Tuesday 5 October 2021

vittalesharu dasaru ವಿಠಲೇಶರು 1982


vittalesharu ಶ್ರೀ ವಿಠಲೇಶರು

ankita - vittalesha

ಕಾಲ - 1908-1982


ಶ್ರೀಮದ್ರಾಘವೇಂದ್ರತೀರ್ಥ ಗುರುಸಾರ್ವಭೌಮರ ಪರಮ ಪರಮ ಭಕ್ತರಾದ 

ಶ್ರೀ ವಿಠಲೇಶದಾಸರು ಆಂಧ್ರಪ್ರದೇಶದ ಹೈದರಾಬಾದ್ ನವರು.. ಇವರು ವೃತ್ತಿ ರೀತ್ಯಾ ವೈದ್ಯರು. ಇವರ ಬಾಲ್ಯದ ಕುರಿತಾದ ಮಾಹಿತಿ ನನ್ನಲ್ಲಿ ಅಷ್ಟೇನೂ ಇಲ್ಲ.

 ಇವರಿಗೆ ಒಮ್ಮೆ ಭಯಂಕರವಾದ ಉದರಶೂಲೆ ಬಂದಿತು.. ಆಗ ಇದ್ದ ಸರಕಾರಿ ಉದ್ಯೋಗವನ್ನು ಬಿಟ್ಟು, ಮಂತ್ರಾಲಯಕ್ಕೆ ಬಂದು, ಶ್ರೀಮದ್ರಾಘವೇಂದ್ರ ಗುರುಸಾರ್ವಭೌಮರಿಗೆ ಸೇವೆ ಮಾಡುತ್ತಾ ಪೂರ್ತಿ ಶರಣಾಗಿರ್ತಾರೆ, ಆಗ ಕಲಿಯುಗ ಕಲ್ಪವೃಕ್ಷ, ಕಾಮಧೇನು ಎಂದೇ ಪ್ರಖ್ಯಾತರಾದ , ನಂಬಿ ಬಂದ ಭಕ್ತರ ಕಷ್ಮಲಗಳನ್ನು , ರೋಗರುಜಿನಾದಿಗಳನ್ನೂ ದೂರಮಾಡುವ ನಮ್ಮ ರಾಯರು , ದಾಸಾರ್ಯರ ಸೇವೆಗೆ ಸಂತೋಷ ಪಟ್ಟು ಅವರನ್ನು ಪೂರ್ಣವಾಗಿ ಆರೋಗ್ಯವಂತರನ್ನಾಗಿ ಮಾಡಿದರು.

ಆಗ ಈ ಪುನರ್ಜೀವನ ರಾಯರ ಭಿಕ್ಷೆ,  ಮಿಕ್ಕ ಜೀವನವೆಲ್ಲಾ ರಾಯರ ಪದಗಳಲ್ಲಿ ಅಂತ ನಿಶ್ಚಯ ಮಾಡಿಕೊಂಡ ದಾಸಾರ್ಯರು ವಿಠಲೇಶ ಅಂಕಿತದಿಂದ ರಾಯರ ಮೇಲೆ ನೇ 700 ಪದ ,ಪದ್ಯಗಳನ್ನು ರಚನೆ ಮಾಡಿ ರಾಯರ ಪದಗಳಲ್ಲಿ ಭಕ್ತಿಪೂರ್ವಕವಾಗಿ ಸಮರ್ಪಣೆ ಮಾಡಿದರು ಎಂದು ಹೇಳ್ತಾರೆ.

ಶ್ರೀ ರಾಯರ ಸಮಗ್ರ ಗ್ರಂಥಗಳನ್ನು ಭಾಮಿನಿ ಷಟ್ಪದಿ ಯಲ್ಲಿ ಪ್ರಾಕೃತ ಭಾಷೆಯಲ್ಲಿ ರಚನೆ ಮಾಡಿದರೆಂದು ಹೇಳ್ತಾರೆ.. ಶ್ರೀಪಾದಮಲ್ಲಿಕಾ, ಪರಿಮಳ ಪುಷ್ಪ, ಶ್ರೀ ರಾಘವೇಂದ್ರ ಗುರುಪದಹಾರ ಎನ್ನುವ ಮೂರು ದೀರ್ಘ ಕೃತಿಗಳ ರಚನೆ ಮಾಡಿದ್ದಾರೆ.

ನನಗೆ ತುಂಬಾ ಪ್ರಾಣಪ್ರದವಾದ ರಾಯರ ಮೂರೂ ಅವತಾರಗಳ ವರ್ಣನಾ ಕೃತಿಯಾದ  ಪರಿಮಳ ಪಾದಪಂಕಜಾ ಇವರ ರಚನೆಯೇ. 

ದಿಕ್ಕು ದೆಸೆ ನೀನೇ, ಕೋರಿ ಕರಿವೆ ಗುರು ಶ್ರೀ ರಾಘವೇಂದ್ರನೆ  ಬಾರೋ ಮಹಾ ಪ್ರಭುವೆ ಇತ್ಯಾದಿ ಪ್ರಖ್ಯಾತ ಕೃತಿಗಳು ಶ್ರೀ ದಾಸಾರ್ಯರಿಂದ ರಚಿತವಾದವೇ ಆಗಿವೆ.

