Harapanahalli Bheemavva
niryANa: 1902
Bhimavva was born in the village Narayanadevrakere of Hospet taluk in Bellary district in the year 1822 A.D. She lived in early part of 19th century. A childhood prodigy, her description of the Divine is graphic. Her voluminous work is published by Mysore University. After Helevanakatte Giriamma, she is the next well known haridasini. Mere chanting of bhImEsha krishNa gives inspiration.
Bheemavva, a staunch devotee of Sri Krishna, belonging to the Yajurveda branch of the Madhava sect. She was an important figure of the Haridasa movement of the Kannada country in the 19th century. Her devotional songs, couched in simple words, in the praise of Krishna carry a certain import of mystic devotion. No man with spiritual ambitions in life can fail to appreciate the force and appeal of these litanies. Bheemavva came from a very small town at Harapanahalli, which now belongs to Bellary District, Karnataka, India. She was born in the year 1823 to Brahmin parents Sri. Raghunath Acharya and Rangamma who belonged to the Sri. Raghavendra Swamy Matha Sampradaya.
- Rathi Kalyana,
- Subhadra Kalyana
- Muyyada Song,
- Sudhama Charithre
- Nala Charithre,
- Stuthimane Malike, etc.
**********
Harpanahalli Bhimavva | 1822-1903 | Bhimavva | Bhimesha Krishna (swapnalabda) | Sri Naradaru (swapna) | Harapanahalli | Pushya Shudda Triyodashi |
***
ಹರಪನಹಳ್ಳಿ ಭೀಮವ್ವನವರ stutih
ಗುರುವು ನಾರದರಿಂದ ಅನುಗ್ರಹ ಪಡೆದಿಹ
ಹರದಿ ಭೀಮವ್ವನ ನೆನೆಯೋಣ
ಪರಮ ಪಾವನಳು ಪರಮಾತ್ಮನ ಗುಣ
ಪರಿ ಪರಿಯಲಿ ಹೊಗಳಿದ||ಪಲ್ಲ||
ಸ್ತುತಿ ಮಣಿ ಮಾಲಿಕೆ,
ಮುಯ್ಯದ ಹಾಡು ರತಿಕಲ್ಯಾಣ ಸುಭದ್ರ ಕಲ್ಯಾಣ
ಶಕುಂತಳನ ಹಾಡು ದಾನವ್ರತದ ಹಾಡು ನಳ ಚರಿತ್ರೆ
108 ನಾರಾಯಣ
ಸಂಕ್ಷೇಪ ರಾಮಾಯಣ ಜಲಕ್ರೀಡಿ ಪಾರಿಜಾತ ಉಧ್ಧವಗೀತ
ಸಮುದ್ರ ಮಥನದ ಹಾಡು ಸೀರೆ ಸೆಳೆದಹಾಡು ಶ್ರಿನಿವಾಸ
ಕಲ್ಯಾಣ ಮೊದಲಾದ||೧||
ತೀರ್ಥಯಾತ್ರೆಗೆ ಪೋಗಿ ಗಂಗಾಸ್ನಾನವ ಮಾಡಿ,
ಸರಸ್ವತಿ ನದಿಯನ್ನ ಧ್ಯಾನಿಸಲು
ಸರಸ್ವತಿ ನದಿಯು ಗುಪ್ತಗಾಮಿನಿ ಕೆಂಪು ಸೀರೆಯು ಹಾಸಿದಂತೆ
ತರಂಗಗಳು ಬರಲು, ನಾವೆಗಳು ಹೋಗುತ್ತಿರಲು ಮತ್ತೆ
ಸ್ನೇಹಿತಳಾದ ಬೃಂದಾವನಿಗೆ ಕೂಡ ದರುಶನ ಕೋರಲು||೨||
ಪಾತ್ರರ ಸಂಗಡ ಯಾತ್ರೆ ಮಾಡಬೇಕೆನ್ನುತ ಜಗನ್ನಾಥದಾಸರು
ತಿಳಿಸಿ ದಂತೆ
ಭೀಮವ್ವನ ಜೊತೆ ಯಾತ್ರೆ ಮಾಡಿ ಬೃಂದಾವನಿಗೆ ಕೂಡ
ದರುಶನವಾಯಿತೆಂದು
ಶ್ರಧ್ಧೆಯಿಂದಲಿ ಬಂದು ಶುಧ್ಧಮನದಿ ಶುಧ್ಧಾತ:ಕ್ಕರಣದಿ ಬೇಡಲು
