Monday 1 July 2019

gurujagannatha dasaru kautalam 1918 ashvija bahula pratipada ಗುರುಜಗನ್ನಾಥ ದಾಸರು






AshvIna bahuLa pratipath is the ArAdhane of shri guru jagannAtha dAsaru.
ಮಾರ್ಗಶಿರ ಶುದ್ಧ ಪಂಚಮಿ. - ಕೋಶಿಗಿ ಮುತ್ಯಾರವರು ಅರ್ಥಾತ್  ಶ್ರೀ ಗುರುಜಗನ್ನಾಥದಾಸಾರ್ಯರು ಅವತಾರ ಮಾಡಿದ ಪವಿತ್ರವಾದದಿನ.

info from sumadhwaseva.com--->


Sri Gurujagannatha Dasaru

Period: 1837 – 1918
Original Name: SwamirAyaAchAryaru
Ankita: guru jagannAtha viTTala
Parents: Venkatagiriyacharya & Seetamma
upadEsha gurugaLu: shri krishNadAsaru whose ankita was petta tande gopAla viTTala
shishyarUs: shri varadEsha viTTala dAsaru, shri srInivAsa viTTala dAsaru, shri Ananda viTTala dAsaru


ಗುರುಪೂರ್ವ ಜಗನ್ನಾಥದಾಸಸ್ಯಾಮಿತ ತೇಜಸ: |
ತಸ್ಯಪಾದಾಬ್ಜ ಸಂಭೂತಾ: ರಜಾಂಸಿ ಶಿರಸಾವಹೇ |
गुरुपूर्व जगन्नाथदासस्यामित तेजस: ।
तस्यपादाब्ज संभूता: रजांसि शिरसावहे ।
gurupoorva jagannaathadaasasyaamita tEjasa: |

tasyapaadaabja sambhootaa: rajaamsi shirasaavahE |

Sri Guru Jagannatha Dasaru has written many devaranamaas, stotraas, some of them being Sri Venkatesha Stavaraja, Sri Lakshmi Hrudaya, Sri Prahladaraja Charite, etc…
  • Contemporaries –
  • Sri Satyadheera Tirtharu, Sri Satyajnaana Tirtharu, of Uttaradimutt, 
  • Sri Vidyaratnakara Tirtharu, of Sri Vyasaraja Mutt,
  • Sri Raghudantha Tirtharu of Sri Koodli Akshobhya Tirtha Mutt, 
  • Sri Vairagyanidhi Tirtharu, Sri Sujnananidhi Tirtharu, Sri SuguNanidhi Tirtharu, Sri Sudhinidhi Tirtharu, of Sripadaraja Mutt     
  • Sri Sugunendra Tirtharu, Sri Suprajnendra Tirtharu, Sri Sukruteendra Tirtharu of Rayara Mutt
  • Sri Modalakallu Sheshadaasaru, Sri Guru Pranesha Daasaru

know more


CLICK BELOW FOR KEERTHANE –    GURU JAGANNAATHA DASARA RACHANEGALU

Click for  – Sri Venkatesha Stavaraja (“ಶ್ರೀ ವೆಂಕಟೇಶಸ್ತವರಾಜ”)

**********

info from dvaita.org--->


Sri Guru Jagananatha Dasaru (1837-1918)
Sri Guru Jagannathadasa was born in the village of Kesigi in Kurnool district in 1836 A.D.
He was blessed with the Ankita of Guru Jagannatha Vittala by Gopala dasa in the dream.
He wrote nearly 30 books on philosophy like 'brahma sUtra BhAshya ADhyAtmikartha', 'Para Para tattva dIpika etc', along with 40 stotras in sanskrit and a number of songs in kannaDa. He also wrote commentaries on Harikathamruthasara in kannaDa and Sanskrit.

He laid down his mortal body in Kavutala of Adoni taluk in the year 1918 A.D." 

************

info from FB madhwanet--->

shri guru jagannAtha dAsaru was born in kOsagi. He was a great devotee of rAyaru. kauthALa in kurnool district was his tapO bhUmi. KouthALa is just 45km far from manthrAlaya.


He had installed prANa dEvaru and rAyara brindAvana at kauthALa. He has composed several dEvaranAmAs and stOtrAs. Some of them are:

1. Sri Venkatesha Stavaraja
2. Sri Lakshmi Hrudaya stOtra
3. Sri PrahlAdarAja Charite
4. brahma sUtra bhAshya ADhyAtmikartha
5. Para Para tatva dIpika

He had several shishyarUs including varadEsha viTTala dAsaru. 


shri appaNAchAryaru, the first chief of TTD's Dasa Sahitya Project, is his vamshastaru. He has taken great effort to renovate the premises that houses rAyara brindAvana and prANa dEvaru at KauthALa. He has also constructed the following.

1. harikathAmrutasAra mandira
2. varadEsha viTTala granthAlaya
3. varada viTTala mandira

shri guru jagannAtha dAsa guruvantargata, shri rAghavEndra tIrtha gurvantargata, bhArati ramaNa mukhyaprANAntargata, sItApate shri rAma dEvara pAdAravindakke gOvinda, gOvinda... 


shri krishNArpaNamastu....


*****

info from kannadasiri.in

ಶ್ರೀಗುರುಜಗನ್ನಾಥದಾಸರು
ಕನ್ನಡ ಸಾಹಿತ್ಯೇತಿಹಾಸದಲ್ಲಿ ಹರಿದಾಸÀ ಸಾಹಿತ್ಯವು ತನ್ನದೇ ಆದ ವೈಶಿಷ್ಟ್ಯದಿಂದ ಮನಾಕರ್ಷಣೀಯವಾಗಿದೆ. ಶ್ರೀಮದಾನಂದತೀರ್ಥರಿಂದ ಪ್ರಣೀತವಾದ ದ್ವೈತಸಿದ್ಧಾಂತವನ್ನು ಭೂಯಿಷ್ಠವಾಗಿಟ್ಟುಕೊಂಡು ಹೊರಟ ಈ ಮಾರ್ಗವು ಸಮಗ್ರ ಸಿದ್ಧಾಂತವನ್ನು ಕನ್ನಡ ಭಾಷೆಯಲ್ಲಿ ಬಹುಪÀರಿಣಾಮಕಾರಿಯಾಗಿ ಅಭಿವ್ಯಕ್ತಿಪಡಿಸಿದುದೇ ಇದರ ಹಿರಿಮೆ. ಕೇವಲ ಸಿದ್ಧಾಂತವನ್ನಷ್ಟೇ ತನ್ನ ಧ್ಯೇಯವಾಗಿಟ್ಟುಕೊಂಡು ಹೊರಟಿದ್ದರೆ ಈ ಸಾಹಿತ್ಯಕ್ಕೆ ಇಷ್ಟೊಂದು ಬೆಲೆ-ಮನ್ನಣೆ ಸಿಗುತ್ತಿರಲಿಲ್ಲ. ಸಾಮಾಜಿಕವಾಗಿ, ನೈತಿಕವಾಗಿ ಬಹು ಮೌಲಿಕ ವಿಚಾರಗಳನ್ನು ತನ್ನ ಅಭಿವ್ಯಕ್ತಿಯಲ್ಲಿ ಅಳವಡಿಸಿಕೊಂಡ ಈ ಸಾಹಿತ್ಯವು ಸಮಾಜದ ಎಲ್ಲ ಸ್ತರಗಳ ಜನರ ಮನಸ್ಸಿಗೆ ಮುಟ್ಟಿ. ಅವರನ್ನು ಜಾಗೃತಗೊಳಿಸಿದ್ದು ಇದರ ಹಿರಿಮೆ ಎನ್ನಬಹುದು.

ಸಮಗ್ರ ಹರಿದಾಸ ಸಾಹಿತ್ಯವನ್ನು ಪರಿಶೀಲಿಸಿದಾಗ ಏಳು ಪ್ರಜ್ಞೆಗಳನ್ನು ನಾವು ಸ್ಪಷ್ಟವಾಗಿ ಗುರುತಿಸಬಹುದಾಗಿದೆ.

ಮೊದಲನೆಯದಾಗಿ ತನ್ನತನವನ್ನೇ ಮೆರೆಯುವ ವ್ಯಷ್ಟಿ ಪ್ರಜ್ಞೆಯನ್ನು ನಾವು ಕಾಣಬಹುದು. ಎರಡನೆಯದಾಗಿ ಎಲ್ಲರಿಗೂ ಅನ್ವಯಿಸುವ ಸಮಷ್ಟಿ ಪ್ರಜ್ಞೆಯನ್ನು ಇಲ್ಲಿ ಗುರುತಿಸಬಹುದು.

ನಂತರದ್ದು ಭಾಷಾಪ್ರಜ್ಞೆ. ಸಂಸ್ಕøತ ಭಾಷೆಯಲ್ಲಿ ಇದ್ದ ಅಮೂಲ್ಯ ವಿಚಾರಗಳನ್ನು ಜನ ಸಂಪರ್ಕ ಭಾಷೆಯಾದ ಕನ್ನಡದಲ್ಲೆ ವ್ಯಕ್ತಪಡಿಸಿ, ತನ್ಮೂಲಕ ಸಾಮಾನ್ಯ ಮನುಷ್ಯನವರೆಗೂ ತಲುಪಿಸಿದುದು ಹರಿದಾಸ ಸಾಹಿತ್ಯದ ಹಿರಿಮೆ ಎಂದು ಹೇಳಬಹುದು. ತಮ್ಮ ಆಡು ಭಾಷೆಯಲ್ಲಿಯೇ ಸುಂದರವಾಗಿ ಅರಳಿದ ವಿಚಾರಗಳನ್ನು ತಿಳಿದಾಗ ಜನರು ಬಹು ಸಂತೋಷದಿಂದ ಈ ಸಾಹಿತ್ಯವನ್ನು ಅಪ್ಪಿಕೊಂಡರು ; ಓದಿದರು; ಕೇಳಿದರು; ಸಂತೋಷಪಟ್ಟರು.

ನಾಲ್ಕನೇಯದಾಗಿ ಸಾಮಾಜಿಕ ಪ್ರಜ್ಞೆ. ಕನ್ನಡದ ಹರಿದಾಸರು ತಮ್ಮಷ್ಟಕ್ಕೆ ತಾವೇ ಪಾಠ-ಪ್ರವಚನ ಮಾಡುತ್ತ, ತಮ್ಮ ಬಳಿಗೆ ಬಂದವರಿಗೆ ಮಾತ್ರ ತತ್ತೊ ್ವೀಪದೇಶ ಮಾಡಿದವರಲ್ಲ. ದಾಸರು ಯಾಯಿವಾರವನ್ನು ಕೈಗೊಂಡು, ‘ಮಧುಕರ’ ವೃತ್ತಿಯನ್ನು ತಮ್ಮ ಜೀವನ ವೃತ್ತಿಯನ್ನಾಗಿ ಸ್ವೀಕರಿಸಿ, ‘ಲಜ್ಜೆಬಿಟ್ಟು ಗೆಜ್ಜೆಕಟ್ಟಿ ಹರಿಯನಾಮ’ವನ್ನು ಹಾಡುತ್ತ ‘ಮುತ್ತು ಬಂದಿದೆ ಕೊಳ್ಳಿರೋ’, ‘ಜೇನು ಬಂದಿದೆ ಕೊಳ್ಳಿರೋ’ ಎಂದು ಹಾಡುತ್ತ, ನರ್ತಿಸುತ್ತ, ಕೇರಿ-ಕೇರಿ-ಸುತ್ತುತ್ತ ಗ್ರಾಮಪ್ರದಕ್ಷಿಣೆ ಮಾಡಿದರು. ತಮ್ಮ ಕಾಲದ ಸಾಮಾಜಿಕ ಸಮಸ್ಯೆಗಳಿಗೆ ಸ್ಪಂದಿಸಿದರು. ಸಮಾಜದ ಓರೆ-ಕೊರೆಗಳನ್ನು, ಅಂಕು-ಡೊಂಕುಗಳನ್ನು ಕಂಡುಹಿಡಿದು, ಅವುಗಳನ್ನು ಕುರಿತು ನಿರ್ಭಯವಾಗಿ ವಿಶ್ಲೇಷಿಸಿದರು. ಆಯಾ ಕಾಲದಲ್ಲಿ ಬಂದ ಹರಿದಾಸರು ತಮ್ಮ ತಮ್ಮ ಕಾಲದಲ್ಲಿ ತಾವು ಕಂಡ ಸಾಮಾಜಿಕ ದೋಷಗಳನ್ನು ಖಂಡಿಸಿ, ಸಮಾಜವನ್ನು ತಿದ್ದುವ ಕಾರ್ಯವನ್ನು ಬಹುಸಮರ್ಥವಾಗಿ ಮಾಡಿದರು. ನರಹರಿತೀರ್ಥರಿಂದ ಪ್ರಾರಂಭಿಸಿ ಗುರುಜಗನ್ನಾಥ ದಾಸರ ವರೆಗೂ ಪರಿಣಾಮಕಾರಿಯಾಗಿ ಮೂಡಿ ಬಂದ ಈ ಸಾಮಾಜಿಕ ಪ್ರಜ್ಞೆಯನ್ನು ಅವರ ಕೀರ್ತನೆಗಳಲ್ಲಿ, ಉಗಾಭೋಗಗಳಲ್ಲಿ, ಸುಳಾದಿಗಳಲ್ಲಿ ಕಾಣಬಹುದಾಗಿದೆ.

ಹರಿದಾಸ ಸಾಹಿತ್ಯದ ಇನ್ನೊಂದು ಮಹತ್ವಪೂರ್ಣವಾದ ಅಂಶ ನೈತಿಕ ಪ್ರಜ್ಞೆ. ಈ ಪ್ರe್ಞÁವಂತಿಕೆಯ ಎರಡು ಮುಖಗಳನ್ನು ಹರಿದಾಸ ಸಾಹಿತ್ಯದಲ್ಲೆ ಗುರುತಿಸಬಹುದು. ಸಮಾಜದ ಸ್ವಾಸ್ಥ್ಯಕ್ಕಾಗಿ, ಒಳಿತಿಗಾಗಿ ಹಲವು ಹನ್ನೊಂದು ಬಗೆಯ ನೀತಿಯನ್ನು ಬೋಧಿಸುವದರೊಂದಿಗೆ, ತಾವೂ ಕೂಡ ಅಂತಹ ಬದುಕನ್ನು ಬದುಕಿ, ಋಜುಮಾರ್ಗದರ್ಶಿಗಳಾದುದು ಈ ದಾಸರ ಹಿರಿಮೆ; ಮೇಲ್ಮೆ, ತತ್ತ್ವ ನೀತಿ-ಸಿದ್ಧಾಂತಗಳನ್ನು ಬೋಧಿಸಿದರೆ ಮಾತ್ರ ಸಾಲದು. ನುಡಿದಂತೆ ನಡೆದಾಗ ಮಾತ್ರ ಆ ಬೋಧನೆ ಪರಿಣಾಮಕಾರಿಯಾಗಬಲ್ಲದು. ತಾವು ಆತ್ಮಶೋಧನೆ ಮಾಡಿಕೊಳ್ಳುವದರೊಂದಿಗೆ ಇತರರನ್ನೂ ಶೋಧಿಸಿಕೊಳ್ಳಲು ಪ್ರೇರೆಪಿಸಿದರು. ಹಾಗೆ ಶೋಧಿಸಿಕೊಂಡು, ತಿದ್ದಿಕೊಳ್ಳಲು ಉಪದೇಶಿಸಿದರು.

ಇದರೊಂದಿಗೆ ತಮ್ಮತನವನ್ನು ಬಿಟ್ಟುಕೊಡದ ತಾವು ನಂಬಿ-ದೀಕ್ಷಾಬದ್ಧರಾಗಿ ತಮ್ಮ ಜೀವನದ ಕೊನೆಯವರೆಗೂ ಬದುಕಿದ ಸಿದ್ಧಾಂತ ಮಾರ್ಗ. ಈ ಸಿದ್ಧಾಂತ ಪ್ರಜ್ಞೆಯೂ ಎಲ್ಲ ಹರಿದಾಸರಲ್ಲಿ ಅಭಿವ್ಯಕ್ತಗೊಂಡಿದೆ. ಎಲ್ಲ ಹರಿದಾಸರೂ ಶ್ರೀಮಧ್ವಾಚಾರ್ಯರ ಅನುಯಾಯಿಗಳು. ಅವರು ಬೋಧಿಸಿದ e್ಞÁನ-ಭಕ್ತಿ-ಕರ್ಮಗಳ ಸಂದೇಶಕ್ಕೆ ಮಾರುಹೋಗಿ. ಅವರ ಸಿದ್ಧಾಂತದ ಬೆಳಕಿನಲ್ಲಿ ಬದುಕಿನ ಋಜುಮಾರ್ಗವನ್ನು ಕಂಡು, ತೃಪ್ತಿಪಟ್ಟು ಆ ಸಿದ್ಧಾಂತಪ್ರಜ್ಞೆಯು ಅಂದರೆ ಶ್ರೀಮಧ್ವಾಚಾರ್ಯರ ದ್ವೈತಸಿದ್ಧಾಂತವು ದಾಸರ ಕೃತಿಗಳಲ್ಲಿ ವ್ಯಾಪಕವಾಗಿ ಅಭಿವ್ಯಕ್ತಿಗೊಂಡಿದೆ.

ಇವೆಲ್ಲವುಗಳೊಂದಿಗೆ ಸಂಗೀತದ ಪ್ರಜ್ಞೆ. ಶ್ರೀಪುರಂದರದಾಸರು ಕರ್ನಾಟಕ ಸಂಗೀತದ ಪಿತಾಮಹರೆಂದು ಪರಿಗಣಿಸಲ್ಪಡುತ್ತಾರೆ. ಇವರಿಗೂ ಪೂರ್ವದಲ್ಲಿ ಹರಿದಾಸರೆಂದು ಪ್ರಸಿದ್ಧರಾದ ಶ್ರೀಪಾದರಾಜರು ಹಾಗೂ ಶ್ರೀವ್ಯಾಸರಯರಲ್ಲಿಯೂ ಸಂಗೀತದ ಗುಣಗಳನ್ನು ನಾವು ಕಾಣಬಹುದು. ಸಂಗೀತ ಬಹು ಪರಿಣಾಮಕಾರಿಯಾದ ಮಾಧ್ಯಮ ಎಂಬುದರಲ್ಲಿ ಎರಡು ಮಾತಿಲ್ಲ. ಇಂದಿಗೂ ದಾಸರಪದಗಳು ಬಹು ಜನಪ್ರಿಯವಾಗಿರುವುದು, ಈ ಸಂಗೀತದ ಗುಣದಿಂದ. ಜನಸಾಮಾನ್ಯರ ಮನಸ್ಸನ್ನು ಬಹು ಸುಲಭವಾಗಿ ಆಕರ್ಷಿಸುವ ಶಕ್ತಿ ಸಂಗೀತಕ್ಕಿದೆ. ಎಲ್ಲ ಹರಿದಾಸರು ತಮ್ಮ ಕೃತಿಗಳನ್ನು ತಾಳಬದ್ಧವಾಗಿ ಲಯಬದ್ಧವಾಗಿ ವಿವಿಧ ರಾಗಗಳಲ್ಲಿ ಹಾಡಿದ್ದಾರೆ. ಅರ್ಥ ತಿಳಿಯದ ಜನಸಾಮಾನ್ಯರೂ ಸಹಿತ ಸಂತೋಷಕ್ಕಾಗಿಯಾದರೂ, ಬೇಸರ ಕಳೆದುಕೊಳ್ಳುವುದಕ್ಕಾಗಿಯಾದರೂ, ದಾಸರ ಪದ್ಯಗಳನ್ನು ಹಾಡಿಕೊಳ್ಳುತ್ತಾರೆ. ಈ ದೃಷ್ಟಿಯಲ್ಲಿ ಹರಿದಾಸರದು ಬಹು ಮೌಲಿಕ ಸಾಧನೆ ಎಂದೇ ಹೇಳಬಹುದು.

ಆಚಾರ್ಯ ಮಧ್ವರ ನಂತರ ಆ ಪೀಠಕ್ಕೆ ಬಂದ ಶ್ರೀನರಹರಿತೀರ್ಥರು ಹಲವು ಕನ್ನಡ ಕೃತಿಗಳನ್ನು ಬರೆದು ಹರಿದಾಸ ಸಾಹಿತ್ಯಕ್ಕೆ ನಾಂದಿ ಹಾಡಿದರು. ಅವರ ಕೆಲವು ಕೃತಿಗಳು ಉಪಲಬ್ಧವಿವೆÉ. ನಂತರ ಶ್ರೀ ಶ್ರೀಪಾದರಾಜರು ಹಲವಾರು ಕೃತಿಗಳನ್ನು ಬರೆಯುವುದರ ಮೂಲಕ ಹರಿದಾಸ ಸಾಹಿತ್ಯವನ್ನು ಶ್ರೀಮಂತಗೊಳಿಸಿದರು. ನಂತರದಲ್ಲಿ ಬಂದ ಶ್ರೀವ್ಯಾಸರಾಯರು ದಾಸಸಾಹಿತ್ಯವನ್ನು ಬೆಳೆಸುವುದರೊಂದಿಗೆ ದಾಸಸಾಹಿತ್ಯಕ್ಕೆ ಕನಕ ಪುರಂದರ ಎಂಬ ಎರಡು ಅಮೂಲ್ಯ ಕಾಣಿಕೆಗಳನ್ನು ನೀಡಿ ದಾಸಸಾಹಿತ್ಯದ ಸುವರ್ಣಯುಗವನ್ನು ನಿರ್ಮಿಸಿದರು.

ಕನ್ನಡ ಸಾಹಿತ್ಯಕ್ಕೆ ಅಮೂಲ್ಯ ಕಾಣಿಕೆಯನ್ನು ನೀಡಿದ ಶ್ರೀ ಪುರಂದರದಾಸರು ಹಾಗೂ ಶ್ರೀ ಕನಕದಾಸರು ತಾವು ಬದುಕಿದ ಅಂದಿನ ಸಮಾಜದೊಡನೆ ಸಂಪೂರ್ಣ ಬೆರೆತು ಸಮಾಜದ ಎಲ್ಲ ಸ್ತರದ ಜನರೊಡನೆ ಸ್ಪಂದಿಸಿ ದಾಸಸಾಹಿತ್ಯದ ಮೇರೆಗಳನ್ನು ಕನ್ನಡ ನಾಡಿನ ತುಂಬ ವಿಸ್ತರಿಸಿದರು. ಕನಕ-ಪುರಂದರ ಯುಗ ಎಂದು ಕರೆಯುವಷ್ಟರ ಮಟ್ಟಿಗೆ ಅವರು ನಿರ್ಮಿಸಿದ ಸಾಹಿತ್ಯ, ಪ್ರಭಾವಶಾಲಿಯೂ ಹಾಗೂ ಜನಪ್ರೀಯವೂ ಆಗಿದೆ. ಮುಂದೆ ಹದಿನೆಂಟನೆಯ ಶತಮಾನದಲ್ಲಿ ಅವತರಿಸಿದ ಶ್ರೀವಿಜಯದಾಸರು ಹಿಂದಿನಿಂದ ನಡೆದು ಬಂದ ಈ ಹರಿದಾಸ ಸಾಹಿತ್ಯವು ಇಂದಿನವರೆಗೂ ಮುಂದುವರೆಯುವಂತೆ ಮಾಡಿ ತಮ್ಮ ಸುಳಾದಿ, ಕೀರ್ತನೆಗಳ ಮೂಲಕ ಚಿರಂತನವಾಗುವಂತೆ ಮಾಡಿದುದು ಶ್ಲ್ಯಾಘನೀಯ. ದಾಸಸಾಹಿತ್ಯ ಸಂಪತ್ತನ್ನು ಬೆಳೆಸುವುದರೊಂದಿಗೆ ಅಮೂಲ್ಯವಾದ ಶಿಷ್ಯ ಸಂಪತ್ತನ್ನೂ ಬೆಳೆಸಿ ತನ್ಮೂಲಕ ಹರಿದಾಸ ಸಾಹಿತ್ಯದ ಬೆಳವಣಿಗೆಗೆ ಅಪರೂಪದ ಕಾಣಿಕೆಯನ್ನು ನೀಡಿದ್ದಾರೆ. ಅವರ ಶಿಷ್ಯರೇ ಗೋಪಾಲದಾಸರು. ಅವರ ಶಿಷ್ಯರೇ ಶ್ರೀ ಹರಿಕಥಾಮೃತಸಾರದ ಕರ್ತೃಗಳಾದ ಶ್ರೀ ಜಗ್ನನಾಥ ದಾಸರು. ಇಪ್ಪತ್ತನೆಯ ಶತಮಾನದವರೆಗೂ ಈ ಪರಂಪರೆಯು ಮುಂದುವರೆದು ಬಂದಿರುವುದೇ ಈ ಪರಂಪರೆಯ ವೈಶಿಷ್ಟ್ಯ.

ಹರಿದಾಸ ಸಾಹಿತ್ಯವನ್ನು ಸ್ಥೂಲವಾಗಿ ಹೀಗೆ ವಿಂಗಡಿಸಬಹುದು. ಶ್ರೀ ನರಹರಿ ತೀರ್ಥರಿಂದ ಪ್ರಾರಂಭಿಸಿ ಶ್ರೀ ಪುರಂದರ ಹಾಗೂ ಶ್ರೀ ಕನಕದಾಸರ ವೆರೆಗಿನದು ಒಂದು ಯುಗ. ಶ್ರೀ ವಿಜಯದಾಸರಿಂದ ಪ್ರಾರಂಭಿಸಿ ಶ್ರೀ ಜಗನ್ನಾಥದಾಸರವರೆಗಿನದು ಎರಡನೆಯ ಯುಗ; ಅವರ ಶಿಷ್ಯರಾದ ಶ್ರೀಪ್ರಾಣೇಶದಾಸರಿಂದ ಪ್ರಾರಂಭಿಸಿ ಶ್ರೀ ಗುರುಗೋವಿಂದದಾಸರು ಹಾಗೂ ಶ್ರೀ ಸುಂದರವಿಠಲರವರೆಗಿನದು ಮೂರನೇ ಯುಗ. ಹತ್ತೊಂಬತ್ತನೆಯ ಶತಮಾನದಲ್ಲಿ ಅವತರಿಸಿದ ಶ್ರೀ ಗುರುಜಗನ್ನಾಥದಾಸರು ತಮ್ಮ ಜೀವನ-ಕೃತಿಗಳಿಂದ ಹರಿದಾಸ ಸಾಹಿತ್ಯವನ್ನು ಮತ್ತಷ್ಟು ಶ್ರೀಮಂತಗೊಳಿಸಿ ವಿಜೃಂಭಿಸುವಂತೆ ಮಾಡಿದರು. ಹರಿದಾಸರಲ್ಲಿ ಬಂದ ಕೊನೆಯ ಅಪರೋಕ್ಷ e್ಞÁನಿಗಳು ಶ್ರೀಗುರುಜಗನ್ನಾಥರೇ ಎಂದರೆ ಅತಿಶಯೋಕ್ತಿಯಾಗಲಿಕ್ಕಿಲ್ಲ. ಅವರ ಜೀವನ ಕೃತಿಗಳು-ಸಾಧನೆ-ಹಾಗೂ ಅವರ ಕೃತಿಗಳ ಸ್ಥೂಲ ಅವಲೋಕನವನ್ನು ಇಲ್ಲಿ ಮಾಡಲಾಗಿದೆ.

ಜನನ ಹಾಗೂ ಬಾಲ್ಯ

ಶ್ರೀಗುರುಜಗನ್ನಾಥದಾಸರು ಜನ್ಮವೆತ್ತಿದ ಸ್ಥಳ ಕೋಶಿಗಿ. ಇದೊಂದು ಚಿಕ್ಕಗ್ರಾಮ. ಇಂದಿನ ಆಂಧ್ರಪ್ರದೇಶದಲ್ಲಿರುವ ಕರ್ನೂಲ ಜಿಲ್ಲೆಗೆ ಸೇರಿದೆ. ಶ್ರೀಗುರುಜಗನ್ನಾಥದಾಸರು ಅವತರಿಸಿದ ಸಮಯದಲ್ಲಿ, ಈ ಊರಲ್ಲಿ ಒಂದು ಅಗ್ರಹಾರವಿದ್ದು ಸದಾಚಾರ ಸಂಪನ್ನರೂ ಹಾಗೂ ಶಾಸ್ತ್ರವೇತ್ತರೂ ಆದ ಅನೇಕ ವಿದ್ವಾಂಸರು ಈ ಊರಲ್ಲಿ ಇದ್ದುದಾಗಿ ತಿಳಿದು ಬರುತ್ತದೆ. ಆಗಿನ ಕಾಲದಲ್ಲಿ ಈ ಊರಿನ ಇನ್ನೊಂದು ವೈಶಿಷ್ಟ್ಯವೆಂದರೆ ಸುಪ್ರಸಿದ್ಧವಾದ ಶ್ರೀವಾಯುದೇವರ ಮಂದಿರ. ಇಂದಿಗೂ ಕೋಶಿಗಿ ಹನುಮಪ್ಪ ನೆಂದು ಪ್ರಸಿದ್ಧವಾದ ಪ್ರಾಣದೇವರ ಗುಡಿ ಇದು. ಕೌಶಿಕ ಗೋತ್ರೋತ್ಪನ್ನರಾದ ಶ್ರೀ ವೆಂಕಟಗಿರಿಯಾಚಾರ್ಯ-ಸೌ| ಸೀತಮ್ಮ ಎಂಬ ದಂಪತಿಗಳು ಈ ಊರಿನಲ್ಲಿ ವಾಸವಾಗಿದ್ದರು. ವೈದಿಕ ವೃತ್ತಿಯನ್ನೇ ಆಧರಿಸಿದ ಅವರು ತಮ್ಮಧರ್ಮಕ್ಕನುಸಾರವಾಗಿ ಸದಾಚಾರ ಸಂಪನ್ನರಾಗಿದ್ದರು. ಮಂತ್ರಾಲಯದ ಶ್ರೀರಾಘವೇಂದ್ರಸ್ವಾಮಿಗಳನ್ನು ತಮ್ಮ ಉದ್ಧಾರಕರೆಂದು ತಿಳಿದ ಅವರು ಶ್ರೀಗುರುರಾಜರ ಅಂತರಂಗ ಭಕ್ತರಾಗಿದ್ದುಕೊಂಡು ಅವರ ಸೇವೆ ಸ್ಮರಣೆಯಲ್ಲಿಯೇ ಕಾಲ ಕಳೆಯುತ್ತಿದ್ದರು.

ಈ ದಂಪತಿಗಳಿಗೆ ಜೀವನದ ಎಲ್ಲ ಸೌಭಾಗ್ಯಗಳಿದ್ದರೂ ಪುತ್ರಸಂತಾನವಿರಲಿಲ್ಲ. ಇವರಿಗೆ ಏಳು ಮಕ್ಕಳು ಹುಟ್ಟಿದ್ದರೂ, ಒಂದು ಮಗುವೂ ಬದುಕಿ ಉಳಿದಿರಲಿಲ್ಲ. ಇಂಥ ಸ್ಥಿತಿ ಉಂಟಾದರೆ ಯಾವ ತಂದೆ-ತಾಯಿಗಳು ಸುಖದಿಂದಿದ್ದಾರು? ಭಾವುಕರೂ, ಗುರುಭಕ್ತರೂ ಆದ ಅವರು ತಮ್ಮ ಊರನ್ನು ಬಿಟ್ಟರು. ಮಂತ್ರಾಲಯದ ಮಂದಿರಕ್ಕೆ ಬಂದಿಳಿದರು. ವಂಶೋದ್ಧಾರಕ ಪುತ್ರನನ್ನು ಅನುಗ್ರಹಿಸಲು ಗುರುಗಳ ಮುಂದೆ ಪ್ರಾರ್ಥನೆ ಇಟ್ಟರು. ಸೇವಾದೀಕ್ಷೆಯನ್ನು ತೊಟ್ಟರು. ಏಕಾಗ್ರಚಿತ್ತದಿಂದ ಭಕ್ತಿಪೂರ್ವಕ ಶ್ರೀಗುರುರಾಜರ ಸೇವೆ ಮಾಡಿದರು. ಮತ್ತೆ ಊರಿಗೆ ಮರಳಿದರು. ಗುರುಗಳ ಸೇವೆ ವ್ಯರ್ಥವಾದೀತೆ? ಶ್ರೀಗುರುರಾಜರ ಅನುಗ್ರಹದ ರೀತಿ ಹಲವು ಹನ್ನೊಂದು ವಿಧ. ಆಗಿನ ಕಾಲದಲ್ಲಿ ಶ್ರೀಕೃಷ್ಣಾಚಾರ್ಯರೆಂಬ ಅಪೂರ್ವ ಸಾಧಕರೊಬ್ಬರಿದ್ದರು. ಇವರು ಇಭರಾಮಪುರದವರು. ಈ ಊರು ಮಂತ್ರಾಲಯದ ಹತ್ತಿರದಲ್ಲಿದೆ. ‘ಇಭರಾಮಪುರದ ಅಪ್ಪಾ ಅವರೇ’ ಎಂದು ಜನರು ಭಕ್ತಿಯಿಂದ ಅವರನ್ನು ಸಂಬೋಧಿಸುತ್ತಿದ್ದರು. ಸಜ್ಜನರ ಉದ್ಧಾರಕ್ಕಾಗಿಯೇ ಅವತರಿಸಿದ ಅಪೂರ್ವ ರತ್ನ ಇವರು. ಮಂತ್ರಾಲಯದ ಶ್ರೀಗುರುರಾಜರ ಅವಿಚ್ಛಿನ್ನ ಭಕ್ತರಾಗಿದ್ದ ಇವರು ಆಧ್ಯಾತ್ಮಸಾಧನೆಯಲ್ಲಿ ಸೀಮಾ ಪುರುಷರಾಗಿದ್ದರು. ಅಂದು ಈ ನಾಡಿನ ಸುತ್ತ ಮುತ್ತಲಿನ ಜನರು ಇವರ ಅನುಗ್ರಹಾಕಾಂಕ್ಷಿಗಳಾಗಿದ್ದರು.

ಶ್ರೀಕೃಷ್ಣಾಚಾರ್ಯರು ಹಾಗೂ ಶ್ರೀವೆಂಕಟಗಿರಿಆಚಾರ್ಯರು ಬಾಲ್ಯದಿಂದಲೇ ಅತ್ಮಿಯ ಸ್ನೇಹಿತರಾಗಿದ್ದರು. ಒಂದು ಅಪೂರ್ವಯೋಗವೋ ಎಂಬಂತೆ ಶ್ರೀ ಕೃಷ್ಣಾಚಾರ್ಯರು ಯಾವ ಮುನ್ಸೂಚನೆಯೂ ಇಲ್ಲದೆ ಕೋಶಿಗಿಗೆ ಬಂದು ತಮ್ಮ ಆತ್ಮೀಯ ಮಿತ್ರರಾದ ಶ್ರೀವೆಂಕಟಗಿರಿಯಾಚರ್ಯರ ಮನೆಯಲ್ಲಿ ವಾಸ್ತವ್ಯ ಮಾಡಿದರು. ಆಧ್ಯಾತ್ಮ-ತತ್ತ ್ವe್ಞÁನಗಳ ವಿಷಯವೇ ಇವರ ಹರಟೆಗೆ ಗ್ರಾಸವಾಗಿತ್ತು. ಈ ಪ್ರಸಂಗದಲ್ಲಿಯೇ ಶ್ರೀವೆಂಕಟಗಿರಿಯಾಚಾರ್ಯರು ತಮ್ಮ ಅಂತರಂಗದ ಅಳಲನ್ನು ಒಟ್ಟಾರೆ ಅವರ ಮುಂದೆ ತೊಡಿಕೊಂಡರು. ತಮಗೆ ಪುತ್ರ ಸಂತಾನವಾಗುವಂತೆ ಅನುಗ್ರಹಿಸಲು ಕೇಳಿಕೊಂಡರು. ಅಪ್ಪಾ ಅವರು ಪ್ರಾಣದೇವರ ಉಪಾಸಕರಾಗಿದ್ದರು. ಪಂಚಮುಖಿಪ್ರಾಣದೇವರೆಂದರೆ ಅವರಿಗೆ ಪಂಚಪ್ರಾಣ. ತಾವು ಹೋದಲ್ಲೆÉಲ್ಲಾ ಪ್ರಾಣದೇವರ ಮೂರುತಿಯನ್ನು ತೆಗೆದುಕೊಂಡೇ ಹೋಗುತ್ತಿದ್ದರು ಹಾಗು ಭಕ್ತಿಯಿಂದ ಪೂಜಿಸುತ್ತಿದ್ದರು. ಇದು ಅವರ ದಿನಚರಿಯ ಒಂದು ಭಾಗ.

ಶ್ರೀ ಅಪ್ಪಾಅವರು ‘ನಾನೇನು ಶಾಪಾನುಗ್ರಹಶಕ್ತನಲ್ಲ; ಶ್ರೀ ರಾಘವೇಂದ್ರ ಸ್ವಾಮಿಗಳು ಅಂತರಂಗದ ಭಕ್ತನಾದ ನಿನಗೆ ಅನುಗ್ರಹಿಸುವರು. ನೀನು ಮಾಡಿದ ಅವರ ಸೇವೆ ವ್ಯರ್ಥವಾಗುವುದಿಲ್ಲ. ನಮ್ಮ ಪೂಜಾಸಮಯದಲ್ಲಿ ನಾಳೆ ನೀನು ಉಪಸ್ಥಿತನಿರು’ ಎಂದು ಹೇಳಿದರು. ಅಂದು ಶ್ರೀಪಂಚಮುಖಿ ಪ್ರಾಣದೇವರನ್ನು ವಿಶೇಷವಾಗಿ ಆರಾಧಿಸಿ ಭಕ್ತಿ ಪೂರ್ವಕ ಪ್ರಾರ್ಥಿಸುತ್ತ ತಮ್ಮ ಮಿತ್ರನಿಗೆ ಪುತ್ರ ಸಂತಾನವನ್ನು ಅನುಗ್ರಹಿಸುವಂತೆ ಪ್ರಾರ್ಥಿಸುತ್ತ ದೇವರ ಪೆಟ್ಟಿಗೆಗೆÉ ಕೈಹಾಕಿದರು.ಅಲ್ಲಿ ಒಂದು ಮುತ್ತು ಅವರ ಕೈಗೆ ಸಿಲುಕಿತು. ಅದನ್ನೇ ವೆಂಕಟಗಿರಿಯಾಚಾರ್ಯರಿಗೆ ಕೊಡುತ್ತ ‘ಅಚಾರ್ಯ ಚಿಂತಿಸಬೇಡಿರಿ ಹರಿವಾಯುಗಳು ನಿಮಗೆ ಮುತ್ತಿನಂತಹ ಮಗನನ್ನು ಕರುಣಿಸುವರು’ ಎಂದರು. ಭಗವದ್ಭಕ್ತರ ಮಾತೆಲ್ಲವೂ ವಾಚಮರ್ಥೋನುಧಾವತಿ ಅಲ್ಲವೇ? ಅಂತೂ ದಂಪತಿಗಳ ಆಸೆ ಫಲಿsಸಿತು. ಶ್ರೀವೆಂಕಟಗಿರಿಯಾಚರ್ಯರಿಗೆ ಮಹಾಭUವÀದ್ಭಕ್ತ ಕೋಶಿಗಿಯ ಕಣ್ಮಣಿಯÁಗಲಿರುವ ಮುತ್ತಿನಂತಹ ಪುತ್ರಸಂತಾನವಾಯಿತು. ಕ್ರಿ.ಶ-1837 ದುರ್ಮುಖಿನಾಮ ಸಂವತ್ಸರ ಮಾರ್ಗಶಿರ ಶುದ್ಧ ಪಂಚಮಿಯಂದು ಸೌ|| ಸೀತಮ್ಮನವರು ಮುಗುವಿಗೆ ಜನ್ಮ ನೀಡಿದರು. ಇದು ತಮ್ಮ ಕುಟುಂಬದ ಮೇಲೆ ತಮ್ಮ ಕುಲದೇವರ ಅನುಗ್ರಹವೆಂದು ತಿಳಿದ ಆಚಾರ್ಯರು ಮಗುವಿಗೆ `ಸ್ವಾಮಿರಾಯ’ ಎಂದು ಹೆಸರಿಟ್ಟರು. ಮುದ್ದಾದ ಮಗುವಿನ ಆಟ-ಪಾಟಗಳನ್ನು ಕಂಡು ಹಿರಿ-ಹಿರಿ-ಹಿಗ್ಗಿದರು.

ಸ್ವಾಮಿರಾಯನ ಅವತಾರವನ್ನು ಕುರಿತಾಗಿ ಹಲವು ಐತಿಹ್ಯಗಳು ಇವೆ. ಇವರ ನಂತರ ಬಂದ ಇವರ ಶಿಷ್ಯರ ಹಾಗೂ ಇನ್ನಿತರ e್ಞÁನಿಗಳ ವಚನಗಳೇ ಇದಕ್ಕೆ ಆಧಾರ. ಇದು ಭಾವುಕರ ನಂಬಿಕೆ.

ಯತಿಕುಲೋತ್ತುಂಗರೂ, ವಾಯ್ವಾಂಶ ಸಂಭೂತರೂ ಹಾಗೂ ಶ್ರೀನರಸಿಂಹದೇವರ ಅವತಾರಕ್ಕೆ ಕಾರಣೀಭೂತರೂ ಆದ ಶ್ರೀಪ್ರಹ್ಲಾದರಾಜರ ತಮ್ಮಂದಿರಾದ ಅಹ್ಲಾದರ ಅವತಾರವೇ ಇವರು ಎಂಬುದು ಭಾವುಕರ ನಂಬಿಕೆ.

ಗುರುಜಗನ್ನಾಥದಾಸರ ಪ್ರಮುಖ ಶಿಷ್ಯರಾದ ಶ್ರೀವರದೇಶವಿಠಲರು ತಮ್ಮ ಗುರುಗಳ ಅವತಾರಗಳನ್ನು ಕುರಿತು ಹಾಡಿದ್ದು, ಅವರ ಕೀರ್ತನೆಯ ಮೂಲಕ ಈ ಅಂಶವು ತಿಳಿದು ಬರುತ್ತದೆ. ಇವರು ಪ್ರಥಮದಲ್ಲಿ ಕಲಿಯುಗದಲ್ಲಿ ಶ್ರೀಗುರುರಾಜರ ಅನುಗ್ರಹಕ್ಕೆ ಪಾತ್ರರಾದ ಅಪ್ಪಣ್ಣಾಚಾರ್ಯರಾಗಿಯೂ, ನಂತರ ಬೆನಕಪ್ಪನಾಗಿಯೂ, ಮುಂದೆ `ದಾಸಪ್ಪ’ ಎಂದು ಹೆಸರು ಹೊಂದಿ ಮುಂದೆ ಶ್ರೀದವಿಠಲರಾಗಿಯೂ ಆದ ದಾಸರಾಗಿ ಮುಂದೆ ಗುರುಜಗನ್ನಾಥದಾಸರಾಗಿ ಅವರೇ ಅವತರಿಸಿದರು ಎಂಬುದಾಗಿ ಹೇಳಿದ್ದಾರೆ.

ಶ್ರೀವರದವಿಠಲರಂತೂ ಬಹು ಮನೋಜ್ಞವಾಗಿ ತಮ್ಮ ಒಂದು ಕೀರ್ತನೆಯಲ್ಲಿ ಇದನ್ನು ವ್ಯಕ್ತಪಡಿಸಿದ್ದಾರೆ.

`ಎರಡನೆ ಜನ್ಮದಿ ಅಪ್ಪಣಾಭಿದನು ಎನಿಸಿ|

ರಾಯರ ಒಲಿಸಿ’. . .

. . . . . . . . . .

. . . . . . . . . . . . . .

‘ಮೂರನೆ ಜನುಮದಿ ಬೆನಕನ ನಾಮದಿ ಬಂದ

ಲಚ್ಚಮರಿಯಲಿ ನಿಂದ’|

. . . . . . . . . . . . .

‘ಭರದಲಿ ಧರೆಯೊಳು ಜನಿಸಿದ ಭೂಸುರರಲ್ಲಿ|

ಕರಜಗಿಯಲ್ಲಿ |’

. . . . . . , . . . . . .

ಶ್ರೀದÀ ವಿಠಲನ ಅಂಕಿತವನು ತಾಪೊಂದಿ|

ಗುರುಗಳ ಹೊಂದಿ|’

ಭೂಮಿಯೊಳಗೆ ವರ ಮಂತ್ರಾಲಯಪ್ರಾಂತದಲಿ|

ಕೋಸಗಿಯಲ್ಲಿ|

ಆ ಮಹಾ ಭೂಸುರ ವೆಂಕಟಗಿರಿಯಾರ್ಯರಲಿ

ಜನಿಸಿದನಲ್ಲಿ

. . . . . . . . . . . . . . . .

. . . . . . . . . . . . . . .

ಧೀರ ಗುರುಜಗನ್ನಾಥ ವಿಠಲನ ಅಂಕಿತವÀ

ಪೊಂದಿದ ಮುದವ|’ . .

ಶ್ರೀವರದವಿಠಲರೂ ಹಾಗೂ ಶ್ರೀಶ್ಯಾಮಸುಂದರವಿಠಲರೂ ಈ ವಿಷಯವನ್ನು ತಮ್ಮ ಕೀರ್ತನೆಗಳಲ್ಲಿ ವ್ಯಕ್ತಪಡಿಸಿದ್ದಾರೆ.

ಬಾಲ್ಯದಲ್ಲಿ ಸ್ವಾಮಿರಾಯನು ಬಹÀು ಉಡಾಳನಾಗಿದ್ದನೆಂಬುದು ಅವರ ಚರಿತ್ರೆಯಿಂದ ತಿಳಿದು ಬರುತ್ತದೆ. ಇದಕ್ಕೆ ಕಾರಣವೂ ಉಂಟು. ಸ್ವಾಮಿರಾಯನು ಚಿಕ್ಕವನಿದ್ದಾಗಲೆ ಅವನ ತಾಯಿಯು ತೀರಿಕೊಂಡದ್ದರಿಂದ ಅವನ ಅಜ್ಜಿ ಹಾಗೂ ತಂದೆಯರು ಅವನನ್ನು ತುಂಬಾ ಮುದ್ದಾಗಿ ಬÉಳೆಸಿದರು. ಹಲವು ಮಕ್ಕಳನ್ನು ಕಳೆದುಕೊಂಡ ನಂತರ ಇವನೊಬ್ಬನೇ ಬದುಕಿ ಉಳಿದುದೂ ಇದಕ್ಕೆ ಕಾರಣವಿರಬಹುದು.

