Monday 1 July 2019

sripatii vittalaru 1870 or sripati vittala dasaru ಶ್ರೀಪತಿ ವಿಠ್ಠಲರು

ಶ್ರೀ ಶ್ರೀಪತಿ ವಿಠ್ಠಲರು  - ಹೆಸರು : ಶ್ರೀ ಶ್ರೀಪತಿ ಆಚಾರ್ಯರು
ಜನನ : ಕ್ರಿ ಶ 1798
ಕ್ರಿ ಶ 1870ರಲ್ಲಿ  ಹರಿಪದ ಸೇರಿದರು
ಜನ್ಮಸ್ಥಳ : ಕಸಬಾ ಗದ್ವಾಲ್ ( ಆಂಧ್ರಪ್ರದೇಶ್ )
ಅಂಕಿತೋಪದೇಶ : ಶ್ರೀ ಶ್ರೀನಿವಾಸ ಭೂವರಾಹ ರಘುಪತಿ ವಿಠ್ಠಲ
ಅಂಕಿತ : ಶ್ರೀ ಶ್ರೀಪತಿ ವಿಠ್ಠಲ

" ಅಂಕಿತ ಪದ "

ರಾಗ : ಕಾಂಬೋಧಿ      ತಾಳ : ಝ೦ಪೆ

ಶ್ರೀಪತಿ ವಿಠ್ಠಲನಾ ಸೇವಿಸುನಿನ್ನಾ ।
ಆಪತ್ತುಗಳು ನಿಲ್ಲವೋ ।
ಕಾಪಾಡುವನ ನಿನ್ನ ಕರುಣಿಸಿ ಶಪಥದಿ ।
ಪಾಪ ವಿದೂರ ಪಂಕಜನಾಭ ಪರಮಾತ್ಮ ।। ಪಲ್ಲವಿ ।।

ಶುದ್ಧ ಮೂರುತಿ ಆತನು ।
ಶತಾನಂದ ಮುಖ್ಯರ ಪ್ರೇರಕನು ।
ಉದ್ಧಾರ ಮಾಡುವ ಉಪೇಕ್ಷಿಸಿದೆ ನಿನ್ನ ।
ಮಧ್ವ ಮುನೀಶನಾ ಮನದಲ್ಲಿದಾತನು ।। ಚರಣ ।।

ಕರುಣಾಸಾರಗ ವ್ಯಾಪನೂ ।
ಕರವ ಭಕ್ತ ಜನರಿಗೆ ಕಾಮಧೇನೂ ।
ಪರಮ ತಾತ್ಪರ್ಯದಿ ಪಾದವ ಬಿಡದಲೆ ।। ಚರಣ ।।

ಶ್ರೀನಿವಾಸ ಭೂವರಾಹ ರಘುಪತಿ ವಿಠ್ಠಲ। ಈ ।
ತನು ಏನಾದರೂ ತನ್ನ ಭಕ್ತರೆಂದರೆ ಬಿಡಾ ।
ಜ್ಞಾನ ಭಕ್ತಿಯನ್ನು ಸಾನುಕೂಲಿಸುವನು ।। ಚರಣ ।।

ಶ್ರೀ ಶ್ರೀನಿವಾಸ ಭೂವರಾಹ ವಿಠ್ಠಲರು ಶ್ರೀ ಶ್ರೀಪತಿ ಅವರಿಗೆ ಮಂತ್ರೋಪದೇಶದೊಂದಿಗೆ "  ಶ್ರೀಪತಿ ವಿಠ್ಠಲ" ಎಂದು ಅಂಕಿತ ಪ್ರದಾನ ಮಾಡಿದರು. ಆ ಅಂಕಿತದಲ್ಲಿ ಪದ ಪದ್ಯಗಳನ್ನು ರಚಿಸಿ ಹರಿದಾಸ ಸಾಹಿತ್ಯಕ್ಕೆ ವಿಶಿಷ್ಟ ಕೊಡುಗೆಯನ್ನು ನೀಡಿದ್ದಾರೆ.

" ಶ್ರೀ ಶ್ರೀನಿವಾಸನ ಪರಮ ಕಾರುಣ್ಯಪಾತ್ರರು "

'ಸತ್ಯಾ " ಎಂಬ ಅಂಧನೊಬ್ಬ ಶ್ರೀ ಶ್ರೀನಿವಾಸನಲ್ಲಿ ಮೊರೆ ಹೋದಾಗ ಸ್ವಪ್ನದಲ್ಲಿ ಕಾಣಿಸಿಕೊಂಡ ಶ್ರೀ ತಿಮ್ಮಪ್ಪಾ.....

