Thursday, 30 December 2021

bhuvanendra teertharu 1799 rajoli matha rayara mutt yati 26 vaishakha bahula saptami ಭುವನೇಂದ್ರ ತೀರ್ಥರು



vaishAka bahuLa sapthami is the ArAdhane of shri bhuvanEndra tIrtharu of rAyara maTa.

info is from FB madhwanet--->

shri bhuvanEndra tIrtharu...  charama shlOka:

भूदॆववंद्यपादाब्जं भूतिमंतमभीष्टदं ।
भूतलॆ सादु विख्यातं भुवनॆंद्र गुरुं भजॆ ॥

Parampare: rAyara maTa, #26
Period: 1785 - 1799
Ashrama gurugaLu: shri varadEndra tIrtharu
shishyaru: shri subhOdendra tIrtharu, shri vyAsatatvagnaru 
brindAvanA: rAjOLi on the banks of Tungabhadra. It is 28 Kms from Manthralaya, across the river on the opposite banks. 

shri bhuvanEndra tIrtharu was of great intellect. He acquired the administrative acumen from his guru varadEndra tIrtharu just as how he acquired scholarship from dhIrEndra tIrtharu. Besides he also patronised haridAsa literature. He was revered by Peshwas of Pune. He got a big gold Mantap made with the contributions he received from his disciples during his tour and worshipped the idol of mUla rAmA placed in it. Kings and Desais were wonderstruck by the administrative acumen of the swamiji. 

He had first given sanyAsa to a great intellectual and named him vyAsatatvagnaru. vyAsatatvagnaru became rAjaguru in the royal court of Seetharama Bhoopala, the king of Gadwal. vyAsatatvagnaru professed to remain as a biDi sanyAsigaLu. Later, shri bhuvanEndra tIrtharu annointed shri subhOdendra tIrtharu as his successor to the pITa.

During shri bhuvanEndra tIrtharu's period, documents in respect of the village Mantralaya were executed by one Nawab Mansoordaul Bahadur. Thus the swamiji became instrumental in the progress of the maTa. SwAmIji introduced a seal with a Shloka

श्रीरामॊ भाति सव्यासः श्रीमध्वास्थानसंसिथतैः ।श्रीराघवेंद्रसद्वशयैः भुवनेंद्रैःश्रियार्चितः ॥

in order to get such recognition for the maTa as would boost its fame in accordance with  the ancient tradition. This was an important milestone.

prANesha dAsaru in his poem  has extolled the swamiji as
ಸುಮ್ಮನೆ ಈಪರಿ ಪದವಿಯು ಜಗದೊಳು ಬಹುದು ಆರಿಗೆ ಅಹುದೂ |
ಬೋಮ್ಮನ ಸಂತತಿಯಿದು ಪುಸಿಯಲ್ಲವು ಸತ್ಯಾ ಭಜಿಸಿರಿ ನಿತ್ಯಾ ||

During the floods of 2009, the brindavana premises got flooded and brindAvana had to be shifted to a new location slightly away from the banks. 

shri bhuvanEndra tIrtha guruvAntargata, shri raghavEndra tIrtha guruvAntargata, maharudradeva guruvAntargata, shri bhArathiramana mukhyaprANantargata, sitA pate shri mUla rAma dEvara pAdAravindakke gOvindA gOvindA...

shri krishNarpaNamastu...

*******


info from raghavendraswamy.wordpress.com---> He was the pontiff of the Sri Mantralaya Matha or the Sri Raghavendra Swamy Matha a hundred years after Raghavendra Swamy.
He is even today acknowledged as one of the finest and most scholarly pandits to occupy the high seat. A scholar par excellence,  he is credited with putting Mantralaya back again on track.
He was honored by several Kings and gifted lands. The Peshwa too was a devotee. He was known for his pooje to Moola Rama Devaru.
He got several record of the Matha and its land regranted. He also introduced a seam with a sloka which is used by the Matha even today.
He had a deep and abiding desire to see Raghavendra Swamy in person. This desire became all the more strong when he was told that Rayaru was giving darshana to a humble villager and that he was also speaking to him regularly.
The pontiff asked the villager to interceded on his behalf with Rayaru and ensure that he too was given darshan. Try as he might and intercede as much, Rayaru refused to agree too the pleas of the villager to give darshan to the pontiff. When Rayaru finally relented, the pontiff could not control his sleep and he dozed off, only to wake up and see the orange ochre robes of Rayaru as he reentered the Brindavana at Mantralaya.
This is the story of Bhuvenandra Theertha, the successor to the Sri Raghavendra Matha after the redoubtable Dheerendra Theertha.
Bhuvanendra Theertha was the pontiff of the Sri Matha from 1785 to 1799.    
The Mantralaya Matha itself acknowledges that Bhuvanendra Theertha was a seer of great intellect. He acquired the administrative acumen from his guru Varadendra Theertha and  scholarship from Dheerendra Theertha.
Besides he was also known as a patron of Haridasa  literature. The  Peshwas of Pune respected him as did many other Kings.
The ruler of Gadhwal,  Seetharam Bhoopala, the Nawab of Hiremoraba, Mir Mohammed Shah Jung, the King of Surpur and the Desai of  Nagaladinni, Khiravala Nayaka and Somashekara Nayaka of Benkapura gifted him lands and several villages.
One day, the pontiff was told by the matha officials and some disciples about how Rayaru was giving darshana in person to a villager from Matmari or Matamari.
Matmari is a small village near Mantralaya. It is on the Raichur-Guntakal railway line and it is located in Raichur taluk of Raichur district in Karnataka.
There was a devotee of Rayaru in the village called Benagappa or Benkappa. He used to visit Mantralaya regularly and sit in meditation before the Brindavana. He made it a point to visit Mantralaya every Thursday without fail.
Several years passed and the youth grew old. Yet, he continued visiting Mantralaya every Thursday without fail. Rayaru was pleased with Benkappa’s devotion and one Thursday he rewarded Benkappa by appearing in person.
Benkappa was speechless when he saw Rayaru emerging from the Brindavana. The speechlessness turned to awe and wonder when he saw Rayaru speaking to him in a loving manner.
Slowly and over a period of time, the Thursday interaction between Rayaru and Benkappa turned into a question and answer session. Benkappabegan telling Rayaru about the problems and  Rayaru set about advising him about the best course of action.
Neighbours, friends and relatives soon realised that Rayaru was speaking to Benkappa and they came to him with their problems. Tell our problems to Rayaru. We will follow whatever he says,”  they said.
Rayaru, in turn, answered each query patiently. He seemed to have answers to all the problems that Benkappa placed before him. Soon, Benkappa’s fame spread far and wide and even the matha officials came to know about it.
The then pontiff of the Sri Matha, Bhuvanendra Theertha, was told about the interaction between Benkappa and Rayaru. The pontiff then summoned Benkappa and asked him about the interactions. Benkappa admitted to the pontiff that he saw Rayaru every Thursday and spoke to him about people’s problems. He said Rayaru solved people’s woes and also suggested solutions.
The pontiff further questioned Benkappa and he was satisfied that the villager indeed was talking to Rayaru. He then asked Benkappa for a favour. “Please request Rayaru to give me darshana too, I would like to see him”, he said.
Benkappa was flabbergasted. He could not believe his ears that the pontiff of the Raghavendra Swamy Matha himself had sought his help to see Rayaru. He, however, promised to do the needful.
The next Thursday, when Rayaru appeared before Benkappa, he placed the pontiff’s request before Rayaru.
Rayaru appeared a little disconcerted. He told Benkappa that till now he had come with people’s problems. Now, he wanted another person to be given Darshana. He said it was not possible and asked him to tell Bhuvanendra Theertha that he could not give darshana to him and that there was no necessity for such a Darshana at present.
When Benkappa conveyed the message to the pontiff, Bhuvanandra Theertha was sorely disappointed. The next week, he once again requested Benkappa to intercede on his behalf with Rayaru.  
When Benkappa saw Rayaru, he once again requested him to give darshana to the pontiff. Rayaru agreed but he put a condition. He said Benkappa should not speak to the pontiff when they sit besides each other. “On no condition should you speak to the pontiff. If you do so, I shall stop talking to you”, Rayaru said.
Benkappa agreed and conveyed the happy news to the pontiff. The next Thursday, both the pontiff and Benkappa sat before the Brindavana and waited eagerly for Rayaru to appear.
Even as the night progressed, both the pontiff and Benkappa sat facing the Brindavana. After some time, the pontiff began dozing and soon he fell asleep. Benkappa, on the other hand, was gazing at the Brindavana with devotion.
It was around 3-30 a,m., and soon a flash of light appeared from the Brindavan. Rayaru slowly emerged from the Brindavana    
And began walking towards the Tungabhadra for his ritual bath and Pooje. When Benkappa turned towards the pontiff, he saw that the seer had dozed off and he had not seen Rayaru. He thought of waking the pontiff but remembered Rayaru’s warning.
Rayaru then finished his bath and then began walking back to the Brindavana. Benkappa then tried to wake the pontiff but to no avail. He then shook the pontiff  but he did not wake up. When he saw Rayaru step onto the platform on which the Brindavana was constructed. Benkappa could not control himself and he spoke to the pontiff. “Swamy, get up and look, Rayaru is getting back into his Brindavana”, he said.
The pontiff was jolted awake and he only managed to see the orange robes vanish into the Brindavana. The pontiff was speechless and turning to Benkappa acknowledged his devotion. “You are truly blessed to have darshana and interaction with Rayaru”, he said. The pontiff also profusely thanked Benkappa for having helped him see Rayaru, even if it was only his robes.
Benkappa was initially happy that he had managed to help the pontiff realise his wish. He, however, became pensive when he remembered Rayaru’s warning.
The next Thursday and scores of Thursdays after that, Benkappa visited Mantralaya and tried to interact with Rayaru. Alas, he realised that he had forfeited a rare honor by displeasing and disobeying Rayaru.
Benkappa continued to regret having disregarded Rayaru’s words. As far as the pontiff was concerned, he headed the matha for a few more years before entering Brindavana in Rajouli.          
To this day, Rayaru goes to the Tungabhadra for his daily bath. There have been scores of devotees who have either seen or heard of an old man going to the Tungabhadra.
Another point here is that it is from this incident that Thursdays gained currency as a particular holy day for Rayaru. The seer of Mantralaya entered Brindavana on a Thursday and it was August 8, 1671.


Therefore, we see a rush of devotees to Rayara Mathas on Thursdays.
******

info is from sri. ಈಶಾವಾಸ್ಯಮ್ ಶರ್ಮ----> ಮಧ್ವರ ಅಂತಃ ಕರಣವನ್ನೇ ಮುಟ್ಟಿದ ಮಹಾನುಭಾವರು – ಶ್ರೀಭುವನೇಂದ್ರತೀರ್ಥರು

ಶ್ರೀವೇದವ್ಯಾಸಾಯ ನಮಃ
ಮಂತ್ರಾಲಯದಿಂದ ಪೂರ್ವದಿಕ್ಕಿಗೆ ಸುಮಾರು 75 ಕಿಲೋಮೀಟರು ಪಯಣಿಸಿದರೆ ಗದ್ವಾಲ್ ಎಂಬ ಊರು ಸಿಗುತ್ತದೆ. ಪುಟ್ಟ ನಗರವೆಂದೋ ಅಥವಾ ದೊಡ್ಡ ಪಟ್ಟಣವೆಂದೋ ನೀವು ಕರೆಯಬಹುದು. ಕೃಷ್ಣಾ ನದಿಗೆ ಬಲು ಸಮೀಪದಲ್ಲೇ ಇರುವ ಈ ಊರಿಗೆ ಬಿರುಬಿಸಿಲೇ ಬಟ್ಟೆ. ಯಥೇಚ್ಛವಾಗಿ ಹಾರಾಡುವ ಧೂಳೇ ಶೃಂಗಾರ ಸಾಮಾಗ್ರಿ. ಇಂದು ಧೂಳಿನ ಸಾಮ್ರಾಜ್ಯವಾದ ಈ ಊರು ಹಿಂದೊಮ್ಮೆ ರಾಜಕೀಯವಾಗಿ ದೊಡ್ಡ ಶಕ್ತಿಕೇಂದ್ರವೇ ಆಗಿತ್ತು. ಆದರೆ ಆಧ್ಯಾತ್ಮ ಚಿಂತಕರ ಮಾತು ಬಂದಲ್ಲಿ ಈ ಊರು ಯಾವತ್ತೂ ಅತ್ಯಂತ ಭಾಗ್ಯಶಾಲಿ. ಶ್ರೀಗೋಪಾಲದಾಸರು, ಶ್ರೀಶೇಷದಾಸರು, ಶ್ರೀವ್ಯಾಸತತ್ತ್ವಜ್ಞರು, ಮಾದನೂರು ವಿಷ್ಣುತೀರ್ಥರೇ ಮೊದಲಾದ ಬಹುದೊಡ್ಡ ಸಾಧಕರು ಈ ಊರಿನ ಸುತ್ತಮತ್ತಲಿನಲ್ಲಿಯೇ ತಮ್ಮ ಸಾಧನಾ ವ್ಯಾಪಾರವನ್ನು ನಡೆಸಿದವರು.
ಈ ಎಲ್ಲ ಸಾಧಕರಿಗೆ ಪ್ರತ್ಯಕ್ಷ ಹಾಗು ಅಪ್ರತ್ಯಕ್ಷವಾಗಿ ನಿರಂತರವಾದ ಚೈತನ್ಯವನ್ನು ತುಂಬಿದ ಶ್ರೇಯವು ಶ್ರೀಭುವನೇಂದ್ರತೀರ್ಥರೆನ್ನುವ ಮಹಾತಪಸ್ವಿಗಳಿಗೆ ಸಲ್ಲುತ್ತದೆ.
ಶ್ರೀಭುವನೇಂದ್ರತೀರ್ಥರು ಮಧ್ವರ ಮೂಲಪರಂಪರೆಯಲ್ಲಿ ಶ್ರೀರಾಯರ ನಂತರ 9ನೆಯವರು. ಇವರ ವಿದ್ಯೆ ಮತ್ತು ಅಸೀಮವಾದ ಆತ್ಮವಿಶ್ವಾಸಕ್ಕೆ ಶ್ರೀಹರಿವಾಯುಗುರುಗಳ ಸಂಪೂರ್ಣ ಅನುಗ್ರಹವಿತ್ತು. ಅಂತೆಯೇ ಇವರು ಸರ್ವಜ್ಞಪೀಠದಲ್ಲಿ ಕುಳಿತುಕೊಳ್ಳುವ ಅವಕಾಶವನ್ನು ಪಡೆದುಕೊಂಡರು. ಇವರು ವಿಶ್ವಾಸದಿಂದ ನುಡಿದ ಮಾತಿಗೆ ಶ್ರೀಮದಾಚಾರ್ಯರೇ ಇವರೊಳಗೆ ನಿಂತು ಸಿದ್ಧಾಂತಸ್ಥಾಪನೆ ಮಾಡಿಸಿದ ಅಪೂರ್ವವಾದ ಒಂದು ಸಂಗತಿ ಇವರ ಜೀವನ ಚರಿತ್ರೆಯಲ್ಲಿ ಕಂಡುಬರುತ್ತದೆ.

