕೆ ಪಯಣ ಬೆಳೆಸಿದರು.
*ಶ್ರೀರಂಗಪಟ್ಟಣ ಹಿಂದೆ ಮೂರು ಮೈಲಿ ಕರಿಘಟ್ಟವೆಂಬ
ಶ್ರೀನಿವಾಸನ ಕ್ಷೇತ್ರದಲ್ಲಿ ವಾಸ ಮಾಡುತ್ತಾರೆ.*
ನಂತರ ಕೆಲದಿನವಾದ ಮೇಲೆ ಅಲ್ಲಿ ಇಂದ ಮುಂದೆ ಕಾವೇರಿ ನದಿ ತೀರದ ಹತ್ತಿರ ಇರುವ ಗೌತಮ ಋಷಿ ಗಳು ತಪಸ್ಸು ಮಾಡಿದ ಗೌತಮ ಕ್ಷೇತ್ರದಲ್ಲಿ ಉಳಿದುಕೊಳ್ಳುವರು.
ಆ ಸಮಯದಲ್ಲಿ ಇದ್ದಕ್ಕಿದ್ದಂತೆ ಶೇಷಗಿರಿದಾಸರ ದೇಹಾಲಸ್ಯವಾಗುತ್ತದೆ.
ಮರುದಿನವೇ ಭಾದ್ರಪದ ಶುದ್ಧ ಬಿದಿಗೆ ಅಂದೇ ಶ್ರೀ ಶೇಷಗಿರಿ ದಾಸರು ಶ್ರೀ ನಾರಾಯಣ ಸ್ಮರಣೆ ಪೂರ್ವಕ ದೇಹವನ್ನು ತ್ಯಾಗ ಮಾಡುತ್ತಾರೆ.
ಮಗನ ಅಂತ್ಯಕ್ರಿಯೆ ಕಾರ್ಯಗಳನ್ನು ಶ್ರೀ ವಿಜಯದಾಸರು ನೆರೆವೇರಿಸಿ ಅಲ್ಲಿಂದ ಮುಂದೆ ಹೊರಡುತ್ತಾರೆ.
ತಮ್ಮ ಎದುರಿಗೆ ತಮ್ಮ ಮಕ್ಕಳಾದ ಶೇಷಗಿರಿ ದಾಸರು ದೇಹತ್ಯಾಗ ಮಾಡಿದ್ದನ್ನು ಕಂಡು ೧೨ ಪದಗಳಿಂದ ಭಗವಂತನಿಗೆ ಪ್ರಾರ್ಥನೆ ಮಾಡುತ್ತಾರೆ.
ಶ್ರೀ ವಿಜಯದಾಸರ ಮಗನಾಗಿ ಹುಟ್ಟಿದ ಶ್ರೀಶೇಷಗಿರಿ ದಾಸರು ದಾಸರಿಂದ ಆಯುರ್ದಾನ ಪಡೆದ ಪುಣ್ಯಜೀವಿ ಹಾಗು ಅವರಿಂದ ಹೊಗಳಿಸಿಕೊಂಡವರು..
ನಿಜವಾಗಿಯೂ ಬಹು ದೊಡ್ಡ ಸಾಧನಾ ಜೀವಿಯೇ ಇರಬೇಕು...
ಅಂತಹವರ ಸ್ಮರಣೆ ಮಾಡಿದರೆ ನಮ್ಮ ಜನ್ಮ ಕಿಂಚಿತ್ತು ಉದ್ದಾರವಾಗಬಹುದು.
ವಿಧಿ ಸಂವತ್ಸರ ಭಾದ್ರಪದ ಶುಕ್ಲ ದ ಭಾನು| ಬಿದಿಗಿಯಲಿ ಪ್ರವರ ಗೌತುಮ ಸಂಗಮಾ
|ನಿಧಿಯಲಿ ವಿಜಯವಿಠ್ಠಲನಂಘ್ರಿಯುಗಳವನು|
ಹೃದಯದಲ್ಲಿ ಇಟ್ಟು ದೇಹವ ತ್ಯಾಗ ಮಾಡ್ದೆ||
ಧನ್ಯನೋ ಶೇಷಗಿರಿದಾಸ ನೀನೂ|
ಪುಣ್ಯವಂತನು ಅಹುದೊ ಮನೋ ವಾಚದಲಿ ನಿತ್ಯ|
************
ಒಮ್ಮೆ ಶ್ರೀ ವಿಜಯದಾಸರು
ಚೀಕಲಪರವಿಯಲ್ಲಿ ಇದ್ದಾರೆ.ಆಗ ಪಂಢರಪುರ ದಲ್ಲಿ ಆಷಾಢ ಶುದ್ದ ಏಕಾದಶಿಯ ಕಾಲ. ಅಂದು ವಿಠ್ಠಲನ ಉತ್ಸವ ಅಲ್ಲಿ.
ಕೆಲವು ಶಿಷ್ಯರು ಶ್ರೀ ವಿಜಯ ದಾಸರ ಜೊತೆಯಲ್ಲಿ ಇದ್ದರು .
ಕೆಲವರು ಪಂಢರಾಪುರಕ್ಕೆ ದಾಸರ ಅಪ್ಪಣೆ ಪಡೆದು ಹೋಗಿದ್ದಾರೆ.
ಆದರೆ ಕೆಲವರಿಗೆ ನಾವು ಸಹ ಹೋಗಿದ್ದರೆ ಪಾಂಡುರಂಗ ದರುಶನ ಆಗುತ್ತಾ ಇತ್ತು .ಆಗಲಿಲ್ಲವಲ್ಲ ಅಂತ ಮನದೊಳಗೆ ಪೇಚಾಡಿದರು.
ಆದರೆ ಅವರೆಲ್ಲರೂ ಮನದೊಳಗೆ ಹೋಗಬೇಕು ಅಂದು ಕೊಂಡಿದ್ದು
ಶ್ರೀ ಶ್ರೀಪಾದರಾಜರು ಪ್ರತಿಷ್ಠಿತ ಅಶ್ವತ್ಥ
ಶ್ರೀ ನರಸಿಂಹ ದೇವರ ಕಟ್ಟಿ ಚೀಕಲಪರ್ವಿಯಲ್ಲಿ.. ಅದು
ದಾಸರು ಅವರ ಜೊತೆಯಲ್ಲಿ ಇದ್ದಾಗ...
ನಮ್ಮ ಶ್ರೀ ವ್ಯಾಸವಿಠಲರು ಹೇಳಿದ ಹಾಗೆ
"ಮಂಗಳಾಂಗನ ಅಂತರಂಗವರಿತನ"
ನಮ್ಮ ವಿಜಯಪ್ರಭುಗಳು ತಮ್ಮ ಶಿಷ್ಯ ವೃಂದವನ್ನು ಕುರಿತು
ನೀವೆಲ್ಲರು ಮುಸುಕು ಹಾಕಿಕೊಳ್ಳಿರಿಎಂದರು..
ತಕ್ಷಣ ಎಲ್ಲಾ ರು ತಮ್ಮ ಮೋರೆಗೆ ಮುಸುಕು ಹಾಕಿಕೊಂಡರು.
ಅದೇ ಕಾಲದಲ್ಲಿ ಪಂಢರಪುರದ ಗರ್ಭಗುಡಿಯಲ್ಲಿ ಪರದೆ ಹಾಕಿತ್ತು ..
ಕಾರಣಾಂತರಗಳಿಂದ ಎಷ್ಟು ಹೊತ್ತು ಆದರು, ಅಲ್ಲಿ ಹೋಗಿದ್ದ ದಾಸರ ಶಿಷ್ಯರಿಗೆ ಮತ್ತು ಕೆಲ ಭಕ್ತರಿಗೆ ಪಾಂಡುರಂಗನ ದರುಶನ ಆಗಲೇ ಇಲ್ಲ.
ಉತ್ಸವ ಕಾಲದಲ್ಲಿ ಸಾಂಶರಾದ ಶ್ರೀ ವಿಜಯದಾಸರು ಪಂಡರಾಪುರಕ್ಕೆ ತಮ್ಮ ಯೋಗ ಶಕ್ತಿ ಇಂದ ಹೋದರು.
ಮತ್ತು ಅದೇ ಸಮಯದಲ್ಲಿ ಚೀಕಲಪರವಿಯಲ್ಲಿ ಸಹ ಇದ್ದರು...
ಶ್ರೀ ವಿಜಯದಾಸರು ವಿಠ್ಠಲ ನ ಮುಂದೆ ನಿಂತು ಅಲ್ಲಿ ಪಾಂಡುರಂಗನ ನಾನಾ ವಿಧವಾದ ಸ್ತೋತ್ರ ಮಾಡಲು ಹಾಕಿದ ಪರದೆಯು ತನ್ನಿಂದ ತಾನೇ ತೆರೆಯಿತು..
ಇದ್ದಕ್ಕಿದ್ದಂತೆ ಪರದೆ ತೆರೆಯಿತು.
ನೋಡುತ್ತಾರೆ.
ಶ್ರೀವಿಜಯದಾಸರಿಗೆ ಪಾಂಡುರಂಗನು ದರುಶನ ಕೊಟ್ಟಿದ್ದು ಮತ್ತು ಕೆಲ ತಮ್ಮ ಶಿಷ್ಯರಿಗೆ ಸಹ ಆ ಸಂದರ್ಶನ ಆನಂದವನ್ನುಸಹ ದಾಸರು ಮಾಡಿಸಿದ್ದರು...
ಹಿಡಿಸಲಾರದ ಆನಂದ ಅವರ ಶಿಷ್ಯ ವೃಂದಕ್ಕೆಲ್ಲರಿಗು
ಅದೇ ಸಮಯದಲ್ಲಿ ಚೀಕಲಪರವಿಯಲ್ಲಿ ದಾಸರು ತಮ್ಮ ಶಿಷ್ಯರಿಗೆ
"ತೆಗೆಯಿರಿ ಮುಸುಕು" ಎಂದೆನ್ನಲು
ಅಂಗದ ಮುಸುಕು ತೆರೆಯಲು ಭಕ್ತರು ಕಂಡಿದ್ದು ಶ್ರೀ ಅಶ್ವತ್ಥ ನರಸಿಂಹ ದೇವರರಿರುವಲ್ಲಿ ಕಂಡಿದ್ದು..
"ಆ ಪುಂಡಲೀಕ ವರದನಾದ ಪಾಂಡುರಂಗನ ದಿವ್ಯ ಮೂರುತಿಯನ್ನು"..
ಸಾಂಶರಾದ ದಾಸರಿಗೆ ಯಾವುದು ಅಸಾಧ್ಯ.
ಸಾಂಶರು ಅಂದರೆ ಏಕ ಕಾಲದಲ್ಲಿ ಎಲ್ಲಾ ಕಡೆ ಪ್ರಕಟವಾಗುವದು..
ಶ್ರೀ ವಿಜಯಪ್ರಭುಗಳ ಅಂತರ್ಯಾಮಿಯಾಗಿ ಇರುವ ಮಧ್ವ ವಲ್ಲಭನಾದ ಆ ವಿಜಯವಿಠ್ಠಲನು ಪ್ರೀತಿಯಾಗಲಿ....
ಶ್ರೀ ಕೃಷ್ಣಾರ್ಪಣ ಮಸ್ತು
ಈ ವಿಷಯವನ್ನು ಶ್ರೀ ಗೋಪಾಲ ದಾಸರು ಒಂದು ಕಡೆ ಹೇಳುತ್ತಾರೆ.
"ಅಂಗದಿ ಮುಸುಕು ತೆಗೆಯಲು|
ಕ್ಷೇತ್ರದಿ ಪಾಂಡುರಂಗನೋ ವಿಜಯರಾಯ||
|ವಿ| ಎಂದು ನುಡಿಯಲು ವಿಷ್ಣು ದಾಸನಾಗುವನು
|ಜ| ಯೆನಲು ಜನನ ಹಾನಿ
|ಯ| ಎಂದು ಕೊಂಡಾಡೆ ಯಮ ಭಟರು ವೋಡುವರು.
|ರಾಯ|
ಎಂದೆನಲು ಹರಿ ಕಾವ ವರವೀವ...
ಜೈ ವಿಜಯರಾಯ
**************
ವಿಜಯ ದಾಸರ ಜೀವನ ಚರಿತ್ರೆಯ ನೋಟ
ಸಾಕ್ಷಾತ್ ಭೃಗು ಮುನಿಗಳೇ ಭಗವಂತನ ಆಜ್ಞಾನುಸಾರ
ಚಿಕನಬರವಿಯಲ್ಲಿ( ಮುಂದೆ ಇದೆ ಚೀಕಲಪರವಿಯೆಂದು ಆಯಿತು) ಅವತಾರ ಮಾಡಿದ್ದಾರೆ.
ಶೀನಪ್ಪ ಕೂಸಮ್ಮನವರ ಜೇಷ್ಠ ಪುತ್ರರಾಗಿ ದಾಸಪ್ಪನೆಂಬ ಅಭಿದಾನದಿಂದ ಹರಿತತ್ವ ಸಾರಲು ಜನನ.
ತಮ್ಮ ಆನಂದ ದಾಸರು, ದಾಸರಿಗೆ ಒಬ್ಬ ತಂಗಿ ಇರುವುದಾಗಿಯೂ ಹೇಳಿಕೆ ಉಂಟು.
ಬಾಲ್ಯ ವಿದ್ಯಾಭ್ಯಾಸ ಮುಂದೆ ಅರಳಮ್ಮನವರೊಂದಿಗೆ ವಿವಾಹ
ಜಗತ್ತಿಗೆ ವಿಜಯರಾಯರ ಮಹಿಮೆ ತಿಳಿಸಲು ಬಡತನವೆಂಬ ನಾಟಕ ( ವೈರಾಗ್ಯ ಮೂರ್ತಿಗಳಿಗೆ ಬಡತನವು
ಒಂದೇ ಸಿರಿತನವು ಒಂದೇ)
ಪ್ರಥಮವಾಗಿ ಕಾಶಿಯಾತ್ರೆ, ಜ್ಞಾನಿಗಳ ಸಮಾಗಮ ಮತ್ತೊಮ್ಮೆ ಕಾಶಿಯಾತ್ರೆ ( ಮತ್ತೆ ಪೊರಟರು ಸಿರಿಉತ್ತಮ ಶ್ಲೋಕಹರಿ ಪೆತ್ತಗಂಗೆಯ ಸ್ನಾನ - ಹಯವದನ ವಿಠ್ಠಲರ ಕೃತಿ)
ಅಲ್ಲಿ ಪುರಂದರ ದಾಸರಿಂದ ವ್ಯಾಸಕಾಶಿಯಲ್ಲಿ ಅಂಕಿತ ವಿಜಯ ವಿಠ್ಠಲಯೆಂಬ ಪ್ರಾಪ್ತಿ
ಅಲ್ಲಿಂದ ಚಿಕಲಪರವಿಗೆ ಪ್ರಯಾಣ ಬಹುಕಾಲ ಚಿಕಲಾಪರಾವಿಯನ್ನೇ ಕಾರ್ಯಕ್ಷೇತ್ರವನ್ನಾಗಿ ಮಾಡಿಕೊಂಡರು. ಮುಂದೆ ತಿರುಪತಿಗೆ ಯಾತ್ರೆ.
ನಂತರ ವಿಜಯವಿಠ್ಠಲ ಮೂರ್ತಿ ಪ್ರಾಪ್ತವಾಗಿದ್ದು
ಮಾಳಗಿ ಶ್ರೀನಿವಾಸಾರ್ಯರ ಮನೆಯಿಂದ
ಶೀಲಗುರು ವಿಜಯದಾಸರಿಗೆ ಒಲಿದು
ಮೇಲಾಗಿ ಬಹುಪರಿಯಿಂದ ಪೂಜೆಗೊಂಡು
- ಶ್ರೀ ಗೋಪಾಲದಾಸರ ಕೃತಿ
ಇತನೀಗ ವಿಜಯವಿಠ್ಠಲ
ಮಾತುಮಾತಿಗೆ ನೆನಸಿದವರ ಪಾತಕಗಳ ಪರಿದು ಯಮನ ಯಾತನೆಯನು ಕಳೆದು ಪೊರೆವ
ಆ ಸಂದರ್ಭದಲ್ಲಿ ವಿಜಯ ದಾಸರಿಂದ ಕೃತಿಯ ರಚನೆ
ಆನಂದ ದಾಸರಿಗೆ ಹಯವದನ ವಿಠ್ಠಲ ಅಂಕಿತವಿತ್ತು ದಾಸ ದೀಕ್ಷೆಯನ್ನಿತ್ತರು.
ಪರವಾದಿ ನಿಗ್ರಹ : ವಾದಕ್ಕಿಳಿದ ದುರ್ವಾದಿಗಳು ಸೋಲಿಸಿ ಹರಿಸರ್ವೋತ್ತಮತತ್ವವನ್ನು ಪ್ರತಿಷ್ಟಾಪಿಸಿದರು
ದುರ್ವಾದಿಯಾದ ರಾಮಶಾಸ್ತ್ರಿಯು ಶರಣಾದದ್ದು ಒಂದು ಉದಾಹರಣೆ ಮಾತ್ರ.
ವಿಜಯದಾಸರ ಮಕ್ಕಳಾದ ಶೇಷಗಿರಿದಾಸರ ಜನನ
ಮೋಹನ ದಾಸರ ರಕ್ಷಣೆ ಮಾಡಿದ್ದು
ನಂತರದಲ್ಲಿ ಭಾಗಣ್ಣ ದಾಸರಿಗೆ ಗೋಪಾಲವಿಠ್ಠಲ ಅಂಕಿತಪ್ರದಾನ ಆದವಾನಿ ಮಂಗರಾಯನ ಸನ್ನಿಧಿಯಲ್ಲಿ ನಂತರದಲ್ಲಿ ದಿವಾನ್ ತಿಮ್ಮಣ್ಣನವರಿಗೆ ವೇಣುಗೋಪಾಲವಿಠ್ಠಲ ಅಂಕಿತಪ್ರದಾನ
ಅದರ ನಂತರದಲ್ಲಿ ಮೋಹನ ದಾಸರಿಗೆ ನವವೃಂದಾವನ ಸನ್ನಿಧಾನದಲ್ಲಿ ಮೋಹನ ವಿಠ್ಠಲಯೆಂದು ಅಂಕಿತಪ್ರದಾನ
ಕಲ್ಲೂರು ಸುಬ್ಬಣ್ಣಾಚಾರ್ಯರ ಶರಣಾಗತಿ
ವೇಣುಗೋಪಾಲ ದಾಸರಿಗೆ ಒದಗಿದ ಅಪಮೃತ್ಯು ಪರಿಹಾರ
ಮಕ್ಕಳಾದ ಶೇಷಗಿರಿ ದಾಸರಿಗೆ ಅಪಮೃತ್ಯು ಪರಿಹಾರ
ಮೋಹನ ದಾಸರಿಗೊದಗಿದ ಅಪಮೃತ್ಯು ಪರಿಹಾರ
ಛಾಗಿ ಕೇಶವರಾಯನ ಅಪಮೃತ್ಯು ಪರಿಹಾರ
ಪೂರ್ವಜರ ನಾಯೀಜನ್ಮ ಪರಿಹಾರ
ಮಹಿಮೆಗಳು
ಗೆಂಗೆಯ ಮಾವಾಹ ಉಕ್ಕೇರಿದ್ದು
ತುಂಗೆಗೆ ಗಂಗೆ ತರಿಸಿದ್ದು
ಚಿಕಲಪರವಿಯಲ್ಲಿದ್ದೆ ಶಿಷ್ಯರಿಗೆ ವಿಠ್ಠಲನ ದರುಶನ ಮಾಡಿಸಿದ್ದು
ವ್ಯಾಘ್ರದಿಂದೊದಗಿದ ವಿಪತ್ತನ್ನು ಪರಿಹಾರ ಮಾಡಿದ್ದು
ಹುಲಿಗೆ ಸದ್ಗತಿಯನ್ನು ನೀಡಿದ್ದು
ಕಳ್ಳನಾದ ರಂಗರಾಜನಿಗೆ ಉದ್ಧರಿಸಿದ್ದು
ವಿಷಪ್ರಾಶನವಾದಾಗ ಭಗವಂತನ ಸ್ಮರಣೆಯಿಂದ ಅದನ್ನು ಉಪಶಮಮ ಮಾಡಿಕೊಂಡಿದ್ದು
ಸುಳಾದಿಯ ಮಟ್ಟ ತಾಳದಲ್ಲಿ
ವಿಷಪಾನಗಳಲ್ಲಿ ನಸುಗುಂದಿದೆ ನವೆದು ಮುಸುಕಿತು ರೋಗ ಕಾಣಿಸಲಾರದೆ ಉಬ್ಬಸ ಬಡುತಲಿಪ್ಪೆ ಅಶ್ವಥ ನಾಮಕನೇ ವಿಜಯವಿಠ್ಠಲ ಎನ್ನ ಅಸುವನು ನಿರ್ವಹಿಸಲಾರೆನೋ ಇನ್ನು
ದಾಸರಲ್ಲಿ ಸಾಮಾಜಿಕ ಕಳಕಳಿ
ದಾಸರಲ್ಲಿ ಅಭೂತಪೂರ್ವಕವಾಗಿ ಭೂತದಯೆ ಇತ್ತು ಎನ್ನುವುದಕ್ಕೆ ಕಾಶಿಯಿಂದ ತಂದ ಗಂಗಾ ಜಲವನ್ನು ಕಟ್ಟೆಗೆ ಕುಡಿಸಿದ್ದು
ವಿವಾಹವಾಗಬೇಕೆಂಬ ಯುವಕನ್ನನ್ನು ಬಡತನದಿಂದ ಪಾರುಮಾಡಿದ್ದು
ವೃದ್ಧನಿಗೆ ಇದ್ದಲಿಯೇ ಗಂಗಾ ಸ್ನಾನ ಮಾಡಿಸಿದ್ದು
ಪತಿತೆಯನ್ನು ಉದ್ಧರಿಸಿದ್ದು
ಹಲವಾರು ಮದುವೆ ಮುಂಜಿವೆಗಳನ್ನು ಮಾಡಿಸಿದ್ದು
“ಹತ್ತೆಂಟು ಮದುವೆ ಮುಂಜಿಗಳ ಮಾಡಿಸಿ ನಿನ್ನ ಭೃತ್ಯರ ಪೋರಿದ್ಯೋ ವಿಜಯರಾಯ - ಗೋಪಾಲ ದಾಸರು”
ನಂತರ ಚಿಪ್ಪಗಿರಿಗೆ ಪ್ರಯಾಣ ಬೆಳೆಸಿದ್ದು
ಅಲ್ಲಿ ಶ್ರೀ ವೇಣುಗೋಪಾಲನ ಮೂರ್ತಿ ಪ್ರಾಪ್ತವಾಗಿದ್ದು
ಬಹುಕಾಲ ಎಲ್ಲರನ್ನು ಸಲುಹಿ ಹರಿಪರ ಮಾರ್ಗವನ್ನು ತೋರಿಸಿ ದಾಸರು ವೈಕುಂಠ ಯಾತ್ರೆಯನ್ನು ಮಾಡುತ್ತಾರೆ
ಎಪ್ಪತ್ತು ಮೂರುವರುಷ ಹೊಪ್ಪ ದೇಹದಲ್ಲಿದ್ದೆ ಅಂದರೆ ೭೩ ವರುಷ ದಾಸರು ತುಂಬು ಜೀವನವನ್ನು ಮಾಡಿಯುವುದಾಗಿ ಸ್ಪಷ್ಟಿಕರಿಸಿದ್ದಾರೆ
*ಕಾರ್ತಿಕ ಮಾಸದ ಶುಕ್ಲ ಪಕ್ಷ ದಶಮಿ ಗುರುವಾರದಂದು ವಿಜಯ ದಾಸರು ಶಿಷ್ಯವರ್ಗಕ್ಕೆ ಅಪಾರ ಸನ್ಮಾರ್ಗಕರವಾದ ವಾಕ್ಯಗಳನ್ನು ಬೋಧಿಸಿ ಯಾತ್ರೆಯನ್ನು ಮಾಡುತ್ತಾರೆ *
ಸಂಗ್ರಹ ಜಮದಗ್ನಿ
******************
ಶ್ರೀ ಶ್ರೀ ನಿವಾಸಾಯ ನಮಃ.
ವಿಜಯದಾಸರ ಸಾಕುಮಗ “ಮೋಹನ್ನದಾಸರು.”
ಶ್ರೀ ವಿಜಯದಾಸರ ಅನುಗ್ರಹದಿಂದ ರೋಗ ಪೀಡಿತನಾದ
ಮಗು ಮೋಹನದಾಸರಾಗಿದ್ದು.—-
ವಿಜಯದಾಸರು ಪುರಂದರದಾಸರು ವಾಸವಾಗಿದ್ದ ಚಕ್ರತೀರ್ಥದಬಳಿ ತಾವೂ ವಾಸಮಾಡಿದ್ದರು.
ದಾಸರ ಆರಾಧನೆ ಮಹೋತ್ಸವಕ್ಕಾಗಿ ಸತ್ರ ಯಾಗವನ್ನು ಆರಂಭಿಸಿದರು.
ಆ ಯಾಗಕಾರ್ಯಕ್ಕೆ ಸಹಸ್ರಾರು ಜನರು ಆ ಮಹಾಕ್ಷೇತ್ರಕ್ಕೆ ಆಗಮಿಸಿದರು.
ಅಲ್ಲಿ ಭೋಜನದ ವ್ಯವಸ್ಥೆಯ ಜೊತೆಗೆ ಧರ್ಮೋಪದೇಶವೂ ನಡೆಯುತ್ತಿತ್ತು.
ಹಾಗಾಗಿ ಅಲ್ಲಿಗೆ ಅನೇಕ ಭಕ್ತಜನರು ಬರಲಾರಂಭಿಸಿದರು.
ಆ ಕಾಲದಲ್ಲಿ ಆನೆಗೊಂದಿಯ ಶ್ರೀಮಂತನೊಬ್ಬನು ಬೆಳ್ಳ್ ಬಂಗಾರದ ವ್ಯಾಪಾರದಿಂದ ಬಹಳ ಹಣ ಸಂಪಾದಿಸಿ ತನ್ನ ತಮ್ಮಂದಿರ ವಶಕ್ಕೆ ಕೊಟ್ಟು ಮೃತ ನಾಗಿದ್ದನು.
ಅವನ ಗರ್ಭಿಣಿ ಹೆಂಡತಿಯನ್ನು ಅವನ ತಮ್ಮಂದಿರು ಯಾವ ಆಸ್ತಿಯನ್ನು ಕೊಡದೇ ಹೊರಹಾಕಿದ್ದರು.
ಆ ಹೆಂಗಸು ತನ್ನ ತವರುಮನೆ ಸೇರಿ ಗಂಡುಮಗುವನ್ನು ಹೆತ್ತಳು.
ಬಹಳ ಕಷ್ಟದಿಂದ ಜೀವನ ಸಾಗಿಸುತ್ತಿದ್ದಳು .ಮಗುವಿಗೂ ಸರಿಯಾದ ಆಹಾರವಿಲ್ಲದೇ ಮೈಯೆಲ್ಲಾ ಕಜ್ಜಿಯಾಗಿ ನರಳುತ್ತಿತ್ತು.
ಅದೇ ಸಮಯಕ್ಕೆ ವಿಜಯದಾಸರು ಸತ್ರಯಾಗ ಮಾಡಿಸುತ್ತಿದ್ದಾರೆಂದು ತಿಳಿದು ಮಗುವಿನ ಸಮೇತ ಅಲ್ಲಿಗೆ ಭೋಜನಕ್ಕೆ ಬಂದಳು.
ಊಟಕ್ಕೆ ಕುಳಿತಾಗ ಆ ಮಗು ಹೇಸಿಕೆ ಮಾಡಿದ್ದರಿಂದ ಅಲ್ಲಿ ನೆರೆದಿದ್ದ ಜನ ಆಕೆಯನ್ನು ಬೈದರು .
ಆಕೆಯ ಮನಸ್ಸಿಗೆ ದುಃಖವಾಗಿ ಊಟದಿಂದ ಎದ್ದು ಸಾಯಲು ನಿರ್ಧರಿಸಿ ತುಂಗಾಭದ್ರ ನದಿ ತೀರದಲ್ಲಿದ್ದ ನವಬೃಂದಾವನದ ನಡುಗಡ್ಢೆಗೆ ಬಂದಳು.
ಅದೇ ಸಮಯಕ್ಕೆ ವಿಜಯರಾಯರು ಪ್ರದಕ್ಷಿಣೆ ಹಾಕಲು ಬಂದಾಗ
ಆಕೆಯನ್ನು ಕುರಿತು ವಿಚಾರಿಸಿದರು.
ಆ ಹೆಂಗಸು ದುಃಖದಿಂದ ತನ್ನ ಮಗುವನ್ನು ಬಯ್ಯುತ್ತಾ ತನ್ನ ದುಃಖವನ್ನು ಹೇಳಿಕೊಂಡಳು.
ಆಗ ಆಕೆಯನ್ನು ಸಮಾಧಾನ ಮಾಡಿ ಮಗುವನ್ನು ತನಗೆ ಒಪ್ಪಿಸಲು ಹೇಳಿದಾಗ ಆಕೆ ಆ ಮಗುವನ್ನು ಅವರಿಗೆ ಅರ್ಪಿಸಿದಳು.
ವಿಜಯರಾಯರು ಮಗುವನ್ನು ತೊಡೆಯ ಮೇಲೆ ಮಲಗಿಸಿಕೊಂಡು ಆಶೀರ್ವಾದ ರೂಪವಾಗಿ
ಚಿರಂಜೀವಿಯಾಗೆಲವೊ ಚಿಣ್ಣ ನೀನು।
ಹರಿದಾಸ ದಾಸ ದಾಸರ ಪಾದ ಧೂಳಾಗಿ।।
ಎಂಬುದಾಗಿ ಹಾಡಿ ಮಗುವಿನ ಕಿವಿಯಲ್ಲಿ ಮಂತ್ರೊಪದೇಶ ಮಾಡಿದರು.ಹಾಡನ್ನು ಕೇಳಿದ ಮಗು ದಾಸರನ್ನು ನೋಡಿ ನಗುವುದನ್ನು ಆರಂಭಿಸಿತು.
ಆ ಹೆಂಗಸನ್ನು ಮತ್ತು ಮಗುವನ್ನು ಕರೆದುಕೊಂಡು ಪತ್ನಿಯಿದ್ದೆಡೆಗೆ ಬಂದರು.ದಾಸರ ಪತ್ನಿ ಅರಳಮ್ಮನಿಗೆ ಮಗುವನ್ನು ಒಪ್ಪಿಸಿ
ಇವನು ನಿನ್ನ ಮಗನು “ಮೋಹನ”ನೆಂದು ಕರೆಯಬೇಕೆಂದರು.
ಆಗ ಅರಳಮ್ಮನಿಗೆ ತನ್ನ ತೀರಿಕೊಂಡ ಮಗುವಿನ ನೆನಪಾಯಿತು.
ಆಗ ದಾಸರು”ಸತ್ತವರಿಗೆ ಅಳಬಾರದು!ಇದ್ದವರೇ ನಮ್ಮ ಮಕ್ಕಳೆಂದು ಸಮಾಧಾನ ಮಾಡಿದರು.
ಆಗ ಅರಳಮ್ಮನು ಮಗುವಿಗೆ ಸ್ನಾನ ಮಾಡಿಸಿ ಉಪಚಾರಮಾಡಿದರು.
ತಾಯಿ ಮಗುವಿನ ಆರೋಗ್ಯ ಸುಧಾರಿಸಿತು.ಆ ಮಗುವೇ ಮುಂದೆ ಮೋಹನದಾಸರು”ಎಂದಪ ಪ್ರಸಿದ್ಧಿ ಪಡೆದರು.
ಮೋಹನದಾಸರು ಮುಂದೆ ಹರಿದಾಸರಾದ ಮೇಲೆ ವಿಜಯರಾಯರನ್ನು ಕುರಿತು ಅನೇಕ ಕೃತಿಗಳನ್ನು
ರಚಿಸಿದರು.
ತಂದೆ ವಿಜಯರಾಯ-ವೇಳೆಗೆ
ಬಂದೆ ವಿಜಯರಾಯ।।
ಹಿಂದೇನು ಜನ್ಮವೊ ಮುಂದೇಸು ಜನ್ಮವೊ
ಒಂದು ತಿಳಿಯದು ಎಂದೆಂದಿಗು ಎನ್ನ।।
ಸಿರಿ ಮೋಹನವಿಠ್ಟಲನ ಪದವ ತೋರಿ
ಧರೆಗೆ ತಂದು ಬಿಟ್ಟೆ ಕರುಣಾಳುವೆ ಎನ್ನ।।
ಎಂದು ಹಾಡಿ ಶ್ರೀ ವಿಜಯ ರಾಯರನ್ನು ಹೊಗಳಿದ್ದಾರೆ.
/:ಶ್ರೀ ಕೃಷ್ಣಾರ್ಪಣಮಸ್ತು//
ಅಜ್ಞಾನ ತಿಮಿರಚ್ಛೇದಂ ಬುದ್ಧಿ ಸಂಪತ್ಪ್ರದಾಯಕಂ
ವಿಜ್ಞಾನ ವಿಮಲಂ ಶಾಂತಂ ವಿಜಯಾಖ್ಯ ಗುರುಂ ಭಜೇ//
**************
ವಿಜಯ ದಾಸರ ಸ್ಮರಣೆ
ಕೂಸಿ ಮಗ ದಾಸಪ್ಪ ಎಂದು ಪ್ರಸಿದ್ಧ. ಬಾಲ್ಯದಿಂದಲೇ ಕಡು ಬಡತನ ಸಿದ್ಧ.
ತಾಯಿ, ಮಗ ಸಂಜೆವರೆಗೆ ತಿರಗಿದರೂ ಹೊಟ್ಟೆಗೆ ಹಿಟ್ಟಿಲ್ಲದ ದಿನಗಳು.
ಬಾಯ್ದೆರೆದು ಕೇಳಿದರೂ ಕೈಗೊಂದು ಕಾಸಿಲ್ಲ. ದುಡಿದರೂ ಇಲ್ಲ, ದಣಿದರೂ ಇಲ್ಲ.
ಹೊಸ ವಸ್ತ್ರ ಕನಸು. ಹಳೆಯ ಹರಿದ ವಸ್ತ್ರವೇ ಭೂಷಣ.
ಹೆಂಡತಿ ಜೊತೆ ಊಟ ದೂರ. ಅವಳೊಬ್ಬಳಿಗೆ ಊಟಕ್ಕೆ ಹಾಕುವದೂ ಕಠಿಣತರ.
ಕಾಡುವ ಬಡತನ.
ದಾಸಪ್ಪ ಬೇಸತ್ತ. ಮನೆ ಬಿಟ್ಟ. ಊರೂ ಬಿಟ್ಟ.
ಗೊತ್ತು ಗುರಿ ಇಲ್ಲದ ಪಯಣ. ನಡೆದಿದ್ದೇ ದಾರಿ, ಮುಟ್ಟಿದ್ದೇ ಊರು.
ದಾಸಪ್ಪನಿಗೆ ಗುರಿ ಗೊತ್ತಿರಲಿಕ್ಕಿಲ್ಲ.
ಆದರೆ ಈಶಪ್ಪನಿಗೆ ಗೊತ್ತಿತ್ತು.
ದೊಡ್ಡ ಯೋಗ್ಯತೆ ದಾಸಪ್ಪನದು.
ಜಗದೀಶಪ್ಪ ತನ್ನ ಸನ್ನಿಧಿ ಕಾಶಿಗೇ ದಾಸಪ್ಪನನ್ನು ಕರೆತಂದ.
ದಾಸಪ್ಪನ ಅಧ್ಯಾತ್ಮ ಭಾಗ್ಯದ ಬಾಗಿಲು ತೆರೆಯಿತು.
ಕಾಶಿ ವಿಶ್ವೇಶ್ವರನ ಅನುಗ್ರಹ,
ಶ್ರೀ ಹರಿ ಬಿಂದುಮಾಧವನ ಪ್ರಸಾದ,
ವಿಠ್ಠಲನ ಅಪರೋಕ್ಷ -
ಇನ್ನೇನು ಇನ್ನೇನು!
ವಿಜಯವಿಠ್ಠಲನ ದರುಶನವಾಯಿತು.
'ನಿನ್ನ ಕಂಡು ಧನ್ಯನಾದೆ ವಿಠ್ಠಲಾ' ಎಂದರು.
ಲೌಕಿಕದ ಮೇಲೆ ವಿಜಯ ಹೊಂದಿದರು.
ವಿಜಯದಾಸರಾದರು.
ಮಸ್ತಕದಲ್ಲಿ ಮಧ್ವ ಶಾಸ್ತ್ರ.
ಕಂಗಳಲ್ಲಿ ಶ್ರೀ ರಂಗ
ನಾಲಿಗೆ ಮೇಲೆ ಸರಸ್ವತಿ.
ಹೃದಯದಲ್ಲಿ ವಿಠ್ಠಲ.
ಅಂತಃಕರಣದಲ್ಲಿ ತುಂಬು ಭಕ್ತಿ.
ಕೈಯಲ್ಲಿ ತಂಬೂರಿ. ಕಾಲಲ್ಲಿ ಗೆಜ್ಜೆ.
ಡಂಗುರ ಸಾರಿದರು ಹರಿಮಹಾತ್ಮೆ.
ವಿಜಯದಾಸರು ನಡೆದಾಡಿದ್ದೆಲ್ಲ ತೀರ್ಥಯಾತ್ರೆ ಆಯಿತು. ಮಾಡಿದ್ದೆಲ್ಲ ಹರಿಪೂಜೆ. ಮಾತನಾಡಿದ್ದೆಲ್ಲ ಮಾಧವನ ಮಹಿಮೆ. ದೇವರ ನಾಮ. ಶಾಸ್ತ್ರದ ತಾತ್ಪರ್ಯವಾಯಿತು.
ನೋಡಿದ್ದೆಲ್ಲ ಹರಿರೂಪ. ಉಂಡಿದ್ದು ಹರಿ ನೈವೇದ್ಯ.
ಜೀವನ ಪರಮಾತ್ಮಮಯ
ವಾಯಿತು.
ದಾಸರು ಬಂದಲ್ಲೆಲ್ಲ ಬರಗಾಲ ಮಾಯ. ಮಳೆಬೆಳೆ ಸುಭಿಕ್ಷ್ಯ. ಜ್ಞಾನ ಮಯ. ಸುಖಕಾಲ.
ಅವರು ಅಂದದ್ದು ಅಂದಂತೆ ನಡೆಯುತ್ತಿತ್ತು.
ನಡೆಯುವದನ್ನು ಮೊದಲೇ ಅನ್ನುತ್ತಿದ್ದರು.
ಬೇಡಿ ಬಂದವರಿಗೆ ಕಷ್ಟ ಪರಿಹಾರ. ಬಯಸಿ ಬಂದವರಿಗೆ ಸುಖ ಪ್ರಾಪ್ತಿ. ಎಲ್ಲರಿಗೂ ಅಧ್ಯಾತದ ಉನ್ನತಿ.
ನೂರಾರು ಸುಜನ ಶಿಷ್ಯರಾದರು. ಅನೆಕಾನೇಕರು ದಾಸದೀಕ್ಷೆ ಪಡೆದರು.
ಹರಿದಾಸ ಸಾಹಿತ್ಯ, ಪಂಥ, ವೈಭವ ಶಿಖರಕ್ಕೇರಿ ದವು.
ವಿಠ್ಠಲನ ಒಲುಮೆಯಾದವನಿಗೆ ಏನು ತಾನೇ ಅಲಭ್ಯ?
ಸುಜನರು ಹಿಂಡುಹಿಂಡಾಗಿ ದಾಸರ ಹಿಂಬಾಲಿ ಸಿದರು. ತಮ್ಮ ತಮ್ಮ ಊರಿಗೆ ಆಹ್ವಾನಿಸಿ ಕರೆದೊಯ್ಯುವರು.
ಎಲ್ಲೆಡೆಗೆ ಸನ್ಮಾನ, ಸತ್ಕಾರ ಶಾಲು ಶಕಲಾತಿ.
ನೂರಾರು ಸಜ್ಜನರ ಜೊತೆ ಭೂರಿ ಸಹಭೋಜ ನ. ಅಪಾರ ಸಂಪತ್ತು. ಆ ಭಾರಿ ವೈಭವ ಕಣ್ಣಿಗೇ ಹಬ್ಬ! ದೈವಾನುಗ್ರಹ ದಾಸರಿಗೆ.
ಸಂಚರಿಸುತ್ತ ಬಂದರು ಮರಳಿ ತಮ್ಮ ಊರಿಗೆ
ಆಗ ಯಾವ ಊರು ದಾಸಪ್ಪನನ್ನು ಹೊರಗೆ ಹಾಕಿತ್ತೋ ಅದೇ ಊರು ಈಗ ವಿಜಯದಾಸರನ್ನು ಭವ್ಯವಾಗಿ ಸ್ವಾಗತಿಸಿತು.
ಅದೇ ಬಂಧುಗಳ ಮನೆಗೆ ಬಂದರು ದಾಸರು.
ಮಧ್ಯಾನ್ಹ ಸಹಸ್ರಬ್ರಹ್ಮ ಭೋಜನ. ನೂರೆಂಟು ಭಕ್ಷ್ಯಭೋಜ್ಯಗಳು.
ವೈಭವ ತುಂಬಿ ತುಳುಕು ತ್ತಿತ್ತು.
ಊಟಕ್ಕೆ ಕುಳಿತ ದಾಸರಿಗೆ ಪೂರ್ವದ ಸ್ಮರಣೆ.
ಇದೇ ಮನೆಯಲ್ಲಿ. ತಾನು ತನ್ನ ತಾಯಿ. ಹೇಳಿದ ಕೆಲಸ ಮಾಡಿದೆವು.
ತುತ್ತಿಗಾಗಿ ತೊತ್ತಾಗಿ ಸಂಜೆವರೆಗೆ ಕಾದೆವು. ಹೊಟ್ಟೆಗೆ ಒಂದು ಸೌಟು ಗಂಜಿ ಸಿಗಲಿಲ್ಲ ಸ್ವಾಮಿ.
ಇಂದು ನೋಡು ಈ ಪರಿ ಕಂಡರಿಯದ ವೈಭವ!
ಎದುರಿಗೆ ನೋಡುತ್ತಾರೆ -
ವಿಜಯವಿಠ್ಠಲ. ತುಂಟ ನಗುಮೊಗ.
ಆಗ ಅದನ್ನು ಕೊಟ್ಟವನು ನಾನೇ.
ಈಗ ಇದನ್ನು ಇಟ್ಟವನೂ ನಾನೇ ಎನ್ನುವಂತಿತ್ತು.
ಬಿಟ್ಟಾರೆಯೇ ದಾಸರು. ಹಾಡಿನಿಂದ ಕಟ್ಟಿ ಹಾಕಿದರು ಹರಿಯನ್ನು!
ಭಕ್ತಿ ಭಾವದಿಂದ ಸ್ತುತಿಸಿ ಸಂತಸ ಪಟ್ಟರು.
'ನಿನ್ನ ಒಲುಮೆಯಿಂದ ನಿಖಿಳ ಜನರು ಬಂದು
ಮನ್ನಿಸುವರೋ!'
ಹೇ, ದೇವರದೇವ
ಏನಿದು ನಿನ್ನ ಲೀಲೆ! ವೈಚಿತ್ರ್ಯ. ವೈಭವ!
ಇಲ್ಲದ್ದು ಕಂಡಿದ್ದೆ. ಇದ್ದದ್ದು ಕಂಡಿರುವೆ.
ಅಂದು -
ಹಸಿದ ಹೊಟ್ಟೆ, ಹರಕು ಬಟ್ಟೆ, ಬಾಯಿ ಬಿಟ್ಟು ಬೇಡಿ ಕೆಟ್ಟೆ.
ಇಂದು -
ಭೂರಿ ಅಶನ ಭಾರೀ ವಸನ. ತುಂಬು ಧನ. ಏನುಂಟು ಏನಿಲ್ಲ ಸ್ವಾಮೀ.
ಯಾತರ ಪ್ರಾಪ್ತಿ ಇದು?
ಈ ಪರಿ ಪುಣ್ಯ ನನ್ನದುಂಟೇ?
ಇಲ್ಲ ಮತ್ತೆ ಅಲ್ಲ.
ಬರಿಗಾಲು, ಬರಿಹೊಟ್ಟೆ, ಬರಿ ಮೈ ನನ್ನ ಯೋಗ್ಯತೆ.
ತುಂಬಿತುಳುಕುವ ಈ ವೈಭವ ನಿನ್ನ ಒಲುಮೆ.
ಬಂದು ಮನ್ನಿಸುವ ಜನ ನಿನ್ನದಯ್ಯಾ ಸ್ವಾಮಿ.
ನೀ ಕೊಟ್ಟರೆ ಉಂಟು.
ಇಲ್ಲದಿರೆ ಇಲ್ಲ.
ಸೂತ್ರದ ಬೊಂಬೆ ನಾವು.
ಸೂತ್ರಧಾರ ನೀನು.
ನಿನ್ನ ಇಚ್ಛೆಯಂತೆಯೇ ಜಗದ ಆಟ.
ನಿನ್ನ ಪರಿಯ ಯೋಚಿಸಿ ನೋಡಲು ಸೋಜಿಗವಾಗುತ್ತದೆ.
'ಸ್ವಾಮಿ, ವಾಚೋ ನಿವರ್ತಂತೆ'
ನಿನ್ನ ಹೇಳಲು ಹೋದ ಶಬ್ದಗಳು ಸೋತು ಮರಳಿದವು.
ಸರ್ವಶಬ್ದ ವಾಚ್ಯನೂ ಹೌದು,ವಾಚ್ಯಾತೀತನೂ
ಹೌದು ಸ್ವಾಮಿ ನೀನು.
ಇಂಥ ಜಗತ್ತಿಗೇ ಸೋಜಿಗವಾಗಿರುವ ಸೋಜಿಗ ನಾಮಕ, ಸೋಜಿಗಕಾರಕ ಸೋಜಿಗಮಯ ಪ್ರಭು ನಿನಗೆ ಸಹಸ್ರ ಶಿ ಸಾ ನಮಸ್ಕಾರಗಳು.
ನಿನ್ನ ಒಲುಮೆ ಸದಾ ಇರಲಿ ನಮಗೆ.
ಶ್ರೀ ಕೃಷ್ಣಾರ್ಪಣಮಸ್ತು
***********
ಅಜ್ಞಾನತಿಮಿರಚ್ಛೇದಂ
ಬುದ್ಧಿಸಂಪತ್ಪ್ರದಾಯಕಂ !
ವಿಜ್ಞಾನವಿಮಲಂ ಶಾಂತಂ
ವಿಜಯಾಖ್ಯಗುರುಂ ಭಜೇ !!
ಅರ್ಥ :- ಅಜ್ಞಾನ ಎಂಬ ಕತ್ತಲೆಯನ್ನು ನಾಶಮಾಡುವ, ಬುದ್ಧಿ (ಜ್ಞಾನ) ಎಂಬ ಸಂಪತ್ತನ್ನು ಕೊಡುವ, ವಿಶಿಷ್ಠವಾದ, ನಿರ್ಮಲವಾದ ಜ್ಞಾನವುಳ್ಳ, ಶಾಂತರಾದ ವಿಜಯದಾಸರನ್ನು ಭಜಿಸುತ್ತೇನೆ ಅಂತ ಪ್ರಾರ್ಥನೆ.
ಶ್ರೀ ವಿಜಯದಾಸರು ಎಲ್ಲರೂ ಜೀವನದಲ್ಲಿ ವಿಜಯಿಗಳಾಗುವಂತೆ ಅನುಗ್ರಹಿಸಲಿ.
ಸರ್ವೇ ಜನಾಃ ಸುಖಿನೋ ಭವಂತು !
ಸುಘೋಷಾಚಾರ್ಯ ಕೊರ್ಲಹಳ್ಳಿ
*****************
ಶ್ರೀ ವಿಜಯ ದಾಸರ ಅಂತಿಮ ದಿನಗಳು!!
ಇಂದು ಶ್ರೀ ವಿಜಯ ದಾಸರ ಮಧ್ಯಾರಾಧನೆ!!!
ಜಯಗಳು ಆಗಲಿ ಅಪಜಯಗಳು ಪೋಗಲಿ
ಜಯದೇವ ರಮಣ ಒಲಿಯಲಿ ಕೋಲೇ
ಜಯದೇವ ರಮಣ ಒಲಿಯಲಿ ಕೋಲೇ
ನಮ್ಮ ವಿಜಯರಾಯ ರ ಕೀರ್ತಿ ಬೆಳೆಯಲಿ ಕೋಲೇ
ಅದು ಯುವ ನಾಮ ಸಂವತ್ಸರ ಶ್ರೀ ವಿಜಯದಾಸರಿಗೆ ಅಂದಿಗೆ 73 ವರ್ಷಗಳು ಕಳೆದಿದ್ದವು .ಅಂದು ಕಾರ್ತಿಕ ಮಾಸದ ಶುಕ್ಲ ಪಕ್ಷದ ದಶಮಿ ದಿನ ಗುರುವಾರವಾಗಿತ್ತು. ಎಂದಿನಂತೆ ಶ್ರೀ ದಾಸರು ಪ್ರಾತಃ ನೇಮನಿಷ್ಠ ಗಳನ್ನು ಹಾಗೂ ದೇವರ ಪೂಜಾದಿಗಳನ್ನು ಪೂರೈಸಿದರು.ಆಪ್ತರಿಗೆಲ್ಲಾ ತಾವು ಇಹಲೋಕದ ವ್ಯಾಪಾರವನ್ನು ಮುಗಿಸುವ ವೇಳೆ ಬಂದಿದೆ ಎಂಬ ಸೂಚನೆಯನ್ನು ನೀಡಿದರು.
ಶ್ರೀ ಭಾಗಣ್ಣ ದಾಸರು,ಕಲ್ಲುರೂ ಸುಬ್ಬಣ್ಣದಾಸರು,ಶ್ರೀ ಮೋಹನ ದಾಸರು,ಶ್ರೀ ಜಗನ್ನಾಥ ದಾಸರು ಮೊದಲಾದ ಶ್ರೀ ದಾಸರ ಪ್ರಮುಖ ಶಿಷ್ಯರೆಲ್ಲ ಉಪಸ್ಥಿತರಿದ್ದರು .
ಶ್ರೀ ಭಾಗಣ್ಣಾದಾಸರನ್ನು ಕರೆದು ತಮಗೆ ಒಲಿದುಬಂದಿದ್ದ ಶ್ರೀ ವಿಜಯವಿಠ್ಠಲ ಪ್ರತಿಮೆಯನ್ನು ಅನುಗ್ರಹಿಸಿದರು.
ಶ್ರೀ ದಾಸರು ಧ್ಯಾನಕ್ಕೆ ಕುಳಿತರು,ಆಗ ಮತ್ತೊಮ್ಮೆ ಶ್ರೀ ಪುರಂದರದಾಸರ ರೂಪದಲ್ಲಿ ಚಂದ್ರನಂತೆ ವಿಜಯ ವಿಠ್ಠಲ ಸಂದರ್ಧನ ನೀಡಿದ.ಆ ಆನಂದ ಸಂದರ್ಭದಲ್ಲಿ ಅವರಿಂದ ಈ ಕೆಳಗಿನ ಸುಳಾದಿಯನ್ನು ರಚಿಸಿದರು.
*ದಾಸ ಪುರಂದರನ ಪಾದವನು ಪೊಂದಿದೆನು
ಎಸು ಜನ್ಮದ ಪುಣ್ಯರಾಶಿ ಫಲಿಸಿತೋ ಎನಗೆ* ...💐
ಶ್ರೀ ದಾಸರ ಅವತಾರಗಳ ಚಿಂತನೆ!!! 🙏🏼
ಸುರಲೀಲನಾಗಿ ನಿಕಂಪನೆಂದೇನಿಸಿ ದ್ವಾಪರದಲ್ಲಿ ಜನಿಸಿ ಕೆಲವು ದಿನ ಬಿಡದೆ
ತರುವಾಯ ವರ ಕಲಿಯುಗದಲ್ಲಿ ಈಗ ಜನನ-ಮರಣವಾಗುತ್ತ ಬಂದು ಧರೆಯೊಳಗೆ ಮೆರೆದು
ಹರಿ ಕೃಪೆಯಿಂದಲಿ ಇವರು ಸದನದೊಳಗೆ ತುರುಕರುವು ಆಗಿ ಜನಿಸಿದೆ ಸುಕೃತದಿಂದ ಸಿರಿಪತಿಸ್ಥ ವಿಷ್ಣು ನಮ್ಮ ವಿಜಯ ವಿಠ್ಠಲನ್ನ ದಾಸರು ಪೆಳುವ ಕವನ ಎರಗಳು ಕರ್ಣಕ್ಕೆ...
