Tuesday 1 January 2019

ರಾಯರು 02 ಮಹಿಮೆ ರಾಘವೇಂದ್ರ ಸ್ವಾಮಿ rayaru 02 mahime raghavendra swamy


ಮೂಕೊsಪಿ ಯತ್ಪ್ರಸಾದೇನ ಮುಕುಂದಶಯನಾಯತೇ ।
ರಾಜರಾಜಾಯತೇ ರಿಕ್ತೋ ರಾಘವೇಂದ್ರಂ ತಮಾಶ್ರಯೇ ।।

ಶ್ರೀ ಗುರುರಾಜ ಗುರುಸಾರ್ವಭೌಮರ ಅನುಗ್ರಹವಾದರೆ ಹುಟ್ಟು ಮೂಕ, ಹುಟ್ಟು ಕಿವುಡನೂ ಕೂಡಾ ಸಹಸ್ರ ವದನನಾದ ಶ್ರೀ ಹರಿಯ ಮಂಚವಾದ ಶ್ರೀ ಶೇಷದೇವರಂತೆ ಪಾಠ ಪ್ರವಚನ ಮಾಡುವ ಸಾಮರ್ಥ್ಯ ಉಳ್ಳವನಾಗುತ್ತಾನೆ ಮತ್ತು ಒಳ್ಳೆಯ ಮಾತುಗಾರನಾಗುತ್ತಾನೆ.
ಹುಟ್ಟು ದರಿದ್ರನೂ ಕೂಡಾ ನವನಿಧಿ ಸಂಪನ್ನನಾದ ಕುಬೇರನಂತೆ ಐಶ್ವರ್ಯ ಸಂಪನ್ನನಾಗುತ್ತಾನೆ.
ಇಂಥಹಾ ಅನುಗ್ರಹ ಮಾಡುವ ಸಾಮರ್ಥ್ಯವುಳ್ಳ ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮರನ್ನು ಆಶ್ರಯಿಸುತ್ತೇನೆ!
ಶ್ರೀ ರಾಯರನ್ನು ಆಶ್ರಯಿಸಿದ ಎಂಥವರೂ ಶ್ರೀ ರಾಯರ ಅನುಗ್ರಹದಿಂದ ಚತುರ್ವಿಧ ಪುರುಷಾರ್ಥ ಸಂಪನ್ನಣ್ಣಾಗುತ್ತಾನೆ.
ಶ್ರೀಮತೋ ರಾಘವೇಂದ್ರಸ್ಯ ನಮಾಮಿ ಪದಪಂಕಜೇ ।
ಕಾಮಿತಾಶೇಷಕಲ್ಯಾಣಕಲನಾಕಲ್ಪಪಾದಪೌ ।।

ಶ್ರೀಮತಃ = ಜ್ಞಾನ ಭಕ್ತ್ಯಾದಿ ಸಂಪದ್ಯುಕ್ತರಾದ
ರಾಘವೇಂದ್ರಸ್ಯ = ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮರ
ಕಾಮಿತ = ಅಪೇಕ್ಷಿತವಾದ
ಅಶೇಷ = ಸಮಗ್ರವಾದ
ಕಲ್ಯಾಣ = ವಿವಾಹ, ಸಂತಾನ, ಪರಿಶುದ್ಧ ಭಕ್ತಿ, ಜ್ಞಾನ - ವಿಜ್ಞಾನ, ವಾಕ್ಕು ಮುಂತಾದ ಮಾಂಗಲ್ಯ ಸಮೃದ್ಧಿಗಳ
ಕಲನಾ = ಕೊಡುವುರದಲ್ಲಿ
ಕಲ್ಪಪಾದಪೌ = ಕಲ್ಪವೃಕ್ಷದಂತೆ ಇರುವ
ಪದಪಂಕಜೇ = ಕಮಲಗಳಂತೆ ಉಳ್ಳ ಪದ ಯುಗಳಗಳನ್ನು
ನಮಾಮಿ = ನಮಸ್ಕರಿಸುತ್ತೇನೆ!!
ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮರು ಜ್ಞಾನ - ಭಕ್ತಿ - ವೈರಾಗ್ಯ ಮುಂತಾದ ಕಲ್ಯಾಣ ಗುಣಶಾಲಿಗಳು.
ಅರಳಿದ ತಾವರೆ ಹೂವುಗಳಂತಿರುವ ಶ್ರೀ ರಾಯರ ಪಾದದ್ವಯವು ಭಕ್ತರು ಅಪೇಕ್ಷಿಸಿದ ವಿವಾಹ - ಸತ್ಪುತ್ರ ಸೌಭಾಗ್ಯ - ಪರಿಶುದ್ಧವಾದ ಭಕ್ತಿ - ಉತ್ತಮ ಜ್ಞಾನ - ವಾಕ್ಪಾಟವ - ದೇಹಾರೋಗ್ಯ ಮುಂತಾದ ಎಲ್ಲಾ ಮಾಂಗಲ್ಯ ಪೂರ್ಣವಾದ ಫಲಗಳನ್ನು ಕೊಡುವುದರಲ್ಲಿ ಕಲ್ಪವೃಕ್ಷಗಳಿಗೆ ಸಮಾನವಾಗಿದೆ.
ನಾನು ಅಂಥಹ ಶ್ರೀ ರಾಯರ ಚರಣ ಕಮಲಗಳನ್ನು ಭಕ್ತ್ಯತಿಶಯದಿಂದ ನಮಿಸುತ್ತೇನೆ!!
ಭಜತಾಂ ಕಲ್ಪವೃಕ್ಷಾಯ ಎಂದು ಹೇಳಿರುವಂತೆ ಶ್ರೀ ರಾಯರು ಭಜಿಸುವ ಭಕ್ತರಿಗೆ ಕಲ್ಪವೃಕ್ಷದಂತೆ ಅಭೀಷ್ಟಪ್ರದರು ಎಂಬುದು ಭಕ್ತರಿಗೆ ಅನುಭವ ಸಿದ್ಧವಾಗಿದೆ.
ಸಕಲ ಸಂಪದ್ಭಕ್ತಿ ಸಂತತ ।
ಸುಕಲ ವಾದ್ದೇಹದ ಸುಪಾಟವ ।
ಭಕುತರಿಗೆ ವಿಜ್ಞಾನ ಸಂಮಾನಾದಿಗಳನಿತ್ತು ।।
ವಿಕಲಮತಿ ಕಾಯಜದಖಿಲವಾ ।
ತಕವ ತರಿಪುತ ಸಲಹೋ ಗುರುಗಳ ।
ಮಕುಟಮಣಿ ಶ್ರೀ ರಾಘವೇಂದ್ರನೇ ಲೋಕ ಸುಂದರನೇ ।।
ಶ್ರೀ ರಾಘವೇಂದ್ರ ಗುರು ಸ್ತೋತ್ರಮಂ । ಭಕ್ತಿಯಿಂ ।
ದಾರದೊಡಂ ಪಠಿಸಿ ಜಪಿಸಿದರೆ ಕುಷ್ಠಾದಿ ।
ಕ್ರೂರ ರೋಗಗಳಿವ ವತಿತ್ವರ್ಯದಿಂದ೦ಧ ಜಪಿಸಿದರೆ ದಿವ್ಯದೃಷ್ಟಿ ।।
ಸಾರುವನವಂ ಏಡ ಮೂಕಾನಾದರು೦ ಸರಿಯೆ ।<br>
ಚಾರು ವಾಚಾಲನಾಗುವ ಸ್ತುತಿಯ ಪಠಿಸಿದವ ಪೂರ್ಣಾಯು ಸಿರಿತಾಳ್ವನೋ ।।

