Sri. Uragadri Vittala Dasaru
Original Name: Sri. Srinivasa Rao
Period: 1871 - 1964
Ankita: Uragadri Vittala
Preceptor: Sri. Tande Muddu Mohana Vittala Dasa
Place: Chitradurga
Aradhana: Karthika Bahula Dwadashi
ಕಾರ್ತೀಕ ಕೃಷ್ಣ ಏಕಾದಶಿ (ಆರಾಧನೆ ದ್ವಾದಶೀ)
****
ಜ್ಞಾನ ಸದ್ಭಕ್ಯ್ತಾದಿ ಶೀಲಂ ಆನತಾಮರ ಪಾದಪಮ್/
ಧ್ಯಾನ ಗಾನ ಕಲಾವಿದಂ ಶ್ರೀನಿವಾಸ ಗುರುಮ್ ಭಜೇ//
ಶ್ರೀ ಹರಿಯ ಕರುಣದಲಿ ಸತಿಸಹಿತ ಗೃಹದೊಳು ಚರಿಸುತಲಿನಿತ್ಯದಿ
ಹರಿಯ ಭಕುತರಿಗರುಹುತಲಿ ಶಿಷ್ಯತ್ವಗಳ ಭೋದೇ
ಇರಲು ನವಮತೃತಿ ವರುಷ ಉರುಳಲು ಕರುಣದಲಿ
ಉರಗಾದ್ರಿವಾಸನು ಕರೆಯೆ ಹರಿಪದಸೇರ್ದ ಗುರುವರರಿಗಾನಮಿಪೆ.
***
shri gurubyo namaha...hari Om...
kArthIka bahuLa dwAdashi is the ArAdhane of shri uragAdrivAsa viTTala dAsaru.
shri uragAdrivAsa viTTala dAsaru
Aradhana: kArthIka bahuLa dwAdashi
Period: 1871 – 1964
ankita: shri venkaTEsha viTTala (swapna-labhdha from Shri vijaya dAsaru) and uragAdrivAsa viTTala from Shri tandE muddu mOhana viTTala dAsaru.
Original name: shri srinivAsa rAyaru
shri Subbaraya dAsaru, alias tandE muddu mOhana viTTala dAsaru, gave ankita to a record 1165 persons. One among them is shri uragAdrivAsa viTTala dAsaru. He has done great service to dAsa sahitya.
shri krishNArpaNamastu...
***
ದಾಸರ ಹೆಸರು : ಉರಗಾದ್ರಿವಾಸವಿಠಲದಾಸರು
ಪೂರ್ವಾಶ್ರಮದ ಹೆಸರು : ಎಂ. ಶ್ರೀನಿವಾಸರಾವ್
ಜನ್ಮ ಸ್ಥಳ : ಹೊಳೆ ಹೊನ್ನೂರು
ತಂದೆ ಹೆಸರು : ಎಂ.ಸ್ವಾಮಿರಾಯ
ತಾಯಿ ಹೆಸರು : ರಾಧಾಬಾು
ಕಾಲ : 1871 - 1964
ಅಂಕಿತನಾಮ : ಶ್ರೀ ಉರಗಾದ್ರಿವಾಸ ವಿಠಲ
ಲಭ್ಯ ಕೀರ್ತನೆಗಳ ಸಂಖ್ಯೆ: 100
ಗುರುವಿನ ಹೆಸರು : ತಂದೆ ಮುದ್ದುಮೋಹನದಾಸರು
ಮಕ್ಕಳು: ಅವರ ಹೆಸರು : ಪದ್ಮಾವತಿ ಬಾು, ಕಮಲಾಬಾು, ವನಜಾಬಾು
ಪತಿ: ಪತ್ನಿಯ ಹೆಸರು : ತುಂಗಾಬಾು
ಒಡಹುಟ್ಟಿದವರು :ಮೂರು ಮಂದಿ ಸಹೋದರರು) ರಾಘವೇಂದ್ರರಾಯ, ರಾಮರಾಯು, ಶ್ರೀಧರರಾಯರು. ಸೋದರಿಯರು - ಕೃಷ್ಣಮ್ಮ, ಜೀವೂಬಾು
ವೃತ್ತಿ : ಅಧ್ಯಾಪಕ ವೃತ್ತಿ
ಕೃತಿಯ ವೈಶಿಷ್ಟ್ಯ : ಭಕ್ತಿ ಪ್ರಧಾನವಾದ ಕೀರ್ತನೆಗಳು
****
ದಿನಾಂಕ : 24.11.19 ಭಾನುವಾರ ಶ್ರೀ ರಾಯರ ಅಂತರಂಗ ಭಕ್ತರಾದ ಶ್ರೀ ಉರಗಾದ್ರಿ ವಾಸ ವಿಠಲ ರ ಆರಾಧನಾ ಮಹೋತ್ಸವ., ಚಿತ್ರದುರ್ಗ.
ಹೆಸರು : ಶ್ರೀ ಶ್ರೀನಿವಾಸ ರಾಯರು
ತಂದೆ : ಶ್ರೀ ಸ್ವಾಮಿ ರಾಯರು
ತಾಯಿ : ಸಾಧ್ವಿ ರಾಧಾಬಾಯಿ
ಕಾಲ : ಕ್ರಿ ಶ ೧೮೭೧ - ೧೯೬೪ (೯೩ ವರ್ಷಗಳು)
ಕವಿತಾ ರಚನೆ
ಶ್ರೀ ವಿಜಯ ರಾಯರ ಸ್ವಪ್ನ ದಟ್ಟವಾದ ಶ್ರೀ ವೆಂಕಟೇಶ ಎಂಬ ಅಂಕಿತದಲ್ಲಿ ಶೇಷಗಿರಿ ದೊರೆಯ ಮೇಲೆ ಅನೇಕ ಪದಗಳನ್ನು ರಚಿಸಿದ್ದಾರೆ.
ಸಕಲ ಕಲಾ ವಲ್ಲಭ
ಕವಿತಾ ರಚನಾ ಕೌಶಲ ದೊಂದಿಗೆ ವೀಣಾ, ವೈಲನ್, ಹಾರ್ಮೋನಿಯಂ, ತಬಲಾ ಮೊದಲಾದ ವಾದ್ಯಗಳನ್ನು ನುಡಿಸುತ್ತಿದ್ದರು.
ಅಂಕಿತ : ಶ್ರೀ ಉರ ಗಾದ್ರಿ ವಾಸ ವಿಠಲ
ಉಪದೇಶ ಗುರುಗಳು :ಶ್ರೀ ತಂದೆ ಮುದ್ದು ಮೋಹನ ವಿಠಲ
ಶಿಷ್ಯ ಸಂಪತ್ತು
ಶ್ರೀ ದಾಸಾರ್ಯರು ೮೦ ಜನಕ್ಕೆ ದಾಸ ದೀಕ್ಷೆ ನೀಡಿದ್ದಾರೆ.
" ಕೃತಿಗಳು "
ಶ್ರೀ ದಾಸಾರ್ಯರೂ ಸುಮಾರು ೫೦೦ ಪದ ಪದ್ಯ ಸುಳಾದಿ ರ ರಚಿಸಿದ್ದಾರೆ.
ಸಂಪೂರ್ಣ ವೆಂಕಟೇಶ ಕಲ್ಯಾಣ
ಭಗವಂತನ ವಿರಾಡ್ರೂಪ - ೧೦೯ ನುಡಿಗಳು
ಶ್ರೀ ಭಾಗವತ ಮಹಿಮಾ - ೨೪ ನುಡಿಗಳು
ಪ್ರಮೇಯ ರಹಸ್ಯ -೯೮ ನುಡಿಗಳು
ಹೃದಯಾ ಬ್ಜ ಚಕ್ರ ಮಂಡಲ ವಿವರಣೆ
ಪಂಚ ಮುದ್ರೆಯಲ್ಲಿ ಭಗವದ್ ರೂಪ ಚಿಂತನಾ ಕ್ರಮ
ಸೃಷ್ಟಿ ಪ್ರಕರಣ
ಲಯ ಪ್ರಕರಣ
ಪ್ರಣವ ಪ್ರತಿ ಪಾದ್ಯ ರೂಪಗಳು
ಪಂಚ ಕೋಶ ವಿವರಣೆ
ಶ್ರೀ ನೃಸಿಂಹ ಸ್ತೋತ್ರ
ಶ್ರೀ ದಶಾವತಾರ ಸ್ತೋತ್ರ
ಶ್ರೀ ದಾಸಾರ್ಯರ ಜೀವನ ಇತರರಿಗೆ ಮಾರ್ಗದರ್ಶನ ಆಗಿತ್ತು.
ಶ್ರೀ ವಿಜಯ ರಾಯರ ಕಂಕಣಾಕಾರ ಸುಳಾದಿ ಅಂತರಾರ್ಥವನ್ನು ಸೂಕ್ಷ್ಮವಾಗಿ ಗ್ರಹಿಸಿ ಅದರಂತೆ ವಿದ್ಯುಕ್ತವಾಗಿ ಹೃದಯಾ ಬ್ಜ ಚಕ್ರದ ಚಿಂತನೆ ಗೈಯುತ್ತ ಬೀಂಬೋಪಾ ಸನಾ ಕ್ರಮದಿಂದ ಅವರು ಆಚರಿಸುತ್ತಿದ್ದ ದೇವರ ಪೂಜಾ ವಿಧಾನವು ವಿಶಿಷ್ಟ ವಾಗಿತ್ತು.
ಅಂಥಾ ಮಹನೀಯರ ಅನುಗ್ರಹ ಸರ್ವ ಕಾಲದಲ್ಲಿಯೂ ಎಲ್ಲರ ಮೇಲಿರಲಿ.....
***
ಶ್ರೀ ಉರಗಾದ್ರಿ ವಿಠಲ ದಾಸರು
ಕಿರುಪರಿಚಯ- ಸ್ಮರಣೆ
ಕಾಲ - 1871 - 1964
ಅಂಕಿತಗಳು - ಶ್ರೀ ವೆಂಕಟೇಶ ( ಶ್ರೀ ವಿಜಯದಾಸರಿಂದ ಸ್ವಪ್ನಲಬ್ದ)
ಉರಗಾದ್ರಿವಾಸ ವಿಠಲ ಶ್ರೀ ತಂದೆ ಮುದ್ದುಮೋಹನ ವಿಠಲರಿಂದ.