ಅರಮನೆಯಲ್ಲಿ ವಾಕ್ಯಾರ್ಥ

ಗದ್ವಾಲು ಹಿಂದೆ ಅನೇಕ ರಾಜರುಗಳ ಆಶ್ರಯದಲ್ಲಿ ಇದ್ದ ಒಂದು ಮಾಂಡಲಿಕ ಸಂಸ್ಥಾನವಾಗಿತ್ತು. ಒಮ್ಮೆ ಈ ಸಂಸ್ಥಾನದ ಅರಮನೆಯಲ್ಲಿ ಒಂದಷ್ಟು ವಿದ್ವಾಂಸರು ಸೇರಿ ಚರ್ಚೆಯೊಂದನ್ನು ಆರಂಭಿಸಿದರು. ಚರ್ಚೆಯ ಆರಂಭಿಕ ಉದ್ದೇಶವೇನಿತ್ತೋ ಅದು ಮರೆಯಾಗಿ ಅದು ಮಧ್ವಮತವನ್ನೇ ಹಳಿಯುವ ಗದ್ದಲವಾಗಿ ಮಾರ್ಪಟ್ಟಿತು. ಈ ಸಭೆಗೆ ಶ್ರೀಭುವನೇಂದ್ರತೀರ್ಥರನ್ನೂ ಆಹ್ವಾನಿಸಲಾಗಿತ್ತು. ಪರೋಕ್ಷವಾಗಿ ಇವರ ತೇಜೋವಧೆಯನ್ನು ಮಾಡುವುದೂ ಇತರರ ಆಶಯವಿತ್ತೋ ಏನೋ, ವಾದಿಗಳು ಮಧ್ವಾಚಾರ್ಯರ ಗ್ರಂಥರಚನೆಯ ಸಾಮರ್ಥ್ಯವನ್ನೇ ಪ್ರಶ್ನಿಸಿದರು. “ವಿದ್ಯೆಯು ಇಲ್ಲದ್ದರಿಂದಲೇ ಮಧ್ವಾಚಾರ್ಯರು ವೇದದ ಎಲ್ಲ ಮಂತ್ರಗಳಿಗೂ ವ್ಯಾಖ್ಯಾನ ಮಾಡಿಲ್ಲ. ಕೇವಲ ಕೆಲವೇ ಸೂಕ್ತಗಳಿಗೆ ಮಾತ್ರವೇ ಅವರು ಅರ್ಥವನ್ನು ಹೇಳಿದ್ದಾರೆ. ಇದು ಮಧ್ವಾಚಾರ್ಯರ ಜ್ಞಾನದ ಕೊರತೆಯನ್ನು ತೋರಿಸುತ್ತದೆ” ಎಂದೊಬ್ಬ ವಾದಿಸಿದ. ಬೇರೆಲ್ಲ ಅಪಶಬ್ದಗಳಿಗೆ ಕೋಪಗೊಳ್ಳದೆ ಪ್ರಶಾಂತರಾಗಿದ್ದ ಶ್ರೀಭುವನೇಂದ್ರತೀರ್ಥರ ಸಹನೆಯ ಕಟ್ಟೆ ಒಡೆದದ್ದು ಈ ದುರಹಂಕಾರದ ಮಾತುಗಳಿಗೆ. ಆದರೂ ಅವರು ದೃಢಚಿತ್ತರಾಗಿ, ಅಪಾರವಿಶ್ವಾಸದ ಮುಗುಳ್ನಗೆಯಿಂದ ಉತ್ತರಿಸಿದರು. ” ಎಲ್ಲ ಮಂತ್ರಗಳಿಗೂ ಶ್ರೀಮಧ್ವವ್ಯಾಖ್ಯಾನವು ಇದೆ. ನಿಮಗೆ ಗೊತ್ತಿಲ್ಲವಷ್ಟೇ” ಎಂದು.
“ಹಾಗಿದ್ದರೆ ತಂದು ತೋರಿಸಿ ಆ ವ್ಯಾಖ್ಯಾನವನ್ನು” ಎಂದು ಆ ಶಬ್ಧಭಂಡಾರಿಯು ಎಗರಾಡಿದ. “ಆಯ್ತು ನಾಳೆಯೇ ತೋರಿಸುತ್ತೇವೆ” ಎಂದು ಶ್ರೀಭುವನೇಂದ್ರತೀರ್ಥರು ತಮ್ಮ ವಾಸ್ತವ್ಯಕ್ಕೆ ಮರಳಿ, ಶುಚಿರ್ಭೂತರಾಗಿ ಧ್ಯಾನಮಗ್ನರಾದರು. ಅಲ್ಲಿಂದ ಮುಂದೆ ನಡೆದದ್ದೆಲ್ಲ ಶ್ರೀಮಧ್ವರ ಮಹಿಮೆಯೇ.

ವೇದವ್ಯಾಖ್ಯಾನ ಹೊರಹೊಮ್ಮಿತು

ತಮ್ಮ ಅಸ್ತಿತ್ವದ ಮೇಲೆ ಅಷ್ಟು ದೃಢವಿಶ್ವಾಸವಿಟ್ಟಿರುವ ತಮ್ಮ ಕಂದನೇ ಆದ ಯತಿಯ ಮನೋಪಟಲದಲ್ಲಿ ಶ್ರೀಮದಾಚಾರ್ಯರು ಮೂಡಿದರು. ಹಾಗೆಯೇ ನಿಧಾನವಾಗಿ ದೇಹಾದ್ಯಂತ ವ್ಯಾಪ್ತರಾಗಿ ಕಣಕಣದಲ್ಲೂ ಆವರಿಸಿಕೊಂಡರು. ಶ್ರೀಭುವನೇಂದ್ರತೀರ್ಥರ ಕೈಗಳು ಗ್ರಂಥಬರೆವ ಸಾಮಾಗ್ರಿಗಳನ್ನು ಕೈಗೆತ್ತಿಕೊಂಡವು. ಶ್ರೀಕಾರವು ಮೊದಲಾಯಿತು, ದುರ್ಗೆಯ ಸ್ಮರಣೆಯೂ ಆಯಿತು. ಸಮಗ್ರವೇದಭಾಷ್ಯ ಗ್ರಂಥದ ರಚನೆ ಮೊದಲ ಅಕ್ಷರವು ಕೂಡ ಪ್ರಾರಂಭಗೊಂಡೇ ಬಿಟ್ಟಿತು. ತಮ್ಮಲ್ಲಿ ಪ್ರವಹಿಸುತ್ತಿರುವ ಈ ಮಹದಾನಂದಕಾರಕವಾದ ಈ ಚೈತನ್ಯದ ಕಣಕಣವನ್ನೂ ಆನಂದಿಸುತ್ತ, ಆನಂದದ ಕಣ್ಣೀರು ಸುರಿಸುತ್ತ ಭಾಷ್ಯದ ರಚನೆಯನ್ನು ಮಾಡುತ್ತಲೇ ಸಾಗಿದರು. ಅವರಿಗೆ ಗೊತ್ತು, ತಮ್ಮೊಳಗೆ ಸಂಚರಿಸುತ್ತಿರುವುದು ರಕ್ತವಲ್ಲ. ಸಕಲಲೋಕಗಳ ಗುರುವಾದ ಪೂರ್ಣಪ್ರಜ್ಞರೇ ವಿದ್ಯುತ್ತಿನ ರೂಪದಿಂದ ಒಳಗೆ ಸಂಚಾರ ಮಾಡುತ್ತಿದ್ದಾರೆ ಎಂದು. ಎಷ್ಟು ಸಾಧ್ಯವಾಗುವುದೋ ಅಷ್ಟನ್ನೂ ಆನಂದಿಸಲೇಬೇಕು ಎಂಬುದು ಅವರ ತುಡಿತ.
ಆಗಾಧವಾದ ಶಕ್ತಿಯ ಸಂಚಾರವಾದರೂ ದೇಹವು ಕಿಂಚಿತ್ತೂ ಬಳಲಿಲ್ಲ. ಉಷಃಕಾಲವು ಪ್ರಾರಂಭಗೊಳ್ಳಲು ಸಾಕಷ್ಟು ಸಮಯವಿದ್ದಂತಯೇ ಗ್ರಂಥರಚನೆಯು ಸಂಪೂರ್ಣ ಆಗಿಯೇ ಬಿಟ್ಟಿತು. ಶ್ರೀಗಳವರು ಉಳಿದ ಸಮಯವನ್ನೆಲ್ಲ ವಿಷ್ಣುಜಾಗರದಲ್ಲಿಯೇ ಕಳೆದು, ಶ್ರೀಮಧ್ವರ ಅಂತಃಕರಣದ ಪ್ರಭಾವವು ತಮ್ಮ ಮೇಲೆ ಇರುವುದನ್ನೇ ನೆನೆದು ನೆನೆದು ಆನಂದಿಸಿದರು.
ಮರುದಿನ ಸಭೆಯಲ್ಲಿ ಗ್ರಂಥವನ್ನು ಪ್ರದರ್ಶಿಸಲಾಯ್ತು. ಮೊದಲಿಗೆ ಅನುಮಾನದಿಂದಲೇ ಅದರತ್ತ ನೋಡಿದ ದುರ್ವಾದಿಗಳು ಕೊನೆಗೆ ಬೆಪ್ಪು ಬೆರಗಾಗಿ, ಯಾಕಾದರೂ ಆ ಮಾತು ಆಡಿದೆವೋ ಎಂಬ ಭಾವನೆಯಿಂದ ತಲೆತಗ್ಗಿಸಿದರು. ಯಾಕೆಂದರೆ ಅವರಿಗೆ ಶ್ರೀಮಧ್ವರ ಗ್ರಂಥರಚನೆಯ ಶೈಲಿಯ ಅರಿವು ಚೆನ್ನಾಗಿ ಇತ್ತು! ಮತ್ತೆ ಮತ್ತೆ ಗ್ರಂಥವನ್ನು ನೋಡುತ್ತಾ ಅದನ್ನೇ ಶ್ಲಾಘನೆ ಮಾಡಲಾರಂಭಿಸಿಬಿಟ್ಟರು. ಶ್ರೀಭುವನೇಂದ್ರತೀರ್ಥರೋ ವ್ಯಾಸದೇವಸುತನು ತಮ್ಮ ಮೇಲೆ ಸುರಿಸಿದ ಕರುಣಾಮೃತಧಾರೆಯನ್ನು ಮತ್ತೆ ಮತ್ತೆ ನೆನೆದು ಪುಲಕಿತರಾದರು.

