Sunday 31 October 2021

prajnananidhi teerthru matha sripadaraja mutt ashvija bahula saptami bidi sanyasi ಪ್ರಜ್ಞಾನನಿಧಿ ತೀರ್ಥರು

 shri gurubyO namaha, hari Om...


AshvIja bahuLa sapthami is the ArAdhane of shri prAjnAnanidhi tIrtharu.


shri prAjnAnanidhi tIrtharu...



ArAdhane: AshvIja bahUla sapthami


parampare: biDi sanyAsigaLu


brindAvana: muLabAgilu town in prEkshAnidhi tIrthara maTa


He was related to shri prEkshAnidhi tIrtharu (1870 -1942) and settled in prEkshAnidhi tIrthara maTa. He looked after the maTa and the maTa is now maintained by his pUrvAshrama descendents.


shri prAjnAnanidhi tIrtha varada gOvindA gOvindA...

***



Friday 15 October 2021

ibharamapura appavaru ashvina shukla dashami ಇಭರಾಮಪುರ ಅಪ್ಪಾವರ ಜಯಂತಿ ವಿಜಯದಶಮಿ

 ಇಭರಾಮಪುರ ಅಪ್ಪಾವರ ವರ್ಧಂತಿ ಉತ್ಸವ. 


ಚಂದಿರ ಉದಯವಾಯಿತೇ ಕೃಷ್ಣಾರ್ಯರೆಂಬೋ 

ಚಂದಿರನುದಿಸಿದ ತನ್ನಯ  ಸುಂದರಿ ಸೂರಿಗಳ ಸುಕೃತ ।
*ಬಿಂದ್ಯವೆಂಬೋ ಉದಯಾಚಲದ 
ಕಂದರದಿಂ ಕುಣಿದು ಬಂದು* ॥

ಮಂತ್ರಾಲಯ ಶ್ರೀ ಗುರುಸಾರ್ವಭೌಮರ ಏಕಾಂತಭಕ್ತರಾದ ಅಪರೋಕ್ಷ ಜ್ಞಾನಿಗಳಾದ , ನಿರಂತರ ಪರಿಮಳ ಗ್ರಂಥ ಪಾರಾಯಣದಿಂದ ಸ್ನಾನ ಮಾಡಿ ನೀರಿನಲ್ಲಿ ಪರಿಮಳ ತೋರಿದ,  ಜ್ಞಾನಿಶ್ರೇಷ್ಠರೆನಿಸಿದ ಯಳಮೇಲಿ ಹಯಗ್ರೀವಾಚಾರ್ಯ , ಯಳಮೇಲಿ ವಿಠಲಾಚಾರ್ಯ, ಶ್ರೀ ಗಣೇಶಾಚಾರ್ಯ(ಶ್ರೀ ಸುಧರ್ಮೇಂದ್ರ ತೀರ್ಥರು)  ಶ್ರೀ ಯೋಗಿ  ನಾರಾಯಣಾಚಾರ್ಯ, ಮುಂತಾದ ಜ್ಞಾನಿಗಳ ಸಮೂಹಕ್ಕೆ ಗುರುಗಳೆನಿಸಿದ, ವಿಜಯರಾಮಚಂದ್ರವಿಠಲ ದಾಸರು , ಜಯೇಶವಿಠಲ ದಾಸರು, ಸುರಪುರ ಆನಂದ ದಾಸರು , ಶ್ರೀ ಇಂದಿರೇಶ ದಾಸರು, ಗುರುಜಗನ್ನಾಥ ದಾಸರಂತಹ  ದಾಸ ಶ್ರೇಷ್ಠರಿಗೆ ಭಕ್ತಿ ಮಾರ್ಗವನ್ನು ತೋರಿ ಅವರ ಸ್ವರೂಪೊದ್ದಾರಕರಾಗಿ ಹರಿದಾಸರಿಗೆ ಮಂದಿರವೆನಿಸಿದ ,  ಶ್ರೀ ಇಭರಾಮಪುರ ಅಪ್ಪಾವರ 232 ವರ್ಧಂತಿ ಉತ್ಸವ.
by prasadacharya
****

Thursday 14 October 2021

madhwacharya jayanti ashvina shukla dashami ಮಧ್ವಾಚಾರ್ಯರ ಜಯಂತಿ ವಿಜಯದಶಮಿ

 

BY ಹೆಜಮಾಡಿ ಸುಧೀಂದ್ರ ಆಚಾರ್ಯ 15 oct 2021
ವಿಜಯದಶಮಿ  Ashvina shukla dashami

ಮಧ್ವಾಚಾರ್ಯರ ಜಯಂತಿ
|| ನ ಚ ಮಧ್ವಸಮೋ ಗುರು: ||

ವಿಜಯದಶಮಿ!!!, ವೇದವಾಕ್ಯಗಳಿಗೆ, ವೇದವ್ಯಾಸರ ವಾಕ್ಯಗಳಿಗೆ, ಸಮಸ್ತ ವೈದಿಕ ವಾಙಮಯಗಳಿಗೆ, ಯಥಾರ್ಥವಾದ ವ್ಯಾಖ್ಯಾನವನ್ನು ಸಜ್ಜನರಿಗೆ ತಿಳಿಸಲೋಸುಗ ಪ್ರಾಣದೇವರು ಪಾಜಕದಲ್ಲಿ ಪ್ರಾದುರ್ಭವಿಸಿದ ಪವಿತ್ರದಿನ.

ಮಾಯಾವಾದವೆಂಬ ಕತ್ತಲು ಜಗತ್ತನ್ನು ವ್ಯಾಪಿಸಿದ್ದ ಸಮಯ, ಹಿಂದಿನ ಭಾಷ್ಯಕಾರರ ಭಾಷ್ಯವನ್ನು ಖಂಡಿಸುತ್ತಾ ಮುಂದಿನವರು, ಅವರ ಭಾಷ್ಯವನ್ನು ಖಂಡಿಸುತ್ತಾ ಇನ್ನೊಬ್ಬರು, ಹೀಗೆ ಬ್ರಹ್ಮಸೂತ್ರಗಳಿಗೆ ಭಾಷ್ಯಗಳ ಸಂಖ್ಯೆ ಇಪ್ಪತ್ತೊಂದಕ್ಕೆ ತಲುಪಿದ್ದ ಸಮಯ! ಇನ್ನೊಂದು ಕಡೆ ಅನ್ಯಮತೀಯರಿಂದ ಸನಾತನ ಧರ್ಮದ ಮೇಲೆ ನಿರಂತರ ಅಟ್ಟಹಾಸ, ಇಂತಹ ಜ್ಞಾನಾಂಧಕಾರದ ಪ್ರಕ್ಷುಬ್ಧ ಪರಿಸ್ಥಿತಿಯಲ್ಲಿ , ಸನಾತನ ಧರ್ಮಕ್ಕೆ, ಸಮಸ್ತ ಸಜ್ಜನರಿಗೆ, ದಾರಿತೋರಿದ ಬೆಳಕು ಪಾಜಕದಲ್ಲಿ ವಾಸುದೇವನಾಗಿ ಉದಿಸಿತು!! ಪೂರ್ಣಪ್ರಜ್ಞರೆಂದು ಪ್ರಸಿದ್ಧವಾಯಿತು!! ಮಧ್ವರಾಗಿ ಮೆರೆಯಿತು!!

ಶ್ರೀಮದಾಚಾರ್ಯರು! ಅವರು ಪೂರ್ಣತೆಯ ಸಂಕೇತ, ಅದಕ್ಕೆಂದೇ ಅವರು ಪೂರ್ಣಪ್ರಜ್ಞರು! ಅವರು ಜ್ಞಾನಾನಂದದ ಸಂಕೇತ, ಆದ್ದರಿಂದಲೇ ಅವರು ಆನಂದತೀರ್ಥರು!! ಅವರ ತತ್ವಗಳು ದೇವಾನುದೇವತೆಗಳಿಗೆ,  ಸಜ್ಜನರಿಗೆ ಸುಖದಾಯಕ ಅದಕ್ಕೆಂದೇ ಅವರು ಸುಖ ತೀರ್ಥರು! ಗರುಡ ಶೇಷ ರುದ್ರರನ್ನೊಳಗೊಂಡ ಸಮಸ್ತ ಜೀವ ಪ್ರಪಂಚಕ್ಕೆ ಅವರು ಗುರುಸ್ಥಾನೀಯರು! ಅದಕ್ಕೆಂದೇ ಅವರು ಮಧ್ವರು!!

ವೇದಗಳ ಆದಿ, ಮಧ್ಯ, ಅಂತ್ಯದಲ್ಲಿ ಸಮಗ್ರವಾಗಿ ಪ್ರತಿಪಾದಿಸಲ್ಪಟ್ಟ ಶ್ರೀಮನ್ನಾರಾಯಣನ ಸರ್ವೋತ್ತಮತ್ವವನ್ನು ಸಮರ್ಥವಾಗಿ ಪ್ರತಿಪಾದಿಸಿದವರೇ ಶ್ರೀಮನ್ಮಧ್ವಾಚಾರ್ಯರು! ಎರಡು ಅಥವಾ ಅದಕ್ಕಿಂತ ಹೆಚ್ಚಿನ ಶಕ್ತಿಗಳು ಜಗತ್ತನ್ನು ನಿಯಂತ್ರಿಸುತ್ತಿದ್ದರೆ, ಕ್ರಮಬದ್ಧವಾದ ಜಗತ್ಪಾಲನೆ ಸಾಧ್ಯವೇ ಇಲ್ಲ! ಎರಡು ಅತ್ಯುತ್ತಮ ಮಹಾಶಕ್ತಿಗಳ ಅಸ್ತಿತ್ವ ಏಕಕಾಲದಲ್ಲಿ ಸಾಧ್ಯವೇ ಇಲ್ಲ, ಇದು ಜಗತ್ತಿನ ಸಾಮಾನ್ಯ ನಿಯಮ. ಇದನ್ನೇ ಆಚಾರ್ಯರು "ಏಕ ಏವ ಮಹಾಶಕ್ತಿ: ಕುರುತೇ ಸರ್ವಮಂಜಸಾ" ಎಂದರು! ಜಗತ್ತಿನ ಸಮಸ್ತ ಜೀವಿಗಳ, ಸಮಸ್ತ ಪದಾರ್ಥಗಳ ಒಳ ಹೊರಗೆ ನಿಂತು, ಅವರಿಂದ ಸಕಲ ಕರ್ಮಗಳನ್ನು ಮಾಡಿಸುವ ನಾರಾಯಣನೇ ಪರಮಾತ್ಮ ನಾಗಿದ್ದಾನೆ ಪರತತ್ವನಾಗಿದ್ದಾನೆ, ಬ್ರಹ್ಮಾದಿ ಸಕಲ ದೇವತೆಗಳೂ ಶ್ರೀಹರಿಯ ಕಿಂಕರರು! ಅಂದಮಾತ್ರಕ್ಕೆ ಅನ್ಯ ದೇವತೆಗಳ ತಿರಸ್ಕಾರ ಸಲ್ಲದು. ಅವರನ್ನು ಯಥೋಚಿತವಾಗಿ ಆರಾಧಿಸಲೇಬೇಕು. ಆರಾಧಿಸುವಾಗ ಆಯಾ ದೇವತೆಗಳ ಅಂತರ್ಯಾಮಿಯಾಗಿ ಶ್ರೀಹರಿಯನ್ನು ಚಿಂತನೆ ಮಾಡಬೇಕು ಎಂದು ತಿಳಿಸಿದವರು ಶ್ರೀಮದಾಚಾರ್ಯರು.

ಇನ್ನು ಅನೇಕರಿಂದ ಆಕ್ಷೇಪಕ್ಕೆ ಒಳಗಾದದ್ದು ಆಚಾರ್ಯರು ತಿಳಿಸಿದ ಭೇದ ತತ್ವ! ಜೀವಿ ಜೀವಿಗಳ ನಡುವೆ, ಜಡ ಜಡಗಳ ನಡುವೆ, ಜೀವ ಜಡಗಳ ನಡುವೆ, ಜೀವ ಮತ್ತು ಜಡಗಳಿಂದ ಪರಮಾತ್ಮನಿಗೆ ಹೀಗೆ ಒಟ್ಟು ಪಂಚಭೇದಗಳನ್ನು ಆಚಾರ್ಯರು ತಿಳಿಸಿದ್ದಾರೆ. ಇದು ಎಲ್ಲರ ಅನುಭವಕ್ಕೆ ಬರುವ ವಿಷಯವೂ ಕೂಡಾ ಆಗಿದೆ! ಆದರೂ ಕೆಲವರಿಗೆ ಮುಕ್ತವಾಗಿ ಒಪ್ಪಿಕೊಳ್ಳಲು ಏನೋ ಪೂರ್ವಾಗ್ರಹ! ಏನೋ ಸಂಕೋಚ!
ಪ್ರಪಂಚದಲ್ಲಿ ಒಂದೇ ತೆರನಾದ ಎರಡು ವಸ್ತುಗಳು ಇಲ್ಲವೇ ಇಲ್ಲ! ಒಂದೇ ಮರದ ಎರಡು ಎಲೆಗಳೂ ಕೂಡ ಸಂಪೂರ್ಣವಾಗಿ ಸಮನಾಗಿಲ್ಲ! ಎಲೆಯ ವಿಷಯ ಹಾಗಿರಲಿ, ನಮ್ಮದೇ ದೇಹದ ಯಾವುದೇ ಎರಡು ಅಂಗಗಳು ಸಂಪೂರ್ಣವಾಗಿ ಒಂದೇ ಸಮನಾಗಿಲ್ಲ!! ದೃಷ್ಟಿದೋಷವಿರುವವರಿಗೆ ಈ ವಿಷಯ ಸ್ಪಷ್ಟವಾಗಿ ಅನುಭವಕ್ಕೆ ಬರುತ್ತದೆ! ಎರಡು ಕಣ್ಣುಗಳ ವೀಕ್ಷಣಾ ಸಾಮರ್ಥ್ಯವೂ ಕೂಡ ಬೇರೆಬೇರೆಯಾಗಿಯೇ ಇರುತ್ತದೆ! ಇದನ್ನೇ ಆಚಾರ್ಯರು " ಭಿನ್ನಾಶ್ಚ ಭಿನ್ನಧರ್ಮಾಶ್ಚ ಪದಾರ್ಥಾ ನಿಖಿಲಾ ಅಪಿ" ಎಂದರು.

ತಾರತಮ್ಯ ಮಧ್ವಸಿದ್ಧಾಂತದ ಇನ್ನೊಂದು ತತ್ವ. ಹಲವರಿಂದ ಆಕ್ಷೇಪಕ್ಕೆ ಒಳಗಾದ ತತ್ವವೂ ಹೌದು!! ಬ್ರಹ್ಮನಿಂದ ಆರಂಭಿಸಿ ತೃಣ ಪರ್ಯಂತ ಎಲ್ಲಾ ವಸ್ತುಗಳೂ ತಾರತಮ್ಯದಿಂದ ಕೂಡಿದೆ, ತಾರತಮ್ಯವಿಲ್ಲದೆ ಈ ಜಗತ್ತೇ ನಡೆಯದು! ಉದಾಹರಣೆಗೆ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ತೋರಿಕೆಗೆ ಎಲ್ಲರೂ ಸಮಾನರು! ಇದೇ ಸಮಾನತೆಯ ವಿಷಯವನ್ನು ಚುನಾವಣಾ ಪ್ರಣಾಳಿಕೆಯಲ್ಲಿ ಸೇರಿಸಿ ಮತ ಗಿಟ್ಟಿಸಿಕೊಂಡು ಅಧಿಕಾರ ಪಡೆದ ಒಬ್ಬ ಮಂತ್ರಿಗೆ ಝಡ್ ಪ್ಲಸ್ ಭದ್ರತೆ! ಆ ಮಂತ್ರಿಯನ್ನು ಕಾಣಬೇಕೆಂದರೆ ಮತಹಾಕಿದ ಒಬ್ಬ ಸಾಮಾನ್ಯ ಮತದಾರ ದಿನಗಟ್ಟಲೆ ಕಾಯಬೇಕು! ಎಲ್ಲಿದೆ ಸಮಾನತೆ !? ಉಚ್ಚ ಅಧಿಕಾರಿ ವರ್ಗದಿಂದ ಹಿಡಿದು, ಸಾಮಾನ್ಯ ನೌಕರನವರೆಗೆ , ಹುದ್ದೆಯಲ್ಲಿ ವೇತನದಲ್ಲಿ ಅಧಿಕಾರದಲ್ಲಿ ಎಲ್ಲ ಕಡೆಯೂ ತಾರತಮ್ಯವೇ ತುಂಬಿದೆ!! ಎಲ್ಲರಿಗೆ ಎಲ್ಲರೂ ಸಮಾನತೆಯಿಂದ ಕೂಡಿದ ಪ್ರಪಂಚವನ್ನು ಊಹಿಸುವುದು ಕೂಡ ಕಷ್ಟವಾಗುತ್ತದೆ. ತಾರತಮ್ಯ ಅದು ವಸ್ತುಸ್ಥಿತಿ ! ತಾರತಮ್ಯ ಜಗದ ನಿಯಮ!!

ಇನ್ನು ಬ್ರಹ್ಮ ಸಗುಣನೋ? ನಿರ್ಗುಣನೋ? ಸಾಕಾರನೋ? ನಿರಾಕಾರನೋ? ಪ್ರಾಕೃತ ಗುಣಗಳಿಲ್ಲದವನಾದ್ದರಿಂದ ನಿರ್ಗುಣ, ಜ್ಞಾನಾನಂದಾದಿ ಅನಂತ ಗುಣಪೂರ್ಣನಾದ್ದರಿಂದ ಸಗುಣ! ಹಾಗೆಯೇ ಪ್ರಾಕೃತ ದೇಹವಿಲ್ಲದವನಾದ್ದರಿಂದ ನಿರಾಕಾರ, ಜ್ಞಾನ ಆನಂದಾದಿಗಳೇ ದೇಹವುಳ್ಳವನಾದ್ದರಿಂದ ಸಾಕಾರ! ಬೆಲ್ಲದಿಂದ ಸಿಹಿಯನ್ನು ಹೇಗೆ ಬೇರ್ಪಡಿಸಲು ಸಾಧ್ಯವಿಲ್ಲವೋ, ಹಾಗೆಯೇ ಭಗವಂತನಿಂದ ಅವನ ಗುಣ ಮತ್ತು ಆಕಾರಗಳು ಅಭಿನ್ನ! ಗೊಂದಲಕ್ಕೆ ಎಡೆಯೇ ಇಲ್ಲದಂತೆ ಇದನ್ನು ತಿಳಿಸಿದವರು ಶ್ರೀಮದಾಚಾರ್ಯರು!

ಅಂತೆಯೇ ಇನ್ನೊಂದು ಪ್ರಶ್ನೆ! ಜಗತ್ತು ಸತ್ಯವೋ ಸುಳ್ಳೋ !!??? ಶ್ರೀಮದಾಚಾರ್ಯರು ಸಾರಿ ಸಾರಿ ಹೇಳಿದ್ದಾರೆ, ಬ್ರಹ್ಮನೆಷ್ಟು ಸತ್ಯವೋ ಹಾಗೆಯೇ ಅವನಿಂದ ಸೃಷ್ಟವಾದ ಈ ಜಗತ್ತು ಕೂಡ ಅಷ್ಟೇ ಸತ್ಯ! "ಯಚ್ಚಿಕೇತ ಸತ್ಯಮಿತ್ತನ್ನ ಮೋಘಂ" ಭಗವಂತ ಯಾವುದನ್ನು ಸೃಷ್ಟಿಸಿದ್ದಾನೋ ಅದು ಸತ್ಯವಾಗಿಯೂ ಸತ್ಯವಾದುದು! ಆದರೆ ಕೆಲವರು ಜಗತ್ತನ್ನು ಮಿಥ್ಯೆ ಎಂದು ಹೇಳುತ್ತಾರೆ. ಆದರೆ ವಿಪರ್ಯಾಸವೆಂದರೆ ಜಗತ್ತನ್ನು ಮಿಥ್ಯೆ ಎಂದು ಸಾಧಿಸುವ ಈ ಮಂದಿ ತಮ್ಮ ಹೆಸರಿನ ಮುಂದೆ ಮಾತ್ರ ಜಗದ್ಗುರು ಎಂಬ ಶಬ್ದವನ್ನು ಸೇರಿಸಲು ಮರೆಯುವುದಿಲ್ಲ! ಮಿಥ್ಯೆಯಾದ ಜಗತ್ತಿನ ಗುರುಗಳಾಗಿ ಇವರು ಸಾಧಿಸುವುದಾದರೂ ಏನು!? ಎಂಥಾ ವೈಪರೀತ್ಯ ವಲ್ಲವೇ!!

ಇನ್ನು ವರ್ಣವ್ಯವಸ್ಥೆಯ ಬಗ್ಗೆ ಅತ್ಯಂತ ಸ್ಪಷ್ಟವಾಗಿ ಅತ್ಯಂತ ನಿಖರವಾಗಿ ಬೆಳಕು ಚೆಲ್ಲಿದ ಏಕಮೇವ ಆಚಾರ್ಯರೆಂದರೆ ಅದು ಶ್ರೀಮದಾಚಾರ್ಯರು ಮಾತ್ರ ! ವರ್ಣ ಕೇವಲ ದೇಹಕ್ಕೆ ಸಂಬಂಧಿಸಿರದೆ ಅದರೊಳಗಿನ ಜೀವಕ್ಕೂ ಸಂಬಂಧಪಟ್ಟದ್ದಾಗಿದೆ! ಬ್ರಾಹ್ಮಣ ದೇಹದಲ್ಲಿ ಶೂದ್ರ ಜೀವ ಇರಬಹುದು, ಅಂತೆಯೇ ಶೂದ್ರ ದೇಹದಲ್ಲಿ ಬ್ರಾಹ್ಮಣ ಜೀವವೂ ಇರಬಹುದು! ದೇಹಕ್ಕೆ ಸಂಬಂಧಿಸಿದ ವರ್ಣ ನಿತ್ಯವಲ್ಲ , ಆದರೆ ಜೀವನಿಗೆ ಸಂಬಂಧಿಸಿದ ವರ್ಣ ಅದು ಸ್ವಾಭಾವಿಕ ಸತ್ಯ ! ಬಹುಶ: ಅನುಭವಕ್ಕೆ ( ಆತ್ಮಸಾಕ್ಷಿ ) ಆದ್ಯತೆ ನೀಡಿದ ಏಕಮೇವ ಆಚಾರ್ಯರೆಂದರೆ ಅದು ಶ್ರೀಮದಾಚಾರ್ಯರು!
" ನ ಚ ಅನುಭವ ವಿರೋಧೇ ಆಗಮಸ್ಯ ಪ್ರಾಮಾಣ್ಯಂ" ಅನುಭವಕ್ಕೆ ವಿರೋಧವಾಗಿ ಸಂದೇಶವು ಎಲ್ಲಿಂದ ಬಂದರೂ ಅದು ಗ್ರಾಹ್ಯ ವಾಗಲಾರದು! 

ಪ್ರತಿಯೊಂದು ಮತದ ಅಂತಿಮಗುರಿ ಅದು ಮೋಕ್ಷ. ಕೆಲವರ ಪ್ರಕಾರ ದುಃಖಾಭಾವವೇ ಮುಖ್ಯವಾದರೆ, ಮತ್ತೆ ಕೆಲವರು ಜೀವ ಬ್ರಹ್ಮರ ಐಕ್ಯವನ್ನು ಮೋಕ್ಷವೆಂದರು! ಇದನ್ನೆಲ್ಲ ನಿರಾಕರಿಸಿದ ಆಚಾರ್ಯರು, ಭಗವಂತನಿಂದ ಸಂಪೂರ್ಣ ಭಿನ್ನರಾಗಿ, ಅವನ ಸಂಪೂರ್ಣ ನಿಯಂತ್ರಣಕ್ಕೊಳಪಟ್ಟು, ತಾರತಮ್ಯ ಸಹಿತವಾಗಿ ಜೀವರ ಸ್ವರೂಪಾನಂದದ ಪರಿಪೂರ್ಣ ಅಭಿವ್ಯಕ್ತಿಯನ್ನು ಮೋಕ್ಷವೆಂದು ತಿಳಿಸಿದರು.