ಶ್ರೀಪತಿದಾಸರ ಮನೆಯ ನಂದಾ ದೀಪದ ಕಾಡಿಗೆ ಹಚ್ಚಿಕೊಳ್ಳಲು ಸೂಚಿಸುತ್ತಾನೆ. ಅದರಂತೆ ಆತ ಬಂದು ಶ್ರೀ ದಾಸಾರ್ಯರಲ್ಲಿ  ಹೇಳಿದಾಗ ಅವರ ಸೊಸೆ ಬಂದು ಆ ದೀಪದ ಕಾಡಿಗೆ ತೆಗೆದು ಆತನ ಕಣ್ಣುಗಳಿಗೆ ಲೇಪಿಸಿದಾಗ ದೃಷ್ಟಿ ಪುನಃ ಬಂದಿತು.

" ಶ್ರೀ ಶ್ರೀಪತಿದಾಸರ ಪದಗಳ ಪಲ್ಲವಿ ಪ್ರಾರಂಭಗಳು "

1. ದಾಸಾಚಾರ್ಯರ ಪಾದ ಸ್ಮರಿಪರಿಗೆ
2. ವರದ ಮೋಹನದಾಸರಂಘ್ರಿಗೆ
3. ಆವ ಬಣ್ಣಿಸಿ ಪಾರುಗಾ೦ಬ ಪೇಳಾ

4. ವಾದಿರಾಜರ ಭಾಗ್ಯವಿದು ವಾದಿರಾಜ
ಈ ಕೃತಿಯಲ್ಲಿ ಶ್ರೀ ಭಾವಿಸಮೀರ ವಾದಿರಾಜರ ಮಹಿಮೆ, ಪಾಂಡಿತ್ಯ, ಕೃತಿ ರಚನೆಗಳನ್ನು ತಿಳಿಸಿದ್ದಾರೆ.

5. ಈಶನ ನೋಡಿರೋ ಕಾಶೀ ನಿವಾಸನ ಪಾಡಿರೋ
ಈ ಕೃತಿಯಲ್ಲಿ ಶ್ರೀ ರುದ್ರದೇವರ ಮಹಿಮೆಯನ್ನು ಬಣ್ಣಿಸಿದ್ದಾರೆ.

6. ಕಂಡೆನು ಕಪಿಕುಲವರನಾ ಭವ
7. ಜತಿಗಣೆ ಅತಿಜಾಣೆ ಕ್ಷಿತಿಯೊಳು ಮದನ
8. ಹರೇ ವೆಂಕಟಾ ಶೈಲ ವಲ್ಲಭಾ ಸ್ಮರಿಸುವೆ ನಾನಿನ್ನಾ
9. ಸುಖವಿಲ್ಲ ಸುಖವಿಲ್ಲ ಸುಖವಿಲ್ಲ
10. ಏನು ಕರುಣಿಯೋ ದೇವಾ ಯದು ವಂಶ ಸಂಭವ
11. ಬೇಡಲಾರೆ ಬೇಡಲಾರೆ ಬೇಡಲಾರೆನೋ
12. ಬೇಡ ಬೇಡ ಕಂಡ್ಯಾ ಬ್ಯಾಸರದಲಿ ಕೇಳು
13. ಈಸಲಾರೆನೋ ಈ ಸಂಸಾರದೊಳು
14. ನಮಿಸುವೆ ನಾ ನಿನ್ನ ಚರಣ ಕಮಲಕ್ಕೆ ವೆಂಕಟೇಶಾ
15. ವ್ಯವಹಾರವನು ತಿಳಿದು ಪೇಳುವೆ
16. ಸಾಮಾನ್ಯವಲ್ಲ  ಶ್ರೀ ಹರಿ ಸೇವೆ
17. ಏನ ಪೇಳಲಿ ಈ ಕರಕರೆಯ
18. ಹರಿಯ ನೆನೆವನೊಬ್ಬ ಜಾಣ ಈ ಜನನ
19. ಮನವೆ ಲಾಲಿಸಿ ಮಾತಾ ಕೇಳ್ಮನವೇ
20. ಕರವ ಪಿಡಿಯೋ ಜೀಯ್ಯಾ ಸಂಸಾರ
21. ಭಜಿಸು ಹರಿಯನು ನಿತ್ಯ ಭಜಿಸಿ ಹರಿಯನು
22. ಭಯವ್ಯಾಕೋ ಪಾಪಿ ಭಯವ್ಯಾಕೋ
23. ರಕ್ಷಿಸೋ ಕೃಷ್ಣಯ್ಯ ಎನ್ನ ರಕ್ಷಿಸೋ ಕೃಷ್ಣಯ್ಯ
24. ರಚ್ಚೆ ಮಾಡುವರೇನೋ ರಮಾಧವನ
25. ಶರಣು ಭುವನ ಜೀವನ ಪಾವನ
26. ವೆಂಕಟಾಚಲ ಭಕ್ತವತ್ಸಲ
27. ಕರತಾರೆಯಮ್ಮ ಕರಕರೆಗಾರೆನಮ್ಮ
28. ಕರುಣಿಸುವುದಯ್ಯ ಕಾಮಿತಗಳಿತ್ತು
29. ಮನವೇ ನೀ ಭಾಗವತರನ ಸಹವಾಸವ ಮಾಡು
30. ಜೋಜೋ ಜೋಜೋ ಜೋ ಕೃಷ್ಣ ಕೃಷ್ಣ
31. ಆವಭವಿಲ್ಲೆನಗೆ ಅವನೀಶನೇ