ಇದರಿಂದತಿಳಿದು ಬರುವಂತೆ ಅವರು ಮೂಲತಃ ನಾರದ ಮುನಿಯ ಶಿಷ್ಯರು, ಕೃತಯುಗದಲ್ಲಿ ಸುರಲಿಲಾ ಎಂಬ ಕಪಿಯಾಗಿಯೂ ದ್ವಾಪರದಲ್ಲಿ ನಿಕಂಪನ ಎಂಬ ಯಾದವನಾಗಿಯೂ ಶ್ರೀಹರಿಸೇವೆ ಮಾಡಿದ್ದರು, ಶ್ರೀ ಪುರಂದರದಾಸರ ಮನೆಯಲ್ಲಿ ಕರುವಾಗಿ ಜನಿಸಿ ಬಳಿಕ ಅವರ ಪುತ್ರನೂ ಆಗಿ ಜನಿಸಿದರು.ಶ್ರೀ ಪುರಂದರದಾಸರ ಪುತ್ರರೊಬ್ಬರಲ್ಲಾದ ಮಧ್ವಾಪತಿದಾಸರಿ ಇವರೇ ಎಂದು ಪ್ರತೀತಿ.
ಶ್ರೀ ವಿಜಯರಾಯರ ಚಿಕಲಪರ್ವಿ/ಚಿಪ್ಪಗಿರಿ ಸಾಧನಾ ಭೂಮಿ ಎಂಬುದಾಗಿ ಪ್ರಸಿದ್ಧವಾಗಿ ವೈಷ್ಣವರ ಪವಿತ್ರ ತೀರ್ಥಕ್ಷೇತ್ರಗಳಲ್ಲೊಂದಾಗಿವೆ ..
ಇಂದಿರಾಪತಿ ಇವರ ಮುಂದೆ ಕುಣಿವನೋ
ಅಂದ ವಚನವಾ ನಿಜಕೆ ತಂದುಕೊಡುವನೋ...
ಕೋಟಿಗಾದರು ನಿನ್ನ ನಾಮ ಒಂದೇ ಸಾಕು.
ದಾಟಿಸುವುದು ಭಾವಸಾಗರವ ಬುತಕಟನದಲಿ ಹರಿದಾಸನದರೆ
ತೋಟವಿಲ್ಲದೆ ಮೋಟಿ ಎತ್ತಿದಂತೆ
ನೀಟಾಗದು ಕಾಣೋ ಎಂದಿಗು ಯಮಭಟರ
ಕಾಟ ತಪ್ಪದು ಕಾಶಿಯೊಳಗಿದ್ದರು
ಹಾಟಕಾಂಬರಧರ ವಿಜಯವಿಠ್ಠಲರೇಯ
ನಾಟಿಸು ನಿನ್ನ ಚರಣದಲಿ ಎನ್ನ ಮನಸ.
ಮಧ್ಯಾರಾಧನೆಯ ಈ ಶುಭ ಸಮಯದಲ್ಲಿ ನಾವೆಲ್ಲೂರು ಒಂದು ಪ್ರತಿಜ್ಞೆ ಮಾಡೋಣ ,ಮುಂದಿನ ಶ್ರೀದಾಸರ ಆರಾಧನೆ ಕಾಲಕ್ಕೆ ಅವರ ಪಂಚಾರತ್ನ ಸುಳಾದಿಗಳನ್ನ/ಇನ್ನು ಇತರೆ ಸುಳಾದಿಗಳನ್ನ(ಸಾಧ್ಯವಾದಷ್ಟು)ಅವರ ಕರುಣಾ ಕವಚವಾದರು ಅರ್ಥಸಹಿತ ಕಂಠಪಾಠ ಮಾಡೋಣ.....🙏🏼
ಅರಳಮ್ಮನವರಿಗೆ ಚಾತುರ್ಥಿಕ ಜ್ವರ (typhoid) ಬಂದಾಗಲೂ,.
ಛಾಗಿ ಕೇಶವರಾಯರಿಗೆ ಮತ್ತು ತಮ್ಮ ಶಿಷ್ಯರಾದ
ಶ್ರೀವೇಣುಗೋಪಾಲವಿಠ್ಠಲ ದಾಸರಿಗೆ ಮತ್ತು,ತಮ್ಮ ಮಗನಾದ
ಶ್ರೀಶೇಷಗಿರಿ ದಾಸರು ಇವರಿಗೆಲ್ಲಾ ಆಪತ್ತು ಬಂದಾಗ ಇಂತಹ, ವಿಷಯದಲ್ಲೂ ಸಹ ನಮ್ಮ
ಶ್ರೀವಿಜಯಪ್ರಭುಗಳು ಮಾಡಿದ್ದೊಂದೇ ಕೆಲಸ..
ಭಗವಂತನಿಗೆ ಶರಣು ಹೋಗಿದ್ದು...
ಅವರಿಗೆಗೊತ್ತಿದ್ದ ಭಾಷೆ ಸುಳಾದಿ ಹಾಗು ಭಗವಂತನ ಕುರಿತಾದ ಪದಗಳು....
ಆರ್ತ ಭಾವಕ್ಕೆ ಅಂತರಂಗದಿಂದ ರಂಗನ ಸುಳಿವು ಕೊಡುವ ಸುಳಾದಿ ಸುಲಲಿತವಾಗಿ ರಸಧಾರೆಯಾಗಿ ಹರಿಯುತ್ತಿತ್ತು...
ಅವರಂತೂ ದಾಸ್ಯಭಾವವನ್ನು ಹೊಂದಿ ಪರಮಾತ್ಮನಲ್ಲದೆ ಬೇರೆ ಕಾಯುವರಿಲ್ಲ ಎಂಬುದನ್ನು ನಮ್ಮಂಥ ಮಂದ ಜೀವಿಗಳಿಗೆ ತೋರಿಸಿಕೊಟ್ಟಿದ್ದಾರೆ...
ಏನೇ ಆಪತ್ತು ಬಂದರು ಭಗವಂತನ ಬಳಿ ಮೊರೆಹೋಗಬೇಕು ಎನ್ನುವ ಭಾಗವತರ ಲಕ್ಷ ಣ ವನ್ನು ನಾವು ಶ್ರೀ ವಿಜಯದಾಸರ ಜೀವನಚರಿತ್ರೆ ಯಲ್ಲಿ ಕಾಣಬಹುದು..
ನಾವು ಸಹ ಎಂತಹದ್ದೆ ಕಷ್ಟ ಬಂದರು ಆ ಭಗವಂತನ ಬಳಿ ಮೊರೆ ಹೋಗೋಣ.
🙏🙏
ಇಂತಹ ಗುರುಗಳನ್ನು ಹೇಗೆ ಭಜಿಸಬೇಕು ಎನ್ನುವದನ್ನು
ಅವರ ಶಿಷ್ಯರಾದ ಶ್ರೀ ವ್ಯಾಸ ವಿಠ್ಠಲ ದಾಸರು ಹೇಳುತ್ತಾರೆ.
ದಿಟ್ಟ ಗುರುಗಳ ಪಾದ ಮುಟ್ಟಿ ಭಜಿಸಿರೋ ಅಂತ.
ಶ್ಯಾಮ ಸುಂದರ ದಾಸರು ಒಂದು ಕಡೆ ಹೇಳುತ್ತಾರೆ.
ನಿಷ್ಟೆಇಂದಲಿ ಮನ ಮುಟ್ಟಿ ಭಜಿಸು| ವಿಜಯ
ವಿಠ್ಠಲ ದಾಸರ ಮನವೇ ನಿತ್ಯ||
🙏ಶ್ರೀ ಕೃಷ್ಣಾರ್ಪಣಮಸ್ತು🙏
ಇಂತಹ ದಿಟ್ಟ ಗುರುಗಳ ಪಾದವನ್ನು ಮುಟ್ಟಿ ಭಜಿಸೊಣ.
ಶ್ರೀ ದಾಸಾರ್ಯರ ಸೇವೆಯಲ್ಲಿ...
ಧರ್ಮ ಕರ್ಮವಶದಿಂದ ಶ್ರೀ ವಿಜಯದಾಸರ ತಂದೆಯ ತಾತ ಅವರಿಗೆ (ಪಿತೃಪಿತಾಮಹ) ನಾಯಿಯ ಜನ್ಮಬಂದಿತ್ತು.
ಶ್ರೀ ವಿಜಯದಾಸರು ಕಾಶಿಯಾತ್ರೆಗೆ ಹೋಗಿ,
ಗಯಾ ವಿಷ್ಣುಪಾದದಲ್ಲಿ ಪಿತೃಗಳ ಉದ್ದಾರಗೋಸುಗ ಪಿಂಡ ಪ್ರಧಾನ ಮಾಡಿ ಶ್ರೀ ಗಯಾ ಗದಾಧರನಿಗೆ ಅರ್ಪಿಸಲು ಅವರ ಪಿತೃ, ಪಿತಾಮಹರು, ನಾಯಿ ಯೋನಿಯಿಂದ ಮುಕ್ತರಾಗುತ್ತಾರೆ...
ಇದನ್ನು ಅರಿತ ಸಾಂಶರಾದ ದಾಸರು ಸೂಕ್ಷ್ಮ ರೂಪದಿಂದ ಚೀಕಲಪರವಿಯಲ್ಲಿ ಇದ್ದ ತಮ್ಮ ಸಹೋದರ ರಾದ ಹಯವದನ ವಿಠ್ಠಲ ರಿಗೆ(ಆನಂದ ದಾಸರಿಗೆ) ದರ್ಶನ ಕೊಟ್ಟು
ಆನಂದ !!ಇಂದು ನಾವು ಮಾಡಿದ ಗಯಾ ಶ್ರಾದ್ದದಿಂದ ತೃಪ್ತನಾದ ಶ್ರೀ ಗಯಾ ಗದಾಧರನು ಕರ್ಮವಶಾತ ನಮ್ಮ ಮುತ್ತಜ್ಜನಿಗೆ ಬಂದಿದ್ದ ನಾಯಿ ಜನ್ಮವನ್ನು ಕಳೆದನು..
ಮುತ್ತಜ್ಜನನ್ನು ಅನುಗ್ರಹ ಮಾಡಿದ ಶ್ರೀ ಹರಿಯು ನಮ್ಮ ವಂಶವನ್ನು ಉದ್ದಾರ ಮಾಡಿದನು..
ಏನು ಅವನ ಕಾರುಣ್ಯ!! ಅಂತನಡೆದ ವಿಷಯದ ಬಗ್ಗೆ ತಿಳಿಸುವರು.
ಈ ವಿಷಯವನ್ನು ತಿಳಿದ ಆನಂದ ದಾಸರಿಗೆ ಆದ ಆನಂದ ಹೇಳಲು ಸಾಧ್ಯವಿಲ್ಲ..
ಹೀಗೆ ಇವರ ಮಹಿಮೆ ಅಸಂಖ್ಯಾತ.
ಶ್ರೀ ವಿಜಯದಾಸರು ಸಾಮಾನ್ಯ ರಲ್ಲ.ನಮ್ಮ ಹಾಗೆ ನರ ಮನುಷ್ಯರಲ್ಲ. ದೇವತಾ ಕಕ್ಷೆಯಲ್ಲಿ ಇರುವ ಮಹಾನುಭಾವರು....
ಹಿಂದೆ ಭಗವದ್ ಭಕ್ತ ನಾದ ಭಗೀರಥ ಮಹಾರಾಜನು ತಪಸ್ಸುಮಾಡಿ ಗಂಗೆಯನ್ನು ಭೂಲೋಕಕ್ಕೆ ತರಿಸಿ ತನ್ನ ಪೂರ್ವಜರ ಉದ್ದಾರ ಮಾಡಿದಂತೆ..
ನಮ್ಮ ಶ್ರೀವಿಜಯ ದಾಸರು ತಮ್ಮ ಹಿರಿಯರಿಗೆ ನಾಯಿ ಜನುಮ ಬಂದಿದ್ದು ತಿಳಿದು ಗಯಾ ಕ್ಷೇತ್ರದಲ್ಲಿ ಕಾರ್ಯಗಳನ್ನು ಮಾಡಿ ಪಿತೃಗಳನ್ನು ಉದ್ದಾರ ಮಾಡಿದ ಮಹಾ ಪುರುಷರು.
ಈ ಘಟನೆಯ ಬಗ್ಗೆ ಅವರ ಶಿಷ್ಯರು ಮತ್ತು ಸೋದರರು ಆದ ಆನಂದ ದಾಸರು ಹೀಗೆ ಹೇಳುತ್ತಾರೆ.
ಭಗೀರಥರಾಯನು ಅಂದದಿ ಜಾನ್ಹವಿತಂದ ಬಲು ಆನಂದ|
ವಿಗಡವಾಗಿ ಪೋದ| ವಂಶೋದ್ದಾರಕ ನೀತ ಅತಿ ಪ್ರಖ್ಯಾತ|
ಭಗವಂತನ ಲೀಲೆ ಪರಿಪರಿಇಂದಲಿ ತಿಳಿದು| ಮನದೊಳು ನಲಿದು|..
ಕಮಲನಾಭನ ಪದಕೆ ಗಯದಲಿ ಪಿಂಡವನು ಅಮಲ ಮನದಿಂದಲಿ ಹಾಕಲಾಗಿ|
ಮಮಪಿತಾ ಪಿತಾಮಹನು ನಾಯಾಗಿ ಜನಿಸಿರಲು| ಕ್ರಮದಿಂದ ಉದ್ದಾರ ಮಾಡಿದ
ಕಾರಣದಿಂದ||
ದಾಸರ ನೋಡಿರೋ| ವಿಜಯದಾಸರ ಪಾಡಿರೋ||
ಈ ಮಹಿಮೆಯನ್ನು ಕುರಿತು ಶ್ರೀಗೋಪಾಲ ದಾಸರು ಹೇಳುತ್ತಾರೆ..
ದುರ್ಯೋನಿಬಂದ ವಂಶಸ್ಥರ| ಉದ್ದರಿಸಿದ್ಯೋ ವಿಜಯರಾಯ||
🙏🙏
ಶ್ರೀ ವಿಜಯದಾಸರ ಈ ದೂರದರ್ಶಿತ್ವ,ತ್ರಿಕಾಲಜ್ಞತ್ವ ವಂಶೋದ್ದಾರಕತ್ವ ಋಣಮೋಚಕತ್ವ..
ಇಂತಹ ಮಹತ್ವದ ಕಾರ್ಯಗಳು ಇತರೇ ಸಾಮಾನ್ಯ ದೇವತೆಗಳಿಂದ ಹಾಗು ಮನುಷ್ಯರಿಂದ ಸಹ ಅಸಾಧ್ಯವಾದುದು...
ಇವರು ಭೃಗು ಋಷಿಗಳು. ಹಾಗಾಗಿ ಇದು ಅವರಿಗೆ ಸಾಧ್ಯವಾಯಿತು..
ಶ್ರೀ ಗೋಪಾಲ ದಾಸರು ಬಾರಿ ಬಾರಿಗು ಹೇಳುತ್ತಾರೆ.
ಇವರು ಸಾಮಾನ್ಯ ಮಾನವರಲ್ಲ.
ದೇವತೆಗಳ ಕಕ್ಷೆಯಲ್ಲಿ ಬರುವ ಋಷಿಗಳಲ್ಲಿ ಶ್ರೇಷ್ಠ ರಾದ ಬ್ರಹ್ಮ ದೇವರ ಮಕ್ಕಳಾದ ಭೃಗು ಋಷಿಗಳು...
ದಿವಿಜರಾ ವೇಶದಿಂದ,ಭಗವಂತನ ಆಜ್ಞೆಯಂತೆ ಧರೆಯೊಳು ಜನಿಸಿದರು...
ಹೀಗೆ ಒಂದಲ್ಲ ಎರಡಲ್ಲ ಮೂರಲ್ಲ ಅನೇಕ ಬಾರಿ ಶ್ರೀ ಹರಿಯು ವಿಜಯದಾಸರಿಗೆ ನಾನಾ ವಿಧವಾದ ತನ್ನ ಭಕ್ತ ವಾತ್ಸಲ್ಯ ವನ್ನು ತೋರಿಸಿರುವನು.
ಅನಂತ ಮಹಿಮೆಯ, ಅನಂತಲೀಲೆಯ
ಅನಂತ ಗುಣ ಚಾರಿತ್ರಿಕ ಉಳ್ಳ ಆ ಅನಂತನಾಮಕನಾದ ಆ ಹರಿಯ ಭಕ್ತರಾದ ನಮ್ಮ ಶ್ರೀ ವಿಜಯದಾಸರ ಮಹಿಮೆ ಯನ್ನು ತಿಳಿಯಲು ನನ್ನಂತಹ ಅನಂತ ಅಜ್ಞಾನ ಉಳ್ಳ ಮಂದಮತಿಗೆ ತಿಳಿಯಲು ಸಾಧ್ಯವಿಲ್ಲ
🙏🙏
ಶ್ರೀ ವಿಜಯದಾಸರ ಪದಗಳನ್ನು,ಸುಳಾದಿ ಯನ್ನು ಮನ ಮುಟ್ಟಿ ಭಜಿಸಿದರೆ ಇವರೆ ನಮಗೆ ಶ್ರೀ ಹರಿಯ ಮಹಿಮೆಯನ್ನು ತಿಳಿಸಿ ಹರಿದಾಡುವಂತ ನಮ್ಮ ಮನಸ್ಸನ್ನು ಶ್ರೀ ಹರಿಯ ಕಡೆ ಹರಿಸುವರು.
ಇಂತಹ ಶ್ರೀ ವಿಜಯದಾಸರನ್ನು ಹೇಗೆ ಭಜಿಸಿದರೆ ಅನುಗ್ರಹ ವಾಗುವದು ಅಂತ
ಶ್ರೀ ಶ್ಯಾಮ ಸುಂದರ ದಾಸರು ಹೇಳಿದಂತೆ
ನಿಷ್ಟೆಇಂದಲಿ ಮನ ಮುಟ್ಟಿ ಭಜಿಸೊ| ವಿಜಯ ವಿಠ್ಠಲ ದಾಸರ ಮನವೇ ನಿತ್ಯ.||
ಇದರಂತೆ ಆಚರಣೆ ಮಾಡೋಣ.
ಅವರ ಅನುಗ್ರಹಕ್ಕೆ ಪಾತ್ರ ರಾಗೋಣ.
ನಾವು ಯಾವ ಯೋನಿಯಲ್ಲಿ ಬಂದರು ಸಹ ಅವರು ನಮಗೆ ಉದ್ದಾರ ಮಾಡಲಿ ಎಂದು ಅವರಲ್ಲಿ ಕೇಳಿಕೊಳ್ಳೊಣ
ವಿಜಯಪ್ರಭುಗಳ ಅಂತರ್ಯಾಮಿಯಾಗಿ ಇರುವ ಮಧ್ವ ವಲ್ಲಭನಾದ ಆ ವಿಜಯವಿಠ್ಠಲನು ಪ್ರೀತಿಯಾಗಲಿ..
🙏ಶ್ರೀ ಕೃಷ್ಣಾರ್ಪಣ ಮಸ್ತು🙏
ವಿ ಎಂದು ನುಡಿಯಲು ವಿಷ್ಣು ದಾಸನಾಗುವನು
ಜ ಯೆನಲು ಜನನ ಹಾನಿ
ಯ ಎಂದು ಕೊಂಡಾಡೆ ಯಮ ಭಟರು ಓಡುವರು.
ರಾಯ
ಎಂದೆನಲು ಹರಿ ಕಾವ ವರವೀವ.
ಎಸ್.ವಿಜಯ ವಿಠ್ಠಲ
*************
ಶ್ರೀ ವಿಜಯದಾಸರಲ್ಲಿ ಭಗವಂತನು ಅವರಲ್ಲಿ ನಿಂತು ತೋರಿಸಿದ
ಮಹಿಮೆಯನ್ನು ತಿಳಿಸುವ ಪುಟ್ಟ ಪ್ರಯತ್ನ.
🙏🙏
ಒಂದು ಸಲ ಶ್ರೀ ವಿಜಯದಾಸರು ತಿರುಪತಿಗೆ ಬ್ರಹ್ಮೋತ್ಸವದ ಸಮಯದಲ್ಲಿ ಯಾತ್ರೆಗೆ ಹೋಗಿದ್ದಾರೆ.ದಾಸರು ಗುಡಿಯಲ್ಲಿ ಒಂದು ಕಡೆ ಮಂಟಪದಲ್ಲಿ ಭಗವಂತನ ಧ್ಯಾನ ಮಾಡುತ್ತಾ ಕುಳಿತಿದ್ದಾರೆ.ಅವರ ಶಿಷ್ಯ ಪರಿವಾರದವರೆಲ್ಲ ಬ್ರಹ್ಮೋತ್ಸವದ ಗಲಾಟೆಯಲ್ಲಿ ದಾಸರನ್ನು ಗಮನಿಸಲಿಲ್ಲ.
ಉತ್ಸವ ಮೂರ್ತಿಗಳು ಹೊರಗಡೆ ಬಂದ ತಕ್ಷಣ ಗುಡಿಯ ಬಾಗಿಲನ್ನು ಬೀಗ ಹಾಕಿ ಎಲ್ಲರೂ ಹೊರಟರು...
ಶ್ರೀವಿಜಯದಾಸರಿಗೆ ಇದು ಯಾವುದರ ಪರಿವೆ ಇಲ್ಲ.ಭಗವಂತನ ಧ್ಯಾನ ದಲ್ಲಿ ಮಗ್ನರಾಗಿದ್ದಾರೆ.
ಭೂರಮಣನಾದ, ಪತ್ನೀ ಸಮೇತನಾದ ಶ್ರೀನಿವಾಸನ ಉತ್ಸವ ಮೂರ್ತಿಯನ್ನು ಸಕಲ ವಿಧವಾದ ವಜ್ರ ವೈಡೂರ್ಯ, ಅನರ್ಘ್ಯ ರತ್ನ ದ ಒಡವೆಗಳಿಂದ ಅಲಂಕರಿಸಿದ್ದಾರೆ...
ವಾದ್ಯವೈಭವ ದೊಡನೆ ,ವೇದ ಘೋಷಗಳಿಂದ ಸ್ವಾಮಿಯನ್ನು ಕರೆ ತಂದಿದ್ದಾರೆ...
ಇತ್ತ ವೆಂಕಟನು ತನ್ನ ಪತ್ನಿಯರೊಂದಿಗೆ ರಥಾರೂಢನಾದ...
ಮುಹೂರ್ತ ಸಮಯಕ್ಕೆ ಸ್ವಾಮಿಯು ಕುಳಿತ ತಕ್ಷಣ ಮಂಗಳಾರುತಿ, ದಂಡ ಪ್ರಣಾಮವನ್ನು ಮಾಡಿ ರಥವನ್ನು ಎಳೆಯಲು ಪ್ರಾರಂಭಿಸಿತು ಭಕ್ತರ ವೃಂದ..ಒಂದು ಅಂಗುಲವು ಸಹ ರಥ ಕದಲಲಿಲ್ಲ..
ಕಂಗಾಲಾಗುವ ಪರಿಸ್ಥಿತಿ ಮಹಂತರದ್ದು.(ಅಲ್ಲಿ ಇರುವ ಅಧಿಕಾರಿಯ ಹೆಸರು)
"ರಥವನ್ನು ಆನೆಯಿಂದ ಎಳೆಸಿದರು ಸಹ ರಥ ಒಂದು ಅಂಗುಲ ಸಹ ಸರಿಯಲಿಲ್ಲ..".
ಯಾರಾದರು ಹರಕೆ ಬಾಕಿ ಇದ್ದರೆ ಅಪರಾಧ ಕಾಣಿಕೆ ಯೊಡನೆ ಹರಕೆ ಸಲ್ಲಿಸಿರಿ.!!
ದೇವಸ್ಥಾನದ ಬಾಗಿಲು ಮೊಹರು ಮಾಡಿರುವದರಿಂದ ಕೊಪ್ಪರಿಗೆ (ಹುಂಡಿಯ)ಸಮೀಪಕ್ಕೆ ಹೋಗಲು ಆಗುವುದಿಲ್ಲ.. ಆದ್ದರಿಂದ ನಂತರ ಬಾಗಿಲು ತೆರೆದೊಡನೆ ಸಲ್ಲಿಸುತ್ತೇನೆ ಅಂತ ಬೇಡಿಕೊಳ್ಳಿ ಅಂತ ಭಕ್ತರಲ್ಲಿ ವಿಜ್ಞಾಪನೆ ಮಾಡಿಕೊಂಡರು .
ನಂತರ ರಥವನ್ನು ಎಳೆಯಲಾಗುತ್ತದೆ ಆದರು ಸಹ ಕದಲಲಿಲ್ಲ.
.ಬಹಳ ಹೊತ್ತು ಆಯಿತು.ಎಷ್ಟು ಜನ ಎಳೆದರು ರಥ ಮುಂದೆ ಬರುತ್ತಾಇಲ್ಲ.ಅವಾಗ ಮಹಂತರು(ಅಧಿಕಾರಿಯು)
ಗಾಬರಿಗೊಂಡು
ಸ್ವಾಮಿ! ನನ್ನ ತಪ್ಪು ಏನಾದರುಇದ್ದರೆ ಕ್ಷಮಿಸು!!,"ಅಂತ ಕರವನ್ನು ಮುಗಿದು ಬಾರಿ ಬಾರಿಗೆ ಕೇಳಿಕೊಂಡ.
ಯಾರಾದರೂ ಬಂದಂತಹ ಭಕ್ತಾದಿಗಳು ಏನಾದರು ಹರಿಕೆ ಇದ್ದರೆ ಪೂರೈಸಲು ಮತ್ತೊಂದು ಸಾರಿ ಕೇಳಿಕೊಂಡ. ಎಲ್ಲರೂ ಹರಿಕೆ ಒಪ್ಪಿಸಿದರು.. *
ಸ್ವಾಮಿಯ ರಥ ಮುಂದೆ ಸಾಗಲಿಲ್ಲ.ಏನಾಶ್ಚರ್ಯ??
"ಗುಡಿಯ ಒಳಗಡೆ ನನ್ನ ಭಕ್ತನು ನನ್ನನ್ನು ತನ್ನ ಹೃದಯಕಮಲದಲ್ಲಿ ತನ್ನ ಭಕ್ತಿಪಾಶದಲ್ಲಿ ಕಟ್ಟಿದ್ದಾನೆ.ಅವನು ನನ್ನನ್ನು ಬಿಡದ ಹೊರತು ನಾನು ಹೊರಡುವನಲ್ಲ ಅಂತ ಸ್ವಾಮಿ ಒಬ್ಬರಿಗೆ ಸೂಚನೆ ಕೊಡುತ್ತಾನೆ.
ತಕ್ಷಣ ಮಹಂತರು ಬಹು ವೇಗದಿಂದ ಮಿತ ಪರಿವಾರದೊಡನೆ ಹೋಗಿ ಗುಡಿಯ ಬಾಗಿಲನ್ನು ತೆಗೆಸಿ ನೋಡುತ್ತಾರೆ..ಒಂದು ಕಡೆ ಮಂಟಪದಲ್ಲಿ
ಶ್ರೀ ವಿಜಯದಾಸರು ಧ್ಯಾನದಲ್ಲಿ ಕುಳಿತಿದ್ದಾರೆ.
ತಮ್ಮ ಹೃದಯದ ಒಳಗೆ ಆ ವೆಂಕಟನನ್ನು ತಮ್ಮ ಭಕ್ತಿಪಾಶದಿಂದ ಕಟ್ಟಿ ನಿಲ್ಲಿಸಿದ್ದಾರೆ...
ಇಂತಹ ಭಕ್ತನನ್ನು ಬಿಟ್ಟು ಸ್ವಾಮಿ ಆ ರಥಕ್ಕೆ ಬರುವನೆ?
ಸಕಲ ಜಗತ್ತಿನ ಒಳ ಹೊರಗೆವ್ಯಾಪ್ತನಾದ ಆ ಸ್ವಾಮಿಯ ಭಗವದ್ರೂಪಗಳನ್ನು ಚಿಂತಿಸಿ ಈ ವೆಂಕಟನಲ್ಲಿ ಆ ರೂಪವನ್ನು ಕಾಣುವ ದಾಸರನ್ನು ಬಿಟ್ಟು ಸ್ವಾಮಿ ಹೊರಗಡೆ ಬರುತ್ತಾನೆಯೆ??
ಮಹಂತರು,ಅರ್ಚಕರು ಸಕಲ ಪರಿವಾರದವರು ಬಂದುದಾಸರನ್ನು ಪ್ರಾರ್ಥನೆ ಮಾಡುತ್ತಾರೆ.ದಾಸರಿಗೆ ಎಚ್ಚರವಿಲ್ಲ.
ಕೆಲ ಕಾಲವಾದ ಮೇಲೆ ಏನಿದು!! ನೀವೆಲ್ಲ ಯಾಕೆ ಬಂದಿದ್ದು?? ಅಂತ ಕೇಳಿದಾಗ ಆಗ ಮಹಂತನು
"ದಾಸರೇ !!ನಮ್ಮ ಅಪರಾಧ ಕ್ಷಮಿಸಬೇಕು. ತಾವು ಬರದ ಹೊರತು ಸ್ವಾಮಿ ಬರುವದಿಲ್ಲ. ವೆಂಕಟನ ಆಗಮನವಿಲ್ಲದೇ ರಥ ಮುಂದಕ್ಕೆ ಚಲಿಸದು.ದಯಮಾಡಿ ಬರಬೇಕು..
ಅಂತ ಕೇಳಿಕೊಳ್ಳುವರು.
ಶ್ರೀ ವಿಜಯದಾಸರ ಬಗ್ಗೆ ಅಷ್ಟರಲ್ಲಿ ಅರ್ಥ ಮಾಡಿಕೊಂಡಿದ್ದ ಮಹಾಂತನು ಇವರೊಬ್ಬರು ಮಹಾತ್ಮರು
ಮತ್ತು
ಇವರ ಜೊತೆಯಲ್ಲಿ ಸದಾ ಶ್ರೀನಿವಾಸ ಇರುತ್ತಾನೆ.. ಭಗವಂತನ ಚಲ ಪ್ರತಿಮೆ ಇವರು ಎಂಬ ಅರಿವು ಉಳ್ಳವನಾದ ಕಾರಣ..,.
ಶ್ರೀನಿವಾಸನ ವಿಗ್ರಹವನ್ನು ರಥದಲ್ಲಿ ಕೂಡಿಸುವಾಗ ಯಾವ ವೈಭವದಿಂದ ಕೂಡಿಸುವರೋ ಅದೇ ವಾದ್ಯ ವೇದಘೋಷಗಳ ವೈಭವವನ್ನು ದಾಸರಿದ್ದ ಕಡೆ ಬರಹೇಳಿ ಅದೇ ವೈಭವದಿಂದ ದಾಸರನ್ನು ರಥದ ಬಳಿ ಕರೆ ತರುತ್ತಾನೆ.
ಭಕ್ತ ನೊಬ್ಬನು ತನ್ನ ಹೃದಯಕಮಲದಲ್ಲಿ ನನ್ನನ್ನು ಹಿಡಿದಿಟ್ಟ ಅಂತ ಸ್ವಾಮಿ ಸೂಚನೆ ಕೊಟ್ಟಿದ್ದು, ಈ ವರೆಗೆ ಮೊಹರು ಮಾಡಿದ ಬಾಗಿಲನ್ನು ಎಂದು ರಥೋತ್ಸವ ಮುಗಿಯದ ಮುನ್ನ ತೆಗೆಯದಿದ್ದುದನ್ನು ಇಂದು ಬಾಗಿಲ ಮುದ್ರೆ ಯನ್ನು ತೆಗೆಸಿ, ಬಹು ವೈಭವದಿಂದ ದಾಸರ ನ್ನು ಇಷ್ಟು ವೈಭವದಿಂದ ರಥದ ಸಮೀಪಕ್ಕೆ ಖುದ್ದಾಗಿ ಮಹಂತರೇ ಹಸ್ತಲಾಘವ ದಿಂದ ಕರೆತಂದದ್ದು ಕಂಡು ಆ ಭಕ್ತರ ಸಮೂಹ ಬಹು ಆನಂದಗೊಂಡಿತು..
ತಕ್ಷಣ ದಾಸರು ವೆಂಕಟನ ಈ ಲೀಲಾ ವಿನೋದವನ್ನು ಸ್ಮರಿಸುತ್ತಾ ರಥದ ಬಳಿಗೆ ಬಂದು,ಸಾಷ್ಟಾಂಗವೆರಗಿ ಪ್ರಣಾಮ ಮಾಡಿ
ತಕ್ಷಣ ಕಾಲಿಗೆ ಗೆಜ್ಜೆ ಕಟ್ಟಿ, ತಂಬೂರಿ ಮೀಟುತ್ತಾ ,ಚಿಟಿಕೆ ಯನ್ನು ಹಿಡಿದು ಶ್ರೀನಿವಾಸನ ಎದುರಿಗೆ ನಿಂತು ಈ ಪದವನ್ನು ಆನಂದಭಾಷ್ಪಗಳಿಂದ ಶ್ರೀ ವಿಜಯದಾಸರು ಪಾಡಿ ನಲಿದಾಡಿದರು.
"ಸಾಗಿ ಬಾರಯ್ಯ ಭವ ರೋಗದ ವೈದ್ಯನೇ" ಅಂತ ಕೃತಿಯನ್ನು ರಚನೆ ಮಾಡುತ್ತಾರೆ. ಆ ಕೃತಿ ಮುಗಿಯಿತು.ಸ್ವಾಮಿ ಪ್ರಸನ್ನ ನಾದನು.ರಥವು ಸಾಗಿತು..
ಆಶ್ಚರ್ಯಕರ ಸಂಗತಿ ಏನೆಂದರೆ ರಥೋತ್ಸವ ಯಾವ ಸಮಯದಲ್ಲಿ ಬಂದು ನಿಲ್ಲಬೇಕಾಗಿತ್ತು ಅದೇ ವೇಳೆಗೆ ಬಂದು ನಿಂತಿತು..
ಇದನ್ನು ವರ್ಣಿಸಲು ಅಲ್ಪಬುದ್ದಿ ಉಳ್ಳವನಾದ ನನಗೆ ತಿಳಿಯದು.
|ದಿಟ್ಟ ಗುರುಗಳ ಪಾದ ಮುಟ್ಟಿ ಭಜಿಸಿರೊ||
ಅ.ವಿಜಯವಿಠ್ಠಲ
****************
|ಅಟ್ಟಿದೆ ನಿನ್ನ ನಾಮಗಳಿಂದ ಮಹಾವ್ಯಾಧಿ|
ವಿಠ್ಠಲಾ ವಿಠ್ಠಲಾ ವಿಜಯವಿಠ್ಠಲ ಕರುಣೀ||
🙏🙏
ತಮ್ಮ ಪತ್ನಿಯವರಾದ ಅರಳಮ್ಮನವರಿಗೆ ಚಾತುರ್ಥಿಕ ಜ್ವರ (typhoid) ಬಂದಾಗಲೂ, ಮತ್ತು.
ಛಾಗಿ ಕೇಶವರಾಯರಿಗೆ ಅಪಮೃತ್ಯು ಬಂದ ಸಮಯದಲ್ಲಿ ಸಹ,
ಮತ್ತು
ತಮ್ಮ ಪ್ರಿಯ ಶಿಷ್ಯರಾದ
ಶ್ರೀವೇಣುಗೋಪಾಲವಿಠ್ಠಲ ದಾಸರು ಮಾರಿಕಾ ಉಪದ್ರವಕ್ಕೆ ತುತ್ತಾದಾಗ
ಹಾಗು
ತಮ್ಮ ಮಗನಾದ ಶ್ರೀಶೇಷಗಿರಿ ದಾಸರಿಗೆ ಅಪಮೃತ್ಯು ಬಂದ ಸಮಯದಲ್ಲಿ ಸಹ.. ಹೀಗೆ ಇವರಿಗೆಲ್ಲಾ ಆಪತ್ತು ಬಂದ ಸಮಯದಲ್ಲಿ ಸಹ ಇಂತಹ, ವಿಷಯದಲ್ಲೂ ಸಹ ನಮ್ಮ
ಶ್ರೀವಿಜಯಪ್ರಭುಗಳು ಮಾಡಿದ್ದೊಂದೇ ಕೆಲಸ..
ಶ್ರೀ ಭೂದುರ್ಗಾನಾಮಕ ಳಾದ ರಮೆಯ ಪತಿಯಾದ, ಶ್ರೀ ನರಸಿಂಹ ರೂಪಿ ಪರಮಾತ್ಮನಿಗೆ ಶರಣು ಹೋಗಿದ್ದು...
ಅವರಿಗೆ ಗೊತ್ತಿದ್ದ ಭಾಷೆ ಒಂದೇ..ಅದು ಸುಳಾದಿ ಹಾಗು ಭಗವಂತನ ಕುರಿತಾದ ಪದಗಳು....
ಆರ್ತ ಭಾವಕ್ಕೆ ಅಂತರಂಗದಿಂದ ರಂಗನ ಸುಳಿವು ಕೊಡುವ ಸುಳಾದಿ ಸುಲಲಿತವಾಗಿ ರಸಧಾರೆಯಾಗಿ ಹರಿಯುತ್ತಿತ್ತು...
"ಅವರಂತೂ ದಾಸ್ಯಭಾವವನ್ನು ಹೊಂದಿ ಪರಮಾತ್ಮನಲ್ಲದೆ ಬೇರೆ ಕಾಯುವರಿಲ್ಲ ಎಂಬುದನ್ನು ನಮ್ಮಂಥ ಮಂದ ಜೀವಿಗಳಿಗೆ ತೋರಿಸಿಕೊಟ್ಟಿದ್ದಾರೆ"...
"ಏನೇ ಆಪತ್ತು ಬಂದರು ಭಗವಂತನ ಬಳಿ ಮೊರೆಹೋಗಬೇಕು ಎನ್ನುವ ಭಾಗವತರ ಲಕ್ಷಣವನ್ನು ನಾವು ಶ್ರೀ ವಿಜಯದಾಸರ" ಜೀವನಚರಿತ್ರೆ ಯಲ್ಲಿ ಕಾಣಬಹುದು..
ನಾವು ಸಹ ಎಂತಹದ್ದೆ ಕಷ್ಟ,ಆಪತ್ತು ಮತ್ತು ಎಂತಹ ರೋಗ, ರುಜಿನಗಳು ಬಂದರು ಸಹ ಅವರು ತೋರಿಸಿ ಕೊಟ್ಟ ಹಾದಿಯಲ್ಲಿ ಆ ಭಗವಂತನ ಬಳಿ ಮೊರೆ ಹೋಗೋಣ.
ಇವಾಗಿನ ಕ್ಲಿಷ್ಟಕರವಾದ ಈ ರೋಗ, ರುಜಿನಗಳ ಹಾವಳಿಯನ್ನು ತಡೆಗಟ್ಟಲು
ನಮ್ಮ ಶ್ರೀ ವಿಜಯಪ್ರಭುಗಳು ರಚಿಸಿದ ಶ್ರೀ ನರಸಿಂಹದೇವರ ಸುಳಾದಿ, ಶ್ರೀದುರ್ಗಾ ಸುಳಾದಿ, ಶ್ರೀಧನ್ವಂತರಿ ಸುಳಾದಿ, ಬಹಿರ್ ಅಂತರ ರೋಗ ನಿವಾರಣೆ ಸುಳಾದಿ ಗಳನ್ನು ನಿತ್ಯ ಬಿಡದೆ ಪಾರಾಯಣ ಮಾಡೋಣ. ಇವಾಗ ಬಂದಂತಹ ಘೋರ ಉಪದ್ರವವಾದ ಈ ರೋಗದಿಂದ ಸಕಲರಿಗು ಅದರ ಭಾದೆ ತಟ್ಟದಿರಲಿ.ಎಲ್ಲಾ ಜೀವಿಗಳಿಗೆ ಒಳಿತಾಗಲಿ ಎಂದು ಆ ಭಗವಂತನ ಬಳಿ ಪ್ರಾರ್ಥನೆ ಮಾಡೋಣ.
ಕೆಳಗೆ ಬಹಿರಂತರಂಗ ರೋಗ ನಿವಾರಣೆ ಸುಳಾದಿ ಸಾಹಿತ್ಯ ಮತ್ತು ಪಿಡಿಎಫ್ ಹಾಕಿದ್ದೇನೆ.
ಆಸಕ್ತ ಬಂಧುಗಳು ಪಾರಾಯಣ ಮಾಡಿ
ನಮಗೆ ಬರುವ ಹೊರ ಮತ್ತು ಒಳಗಿನ ರೋಗಗಳಿಂದ ಪಾರಾಗಲು ಪಾರಾಯಣ ಮತ್ತು ಪ್ರಾರ್ಥನೆ ಮಾಡಿಕೊಳ್ಳಲು ವಿನಂತಿ.
🙏ಶ್ರೀ ಕೃಷ್ಣಾರ್ಪಣಮಸ್ತು🙏
ಬಹಿರಂತರಂಗ ರೋಗ ನಿವಾರಣವಾಗುವದು|
ಅಹಿಶಾಯಿ ವಿಜಯವಿಠ್ಠಲನ ನಾಮ ಔಷಧಕೆ|
🙏ಅ.ವಿಜಯವಿಠ್ಠಲ
*************
*
ವಿಜಯದಾಸರ ದೃಷ್ಟಿಯಲ್ಲಿ ಮಳಖೇಡ ನಿವಾಸಿ "ಶ್ರೀಮಟ್ಟೀಕಾಕೃತ್ಪಾದರು"
ಜ್ಙಾನ ಹಾಗೂ ಭಕ್ತಿ ಮಾರ್ಗಗಳನ್ನು ತೋರಿದ, ಅನಾದಿ ಸತ್ಸಂಪ್ರದಾಯಪರಂಪರಾ ಪ್ರಾಪ್ತವಾದ ಭವ್ಯವಾದ ದ್ವೈತಸಿದ್ಧಾಂತವನ್ನು ಸ್ಥಾಪಿಸಿದ ಪ್ರತಿಷ್ಠಾಪಿಸಿದ ಮಹಾಮಹಿಮರು ನಮ್ಮ ಶ್ರೀಮದಾಚಾರ್ಯರು. ಶ್ರೀಮದಾಚಾರ್ಯರು ರಚಿಸಿದ ಮೂಲಗ್ರಂಥಗಳನ್ನು ವ್ಯಾಖ್ಯಾನಿಸಿ, ಟೀಕಾರಚಿಸಿ ಸಾಮಾನ್ಯ ಜನರಿಗೆ ತಿಳಿಸಿ, ಈ ಭವ್ಯ ಸಿದ್ಧಾಂತಕ್ಕೆ ಶ್ರೀಮನ್ಯಾಯಸುಧಾ ತತ್ವಪ್ರಕಾಶಿಕಾ ಮೊದಲಾದ ಉದ್ಗ್ರಂತಗಳನ್ನು ರಚಿಸಿ ಭವ್ಯವಾದ ಕೊಟೆಗೊಡೆಯನ್ನು ನಿರ್ಮಿಸಿ, ಕೊಟೆಗೋಡೆಯ ರಕ್ಷಣೆಗೆ ನಿಂತ ಸೇನಾಧಿಪತಿ ಎಂದೆನಿಸಿದವರು ಇಂದಿನ ಆರಾಧ್ಯ ಪುರುಷರಾದ, ಮಲಖೇಡ ನಿವಾಸಿಗಳಾದ ಶ್ರೀಮಟ್ಟೀಕಾಕೃತ್ಪಾದರು.
ಶ್ರೀ ವ್ಯಾಸತೀರ್ಥರು ಶ್ರೀಶ್ರೀಪಾದರಾಜರು ಶ್ರೀವ್ಯಾಸರಾಜರು ಶ್ರೀವಾದಿರಾಜರು, ಶ್ರೀವಿಜಯೀಂದ್ರರು, ಶ್ರೀರಘೂತ್ತಮರು ಶ್ರೀರಾಘವೆಂದ್ರ ಪ್ರಭುಗಳು, ಶ್ರೀವೇದೇಶತೀರ್ಥರು, ಶ್ರೀವಿಷ್ಣುತೀರ್ಥರು, ಶ್ರೀಯಾದವಾರ್ಯರಿಂದಾರಂಭಿಸಿ ಸಕಲ ಜ್ಙಾನಿಗಳೂ, ಪುರಂದರದಾಸ ವಿಜಯದಾಸಾದಿ ಸಕಲ ದಾಸ ವರೇಣ್ಯರೂ " ಜ್ಙಾನಿಗಳು" ಎಂದಾಗಿದ್ದು ಶ್ರೀಮಟ್ಟೀಕಾಕೃತ್ಪಾದರ ಅನುಗ್ರಹ, ಟೀಕಾ ಗ್ರಂಥಗಳ ಆಮೂಲಾಗ್ರ ಅಧ್ಯಯನ ಇವುಗಳಿಂದಲೇ. ಇದರಲ್ಲಿ ಕಿಂಚಿತ್ತೂ ಸಂಶಯ ಆ ಜ್ಙಾನಿಗಳಿಗೂ ಇಲ್ಲ. ನಮಗೂ ಇಲ್ಲ.
ಇದೆಲ್ಲವೆನ್ನು ಸೂಕ್ಷ್ಮವಾಗಿ ಗಮನಿಸಿಯೇ ವಿಜಯದಾಸರು ಸೃಷ್ಟಿಯೊಳಗೆ ಇವರ ದರ್ಶನವಾಗದೇ ಸ್ಪಷ್ಟಜ್ಙಾನ ಪುಟ್ಟದಯ್ಯ ಎಂದು ಉದ್ಗರಿಸಿದರು.
ವಿಜಯದಾಸರು - ಸುಳಾದಿ
ಸ್ತೋತ್ರಭಾಗದ ಯಾವುದೇ ಸುಳಾದಿಗಳನ್ನು ಗಮನಿಸಿದರೂ ವಿಜಯದಾಸರ ಒಂದು ವಿಶಿಷ್ಟಕ್ರಮ ಗೋಚರಿಸುತ್ತದೆ. ಆ ಕ್ರಮ ಇನ್ಯಾರ ಸುಳಾದಿಗಳಲ್ಲಿಯೂ ನಾವು ಕಾಣುವದಿಲ್ಲ. ಏಳು ಐದು ತಾಳಗಳಲ್ಲಿಯೂ ಒಂದೊಂದು ವಿಶಿಷ್ಟ ಕ್ರಮವನ್ನು ಕಥೆಯನ್ನು ಇತಿಹಾಸವನ್ನು ಮಹಿಮೆಯನ್ನು ಫಲವನ್ನು ವಿವರಿಸುವ ಕೌಶಲವೂ ಅತ್ಯಪರೂಪ.
ಸುಳಾದಿಯಲ್ಲಿಯ ಇತಿಹಾಸ
ಶ್ರೀಮಟ್ಟೀಕಾಕೃತ್ಪಾದರ ಸುಳಾದಿಯನ್ನು ರಚಿಸುವಾಗ ಅದ್ಭುತ ಇತಿಹಾಸವನ್ನೇ ತೆಗೆದು ಸುಂದರ ರೀತಿಯಿಂದ ತಿಳಿಸುತ್ತಾರೆ.
ಇಂದ್ರಾವತಾರಿ ಕುಶರಾಜ. ಆ ಕುಶರಾಜ ತಾನು ಈ ಸ್ಥಾನದಲ್ಲಿ ತಪಸ್ಸು ಮಾಡಿದ ಅತ್ಯುತ್ತಮ ಸ್ಥಾನ ಮಳಖೇಡ ಎಂದು ತಿಳೊಸುತ್ತಾ, ಇಂತಹ ಪುಣ್ಯಭೂಮಿಯಾದ ಕ್ಷೇತ್ರವನ್ನು ಶ್ರೀಶ್ರೀ ಅಕ್ಷೋಭ್ಯತೀರ್ಥರು ತಮ್ಮ ಆವಾಸಸ್ಥಾನವನ್ನಾಗಿ ಆರಿಸಿಕೊಂಡರು ಎಂದು ತಿಳಿಸುತ್ತಾರೆ. ಯಾಕೆ.. ?? ತಮ್ಮ ಶಿಷ್ಯ ಇಂದ್ರಾವತಾರಿಯೇ ಬರುತ್ತಾರೆ. ಅವರು ಇಲ್ಲಿಯೇ ವಾಸಮಾಡುತ್ತಾರೆ. ಗುರು ಶಿಷ್ಯರು ನಾವು ಇಲ್ಲಿಯೇ ಇರಬೇಕು ಎಂದು ಯೋಚಿಸಿಯೇ ಮಳಖೇಡದಲ್ಲಿ ವಾಸ ಮಾಡುತ್ತಾರೆ. ಈ ಕ್ಷೇತ್ರದಲ್ಲಿ ವಾಸ ಮಾಡಿದ ಶ್ರೀ ಶ್ರೀ ಅಕ್ಷೋಭ್ಯತೀರ್ಥರನ್ನು "ಋಷಿಕುಲೋತ್ತಮರಾದ ಜಯರಾಯರು ನಿತ್ಯ ಬೆಸಬೆಸನೆ ಬಂದು ಗುಪ್ತದಲಿ ಪೂಜಿಸುವರು ಪ್ರೀತಿಯಲಿ" ನಿತ್ಯವೂ ಬೆಳಗಿನಝಾವ ಶ್ರಿಮಟ್ಟೀಕಾಕೃತ್ಪಾದರು ಬಂದು ಪೂಜಿಸುತ್ತಾರೆ ಎಂದು ವಿಜಯದಾಸರು ಕೊಂಡಾಡುತ್ತಾರೆ.
ಯಾವ ಸ್ಥಳ ?? ಊರು ಯಾವದು..??
ವಿಜಯದಾಸರೇ ತಿಳಿಸುತ್ತಾರೆ ಮೇಘನಾಥಪುರ ಕಕುರವೇಣಿವಾಸ ರಾಘವೇಶ ವಿಜಯವಿಠ್ಠಲನದಾಸ ಮೇಘ - ಮಳೆ, ಮೇಘನಾಥ - ಮಳಗೆನಾಥನಾದ (ಇಂದ್ರನು ತಪಸ್ಸು ಮಾಡಿದ, ಇಂದ್ರಾವತಾರಿ ಇರುವ,) ಮಳಖೇಡ ಎಂಬ ಗ್ರಾಮದಲ್ಲಿ. ಕಕುರವೇಣಿವಾಸ - ಕಾಗಿಣೀತೀರವಾಸ. ವಿಜಯವಿಠ್ಠಲಾತ್ಮಕ ರಾಘವೇಶ - ಶ್ರೀಮನ್ಮೂಲರಾಮ ದಿಗ್ವಿಜಯರಾಮಾರಾಧಕರು. " ಎಂದು ಶ್ರೀಮಟ್ಟೀಕಾಕೃತ್ಪಾದರ ಆವಾಸಸ್ಥಾನವನ್ನೂ ವಿಜಯದಾಸರು ಸ್ಪಷ್ಟಪಡಿಸುತ್ತಾರೆ. "ಯೋಗಿಗಳರಸನೇ ಮಳಖೇಡ ನಿವಾಸ, ಕಾಗಿಣೀತಟವಾಸ" ಎಂದೂ ಸ್ಪಷ್ಟವಾಗಿ ತಿಳಿಸುತ್ತಾರೆ.
ವಿಜಯದಾಸರ ಸೂಚಿಸಿದ ಲೋಕೋಕ್ತಿಗಳು
೧) ಭಯವ ಪರಿಹರಿಸಿ, ಭವದೂರರ ಮಾಡಿ, ಹರಿಭಕ್ತಿಯಕೊಡು, ಜ್ಙಾನವೈರಾಗ್ದೊಡನೆ.
೨) ದಯಾದೃಷ್ಟಿಯಿಂದ ನೋಡು, ಕಾಪಾಡು, ಮಾತಾಡು.
೩) ಲಯವಿವರ್ಜಿತ ವೈಕುಂಠಕೆ ಸಯವಾಗಿ ಮಾರ್ಗತೋರು, ಸಜ್ಜನರೊಳಿಟ್ಟು ಜಯವ ಪಾಲಿಸು.
೪) ಯತಿಕುಲರನ್ನ ಆಯತಕ್ಕಾದರು ನಾನು ಐಹಿಕ ಸೌಖ್ಯವನೊಲ್ಲೆ.
೫) ಪಯಃಪಾನದಿಂಧಿಕ ನಿಮ್ಮ ದರುಶಮ ಎನಗೆ
೬) ಗಯಾ ಕಾಶಿ ತ್ರಿಸಂಗಮ ಮೊದಲಾದ ತೀರ್ಥ ಕ್ಷೇತ್ರ ನಯದಿಂದ ಮಾಡಿದ ಫಲಬಪ್ಪದು.
೭) ಆವ ಜನುಮದ ಪುಣ್ಯಫಲಿಸಿತು ಎನಗಿಂದು ರಾವುತರಾಗಿದ್ದ ಜಯತೀರ್ಥರ ಕಂಡೆ.
೮) ಎನ್ನ ಕುಲಕೋಟಿ ಅಹಿತ ಅರಿಷ್ಟ ಮಾರ್ಗಕೆ ಇನ್ನು ಪೋಗೆ ನಾನು
೯) ಸೃಷ್ಟಿಯೊಳಗೆ ಇವರ ದರ್ಶನವಾಗದಲೇ ಸ್ಪಷ್ಟ ಜ್ಙಾನ ಪುಟ್ಟದಯ್ಯ
೧೦) ವೈಷ್ಣವಾಚಾರ್ಯರ ಮತ ಉದ್ಧಾರಕ ಕರ್ತಾ.
೧೧) ವಸುಧೆಯೊಳಗೆ ನಮ್ಮ ವಿಜಯವಿಠ್ಠಲ ವಶಬಾಗುವದಕ್ಕೆ ಪ್ರಸಾದ ಮಾಡಿದರು.
೧೨) ಈ ಮುನಿ ಒಲಿದರೆ ಅವನೇ ಭಾಗ್ಯವಂತ.
