Tuesday, 1 January 2019

ರಾಯರು 03 ಮಹಿಮೆ ರಾಘವೇಂದ್ರ ಸ್ವಾಮಿ rayaru 03 mahime raghavendra swamy


ವಿಜಯ ನಗರ ಸಾಮ್ರಾಜ್ಯದ ಕಾಲದಲ್ಲಿ ತನ್ನ ಕೀರ್ತಿಯ ಉತ್ತುಂಗ ಶಿಖರಕ್ಕೆ ಏರಿದ್ದ ಹರಿದಾಸ ಸಾಹಿತ್ಯವು ಆ ಸಾಮ್ರಾಜ್ಯ ಪತನಾನಂತರ ತನ್ನ ಅವನತಿಯತ್ತ ನಡೆಯಿತು. ಆ ಸಂದರ್ಭದಲ್ಲಿ ಶ್ರೀ ಮಹೀಪತಿದಾಸರ ಕೀರ್ತನೆಗಳ ಮೂಲಕ ದಾಸ ಸಾಹಿತ್ಯಕ್ಕೆ ಜ್ಯೋತಿ ನಂದಾದೀಪವಾಗಿ ಮುಂದುವರೆಯಿತೆನ್ನಬಹುದು!
ಇಂತಹಾ ಸಮಯದಲ್ಲಿ ಹರಿದಾಸ ಸಾಹಿತ್ಯಕ್ಕೆ ಮತ್ತೆ ಚಾಲನೆ ದೊರೆತುದು " ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮರಿಂದ.
ಶ್ರೀ ರಾಘವೇಂದ್ರತೀರ್ಥರು ಪಂಡಿತರೂ, ಮಠಾಧಿಪತಿಗಳೂ, ಯೋಗಿಗಳೂ ಆಗಿದ್ದ ಇವರ ಪ್ರಭಾವ ದೇಶದೆಲ್ಲೆಡೆ ಹರಡಿತು.
ಶ್ರೀ ವ್ಯಾಸರಾಜರಂತೆಯೇ ಶ್ರೀ ರಾಘವೇಂದ್ರತೀರ್ಥರೂ " ವ್ಯಾಸಕೂಟ - ದಾಸಕೂಟ " ಗಳೆರಡನ್ನೂ ಉಜ್ಜೀವನಗೊಳಿಸಿದರು.
ಶ್ರೀ ರಾಘವೇಂದ್ರತೀರ್ಥರು ದಾಸ ಸಾಹಿತ್ಯದ ಮೊದಲ ಮತ್ತು ಎರಡನೆಯ ಘಟ್ಟಗಳಿಗೆ ಸಂಪರ್ಕ ಸೇತುವೆಯಾದರು.
ಶ್ರೀ ರಾಯರ ಅಂಕಿತ " ವೇಣುಗೋಪಾಲ "
ಮಂತ್ರಾಲಯದ ಸುತ್ತಮುತ್ತ ಇವರ ಪ್ರಭಾವ ದಟ್ಟವಾಗಿ ಹರಡುತ್ತಿದ್ದಂತೆಯೇ ಹರಿದಾಸರಿಗೆ ಸ್ಫೂರ್ತಿಯೂ ಇದರೊಂದಿಗೆ ಉಕ್ಕಿ ಹರಿಯಿತು.
ಮೊದಲ ಹರಿದಾಸ ಪಂಥದ ಕೇಂದ್ರವು ಹಂಪಿಯಲ್ಲಿದ್ದುದು ( ಇದರ ಮೇಲ್ವಿಚಾರಕರು ಶ್ರೀ ವ್ಯಾಸರಾಜ ಗುರುಸಾರ್ವಭೌಮರು ); ಈ ಮಂತ್ರಾಲಯದಲ್ಲಿ - ಚಿಪ್ಪಗಿರಿ - ಉತ್ತನೂರು - ಮಾನ್ವಿ - ರಾಯಚೂರು - ಲಿಂಗಸೂಗೂರು ಮೊದಲಾದ ಊರುಗಳಲ್ಲಿ ನಿಂತಿತು. ಇದರಿಂದ ಅಲ್ಲಲ್ಲಿ ಹರಿದಾಸರು ಹುಟ್ಟಿದರು.
ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮರ ಮೇಲೆ ಪ್ರಪ್ರಥಮವಾಗಿ ಕೃತಿ ರಚನೆ ಮಾಡಿದವರು ಶ್ರೀ ರಾಯರ ಮೊಮ್ಮಕ್ಕಳೂ, ವಿದ್ಯಾ ಶಿಷ್ಯರೂ, ಆಶ್ರಮ ಶಿಷ್ಯರೂ, ಉತ್ತರಾಧಿಕಾರಿಗಳೂ ಆದ ಶ್ರೀ ಯೋಗೀ೦ದ್ರತೀರ್ಥರು.

ಶ್ರೀ ಯೋಗೀ೦ದ್ರತೀರ್ಥರು - ಅಂಕಿತ " ಶ್ರೀ ರಾಮ "
ರಾಗ : ಮುಖಾರಿ ತಾಳ : ತ್ರಿವಿಡಿ
ಸರಸೀ ಸಂಭವಾ ಸುಂದರಾ ।
ಚರಣ ಯುಗ ಶರಣೆಂಬೆ ನಿನಗೆ ।। ಪಲ್ಲವಿ ।।
ಕರುಣಿಸಿ ಪದವಾ ಪರಿಪಾಲಿಸಿದೆ ।
ಪರಮ ಪುರುಷನನುಗ್ರಹವ ಪಡೆದೆ ।। ಚರಣ ।।
ವೈರಿ ನಿಕರವಾ ದೂರೀಕರಿಸಿದೆ ।
ಗುರು ರಾಘವೇಂದ್ರರಾಯ ಸ್ಮರಿಸೂವೆ ನಿಮ್ಮಾಯ ।। ಚರಣ ।।
ಶ್ರೀರಾಮ ಪದಾಂಭೋಜ ವರ ಪೂಜಾ ಬಲದಿಂ ।
ದುರಿತಾವ್ಯನಗೆ ನೀ ಯಿರದಂತೆ ಮಾಡಿದೆ ।। ಚರಣ ।।

****

ಶ್ರೀ ರಾಘವೇಂದ್ರತೀರ್ಥರಿಂದ ಪುನರುಜ್ಜೀವನ ಪಡೆದು ಚಾಲನೆಗೊಂಡ ಈ ಹರಿದಾಸ ಸಾಹಿತ್ಯ ಕ್ಷೇತ್ರವನ್ನು ಅಕ್ಷರಶಃ ಮುಂದುವರೆಸಿದವರು ಶ್ರೀ ವಿಜಯರಾಯರು. 
ಇವರ ಅಂಕಿತ " ವಿಜಯವಿಠ್ಠಲ "

ಶ್ರೀ ವಿಜಯರಾಯರು ಶ್ರೀ ಪುರಂದರದಾಸರಿಂದ ಸ್ವಪ್ನಾಂಕಿತರಾಗಿ " ವಿಜಯ ವಿಠಲ " ನೆಂಬ ಅಂಕಿತದಲ್ಲಿ ಕೃತಿಗಳನ್ನು ರಚಿಸಿದರು.

ಶ್ರೀ ಭಾವಿಸಮೀರ ವಾದಿರಾಜರ ಮೂಲಕ ಶಾಸ್ತ್ರ ಜ್ಞಾನ ವೈಭವವನ್ನು ಪಡೆದು, ಶಾಸ್ತ್ರೀಯವಾಗಿ - ಸೈದ್ಧಾಂತಿಕವಾಗಿ ಮಹತ್ವದ ತಿರುವು ಪಡೆದಿದ್ದ ಹರಿದಾಸ ಸಾಹಿತ್ಯವು ಶ್ರೀ ವಿಜಯದಾಸರಿಂದ ಮತ್ತಷ್ಟು ವೈಭವಯುತವಾಯಿತು!