ರಾಘವೇ೦ದ್ರೋ ಮಮ ಸ್ವಾಮೀ ರಾಘವೇ೦ದ್ರೋ ಗುರುರ್ಮಮ
ರಾಘವೇ೦ದ್ರಃ ಪ್ರಿಯೋದೇವಃ ರಾಘವೇ೦ದ್ರಾತ್ಪರೋ ನಹಿ
ಯಾನ್ಯೇವ ಕರ್ಮಾಣಿ ಮಯಾ ಕೃತಾನಿ
ಸರ್ವಾಣಿ ತೇನೈವ ಕೃತಾನಿ ನಿತ್ಯ೦
ಸುಖಾನಿ ದುಃಖಾನಿ ಭವ೦ತಿ ನಿತ್ಯ೦
ಸಮರ್ಪಿತಾನ್ಯೇವ ಗುರೋಃ ಪದಾಬ್ಚೆ
ಮಾತಾ ಪಿತಾ ಮೇ ಗತಿರಾತ್ಮ ಬ೦ಧುಃ
ಭ್ರಾತಾ ಸಖಾ ಮೇ ಪರದೇವತಾ ಚ
ರಾಜಾ ಗುರುಃ ಸರ್ವಮಪಿ ತ್ವಮೇವ
ಯನ್ಮೇ ಹಿತ೦ ದೇವ ತದೇವ ದೇಹಿ
ಶರೀರಚೇಷ್ಟಾ ಮಮ ತೇ ಪ್ರಣಾಮಃ
ಸ್ತುತಿಸ್ತು ವಾಗಿ೦ದ್ರಿಯವೃತ್ತಿರಸ್ತು
ಸರ್ವಾಮನೋವೃತ್ತಿರನುಸ್ಮೃತಿಸ್ತೇ
ಸರ್ವ೦ ತ್ವದಾರಾಧನಮೇವ ಭೂಯಾತ್
ಜನ್ಮಾ೦ತರೇ ತಸ್ಯ ಗೃಹೇ ಜನಿಶ್ಚ
ತತ್ರೈವ ವಾಸಃ ಖಲು ಮೇ ಸದಾಸ್ತು
ಶ್ರೀಮಧ್ವಶಾಸ್ತ್ರ ಶ್ರವಣ೦ ಚ ಮೇಸ್ಯಾತ್
ಅನ೦ತಕಾಲೀನ ಸುಪುಣ್ಯರಾಶಿಃ
ಇತಿ ಶ್ರೀರಾಘವೇ೦ದ್ರಾರ್ಯಚರಣದ್ವಯಸೇವಿನಾ
ಮಹಾತ್ಮ್ಯ೦ ರಾಘವೇ೦ದ್ರಸ್ಯ ರಚಿತ೦ ಸ್ವಾಮಿನಾ ಮಯಾ
ರಚನೆ : ಶ್ರೀ ಗುರುಜಗನ್ನಾಥದಾಸರು
(ಶ್ರೀ ಅಪ್ಪಣ್ಣಾಚಾರ್ಯರು - ಪೂರ್ವ ಜನ್ಮದಲ್ಲಿ)
|| ಶ್ರೀ ಕೃಷ್ಣಾರ್ಪಣಮಸ್ತು ||
*****

"ಹಾವೇರಿ ....  ಶ್ರೀ ರಾಯರ ಮಧ್ಯಾರಾಧನೆ ವಿಶೇಷ "
" ಶ್ರೀ ರಾಯರ ಆರಾಧನಾ ಲೇಖನ ಮಾಲೆ - 8 "
" ಹರಿದಾಸರು ಕಂಡ ಶ್ರೀ ಗುರುಸಾರ್ವಭೌಮರು "
" ಹರಿದಾಸರು ಕಂಡ ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮರು "
" ದ್ವಿತೀಯ ಘಟ್ಟದ ಮೂಲ ಸ್ಫೂರ್ತಿ - ಪ್ರೇರಕ ಶಕ್ತಿ " ಶ್ರೀ ಮಂತ್ರಾಲಯ ಪ್ರಭುಗಳು "
*****


ಗುರು ವಿಜಯ ಪ್ರತಿಷ್ಠಾನ

ಮಂತ್ರಾಲಯ ಪ್ರಭು ಶ್ರೀರಾಘವೇಂದ್ರರ ಅನನ್ಯವಾದ, ಅಚಿಂತ್ಯ ಮತ್ತು ಅದ್ಭುತವಾದ ಗುಣವಿಶೇಷಗಳನ್ನು ಕನ್ನಡ ವರ್ಣಮಾಲೆಯ “ಅ” ದಿಂದ “ಕ್ಷ” ಆಕ್ಷರಗಳವರೆಗೆ ಸರದಿಯಂತೆ ಬಳಸಿ, “ಅಶ್ವಗತಿ” ಎಂಬ ರಾಗವನ್ನನುಸರಿಸಿ ಶ್ರೀಮಾನ್ಯ ಕೃಷ್ಣಾವಧೂತರು ಶ್ರೀ ಅಕ್ಷರಮಾಲಿಕಾ ಸ್ತೋತ್ರವನ್ನು ರಚಿಸಿದ್ದಾರೆ. ಈ ಸ್ತೋತ್ರವನ್ನು ಪರಿಪೂರ್ಣವಾಗಿ ಶ್ರವಣ ಮಾಡಿದರೆ ಕುದುರೆಯು ಧೃತಗತಿಯಲ್ಲಿ ನಡೆಯುವಾಗ ಹೊರಹೊಮ್ಮುವ ನಿಯಮಬದ್ಧ ಗೊರಸಿನ ಶಬ್ಧದಂತೆ ಕೇಳಿಸುತ್ತದೆ. ಇದು ಈ ರಾಗದ ವೈಶಿಷ್ಟ್ಯ. ಅಕ್ಷರಮಾಲಿಕಾ ಸ್ತೋತ್ರದ ಶ್ರವಣ ಪುಣ್ಯಪ್ರದ, ಶುಭಪ್ರದ ಮತ್ತು ಮೋಕ್ಷಪ್ರದ. 