ತಂದೆ ವೆಂಕಟಗಿರಿಯಾಚಾರ್ಯರು ಸಕಾಲಕ್ಕೆ ಚೌಲ-ಉಪನಯನಾದಿಗಳನ್ನು ನೆರವೇರಿಸಿದರು. ಮೊದಲೇ ಸ್ಫುರದ್ರೂಪಿಯಾಗಿದ್ದ ಸ್ವಾಮಿರಾಯನು ಸಂಸ್ಕಾರದ ನಂತರ ತುಂಬಾ ಆಕರ್ಷಕನಾಗಿಯೂ, ಮೋಹನಾಂಗನಾಗಿಯೂ ಕಾಣಿಸುತ್ತಿದ್ದನು. ಸ್ವತಃ ಪಂಡಿತರಾದ ಅವನ ತಂದೆ ಅವನ ವಿದ್ಯಾಭ್ಯಾಸದ ಉಸ್ತುವಾರಿಯನ್ನು ವಹಿಸಿದರು. ಆದರೆ ಸ್ವಾಮಿರಾಯನ ಮನಸ್ಸು ಮಾತ್ರ ಅಭ್ಯಾಸದ ಕಡೆಗೆ ಎಳಸಲಿಲ್ಲ. ಯಾವಾಗಲೂ ತನ್ನ ವಯಸ್ಸಿನ ಹುಡುಗರೊಂದಿಗೆ ಆಟ-ನೋಟಗಳಲ್ಲಿ ಮಗ್ನನಾಗಿದ್ದ ಸ್ವಾಮಿರಾಯನು ತುಂಬಾ ಹಟಮಾರಿಯೂ ಆಗಿದ್ದನು. ಅವನ ತಂದೆಗೆ ವ್ಯಥೆಯಾದರೂ ಅದನ್ನು ಹೇಳಲಾರದಷ್ಟು ನಿಸ್ಸಹಾಯಕರಾಗಿದ್ದರು. ಮದುವೆಯಾದರೆ ಮಗನು ಹಾದಿಗೆ ಬರಬಹುದೆಂದು ವಿಚಾರಿಸಿದ ಅವರು ಅವನಿಗೆ ಮದುವೆಯನ್ನೂ ಮಾಡಿದರು. ಆ ಹುಡಗಿಯು ಮದುವೆಯಾದ ಎರಡೇ ವರುಷದಲ್ಲಿ ಇಲ್ಲವಾದಳು. ಅವರ ತಂದೆ ಸ್ವಾಮಿರಾಯನಿಗೆ ಎರಡನೇ ಮದುವೆಯನ್ನು ಮಾಡಿದರು. ಆದರೆ ಮೊದಲನೆಯ ಪತ್ನಿಯ ಸಾವಿನಿಂದಾಗಲಿ ಅಥವಾ ಎರಡನೆ ಪತ್ನಿಯ ಪ್ರವೇಶದಿಂದಾಗಲಿ ಸ್ವಾಮಿರಾಯನ ಜೀವನದಲ್ಲಿ ಯಾವ ಬದಲಾವಣೆಯೂ ಆಗಲಿಲ್ಲ. ಉಂಡಾಡಿ ಭಟ್ಟನಂತೆ ಕೇವಲ ಊಟ-ಆಟಗಳಿಗೇ ಅವನ ಜೀವನ ಮೀಸಲಾಗಿತ್ತು. ಯಾವ ಕೆಲಸಕ್ಕೂ ಬಾರದ ಹುಡುಗನಿವನೆಂದು ಮನೆಯವರೂ, ಊರವರು ಅಂದುಕೊಳ್ಳುವಂತಾಯಿತು. ವೆಂಕಟಗಿರಿಯಾಚಾರ್ಯರು ತುಂಬಾ ಚಿಂತಾಕ್ರಾಂತರಾದರು. ಶ್ರೀಹರಿವಾಯು ಗುರುಗಳ ಅನುಗ್ರಹದಿಂದ ಜನಿಸಿದ ಪುತ್ರ ಈ ಸ್ಥಿತಿಗೆ ಹೇಗೆ ಬಂದನೆಂಬುದು ಅವರಿಗೆ ಬಿಡಿಸಲಾರದ ಒಗಟಾಗಿತ್ತು.

ವಾಯುದೇವರ ಉಪಾಸನೆ

ಜೀವನದಲ್ಲಿ ಮಹತ್ವದ ತಿರುವು ಉಂಟಾಗಬೇಕಾದರೆ ಆ ಯೋಗಬರಬೇಕು. ಕಾಲನಾಮಕ ಪರಮಾತ್ಮನ ಕೃಪೆ ಉಂಟಾಗಬೇಕು. ಜೀವನ ಪ್ರಾರಬ್ಧಕರ್ಮಗಳು ತೀರಬೇಕು. ಶ್ರೀಪುರಂದರದಾಸರು, ಶ್ರೀಕನಕದಾಸರು ಶ್ರೀವಿಜಯದಾಸರು-ಶ್ರೀಗೋಪಾಲದಾಸರು-ಶ್ರೀ ಜಗನ್ನಾಥದಾಸರು ಇವರೆಲ್ಲರ ಜೀವನದಲ್ಲೂ ಈ ಮಹತ್ವದ ತಿರುವನ್ನು ನಾವು ಕಾಣುತ್ತೇವೆ. ಮುಂದೆ ಗುರುಜಗನ್ನಾಥ ದಾಸನಾಗಲಿರುವ ಸ್ವಾಮಿರಾಯನೂ ಇದಕ್ಕೆ ಹೊರತಲ್ಲ.

ಈಗಾಗಲೇ 24-25 ವರುಷ ತುಂಬಿದ ಸ್ವಾಮಿರಾಯನನ್ನು ಆ ಊರಿನ ಹಿರಿಯರೊಬ್ಬರು ಹೀಗೆ ಆಕ್ಷೇಪಿಸಿದರು. ‘ನಿನ್ನ ತಂದೆಯಾದರೋ ದೊಡ್ಡವಿದ್ವಾಂಸರು, ಸದಾಚಾರ ಸಂಪನ್ನರು. ಅವರ ಹೆಸರಿಗೆ ಕಲಂಕತರುವಂತಹ ಮಗ ನೀನಾಗಿರುವೆ. ನಿನ್ನ ತಂದೆಗೆ ನೀನೊಂದು ಭಾರ’ ಹೀಗೆ ಅರ್ಥಬರುವಂತೆ ಮಾತನಾಡಿದರು. ಆ ಹಿರಿಯರ ಮಾತು ಸ್ವಾಮಿರಾಯನ ಮರ್ಮಕ್ಕೆ ನಾಟಿದಂತಾಯಿತು. ಮೈತುಂಬ ರೋಮಾಂಚನವಾದಂತಾಯಿತು. ಅವನ ಚಿತ್ತವೆಲ್ಲವೂ ಜರ್ಝರಿತವಾಯಿತು. ಯಾವುದೋ ಅವಕ್ತ್ಯ ಶಕ್ತಿಯೊಂದು ಅವನ ಮನಸ್ಸನ್ನು ಕಟುಕಿದಂತಾಯಿತು. ಇದೆಲ್ಲವೂ ಶ್ರೀ ಹರಿಯ ಕಾರ್ಯ. ಆ ಹಿರಿಯರಲ್ಲಿ ನಿಂತು ಮಾತನಾಡಿಸಿದವನು ಶ್ರೀಹರಿಯೇ. ಸ್ವಾಮಿರಾಯರಲ್ಲಿ ನಿಂತು ಆ ಅನುಭವವನ್ನು ಅವರಿಗೆ ತಂದು ಕೊಟ್ಟವನು ಶ್ರೀ ಹರಿಯೇ. ಶ್ರೀ ಜಗನ್ನಾಥದಾಸರ ಮಾತು ಇಲ್ಲಿ ನೆನಪಿಗೆ ಬರುತ್ತದೆ.

‘ಒಬ್ಬನಲಿ ನಿಂದಾಡುವನು

ಮತ್ತೊಬ್ಬನಲಿ ನೋಡುವನು

ಬೇಡುವನೊಬ್ಬನಲಿ ಮಾತಾಡುವನು ಬೆರಗಾಗಿ’|

ಸ್ವಾಮಿರಾಯನ ಸ್ಮøತಿಪಟಲದಲ್ಲಿ ಅವನು ಕಳೆದ ಬಾಲ್ಯಾವಸ್ಥೆಯ ನೆನಪುಗಳ ಸುರುಳಿ ಬಿಚ್ಚತೊಡಗಿತು. ತಾನು ಉಡಾಳ ಗಳೆಯರೊಡನೆ ವ್ಯರ್ಥ ಸಮಯ ಕಳೆದದ್ದು, ತನ್ನ ತಂದೆಯು ಕಲಿಸಿದ ಅಧ್ಯಯನಕ್ಕೆ ಕಿವಿಗೊಡದೇ ಇದ್ದುದು, ಹೀಗೆ ಹಲವಾರು ಸ್ಮøತಿಗಳು.

ಸ್ವಾಮಿರಾಯನ ಮನಸ್ಸು ಒಂದು ಹಂತಕ್ಕೆ ಬಂದಿತು. ತಾನು ಇಷ್ಟುದಿನ ಮಾಡಿದ್ದು ಬಹು ತಪ್ಪು ಎನಿಸಿತು. ಬಹಳ ಪಶ್ಚಾತ್ತಾಪವಾಯಿತು. ಪಶ್ಚಾತ್ತಾಪಪಟ್ಟಷ್ಟೂ ಮಾನಸಿಕ ಭಾವನೆಗಳು ಶುದ್ಧಿ ಎನಿಸ ತೊಡಗಿದವು. ಕಣ್ಣು ಬಿಟ್ಟಷ್ಟೂ ಅವನ ದೃಷ್ಟಿಗೆ ಸತ್ಯವೊಂದು ಗೋಚರಿಸಿದಂತಾಯಿತು. ಮನಸ್ಸು ಒಂದು ನಿರ್ಧಾರಕ್ಕೆ ಬಂದಂತಾಯಿತು. ಆಧ್ಯಾತ್ಮಿಕಸಾಧನೆ-ಸಿದ್ಧಿಗಳ ಪಥ ಅವನ ಮುಂದೆ ಸುಳಿದಂತಾಯಿತು. ಯಾರಿಗೂ ಹೇಳದೇ ಕೋಶಿಗಿಯನ್ನು ಬಿಟ್ಟನು.

‘ಬುಡಬಲದೊಡ್ಡಿ’ ಎಂಬುದು ಕೋಶಿಗಿಯ ಹತ್ತಿರದ ಒಂದು ಗ್ರಾಮ. ಅಲ್ಲಿ ಒಂದು ಹನುಮಂತದೇವರ ದೇವಸ್ಥಾನ. ಪ್ರಶಾಂತಸ್ಥಳ. ಪ್ರಾಣದೇವರ ಸನ್ನಿಧಾನದಿಂದ ಪವಿತ್ರ ತಾಣ; ಆಧ್ಯಾತ್ಮಸಾಧನೆಗೆ ಹೇಳಿ ಮಾಡಿಸಿದಂತಹ ಕಣ. ಸ್ವಾಮಿರಾಯನು ತನ್ನ ಕಠಿಣ ಸೇವೆಯನ್ನು ಪ್ರಾರಂಭಿಸಿದನು.

‘ಪ್ರಾಣನಾಥನೇ ಬಹು ಪ್ರಾಣ ತಪ್ಪಿದೆ ಎನ್ನ

ತ್ರಾಣವಗೊಟ್ಟು ಪೊರೆಯೋ

ಕ್ಷೋಣಿತನಾಳದಿ ದುಗ್ಗಾಣಿ ಕಾಣದೀ ಪರಿ

ಕ್ಷೀಣನಾಗಿ ನಾ ಬಂದೆ ಮುಖ್ಯ ಪ್ರಾಣನಾಥನೆ’

ಎಂದು ಹಾಡುತ್ತ ವಾಯುದೇವರ ಉಪಾಸನೆಯನ್ನು ಪ್ರಾರಂಭಿಸಿದರು.

'ಭಾರತಿರಮಣ ನಾ ಸಾರುವೆ ಚರಣಾ

ತೋರೊ ಮನ್ಮನದೊಳು ಭೂರಿ ಸುಕರಣಾ'

. . . . . . . . . . . . . . . . . . . .

. . . . . . . . . . . . . . . . . . . . . .

ಕುಟಿಲ ದುರ್ವಿಷÀಯ ಲಂಪಟ ಬಿಡಿಸೀಗಾ

ದಿಟ ಗುರುಜಗನ್ನಾಥ ವಿಠಲನಣುಗಾ'- ಎಂದು ಮನದುಂಬಿ ಭಕ್ತಿಯಿಂದ ಆತ್ಮನಿವೇದನೆ ಮಾಡಿಕೊಂಡರು. ಆರ್ತರಾಗಿ ಪರಿಪರಿಯಿಂದ ಬೇಡಿಕೊಂಡರು. ಸ್ವಾಮಿರಾಯನ ಕೂಗು ವಾಯುದೇವರಿಗೂ ಕೇಳಿಸಿತು. ಪಶ್ಚಾತ್ತಾಪದಿಂದ ಅವರ ಮನಸ್ಸು ಶುದ್ಧವಾಗಿತ್ತು. ಸ್ವಾಮಿರಾಯನ ಸೇವೆಯನ್ನು ಪ್ರಾಣದೇವರು ಮನಃಪೂರ್ವಕವಾಗಿ ಸ್ವೀಕರಿಸಿದ್ದರು. ಅವರ ಮೇಲೆ ವಾಯುದೇವರು ತಮ್ಮ ಅನುಗ್ರಹ ಹಸ್ತವನ್ನಿಟ್ಟರು. ಸ್ವಾಮಿರಾಯನ ನಾಲಿಗೆಯ ಮೇಲೆ ಬೀಜಾಕ್ಷರಗಳನ್ನು ಬರೆದರು. ಅದರೊಂದಿಗೆ ಶ್ರೀಮಂತ್ರಾಲಯಪ್ರಭುಗಳೇ ಅವರಿಗೆ ಪಾಠ ಹೇಳುವರೆಂಬುವದನ್ನೂ ಸೂಚಿಸಿದರು. ಶ್ರೀ ಹರಿವಾಯುಗಳ ಅನುಗ್ರಹವಾದ ಮೇಲೆ ಗುರುಗಳ ಅನುಗ್ರಹ ಆಗವದು ತಡವೇ?

ಸ್ವಾಮಿರಾಯನ ಜೀವನದಲ್ಲಿ ಇದೊಂದು ಅವಿಸ್ಮರಣೀಯದಿನ. ಪ್ರಾಜ್ಞ ನಾಮಕ ಪರಮಾತ್ಮನು ಅವರನ್ನು ಗಾಢನಿದ್ರಾವಸ್ಥೆಗೆ ಕರೆದುಕೊಂಡು ಹೋಗಿದ್ದಾನೆ. ಅವರು ಸ್ವಪ್ನದಲ್ಲಿ ಕಂಡದ್ದಾದರೂ ಏನು? ಸ್ವಾಮಿರಾಯನ ಮನೆತನದ ಗುರುಗಳೂ, e್ಞÁನಿಗಳೂ ಆದ ಇಭರಾಮಪುರದ ಅಪ್ಪಾ ಅವರು ಮುಂದೆ ಮುಂದೆ ಬರುತ್ತಿದ್ದಾರೆ. 'ಸ್ವಾಮಿರಾಯ, ಇತ್ತ ನೋಡು ಯಾರು ಬರುತ್ತಿದ್ದಾರೆ. ಕಾಮಧೇನು-ಕಲ್ಪವೃಕ್ಷ ಸ್ವರೂಪರಾದ ಸಾಕ್ಷಾತ್ ಮಂತ್ರಾಲಯ ಪ್ರಭುಗಳನ್ನು ಇಲ್ಲಿಗೆ ಕರೆದು ತಂದಿರುವೆ. ಇಂದಿನಿಂದ ನಿನ್ನ ಜೀವನದಲ್ಲಿ ಹೊಸ ಅಧ್ಯಾಯ ಪ್ರಾರಂಭವಾಯಿತು. ಈ ಮಧ್ವವಾರಿಧಿಚಂದ್ರಮರು ನಿನಗೆ ವೇದಾಂತ ಪಾಠಗಳನ್ನು ಹೇಳಿಕೊಡುವರು' ಎಂಬ ಮಾತುಗಳು ಸ್ವಾಮಿರಾಯನ ಕಿವಿಯ ಮೇಲೆ ಬಿದ್ದಂತಾಯಿತು.

ಸ್ವಪ್ನಾವಸ್ಥೆಯಲ್ಲಿದ್ದ ಸ್ವಾಮಿರಾಯನು ಒಂದು ಮಹಾನ್ ಬೆಳಕಿನ ಬೆಟ್ಟವೇ ಅಪ್ಪಾ ಅವರ ಹಿಂದೆ ಬರುತ್ತಿರುವದನ್ನು ಕಂಡನು. ಆ ದಿವ್ಯಪ್ರಭೆಯ ಮಧ್ಯದಲ್ಲಿ ಮಂದಸ್ಮಿತ ಮುಖಾರವಿಂದದ ಮಂತ್ರಾಲಯದ ಮುನಿಪುಂಗವರನ್ನು ಕಂಡನು. ಒಂದು ಕ್ಷಣ ಅವನ ಮೈತುಂಬ ರೋಮಾಂಚನವಾಯಿತು. 'ಓಂ ಅಥಾತೋಬ್ರಹ್ಮಜಿe್ಞÁಸಾ ಓಂ' ಪ್ರಾರಂಭವಾಯಿತು ಶ್ರೀ ಪರಿಮಳಾಚಾರ್ಯರ ಪಾಠ, 'ತವ ಸಂಕೀರ್ತನಾತ್ ವೇದಶಾಸ್ತ್ರಾರ್ಥ e್ಞÁನ ಸಿದ್ಧಯೇ'- ಎಂಬುದು ಶ್ರೀ ಗುರುರಾಜರ ಪ್ರಶಸ್ತಿ. ಅಂದಮೇಲೆ ಅವರ ಸಾಕ್ಷಾತ್ ದರ್ಶನ ಪಡೆದವನೇ ಧನ್ಯ; ಮಾನ್ಯ. ಶ್ರೀಕೃಷ್ಣನು ಅರ್ಜುನನಿಗೆ ಭಗವದ್ಗೀತೆಯನ್ನು ಬೋಧಿಸಿದಂತೆ, ಶ್ರೀವೇದವ್ಯಾಸರು ಆಚಾರ್ಯಮಧ್ವರಿಗೆ ತತ್ತ ್ವe್ಞÁನ ನೀಡಿದಂತೆ- ಶ್ರೀಗುರುರಾಜರು ಸ್ವಾಮಿರಾಯನಿಗೆ ವೇದಾಂತ ಪಾಠ ಹೇಳಿದರು. ಅವರಿಗೆ ಅರಿವಿಲ್ಲದಂತೆ ಶ್ರೀಮದಾಚಾರ್ಯರ ತತ್ತ ್ವe್ಞÁನ ಅವರ ತಲೆಯಲ್ಲಿ ತುಂಬಿತು; ಮನಸ್ಸಿನಲ್ಲಿ ಹೊಳೆಯಿತು. ಮುಖದಿಂದ ಹೊರಸೂಸತೊಡಗಿತು. ದಿನದಿಂದ ದಿನಕ್ಕೆ ಸ್ವಾಮಿರಾಯನ ಮುಖದ ಮೇಲೆ ದಿವ್ಯ ತೇಜಸ್ಸು ಕಾಣತೊಡಗಿತು.

ಸ್ವಾಮಿರಾಯನ ಚರ್ಯೆಯು ಹಾಗೂ ದಿನಚರಿಯೂ ಪೂರ್ಣ ಬದಲಾದವು. ನಿತ್ಯದಲ್ಲಿ ಧರ್ಮಾನುಷ್ಠಾನ, ಶುದ್ಧಕರ್ಮಾಚರಣೆ ಪ್ರಾರಂಭವಾದವು. ಮಿಕ್ಕ ಸಮಯವನ್ನೆಲ್ಲ ವೇದಾಂತ ಚಿಂತನೆಯಲ್ಲಿ ವ್ಯಯಿಸಹತ್ತಿದರು. ಇಂತಹ ಮಗನನ್ನು ಕಂಡರೆ ಯಾವ ತಂದೆಗೆ ತಾನೆ ಸಂತಸವಾಗಲಿಕ್ಕಿಲ್ಲ? ಶ್ರೀವೆಂಕಟಗಿರಿ ಆಚಾರ್ಯರ ಸಂತಸಕ್ಕೆ ಪಾರವೇ ಇಲ್ಲದಂತಾಯಿತು. ತಮಗೆ ಸಂತತಿಯಾಗುÀವದಕ್ಕೂ ಪೂರ್ವದಲ್ಲಿ ಶ್ರೀಅಪ್ಪಾ ಅವರು ಹೇಳಿದ ಮಾತು ಫಲಿಸಿದುದನ್ನು ಕಣ್ಣಾರೆ ಕಂಡ ಅವರು ಹಿರಿ ಹಿರಿ ಹಿಗ್ಗಿದರು. e್ಞÁನಿಗಳು ಹೇಳುವಂತೆ 'ವಾಚಮರ್ಥೋನುಧಾವತಿ' ಎಂಬ ಮಾತು ಅವರನಿದರ್ಶನಕ್ಕೆ ಬಂದಂತಾಯಿತು. ಉಡಾಳ ಸ್ವಾಮಿರಾಯನನ್ನು ಕಂಡ ಆ ಊರಿನ ಜನರು ಅವನು ವಿದ್ವಾಂಸನಾದದ್ದನ್ನು ನೋಡಿ ಅಚ್ಚರಿಪಟ್ಟರು. ಸ್ವಾಮಿರಾಯನು ವಿದ್ವಾನ್ ಸ್ವಾಮಿರಾಯರಾದರು. ಪಂಡಿತಮಂಡಳಿಯಲ್ಲಿ ಅವರಿಗೆ ಸ್ಥಾನ ದೊರೆಯಹತ್ತಿತು. 'ರಾಯ' ಪದವಿ ಹೋಗಿ 'ಆಚಾರ್ಯ' ಪದವಿ ತಾನೇ ತಾನಾಗಿ ಬಂದಿತು. ಎಲ್ಲರೂ ಇವರನ್ನು 'ಕೋಶಿಗಿ ಸ್ವಾಮಿರಾಚಾರ್ಯ' ಎಂದು ಸಂಬೋಧಿಸತೊಡಗಿದರು. ಇದೇ ಗುರುವನುಗ್ರಹದ ಸಂಕೇತವಲ್ಲವೇ?

ಸದಾ ಆಧ್ಯಾತ್ಮದ ಚಿಂತನೆಯಲ್ಲಿ ಇರುವ ಸ್ವಾಮಿರಾಚಾರ್ಯರಿಗೆ ಶ್ರೀಮದ್ಭಾಗವತ ಪುರಾಣವನ್ನು ಹೇಳುವ ತವÀಕ ಉಂಟಾಯಿತು. ಹಿರಿಯರ ಸಮ್ಮತಿಯನ್ನು ಪಡೆದು ಹೇಳುವದು ಸೂಕ್ತವೆಂದು ಅರಿತ ಆಚಾರ್ಯರು ತಮ್ಮ ತಂದೆಯವರಿಗೆ ನಮಸ್ಕರಿಸಿ ತಮ್ಮ ಅಭಿಲಾಷೆಯನ್ನು ನಿವೇದಿಸಿಕೊಂಡರು. ತಂದೆಗಾದರೋ ಸ್ವಗರ್À ಮೂರೇಗೇಣು ಉಳಿದಷ್ಟು ಸಂತಸ, ಹಿಗ್ಗು. ‘ಅಸ್ತು’ ಎಂದರು ಆಚಾರ್ಯರು ‘ವಿದ್ಯಾವತಾಂಭಾಗವತೇ ಪರೀಷಾ’ ಎಂಬುದು ಪಂಡಿತ ಮಂಡಳಿಯಲ್ಲಿ ಜನ-ಜನಿತವಾದ ಮಾತು. ಪ್ರಾರಂಭವಾಯಿತು, ಆಚಾರ್ಯರ ಅಮೋಘ ಪುರಾಣ ಕಥನ. ಶ್ರೀಮದ್ಭಾಗವತದ ಪ್ರಾರಂಭದ ಪದ್ಯವೊಂದನ್ನೇ ತೆಗೆದು ಕೊಂಡು ‘ಸಂಕ್ಷೇಪ ವಿಸ್ತರಾಭ್ಯಾಂಚ ಕಥಯಂತಿ ಮನೀಷಿಣ:’ ಎಂದು ಪ್ರಾರಂಭಿಸಿ ಸಮಗ್ರ ಭಾಗವತದ ಸಂದೇಶವೆಲ್ಲವೂ ಮೊದಲನೆಯ ಪದ್ಯದಲಿಯೇ ಹೇಗೆ ಅಡಗಿದೆ ಎಂಬುದನ್ನು ತೋರಿಸುತ್ತ ಆ ಶ್ಲೋಕದಲ್ಲಿ ಅಡಗಿದ ಶ್ರೀ ವೇದವ್ಯಾಸರ ಆಸೆ, ಆಕÀೂತಗಳನ್ನು ಎಳೆ-ಎಳೆಯಾಗಿ ಬಿಡಿಸಿ ವ್ಯಾಖ್ಯಾನಿಸಿದರು. ಆಲಿಸಿದ ಶ್ರೋತ್ರುಗಳು ಆಚಾರ್ಯರ ಅದ್ಭುತ ಪಾಂಡಿತ್ಯವನ್ನು- ವಾಗ್ಝರಿಯನ್ನು ಕೇಳಿ ಆಶ್ಚರ್ಯಚಕಿತರಾದರು. ಮನದಣಿ ಸಂತೋಷಪಟ್ಟರು. `ಕಿಮಲಭ್ಯಂ ಭಗವತೀ ಪ್ರಸನ್ನೇ ಶ್ರೀನಿಕೇತನೆ’É ಅಲ್ಲವೆ? ಭಗಂತನ ಪ್ರಸಾದವಾದರೆ ಯಾವುದು ತಾನೆ ಅಸಾಧ್ಯ?

ನಂಬಿ ಕೆಟ್ಟವರಿಲ್ಲವೋ

‘ನಂಬಿ ಕೆÀಟ್ಟವರಿಲ್ಲವೋ, ಶ್ರೀಗುರುರಾಜರ ನಂಬದೆ

ಕೆಡಬೇಡಿರೋ’- ಎನ್ನುತ್ತದೆ ದಾಸವಾಣಿ



ಶ್ರೀಗುರುರಾಜರ ಕರುಣಾನುಗ್ರಹಗಳನ್ನು ಪಡೆದ ಶ್ರೀಸ್ವಾಮಿರಾಯರಿಗೆ ಶ್ರೀರಾಯರಲ್ಲಿ ಭಕ್ತಿ-ಶ್ರದ್ಧೆಗಳು ಇಮ್ಮಡಿಗೊಂಡವು. ತಮ್ಮ ಜೀವನದಲ್ಲಿ ಅದ್ಭುತ ಪವಾಡವನ್ನು ಮಾಡಿ ಮೂಕನನ್ನೂ ಮುಕುಂದಶಯನನನ್ನಾಗಿ ಮಾಡುವ ಕುಂಠನನ್ನೂ ಶ್ರೇಷ್ಠ ಪಂಡಿತನನ್ನಾಗಿಸುವ ಶ್ರೀರಾಯರ ಅದ್ಭುತ ಸಾಮಥ್ರ್ಯವನ್ನು ಸ್ವತಃ ಅನುಭವಿಸಿದ ಅವರು ಶ್ರೀರಾಯರ ವಿಶೇಷ ಸೇವೆಯನ್ನು ಮಾಡಲು ತಮ್ಮ ಶೇಷಾಯುಷ್ಯವನ್ನೇ ಅವರ ಸೇವೆಗೆ ಮುಡಿಪಾಗಿಡಲು ನಿರ್ಧರಿಸಿದರು. ಮಂಚಾಲಿಯ ಹತ್ತಿರದ ಊರಿನವರಾದ ಅವರು ಹಲವು ಸಲ ಅಲ್ಲಿಗೆ ಹೋಗಿ ಬಂದಿದ್ದರೂ ಈ ಸಲ ಅಲ್ಲಿಗೆ ಹೊರಡುವ ಅವರ ಸಂಕಲ್ಪವೇ ಬೇರೆಯಾಗಿತ್ತು. ಬೃಂದಾವನದಲ್ಲಿ ಶ್ರೀಗುರುರಾಜರನ್ನು ಕಾಣುವ ಅವರ ದೃಷ್ಟಿಯೇ ಭಿನ್ನವಾಗಿತ್ತು. ಆಚಾರ್ಯರು ಮಂತ್ರಾಲಯದ ಮಂದಿರವನ್ನು ಪ್ರವೇಶಿಸಿದರು. ಗುರುರಾಜರ ಬೃಂದಾವನದ ಮುಂದೆ ನಿಂತರು.

‘ನೋಡಿದ್ಯಾ ಗುರುರಾಯರ ನೋಡಿದ್ಯಾ’-ಎಂದು ತಮ್ಮ ಮನಸ್ಸನ್ನು ಕೇಳಿಕೊಂಡರು. ಅವರ ಮನದ ಮೂಲೆಯಲ್ಲಿ ಉತ್ತರ ಸಿದ್ಧವಾಗಿತ್ತು.

‘ನೋಡಿದೆ ಗುರುರಾಯರನ್ನ ಈ

ರೂಢಿಯೊಳಗೆ ಮೆರೆವೊ ಸಾರ್ವಭೌಮನ್ನ’

ಅಂದು ಅವರು ಕಂಡ ದೃಶ್ಯವಾದರು ಎಂತಹುದು? ಅವರು ಮುಂದೆ ದಾಸರಾದ ಮೇಲೆ ಅಂದಿನ ಅವರ ಅಪೂರ್ವ ಅನುಭವವನ್ನು ತಮ್ಮ ಕೀರ್ತನೆಯಲ್ಲಿ ಶಬ್ದ ಮಾಧ್ಯಮದಲ್ಲಿ ಬಿಡಿಸಿದ್ದಾರೆ.

‘ಮುದ್ದು ಬೃಂದಾವನ ಮಧ್ಯದೊಳಗಿದ್ದು

ತಿದ್ದಿ ಹಚ್ಚಿದ ನಾಮ-ಮುದ್ರೆಗಳೊಪ್ಪುತೀಗ

ಗಳದೊಳು ಶ್ರೀ ತುಳಸಿ ನಳಿನಾಕ್ಷÀಮಾಲೆಯು

ಚಲುವಾ ಮುಖದೊಳು-ಪೊಳೆವೊ ದಂತಗಳಿಂದ

ಹೃದಯ ಸದನದಲ್ಲಿ ಪದುಮನಾಭನ ಭಜಿಸಿ

ಮುದಮನದಿಂದ ನಿತ್ಯ ಸದಮಲ ರೂಪ ತಾಳಿ’

ದಂತಹ ಶ್ರೀ ಗುರುರಾಜರ ಭವ್ಯ ಆಕೃತಿಯನ್ನು ಕಂಡ ಅವರೇ ದನ್ಯರು. ಎಷ್ಟು ಜನರಿಗೆ ಇಂಥ ಪುಣ್ಯ ಲಭಿಸೀತು!

ಅದೇ ಉಸುರಿನಲ್ಲಿ ತಮ್ಮ ಮನ ಮಂದಿರಕ್ಕೂ ಆಗಮಿಸುವಂತೆ ಗುರುಗಳನ್ನು ಭಕ್ತ್ಯುದ್ರೇಕದಿಂದ ಪ್ರಾರ್ಥಿಸಿದರು.

‘ದಯಮಾಡೋ ದಯಮಾಡೋ

. . . . . . . . . . . . . . . .

. . .. . . . . . . . . . . . . .

ನಿಲ್ಲಿಸೊ ಎನಮನ ಎಲ್ಲಿ ಚಲಿಸದಂತೆ’,



ಶ್ರೀಗುರುರಾಜರಿಗೆ ಅವರ ಪ್ರಾರ್ಥನೆ ಕೇಳಿಸಿತೇನೋ! ಗುರುರಾಜರು ಅವರ ಮನವನ್ನು ಪ್ರವೇಶಿಸಿದರು-ತಕ್ಷಣ ಆಚಾರ್ಯರು

‘ಬಂದ ಶ್ರೀ ರಾಘವೇಂದ್ರ ಮೂರುತಿ ಮನ-

ಮಂದಿರದೊಳಗೆ ಸರಸದಿ

ಬಂದನು ಭÀಕುತನ ಬಂಧನ ಬಿಡಿಸ್ಯಾ-

ನಂದ ನೀಡುತ ಮುದದಿಂದಲಿ ಭರದಿಂದ’-

ಎಂದು ಹಾಡಿ ಕುಣಿದಾಡಿದರು. ಮಂತ್ರಾಲಯದಿಂದ ಹಿಂದಿರುಗಿ ತಮ್ಮ ಊರಿಗೆ ಮರಳಿದರೂ ತಮ್ಮ ಮನೆಯನ್ನೇ ಮಂತ್ರಾಲಯವನ್ನಾಗಿಸಿ, ಸದಾ ಮನಸ್ಸಿನಲ್ಲೆ ಬೃಂದಾವನವನ್ನು ಸ್ಥಾಪಿಸಿ, ಶ್ರೀಗುರುರಾಜರ ಸ್ಮರಣೆಯನ್ನೇ ಮಾಡುತ್ತಿದ್ದ ಈ ಏಕಾಂತ ಭಕ್ತನ ಪ್ರಾರ್ಥನೆಗೆ ಮೆಚ್ಚಿದ ಶ್ರೀ ಗುರುರಾಜರು ಆಚಾರ್ಯರ ಮನೆಗೂ ಬಂದರು.

'ಕರೆದಲ್ಲಿಗೆ ಬರುವ ಮಂತ್ರಾಲಯಧೊರೆಯ' ಎಂಬ ಭಕ್ತರ ಮಾತನ್ನು ಸತ್ಯವನ್ನಾಗಿಸಿದರು. ಆಚಾರ್ಯರ ಭಕ್ತಿಗೆ ಮೆಚ್ಚಿದ ಶ್ರೀರಾಘವೇಂದ್ರ ಸ್ವಾಮಿಗಳು ಅವರ ದೇªರÀ ಮನೆಯಲ್ಲಿಯ ಒಂದು ಮಣೆಯ ಮೇಲೆ ಮೂಡಿನಿಂತರು. ಸದಾ ಅವರ ಮನಸ್ಸಿನಲ್ಲಿ ಹೊಳೆಯುತ್ತಿದ್ದ ಗುರುಗಳ ಆಕೃತಿಯು ಆ ಮಣೆಯ ಮೇಲೆ ಸ್ಪಷ್ಟವಾಗಿ ಗೋಚರಿಸತೊಡಗಿತು. ತಮ್ಮ ಭಾಗ್ಯದ ನಿಧಿ, ಒಲುಮೆಯಸಿರಿ, ಬದುಕಿನ ಭಾಗ್ಯ, ಚಿಂತನೆಯ ಸಾಕಾರ ಮೂರ್ತಿಯನ್ನು ಕಂಡ ಆಚಾರ್ಯರ ಸಂತೋಷಕ್ಕೆ ಪಾರವೇ ಇಲ್ಲದಂತಾಯಿತು. ಅದೆ ಉತ್ಸಾಹದಲ್ಲಿ ಆ ಮಣೆಯನ್ನು ತಮ್ಮ ಮಸ್ತಕದಲ್ಲಿಟ್ಟುಕೊಂಡು ಆನಂದಾತಿರೇಕÀದಲ್ಲಿ ನೃತ್ಯ ಮಾಡಿದರು. ಗಂಧಾಕ್ಷÀತೆ-ಹೂ-ತುಳಸಿಗಳಿಂದ ಶ್ರೀಗುರುರಾಜರನ್ನು ಪೂಜಿಸಿದರು. ಮಂಗಳಾರತಿ ಎತ್ತಿ ಸಾಷ್ಟಾಂಗ ನಮಸ್ಕಾರ ಹಾಕಿದರು. ಅಂದಿನಿಂದ ಆ ಮಣೆಯು ಆಚಾರ್ಯರ ಸಂಗಾತಿಯಾಯಿತು.

ಆಚಾರ್ಯರು ಆ ಮಣೆಯನ್ನು ಇಡುವದಕ್ಕಾಗಿಯೇ ಪಂಚಲೋಹದ ಒಂದು ಬೃಂದಾವನವನ್ನು ಮಾಡಿಸಿ, ಅದರಲ್ಲಿ ಆ ಮಣೆಯನ್ನು ವಿಧ್ಯುಕ್ತವಾಗಿ ಪ್ರತಿಷ್ಠಾಪಿಸಿದರು. ಅದು ಅವರ ನಿತ್ಯ ಪೂಜೆಯ ಬೃಂದಾವನವಾಯಿತು. ಆಚಾರ್ಯರು ತಾವು ಹೊದಲ್ಲೆಲ್ಲಾ ಆ ಬೃಂದಾವನವನ್ನು ಹೆಗಲಮೇಲೆ ಇಟ್ಟುಕೊಂಡು ಹೋಗುತ್ತಿದ್ದರು. ಹೀಗೆ ಗುರುಗಳು ಅವರಿಗೆ ಸದಾ ಬೆಂಗಾವಲಾಗಿ, ರಕ್ಷಕರಾಗಿದ್ದಾಗ ಯಾವುದು ತಾನೆ ಅಸಾಧ್ಯವಾದೀತು? ಅಂದು ಅವರು ಪ್ರತಿಷ್ಟಾಪಿಸಿದ ಪಂಚಲೋಹದ ಬ್ರಂದಾವನವನ್ನು ನಾವು ಇಂದಿಗೂ ಕೌತಾಳದಲ್ಲಿ ಕಾಣಬಹುದಾಗಿದೆ.

ಸ್ವಾಮಿರಾಚಾರ್ಯರು ‘ಗುರುಜಗನ್ನಾಥವಿಠ್ಠಲ’ರಾದರು

ಅಂದಿನ ದಿನಗಳಲ್ಲಿ ಆಚಾರ್ಯರು ವೈಷ್ಣವಾಗ್ರೇಸÀರರಾಗಿ, ಗುರುರಾಜರ ಆದರ್ಶಭಕ್ತರಾಗಿ ಮೆರೆಯುತ್ತಿದ್ದರು. ಸಂಸ್ಕøತ ಭಾಷಾ ವಿಶಾರದರಾದ ಅವರು ಹಲವಾರು ಗ್ರಂಥಗಳನ್ನು ಬರೆದಿದ್ದಾರೆ. ಅವೆಲ್ಲವೂ ಪಾಂಡಿತ್ಯ ಪೂರ್ಣಕೃತಿಗಳಾಗಿದ್ದು ಪಠನೀಯವಾಗಿವೆ. ಉದಾ-(ಬ್ರಹ್ಮಸೂತ್ರ ಭಾಷ್ಯಾರ್ಥಸÀಂಗ್ರಹ ; ಹರಿಕಥಾಮೃತಸಾರಚಂದ್ರಿಕಾ) ಆದರೆ ಸ್ವಾಮಿರಾಚಾರ್ಯರಿಗೆ ಇದರಿಂದ ತೃಪ್ತಿಯಾಗಲಿಲ್ಲ. ತಾವೂ ಹರಿದಾಸರಂತೆ ವೇಷತೊಟ್ಟು, ತಂಬೂರಿ ಹಿಡಿದು ಹಾಡಿ, ಕುಣಿದು, ನರ್ತನ ಮಾಡುತ್ತ ಶ್ರೀಹರಿವಾಯುಗುರುಗಳಿಗೆ ಸಂಗೀತ-ಕೀರ್ತನ-ನರ್ತನ ಸೇವೆ ಅರ್ಪಿಸಲು ಅವರ ಮನಸ್ಸು ತವಕಪಡುತ್ತಿತ್ತು. ನೂರಾರು ಕೀರ್ತನೆಗಳು ಅವರ ಮನದಾಳದಲಿ ಹುದುಗಿದ್ದು ಅವರ ಬಾಯಿಂದ ಹೊರಬರಲು ತವಕಿಸುತ್ತಿದ್ದವು. ತಮ್ಮ ಭಕ್ತನ ಅಂತರಂಗದ ಹಸಿವು ಗುರುರಾಜರಿಗೆ ತಿಳಿದೇ ಇತ್ತು. ಆಚಾರ್ಯರ ಮನಸ್ಸು ಒಂದು ಹದಕ್ಕೆ ಬರುವದನ್ನೇ ಅವರು ಕಾಯುತ್ತಿದ್ದರು. ಆ ಸುದಿನವೂ ಬಂತು. ಅಂಕಿತವನ್ನು ಸ್ವೀಕರಿಸಿ, ಹರಿದಾಸರಾಗುವಂತೆ ಮಂತ್ರಾಲಯ ಪ್ರಭುಗಳು ಅವರಿಗೆ ಪ್ರೇರಣೆಯನ್ನು ನೀಡಿದರು.

'ಗುರು ಜಗನ್ನಾಥೆಂ¨ ಮುದ್ರಿಕಾ ನೆಂಟತಂದೆ

ಗುರು ಗೋಪಾಲದಾಸಾರ್ಯರಿಂದಾ|

ಭರದಿ ಕೈಗೊಂಡು ಪ್ರಾಕೃತ ಭಾಷ್ಯಾದಿಂದಲಿ

ವರತತ್ವರಹಸ್ಯ ವರದ ಕರುಣಾರ್ಣವ|'

ಎಂಬುದಾಗಿ ದಾಸರ ಶಿಷ್ಯರಾದ ವರದವಿಠಲದಾಸರು ಹೇಳಿದ್ದಾರೆ. ಸ್ವಾಮಿರಾಚಾರ್ಯರು ನೆಂಟತಂದೆ ಗುರುಗೋಪಾಲವಿಠಲಾಂಕಿತರೂ, ಗೋಪಾಲದಾಸರ ವಂಶೀಕರೂ ಆದ ಶ್ರೀಕೃಷ್ಣದಾಸರಿಂದ ‘ಗುರುಜಗನ್ನಾಥವಿಠಲ’ ಎಂಬುದಾಗಿ ಅಂಕಿತವನ್ನು ಪಡೆದರು. ಆಚಾರ್ಯ ಮಧ್ವರಿಂದ ಪರಂಪರಾ ಪ್ರಾಪ್ತವಾಗಿ ಬಂದ ಹರಿದಾಸ ಶ್ರೇಣಿಯಲ್ಲಿ ಖ್ಯಾತ ನಾಮಾಂಕಿತರಾದರು. ತಮ್ಮ ಕೊನೆಯುಸಿರಿರುವ ವರೆಗೂ ಹರಿದಾಸ್ಯಸಿದ್ಧಿಯನ್ನು ಸಾಧಿಸುತ್ತ, ಕನ್ನಡ ದಾಸಸಾಹಿತ್ಯಕ್ಕೆ ಅಮೋಘ ಸೇವೆಯನ್ನು ಸಲ್ಲಿಸಿದರು.

ಸ್ವಾಮಿರಾಚಾರ್ಯರಾಗಿ ಈ ಜೀವ ಸಾಧಿಸಿದ್ದು ಒಂದು ಘಟ್ಟ್ಟವಾದರೆ, ಇದೇ ಜೀವ ಗುರುಜಗನ್ನಾಥವಿಠಲರಾಗಿ ಸಾಧಿಸಿದ್ದು ಇನ್ನೊಂದು ಫಟ್ಟ. ತಮ್ಮ ಜೀವನಕ್ಕೇ ಹೊಸ ತಿರುವನ್ನು ಕೊಟ್ಟು, ತಮ್ಮನ್ನು ಈ ಸ್ಥಿತಿಗೆ ತಂದ ಮಂತ್ರಾಲಯದ ಮುನಿಪುಂಗವರನ್ನು ನೆನೆದಷ್ಟೂ ಅವರ ಹೃದಯ ಭಕ್ತಿಭಾವನೆಯಿಂದ ಉಕ್ಕಿ ಬರುತ್ತಿತ್ತು; ಕೃತಜ್ಞತೆಯಿಂದ ಅವರ ಕಣ್ಣುಗಳು ತೇವÀಗೊಂಡಿದ್ದವು. ಶ್ರೀಗುರುರಾಜರ ದರ್ಶನಾಕಾಂಕ್ಷಿಗಳಾಗಿ ದಾಸರು ಮಂತ್ರಾಲಯಕ್ಕೆ ಬಂದರು. ರಾಯರ ಬೃಂದಾವನದ ಎದುರು ನಿಂತಾಕ್ಷಣ ಶ್ರೀರಾಯರ ಅಗಮ್ಯ ಮಹಿಮೆಯನ್ನು ಕುರಿತಾದ ಪದಗಳು ಅವರ ಬಾಯಿಂದ ಪುಂಖಾನುಪುಂಖವಾಗಿ ಹೊರಬರುತ್ತಿದ್ದವು. ಬೃಂದಾವನದಲ್ಲಿ ಕುಳಿತ ಗುರುರಾಜರು ತಮ್ಮ ದರ್ಶನವನ್ನು ದಾಸರಿಗೆ ಅನುಗ್ರಹಿಸಿದರು.

'ರಾಯರ ನೋಡಿರೈ ಶುಭತಮ-ಕಾಯರ-ಪಾಡಿರೈ

ತೋಯಜ-ಪತಿ-ನಾರಾಯಣ ಪದಯುಗ

ಭೃಂಗಾ-ಭಕ್ತ-ಕೃಪಾಂಗಾ

ಸುಂದರ ಮುಖ ಅರವಿಂದ ಲೋಚನ, ಘ್ರಾಣ

ಕುಂದ ಕುಟ್ಮಿಲ ಸಮರದನ, ರಾಜಿತ ವದನ

ಮಂದಸ್ಮಿತಯುತ-ದ್ವಂದ್ವಓಷ್ಠ ಶ್ರುತಿ

ಛಂದವಾಗಿಹ ಚುಬಕಾ, ಫಾಲದಿ ತಿಲಕಾ

. . . . . . . . . . . . . . . . . . . .

. . . . . . . . . . . . . . . . . . . .

ಹಸ್ತದಿ ರಾಜಿಪ ಪುಸ್ತಕ ಮಣಿಮಾಲಾ

ಸ್ವಸ್ತಿಕಾಸನ-ಸ್ಥಿತ-ಮೋದ, ಕೃಪವಿನೋದ

ಮಸ್ತಕದಿಂದಲಿ ವಿಸ್ತøತ ಕಾಷಾಯ

ವಸ್ತ್ರದಿ ಶೋಭಿಪ ಗಾತ್ರ ಶುಭಚರಿತ್ರ'

ತಾವು ಕಂಡ ರಾಯರನ್ನು ದಾಸರು ಹೀಗೆ ವರ್ಣಿಸಿದ್ದಾರೆÀ. ಮಂತ್ರಾಲಯ- ದಲ್ಲಿಯ ರಾಯರ ಭಕ್ತರನ್ನೂ ಶ್ರೀಗುರುರಾಜರಿಗೆ ಸಲ್ಲಿಸುವ ವಿವಿಧ ಬಗೆಯ ಸೇವೆಗಳನ್ನೂ ಕಣ್ತುಂಬನೋಡಿ ಆನಂದಿಸಿದರು. ಸಂಜೆಯಾಗುತ್ತಿದ್ದಂತೆ ಶ್ರೀಗುರುರಾಜರ ರಥೋತ್ಸವದ ಸಿದ್ಧತೆ ನಡೆಯಹತ್ತಿತು.

ಶ್ರೀಗುರುರಾಜರ ಉತ್ಸವ ಮೂರ್ತಿಯನ್ನು ರಥದಲ್ಲಿ ತಂದಿರಿಸಿದರು. ರಥಾರೂಢರಾದ ಅಗÀಮ್ಯ ಮಹಿಮರನ್ನು ಕಂಡ ದಾಸರು ರೋಮಾಂಚನ ಗೊಂಡರು

'ರಥವಾನೇರಿದ ಯತಿವರನ್ಯಾರೇ ಪೇಳಮ್ಮಯ್ಯಾ
ವಿತತ ಮಹಿಮಾ-ಗತಿ ಜನರನತಿ
(check-incomplete?)
*****



ಶ್ರೀರಾಯರ ಮುದ್ದು ಕಂದ ಅಂದರೆ ಶ್ರೀಗುರುಜಗನ್ನಾಥದಾಸರು

ಗುರುಜಗನ್ನಾಥದಾಸರು ಶ್ರೀರಾಯರ ಸಂಪೂರ್ಣಾನುಗ್ರಹಕ್ಕೆ ಪಾತ್ರರಾದವರು.ಇವರಚರಿತ್ರೆ👆ಓದಿ ಮನನ ಮಾಡಿಕೊಂಡು,ದಾಸರ ಸ್ಮರಣೆ ಮಾಡಿದರೆ ಶ್ರೀರಾಯರ ಅನುಗ್ರಹ ಆಗುವುದರಲ್ಲಿ ಸಂದೇಹವಿಲ್ಲ.