ಅಂದು ಭಾವನಾ ಪ್ರಧಾನವಾಗಿ ಹರಿದು ಬಂದ ಹರಿದಾಸ ಸಾಹಿತ್ಯವು ಇಂದು ಬುದ್ಧಿ ಪ್ರಧಾನವಾಗಿ ಪಾಂಡಿತ್ಯದ ಪರಿಣಿತಿಯಲ್ಲಿ ಜನಮನದ ಅನಿಸಿಕೆಯಲ್ಲಿ ತನ್ನ ಪ್ರಚಾರ ಕಾರ್ಯದ ಕೃತಕೃತ್ಯೆಯನ್ನು ಪಡೆಯಿತು!

ತತ್ತ್ವ ನಿಬಿಡ ಸುಳಾದಿಗಳನ್ನೇ ಹೆಚ್ಚಾಗಿ ರಚಿಸಿ " ಸುಳಾದಿ ದಾಸ " ರೆಂದೇ ಜಗತ್ಪ್ರಸಿದ್ಧರಾದವರು ಶ್ರೀ ವಿಜಯರಾಯರು.

ದ್ವೈತ ಸಿದ್ಧಾಂತದ ಮತ್ತೂ ಕೆಲವು ವಿಶ್ಲೇಷಣಾತ್ಮಕ ತತ್ತ್ವ ಸೂಕ್ಷ್ಮಗಳ ಹರಿದಾಸ ಸಾಹಿತ್ಯವು ಹೊರ ಬರಲು ಶ್ರೀ ವಿಜಯರಾಯರು ಕಾರಣರಾದರು.

ರಾಗ : ಸೌರಾಷ್ಟ್ರ     ತಾಳ : ತ್ರಿಪುಟ

ಪರಮ ಮಂಗಳ ಮೂರುತಿ ದಿವ್ಯ ಕೀರುತಿ ।
ಧರೆಯೊಳಗಿದೆ ವಾರುತಿ    ।। ಪಲ್ಲವಿ ।।

ಕರುಣಾಪಯೋನಿಧಿಯೇ ।
ಕರವ ಪಿಡಿದು ಎನ್ನ ।
ಕರಣ ಶುದ್ಧನ ಮಾಡೋ ।
ಕರವ ಮಸ್ತಕ ಬಾಗುವೆ ।। ಚರಣ ।।

ರಾಘವೇಂದ್ರರ ಪಾದ ।
ಲಾಘವ ಮತಿಯಲ್ಲಿ ।
ಶ್ಲಾಘನ ಮಾಡಿದ ।
ಮಾಗಧಾರಿಯ ಪ್ರಿಯ ।। ಚರಣ ।।

ನಿರುತ ಮಂತ್ರಾಲಯ ।
ಪುರ ವಾಸ ಅಘ ನಾಶ ।
ಸಿರಿ ವಿಜಯವಿಠ್ಠಲನ ।
ಚರಣ ಭಜಿಪ ಗುರುವೇ ।। ಚರಣ ।।

ಶ್ರೀ ವಿಜಯರಾಯರು ಶ್ರೀ ಕ್ಷೇತ್ರ ಮಂತ್ರಾಲಯದ ವಿಳಾಸವನ್ನು ಕೊಟ್ಟ ಪ್ರಪ್ರಥಮ ಹರಿದಾಸರು. ಅವರು ಆ ಸ್ಥಳದ ಪಾವಿತ್ರ್ಯತೆಯನ್ನು ಬಹಳ ಸುಂದರವಾಗಿ ನಿರೂಪಣೆ ಮಾಡಿದ್ದಾರೆ..

ನೋಡಿದೆ ಗುರುಗಳ ನೋಡಿದೆ ।
ನೋಡಿದೆನು ಗುರು ರಾಘವೇಂದ್ರರ ।
ಮಾಡಿದೆನು ಭಕುತಿಯಲಿ ವಂದನೆ ।
ಬೇಡಿದೆನೊ ಕೊಂಡಾಡಿ ವರಗಳ ।
ಈಡು ಇಲ್ಲದ ಮೆರೆವ ಮಹಿಮೆಯ ।। ಪಲ್ಲವಿ ।।

ಮೊದಲು ಗಾಂಗೇಯಶಯ್ಯಜನು ಈ ।
ನದಿಯ ತೀರದಿ ಇಲ್ಲಿ ಯಾಗವ ।
ಮುದದಿ ರಚಿಸಿ ಪೂರೈಸಿ ಪೋಗಿರ ।
ಲದನೆ ತನ್ನೊಳಗರಿತು ತವಕದಿ ।
ಹೃದಯ ನಿರ್ಮಲರಾಗಿ ರಾಗದಿ ।
ಬುಧ ಜನರ ಸಮ್ಯಾಳದಲಿ ಸಿರಿ ।
ಸದನನಂಘ್ರಿಗಳ ನೆನೆದು ಕಳೆವರ ।
ಉದಿತ ಭಾಸ್ಕರನಂತೆಯಿಪ್ಪದು ।। ಚರಣ ।।

ಗಾಂಗ = ಬಂಗಾರ
ಗಾಂಗೇಯ = ಬಂಗಾರದ
ಶಯ್ಯ = ಹಾಸಿಗೆ

ಅಂದರೆ...

ಗಾಂಗ = ಹಿರಣ್ಯ = ಬಂಗಾರ
ಶಯ್ಯ = ಕಶಿಪು = ಹಾಸಿಗೆ
ಜ = ಅವನಿಂದ ಹುಟ್ಟಿದ

ಹಾಗಾಗಿ..

" ಗಾಂಗೇಯಶಯ್ಯಜ " ಅಂದರೆ ಹಿರಣ್ಯಕಶ್ಯಪುವಿನ ಮಗ ಶ್ರೀ ಪ್ರಹ್ಲಾದರಾಜರು ಎಂದು ತಾತ್ಪರ್ಯ!

**

" ಶ್ರೀ ಪ್ರಸನ್ನ ವೆಂಕಟದಾಸರು " 
ಇವರ ಅಂಕಿತ ಪ್ರಸನ್ವೆಂಕಟ

ಶ್ರೀ ವಿಜಯರಾಯರ ಸಮಕಾಲೀನರಾದ ಶ್ರೀ ಪ್ರಸನ್ನ ವೇಂಕಟದಾಸರು ಹರಿದಾಸ ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಕೊಡುಗೆಯೂ ಗಮನಾರ್ಹವಾಗಿದೆ.

ರಾಗ : ಮಿಶ್ರಕಮಾಚ್        ತಾಳ : ಝ೦ಪೆ

ಎಂದಿಗಾದರೂ ಒಮ್ಮೆ ವೃಂದಾವನದಿಂದ ।
ಬಂದು ಈ ಕಂದನನು ಕೂಗಲಾರೆಯ ಗುರುವೇ ।। ಪಲ್ಲವಿ ।।

ಮಂದರೋದ್ಧರನ ಮಹಾ ಮಂದಿರವ ತಂದಿಳಿಸಿ ।
ಚೆಂದ ಮುಕುತಿ ಜ್ಞಾನದಾನಂದವ ನೀಡಿ ।। ಅ ಪ ।।

ಅಪ್ರಮೇಯನೆ ನೀನು ಅಪರೂಪದಲಿ ಅಂದು ।
ಅಪ್ಪಣ್ಣಾಚಾರ್ಯರಿಗೆ ಪ್ರಕಟಗೊಂಡು ।
ಸ್ವಪದವಲಂಬಿತರ ಪೊರೆವ ಗುರು ನೀ ಎಂಬ ।
ಸುಪ್ರಸಿದ್ಧಿಯ ಕೇಳಿ ಒಪ್ಪಿಸಿ ಬಂದಿರುವೆ ।। ಚರಣ ।।