ತಂದೆ ತಾಯಿಗಳು - ಮಳವಳ್ಳಿ ಸ್ವಾಮಿರಾಯರು, ಶ್ರೀಮತಿ ರಾಧಾಬಾಯಿನವರು.....
ಶಿವಮೊಗ್ಗ ಜಿಲ್ಲೆಯ ಹೊಳೆ ಹೊನ್ನೂರು ಕ್ಷೇತ್ರದಲ್ಲಿ ಜನ್ಮಿಸಿದಂತಹಾ ನಮ್ಮ ದಾಸರ ಜನ್ಮ ನಾಮ ಶ್ರೀನಿವಾಸರಾಯರು ತಂದೆ ತಾಯಿಗಳಿಗೆ ಆರು ಮಂದಿ ಮಕ್ಕಳಲ್ಲಿ ನಮ್ಮ ದಾಸರು 3 ನೆಯವರು.. ಇವರ 14 ನೇ ವಯಸ್ಸಿನಲ್ಲೇನೇ ದಾಸರ ತಂದೆಯವರ ನಿಧನವಾಯಿತು... ನಂತರ ಆರ್ಧಿಕ ಪರಿಸ್ಥಿತಿಯ ಅನುಗುಣವಾಗಿ ಮೈಸೂರ್ಗೆ ಬಂದು ವಿದ್ಯಾಭ್ಯಾಸವನ್ನು ನಡೆಸಿ ಹೊಸನಗರ ತಾಲ್ಲೂಕಿನ ಕಳೂರು ಕಟ್ಟೆ ಎಂಬ ಊರಿನಲ್ಲಿ ಅಧ್ಯಾಪಕ ವೃತ್ತಿಯನ್ನು ಪಡೆದು ನಂತರದಿನಗಳಲ್ಲಿ ಸರ್ಕಾರಿ ಮಾಧ್ಯಮಿಕ ಶಾಲೆಯಲ್ಲಿ Headmaster ಆಗಿದರು....
ಇದೇ ಸಮಯದಲ್ಲಿ ಸತ್ಸಂಗದಿಂದ ಶ್ರೀಮದಾನಂದತೀರ್ಥ ಭಗವತ್ಪಾದಾಚಾರ್ಯರ ಶಾಸ್ತ್ರದ ತತ್ವವನ್ನು ಅಧ್ಯಯನ ಮಾಡಿ ಆಧ್ಯಾತ್ಮಿಕ ಚಿಂತನೆಯಲ್ಲಿ ಮನಸನ್ನ ತೊಡಗಿಸಿದರು. ನಂತರ ಅವರ ಅಕ್ಕ ಜೀವೂಬಾಯಿನವರ ಮೊದಲನೇ ಪುತ್ರಿಯಾದ ತುಂಗಾಬಾಯಿನವರೊಂದಿಗೆ ವಿವಾಹವಾಗಿ ಮೂರು ಜನ ಹೆಣ್ಣು ಮಕ್ಕಳನ್ನ ಪಡೆದು ಸಂಸಾರವನ್ನ ಸಾಗಿಸುತ್ತಿದ್ದರೂ ಸಹಾ ಅವರಿಗೆ ಪರಮಾತ್ಮನಲ್ಲಿ ಭಕ್ತಿ ಪ್ರಪತ್ತಿಗಳು , ಆತನಲ್ಲಿ ಶ್ರದ್ಧೆ ಹೆಚ್ಚು ಆಗುತ್ತಾ ಬಂತು... ಹೀಗೆ ಹರಿಯ ಸೇವೆಯನ್ನು ಮಾಡುತ್ತಿರುವ ಇವರಿಗೆ ಒಮ್ಮೆ ದಾಸರ ಮನೆದೇವರಾದ ವೆಂಕಪ್ಪನ ಆಶೀರ್ವಾದದಿಂದ ಸ್ವಪ್ನದಲ್ಲಿ ಶ್ರೀ ವಿಜಯದಾಸರಿಂದ ಶ್ರೀ ವೆಂಕಟೇಶ ಎನ್ನುವ ಅಂಕಿತನಾಮವನ್ನು ಪಡೆದು ಅದೇ ಅಂಕಿತದಿಂದ ಅನೇಕ ಕೀರ್ತನೆಗಳನ್ನು ರಚನೆ ಮಾಡಿದರು... ಅವರ ಕವಿತಾ ಕೌಶಲ ಸಾಹಿತ್ಯ ಎಷ್ಟು ಅದ್ಬುತವಾಗಿತ್ತು ಎಂದು ... ಅವರ ಕೃತಿಗಳಲ್ಲೇ ನಾವು ಕಾಣಬಹುದು... ಉದಾಹರಣೆಗೆ ಶ್ರೀ ಶೇಷಗಿರಿದಾಸರು ಅದ್ಭುತವಾಗಿ ಹಾಡಿದಂತಹಾ ಹನುಮಂತ ಹನುಮಂತ ಹನುಮಂತಾ ಎನ್ನುವ ಅದ್ಭುತವಾದ ಪದ ನಮ್ಮ ಭಜನೆಯ ಭಾಗವಾಗಿದೆ....
ಶ್ರೀ ದಾಸರಿಗೆ ಕವನಾ ಕೌಶಲವೇ ಅಲ್ಲದೇ ತಬಲ, ಪಿಟೀಲು, ವೀಣೆ, ಹಾರ್ಮೋನಿಯಂ ಇತ್ಯಾದಿ ಸಂಗೀತ ವಾದ್ಯಗಳಲ್ಲಿ, ಚಿತ್ರಕಲೆ ಯಲ್ಲೀ ವಿಶೇಷ ಜ್ಞಾನ ಕೌಶಲವನ್ನು ಪಡೆದವರಾಗಿದ್ದರು... ಭಜನೆಯ ಸಂದರ್ಭದಲ್ಲಾರದೂ ಅವರ ಕೃತಿ ರಚನೆಯ ಸಮಯದಲ್ಲಾದರೂ ಆ ಹಾಡುಗಳನ್ನು ವಾದ್ಯಗಳೊಂದಿಗೆ ಹಾಡುತ್ತಿದ್ದರು... ನಂತರ teacher job ಆದ್ದರಿಂದ transfers ನಡೆದು ನಡೆದು ಚಿತ್ರದುರ್ಗದಲ್ಲಿ ಬಂದು ವಾಸಮಾಡಲಾರಂಬಿಸಿದರು. ಅಲ್ಲಿನ ಪ್ರಾಣದೇವರ ದೇವಸ್ಥಾನದಲ್ಲಿ ಪ್ರವಚನ, ಭಜನಾ ಕಾರ್ಯಕ್ರಮಗಳಲ್ಲಿ ನಿರತರಾಗಿದ್ದರು. ಚಿತ್ರದುರ್ಗದವರು ಅವರಿಗೆ ಭಜನೆ ಶ್ರೀನಿವಾಸರಾಯರು ಅಂತನೇ ಕರೆತಿದ್ದರು..... ಶ್ರೀ ವಿಜಯದಾಸರಿಂದ ಸ್ವಪ್ನಲಬ್ದ ಅಂಕಿತವನ್ನ ಪಡೆದರೂ ಸಹಾ ಒಬ್ಬ ಶ್ರೇಷ್ಠ ಗುರುಗಳ ಆಶೀರ್ವಾದಕ್ಕಾಗಿ ಚಿಂತಿಸುತಿದ್ದರು... ವೆಂಕಪ್ಪನು ಇವರ ಮನದಾಸೆಯನ್ನು ಅರಿತವರಾಗಿ .... ಅದೇ ಸಮಯದಲ್ಲಿ ಶ್ರೀ ವಿಜಯದಾಸರ ಶ್ರೇಷ್ಠ ಪರಂಪರೆಯಲ್ಲಿ ಬಂದಂತಹಾ ಶ್ರೀ ತಂದೆ ಮುದ್ದುಮೋಹನ ವಿಠಲ ದಾಸರು ದಾಸರನ್ನೈ ಹುಡುಕಿಕೊಂಡು ಚಿತ್ರದುರ್ಗಕ್ಕೆ ಆಗಮಿಸಿ ದಾಸರನ್ನ ಕರೆದು ನಿಮಗೆ ಅಂಕಿತನೀಡುವುದಕ್ಕಾಗಿಯೇ ಇಲ್ಲಿಗೆ ಬಂದಿದ್ದೇವೆ ಎಂದು ತಿಳಿಸಿ ಶ್ರಿ ಶ್ರೀನಿವಾಸರಾಯರಿಗೆ ಉರಗಾದ್ರಿವಾಸ ವಿಠಲ ಎಂಬ ಅಂಕಿತವನ್ನುನೀಡಿ ಆಶೀರ್ವದಿಸಿ ನಿನ್ನಲ್ಲೇ ನಾನು ಒಂದು ಅಂಶದಿಂದ ಇರ್ತೇನೆ ಎಂದು ಪತ್ರರೂಪೇಣಾ ತಿಳಿಸಿದರಂತೆ.... ಹೀಗೆ ಉತ್ತಮೋತ್ತಮ ಗುರುಗಳ ಅನುಗ್ರಹವನ್ನ ಪಡೆದ ಶ್ರೀ ದಾಸರು ಅತ್ಯುತ್ತಮ ಕೃತಿರಚನೆಗಳನ್ನು ಮಾಡಿದರು. . ಇವರ ಕೃತಿಗಳಲ್ಲಿ ಶ್ರೀನಿವಾಸ ಕಲ್ಯಾಣ , ವಿರಾಡ್ರೂಪ ವರ್ಣನೆ , *ಶ್ರೀವೆಂಕಟಾಚಲ ಮಹಾತ್ಮ್ಯೆ * ಕೃತಿಗಳು ಮೇರು ಕೃತಿಗಳಾದವು.... ಮತ್ತೆ ಸೃಷ್ಟಿ ಪ್ರಕರಣ, ಚಕ್ರಾಜ್ಜ ಮಂಡಲದ ವರ್ಣನೆ , ಶ್ರೀ ನಾರಸಿಂಹ ಸ್ತೋರ್ತ, ದಶಾವತಾರ ವರ್ಣನೆ ಇತ್ಯಾತಿ ಕೃತಿಗಳು ಪ್ರಖ್ಯಾತವಾದವು.....