ಮಧ್ವೇಶಕೃಷ್ಣನು ಒಲಿಯುವನು ನಮ್ಮನ ಉಧ್ಧಾರ ಮಾಡುವನು||೩||
********
" ಶ್ರೀ ಭೀಮೇಶಕೃಷ್ಣ - 1 "
" ದಿನಾಂಕ : 25.01.2021 ಸೋಮವಾರ - ಶ್ರೀ ರಾಯರ ಅಂತರಂಗ ಭಕ್ತರಾದ ಮಾತೋಶ್ರೀ ಹರಪನಹಳ್ಳಿ ಭೀಮವ್ನವರ ಆರಾಧನಾ ಮಹೋತ್ಸವ "
" ಪ್ರಸ್ತಾವನೆ "
ರಾಗ : ಮೋಹನ ತಾಳ : ಆದಿ
ಯೆಷ್ಟು ಪೇಳಲಿ ವೆಂಕಟಗಿರಿಯ ।
ದೃಷ್ಟಿಗೆ ಬಹು ಸಿರಿಯ ।
ಬೆಟ್ಟವನೆ ಮನಸಿಟ್ಟೇರಲು ಬೇಡಿದ ।
ಇಷ್ಟಾರ್ಥಗಳ ಈಡಾಡುವ
ದೊರೆಯ ।। ಪಲ್ಲವಿ ।।
ಚಿತ್ರ ವಿಚಿತ್ರದ
ಮಹಾದ್ವಾರ ।
ಚಿನ್ನದ ಗೋಪುರ
ಸ್ವಚ್ಛವಾದ ಸ್ವಾಮಿ
ಪುಷ್ಕರಣಿಯ ತೀರ ।
ಸುತ್ತಲು ಪ್ರಾಕಾರ ।
ಹೆಚ್ಚಿನತೀ ವ್ರತವೆ
ಮನೋಹರ ।
ಮಾರುವ ವಿಸ್ತಾರಸ ।
ಚಿತ್ತಜನಯ್ಯನ
ಶೈಲವೆ ದೂರದಿಂದ ।
ಹತ್ತಿ ಬರುವುದೀತನ
ಪರಿವಾರ ।। ಚರಣ ।।
ರತ್ನ ಮಾಣಿಕ್ಯದ
ಕೇಯೂರ ।
ಕಟ್ಟಿದ ಉಡಿದಾರ ।
ಉಟ್ಟಿದ್ದ ನಿರಿಜರ
ಪೀತಾಂಬರ ।
ಕೌಸ್ತುಭ ಮಣಿಹಾರ ।
ಗಟ್ಟಿ ಕರ ಕಂಕಣ
ಕುಂಡಲಧರ ।
ಚತುರ್ಭುಜದಲಂಕಾರ ।
ವಕ್ಷ ಸ್ಥಳದಲ್ಲಿ
ಹೊಂದಿದ ಶ್ರೀ ಮಹಾ - ।
ಲಕ್ಷ್ಮೀದೇವಿಯರಿಂದೊಲಿವ
ಶೃಂಗಾರ ।। ಚರಣ ।।
ಆಕಾಶರಾಜನ ಕಿರೀಟ ।
ಚಿತ್ರವು ಬಹು ಮಾಟ ।
ಹಾಕಿದ್ದ ಹರಿ
ಕಡೆಗಣ್ಣಿನ ನೋಟ ।
ಭಕ್ತರ ಕುಣಿದಾಟ ।
ಬೇಕಾದ ಭಜಕರ
ಭವ ಪಡಿಪಾಟ ।
ಬಿಡಿಸುವ ಯಮ ಕಾಟ ।
ಕೋಟಿ ಜನರ
ಓಡ್ಯಾಟವೆ । ನ ।
ಮ್ಮ ಕಿರೀಟಿಯ
ಸಖ ಕೇಶವನ
ಮಂದಿರದೊಳ್ ।। ಚರಣ ।।
ತಪ್ಪುಗಾಣಿಕೆ ಬೇಡುವ ।
ಸರ್ಪ ಶೈಲದ ತಿಮ್ಮಪ್ಪ ।
ಕಪ್ಪವ ಕಾಸು
ಕವಡೆ ಮುಡುಪು ।
ಹಾಕದೆ ತಾನೊಪ್ಪ
ಜಪ್ಪಿಸಿ ನೋಡುವ
ಜನರ ತಪ್ಪ ।
ಹುಡುಕ್ಯಾಡುತಲಿಪ್ಪ
ಅಪ್ಪ ಮಹಿಮಾನಂತ
ಮೂರುತಿ । ತಾ ।
ನೊಪ್ಪಿದರೊಲಿದು
ಕೊಡುವ ಸಾರೂಪ್ಯ ।। ಚರಣ ।।
ದೇಶದೇಶದೊಳು
ಈತನ ವಾರುತೆಯು ।
ತುಂಬಿದ ಕೀರುತಿಯು ।
ಆಸೆಯ ದೈವ ಈ
ಮೂರುತಿಯು ।
ಫಲ್ಗುಣ ಸಾರಥಿಯು ।
ಲೇಸಾಗಿ ಜನರ
ನೋಡುವ ರೀತಿಯು ।
ಕರ್ಪೂರದಾರತಿಯು ।
ವಾಸವಾಗಿರುವ ಈ
ಶೇಷಾದ್ರಿಯಲಿ । ಭೀ ।
ಮೇಶ ಕೃಷ್ಣ ಶ್ರೀನಿವಾಸ
ಕೃಪಾಳು ।। ಚರಣ ।।
ಹರಪನಹಳ್ಳಿ ಭೀಮವ್ವ ಆಧುನಿಕ ಹರಿದಾಸ ಸಾಹಿತ್ಯದ ಅಪರೂಪದ ಸಹಜ ಕವಯಿತ್ರಿ.
ಅವರ ಕೃತಿಗಳು ಮತೀಯ ಜಡತ್ವವನ್ನು ನೀಗಿಕೊಂಡ ಸಹಜ ಕಾವ್ಯವೆನಿಸಿವೆ.
ಭೀಮವ್ವನವರ ಸಾಹಿತ್ಯವು ವರ್ಣನಾ ಪ್ರಧಾನವಾದ ಶೈಲಿ.
ಆಯ್ದ ಪ್ರತಿ ವಸ್ತುವಿನ ವಿವರವನ್ನೂ ಅತಿ ಉತ್ಸಾಹದಿಂದ ಬಣ್ಣಿಸುತ್ತಾರೆ.
ಇದು ದಾಸ ಸಾಹಿತ್ಯದ ಒಂದು ಮುಖ್ಯ ಲಕ್ಷಣ.
ಸಗುಣೋಪಾಸನೆಯಿಂದಾಗಿ ದಾಸ ಸಾಹಿತ್ಯಕ್ಕೆ ಈ ಬಗೆಯ ವೈವಿಧ್ಯ ಒದಗಿತು.
ಶ್ರೀಮದ್ಭಾಗವತದ ಶ್ರೀ ಕೃಷ್ಣ ಹರಿದಾಸರ ಆರಾಧ್ಯ ದೈವ.
ಅವನ ಬಾಲ ಲೀಲೆಗಳನ್ನು ವರ್ಣಿಸುವುದರಲ್ಲಿ ಹರಿದಾಸರ ಮನಸ್ಸು ತಲ್ಲೀನವಾಗಿತ್ತು.
ಭೀಮವ್ವನವರ ಪದಗಳು ಇದರಿಂದ ಹೊರತಲ್ಲ.
ಈ ದೃಷ್ಟಿಯಿಂದ ಹರಪನಹಳ್ಳಿ ಭೀಮವ್ವ ಆಧುನಿಕ ಹರಿದಾಸರಲ್ಲಿ ಅತ್ಯಂತ ಮಹತ್ವದ ಸ್ಥಾನವನ್ನು ಪಡೆದಿರುತ್ತಾರೆ.
ಅವರ ಕೃತಿಗಳಿಗೆ ಹಿನ್ನೆಲೆಯಾಗಿ ಅವರು ಬಾಳಿ ಬದುಕಿದ ಪರಿಸರ ಅವರ ಜೀವನದ ವಿವರಗಳು ಹೆಚ್ಚಿನ ಮಹತ್ವ ಪಡೆಯುತ್ತವೆ.
ಭೀಮವ್ವನವರ ಸಾಹಿತ್ಯ ಜೀವನೋನ್ಮುಖವಾದುದು.
ಜೀವನ ಪ್ರೇಮ ಅವರ ಪದಗಳಲ್ಲಿ ಉಕ್ಕಿ ಹರಿದಿವೆ.
ಎಲ್ಲಿಯೂ ಭೀಮವ್ವನವರು ಬದುಕನ್ನು ಧಿಕ್ಕರಿಸಿಲ್ಲ.
ಭೇಮವ್ವನವರ ಶ್ರೀ ಕೃಷ್ಣ ಭಕ್ತಿ ಬದುಕಿಗೆ ನಮ್ಮನ್ನು ತಂದು ಕಟ್ಟುವ ಶಕ್ತಿಯಾಗಿದೆ.