ಅಶನ ವಸನಗಳಾಶೆ ಹುಸಿ ಮಾತನಾಡಿಸಿ ।
ಘಾಸಿಗೊಳಿಸಿದೆ ಎನ್ನ ಮನಕೆ ಮುಸುಕು ಹಾಕಿ ।
ಮೋಸ ಹೋದೆ ಗುರುವೇ ಭವ ಪಾಶದಲಿ ಸಿಲುಕಿ ।
ಆಸರೆಯ ನೀಡು ಬಾ ಹರಿದಾಸ ನೆನಿಸಿ ।। ಚರಣ ।।

ಧನ ಕನಕಗಳ ಬಯಸಿ ನಿನ್ನ ಕರೆಯುವನಲ್ಲ ।
ನಿನ್ನವರ ಮನೆಯಲ್ಲಿ ಕುನ್ನಿಯಾಗಿರಿಸೆನ್ನ ।
ಮನೋಜನಿತ ಜನಕ ಶ್ರೀ ಪ್ರಸನ್ವೆಂಕಟನೊಲುಮೆ ।
ಸನ್ನತವು ಕೊಡಿಸೆನ್ನ ಅನುಗ್ರಹಿಸು ಬಾ ತಂದೆ ।। ಚರಣ ।।

***

" ಶ್ರೀ ಗೋಪಾಲದಾಸರು - ಅಂಕಿತ : ಶ್ರೀ ಗೋಪಾಲವಿಠ್ಠಲ "

ಶ್ರೀ ಗೋಪಾಲದಾಸರು ಸಾಹಿತ್ಯದಂತೆಯೇ ಸಂಗೀತ, ನರ್ತನ ಮತ್ತು ಚಿತ್ರ ಕಲೆಗಳನ್ನೂ ಬಳಸಿಕೊಂಡಿದ್ದು ವಿಶೇಷ ಸಂಗತಿ!

ರಾಗ : ಮಧ್ಯಮಾವತಿ     ತಾಳ : ಆದಿ

ರಥವನೇರಿದ ರಾಘವೇಂದ್ರರಾಯ ಗುಣಸಾಂದ್ರ ।। ಪಲ್ಲವಿ ।।
ಸತುವ ಮಾರ್ಗದಿ ಸಂತತ ಸೇವಿಪರಿಗೆ ।

ಹಿತದಿಂದಲಿ ಮನೋರಥವ ಕೊಡುವೆನೆಂದು ।। ಅ ಪ ।।

ಚತುರ ದಿಕ್ಕುವಿದಿಕ್ಕುಗಳಲ್ಲಿ ಚರಿಪಾ ಜನರಲ್ಲಿ ।
ಮಿತಿಯಿಲ್ಲದೆ ಬಂದು ಓಲೈಸುತಲಿ ವರವ ಬೇಡುತಲಿ ।
ನುತಿಸುತ ಪರಿಪರಿ ನತರಾಗಿಹರಿಗೆ ।
ಗತಿ ಪೇಳದೆ ಸರ್ವಥಾ ನಾ ಬಿಡೆನೆಂದು ।। ಚರಣ ।।

ಅತುಳ ಮಹಿಮನೆ ಆ ದಿನದಲ್ಲಿ ದಿತಿಜಾ ವಂಶದಲಿ ।
ಉತ್ಪತ್ತಿಯಾಗಿ ಉಚಿತದಲ್ಲಿ ಉತ್ತಮ ಮತಿಯಲ್ಲಿ ।
ಅತಿಶಯವಿರುತಿರೆ ಪಿತನ ಬಾಧೆಗೆ ಮನ್ಮಥ ।
ಪಿತನೊಲಿಸಿದ ಜಿತ ಕರುಣದಲಿ ।। ಚರಣ ।।

ಪ್ರಥಮ ಪ್ರಹ್ಲಾದ ವ್ಯಾಸ ಮುನಿಯೇ ಯತಿ ರಾಘವೇಂದ್ರ ।
ಪತಿತರುದ್ಧರಿಪ ಪಾವನಕಾರಿಯೆ ಕೈಮುಗಿವೆನು ಧೊರೆಯೆ ।
ಕ್ಷಿತಿಯೊಳು ಗೋಪಾಲವಿಠ್ಠಲನ ನೆನೆಯುತ ವರ ।
ಮಂತ್ರಾಲಯದೊಳು ಶುಭವೀಯುತ ।। ಚರಣ ।।

***

ಶ್ರೀ ಐಜಿ ವೆಂಕಟರಾಮಾಚಾರ್ಯರು - ವಾಸುದೇವವಿಠ್ಠಲ ( ಶ್ರೀ ವ್ಯಾಸತತ್ತ್ವಜ್ಞತೀರ್ಥರು )

ರಾಗ : ಮುಖಾರಿ     ತಾಳ : ಝ೦ಪೆ

ನಾನ್ಯಾಕೆ ಚಿಂತಿಸಲಿ ನಾನ್ಯಾಕೆ ಧ್ಯೇನಿಸಲಿ ।
ತಾನಾಗಿ  ರಾಘವೇಂದ್ರಯತಿ ಒಲಿದ ।। ಪಲ್ಲವಿ ।।

ಪೋರತನದವನು ಎರಡು ತೆರೆಗಳಲ್ಲಿ ।
ದೂರಾಗಿ ಮೊರೆಯು ಇಲ್ಲವೆಂದು ।
ಕಾರುಣ್ಯದಿಂದ ತಮ್ಮಯ ಗುರುತುಗಳ ತೋರಿ ।
ಧೀರ ತಾ ಕರವನ್ನು ಪಿಡಿದ ಬಳಿಕ ।। ಚರಣ ।।

ಜಗದೊಳಗೆ ಪದಾರ್ಥಗಳ ಗುಣದಿ ಭುಂಜಿಸುವಂಗೆ ।
ಆಗದಂಕರನು ತಾನು ಬಳಿಗೆ ಬಂದು ।
ಬಗೆ ಬಗೆಯಿಂದಲಿ ಸರಸ ಪದಾರ್ಥಗಳು ।
ಸೊಗಸಾಗಿ ಉಣಿಸಲು ಚಿಂತೆಯುಂಟೆ ।। ಚರಣ ।।

ಪೂರ್ಣ ಜಲ ಹರಿವ ವಾಹಿನಿ ಕಂಡು ಬೆದರುವಗೆ ।
ಕರ್ಣಧಾರನು ತಾನೆ ಬಂದು ನಿಂದು ।
ತೂರ್ಣದಲಿ ಕರ ಪಿಡಿದು ಹರಿಗೋಲ ಒಳಗಿಟ್ಟು ।
ಫೂರ್ಣಿಸಲು ಅವನಿಗೆ ಚಿಂತೆಯುಂಟೆ ।। ಚರಣ ।।

ತನ್ನಯ ಹಿತವು ತಾ ವಿಚಾರಿಸಲವಂಗೆ ।
ಚೆನ್ನಾಗಿ ಪರಮ ಗುರು ತಾನೆ ಬಂದು ।
ಸನ್ಮಾರ್ಗವಾನು ತಾನೇ ಪೇಳುವೆನೆನಲು ।
ಇನ್ನು ಆಯಾಸವುಂಟೆ ।। ಚರಣ ।।

ಏಸು ಜನ್ಮದಲಿ ಅರ್ಚಿಸಿದೆನೋ ನಾ ಇನ್ನು ।
ವಾಸುದೇವವಿಠಲ ಪಾದ ಪದುಮ ।
ಲೇಸಾಗಿ ಈ ಸುಕೃತದಿಂದೆನ್ನ ಹರಿದಾಸ ।
ಈ ಸುಗುಣ ಗುರುರಾಯ ಎನಗೆ ।। ಚರಣ ।।