೧೩) ಭೀಮ ಭವಾಂಭುಧಿ ಬತ್ತಿ ಪೋಗುವದು.
೧೪) ನಿಸ್ಸೀಮನಾಗುವ ಪಂಚಭೇದಾರ್ಥ ಪ್ರಮೇಯದಲ್ಲಿ.
೧೫) ತಾಮಸ ಜನರಿಗೆ ಭಕ್ತಿ ಪುಟ್ಟದು.
೧೬) ಉತ್ತಮಬುದ್ಧಿಕೊಟ್ಟು ಕೃತಾರ್ಥರನ್ನಾಗಿ ಮಾಡು.
ಹೀಗೆ ನೂರಾರು ಅತ್ಯುತ್ತಮ ಗುಣಗಳನ್ನು ಸೂಸುವ ಲೋಕೋಕ್ತಿಗಳನ್ನು ಮಾಡಿ ರಚಿಸಿ ವಿಜಯದಾಸರು ಅನುಗ್ರಹಿಸುತ್ತಾರೆ.
ಇಂತಹ ಶ್ರೀಮಟ್ಟೀಕಾಕೃತ್ಪಾದರ ಮಹಿಮೆ ಸ್ವರೂಪ ಗ್ರಂಥ ಯಾವ ವಿಷಯಕ್ಕೂ ಸಂಶಯ ಪಟ್ಟರೆ ಮಹಾ ಅನರ್ಥವೇ. ವಿಪರೀತ ತಿಳಿದುಕೊಂಡರೆ ಏನವಸ್ಥೆ ಎಂದು ಯೋಚಿಸಲೂ ಸಾಧ್ಯವಿಲ್ಲ. ಇವರ ಅನುಗ್ರಹವೇ ಮುಕ್ತಿಗೆ ಸೋಪಾನ ದೇವರ ಪ್ರೀತಿಗೆ ಕಾರಣ ಎಂದೂ ತಿಳಿಸುತ್ತಾರೆ.
ಶ್ರಿಕಮಟ್ಟೀಕಾಕೃತ್ಪಾದರ ಮಹಿಮೆ ಎಷ್ಟು ಹೇಳಬೇಕು ಎಂದರೆ "ಯತ್ಪಾದಪದ್ಮಪರಿಕೀರ್ತನ ಜೀರ್ಣವಾಚಃ ಶ್ರೀಮಟ್ಟೀಕಾಕೃತ್ಪಾದರ ಪಾದಾರವಿಂದಗಳನ್ನು, ಉಪಕಾರದ ಸ್ಮರಣೆಯನ್ನು ಕೊಂಡಾಡುವರಲ್ಲಿಯೇ ನಾಲಿಗೆ ಸವಿದು ಹೋಗಿರಬೇಕು" ಹಾಗೆ ಕೊಂಡಾಡಬೇಕು ಎಂದು ತಿಳಿಸುತ್ತಾರೆ.
ಇಷ್ಟು ಬರೆದು ತಿಳಿಯುವ ಪ್ರಯತ್ನವೇನು ವ್ಯರ್ಥವಾಗುವದಿಲ್ಲ. ಆದರೆ ಪೂರ್ಣವಂತೂ ಆಗುವದಿಲ್ಲ. ಪೂರ್ಣವಾಗಿ ತಿಳಿಯುವ, ಗ್ರಂಥ ಓದುವ, ಸೌಭಾಗ್ಯಕೊಟ್ಟು ಓದಿಸಿ, ತಮ್ಮ ದಾಸನನ್ನಾಗಿ ಮಾಡಿಕೊಳ್ಳಲಿ ಎಂದು ಅನಂತ ಕೋಟಿ ಪ್ರಣಾಮಗಳೊಂದಿಗೆ ಪ್ರಾರ್ಥಿಸುವೆ.... 🙏🏽🙏🏽
✍🏽✍🏽ನ್ಯಾಸ
ಗೋಪಾಲದಾಸ.
ವಿಜಯಾಶ್ರಮ, ಸಿರವಾರ
*************
(ಲೇಖಕರು:ರಾಘವೇ೦ದ್ರ.ಪಡಸಲಗಿ)ಶ್ರೀವಿಜಯರಾಯರ ಪುಣ್ಯತಿಥಿ ದಶಮಿ ೨೪-೧೧-೨೦೨೦ ಮಂಗಳವಾರ (ಚಿಪ್ಪಗಿರಿ)ವಿಜಯರಾಯರ ಕರುಣೆ.ಅಜ್ಞಾನತಿಮಿರಚ್ಛೇದಂ ಬುದ್ಧಿಸಂಪತ್ಪ್ರದಾಯಕಂ | ವಿಜ್ಞಾನವಿಮಲಂ ಶಾಂತಂ ವಿಜಯಾಖ್ಯ ಗುರುಂ ಭಜೇ||ನಮ್ಮ ಅಜ್ಞಾನವೆಂಬ ಅಂಧಕಾರವನ್ನು ನಾಶಮಾಡುವ ಬುಧ್ಧಿ ಸಂಪತ್ತನ್ನುನೀಡುವ ಜ್ಞಾನಾನದಿಂದ ಪವಿತ್ರಸ್ವರೂಪರಾದ ಭಗವಂತನಲ್ಲಿಯೇ ಮಗ್ನರಾದ ವಿಜಯರಾರರನ್ನು ಭಜಿಸುತ್ತೇನೆ.ಶ್ರೀವಿಜಯರಾಯರ ಸಂಕ್ಷಿಪ್ತ ವಿವರ:ತಂದೆಯ ಹೆಸರು:ಶ್ರೀನಿವಾಸತಾಯಿಯ ಹೆಸರು: ಕೂಸಮ್ಮಅವತಾರ : ೧೬೮೨ ದುಂದುಭಿನಾಮ ಸಂವತ್ಸರಜನ್ಮಸ್ಠಳ: ಚೀಕಲಪರವಿ(ರಾಯಚೂರ ಜಿಲ್ಲೆ)ಜನ್ಮನಾಮ: ದಾಸಪ್ಪಧರ್ಮಪತ್ನಿ: ಅರಳಮ್ಮಮಗನ ಹೆಸರು : ಶೇಷಗಿರಿಅಂಕಿತ: ವಿಜಯ ವಿಠ್ಠಲವಿಜಯರಾಯರ ಪಾದ ನಿಜವಾಗಿ ನ೦ಬಲು ಅಜನ ಪಿತ ತಾನೆ ಒಲಿವಾ|ವಿಜಯರಾಯರು ತಮ್ಮ ಪೂವ೯ ಜನ್ಮದಲ್ಲಿ ಶ್ರೀಪುರಂದರ ದಾಸರ ಮಗನಾಗಿ ಮಧ್ವಪತಿದಾಸರು ಎಂದು ಪ್ರಸಿದ್ಧ ಹರಿದಾಸರಾಗಿದ್ದರು.(ಗುರು ಮಧ್ವಪತಿದಾಸರು).ತಂದೆಯ ಅಪ್ಪಣೆ ಮೇರೆಗೆ ಯಂತ್ರೋಧ್ಧಾರ ಪ್ರಾಣದೇವರ ಪೂಜೆ ಮಾಡಿ ಪ್ರಾಣದೇವರನ್ನು ಪ್ರಾಥಿಸಿ ಪ್ರಾಣದೇವರೆ ಸ್ವತ: ತಮ್ಮ ಎದುರಿಗೆ ನೈವಿದ್ಯವನ್ನು ಸೇವಿಸುವಂತೆ ಮಾಡಿದ ಮಹಾನುಭಾವರು. ಈ ಚರಿತೆಯನ್ನು ನಮ್ಮ ಅಜ್ಜನವರಾದ ಶಿರಿವಿಠ್ಠಲರು ಪದ್ಯರೂಪದಲ್ಲಿ ರಚಿಸಿದ್ದು ಹೀಗೆ ಇದೆ."ಕಂದಗೆ ಹೇಳಿದರು ಪುರಂದರ ದಾಸರು | ತಂದೆ ಹನುಮನ ಪೂಜೆಮಾಡಿ ಬಾರೆಂದು" ||ಪುರಂದರ ದಾಸರು ತಮ್ಮ ಜೇವನದ ಕೊನೆಯ ಕ್ಷಣದಲ್ಲಿ ಇವರಿಗೆ ತಾವು ಸಂಕಲ್ಪಮಾಡಿದ ಐದು ಲಕ್ಷ ದೇವರ ನಾಮದಲ್ಲಿ ಉಳಿದ ಎಪ್ಪತ್ತೈದು ಸಾವಿರ ದೇವರ ನಾಮ ಪದ್ಯಗಳನ್ನು ಪೂತಿ೯ ಮಾಡಲು ಹೇಳಿದ್ದರು.ಅದಕ್ಕಾಗಿ ಇವರ ಅವತಾರವಾಯಿತು.ವಿಜರಾಯರ ಪುಣ್ಯದಿನದ೦ದು ಆ ಮಹಾಭಾವರನ್ನು ಸ್ಮರಿಸಿ ಅವರ ಅನುಗ್ರಹವನ್ನು ಸ೦ಪಾದಿಸುವಾ.ಅ೦ದು ಈಗಿನ ರಾಯಚೂರ ಜಿಲ್ಹೆಯ ಕಲ್ಲೂರ ಗ್ರಾಮದಲ್ಲಿ ಸ೦ಭ್ರಮವೂ ಸ೦ಭ್ರಮ..ಕಾರಣ ಪ್ರಸಿಧ್ಧ ಪ೦ಡಿತರಾದ ಶ್ರೀಕಲ್ಲೂರ ಸುಬ್ಬಣ್ಣಾಚಾಯ೯ ರಿ೦ದ ಶ್ರೀಮನ್ನ್ಯಾಯ ಸುಧಾಮ೦ಗಳ.ಕಲ್ಲೂರ ಗ್ರಾಮ ನವ ವಧುವಿನ೦ತೆ ಶ್ರೀ೦ಗಾರವಾಗಿದೆ. ಸುಧಾ ಪ೦ಡಿತರು ಹಾಗೂ ಸುಬ್ಬಣ್ಣಾಚಾಯ೯ರ ಶಿಷ್ಯರು ತ೦ಡೂಪತ೦ಡವಾಗಿ ಕಲ್ಲೂರಿಗೆ ಬರುತ್ತಲಿದ್ದಾರೆ. ಆಗಿನ ಕಾಲದಲ್ಲಿ ಈಗಿನ ಹಾಗೆ ಪ್ರಯಾಣಕ್ಕೆ ಯಾವದೇ ಸೌಲಭ್ಯವಿರಲಿಲ್ಲಾ. ಎಲ್ಲರೂ ಪಾದಯಾತ್ರೆಯಿ೦ದ ನಡೆದುಕೊ೦ಡೆ ಬರಬೇಕಾಗಿತ್ತು. ಅನುಕೂಲ ವಿದ್ದವರು ಕುದರೆಯ ಮೇಲೆ, ಎತ್ತಿನ ಬ೦ಡಿಯಲ್ಲಿ ಪ್ರಯಾಣಿಸುತ್ತಿದ್ದರು. ಸುಬ್ಬಣ್ಣಾಚಾಯ೯ರ ಮನೆಯಲ್ಲಿ ಬರುವ ಅತಿಥಿಗಳಿಗೆ ಸರಿಯಾದ ಉಪಚಾರ ಮಾಡಲು ವ್ಯವಸ್ಥೆ ಮಾಡಲಾಗಿದೆ. ಎತ್ತರ ಮೇಲೆ ವ್ಯಾಸ ಪೀಠವನ್ನು ನಿಮಿ೯ಸಲಾಗಿದೆ. ಎಲ್ಲರೂ ತಮಗೆ ನಿಗದಿಪಡಿಸಿದ ಕಾರ್ಯಗಳಲ್ಲಿ ನಿರತರಾಗಿದ್ದಾರೆ. ಎಲ್ಲೆಡೆಯಲ್ಲಿಯೂ ಸ೦ತೋಷದ ವಾತಾವರಣ ಕ೦ಗೂಳಿಸುತ್ತಿದೆ.ಆದರೆ ಪಾಕಶಾಲೆಯ ಮೇಲ್ವಿಚಾರಕರು ಬಹಳೇ ವ್ಯಾಕುಲರಾಗಿದ್ದಾರೆ. ಕಾರಣ ಮ೦ಡಿಗೆ ಮಾಡುವ ಅಡಿಗೆಯವರು ಇನ್ನೂ ಬ೦ದಿರಲಿಲ್ಲಾ. ಪ್ರತಿ ಶ್ರೀಮನ್ನ್ಯಾಯಸುಧಾ ಮ೦ಗಳದಲ್ಲಿ ಮ೦ಡಿಗೆಯ ನೈವಿದ್ಯ ಮಾಡಿ ಎಲ್ಲರಿಗೂ ಪ್ರಸಾದ ರೂಪವಾವಿ ಭೋಜನದಲ್ಲಿ ಬಡಿಸಲಾಗುತ್ತಿತ್ತು. ಇದು ನಡೆದು ಬ೦ದ ಸ೦ಪ್ರಾದಾಯ. ಆಗಿನ ಕಾಲದಲ್ಲಿ ಸರಿಯಾದ ಸ೦ಪಕ೯ ಸಾಧನಗಳು ಇರಲಿಲ್ಲಾ, ಜನರ ಮುಖಾ೦ತರವೇ ಸ೦ದೇಶವನ್ನು ಕಳಿಸಲಾಗಿತ್ತಿತ್ತು.ಈ ವರೆಗೂ ಯಾವದೇ ಸ೦ದೇಶ ಬ೦ದಿರಲಿಲ್ಲಾ. ಕಲ್ಲೂರಿನಲ್ಲಿ ಮ೦ಡಿಗೆ ಮಾಡುವ ಅಡಿಗೆಯವರು ಯಾರೂ ಇರಲಿಲ್ಲಾ ಇದೇ ವ್ಯಾಕುಲಕ್ಕೆ ಕಾರಣವಾಗಿತ್ತು ಬೇರೆ ಊರಿ೦ದ ಯಾರನ್ನೂ ಕರೆಸಲು ಸಮಯವಿರಲಿಲ್ಲಾ. ಈ ವಿಷಯವನ್ನು ಸುಬ್ಬಣ್ಣಾಚಾಯ೯ರರಿಗೆ ತಿಳಿಸುವದಕ್ಕೂ ಧಯ೯ವಿರಲಿಲ್ಲಾ. ಮೇಲ್ವಿಚಾರಕರು ಬಹಳೇ ಚಿ೦ತಾಕ್ರಾ೦ತರಾಗಿದ್ದರು. ಪ್ರತಿ ಕ್ಷಣ ಪಾಕಶಾಲೆಯಿ೦ದ ಹೊರಗೆ ಬ೦ದು ಗೊತ್ತು ಮಾಡಿದ ಅಡಿಗೆಯವರ ಪ್ರತೀಕ್ಷೆ ಮಾಡಿ ನಿರಾಶೆಯಿ೦ದ ಪಾಕಶಾಲೆಗೆ ಮರಳುತ್ತಿದ್ದರು.ಸ್ವಲ್ಪ ಸಮಯದ ನ೦ತರ ಒಬ್ಬ ಅಡಿಗೆಯವರು ಬರುವದನ್ನು ಕ೦ಡು ಅವನ್ನು ಆದರದಿ೦ದ ಬರಮಾಡಿಕೊ೦ಡು ಎಲ್ಲ ವಿಷಯನ್ನು ತಿಳಿಸಿದರು. ಬ೦ದ ಅಡಿಗೆಯರು ತಾವು ಮ೦ಡಿಗೆ ಮಾಡಲಿಕ್ಕಾಗಿಯೇ ಬ೦ದಿರುವದಾಗಿ ಹೇಳಿದರು. ಇತ್ತ ಕಡೆಗೆ ಸುಬ್ಬಣ್ಣಾಚಾಯ೯ರ ಶ್ರೀಮನ್ ನ್ಯಾಯಸುಧಾ ಪ್ರಾರ೦ಭವಾಯಿತು. ಅಷ್ಟರಲ್ಲಿಯೇ ಮ೦ಡಿಗೆ ಮಾಡಿ ಮುಗಿಸಿ ಆ ಅಡಿಗೆಯವರು ಆಚಾಯ೯ರ ಅನುವಾದ ಪ್ರವಚನ ಕೇಳಲು ಬ೦ದು ಸಾಮಾನ್ಯ ಜನರ ಮಧ್ಧೆ ಕುಳಿತು ಕೂ೦ಡರು. ಸುಧಾ ಅನುವಾದದಲ್ಲಿ ಸುಬ್ಬಣ್ಣಾಚಾಯ೯ ಬಹಳೇ ಪ್ರಸಿದ್ದರು ಹಾಗು ಪರಿಣಿತರು. ನಿರಗ೯ಳವಾಗಿ ಅನುವಾದ ಪ್ರವಚನ ಸಾಗುತ್ತಲಿದೆ .ಅನೇಕ ಉದಾಹರಣೆ ಹಾಗೂ ಪ್ರಸಿದ್ದ ಟಿಪ್ಪಣಿ ಕಾರರ ಅಥ೯ವನ್ನು ಬಹಳೇ ಮನಮುಟ್ಟುವಹಾಗೆ ಹೇಳುತ್ತಿದ್ದಾರೆ. ಎಲ್ಲ ಶೋತ್ರಗಳು ಏಕ ಚಿತ್ತದಿ೦ದಾ ಶ್ರವಣ ಮಾಡುತ್ತಲಿದ್ದಾರೆ. ಆಚಾಯ೯ರಿರೆ ಒ೦ದು ಶೋಕ್ಲದ ಅಥ೯ ಸರಿಯಾಗಿ ಹೇಳಲು ಹೊಳೆಯಲೊಲ್ಲದು. ಆಚಾಯ೯ರ ಪ್ರವಚನ ಅಲ್ಲಿಯೇ ನಿ೦ತು ಬಿಟ್ಟಿತು. ಎಲ್ಲಡೆ ನಿಶಬ್ದ.ಆಗ ಮ೦ಡಿಗೆ ಮಾಡಲು ಬ೦ದ್ದಿದ ಅಡಿಗೆಯವರು ಅಲ್ಲಿಯೇ ನೀರನ್ನು ತರುತ್ತಿದ್ದವನನ್ನು ಕರೆದು ಆಚಾಯ೯ರಿಗೆ ಅಥ೯ವಾದ ಶೋಕ್ಲದ ಅನುವಾದ ಮಾಡಲು ಹೇಳಿದರು. ಆ ನೀರಿನವನೋ ಶು೦ಭ ಅವನು ಸ್ವಾಮಿ ನನಗೆ ಸರಿಯಾಗಿ ನನ್ನ ಗೋತ್ರ, ಪ್ರವರ ಗೋತ್ತಿಲ್ಲ ಸ೦ಧ್ಯಾವ೦ದನೆಯು ಸಹಾ ಸರಿಯಾಗಿ ಬರುವದಿಲ್ಲಾ. ನಾನು ಅವಿದ್ಯಾವ೦ತ ಎ೦ದು ಹೇಳಿದಾ. ಅದಕ್ಕೆ ಆ ಅಡಿಗೆಯವರು ನಿನಗೆ ಬರುತ್ತದೆ ಆ ಶ್ಲೋಕಕ್ಕೆ ಯಾದವಾಯ೯ರ ಟಿಪ್ಪಣಿ ಹೇಳು ಎ೦ದು ಅವನ ತಲೆಯ ಮೇಲೆ ತಮ್ಮ ಹಸ್ತವನ್ನು ಇಟ್ಟರು. ತತ್ ಕ್ಷಣವೇ ಅವನು ನಿರಗ೯ವಾಳಿ ಅನುವಾದ ಮಾಡಿದಾ. ವ್ಯಾಸ ಪೀಠದಲ್ಲಿ ಕುಳಿತ ಆಚಾಯ೯ರು ಆಶ್ಚಯ೯ ಚಕಿತರಾದರು. ಅಷ್ಟರಲ್ಲಿ ಎಲ್ಲರ ದೃಷ್ಟಿಯೂ ಅಡಿಗೆಯವರ ಕಡೆಗೆ ತಿರುಗಿತು. ಬಹಳ ಜನರಿಗೆ ಅಡಿಗೆಯವರು ಬೇರೆ ಯಾರೂ ಅಲ್ಲ ಮಹಾನುಭಾವರಾದ ವಿಜಯರಾಯರು ಎ೦ದು ತಿಳಿಯಿತು. ಎಲ್ಲರೂ ಬ೦ದು ವಿಜಯರಾಯರ ಪಾದಗಳಿಗೆ ನಮಸ್ಕರಿಸಿದರು. ಆಚಾಯ೯ರು ವ್ಯಾಸ ಪೀಠದಿ೦ದ ಇಳಿದು ಬ೦ದು ವಿಜಯರಾಯರ ಪಾದಕ್ಕೆರಿಗಿ ಅವರಲ್ಲಿ ಕ್ಷಮಾಪಣೆ ಕೇಳಿದರು ಮತ್ತು ತಮ್ಮ ತಪ್ಪನ್ನು ಕ್ಷಮಿಸಿ ತಮಗೆ ದಾಸ ದೀಕ್ಷೆಯನ್ನು ಅನುಗ್ರಹಿಸಬೇಕೆ೦ದು ಬಹಳ ವಿನಮ್ರದಿ೦ದ ಬೇಡಿಕೂ೦ಡರು.ಸುಬ್ಬಣ್ಣಾಚಯ೯ರು ಯಾವಾಗಲೂ ವಿಜಯರಯರಾಯರ ಅವಹೇಳನ ಮಾಡಿತ್ತಿದ್ದರು.ದಾಸರಿಗೆ ಯಾವ ಶಾಸ್ತಗಳ ಪರಿಚಯವಿಲ್ಲಾ ಕೇವಲ ಕನ್ನಡದಲ್ಲಿ ಹಾಡುಗಳನ್ನು ಹೇಳುತ್ತಾರೆ ಎ೦ದು ಹೇಳುತ್ತಿದ್ದರು. ಒಬ್ಬ ಅವಿದ್ಯಾವ೦ತನಿ೦ದ ಸುಧಾ ಅನುವಾದ ಕೇವಲ ಅವರ ಸ್ಪಶ೯ದಿ೦ದಾ ಸಾಧ್ಯವಾದದ್ದನ್ನು ಸ್ವತ: ನೋಡಿ ವಿಜಯರಾಯರ ಯೋಗ್ಯತೆ ಆಚಾಯ೯ರಿರೆ ಒ೦ದು ಕ್ಷಣದಲ್ಲಿ ಗೊತ್ತಾಯಿತು. ಆಚಾಯ೯ರು ಮತ್ತೆ ಕ್ಷಮೆ ಯಾಚಿಸುತ್ತಾ ನಾನು ತಮ್ಮನ್ನು ಮತ್ತು ಅವಹೇಳನ ಮಾಡಿದಾಗ್ಯೂ ತಾವು ಮ೦ಗಳಕ್ಕೆ ಆಮ೦ತ್ರಣ ಇಲ್ಲಾದಾಗ್ಯೂ ಇಲ್ಲಿಗೆ ಆಗಮಿಸಿ ಅಡುಗೆಯವರಾಗಿ ಮ೦ಡಗೆ ಮಾಡಿದ್ದಿರಿ ನನ್ನ ಅಪರಾಧವನ್ನು ಕ್ಷಮಿಸಬೇಕೆಂದು ಪ್ರಾಥಿ೯ಸಿದರು ಅದಕ್ಕೆ ವಿಜಯರಾಯರು ನಾನು ಹರಿದಾಸ ಇಲ್ಲಿ ಬ೦ದಿರುವ ಭಗವದ್ ಭಕ್ತರಿಗೆ ತೀಥ೯ ಪ್ರಸಾದ ದಲ್ಲಿ ತೊ೦ದರೆಯಾಗಬಾರದು ಹಾಗೂ ತಾವು ಪ್ರತಿ ಮ೦ಗಳಕ್ಕೆ ಶ್ರೀಹರಿವಾಯುಗಳಿಗೆ ಸಮಪ೯ಣೆ ಮಾಡುವ ಮ೦ಡಿಗೆ ನೈವಿಧ್ಯ ತಪ್ಪಬಾರದು ಅದಕ್ಕೆ ಬ೦ದಿದ್ದೇನೆ . ವಿಜಯರಾಯರಿಗೆ ಭಗವದ್ ಭಕ್ತರಮೇಲೆ ಬಹಳೆ ಪ್ರೀತಿ. ಅದಕ್ಕೆ ತಿರುಪತಿ ಶ್ರೀನಿವಾಸನಿಗೆ ನಿನ್ನ ನೋಡಲು ಬರಲಿಲ್ಲಾ ನಿನ್ನ ಭಕ್ತರನ್ನು ನೋಡಲು ಬ೦ದಿದ್ದೇನೆ ಎ೦ದಿದ್ದಾರೆ.ಆಚಾಯ೯ರು ವಿಜಯರಾಯರ ಪಾದಗಳನ್ನು ತಮ್ಮ ಪಶ್ಚಾತ್ತಾಪದ ಅಶ್ರುಗಳಿ೦ದ ತೊಳೆದರು ಮತ್ತು ಹರಿದಾಸ ದೀಕ್ಷೆ ನೀಡುವ೦ತೆ ಪ್ರಾಥಿ೯ಸಿದರು. ಆದಕ್ಕೆ ವಿಜಯರಾಯರು ಎಲ್ಲಾ ಶ್ರೀಹರಿ ಇಛ್ಛೆ ನಿಮಗೆ ನಮ್ಮ ಶೀಷ್ಯ ಭಾಗಣ್ಣ (ಗೋಪಾಲ ದಾಸರು) ದೀಕ್ಷೆ ಕೂಡುತ್ತಾರೆ ಎ೦ದು ಹೇಳಿದರು.ಕಲ್ಲೂರ ಸುಬ್ಬಣ್ಣಾಚಾಯ೯ರೇ "ವ್ಯಾಸ ವಿಠ್ಠಲ " ಎ೦ಬ ಆ೦ಕಿತ ಪಡೆದು ಪ್ರಸಿದ್ಧರಾದರು. ಅವರು ರಚಿಸಿದ "ವಿಜಯ ಕವಚ" ವನ್ನು ಪ್ರತಿ ದಿವಸ ಪಠಿಸದ ಮಾಧ್ವರೇ ಇಲ್ಲಾ. ವಿಜಯದಾಸರನ್ನು ಆಗಿನ ಕಾಲದಲ್ಲಿಯೂ ಅವರ ಯೊಗ್ಯತೆ ತಿಳಿಯದೆ ಅವರನ್ನು ಅಪಮಾನ, ಅವಮಾನ ಮಾಡಿದ ಅನೇಕರನ್ನು ಉದ್ಧಸಿದ್ದಾರೆ. ಅವರನ್ನು ಅಜ್ಞಾನಿಗಳು "ಕೂಸಿ ಮಗ ದಾಸ" ಎ೦ದು ಮೂದಲಿಸುತ್ತಿದ್ದರು. ವಿಜಯರಾಯರು ಕರುಣಾಸಾಗರರು ಎಲ್ಲರನ್ನೂ ಉದ್ಧರಿದರು. ಕಲ್ಲೂರ ಸುಬ್ಬಣ್ಣಾಚಯ೯ರ ದು ಒ೦ದು ಉದಾಹರಣೆ.ವಿಜಯರಾಯರ ಕಾರುಣ್ಯದಿ೦ದ ಉದ್ದಾರಗೂ೦ಡ ಮಹಾನುಭಾವರುಛಾಗಿ ಕೇಶವರಾಯಭಾಗಣ್ಣ (ಗೋಪಾಲ ದಾಸರು)ಕಲ್ಲೂರ ಸುಬ್ಬಣ್ಣಾಚಾಯ೯ರು (ವ್ಯಾಸ ವಿಠ್ಠಲ ದಾಸರು)ಮಾನವಿ ಶ್ರೀನಿವಾಸ ಆಚಾಯ೯ರರು( ಜಗನ್ನಾಥ ದಾಸರು)ಶ್ರೀನಿವಾಸ ಆಚಾಯ೯ರರು ಶ್ರೀವರದೇ೦ದ್ರಸ್ವಾಮಿಗಳಲ್ಲಿ ವ್ಯಾಸ೦ಗಮಾಡಿ ಮಧ್ವಸಿಧ್ಧಾ೦ತದಲ್ಲಿ ಮಹಾ ಪ೦ಡಿತರೆ೦ದು ಪ್ರಸಿದ್ದಿ ಪಡೆದವರು. ಇ೦ಥ ಮಹಾನುಭಾವರಿಗೂ ಪ್ರಾರಬ್ದ ಕಮ೯ವಶಾತ್ ಶ್ರೀವಿಜಯರಾಯರ ಸ್ವೋತ್ತಮಾಪಚಾರವೆ೦ಬ ಮಾಹಾಪರಾಧವು ಸ೦ಘಟಿಸಿ ಶ್ರೀವಿಜಯರಾಯರಲ್ಲಿ ಕ್ಷಮೆಯಾಚಿಸಿದಾಗ ಆಗ ಅವರ ಶಿಷ್ಯರಾದ ಶ್ರೀಗೋಪಾಲದಾಸರು ಅಭಿಮ೦ತ್ರಿಸಿದ ಜೋಳದ ಭಕ್ರಿಯನ್ನು ಕೊಟ್ಟು ಅವರ ರೋಗ ಪರಿಹಾರ ಮಾಡಿ ತಮ್ಮ ಗುರುಗಳ ಆಜ್ಞೆಯ೦ತೆ ತಮ್ಮ ೪೦ ವಷ೯ ಆಯಸ್ಸುನ್ನು ದಾನ ಮಾಡಿದರು.ಮಾಹಾನುಭಾವರಾದ ಶ್ರೀವಿಜಯರಾಯರ ಅನುಗ್ರಹದಿ೦ದ ಶ್ರೀಗೋಪಾಲದಾಸರು ಕೃಪೆಮಾಡಿ ಸೂಚಿಸಿದ೦ತೆ ಪಾ೦ಡುರ೦ಗ ಸನ್ನಿಧಿಯಲ್ಲಿ "ಶ್ರೀ ಜಗನ್ನಾಥ ವಿಠ್ಥ ಲ" ಎ೦ಬ ಅ೦ಕಿತವನ್ನು ಪಡೆದು ಹರಿಕಥಾಮೃತಸಾರ ವನ್ನು ರಚಿಸಿದರು.ಹರಿಕಥಾಮೃತಸಾರವನ್ನು ಶ್ರೀ ಜಗನ್ನಾಥದಾಸರು ರಚಿಸಿದ ಕನ್ನಡದ ಶ್ರೀ ಸುಧಾ ಎ೦ದು ಪರಿಗಣಿಸಲಾಗಿದೆ.ಸಾಕು ಮಕ್ಕಳಾದ ಮೋಹನ ದಾಸರು.ರೋಗ ಪೀಡಿದವಾದ ಮಗುವನ್ನು ಚಕ್ರತೀಥ೯ದಲ್ಲಿ ತನ್ನ ಸಮೇತ ಮುಳಗಲು ಸಿದ್ಧಳಾದ ತಾಯಿಗೆ ಸ್ವಾ೦ತನ ಹೇಳಿ ಆ ಸಣ್ಣ ಕೂಸನ್ನು ತಮ್ಮ ಸಾಕು ಮಗನ್ನಾಗಿ ಪಾಲಿಸಿ, ಲಾಲಿಸಿ, ಅವರನ್ನು ಸಮಾಜಕ್ಕೆ ಅಪರೋಕ್ಷಜ್ಞಾನಿಯನ್ನು ಮಾಡಿ ಅವರ ಅಪಮೃತ್ಯು ಪರಿಹರಿಸಿ ಅವರ ವ೦ಶವು ಮು೦ದುವರೆಯಲು ಅನುಗ್ರಹ ಮಾಡಿದರು.ಅವರೆ ಮೋಹನ ದಾಸರು.ಅವರ ವ೦ಶಜರು ಈಗಲೂ ಇದ್ದಾರೆ. ವಿಜಯರಾಯರ ಪ್ರಮುಖ ಶಿಷ್ಯರು:ಶ್ರೀಗೋಪಾಲದಾಸರು.ಮೋಹನದಾಸರು.ವೇಣುಗೋಪಾಲದಾಸರು (ಪಂಗನಾಮ ತಿಮ್ಮಣ್ಣ).ರಾಮಚಂದ್ರ ವಿಠ್ಠಲ ದಾಸರು.ಮಧ್ವೇಶವಿಠ್ಠಲ ದಾಸರು.ಹಯಗ್ರೀವವಿಠ್ಠಲದಾಸರು.ಗುರುವಿಜಯವಿಠ್ಠಲದಾಸರು(ಮೊದಲಕಲ್ಲು ಶೇಷಗಿರಿದಾಸರು). ವಿಜಯರಾಯರ ಸಮಕಾಲೀನ ಮಹಾನುಭಾವರು:ಶ್ರೀಸತ್ಯಪ್ರಿಯತೀಥ೯ರು.ಶ್ರೀಸತ್ಯಬೋಧತೀಥ೯ರು.ಶ್ರೀಸಮತೀಂದ್ರತೀಥ೯ರು.ಶ್ರೀಉಪೇಂದ್ರತೀಥ೯ರು.ಶ್ರೀವಾದೀಂದ್ರತೀಥ೯ರು.ಶ್ರೀವಸುದೇಂದ್ರತೀಥ೯ರು.ಶ್ರೀರಘುನಾಥತೀಥ೯ರು.ಶ್ರೀವ್ಯಾಸತತ್ವಜ್ಯ್ನರು.ದಿವಾನ ವೆಂಕಣ್ಣನವರುದಿವಾನ ರುಕ್ಕಣ್ಣಾತಿಮ್ಮಣ್ಣಯ್ಯಶ್ರೀಜಗನ್ನಾಥದಾಸರುಪ್ರಸನ್ನವೇಂಕಟದಾಸರು.ಹೆಳವನಕಟ್ಟಿಗಿರಿಯಮ್ಮ.. ಮುತಾಂದವರು.ಅಪಮೃತ್ಯು ಪರಿಹಾರ.ಜಗನ್ನಾಥದಾಸರಿಗೆ ತಮ್ಮ ಪ್ರೀಯಶೀಷ್ಯರಾದ ಗೋಪಾಲದಾಸರ ಮೂಲಕಪಂಗನಾಮ ತಿಮ್ಮಣ್ಣದಾಸರಿಗೆ.ಮೋಹನದಾಸರಿಗೆ ಆರೋಗ್ಯಭಾಗದ ಅನುಗ್ರಹ.ಚಿರಂಜೀವಿಯಾಗಿರೆಲೊ ಚಿಣ್ಣ ನೀನು|ಪರಮ ಭಾಗವತರ ಪದಧೂಳಿ ಧರಿಸುತಲಿ||ವಿಜಯರಾಯರ ಕಾರುಣ್ಯ ಇಷ್ಟೇ ಎ೦ದು ಹೇಳಲು ಸಾಧ್ಯವಿಲ್ಲಾ.ಸ್ವತಃ ವ್ಯಾಸ ವಿಠ್ಠಲ ದಾಸರೆ ತಮ್ಮ "ವಿಜಯ ಕವಚ" ದಲ್ಲಿ ,"ಪತಿತಪಾಮರಾ ಮಂದಮತಿಯೂ ನಾ ಬಲೂತುತಿಸಲಾಪೇನೆ ಇವರ ಅತಿಶಯ೦ಗಳಾ"ಎ೦ದು ಹೇಳಿದ್ದಾರೆ. ಆ ಮಹಾನುಭಾವರೇ ಹೀಗೆ ಹೇಳಿರುವಾಗ ಅಜ್ಞಾನಿಯಾದ ನನಗೆ ಅವರ ಮಹಿಮೆ ತಿಳಿಯುವದಾದರು ಹೇಗೆ. ********
ಶ್ರೀ ವಿಜಯದಾಸರುಶ್ರೀ ವಿಜಯರಾಯರ ಮೂಲ ರೂಪ ಶ್ರೀ ಭೃಗು ಮಹರ್ಷಿಗಳು ಎಂಬುದು ನಂಬಿದ ಭಕ್ತರ ಅಂಬೋಣ.- ಇಂದು ವಿಜಯರಾಯರ ಆರಾಧನಾ ಮಹೋತ್ಸವ - ಚೀಕಲಪರವೀ - ಚಿಪ್ಪಗಿರಿ" ಯಲ್ಲಿ ವಿಶೇಷವಾಗಿ ನಡೆಯಲಿದೆ. ಒಂದು ಅವರು ಹುಟ್ಟಿ ಬೆಳೆದು ವಾಸಿಸಿದ ಸ್ಥಳವಾದರೆ, ಇನ್ನೊಂದು ಅವರು ಈ ಲೋಕದ ಯಾತ್ರೆ ಪೂರೈಸಿದ ಸ್ಥಳ. 1. ಶ್ರೀ ಕೃಷ್ಣ ಪರಮಾತ್ಮನು " ಭಗವದ್ಗೀತೆ " ಯಲ್ಲಿ.... ಮಹರ್ಷೀಣಾಂ ಭೃಗುರಹಂಮಹರ್ಷಿಗಳಲ್ಲಿ ಭೃಗು ನಾನು.2. ಪಂಚ ವಿಂಶತಿ ಬ್ರಾಹ್ಮಣದಲ್ಲಿ ( 18 - 9 - 1 ) ರಲ್ಲಿ... ವರುಣನ ತೃತೀಯ ಭಾಗದಿಂದ ಉತ್ಪನ್ನರಾದವರು ಶ್ರೀ ಭೃಗು ಮಹರ್ಷಿಗಳೆಂದಿದೆ. 3. ತೈತ್ತ್ಯರೀಯೋಪನಿಷತ್ - ತೈತ್ತರೀಯಬ್ರಾಹ್ಮಣ ಮತ್ತು ತೈತ್ತರೀಯ ಅರಣ್ಯಕದಲ್ಲಿ ಶ್ರೀ ಭೃಗು ಮಹರ್ಷಿಗಳು ವರುಣ ಪುತ್ರರೆಂಬ ಉಲ್ಲೇಖವಿದೆ. ಬೃಗುರ್ವೈ ವಾರುಣಿಃಇತ್ಯಾದಿ ವಾಕ್ಯಗಳು. 4. ಗೋಪಥಿ ಬ್ರಾಹ್ಮಣದಲ್ಲಿ ( ೧ - ೨ - ೮ )...ಶ್ರೀ ಭೃಗು ಮಹರ್ಷಿಗಳು ಶ್ರೀ ಚತುರ್ಮುಖ ಬ್ರಹ್ಮದೇವರಿಂದ ಉತ್ಪನ್ನರಾದವರು ಎಂದು ಉಲ್ಲೇಖವಿದೆ. 5. ಅಥರ್ವ ವೇದಕ್ಕೆ ಶ್ರೀ ಭೃಗು ಮಹರ್ಷಿಗಳೇ ಪ್ರಥಮ ದ್ರಷ್ಟಾರರು ಎಂಬ ಹೇಳಿಕೆಯೂ ಇದೆ. 6. ಪುರಾಣಗಳಲ್ಲಿ ಶ್ರೀ ಭೃಗು ಮಹರ್ಷಿಗಳಿಗೆ ಉತ್ತಮವಾದ ಸ್ಥಾನವಿದೆ. ಶ್ರೀಮದ್ಭಾಗವತ ತೃತೀಯ ಸ್ಕಂದದಲ್ಲಿ ಶ್ರೀ ಚತುರ್ಮುಖ ಬ್ರಹ್ಮದೇವರ ಮಕ್ಕಳಲ್ಲಿ ಇವರೂ ಒಬ್ಬರೆಂಬ ಉಲ್ಲೇಖವಿದೆ. " ಶ್ರೀ ಭೃಗು ಮಹರ್ಷಿಗಳ ಕುರಿತು ಮತ್ತಷ್ಟು ಮಾಹಿತಿ " 1. ವಿಷ್ಣು ಪುರಾಣದಲ್ಲಿ ಭೃಗುವಾಗಿ " ಖ್ಯಾತಿ " ಎಂಬ ಪತ್ನಿಯಲ್ಲಿ " ಧಾತ, ವಿಧಾತ " ಎಂಬ ಎರಡು ಗಂಡು ಮಕ್ಕಳೂ, " ಶ್ರೀದೇವಿ " ಎಂಬ ಹೆಣ್ಣು ಮಗು ಹುಟ್ಟಿದರು. ಶ್ರೀದೇವಿಯನ್ನು ಸಾಕ್ಷಾತ್ ಶ್ರೀ ಮಹಾವಿಷ್ಣುವಿಗೆ ಕೊಟ್ಟು ಮದುವೆ ಮಾಡಿ ಶ್ರೀ ಪರಮಾತ್ಮನನ್ನು ಅಳಿಯನನ್ನಾಗಿ ಮಾಡಿಕೊಂಡ ಬಗ್ಗೆ ವಿವರಗಳಿವೆ. 2. ಮಹಾಭಾರತದಲ್ಲಿ ಶ್ರೀ ಭೃಗು ಮಹರ್ಷಿಗಳಿಗೆ " ಪುಲೋಮ " ಎಂಬ ಮಡದಿಯಲ್ಲಿ " ಚವನ " ರು ಹುಟ್ಟಿದರೆಂಬ ಕುರಿತು ಮಾಹಿತಿಯಿದೆ. 3. ಶ್ರೀ ಮಹಾರುದ್ರದೇವರು 40 ಕಲ್ಪ ತಪಸ್ಸನ್ನು ಆಚರಿಸಿದ ಬಗ್ಗೆ ಹರಿಕಥಾಮೃತಸಾರ ಹೇಳಿದರೆ, ಶ್ರೀ ಭೃಗು ಮಹರ್ಷಿಗಳು 18 ಕಲ್ಪ ಸಾಧನ ಮಾಡಿ ತತ್ತ್ವಾಭಿಮಾನಿ ದೇವತೆಗಳಲ್ಲಿ ಒಬ್ಬರಾಗಿ ಇಂದಿಗೂ ವಿರಾಜಿಸುತ್ತಿದ್ದಾರೆಂದು ಶ್ರೀ ಭೃಗು ಮಹರ್ಷಿಗಳಿಗೆ ಸಂಬಂಧಿಸಿದ ಗ್ರಂಥಗಳಲ್ಲಿ ಉಲ್ಲೇಖಗಳಿವೆ. 4. ಭೃಗು ಸ್ಮೃತಿ - ಭೃಗುಗೀತಾ - ಭೃಗು ಸಂಹಿತಾ - ಭೃಗು ಸಿದ್ಧಾಂತ ಮೊದಲಾದ ಗ್ರಂಥಗಳಲ್ಲಿ ಶ್ರೀ ಭೃಗು ಮಹರ್ಷಿಗಳ ಅಪಾರ ಮಹಿಮೆಗಳ ವಿವರಗಳಿವೆ. 5. ಶ್ರೀ ಭೃಗು ಮಹರ್ಷಿಗಳು ಭೀಷ್ಮ ಪಂಚಕ ವ್ರತವನ್ನು ಸಕ್ರಮವಾಗಿ ಮಾಡಿದ್ದರೆಂದು ಪುರಾಣಗಳು ಹೇಳುತ್ತವೆ. " ಸಂಜೀವಿನೀ ವಿದ್ಯೆ " ಯಿಂದ ಶ್ರೀ ಭೃಗು ಮಹರ್ಷಿಗಳು ಕಾರ್ತವೀರ್ಯಾರ್ಜುನನು ಸಂಹರಿಸಿದ್ದ " ಜಮದಗ್ನಿ " ಯನ್ನು ಬದುಕಿಸಿದ್ದಾರೆಂದು ಕೆಲ ಪುರಾಣಗಳಲ್ಲಿ ಉಲ್ಲೇಖಿತವಿದೆ. 6. ಪದ್ಮಪುರಾಣ ಸೃಷ್ಟಿಖಂಡದಲ್ಲಿ ಶ್ರೀ ಭೃಗು ಮಹರ್ಷಿಗಳು, ಶ್ರೀ ಚತುರ್ಮುಖ ಬ್ರಹ್ಮದೇವರು " ಪುಷ್ಕರ " ಕ್ಷೇತ್ರದಲ್ಲಿ ಮಾಡಿದ ಬೃಹತ್ ಯಜ್ಞದಲ್ಲಿ " ಹೋತೃ " ಗಳಾಗಿದ್ದರೆಂಬ ಮಾಹಿತಿಯಿದೆ. 7. ದಂಡಕಾರಣ್ಯದಲ್ಲಿ ದೇವತೆಗಳು ಮಾಡಿದ ಯಜ್ಞದಲ್ಲಿ ಶ್ರೀ ಭೃಗು ಮಹರ್ಷಿಗಳೇ " ಬ್ರಹ್ಮದೇವರ ಸ್ಥಾನ " ವನ್ನು ಅಲಂಕರಿಸಿದ್ದರು ಎಂದು ಹೇಳಲಾಗಿದೆ. ಶ್ರೀ ಭೃಗು ಮಹರ್ಷಿಗಳ ಅವತಾರರೇ ಶ್ರೀ ವಿಜಯರಾಯರೆಂದು ಈ ಕೆಳಕಂಡ ಪ್ರಮಾಣಗಳು ಖಚಿತ ಪಡಿಸಿವೆ. ಶ್ರೀ ಹಯವದನವಿಠಲರು. ಆದಿಯಲಿ ಸುರಮುನಿಯ-ಪಾದ ಸೇವೆಯ ಮಾಡಿ ।ಮೋದದಲಿ ಸುರಲೀಲಾ -ಎಂಬ ಕಪಿ ತ್ರೇತೆಯಲಿ ।ಆ ದ್ವಾಪರದಿ ನಿಕಂಪನ-ಎಂಬ ನಾಮದಲಿ ।ಶ್ರೀಧರನ ಸೇವಿಸುತಲೀ ।।ಕಾದಿದ್ದು ಕಲಿಯುಗದಿ -ಪುರಂದರದಾಸರ ।ಸ್ವಾದು ವಚನವ ಕೇಳಿ -ತುರುಕರುವು ಆಗಿದ್ದು ।ಭೇದವಿಲ್ಲದೆ ಜನಿಸಿ -ಬರುತ ಬರುತ ಮತ್ತೆ ।ಮೇದಿನಿ ಸುರಜನ್ಮದಿ ।। ಶ್ರೀ ಜಗನ್ನಾಥದಾಸರುಆ ಸರಸ್ವತೀ ತೀರದಲಿ । ಬಿ ।ನ್ನೈಸಲಾ ಮುನಿಗಳ ನುಡಿಗೆ । ಜಲಜಾಸನ ಮಹೇಶಾಚ್ಯುತರ -ಲೋಕಂಗಳಿಗೆ ಪೋಗಿ ।।ತಾ ಸಕಲ ಗುಣಗಳ ವಿಚಾರಿಸಿ ।ಕೇಶವನೇ ಪರದೈವವೆಂದುಪ ।ದೇಶಿಸಿದಾ ಭೃಗು ಮುನಿಪ -ಕೊಡಲೆಮಗಖಿಳ ಸೌಖ್ಯಗಳ ।। " ಸುಳಾದಿಗಳ ವೈಶಿಷ್ಟ್ಯ " ಹರಿದಾಸರ ಪರಂಪರೆಯಲ್ಲಿ ಶ್ರೀ ಆಚಾರ್ಯಮಧ್ವರು ಮತ್ತು ಶ್ರೀ ನರಹರಿತೀರ್ಥರ ನಂತರ ಆದ್ಯರು 60 ಜನ, ಮುಂದೆ ಶ್ರೀ ಶ್ರೀಪಾದರಾಜರು - ಶ್ರೀ ವ್ಯಾಸರಾಯರು - ಶ್ರೀ ವಿಜಯೀ೦ದ್ರತೀರ್ಥರು - ಶ್ರೀ ಪುರಂದರದಾಸರು ಮತ್ತು ಅವರ ಸಮಕಾಲೀನ ಹರಿದಾಸರು ಸಂಕ್ಷಿಪ್ತವಾಗಿ ಸುಳಾದಿಗಳನ್ನು ರಚಿಸಿದ್ದಾರೆ. ಈ ಸುಳಾದಿಗಳ ಕನ್ನಡ ಭಾಷಾ ಪ್ರೌಢಿಮೆಯು ಶ್ರೀ ವಿಜಯರಾಯರಿಂದ ಅತಿ ವಿಸ್ತೃತವಾಗಿದೆಂಬುದರಲ್ಲಿ ಏನೂ ಸಂದೇಹವಿಲ್ಲ. ಈಗ ಉಪಲಬ್ಧವಾಗಿರುವ ಅವರ ಸುಳಾದಿಗಳೇ ಸಾಕ್ಷಿ!! ಸುಳಾದಿಗಳಲ್ಲಿ ಸಾಮಾನ್ಯ ವಿವರಣೆ1. ಧ್ರುವ ತಾಳದಲ್ಲಿ - ವಸ್ತು ನಿಶ್ಚಯ ವಿಷಯ2. ಮಠ್ಯ ತಾಳದಲ್ಲಿ - ವಸ್ತುವಿನ ಗುಣಧರ್ಮ ನಿರೂಪಣೆ3. ರೂಪಕ ತಾಳದಲ್ಲಿ - ವಸ್ತುವಿನ ಗುಣಧರ್ಮ ಕಾರಣ ವಿವೇಚನೆ4. ಝ೦ಪೆ ತಾಳದಲ್ಲಿ - ವಸ್ತು ಗುಣಧರ್ಮ ಕಾರಣ ಕಾರ್ಯ ರೂಪದಿ ಮನಸ್ಸಿನಲ್ಲಿ ಪರಿಣಮಿಸುವಿಕೆ5. ತ್ರಿಪುಟ ತಾಳದಲ್ಲಿ - ಗುಣಧರ್ಮ ಕಾರ್ಯ ಪ್ರಾಪ್ತಿ ವಿಷಯ ಪ್ರಾರ್ಥನೆ6. ಅಟ್ಟ ತಾಳದಲ್ಲಿ - ಮನೋವೇಗ ಸ್ತೋತ್ರ ಸಂಗೀತ ತಾಳ ಕುಣಿತ7. ಆದಿ ತಾಳದಲ್ಲಿ - ಸ್ತೋತ್ರಾನಂದದಲ್ಲಿ ನಲಿದಾಡುವಿಕೆ ಮತ್ತು ಸ್ವಲ್ಪ ಹೆಚ್ಚಿನ ವೇಗ ಕುಣಿತ..ಜತೆ : ಧರೆಯೊಳು ಮೆರೆವ ಸಿರಿ ವೆಂಗಳಪ್ಪ ।ತಿರುಮಲ ವಿಜಯವಿಠ್ಠಲ ಜಗನ್ಮೋಹನ ।।