ಶ್ರೀ ದಾಸರು ಚಿತ್ರದುರ್ಗದಲ್ಲೇ ತಮ್ಮ ಗುರುಗಳ ಸ್ಮರಣೆಯಂತೇ ಪರಮಪ್ರಿಯ ದಾಸಮಂಡಲಿಯನ್ನ ಸ್ಥಾಪನೆ ಮಾಡಿ ದಾಸ ಸಾಹಿತ್ಯದ ಪ್ರಚಾರಕ್ಕೆ ತಮ್ಮ ಇಡೀ ಜೀವನವನ್ನು ಸಮರ್ಪಿಸಿದರು... ಶ್ರೀ ದಾಸರು 500 ಕ್ಕೆ ಹೆಚ್ಚು ಕೃತಿಗಳನ್ನು ಬರೆದರೂ ಸಹಾ ವಿಧಿವಶಾತ್ ಅವೆಲ್ಲವೂ ನೀರಿನ ಪ್ರವಾಹದಲ್ಲಿ ಬಿದ್ದು ಕೊಚ್ಚಿಕೊಂಡು ಹೋಗಿವೆಯಂತೆ ಆದರೂ ಸಹಾ ದಾಸರು ತಮ್ಮ ಕೀರ್ತನೆಗಳನ್ನು ಮತ್ತೆ ಬರೆದಿಡುವ ಕೆಲಸ ಮಾಡಲಿಲ್ಲವಂತೆ... ಈಗ ದೊರಕಿದ ಅವರ ಕೃತಿಗಳು ಅವರ ಪತ್ನೀ , ಮಕ್ಕಳು ಸಂಗ್ರಹಿಸಿ ಬರೆದು ಇಟ್ಟವೇಯಂತೆ....
ಶ್ರೀ ದಾಸರ ಶಿಷ್ಯ ಸಂಪತ್ತೂ ಅಧಿಕವಾಗಿತ್ತು. ದಾಸರಿಂದ ಅಂಕಿತೋಪದೇಶ ಪಡೆದ ದಾಸರು 200 ಕ್ಕಿಂತ ಹೆಚ್ಚಾಗಿದ್ದರು .. ಇವರಲ್ಲಿ ಅತ್ಯಂತ ಆತ್ಮೀಯ ಶಿಷ್ಯರು ಶ್ರೀ ತಂದೆ ವೆಂಕಟೇಶ ವಿಠಲರು ... ಇವರು ತಮ್ಮ ಗುರುಗಳಾದ ಉರಗಾದ್ರಿವಾಸ ವಿಠಲ ದಾಸರ ಶಿಷ್ಯರ ಅಂಕಿತನಾಮಗಳನ್ನು ಸೇರಿಸಿ
ಅಂಕಿತಮಾಲಾಸ್ತೋತ್ರ ಎನ್ನುವ ಕೃತಿರಚನೆಯನ್ನು ಮಾಡಿದ್ದಾರೆ.. ಇನ್ನೂ ಶ್ರೀ ದಾಸರ ಶಿಷ್ಯರು ಮೈಸೂರಿನ ಮುಕುಂದವಿಠಲ ದಾಸರು, ಸುಜ್ಞಾನ ವಿಠಲರು, ಕಮಲನಾಭವಿಠಲರು ಹೀಗೆ ಪ್ರಸಿದ್ಧರು.... ಶ್ರೀ ಗುರುಗೋವಿಂದ ವಿಠಲದಾಸರೂ ಸಹಾ ಶ್ರೀ ನಮ್ಮ ಉರಗಾದ್ರಿ ವಿಠಲ ದಾಸರಿಗೆ ಆತ್ಮೀಯರಾಗಿದ್ದರಂತೆ....
ಶ್ರೀ ಉರಗಾದ್ರಿವಾಸ ವಿಠಲ ದಾಸರು ಹೀಗೆ ಭಗವದ್ಭಕ್ತಿಯಲ್ಲಿ , ದಾಸ ಸಾಹಿತ್ಯದ ಸೇವೇಯಲ್ಲಿ ತಮ್ಮ ಪೂರ್ತಿ ಜೀವನವನ್ನ ಕಳೆದು ತಮ್ಮ 93ನೇ ವರ್ಷದಲ್ಲಿ ಇದೇ ನವಂಬರ್ 30 ರಕ್ಕೆ ಕಾರ್ತೀಕ ಬಹುಳ ದ್ವಾದಶಿ ಯಂದು ಹರಿಪುರಕ್ಕೆ ತೆರಳಿದರು...
ಇಂಥಹಾ ಶ್ರೇಷ್ಠ ದಾಸರ ಚರಿತ್ರೆಯನ್ನ ಸಂಕ್ಷಿಪ್ತವಾಗಿ ನಿಮ್ಮ ಮುಂದೆ ಇಡುವುದಕ್ಕೆ ಅನುಗ್ರಹಮಾಡಿದ ಶ್ರಿ ಭಾರತೀರಮಣ ಮುಖ್ಯಪ್ರಾಣಾಂತರ್ಗತ ನನ್ನ ವೆಂಕಪ್ಪನಿಗೆ ಶತಕೋಟಿ ನಮನಗಳೊಂದಿಗೆ
ಇಂಥಹಾ ದಾಸ ಶ್ರೇಷ್ಠರನ್ನ ಆರಾಧನೆ ದಿನಗಳಲ್ಲೇ ಅಲ್ಲದೆ ಪ್ರತಿ ದಿವಸ ಸ್ಮರಣೆ ಮಾಡಿಕೊಳ್ಳುವುದರಲ್ಲಿಯೇ, ಹಾಗೂ ಅವರ ಪದಗಳು ಹಾಡುವುದರಲ್ಲಿಯೇ ನಮ್ಮ ಜೀವನದ ಸಾರ್ಥಕತೆ ಅಂತ ಹೇಳಬಹುದಲ್ಲವೇ .....
ಶ್ರೀ ಉರಗಾದ್ರಿ ವಾಸ ವಿಠಲ ದಾಸರ ಸ್ಮರಣೆ ಯೊಂದಿಗೆ
ಜ್ಞಾನ ಸದ್ಭಕ್ತ್ಯಾದಿ ಶೀಲಂ ಆನತಾಮರ ಪಾದಪಮ್
ಧ್ಯಾನ ಗಾನ ಕಲಾವಿದಂ ಶ್ರೀನಿವಾಸ ಗುರುಂ ಭಜೇ
-Smt. Padma Sirish
ನಾದನೀರಾಜನದಿಂ ದಾಸಸುರಭಿ
***
by ಆಚಾರ್ಯ ನಾಗರಾಜು ಹಾವೇರಿ
" ಶ್ರೀ ಉರಗಾದ್ರಿ - 1 "
" ದಿನಾಂಕ : 12.12.2020 ಶನಿವಾರ " ಕಾರ್ತೀಕ ಬಹುಳ ದ್ವಾದಶೀ "
" ಶ್ರೀ ಶ್ರೀನಿವಾಸನ - ಶ್ರೀ ರಾಯರ ಅಂತರಂಗ ಭಕ್ತರಾದ ಶ್ರೀ ಉರಗಾದ್ರಿವಾಸ ವಿಠ್ಠಲರ ಆರಾಧನಾ ಮಹೋತ್ಸನ, ಚಿತ್ರದುರ್ಗ "
" ಪ್ರಸ್ತಾವನೆ "
ಜ್ಞಾನ ಸದ್ಭಕ್ತ್ಯಾದಿ ಶೀಲಂ
ಆನತಾಮರ ಪಾದಪಂ ।
ಧ್ಯಾನ ಗಾನ ಕಲಾವಿದಂ
ಶ್ರೀನಿವಾಸ ಗುರುಂ ಭಜೇ ।।
ಲೋಕದಲ್ಲಿ ಮಹಾತ್ಮರ ಜೀವನ ಕ್ರಮ; ನಡೆ ನುಡಿಗಳು ಮತ್ತು ಆಚಾರ ವ್ಯವಹಾರಗಳು - ಪಾಮರರಾದ ಜನರ ಮನಸ್ಸು ಹಾಗೂ ಜೀವನದ ಮೇಲೆ ಗಂಭೀರವಾದ ಪರಿಣಾಮ ಬೀರುತ್ತದೆ.
ಜನರಿಂದ ಸನ್ಮಾನ; ಸಮಾಜದಲ್ಲಿ ಕೀರ್ತಿ ಪ್ರತಿಷ್ಠೆಗಳ ಪ್ರಾಪ್ತಿ; ಗುರು ಪೀಠದ ಸ್ಥಾನ ಮಾನಗಳನ್ನು ಬಯಸುವವರೇ ಹೆಚ್ಚಾಗಿದ್ದಾರೆ.
ಆದರೆ, ಲೋಕ ವಾರ್ತೆಯಿಂದ ದೂರವಾಗಿದ್ದುಕೊಂಡು ಐಹಿಕ ಸುಖ ಸೌಕರ್ಯಗಳನ್ನೂ ಬಯಸದೇ; ಕೇವಲ ಜ್ಞಾನ ಭಕ್ತಿ ವೈರಾಗ್ಯಗಳನ್ನೇ ದೈವೀ ಸಂಪತ್ತೆಂದು ಭಾವಿಸಿ; ಎಲೆಮರೆಕಾಯಿಯಂತೆ ಶ್ರೇಷ್ಠ ಮಟ್ಟದ ಸಾತ್ವಿಕ ಮತ್ತು ನಿಷ್ಕಾಮ ಜೀವನವನ್ನು ನಡೆಸುತ್ತಾ; ಕೇವಲ ಜ್ಞಾನರ್ಥಿಗಳಾಗಿ - ತಮ್ಮಲ್ಲಿ ಬರುವ ಸತ್ಪಾತ್ರರ ಆತ್ಮೋದ್ಧಾರದಲ್ಲಿ ನಿರತರಾದ; ಶುಭಾತ್ಮರನ್ನು ಅರಸಿಕೊಂಡು ಅವರ ದರ್ಶನ ಭಾಗ್ಯ ಪಡೆದು ಅವರ ನಡೆ ನುಡಿ ಮತ್ತು ಪ್ರಾಸಾದಿಕ ಮಾತುಗಳಿಂದ ಸಾರ್ಥಕ ಪಡಿಸಿಕೊಳ್ಳುವಂಥಹಾ ಪುಣ್ಯ ಚಾರಿತ್ರ್ಯದಿಂದ ಶೋಭಿಸುವ ಹರಿದಾಸ ವರೇಣ್ಯರಲ್ಲಿ ಪ್ರಾತಃ ಸ್ಮರಣೀಯ ಪರಮಪೂಜ್ಯ ಶ್ರೀ ಉರಗಾದ್ರಿವಾಸ ವಿಠ್ಠಲರೂ ಒಬ್ಬರು!
