Tuesday 1 January 2019

ರಾಯರು 04 ಮಹಿಮೆ ರಾಘವೇಂದ್ರ ಸ್ವಾಮಿ rayaru 04 mahime raghavendra swamy


ಧರೆಯೊದ್ದಾರಕೆ ಮೆರೆವರು ಗುರುಗಳು| ವರ ಮಂತ್ರಾಲಯ ದಲ್ಲಿ| ವರ ಪ್ರಹ್ಲಾದರು ವ್ಯಾಸ ಪ್ರಭುಗಳು| ವರ ತುಂಗಾತಟದಲ್ಲಿ| 🙏 ಮಂತ್ರಾಲಯ ಮಹಾ ಪ್ರಭುಗಳ ಆರಾಧನಾ ಪರ್ವಕಾಲ ನಾಳೆ ಇಂದ ಪ್ರಯುಕ್ತ ಅವರ ಮಹಿಮೆ ತಿಳಿಯುವ ಪುಟ್ಟ ಪ್ರಯತ್ನ ✍ಶ್ರೀ ಮಲ್ಲಪ್ಪ ಸಿಂಧೆ ಮತ್ತು ಅವರ ಸಹೋದರರು ಶ್ರೀ ಗುರು ರಾಜರ ಪರಮ ಭಕ್ತರು. ಪುಣೆಯ ಸಿಂಧೆ ಮನೆತನದವರು ಇವರು.ಬಹಳ ಧಾರ್ಮಿಕರು,ಧರ್ಮಕಾರ್ಯ ನಿರತರು,ಶ್ರೇಷ್ಠ ಉದ್ದಿಮೆ ದಾರರು,ಮತ್ತು ಶ್ರೀಮಂತ ಮನೆತನ. ಇಂತಹ ಮನೆತನದ ಶ್ರೀ ಮಲ್ಲಪ್ಪ ಸಿಂಧೆ ಅವರಿಗೆ ರಾಯರು ಎಂದರೆ ವಿಶೇಷ ಭಕ್ತಿ.ಯಾವುದೇ ಕಾರ್ಯವನ್ನು ಮಾಡುವ ಮೊದಲು ಶ್ರೀರಾಯರನ್ನು ಪ್ರಾರ್ಥನೆ ಮಾಡಿ ಆರಂಭಿಸುವದು ಅವರ ಪದ್ದತಿ.. ಒಮ್ಮೆ ದುರದೃಷ್ಟವಶಾತ್, ಅವರ ಪ್ರಾರಬ್ಧ ಕರ್ಮಾನುಸಾರ ಕಾಯಿಲೆಗೆ ತುತ್ತಾಗಿ ಆಪರೇಶನ್ ಮಾಡುವ ಪರಿಸ್ಥಿತಿ ಬಂತು. ಪ್ರಾಣಾಪಾಯಕರವಾದ ಆ ಆಪರೇಶನ್ ಮುಂಬೈನ ಬೀಚ್ ಕ್ಯಾಂಡಿ ಆಸ್ಪತ್ರೆ ಯಲ್ಲಿ 7/8/1967ರಂದು ನಡೆಯಿತು. ಸುಮಾರು 5 ತಾಸುಗಳ ಕಾಲ ನಡೆದ ಆಪರೇಶನ್. ರಾಯರ ಅನುಗ್ರಹ ದಿಂದ ಆಪತ್ತು ನಿಂದ ಪಾರಾದರು. ಶಸ್ತ್ರಚಿಕಿತ್ಸೆ ಹಿಂದಿನ ದಿನ ರಾತ್ರಿ ಮಲ್ಲಪ್ಪ ನವರು ರಾಯರ ಬಳಿ ಪ್ರಾರ್ಥನೆ ಮಾಡಿ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನಡೆಸಿಕೊಡಲು ಕೇಳಿಕೊಳ್ಳುವರು. ಆ ರಾತ್ರಿ ಅವರು ಮಲಗಿದ್ದಾಗ ಸ್ವಪ್ನದಲ್ಲಿ ಮಂತ್ರಾಲಯ ಪ್ರಭುಗಳ ದರುಶನ ವಾಗಿದೆ..ಒಬ್ಬ ಯತಿಗಳು ಧ್ಯಾನ ಮಾಡುತ್ತಾ ಒಂದು ಕೊಠಡಿಯಲ್ಲಿ ಕುಳಿತಿದ್ದಾರೆ.. ಅಲ್ಲಿ ಮಲ್ಲಪ್ಪ ಸಿಂಧೆಯವರು ತಮ್ಮ ಸಂಗಡಿಗರಾದ ಶ್ರೀ ಕೊಂಡಪ್ಪ ಮತ್ತು ವೆಂಕಟಸ್ವಾಮಿ ಜೊತೆಗೆ ಹೋಗುತ್ತಾರೆ. ಗುರುಗಳ ಬಳಿ ಕುಳಿತಿದ್ದ ಶಿಷ್ಯ ನೊಬ್ಬ ಇವರನ್ನು ಕಂಡು ಓಹೋ! ಬನ್ನಿ.