ಸಾಮಾನ್ಯವಾಗಿ ಧಾರ್ಮಿಕ ನೇತಾರರಿಗೆ ಅಂಟಿಕೊಳ್ಳುವ ಒಂದು ಪ್ರಮುಖ ಆಕ್ಷೇಪವೆಂದರೆ ಅವರ ಆಧ್ಯಾತ್ಮಿಕವಾಗಿ ತಮ್ಮ ಯೋಚನಾಲಹರಿಯನ್ನು ಹರಿಯಬಿಡುತ್ತಾರೆಯೇ ಹೊರತು ಸಾಮಾಜಿಕವಾಗಿ ಅಲ್ಲಾ ಎಂದು! ಇದಕ್ಕೆ ಅಪವಾದ ಶ್ರೀಮದಾಚಾರ್ಯರು! ಭಗವಂತನ ಸೇವೆಯ ಜೊತೆಜೊತೆಗೆ ಸಕಲ ಜೀವಿಗಳ ಸೇವೆಗೂ ಆಚಾರ್ಯರು ಆದ್ಯತೆ ನೀಡಿದರು. ಭಗವಂತನ ರಾಜ್ಯದಲ್ಲಿ ನಾವು ವಾಸ ಮಾಡುತ್ತಿರುವುದಕ್ಕೆ ಭಗವಂತನಿಗೆ ನಾವು ಸಲ್ಲಿಸುವ ಕಪ್ಪವೆಂದರೆ ಅದು ಜನಸೇವೆ!
" ನಾನಾ ಜನಸ್ಯ ಶುಶ್ರೂಷಾ ಕರ್ತವ್ಯಾ ಕರವನ್ಮಿತೇ:"
" ತಸ್ಯ-ಪ್ರಾಣ್ಯುಪಕಾರೇಣ ಸಂತುಷ್ಟೋ ಭವತೀಶ್ವರ:"
ಇನ್ನು ಸನಾತನ ಧರ್ಮದಲ್ಲಿ ಸ್ತ್ರೀಯರಿಗೆ ಸಮಾನ ಪ್ರಾಶಸ್ತ್ಯವಿಲ್ಲ ಎಂದು ಅರಚುವ ಮಂದಿ ಆಚಾರ್ಯರ ಈ ಮಾತನ್ನು ಒಮ್ಮೆ ಗಮನಿಸಬೇಕು
" ಕನ್ಯೋದಿತಾ ಬತ ಕುಲದ್ವಯತಾರಿಣೀತಿ" ಒಬ್ಬ ಗಂಡು ಒಂದು ಕುಲದ ಉದ್ಧಾರಕನಾದರೆ ಒಬ್ಬ ಹೆಣ್ಣುಮಗಳು ಎರಡು ಕುಲದ ಉದ್ಧಾರಕಳು! ಇದು ಸ್ತ್ರೀಯರ ಬಗ್ಗೆ ಆಚಾರ್ಯರ ನಿಲುವು !!

ಭಕ್ತಿ ಪಂಥದ ಉಗಮ, ದಾಸ ಸಾಹಿತ್ಯದ ಉಗಮ ಎರಡೂ ಶ್ರೀಮದಾಚಾರ್ಯರಿಂದಲೇ! ಜ್ಞಾನವಿಲ್ಲದ ಭಕ್ತಿ ಅದು ಕುರುಡು ಭಕ್ತಿ, ಭಕ್ತಿಯಿಲ್ಲದ ಜ್ಞಾನ ಅದು ಒಣ ಪಾಂಡಿತ್ಯ. ಜ್ಞಾನ ಪ್ರೇಮಗಳ ಪ್ರವಾಹವು ಒಂದೆಡೆ ಸೇರಿದಾಗ ಆವಿಷ್ಕಾರಗೊಳ್ಳುವುದೇ ನಿಜವಾದ ಭಕ್ತಿ! ಇದನ್ನು ಸಾರಿದವರು ಆಚಾರ್ಯರು. ತಾವೇ ಸ್ವತ: ದ್ವಾದಶಸ್ತೋತ್ರಾಧಿಗಳನ್ನು ರಚಿಸುವ ಮೂಲಕ ದಾಸಸಾಹಿತ್ಯಕ್ಕೆ ಮೇಲ್ಪಂಕ್ತಿಯನ್ನು ಹಾಕಿಕೊಟ್ಟರು. ಇದರ ಫಲವಾಗಿಯೇ ನಂತರದಲ್ಲಿ ಲಕ್ಷಾಂತರ ಭಕ್ತಿ ಕೀರ್ತನೆಗಳು ಭಗವಂತನ ಗುಣ ಮಹಿಮೆಯನ್ನು ಕೊಂಡಾಡುತ್ತಾ ಆಡುಭಾಷೆಯಲ್ಲಿ ಹರಿದುಬಂದವು, ಭಾವವನ್ನೂ ಭಾಷೆಯನ್ನೂ ಸಮೃದ್ಧಗೊಳಿಸಿದವು!

ಹೀಗೆ ತತ್ವವಾದವೆಂಬ ಜ್ಯೋತಿಯ ಮೂಲಕ ಭಗವಾನ್ ವೇದವ್ಯಾಸರ ವಾಕ್ಯಗಳ ನಿಜ ಆಂತರ್ಯವನ್ನು ಸಮಾಜಕ್ಕೆ ತೋರಿದವರು ಶ್ರೀಮದಾಚಾರ್ಯರು! " ಅಂತೇ ಸಿದ್ಧಸ್ತು ಸಿದ್ಧಾಂತ: ಮಧ್ವಸ್ಯಾಗಮ ಏವಹಿ " ಎಂಬ ಶ್ರೀಮದ್ವಾದಿರಾಜ ಗುರುಸಾರ್ವಭೌಮರ ಮಾತಿನಂತೆ ಎಂದೆಂದಿಗೂ ಅಖಂಡಿತವಾಗಿ ಅಭೇಧ್ಯವಾಗಿ ಇರು
ವುದು ಶ್ರೀಮದಾಚಾರ್ಯರ ಸಿದ್ಧಾಂತದ ವೈಶಿಷ್ಟ್ಯ!!

ಶ್ರೀಮದಾಚಾರ್ಯರ ಸಿದ್ಧಾಂತವನ್ನೂ, ಶ್ರೀಮದಾಚಾರ್ಯರ ಮಹಿಮೆಯನ್ನೂ, ಪರಿಪೂರ್ಣವಾಗಿ ತಿಳಿಯುವುದು ಅದು ದೇವತೆಗಳಿಗೂ ಅಸಾಧ್ಯವಾದ ವಿಷಯ! ಅಂತಹ ಶ್ರೀಮದಾಚಾರ್ಯರು ಅವತರಿಸಿದ ಪರಮಪವಿತ್ರ ದಿನವೇ ವಿಜಯದಶಮಿ. ಪ್ರತಿಯೊಬ್ಬ ಆಸ್ತಿಕರೂ ಶ್ರೀಮದಾಚಾರ್ಯರಿಗೆ ಅತ್ಯಂತ ಕೃತಜ್ಞರಾಗಿರಲೇಬೇಕು! ಸಜ್ಜನರ ಮೇಲೆ ಶ್ರೀಮದಾಚಾರ್ಯರು ತೋರಿದ ಕೃಪೆ ಅದು ಅಪಾರ! ಶ್ರೀಮದಾಚಾರ್ಯರು ಕೊಟ್ಟ ಗ್ರಂಥಗಳ ಅಧ್ಯಯನ ಮಾಡುವುದು ಸಜ್ಜನರ ಆದ್ಯ ಕರ್ತವ್ಯ.

ಜನ್ಮತ: ಮಾಧ್ವರಾಗುವುದಕ್ಕಿಂತಲೂ, ತತ್ವತ: ಮಾಧ್ವರಾಗುವುದು ಬಹಳ ವಿಶೇಷ. ಸಮಗ್ರ ಸರ್ವಮೂಲ ಗಳ ಅಧ್ಯಯನವನ್ನು ಟೀಕಾ ಸಹಿತವಾಗಿ ತಪಸ್ಸಿನಂತೆ ಅಧ್ಯಯನ ಮಾಡುವುದು ಪ್ರತಿಯೊಬ್ಬ ಮಾಧ್ವರ ವ್ರತವಾಗಬೇಕು. ನಾವೂ ಅಧ್ಯಯನ ಮಾಡಿ, ಯಥಾಯೋಗ್ಯವಾಗಿ ನಮ್ಮ ಪ್ರತಿಯೊಬ್ಬ ಕುಟುಂಬ ಸದಸ್ಯರಿಂದಲೂ ಮಧ್ವ ಸಿದ್ಧಾಂತದ ಅಧ್ಯಯನ, ಅನುಸಂಧಾನ ಮಾಡಿಸಿದೆವೆಂದರೆ ಅದೇ ನಾವು ಆಚಾರ್ಯರಿಗೆ ಸಲ್ಲಿಸುವ ನಿಜವಾದ ಗುರುದಕ್ಷಿಣೆ!

ಅನಂತ ಜನ್ಮಗಳ ಪುಣ್ಯ ವಿಶೇಷವಿದ್ದರೆ ಮಾತ್ರ ಮಾಧ್ವ ಸಿದ್ಧಾಂತದಲ್ಲಿ ಒಲವು ಮೂಡಲು ಸಾಧ್ಯ. ದೊರಕಿದ ಬಹು ಅಮೂಲ್ಯವಾದ ಮಾಧ್ವ ಜನ್ಮವನ್ನು ವ್ಯರ್ಥಗೊಳಿಸದಿರೋಣ. ಒಂದಲ್ಲ ಎರಡಲ್ಲ ಅನಂತ ಜನ್ಮಗಳಲ್ಲೂ ನಮಗೆ ಶ್ರೀಮದಾಚಾರ್ಯರೇ ಗುರುಗಳಾಗಿ ದೊರಕಲಿ. ಅವರಿಗೆ ಶಿರಬಾಗಿ " ಭೂಯಿಷ್ಠಾಂ ತೇ ನಮ ಉಕ್ತಿಂ ವಿಧೇಮ" ಎನ್ನುವ ಭಾಗ್ಯ ಅನಂತ ಜನ್ಮಗಳಲ್ಲಿ ನಮಗೆ ಒದಗಿ ಬರಲಿ!

"ಆಚಾರ್ಯಾ: ಶ್ರೀಮದಾಚಾರ್ಯಾ: ಸಂತು ಮೇ ಜನ್ಮ ಜನ್ಮನಿ" 🙇‍♂️🙇‍♂️

end
****

ಶ್ರೀ ಪೂರ್ಣಪ್ರಜ್ಞರು ಭೂಮಿಯಲ್ಲಿ ಅವತರಿಸಿದ ಪರಮಪವಿತ್ರವಾದ ದಿನ ವಿಜಯದಶಮಿ. ಸರ್ವದಾ ವಿಜಯಪ್ರದನಾದ ಶ್ರೀಹರಿಯನ್ನು ತಿಳಿಸುವ ಶಾಸ್ತ್ರವನ್ನು ʼದʼ ಅನುಗ್ರಹಿಸಿದ ಶಮಿ -ಶಮಗುಣ ಭರಿತರು ಶ್ರೀಮಧ್ವರು.
   ಉಡುಪಿಯ ಸಮೀಪದ ಒಂದು ಪುಟ್ಟ ಹಳ್ಳಿ ಪಾಜಕ. ಪರಾತ್ಪರನಾದ ಶ್ರೀಪರಶುರಾಮನ, ಶ್ರೀದುರ್ಗಾದೇವಿಯ ಸಾನ್ನಿಧ್ಯವಿಶೇಷದಿಂದ ಪವಿತ್ರವಾಗಿದ್ದ ಈ ಪುಣ್ಯಭೂಮಿ ಪವಮಾನನ ಪ್ರಾದುರ್ಭಾವದಿಂದ ಪ್ರಖ್ಯಾತವಾಯಿತು. ತತ್ತ್ವಜ್ಞಾನಕ್ಕೆ ಮಹೋನ್ನತ ಕೊಡುಗೆಯನ್ನು ನೀಡಿದ ಹಿರಿಮೆಗೆ ಭಾಜನವಾಯಿತು. ಮಧ್ಯಗೇಹಭಟ್ಟರು( ನಡಿಲ್ಲಾಯ ನಾರಾಯಣ ಭಟ್ಟರು ) ಮತ್ತು ವೇದವತಿಯರೆಂಬ ಪುಣ್ಯದಂಪತಿಗಳನ್ನು ನಿಮಿತ್ತವಾಗಿರಿಸಿಕೊಂಡು ಪ್ರಾಣದೇವ ಅವತರಿಸುವ ಪೂರ್ವದಲ್ಲಿಯೇ ಉಡುಪಿಯ ಹಿರಿದೈವ ಅನಂತಾಸನ ಲೋಕೋತ್ತರವಾದ ತೇಜಸ್ಸೊಂದು ಭೂಮಿಯಲ್ಲಿ ಅವತರಿಸುವ ಸೂಚನೆಯನ್ನು ನೀಡಿದ್ದ.     ನಡಿಲ್ಲಾಯದಂಪತಿಗಳ ದಂಪತಿಗಳ ಪುಣ್ಯಗರ್ಭದಲ್ಲಿ ಅವತರಿಸಿದ ಆ ಅಲೌಕಿಕ ತೇಜಸ್ಸು ತನ್ನ ಅಸದೃಶವಾದ ಪಾಂಡಿತ್ಯದಿಂದ, ಅಸಾಧಾರಣವಾದ ವ್ಯಕ್ತಿತ್ತ್ವದಿಂದ, ಅಪ್ರತಿಮವಾದ ತಪಶ್ಚರ್ಯದಿಂದ, ಅನುಪಮವಾದ ಹರಿಭಕ್ತಿಯಿಂದ, ಅಪ್ರತಿದ್ವಂದ್ವವಾದ ಸಿದ್ಧಾಂತದಿಂದ ಅವನಿಯಲ್ಲಿ ಅದ್ವಿತೀಯವೆನಿಸಿತು. ತತ್ತ್ವಜ್ಞಾನಿಗಳ ಪಂಕ್ತಿಯಲ್ಲಿ ಅಗ್ರಮಾನ್ಯವಾಯಿತು.ವೈದಿಕ ಚಿಂತನಕ್ರಮಕ್ಕೆ ಒಂದು ಶಿಸ್ತನ್ನು, ನಿಖರತೆಯನ್ನು, ಹೊಸನೋಟವನ್ನು ನೀಡಿ, ವೈಚಾರಿಕ ಕ್ರಾಂತಿಯ ಶುಭೋದಯವನ್ನು ಸಾರಿದ ಮಹಾಮನೀಷಿಯ ಅವತರಣದಿಂದ ಅಜ್ಞಾತವಾಗಿದ್ದ ಗ್ರಾಮವೊಂದು ಜಿಜ್ಞಾಸುಗಳ, ಪ್ರಾಜ್ಞರ ಪರಮಗಮ್ಯಸ್ಥಾನವಾಯಿತು.ವಿಲಂಬಿ ಸಂವತ್ಸರದ (ಕ್ರಿ.ಶ 1238)ರ ಆಶ್ವಯುಜ ಶುಕ್ಲಪಕ್ಷದ ವಿಜಯದಶಮಿಯ ಪರ್ವಕಾಲದಲ್ಲಿ ಅವತರಿಸಿದ ಶಿಶುವಿಗೆ ತಂದೆಯಿಟ್ಟ ಹೆಸರು 'ವಾಸುದೇವ'. ಭೂಮಿಯಲ್ಲಿ ವಾಸುದೇವರೂಪದಲ್ಲಿ ಅಸುದೇವ ಅವತರಿಸಿದ ಸಂದರ್ಭದಲ್ಲಿ ಜಿಜ್ಞಾಸುಗಳಿಗೆ ವೇದ-ವೇದಾಂತಗಳ ಪರಿಚಯವಿದ್ದರೂ, ವೇದವ್ಯಾಸರಿಗೆ ಸಮ್ಮತವಾದ, ವೇದಾಂತದ ಅಂತರ್ನಿಹಿತವಾದ ಸತ್ಯ ಅಸ್ಪಷ್ಟವಾಗಿಯೇ ಇತ್ತು. ಹೊಸ ಬೆಳಕಿಗೆ ಜಗತ್ತು ಕಾಯುತ್ತಿತ್ತು. ಭಗವಾನ್ ವೇದವ್ಯಾಸರ ಹೃದ್ಗತವನ್ನು ತೆರೆದಿಡುವ ಮಹಾಮನೀಷಿಯೋರ್ವನ ಆಗಮನಕ್ಕೆ ಜಗತ್ತು ಕಾತರದಿಂದ ಕಾಯುತ್ತಿದ್ದಂತಹ ಸಂದರ್ಭದಲ್ಲಿ,ಭಗವದಾಣತಿಯಂತೆ ಪರಮೇಷ್ಠಿ ಪದಾರ್ಹನಾದ ಪವಮಾನನ ಅವತಾರ ಪಾಜಕದಲ್ಲಾಯಿತು.
ತಮ್ಮ ಅಸಾಧಾರಣವಾದ ಪಾಂಡಿತ್ಯದಿಂದ, ಅನುಪಮವಾದ ಹರಿಭಕ್ತಿಯಿಂದ, ಅಲೌಕಿಕವಾದ ತೇಜಸ್ಸಿನಿಂದ, ಅನನ್ಯವಾದ ವ್ಯಕ್ತಿತ್ವದಿಂದ ತತ್ತ್ವಜ್ಞಾನಿಗಳ ಪಂಕ್ತಿಯಲ್ಲಿ ಅಗ್ರಮಾನ್ಯರಾದ ಶ್ರೀಮಧ್ವಾಚಾರ್ಯರು ವೈದಿಕಚಿಂತನ ಕ್ರಮಕ್ಕೆ ಒಂದು ಹೊಸ ಶಿಸ್ತನ್ನು, ನಿಖರತೆಯನ್ನು ಹೊಸನೋಟವನ್ನು ನೀಡಿ ಬೌದ್ಧಿಕ ಕ್ರಾಂತಿಯ ಶುಭೋದಯವನ್ನು ಸಾರಿದ ಮಹಾಮನೀಷಿಗಳು. ವೇದ,ಉಪನಿಷತ್, ಭಗವದ್ಗೀತೆ, ಬ್ರಹ್ಮಸೂತ್ರಗಳು,ಪುರಾಣಗಳು,ಪಂಚರಾತ್ರವೇ ಮೊದಲಾದ ಸಮಗ್ರ ವೇದಾಂತ ವಾಙ್ಮಯದ ಯಥಾರ್ಥ ಚಿತ್ರಣವನ್ನು ಭಗವಾನ್ ಶ್ರೀವೇದವ್ಯಾಸದೇವರಿಗೆ ಸಮ್ಮತವಾಗುವಂತೆ ನೀಡುವಲ್ಲಿ ಶ್ರೀಮಧ್ವಾಚಾರ್ಯರು ಅತ್ಯಂತ ಪರಿಣಾಮಕಾರಿಯಾದ ಹಾಗೂ ಪ್ರಭಾವಶಾಲಿಯಾದ ಪಾತ್ರವನ್ನು ವಹಿಸಿದರು. ಸಮಸ್ತ ವೈದಿಕವಾಙ್ಮಯವನ್ನು ಅಖಂಡವಾಗಿ ಅರ್ಥೈಸಿ, ತಮ್ಮ ಅಪರೂಪವಾದ ಸಂಶೋಧನಾಪ್ರಜ್ಞೆಯಿಂದ ಅಪಾತತ: ಕಾಣುವ ಅನೇಕ ವಿರೋಧಾಭಾಸಗಳನ್ನು ಪರಿಹರಿಸಿದ ಅಶ್ರುತ ಪ್ರತಿಭೆ ಶ್ರೀಆನಂದತೀರ್ಥರದು. ವೇದಾಂತವೆಂದರೆ ಮೂಢನಂಬಿಕೆಯಲ್ಲ, ಅತ್ಯಂತ ವೈಜ್ಞಾನಿಕವಾದ ಮತ್ತು ಪ್ರಾಯೋಗಿಕವಾದ ಚಿರಂತನ ಸತ್ಯವೆಂದು ತಮ್ಮ 'ತತ್ತ್ವವಾದ'ದಲ್ಲಿ ಪ್ರಚುರ ಪಡಿಸಿದರು. ನಾರಾಯಣನೊಬ್ಬನೇ ಸರ್ವೋತ್ತಮನಾದ ಸ್ವತಂತ್ರನಾದ ಪರದೈವವೆಂದು, ಸಮಸ್ತ ವೇದವಾಙ್ಮಯವೂ ಅಷ್ಟೇ ಅಲ್ಲ ಸಮಸ್ತ ಶಬ್ದರಾಶಿ,ಧ್ವನಿಗಳೂ ಮುಖ್ಯತ: ಅವನ ಗುಣಗಾನವನ್ನೇ ಮಾಡುತ್ತಿವೆ ಎಂದು ವಿಷ್ಣುಸರ್ವೋತ್ತಮತ್ವವನ್ನು ಪ್ರತಿಪಾದಿಸಿದ ಶ್ರೀಮಧ್ವಾಚಾರ್ಯರು ವೇದಸೂಕ್ತಗಳಲ್ಲಿ ಇಂದ್ರ,ವರುಣ,ಅಗ್ನಿ ಮುಂತಾದ ನಾನಾಗುಣನಾಮಗಳಿಂದ ಪ್ರತಿಪಾದ್ಯನಾದ ನಾರಾಯಣ ಅನಂತ ಕಲ್ಯಾಣಗುಣಪೂರ್ಣನೆಂದು, ಅವನಿಂದ ಸೃಷ್ಟವಾದ,ವ್ಯಕ್ತವಾದ ಈ ಜಗತ್ತು ಶ್ರೀಹರಿಯ ಅಧೀನವೆಂದು ವೇದಪ್ರತಿಪಾದಿತವಾದ ಸತ್ಯವನ್ನು ಪುನ: ಬೆಳಕಿಗೆ ತಂದರು. ಸಮಸ್ತವೇದಪ್ರತಿಪಾದ್ಯನಾದ ಶ್ರೀಹರಿ ಸರ್ವೋತ್ತಮನೆಂದು, ಉಳಿದ ಎಲ್ಲಾ ದೇವತೆಗಳೂ ಗುರುಸ್ಥಾನೀಯರೆಂದು ತಿಳಿಸಿದರು. ಜಗತ್ತು ಸತ್ಯವೆಂದು ಅತ್ಯಂತ ಸ್ಪಷ್ಟವಾಗಿ ವೇದ, ಉಪನಿಷತ್ತುಗಳ ಸಂದೇಶವನ್ನು ಸಾರಿದ ಶ್ರೀಮಧ್ವಾಚಾರ್ಯರು ಒಂದು ಜೀವಿಯಂತೆ ಇನ್ನೊಂದು ಜೀವಿಯಿಲ್ಲ, ಜಡವಸ್ತುಗಳಲ್ಲಿಯೂ ಪರಸ್ಪರ ಭೇದಗಳಿವೆ. ಪ್ರತಿಯೊಬ್ಬ ವ್ಯಕ್ತಿಗೂ, ಪ್ರತಿಯೊಂದು ವಸ್ತುವಿಗೂ ತನ್ನದೇ ಆದ ವಿಶಿಷ್ಟವಾದ ಸ್ವಭಾವವಿದೆ ಎಂದು ತಿಳಿಸಿದರು. ಶ್ರೀಮಧ್ವರು ಪ್ರತಿಯೊಬ್ಬ ವ್ಯಕ್ತಿಯ ವ್ಯಕ್ತಿತ್ವದ ಪೂರ್ಣವಿಕಾಸವೇ ಜೀವನದ ಗುರಿಯಾಗಬೇಕು ಎಂದು ವ್ಯಕ್ತಿವಿಶಿಷ್ಟವಾದವನ್ನು ಪ್ರತಿಪಾದಿಸಿದರು."ಭಗವಂತನನ್ನು ಅರಿತವನು ಮಾತ್ರವೇ ಜಗತ್ತಿನ ರಹಸ್ಯವನ್ನು ಅರಿಯಬಲ್ಲ, ಭಗವಂತನನ್ನು ಅರಿಯುವುದು ಕಠಿಣತಮವೇ ಆದರೂ, ಜ್ಞಾನ,ವೈರಾಗ್ಯಗಳ ಸಂಪರ್ಕದಲ್ಲಿ ಪರಿಶುದ್ಧವಾದ ಶ್ರೀಹರಿಯ ಚರಣಭಕ್ತಿಯೇ ಅಂತಹ ಪ್ರಯತ್ನವನ್ನು ಯಶಸ್ವಿಗೊಳಿಸುವಲ್ಲಿ ಸಹಕಾರಿಯಾಗಬಲ್ಲುದು' ಎಂದು ತಮ್ಮ ಭಕ್ತಿ ಸಿದ್ಧಾಂತವನ್ನು ಪ್ರಚುರ ಪಡಿಸಿದ ಶ್ರೀಮಧ್ವಮುನಿಗಳು ಜ್ಞಾನಯೋಗ, ಕರ್ಮಯೋಗಗಳು ಪರಸ್ಪರಸಂಬಂಧವಿರದವುಗಳಲ್ಲ, ಪರಸ್ಪರ ಪೂರಕವಾದವು ಅವುಗಳ ಸಮನ್ವಯವೇ ಸಾಧನೆಯ ಪ್ರಮುಖ ಅಂಶವೆಂದು ಜ್ಞಾನಯೋಗ-ಕರ್ಮಯೋಗಗಳ ಸಂಬಂಧವನ್ನು ಅತ್ಯಂತ ಸ್ಪಷ್ಟವಾದ ಮಾತುಗಳಲ್ಲಿ ತಿಳಿಸಿದರು.
ಶ್ರೀಹರಿಯಲ್ಲಿ ಅಪಾರವಾದ ಪ್ರೀತಿ,ಭಕ್ತಿಗಳೇ ಆತನ ಅನುಗ್ರಹಸಿದ್ಧಿಗೆ ಸಾಧನಗಳೆಂದು ಒತ್ತಿಹೇಳಿದ ಪೂರ್ಣಪ್ರಜ್ಞರು ಸತ್ಯವಾದ ಜಗತ್ತನ್ನು ನಾವು ಪ್ರೀತಿಸಬೇಕು. ಜಗತ್ತು ಶ್ರೀಹರಿಯ ಲೀಲಾತಿಶಯಗಳನ್ನು ಅಭಿವ್ಯಂಜಿಸುವುದರಿಂದ ಜಗತ್ತನ್ನು ಪ್ರೀತಿಸಿದರೆ ಶ್ರೀಹರಿಯ ಲೀಲಾತಿಶಯಗಳನ್ನೂ ಪ್ರೀತಿಸಿದಂತೆ ಎಂದು ತಿಳಿಸಿದರು. ದೀನರಿಗೆ,ದು:ಖಿತರಿಗೆ ನೆರವಾಗುವುದು ಭಗವಂತನ ರಾಜ್ಯದ ಪ್ರಜೆಗಳಾದ ನಾವು ಸಲ್ಲಿಸುವ ಕಂದಾಯವೆಂದು ಸಮಾಜಸೇವೆ ಪ್ರತಿಯೊಬ್ಬನ ವಿಹಿತಕರ್ತವ್ಯವೆಂದು ಉಪದೇಶಿಸಿ ಸಮಾಜಸೇವೆಗೆ ಒತ್ತು ನೀಡಿ ಸಮಾಜಸೇವೆಯೂ ಭಗವತ್ಪೂಜೆಯೆಂದು ಸಾರಿದ ಶ್ರೀಪೂರ್ಣಬೋಧರು ತಮ್ಮ ಸಮಾಜಮುಖಿ ಚಿಂತನದಿಂದ ತತ್ತ್ವಜ್ಞಾನಿಗಳ ಪಂಕ್ತಿಯಲ್ಲಿ ಅಗ್ರಮಾನ್ಯರಾದರು. ನಾವು ಊಹಿಸಲೂ ಆಗದ ಎತ್ತರದ ನೆಲೆ ಸತ್ಯಲೋಕದ ಅಧಿಪತಿಗಳಾಗಿದ್ದ ಶ್ರೀಮುಖ್ಯಪ್ರಾಣರು ನಮ್ಮ ಮೇಲಿನ ಕರುಣೆಯ ಕಾರಣದಿಂದಾಗಿ ಭೂಮಿಗಿಳಿದು ಮಾಡಿದ ಅನುಗ್ರಹ ಅನ್ಯಾದೃಶ. ಒಂದು ದಿನ ಮಾತ್ರವಲ್ಲ ಪ್ರತಿನಿತ್ಯವೂ, ಪ್ರತಿಕ್ಷಣವೂ ನಮ್ಮ ಹೃದಯದಲ್ಲಿ ಶ್ರೀಮಧ್ವರ ಜಯಂತಿಯಾಗುತ್ತಿರಲಿ. ಮಧ್ವರೆಂಬ ಸೂರ್ಯ ಕವಿದ ಕತ್ತಲೆಯನ್ನು ಅತ್ತ ಸರಿಸಲಿ. ಶ್ರೀವೇದವ್ಯಾಸರ ಮಾರ್ಗದಲ್ಲಿ ನಮ್ಮನ್ನು ಮುನ್ನೆಡೆಸಲಿ. 🙏🙏🙏