" ಶ್ರೀ ಉರಗಾದ್ರಿವಾಸ ವಿಠ್ಠಲರ ಸಂಕ್ಷಿಪ್ತ ಮಾಹಿತಿ "
ಹೆಸರು :
ಶ್ರೀ ಶ್ರೀನಿವಾಸರಾಯರು
ತಂದೆ :
ಶ್ರೀ ಸ್ವಾಮಿರಾಯರು
ತಾಯಿ :
ಸಾಧ್ವೀ ರಾಧಾಬಾಯಿ
ಜನ್ಮ ಸ್ಥಳ :
ಹೊಳೆಹೊನ್ನೂರು
ಜನ್ಮ ದಿನಾಂಕ :
06.02.1871
ಕಾಲ :
ಕ್ರಿ. ಶ. 1871 - 1964 ( 93 ವರ್ಷಗಳು )
ಗುರುಗಳು :
ಶ್ರೀ ತಂದೆ ಮುದ್ದುಮೋಹನ ವಿಠ್ಠಲರು
ನಿರ್ಯಾಣ :
30.11.1964
ಆರಾಧನಾ ದಿನ :
ಕಾರ್ತೀಕ ಬಹುಳ ದ್ವಾದಶೀ
ಆರಾಧನಾ ಸ್ಥಳ :
ಚಿತ್ರದುರ್ಗ
" ಶ್ರೀ ದಾಸರ ಜನನ ಮತ್ತು ವಿದ್ಯಾಭ್ಯಾಸ "
ಶ್ರೀ ಸ್ವಾಮಿರಾಯ ಮತ್ತು ಸಾಧ್ವೀ ರಾಧಾಬಾಯಿ ದಂಪತಿಗಳಿಗೆ ತೃತೀಯ ಪುತ್ರರಾಗಿ ಶ್ರೀ ಶ್ರೀನಿವಾಸರಾಯರು 06.02.1871 ರಂದು ಶಿವಮೊಗ್ಗ ಜಿಲ್ಲೆಯ ಹೊಳೆಹೊನ್ನೂರು ಕ್ಷೇತ್ರದಲ್ಲಿ ಜನ್ಮ ತಾಳಿದರು.
ಶ್ರೀ ಶ್ರೀನಿವಾಸರಾಯರ ಚಿಕ್ಕ ವಯಸ್ಸಿನಲ್ಲಿಯೇ ಅವರ ತಂದೆ ಕಾಲವಾದರು.
ತಂದೆಯ ಮರಣ ಹಾಗೂ ಕುಟುಂಬದ ಆರ್ಥಿಕ ಪರಿಸ್ಥಿಗಳು ಬಾಲಕನ ಎಳೆಯ ಮನಸ್ಸಿನ ಮೇಲೆ ಗಂಭೀರವಾದ ಪರಿಣಾಮವನ್ನುಂಟು ಮಾಡಿದವು.
ಕೆಲವು ದಿನಗಳ ನಂತರ ಮೈಸೂರಿಗೆ ಬಂದು ಅಲ್ಲಿ ಲೋವರ್ ಸೆಕೆಂಡರಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಮೈಸೂರು ಜಿಲ್ಲಾ ನಾರ್ಮಲ್ ಸ್ಕೂಲಿನಲ್ಲಿ ತರಬೇತಿ ಪಡೆದು ಮುಂದೆ ಹೊಸನಗರ ತಾಲೂಕಿನ " ಕಳೂರು ಕಟ್ಟೆ " ಎಂಬ ಗ್ರಾಮದ ಪ್ರಾಥಮಿಕ ಶಾಲೆಯಲ್ಲಿ ಅಧ್ಯಾಪಕ ವೃತ್ತಿಯನ್ನು ಪಡೆದರು.
ನಂತರ ಉತ್ತಮ ಶಿಕ್ಷಣ ಪಡೆದು ಸರ್ಕಾರಿ ಮಾಧ್ಯಮಿಕ ಶಾಲೆಯ ಮುಖ್ಯೋಪಾಧ್ಯಾಯರಾದರು.
" ದ್ವೈತ ಸಿದ್ಧಾಂತಾಧ್ಯಯನ "
ಸಕಾಲದಲ್ಲಿ ಸಾತ್ವಿಕರ ಸಂಗ ದೊರೆತು ಶ್ರೀಮನ್ಮಧ್ವಾಚಾರ್ಯ ಪ್ರಣೀತವಾದ ತತ್ತ್ವಗಳ ಕಡೆಗೆ ಮನಸ್ಸು ಹರಿದು ತನ್ಮೂಲಕ ಅವರ ಅಧ್ಯಾತ್ಮಿಕ ಪ್ರವೃತ್ತಿಯು ದ್ವೈತ ಸಿದ್ಧಾಂತದ ಮತ್ತು ಚಿಂತನೆಗಳಲ್ಲಿ ಸಮಾವೇಶವಾಯಿತು.
" ವಿವಾಹ "
ಶ್ರೀ ಶ್ರೀನಿವಾಸರಾಯರು ಸಾಧ್ವೀಮಣಿ ತುಂಗಾಬಾಯಿಯೊಡನೆ ವಿವಾಹವಾದರು.
ಇವರಿಗೆ ಮೂರು ಜನ ಪುತ್ರಿಯರು ಜನಿಸಿದರು.
ತಮಗೆ ಬರುವ ವರಮಾನದಿಂದಲೇ ಸುಖದಿಂದ ಸಂಸಾರವನ್ನು ನಿಭಾಯಿಸುತ್ತಿದ್ದರು.
" ಕವಿತಾ ರಚನೆ "
ಶ್ರೀ ಶ್ರೀನಿವಾಸರಾಯರ ಮನಸ್ಸು ಬರ ಬರುತ್ತಾ ಶ್ರೀ ಹರಿಯ ಚರಣಾರವಿಂದವಿಂದಗಳಲ್ಲೇ ನೆಲೆಗೊಂಡು ಆಧ್ಯಾತ್ಮಿಕ ಚಿಂತನೆಯಲ್ಲಿ ತಲ್ಲೀನರಾದರು.
ಹೃದಯಾಂತರಾಳದಿಂದ ಕವಿತಾ ಸಾಮರ್ಥ್ಯವು ಪುಟಿದೆದ್ದು ಕೀರ್ತನೆಗಳ ರೂಪದಲ್ಲಿ ಹೊರಹೊಮ್ಮಿತು.
ಶ್ರೀ ವಿಜಯರಾಯರಿಂದ ಸ್ವಪ್ನದತ್ತವಾದ " ಶ್ರೀ ವೆಂಕಟೇಶ " ವೆಂಬ ಅಂಕಿತದಿಂದ ಶೇಷಗಿರಿ ಧೊರೆಯ ಮೇಲೆ ಅನೇಕ ಕೀರ್ತನೆಗಳನ್ನು ರಚಿಸಿದರು.
" ಸಕಲ ಕಲಾ ವಲ್ಲಭರು "
ಶ್ರೀ ಶ್ರೀನಿವಾಸರಾಯರು ಕವಿತಾ ರಚನಾ ಕೌಶಲದೊಂದಿಗೆ ವೀಣೆ, ವಾಯಿಲನ್, ಹಾರ್ಮೋನಿಯಂ ತಬಲಾ ಮುಂತಾದ ವಾದ್ಯಗಳನ್ನು ನುಡಿಸುತ್ತಿದ್ದರು.
ದೇವರ ನಾಮಗಳನ್ನು ವಾದ್ಯಗಳ ಜೊತೆಗೆ ರಸವತ್ತಾಗಿ ಹಾಡುತ್ತಿದ್ದುದನ್ನು ಕೇಳಿದ ಜನರ ಹೃದಯದಲ್ಲಿ ಭಕ್ತಿ ಭಾವ ಅರಳುವಂತೆ ಮಾಡುತ್ತಿತ್ತು.
" ಚಿತ್ರಕಲಾವಿದರು "
ಶ್ರೀ ಶ್ರೀನಿವಾಸರಾಯರು ತಮಗೆ ಕರಗತವಾದ ಚಿತ್ರ ಕಲೆಯನ್ನು ರೂಢಿಸಿಕೊಂಡು ತಾತ್ತ್ವಿಕ ವಿಷಗಳನ್ನು ಪ್ರತಿಬಿಂಬಿಸುವ ಅನೇಕ ಚಿತ್ರಗಳನ್ನು ಬರೆದರು.
ಶ್ರೀಮದಾಚಾರ್ಯ ಪ್ರಣೀತ ದ್ವೈತ ಸಿದ್ಧಾಂತದ ಸಕಲ ಗ್ರಂಥಗಳ ಸಮಗ್ರಾವಲೋಕನೆ; ಅಪರೋಕ್ಷ ಜಾನಿಗಳಿನ್ದ ರಚಿತವಾದ ಪದಗಳ ಅಧ್ಯಯನ ಮತ್ತು ಉಪಾಸನೆ ಅವರ ನಿತ್ಯ ಕರ್ಮಗಳಾದವು.
" ಶ್ರೀ ಮುಖ್ಯಪ್ರಾಣದೇವರ ಸೇವೆ "
ಶ್ರೀ ಶ್ರೀನಿವಾಸರಾಯರು ಚಿತ್ರದುರ್ಗಕ್ಕೆ ಬಂದು ನೆಲೆಸಿ ಅಲ್ಲಿಯೇ 12 ವರ್ಷಗಳ ಕಾಲ ಶ್ರೀ ಮುಖ್ಯಪ್ರಾಣದೇವರ ಸೇವೆ ಮಾಡಿದರು.