ಶ್ರೀ ಗುರು ಜಗನ್ನಾಥ ದಾಸರು. ಕೌತಾಳಂ
ಇಂದು ಅವರ ಆರಾಧನೆ.
🙏🙏
ಶ್ರೀ ಇಭರಾಮಪುರ ಅಪ್ಪಾವರ ಅನುಗ್ರಹ ದಿಂದ ಜನಿಸಿದ ಮಹಾನುಭಾವರು.
ನಂತರ ಪ್ರಾಣದೇವರ ಸೂಚನೆಯಂತೆ
ನಂತರ ಅವರಿಗೆ 
ಸ್ವಪ್ನದಲ್ಲಿ ಶ್ರೀ ಇಭರಾಮಪುರ ಅಪ್ಪಾವರು ಹಾಗು ಶ್ರೀ ರಾಯರು ಬಂದು ಪಾಠವನ್ನು ಉಪದೇಶ ಮಾಡಿದರು
ಅವರಿಗೆ ಅಂಕಿತವನ್ನು ಶ್ರೀ ಗೋಪಾಲದಾಸರ ವಂಶೀಕರಾದ  ನೆಂಟಪೆತ್ತ ತಂದೆ ಗೋಪಾಲವಿಠ್ಠಲರು ಇಂದ ಶ್ರೀ ಗುರು ಜಗನ್ನಾಥ ವಿಠ್ಠಲ ಅಂತ ಪ್ರಾಪ್ತಿ ಆಯಿತು.
ಆ ನಂತರ ಅವರ ದಿನಚರ್ಯೆ ಬದಲಾಯಿತು.
ರಾಯರ ಮೇಲೆ ಅನೇಕ ಕೃತಿಗಳು ರಚಿಸಿದ್ದಾರೆ. 
ತೂಗಿರೆ ರಾಯರ ಕೃತಿ ಹೇಳದವರಿಲ್ಲ.,ಕೇಳದವರಿಲ್ಲ.
ಶ್ರೀ ವರದೇಂದ್ರ ಗುರುಗಳ ಸ್ವಪ್ನ ಸೂಚನೆ ಯಂತೆ ಲಿಂಗಸೂಗುರಿಗೆ ಬಂದು 
ಸ್ವಾಮಿ ರಾಯರಿಗೆ ಶ್ರೀ ವರದೇಶ ವಿಠ್ಠಲ ಅಂಕಿತವನ್ನು ಕೊಟ್ಟು ಅವರಿಗೆ ಅನುಗ್ರಹಿಸಿದ ಮಹಾನುಭಾವರು.
ಆನಂತರ ಶ್ರೀ ವರದೇಶದಾಸರ ಪ್ರಾರ್ಥನೆ ಯಂತೆ 
ಶ್ರೀ ಗೊರೆಬಾಳ ಹನುಮಂತ ರಾಯರಿಗೆ ಸುಂದರ ವಿಠ್ಠಲ ಇನ್ನೂ ಇಬ್ಬರಿಗೂ  ಅಂಕಿತವನ್ನು ಕೊಟ್ಟು ಉದ್ದರಿಸಿದ ಮಹಾನುಭಾವರು.
*ಇವರ ಅವತಾರವನ್ನು ಶ್ರೀ ವರದೇಶದಾಸರು ತಮ್ಮ ಕೃತಿಯಲ್ಲಿ ಹೊರಗೆಡಿಹಿದಾಗ,
ತಮ್ಮ ಕುರುಹು  ಧರೆಯೊಳು ನರರಿಗೆ ತಿಳಿದ ಮೇಲೆ ಇರಬಾರದೆಂದು ತಿಳಿದು
ಸ್ವಾಮೀರಾಯ ನೀನು ಊರಿಗೆ ಹೊರಡು ನಿನ್ನ ಹಿಂದೆ ನಾವು ಬರುತ್ತೇವೆ ಅಂತ ಹೇಳಿದರು..
ಅದರಂತೆ ಶ್ರೀ ವರದೇಶದಾಸರು ತಮ್ಮ ಗುರುಗಳ ಮಾತಿನಂತೆ ಕೌತಾಳಂನಲ್ಲಿ ಆಶ್ವೀಜ ಶುದ್ಧ ತೃತೀಯ ಶ್ರೀ ರಾಯರ ಸನ್ನಿಧಿಯಲ್ಲಿ, ತಮ್ಮ ಗುರುಗಳ ತೊಡೆಯ ಮೇಲೆ ತಮ್ಮ ಇಹಲೋಕ ತ್ಯಜಿಸಿದರು
ತಾವೇ ನಿಂತು ತಮ್ಮ ಶಿಷ್ಯ ರ ಕಾರ್ಯಗಳನ್ನು ಮುಗಿಸಿ,ಅವರ ವೈಕುಂಠ ಸಮಾರಾಧನೆ ಆದ ಮೇಲೆ 
ಆಶ್ವೀಜ ಕೃಷ್ಣ ಪಾಡ್ಯದಂದು ಭಗವಂತನ ಸ್ಮರಣೆ ಮಾಡುತ್ತಾ ತಮ್ಮ ಇಹಲೋಕವನ್ನು ತ್ಯಜಿಸಿದರು
ಇವರನ್ನು ಶ್ರೀ ವರದೇಶದಾಸರು ಬಹಳವಾಗಿ ಸ್ತುತಿಸಿದ್ದಾರೆ.
*ಇವರು ನಾಲ್ಕು ಅವತಾರ,
ಶ್ರೀಅಪ್ಪಣ್ಣಾಚಾರ್ಯರು(ರಾಯರ ಸ್ತೋತ್ರ ಬರೆದವರು) ೨ನೇ ಅವತಾರ ಬೆನಕಪ್ಪ ಶ್ಯಾನುಭೋಗರಾಗಿ
೩ನೇ ಅವತಾರ ಕರ್ಜಿಗಿ ದಾಸರು ಎಂದೆ ಪ್ರಸಿದ್ಧರಾಗಿರುವ ಶ್ರೀದ ವಿಠ್ಠಲ ರಾಗಿ,
೪ನೇ ಅವತಾರ ಕೌತಾಳಂ ಶ್ರೀ ಗುರು ಜಗನ್ನಾಥ ದಾಸರು
ಹೀಗೆ ಅವರನ್ನು ಸ್ತುತಿಸಿದ್ದಾರೆ.
ಅಂತಹವರ ಸ್ಮರಣೆ ನಮ್ಮ ಅರಿಷ್ಟ ನಿವಾರಣೆ.
🙏

ಶ್ರೀ ಗುರು ಜಗನ್ನಾಥ ದಾಸರಲ್ಲಿ ಭಗವಂತನು ನಿಂತು ತೋರಿದ ಮಹಿಮೆ👇
ಶಿಗ್ಗಾವಿಯಲ್ಲಿ  ರಾಮಾಚಾರ್ಯ,ಸುಶೀಲಮ್ಮ ಅನ್ನುವ ಬಡ ದಂಪತಿಗಳಿದ್ದರು.
ಇವರಿಬ್ಬರೂ ಶ್ರೀ ಗುರು ಜಗನ್ನಾಥ ದಾಸರನ್ನು ಕಂಡರೆ ಅತೀವ ಭಕ್ತಿ, ವಿಶ್ವಾಸ.
ಬಹು ವರ್ಷಗಳು ಆದರು ಸಂತಾನವಾಗಿದ್ದಿಲ್ಲ.
ಶ್ರೀ ಗುರುಜಗನ್ನಾಥ ದಾಸರ ವಾಣಿಯಂತೆ ಕಲಿಯುಗದ ಕಲ್ಪ ವೃಕ್ಷ ಮಂತ್ರಾಲಯ ಪ್ರಭುಗಳು ಆದ ಶ್ರೀ ರಾಯರ ಸೇವೆ ಯನ್ನು ಮಾಡಿ ಓರ್ವ ಪುತ್ರ ನನ್ನು ಪಡೆದರು.
ಆದರೆ ದುರದೃಷ್ಟವಶಾತ್ ಆ ಹೆಣ್ಣು ಮಗಳಿಗೆ ಬಾಣಂತಿ ಸಮಯದಲ್ಲಿ ರೋಗ ಹತ್ತಿಕೊಂಡಿತು.ಯಾವ ಔಷಧ ಚಿಕಿತ್ಸೆ ಫಲಕಾರಿಯಾಗಲಿಲ್ಲ.
ನಿತ್ಯ ವು ರಾಮಾಚಾರ್ಯರು ದಾಸರ ಬಳಿ ಬಂದು ತಮ್ಮ ಪತ್ನಿ ಯ ಅನಾರೋಗ್ಯ ಬಗ್ಗೆ ಹೇಳಿಕೊಳ್ಳುತ್ತಾ ಇದ್ದರು.
ಒಂದು ದಿನ ಸಾಯಂಕಾಲ ಮಳೆ ಬಂದು ನಿಂತ ಸಮಯ.
ಸುಜೀವಿಗಳಾದ ದಂಪತಿಗಳ ಉದ್ಧಾರಕ್ಕಾಗಿ ದಾಸರು ಅವರ ಮನೆಗೆ ಬರುತ್ತಾರೆ. ಒಳಗಡೆ ಹೆಂಡತಿಯ ಆರೈಕೆ ಯಲ್ಲಿ ತೊಡಗಿದ್ದ ರಾಮಾಚಾರ್ಯರು ದಾಸರನ್ನು ಕಂಡು ಓಡಿಬಂದು ಸತ್ಕಾರ ಮಾಡುತ್ತಾನೆ.
ಅಲ್ಲೇ ಅವರ ಮನೆಯ ಕಟ್ಟಿಯ ಮೇಲೆ ಕುಳಿತ ದಾಸರು ತಮ್ಮ ಕಾಲಿಗೆ ಅಂಟಿಕೊಂಡಿದ್ದ ಮಣ್ಣನ್ನು ಕೈಯಿಂದ ತೆಗೆಯುತ್ತಾ ಶ್ರೀ ವಿಜಯ ಪ್ರಭು ಗಳು ರಚಿಸಿದ ಶ್ರೀ ನರಸಿಂಹ ದೇವರ ಸುಳಾದಿ ಪಠಿಸುತ್ತಾ ಇದ್ದರು.
ಪಾರಾಯಣ ಪೂರ್ತಿ ಆಯಿತು.
ಅವಾಗ ರಾಮಾಚಾರ್ಯ ದಾಸರ ಬಳಿ ನಿವೇದನೆ ಮಾಡಿಕೊಳ್ಳುತ್ತಾನೆ.
ಮುತ್ಯಾ ನನ್ನ ಹೆಂಡತಿಗೆ ರೋಗ ಕಡಿಮೆ ಆಗುತ್ತಾ ಇಲ್ಲ.  ದಿನದಿಂದ ದಿನಕ್ಕೆ ಅವಳು ಕೃಶಳಾಗುತ್ತಾ ಇದ್ದಾಳೆ.ನಿಮ್ಮ ಮಾತಿನಂತೆ ಪುತ್ರ ಜನನವಾಗಿದೆ.ಇವಾಗ ಅವಳಿಗೆ ಬಂದ ರೋಗವನ್ನು ನೀವೆ ಪರಿಹರಿಸಬೇಕು ಅಂತ ದೀನನಾಗಿ ಕೇಳುತ್ತಾನೆ.
ಅವಾಗ ದಾಸರು ರಾಮಾಚಾರ್ಯ ನಾನು ಸಹ ನಿನ್ನ ಹಾಗೇ ಸಾಮಾನ್ಯ ಮನುಷ್ಯ 
ನಿಶ್ಚಲ ಭಕ್ತಿ ಇಂದ ಪ್ರಾಣದೇವರ ಸೇವಿಸಿದೆ.ಅವರ ಮುಖಾಂತರ ಸಂತಾನ ಗೋಪಾಲ ಕೃಷ್ಣ ನು ನಿಮಗೆ ಸಂತಾನ ಅನುಗ್ರಹ ಮಾಡಿದ
ನನಗೆ ಯಾವ ವೈದ್ಯ ತಿಳಿಯದು.ನಿನಗಾಗಿ ಧನ್ವಂತರಿ ರೂಪಿ ಪರಮಾತ್ಮನ ನ್ನು ಪ್ರಾರ್ಥನೆ ಮಾಡುತ್ತೇನೆ
ಜ್ವರ ವನ್ನು ,ಅಪಮೃತ್ಯುವನ್ನು ಪರಿಹರಿಸುವ ನರಸಿಂಹ ದೇವರು ನಿನ್ನ ಸಂಕಷ್ಟ ಪರಿಹರಿಸುವ. 
ಅಂತ ಹೇಳಿ ಅಲ್ಲಿ ಇಂದ ಹೋಗುತ್ತಾರೆ.
ರಾಮಾಚಾರ್ಯ ನಿಗೆ ಏನು ತಿಳಿಯಲಿಲ್ಲ. 
ದಾಸರು ಕುಳಿತ ಜಾಗದಲ್ಲಿ ಅವರು ತಮ್ಮ ಕಾಲಿನಿಂದ ತೆಗೆದ ಮಣ್ಣಿನ ಉಂಡೆ ಇತ್ತು.
ತಕ್ಷಣ ಅದನ್ನು  ಭಕ್ತಿಇಂದತೆಗೆದುಕೊಂಡು,
ಕಣ್ಣಿಗೆ ಒತ್ತಿಕೊಂಡು ಹೆಂಡತಿಯ ಬಳಿ ಹೋಗಿ
ಸುಶೀಲಾ ಇಂದಿಗೆ ನಿನ್ನ ರೋಗ ಪರಿಹಾರವಾಯಿತು.
ಮುತ್ಯಾ ಅವರು ಅನುಗ್ರಹಿಸಿದ ಈ ಮೃತ್ತಿಕಾ ಸೇವನೆ ಮಾಡು.ಇದು ನಾವು ಕೇಳದೆ ಇದ್ದರು ಅವರು ಅನುಗ್ರಹ ಮಾಡಿ ಕೊಟ್ಟಿದ್ದಾರೆ ತೆಗೆದುಕೊ ಅಂತ ಹೇಳಿ ಅವರ ಬಾಯಿಯಲ್ಲಿ ಮೃತ್ತಿಕಾ ಹಾಕಿ ಉಳಿದ ಮೃತ್ತಿಕಾ ಅವರ ಮೈಗೆಲ್ಲ ಹಚ್ಚುವರು.
ವಿಶ್ವಾಸೋ ಫಲದಾಯಕಃ
ಅವರ ವಿಶ್ವಾಸ ಹುಸಿಯಾಗಲಿಲ್ಲ.
ಸರ್ವಂತರ್ಯಾಮಿಯಾಗಿ ಇರುವ ಧನ್ವಂತರಿ ರೂಪಿ ಪರಮಾತ್ಮ ಆ ಹೆಣ್ಣು ಮಗಳಿಗೆ ಆರೋಗ್ಯ ಭಾಗ್ಯವನ್ನು ಅನುಗ್ರಹ ಮಾಡುತ್ತಾನೆ.
ನಿತ್ಯ ಬಿಡದೆ ಭಜಿಸೋ
ಕೋಶಿಗಿ ಮುತ್ಯನ ಕೃಪೆ ಗಳಿಸೋ.

'ಕನಸು ಕರುಣಿಸಿದ ಬೃಂದಾವನ'... 

ಶ್ರೀ ಗುರು ಜಗನ್ನಾಥ ದಾಸರು ಶಿಗ್ಗಾವಿಯಲ್ಲಿ ತಂಗಿದ್ದಾಗ ಅವರಿಗೆ ಒಂದು ರಾತ್ರಿ ಸ್ವಪ್ನವಾಯಿತು,ಸ್ವಪ್ನದಲ್ಲಿ ಗುರುರಾಜರು ಕಾಣಿಸಿಕೊಂಡು ತಾವು ಇಲ್ಲಿಂದ ಏಳುಮೈಲು ದೂರದಲ್ಲಿರುವ ಬೊಮ್ಮನಹಳ್ಳಿ ಯ ಅಗ್ನಿಹೋತ್ರಿಗಳ ಮನೆಯಲ್ಲಿರುವ ಶಿಲಾ ಬೃಂದಾವನದಲ್ಲಿ ನೆಲೆಸಿರುವುದಾಗಿಯೂ,ಶಾಲಿಗ್ರಾಮ ಶಿಲೆಯ ಆ ಬೃಂದಾವನವನ್ನು ಅವರ ಮನೆಯವರಿಂದ ಸ್ವೀಕರಿಸಿ ಪೂಜಿಸಬೇಕೆಂದು ದಾಸರಿಗೆ ಸೂಚಿಸಿದರು .ದಾಸರಿಗೆ  ಕನಸಿನಲ್ಲಿಯೇ ಗುರುರಾಜರು ನೆಲೆಸಿರುವ ಆ ಸುಂದರ ಶಾಲಿಗ್ರಾಮ ಶಿಲೆಯ ಬೃಂದಾವನವು ಸ್ಪಷ್ಟವಾಗಿ ಕಂಡಿತು. ಎಚ್ಚರವಾದ ಮೇಲೆ ದಾಸರಿಗೆ ರೋಮಾಂಚನ ವಾಯಿತು.ಗುರುರಾಜರು ತಮ್ಮಮೇಲಿಟ್ಟಿರುವ ಕಾರುಣ್ಯವನ್ನು ಸ್ಮರಿಸಿದರು.ಮಾರನೆ ದಿನ ಶಿಷ್ಯರನ್ನು ಕರೆದು ಕೊಂಡು ಗುರುರಾಜರನ್ನು ಸ್ವಾಗತಿಸಲು ಬೊಮ್ಮನಹಳ್ಳಿಗೆ ಬಂದರು.

ಬೊಮ್ಮನಹಳ್ಳಿಯಲ್ಲೂ ಅಗ್ನಿಹೋತ್ರಿಯವರ ಮನೆಯವರಿಗೆ ಸ್ವಪ್ನವಾಗಿತ್ತು.

ಗುರುರಾಜರು ಅವರಿಗೆ ಕನಸಿನಲ್ಲಿ ಕಾಣಿಸಿಕೊಂಡು" ನಾನು ನಿಮ್ಮ ಮನೆಯ ಗೋಡೆಗೆ ಹುದುಗಿರುವ ಶಿಲಾ ಬೃಂದಾವನದಲ್ಲಿ ಸನ್ನಿಹಿತರಾಗಿದ್ದೇವೆ.ನೀವು ತಿಳಿಯದೆ ಪ್ರತಿನಿತ್ಯ ನನ್ನ ತಲೆಯ ಮೇಲೆ ದೀಪವನ್ನಿಡುತ್ತಿರುವಿರಿ.ನಿಮ್ಮಲ್ಲಿಗೆ ನನ್ನ ಏಕಾಂತ ಭಕ್ತರಾದ ಗುರು ಜಗನ್ನಾಥ ದಾಸರು ಬರುವರು.ಅವರಿಗೆ ನನ್ನನು ಒಪ್ಪಿಸಿರಿ", ಎಂದು ಆದೇಶಿಸಿದರು.

ಗುರುರಾಜರ ಸೂಚನೆಯಂತೆ ಬಂದ ಗುರು ಜಗನ್ನಾಥ ದಾಸರಿಗೆ ಅಗ್ನಿಹೋತ್ರಿಗಳ ಮನೆಯವರು ಗೋಡೆಯಲ್ಲಿದ್ದ ಗುರುರಾಜರ ಬೃಂದಾವನವನ್ನು ಒಪ್ಪಿಸಿ ಅವರ ಪೂಜಾದಿಗಳಿಗೆ ಅಗತ್ಯ ಸೌಕರ್ಯಗಳನ್ನು ಏರ್ಪಡಿಸಿದರು.

ಹೀಗೆ ನಮ್ಮ ಕೌತಾಳ ದಾಸರಿಗೆ,ಮಂತ್ರಾಲಯ ಪ್ರಭುಗಳು ಕರುಣಿಸಿದ ಘಟನೆ...
ಎನ್ನ ಮನದಲಿ ನೀನೆ ನಿಂತು |
ಘನ್ನಕಾರ್ಯವ ಮಾಡಿ ಮಾಡಿಸು |
ಧನ್ಯನೆಂದೆನಿಸೆನ್ನ ಲೋಕದಿ ಶೇಷಗಿರಿವಾಸ
***

ಶ್ರೀ ಕೋಸಗಿ ಮುತ್ಯಾ ಅವರು ಮಂಚಾಲಿ ಮಹಾಪ್ರಭುಗಳ ಮೇಲೆ ರಚಿಸಿದ ಶ್ರೀ ರಾಘವೇಂದ್ರ ಸಹಸ್ರನಾಮಾವಳಿಯಲ್ಲಿ ಬರುವ ೧೭೮ ನೇ ಶ್ಲೋಕ ಇದು.

ಶ್ರೀ ಕೋಸಗಿ ಮುತ್ಯಾ ಅವರ ಆರಾಧನಾ. ಅವರ ಕೃತಿ ಗಳ ಅಧ್ಯಯನ ದಿಂದ ಅವರ ಸ್ಮರಣೆ ಮತ್ತು  ಆರಾಧನಾ ..

ಶ್ರೀ ಮುತ್ಯಾ ಅವರು ಹೇಳಿದ ಈ ನಾಮ ಗುರುಗಳ ಮೂಲ ಸ್ವರೂಪವನ್ನು ಅವರು ನೆಲೆ ನಿಂತಿರುವ ಸ್ಥಾನವನ್ನು ಅದರ ವೈಭವವನ್ನು ಬಹುವಾಗಿ ಸೂಚಿಸುತ್ತದೆ.

ಎಲ್ಲಾ ಹರಿದಾಸರು ರಾಯರನ್ನು  ಶೇಷಾಂಶರನ್ನಾಗಿ ವರ್ಣನೆ ಮಾಡಿದ್ದಾರೆ.

ಶ್ರೀ ವಿಜಯಪ್ರಭುಗಳು ತಮ್ಮ ಒಂದು ಸುಳಾದಿ ಯಲ್ಲಿ

|||ಕರುಣಾವಾರಿಧಿ ನರಹರಿ ವಿಜಯವಿಠಲ ನ್ನ ಸ್ಮರಿಸಿ ಶೇಷಾಂಶ ಧರಿಸಿ ದೇಹವ ತಾಳ್ದಾ ||

ಎಂದು ಹೇಳಿದರೆ

ಅವರ ಶಿಷ್ಯರಾದ 

ಶ್ರೀ ಭಾಗಣ್ಣ ದಾಸರು 

|ವಂದಿಸಿ ನೋಡುವ ಬಾರೆ| ಎಂಬ ಕೃತಿ ಯಲ್ಲಿ

|ಶೇಷಾಂಶ ಪ್ರಹ್ಲಾದ ವ್ಯಾಸಮುನಿಯೇ ರಾಘವೇಂದ್ರ|

ಎಂದು ಹೇಳಿದ್ದಾರೆ.

ಶ್ರೀ ಶೇಷದೇವರು ಸದಾ ಕಾಲ ಶ್ವೇತದ್ವೀಪದ ಅಮುಕ್ತ ಸ್ಥಾನದಲ್ಲಿ ಶ್ರೀ ವಾಸುದೇವ ರೂಪಿ ಶ್ರೀ ಹರಿಗೆ  ಸದಾ ಹಾಸಿಗೆಯಾಗಿ ಸೇವೆ ಸಲ್ಲಿಸುತ್ತಾ ಇರುವ ಕಾರಣ ಶೇಷಾಂಶ ಸಂಭೂತರಾದ ಮಂಚಾಲಿ ಪ್ರಭುಗಳನ್ನು ವೈಕುಂಠ ವಾಸಿನೇ ನಮಃ ಎಂದು ಹೇಳಿದ್ದು ಯುಕ್ತ ಮತ್ತು ಸೂಕ್ತ ವಾಗಿದೆ.

ಇನ್ನೂ ಸಕಲ ಹರಿದಾಸರು ಗುರುರಾಜರು ನಿಂತ ಮಂತ್ರಾಲಯ ವನ್ನು ವೈಕುಂಠ ವನ್ನಾಗಿಯು ಮತ್ತು ಸುರಪನಾಲಯ ಎಂದು ವರ್ಣನೆ ಮಾಡಿದ್ದಾರೆ.

ನಿಜ ..

ಮಂತ್ರಾಲಯ ಕ್ಷೇತ್ರವೂ ವೈಕುಂಠವೇ ಸರಿ.

ಆ ವೈಕುಂಠ ದಲ್ಲಿ ಶ್ರೀ ವಾಸುದೇವ ರೂಪಿ ಪರಮಾತ್ಮನ ರೂಪ ಒಂದು ಮಾತ್ರ ಇದ್ದರೆ 

ಇಲ್ಲಿ ಆರು ರೂಪಗಳು.

ಇವರ ವೃಂದಾವನ ದಲ್ಲಿ ಭಗವಂತನು  ರಾಮ, ನರಹರಿ, ಕೃಷ್ಣ, ವೇದವ್ಯಾಸರು ಮತ್ತು ಹಯಗ್ರೀವ ದೇವರು ಮತ್ತು ಚಕ್ರ ರೂಪಿ ನಾರಾಯಣನಾಗಿ ಸದಾ ಸನ್ನಿಹಿತನಾಗಿ ನಿಂತಿದ್ದಾನೆ.

ಈ ದೃಷ್ಟಿಯಿಂದ ನೋಡುವುದಾದರೆ ಶ್ರೀ ಗುರುರಾಜರ ಬೃಂದಾವನ ಮತ್ತು ಆ ಮುದ್ದು ಬೃಂದಾವನ ದಿಂದ ಒಪ್ಪುವ ಮಂತ್ರಾಲಯ ಕ್ಷೇತ್ರ ನಿಜಕ್ಕೂ ವೈಕುಂಠವೇ ಸರಿ..

ಈ ದೃಷ್ಟಿಯಿಂದ ಶ್ರೀ ಕೋಸಗಿ ಮುತ್ಯಾ ಅವರು ಶ್ರೀ ವೈಕುಂಠ ವಾಸಿನೇ ನಮಃ ಎಂದು ಹೇಳಿದ್ದಾರೆ.*

ನನ್ನ ಈ ಲೇಖನ ಪುಷ್ಪ ವನ್ನು ಶ್ರೀ ದಾಸರ ಹಾಗು ಅವರ ಅಂತರ್ಯಾಮಿಯಾದ ಶ್ರೀ ಗುರು ಜಗನ್ನಾಥ ವಿಠ್ಠಲನ ಪಾದಕ್ಕೆ ಅರ್ಪಣೆ ಮಾಡುತ್ತಾ

ಶ್ರೀ ದಾಸರಾಯರ ದಯೆ ಅನುಗ್ರಹ ಸದಾ ನಮ್ಮ ಎಲ್ಲರ ಮೇಲಿರಲಿ ಎಂದು ಪ್ರಾರ್ಥನೆ ಮಾಡುತ್ತಾ

ಶ್ರೀ ಕೃಷ್ಣಾರ್ಪಣಮಸ್ತು

 ‌(received in WhatsApp)

***




ಶ್ರೀ ಗುರು ಜಗನ್ನಾಥ ದಾಸರು. ಕೌತಾಳಂ||
ಇಂದು ಅವರ ಆರಾಧನೆ. 2020

ಶ್ರೀ ಇಭರಾಮಪುರ ಅಪ್ಪಾವರ ಅನುಗ್ರಹ ದಿಂದ ಜನಿಸಿದ ಮಹಾನುಭಾವರು.
ನಂತರ ಮುಖ್ಯಪ್ರಾಣದೇವರ ಸೂಚನೆಯಂತೆ
ನಂತರ ಅವರಿಗೆ 
ಸ್ವಪ್ನದಲ್ಲಿ ಶ್ರೀ ಇಭರಾಮಪುರ ಅಪ್ಪಾವರು ಹಾಗು ಶ್ರೀ ರಾಯರು ಬಂದು ಪಾಠವನ್ನು ಉಪದೇಶ ಮಾಡಿದರು..
ಅವರಿಗೆ ಅಂಕಿತವನ್ನು ಶ್ರೀ ಗೋಪಾಲದಾಸರ ವಂಶೀಕರಾದ  ನೆಂಟಪೆತ್ತ ತಂದೆ ಗೋಪಾಲವಿಠ್ಠಲರು ಇಂದ ಶ್ರೀ ಗುರು ಜಗನ್ನಾಥ ವಿಠ್ಠಲ ಅಂತ ಪ್ರಾಪ್ತಿ ಆಯಿತು.
ಆ ನಂತರ ಅವರ ದಿನಚರ್ಯೆ ಬದಲಾಯಿತು.
ರಾಯರ ಮೇಲೆ ಅನೇಕ ಕೃತಿಗಳು ರಚಿಸಿದ್ದಾರೆ. 
ತೂಗಿರೆ ರಾಯರ ಕೃತಿ,ಎದ್ದು ಬರುತಾರೆ ನೋಡೆ,ಗುರುರಾಜ ಗುರು ಸಾರ್ವಭೌಮ.., ಹೇಳದವರಿಲ್ಲ.,ಕೇಳದವರಿಲ್ಲ.
ಶ್ರೀ ವರದೇಂದ್ರ ಗುರುಗಳ ಸ್ವಪ್ನ ಸೂಚನೆ ಯಂತೆ ಲಿಂಗಸೂಗುರಿಗೆ ಬಂದು ಸಂತಿಕೆಲ್ಲೂರು ಸ್ವಾಮಿ ರಾಯರಿಗೆ ಶ್ರೀ ವರದೇಶ ವಿಠ್ಠಲ ಅಂಕಿತವನ್ನು ಕೊಟ್ಟು ಅವರಿಗೆ ಅನುಗ್ರಹಿಸಿದ ಮಹಾನುಭಾವರು.
ಆನಂತರ ಶ್ರೀ ವರದೇಶದಾಸರ ಪ್ರಾರ್ಥನೆ ಯಂತೆ 
ಶ್ರೀ ಗೊರೆಬಾಳ ಹನುಮಂತ ರಾಯರಿಗೆ ಸುಂದರ ವಿಠ್ಠಲ ಇನ್ನೂ ಇಬ್ಬರಿಗೂ  ಅಂಕಿತವನ್ನು ಕೊಟ್ಟು ಉದ್ದರಿಸಿದ ಮಹಾನುಭಾವರು...

ಇವರ ಅವತಾರವನ್ನು ಶ್ರೀ ವರದೇಶದಾಸರು ತಮ್ಮ ಕೃತಿಯಲ್ಲಿ ಹೊರಗೆಡಿಹಿದಾಗ,
ಭಗವಂತನ ಸಂಕಲ್ಪ ದಂತೆ ದೇವತೆಗಳಿಗೆ
ತಮ್ಮ ಕುರುಹು  ಧರೆಯೊಳು ನರರಿಗೆ ತಿಳಿದ ಮೇಲೆ ಇರಬಾರದೆಂದು ತಿಳಿದು ವರದೇಶದಾಸರಿಗೆ ಹೇಳುತ್ತಾರೆ.
"ಸ್ವಾಮೀರಾಯ!! ನೀನು ಊರಿಗೆ ಹೊರಡು ನಿನ್ನ ಹಿಂದೆ ನಾವು ಬರುತ್ತೇವೆ ಅಂತ ಹೇಳಿದರು....
ಅದರಂತೆ ಶ್ರೀ ವರದೇಶದಾಸರು ತಮ್ಮ ಗುರುಗಳ ಮಾತಿನಂತೆ ಕೌತಾಳಂನಲ್ಲಿ ಆಶ್ವೀಜ ಶುದ್ಧ ತೃತೀಯ ಶ್ರೀ ರಾಯರ ಸನ್ನಿಧಿಯಲ್ಲಿ, ತಮ್ಮ ಗುರುಗಳ ತೊಡೆಯ ಮೇಲೆ ತಮ್ಮ ಇಹಲೋಕ ತ್ಯಜಿಸಿದರು..
ತಾವೇ ನಿಂತು ತಮ್ಮ ಶಿಷ್ಯ ರ ಕಾರ್ಯಗಳನ್ನು ಮುಗಿಸಿ,ಅವರ ವೈಕುಂಠ ಸಮಾರಾಧನೆ ಆದ ಮೇಲೆ 
ಆಶ್ವೀಜ ಕೃಷ್ಣ ಪಾಡ್ಯದಂದು ಭಗವಂತನ ಸ್ಮರಣೆ ಮಾಡುತ್ತಾ ತಮ್ಮ ಭೌತಿಕ ದೇಹವನ್ನು ಸಮಾಪ್ತಿಗೊಳಿಸಿ ಇಹಲೋಕವನ್ನು ತ್ಯಜಿಸಿದರು..
ಇವರನ್ನು ಶ್ರೀ ವರದೇಶದಾಸರು ಬಹಳವಾಗಿ ಸ್ತುತಿಸಿದ್ದಾರೆ.

ಇವರಿಗೆ ಐದು  ಅವತಾರ..,
ಶ್ರೀ ಪ್ರಹ್ಲಾದ ರಾಜರ ಸಹೋದರರಾದ ಅಹ್ಲಾದರು
ಶ್ರೀಅಪ್ಪಣ್ಣಾಚಾರ್ಯರು(ರಾಯರ ಸ್ತೋತ್ರ ಬರೆದವರು). ೩ನೇ ಅವತಾರ ಬೆನಕಪ್ಪ‌ ಎಂಬ ನಾಮದಿಂದ ಶ್ಯಾನುಭೋಗರಾಗಿ..
೪ನೇ ಅವತಾರ ಕರ್ಜಿಗಿ ದಾಸರು ಎಂದೆ ಪ್ರಸಿದ್ಧರಾಗಿರುವ ಶ್ರೀದ ವಿಠ್ಠಲ ದಾಸರಾಗಿ,
೫ನೇ ಅವತಾರ ಕೌತಾಳಂ ಶ್ರೀ ಗುರು ಜಗನ್ನಾಥ ದಾಸರು..
ಹೀಗೆ ಅವರನ್ನು ಅನೇಕ ದಾಸರು ಸ್ತುತಿಸಿದ್ದಾರೆ.
ಪ್ರಾತಃಕಾಲ ಇಂತಹ ಹರಿಭಕ್ತರ ಸ್ಮರಣೆ ನಮ್ಮ ಅರಿಷ್ಟ ನಿವಾರಣೆ.
ದಾಸರ ಅಂತರ್ಯಾಮಿಯಾದ ಶ್ರೀ ಗುರು ಜಗನ್ನಾಥ ವಿಠ್ಠಲ ನಿಗೆ ಈ ಲೇಖನ ಸಮರ್ಪಣೆ ಮಾಡುತ್ತಾ
🙏ಶ್ರೀ ಕೃಷ್ಣಾರ್ಪಣ ಮಸ್ತು🙏
ನೆರೆ ನಂಬಿದ ಭಕುತರ ಕರವನು|
ತಾ ಪಿಡಿವಾ|
ದುರಿತವ ತರಿವಾ|
ಮರುತಾಂತರ್ಗತ ವರದ ವಿಠ್ಠಲನ ದೂತಾ ಗುರು ಜಗನ್ನಾಥ||

**

ಶ್ರೀ ಗುರು ಜಗನ್ನಾಥ ದಾಸರಲ್ಲಿ ಭಗವಂತನು ನಿಂತು ತೋರಿದ ಮಹಿಮೆ.
ಶಿಗ್ಗಾವಿಯಲ್ಲಿರಾಮಾಚಾರ್ಯ,ಸುಶೀಲಮ್ಮ ಅನ್ನುವ ಬಡ ದಂಪತಿಗಳಿದ್ದರು.
ಇವರಿಬ್ಬರೂ ಶ್ರೀ ಗುರು ಜಗನ್ನಾಥ ದಾಸರನ್ನು ಕಂಡರೆ ಅತೀವ ಭಕ್ತಿ, ವಿಶ್ವಾಸ.
ಬಹು ವರ್ಷಗಳು ಆದರು ಸಂತಾನವಾಗಿದ್ದಿಲ್ಲ.
ಶ್ರೀ ಗುರುಜಗನ್ನಾಥ ದಾಸರ ವಾಣಿಯಂತೆ ಕಲಿಯುಗದ ಕಲ್ಪ ವೃಕ್ಷ ಮಂತ್ರಾಲಯ ಪ್ರಭುಗಳು ಆದ ಶ್ರೀ ರಾಯರ ಸೇವೆ ಯನ್ನು ಮಾಡಿ ಓರ್ವ ಪುತ್ರ ನನ್ನು ಪಡೆದರು.
ಆದರೆ ದುರದೃಷ್ಟವಶಾತ್ ಆ ಹೆಣ್ಣು ಮಗಳಿಗೆ ಬಾಣಂತಿ ಸಮಯದಲ್ಲಿ ರೋಗ ಹತ್ತಿಕೊಂಡಿತು.ಯಾವ ಔಷಧ ಚಿಕಿತ್ಸೆ ಫಲಕಾರಿಯಾಗಲಿಲ್ಲ.
ನಿತ್ಯ ವು ರಾಮಾಚಾರ್ಯರು ದಾಸರ ಬಳಿ ಬಂದು ತಮ್ಮ ಪತ್ನಿ ಯ ಅನಾರೋಗ್ಯ ಬಗ್ಗೆ ಹೇಳಿಕೊಳ್ಳುತ್ತಾ ಇದ್ದರು.
ಒಂದು ದಿನ ಸಾಯಂಕಾಲ ಮಳೆ ಬಂದು ನಿಂತ ಸಮಯ.
ಸುಜೀವಿಗಳಾದ ದಂಪತಿಗಳ ಉದ್ಧಾರಕ್ಕಾಗಿ ದಾಸರು ಅವರ ಮನೆಗೆ ಬರುತ್ತಾರೆ. ಒಳಗಡೆ ಹೆಂಡತಿಯ ಆರೈಕೆ ಯಲ್ಲಿ ತೊಡಗಿದ್ದ ರಾಮಾಚಾರ್ಯರು ದಾಸರನ್ನು ಕಂಡು ಓಡಿಬಂದು ಸತ್ಕಾರ ಮಾಡುತ್ತಾನೆ.
ಅಲ್ಲೇ ಅವರ ಮನೆಯ ಕಟ್ಟಿಯ ಮೇಲೆ ಕುಳಿತ ದಾಸರು ತಮ್ಮ ಕಾಲಿಗೆ ಅಂಟಿಕೊಂಡಿದ್ದ ಮಣ್ಣನ್ನು ಕೈಯಿಂದ ತೆಗೆಯುತ್ತಾ ಶ್ರೀ ವಿಜಯ ಪ್ರಭು ಗಳು ರಚಿಸಿದ ಶ್ರೀ ನರಸಿಂಹ ದೇವರ ಸುಳಾದಿ ಪಠಿಸುತ್ತಾ ಇದ್ದರು...
ಪಾರಾಯಣ ಪೂರ್ತಿ ಆಯಿತು.
ಅವಾಗ ರಾಮಾಚಾರ್ಯ ದಾಸರ ಬಳಿ ನಿವೇದನೆ ಮಾಡಿಕೊಳ್ಳುತ್ತಾನೆ.
ಮುತ್ಯಾ !!ನನ್ನ ಹೆಂಡತಿಗೆ ರೋಗ ಕಡಿಮೆ ಆಗುತ್ತಾ ಇಲ್ಲ.  ದಿನದಿಂದ ದಿನಕ್ಕೆ ಅವಳು ಕೃಶಳಾಗುತ್ತಾ ಇದ್ದಾಳೆ.ನಿಮ್ಮ ಮಾತಿನಂತೆ ಪುತ್ರ ಜನನವಾಗಿದೆ.ಇವಾಗ ಅವಳಿಗೆ ಬಂದ ರೋಗವನ್ನು ನೀವೆ ಪರಿಹರಿಸಬೇಕು ಅಂತ ದೀನನಾಗಿ ಕೇಳುತ್ತಾನೆ.
ಅವಾಗ ದಾಸರು "ರಾಮಾಚಾರ್ಯ! ನಾನು ಸಹ ನಿನ್ನ ಹಾಗೇ ಸಾಮಾನ್ಯ ಮನುಷ್ಯ.ನಿಶ್ಚಲ ಭಕ್ತಿ ಇಂದ ನೀನು ಪ್ರಾಣದೇವರ ಸೇವಿಸಿದೆ.ಅವರ ಮುಖಾಂತರ ಸಂತಾನ ಗೋಪಾಲ ಕೃಷ್ಣ ನು ನಿಮಗೆ ಸಂತಾನ ಅನುಗ್ರಹ ಮಾಡಿದ.ನನಗೆ ಯಾವ ವೈದ್ಯಕೀಯ ಚಿಕಿತ್ಸೆ ತಿಳಿಯದು.ನಿನಗಾಗಿ ಧನ್ವಂತರಿ ರೂಪಿ ಪರಮಾತ್ಮನ ನ್ನು ಪ್ರಾರ್ಥನೆ ಮಾಡುತ್ತೇನೆ.ಜ್ವರ ವನ್ನು ,ಅಪಮೃತ್ಯುವನ್ನು ಪರಿಹರಿಸುವ ನರಸಿಂಹ ದೇವರು ನಿನ್ನ ಸಂಕಷ್ಟ ಪರಿಹರಿಸುವ... 
ಅಂತ ಹೇಳಿ ಅಲ್ಲಿ ಇಂದ ಹೋಗುತ್ತಾರೆ.
ರಾಮಾಚಾರ್ಯ ನಿಗೆ ಏನು ತಿಳಿಯಲಿಲ್ಲ. 
ದಾಸರು ಕುಳಿತ ಜಾಗದಲ್ಲಿ ಅವರು ತಮ್ಮ ಕಾಲಿನಿಂದ ತೆಗೆದ ಮಣ್ಣಿನ ಉಂಡೆ ಇತ್ತು...
ತಕ್ಷಣ ಅದನ್ನು  ಭಕ್ತಿಇಂದತೆಗೆದುಕೊಂಡು,
ಕಣ್ಣಿಗೆ ಒತ್ತಿಕೊಂಡು ಹೆಂಡತಿಯ ಬಳಿ ಹೋಗಿ
ಸುಶೀಲಾ! ಇಂದಿಗೆ ನಿನ್ನ ರೋಗ ಪರಿಹಾರವಾಯಿತು..
ಮುತ್ಯಾ ಅವರು ಅನುಗ್ರಹಿಸಿದ ಈ ಮೃತ್ತಿಕಾ ಸೇವನೆ ಮಾಡು.ಇದು ನಾವು ಕೇಳದೆ ಇದ್ದರು ಅವರು ಅನುಗ್ರಹ ಮಾಡಿ ಕೊಟ್ಟಿದ್ದಾರೆ ತೆಗೆದುಕೊ ಅಂತ ಹೇಳಿ ಅವರ ಬಾಯಿಯಲ್ಲಿ ಮೃತ್ತಿಕಾ ಹಾಕಿ ಉಳಿದ ಮೃತ್ತಿಕಾ ಅವರ ಮೈಗೆಲ್ಲ ಹಚ್ಚುವರು...
"ವಿಶ್ವಾಸೋ ಫಲದಾಯಕಃ"
ಅವರ ವಿಶ್ವಾಸ ಹುಸಿಯಾಗಲಿಲ್ಲ.
ಸರ್ವಂತರ್ಯಾಮಿಯಾಗಿ ಇರುವ ಧನ್ವಂತರಿ ರೂಪಿ ಪರಮಾತ್ಮ ಆ ಹೆಣ್ಣು ಮಗಳಿಗೆ ಆರೋಗ್ಯ ಭಾಗ್ಯವನ್ನು ಅನುಗ್ರಹ ಮಾಡುತ್ತಾನೆ.
🙏ಶ್ರೀ ಕೃಷ್ಣಾರ್ಪಣ ಮಸ್ತು🙏
ನಿತ್ಯ ಬಿಡದೆ ಭಜಿಸೋ|

ಕೋಶಿಗಿ ಮುತ್ಯನ ಕೃಪೆ ಗಳಿಸೋ||🙏
ಶ್ರೀ ಗುರು‌ಜಗನ್ನಾಥ ದಾಸ ಗುರುಭ್ಯೋ  ನ
***

ಕೌತಾಳಂ ಶ್ರೀ ಗುರು ಜಗನ್ನಾಥ ದಾಸರ  ಪೂರ್ವಆರಾಧನಾ ಇಂದು.|

ಜ್ಞಾನ ಭಕ್ತಿ ವೈರಾಗ್ಯ ಗಳೆಂಬ ನಿಜ ಸಂಪತ್ತಿನಿಂದ ಉಳ್ಳ ಹರಿದಾಸರಿಗೆ ಈ ಲೌಕಿಕ ಸಂಪತ್ತು ಸಂಗ್ರಹಣೆ ಅವಶ್ಯಕತೆ ಇರುವದಿಲ್ಲ.
ಈ ಘಟನೆ ನಮ್ಮ ಕೌತಾಳಂ ಗುರು ಜಗನ್ನಾಥ ದಾಸರ ಚರಿತ್ರೆಯಲ್ಲಿ ಬರುತ್ತದೆ. 