ಪ್ರೀತೋಸ್ತು ಕೃಷ್ಣ ಪ್ರಭುಃ
ಫಣೀಂದ್ರ ಕೆ
***

Tuesday 5 October 2021

praneshachaya katti dasaru ಶ್ರೀ ಪ್ರಾಣೇಶಾಚಾರ್ಯ ಕಟ್ಟಿ


praneshachaya katti  dasaru
ankita - sriramavittala

ಶ್ರೀ ಪ್ರಾಣೇಶಾಚಾರ್ಯ ಕಟ್ಟಿ   ಶ್ರೀರಾಮ 
ಅಂಕಿತ - ಶ್ರೀ ರಾಮವಿಠಲ

 ನಮ್ಮ ಪ್ರಾತಃಸ್ಮರಣೀಯರಾದ ಹರಿದಾಸರು


ಶ್ರೀ ಪ್ರಾಣೇಶಾಚಾರ್ಯರು ಬಿಜಾಪುರ ಜಿಲ್ಲೆಯ ಬಾಗೇವಾಡಿ ತಾಲೂಕಿನ,  ಮುತ್ತಿಗೆ ಗ್ರಾಮ ವಾಸ್ತವ್ಯರಾದ ಶ್ರೀ ನರಸಿಂಹಾಚಾರ್ಯ , ಶ್ರೀಮತಿ ಲಕ್ಷ್ಮೀಬಾಯಿ ದಂಪತಿಗಳ ನಾಲ್ಕು ಜನ ಮಕ್ಕಳಲ್ಲಿ ಹಿರಿಯರು..

ಇವರು ಜನಿಸಿದ್ದು 1936 ಹುನಗುಂದ್ ದಲ್ಲಿ, ಅಲ್ಲೇ ವಿದ್ಯಾಭ್ಯಾಸವನ್ನು ಪೂರ್ತಿ ಮಾಡಿ ಮುಂದೆ ಶಿಕ್ಷಕ ವೃತ್ತಿಗೆ ಬಂದವರು.. ಇವರ ತಾತಂದಿರು ಹನುಮಂತಾಚಾರ್ಯರು- ಶ್ರೀ ಕೊಪ್ರ ಗಿರಿಯಾಚಾರ್ಯರಿಗೂ, ಗೊರೆಬಾಳ ಹನುಮಂತರಾಯರಿಗೂ ಸಮಕಾಲೀನರಾದರೂ ಸಹಾ, ಬಾಲ್ಯವೆಲ್ಲವೂ ಲಿಂಗಸೂಗೂರ್ ದಲ್ಲಿ ಕಳೆದರೂ ಸಹಾ, ಎಲ್ಲದಕ್ಕೂ ಸಮಯ ಬರಬೇಕು ಎಂಬಂತೆ ,ದಾಸ ಸಾಹಿತ್ಯದ ಪ್ರಭಾವಕ್ಕೆ ಇವರು ಒಳಗಾಗಲಿಲ್ಲ.. 

ನಂತರದಲಿ ಉದ್ಯೋಗ ರೀತ್ಯಾ ಮಾದಿನೂರು ವಿಷ್ಣುತೀರ್ಥರ ಪುಣ್ಯಕ್ಷೇತ್ರವಾದ ಮಾದಿನೂರಿಗೆ ಬದಲಾವಣೆ ಆಗಿದೆ.. ಅಂದಿನಿಂದ ಇವರ ಪ್ರಪಂಚವೇ ಬದಲಾಗಿದೆ. ಶ್ರೀ ಅರಣ್ಯಕಾಚಾರ್ಯರ (ಶ್ರೀ ವಿಷ್ಣುತೀರ್ಥರ) ಸೇವೆ, ಪೂಜಾದಿಗಳಲ್ಲಿ ನಿರತರಾಗಿಹೋದರು..

1956 ರಲ್ಲಿ ಶ್ರೀ ಪ್ರಾಣೇಶಾಚಾರ್ಯರಿಗೆ ತಾಯಿ ಮಹಾಲಕ್ಷ್ಮೀದೇವಿಯರು ಕನ್ನಸಿನಲ್ಲಿ ಕಾಣಿಸಿಕೊಂಡು ದಾಸ ಸಾಹಿತ್ಯ ದ ಸೇವೆ ಮಾಡಬೇಕೆಂತಲೂ, ಕೃತಿರಚನೆ ಮಾಡು ಅಂತಲೂ ಆಜ್ಞೆಮಾಡಿದರಂತೆ.. ಅಂದಿನಿಂದ ಶ್ರೀ ಕಟ್ಟಿಯವರು ಶ್ರೀರಾಮ ಅಂಕಿತದಿಂದ ಕೃತಿರಚನೆ, ನಾಟಕಗಳ ರಚನೆ ಮಾಡ ತೊಡಗಿದರಂತಾರೆ.. ನಂತರದಲಿ ಸಂಚಾರಕ್ಕೆ ಬಂದಂತಹಾ ಶ್ರೀಮದುತ್ತರಾದಿಮಠದ ಯತಿಗಳಾದ ಶ್ರೀ ಸತ್ಯಪ್ರಮೋದತೀರ್ಥರಿಂದ ಮತ್ತೆ ಶ್ರೀರಾಮವಿಠಲ ಎನ್ನುವ ಅಂಕಿತನಾಮವನ್ನು ಪಡೆದು ಕೀರ್ತನೆಗಳ ಜೊತೆಗೆ , ಸುಳಾದಿಗಳ ರಚನೆಯೂ ಮಾಡಿದರೆಂದು ಹೇಳುತ್ತಾರೆ.. 

ಇವರಿಗೆ ನಾಟಕ ಸಾಹಿತ್ಯ ಅಂದರೆ ಪರಮಪ್ರೀತಿ. ಅಲ್ಲದೇ 108 ಸುಳಾದಿಗಳ ರಚನೆ ಮಾಡಬೇಕೆಂದು ನಿರ್ಧಾರ ಮಾಜಿದವರಾಗಿದ್ದಾರೆ ಎಂದು ಹೇಳ್ತಾರೆ. ಆದರೆ 27 ಸುಳಾದಿಗಳ ರಚನೆ ಮಾತ್ರ ಮಾಡಿದರಂತೆ.. 

ಶ್ರೀ ಚಂದ್ರಿಕಾಚಾರ್ಯರ ಸುಳಾದಿ,  ಶ್ರೀ ವಿಜಯದಾಸಾರ್ಯರ ಸುಳಾದಿ, ಶ್ರೀ ಜಗನ್ನಾಥದಾಸಾರ್ಯರ ಸುಳಾದಿ, ತೋರವಿ ನರಸಿಂಹ ಸುಳಾದಿ, ಅಶ್ವತ್ಥಾವಿರ್ಭಾವ ಸುಳಾದಿ, ಪ್ರಲ್ಹಾದಚರಿತ್ರೆಯ ಸುಳಾದಿ, ಶ್ರೀಮದ್ರಾಘವೇಂದ್ರ ಗುರುಸಾರ್ವಭೌಮರ ಸುಳಾದಿ ಇತ್ಯಾದಿಗಳು 27 ರಲ್ಲಿ ಇದ್ದವೆ..

ಅಲ್ಲದೆ ಶ್ರೀ ದಾಸಾರ್ಯರು ಕುಪ್ಪಿಭೀಮಸೇನದೇವರ ಸುಪ್ರಭಾತ, ಶ್ರೀಮಟ್ಟೀಕಾಕೃತ್ಪಾದರ ಸುಪ್ರಭಾತ, ಕೋರವಾರೇಶನ ಭಜನಾಮಂಜರಿ, ತುಳಸಿಗೇರಿ ಹುನುಮನ ಸ್ತುತಿ, ಯಲಗೂರೇಶನ, ಹಲಗಣೇಶನ, ಕೋರವಾರೇಶನ ಉದಯರಾಗ, ಜೋಗುಳ, ಮಂಗಳ ಪದಗಳು ರಚನೆ ಮಾಡಿದ್ದಾರೆ...

ಇವರು ಪ್ರತ್ಯೇಕವಾಗಿ 9 ತಾಳಗಳಗಿಂತಲೂ ಹೆಚ್ಚು ತಾಳಗಳಿಂದ ಸುಳಾದಿ ರಚನೆಯನ್ನು ಮಾಡಿದ್ದಾರೆ ಅಂತಲೂ ಹೇಳ್ತಾರೆ..

ಇನ್ನೂ ಮಾಹಿತಿ, ಕೃತಿಗಳು  ತಿಳಿದವರು ದಯವಿಟ್ಟುತಿಳಿಸಿ 

-Smt. Padma Sirish

ನಾದನೀರಾಜನದಿಂ ದಾಸಸುರಭಿ 
***


vittalesharu dasaru ವಿಠಲೇಶರು 1982


vittalesharu ಶ್ರೀ ವಿಠಲೇಶರು

ankita - vittalesha

ಕಾಲ - 1908-1982


ಶ್ರೀಮದ್ರಾಘವೇಂದ್ರತೀರ್ಥ ಗುರುಸಾರ್ವಭೌಮರ ಪರಮ ಪರಮ ಭಕ್ತರಾದ 

ಶ್ರೀ ವಿಠಲೇಶದಾಸರು ಆಂಧ್ರಪ್ರದೇಶದ ಹೈದರಾಬಾದ್ ನವರು.. ಇವರು ವೃತ್ತಿ ರೀತ್ಯಾ ವೈದ್ಯರು. ಇವರ ಬಾಲ್ಯದ ಕುರಿತಾದ ಮಾಹಿತಿ ನನ್ನಲ್ಲಿ ಅಷ್ಟೇನೂ ಇಲ್ಲ.

 ಇವರಿಗೆ ಒಮ್ಮೆ ಭಯಂಕರವಾದ ಉದರಶೂಲೆ ಬಂದಿತು.. ಆಗ ಇದ್ದ ಸರಕಾರಿ ಉದ್ಯೋಗವನ್ನು ಬಿಟ್ಟು, ಮಂತ್ರಾಲಯಕ್ಕೆ ಬಂದು, ಶ್ರೀಮದ್ರಾಘವೇಂದ್ರ ಗುರುಸಾರ್ವಭೌಮರಿಗೆ ಸೇವೆ ಮಾಡುತ್ತಾ ಪೂರ್ತಿ ಶರಣಾಗಿರ್ತಾರೆ, ಆಗ ಕಲಿಯುಗ ಕಲ್ಪವೃಕ್ಷ, ಕಾಮಧೇನು ಎಂದೇ ಪ್ರಖ್ಯಾತರಾದ , ನಂಬಿ ಬಂದ ಭಕ್ತರ ಕಷ್ಮಲಗಳನ್ನು , ರೋಗರುಜಿನಾದಿಗಳನ್ನೂ ದೂರಮಾಡುವ ನಮ್ಮ ರಾಯರು , ದಾಸಾರ್ಯರ ಸೇವೆಗೆ ಸಂತೋಷ ಪಟ್ಟು ಅವರನ್ನು ಪೂರ್ಣವಾಗಿ ಆರೋಗ್ಯವಂತರನ್ನಾಗಿ ಮಾಡಿದರು.

ಆಗ ಈ ಪುನರ್ಜೀವನ ರಾಯರ ಭಿಕ್ಷೆ,  ಮಿಕ್ಕ ಜೀವನವೆಲ್ಲಾ ರಾಯರ ಪದಗಳಲ್ಲಿ ಅಂತ ನಿಶ್ಚಯ ಮಾಡಿಕೊಂಡ ದಾಸಾರ್ಯರು ವಿಠಲೇಶ ಅಂಕಿತದಿಂದ ರಾಯರ ಮೇಲೆ ನೇ 700 ಪದ ,ಪದ್ಯಗಳನ್ನು ರಚನೆ ಮಾಡಿ ರಾಯರ ಪದಗಳಲ್ಲಿ ಭಕ್ತಿಪೂರ್ವಕವಾಗಿ ಸಮರ್ಪಣೆ ಮಾಡಿದರು ಎಂದು ಹೇಳ್ತಾರೆ.

ಶ್ರೀ ರಾಯರ ಸಮಗ್ರ ಗ್ರಂಥಗಳನ್ನು ಭಾಮಿನಿ ಷಟ್ಪದಿ ಯಲ್ಲಿ ಪ್ರಾಕೃತ ಭಾಷೆಯಲ್ಲಿ ರಚನೆ ಮಾಡಿದರೆಂದು ಹೇಳ್ತಾರೆ.. ಶ್ರೀಪಾದಮಲ್ಲಿಕಾ, ಪರಿಮಳ ಪುಷ್ಪ, ಶ್ರೀ ರಾಘವೇಂದ್ರ ಗುರುಪದಹಾರ ಎನ್ನುವ ಮೂರು ದೀರ್ಘ ಕೃತಿಗಳ ರಚನೆ ಮಾಡಿದ್ದಾರೆ.

ನನಗೆ ತುಂಬಾ ಪ್ರಾಣಪ್ರದವಾದ ರಾಯರ ಮೂರೂ ಅವತಾರಗಳ ವರ್ಣನಾ ಕೃತಿಯಾದ  ಪರಿಮಳ ಪಾದಪಂಕಜಾ ಇವರ ರಚನೆಯೇ. 

ದಿಕ್ಕು ದೆಸೆ ನೀನೇ, ಕೋರಿ ಕರಿವೆ ಗುರು ಶ್ರೀ ರಾಘವೇಂದ್ರನೆ  ಬಾರೋ ಮಹಾ ಪ್ರಭುವೆ ಇತ್ಯಾದಿ ಪ್ರಖ್ಯಾತ ಕೃತಿಗಳು ಶ್ರೀ ದಾಸಾರ್ಯರಿಂದ ರಚಿತವಾದವೇ ಆಗಿವೆ.

ಹೀಗೊಂದು ಸಂದರ್ಭದಲ್ಲಿ ಮಂತ್ರಾಲಯಕ್ಕೆ ರಾಯರ ದರ್ಶನಾರ್ಥಿಗಳಾಗಿ ಬಂದ ದಾಸಾರ್ಯರು ರಾಯರಿಗೆ ಭಕ್ತಿಪೂರ್ವಕವಾಗಿ ನಮಸ್ಕಾರ,  ಸೇವಾದಿಗಳು ಸಲ್ಲಿಸಿದನಂತರ ಪ್ರಸಾದ ಸ್ವೀಕಾರ ಮಾಡಲು ಕುಳಿತಾಗ, ಬಡಿಸುವವರು ದಾಸರ ಮುಂದಿನವರವರೆಗೂ ಬಂದು ಪದಾರ್ಥಗಳು ಬಡಿಸದೆ ಹೊರಟು ಹೋಗಿರ್ತಾರೆ.ಆಗ ದಾಸಾರ್ಯರು ರಾಯರನ್ನು ಕುರಿತಾಗಿ  ನಿನ್ನ ಅಂಗಳದೊಳಗೆ ಹಿಡಿ ಅನ್ನ ಹಾಕೋ ಘನ್ನ  ಶ್ರೀ ಗುರು ರಾಘವೇಂದ್ರ  ಎಂಬುದಾಗಿ ಸ್ತ್ರೋತ್ರ ಮಾಡ್ತಾರೆ. ಆಗ ಆ ಕೃತಿಯನ್ನು ಕೇಳಿ ಅಲ್ಲಿಗೆ ಬಂದ ಆಗಿನ ಶ್ರೀ ರಾಯರ ಮಠದ ಯತಿಗಳಾದ ಶ್ರೀ ಸುಯಮೀಂದ್ರತೀರ್ಥರು ತುಂಬಾ ಸಂತೋಷಪಟ್ಟು ಭೋಜನಶಾಲೆಗೆ ಹೋಗಿ ಅಲ್ಲಿನವರಿಗೆ ದಾಸಾರ್ಯರಿಗೆ ತೀರ್ಥ,ಪ್ರಸಾದದ ವಸತಿ ಮಾಡಿ ಎಂದು ಆಜ್ಞೆ ಮಾಡ್ತಾರೆ. ನೋಡಿ ನಮ್ಮ ರಾಯರ ಪರಮ ಕಾರುಣ್ಯ ಅಲ್ಲವೇ?

ಹೀಗೆ ಹಂತಹಂತದಲ್ಲಿಯೂ ರಾಯರ ಪರಮಾನುಗ್ರಹಕ್ಕೆ  ಪಾತ್ರರಾದ ಶ್ರೀ ವಿಠಲೇಶ ದಾಸಾರ್ಯರ ಕುರಿತಾದ ಮಾಹಿತಿ ಇಂದಿನವರೆಗೂ, ಪುಸ್ತಕ ರೂಪದಲ್ಲಿ ಪ್ರಕಟಗೊಂಡಿದ್ದು ನಾನು ಕಂಡಿಲ್ಲ. ಇವರ ಜೀವನ ಚರಿತ್ರೆಯ ಕುರಿತಾದ ಪೂರ್ಣ ಮಾಹಿತಿಯೂ ತಿಳಿದುಬರಬೇಕಿದೆ. ದಾಸಾರ್ಯರ ಅನುಗ್ರಹ ಆದಲ್ಲಿ, ನಾನು ಯೋಗ್ಯಳಾದಲ್ಲಿ ದಾಸಾರ್ಯರ ಚರಿತ್ರೆಯನ್ನು ತಿಳಿಯುವ ಸೌಭಾಗ್ಯ ಸಿಗುವುದು ಎನ್ನುವುದರಲ್ಲಿ ಈಷಣ್ಮಾತ್ರವೂ ಸಂದೇಹವಿಲ್ಲ.