ವ್ಯಾಖ್ಯಾನಕ್ಕೆ ದಿವ್ಯವಾದ ಬೀಳ್ಕೊಡುಗೆ

ನೆರೆದ ಎಲ್ಲ ವಿದ್ವಾಂಸರನ್ನು ಸತ್ಕರಿಸಿ, ಅವರನ್ನು ಬೀಳ್ಕೊಟ್ಟು ಶ್ರೀಗಳವರು ತಮ್ಮ ಬಿಡಾರಕ್ಕೆ ಬಂದು ಮತ್ತೊಮ್ಮೆ ಶ್ರೀಸರ್ವಜ್ಞಮೂರ್ತಿಯನ್ನು ಧ್ಯಾನಿಸುತ್ತಾ ವಿರಮಿಸಿದರು. ಸ್ವಪ್ನಪಟಲದಲ್ಲಿ ಮತ್ತೊಮ್ಮೆ ಆನಂದಮುನಿಗಳ ದರ್ಶನವಾಯ್ತು. ಆಗ ಕೇಳಿದರು. “ಮಹಾಚಾರ್ಯ! ಈ ವೇದಭಾಷ್ಯವನ್ನು ನಾವು ಮುದ್ರಿಸಿ ಪ್ರಚುರಪಡಿಸುವುದೇ?” ಎಂದು. ಮುಗುಳ್ನಗುತ್ತಾ ಮಧ್ವರೆಂದರು. “ನಮ್ಮ ಇಷ್ಟು ಮಾತ್ರದ ವ್ಯಾಖ್ಯಾನದಿಂದಲೇ ಬೇರೆ ಎಲ್ಲದಕ್ಕೂ ಅರ್ಥ ಸಿಗುವುದು. ಓದುಗನಿಗೆ ಅರಿವು ಇರಬೇಕಷ್ಟೇ. ವಿಸ್ತೃತವಾದ ವ್ಯಾಖ್ಯಾನವು ಮುಂದೆ ಅಯೋಗ್ಯರ ಕೈಗೆ ಸಿಕ್ಕರೆ ಅನಾಹುತವೇ ಆಗುವುದು. ಅದಾಗಕೂಡದು. ಈಗ ನೀವು ನಮ್ಮ ಮೇಲಿನ ಅತಿಶಯವಾದ ಪ್ರೀತಿಯಿಂದಲೇ ಸಭೆಯಲ್ಲಿ ವಾಗ್ದಾನ ಮಾಡಿಬಂದಿರಿ. ಆ ನಿಮ್ಮ ಪ್ರೀತಿಗೆ ಸೋತು ನಾವು ನಿಮ್ಮೊಳಗೆ ನಿಂತು ನಿಮ್ಮ ಮಾತನ್ನು ನಡೆಸಿದ್ದೇವಷ್ಟೇ. ಹಾಗಾಗಿ ಇದರ ಪ್ರಚಾರದ ಅಗತ್ಯವಿಲ್ಲ” ಎಂದು.
“ಸರಿ, ಹಾಗಾದರೆ ಈ ಗ್ರಂಥವನ್ನೇನು ಮಾಡುವುದು?” ಎಂದು ಇವರು ಕೇಳಿದಾಗ “ಅದನ್ನು ತುಂಗಭದ್ರೆಯಲ್ಲಿ ವಿಸರ್ಜಿಸಿ. ಆಕೆಯು ಆ ಅಕ್ಷರಗಳನ್ನೆಲ್ಲ ಪುನಃ ವಾಸುದೇವನಲ್ಲಿ ತಂದು ಸೇರಿಸುವಳು” ಎಂಬ ಉತ್ತರವು ಬಂದಿತು. ತಡವೇಕೆ? ಶ್ರೀಭುವನೇಂದ್ರತೀರ್ಥರು ಆ ಗ್ರಂಥವನ್ನು ಪೂಜಿಸಿ ಸಕಲಮರ್ಯಾದೆಯಿಂದ ತುಂಗಭದ್ರೆಯಲ್ಲಿ ವಿಸರ್ಜಿಸಿಬಿಟ್ಟರು.
ಅಬ್ಬಾ! ಎಂತಹ ಮಹಾವ್ಯಕ್ತಿತ್ವ ಶ್ರೀಭುವನೇಂದ್ರ ತೀರ್ಥರದ್ದು? ಬರೆದ ಒಂದಕ್ಷರವನ್ನು ಕೂಡ ಅಳಿಸಿ ಹಾಕಲು ನಮ್ಮ ಮನಸ್ಸೊಪ್ಪದು. ಅಂತಹುದರಲ್ಲಿ ಸಕಲ ಅಕ್ಷರಾಭಿಮಾನಿ ದೇವತೆಗಳೆಲ್ಲ ನಾಮುಂದು ತಾಮುಂದು ಎಂದು ಬಂದು ನೆಲೆಸಿದ ಮಹಾನ್ ಭಾಷ್ಯವೊಂದನ್ನು ನೀರಲ್ಲಿ ವಿಸರ್ಜನೆ ಮಾಡಲು ಅದೆಷ್ಟು ಧೈರ್ಯ ಇದ್ದಿರಬೇಕು? ಆಚಾರ್ಯ ಮಧ್ವರ ಮಾತು ಎಂದರೆ ಅದೆಂತಹ ನಿಷ್ಠೆ ಅವರಿಗೆ? ಅದೆಷ್ಟು ಪ್ರೇಮ ಅವರ ಮೇಲೆ? ಆಚಾರ್ಯ ಮಧ್ವರ ಪ್ರೇಮವಾದರೂ ಎಷ್ಟು ಅತಿಶಯವಾದದ್ದು ಇವರ ಮೇಲೆ ಅಲ್ಲವೇ? ಶ್ರೀಹರಿಯ ಸರ್ವೋತ್ತಮತ್ವದ ನಿಷ್ಠೆ ಇರುವವರಿಗೆ, ಶಾಸ್ತ್ರಾಚಾರದ ವಿಷಯದಲ್ಲಿ ಎಂದಿಗೂ ಅಪವಿತ್ರ ರಾಜಿಯನ್ನು ಮಾಡಿಕೊಳ್ಳದ ಶ್ರದ್ಧಾಳುವಿನಲ್ಲಿ ತಾವೇ ನಿಂತು, ಭಕ್ತನು ನುಡಿದ ಮಾತನ್ನು ಸತ್ಯಮಾಡಿ ತೋರಿಸುವಷ್ಟು ಅಂತಃಕರಣವುಳ್ಳವರು ನಮ್ಮ ಜೀವೋತ್ತಮರು. ಶ್ರೀಭುವನೇಂದ್ರತೀರ್ಥರ ಜೀವನವೇ ಇದಕ್ಕೊಂದು ಸಾಕ್ಷಿ.

ಸುಮಾರು 20 ವರ್ಷಗಳ ಕೆಳಗೆ ಈ ದಿವ್ಯಚರಿತ್ರೆಯನ್ನು ತಿಳಿಸಿಕೊಟ್ಟದ್ದು ಪೂಜ್ಯರಾದ, ಮಹಾಮಹೋಪಾಧ್ಯಾಯರಾದ ಶ್ರಿ ಗಿರಿ ಆಚಾರ್ಯರು. ಇಲ್ಲಿ ಇರುವುದು ನನ್ನ ಶಬ್ದಗಳು ಮತ್ತು ನಿರೂಪಣೆ ಮಾತ್ರವೇ. ಈ ಚರಿತ್ರೆಯಿಂದ ಶ್ರೀಹರಿವಾಯುಗುರುಗಳು ಸಂತಸಪಟ್ಟಲ್ಲಿ, ಓದುಗರು ಆನಂದಿಸಿದಲ್ಲಿ ಅದರ ಫಲವೆಲ್ಲ ಅತ್ಯಂತ ಹಿರಿಯರಾದ ಶ್ರೀಆಚಾರ್ಯರಿಗೆ ಸಲ್ಲುವುದು. ತಪ್ಪುಗಳೇನಿದ್ದರೂ ನನ್ನವು.

ರಾಜೋಳಿ (ರಾಜವಳ್ಳಿ) ಗ್ರಾಮ

ಮುಂದೆ ಶ್ರೀಭುವನೆಂದ್ರತೀರ್ಥರು ಗದ್ವಾಲ್ ರಾಜಸಂಸ್ಥಾನದಿಂದ ರಾಜಗುರುಗಳೆಂದು ಮಾನಿತರಾದರು. ಮಂತ್ರಾಲಯದ ಸುತ್ತ ಮುತ್ತ ಇರುವ ಎಲ್ಲ ಗ್ರಾಮಗಳೂ ಕೂಡ ಒಂದಲ್ಲ ಒಂದು ರೀತಿ ಶ್ರೀಭುವನೇಂದ್ರತೀರ್ಥರಿಗೆ ಜಹಗೀರುಗಳಾಗಿ ಬಂದಿವೆ. ಇವರು ತಮ್ಮ ಇಹಲೋಕದ ಸಾಧನೆಯ ಕೊನೆಯ ದಿನಗಳನ್ನು ಕಳೆದದ್ದು ತುಂಗಭದ್ರಾನದಿಯ ದಡದ ಮೇಲೆ ಇರುವ ರಾಜೋಳಿ ಎಂಬ ಹಳ್ಳಿಯಲ್ಲಿ. ಇದು ಈಗಿನ ತೆಲಂಗಾಣ ರಾಜ್ಯದ ಗದ್ವಾಲ್ ಜಿಲ್ಲೆಯಲ್ಲಿರುವ ಕುಗ್ರಾಮ. ತೆಲಂಗಾಣ ರಾಜ್ಯಕ್ಕೆ ಸೇರಿದೆ. ಗದ್ವಾಲ್ ಜಿಲ್ಲೆಯ ಆಡಳಿತಕ್ಕೆ ಒಳಪಟ್ಟಿದೆ. ಮಂತ್ರಾಲಯದಿಂದ 75 ಕಿಲೋಮೀಟರು ದೂರದಲ್ಲಿದೆ. ಕರ್ನೂಲಿಗೆ ಸುಮಾರು 25ಕಿ.ಮೀ ಆಗುತ್ತದೆ. ಈ ಸುತ್ತಮುತ್ತಲಿನ ಪ್ರದೇಶವೆಲ್ಲ ತೀವ್ರವಾದ ಬಿಸಿಲಿನ ಹೊಡೆತಕ್ಕೆ ಸಿಕ್ಕಿದ್ದರೂ ವೃಂದಾವನವಿರುವ ಪರಿಸರವು ಮಾತ್ರ ಅದ್ಭುತ ಎನ್ನುವಂತೆ ತಂಪಾಗಿ ಇರುತ್ತದೆ. ಸೆಪ್ಟಂಬರ್ ತಿಂಗಳಿನಲ್ಲಿ ನದಿಯ ದಡವಂತೂ ಒಂದು ಪುಟ್ಟ ಪಕ್ಷಿಧಾಮವಾಗಿ ಬದಲಾಗಿರುತ್ತದೆ.

ವೃಂದಾವನ ಸ್ಥಳಾಂತರ ಮತ್ತು ಮಹಿಮಾಪ್ರದರ್ಶನ

ಶ್ರೀಭುವನೇಂದ್ರತೀರ್ಥರ ಮೂಲವೃಂದಾವನ ಸನ್ನಿಧಿ – ರಾಜವಳ್ಳಿ
ಆಗಿನ ಆಂಧ್ರರಾಜ್ಯ ಸರ್ಕಾರವು ಈ ಹಳ್ಳಿಯ ಬಳಿ ಜಲಾಶಯವೊಂದನ್ನು ನಿರ್ಮಿಸುವ ಯೋಜನೆಯೊಂದನ್ನು ಹಾಕಿಕೊಂಡಿತು. ಆಗ ಗುರುಗಳ ವೃಂದಾವನದ ಮೂಲ ಸ್ಥಳವು ಮುಳುಗಡೆಯಾಗುವ ಪ್ರಸಂಗ ಬಂದಿತು. ಶ್ರೀಶ್ರೀಸುಶಮೀಂದ್ರತೀರ್ಥ ಶ್ರೀಪಾದಂಗಳವರು ವೃಂದಾವನದ ಕಳಾಕರ್ಷಣೆಯನ್ನು ಮಾಡಿ, ಮಂತ್ರಾಲಯಕ್ಕೆ ಅದನ್ನು ಸ್ಥಳಾಂತರಿಸುವ ಒಂದು ಅಭಿಪ್ರಾಯವನ್ನು ಹೊಂದಿದ್ದರು. ಆದರೆ ಆ ಗ್ರಾಮಸ್ಥರು ಶ್ರೀಗಳವರಲ್ಲಿ ಬಂದು “ಸ್ವಾಮಿ, ಈ ಗುರುಗಳು ನಮ್ಮನ್ನೆಲ್ಲ ಕಾಯುತ್ತಿದ್ದಾರೆ. ದಯಮಾಡಿ ಇವರನ್ನು ನಮ್ಮ ಊರಿನಲ್ಲಿಯೇ ಇರುವಂತೆ ವ್ಯವಸ್ಥೆ ಮಾಡಿ” ಎಂದು ಕೇಳಿಕೊಂಡರು. ಅವರೆಲ್ಲರ ಮನವಿಯನ್ನು ಪುರಸ್ಕರಿಸಿ ಶ್ರೀಸುಶಮೀಂದ್ರತೀರ್ಥರು ಶ್ರೀಭುವನೇಂದ್ರತೀರ್ಥ ಶ್ರೀಪಾದರ ವೃಂದಾವನದ ಕಳಾಕರ್ಷಣೆಯನ್ನು ಮಾಡಿ, ಮೂಲವೃಂದಾವನವನ್ನು ರಾಜೋಳಿಯಲ್ಲಿಯೇ ಮತ್ತೊಂದು ಕಡೆ ಸ್ಥಾನಾಂತರಿಸಿ, ಪುನಃ ಪ್ರತಿಷ್ಠಾಪನೆಯನ್ನು ಮಾಡಿದರು.
ಸ್ಥಾನಾಂತರಕ್ಕಾಗಿ ವೃಂದಾವನದ ಸ್ಥಳವನ್ನು ತೆಗೆದು ನೋಡಿದಾಗ ಅಲ್ಲಿ 2 ಶತಮಾನಗಳ ಕೆಳಗೆ ಇರಿಸಿದ ಶಂಖ, ಶಾಲಗ್ರಾಮ, ತೀರ್ಥದ ಗಿಂಡಿಗಳು ಹಾಗೆಯೇ ಇದ್ದವು. ಆ ವಸ್ತುಗಳನ್ನು ಸ್ಪರ್ಷಿಸುವ ಭಾಗ್ಯವನ್ನು ಶ್ರೀಸುಯಮೀಂದ್ರ ಆಚಾರ್ಯ, ಶ್ರೀವಾದೀಂದ್ರ ಆಚಾರ್ಯ ಮತ್ತು ನನ್ನ ಕೆಲ ಸ್ನೇಹಿತರು ಪಡೆದುಕೊಂಡಿದ್ದರು. ಅವುಗಳನ್ನು ಮುಟ್ಟಿದಾಗ ವರ್ಣನೆಗೆ ಮೀರಿದ ಒಂದು ಚೇತನದ ಅಲೆಯು ತಮ್ಮ ದೇಹದಲ್ಲಿ ಪ್ರವೇಶಿಸಿದ ಅನುಭವವನ್ನು ಇವರೆಲ್ಲರೂ ಆ ನಂತರ ಹಂಚಿಕೊಂಡರು. ಇದು ಶ್ರೀಭುವನೇಂದ್ರತೀರ್ಥರು ಅದೃಶ್ಯರೂಪದಲ್ಲಿ ಆ ಪ್ರದೇಶದಲ್ಲಿ ಸನ್ನಿಹಿತರಾಗಿದ್ದುಕೂಂಡು, ಭಕ್ತರನ್ನು ಕಾಯುತ್ತಿರುವ ವಿಷಯಕ್ಕೆ ಇರುವ ಸೂಚನೆಯಾಗಿದೆ.
ಶ್ರೀಮಧ್ವರಾಯರ ಪೀಠದ ಪ್ರಸ್ತುತ ಅಧಿಪತಿಗಳಾದ ಶ್ರೀಶ್ರೀಸುಬುಧೇಂದ್ರತೀರ್ಥ ಶ್ರೀಪಾದಂಗಳವರು ತಮ್ಮ ಚಿಕ್ಕವಯಸ್ಸಿನಿಂದಲೂ ಶ್ರೀಭುವನೇಂದ್ರತೀರ್ಥರ ಪ್ರತಿಯೊಂದು ಆರಾಧನೆಯಲ್ಲಿಯೂ ತಪ್ಪದೇ ಭಾಗವಹಿಸಿರುವುದು ಒಂದು ವಿಶೇಷ.