ಹೀಗೊಂದು ಸಂದರ್ಭದಲ್ಲಿ ಮಂತ್ರಾಲಯಕ್ಕೆ ರಾಯರ ದರ್ಶನಾರ್ಥಿಗಳಾಗಿ ಬಂದ ದಾಸಾರ್ಯರು ರಾಯರಿಗೆ ಭಕ್ತಿಪೂರ್ವಕವಾಗಿ ನಮಸ್ಕಾರ,  ಸೇವಾದಿಗಳು ಸಲ್ಲಿಸಿದನಂತರ ಪ್ರಸಾದ ಸ್ವೀಕಾರ ಮಾಡಲು ಕುಳಿತಾಗ, ಬಡಿಸುವವರು ದಾಸರ ಮುಂದಿನವರವರೆಗೂ ಬಂದು ಪದಾರ್ಥಗಳು ಬಡಿಸದೆ ಹೊರಟು ಹೋಗಿರ್ತಾರೆ.ಆಗ ದಾಸಾರ್ಯರು ರಾಯರನ್ನು ಕುರಿತಾಗಿ  ನಿನ್ನ ಅಂಗಳದೊಳಗೆ ಹಿಡಿ ಅನ್ನ ಹಾಕೋ ಘನ್ನ  ಶ್ರೀ ಗುರು ರಾಘವೇಂದ್ರ  ಎಂಬುದಾಗಿ ಸ್ತ್ರೋತ್ರ ಮಾಡ್ತಾರೆ. ಆಗ ಆ ಕೃತಿಯನ್ನು ಕೇಳಿ ಅಲ್ಲಿಗೆ ಬಂದ ಆಗಿನ ಶ್ರೀ ರಾಯರ ಮಠದ ಯತಿಗಳಾದ ಶ್ರೀ ಸುಯಮೀಂದ್ರತೀರ್ಥರು ತುಂಬಾ ಸಂತೋಷಪಟ್ಟು ಭೋಜನಶಾಲೆಗೆ ಹೋಗಿ ಅಲ್ಲಿನವರಿಗೆ ದಾಸಾರ್ಯರಿಗೆ ತೀರ್ಥ,ಪ್ರಸಾದದ ವಸತಿ ಮಾಡಿ ಎಂದು ಆಜ್ಞೆ ಮಾಡ್ತಾರೆ. ನೋಡಿ ನಮ್ಮ ರಾಯರ ಪರಮ ಕಾರುಣ್ಯ ಅಲ್ಲವೇ?

ಹೀಗೆ ಹಂತಹಂತದಲ್ಲಿಯೂ ರಾಯರ ಪರಮಾನುಗ್ರಹಕ್ಕೆ  ಪಾತ್ರರಾದ ಶ್ರೀ ವಿಠಲೇಶ ದಾಸಾರ್ಯರ ಕುರಿತಾದ ಮಾಹಿತಿ ಇಂದಿನವರೆಗೂ, ಪುಸ್ತಕ ರೂಪದಲ್ಲಿ ಪ್ರಕಟಗೊಂಡಿದ್ದು ನಾನು ಕಂಡಿಲ್ಲ. ಇವರ ಜೀವನ ಚರಿತ್ರೆಯ ಕುರಿತಾದ ಪೂರ್ಣ ಮಾಹಿತಿಯೂ ತಿಳಿದುಬರಬೇಕಿದೆ. ದಾಸಾರ್ಯರ ಅನುಗ್ರಹ ಆದಲ್ಲಿ, ನಾನು ಯೋಗ್ಯಳಾದಲ್ಲಿ ದಾಸಾರ್ಯರ ಚರಿತ್ರೆಯನ್ನು ತಿಳಿಯುವ ಸೌಭಾಗ್ಯ ಸಿಗುವುದು ಎನ್ನುವುದರಲ್ಲಿ ಈಷಣ್ಮಾತ್ರವೂ ಸಂದೇಹವಿಲ್ಲ.

ಆದರೆ ಶ್ರೀ ದಾಸಾರ್ಯರ ಅಪ್ರತಿಮ, ಅಪುರೂಪದ, ಸಾಹಿತ್ಯ ನಾವು ಪ್ರತಿದಿನ ಹಾಡುತ್ತಿರುವುದೂ ಅವರ ಹಾಗೂ  ಅವರ ಅಂತರ್ಗತ ಶ್ರೀ ರಾಯರ, ಪರಮಾತ್ಮನ  ಸೇವೆಯೇ ಸರಿ.

ಇಷ್ಟಾದರೂ ನಮ್ಮಿಂದ ಸೇವಾಕುಸುಮವನ್ನು ಸ್ವೀಕಾರ ಮಾಡುತ್ತಿರುವ ಶ್ರೀ ವಿಠಲೇಶರಿಗೆ ಶಿರಬಾಗಿ ಕೋಟಿ ನಮಸ್ಕಾರಗಳನ್ನು ಅವರ ಅಡಿದಾವರಗಳಲ್ಲಿ ಸಲ್ಲಿಸುತ್ತಾ....

-Smt. Padma Sirish

ನಾದನೀರಾಜನದಿಂ ದಾಸಸುರಭಿ

***

No comments:

Post a Comment