ಆದರೆ ಶ್ರೀ ದಾಸಾರ್ಯರ ಅಪ್ರತಿಮ, ಅಪುರೂಪದ, ಸಾಹಿತ್ಯ ನಾವು ಪ್ರತಿದಿನ ಹಾಡುತ್ತಿರುವುದೂ ಅವರ ಹಾಗೂ  ಅವರ ಅಂತರ್ಗತ ಶ್ರೀ ರಾಯರ, ಪರಮಾತ್ಮನ  ಸೇವೆಯೇ ಸರಿ.

ಇಷ್ಟಾದರೂ ನಮ್ಮಿಂದ ಸೇವಾಕುಸುಮವನ್ನು ಸ್ವೀಕಾರ ಮಾಡುತ್ತಿರುವ ಶ್ರೀ ವಿಠಲೇಶರಿಗೆ ಶಿರಬಾಗಿ ಕೋಟಿ ನಮಸ್ಕಾರಗಳನ್ನು ಅವರ ಅಡಿದಾವರಗಳಲ್ಲಿ ಸಲ್ಲಿಸುತ್ತಾ....

-Smt. Padma Sirish

ನಾದನೀರಾಜನದಿಂ ದಾಸಸುರಭಿ

***

santekelluru venkatarayaru ashivna shukla shashti ಸಂತಿಕೆಲ್ಲೂರು ವೆಂಕಟರಾಯ

gruhastaru / dasaru

santekelluru venkatarayaru  ಸಂತಿಕೆಲ್ಲೂರು ವೆಂಕಟರಾಯ ashivna shukla shashti


 ವೇಂಕಟೇಶ ಕೃಪಾಪಾತ್ರಂ ಮೌನ ಧ್ಯಾನ ರತಂ ಸದಾ/

ವೇಂಕಟದಾಸಾರ್ಯಂ ವಂದೇ ಕೆಲವೂರೇಶ ಸೇವಕಂ//


ಶ್ರೀಮದ್ ರಾಘವೇಂದ್ರ ರಾಘವೇಂದ್ರ ತೀರ್ಥ ಗುರುಸಾರ್ವಭೌಮರ ಪರಮಾನುಗ್ರಹ ಪಾತ್ರರೂ, ಸದಾ ಶ್ರೀಮದ್ಹರಿಕಥಾಮೃತಸಾರದ ಪಾರಾಯಣದಲ್ಲಿ ಸದಾ ನಿರತರು, ಶ್ರೀ ವರದೇಶದಾಸಾರ್ಯರ ವಂಶೋದ್ಭವರೂ, ಈ ಕಾಲದಲ್ಲಿ ಸಹ ಆಧ್ಯಾತ್ಮಿಕ ಚಿಂತನೆಯಲ್ಲಿಯೇ ಜೀವನವನ್ನು ಕಳೆದಂತಹಾ, ವಿರಕ್ತ ಶಿಖಾಮಣಿಗಳೂ ಆದ ಶ್ರೀ ಸಂತಿಕೆಲ್ಲೂರು ವೆಂಕಟರಾಯರ ಆರಾಧನೆಯ ಶುಭಸ್ಮರಣೆಗಳು..


ಶ್ರೀ ವೇಂಕಟದಾಸರ, ಶ್ರೀ ಪ್ರಾಣೇಶದಾಸಾರ್ಯರ ಅಂತರ್ಗತ ಭಾರತೀರಮಣ ಮುಖ್ಯಪ್ರಾಣಾಂತರ್ಗತ ಲಕ್ಷ್ಮೀನಾರಸಿಂಹಾಭಿನ್ನ ವೆಂಕಪ್ಪನ ಅನುಗ್ರಹ ಸದಾ ನಮಗಿರಲಿ ಎಂದು ಭಕ್ತಿಯಿಂದ ಪ್ರಾರ್ಥನೆ ಮಾಡುತ್ತಾ...


ಜೈ ವಿಜಯರಾಯ 

-smt. padma sirisha

ನಾದನೀರಾಜನದಿಂ ದಾಸಸುರಭಿ  🙏🏽

***

ಶ್ರೀವರದೇಶದಾಸರನ್ನ ಹತ್ತಿರದಿಂದ ಕಂಡವರ  ಮಾತು.


ಒಂದು ಜನುಮದಾಗ ಮುಗಿತೈತೇನ್ ದೊಡ್ಡವರ ಸುದ್ದಿ,ಒಂದು ಹೇಳುತಿನಿ ಕೇಳ್ ಯಂಕಣ್ಣ,,,

ಗುರುಗಳ ಸನ್ನಿಧಾನದಾಗ ಸ್ವಾಮಿರಾಯರು ವೈಕುಂಠ ಯಾತ್ರೆ ಮಾಡಿಬಿಟ್ರು, ಮುತ್ಯಾನಾ  ಅವರಿಗೆ ಮುಂದಿನ ಕಾರ್ಯ ಮಾಡಿದ್ದು, ಮೂರನೆ ದಿವ್ಸ ಅಸ್ಥಿ ಸಂಗ್ರಹಕ ಹೋದಾಗ್ಯೆ, ಸ್ವಾಮಿರಾಯರ ಅಸ್ಥಿಗಳ ಅವಲಾ, ಅವು  ರಾಮ ರಾಮ ಅಂತ ರಾಮಸ್ಮರಣೆ ಮಾಡಕತ್ತಿದ್ದವಂತ.

ಆ ರಾಮ ಸ್ಮರಣೆನಾ, ಮುತ್ಯಾ, ಅವರ ಜೊತಿಗೆ ಹನುಮಂತರಾವ ಕರಣಂ ಇನ ಇಬ್ಬರು ಇದ್ರಂತ. ಬಹಳ ದಿವಸ ಆದ ಮೇಲೆ ಕೌತಲ ದಿಂದ ಬಂದ ಪತ್ರದಾಗ ತಿಳಿತು ನಮಗ.


ಆಮೇಲೆ ಇದ ವಿಷ್ಯನಾ ವೇ||, ಮೂ|| , ಶ್ರೀರಾಘವೇಂದ್ರಚಾರ ಮೂರು ವರುಷ ಆದ ಮೇಲೆ‌ ಲಿಂಗಸ್ಗೂರಗೆ ಬಂದಾಗ, ಮತ್ತ ಇದ ಸ್ಮರಿಸಿದ್ರು.


ನೋಡ, ನಮಗರಿವಿಲ್ಲದಂಗ ಹೆಂಗ ಉಸಿರಾಟ ನಡದೈತಿ, ಹಂಗ ಸ್ವಾಮಿರಾಯರು ಉಸಿರಾಟದಂಗ, ಮನಸಿನ್ಯಾಗ  ರಾಮಸ್ಮರಣೆ ಮಾಡುತಿದ್ರು,


( ಹಳ್ಳೆರಾವ ವೆಂಕಟರಾವ(ಶ್ರೀ ವರದೇಂದ್ರ ವಿಠ್ಠಲ ದಾಸರು) ತಿಳಿಸಿದ್ದು- 

✍️ಕೆಲೂರ ವೆಂಕಟರಾವ)

🙏🙏🙏

ಕೃಪೆ. ಶ್ರೀ ಕೆಲ್ಲೂರ ವೆಂಕಟರಾಯರ ಮೊಮ್ಮಗನಾದ ಶ್ರೀ ಶೇಷಗಿರಿ ಅವರು.

***



swamirajacharya vaidya dasaru ಸ್ವಾಮಿರಾಜಾಚಾರ್ಯ ವೈದ್ಯ 1992

 ಶ್ರೀ ಸ್ವಾಮಿರಾಜಾಚಾರ್ಯ ವೈದ್ಯ  1882-1992

ಅಂಕಿತನಾಮ :- ಮುರಳೀವಿನೋದ ವಿಠಲ 

ದಾಸ ಸಾಹಿತ್ಯದ ಸೇವೆ ಮಾಡಿದ ನಮ್ಮ ದಾಸಾರ್ಯರು ಲೌಕಿಕ ವಿದ್ಯೆಯಲ್ಲಿಯೂ ಆದ್ಯರಾಗಿದ್ದರೆನ್ನುವುದು ಗೊತ್ತಿರುವ ವಿಷಯವೇ.. ಕರ್ತವ್ಯ ಪಾಲನಗೆ ಲೌಕಿಕ ವಿದ್ಯಾ, ವೃತ್ತಿಗಳಾದರೆ , ಮಾನಸ ಪೂಜಾ ರೂಪವಾಗಿ ದಾಸ ಸಾಹಿತ್ಯದ ಸೇವೆಯೇ ಅವರ ಉಸಿರಾಗಿತ್ತು..

ಶ್ರೀ ವಿದ್ಯಾಪ್ರಸನ್ನತೀರ್ಥರು ತಮ್ಮ ಪೂರ್ವಾಶ್ರಮದಲ್ಲಿ ಎಲ್.ಎಲ್.ಬಿ ಓದಿದವರಾಗಿದ್ದರು, ಶ್ರೀಯುತ ಗೋರೆಬಾಳ ಹನುಮಂತರಾಯರೂ ಸಹ.. ಹಾಗೆಯೆ ಉಪಾಧ್ಯಾಯ ವೃತ್ತಿಯಲ್ಲಿ ನಮ್ಮ ಉರಗಾದ್ರಿವಾಸವಿಠಲರು, ಶ್ರೀ ತಂದೆವೆಂಕಟೇಶವಿಠಲರನ್ನು ಉದಾಹರಣೆಯಾಗಿ ಹೇಳಬಹುದು... ಇವರಂತೆಯೇ ಸರ್ಕಾರಿ ಕೆಲಸಕ್ಕೆ ತಿಲೋದಕ ನೀಡಿ ವೈದ್ಯ ವೃತ್ತಿಯನ್ನಾದರಿಸಿದ ರಾಯರ ಪರಮ ಭಕ್ತರಾದ ಶ್ರೀ ವಿಠಲೇಶಾಂಕಿತಸ್ಥರಾದ ಶ್ರೀ ವಿಠೋಬಾಚಾರ್ಯರು ಆಯುರ್ವೇದ ವೈದ್ಯ ನಿಪುಣರಾಗಿದ್ದರು ... ಇಂಥವರ ಹಾದಿಯಲ್ಲಿ ನಡೆದ ಮತ್ತೊಬ್ಬ ದಾಸಾರ್ಯರು ಇಂದಿನ ನಮ್ಮ ಕಥಾನಾಯಕರಾದ ಶ್ರೀ ಸ್ವಾಮಿರಾಜಾಚಾರ್ಯ ವೈದ್ಯ ಇವರೂ ಸಹ ಆಯುರ್ವೇದ ವೈದ್ಯಕೀಯ ಕ್ಷೇತ್ರದಲ್ಲಿ ಪ್ರಖ್ಯಾತ ವೈದ್ಯರಾಗಿದ್ದರು... ಇವರ ಸ್ವಸ್ಥಳವಾದ ಕುಷ್ಟಗಿಯಲ್ಲಿ, ಬಳ್ಳಾರಿ,  ಬಾಗಲಕೋಟೆ ಮೊದಲಾದ ಸ್ಥಳಗಳಲ್ಲಿ ಆಯುರ್ವೇದ ಮಹಾವಿದ್ಯಾಲಯಗಳನ್ನು ಸ್ಥಾಪಿಸಿ , ಅವುಗಳ ಅಧ್ಯಕ್ಷರಾಗಿಯೂ, ಪ್ರಾಧ್ಯಾಪಕರಾಗಿಯೂ ಅನೇಕ ಸಂವತ್ಸರಗಳ ಕಾಲ ಸೇವೆಯನ್ನು ಮಾಡಿದವರಾಗಿ , ಆಗಿನ ನಮ್ಮ ಭಾರತದ ಪ್ರಪ್ರಧಮ ರಾಷ್ಟ್ರಪತಿಗಳಾದ ಶ್ರೀ ಡಾ. ರಾಜೇಂದ್ರಪ್ರಸಾದ್ ಅವರಿಂದ ಸನ್ಮಾನಿಸಲ್ಪಟ್ಟ ಮಹಾನ್ ವೈದ್ಯರು ನಮ್ಮ ಶ್ರೀ ದಾಸಾರ್ಯರು...

ಇನ್ನೂ ಒಂದು ವಿಶೇಷವೆಂದರೆ,  ನಾವು ಹಿಂದಿನ ಲೇಖನಗಳಲ್ಲಿ ಕುಷ್ಟಗಿಯ ಮಹಾನ್ ದಾಸಾರ್ಯರಾದ, ಸಂಸ್ಕೃತ ಪಂಡಿತರು, ವ್ಯಾಸ- ದಾಸ ಸಾಮಿತ್ಯದಲ್ಲಿ ಪ್ರಾವೀಣ್ಯರೂ ಆದ ಶ್ರೀ ರಾಘವಾರ್ಯ ಒಡೆಯರ ಚರಿತ್ರೆ ಓದಿದ್ದಿವಿ.... ಅವರ ಪೌತ್ರರು ಹಾಗೂ ದತ್ತಕ ಪುತ್ರರೇ ಶ್ರೀ ಸ್ವಾಮಿರಾಜಾಚಾರ್ಯ ವೈದ್ಯರು.. ನೋಡಿ ಹಿರಿಯರ ಆಶೀರ್ವಾದ ಇದ್ದರೆ , ಅವರ ಹಾದಿಯನ್ನು ಕಿರಿಯರು ಹಿಡಿದರೆ ಜೀವನ ಸಾಧನಾ ಪಥದಲ್ಲಿಯೆ ಸಾಗೋದು ಎನ್ನುವ ಉದಾಹರಣೆಗೆ ಶ್ರೀ ವೈದ್ಯರನ್ನ ತೆಗದುಕೊಳ್ಳಬಹುದಲ್ಲವೇ?

ಮಕ್ಕಳಿಲ್ಲದ ಕಾರಣ ಶ್ರೀ ರಾಘವಾರ್ಯ ಒಡೆಯರು , ಶ್ರೀ ಸ್ವಾಮಿರಾಜಾಚಾರ್ಯರನ್ನು ದತ್ತಕ ತಗೊಂಡು ಲೌಕಿಕ ವಿದ್ಯಾಭ್ಯಾಸದ ಜೊತೆಗೆ ಶಾಸ್ತ್ರದ ವಿಚಾರದಲ್ಲಿಯೂ ನಿಷ್ಣಾತರನ್ನಾಗಿ ಮಾಡಿದರು. ಮುಂದಿನ ವಿದ್ಯಾಭ್ಯಾಸಕ್ಕೆ ರಾಯಚೂರು ಪ್ರಾಂತಕ್ಕೆ ಕರೆದುಕೊಂಡು ಬಂದರು..

ಅಲ್ಲಿ ಆಗಿನ ಕಾಲದ ಶ್ರೀ ಮಂತ್ರಾಲಯ ಮಠಾಧೀಶರಾದ ಶ್ರೀ ಸುಶೀಲೇಂದ್ರತೀರ್ಥರ ಆಗಮನವಾಗಿತ್ತು.. ಸಂಸ್ಥಾನ ಪೂಜೆ, ಪ್ರಸಾದಗಳನಂತರ ಶ್ರೀಗಳ ಕುರಿತು ಗುರುಸ್ತೋತ್ರವನ್ನು ರಚಿಸಿ ಬಾಲಕನಾದ ಶ್ರೀ ಸ್ವಾಮಿರಾಜಾಚಾರ್ಯರಿಂದ ಹೇಳಿಸಿದರು.. ಶ್ರೀಗಳು ಬಹಳ ಸಂತೋಷಪಟ್ಟು ತಮ್ಮ ಅಮೃತಹಸ್ತವನ್ನು ಆ ಕಂದನ ತಲೆಯಮೇಲಿಟ್ಟು ಆಶೀರ್ವಾದ ಮಾಡಿದರು.. ನಂತರದಲ್ಲಿ ಶ್ರೀ ರಾಘವಾರ್ಯ ಒಡೆಯರು ಸ್ವಾಮಿರಾಜಾಚಾರ್ಯರಿಗೆ ತಾವೇ ಗುರುಗಳಾಗಿ  ಮಧ್ವ ಶಾಸ್ತ್ರದ ಎಲ್ಲ ತತ್ವಗಳನ್ನು ತಿಳಿಸಿದರು...

ರಾಘವಾರ್ಯ ಒಡೆಯರು ಕಾಲವಾದನಂತರ ಶ್ರೀ ವೈದ್ಯರು ತಮ್ಮ ಸಾಧನೆಯನ್ನು ಮುಂದುವರೆಸಿದರು.. ಲೌಕಿಕ ವೈದ್ಯಕೀಯ ವೃತ್ತಿಯ ಜೊತೆ , ಶಾಸ್ತ್ರಾಧ್ಯಯನ , ಪೂಜೆಯನ್ನು ಎಂದಿಗೂ ಬಿಟ್ಟವರಲ್ಲ. ಮದುವೆಯಾಗಿ ಒಬ್ಬ ಮಗ ಹುಟ್ಟಿ, ಆ ಮಗ ಆಕಸ್ಮಿಕವಾಗಿ  ಸತ್ತುಹೋದ ಘಟನೆ ಶ್ರೀ ಸ್ವಾಮಿರಾಜಾಚಾರ್ಯರ ಮೇಲೆ ಬಹಳ ಪ್ರಭಾವ ತೋರಿಸಿ, ತಾತನವರಾದ ರಾಘವಾರ್ಯ ಒಡೆಯರ ವೈರಾಗ್ಯ ಪೂರಿತ ಮಾತುಗಳು ಪದೇ ಪದೇ ನೆನಪಿಗೆ ಬರುತ್ತಿದ್ದು ಆಧ್ಯಾತ್ಮಿಕತೆಯ ಭಾವ ಇನ್ನೂ ಹೆಚ್ಚಿಸಿತು..  ಆ ಸಂದರ್ಭದಲ್ಲಿ ಅಲ್ಲಿನ ಪರಮ ಯೋಗಿಗಳು, ಸ್ವಾತಂತ್ರ್ಯ ಹೋರಾಟಗಾರರು ಆದ ಮುರಡಿ ಭೀಮಜ್ಜನವರ ಸಾಂಗತ್ಯದಿಂದ ಪರಮಾತ್ಮನಲ್ಲಿ ಪೂರ್ಣ ಭಕ್ತಿ ಮಾಡುತ್ತ ವ್ಯಾಸ-ದಾಸ ಸಾಹಿತ್ಯ ಸೇವೆಯಲ್ಲಿಯೇ ಜೀವನವನ್ನು ಕಳೆಯುತ್ತಿದ್ದರು..

ಮೈಸೂರಿನ ಶ್ರೇಷ್ಠ ದಾಸಾರ್ಯರು, ಹರಿದಾಸಕುಲತಿಲಕ ರೆಂದೇ ಪ್ರಸಿದ್ಧರಾದ, ಶ್ರೀ ಪರಮಪ್ರಿಯ  ತಂದೆಮುದ್ದುಮೋಹನವಿಠಲರ ಕೊನೆಯ ಶಿಷ್ಯರಾದ ಶ್ರೀ ಗುರುಗೋವಿಂದವಿಠಲರು ಹರಿದಾಸ ಸಾಹಿತ್ಯದ ಸಂಶೋಧಕರಾಗಿ ಮನೆ ಮನೆ ತಿರುಗುತ್ತ, ಎಲ್ಲ ದಾಸಾರ್ಯರ ಚರಿತ್ರೆಯನ್ನು ಸಂಗ್ರಹಿಸುತ್ತ ಕುಷ್ಟಗಿಯ ಶ್ರೀ ರಾಘವಾರ್ಯ ಒಡೆಯರ ಜೀವನ ಚರಿತ್ರೆಯನ್ನು ಸಂಗ್ರಹಿಸಲು ಬಂದಾಗ ಶ್ರೀ ಸ್ವಾಮಿರಾಜಾಚಾರ್ಯ ವೈದ್ಯರು ಅವರನ್ನು ಗೌರವಿಸಿ ತಮ್ಮ ತಾತಂದಿರಾದ ರಾಘವಾರ್ಯ ಒಡೆಯರ ಜೀವನ ಚರಿತ್ರೆಯನ್ನು ತಿಳಿಸುತ್ತಾರೆ.... ಆಗ ಶ್ರೀ ಗುರುಗೋವಿಂದವಿಠಲರು ಶ್ರೀ ವೈದ್ಯರ ಆಧ್ಯಾತ್ಮಿಕ ಭಕ್ತಿಯನ್ನು, ತಾತನವರಿಂದ ಬಂದ ಪಾರಂಪರಿಕ ಜ್ಞಾನದ ಆಸ್ತಿಯನ್ನು ಕಂಡು ತುಂಬಾ ಸಂತಸಪಟ್ಟವರಾಗಿ ವೈದ್ಯರನ್ನು ಅನುಗ್ರಹಿಸಿ ಮುರಳೀವಿನೋದ ವಿಠಲ ಎಂದು ಅಂಕಿತನಾಮ ನೀಡಿದರು...

ಅಂಕಿತೋಪದೇಶದ ಪದ ಹೀಗಿದೆ....
👇🏽👇🏽👇🏽👇🏽

ಮುರಳಿ ವಿನೋದ ವಿಠಲ ಪೊರೆಯ ಬೇಕಿವನಾ...

ದುರಿತ ದುಷ್ಕೃತವೆಲ್ಲ  ದೂರ ಸಾಗಿಸುತಾ ..

ಚಾರು ಯೌವನದಲ್ಲಿ  ಪರಿಪರಿಯ ಲೌಕಿಕದಿಮಾರಮಣ ಸ್ಮೃತಿ
ರಹಿತ  ಕರ್ಮವೆಸಗೀಜಾರಿ ಪೋಗಲು ಆಯು - ಆರಾಧ್ಯ ದೇವತೆಯಚಾರುತರ ಪೂಜಿಸಲು ಸಾರಿ ಬಂದಿಹನಾ ..

ಹಿಂದೆ ಮಾಡಿರುವ ಬಹು - ಮಂದಿ ಜನಗಳ ಸೇವೆ
ಇಂದಿರೇಶನೆ ನಿನ್ನ  ಸೇವೆ
ಎಂದೆನಿಸೀ ,ಇಂದಿರಾರಾಧ್ಯ ಪದ  ಚೆಂದದಿಂ ಪೊರೆ ಇವನ
ಮಂದರೋದ್ಧಾರಿ ಹರಿ  ಕಂದರ್ಪಪಿತನೇ....

ಧ್ಯಾನ ಯೋಗದಿ ಮನವ  ಸಾನುಕೂಲಿಸು ಇವಗೆ
ಮಾನನಿಧಿ ಮಧ್ವಪದ  ರೇಣುನಾಶ್ರಯಿಸೀಗಾನದಲಿ
ತವ ಮಹಿಮೆ  ಪೊಗಳಿಕೆಯನೆ ಇತ್ತು 
ಪ್ರಾಣಾಂತರಾತ್ಮಕನೆ  ಪಾಲಿಸೈ ಹರಿಯೆ ...

ದೇವಧನ್ವಂತರಿಯೆ  ಪಾವನಾತ್ಮಕ ನಿನ್ನಸೇವೆ ಗಯ್ಯುವವಗಿ -
ನ್ನಾವ ದುರಿತಗಳೋಭಾವದಲಿ ಮೈದೋರಿ  
ನೀವೊಲಿದು ತೋದರಂತೆದೇವ
ತವ ದಾಸ್ಯವನು  ಇತ್ತಿಹೆನು ಹರಿಯೇ ...

ನಾರಸಿಂಹಾತ್ಮಕನೆ  ಕಾರುಣ್ಯದಲಿ ಹೃದಯ-
ವಾರಿರುಹ ಮಧ್ಯದಲಿ  ತೋರಿ ತವ ರೂಪ ಪಾರುಗೈ ಭವವ ಗುರುಗೋವಿಂದ ವಿಠಲನೆಸಾರಿ ತವ ಪಾದವನು ಪ್ರಾರ್ಥಿಸುವೆ ಹರಿಯೇ....