**

ಶ್ರೀ ಶ್ರೀನಿವಾಸಾಚಾಯರು - ಜಗನ್ನಾಥವಿಠ್ಠಲ

ರಾಗ : ಯದುಕುಲ ಕಾಂಬೋಧಿ   ತಾಳ : ಆದಿ

ಪೊಂದಿ ಬದುಕಿರೋ ರಾಘವೇಂದ್ರರಾಯರ ।
ಕುಂದದೆಮ್ಮನು ಕರುಣದಿಂದ ಪೊರೆವನೋ ।। ಪಲ್ಲವಿ ।।

ನಂಬಿ ತುತಿಸುವ ಜನಕದಂಬ ಕಿಷ್ಟವ ।
ತುಂಬಿ ಕೊಡುವನೋ ಅನ್ಯರ ಹಂಬಲೀಯನು ।। ಚರಣ ।।

ಫಾಲಲೋಚನಾ ವಿನುತ ಮೂಲರಾಮನ ।
ಶೀಲ ಸದ್ಗುಣಾ ನೆನವ ಶೀಲನನುದಿನ ।। ಚರಣ ।।

ಅಲವಬೋಧರ ಸುಮತ ಜಲಧಿ ಚಂದಿರಾ ।
ಒಲಿದು ಭಕ್ತರ ಪೊರೆವ ಸುಲಭ ಸುಂದರಾ ।। ಚರಣ ।।

ಗುರು ಸುಧೀಂದ್ರರಾ ವಿಮಲ ಕರಾಜರೆನಿಪರಾ ।
ಸ್ಮರಿಸು ಸುರುಚಿರಾ ಯುಗಳ ಚರಣ ಪುಷ್ಕರಾ ।। ಚರಣ ।।

ಭೂತ ಭಾವನಾ ಜಗನ್ನಾಥವಿಠಲನಾ ।
ಪ್ರೀತಿ ಪಾತ್ರನಾ ನಂಬಿರೀತ ನೀಕ್ಷಣಾ ।। ಚರಣ ।।

***

ಶ್ರೀ ಸೀನಪ್ಪದಾಸರು - ವರದ ಗೋಪಾಲವಿಠ್ಠಲ

ರಾಗ : ಭೂಪಾಳಿ ತಾಳ : ಝ೦ಪೆ

ಸ್ಮರಿಸು ಗುರುಗಳನೆ ಮನವೇ ।
ಸ್ಮರಿಸು ಗುರುಗಳ ನಿನಗೆ ಪರಮ ಮಂಗಳ । ಬಂದ ।
ದುರಿತ ಪರ್ವತಕೆ ಪವಿ ಎಂದು ತಿಳಿದೂ ।। ಪಲ್ಲವಿ ।।

ಉರಗ ವೃಶ್ಚಿಕ ವ್ಯಾಘ್ರ ಅರಸು ಚೋರಾಗ್ನಿ ಕರಿ ।
ಗರಳ ಜ್ವರ ಮೊದಲಾದ ಭಯಗಳಿಂದಾ ।
ಪೊರದು ಮಂಗಳವೀವ ನರಹರಿಯ ದಾಸರ ।
ಚರಣ ಕಂಡೆನು ದುರಿತ ಪರಿಹಾರವಾಯಿತು ।। ಚರಣ ।।

ಗುರು ಸ್ಮರಣೆಯಿಂದ ಸಕಲ ವಿಪತ್ತು ಪರಿಹಾರ ।
ಗುರು ಸ್ಮರಣೆಯಿಂದ ಪಂಪದವು ನಿನಗೆ ।
ಗುರು ಸ್ಮರಣೆಯಿಂದ ಪುಷ್ಕಳ ದ್ರವ್ಯವದಗುವದು ।
ಗುರು ಸ್ಮರಣೆಯಿಂದಾ ಹರಿ ವಲಿದು ಪೊರೆವಾ ।। ಚರಣ ।।

ಗುರುಗಳಿಗಿಂತಧಿಕ ಇನ್ನಾರು ಆಪ್ತರು ನಿನಗೆ ।
ಗುರುಗಳೇ ಪರಮ ಹಿತಕರರು ನಿನಗೆ ।
ಗುರು ಸ್ವಾಮಿ ವರದ ಗೋಪಾಲ ವಿಠಲ ಸರ್ವ ।
ದುರಿತಗಳ ಕಳೆದು ಸುಖಕರದ ನೋಡೋ ।। ಚರಣ ।।

**

ಶ್ರೀ ದಾಸಪ್ಪ ದಾಸರು - ಗುರು ಗೋಪಾಲವಿಠ್ಠಲ

ರಾಗ : ಕಾಂಬೋಧಿ  ತಾಳ : ಝ೦ಪೆ

ನಾಮದ ಘನತೆ ನಿಮಗೆ ಸಲ್ಲೋದೆ ।
ಶ್ರೀಮಂತ ರಾಘವೇಂದ್ರಸ್ವಾಮಿ ಎಂತೆಂಬ ।। ಪಲ್ಲವಿ ।।

ಅಲವಬೋಧರ ಭಾಷ್ಯಾ೦ಬುಧಿಗೆ  ಟೀಕೆಗಳೆಂಬ ।
ಲಲಿತ ಸೇತುವೆಗಟ್ಟಿ ಹರಿದಾಸರ ।
ಸುಲಭದಿ೦ದೈದಿಸಿ ದಶ ಕರಣಗಳ ಜೈಸಿ ।
ವಲಿಸಿ ವಿಷ್ಣು ಜ್ಞಾನ ಪ್ರಕೃತಿಯನು ।। ಚರಣ ।।

ಹಲವು ದುರ್ಮತ ವಾದಿಗಳೆಂಬಾದ್ರಿಗಳ ।
ಕುಲಿಶದಿಂದ ವರ ಪಕ್ಷ ಭೇದಿಸಿ ।
ಅಲವಬೋಧರ ಮತ ಅಮರಾವತಿಯಲಿ । ನಿ ।
ಶ್ಚಲ ಸಾಮ್ರಾಜ್ಯವನಾಳ್ದೆ ಕವಿಗಳ ಪೊರೆದೆ ।। ಚರಣ ।।

ಭಾಸುರ ಸಚ್ಚಾಸ್ತ್ರ ವದನದಿ ವೊಪ್ಪುತಾ ।
ಪೂಶರ ಜಯ ಶಕ್ತಿಯನೆ ಧರಿಸಿದೆ ।
ವಾಸವಿ ಸಖ ಗುರು ಗೋಪಾಲವಿಠಲನ ದಾಸ ।
ಶ್ರೀ ಸುಧೀಂದ್ರ ಕುಮಾರ ಸ್ವಾಮಿ ರಾಘವೇಂದ್ರ ।। ಚರಣ ।।

**

 " ಶ್ರೀ  ಜನಾರ್ಧನವಿಠ್ಠಲ 
ದಾಸರು " ಜನಾರ್ಧನವಿಠ್ಠಲ "
ರಾಗ : ಕಾಂಬೋಧಿ ತಾಳ : ಝ೦ಪೆ

ಪಾದವನು ಕಂಡು ಪಾವನನಾದೆನೋ ।
ವೇದಾರ್ಥ ತಿಳಿದ ಗುರುರಾಘವೇಂದ್ರರು ಮೆಟ್ಟ ।। ಪಲ್ಲವಿ ।।

ಮನೋಭಾವವನು ಕೊಡುವ ಘನ ಭಕುತರಿಗೆ ಇಂದು ।
ದನುಜದಲ್ಲಣನಂಘ್ರಿ ಮನದಿ ಭಜಿಸಿ ।
ಕನಸಿನಲಿ ಕನಿಕರಿಸಿ ವನಜನಾಭನ ಪದವ ।
ವಿನಯದಿಂದಲಿ ತೋರಿ ಮನ ಮೋದ ಪಡಿಸುವರ ।। ಚರಣ ।।

ಸೀತಾರಾಮರ ಪೂಜೆ ಆತುರದಲಿ ಮಾಡಿ ।
ನೀತ ಮಾರ್ಗದಿ ಜಾತ ರಹಿತನಾದ ।
ಆತುರವ ಪರಿಹರಿಸಿ ಶಾತಕುಂಭದಂತೆ ।
ಆತುಮವ ಮಾಡುವ ಅನಿಮಿತ್ಯ ಬಂಧುವಿನ ।। ಚರಣ ।।

ಗುರು ಸುಧೀಂದ್ರರ ವರ ಕುಮಾರಕರಾದ ।
ಪರಲೋಕ ಸುಖವ ಕೊಡುವ ಪರಮ ಕರುಣಿ ।
ಧರೆಯೊಳಗೆ ಸರಿಗಾಣೆ ಜನಾರ್ಧನವಿಠ್ಠಲನ್ನ ।
ಸ್ಥಿರವಾಗಿ ಭಜಿಸುವ ಗುರು ಶಿಖಾಮಣಿಯ । ದ್ವಯ ।। ಚರಣ ।।

**

ಶ್ರೀ ಮೋಹನವಿಠಲರು...

