ಇಭರಾಮಪುರ ಅಪ್ಪಾವರ ವರ್ಧಂತಿ ಉತ್ಸವ.
ಚಂದಿರ ಉದಯವಾಯಿತೇ ಕೃಷ್ಣಾರ್ಯರೆಂಬೋ
ಚಂದಿರನುದಿಸಿದ ತನ್ನಯ ಸುಂದರಿ ಸೂರಿಗಳ ಸುಕೃತ ।
*ಬಿಂದ್ಯವೆಂಬೋ ಉದಯಾಚಲದ
ಕಂದರದಿಂ ಕುಣಿದು ಬಂದು* ॥
ಮಂತ್ರಾಲಯ ಶ್ರೀ ಗುರುಸಾರ್ವಭೌಮರ ಏಕಾಂತಭಕ್ತರಾದ ಅಪರೋಕ್ಷ ಜ್ಞಾನಿಗಳಾದ , ನಿರಂತರ ಪರಿಮಳ ಗ್ರಂಥ ಪಾರಾಯಣದಿಂದ ಸ್ನಾನ ಮಾಡಿ ನೀರಿನಲ್ಲಿ ಪರಿಮಳ ತೋರಿದ, ಜ್ಞಾನಿಶ್ರೇಷ್ಠರೆನಿಸಿದ ಯಳಮೇಲಿ ಹಯಗ್ರೀವಾಚಾರ್ಯ , ಯಳಮೇಲಿ ವಿಠಲಾಚಾರ್ಯ, ಶ್ರೀ ಗಣೇಶಾಚಾರ್ಯ(ಶ್ರೀ ಸುಧರ್ಮೇಂದ್ರ ತೀರ್ಥರು) ಶ್ರೀ ಯೋಗಿ ನಾರಾಯಣಾಚಾರ್ಯ, ಮುಂತಾದ ಜ್ಞಾನಿಗಳ ಸಮೂಹಕ್ಕೆ ಗುರುಗಳೆನಿಸಿದ, ವಿಜಯರಾಮಚಂದ್ರವಿಠಲ ದಾಸರು , ಜಯೇಶವಿಠಲ ದಾಸರು, ಸುರಪುರ ಆನಂದ ದಾಸರು , ಶ್ರೀ ಇಂದಿರೇಶ ದಾಸರು, ಗುರುಜಗನ್ನಾಥ ದಾಸರಂತಹ ದಾಸ ಶ್ರೇಷ್ಠರಿಗೆ ಭಕ್ತಿ ಮಾರ್ಗವನ್ನು ತೋರಿ ಅವರ ಸ್ವರೂಪೊದ್ದಾರಕರಾಗಿ ಹರಿದಾಸರಿಗೆ ಮಂದಿರವೆನಿಸಿದ , ಶ್ರೀ ಇಭರಾಮಪುರ ಅಪ್ಪಾವರ 232 ವರ್ಧಂತಿ ಉತ್ಸವ.
by prasadacharya
****
No comments:
Post a Comment