🙏🏽🙇🏻‍♀🙏🏽

ನಂತರದಲಿ ಗುರುಗಳ ಹಾದಿಯನ್ನೇ ಹಿಡಿದು ಕುಷ್ಟಗಿ ಸುತ್ತಮುತ್ತ ಆಗಿಹೋದ ಎಲ್ಲ ಹರಿದಾಸರ ಚರಿತ್ರೆ ಸಂಗ್ರಹಮಾಡಿ ಆನಂದ ಸೇವಾ ಟ್ರಸ್ಟ್ ಎನ್ನುವ ಆಧ್ಯಾತ್ಮಿಕ ಸಂಸ್ಥೆಯನ್ನು ಸ್ಥಾಪಿಸಿ,  ದಾಸರ ಜೀವನ ಚರಿತ್ರೆಗಳ ಸಂಗ್ರಹ, ಶ್ರೀಮದಾಚಾರ್ಯರ ತತ್ವಗಳನ್ನು ತಿಳಿಸಿ ಹೇಳುವುದೇ ಧ್ಯೇಯವಾಗಿ ಬದುಕಿದರು..  ತಮ್ಮ ತಾತಂದಿರಾದ ರಾಘವಾರ್ಯ ಒಡೆಯರ ಚರಿತ್ರೆ,  ಅವರ ಪದ್ಯಗಳನ್ನು, ತುಂಬಾ ಜನ ಹರಿದಾಸರ ಜೀವನ ಚರಿತ್ರೆ, ಅವರ ಕೃತಿಗಳನ್ನು ಸಂಗ್ರಹಿಸಿ ಪ್ರಕಾಶನ ಮಾಡಿದರೆಂದು ಹೇಳ್ತಾರೆ.. 

ದಾಸ ಸಾಹಿತ್ಯದ ಸೇವೆಯಲ್ಲಿಯೇ ಇಡೀ ಜೀವನವನ್ನು ಕಳೆದ ಶ್ರೀ ಮುರಳೀವಿನೋದ ವಿಠಲರು ಸ್ವತಃ ಯಾವ ರಚನೆಯೂ ಮಾಡಲಿಲ್ಲ... ಆದರೆ ಬದುಕಿದಷ್ಟು ದಿನಗಳೂ ವೈದ್ಯ ವೃತ್ತಿಯಲ್ಲಿ ನಿರತರಾಗಿದ್ದರೂ, ದಾಸರ ಸೇವೆಯನ್ನು ಬಿಡದೆ ಮಾಡಿದ ಮಹಾನುಭಾವರಾಗಿದ್ದರು.. ಹರಿದಾಸ ದೀಕ್ಷೆಯಲ್ಲಿಯೂ ಅದರ ಅನುಷ್ಠಾನದಲ್ಲಿಯೂ ನೂರು ವರ್ಷಗಳಿಗಿಂತಧಿಕ (1882-1992) ಬಾಳಿದ ಪರಮಚೇತನರ ಕಿಂಚಿತ್ ಸ್ಮರಣೆ ನಮ್ಮ ಕಷ್ಮಲಗಳನ್ನು ನಾಶ ಮಾಡುವ ಆಯುಧವೆನ್ನುವುದರಲ್ಲಿ ಈಷಣ್ಮಾತ್ರವೂ ಸಂದೇಹವಿಲ್ಲ... 

ಶ್ರೀ ದಾಸಾರ್ಯರ ಕುರಿತಾದ ಮತ್ತಷ್ಟು ಮಾಹಿತಿ, ಅವರ ಕೃತಿಗಳು ತಿಳಿದವರಿದ್ದರೆ ದಯವಿಟ್ಟು ನಮಗೆ ಪರ್ಸನಲ್ಲೀ  ತಿಳಿಸಬೇಕೆಂದು ವಿನಂತಿ.. 

ಶ್ರೀ ಮುರಳೀವಿನೋದ ವಿಠಲರ, ಅವರ ಗುರುಗಳು ಶ್ರೀ ಗುರುಗೋವಿಂದವಿಠಲರ,  ತಾತನವರಾದ ಶ್ರೀ ರಾಘವಾರ್ಯ ಒಡೆಯರ ಅನುಗ್ರಹ ಕ್ಷಣಕ್ಷಣಕ್ಕೂ ನಮ್ಮ ಎಲ್ಲರಮೇಲಿರಲಿ ಎಂದು ಪ್ರಾರ್ಥನೆ ಮಾಡುತ್ತಾ...

ಇನ್ನೂ ಇವರ ಕುರಿತಾದ ಮಾಹಿತಿ ಇದ್ದವರು ನನಗೆ ದಯಪಾಲಿಸಿ 🙏🏽

-Smt. Padma Sirish   6360104951 ೬೩೬೦೧೦೪೯೫೧

ನಾದನೀರಾಜನದಿಂ ದಾಸಸುರಭಿ 🙏🏽
***

Friday 1 October 2021

narasappanavaru dasaru narasipura ನರಸಪ್ಪನವರು ದಾಸರು

Name: Narasappa

Place: Narasipura

Ankita: anandapurna vittala

Guru: tandemuddu mohana vittala dasaru

Period: Around 1900+

ತಂದೆ ಮುದ್ದು ಮೋಹನ ವಿಠ್ಠಲ ದಾಸರು ಪ್ರವಾಸವನ್ನು ನರಸೀಪುರಕ್ಕೆ ಸಮೀಪದಲ್ಲಿದ್ದು ತಮ್ಮ ಅನೇಕ ಶಿಷ್ಯರು ಮತ್ತು ತಮ್ಮ ಅಭಿಮಾನಿಗಳಿದ್ದ ಕೊಡಿಗೇಹಳ್ಳಿಯಿಂದ ಪ್ರಾರಂಭಿಸಿದರು. ದಾಸರಿಂದ ಈ ಮೊದಲೇ 'ಆನಂದಪೂರ್ಣವಿಠಲ' ಎಂಬ ಅಂಕಿತವನ್ನು ಪಡೆದಿದ್ದ ನರಸಪ್ಪನವರು ಆ ಊರಿನ ಗಣ್ಯರಲ್ಲೊಬ್ಬರು.

***




venkataramana dasaru ವೆಂಕಟರಮಣ ದಾಸರು

 Name: Venkataramana Dasaru

Ankita: sarvesha vittala


ಶ್ರೀ ಶೇಷದಾಸರ (prananatha vittalaru) ಅಂಕಿತ ಸ್ವೀಕಾರದಿಂದ ಪ್ರಭಾವಿತರಾಗಿ ಅವರ ಭಾವಮೈದುನರಾದ ವೆಂಕಟರಮಣದಾಸರೂ ಸಹ ಸುಬ್ಬರಾಯ ದಾಸರಲ್ಲಿ (tandemuddu mohana dasaru 1865-1939) ಪ್ರಾರ್ಥನೆ ಮಾಡಿ 'ಸರ್ವೇಶವಿಠಲ' ಎಂಬ ಅಂಕಿತ ಪಡೆದರು. ಮುಂದಿನ ತಿಂಗಳಿನಲ್ಲೇ ಜರುಗಿದ ರಥೋತ್ಸವದಲ್ಲಿ ಸುಬ್ಬರಾಯ ದಾಸರು 'ದಾಸಕೂಟ ಸಭೆ'&ಟಿbsಠಿ;ಯನ್ನು ನೂತನ ಶಿಷ್ಯರಿಂದÀಲೂ, ಭಕ್ತವೃಂದದಿಂದಲೂ ಕೂಡಿ ನೆರವೇರಿಸಿದರು.

****


sirivatsankitaru dasaru ಸಿರಿವತ್ಸಾಂಕಿತರು ದಾಸರು


Name: Sirivatsankitaru dasaru

Ankita: sirivatsankita

ದಾಸರ ಹೆಸರು : ಸಿರಿವತ್ಸಾಂಕಿತರು ದಾಸರು

ಜನ್ಮ ಸ್ಥಳ : ಕರ್ಜಗಿ (ಹಾವೇರಿ ಜಿಲ್ಲೆ) 

ಲಭ್ಯ ಕೀರ್ತನೆಗಳ ಸಂಖ್ಯೆ : 25

****


madakashira bheema dasaru 1750 plus ಮಡಕಶಿರ ಭೀಮದಾಸರು


Name: madakashira bheema dasaru

Ankita: Bheemesha Vittala

Period: 1750+


"ಶ್ರೀ ಮಡಕಶಿರ ಭೀಮದಾಸರು "

ಶ್ರೀ ಮಡಕಶಿರ ಭೀಮದಾಸರು  ಮೈಸೂರಿನಲ್ಲಿ ಅಧ್ಯಯನ ಮಾಡುತ್ತಿದ್ದಾಗ  ಪುಣೆಯ ಶ್ರೀ ತ್ರ್ಯ೦ಬಕ ಶಾಸ್ತ್ರಿಗಳು ಬಂದರು.

ಶ್ರೀ ಕೃಷ್ಣರಾಜ ಒಡೆಯರು ಶ್ರೀ ತ್ರ್ಯ೦ಬಕ ಶಾಸ್ತ್ರಿಗಳಿಗೆ ಅದ್ಭುತವಾದ ಸ್ವಾಗತ ಸತ್ಕಾರ ಮಾಡಿ ಶಾಸ್ತ್ರಿಗಳ ಮೇಲೆ ಸುವರ್ಣ ವೃಷ್ಟಿಯನ್ನೇ ಸುರಿಸಿದರು

ಶ್ರೀ ತ್ರ್ಯ೦ಬಕ ಶಾಸ್ತ್ರಿಗಳಿಗೆ ರಾಜ ದರ್ಬಾರಿನಲ್ಲಿ ಆದ ಗೌರವವನ್ನು ಕಂಡು ಈ  ಶ್ರೀ ಭೀಮಾಚಾರ್ಯರಲ್ಲಿ ಹೇಯ ಹುಟ್ಟಿತಂತೆ. 

ತಾವೂ ಅಂಥಾ ಪಾಂಡಿತ್ಯವನ್ನು ಸಂಪಾದಿಸಿ ರಾಜ ಮನ್ನಣೆಯನ್ನು ಪಡೆಯಬೇಕೆಂದು ಅವರು ಪಾದಚಾರಿಗಳಾಗಿಯೇ ಬಂಗಾಳಕ್ಕೆ ಹೋಗಿ " ನವದ್ವೀಪ " ದಲ್ಲಿ " ನವೀನ ತರ್ಕ ಶಾಸ್ತ್ರ " ವನ್ನು ಅಧ್ಯಯನ ಮಾಡಿದರು.

ಶ್ರೀ ಭೀಮಾಚಾರ್ಯರು ಪ್ರಗಾಢ ಪಂಡಿತರಾದರು. ಹಿಂದಿ - ಬಂಗಾಲಿ ಭಾಷೆಯ ಪರಿಚಯದೊಂದಿಗೆ ಉತ್ತರ ದೇಶದ ಚೈತನ್ಯ ಪಂಥೀಯ ಭಕ್ತಿಯುಕ್ತವಾದ ಸಂಕೀರ್ತನ ಪದ್ಧತಿಯು   ಶ್ರೀ ಭೀಮಾಚಾರ್ಯರ ಮೇಲೆ ವಿಲಕ್ಷಣ ಪರಿಣಾಮ ಮಾಡಿತು.

ವಿದ್ಯಾಧ್ಯಯನವೆಲ್ಲಾ ಮುಗಿಸಿ ಮಹಾ ವಿದ್ವಾಂಸರೆನಿಸಿ ಅದೇ ರಾಜ ಮಹಾರಾಜರಿತ್ತ ಶಾಲು ಶಕಲಾತಿಗಳನ್ನು ಧರಿಸಿ ತಮ್ಮ ಬಿರಿದು ಬಾವಲಿಗಳನ್ನು ಮೆರಿಸುತ್ತ ಬಳ್ಳಾರಿಗೆ ಬಂದರು.

ಶ್ರೀ ಭೀಮಾಚಾರ್ಯರ ವಿಲಕ್ಷಣ ಶಾಸ್ತ್ರ ಪಾಂಡಿತ್ಯ, ರಾಜ ಗೌರವ, ಜಯಪತ್ರ, ಪ್ರಮಾಣ ಪತ್ರಗಳನ್ನು ನೋಡಿ ಬಳ್ಳಾರಿಯ ನಾಗರೀಕರೆಲ್ಲರೂ ಹೆಮ್ಮೆಗೊಂಡು ಅವರ ಮದುವೆ ಮಾಡಿದರು.

ಶ್ರೀ ಭೀಮಾಚಾರ್ಯರ ಸಂಸಾರ ಬೆಳೆದ ಬಳಿಕ ಸಂಸಾರಕ್ಕೆ ಚಿಂತೆಯಾಗತೊಡಗಿತು. 

ಬಡತನದಲ್ಲಿದ್ದರೂ ಪಾಂಡಿತ್ಯದ ಮದದಿಂದ ಬೀಗಿ ನಡೆಯುತ್ತಿದ್ದ ಶ್ರೀ ಭೀಮಾಚಾರ್ಯರು ನಿರ್ವಾಹವಿಲ್ಲದೆ ಒಬ್ಬ ವಕೀನ ಕಡೆಗೆ ದೇಶಾವರಿಗೆ ಹೋಗಿದ್ದರು. 

ಅವನು ಮೂರು ಪೈಸೆ ದೇಶಾವರಿಯನ್ನಿತ್ತ. " ಇಷ್ಟೇ ಮಾತ್ರವೇ ನನ್ನ ಪಾಂಡಿತ್ಯಕ್ಕೆ ಬೆಲೆ " ಎಂದಂದು ಶ್ರೀ ಭೀಮಾಚಾರ್ಯರು ಅವನು ಕೊಟ್ಟ ಪುಡಿಕಾಸು ಅಲ್ಲಿಯೇ ಇಟ್ಟು ಶ್ರೀ ಸುರಪುರ ಆನಂದದಾಸರಿಂದ ದಾಸ ದೀಕ್ಷೆ ತೊಟ್ಟು ತಂಬೂರಿ ಹಿಡಿದು ಹೊರಟರು.

ಶ್ರೀ ಸುರಪುರ ಆನಂದದಾಸರಿಂದ " ಭೀಮೇಶ ವಿಠ್ಠಲ " ಎಂಬ ಅಂಕಿತವನ್ನು ಪಡೆದು ಅನೇಕ ಪದ ಪದ್ಯಗಳನ್ನು ರಚಿಸಿದರು.

ಶ್ರೀ ಭೀಮೇಶ ವಿಠ್ಠಲರ ಕವಿತೆಗಳಲ್ಲಿ ಗುರುಗಳಾದ ಶ್ರೀ ಸುರಪುರ ಆನಂದದಾಸರ ಜಾಡು, ಜಾಣ್ಮೆಗಳು ಮೈದೋರಿದೆ.

ಶ್ರೀ ಭೀಮೇಶ ವಿಠ್ಠಲರು ಹಲವು ಆಖ್ಯಾನಗಳನ್ನೂ, ಬಿಡಿ ದೇವರ ನಾಮಗಳನ್ನೂ ರಚಿಸಿದ್ದಾರೆ.

ಸಂಸ್ಕೃತದ ಉದ್ಧಾಮ ಪಂಡಿತರಾಗಿದ್ದರೂ, ತಿರುಳುಗನ್ನಡ ಶೈಲಿಯಲ್ಲಿ ಮನೋಜ್ಞ ಕೀರ್ತನೆಗಳನ್ನು ಕಟ್ಟುವುದು ಶ್ರೀ ಭೀಮೇಶ ವಿಠ್ಠಲರ ವೈಶಿಷ್ಟ್ಯವಾಗಿದೆ.

ದ್ರಾಕ್ಷಾ ಪಾಕದಲ್ಲಿ ಸಂಸ್ಕೃತದ ಪುರಾಣ, ಉಪನಿಷತ್ತುಗಳ ಸಾರವನ್ನೆಲ್ಲಾ ಕನ್ನಡೀಕರಿಸುವ ಹದ ಹವಣಗಳು ಶ್ರೀ ಭೀಮೇಶ ವಿಠ್ಠಲರಲ್ಲಿ ಅನ್ಯಾದೃಶ್ಯವಾಗಿದೆ.

ಆಂಧ್ರ ಪ್ರದೇಶದಲ್ಲೂ, ಕರ್ನಾಟಕದಲ್ಲೂ ಶ್ರೀ ಭೀಮೇಶ ವಿಠ್ಠಲರ ಹೆಸರು ಪ್ರಸಿದ್ಧವಾಗಿದೆ.

ರಾಗ : ಶಂಕರಾಭರಣ        ತಾಳ : ಆದಿ

ರಾಘವೇಂದ್ರ ಗುರುರಾಯ ಯನ್ನ । ಪಾ ।

ಪೌಘಗಳೆಣಿಸದೆ ಪಾಲಿಸೋ ।। ಪಲ್ಲವಿ ।।

ನಾಗಶಯನನಣುಗನೇ ವಂದಿಪೆ । ಅನು ।

ರಾಗದಿ ಹರಿಯನು ತೋರಿಸು ।। ಅ. ಪ ।।

ಹೀನ ವಿಷಯಗಳ ನೋಡುತ ಮನದಲಿ ।

ಧ್ಯಾನವಗೊಳಿಸದೆ ಪೋಷಿಸು ।। ಚರಣ ।।

ಬುಧರ ಚರಣಗಳ ನಮಿಸುತಲನುದಿನ ।

ಮುದವ ಬಡುವ ಪಥವ ತೋರಿಸೋ ।। ಚರಣ ।।

ನೀಚರ ಮನೆ ಮೃಷ್ಟಾನ್ನವ ತ್ಯಜಿಸುತ ।

ಯಾಚನೆ ಮಾಡಿಸುವದೇ ಲೇಸೋ ।। ಚರಣ ।।

ಕುನರ ಜೀವಿಯ ಬಿಡಿಸುತ ಭಕುತರ ಮನೆ ।

ಶುನಕನ ಮಾಡುತ ಪಾಲಿಸೋ ।।

ಬಾಲನ ಬಿಂನಪ ಭೀಮೇಶ ವಿಠ್ಠಲನ ।

ಶೀಲ ಬಲ್ಲ ಗುರು ಲಾಲಿಸೋ ।। ಚರಣ ।।


ರಾಗ : ಮೋಹನ      ತಾಳ : ಆದಿ

ಬೇಡುವೆ ನಿನ್ನ ಕೊಡು ವರವನ್ನ ।। ಪಲ್ಲವಿ ।।

ಬೇಡುವೆ ಭಕುತರ ಬೀಡೋಳು ನಿನ್ನ । ಕೊಂ ।

ಡಾಡುವೆ ರಥದೊಳಗಾಡುವೆ ವಿಭುವೆ ನಾ ।। ಚರಣ ।।

ಇಂದ್ರನ ವಿಭವ ಸುಧೀಂದ್ರ ತನುಜ । ರಾಘ ।

ವೇಂದ್ರ ಗುರುವೇ ಕಮಲೇಂದ್ರನ ಕೃಪೆಯ ನಾ ।। ಚರಣ ।।

ವರ ಭೀಮೇಶ ವಿಠ್ಠಲನರಿದವರೊಳು । ನಾ ।

ಪರ ನೆನುತಲಿ ನಿನ್ನ ಚರಣವ ಸ್ತುತಿಸಿ ನಾ ।। ಚರಣ ।।


ಶ್ರೀ ಭೀಮೇಶ ವಿಠ್ಠಲರಲ್ಲಿ ನಾದಿಷ್ಠತೆ, ಛಾ೦ದಿಷ್ಟತೆ, ರಾಗಿಷ್ಠತೆಗಳು ಭಗವನ್ನಿಷ್ಟೆಯೊಡನೆ ಬೆರೆತು ಮಿಶ್ರ ಮಾಧುರಿಯ ಅಪೂರ್ವ ಮಾದರಿಯನ್ನು ಒದಗಿಸಿದೆ.

ಸುಮಾರು 200 ಕ್ಕೂ ಅಧಿಕ ಪದ - ಪದ್ಯ - ಸುಳಾದಿಗಳನ್ನು ರಚಿಸಿ ಹರಿದಾಸ ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸಿದ್ದಾರೆ.

*****


damodara dasaru son of jagannatha dasaru 1750plus ದಾಮೋದರ ದಾಸರು

 .

Damodara Dasaru 

Poorvashrama Name: Damodaracharyaru

Son of Jagannatha Dasaru

Ankita: tandejagannatha vittala

Period: 1750+

(Jagannatha Dasa period is 1728 - 1809)

ಶ್ರೀ ದಾಮೋದರಾಚಾರ್ಯ 

ತಂದೆಜಗನ್ನಾಥವಿಠ್ಠಲಾಂಕಿತ 

****

bagepalli shesha dasaru prananatha vittala ankita bhadrapada pournima ಬಾಗೇಪಲ್ಲಿ ಶೇಷದಾಸರು


 ..

shri gurubyO namaha...


bhAdrapada shuddha pourNami is the ArAdhane of shri bAgEpalli sEsha dAsaru.


GurugalU: shri tande muddu mOhana ViTTala dAsaru


shri bAgepalli shEsha dAsa varada gOvindA gOvindA... 

shri krishNArpaNamastu... 

***

Name: bagepalli shesha dasaru ಬಾಗೇಪಲ್ಲಿ ಶೇಷದಾಸರು

Ankita: prananatha vittala ankita 

Period: From 1865 to

Kruti: around 32

ದಾಸರ ಹೆಸರು: ಬಾಗೇಪಲ್ಲಿ ಶೇಷದಾಸರು

ಜನ್ಮ ಸ್ಥಳ: ತುಮಕೂರು ಜಿಲ್ಲೆಯ ಇರಕಸಂದ್ರ

ತಂದೆ ಹೆಸರು: ನರಸಣ್ಣ

ತಾಯಿ ಹೆಸರು: ಮಹಾಲಕ್ಷ್ಮಮ್ಮ

ಕಾಲ : 1865 -

ಅಂಕಿತನಾಮ: ಪ್ರಾಣನಾಥವಿಠಲ

ಲಭ್ಯ ಕೀರ್ತನೆಗಳ ಸಂಖ್ಯೆ: 32

ಗುರುವಿನ ಹೆಸರು: ತಂದೆ ಮುದ್ದುಮೋಹನದಾಸರು

ಪೂರ್ವಾಶ್ರಮದ ಹೆಸರು: ಶೇಷಗಿರಿ

ಮಕ್ಕಳು: ಅವರ ಹೆಸರು: ಗುರುರಾಜಾಚಾರ್ಯ (ಮಗ) ಲಕ್ಷ್ಮಮ್ಮ, ಗೋದಾವರಮ್ಮ (ಹೆಣ್ಣು ಮಕ್ಕಳು)

ಪತಿ: ಪತ್ನಿಯ ಹೆಸರು: ವೆಂಕಮ್ಮ

ವೃತ್ತಿ: ಹರಿದಾಸವೃತ್ತಿ

ಕಾಲವಾದ ಸ್ಥಳ ಮತ್ತು ದಿನ: ಚಿಂತಾಮಣಿ 12-9-1924 (ಭಾದ್ರಪದ ಶುದ್ಧ ಚತುರ್ದಶಿ)

ವೃಂದಾವನ ಇರುವ ಸ್ಥಳ: ದಾಸರ ಪ್ರತೀಕವನ್ನು ಬಾಗೇಪಲ್ಲಿಯಲ್ಲಿ ಸ್ಥಾಪಿಸಲಾಗಿದೆ.

ಕೃತಿಯ ವೈಶಿಷ್ಟ್ಯ: ಇವರ ಕೃತಿಗಳಲ್ಲಿ ಸಂಪ್ರದಾಯದ ಹಾಡುಗಳು ಹೆಚ್ಚಾಗಿದೆ. ಪ್ರೌಢವೂ, ಪ್ರಮೇಯಭರಿತವೂ ಆಗಿರದೆ ಸರಳವಾಗಿದೆ.