32. ಇಷ್ಟು ದಯ ಮಾಡಿದ್ದೆ ಅತಿ ಸೋಜಿಗಾ
ಈ ಕೃತಿಯಲ್ಲಿ ಶ್ರೀ ಹರಿಯ ದಯಾಳುತ್ವವನ್ನು ಹಾಡಿ ಹೊಗಳಿದ್ದಾರೆ ಮತ್ತು ಆತ್ಮ ನಿವೇದನೆ ಇದೆ.

33. ಪಾಹಿ ವೆಂಕಟರಮಣ ಪಾಹಿ
34. ದಯ ಮಾಡಲೊಲ್ಯಾ ದಯಾನಿಧೇ
35. ನರಹರೆ ಪಾಹಿಮಾ೦ ನರಹರೇ
36. ಮಾಧವ ನೀ ಮಧುರೆಗೆ ಹೋದರೆ
37. ಗೋವಿಂದನಾ ಪಾದ ನಿರುತ ನಂಬಿರಲಾಗಿ
38. ಭಕ್ತವತ್ಸಲ ಪಾಂಡುರಂಗಾ
39. ಏನು ಸಾರ್ಥಕ ಭೂಮಿಯಲ್ಲಿ
40. ಭಜಿಸಿ ಭಾಗ್ಯವಂತನಾಗೋ ಭಕ್ತವತ್ಸಲನಾ
41. ಕರುಣಾರ್ಣವ ಕರಿವರ ವರದ ಶ್ರೀ

ಮೊದಲಾದ ರಸವತ್ಕಾವ್ಯಗಳನ್ನು ಬರೆದಿದ್ದಾರೆ. ಶ್ರೀ  ಶ್ರೀಪತಿ ವಿಠ್ಠಲ ದಾಸರ ಲಲಿತ ಬಂಧುರವಾದ ಸುಂದರ ಕೃತಿಗಳಲ್ಲಿ ಭಗವದಾಭಿ ಮುಖ್ಯವು ಮುಖ್ಯವಾಗಿದೆ. ಸರ್ವಾರ್ಪಣ ಸಿದ್ಧಿಯಿಂದ ಶ್ರೀ ದಾಸಾರ್ಯರ ಸಾಹಿತ್ಯವು ಕೃತಕೃತ್ಯವಾಗಿದೆ. ಆದರೂ ಜನ ಜೀವನದೆಡೆಗೆ ಶ್ರೀ ದಾಸರ ಕವಿ ವಾಣಿಯು ಉನ್ಮುಖವಾಗಿ ಚತುರ್ಮುಖ ಚಾತುರ್ಯದಿಂದ ಬದುಕನ್ನು ತಿದ್ದುವಲ್ಲಿಯೂ ಸಾಫಲ್ಯವನ್ನು ಕಂಡಿದೆ.

ವಿಷಯಕ್ಕೆ ಅನುಗುಣವಾದ ಅಭಿವ್ಯಕ್ತಿಯ ರೂಪವನ್ನು ಆಯ್ದುಕೊಂಡು ಸ್ವಯಂ ಪೂರ್ಣವಾದ ರಸೋಲ್ಲಾಸದಿಂದ ಅವರ ದೇವರ ನಾಮಗಳೆಲ್ಲವೂ ದಿವ್ಯ ಭವ್ಯ ಗೀತದ ಸೊಬಗನಾಂತು ಸೊಗಯಿಸುತ್ತದೆ.

ಶ್ರೀ  ಶ್ರೀಪತಿ ವಿಠ್ಠಲ ದಾಸರ ಸಾಹಿತ್ಯದಲ್ಲಿ ಬುದ್ಧಿ ಭಾವಗಳು ವಿದ್ಯುದಾಲಿಂಗನೆಯಾಗಿ ಹೊಸದಾಗ ಒಂದು ರಸ ರಂಗವೇ ಏರ್ಪಡುವುದು.