ಬನ್ನಿ.. ಗುರುಗಳ ನೋಡಲು ನೀವು ಬರುವಿರೆಂದು ಗುರುಗಳ ಆಜ್ಞೆ ಆಗಿದೆ.ಪೂಜೆ ಮುಗಿದಿದೆ. ನೋಡಿ!! ನಿಮಗಾಗಿ ರಾಯರು ಇಲ್ಲಿ ಪ್ರಸಾದ ಇಟ್ಟಿದ್ದಾರೆ.ಇದನ್ನು ಸ್ವೀಕರಿಸಿ... ಗುರುಗಳು ಧ್ಯಾನಕ್ಕೆ ಕುಳಿತಿದ್ದಾರೆ.ಅವರ ಧ್ಯಾನಕ್ಕೆ ಭಂಗ ತರಬೇಡಿ. ಎಂದು ಹೇಳಿ ಆ ಕೊಠಡಿಯಲ್ಲಿ ಒಂದು ಕಡೆ ಇಟ್ಟು ಇರುವ ಪ್ರಸಾದವನ್ನು ಅಂದರೆ ಭಕ್ರಿ, ತುಪ್ಪ, ಮತ್ತು ಸಕ್ಕರೆ, ಅವರಿಗೆ ತೋರಿಸಲು ಮಲ್ಲಪ್ಪ ಸಿಂಧೆಯವರು ಅದನ್ನು ಭಕ್ತಿ ಇಂದ ಸ್ವೀಕರಿಸಿ ಗುರುಗಳಿಗೆ ದೂರದಿಂದ ನಮಸ್ಕಾರ ಮಾಡಿ ಹೊರಬಂದರು. ಎಚ್ಚರಿಕೆ ಆಯಿತು. ನೋಡಿದರೆ ಸುತ್ತಲೂ ಯಾರು ಇಲ್ಲ. ಸ್ವಪ್ನದಲ್ಲಿ ಗುರುಗಳ ಅನುಗ್ರಹ ನೆನೆದು ಆನಂದ ಭರಿತರಾದರು.. ಬೆಳಿಗ್ಗೆ ಎದ್ದ ಕೂಡಲೇ ತಮಗೆ ರಾತ್ರಿ ಬಿದ್ದ ಸ್ವಪ್ನ ಸೂಚಿತ ದೃಶ್ಯಗಳನ್ನು ಯೋಚಿಸುತ್ತಾ "ನನ್ನ ಜೊತೆಯಲ್ಲಿ ಇದ್ದವರು ಕೊಂಡಪ್ಪ ಮತ್ತು ವೆಂಕಟಸ್ವಾಮಿ. ಅಂದರೆ ಭಗವಂತನ ಹೆಸರು ಇಟ್ಟು ಕೊಂಡವರು. "ಬಹುಶಃ ಭಗವಂತನು ಅವರ ರೂಪದಿಂದ ಬಂದು "ಅಪ್ಯಚ್ಯುತೋ ಗುರುದ್ವಾರ" ಅಂದರೆ ಶ್ರೀ ಹರಿಯು ಸಹ ಗುರುಗಳ ಮುಖಾಂತರವೆ ಅನುಗ್ರಹ ಮಾಡಿಸುವನು..ಅದರಂತೆ ಶ್ರೀ ರಾಯರ ಮುಖಾಂತರ ವಾಗಿ ನನಗೆ ಸ್ವಪ್ನದಲ್ಲಿ (ರೊಟ್ಟಿ) ಭಕ್ರಿ ತುಪ್ಪ, ಸಕ್ಕರೆ ಪ್ರಸಾದ ಕೊಡಿಸಿ, ನಿನ್ನ ಶಸ್ತ್ರಚಿಕಿತ್ಸೆ ಭಕ್ರಿ (ರೊಟ್ಟಿ) ಯಂತೆ ಕಠಿಣವಾಗಿದ್ದರು ಸಹ ನಾವು ಅದನ್ನು ತುಪ್ಪ ದಂತೆ ಕರಗಿಸಿ ಸಕ್ಕರೆಯಂತೆ ಆನಂದವಾಗುವಂತೆ ಮಾಡುತ್ತೇವೆ ಎಂದು ಸೂಚಿಸಿದ್ದಾರೆ..ಆಯುಷ್ಯ ಅಭಿವೃದ್ಧಿ ಗೆ ಘೃತ ಮುಖ್ಯ ಅಂತ ಹೇಳುತ್ತಾರೆ.. ಬರಿಯ ಆಯುಷ್ಯ ಇದ್ದರೆ ಉಪಯೋಗ ಇಲ್ಲ. ನಮ್ಮ ಜೀವನ ಸಹ ಮಧುರವಾಗಿ ಸಿಹಿಯಾಗಿ ಇರಬೇಕು ಅಂದರೆ ಸಕ್ಕರೆ ಯನ್ನು ದಯಪಾಲಿಸಿದ್ದಾರೆ... ಆಹಾ!!