ಶ್ರೀ ಗುರು ಜಗನ್ನಾಥ ದಾಸರಿಗೆ ಲೌಕಿಕದ ಮೋಹವಿಲ್ಲ..
ದಾಸರು ಎಂದು ಭವಿಷ್ಯವನ್ನು ಕುರಿತು ಆಲೋಚನೆ ಮಾಡಿದವರಲ್ಲ.ಭಗವಂತ ಏನು ಕೊಟ್ಟಿದ್ದಾನೆ ಅದರಲ್ಲಿ ತೃಪ್ತಿ ಪಡುವದು ಅವರ ಸ್ವಭಾವ.
ರಾಯರ ಆರಾಧನೆಹತ್ತಿರ ಬಂತು. ಬೇಕಾದ ಸಾಮಗ್ರಿಗಳು ಸಂಗ್ರಹಣೆ ಆಗಿಲ್ಲ..
ದಾಸರ ಶಿಷ್ಯರಿಗೆ ಚಿಂತೆ ಯಾಯಿತು.ಆರಾಧನೆಗೆ ಇನ್ನೂ ಒಂದೇ ದಿನ ಉಳಿದಿದೆ.
ಆರಾಧನೆಗೆ ಸಾಮಗ್ರಿಗಳನ್ನು ತರಲು ದಾಸರ ಬಳಿ ಧನವಿಲ್ಲ..
ಬರುವ ಭಕ್ತಾದಿಗಳ ಸಂಖ್ಯೆ ಬಹಳ..ಹೇಗೆ ಅಂತ ಚಿಂತೆ..
ಆದರೆ ಆ ಊರಿನ ಕೆಲವರು ಗಣ್ಯರು  
ದಾಸರು ನಮ್ಮ ಬಳಿ ಬಂದು ಕೇಳಲಿ, ಸಂಪೂರ್ಣ ಖರ್ಚು ಕೊಡುತ್ತೇವೆ ಅಂತ ಶಿಷ್ಯರ ಮುಂದೆ ಹೇಳುತ್ತಾ ಇದ್ದರು.
ಆ ದಿನ ಸಾಯಂಕಾಲ ಭಜನೆ ಆಯಿತು.
ಅವಾಗ್ಗೆ ಶಿಷ್ಯರು 
ಮುತ್ಯಾ !! ರಾಯರ ಆರಾಧನೆ ಹತ್ತಿರ ಬಂತು.ಮಾಡಬೇಕಾದ ಕೆಲಸ ಬಹಳವಿದೆ.ನೀವು ಒಮ್ಮೆ ಕೇಳಿದರೆ ಸಾಕು ಕೊಡಲು ಬಹಳಷ್ಟು ಜನ ಸಿದ್ದರಿದ್ದಾರೆ 
ಅಂತ ಹೇಳಿದಾಗ
ದಾಸರು ನಗುತ್ತಾ ಹೇಳುತ್ತಾರೆ.
"ಮಗುವಿನ ಚಿಂತೆ ತಾಯಿಗೆ ಹೊರತು ಮಗುವಿಗೆ ಇರುವದಿಲ್ಲ".
"ಕಾರ್ಯವನ್ನು ಮಾಡಿ, ಮಾಡಿಸುವವನು ಆ ಭಗವಂತ"..
"ಅಸ್ವತಂತ್ರನಾದ ಜೀವಿ ಇಲ್ಲದ ಕತೃತ್ವ,ಭಾರ ಹೊರಬಾರದು.."
ನಮ್ಮ ಪುರಂದರದಾಸರ ತಾರಕ ಮಂತ್ರ ..
ಹಾಡಿದರೆ ಎನ್ನೊಡೆಯನ ಹಾಡುವೆ|
ಬೇಡಿದರೆ ಎನ್ನೊಡೆಯನ ಬೇಡುವೆ|
ಎನ್ನೊಡೆಯನಿಗೆ ಒಡಲನು ತೋರುವೆ|
ಮಾಡಿದ ಕೆಲಸದಿಂದ ಬೇಡಿದ ಸುಖ ಬರದೇ ಇದ್ದರುಪರವಾಗಿಲ್ಲ.ಅದರಿಂದ ದುಖಃ ಬರಬಾರದು..
"ನರರನ್ನು ಬೇಡಿ ಸುಖ ಪಡುವದಕ್ಕಿಂತ ಭಗವಂತನನ್ನು ಬೇಡಿ ಕಷ್ಟ ಪಡುವದೇ ಲೇಸು"..
ನರರನ್ನು ಬೇಡಿದಾಗ ಇಹದಲ್ಲಿ ಸುಖ..ಆದರೆ ಪರದಲ್ಲಿ ದುಖಃ..
"ಅದೇ ಭಗವಂತನಲ್ಲಿ ಬೇಡಿದಾಗ ಈಗ ಮತ್ತು ಪರದಲ್ಲಿ  ಸುಖವನ್ನು ಕರುಣಿಸುವನು"..
ಅಂತ ಹೇಳಿ
ಏಕಾಂತದಿ ಶ್ರೀಕಾಂತನ
ಭಜಿಸಲು|
ಲೋಕಾಂತರ ಸುಖ ಪ್ರಾಪ್ತಿ|
ಅನ್ನುವ ಕೃತಿಯೊಂದಿಗೆ ಆ ದಿನ ಉಪದೇಶ ಮುಗಿಸುತ್ತಾರೆ.
ಎಲ್ಲಾ ಶಿಷ್ಯರಿಗು ಗುರುಗಳ ಮಾತಿನ ಮೇಲೆ ವಿಶ್ವಾಸ. 
ಮರುದಿನ ಬೆಳಿಗ್ಗೆ ರಾಯರ ಸೂಚನೆಯಂತೆ ತಿರುಮಲ ರಾಯರೆಂಬ ಜಡ್ಜ್ ಗಳು ಧಾರವಾಡದಿಂದ ಬಂದು ರಾಯರ ಆರಾಧನೆಗೆ ಬೇಕಾದ ಹಣವನ್ನು ದಾಸರಿಗೆ ಸಮರ್ಪಣೆ ಮಾಡುತ್ತಾರೆ..
ಆಗ ಗುರು ಜಗನ್ನಾಥ ದಾಸರು ತಿರುಮಲರಾಯರನ್ನು ಆಶೀರ್ವದಿಸಿ,ರಾಯರ ಕಾರುಣ್ಯ ವನ್ನು ನೆನೆದು
ನಂಬಿ ಕೆಟ್ಟವರಿಲ್ಲವೋ
ಈ ಗುರುಗಳ|
ನಂಬದೆ ಕೆಡುವರುಂಟೋ||
ನಂಬಿದ ಜನರಿಗೆ ಬೆಂಬಲ ತಾನಾಗಿ|
ಹಂಬಲಿಸಿದ ಫಲ ತುಂಬಿ ಕೊಡುವ ರನ್ನ||
ಅನ್ನುವ ೦೩ನುಡಿಗಳುಳ್ಳ ಕೃತಿಯನ್ನು ರಚನೆ ಮಾಡಿ ಅವರಿಗೆ ಸಮರ್ಪಣೆ ಮಾಡುತ್ತಾರೆ.
ಇದು ದಾಸ ರಲ್ಲಿ ನಿಂತು ಭಗವಂತ ತೋರಿದ ಲೀಲೆ.
🙏ಶ್ರೀ ಕೃಷ್ಣಾರ್ಪಣ ಮಸ್ತು 🙏
ವರದೇಶ ವಿಠ್ಠಲನ್ನ ಸ್ಥಿರ ದಾಸ್ಯ ತನವೆಂಬೊ| 

ಗುರುತು ತೋರುವದಯ್ಯ ಗುರು ಜಗನ್ನಾಥಾರ್ಯ||

 ‌(received in WhatsApp)

****

ಶ್ರೀ ಗುರುರಾಜೋ ವಿಜಯತೇ ||
|| ಶ್ರೀ ಇಭರಾಮಪುರಾಧೀಶಾಯ ನಮಃ ||

ಗುರು ಮಹಿಮೆ: ಮುತ್ತಿನಂತಹ ಮಗ

ದಾಸೀಕೃತಾಶೇಷಜನಂ    ದಾಸವರ್ಯಾಂಘ್ರಿಮಾನಸಂ |
ವಶೀಕೃತಗುರುಂವಂದೇ ವಾಗ್ಙ್ಮನಃಸ್ವಾಮಿಶರ್ಮಕಂ ||

ಶ್ರೀ ವೆಂಕಟಗಿರಿ ಆಚಾರ್ಯರು ಹಾಗೆ ಶ್ರೀ ಇಭರಾಮಪುರದ ಅಪ್ಪಾವರ ಸ್ನೇಹಿತರು. ಇಬ್ಬರು ಒಬ್ಬರಿಗೊಬ್ಬರು ಅಣ್ಣ ತಮಣ್ಣ ಸಂಬಂದ ಹಾಗೆ ಇತ್ತು. ಶ್ರೀ ವೆಂಕಟಗಿರಿ ಆಚಾರ್ಯ ಒಂದು ಸಂದರ್ಭದಲ್ಲಿ ಇಭರಾಮಪುರಕೆ ಬಂದಿರುತ್ತಾರೆ. ಬಂದ ಸಂದರ್ಭದಲ್ಲಿ ಅಪ್ಪಾವರ ಪ್ರಾಣದೇವರ ಪೂಜೆಯಲ್ಲಿ ನಿರತರಾಗಿರುತ್ತಾರೆ, ಆಚಾರ್ಯರು ನೊಂದ ಮನಸ್ಸಿನಿಂದ ಅಪ್ಪಾವರಲ್ಲಿ ಪ್ರಾರ್ಥನೆ ಮಾಡುತ್ತಾರೆ ,ಅಣ್ಣಾ ಎಲ್ಲರಿಗೂ ಅನುಗ್ರಹ ಮಾಡ್ತಿಯ ನನ್ನಗೆ ಸಂತಾನ ಇಲ್ಲ ಅಂತ ಬೇಡಿಕೊಳ್ಳುತ್ತಾರೆ. ಅಪ್ಪಾವರು ತಮ್ಮ ಉಪಸ್ಯಮೂರ್ತಿಯಾದ ಪಂಚಮುಖಿ ಮುಖ್ಯ ಪ್ರಾಣದೇವರಿಗೆ ಅಭಿಷೆಕ ಮಾಡಿ ಮುತ್ತು ಕೊಡುತ್ತಾ "ವೆಂಕಟಗಿರಿ ನಿನಗೆ ಮುತ್ತಿನಂತಹ ಮಗ ಹುಟ್ಟುತ್ತಾನೆ ಎಂದು ಆಶೀರ್ವಾದ ಮಾಡುತ್ತಾರೆ.

ಅಪ್ಪಾವರು ಆಶೀರ್ವಾದದಿಂದ ಗಂಡು ಮಗ ಆಗುತ್ತೆ. ಅವರೇ ಮುಂದೆ ಸ್ವಾಮಿರಾಯ ಆಚಾರ್ಯರಿಂದ ಶ್ರೀ ಗುರುಜಗನ್ನಾಥ ದಾಸರು ಅಂತ ಜಗನ್ಮಾನ್ಯರಾಗುತ್ತಾರೆ.

ಸ್ವಪ್ನದಲ್ಲಿ ಪಾಠ

ಶ್ರೀ ಸ್ವಾಮಿರಾಯ (ಶ್ರೀ ಗುರು ಜಗನಾಥದಾಸರು) ಶ್ರೀಹರಿಯ ಕೃಪರಿಗೆ ಗುರುವೇ ಕಾರಣ ಅತಿರೋಹಿತ ವಿಮಲವಿಜ್ಞಾನಿಗಳಾದ ವಾಯು ದೇವರ ಮೊರೆ ಹೋಗಬೇಕೆಂದು ನಿಶ್ಚಯಸಿದರು.

ಸ್ವಗ್ರಾಮ ಕೌತಾಲಂ ಹತ್ತಿರವಾದ ಬುಡಮಲ ದೊಡ್ಡಿ ಯಂಬ ಪವಿತ್ರ ಕ್ಷೇತ್ರ ಸಾಧನೆಗೆ ಯೋಗ್ಯವಾದ ಸ್ಥಳವೆಂದು ನಿರ್ಧರಿಸಿ ಯಾರಿಗೂ ಹೇಳದೆ ಪ್ರಯಾಣ ಬೆರಿಸುತ್ತಾರೆ. ಆ ಕ್ಷೇತ್ರದಲ್ಲಿಯ ವಾಯು ದೇವರ ಸೇವೆ ಆರಂಭಿಸುತ್ತಾರೆ. ಶ್ರೀ ಸ್ವಾಮಿರಾಯರ ಸೇವೆ ಸ್ವೀಕರಿಸಿದ ಮುಖ್ಯಪ್ರಾಣದೇವರು ಸ್ವಪ್ನದಲ್ಲಿ ನಾಲಿಗೆಯಮೇಲೆ ಬೀಜಕ್ಷರ ಬರೆದು ಸ್ವಗ್ರಾಮಕೇ ತೆರೆಳು ನಿನಗೆ ಉಪದೇಶ ಆಗುತ್ತೆ ಎಂದು ಅನುಗ್ರಹಿಸುತ್ತಾರೆ. 

ವಾಯುದೇವರ ಆಜ್ಞೆಯಂತೆ ಸ್ವಗ್ರಾಮಗೆ ತೆರುಳಿತಾರೆ. ರೂಡಿನಾಮ ಸಂವತ್ಸರ ಶ್ರಾವಣ ಶುದ್ಧ ಮಹಲಕ್ಷ್ಮಿಯ ದಿನದಂದು ಸ್ವಪ್ನದಲ್ಲಿ ಶ್ರೀ ಅಪಾವರು ಹಾಗು ರಾಘವೇಂದ್ರತೀರ್ಥ ಗುರುಸಾರ್ವಭೌಮರು ಗುರು ಉಪದೇಶ ಕೊಡುತ್ತಾರೆ. 

ಶ್ರೀ ಗುರು ಜಗನ್ನಾಥದಾಸರು ದಾಸಸಾಹಿತ್ಯಕೆ ಅಪಾರ ಕೊಡುಗೆ ನೀಡಿದರೆ. ತೂಗಿರೆ ರಾಯರ ತೂಗಿರೆ ಗುರುಗಳ ದಾಸರ ಪ್ರಸಿದ್ದವಾದ ರಚನೆ. ದಾಸರು ಕೆಲವು ಕನ್ನಡವಲ್ಲದೆ ಸಂಸ್ಕೃತ ಸಾಹಿತ್ಯ ಶ್ರೀಮಂತಗೊಳಿಸಿದ್ದಾರೆ. 

ಗುರುಸ್ಮರಣೆಯಿಂದ ಸಕಲ ಆಪತ್ತು ಪರಿಹಾರ ,
ಗುರು ಸ್ಮರಣೆಯಿಂದ ಸಕಲ ಸಂಪದವು ನಿನಗೆ ,
ಗುರು ಸ್ಮರಣೆಯಿಂದ ವಿಶೇಷ ಧನ ದೊರಕುವುದು.
ಗುರು ಸ್ಮರಣೆಯಿಂದ ಹರಿಯೊಲಿದು ಪೊರೆವ.
ಸ್ಮರಿಸು ಗುರುಗಳ ಮನವೆ ಸ್ಮರಿಸು ಗುರುಗಳ
-ಶ್ರೀ ಇಭರಾಮಪುರಾಧೀಶ
***

 ಶ್ರೀಂ ಶ್ರೀ ಕಂ ಕಪಿಲಾಯ ನಮಃ


ರಾಘವೇಂದ್ರ ಕೃಪಾಪಾತ್ರಂ ಕೌತಾಳ ಕ್ಷೇತ್ರ ವಾಸಿನಮ್ /
ನಾನಾ ಗ್ರಂಥ ಪ್ರಣೇತಾರಂ ಗುರುಜಗನ್ನಾಥ ಮಹಂ ಭಜೇ//

ಹರಿವಿಶ್ವನು ನಾಮದಿ ಭೂತಳದಲ್ಲಿ
ಜನಿಸಿದ ಮುದದಲ್ಲಿ
ಪರಿಚಾರಿಕ ನಾಮದಿ ಕರಸ್ನೇಹದಿ
ಜನಿಸಿದ ಪೂರ್ವದಲಿ
 ಶ್ರೀ ವರದೇಶವಿಠಲರು


ಭಾಷ್ಯ ಭಾಗವತಕ್ಕೆ ವ್ಯಾಖ್ಯಾನವಾಗಲಿ ಬೇಕು
ಹರಿಕಥಾಮೃತಸಾರದರ್ಥವ ಬರೆಯಲಿಬೇಕು..
  ಶ್ರೀ ಶ್ರೀನಿವಾಸದಾಸಾರ್ಯರು

ಯಾತಕೆ ಅನುಮಾನ ಈತನೆ ಜಾತರೂಪ ಶಯನ-
ಜಾತ ದಾತಯತಿನಾಥ ಶ್ರೀರಾಯರ
ಪ್ರೀತಿ ಪಡೆದ ಪಿತ ಭ್ರಾತಾಚಾರ್ಯರು ನಿಜ
ಪುನಃ ಜಗದಿ ಜನಿಸಿ ಗಣಪತಿ
ಅನುಚರನಾಮವ ಧರಿಸಿ
ಅನಿಲನಿಗಮದೋಳ್ ಮಿನುಗುವ ಹರಿಗುಣ-
ಮಣಿ ಬೆಳಕನುಗುಣಿ ಜನಕೆ ತೋರಿದನು..
ಶ್ರೀ ಶ್ಯಾಮಸುಂದರ ದಾಸಾರ್ಯರು

ಇಂದು  ಶ್ರೀಮದ್ ರಾಘವೇಂದ್ರ ಗುರುಸಾರ್ವಭೌಮರ ಕಾರುಣ್ಯದಿಂದ, ಶ್ರೀ ಇಭರಾಮಪುರದ ಅಪ್ಪಾವರ ಅನುಗ್ರಹದಿಂದ  ಜನಿಸಿದಂತಹವರಾದ, ಶ್ರೀ ಬುಡುಮಲದೊಡ್ಡಿಯ ಪ್ರಾಣದೇವರ ಜೊತೆ ಮಾತನಾಡಿದವರಾದ, ಶ್ರೀ ರಾಘವೇಂದ್ರ ವಿಜಯ, ಲಕ್ಷ್ಮೀ ಹೃದಯ, ವೆಂಕಟೇಶ ಸ್ತವರಾಜ, ಧೃವಚರಿತ್ರೆ, ಪ್ರಲ್ಹಾದ ಚರಿತ್ರೆ,  ಶ್ರೀನಿವಾಸ ಕಲ್ಯಾಣ,  ವೆಂಕಟೇಶ ಮಾಹತ್ಮ್ಯ, ದ್ರೌಪದೀ ವಸ್ತ್ರಾಪಹರಣ, ಇತ್ಯಾದಿ ಮಹಾನ್ ಖಂಡಕಾವ್ಯಗಳು, ಸಂಸ್ಕೃತ ರಚನೆಗಳ (ಸಂಸ್ಕೃತದಲ್ಲಿ - 30 ಗ್ರಂಥಗಳು, 20 ಸ್ತೋತ್ರಗಳು) ಜೊತೆಗೆ 200 ಕ್ಕೂ ಮೇಲ್ಪಟ್ಟಂತಹಾ ಕೃತಿಗಳು, ಶ್ರೀಮದ್ಹರಿಕಥಾಮೃತಸಾರದ ಅರ್ಥ ವ್ಯಾಖ್ಯಾನ ಇತ್ಯಾದಿಗಳನ್ನು  ರಚನೆ ಮಾಡಿ ದಾಸ ಸಾಹಿತ್ಯದ ಸೇವೆಯನ್ನು ಮಾಡ್ತಿರುವ ಸಜ್ಜನರಿಗೆ ನೀಡಿದಂತಹಾ ಮಹಾನ್ ವೈರಾಗ್ಯ ಶಿಖಾಮಣಿಗಳಾದ, ಬ್ರಾಹ್ಮಣರಿಗೇ ಅಲ್ಲದೇ ಅನ್ಯ ಜಾತಿಯವರಿಗೂ ಜೀವನದ ಸರಿಯಾದ ಹಾದಿಯನ್ನು ತೋರಿ, ದಾಸಾರ್ಯರು ಪರಮಾತ್ಮನ ಸೇವೆಯೊಂದಿಗೆ ಸಮಾಜಸೇವೆಯನ್ನೂ ಮಾಡಬೇಕು ಎನ್ನುವ ಮಾತಿಗೆ ಮತ್ತೊಂದು ಉದಾಹರಣೆಯಾಗಿ ನಿಂತವರಾದ, ಪ್ರಲ್ಹಾದರಾಜರ ಅನುಜ ವ್ಯಾನ ನಾಮಕ ವಾಯುದೇವರ ಆವೇಶಯುಕ್ತದಿಂದ ಕಹ್ಲಾದರಾಗಿ, (ಇದಕ್ಕೆ ಪ್ರಮಾಣ  ಶ್ರೀ ಗುರುಜಗನ್ನಾಥವಿಠಲರ ರಾಘವೇಂದ್ರ ವಿಜಯದ ವಾಕ್ಯ - ವ್ಯಾನನಿಹ ಕಹ್ಲಾದನೊಳು ) ರಾಯರಿಂದ ಸಾಕ್ಷಾತ್ತಾಗಿ ಶಾಸ್ತ್ರಗಳ ಜ್ಞಾನ ಪಡೆದ  ಶ್ರೀಅಪ್ಪಣಾಚಾರ್ಯರಾಗಿ, ಬೆನಕಪ್ಪನಾಗಿ ನಂತರ ಶ್ರೀ ಶ್ರೀದವಿಠಲರಾಗಿ, ಮತ್ತೆ ಶ್ರೀ ಗುರುಜಗನ್ನಾಥವಿಠಲರಾಗಿ ಅವತಾರ ಮಾಡಿ ಬಂದು ನಮ್ಮನ್ನು ಉದ್ಧರಿಸಲೆಂದೇ ಕೃತಿಗಳು ರಚನೆ ಮಾಡಿ ನೀಡಿ, ಹಾದಿಯನ್ನು ತೋರಿದ ಶ್ರೀ ಗುರುಜಗನ್ನಾಥದಾಸಾರ್ಯರ ಮಧ್ಯಾರಾಧನೆಯ ಶುಭಸ್ಮರಣೆಗಳು..

ಶ್ರೀ ದಾಸಾರ್ಯರ ಪರಮಾನುಗ್ರಹ ನಮ್ಮ ಎಲ್ಲರಮೇಲೆ ಸದಾ ಸದಾ ಇರಲೆಂದು ಅವರಲ್ಲಿ ಭಕ್ತಿಯಿಂದ  ಪ್ರಾರ್ಥನೆ ಮಾಡುತ್ತಾ...

-Smt. Padma Sirish

ನಾದನೀರಾಜನದಿಂ ದಾಸಸುರಭಿ 🙏🏽
***


Harikathamrutha saara

Harikatha means Mahabharatha

Amrta means 
Srimad Bhagavatha

Hence HKMS is the quint essence of two works...


Further "Saara" means Paramatma and Parashukla traya.This work is mainly  concerned with them and indicates that the devotees who recite this must mainly focus on these deities only.


Harikathamrutha


Hari  is Ananta kalyana guna paripoorna Sriman

Narayana 

Katha means Lakshmi


Amrutha is Vayudevru.Vayudevru is called amrutha because his knowledge doesnot get deviated even at the time of pralaya.


So HKMS means the work deals mainly with these deities( above mentioned Paramatma and Parashukla devatas) 


Other things are added just in secondary sense and this  work highlights paramatma and parashukla traya viseshagalu...


Hare Srinivasa
***********

by ಆಚಾರ್ಯ ನಾಗರಾಜು ಹಾವೇರಿ
ಗುರು ವಿಜಯ ಪ್ರತಿಷ್ಠಾನ 

"ಕೋಸಗಿ ಮುತ್ಯಾ - 1 "

( ದಿನಾಂಕ : 25.10.2018 ಗುರುವಾರ ಶ್ರೀ ಗುರು ಜಗನ್ನಾಥದಾಸರ ಆರಾಧನಾ ಮಹೋತ್ಸವ, ಕೌತಾಳಂ, ತಾ ।। ಆದೋನಿ ಜಿ ।। ಕರ್ನೂಲ್ - ಆಂಧ್ರಪ್ರದೇಶ )

ರಾಘವೇಂದ್ರ ಕೃಪಾಪಾತ್ರಂ ಕೌತಾಳ ಕ್ಷೇತ್ರ ವಾಸಿನಮ್ ।
ನಾನಾ ಗ್ರಂಥ ಪ್ರಣೇತಾರಂ ಗುರುಜಗನ್ನಾಥ ಮಹಂ ಭಜೇ ।।

" ಶ್ರೀ ವರದವಿಠ್ಠಲರು "....

ಉದಯರಾಗ ತಾಳ : ಝ೦ಪೆ

ಏಳಯ್ಯ ಗುರುವೇ ಬೆಳಗಾಯಿತು ।
ಏಳು ಶ್ರೀ ಗುರು ಜಗನ್ನಾಥದಾಸಾರ್ಯ ।। ಪಲ್ಲವಿ ।।

ಪರಮ ಭಾಗವತವನು ಅತಿ ।
ವಿರಳದಲಿ ತಿಳಿಸಬೇಕು ।
ಶಾಸ್ತ್ರಾರ್ಥಗಳ ನಿಜ ಮರ್ಮವ । ವಿಶದೀ ।
ಕರಿಸಲೀಬೇಕು ।।
ಹರಿಕಥಾಮೃತಸಾರಕೆ ।
ಪರಿಮಳ ರಚಿಸಬೇಕು ।
ಪರತರ ಪದ್ಯ ಸುಳಾದಿಗಳ ।
ವಿರಚಿಸಲಿಬೇಕು ।। ಚರಣ ।।

ಗುರುಗುಣಸ್ತವನವನು ರಚಿಸಿ ಪಾಡಲುಬೇಕು ।
ವರ ಅಪ್ಪಣ್ಣಾರ್ಯರಾಗಿ ।
ಗುರುಗಳೊಂದಿಗೆ ಮಾತನಾಡಲುಬೇಕು ಬೆನಕಪ್ಪರಾಗಿ ।
ಹರಿಕಥಾಮೃತಸಾರಕೆ । ಫಲಶ್ರುತಿ ।।
ಯ ರಚಿಸಬೇಕು ಶ್ರೀದವಿಠಲರಾಗಿ ।
ಗುರುಗಳ ಇರುವನ್ನು ತೋರಿಸಲಿಬೇಕು ।
ಗುರು ಜಗನ್ನಾಥದಾಸಾರ್ಯರಾಗಿ ।। ಚರಣ ।।

ಘೋರತರ ಸಂಸಾರ ಸಾಗರದಲಿ ।
ದಾರಿ ಕಾಣದೇ ಬಳಲಿ ಬೆಂಡಾಗಿ ನಿಂತಿಹನೋ ।
ಪರಮ ಕರುಣಾಕರನಾದ ವರದವಿಠ್ಠಲನ ದಾಸ ।
ಕೈಪಿಡಿದು ಉದ್ಧರಿಸಲು ಬೇಗನೇ ಏಳು ।। ಚರಣ ।।

ಶ್ರೀ ರಾಯರ ಪ್ರಭಾವಕ್ಕೆ ಒಳಗಾಗದವರೇ ಇಲ್ಲ!

ಮಂಚಾಲೆಗೆ ಸಮೀಪ ಕೋಸಗಿ!

ಮಹಾತ್ಮರ ಪೂರ್ವ ವೃತ್ತಾ೦ತವೇ ಇವರದ್ದು!

ವಿದ್ವನ್ಮಣಿ ಕಾಳಿದಾಸನು ಪೂರ್ವದಲ್ಲಿ ಹೇಗೆ ಅವಿದ್ಯಾವಂತನಾಗಿದ್ದನೋ ಅದರಂತೆ ಶ್ರೀ ಸ್ವಾಮಿರಾಯರು!

ಕಾಳಿದಾಸನಿಗೆ ಕಾಳಿಯ ಅನುಗ್ರಹ!

ಶ್ರೀ ಸ್ವಾಮಿರಾಯರಿಗೆ ಬುಡಮಲದೊಡ್ಡಿಯ ಶ್ರೀ ಪ್ರಾಣದೇವರ ಪರಮಾನುಗ್ರಹ!

ಏನೂ ತಿಳಿಯದ ಶ್ರೀ ಸ್ವಾಮಿರಾಯರು ಕನ್ನಡ - ಸಂಸ್ಕೃತದಲ್ಲಿ ಕವಿಸಾರ್ವಭೌಮರಾದರು!!!
***

" ಕೋಸಗಿ ಮುತ್ಯಾ - 2 "

" ಶ್ರೀ ಗುರು ಜಗನ್ನಾಥದಾಸರ ಸಂಕ್ಷಿಪ್ತ ಮಾಹಿತಿ "

ಹೆಸರು : ಶ್ರೀ ಸ್ವಾಮಿರಾಯ

ತಂದೆ : ಶ್ರೀ ವೆಂಕಟಗಿರಿಯಾಚಾರ್ಯರು

ತಾಯಿ : ಸಾಧ್ವೀ ಸೀತಮ್ಮ

ಜನ್ಮ ಸ್ಥಳ : ಕೋಸಿಗಿ

ಕಾಲ : ಕ್ರಿ ಶ 1837 - 1918

" ಶ್ರೀ ರಾಯರ ಮತ್ತು ಶ್ರೀ ಅಪ್ಪಾವರ ಪರಮಾನುಗ್ರ "

ಶ್ರೀ ವೆಂಕಟಗಿರಿಯಾಚಾರ್ಯ ದಂಪತಿಗಳಿಗೆ ಜೀವನದಲ್ಲಿ ಎಲ್ಲಾ ಸೌಭಾಗ್ಯಗಳಿದ್ದರೂ ಪುತ್ರ ಸಂತಾನವಿರಲಿಲ್ಲ. ಭಾವುಕರೂ, ಗುರುಭಕ್ತರಾದ ಇವರು ಕೋಸಗಿಯಿಂದ ಮಂತ್ರಾಲಯಕ್ಕೆ ಬಂದು ವಂಶೋದ್ಧಾರಕ ಪುತ್ರನನ್ನು ಅನುಗ್ರಹಿಸಬೇಕೆಂದು ಶ್ರೀ ಗುರುಸಾರ್ವಭೌಮರಲ್ಲಿ ಪ್ರಾರ್ಥಿಸಿ ಏಕಾಗ್ರಚಿತ್ತ ಮತ್ತು ಭಕ್ತಿ ಶ್ರದ್ಧೆಗಳಿಂದ ಸೇವೆ ಮಾಡಿದರು.

ಗುರುಗಳ ಸೇವೆ ವ್ಯರ್ಥವಾದೀತೇ? " ವಿಶ್ವಾಸೋ ಫಲದಾಯಕ " ಯೆಂಬಂತೆ ಆ ಕಾಲದಲ್ಲಿ ಇಬಾರಾಮಪುರ ಶ್ರೀ ಕೃಷ್ಣಾಚಾರ್ಯರೆಂಬ ಮಹಾನ್ ಸಾಧಕ - ಅಪರೋಕ್ಷ ಜ್ಞಾನಿಗಳೊಬ್ಬರಿದ್ದರು. ಸಜ್ಜನರ ಉದ್ಧಾರಕ್ಕಾಗಿಯೇ ಅವತರಿಸಿದ ಅಪೂರ್ವ ರತ್ನ. ಶ್ರೀಅಪ್ಪಾವರು ಶ್ರೀ ರಾಯರ ಅವಿಚ್ಚಿನ್ನ ಅಂತರಂಗ ಭಕ್ತರು!

ಶ್ರೀ ಅಪ್ಪಾವರು ಮತ್ತು ಶ್ರೀ ವೆಂಕಟಗಿರಿಯಾಚಾರ್ಯರು ಬಾಲ್ಯದಿಂದಲೇ ಸ್ನೇಹಿತರಾಗಿದ್ದರು. ಶ್ರೀ ಅಪ್ಪಾವರು ಯಾವ ಮುನ್ಸೂಚನೆಯೂ ಇಲ್ಲದಲೆ ಕೋಸಿಗಿಗೆ ಬಂದರು. ಆಧ್ಯಾತ್ಮ - ತತ್ತ್ವಜ್ಞಾನಗಳ ವಿಷಯವೇ ಇವರ ಚರ್ಚೆಯಾಗಿತ್ತು.

ಆ ಸಂದರ್ಭದಲ್ಲಿ ಶ್ರೀ ಆಚಾರ್ಯರು ತಮ್ಮ ಅಂತರಂಗದ ಅಳಲನ್ನು ಶ್ರೀ ಅಪ್ಪಾವರ ಬಳಿ ತೋಡಿಕೊಂಡರು ಹಾಗೂ ತಮಗೆ ಸತ್ಪುತ್ರ ಸಂತಾನವಾಗುವಂತೆ ಅನುಗ್ರಹಿಸಲು ಕೋರಿಕೊಂಡರು. ಶ್ರೀ ಅಪ್ಪಾವರು ಶ್ರೀ ಪಂಚಮುಖ ಪ್ರಾಣದೇವರ ಉಪಾಸಕರು. ಆಗ ಶ್ರೀ ಅಪ್ಪಾವರು..

ನಾನೇನು ಶಾಪಾನುಗ್ರಹ ಶಕ್ತನಲ್ಲ! ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮರು ನಿನಗೆ ಅನುಗ್ರಹಿಸುವರು. ನೀನು ಶ್ರೀ ಗುರುರಾಯರಿಗೆ ಮಾಡಿದ ಸೇವೆ ಎಂದಿಗೂ ವ್ಯರ್ಥವಾಗುವುದಿಲ್ಲ. ನೀನು ನಾಳೆ ನಮ್ಮ ಪೂಜಾ ಸಮಯದಲ್ಲಿ ಉಪಸ್ಥಿತನಿರು ಎಂದು ಹೇಳಿದರು!

ಆದಿನ ಶ್ರೀ ಅಪ್ಪಾವರು ಶ್ರೀ ಪಂಚಮುಖ ಪ್ರಾಣದೇವರನ್ನು ವಿಶೇಷವಾಗಿ ಪೂಜಿಸಿ ಭಕ್ತಿ ಪೂರ್ವಕ ಪ್ರಾರ್ಥಿಸುತ್ತಾ ತಮ್ಮ ಮಿತ್ರನಿಗೆ ಪುತ್ರ ಸಂತಾನವನ್ನು ಅನುಗ್ರಹಿಸುಯೆಂದು ಬೇಡುತ್ತಾ ದೇವರ ಪೆಟ್ಟಿಗೆಗೆ ಕೈ ಹಾಕಿದರು. ಆ ಪೆಟ್ಟಿಗೆಯಲ್ಲಿ ಒಂದು ಮುತ್ತು ಅವರ ಕೈಗೆ ಸಿಕ್ಕಿತು. ಆ ಮುತ್ತನ್ನು ಶ್ರೀ ವೆಂಕಟಗಿರಿಯಾಚಾರ್ಯರಿಗೆ ಕೊಡುತ್ತಾ...

" ಆಚಾರ್ಯಾ! ಚಿಂತಿಸಬೇಡ. ಶ್ರೀ ಹರಿವಾಯುಗುರುಗಳು ನಿನಗೆ ಮುತ್ತಿನಂಥಾ ಪುತ್ರನನ್ನು ಕರುಣಿಸುವರು " ಎಂದರು. ಭಗವದ್ಭಕ್ತರ ಮಾತುಗಳೆಲ್ಲವೂ " ವಾಚಮಥೋ೯ನುಧಾವತಿ " ಅಲ್ಲವೇ?

ಅಂತೂ ಆ ದಂಪತಿಗಳ ಆಶೆ ಫಲಿಸಿತು. ಮುಂದೆ ಆ ದಂಪತಿಗಳಿಗೆ ಮಹಾ ಭಕ್ತನಾಗಿ ಕೋಸಗಿಯ ಕಣ್ಮಣಿಯಾಗಲಿರುವ ಮುತ್ತಿನಂಥಾ ಪುತ್ರ ಸಂತಾನವಾಯಿತು.

ಶ್ರೀ ವೆಂಕಟಗಿರಿಯಾಚಾರ್ಯರು ಆ ಮಗುವಿಗೆ " ಸ್ವಾಮಿರಾಯ " ಎಂದು ನಾಮಕರಣ ಮಾಡಿದರು.
***

" ಕೋಸಗಿ ಮುತ್ಯಾ - 3 "

ವಿದ್ಯಾ ಗುರುಗಳು : ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮರು

ಶ್ರೀ ರಾಯರು ಬುಡಮಲದೊಡ್ಡಿಯ ಶ್ರೀ ವ್ಯಾಸರಾಜ ಪ್ರತಿಷ್ಠಿತ ಶ್ರೀ ಮುಖ್ಯಪ್ರಾಣದೇವರ ಸನ್ನಿಧಾನದಲ್ಲಿ ಶ್ರೀ ಅಪ್ಪಾವರ ಸಮ್ಮುಖದಲ್ಲಿ ಶ್ರೀ ಸ್ವಾಮಿರಾಯರ ನಾಲಿಗೆಯ ಮೇಲೆ ಬೀಜಾಕ್ಷರ ಬರೆದು, ಶ್ರೀ ರಾಯರೇ ಸ್ವತಃ ಪಾಠ ಮಾಡಿದರು. ಸಕಲ ವಿದ್ಯಾ ಪಾರಂಗತರಾದ ಶ್ರೀ ಸ್ವಾಮಿರಾಯರು ಗೀರ್ವಾಣ ಭಾಷೆ ಹಾಗೂ ಕನ್ನಡದಲ್ಲಿ ನೂರಾರು ಕೃತಿಗಳನ್ನು ರಚಿಸಿದರು. ಕೋಸಿಗಿಯಲ್ಲಿ ಸಾಹಿತ್ಯದ ಮಳೆ ಸುರಿಯಿತು!!

ಅಂಕಿಂತೋಪದೇಶ : ಶ್ರೀ ಕೃಷ್ಣವಿಠ್ಠಲರು

ಅಂಕಿತ : ಶ್ರೀ ಗುರು ಜಗನ್ನಾಥವಿಠ್ಠಲ

ಅಂಶ : ಶ್ರೀ ಕಹ್ಲಾದರಾಜರು

ಕಕ್ಷೆ : 18

ಆವೇಶ : ಆದಿಗಣಪನ ಸಮಾನಾವೇಶ

ಅವತಾರ :

ಶ್ರೀ ಅಪ್ಪಣ್ಣಾಚಾರ್ಯರು, ಲಚ್ಚಮರಿ ಶ್ರೀ ಬೆನಕಪ್ಪ. ಶ್ರೀ ಕರ್ಜಗಿ ದಾಸಪ್ಪ ( ಶ್ರೀ ಶ್ರೀದವಿಠ್ಠಲರು ) ಮತ್ತು ಶ್ರೀ ಸ್ವಾಮಿರಾಯರು ( ಶ್ರೀ ಗುರುಜಗನ್ನಾಥದಾಸರು )

ಶ್ರೀ ಗುರು ಜಗನ್ನಾಥದಾಸರು...

ಪ್ರಹ್ಲಾದ ಮುಖ್ಯಪ್ರಾಣಾವೇಶದಿಂದ ಸೋದರ ಜೀವಾಂಸ ಅಪಾನಾವಿಷ್ಠ । ಸಹ್ಲಾದನಾಮಕ ಮಿತ್ರಾಹ್ವಯ ಸೂರ್ಯನಾದ । ಕಲ್ಹಾದ ವ್ಯಾನಾವೇಶದಿಂದ ಮೋದದಿ ಸೋಮಾಂಶೋದಾನ । ಯುಗ । ನುಹ್ಲಾದ ನಾಮಕ ಸಂಭೂತನಾದ ಆದಿಗಣಪ ಸಮಾನಾವೇಶದಿಂದ । ಆಹ್ಲಾದನಾದ ಆದರೈವರೀ ದೈತ್ಯ ಪುತ್ರರೆನಿಸಿ ಮೇದಿನೀ ಸುರರ ಉದ್ಧರಿಸಲೋಸಗ.... ।।

ಎಂದು ಶ್ರೀ ಗುರುಜಗನ್ನಾಥದಾಸರು ಶ್ರೀ ನೃಸಿಂಹ ಪುರಾಣದನ್ವಯ ತಮ್ಮ ಅಂಶ - ಅವತಾರ - ಆವೇಶಗಳನ್ನು ಮೇಲ್ಕಂಡ ಸುಳಾದಿಯಲ್ಲಿ ತಿಳಿಸಿದ್ದಾರೆ.

ಶ್ರೀ ಗುರು ಜಗನ್ನಾಥದಾಸರೇ ತಮ್ಮ ವಿದ್ಯಾ ಗುರುಗಳಾದ ಶ್ರೀ ರಾಯರ ಕುರಿತು ಒಂದು ಸುಳಾದಿಯಲ್ಲಿ...

ವೇದ ಶಾಸ್ತ್ರ ಪುರಾಣ ಕಥೆಗಳ ಓದಿದವನಲ್ಲ । ತತ್ತ್ವದ ಹಾದಿ ತಿಳಿದವನಲ್ಲ! ಬುಧ ಜನ ಸಂಗ ಮೊದಲಿಲ್ಲ । ಮೋದತೀರ್ಥ ಪದಾಬ್ಜ ಮಧುಕರರಾದ ಶ್ರೀ ಗುರುರಾಘವೇಂದ್ರರ । ಪಾದಪದ್ಮ ಪರಾಗ ಸ್ಪರ್ಶ ಮಾತ್ರದಲಿ । ಕೃತಿಯ ಮಾಡಲು ಶಕುತಿ ಪುಟ್ಟಿತು । ಮತಿಯ ಮಾಂದ್ಯವು ತಾನೇ ಹೋಯಿತು । ಯತನವಿಲ್ಲದೆ ಸಕಲ ಶ್ರುತಿ ಸ್ಮೃತಿ ಅರ್ಥ ತಿಳಿದಿಹುದೋ ।।

ಸಮಕಾಲೀನ ಯತಿಗಳು :

ಶ್ರೀ ರಾಯರ ಮಠದ ಶ್ರೀ ಸುಜ್ಞಾನೇಂದ್ರರು, ಶ್ರೀ ಸುಧರ್ಮೇಂದ್ರರು, ಶ್ರೀ ಸುಗುಣೇಂದ್ರರು, ಶ್ರೀ ಸುಪ್ರಜ್ಞೇ೦ದ್ರರು, ಸುಕೃತೀಂದ್ರರು, ಶ್ರೀ ಸುಶೀಲೇಂದ್ರರು - ಶ್ರೀ ವ್ಯಾಸರಾಜ ಮಠದ ಶ್ರೀ ವಿದ್ಯಾರತ್ನಾಕರತೀರ್ಥರು ಮತ್ತು ಶ್ರೀ ಕೂಡ್ಲಿ ಅಕ್ಷೋಭ್ಯತೀರ್ಥ ಮಠದ ಶ್ರೀ ರಘುದಾಂತತೀರ್ಥರು.

ಶಿಷ್ಯರು :

1. ಶ್ರೀ ವರದವಿಠ್ಠಲರು
2. ಶ್ರೀ ವರದೇಶವಿಠ್ಠಲರು
3. ಶ್ರೀ ವರದೇಂದ್ರವಿಠ್ಠಲರು
4. ಶ್ರೀ ಆನಂದವಿಠ್ಠಲರು
5. ಶ್ರೀ ಸುಂದರವಿಠ್ಠಲರು
6. ಶ್ರೀ ಜಗದೀಶವಿಠ್ಠಲರು
7. ಶ್ರೀ ಶ್ರೀನಿವಾಸವಿಠ್ಠಲರು
8. ಶ್ರೀ ಮುದ್ದು ಗುರು ಜಗನ್ನಾಥದಾಸರು
***

" ಕೋಸಗಿ ಮುತ್ಯಾ - 4 "