ಪೂಜೆ, ಹಸ್ತೋದಕ ಇತ್ಯಾದಿ ವ್ಯವಸ್ಥೆ

ಶ್ರೀಗುರುಗಳ ಸನ್ನಿಧಿಯಲ್ಲಿ ಪ್ರತಿನಿತ್ಯ ಪೂಜೆ ಮತ್ತು ಹಸ್ತೋದಕದ ವ್ಯವಸ್ಥೆ ಇದೆ. ಇದಕ್ಕೆಂದೇ ಶ್ರೀಮಠದಿಂದ ವ್ಯವಸ್ಥಾಪಕರು ಇದ್ದಾರೆ. ಮೊದಲೇ ತಿಳಿಸಿದಲ್ಲಿ ತೀರ್ಥಪ್ರಸಾದದ ವ್ಯವಸ್ಥೆಯು ಆಗುವುದು. ಮಂತ್ರಾಲಯಕ್ಕೆ ದರ್ಶನಕ್ಕಾಗಿ ಬಂದವರು, ಮಧ್ಯಾಹ್ನ ಊಟವಾದ ನಂತರ ಒಂದು ಗಾಡಿಯನ್ನು ಮಾಡಿಕೊಂಡು ರಾಜೋಳ್ಳಿಗೆ ಭೇಟಿ ನೀಡಬಹುದು. ಹೋಗಿ ಬರಲು ಸುಮಾರು 5-6 ಗಂಟೆಗಳು ಸಾಕು.

ರಾಜೋಳ್ಳಿಯ ಹತ್ತಿರ ಯಾವ ಕ್ಷೇತ್ರಗಳಿವೆ?

ಮಾಧ್ವರಿಗೆ ಪರಮಪ್ರಿಯವಾಗುವ ಬಹಳಷ್ಟು ಕ್ಷೇತ್ರಗಳು ರಾಜೋಳ್ಳಿಗೆ ಬಹಳ ಸಮೀಪ. ಇಲ್ಲಿಗೆ ಸುಮಾರು 25 ಕಿ,ಮೀ ಸುತ್ತಳತೆಯಲ್ಲಿ ಏನೆಲ್ಲೆ ಇವೆ ನೋಡಿ!

ಗದ್ವಾಲ್ : ಶ್ರೀಚನ್ನಕೇಶವನ ಪ್ರಾಚೀನವಾದ ಗುಡಿ
ವೇಣಿಸೋಮಪುರ : ಶ್ರೀವ್ಯಾಸತತ್ತ್ವಜ್ಞತೀರ್ಥರ ಸನ್ನಿಧಿ
ಮೊದಲಕಲ್ : ಬೇಟೆಗಾರ ಶ್ರೀನಿವಾಸನ ಸನ್ನಿಧಿ ಮತ್ತು ಶ್ರೀಶೇಷದಾಸರ ಕಾರ್ಯಕ್ಷೇತ್ರ
ಉತ್ತನೂರು : ಶ್ರೀಗೋಪಾಲದಾಸರ ಮನೆ
ಸಂಕಾಪುರ : ಶ್ರೀಗೋಪಾಲದಾಸರಿಗೆ ಗಾಯತ್ರೀಮಂತ್ರ ಸಿದ್ಧಿಯಾದ ಸ್ಥಳ
ಹೇಗೆ ಹೋಗುವುದು?

ದಾರಿ 1: ಮಂತ್ರಾಲಯದಲ್ಲಿ ಬಸ್ ನಿಲ್ದಾಣಕ್ಕೆ ಹೋಗುವಾಗ ನಾಲ್ಕು ದಿಕ್ಕಿನಲ್ಲಿಯೂ ರಾಯರನ್ನು ಕೂರಿಸಿರುವ ಒಂದು ಸರ್ಕಲ್ ಕಾಣಿಸುತ್ತದೆ ಅಲ್ಲವೆ. ಒಂದು ರೈಲ್ವೇ ನಿಲ್ದಾಣಕ್ಕೂ ಇನ್ನೊಂದು ಬಸ್ ನಿಲ್ದಾಣಕ್ಕೂ ಹೋಗುತ್ತದೆಂದು ಎಲ್ಲ ಯಾತ್ರಿಕರಿಗೂ ಗೊತ್ತು. ಯಾರೂ ಹೆಚ್ಚು ತಲೆ ಕೆಡಿಸಿಕೊಳ್ಳಲು ಹೋಗದ ಇನ್ನೊಂದು ದಾರಿ ಉಂಟಲ್ಲ, ಅದುವೆ ನಮ್ಮನ್ನು ನಮ್ಮ ಕಥಾನಾಯಕರಾದ ಶ್ರೀಭುವನೆಂದ್ರತೀರ್ಥರೆಡೆಗೆ ಕರೆದುಕೊಂಡು ಹೋಗುವುದು. ಆ ದಾರಿಯಲ್ಲಿ ಸುಮಾರು 25 ಕಿ.ಮೀ ಕ್ರಮಿಸಿದ ನಂತರ ಗುಂಡ್ರೇವುಲ ಎಂಬ ಪುಟಾಣಿ ಹಳ್ಳಿ ಸಿಗುವುದು. ಅಲ್ಲಿ ಶ್ರೀಭುವನೇಂದ್ರತೀರ್ಥರ ಶಿಷ್ಯರಾದ ಶ್ರೀಸುಬೋಧೇಂದ್ರತೀರ್ಥರ ಮೃತ್ತಿಕಾ ವೃಂದಾವನವಿದೆ. ಅಲ್ಲಿ ಹೋಗಿ, ದರ್ಶನ ಮಾಡಿಕೊಂಡು ಮುಂದುವರೆಯಿರಿ.
ನಿಮ್ಮ ಎಡಗಡೆಗೆ ಅಲ್ಲಲ್ಲಿಯೇ ತುಂಗಭದ್ರೆಯು ಕಣ್ಣಾಮುಚ್ಚೇ ಆಟವಾಡುತ್ತಾ ಬರುವಳು. ಅವಳನ್ನೇ ಗಮನಿಸುತ್ತಾ ಮತ್ತೆ ಸುಮಾರು 25 ಕಿ.ಮೀ ಮುಂಬರಿದರೆ ನಿಮಗೊಂದು ಜಲಾಶಯವು ಕಾಣಿಸುವುದು. ಮೇಲೆ ಹೇಳಿದ ಜಲಾಶಯವು ಇದೇ. ಈ ಊರಿಗೆ ಸುಂಕೇಸುಲ ಎಂದು ಹೆಸರು. ಇಲ್ಲಿ ರಸ್ತೆ ಇಬ್ಭಾಗ ಆಗುತ್ತದೆ. ಎಡಪಕ್ಕದಲ್ಲಿರುವ, ಅಣೇಕಟ್ಟೆಯ ಸೇತುವೆಯ ಮೇಲೆ ಮುಂದುವರೆಯಿರಿ. (ನೇರವಾಗಿ ಹೋಗುವ ರಸ್ತೆ ಕರ್ನೂಲಿಗೆ ಹೋಗಿ ಸೇರುತ್ತದೆ) ಸೇತುವೆಯಿಂದ ಕೆಳಗೆ ಇಳಿದು, ಕುಲುಕಾಡುವ ರಸ್ತೆಯಲ್ಲಿ ಮುಂದುವರೆಯಿರಿ. ಕನ್ನಡ ಮಾತನಾಡುವ ಜನರು ಸಾಕಷ್ಟು ಇದ್ದಾರೆ. ಅಲ್ಲಿ ಕೇಳಿದರೆ ಶ್ರೀಭುವನೇಂದ್ರತೀರ್ಥರ ಸನ್ನಿಧಿಗೆ ದಾರಿಯನ್ನು ತೋರಿಸುತ್ತಾರೆ.
ದಾರಿ 2 : ರೈಲ್ವೇ ನಿಲ್ದಾಣಕ್ಕೆ ಹೋಗುವ ರಸ್ತೆಯನ್ನು ಹಿಡಿದುಕೊಂಡು, ರಾಯಚೂರಿನ ದಿಕ್ಕಿನತ್ತ ಮುಂದುವರೆಯಿರಿ. ಯರಗೇರಾ ಎನ್ನುವ ಹಳ್ಳಿಯ ಬಳಿ ಇರುವ ಜಂಕ್ಷನ್ನಿನಲ್ಲಿ ಬಲ ತಿರುವು ತೆಗೆದುಕೊಳ್ಳಬೇಕು. ಇದು ಕರ್ನೂಲಿಗೆ ಹೋಗುವ ರಸ್ತೆ. ಸುಮಾರು 40 ಕಿ.ಮೀ ಆದ ನಂತರ ಶಾಂತಿನಗರ ಎನ್ನುವ ಪಟ್ಟಣ ಬರುತ್ತದೆ. ಅಲ್ಲಿಂದ ಸುಮಾರು 5 ಕಿ.ಮೀ ದೂರ ಈ ರಾಜೋಳ್ಳಿ. ಶಾಂತಿ ನಗರದ ಮುಖ್ಯ ವೃತ್ತದಲ್ಲಿ, ಸ್ಥಳಿಯರನ್ನು ಕೇಳಿಕೊಂಡು ರಾಜೋಳ್ಳಿಯತ್ತ ಮುಂದುವರೆಯಿರಿ.
ರಾಜೋಳಿಯಲ್ಲಿ ಶ್ರೀಗಳವರ ಸನ್ನಿಧಿಯ ಹತ್ತಿರದಲ್ಲಿಯೇ ಪ್ರಾಚೀನವಾದ ರಂಗನಾಥನ ದೇವಳವೊಂದು ಇದೆ. ಗುರುಗಳ ದರ್ಶನವಾದ ನಂತರ ಅಲ್ಲಿ ಕೂಡ ದರ್ಶನವನ್ನು ತಪ್ಪದೇ ಮಾಡಿ.
ಸೂರಿಗೆ ಮತ್ತು ಶ್ರೀನಿಧಿಗೆ ವಿಶ್ವಾಸಪೂರ್ವಕ ಧನ್ಯವಾದಗಳು
*********