ನಾನೆಂಥಹ ಭಾಗ್ಯಶಾಲಿ.ಶ್ರೀ ಹರಿ ವಾಯು ಗುರುಗಳ ಅನುಗ್ರಹ ಕ್ಕೆ ಪಾತ್ರನಾದೆ.ಇನ್ನೂ ನನಗೆ ಯಾವ ಭಯವು ಇಲ್ಲ ಅಂತ ಹೇಳಿ ಶಸ್ತ್ರಚಿಕಿತ್ಸೆ ಮಾಡಲು ಒಪ್ಪಿಗೆ ಕೊಡುತ್ತಾರೆ. ಮರುದಿನ ಸತತ 5 ತಾಸುಗಳ ಕಾಲ ಶಸ್ತ್ರಚಿಕಿತ್ಸೆ ಅವರಿಗೆ ನಡೆಯುತ್ತದೆ. ಬಂದ ವಿಪತ್ತಿನಿಂದ ಸಿಂಧೆಯವರು ಪಾರಾಗುತ್ತಾರೆ. ಹೀಗೆ ಮಂತ್ರಾಲಯ ಪ್ರಭುಗಳು ತಮ್ಮ ಭಕ್ತರು ಎಲ್ಲೆ ಇರಲಿ ಅವರ ರಕ್ಷಣೆ ಮಾಡುವವರು ಎಂಬುದನ್ನು ಈ ಘಟನೆ ತೋರಿಸುತ್ತದೆ... ನಂತರ ಅವರ ಆರೋಗ್ಯ ಗುಣವಾದ ಮೇಲೆ ಮಂತ್ರಾಲಯಕ್ಕೆ ಬಂದು ಗುರುರಾಜರ ದರುಶನ ಪಡೆದು ಅವಾಗ ಪೀಠದಲ್ಲಿ ಇದ್ದ ಶ್ರೀ ಸುಜಯೀಂದ್ರ ಗುರುಗಳಿಗೆ ನಮಸ್ಕರಿಸಿ ತಮಗಾದ ಸ್ವಪ್ನ ಅನುಭವವನ್ನು ಹೇಳಿ ನನಗೆ ಮಂತ್ರಾಲಯ ಮಂದಿರವನ್ನು ಜೀರ್ಣೋದ್ಧಾರ ಮಾಡಲು ರಾಯರ ಸೂಚನೆಯಾಗಿದೆ.ಹಾಗಾಗಿ ಆಲಯ ನಿರ್ಮಾಣಕ್ಕೆ ತಾವು ಅಪ್ಪಣೆ ಕೊಡಬೇಕು ಅಂತ ಕೇಳಿ ಅವರಿಂದ ಫಲ ಮಂತ್ರಾಕ್ಷತೆ ಪಡೆದುಕೊಂಡರು... ಆ ನಂತರ ಆಲಯ ಜೀರ್ಣೋದ್ಧಾರ ಆಯಿತು.. ಹೀಗೆ ಸ್ವಪ್ನದಲ್ಲಿ ಬಂದು ಅನುಗ್ರಹ ಮಾಡಿ ಅವರಿಂದ ಆಲಯ ನಿರ್ಮಾಣದ ಸೇವೆಯನ್ನು ತೆಗೆದುಕೊಂಡು ಅವರಿಗೆ ಅನುಗ್ರಹ ಮತ್ತು ಅವರಿಗೆ ಖ್ಯಾತಿಯನ್ನು ನೀಡಿದವರು ನಮ್ಮರಾಯರು. ಹೀಗೆ ಅಸಂಖ್ಯಾತ ಅವರ ಮಹಿಮೆಯ ಸಮುದ್ರದಲ್ಲಿ ಇದು ಒಂದು ಘಟನೆ ಒಂದು ಹನಿ ಅಂತ ಹೇಳಬಹುದು.. 🙏ಶ್ರೀ ಕೃಷ್ಣಾರ್ಪಣ ಮಸ್ತು🙏 ಕರೆದರೆ ಬರುವರು| ಅರಘಳಿಗೆ ಇರದಲೆ| ಕರ್ಕಶ ಹೃದಯಿಗಳಲ್ಲ| ಧರೆಯೊಳು ಗುರುಗಳ ಮೊರೆಯಿಡಲಾಗದ| ನರರೇ ಪಾಪಿಗಳೆಲ್ಲ.|| ಭುವಿಯೊಳು ಬಹುಪರಿ| ಬಳಲುವ ಮನುಜರ| ಭವಣೆಯ ಬಲು ತಿಳಿದಿಲ್ಲಿ| ತವಕದಿ ಬಿಡಿಸಲು| ಅವತರಿಸಿರುವರು| ವರ ಮಂತ್ರಾಲಯ ದಲ್ಲಿ|| ನಾಳೆಯಿಂದ ಗುರುಗಳ ಆರಾಧನಾ ಪರ್ವಕಾಲ ಆರಂಭ. 🙏ಅ.ವಿಜಯವಿಠ್ಠಲ🙏