" ಶ್ರೀ ಗುರು ಜಗನ್ನಾಥ ದಾಸ ಕೃತ ಶ್ರೀ ವೆಂಕಟೇಶ ಸ್ತುತಿ "
ಶ್ರೀ ಗುರು ಜಗನ್ನಾಥ ದಾಸಾರ್ಯರು ಶ್ರೀ ಕ್ಷೇತ್ರ ತಿರುಮಲೆಯ ಚಲುವನಾದ ಶ್ರೀ ಶ್ರೀನಿವಾಸನ ದರ್ಶನ ಪಡೆದು ಶ್ರೀ ಶ್ರೀನಿವಾಸನನ್ನು ಮನತುಂಬಿ ಅತ್ಯಂತ ಮನೋಜ್ಞವಾಗಿ ಪ್ರಮೇಯ ಭರಿತ ಸ್ತೋತ್ರ ಪದ್ಯಗಳನ್ನು ರಚಿಸಿದ್ದಾರೆ. ಅವುಗಳು.... 
1. ನಮೋ ನಮೋ ವೆಂಕಟೇಶಾ । ಸರ್ವೋ ।
ತ್ತಮಾ ನೀನೆ ಶ್ರೀಶಾ ।।
ರಮಾವರನೆ ಸದ್ಹಿ ಮಾಕರಾರ್ಕ ಮುಖ ।
ಸಮಾನಸಾನುತ ಸಮೀರನಗಧೀಶಾ ।। [ ೫ ನುಡಿಗಳು ]
2. ನೋಡಿದೆ ವೆಂಕಟ ನಿನ್ನ ।
ನೋಡಿದೆ ವೆಂಕಟ ನಿನ್ನ । ಕೊಂ ।
ಡಾಡಿ ಬೇಡಿದೆ ವರವನ್ನ ।। ಆಹಾ ।।
ರೂಢಿಯೊಳಗೆ ನಿನಗೆ ।
ಈಡುಗಾಣೇನೋ ದೇವಾ ।
ನಾಡು ದೈವಗಳೆಲ್ಲ ।
ವೋಡಿ ಪೋದವೊ ಸ್ವಾಮಿ ।। [ ೧೧ ನುಡಿಗಳು }
3. ಶ್ರೀನಿವಾಸಾ ನಿನ್ನಯಾಟ 
ಯೇನು ಪೇಳಲಿ ।
ಜ್ಞಾನಿಗಳು ನಿನ್ನಾ 
ಗುಣಗಾಳೇನೂ ತಿಳಿಯಾರೊ ।। [ ೭ ನುಡಿಗಳು ]
4. ಶ್ರೀಶನಂಘ್ರಿ ಪ್ರತಿವಾಸರ ಭಜಿಸಲಭಿ -
ಲಾಷ ಸಲಿಸಿ ಕಾಯಿವಾ ।।
ವಾಸವಿ ಸುತ ಅಮರೇಶ ವಿನುತ ಶಿರಿ ।
ವಾಸುದೇವ ದೇವಾ ।। [ ೩ ನುಡಿಗಳು ]
5. ಛಲಾವ್ಯಾಕೋ 
ನಿನಗೆ ಯನ್ನಲ್ಲಿ ।
ಛಲಾವ್ಯಾಕೋ 
ಕೋಲಾಚಲಾ ವೆಂಕಟಾ ।
ಫಲಾ ನೀಡಿ ನೀ 
ಭಲಾವೆನಿಸಿಕೊಳ್ಳೋ ।। [ ೯ ನುಡಿಗಳು ]
6. ನಿನಗೇನು ಭಕ್ತಾರ ಚಿಂತೀ ।
ಘನ ಮಹಿಮ ಮಹದಾಡಿ 
ಸುರವಂದ್ಯ ದೇವಾ ।। [ ೩ ನುಡಿಗಳು ]
7. ಬಂದು ಸಂಸಾರದಿ 
ನೊಂದು ತಾಪತ್ರಯದಿ ।
ಬೆಂದು ಕುಂದಿ ಕುಂದಿದೆ ।। [ ೫ ನುಡಿಗಳು ]
8. ಕರುಣಿಸಲೊಲ್ಯಾ ಕರುಣಾನಿಧೇ ।
ಕರುಣಿಸಲೊಲ್ಯಾ ನೀ ಕರುಣಸಾಗರ ನಿನ್ನ । 
ಚರಣ ಭಜಿಸಿ ಭವ ಅರಣ ದಾಟುವಂತೆ ।। [ ೫ ನುಡಿಗಳು ]
9. ಏನು ಧನ್ಯಾರೋ 
ವೈಷ್ಣವರೆಂಥಾ ಮಾನ್ಯರೊ ।
ಜ್ಙಾನದಿ ಅನುಸಂಧಾನವ ಮಾಡುತ ।
ಶ್ರೀನಿವಾಸ ಪದ ಧ್ಯಾನವ 
ಮಾಡುವರೇ ।। [ ೫ ನುಡಿಗಳು ]
10. ಶ್ರೀ ರಮಣ ನಿನ್ನ ಪಾದ 
ಸಾರಿದಾ ಸುಜನರಿಗೆ ।
ಘೋರ ದುರಿತಗಳು ಉಂಟೆ ।।
ದೂರ ವೋಡುವವಿನ್ನೂ 
ಘೋರ ಸಿಂಹನ ಕಂಡ ।
ವಾರಣ ನಿಚಯದಂತೇ ಇಂತೆ ।। [ ೫ ನುಡಿಗಳು ] 
11. ಇದು ಯೇನು ಚರಿಯಾ 
ವೆಂಕಟರಾಯ ।
ಇದು ಯೇನು ಚರಿಯಾ ।
ಇದು ಯೇನು ಚರಿಯಾ 
ಶ್ರೀ ಯದುಕುಲ ತಿಲಕಾನೆ ।
ಸದನತ್ರಯವ ಬಿಟ್ಟು 
ಹುದುಗಿಕೊಂಡಿರುವುದು ।। [ ೫ ನುಡಿಗಳು ]
12. ವಿರುಪಾಪುರ ವೆಂಕಟರಮಣಾ ।
ಸ್ಮರಿಸುವೆ ನಾ ನಿನ್ನ ಚರಣಾ ।
ಕರುಣಿಸೋ ನಿನ್ನಯ ಶರಣಾ ।
ಪರಿಪೂರಿಸೊ ಯನ್ನಲಿ ಕರುಣಾ ।। [ ೫ ನುಡಿಗಳು ] 
13. ಗಿರಿರಾಯಾ ಗಿರಿರಾಯಾ ।
ಶರಣಾಗತರಿಗೆ ಕರುಣಾಕರ 
ವೆಂಕಟ ।। [ ೫ ನುಡಿಗಳು ] 
14. ಧಣಿ ಧಣಿ ಶ್ರೀನಿವಾಸ ನೀನೆ ।
ಕುಣಿದು ಪಾದಲು ಸುರನಾ ।
ಗುಣಿಸಿ ದನಿಸುವಂಥಾ ।। [ ೫ ನುಡಿಗಳು ] 
15  ಯೆನ್ನ ಮೊರೆಯ 
ಕೆಳಬಾರದೇ ಹೇ ಶ್ರೀನಿವಾಸ ।
ಯೆನ್ನ ಮೊರೆಯ ಕೇಳಿದರೆ 
ಎನ್ನನಿವರು ಬದುಕಿಸರು ।
ಇನ್ನು ಮಾಡಲೇನು ಯೆಂದು 
ನಿನ್ನ ಪದಕೆ ಸಾರಿದೆನು ।। [ ೯ ನುಡಿಗಳು ]
16. ತಿಳಿಯ ಬಲ್ಲೆನೆ ನಾನಿನ್ನ 
ವೆಂಕಟರಮಣಾ ।
ತಿಳಿಯ ಬಲ್ಲನೆ ನಿನ್ನ 
ನಳಿನಭವಾದ್ಯರಿ -
ಗಳವಡಿಯದ ಪಾದ 
ನಳಿನ ಮಹಿಮೆಗಳ ।। [ ೩ ನುಡಿಗಳು ]
17. ಬಾರಯ್ಯ ವೆಂಕಟ ಮನ್ಮನಕೆ ।
ತ್ವರಿತದಿ ನಿಜನಾರೀ ಸಹಿತದಿ 
ಈ ಸಮಯಕೆ ।
ಶರಣೆಂಬೆನೊ ಪದಯುಗಕೆ ।। [ ೧೧ ನುಡಿಗಳು ]
18. ಯಾಕೆ ನಿನ್ನ ಮನಕೆ 
ಬಾರೆನೋ ಶ್ರೀ ವೆಂಕಟೇಶ ।
ಯಾಕೆ ನಿನ್ನ ಮನಕೆ ಬಾರೆ 
ಸಾಕೊ ನಿನ್ನ ಧ್ವರಿಯತನ ।
ಕಾಕು ಜನರ ಕಾಯ್ದು ಯೆನ್ನ 
ಸಾಕದಿರುವದೇನು ನ್ಯಾಯ ।। [ ೭ ನುಡಿಗಳು ]
19. ಯಾಕೆ ನಿನ್ನ ಮನಕೆ 
ಬಾರೆನೋ ಹೇ ವೆಂಕಟೇಶ ।
ಯಾಕೆ ನಿನ್ನ ಮನಕೆ ಬಾರೆ 
ಸಾಕು ನಿನ್ನ ಧೊರಿಯತನ ।
ಕಾಕು ಬುದ್ಧಿ ಯೆನಗಿಲ್ಲೋ 
ಹೇ ವೆಂಕಟೇಶಾ ।। [ ೭ ನುಡಿಗಳು ]
20. ಯಾಕೆ ಪುಟ್ಟದೋ ಕರುಣಾ ।
ಶ್ರೀ ಕರಾರ್ಚಿತ ಜಗದೇಕ
 ಕಾರಣ ಶ್ರೀಕರದೇವಾ ।
ಪಾಕಶಾಸನ ಮುಖ್ಯಾನೇಕ 
ಜೀವರನು ನೀ ।
ಸಾಕುವನಿಗೆ ನಾನ್ಯಾಕೆ 
ಬಾರೆನೊ ಮನಕೆ ।। [ ೫ ನುಡಿಗಳು ] 
21. ಶರಣು ವೇಂಕಟನಾಥ ।
ಪೊರೆ ನಿಜ ಕರುಣಿ
ಖಗವರೂಥ ।। [ ೩ ನುಡಿಗಳು ]
22. ಶ್ರೀ ವೆಂಕಟೇಶ ಸ್ತವರಾಜ 
ಶ್ರೀ ರಮಣ ಸರ್ವೇಶ ಸರ್ವಗ ।
ಸಾರಭೋಕ್ತ ಸ್ವತಂತ್ರ ಸರ್ವದಾ ।
ಪಾರ ಮಹಿಮೋದಾರ -
ಸದ್ಗುಣ ಪೂರ್ಣ ಗಂಭೀರ ।।
ಸಾರಿದವರಘ ದೂರಗೈಸಿ ।
ಸೂರಿ ಜನರಿಗೆ ಸೌಖ್ಯ ನೀಡುವ ।
ಧೀರ ವೆಂಕಟರಮಣ ಕರುಣಾದಿ 
ಪೊರೆಯೋ ನೀ ಯೆನ್ನ ।। ೧ ।।
ಘನ್ನ ಮಹಮಾಪನ್ನಾ ಪಾಲಕ ।
ನಿನ್ನ ಹೊರತಿನ್ನನ್ಯ ದೇವರ ।
ಮನ್ನದಲಿ ನಾ ನೆನಿಸೆ ನೆಂದಿಗು -
ಬನ್ನ ಬಡಿಸಿದರು ।।
ಎನ್ನ ಪಾಲಕ ನೀನೆ ಇರುತಿರೆ ।
ಇನ್ನು ಭವಭಯವೇಕೆ ಯೆನಗೆ ।
ಚೆನ್ನ ವೆಂಕಟರಮಣ ಕರುಣದಿ -
ಪೊರೆಯೊ ನೀ ಯೆನ್ನ ।। ೨ ।।
ಲಕುಮಿ ಬೊಮ್ಮ ಭವಾಮರೇಶರು ।
ಭಕುತಿ ಪೂರ್ವಕ ನಿನ್ನ ಭಜಿಸಿ ।
ಸಕಲ ಲೋಕಗೆ ನಾಥರೆನಿಪರೊ- 
ಸರ್ವ ಕಾಲದಲಿ ।।
ನಿಖಿಳ ಜೀವರ ಪೊರೆವೊ ದೇವನೆ ।
ಭಕುತಿ ನೀ ಯೆನಗೀಯದಿರಲು ।
ವ್ಯಕುತವಾಗ್ಯಪಕೀರ್ತಿ 
ಒಪ್ಪುದೊ ಶ್ರೀನಿಕೇತನನೆ ।। ೩ ।।
ಯಾಕೆ ಪುಟ್ಟುದೋ ಎನ್ನೊಳು ಕರುಣ ।
ಸಾಕಲಾರೆಯ ನಿನ್ನ ಶರಣನ ।
ನೂಕಿಬಿಟ್ಟರೆ ನಿನಗೆ ಲೋಕದಿ 
ಖ್ಯಾತಿ ಒಪ್ಪುವುದೇ ।।
ನೊಕನೀಯನೆ ನೀನೆ ಯೆನ್ನೆನು ।
ಜೋಕೆಯಿಂದಲಿ ಕಾಯೋ ಬಿಡದೆ ।
ಏಕದೇವನು ನೀನೆ ವೆಂಕಟ -
ಶೇಷಗಿರಿ ವಾಸ ।। ೪ ।।
ಅಂಬುಜಾಂಬಕ ನಿನ್ನ ಪದಯುಗ ।
ನಂಬಿಕೊಂಡೀ ಪರಿಯಲಿರುತಿರೆ ।
ಡೊಂಬೆಗಾರನ ತೆರದಿ ನೀ -
ನಿರ್ಭಾಗ್ಯ ಸ್ಥಿತಿ ತೋರೆ ।।
ಬಿಂಬ ಮೂರುತಿ 
ನಿನ್ನ ಕರಗತ ।
ಕಂಬು ವರವೇ ಗತಿಯೋ ವಿಶ್ವ ।
ಕುಟುಂಬಿ ಯೆನ್ನೆನು ಸಲಹೋ 
ಸಂತತ ಶೇಷಗಿರಿವಾಸ ।। ೫ ।।
ಸಾರಶಿರಿ ವೈಕುಂಠ ತ್ಯಜಿಸಿ ।
ಧಾರುಣೀಯೊಳು ಗೊಲ್ಲನಾಗೀ ।
ಚೋರ ಕರ್ಮವ ಮಾಡಿ 
ಬದುಕಿಹದಾರಿಗರಿಕಿಲ್ಲ ।।
ಸಾರಿ ಪೇಳುವ ನಿನ್ನ ಗುಣಗಳ ।
ಪಾರವಾಗಿರುತಿಹವೋ ಜನರಿಗೆ ।
ಧೀರ ವೆಂಕಟರಮಣ ಕರುಣದಿ 
ಪೊರೆಯೊ ನೀ ಯೆನ್ನ ।। ೬ ।।
ನೀರ ಮುಳುಗಿ ಭಾರಪೊತ್ತೂ ।
ಧಾರುಣೀ ತಳವಗಿದು ಸಿಟ್ಟಿಲಿ ।
ಕ್ರೂರನುದರವ ಶೀಳಿ 
ಕರುಳಿನ ಮಾಲೆ ಧರಿಸಿದರು ।।
ಪೋರ ವಿಪ್ರ ಕುಠಾರಿ ವನವನ ।
ಚಾರಿಗೋಪ ದಿಗಂಬರಾಶ್ವವ ।
ಏರಿ ಪೋದರು ಬಿಡೆನೋ 
ವೆಂಕಟ ಶೇಷಗಿರಿವಾಸ ।। ೭ ।।
ಲಕ್ಷ್ಮೀ ನಾಯಕ ಸಾರ್ವಭೌಮನೆ ।
ಪಕ್ಷಿವಾಹನ ಪರಮ ಪುರುಷನೆ ।
ಮೋಕ್ಷದಾಯಕ ಪ್ರಾಣ ಜನಕನೆ 
ವಿಶ್ವ ವ್ಯಾಪಕನೆ ।।
ಅಕ್ಷಯಾಂಬರವಿತ್ತಿ ವಿಜಯನ ।
ಪಕ್ಷಪಾತವ ಮಾಡಿ ಕರುಗಳ ।
ಲಕ್ಷಮಾಡದೆ ಕೊಂದೆಯೋ 
ಶ್ರೀ ಶೇಷಗಿರಿವಾಸ ।। ೮ ।।
ಹಿಂದೆ ನೀ ಪ್ರಹ್ಲಾದಗೋಸುಗ ।
ಎಂದು ನೋಡದ ರೂಪವ ಧರಿಸೀ  ।
ಬಂದು ದೈತ್ಯನ ಒಡಲ ಬಗೆದೂ 
ಪೊರೆದೆ ಬಾಲಕನ ।।
ತಂದೆತಾಯ್ಗಳ ಬಿಟ್ಟು ವಿಪಿನದಿ ।
ನಿಂದು ತಪಿಸುವ ಪಂಚ ವತ್ಸರ ।
ಕಂದನಾ ಧೃವಗೊಲಿದು -
ಪೊರೆದೆಯೊ ಶೇಷಗಿರಿವಾಸ ।। ೯ ।।
ಮಡುವಿನೊಳಗಿಹ ಮಕರಿ ಕಾಲನು ।
ಪಿಡಿದು ಬಾಧಿಸೆ ಕರಿಯು ತ್ರಿಜಗ ।
ದ್ವಡೆಯ ಪಾಲಿಸೋ ಯೆನಲು 
ತಕ್ಷಣ ಬಂದು ಪಾಲಿಸದೆ ।।
ಮಡದಿ ಮಾತನು ಕೇಳಿ ಬಲುಪರಿ ।
ಬಡವ ಬ್ರಾಹ್ಮಣ ಧಾನ್ಯ ಕೊಡಲು ।
ಪೊಡವಿಗಸದಳ ಭಾಗ್ಯ 
ನೀಡದೆ ಶೇಷಗಿರಿ ವಾಸ ।। ೧೦ ।।
ಪಿಂತೆ ಮಾಡಿದ ಮಹಿಮೆಗಳ । ನಾ ।
ನೆಂತು ವರ್ಣಿಸಲೇನು ಫಲ । ಶ್ರೀ ।
ಕಾಂತ ಎನ್ನನು ಪೊರೆಯೊ 
ಕೀರುತಿ ನಿನಗೆ ಫಲವೆನಗೆ ।।
ಕಂತು ಜನಕನೆ 
ಯೆನ್ನ ಮನಸಿನ ।
ಅಂತರಂಗದಿ ನೀನೆ ಸರ್ವದ ।
ನಿಂತು ಪ್ರೇರಣೆ ಮಾಳ್ಪೆ -
ಸರ್ವದಾ ಶೇಷಗಿರಿ ವಾಸ ।। ೧೧ ।।
ಶ್ರೀನಿವಾಸನೆ ಭಕ್ತ ಪೋಷನೆ ।
ಜ್ಞಾನಿ ಕುಲಗಳಿಗಭಯದಾಯಕ ।
ದೀನ ಬಾಂಧವ ನೀನೆ 
ಎನ ಮನದಿಷ್ಟಾರ್ಥ ಪೂರೈಸೊ ।।
ಅನುಪಮೋಪಮ ಜ್ಞಾನ ಸಂಪದ ।
ವಿನಯ ಪೂರ್ವಕವಿತ್ತು ಪಾಲಿಸೋ ।
ಜನುಮ ಜನುಮಕೆ ಮರೆಯ-
ಬೇಡವೋ ಶೇಷಗಿರಿ ವಾಸ ।। ೧೨ ।।
ಮದವು ಮತ್ಸರ ಲೋಭ ಮೋಹವು ।
ಒದಗಬಾರದು ಎನ್ನ ಮನದಲಿ ।
ಪದುಮನಾಭನೆ ಜ್ಞಾನ 
ಭಕ್ತಿ ವಿರಕ್ತಿ ನೀನಿತ್ತು ।।
ಹೃದಯ ಮಧ್ಯದಿ ನಿನ್ನ ರೂಪವು ।
ವದನದಲಿ ತವ ನಾಮ ಮಂತ್ರವು ।
ಸದಯ ಪಾಲಿಸು 
ಬೇಡಿಕೊಂಬೆನೋ 
ಶೇಷಗಿರಿವಾಸ ।। ೧೩ ।।
ಅಂದ ನುಡಿ ಪುಸಿಯಾಗಬಾರದು ।
ಬಂದ ಭಾಗ್ಯವು ಪೋಗಬಾರದು ।
ಕುಂದು ಬಾರದೆ ನಿನ್ನ 
ಕರುಣವು ದಿನವು ವರ್ಧಿಸಲಿ ।।
ನಿಂದೆ ಮಾಡುವ 
ಜನರ ಸಂಗವು ।
ಎಂದಿಗಾದರು ದೊರೆಯಬಾರದು ।
ಎಂದು ನಿನ್ನನು 
ಬೇಡಿಕೊಂಬೆನೊ 
ಶೇಷಗಿರಿವಾಸ ।। ೧೪ ।।
ಯೇನು ಬೇಡಲಿ ನಿನ್ನ ದೇವನೆ ।
ಸಾನುರಾಗದಿ ಯೆನ್ನ ಪಾಲಿಸೊ ।
ನಾನಾ ವಿಧ ವಿಧ ಸೌಖ್ಯ 
ನೀಡುವದಿಹ ಪರಂಗಳಲಿ ।।
ಶ್ರೀನಿವಾಸನೆ ನಿನ್ನ ದಾಸಗೆ ।
ಏನು ಕೊರತೆಲ್ಲೆಲ್ಲಿ ನೋಡಲು ।
ನೀನೆ ನಿಂತೀವಿಧದಿ 
ಪೇಳಿಸು ಶೇಷಗಿರಿವಾಸ ।। ೧೫ ।।
ಆರು ಮುನಿದವರೇನು ಮಾಳ್ಪರೋ ।
ಆರು ಒಲಿದರೇನು ಮಾಳ್ಪರೋ ।
ಆರು ನೇಹಿಗಾರರು 
ದ್ವೇಷಿಗಳಾರುದಾಶೀನರು ।।
ಕ್ರೂರ ಜೀವರ ಹಣಿದು ಸಾತ್ವಿಕ ।
ಧೀರ ಜೀವರ ಪೊರೆದು ನಿನ್ನಲಿ ।
ಸಾರ ಭಕುತಿಯನಿತ್ತು 
ಪಾಲಿಸೋ ಶೇಷಗಿರಿವಾಸ ।। ೧೬ ।।
ನಿನ್ನ ಸೇವೆಯನಿತ್ತು ಯೆನಗೆ ।
ನಿನ್ನ ಪಾದಯುಗ ಭಕ್ತಿ ನೀಡಿ ।
ನಿನ್ನ ಗುಣ ಗಣ ಸ್ತವನ 
ಮಾಡುವ ಜ್ಞಾನನೀನಿತ್ತು ।।
ಯೆನ್ನ ಮನದಲಿ ನೀನೆ ನಿಂತೂ ।
ಘನ್ನ ಕಾರ್ಯವ ಮಾಡಿ ಮಾಡಿಸು ।
ಧನ್ಯನೆಂದೆನಿಸೆನ್ನ 
ಲೋಕದಿ ಶೇಷಗಿರಿವಾಸ ।। ೧೭ ।।
ಜಯ ಜಯತು ಶಠ 
ಕೂರ್ಮ ರೂಪನೆ ।
ಜಯ ಜಯತು ಕಿಟ 
ಸಿಂಹವಾಹನ ।
ಜಯ ಜಯತು ಭ್ರುಗುರಾಮ 
ರಘುಕುಲಾಸೋಮ ಶ್ರೀರಾಮ ।।
ಜಯ ಜಯತು ಶಿರಿ 
ಯದುವರೇಣ್ಯನೇ ।
ಜಯ ಜಯತು ಜನ 
ಮೋಹ ಬುದ್ಧನೇ ।
ಜಯ ಜಯತು ಕಲಿ 
ಕಲ್ಮಷಘ್ನನೆ 
ಕಲ್ಕಿ ನಾಮಕನೆ ।। ೧೮ ।।      
ಕರುಣಸಾಗರ ನೀನೆ ನಿಜಪದ ।
ಶರಣ ವತ್ಸಲ ನೀನೆ ಶಾಶ್ವತ ।
ಶರಣ ಜನ ಮಂದಾರ -
ಕಮಲಾಕಾಂತ ಜಯವಂತ ।।
ನಿರುತ ನಿನ್ನನು ಸ್ತುತಿಸಿ ಪಾಡುವೆ ।
ವರದ ಗುರು ಜಗನ್ನಾಥ ವಿಠಲ-
ಪರಮ ಪ್ರೇಮದಿ ಪೊರೆಯೊ 
ಯೆನ್ನೆನು ಶೇಷಗಿರಿ ವಾಸ ।। ೧೯ ।।
***

" ಕೋಸಗಿ ಮುತ್ಯಾ - 5 "
" ಶ್ರೀ ಗುರು ಜಗನ್ನಾಥದಾಸರ ಕೃತಿ ವೈಭವ "
ಹರಿದಾಸ ಸಾಹಿತ್ಯವೆಂದರೆ ತತ್ತ್ವಜ್ಞಾನ ಸಮೀಕರಣ ಮಾಡಿದಂತೆ.
ಹರಿದಾಸ ಪರಿಕಲ್ಪನೆಯ ಮೂಲ ಪುರುಷರೆಂದರೆ ಸಾಕ್ಷಾತ್ ಶ್ರೀಮನ್ಮಧ್ವಾಚಾರ್ಯರು.
ಕನ್ನಡದಲ್ಲಿ ಕೀರ್ತನೆಗಳನ್ನು ರಚಿಸಿ ಕನ್ನಡದ ಹರಿದಾಸ ಸಾಹಿತ್ಯದ ಆದ್ಯ ಪ್ರವರ್ತಕರಾದ ಶ್ರೀ ನರಹರಿತೀರ್ಥರಿಂದ ಪ್ರಾರಂಭಿಸಿ ಎಲ್ಲಾ ಹರಿದಾಸರೂ ತಮ್ಮ ಕೀರ್ತನೆಗಳಲ್ಲಿ ಮಧ್ವಮತದ ತತ್ತ್ವಗಳನ್ನು ಪ್ರಚುರ ಪಡಿಸಿದ್ದಾರೆ!
ಆ ಸತ್ಪರಂಪರೆಯಲ್ಲಿ ಬಂದ ಶ್ರೀ ಗುರುಜಗನ್ನಾಥದಾಸರೂ ಕೂಡಾ ತಮ್ಮ ಕೀರ್ತನೆಗಳಲ್ಲಿ ಮಧ್ವಮತದ ತತ್ತ್ವಗಳನ್ನು ಸಾಂದ್ರ ಸುಂದರವಾಗಿ ನಿರೂಪಿಸಿದ್ದಾರೆ.
ಪ್ರಾಚೀನ ಸಾಹಿತ್ಯ ಸಂಗ್ರಹ; ಸ್ವಂತ ಕೃತಿಗಳನ್ನು ರಚಿಸಿ ಹರಿದಾಸ ಕ್ಷೇತ್ರಕ್ಕೆ ಸೇವೆ ಸಲ್ಲಿಸಿದ್ದಾರೆ.
ಶ್ರೀ ಗುರು ಜಗನ್ನಾಥದಾಸರು ತಮ್ಮ ಪದ - ಸುಳಾದಿ - ಉಗಾಭೋಗಗಳಲ್ಲಿ ಕನ್ನಡ ಭಾಷೆಯಲ್ಲಿ ಷಟ್ಪದಿ, ದ್ವಿಪದಿ ಬಂಧವನ್ನು ಹೆಚ್ಚಾಗಿ ಬಲಾಯಿಸಿದ್ದಾರೆ.
ಸಂಸ್ಕೃತದಲ್ಲಿ ಅಪ್ರತಿಮ ಪಂಡಿತರು.
ಶಾಸ್ತ್ರ, ಸಾಹಿತ್ಯ ಎರಡರಲ್ಲಿಯೂ ಪರಿಣಿತಿ ಮತ್ತು ಪಾರಂಗತಿ.
ಆದರೂ ಕನ್ನಡ ಭಾಷೆಯತ್ತ ಒಲವು.
ದಾಸ ಪಂಥದಲ್ಲಿ ಅಭಿನವೇಶ.
" ಶ್ರೀ ಗುರು ಜಗನ್ನಾಥವಿಠಲಾಂಕಿತ " ದಲ್ಲಿ ಪದ - ಪದ್ಯ - ಸುಳಾದಿ - ಷಟ್ಪದಿಗಳನ್ನು ಅತ್ಯಂತ ಮನೋಜ್ಞವಾಗಿಯೂ, ಅತಿ ಸುಂದರವಾಗಿಯೂ ರಚಿಸಿದ ಮಹಾನುಭಾವರು ಶ್ರೀ ಕೋಸಗೀ ಸ್ವಾಮಿರಾಯಾಚಾರ್ಯರು!
ಶ್ರೀ ಗುರು ಜಗನ್ನಾಥದಾಸಾರ್ಯರ ಕೀರ್ತನೆಗಳಲ್ಲಿ ಜ್ಞಾನದ ಗಾಂಭೀರ್ಯವು ಪ್ರತಿಬಿಂಬಿತವಾಗಿದೆ.
ಸರಸ ಸಜ್ಜನಿಕೆ ಒಡಮೂಡಿದೆ.
ಪ್ರಮೇಯ ಜ್ಞಾನದ ರೇಖಾಂಕನವು ಶ್ರೀ ದಾಸರಾಯರ ಪದ್ಯ ಪದ್ಧತಿಯಲ್ಲಿ ಸ್ಫುಟವಾಗಿ ಗೋಚರಿಸುತ್ತದೆ.
ಪ್ರಾಸಾದಿಕೆಯ ಪ್ರಾಸಾದದಲ್ಲಿ ಪ್ರಮೇಯ ರತ್ನಗಳನ್ನೆಲ್ಲ ಪಾರದರ್ಶಕವಾದ ತಮ್ಮ ಪ್ರತಿಭೆಯ ಗೋಲಕದಿಂದ ದರ್ಶನ ಮಾಡಿಸುತ್ತಾರೆ.
ಕನ್ನಡದಂತೆ ಸಂಸ್ಕೃತದಲ್ಲಿಯೂ ಶ್ರೀ ಗುರು ಜಗನ್ನಾಥದಾಸರಿಗೆ ಕವಿತ್ವ ಶಕ್ತಿ ಇದ್ದಿತು.
16ಕ್ಕೂ ಹೆಚ್ಚು ಸಂಸ್ಕೃತ ಗ್ರಂಥಗಳು
14ಕ್ಕೂ ಹೆಚ್ಚು ಸಂಸ್ಕೃತ ಸ್ತೋತ್ರ ಸಾಹಿತ್ಯಗಳು
200ಕ್ಕೂ ಅಧಿಕ ಲಘು ಕೃತಿಗಳು
ದೀರ್ಘ ಕೃತಿಗಳು...
1. ಶ್ರೀ ರಾಘವೇಂದ್ರ ಮಹಾತ್ಮ್ಯಮ್ ( 117 ಶ್ಲೋಕಗಳು )
" ಪ್ರಥಮೋಧ್ಯಾಯಃ "
ಆದಿ :
ಶ್ರೀ ರಾಘವೇಂದ್ರಮಾಹಾತ್ಮ್ಯಾ೦
ರಾಘವೇಂದ್ರ ಪ್ರಸಾದತಃ ।
ವಕ್ಷ್ಯಾಮಿ ಲೇಶಲೇಶಂ ವಾ
ಶೃಣುಷ್ವ ಗದತೋ ಮಮ ।। ೧ ।।
ಅಂತ್ಯ :
ಇತಿ ವೇದವಿದೋ ವಿಪ್ರಾ:
ಪ್ರವದಂತಿ ಸತಾಂ ಮತಮ್ ।
ತಸ್ಮಾದ್ಗುರುವರಂ ಭಕ್ತ್ಯಾ
ಭಜನ್ ಸೌಖ್ಯಮವಾಪ್ನುಯಾತ್ ।। ೩೩ ।।
" ದ್ವಿತೀಯೋಧ್ಯಾಯಃ "
ಆದಿ :
ಅನಂತಗುಣಸಂಪೂರ್ಣ೦
ಅನಂತಾ೦ಶಂ ಹರಿ ಪ್ರಿಯಮ್ ।
ಅನಂತ ಭಕ್ತತ್ರಾತಾರಂ
ರಾಘವೇಂದ್ರಂ ಭಜೇsನಿಶಮ್ ।। ೧ ।।
ಅಂತ್ಯ :
ಯದ್ವೃಂದಾವನ ಸೇವನಂ
ವಿತನುತೇ ರಾಶಿ ಶ್ರಿಯಾಮಕ್ಷಯಂ
ವಿದ್ಯಾ ಸನ್ಮತಿಮಾತನೋತಿ ಪರಮಂ
ತನ್ಮೂರ್ತಿ ಸಂದರ್ಶನಮ್ ।
ಯದ್ವೃಂದಾವನ ಸೇವನಂ ಕುರು
ಸಖೇ ಸದ್ಯೋsನವದ್ಯಸ್ಸುಧೀ:
ಪ್ರಜ್ಞಾಯಾ೦ ಪ್ರತಿಭಾತಿ ವಿಶ್ವಮಖಿಲ೦
ಬಿಂಬಾಪರೋಕ್ಷ೦ ಸದಾ ।। ೧೯ ।।
" ತೃತೀಯೋಧ್ಯಾಯಃ "
ಆದಿ :
ಕೃಪಾಧೇ ಕೃಪಾನಿಧೇ
ಕೃಪಾನಿಧೇ ಕೃಪಾನಿಧೇ ।
ಭಜೇ ಭಜೇ ಭಜೇ ಭಜೇ
ಭಜೇ ಭಜೇ ಭಜೇ ಭಜೇ ।। ೧ ।।
ಅಂತ್ಯ :
ತ್ವತ್ಪಾದಪದ್ಮಮಾನಮ್ಮ ಏ
ಕುರ್ವಂತಿ ಪ್ರದಕ್ಷಿಣಮ್ ।
ತೀರ್ಥಯಾತ್ರಾಫಲಂ ಪ್ರಾಪ್ಯ
ಮೋದಂತೇ ಭುವಿ ಸರ್ವದಾ ।। ೧೯ ।।
" ಚತುರ್ಥೊಧ್ಯಾಯಃ "
ಆದಿ :
ಶ್ರೀ ರಾಘವೇಂದ್ರ ಮತ್ಸ್ವಾಮಿನ್
ಜ್ಞಾನಾನಂದ ದಯಾನಿಧೇ ।
ತ್ವತ್ಪಾದಾಂಬುಜಸಕ್ತ೦ ಮಾಂ ಉ
ದ್ಧಾರಸ್ವ ಮಹಾಮತೇ ।। ೧ ।।
ಅಂತ್ಯ :
ಸಂಸಾರಗಾಢಾ೦ಧಾಗುಹಾವಿಲೀನ೦
ದುರಾಶ ದುಷ್ಟ ಗ್ರಹ ನಷ್ಟಚಿತ್ತಮ್ ।
ಋಣಾಹಿದಂಷ್ಟ್ರಾಗ್ರಯುಗೇನ ದಷ್ಟ೦
ಉಜ್ಜೀವಯ ತ್ವಂ ಗುರುಸಾರ್ವಭೌಮ ।। ೨೫ ।।
" ಪಂಚಾಮೋಧ್ಯಾಯಃ "
ಯತ್ಫಲಂ ದರ್ಶನೇ ತೇsದ್ಯ
ಯತ್ಸುಖಂ ತವ ಸೇವನೇ ।
ತತ್ಸುಖಂ ನಾಸ್ತಿ ನಾಸ್ತೈವ
ಸುರೇಂದ್ರ ಭವನೇಷ್ವಪಿ ।। ೧ ।।
ಅಂತ್ಯ :
ಇತಿ ಶ್ರೀರಾಘವೇಂದ್ರಾರ್ಯ
ಚರಣದ್ವಯ ಸೇವಿನಾ ।
ಮಾಹಾತ್ಮ್ಯ೦ ರಾಘವೇದ್ರಸ್ಯ
ರಚಿತಂ ಸ್ವಾಮಿನಾ ಮಯಾ ।। ೨೩ ।।
2. ಶ್ರೀ ರಾಘವೇಂದ್ರ ವಿಜಯ ( ಕನ್ನಡದಲ್ಲಿ 230 ಪದ್ಯಗಳು )
3. ಶ್ರೀ ಕೃಷ್ಣಲೀಲಾ ( ಕನ್ನಡದಲ್ಲಿ 72 ಪದ್ಯಗಳು )
4. ಶ್ರೀಮದ್ರಾಮಭಜನೆ - ಫಲಶ್ರುತಿಯೊಂದಿಗೆ 131 ನುಡಿಗಳು
5. ಶ್ರೀ ಲಕ್ಷ್ಮೀ ಹೃದಯಂ ( 108 ನುಡಿಗಳು )
6. ಶ್ರೀ ಪ್ರಹ್ಲಾದ ಚರಿತ್ರೆ ( 103 ನುಡಿಗಳು ) ಜೊತೆಗೆ..
1. ಶ್ರೀ ವೆಂಕಟೇಶಸ್ತವರಾಜ ( 19 ಪದ್ಯಗಳು )
2. ಶ್ರೀ ಲಕ್ಷ್ಮೀಸ್ತವರಾಜ ( 16 ಪದ್ಯಗಳು ) '
ಸಂಸ್ಕೃತ " ದಲ್ಲಿ...
1. ಶ್ರೀ ರಾಘವೇಂದ್ರ ಪ್ರಾರ್ಥನಾ ( 8 ಶ್ಲೋಕಗಳು )
2. ಶ್ರೀ ರಾಘವೇಂದ್ರ ಅಷ್ಟಾಕ್ಷರ ಸ್ತೋತ್ರಮ್ ( 10 ಶ್ಲೋಕಗಳು )
3. ಶ್ರೀ ರಾಘವೇಂದ್ರಾಷ್ಟಕಮ್ ( 9 ಶ್ಲೋಕಗಳು )
4. ಶ್ರೀ ರಾಘವೇಂದ್ರ ಆಪಾದಮೌಲಿ ಪರ್ಯಂತ ವರ್ಣನ ಸ್ತೋತ್ರಮ್ ( 11 ಶ್ಲೋಕಗಳು )
5. ಸರ್ವ ಸಮರ್ಪಣ ಸ್ತೋತ್ರಮ್ ( 10 ಶ್ಲೋಕಗಳು )
6. ಶ್ರೀ ರಾಘವೇಂದ್ರ ರಕ್ಷಾ ಸ್ತೋತ್ರಮ್ ( 13 ಶ್ಲೋಕಗಳು )
7. ಶ್ರೀ ರಾಘವೇಂದ್ರವೈಭವ ಸ್ತೋತ್ರಮ್ ( 15 ಶ್ಲೋಕಗಳು )
8. ಶ್ರೀ ರಾಘವೇಂದ್ರ ಕರಾವಲಂಬನ ಸ್ತೋತ್ರಮ್ ( 22 ಶ್ಲೋಕಗಳು )
9. ಶ್ರೀ ವರದೇಂದ್ರ ಗುರು ಸ್ತೋತ್ರಮ್ ( ೧೪ ಶ್ಲೋಕಗಳು )
10. ಶ್ರೀ ವರದೇಂದ್ರ ಕರಾವಲಂಬನ ಸ್ತೋತ್ರಮ್ ( ೯ ಶ್ಲೋಕಗಳು )
ಇದಲ್ಲದೆ ಇವರು ಬರೆದಿರುವ ನೂರಾರು ಪತ್ರಗಳಲ್ಲಿ ಸಂಬಂಧ ಪಟ್ಟ ಯತಿಗಳ ಸ್ತುತಿ, ಆಧ್ಯಾತ್ಮಿಕ ಸಂದೇಶಗಳು ತುಂಬಿ ತುಳುಕಿವೆ.
ಉದಾಹರಣೆಗೆ...
ಶ್ರೀ ಸುಪ್ರಜ್ಞೇ೦ದ್ರತೀರ್ಥರಿಗೆ ಬರೆದ ಪತ್ರದಲ್ಲಿ ಅವರನ್ನು ಸ್ತುತಿಸಿ ನಂತರ ವಿಷಯ ಬರೆದಿದ್ದು ಪ್ರಕಟವಾಗಿದೆ.
ಮಾಧ್ವರ ಆ ಭಾಗದ ಪ್ರಪ್ರಥಮ ಧಾರ್ಮಿಕ ಮಾಸ ಪತ್ರಿಕೆಯನ್ನು ಕ್ರಿ ಶ 1908ರಲ್ಲಿ " ತತ್ತ್ವ ಪ್ರಕಾಶಿಕಷ್ಟೇ " ಆರಂಭಿಸಿದ ಕೀರ್ತಿ ಶ್ರೀ ಗುರು ಜಗನ್ನಾಥದಾಸರಿಗೆ ಸಲ್ಲುತ್ತದೆ!!
" ಶ್ರೀ ರಾಯರಂತೆ ಸಮಾಜ ಸುಧಾರಕರು "
ಕೌತಾಳ ಗ್ರಾಮದಲ್ಲಿ ನೇಯಿಕಾರರ ಮತ್ತು ಬೇಡರ ಜನಾಂಗದವರಿಗೆ ವೈಷ್ಣವ ದೀಕ್ಷೆ ನೀಡಿದರು.
ಪರಿವರ್ತನೆ ಅಲ್ಲಿಂದ ಆರಂಭವಾಯಿತು.
ಸಮಾಜ ಇವರನ್ನು ಅಪ್ಪಿಕೊಂಡಿತು.
ಆಶ್ರಯ ಬೇಡಿತು.
ದಾಸರು ಎಲ್ಲರನ್ನೂ ತಮ್ಮ ತೆಕ್ಕೆಗೆ ತೆಗೆದುಕೊಂಡರು.
ಇಂದಿಗೂ " ಗಜೇಂದ್ರಗಡ " ಮುಂತಾದ ಕಡೆ ಇವರ ನೇಯಿಕಾರರ ಶಿಷ್ಯ ಪರಂಪರೆಯಿದೆ.
" ನಿರ್ಯಾಣ "
ಶ್ರೀ ಗುರುಜಗನ್ನಾಥದಾಸರು ಕಾಲಯುಕ್ತ ನಾಮ ಸಂವತ್ಸರ ಆಶ್ವಯುಜ ಬಹುಳ ಪ್ರತಿಪಾದ ಭಾನುವಾರ ಕೌತಾಳ ಕ್ಷೇತ್ರದಲ್ಲಿ ಹರಿಪಾದ ಸೇರಿದರು.
" ಶ್ರೀ ವರದವಿಠ್ಠಲರು "....
ತೆರಳಿ ಪೊದರು ಗುರುಜಗನ್ನಾಥ-
ವಿಠಲಾಂಕಿತ ಗುರುವರ್ಯರು ।। ಪಲ್ಲವಿ ।।
ಪರಮ ಭಕ್ತರಿಗೆಲ್ಲ ಗುರು
ರಾಘವೇಂದ್ರರ ಇರುವು ತೋರುತ ।। ಆ. ಪ ।।
ದುರುಳ ಜನರಿಗೆ ಮರುಳುಗೊಳಿಸುತ ।
ವರಳನೆಳೆದ ಗೋಪಾಲಮೂರ್ತಿಯ ।
ಪರಮ ಭವಾಭ್ಡಿಯುಳ್ಳ ಭಾಗವತನು । ಅತಿ ।
ವಿರಳದಲಿ ತಿಳಿಸುವ ಜ್ಞಾನಿವರ್ಯನು ।। ಚರಣ ।।
ಬರೆದೋದದಲೆ ಶ್ರೀ ಗುರುವರ್ಯನ ।
ಕರುಣ ಕಟಾಕ್ಷದಿ ಪರಿ ।
ಪರಿ ಶಾಸ್ತ್ರದ ಮರ್ಮವನರಿದು ।।
ಚರಿಸಿದರು ಬಲು ದೇಶದಲಿ ।
ಸರಿಯಿಲ್ಲವೆಂಬ ಪೆಸರಿನಲಿ ।। ಚರಣ ।।
ಕಲಿಯುಗದ ಜನರಿಗೆ
ಕಲುಷಿತರಂತೆ ತೋರುತ ।
ಕಳೆದು ಹೋದರು
ಪ್ರಾರಬ್ಧ ನಿಮಿತ್ತದಿ ।
ಕಾಲಯುಕ್ತ ಸಂವತ್ಸರ
ದಾಶ್ವಯುಜ ಪಾಡ್ಯ ರವಿವಾರ ।
ಹೇಳಿ ಕೇಳುತಲಿ ಶ್ರೀ ವರದವಿಠ್ಠಲನ
ಪುರವ ಪೊಂದಿದರು ।। ಚರಣ ।।
ಗುರು ಪೂರ್ವ ಜಗನ್ನಾಥದಾಸ್ಯಾಮಿತ ತೇಜಸಃ ।
ತಸ್ಯ ಪಾದಾಬ್ಜ ಸಂಭೂತಾಃ ರಾಜಾ೦ಸಿ ಶಿರಸಾವಹೇ ।।
ನ ಯಾಚೇ ಗಜೇಂದ್ರ ನರೇಂದ್ರಾಧಿಪತ್ಯಂ
ನ ಯಾಚೇsಮರತ್ವಂ ನ ಲೋಕಾಧಿಪತ್ಯಂ ।
ನ ಜಾಯಾ೦ ನ ಪುತ್ರಂ ನ ಶಿಷ್ಯಾರಿಮನ್ನಂ
ನ ಭಾಗ್ಯ೦ ಹರೇ: ( ಗುರೋ: )
ದೇಹಿ ತೇ ಪಾದ ದಾಸ್ಯಮ್ ।।
ಇಂಥಹಾ ಚಿಂತನೆಗಳೂ; ಪರಿಕಲ್ಪನೆಗಳೂ ದಾಸರ ಅನುಗ್ರಹದಿಂದ ನಮ್ಮನ್ನು ಆವರಿಸಿಕೊಳ್ಳಲಿ!!
ಈ " ಶ್ರೀ ಅಹ್ಲಾದಾಂಶ ಗುರುಜಗನ್ನಾಥದಾಸರು " ಎಂಬ ಕಿರು ಲೇಖನವನ್ನು ನನ್ನ ತೀರ್ಥ ರೂಪರಾದ ಕೀರ್ತಿಶೇಷ ಶ್ರೀ ಹಾವೇರಿ ಗುಂಡಾಚಾರ್ಯರ - ಕೀರ್ತಿಶೇಷ ಶ್ರೀ ಢಣಾಪುರ ಕೃಷ್ಣಮೂರ್ತಿಯವರ ಮತ್ತು ನನ್ನ ಮಾರ್ಗದರ್ಶಕ ಗುರುಗಳಾದ ಕೀರ್ತಿಶೇಷ ಶ್ರೀ ರಾಜಗೋಪಾಲಾಚಾರ್ಯರ ಅಂತರ್ಯಾಮಿ ಶ್ರೀ ರಾಘವೇಂದ್ರಗುರ್ವ೦ತರ್ಗತ ಶ್ರೀ ಭಾರತೀ ರಮಣ ಮುಖ್ಯಪ್ರಾಣಾಂತರ್ಗತ ಶ್ರೀಮನ್ಮೂಲ ರಘುಪತಿ ವೇದವ್ಯಾಸೋsಭಿನ್ನ ಶ್ರೀ ಲಕ್ಷ್ಮೀ ನರಸಿಂಹದೇವರ ಪಾದಪದ್ಮಗಳಲ್ಲಿ ಸಮರ್ಪಿತವಾಗಿದೆ.
ಆಚಾರ್ಯ ನಾಗರಾಜು ಹಾವೇರಿ
ಗುರು ವಿಜಯ ಪ್ರತಿಷ್ಠಾನ
***