****

ಬಾಗೇಪಲ್ಲಿಯ ಹೆಸರಾಂತ ಹರಿಕಥಾ ಕೀರ್ತನಕಾರರಾದ ಶೇಷದಾಸರು ಸಂಚಾರ ಮಾರ್ಗವಾಗಿ ದೇವರಾಯನದುರ್ಗಕ್ಕೆ ಬಂದರು. ಅವರ ಅಸಾಧಾರಣ ವ್ಯಕ್ತಿತ್ವವನ್ನು ಅರಿತಿದ್ದ ಸುಬ್ಬರಾಯದಾಸರು ಇವರೇ ತಮ್ಮ ಪ್ರಪ್ರಥಮ ಶಿಷ್ಯರಾಗಲು ಅತ್ಯಂತ ಯೋಗ್ಯರೆಂದು ನಿರ್ಣಯಿಸಿ ಶೇಷದಾಸರಿಗೆ ಅಂಕಿತೋಪದೇಶವಾಗಿಲ್ಲವೆಂಬುದನ್ನು ವಿಚಾರಿಸಿ ಉಪದೇಶ ಪಡೆಯಬೇಕಾಗಿ ಸೂಚಿಸಿದರು. ಶೇಷದಾಸರು ಹಾಗೆ ಅಂಕಿತೋಪದೇಶ ಕೊಡುವ ಯೋಗ್ಯ ಗುರುಗಳನ್ನು ತೋರಿಸಿದಲ್ಲಿ ತಾವು ಸಿದ್ಧರಿರುವುದಾಗಿ ತಿಳಿಸಿ ಸುಬ್ಬರಾಯದಾಸರ ಮಹತ್ವವನ್ನರಿತು ಅವರಿಂದಲೇ ಉಪದೇಶ ಯಾಚಿಸಿದರು.

ಪ್ಲವನಾಮ ಸಂವತ್ಸರದ ಮಾಘ ಶುದ್ಧ ದಶಮಿ ಸೋಮವಾರ ಶುಭ ಮುಹೂರ್ತದಲ್ಲಿ ರಾಮಗುಹೆಯಲ್ಲಿ ಶೇಷದಾಸರಿಗೆ ಶ್ರೀ ತಂದೆ ಮುದ್ದುಮೋಹನದಾಸರಿಂದ 'ಪ್ರಾಣನಾಥ ವಿಠಲ' ಎಂಬ ಅಂಕಿತವು ವಿಧ್ತ್ಯುಕ್ತವಾಗಿ ಕೊಡಲ್ಪಟ್ಟಿತು. ಅಂಕಿತನಾಮವನ್ನು ಇದೇ ಸಂಪುಟದ ಶ್ರೀ ಬಾಗೇಪಲ್ಲಿ ಶೇಷದಾಸರ ಪದಗಳು ಎಂಬ ಭಾಗದಲ್ಲಿ ಕಾಣಬಹುದು. ಶ್ರೀ ಶೇಷದಾಸರು ಇದಕ್ಕೆ ಮುಂಚಿತವಾಗಿಯೇ ‘ಶೇಷವಿಠಲ’ ಎಂಬ ಮುದ್ರಿಕೆಯಿಂದ ಅನೇಕ ಪದಗಳನ್ನು ರಚಿಸಿದ್ದರು.

***



manohara vittalaru buraladinni monappa 1772 ಮನೋಹರ ವಿಠಲರು ಮೋನಪ್ಪನವರು

 "

Name: Manohara Vittalaru

Earlier Name: Booraladinni Monappanavaru

Ankita: manohara vittala


" ಶ್ರೀ ಮನೋಹರವಿಠ್ಠಲಾಂಕಿತ " ಬೂರಲದಿನ್ನಿ ಶ್ರೀ ಮೋನಪ್ಪನವರು

( ಕ್ರಿ ಶ 1703 - 1772 )

ಶ್ರೀ ಜಗನ್ನಾಥದಾಸರ ಶಿಷ್ಯರಾದ ಇವರು  " ಮನೋಹರ ವಿಠಲ " ಎಂಬ ಅಂಕಿತದಿಂದ  ಕೀರ್ತನೆಗಳನ್ನೂ, ಕಿರು ಕಾವ್ಯಗಳನ್ನೂ, ಪ್ರಾಕೃತ ಸ್ತೋತ್ರಗಳನ್ನೂ ರಚಿಸಿದ್ದಾರೆ

ಇವರ ಹೆಸರು ಬೂರಲದಿನ್ನಿ ಶ್ರೀ ಮೋನಪ್ಪ ( ನಾರಪ್ಪ ). 

ಶ್ರೀ ಮನೋಹರವಿಠಲರು ಜಗನ್ನಾಥದಾಸ ವಿರಚಿತ " ಹರಿಕಥಾಮೃತಸಾರ " ಕ್ಕೆ ಸುಂದರವಾದ ಫಲಶ್ರುತಿಯನ್ನು ರಚಿಸಿದ್ದಾರೆ.

ಶ್ರೀ ಮನೋಹರವಿಠಲರು ರಚಿಸಿದ :-

" ಮನ್ಮಥ ವಿಲಾಸ " ವು ೧೯೭ ಪದ್ಯಗಳುಳ್ಳ ಷಟ್ಪದಿ ಕಾವ್ಯವಾಗಿದೆ.

" ಶ್ರೀ ಕೃಷ್ಣ  ಜಯಂತೀ " ಕಾವ್ಯದಲ್ಲಿ ವಾರ್ಧಿಕ ಷಟ್ಪದಿಯ ೧೦೦ ಪದ್ಯಗಳಿರುತ್ತವೆ.

ಶ್ರೀ ಮನೋಹರವಿಠಲರ ಕಾವ್ಯದಲ್ಲಿ ಅರ್ಥಾನುಗುಣವಾದ ಪ್ರಾಸದ ಕಿಂಕಿಣಿ ನಾದವು ಹಿತಮಿತವಾಗಿ ಕಂಡು ಬರುತ್ತವೆ. ಕಥಾ ವಸ್ತು ಹಳೇದಾದರೂ ಕವಿ ಪ್ರಜ್ಞೆಯು ಕಲ್ಪನೆಯ ವೈಚಿತ್ರ್ಯದಿಂದ ಹೊಸತನವನ್ನು ಸಾಧಿಸಿ ತೋರಿಸಿದೆ.

ಈ ಪುರಾಣ ಕಥೆಗಳ ಕಲ್ಪನಾ ಕುಶಾಲವಾದ ಕವಿ ಪ್ರತಿಭೆಯು ಸ್ವಂತಿಕೆಯ ಧೀಮಂತಿಕೆಯಿಂದ ತನ್ನ ತನವನ್ನು ಮೆರೆದಿದೆ.

ಕುಮಾರವ್ಯಾಸ, ಲಕ್ಷ್ಮೀಶರ ಶೈಲಿಯ ಬಿಣ್ಪು, ಕಾವ್ಯದ ಕೆಚ್ಚು ಎರಡೂ ಇವರ ಶಬ್ದ ಶೈಲಿಯಲ್ಲಿ ಜೀವನಾಡಿಗಳಾಗಿ ಮೂಡಿ ಮಿಂಚಿವೆ. ಇವರ ಶೈಲಿಯ ಶ್ರೀಮಂತಿಕೆಗೆ ಅವರ ಹರಿಕಥಾಮೃತಸಾರ ಫಲಶೃತಿಯಲ್ಲಿ..

ವಾದಿಗಳ ಎದೆ ಶೂಲ ಕುಮತವ ।

ಭೇದಿಸುವ ಕರ ವಾಲ ಕಾಮ ।

ಕ್ರೋಧತರಿದಾನಂದವೀವುದು ಹರಿಕಾಥಾಮೃತವು ।। 

ಪಾದ ಮಾತ್ರವ ಪಠಿಸುವಗೆ ಗಂಗಾದಿ ಸ್ನಾನ ಫಲವು ಬಹದು । ಮು ।

ನ್ನೋದಿದವನೇ ಧನ್ಯತಮ ಪುಸ್ತಕ ಸಮಗ್ರವನು ।।

ಇದು ಸುಧಾಮಣಿ । ಚಿಂತಿಸುವರಿ ।

ಗಿದು ಅಭೀಷ್ಟವನೀವ ಸುರತರು ।

ವಿದುಮನದ ಕಾಮಿತವ ಕರಕೊಂಬುದಕೆ ಸುರಧೇನು ।।

ಇದು ಚತುರವಿಧದಾ । ಪುರುಷಾ ।

ರ್ಥದ ಸುಮಾರ್ಗವ ಭಕ್ತಿಯಿಂದಲಿ ।

ಸದಮಲ ಶ್ರೀ ಹರಿಕಥಾಮೃತಸಾರ ಕೇಳ್ವರಿಗೆ ।।

ಶ್ರೀ ಮನೋಹರವಿಠಲರ ವೈಶಿಷ್ಟ್ಯ ಯೇನೆಂದರೆ....

ಶ್ರೀ ಪ್ರಾಣೇಶದಾಸರು ಸ್ವಯಂ ತಾವೇ ಶ್ರೀ ಮನೋಹರವಿಠಲ ಕೃತ " ಕೃಷ್ಣ ಜಯಂತೀ ಕಥಾ, ಮನ್ಮಥ ವಿಲಾಸ " ಕಾವ್ಯಗಳನ್ನು ತಮ್ಮ ಹಸ್ತಾಕ್ಷರಗಳಿಂದ ಬರೆದಿಟ್ಟಿದ್ದಾರೆ. ಇದರ ಮೇಲಿಂದ ಶ್ರೀ ಮನೋಹರವಿಠಲರ ಕೃತಿಗಳು ಎಷ್ಟು ಮನೋಹರವಾಗಿರುವವು ಎಂಬ ಕಲ್ಪನೆ ಬರಲು ಸಾಕು!

ಶ್ರೀ ಮನೋಹರವಿಠಲ ಕೃತ " ಅನಂತಕಥಾ " ಎಂಬ ಕಾವ್ಯವನ್ನು ಪ್ರಾತಃ ಸ್ಮರಣೀಯ ಪರಮಪೂಜ್ಯ ಶ್ರೀ ಗೋರೆಬಾಳು ಹನುಮಂತರಾಯರು ( ಶ್ರೀ ಸುಂದರವಿಠಲರು ) ಶೋಧಿಸಿ ಪ್ರಕಟಿಸಿದ್ದಾರೆ.

ಶ್ರೀ ಮನೋಹರವಿಠಲ ಕೃತ " ಗದಾಯುದ್ಧ, ಪಂಚ ಪರ್ವ ಭಾರತ, ಸಂಕೋಚ ಭಾರತ " ಮುಂತಾದ ಕಾವ್ಯಗಳು ಅಮುದ್ರಿತವಾಗಿಯೇ ಉಳಿದಿವೆ.

ಶ್ರೀ ಮನೋಹರವಿಠಲರ ಕೃತಿಗಳಲ್ಲಿ " ಅನಂತಕಥಾ " ಕಾವ್ಯವು ಅರಸು ಕೃತಿಯಾಗಿದೆ. ವಾರ್ಧಿಕ ಷಟ್ಪದಿಯ ವೃತ್ತದಲ್ಲಿ ಬರೆಯಲ್ಪಟ್ಟ ಈ ಕಾವ್ಯವು ಮಹಾಕಾವ್ಯದ ಮಹತಿಯನ್ನು ಮೆರೆದಿದೆ.

ಕುಮಾರವ್ಯಾಸ, ಲಕ್ಷ್ಮೀಶ, ಕುಮಾರವಾಲ್ಮೀಕೀ ಮುಂತಾದವರ ಕೃತಿಗಳಿಗೆ ಹೊಯ್ ಕೈಯ್ಯಾಗಿ ನಿಲ್ಲಬಲ್ಲ ಈ ಅನುಪಮ ಮಹಾ ಕಾವ್ಯದಲ್ಲಿ ವೈಷ್ಣವೀಯ ಪ್ರತಿಭೆಯ ಕಾವ್ಯಮುಖದ ದರ್ಶನವಾಗುತ್ತದೆ. ಇದರ ಕಥಾ ವಸ್ತು ಮಹಾಭಾರತಾದಿ ಪ್ರಾಚೀನ ಗ್ರಂಥಗಳಿಂದ ಎತ್ತಿಕೊಂಡಿದ್ದರೂ ಶ್ರೀ ಮನೋಹರವಿಠಲರ ಪ್ರತಿಭೆಯ ಕಲಾ ಕುಂಚದ ಕೈವಾಡದಿಂದ ನಿರೂಪಣದ ನಾವೀನ್ಯವು ಮೌಲಿಕತೆಯ ಮೆರಗನಾಂತು ರಸದ ಹೊಸತನವನ್ನು ಸೊಗಯಿಸಿದೆ. ಇದರಲ್ಲಿ ಪ್ರಾಚೀನ ಕಥಾ ವಸ್ತುವಿನ ಅನುಸರಣವಿದ್ದರೂ ಅನುಕರಣವಿಲ್ಲ.

ಕಾವ್ಯದ ಶಯ್ಯೆಯಲ್ಲಿ ನಾಟಕೀಯ ಸನ್ನಿವೇಶಗಳನ್ನು ಸೂಕ್ತವಾಗಿ ಅಳವಡಿಸಿದ್ದು ಕವಿಯ ಕಲಾವಂತಿಕೆಯನ್ನೂ, ಸಾಹಿತ್ಯ ಪ್ರಜ್ಞೆಯನ್ನೂ ಎತ್ತಿ ತೋರುತ್ತದೆ.

ಶ್ರೀ ಮನೋಹರವಿಠಲರ ಬೆಡಗಿನ ನಡಿಗೆಗೆ...

ಕಲಹಂಸ ಸಾರಸ ಚಕೋರದಿಂ ಕೀರದಿಂ ।

ಕಲಕಲ ಧ್ವನಿಯ ಕಾರಂಡದಿ೦ ತಂಡದಿಂ ।

ಕಲೆತು ಬೆರಬೆರವ ಬಕ ಕೋಕಿಯಂ ಕೇಕಿಯಿಂದುಲಿವನೀರ್ವಕ್ಕಿಯಿಂದ ।।

ಸುಳಿಸುಳಿವ ಜಲಚರ ಪ್ರಾಣಿಗಳ ಶ್ರೇಣಿಗಳ ।

ಚಲುವಿಕೆಯ ಕುಮುದ ಕುಲ್ಹಾರದಿ೦ ಸಾರದಿಂ ।

ಬೆಳೆದಬ್ಜ ಕುಸುಮಗಳ ಜಾಲದಿಂ ಕೂಲದಿಂದ್ವಯ ಸರಸಿಗಳ್ಮೆರೆದವು ।।

ಶ್ರೀ ಮನೋಹರವಿಠಲರ ಕನ್ನಡ ಹರಿವಾಯುಸ್ತುತಿ ಮತ್ತು ಶ್ರೀ ರಾಯರಸ್ತೋತ್ರವೂ ಇಷ್ಟೇ ಮನೋಹರವಾದ ಕಾವ್ಯವಾಗಿದೆ. ಶ್ರೀ ರಾಯರ ಸ್ತೋತ್ರ...  

ಸಕಲ ಸಂಪದ್ಭಕ್ತಿ ಸಂತತ ।

ಸುಕಲ ವಾದ್ದೇಹದ ಸುಪಾಟವ ।

ಭಕುತರಿಗೆ ವಿಜ್ಞಾನ ಸಂಮಾನಾದಿಗಳನಿತ್ತು ।।

ವಿಕಲಮತಿ ಕಾಯಜದಖಿಲವಾ ।

ತಕವ ತರಿಪುತ ಸಲಹೋ ಗುರುಗಳ ।

ಮಕುಟಮಣಿ ಶ್ರೀ ರಾಘವೇಂದ್ರನೇ ಲೋಕ ಸುಂದರನೇ ।।

ಶ್ರೀ ರಾಘವೇಂದ್ರ ಗುರು ಸ್ತೋತ್ರಮಂ । ಭಕ್ತಿಯಿಂ ।

ದಾರದೊಡಂ ಪಠಿಸಿ ಜಪಿಸಿದರೆ ಕುಷ್ಠಾದಿ ।

ಕ್ರೂರ ರೋಗಗಳಿವ ವತಿತ್ವರ್ಯದಿಂದ೦ಧ ಜಪಿಸಿದರೆ ದಿವ್ಯದೃಷ್ಟಿ ।।

ಸಾರುವನವಂ ಏಡ ಮೂಕಾನಾದರು೦ ಸರಿಯೆ ।

ಚಾರು ವಾಚಾಲನಾಗುವ ಸ್ತುತಿಯ ಪಠಿಸಿದವ ಪೂರ್ಣಾಯು ಸಿರಿತಾಳ್ವನೋ ।।

ಜ್ಯೋತಿ ಕನ್ನಡಿಯೊಳಗೆ ಮುಖಸ್ಪಷ್ಟ ಕಾಣಿಸುವ ।

ರೀತಿಯಿಂ ಗ್ರಹಿಸಿ ಶ್ರೀ ಮನೋಹರವಿಠ್ಠಲದಾಸ ।

ಚಾತುರ್ಯದಿಂ ಪೇಳ್ದನೆಂದರಿದು ಬರೆದೋದಿ ಕೇಳ್ವುದೆಲ್ಲಾ ಸುಜನರೂ ।।

ಒಟ್ಟಾರೆ ಶ್ರೀ ಮನೋಹರವಿಠಲರು ಬರೀ ದೇವರ ನಾಮದ ದಾಸಯ್ಯರಾಗದೆ ದಾಸೋಲ್ಲಾಸಗೈಯ್ಯುವ " ಕವಿಬ್ರಹ್ಮ " ರಾಗಿದ್ದಾರೆ.

by ಆಚಾರ್ಯ ನಾಗರಾಜು ಹಾವೇರಿ

     ಗುರು ವಿಜಯ ಪ್ರತಿಷ್ಠಾನ

*****

janardhana vittala dasaru tirumala dasarya 1865 ಜನಾರ್ದನ ವಿಠಲ ದಾಸರು

     ..

Janardhana Vittala Dasaru

Poorvashrama Name: Tirumaladasarya

Period: 1780 - 1865

Ankita: Janardhana Vittala


ಶ್ರೀ ತಿರುಮಲದಾಸಾರ್ಯ ವಿರಚಿತ 

ಜನಾರ್ದನವಿಠಲಾಂಕಿತ

ಶ್ರೀ ಗೋಪಾಲದಾಸರ ತಮ್ಮಂದಿರೂ, ಅಪರೋಕ್ಷ ಜ್ಞಾನಿಗಳೂ ಆದ ಶ್ರೀ ಗುರುಗೋಪಾಲದಾಸರ ಶಿಷ್ಯ,  ಜನಾರ್ದನ ವಿಠಲ ದಾಸರು.

ಶ್ರೀ ಗುರುಗೋಪಾಲದಾಸರು ಶ್ರೀ ತಿರುಮಲದಾಸರಿಗೆ " ಶ್ರೀ ಜನಾರ್ದನ ವಿಠಲ " ಎಂದು ಯಾಕಿಂತದೊಂದಿಗೆ ದಾಸ ದೀಕ್ಷೆ ಕೊಟ್ಟಿದ್ದಾರೆ. ಆ ಅಂಕಿತ ಪದ ಹೀಗಿದೆ...

ರಾಗ : ಕಾಂಬೋಧಿ      ತಾಳ : ಝ೦ಪೆ

ಶ್ರೀ ಜನಾರ್ದನವಿಠಲ ಶೃಂಗಾರ ಪರಿಪೂರ್ಣ ।

ಅಜಭವಾಮರೇಂದ್ರ ಸೇವ್ಯಾ ।

ನೈಜ ಭಾವದಿ ನಮಿಸಿ ಬೇಡಿದವನಿಗೆ ವರವ ।

ನಿಜವಾಗಿ ಪಾಲಿಸುವೆನೆಂದು ದಯದಲಿ ಬಂದ್ಯಾ ।। ಪಲ್ಲವಿ ।।

ವೇಣುಗೋಪಾಲದಾಸರು ಕರುಣಾವನೆ ಮಾಡಿ ।

ಪಾಣಿ ಪಿಡಿದದ್ದು ನೋಡಿ ।

ಕ್ಷೋಣಿಯೊಳುಳ್ಳಂಥ ತೀರ್ಥ ಯಾತ್ರಾದಿಗಳ ।

ಸ್ನಾನಾದಿ ಫಲವ ನೀಡಿ ।

ವಾಣಿ ಅರಸಾನಿಂದ ತೃಣ ಜೀವ ಪರಿಯಂತ ।

ಮೇಣು ತಾರತಮ್ಯ ನೋಡಿ ।

ಅನಾಜ್ಞದವನೆಂದು ಅತಿ ಮಮತೆಯಿಂದಲಿ ।

ನೀನೆ ವ್ಯಕ್ತವಾಗಿ ನಿಂತು ಉದ್ಧರಿಪುದಕೆ ।। ಚರಣ ।।

ಮಾನ ಮಮತೆಯೆಂಬ ಹೀನ ಅಹಂಕಾರವನು ।

ಹಾನಿ ಮಾಡುವೆ ನೆನುತಲಿ ।

ಜ್ಞಾನ ಭಕುತಿಯ ಕೊಟ್ಟು ಧ್ಯಾನ ಮಾರ್ಗವ ತೋರಿ ।

ಪ್ರಾಣನಾ ಪಾದದಲಿ ।

ಆನಂದ ಉಂಬದಕೆ ಅತಿ ವೇಗ ಪೊಂದಿಸಿ ।

ಶೀಲ ಸ್ವಭಾವದಲಿ ।

ಭಾನು ಕೋಟಿ ತೇಜ ಭಕುತ ಜನರಾಧಾರಿ ।

ಧೇನುವತ್ಸಲನ ಪೊರೆವ ಪರಿಯಂತೆ ದಯದಲಿ ।। ಚರಣ ।।

ಮನ್ಮಥ ನಾಮ ಸಂವತ್ಸರಾ ಮಾಘ ಶುದ್ಧ ಬಿದಿಗಿ ।

ಮಂಗಳವಾರದಲ್ಲಿ ।

ಮನ್ಮನೋಭೀಷ್ಟೆಯನು ಕೊಡಲು ಗುರುಗೋಪಾಲ ।

ದಾಸರ ಮುಖದಲಿ ।

ಸನ್ಮಾನದಲ್ಲಿ ಸಂಗೀತ ನಾಮ ಸ್ಮರಣೆ ।

ಎನ್ನು ಪೇಳುಪೇ ನೆನುತಲಿ ।

ಚಿನ್ಮಯನೇ ಪುನ್ನಾಡಿಯೊಳಗೆ ಪೊಳವೇನೆಂದು ।

ಘನ್ನ ಕರುಣಾದಿ ಬಂದ್ಯಾ ಶ್ರೀ ಜನಾರ್ದನವಿಠಲ ।। ಚರಣ ।।

ಎಂದು ಅಂಕಿಂತದೊಂದಿಗೆ ಶ್ರೀ ಗುರುಗೋಪಾಲದಾಸರು ಶ್ರೀ ತಿರುಮಲದಾಸರಿಗೆ ದಾಸ ದೀಕ್ಷೆ  ನೀಡಿದರು. ಇವರ ಪ್ರೀತಿಯ ಶಿಷ್ಯರೇ ಶ್ರೀ ಅಭಿನವ ಜನಾರ್ದನ ವಿಠಲರು.