||ಶ್ರೀ ರಾಘವೇಂದ್ರ ಅಕ್ಷರಮಾಲಿಕಾ ಸ್ತೋತ್ರ ||


ಅಜ್ಞಾನ ನಾಶಾಯ ವಿಜ್ಞಾನ ಪೂರ್ಣಾಯ ಸುಜ್ಞಾನದಾತ್ರೇ ನಮಸ್ತೇ ಗುರೋ |

ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಪಾಹಿ ಪ್ರಭೋ|| ೧ ||

ಆನಂದರೂಪಾಯ ನಂದಾತ್ಮಜ ಶ್ರೀಪದಾಂಭೋಜಭಾಜೇ ನಮಸ್ತೇ ಗುರೋ |

ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಪಾಹಿ ಪ್ರಭೋ|| ೨ ||

ಇಷ್ಟಪ್ರದಾನೇನ ಕಷ್ಟಪ್ರಹಾಣೇನ ಶಿಷ್ಟಸ್ತುತ ಶ್ರೀಪದಾಂಭೋಜ ಭೋ |

ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಪಾಹಿ ಪ್ರಭೋ|| ೩ ||

ಈಡೇ ಭವತ್ಪಾದ ಪಾಥೋಜಮಾಧ್ಯಾಯ ಭೂಯೋಽಪಿ ಭೂಯೋ ಭಯಾತ್ ಪಾಹಿ ಭೋ |

ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಪಾಹಿ ಪ್ರಭೋ|| ೪ ||

ಉಗ್ರಂ ಪಿಶಾಚಾದಿಕಂ ದ್ರಾವಯಿತ್ವಾಶು ಸೌಖ್ಯಂ ಜನಾನಾಂ ಕರೋಶೀಷ ಭೋ |

ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಪಾಹಿ ಪ್ರಭೋ|| ೫ ||

ಊರ್ಜತ್ ಕೃಪಾಪೂರ ಪಾಥೋನಿಧೇಮಂಕ್ಷು ತುಷ್ಟೋಽನುಗೃಹ್ಣಾಸಿ ಭಕ್ತ್ವಾನ್ ವಿಭೋ |

ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಪಾಹಿ ಪ್ರಭೋ|| ೬ ||

ಋಜೂತ್ತಮ ಪ್ರಾಣ ಪಾದಾರ್ಚನಪ್ರಾಪ್ತ ಮಾಹಾತ್ಮ್ಯ ಸಂಪೂರ್ಣ ಸಿದ್ಧೇಶ ಭೋ |

ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಪಾಹಿ ಪ್ರಭೋ|| ೭ ||

ಋಭುಸ್ವಭಾವಾಪ್ತ ಭಕ್ತೇಷ್ಟಕಲ್ಪದ್ರು ರೂಪೇಶ ಭೂಪಾದಿ ವಂದ್ಯ ಪ್ರಭೋ |

ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಪಾಹಿ ಪ್ರಭೋ|| ೮ ||

ೠದ್ಧಂ ಯಶಸ್ತೇ ವಿಭಾತಿ ಪ್ರಕೃಷ್ಟಂ ಪ್ರಪನ್ನಾರ್ತಿಹಂತರ್ಮಹೋದಾರ ಭೋ |

ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಪಾಹಿ ಪ್ರಭೋ|| ೯ ||

ಕ್ಲಿಪ್ತಾತಿ ಭಕ್ತೌಘ ಕಾಮ್ಯಾರ್ಥ ದಾತರ್ಭವಾಂಬೋಧಿ ಪಾರಂಗತ ಪ್ರಾಜ್ಞ ಭೋ |

ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಪಾಹಿ ಪ್ರಭೋ||೧೦ ||

ಏಕಾಂತ ಭಕ್ತಾಯ ಮಾಕಾಂತ ಪಾದಾಬ್ಜ ಉಚ್ಚಾಯ ಲೋಕೇ ನಮಸ್ತೇ ವಿಭೋ |

ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಪಾಹಿ ಪ್ರಭೋ|| ೧೧ ||

ಐಶ್ವರ್ಯಭೂಮನ್ ಮಹಾಭಾಗ್ಯದಾಯಿನ್ ಪರೇಶಾಂ ಚ ಕೃತ್ಯಾದಿ ನಾಶಿನ್ ಪ್ರಭೋ |

ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಪಾಹಿ ಪ್ರಭೋ|| ೧೨ ||

ಓಂಕಾರ ವಾಚ್ಯಾರ್ಥಭಾವೇನ ಭಾವೇನ ಲಬ್ಧೋದಯ ಶ್ರೀಕ ಯೋಗೀಶ ಭೋ |

ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಪಾಹಿ ಪ್ರಭೋ|| ೧೩ ||

ಔರ್ವಾನಲಪ್ರಖ್ಯ ದುರ್ವಾದಿದಾವಾನಲೈಃ ಸರ್ವತಂತ್ರ ಸ್ವತಂತ್ರೇಶ ಭೋ |

ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಪಾಹಿ ಪ್ರಭೋ|| ೧೪ ||

ಅಂಭೋಜಸಂಭೂತಮುಖ್ಯಾಮರಾರಾಧ್ಯ ಭೂನಾಥ ಭಕ್ತೇಶ ಭಾವಜ್ಞ ಭೋ |

ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಪಾಹಿ ಪ್ರಭೋ|| ೧೫ ||

ಅಸ್ತಂಗತಾನೇಕಮಾಯಾದಿ ವಾದೀಶ ವಿದ್ಯೋತಿತಾಶೇಷ ವೇದಾಂತ ಭೋ |

ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಪಾಹಿ ಪ್ರಭೋ|| ೧೬ ||

ಕಾಮ್ಯಾರ್ಥದಾನಾಯ ಬದ್ಧಾದರಾಶೇಷ ಲೋಕಾಯ ಸೇವಾನುಸಕ್ತಾಯ ಭೋ |

ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಪಾಹಿ ಪ್ರಭೋ|| ೧೭ ||

ಖದ್ಯೋತಸಾರೇಷು ಪ್ರತ್ಯರ್ಥಿಸಾರ್ಥೇಶು ಮಧ್ಯಾಹ್ನ ಮಾರ್ತಾಂಡ ಬಿಂಬಾಭ ಭೋ |

ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಪಾಹಿ ಪ್ರಭೋ|| ೧೮ ||

ಗರ್ವಿಷ್ಠ ಗರ್ವಾಂಬುಶೋಷಾರ್ಯಮಾತ್ಯುಗ್ರ ನಮ್ರಾಂಬುಧೇರ್ಯಾಮಿನೀ ನಾಥ ಭೋ |

ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಪಾಹಿ ಪ್ರಭೋ|| ೧೯ ||

ಘೋರಾಮಯಧ್ವಾಂತ ವಿಧ್ವಂಸನೋದ್ದಾಮ ದೇದೀಪ್ಯ ಮಾನಾರ್ಕ ಬಿಂಬಾಭ ಭೋ |

ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಪಾಹಿ ಪ್ರಭೋ|| ೨೦ ||

ಙಣತ್ಕಾರದಂಡಾಂಕ ಕಾಷಾಯವಸ್ತ್ರಾಂಕ ಕೌಪೀನ ಪೀನಾಂಕ ಹಂಸಾಂಕ ಭೋ |

ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಪಾಹಿ ಪ್ರಭೋ|| ೨೧ ||

ಚಂಡೀಶ ಕಾಂಡೇಶ ಪಾಖಂಡ ವಾಕ್ಕಾಂಡ ತಾಮಿಶ್ರಮಾರ್ತಾಂಡ ಪಾಷಂಡ ಭೋ |

ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಪಾಹಿ ಪ್ರಭೋ|| ೨೨ ||

ಛದ್ಮಾಣುಭಾಗಂ ನವಿದ್ಮಸ್ತ್ವದಂತಃ ಸುಸದ್ಮೈವ ಪದ್ಮಾವಧಸ್ಯಾಸಿ ಭೋ |

ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಪಾಹಿ ಪ್ರಭೋ|| ೨೩ ||

ಜಾಡ್ಯಂಹಿನಸ್ತ್ವಿಜ್ವರಾರ್ಶಃಕ್ಷಯಾದ್ಯಾಶು ತೇ ಪಾದ ಪದ್ಮಾಂಬುಲೇಶೋಽಪಿ ಭೋ |

ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಪಾಹಿ ಪ್ರಭೋ|| ೨೪ ||

ಝಾಶುಧ್ವಜೀಯೇಷ್ವಲಭ್ಯೋರುಚೇತಃ ಸಮಾರೂಢಮಾರೂಢ ವಕ್ಷೋಂಗ ಭೋ |

ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಪಾಹಿ ಪ್ರಭೋ|| ೨೫ ||

ಞಾಂಚಾವಿಹೀನಾಯ ಯಾದೃಚ್ಛಿಕ ಪ್ರಾಪ್ತ ತುಷ್ಟಾಯ ಸದ್ಯಃ ಪ್ರಸನ್ನೋಽಸಿ ಭೋ |

ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಪಾಹಿ ಪ್ರಭೋ|| ೨೬ ||

ಟೀಕಾರಹಸ್ಯಾರ್ಥ ವಿಖ್ಯಾಪನಗ್ರಂಥ ವಿಸ್ತಾರ ಲೋಕೋಪಕರ್ತಃ ಪ್ರಭೋ |

ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಪಾಹಿ ಪ್ರಭೋ|| ೨೭ ||

ಠಂಕುರ್ವರೀಣಾಮ ಮೇಯಪ್ರಭಾವೋದ್ಧರಾಪಾದ ಸಂಸಾರತೋ ಮಾಂ ಪ್ರಭೋ |

ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಪಾಹಿ ಪ್ರಭೋ|| ೨೮ ||

ಡಾಕಿನ್ಯಪಸ್ಮಾರ ಘೋರಾಧಿಕೋಗ್ರ ಗ್ರಹೋಚ್ಚಾಟನೋದಗ್ರ ವೀರಾಗ್ರ್ಯ ಭೋ |

ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಪಾಹಿ ಪ್ರಭೋ|| ೨೯ ||

ಢಕ್ಕಾಧಿಕಧ್ವಾನ ವಿದ್ರಾವಿತಾನೇಕ ದುರ್ವಾದಿಗೋಮಾಯು ಸಂಘಾತ ಭೋ |

ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಪಾಹಿ ಪ್ರಭೋ|| ೩೦ ||

ಣಾತ್ಮಾದಿಮಾತ್ರರ್ಣಲಕ್ಷ್ಯಾರ್ಥಕ ಶ್ರೀಪತಿಧ್ಯಾನಸನ್ನದ್ಧಧೀಸಿದ್ಧ ಭೋ |

ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಪಾಹಿ ಪ್ರಭೋ|| ೩೧ ||

ತಾಪತ್ರಯ ಪ್ರೌಢ ಬಾಧಾಭಿಭೂತಸ್ಯ ಭಕ್ತಸ್ಯ ತಾಪತ್ರಯಂ ಹಂಸಿ ಭೋ |

ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಪಾಹಿ ಪ್ರಭೋ|| ೩೨ ||

ಸ್ಥಾನತ್ರಯಪ್ರಾಪಕಜ್ಞಾನದಾತಸ್ತ್ರಿಧಾಮಾಂಘ್ರಿಭಕ್ತಿಂ ಪ್ರಯಚ್ಛ ಪ್ರಭೋ |

ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಪಾಹಿ ಪ್ರಭೋ|| ೩೩ ||

ದಾರಿದ್ರ್ಯ ದಾರಿದ್ರ್ಯ ಯೋಗೇನ ಯೋಗೇನ ಸಂಪನ್ನ ಸಂಪತ್ತಿ ಮಾ ದೇಹಿ ಭೋ |

ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಪಾಹಿ ಪ್ರಭೋ|| ೩೪ ||

ಧಾವಂತಿ ತೇ ನಾಮಧೇಯಾಭಿ ಸಂಕೀರ್ತನೇನೈನ ಸಾಮಾಶು ವೃಂದಾನಿ ಭೋ |

ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾ

ಅಪರೋಕ್ಷೀಕೃತಶ್ರೀಶಃ ।

ಸಮುಪೇಕ್ಷಿತಭಾವಜಃ ।।
ಅಪೇಕ್ಷಿತಪ್ರದಾತಾನ್ಯೋ ।
ರಾಘವೇಂದ್ರಾನ್ನವಿದ್ಯತೇ ।।

ಕನ್ನಡ ಪ್ರತಿಪದಾರ್ಥ ಮತ್ತು ಭಾವಾರ್ಥ:-


ಶ್ರೀರಾಘವೇಂದ್ರಃ - ಶ್ರೀರಾಘವೇಂದ್ರಯತಿವರ್ಯರು


ಅಪರೋಕ್ಷೀಕೃತಶ್ರೀಶಃ -

ಸಕಲ ಸಂಪತ್ತಿಗೆ ಒಡತಿಯಾದ ಶ್ರೀಮಹಾಲಕ್ಷ್ಮಿಯ ಪತಿಯಾದ ಶ್ರೀಮನ್ಮಹಾವಿಷ್ಣುವನ್ನು ಪ್ರತ್ಯಕ್ಷಿಸಿಕೊಂಡವರು.