" ಕೋಸಗಿ ಮುತ್ಯಾ - 6 "
" ಶ್ರೀ ಗುರು ಜಗನ್ನಾಥದಾಸರ ಪೂರ್ವಾರಾಧನೆ ವಿಶೇಷ "
ಶ್ರೀ ಜಗನ್ನಾಥದಾಸರು - ಶ್ರೀ ಸಹ್ಲಾದರಾಜರು ( ಕೃತ ಯುಗದಲ್ಲಿ )
ಶ್ರೀ ಗುರು ಜಗನ್ನಾಥದಾಸರು - ಶ್ರೀ ಆಹ್ಲಾದರಾಜರು 
( ಕೃತ ಯುಗದಲ್ಲಿ )
ಶ್ರೀ ಜಗನ್ನಾಥದಾಸಾರ್ಯರಿಂದ ಅಂಕೀತೋಪದೇಶ ಪಡೆದು " ಹರಿಕಥಾಮೃತಸಾರ " ಕ್ಕೆ ಪ್ರಪ್ರಥಮವಾಗಿ " ಫಲಶ್ರುತಿ " ಬರೆದ ಮಹಾತ್ಮರಾದ ಶ್ರೀ ಶ್ರೀದ ವಿಠಲರೇ ನಮ್ಮ ಶ್ರೀ ಗುರು ಜಗನ್ನಾಥದಾಸರು. 
ಶ್ರೀ ರಾಯರು ( ಶ್ರೀ ಪ್ರಹ್ಲಾದ್ರಾಜರು ) ತಮ್ಮ ಪ್ರೀತಿಯ ತಮ್ಮಂದಿರಾದ ಶ್ರೀ ಆಹ್ಲಾದರಾಜರು ಶ್ರೀ ಶ್ರೀದ ವಿಠಲರಾಗಿ ಅವತಾರ ಮಾಡಿದಾಗ ತಮ್ಮ ಇನ್ನೊಬ್ಬ ತಮ್ಮಂದಿರಾದ ಶ್ರೀ ಜಗನ್ನಾಥದಾಸರಿಂದ ದಾಸ ದೀಕ್ಷೆ ಕೊಡಿಸಿ ಉದ್ಧಾರ ಮಾಡಿದರು.
ಶ್ರೀ ಗುರು ಜಗನ್ನಾಥದಾಸರನ್ನೂ ಉದ್ಧಾರ ಮಾಡಿದ ಧೀರರು ನಮ್ಮ ಧೀರಶ್ರೀ ರಾಘವೇಂದ್ರರು!
ಈ ಮೂರು ಜನ ಶ್ರೀ ನೃಸಿಂಹದೇವರ ಪ್ರಾದುರ್ಭಾವ ಆದಾಗ ಪ್ರತ್ಯಕ್ಷ ಕಂಡ ಮಹನೀಯರು!
ಶ್ರೀ ಗುರು ಜಗನ್ನಾಥದಾಸರಿಗೆ  ಹರಿಕಥಾಮೃತಸಾರಯೆಂದರೆ ಪ್ರಾಣ! 
ಶ್ರೀ ಹರಿಕಥಾಮೃತಸಾರಕ್ಕೆ ಶ್ರೀ ಗುರು ಜಗನ್ನಾಥದಾಸರು ಸಂಸ್ಕೃತ ಮತ್ತು ಕನ್ನಡದಲ್ಲಿ ವ್ಯಾಖ್ಯಾನ ಮಾಡಿದ ಪೂತಾತ್ಮರು!
" ಶ್ರೀ ಜಗನ್ನಾಥದಾಸರ ಮೇರು ಕೃತಿ ಶ್ರೀ ಹರಿಕಥಾಮೃತಸಾರ - ಒಂದು ಚಿಂತನೆ "
ಹರಿದಾಸ ಸಾಹಿತ್ಯದ ಮೇರು ಕೃತಿ ಯೆನಿಸಿದ " ಹರಿಕಥಾಮೃತ ಸಾರ " ವು ಶ್ರೀ ಜಗನ್ನಾಥದಾಸರ ಆಧ್ಯಾತ್ಮಿಕ ಕವಿತ್ವದ ಮಂಗಳ ಕಳಸವಾಗಿದೆ. 
ಇಂಥಾ ಮಧುರ, ಗಂಭೀರವಾದ ಸಾತ್ವಿಕ ಸಾಹಿತ್ಯಿಕ ಕೃತಿಯು ಹಿಂದಾಗಲಿಲ್ಲ. 
ಇಂದಿಲ್ಲ. 
ಮುಂದೆ ಆಗುವುದಿಲ್ಲ 
ಎಂದು ಹೇಳಿದರೆ ಸತ್ಯಕ್ಕೆ ವ್ಯತ್ಯಾಸವಾಗಿ ನುಡಿದಂತಾಗಲಿಲ್ಲ.
ಹರಿಕಥಾಮೃತಸಾರ ಒಂದು ಪ್ರಮೇಯ ಪಾರಿಜಾತ. 
ಶ್ರೀ ಸರ್ವಜ್ಞಾಚಾರ್ಯರ ಸಿದ್ಧಾಂತವೆಲ್ಲವೂ ಇಲ್ಲಿಯ ಮುದ್ದು ಭಾಷೆಯಲ್ಲಿ ಮೂಡಿ ನಿಂತಿವೆ.
ವೇದ ವೇದಾಂತದ ತಿರುಳೆಲ್ಲವೂ ಈ ಕಾವ್ಯದ ಹುರುಳಾಗಿ ಇಲ್ಲಿ ಅರಳಿವೆ. 
ವೈದಿಕ ದರ್ಶನದ ನೂರಾರು ಗ್ರಂಥಗಳಲ್ಲಿ ಹೇಳಿದ ತತ್ತ್ವಾರ್ಥಗಳನ್ನೂ, ಪ್ರಮೇಯ ರಹಸ್ಯಗಳನ್ನೂ ಮಥಿಸಿ ಈ ತಮ್ಮ ಅನರ್ಘ್ಯವಾದ ಕೃತಿಯಲ್ಲಿ ಎರಕ ಹಾಕಿದ್ದಾರೆ.
ಆಸ್ತಿಕ ದರ್ಶನಗಳನ್ನೆಲ್ಲಾ ಜಾಲಿಸಿ ತತ್ತ್ವಸಾರವಾದ ತತ್ತ್ವಗಳ ಕೆನೆಯನ್ನೆಲ್ಲಾ ಕಡೆದು ಅವುಗಳ ಆರ್ಕದಂತಿದ್ದ ಹೂ ಬೆಣ್ಣೆಯನ್ನೇ ಇಲ್ಲಿ ತೇಲಿಸಿದ್ದಾರೆ.
ಸಾಹಿತ್ಯವು ಸಿದ್ಧಾಂತವನ್ನಪ್ಪಿ ಇಲ್ಲಿ ಸಾರ್ಥಕವಾಗಿದೆ. 
ಸಿದ್ಧಾಂತವು ಸಾಹಿತ್ಯದ ಆಲಿಂಗನದಿಂದ ಮಧುರ ಮೋದಕವಾಗಿದೆ.
ಹರಿಕಥಾಮೃತಸಾರವನ್ನು ಓದಿದ ಜೀವಕ್ಕೆ ಆರೋಗ್ಯ, ಸೌಭಾಗ್ಯ, ರುಚಿ, ರಸ, ಲೌಕಿಕ ಆನಂದ, ಬ್ರಹ್ಮಾನಂದ, ಕಾವ್ಯಾರ್ಥ, ಪುರುಷಾರ್ಥ ಎಲ್ಲವೂ ದೊರಕಿ ಮಾನವೀಯ ಜೀವನವೇ ಪಾವನವಾಗುವದು.
ಈ ಹರಿಕಥಾಮೃತಸಾರದಲ್ಲಿ 32 ಸಂಧಿಗಳಿದ್ದು, 988 ಪದ್ಯಗಳು ಸುಂದರವಾದ ಭಾಮಿನೀ ಷಟ್ಪದಿಯ ಛಂದಸ್ಸಿನಲ್ಲಿ ಸಮಗ್ರ ವೇದಾಂತ ಪ್ರಪಂಚಕ್ಕೆ ಕಂಕಣ ಪರಿಧಿಯನ್ನು ಕಟ್ಟಿ ರಸೋಧಧಿಯನ್ನೇ ಒಟ್ಟೈಸಿದೆ.
1. ಮಂಗಳಾಚರಣ ಸಂಧಿ - 13 ಪದ್ಯಗಳು
2. ಕರುಣಾ ಸಂಧಿ - 31 ಪದ್ಯಗಳು
3. ವ್ಯಾಪ್ತಿ ಸಂಧಿ - 32 ಪದ್ಯಗಳು
4. ಭೋಜನ ಸಂಧಿ - 30 ಪದ್ಯಗಳು
5. ವಿಭೂತಿ ಸಂಧಿ - 40 ಪದ್ಯಗಳು
6. ಪಂಚಾಗಿಹೋತ್ರ ಸಂಧಿ - 35 ಪದ್ಯಗಳು
7. ಪಂಚತನ್ಮಾತ್ರ ಸಂಧಿ - 33 ಪದ್ಯಗಳು
8. ಮಾತೃಕಾ ಸಂಧಿ - 32 ಪದ್ಯಗಳು
9. ವರ್ಣ ಪ್ರಕ್ರಿಯಾ ಸಂಧಿ - 31 ಪದ್ಯಗಳು
10. ಸರ್ವ ಪ್ರತೀಕ ಸಂಧಿ - 25 ಪದ್ಯಗಳು
11. ಧ್ಯಾನ ಪ್ರಕ್ರಿಯಾ ಸಂಧಿ - 32 ಪದ್ಯಗಳು
12. ನಾಡೀ ಪ್ರಕರಣ ಸಂಧಿ - 45 ಪದ್ಯಗಳು
13. ನಾಮ ಸ್ಮರಣ ಸಂಧಿ - 33 ಪದ್ಯಗಳು
14. ಜೀವನ ಪ್ರಕ್ರಿಯಾ ಸಂಧಿ - 31 ಪದ್ಯಗಳು
15. ಶ್ವಾಸ ಸಂಧಿ - 09 ಪದ್ಯಗಳು
16. ದಟ್ಟ ಸ್ವಾತಂತ್ರ್ಯ ಸಂಧಿ - 15 ಪದ್ಯಗಳು
17. ಸ್ವಾತಂತ್ರ್ಯ ವಿಭಜನ ಸಂಧಿ - 37 ಪದ್ಯಗಳು
18. ಬಿಂಬೋಪಾಸನಾ ಸಂಧಿ - 31 ಪದ್ಯಗಳು
19. ಸ್ತೋತ್ರ ಸಂಧಿ - 35 ಪದ್ಯಗಳು
20. ಅವರೋಹಣ ತಾರತಮ್ಯ ಸಂಧಿ - 07 ಪದ್ಯಗಳು
21. ಆವೇಶಾವತಾರ ಸಂಧಿ - 57 ಪದ್ಯಗಳು
22. ಭಕ್ತಾಪರಾಧ ಸಹಿಷ್ಣು ಸಂಧಿ - 35 ಪದ್ಯಗಳು
23. ಬೃಹತ್ತಾರತಮ್ಯ ಸಂಧಿ - 29 ಪದ್ಯಗಳು
24. ಕಲ್ಪನಾ ಸಂಧಿ - 63 ಪದ್ಯಗಳು
25. ಕ್ರೀಡಾವಿಲಾಸ ಸಂಧಿ - 63 ಪದ್ಯಗಳು
26. ಆರೋಹಣ ತಾರತಮ್ಯ ಸಂಧಿ - 19 ಪದ್ಯಗಳು
27. ದೇವತಾನುಕ್ರಮಣಿಕಾ ಸಂಧಿ - 05 ಪದ್ಯಗಳು
28. ವಿಘ್ನೇಶ ಸಂಧಿ - 21 ಪದ್ಯಗಳು
29. ಅಣು ತಾರತಮ್ಯ ಸಂಧಿ - 16 ಪದ್ಯಗಳು
30. ದೈತ್ಯ ತಾರತಮ್ಯ ಸಂಧಿ - 25 ಪದ್ಯಗಳು
31. ನೈವೇದ್ಯ ಪ್ರಕರಣ ಸಂಧಿ - 25 ಪದ್ಯಗಳು
32. ಕಕ್ಷಾ ತಾರತಮ್ಯ ಸಂಧಿ - 36 ಪದ್ಯಗಳು
ಒಟ್ಟು : 988 ಪದ್ಯಗಳು
ಶ್ರೀ ಜಗನ್ನಾಥದಾಸರು ಪ್ರತಿಯೊಂದು ಸಂಧಿಯ ಪ್ರಾರಂಭದಲ್ಲೂ...
ಹರಿಕಥಾಮೃತಸಾರ ಗುರುಗಳ ।
ಕರುಣದಿಂದಾ ಪಾಣಿತು ಪೇಳುವೆ ।
ಪರಮ ಭಗವದ್ಭಕ್ತರಿದನಾದರದಿ ಕೇಳುವುದು ।।
ಎಂದು ಅನುಬಂಧ ಚತುಷ್ಟಯರನ್ನು ಸುಂದರವಾಗಿ ಹೇಳಿ ತಮ್ಮ ಧ್ಯೇಯ ದರ್ಶನಗಳನ್ನು ಮತ್ತೆ ಮತ್ತೆ ಸಾರಿ ಹೇಳುತ್ತಾರೆ.
" ಹರಿ "
1. ಮುಮುಕ್ಷುಗಳಾದ ಜೀವರು ಪರಮಾತ್ಮನ ಸಾಕ್ಷಾತ್ಕಾರವಾಗಬೇಕಾದರೆ ಭಗವಂತನ ಬಿಂಬೋಪಾಸನೆಯನ್ನು ಮಾಡಲೇಬೇಕು.
2. ಶ್ರೀ ಗಣೇಶನಿಗೆ ತನ್ನ ಬಿಂಬ ರೂಪ " ಶ್ರೀ ವಿಶ್ವ೦ಭರ " ಯೆಂದು ತಿಳಿದಿದೆ. 
ಆದ್ದರಿಂದ ಶ್ರೀ ಗಣೇಶನು ಶ್ರೀ ಶ್ರೀ ವಿಶ್ವ೦ಭರನಾಮಕ ಪರಮಾತ್ಮನನ್ನು ಉಪಾಸನೆ ಮಾಡುತ್ತಾನೆ.
3. ಆದರೆ, ಸಾಮಾನ್ಯ ಜೀವರಿಗೆ ತಮ್ಮ ಬಿಂಬ ರೂಪ ಯಾವುದು ಎಂದು ಗೊತ್ತಿಲ್ಲ. 
ಅದಕ್ಕೆ ಶ್ರೀಮದಾಚಾರ್ಯರು ತಮ್ಮ ಭಾಷ್ಯದಲ್ಲಿ ಸಾಮಾನ್ಯವಾಗಿ ಸರ್ವ ಜೀವರ ಬಿಂಬ ರೂಪ ಪರಮಾತ್ಮನು " ಹರಿ " ಶಬ್ದ ವಾಚ್ಯನಾಗಿದ್ದಾನೆ.
" ಕಥಾ "
" ಕಥಾ " ಎಂದರೆ ಕತೆಯಲ್ಲ. 
ಇಲ್ಲಿ " ಹರಿ ಕಥಾ " ಎಂದರೆ....
" ಕಥ್ಯ೦ತೇ ಪ್ರತಿಪಾದ್ಯ೦ತೇ ಹರೇ: ಜ್ಞಾನಾನಂದಾದಿ ಗುಣಾ: ಅನಂತ ರೂಪಾಣಿ ಯತ್ರ ಪ್ರತಿಪಾದ್ಯ೦ತೇ ತೇ ಹರಿ ಕಥಾ: ಇತಿ " 
ಎಂದರೆ....
" ವೇದಾದಿಗಳು " ಯೆಂದರ್ಥ.
" ದ್ವೇ ವಿದ್ಯೇ ವೇದಿತವ್ಯೇ " ...
1. ಅಪರಾ ವಿದ್ಯಾ
" ಅಪರಾ ವಿದ್ಯೆ " ಎಂದರೆ " ಋಗ್ವೇದಾದಿಗಳು ".
2. ಪರ ವಿದ್ಯಾ
" ಪರಾ " ಶ್ರೀ ಪರಮಾತ್ಮನನ್ನೇ ಪ್ರತಿಪಾದನೆ ಮಾಡುವ ಉಪನಿಷತ್ತುಗಳೂ, ಬ್ರಹ್ಮಸೂತ್ರಗಳೂ, ಭಾಗವತ, ಮಹಾಭಾರತ ಮತ್ತು ಮೂಲರಾಮಾಯಣ.
ಪರಮಾತ್ಮನನ್ನೇ ಪ್ರತಿಪಾದನೆ ಮಾಡುವ " ಪರಾ " ವಿದ್ಯೆಗೆ " ಅಮೃತ " ಎಂದು ಹೆಸರು.
ಅಂದರೆ, ಅಮೃತ ಸ್ವರೋಪ ಮೋಕ್ಷಕ್ಕೆ ಸಾಧಕವೆನಿಸುತ್ತದೆ.
" ಸಾರ "
ಸಾರ = ರಹಸ್ಯ / ಶ್ರೇಷ್ಠ
ದೇವತೆಗಳು ಪಾನ ಮಾಡುವ ಅಮೃತಕ್ಕಿಂತಲೂ ಈ ಜ್ಞಾನಾಮೃತ ಶ್ರೇಷ್ಠ ಎಂಬುದನ್ನು ತಿಳಿಸುವುದಕ್ಕಾಗಿ " ಸಾರ " ಶಬ್ದ ಪ್ರಯೋಗ ಮಾಡಿದ್ದಾರೆ.
ಅಚ್ಛ ತಿಳಿಗನ್ನಡದಲ್ಲಿ ಅವುಗಳ ಸಾರ ರಹಸ್ಯವನ್ನು ತಿಳಿಸುತ್ತೇನೆಂಬ ಅಭಿಪ್ರಾಯದಿಂದ ಈ ಗ್ರಂಥಕ್ಕೆ " ಹರಿಕಥಾಮೃತಸಾರ " ಯೆಂದು ನಾಮಕರಣ ಮಾಡಿದ್ದಾರೆ.
ಭಗವಂತನ ಸಾರ್ವತ್ರಿಕ ವ್ಯಾಪ್ತಿಯು ಸಾಮಾನ್ಯವಾಗಿ ತಿಳಿದುಕೊಳ್ಳಲು ಕಠಿಣವಾದರೂ ದೃಷ್ಟಾಂತ ಮುಖಾಂತರ ಸುಲಭ ಗಮ್ಯವಾಗುವಂತೆ ರಮ್ಯವಾಗಿ ಹೇಳುತ್ತಾರೆ ಶ್ರೀ ಜಗನ್ನಾಥದಾಸರು.
ಪರಿಮಳವು ಸುಮನದೊಳಗೆ ಅನಲನು ।
ಅರಣಿಯೊಳಗೆ ಇಪ್ಪಂತೆ । ದಾಮೋ ।
ದರನು ಬ್ರಹ್ಮಾದಿಗಳ 
ಮನದಲಿ ತೋರಿ ತೋರದಲೆ ।।
ಇರುತಿಹ ಜಗನ್ನಾಥವಿಠಲನ ।
ಕರುಣ ಪಡೆವ ಮುಮುಕ್ಷು ಜೀವರು ।
ಪರಮ ಭಾಗವತರನು 
ಕೊಂಡಾಡುವುದು ಪ್ರತಿ ದಿನವು ।। 1/13 ।।
ಸಂಸ್ಕೃತದಲ್ಲಿ " ಉಪನಾ ಕಾಳಿದಾಸಸ್ಯ " ಎಂಬ ವಚನವಿದ್ದಂತೆ " ಉಪಮಾ ಜಗನ್ನಾಥಸ್ಯ " ಎಂದು ಹೇಳಬೇಕೆನಿಸುತ್ತದೆ.
ಶ್ರೀ ಜಗನ್ನಾಥದಾಸರ ಕೃತಿಗಳನ್ನು ಪರಾಮರ್ಶಿಸಿದ ರಸ ಚೇತನಕ್ಕೆ...
ಭಕ್ತ ಭಗವಂತರ ರಾಗಾನುರಾಗಗಳನ್ನೂ, ಪ್ರೀತಿ ವಾತ್ಸಲ್ಯಗಳನ್ನೂ, ಎಂಥ ಹೃದಯ ಸ್ಪರ್ಶಿಯಾದ ನಿದರ್ಶನದಿಂದ ಪ್ರದರ್ಶನ ಮಾಡಿದ್ದಾರೆ ಶ್ರೀ ಜಗನ್ನಾಥದಾಸರು.
ಜನನಿಯನು ಕಾಣದಿಹ ಬಾಲಕ ।
ನೆನೆನೆನೆದು ಹಲುಬುತಿರೆ ಕತ್ತಲ ।
ಮನೆಯೊಳಗಿದ್ದವನ 
ನೋಡುತ ನಗುತ ಹರುಷದಲಿ ।।
ತನಯನಂ ಬಿಗಿದಪ್ಪಿ ರಂಬಿಸಿ ।
ಕನಲಿಕೆಯ ಕಳೆವಂತೆ । ಮಧುಸೂ ।
ದನನು ತನ್ನವರಿದ್ದೆಡೆಗೆ 
ಬಂದೊದಗಿ ಸಲಹುವನು ।। 2/11 ।।
ಇದಕ್ಕೆ ಅನೇಕ ಸಾಕ್ಷಿಗಳನ್ನು ಹೇಳಿ ಆರ್ತತ್ರಾಣ  ತತ್ಪರತೆಯನ್ನು ಸಿದ್ಧ ಮಾಡಿದ್ದಾರೆ.
ಮಹಾಭಾರತದ ವಿಷಯದಲ್ಲಿ....
" ಯದಿಹಾಸ್ತಿತದನ್ಯತ್ರಯನ್ನೇಹಾಸ್ತಿ ನ ತತ್ ಕ್ವಚಿತ್ "
ಯೆಂದು ಹೇಳಿದಂತೆ ನ್ಯೂನಾರ್ಥದಲ್ಲಿ ಹರಿಕಥಾಮೃತಸಾರ ವಿಷಯದಲ್ಲೂ ಹಾಗೆ ಹೇಳಬಹುದಾಗಿದೆ.
ಶ್ರೀ ಹರಿಕಥಾಮೃತಸಾರದಲ್ಲಿ...
ಬಾರದ ಪ್ರಮೇಯವಿಲ್ಲ.
ತಿಳಿಸದ ತತ್ತ್ವವಿಲ್ಲ.
ಬಣ್ಣಿಸದ ಭಗವನ್ಮಹಿಮಾ ಇಲ್ಲ.
ಸರ್ವ ಸೈದ್ಧಾಂತಿಕ ಜ್ಞಾತವ್ಯಾ೦ಶಗಳ ಒಂದು ಮಂಜುಳ ಮಂಜೂಷಿಕೆಯಂತೆ ಕಂಗೊಳಿಸುತ್ತಿದೆ ಈ ಸತ್ಪ್ರಬಂಧ!!
ಶ್ರೀ ಹರಿಕಥಾಮೃತಸಾರಕ್ಕೆ ವ್ಯಾಖ್ಯಾನ....
ಸಂಸ್ಕೃತದಲ್ಲಿ...
ಶ್ರೀ ಗುರು ಜಗನ್ನಾಥದಾಸರು
ಇವರು ಪೂರ್ವ ಅಂದರೆ ಹಿಂದಿನ ಆವವತಾರದಲ್ಲಿ ಶ್ರೀ ಶ್ರೀದವಿಠಲರು. 
ಮುಂದಿನ ಅವತಾರವೇ ಶ್ರೀ ಗುರು ಜಗನ್ನಾಥದಾಸರು.
a. ಹರಿಕಥಾಮೃತಸಾರ ತಾತ್ಪರ್ಯ 8 ಸಂಧಿಗಳಿಗೆ ಸಂಸ್ಕೃತದಲ್ಲಿ ಪೂರ್ಣ ಶ್ಲೋಕಗಳನ್ನು ರಚಿಸಿದ್ದಾರೆ.
b. ಮೊದಲನೇ ಸಂಧಿಗೆ - 42 ಶ್ಲೋಕಗಳೂ, ಎರಡನೇ ಸಂಧಿಗೆ - 64 ಶ್ಲೋಕಗಳೂ, 3ನೇ ಸಂಧಿಗೆ 67 ಶ್ಲೋಕಗಳನ್ನು ರಚಿಸಿದ್ದಾರೆ.
c. 4ನೇ ಸಂಧಿಗೆ ಶ್ರೀ ಹರಿಕಥಾಮೃತಸಾರ ತಾತ್ಪರ್ಯ ಚಂದ್ರಿಕಾ ಎಂಬ ಸಂಸ್ಕೃತ ವ್ಯಾಖ್ಯಾ!
d. 12ನೇ ಸಂಧಿಗೆ ಶ್ರೀ ಹರಿಕಥಾಮೃತಸಾರ ಮಂದ ಪ್ರಬೋಧಿನಿ ಮೂಲ ಸನಾಭಿ ಸಂಸ್ಕೃತ ಟೀಕಾ
e. ಶ್ರೀ ಹರಿಕಥಾಮೃತಸಾರ ಸಂಗ್ರಹ ಸೃಗ್ಧರಾ ಸಂಸ್ಕೃತ ಶ್ಲೋಕಗಳು - 6 ಪತ್ರ
f. ಹರಿಕಥಾಮೃತಸಾರ ತಾತ್ಪರ್ಯ ಪ್ರಕಾಶಿಕಾ ಸಂಧಿ - 3 ಪತ್ರ
g. ಹರಿಕಥಾಮೃತಸಾರ ಚಂದ್ರಿಕಾ - ಸ್ವಾಮಿರಾಜೀಯ - 8 ಪತ್ರ ( ಸಂಸ್ಕೃತ ಮತ್ತು ಕನ್ನಡ )
h. ಹರಿಕಥಾಮೃತಸಾರ ಮಂಡಬೋಧಿನೀ - 4 ಪತ್ರ
.
i. -- ಸದರ -- - 6 ಪತ್ರ
j. ಹರಿಕಾಥಾಮೃತಸಾರ ಚಂದ್ರಿಕಾ - 6 ಪತ್ರ
k. --- ಸದರ ---- - 4 ಪತ್ರ
l. ಹರಿಕಥಾಮೃತಸಾರಾಮೋದ - 2 ಪತ್ರ
m. ಹರಿಕಥಾಮೃತಸಾರ ತಾತ್ಪರ್ಯ ಚಂದ್ರಿಕಾ - 2 ಪತ್ರ
n. ಹರಿಕಥಾಮೃತಸಾರ ಚಂದ್ರಿಕಾ - 2 ಪತ್ರ
o. ದತ್ತ ಸ್ವಾತಂತ್ರ್ಯ ಸಂಧಿಗೆ ಸಂಬಂಧ ಪಟ್ಟ ಪತ್ರ
q. ಹರಿಕಥಾಮೃತ ಪರಿಮಳಸನಾಭಿ ಮೂಲ ಪದ್ಯ ಕನ್ನಡಾರ್ಥ - 2 ಪತ್ರ
ಶ್ರೀಮನ್ನ್ಯಾಯಸುಧೆಯ ಪ್ರತೀಕದಂತಿರುವ ಹರಿಕಥಾಮೃತಸಾರ ಗ್ರಂಥದಿಂದ ಕನ್ನಡ ಸಾಹಿತ್ಯದ ಸ್ಥಾನವು ಉನ್ನತವಾಗಿದೆ.
ಕನ್ನಡ ಆಧ್ಯಾತ್ಮಿಕ  ವಾಙ್ಮಯ ಭಾಂಡಾರವು ಸಿರಿ ಸಂಪನ್ನವಾಗುವಂತೆ ಮಾಡಿದೆ.
ಇದರಿಂದ ಕನ್ನಡ ನಾಡು, ನುಡಿ ಪುನೀತವಾಗಿದೆ.
ಮಾಧ್ವ ಪ್ರಪಂಚವೆಲ್ಲವೂ ಈ ವಿಶ್ವಮಾನ್ಯವಾದ ಕೃತಿಯಿಂದ ಧನ್ಯವಾಗಿದೆ.
ಶ್ರೀ ಶ್ರೀದವಿಠಲರಿಂದ ರಚಿತವಾದ ಹರಿಕಥಾಮೃತಸಾರ - ಫಲ ಶ್ರುತಿ ಸಂಧಿಯ 13ನೇ ಪದ್ಯ ಹೀಗಿದೆ...
ವ್ಯಾಸತೀರ್ಥರ ಒಲವೋ । ವಿಠಲೋ ।
ಪಾಸಕ ಪ್ರಭುವರ್ಯ ಪುರಂದರ ।
ದಾಸರಾಯರ ದಯವೋ 
ತಿಳಿಯದಿದು ಓದಿ ಕೇಳದಲೆ ।।
ಕೇಶವನ ದಿನ ಮಣಿಗಳನು । ಪ್ರಾ ।
ಣೇಶಗರ್ಪಿಸಿ ವಾದಿರಾಜರ ।
ಕೋಶಕೊಪ್ಪುವ ಹರಿಕಥಾ-
ಮೃತಸಾರ ರಚಿಸಿದರು ।।
ಶ್ರೀ ಪ್ರಹ್ಲಾದಾಂಶ ವ್ಯಾಸರಾಜ ಗುರುಸಾರ್ವಭೌಮರ ಒಲುಮೆಯೋ; ಶ್ರೀ ಪಂಢರಾಪುರಾಧೀಶ ವಿಠ್ಠಲನ ಉಪಾಸಕರಾದ ಶ್ರೀ ನಾರದಾಂಶ ಪುರಂದರದಾಸರ ದಯವೋ ಓದಿ ಕೇಳದಲೆ ಇದು ( ಹರಿಕಥಾಮೃತಸಾರ ) ತಿಳಿಯದು.
" ಕೇಶವ "
ಸರ್ವರ ರಕ್ಷಕ = ಸರ್ವೋತ್ತಮ 
ಅಂದರೆ...
ಶ್ರೀ ಮಹಾಲಕ್ಷ್ಮೀ - ಶ್ರೀ ಚತುರ್ಮುಖ ಬ್ರಹ್ಮದೇವರು - ಶ್ರೀ ರುದ್ರದೇವರೇ ಮೊದಲಾದ ಸಕಲ ಚೇತನಗಳನ್ನು ವಶದಲ್ಲಿಟ್ಟುಕೊಂಡಿರುವ ಶ್ರೀ ಮಹಾವಿಷ್ಣು.
ಶ್ರೀ ಹರಿಯ ಗುಣಗಳೆಂಬ ಮಣಿಗಳನ್ನು ಪ್ರಾಣೇಶನಾದ ( ಶ್ರೀ ವಾಯುದೇವರ ತಂದೆ ) ಶ್ರೀ ಹರಿಗೆ ಅರ್ಪಿಸಿ; ಶ್ರೀ ಭಾವಿಸಮೀರ ವಾದಿರಾಜರ ಕೋಶಕ್ಕೆ ( ಭಂಡಾರ / ಖಜಾನೆ ) ಒಪ್ಪಿಗೆ ಆಗುವಂತೆ ಈ ಹರಿಕಥಾಮೃತಸಾರವನ್ನು ಶ್ರೀ ಜಗನ್ನಾಥದಾಸರು ರಚಿಸಿದರು!!
ಶ್ರೀ ಜಗನ್ನಾಥದಾಸರು...
ರಾಗ : ಪಂತುವರಾಳಿ ತಾಳ : ಆದಿ
ತಾರಕವಿದು ಹರಿಕಥಾ-
ಮೃತಸಾರ ಜನಕೆ ।
ಘೋರತರ ಅಸಾರ ಸಂ-
ಸಾರವೆಂಬ ವನಧಿಗೆ ನವ ।। ಪಲ್ಲವಿ ।।
... ಭೂತ ಭವ್ಯ ಭವತ್ಪ್ರಭು 
ಅನಾಥ ಬಂಧು । ಜಗ ।
ನ್ನಾಥವಿಠಲ ಪಾಹಿ ಎಂದು 
ಮಾತುಮಾತಿಗೆಂಬುವರಿಗೆ ।।
by ಆಚಾರ್ಯ ನಾಗರಾಜು ಹಾವೇರಿ
     ಗುರು ವಿಜಯ ಪ್ರತಿಷ್ಠಾನ
*****

ಶ್ರೀ ಗುರು ಜಗನ್ನಾಥದಾಸರ ಮಧ್ಯಾರಾಧನೆ ವಿಶೇಷ "


" ಶ್ರೀ ಗುರು ಜಗನ್ನಾಥದಾಸರ ಕಣ್ಣಲ್ಲಿ ಶ್ರೀ ರಾಯರು "


ರಾಗ : ಅಸಾವೇರಿ ತಾಳ : ಏಕ


ಅರಿಯಾರೋ ಅಂದಿಗ೦ದಿಗನ್ಯ । ಈ ।

ಧರೆಯೊಳಿರುವ ಮಹಿಮೆ ಘನ್ನ ।। ಪಲ್ಲವಿ ।।

ಮರುತಾವೇಶಯುತ ಉರಗಾಂಶರನ್ನ ।। ಅ ಪ ।।

ಪ್ರಹ್ಲಾದ ಬಾಹ್ಲೀಕ ವ್ಯಾಸನು ।

ಇಲ್ಲೀಗ ರಾಘವೇಂದ್ರ ।

ಉಲ್ಲಾಸ ಬಡುವನು ।। ಚರಣ ।।

ಇನ್ನೂರ ನಾಲ್ವತ್ತು ।

ಮುನ್ನೀಗ ಪೋದದ್ದು ।
ನನ್ನೂರ ಅರವತ್ತು ।
ಇನ್ನು ಉಳಿದಿಹದು ।। ಚರಣ ।।
ಎಲ್ಲೀ ನೋಡಲಿವ- ।
ರಿಲ್ಲದ ಸ್ಥಳವಿಲ್ಲ ।
ಬಲ್ಲಾ ಭಕುತಗೆ ।
ಅಲ್ಲಲ್ಲೇ ತೋರುವದು ।। ಚರಣ ।।
ಖುಲ್ಲ ನರರಿಗೆ ।
ಎಲ್ಲೆಲ್ಲಿ ಇಲ್ಲವೋ ।
ಸಲ್ಲೋದು ನಿಶ್ಚಯ ।
ಸುಳ್ಳಲ್ಲ ಈ ಮಾತು ।। ಚರಣ ।।
ದುಷ್ಟ ಜನರಿಗೆ ।
ಇಷ್ಟಾರ್ಥ ಕೊಡವೊನೊಮ್ಮೆ ।
ಶಿಷ್ಟ ಜನರಿಗ- ।
ಭೀಷ್ಟವ ಕೊಡುವುದು ।। ಚರಣ ।।
ಇವರ ಪೂಜಿಪ ಜನ ।
ದಿವಿಜರು ನಿಶ್ಚಯ ।
ಭುವನದೊಳಗೆ ಇನ್ನು ।
ಇವರಿಗೆ ಸರಿಯುಂಟೆ ।। ಚರಣ ।।
ಇವರನು ಒಲಿಸಲು ।
ಪವನನು ಒಲಿವನು ।
ದಿವಿಜಾರುತ್ತಮ । ಮಾ ।
ಧವ ತಾನೇ ಒಲಿವಾ ।। ಚರಣ ।।
ಅಮಿತ ಮಹಿಮರೆಂದು ।
ಪ್ರಮಿತರು ಪೇಳೋರು ।
ಸುಮತಿಗಳ ಮನಕೆ ।
ಗಮಿಸಿ ತಿಳಿಸುವುದು ।। ಚರಣ ।।
ದಾತಾ ಗುರು ಜಗ ।
ನ್ನಾಥ ವಿಠಲ ಬಹು ।
ಪ್ರೀತಿಯಿಂದಲಿ ಇವರ ।
ಖ್ಯಾತಿಯ ಮಾಡೋದು ।। ಚರಣ ।।
" ಮರುತಾವೇಶಯುತ ಉರಗಾಂಶರನ್ನ "
ಪ್ರಮಾಣ :
ವಾಯೂನಾ ಚ ಸಮಾವಿಷ್ಟಂ ಹರೇಃ ಪಾದಾಬ್ಜ ಸಂಶಯಂ ।
ವಾಯೂನಾ ಚ ಸಮಾವಿಷ್ಟಃ ಮಹಾಬಲ ಸಮನ್ವಿತಃ ।
ಪ್ರಹ್ಲಾದಾದುತ್ತಮಃ ಕೋನು ವಿಷ್ಣು ಭಕ್ತೌ ಜಗತ್ತ್ರಯೇ ।।
ಕೃಷ್ಣಗ್ರಹಗ್ರಹೀತಾತ್ಮ....... ಪ್ರಹ್ಲಾದೋ ನಿತ್ಯ ಭಕ್ತಿಮಾನ್ ।।
ವಾಯೂನಾ ಚ ಸಮಾವಿಷ್ಟಃ ಮಹಾಬಲ ಸಮನ್ವಿತಃ । ಎಂದರೆ ವಾಯೂನಾಚ ನಿತ್ಯ ಸಮಾವಿಷ್ಟತ್ವಾತ್ ಪ್ರಹ್ಲಾದೋ ನಿತ್ಯ ಭಕ್ತಿಮಾನ್ ।
" ನಿತ್ಯ " ಪದಕ್ಕೆ ಅರ್ಥವೇನೆಂದರೆ..
ಅವರ ಮುಂದಿನ ಅವತಾರಗಳಾದ ಶ್ರೀ ಬಾಹ್ಲೀಕ - ಶ್ರೀ ವ್ಯಾಸರಾಜ - ಶ್ರೀ ರಾಘವೇಂದ್ರತೀರ್ಥರು. ಇವರಲ್ಲೂ ಸಹಾ ಶ್ರೀ ವಾಯುದೇವರು ನಿತ್ಯಾವೇಶದಿಂದ ಇರುತ್ತಾರೆಂದು ಸ್ಪಷ್ಟ!
ಶ್ರೀ ದಾಸಾರ್ಯರು ಅನು ಪಲ್ಲವಿಯಲ್ಲಿ " ಉರುಗಾಂಶ " ಎಂದು ಪ್ರಯೋಗ ಮಾಡಿದ್ದಾರೆ. ಶ್ರೀ ದಾಸರಾಯರ ಮಾತಿನ ಅರ್ಥ ತಿಳಿಯದೇ, ಶ್ರೀ ರಾಯರು ಶ್ರೀ ಶೇಷದೇವರ ಅವತಾರವೆಂದು ವಿದ್ವಜ್ಜನರು ಹೇಳುತ್ತಿದ್ದು, ಇದು ಸರಿಯಲ್ಲ!
ಕಾರಣ ಶ್ರೀ ರಾಯರಲ್ಲಿ ಶ್ರೀ ಶೇಷದೇವರ ಆವೇಶವಿದೆ ಎಂದು ಶ್ರೀ ವಿಜಯೀ೦ದ್ರತೀರ್ಥರು ತಮ್ಮಿಂದ ರಚಿತವಾದ ಶ್ರೀ ವ್ಯಾಸರಾಜ ಸ್ತೋತ್ರದಲ್ಲಿ....
ಪ್ರಹ್ಲಾದಸ್ಯಾsವತ
ಾರೋಸಾವೀಂದ್ರಸ್ಯಾನುಪ್ರವೇಶನಾತ್ ।
ತೇನೇ ತತ್ಸೇವಿನಾ೦ ನೃಣಾ೦ ಸರ್ವಮೇತದ್ಭವೇ ಧ್ರುವಮ್ ।।
ಆದ್ದರಿಂದ ಶ್ರೀ ರಾಯರು ಶ್ರೀ ಶೇಷಾಂಶ ಅಲ್ಲವೆಂದು ಸಿದ್ಧವಾಯಿತು!! ಮತ್ತು ಶ್ರೀ ರಾಯರು ೧೫ನೇ ಕಕ್ಷೆಯಲ್ಲಿ ಶ್ರೀ ಭೃಗು ಮಹರ್ಷಿಗಳ ನಂತರ ಬರುವವರು! ಈ ವಿಷಯವನ್ನು ಶ್ರೀ ಸಹ್ಲಾದಾಂಶ ಜಗನ್ನಾಥದಾಸರು.....
" ಹರಿಕಥಾಮೃತಸಾರದ - ಬೃಹತ್ತಾರತಮ್ಯಸಂಧಿ " ಯಲ್ಲಿ....
ತರಣಿಗಿಂತಲಿ ಪಾದ ಪಾದರೆ ।
ವರುಣ ನೀಚನು ಮಹಾಭಿಷಕು । ದು ।
ರ್ದರ ಸುಶೇಷಣನು ಶಾಂತನೂ ನಾಲ್ವರು ವರುಣ ರೂಪ ।।
ಸುರಮುನಿ ನಾರದನು ಕಿಂಚಿತ್ ಕೊರತೆ ।
ವರುಣಗೆ ಅಗ್ನಿ ಭೃಗು ಅಜ ।
ಗೊರಳ ಪತ್ನಿ ಪ್ರಸೂತಿ ಮೂವರು ನಾರದನಿಗೆ ಅಧಮರು ।। 20 ।।
ನೀಲ ದೃಷ್ಟದ್ಯುಮ್ನ ಲವ ಈ ।
ಲೇಲಿಹಾಸನ ರೂಪಗಳು ಭೃಗು ।
ಕಾಲಿಲಿ ಒದ್ದಿದ್ದರಿಂದ ಹರಿಯ ವ್ಯಾಧನು ಎನಿಸಿದನು ।।
ಏಳು ಋಷಿಗಳಿಗೆ ಉತ್ತಮರು ಮುನಿ ।
ಮೌಳಿ ನಾರದಾಗೆ ಅಧಮ ಮೂವರು ।
ಘಾಳಿಯುತ ಪ್ರಹ್ಲಾದ ಬಾಹ್ಲೀಕರಾಯನು ಎನಿಸಿದನು ।। 21 ।।
ಜನಪ ಕರ್ಮಜರೊಳಗೆ ನಾರದ ।
ಮುನಿ ಅನುಗ್ರಹ ಬಲದಿ ಪ್ರಹ್ಲಾದ ।
ಅನಲ ಭೃಗು ದಾಕ್ಷಾಯಣಿಯಾರಿಗೆ ಸಮನು ಎನಿಸಿಕೊಂಬ ।।
ಮನು ವಿವಸ್ವಾನ್ ಗಾಧಿಜ ಈರ್ವರು ।
ಅನಳಗಿಂತ ಅಧಮರು ಮೂವರು ।
ಎಣೆ ಎನಿಸುವರು ಸಪ್ತ ಋಷಿಗಳಿಗೆ ಎಲ್ಲ ಕಾಲದಲಿ ।। 22 ।।
ನೀಲ, ದುಷ್ಟದ್ಯುಮ್ನ ಮತ್ತು ಲವ - ಈ ಮೂವರು ಶ್ರೀ ಅಗ್ನಿದೇವರ ರೂಪಗಳು.
ಭೃಗು ಮಹರ್ಷಿ ಶ್ರೀ ಹರಿಯನ್ನು ಕಾಲಿಂದ ಒದ್ದದ್ದರಿಂದ ಬೇಡನಾಗಿ ಜನಿಸಿದರು.
ಅಗ್ನಿ, ಭೃಗು ಮತ್ತು ಪ್ರಸೂತಿ - ಈ ಮೂವರು ಸಪ್ತ ಋಷಿಗಳಿಗಿಂತ ಉತ್ತಮರು. ನಾರದಮುನಿಗಿಂತ ಕಡಿಮೆ.
ಶ್ರೀ ಪ್ರಹ್ಲಾದರಾಜರು - ಅಗ್ನಿ, ಭೃಗು ಮತ್ತು ಪ್ರಸೂತಿಯರಿಗೆ ಸಮರು!
" ಶ್ರೀ ಶಂಖುಕರ್ಣ " ಎಂಬ ಕರ್ಮಜ ದೇವತೆಯ ಅವತಾರ.
ಆದರೆ ಶ್ರೀ ಶಂಖುಕರ್ಣರು 14ನೇ ಕಕ್ಷೆಗೆ ಸೇರಿದ ಶ್ರೀ ನಾರದ ಮಹರ್ಷಿಗಳ ಶಿಷ್ಯರಾದ್ದರಿಂದ 15ನೇ ಕಕ್ಷೆಯಲ್ಲಿ ಬರುವ ಅಷ್ಟ ವಸುಗಳಲ್ಲಿ " ಶ್ರೀ ಅಗ್ನಿದೇವರು ", ಶ್ರೀ ಭೃಗು ಮಹರ್ಷಿಗಳು, ಶ್ರೀ ದಕ್ಷ ಪ್ರಜಾಪತಿ ಹೆಂಡತಿಯಾದ ಪ್ರಸೂತಿಯೂ ಈ ಮೂರು ಮಂದಿಯೂ ಸಮಾನರು.
ಶ್ರೀ ನಾರದರಿಗಿಂತ ಸ್ವಲ್ಪ ಅಧಮರೂ ಮತ್ತು ಶ್ರೀ ವರುಣದೇವರಿಗಿಂತ 1/4 ಗುಣ ಅಧಮರು. ಅನಂತರ ಕರ್ಮಜ ದೇವತೆಗಳ ಮಧ್ಯದಲ್ಲಿ ಪರಿಣಿತರಾದ ಶ್ರೀ ಪ್ರಹ್ಲಾದರಾಜರು ಶ್ರೀ ಭೃಗು ಮಹರ್ಷಿಗಳಿಗಿಂತ ಸ್ವಲ್ಪ ಅಧಮರು.
" ಮೊದಲನೇ ನುಡಿ "
ಪ್ರಮಾಣ :
ಪ್ರಹ್ಲಾದೋ ಜನ್ಮ ವೈಷ್ಣವಃ ।
ಪ್ರಹ್ಲಾದೋ ನಿತ್ಯ ಭಕ್ತಿಮಾನ್ ।
ವಾಸುದೇವೇ ಭಗವತಿ ಯಸ್ಯ ನೈಸರ್ಗಿಕೀರತಿಃ ।
ಬ್ರಹ್ಮಣ್ಯಃ ಶೀಲ ಸಂಪನ್ನಃ ಸತ್ಯಸಂಧೋ ಜಿತೇಂದ್ರಿಯಃ ।
ಪ್ರಶಾಂತಕಾಮೋ ರಹಿತಾಸುರೋಸುರಃ ।।
ಮಹದರ್ಭಕಃ ಮಹದುಪಾಸಕಃ ನಿರ್ವೈರಾಯ ಪ್ರಿಯ ಸುಹೃತ್ತಮಃ ।
ಮಾನಸ್ತಂಭ ವಿವರ್ಜಿತಃ ಯಥಾ ಭಗವತೀಶ್ವರೇ ।।
ಪ್ರಹ್ಲಾದೋಪಿ ಮಹಾಭಾಗಃ ಕರ್ಮದೇವ ಸಮಃ ಸ್ಮೃತಃ ।
ಪ್ರಕೃಷ್ಟಾಹ್ಲಾದ ಯುಕ್ತತ್ವಾತ್ ನಾರದಸ್ಯೋಪದೇಶತಃ ।
ಅತಃ ಪ್ರಹ್ಲಾದ ನಾಮಾಸೌ ಪೃಥುವ್ಯಾಂ ಖಗಸತ್ತಮಃ ।।
ದೇವಾಃ ಶಾಪ ಬಲದೇವ ಪ್ರಹ್ಲಾದಾದಿತ್ವಮ
ಾಗತಾಃ ।
ದೇವಾಃ ಶಾಪಾಭಿಭೂತತ್ವಾತ್ ಪ್ರಹ್ಲಾದಾದ್ಯ ಬಭೂವಿರೇ ।।
ಪ್ರಹ್ಲಾದೋ ಕಯಾಧವಃ ವಿರೋಚನಂ ಸ್ವಪುತ್ರಂ ಅಪನ್ಯಧತ್ತ ।।
ಋತೇತು ತಾತ್ವಿರ್ಕಾ ದೇವನ್ನಾರದಾದೀನಥೈವ ಚ ।
ಪ್ರಹ್ಲಾದಾದುತ್ತಮಃ ಕೋನು ವಿಷ್ಣು ಭಕ್ತೌ ಜಗತ್ತ್ರಯೇ ।।
" ಶ್ರೀ ಪ್ರಹ್ಲಾದರಾಜರಿಗೆ ಜಗನ್ನಾಥನಾದ ಶ್ರೀ ನೃಸಿಂಹನ ಪರಮಾದ್ಭುತ ವಚನ!! "
ವತ್ಸ! ಯದ್ಯದಭೀಷ್ಟಂತೇ ತತ್ತದಸ್ತು ಸುಖೀಭವ ।
ಭವಂತಿ ಪುರುಷಾ ಲೋಕೇ ಮದ್ಭಾಕ್ತಾಸ್ತ್ವಾಮನುವ್ರತಾಃ ।
ತ್ವಂ ಚ ಮಾಂ ಚ ಸ್ಮರೇಕಾಲೇ ಕರ್ಮಬಂಧಾತ್ಪ್ರಮುಚ್ಯತೇ ।।
**
" ಶ್ರೀ ಬಾಹ್ಲೀಕರಾಜರು "
ಪ್ರಮಾಣ :
ಮ ಭಾ ತಾ ನಿ ( ೧೧-೮ )
ಬಾಹ್ಲೀಕರಾಜ ಸತ್ತಮಃ ಹಿರಣ್ಯಕಶಿಪೋ ಪುತ್ರ: ।
ಪ್ರಹ್ಲಾದೋ ಭಗವತ್ಪ್ರಿಯಃ ವಾಯುನಾ ಚ ಸಮಾವಿಷ್ಟ: ।।
*
ಶ್ರೀ ಪುರಂದರದಾಸರು....
ಶೇಷಾವೇಶ ಪ್ರಹ್ಲಾದನವತಾರ ವೆನಿಸಿದೆ । ವ್ಯಾಸರಾಯನೆಂಬೋ ಪೆಸರು ನಿನಗಂದಂತೆ । ದೇಶಾಧಿಪಗೆ ಬಂದ ಕುಹೂ ಯೋಗವನು ನೂಕಿ । ನೀ ಸಿಂಹಾಸನವೇರಿ ಮೆರೆದೆ ಜಗವರಿಯೇ । ವ್ಯಾಸಾಬ್ಧಿಯನು ಬಿಗಿಸಿ ಕಾಶಿ ದೇಶದೊಳೆಲ್ಲ । ಭಾಸುರ ಕೀರ್ತಿಯನು ಪಡೆದೆ ನೀ ಗುರುರಾಯ । ವಾಸುದೇವ ಪುರಂದರ ವಿಠ್ಠಲನ್ನ ದಾಸರೊಳು । ಲೇಶ ನಿನ್ನಂತೆ ವೆಗ್ಗಳರ ಕಾಣೆನು ನಾನು ।।
*
" ಶ್ರೀ ಪ್ರಹ್ಲಾದರಾಜರೇ ಶ್ರೀ ಮಂತ್ರಾಲಯ ಪ್ರಭುಗಳು "
ಶ್ರೀಮದ್ಭಾಗವತದಲ್ಲಿನ ಬಲಿ ಚಕ್ರವರ್ತಿ ಪ್ರಸಂಗ ...
ರಕ್ಷಿಷ್ಯೆ ಸರ್ವತೋಹಂ ತ್ವಾ೦ ಸಾನುಗಂ ಸಪರಿಚ್ಛದಮ್ ।
ಸದಾ ಸನ್ನಿಹಿತಂ ವೀರ ತತ್ರ ಮಾಂ ದಕ್ಷ್ಯತೇ ಭವಾನ್ ।।
ಶ್ರೀ ಪ್ರಹ್ಲಾದ ಉವಾಚ : -
ನೇಮ೦ ವಿರಿಂಚೋ ಲಭತೇ ಪ್ರಸಾದಂ ನ ಶ್ರೀರ್ನ ಶರ್ವ: ಕಿಮುತಪಾರೇ ತೇ ।
ಯನ್ನೋಸುರಾಣಾಮಸಿ ದುರ್ಗಪಾಲೋ ವಿಶ್ವಾಭಿವಂದ್ಯೈರಪಿ ವಂದಿತಾಂಘ್ರಿ: ।।
ತಾತ್ಪರ್ಯ :
ಶ್ರೀ ಚತುರ್ಮುಖ ಬ್ರಹ್ಮದೇವರಿಗಾಗಲೀ, ಶ್ರೀ ಜಗನ್ಮಾತೆ ಮಾಹಾಲಕ್ಷ್ಮೀದೇವಿ
ಯರಿಗಾಗಲೀ, ಶ್ರೀ ಮಹಾರುದ್ರದೇವರಿಗಾ
ಗಲೀ ಇಂಥಹಾ ಕೃಪಾ ಪ್ರಸಾದವು ದೊರೆಯಲಿಲ್ಲ. ಹಾಗಿರುವಾಗ ಇತರರ ಮಾತಿರಲಿ ವಿಶ್ವವಂದ್ಯರಾದ ಶ್ರೀ ಚತುರ್ಮುಖ ಬ್ರಹ್ಮದೇವರು ಯಾರ ಚರಣಾರವಿಂದಗಳಿಗೆ ನಮಸ್ಕರಿಸುವರೋ ಅಂಥಹ ಪರಮ ದಯಾಳುವಾದ ನೀನು ( ಶ್ರೀ ಹರಿ ) ನಮ್ಮಂಥಹ ಅಸುರರ ಬಾಗಿಲು ಕಾಯುವವನಾದೆ.
ಇಂಥಹಾ ಪರಮಾನುಗ್ರಹದಿಂದ ನೀನು ( ಶ್ರೀ ಹರಿ ) ನಮ್ಮ ಮನೆಯ ದ್ವಾರಪಾಲಕನೇ ಆಗಿಬಿಟ್ಟೆಯಲ್ಲಾ? ಎಂಥಾ ಕರುಣಾನಿಧಿಯೋ ಸ್ವಾಮಿ ಎಂದು ಶ್ರೀ ಪ್ರಹ್ಲಾದರಾಜರು ಶ್ರೀ ಹರಿಯನ್ನು ಸ್ತುತಿಸಿದ್ದಾರೆ.
ಬ್ರಹ್ಮಾಂಡ ಪುರಾಣದಲ್ಲಿ...
ಬಲಿರಪ್ಯ ಸುರಾವೇಶಾತ್ ಸ್ತುವನ್ನಪಿ ಜನಾರ್ದನಂ ।
ಪ್ರಾಕ್ಷಿಪತ್ಯಂತರಾಕ್ವಾಪಿ ಪ್ರಹ್ಲಾದೋ ನಿತ್ಯಭಕ್ತಿಮಾನ್ ।।
ಶ್ರೀ ಪ್ರಹ್ಲಾದರಾಜರು ಸದಾ ಶ್ರೀ ಹರಿಭಕ್ತಿಯುಳ್ಳ ಶ್ರೀ ವಾಯುದೇವರ ನಿತ್ಯಾವೇಶರಾದುದರಿಂದ ಅವರಿಗೆ ಎಂದೆಂದೂ ಅಸುರಾವೇಶ ಇಲ್ಲ!
ಶ್ರೀ ವಾಮನಾವತಾರಿ ಹರಿ :
ವತ್ಸಾ ಪ್ರಹ್ಲಾದ! ನಿನಗೆ ಮಂಗಳವಾಗಲಿ. ನಿನ್ನ ಪೌತ್ರನೊಡನೆ ಸುತಲ ಲೋಕಕ್ಕೆ ಹೋಗು, ನೀನು ಸಂತೋಷದಿಂದ ಅಲ್ಲಿದ್ದು ನಿನ್ನ ಬಂಧುಗಳನ್ನೇಲ್ಲಾ ಸಂತೋಷ ಪಡಿಸುತ್ತಿರು. ಗದಾಪಾಣಿಯಾಗಿ ಬಾಗಿಲಲ್ಲಿರುವ ನನ್ನನ್ನು ನಿತ್ಯವೂ ನೋಡುತ್ತಿರು. ನನ್ನ ದರ್ಶನದಿಂದ ಸಂತೋಷವನ್ನು ಹೊಂದಿ ಸಕಲ ಪ್ರಾರಬ್ಧ ಕರ್ಮವನ್ನೂ ಕಳೆದುಕೊಳ್ಳುವೆ.
" ಶ್ರೀ ವಾಮನ ಪುರಾಣ " ದಲ್ಲಿ..
ಬ್ರಹ್ಮ ಕರಾರ್ಚಿತ ಮೂಲರಾಮನನ್ನು ಕೊನೆಯ ಯುಗ ಅಂದರೆ ಕಲಿಯುಗದಲ್ಲಿ - ಕೊನೆಯ ಅವತಾರದಲ್ಲಿ ಶ್ರೀ ರಾಘವೇಂದ್ರ ನಾಮಕ ಅವತಾರದಲ್ಲಿ ಕೊನೆಯ ಆಶ್ರಮವೆಂದರೆ ಯತ್ಯಾಶ್ರಮದಲ್ಲಿ ಪೂಜಿಸಿ ನನ್ನ ಸನ್ನಿಧಾನಕ್ಕೆ ಬಾ ಎಂದು ಪರಮಾನುಗ್ರ ಮಾಡಿದನು!!
" ಯದ್ಯದ್ವೈಧಸಮಾತ್ಮ
ನೇದಮನಘಯಚ್ಛಾ೦ತಿಮೇ ಚಾಂತಿಮೇ "
ಶುಕ ಮಹರ್ಷಿಗಳು...
ಪ್ರಹ್ಲಾದನು ಭಗವಂತನ ಆಜ್ಞೆಯನ್ನು ಶಿರಸಾ ವಹಿಸಿ ಬಲಿಯೊಡನೆ ಶ್ರೀ ವಾಮನದೇವರಿಗೆ ಪ್ರದಕ್ಷಿಣೆ ನಮಸ್ಕಾರವನ್ನು ಮಾಡಿ ಸ್ವಾಮಿಯ ಅನುಜ್ಞೆಯನ್ನು ಪಡೆದು ಸಕಲ ಅಸುರ ಸೇನೆಗಳಿಗೆ ಅಧಿಪತಿಯಾಗಿ ಮಹಾಬಿಲವನ್ನು ಸೇರಿದನು!!
ಶ್ರೀ ವಾಮನ ರೂಪಿ ಶ್ರೀ ಹರಿಯ ಪರಮಾನುಗ್ರಹದಿಂದ ಕಲಿಯುಗದ ಜನರನ್ನು ಉದ್ಧರಿಸಲು ಧರೆಗೆ ಇಳಿದು ಬಂದ ಕಲ್ಪವೃಕ್ಷ - ಕಾಮಧೇನು ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮರು. ಈಗಲೂ ಶ್ರೀ ಹರಿಯು ರಾಮ - ನರಹರಿ - ಕೃಷ್ಣ - ಕೃಷ್ಣ ( ವೇದವ್ಯಾಸ ) - ನಾರಾಯಣ ಪಂಚ ರೂಪಗಳಿಂದ ಶ್ರೀ ಕ್ಷೇತ್ರ ಮಂತ್ರಾಲಯ ಬೃಂದಾವನದಲ್ಲಿ ವಿರಾಜಮಾನರಾದ ಶ್ರೀ ರಾಯರಲ್ಲಿ ನೆಲೆನಿಂತು ಶ್ರೀ ರಾಯರಿಗೆ ರಕ್ಷಾ ಕವಚನಾಗಿಯೂ, ಶ್ರೀ ನೃಸಿಂಹ ರೂಪದಲ್ಲಿ ಮಂತ್ರಾಲಯ ಕ್ಷೇತ್ರ ಪಾಲಕನಾಗಿರುವ ಶ್ರೀ ಹರಿಯು ಎಂಥಾ ಪರಮ ಕರುಣಾಳು!
" ವಿ ಸೂ "
ಶ್ರೀ ಹರಿದಾಸರುಗಳ ಮಾತುಗಳಿಗೆ ಸಪ್ರಮಾಣಗಳೊಂದಿಗೆ ಅರ್ಥ ಮಾಡುತ್ತಾ ಹೋದರೆ ಒಂದೊಂದು ಹಾಡಿಗೂ ( ಕೀರ್ತನೆಗೂ ) ದೊಡ್ಡ ಗ್ರಂಥವೇ ಆಗುತ್ತದೆ. ಆದ್ದರಿಂದ ಇಲ್ಲಿ ಸಂಕ್ಷಿಪ್ತವಾಗಿ ಒಂದೆರಡು ನುಡಿಗೆ ಮಾತ್ರ ವಿವರಣೆಯನ್ನು ಕೊಡಲಾಗಿದೆ.
**