*********

ಇದೊಂದು ಅಧ್ಬುತವಾದ,ರಮ್ಯವಾದ ಸತ್ಯ ಕತೆ. ಈ ಘಟನೆ ನಡೆದಿದ್ದು 1945ರಲ್ಲಿ ಇದು ಶ್ರೀ ಗುರು ರಾಜರ ಅನೇಕ ಮಹಿಮೆಗಳಲ್ಲಿ ಇದು ಒಂದು ಸೇರುತ್ತದೆ. ಶ್ರೀ ರಾಯರ ಆರಾಧನೆ ೦೮ದಿನ ಮುಂಚೆ ಎಮ್ಮಿಗನೂರಿ ಆರೋಗ್ಯ ಇಲಾಖೆಯ ಅಧಿಕಾರಿಗಳು ವರದಿಯಂತೆ ಕಾಲರಾ ಇದ್ದ ಪ್ರಯುಕ್ತ ಬಳ್ಳಾರಿ ಯ ಕಲೆಕ್ಟರ್ ಆಗಿದ್ದ ಶ್ರೀfrazer ಸಾಹೇಬ್ ಮಂತ್ರಾಲಯ ದಲ್ಲಿ ಆರಾಧನೆ ಉತ್ಸವ ಮಾಡಬಾರದು ಹಾಗು ಜನಗಳು ಸೇರಬಾರದು ಅಂತ 144 section ಜಾರಿ ಮಾಡಿದರು. ಆ ಸಮಯದಲ್ಲಿ ಮಂತ್ರಾಲಯ ದಲ್ಲಿ ಆರಾಧನೆ ಉತ್ಸವ ಭರದಿಂದ ಸಾಗಿತ್ತು. ಆ ಸಮಯದಲ್ಲಿ ಅಲ್ಲಿ ಪೀಠದಲ್ಲಿ ಶ್ರೀ ಸುಯಮೀಂದ್ರ ಗುರುಗಳು ಇದ್ದರು ಇದನ್ನು ಕೇಳಿ ಅವರ ಮನಸ್ಸಿಗೆ ಬಹಳ ಬೇಸರವಾಯಿತು.
ರಾಯರ ಆರಾಧನೆಗೆ ಅಡ್ಡಿಯೇ??
ಎಂತಹ ಅನ್ಯಾಯ??
ಮಂತ್ರಾಲಯದ ಸುತ್ತ ಮುತ್ತ ಕಾಲರಾ ವ್ಯಾಧಿ ಜೋರಾಗಿದೆಯೆಂದು ಅಧಿಕಾರಿಗಳು ತಪ್ಪಾಗಿ ವರದಿ ಕೊಟ್ಟ್ಇದ್ದಾರೆ ಈ ತರಹದ ಸೆಕ್ಷನ್ ಹಾಕಿ ರು ವ ದು ತಪ್ಪು ಅಂತ ಗುರುಗಳು ತಮ್ಮ ಆಪ್ತ ರನ್ನು ಕಲೆಕ್ಟರ್ ಬಳಿ ಕಳುಹಿಸಿ,ರಾಯರ ಮಹಿಮೆಯನ್ನು ಹೇಳಿಸಿದರು. ಆದರು ಆ ಅಧಿಕಾರಿ ಒಪ್ಪಿಗೆ ಕೊಡಲಿಲ್ಲ. ನಿಜವಾಗಿ ಅಲ್ಲಿ ಕಾಲರಾ ಆ ಸಮಯದಲ್ಲಿ ಇದ್ದಿಲ್ಲ.ಬೇರೆ ಯಾರೋ ಅನಾರೋಗ್ಯ ದಿಂದ ಸತ್ತಕಾರಣದಿಂದ ಅಧಿಕಾರಿಗಳು ಕಾಲರಾ ಅಂತ ಹೇಳಿ  ಸುಳ್ಳು ವರದಿ ನೀಡಿದ್ದರು. ಶ್ರಾವಣ ಶುಕ್ಲ ಚತುರ್ದಶಿ ಸಪ್ತರಾತ್ರೋತ್ಸವ ಪ್ರಾರಂಭವಾಗಿದೆ. ಭಕ್ತರು ಆದವಾನಿ ತುಂಗಭದ್ರಾ ರೈಲ್ವೆ ಸ್ಟೇಷನ್ ನಲ್ಲಿ ಬಂದಿದ್ದಾರೆ. ಆದರೆ ಬ್ರಿಟಿಷ್ ಅಧಿಕಾರಿಗಳು ಯಾರನ್ನು ರೈಲಿನಿಂದ ಇಳಿಯಗೊಡದೆ ಅವರನ್ನು ಹಿಂತಿರುಗಿ ಕಳುಹಿಸುತ್ತಾರೆ. ಇದನ್ನು ಕೇಳಿದ ಸ್ವಾಮಿ ಗಳಿಗೆ ಬೇಸರವಾಗಿ ಮತ್ತೆ ಆ ಅಧಿಕಾರಿಗೆ ಹೇಳುತ್ತಾರೆ. ಹಾಕಿದ ಸೆಕ್ಷನ್ ಹಿಂದೆ ತೆಗೆಯಲು ,ಮತ್ತು ಇಲ್ಲಿ ಯಾವುದೇ ರೀತಿಯ ರೋಗ ಉಪದ್ರವ ಇಲ್ಲ ಅಂತ ಹೇಳಿದರು ಆವಾಗ ಆ ಅಧಿಕಾರಿಗಳು ಒಪ್ಪಿಗೆ ಕೊಡುವುದಿಲ್ಲ. ಮರುದಿನ ಹುಣ್ಣುಮೆ. ಸಾಯಂಕಾಲ ಆ ಅಧಿಕಾರಿಗೆ ಏನೋ ಒಂದು ತರಹ ಕಳವಳ.