***
" ಶ್ರೀ ಭೀಮೇಶಕೃಷ್ಣ - 2 "
" ಹರಪನಹಳ್ಳಿ ಭೀಮವ್ವನವರ ಸಂಕ್ಷಿಪ್ತ ಮಾಹಿತಿ "
ರಾಗ : ಹಂಸಾನಂದೀ ತಾಳ : ಆದಿ
ಕಂಡು ಧನ್ಯನಾದೆ
ನಂದ ತನಯನ ಕಣ್ಣಾರೆ ।
ಕಂಡು ಧನ್ಯನಾದೆ
ನಂದ ತನಯನ ।
ಕಂಡು ಧನ್ಯನಾದೆ ದಣಿ-
ಯವೆನ್ನವೆರಡು ಕಂಗಳೀಗ ।
ತಿರುಗಿ ಪೊಗಲಾರೆ
ತಿಮ್ಮಲಾಪುರೀಶ
ದೊರೆಯ ಬಿಟ್ಟು ।। ಚರಣ ।।
ಸಾಲು ದೀವಿಗೆ ಸಣ್ಣ ನಾಮ
ಸರದ ಮಧ್ಯೆ ವೈಜಯಂತೀ ।
ಸೂರ್ಯನಂತೆ ಪೊಳೆವ ಮುದ್ದು
ಮುಖವು ಮಹಾದ್ವಾರದಲ್ಲೇ ।। ಚರಣ ।।
ಶಂಖ ಚಕ್ರ ಶ್ಯಾಮ ವರ್ಣ
ಅಂಕಿತವುಳ್ಳ ನಾಮಗಳಿಂದ ।
ಪಂಕಜಾಕ್ಷ ಪರಮಪುರುಷ
ವೆಂಕಟನೆಂಬೊ
ನಾಮಾಂಕಿತನಾದವನ ।। ಚರಣ ।।
ಆ ಮಹಾ ವೈಕುಂಠದಲ್ಲಾ-
ವಾಸವಾದ ನಮ್ಮ । ಕುಲ ।
ಸ್ವಾಮಿ ಯೆನಿಸಿಕೊಂಡ
ಭೀಮೇಶಕೃಷ್ಣನ
ದಯದಿಂದೀಗ ।। ಚರಣ ।।
ಹೆಸರು : ಕಮಲಾಕ್ಷಿ
ತಂದೆ : ಶ್ರೀ ರಘುನಾಥಾಚಾರ್ಯ
ತಾಯಿ : ರಾಘಮ್ಮ
ಹುಟ್ಟಿದ ಸ್ಥಳ : ನಾರಾಯಣದೇವರ ಕೆರೆ
ಕಾಲ : ಕ್ರಿ. ಶ. 1823 - 1903
" ವೈವಾಹಿಕ ಜೀವನ "
ಭೀಮವ್ವನವರ ವೈವಾಹಿಕ ಜೀವನ ಬಹಳ ಸಂಕ್ಷಿಪ್ತವಾದುದು.
11 ವರ್ಷಗಳ ಭೀಮವ್ವ, 45 ವರ್ಷಗಳ ಮುನಿಯಪ್ಪನಿಗೆ 3ನೆಯ ಹೆಂಡತಿಯಾದರು.
ಇಬ್ಬರು [ ಮಗಳ ಹೆಸರು : ಸುಬ್ಬಾಬಾಯಿ ಮತ್ತು ಮಗನ ಹೆಸರು : ಸೋಮರಾಯ ] ಮಕ್ಕಳನ್ನು ಪಡೆದರು.
36 ವರ್ಷದಲ್ಲಿ ಪತಿಯ ವಿಯೋಗ.
ಆನಂತರದ ಅವರ ಬದುಕು ಬ್ರಾಹ್ಮಣ ಸಮಾಜದ ತೀರಾ ಕಟ್ಟು ನಿಟ್ಟಾದ ಆಚರಣೆಗಳ ಚೌಕಟ್ಟಿನಲ್ಲಿ ಸಾಗಿತು.
ಆದರೆ ಅದು ಕೇವಲ ಹೂಬತ್ತಿ ಹೊಸೆಯುವ ಕಾರ್ಯದಲ್ಲಿ ಮುಗಿದು ಹೋಗಲಿಲ್ಲ.
ಹರಪನಹಳ್ಳಿ ಭೀಮ್ಮವ್ವನವರ ಅಂತರಂಗದಲ್ಲಿ ಅಡಗಿದ್ದ ದೈವಭಕ್ತಿ ಜಾಗೃತವಾಯ್ತು.
" ಶ್ರೀ ನಾರದ ಮಹರ್ಷಿಗಳ ಕಾರುಣ್ಯ "
ಶ್ರೀ ನಾರದ ಮಹರ್ಷಿಗಳ ಆದೇಶದಂತೆ ಕೃಷ್ಣ ಸರ್ಪವೊಂದು ತನ್ನ ನಾಲಿಗೆಯಿಂದ ಆಕೆಯ ನಾಲಿಗೆಯ ಮೇಲೆ ಮೂರು ಅಕ್ಷರಗಳನ್ನು ಬರೆದಂತೆ ಅವರು ಸ್ವಪ್ನದಲ್ಲಿ ಕಂಡರು.
ಭೀಮವ್ವನಲ್ಲಿ ಅಡಕವಾಗಿದ್ದ ಸಾಹಿತ್ಯದ ಪ್ರತಿಭೆಗೆ ಈ ಸ್ವಪ್ನ ಮೀಟುಗೋಲಾಯಿತು.
ಪದಗಳ ರಚನೆ ಪ್ರಾರಂಭವಾಯಿತು.
ಭೀಮವ್ವನಲ್ಲಿ ಸಹಜ ಕವಿತ್ವದ ಶಕ್ತಿ ಅದಮ್ಯವಾಗಿತ್ತು.
" ಸಮಕಾಲೀನ ಅಪರೋಕ್ಷಜ್ಞಾನಿಗಳು "
ಶ್ರೀ ಶೇಷದಾಸರು, ಶ್ರೀ ಇಭ್ರಾಮಪುರ ಕೃಷ್ಣಾಚಾರ್ಯರು, ಶ್ರೀ ಸುರಪುರದ ಆನಂದದಾಸರು, ಶ್ರೀ ಕೃಷ್ಣಾವಧೂತರು, ಶ್ರೀ ಗುರು ಜಗನ್ನಾಥದಾಸರು ಮತ್ತು ಶ್ರೀ ವರದೇಶದಾಸರು.
" ಅಂಕಿತ ಪ್ರಾಪ್ತಿ "
ಒಂದು ದಿನ ಸ್ವಪ್ನದಲ್ಲಿ ಒಬ್ಬ ಬ್ರಾಹ್ಮಣ ರೂಪದಲ್ಲಿ ಶ್ರೀ ಪುರಂದರದಾಸರು ಭೀಮವ್ವನವರಿಗೆ " ಭೀಮೇಶಕೃಷ್ಣ " ಎಂಬ ಸ್ವಪ್ನಾಂಕಿತವನ್ನು ಕೊಟ್ಟರು.
ಅಂಕಿತ ದೊರೆತ ತಕ್ಷಣ ಭೀಮವ್ವನವರಲ್ಲಿ ಹುದುಗಿದ್ದ ಕಾವ್ಯ ಸತ್ತ್ವ ನಿರರ್ಗಳವಾಗಿ ಹರಿಯತೂಡಗಿತು.