ಭಾಗವತ ಶಿರೋಮಣಿ ಈತನು| ತ್ಯಾಗ ಮೂರುತಿ ಮಹಿಮಾನ್ವಿತನು|                      |ಬಾಗಿ ಭಜಿಸದೆ ದೂಷಿಪ ನರನು| ಬೇಗನೆ ಸೇರುವ ಘನ ನರಕವನು|| ಶ್ರೀ ಕೌತಾಳಂ ಶ್ರೀ ಗುರು ಜಗನ್ನಾಥ ದಾಸರ ಅಪರೂಪದ ಚಿತ್ರಶ್ರೀ ಮಂತ್ರಾಲಯ ಮಹಾ ಪ್ರಭುಗಳ  ಮೇಲೆ ಬಹುವಾಗಿ ಕೀರ್ತನೆ ರಚನೆಯನ್ನು ಮಾಡಿದ್ದಾರೆ ಶ್ರೀ ಕೋಸಗಿ ಮುತ್ಯಾ ಅವರು.
ಒಂದು ಕಡೆ ಹೇಳುತ್ತಾರೆ.
ಪರಮ ಪುರುಷನೆ ನಿನ್ನ ಅನುಚರನೆನೆಸಿ| 
ಧರೆಯೊಳುನರರನ್ನ ಬೇಡೋದು ಘನತೆಯೆ||
ಮುಂದೆ ಸಾಲುಗಳಲ್ಲಿ ರಾಯರ ಮಹಿಮೆಯನ್ನು ಹೇಳಿ ಕೊನೆಯಲ್ಲಿ ಹೇಳುತ್ತಾರೆ.
ಹಿಂದಿನ ಮಹಿಮ ದಿಂದೇನು‌ 
ಎನಗಯ್ಯ|
ಇಂದು ಮಹಾಮಹಿಮ ತೋರಿಸೋ..||
ಮುಂದೆ ಕೊನೆಗೆ ಹೇಳುತ್ತಾರೆ.
ಎಂತೆಂಥ ಭಯ ಬರೆ ನಿಂತು ಕಳೆದ್ಯೋ|
ದಯವಂತ ನಿನಗೆಣೆಗಾಣೆನಯ್ಯಾ||
ನಿನ್ನಲ್ಲಿ ಹರಿ ದಯ ಉನ್ನತ ಇರಲಿನ್ನು|
ಎನ್ನಲ್ಲಿ ನಿನ್ನ ದಯ ಇರಲಯ್ಯ||
ದಾತ ಗುರು ಜಗನ್ನಾಥ ವಿಠ್ಠಲ |ನಿನ್ನ ಮಾತು ಲಾಲಿಸಿದಂತೆ ಪೊರೆ ಎನ್ನ||
ದಾತ ಗುರು ಜಗನ್ನಾಥ ವಿಠ್ಠಲ ಅವರ ಯಾವ ಮಾತನ್ನು ಕೇಳಿದ ಎನ್ನುವ ಬಗ್ಗೆ ಮುಂದೆ ವಿವರಣೆ ಪ್ರಯತ್ನ ಮಾಡುವೆ.
ಶ್ರೀ ವರದೇಶ ದಾಸ  ಗುರುಅಂತರ್ಗತ ಶ್ರೀ ಗುರು ಜಗನ್ನಾಥ ದಾಸರ ಅಂತರ್ಗತ ಶ್ರೀ ಮದ್ ಇಭರಾಮಪುರ ಅಪ್ಪಾವರ ಅಂತರ್ಗತ ಶ್ರೀ ರಾಘವೇಂದ್ರ ಗುರು ಅಂತರ್ಗತ ಶ್ರೀ ಭಾರತಿರಮಣ ಮುಖ್ಯ ಪ್ರಾಣಂತರ್ಗತ ಶ್ರೀ ಗುರು ಜಗನ್ನಾಥ ವಿಠ್ಠಲನ ಪಾದಕಮಲಕ್ಕೆ  ಅರ್ಪಣೆ ಮಾಡುತ್ತಾ
ಶ್ರೀ ಕೃಷ್ಣಾರ್ಪಣಮಸ್ತು🙏
*******

" ಶ್ರೀ ಅಹ್ಲಾದಾಂಶ ಗುರು ಜಗನ್ನಾಥದಾಸರು - 1 " 
" ಸೋಮಾಪುರ ಶ್ರೀ ಕೃಷ್ಣದಾಸರ ಶಿಷ್ಯರೂ, ಶ್ರೀ ಪ್ರಹ್ಲಾದಾಂಶ ರಾಯರ ಪ್ರೀತಿಪಾತ್ರರು - ಶ್ರೀ ಅಹ್ಲಾದಾಂಶ ಗುರು ಜಗನ್ನಾಥದಾಸರು " 
!! ದಿನಾಂಕ : 14.10.2019 ಸೋಮವಾರ ಶ್ರೀ ಗುರು ಜಗನ್ನಾಥದಾಸರ ಆರಾಧನಾ ಮಹೋತ್ಸವ, ಕೌತಾಳಂ, ತಾ ।। ಆದೋನಿ ಜಿ ।। ಕರ್ನೂಲ್ - ಆಂಧ್ರಪ್ರದೇಶ !!
ರಾಘವೇಂದ್ರ ಕೃಪಾಪಾತ್ರಂ 
ಕೌತಾಳ ಕ್ಷೇತ್ರ ವಾಸಿನಮ್ ।
 ನಾನಾ ಗ್ರಂಥ ಪ್ರಣೇತಾರಂ 
ಗುರುಜಗನ್ನಾಥ ಮಹಂ ಭಜೇ ।। 
" ಶ್ರೀ ವರದವಿಠ್ಠಲರು ".... 
ಉದಯರಾಗ ತಾಳ : ಝ೦ಪೆ
ಏಳಯ್ಯ ಗುರುವೇ ಬೆಳಗಾಯಿತು ।
ಏಳು ಶ್ರೀ ಗುರು ಜಗನ್ನಾಥದಾಸಾರ್ಯ ।। ಪಲ್ಲವಿ ।। 
ಪರಮ ಭಾಗವತವನು ಅತಿ ।
ವಿರಳದಲಿ ತಿಳಿಸಬೇಕು ।
ಶಾಸ್ತ್ರಾರ್ಥಗಳ ನಿಜ ಮರ್ಮವ ।
ವಿಶದೀಕರಿಸಲೀಬೇಕು ।।
ಹರಿಕಥಾಮೃತಸಾರಕೆ ।
ಪರಿಮಳ ರಚಿಸಬೇಕು ।
ಪರತರ ಪದ್ಯ ಸುಳಾದಿಗಳ ।
ವಿರಚಿಸಲಿಬೇಕು ।। ಚರಣ ।। 
ಗುರುಗುಣಸ್ತವನವನು । 
ರಚಿಸಿ ಪಾಡಲುಬೇಕು ।
ವರ ಅಪ್ಪಣ್ಣಾರ್ಯರಾಗಿ ।
ಗುರುಗಳೊಂದಿಗೆ ಮಾತನಾಡ-
ಲುಬೇಕು ಬೆನಕಪ್ಪರಾಗಿ ।
ಹರಿಕಥಾಮೃತಸಾರಕೆ । ಫಲಶ್ರುತಿ ।।
ಯ ರಚಿಸಬೇಕು ಶ್ರೀದವಿಠಲರಾಗಿ ।
ಗುರುಗಳ ಇರುವನ್ನು ತೋರಿಸಲಿಬೇಕು ।
ಗುರು ಜಗನ್ನಾಥದಾಸಾರ್ಯರಾಗಿ ।। ಚರಣ ।। 
ಘೋರತರ ಸಂಸಾರ ಸಾಗರದಲಿ ।
ದಾರಿ ಕಾಣದೇ ಬಳಲಿ -
ಬೆಂಡಾಗಿ ನಿಂತಿಹನೋ ।
ಪರಮ ಕರುಣಾಕರನಾದ 
ವರದವಿಠ್ಠಲನ ದಾಸ ।
ಕೈಪಿಡಿದು ಉದ್ಧರಿಸಲು-
ಬೇಗನೇ ಏಳು ।। ಚರಣ ।। 
ಶ್ರೀ ರಾಯರ ಪ್ರಭಾವಕ್ಕೆ ಒಳಗಾಗದವರೇ ಇಲ್ಲ! 
ಮಂಚಾಲೆಗೆ ಸಮೀಪ ಕೋಸಗಿ! 
ಮಹಾತ್ಮರ ಪೂರ್ವ ವೃತ್ತಾ೦ತವೇ ಇವರದ್ದು! 
ವಿದ್ವನ್ಮಣಿ ಕಾಳಿದಾಸನು ಪೂರ್ವದಲ್ಲಿ ಹೇಗೆ ಅವಿದ್ಯಾವಂತನಾಗಿದ್ದನೋ ಅದರಂತೆ ಶ್ರೀ ಸ್ವಾಮಿರಾಯರು! 
ಕಾಳಿದಾಸನಿಗೆ ಕಾಳಿಯ ಅನುಗ್ರಹ! 
ಶ್ರೀ ಸ್ವಾಮಿರಾಯರಿಗೆ ಬುಡಮಲದೊಡ್ಡಿಯ ಶ್ರೀ ಪ್ರಾಣದೇವರ ಪರಮಾನುಗ್ರಹ! 
ಏನೂ ತಿಳಿಯದ ಶ್ರೀ ಸ್ವಾಮಿರಾಯರು ಕನ್ನಡ - ಸಂಸ್ಕೃತದಲ್ಲಿ ಕವಿಸಾರ್ವಭೌಮರಾದರು!!! 
" ಶ್ರೀ ಗುರು ಜಗನ್ನಾಥದಾಸರ ಸಂಕ್ಷಿಪ್ತ ಮಾಹಿತಿ " 
ಹೆಸರು : ಶ್ರೀ ಸ್ವಾಮಿರಾಯ 
ತಂದೆ : ಶ್ರೀ ವೆಂಕಟಗಿರಿಯಾಚಾರ್ಯರು 
ತಾಯಿ : ಸಾಧ್ವೀ ಸೀತಮ್ಮ 
ಜನ್ಮ ಸ್ಥಳ : ಕೋಸಿಗಿ 
ಕಾಲ : ಕ್ರಿ ಶ 1837 - 1918 
" ಶ್ರೀ ರಾಯರ ಮತ್ತು ಶ್ರೀ ಅಪ್ಪಾವರ ಪರಮಾನುಗ್ರ " 
ಶ್ರೀ ವೆಂಕಟಗಿರಿಯಾಚಾರ್ಯ ದಂಪತಿಗಳಿಗೆ ಜೀವನದಲ್ಲಿ ಎಲ್ಲಾ ಸೌಭಾಗ್ಯಗಳಿದ್ದರೂ ಪುತ್ರ ಸಂತಾನವಿರಲಿಲ್ಲ. ಭಾವುಕರೂ, ಗುರುಭಕ್ತರಾದ ಇವರು ಕೋಸಗಿಯಿಂದ ಮಂತ್ರಾಲಯಕ್ಕೆ ಬಂದು ವಂಶೋದ್ಧಾರಕ ಪುತ್ರನನ್ನು ಅನುಗ್ರಹಿಸಬೇಕೆಂದು ಶ್ರೀ ಗುರುಸಾರ್ವಭೌಮರಲ್ಲಿ ಪ್ರಾರ್ಥಿಸಿ ಏಕಾಗ್ರಚಿತ್ತ ಮತ್ತು ಭಕ್ತಿ ಶ್ರದ್ಧೆಗಳಿಂದ ಸೇವೆ ಮಾಡಿದರು. ಗುರುಗಳ ಸೇವೆ ವ್ಯರ್ಥವಾದೀತೇ? 
" ವಿಶ್ವಾಸೋ ಫಲದಾಯಕ " ಯೆಂಬಂತೆ ಆ ಕಾಲದಲ್ಲಿ ಇಭರಾಮಪುರ ಶ್ರೀ ಕೃಷ್ಣಾಚಾರ್ಯರೆಂಬ ಮಹಾನ್ ಸಾಧಕ - ಅಪರೋಕ್ಷ ಜ್ಞಾನಿಗಳೊಬ್ಬರಿದ್ದರು. 
ಸಜ್ಜನರ ಉದ್ಧಾರಕ್ಕಾಗಿಯೇ ಅವತರಿಸಿದ ಅಪೂರ್ವ ರತ್ನ. ಶ್ರೀಅಪ್ಪಾವರು ಶ್ರೀ ರಾಯರ ಅವಿಚ್ಚಿನ್ನ ಅಂತರಂಗ ಭಕ್ತರು! 
ಶ್ರೀ ಅಪ್ಪಾವರು ಮತ್ತು ಶ್ರೀ ವೆಂಕಟಗಿರಿಯಾಚಾರ್ಯರು ಬಾಲ್ಯದಿಂದಲೇ ಸ್ನೇಹಿತರಾಗಿದ್ದರು. 
ಶ್ರೀ ಅಪ್ಪಾವರು ಯಾವ ಮುನ್ಸೂಚನೆಯೂ ಇಲ್ಲದಲೆ ಕೋಸಿಗಿಗೆ ಬಂದರು. 
ಆಧ್ಯಾತ್ಮ - ತತ್ತ್ವಜ್ಞಾನಗಳ ವಿಷಯವೇ ಇವರ ಚರ್ಚೆಯಾಗಿತ್ತು. 
ಆ ಸಂದರ್ಭದಲ್ಲಿ ಶ್ರೀ ಆಚಾರ್ಯರು ತಮ್ಮ ಅಂತರಂಗದ ಅಳಲನ್ನು ಶ್ರೀ ಅಪ್ಪಾವರ ಬಳಿ ತೋಡಿಕೊಂಡರು ಹಾಗೂ ತಮಗೆ ಸತ್ಪುತ್ರ ಸಂತಾನವಾಗುವಂತೆ ಅನುಗ್ರಹಿಸಲು ಕೋರಿಕೊಂಡರು. 
ಶ್ರೀ ಅಪ್ಪಾವರು ಶ್ರೀ ಪಂಚಮುಖ ಪ್ರಾಣದೇವರ ಉಪಾಸಕರು. ಆಗ ಶ್ರೀ ಅಪ್ಪಾವರು.. ನಾನೇನು ಶಾಪಾನುಗ್ರಹ ಶಕ್ತನಲ್ಲ! 
ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮರು ನಿನಗೆ ಅನುಗ್ರಹಿಸುವರು. 
ನೀನು ಶ್ರೀ ಗುರುರಾಯರಿಗೆ ಮಾಡಿದ ಸೇವೆ ಎಂದಿಗೂ ವ್ಯರ್ಥವಾಗುವುದಿಲ್ಲ. 
ನೀನು ನಾಳೆ ನಮ್ಮ ಪೂಜಾ ಸಮಯದಲ್ಲಿ ಉಪಸ್ಥಿತನಿರು ಎಂದು ಹೇಳಿದರು! 
ಆದಿನ ಶ್ರೀ ಅಪ್ಪಾವರು ಶ್ರೀ ಪಂಚಮುಖ ಪ್ರಾಣದೇವರನ್ನು ವಿಶೇಷವಾಗಿ ಪೂಜಿಸಿ ಭಕ್ತಿ ಪೂರ್ವಕ ಪ್ರಾರ್ಥಿಸುತ್ತಾ ತಮ್ಮ ಮಿತ್ರನಿಗೆ ಪುತ್ರ ಸಂತಾನವನ್ನು ಅನುಗ್ರಹಿಸುಯೆಂದು ಬೇಡುತ್ತಾ ದೇವರ ಪೆಟ್ಟಿಗೆಗೆ ಕೈ ಹಾಕಿದರು. 
ಆ ಪೆಟ್ಟಿಗೆಯಲ್ಲಿ ಒಂದು ಮುತ್ತು ಅವರ ಕೈಗೆ ಸಿಕ್ಕಿತು. ಆ ಮುತ್ತನ್ನು ಶ್ರೀ ವೆಂಕಟಗಿರಿಯಾಚಾರ್ಯರಿಗೆ ಕೊಡುತ್ತಾ... 
" ಆಚಾರ್ಯಾ! ಚಿಂತಿಸಬೇಡ. ಶ್ರೀ ಹರಿವಾಯುಗುರುಗಳು ನಿನಗೆ ಮುತ್ತಿನಂಥಾ ಪುತ್ರನನ್ನು ಕರುಣಿಸುವರು " ಎಂದರು. 
ಭಗವದ್ಭಕ್ತರ ಮಾತುಗಳೆಲ್ಲವೂ " ವಾಚಮಥೋ೯ನುಧಾವತಿ " ಅಲ್ಲವೇ? ಅಂತೂ ಆ ದಂಪತಿಗಳ ಆಶೆ ಫಲಿಸಿತು. 
ಮುಂದೆ ಆ ದಂಪತಿಗಳಿಗೆ ಮಹಾ ಭಕ್ತನಾಗಿ ಕೋಸಗಿಯ ಕಣ್ಮಣಿಯಾಗಲಿರುವ ಮುತ್ತಿನಂಥಾ ಪುತ್ರ ಸಂತಾನವಾಯಿತು. 
ಶ್ರೀ ವೆಂಕಟಗಿರಿಯಾಚಾರ್ಯರು ಆ ಮಗುವಿಗೆ " ಸ್ವಾಮಿರಾಯ " ಎಂದು ನಾಮಕರಣ ಮಾಡಿದರು. 
ವಿದ್ಯಾ ಗುರುಗಳು : 
ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮರು ಶ್ರೀ ರಾಯರು ಬುಡಮಲದೊಡ್ಡಿಯ ಶ್ರೀ ವ್ಯಾಸರಾಜ ಪ್ರತಿಷ್ಠಿತ ಶ್ರೀ ಮುಖ್ಯಪ್ರಾಣದೇವರ ಸನ್ನಿಧಾನದಲ್ಲಿ ಶ್ರೀ ಅಪ್ಪಾವರ ಸಮ್ಮುಖದಲ್ಲಿ ಶ್ರೀ ಸ್ವಾಮಿರಾಯರ ನಾಲಿಗೆಯ ಮೇಲೆ ಬೀಜಾಕ್ಷರ ಬರೆದು, ಶ್ರೀ ರಾಯರೇ ಸ್ವತಃ ಪಾಠ ಮಾಡಿದರು. 
ಸಕಲ ವಿದ್ಯಾ ಪಾರಂಗತರಾದ ಶ್ರೀ ಸ್ವಾಮಿರಾಯರು ಗೀರ್ವಾಣ ಭಾಷೆ ಹಾಗೂ ಕನ್ನಡದಲ್ಲಿ ನೂರಾರು ಕೃತಿಗಳನ್ನು ರಚಿಸಿದರು. ಕೋಸಿಗಿಯಲ್ಲಿ ಸಾಹಿತ್ಯದ ಮಳೆ ಸುರಿಯಿತು!!
***

