Tuesday, 5 October 2021

praneshachaya katti dasaru ಶ್ರೀ ಪ್ರಾಣೇಶಾಚಾರ್ಯ ಕಟ್ಟಿ


praneshachaya katti  dasaru
ankita - sriramavittala

ಶ್ರೀ ಪ್ರಾಣೇಶಾಚಾರ್ಯ ಕಟ್ಟಿ   ಶ್ರೀರಾಮ 
ಅಂಕಿತ - ಶ್ರೀ ರಾಮವಿಠಲ

 ನಮ್ಮ ಪ್ರಾತಃಸ್ಮರಣೀಯರಾದ ಹರಿದಾಸರು


ಶ್ರೀ ಪ್ರಾಣೇಶಾಚಾರ್ಯರು ಬಿಜಾಪುರ ಜಿಲ್ಲೆಯ ಬಾಗೇವಾಡಿ ತಾಲೂಕಿನ,  ಮುತ್ತಿಗೆ ಗ್ರಾಮ ವಾಸ್ತವ್ಯರಾದ ಶ್ರೀ ನರಸಿಂಹಾಚಾರ್ಯ , ಶ್ರೀಮತಿ ಲಕ್ಷ್ಮೀಬಾಯಿ ದಂಪತಿಗಳ ನಾಲ್ಕು ಜನ ಮಕ್ಕಳಲ್ಲಿ ಹಿರಿಯರು..

ಇವರು ಜನಿಸಿದ್ದು 1936 ಹುನಗುಂದ್ ದಲ್ಲಿ, ಅಲ್ಲೇ ವಿದ್ಯಾಭ್ಯಾಸವನ್ನು ಪೂರ್ತಿ ಮಾಡಿ ಮುಂದೆ ಶಿಕ್ಷಕ ವೃತ್ತಿಗೆ ಬಂದವರು.. ಇವರ ತಾತಂದಿರು ಹನುಮಂತಾಚಾರ್ಯರು- ಶ್ರೀ ಕೊಪ್ರ ಗಿರಿಯಾಚಾರ್ಯರಿಗೂ, ಗೊರೆಬಾಳ ಹನುಮಂತರಾಯರಿಗೂ ಸಮಕಾಲೀನರಾದರೂ ಸಹಾ, ಬಾಲ್ಯವೆಲ್ಲವೂ ಲಿಂಗಸೂಗೂರ್ ದಲ್ಲಿ ಕಳೆದರೂ ಸಹಾ, ಎಲ್ಲದಕ್ಕೂ ಸಮಯ ಬರಬೇಕು ಎಂಬಂತೆ ,ದಾಸ ಸಾಹಿತ್ಯದ ಪ್ರಭಾವಕ್ಕೆ ಇವರು ಒಳಗಾಗಲಿಲ್ಲ.. 

ನಂತರದಲಿ ಉದ್ಯೋಗ ರೀತ್ಯಾ ಮಾದಿನೂರು ವಿಷ್ಣುತೀರ್ಥರ ಪುಣ್ಯಕ್ಷೇತ್ರವಾದ ಮಾದಿನೂರಿಗೆ ಬದಲಾವಣೆ ಆಗಿದೆ.. ಅಂದಿನಿಂದ ಇವರ ಪ್ರಪಂಚವೇ ಬದಲಾಗಿದೆ. ಶ್ರೀ ಅರಣ್ಯಕಾಚಾರ್ಯರ (ಶ್ರೀ ವಿಷ್ಣುತೀರ್ಥರ) ಸೇವೆ, ಪೂಜಾದಿಗಳಲ್ಲಿ ನಿರತರಾಗಿಹೋದರು..