ಸಮುಪೇಕ್ಷಿತಭಾವಜಃ - ಮನಸ್ಸಿನಲ್ಲಿ ಉತ್ಪನ್ನವಾಗುವ ಕಾಮಾದಿಗಳನ್ನು ಚೆನ್ನಾಗಿ ತಿರಸ್ಕರಿಸಿದ್ದಾರೆ.


ಅತಃ ಅಯಂ- ಆದ್ದರಿಂದ ಇವರು


ಅಪೇಕ್ಷಿತಪ್ರದಾತಾ - 

ಬೇಡಿದ್ದನ್ನು ನೀಡುವವರು

ರಾಘವೇಂದ್ರಾತ್ - ರಾಘವೇಂದ್ರತೀರ್ಥರಿಗಿಂತ 


ಅನ್ಯಃ - ಬೇರೆ ಯಾರೂ


ನ ವಿದ್ಯತೇ - ಬೇಡಿದ್ದನ್ನು ಕರುಣಿಸಲಾರರು.


ಭಾವಾರ್ಥ:-


ತಮ್ಮೆಲ್ಲರಿಗೂ ತಿಳಿದಿರುವಂತೇ ಭೂಮಿಯಲ್ಲಿ ಜನಿಸಿರುವ ಪ್ರತಿಯೊಂದು ಜೀವಿಯ ನಿಜವಾದ ಗುರಿಯು ಕೇವಲ ಎರಡು. ಮೊದಲನೇಯದ್ದು- ಸತ್ಕರ್ಮ ಮಾಡಲು ಸಂಪತ್ತು ಹಾಗೂ ತ್ರಿವಿಧಗುಣಸಂಪನ್ನವಾದ ಭೂಮಿಯ ಕರ್ಷಣಾಸಾಮರ್ಥ್ಯವನ್ನು ಸೋಲಿಸುವ ಮನಃಶಕ್ತಿ.


ಶ್ರೀರಾಘವೇಂದ್ರತೀರ್ಥರು ತಮ್ಮ ಪೂರ್ವಾವತಾರಗಳಲ್ಲೂ ಹಾಗೂ ರಾಘವೇಂದ್ರತೀರ್ಥರ ಅವತಾರದಲ್ಲಿಯೂ ಸಂಪತ್ತಿನ ಒಡತಿಯಾದ ಶ್ರೀಮಹಾಲಕ್ಷ್ಮಿಯ ಪತಿಯಾದ ಶ್ರೀಮನ್ಮಹಾವಿಷ್ಣುವನ್ನು ಪ್ರತ್ಯಕ್ಷವಾಗಿ ಕಂಡಿದ್ದಾರೆ. ತ್ರಿಗುಣಗಳಿಂದ ಕೂಡಿದ ಭೂಮಿಯು ಕಲಿಯುಗದಲ್ಲಿ ಕೇವಲ ತಮೋಗುಣಗಳನ್ನು ಮಾತ್ರ ವಿಸ್ತರಿಸುವುದು. ಇಂತಹ ಭಯಂಕರ ತಮೋಗುಣಗಳು ಜೀವಿಯ ಷಡ್ವೈರಿಗಳೆಂದೆನಿಸಿದ ಕಾಮಾದಿಗಳನ್ನು ಜೀವಿಗಳ ಭಾವ ಅಥವಾ ಮನದಲ್ಲಿ ತುಂಬಿ ಆ ಜೀವಿಯ ಆಜೀವಗುರಿಯಾದ ಮೋಕ್ಷವನ್ನು ತಪ್ಪಿಸುವಲ್ಲಿ ವಿಜಯಿಯಾಗುತ್ತವೆ. 


ಹಾಗಾಗಿ ಪ್ರತಿ ಜೀವಿಯೂ ಕೂಡಾ ತನ್ನ ಮೋಕ್ಷಕ್ಕಾಗಿ ಸಂಪತ್ತಿನ ಗಳಿಕೆ ಹಾಗೂ ಕಾಮಾದಿಗಳ ಮೇಲೆ ವಿಜಯವನ್ನು ಪಡೆಯಲು ಈ ಜೀವಿಗಳ ಮಾಡಬೇಕಾದ ಕಾರ್ಯಗಳನ್ನು ತಮ್ಮ ಹಿಂದಿನ ಜನ್ಮಗಳಲ್ಲೇ ಸಾಧಿಸಿಕೊಂಡ ಗುರುಸಾರ್ವಭೌಮರಾದ ಶ್ರೀಮದ್ರಾಘವೇಂದ್ರತೀರ್ಥರ ಮೊರೆ ಹೋಗಬೇಕು. 


ಜೀವಿಗಳ ಮೋಕ್ಷಪ್ರಾಪ್ತಿಗೆ ಅವಶ್ಯವಾದ ಸಂಪತ್ತನ್ನೂ ಹಾಗೂ ಜೀವಿಯ ತಮೋಗುಣಗಳನ್ನು ನಾಶಮಾಡುವ ಸಾಮರ್ಥ್ಯವು ಶ್ರೀಮದ್ರಾಘವೇಂದ್ರಗುರುಸಾರ್ವಭೌಮರಿಗಲ್ಲದೇ ಬೇರೇ ಯಾರಿಗೂ ಇಲ್ಲ ಎಂಬ ಭಾವವನ್ನು ಈ ಶ್ಲೋಕದಲ್ಲಿ ಕಾಣಬಹುದು.


ಓಂ ಶ್ರೀರಾಘವೇಂದ್ರಾಯ ನಮಃ ।।

*****


" ಅಗಮ್ಯ ಮಹಿಮರು ಶ್ರೀ ಗುರುರಾಜರು "

ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮರು ಶ್ರೀ ಪಾಂಡುರಂಗನ ದರ್ಶನಾಕಾಂಕ್ಷಿಗಳಾಗಿ ಪಂಢರಾಪುರಕ್ಕೆ ದಿಗ್ವಿಜಯ ಮಾಡಿದರು.


ಮಾರ್ಗ ಮಧ್ಯದಲ್ಲಿ ಒಂದು ಬೆಂಗಾಡು ತಲುಪಿದರು. ಬಿಸಿಲಿನ ತಾಪ ಹೇಳಲಸದಳ. ಗಿಡಮರ - ಕುಂಟಿ - ಬಾವಿ - ಕೆರೆ ಯಾವುದೂ ಇಲ್ಲದ ಆ ದಾರಿಯಲ್ಲಿ ಸಂಚಾರ ಹೊರಟವರೆಲ್ಲ ಬಿಸಿಲಿನ ಬೇಗೆ, ತೃಷೆಯಿಂದ ಬಳಲಿದ್ದಾರೆ.


ಶ್ರೀ ಗುರುಸಾರ್ವಭೌಮರೊಡನೆ ನೂರಾರು ಜನ ಶಿಷ್ಯರು ಕುಟುಂಬ ಸಹಿತ ಪ್ರಯಾಣ ಬೆಳೆಸಿದ್ದಾರೆ. ಇಂಥಹ ಸಮಯದಲ್ಲಿ ದ್ವಾರಪಾಲಕನೊಬ್ಬನ ಗರ್ಭಿಣಿ ಮಡದಿಗೆ ಪ್ರಸವ ವೇದನೆ ಪ್ರಾರಂಭವಾಯಿತು. ಹೆಂಗಸರು ಭಯದಿಂದ ಕಂಗಾಲಾದರು.


ದ್ವಾರಪಾಲಕನು ಭೀತನಾಗಿ ಶ್ರೀ ಗುರುರಾಜರು ಮಂಡಿಸಿದ್ದ ಮೇನೆಯ ಬಳಿ ಓದಿ ಬಂದು ಅಡ್ಡ ಬಿದ್ದು ವಿಷಯ ಹೇಳಿಕೊಂಡು ..... 