ಅಂದಿನಿಂದ ಭೀಮೇಶಕೃಷ್ಣಾ೦ಕಿತದಲ್ಲಿ ಪದಗಳನ್ನು ರಚಿಸಲು ಆರಂಭಿಸಿದರು.
ಪದಗಳಗಿಂತ ಕಥನ ಪರವಾದ ದೀರ್ಘ ಕೃತಿಗಳ ರಚನೆಯಿಂದ ಭೀಮವ್ವನವರ ಮನಸ್ಸು ಒಲಿಯಿತು.
ಜನ ಹೇಳುವಂತೆ " ಭೀಮವ್ವನವರು ಸ್ವಪ್ನದಲ್ಲಿ ಕಂಡ ದೃಶ್ಯಗಳನ್ನು " ಹಾಡುತ್ತಿದ್ದರಂತೆ.
ಅಕ್ಷರ ಜ್ಞಾನವಿಲ್ಲದ ಭೀಮವ್ವನವರಿಗೆ ಪುರಾಣ ಪ್ರವಚನ, ಹರಿಕಥೆ ಮತ್ತು ಭಜನೆಗಳಂಥ ಸಮೂಹ ಶ್ರವಣ ಮಾಧ್ಯಮವೇ ಜ್ಞಾನದ ಮೂಲಗಳೆನಿಸಿದವು.
ಭೀಮವ್ವನವರು ಭಗವಂತನ ಕಥೆಗಳನ್ನು ಭಕ್ತಿ ಶ್ರದ್ಧೆಗಳಿಂದ ಕೇಳುತ್ತಿದ್ದರು.
ಅವರಲ್ಲಿ ಭಕ್ತಿ ಮಾತ್ರ ಸ್ಥಾನ.
***
" ಶ್ರೀ ಭೀಮೇಶಕೃಷ್ಣ - 3 "
" ಭೀಮವ್ವನವರ ಸಾಹಿತ್ಯ "
ಮಧ್ವಮತದ ತತ್ತ್ವಗಳ ನಿರೂಪಣೆಯನ್ನು ಮಾಡಿದ ಅನೇಕ ಕೀರ್ತನೆಗಳನ್ನು ರಚಿಸಿದ್ದಾರೆ.
ಅವರ ಕೃತಿಗಳಲ್ಲಿ ಆ ಕಾಲದ ಬ್ರಾಹ್ಮಣ ವರ್ಗದ ಒಂದು ಸಾಂಸಾರಿಕ ಪರಿಸರದ ಶಾಸ್ತ್ರ ಸಂಪ್ರದಾಯಗಳ ರಿವಾಜುಗಳ ಸಾಮರ್ಥ್ಯ ಅಭಿವ್ಯಕ್ತಿಯಿದೆ.
ಓದು ಬರಹ ಬಾರದ ಕೇವಲ ಶ್ರವಣ ಮಾತ್ರದ ಜ್ಞಾನದಿಂದ ವಿಫುಲ ಸಾಹಿತ್ಯ ರಚನೆ ಮಾಡಿರುವ ಅವರ ಅಸಾಮಾನ್ಯ ಪ್ರತಿಭೆ, ಸ್ಮರಣ ಶಕ್ತಿ ಮೆಚ್ಚುಗಿಗೆ ಪಾತ್ರವಾಗಿದೆ.
ಭೀಮವ್ವನವರು ಧೀರ್ಘ ಕೃತಿಗಳನ್ನೂ ರಚಿಸಿದ್ದಾರೆ.
ಸುಭದ್ರಾ ಕಲ್ಯಾಣ ಪದ
ರತಿ ಕಲ್ಯಾಣ ಪದ
ಶಕುಂತಲ ದುಷ್ಯಂತ ಮಹಾರಾಜನ ಪದ
ನಳ ಚರಿತ್ರೆ ಪದ
ಪತಿ ದಾನ ಕೊಟ್ಟ ಪದ
ಶುಕ್ರವಾರ ಮತ್ತು ಶನಿವಾರದ ಪದ
ಶ್ರೀ ಶ್ರೀನಿವಾಸ ಕಲ್ಯಾಣ ಪದ
ಸುಧಾಮನ ಪದ
ಸ್ತುತಿ ಮಣಿ ಮಾಲಿಕೆ ಪದ
ಮುಯ್ಯದ ಪದ
ಹಸೆಗೆ ಕರೆಯುವ ಪದ
ಆರತಿಯ ಪದ
ಉಡಿ ತುಂಬುವ ಪದ
ಆಶೀರ್ವಾದ ಮಾಡುವ ಪದ
ಬಾಗಿಲು ಕಟ್ಟುವ ಪದ
ಉರುಟಣಿ ಮಾಡುವ ಪದ
ಶುಕ್ರವಾರ ಮತ್ತು ಶನಿವಾರದ ಪದ
ಮಂಗಳಗೌರೀ ಪದ
ಬುಧ - ಬೃಹಸ್ಪತಿ ಪದ
ಮಹಾಲಕ್ಷ್ಮೀ ಮತ್ತು ಶ್ರೀ ಕೃಷ್ಣ ದಾನ ವ್ರತದ ಪದ
ಶ್ರೀ ಹನುಮಂತದೇವರ ಚರಿತ್ರೆ ಪದ
" ಸಂಕ್ಷೇಪ ರಾಮಾಯಣ "
ರಾಗ : ನಾದನಾಮಕ್ರಿಯ ತಾಳ : ಆದಿ
ಕಂದನೆಂದೆನಿಸಿದ ಕೌಸಲ್ಯಾದೇವಿಗೆ ।
ರಾಮ ಯೆನಬಾರದೆ ।
ಇಂದಿರಾಪತಿ ರಾಮಚಂದ್ರಗೆ ।
ಶ್ರೀ ರಘುರಾಮ ಯೆನಬಾರದೆ ।। 1 ।।
ಶಿಶುವಾಗಿ ಅವತಾರ ಮಾಡಿದ ।
ದಶರಥನಲ್ಲಿ ರಾಮ ಯೆನಬಾರದೆ ।
ಋಷಿ ಯಜ್ಞ ಸಲಹಿ ರಕ್ಕಸರನೆ ।
ಕೊಂದ ಶ್ರೀ ರಾಮ ಯೆನಬಾರದೆ ।। 2 ।।
ನೀಟಾಗಿ ನೆನೆ ಭಾನುಕೋಟಿ ತೇಜ ।
ಶ್ರೀ ರಾಮ ಯೆನಬಾರದೆ ।
ಸಾತ್ವಿಕ ದೈವವೆ ತಾಟಕಾಂತಕ ।
ಶ್ರೀ ರಾಮ ಯೆನಬಾರದೆ ।। 3 ।।
ಪಾದ ನಖವು ಸೋಕಿ ।
ಪಾದ ನಾಶನವಾಗೆ ।
ಶ್ರೀಪತಿ ಕರುಣದಿ ಶಿಲೆಯು ।
ಸ್ತ್ರೀಯಾಗಲು ಶ್ರೀ ರಾಮ ಯೆನಬಾರದೆ ।। 4 ।।