ಉಗಾಭೋಗದ ಸಾಮಾನ್ಯ ವಿವರಣೆ1. ಉದ್ಗ್ರಾಹವೆಂದರೆ ಬಿಗಿದ ಕಂಠ ಉಬ್ಬಿ ಆನಂದದಿಂದ ಶಬ್ದ ಸಂಗೀತಕ್ಕನುಗುಣವಾಗಿ ಹೊರಸೂಸುವುದು. ಸಾಮಾನ್ಯವಾಗಿ ಇವೆಲ್ಲಾ ಸಾಮವೇದ ಗಾನ ವಿಭಾಗ. ಉದ್ಗಾತೃ = ಸಾಮವೇದ ಉಚ್ಛ ಸ್ವರದಿಂದ ಮಂತ್ರ ಹೇಳುವ ಋತ್ವಿಕ. ಅಂದರೆ, ಮೊದಲಿಗೆ ಹೇ ಹರೇ ಎಂದು ಉಚ್ಛವಾಗಿ ಹೇಳುವುದು. 2. ಮೇಲಾಪ - ಸಂಗೀತದಲ್ಲಿ ಸಪ್ತ ಸ್ವರಗಳನ್ನು ಹೊಂದಿಕೊಂಡು ವ್ಯತ್ಯಾಸವಿಲ್ಲದೆ ಹೇಳುವುದು. 3. ಧ್ರುವ - ನಿಶ್ಚಯಾತ್ಮಕ ಲಯ - ತಾಳ - ಗತಿಗಳ ಕ್ರಮ 4. ಅಂತರ - ಆದಿ ಮಧ್ಯಾ೦ತ ಸ್ವರ ಗತಿಗಳಿಂದ ವ್ಯತ್ಯಾಸವಿಲ್ಲದೇ ಹೇಳುವುದು 5. ಅಭೋಗ - ಮೇಲ್ಕಂಡ ವಿಸ್ತೃತದಿಂದ ಹೇಳುತ್ತಾ ಆಲಾಪದೊಂದಿಗೆ ಪೂರ್ಣಾನಂದದೊಂದಿಗೆ ಪೊಗಳುವರು. ಉದಾಹರಣೆಗೆ... ಜುಟ್ಟು ಜನಿವಾರ -ಕಿತ್ತುಕೊಂಡು ಯತಿಯಾಗಿ ।ಕಟ್ಟ ಕಡೆಯಲಿ -ಗೃಹಸ್ಥಾಶ್ರಮ ತೊರೆದು ।ಹುಟ್ಟುಗ ಇಲ್ಲೆನುತ ಕೃಷ್ಣ ಕೃಷ್ಣ -ವಿಜಯ ವಿಠ್ಠಲನ್ನ-ಪಾದಕ್ಕೆ ಮೊರೆ ಇಟ್ಟಿರುವರು ।। ಶ್ರೀ ವಿಜಯರಾಯರ ( ಕ್ರಿ ಶ 1687 - 1755 ) - ಶಿಷ್ಯ ಸಂಪತ್ತು " 1. ಶ್ರೀ ಆನಂದದಾಸರು ( ಶ್ರೀ ವಿಜಯರಾಯರ ತಮ್ಮಂದಿರು ) - ಹಯವದನವಿಠ್ಠಲ2. ಶ್ರೀ ಭಾಗಣ್ಣದಾಸರು - ಗೋಪಾಲವಿಠ್ಠಲ3. ಶ್ರೀ ಮೋಹನಪ್ಪಾದಾಸರು - ಮೋಹನವಿಠ್ಠಲ4. ಶ್ರೀ ಪಂಗನಾಮದ ತಿಮ್ಮಣ್ಣದಾಸರು - ವೇಣುಗೋಪಾಲವಿಠ್ಠಲ5. ಶ್ರೀ ಬೇಲೂರು ವೆಂಕಟದಾಸರು - ವೆಂಕಟೇಶವಿಠ್ಠಲ6. ಶ್ರೀ ಹೊನ್ನಾಳಿ ವೆಂಕಪ್ಪಾಚಾರ್ಯ - ವೆಂಕಟವಿಠ್ಠಲ7. ಶ್ರೀ ಮೀನಪ್ಪದಾಸರು - ಮುದ್ದುವಿಠ್ಠಲ8. ಶ್ರೀ ಕೂಡ್ಲಿ ಮಧ್ವಾಚಾರ್ಯರು - ಗುರು ಮಧ್ವೇಶವಿಠ್ಠಲ9. ಶ್ರೀ ಶೇಷಗಿರಿದಾಸರು ( ಶ್ರೀ ವಿಜಯರಾಯರ ಮಗ ) - ಹಯಗ್ರೀವವಿಠ್ಠಲ10. ಶ್ರೀ ವಿಜಯಸಾರಥಿದಾಸರು - ವಿಜಯಸಾರಥಿವಿಠ್ಠಲ11. ಶ್ರೀ ಮೊದಲಕಲ್ಲು ಶೇಷದಾಸರಿಗೆ ಸ್ವಪ್ನಾ೦ಕಿತ - ಗುರು ವಿಜಯವಿಠ್ಠಲ ಶ್ರೀ ವಿಜಯರಾಯರ ಮೇಲೆ ಶಿಷ್ಯ ಪ್ರಶಿಷ್ಯರು ರಚಿಸಿದ ಕೃತಿಗಳ ಸಂಖ್ಯೆ. 1. ಹಯವದನವಿಠ್ಠಲರು - ೯ ಕೃತಿಗಳು2. ಶ್ರೀ ಗೋಪಾಲದಾಸರು - ೭ ಕೃತಿಗಳು3. ಶ್ರೀ ಮೋಹನದಾಸರು - ೧೧ ಕೃತಿಗಳು4. ಶ್ರೀ ವೇಣುಗೋಪಾಲದಾಸರು - ೪ ಕೃತಿಗಳು5. ಶ್ರೀ ಜಗನ್ನಾಥದಾಸರು - ೨ ಕೃತಿಗಳು6. ಶ್ರೀ ಗುರು ಗೋಪಾಲದಾಸರು - ೧ ಕೃತಿ7. ಶ್ರೀ ವ್ಯಾಸವಿಠ್ಠಲರು - ೨ ಕೃತಿಗಳು8. ಶ್ರೀ ಗುರು ವ್ಯಾಸವಿಠ್ಠಲರು - ೧ ಕೃತಿ9. ಶ್ರೀ ಗುರು ವೇಣುಗೋಪಾಲವಿಠ್ಠಲರು - ೨ ಕೃತಿ10. ಶ್ರೀ ರಾಮಚಂದ್ರವಿಠ್ಠಲರು - ೧ ಕೃತಿ11. ಶ್ರೀ ತಂದೆ ವೇಣುಗೋಪಾಲವಿಠ್ಠಲರು - ೧ ಕೃತಿ12. ಶ್ರೀ ರಘುಪತಿವಿಠ್ಠಲರು - ೨ ಕೃತಿಗಳು13. ವರದ ಗುರು ಮುದ್ದುಕೃಷ್ಣದಾಸರು - ೨ ಕೃತಿಗಳು14. ಶ್ರೀ ಬಾದರಾಯಣವಿಠ್ಠಲರು - ೨ ಕೃತಿಗಳು15. ಶ್ರೀ ಕೇಶವವಿಠ್ಠಲರು - ೧ ಕೃತಿ16. ಶ್ರೀ ವೆಂಕಟವಿಠ್ಠಲರು - ೧ ಕೃತಿ17. ಶ್ರೀ ಲಕ್ಷ್ಮೀಪತಿವಿಠ್ಠಲರು - ೧ ಕೃತಿ18. ಶ್ರೀ ಶ್ರೀಶ ಗೋಪಾಲವಿಠ್ಠಲರು - ೨ ಕೃತಿಗಳು19. ಶ್ರೀ ಮೊದಲಕಲ್ಲು ಶೇಷದಾಸರು - ೧ ಕೃತಿ20. ಶ್ರೀ ಶ್ಯಾಮಸುಂದರದಾಸರು - ೩ ಕೃತಿಗಳು21. ಶ್ರೀ ಜಯೇಶವಿಠಲರು - ೨ ಕೃತಿಗಳು ಶ್ರೀ ಮೊದಲಕಲ್ಲು ಶೇಷದಾಸರು ಗುರುಗಳ ಮನದಿ ಕಂಡು ಧನ್ಯನಾದೆ ।ಸಿರಿ ಅರಸನಾ ದಾಸರು-ವಿರಾಯರಾಯರು ।। ಪಲ್ಲವಿ ।। ಶ್ಯಾಮಸುಂದರ ಕಾಯ -ನಾಮ ದ್ವಾದಶ ಮುದ್ರೆ ।ವಾಮನ ರೂಪವ ಧರಿಸಿ -ಕೋಮಲ ತುಳಸಿಯು ।ಕಮಲಾಕ್ಷಿ ಮಣಿಗಳಿಂದ-ವಿಮಲ ಚಿತ್ತದಿ ।ಕಾಮನಯ್ಯನ ಸಾಮ-ಗಾನದಿ ಪೊಗಳುವ | ಚರಣ |*ಹಿಂದೆ ಪುರಂದರದಾಸರ -ಕಂದನಾಗಿ ಪುಟ್ಟಿ ।ತಂದೆ ವಾಕ್ಯವ ತಾಳಿ -ಇಂದು ಧರಿಗೆ ಬಂದು ।ಇಂದಿರೇಶನ ಚರಿತ್ರೆಯು -ಕುಂದದಲೆ ಬೀರಿ ।ಮಂದ ಮತಿಗಳಿಗೆ -ಮಂದರಧರನ ತೋರಿದ ।। ಚರಣ ।। ಗುರುಗಳ ಹೃದಯವಾಸ-ಗುರುವಿಜಯವಿಠ್ಠಲನ ।ಸಿರಿ ಪಾದ ಪದುಮ -ಕರುಣವ ತೋರಿಸಿ ।ಸಾರ ಹೃದಯದಿ -ಹರಿಯ ಕೊಂಡಾಡಿಸಿ ಎರಗೆ ।ಪರಮ ಸುಖದೊಳೀ-ರುವಂತೆ ಮಾಡಿದ ।। ಚರಣ ।। ಉಪಸಂಹಾರಶ್ರೀ ವಿಜಯರಾಯರ ಸೃಷ್ಟಿ ಪ್ರಕರಣ ಸುಳಾದಿ ಇಂದಿನ ವಿಜ್ಞಾನಿಗಳಿಗೂ ಸೃಷ್ಟಿಯ ಹಿಂದಿನ ನೈಜ ರಹಸ್ಯವನ್ನು ತಿಳಿಸಿ ಕೊಡುವ ದೊಡ್ಡ ಆಕರ. ಶ್ರೀ ಚತುರ್ಮುಖ ಬ್ರಹ್ಮದೇವರು ಬ್ರಹ್ಮ ಕಲ್ಪದಲ್ಲಿ ಸೃಷ್ಟಿ ಮಾಡಿದುದರ ಸಮಗ್ರ ವಿವರ ಹಾಗೂ ಅಂಕಿ ಅಂಶಗಳ ವಿವರ ಕೊಟ್ಟಿದ್ದಾರೆ. ಶ್ರೀ ವಿಜಯರಾಯರ ಸೃಷ್ಟಿ ಪ್ರಕರಣ ಸುಳಾದಿಯ ಪ್ರಕಾರ.. ಶ್ರೀ ನಾರದರು ಹುಟ್ಟಿದ 06 ವರ್ಷದ ಮೇಲೆ ವಾಗೀ೦ದ್ರಿಯದಿಂದ ಅಗ್ನಿದೇವರನ್ನು ಶ್ರೀ ಬ್ರಹ್ಮದೇವರು ಹುಟ್ಟಿಸಿದರು.ಶ್ರೀ ಅಗ್ನಿದೇವರ ನಂತರ 10 ವರ್ಷದ ಮೇಲೆ ಶ್ರೀ ಬ್ರಹ್ಮದೇವರು ಋಷಿ ಶ್ರೇಷ್ಠರಾದ ಭೃಗು ಋಷಿಗಳನ್ನು ಭ್ರೂಮಧ್ಯದಿಂದ ಹುಟ್ಟಿಸಿದರು. ಶ್ರೀ ಭೃಗು ಮಹರ್ಷಿಗಳು ಹುಟ್ಟಿದ 01 ವರ್ಷದ ನಂತರ ಭೃಗು ಭಾರ್ಯಳನ್ನು ಹುಟ್ಟಿಸಿದರು - ಹೀಗೆ ತಮ್ಮ ವೃತ್ತಾನಂತವನ್ನು ಬಿಡಿಸಿಡುತ್ತಾರೆ. ಹಂಸ ಮಂತ್ರದ ಸುಳಾದಿಗಳೂ ಕೂಡ ಶ್ರೀ ವಿಜಯರಾಯರ ವಿಶಿಷ್ಟ ರಚನೆಗಳು. ವಿಶಿಷ್ಟ ವ್ಯಕ್ತಿಗಳು ಮಾತ್ರ ಈ ರೀತಿಯ ಶ್ರೇಷ್ಠ ಮಂತ್ರಗಳ ಬಗ್ಗೆ ಬೆಳಕು ಚೆಲ್ಲುತ್ತಾರೆ. ಹೀಗೆ ಶ್ರೀ ವಿಜಯರಾಯರ ದಾಸ ಸಾಹಿತ್ಯದ ಕೃಷಿ ಪರಮಾದ್ಭುತವಾಗಿದೆ. ಮಾನವ ಜನಾಂಗದ ಕಲ್ಯಾಣಕ್ಕಾಗಿ ರಚಿತವಾದ ಆ ಕೃತಿಗಳು ಶ್ರೀ ವಿಜಯರಾಯರ ಭವ್ಯಾಕೃತಿಯೂ ಹೌದು. ಮತಿ ಇಲ್ಲದವರಿಗೆ ಸುಮತಿ ಕೊಡುವ ಕಾರುಣ್ಯ ಮೂರ್ತಿ ನಮ್ಮ ಚಿಪ್ಪಗಿರಿಯ ತಪೋಮೂರ್ತಿ!! (ಸಂಗ್ರಹ)********ವಿಜಯ ದಾಸರ ಸ್ಮರಣೆ🌸🌸🌸🌸🌸🌸🌸
ಕೂಸಿ ಮಗ ದಾಸಪ್ಪ ಎಂದು ಪ್ರಸಿದ್ಧ. ಬಾಲ್ಯದಿಂದಲೇ ಕಡು ಬಡತನ ಸಿದ್ಧ.ತಾಯಿ, ಮಗ ಸಂಜೆವರೆಗೆ ತಿರಗಿದರೂ ಹೊಟ್ಟೆಗೆ ಹಿಟ್ಟಿಲ್ಲದ ದಿನಗಳು.ಬಾಯ್ದೆರೆದು ಕೇಳಿದರೂ ಕೈಗೊಂದು ಕಾಸಿಲ್ಲ. ದುಡಿದರೂ ಇಲ್ಲ, ದಣಿದರೂ ಇಲ್ಲ.ಹೊಸ ವಸ್ತ್ರ ಕನಸು. ಹಳೆಯ ಹರಿದ ವಸ್ತ್ರವೇ ಭೂಷಣ.ಹೆಂಡತಿ ಜೊತೆ ಊಟ ದೂರ. ಅವಳೊಬ್ಬಳಿಗೆ ಊಟಕ್ಕೆ ಹಾಕುವದೂ ಕಠಿಣತರ.ಕಾಡುವ ಬಡತನ.ದಾಸಪ್ಪ ಬೇಸತ್ತ. ಮನೆ ಬಿಟ್ಟ. ಊರೂ ಬಿಟ್ಟ.ಗೊತ್ತು ಗುರಿ ಇಲ್ಲದ ಪಯಣ. ನಡೆದಿದ್ದೇ ದಾರಿ, ಮುಟ್ಟಿದ್ದೇ ಊರು.ದಾಸಪ್ಪನಿಗೆ ಗುರಿ ಗೊತ್ತಿರಲಿಕ್ಕಿಲ್ಲ.ಆದರೆ ಈಶಪ್ಪನಿಗೆ ಗೊತ್ತಿತ್ತು.ದೊಡ್ಡ ಯೋಗ್ಯತೆ ದಾಸಪ್ಪನದು.ಜಗದೀಶಪ್ಪ ತನ್ನ ಸನ್ನಿಧಿ ಕಾಶಿಗೇ ದಾಸಪ್ಪನನ್ನು ಕರೆತಂದ.ದಾಸಪ್ಪನ ಅಧ್ಯಾತ್ಮ ಭಾಗ್ಯದ ಬಾಗಿಲು ತೆರೆಯಿತು. ಕಾಶಿ ವಿಶ್ವೇಶ್ವರನ ಅನುಗ್ರಹ,ಶ್ರೀ ಹರಿ ಬಿಂದುಮಾಧವನ ಪ್ರಸಾದ,ವಿಠ್ಠಲನ ಅಪರೋಕ್ಷ -ಇನ್ನೇನು ಇನ್ನೇನು!ವಿಜಯವಿಠ್ಠಲನ ದರುಶನವಾಯಿತು.'ನಿನ್ನ ಕಂಡು ಧನ್ಯನಾದೆ ವಿಠ್ಠಲಾ' ಎಂದರು.ಲೌಕಿಕದ ಮೇಲೆ ವಿಜಯ ಹೊಂದಿದರು.ವಿಜಯದಾಸರಾದರು.ಮಸ್ತಕದಲ್ಲಿ ಮಧ್ವ ಶಾಸ್ತ್ರ.ಕಂಗಳಲ್ಲಿ ಶ್ರೀ ರಂಗನಾಲಿಗೆ ಮೇಲೆ ಸರಸ್ವತಿ.ಹೃದಯದಲ್ಲಿ ವಿಠ್ಠಲ.ಅಂತಃಕರಣದಲ್ಲಿ ತುಂಬು ಭಕ್ತಿ.ಕೈಯಲ್ಲಿ ತಂಬೂರಿ. ಕಾಲಲ್ಲಿ ಗೆಜ್ಜೆ.ಡಂಗುರ ಸಾರಿದರು ಹರಿಮಹಾತ್ಮೆ.ವಿಜಯದಾಸರು ನಡೆದಾಡಿದ್ದೆಲ್ಲ ತೀರ್ಥಯಾತ್ರೆ ಆಯಿತು. ಮಾಡಿದ್ದೆಲ್ಲ ಹರಿಪೂಜೆ. ಮಾತನಾಡಿದ್ದೆಲ್ಲ ಮಾಧವನ ಮಹಿಮೆ. ದೇವರ ನಾಮ. ಶಾಸ್ತ್ರದ ತಾತ್ಪರ್ಯವಾಯಿತು.ನೋಡಿದ್ದೆಲ್ಲ ಹರಿರೂಪ. ಉಂಡಿದ್ದು ಹರಿ ನೈವೇದ್ಯ. ಜೀವನ ಪರಮಾತ್ಮಮಯವಾಯಿ ತು.ದಾಸರು ಬಂದಲ್ಲೆಲ್ಲ ಬರಗಾಲ ಮಾಯ. ಮಳೆಬೆಳೆ ಸುಭಿಕ್ಷ್ಯ. ಜ್ಞಾನ ಮಯ. ಸುಖಕಾಲ.ಅವರು ಅಂದದ್ದು ಅಂದಂತೆ ನಡೆಯುತ್ತಿತ್ತು.ನಡೆಯುವದನ್ನು ಮೊದಲೇ ಅನ್ನುತ್ತಿದ್ದರು.ಬೇಡಿ ಬಂದವರಿಗೆ ಕಷ್ಟ ಪರಿಹಾರ. ಬಯಸಿ ಬಂದವರಿಗೆ ಸುಖ ಪ್ರಾಪ್ತಿ. ಎಲ್ಲರಿಗೂ ಅಧ್ಯಾತದ ಉನ್ನತಿ.ನೂರಾರು ಸುಜನ ಶಿಷ್ಯರಾದರು. ಅನೆಕಾನೇಕರು ದಾಸದೀಕ್ಷೆ ಪಡೆದರು.ಹರಿದಾಸ ಸಾಹಿತ್ಯ, ಪಂಥ, ವೈಭವ ಶಿಖರಕ್ಕೇರಿ ದವು.ವಿಠ್ಠಲನ ಒಲುಮೆಯಾದವನಿಗೆ ಏನು ತಾನೇ ಅಲಭ್ಯ?ಸುಜನರು ಹಿಂಡುಹಿಂಡಾಗಿ ದಾಸರ ಹಿಂಬಾಲಿ ಸಿದರು. ತಮ್ಮ ತಮ್ಮ ಊರಿಗೆ ಆಹ್ವಾನಿಸಿ ಕರೆದೊಯ್ಯುವರು.ಎಲ್ಲೆಡೆಗೆ ಸನ್ಮಾನ, ಸತ್ಕಾರ ಶಾಲು ಶಕಲಾತಿ.ನೂರಾರು ಸಜ್ಜನರ ಜೊತೆ ಭೂರಿ ಸಹಭೋಜ ನ. ಅಪಾರ ಸಂಪತ್ತು. ಆ ಭಾರಿ ವೈಭವ ಕಣ್ಣಿಗೇ ಹಬ್ಬ! ದೈವಾನುಗ್ರಹ ದಾಸರಿಗೆ.ಸಂಚರಿಸುತ್ತ ಬಂದರು ಮರಳಿ ತಮ್ಮ ಊರಿಗೆಆಗ ಯಾವ ಊರು ದಾಸಪ್ಪನನ್ನು ಹೊರಗೆ ಹಾಕಿತ್ತೋ ಅದೇ ಊರು ಈಗ ವಿಜಯದಾಸರನ್ನು ಭವ್ಯವಾಗಿ ಸ್ವಾಗತಿಸಿತು.ಅದೇ ಬಂಧುಗಳ ಮನೆಗೆ ಬಂದರು ದಾಸರು.ಮಧ್ಯಾನ್ಹ ಸಹಸ್ರಬ್ರಹ್ಮ ಭೋಜನ. ನೂರೆಂಟು ಭಕ್ಷ್ಯಭೋಜ್ಯಗಳು.ವೈಭವ ತುಂಬಿ ತುಳುಕು ತ್ತಿತ್ತು.ಊಟಕ್ಕೆ ಕುಳಿತ ದಾಸರಿಗೆ ಪೂರ್ವದ ಸ್ಮರಣೆ.ಇದೇ ಮನೆಯಲ್ಲಿ. ತಾನು ತನ್ನ ತಾಯಿ. ಹೇಳಿದ ಕೆಲಸ ಮಾಡಿದೆವು.ತುತ್ತಿಗಾಗಿ ತೊತ್ತಾಗಿ ಸಂಜೆವರೆಗೆ ಕಾದೆವು. ಹೊಟ್ಟೆಗೆ ಒಂದು ಸೌಟು ಗಂಜಿ ಸಿಗಲಿಲ್ಲ ಸ್ವಾಮಿ.ಇಂದು ನೋಡು ಈ ಪರಿ ಕಂಡರಿಯದ ವೈಭವ!ಎದುರಿಗೆ ನೋಡುತ್ತಾರೆ -ವಿಜಯವಿಠ್ಠಲ. ತುಂಟ ನಗುಮೊಗ.ಆಗ ಅದನ್ನು ಕೊಟ್ಟವನು ನಾನೇ.ಈಗ ಇದನ್ನು ಇಟ್ಟವನೂ ನಾನೇ ಎನ್ನುವಂತಿತ್ತು.ಬಿಟ್ಟಾರೆಯೇ ದಾಸರು. ಹಾಡಿನಿಂದ ಕಟ್ಟಿ ಹಾಕಿದರು ಹರಿಯನ್ನು!ಭಕ್ತಿ ಭಾವದಿಂದ ಸ್ತುತಿಸಿ ಸಂತಸ ಪಟ್ಟರು.'ನಿನ್ನ ಒಲುಮೆಯಿಂದ ನಿಖಿಳ ಜನರು ಬಂದುಮನ್ನಿಸುವರೋ!'ಹೇ, ದೇವರದೇವಏನಿದು ನಿನ್ನ ಲೀಲೆ! ವೈಚಿತ್ರ್ಯ. ವೈಭವ! ಇಲ್ಲದ್ದು ಕಂಡಿದ್ದೆ. ಇದ್ದದ್ದು ಕಂಡಿರುವೆ.ಅಂದು -ಹಸಿದ ಹೊಟ್ಟೆ, ಹರಕು ಬಟ್ಟೆ, ಬಾಯಿ ಬಿಟ್ಟು ಬೇಡಿ ಕೆಟ್ಟೆ.ಇಂದು -ಭೂರಿ ಅಶನ ಭಾರೀ ವಸನ. ತುಂಬು ಧನ. ಏನುಂಟು ಏನಿಲ್ಲ ಸ್ವಾಮೀ.ಯಾತರ ಪ್ರಾಪ್ತಿ ಇದು?ಈ ಪರಿ ಪುಣ್ಯ ನನ್ನದುಂಟೇ?ಇಲ್ಲ ಮತ್ತೆ ಅಲ್ಲ.ಬರಿಗಾಲು, ಬರಿಹೊಟ್ಟೆ, ಬರಿ ಮೈ ನನ್ನ ಯೋಗ್ಯತೆ.ತುಂಬಿತುಳುಕುವ ಈ ವೈಭವ ನಿನ್ನ ಒಲುಮೆ.ಬಂದು ಮನ್ನಿಸುವ ಜನ ನಿನ್ನದಯ್ಯಾ ಸ್ವಾಮಿ.ನೀ ಕೊಟ್ಟರೆ ಉಂಟು.ಇಲ್ಲದಿರೆ ಇಲ್ಲ.ಸೂತ್ರದ ಬೊಂಬೆ ನಾವು.ಸೂತ್ರಧಾರ ನೀನು.ನಿನ್ನ ಇಚ್ಛೆಯಂತೆಯೇ ಜಗದ ಆಟ.ನಿನ್ನ ಪರಿಯ ಯೋಚಿಸಿ ನೋಡಲು ಸೋಜಿಗವಾಗುತ್ತದೆ.'ಸ್ವಾಮಿ, ವಾಚೋ ನಿವರ್ತಂತೆ'ನಿನ್ನ ಹೇಳಲು ಹೋದ ಶಬ್ದಗಳು ಸೋತು ಮರಳಿದವು.ಸರ್ವಶಬ್ದ ವಾಚ್ಯನೂ ಹೌದು,ವಾಚ್ಯಾತೀತನೂಹೌದು ಸ್ವಾಮಿ ನೀನು.ಇಂಥ ಜಗತ್ತಿಗೇ ಸೋಜಿಗವಾಗಿರುವ ಸೋಜಿಗ ನಾಮಕ, ಸೋಜಿಗಕಾರಕ ಸೋಜಿಗಮಯ ಪ್ರಭು ನಿನಗೆ ಸಹಸ್ರ ಶಿ ಸಾ ನಮಸ್ಕಾರಗಳು.ನಿನ್ನ ಒಲುಮೆ ಸದಾ ಇರಲಿ ನಮಗೆ. ಶ್ರೀ ಕೃಷ್ಣಾರ್ಪಣಮಸ್ತು***********
|ನಮ್ಮ ವಿಜಯರಾಯರ ಕೀರ್ತಿ ಮೆರೆಯಲಿ ಕೋಲೇ||🙏🙏 ಮೂರನೇ ಬಾರಿಗೆ ಶ್ರೀ ವಿಜಯಪ್ರಭುಗಳು ಕಾಶಿಯಾತ್ರಿಗೆ ಅತಿ ವೈಭವದೊಡನೆ ಶಿಷ್ಯರ,ಪರಿವಾರದ ಜೊತೆ ಹೊರಟರು.ಮಾರ್ಗಮಧ್ಯದಲ್ಲಿ ಅನೇಕ,ರಾಜ ಮಹಾರಾಜ ರಿಂದ ಮನ್ನಣೆಯನ್ನು ಪಡೆಯುತ್ತಾ, ದೀನ ಜನರನ್ನು ಉದ್ಧರಿಸುತ್ತಾ,ಶ್ರೀಹರಿಯ ಮಹಿಮೆಯನ್ನು ಸಾರುತ್ತಾ ಕಾಶಿಗೆ ಪಯಣಿಸಿ, ಗಂಗಾಸ್ನಾನ ಮಾಡಿ,ಗಯಾ ಕ್ಷೇತ್ರದಲ್ಲಿಹೋಗಿ ಪಿತೃಕಾರ್ಯವನ್ನು ಮಾಡಿ ಮತ್ತೆ ಕಾಶಿಗೆ ತಿರುಗಿ ಬಂದು ಕೆಲ ಕಾಲ ಅಲ್ಲಿ ಉಳಿದು ಕೊಂಡರು.ಒಂದು ದಿನ ಶ್ರೀವಿಜಯದಾಸರು ಗಂಗಾಸ್ನಾನ ಮಾಡಿ ಊರ್ಧ್ವಪುಂಡ್ರಗಳಾದಿಗಳನ್ನು ಧರಿಸಿಕೊಂಡು ಆಹ್ನೀಕಕ್ಕೆ ಕುಳಿತ ಸಮಯ...ಗಂಗೆ ತುಂಬಿ ಪ್ರಶಾಂತವಾಗಿ ಹರಿಯುತ್ತಾ ಇದ್ದಾಳೆ. ಸಾವಿರಾರು ಜನ ಯಾತ್ರಿಕರ ಸಮ್ಮಿಲನ. ಅನೇಕರು ತಮ್ಮ ಕಾರ್ಯಗಳನ್ನು ಮಾಡುತ್ತಾ ಇದ್ದಾರೆ.ದಾಸರ ಭಕ್ತರು ದಾಸರನ್ನು ನೋಡುತ್ತ ಕುಳಿತಿದ್ದಾರೆ.ಗಂಗಾನದಿಯ ದಡದಲ್ಲಿ ಕುಳಿತು ಗಂಗೆಯ ಮಹಿಮೆಯನ್ನುಚಿಂತನೆ ಮಾಡುತ್ತಾ ದಾಸರು ಕುಳಿತಿದ್ದಾರೆ..ಪ್ರಳಯಕಾಲದಲ್ಲಿ ಮತ್ಸ್ಯ ರೂಪಿ ಪರಮಾತ್ಮನನ್ನು ವರುಣದೇವರು ಉದರದಲ್ಲಿ ಧರಿಸಿದರು..ಆ ಸ್ವಾಮಿಯು ಇಲ್ಲಿ ಗಂಗೆಯಲ್ಲಿ ವರುಣದೇವನೊಡನೆ ವಿರಾಜಿಸಿದನು.. ತನ್ನ ಪತಿಯೊಡನೆ ಆ ಮತ್ಸ್ಯ ರೂಪಿ ಪರಮಾತ್ಮನನ್ನು ಧರಿಸಿದ ಗಂಗೆಯು ಮತ್ಸ್ಯೋದರಿ ಎನಿಸಿದಳು.ಈ ಸ್ಥಳದಲ್ಲಿ ಪರ್ವಕಾಲದಲ್ಲಿ ಅನೇಕಾನೇಕ ದೇವತೆಗಳು ಸ್ನಾನಕ್ಕಾಗಿ ಇಲ್ಲಿ ಬರುತ್ತಾರೆ. ಎಂದು ಅಲ್ಲಿ ನ ಮಹಿಮೆಯನ್ನು ಚಿಂತಿಸಿಗಂಗೆ ಸನ್ಮಂಗಳಾಂಗೆ ರಂಗನಂಘ್ರಿಯ ಸಂಗೆ|...ಅನನುತ ವಿಜಯವಿಠ್ಠಲನ ಮನಸಿನಲಿ ನೆನೆಸುವ ಸಾಧನ ಕೊಡು ವಿರಜೆ||ಎನ್ನುವ ಕೃತಿಯನ್ನು ರಚನೆ ಮಾಡಿದರು.ಆ ಸಮಯದಲ್ಲಿ ಶ್ರೀ ಗಂಗಾದೇವಿಯು "ನಮ್ಮಪ್ಪನಾದ ಆ ಶ್ರೀಹರಿಯ ಪರಮಭಕ್ತರಾದ ಶ್ರೀ ಭೃಗು ಋಷಿಗಳು ಇಂದುಶ್ರೀ ವಿಜಯದಾಸರ ರೂಪಿನಲ್ಲಿ,ಎನ್ನ ಮನಿಗೆ ಬಂದಿರುವರು.ನನ್ನ ಭಾಗ್ಯ ದೊಡ್ಡದು!!. ನಾನು ಅವರ ಸಂಗದಿಂದ ಪುನೀತಳಾದೆ,ಅಂತ ಬಹಳ ಆನಂದದಿಂದ ಹಾಗೆ ಉಕ್ಕೇರಿ ದಾಸರ ಮೇಲೆ ಬಂದು ಉದಕ ಸುರಿಯಲು ಶ್ರೀ ವಿಜಯದಾಸರ ವಸ್ತ್ರಗಳು ತೊಯ್ಯಲಿಲ್ಲ.ನಾಮ ಮುದ್ರೆಗಳು ಕೆಡಲಿಲ್ಲ.ಅವಾಗ ಗಂಗಾದೇವಿ ಸುಂದರವಾದ ಸ್ತ್ರೀ ರೂಪಧಾರಣೆ ಮಾಡಿ,ಸರ್ವಾಭರಣದಿಂದ ಅಲಂಕೃತ ಳಾಗಿ ದಾಸರ ಸಮೀಪಕ್ಕೆ ಬಂದು, ಮನುಜ ವೇಷ ಧಾರಿಗಳಾದ ಶ್ರೀ ವಿಜಯಪ್ರಭುಗಳನ್ನು ಪೂಜಾ ಸಾಮಗ್ರಿ ಗಳಿಂದ ಪೂಜಿಸಿದಳು..ದಾಸರನ್ನು ಪೂಜಿಸಿದ ನಂತರ ಗಂಗಾದೇವಿ ತಿರುಗಿ ತಾನು ಹೇಗೆ ಬಂದಳೋ ಹಾಗೇ ತಿರುಗಿ ಹೋದಳು.ಸಕಲ ಸಜ್ಜನರಿಗೆಲ್ಲ ಗಂಗಾದೇವಿಯ ಪ್ರತ್ಯಕ್ಷ ದರುಶನವನ್ನು ದಾಸರು ಮಾಡಿಸಿ ಆನಂದ ಪಟ್ಟರು.ಎಲ್ಲಾ ಯಾತ್ರಿಕರು,ಶಿಷ್ಯರು ನಮ್ಮ ಅಹೋಭಾಗ್ಯ!!.ಏಕ ಕಾಲಕ್ಕೆ ಶ್ರೀಹರಿಯ ಮಗಳಾದ ಗಂಗಾದೇವಿಯ ಮತ್ತು ಅವನ ಭಕುತರಾದ ದಾಸರ ದರುಶನ ಅಂತ ಬಾರಿ ಬಾರಿಗೆ ದಾಸರಿಗೆ ನಮಸ್ಕಾರ ಮಾಡಿದರು.ತನಗಿಂತಲು ಉತ್ತಮರಾದ ಭಗವದ್ಭಕ್ತರು ಮನೆಗೆ ಬರಲು,ಭಕ್ತರಿಗೆ ಎಷ್ಟು ಆನಂದವೋ!!(ಶ್ರೀಗಂಗಾದೇವಿಯು ೨೦ನೆಯ ಕಕ್ಷ ,ಶ್ರೀಭೃಗು ಋಷಿಗಳು ೧೫ನೆಯ ಕಕ್ಷ).ಹಿಂದೆ ನಮ್ಮಪ್ಪ ಆ ಶ್ರೀಹರಿಯು ಸರ್ವೋತ್ತಮ ನೆಂದು ಸಾರಿದ,ಇಂದು ಈ ಕಲಿಯುಗದಲ್ಲಿ ಮನುಜ ವೇಷಧಾರಿಗಳಾಗಿ, ಆ ಹರಿಯನ್ನು ಪಾಡುತ್ತಾ,ಸ್ತುತಿಸುತ್ತಾ,ಸಜ್ಜನರನ್ನು ಉದ್ದಾರ ಮಾಡುತ್ತಾ ಇರುವ ದಾಸರ ಸಂದರುಶನ ಎನಗಾಯಿತೆಂದು ಪ್ರತ್ಯಕ್ಷ ರೂಪಧಾರಣೆ ಮಾಡಿ ಅವರನ್ನು ಪೂಜಿಸಿದಳು.ಅಂದು ದಾಸರ ಜೊತೆಯಲ್ಲಿ ಇದ್ದ ಅವರ ತಮ್ಮಂದಿರು ಆದ ಶ್ರೀಆನಂದ ದಾಸರುತೃತಿಯ ಕಾಶೀಯಾತ್ರೆ ಮಾಡ ಬಂದಾಗ| ಉನ್ನತವಾಗಿ ನಭಗಂಗೆ ಉಕ್ಕೇರಿ ಗಗನಕ್ಕೆ| ಅತಿಶಯದಿ ಬಂದು ಮತ್ಸ್ಯೊದರಿಯ ನಾಮದಲ್ಲಿ ಪ್ರತಿ ಇಲ್ಲ ದಂತೆ ತೋರೆ||ಶ್ರೀಗೋಪಾಲದಾಸರು ಈ ಘಟನೆಯನ್ನುನೋಡಿ,ದಾಸರ ಮಹಿಮೆಯನ್ನು ವರ್ಣಿಸುತ್ತಾರೆ.ಸ್ವಚ್ಛವಾಗಿ ಗಂಗಾತೀರವ ವಾಸಮಾಡಿ ನಿಚ್ಚಾಗಿ ಶ್ರೀ ವಿಜಯರಾಯ|ಹೆಚ್ಚಾದ ಪರ್ವಣೆ ಮಚ್ಚೊದರಿಯ ತೋರ್ದೆ ವಿಚಿತ್ರವಿಜಯರಾಯ||🙏ಶ್ರೀ ಕೃಷ್ಣಾರ್ಪಣಮಸ್ತು🙏ಶ್ರೀ ವಿಜಯಪ್ರಭುಗಳ ಅಂತರ್ಯಾಮಿಯಾದ ಮಧ್ವ ವಲ್ಲಭನಾದ ಶ್ರೀ ವಿಜಯವಿಠ್ಠಲನು ಪ್ರೀತಿಯಾಗಲಿ.🙏ಜೈ ವಿಜಯರಾಯ🙏***********ದಾಸೋತ್ತಮನೆ ದಯಾಪರ ಹರಿಗಾ-ಭಾಸಕ ಭಕುತರ ಪೋಷ್ಯನೆ ಯೆನಗೆ ನೀ ಈ ಶರೀರದಿ ಪ್ರಕಾಶ ಮಾಡಿ ಜ್ಞಾನಮಾಸದೆ ಭಗವದುಪಾಸನೆ ಮಾಡಿಸೋ
ಹನುಮದ್ವ್ರತದ ಶುಭಾಶಯಗಳು... ಪರಮಾತ್ಮನ ದಾಸ ಅಂದರೇ ಹೇಗಿರಬೇಕು ಎನ್ನುವುದನ್ನು ತೋರಿಸಿಕೊಡಲು ಅವತಾರತ್ರಯದಲ್ಲಿ ನಮಗಾಗಿ ಬಂದ ವಾಯುಜೀವೋತ್ತಮರ ಕೃಪೆ ನಮ್ಮ ಎಲ್ಲರ ಮೇಲಿರಲೆಂದೂ ಹಾರೈಸುತ್ತಾ....
ಇವತ್ತು ಮತ್ತೊಂದು ವಿಶೇಷ...
ಶ್ರೀ ವಿಜಯದಾಸಾರ್ಯರು ಶ್ರೀ ಗೋಪಾಲದಾಸಾರ್ಯರಿಗೆ ಆಂಧ್ರದ ಆದವಾನಿಯ ಮಂಗರಾಯನ ದೇವಸ್ಥಾನದಲ್ಲಿ... ಇದೇ ಹನುಮದ್ ವ್ರತದ ಪವಿತ್ರವಾದ ದಿನದಲ್ಲಿ ಅಂಕಿತೋಪದೇಶವನ್ನು ಮಾಡಿದ ಸುದಿನವು.. (ಶ್ರೀ ವಿಜಯಪ್ರಭುಗಳ ಜೀವನ ಚರಿತ್ರೆಯಲ್ಲಿ ನಾವು ಈಗಾಗಲೇ ಕೇಳಿದ್ದೇವೆ)
ಪರಮ ಶ್ರೇಷ್ಠ ದಾಸ ದ್ವಯರ ಕಾರುಣ್ಯ ನಮ್ಮ ಎಲ್ಲರ ಮೇಲೆ ಸದಾ ಸದಾ ಇರಲಿ ಎಂದು ಪ್ರಾರ್ಥನೆ ಮಾಡುತ್ತಾ..
ಮುಖ್ಯಪ್ರಾಣದೇವರ ಅವತಾರತ್ರಯದ ಕೃತಿಗಳು ಹಾಡುವ ಮುಖಾಂತರ ಭಾರತೀರಮಣ ಮುಖ್ಯಪ್ರಾಣಾಂತರ್ಗತ ಶ್ರೀಹರಿಯ ಸೇವೆಯನ್ನು ನಮ್ಮಿಂದ ಪರಮಾತ್ಮನು ಮಾಡಿಸಲೀ ಎಂದು ಪ್ರಾರ್ಥನೆ ಮಾಡುತ್ತಾ...
ಹರಿ ಸರ್ವೋತ್ತಮ ವಾಯು ಜೀವೋತ್ತಮ
ಜೈ ವಿಜಯರಾಯಭಾಗಣ್ಣಾರ್ಯ ಗುರುಮ್ ಭಜೇ
ನಾದನೀರಾಜನದಿಂ ದಾಸಸುರಭಿ🙏🏽****ಈ ಭೋಗೇಶ್ವರ ದೇವಸ್ಥಾನದ ಮೂರ್ತಿಯಾದ ರುದ್ರದೇವರು ಟಿಪ್ಪು ಸುಲ್ತಾನ್ ಜೊತೆ ಮಾತನಾಡಿದ್ದಾನೆ ಅಂತಲೂ ಚರಿತ್ರೆ ಇದೆ...
ಈ ರುದ್ರದೇವರಿಗೆ ಎಷ್ಟೇ ತೈಲಾಭಿಷೇಕ ಮಾಡಿದರೂ ಲಿಂಗದ ಒಳಗೆ ಹೋಗಿಬಿಡುತ್ತೆ...
ಮತ್ತೆ ಶ್ರೀ ವಿಜಯಪ್ರಭುಗಳ ತಪೋ ಸ್ಥಾನವೂ ಹೌದು. ಅದರ ಫಲವಾಗಿ ದೇವಸ್ಥಾನದ ಅಂದರೆ ರುದ್ರದೇವರ ಎದುರ್ಗಡೆ ಕಂಬದಲ್ಲಿ ಪುಟ್ಟ ಹನುಮಪ್ಪ ಮುಖ ತಿರುಗಿಸಿಕೊಂಡಂತಹಾ ಮೂರ್ತಿ ಒಡಮೂಡಿದ್ದಾನೆ. ಮತ್ತೆ ಇದೇ ದೇವಸ್ಥಾನದ ಹೊರಗಡೆ ಶ್ರೀ ವಿಜಯಪ್ರಭುಗಳು ಚಂದಪ್ಪನಿಗೆ ಮುಕ್ತಿಪಥವನ್ನು ತೋರಿದರೆಂತಲೂ ಚರಿತ್ರೆಯಲ್ಲಿ ನಾವು ಕೇಳಿದ್ದೇವೆ. ಮತ್ತೆ ವಾಮಾಚಾರ ಮಾಡುತ್ತಿರುವವರಿಗೆ ಸರಿಯಾದ ಮಾರ್ಗವನ್ನೂ ತೋರಿದರು ಶ್ರೀ ವಿಜಯಪ್ರಭುಗಳು ಅಂತಲೂ ಹೇಳ್ತಾರೆ..
ಅಲ್ಲದೆ...
ಶ್ರೀ ಸತ್ಯಜ್ಞಾನತೀರ್ಥರು ಒಮ್ಮೆ ಸಂಚಾರತ್ವೇನ ಚಿಪ್ಪಗಿರಿಗೆ ಬಂದಾಗ , ಶಿಷ್ಯರು ರಾಮದೇವರ ಪೆಟ್ಟಿಗೆಯನ್ನು ಶ್ರೀ ಭೋಗೇಶ್ವರ ಆಲಯದಲ್ಲಿ ಇಟ್ಟುಬಿಡ್ತಾರೆ. ಸಂಜೆ ಆಗಿದ್ದ ಕಾರಣ ಪೆಟ್ಟಿಗೆಗೇನೇ ಪೂಜೆ ಮಾಡಿ ಶ್ರೀ ಪ್ರಾಣದೇವರಿಗೆ, ದೇವರಿಗೆ ಮಂಗಳಾರತಿ ನೀಡಿದರು. ನಂತರ ಅದು ರುದ್ರದೇವರ ದೇವಸ್ಥಾನ ಅಂತ ತಿಳಿದು, ಶಿಷ್ಯರನ್ನ ಕೇಳಿದಾಗ , ಹೌದು ಸ್ವಾಮಿ, ಆದರೆ ಇದು ಶ್ರೀ ವಿಜಯದಾಸಾರ್ಯರು ಕೈಲಾಸ ವಾಸಾ ಗೌರೀಶ ಈಶ ಪದವನ್ನು ರಚಿಸಿದ ದೇವಸ್ಥಾನ ಅಂತ ಇಲ್ಲಿಯೆ ಪೆಟ್ಟಿಗೆ ಇಟ್ಟಿದ್ದೆವೆ ಅಂತಾರೆ ಶಿಷ್ಯರು.
ಆಗ ಶ್ರೀಗಳಂತಾರೆ ! ಆಯಿತು ಬಂದಿವಿ. ಮುಗಿತು, ರಾತ್ರಿ ಕಳೆದು ಬೆಳಿಗ್ಗೆ ಬೇರೇ ದೇವಾಲಯಕ್ಕೆ ಹೋಗೋಣ ಅಂತ ಅಂತಾರೆ. ಆ ರಾತ್ರಿ ಎಲ್ರೂ ಅಲ್ಲಿಯೇ ಮಲಗ್ತಾರೆ.
ಆ ದಿನ ಬೆಳಗಿನ ಜಾವ 3 ಗಂಟೆ ಗೇ ಸುಮಾರು ಶ್ರೀಗಳಿಗೆ ಪ್ರಾಣದೇವರು ಸ್ವಪ್ನದಲ್ಲಿ ಕಾಣಿಸಿಕೊಂಡು - ನಾನು ಇಲ್ಲಿಯೆ ಇದ್ದೆನೆ ಅಂದಮೇಲೆ ನನ್ನ ತಂದೆನೂ ಇರುವನು. ಅಂತಲೂ ಹೇಳಿ ಅಂತರ್ಹಿತನಾಗ್ತಾನೆ. ಶಿಷ್ಯರನ್ನು ಎಬ್ಬಿಸಿ ಶ್ರೀಗಳು ಎಲ್ಲಿಯೂ ಹೋಗುವದು ಬೇಡ. ಇಲ್ಲಿ ಪ್ರಾಣದೇವರು ಇದ್ದಾರೆಯಂತೆ ನೋಡಿ ಅಂದಾಗ. ಎಲ್ರೂ ಆ ಕತ್ತಲಿನಲ್ಲಿ ದಿವಿಟೀ ಹಿಡಿದು ಹುಡುಕಿದಾಗ ರುದ್ರದೇವರ ಎದುರ್ಗಡೆನೇ ಒಂದು ಕಂಬದಲ್ಲಿ ಪುಟ್ಟ ಹನುಮಪ್ಪನ ಕೆತ್ತನೆ ಇದ್ದದ್ದು ಕಂಡು ಎಲ್ಲರಿಗೂ ಆಶ್ಚರ್ಯವಾಗುತ್ತೆ. ಮರುದಿನ ವಿಜೃಂಭಣೆಯಿಂದ ಸಂಸ್ಥಾನ ಪೂಜೆ ಅಲ್ಲಿಯೇ ಮಾಡಿ ಪರಿವಾರದೊಂದಿಗೆ ಹೊರಡ್ತಾರೆ ಶ್ರೀ ಸತ್ಯಜ್ಞಾನತೀರ್ಥರು. ಈ ವಿಷಯವನ್ನು ಶ್ರೀ ಮೋಹನದಾಸಾರ್ಯರ ವಂಶಸ್ಥರಾದ ಶ್ರೀ ಕೃಷ್ಣದಾಸರು ಪ್ರತ್ಯಕ್ಷವಾಗಿ ನೋಡಿದ್ದೂ ಉಂಟು....
ಶ್ರೀ ವಿಜಯಪ್ರಭುಗಳು ಈ ಪ್ದಾಣದೇವರನ್ನೇ ಆಹ್ವಾನ ಮಾಡಿ ಅದೇ ಕಂಬದಲ್ಲಿ ಪೂಜಿಸುತ್ತಿದ್ದರು ಅಂತಲೂ ಶ್ರೀಗಳಿಗೆ ಸ್ವಪ್ನವೂ ಆಯಿತೆಂದು ಹೇಳುತ್ತಾರೆ..
ಜೈ ವಿಜಯರಾಯ... **********
ಶ್ರೀಪತಿ ವಿಜಯವಿಠಲನೊಲಿಯದಿರೆ ಮಡಿಯಲ್ಲ.
*************
ಒಮ್ಮೆ ಶ್ರೀದಾಸರು ಗಂಗಾಸ್ನಾನ ಕ್ಕೆಂದು ಸಹಕುಟುಂಬರಾಗಿ ತೆರಳಲು ಸಕಲಸಿದ್ಧತೆಗಳನ್ನು ಮಾಡಿಕೊಂಡಿದ್ದರು.ಆಗ ಅವರ ಪತ್ನಿ ಅರಳಮ್ಮನವರು ಇದ್ದಕಿದ್ದಂತೆಯೇ ವಿಚಿತ್ರ ಜ್ವರಕ್ಕೆ ತುತ್ತಾದರು.
ಒಂದು ದಿನವೂ ಯಾವ ಕಾರಣಕ್ಕೂ ನೈವೇದ್ಯದಿ ಪೂಜಾಕೈಂಕರ್ಯವನ್ನು ತಪ್ಪದೇ ನಡೆಸಿಕೊಂಡು ಬಂದಿದ್ದ ಅವರಿಗೆ ಅದು ಆಘಾತವೆನ್ನಿಸಿತ್ತು.ಪುರುಷರಿಗೆ ದೇವಪೂಜೆ ವಿಹಿತವಾಗಿರುವಂತೆ ಸ್ತ್ರೀಯರಿಗೆ ದೇವರ ನೈವೇದ್ಯಕ್ಕೆ ಪಾಕಕಾರ್ಯ ವಿಹಿತವಾಗಿದೆ .
ಸಾಕ್ಷಾತ್ ದ್ರೌಪದಿದೇವಿ ಪ್ರತಿನಿತ್ಯ ಶ್ರೀಹರಿಯ ನೈವೇದ್ಯಕ್ಕೆ ಪಾಕ ಸಿದ್ದಪಡಿಸಿ ಶ್ರೀ ಭೀಮಸೇನದೇವರ ಪೂಜಕಾರ್ಯದಲ್ಲಿ ಸೇವೆ ಸಲ್ಲಿಸುತ್ತಿದ್ದ ವಿವರ ಶ್ರೀ ಸುಮಧ್ವವಿಜಯಾದಿಗಳಲ್ಲಿ ನಾವು ತಿಳಿಯಬಹುದು .ಇಂಥಹ ಧರ್ಮದೇವತೆಯಂತಿದ್ದ ಅರಳಮ್ಮನವರಿಗೆ ಜ್ವರದಿಂದಾಗಿ ಧರ್ಮಲೋಪವಾಗುವ ಭಯ ಕಂಗೆಡಿಸಿತು.
ಅದರೊಂದಿಗೆ ಗಂಗಾಸ್ನಾನದ ಯೋಗವೂ ತಪ್ಪುವ ಭಯವೂ ಸೇರಿ ಅವರ ದುಃಖ ಮಿತಿಮಿರಿತು.ಶ್ರೀ ದಾಸರು ಆ ವಿಘ್ನವನ್ನು ಆ ಭಾವವಂತನಲ್ಲಿ ನೀವೇದಿಸಿಕೊಂಡು, ಆ ಜ್ವರ ವನ್ನು ಪರಿಹರಿಸಲು ಪ್ರಾರ್ಥಿಸಿಕೊಂಡರು.
ಕೂಡಲೇ ಶ್ರೀ ದಾಸರು ದಯಮಾಡೋ ಎನ್ನೋಡಯಾ ದಾಸಿಗೊಲಿದು' ಎಂಬ ಈ ಕೆಳಗಿನ ಸುಳಾದಿಯನ್ನು ರಚಿಸಿ ಶ್ರೀಹರಿಯನ್ನು ಪ್ರಾರ್ಥಿಸಿದರು...
"ದಯಮಾಡೋ ಎನ್ನೋಡೆಯಾ ದಾಸಿಗೊಲಿದು ಇಂದು.ಭಯವ ಪರಿಹರಿಸಿ ವೇಗದಿಂದಲಿ ಬಿಡದೆ ...
ಅಟ್ಟಿದೆ ನಿನ್ನ ನಾಮಗಳಿಂದ ಮಾಹವ್ಯಾದಿ
ವಿಠ್ಠಲ ವಿಠ್ಠಲ, ವಿಜಯವಿಠ್ಠಲ ಕರುಣಿ"..
ನಿಮ್ಮ ಪುಣ್ಯದ ಶೇಷವಿನ್ನು ಉoಬೆವು ನಾವು ಬಣ್ಣಿಪೇ ವಿಜಯರಾಯ
ಎಮ್ಮ ಸಾಮರ್ಥ್ಯವು ನಿಮ್ಮ ದೆಂದಿಗು ವಿಜಯರಾಯ||
ಶ್ರೀ ದಾಸಾರ್ಯರ ಸೇವೆಯಲ್ಲಿ
ವಿಜಯ ವಿಠ್ಠಲ
***********
bhadrapada shukla bidige ಶ್ರೀ ವಿಜಯದಾಸರ ಮಕ್ಕಳಾದ ಶ್ರೀ ಶೇಷಗಿರಿದಾಸರ ಆರಾಧನಾ ದಿನ. ಅವರ ಬಗ್ಗೆ ಹೆಚ್ಚಿನ ಪ್ರಚಲಿತ ವಿಲ್ಲ.
ಶ್ರೀ ವಿಜಯ ವಿಠ್ಠಲನ ಅನುಗ್ರಹದಿಂದ ಜನಿಸಿದ ಒಬ್ಬ ಉತ್ತಮವಾದ ಸಾಂಶ ಜೀವ ಶ್ರೀವಿಜಯದಾಸರಲ್ಲಿ ಜನಿಸಿದ ಕೂಸು ಇಂದಿನ ಕಥಾ ನಾಯಕರು.
ಶ್ರೀ ವಿಜಯದಾಸರು ತಮ್ಮ ಕುಲದೈವವಾದ ಶೇಷಾಚಲವಾಸನಾದ ಆ ಸ್ವಾಮಿಯ ಹೆಸರನ್ನೇ ತಮ್ಮ ಮಗನಿಗೆ ಶೇಷಗಿರಿ ದಾಸ ಅಂತ ನಾಮಕರಣ ವನ್ನು ಮಾಡಿದರು.
ಕೆಲ ಕಾಲದ ನಂತರ ಅವರು ಬೆಳೆದು ದೊಡ್ಡವರಾದ ಮೇಲೆ ಅವರಿಗೆ ಇದ್ದಕ್ಕಿದ್ದಂತೆ ದೇಹಾಲಸ್ಯವಾಗುತ್ತದೆ.ವ್ಯಾಧಿ ಮಿತಿ ಮೀರಿತು.