" ಶ್ರೀ ಕೃಷ್ಣ ಬಾಲ ಲೀಲೆಗಳು "

01. ಗೋಕುಲದಿ ಗೋಪಿಗಳಾನೇಕಾ

02. ಬಂದಳು ಪೂತನಿಯು ತಾ ಬಂದಳು
ಈ ಕೃತಿಯಲ್ಲಿ ಪೂತನಿಯ ಆಗಮನ, ಹಾಲುಣಿಸುವುದನ್ನು ಬಣ್ಣಿಸುತ್ತಾ ಹಾಲಿನೊಂದಿಗೆ ಹರಿ ಹಂತಕಿಯಾಗಿ ಬಂದ ಅವರ ಅಸುವನ್ನೇ ಹೀರಿದ್ದನ್ನು ವರ್ಣಿಸಿದ್ದಾರೆ.

03. ಯೇನಾಯಿತು ಈ ರಂಗಗೆ ನೋಡಿರಮ್ಮ
04. ಮೀಸಲು ಕಟ್ಟಿದರು ದೇವರಿಗೆ ತಮ್ಮ
05. ಭಲಾ ಭಲಾ ಯದುಲಲಾಮ
06. ಅಳುವುದ್ಯಾತಕೋ ರಂಗಾ

07. ಲಾಲಿಸಿದಳು ಕೃಷ್ಣನ್ನ ಯಶೋದೆ
ಈ ಕೃತಿಯಲ್ಲಿ ಹೆತ್ತವವನ್ನು ಮಗುವೆಂದು ಪಾಲಿಸಿದ ಯಶೋದೆಯ ಮುಗ್ಧತೆ, ತಾಯ್ತನಗಳೊಂದಿಗೆ ಬಾಲಕೃಷ್ಣನ ಲೀಲೆಗಳನ್ನೂ, ಜನಪ್ರಿಯತೆಯನ್ನೂ ಅತ್ಯಂತ ಹೃದಯಂಗಮವಾಗಿ ಬಣ್ಣಿಸಿದ್ದಾರೆ.

08. ನಾನೇನು ಬಣ್ಣಿಸಲೇ ಕೃಷ್ಣನ ಲೀಲೆ
ಈ ಕೃತಿಯಲ್ಲಿ ಗೋಪಿಕೆಯರ ಸಲ್ಲಾಪ, ಗೋಪಿಯರಿಗೆ ಗಂಡಂದಿರ ಅಂಜಿಕೆ, ಶ್ರೀ ಕೃಷ್ಣ ಪರಮಾತ್ಮನ ಕಾಟ, ತುಂಟತನಗಳು ಚಿತ್ರಣಗೊಂಡಿವೆ.

09. ದೇವಾದಿದೇವ ಶ್ರೀ ಕೃಷ್ಣ ದೇವಕ್ಕಿ ಕಂದ
10. ಕರದೆಯೇ ಕಾಮಿನಿ ಮಣಿ ನಿಮ್ಮ
11. ಭಳಿರೆ ಭಳಿರೆ ಭವ ಭಯಾರ್ತಿ ಹರ
12. ಯೆಲೆ ವನಿತೆ ಸ್ಮರಕಲಾಪದಲಿ
13. ಆಲಿಸಿ ಈ ಲಲನೆ ಬಳಲಿ ಹಲಬುತಿರೆ
14. ಯಲೇ ಸಖಿಯೇ ತವ ಮುಖದಿ ಮನ್ಮಥ
15. ನಡಿ ನಡಿ ನಡಿಯೋ ಹೋಗುವಾ

16. ತೋರೋ ತೋರೋ ಸುಖಸಾರ ಸುಂದರ ನಿನ್ನ ಚಾರು ಚರಣವ ತೋರೋ ತೋರೋ.........    ಈ ಕೃತಿಯಲ್ಲಿ ಶರಣಾಗತಿ ಭಾವವಿದೆ.

17. ಯೇನಾ ಪೇಳಲಿ ಯೇನಂದಾ ಮಾತಿಗೆ
18. ಯದುನಾಥನೊಲಿದನು ಈ ಸುಂದರಿಗೆ
19. ತರುಣಿ ಪಶ್ಚಿಮ ದಿಶೆಯೊಳಗಿಡಲು

ಹೀಗೆ ಶ್ರೀ ಕೃಷ್ಣ ಪರಮಾತ್ಮನ ಬಾಲ ಲೀಲೆಗಳ 19 ಪದಗಳಲ್ಲಿನ ಚಾತುರ್ಯವು ವಿನೋದ ವೈಖರಿಯಿಂದಲೇ ಪ್ರಮೋದವನ್ನು ಉಂಟು ಮಾಡುತ್ತದೆ.