" ಗುರುದೇವಾ! ನನ್ನ ಮಡದಿಗೆ ಪ್ರಸವ ವೇದನೆ ಪ್ರಾರಂಭವಾಗಿದೆ. ನೀರು - ನೆರಳಿಲ್ಲದ ಈ ಬೆಂಗಾಡಿನಲ್ಲಿ ನನ್ನ ಪತ್ನಿ ಪ್ರಸವಿಸಿದರೆ ಗತಿಯೇನು? ಜೀಯಾ! ಬಡವನ ಮೇಲೆ ಕರುಣೆ ತೋರಿ ಕಾಪಾಡಬೇಕು "


ಎಂದು ಪ್ರಾರ್ಥಿಸಿದ. ಶ್ರೀ ಗುರುಸಾರ್ವಭೌಮರು ಅದನ್ನಾಲಿಸಿ " ಹೆದರಬೇಡ! ಶ್ರೀ ಹರಿ ವಾಯುಗಳು ನಿನ್ನ ಪತ್ನಿಯನ್ನೂ, ಜನಿಸಲಿರುವ ಪುತ್ರನನ್ನೂ ರಕ್ಷಿಸುವರು "


ಎಂದು ಮೇನೆಯನ್ನಿಳಿದು ದ್ವಾರಪಾಲಕನ ಮಡದಿ ಕುಳಿತಿದ್ದ ಗಾಡಿಯ ಬಳಿಗೆ ಬಂದು ಆಕೆಯನ್ನು ಕೃಪಾ ದೃಷ್ಟಿಯಿಂದೀಕ್ಷಿಸಿ.....


" ಮಗಳೇ! ಭಯಪಡಬೇಡಮ್ಮಾ! ಮೂಲರಾಮನು ಸುಖ ಪ್ರಸವವಾಗುವಂತೆ ಅನುಗ್ರಹಿಸುವನು "


ಎಂದು ಹೇಳಿ ಕರದಲ್ಲಿದ್ದ ಜಲಪೂರ್ಣ ಕಮಂಡಲವನ್ನು ಬಲ ಕರದಿಂದ ಸ್ಪರ್ಶಿಸಿ ಮಂತ್ರೋಚ್ಛಾರಣೆ ಮಾಡುತ್ತಾ ಧ್ಯಾನಿಸ ಹತ್ತಿದರು.


ಶ್ರೀ ರಾಯರ ಕೈಯಲ್ಲಿದ್ದ ಕಮಂಡಲದಿಂದ ಇದ್ದಕ್ಕಿದ್ದಂತೆ ನೀರು ನೀರುಕ್ಕಿ ಧಾರಾಕಾರವಾಗಿ ಹರಿಯಲಾರಂಭಿಸಿತು. ಶ್ರೀ ಗುರುಗಳಿಗೆ ಒಲಿದ ಭಾಗೀರಥಿಯು ಅಕ್ಷಯ ಪೂರ್ಣ ಜಲ ಪ್ರವಾಹ ರೂಪವಾಗಿ ಕಮಂಡಲದಿಂದ ಹೊರಹೊಮ್ಮಿ ಹರಿದಳು.


ಆ ಮಹಿಮೆಯನ್ನು ಕಂಡು ಜನರು ಶ್ರೀ ಗುರುಗಳ ಜಯ ಘೋಷ ಮಾಡಿದರು. ಶ್ರೀ ಮಠದವರು ಸಡಗರದಿಂದ ನಾಲ್ಕಾರು ದೊಡ್ಡ ಪಾತ್ರೆಗಳನ್ನು ತಂದು ಕಮಂಡಲುವಿನ ಕೆಳಗೆ ಇಟ್ಟರು. ಕ್ಷಣಾರ್ಧದಲ್ಲಿ ಅವೆಲ್ಲವೂ ತುಂಬಿ ತುಳಕಾಡಿದವು. ಶ್ರೀಮಠದ ಪರಿವಾರದವರು ಆ ಪವಿತ್ರ ಜಲವನ್ನು ಪಾನ ಮಾಡಿ ಸಂತೋಷಪಟ್ಟರು.


ಆಗ ಶ್ರೀ ರಾಯರು ಹೊದ್ದಿದ್ದ ಕಾವಿ ಶಾಟಿಯನ್ನು ಆಕಾಶದತ್ತ ಎಸೆದರು. ಆಶ್ಚರ್ಯ! ಯಾವ ಆಧಾರವೂ ಇಲ್ಲದೇ ಆ ಶಾಟಿಯು ಅಂಬರದಲ್ಲಿ ನಿಂತಿತು. ಮಾತ್ರವಲ್ಲ! ವಿಚಿತ್ರವಾಗ ವಿಸ್ತೃತವಾಗಿ ಆ ಗರ್ಭಿಣಿಯು ಕುಳಿತಿದ್ದ ಗಾಡಿಯಿದ್ದ ಪ್ರದೇಶದಲ್ಲಿ ವ್ಯಾಪಕವಾಗಿ ನೆರಳು ನೀಡಿತು!


ಶ್ರೀ ರಾಯರ ಅಪ್ಪಣೆಯಂತೆ ಕೆಲ ಸ್ತ್ರೀಯರನ್ನು ಪ್ರಸವ ವೇದನೆಯಲ್ಲಿದ್ದ ಮಹಿಳೆಯ ಸಹಾಯಕ್ಕೆ ಬಿಟ್ಟು ಎಲ್ಲರೂ ದೂರ ಸರಿದು ನಿಂತರು. ಶ್ರೀ ರಾಯರು ಮೇನೆಯಲ್ಲಿ ಕುಳಿತರು.


ದ್ವಾರಪಾಲಕನಿಗೆ ಪುತ್ರ ಜನಿಸಿದ. ವಿಷಯವರಿತ ಶ್ರೀ ರಾಯರು ಸಮಾಧಾನ ತಾಳಿ " ಹರಿಯು ಕೂಸು, ಬಾಣಂತಿಗೆ ಮಂಗಳ ಕರುಣಿಸಲಿ " ಎಂದು ಆಶೀರ್ವದಿಸಿ ಪ್ರಯಾಣ ಬೆಳೆಸಿದರು.


ಶ್ರೀ ಮಠದ ಪರಿವಾರದವರು......


" ಅನಾಥ ರಕ್ಷಕ ಗುರುಸಾರ್ವಭೌಮರಿಗೆ ಜಯವಾಗಲಿ "


ಎಂದು ಹರ್ಷೋದ್ಗಾರ ಮಾಡಿದರು. ಹೀಗೆ ಶ್ರೀ ರಾಯರು ಅನೇಕ ಮಹಿಮೆಗಳನ್ನು ತೋರಿ ಶರಣಾಗತರನ್ನು ಪೊರೆಯುತ್ತಾ ಸಂಚಾರ ಕ್ರಮದಿಂದ " ಪಂಢರಾಪುರ " ಕ್ಕೆ ಚಿತ್ತೈಸಿದರು!!


ಗುರು ವಿಜಯ ಪ್ರತಿಷ್ಠಾನ

*****


ಶ್ರೀ ರಾಯರ ಪಾದೋದಕ ಮತ್ತು ಹಸ್ತೋದಕ ಸರ್ವರಿಗೂ ಗ್ರಾಹ್ಯ
ಯತ್ಪಾದೋದಕ ಸಂಚಯಃ ಸುರನದೀ ಮುಖ್ಯಾಪಗಾಸಾದಿತ