ಸಕಲ ಸದ್ಗುಣ ಪೋಗಿ ಮಿಥಿಲಾ ।
ಪಟ್ಟಣದಲ್ಲಿ ಶ್ರೀ ರಾಮ ಯೆನಬಾರದೆ ।
ತ್ರಿಪುರ ಸಂಹಾರ ತ್ರಿನೇತ್ರನ ಧನುವೆತ್ತಿ ।
ಶ್ರೀ ರಾಮ ಯೆನಬಾರದೆ ।। 5 ।।
ಚೆಲ್ವ ಜಾನಕಿ ಮಲ್ಲಿಗೆಯ ।
ವನಮಾಲೆಯು ಶ್ರೀ ರಾಮ ಯೆನಬಾರದೆ ।
ವಲ್ಲಭಗ್ಹಾಕಲು ಫುಲ್ಲಲೋಚನೆ ।
ಶ್ರೀ ಸೀತಾರಾಮ ಯೆನಬಾರದೆ ।।। 6 ।।
ಮಂಗಳ ಮಹಿಮೆ ಸೀತಾಂಗನೆ ಕೊರಳಿಗೆ ।
ಶ್ರೀ ರಾಮ ಯೆನಬಾರದೆ ।
ಮಾಂಗಲ್ಯ ಬಂಧನ ಮಾಡಿದ ।
ಮಹಾತ್ಮನು ಶ್ರೀ ರಾಮ ಯೆನಬಾರದೆ ।। 7 ।।
ಜಗದೇಕ ಸುಂದರಿ ಜಾನಕಿಯ ಗೆದ್ದ ।
ಶ್ರೀ ರಾಮ ಯೆನಬಾರದೆ ।
ಜಗದೀಶ ಜನಕಗೆ ಜಾಮತನೆನಿಸಿದ ।
ಶ್ರೀ ರಾಮ ಯೆನಬಾರದೆ ।। 8 ।।
ಮುದ್ದು ಜಾನಕಿಯ ಕೂಡಿ ಅಯೋಧ್ಯಕೆ ।
ಬರುತಿರೆ ಶ್ರೀ ರಾಮ ಯೆನಬಾರದೆ ।
ಮಧ್ಯ ಮಾರ್ಗದಿ ಬನಿದ್ದನು ಭಾರ್ಗವ ।
ಶ್ರೀ ರಾಮ ಯೆನಬಾರದೆ ।। 9 ।।
ತನ್ನ ತಾನೇ ಗೆದ್ದು ಧನ್ಯನೆಂದೆನಿಸಿದಿ ।
ಶ್ರೀ ರಾಮ ಯೆನಬಾರದೆ ।
ಬ್ರಹ್ಮ ಶಂಕರರಿಂದಿನ್ನು ಉತ್ತಮನಾದ ।
ಶ್ರೀ ರಾಮ ಯೆನಬಾರದೆ ।। 10 ।।
ಪಟ್ಟಗಟ್ಟಲು ಪರಮೋತ್ಸವ ಕಾಲಕ್ಕೆ ।
ಶ್ರೀ ರಾಮ ಯೆನಬಾರದೆ ।
ದುಷ್ಟ ಕೈಕೆಯ ದುಷ್ಟೂರ ವಚನವ ।
ಕೇಳಿದ ಶ್ರೀ ರಾಮ ಯೆನಬಾರದೆ ।। 11 ।।
ಆ ಲಕ್ಷುಮಿಯ ಮಾತಲಕ್ಷ್ಯವ ಮಾಡದೆ ।
ಶ್ರೀ ರಾಮ ಯೆನಬಾರದೆ ।
ಲಕ್ಷ್ಮಣ ಲಕ್ಷ್ಮಿ ಕೂಡ್ವನವಾಸ ತಿರಿಗಿದ
ಶ್ರೀ ರಾಮ ಯೆನಬಾರದೆ ।। 12 ।।
ಸೋಸಿಲಿಂದಲಿ ಸತಿ ಆದೇನೆಂದಸುರೆಯ ।
ಶ್ರೀ ರಾಮ ಯೆನಬಾರದೆ ।
ನಾಶ ರಹಿತ ಕಿವಿ ನಾಸಿಕನಳಿಸಿದ ।ಶ್
ರೀ ರಾಮ ಯೆನಬಾರದೆ ।। 13 ।।
ದಂಡಕಾರಣ್ಯದಿ ಕಂಡು ಮಾರೀಚನ್ನ ।
ಶ್ರೀ ರಾಮ ಯೆನಬಾರದೆ ।
ಹಿಂದ್ಹೋಗೆ ರಾಘವ ಬಂದ ರಾವಣನಲ್ಲೆ ।
ಶ್ರೀ ರಾಮ ಯೆನಬಾರದೆ ।। 14 ।।
ಘಾತಕ ರಾವಣ ಜಗನ್ಮಾತೆಯನೊಯ್ಯಲು ।
ಶ್ರೀ ರಾಮ ಯೆನಬಾರದೆ ।
ಸೋತು ಜಟಾಯು ಯುದ್ಧವ ಮಾಡಿ । ತಾ ।
ಬೀಳಲು ಶ್ರೀ ರಾಮ ಯೆನಬಾರದೆ ।। 15 ।।
ಒಲಿದು ಸುಗ್ರೀವಗೆ ವಾಲೀ ವಧೆಯ ಮಾಡಿ ।
ಶ್ರೀ ರಾಮ ಯೆನಬಾರದೆ ।
ವಾನರಗಳ ಕೂಡಿ ವಾರಿಧಿ ಕಟ್ಟಿದ ।
ಶ್ರೀ ರಾಮ ಯೆನಬಾರದೆ ।। 16 ।।
ಲೋಕ ಮಾತೆಯ ಲಂಕಾನಾಥ । ತಾ ।
ಒಯ್ದಾಗ ಶ್ರೀ ರಾಮ ಯೆನಬಾರದೆ ।
ಸೀತಾಕೃತಿಯ ನಿಟ್ಟು ಅಶೋಕ ವನದೊಳು ।
ಶ್ರೀ ರಾಮ ಯೆನಬಾರದೆ ।। 17 ।।
ಮಂಡೋದರಿಯ ಗಂಡನ್ನ ದಶಶಿರಗಳು ।
ಶ್ರೀ ರಾಮ ಯೆನಬಾರದೆ ।
ಚೆಂಡನಾಡಿದ ಕೋದಂಡಪಾಣಿಯ ।
ಶ್ರೀ ರಾಮ ಯೆನಬಾರದೆ ।। 18 ।।
ಪ್ರೀತಿಂದ್ವಿಭೀಷಣಗೆ ಪಟ್ಟಗಟ್ಟಿದ ।
ಶ್ರೀ ರಾಮ ಯೆನಬಾರದೆ ।
ಸೀತಾ ಸಮೇತನಾಗಿ ಸಿಂಧು ದಾಟಿದ ।
ಶ್ರೀ ರಾಮ ಯೆನಬಾರದೆ ।। 19 ।।