ದಂಡ ಕಮಂಡಲಧರ ಪಂಡಿತಾರಾಧಾರ ।
ಕುಂಡಲಿಶಯನನ ಭಜಕ ರಾಘವೇಂದ್ರರ ।
ಕೊಂಡಾಡಿ ವದನ ಗುಣಿಸುವೆ ಕೋಲೆ ।।

ಶ್ರೀ ಪ್ರಾಣೇಶದಾಸರು..

ರಾಘವೇಂದ್ರ ನಿನ್ನ ಪಾದ ಸರಸಿಜಕೆ ।
ಬಾಗುವೆ ಮನ್ಮನದ ಹರಿಕೆ ಪೂರೈಸೋ ರಾಘವೇಂದ್ರ ।।

ಶ್ರೀ ಶ್ರೀದ ವಿಠಲರು...

ರಾಘವೇಂದ್ರ ಗುರುರಾಯರ ಸೇವಿಸಿರೋ ಸೌಖ್ಯದಿ ಜೀವಿಸಿರೋ ।
ಯೋಗದಿ ತುಂಗಾತೀರದಲ್ಲಿ ನಿಂದು ವಿಹರಿಸುತಿಹರಿಂದು ।।

ಶ್ರೀ ಶ್ರೀಶ ವಿಠಲರು...

ರಾಘವೇಂದ್ರ ಗುರುರಾಯ ।
ರಂಘ್ರಿ ಕಮಲಾರಾಧಿಸಿರೋ ವಿಮಲಾ ।।

ಶ್ರೀ ಗುರು ಶ್ರೀಶ ವಿಠಲರು...

ನೋಡಲೇ ಮನವೇ ಕೊಂಡಾಡು ಗುರುಗಳ ಪಾದ ।
ಈಡುಯಿಲ್ಲವೋ ಪುಣ್ಯಕೆ ।
ನಾಡೊಳಗೆ ಗುರು ರಾಘವೇಂದ್ರರಾಯರ ಸೇವೆ ।
ಮಾಡಿದವ ಪರಮ ಧನ್ಯ - ಮಾನ್ಯ ।।

ಶ್ರೀ ಕಮಲೇಶವಿಠಲರು...

ಶರಣರ ಸುರಭೂಜ ಗುರುರಾಜ ।
... ಭೇಶ ಕೋಟಿ ಸಂಕಾಶನಾದ । ಕಮ ।
ಲೇಶವಿಠಲನ ದಾಸನೇ ಸಹಜ ।।

ಶ್ರೀ ರಾಮಚಂದ್ರವಿಠಲರು...

ಕರೆದು ಕೈ ಪಿಡಿಯೋ ಎನ್ನ ಶ್ರೀ ರಾಘವೇಂದ್ರ ।
ಗುರುವೇ ಕರುಣಾ ಸಂಪನ್ನ ।।

ಶ್ರೀ ವೆಂಕಟೇಶವಿಠಲರು...

ವಸುಧೆಯೊಳಗೆಣೆಗಾಣೆನೋ ಈ ಗುರುಗಳಿಗೆ ।
ಅಸುಪತಿ ಸಮದಿಂದೈಶಸುವ ಕುಶಲರಿಗೆ ।।

ಶ್ರೀ ಜನಾರ್ದನವಿಠಲರು....

ಇಂದು ಯೆನ್ನೆನು ಬಂದು ರಕ್ಷಿಸೋ ।
ತಂದೆ ಗುರುರಾಘವೇಂದ್ರನೇ ।
ಮಂದಮತಿನಾ ಮನದಿ ಮಾಡುವ ।
ಕುಂದುಗಳ ನೀನೆಣಿಸದೆ ।।

ಶ್ರೀ ಅಭಿನವ ಜನಾರ್ದನವಿಠಲರು....

ಸ್ಮರಿಸಿ ಸುಖಿಸಿರೋ ಯಿವರ ।
ಚರಣ ಭಜಿಸಿರೋ ।
ದುರಿತ ಹರಿವ ರಾಘವೇಂದ್ರ ।
ಗುರುಗಳೆಂಬೋರಾ ।।

ಶ್ರೀ ಶ್ರೀಶ ಕೇಶವ ವಿಠಲರು...

ಗುರುವೇ ಕರುಣದಿಂದಾ ನೋಡೋ ।
ನಿನ್ನ ತರುಳನೆಂದು ದಯ ಮಾಡೋ ।
ದುರುಳರೊಳತಿ ದುರುಳ ನರನಾ ।।
ಮೊರೆಯ ಪೋಗುವೆನೋ ।
ಪೊರೆಯೊ ಅಸ್ಮಾದ್ಗುರುವೇ ।।

ಶ್ರೀ ಚೀಕಲಪರವಿ ಜಯದಾಸರು..

ಶ್ರೀ ರಾಘವೇಂದ್ರ ಪಾಲಿಸೋ ಘೋರ ಘಾವಳಿ ।
ದೂರ ಮಾಡೆನ್ನನು ಪೋಷಿಸೋ ।।

ಶ್ರೀ ಸೋದೇ ವಾದಿರಾಜ ಮಠಾಧೀಶರಾದ ಶ್ರೀ ವಿಶ್ವೇಂದ್ರ ತೀರ್ಥರು...

ವರ ಮಂತ್ರಾಲಯದೊಳು ಘನವಾಗಿ ನೆಲೆಸಿರ್ಪ ।
ಪರಮ ಸದ್ಗುರುವರ್ಯ ಶ್ರೀ ರಾಘವೇಂದ್ರ ।।

ಶ್ರೀ ವ್ಯಾಸರಾಜ ಮಠಾಧೀಶರಾದ ಶ್ರೀ ವಿದ್ಯಾರತ್ನಾಕರತೀರ್ಥರು....

ಕಾಮ ಜನಕನಾದ ನಾಮಗಿರೀಶ್ವರ ।
ಸ್ವಾಮಿ ನೃಹರಿ ಪಾದ ತಾಮರಸಂಗಳ ।
ಪ್ರೇಮದಿ ಪೂಜಿಪೆನೆಂಬೊ ಕಾಮಿತ ವರ ನೀಡೋ ।
ಶ್ರೀಮತ್ಸುಧೀಂದ್ರ ಕರ ತಾಮರಸ ಭವನೇ ।।

ಶ್ರೀ ತಂದೆ ಶ್ರೀಪತಿವಿಠಲರು...

ವೃಂದಾವನದಲಿ ರಾಜಿಪ ಯತಿವರನ್ಯಾರೇ ಪೇಳಮ್ಮಯ್ಯ ।
ಯಿಂದಿರೆಯರಸನ ಚಂದದಿ ಭಜಿಸುವ ।
ಕುಂದು ರಹಿತ ರಾಘವೇಂದ್ರ ಕಾಣಮ್ಮ ।।

ಶ್ರೀ ಅನಂತಾದ್ರೀಶರು...