ನಿತ್ಯ ಸಾಯಂಕಾಲ ಶ್ರೀ ಮುಖ್ಯಪ್ರಾಣದೇವರ ಮುಂದೆ ಪುರಾಣ ಮತ್ತು ಹರಿಕಥಾಮೃತಸಾರ ಪ್ರವಚನಗಳನ್ನು ನಡೆಸುತ್ತಾ ತಮ್ಮ ಆಪ್ತರೊಂದಿಗೆ ಆಧ್ಯಾತ್ಮಿಕ ಚಿಂತನೆಯಲ್ಲಿ ಕಾಲ ಕಳೆಯುತ್ತಿದ್ದರು.
" ಭಜನೆ "
ನಿತ್ಯವೂ ಭಗವದಾರಾಧನೆ; ಸಚ್ಛಾಸ್ತ್ರ ಪ್ರವಚನಗಳಲ್ಲಿ ಮನಸ್ಸು ನೆಲೆಗೊಂಡಿತು.
ನಿತ್ಯವೂ ಸಾಯಂಕಾಲ ತಾರತಮ್ಯಾನುಸಾರ ಭಜನೆ; ಶನಿವಾರದಂದು ವಿಶೇಷ ಪೂಜೆ ಮತ್ತು ಭಜನೆ; ಏಕಾದಶೀ ಜಾಗರಣೆಯೇ ಮುಂತಾದ ಸತ್ಸಾಧನ ಪ್ರವೃತ್ತರಾಗಿ ಆಧ್ಯಾತ್ಮಿಕ ಮೌಲ್ಯಗಳನ್ನು ವೃದ್ಧಿ ಪಡಿಸಿಕೊಂಡರು.
ಮುಂದೆ ಇವರು ಭಜನೆ ಶ್ರೀನಿವಾಸರಾಯರೆಂದೇ ಖ್ಯಾತಿ ಪಡೆದರು.
" ಪದ ರಚನೆ "
ಶ್ರೀ ವಿಜಯರಾಯರಿಂದ ಸ್ವಪ್ನದ್ವಾರಾ ದತ್ತವಾದ " ಶ್ರೀ ವೆಂಕಟೇಶ " ಎಂಬ ಅಂಕಿತದಲ್ಲಿ ಅನೇಕ ಪದ್ಯಗಳನ್ನು ರಚಿಸಿದ್ದಾರೆ.
ಅದರ ಒಂದು ತುಣಕನ್ನು ಸಜ್ಜನರ ಮಾಹಿತಿಗಾಗಿ ಇಲ್ಲಿ ಕೊಡಲಾಗಿದೆ.
ಶಂಕ ಚಕ್ರಾಂಕಿತನೆ
ಮಂಕು ಬುದ್ಧಿಯ ಬಿಡಿಸೋ ।
ಅಂಕಿತವೆನಗೆಯಿಲ್ಲ
ಅಂಕೆಯಿಲ್ಲವೋ ನಿನ್ನ
ನೆನೆವುದಕೆ ಎಂದಿಗೂ ।
ಶಂಕೆಯು ಪಡೆವನಲ್ಲ
ವೆಂಕಟಾದ್ರಿವಾಸ । ಶ್ರೀ ।
ವೆಂಕಟೇಶನು ಮಾಮ
ಕುಲ ಸ್ವಾಮಿ ದೈವವೆಂದನುದಿನ ।
ಸಂಕಟಗಾಮಿಗಳ ಕಂಟಕವ
ಹರಿಸಿ । ಪದ ।
ಪಂಕಜಡಿ ಮಾನವ ನಿಲ್ಲಿಸೋ ।।
***
[11:01 AM, 5/20/2021] Suresh Hulikunti Rao: " ಶ್ರೀ ಉರಗಾದ್ರಿ - 2 "
" ನೀತ ಗುರುವಿನ ದರ್ಶನ "
ನೀತ ಗುರುಗಳ ದರ್ಶನಕ್ಕಾಗಿ ಹಂಬಲಿಸುತ್ತಿದ್ದ ಶ್ರೀ ಶ್ರೀನಿವಾಸರಾಯರನ್ನು " ಕರುವನ್ನರಸಿ ಹಸು ಬಂದಂತೆ " ಶ್ರೀ ತಂದೆ ಮುದ್ದುಮೋಹನದಾಸರು ದಯಾ ಮಾಡಿಸಿದರು.
ಅಂಕಿತೋಪದೆಶಕ್ಕೆ ಪರಿತಪಿಸುತ್ತಿರುವ ಶ್ರೀ ಶ್ರೀನಿವಾಸರಾಯರ ಕೀರ್ತನೆಗಳ ಪದ ಪಂಕ್ತಿಗಳನ್ನು ಸ್ಪಷ್ಟವಾಗಿ ಉಲ್ಲೇಖಿಸಿ...
" ನಿನಗೆ ಅಂಕಿತ ನೀಡಲೆಂದೇ ನಾವು ಬಂದಿದ್ದೇವೆ "
ಎಂದು ಶ್ರೀ ತಂದೆ ಮುದ್ದುಮೋಹನದಾಸರು ಹೇಳಿದಾಗ ಶ್ರೀ ಶ್ರೀನಿವಾಸರಾಯರಿಗೆ ಆಶ್ಚರ್ಯವಾಯಿತು.
" ಅಂಕಿತ ಪ್ರದಾನ "
ಗುಪ್ತವಾಗಿ ತಮ್ಮ ಕುಲದೈವನಾದ ಶ್ರೀನಿವಾಸನಲ್ಲಿ ಮಾಡಿಕೊಂಡ ಅಂತರಂಗದ ಅಪೇಕ್ಷೆಯನ್ನು ಅರಿತ ದಾಸರು ಅಪರೋಕ್ಷ ಜ್ಞಾನಿಗಳೆಂದು ಮನದಟ್ಟವಾಯಿತು.
ಶ್ರೀ ತಂದೆ ಮುದ್ದುಮೋಹನದಾಸರು ಶ್ರೀ ವಿಜಯರಾಯರ ಪರಮ ಪಾವನ ಪರಂಪರೆಯಲ್ಲಿ ಬಂದವರೆಂದು ತಿಳಿದ ಮೇಲಂತೂ ಅವರ ಶಂಕೆ ಪೂರ್ಣ ನಿವೃತ್ತಿಯಾಯಿತು.
ಶ್ರೀ ಶ್ರೀನಿವಾಸರಾಯರು ಶ್ರೀ ತಂದೆ ಮುದ್ದುಮೋಹನದಾಸರಿಗೆ ಶರಣಾದರು.
ಶ್ರೀ ಶ್ರೀನಿವಾಸರಾಯರ ಯೋಗ್ಯತೆಯನ್ನರಿತ ಶ್ರೀ ತಂದೆ ಮುದ್ದುಮೋಹನದಾಸರು ಅವರಿಗೆ " ಉರಗಾದ್ರಿವಾಸವಿಠ್ಠಲ " ಎಂಬ ಅಂಕಿತೋಪದೇಶವನ್ನು ನೀಡಿ ಪರಮಾನುಗ್ರಹ ಮಾಡಿದರು.
" ಅಂಕಿತ ಪದ " .....
ಉರಗಾದ್ರಿವಾಸವಿಠ್ಠಲ
ನೀನವನ ।
ಪರಮಾದರದಿ ಕಾಪಾಡೋ
ಹರಿಯೇ ।। ಪಲ್ಲವಿ ।।
ಗುರು ಕರುಣವನು
ಪಡೆದು ಹರಿ ವಾಯು ।
ಗುರುಗಳ ಸೇವೆಯನೆಯಿತ್ತು
ಕಾಪಾಡೋ ಹರಿಯೇ ।। ಅ. ಪ ।।
ಗುರು ಕರುಣವೇ ಪಡೆಯದ
ಸುರನರಾದ್ಯರಿಗೆ ।
ಹರಿ ಕರುಣ ದೊರೆಯ-
ದೆಂಬುದು ಸಿದ್ಧ ।
ನಿರುತ ದೃಢ ಮನವ
ನೀನಿತ್ತು ಕಾಪಾಡೋ ಹರಿಯೇ ।।
ಹರಿ ನಿನ್ನ ದಾಸರಾದಾಸ್ಯವನು
ಇತ್ತು ಸತತ ಕಾಪಾಡೋ ಹರಿಯೇ ।
ಪರಮ ಭಾಗವತರ
ಸಂಗವನುಯಿತ್ತು ।
ಪರಮ ಕೃಪೆಯಿಂದ
ರಕ್ಷಿಸೋ ಹರಿಯೇ ।। ಚರಣ ।।
ಪಂಚ ರೂಪಾತ್ಮಕನ
ಪಂಚ ರೂಪವನರುಹೀ ।
ಸಂಚಿತಾಗಮಿಗಳ ಹರಿಸಿ ।
ಮಿಂಚಿನಂದದಿ
ಪೊಳೆಯೋ ಹರಿಯೇ ।।
ಗುರು ಶಿಷ್ಯ ಬಿಂಬೈಕ್ಯ
ಚಿಂತನೆಯಿಂದ ।
ಹರಿ ವಾತು ಮತದಲ್ಲಿ ।
ನಿರುತ ಕಾಪಾಡೋ
ಹರಿಯೇ ।। ಚರಣ ।।
ಪರಮ ಭಾಗವತರನ್ನು
ಹಿಂದೆ ರಕ್ಷಿಸಿದಂತೆ ನೀನವನ ।
ನಿರುತ ಕಾಪಾಡೋ ಹರಿಯೇ ।
ಪರಮ ಭಾಗವತರ ತಂದೆ -
ಮುದ್ದುಮೋಹನವಿಠ್ಠಲ । ಯಿನ್ನಿ ।।
ವನಲಿ ಒಂದಂಶದಲ್ಲಿ
ಇದ್ದು ಹೃದಯಾಂಬರದಿ ।
ನಿನ್ನ ಬಿಂಬ ರೂಪವ
ತೋರಿ ಕಾಪಾಡೋ
ಹರಿಯೇ ।। ಚರಣ ।।
ಎಂದು ಶ್ರೀ ತಂದೆ ಮುದ್ದು ಮೋಹನದಾಸರು ಶ್ರೀ ಶ್ರೀನಿವಾಸರಾಯರಿಗೆ ಅಂಕಿತ ನೀಡುವ ಸಂದರ್ಭದಲ್ಲಿ ತಮ್ಮ ಬಿಂಬ ಮೂರ್ತಿಯಲ್ಲಿ ಮಾಡಿದ ಪ್ರಾರ್ಥನೆ ಹುಸಿಯಾಗಲಿಲ್ಲ.