ಶ್ರೀ ಗುರುಗೋಪಾಲದಾಸರ ಶಿಷ್ಯರಾದ ಶ್ರೀ ಜನಾರ್ದನವಿಠಲರು ಶ್ರೀ ಪ್ರೇಮದಾಸರಿಗೆ " ಹೇವಳ೦ಬಿ ನಾಮ ಸಂವತ್ಸರ ವೈಶಾಖ ಶುದ್ಧ ದ್ವಿತೀಯ ಶುಕ್ರವಾರದಂದು " ಅಭಿನವ ಜನಾರ್ದನ ವಿಠಲ " ಎಂಬ ಅಂಕಿತದೊಂದಿಗೆ ದಾಸ ದೀಕ್ಷೆ ಕೊಟ್ಟರು. ಆ ಅಂಕಿತ ಪದ ಹೀಗಿದೆ...

ರಾಗ : ಕಾಂಬೋಧಿ     ತಾಳ : ಝ೦ಪೆ

ಅಭಿನವ ಜನಾರ್ದನ ವಿಠಲ ಯೆನ್ನ ।

ಗಭೀರ ವಚನವ ಲಾಲಿಸೈಯ್ಯಾ ಗಮನಕದಿ ವೇಗ ।। ಪಲ್ಲವಿ ।।

ಒಡಿಯ ನೀನಹುದೆಂದು ಅಡಿಗಡಿಗೆ ಚರಣಗಳ ।

ಬಿಡದೆ ನಂಬಿಕೊಂಡು ಪೊಡವಿಯೊಳಗೆ ।

ನಡತಿವಂತರ ಕೂಡ ಬಿಡದೆ ಆಡುವ ನರಗ ।

ಪಡಿನಾಮ ಅಮೃತವನೇ ಪಾಲಿಸಿ ರಕ್ಷಿಪುದು ।। ಚರಣ ।।

ಅಪರಾಧವೆಣಿಸದಲೇ ಅಪವರ್ಗದಾ ಜನರ ।

ನಿಪುಣರನ ಮಾಡುವಾ ನೀತಿವಂತಾ ।

ಕಪಟ ಕುಚೇಷ್ಟಗಳ ಪ್ರಕಟ ಬಾಹ್ಯಾಂತರದಿ ।

ವಪುವಿಲಿದ್ದದು ಕಳೆದು ಉಪಜೀವ್ಯ ನೀನಾಗಿ ।। ಚರಣ ।।

ಶ್ರೀ ಗುರು ಗೋಪಾಲ ದಾಸರಾಯರ ಪಾದ ।

ಜಾಗುರೂಕದಿ೦ದ ಭಜಿಸಿ ಜಗದಿ ।

ಯೋಗನೆಸಗಲಿ ಮನಕೆ ಯೋಗೀಶ ಭಕ್ತಿಯಲಿ ।

ಭಾಗೀರಥಿ ಪಿತ ಜನಾರ್ದನವಿಠಲೈಯ್ಯಾ ।। ಚರಣ ।।

ಶ್ರೀ ಜನಾರ್ದನ ವಿಠಲರು ಅನೇಕ ಪದ - ಪದ್ಯಗಳನ್ನು ರಚಿಸಿ ಹರಿದಾಸ ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸಿದ್ದಾರೆ!

by ಆಚಾರ್ಯ ನಾಗರಾಜು ಹಾವೇರಿ, ಗುರು ವಿಜಯ ಪ್ರತಿಷ್ಠಾನ

****

vadavi bheemacharyaru ವಡವಿ ಭೀಮಾಚಾರ್ಯರು dasaru ದಾಸರು


info on tandemuddu mohana dasaru 1940 1939


Name: Vadavi Bheemacharyaru

Place: Kadaramandalagi

Ankita: maruteesha vittala

Guru: tandemuddu mohana vittala dasaru


ವಡವಿ ಭೀಮಾಚಾರ್ಯರು 

ತಂದೆ ಮುದ್ದು ಮೋಹನ ವಿಠ್ಠಲ ದಾಸರ ಶಿಷ್ಯರಾದ 'ಮಾರುತೀಶವಿಠಲ' ಅಂಕಿತರಾದ ವಡವಿ ಭೀಮಾಚಾರ್ಯರು ಮುಖ್ಯರು. ದಾಸರು ತಮ್ಮ ಕದರುಮಂಡಲಗಿಯ ಭೇಟೆಯ ನೆನಪಿಗಾಗಿ ದೇವಸ್ಥಾನದಲ್ಲಿ ಶಿಲಾ ಸ್ತಂಭ ಸ್ಥಾಪಿಸಿ ನಿರಂತರ ದೀವಿಗೆ ಬೆಳಗುವಂತೆ ಏರ್ಪಾಡು ಮಾಡಿ ಬೆಂಗಳೂರಿಗೆ ಹಿಂತಿರುಗಿದರು.

***

krishnadvaipayana teertharu 02 surapura 1833 bidi sanyasi kanva mutt phalguna pournima ಕೃಷ್ಣದ್ವೈಪಾಯನ ತೀರ್ಥರು


Sri Krishnadvaipayana Theertha (moksharthigalu) bidi sanyasi
Ashrama Period: 1833
Ashrama Guru: Sri Sri Vidyadheesha Theertha
Ashrama Shishya: Sri
Vrundavana: Surapura
Aradhana:  Palguna Shuddha Pournima

*****


Shri Krishnadvaipayana Theertharu
1833-1833
 Surapura (Mokshaartigalu) Palguna Shuddha Pournima

yeri venkateshacharyaru bidi sanyasi jyeshta shukla ashtami chintamani ಏರಿ ವೆಂಕಟೇಶಾಚಾರ್ಯರು

to check bidi sanyasi or gruhastaru

and aradhana date

Name: yeri venkateshacharyaru

Ankita: yerivenkata


ಶ್ರೀ ಗಲಗಲಿ ಅವ್ವನವರ ಪುತ್ರನ ಸುತರೂ, ಮಹಾನ್ ಪಂಡಿತರೂ , ಪರ್ಜನ್ಯ ಜಪದಿಂದ ಮಳೆಯನ್ನು ತರಿಸಿ, ಜನರ ಬಾಧೆಯನ್ನು ಕಳೆದ ಪವಾಡಪುರುಷರು, ಪರಮ ವೈರಾಗ್ಯ ಸಂಪನ್ನರು, ಸಂಚಾರ ಕ್ರಮದಲ್ಲಿ ಚಿಂತಾಮಣಿ ಹತ್ತಿರದ ಕೋಲಾರ್ ಪ್ರಾಂತದಲಿ ನೆಲಸಿ ಸಾಧನೆ ಮಾಡಿ ಅಲ್ಲಿಯೇ ಪರಂಧಾಮಕ್ಕೆ ತೆರಳಿ ಇಂದಿಗೂ ಕಟ್ಟಿಯಲ್ಲಿ ನಿಂತು ಆರ್ತರ ಬಾಧೆಗಳನ್ನು ಶಮನ ಮಾಡುತ್ತಿರುವವರೂ, ಏರಿ ವೆಂಕಟ ಎನ್ನುವ ಇವರ ಹೆಸರನ್ನೇ  ಅಂಕಿತನಾಮವಾಗಿಟ್ಟುಕೊಂಡು ರಚಿಸಿದ ಶ್ರೀನಿವಾಸ ಕಲ್ಯಾಣದ ಕರ್ತೃಗಳಾದ ಶೇಷಾಚಾರ್ಯರ ಅಗ್ರಜರಾದ ಶ್ರೀ ಏರಿ ವೆಂಕಟೇಶಾಚಾರ್ಯರ ಆರಾಧನೆಯೂ ......

ಶ್ರೀ ಮಹಾನ್ ಚೇತನರು ನಮ್ಮ ಎಲ್ಲರಮೇಲೆ ಅನುಗ್ರಹ ಸದಾಕಾಲದಲ್ಲಿ ತೋರಲೆಂದು ಪ್ರಾರ್ಥನೆ ಮಾಡುತ್ತಾ .....

-Smt. Padma Sirish

ನಾದನೀರಾಜನದಿಂ ದಾಸಸುರಭಿ 
***

yeri sheshacharyaru bidi sanyasi chintamani jyeshta shukla ashtami ಏರಿ ಶೇಶಾಚಾರ್ಯರು

 

to check bidi sanyasi or grahastaru


jEshTa shuddha ashTami is the ArAdhane of shri yeri shEshAchAryaru.


shri aeri shEshAchAryaru...


He was the brother and shishyaru of shri Aeri Venkateshacharyaru, whose kaTTE is in chnitAmaNi. Both were aparOxsha jnAnIs and display miracles even to this date. 


shri shEshAchArya varada gOvindA gOvindA...


shri krishNArpaNamastu..


****

ಜ್ಯೇಷ್ಠ ಶುದ್ಧ ಅಷ್ಟಮಿ

ಶ್ರೀನಿವಾಸನ ಪರಮಾರಾಧಕರು,  ಶ್ರೀನಿವಾಸನನ್ನು ಒಲಿಸಿಕೊಂಡಂತಹವರು,  ಶ್ರೀನಿವಾಸನ ಪ್ರತಿಮೆಯನ್ನು,  ತಿರುಮಲೆಯಲ್ಲಿ ಶ್ರೀನಿವಾಸನ ದರ್ಶನದ, ಪ್ರದಕ್ಷಿಣೆಯ ಸಮಯದಲ್ಲಿ ದದ್ದ್ಯಾನ್ನದಲ್ಲಿ ಪಡೆದವರು, ವೃತ್ತನಾಮದಲ್ಲಿ ಶ್ರೀನಿವಾಸ ಕಲ್ಯಾಣವನ್ನು ರಚಿಸಿ ನಮಗೆ ಅನುಗ್ರಹ ಮಾಡಿದವರು, ತಮ್ಮ ಅಣ್ಣನವರಾದ ಮಹಾನ್ ಮಹಿಮರಾದ ಶ್ರೀ ಏರಿ ವೆಂಕಟೇಶಾಚಾರ್ಯರ ಹೆಸರಿನ ಏರಿ ವೆಂಕಟ ಎನ್ನುವ ಅಂಕಿತವನ್ನಿಟ್ಟು ಕೃತಿ ರಚನೆ ಮಾಡಿದ ಭ್ರಾತೃ ಭಕ್ತಿ ಪರಾಯಣರೂ ಆದ ಶ್ರೀ ಏರಿ ಶೇಷಾಚಾರ್ಯರ ಆರಾಧನಾ ಮಹೋತ್ಸವ, ಚಿಂತಾಮಣಿ ಶ್ರೀ ಏರಿ ವೆಂಕಟೇಶಾಚಾರ್ಯರ  ಸನ್ನಿಧಾನದಲ್ಲಿ... 

ಶ್ರೀ ದಾಸಾರ್ಯರು ಸದಾ ನಮ್ಮ ಮೇಲೆ ಅನುಗ್ರಹ ತೋರಲಿ ಎಂದು ಅವರಲ್ಲಿ ಭಕ್ತಿಯಿಂದ ಪ್ರಾರ್ಥನೆ ಮಾಡುತ್ತಾ...

-Smt. Padma Sirish

ನಾದನೀರಾಜನದಿಂ ದಾಸಸುರಭಿ 🙏🏽

***

karjagi rajagopala dasaru ಕರ್ಜಗಿ ರಾಜಗೋಪಾಲ ದಾಸರು


Name: Karjagi Rajagopala Dasaru
Ankita: Rajagopaladasa

" ಶ್ರೀ ಕರ್ಜಗಿ ರಾಜಗೋಪಾಲ ದಾಸರು "
ಶ್ರೀ ರಾಜಗೋಪಾಲದಾಸರು ಮೂಲತಃ ಕಡಕೋಳದವರು.
ಆದರೆ ಶ್ರೀ ರಾಜಗೋಪಾಲಚಾರ್ಯರು ನಿರಂತರವಾಗಿ ಕರ್ಜಗಿಯಲ್ಲಿಯೇ ವಾಸವಾಗಿದ್ದರಿಂದಲೇ ಇವರಿಗೆ ಕರ್ಜಗಿ ಎಂಬ ಅಡ್ಡ ಹೆಸರಾಗಿ ಸೇರಿಕೊಂಡಿತು!
ಶ್ರೀ ರಾಜಗೋಪಾಲದಾಸರು ಸ್ವಯಂ ಸ್ಫೂರ್ತಿಯಿಂದ " ರಾಜಗೋಪಾಲದಾಸ " ಅಂಕಿತದಲ್ಲಿ ಅನೇಕ ಪದ - ಪದ್ಯಗಳನ್ನೂ; ಪ್ರಬಂಧಗಳನ್ನೂ ರಚಿಸಿದ್ದಾರೆ. ಅದರಲ್ಲಿ " ಕೀಚಕವಧೆ " ಎಂಬ ಪ್ರಹಸನವು ಅತ್ಯಾಕರ್ಷಕ ಕೃತಿಯಾಗಿದೆ.
ಶ್ರೀ ರಾಜಗೋಪಾಲದಾಸರು ಕರ್ಜಗಿ ವಾಸಿಗಳಾದ ಶ್ರೀ ಗಲಗಲಿ ಗೋಪಾಲಕೃಷ್ಣಾಚಾರ್ಯರ ಶಿಷ್ಯರಾಗಿ ಅವರಲ್ಲಿ ಶಾಸ್ತ್ರಾಧ್ಯನ ಮಾಡಿದವರು.
ಶ್ರೀ ರಾಜಗೋಪಾಲದಾಸರು ತಮ್ಮಿಂದ ರಚಿತವಾದ " ಕೀಚಕ ವಧೆ " ಮಂಗಳಾಚರಣೆಯಲ್ಲಿ ಗಲಗಲಿಯ ಶ್ರೀ ಮುದ್ಗಲಾಚಾರ್ಯರ ಮನೆಯತನದ ಪಂಡಿತರನ್ನು ವರ್ಣಿಸಿ ವಂದಿಸಿದ್ದಾರೆ.
ಧಾತ್ರಿಯೊಳು ವಿಚಿತ್ರ ಗಾಲವ ।
ಕ್ಷೇತ್ರದಲ್ಲಿಯ ಮುದ್ಗಲಾರ್ಯರ ।
ಪುತ್ರ ಪೌತ್ರ ಪ್ರಪೌತ್ರ ಮೊದಲು । ಕ ।।
ಳತ್ರ ಮಿತ್ರರು ಛಾತ್ರ ವರ್ಗಕೆ ।
ಪಾತ್ರ ಪದ ಶತ ವತ್ರಕೆ । ವರ ।
ಗಾತ್ರದಿಂದಭಿನಮಿಸಿ ವರಗಳ ।।
ಶ್ರೀ ರಾಜಗೋಪಾಲದಾಸರ ಶೈಲಿಯು ಹಲವೆಡೆ ಪ್ರಸನ್ನ ಗಂಭೀರವಾಗಿಯೂ; ಕೆಲವು ಕಡೆ ಕೋಮಲವಾಗಿಯೂ; ಅಲ್ಲಲ್ಲಿ ಜಾನಪದ ಜಾಡಿನ ಗತ್ತು - ಸುತ್ತುಗಳಲ್ಲಿ ಹರಿದು ಮೊರೆಯುತ್ತದೆ.
ಕೀಚಕನನ್ನು ಕೊಲ್ಲುವಾಗ ಶ್ರೀ ಭೀಮಸೇನದೇವರು ಕಾಮಿನೀ ವೇಷ ತೊಟ್ಟಿದ್ದನ್ನು ಅತ್ಯಂತ ಮನೋಜ್ಞ ಮಾರ್ಮಿಕ ಶೈಲಿಯಲ್ಲಿ ಶ್ರೀ ರಾಜಗೋಪಾಲದಾಸರು ಈ ಕೆಳಗಿನಂತೆ ಬಣ್ಣಿಸಿದ್ದಾರೆ!!
ಭೀಮನು ಸರ್ವ ಜನ ಮೋಹಿಸುವಂಥ ।
ಕಾಮಿನಿಯ ರೂಪವ ತೊಟ್ಟನು ।। ಪಲ್ಲವಿ ।।
ಸೋಮ ಸಮಾನನ ತಾಮರ ಸಾಂಬಕ ।
ಹೇಮಾಂಬರ ಕಂಠಿ ಮಣಿ । ಗಣಸು ।
ತ್ರಾಮ ಕಾಮಿನಿಯ ವ್ಯಾಮೋಹಿಪ । ಅಭಿ ।
ರಾಮ ರೂಪ ನಿಸ್ಸೀಮ ಗುಣಾಢ್ಯ ।। ಅ ಪ ।।
ಈ ಹಾಡನ್ನು ನಮ್ಮ ನಿಮ್ಮೆಲ್ಲರಿಗೂ ಚಿರ ಪರಿಚಿತರಾದ, ದಾಸ ಸಾಹಿತ್ಯ ಗಾನ ಗಂಧರ್ವ ಪಂಡಿತ ಶ್ರೀ ಅನಂತ ಕುಲಕರ್ಣಿ ಅವರ ಮಧುರ ಕಂಠದಲ್ಲಿ ಹೊರ ಹೊಮ್ಮಿದೆ!!
ಇಂಥಾ ಅನೇಕ ಸುಮಧುರ - ಸುಂದರ ಸಾಹಿತ್ಯವನ್ನು ಶ್ರೀ ರಾಜಗೋಪಾಲದಾಸರು ರಚಿಸಿದ ಕೃತಿಗಳ ಕುರಿತು ಹೆಚ್ಚಿನ ಸಂಶೋಧನೆ ಅಗತ್ಯವಿದೆ ಎಂದು ಹೇಳುತ್ತಾ...
by ಆಚಾರ್ಯ ನಾಗರಾಜು ಹಾವೇರಿ
ಗುರು ವಿಜಯ ಪ್ರತಿಷ್ಠಾನ
****

prayagavva dasaru bhagamma 1750 plus ಪ್ರಯಾಗವ್ವ ದಾಸರು

 

Name: prayagavva

Earlier Name: Bhagamma

Ankita: prayagavva


ವಿದುಷಿ.ಪ್ರಯಾಗವ್ವನವರು ಗಲಗಲಿ ಅವ್ವನವರ ಶಿಷ್ಯಳು. 

" ಶ್ರೀ ಹರಿ ಭಕ್ತೆ ಪ್ರಯಾಗವ್ವ "

ಪರಮ ಭಾಗವದ್ಭಕ್ತೆಯೂ, ಪ್ರಮೇಯ ವಿಜ್ಞಳೂ ಆದ ಪ್ರಯಾಗಬಾಯಿಯ ಹೆಸರನ್ನು ಯಾರೂ ಕೇಳಿರಲಿಕ್ಕಿಲ್ಲ. 

ಆದರೆ ನಾವು ಇಲ್ಲಿ ಉಲ್ಲೇಖಿಸಿದ ಈ ಮಾಧ್ವ ಮಹಿಳೆಯು ಕಥಾ ಪ್ರಧಾನವಾದ ಪುರಾಣ ವಸ್ತುಗಳನ್ನು ಆಯ್ದುಕೊಂಡು ಅದರಲ್ಲಿ ಹರಿ ಭಕ್ತಿ ರಸವನ್ನು ತುಂಬಿ ಕಾವ್ಯ ಕಲಶಗಳನ್ನಾಗಿ ಮೆರೆಸಿದ್ದಾಳೆ. 

ಆದರೆ ಪ್ರಯಾಗವ್ವ ಬರೀ ಕವಿಯಲ್ಲ ಮಹಾ ತತ್ತ್ವಜ್ಞಾನಿಯಾದ ವೇದಾಂತ ವಿದುಷಿ.ಪ್ರಯಾಗವ್ವನವರು ಗಲಗಲಿ ಅವ್ವನವರ ಶಿಷ್ಯಳು. 

ಮಾಧ್ವ ತತ್ತ್ವಜ್ಞಾನದ ಬೋಧನ ಪ್ರಧಾನವಾದ " ಶೃಂಗಾರ ತಾರತಮ್ಯ " ಮುಂತಾದ ಅವ್ವನವರ ಸತ್ಕೃತಿಗಳಿಂದ ಸ್ಫೂರ್ತಿ ಪಡೆದು ಪ್ರಯಾಗವ್ವನವರು ಕೃತಿ ರಚನೆಗೆ ಕೈ ಹಾಕಿದರು.

ಅವ್ವನವರ ಹಿಂದೆ ಇದ್ದು ಅವರು ಆಗಾಗ ಹೇಳುವ ಹಾಡುವ ಪದಗಳನ್ನು ಬರೆದುಕೊಂಡು ತಾನೂ ಹಾಡುವುದೇ ಅವಳ ಮುಖ್ಯ ಕೆಲಸವಾಗಿದ್ದಿತು.ಗಲಗಲಿ ಅವ್ವನವರು ಕಾಶೀ ಯಾತ್ರೆಗೆ ಹೊರಟಾಗ ಅವರ ಜೊತೆ ಹೊರಟ ನೂರಾರು ಜನ ಶಿಷ್ಯರಲ್ಲಿ ಪ್ರಯಾಗವ್ವನೂ ಇದ್ದಳು. 

ಕಾಶಿಯಲ್ಲಿದ್ದಾಗ ಪ್ರಯಾಗವ್ವನಿಗೆ ವಾಂತಿ ಶುರುವಾಗಿ ಕಲರಾ ಬಂದಿತು. 

ಆಗ ಪ್ರಯಾಗವ್ವ ಗಲಗಲಿ ಅವ್ವನವರ ಪಾದದ ಮೇಲೆ ತಲೆಯಿಟ್ಟು ತಮ್ಮನ್ನು ಈ ಮೃತ್ಯು ಸಂಕಟದಿಂದ ಪಾರು ಮಾಡಬೇಕೆಂದು ಬೇಡಿಕೊಂಡಳು.

ಆಗ ಗಲಗಲಿ ಅವ್ವನವರು ಪ್ರಯಾಗವ್ವಗೆ ಶ್ರೀಮದ್ಭಗವತದ ಮೂರನೇ ಸ್ಕಂದವನ್ನು ಕನ್ನಡ ಪದ್ಯದಲ್ಲಿ ಭಾಷಾಂತರಿಸಲಿಕ್ಕೆ ಹೇಳಿದರು.

ಅದರಂತೆ ಪ್ರಯಾಗವ್ವನು ಸಂಕಲ್ಪ ಮಾಡಿದಾಗ ಅವಳ ಕಲರಾ ರೋಗವು ಕಡಿಮೆಯಾಯಿತು.

ಆದರೆ ಶ್ರೀಮದ್ಭಾಗವತದಂಥ ಕಠಿಣ ಪುರಾಣ, ಅದರಲ್ಲಿಯೂ ಪ್ರಮೇಯ ಜಾಲ ಜಟಿಲವಾದ ತೃತೀಯ ಸ್ಕಂದವನ್ನು ಕನ್ನಡಿಸುವುದು ಹೇಗೆ? 

ಪ್ರಯಾಗವ್ವನು ಹಾಗೆ ಅಪ್ಪಣೆ ಮಾಡಿದ ಗಲಗಲಿ ಅವ್ವನವರಿಗೆ ಶರಣು ಹೋದಳು.

ಆಗ ಅವ್ವನವರು ಪ್ರಯಾಗವ್ವಳಿಗೆ ತೃತೀಯ ಸ್ಕಂದದ ತತ್ತ್ವಗಳ ತಿರುಳನ್ನೂ, ಪ್ರಮೇಯ ಭಾಗಗಳ ವಿವರಗಳನ್ನೂ ಸರಳವಾಗಿ ತಿಳಿಸಿಕೊಟ್ಟು ಇದನ್ನು ಕನ್ನಡಿಸು ಎಂದು ಹೇಳಿದರು.

" ವಿಜಯಧ್ವಜೀಯ ಟೀಕೆ " ಗನುಗುಣವಾಗಿ ಸಮಗ್ರ ತೃತೀಯ ಸ್ಕಂದವನ್ನು ಸರಸ ಸುಂದರವಾಗಿ ಕನ್ನಡ ಪದ್ಯ ಬದ್ಧವಾಗಿ ಮಾಡಿದ ಪ್ರಯಾಗವ್ವನ ಜಾಣ್ಮೆಗೈಮೆಗಳು ಅಸಾಧಾರವವಾಗಿದೆ.