ಇದನ್ನು ಕಂಡ ಅರಳಮ್ಮನವರು ಬಹು ವ್ಯಸನಗೊಂಡು ಚಿಂತಿತರಾಗಿ ದಾಸರ ಬಳಿಗೆ ಬಂದು
ನಮ್ಮ ಮಗ ಶೇಷಗಿರಿ ಇಷ್ಟು ದೇಹಾಲಸ್ಯದಿಂದ ಇದ್ದಾಗ ನೀವು ನಿಮ್ಮ ಪಾಡಿಗೆ ಇರುವದು ಸರಿಯೇ!! ಅವನ ಆರೋಗ್ಯ ದ ಬಗ್ಗೆ ಸ್ವಾಮಿಯ ಬಳಿ ಪ್ರಾರ್ಥನೆ ಮಾಡಿ ಅಂತ ಮೊರೆ ಇಡುತ್ತಾರೆ.
ತಕ್ಷಣ ಶ್ರೀ ವಿಜಯದಾಸರು ಮಗನ ಬಳಿ ಬಂದು ನೋಡಿದಾಗ
ಪ್ರಬಲ ಕರ್ಮ ಇವನಿಗೆ ಬೆನ್ನು ಹತ್ತಿದೆ.ಅದರ ನಿವಾರಣೆಗೆ ಶ್ರೀಹರಿಯ ಕರುಣ ಬೇಡುವದು ಬಿಟ್ಟು ಬೇರೆ ಯಾವ ಔಷಧ ಉಪಚಾರ ಗಳಿಂದ ಆಗದು ಅಂತ ಅವರಿಗೆ ತಿಳಿಯುತ್ತದೆ.
ತಕ್ಷಣ ತಮ್ಮ ಮಗನ ಅಪಮೃತ್ಯು ಪರಿಹಾರಕ್ಕಾಗಿ ಒಂದು ಸುಳಾದಿ ಯನ್ನು ರಚನೆಯನ್ನು ಮಾಡಿ ತಮ್ಮ ಉಪಾಸ್ಯ ಮೂರುತಿಯಾದ ಶ್ರೀ ವಿಜಯವಿಠ್ಠಲನಲ್ಲಿ ಪ್ರಾರ್ಥನೆ ಮಾಡುತ್ತಾರೆ.
ಆ ಸುಳಾದಿ ಹೀಗಿದೆ.👇
ಹಗರಣ ಮಾಡದಿರು ಹರಿಯೆ| ನಿನಗೆ ಕರವ ಮುಗಿದು ಬೇಡಿಕೊಂಬೆ| ಭಕ್ತ ಜನರ ಬಗೆಬಗೆಯಿಂದ ಬಂದ ಕ್ಲೇಶ ಕಳೆದು| ನಂಬಿಗೆ ಇತ್ತು ಪಾಲಿಸುವ ಗುಣವಾರಿಧಿ||..
ಅಂತ ರಚನೆಯನ್ನು ಮಾಡಿ ಅದರಲ್ಲಿ ಹೇಳುತ್ತಾರೆ ತಮ್ಮ ಮಗನ ಬಗ್ಗೆ. ಆ ಜೀವಿ ಎಂತಹದ್ದು ಅಂತ.
ಉದ್ದವನ್ನ ಶಾಪದಿಂದ ಮುಕ್ತನಮಾಡಿ| ಉದ್ದರಿಸಿದೆ ತತ್ವವ ಉಪದೇಶಿಸಿ|
ಶುದ್ದ ವೈಷ್ಣವನಿವ| ನಿರ್ಮತ್ಸರದವ| ಮಧ್ವರಾಯರ ಪಾದ ಪದ್ಮವೆ ಪೊಂದಿದ ತದ್ದಾಸರ ದಾಸ ಭೃತ್ಯನೆನಿಪನಿವ||
ಶ್ರದ್ಧೆ ಯುಳ್ಳವನಿವ| ಸೌಮ್ಯಗುಣದವ ಸಿದ್ದಾಂತ| ಪ್ರಮೇಯಗಳ ಪದ್ದತಿ ಬಲ್ಲವ|
ಉದ್ದಂಡನಲ್ಲವೋ| ಕರ್ಮನಿಷ್ಟನಿವ|
ಕ್ಷುದ್ರ ನಾದರೆ ನಾ ನಿನಗೆ ಪ್ರಾರ್ಥಿಸುವನೆ||
ಅಂತ ಕೇಳಿಕೊಂಡರು.
ಆದರು ಸಹ ಅವರ ಆರೋಗ್ಯ ಸುಧಾರಣೆ ಆಗಲಿಲ್ಲ
ತಕ್ಷಣ ಎರಡು ಉಗಾಭೋಗ ಗಳನ್ನು ರಚಿಸಿ ಆ ಶ್ರೀ ಹರಿಗೆ ಒಪ್ಪಿಸಿ ,
ಸ್ವಾಮಿ!! ಸಣ್ಣವನು ಇವನು ವಿವಾಹವಾಗಿದೆ .ಇವನೊಬ್ಬನೇ ಮಗ.ನನ್ನವಳ ಕೊರಗು ಸೊಸೆಯ ದುಃಖ ನೋಡಲಾಗದು.ನನಗೆ ನೀನು ಕೊಟ್ಟ ತಿಳುವಳಿಕೆ ಎಲ್ಲಡಿಗಿತು ಏನೋ ನಿನ್ನ ಬಂಧ ಶಕುತಿಯನ್ನು ಮೀರಿದವರನ್ನು ನಾ ಕಂಡಿಲ್ಲ ಹರಿಯೇ ಇನ್ನೂ ಇವನಿಗೆ ಆಯುಷ್ಯ ಇಲ್ಲ. ಆದುದರಿಂದ ನನ್ನ ಆಯುಸ್ಸಿನಲ್ಲಿ ಎರಡು ವರ್ಷ ಇವನಿಗೆ ಧಾರೆ ಎರೆದಿದ್ದೇನೆ..
ಉಳಿಸು ಇವನನ್ನು ಎಂದು ಆ ವಿಜಯವಿಠ್ಠಲನಲ್ಲಿ ಮೊರೆ ಇಟ್ಟರು.
ಮರುದಿನದಿಂದಲೆ ಶೇಷಗಿರಿ ದಾಸರ ಆರೋಗ್ಯ ಸುಧಾರಣೆ ಆಯಿತು.
ಮುಂದೆ ಎರಡು ವರುಷದ ನಂತರ ಶ್ರಾವಣಮಾಸ ಬಂದಾಗ ತಮ್ಮ ಕುಟುಂಬದ ಜೊತೆಗೂಡಿ ಶ್ರೀರಂಗಪಟ್ಟಣ ಕ್ಕೆ ಪಯಣ ಬೆಳೆಸಿದರು.
*ಶ್ರೀರಂಗಪಟ್ಟಣ ಹಿಂದೆ ಮೂರು ಮೈಲಿ ಕರಿಘಟ್ಟವೆಂಬ
ಶ್ರೀನಿವಾಸನ ಕ್ಷೇತ್ರದಲ್ಲಿ ವಾಸ ಮಾಡುತ್ತಾರೆ.*
ನಂತರ ಕೆಲದಿನವಾದ ಮೇಲೆ ಅಲ್ಲಿ ಇಂದ ಮುಂದೆ ಕಾವೇರಿ ನದಿ ತೀರದ ಹತ್ತಿರ ಇರುವ ಗೌತಮ ಋಷಿ ಗಳು ತಪಸ್ಸು ಮಾಡಿದ ಗೌತಮ ಕ್ಷೇತ್ರದಲ್ಲಿ ಉಳಿದುಕೊಳ್ಳುವರು.
ಆ ಸಮಯದಲ್ಲಿ ಇದ್ದಕ್ಕಿದ್ದಂತೆ ಶೇಷಗಿರಿದಾಸರ ದೇಹಾಲಸ್ಯವಾಗುತ್ತದೆ.
ಮರುದಿನವೇ ಭಾದ್ರಪದ ಶುದ್ಧ ಬಿದಿಗೆ ಅಂದೇ ಶ್ರೀ ಶೇಷಗಿರಿ ದಾಸರು ಶ್ರೀ ನಾರಾಯಣ ಸ್ಮರಣೆ ಪೂರ್ವಕ ದೇಹವನ್ನು ತ್ಯಾಗ ಮಾಡುತ್ತಾರೆ.
ಮಗನ ಅಂತ್ಯಕ್ರಿಯೆ ಕಾರ್ಯಗಳನ್ನು ಶ್ರೀ ವಿಜಯದಾಸರು ನೆರೆವೇರಿಸಿ ಅಲ್ಲಿಂದ ಮುಂದೆ ಹೊರಡುತ್ತಾರೆ.
ತಮ್ಮ ಎದುರಿಗೆ ತಮ್ಮ ಮಕ್ಕಳಾದ ಶೇಷಗಿರಿ ದಾಸರು ದೇಹತ್ಯಾಗ ಮಾಡಿದ್ದನ್ನು ಕಂಡು ೧೨ ಪದಗಳಿಂದ ಭಗವಂತನಿಗೆ ಪ್ರಾರ್ಥನೆ ಮಾಡುತ್ತಾರೆ.
ಶ್ರೀ ವಿಜಯದಾಸರ ಮಗನಾಗಿ ಹುಟ್ಟಿದ ಶ್ರೀಶೇಷಗಿರಿ ದಾಸರು ದಾಸರಿಂದ ಆಯುರ್ದಾನ ಪಡೆದ ಪುಣ್ಯಜೀವಿ ಹಾಗು ಅವರಿಂದ ಹೊಗಳಿಸಿಕೊಂಡವರು..
ನಿಜವಾಗಿಯೂ ಬಹು ದೊಡ್ಡ ಸಾಧನಾ ಜೀವಿಯೇ ಇರಬೇಕು...
ಅಂತಹವರ ಸ್ಮರಣೆ ಮಾಡಿದರೆ ನಮ್ಮ ಜನ್ಮ ಕಿಂಚಿತ್ತು ಉದ್ದಾರವಾಗಬಹುದು.
ವಿಧಿ ಸಂವತ್ಸರ ಭಾದ್ರಪದ ಶುಕ್ಲ ದ ಭಾನು| ಬಿದಿಗಿಯಲಿ ಪ್ರವರ ಗೌತುಮ ಸಂಗಮಾ
|ನಿಧಿಯಲಿ ವಿಜಯವಿಠ್ಠಲನಂಘ್ರಿಯುಗಳವನು|
ಹೃದಯದಲ್ಲಿ ಇಟ್ಟು ದೇಹವ ತ್ಯಾಗ ಮಾಡ್ದೆ||
ಧನ್ಯನೋ ಶೇಷಗಿರಿದಾಸ ನೀನೂ|
ಪುಣ್ಯವಂತನು ಅಹುದೊ ಮನೋ ವಾಚದಲಿ ನಿತ್ಯ|
************
ಒಮ್ಮೆ ಶ್ರೀ ವಿಜಯದಾಸರು
ಚೀಕಲಪರವಿಯಲ್ಲಿ ಇದ್ದಾರೆ.ಆಗ ಪಂಢರಪುರ ದಲ್ಲಿ ಆಷಾಢ ಶುದ್ದ ಏಕಾದಶಿಯ ಕಾಲ. ಅಂದು ವಿಠ್ಠಲನ ಉತ್ಸವ ಅಲ್ಲಿ.
ಕೆಲವು ಶಿಷ್ಯರು ಶ್ರೀ ವಿಜಯ ದಾಸರ ಜೊತೆಯಲ್ಲಿ ಇದ್ದರು .
ಕೆಲವರು ಪಂಢರಾಪುರಕ್ಕೆ ದಾಸರ ಅಪ್ಪಣೆ ಪಡೆದು ಹೋಗಿದ್ದಾರೆ.
ಆದರೆ ಕೆಲವರಿಗೆ ನಾವು ಸಹ ಹೋಗಿದ್ದರೆ ಪಾಂಡುರಂಗ ದರುಶನ ಆಗುತ್ತಾ ಇತ್ತು .ಆಗಲಿಲ್ಲವಲ್ಲ ಅಂತ ಮನದೊಳಗೆ ಪೇಚಾಡಿದರು.
ಆದರೆ ಅವರೆಲ್ಲರೂ ಮನದೊಳಗೆ ಹೋಗಬೇಕು ಅಂದು ಕೊಂಡಿದ್ದು
ಶ್ರೀ ಶ್ರೀಪಾದರಾಜರು ಪ್ರತಿಷ್ಠಿತ ಅಶ್ವತ್ಥ
ಶ್ರೀ ನರಸಿಂಹ ದೇವರ ಕಟ್ಟಿ ಚೀಕಲಪರ್ವಿಯಲ್ಲಿ.. ಅದು
ದಾಸರು ಅವರ ಜೊತೆಯಲ್ಲಿ ಇದ್ದಾಗ...
ನಮ್ಮ ಶ್ರೀ ವ್ಯಾಸವಿಠಲರು ಹೇಳಿದ ಹಾಗೆ
"ಮಂಗಳಾಂಗನ ಅಂತರಂಗವರಿತನ"
ನಮ್ಮ ವಿಜಯಪ್ರಭುಗಳು ತಮ್ಮ ಶಿಷ್ಯ ವೃಂದವನ್ನು ಕುರಿತು
ನೀವೆಲ್ಲರು ಮುಸುಕು ಹಾಕಿಕೊಳ್ಳಿರಿಎಂದರು..
ತಕ್ಷಣ ಎಲ್ಲಾ ರು ತಮ್ಮ ಮೋರೆಗೆ ಮುಸುಕು ಹಾಕಿಕೊಂಡರು.
ಅದೇ ಕಾಲದಲ್ಲಿ ಪಂಢರಪುರದ ಗರ್ಭಗುಡಿಯಲ್ಲಿ ಪರದೆ ಹಾಕಿತ್ತು ..
ಕಾರಣಾಂತರಗಳಿಂದ ಎಷ್ಟು ಹೊತ್ತು ಆದರು, ಅಲ್ಲಿ ಹೋಗಿದ್ದ ದಾಸರ ಶಿಷ್ಯರಿಗೆ ಮತ್ತು ಕೆಲ ಭಕ್ತರಿಗೆ ಪಾಂಡುರಂಗನ ದರುಶನ ಆಗಲೇ ಇಲ್ಲ.
ಉತ್ಸವ ಕಾಲದಲ್ಲಿ ಸಾಂಶರಾದ ಶ್ರೀ ವಿಜಯದಾಸರು ಪಂಡರಾಪುರಕ್ಕೆ ತಮ್ಮ ಯೋಗ ಶಕ್ತಿ ಇಂದ ಹೋದರು.
ಮತ್ತು ಅದೇ ಸಮಯದಲ್ಲಿ ಚೀಕಲಪರವಿಯಲ್ಲಿ ಸಹ ಇದ್ದರು...
ಶ್ರೀ ವಿಜಯದಾಸರು ವಿಠ್ಠಲ ನ ಮುಂದೆ ನಿಂತು ಅಲ್ಲಿ ಪಾಂಡುರಂಗನ ನಾನಾ ವಿಧವಾದ ಸ್ತೋತ್ರ ಮಾಡಲು ಹಾಕಿದ ಪರದೆಯು ತನ್ನಿಂದ ತಾನೇ ತೆರೆಯಿತು..
ಇದ್ದಕ್ಕಿದ್ದಂತೆ ಪರದೆ ತೆರೆಯಿತು.
ನೋಡುತ್ತಾರೆ.
ಶ್ರೀವಿಜಯದಾಸರಿಗೆ ಪಾಂಡುರಂಗನು ದರುಶನ ಕೊಟ್ಟಿದ್ದು ಮತ್ತು ಕೆಲ ತಮ್ಮ ಶಿಷ್ಯರಿಗೆ ಸಹ ಆ ಸಂದರ್ಶನ ಆನಂದವನ್ನುಸಹ ದಾಸರು ಮಾಡಿಸಿದ್ದರು...
ಹಿಡಿಸಲಾರದ ಆನಂದ ಅವರ ಶಿಷ್ಯ ವೃಂದಕ್ಕೆಲ್ಲರಿಗು
ಅದೇ ಸಮಯದಲ್ಲಿ ಚೀಕಲಪರವಿಯಲ್ಲಿ ದಾಸರು ತಮ್ಮ ಶಿಷ್ಯರಿಗೆ
"ತೆಗೆಯಿರಿ ಮುಸುಕು" ಎಂದೆನ್ನಲು
ಅಂಗದ ಮುಸುಕು ತೆರೆಯಲು ಭಕ್ತರು ಕಂಡಿದ್ದು ಶ್ರೀ ಅಶ್ವತ್ಥ ನರಸಿಂಹ ದೇವರರಿರುವಲ್ಲಿ ಕಂಡಿದ್ದು..
"ಆ ಪುಂಡಲೀಕ ವರದನಾದ ಪಾಂಡುರಂಗನ ದಿವ್ಯ ಮೂರುತಿಯನ್ನು"..
ಸಾಂಶರಾದ ದಾಸರಿಗೆ ಯಾವುದು ಅಸಾಧ್ಯ.
ಸಾಂಶರು ಅಂದರೆ ಏಕ ಕಾಲದಲ್ಲಿ ಎಲ್ಲಾ ಕಡೆ ಪ್ರಕಟವಾಗುವದು..
ಶ್ರೀ ವಿಜಯಪ್ರಭುಗಳ ಅಂತರ್ಯಾಮಿಯಾಗಿ ಇರುವ ಮಧ್ವ ವಲ್ಲಭನಾದ ಆ ವಿಜಯವಿಠ್ಠಲನು ಪ್ರೀತಿಯಾಗಲಿ....
ಶ್ರೀ ಕೃಷ್ಣಾರ್ಪಣ ಮಸ್ತು
ಈ ವಿಷಯವನ್ನು ಶ್ರೀ ಗೋಪಾಲ ದಾಸರು ಒಂದು ಕಡೆ ಹೇಳುತ್ತಾರೆ.
"ಅಂಗದಿ ಮುಸುಕು ತೆಗೆಯಲು|
ಕ್ಷೇತ್ರದಿ ಪಾಂಡುರಂಗನೋ ವಿಜಯರಾಯ||
|ವಿ| ಎಂದು ನುಡಿಯಲು ವಿಷ್ಣು ದಾಸನಾಗುವನು
|ಜ| ಯೆನಲು ಜನನ ಹಾನಿ
|ಯ| ಎಂದು ಕೊಂಡಾಡೆ ಯಮ ಭಟರು ವೋಡುವರು.
|ರಾಯ|
ಎಂದೆನಲು ಹರಿ ಕಾವ ವರವೀವ...
ಜೈ ವಿಜಯರಾಯ
**************
ವಿಜಯ ದಾಸರ ಜೀವನ ಚರಿತ್ರೆಯ ನೋಟ
ಸಾಕ್ಷಾತ್ ಭೃಗು ಮುನಿಗಳೇ ಭಗವಂತನ ಆಜ್ಞಾನುಸಾರ
ಚಿಕನಬರವಿಯಲ್ಲಿ( ಮುಂದೆ ಇದೆ ಚೀಕಲಪರವಿಯೆಂದು ಆಯಿತು) ಅವತಾರ ಮಾಡಿದ್ದಾರೆ.
ಶೀನಪ್ಪ ಕೂಸಮ್ಮನವರ ಜೇಷ್ಠ ಪುತ್ರರಾಗಿ ದಾಸಪ್ಪನೆಂಬ ಅಭಿದಾನದಿಂದ ಹರಿತತ್ವ ಸಾರಲು ಜನನ.
ತಮ್ಮ ಆನಂದ ದಾಸರು, ದಾಸರಿಗೆ ಒಬ್ಬ ತಂಗಿ ಇರುವುದಾಗಿಯೂ ಹೇಳಿಕೆ ಉಂಟು.
ಬಾಲ್ಯ ವಿದ್ಯಾಭ್ಯಾಸ ಮುಂದೆ ಅರಳಮ್ಮನವರೊಂದಿಗೆ ವಿವಾಹ
ಜಗತ್ತಿಗೆ ವಿಜಯರಾಯರ ಮಹಿಮೆ ತಿಳಿಸಲು ಬಡತನವೆಂಬ ನಾಟಕ ( ವೈರಾಗ್ಯ ಮೂರ್ತಿಗಳಿಗೆ ಬಡತನವು
ಒಂದೇ ಸಿರಿತನವು ಒಂದೇ)
ಪ್ರಥಮವಾಗಿ ಕಾಶಿಯಾತ್ರೆ, ಜ್ಞಾನಿಗಳ ಸಮಾಗಮ ಮತ್ತೊಮ್ಮೆ ಕಾಶಿಯಾತ್ರೆ ( ಮತ್ತೆ ಪೊರಟರು ಸಿರಿಉತ್ತಮ ಶ್ಲೋಕಹರಿ ಪೆತ್ತಗಂಗೆಯ ಸ್ನಾನ - ಹಯವದನ ವಿಠ್ಠಲರ ಕೃತಿ)
ಅಲ್ಲಿ ಪುರಂದರ ದಾಸರಿಂದ ವ್ಯಾಸಕಾಶಿಯಲ್ಲಿ ಅಂಕಿತ ವಿಜಯ ವಿಠ್ಠಲಯೆಂಬ ಪ್ರಾಪ್ತಿ
ಅಲ್ಲಿಂದ ಚಿಕಲಪರವಿಗೆ ಪ್ರಯಾಣ ಬಹುಕಾಲ ಚಿಕಲಾಪರಾವಿಯನ್ನೇ ಕಾರ್ಯಕ್ಷೇತ್ರವನ್ನಾಗಿ ಮಾಡಿಕೊಂಡರು. ಮುಂದೆ ತಿರುಪತಿಗೆ ಯಾತ್ರೆ.
ನಂತರ ವಿಜಯವಿಠ್ಠಲ ಮೂರ್ತಿ ಪ್ರಾಪ್ತವಾಗಿದ್ದು
ಮಾಳಗಿ ಶ್ರೀನಿವಾಸಾರ್ಯರ ಮನೆಯಿಂದ
ಶೀಲಗುರು ವಿಜಯದಾಸರಿಗೆ ಒಲಿದು
ಮೇಲಾಗಿ ಬಹುಪರಿಯಿಂದ ಪೂಜೆಗೊಂಡು
- ಶ್ರೀ ಗೋಪಾಲದಾಸರ ಕೃತಿ
ಇತನೀಗ ವಿಜಯವಿಠ್ಠಲ
ಮಾತುಮಾತಿಗೆ ನೆನಸಿದವರ ಪಾತಕಗಳ ಪರಿದು ಯಮನ ಯಾತನೆಯನು ಕಳೆದು ಪೊರೆವ
ಆ ಸಂದರ್ಭದಲ್ಲಿ ವಿಜಯ ದಾಸರಿಂದ ಕೃತಿಯ ರಚನೆ
ಆನಂದ ದಾಸರಿಗೆ ಹಯವದನ ವಿಠ್ಠಲ ಅಂಕಿತವಿತ್ತು ದಾಸ ದೀಕ್ಷೆಯನ್ನಿತ್ತರು.
ಪರವಾದಿ ನಿಗ್ರಹ : ವಾದಕ್ಕಿಳಿದ ದುರ್ವಾದಿಗಳು ಸೋಲಿಸಿ ಹರಿಸರ್ವೋತ್ತಮತತ್ವವನ್ನು ಪ್ರತಿಷ್ಟಾಪಿಸಿದರು
ದುರ್ವಾದಿಯಾದ ರಾಮಶಾಸ್ತ್ರಿಯು ಶರಣಾದದ್ದು ಒಂದು ಉದಾಹರಣೆ ಮಾತ್ರ.
ವಿಜಯದಾಸರ ಮಕ್ಕಳಾದ ಶೇಷಗಿರಿದಾಸರ ಜನನ
ಮೋಹನ ದಾಸರ ರಕ್ಷಣೆ ಮಾಡಿದ್ದು
ನಂತರದಲ್ಲಿ ಭಾಗಣ್ಣ ದಾಸರಿಗೆ ಗೋಪಾಲವಿಠ್ಠಲ ಅಂಕಿತಪ್ರದಾನ ಆದವಾನಿ ಮಂಗರಾಯನ ಸನ್ನಿಧಿಯಲ್ಲಿ ನಂತರದಲ್ಲಿ ದಿವಾನ್ ತಿಮ್ಮಣ್ಣನವರಿಗೆ ವೇಣುಗೋಪಾಲವಿಠ್ಠಲ ಅಂಕಿತಪ್ರದಾನ
ಅದರ ನಂತರದಲ್ಲಿ ಮೋಹನ ದಾಸರಿಗೆ ನವವೃಂದಾವನ ಸನ್ನಿಧಾನದಲ್ಲಿ ಮೋಹನ ವಿಠ್ಠಲಯೆಂದು ಅಂಕಿತಪ್ರದಾನ
ಕಲ್ಲೂರು ಸುಬ್ಬಣ್ಣಾಚಾರ್ಯರ ಶರಣಾಗತಿ
ವೇಣುಗೋಪಾಲ ದಾಸರಿಗೆ ಒದಗಿದ ಅಪಮೃತ್ಯು ಪರಿಹಾರ
ಮಕ್ಕಳಾದ ಶೇಷಗಿರಿ ದಾಸರಿಗೆ ಅಪಮೃತ್ಯು ಪರಿಹಾರ
ಮೋಹನ ದಾಸರಿಗೊದಗಿದ ಅಪಮೃತ್ಯು ಪರಿಹಾರ
ಛಾಗಿ ಕೇಶವರಾಯನ ಅಪಮೃತ್ಯು ಪರಿಹಾರ
ಪೂರ್ವಜರ ನಾಯೀಜನ್ಮ ಪರಿಹಾರ
ಮಹಿಮೆಗಳು
ಗೆಂಗೆಯ ಮಾವಾಹ ಉಕ್ಕೇರಿದ್ದು
ತುಂಗೆಗೆ ಗಂಗೆ ತರಿಸಿದ್ದು
ಚಿಕಲಪರವಿಯಲ್ಲಿದ್ದೆ ಶಿಷ್ಯರಿಗೆ ವಿಠ್ಠಲನ ದರುಶನ ಮಾಡಿಸಿದ್ದು
ವ್ಯಾಘ್ರದಿಂದೊದಗಿದ ವಿಪತ್ತನ್ನು ಪರಿಹಾರ ಮಾಡಿದ್ದು
ಹುಲಿಗೆ ಸದ್ಗತಿಯನ್ನು ನೀಡಿದ್ದು
ಕಳ್ಳನಾದ ರಂಗರಾಜನಿಗೆ ಉದ್ಧರಿಸಿದ್ದು
ವಿಷಪ್ರಾಶನವಾದಾಗ ಭಗವಂತನ ಸ್ಮರಣೆಯಿಂದ ಅದನ್ನು ಉಪಶಮಮ ಮಾಡಿಕೊಂಡಿದ್ದು
ಸುಳಾದಿಯ ಮಟ್ಟ ತಾಳದಲ್ಲಿ
ವಿಷಪಾನಗಳಲ್ಲಿ ನಸುಗುಂದಿದೆ ನವೆದು ಮುಸುಕಿತು ರೋಗ ಕಾಣಿಸಲಾರದೆ ಉಬ್ಬಸ ಬಡುತಲಿಪ್ಪೆ ಅಶ್ವಥ ನಾಮಕನೇ ವಿಜಯವಿಠ್ಠಲ ಎನ್ನ ಅಸುವನು ನಿರ್ವಹಿಸಲಾರೆನೋ ಇನ್ನು
ದಾಸರಲ್ಲಿ ಸಾಮಾಜಿಕ ಕಳಕಳಿ
ದಾಸರಲ್ಲಿ ಅಭೂತಪೂರ್ವಕವಾಗಿ ಭೂತದಯೆ ಇತ್ತು ಎನ್ನುವುದಕ್ಕೆ ಕಾಶಿಯಿಂದ ತಂದ ಗಂಗಾ ಜಲವನ್ನು ಕಟ್ಟೆಗೆ ಕುಡಿಸಿದ್ದು
ವಿವಾಹವಾಗಬೇಕೆಂಬ ಯುವಕನ್ನನ್ನು ಬಡತನದಿಂದ ಪಾರುಮಾಡಿದ್ದು
ವೃದ್ಧನಿಗೆ ಇದ್ದಲಿಯೇ ಗಂಗಾ ಸ್ನಾನ ಮಾಡಿಸಿದ್ದು
ಪತಿತೆಯನ್ನು ಉದ್ಧರಿಸಿದ್ದು
ಹಲವಾರು ಮದುವೆ ಮುಂಜಿವೆಗಳನ್ನು ಮಾಡಿಸಿದ್ದು
“ಹತ್ತೆಂಟು ಮದುವೆ ಮುಂಜಿಗಳ ಮಾಡಿಸಿ ನಿನ್ನ ಭೃತ್ಯರ ಪೋರಿದ್ಯೋ ವಿಜಯರಾಯ - ಗೋಪಾಲ ದಾಸರು”
ನಂತರ ಚಿಪ್ಪಗಿರಿಗೆ ಪ್ರಯಾಣ ಬೆಳೆಸಿದ್ದು
ಅಲ್ಲಿ ಶ್ರೀ ವೇಣುಗೋಪಾಲನ ಮೂರ್ತಿ ಪ್ರಾಪ್ತವಾಗಿದ್ದು
ಬಹುಕಾಲ ಎಲ್ಲರನ್ನು ಸಲುಹಿ ಹರಿಪರ ಮಾರ್ಗವನ್ನು ತೋರಿಸಿ ದಾಸರು ವೈಕುಂಠ ಯಾತ್ರೆಯನ್ನು ಮಾಡುತ್ತಾರೆ
ಎಪ್ಪತ್ತು ಮೂರುವರುಷ ಹೊಪ್ಪ ದೇಹದಲ್ಲಿದ್ದೆ ಅಂದರೆ ೭೩ ವರುಷ ದಾಸರು ತುಂಬು ಜೀವನವನ್ನು ಮಾಡಿಯುವುದಾಗಿ ಸ್ಪಷ್ಟಿಕರಿಸಿದ್ದಾರೆ
*ಕಾರ್ತಿಕ ಮಾಸದ ಶುಕ್ಲ ಪಕ್ಷ ದಶಮಿ ಗುರುವಾರದಂದು ವಿಜಯ ದಾಸರು ಶಿಷ್ಯವರ್ಗಕ್ಕೆ ಅಪಾರ ಸನ್ಮಾರ್ಗಕರವಾದ ವಾಕ್ಯಗಳನ್ನು ಬೋಧಿಸಿ ಯಾತ್ರೆಯನ್ನು ಮಾಡುತ್ತಾರೆ *
ಸಂಗ್ರಹ ಜಮದಗ್ನಿ
******************
ಶ್ರೀ ಶ್ರೀ ನಿವಾಸಾಯ ನಮಃ.
ವಿಜಯದಾಸರ ಸಾಕುಮಗ “ಮೋಹನ್ನದಾಸರು.”
ಶ್ರೀ ವಿಜಯದಾಸರ ಅನುಗ್ರಹದಿಂದ ರೋಗ ಪೀಡಿತನಾದ
ಮಗು ಮೋಹನದಾಸರಾಗಿದ್ದು.—-
ವಿಜಯದಾಸರು ಪುರಂದರದಾಸರು ವಾಸವಾಗಿದ್ದ ಚಕ್ರತೀರ್ಥದಬಳಿ ತಾವೂ ವಾಸಮಾಡಿದ್ದರು.
ದಾಸರ ಆರಾಧನೆ ಮಹೋತ್ಸವಕ್ಕಾಗಿ ಸತ್ರ ಯಾಗವನ್ನು ಆರಂಭಿಸಿದರು.
ಆ ಯಾಗಕಾರ್ಯಕ್ಕೆ ಸಹಸ್ರಾರು ಜನರು ಆ ಮಹಾಕ್ಷೇತ್ರಕ್ಕೆ ಆಗಮಿಸಿದರು.
ಅಲ್ಲಿ ಭೋಜನದ ವ್ಯವಸ್ಥೆಯ ಜೊತೆಗೆ ಧರ್ಮೋಪದೇಶವೂ ನಡೆಯುತ್ತಿತ್ತು.
ಹಾಗಾಗಿ ಅಲ್ಲಿಗೆ ಅನೇಕ ಭಕ್ತಜನರು ಬರಲಾರಂಭಿಸಿದರು.
ಆ ಕಾಲದಲ್ಲಿ ಆನೆಗೊಂದಿಯ ಶ್ರೀಮಂತನೊಬ್ಬನು ಬೆಳ್ಳ್ ಬಂಗಾರದ ವ್ಯಾಪಾರದಿಂದ ಬಹಳ ಹಣ ಸಂಪಾದಿಸಿ ತನ್ನ ತಮ್ಮಂದಿರ ವಶಕ್ಕೆ ಕೊಟ್ಟು ಮೃತ ನಾಗಿದ್ದನು.
ಅವನ ಗರ್ಭಿಣಿ ಹೆಂಡತಿಯನ್ನು ಅವನ ತಮ್ಮಂದಿರು ಯಾವ ಆಸ್ತಿಯನ್ನು ಕೊಡದೇ ಹೊರಹಾಕಿದ್ದರು.
ಆ ಹೆಂಗಸು ತನ್ನ ತವರುಮನೆ ಸೇರಿ ಗಂಡುಮಗುವನ್ನು ಹೆತ್ತಳು.
ಬಹಳ ಕಷ್ಟದಿಂದ ಜೀವನ ಸಾಗಿಸುತ್ತಿದ್ದಳು .ಮಗುವಿಗೂ ಸರಿಯಾದ ಆಹಾರವಿಲ್ಲದೇ ಮೈಯೆಲ್ಲಾ ಕಜ್ಜಿಯಾಗಿ ನರಳುತ್ತಿತ್ತು.
ಅದೇ ಸಮಯಕ್ಕೆ ವಿಜಯದಾಸರು ಸತ್ರಯಾಗ ಮಾಡಿಸುತ್ತಿದ್ದಾರೆಂದು ತಿಳಿದು ಮಗುವಿನ ಸಮೇತ ಅಲ್ಲಿಗೆ ಭೋಜನಕ್ಕೆ ಬಂದಳು.
ಊಟಕ್ಕೆ ಕುಳಿತಾಗ ಆ ಮಗು ಹೇಸಿಕೆ ಮಾಡಿದ್ದರಿಂದ ಅಲ್ಲಿ ನೆರೆದಿದ್ದ ಜನ ಆಕೆಯನ್ನು ಬೈದರು .
ಆಕೆಯ ಮನಸ್ಸಿಗೆ ದುಃಖವಾಗಿ ಊಟದಿಂದ ಎದ್ದು ಸಾಯಲು ನಿರ್ಧರಿಸಿ ತುಂಗಾಭದ್ರ ನದಿ ತೀರದಲ್ಲಿದ್ದ ನವಬೃಂದಾವನದ ನಡುಗಡ್ಢೆಗೆ ಬಂದಳು.
ಅದೇ ಸಮಯಕ್ಕೆ ವಿಜಯರಾಯರು ಪ್ರದಕ್ಷಿಣೆ ಹಾಕಲು ಬಂದಾಗ
ಆಕೆಯನ್ನು ಕುರಿತು ವಿಚಾರಿಸಿದರು.
ಆ ಹೆಂಗಸು ದುಃಖದಿಂದ ತನ್ನ ಮಗುವನ್ನು ಬಯ್ಯುತ್ತಾ ತನ್ನ ದುಃಖವನ್ನು ಹೇಳಿಕೊಂಡಳು.
ಆಗ ಆಕೆಯನ್ನು ಸಮಾಧಾನ ಮಾಡಿ ಮಗುವನ್ನು ತನಗೆ ಒಪ್ಪಿಸಲು ಹೇಳಿದಾಗ ಆಕೆ ಆ ಮಗುವನ್ನು ಅವರಿಗೆ ಅರ್ಪಿಸಿದಳು.
ವಿಜಯರಾಯರು ಮಗುವನ್ನು ತೊಡೆಯ ಮೇಲೆ ಮಲಗಿಸಿಕೊಂಡು ಆಶೀರ್ವಾದ ರೂಪವಾಗಿ
ಚಿರಂಜೀವಿಯಾಗೆಲವೊ ಚಿಣ್ಣ ನೀನು।
ಹರಿದಾಸ ದಾಸ ದಾಸರ ಪಾದ ಧೂಳಾಗಿ।।
ಎಂಬುದಾಗಿ ಹಾಡಿ ಮಗುವಿನ ಕಿವಿಯಲ್ಲಿ ಮಂತ್ರೊಪದೇಶ ಮಾಡಿದರು.ಹಾಡನ್ನು ಕೇಳಿದ ಮಗು ದಾಸರನ್ನು ನೋಡಿ ನಗುವುದನ್ನು ಆರಂಭಿಸಿತು.
ಆ ಹೆಂಗಸನ್ನು ಮತ್ತು ಮಗುವನ್ನು ಕರೆದುಕೊಂಡು ಪತ್ನಿಯಿದ್ದೆಡೆಗೆ ಬಂದರು.ದಾಸರ ಪತ್ನಿ ಅರಳಮ್ಮನಿಗೆ ಮಗುವನ್ನು ಒಪ್ಪಿಸಿ
ಇವನು ನಿನ್ನ ಮಗನು “ಮೋಹನ”ನೆಂದು ಕರೆಯಬೇಕೆಂದರು.
ಆಗ ಅರಳಮ್ಮನಿಗೆ ತನ್ನ ತೀರಿಕೊಂಡ ಮಗುವಿನ ನೆನಪಾಯಿತು.
ಆಗ ದಾಸರು”ಸತ್ತವರಿಗೆ ಅಳಬಾರದು!ಇದ್ದವರೇ ನಮ್ಮ ಮಕ್ಕಳೆಂದು ಸಮಾಧಾನ ಮಾಡಿದರು.
ಆಗ ಅರಳಮ್ಮನು ಮಗುವಿಗೆ ಸ್ನಾನ ಮಾಡಿಸಿ ಉಪಚಾರಮಾಡಿದರು.
ತಾಯಿ ಮಗುವಿನ ಆರೋಗ್ಯ ಸುಧಾರಿಸಿತು.ಆ ಮಗುವೇ ಮುಂದೆ ಮೋಹನದಾಸರು”ಎಂದಪ ಪ್ರಸಿದ್ಧಿ ಪಡೆದರು.
ಮೋಹನದಾಸರು ಮುಂದೆ ಹರಿದಾಸರಾದ ಮೇಲೆ ವಿಜಯರಾಯರನ್ನು ಕುರಿತು ಅನೇಕ ಕೃತಿಗಳನ್ನು
ರಚಿಸಿದರು.
ತಂದೆ ವಿಜಯರಾಯ-ವೇಳೆಗೆ
ಬಂದೆ ವಿಜಯರಾಯ।।
ಹಿಂದೇನು ಜನ್ಮವೊ ಮುಂದೇಸು ಜನ್ಮವೊ
ಒಂದು ತಿಳಿಯದು ಎಂದೆಂದಿಗು ಎನ್ನ।।
ಸಿರಿ ಮೋಹನವಿಠ್ಟಲನ ಪದವ ತೋರಿ
ಧರೆಗೆ ತಂದು ಬಿಟ್ಟೆ ಕರುಣಾಳುವೆ ಎನ್ನ।।
ಎಂದು ಹಾಡಿ ಶ್ರೀ ವಿಜಯ ರಾಯರನ್ನು ಹೊಗಳಿದ್ದಾರೆ.
/:ಶ್ರೀ ಕೃಷ್ಣಾರ್ಪಣಮಸ್ತು//
ಅಜ್ಞಾನ ತಿಮಿರಚ್ಛೇದಂ ಬುದ್ಧಿ ಸಂಪತ್ಪ್ರದಾಯಕಂ
ವಿಜ್ಞಾನ ವಿಮಲಂ ಶಾಂತಂ ವಿಜಯಾಖ್ಯ ಗುರುಂ ಭಜೇ//
**************
ವಿಜಯ ದಾಸರ ಸ್ಮರಣೆ
ಕೂಸಿ ಮಗ ದಾಸಪ್ಪ ಎಂದು ಪ್ರಸಿದ್ಧ. ಬಾಲ್ಯದಿಂದಲೇ ಕಡು ಬಡತನ ಸಿದ್ಧ.
ತಾಯಿ, ಮಗ ಸಂಜೆವರೆಗೆ ತಿರಗಿದರೂ ಹೊಟ್ಟೆಗೆ ಹಿಟ್ಟಿಲ್ಲದ ದಿನಗಳು.
ಬಾಯ್ದೆರೆದು ಕೇಳಿದರೂ ಕೈಗೊಂದು ಕಾಸಿಲ್ಲ. ದುಡಿದರೂ ಇಲ್ಲ, ದಣಿದರೂ ಇಲ್ಲ.
ಹೊಸ ವಸ್ತ್ರ ಕನಸು. ಹಳೆಯ ಹರಿದ ವಸ್ತ್ರವೇ ಭೂಷಣ.
ಹೆಂಡತಿ ಜೊತೆ ಊಟ ದೂರ. ಅವಳೊಬ್ಬಳಿಗೆ ಊಟಕ್ಕೆ ಹಾಕುವದೂ ಕಠಿಣತರ.
ಕಾಡುವ ಬಡತನ.
ದಾಸಪ್ಪ ಬೇಸತ್ತ. ಮನೆ ಬಿಟ್ಟ. ಊರೂ ಬಿಟ್ಟ.
ಗೊತ್ತು ಗುರಿ ಇಲ್ಲದ ಪಯಣ. ನಡೆದಿದ್ದೇ ದಾರಿ, ಮುಟ್ಟಿದ್ದೇ ಊರು.
ದಾಸಪ್ಪನಿಗೆ ಗುರಿ ಗೊತ್ತಿರಲಿಕ್ಕಿಲ್ಲ.
ಆದರೆ ಈಶಪ್ಪನಿಗೆ ಗೊತ್ತಿತ್ತು.
ದೊಡ್ಡ ಯೋಗ್ಯತೆ ದಾಸಪ್ಪನದು.
ಜಗದೀಶಪ್ಪ ತನ್ನ ಸನ್ನಿಧಿ ಕಾಶಿಗೇ ದಾಸಪ್ಪನನ್ನು ಕರೆತಂದ.
ದಾಸಪ್ಪನ ಅಧ್ಯಾತ್ಮ ಭಾಗ್ಯದ ಬಾಗಿಲು ತೆರೆಯಿತು.
ಕಾಶಿ ವಿಶ್ವೇಶ್ವರನ ಅನುಗ್ರಹ,
ಶ್ರೀ ಹರಿ ಬಿಂದುಮಾಧವನ ಪ್ರಸಾದ,
ವಿಠ್ಠಲನ ಅಪರೋಕ್ಷ -
ಇನ್ನೇನು ಇನ್ನೇನು!
ವಿಜಯವಿಠ್ಠಲನ ದರುಶನವಾಯಿತು.
'ನಿನ್ನ ಕಂಡು ಧನ್ಯನಾದೆ ವಿಠ್ಠಲಾ' ಎಂದರು.
ಲೌಕಿಕದ ಮೇಲೆ ವಿಜಯ ಹೊಂದಿದರು.
ವಿಜಯದಾಸರಾದರು.
ಮಸ್ತಕದಲ್ಲಿ ಮಧ್ವ ಶಾಸ್ತ್ರ.
ಕಂಗಳಲ್ಲಿ ಶ್ರೀ ರಂಗ
ನಾಲಿಗೆ ಮೇಲೆ ಸರಸ್ವತಿ.
ಹೃದಯದಲ್ಲಿ ವಿಠ್ಠಲ.
ಅಂತಃಕರಣದಲ್ಲಿ ತುಂಬು ಭಕ್ತಿ.
ಕೈಯಲ್ಲಿ ತಂಬೂರಿ. ಕಾಲಲ್ಲಿ ಗೆಜ್ಜೆ.
ಡಂಗುರ ಸಾರಿದರು ಹರಿಮಹಾತ್ಮೆ.
ವಿಜಯದಾಸರು ನಡೆದಾಡಿದ್ದೆಲ್ಲ ತೀರ್ಥಯಾತ್ರೆ ಆಯಿತು. ಮಾಡಿದ್ದೆಲ್ಲ ಹರಿಪೂಜೆ. ಮಾತನಾಡಿದ್ದೆಲ್ಲ ಮಾಧವನ ಮಹಿಮೆ. ದೇವರ ನಾಮ. ಶಾಸ್ತ್ರದ ತಾತ್ಪರ್ಯವಾಯಿತು.
ನೋಡಿದ್ದೆಲ್ಲ ಹರಿರೂಪ. ಉಂಡಿದ್ದು ಹರಿ ನೈವೇದ್ಯ.
ಜೀವನ ಪರಮಾತ್ಮಮಯ
ವಾಯಿತು.
ದಾಸರು ಬಂದಲ್ಲೆಲ್ಲ ಬರಗಾಲ ಮಾಯ. ಮಳೆಬೆಳೆ ಸುಭಿಕ್ಷ್ಯ. ಜ್ಞಾನ ಮಯ. ಸುಖಕಾಲ.
ಅವರು ಅಂದದ್ದು ಅಂದಂತೆ ನಡೆಯುತ್ತಿತ್ತು.
ನಡೆಯುವದನ್ನು ಮೊದಲೇ ಅನ್ನುತ್ತಿದ್ದರು.
ಬೇಡಿ ಬಂದವರಿಗೆ ಕಷ್ಟ ಪರಿಹಾರ. ಬಯಸಿ ಬಂದವರಿಗೆ ಸುಖ ಪ್ರಾಪ್ತಿ. ಎಲ್ಲರಿಗೂ ಅಧ್ಯಾತದ ಉನ್ನತಿ.
ನೂರಾರು ಸುಜನ ಶಿಷ್ಯರಾದರು. ಅನೆಕಾನೇಕರು ದಾಸದೀಕ್ಷೆ ಪಡೆದರು.
ಹರಿದಾಸ ಸಾಹಿತ್ಯ, ಪಂಥ, ವೈಭವ ಶಿಖರಕ್ಕೇರಿ ದವು.
ವಿಠ್ಠಲನ ಒಲುಮೆಯಾದವನಿಗೆ ಏನು ತಾನೇ ಅಲಭ್ಯ?
ಸುಜನರು ಹಿಂಡುಹಿಂಡಾಗಿ ದಾಸರ ಹಿಂಬಾಲಿ ಸಿದರು. ತಮ್ಮ ತಮ್ಮ ಊರಿಗೆ ಆಹ್ವಾನಿಸಿ ಕರೆದೊಯ್ಯುವರು.
ಎಲ್ಲೆಡೆಗೆ ಸನ್ಮಾನ, ಸತ್ಕಾರ ಶಾಲು ಶಕಲಾತಿ.
ನೂರಾರು ಸಜ್ಜನರ ಜೊತೆ ಭೂರಿ ಸಹಭೋಜ ನ. ಅಪಾರ ಸಂಪತ್ತು. ಆ ಭಾರಿ ವೈಭವ ಕಣ್ಣಿಗೇ ಹಬ್ಬ! ದೈವಾನುಗ್ರಹ ದಾಸರಿಗೆ.
ಸಂಚರಿಸುತ್ತ ಬಂದರು ಮರಳಿ ತಮ್ಮ ಊರಿಗೆ
ಆಗ ಯಾವ ಊರು ದಾಸಪ್ಪನನ್ನು ಹೊರಗೆ ಹಾಕಿತ್ತೋ ಅದೇ ಊರು ಈಗ ವಿಜಯದಾಸರನ್ನು ಭವ್ಯವಾಗಿ ಸ್ವಾಗತಿಸಿತು.
ಅದೇ ಬಂಧುಗಳ ಮನೆಗೆ ಬಂದರು ದಾಸರು.
ಮಧ್ಯಾನ್ಹ ಸಹಸ್ರಬ್ರಹ್ಮ ಭೋಜನ. ನೂರೆಂಟು ಭಕ್ಷ್ಯಭೋಜ್ಯಗಳು.
ವೈಭವ ತುಂಬಿ ತುಳುಕು ತ್ತಿತ್ತು.
ಊಟಕ್ಕೆ ಕುಳಿತ ದಾಸರಿಗೆ ಪೂರ್ವದ ಸ್ಮರಣೆ.
ಇದೇ ಮನೆಯಲ್ಲಿ. ತಾನು ತನ್ನ ತಾಯಿ. ಹೇಳಿದ ಕೆಲಸ ಮಾಡಿದೆವು.
ತುತ್ತಿಗಾಗಿ ತೊತ್ತಾಗಿ ಸಂಜೆವರೆಗೆ ಕಾದೆವು. ಹೊಟ್ಟೆಗೆ ಒಂದು ಸೌಟು ಗಂಜಿ ಸಿಗಲಿಲ್ಲ ಸ್ವಾಮಿ.
ಇಂದು ನೋಡು ಈ ಪರಿ ಕಂಡರಿಯದ ವೈಭವ!
ಎದುರಿಗೆ ನೋಡುತ್ತಾರೆ -
ವಿಜಯವಿಠ್ಠಲ. ತುಂಟ ನಗುಮೊಗ.
ಆಗ ಅದನ್ನು ಕೊಟ್ಟವನು ನಾನೇ.
ಈಗ ಇದನ್ನು ಇಟ್ಟವನೂ ನಾನೇ ಎನ್ನುವಂತಿತ್ತು.
ಬಿಟ್ಟಾರೆಯೇ ದಾಸರು. ಹಾಡಿನಿಂದ ಕಟ್ಟಿ ಹಾಕಿದರು ಹರಿಯನ್ನು!
ಭಕ್ತಿ ಭಾವದಿಂದ ಸ್ತುತಿಸಿ ಸಂತಸ ಪಟ್ಟರು.
'ನಿನ್ನ ಒಲುಮೆಯಿಂದ ನಿಖಿಳ ಜನರು ಬಂದು
ಮನ್ನಿಸುವರೋ!'
ಹೇ, ದೇವರದೇವ
ಏನಿದು ನಿನ್ನ ಲೀಲೆ! ವೈಚಿತ್ರ್ಯ. ವೈಭವ!
ಇಲ್ಲದ್ದು ಕಂಡಿದ್ದೆ. ಇದ್ದದ್ದು ಕಂಡಿರುವೆ.
ಅಂದು -
ಹಸಿದ ಹೊಟ್ಟೆ, ಹರಕು ಬಟ್ಟೆ, ಬಾಯಿ ಬಿಟ್ಟು ಬೇಡಿ ಕೆಟ್ಟೆ.
ಇಂದು -
ಭೂರಿ ಅಶನ ಭಾರೀ ವಸನ. ತುಂಬು ಧನ. ಏನುಂಟು ಏನಿಲ್ಲ ಸ್ವಾಮೀ.
ಯಾತರ ಪ್ರಾಪ್ತಿ ಇದು?
ಈ ಪರಿ ಪುಣ್ಯ ನನ್ನದುಂಟೇ?
ಇಲ್ಲ ಮತ್ತೆ ಅಲ್ಲ.
ಬರಿಗಾಲು, ಬರಿಹೊಟ್ಟೆ, ಬರಿ ಮೈ ನನ್ನ ಯೋಗ್ಯತೆ.
ತುಂಬಿತುಳುಕುವ ಈ ವೈಭವ ನಿನ್ನ ಒಲುಮೆ.
ಬಂದು ಮನ್ನಿಸುವ ಜನ ನಿನ್ನದಯ್ಯಾ ಸ್ವಾಮಿ.
ನೀ ಕೊಟ್ಟರೆ ಉಂಟು.
ಇಲ್ಲದಿರೆ ಇಲ್ಲ.
ಸೂತ್ರದ ಬೊಂಬೆ ನಾವು.
ಸೂತ್ರಧಾರ ನೀನು.
ನಿನ್ನ ಇಚ್ಛೆಯಂತೆಯೇ ಜಗದ ಆಟ.
ನಿನ್ನ ಪರಿಯ ಯೋಚಿಸಿ ನೋಡಲು ಸೋಜಿಗವಾಗುತ್ತದೆ.
'ಸ್ವಾಮಿ, ವಾಚೋ ನಿವರ್ತಂತೆ'
ನಿನ್ನ ಹೇಳಲು ಹೋದ ಶಬ್ದಗಳು ಸೋತು ಮರಳಿದವು.
ಸರ್ವಶಬ್ದ ವಾಚ್ಯನೂ ಹೌದು,ವಾಚ್ಯಾತೀತನೂ
ಹೌದು ಸ್ವಾಮಿ ನೀನು.
ಇಂಥ ಜಗತ್ತಿಗೇ ಸೋಜಿಗವಾಗಿರುವ ಸೋಜಿಗ ನಾಮಕ, ಸೋಜಿಗಕಾರಕ ಸೋಜಿಗಮಯ ಪ್ರಭು ನಿನಗೆ ಸಹಸ್ರ ಶಿ ಸಾ ನಮಸ್ಕಾರಗಳು.
ನಿನ್ನ ಒಲುಮೆ ಸದಾ ಇರಲಿ ನಮಗೆ.
ಶ್ರೀ ಕೃಷ್ಣಾರ್ಪಣಮಸ್ತು
***********
ಅಜ್ಞಾನತಿಮಿರಚ್ಛೇದಂ
ಬುದ್ಧಿಸಂಪತ್ಪ್ರದಾಯಕಂ !
ವಿಜ್ಞಾನವಿಮಲಂ ಶಾಂತಂ
ವಿಜಯಾಖ್ಯಗುರುಂ ಭಜೇ !!
ಅರ್ಥ :- ಅಜ್ಞಾನ ಎಂಬ ಕತ್ತಲೆಯನ್ನು ನಾಶಮಾಡುವ, ಬುದ್ಧಿ (ಜ್ಞಾನ) ಎಂಬ ಸಂಪತ್ತನ್ನು ಕೊಡುವ, ವಿಶಿಷ್ಠವಾದ, ನಿರ್ಮಲವಾದ ಜ್ಞಾನವುಳ್ಳ, ಶಾಂತರಾದ ವಿಜಯದಾಸರನ್ನು ಭಜಿಸುತ್ತೇನೆ ಅಂತ ಪ್ರಾರ್ಥನೆ.