ಸಂಖ್ಯಾನುತ್ತಮಪುಣ್ಯಸಂಘವಿಲಸತ್ಪ್ರಖ್ಯಾತ ಪುಣ್ಯಾವಹಃ ।
ದುಸ್ತಾಪತ್ರಯನಾಶನೋ ಭುವಿಮಹಾವಂಧ್ಯಾ ಸುಪುತ್ರಪ್ರದೋ
ವ್ಯಂಗಸ್ವಂಗಸಮೃದ್ಧಿದೋ ಗ್ರಹ ಮಹಾ ಪಾಪಾಪಹಸ್ತ೦ ಶ್ರಯೇ ।। ೮ ।।
೧. ಶ್ರೀ ತ್ರಿವಿಕ್ರಮಾವತಾರದಲ್ಲಿ ಶ್ರೀ ಹರಿಯ ಪಾದದಿಂದ ಆವಿರ್ಭವಿಸಿದ ಕಾರಣದಿಂದ ಗಂಗೆಯು ಪರಮ ಪಾವನಳು. ಇತರ ನದಿಗಳು ಬೇರೆ ಬೇರೆ ಕಾರಣಗಳಿಂದ ಪಾವನವಾಗಿವೆ. ಆದರೆ ಗಂಗೆಗೆ ಸಮವಲ್ಲ. ಈ ಎಲ್ಲಾ ನದಿಗಳೂ ಸ್ನಾನ - ದರ್ಶನ - ಸ್ಮರಣ - ಸ್ಪರ್ಶನ ಮುಂತಾದವುಗಳಿಂದ ಮಹಾ ಪುಣ್ಯವನ್ನು ಕೊಡುತ್ತವೆ. ಒಮ್ಮೊಮ್ಮೆ ಸ್ನಾನದಿಗಳನ್ನು ಮಾಡಿದ್ದರಿಂದ ಒಂದೊಂದು ಪುಣ್ಯದಂತೆ ಪ್ರತಿದಿನದಲ್ಲಿಯೂ ತ್ರಿಕಾಲ ಸ್ನಾನಾದಿಗಳಿಂದ ಅಸಂಖ್ಯ ಪುಣ್ಯಗಳನ್ನು ಕೊಡುತ್ತವೆ. ಈ ಪುಣ್ಯಗಳಿಗೆ ಸಮವಾದ ಪುಣ್ಯಗಳಿಲ್ಲ!!
1) ಗಂಗೆ ಮುಂತಾದ ಎಲ್ಲಾ ನದಿಗಳಲ್ಲಿ ಪ್ರತಿದಿನದಲ್ಲಿಯೂ ತ್ರಿಕಾಲ ಸ್ನಾನ ಮುಂತಾದ್ದರಿಂದ ಬರುವ ಎಲ್ಲಾ ಪುಣ್ಯಗಳ ಸಮೂಕ್ಕಿಂತಲೂ ಮಿಗಿಲಾದ ಪುಣ್ಯವನ್ನು &quot; ಬ್ರಾಹ್ಮಣ ಪಾದೋದಕ ವು ಕೊಡುತ್ತದೆ ಎಂದು ಶಾಸ್ತ್ರಗಳು ಹೊಗಳುತ್ತಿವೆ.
2) ಗಂಗಾ ಜನಕನೂ,ನಿರಪೇಕ್ಷನೂ ಆದ ಶ್ರೀ ಹರಿಯು ಕೃಷ್ಣಾವತಾರದಲ್ಲಿಯೂ, ಇತರಾವತಾರಗಳಲ್ಲಿಯೂ, ರಾಜಸೂಯ ಯಾಗ ಮುಂತಾದ ಸಂದರ್ಭಗಳಲ್ಲಿ ವಿಷ್ಣುಭಕ್ತರಾದ ಬ್ರಾಹ್ಮಣರ ಪಾದವನ್ನು ತಾನೇ ತೊಳೆದು ಬ್ರಾಹ್ಮಣ ಪಾದೋದಕವನ್ನು ತನ್ನ ತಲೆಯಲ್ಲಿ ಧರಿಸಿ ಬ್ರಾಹ್ಮಣ ಪಾದೋದಕದ ಮಹತ್ವವನ್ನು ವ್ಯಕ್ತ ಪಡಿಸಿದ್ದಾನೆ.<br>
3) ಶ್ರೀ ಗುರುರಾಜರ ಮೂಲ ಬೃಂದಾವನದಲ್ಲಿ ಶ್ರೀ ಹರಿಯೂ, ಬ್ರಹ್ಮಾದಿ ಸಕಲ ದೇವತೆಗಳೂ, ಗಂಗಾದಿ ಸಕಲ ತೀರ್ಥಾಭಿಮಾನಿ ದೇವತೆಗಳೂ ಸನ್ನಿಹಿತರಾಗಿದ್ದಾರೆ. ಆದ್ದರಿಂದ ಬೃಂದಾವನಕ್ಕೆ ಅಭಿಷೇಕ ಮಾಡಿದರೆ ಆ ಅಭಿಷೇಕ ಜಲಕ್ಕೆ ಬೃಂದಾವನದಲ್ಲಿ ವಿಶೇಷ ಸನ್ನಿಧಾನದಿಂದಿರುವ ಗಂಗಾದಿ ಸಕಲ ತೀರ್ಥಾಭಿಮಾನಿ ದೇವತೆಗಳ ಸಂಪರ್ಕದಿಂದ ಆ ತೀರ್ಥಗಳಂತೆ ಪಾವನತ್ವವೂ, ಆ ತೀರ್ಥಾಭಿಮಾನಿ ದೇವತೆಗಳಿಗಿಂತ ಉತ್ತಮರಾದ ಶ್ರೀ ಹರಿ ಬ್ರಹ್ಮ ಮುಂತಾದ ದೇವತೆಗಳ ಸಂಪರ್ಕದಿಂದ ಗಂಗಾದಿ ತೀರ್ಥಗಳಿಗಿಂತ ಅಧಿಕವಾದ ಪಾವನತ್ವವು ಬರುತ್ತದೆ.
4) ಪರಮ ಪಾವನನಾದ ಶ್ರೀ ಹರಿಯನ್ನು ಹೃದಯ ಕಮಲದಲ್ಲಿ ಧ್ಯಾನಿಸುತ್ತಿರುವ ಭಗವದ್ಭಕ್ತರ ಶರೀರ ಸಂಪರ್ಕದಿಂದ ಗಂಗಾದಿ ಪುಣ್ಯ ನದಿಗಳೂ ಕೂಡಾ ಪಾವನವಾಗುತ್ತದೆ ಎಂದು ತೀರ್ಥೀ ಕುರ್ವ೦ತಿ ತೀರ್ಥಾನಿ ಸ್ವಾತ್ಮಸ್ಥೇನ ಗದಾಭೃತಾ ಎಂಬ ಶ್ರೀಮದ್ಭಾಗವತದ ವಾಕ್ಯ ಹೇಳುತ್ತದೆ.
ಆದ್ದರಿಂದ ಶ್ರೀ ಹರಿಯನ್ನು ನಿತ್ಯ ನಿರಂತರ ಸ್ಮರಿಸುತ್ತಿರುವ ಶ್ರೀ ಗುರುರಾಜರ ಪಾದೋದಕವು ಸಕಲ ಪುಣ್ಯ ನದಿಗಳಿಂದ ಬರುವ ಪುಣ್ಯಕ್ಕಿಂತಲೂ ಅಧಿಕ ಪುಣ್ಯವನ್ನು ಕೊಡುತ್ತದೆ.
ಇತ್ಯಾದಿ ಕಾರಣಗಳಿಂದ ಸಕಲ ನದಿಗಳಿಂದ ಬರುವ ಪುಣ್ಯಗಳಿಗಿಂತ ಹೆಚ್ಚಿನ ಪುಣ್ಯವನ್ನು ಶ್ರೀ ಗುರುರಾಜರ ಪಾದೋದಕವು ಕೊಡುತ್ತದೆಂದು ಸಿದ್ಧವಾಯಿತು.
೨. ಆಧ್ಯಾತ್ಮಿಕ ತಾಪ, ಆಧಿ ಭೌತಿಕ ತಾಪ, ಆಧಿ ದೈವಿಕ ತಾಪ ಎಂದು ತಾಪವು ಅಂದರೆ ಕಷ್ಟವು ತ್ರಿವಿಧವಾಗಿದೆ.
1) ದೇಹದೊಳಗೆ ರೋಗಾದಿಗಳಿಂದ ಏರ್ಪಡುವ ತಾಪವು ಆಧ್ಯಾತ್ಮಿಕ ತಾಪವೆನಿಸುತ್ತದೆ.
2) ದೇಹದ ವರಗೆ ಕೋಲು ಕತ್ತಿ ಮುಂತಾದವುಗಳ ಹೊಡೆತದಿಂದ ಏರ್ಪಡುವ ತಾಪವು ಆಧಿಭೌತಿಕತಾಪವೆನಿಸುತ್ತದೆ.
3) ದೇವತಾ ಕೋಪದಿಂದ ಏರ್ಪಡುವ ಅತಿವೃಷ್ಟಿ, ಅನಾವೃಷ್ಟಿ, ಅತಿ ಬಿಸಿಲು ಮುಂತಾದವುಗಳಿಂದ ಬರುವ ತಾಪವು ಆದಿ ದೈವಿಕ ತಾಪವೆನಿಸುತ್ತದೆ
ಈ ತ್ರಿವಿಧ ತಾಪಗಳು ಎರಡು ವಿಧವಾಗಿವೆ.
೧} ಏಕಾದಶೀ ಉಪವಾಸ ಮುಂತಾದುವುಗಳಿಂದ ಏರ್ಪಡುವ ಆಧ್ಯಾತ್ಮಿಕ ತಾಪಗಳೂ;
೨} ಪಂಚಾಗ್ನಿ ತಪಸ್ಸು ಮುಂತಾದವುಗಳಿಂದ ಏರ್ಪಡುವ ಆಧಿ ಭೌತಿಕ ತಾಪಗಳೂ;<br>
3} ದೇವತೆಗಳು ನಮ್ಮನ್ನು ಪರೀಕ್ಷಿಸುತ್ತಿರುವಾಗ ರಂತಿದೇವ ಮುಂತಾದದವರಿಗೆ ಬಂದಂತೆ ಬರು ಆದಿ ದೈವಿಕ ತಾಪಗಳು ಮನಸ್ಸಿನ ನೈರ್ಮಲ್ಯಕ್ಕೆ ಕಾರಣವಾಗಿ ಪರಂಪರೆಯಿಂದ ಮೋಕ್ಷಕ್ಕೆ ಕಾರಣವಾಗುತ್ತದೆ.
ಆದ್ದರಿಂದ ಇಂತಹ ತಾಪತ್ರಯವು ಉತ್ತಮ ತಾಪತ್ರಯವು. ಇದಕ್ಕೆ ವಿಪರೀತ ತಾಪತ್ರಯವೂ ದುಷ್ಟ ತಾಪತ್ರಯವು ಅನಿಸುತ್ತದೆ. ಭಕ್ತರಿಗೆ ಬಂದ ಇಂತಹ ದುಷ್ಟ ತಾಪತ್ರಯವನ್ನು ಶ್ರೀ ಗುರುರಾಜರ ಪಾದೋದಕವು ನಾಶ ಮಾಡುತ್ತದೆ.<br>
೩) ಬಹುಕಾಲದ ಮೇಲೆ ಮಕ್ಕಳು ಹುಟ್ಟುವುದು. ಈ ಜನ್ಮ ಅಥವಾ ಜನ್ಮಾಂತರದಲ್ಲಿ ಮಾಡಿದ ಪಾಪಗಳಿಗೆ ಹರಿವಂಶ ಶ್ರವಣ ಮುಂತಾದ ಪ್ರಾಯಶ್ಚಿತ್ತಗಳನ್ನೂ ಮಾಡಿದ ಮೇಲೆ ಮಕ್ಕಳು ಹುಟ್ಟುವುದು, ಪ್ರಾಯಶ್ಚಿತ್ತ ಮಾಡಿದ ಮೇಲೂ ಮಕ್ಕಳು ಹುಟ್ಟದಿರುವುದು ಹೀಗೆ ಬಂಜೆತನದಲ್ಲಿ ಅನೇಕ ವಿಧವಿದೆ. ಇವರಲ್ಲಿ ಪ್ರಾಯಶ್ಚಿತ್ತಾದಿಗಳನ್ನು ಮಾಡಿದರೂ ಮಕ್ಕಳು ಹುಟ್ಟದಿರುವವು ಮಹಾವಂಧ್ಯ ಎನಿಸುವಳು.
ಆ ಮಹಾವಂಧ್ಯೆಯೂ ಶ್ರೀ ಗುರಾಯರ ಪಾದೋದಕವನ್ನು ಅತಿಭಕ್ತಿಯಿಂದ ನಿರಂತರವೂ ಎಡೆಬಿಡದೆ ಸೇವಿಸುತ್ತಾ ಬಂದರೆ ಅವಳು ಜನ್ಮಾಂತರದಲ್ಲಿಯೂ, ಈ ಜನ್ಮದಲ್ಲಿಯೂ ಮಾಡಿರುವ ಎಲ್ಲಾ ಪಾಪ ಪರ್ವತವೂ ಕರಗಿ ಅವಳಿಗೆ ಮಗನು ಹುಟ್ಟುವನು. ಹುಟ್ಟಿದವನು ಸಾಮಾನ್ಯ ಮಗನಲ್ಲ. ಉತ್ತಮ ಪುತ್ರನಾಗಿರುವನು.
೪) ಜನ್ಮಾಂತರೀಯ ಪಾಪಗಳಿಂದ ಹುಟ್ಟುವಾಗಲೇ ಕೆಲವರು ಅಂಗ ಹೀನರಾಗಿ&nbsp; ಹುಟ್ಟುವರು ಅಥವಾ ಈ ಜನ್ಮದಲ್ಲಿ ಮಾಡಿದ ಪಾಪಗಳಿಂದಲೂ ಅಂಗ ಹೀರಾಗುವುದುಂಟು. ಇಂತಹ ವ್ಯಕ್ತಿಗಳು ಶ್ರೀ ರಾಘವೇಂದ್ರತೀರ್ಥರ ಪಾದೋದಕವನ್ನು ಸೇವಿಸುತ್ತಾ ಬಂದರೆ ಅವರ ಪಾಪವೆಲ್ಲಾ ದೂರವಾಗಿ ಪುನಃ ಅಂಗಗಳು ಬರುತ್ತವೆ. ಅಂದರೆ ಇದ್ದ ಅಂಗಗಳು ವಿಕೃತವಾಗಿದ್ದರೆ ವಿಕಾರಗಳೆಲ್ಲವೂ ಹೋಗಿ ಸರಿಯಾಗುತ್ತವೆ. ಅಂಗಗಳು ದೇಹವನ್ನು ಬಿಟ್ಟು ಆಗಲಿ ಎಷ್ಟೋ ಕಾಲವಿದ್ದರೆ ಮುಂದಿನ ಜನ್ಮದಲ್ಲಿ ಉತ್ತಮ ಅಂಗಗಳು ಬರುತ್ತವೆ. ಈ ಅಂಗಗಳೂ ಸುಂದರವಾಗಿಯೂ, ದೃಢವಾಗಿಯೂ ಇರುತ್ತವೆ.
೫) ಶನಿ, ರಾಹು, ಕೇತು, ಅಂಗಾರಕ ಮುಂತಾದ ಗ್ರಹಗಳಿಂಲೂ,ಬ್ರಹ್ಮ ಹತ್ಯಾ ಮುಂತಾದ ಮಹಾ ಪಾಪಗಳಿಂದಲೂ ಬರುವ ಎಲ್ಲಾ ಬಾಧೆಗಳು ಶ್ರೀ ರಾಯರ ಪಾದೋದಕದಿಂದ ನಾಶವಾಗುತ್ತದೆ.
ಇಂತಹ ಪಾದೋದಕ ಮಹಿಮೆಯುಳ್ಳ ಶ್ರೀ ಗುರುರಾಜ ಗುರುಸಾರ್ವಭೌಮರನ್ನು ಸೇವಿಸುತ್ತೇನೆ!!
*****