ಮೇಲ್ಕಂಡ ದೀರ್ಘ ಕೃತಿಗಳೊಂದಿಗೆ ಶ್ರೀ ದಾಸಾರ್ಯರು ಪದ - ಪದ್ಯ - ಉಗಾಭೋಗಗಳನ್ನು ರಚಿಸಿ ಹರಿದಾಸ ಸಾಹಿತ್ಯ ಕ್ಷೇತ್ರವನ್ನು ಪ್ರಸಿದ್ಧಿಗೊಳಿಸಿದ್ದಾರೆ.

" ಉಪಸಂಹಾರ "

ಶ್ರೀ ಶ್ರೀಪತಿ ವಿಠ್ಠಲ ದಾಸರ ರಚನೆಯಲ್ಲಿ ವಾತ್ಸಲ್ಯ ಭಾವದ ನಿರೋಪಣೆ, ಬಾಲ ಭಾಷೆಯ ಬಳಕೆಯಿಂದಾಗಿ ಒಂದು ವಿಶಿಷ್ಟ ಸ್ಥಾನ ಪಡೆದಿದೆ.ಶ್ರೀ  ಶ್ರೀಪತಿ ವಿಠ್ಠಲ ಅಂಕಿತದಲ್ಲಿ ದೇವರ ನಾಮಗಳನ್ನು ರಚಿಸಿದ್ದಾರೆ. ಇವರ ಕಾವ್ಯಗಳಲ್ಲಿ - ಭಕ್ತಿಯ ಉತ್ಕಟತೆ, ಭಗವಲ್ಲೀಲಾ ವಿಲಾಸಗಳು, ನಿರೂಪಣೆಯ ನೈಜತೆಯೊಂದಿಗೆ ಬೆರೆತು ರಸ ಪ್ರತೀತಿಗೆ ಗೋಚರವಾಗುತ್ತದೆ.

ಶ್ರೀ ಶ್ರೀಪತಿ ವಿಠ್ಠಲ ದಾಸರು ಅನೇಕ ಪದ ಪದ್ಯಗಳನ್ನೂ, ಕಾವ್ಯ ಕೀರ್ತನೆಗಳನ್ನೂ ರಚಿಸಿ ಜನರಲ್ಲಿ ಧರ್ಮ ಶ್ರದ್ಧೆಗಳನ್ನು ಕುದುರಿಸಿ; ಸಂಗೀತ - ಸಾಹಿತ್ಯ - ವೇದಾಂತ - ಗಮಕ ಮುಂತಾದ ವಿವಿಧ ಕಲೆಗಳ ಹೃದಯಂಗಮ ಸಂಗಮವನ್ನು ತಮ್ಮ ಕೃತಿಗಳಲ್ಲಿ ಸಾಧಿಸಿ ತೋರಿಸಿದ್ದಾರೆ.

ಹೀಗೆ  ಶ್ರೀ ಶ್ರೀಪತಿ ವಿಠ್ಠಲ ದಾಸರು ತಮ್ಮ ವೈವಿಧ್ಯಮಯ ಕೀರ್ತನೆಗಳಿಂದಾಗಿ ಹರಿದಾಸ ಸಾಹಿತ್ಯದ ಯುಗದಲ್ಲಿ ಮಹತ್ವದ ಸ್ಥಾನವನ್ನು ಪಡೆದ, ಶ್ರೀ  ಶ್ರೀ ಶ್ರೀಪತಿ ವಿಠ್ಠಲ ದಾಸರು ಕ್ರಿ ಶ 1870ರಲ್ಲಿ ತಮ್ಮ ಇಹಲೋಕ ವ್ಯಾಪಾರವನ್ನು ಮುಗಿಸಿ ಹರಿಪದ ಸೇರಿದರು!!

ಗದ್ವಾಲಿ ಪುರ ವಾಸಸ್ಥ ದಾಸಾಚಾರ್ಯ ಸಂಸೇವಕಮ್ ।
ವಂದೇ ಶ್ರೀಪತಿದಾಸಾರ್ಯ೦ ಜ್ಞಾನ ವಿಜ್ಞಾನ ಭೂಷಿತಮ್ ।।
*****



1 comment:

  1. Location:ಮೈಸೂರು ಯಾಜೆ... ಗದ್ವಾಲ್ ಆಗ್ಬೇಕು ಅದು

    ReplyDelete