1956 ರಲ್ಲಿ ಶ್ರೀ ಪ್ರಾಣೇಶಾಚಾರ್ಯರಿಗೆ ತಾಯಿ ಮಹಾಲಕ್ಷ್ಮೀದೇವಿಯರು ಕನ್ನಸಿನಲ್ಲಿ ಕಾಣಿಸಿಕೊಂಡು ದಾಸ ಸಾಹಿತ್ಯ ದ ಸೇವೆ ಮಾಡಬೇಕೆಂತಲೂ, ಕೃತಿರಚನೆ ಮಾಡು ಅಂತಲೂ ಆಜ್ಞೆಮಾಡಿದರಂತೆ.. ಅಂದಿನಿಂದ ಶ್ರೀ ಕಟ್ಟಿಯವರು ಶ್ರೀರಾಮ ಅಂಕಿತದಿಂದ ಕೃತಿರಚನೆ, ನಾಟಕಗಳ ರಚನೆ ಮಾಡ ತೊಡಗಿದರಂತಾರೆ.. ನಂತರದಲಿ ಸಂಚಾರಕ್ಕೆ ಬಂದಂತಹಾ ಶ್ರೀಮದುತ್ತರಾದಿಮಠದ ಯತಿಗಳಾದ ಶ್ರೀ ಸತ್ಯಪ್ರಮೋದತೀರ್ಥರಿಂದ ಮತ್ತೆ ಶ್ರೀರಾಮವಿಠಲ ಎನ್ನುವ ಅಂಕಿತನಾಮವನ್ನು ಪಡೆದು ಕೀರ್ತನೆಗಳ ಜೊತೆಗೆ , ಸುಳಾದಿಗಳ ರಚನೆಯೂ ಮಾಡಿದರೆಂದು ಹೇಳುತ್ತಾರೆ.. 

ಇವರಿಗೆ ನಾಟಕ ಸಾಹಿತ್ಯ ಅಂದರೆ ಪರಮಪ್ರೀತಿ. ಅಲ್ಲದೇ 108 ಸುಳಾದಿಗಳ ರಚನೆ ಮಾಡಬೇಕೆಂದು ನಿರ್ಧಾರ ಮಾಜಿದವರಾಗಿದ್ದಾರೆ ಎಂದು ಹೇಳ್ತಾರೆ. ಆದರೆ 27 ಸುಳಾದಿಗಳ ರಚನೆ ಮಾತ್ರ ಮಾಡಿದರಂತೆ.. 

ಶ್ರೀ ಚಂದ್ರಿಕಾಚಾರ್ಯರ ಸುಳಾದಿ,  ಶ್ರೀ ವಿಜಯದಾಸಾರ್ಯರ ಸುಳಾದಿ, ಶ್ರೀ ಜಗನ್ನಾಥದಾಸಾರ್ಯರ ಸುಳಾದಿ, ತೋರವಿ ನರಸಿಂಹ ಸುಳಾದಿ, ಅಶ್ವತ್ಥಾವಿರ್ಭಾವ ಸುಳಾದಿ, ಪ್ರಲ್ಹಾದಚರಿತ್ರೆಯ ಸುಳಾದಿ, ಶ್ರೀಮದ್ರಾಘವೇಂದ್ರ ಗುರುಸಾರ್ವಭೌಮರ ಸುಳಾದಿ ಇತ್ಯಾದಿಗಳು 27 ರಲ್ಲಿ ಇದ್ದವೆ..

ಅಲ್ಲದೆ ಶ್ರೀ ದಾಸಾರ್ಯರು ಕುಪ್ಪಿಭೀಮಸೇನದೇವರ ಸುಪ್ರಭಾತ, ಶ್ರೀಮಟ್ಟೀಕಾಕೃತ್ಪಾದರ ಸುಪ್ರಭಾತ, ಕೋರವಾರೇಶನ ಭಜನಾಮಂಜರಿ, ತುಳಸಿಗೇರಿ ಹುನುಮನ ಸ್ತುತಿ, ಯಲಗೂರೇಶನ, ಹಲಗಣೇಶನ, ಕೋರವಾರೇಶನ ಉದಯರಾಗ, ಜೋಗುಳ, ಮಂಗಳ ಪದಗಳು ರಚನೆ ಮಾಡಿದ್ದಾರೆ...

ಇವರು ಪ್ರತ್ಯೇಕವಾಗಿ 9 ತಾಳಗಳಗಿಂತಲೂ ಹೆಚ್ಚು ತಾಳಗಳಿಂದ ಸುಳಾದಿ ರಚನೆಯನ್ನು ಮಾಡಿದ್ದಾರೆ ಅಂತಲೂ ಹೇಳ್ತಾರೆ..

ಇನ್ನೂ ಮಾಹಿತಿ, ಕೃತಿಗಳು  ತಿಳಿದವರು ದಯವಿಟ್ಟುತಿಳಿಸಿ 

-Smt. Padma Sirish

ನಾದನೀರಾಜನದಿಂ ದಾಸಸುರಭಿ 
***


No comments:

Post a Comment