ಭೋ ಯತಿ ವರದೇಂದ್ರ ಸದ್ಗುರು ರಾಯ ರಾಘವೇಂದ್ರ ।
ಕಾಯೋ ಯೆನ್ನ ಶುಭಕಾಯ ಭಜಿಸುವೆ ।
ಕಾಯೋ ಮಾಯತಮಕೆ ಚಂದ್ರಾ ।।

ಶ್ರೀ ಮಧ್ವೇಶವಿಠಲರು...

ರಾಘವೇಂದ್ರತೀರ್ಥನೀತಾ ರಾಜಿಸುವಾತಾ ।
ಪಾಪೌಘಗಳೆಲ್ಲವ ನೋಡಿಸಿ ಪುಣ್ಯಗಳೀವಾತಾ ।।

ಶ್ರೀ ಗುರು ಜಗನ್ನಾಥದಾಸರು....

ದಯಾನಿಧೇ ಶ್ರೀ ರಾಘವೇಂದ್ರ ಗುರುವೇ ।
ಕಾಮಿತ ಸುರತರುವೇ ।।

ಶ್ರೀ ವರದೇಶವಿಠಲರು...

ವಿನಯದಿಂದಲಿ ನಮಿಸುವೆನಾ । ವೃಂದಾ ।
ವನದಿ ರಾಜಿಪ ರಾಘವೇಂದ್ರ ಗುರುವರನ ।

ಶ್ರೀ ಪ್ರಸನ್ನ ಶ್ರೀನಿವಾಸದಾಸರು....

ಶರಣಂ ಶರಣಂ ಪಾಲಯಮಾಂ । ಶ್ರೀ ಶ್ರೀ ।
ಗುರು ರಾಘವೇಂದ್ರ ಕೃಪಾ೦ಬುಧೇ ।।

ಶ್ರೀ ಶ್ಯಾಮಸುಂದರದಾಸರು...

ಸತತ ಪಾಲಿಸು ಯೆನ್ನ ಯತಿ ರಾಘವೇಂದ್ರ ।
ಪತಿತ ಪಾವನ ಪಾವನಸುತ ಮತಾಂಬುಧಿ ಚಂದ್ರಾ ।।

ಶ್ರೀ ತಂದೆ ವೆಂಕಟೇಶವಿಠಲರು....

ಬಾರೋ ಸದ್ಗುಣಸಾರ ಶರನಿಧೇ ।
ಬಾರೋ ಕರುಣಾಂಭೋನಿಧೇ ।
ಬಾರೋ ತುಂಗಾತೀರ ನವ ಮಂತ್ರಾಲಯ ಪ್ರಭೋ ಸಾರಿದೆ ।।

ಶ್ರೀ ವಿಠಲೇಶರು...

ಕೋರಿ ಕರೆವೆ ಗುರು ಶ್ರೀ ರಾಘವೇಂದ್ರನೇ ।
ಬಾರೋ ಮಹಾ ಪ್ರಭುವೇ ।
ಚಾರು ಚರಣಯುಗ ಸಾರಿ ನಮಿಪೆ ಬೇಗ ।
ಬಾರೋ ಹೃದಯ ಸುಜನಾರ ರೂಪವ ತೋರೊ ।।

ಶ್ರೀ ಭೀಮೇಶಕೃಷ್ಣ....

ನೋಡಿರಿ ಗುರು ರಾಘವೇಂದ್ರರ ।
ಮಾಡಿರಿ ನಮಸ್ಕಾರ ।
ಬೇಡಿದ ಇಷ್ಟಾವರ ।
ನೀಡುವರು ನಮ್ಮ ಯತಿವರ ।।

ಶ್ರೀ ಗೋಪತಿವಿಠಲರು....

ಯೋಗಿ ಕುಲವರ ಮಕುಟ । ಗುರು ಶ್ರೀ ।
ರಾಘವೇಂದ್ರರ ಭಜಿಸಿರೋ ।।

ಶ್ರೀ ಕೃಷ್ಣವಿಠಲರು....

ಯಾರಗೊಡವೆ ಯಾಕೋ । ಮತ್ತಿ ।
ನ್ನಾರ ಸಂಗವೇಕೋ ।
ನರಹರಿ ಭಕ್ತ ಶ್ರೀ ಗುರು ರಾಘವೇಂ ।
ದ್ರರ ದಯ ವೊಂದಿದ್ದರೆ ಸಾಕೋ ।।

ಶ್ರೀ ಶ್ರೀಕರವಿಠಲರು...

ರಾಜ ಬಾರೋ ಗುರುರಾಜ ಬಾರೋ ।
ರಾಜಾಧಿರಾಜ ಗುರು ।।

ಶ್ರೀ ನರಸಿಂಹವಿಠಲರು...

ನೋಡಿದ್ಯಾ ಗುರುಗಳ ಕೊಂಡ್ಯಾಡಿದ್ಯಾ ।
ಈಡಾಡಿದ್ಯಾ ಪಾಪಗಳ ।। ಆಹಾ ।।
ಮನಸಿಲಿ ನೋಡಿದ್ಯಾ ಯತಿಗಳನ್ನ ।
ನಾಡಿನೊಳಗೆ ಈಡಿಲ್ಲದಿಹ ಈ ಗುರುಗಳಾ ।।

ಶ್ರೀ ಐಹೊಳೆ ವೆಂಕಟದಾಸರು.........

ರಾಗ : ಮೋಹನ ತಾಳ : ಆದಿ

ದಿನಕರನುದಿಸಿದನು ಧರೆಯೊಳಗೆ ।
ದಾನವ ಕುಲದಲ್ಲಿ ಕ್ಷೋಣಿಯೊಳಗೆ ।। ಪಲ್ಲವಿ ।।

ಪ್ರಥಮ ಪ್ರಹ್ಲಾದನಾಗಿ ಅವತಾರ ಮಾಡಿ ।
ಸತತ ಹರಿಯ ನುತಿಸಿ ।
ಮತಿಹೀನನಾದ ತಂದೆಗೆ ನರಹರಿ ರೂಪ ।
ಸತಿಯಿಂದ ತೋರಿದ ಪ್ರಹ್ಲಾದರಾಯರೆಂಬ ।। ಚರಣ ।।

ವ್ಯಾಸಮುನಿಯು ಯೆನಿಸಿ ಸೋಸಿಲಿಂದ ।
ವಾಸವ ಸತತ ಭಜಿಸಿ ।
ದಾಸನೆಂದು ಮೆರದಿ ನವವೃಂದಾವನದಿ ।
ಸೋಸಿಲಿ ಕರೆದರೆ ವಾಸ ಮಾಡುವುದಕ್ಕೆ ।। ಚರಣ ।।

ತುಂಗಭದ್ರೆಯ ತೀರದಿ ।
ಮಂಗಳ ಮಂತ್ರಾಲಯ ಸ್ಥಳದಿ ।
ಅಂಗಜ ಪಿತ ನಮ್ಮ ಐಹೊಳೆ ವೆಂಕಟನ ।
ಕಂಗಳಿಂದಲಿ ಕಂಡೆ ಗುರು ರಾಘವೇಂದ್ರನೆಂಬ ।। ಚರಣ ।।

*** 

" ಶ್ರೀ ಲಕುಮೀಶ "

ರಾಗ : ಹಂಸಾನಂದಿ           ತಾಳ : ಆದಿ

ಬಂದು ನೆಲೆಸಿಹ ನೋಡಿ ಶ್ರೀ ರಾಘವೆಂದ್ರನು ।। ಪಲ್ಲವಿ ।।

ಅಂದು ಭೂಮಿಯ ಕದ್ದ ದೈತ್ಯನ ।
ಕೊಂದ ವರಹ ಗೋವಿಂದನ ಛಂದದ । ಕೋರೆ ।
ಯಿಂದ ಜನಿಸಿದ ಸುಂದರ ತುಂಗಾ ನದಿಯ ತೀರದಿ ।। ಅ ಪ ।।

ಪ್ರಮಾಣ :