ಆದಿ ಲಕ್ಷುಮಿ ಕೂಡಿ ಹೋದನಯೋಧ್ಯಕೆ ।
ಶ್ರೀ ರಾಮ ಯೆನಬಾರದೆ ।
ಶ್ರೀದೇವಿಯ ಸಹಿತ ಪಟ್ಟಣ ಹೊಕ್ಕ ।
ಪಟ್ಟಾಭಿರಾಮ ಯೆನಬಾರದೆ ।। 20 ।।
ಭರತ ಸುಮಿತ್ರ ಕೌಸಲ್ಯಗೆ ಸುಖವಿಟ್ಟ ।
ಶ್ರೀ ರಾಮ ಯೆನಬಾರದೆ ।
ಮುಕ್ತಿದಾಯಕ ಮುಂದೆ ಬಿಡದೆ ।
ಕಾಪಾಡುವ ಶ್ರೀ ರಾಮ ಯೆನಬಾರದೆ ।। 21 ।।
ಪತ್ನಿ ವಾರ್ತೆಯ ತಂದ । ಪವನ ।
ಸುತಗೆ ಒಲಿದ ಶ್ರೀ ರಾಮ ಯೆನಬಾರದೆ ।
ಸತ್ಯ ಲೋಕದ ಆಧಿಪತ್ಯವ ಕೊಟ್ಟ ।
ಶ್ರೀ ರಾಮ ಯೆನಬಾರದೆ ।। 22 ।।
ರಾಮ ರಾಮ ಯೆಂದು ಕರೆಯೆ ಭಕ್ತಿಯ ।
ನೋಡಿ ಶ್ರೀ ರಾಮ ಯೆನಬಾರದೆ ।
ಪ್ರೇಮದಿ ತನ್ನ ನಿಜ ಧಾಮವನು ।
ಕೊಡುವೋನು ಶ್ರೀ ರಾಮ ಯೆನಬಾರದೆ ।। 23 ।।
ಅರಸನಾಗಯೋಧ್ಯವನಾಳಿ ಯದು ಕುಲದಲಿ ।
ಶ್ರೀ ರಾಮ ಯೆನಬಾರದೆ ।
ಹರುಷದಿ ಭೀಮೇಶಕೃಷ್ಣನಾಗ್ಯೂದಿಸಿದ ।
ಶ್ರೀ ರಾಮ ಯೆನಬಾರದೆ ।। 24 ।।
ಮುಂತಾದವು. ವ್ರತಾಚರಣೆಯಲ್ಲಿ ಎತ್ತಿದ ಕೈ. ಸುಳಾದಿ ಮತ್ತು ಉಗಾಭೋಗಗಳನ್ನೂ ಭೀಮವ್ವನವರು ರಚಿಸಿದ್ದಾರೆ.
***
" ಶ್ರೀ ಭೀಮೇಶಕೃಷ್ಣ - 4 "
ಭೀಮವ್ವನವರು ಹೆಚ್ಚಾಗಿ ಸಾಂಪ್ರದಾಯಿಕ ಹಾಡುಗಳನ್ನು ರಚಿಸಿದ್ದಾರೆ.
ಭೀಮವ್ವನವರ ಸಾಹಿತ್ಯ ಗೇಯ ಪ್ರಧಾನವಾದುದು.
ಅವರ ಪದಗಳು ನಾದಮಯವಾಗಿವೆ.
ಆದಿ ಮತ್ತು ಅಂತ್ಯ ಪ್ರಾಸಗಳು ಸಹಜವಾಗಿಯೇ ಬರುತ್ತವೆ.
ನಿರರ್ಗಳವಾದ ಓಟದಲ್ಲಿ ಪದಗಳು ಮೂಡಿ ಬರುತ್ತವೆ.
ಅದಕ್ಕೆ ತಕ್ಕಂತೆ ಭೀಮವ್ವನವರು ವಿವಿಧ ಬಂಧಗಳನ್ನು ಒಳಸಿಕೊಂಡಿದ್ದಾರೆ.
ದ್ವಿಪದಿ, ತ್ರಿಪದಿ, ಕಂದ ಪದ್ಯಗಳು, ಬಳಕೆಯಾಗಿವೆ.
ಸುವ್ವಾಲಿಯ ರೂಪದಲ್ಲಿಯೂ ಕೃತಿಗಳನ್ನು ರಚಿಸಿದ್ದಾರೆ.
ಹರಪನಹಳ್ಳಿ ಭೀಮವ್ವನವರ ವದನಾರವಿಂದದಲ್ಲಿ ಪದ್ಯ ರೂಪದಲ್ಲಿ ಹೊರ ಹೊಮ್ಮಿದ ಸರಳ ಸುಂದರವಾದ.........
" ಶ್ರೀ ಶ್ರೀನಿವಾಸ ಕಲ್ಯಾಣ ".
ಅಪ್ಪ ವೆಂಕೋಬನ ನೇತ್ರದಲಿ । ನೋ ।
ಡಿ ಪವಿತ್ರಳಾದೆನೋ ಯಿಂದಿಗೆ ।
ತಪ್ಪುಗಳೆಲ್ಲ ನಿನಗರ್ಪಿಸುವೆ ನೀನೆನ್ನ ।
ಒಪ್ಪಿಕೊಳ್ಳಬೇಕೋ ತಿಮ್ಮಪ್ಪಾ
ಕರುಣಾನಿಧಿಯೇ ।। ಪಲ್ಲವಿ ।।
ಹೆದರದೆ ಭೃಗು ಋಷಿಯು ।
ಒದೆಯ ಪಾದಗಳಿಂದ ।
ಎದೆಯ ಮೇಲಿರುವ ಲಕ್ಷ್ಮೀ ।
ಕದನ ಮಾಡುತವೆ
ಕೊಲ್ಲಾಪುರಕೆ ನಡೆತರಲು ।।
ಒದಗಿ ವೈಕುಂಠ ಬಿಟ್ಟು ।
ಯದುನಾಥ ಯಾರಿಲ್ಲದಂತೆ
ಗುಡ್ಡವ ಸೇರಿ ।
ಇದು ನಿನಗೆ ಸದನಾಯಿತೋ
ದೇವಾ ।। ಚರಣ ।।
ಹುತ್ತದೊಳಗಡಗಿ ನೀ
ಗುಪ್ತದಿಂದಿರುತಿರಲು ।
ಉತ್ತಮ ಗೋವು ಬಂದು ।
ನಿತ್ಯದಲಿ ಕ್ಷೀರವನು
ಕರೆಯೆ ಗೋವಳನಿಂದೆ ।।
ನೆತ್ತಿಯ ನೊಡೆದುಕೊಂಡು ।
ಸಿಟ್ಟಿನಿನ್ದಲಿ ಚೋಳ-
ರಾಯಗೆ ಶಾಪವನು ।
ಕೊಟ್ಟ ಕಿರೀಟವನು ಇಟ್ಟು