ಶ್ರೀ ವಿಜಯದಾಸರು ಎಲ್ಲರೂ ಜೀವನದಲ್ಲಿ ವಿಜಯಿಗಳಾಗುವಂತೆ ಅನುಗ್ರಹಿಸಲಿ.
ಸರ್ವೇ ಜನಾಃ ಸುಖಿನೋ ಭವಂತು !
ಸುಘೋಷಾಚಾರ್ಯ ಕೊರ್ಲಹಳ್ಳಿ
*****************
ಶ್ರೀ ವಿಜಯ ದಾಸರ ಅಂತಿಮ ದಿನಗಳು!!
ಇಂದು ಶ್ರೀ ವಿಜಯ ದಾಸರ ಮಧ್ಯಾರಾಧನೆ!!!
ಜಯಗಳು ಆಗಲಿ ಅಪಜಯಗಳು ಪೋಗಲಿ
ಜಯದೇವ ರಮಣ ಒಲಿಯಲಿ ಕೋಲೇ
ಜಯದೇವ ರಮಣ ಒಲಿಯಲಿ ಕೋಲೇ
ನಮ್ಮ ವಿಜಯರಾಯ ರ ಕೀರ್ತಿ ಬೆಳೆಯಲಿ ಕೋಲೇ
ಅದು ಯುವ ನಾಮ ಸಂವತ್ಸರ ಶ್ರೀ ವಿಜಯದಾಸರಿಗೆ ಅಂದಿಗೆ 73 ವರ್ಷಗಳು ಕಳೆದಿದ್ದವು .ಅಂದು ಕಾರ್ತಿಕ ಮಾಸದ ಶುಕ್ಲ ಪಕ್ಷದ ದಶಮಿ ದಿನ ಗುರುವಾರವಾಗಿತ್ತು. ಎಂದಿನಂತೆ ಶ್ರೀ ದಾಸರು ಪ್ರಾತಃ ನೇಮನಿಷ್ಠ ಗಳನ್ನು ಹಾಗೂ ದೇವರ ಪೂಜಾದಿಗಳನ್ನು ಪೂರೈಸಿದರು.ಆಪ್ತರಿಗೆಲ್ಲಾ ತಾವು ಇಹಲೋಕದ ವ್ಯಾಪಾರವನ್ನು ಮುಗಿಸುವ ವೇಳೆ ಬಂದಿದೆ ಎಂಬ ಸೂಚನೆಯನ್ನು ನೀಡಿದರು.
ಶ್ರೀ ಭಾಗಣ್ಣ ದಾಸರು,ಕಲ್ಲುರೂ ಸುಬ್ಬಣ್ಣದಾಸರು,ಶ್ರೀ ಮೋಹನ ದಾಸರು,ಶ್ರೀ ಜಗನ್ನಾಥ ದಾಸರು ಮೊದಲಾದ ಶ್ರೀ ದಾಸರ ಪ್ರಮುಖ ಶಿಷ್ಯರೆಲ್ಲ ಉಪಸ್ಥಿತರಿದ್ದರು .
ಶ್ರೀ ಭಾಗಣ್ಣಾದಾಸರನ್ನು ಕರೆದು ತಮಗೆ ಒಲಿದುಬಂದಿದ್ದ ಶ್ರೀ ವಿಜಯವಿಠ್ಠಲ ಪ್ರತಿಮೆಯನ್ನು ಅನುಗ್ರಹಿಸಿದರು.
ಶ್ರೀ ದಾಸರು ಧ್ಯಾನಕ್ಕೆ ಕುಳಿತರು,ಆಗ ಮತ್ತೊಮ್ಮೆ ಶ್ರೀ ಪುರಂದರದಾಸರ ರೂಪದಲ್ಲಿ ಚಂದ್ರನಂತೆ ವಿಜಯ ವಿಠ್ಠಲ ಸಂದರ್ಧನ ನೀಡಿದ.ಆ ಆನಂದ ಸಂದರ್ಭದಲ್ಲಿ ಅವರಿಂದ ಈ ಕೆಳಗಿನ ಸುಳಾದಿಯನ್ನು ರಚಿಸಿದರು.
*ದಾಸ ಪುರಂದರನ ಪಾದವನು ಪೊಂದಿದೆನು
ಎಸು ಜನ್ಮದ ಪುಣ್ಯರಾಶಿ ಫಲಿಸಿತೋ ಎನಗೆ* ...💐
ಶ್ರೀ ದಾಸರ ಅವತಾರಗಳ ಚಿಂತನೆ!!! 🙏🏼
ಸುರಲೀಲನಾಗಿ ನಿಕಂಪನೆಂದೇನಿಸಿ ದ್ವಾಪರದಲ್ಲಿ ಜನಿಸಿ ಕೆಲವು ದಿನ ಬಿಡದೆ
ತರುವಾಯ ವರ ಕಲಿಯುಗದಲ್ಲಿ ಈಗ ಜನನ-ಮರಣವಾಗುತ್ತ ಬಂದು ಧರೆಯೊಳಗೆ ಮೆರೆದು
ಹರಿ ಕೃಪೆಯಿಂದಲಿ ಇವರು ಸದನದೊಳಗೆ ತುರುಕರುವು ಆಗಿ ಜನಿಸಿದೆ ಸುಕೃತದಿಂದ ಸಿರಿಪತಿಸ್ಥ ವಿಷ್ಣು ನಮ್ಮ ವಿಜಯ ವಿಠ್ಠಲನ್ನ ದಾಸರು ಪೆಳುವ ಕವನ ಎರಗಳು ಕರ್ಣಕ್ಕೆ...
ಇದರಿಂದತಿಳಿದು ಬರುವಂತೆ ಅವರು ಮೂಲತಃ ನಾರದ ಮುನಿಯ ಶಿಷ್ಯರು, ಕೃತಯುಗದಲ್ಲಿ ಸುರಲಿಲಾ ಎಂಬ ಕಪಿಯಾಗಿಯೂ ದ್ವಾಪರದಲ್ಲಿ ನಿಕಂಪನ ಎಂಬ ಯಾದವನಾಗಿಯೂ ಶ್ರೀಹರಿಸೇವೆ ಮಾಡಿದ್ದರು, ಶ್ರೀ ಪುರಂದರದಾಸರ ಮನೆಯಲ್ಲಿ ಕರುವಾಗಿ ಜನಿಸಿ ಬಳಿಕ ಅವರ ಪುತ್ರನೂ ಆಗಿ ಜನಿಸಿದರು.ಶ್ರೀ ಪುರಂದರದಾಸರ ಪುತ್ರರೊಬ್ಬರಲ್ಲಾದ ಮಧ್ವಾಪತಿದಾಸರಿ ಇವರೇ ಎಂದು ಪ್ರತೀತಿ.
ಶ್ರೀ ವಿಜಯರಾಯರ ಚಿಕಲಪರ್ವಿ/ಚಿಪ್ಪಗಿರಿ ಸಾಧನಾ ಭೂಮಿ ಎಂಬುದಾಗಿ ಪ್ರಸಿದ್ಧವಾಗಿ ವೈಷ್ಣವರ ಪವಿತ್ರ ತೀರ್ಥಕ್ಷೇತ್ರಗಳಲ್ಲೊಂದಾಗಿವೆ ..
ಇಂದಿರಾಪತಿ ಇವರ ಮುಂದೆ ಕುಣಿವನೋ
ಅಂದ ವಚನವಾ ನಿಜಕೆ ತಂದುಕೊಡುವನೋ...
ಕೋಟಿಗಾದರು ನಿನ್ನ ನಾಮ ಒಂದೇ ಸಾಕು.
ದಾಟಿಸುವುದು ಭಾವಸಾಗರವ ಬುತಕಟನದಲಿ ಹರಿದಾಸನದರೆ
ತೋಟವಿಲ್ಲದೆ ಮೋಟಿ ಎತ್ತಿದಂತೆ
ನೀಟಾಗದು ಕಾಣೋ ಎಂದಿಗು ಯಮಭಟರ
ಕಾಟ ತಪ್ಪದು ಕಾಶಿಯೊಳಗಿದ್ದರು
ಹಾಟಕಾಂಬರಧರ ವಿಜಯವಿಠ್ಠಲರೇಯ
ನಾಟಿಸು ನಿನ್ನ ಚರಣದಲಿ ಎನ್ನ ಮನಸ.
ಮಧ್ಯಾರಾಧನೆಯ ಈ ಶುಭ ಸಮಯದಲ್ಲಿ ನಾವೆಲ್ಲೂರು ಒಂದು ಪ್ರತಿಜ್ಞೆ ಮಾಡೋಣ ,ಮುಂದಿನ ಶ್ರೀದಾಸರ ಆರಾಧನೆ ಕಾಲಕ್ಕೆ ಅವರ ಪಂಚಾರತ್ನ ಸುಳಾದಿಗಳನ್ನ/ಇನ್ನು ಇತರೆ ಸುಳಾದಿಗಳನ್ನ(ಸಾಧ್ಯವಾದಷ್ಟು)ಅವರ ಕರುಣಾ ಕವಚವಾದರು ಅರ್ಥಸಹಿತ ಕಂಠಪಾಠ ಮಾಡೋಣ.....🙏🏼
ಅರಳಮ್ಮನವರಿಗೆ ಚಾತುರ್ಥಿಕ ಜ್ವರ (typhoid) ಬಂದಾಗಲೂ,.
ಛಾಗಿ ಕೇಶವರಾಯರಿಗೆ ಮತ್ತು ತಮ್ಮ ಶಿಷ್ಯರಾದ
ಶ್ರೀವೇಣುಗೋಪಾಲವಿಠ್ಠಲ ದಾಸರಿಗೆ ಮತ್ತು,ತಮ್ಮ ಮಗನಾದ
ಶ್ರೀಶೇಷಗಿರಿ ದಾಸರು ಇವರಿಗೆಲ್ಲಾ ಆಪತ್ತು ಬಂದಾಗ ಇಂತಹ, ವಿಷಯದಲ್ಲೂ ಸಹ ನಮ್ಮ
ಶ್ರೀವಿಜಯಪ್ರಭುಗಳು ಮಾಡಿದ್ದೊಂದೇ ಕೆಲಸ..
ಭಗವಂತನಿಗೆ ಶರಣು ಹೋಗಿದ್ದು...
ಅವರಿಗೆಗೊತ್ತಿದ್ದ ಭಾಷೆ ಸುಳಾದಿ ಹಾಗು ಭಗವಂತನ ಕುರಿತಾದ ಪದಗಳು....
ಆರ್ತ ಭಾವಕ್ಕೆ ಅಂತರಂಗದಿಂದ ರಂಗನ ಸುಳಿವು ಕೊಡುವ ಸುಳಾದಿ ಸುಲಲಿತವಾಗಿ ರಸಧಾರೆಯಾಗಿ ಹರಿಯುತ್ತಿತ್ತು...
ಅವರಂತೂ ದಾಸ್ಯಭಾವವನ್ನು ಹೊಂದಿ ಪರಮಾತ್ಮನಲ್ಲದೆ ಬೇರೆ ಕಾಯುವರಿಲ್ಲ ಎಂಬುದನ್ನು ನಮ್ಮಂಥ ಮಂದ ಜೀವಿಗಳಿಗೆ ತೋರಿಸಿಕೊಟ್ಟಿದ್ದಾರೆ...
ಏನೇ ಆಪತ್ತು ಬಂದರು ಭಗವಂತನ ಬಳಿ ಮೊರೆಹೋಗಬೇಕು ಎನ್ನುವ ಭಾಗವತರ ಲಕ್ಷ ಣ ವನ್ನು ನಾವು ಶ್ರೀ ವಿಜಯದಾಸರ ಜೀವನಚರಿತ್ರೆ ಯಲ್ಲಿ ಕಾಣಬಹುದು..
ನಾವು ಸಹ ಎಂತಹದ್ದೆ ಕಷ್ಟ ಬಂದರು ಆ ಭಗವಂತನ ಬಳಿ ಮೊರೆ ಹೋಗೋಣ.
🙏🙏
ಇಂತಹ ಗುರುಗಳನ್ನು ಹೇಗೆ ಭಜಿಸಬೇಕು ಎನ್ನುವದನ್ನು
ಅವರ ಶಿಷ್ಯರಾದ ಶ್ರೀ ವ್ಯಾಸ ವಿಠ್ಠಲ ದಾಸರು ಹೇಳುತ್ತಾರೆ.
ದಿಟ್ಟ ಗುರುಗಳ ಪಾದ ಮುಟ್ಟಿ ಭಜಿಸಿರೋ ಅಂತ.
ಶ್ಯಾಮ ಸುಂದರ ದಾಸರು ಒಂದು ಕಡೆ ಹೇಳುತ್ತಾರೆ.
ನಿಷ್ಟೆಇಂದಲಿ ಮನ ಮುಟ್ಟಿ ಭಜಿಸು| ವಿಜಯ
ವಿಠ್ಠಲ ದಾಸರ ಮನವೇ ನಿತ್ಯ||
🙏ಶ್ರೀ ಕೃಷ್ಣಾರ್ಪಣಮಸ್ತು🙏
ಇಂತಹ ದಿಟ್ಟ ಗುರುಗಳ ಪಾದವನ್ನು ಮುಟ್ಟಿ ಭಜಿಸೊಣ.
ಶ್ರೀ ದಾಸಾರ್ಯರ ಸೇವೆಯಲ್ಲಿ...
ಧರ್ಮ ಕರ್ಮವಶದಿಂದ ಶ್ರೀ ವಿಜಯದಾಸರ ತಂದೆಯ ತಾತ ಅವರಿಗೆ (ಪಿತೃಪಿತಾಮಹ) ನಾಯಿಯ ಜನ್ಮಬಂದಿತ್ತು.
ಶ್ರೀ ವಿಜಯದಾಸರು ಕಾಶಿಯಾತ್ರೆಗೆ ಹೋಗಿ,
ಗಯಾ ವಿಷ್ಣುಪಾದದಲ್ಲಿ ಪಿತೃಗಳ ಉದ್ದಾರಗೋಸುಗ ಪಿಂಡ ಪ್ರಧಾನ ಮಾಡಿ ಶ್ರೀ ಗಯಾ ಗದಾಧರನಿಗೆ ಅರ್ಪಿಸಲು ಅವರ ಪಿತೃ, ಪಿತಾಮಹರು, ನಾಯಿ ಯೋನಿಯಿಂದ ಮುಕ್ತರಾಗುತ್ತಾರೆ...
ಇದನ್ನು ಅರಿತ ಸಾಂಶರಾದ ದಾಸರು ಸೂಕ್ಷ್ಮ ರೂಪದಿಂದ ಚೀಕಲಪರವಿಯಲ್ಲಿ ಇದ್ದ ತಮ್ಮ ಸಹೋದರ ರಾದ ಹಯವದನ ವಿಠ್ಠಲ ರಿಗೆ(ಆನಂದ ದಾಸರಿಗೆ) ದರ್ಶನ ಕೊಟ್ಟು
ಆನಂದ !!ಇಂದು ನಾವು ಮಾಡಿದ ಗಯಾ ಶ್ರಾದ್ದದಿಂದ ತೃಪ್ತನಾದ ಶ್ರೀ ಗಯಾ ಗದಾಧರನು ಕರ್ಮವಶಾತ ನಮ್ಮ ಮುತ್ತಜ್ಜನಿಗೆ ಬಂದಿದ್ದ ನಾಯಿ ಜನ್ಮವನ್ನು ಕಳೆದನು..
ಮುತ್ತಜ್ಜನನ್ನು ಅನುಗ್ರಹ ಮಾಡಿದ ಶ್ರೀ ಹರಿಯು ನಮ್ಮ ವಂಶವನ್ನು ಉದ್ದಾರ ಮಾಡಿದನು..
ಏನು ಅವನ ಕಾರುಣ್ಯ!! ಅಂತನಡೆದ ವಿಷಯದ ಬಗ್ಗೆ ತಿಳಿಸುವರು.
ಈ ವಿಷಯವನ್ನು ತಿಳಿದ ಆನಂದ ದಾಸರಿಗೆ ಆದ ಆನಂದ ಹೇಳಲು ಸಾಧ್ಯವಿಲ್ಲ..
ಹೀಗೆ ಇವರ ಮಹಿಮೆ ಅಸಂಖ್ಯಾತ.
ಶ್ರೀ ವಿಜಯದಾಸರು ಸಾಮಾನ್ಯ ರಲ್ಲ.ನಮ್ಮ ಹಾಗೆ ನರ ಮನುಷ್ಯರಲ್ಲ. ದೇವತಾ ಕಕ್ಷೆಯಲ್ಲಿ ಇರುವ ಮಹಾನುಭಾವರು....
ಹಿಂದೆ ಭಗವದ್ ಭಕ್ತ ನಾದ ಭಗೀರಥ ಮಹಾರಾಜನು ತಪಸ್ಸುಮಾಡಿ ಗಂಗೆಯನ್ನು ಭೂಲೋಕಕ್ಕೆ ತರಿಸಿ ತನ್ನ ಪೂರ್ವಜರ ಉದ್ದಾರ ಮಾಡಿದಂತೆ..
ನಮ್ಮ ಶ್ರೀವಿಜಯ ದಾಸರು ತಮ್ಮ ಹಿರಿಯರಿಗೆ ನಾಯಿ ಜನುಮ ಬಂದಿದ್ದು ತಿಳಿದು ಗಯಾ ಕ್ಷೇತ್ರದಲ್ಲಿ ಕಾರ್ಯಗಳನ್ನು ಮಾಡಿ ಪಿತೃಗಳನ್ನು ಉದ್ದಾರ ಮಾಡಿದ ಮಹಾ ಪುರುಷರು.
ಈ ಘಟನೆಯ ಬಗ್ಗೆ ಅವರ ಶಿಷ್ಯರು ಮತ್ತು ಸೋದರರು ಆದ ಆನಂದ ದಾಸರು ಹೀಗೆ ಹೇಳುತ್ತಾರೆ.
ಭಗೀರಥರಾಯನು ಅಂದದಿ ಜಾನ್ಹವಿತಂದ ಬಲು ಆನಂದ|
ವಿಗಡವಾಗಿ ಪೋದ| ವಂಶೋದ್ದಾರಕ ನೀತ ಅತಿ ಪ್ರಖ್ಯಾತ|
ಭಗವಂತನ ಲೀಲೆ ಪರಿಪರಿಇಂದಲಿ ತಿಳಿದು| ಮನದೊಳು ನಲಿದು|..
ಕಮಲನಾಭನ ಪದಕೆ ಗಯದಲಿ ಪಿಂಡವನು ಅಮಲ ಮನದಿಂದಲಿ ಹಾಕಲಾಗಿ|
ಮಮಪಿತಾ ಪಿತಾಮಹನು ನಾಯಾಗಿ ಜನಿಸಿರಲು| ಕ್ರಮದಿಂದ ಉದ್ದಾರ ಮಾಡಿದ
ಕಾರಣದಿಂದ||
ದಾಸರ ನೋಡಿರೋ| ವಿಜಯದಾಸರ ಪಾಡಿರೋ||
ಈ ಮಹಿಮೆಯನ್ನು ಕುರಿತು ಶ್ರೀಗೋಪಾಲ ದಾಸರು ಹೇಳುತ್ತಾರೆ..
ದುರ್ಯೋನಿಬಂದ ವಂಶಸ್ಥರ| ಉದ್ದರಿಸಿದ್ಯೋ ವಿಜಯರಾಯ||
🙏🙏
ಶ್ರೀ ವಿಜಯದಾಸರ ಈ ದೂರದರ್ಶಿತ್ವ,ತ್ರಿಕಾಲಜ್ಞತ್ವ ವಂಶೋದ್ದಾರಕತ್ವ ಋಣಮೋಚಕತ್ವ..
ಇಂತಹ ಮಹತ್ವದ ಕಾರ್ಯಗಳು ಇತರೇ ಸಾಮಾನ್ಯ ದೇವತೆಗಳಿಂದ ಹಾಗು ಮನುಷ್ಯರಿಂದ ಸಹ ಅಸಾಧ್ಯವಾದುದು...
ಇವರು ಭೃಗು ಋಷಿಗಳು. ಹಾಗಾಗಿ ಇದು ಅವರಿಗೆ ಸಾಧ್ಯವಾಯಿತು..
ಶ್ರೀ ಗೋಪಾಲ ದಾಸರು ಬಾರಿ ಬಾರಿಗು ಹೇಳುತ್ತಾರೆ.
ಇವರು ಸಾಮಾನ್ಯ ಮಾನವರಲ್ಲ.
ದೇವತೆಗಳ ಕಕ್ಷೆಯಲ್ಲಿ ಬರುವ ಋಷಿಗಳಲ್ಲಿ ಶ್ರೇಷ್ಠ ರಾದ ಬ್ರಹ್ಮ ದೇವರ ಮಕ್ಕಳಾದ ಭೃಗು ಋಷಿಗಳು...
ದಿವಿಜರಾ ವೇಶದಿಂದ,ಭಗವಂತನ ಆಜ್ಞೆಯಂತೆ ಧರೆಯೊಳು ಜನಿಸಿದರು...
ಹೀಗೆ ಒಂದಲ್ಲ ಎರಡಲ್ಲ ಮೂರಲ್ಲ ಅನೇಕ ಬಾರಿ ಶ್ರೀ ಹರಿಯು ವಿಜಯದಾಸರಿಗೆ ನಾನಾ ವಿಧವಾದ ತನ್ನ ಭಕ್ತ ವಾತ್ಸಲ್ಯ ವನ್ನು ತೋರಿಸಿರುವನು.
ಅನಂತ ಮಹಿಮೆಯ, ಅನಂತಲೀಲೆಯ
ಅನಂತ ಗುಣ ಚಾರಿತ್ರಿಕ ಉಳ್ಳ ಆ ಅನಂತನಾಮಕನಾದ ಆ ಹರಿಯ ಭಕ್ತರಾದ ನಮ್ಮ ಶ್ರೀ ವಿಜಯದಾಸರ ಮಹಿಮೆ ಯನ್ನು ತಿಳಿಯಲು ನನ್ನಂತಹ ಅನಂತ ಅಜ್ಞಾನ ಉಳ್ಳ ಮಂದಮತಿಗೆ ತಿಳಿಯಲು ಸಾಧ್ಯವಿಲ್ಲ
🙏🙏
ಶ್ರೀ ವಿಜಯದಾಸರ ಪದಗಳನ್ನು,ಸುಳಾದಿ ಯನ್ನು ಮನ ಮುಟ್ಟಿ ಭಜಿಸಿದರೆ ಇವರೆ ನಮಗೆ ಶ್ರೀ ಹರಿಯ ಮಹಿಮೆಯನ್ನು ತಿಳಿಸಿ ಹರಿದಾಡುವಂತ ನಮ್ಮ ಮನಸ್ಸನ್ನು ಶ್ರೀ ಹರಿಯ ಕಡೆ ಹರಿಸುವರು.
ಇಂತಹ ಶ್ರೀ ವಿಜಯದಾಸರನ್ನು ಹೇಗೆ ಭಜಿಸಿದರೆ ಅನುಗ್ರಹ ವಾಗುವದು ಅಂತ
ಶ್ರೀ ಶ್ಯಾಮ ಸುಂದರ ದಾಸರು ಹೇಳಿದಂತೆ
ನಿಷ್ಟೆಇಂದಲಿ ಮನ ಮುಟ್ಟಿ ಭಜಿಸೊ| ವಿಜಯ ವಿಠ್ಠಲ ದಾಸರ ಮನವೇ ನಿತ್ಯ.||
ಇದರಂತೆ ಆಚರಣೆ ಮಾಡೋಣ.
ಅವರ ಅನುಗ್ರಹಕ್ಕೆ ಪಾತ್ರ ರಾಗೋಣ.
ನಾವು ಯಾವ ಯೋನಿಯಲ್ಲಿ ಬಂದರು ಸಹ ಅವರು ನಮಗೆ ಉದ್ದಾರ ಮಾಡಲಿ ಎಂದು ಅವರಲ್ಲಿ ಕೇಳಿಕೊಳ್ಳೊಣ
ವಿಜಯಪ್ರಭುಗಳ ಅಂತರ್ಯಾಮಿಯಾಗಿ ಇರುವ ಮಧ್ವ ವಲ್ಲಭನಾದ ಆ ವಿಜಯವಿಠ್ಠಲನು ಪ್ರೀತಿಯಾಗಲಿ..
🙏ಶ್ರೀ ಕೃಷ್ಣಾರ್ಪಣ ಮಸ್ತು🙏
ವಿ ಎಂದು ನುಡಿಯಲು ವಿಷ್ಣು ದಾಸನಾಗುವನು
ಜ ಯೆನಲು ಜನನ ಹಾನಿ
ಯ ಎಂದು ಕೊಂಡಾಡೆ ಯಮ ಭಟರು ಓಡುವರು.
ರಾಯ
ಎಂದೆನಲು ಹರಿ ಕಾವ ವರವೀವ.
ಎಸ್.ವಿಜಯ ವಿಠ್ಠಲ
*************
ಶ್ರೀ ವಿಜಯದಾಸರಲ್ಲಿ ಭಗವಂತನು ಅವರಲ್ಲಿ ನಿಂತು ತೋರಿಸಿದ
ಮಹಿಮೆಯನ್ನು ತಿಳಿಸುವ ಪುಟ್ಟ ಪ್ರಯತ್ನ.
🙏🙏
ಒಂದು ಸಲ ಶ್ರೀ ವಿಜಯದಾಸರು ತಿರುಪತಿಗೆ ಬ್ರಹ್ಮೋತ್ಸವದ ಸಮಯದಲ್ಲಿ ಯಾತ್ರೆಗೆ ಹೋಗಿದ್ದಾರೆ.ದಾಸರು ಗುಡಿಯಲ್ಲಿ ಒಂದು ಕಡೆ ಮಂಟಪದಲ್ಲಿ ಭಗವಂತನ ಧ್ಯಾನ ಮಾಡುತ್ತಾ ಕುಳಿತಿದ್ದಾರೆ.ಅವರ ಶಿಷ್ಯ ಪರಿವಾರದವರೆಲ್ಲ ಬ್ರಹ್ಮೋತ್ಸವದ ಗಲಾಟೆಯಲ್ಲಿ ದಾಸರನ್ನು ಗಮನಿಸಲಿಲ್ಲ.
ಉತ್ಸವ ಮೂರ್ತಿಗಳು ಹೊರಗಡೆ ಬಂದ ತಕ್ಷಣ ಗುಡಿಯ ಬಾಗಿಲನ್ನು ಬೀಗ ಹಾಕಿ ಎಲ್ಲರೂ ಹೊರಟರು...
ಶ್ರೀವಿಜಯದಾಸರಿಗೆ ಇದು ಯಾವುದರ ಪರಿವೆ ಇಲ್ಲ.ಭಗವಂತನ ಧ್ಯಾನ ದಲ್ಲಿ ಮಗ್ನರಾಗಿದ್ದಾರೆ.
ಭೂರಮಣನಾದ, ಪತ್ನೀ ಸಮೇತನಾದ ಶ್ರೀನಿವಾಸನ ಉತ್ಸವ ಮೂರ್ತಿಯನ್ನು ಸಕಲ ವಿಧವಾದ ವಜ್ರ ವೈಡೂರ್ಯ, ಅನರ್ಘ್ಯ ರತ್ನ ದ ಒಡವೆಗಳಿಂದ ಅಲಂಕರಿಸಿದ್ದಾರೆ...
ವಾದ್ಯವೈಭವ ದೊಡನೆ ,ವೇದ ಘೋಷಗಳಿಂದ ಸ್ವಾಮಿಯನ್ನು ಕರೆ ತಂದಿದ್ದಾರೆ...
ಇತ್ತ ವೆಂಕಟನು ತನ್ನ ಪತ್ನಿಯರೊಂದಿಗೆ ರಥಾರೂಢನಾದ...
ಮುಹೂರ್ತ ಸಮಯಕ್ಕೆ ಸ್ವಾಮಿಯು ಕುಳಿತ ತಕ್ಷಣ ಮಂಗಳಾರುತಿ, ದಂಡ ಪ್ರಣಾಮವನ್ನು ಮಾಡಿ ರಥವನ್ನು ಎಳೆಯಲು ಪ್ರಾರಂಭಿಸಿತು ಭಕ್ತರ ವೃಂದ..ಒಂದು ಅಂಗುಲವು ಸಹ ರಥ ಕದಲಲಿಲ್ಲ..
ಕಂಗಾಲಾಗುವ ಪರಿಸ್ಥಿತಿ ಮಹಂತರದ್ದು.(ಅಲ್ಲಿ ಇರುವ ಅಧಿಕಾರಿಯ ಹೆಸರು)
"ರಥವನ್ನು ಆನೆಯಿಂದ ಎಳೆಸಿದರು ಸಹ ರಥ ಒಂದು ಅಂಗುಲ ಸಹ ಸರಿಯಲಿಲ್ಲ..".
ಯಾರಾದರು ಹರಕೆ ಬಾಕಿ ಇದ್ದರೆ ಅಪರಾಧ ಕಾಣಿಕೆ ಯೊಡನೆ ಹರಕೆ ಸಲ್ಲಿಸಿರಿ.!!
ದೇವಸ್ಥಾನದ ಬಾಗಿಲು ಮೊಹರು ಮಾಡಿರುವದರಿಂದ ಕೊಪ್ಪರಿಗೆ (ಹುಂಡಿಯ)ಸಮೀಪಕ್ಕೆ ಹೋಗಲು ಆಗುವುದಿಲ್ಲ.. ಆದ್ದರಿಂದ ನಂತರ ಬಾಗಿಲು ತೆರೆದೊಡನೆ ಸಲ್ಲಿಸುತ್ತೇನೆ ಅಂತ ಬೇಡಿಕೊಳ್ಳಿ ಅಂತ ಭಕ್ತರಲ್ಲಿ ವಿಜ್ಞಾಪನೆ ಮಾಡಿಕೊಂಡರು .
ನಂತರ ರಥವನ್ನು ಎಳೆಯಲಾಗುತ್ತದೆ ಆದರು ಸಹ ಕದಲಲಿಲ್ಲ.
.ಬಹಳ ಹೊತ್ತು ಆಯಿತು.ಎಷ್ಟು ಜನ ಎಳೆದರು ರಥ ಮುಂದೆ ಬರುತ್ತಾಇಲ್ಲ.ಅವಾಗ ಮಹಂತರು(ಅಧಿಕಾರಿಯು)
ಗಾಬರಿಗೊಂಡು
ಸ್ವಾಮಿ! ನನ್ನ ತಪ್ಪು ಏನಾದರುಇದ್ದರೆ ಕ್ಷಮಿಸು!!,"ಅಂತ ಕರವನ್ನು ಮುಗಿದು ಬಾರಿ ಬಾರಿಗೆ ಕೇಳಿಕೊಂಡ.
ಯಾರಾದರೂ ಬಂದಂತಹ ಭಕ್ತಾದಿಗಳು ಏನಾದರು ಹರಿಕೆ ಇದ್ದರೆ ಪೂರೈಸಲು ಮತ್ತೊಂದು ಸಾರಿ ಕೇಳಿಕೊಂಡ. ಎಲ್ಲರೂ ಹರಿಕೆ ಒಪ್ಪಿಸಿದರು.. *
ಸ್ವಾಮಿಯ ರಥ ಮುಂದೆ ಸಾಗಲಿಲ್ಲ.ಏನಾಶ್ಚರ್ಯ??
"ಗುಡಿಯ ಒಳಗಡೆ ನನ್ನ ಭಕ್ತನು ನನ್ನನ್ನು ತನ್ನ ಹೃದಯಕಮಲದಲ್ಲಿ ತನ್ನ ಭಕ್ತಿಪಾಶದಲ್ಲಿ ಕಟ್ಟಿದ್ದಾನೆ.ಅವನು ನನ್ನನ್ನು ಬಿಡದ ಹೊರತು ನಾನು ಹೊರಡುವನಲ್ಲ ಅಂತ ಸ್ವಾಮಿ ಒಬ್ಬರಿಗೆ ಸೂಚನೆ ಕೊಡುತ್ತಾನೆ.
ತಕ್ಷಣ ಮಹಂತರು ಬಹು ವೇಗದಿಂದ ಮಿತ ಪರಿವಾರದೊಡನೆ ಹೋಗಿ ಗುಡಿಯ ಬಾಗಿಲನ್ನು ತೆಗೆಸಿ ನೋಡುತ್ತಾರೆ..ಒಂದು ಕಡೆ ಮಂಟಪದಲ್ಲಿ
ಶ್ರೀ ವಿಜಯದಾಸರು ಧ್ಯಾನದಲ್ಲಿ ಕುಳಿತಿದ್ದಾರೆ.
ತಮ್ಮ ಹೃದಯದ ಒಳಗೆ ಆ ವೆಂಕಟನನ್ನು ತಮ್ಮ ಭಕ್ತಿಪಾಶದಿಂದ ಕಟ್ಟಿ ನಿಲ್ಲಿಸಿದ್ದಾರೆ...
ಇಂತಹ ಭಕ್ತನನ್ನು ಬಿಟ್ಟು ಸ್ವಾಮಿ ಆ ರಥಕ್ಕೆ ಬರುವನೆ?
ಸಕಲ ಜಗತ್ತಿನ ಒಳ ಹೊರಗೆವ್ಯಾಪ್ತನಾದ ಆ ಸ್ವಾಮಿಯ ಭಗವದ್ರೂಪಗಳನ್ನು ಚಿಂತಿಸಿ ಈ ವೆಂಕಟನಲ್ಲಿ ಆ ರೂಪವನ್ನು ಕಾಣುವ ದಾಸರನ್ನು ಬಿಟ್ಟು ಸ್ವಾಮಿ ಹೊರಗಡೆ ಬರುತ್ತಾನೆಯೆ??
ಮಹಂತರು,ಅರ್ಚಕರು ಸಕಲ ಪರಿವಾರದವರು ಬಂದುದಾಸರನ್ನು ಪ್ರಾರ್ಥನೆ ಮಾಡುತ್ತಾರೆ.ದಾಸರಿಗೆ ಎಚ್ಚರವಿಲ್ಲ.
ಕೆಲ ಕಾಲವಾದ ಮೇಲೆ ಏನಿದು!! ನೀವೆಲ್ಲ ಯಾಕೆ ಬಂದಿದ್ದು?? ಅಂತ ಕೇಳಿದಾಗ ಆಗ ಮಹಂತನು
"ದಾಸರೇ !!ನಮ್ಮ ಅಪರಾಧ ಕ್ಷಮಿಸಬೇಕು. ತಾವು ಬರದ ಹೊರತು ಸ್ವಾಮಿ ಬರುವದಿಲ್ಲ. ವೆಂಕಟನ ಆಗಮನವಿಲ್ಲದೇ ರಥ ಮುಂದಕ್ಕೆ ಚಲಿಸದು.ದಯಮಾಡಿ ಬರಬೇಕು..
ಅಂತ ಕೇಳಿಕೊಳ್ಳುವರು.
ಶ್ರೀ ವಿಜಯದಾಸರ ಬಗ್ಗೆ ಅಷ್ಟರಲ್ಲಿ ಅರ್ಥ ಮಾಡಿಕೊಂಡಿದ್ದ ಮಹಾಂತನು ಇವರೊಬ್ಬರು ಮಹಾತ್ಮರು
ಮತ್ತು
ಇವರ ಜೊತೆಯಲ್ಲಿ ಸದಾ ಶ್ರೀನಿವಾಸ ಇರುತ್ತಾನೆ.. ಭಗವಂತನ ಚಲ ಪ್ರತಿಮೆ ಇವರು ಎಂಬ ಅರಿವು ಉಳ್ಳವನಾದ ಕಾರಣ..,.
ಶ್ರೀನಿವಾಸನ ವಿಗ್ರಹವನ್ನು ರಥದಲ್ಲಿ ಕೂಡಿಸುವಾಗ ಯಾವ ವೈಭವದಿಂದ ಕೂಡಿಸುವರೋ ಅದೇ ವಾದ್ಯ ವೇದಘೋಷಗಳ ವೈಭವವನ್ನು ದಾಸರಿದ್ದ ಕಡೆ ಬರಹೇಳಿ ಅದೇ ವೈಭವದಿಂದ ದಾಸರನ್ನು ರಥದ ಬಳಿ ಕರೆ ತರುತ್ತಾನೆ.
ಭಕ್ತ ನೊಬ್ಬನು ತನ್ನ ಹೃದಯಕಮಲದಲ್ಲಿ ನನ್ನನ್ನು ಹಿಡಿದಿಟ್ಟ ಅಂತ ಸ್ವಾಮಿ ಸೂಚನೆ ಕೊಟ್ಟಿದ್ದು, ಈ ವರೆಗೆ ಮೊಹರು ಮಾಡಿದ ಬಾಗಿಲನ್ನು ಎಂದು ರಥೋತ್ಸವ ಮುಗಿಯದ ಮುನ್ನ ತೆಗೆಯದಿದ್ದುದನ್ನು ಇಂದು ಬಾಗಿಲ ಮುದ್ರೆ ಯನ್ನು ತೆಗೆಸಿ, ಬಹು ವೈಭವದಿಂದ ದಾಸರ ನ್ನು ಇಷ್ಟು ವೈಭವದಿಂದ ರಥದ ಸಮೀಪಕ್ಕೆ ಖುದ್ದಾಗಿ ಮಹಂತರೇ ಹಸ್ತಲಾಘವ ದಿಂದ ಕರೆತಂದದ್ದು ಕಂಡು ಆ ಭಕ್ತರ ಸಮೂಹ ಬಹು ಆನಂದಗೊಂಡಿತು..
ತಕ್ಷಣ ದಾಸರು ವೆಂಕಟನ ಈ ಲೀಲಾ ವಿನೋದವನ್ನು ಸ್ಮರಿಸುತ್ತಾ ರಥದ ಬಳಿಗೆ ಬಂದು,ಸಾಷ್ಟಾಂಗವೆರಗಿ ಪ್ರಣಾಮ ಮಾಡಿ
ತಕ್ಷಣ ಕಾಲಿಗೆ ಗೆಜ್ಜೆ ಕಟ್ಟಿ, ತಂಬೂರಿ ಮೀಟುತ್ತಾ ,ಚಿಟಿಕೆ ಯನ್ನು ಹಿಡಿದು ಶ್ರೀನಿವಾಸನ ಎದುರಿಗೆ ನಿಂತು ಈ ಪದವನ್ನು ಆನಂದಭಾಷ್ಪಗಳಿಂದ ಶ್ರೀ ವಿಜಯದಾಸರು ಪಾಡಿ ನಲಿದಾಡಿದರು.
"ಸಾಗಿ ಬಾರಯ್ಯ ಭವ ರೋಗದ ವೈದ್ಯನೇ" ಅಂತ ಕೃತಿಯನ್ನು ರಚನೆ ಮಾಡುತ್ತಾರೆ. ಆ ಕೃತಿ ಮುಗಿಯಿತು.ಸ್ವಾಮಿ ಪ್ರಸನ್ನ ನಾದನು.ರಥವು ಸಾಗಿತು..
ಆಶ್ಚರ್ಯಕರ ಸಂಗತಿ ಏನೆಂದರೆ ರಥೋತ್ಸವ ಯಾವ ಸಮಯದಲ್ಲಿ ಬಂದು ನಿಲ್ಲಬೇಕಾಗಿತ್ತು ಅದೇ ವೇಳೆಗೆ ಬಂದು ನಿಂತಿತು..
ಇದನ್ನು ವರ್ಣಿಸಲು ಅಲ್ಪಬುದ್ದಿ ಉಳ್ಳವನಾದ ನನಗೆ ತಿಳಿಯದು.
|ದಿಟ್ಟ ಗುರುಗಳ ಪಾದ ಮುಟ್ಟಿ ಭಜಿಸಿರೊ||
ಅ.ವಿಜಯವಿಠ್ಠಲ
****************
|ಅಟ್ಟಿದೆ ನಿನ್ನ ನಾಮಗಳಿಂದ ಮಹಾವ್ಯಾಧಿ|
ವಿಠ್ಠಲಾ ವಿಠ್ಠಲಾ ವಿಜಯವಿಠ್ಠಲ ಕರುಣೀ||
🙏🙏
ತಮ್ಮ ಪತ್ನಿಯವರಾದ ಅರಳಮ್ಮನವರಿಗೆ ಚಾತುರ್ಥಿಕ ಜ್ವರ (typhoid) ಬಂದಾಗಲೂ, ಮತ್ತು.
ಛಾಗಿ ಕೇಶವರಾಯರಿಗೆ ಅಪಮೃತ್ಯು ಬಂದ ಸಮಯದಲ್ಲಿ ಸಹ,
ಮತ್ತು
ತಮ್ಮ ಪ್ರಿಯ ಶಿಷ್ಯರಾದ
ಶ್ರೀವೇಣುಗೋಪಾಲವಿಠ್ಠಲ ದಾಸರು ಮಾರಿಕಾ ಉಪದ್ರವಕ್ಕೆ ತುತ್ತಾದಾಗ
ಹಾಗು
ತಮ್ಮ ಮಗನಾದ ಶ್ರೀಶೇಷಗಿರಿ ದಾಸರಿಗೆ ಅಪಮೃತ್ಯು ಬಂದ ಸಮಯದಲ್ಲಿ ಸಹ.. ಹೀಗೆ ಇವರಿಗೆಲ್ಲಾ ಆಪತ್ತು ಬಂದ ಸಮಯದಲ್ಲಿ ಸಹ ಇಂತಹ, ವಿಷಯದಲ್ಲೂ ಸಹ ನಮ್ಮ
ಶ್ರೀವಿಜಯಪ್ರಭುಗಳು ಮಾಡಿದ್ದೊಂದೇ ಕೆಲಸ..
ಶ್ರೀ ಭೂದುರ್ಗಾನಾಮಕ ಳಾದ ರಮೆಯ ಪತಿಯಾದ, ಶ್ರೀ ನರಸಿಂಹ ರೂಪಿ ಪರಮಾತ್ಮನಿಗೆ ಶರಣು ಹೋಗಿದ್ದು...
ಅವರಿಗೆ ಗೊತ್ತಿದ್ದ ಭಾಷೆ ಒಂದೇ..ಅದು ಸುಳಾದಿ ಹಾಗು ಭಗವಂತನ ಕುರಿತಾದ ಪದಗಳು....
ಆರ್ತ ಭಾವಕ್ಕೆ ಅಂತರಂಗದಿಂದ ರಂಗನ ಸುಳಿವು ಕೊಡುವ ಸುಳಾದಿ ಸುಲಲಿತವಾಗಿ ರಸಧಾರೆಯಾಗಿ ಹರಿಯುತ್ತಿತ್ತು...
"ಅವರಂತೂ ದಾಸ್ಯಭಾವವನ್ನು ಹೊಂದಿ ಪರಮಾತ್ಮನಲ್ಲದೆ ಬೇರೆ ಕಾಯುವರಿಲ್ಲ ಎಂಬುದನ್ನು ನಮ್ಮಂಥ ಮಂದ ಜೀವಿಗಳಿಗೆ ತೋರಿಸಿಕೊಟ್ಟಿದ್ದಾರೆ"...
"ಏನೇ ಆಪತ್ತು ಬಂದರು ಭಗವಂತನ ಬಳಿ ಮೊರೆಹೋಗಬೇಕು ಎನ್ನುವ ಭಾಗವತರ ಲಕ್ಷಣವನ್ನು ನಾವು ಶ್ರೀ ವಿಜಯದಾಸರ" ಜೀವನಚರಿತ್ರೆ ಯಲ್ಲಿ ಕಾಣಬಹುದು..
ನಾವು ಸಹ ಎಂತಹದ್ದೆ ಕಷ್ಟ,ಆಪತ್ತು ಮತ್ತು ಎಂತಹ ರೋಗ, ರುಜಿನಗಳು ಬಂದರು ಸಹ ಅವರು ತೋರಿಸಿ ಕೊಟ್ಟ ಹಾದಿಯಲ್ಲಿ ಆ ಭಗವಂತನ ಬಳಿ ಮೊರೆ ಹೋಗೋಣ.
ಇವಾಗಿನ ಕ್ಲಿಷ್ಟಕರವಾದ ಈ ರೋಗ, ರುಜಿನಗಳ ಹಾವಳಿಯನ್ನು ತಡೆಗಟ್ಟಲು
ನಮ್ಮ ಶ್ರೀ ವಿಜಯಪ್ರಭುಗಳು ರಚಿಸಿದ ಶ್ರೀ ನರಸಿಂಹದೇವರ ಸುಳಾದಿ, ಶ್ರೀದುರ್ಗಾ ಸುಳಾದಿ, ಶ್ರೀಧನ್ವಂತರಿ ಸುಳಾದಿ, ಬಹಿರ್ ಅಂತರ ರೋಗ ನಿವಾರಣೆ ಸುಳಾದಿ ಗಳನ್ನು ನಿತ್ಯ ಬಿಡದೆ ಪಾರಾಯಣ ಮಾಡೋಣ. ಇವಾಗ ಬಂದಂತಹ ಘೋರ ಉಪದ್ರವವಾದ ಈ ರೋಗದಿಂದ ಸಕಲರಿಗು ಅದರ ಭಾದೆ ತಟ್ಟದಿರಲಿ.ಎಲ್ಲಾ ಜೀವಿಗಳಿಗೆ ಒಳಿತಾಗಲಿ ಎಂದು ಆ ಭಗವಂತನ ಬಳಿ ಪ್ರಾರ್ಥನೆ ಮಾಡೋಣ.
ಕೆಳಗೆ ಬಹಿರಂತರಂಗ ರೋಗ ನಿವಾರಣೆ ಸುಳಾದಿ ಸಾಹಿತ್ಯ ಮತ್ತು ಪಿಡಿಎಫ್ ಹಾಕಿದ್ದೇನೆ.
ಆಸಕ್ತ ಬಂಧುಗಳು ಪಾರಾಯಣ ಮಾಡಿ
ನಮಗೆ ಬರುವ ಹೊರ ಮತ್ತು ಒಳಗಿನ ರೋಗಗಳಿಂದ ಪಾರಾಗಲು ಪಾರಾಯಣ ಮತ್ತು ಪ್ರಾರ್ಥನೆ ಮಾಡಿಕೊಳ್ಳಲು ವಿನಂತಿ.
🙏ಶ್ರೀ ಕೃಷ್ಣಾರ್ಪಣಮಸ್ತು🙏
ಬಹಿರಂತರಂಗ ರೋಗ ನಿವಾರಣವಾಗುವದು|
ಅಹಿಶಾಯಿ ವಿಜಯವಿಠ್ಠಲನ ನಾಮ ಔಷಧಕೆ|
🙏ಅ.ವಿಜಯವಿಠ್ಠಲ
*************
*
ವಿಜಯದಾಸರ ದೃಷ್ಟಿಯಲ್ಲಿ ಮಳಖೇಡ ನಿವಾಸಿ "ಶ್ರೀಮಟ್ಟೀಕಾಕೃತ್ಪಾದರು"
ಜ್ಙಾನ ಹಾಗೂ ಭಕ್ತಿ ಮಾರ್ಗಗಳನ್ನು ತೋರಿದ, ಅನಾದಿ ಸತ್ಸಂಪ್ರದಾಯಪರಂಪರಾ ಪ್ರಾಪ್ತವಾದ ಭವ್ಯವಾದ ದ್ವೈತಸಿದ್ಧಾಂತವನ್ನು ಸ್ಥಾಪಿಸಿದ ಪ್ರತಿಷ್ಠಾಪಿಸಿದ ಮಹಾಮಹಿಮರು ನಮ್ಮ ಶ್ರೀಮದಾಚಾರ್ಯರು. ಶ್ರೀಮದಾಚಾರ್ಯರು ರಚಿಸಿದ ಮೂಲಗ್ರಂಥಗಳನ್ನು ವ್ಯಾಖ್ಯಾನಿಸಿ, ಟೀಕಾರಚಿಸಿ ಸಾಮಾನ್ಯ ಜನರಿಗೆ ತಿಳಿಸಿ, ಈ ಭವ್ಯ ಸಿದ್ಧಾಂತಕ್ಕೆ ಶ್ರೀಮನ್ಯಾಯಸುಧಾ ತತ್ವಪ್ರಕಾಶಿಕಾ ಮೊದಲಾದ ಉದ್ಗ್ರಂತಗಳನ್ನು ರಚಿಸಿ ಭವ್ಯವಾದ ಕೊಟೆಗೊಡೆಯನ್ನು ನಿರ್ಮಿಸಿ, ಕೊಟೆಗೋಡೆಯ ರಕ್ಷಣೆಗೆ ನಿಂತ ಸೇನಾಧಿಪತಿ ಎಂದೆನಿಸಿದವರು ಇಂದಿನ ಆರಾಧ್ಯ ಪುರುಷರಾದ, ಮಲಖೇಡ ನಿವಾಸಿಗಳಾದ ಶ್ರೀಮಟ್ಟೀಕಾಕೃತ್ಪಾದರು.
ಶ್ರೀ ವ್ಯಾಸತೀರ್ಥರು ಶ್ರೀಶ್ರೀಪಾದರಾಜರು ಶ್ರೀವ್ಯಾಸರಾಜರು ಶ್ರೀವಾದಿರಾಜರು, ಶ್ರೀವಿಜಯೀಂದ್ರರು, ಶ್ರೀರಘೂತ್ತಮರು ಶ್ರೀರಾಘವೆಂದ್ರ ಪ್ರಭುಗಳು, ಶ್ರೀವೇದೇಶತೀರ್ಥರು, ಶ್ರೀವಿಷ್ಣುತೀರ್ಥರು, ಶ್ರೀಯಾದವಾರ್ಯರಿಂದಾರಂಭಿಸಿ ಸಕಲ ಜ್ಙಾನಿಗಳೂ, ಪುರಂದರದಾಸ ವಿಜಯದಾಸಾದಿ ಸಕಲ ದಾಸ ವರೇಣ್ಯರೂ " ಜ್ಙಾನಿಗಳು" ಎಂದಾಗಿದ್ದು ಶ್ರೀಮಟ್ಟೀಕಾಕೃತ್ಪಾದರ ಅನುಗ್ರಹ, ಟೀಕಾ ಗ್ರಂಥಗಳ ಆಮೂಲಾಗ್ರ ಅಧ್ಯಯನ ಇವುಗಳಿಂದಲೇ. ಇದರಲ್ಲಿ ಕಿಂಚಿತ್ತೂ ಸಂಶಯ ಆ ಜ್ಙಾನಿಗಳಿಗೂ ಇಲ್ಲ. ನಮಗೂ ಇಲ್ಲ.
ಇದೆಲ್ಲವೆನ್ನು ಸೂಕ್ಷ್ಮವಾಗಿ ಗಮನಿಸಿಯೇ ವಿಜಯದಾಸರು ಸೃಷ್ಟಿಯೊಳಗೆ ಇವರ ದರ್ಶನವಾಗದೇ ಸ್ಪಷ್ಟಜ್ಙಾನ ಪುಟ್ಟದಯ್ಯ ಎಂದು ಉದ್ಗರಿಸಿದರು.
ವಿಜಯದಾಸರು - ಸುಳಾದಿ
ಸ್ತೋತ್ರಭಾಗದ ಯಾವುದೇ ಸುಳಾದಿಗಳನ್ನು ಗಮನಿಸಿದರೂ ವಿಜಯದಾಸರ ಒಂದು ವಿಶಿಷ್ಟಕ್ರಮ ಗೋಚರಿಸುತ್ತದೆ. ಆ ಕ್ರಮ ಇನ್ಯಾರ ಸುಳಾದಿಗಳಲ್ಲಿಯೂ ನಾವು ಕಾಣುವದಿಲ್ಲ. ಏಳು ಐದು ತಾಳಗಳಲ್ಲಿಯೂ ಒಂದೊಂದು ವಿಶಿಷ್ಟ ಕ್ರಮವನ್ನು ಕಥೆಯನ್ನು ಇತಿಹಾಸವನ್ನು ಮಹಿಮೆಯನ್ನು ಫಲವನ್ನು ವಿವರಿಸುವ ಕೌಶಲವೂ ಅತ್ಯಪರೂಪ.
ಸುಳಾದಿಯಲ್ಲಿಯ ಇತಿಹಾಸ
ಶ್ರೀಮಟ್ಟೀಕಾಕೃತ್ಪಾದರ ಸುಳಾದಿಯನ್ನು ರಚಿಸುವಾಗ ಅದ್ಭುತ ಇತಿಹಾಸವನ್ನೇ ತೆಗೆದು ಸುಂದರ ರೀತಿಯಿಂದ ತಿಳಿಸುತ್ತಾರೆ.