" ದಿನಾಂಕ : 14.05.2020 ಗುರುವಾರ ಶ್ರೀ ಭುವನೇಂದ್ರತೀಥರ ಆರಾಧನಾ ಮಹೋತ್ಸವ - ರಾಜವಳ್ಳಿ "
" ಶ್ರೀ ರಾಯರ ಉಭಯ ವಂಶಾಬ್ಧಿ ಚಂದ್ರಮರೂ, ಶ್ರೀ ಇಂದ್ರ ದೇವರ ಅಂಶ ಸಂಭೂತರೂ, ಬೊಮ್ಮನ ಸಂತತಿಯಲ್ಲಿ ವಿರಾಜಿಪ ಶ್ರೀ ಭುವನೇಂದ್ರತೀಥರು "
ಶ್ರೀ ಪ್ರಾಣೇಶದಾಸರು...
ಸುವಿವೇಕಿಗಳಿಗಿಷ್ಟ ।
ತವಕದಿಂದಲಿ ಈವ ।
ಕವಿಭಿರೀಡಿತ ಪಾದ ।
ಭುವನೇಂದ್ರತೀರ್ಥ ।।
ಶ್ರೀ ಮಂತ್ರಾಲಯ ಪ್ರಭುಗಳ ಉಭಯ ವಂಶಾಬ್ಧಿ ಚಂದ್ರಮರಾದ ಶ್ರೀ ವಾದೀಂದ್ರತೀರ್ಥರು ತಮ್ಮ ಪೂರ್ವಾಶ್ರಮ ತಮ್ಮಂದಿರಾದ ಶ್ರೀ ವೇಣುಗೋಪಾಲಾಚಾರ್ಯರ ಜ್ಯೇಷ್ಠ ಪುತ್ರರಾದ ಶ್ರೀ ಪುರುಷೋತ್ತಮಾಚಾರ್ಯರಿಗೆ ಪರಮಹಂಸಾಶ್ರಮವನ್ನು ಕೊಟ್ಟು " ವಸುಧೇಂದ್ರತೀರ್ಥ " ರೆಂದು ನಾಮಕರಣ ಮಾಡಿ ತಮ್ಮ ಸ್ವ ಹಸ್ತಗಳಿಂದ ದ್ವೈತ ವೇದಾಂತ ದಿಗ್ವಿಜಯ ವಿದ್ಯಾ ಸಾಮ್ರಾಜ್ಯದಲ್ಲಿ ಪಟ್ಟಾಭಿಷೇಕ ಮಾಡಿದರು.
ಶ್ರೀ ವಸುಧೇಂದ್ರತೀರ್ಥರಿಗೆ ಪೂರ್ವಾಶ್ರಮದಲ್ಲಿ ಇಬ್ಬರು ತಮ್ಮಂದಿರು.
ಶ್ರೀ ಬಲರಾಮಾಚಾರ್ಯರು ( ಶ್ರೀ ವರದೇಂದ್ರತೀರ್ಥರು ). 
ಇವರು ಶ್ರೀ ಜಗನ್ನಾಥದಾಸರ ವಿದ್ಯಾ ಗುರುಗಳು.
ಶ್ರೀ ಲಕ್ಷ್ಮೀನಾರಾಯಣಾಚಾರ್ಯರು ( ಶ್ರೀ ಭುವನೇಂದ್ರತೀರ್ಥರು ).
ಇಬ್ಬರೂ ಶ್ರೀಮಧ್ವ ಪೀಠಾಧೀಶರಾಗಿ " ಶ್ರೀ ವರದೇಂದ್ರತೀರ್ಥ - ಶ್ರೀ ಭುವನೇಂದ್ರತೀರ್ಥ " ರೆಂದು ಪ್ರಸಿದ್ಧಿ ಪಡೆದರು.
ಶ್ರೀ ವಾದೀಂದ್ರತೀರ್ಥರ ತರುವಾಯ ಶ್ರೀ ವಸುಧೇಂದ್ರತೀರ್ಥರು - ಶ್ರೀ ವರದೇಂದ್ರತೀರ್ಥರು - ಶ್ರೀ ಧೀರೇಂದ್ರತೀರ್ಥರು - ಶ್ರೀ ಭುವನೇಂದ್ರತೀರ್ಥರು ಕ್ರಮವಾಗಿ ದ್ವೈತ ವೇದಾಂತ ದಿಗ್ವಿಜಯ ವಿದ್ಯಾ ಸಾಮ್ರಾಜ್ಯವನ್ನು ಪರಿಪಾಲಿಸಿ ಕೀರ್ತಿ ಗಳಿಸಿದರು.
" ಶ್ರೀ ಭುವನೇಂದ್ರತೀರ್ಥರ ವಂಶ "
ಶ್ರೀ ವೇಂಕಟನಾಥಾಚಾರ್ಯರು ( ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮರು )
ಶ್ರೀ ಲಕ್ಷ್ಮೀನಾರಾಯಣಚಾರ್ಯರು ( ಶ್ರೀ ರಾಯರ ಪೂರ್ವಾಶ್ರಮ ಪುತ್ರರು )
ಶ್ರೀ ಪುರುಷೋತ್ತಮಾಚಾರ್ಯರು
ಶ್ರೀ ಶ್ರೀನಿವಾಸಾಚಾರ್ಯರು ( ಶ್ರೀ ವಾದೀಂದ್ರತೀರ್ಥರು ) ಮತ್ತು ಶ್ರೀ ವೇಣುಗೋಪಾಲಾಚಾರ್ಯ
ಶ್ರೀ ಜಯರಾಮಾಚಾರ್ಯರು ( ಶ್ರೀ ಧೀರೇಂದ್ರತೀರ್ಥರು )
****
ಶ್ರೀ ವೇಣುಗೋಪಾಲಾಚಾರ್ಯರಿಗೆ ಮೂರು ಜನ ಮಕ್ಕಳು. 
ಇವರು ಶ್ರೀ ರಾಯರ ಪೂರ್ವಾಶ್ರಮ ಮರಿಮೊಮ್ಮಕ್ಕಳು. 
ಇವರು ಮೂರೂ ಜನ ಪ್ರಖ್ಯಾತ ಪಂಡಿತರೂ, ಗ್ರಂಥಕಾರರೂ, ವ್ಯಾಖ್ಯಾನಕಾರರೂ ಮತ್ತು ಹರಿದಾಸ ಸಾಹಿತ್ಯದ ಪೋಷಕರು.
ಶ್ರೀ ಪುರುಷೋತ್ತಮಾಚಾರ್ಯರು ( ಶ್ರೀ ವಸುಧೇಂದ್ರತೀರ್ಥರು ) ಇವರು ಶ್ರೀ ವಿಜಯರಾಯರ ಮತ್ತು ಶ್ರೀ ಗೋಪಾಲದಾಸರ ಗುರುಗಳು.
ಶ್ರೀ ಬಲರಾಮಾಚಾರ್ಯರು - ಇವರು ಪೂರ್ವಾಶ್ರಮದಲ್ಲೇ ಶ್ರೀ ಜಗನ್ನಾಥದಾಸರ ವಿದ್ಯಾ ಗುರುಗಳು. 
ಇವರೇ ಮುಂದೆ ಶ್ರೀ ವರದೇಂದ್ರತೀರ್ಥರು. 
ಶ್ರೀ ಗುರು ಗೋಪಾಲದಾಸರು - ಶ್ರೀ ವರದ ಗೋಪಾಲದಾಸರು - ಶ್ರೀ ಜಗನ್ನಾಥದಾಸರು - ಶ್ರೀ ಪ್ರಾಣೇಶದಾಸರ ಶಿಷ್ಯ ಪ್ರಶಿಷ್ಯರಿಗೆ ಅಚ್ಚುಮೆಚ್ಚಿನ ಗುರುಗಳು.
ಶ್ರೀ ಲಕ್ಷ್ಮೀನಾರಾಯಣಾಚಾರ್ಯರು ( ಶ್ರೀ ಭುವನೇಂದ್ರತೀರ್ಥರು ) . 
ಇವರು ಶ್ರೀ ವ್ಯಾಸತತ್ತ್ವಜ್ಞತೀರ್ಥರಿಗೆ ಅಚ್ಚುಮೆಚ್ಚಿನ ಪ್ರಿಯ ಗುರುಗಳೂ ಮತ್ತು  ಶ್ರೀ ವರದ ಗೋಪಾಲದಾಸರು - ಶ್ರೀ ಜಗನ್ನಾಥದಾಸರು - ಶ್ರೀ ಪ್ರಾಣೇಶದಾಸರಾಯರಿಂದ ಸ್ತೋತ್ರ ಮಾಡಲ್ಪಟ್ಟ ಮಹನೀಯರು.
ಶ್ರೀ ಭುವನೇಂದ್ರತೀರ್ಥರು ಶ್ರೀ ರಾಯರಿಗೆ ಪೂರ್ವಾಶ್ರಮ ಮರಿಮೊಮ್ಮಕ್ಕಳೂ ಮತ್ತು ದ್ವೈತ ವೇದಾಂತ ಸಾಮ್ರಾಜ್ಯದಲ್ಲಿ ವಿರಾಜಮಾನರಾದವರು. 
ಆದ್ದರಿಂದ ಇವರೂ ಸಹ " ಶ್ರೀ ರಾಯರ ಉಭಯ ವಂಶಾಬ್ಧಿ " ಚಂದ್ರಮರು ".
" ಶ್ರೀ ಭುವನೇಂದ್ರತೀರ್ಥರ ಸಂಕ್ಷಿಪ್ತ ಮಾಹಿತಿ "
ಹೆಸರು : ಶ್ರೀ ಲಕ್ಷ್ಮೀನಾರಾಯಣಾಚಾರ್ಯರು ( ಶ್ರೀ ರಾಯರ ಮರಿ ಮೊಮ್ಮಗ )
ತಂದೆ : ಶ್ರೀ ವೇಣುಗೋಪಾಲಾಚಾರ್ಯರು
ವಿದ್ಯಾ ಗುರುಗಳು : ಶ್ರೀ ವರದೇಂದ್ರ - ಶ್ರೀ ಧೀರೇಂದ್ರತೀರ್ಥರು
ಆಶ್ರಮ ಗುರುಗಳು : ಶ್ರೀ ವರದೇಂದ್ರತೀರ್ಥರುಶ್ರೀ 
ಪ್ರಾಣೇಶದಾಸರು.....
ಶ್ರೀ ಮಧ್ವಮತವೆಂಬ 
ಕ್ಷೀರ ಪಾರಾವಾರ ।
ಸೋಮನೆನಿಸುತಿಹ 
ವರದೇಂದ್ರ ಕರ ಸಂಜಾತ ।
ನೀ ಮಹಿಯೊಳಗಾವಾವಪರಿ 
ಕಾಣಿಸುವ ನೋಡಿ -
ರಾಮಪದ ಜಲಜಭೃಂಗ ।।
ಶ್ರೀ ಭೂತರಾಜರ ಅಂಶ ಸಂಭೂತರಾದ ಶ್ರೀ ವರದ ಗೋಪಾಲದಾಸರು...
ರಾಗ : ಕಾಂಬೋಧಿ ತಾಳ : ಝಂಪೆ
ಭುವನದೊಳಗ್ಯಣೆಗಾಣೆ ನಿಮಗೆ ।
ಭುವನೇಂದ್ರ ಭೂಮ 
ಸದ್ಗುಣ ಸಂಯಮೀಂದ್ರ ।। ಪಲ್ಲವಿ ।।
ಶಮದಲ್ಲಿ ದಮದಲ್ಲಿ 
ಶಾಂತತ್ವ ಗುಣದಲ್ಲೀ ।
ಕಮನೀಯ ರೂಪದಲ್ಲಿ 
ಕರಣ ಶುದ್ಧಿಯಲ್ಲೀ ।
ಯಮ ನಿಯಮಾಷ್ಟಾಂಗ 
ಯೋಗ ಮೊದಲಾದಲ್ಲೀ ।
ವಿಮಲತರ ಮತಿಯಲ್ಲಿ 
ವಿತರಣಗಳಲ್ಲೀ ।। ಚರಣ ।।
ವೇದ ವೇದಾಂಗಗಳ 
ಪ್ರವಚನ ವಿಶೇಷದಲ್ಲೀ ।
ವಾದಿಗಳ ಗೆಲುವಲ್ಲಿ 
ವರವ ಕೊಡುವಲ್ಲೀ ।
ಸಾದರದಿ ಸಕಲ 
ವಾಕ್ಯಾರ್ಥ ಶೋಧನದಲ್ಲೀ ।
ಮೂದಲಿಸಿ ಮನ್ಮಥನ 
ಮದವ ಮುರಿವಲ್ಲೀ ।। ಚರಣ ।।
ವರದೇಂದ್ರಯತಿ ಕುಲೇಂದ್ರರ 
ಕುವರ ನಾ ನಿಮ್ಮ ।
ವರಣಿಸಲೊಶವೇ 
ವರ ಗುಣಗಳ ।
ವರದ ಗೋಪಾಲವಿಠ್ಠಲ 
ರಾಮ ವ್ಯಾಸ ಪದ ।
ಸರಸಿಜ ಸುಭೃಂಗ 
ನಿಸ್ಸಂಗ ಮಂಗಳ ಮಹಿಮ ।। ಚರಣ ।।
ಆಶ್ರಮ ನಾಮ : ಶ್ರೀ ಭುವನೇಂದ್ರತೀರ್ಥರು
ಕಾಲ : ಕ್ರಿ ಶ 1785 - 1799
ಆಶ್ರಮ ಶಿಷ್ಯರು 
ಶ್ರೀ ವ್ಯಾಸತತ್ತ್ವಜ್ಞತೀರ್ಥರು ( ಶ್ರೀ ಅಗ್ನಿದೇವರ ಅಂಶ ಸಂಭೂತರು )
ಶ್ರೀ ಸುಬೋಧೇಂದ್ರತೀರ್ಥರು ( ಶ್ರೀ ಸೂರ್ಯದೇವರ ಅಂಶ ಸಂಭೂತರು )
ಶ್ರೀ ವ್ಯಾಸತತ್ತ್ವಜ್ಞತೀರ್ಥರು ....
ವಾನ ಪ್ರಸ್ಥಾಶ್ರಮ ಧರ್ಮವನ್ನು ಕ್ರಬದ್ಧವಾಗಿ ಎರಡು ವರುಷಗಳ ಕಾಲ ಆಚರಿಸಿದ ನಂತರ ಶ್ರೀ ವೇಂಕಟರಾಮಾಚಾರ್ಯರು ಸಂನ್ಯಾಸಾಶ್ರಮ ಸ್ವೀಕರಿಸಲು ನಿಶ್ಚಯಿಸಿ, ವೇದ ವೇದಾಂತ ಪಾರಂಗತರೂ; ತಪಸ್ವಿಗಳೂ ಆದ ಶ್ರೀ ರಾಯರ ಮಠದ ಪೀಠಾಧಿಪತಿಗಳೂ ಆದ ಶ್ರೀ ಭುವನೇಂದ್ರತೀರ್ಥರ ಸನ್ನಿಧಾನಕ್ಕೆ ಬಂದರು. 
ಶ್ರೀ ಭುವನೇಂದ್ರತೀರ್ಥರು ವಿರಾಜಿಸಿದ ಪೀಠದ ಮಹತ್ವವನ್ನು ಶ್ರೀ ಮರುದಂಶ ಪ್ರಾಣೇಶದಾಸರು...
ರಾಗ : ಭೈರವಿ ತಾಳ : ಆದಿ
ಗುರುಗಳ ನೋಡಿರೈ । ಉತ್ತಮ ।
ವರಗಳ ಬೇಡಿರೈ ।। ಪಲ್ಲವಿ ।।
ದುರುಳ ತಿಮಿರ ದಿವಾಕರ ।
ಶರಣರ ಸುರತರು ।
ವರದೇಂದ್ರರ ಕರ ಪಂಕಜರುಹ ।। ಅ. ಪ ।।
ಮಂಗಳ ಸ್ವರೂಪ 
ಮಧ್ವಮತಾಂಬುದಿ ಸೋಮ ।
ಸದ್ಗುಣ ಸೋಮ ।
ಪಿಂಗಳನಿಭ ಸಂನ್ಯಾಸ 
ಕುಲೋತ್ತಮ ।
ನೀತಾ ಲೋಕ ವಿಖ್ಯಾತ ।।
ಸಂಗರಹಿತ ಕೌಪೀನ 
ಕಮಂಡಲ ಧರ ।
ದೋಷ ವಿದೂರಾ ।
ಮಂಗಳೆ ಪತಿ ಪದ ಭಜಕ ।
ಅಘೋರಗ ವೀಂದ್ರ 
ಶ್ರೀ ಭುವನೇಂದ್ರಾ ।। ಚರಣ ।।
ಜನ್ಮಾರಭ್ಯವು ಲೌಕಿಕ 
ಸ್ವಪ್ನದೊಳಿರಿಯಾ ।
ಭೂಸುರ ವರ್ಯಾ ।
ಸುಮ್ಮನೆ ಈ ಪದ 
ಪದವಿಯು ಜಗದೊಳು ।
ಬಹುದು ಆರಿಗೆ ಅಹುದು ।।
ಬೊಮ್ಮನ ಸಂತತಿಯಿದು 
ಪುಸಿಯಲ್ಲ ಸತ್ಯಾ ।
ಭಜಿಸಿರಿ ನಿತ್ಯಾ ।
ಎಮ್ಮ ಬಳಿಯೊಳಿಹ 
ದುಷ್ಟಮತೇ೦ಧನ ।
ದಾವಾ ಸೌಖ್ಯವನೀವಾ ।। ಚರಣ ।।
ಧಾರುಣಿಯೊಳು ವಿಸ್ತರಿದ 
ಸ್ವಮತವ ।
ಧೀತ ಗುಣ ಗಂಭೀರಾ ।
ಆರಿಂದೊಶ ಚರಿತೆಯ 
ಪೂರ್ತಿಸಿ ।
ಪೇಳ್ದದಕೆ ಬಹುಸುಖಿ 
ಮನಕೆ ।।
ಶ್ರೀ ರಾಘವೇಂದ್ರರನುಗ್ರಹ ।
ಪಾರಾವಾರದೊಳಗೆ 
ವಿಹಾರಾ ।
ಘೋರಿಸುತಿಹ ಸಂಸಾರ 
ಸಮುದ್ರಕೆ ।
ಮುನಿಯೂ ಯತಿ 
ಶಿರೋಮಣಿಯೂ ।। ಚರಣ ।।
ಚರಕಾಲ ಸುಕೃತ 
ದೊರಕಲು ।
ವದಗುವುದು 
ಸೇವೆಯಿವರದು ।
ಮರಳೊಂದ್ಯೋಚಿಸದೆ ।
ಶರಣಾಗತರಾಗೀ 
ಚಿಂತೆಯ ನೀಗಿ ।।
ಎರವಿಲ್ಲದೆ ದುಃಖವ 
ಪರಿಹರಿಪರು ।
ಹತ್ತೇ ಕರೆವರು ಮತ್ತೇ ।
ಸಿರಿ ಪೂರ್ಣಾಯು 
ಸುತಾದಿ ।
ವಿಷಯಗಳ ಕೊಡುವ 
ದುರಿತವ ತರಿವ ।। ಚರಣ ।।
ತವಕದೊಳಿವರ 
ಪದಾಬ್ಜವ ।
ಸೇವಿಪ ಭಕ್ತ 
ಜೀವನ್ಮುಕ್ತಾ ।
ಕುವಲಯದೊಳ-
ಗೀಗಿವರಿಗೆ ।
ಸರಿಯಾರಿಲ್ಲ 
ಕೇಳಿರಿ ಸೊಲ್ಲಾ ।।
ಅವನೀಶರು 
ಎಂಬಾಹ್ವಯ ।
ತಿಳಿಯಲಿಕುಂಟೇ 
ಅಧಿಕರುವುಂಟೇ ।
ಇವರಿಗೆರಗದಿರೆ 
ಒಲಿಯನು ।
ಶ್ರೀ ಪ್ರಾಣೇಶವಿಠಲನು 
ಲೇಶಾ ।। ಚರಣ ।।
ಶ್ರೀ ವೆಂಕಟರಮಣಾಚಾರ್ಯರು ಶ್ರೀ ಶ್ರೀಗಳವರನ್ನು ಸಂದರ್ಶಿಸಿ ತಮ್ಮ ಮನದಿಚ್ಛೆಯನ್ನು ವಿನಮ್ರರಾಗಿ ವಿಜ್ಞಾಪಿಸಿಕೊಂಡರು.