ಶ್ರೀ ಉರಗಾದ್ರಿವಾಸವಿಠ್ಠಲರು ತಮ್ಮ ಗುರುಗಳಂತೆಯೇ ಹರಿದಾಸ ಪರಂಪರೆಯನ್ನು ಬೆಳೆಸಿದರು.
ಚಿತ್ರದುರ್ಗದಲ್ಲಿ....
" ಪರಮಪ್ರಿಯ ದಾಸ ಮಂಡಳಿ "
ಯನ್ನು ಸ್ಥಾಪಿಸಿ ನೂರಾರು ಸುಜೀವಿಗಳನ್ನು ಸಂಘಟಿಸಿದರು.
" ಗುರುಗಳ ಪತ್ರ "
ಒಮ್ಮೆ " ಪರಮಪ್ರಿಯ ಶ್ರೀ ತಂದೆ ಮುದ್ದುಮೋಹನದಾಸರು ತಮ್ಮ ಪ್ರಿಯ ಶಿಷ್ಯರಾದ ಶ್ರೀ ಉರಗಾದ್ರಿವಾಸ ವಿಠ್ಥಲರಿಗೆ ಬರೆದ ಪತ್ರದಲ್ಲಿ...
" ನಾನು ನಿಮ್ಮಲ್ಲಿ ಒಂದಂಶದಿಂದ ಇರುತ್ತೇನೆ.
ಈ ಮಾತು ಸತ್ಯ! ಸತ್ಯ! ಸತ್ಯ!
ಎಂದು ಮೂರು ಬಾರಿ " ಸತ್ಯ " ಎಂಬ ಪದವನ್ನು ಬಳಸಿದ್ದರಂತೆ.
ಸಾಧನ ಮಾರ್ಗದಲ್ಲಿ ಮುನ್ನಡೆಯ ಗುರು ಬಿಂಬ ತಮ್ಮಲ್ಲಿ ಒಂದಂಶದಿಂದ ಇರುವುದರಿಂದ ಪ್ರೌಢ ಶೈಲಿಯ ಗಹನವಾದ ತತ್ತ್ವಗಳುಳ್ಳ ಪದಗಳನ್ನು ರಚಿಸಿದರು .
" ಜೀವನ ಶೈಲಿ "
ಸಂಸಾರದಲ್ಲಿದ್ದರೂ ಸಂಸಾರಿಕ ಪಾಶಕ್ಕೆ ಸಿಲುಕದೇ; ಕೆಸರಿನಲ್ಲಿ ಅರಳಿದ ಕಮಲದ ಹಾಗೆ ತೊಟ್ಟು ಕಳಚಿದ ಹಣ್ಣಿನಂತೆ ಪರಿಪಕ್ವ ಸ್ಥಿತಿಯನ್ನು ತಲುಪಿ ಕಲಿಯುಗದಲ್ಲಿ ಹರಿದಾಸರು ಹೇಗಿರಬೇಕೆಂಬುದನ್ನು ತಮ್ಮ ಜೀವನದ ಮೂಲಕ ತೋರಿಸಿ ಕೊಟ್ಟಿದ್ದಾರೆ.
ಅನುಗ್ರಹಾಕಾಂಕ್ಷಿಗಳಾಗಿ ಬಂದ ಅನೇಕ ಸುಜೀವಿಗಳಿಗೆ ಅಂಕಿತೋಪದೇಶ ನೀಡಿ ಹರಿಯ ಕಿಂಕರನನ್ನಾಗಿ ಮಾಡಿದರು.
" ನಡಿದಂತೆ ನುಡಿ ನುಡಿದಂತೆ ನಡೆ "
ಎಂಬ ಸೂತ್ರವು ಶ್ರೀ ಉರಗಾದ್ರಿವಾಸವಿಠ್ಠಲರ ಬಾಳಿನ ಧ್ಯೇಯವಾಗಿತ್ತು.
" ತೃಪ್ತಿ ಜೀವನ "
ತಮ್ಮ ಜೀವನದುದ್ದಕ್ಕೂ ಯಾರಿಗೂ ಕೈಚಾಚದೆ; ಕೀರ್ತಿ ಮತ್ತು ಪ್ರತಿಷ್ಠೆಗಳ ಕಡೆಗೆ ಸ್ವಲ್ಪವೂ ಲಕ್ಷ್ಯ ಕೊಡದೆ; ಕೇವಲ ತೃಪ್ತಿ, ನೆಮ್ಮದಿ ಮತ್ತು ನೈಜ್ಯಾನುಸಂಧಾನಗಳಿಂದ 93 ವರ್ಷಗಳ ಧನ್ಯ ಹಾಗೂ ಪುಣ್ಯಕರವಾದ ತುಂಬು ಜೀವನವನ್ನು ನಡೆಸಿದ ಶ್ರೀ ಉರಗಾದ್ರಿವಿಠ್ಥಲರ ಬದುಕು ಎಲ್ಲರಿಗೂ ಆದರ್ಶದ ನಂದಾದೀಪವಾಗಿದೆ.
***
" ಶ್ರೀ ಉರಗಾದ್ರಿ - 3 "
" ಶಿಷ್ಯ ಸಂಪತ್ತು " ಶ್ರೀ ಉರಗಾದ್ರಿವಿಠ್ಠಲರಿಗೆ ಸುಮಾರು 80 ಸುಜೀವಿಗಳಿಗೆ ಅಂಕಿತೋಪದೇಶದೊಂದಿಗೆ ದಾಸ ದೀಕ್ಷೆಯನ್ನು ನೀಡಿ ಹರಿದಾಸ ಪಂಥವನ್ನು ಮುಂದುವೆರಿಸಿದ್ದರೆ.
ಅದರಲ್ಲಿ ಒಂದೆರಡು ಅಂಕಿತ ಪದಗಳನ್ನೂ ಇಲ್ಲಿ ಸಜ್ಜನರಿಗಾಗಿ ಉದಾಹರಿಸಲಾಗಿದೆ.
" ಶ್ರೀ ಮುದ್ದುಮೋಹನದಾಸರು ಶ್ರೀ ಆರ್ ರಾಮಚಂದ್ರರಾಯರಿಗೆ ( ಶ್ರೀ ತಂದೆ ವೆಂಕಟೇಶ ವಿಠ್ಠಲರಿಗೆ ) ನೀಡಿದ ಅಂಕಿತ ಪದ...
" ರಾಗ : ವಸಂತ ತಾಳ : ಆದಿ
ತಂದೆ ವೆಂಕಟೇಶನೆಂದೆ । ಪು ।
ರಂದರದಾಸರ ಪ್ರಿಯನಿವನೆಂದೆ ।। ಪಲ್ಲವಿ ।।
ಜನ್ಮ ಜನ್ಮಂಗಳಲಿ ತಂದೆ ।
ಎಂದೆಂದು ಭವ-
ಮೋಚನದೊಳು ತಂದೆ ।
ಇಂದು ವಿನಯದಿ ತಂದೆ ।।
ದಂದುಗೆ ಬಿಡಿಸೆಂದೇ ।
ನಿನ್ನ ಹೃನ್ಮ೦ದಿರಾ-
ರವಿಂದದೊಳು ನಿಂದೆ ।। ಚರಣ ।।
ಕಾಲ ಕಾಲದಿ ತಂದೆ ।
ವಾಕು ಮನಕೆ
ನಿಲುಕದಾಲಿಹೇ ತಂದೆ ।
ಬಾಲ್ಯ ಯೌವನ । ಜ ।।
ರಾಲಯಾದ್ಯವಸ್ಥೆಯ ತಂದೆ ।
ಕಾಲ ಕರ್ಮಗಳಲ್ಲಿ ಕಾರ್ಯ
ಪ್ರೇರಣೆಗೆಲ್ಲ ।। ಚರಣ ।।
ಚತುರ ರೂಪದಿ ನಿಂದೆ ।
ತಂದೆ ಚತುರ
ರೂಪದಿ ತಂದೆ ।
ನುತಿಪೆನೋ ಉರಗಾದ್ರಿ-
ವಾಸವಿಠ್ಠಲ । ಅ ।
ಪ್ರತಿಮಹಿಮಾ ಸೃಷ್ಠಿ
ಸ್ಥಿತಿ ಲಯಕೆಲ್ಲ ।। ಚರಣ ।।
**
" ಶ್ರೀ ಟಿ ಆರ್ ಶ್ರೀನಿವಾಸಮೂರ್ತಿ ( ಶ್ರೀ ಜಯಾಪತಿ ವಿಠ್ಠಲರಿಗೆ ) ನೀಡಿದ ಅಂಕಿತ ಪದ "
ಜಯಾಪತಿ ವಿಠಲಾ
ಕರುಣಿಸು ಎನ್ನಯ ।
ತೋಯಜ ಪದ
ದಾಸನೆಂದೆನಿಸೋ ।। ಪಲ್ಲವಿ ।।
ಕರಣ ಶುದ್ಧಿಯನಿತ್ತು
ಹರಿ ಗುರು ಸೇವೆಯ ।
ನಿರುತ ಕ್ರಿಯೆಗಳಲ್ಲಿ
ನಿರ್ಮಮತೆಯಿತ್ತು ।। ಚರಣ ।।
ಸ್ವೋಚಿತ ಕಾರ್ಯದಿ
ಸನ್ಮನವನಿತ್ತು ।
ಕೀಚಕಾರಿಪ್ರಿಯ ನಿನ್ನ
ಭಕ್ತನೆಂದೆನಿಸಯ್ಯ ।। ಚರಣ ।।
ಉರಗಾದ್ರಿ ವಾಸ ವಿಠ್ಠಲ
ನಿನ್ನವರ ।
ಪೊರೆದಂತೆ ಪೊರೆವುದು
ಶರಣರ ಮಂದಾರ ।। ಚರಣ ।।
**
" ಶ್ರೀ ಹೆಚ್ ಎಸ್ ಶ್ರೀನಿವಾಸಮೂರ್ತಿಗಳಿಗೆ ನೀಡಿದ ಅಂಕಿತ ಪದ "
ಶ್ರೀಕಾಂತ ವಿಠಲ ತವ -
ಸೇವಕನಾಡಿವನ ।
ನೀ ಕಾಪಾಡಿ ಸಲಹೋ
ಸನ್ಮತಿಯನಿತ್ತು ।। ಪಲ್ಲವಿ ।।
ವಾಕು ಲಾಲಿಸು ಈ ಬಾಲ
ನಿನ್ನವನೆಂದು । ನಿ ।
ರಾಕರಿಸದೆ ನಿನ್ನ ಭಕುತಿ ।
ಭಾಗ್ಯವನಿತ್ತು ।। ಅ ಪ ।।
ಆಯುರಾರೋಗ್ಯ
ಸದ್ವಿದ್ಯ । ವಾ ।
ಕ್ಕಾಯ ಮನದ ಧ್ಯಾನ
ವೃದ್ಧಿಗೈಸಿ ।
ವಾಯು ಮತಾಗಮ -
ತತ್ತ್ವದಾಯವ ತಿಳಿಸು ।
ಜೀಯ ನಿನ್ನ ಸೇವೆಯ-
ನಿತ್ತು ಕಾಯೋ ।। ಚರಣ ।।
ಮಾತಾ ಪಿತೃ ಭ್ರಾತೃ
ಬಂಧು ಭಾಗನಿಹರಲ್ಲಿಹ । ಶ್ರೀ ।
ಪತಿ ವಿಭೂತಿಗಳ ನೆನೆದು ।
ಜಿತ ಮನದಿ ಪ್ರೀತಿ -
ವಿಶ್ವಾಸದಲಿ ।
ಸತತ ಶ್ರೀ ಹರಿ ನಿನ್ನ
ಬಿಂಬ ಕ್ರಿಯೆಗಳನೆ
ಅರುಹೋ ।। ಚರಣ ।।
ಪರ ಭಾಷೆ ಪರ ಸೇವೆ
ಪರಮಾರ್ಥ ಪರವಾಗಿ ।
ಪರಿ ಪರಿಯಲಿ
ವೃದ್ಧಿಯಾಗುತ್ತ ।
ಸುರರೊಡೆಯ ಉರಗಾದ್ರಿ -
ವಾಸ ವಿಠಲಾಭಿನ್ನ ।
ಶ್ರೀಕಾಂತ ವಿಠಲನ
ಹೃತ್ಪಂಕಜದಿ
ತೋರೋ ।। ಚರಣ ।।
[ ಪರಮಪೂಜ್ಯ ಶ್ರೀ ಹೆಚ್ ಎಸ್ ಶ್ರೀನಿವಾಸಮೂರ್ತಿಯವರು - ಶ್ರೀಮತಿ ಸರಸ್ವತೀ ವಟ್ಟಂ ಅಕ್ಕನವರ ಮಾವಂದಿರು ]
***
" ಶ್ರೀ ಉರಗಾದ್ರಿ - 4 "
" ಕೀರ್ತನೆಗಳು "
ಶ್ರೀ ಉರಗಾದ್ರಿವಾಸ ವಿಠ್ಠಲರು 500ಕ್ಕೂ ಅಧಿಕ ಪದ ಪದ್ಯ ಉಗಾಭೋಗಗಳನ್ನು ರಚಿಸಿದ್ದರಂತೆ.