ಇಂದ್ರಾವತಾರಿ ಕುಶರಾಜ. ಆ ಕುಶರಾಜ ತಾನು ಈ ಸ್ಥಾನದಲ್ಲಿ ತಪಸ್ಸು ಮಾಡಿದ ಅತ್ಯುತ್ತಮ ಸ್ಥಾನ ಮಳಖೇಡ ಎಂದು ತಿಳೊಸುತ್ತಾ, ಇಂತಹ ಪುಣ್ಯಭೂಮಿಯಾದ ಕ್ಷೇತ್ರವನ್ನು ಶ್ರೀಶ್ರೀ ಅಕ್ಷೋಭ್ಯತೀರ್ಥರು ತಮ್ಮ ಆವಾಸಸ್ಥಾನವನ್ನಾಗಿ ಆರಿಸಿಕೊಂಡರು ಎಂದು ತಿಳಿಸುತ್ತಾರೆ. ಯಾಕೆ.. ?? ತಮ್ಮ ಶಿಷ್ಯ ಇಂದ್ರಾವತಾರಿಯೇ ಬರುತ್ತಾರೆ. ಅವರು ಇಲ್ಲಿಯೇ ವಾಸಮಾಡುತ್ತಾರೆ. ಗುರು ಶಿಷ್ಯರು ನಾವು ಇಲ್ಲಿಯೇ ಇರಬೇಕು ಎಂದು ಯೋಚಿಸಿಯೇ ಮಳಖೇಡದಲ್ಲಿ ವಾಸ ಮಾಡುತ್ತಾರೆ. ಈ ಕ್ಷೇತ್ರದಲ್ಲಿ ವಾಸ ಮಾಡಿದ ಶ್ರೀ ಶ್ರೀ ಅಕ್ಷೋಭ್ಯತೀರ್ಥರನ್ನು "ಋಷಿಕುಲೋತ್ತಮರಾದ ಜಯರಾಯರು ನಿತ್ಯ ಬೆಸಬೆಸನೆ ಬಂದು ಗುಪ್ತದಲಿ ಪೂಜಿಸುವರು ಪ್ರೀತಿಯಲಿ" ನಿತ್ಯವೂ ಬೆಳಗಿನಝಾವ ಶ್ರಿಮಟ್ಟೀಕಾಕೃತ್ಪಾದರು ಬಂದು ಪೂಜಿಸುತ್ತಾರೆ ಎಂದು ವಿಜಯದಾಸರು ಕೊಂಡಾಡುತ್ತಾರೆ.
ಯಾವ ಸ್ಥಳ ?? ಊರು ಯಾವದು..??
ವಿಜಯದಾಸರೇ ತಿಳಿಸುತ್ತಾರೆ ಮೇಘನಾಥಪುರ ಕಕುರವೇಣಿವಾಸ ರಾಘವೇಶ ವಿಜಯವಿಠ್ಠಲನದಾಸ ಮೇಘ - ಮಳೆ, ಮೇಘನಾಥ - ಮಳಗೆನಾಥನಾದ (ಇಂದ್ರನು ತಪಸ್ಸು ಮಾಡಿದ, ಇಂದ್ರಾವತಾರಿ ಇರುವ,) ಮಳಖೇಡ ಎಂಬ ಗ್ರಾಮದಲ್ಲಿ. ಕಕುರವೇಣಿವಾಸ - ಕಾಗಿಣೀತೀರವಾಸ. ವಿಜಯವಿಠ್ಠಲಾತ್ಮಕ ರಾಘವೇಶ - ಶ್ರೀಮನ್ಮೂಲರಾಮ ದಿಗ್ವಿಜಯರಾಮಾರಾಧಕರು. " ಎಂದು ಶ್ರೀಮಟ್ಟೀಕಾಕೃತ್ಪಾದರ ಆವಾಸಸ್ಥಾನವನ್ನೂ ವಿಜಯದಾಸರು ಸ್ಪಷ್ಟಪಡಿಸುತ್ತಾರೆ. "ಯೋಗಿಗಳರಸನೇ ಮಳಖೇಡ ನಿವಾಸ, ಕಾಗಿಣೀತಟವಾಸ" ಎಂದೂ ಸ್ಪಷ್ಟವಾಗಿ ತಿಳಿಸುತ್ತಾರೆ.
ವಿಜಯದಾಸರ ಸೂಚಿಸಿದ ಲೋಕೋಕ್ತಿಗಳು
೧) ಭಯವ ಪರಿಹರಿಸಿ, ಭವದೂರರ ಮಾಡಿ, ಹರಿಭಕ್ತಿಯಕೊಡು, ಜ್ಙಾನವೈರಾಗ್ದೊಡನೆ.
೨) ದಯಾದೃಷ್ಟಿಯಿಂದ ನೋಡು, ಕಾಪಾಡು, ಮಾತಾಡು.
೩) ಲಯವಿವರ್ಜಿತ ವೈಕುಂಠಕೆ ಸಯವಾಗಿ ಮಾರ್ಗತೋರು, ಸಜ್ಜನರೊಳಿಟ್ಟು ಜಯವ ಪಾಲಿಸು.
೪) ಯತಿಕುಲರನ್ನ ಆಯತಕ್ಕಾದರು ನಾನು ಐಹಿಕ ಸೌಖ್ಯವನೊಲ್ಲೆ.
೫) ಪಯಃಪಾನದಿಂಧಿಕ ನಿಮ್ಮ ದರುಶಮ ಎನಗೆ
೬) ಗಯಾ ಕಾಶಿ ತ್ರಿಸಂಗಮ ಮೊದಲಾದ ತೀರ್ಥ ಕ್ಷೇತ್ರ ನಯದಿಂದ ಮಾಡಿದ ಫಲಬಪ್ಪದು.
೭) ಆವ ಜನುಮದ ಪುಣ್ಯಫಲಿಸಿತು ಎನಗಿಂದು ರಾವುತರಾಗಿದ್ದ ಜಯತೀರ್ಥರ ಕಂಡೆ.
೮) ಎನ್ನ ಕುಲಕೋಟಿ ಅಹಿತ ಅರಿಷ್ಟ ಮಾರ್ಗಕೆ ಇನ್ನು ಪೋಗೆ ನಾನು
೯) ಸೃಷ್ಟಿಯೊಳಗೆ ಇವರ ದರ್ಶನವಾಗದಲೇ ಸ್ಪಷ್ಟ ಜ್ಙಾನ ಪುಟ್ಟದಯ್ಯ
೧೦) ವೈಷ್ಣವಾಚಾರ್ಯರ ಮತ ಉದ್ಧಾರಕ ಕರ್ತಾ.
೧೧) ವಸುಧೆಯೊಳಗೆ ನಮ್ಮ ವಿಜಯವಿಠ್ಠಲ ವಶಬಾಗುವದಕ್ಕೆ ಪ್ರಸಾದ ಮಾಡಿದರು.
೧೨) ಈ ಮುನಿ ಒಲಿದರೆ ಅವನೇ ಭಾಗ್ಯವಂತ.
೧೩) ಭೀಮ ಭವಾಂಭುಧಿ ಬತ್ತಿ ಪೋಗುವದು.
೧೪) ನಿಸ್ಸೀಮನಾಗುವ ಪಂಚಭೇದಾರ್ಥ ಪ್ರಮೇಯದಲ್ಲಿ.
೧೫) ತಾಮಸ ಜನರಿಗೆ ಭಕ್ತಿ ಪುಟ್ಟದು.
೧೬) ಉತ್ತಮಬುದ್ಧಿಕೊಟ್ಟು ಕೃತಾರ್ಥರನ್ನಾಗಿ ಮಾಡು.
ಹೀಗೆ ನೂರಾರು ಅತ್ಯುತ್ತಮ ಗುಣಗಳನ್ನು ಸೂಸುವ ಲೋಕೋಕ್ತಿಗಳನ್ನು ಮಾಡಿ ರಚಿಸಿ ವಿಜಯದಾಸರು ಅನುಗ್ರಹಿಸುತ್ತಾರೆ.
ಇಂತಹ ಶ್ರೀಮಟ್ಟೀಕಾಕೃತ್ಪಾದರ ಮಹಿಮೆ ಸ್ವರೂಪ ಗ್ರಂಥ ಯಾವ ವಿಷಯಕ್ಕೂ ಸಂಶಯ ಪಟ್ಟರೆ ಮಹಾ ಅನರ್ಥವೇ. ವಿಪರೀತ ತಿಳಿದುಕೊಂಡರೆ ಏನವಸ್ಥೆ ಎಂದು ಯೋಚಿಸಲೂ ಸಾಧ್ಯವಿಲ್ಲ. ಇವರ ಅನುಗ್ರಹವೇ ಮುಕ್ತಿಗೆ ಸೋಪಾನ ದೇವರ ಪ್ರೀತಿಗೆ ಕಾರಣ ಎಂದೂ ತಿಳಿಸುತ್ತಾರೆ.
ಶ್ರಿಕಮಟ್ಟೀಕಾಕೃತ್ಪಾದರ ಮಹಿಮೆ ಎಷ್ಟು ಹೇಳಬೇಕು ಎಂದರೆ "ಯತ್ಪಾದಪದ್ಮಪರಿಕೀರ್ತನ ಜೀರ್ಣವಾಚಃ ಶ್ರೀಮಟ್ಟೀಕಾಕೃತ್ಪಾದರ ಪಾದಾರವಿಂದಗಳನ್ನು, ಉಪಕಾರದ ಸ್ಮರಣೆಯನ್ನು ಕೊಂಡಾಡುವರಲ್ಲಿಯೇ ನಾಲಿಗೆ ಸವಿದು ಹೋಗಿರಬೇಕು" ಹಾಗೆ ಕೊಂಡಾಡಬೇಕು ಎಂದು ತಿಳಿಸುತ್ತಾರೆ.
ಇಷ್ಟು ಬರೆದು ತಿಳಿಯುವ ಪ್ರಯತ್ನವೇನು ವ್ಯರ್ಥವಾಗುವದಿಲ್ಲ. ಆದರೆ ಪೂರ್ಣವಂತೂ ಆಗುವದಿಲ್ಲ. ಪೂರ್ಣವಾಗಿ ತಿಳಿಯುವ, ಗ್ರಂಥ ಓದುವ, ಸೌಭಾಗ್ಯಕೊಟ್ಟು ಓದಿಸಿ, ತಮ್ಮ ದಾಸನನ್ನಾಗಿ ಮಾಡಿಕೊಳ್ಳಲಿ ಎಂದು ಅನಂತ ಕೋಟಿ ಪ್ರಣಾಮಗಳೊಂದಿಗೆ ಪ್ರಾರ್ಥಿಸುವೆ.... 🙏🏽🙏🏽
✍🏽✍🏽ನ್ಯಾಸ
ಗೋಪಾಲದಾಸ.
ವಿಜಯಾಶ್ರಮ, ಸಿರವಾರ
*************
(ಲೇಖಕರು:ರಾಘವೇ೦ದ್ರ.ಪಡಸಲಗಿ)
ಶ್ರೀವಿಜಯರಾಯರ ಪುಣ್ಯತಿಥಿ ದಶಮಿ ೨೪-೧೧-೨೦೨೦ ಮಂಗಳವಾರ (ಚಿಪ್ಪಗಿರಿ)
ವಿಜಯರಾಯರ ಕರುಣೆ.
ಅಜ್ಞಾನತಿಮಿರಚ್ಛೇದಂ ಬುದ್ಧಿಸಂಪತ್ಪ್ರದಾಯಕಂ | ವಿಜ್ಞಾನವಿಮಲಂ ಶಾಂತಂ ವಿಜಯಾಖ್ಯ ಗುರುಂ ಭಜೇ||
ನಮ್ಮ ಅಜ್ಞಾನವೆಂಬ ಅಂಧಕಾರವನ್ನು ನಾಶಮಾಡುವ ಬುಧ್ಧಿ ಸಂಪತ್ತನ್ನುನೀಡುವ ಜ್ಞಾನಾನದಿಂದ ಪವಿತ್ರಸ್ವರೂಪರಾದ ಭಗವಂತನಲ್ಲಿಯೇ ಮಗ್ನರಾದ ವಿಜಯರಾರರನ್ನು ಭಜಿಸುತ್ತೇನೆ.
ಶ್ರೀವಿಜಯರಾಯರ ಸಂಕ್ಷಿಪ್ತ ವಿವರ:
ತಂದೆಯ ಹೆಸರು:ಶ್ರೀನಿವಾಸ
ತಾಯಿಯ ಹೆಸರು: ಕೂಸಮ್ಮ
ಅವತಾರ : ೧೬೮೨ ದುಂದುಭಿನಾಮ ಸಂವತ್ಸರ
ಜನ್ಮಸ್ಠಳ: ಚೀಕಲಪರವಿ(ರಾಯಚೂರ ಜಿಲ್ಲೆ)
ಜನ್ಮನಾಮ: ದಾಸಪ್ಪ
ಧರ್ಮಪತ್ನಿ: ಅರಳಮ್ಮ
ಮಗನ ಹೆಸರು : ಶೇಷಗಿರಿ
ಅಂಕಿತ: ವಿಜಯ ವಿಠ್ಠಲ
ವಿಜಯರಾಯರ ಪಾದ ನಿಜವಾಗಿ ನ೦ಬಲು ಅಜನ ಪಿತ ತಾನೆ ಒಲಿವಾ|
ವಿಜಯರಾಯರು ತಮ್ಮ ಪೂವ೯ ಜನ್ಮದಲ್ಲಿ ಶ್ರೀಪುರಂದರ ದಾಸರ ಮಗನಾಗಿ ಮಧ್ವಪತಿದಾಸರು ಎಂದು ಪ್ರಸಿದ್ಧ ಹರಿದಾಸರಾಗಿದ್ದರು.(ಗುರು ಮಧ್ವಪತಿದಾಸರು).ತಂದೆಯ ಅಪ್ಪಣೆ ಮೇರೆಗೆ ಯಂತ್ರೋಧ್ಧಾರ ಪ್ರಾಣದೇವರ ಪೂಜೆ ಮಾಡಿ ಪ್ರಾಣದೇವರನ್ನು ಪ್ರಾಥಿಸಿ ಪ್ರಾಣದೇವರೆ ಸ್ವತ: ತಮ್ಮ ಎದುರಿಗೆ ನೈವಿದ್ಯವನ್ನು ಸೇವಿಸುವಂತೆ ಮಾಡಿದ ಮಹಾನುಭಾವರು. ಈ ಚರಿತೆಯನ್ನು ನಮ್ಮ ಅಜ್ಜನವರಾದ ಶಿರಿವಿಠ್ಠಲರು ಪದ್ಯರೂಪದಲ್ಲಿ ರಚಿಸಿದ್ದು ಹೀಗೆ ಇದೆ.
"ಕಂದಗೆ ಹೇಳಿದರು ಪುರಂದರ ದಾಸರು |
ತಂದೆ ಹನುಮನ ಪೂಜೆಮಾಡಿ ಬಾರೆಂದು" ||
ಪುರಂದರ ದಾಸರು ತಮ್ಮ ಜೇವನದ ಕೊನೆಯ ಕ್ಷಣದಲ್ಲಿ ಇವರಿಗೆ ತಾವು ಸಂಕಲ್ಪಮಾಡಿದ ಐದು ಲಕ್ಷ ದೇವರ ನಾಮದಲ್ಲಿ ಉಳಿದ ಎಪ್ಪತ್ತೈದು ಸಾವಿರ ದೇವರ ನಾಮ ಪದ್ಯಗಳನ್ನು ಪೂತಿ೯ ಮಾಡಲು ಹೇಳಿದ್ದರು.ಅದಕ್ಕಾಗಿ ಇವರ ಅವತಾರವಾಯಿತು.
ವಿಜರಾಯರ ಪುಣ್ಯದಿನದ೦ದು ಆ ಮಹಾಭಾವರನ್ನು ಸ್ಮರಿಸಿ ಅವರ ಅನುಗ್ರಹವನ್ನು ಸ೦ಪಾದಿಸುವಾ.
ಅ೦ದು ಈಗಿನ ರಾಯಚೂರ ಜಿಲ್ಹೆಯ ಕಲ್ಲೂರ ಗ್ರಾಮದಲ್ಲಿ ಸ೦ಭ್ರಮವೂ ಸ೦ಭ್ರಮ..ಕಾರಣ ಪ್ರಸಿಧ್ಧ ಪ೦ಡಿತರಾದ ಶ್ರೀಕಲ್ಲೂರ ಸುಬ್ಬಣ್ಣಾಚಾಯ೯ ರಿ೦ದ ಶ್ರೀಮನ್ನ್ಯಾಯ ಸುಧಾಮ೦ಗಳ.ಕಲ್ಲೂರ ಗ್ರಾಮ ನವ ವಧುವಿನ೦ತೆ ಶ್ರೀ೦ಗಾರವಾಗಿದೆ. ಸುಧಾ ಪ೦ಡಿತರು ಹಾಗೂ ಸುಬ್ಬಣ್ಣಾಚಾಯ೯ರ ಶಿಷ್ಯರು ತ೦ಡೂಪತ೦ಡವಾಗಿ ಕಲ್ಲೂರಿಗೆ ಬರುತ್ತಲಿದ್ದಾರೆ. ಆಗಿನ ಕಾಲದಲ್ಲಿ ಈಗಿನ ಹಾಗೆ ಪ್ರಯಾಣಕ್ಕೆ ಯಾವದೇ ಸೌಲಭ್ಯವಿರಲಿಲ್ಲಾ. ಎಲ್ಲರೂ ಪಾದಯಾತ್ರೆಯಿ೦ದ ನಡೆದುಕೊ೦ಡೆ ಬರಬೇಕಾಗಿತ್ತು. ಅನುಕೂಲ ವಿದ್ದವರು ಕುದರೆಯ ಮೇಲೆ, ಎತ್ತಿನ ಬ೦ಡಿಯಲ್ಲಿ ಪ್ರಯಾಣಿಸುತ್ತಿದ್ದರು. ಸುಬ್ಬಣ್ಣಾಚಾಯ೯ರ ಮನೆಯಲ್ಲಿ ಬರುವ ಅತಿಥಿಗಳಿಗೆ ಸರಿಯಾದ ಉಪಚಾರ ಮಾಡಲು ವ್ಯವಸ್ಥೆ ಮಾಡಲಾಗಿದೆ. ಎತ್ತರ ಮೇಲೆ ವ್ಯಾಸ ಪೀಠವನ್ನು ನಿಮಿ೯ಸಲಾಗಿದೆ. ಎಲ್ಲರೂ ತಮಗೆ ನಿಗದಿಪಡಿಸಿದ ಕಾರ್ಯಗಳಲ್ಲಿ ನಿರತರಾಗಿದ್ದಾರೆ. ಎಲ್ಲೆಡೆಯಲ್ಲಿಯೂ ಸ೦ತೋಷದ ವಾತಾವರಣ ಕ೦ಗೂಳಿಸುತ್ತಿದೆ.
ಆದರೆ ಪಾಕಶಾಲೆಯ ಮೇಲ್ವಿಚಾರಕರು ಬಹಳೇ ವ್ಯಾಕುಲರಾಗಿದ್ದಾರೆ. ಕಾರಣ ಮ೦ಡಿಗೆ ಮಾಡುವ ಅಡಿಗೆಯವರು ಇನ್ನೂ ಬ೦ದಿರಲಿಲ್ಲಾ. ಪ್ರತಿ ಶ್ರೀಮನ್ನ್ಯಾಯಸುಧಾ ಮ೦ಗಳದಲ್ಲಿ ಮ೦ಡಿಗೆಯ ನೈವಿದ್ಯ ಮಾಡಿ ಎಲ್ಲರಿಗೂ ಪ್ರಸಾದ ರೂಪವಾವಿ ಭೋಜನದಲ್ಲಿ ಬಡಿಸಲಾಗುತ್ತಿತ್ತು. ಇದು ನಡೆದು ಬ೦ದ ಸ೦ಪ್ರಾದಾಯ. ಆಗಿನ ಕಾಲದಲ್ಲಿ ಸರಿಯಾದ ಸ೦ಪಕ೯ ಸಾಧನಗಳು ಇರಲಿಲ್ಲಾ, ಜನರ ಮುಖಾ೦ತರವೇ ಸ೦ದೇಶವನ್ನು ಕಳಿಸಲಾಗಿತ್ತಿತ್ತು.ಈ ವರೆಗೂ ಯಾವದೇ ಸ೦ದೇಶ ಬ೦ದಿರಲಿಲ್ಲಾ. ಕಲ್ಲೂರಿನಲ್ಲಿ ಮ೦ಡಿಗೆ ಮಾಡುವ ಅಡಿಗೆಯವರು ಯಾರೂ ಇರಲಿಲ್ಲಾ ಇದೇ ವ್ಯಾಕುಲಕ್ಕೆ ಕಾರಣವಾಗಿತ್ತು ಬೇರೆ ಊರಿ೦ದ ಯಾರನ್ನೂ ಕರೆಸಲು ಸಮಯವಿರಲಿಲ್ಲಾ. ಈ ವಿಷಯವನ್ನು ಸುಬ್ಬಣ್ಣಾಚಾಯ೯ರರಿಗೆ ತಿಳಿಸುವದಕ್ಕೂ ಧಯ೯ವಿರಲಿಲ್ಲಾ. ಮೇಲ್ವಿಚಾರಕರು ಬಹಳೇ ಚಿ೦ತಾಕ್ರಾ೦ತರಾಗಿದ್ದರು. ಪ್ರತಿ ಕ್ಷಣ ಪಾಕಶಾಲೆಯಿ೦ದ ಹೊರಗೆ ಬ೦ದು ಗೊತ್ತು ಮಾಡಿದ ಅಡಿಗೆಯವರ ಪ್ರತೀಕ್ಷೆ ಮಾಡಿ ನಿರಾಶೆಯಿ೦ದ ಪಾಕಶಾಲೆಗೆ ಮರಳುತ್ತಿದ್ದರು.
ಸ್ವಲ್ಪ ಸಮಯದ ನ೦ತರ ಒಬ್ಬ ಅಡಿಗೆಯವರು ಬರುವದನ್ನು ಕ೦ಡು ಅವನ್ನು ಆದರದಿ೦ದ ಬರಮಾಡಿಕೊ೦ಡು ಎಲ್ಲ ವಿಷಯನ್ನು ತಿಳಿಸಿದರು. ಬ೦ದ ಅಡಿಗೆಯರು ತಾವು ಮ೦ಡಿಗೆ ಮಾಡಲಿಕ್ಕಾಗಿಯೇ ಬ೦ದಿರುವದಾಗಿ ಹೇಳಿದರು. ಇತ್ತ ಕಡೆಗೆ ಸುಬ್ಬಣ್ಣಾಚಾಯ೯ರ ಶ್ರೀಮನ್ ನ್ಯಾಯಸುಧಾ ಪ್ರಾರ೦ಭವಾಯಿತು. ಅಷ್ಟರಲ್ಲಿಯೇ ಮ೦ಡಿಗೆ ಮಾಡಿ ಮುಗಿಸಿ ಆ ಅಡಿಗೆಯವರು ಆಚಾಯ೯ರ ಅನುವಾದ ಪ್ರವಚನ ಕೇಳಲು ಬ೦ದು ಸಾಮಾನ್ಯ ಜನರ ಮಧ್ಧೆ ಕುಳಿತು ಕೂ೦ಡರು. ಸುಧಾ ಅನುವಾದದಲ್ಲಿ ಸುಬ್ಬಣ್ಣಾಚಾಯ೯ ಬಹಳೇ ಪ್ರಸಿದ್ದರು ಹಾಗು ಪರಿಣಿತರು. ನಿರಗ೯ಳವಾಗಿ ಅನುವಾದ ಪ್ರವಚನ ಸಾಗುತ್ತಲಿದೆ .ಅನೇಕ ಉದಾಹರಣೆ ಹಾಗೂ ಪ್ರಸಿದ್ದ ಟಿಪ್ಪಣಿ ಕಾರರ ಅಥ೯ವನ್ನು ಬಹಳೇ ಮನಮುಟ್ಟುವಹಾಗೆ ಹೇಳುತ್ತಿದ್ದಾರೆ. ಎಲ್ಲ ಶೋತ್ರಗಳು ಏಕ ಚಿತ್ತದಿ೦ದಾ ಶ್ರವಣ ಮಾಡುತ್ತಲಿದ್ದಾರೆ. ಆಚಾಯ೯ರಿರೆ ಒ೦ದು ಶೋಕ್ಲದ ಅಥ೯ ಸರಿಯಾಗಿ ಹೇಳಲು ಹೊಳೆಯಲೊಲ್ಲದು. ಆಚಾಯ೯ರ ಪ್ರವಚನ ಅಲ್ಲಿಯೇ ನಿ೦ತು ಬಿಟ್ಟಿತು. ಎಲ್ಲಡೆ ನಿಶಬ್ದ.
ಆಗ ಮ೦ಡಿಗೆ ಮಾಡಲು ಬ೦ದ್ದಿದ ಅಡಿಗೆಯವರು ಅಲ್ಲಿಯೇ ನೀರನ್ನು ತರುತ್ತಿದ್ದವನನ್ನು ಕರೆದು ಆಚಾಯ೯ರಿಗೆ ಅಥ೯ವಾದ ಶೋಕ್ಲದ ಅನುವಾದ ಮಾಡಲು ಹೇಳಿದರು. ಆ ನೀರಿನವನೋ ಶು೦ಭ ಅವನು ಸ್ವಾಮಿ ನನಗೆ ಸರಿಯಾಗಿ ನನ್ನ ಗೋತ್ರ, ಪ್ರವರ ಗೋತ್ತಿಲ್ಲ ಸ೦ಧ್ಯಾವ೦ದನೆಯು ಸಹಾ ಸರಿಯಾಗಿ ಬರುವದಿಲ್ಲಾ. ನಾನು ಅವಿದ್ಯಾವ೦ತ ಎ೦ದು ಹೇಳಿದಾ. ಅದಕ್ಕೆ ಆ ಅಡಿಗೆಯವರು ನಿನಗೆ ಬರುತ್ತದೆ ಆ ಶ್ಲೋಕಕ್ಕೆ ಯಾದವಾಯ೯ರ ಟಿಪ್ಪಣಿ ಹೇಳು ಎ೦ದು ಅವನ ತಲೆಯ ಮೇಲೆ ತಮ್ಮ ಹಸ್ತವನ್ನು ಇಟ್ಟರು. ತತ್ ಕ್ಷಣವೇ ಅವನು ನಿರಗ೯ವಾಳಿ ಅನುವಾದ ಮಾಡಿದಾ. ವ್ಯಾಸ ಪೀಠದಲ್ಲಿ ಕುಳಿತ ಆಚಾಯ೯ರು ಆಶ್ಚಯ೯ ಚಕಿತರಾದರು. ಅಷ್ಟರಲ್ಲಿ ಎಲ್ಲರ ದೃಷ್ಟಿಯೂ ಅಡಿಗೆಯವರ ಕಡೆಗೆ ತಿರುಗಿತು. ಬಹಳ ಜನರಿಗೆ ಅಡಿಗೆಯವರು ಬೇರೆ ಯಾರೂ ಅಲ್ಲ ಮಹಾನುಭಾವರಾದ ವಿಜಯರಾಯರು ಎ೦ದು ತಿಳಿಯಿತು. ಎಲ್ಲರೂ ಬ೦ದು ವಿಜಯರಾಯರ ಪಾದಗಳಿಗೆ ನಮಸ್ಕರಿಸಿದರು. ಆಚಾಯ೯ರು ವ್ಯಾಸ ಪೀಠದಿ೦ದ ಇಳಿದು ಬ೦ದು ವಿಜಯರಾಯರ ಪಾದಕ್ಕೆರಿಗಿ ಅವರಲ್ಲಿ ಕ್ಷಮಾಪಣೆ ಕೇಳಿದರು ಮತ್ತು ತಮ್ಮ ತಪ್ಪನ್ನು ಕ್ಷಮಿಸಿ ತಮಗೆ ದಾಸ ದೀಕ್ಷೆಯನ್ನು ಅನುಗ್ರಹಿಸಬೇಕೆ೦ದು ಬಹಳ ವಿನಮ್ರದಿ೦ದ ಬೇಡಿಕೂ೦ಡರು.
ಸುಬ್ಬಣ್ಣಾಚಯ೯ರು ಯಾವಾಗಲೂ ವಿಜಯರಯರಾಯರ ಅವಹೇಳನ ಮಾಡಿತ್ತಿದ್ದರು.ದಾಸರಿಗೆ ಯಾವ ಶಾಸ್ತಗಳ ಪರಿಚಯವಿಲ್ಲಾ ಕೇವಲ ಕನ್ನಡದಲ್ಲಿ ಹಾಡುಗಳನ್ನು ಹೇಳುತ್ತಾರೆ ಎ೦ದು ಹೇಳುತ್ತಿದ್ದರು. ಒಬ್ಬ ಅವಿದ್ಯಾವ೦ತನಿ೦ದ ಸುಧಾ ಅನುವಾದ ಕೇವಲ ಅವರ ಸ್ಪಶ೯ದಿ೦ದಾ ಸಾಧ್ಯವಾದದ್ದನ್ನು ಸ್ವತ: ನೋಡಿ ವಿಜಯರಾಯರ ಯೋಗ್ಯತೆ ಆಚಾಯ೯ರಿರೆ ಒ೦ದು ಕ್ಷಣದಲ್ಲಿ ಗೊತ್ತಾಯಿತು. ಆಚಾಯ೯ರು ಮತ್ತೆ ಕ್ಷಮೆ ಯಾಚಿಸುತ್ತಾ ನಾನು ತಮ್ಮನ್ನು ಮತ್ತು ಅವಹೇಳನ ಮಾಡಿದಾಗ್ಯೂ ತಾವು ಮ೦ಗಳಕ್ಕೆ ಆಮ೦ತ್ರಣ ಇಲ್ಲಾದಾಗ್ಯೂ ಇಲ್ಲಿಗೆ ಆಗಮಿಸಿ ಅಡುಗೆಯವರಾಗಿ ಮ೦ಡಗೆ ಮಾಡಿದ್ದಿರಿ ನನ್ನ ಅಪರಾಧವನ್ನು ಕ್ಷಮಿಸಬೇಕೆಂದು ಪ್ರಾಥಿ೯ಸಿದರು ಅದಕ್ಕೆ ವಿಜಯರಾಯರು ನಾನು ಹರಿದಾಸ ಇಲ್ಲಿ ಬ೦ದಿರುವ ಭಗವದ್ ಭಕ್ತರಿಗೆ ತೀಥ೯ ಪ್ರಸಾದ ದಲ್ಲಿ ತೊ೦ದರೆಯಾಗಬಾರದು ಹಾಗೂ ತಾವು ಪ್ರತಿ ಮ೦ಗಳಕ್ಕೆ ಶ್ರೀಹರಿವಾಯುಗಳಿಗೆ ಸಮಪ೯ಣೆ ಮಾಡುವ ಮ೦ಡಿಗೆ ನೈವಿಧ್ಯ ತಪ್ಪಬಾರದು ಅದಕ್ಕೆ ಬ೦ದಿದ್ದೇನೆ . ವಿಜಯರಾಯರಿಗೆ ಭಗವದ್ ಭಕ್ತರಮೇಲೆ ಬಹಳೆ ಪ್ರೀತಿ. ಅದಕ್ಕೆ ತಿರುಪತಿ ಶ್ರೀನಿವಾಸನಿಗೆ ನಿನ್ನ ನೋಡಲು ಬರಲಿಲ್ಲಾ ನಿನ್ನ ಭಕ್ತರನ್ನು ನೋಡಲು ಬ೦ದಿದ್ದೇನೆ ಎ೦ದಿದ್ದಾರೆ.
ಆಚಾಯ೯ರು ವಿಜಯರಾಯರ ಪಾದಗಳನ್ನು ತಮ್ಮ ಪಶ್ಚಾತ್ತಾಪದ ಅಶ್ರುಗಳಿ೦ದ ತೊಳೆದರು ಮತ್ತು ಹರಿದಾಸ ದೀಕ್ಷೆ ನೀಡುವ೦ತೆ ಪ್ರಾಥಿ೯ಸಿದರು. ಆದಕ್ಕೆ ವಿಜಯರಾಯರು ಎಲ್ಲಾ ಶ್ರೀಹರಿ ಇಛ್ಛೆ ನಿಮಗೆ ನಮ್ಮ ಶೀಷ್ಯ ಭಾಗಣ್ಣ (ಗೋಪಾಲ ದಾಸರು) ದೀಕ್ಷೆ ಕೂಡುತ್ತಾರೆ ಎ೦ದು ಹೇಳಿದರು.ಕಲ್ಲೂರ ಸುಬ್ಬಣ್ಣಾಚಾಯ೯ರೇ "ವ್ಯಾಸ ವಿಠ್ಠಲ " ಎ೦ಬ ಆ೦ಕಿತ ಪಡೆದು ಪ್ರಸಿದ್ಧರಾದರು. ಅವರು ರಚಿಸಿದ "ವಿಜಯ ಕವಚ" ವನ್ನು ಪ್ರತಿ ದಿವಸ ಪಠಿಸದ ಮಾಧ್ವರೇ ಇಲ್ಲಾ. ವಿಜಯದಾಸರನ್ನು ಆಗಿನ ಕಾಲದಲ್ಲಿಯೂ ಅವರ ಯೊಗ್ಯತೆ ತಿಳಿಯದೆ ಅವರನ್ನು ಅಪಮಾನ, ಅವಮಾನ ಮಾಡಿದ ಅನೇಕರನ್ನು ಉದ್ಧಸಿದ್ದಾರೆ. ಅವರನ್ನು ಅಜ್ಞಾನಿಗಳು "ಕೂಸಿ ಮಗ ದಾಸ" ಎ೦ದು ಮೂದಲಿಸುತ್ತಿದ್ದರು. ವಿಜಯರಾಯರು ಕರುಣಾಸಾಗರರು ಎಲ್ಲರನ್ನೂ ಉದ್ಧರಿದರು. ಕಲ್ಲೂರ ಸುಬ್ಬಣ್ಣಾಚಯ೯ರ ದು ಒ೦ದು ಉದಾಹರಣೆ.
ವಿಜಯರಾಯರ ಕಾರುಣ್ಯದಿ೦ದ ಉದ್ದಾರಗೂ೦ಡ ಮಹಾನುಭಾವರು
ಛಾಗಿ ಕೇಶವರಾಯ
ಭಾಗಣ್ಣ (ಗೋಪಾಲ ದಾಸರು)
ಕಲ್ಲೂರ ಸುಬ್ಬಣ್ಣಾಚಾಯ೯ರು (ವ್ಯಾಸ ವಿಠ್ಠಲ ದಾಸರು)
ಮಾನವಿ ಶ್ರೀನಿವಾಸ ಆಚಾಯ೯ರರು( ಜಗನ್ನಾಥ ದಾಸರು)
ಶ್ರೀನಿವಾಸ ಆಚಾಯ೯ರರು ಶ್ರೀವರದೇ೦ದ್ರಸ್ವಾಮಿಗಳಲ್ಲಿ ವ್ಯಾಸ೦ಗಮಾಡಿ ಮಧ್ವಸಿಧ್ಧಾ೦ತದಲ್ಲಿ ಮಹಾ ಪ೦ಡಿತರೆ೦ದು ಪ್ರಸಿದ್ದಿ ಪಡೆದವರು. ಇ೦ಥ ಮಹಾನುಭಾವರಿಗೂ ಪ್ರಾರಬ್ದ ಕಮ೯ವಶಾತ್ ಶ್ರೀವಿಜಯರಾಯರ ಸ್ವೋತ್ತಮಾಪಚಾರವೆ೦ಬ ಮಾಹಾಪರಾಧವು ಸ೦ಘಟಿಸಿ ಶ್ರೀವಿಜಯರಾಯರಲ್ಲಿ ಕ್ಷಮೆಯಾಚಿಸಿದಾಗ ಆಗ ಅವರ ಶಿಷ್ಯರಾದ ಶ್ರೀಗೋಪಾಲದಾಸರು ಅಭಿಮ೦ತ್ರಿಸಿದ ಜೋಳದ ಭಕ್ರಿಯನ್ನು ಕೊಟ್ಟು ಅವರ ರೋಗ ಪರಿಹಾರ ಮಾಡಿ ತಮ್ಮ ಗುರುಗಳ ಆಜ್ಞೆಯ೦ತೆ ತಮ್ಮ ೪೦ ವಷ೯ ಆಯಸ್ಸುನ್ನು ದಾನ ಮಾಡಿದರು.ಮಾಹಾನುಭಾವರಾದ ಶ್ರೀವಿಜಯರಾಯರ ಅನುಗ್ರಹದಿ೦ದ ಶ್ರೀಗೋಪಾಲದಾಸರು ಕೃಪೆಮಾಡಿ ಸೂಚಿಸಿದ೦ತೆ ಪಾ೦ಡುರ೦ಗ ಸನ್ನಿಧಿಯಲ್ಲಿ "ಶ್ರೀ ಜಗನ್ನಾಥ ವಿಠ್ಥ ಲ" ಎ೦ಬ ಅ೦ಕಿತವನ್ನು ಪಡೆದು ಹರಿಕಥಾಮೃತಸಾರ ವನ್ನು ರಚಿಸಿದರು.ಹರಿಕಥಾಮೃತಸಾರವನ್ನು ಶ್ರೀ ಜಗನ್ನಾಥದಾಸರು ರಚಿಸಿದ ಕನ್ನಡದ ಶ್ರೀ ಸುಧಾ ಎ೦ದು ಪರಿಗಣಿಸಲಾಗಿದೆ.
ಸಾಕು ಮಕ್ಕಳಾದ ಮೋಹನ ದಾಸರು.
ರೋಗ ಪೀಡಿದವಾದ ಮಗುವನ್ನು ಚಕ್ರತೀಥ೯ದಲ್ಲಿ ತನ್ನ ಸಮೇತ ಮುಳಗಲು ಸಿದ್ಧಳಾದ ತಾಯಿಗೆ ಸ್ವಾ೦ತನ ಹೇಳಿ ಆ ಸಣ್ಣ ಕೂಸನ್ನು ತಮ್ಮ ಸಾಕು ಮಗನ್ನಾಗಿ ಪಾಲಿಸಿ, ಲಾಲಿಸಿ, ಅವರನ್ನು ಸಮಾಜಕ್ಕೆ ಅಪರೋಕ್ಷಜ್ಞಾನಿಯನ್ನು ಮಾಡಿ ಅವರ ಅಪಮೃತ್ಯು ಪರಿಹರಿಸಿ ಅವರ ವ೦ಶವು ಮು೦ದುವರೆಯಲು ಅನುಗ್ರಹ ಮಾಡಿದರು.ಅವರೆ ಮೋಹನ ದಾಸರು.ಅವರ ವ೦ಶಜರು ಈಗಲೂ ಇದ್ದಾರೆ.
ವಿಜಯರಾಯರ ಪ್ರಮುಖ ಶಿಷ್ಯರು:
ಶ್ರೀಗೋಪಾಲದಾಸರು.
ಮೋಹನದಾಸರು.
ವೇಣುಗೋಪಾಲದಾಸರು (ಪಂಗನಾಮ ತಿಮ್ಮಣ್ಣ).
ರಾಮಚಂದ್ರ ವಿಠ್ಠಲ ದಾಸರು.
ಮಧ್ವೇಶವಿಠ್ಠಲ ದಾಸರು.
ಹಯಗ್ರೀವವಿಠ್ಠಲದಾಸರು.
ಗುರುವಿಜಯವಿಠ್ಠಲದಾಸರು(ಮೊದಲಕಲ್ಲು ಶೇಷಗಿರಿದಾಸರು).
ವಿಜಯರಾಯರ ಸಮಕಾಲೀನ ಮಹಾನುಭಾವರು:
ಶ್ರೀಸತ್ಯಪ್ರಿಯತೀಥ೯ರು.
ಶ್ರೀಸತ್ಯಬೋಧತೀಥ೯ರು.
ಶ್ರೀಸಮತೀಂದ್ರತೀಥ೯ರು.
ಶ್ರೀಉಪೇಂದ್ರತೀಥ೯ರು.
ಶ್ರೀವಾದೀಂದ್ರತೀಥ೯ರು.
ಶ್ರೀವಸುದೇಂದ್ರತೀಥ೯ರು.
ಶ್ರೀರಘುನಾಥತೀಥ೯ರು.
ಶ್ರೀವ್ಯಾಸತತ್ವಜ್ಯ್ನರು.
ದಿವಾನ ವೆಂಕಣ್ಣನವರು
ದಿವಾನ ರುಕ್ಕಣ್ಣಾ
ತಿಮ್ಮಣ್ಣಯ್ಯ
ಶ್ರೀಜಗನ್ನಾಥದಾಸರು
ಪ್ರಸನ್ನವೇಂಕಟದಾಸರು.
ಹೆಳವನಕಟ್ಟಿಗಿರಿಯಮ್ಮ.. ಮುತಾಂದವರು.
ಅಪಮೃತ್ಯು ಪರಿಹಾರ.
ಜಗನ್ನಾಥದಾಸರಿಗೆ ತಮ್ಮ ಪ್ರೀಯಶೀಷ್ಯರಾದ ಗೋಪಾಲದಾಸರ ಮೂಲಕ
ಪಂಗನಾಮ ತಿಮ್ಮಣ್ಣದಾಸರಿಗೆ.
ಮೋಹನದಾಸರಿಗೆ ಆರೋಗ್ಯಭಾಗದ ಅನುಗ್ರಹ.
ಚಿರಂಜೀವಿಯಾಗಿರೆಲೊ ಚಿಣ್ಣ ನೀನು|
ಪರಮ ಭಾಗವತರ ಪದಧೂಳಿ ಧರಿಸುತಲಿ||
ವಿಜಯರಾಯರ ಕಾರುಣ್ಯ ಇಷ್ಟೇ ಎ೦ದು ಹೇಳಲು ಸಾಧ್ಯವಿಲ್ಲಾ.ಸ್ವತಃ ವ್ಯಾಸ ವಿಠ್ಠಲ ದಾಸರೆ ತಮ್ಮ "ವಿಜಯ ಕವಚ" ದಲ್ಲಿ ,
"ಪತಿತಪಾಮರಾ ಮಂದಮತಿಯೂ ನಾ ಬಲೂ
ತುತಿಸಲಾಪೇನೆ ಇವರ ಅತಿಶಯ೦ಗಳಾ"
ಎ೦ದು ಹೇಳಿದ್ದಾರೆ. ಆ ಮಹಾನುಭಾವರೇ ಹೀಗೆ ಹೇಳಿರುವಾಗ ಅಜ್ಞಾನಿಯಾದ ನನಗೆ ಅವರ ಮಹಿಮೆ ತಿಳಿಯುವದಾದರು ಹೇಗೆ.
********
ಶ್ರೀ ವಿಜಯದಾಸರು
ಶ್ರೀ ವಿಜಯರಾಯರ ಮೂಲ ರೂಪ ಶ್ರೀ ಭೃಗು ಮಹರ್ಷಿಗಳು ಎಂಬುದು ನಂಬಿದ ಭಕ್ತರ ಅಂಬೋಣ.-
ಇಂದು ವಿಜಯರಾಯರ ಆರಾಧನಾ ಮಹೋತ್ಸವ - ಚೀಕಲಪರವೀ - ಚಿಪ್ಪಗಿರಿ" ಯಲ್ಲಿ ವಿಶೇಷವಾಗಿ ನಡೆಯಲಿದೆ. ಒಂದು ಅವರು ಹುಟ್ಟಿ ಬೆಳೆದು ವಾಸಿಸಿದ ಸ್ಥಳವಾದರೆ, ಇನ್ನೊಂದು ಅವರು ಈ ಲೋಕದ ಯಾತ್ರೆ ಪೂರೈಸಿದ ಸ್ಥಳ.
1. ಶ್ರೀ ಕೃಷ್ಣ ಪರಮಾತ್ಮನು " ಭಗವದ್ಗೀತೆ " ಯಲ್ಲಿ....
ಮಹರ್ಷೀಣಾಂ ಭೃಗುರಹಂ
ಮಹರ್ಷಿಗಳಲ್ಲಿ ಭೃಗು ನಾನು.
2. ಪಂಚ ವಿಂಶತಿ ಬ್ರಾಹ್ಮಣದಲ್ಲಿ ( 18 - 9 - 1 ) ರಲ್ಲಿ...
ವರುಣನ ತೃತೀಯ ಭಾಗದಿಂದ ಉತ್ಪನ್ನರಾದವರು ಶ್ರೀ ಭೃಗು ಮಹರ್ಷಿಗಳೆಂದಿದೆ.
3. ತೈತ್ತ್ಯರೀಯೋಪನಿಷತ್ - ತೈತ್ತರೀಯಬ್ರಾಹ್ಮಣ ಮತ್ತು ತೈತ್ತರೀಯ ಅರಣ್ಯಕದಲ್ಲಿ ಶ್ರೀ ಭೃಗು ಮಹರ್ಷಿಗಳು ವರುಣ ಪುತ್ರರೆಂಬ ಉಲ್ಲೇಖವಿದೆ.
ಬೃಗುರ್ವೈ ವಾರುಣಿಃ
ಇತ್ಯಾದಿ ವಾಕ್ಯಗಳು.
4. ಗೋಪಥಿ ಬ್ರಾಹ್ಮಣದಲ್ಲಿ ( ೧ - ೨ - ೮ )...
ಶ್ರೀ ಭೃಗು ಮಹರ್ಷಿಗಳು ಶ್ರೀ ಚತುರ್ಮುಖ ಬ್ರಹ್ಮದೇವರಿಂದ ಉತ್ಪನ್ನರಾದವರು ಎಂದು ಉಲ್ಲೇಖವಿದೆ.
5. ಅಥರ್ವ ವೇದಕ್ಕೆ ಶ್ರೀ ಭೃಗು ಮಹರ್ಷಿಗಳೇ ಪ್ರಥಮ ದ್ರಷ್ಟಾರರು ಎಂಬ ಹೇಳಿಕೆಯೂ ಇದೆ.
6. ಪುರಾಣಗಳಲ್ಲಿ ಶ್ರೀ ಭೃಗು ಮಹರ್ಷಿಗಳಿಗೆ ಉತ್ತಮವಾದ ಸ್ಥಾನವಿದೆ.
ಶ್ರೀಮದ್ಭಾಗವತ ತೃತೀಯ ಸ್ಕಂದದಲ್ಲಿ ಶ್ರೀ ಚತುರ್ಮುಖ ಬ್ರಹ್ಮದೇವರ ಮಕ್ಕಳಲ್ಲಿ ಇವರೂ ಒಬ್ಬರೆಂಬ ಉಲ್ಲೇಖವಿದೆ.
" ಶ್ರೀ ಭೃಗು ಮಹರ್ಷಿಗಳ ಕುರಿತು ಮತ್ತಷ್ಟು ಮಾಹಿತಿ "
1. ವಿಷ್ಣು ಪುರಾಣದಲ್ಲಿ ಭೃಗುವಾಗಿ " ಖ್ಯಾತಿ " ಎಂಬ ಪತ್ನಿಯಲ್ಲಿ " ಧಾತ, ವಿಧಾತ " ಎಂಬ ಎರಡು ಗಂಡು ಮಕ್ಕಳೂ, " ಶ್ರೀದೇವಿ " ಎಂಬ ಹೆಣ್ಣು ಮಗು ಹುಟ್ಟಿದರು. ಶ್ರೀದೇವಿಯನ್ನು ಸಾಕ್ಷಾತ್ ಶ್ರೀ ಮಹಾವಿಷ್ಣುವಿಗೆ ಕೊಟ್ಟು ಮದುವೆ ಮಾಡಿ ಶ್ರೀ ಪರಮಾತ್ಮನನ್ನು ಅಳಿಯನನ್ನಾಗಿ ಮಾಡಿಕೊಂಡ ಬಗ್ಗೆ ವಿವರಗಳಿವೆ.
2. ಮಹಾಭಾರತದಲ್ಲಿ ಶ್ರೀ ಭೃಗು ಮಹರ್ಷಿಗಳಿಗೆ " ಪುಲೋಮ " ಎಂಬ ಮಡದಿಯಲ್ಲಿ " ಚವನ " ರು ಹುಟ್ಟಿದರೆಂಬ ಕುರಿತು ಮಾಹಿತಿಯಿದೆ.
3. ಶ್ರೀ ಮಹಾರುದ್ರದೇವರು 40 ಕಲ್ಪ ತಪಸ್ಸನ್ನು ಆಚರಿಸಿದ ಬಗ್ಗೆ ಹರಿಕಥಾಮೃತಸಾರ ಹೇಳಿದರೆ, ಶ್ರೀ ಭೃಗು ಮಹರ್ಷಿಗಳು 18 ಕಲ್ಪ ಸಾಧನ ಮಾಡಿ ತತ್ತ್ವಾಭಿಮಾನಿ ದೇವತೆಗಳಲ್ಲಿ ಒಬ್ಬರಾಗಿ ಇಂದಿಗೂ ವಿರಾಜಿಸುತ್ತಿದ್ದಾರೆಂದು ಶ್ರೀ ಭೃಗು ಮಹರ್ಷಿಗಳಿಗೆ ಸಂಬಂಧಿಸಿದ ಗ್ರಂಥಗಳಲ್ಲಿ ಉಲ್ಲೇಖಗಳಿವೆ.
4. ಭೃಗು ಸ್ಮೃತಿ - ಭೃಗುಗೀತಾ - ಭೃಗು ಸಂಹಿತಾ - ಭೃಗು ಸಿದ್ಧಾಂತ ಮೊದಲಾದ ಗ್ರಂಥಗಳಲ್ಲಿ ಶ್ರೀ ಭೃಗು ಮಹರ್ಷಿಗಳ ಅಪಾರ ಮಹಿಮೆಗಳ ವಿವರಗಳಿವೆ.
5. ಶ್ರೀ ಭೃಗು ಮಹರ್ಷಿಗಳು ಭೀಷ್ಮ ಪಂಚಕ ವ್ರತವನ್ನು ಸಕ್ರಮವಾಗಿ ಮಾಡಿದ್ದರೆಂದು ಪುರಾಣಗಳು ಹೇಳುತ್ತವೆ. " ಸಂಜೀವಿನೀ ವಿದ್ಯೆ " ಯಿಂದ ಶ್ರೀ ಭೃಗು ಮಹರ್ಷಿಗಳು ಕಾರ್ತವೀರ್ಯಾರ್ಜುನನು ಸಂಹರಿಸಿದ್ದ " ಜಮದಗ್ನಿ " ಯನ್ನು ಬದುಕಿಸಿದ್ದಾರೆಂದು ಕೆಲ ಪುರಾಣಗಳಲ್ಲಿ ಉಲ್ಲೇಖಿತವಿದೆ.
6. ಪದ್ಮಪುರಾಣ ಸೃಷ್ಟಿಖಂಡದಲ್ಲಿ ಶ್ರೀ ಭೃಗು ಮಹರ್ಷಿಗಳು, ಶ್ರೀ ಚತುರ್ಮುಖ ಬ್ರಹ್ಮದೇವರು " ಪುಷ್ಕರ " ಕ್ಷೇತ್ರದಲ್ಲಿ ಮಾಡಿದ ಬೃಹತ್ ಯಜ್ಞದಲ್ಲಿ " ಹೋತೃ " ಗಳಾಗಿದ್ದರೆಂಬ ಮಾಹಿತಿಯಿದೆ.
7. ದಂಡಕಾರಣ್ಯದಲ್ಲಿ ದೇವತೆಗಳು ಮಾಡಿದ ಯಜ್ಞದಲ್ಲಿ ಶ್ರೀ ಭೃಗು ಮಹರ್ಷಿಗಳೇ " ಬ್ರಹ್ಮದೇವರ ಸ್ಥಾನ " ವನ್ನು ಅಲಂಕರಿಸಿದ್ದರು ಎಂದು ಹೇಳಲಾಗಿದೆ. ಶ್ರೀ ಭೃಗು ಮಹರ್ಷಿಗಳ ಅವತಾರರೇ ಶ್ರೀ ವಿಜಯರಾಯರೆಂದು ಈ ಕೆಳಕಂಡ ಪ್ರಮಾಣಗಳು ಖಚಿತ ಪಡಿಸಿವೆ.
ಶ್ರೀ ಹಯವದನವಿಠಲರು.
ಆದಿಯಲಿ ಸುರಮುನಿಯ-
ಪಾದ ಸೇವೆಯ ಮಾಡಿ ।
ಮೋದದಲಿ ಸುರಲೀಲಾ -
ಎಂಬ ಕಪಿ ತ್ರೇತೆಯಲಿ ।
ಆ ದ್ವಾಪರದಿ ನಿಕಂಪನ-
ಎಂಬ ನಾಮದಲಿ ।
ಶ್ರೀಧರನ ಸೇವಿಸುತಲೀ ।।
ಕಾದಿದ್ದು ಕಲಿಯುಗದಿ -
ಪುರಂದರದಾಸರ ।
ಸ್ವಾದು ವಚನವ ಕೇಳಿ -
ತುರುಕರುವು ಆಗಿದ್ದು ।
ಭೇದವಿಲ್ಲದೆ ಜನಿಸಿ -
ಬರುತ ಬರುತ ಮತ್ತೆ ।
ಮೇದಿನಿ ಸುರಜನ್ಮದಿ ।।
ಶ್ರೀ ಜಗನ್ನಾಥದಾಸರು
ಆ ಸರಸ್ವತೀ ತೀರದಲಿ । ಬಿ ।
ನ್ನೈಸಲಾ ಮುನಿಗಳ ನುಡಿಗೆ । ಜಲಜಾಸನ ಮಹೇಶಾಚ್ಯುತರ -
ಲೋಕಂಗಳಿಗೆ ಪೋಗಿ ।।
ತಾ ಸಕಲ ಗುಣಗಳ ವಿಚಾರಿಸಿ ।
ಕೇಶವನೇ ಪರದೈವವೆಂದುಪ ।
ದೇಶಿಸಿದಾ ಭೃಗು ಮುನಿಪ -
ಕೊಡಲೆಮಗಖಿಳ ಸೌಖ್ಯಗಳ ।।
" ಸುಳಾದಿಗಳ ವೈಶಿಷ್ಟ್ಯ "
ಹರಿದಾಸರ ಪರಂಪರೆಯಲ್ಲಿ ಶ್ರೀ ಆಚಾರ್ಯಮಧ್ವರು ಮತ್ತು ಶ್ರೀ ನರಹರಿತೀರ್ಥರ ನಂತರ ಆದ್ಯರು 60 ಜನ, ಮುಂದೆ ಶ್ರೀ ಶ್ರೀಪಾದರಾಜರು - ಶ್ರೀ ವ್ಯಾಸರಾಯರು - ಶ್ರೀ ವಿಜಯೀ೦ದ್ರತೀರ್ಥರು - ಶ್ರೀ ಪುರಂದರದಾಸರು ಮತ್ತು ಅವರ ಸಮಕಾಲೀನ ಹರಿದಾಸರು ಸಂಕ್ಷಿಪ್ತವಾಗಿ ಸುಳಾದಿಗಳನ್ನು ರಚಿಸಿದ್ದಾರೆ.