ಎಲ್ಲಿ ಕುಳಿತರು ನಿಂತರು ಮನಸ್ಸಿಗೆ ಸಮಾಧಾನ ವಿಲ್ಲ. ಮಲಗಿದರು ನಿದ್ದೆ ಬರಲಿಲ್ಲ. ಅವರಿಗೆ ಹಿಂದೆ ನಡೆದವು ಘಟನೆ ಗಳು ಮನ್ರೋಸಾಹೇಬ ನಿಗೆ ರಾಯರು ದರುಶನ ಕೊಟ್ಟ ಕತೆ,ಅವರ ಮಹಿಮೆಯನ್ನು ಸ್ವಾಮಿಗಳು ಹೇಳಿದ್ದು ಅದೇ ಪುನರಾವರ್ತಿತ ಆಯಿತು. ತಲೆಯಲ್ಲಿ  ಏನೋ ಭಾರ ವಾದಂತೆ ಆಯಿತು. ತಕ್ಷಣ ಮೇಲೆದ್ದು ಟೆಲಿಗ್ರಾಂ ಮಾಡಿ ಮಂತ್ರಾಲಯ ದಲ್ಲಿ ರಾಯರ ಉತ್ಸವ ಮಾಡಬಹುದು.144 section cancelಮಾಡಿದೆ ಅಂತ ಬರೆದು ಮಠದ ಅಧಿಕಾರಿಗಳು ಕರೆಸಿ ಅವರಿಗೆ ಕೊಟ್ಟ ಕಳುಹಿಸಿದರು.
ಒಂದು ಮಾತು ಆ ಅಧಿಕಾರಿ ಹೇಳುತ್ತಾನೆ. ನನಗೆ ತಿಳಿಯದೇ ರಾಯರು ಈ  ಆದೇಶವನ್ನು ರದ್ದು ಮಾಡಿಸುವ ಈ ಕೆಲಸ ಮಾಡಿಸಿದ್ದಾರೆ. ತಕ್ಷಣ ಮಂತ್ರಾಲಯ ಹೋಗಿ ಅಲ್ಲಿ ಇರುವ ಅಧಿಕಾರಿಗಳು ಈ ಪತ್ರ ತೋರಿಸಿ ರಾಯರ ಆರಾಧನೆ ನಡೆಸಿ..ಮತ್ತು ನನ್ನ ಮನಸ್ಸಿಗೆ ಇವಾಗ ನೆಮ್ಮದಿ ಆಗಿದೆ ಅಂತ ಹೇಳಿ ಕಳುಹಿಸುವರು.

ಬೆಳಿಗ್ಗೆ ಪಾಡ್ಯ ರಾಯರ ಪೂರ್ವರಾಧನೆ.

ಬಾಂಬೆ ಮದ್ರಾಸ ಇಂದ ಅನೇಕ ಭಕ್ತರು ರೈಲಿನಲ್ಲಿ ತುಂಗಭದ್ರಾ ಸ್ಟೇಷನ್ ಗೆ ಬಂದಿದ್ದಾರೆ. ಅವರಿಗೆ ಇಲ್ಲಿ ಸೆಕ್ಷನ್ ಹಾಕಿದ್ದು ತಿಳಿಯದು. ಆ ಸಮಯದಲ್ಲಿ ಅಲ್ಲಿ ಇರುವ ಅಧಿಕಾರಿಗಳಿಗೆ ಇನ್ನೂ ಆರ್ಡರ್ ಅವರ ಕೈಯಲ್ಲಿ ಬಂದಿದಿಲ್ಲ. ಹಾಗಾಗಿ ಅವರು ಯಾರನ್ನು ರೈಲಿನಿಂದ ಇಳಿಯಗೊಡದೇ ಹಿಂದಕ್ಕೆ ಕಳಿಸಲು ಪ್ರಯತ್ನ ಮಾಡುತ್ತಾ ಇದ್ದಾರೆ. ಸುಮಾರು ಸಾವಿರಕ್ಕು ಹೆಚ್ಚಿನ ಭಕ್ತರು, ಬಹು ದುಃಖ ದಿಂದ ರಾಯರ ಆರಾಧನೆ ಹೋಗದೇ ಇರುವದಕ್ಕೆ ಅಳಹತ್ತಿದರು ಅಯ್ಯೋ ಇಷ್ಟು ದೂರ ಬಂದು ರಾಯರೇ ನಿಮ್ಮ ದರುಶನ ಇಲ್ಲದೇ ಹೋಗಬೇಕು ಆಯಿತಲ್ಲವಾಂತ ಕಣ್ಣೀರು ಹಾಕುತ್ತಾ ಪ್ರಾರ್ಥನೆ ಮಾಡ ಹತ್ತಿದರು.

ರೈಲು ಮುಂದೆ ಚಲಿಸಿತು.