ಶ್ರೀಮಠದ ಶಿಷ್ಯರೂ; ಪಂಡಿತ ಶ್ರೇಷ್ಠರೂ; ಪರಮ ವೈರಾಗ್ಯಶಾಲಿಗಳೂ ಆದ ಶ್ರೀ ಆಚಾರ್ಯರು ಪರಮಹಂಸರಾಗಲು ಬಯಸಿದ್ದನ್ನು ಕಂಡು " ಯೋಗ್ಯನಾದ ಶಿಷ್ಯ ಅನಾಯಾಸವಾಗಿ ಸಿಕ್ಕಿದನೆಂದು " ಜ್ಞಾನಿವರೇಣ್ಯರಾದ ಶ್ರೀ ಭುವನೇಂದ್ರತೀರ್ಥರಿಗೆ ಬಹಳ ಸಂತೋಷವಾಯಿತು.
ಆದರೂ, ಅದನ್ನು ಹೊರಗೆ ತೋರಗೊಡದೆ " ಆಚಾರ್ಯರೇ! ಪಂಡಿತ ಶ್ರೇಷ್ಠರಾದ ತಾವು ಶ್ರೀಮದ್ಭಾಗವತ ಸಪ್ತಮ ಸ್ಕಂಧಕ್ಕೆ ವ್ಯಾಖ್ಯಾನವನ್ನು ಬರೆಯಿರಿ. 
ನಂತರ ಶ್ರೀ ಮೂಲರಾಮ ತಮ್ಮ ಅಭೀಷ್ಟವನ್ನು ಪೂರೈಸುತ್ತಾನೆ " ಎಂದು ಅಜ್ಞಾಪಿಸಿದರು.
ಶ್ರೀ ಭುವನೇಂದ್ರತೀರ್ಥರ ಆಜ್ಞೆಯಂತೆ ಶ್ರೀ ವೆಂಕಟರಮಣಾಚಾರ್ಯರು ಶ್ರೀಮದ್ಭಾಗವತ ಸಪ್ತಮ ಸ್ಕಂಧಕ್ಕೆ " ಮಂದನಂದಿನೀ " ಯೆಂಬ ಟಿಪ್ಪಣಿಯನ್ನು ರಚಿಸಿ, ಆ ವ್ಯಾಖ್ಯಾನ ಗ್ರಂಥವನ್ನು ಅತ್ಯಂತ ವಿನೀತರಾಗಿ ಶ್ರೀ ಭುವನೇಂದ್ರತೀರ್ಥರ ಸನ್ನಿಧಾನದಲ್ಲಿ ಸಮರ್ಪಿಸಿದರು.
ಸ್ವತಃ ವಿದ್ವಾಂಸರೂ; ಶ್ರೀಮದ್ಭಾಗವತದ ನಿಜವಾದ ಮರ್ಮವನ್ನು ಚೆನ್ನಾಗಿ ಅರಿತವರಾದ ಶ್ರೀ ಭುವನೇಂದ್ರತೀರ್ಥರು " ಮಂದನಂದಿನಿ " ಯನ್ನು ಓದಿ ಬಹಳ ಸಂತೋಷ ಪಟ್ಟು ಶ್ರೀ ವೆಂಕಟರಾಮಾಚಾರ್ಯರಿಗೆ ಪರಮಹಂಸಾಶ್ರಮ ನೀಡಿ " ವ್ಯಾಸತತ್ತ್ವಜ್ಞತೀರ್ಥ " ರೆಂದು ನಾಮಕರಣ ಮಾಡಿ ದ್ವೈತ ವೇದಾಂತ ದಿಗ್ವಿಜಯ ವಿದ್ಯಾ ಸಿಂಹಾಸನದಲ್ಲಿ ಪಟ್ಟಾಭಿಷೇಕ ಮಾಡಿದರು...
ಈ ವಿಷಯವನ್ನು ಶ್ರೀ ಸಹ್ಲಾದಾಂಶ ಶ್ರೀ ಜಗನ್ನಾಥದಾಸರು...
ಕವಿಭಿರೀಡಿತ ಮಹಾ 
ಮುನಿ ವ್ಯಾಸ ಕೃತ । ಸುಭಾ ।
ಗವತಾದಿ ಗ್ರಂಥ 
ವ್ಯಾಖ್ಯಾನ ನೋಡಿ ।
ಭುವನೇಂದ್ರರಾಯರ 
ಕರುಣದಲಿ । ತುರಿಯಾಶ್ರ ।
ಮವನ್ನಿತ್ತು ವ್ಯಾಸತತ್ತ್ವಜ್ಞರಹುದೆಂದು ।।
ಶ್ರೀ ವ್ಯಾಸತತ್ತಜ್ಞತೀರ್ಥರು ಕೆಲವು ದಿನ ತಮ್ಮ ಗರುಗಳೊಂದಿಗೆ ಶ್ರೀ ರಾಯರ ಸನ್ನಿಧಾನದಲ್ಲಿದ್ದು ಮಹಾ ಸಂಸ್ಥಾನಗಳ ಪ್ರತಿಮೆಗಳನ್ನು ಪೂಜಿಸಿ; ಮಠದ ಬಂಧನದಿಂದ ಬಿಡುಗಡೆ ಹೊಂದಿ ಏಕಾಂತದಲ್ಲಿ ಶ್ರೀ ಹರಿಯನ್ನು ಒಲಿಸಿಕೊಳ್ಳಬೇಕೆಂಬ ಬಯಕೆ ಉಂಟಾಯಿತು.
ಪರಮ ಭಕುತಿಯಲಿ । ಶ್ರೀ ।
ಹರಿಯ ಗುಣಗಳ ನೆನೆದು ।
ಪರವಶದಲ್ಲಿ ಮೈಮರೆದು ಕೃಷ್ಣ ।
ನರಹರಿ ಹರಿಯೆಂದು ಕುಣಿಯ ।।
ಬೇಕೆಂಬ ಆಸೆ ತೀವ್ರವಾಯಿತು. 
ಅದನ್ನು ತಮ್ಮ ಗುರುಗಳಿಗೆ ವಿನೀತರಾಗಿ ವಿವರಿಸಿ; ತಮ್ಮ ವಿದ್ಯಾ ಶಿಷ್ಯರಾದ ಶ್ರೀ ಮುದ್ದುಕೃಷ್ಣಾಚಾರ್ಯರಿಗೆ ಆಶ್ರಮವನ್ನು ಕೊಟ್ಟು ತಮ್ಮ ಉತ್ತರಾಧಿಕಾರಿಗಳನ್ನಾಗಿ ಸ್ವೀಕರಿಸಬೇಕೆಂದು ಪ್ರಾರ್ಥಿಸಿಕೊಂಡರು.
ಶ್ರೀ ವ್ಯಾಸತತ್ತ್ವಜ್ಞತೀರ್ಥರ ವಿಜ್ಞಾಪನೆಯಂತೆ, ಶ್ರೀ ಮಠದ ಶಿಷ್ಯರೂ; ಶ್ರೀ ವ್ಯಾಸತತ್ತ್ವಜತೀರ್ಥರ ವಿದ್ಯಾ ಶಿಷ್ಯರೂ; ಉದ್ಧಾಮ ಪಂಡಿತರೂ ಆದ ಶ್ರೀ ಮುದ್ದು ಕೃಷ್ಣಾಚಾರ್ಯರಿಗೆ ಪರಮಹಂಸಾಶ್ರಮವನ್ನು ನೀಡಿ " ಸುಬೋಧೇಂದ್ರತೀರ್ಥ " ಯೆಂದು ನಾಮಕರಣ ಮಾಡಿ ತಮ್ಮ ಹಸ್ತಗಳಿಂದ ವೇದಾಂತ ದಿಗ್ವಿಜಯ ವಿದ್ಯಾ ಸಿಂಹಾಸನದಲ್ಲಿ ಪಟ್ಟಾಭಿಷೇಕ ಮಾಡಿದರು.
" ಮಹಿಮೆ "
ಗದ್ವಾಲಿನ ರಾಜ ರಾಮಭೂಪಾಲ ಶ್ರೀ ಭುವನೇಂದ್ರತೀರ್ಥರನ್ನು ಗುರುಗಳನ್ನಾಗಿ ಮಾಡಿಕೊಂಡು ಅವರ ಮಾರ್ಗದರ್ಶನದಲ್ಲಿ ರಾಜ್ಯಭಾರ ಮಾಡಿ ಕೀರ್ತಿ ಗಳಿಸಿದವನು. 
ಒಮ್ಮೆ ಶತ್ರುರಾಜರು ದಂಡೆತ್ತಿ ಬಂದಾಗ ರಾಜಧಾನಿಯಲ್ಲಿ ಸೈನ್ಯವಿರಲಿಲ್ಲ. 
ರಾಜಾ ಮತ್ತು ಹತ್ತಾರು ಅಂಗರಕ್ಷರು ಮಾತ್ರ ಇದ್ದರು.
ಸೈನ್ಯವಿಲ್ಲದೇ ಶತ್ರುಗಳನ್ನು ಜಯಿಸಲು ಸಾಧ್ಯವಿಲ್ಲವೆಂದು ಮನಗೊಂಡ ರಾಮಭೂಪಲನು ಶ್ರೀ ಭುವನೇಂದ್ರತೀರ್ಥರಿಗೆ ಶರಣು ಬಂದು ಪರಿಸ್ಥಿತಿ ವಿಜ್ಞಾಪಿಸಿದ.ಶ್ರೀ ಭುವನೇಂದ್ರತೀರ್ಥರು....
ಧರ್ಮೋ ಭವತು ಸದ್ಧರ್ಮಃ 
ಮಾರ್ಗಣಾಸ್ಸಂತುಮಾರ್ಗಣಾಃ ।
ವಾಹಿನೀ ವಾಹಿನೀ ರಾಜನ್ 
ಶಾಕರಾಜ ( ತವಶತ್ರು ) ಪರಾಜಯೇ ।।
ಅಂದರೆ ರಾಜನ್! ನಿನ್ನ ಶತ್ರು ಶಾಕರಾಜನನ್ನು ಜಯಿಸಲು ನಿನಗೆ...
ಸದ್ಧರ್ಮವು ಧರ್ಮವಾಗಲಿ ( ಬಿಲ್ಲಾಗಲಿ );
ದೊಡ್ಡವರು ತೋರಿದ ಸನ್ಮಾರ್ಗಗಳು ಬಾಣವಾಗಲಿ ( ಮಾರ್ಗಣಾ )
ನದಿಯೇ ( ವಾಹಿನೀ ) ಸೈನ್ಯವಾಗಲಿ ।।
ಎಂದು ಆಶೀರ್ವದಿಸಿ ಫಲ ಮಂತ್ರಾಕ್ಷತೆ ಕೊಟ್ಟು ಕಳುಹಿದರು. 
ಶ್ರೀ ಭುವನೇಂದ್ರತೀರ್ಥರ ಅನುಗ್ರಹ ಬಲದಿಂದ ಇದ್ದಕ್ಕಿದ್ದಂತೆ ರಾಜಧಾನಿಗೂ - ಶತ್ರುಗಳ ಶಿಬಿರಕ್ಕೆ ಮಧ್ಯೆ ಇದ್ದ ನದಿಗೆ ಪೂರ್ಣ ಪ್ರವಾಹ ಬಂದು ಶತ್ರುಗಳು ಬರದಂತಾಯಿತು. 
2 - 3 ದಿನಗಳಲ್ಲಿ ಬೇರೆಡೆಗೆ ಹೋಗಿದ್ದ ರಾಮಭೂಪಾಲನ ಸೈನ್ಯ ಬಂದು ಬಿಟ್ಟಿತು. 
ರಾಜಭೂಪಾಲನು ಸೈನ್ಯ ಸಹಿತನಾಗಿ ಯುದ್ಧ ಮಾಡಿ ಶತ್ರುಗಳನ್ನು ಜಯಿಸಿಬಿಟ್ಟನು.
ರಾಗ : ಕಾಂಬೋಧಿ ತಾಳ : ಝಂಪೆ
ಇಂದ್ರನಿಗಿಂತಧಿಕ 
ಭುವನೇಂದ್ರರೆನ್ನಿ ಇದರ ।
ಅಂದವನು ವರ್ಣಿಸುವೆ 
ಕೆಳೆಲವೋ ಕೆಳದಿ ।। ಪಲ್ಲವಿ ।।
ಸುರವರ್ಯನಾತ ಭೂಸುರ-
ವರ್ಯನೆಂದೀತ ।
ಪರಮ ಸುಖಿಯಾತ 
ಪರ ಸುಖದನೀತ ।
ಕರದಲ್ಲಿ ವಜ್ರ ಧರಿದ 
ವೀರನಾತ ।
ಪರಿಕರರ ಕರದಲ್ಲಿ 
ವಿಡಿಸಿದ ವಜ್ರನೀತ ।। ಚರಣ ।।
ಶತಮನ್ಯುನಾತ ನಿರ್ಗತ 
ಮನ್ಯು ನೀತ ಬಲು ।
ಜಿತ ಶತ್ರುನಾತ 
ವರ್ಜಿತ ಶತ್ರುನೀತ ।
ಅತಿಶಯ ಸುಧಾ 
ಪಾನ ಮಾಡಿದನಾತ ।
ಸಂತರಿಗೆ ಸಂತತ ಸುಧಾ 
ಉಣಿಸುತಿಹನೀತ ।। ಚರಣ ।।
ಇಂದ್ರ ಪರಸತಿಯಿಂದ 
ರಂಧ್ರ ಮೈಯಾದ । ಭುವ ।
ನೇಂದ್ರ ಸರ್ವೆಂದ್ರಿಯಂಗಳನ್ನು । ಜಯಿಸಿ ।
ವಂದಿಸುತ ವರದ 
ಗೋಪಾಲವಿಠಲನ । ವೊಲಿ ।
ಮಿಂದ ಮೆರೆವರು 
ಸಂಯಮೀಂದ್ರ ಗುಣಸಾಂದ್ರಾ ।। ಚರಣ ।।
ಸಮಕಾಲೀನ ಯತಿಗಳು :
ಶ್ರೀ ವ್ಯಾಸರಾಜ ಮಠದ ಶ್ರೀ ಶ್ರೀನಾಥತೀರ್ಥರು, ಶ್ರೀ ವಿದ್ಯಾನಾಥತೀರ್ಥರು, ಶ್ರೀ ವಿದ್ಯಾಪತಿತೀರ್ಥರು
ಸಮಕಾಲೀನ ಹರಿದಾಸರು :
ಶ್ರೀ ಮೋಹನದಾಸರು, ಶ್ರೀ ವರದ ಗೋಪಾಲದಾಸರು, ಶ್ರೀ ಜಗನ್ನಾಥದಾಸರು, ಶ್ರೀ ಪ್ರಾಣೇಶದಾಸರು, ಶ್ರೀ ಶ್ರೀದ ವಿಠಲರು, ಶ್ರೀ ಗುರು ಪ್ರಾಣೇಶದಾಸರು; ಶ್ರೀ ತಂದೆ ವಾಸುದೇವವಿಠಲರು, ಶ್ರೀ ಶ್ರೀಶವಿಠಲರು, ಶ್ರೀ ಗುರು ಶ್ರೀಶ ವಿಠಲರು ಮತ್ತು ಶ್ರೀ ಹನುಮಯ್ಯ ಅಂಕಿತರಾದ ಶ್ರೀ ಅಡವಿ ರಾಮದಾಸರು.
ಗ್ರಂಥ : ಋಗ್ವೇದದಕ್ಕೆ ವ್ಯಾಖ್ಯಾನ
ಉಪಸಂಹಾರ :
ಸ್ವಾಮೀ ಶ್ರೀ ಭುವನೇಂದ್ರತೀರ್ಥ ಗುರುವರೇಣ್ಯರೇ! 
ನೀವು ಶ್ರೀಮದಾಚಾರ್ಯರ ಸಿದ್ಧಾಂತ ಪ್ರತಿಷ್ಠಾಪನೆ; ಪರಿಪಾಲನೆಯಿಂದ ಕೀರ್ತಿಗಳಿಸಿದ್ದೀರಿ. ಶ್ರೀ ಮೂಲರಮನನ್ನು ಸದಾ ಪೂಜಿಸುವ ಪುಣ್ಯಮೂರ್ತಿಗಳು. ಶಿಷ್ಯನಾದ ರಾಮಭೂಪಾಲನಿಗೆ ಶತ್ರುಗಳಿಂದ ಒದಗಿದ್ದ ವಿಪತ್ತನ್ನು ಪರಿಹರಿಸಿ ಅವನನ್ನೂ; ಅವನ ರಾಜ್ಯವನ್ನೂ ಸಂರಕ್ಷಿಸಿದ ಮಹಾಶಕ್ತಿ ಸಂಪನ್ನರು.
ಸ್ವಾಮೀ ಶ್ರೀ ಭುವನೇಂದ್ರತೀರ್ಥ ಗುರುವರ್ಯರೇ! 
ನಿಮ್ಮ ಮಹಿಮೆ ಅಸಾಧಾರಣವಾದುದು. 
ವಿದ್ಯೆಗೆ ತವರೆನಿಸಿದ ಪೂನಾ ಪಟ್ಟಣದ ಪೇಶ್ವೆ ರಾಜರು ಮತ್ತು ಅವರ ಆಸ್ಥಾನ ವಿದ್ವನ್ಮಣಿಗಳಿಂದ ಭಕ್ತಿ ಶ್ರದ್ಧಾದಿ ಪೂರ್ವಕ ನಮಸ್ಕೃತರೂ; ಮಹಾ ತಪಸ್ವಿಗಳೂ, ಗೀರ್ವಾಣಾ ಭಾಷಾ ಕೋವಿದರಾದ ಶ್ರೀ ವರದೇಂದ್ರತೀರ್ಥರಿಂದ ತುರ್ಯಾಶ್ರಮ ಸ್ವೀಕರಿಸಿದ ನೀವು; ಶ್ರೀ ವರದೇಂದ್ರತೀರ್ಥರು, ಶ್ರೀ ಧೀರೇಂದ್ರತೀರ್ಥರ ಕಾರುಣ್ಯಾತಿಶಯದಿಂದ ಅವರುಗಳಿಂದ ಸಕಲ ಶಾಸ್ತ್ರಗಳಲ್ಲಿ ಅಸದೃಶ ಪಾಂಡಿತ್ಯವನ್ನು ಪಡೆದು ಮುಂದೆ ಮಹಾ ಸಂಸ್ಥಾನಾಧಿಪತ್ಯವನ್ನು ಪಡೆದ ಮಹಾಭಾಗ್ಯಶಾಲಿಗಳು!!
ಪೂನಾ - ಗದ್ವಾಲ್ ರಾಜ್ಯಾಧಿಪರಾದ ರಾಜ ಮಹಾರಾಜರಿಂದ; ಸಕಲ ಪಂಡಿತ ಮಂಡಳಿಯಿಂದ ಪೂಜಿತರಾಗಿ ಅನಿತರ ಸಾಧಾರಣ ಕೀರ್ತಿಗಳಿಸಿ ವೈಶಾಖ ಬಹುಳ ಸಪ್ತಮೀ ದಿನ ಗದ್ವಾಲ ಸಂಸ್ಥಾನದ ತುಂಗಭದ್ರಾ ತೀರದಲ್ಲಿರುವ ರಾಜವಳ್ಳಿ ಗ್ರಾಮದಲ್ಲಿ ಬೃಂದಾವನಸ್ಥರಾದರು.
ಭೂದೇವ ವಂದ್ಯ ಪಾದಾಬ್ಜಂ 
ಭೂತಿಮಂತಮಭೀಷ್ಟದಂ ।
ಭೂತಲೇ ಸಾಧು ವಿಖ್ಯಾತಂ 
ಭುವನೇಂದ್ರ ಗುರುಂ ಭಜೇ ।।
ರಾಗ : ಸಾರಂಗ ತಾಳ : ಝಂಪೆ
ಅರೆ ಈ ಸಂಯಮೀಂದ್ರ 
ಭುವನೇಂದ್ರ ।
ಸೂರಿ ಸುಗುಣಾಬ್ಧಿ 
ಚಂದ್ರ ನೀರೆ ।। ಪಲ್ಲವಿ ।।
ದೇವಗುರು ಕವಿಯೆಂಬಿಯಾ ।
ಮೂಢತ್ವ ಸೇವಿಸುವ ಜನರೆಲ್ಲವೇ ।
ಪವಕರೆ ಇವರೆಂಬಿಯಾ ।
ಸರ್ವಭುಕು ಈ ಮಹಾತ್ಮರಲಿ 
ತೋರೆ ನೀರೆ ।। ಚರಣ ।।
ದುರ್ವಾದಿಗಳಿವರೆಂಬಿಯಾ 
ಕೋಪಗಳ ।
ಕಾರ್ಯಲೇಶಗಳಿಲ್ಲವೇ ।
ಊರ್ವೀಧರ 
ಶೇಷನೆಂಬಿಯಾ ।
ದ್ವಿರಸನವು ಓರ್ವರಿವರಿಗೆ 
ಪೇಳಿರೆ ನೀರೆ ।। ಚರಣ ।।
ವರದೇಂದ್ರ ಕರಕಮಲಜಾರೆನಿಸಿ ಈ ।
ಧರಿಯೊಳಗೆ ಮೆರೆವ ಧೀರಾ ।
ವರದಗೋಪಾಲವಿಠಲ ಪರನೆಂದು ।
ಬಿರಿದು ಡಂಗುರ ಹೊಯಿಸುವ ನೀರೆ ।। ಚರಣ ।।
by ಆಚಾರ್ಯ ನಾಗರಾಜು ಹಾವೇರಿ
     ಗುರು ವಿಜಯ ಪ್ರತಿಷ್ಠಾನ
****