" ಸಕಲ ಸಿದ್ಧಿ ಪ್ರದಾಯಕ ಶ್ರೀ ರಾಘವೇಂದ್ರ ನಾಮ "

ವಿದ್ವತ್ಕವಿಕುಲತಿಲಕ ಶ್ರೀ ನಾರಾಯಣಾಚಾರ್ಯ ವಿರಚಿತಮ್ ಶ್ರೀ ರಾಘವೇಂದ್ರವಿಜಯ ಮಹಾ ಕಾವ್ಯ " ದಲ್ಲಿ.....

ಸಂತಂ ಶ್ರೀರಮಣಪ್ರಿಯಂ ಯತಿವರಂ ವ್ಯಾಸಸ್ಯ ಭಾವೇ ಭೃಶಂ
ದುರ್ವಾರಾಮಿತಮಾಯಿಭಿಕ್ಷುತಿಮಿರೇ ಪರ್ವಸ್ಥಚಂದ್ರಂ ಭುವಿ ।
ಸತ್ಸಂಘಸ್ತುತಮಿಸ್ಟದಕ್ಷತಿರುಹಂ ವಂದಾರು ವಿಪ್ರಶ್ರಿಯಂ
ತಂ ನತ್ವಾ ಸಕಲೋ ದುರೂಹಸುದೃಶಂ ಸಂಯಾತಿ ವಿದ್ಯಾದಿಕಮ್ ।।

ವಿವರಣೆ :