ಎಲ್ಲಾ ಭಕ್ತರು ರಾಘವೇಂದ್ರ ರಾಘವೇಂದ್ರ ಕಾಪಾಡು ದರುಶನ ಭಾಗ್ಯ ಕೊಡು ತಂದೇ ಅಂತ ಏಕಕಾಲದಲ್ಲಿ ಕೂಗ ಹತ್ತಿದರು. ತಕ್ಷಣ ಹೊರಟಿದ್ದ ರೈಲು ನಿಂತಿದೆ.  ಚೆನ್ನಾಗಿ ಇದ್ದ ರೈಲು ಕೆಟ್ಟು ನಿಂತಿದೆ.ಇಂಜಿನ್ ಚಾಲಕ ಎಷ್ಟು ಪ್ರಯತ್ನ ಪಟ್ಟರು ರೈಲು ಮುಂದೆ ಸಾಗುತ್ತಾ ಇಲ್ಲ ಅರ್ಧಘಂಟೆ ಆಯಿತು .ಏನೇ ಪ್ರಯತ್ನ ಮಾಡಿದರು ರಿಪೇರಿ ಆಗುತ್ತಾ ಇಲ್ಲ.  ಮತ್ತೆ ಅದರಲ್ಲಿ ಯಾವ ಭಾಗವು ಕೆಟ್ಟಿಲ್ಲ.ಆದರು ರೈಲು ಕದಲುವದಿಲ್ಲ.ಅಲ್ಲಿ ನ ಅಧಿಕಾರಿಗಳು ಒಂದು ತಿಳಿಯದೇ ಹೋಯಿತು.
ಅಷ್ಟು ಹೊತ್ತಿಗೆ ಕಲೆಕ್ಟರ್ ಇಂದ ೧೪೪ ಸೆಕ್ಷನ್ ರದ್ದುಮಾಡಲಾಗಿದೆ.ಎಲ್ಲಾ ಭಕ್ತರ ನ್ನು ಮಂತ್ರಾಲಯ ಹೋಗಲು ಬಿಡಿ ಎನ್ನುವ ಆದೇಶ ಪತ್ರ ಬಂದಿದೆ. ತಕ್ಷಣ ಎಲ್ಲಾ ಭಕ್ತರು ರಾಯರ ಮಹಿಮೆಯನ್ನು ಕೊಂಡಾಡಿ ಪತ್ರ ಬರುವವರೆಗೆ ರೈಲನ್ನು ನಿಲ್ಲಿಸುವಂತೆ ಮಾಡಿದ ಗುರುರಾಜ ರ ಕಾರುಣ್ಯ ವನ್ನು ನೆನೆಯುತ್ತಾರೆ.  ಸಾವಿರ ಕ್ಕು ಹೆಚ್ಚಿನ ಜನ ರೈಲು ನಿಂದ ಇಳಿದ ಕೂಡಲೇ ಆಶ್ಚರ್ಯಕರ ಘಟನೆ ನಡೆಯಿತು. ತಕ್ಷಣ ರೈಲು ಕದಲಲು ಪ್ರಾರಂಭ ಆಗಿತು ಮುಂದೆ ಪ್ರಯಾಣ ರೈಲು ಬೆಳೆಸಿದೆ.
ಈ ಮಹಾ ಮಹಿಮೆಯನ್ನು ಕಣ್ಣಾರೆ ಕಂಡ ಸಕಲ ಜನರು ಯಂತ್ರದ ಗಾಡಿ ಯನ್ನು ನಿಯಂತ್ರಣ ಮಾಡಿದ ಮಂತ್ರಾಲಯ ಮಹಾ ಮಹಿಮನ ಮಹಿಮೆಯನ್ನು ಬಣ್ಣಿಸುತ್ತಾ ಆನಂದದಿಂದ ಆರಾಧನೆ ಯಲ್ಲಿ ಪಾಲ್ಗೊಳ್ಳಲು ಹೊರಡುತ್ತಾರೆ.

ಇಂತಹ ಮಹಾ ಮುನಿಯ ಮಧ್ಯಾರಾಧನೆ ಇಂದು ಎಲ್ಲ ಕಾಲದಿ  ಪ್ರಾಣಲಕುಮಿನಲ್ಲ ನಿನ್ನೊಳು ನಿಂತು ಕಾರ್ಯಗಳನೆಲ್ಲ ತಾನೇ ಮಾಡಿ ಕೀರ್ತಿಯ ನಿನಗೆ ಕೊಡುತಿಪ್ಪ.
***********

ಕರೆದರೆ ಬರುವರು ಅರಘಳಿಗೆ ಇರದಲೆ|
ಕರ್ಕಶ ಹೃದಯಿಗಳಲ್ಲ|
ಧರೆಯೊಳು ಗುರುಗಳ ಮೊರೆಯಿಡಲಾಗದ ನರರೇ ಪಾಪಿಗಳೆಲ್ಲ||
||ಇಂದು ಮಂತ್ರಾಲಯ ಪ್ರಭುಗಳಾದ ಶ್ರೀ ರಾಘವೇಂದ್ರ ಗುರುಗಳ ಪೂರ್ವಾರಾಧನೆ.|||
||ರಾಯರ ಮಹಿಮಾ||
||ವೃಷಭಕ್ಕೆ ಪ್ರಾಣ ದಾನ ಮಾಡಿದರು.||.