ಆದರೆ ದುರಾದೃಷ್ಟವೆಂದರೆ ಕೀರ್ತನೆಗಳಿದ್ದ ಪೆಟ್ಟಿಗೆಯೇ ನೀರಿನ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಯಿತಂತೆ.
ಆ ನಂತರ ಶ್ರೀ ದಾಸಾರ್ಯರು ಪುನಃ ಅವನ್ನು ಬರೆದಿಡುವ ಗೋಜಿಗೆ ಹೋಗಲಿಲ್ಲವಂತೆ.
ಶ್ರೀ ದಾಸಾರ್ಯರ ಧರ್ಮಪತ್ನಿ ಮತ್ತು ಮಕ್ಕಳು ಎಷ್ಟು ಸಂಗ್ರಹಿಸಿ ಬರೆದಿಟ್ಟಿರುತ್ತಾರೋ ಅವುಗಳು ಮಾತ್ರ ಲಭ್ಯವಾಗಿವೆಯೆಂದು ಬಲ್ಲವರ ನುಡಿ!!
" ಶ್ರೀ ಸಂಪೂರ್ಣ ವೆಂಕಟೇಶ ಕಲ್ಯಾಣ "
ಇನ್ನೆಂದಿಗೋ ನಿನ್ನ
ದರುಶನ ಶೇಷಾದ್ರಿವಾಸ ।। ಪಲ್ಲವಿ ।।
ಪನ್ನಂಗ ಶಯನ
ಪ್ರಸನ್ನರ ಪಾಲಿಪ ।। ಅ. ಪ ।।
( ಮೂರು ಚರಣಗಳ ದೀರ್ಘವಾದ ಕೃತಿ )
" ಶ್ರೀ ಹರಿಯ ವಿರಾಡ್ರೂಪ ವರ್ಣನೆ "
( 109 ನುಡಿಗಳುಳ್ಳ ದೀರ್ಘ ಕೃತಿ )
ಜಗದಾದಿ ವಂದ್ಯನಿಗೆ ಶರಣು ।। ಪಲ್ಲವಿ ।।
... ಪಾಹಿ ಶ್ರೀ ವೇಂಕಟೇಶಾತ್ಮಕ ಸಿರಿ ।
ಉರಗಾದ್ರಿವಾಸ ವಿಠ್ಠಲ
ತವ ಶರಣು ।
ಪಾಹಿಮಾಂ ಪಾಹಿ ಶ್ರೀ
ವೆಂಕಟೇಶಾಭಿನ್ನ ।
ಉರಗಾದ್ರಿವಾಸ ವಿಠ್ಠಲ
ತವ ಶರಣು ಶರಣೂ ।। ಚರಣ ।।
" ಶ್ರೀಮದ್ಭಾಗವತದ ಮಹಿಮೆ "
( 24 ನುಡಿಗಳ ಸುದೀರ್ಘ ಕೃತಿ )
ಶ್ರೀ ಭಾಗವತ ಮಹಿಮೆ
ಬಣ್ಣಿಸಲಳವೇ ।। ಪಲ್ಲವಿ ।।
ಈ ಭಾವ ಶರಧಿಗೆ ಸು-
ನಾವೆಯಂತಿಹುದಯ್ಯ ।। ಅ. ಪ ।।
.... ಯಾಮ ಯಾಮಕೆ ಈ
ಭಾಗವತವ ಪಠಿಸೆ ।
ಭಾಗವತ ಸಪ್ತಾಹದ
ಪುಣ್ಯಫಲವು ।
ಭಾವ ಭಕುತಿಯು
ಪುಟ್ಟಿ ಶ್ರೀ ವೆಂಕಟೇಶನ ।
ಪಾವನವಾದ ಶ್ರೀಪಾದವ
ಸೇರುವ ।। ಚರಣ ।।
ಶ್ರೀ ಭಾಗವತ ಮಹಿಮಾ ಸ್ತೋತ್ರ ಪದವನ್ನು ಶ್ರೀ ವಿಜಯರಾಯರಿಂದ ಸಪ್ನಾಂಕಿತ " ಶ್ರೀ ವೆಂಕಟೇಶ " ದಲ್ಲಿಯೇ ರಚನೆ ಮಾಡಿದ್ದಾರೆ.
" ಪ್ರಮೇಯ ರಹಸ್ಯ - 98 ನುಡಿಗಳ ಸುದೀರ್ಘ ಕೃತಿ
" ಇತರ ರಚನೆಗಳು "
ಹೃದಯಾಬ್ಜ ಚಕ್ರ ಮಂಡಲದ ವಿವರಗಳು
ಪಂಚ ಮುದ್ರೆಯಲ್ಲಿ ಭಗವದ್ರೂಪಗಳ ಚಿಂತನಾ ಕ್ರಮ
ಕೇಶವಾದಿ ಚತುರ್ವಿ೦ಶತಿ ನಾಮ ಸ್ತೋತ್ರ
ಸೃಷ್ಠಿ ಪ್ರಕರಣ
ಲಯ ಪ್ರಕರಣ
ಪ್ರಣವ ಪ್ರತಿಪಾದ್ಯ ರೂಪಗಳು
ಪಂಚಕೋಶ ಪ್ರಕರಣ
ಸುಳಾದಿಗಳು
ಶ್ರೀ ನೃಸಿಂಹ ಸ್ತೋತ್ರ
ಶ್ರೀ ದಶಾವತಾರ ಸ್ತುತಿ
ಮೊದಲಾದ 92 ಪದಗಳು ಮಾತ್ರ ಉಪಲಬ್ಧವಿದ್ದು ಶ್ರೀ ಉರಗಾದ್ರಿವಾಸ ವಿಠ್ಠಲರ ಅಪಾರ ಪಾಂಡಿತ್ಯದ ಜ್ಞಾನ ಭಂಡಾರ ಮಹಾಪೂರವೇ ಹರಿದು ಬಂದು ಹರಿದಾಸ ಸಾಹಿತ್ಯ ಭಂಡಾರವು ತುಂಬುವಂಥಾ ಉತ್ತಮ ಕೊಡುಗೆಯ ಕೃತಿಗಳಾಗಿವೆ.
ಅಂದು ಶ್ರೀ ದಾಸರು ಬರೆದ ಹಸ್ತ ಪ್ರತಿಗಳು ಪೆಟ್ಟಿಗೆ ಸಮೇತ ನೀರಿನ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗದಿರುತ್ತಿದ್ದರೆ ಇಂದು ಇನ್ನೂ ಅನೇಕ ಕೃತಿಗಳೊಂದಿಗೆ ಮಹಾಪೂರವೇ ಹರಿದಾಸ ಸಾಹಿತ್ಯ ಭಂಡಾರಕ್ಕೆ ಹರಿದು ಬರುತ್ತಿತ್ತು.
ಇದು ನಮ್ಮ ದುರಾದೃಷ್ಟವೇ ಸರಿ!
by ಆಚಾರ್ಯ ನಾಗರಾಜು ಹಾವೇರಿ
ಗುರು ವಿಜಯ ಪ್ರತಿಷ್ಠಾನ
****
ನಿರ್ಯಾಣ "
93 ವರ್ಷಗಳ [ 06.02.1871 to 30.11.1964 ] ತುಂಬು ಜೀವನದ ಸಾಫಲ್ಯವನ್ನು ಕಂಡ ಪೂತಾತ್ಮರಾದ ಶ್ರೀ ಉರಗಾದ್ರಿವಾಸ ವಿಠ್ಥಲರು...