ಶ್ರೀ ರಾಯರ ಮಠದ 17ನೇ ಶತಮಾನದ  ಶ್ರೇಷ್ಠ ಯತಿಗಳೂ, ರಾಯರ ಪೂರ್ವಾಶ್ರಮದ ಮರಿ ಮೊಮ್ಮಗ, ಶ್ರೀ ವರದೇಂದ್ರತೀರ್ಥರ, ಶ್ರೀ ಧೀರೇಂದ್ರತೀರ್ಥರ (ವಿದ್ಯಾ ಗುರುಗಳು) ಶಿಷ್ಯರು  ಶ್ರೀ ವ್ಯಾಸತತ್ವಜ್ಞರ, ಶ್ರೀ ಸಭೋದೇಂದ್ರತೀರ್ಥರ ಗುರುಗಳು, ಗದ್ವಾಲಿನ ರಾಜ್ಯದ ಸಂರಕ್ಷಣೆ ಮಾಡಿದ ಗುರುಗಳು, ಪರಮ ವೈರಾಗ್ಯ ಪುರುಷರು, ವರದಗೋಪಾಲವಿಠಲರು, ಪ್ರಾಣೇಶದಾಸರೇ ಮೊದಲು ಎಲ್ಲಾ ಹರಿದಾಸರಿಂದ ಸ್ತುತಿಸಲ್ಪಟ್ಟಂತಹಾ ಮಹಾನ್ ಯತಿಗಳಾದ ಶ್ರೀ ಭುವನೇಂದ್ರತೀರ್ಥರ ಆರಾಧನಾ ಮಹೋತ್ಸವ - ರಾಜವಳ್ಳಿಯಲ್ಲಿ... 