ಈ ಗ್ರಂಥದ ಪ್ರಾರಂಭದಲ್ಲಿ ಪ್ರಯಾಗವ್ವನು ತನ್ನ ಗುರುಗಳಾದ ಗಲಗಲಿ ಮನೆತನದ ಕುಲದೇವರಾದ ಪುಂಡಲೀಕ ವರದ ಶ್ರೀ ಪಾಂಡುರಂಗನನ್ನೇ ಭಕ್ತಿಯಿಂದ ವಂದಿಸಿ ಹರಿ ಗುರು ಭಕ್ತಿಯನ್ನು ಮೆರೆದಿರುವಳು.

ಪುಂಡರೀಕ ಪ್ರಭು 

ಪಾಂಡುರಂಗನ ಪಾದ ।

ಕಂಡು ವಂದನೆಯ 

ಮಾಡುವೆನು ।

ದಂಡಿಸಿ ದೇಹವ 

ತಾಂಡವ ಕೃಷ್ಣನ ।

ಕೊಂಡಾಡಿ ಪದವ 

ಪೇಳುವೆನು ।।

ಶ್ರೀ ಗಲಗಲಿ ಆಚಾರ್ಯರಂಥ ಅಪರೋಕ್ಷ ಜ್ಞಾನಿಗಳ ಪತ್ನಿಯ ಸಹವಾಸ ತನಗೆ ದೊರೆತಿದ್ದು ತನ್ನ ಏಸು ಜನ್ಮದ ಭಾಗ್ಯವೋ ಏನೋ ಎಂದು ಅವ್ವನವರಿಗೆ ಈ ಗ್ರಂಥ ಪ್ರಾರಂಭದಲ್ಲಿ ಗ್ರಂಥ ಕರ್ತಳು ಕೃತಜ್ಞತೆಯನ್ನು ಸಲ್ಲಿಸಿದ್ದಾಳೆ.

ಏಸು ಜನ್ಮದ ಪುಣ್ಯ

ವಾಸವಾಯಿತೋ ।

ವಿಷ್ಣುದಾಸರ ದಾಸಿ 

ದಾಸಿ ನಾನಾದೆ ।

ಈ ಸಂಸಾರ ಕ್ಲೇಶವು 

ಕಳೆದು । ಸು ।

ವಾಸನೆಯ ಕೊಡು 

ಗುರುರಾಜ ।।

ಇಂಥ ಶ್ರೀ ವಿಷ್ಣುದಾಸರ ಮನೆಯ ದಾಸಿಯಾಗಿದ್ದೊಂದು ತನ್ನ ದೊಡ್ಡ ಭಾಗ್ಯಯೆಂದು ಪ್ರಯಾಗವ್ವ ಅಭಿಮಾನದಿಂದ ಹೇಳಿಕೊಂಡಿದ್ದಾಳೆ.

ಶ್ರೀಮದ್ಭಾಗವತದ 12 ಸ್ಕಂದಗಳಲ್ಲಿ ಹೆಚ್ಚಾಗಿ ಮೂರನೆಯ ಸ್ಕಂದದಲ್ಲಿ ಬರೀ ವೇದಾಂತ ವಿಷಯವೇ ತುಂಬಿದೆ.

ಕಥಾ ಪ್ರಚುರವಾದ 8-9-10ನೇ ಸ್ಕಂದಗಳನ್ನು ಬಿಟ್ಟು...

ಸೃಷ್ಟಿ ಪ್ರಕ್ರಿಯೆ

ಸಾಂಖ್ಯ ತತ್ತ್ವ

ಧರ್ಮ ಸೂಕ್ಷ್ಮ

ಕರ್ಮ ಮೀಮಾಂಸಾ

ಮುಂತಾದ ಕ್ಲಿಷ್ಟ ವಿಷಯಗಳನ್ನು ವಿವರಿಸುವ ತೃತೀಯ ಸ್ಕಂದವನ್ನೇ ಆಯ್ದು ಅತ್ಯಂತ ಸಮರ್ಥ ರೀತಿಯಿಂದ ಕನ್ನಡಿಸಿ ಅದರಲ್ಲಿ 

ಭಾಗವತ ತಾತ್ಪರ್ಯ

ವಿಜಯಧ್ವಜೀಯ

ಯಾದುಪತ್ಯ

ಮುಂತಾದ ಟೀಕಾ ಟಿಪ್ಪಣಿಗಳಿಗನುಗುಣವಾಗಿಯೇ ತತ್ತ್ವಾರ್ಥಗಳನ್ನು ನಿರೂಪಿಸಿದ ಪ್ರಯಾಗವ್ವನು ವೇದಾಂತ ವಾಗ್ಮಯಕ್ಕೆ ಅದರಲ್ಲಿಯೂ ಮಾಧ್ವ ಸಾಹಿತ್ಯಕ್ಕೆ ಸಲ್ಲಿಸಿದ ಸೇವೆಯು ಅಪೂರ್ವವೂ, ಅಭಿನಂದನೀಯವೂ ಆಗಿದೆ.

ಗಹನಗೂಢವಾದ ತತ್ತ್ವಗಳಿಂದ ತುಂಬಿದ ಈ ತೃತೀಯ ಸ್ಕಂದದ ಕನ್ನಡೀಕರಣ ಶಕ್ತಿಯನ್ನು ತನಗೆ ಕೊಡುಯೆಂದು ಮೊದಲು ಸಾಂಪ್ರದಾಯಿಕವಾಗಿ ಶ್ರೀ ಗಣಪತಿಯನ್ನು ಸ್ತುತಿಸಿ, ಕೊನೆಗೆ ನಿಜವಾದ ವಿಘ್ನಹರ್ತಾಸ್ವಾಮಿ ಶ್ರೀ ಹರಿಯೇ ಎಂದು ಶ್ರೀ ಮಹಾ ವಿಷ್ಣುವಿಗೆ ಶರಣು ಹೋಗಿ ತನ್ನ ಕಾಮಿತವಾದ ಗ್ರಂಥ ಪೂರ್ತಿಯು ಶ್ರೀ ರಾಮನ ದಯೆಯಿಂದಲೇ ಸಾಧ್ಯ ಎಂಬುದನ್ನು ತಾರತಮ್ಯ ಕ್ರಮ ತಿಳಿದ ಪ್ರಯಾಗವ್ವ ಪ್ರಾರಂಭದಲ್ಲಿಯೇ ತಿಳಿದಿದ್ದಾಳೆ.

ಇದರಿಂದಲೇ ಪ್ರಯಾಗವ್ವನ ಅಚ್ಚ ವೈಷ್ಣವ ಸಿದ್ಧಾಂತದ ನಿಚ್ಛಳ ಜ್ಞಾನ ಎಷ್ಟು ಪ್ರಖರವಾಗಿದ್ದಿತೆಂಬುದು ಸ್ಪಷ್ಟವಾಗುತ್ತದೆ.ತೃತೀಯ ಸ್ಕಂದದಲಿ.... 

ರತಿಯಿಟ್ಟು ಮನದಲ್ಲೇ ।

ಯತಿ ಮುನಿರಾಯ-

ನಿಗೊಂದಿಸುವೆ ।

ಭಕ್ತಿಯಿಂದಲೇ ಮತಿ 

ಬೇಡಿ ಪಾರ್ವತಿ ।

ಸುತಗೆ ವಂದನೆಯ 

ಮಾಡುವೆನು ।।

ಸ್ವಾಮಿ ಗುರುಗಳ ಪಾದ ।

ನೇಮದಿ ಭಜಿಸುವೆ ।

ಸೋಮ ಮುಖಿಯ ಪತಿಯಾದ ।

ರಾಮ ನಾಮವ ।

ಪ್ರೇಮದಿಂದಲಿ ಪಾಡಿ ।

ಕಾಮಿತ ಫಲವ ಐದುವೆನು ।।

ದುರ್ಯೋಧನನ ದುಷ್ಟ ಮಾತುಗಳಿಂದ ನೊಂದ ವಿದುರನು ತೀರ್ಥ ಯಾತ್ರೆಗೆ ಹೊರಟು ದಾರಿಯಲ್ಲಿ ಉದ್ಧವನ ಆದೇಶದ ಮೇರೆಗೆ ಶ್ರೀ ಮೈತ್ರೇಯರ ಬಳಿಗೆ ಬಂದು " ಸೃಷ್ಟಿ ಸ್ಥಿತಿ ಲಯದಷ್ಟು ವಿಸ್ತಾರಗಟ್ಯಾಗಿ ವಿದುರ ಕೇಳಿದನು ".

ಆಗ ಸಾಕ್ಷಾತ್ಭಗವಂತನ ವದನಾರವಿಂದದಿಂದಲೇ ಕೇಳಿ ತತ್ತ್ವಜ್ಞಾನದ ತಿರುಳನ್ನೆಲ್ಲಾ ತಿಳಿಯಾಗಿ ತಿಳಿದ ವಿಮಲ ಜ್ಞಾನಿ ಶ್ರೀ ಮೈತ್ರೇಯರು ವಿದುರನಿಗೆ ಶ್ರೀ ಹರಿಯ ಮಹಾ ಮಹಿಮಾ ರೂಪವಾದ ಸೃಷ್ಟಿ ಸ್ಥಿತಿ ಲಯಾದಿಗಳನ್ನು ನಿರೂಪಿಸಲು ಪ್ರಾರಂಭಿಸುತ್ತಾರೆ.

ಸುತ ಬ್ರಹ್ಮರಾಯಗ 

ಶತ ವರುಷ ಮುಗಿಯಲು ।

ಅತಿಶಯ ಜಲ ತುಂಬಿದವು ।

ಇತರ ದೇವತೆಗಳು ಮತಿ 

ಭ್ರಾ೦ತರಾಗಿ । ಶ್ರೀ ।

ಪತಿ ನೀನೆ ಗತಿ ನಮಗೆನಲು ।।

ಆಲದೆಲೆಯ ಮ್ಯಾಲೆ 

ನೀಲ ಮೇಘ ಸ್ವಾಮಿ ।

ಬಾಲನಾಗಿ ಮಲಗಿರಲು ।

ಲೋಲಾಕ್ಷನ ಮಹಿಮೆ । ಮ ।

ಹಾಲಕ್ಷ್ಮೀ ತಾ ತಿಳಿದು ।

ಮೇಲಾಗಿ ಸ್ತೋತ್ರ । ಮಾಡಿ ।

ದಳು ಆಮ್ರಾಯಣಿ ಸೂಕ್ತ ।

ದಲೆ ಅಂಬುಜನಾಭನ್ನ 

ನಂಬಿ ಸ್ತೋತ್ರವನೆ । ಮಾಡಿ ।

ದಳು ರಮೆಯ ಸ್ತುತಿ ।

ಕೇಳಿ ಅಂಬುದಿ೦ ।

ದಲೇ ಎದ್ದು ಕಂಬು

ಕಂಧರ ಬಂದನಾಗ ।।

ಅನಿರುದ್ಧ ಪ್ರದ್ಯುಮ್ನ 

ಘನ ಸಂಕರ್ಷಣ ।

ಸನಕಾದಿ ಪತಿ ವಾಸುದೇವ ।

ಕನಿಕೆ ಮಾಯಾ ಜಯ 

ಕೃತು ಶಾಂತಾದೇವಿಯರು ।

ಅನುಕೂಲವಾಗಿ ಪುಟ್ಟಿದರು ।।

ಹೀಗೆ ವೇದಾಂತ ಮೀಮಾಂಸಾ ಶಾಸ್ತ್ರಗಳ ಕಠಿಣ ವಿಷಯಗಳನ್ನೂ ನೀರು ನೀರಾಗಿ ಹಿಂಜಿ ಹಿಗ್ಗಿಸಿ ಮನಂಬುಗುವ ರೀತಿಯಲ್ಲಿ ಹೇಳುವ ಹದ ಹವಣು ಪ್ರಯಾಗವ್ವನಂತೆ ಬೇರಾರಿಗೂ ಸಾಧಿಸಿದಂತೆ ಕಂಡು ಬರುವುದಿಲ್ಲ!

ಇಂಥ ರುಕ್ಷ ವಿಷಯದಲ್ಲಿ ತನ್ನ ವಾಣಿಯನ್ನು ಓಡಿಸಿದ್ದರೂ ಪ್ರಯಾಗವ್ವನ ಕಾವ್ಯದ ಝರಿ ಬತ್ತಿಲ್ಲ. 

ಪ್ರಸಂಗ ಬಂದಾಗ ಪ್ರಯಾಗವ್ವನ ಸರಸ ಕವಿತ್ವವು ರಸ ಕಾರಂಜಿಯನ್ನು ಚಿಮ್ಮಿಸದೆ ಬಿಟ್ಟಿಲ್ಲ.ಕರ್ದಮ ದೇವಹೂತಿಯರ ವಿವಾಹ, ತದನಂತರ ಪ್ರಣಯ ವಿಲಾಸ, ಸರಸ ಸಂಭಾಷಣೆಯ ಪ್ರಸಂಗಗಳನ್ನು ಶೃಂಗಾರ ತರಂಗಿತವಾದ ಸುಮಧುರ ಶೈಲಿಯಲ್ಲಿ ಕವಯಿತ್ರಿ ಪ್ರಯಾಗವ್ವ ಬಿತ್ತರಿಸುತ್ತಾಳೆ

ಸಂಡಿಗೆ ಹಪ್ಪಳ 

ಮಂಡಿಗೆ ಗುಲ್ಲೋರಿಗಿ ।

ದಿಂಡು ಸೂರಣೆ ಬಡಿಸುವರು ।

ಬೆಂಡೀಕಾಯಿ ಶಾಖ 

ಸಂಡಿಗಿ ಹಳಿ ಶಾಖ ।

ಗಂಡಸರು ಭೂಮ

 ಬಡಿಸುವರು ।।

ಉರಟನಿ - ಭೂಮದ ಹಾಡು - ಹಸೆ ಕರೆದ ಪದಗಳಲ್ಲಿ ಮಧುರಸ ಹೊಸ ರೀತಿಯಿಂದಲೇ ಹರಿದು ಎಲ್ಲೆಡೆಗೂ ಹೌಸು ಹುಮ್ಮಸ್ಸುಗಳ ಸೌರಭ ಬೀಸಿ ಬಂದಂತೆನಿಸುತ್ತದೆ.

ಮುಂದೆ ದೇವಹೂತಿಯ ಪರಿ ಪರಿ ಸೇವೆಗೆ ಮೆಚ್ಚಿದ ಕರ್ದಮ ಋಷಿಯು ಒಲಿದು ವರ ಬೇಡೆಂದಾಗ ಆ ರಸಿಕ ಋಷಿ ರಮಣಿಯು....

ವಸುಧಾಧಿತಿ ಪತಿ ಪುತ್ರ ।

ಹೊಸದಾಗಿ ನುಡಿದಳು ।

ಹಸನಾದ ಮೋಕ್ಷ ಹಾಂಗಿರಲೆ ।।

ಕುಸುಮನಾಭ ನೀವು ।

ದಶದಿಕ್ಕಿನಲ್ಲೆಸೆವೊ 

ಮಂದಿರ ಮಾಡೆನ್ನಲು ।।

ಇಲ್ಲಿ ಸಂದರ್ಭೋಚಿತವಾಗಿ ತಕ್ಕ ಪದ ಪ್ರಯೋಗ ಮಾಡುವ ಈ ಕವಿಕಾಮಿನಿಯ ಶಬ್ದಶಕ್ತಿ ಜ್ಞಾನದ ಅಗಾಧೆಯನ್ನು ಕಾಣಬಹುದು. 

ತಮ್ಮ ವಿಹಾರಕ್ಕಾಗಿ ಭವ್ಯ ಅರಮನೆ - ದಿವ್ಯ ವಸ್ತ್ರಾಭರಣಗಳನ್ನೂ ಅನೇಕ ದಾಸ ದಾಸಿಯರು ಚಂದನಗಂಧ, ಕುಸುಮ ಹಾರ, ಹೂವಿನ ಹಾಸಿಗೆ ಮುಂತಾದ ವಿವಿಧ ವಿಲಾಸಿ ವಸ್ತುಗಳನ್ನೂ ಬೇಡುವ ದೇವಹೂತಿಗೆ ಕವಯಿತ್ರಿ " ವಸುಧಾಧಿತಿಪತಿ ಪುತ್ರ " ಎಂಬ ಹೇತುಗರ್ಭ ವಿಶೇಷಣವನ್ನು ಕೊಟ್ಟು ವಿಶೇಷಾರ್ಥವೊಂದು ಧ್ವನಿತವಾಗುವಂತೆ ಮಾಡಿದ್ದಾಳೆ.

ದೇವಹೂತಿ ಬಡ ಬ್ರಾಹ್ಮಣನ ಮಗಳಾದ ಬರೀ ವೈದಿಕ ಮುತ್ತೈದೆಯಲ್ಲ. 

ಅವಳು ಮೊದಲು ವಿಶ್ವ ಸಾಮ್ರಾಟನ ಮಗಳು. 

ಅವಳಿಗೆ ರಾಜ ಭೋಗದ ಅನುಭವವಿದೆ. 

ಆದುದರಿಂದಲೇ ಗುಡಿಸಲದ ಗೃಹಸ್ಥರಿಗೆ ಕಲ್ಪನೆ ಕೂಡಾ ಇಲ್ಲದ ವಿಲಾಸ ಸಾಮಾಗ್ರಿಗಳನ್ನು ಸಿದ್ಧಪಡಿಸಲು ಸಿದ್ಧ ತಾಪಸರಾದ ಕರ್ದಮ ಮುನಿಗಳಿಗೆ ಬಿನ್ನವಿಸಿದಳು ಎಂದು ಸೂಚವಾಗಿ ಈ " ವಸುಧಾಧಿತಿಪತಿ ಪುತ್ರ " ಎಂಬ ವಿಶೇಷಣದಿಂದ ಕಾಣಿಸಿದ್ದಾಳೆ.

ಮತ್ತೆ ಅದೇ ಪದ್ಯದಲ್ಲಿ " ಹೊಸದಾಗಿ ನುಡಿದಳು " ಎನ್ನುವುದರಿಂದ ದೇವಹೂತಿಯು ಸಾಮನ್ಯ ನಾರಿಯಂತೆ ಬರೀ ವಿಲಾಸಪ್ರಿಯಳಾಗಿದ್ದಿಲ್ಲ. 

ಅಂತೆಯೇ ಅವಳು ಹಿಂದೆಂದೂ ಇಂಥಾ ಕಾಮನೆಯನ್ನು ಮಾಡಿದ್ದಿಲ್ಲ.

ಇಂದು ಒಂದುಸಲ ತಮ್ಮ ಇಡೀ ಆಯುಷ್ಯದಲ್ಲಿಯೇ ಒಂದು ಸಾರಿ ಅವರು ಲೌಕಿಕ ವಿಷಯ ಸುಖಕ್ಕೆ ಇಳಿಯುವವರಿದ್ದರು. 

ಆದುದರಿಂದಲೇ ಅವಳು ಆ ನಿಮಿಷ ರಸ ನಿಮಿಷವಾಗಲೆಂದು ಅಂದು ಅದಕ್ಕೆ ಬೇಕಾದ ಸುಖೋಪಭೋಗ ಸಾಮಾಗ್ರಿಗಳನ್ನೆಲ್ಲಾ ಅದೇ ಮೊದಲುಬಾರಿ ಅಪೇಕ್ಷಿಸಿದ್ದು ಎಂಬುದನ್ನು " ಹೊಸದಾಗಿ ನುಡಿದಳು " ಎಂಬ ಶಬ್ದದಿಂದ ಸೂಚಿಸಿ ದೇವಹೂತಿಯ ವೈರಾಗ್ಯ ಹಾಗೂ ವಿಷಯ ಸುಖ ವಿಮುಖ ಪ್ರವೃತ್ತಿಗಳನ್ನು ಎತ್ತಿ ತೋರಿಸಿದ್ದಾಳೆ.

ಎಂತಲೇ ಅವಳು ತನ್ನ ಪತಿಗೆ ರಾಜ ಮಹಾರಾಜನಾಗಿ ಸಿರಿ ಸಂಪದಗಳಿಂದ ಮೆರೆಯುವ ಮಗನನ್ನು ಕೊಡು ಎಂದು ಕೇಳದೆ " ಇತರ ವಿಷಯ ಬಿಟ್ಟು ಗತಿ ಮೋಕ್ಷ ನೀಡುವಂಥ ಸುತನ ಕೊಡೆಂದು ಕೇಳಿದಳು.

ಅವಳ ಅಪೇಕ್ಷೆಯಂತೆ ಅಷ್ಟ ಮಹಾ ಸಿದ್ಧಿಗಳನ್ನೆಲ್ಲಾ ಸ್ವಾಧೀನ ಪಡಿಸಿಕೊಂಡ ಕರ್ದಮರು ದಿವ್ಯ ಮಂದಿರ, ವಿಹಾರ ವಿಮಾನ, ವಿಲಾಸ ಸಾಮಾಗ್ರಿಗಳನ್ನೆಲ್ಲಾ ತಪೋ ಬಲದಿಂದ ನಿರ್ಮಿಸಿ ದೇವ ಪುತ್ರಿಯಾದ ದೇವಹೂತಿಯ ಕಾಮನೆಗಳನ್ನೆಲ್ಲಾ ಪೂರೈಸಿ ಸಂತವಿಸಿ ಅವಳಿಗೆ...

ಮನು ಪುತ್ರಿ ನೀ ಕೇಳು 

ಮನದಲ್ಲಿ ಖೇದವು ಬೇಡ ।

ವನಜಲೋಚನೆ ನಿನ್ನದರದಲಿ ।

ಜನಿಸುವಾಗಲೇ 

ಘನ ಮಹಿಮ ಕೃಷ್ಣನು ।

ಮನಿಸಿನಿಂದಾತನ ಭಜಿಸು ।।

ಎಂದು ಹೇಳಿದರು. 

ಅದರಂತೆ ಕಪಿಲಾವತಾರವಾಯಿತು 

ಮತ್ತು 9 ಜನ ಕನ್ನಿಕೆಯರು ದೇವಹೂತಿಯಲ್ಲಿ ಕರ್ದಮನಿಂದ ಜನಿಸಿದರು.

ಇಂತೂ ಇಂಥ ಕ್ಲಿಷ್ಟವಾದ ತತ್ತ್ವಜ್ಞಾನದ ಭಾಗವನ್ನು ಶೈಲಿಗೆ ಹೊಂದಿಸಿಕೊಂಡು ಶಾಸ್ತ್ರಗಂಧಿ ಕಾವ್ಯವನ್ನು ಬರೆದ ಪ್ರಯಾಗವ್ವ ಕವಿಯೂ ಹೌದು, ಪಂಡಿತಳೂ ಹೌದು, ತತ್ತ್ವಜ್ಞಾನಿಯೂ ಹೌದು.

ಮಾಧ್ವ ವಾಜ್ಮಯಕ್ಕೆ ಇಂಥಾ ಮೌಲಿಕವಾದ ತಾತ್ವಿಕ ಕಾಣಿಕೆ ಕೊಟ್ಟ ಮಹಿಳೆಯರಲ್ಲಿ ಪ್ರಯಾಗವ್ವನಿಗೆ ಅಗ್ರಸ್ಥಾನ, 

ವಿಶಿಷ್ಟ ಮಾನಗಳು ಸಲ್ಲುವುದರಲ್ಲಿ ಸಂದೇಹವಿಲ್ಲ!!

by ಆಚಾರ್ಯ ನಾಗರಾಜು ಹಾವೇರಿ

     ಗುರು ವಿಜಯ ಪ್ರತಿಷ್ಠಾನ

****