ಮೆರೆಯುವೆ ದೇವಾ ।। ಚರಣ ।।
ಮಾರಮಣನೆ ನಿನ್ನ
ಗಾಯದೌಷಧಕ್ಕೋಗಿ ।
ಭೂರಮಣನ್ವರಾಹನಿಂದ ।
ನೂರು ಪಾದ ಭೂಮಿ
ಕೊಟ್ಟರೆ । ಸಾಕೆಂದು ।।
ಪಾಯದಿಂದದ್ವ್ಯಾಪಿಸಿ ।
ತಾಯಿ ಬಕುಳಾದೇವಿಯಿಂದ । ಪೂ ।
ಜೆಯಗೊಮ್ಬೋ ಶ್ರೀಯರಸು
ನಿನಗೆ ಸರಿಯೇ ದೇವಾ ।। ಚರಣ ।।
ನಾಟಕಧಾರಿ ಕಿರಾತ
ರೂಪವ ಧರಿಸಿ ।
ಬೇಟೆಗೆನುತಲಿ ಪೋಗಲು ।
ತೋಟದಲಿ ಚೆಲ್ವ
ಪದ್ಮಾವತಿಯ ಕಡೆಗಣ್ಣ ।।
ನೋಟದಿ ಮನಸೋಲಿಸಿ ।
ಬೂಟಕತನದಿ
ಜಗಳಾಟವನ್ನೇ ಮಾಡಿ ।
ಪಾಟುಬಟ್ಟು ಕಲ್ಲಲೇಟು
ತಿಂದೆಯೋ ದೇವಾ ।। ಚರಣ ।।
ಗದಗದನೆ ನಡುಗುತಲಿ
ಕುದರೆಯನು ಕಳಕೊಂಡು ।
ಪದ್ಮಾವತಿ ವಾರ್ತೆಯನ್ನು । ಬಳಿಯ ।
ಲಿದ್ದ ಬಕುಳ ಮಾಲಿಕೆಗೆ
ಬೋಧಿಸಿ । ಕಲಿ ।।
ಸಿದಾಕಾಶನಲ್ಲಿ ಚದುರ ।
ಮಾತಿನ ಚಪಲ
ಕೊರವಂಜಿ ನೀನಾಗಿ ।
ಹೇಳಲು ಎಲ್ಲಿ ಕಲಿತೆಯೋ
ಮಹಾದೇವಾ ।। ಚರಣ ।।
ಬಂಧು ಬಳಗವ ಕೋಡಿ
ಭಾರೀ ಸಾಲವ ।
ಮಾಡಿಕೊಂಡು ಕರವೀರದಿಂದೆ ।
ಅಂಡಲೆದು ಕರೆಸಿ
ಕಾಣುತಲಿ । ಲಕ್ಷ್ಮೀಯನಪ್ಪಿ ।।
ಕೊಂಡು ಪರಮ್ಹರುಷದಿಂದ ।
ಮಂದಗಮನೆಯೆ ನಿನ್ನ
ಮಾತು ಲಾಲಿಸಿ ।
ಮಾಡಿಕೊಂಡೆ ಪದ್ಮಾವತಿಯ
ಅಂದೆಯಾ ಎಲೆ ದೇವಾ ।। ಚರಣ ।।
ಆಕಾಶರಾಜ ಅನೇಕ
ಹರುಷದಿ ಮಾಡಿ ।
ತಾ ಕನ್ಯಾದಾನವನ್ನು ।
ಹಾಕಿದ ರತ್ನ ಮಾಣಿಕ್ಯ
ಕಿರೀಟವನು ।।
ಬೇಕಾದಭರಣ ಭಾಗ್ಯ ।
ಸಾಕಾಗದೇನೋ ಬಡವರ
ಕಾಡಿ ಬೇಡುವುದು ।
ಶ್ರೀಕಾಂತ ನಿನಗೆ
ಸರಿಯೇ ದೇವಾ ।। ಚರಣ ।।
ಹೇಮ ಗೋಪರದಿ
ವಿಮಾನ ಶ್ರೀನಿವಾಸ ।
ದೇವರನು ನೋಡಿ ನಮಿಸಿ ।
ಕಾಮಿಸಿ ಕಂಡೆ
ಹೊನ್ನೊಸ್ತಿಲು ಗರುಡ ।।
ಗಂಬದ ಸುತ್ತ ಪ್ರಾಕಾರವೋ ।
ಸ್ವಾಮಿ ಪುಷ್ಕರಣಿಯಲ್ಲಿ
ಸ್ನಾನ ಪಾನವ ಮಾಡಿ ।
ನೋಡಿದೆನೋ ನಿನ್ನ
ಭಕುತರ ದೇವಾ ।। ಚರಣ ।।
ಪನ್ನಗಾದ್ರಿ ವೆಂಕಟನ್ನ
ರಥ ಶೃಂಗಾರ ।
ವರ್ಣಿಸಲಳವೆ ನಮಗೆ ।
ಕಣ್ಣಾರೆ ಕಂಡೆ
ಗರುಡೋತ್ಸವದಲಂಕಾರ ।।
ಇನ್ನೆಲ್ಲೂ ಕಾಣೆ ಜಗದಿ ।
ಅನ್ನಪೂರ್ಣೆಯಾ ನೋಡೆ
ಅಧಿಕ ಗಂಟೆಯ ನಾದ ।
ಎನ್ನ ಕಿವಿಗಾನಂದವೋ
ದೇವಾ ।। ಚರಣ ।।
ಪಾದದಲ್ಲೊಪ್ಪೋ
ಪಾಗಡಾರಳಿ ಕಿರಿಗೆಜ್ಜೆ ।
ಮೇಲಲವೋ ಪೀತಾಂಬರ ।
ನೀಲ ಮಾಣಿಕದ
ಉಡಿದಾರವೋ ವೈಜಯಂತೀ ।।
ಮಾಲೆ ಶ್ರೀವತ್ಸದಾ ಹಾರ ।
ಮೇಲಾದ ಸಾರಿಗೆ ಸರ
ಪದಕವೋ । ಕಮಲ ।
ದಳಾಯತಾಕ್ಷನ
ನೋಡಿದೆ ದೇವಾ ।। ಚರಣ ।।
ಕರಗಳಲ್ಲಿಟ್ಟು ಕಂಕಣ
ಕಡಗ ಭುಜಕೀರ್ತಿ ।
ವರ ಶಂಖ ಚಕ್ರಧಾರಿ ।
ಗಿರಿಯೇ ಭೂವೈಕುಂಠವೆಂದು
ತೋರುತ ನಿಂತ ।।
ಶಿರದಿ ಕಿರೀಟ ಧರಿಸಿ ।
ಬಿಳಿಯ ತ್ರಿನಾಮ
ಭೀಮೇಶಕೃಷ್ಣನ ಮುಖದಿ ।
ಹೊಳೆವ ಮೂರ್ತಿಯ
ನೋಡಿ ಹೇ ದೇವಾ ।। ಚರಣ ।।
" ವಾಯುದೇವರ ಅವತಾರತ್ರಯ ಸ್ತೋತ್ರ ಪದ "