ದಿನಾಂಕ : 30.11.1964
ಅಂದರೆ....
ಶ್ರೀ ಕ್ರೋಧಿ ನಾಮ ಸಂವತ್ಸರ ಕಾರ್ತೀಕ ಬಹುಳ ದ್ವಾದಶೀ ದಿನದಂದು ಅಪಾರ ಶಿಷ್ಯ ವರ್ಗವನ್ನು ತೊರೆದು ಹರಿಪಾದ ಸೇರಿದರು.
" ಶ್ರೀ ತಂದೆ ವೆಂಕಟೇಶ ವಿಠ್ಠಲರ ಮಾತಲ್ಲಿ... "
ಹರಿಯ ದರುಶನಕಾಗಿ
ತೆರಳಿ ಪೋದರು ನಮ್ಮ ।
ಉರಗಾದ್ರಿವಾಸನ ಪ್ರಿಯ
ದಾಸೋತ್ತಮರು ।। ಪಲ್ಲವಿ ।।
ಹರಿದಾಸ ಪೇಳಿಗೆಯೊಳು
ಪ್ರತಿಭಾನ್ವಿತ ।
ಸರಸ ಕಲಾಚಾರ್ಯ
ಯೋಗಿವರ್ಯ ।
ಧರೆಯೊಳು ತ್ರಿವನತಿ
ಪರಮಾಯುಶ್ಯಾವನೆಲ್ಲ ।
ಹರಿ ಸೇವೆಗೆಂದಿರಿಸಿ
ಛಾತ್ರರ ಕಣ್ದೆರಿಸಿ ।। ಚರಣ ।।
" ಉಪ ಸಂಹಾರ "
ಕರ್ನಾಟಕದ ಹರಿದಾಸರಿಗೆ " ವೆಂಕಟಾದ್ರಿ " ತವರೂರು.
ಎಲ್ಲಾ ಹರಿದಾಸರೂ ಶ್ರೀ ಶ್ರೀನಿವಾಸನನ್ನು ಮನಸಾರೆ ಕೊಂಡಾಡಿರುವರು.
ಶ್ರೀ ಶ್ರೀನಿವಾಸನ ಕರುಣಾಕಟಾಕ್ಷದಿಂದ ಹೊರಹೊಮ್ಮಿದ ಇವರ ಸಾಹಿತ್ಯ ಮೀಸಲಳಿಯದ ನಿತ್ಯ - ನೂತನ - ಸಜೀವ - ವಿಶ್ವ ಸಾಹಿತ್ಯ.
ಹರಿದಾಸರ ಕೃತಿಗಳು ಶ್ರುತಿ - ಸ್ಮೃತಿ - ಇತಿಹಾಸ - ಪುರಾಣಗಳಿಗೆ ವ್ಯಾಖ್ಯಾನಗಳಿಂತೆ ಇರುವವು.
ಸಾಮಾನ್ಯ ಜನರಿಗೆ ತಿಳಿಯಲಸಾಧ್ಯವಾದ ಅನೇಕ ವೇದಾಂತ ರಹಸ್ಯಗಳನ್ನು ಹರಿದಾಸರು ತಮ್ಮ ಕೃತಿಗಳಲ್ಲಿ ವಿಶದಪಡಿಸಿರುವರು.
ಹೀಗೆ ಎಲ್ಲಾ ಹರಿದಾಸರು ಸಮಾಜಕ್ಕೆ ತಮ್ಮದೇ ಆದ ಒಂದು ವಿಶಿಷ್ಟ ಕೊಡುಗೆಯನ್ನು ಕೊಟ್ಟಿರುವರು.
ಇಂಥಾ ಹರಿದಾಸರ ಸತ್ಪರಂಪರೆಗೆ ಸೇರಿದವರು ಇಂದಿನ ಕಥಾನಾಯಕರಾದ ಶ್ರೀ ಉರಗಾದ್ರಿವಾಸ ವಿಠಲರು.
ಶ್ರೀ ಉರಗಾದ್ರಿವಾಸ ವಿಠಲರ ಸಾಹಿತ್ಯ ಶ್ರೀ ಶ್ರೀನಿವಾಸನ ಅಡಿದಾವರೆಗಳನ್ನೇ ಆಶ್ರಯಿಸಿ ನಿಂತಿವೆ.
ಇವರ ಅಂಕಿತ ನಾಮ ಶ್ರೀ ಶ್ರೀನಿವಾಸನದೇ ಆಗಿದೆ.
ಜ್ಞಾನ ಸದ್ಭಕ್ತ್ಯಾದಿ ಶೀಲಂ
ಆನತಾಮರ ಪಾದಪಂ ।
ಧ್ಯಾನ ಗಾನ ಕಲಾವಿದಂ
ಶ್ರೀನಿವಾಸ ಗುರುಂ ಭಜೇ ।।
ಶ್ರೀ ಉರಗಾದ್ರಿವಾಸ ವಿಠ್ಠಲರ ಜೀವನ ಇತರರಿಗೆ ಮಾರ್ಗದರ್ಶನವಾಗಿತ್ತು.
ಶ್ರೀ ವಿಜಯರಾಯರ ಕಂಕಣಾಕಾರ ಸುಳಾದಿಯ ಅಂತರಾರ್ಥವನ್ನು ಸೂಕ್ಷ್ಮವಾಗಿ ಗ್ರಹಿಸಿ ಅದರಂತೆ ವಿದ್ಯುಕ್ತವಾಗಿ " ಹೃದಯಾಬ್ದಚಕ್ರ " ದ ಚಿಂತನೆ ಗೈಯುತ್ತಾ ಬಿಂಬೋಪಾಸನ ಕ್ರಮದಿಂದ ಅವರು ಆಚರಿಸುತ್ತಿದ್ದ ದೇವರ ಪೂಜಾ ವಿಧಾನವು ವಿಶಿಷ್ಟವಾಗಿತ್ತು.
ಆ ಮಹನೀಯರ ಅನುಗ್ರಹ ಸರ್ವದಾ ಎಲ್ಲರ ಮೇಲಿರಲಿ!!!!
by ಆಚಾರ್ಯ ನಾಗರಾಜು ಹಾವೇರಿ
ಗುರು ವಿಜಯ ಪ್ರತಿಷ್ಠಾನ
*****
YEAR 2021
ಶ್ರೀಂ ಶ್ರೀ ಕಂ ಕಪಿಲಾಯ ನಮಃ
ಕಾರ್ತೀಕ ಕೃಷ್ಣ ದಶಮಿ
ಜ್ಞಾನ ಸದ್ಭಕ್ತ್ಯಾದಿ ಶೀಲಂ
ಆನತಾಮರ ಪಾದಪಂ/
ಧ್ಯಾನ ಗಾನ ಕಲಾವಿದಂ
ಶ್ರೀನಿವಾಸ ಗುರುಮ್ ಭಜೇ//
ವೆಂಕಪ್ಪನ ಪರಮ ಆರಾಧಕರು, ಶ್ರೀಮದಾಚಾರ್ಯರ ತತ್ವಗಳನು ಅದ್ಭುತವಾದ ತಮ್ಮ ಕೃತಿಗಳ ಮುಖಾಂತರ ಸಜ್ಜನರಿಗೆ ನೀಡಿದವರು, ಶ್ರೀ ವಿಜಯದಾಸಾರ್ಯರಿಂದ ಸ್ವಪ್ನದಲ್ಲಿ ವೆಂಕಟೇಶ ಎನ್ನುವಂತಹಾ ಅಂಕಿತೋಪದೇಶವನ್ನು ಪಡೆದವರು, ನಂತರದಲಿ ತಮ್ಮನ್ನೇ ಹುಡುಕಿಕೊಂಡು ಬಂದವರಾದ ಶ್ರೀ ಪರಮಪ್ರಿಯ ಸುಬ್ಬರಾಯದಾಸರಿಂದ ಅಂಕಿತೋಪದೇಶದ ಅನುಗ್ರಹ ಪಡೆದವರು, ಶೂನ್ಯದ ಕುರಿತಾದ ವಿಶ್ಲೇಷಣೆ ಹಾಗೂ ಅನೇಕ ಮಹಾನ್ ಕೃತಿಗಳನ್ನು ರಚನೆ ಮಾಡಿದವರು, ಶ್ರೀ ತಂದೆವೆಂಕಟೇಶವಿಠಲರೇ ಮೊದಲು 80 ಜನರಿಗೆ ಅಂಕಿತೋಪದೇಶ ನೀಡಿ ಹರಿದಾಸ ಸಾಹಿತ್ಯದ ಝರಿಯನ್ನು ಸದಾ ಹರಿಯುವಂತೆ ಮಾಡಿದವರು, ಪರಮ ವೈರಾಗ್ಯ ಪುರುಷರು, ತಮ್ಮ ಇಡೀ ಜೀವನವನ್ನು ಶ್ರೇಷ್ಠ ಹರಿದಾಸರ ಕೃತಿಗಳ ಚಿಂತನೆಯಲ್ಲೇ ಕಳೆದವರು, ದಾಸ ಸಾಹಿತ್ಯದ ಸೇವೆಗೇ ತಮ್ಮ ಜೀವನವನ್ನು ಸಮರ್ಪಣೆ ಮಾಡಿದವರಾದ ಶ್ರೀ ಉರಗಾದ್ರಿವಾಸವಿಠಲರ ಆರಾಧನೆ ಇಂದಿನಿಂದ ತ್ರಯೋದಶಿ ವರೆಗೂ .. (ಆರಾಧನೆ ಕಾರ್ತೀಕ ಕೃಷ್ಣ ದ್ವಾದಶಿ) ಎಲ್ಲರ ಮನೆ, ಮನ ಮಂದಿರಗಳಲ್ಲಿ.
-Smt. Padma Sirish
ನಾದನೀರಾಜನದಿಂ ದಾಸಸುರಭಿ
***
Sri Uragadri Vittala Dasa | 1871-1964 | Srinivasa Rao | Uragadri Vittala | Sri Tande Muddu Mohana Vittala Dasa | Chitradurga | Karthika Bahula Dwadashi |
No comments:
Post a Comment