ಶ್ರೀ ಗುರುಗಳ ಪೂರ್ಣಾನುಗ್ರಹ ನಮ್ಮ ಎಲ್ಲರ ಮೇಲೆ ಇರಲಿ ಎಂದು ಪ್ರಾರ್ಥನೆ ಮಾಡುತ್ತಾ...
**********
year 2021
ಶ್ರೀಭುವನೇಂದ್ರತೀರ್ಥ ಶ್ರೀಪಾದಂಗಳವರು 

ಶ್ರೀಮದಾಚಾರ್ಯರ ಪೀಠದ ಮೇಲೆ ವಿರಾಜಮಾನರಾದ ಶ್ರೀಧೀರೇಂದ್ರತೀರ್ಥರ ವಿದ್ಯಾಶಿಷ್ಯರಾದವರು ಶ್ರೀಭುವನೇಂದ್ರತೀರ್ಥರು..

ಹೆಸರಿಗೆ ತಕ್ಕಂತೆ ಭೂಮಂಡಲದಲ್ಲೇ ಶ್ರೇಷ್ಠವಿದ್ವಾಂಸರಾಗಿ ಅನೇಕ ಭೂಪಾಲರಿಂದ ಮಾನಿತರಾದವರು.

ಶ್ರೀಮದಾಚಾರ್ಯರ ಪ್ರಣೀತವಾದ ಋಗ್ಭಾಷ್ಯ 40 ಋಕ್ಕುಗಳಿಗೆ ಅರ್ಥ ಹೇಳಿ ಶ್ರೀಮದಾಚಾರ್ಯರ ವಿಶೇಷಾನುಗ್ರಹಕ್ಕೇ ಪಾತ್ರರಾಗಿದ್ದ ಶ್ರೀಪಾದರು ಅನೇಕ ಋಕ್ಕುಗಳಿಗೆ ಅರ್ಥಹೇಳಿದ್ದನ್ನು ಇವರ ಇತಿಹಾಸ ತಿಳಿಸುತ್ತದೆ.. 

ಶ್ರೀಬ್ರಹ್ಮಕರಾರ್ಚಿತವಾದ ಮೂಲರಾಮದೇವರಿಗೆ ಸುಂದರವಾದ ಸುವರ್ಣಮಂಟಪವನ್ನು ಸಮರ್ಪಿಸಿ ವೈಭವಯುತವಾಗಿ ಸರ್ವೋತ್ತಮನ ಪೂಜೆಮಾಡಿದವರು ಶ್ರೀಭುವನೇಂದ್ರತೀರ್ಥರು.. 

ವಿದ್ಯಾಮಠದ ವಿದ್ವಚ್ಚಕ್ರವರ್ತಿ ಶ್ರೀವರದೇಂದ್ರರಲ್ಲಿ ಅಧ್ಯಯನ ಮಾಡಿ 
ಶ್ರೀ ಧೀರೇಂದ್ರರ ಪರಮಾನುಗ್ರಹಕ್ಕೇ ಪಾತ್ರರಾಗಿದ್ದ ಶ್ರೀಜಗನ್ನಾಥದಾಸರು ಶ್ರೀಭುವನೇಂದ್ರ ತೀರ್ಥರ ಸಮಕಾಲೀನರು.. 
ದಾಸರು ಶ್ರೀಭುವನೇಂದ್ರ ತೀರ್ಥರ ಮಹಾಮಹಿಮೆಯನ್ನು ಬಹುವಾಗಿ ವರ್ಣಿಸುತ್ತಾರೆ.
 
""ಗಂಗಾ-ಪ್ರಯಾಗ, ಕಾಶಿ ಮುಂತಾದ ತೀರ್ಥಕ್ಷೇತ್ರಗಳ ಸಂದರ್ಶನದ ಫಲ ಕೇವಲ ಶ್ರೀ ಭುವನೇಂದ್ರ ತೀರ್ಥರ ದರ್ಶನಮಾತ್ರದಿಂದಲೇ ಲಭಿಸುವದು""

ಎಂದು ಪರಮೋತೃಷ್ಟವಾದ ಅವರ ಮಹಿಮೆಯನ್ನು ತಿಳಿಸಿಕೊಟ್ಟಿದ್ದಾರೆ.

 ಶ್ರೀಭುವನೇಂದ್ರ ತೀರ್ಥರ ಮೂಲರಾಮನ ಪೂಜೆಯ ವೈಭವವನ್ನು,

""ಶ್ರೀಮೂಲದಿಗ್ವಿಜಯರಾಮ ವ್ಯಾಸಾಂಘ್ಹ್ರಿ ಯುಗ 
  ತಾಮರಸ ಭಜಕ ಈ ಭೂಯೊಳಿಹ 
  ಪಾಮರನ ಉದ್ಧರಿಸು ರವಿ ಸಾರ್ವ-
  ಭೌಮ ನೀ ಸಂಚರಿಪ ಈ ಮಹೀತಳದಿ"" 

ಎಂದು ಗುರುಗಳನ್ನು ಶ್ರೀಜಗನ್ನಾಥದಾಸರು ಪ್ರಾರ್ಥಿಸಿದ್ದಾರೆ.. 

ಶ್ರೀಭುವನೇಂದ್ರ ತೀರ್ಥರ ಮತ್ತೊಂದು ಕೊಡುಗೆ. ಟಿಪ್ಪಣಿಕಾರರ ಪ್ರಪಂಚದಲ್ಲಿ ಅಜರಾಮರರಾದ ಶ್ರೀಮನ್ನ್ಯಾಯಸುಧಾ, ಭಾಗವತಾದಿ ಗ್ರಂಥಗಳಿಗೆ  ಟಿಪ್ಪಣಿಯನ್ನು ಬರೆದ ಶ್ರೀವ್ಯಾಸತತ್ವಜ್ಙತೀರ್ಥರನ್ನು ಕೊಟ್ಟದ್ದು.. 
ಐಜೀ ವೆಂಕಟರಾಮಾಚಾರ್ಯರಿಗೆ ತುರ್ಯಾಶ್ರಮವನ್ನು ನೀಡಿ ಶ್ರೀವ್ಯಾಸತತ್ವಜ್ಙತೀರ್ಥರೆಂದು ನಾಮಕರಣ ಮಾಡಿ ಶ್ರೀವಿಬುಧೇಂದ್ರತೀರ್ಥರಿಗೆ ಸ್ವಪ್ನಲಬ್ಧವಾದ ಷೊಡಷಬಾಹು ನರಸಿಂಹದೇವರನ್ನು ಇವರಿಗೆ ಪ್ರದಾನಮಾಡಿದವರು ಶ್ರೀಭುವನೇಂದ್ರ ತೀರ್ಥರು.. 

ಶ್ರೀಮದಾಚಾರ್ಯರಿಂದ ಅನೂಚಾನವಾಗಿ ಶ್ರೀಪದ್ಮಾನಾಭತೀರ್ಥರು, ಶ್ರೀನರಹರಿ- ಅಕ್ಷೋಭ್ಯತೀರ್ಥರು, ಶ್ರೀಜಯತೀರ್ಥರು, ಶ್ರೀವಿಬುಧೇಂದ್ರ-ವಿಜಯೀಂದ್ರತೀರ್ಥರು ಹಾಗೂ ಗುರುಸಾರ್ವಭೌಮ ಶ್ರೀರಾಘವೇಂದ್ರತೀರ್ಥರೇ ಮೊದಲಾದ ತಪಸ್ವಿಗಳು ಬಂದ ವಿದ್ಯಾಮಠವೆಂಬ ಖ್ಯಾತಿಗೆ ಪಾತ್ರವಾದ ಶ್ರೀಮದಾಚಾರ್ಯರ ಮೂಲಮಹಾ ಸಂಸ್ಥಾನದ ಗುರುತಿನ ದ್ಯೋತಕವಾಗಿ 

"ಶ್ರೀರಾಮೋ ಭಾತಿ ಸ ವ್ಯಾಸಃ
 ಶ್ರೀಮಧ್ವಾಸ್ಥಾನಸಂಸ್ಥಿತೈಃ
 ಶ್ರೀರಾಘವೇಂದ್ರಸದ್ವಂಶೈಃ
ಭುವನೇಂದ್ರೈಃ ಶ್ರಿಯಾರ್ಚಿತಃ"
  
ಎಂದು ರಾಯಸವನ್ನು ಹೊರಡಿಸಿದವರು 
ಶ್ರೀಭುವನೇಂದ್ರ ತೀರ್ಥರು.. 

ಶ್ರೀಗಳವರು ಮಹಾಸಂಸ್ಥಾನವನ್ನು 14 ವರ್ಷಗಳ ಕಾಲ ಆಳಿ ಶ್ರೀಸುಬೋಧೇಂದ್ರತೀರ್ಥರಿಗೆ ಆಶ್ರಮವನ್ನು ಕೊಟ್ಟು ಗದ್ವಾಲ್ ಮಹಾಸಂಸ್ಥಾನದ, 
ಮಂತ್ರಾಲಯ ಕ್ಷೇತ್ರಕ್ಕೇ ಸಮೀಪದಲ್ಲಿರುವ ರಾಜವಳ್ಳಿ ಎಂಬ ಗ್ರಾಮದಲ್ಲಿ ವೃಂದಾವನಸ್ಥರಾದರು.

ಇಂದಿಗೂ ಶ್ರೀಗುರುಸಾರ್ವಭೌಮರಂತೆ ಜಾತಿ-ಮತ ಭೇದವಿಲ್ಲದೇ ಬಂದ ಭಕುತರನ್ನು ಪೊರೆಯುತ್ತಿರುವ
 ಶ್ರೀ ಮಧ್ವಾಚಾರ್ಯರ 
ಮತಾನುಗ ಹೆಮ್ಮೆಯ ಯತಿಗಳು ಶ್ರೀಭುವನೇಂದ್ರ ತೀರ್ಥರು..

ಇವರ ದೇಹವನ್ನು ಕಾರಣಾಂತರಗಳಿಂದ ಇತ್ತೀಚೆಗೆ ಹೊರತೆಗೆದು ಪುನಃ ಪ್ರತಿಷ್ಠಾಪನೆ ಮಾಡಲಾಯಿತು.
ಶ್ರೀಗಳವರ ದೇಹ ಯಾವುದೇ ವಿಕಾರಕ್ಕೊಳಗಾಗಿರಲಿಲ್ಲ ಎನ್ನುವದು ಇವರ ತಪಸ್ಸಿಗೆ ಹಿಡಿದ ಕೈಗನ್ನಡಿ.. 

ಅಂತಹ ಮಹಾತಪಸ್ವೀಗಳಾದ ಶ್ರೀಧೀರೇಂದ್ರ ತೀರ್ಥರ ಶಿಷ್ಯರಾದ ತಪಸ್ವಿವರೇಣ್ಯರಾದ ಶ್ರೀಭುವನೇಂದ್ರತೀರ್ಥರ ಆರಾಧಾನಾಪರ್ವಕಾಲದಲ್ಲಿ ರಾಜವಳ್ಳಿಯ ಅವರ ಮೂಲವೃಂದಾವನದ ಸನ್ನಿಧಾನದಲ್ಲಿ 
ಅವರ ಪೀಠದಲ್ಲಿಯೇ ವಿರಾಜಮಾನರಾದ ಪರಮಪೂಜ್ಯ ಶ್ರೀಸುಬುಧೇಂದ್ರತೀರ್ಥ ಶ್ರೀಪಾದಂಗಳವರು..

-  ಸಮೀರ ಜೋಷಿ
*****
" ದಿನಾಂಕ : 01.06.2021 ಮಂಗಳವಾರ - ಶ್ರೀ ಪ್ಲವ ನಾಮ ಸಂವತ್ಸರ ಉತ್ತರಾಯಣ ವಸಂತ ಋತು ವೈಶಾಖ ಬಹುಳ ಸಪ್ತಮೀ - ಶ್ರೀ ರಾಯರ ಉಭಯ ವಂಶಾಬ್ಧಿ ಚಂದ್ರಮರೂ, ಶ್ರೀ ಇಂದ್ರ ದೇವರ ಅಂಶ ಸಂಭೂತರೂ, ಬೊಮ್ಮನ ಸಂತತಿಯಲ್ಲಿ ವಿರಾಜಿಪ ಶ್ರೀ ಭುವನೇಂದ್ರತೀಥರು - ರಾಜವಳ್ಳಿ, ಆಂಧ್ರಪ್ರದೇಶ  "
***

No comments:

Post a Comment