ಕೊಡು ಕೊಡು ವರವ
ಕಿಂಕರ ನಾನಲ್ಲೆ ।
ಪಿಡಿ ಕೈ ಹೂವಿನ್ಹಡಗಲಿ
ಹನುಮಂತರಾಯಾ ।। ಪಲ್ಲವಿ ।।
ನೂರುಗಾವುದ ಶರಧಿಯ
ದಾಟಿ ಲಂಕೆ ।
ಊರು ಸುಟ್ಟು ಬಂದ
ಧೀರ ನೀನಲ್ಲೆ ।। ಚರಣ ।।
ಕ್ರೂರ ಕೌರವರ ಮಡುಹಿ
ಕುರುಪತಿ ರಾಜ್ಯ ।
ರಾಯ ಧರ್ಮಗೆ ಪಟ್ಟ
ಕಟ್ಟಿದೆಯೆಲ್ಲ ।। ಚರಣ ।।
ಮಾಯಾವಾದಿಗಳ ಮರ್ಧಿಸಿ
ಮಧ್ವಮುನಿಯೇ ।
ಭೀಮೇಶಕೃಷ್ಣನಧಿಕೆಂಬೋ
ಬಿರುದೆತ್ತಿದ್ಯಲ್ಲ ।। ಚರಣ ।।
" ಭೀಮವ್ವನವರ ಕಣ್ಣಲ್ಲಿ ಶ್ರೀ ಮಂತ್ರಾಲಯ ಪ್ರಭುಗಳು "
ನೋಡಿರಿ ರಾಘವೇಂದ್ರರ ।
ಮಾಡಿರಿ ನಮಸ್ಕಾರ ।
ಬೇಡಿದ ಇಷ್ಟಾವರ ।
ನೀಡುವ ನಮ್ಮ ಯತಿವರ ।। ಪಲ್ಲವಿ ।।
ಮಂತ್ರಾಲಯದಿ ನಿಂತಿಹ ।
ಚಿಂತೆಗಳ ಪರಿಹರಿಸುವ ।
ಕಂತುಪಿತನನಂತ ಗುಣ । ತ ।
ನ್ನಂತರಂಗದಿ ಸ್ತುತಿಸುವ ।।
ಇಂಥಾ ಯತಿಗಳ ಕಾಣೆ । ಹರಿಯೇ ।
ಕಾಂತ ಭಕ್ತರೆನಿಸಿಕೊಂಬುವ ।
ಮಂತ್ರಾಕ್ಷತೆ ಫಲ ನೀಡಿ ।
ಸಂತಾನ ಸಂಪತ್ತು
ಕೊಡುವರ ।। ಚರಣ ।।
ಭೂತ ಪ್ರೇತ ಭಯಗಳ ।
ವಾತ ಪಿತ್ತ ವ್ಯಾಧಿಗಳ ।
ಸೇತು ಕುಷ್ಟ ರೋಗಗಳ ।
ಪಾತಕಿಯರ ಪಾಪಗಳ ।।
ಪ್ರೀತಿಲಿಂದ ಕಳೆವರೋ ।
ಪ್ರಖ್ಯಾತರಾಗಿ ಬೆಳೆವರೋ ।
ಭೂತಳದಿ ಸನ್ನಿಹಿತರಾದ ।
ಸೀತಾಪತಿ ನಿಜಮಾತ-
ರೆನಿಸೋರೋ ।। ಚರಣ ।।
ಭಜಿಸೆ ಭಕ್ತರ ನೋಡುವ ।
ಸದನಕೆ ಬಂದು ಕೂಡುವ ।
ಒದಗಿದಾಪತ್ತು ದೂಡುವ ।
ಮುದದಿ ತಾ ದಯ ಮಾಡುವಾ ।।
ಅಜನನಯ್ಯನ ಕೊಂಡಾಡುತ ।
ತುಂಗಾ ನದಿಯ ತೀರ ವಾಸವಾಗಿ ।
ಹೃದಯದೊಳು ಭೀಮೇಶಕೃಷ್ಣನ ।
ಪದವ ಭಜಿಸಿ ಪಡೆವರಾನಂದವ ।। ಚರಣ ।।
" ನಿರ್ಯಾಣ "
ಕ್ರಿ ಶ 1903 ರ ಪುಷ್ಯ ಶುದ್ಧ ದ್ವಾದಶೀ ದಿನ ವೈಕುಂಠಕ್ಕೆ ಪ್ರಯಾಣ ಬೆಳೆಸಿದರು.
" ಉಪಸಂಹಾರ "
ಭೀಮವ್ವನವರ ಕೃತಿಗಳಿಗೆ ಪುರಾಣ ಪ್ರಪಂಚವೇ ಆಧಾರಭೂತವಾಗಿದೆ.
ಆದರೆ ಭೀಮವ್ವನವರು ಪುರಾಣದ ಜಗತ್ತನ್ನು ಲೌಕಿಕದ ನೆಲೆಗೆ ಇಳಿಸುತ್ತಾರೆ.
ಕಥೆಗಳನ್ನೂ, ಕಥೆಗಳಲ್ಲಿ ಬರುವ ಪಾತ್ರಗಳನ್ನು ಮಾನವೀಯವಾಗಿಸುತ್ತಾರೆ.
ಭೀಮವ್ವನವರ ಉಪಲಬ್ಧ ಸಾಹಿತ್ಯದಲ್ಲಿ ತಾತ್ವಿಕ ರಚನೆಗಳು ಬಹಳ ಕಡಿಮೆ.
ದ್ವೈತ ಸಿದ್ಧಾಂತದ ತತ್ತ್ವಗಳನ್ನು ಸುವ್ವಾಲಿಯ ಬಂಧದಲ್ಲಿ ನಿರೂಪಿಸಿದ್ದಾರೆ.
ಸಾಂಸಾರಿಕ ವಲಯದಲ್ಲಿದ್ದು, ನಿರಕ್ಷರಸ್ಥರಾದ ಭೀಮವ್ವನವರು ಅತ್ಯಮೂಲ್ಯವಾದ ಸಾಹಿತ್ಯವನ್ನು ಸೃಷ್ಟಿಸಿದ್ದಾರೆ.
ಭೀಮವ್ವನವರ ಸಾಹಿತ್ಯಗಳು ಜನಪ್ರಿಯವಾಗಿವೆ.
ಭೀಮವ್ವನವರ ಸಾಹಿತ್ಯ ಆಧ್ಯಾತ್ಮಿಕ ದೃಷ್ಟಿಯಿಂದ ಜನ ಮಾನಸದಲ್ಲಿ ಸ್ಥಿರವಾದ ಸ್ಥಾನವನ್ನು ಪಡೆದಿದೆ.
by ಆಚಾರ್ಯ ನಾಗರಾಜು ಹಾವೇರಿ
ಗುರು ವಿಜಯ ಪ್ರತಿಷ್ಠಾನ
****
No comments:
Post a Comment