" ಶ್ರೀ ಅಹ್ಲಾದಾಂಶ ಗುರು ಜಗನ್ನಾಥದಾಸರು - 2 " 
ಅಂಕಿಂತೋಪದೇಶ : ಶ್ರೀ ಕೃಷ್ಣವಿಠ್ಠಲರು 
ಅಂಕಿತ : ಶ್ರೀ ಗುರು ಜಗನ್ನಾಥವಿಠ್ಠಲ
" ಪ್ರಮಾಣ " 
ಶ್ರೀ ವರದೇಂದ್ರ ವಿಠಲರು.... 
ಗುರು ಜಗನ್ನಾಥೆ೦ಬ -
ಮುದ್ರಿಕಾ ನೆಂಟ ತಂದೆ ।
ಗುರು ಗೋಪಾಲದಾಸಾರ್ಯರಿಂದಾ ।
ಭರದಿ ಕೈಕೊಂಡು -
ಪ್ರಾಕೃತ ಭಾಷ್ಯದಿಂದಲಿ ।
ಪರತತ್ತ್ವ ರಹಸ್ಯವರೆದ-
ಕರುಣಾರ್ಣವಾ ।।
ಶ್ರೀ ವರದೇಶ ವಿಠಲರು... 
ಸಿರಿ ಗೋಪಾಲಾಖ್ಯರು ಸುಜ್ಞಾನವನು ।
ಕರುಣಿಸಿ ಮರ್ಮವನು ।
ಸರಸದಿ ಗ್ರಂಥದ ವರ ।
ಸುರಹಸ್ಯವನು ಸಂಗ್ರಹಿಸದ ತಾನು ।।
ಶ್ರೀ ವರದ ವಿಠಲರು.... 
ಸಾರುತ ಕೃಷ್ಣದಾಸಾರ್ಯರ । ಸ ।
ಚ್ಚರಣ ಪಡೆದನು ಕರುಣ ।
ಧೀರ ಗುರು ಜಗನ್ನಾಥವಿಠಲನ -
ಅಂಕಿತವ ಪೊಂದಿದ ಮುದವ ।।
ಅಂಶ : ಶ್ರೀ ಆಹ್ಲಾದರಾಜರು
ಶ್ರೀ ವರದ ವಿಠಲರು.... 
ಸೂರಾಂಶದಿ ತಾ ಭುವಿಗೆ ಬಂದ ಆಹ್ಲಾದ । 
ಜಗಕಿದು ಮೋದ ।
ತೋರಿದ ಅಣ್ಣ ಪ್ರಹ್ಲಾದ -
ಇವರಿಗೆ ದಾರಿ । ನಿಜ ಹೆದ್ದಾರಿ ।
ಮಾರಮಣನ ನರಹರಿ ರೂಪ -
ಮುದದಿಂದ । ಕಂಡ ಆನಂದ ।।
ಕಕ್ಷೆ : 18 
ಆವೇಶ : ಆದಿಗಣಪನ ಸಮಾನಾವೇಶ 
ಶ್ರೀ ಗುರು ಜಗನ್ನಾಥದಾಸರು... 
ಪ್ರಹ್ಲಾದ ಮುಖ್ಯಪ್ರಾಣಾವೇಶದಿಂದ ಸೋದರ ಜೀವಾಂಸ ಅಪಾನಾವಿಷ್ಠ । ಸಹ್ಲಾದನಾಮಕ ಮಿತ್ರಾಹ್ವಯ ಸೂರ್ಯನಾದ । ಕಲ್ಹಾದ ವ್ಯಾನಾವೇಶದಿಂದ ಮೋದದಿ ಸೋಮಾಂಶೋದಾನ । ಯುಗ । ನುಹ್ಲಾದ ನಾಮಕ ಸಂಭೂತನಾದ ಆದಿಗಣಪ ಸಮಾನಾವೇಶದಿಂದ । ಆಹ್ಲಾದನಾದ ದೈತ್ಯ ಪುತ್ರರೆನಿಸಿ ಮೇದಿನೀ ಸುರರ ಉದ್ಧರಿಸಲೋಸಗ.... ।। 
ಎಂದು ಶ್ರೀ ಗುರುಜಗನ್ನಾಥದಾಸರು ಶ್ರೀ ನೃಸಿಂಹ ಪುರಾಣದನ್ವಯ ತಮ್ಮ ಅಂಶ - ಅವತಾರ - ಆವೇಶಗಳನ್ನು ಮೇಲ್ಕಂಡ ಸುಳಾದಿಯಲ್ಲಿ ತಿಳಿಸಿದ್ದಾರೆ. 
" ಶ್ರೀ ಗುರು ಜಗನ್ನಾಥದಾಸರ ಅವತಾರಗಳು "
ಶ್ರೀ ಅಪ್ಪಣ್ಣಾಚಾರ್ಯರು, ಲಚ್ಚಮರಿ ಶ್ರೀ ಬೆನಕಪ್ಪ. ಶ್ರೀ ಕರ್ಜಗಿ ದಾಸಪ್ಪ ( ಶ್ರೀ ಶ್ರೀದವಿಠ್ಠಲರು ) ಮತ್ತು ಶ್ರೀ ಸ್ವಾಮಿರಾಯರು ( ಶ್ರೀ ಗುರುಜಗನ್ನಾಥದಾಸರು ) 
" ಶ್ರೀ ಅಪ್ಪಣ್ಣಾಚಾರ್ಯರು " 
ಎರಡನೇ ಜನ್ಮದಿ ಅಪ್ಪಣ್ಣಾಭಿದ- 
ನೆನಿಸಿ ರಾಯರ ಒಲಿಸಿ ।
ಗುರುಗಳು ಈತಗೆ ಸಂಸ್ಥಾನವ- 
ಕೊಡ ಬಯಸೆ । ತಿಳಿಸಿದ ಆಸೆ ।
ದರುಶನ ಬೇಡ ಯೆನಲು -
ಗುರುಗಳು ತನಗೆ । 
ನಡೆದನು ಮನೆಗೆ ।
ಆರನೆ ದಿನ ಗುರುರಾಜರು -
ವೃಂದಾವನದಿ । 
ನಡೆದರು ಮುದದಿ ।
ದೂರದ ಊರಲಿ ಇರುವ -
ಅಪ್ಪಣ್ಣನು ಕೇಳಿ । 
ದುಃಖವ ತಾಳಿ ।।
ಭಾರದ ಮನದಿಂ ಗುರುಗಳ -
ಸ್ತುತಿಸುತ ಬಂದಾ । 
ಮುಂದೆ ತಾ ನಿಂದಾ ।
ನೊಂದ ಮನದ ಅಪ್ಪಣ್ಣನ- 
ಹಂಬಲವರಿತು । 
ತಪ್ಪನು ಮರೆತು ।
ಮಂದಿರ ಗುರುಗಳು ಶಿಷ್ಯನ -
ಭಕುತಿಗೆ ಒಲಿದು । 
ಪ್ರೀತಿಯ ತಳೆದು ।
ಅಂದರು " ಸಾಕ್ಷೀ ಹಯಾಸ್ಯೋsತ್ರಹಿ "- 
ಎಂದು । ಹರಿಸಿದರೆಂದು ।।
" ಶ್ರೀ ಬೆನಕಪ್ಪ "
ಮೂರನೆ ಜನುಮದಿ ಬೆನಕನ -
ನಾಮದಿ ಬಂದ । 
ಲಚ್ಚಮರಿಯಲಿ ನಿಂದ ।
ಮೂರು ಹೊತ್ತು ಭೋಜನ -
ತಾಂಬೂಲವ ತಿಂದ । 
ಸ್ತ್ರೀಯರಾನಂದ ।
ಸಾರಿದ ಜನರಿಗೆ ಬೇಡಿದ -
ವರಗಳ ಕೊಟ್ಟ । 
ಆ ದೇಹವ ಬಿಟ್ಟ ।।
" ಶ್ರೀ ಶ್ರೀದ ವಿಠಲರು " 
ಭರದಿ ಧರೆಯೊಳು ಜನಿಸಿದ -
ಭೂಸುರರಲ್ಲಿ । 
ಕರಜಗಿಯಲ್ಲಿ ।ಪರಿಚಾರಕ -
ನಾಮದಿ ತಾ ನಾಡೊಳು -
ಮೆರೆದಾ । ಬಂದುದ ಮರೆದಾ ।
ಗುರುಗಳು ಕರುಣಿಪ ಶುಭದಿನವಾಗ -
ಇರಲು । ದಾಸರು ಬರಲು ।
ಜಗದೊಡೆಯ, ಪ್ರಾಣೇಶದಾಸರು -
ಅಂದು । ಇವರಲ್ಲಿಗೆ ಬಂದು ।
ಬಗೆ ಬಗೆಯಿಂದಲಿ " ಆದದ್ದಾಯಿತು " -
ಯೆನಲು । ನೆನಪಿಗೆ ಬರಲು ।
ನಗೆಮೊಗದಲಿ ದಾಸಪ್ಪನು ಇವರಿಗೆ -
ಮಣಿದು । ಮನದಲಿ ತಿಳಿದು ।
ಮೋದ ಬಡಿಪ ಜಗನ್ನಾಥದಾಸರಿಗೆ -
ಎರಗಿ । ಅಘಗಳ ನೀಗಿ ।
ಶ್ರೀದ ವಿಠಲನ ಅಂಕಿತವನು ತಾ -
ಪೊಂದಿ । ಗುರುಗಳ ಹೊಂದಿ ।
ಮೇದಿನಿಯೊಳು ಸುಖ ತತ್ತ್ವವ ಬೀರಿದ -
ನೀತಾ । ಬಹು ಪ್ರಖ್ಯಾತಾ ।
ಹರಿಕಥಾಮೃತಸಾರ ಗ್ರಂಥವ -
ಪಠಿಸಿ । ಸಾರವ ತಿಳಿಸಿ ।
ಬರೆದನು ಫಲಸ್ತುತಿ ಸಂಧಿಯನು -
ತಾನಿದಕೆ । ವಿನಯದಿ ಅರಿಕೆ ।
ಹರುಷದಿ ಓದಲು ಕೃಷ್ಣನು ಪಿಡಿಯುವ -
ಕರವ । ದಾಸ್ಯವ ಕೊಡುವಾ ।।
" ಶ್ರೀ ಗುರು ಜಗನ್ನಾಥದಾಸರು "
ಭೂಮಿಯೊಳಗೆ ವರ ಮಂತ್ರಾಲಯ -
ಪ್ರಾಂತದಲಿ । ಕೋಸಿಗಿಯಲ್ಲಿ ।
ಆ ಮಹಾಭೂಸುರ ವೆಂಕಟಗಿರಿ - 
ಯಾರ್ಯರಲಿ । 
ಜನಿಸಿದನಿಲ್ಲಿ ।
ಸ್ವಾಮಿ ಯೆಂಬ ಸುನಾಮದಿ -
ಕರೆಸಿದ ನೀತಾ ।। ರಾಜರ ಪ್ರೀತಾ ।
ಶ್ರೀ ರಾಘವೇಂದ್ರರ ಕೃಪೆಯಲ್ಲಿ -
ತಾ ಮೆರೆದ । ತತ್ತ್ವದ ನೊರೆದ ।
ಸಾರುತ ಕೃಷ್ಣದಾಸಾರ್ಯರ ।ಸಚ್ಚರಣ ।
ಪಡೆದನು ಕರುಣ ।
ಧೀರ ಗುರುಜಗನ್ನಾಥ -
ವಿಠಲನ ಅಂಕಿತವ । 
ಪಡೆದನು ಮುದದಿ ।।
" ಶ್ರೀ ಗುರು ಜಗನ್ನಾಥದಾಸರೇ ತಮ್ಮ ವಿದ್ಯಾ ಗುರುಗಳಾದ ಶ್ರೀ ರಾಯರ ಕುರಿತು ಒಂದು ಸುಳಾದಿಯಲ್ಲಿ "...
ವೇದ ಶಾಸ್ತ್ರ ಪುರಾಣ -ಕಥೆಗಳ ಓದಿದವನಲ್ಲ । 
ತತ್ತ್ವದ ಹಾದಿ ತಿಳಿದವನಲ್ಲ! 
ಬುಧ ಜನ ಸಂಗ ಮೊದಲಿಲ್ಲ । 
ಮೋದತೀರ್ಥ ಪದಾಬ್ಜ -
ಮಧುಕರರಾದ ಶ್ರೀ ಗುರುರಾಘವೇಂದ್ರರ । 
ಪಾದಪದ್ಮ ಪರಾಗ ಸ್ಪರ್ಶ ಮಾತ್ರದಲಿ । 
ಕೃತಿಯ ಮಾಡಲು ಶಕುತಿ ಪುಟ್ಟಿತು । 
ಮತಿಯ ಮಾಂದ್ಯವು ತಾನೇ ಹೋಯಿತು । 
ಯತನವಿಲ್ಲದೆ ಸಕಲ ಶ್ರುತಿ -
ಸ್ಮೃತಿ ಅರ್ಥ ತಿಳಿದಿಹುದೋ ।। 
ಸಮಕಾಲೀನ ಯತಿಗಳು : 
ಶ್ರೀ ರಾಯರ ಮಠದ ಶ್ರೀ ಸುಜ್ಞಾನೇಂದ್ರರು, ಶ್ರೀ ಸುಧರ್ಮೇಂದ್ರರು, ಶ್ರೀ ಸುಗುಣೇಂದ್ರರು, ಶ್ರೀ ಸುಪ್ರಜ್ಞೇ೦ದ್ರರು, ಸುಕೃತೀಂದ್ರರು, ಶ್ರೀ ಸುಶೀಲೇಂದ್ರರು 
ಶ್ರೀ ವ್ಯಾಸರಾಜ ಮಠದ ಶ್ರೀ ವಿದ್ಯಾರತ್ನಾಕರತೀರ್ಥರು ಮತ್ತು 
ಶ್ರೀ ಕೂಡ್ಲಿ ಅಕ್ಷೋಭ್ಯತೀರ್ಥ ಮಠದ ಶ್ರೀ ರಘುದಾಂತತೀರ್ಥರು. 
ಶಿಷ್ಯರು : 
1. ಶ್ರೀ ವರದವಿಠ್ಠಲರು ( ಶ್ರೀ ಕರಣಂ ಹನುಮಂತರಾಯರು )
2. ಶ್ರೀ ವರದೇಶವಿಠ್ಠಲರು ( ಶ್ರೀ ಸ್ವಾಮಿರಾಯರು )
3. ಶ್ರೀ ವರದೇಂದ್ರವಿಠ್ಠಲರು ( ಶ್ರೀ ಹಳ್ಳಿಕೆರಿ ವೇಂಕಟರಾಯರು )
4. ಶ್ರೀ ಆನಂದವಿಠ್ಠಲರು
5. ಶ್ರೀ ಸುಂದರವಿಠ್ಠಲರು ( ಶ್ರೀ ಗೋರೆಬಾಳು ಹನುಮಂತರಾಯರು )
6. ಶ್ರೀ ಜಗದೀಶವಿಠ್ಠಲರು
7. ಶ್ರೀ ಶ್ರೀನಿವಾಸವಿಠ್ಠಲರು
8. ಶ್ರೀ ಮುದ್ದು ಗುರು ಜಗನ್ನಾಥದಾಸರು ( ಶ್ರೀ ರಾಘವೇಂದ್ರಾಚಾರ್ಯರು - ಇವರು ಶ್ರೀ ಗುರು ಜಗನ್ನಾಥದಾಸರ ಪುತ್ರ )
9. ಶ್ರೀ ಸುಂದರ ಗುರು ಜಗನ್ನಾಥದಾಸರು ( ಶ್ರೀ ಜಗನ್ನಾಥಾಚಾರ್ಯರು - ಇವರು ಶ್ರೀ ಗುರು ಜಗನ್ನಾಥದಾಸರ ಪೌತ್ರ )
***
" ಶ್ರೀ ಅಹ್ಲಾದಾಂಶ ಗುರು ಜಗನ್ನಾಥದಾಸರು - 3 " 
ಹರಿದಾಸ ಸಾಹಿತ್ಯವೆಂದರೆ ತತ್ತ್ವಜ್ಞಾನ ಸಮೀಕರಣ ಮಾಡಿದಂತೆ. ಹರಿದಾಸ ಪರಿಕಲ್ಪನೆಯ ಮೂಲ ಪುರುಷರೆಂದರೆ ಸಾಕ್ಷಾತ್ ಶ್ರೀಮನ್ಮಧ್ವಾಚಾರ್ಯರು. 
ಕನ್ನಡದಲ್ಲಿ ಕೀರ್ತನೆಗಳನ್ನು ರಚಿಸಿ ಕನ್ನಡದ ಹರಿದಾಸ ಸಾಹಿತ್ಯದ ಆದ್ಯ ಪ್ರವರ್ತಕರಾದ ಶ್ರೀ ನರಹರಿತೀರ್ಥರಿಂದ ಪ್ರಾರಂಭಿಸಿ ಎಲ್ಲಾ ಹರಿದಾಸರೂ ತಮ್ಮ ಕೀರ್ತನೆಗಳಲ್ಲಿ ಮಧ್ವಮತದ ತತ್ತ್ವಗಳನ್ನು ಪ್ರಚುರ ಪಡಿಸಿದ್ದಾರೆ! 
ಆ ಸತ್ಪರಂಪರೆಯಲ್ಲಿ ಬಂದ ಶ್ರೀ ಗುರುಜಗನ್ನಾಥದಾಸರೂ ಕೂಡಾ ತಮ್ಮ ಕೀರ್ತನೆಗಳಲ್ಲಿ ಮಧ್ವಮತದ ತತ್ತ್ವಗಳನ್ನು ಸಾಂದ್ರ ಸುಂದರವಾಗಿ ನಿರೂಪಿಸಿದ್ದಾರೆ. 
ಪ್ರಾಚೀನ ಸಾಹಿತ್ಯ ಸಂಗ್ರಹ; ಸ್ವಂತ ಕೃತಿಗಳನ್ನು ರಚಿಸಿ ಹರಿದಾಸ ಕ್ಷೇತ್ರಕ್ಕೆ ಸೇವೆ ಸಲ್ಲಿಸಿದ್ದಾರೆ. 
ಶ್ರೀ ಗುರು ಜಗನ್ನಾಥದಾಸರು ತಮ್ಮ ಪದ - ಸುಳಾದಿ - ಉಗಾಭೋಗಗಳಲ್ಲಿ ಕನ್ನಡ ಭಾಷೆಯಲ್ಲಿ ಷಟ್ಪದಿ, ದ್ವಿಪದಿ ಬಂಧವನ್ನು ಹೆಚ್ಚಾಗಿ ಬಲಾಯಿಸಿದ್ದಾರೆ. 
ಸಂಸ್ಕೃತದಲ್ಲಿ ಅಪ್ರತಿಮ ಪಂಡಿತರು. 
ಶಾಸ್ತ್ರ, ಸಾಹಿತ್ಯ ಎರಡರಲ್ಲಿಯೂ ಪರಿಣಿತಿ ಮತ್ತು ಪಾರಂಗತಿ. 
ಆದರೂ ಕನ್ನಡ ಭಾಷೆಯತ್ತ ಒಲವು. 
ದಾಸ ಪಂಥದಲ್ಲಿ ಅಭಿನವೇಶ. ' ಶ್ರೀ ಗುರು ಜಗನ್ನಾಥವಿಠಲಾಂಕಿತ " ದಲ್ಲಿ ಪದ - ಪದ್ಯ - ಸುಳಾದಿ - ಷಟ್ಪದಿಗಳನ್ನು ಅತ್ಯಂತ ಮನೋಜ್ಞವಾಗಿಯೂ, ಅತಿ ಸುಂದರವಾಗಿಯೂ ರಚಿಸಿದ ಮಹಾನುಭಾವರು ಶ್ರೀ ಕೋಸಗೀ ಸ್ವಾಮಿರಾಯಾಚಾರ್ಯರು! 
ಶ್ರೀ ಗುರು ಜಗನ್ನಾಥದಾಸಾರ್ಯರ ಕೀರ್ತನೆಗಳಲ್ಲಿ ಜ್ಞಾನದ ಗಾಂಭೀರ್ಯವು ಪ್ರತಿಬಿಂಬಿತವಾಗಿದೆ. ಸರಸ ಸಜ್ಜನಿಕೆ ಒಡಮೂಡಿದೆ. 
ಪ್ರಮೇಯ ಜ್ಞಾನದ ರೇಖಾಂಕನವು ಶ್ರೀ ದಾಸರಾಯರ ಪದ್ಯ ಪದ್ಧತಿಯಲ್ಲಿ ಸ್ಫುಟವಾಗಿ ಗೋಚರಿಸುತ್ತದೆ. ಪ್ರಾಸಾದಿಕೆಯ ಪ್ರಾಸಾದದಲ್ಲಿ ಪ್ರಮೇಯ ರತ್ನಗಳನ್ನೆಲ್ಲ ಪಾರದರ್ಶಕವಾದ ತಮ್ಮ ಪ್ರತಿಭೆಯ ಗೋಲಕದಿಂದ ದರ್ಶನ ಮಾಡಿಸುತ್ತಾರೆ. 
ಕನ್ನಡದಂತೆ ಸಂಸ್ಕೃತದಲ್ಲಿಯೂ ಶ್ರೀ ಗುರು ಜಗನ್ನಾಥದಾಸರಿಗೆ ಕವಿತ್ವ ಶಕ್ತಿ ಇದ್ದಿತು. 
16ಕ್ಕೂ ಹೆಚ್ಚು ಸಂಸ್ಕೃತ ಗ್ರಂಥಗಳು
14ಕ್ಕೂ ಹೆಚ್ಚು ಸಂಸ್ಕೃತ ಸ್ತೋತ್ರ ಸಾಹಿತ್ಯಗಳು
200ಕ್ಕೂ ಅಧಿಕ ಲಘು ಕೃತಿಗಳು ದೀರ್ಘ ಕೃತಿಗಳು... 
1. ಶ್ರೀ ರಾಘವೇಂದ್ರ ಮಹಾತ್ಮ್ಯಮ್ ( 117 ಶ್ಲೋಕಗಳು ) 
" ಪ್ರಥಮೋಧ್ಯಾಯಃ " 
ಆದಿ :
ಶ್ರೀ ರಾಘವೇಂದ್ರಮಾಹಾತ್ಮ್ಯಾ೦-
ರಾಘವೇಂದ್ರ ಪ್ರಸಾದತಃ ।
ವಕ್ಷ್ಯಾಮಿ ಲೇಶಲೇಶಂ ವಾ -
ಶೃಣುಷ್ವ ಗದತೋ ಮಮ ।। 1 ।। 
ಅಂತ್ಯ :
ಇತಿ ವೇದವಿದೋ ವಿಪ್ರಾ: 
ಪ್ರವದಂತಿ ಸತಾಂ ಮತಮ್ ।
ತಸ್ಮಾದ್ಗುರುವರಂ ಭಕ್ತ್ಯಾ 
ಭಜನ್ ಸೌಖ್ಯಮವಾಪ್ನುಯಾತ್ ।। 33 ।। 
" ದ್ವಿತೀಯೋಧ್ಯಾಯಃ " 
ಆದಿ :
ಅನಂತಗುಣಸಂಪೂರ್ಣ೦ -
ಅನಂತಾ೦ಶಂ ಹರಿ ಪ್ರಿಯಮ್ ।
ಅನಂತ ಭಕ್ತತ್ರಾತಾರಂ -
ರಾಘವೇಂದ್ರಂ ಭಜೇsನಿಶಮ್ ।। 1 ।। 
ಅಂತ್ಯ :
ಯದ್ವೃಂದಾವನ ಸೇವನಂ -
ವಿತನುತೇ ರಾಶಿ ಶ್ರಿಯಾಮಕ್ಷಯಂ
ವಿದ್ಯಾ ಸನ್ಮತಿಮಾತನೋತಿ -
ಪರಮಂ ತನ್ಮೂರ್ತಿ ಸಂದರ್ಶನಮ್ ।
ಯದ್ವೃಂದಾವನ ಸೇವನಂ ಕುರು -
ಸಖೇ ಸದ್ಯೋsನವದ್ಯಸ್ಸುಧೀ:
ಪ್ರಜ್ಞಾಯಾ೦ ಪ್ರತಿಭಾತಿ -
ವಿಶ್ವಮಖಿಲ೦ ಬಿಂಬಾಪರೋಕ್ಷ೦ ಸದಾ ।। 19 ।। 
" ತೃತೀಯೋಧ್ಯಾಯಃ " 
ಆದಿ :
ಕೃಪಾಧೇ ಕೃಪಾನಿಧೇ -
ಕೃಪಾನಿಧೇ ಕೃಪಾನಿಧೇ ।
ಭಜೇ ಭಜೇ ಭಜೇ ಭಜೇ -
ಭಜೇ ಭಜೇ ಭಜೇ ಭಜೇ ।। 1 ।। 
ಅಂತ್ಯ :
ತ್ವತ್ಪಾದಪದ್ಮಮಾನಮ್ಮ ಏ-
ಕುರ್ವಂತಿ ಪ್ರದಕ್ಷಿಣಮ್ ।
ತೀರ್ಥಯಾತ್ರಾಫಲಂ -
ಪ್ರಾಪ್ಯ ಮೋದಂತೇ ಭುವಿ ಸರ್ವದಾ ।। 19 ।। 
" ಚತುರ್ಥೊಧ್ಯಾಯಃ " 
ಆದಿ :
ಶ್ರೀ ರಾಘವೇಂದ್ರ ಮತ್ಸ್ವಾಮಿನ್ -
ಜ್ಞಾನಾನಂದ ದಯಾನಿಧೇ ।
ತ್ವತ್ಪಾದಾಂಬುಜಸಕ್ತ೦ ಮಾಂ -
ಉದ್ಧಾರಸ್ವ ಮಹಾಮತೇ ।। 1 ।। 
ಅಂತ್ಯ : 
ಸಂಸಾರಗಾಢಾ೦ಧಾಗುಹಾವಿಲೀನ೦
ದುರಾಶ ದುಷ್ಟ ಗ್ರಹ ನಷ್ಟಚಿತ್ತಮ್ ।
ಋಣಾಹಿದಂಷ್ಟ್ರಾಗ್ರಯುಗೇನ ದಷ್ಟ೦
ಉಜ್ಜೀವಯ ತ್ವಂ ಗುರುಸಾರ್ವಭೌಮ ।। 25 ।। 
" ಪಂಚಾಮೋಧ್ಯಾಯಃ " 
ಆದಿ :
ಯತ್ಫಲಂ ದರ್ಶನೇ ತೇsದ್ಯ 
ಯತ್ಸುಖಂ ತವ ಸೇವನೇ ।
ತತ್ಸುಖಂ ನಾಸ್ತಿ ನಾಸ್ತೈವ 
ಸುರೇಂದ್ರ ಭವನೇಷ್ವಪಿ ।। 1 ।। 
ಅಂತ್ಯ :
ಇತಿ ಶ್ರೀರಾಘವೇಂದ್ರಾರ್ಯ 
ಚರಣದ್ವಯ ಸೇವಿನಾ ।
ಮಾಹಾತ್ಮ್ಯ೦ ರಾಘವೇದ್ರಸ್ಯ 
ರಚಿತಂ ಸ್ವಾಮಿನಾ ಮಯಾ ।। 23 ।। 
2. ಶ್ರೀ ರಾಘವೇಂದ್ರ ವಿಜಯ ( ಕನ್ನಡದಲ್ಲಿ 230 ಪದ್ಯಗಳು ) 
3. ಶ್ರೀ ಕೃಷ್ಣಲೀಲಾ ( ಕನ್ನಡದಲ್ಲಿ 72 ಪದ್ಯಗಳು ) 
4. ಶ್ರೀಮದ್ರಾಮಭಜನೆ - ಫಲಶ್ರುತಿಯೊಂದಿಗೆ 131 ನುಡಿಗಳು 
5. ಶ್ರೀ ಲಕ್ಷ್ಮೀ ಹೃದಯಂ ( 108 ನುಡಿಗಳು ) 
6. ಶ್ರೀ ಪ್ರಹ್ಲಾದ ಚರಿತ್ರೆ ( 103 ನುಡಿಗಳು ) 
ಜೊತೆಗೆ.. 
1. ಶ್ರೀ ವೆಂಕಟೇಶಸ್ತವರಾಜ ( 19 ಪದ್ಯಗಳು )
2. ಶ್ರೀ ಲಕ್ಷ್ಮೀಸ್ತವರಾಜ ( 16 ಪದ್ಯಗಳು ) 
' ಸಂಸ್ಕೃತ " ದಲ್ಲಿ... 
1. ಶ್ರೀ ರಾಘವೇಂದ್ರ ಪ್ರಾರ್ಥನಾ ( 8 ಶ್ಲೋಕಗಳು )
2. ಶ್ರೀ ರಾಘವೇಂದ್ರ ಅಷ್ಟಾಕ್ಷರ ಸ್ತೋತ್ರಮ್ ( 10 ಶ್ಲೋಕಗಳು )
3. ಶ್ರೀ ರಾಘವೇಂದ್ರಾಷ್ಟಕಮ್ ( 9 ಶ್ಲೋಕಗಳು )
4. ಶ್ರೀ ರಾಘವೇಂದ್ರ ಆಪಾದಮೌಲಿ ಪರ್ಯಂತ ವರ್ಣನ ಸ್ತೋತ್ರಮ್ ( 11 ಶ್ಲೋಕಗಳು )
5. ಸರ್ವ ಸಮರ್ಪಣ ಸ್ತೋತ್ರಮ್ ( 10 ಶ್ಲೋಕಗಳು )
6. ಶ್ರೀ ರಾಘವೇಂದ್ರ ರಕ್ಷಾ ಸ್ತೋತ್ರಮ್ ( 13 ಶ್ಲೋಕಗಳು )
7. ಶ್ರೀ ರಾಘವೇಂದ್ರವೈಭವ ಸ್ತೋತ್ರಮ್ ( 15 ಶ್ಲೋಕಗಳು )
8. ಶ್ರೀ ರಾಘವೇಂದ್ರ ಕರಾವಲಂಬನ ಸ್ತೋತ್ರಮ್ ( 22 ಶ್ಲೋಕಗಳು )
9. ಶ್ರೀ ವರದೇಂದ್ರ ಗುರು ಸ್ತೋತ್ರಮ್ ( ೧೪ ಶ್ಲೋಕಗಳು )
10. ಶ್ರೀ ವರದೇಂದ್ರ ಕರಾವಲಂಬನ ಸ್ತೋತ್ರಮ್ ( ೯ ಶ್ಲೋಕಗಳು ) 
ಇದಲ್ಲದೆ ಇವರು ಬರೆದಿರುವ ನೂರಾರು ಪತ್ರಗಳಲ್ಲಿ ಸಂಬಂಧ ಪಟ್ಟ ಯತಿಗಳ ಸ್ತುತಿ, ಆಧ್ಯಾತ್ಮಿಕ ಸಂದೇಶಗಳು ತುಂಬಿ ತುಳುಕಿವೆ. 
ಉದಾಹರಣೆಗೆ... 
ಶ್ರೀ ಸುಪ್ರಜ್ಞೇ೦ದ್ರತೀರ್ಥರಿಗೆ ಬರೆದ ಪತ್ರದಲ್ಲಿ ಅವರನ್ನು ಸ್ತುತಿಸಿ ನಂತರ ವಿಷಯ ಬರೆದಿದ್ದು ಪ್ರಕಟವಾಗಿದೆ. ಮಾಧ್ವರ ಆ ಭಾಗದ ಪ್ರಪ್ರಥಮ ಧಾರ್ಮಿಕ ಮಾಸ ಪತ್ರಿಕೆಯನ್ನು ಕ್ರಿ ಶ 1908ರಲ್ಲಿ " ತತ್ತ್ವ ಪ್ರಕಾಶಿಕಷ್ಟೇ " ಆರಂಭಿಸಿದ ಕೀರ್ತಿ ಶ್ರೀ ಗುರು ಜಗನ್ನಾಥದಾಸರಿಗೆ ಸಲ್ಲುತ್ತದೆ!! 
" ಶ್ರೀ ರಾಯರಂತೆ ಸಮಾಜ ಸುಧಾರಕರು " 
ಕೌತಾಳ ಗ್ರಾಮದಲ್ಲಿ ನೇಯಿಕಾರರ ಮತ್ತು ಬೇಡರ ಜನಾಂಗದವರಿಗೆ ವೈಷ್ಣವ ದೀಕ್ಷೆ ನೀಡಿದರು. ಪರಿವರ್ತನೆ ಅಲ್ಲಿಂದ ಆರಂಭವಾಯಿತು. 
ಸಮಾಜ ಇವರನ್ನು ಅಪ್ಪಿಕೊಂಡಿತು. ಆಶ್ರಯ ಬೇಡಿತು. ದಾಸರು ಎಲ್ಲರನ್ನೂ ತಮ್ಮ ತೆಕ್ಕೆಗೆ ತೆಗೆದುಕೊಂಡರು. 
ಇಂದಿಗೂ " ಗಜೇಂದ್ರಗಡ " ಮುಂತಾದ ಕಡೆ ಇವರ ನೇಯಿಕಾರರ ಶಿಷ್ಯ ಪರಂಪರೆಯಿದೆ. 
" ನಿರ್ಯಾಣ " 
ಶ್ರೀ ಗುರುಜಗನ್ನಾಥದಾಸರು ಕಾಲಯುಕ್ತ ನಾಮ ಸಂವತ್ಸರ ಆಶ್ವಯುಜ ಬಹುಳ ಪ್ರತಿಪಾದ ಭಾನುವಾರ ಕೌತಾಳ ಕ್ಷೇತ್ರದಲ್ಲಿ ಹರಿಪಾದ ಸೇರಿದರು. 
" ಶ್ರೀ ವರದವಿಠ್ಠಲರು ".... 
ತೆರಳಿ ಪೊದರು ಗುರುಜಗನ್ನಾಥ-
ವಿಠಲಾಂಕಿತ ಗುರುವರ್ಯರು ।। ಪಲ್ಲವಿ ।। 
ಪರಮ ಭಕ್ತರಿಗೆಲ್ಲ ಗುರು -
ರಾಘವೇಂದ್ರರ ಇರುವು ತೋರುತ ।। ಆ. ಪ ।। 
ದುರುಳ ಜನರಿಗೆ ಮರುಳುಗೊಳಿಸುತ ।
ವರಳನೆಳೆದ ಗೋಪಾಲಮೂರ್ತಿಯ ।
ಪರಮ ಭವಾಭ್ಡಿಯುಳ್ಳ ಭಾಗವತನು । ಅತಿ ।
ವಿರಳದಲಿ ತಿಳಿಸುವ ಜ್ಞಾನಿವರ್ಯನು ।। ಚರಣ ।। 
ಬರೆದೋದದಲೆ ಶ್ರೀ ಗುರುವರ್ಯನ ।
ಕರುಣ ಕಟಾಕ್ಷದಿ ಪರಿ ।
ಪರಿ ಶಾಸ್ತ್ರದ ಮರ್ಮವನರಿದು ।।
ಚರಿಸಿದರು ಬಲು ದೇಶದಲಿ ।
ಸರಿಯಿಲ್ಲವೆಂಬ ಪೆಸರಿನಲಿ ।। ಚರಣ ।। 
ಕಲಿಯುಗದ ಜನರಿಗೆ ಕಲುಷಿತರಂತೆ ತೋರುತ ।
ಕಳೆದು ಹೋದರು ಪ್ರಾರಬ್ಧ ನಿಮಿತ್ತದಿ ।
ಕಾಲಯುಕ್ತ ಸಂವತ್ಸರದಾಶ್ವಯುಜ -
ಪಾಡ್ಯ ರವಿವಾರ ।
ಹೇಳಿ ಕೇಳುತಲಿ ಶ್ರೀ ವರದವಿಠ್ಠಲನ 
ಪುರವ ಪೊಂದಿದರು ।। ಚರಣ ।। 
ಗುರು ಪೂರ್ವ ಜಗನ್ನಾಥದಾಸ್ಯಾಮಿತ ತೇಜಸಃ ।
ತಸ್ಯ ಪಾದಾಬ್ಜ ಸಂಭೂತಾಃ ರಾಜಾ೦ಸಿ ಶಿರಸಾವಹೇ ।। 
ನ ಯಾಚೇ ಗಜೇಂದ್ರ ನರೇಂದ್ರಾಧಿಪತ್ಯಂ
ನ ಯಾಚೇsಮರತ್ವಂ ನ ಲೋಕಾಧಿಪತ್ಯಂ ।
ನ ಜಾಯಾ೦ ನ ಪುತ್ರಂ ನ ಶಿಷ್ಯಾರಿಮನ್ನಂ
ನ ಭಾಗ್ಯ೦ ಹರೇ: ( ಗುರೋ: ) ದೇಹಿ ತೇ ಪಾದ ದಾಸ್ಯಮ್ ।। 
ಇಂಥಹಾ ಚಿಂತನೆಗಳೂ; ಪರಿಕಲ್ಪನೆಗಳೂ ದಾಸರ ಅನುಗ್ರಹದಿಂದ ನಮ್ಮನ್ನು ಆವರಿಸಿಕೊಳ್ಳಲಿ!! 
 " ಶ್ರೀ ಅಹ್ಲಾದಾಂಶ ಗುರುಜಗನ್ನಾಥದಾಸರು " ಎಂಬ ಕಿರು ಲೇಖನವನ್ನು ನನ್ನ ತೀರ್ಥ ರೂಪರಾದ ಕೀರ್ತಿಶೇಷ ಶ್ರೀ ಹಾವೇರಿ ಗುಂಡಾಚಾರ್ಯರ ಮತ್ತು ನನ್ನ ಮಾರ್ಗದರ್ಶಕ ಗುರುಗಳಾದ ಕೀರ್ತಿಶೇಷ ಶ್ರೀ ರಾಜಗೋಪಾಲಾಚಾರ್ಯರ ಅಂತರ್ಯಾಮಿ ಶ್ರೀ ರಾಘವೇಂದ್ರಗುರ್ವ೦ತರ್ಗತ ಶ್ರೀ ಭಾರತೀ ರಮಣ ಮುಖ್ಯಪ್ರಾಣಾಂತರ್ಗತ ಶ್ರೀಮನ್ಮೂಲ ರಘುಪತಿ ವೇದವ್ಯಾಸೋsಭಿನ್ನ ಶ್ರೀ ಲಕ್ಷ್ಮೀ ನರಸಿಂಹದೇವರ ಪಾದಪದ್ಮಗಳಲ್ಲಿ ಸಮರ್ಪಿತವಾಗಿದೆ. 
ಆಚಾರ್ಯ ನಾಗರಾಜು ಹಾವೇರಿ
ಗುರು ವಿಜಯ ಪ್ರತಿಷ್ಠಾನ
***
" ಶ್ರೀ ಅಹ್ಲಾದಾಂಶ ಗುರು ಜಗನ್ನಾಥದಾಸರು - 4 " 
ಶ್ರೀ ಜಗನ್ನಾಥದಾಸರು - ಶ್ರೀ ಸಹ್ಲಾದರಾಜರು ( ಕೃತ ಯುಗದಲ್ಲಿ )
ಶ್ರೀ ಗುರು ಜಗನ್ನಾಥದಾಸರು - ಶ್ರೀ ಆಹ್ಲಾದರಾಜರು ( ಕೃತ ಯುಗದಲ್ಲಿ )
ಶ್ರೀ ಜಗನ್ನಾಥದಾಸಾರ್ಯರಿಂದ ಅಂಕೀತೋಪದೇಶ ಪಡೆದು " ಹರಿಕಥಾಮೃತಸಾರ " ಕ್ಕೆ ಪ್ರಪ್ರಥಮವಾಗಿ " ಫಲಶ್ರುತಿ " ಬರೆದ ಮಹಾತ್ಮರಾದ ಶ್ರೀ ಶ್ರೀದ ವಿಠಲರೇ ನಮ್ಮ ಶ್ರೀ ಗುರು ಜಗನ್ನಾಥದಾಸರು. 
ಶ್ರೀ ರಾಯರು ( ಶ್ರೀ ಪ್ರಹ್ಲಾದ್ರಾಜರು ) ತಮ್ಮ ಪ್ರೀತಿಯ ತಮ್ಮಂದಿರಾದ ಶ್ರೀ ಆಹ್ಲಾದರಾಜರು ಶ್ರೀ ಶ್ರೀದ ವಿಠಲರಾಗಿ ಅವತಾರ ಮಾಡಿದಾಗ ತಮ್ಮ ಇನ್ನೊಬ್ಬ ತಮ್ಮಂದಿರಾದ ಶ್ರೀ ಜಗನ್ನಾಥದಾಸರಿಂದ ದಾಸ ದೀಕ್ಷೆ ಕೊಡಿಸಿ ಉದ್ಧಾರ ಮಾಡಿದರು. 
ಶ್ರೀ ಗುರು ಜಗನ್ನಾಥದಾಸರನ್ನೂ ಉದ್ಧಾರ ಮಾಡಿದ ಧೀರರು ನಮ್ಮ ಧೀರಶ್ರೀ ರಾಘವೇಂದ್ರರು! 
ಈ ಮೂರು ಜನ ಶ್ರೀ ನೃಸಿಂಹದೇವರ ಪ್ರಾದುರ್ಭಾವ ಆದಾಗ ಪ್ರತ್ಯಕ್ಷ ಕಂಡ ಮಹನೀಯರು! 
ಶ್ರೀ ಗುರು ಜಗನ್ನಾಥದಾಸರಿಗೆ  ಹರಿಕಥಾಮೃತಸಾರ ಯೆಂದರೆ ಪ್ರಾಣ! ಇದರ ಶ್ರೀ ಹರಿಕಥಾಮೃತಸಾರಕ್ಕೆ ಶ್ರೀ ಗುರು ಜಗನ್ನಾಥದಾಸರು ಸಂಸ್ಕೃತ ಮತ್ತು ಕನ್ನಡದಲ್ಲಿ ವ್ಯಾಖ್ಯಾನ ಮಾಡಿದ ಪೂತಾತ್ಮರು!
" ಶ್ರೀ ಜಗನ್ನಾಥದಾಸರ ಮೇರು ಕೃತಿ ಶ್ರೀ ಹರಿಕಥಾಮೃತಸಾರ - ಒಂದು ಚಿಂತನೆ "
ಹರಿದಾಸ ಸಾಹಿತ್ಯದ ಮೇರು ಕೃತಿ ಯೆನಿಸಿದ " ಹರಿಕಥಾಮೃತ ಸಾರ " ವು ಶ್ರೀ ಜಗನ್ನಾಥದಾಸರ ಆಧ್ಯಾತ್ಮಿಕ ಕವಿತ್ವದ ಮಂಗಳ ಕಳಸವಾಗಿದೆ. 
ಇಂಥಾ ಮಧುರ, ಗಂಭೀರವಾದ ಸಾತ್ವಿಕ ಸಾಹಿತ್ಯಿಕ ಕೃತಿಯು ಹಿಂದಾಗಲಿಲ್ಲ. 
ಇಂದಿಲ್ಲ. ಮುಂದೆ ಆಗುವುದಿಲ್ಲ ಎಂದು ಹೇಳಿದರೆ ಸತ್ಯಕ್ಕೆ ವ್ಯತ್ಯಾಸವಾಗಿ ನುಡಿದಂತಾಗಲಿಲ್ಲ. 
ಹರಿಕಥಾಮೃತಸಾರ ಒಂದು ಪ್ರಮೇಯ ಪಾರಿಜಾತ. 
ಆಚಾರ್ಯ ಮಧ್ವರ ಸಿದ್ಧಾಂತವೆಲ್ಲವೂ ಇಲ್ಲಿಯ ಮುದ್ದು ಭಾಷೆಯಲ್ಲಿ ಮೂಡಿ ನಿಂತಿವೆ. 
ವೇದ ವೇದಾಂತದ ತಿರುಳೆಲ್ಲವೂ ಈ ಕಾವ್ಯದ ಹುರುಳಾಗಿ ಇಲ್ಲಿ ಅರಳಿವೆ. ವೈದಿಕ ದರ್ಶನದ ನೂರಾರು ಗ್ರಂಥಗಳಲ್ಲಿ ಹೇಳಿದ ತತ್ತ್ವಾರ್ಥಗಳನ್ನೂ, ಪ್ರಮೇಯ ರಹಸ್ಯಗಳನ್ನೂ ಮಥಿಸಿ ಈ ತಮ್ಮ ಅನರ್ಘ್ಯವಾದ ಕೃತಿಯಲ್ಲಿ ಎರಕ ಹಾಕಿದ್ದಾರೆ. 
ಆಸ್ತಿಕ ದರ್ಶನಗಳನ್ನೆಲ್ಲಾ ಜಾಲಿಸಿ ತತ್ತ್ವಸಾರವಾದ ತತ್ತ್ವಗಳ ಕೆನೆಯನ್ನೆಲ್ಲಾ ಕಡೆದು ಅವುಗಳ ಆರ್ಕದಂತಿದ್ದ ಹೂ ಬೆಣ್ಣೆಯನ್ನೇ ಇಲ್ಲಿ ತೇಲಿಸಿದ್ದಾರೆ. 
ಸಾಹಿತ್ಯವು ಸಿದ್ಧಾಂತವನ್ನಪ್ಪಿ ಇಲ್ಲಿ ಸಾರ್ಥಕವಾಗಿದೆ. ಸಿದ್ಧಾಂತವು ಸಾಹಿತ್ಯದ ಆಲಿಂಗನದಿಂದ ಮಧುರ ಮೋದಕವಾಗಿದೆ. 
ಹರಿಕಥಾಮೃತಸಾರವನ್ನು ಓದಿದ ಜೀವಕ್ಕೆ ಆರೋಗ್ಯ, ಸೌಭಾಗ್ಯ, ರುಚಿ, ರಸ, ಲೌಕಿಕ ಆನಂದ, ಬ್ರಹ್ಮಾನಂದ, ಕಾವ್ಯಾರ್ಥ, ಪುರುಷಾರ್ಥ ಎಲ್ಲವೂ ದೊರಕಿ ಮಾನವೀಯ ಜೀವನವೇ ಪಾವನವಾಗುವದು. 
ಈ ಹರಿಕಥಾಮೃತಸಾರದಲ್ಲಿ 32 ಸಂಧಿಗಳಿದ್ದು, 988 ಪದ್ಯಗಳು ಸುಂದರವಾದ ಭಾಮಿನೀ ಷಟ್ಪದಿಯ ಛಂದಸ್ಸಿನಲ್ಲಿ ಸಮಗ್ರ ವೇದಾಂತ ಪ್ರಪಂಚಕ್ಕೆ ಕಂಕಣ ಪರಿಧಿಯನ್ನು ಕಟ್ಟಿ ರಸೋಧಧಿಯನ್ನೇ ಒಟ್ಟೈಸಿದೆ. 
1. ಮಂಗಳಾಚರಣ ಸಂಧಿ - 13 ಪದ್ಯಗಳು
2. ಕರುಣಾ ಸಂಧಿ - 31 ಪದ್ಯಗಳು
3. ವ್ಯಾಪ್ತಿ ಸಂಧಿ - 32 ಪದ್ಯಗಳು
4. ಭೋಜನ ಸಂಧಿ - 30 ಪದ್ಯಗಳು
5. ವಿಭೂತಿ ಸಂಧಿ - 40 ಪದ್ಯಗಳು
6. ಪಂಚಾಗಿಹೋತ್ರ ಸಂಧಿ - 35 ಪದ್ಯಗಳು
7. ಪಂಚತನ್ಮಾತ್ರ ಸಂಧಿ - 33 ಪದ್ಯಗಳು
8. ಮಾತೃಕಾ ಸಂಧಿ - 32 ಪದ್ಯಗಳು
9. ವರ್ಣ ಪ್ರಕ್ರಿಯಾ ಸಂಧಿ - 31 ಪದ್ಯಗಳು
10. ಸರ್ವ ಪ್ರತೀಕ ಸಂಧಿ - 25 ಪದ್ಯಗಳು
11. ಧ್ಯಾನ ಪ್ರಕ್ರಿಯಾ ಸಂಧಿ - 32 ಪದ್ಯಗಳು
12. ನಾಡೀ ಪ್ರಕರಣ ಸಂಧಿ - 45 ಪದ್ಯಗಳು
13. ನಾಮ ಸ್ಮರಣ ಸಂಧಿ - 33 ಪದ್ಯಗಳು
14. ಜೀವನ ಪ್ರಕ್ರಿಯಾ ಸಂಧಿ - 31 ಪದ್ಯಗಳು
15. ಶ್ವಾಸ ಸಂಧಿ - 09 ಪದ್ಯಗಳು
16. ದಟ್ಟ ಸ್ವಾತಂತ್ರ್ಯ ಸಂಧಿ - 15 ಪದ್ಯಗಳು
17. ಸ್ವಾತಂತ್ರ್ಯ ವಿಭಜನ ಸಂಧಿ - 37 ಪದ್ಯಗಳು
18. ಬಿಂಬೋಪಾಸನಾ ಸಂಧಿ - 31 ಪದ್ಯಗಳು
19. ಸ್ತೋತ್ರ ಸಂಧಿ - 35 ಪದ್ಯಗಳು
20. ಅವರೋಹಣ ತಾರತಮ್ಯ ಸಂಧಿ - 07 ಪದ್ಯಗಳು
21. ಆವೇಶಾವತಾರ ಸಂಧಿ - 57 ಪದ್ಯಗಳು
22. ಭಕ್ತಾಪರಾಧ ಸಹಿಷ್ಣು ಸಂಧಿ - 35 ಪದ್ಯಗಳು
23. ಬೃಹತ್ತಾರತಮ್ಯ ಸಂಧಿ - 29 ಪದ್ಯಗಳು
24. ಕಲ್ಪನಾ ಸಂಧಿ - 63 ಪದ್ಯಗಳು
25. ಕ್ರೀಡಾವಿಲಾಸ ಸಂಧಿ - 63 ಪದ್ಯಗಳು
26. ಆರೋಹಣ ತಾರತಮ್ಯ ಸಂಧಿ - 19 ಪದ್ಯಗಳು
27. ದೇವತಾನುಕ್ರಮಣಿಕಾ ಸಂಧಿ - 05 ಪದ್ಯಗಳು
28. ವಿಘ್ನೇಶ ಸಂಧಿ - 21 ಪದ್ಯಗಳು
29. ಅಣು ತಾರತಮ್ಯ ಸಂಧಿ - 16 ಪದ್ಯಗಳು
30. ದೈತ್ಯ ತಾರತಮ್ಯ ಸಂಧಿ - 25 ಪದ್ಯಗಳು
31. ನೈವೇದ್ಯ ಪ್ರಕರಣ ಸಂಧಿ - 25 ಪದ್ಯಗಳು
32. ಕಕ್ಷಾ ತಾರತಮ್ಯ ಸಂಧಿ - 36 ಪದ್ಯಗಳು 
ಒಟ್ಟು : 988 ಪದ್ಯಗಳು 
ಶ್ರೀ ಜಗನ್ನಾಥದಾಸರು ಪ್ರತಿಯೊಂದು ಸಂಧಿಯ ಪ್ರಾರಂಭದಲ್ಲೂ... 
ಹರಿಕಥಾಮೃತಸಾರ ಗುರುಗಳ ।
ಕರುಣದಿಂದಾ ಪಾಣಿತು ಪೇಳುವೆ ।
ಪರಮ ಭಗವದ್ಭಕ್ತರಿದನಾದರದಿ ಕೇಳುವುದು ।। 
ಎಂದು ಅನುಬಂಧ ಚತುಷ್ಟಯರನ್ನು ಸುಂದರವಾಗಿ ಹೇಳಿ ತಮ್ಮ ಧ್ಯೇಯ ದರ್ಶನಗಳನ್ನು ಮತ್ತೆ ಮತ್ತೆ ಸಾರಿ ಹೇಳುತ್ತಾರೆ. 
" ಹರಿ " 
1. ಮುಮುಕ್ಷುಗಳಾದ ಜೀವರು ಪರಮಾತ್ಮನ ಸಾಕ್ಷಾತ್ಕಾರವಾಗಬೇಕಾದರೆ ಭಗವಂತನ ಬಿಂಬೋಪಾಸನೆಯನ್ನು ಮಾಡಲೇಬೇಕು. 
2. ಶ್ರೀ ಗಣೇಶನಿಗೆ ತನ್ನ ಬಿಂಬ ರೂಪ " ಶ್ರೀ ವಿಶ್ವ೦ಭರ " ಯೆಂದು ತಿಳಿದಿದೆ. 
ಆದ್ದರಿಂದ ಶ್ರೀ ಗಣೇಶನು ಶ್ರೀ ಶ್ರೀ ವಿಶ್ವ೦ಭರನಾಮಕ ಪರಮಾತ್ಮನನ್ನು ಉಪಾಸನೆ ಮಾಡುತ್ತಾನೆ. 
3. ಆದರೆ, ಸಾಮಾನ್ಯ ಜೀವರಿಗೆ ತಮ್ಮ ಬಿಂಬ ರೂಪ ಯಾವುದು ಎಂದು ಗೊತ್ತಿಲ್ಲ. 
ಅದಕ್ಕೆ ಶ್ರೀಮದಾಚಾರ್ಯರು ತಮ್ಮ ಭಾಷ್ಯದಲ್ಲಿ ಸಾಮಾನ್ಯವಾಗಿ ಸರ್ವ ಜೀವರ ಬಿಂಬ ರೂಪ ಪರಮಾತ್ಮನು " ಹರಿ " ಶಬ್ದ ವಾಚ್ಯನಾಗಿದ್ದಾನೆ. 
" ಕಥಾ " " ಕಥಾ " ಎಂದರೆ ಕತೆಯಲ್ಲ. 
ಇಲ್ಲಿ " ಹರಿ ಕಥಾ " ಎಂದರೆ.... 
ಕಥ್ಯ೦ತೇ ಪ್ರತಿಪಾದ್ಯ೦ತೇ ಹರೇ: 
ಜ್ಞಾನಾನಂದಾದಿ ಗುಣಾ: 
ಅನಂತ ರೂಪಾಣಿ ಯತ್ರ 
ಪ್ರತಿಪಾದ್ಯ೦ತೇ ತೇ ಹರಿ ಕಥಾ: ಇತಿ " 
ಎಂದರೆ ವೇದಾದಿಗಳು ಯೆಂದರ್ಥ.
***

" ಶ್ರೀ ಅಹ್ಲಾದಾಂಶ ಗುರು ಜಗನ್ನಾಥದಾಸರು - 5 "
" ದ್ವೇ ವಿದ್ಯೇ ವೇದಿತವ್ಯೇ " ...
1. ಅಪರಾ ವಿದ್ಯಾ
" ಅಪರಾ ವಿದ್ಯೆ " ಎಂದರೆ " ಋಗ್ವೇದಾದಿಗಳು ".
2. ಪರ ವಿದ್ಯಾ
" ಪರಾ " ಶ್ರೀ ಪರಮಾತ್ಮನನ್ನೇ ಪ್ರತಿಪಾದನೆ ಮಾಡುವ ಉಪನಿಷತ್ತುಗಳೂ, ಬ್ರಹ್ಮಸೂತ್ರಗಳೂ, ಭಾಗವತ, ಮಹಾಭಾರತ ಮತ್ತು ಮೂಲರಾಮಾಯಣ.
ಪರಮಾತ್ಮನನ್ನೇ ಪ್ರತಿಪಾದನೆ ಮಾಡುವ " ಪರಾ " ವಿದ್ಯೆಗೆ " ಅಮೃತ " ಎಂದು ಹೆಸರು.
ಅಂದರೆ, ಅಮೃತ ಸ್ವರೋಪ ಮೋಕ್ಷಕ್ಕೆ ಸಾಧಕವೆನಿಸುತ್ತದೆ.
" ಸಾರ "
ಸಾರ = ರಹಸ್ಯ / ಶ್ರೇಷ್ಠ
ದೇವತೆಗಳು ಪಾನ ಮಾಡುವ ಅಮೃತಕ್ಕಿಂತಲೂ ಈ ಜ್ಞಾನಾಮೃತ ಶ್ರೇಷ್ಠ ಎಂಬುದನ್ನು ತಿಳಿಸುವುದಕ್ಕಾಗಿ " ಸಾರ " ಶಬ್ದ ಪ್ರಯೋಗ ಮಾಡಿದ್ದಾರೆ.
ಅಚ್ಛ ತಿಳಿಗನ್ನಡದಲ್ಲಿ ಅವುಗಳ ಸಾರ ರಹಸ್ಯವನ್ನು ತಿಳಿಸುತ್ತೇನೆಂಬ ಅಭಿಪ್ರಾಯದಿಂದ ಈ ಗ್ರಂಥಕ್ಕೆ " ಹರಿಕಥಾಮೃತಸಾರ " ಯೆಂದು ನಾಮಕರಣ ಮಾಡಿದ್ದಾರೆ.
ಭಗವಂತನ ಸಾರ್ವತ್ರಿಕ ವ್ಯಾಪ್ತಿಯು ಸಾಮಾನ್ಯವಾಗಿ ತಿಳಿದುಕೊಳ್ಳಲು ಕಠಿಣವಾದರೂ  ದೃಷ್ಟಾಂತ ಮುಖಾಂತರ ಸುಲಭ ಗಮ್ಯವಾಗುವಂತೆ ರಮ್ಯವಾಗಿ ಹೇಳುತ್ತಾರೆ ಶ್ರೀ  ಜಗನ್ನಾಥದಾಸರು.
ಪರಿಮಳವು ಸುಮನದೊಳಗೆ ಅನಲನು ।
ಅರಣಿಯೊಳಗೆ ಇಪ್ಪಂತೆ । ದಾಮೋ ।
ದರನು ಬ್ರಹ್ಮಾದಿಗಳ ಮನದಲಿ ತೋರಿ ತೋರದಲೆ ।।
ಇರುತಿಹ ಜಗನ್ನಾಥವಿಠಲನ ।
ಕರುಣ ಪಡೆವ ಮುಮುಕ್ಷು ಜೀವರು ।
ಪರಮ ಭಾಗವತರನು ಕೊಂಡಾಡುವುದು ಪ್ರತಿ ದಿನವು ।। 1 - 13 ।।
ಸಂಸ್ಕೃತದಲ್ಲಿ.... 
" ಉಪಮಾ ಕಾಳಿದಾಸಸ್ಯ " ಎಂಬ ವಚನವಿದ್ದಂತೆ " ಉಪಮಾ ಜಗನ್ನಾಥಸ್ಯ " ಎಂದು ಹೇಳಬೇಕೆನಿಸುತ್ತದೆ.
ಶ್ರೀ ಜಗನ್ನಾಥದಾಸರ ಕೃತಿಗಳನ್ನು ಪರಾಮರ್ಶಿಸಿದ ರಸ ಚೇತನಕ್ಕೆ...
ಭಕ್ತ ಭಗವಂತರ ರಾಗಾನುರಾಗಗಳನ್ನೂ, ಪ್ರೀತಿ ವಾತ್ಸಲ್ಯಗಳನ್ನೂ, ಎಂಥ ಹೃದಯ ಸ್ಪರ್ಶಿಯಾದ ನಿದರ್ಶನದಿಂದ ಪ್ರದರ್ಶನ ಮಾಡಿದ್ದಾರೆ ಶ್ರೀ ಜಗನ್ನಾಥದಾಸರು.
ಜನನಿಯನು ಕಾಣದಿಹ ಬಾಲಕ । 
ನೆನೆನೆನೆದು ಹಲುಬುತಿರೆ  ಕತ್ತಲ ।
ಮನೆಯೊಳಗಿದ್ದವನ ನೋಡುತ ನಗುತ ಹರುಷದಲಿ ।।
ತನಯನಂ ಬಿಗಿದಪ್ಪಿ ರಂಬಿಸಿ ।
ಕನಲಿಕೆಯ ಕಳೆವಂತೆ । ಮಧುಸೂ ।
ದನನು ತನ್ನವರಿದ್ದೆಡೆಗೆ ಬಂದೊದಗಿ ಸಲಹುವನು ।। 2 - 11 ।।
ಇದಕ್ಕೆ ಅನೇಕ ಸಾಕ್ಷಿಗಳನ್ನು ಹೇಳಿ ಆರ್ತತ್ರಾನ ತತ್ಪರತೆಯನ್ನು ಸಿದ್ಧ ಮಾಡಿದ್ದಾರೆ.
ಮಹಾಭಾರತದ ವಿಷಯದಲ್ಲಿ....
" ಯದಿಹಾಸ್ತಿತದನ್ಯತ್ರಯ-
ನ್ನೇಹಾಸ್ತಿ ನ ತತ್ ಕ್ವಚಿತ್ "
ಯೆಂದು ಹೇಳಿದಂತೆ ನ್ಯೂನಾರ್ಥದಲ್ಲಿ ಹರಿಕಥಾಮೃತಸಾರ ವಿಷಯದಲ್ಲೂ ಹಾಗೆ ಹೇಳಬಹುದಾಗಿದೆ.
ಶ್ರೀ ಹರಿಕಥಾಮೃತಸಾರದಲ್ಲಿ...
ಬಾರದ ಪ್ರಮೇಯವಿಲ್ಲ.
ತಿಳಿಸದ ತತ್ತ್ವವಿಲ್ಲ.
ಬಣ್ಣಿಸದ ಭಗವನ್ಮಹಿಮಾ ಇಲ್ಲ.
ಸರ್ವ ಸೈದ್ಧಾಂತಿಕ ಜ್ಞಾತವ್ಯಾ೦ಶಗಳ ಒಂದು ಮಂಜುಳ ಮಂಜೂಷಿಕೆಯಂತೆ ಕಂಗೊಳಿಸುತ್ತಿದೆ ಈ ಸತ್ಪ್ರಬಂಧ!!
ಶ್ರೀ ಹರಿಕಥಾಮೃತಸಾರಕ್ಕೆ ವ್ಯಾಖ್ಯಾನ....
ಸಂಸ್ಕೃತದಲ್ಲಿ...
ಶ್ರೀ ಗುರು ಜಗನ್ನಾಥದಾಸರು ( ಇವರು ಪೂರ್ವ ಅಂದರೆ ಹಿಂದಿನ ಆವವತಾರದಲ್ಲಿ ಶ್ರೀ ಶ್ರೀದವಿಠಲರು. ಮುಂದಿನ ಅವತಾರವೇ ಶ್ರೀ ಗುರು ಜಗನ್ನಾಥದಾಸರು )
a. ಹರಿಕಥಾಮೃತಸಾರ ತಾತ್ಪರ್ಯ 8 ಸಂಧಿಗಳಿಗೆ ಸಂಸ್ಕೃತದಲ್ಲಿ ಪೂರ್ಣ ಶ್ಲೋಕಗಳನ್ನು ರಚಿಸಿದ್ದಾರೆ.
b. ಮೊದಲನೇ ಸಂಧಿಗೆ - 42 ಶ್ಲೋಕಗಳೂ, ಎರಡನೇ ಸಂಧಿಗೆ - 64 ಶ್ಲೋಕಗಳೂ, 3ನೇ ಸಂಧಿಗೆ 67 ಶ್ಲೋಕಗಳನ್ನು ರಚಿಸಿದ್ದಾರೆ.
c. 4ನೇ ಸಂಧಿಗೆ ಶ್ರೀ ಹರಿಕಥಾಮೃತಸಾರ ತಾತ್ಪರ್ಯ ಚಂದ್ರಿಕಾ ಎಂಬ ಸಂಸ್ಕೃತ ವ್ಯಾಖ್ಯಾ!
d. 12ನೇ ಸಂಧಿಗೆ ಶ್ರೀ ಹರಿಕಥಾಮೃತಸಾರ ಮಂದ ಪ್ರಬೋಧಿನಿ ಮೂಲ ಸನಾಭಿ ಸಂಸ್ಕೃತ ಟೀಕಾ
e. ಶ್ರೀ ಹರಿಕಥಾಮೃತಸಾರ ಸಂಗ್ರಹ ಸೃಗ್ಧರಾ ಸಂಸ್ಕೃತ ಶ್ಲೋಕಗಳು - 6 ಪತ್ರ
f. ಹರಿಕಥಾಮೃತಸಾರ ತಾತ್ಪರ್ಯ ಪ್ರಕಾಶಿಕಾ ಸಂಧಿ - 3 ಪತ್ರ
g. ಹರಿಕಥಾಮೃತಸಾರ ಚಂದ್ರಿಕಾ - ಸ್ವಾಮಿರಾಜೀಯ - 8 ಪತ್ರ ( ಸಂಸ್ಕೃತ ಮತ್ತು ಕನ್ನಡ )
h. ಹರಿಕಥಾಮೃತಸಾರ ಮಂಡಬೋಧಿನೀ - 4 ಪತ್ರ
 .
 i.      --  ಸದರ --                          - 6 ಪತ್ರ
j. ಹರಿಕಾಥಾಮೃತಸಾರ ಚಂದ್ರಿಕಾ         - 6 ಪತ್ರ
k.      --- ಸದರ ----                      - 4 ಪತ್ರ
l. ಹರಿಕಥಾಮೃತಸಾರಾಮೋದ            - 2 ಪತ್ರ
m. ಹರಿಕಥಾಮೃತಸಾರ ತಾತ್ಪರ್ಯ ಚಂದ್ರಿಕಾ - 2 ಪತ್ರ
n. ಹರಿಕಥಾಮೃತಸಾರ ಚಂದ್ರಿಕಾ - 2 ಪತ್ರ
o. ದತ್ತ ಸ್ವಾತಂತ್ರ್ಯ ಸಂಧಿಗೆ ಸಂಬಂಧ ಪಟ್ಟ ಪತ್ರ
q. ಹರಿಕಥಾಮೃತ ಪರಿಮಳಸನಾಭಿ ಮೂಲ ಪದ್ಯ ಕನ್ನಡಾರ್ಥ - 2 ಪತ್ರ
ಶ್ರೀಮನ್ನ್ಯಾಯಸುಧೆಯ ಪ್ರತೀಕದಂತಿರುವ ಹರಿಕಥಾಮೃತಸಾರ ಗ್ರಂಥದಿಂದ ಕನ್ನಡ ಸಾಹಿತ್ಯದ ಸ್ಥಾನವು ಉನ್ನತವಾಗಿದೆ.
ಕನ್ನಡ ಆಧ್ಯಾತ್ಮಿಕ  ವಾಙ್ಮಯ ಭಾಂಡಾರವು ಸಿರಿ ಸಂಪನ್ನವಾಗುವಂತೆ ಮಾಡಿದೆ.
ಇದರಿಂದ ಕನ್ನಡ ನಾಡು, ನುಡಿ ಪುನೀತವಾಗಿದೆ.
ಮಾಧ್ವ ಪ್ರಪಂಚವೆಲ್ಲವೂ ಈ ವಿಶ್ವಮಾನ್ಯವಾದ ಕೃತಿಯಿಂದ ಧನ್ಯವಾಗಿದೆ.
ಶ್ರೀ ಶ್ರೀದವಿಠಲರಿಂದ ರಚಿತವಾದ ಹರಿಕಥಾಮೃತಸಾರ - ಫಲ ಶ್ರುತಿ ಸಂಧಿಯ 13ನೇ ಪದ್ಯ ಹೀಗಿದೆ...
ವ್ಯಾಸತೀರ್ಥರ ಒಲವೋ । ವಿಠಲೋ ।
ಪಾಸಕ ಪ್ರಭುವರ್ಯ ಪುರಂದರ ।
ದಾಸರಾಯರ ದಯವೋ ತಿಳಿಯದಿದು ಓದಿ ಕೇಳದಲೆ ।।
ಕೇಶವನ ದಿನ ಮಣಿಗಳನು । ಪ್ರಾ ।
ಣೇಶಗರ್ಪಿಸಿ ವಾದಿರಾಜರ ।
ಕೋಶಕೊಪ್ಪುವ ಹರಿಕಥಾಮೃತಸಾರ ರಚಿಸಿದರು ।।
ಶ್ರೀ ಪ್ರಹ್ಲಾದಾಂಶ ವ್ಯಾಸರಾಜ ಗುರುಸಾರ್ವಭೌಮರ ಒಲುಮೆಯೋ; ಶ್ರೀ ಪಂಢರಾಪುರಾಧೀಶ  ವಿಠ್ಠಲನ ಉಪಾಸಕರಾದ ಶ್ರೀ ನಾರದಾಂಶ ಪುರಂದರದಾಸರ ದಯವೋ ಓದಿ ಕೇಳದಲೆ ಇದು (  ಹರಿಕಥಾಮೃತಸಾರ ) ತಿಳಿಯದು.
" ಕೇಶವ "
ಸರ್ವರ ರಕ್ಷಕ = ಸರ್ವೋತ್ತಮ
ಅಂದರೆ ಶ್ರೀ  ಮಹಾಲಕ್ಷ್ಮೀ - ಶ್ರೀ ಚತುರ್ಮುಖ ಬ್ರಹ್ಮದೇವರು - ಶ್ರೀ ರುದ್ರದೇವರೇ ಮೊದಲಾದ ಸಕಲ  ಚೇತನಗಳನ್ನು ವಶದಲ್ಲಿಟ್ಟುಕೊಂಡಿರುವ ಶ್ರೀ ಮಹಾವಿಷ್ಣು !
ಶ್ರೀ ಹರಿಯ ಗುಣಗಳೆಂಬ  ಮಣಿಗಳನ್ನು ಪ್ರಾಣೇಶನಾದ ( ಶ್ರೀ ವಾಯುದೇವರ ತಂದೆ ) ಶ್ರೀ ಹರಿಗೆ ಅರ್ಪಿಸಿ; ಶ್ರೀ  ಭಾವಿಸಮೀರ ವಾದಿರಾಜರ ಕೋಶಕ್ಕೆ ( ಭಂಡಾರ / ಖಜಾನೆ ) ಒಪ್ಪಿಗೆ ಆಗುವಂತೆ ಈ  ಹರಿಕಥಾಮೃತಸಾರವನ್ನು ಶ್ರೀ ಜಗನ್ನಾಥದಾಸರು ರಚಿಸಿದರು!!
ಶ್ರೀ ಜಗನ್ನಾಥದಾಸರು...
ರಾಗ : ಪಂತುವರಾಳಿ             ತಾಳ : ಆದಿ
ತಾರಕವಿದು ಹರಿಕಥಾಮೃ-
ತಸಾರ ಜನಕೆ ।
ಘೋರತರ ಅಸಾರ ಸಂ-
ಸಾರವೆಂಬ ವನಧಿಗೆ ನವ ।। ಪಲ್ಲವಿ ।।
... ಭೂತ ಭವ್ಯ ಭವತ್ಪ್ರಭು ಅ-
ನಾಥ ಬಂಧು । ಜಗ ।
ನ್ನಾಥವಿಠಲ ಪಾಹಿ ....... 
ಎಂದು ಮಾತುಮಾತಿಗೆಂಬುವರಿಗೆ ।।
ಆಚಾರ್ಯ ನಾಗರಾಜು ಹಾವೇರಿ
ಗುರು ವಿಜಯ ಪ್ರತಿಷ್ಠಾನ
****





Guru Jagannatha Vittala Dasa1837-1918Swamy Raya CharyaGuru Jagannatha VittalaSri Pettha Tande Gopala DasaKavitala APAshwija Bahula Padya








No comments:

Post a Comment