ಈ ಸುಳಾದಿಗಳ ಕನ್ನಡ ಭಾಷಾ ಪ್ರೌಢಿಮೆಯು ಶ್ರೀ ವಿಜಯರಾಯರಿಂದ ಅತಿ ವಿಸ್ತೃತವಾಗಿದೆಂಬುದರಲ್ಲಿ ಏನೂ ಸಂದೇಹವಿಲ್ಲ.
ಈಗ ಉಪಲಬ್ಧವಾಗಿರುವ ಅವರ ಸುಳಾದಿಗಳೇ ಸಾಕ್ಷಿ!!
ಸುಳಾದಿಗಳಲ್ಲಿ ಸಾಮಾನ್ಯ ವಿವರಣೆ
1. ಧ್ರುವ ತಾಳದಲ್ಲಿ - ವಸ್ತು ನಿಶ್ಚಯ ವಿಷಯ
2. ಮಠ್ಯ ತಾಳದಲ್ಲಿ - ವಸ್ತುವಿನ ಗುಣಧರ್ಮ ನಿರೂಪಣೆ
3. ರೂಪಕ ತಾಳದಲ್ಲಿ - ವಸ್ತುವಿನ ಗುಣಧರ್ಮ ಕಾರಣ ವಿವೇಚನೆ
4. ಝ೦ಪೆ ತಾಳದಲ್ಲಿ - ವಸ್ತು ಗುಣಧರ್ಮ ಕಾರಣ ಕಾರ್ಯ ರೂಪದಿ ಮನಸ್ಸಿನಲ್ಲಿ ಪರಿಣಮಿಸುವಿಕೆ
5. ತ್ರಿಪುಟ ತಾಳದಲ್ಲಿ - ಗುಣಧರ್ಮ ಕಾರ್ಯ ಪ್ರಾಪ್ತಿ ವಿಷಯ ಪ್ರಾರ್ಥನೆ
6. ಅಟ್ಟ ತಾಳದಲ್ಲಿ - ಮನೋವೇಗ ಸ್ತೋತ್ರ ಸಂಗೀತ ತಾಳ ಕುಣಿತ
7. ಆದಿ ತಾಳದಲ್ಲಿ - ಸ್ತೋತ್ರಾನಂದದಲ್ಲಿ ನಲಿದಾಡುವಿಕೆ ಮತ್ತು ಸ್ವಲ್ಪ ಹೆಚ್ಚಿನ ವೇಗ ಕುಣಿತ..
ಜತೆ :
ಧರೆಯೊಳು ಮೆರೆವ ಸಿರಿ ವೆಂಗಳಪ್ಪ ।
ತಿರುಮಲ ವಿಜಯವಿಠ್ಠಲ ಜಗನ್ಮೋಹನ ।।
ಉಗಾಭೋಗದ ಸಾಮಾನ್ಯ ವಿವರಣೆ
1. ಉದ್ಗ್ರಾಹವೆಂದರೆ ಬಿಗಿದ ಕಂಠ ಉಬ್ಬಿ ಆನಂದದಿಂದ ಶಬ್ದ ಸಂಗೀತಕ್ಕನುಗುಣವಾಗಿ ಹೊರಸೂಸುವುದು. ಸಾಮಾನ್ಯವಾಗಿ ಇವೆಲ್ಲಾ ಸಾಮವೇದ ಗಾನ ವಿಭಾಗ. ಉದ್ಗಾತೃ = ಸಾಮವೇದ ಉಚ್ಛ ಸ್ವರದಿಂದ ಮಂತ್ರ ಹೇಳುವ ಋತ್ವಿಕ. ಅಂದರೆ, ಮೊದಲಿಗೆ ಹೇ ಹರೇ ಎಂದು ಉಚ್ಛವಾಗಿ ಹೇಳುವುದು.
2. ಮೇಲಾಪ - ಸಂಗೀತದಲ್ಲಿ ಸಪ್ತ ಸ್ವರಗಳನ್ನು ಹೊಂದಿಕೊಂಡು ವ್ಯತ್ಯಾಸವಿಲ್ಲದೆ ಹೇಳುವುದು.
3. ಧ್ರುವ - ನಿಶ್ಚಯಾತ್ಮಕ ಲಯ - ತಾಳ - ಗತಿಗಳ ಕ್ರಮ
4. ಅಂತರ - ಆದಿ ಮಧ್ಯಾ೦ತ ಸ್ವರ ಗತಿಗಳಿಂದ ವ್ಯತ್ಯಾಸವಿಲ್ಲದೇ ಹೇಳುವುದು
5. ಅಭೋಗ - ಮೇಲ್ಕಂಡ ವಿಸ್ತೃತದಿಂದ ಹೇಳುತ್ತಾ ಆಲಾಪದೊಂದಿಗೆ ಪೂರ್ಣಾನಂದದೊಂದಿಗೆ ಪೊಗಳುವರು. ಉದಾಹರಣೆಗೆ...
ಜುಟ್ಟು ಜನಿವಾರ -
ಕಿತ್ತುಕೊಂಡು ಯತಿಯಾಗಿ ।
ಕಟ್ಟ ಕಡೆಯಲಿ -
ಗೃಹಸ್ಥಾಶ್ರಮ ತೊರೆದು ।
ಹುಟ್ಟುಗ ಇಲ್ಲೆನುತ ಕೃಷ್ಣ ಕೃಷ್ಣ -
ವಿಜಯ ವಿಠ್ಠಲನ್ನ-
ಪಾದಕ್ಕೆ ಮೊರೆ ಇಟ್ಟಿರುವರು ।।
ಶ್ರೀ ವಿಜಯರಾಯರ ( ಕ್ರಿ ಶ 1687 - 1755 ) -
ಶಿಷ್ಯ ಸಂಪತ್ತು "
1. ಶ್ರೀ ಆನಂದದಾಸರು
( ಶ್ರೀ ವಿಜಯರಾಯರ ತಮ್ಮಂದಿರು ) - ಹಯವದನವಿಠ್ಠಲ
2. ಶ್ರೀ ಭಾಗಣ್ಣದಾಸರು - ಗೋಪಾಲವಿಠ್ಠಲ
3. ಶ್ರೀ ಮೋಹನಪ್ಪಾದಾಸರು - ಮೋಹನವಿಠ್ಠಲ
4. ಶ್ರೀ ಪಂಗನಾಮದ ತಿಮ್ಮಣ್ಣದಾಸರು - ವೇಣುಗೋಪಾಲವಿಠ್ಠಲ
5. ಶ್ರೀ ಬೇಲೂರು ವೆಂಕಟದಾಸರು - ವೆಂಕಟೇಶವಿಠ್ಠಲ
6. ಶ್ರೀ ಹೊನ್ನಾಳಿ ವೆಂಕಪ್ಪಾಚಾರ್ಯ - ವೆಂಕಟವಿಠ್ಠಲ
7. ಶ್ರೀ ಮೀನಪ್ಪದಾಸರು - ಮುದ್ದುವಿಠ್ಠಲ
8. ಶ್ರೀ ಕೂಡ್ಲಿ ಮಧ್ವಾಚಾರ್ಯರು - ಗುರು ಮಧ್ವೇಶವಿಠ್ಠಲ
9. ಶ್ರೀ ಶೇಷಗಿರಿದಾಸರು ( ಶ್ರೀ ವಿಜಯರಾಯರ ಮಗ ) - ಹಯಗ್ರೀವವಿಠ್ಠಲ
10. ಶ್ರೀ ವಿಜಯಸಾರಥಿದಾಸರು - ವಿಜಯಸಾರಥಿವಿಠ್ಠಲ
11. ಶ್ರೀ ಮೊದಲಕಲ್ಲು ಶೇಷದಾಸರಿಗೆ ಸ್ವಪ್ನಾ೦ಕಿತ - ಗುರು ವಿಜಯವಿಠ್ಠಲ
ಶ್ರೀ ವಿಜಯರಾಯರ ಮೇಲೆ ಶಿಷ್ಯ ಪ್ರಶಿಷ್ಯರು ರಚಿಸಿದ ಕೃತಿಗಳ ಸಂಖ್ಯೆ.
1. ಹಯವದನವಿಠ್ಠಲರು - ೯ ಕೃತಿಗಳು
2. ಶ್ರೀ ಗೋಪಾಲದಾಸರು - ೭ ಕೃತಿಗಳು
3. ಶ್ರೀ ಮೋಹನದಾಸರು - ೧೧ ಕೃತಿಗಳು
4. ಶ್ರೀ ವೇಣುಗೋಪಾಲದಾಸರು - ೪ ಕೃತಿಗಳು
5. ಶ್ರೀ ಜಗನ್ನಾಥದಾಸರು - ೨ ಕೃತಿಗಳು
6. ಶ್ರೀ ಗುರು ಗೋಪಾಲದಾಸರು - ೧ ಕೃತಿ
7. ಶ್ರೀ ವ್ಯಾಸವಿಠ್ಠಲರು - ೨ ಕೃತಿಗಳು
8. ಶ್ರೀ ಗುರು ವ್ಯಾಸವಿಠ್ಠಲರು - ೧ ಕೃತಿ
9. ಶ್ರೀ ಗುರು ವೇಣುಗೋಪಾಲವಿಠ್ಠಲರು - ೨ ಕೃತಿ
10. ಶ್ರೀ ರಾಮಚಂದ್ರವಿಠ್ಠಲರು - ೧ ಕೃತಿ
11. ಶ್ರೀ ತಂದೆ ವೇಣುಗೋಪಾಲವಿಠ್ಠಲರು - ೧ ಕೃತಿ
12. ಶ್ರೀ ರಘುಪತಿವಿಠ್ಠಲರು - ೨ ಕೃತಿಗಳು
13. ವರದ ಗುರು ಮುದ್ದುಕೃಷ್ಣದಾಸರು - ೨ ಕೃತಿಗಳು
14. ಶ್ರೀ ಬಾದರಾಯಣವಿಠ್ಠಲರು - ೨ ಕೃತಿಗಳು
15. ಶ್ರೀ ಕೇಶವವಿಠ್ಠಲರು - ೧ ಕೃತಿ
16. ಶ್ರೀ ವೆಂಕಟವಿಠ್ಠಲರು - ೧ ಕೃತಿ
17. ಶ್ರೀ ಲಕ್ಷ್ಮೀಪತಿವಿಠ್ಠಲರು - ೧ ಕೃತಿ
18. ಶ್ರೀ ಶ್ರೀಶ ಗೋಪಾಲವಿಠ್ಠಲರು - ೨ ಕೃತಿಗಳು
19. ಶ್ರೀ ಮೊದಲಕಲ್ಲು ಶೇಷದಾಸರು - ೧ ಕೃತಿ
20. ಶ್ರೀ ಶ್ಯಾಮಸುಂದರದಾಸರು - ೩ ಕೃತಿಗಳು
21. ಶ್ರೀ ಜಯೇಶವಿಠಲರು - ೨ ಕೃತಿಗಳು
ಶ್ರೀ ಮೊದಲಕಲ್ಲು ಶೇಷದಾಸರು
ಗುರುಗಳ ಮನದಿ ಕಂಡು ಧನ್ಯನಾದೆ ।
ಸಿರಿ ಅರಸನಾ ದಾಸರು-
ವಿರಾಯರಾಯರು ।। ಪಲ್ಲವಿ ।।
ಶ್ಯಾಮಸುಂದರ ಕಾಯ -
ನಾಮ ದ್ವಾದಶ ಮುದ್ರೆ ।
ವಾಮನ ರೂಪವ ಧರಿಸಿ -
ಕೋಮಲ ತುಳಸಿಯು ।
ಕಮಲಾಕ್ಷಿ ಮಣಿಗಳಿಂದ-
ವಿಮಲ ಚಿತ್ತದಿ ।
ಕಾಮನಯ್ಯನ ಸಾಮ-
ಗಾನದಿ ಪೊಗಳುವ | ಚರಣ |
*ಹಿಂದೆ ಪುರಂದರದಾಸರ -
ಕಂದನಾಗಿ ಪುಟ್ಟಿ ।
ತಂದೆ ವಾಕ್ಯವ ತಾಳಿ -
ಇಂದು ಧರಿಗೆ ಬಂದು ।
ಇಂದಿರೇಶನ ಚರಿತ್ರೆಯು -
ಕುಂದದಲೆ ಬೀರಿ ।
ಮಂದ ಮತಿಗಳಿಗೆ -
ಮಂದರಧರನ ತೋರಿದ ।। ಚರಣ ।।
ಗುರುಗಳ ಹೃದಯವಾಸ-
ಗುರುವಿಜಯವಿಠ್ಠಲನ ।
ಸಿರಿ ಪಾದ ಪದುಮ -
ಕರುಣವ ತೋರಿಸಿ ।
ಸಾರ ಹೃದಯದಿ -
ಹರಿಯ ಕೊಂಡಾಡಿಸಿ ಎರಗೆ ।
ಪರಮ ಸುಖದೊಳೀ-
ರುವಂತೆ ಮಾಡಿದ ।। ಚರಣ ।।
ಉಪಸಂಹಾರ
ಶ್ರೀ ವಿಜಯರಾಯರ ಸೃಷ್ಟಿ ಪ್ರಕರಣ ಸುಳಾದಿ ಇಂದಿನ ವಿಜ್ಞಾನಿಗಳಿಗೂ ಸೃಷ್ಟಿಯ ಹಿಂದಿನ ನೈಜ ರಹಸ್ಯವನ್ನು ತಿಳಿಸಿ ಕೊಡುವ ದೊಡ್ಡ ಆಕರ.
ಶ್ರೀ ಚತುರ್ಮುಖ ಬ್ರಹ್ಮದೇವರು ಬ್ರಹ್ಮ ಕಲ್ಪದಲ್ಲಿ ಸೃಷ್ಟಿ ಮಾಡಿದುದರ ಸಮಗ್ರ ವಿವರ ಹಾಗೂ ಅಂಕಿ ಅಂಶಗಳ ವಿವರ ಕೊಟ್ಟಿದ್ದಾರೆ.
ಶ್ರೀ ವಿಜಯರಾಯರ ಸೃಷ್ಟಿ ಪ್ರಕರಣ ಸುಳಾದಿಯ ಪ್ರಕಾರ..
ಶ್ರೀ ನಾರದರು ಹುಟ್ಟಿದ 06 ವರ್ಷದ ಮೇಲೆ ವಾಗೀ೦ದ್ರಿಯದಿಂದ ಅಗ್ನಿದೇವರನ್ನು ಶ್ರೀ ಬ್ರಹ್ಮದೇವರು ಹುಟ್ಟಿಸಿದರು.
ಶ್ರೀ ಅಗ್ನಿದೇವರ ನಂತರ 10 ವರ್ಷದ ಮೇಲೆ ಶ್ರೀ ಬ್ರಹ್ಮದೇವರು ಋಷಿ ಶ್ರೇಷ್ಠರಾದ ಭೃಗು ಋಷಿಗಳನ್ನು ಭ್ರೂಮಧ್ಯದಿಂದ ಹುಟ್ಟಿಸಿದರು.
ಶ್ರೀ ಭೃಗು ಮಹರ್ಷಿಗಳು ಹುಟ್ಟಿದ 01 ವರ್ಷದ ನಂತರ ಭೃಗು ಭಾರ್ಯಳನ್ನು ಹುಟ್ಟಿಸಿದರು -
ಹೀಗೆ ತಮ್ಮ ವೃತ್ತಾನಂತವನ್ನು ಬಿಡಿಸಿಡುತ್ತಾರೆ.
ಹಂಸ ಮಂತ್ರದ ಸುಳಾದಿಗಳೂ ಕೂಡ ಶ್ರೀ ವಿಜಯರಾಯರ ವಿಶಿಷ್ಟ ರಚನೆಗಳು.
ವಿಶಿಷ್ಟ ವ್ಯಕ್ತಿಗಳು ಮಾತ್ರ ಈ ರೀತಿಯ ಶ್ರೇಷ್ಠ ಮಂತ್ರಗಳ ಬಗ್ಗೆ ಬೆಳಕು ಚೆಲ್ಲುತ್ತಾರೆ.
ಹೀಗೆ ಶ್ರೀ ವಿಜಯರಾಯರ ದಾಸ ಸಾಹಿತ್ಯದ ಕೃಷಿ ಪರಮಾದ್ಭುತವಾಗಿದೆ. ಮಾನವ ಜನಾಂಗದ ಕಲ್ಯಾಣಕ್ಕಾಗಿ ರಚಿತವಾದ ಆ ಕೃತಿಗಳು ಶ್ರೀ ವಿಜಯರಾಯರ ಭವ್ಯಾಕೃತಿಯೂ ಹೌದು.
ಮತಿ ಇಲ್ಲದವರಿಗೆ ಸುಮತಿ ಕೊಡುವ ಕಾರುಣ್ಯ ಮೂರ್ತಿ ನಮ್ಮ ಚಿಪ್ಪಗಿರಿಯ ತಪೋಮೂರ್ತಿ!!
(ಸಂಗ್ರಹ)
********
ವಿಜಯ ದಾಸರ ಸ್ಮರಣೆ
🌸🌸🌸🌸🌸🌸🌸
ಕೂಸಿ ಮಗ ದಾಸಪ್ಪ ಎಂದು ಪ್ರಸಿದ್ಧ. ಬಾಲ್ಯದಿಂದಲೇ ಕಡು ಬಡತನ ಸಿದ್ಧ.
ತಾಯಿ, ಮಗ ಸಂಜೆವರೆಗೆ ತಿರಗಿದರೂ ಹೊಟ್ಟೆಗೆ ಹಿಟ್ಟಿಲ್ಲದ ದಿನಗಳು.
ಬಾಯ್ದೆರೆದು ಕೇಳಿದರೂ ಕೈಗೊಂದು ಕಾಸಿಲ್ಲ. ದುಡಿದರೂ ಇಲ್ಲ, ದಣಿದರೂ ಇಲ್ಲ.
ಹೊಸ ವಸ್ತ್ರ ಕನಸು. ಹಳೆಯ ಹರಿದ ವಸ್ತ್ರವೇ ಭೂಷಣ.
ಹೆಂಡತಿ ಜೊತೆ ಊಟ ದೂರ. ಅವಳೊಬ್ಬಳಿಗೆ ಊಟಕ್ಕೆ ಹಾಕುವದೂ ಕಠಿಣತರ.
ಕಾಡುವ ಬಡತನ.
ದಾಸಪ್ಪ ಬೇಸತ್ತ. ಮನೆ ಬಿಟ್ಟ. ಊರೂ ಬಿಟ್ಟ.
ಗೊತ್ತು ಗುರಿ ಇಲ್ಲದ ಪಯಣ. ನಡೆದಿದ್ದೇ ದಾರಿ, ಮುಟ್ಟಿದ್ದೇ ಊರು.
ದಾಸಪ್ಪನಿಗೆ ಗುರಿ ಗೊತ್ತಿರಲಿಕ್ಕಿಲ್ಲ.
ಆದರೆ ಈಶಪ್ಪನಿಗೆ ಗೊತ್ತಿತ್ತು.
ದೊಡ್ಡ ಯೋಗ್ಯತೆ ದಾಸಪ್ಪನದು.
ಜಗದೀಶಪ್ಪ ತನ್ನ ಸನ್ನಿಧಿ ಕಾಶಿಗೇ ದಾಸಪ್ಪ
ನನ್ನು ಕರೆತಂದ.
ದಾಸಪ್ಪನ ಅಧ್ಯಾತ್ಮ ಭಾಗ್ಯದ ಬಾಗಿಲು ತೆರೆಯಿತು. ಕಾಶಿ ವಿಶ್ವೇಶ್ವರನ ಅನುಗ್ರಹ,
ಶ್ರೀ ಹರಿ ಬಿಂದುಮಾಧವನ ಪ್ರಸಾದ,
ವಿಠ್ಠಲನ ಅಪರೋಕ್ಷ -
ಇನ್ನೇನು ಇನ್ನೇನು!
ವಿಜಯವಿಠ್ಠಲನ ದರುಶನವಾಯಿತು.
'ನಿನ್ನ ಕಂಡು ಧನ್ಯನಾದೆ ವಿಠ್ಠಲಾ' ಎಂದರು.
ಲೌಕಿಕದ ಮೇಲೆ ವಿಜಯ ಹೊಂದಿದರು.
ವಿಜಯದಾಸರಾದರು.
ಮಸ್ತಕದಲ್ಲಿ ಮಧ್ವ ಶಾಸ್ತ್ರ.
ಕಂಗಳಲ್ಲಿ ಶ್ರೀ ರಂಗ
ನಾಲಿಗೆ ಮೇಲೆ ಸರಸ್ವತಿ.
ಹೃದಯದಲ್ಲಿ ವಿಠ್ಠಲ.
ಅಂತಃಕರಣದಲ್ಲಿ ತುಂಬು ಭಕ್ತಿ.
ಕೈಯಲ್ಲಿ ತಂಬೂರಿ. ಕಾಲಲ್ಲಿ ಗೆಜ್ಜೆ.
ಡಂಗುರ ಸಾರಿದರು ಹರಿಮಹಾತ್ಮೆ.
ವಿಜಯದಾಸರು ನಡೆದಾಡಿದ್ದೆಲ್ಲ ತೀರ್ಥಯಾತ್ರೆ ಆಯಿತು. ಮಾಡಿದ್ದೆಲ್ಲ ಹರಿಪೂಜೆ. ಮಾತನಾಡಿದ್ದೆಲ್ಲ ಮಾಧವನ ಮಹಿಮೆ. ದೇವರ ನಾಮ. ಶಾಸ್ತ್ರದ ತಾತ್ಪರ್ಯ
ವಾಯಿತು.
ನೋಡಿದ್ದೆಲ್ಲ ಹರಿರೂಪ. ಉಂಡಿದ್ದು ಹರಿ ನೈವೇದ್ಯ. ಜೀವನ ಪರಮಾತ್ಮಮಯವಾಯಿ ತು.
ದಾಸರು ಬಂದಲ್ಲೆಲ್ಲ ಬರಗಾಲ ಮಾಯ. ಮಳೆಬೆಳೆ ಸುಭಿಕ್ಷ್ಯ. ಜ್ಞಾನ ಮಯ. ಸುಖಕಾಲ.
ಅವರು ಅಂದದ್ದು ಅಂದಂತೆ ನಡೆಯುತ್ತಿತ್ತು.
ನಡೆಯುವದನ್ನು ಮೊದಲೇ ಅನ್ನುತ್ತಿದ್ದರು.
ಬೇಡಿ ಬಂದವರಿಗೆ ಕಷ್ಟ ಪರಿಹಾರ. ಬಯಸಿ ಬಂದವರಿಗೆ ಸುಖ ಪ್ರಾಪ್ತಿ. ಎಲ್ಲರಿಗೂ ಅಧ್ಯಾತದ ಉನ್ನತಿ.
ನೂರಾರು ಸುಜನ ಶಿಷ್ಯರಾದರು. ಅನೆಕಾನೇಕರು ದಾಸದೀಕ್ಷೆ ಪಡೆದರು.
ಹರಿದಾಸ ಸಾಹಿತ್ಯ, ಪಂಥ, ವೈಭವ ಶಿಖರಕ್ಕೇರಿ ದವು.
ವಿಠ್ಠಲನ ಒಲುಮೆಯಾದವನಿಗೆ ಏನು ತಾನೇ ಅಲಭ್ಯ?
ಸುಜನರು ಹಿಂಡುಹಿಂಡಾಗಿ ದಾಸರ ಹಿಂಬಾಲಿ ಸಿದರು. ತಮ್ಮ ತಮ್ಮ ಊರಿಗೆ ಆಹ್ವಾನಿಸಿ ಕರೆದೊಯ್ಯುವರು.
ಎಲ್ಲೆಡೆಗೆ ಸನ್ಮಾನ, ಸತ್ಕಾರ ಶಾಲು ಶಕಲಾತಿ.
ನೂರಾರು ಸಜ್ಜನರ ಜೊತೆ ಭೂರಿ ಸಹಭೋಜ ನ. ಅಪಾರ ಸಂಪತ್ತು. ಆ ಭಾರಿ ವೈಭವ ಕಣ್ಣಿಗೇ ಹಬ್ಬ! ದೈವಾನುಗ್ರಹ ದಾಸರಿಗೆ.
ಸಂಚರಿಸುತ್ತ ಬಂದರು ಮರಳಿ ತಮ್ಮ ಊರಿಗೆ
ಆಗ ಯಾವ ಊರು ದಾಸಪ್ಪನನ್ನು ಹೊರಗೆ ಹಾಕಿತ್ತೋ ಅದೇ ಊರು ಈಗ ವಿಜಯದಾಸರನ್ನು ಭವ್ಯವಾಗಿ ಸ್ವಾಗತಿಸಿತು.
ಅದೇ ಬಂಧುಗಳ ಮನೆಗೆ ಬಂದರು ದಾಸರು.
ಮಧ್ಯಾನ್ಹ ಸಹಸ್ರಬ್ರಹ್ಮ ಭೋಜನ. ನೂರೆಂಟು ಭಕ್ಷ್ಯಭೋಜ್ಯಗಳು.
ವೈಭವ ತುಂಬಿ ತುಳುಕು ತ್ತಿತ್ತು.
ಊಟಕ್ಕೆ ಕುಳಿತ ದಾಸರಿಗೆ ಪೂರ್ವದ ಸ್ಮರಣೆ.
ಇದೇ ಮನೆಯಲ್ಲಿ. ತಾನು ತನ್ನ ತಾಯಿ. ಹೇಳಿದ ಕೆಲಸ ಮಾಡಿದೆವು.
ತುತ್ತಿಗಾಗಿ ತೊತ್ತಾಗಿ ಸಂಜೆವರೆಗೆ ಕಾದೆವು. ಹೊಟ್ಟೆಗೆ ಒಂದು ಸೌಟು ಗಂಜಿ ಸಿಗಲಿಲ್ಲ ಸ್ವಾಮಿ.
ಇಂದು ನೋಡು ಈ ಪರಿ ಕಂಡರಿಯದ ವೈಭವ!
ಎದುರಿಗೆ ನೋಡುತ್ತಾರೆ -
ವಿಜಯವಿಠ್ಠಲ. ತುಂಟ ನಗುಮೊಗ.
ಆಗ ಅದನ್ನು ಕೊಟ್ಟವನು ನಾನೇ.
ಈಗ ಇದನ್ನು ಇಟ್ಟವನೂ ನಾನೇ ಎನ್ನುವಂತಿತ್ತು.
ಬಿಟ್ಟಾರೆಯೇ ದಾಸರು. ಹಾಡಿನಿಂದ ಕಟ್ಟಿ ಹಾಕಿದರು ಹರಿಯನ್ನು!
ಭಕ್ತಿ ಭಾವದಿಂದ ಸ್ತುತಿಸಿ ಸಂತಸ ಪಟ್ಟರು.
'ನಿನ್ನ ಒಲುಮೆಯಿಂದ ನಿಖಿಳ ಜನರು ಬಂದು
ಮನ್ನಿಸುವರೋ!'
ಹೇ, ದೇವರದೇವ
ಏನಿದು ನಿನ್ನ ಲೀಲೆ! ವೈಚಿತ್ರ್ಯ. ವೈಭವ!
ಇಲ್ಲದ್ದು ಕಂಡಿದ್ದೆ. ಇದ್ದದ್ದು ಕಂಡಿರುವೆ.
ಅಂದು -
ಹಸಿದ ಹೊಟ್ಟೆ, ಹರಕು ಬಟ್ಟೆ, ಬಾಯಿ ಬಿಟ್ಟು ಬೇಡಿ ಕೆಟ್ಟೆ.
ಇಂದು -
ಭೂರಿ ಅಶನ ಭಾರೀ ವಸನ. ತುಂಬು ಧನ. ಏನುಂಟು ಏನಿಲ್ಲ ಸ್ವಾಮೀ.
ಯಾತರ ಪ್ರಾಪ್ತಿ ಇದು?
ಈ ಪರಿ ಪುಣ್ಯ ನನ್ನದುಂಟೇ?
ಇಲ್ಲ ಮತ್ತೆ ಅಲ್ಲ.
ಬರಿಗಾಲು, ಬರಿಹೊಟ್ಟೆ, ಬರಿ ಮೈ ನನ್ನ ಯೋಗ್ಯತೆ.
ತುಂಬಿತುಳುಕುವ ಈ ವೈಭವ ನಿನ್ನ ಒಲುಮೆ.
ಬಂದು ಮನ್ನಿಸುವ ಜನ ನಿನ್ನದಯ್ಯಾ ಸ್ವಾಮಿ.
ನೀ ಕೊಟ್ಟರೆ ಉಂಟು.
ಇಲ್ಲದಿರೆ ಇಲ್ಲ.
ಸೂತ್ರದ ಬೊಂಬೆ ನಾವು.
ಸೂತ್ರಧಾರ ನೀನು.
ನಿನ್ನ ಇಚ್ಛೆಯಂತೆಯೇ ಜಗದ ಆಟ.
ನಿನ್ನ ಪರಿಯ ಯೋಚಿಸಿ ನೋಡಲು ಸೋಜಿಗವಾಗುತ್ತದೆ.
'ಸ್ವಾಮಿ, ವಾಚೋ ನಿವರ್ತಂತೆ'
ನಿನ್ನ ಹೇಳಲು ಹೋದ ಶಬ್ದಗಳು ಸೋತು ಮರಳಿದವು.
ಸರ್ವಶಬ್ದ ವಾಚ್ಯನೂ ಹೌದು,ವಾಚ್ಯಾತೀತನೂ
ಹೌದು ಸ್ವಾಮಿ ನೀನು.
ಇಂಥ ಜಗತ್ತಿಗೇ ಸೋಜಿಗವಾಗಿರುವ ಸೋಜಿಗ ನಾಮಕ, ಸೋಜಿಗಕಾರಕ ಸೋಜಿಗಮಯ ಪ್ರಭು ನಿನಗೆ ಸಹಸ್ರ ಶಿ ಸಾ ನಮಸ್ಕಾರಗಳು.
ನಿನ್ನ ಒಲುಮೆ ಸದಾ ಇರಲಿ ನಮಗೆ.
ಶ್ರೀ ಕೃಷ್ಣಾರ್ಪಣಮಸ್ತು
***********
|ನಮ್ಮ ವಿಜಯರಾಯರ ಕೀರ್ತಿ ಮೆರೆಯಲಿ ಕೋಲೇ||
🙏🙏
ಮೂರನೇ ಬಾರಿಗೆ ಶ್ರೀ ವಿಜಯಪ್ರಭುಗಳು ಕಾಶಿಯಾತ್ರಿಗೆ ಅತಿ ವೈಭವದೊಡನೆ ಶಿಷ್ಯರ,ಪರಿವಾರದ ಜೊತೆ ಹೊರಟರು.ಮಾರ್ಗಮಧ್ಯದಲ್ಲಿ ಅನೇಕ,ರಾಜ ಮಹಾರಾಜ ರಿಂದ ಮನ್ನಣೆಯನ್ನು ಪಡೆಯುತ್ತಾ, ದೀನ ಜನರನ್ನು ಉದ್ಧರಿಸುತ್ತಾ,ಶ್ರೀಹರಿಯ ಮಹಿಮೆಯನ್ನು ಸಾರುತ್ತಾ ಕಾಶಿಗೆ ಪಯಣಿಸಿ, ಗಂಗಾಸ್ನಾನ ಮಾಡಿ,ಗಯಾ ಕ್ಷೇತ್ರದಲ್ಲಿಹೋಗಿ ಪಿತೃಕಾರ್ಯವನ್ನು ಮಾಡಿ ಮತ್ತೆ ಕಾಶಿಗೆ ತಿರುಗಿ ಬಂದು ಕೆಲ ಕಾಲ ಅಲ್ಲಿ ಉಳಿದು ಕೊಂಡರು.
ಒಂದು ದಿನ ಶ್ರೀವಿಜಯದಾಸರು ಗಂಗಾಸ್ನಾನ ಮಾಡಿ ಊರ್ಧ್ವಪುಂಡ್ರಗಳಾದಿಗಳನ್ನು ಧರಿಸಿಕೊಂಡು ಆಹ್ನೀಕಕ್ಕೆ ಕುಳಿತ ಸಮಯ...
ಗಂಗೆ ತುಂಬಿ ಪ್ರಶಾಂತವಾಗಿ ಹರಿಯುತ್ತಾ ಇದ್ದಾಳೆ. ಸಾವಿರಾರು ಜನ ಯಾತ್ರಿಕರ ಸಮ್ಮಿಲನ. ಅನೇಕರು ತಮ್ಮ ಕಾರ್ಯಗಳನ್ನು ಮಾಡುತ್ತಾ ಇದ್ದಾರೆ.ದಾಸರ ಭಕ್ತರು ದಾಸರನ್ನು ನೋಡುತ್ತ ಕುಳಿತಿದ್ದಾರೆ.
ಗಂಗಾನದಿಯ ದಡದಲ್ಲಿ ಕುಳಿತು ಗಂಗೆಯ ಮಹಿಮೆಯನ್ನುಚಿಂತನೆ ಮಾಡುತ್ತಾ ದಾಸರು ಕುಳಿತಿದ್ದಾರೆ..
ಪ್ರಳಯಕಾಲದಲ್ಲಿ ಮತ್ಸ್ಯ ರೂಪಿ ಪರಮಾತ್ಮನನ್ನು ವರುಣದೇವರು ಉದರದಲ್ಲಿ ಧರಿಸಿದರು..
ಆ ಸ್ವಾಮಿಯು ಇಲ್ಲಿ ಗಂಗೆಯಲ್ಲಿ ವರುಣದೇವನೊಡನೆ ವಿರಾಜಿಸಿದನು..
ತನ್ನ ಪತಿಯೊಡನೆ ಆ ಮತ್ಸ್ಯ ರೂಪಿ ಪರಮಾತ್ಮನನ್ನು ಧರಿಸಿದ ಗಂಗೆಯು ಮತ್ಸ್ಯೋದರಿ ಎನಿಸಿದಳು.
ಈ ಸ್ಥಳದಲ್ಲಿ ಪರ್ವಕಾಲದಲ್ಲಿ ಅನೇಕಾನೇಕ ದೇವತೆಗಳು ಸ್ನಾನಕ್ಕಾಗಿ ಇಲ್ಲಿ ಬರುತ್ತಾರೆ. ಎಂದು ಅಲ್ಲಿ ನ ಮಹಿಮೆಯನ್ನು ಚಿಂತಿಸಿ
ಗಂಗೆ ಸನ್ಮಂಗಳಾಂಗೆ ರಂಗನಂಘ್ರಿಯ ಸಂಗೆ|...
ಅನನುತ ವಿಜಯವಿಠ್ಠಲನ ಮನಸಿನಲಿ ನೆನೆಸುವ ಸಾಧನ ಕೊಡು ವಿರಜೆ||
ಎನ್ನುವ ಕೃತಿಯನ್ನು ರಚನೆ ಮಾಡಿದರು.
ಆ ಸಮಯದಲ್ಲಿ
ಶ್ರೀ ಗಂಗಾದೇವಿಯು "ನಮ್ಮಪ್ಪನಾದ ಆ ಶ್ರೀಹರಿಯ ಪರಮಭಕ್ತರಾದ ಶ್ರೀ ಭೃಗು ಋಷಿಗಳು ಇಂದು
ಶ್ರೀ ವಿಜಯದಾಸರ ರೂಪಿನಲ್ಲಿ,ಎನ್ನ ಮನಿಗೆ ಬಂದಿರುವರು.ನನ್ನ ಭಾಗ್ಯ ದೊಡ್ಡದು!!. ನಾನು ಅವರ ಸಂಗದಿಂದ ಪುನೀತಳಾದೆ,ಅಂತ ಬಹಳ ಆನಂದದಿಂದ ಹಾಗೆ ಉಕ್ಕೇರಿ ದಾಸರ ಮೇಲೆ ಬಂದು ಉದಕ ಸುರಿಯಲು
ಶ್ರೀ ವಿಜಯದಾಸರ ವಸ್ತ್ರಗಳು ತೊಯ್ಯಲಿಲ್ಲ.ನಾಮ ಮುದ್ರೆಗಳು ಕೆಡಲಿಲ್ಲ.ಅವಾಗ ಗಂಗಾದೇವಿ ಸುಂದರವಾದ ಸ್ತ್ರೀ ರೂಪಧಾರಣೆ ಮಾಡಿ,ಸರ್ವಾಭರಣದಿಂದ ಅಲಂಕೃತ ಳಾಗಿ ದಾಸರ ಸಮೀಪಕ್ಕೆ ಬಂದು, ಮನುಜ ವೇಷ ಧಾರಿಗಳಾದ ಶ್ರೀ ವಿಜಯಪ್ರಭುಗಳನ್ನು ಪೂಜಾ ಸಾಮಗ್ರಿ ಗಳಿಂದ ಪೂಜಿಸಿದಳು..
ದಾಸರನ್ನು ಪೂಜಿಸಿದ ನಂತರ ಗಂಗಾದೇವಿ ತಿರುಗಿ ತಾನು ಹೇಗೆ ಬಂದಳೋ ಹಾಗೇ ತಿರುಗಿ ಹೋದಳು.
ಸಕಲ ಸಜ್ಜನರಿಗೆಲ್ಲ ಗಂಗಾದೇವಿಯ ಪ್ರತ್ಯಕ್ಷ ದರುಶನವನ್ನು ದಾಸರು ಮಾಡಿಸಿ ಆನಂದ ಪಟ್ಟರು.
ಎಲ್ಲಾ ಯಾತ್ರಿಕರು,ಶಿಷ್ಯರು ನಮ್ಮ ಅಹೋಭಾಗ್ಯ!!.ಏಕ ಕಾಲಕ್ಕೆ ಶ್ರೀಹರಿಯ ಮಗಳಾದ ಗಂಗಾದೇವಿಯ ಮತ್ತು ಅವನ ಭಕುತರಾದ ದಾಸರ ದರುಶನ ಅಂತ ಬಾರಿ ಬಾರಿಗೆ ದಾಸರಿಗೆ ನಮಸ್ಕಾರ ಮಾಡಿದರು.
ತನಗಿಂತಲು ಉತ್ತಮರಾದ ಭಗವದ್ಭಕ್ತರು ಮನೆಗೆ ಬರಲು,ಭಕ್ತರಿಗೆ ಎಷ್ಟು ಆನಂದವೋ!!
(ಶ್ರೀಗಂಗಾದೇವಿಯು ೨೦ನೆಯ ಕಕ್ಷ ,ಶ್ರೀಭೃಗು ಋಷಿಗಳು ೧೫ನೆಯ ಕಕ್ಷ).
ಹಿಂದೆ ನಮ್ಮಪ್ಪ ಆ ಶ್ರೀಹರಿಯು ಸರ್ವೋತ್ತಮ ನೆಂದು ಸಾರಿದ,ಇಂದು ಈ ಕಲಿಯುಗದಲ್ಲಿ ಮನುಜ ವೇಷಧಾರಿಗಳಾಗಿ, ಆ ಹರಿಯನ್ನು ಪಾಡುತ್ತಾ,ಸ್ತುತಿಸುತ್ತಾ,ಸಜ್ಜನರನ್ನು ಉದ್ದಾರ ಮಾಡುತ್ತಾ ಇರುವ ದಾಸರ ಸಂದರುಶನ ಎನಗಾಯಿತೆಂದು ಪ್ರತ್ಯಕ್ಷ ರೂಪಧಾರಣೆ ಮಾಡಿ ಅವರನ್ನು ಪೂಜಿಸಿದಳು.
ಅಂದು ದಾಸರ ಜೊತೆಯಲ್ಲಿ ಇದ್ದ ಅವರ ತಮ್ಮಂದಿರು ಆದ ಶ್ರೀಆನಂದ ದಾಸರು
ತೃತಿಯ ಕಾಶೀಯಾತ್ರೆ ಮಾಡ ಬಂದಾಗ| ಉನ್ನತವಾಗಿ ನಭಗಂಗೆ ಉಕ್ಕೇರಿ ಗಗನಕ್ಕೆ| ಅತಿಶಯದಿ ಬಂದು ಮತ್ಸ್ಯೊದರಿಯ ನಾಮದಲ್ಲಿ ಪ್ರತಿ ಇಲ್ಲ ದಂತೆ ತೋರೆ||
ಶ್ರೀಗೋಪಾಲದಾಸರು ಈ ಘಟನೆಯನ್ನುನೋಡಿ,ದಾಸರ ಮಹಿಮೆಯನ್ನು ವರ್ಣಿಸುತ್ತಾರೆ.
ಸ್ವಚ್ಛವಾಗಿ ಗಂಗಾತೀರವ ವಾಸಮಾಡಿ ನಿಚ್ಚಾಗಿ ಶ್ರೀ ವಿಜಯರಾಯ|
ಹೆಚ್ಚಾದ ಪರ್ವಣೆ ಮಚ್ಚೊದರಿಯ ತೋರ್ದೆ ವಿಚಿತ್ರವಿಜಯರಾಯ||
🙏ಶ್ರೀ ಕೃಷ್ಣಾರ್ಪಣಮಸ್ತು🙏
ಶ್ರೀ ವಿಜಯಪ್ರಭುಗಳ ಅಂತರ್ಯಾಮಿಯಾದ ಮಧ್ವ ವಲ್ಲಭನಾದ ಶ್ರೀ ವಿಜಯವಿಠ್ಠಲನು ಪ್ರೀತಿಯಾಗಲಿ.
🙏ಜೈ ವಿಜಯರಾಯ🙏
***********
ದಾಸೋತ್ತಮನೆ ದಯಾಪರ ಹರಿಗಾ-
ಭಾಸಕ ಭಕುತರ ಪೋಷ್ಯನೆ ಯೆನಗೆ ನೀ
ಈ ಶರೀರದಿ ಪ್ರಕಾಶ ಮಾಡಿ ಜ್ಞಾನ
ಮಾಸದೆ ಭಗವದುಪಾಸನೆ ಮಾಡಿಸೋ
ಹನುಮದ್ವ್ರತದ ಶುಭಾಶಯಗಳು...
ಪರಮಾತ್ಮನ ದಾಸ ಅಂದರೇ ಹೇಗಿರಬೇಕು ಎನ್ನುವುದನ್ನು ತೋರಿಸಿಕೊಡಲು ಅವತಾರತ್ರಯದಲ್ಲಿ ನಮಗಾಗಿ ಬಂದ ವಾಯುಜೀವೋತ್ತಮರ ಕೃಪೆ ನಮ್ಮ ಎಲ್ಲರ ಮೇಲಿರಲೆಂದೂ ಹಾರೈಸುತ್ತಾ....
ಇವತ್ತು ಮತ್ತೊಂದು ವಿಶೇಷ...
ಶ್ರೀ ವಿಜಯದಾಸಾರ್ಯರು ಶ್ರೀ ಗೋಪಾಲದಾಸಾರ್ಯರಿಗೆ ಆಂಧ್ರದ ಆದವಾನಿಯ ಮಂಗರಾಯನ ದೇವಸ್ಥಾನದಲ್ಲಿ... ಇದೇ ಹನುಮದ್ ವ್ರತದ ಪವಿತ್ರವಾದ ದಿನದಲ್ಲಿ ಅಂಕಿತೋಪದೇಶವನ್ನು ಮಾಡಿದ ಸುದಿನವು.. (ಶ್ರೀ ವಿಜಯಪ್ರಭುಗಳ ಜೀವನ ಚರಿತ್ರೆಯಲ್ಲಿ ನಾವು ಈಗಾಗಲೇ ಕೇಳಿದ್ದೇವೆ)
ಪರಮ ಶ್ರೇಷ್ಠ ದಾಸ ದ್ವಯರ ಕಾರುಣ್ಯ ನಮ್ಮ ಎಲ್ಲರ ಮೇಲೆ ಸದಾ ಸದಾ ಇರಲಿ ಎಂದು ಪ್ರಾರ್ಥನೆ ಮಾಡುತ್ತಾ..
ಮುಖ್ಯಪ್ರಾಣದೇವರ ಅವತಾರತ್ರಯದ ಕೃತಿಗಳು ಹಾಡುವ ಮುಖಾಂತರ ಭಾರತೀರಮಣ ಮುಖ್ಯಪ್ರಾಣಾಂತರ್ಗತ ಶ್ರೀಹರಿಯ ಸೇವೆಯನ್ನು ನಮ್ಮಿಂದ ಪರಮಾತ್ಮನು ಮಾಡಿಸಲೀ ಎಂದು ಪ್ರಾರ್ಥನೆ ಮಾಡುತ್ತಾ...
ಹರಿ ಸರ್ವೋತ್ತಮ ವಾಯು ಜೀವೋತ್ತಮ
ಜೈ ವಿಜಯರಾಯ
ಭಾಗಣ್ಣಾರ್ಯ ಗುರುಮ್ ಭಜೇ
ನಾದನೀರಾಜನದಿಂ ದಾಸಸುರಭಿ🙏🏽
****
ಈ ಭೋಗೇಶ್ವರ ದೇವಸ್ಥಾನದ ಮೂರ್ತಿಯಾದ ರುದ್ರದೇವರು ಟಿಪ್ಪು ಸುಲ್ತಾನ್ ಜೊತೆ ಮಾತನಾಡಿದ್ದಾನೆ ಅಂತಲೂ ಚರಿತ್ರೆ ಇದೆ...
ಈ ರುದ್ರದೇವರಿಗೆ ಎಷ್ಟೇ ತೈಲಾಭಿಷೇಕ ಮಾಡಿದರೂ ಲಿಂಗದ ಒಳಗೆ ಹೋಗಿಬಿಡುತ್ತೆ...
ಮತ್ತೆ ಶ್ರೀ ವಿಜಯಪ್ರಭುಗಳ ತಪೋ ಸ್ಥಾನವೂ ಹೌದು. ಅದರ ಫಲವಾಗಿ ದೇವಸ್ಥಾನದ ಅಂದರೆ ರುದ್ರದೇವರ ಎದುರ್ಗಡೆ ಕಂಬದಲ್ಲಿ ಪುಟ್ಟ ಹನುಮಪ್ಪ ಮುಖ ತಿರುಗಿಸಿಕೊಂಡಂತಹಾ ಮೂರ್ತಿ ಒಡಮೂಡಿದ್ದಾನೆ. ಮತ್ತೆ ಇದೇ ದೇವಸ್ಥಾನದ ಹೊರಗಡೆ ಶ್ರೀ ವಿಜಯಪ್ರಭುಗಳು ಚಂದಪ್ಪನಿಗೆ ಮುಕ್ತಿಪಥವನ್ನು ತೋರಿದರೆಂತಲೂ ಚರಿತ್ರೆಯಲ್ಲಿ ನಾವು ಕೇಳಿದ್ದೇವೆ.
ಮತ್ತೆ ವಾಮಾಚಾರ ಮಾಡುತ್ತಿರುವವರಿಗೆ ಸರಿಯಾದ ಮಾರ್ಗವನ್ನೂ ತೋರಿದರು ಶ್ರೀ ವಿಜಯಪ್ರಭುಗಳು ಅಂತಲೂ ಹೇಳ್ತಾರೆ..
ಅಲ್ಲದೆ...
ಶ್ರೀ ಸತ್ಯಜ್ಞಾನತೀರ್ಥರು ಒಮ್ಮೆ ಸಂಚಾರತ್ವೇನ ಚಿಪ್ಪಗಿರಿಗೆ ಬಂದಾಗ , ಶಿಷ್ಯರು ರಾಮದೇವರ ಪೆಟ್ಟಿಗೆಯನ್ನು ಶ್ರೀ ಭೋಗೇಶ್ವರ ಆಲಯದಲ್ಲಿ ಇಟ್ಟುಬಿಡ್ತಾರೆ. ಸಂಜೆ ಆಗಿದ್ದ ಕಾರಣ ಪೆಟ್ಟಿಗೆಗೇನೇ ಪೂಜೆ ಮಾಡಿ ಶ್ರೀ ಪ್ರಾಣದೇವರಿಗೆ, ದೇವರಿಗೆ ಮಂಗಳಾರತಿ ನೀಡಿದರು. ನಂತರ ಅದು ರುದ್ರದೇವರ ದೇವಸ್ಥಾನ ಅಂತ ತಿಳಿದು, ಶಿಷ್ಯರನ್ನ ಕೇಳಿದಾಗ , ಹೌದು ಸ್ವಾಮಿ, ಆದರೆ ಇದು ಶ್ರೀ ವಿಜಯದಾಸಾರ್ಯರು ಕೈಲಾಸ ವಾಸಾ ಗೌರೀಶ ಈಶ ಪದವನ್ನು ರಚಿಸಿದ ದೇವಸ್ಥಾನ ಅಂತ ಇಲ್ಲಿಯೆ ಪೆಟ್ಟಿಗೆ ಇಟ್ಟಿದ್ದೆವೆ ಅಂತಾರೆ ಶಿಷ್ಯರು.
ಆಗ ಶ್ರೀಗಳಂತಾರೆ ! ಆಯಿತು ಬಂದಿವಿ. ಮುಗಿತು, ರಾತ್ರಿ ಕಳೆದು ಬೆಳಿಗ್ಗೆ ಬೇರೇ ದೇವಾಲಯಕ್ಕೆ ಹೋಗೋಣ ಅಂತ ಅಂತಾರೆ. ಆ ರಾತ್ರಿ ಎಲ್ರೂ ಅಲ್ಲಿಯೇ ಮಲಗ್ತಾರೆ.
ಆ ದಿನ ಬೆಳಗಿನ ಜಾವ 3 ಗಂಟೆ ಗೇ ಸುಮಾರು ಶ್ರೀಗಳಿಗೆ ಪ್ರಾಣದೇವರು ಸ್ವಪ್ನದಲ್ಲಿ ಕಾಣಿಸಿಕೊಂಡು - ನಾನು ಇಲ್ಲಿಯೆ ಇದ್ದೆನೆ ಅಂದಮೇಲೆ ನನ್ನ ತಂದೆನೂ ಇರುವನು. ಅಂತಲೂ ಹೇಳಿ ಅಂತರ್ಹಿತನಾಗ್ತಾನೆ. ಶಿಷ್ಯರನ್ನು ಎಬ್ಬಿಸಿ ಶ್ರೀಗಳು ಎಲ್ಲಿಯೂ ಹೋಗುವದು ಬೇಡ. ಇಲ್ಲಿ ಪ್ರಾಣದೇವರು ಇದ್ದಾರೆಯಂತೆ ನೋಡಿ ಅಂದಾಗ. ಎಲ್ರೂ ಆ ಕತ್ತಲಿನಲ್ಲಿ ದಿವಿಟೀ ಹಿಡಿದು ಹುಡುಕಿದಾಗ ರುದ್ರದೇವರ ಎದುರ್ಗಡೆನೇ ಒಂದು ಕಂಬದಲ್ಲಿ ಪುಟ್ಟ ಹನುಮಪ್ಪನ ಕೆತ್ತನೆ ಇದ್ದದ್ದು ಕಂಡು ಎಲ್ಲರಿಗೂ ಆಶ್ಚರ್ಯವಾಗುತ್ತೆ. ಮರುದಿನ ವಿಜೃಂಭಣೆಯಿಂದ ಸಂಸ್ಥಾನ ಪೂಜೆ ಅಲ್ಲಿಯೇ ಮಾಡಿ ಪರಿವಾರದೊಂದಿಗೆ ಹೊರಡ್ತಾರೆ ಶ್ರೀ ಸತ್ಯಜ್ಞಾನತೀರ್ಥರು.
ಈ ವಿಷಯವನ್ನು ಶ್ರೀ ಮೋಹನದಾಸಾರ್ಯರ ವಂಶಸ್ಥರಾದ ಶ್ರೀ ಕೃಷ್ಣದಾಸರು ಪ್ರತ್ಯಕ್ಷವಾಗಿ ನೋಡಿದ್ದೂ ಉಂಟು....
ಶ್ರೀ ವಿಜಯಪ್ರಭುಗಳು ಈ ಪ್ದಾಣದೇವರನ್ನೇ ಆಹ್ವಾನ ಮಾಡಿ ಅದೇ ಕಂಬದಲ್ಲಿ ಪೂಜಿಸುತ್ತಿದ್ದರು ಅಂತಲೂ ಶ್ರೀಗಳಿಗೆ ಸ್ವಪ್ನವೂ ಆಯಿತೆಂದು ಹೇಳುತ್ತಾರೆ..
ಜೈ ವಿಜಯರಾಯ...
****
******
Art by Murali from Shimoga
No comments:
Post a Comment