✍ಶ್ರೀ ಮಂತ್ರಾಲಯ ಮಹಾಪ್ರಭುಗಳ ಅಸಂಖ್ಯಾತ ಮಹಿಮೆ ಗಳ ಸಾಲಿನಲ್ಲಿ ಇದು ಒಂದು ಸೇರುತ್ತದೆ.
ಶ್ರೀ ಗುರುರಾಜರ ಅನುಗ್ರಹ ಬರಿಯ ಮಾನವ ಕುಲಕ್ಕೆ ಮಾತ್ರ ವಲ್ಲ ಪ್ರಾಣಿಗಳ ಮೇಲೆ ಸಹ ಅನುಗ್ರಹ ಮಾಡಿದ್ದಾರೆ..
ಅವರು  ಸರ್ವಜೀವಿಗಳ ಉದ್ದಾರಕರು..
ಈ ಘಟನೆ ನಡೆದಿದ್ದು ಹುಬ್ಬಳ್ಳಿಯಲ್ಲಿ .ಸುಮಾರು ೪೦ವರುಷಗಳ ಹಿಂದಿನ ಮಾತು.
ಶ್ರೀ  s.n.ಕೆಂಭಾವಿಯವರು ರಾಯರ ಭಕ್ತರು. ಅವರಿಗೆ ರಾಯರಲ್ಲಿ ಅಪಾರ ಭಕ್ತಿ, ಗೌರವ ನಂಬಿಕೆಗಳು ಇದ್ದವು.
ಆದರೆ ಅವರ ಧರ್ಮ ಪತ್ನಿಗೆ ಅಷ್ಟು ಒಂದು ನಂಬಿಕೆ ಮೊದಲು ಇದ್ದಿಲ್ಲ.
ಕೆಂಭಾವಿಯವರು ಸಮಯ ಸಿಕ್ಕಾಗ ಎಲ್ಲಾ  ತಮ್ಮ ಪತ್ನಿಗೆ ಶ್ರೀರಾಯರ ಮಹಿಮೆ,ರಾಯರ ಮೃತ್ತಿಕಾ ಮಹಿಮೆ ಬಗ್ಗೆ ಅದರ ಪ್ರಭಾವವನ್ನು ಹೇಳುತ್ತ ಇದ್ದರು.ಅವರ ಮನೆಯಲ್ಲಿ ಒಂದು ಸುಧೃಡವಾದ,ಎತ್ತು ಇತ್ತು.
ಅದನ್ನು ಕಂಡರೆ ಶ್ರೀಮತಿ ಕೆಂಭಾವಿಯವರಿಗೆ ಬಲು ಪ್ರೀತಿ, ವಾತ್ಸಲ್ಯ.ಒಂದು ದಿನ ಬೆಳಿಗ್ಗೆ ಕೊಟ್ಟಿಗೆಗೆ ಬಂದಾಗ ಒಂದು ಅಘಾತಕಾರಿ ದೃಶ್ಯ.
ಅವರ ಪ್ರೀತಿಯ ಎತ್ತು ಸರ್ಪದ ಸ್ಪರ್ಶದಿಂದ ಬಾಯಿಯಲ್ಲಿ ನೊರೆ ಬರುತ್ತಾ ಮೃತ್ಯು ವಿಗೆ ಸಮೀಪದಲ್ಲಿ ಇರುವುದು ಕಂಡು, ಗಾಭರಿ ಇಂದ ಹೌಹಾರಿದರು.
ಅದನ್ನು ಹೇಗಾದರೂ ಬದುಕಿಸಿಕೊಳ್ಳಬೇಕು ಅಂತ ವಿಚಾರ ಮಾಡಲು ಅವರಿಗೆ ಯಾವ ದಾರಿಯು ತೋರಲಿಲ್ಲ.
ವಿಷಬಾಧೆಯಿಂದ ಮರಣದ ಸಮೀಪದಲ್ಲಿ ಇರುವ ತಮ್ಮ ಪ್ರೀತಿಯ ಎತ್ತನ್ನು ಆ ನೋಡಿ ಆ ತಾಯಿಯು ಬಹು ದುಃಖ ಗೊಳ್ಳುತ್ತಾಳೆ.
ಅವಾಗ್ಗೆ ಅವರಿಗೆ ತಮ್ಮ ಪತಿ ಸದಾ ಹೇಳುತ್ತಾ ಇದ್ದ ರಾಯರ ಮಹಿಮೆಯನ್ನು ಹಾಗು ಅವರ ಮೃತ್ತಿಕಾ ಪ್ರಭಾವವನ್ನು ನೆನಪಿಗೆ ಬರುತ್ತದೆ. 