ರಂಗೋತ್ತುಂಗತರಂಗಮಂಗಲಕರಶ್ರೀತುಂಗಭದ್ರಾತಟ
ಪ್ರತ್ಯಸ್ಥದ್ವಿಜಪುಂಗವಾಲಯಲಸನ್ ಮಂತ್ರಾಲಯಾಖ್ಯೆ ಪುರೇ ।
ನವ್ಯೋ೦ದ್ರೋಪಲನೀಲಭವ್ಯಕರ ಸದ್ಬೃಂದಾವನಾ೦ತರ್ಗತ:
ಶ್ರೀಮತ್ಸದ್ಗುರುರಾಘವೇಂದ್ರಯತಿರಾಟ್ ಕುರ್ಯಾಧ್ರುವಂ ಮಂಗಲಮ್ ।।

ಪ್ರಥಮ ಯುಗದೊಳು ಈತ ಜಾತ ರೂಪ ಕಶ್ಯಪ ।
ಜಾತ ನೆನಿಸಿ ಮೆರೆದಾತ ಮತಿಗೆಟ್ಟ ಪಿತನ ।
ಅತುಳ ಬಾಧೆಗಳ್ ಗೆದ್ದಾತ ಕೃತಿ ಪತಿಗೆ ಪ್ರೀತ ।।
ವೀತ ಹೋತ್ರನ ಪುತ್ರನ ಜನಕನ ಸತತ ನಲಿಯುತ ನಗುತ । ಭಜಿ ।
ಸುತ ರತುನ ಸ್ತಂಭದಿ ಪಿತಗೆ ನರಮೃಗ ।
ತತಿಯ ಪತಿಯನು ಜಿತದಿ ತೋರುತ ।। ಚರಣ ।।

ಪ್ರಮಾಣ :

ಶಂಖುಕರ್ಣಾಖ್ಯ ದೇವಸ್ತು ಬ್ರಹ್ಮ ಶಾಪಾಶ್ಚ ಭೋತಲೇ ।
ಪ್ರಹ್ಲಾದ ಇತಿ ವಿಖ್ಯಾತೋ ಭೂಭಾರ ಕ್ಷಪಣೇ ರತಃ ।।
ಸ ಏವ ರಾಘವೇಂದ್ರಾಖ್ಯ ಯತಿ ರೂಪೇಣ ಸರ್ವದಾ ।
ಕಲೌಯುಗೇ ರಾಮಸೇವಾಂ ಕುರ್ವನ್ ಮಂತ್ರಾಲಯೇ ಭವೇತ್ ।।

ಪ್ರಹ್ಲಾದೋ ಜನ್ಮ ವೈಷ್ಣವಃ ।

ಪ್ರಹ್ಲಾದೋ ನಿತ್ಯ ಭಕ್ತಿಮಾನ್ ।

ವಾಸುದೇವೇ ಭಗವತಿ ಯಸ್ಯ ನೈಸರ್ಗಿಕೀರತಿಃ ।
ಬ್ರಹ್ಮಣ್ಯಃ ಶೀಲ ಸಂಪನ್ನಃ ಸತ್ಯಸಂಧೋ ಜಿತೇಂದ್ರಿಯಃ ।
ಪ್ರಶಾಂತಕಾಮೋ ರಹಿತಾಸುರೋಸುರಃ ।।
ಮಹದರ್ಭಕಃ ಮಹದುಪಾಸಕಃ ನಿರ್ವೈರಾಯ ಪ್ರಿಯ ಸುಹೃತ್ತಮಃ ।
ಮಾನಸ್ತಂಭ ವಿವರ್ಜಿತಃ ಯಥಾ ಭಗವತೀಶ್ವರೇ ।।

ಪ್ರಹ್ಲಾದೋಪಿ ಮಹಾಭಾಗಃ ಕರ್ಮದೇವ ಸಮಃ ಸ್ಮೃತಃ ।
ಪ್ರಕೃಷ್ಟಾಹ್ಲಾದ ಯುಕ್ತತ್ವಾತ್ ನಾರದಸ್ಯೋಪದೇಶತಃ ।
ಅತಃ ಪ್ರಹ್ಲಾದ ನಾಮಾಸೌ ಪೃಥುವ್ಯಾಂ ಖಗಸತ್ತಮಃ ।।

ದೇವಾಃ ಶಾಪ ಬಲದೇವ ಪ್ರಹ್ಲಾದಾದಿತ್ವಮಾಗತಾಃ ।
ದೇವಾಃ ಶಾಪಾಭಿಭೂತತ್ವಾತ್ ಪ್ರಹ್ಲಾದಾದ್ಯ ಬಭೂವಿರೇ ।।

ಪ್ರಹ್ಲಾದೋ  ಕಯಾಧವಃ ವಿರೋಚನಂ ಸ್ವಪುತ್ರಂ ಅಪನ್ಯಧತ್ತ ।।

ಋತೇತು ತಾತ್ವಿರ್ಕಾ ದೇವನ್ನಾರದಾದೀನಥೈವ ಚ ।
ಪ್ರಹ್ಲಾದಾದುತ್ತಮಃ ಕೋನು ವಿಷ್ಣು ಭಕ್ತೌ ಜಗತ್ತ್ರಯೇ ।।

" ಶ್ರೀ ಪ್ರಹ್ಲಾದರಾಜರಿಗೆ ಜಗನ್ನಾಥನಾದ ಶ್ರೀ ನೃಸಿಂಹನ ಪರಮಾದ್ಭುತ ವಚನ!! "

ವತ್ಸ! ಯದ್ಯದಭೀಷ್ಟಂತೇ ತತ್ತದಸ್ತು ಸುಖೀಭವ ।
ಭವಂತಿ ಪುರುಷಾ ಲೋಕೇ ಮದ್ಭಾಕ್ತಾಸ್ತ್ವಾಮನುವ್ರತಾಃ ।
ತ್ವಂ ಚ ಮಾಂ ಚ ಸ್ಮರೇಕಾಲೇ ಕರ್ಮಬಂಧಾತ್ಪ್ರಮುಚ್ಯತೇ ।।

ಬ್ರಹ್ಮನಯ್ಯ ಸರ್ವೇಶಾ ಎಂದರುಹಿದಾ । ಭಾವಿ ।
ಬ್ರಹ್ಮದೇವನ ಆವೇಶಾ ಯಿಂದ ಪುಟ್ಟಿ ಈ ।
ಬ್ರಹ್ಮಾಂಡದೊಳಗೆ ವ್ಯಾಸರಾಜ ಯತಿಯ ರವಿಭಾಸ ।।
ಬ್ರಹ್ಮಣ್ಯತೀರ್ಥರ ಕುವರ ನೆನಿಸುತ ಬ್ರಹ್ಮಜಾ೦ಶಗೆ ಗುರುವು ಎನಿಸುತ ।
ಬ್ರಹ್ಮ ತಾನೆಂಬ ಕುಮತಿಗಳ । ಮ ।
ನ ಹಮ್ಮು ಮುರಿಯುತ ದುಂದುಭಿ ಹೊಡೆಸುತ ।। ಚರಣ ।।

ಪ್ರಮಾಣ :

ವಾಯೂನಾ ಚ ಸಮಾವಿಷ್ಟಂ ಹರೇಃ ಪಾದಾಬ್ಜ ಸಂಶಯಂ ।

ವಾಯೂನಾ ಚ ಸಮಾವಿಷ್ಟಃ ಮಹಾಬಲ ಸಮನ್ವಿತಃ ।
ಪ್ರಹ್ಲಾದಾದುತ್ತಮಃ ಕೋನು ವಿಷ್ಣು ಭಕ್ತೌ ಜಗತ್ತ್ರಯೇ ।।
ಕೃಷ್ಣಗ್ರಹಗ್ರಹೀತಾತ್ಮ....... ಪ್ರಹ್ಲಾದೋ ನಿತ್ಯ ಭಕ್ತಿಮಾನ್ ।।

ವಾಯೂನಾ ಚ ಸಮಾವಿಷ್ಟಃ ಮಹಾಬಲ ಸಮನ್ವಿತಃ । ಎಂದರೆ ವಾಯೂನಾಚ ನಿತ್ಯ ಸಮಾವಿಷ್ಟತ್ವಾತ್ ಪ್ರಹ್ಲಾದೋ ನಿತ್ಯ ಭಕ್ತಿಮಾನ್ ।

" ನಿತ್ಯ " ಪದಕ್ಕೆ ಅರ್ಥವೇನೆಂದರೆ..