ತಕ್ಷಣ ದೇವರ ಮನೆಗೆ ಹೋಗಿ ರಾಯರಲ್ಲಿ ಪ್ರಾರ್ಥನೆ ಮಾಡಿ  ದೀಪವನ್ನು ಹಚ್ಚಿ
ಸ್ವಾಮಿ!! ನಿಮ್ಮ ಬಗ್ಗೆ ನಮ್ಮ ಯಜಮಾನರು ಬಹಳಷ್ಟು ಹೇಳುತ್ತಾರೆ.ಕರುಣಾಳುಗಳು ದೀನ ಜನರ ಉದ್ದಾರಕರು ಅಂತ.ಆದರೆ ನನಗೆ ಏನು ಗೊತ್ತಿಲ್ಲ.ನೀವು ಮಹಾತ್ಮರು.ದಯವಿಟ್ಟು ನಮ್ಮ ಮನೆಯ ಆ ಎತ್ತಿನ ಕಷ್ಟ ವನ್ನು ಪರಿಹಾರ ಮಾಡಿ ಜೀವದಾನ ಮಾಡಿ ಅಂತ ಕೇಳಿಕೊಂಡರು.
ತಕ್ಷಣ ಅಲ್ಲಿ ಸಂಪುಟ ದಲ್ಲಿ ಇದ್ದ ಶ್ರೀರಾಯರ ಮೃತ್ತಿಕಾ ತೆಗೆದುಕೊಂಡು ಒಂದು ಪಾತ್ರೆಯಲ್ಲಿ ನೀರನ್ನು ತೆಗೆದುಕೊಂಡು ಅದರಲ್ಲಿ ಮೃತ್ತಿಕಾ ಕಲಿಸಿ ರಾಯರ ಸ್ಮರಣೆ ಮಾಡುತ್ತಾ ಆ ಎತ್ತಿಗೆ ಬಲವಂತವಾಗಿ ಕುಡಿಸುತ್ತಾರೆ..
ಹತ್ತು ನಿಮಿಷ ಗಳಾಯಿತು.ಅವರು ರಾಯರ ಸ್ಮರಣೆ ಮಾಡುತ್ತಾ ಆ ವೃಷಭ ದ ಕಡೆ ನೋಡುತ್ತಾ ಇದ್ದಾರೆ.
ತಕ್ಷಣ ಎತ್ತು ಎದ್ದು ನಿಂತು ಮೈ ಕೊಡವಿಕೊಂಡು ಜೋರಾಗಿ ಕೂಗಿತು..
ಹಾವುಕಡಿದಿದ್ದು, ಬಾಯಿಯಲ್ಲಿ ನೊರೆ ಬಂದ ಗುರುತು ಇಲ್ಲವೇ ಇಲ್ಲ.

 ತಕ್ಷಣ ಆ ತಾಯಿ ರಾಯರ ಮಹಿಮೆಯನ್ನು ನೋಡಿ ಸಂತೋಷ ದಿಂದ ಸ್ತುತಿಸಿ ದರು.
ಮತ್ತು ಕೊನೆಯವರೆಗು ಶ್ರೀರಾಯರ ಅನನ್ಯ ಭಕ್ತರಾದರು.
ಇದನ್ನು ನೋಡಿ ದಾಗ ಶ್ರೀರಾಯರ ಕರುಣಾ ಬರೀ ಮನುಷ್ಯ ಮಾತ್ರ ದವರಿಗಲ್ಲದೇ ಮೂಕ ಪ್ರಾಣಿಗಳ ಮೇಲೆ ಸಹ ಇದೆ. ಎಂದು ಸ್ಪಷ್ಟವಾಗಿ ಕಾಣಬಹುದು.

ಇದು ಶ್ರೀ ಗುರುರಾಜರ ಭಕ್ತ ವಾತ್ಸಲ್ಯ ಕ್ಕೆ ಉದಾಹರಣೆ.
ಅವರಲ್ಲಿ ನಿಂತು ಈ ಕಾರ್ಯ ವನ್ನು ಮಾಡಿಸಿದ ಅವರ ಅಂತರ್ಯಾಮಿಯಾಗಿ ಇರುವ ಭಾರತಿಪತಿಯಾದ ಶ್ರೀ ಹರಿಯ ಅನುಗ್ರಹ…ಮತ್ತು
ಅವರಿಗೆ ಲೋಕದಲ್ಲಿ ಹೆಸರು ಕೊಡಲು ಭಗವಂತನು ಮಾಡುವ ಲೀಲೆಗಳಲ್ಲಿ ಇದು ಒಂದು...
🙏ಶ್ರೀ ಕೃಷ್ಣಾರ್ಪಣ ಮಸ್ತು🙏
 ಭುವಿಯೊಳು ಬಹುಪರಿ ಬಳಲುವ ಮನುಜರ ಭವಣೆಯ ಬಲು ತಿಳಿದಿಲ್ಲಿ|
ತವಕದಿ ಬಿಡಿಸಲು ಅವತರಿಸಿರುವರು|
ವರ ಮಂತ್ರಾಲಯ ದಲ್ಲಿ||
🙏ಶ್ರೀ ರಾಘವೇಂದ್ರಾಯ ನಮಃ🙏
ಇಂದಿನಿಂದ ಸಾಧ್ಯವಾದಷ್ಟು ಶ್ರೀರಾಯರ ಮಹಿಮೆಯನ್ನು ತಿಳಿದುಕೊಳ್ಳುವ ಪುಟ್ಟ ಪ್ರಯತ್ನ ಮಾಡೋಣ.

🙏ಅ.ವಿಜಯವಿಠ್ಠಲ🙏
************

No comments:

Post a Comment