ಅವರ ಮುಂದಿನ ಅವತಾರಗಳಾದ ಶ್ರೀ ಬಾಹ್ಲೀಕ - ಶ್ರೀ ವ್ಯಾಸರಾಜ - ಶ್ರೀ ರಾಘವೇಂದ್ರತೀರ್ಥರು. ಇವರಲ್ಲೂ ಸಹಾ ಶ್ರೀ ವಾಯುದೇವರು ನಿತ್ಯಾವೇಶದಿಂದ ಇರುತ್ತಾರೆಂದು ಸ್ಪಷ್ಟ!

ಶ್ರೀ ಪುರಂದರದಾಸರು....

ಶೇಷಾವೇಶ ಪ್ರಹ್ಲಾದನವತಾರ ವೆನಿಸಿದೆ । ವ್ಯಾಸರಾಯನೆಂಬೋ ಪೆಸರು ನಿನಗಂದಂತೆ । ದೇಶಾಧಿಪಗೆ ಬಂದ ಕುಹೂ ಯೋಗವನು ನೂಕಿ । ನೀ ಸಿಂಹಾಸನವೇರಿ ಮೆರೆದೆ ಜಗವರಿಯೇ । ವ್ಯಾಸಾಬ್ಧಿಯನು ಬಿಗಿಸಿ ಕಾಶಿ ದೇಶದೊಳೆಲ್ಲ । ಭಾಸುರ ಕೀರ್ತಿಯನು ಪಡೆದೆ ನೀ ಗುರುರಾಯ । ವಾಸುದೇವ ಪುರಂದರ ವಿಠ್ಠಲನ್ನ ದಾಸರೊಳು । ಲೇಶ ನಿನ್ನಂತೆ ವೆಗ್ಗಳರ ಕಾಣೆನು ನಾನು ।।

ಶ್ರೀ ವಿಜಯೀ೦ದ್ರತೀರ್ಥರು....

ಪ್ರಹ್ಲಾದಸ್ಯಾವತಾರೋ ಸಾವೀಂದ್ರಸ್ಯಾನುಪ್ರವೇಶನಾತ್ ।
ತೇನೆ ಸತ್ಸೇವಿನಾಂ ನೃಣಾಂ ಸರ್ವಮೇತದ್ಭವೇ ಧ್ರುವಮ್ ।।

ಶ್ರೀ ವಿದ್ಯಾರತ್ನಾಕರತೀರ್ಥರು....

ಬ್ರಹ್ಮಣ್ಯತೀರ್ಥಸ್ತ೦ ಕೃತ್ವಾ ಯತಿ೦ ಮಂತ್ರಂಮಪಾದಿತತ್ ।
ಶ್ರೀ ವ್ಯಾಸತೀರ್ಥ ನಾಮಾನಾ೦ ಚಕ್ರೇ ಶಾಸ್ತ್ರಸ್ಯ ವಿಸ್ತೃತಃ ।।

ನಾಗಾದ್ರೀಶನ ದಯದಿ ತಿಮ್ಮಣ್ಣಭಟ್ಟರ ।
ಮಗನೆನಿಸೀ ಜಗದಿ ವೇಂಕಟೇಶ ನಾಮದಿ ।
ನಿಗಮಾಗಮಗಳೋದಿ ವೀಣೆ ಗಾನ । ವಿದ್ಯಾದಿ ।।
ಮಿಗೆ ಪ್ರವೀಣನು ಯೆನಿಸೆ ಹರುಷದಿ ಸುಗುಣ ನಿಧಿ ।
ಶ್ರೀ ಗುರು ಸುಧೀಂದ್ರರು ರಾಘವೇಂದ್ರನೆಂದು ನಾಮ ನೀಡಲು ।
ನಗಧರ ಲಕುಮೀಶ ನೊಲಿಸುತ ।। ಚರಣ ।।

ಪ್ರಮಾಣ :

ಸದ್ವಿಷ್ಟ೦ ಸುತಂ ದ್ವಿಜೇಂದ್ರಪತ್ನೀ ಶುಭಲಗ್ನೇ ಪರಿಪೂರ್ಣ ದೃಷ್ಟಿಭಾಜಿ ।
ಅಖಿಲ ದ್ವಿಜರಾಜ ವಂದನೀಯಂ ದ್ವಿಜರಾಜಂ ದಿಗಿವಾಮರಾಧಿಪಸ್ಯ ।।
ಉದಯಾಸ್ತಪಟರಹೇಮಪೃಥ್ವೀಧರಪರ್ಯಂತಧರಾಚರೈರ್ಜನೌಗ್ಹೈ: ।
ಅಭಿವಂದ್ಯ ಇತೀವ ಬಾಲಕಸ್ಯ ವೃತನೋದ್ವೇ೦ಕಟನಾಥನಾಮ ತಾತಃ ।।
ಉಪಾಸದತ್ತಂ ಕುತುಕೇನ ಶೇಮುಷೀನಿಧಿ: ಸ ಲಕ್ಷ್ಮೀ ನರಸಿಂಹ ದೇಶಿಕಮ್ ।
ತಪೋಧಿ ಸಾಂದೀಪಿನಿ ಭೂಸುರೋತ್ತಮಂ ಯತಾ ಯಶೋದಾತನಯಸ್ತ್ರಯೀಮಯಃ ।।
ದ್ವಿಪಂಚಕೃತ್ವ: ಶ್ರುತಿಮಾತ್ರತಃ ಶ್ರುತಿ ತ್ರಿವಿಷ್ಟಪೋದ್ಯಾವನನೀಮಹೀರುವ ।
ವಟುರ್ದ್ವಿತೀಯಾ೦ ಪಟುಭಿರ್ವಯಸ್ಸಮೈರಧತ್ತ ಶಾಖಾ೦ ಧರಣೀ ಸುರೇಶ್ವರಃ ।।
ತಸ್ಯ ನಾಮ ಸ ದದೇ ಸದಾಶಿಷಾ ರಾಜರಾಜ ಇವ ರಾಜಿತಃ ಶ್ರಿಯಾ ।
ರಾಮಭದ್ರ ಇವ ಭದ್ರಭಾಜನಂ ತತ್ಕೃಪೇವ ಜಗತಾಂ ಹಿತೇ ರತಃ ।।
ಶ್ರೀ ಸುರೇಂದ್ರವದಾಯಂ ತಪಸ್ಯಯಾ ಶ್ರೀ ಜಯೀ೦ದ್ರ ಇವ ಕೀರ್ತಿ ಸಂಪದಾ ।
ವಿಶ್ರುತೋಹಮಿಹ ವಾದಸಂಗರೇ ರಾಘವೇಂದ್ರ ಯತಿರಾಟ್ ಸುಮೇಧಾತಾಮ್ ।।
ಮಂತ್ರೈ: ಪೂತೈರ್ವಾರಿಜಾದ್ಯೈ: ಪ್ರಸೂನೈರ್ಮುಕ್ತಾಮುಖೈರತ್ನಜಾಲೈರುಪೇತೈ: ।
ವಾರ್ಭಿ: ಶಂಖಾಪೂರಿತೈ: ಸೋಭಿಷಿಚ್ಯ ಪ್ರಾಜ್ಞ೦ ವಿದ್ಯಾರಾಜ್ಯರಾಜಂ ವಿತೇನೇ ।।

- ಆಚಾರ್ಯ ನಾಗರಾಜು ಹಾವೇರಿ


*****

No comments:

Post a Comment