ಶ್ರೀರಮಣಪ್ರಿಯಂ = ಶ್ರೀ ಮಹಾಲಕ್ಷ್ಮೀ ಪತಿಯಾದ ಶ್ರೀ ಹರಿಯ ಪ್ರೀತ್ಯಾಸ್ಪದರಾದ

ವ್ಯಾಸಸ್ಯ ಭಾವೇ = ಶ್ರೀ ವೇದವ್ಯಾಸರ ಸ್ವರೂಪದ ಧ್ಯಾನದಲ್ಲಿ

ಭೃಶಂ = ಅತಿಶಯವಾಗಿ

ಸಂತಂ = ಇರುವ

ಭುವಿ = ಭೂಲೋಕದಲ್ಲಿ

ದುರ್ವಾರಾಮಿತ = ಪರಾಜಯಗೊಳಿಸಲು ಅಸಾಧ್ಯರಾದ

ಮಾಯಿಭಿಕ್ಷು = ಮಾಯಾವಾದಿ ಸಂನ್ಯಾಸಿಗಳೆಂಬ

ತಿಮಿರೇ = ಕತ್ತಲೆಯ ವಿಷಯದಲ್ಲಿ

ಪರ್ವಸ್ಥಚಂದ್ರಂ = ಹುಣ್ಣುಮೆಯ ಚಂದ್ರನಂತಿರುವ

ಸತ್ಸಂಘಸ್ತುತಂ = ಸಜ್ಜನರ ಸಮೂಹದಿಂದ ಹೊಗಳಿಸಿಕೊಳ್ಳಲ್ಪಟ್ಟ

ಇಷ್ಟದಕ್ಷಿತಿರುಹಂ = ಕಲ್ಪವೃಕ್ಷದಂತಿರುವ

ತಂ = ಅಂತಹ

ವಂದಾರುವಿಪ್ರಶ್ರಿಯಂ = ಪ್ರಣಾಮ ಮಾಡುವ ಸ್ವಭಾವವುಳ್ಳ ದ್ವಿಜರಿಗೆ ಸಂಪತ್ತನ್ನು ಕೊಡುವ

ಯತಿವರಂ = ಸಂನ್ಯಾಸಿ ಶ್ರೇಷ್ಠರಾದ ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮರನ್ನು

ನತ್ವಾ = ನಮಸ್ಕರಿಸಿ

ಸಕಲ: = ಎಲ್ಲಾ ಜನರು

ದುರೂಹಸುದೃಶಂ = ಊಹಿಸಲೂ ಸಾಧ್ಯವಿಲ್ಲದ ಶ್ರೇಷ್ಠವಾದ ಜ್ಞಾನವನ್ನು

ವಿದ್ಯಾದಿಕಂ = ವಿದ್ಯಾ - ಸಂಪತ್ತು - ಲೌಕಿಕ ವಿಜ್ಞಾನ ಮತ್ತು ಸಂತಾನ ಮುಂತಾದುದನ್ನು

ಸಂಯಾತಿ = ಚೆನ್ನಾಗಿ ಹೊಂದುತ್ತಾರೆ!!

ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮರು ಸಕಲ ವೇದಾಭಿಮಾನಿಯೂ; ಸಂಪದಭಿಮಾನಿಯೂ; ಜಗನ್ಮಾತೆಯಾದ ಶ್ರೀಮಹಾಲಕ್ಷ್ಮೀದೇವಿಯ ರಮಣನ ಅತಿಶಯವಾದ ಪ್ರೀತಿಗೆ ಪಾತ್ರರಾದವರು.

ಯಾವಾಗಲೂ ಶ್ರೀ ವೇದವ್ಯಾಸದೇವರ ಧ್ಯಾನವನ್ನು ಮಾಡುತ್ತಾ, ಶ್ರೀ ವೇದವ್ಯಾಸದೇವರಿಗೆ ಅಭಿಮತವಾದ ಗೀತಾ - ಉಪನಿಷತ್ - ಬ್ರಹ್ಮಸೂತ್ರಗಳ ಅರ್ಥವನ್ನು ಶಿಷ್ಯರಿಗೆ ಉಪದೇಶಿಸುತ್ತಾ, ಗ್ರಂಥಗಳನ್ನು ರಚಿಸುತ್ತಾ ಇರುತ್ತಾರೆ.

ಇಂದು ಭೂಲೋಕದಲ್ಲಿರುವ ಯತಿಗಳಲ್ಲಿ ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮರು ಶ್ರೇಷ್ಠರು.

ಭೂಲೋಕದಲ್ಲಿ ಜಯಿಸಲು ಸಾಧ್ಯವಿಲ್ಲದ ಅಸಂಖ್ಯಾಕರಾದ ಮಾಯಾವಾದಿ ಸಂನ್ಯಾಸಿಗಳೆಂಬ ಕತ್ತಲೆಯನ್ನು ನಿವಾರಣೆ ಮಾಡುತ್ತಿದ್ದಾರೆ ಶ್ರೀ ಗುರುರಾಜ ಗುರುಸಾರ್ವಭೌಮರು.

ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮರು ಭಜಿಸುವವರಿಗೆ ಕಲ್ಪವೃಕ್ಷದಂತಿದ್ದಾರೆ.

ನಿರಂತರ ಶ್ರೀ ರಾಯರಿಗೆ ತಲೆ ಬಾಗಿ ನಮಸ್ಕರಿಸಿ ಸ್ತುತಿಸುವ ವಿಪ್ರರಿಗೆ ವಿಶಿಷ್ಟವಾದ ಐಶ್ವರ್ಯವನ್ನು ಶ್ರೀ ಗುರುರಾಯರು ನೀಡುತ್ತಾರೆ.

ಶ್ರೀ ಗುರು ರಾಘವೇಂದ್ರತೀರ್ಥರಿಗೆ ಬಾಗಿದ, ಅವರನ್ನು ಸ್ತೋತ್ರ ಮಾಡಿದ ಜನರೆಲ್ಲರೂ ಊಹಿಸಲೂ ಸಾಧ್ಯವಿಲ್ಲದ; ಬಾಯಿಯಿಂದ ವರ್ಣಿಸಲೂ ಸಾಧ್ಯವಿಲ್ಲದ ಉತ್ತಮವಾದ ಆಧ್ಯಾತ್ಮಿಕ ಜ್ಞಾನವನ್ನು ಹೊಂದುತ್ತಾರೆ.

ಶ್ರೇಷ್ಠವಾದ ವಿದ್ಯೆ, ಸಾತ್ವಿಕವಾದ ಸಂಪತ್ತು; ಸಂಗೀತ; ಶಿಲ್ಪಾದಿಜ್ಞಾನ; ಸಂತಾನ ಮುಂತಾದ ಸಕಲೇಷ್ಟಾರ್ಥಗಳೂ ಸಿದ್ಧಿಸುತ್ತವೆ!!

ಪ್ರಮಾಣ :

ಶ್ರೀ ರಾಯರು ಅಪೇಕ್ಷಿತಪ್ರದಾತಾನ್ಯರು.

ಅಪರೊಕ್ಷೀಕೃತಶ್ರೀಶಃ ಸಮುಪೇಕ್ಷಿತಭಾವಜ: ।
ಅಪೇಕ್ಷಿತಪ್ರದಾತಾನ್ಯೋ ರಾಘವೇಂದ್ರಾನ್ನ ವಿದ್ಯತೇ ।। ೧೩ ।।

೧. " ವಿಷ್ಣುರ್ಹಿ ದಾತಾ ಮೋಕ್ಷಸ್ಯ ವಾಯುಶ್ಚ ತದನುಜ್ಞಯಾ "

ಶ್ರೀ ಮಹಾವಿಷ್ಣುವು ಮೋಕ್ಷವನ್ನು ಕೊಡುತ್ತಾನೆ. ಶ್ರೀ ವಾಯುದೇವರೂ ಶ್ರೀ ಪರಮಾತ್ಮನ ಆಜ್ಞೆಯಿಂದ ಮೋಕ್ಷವನ್ನು ಕೊಡುತ್ತಾರೆ. ಅಂತೆಯೇ ಶ್ರೀ ಲಕ್ಷ್ಮೀನಾರಾಯಣರ ನಿತ್ಯ ಸನ್ನಿಧಾನಯುಕ್ತರೂ, ಶ್ರೀ ವಾಯುದೇವರ ನಿತ್ಯಾವೇಶಯುಕ್ತಾರಾದ ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮರೂ ಕೂಡಾ ಶ್ರೀ ಹರಿ ವಾಯುಗಳ ಆಜ್ಞೆಯಂತೆ ಮೋಕ್ಷವನ್ನು ಕೊಡುತ್ತಾರೆ!!

ಮೋಕ್ಷೋ ಜ್ಞಾನಂ ಚ ಕ್ರಮಶೋ ಮುಕ್ತಿಗೊ ಭೋಗ ಏವ ಚ ।
ಉತ್ತರೇಷಾ೦ ಪ್ರಸಾದೇನ ನೀಚಾನಾ೦ ನಾನ್ಯಥಾ ಭವೇತ್ ।।

ಲಿಂಗಭಂಗ ರೂಪವಾದ ಮೋಕ್ಷವೂ, ಜ್ಞಾನವೂ, ಮುಕ್ತಿಯಲ್ಲಿ ಆನಂದಾನುಭವವೂ, ಭಕ್ತಿ ವೈರಾಗ್ಯಾದಿ ಗುಣಗಳೂ ನೀಚ ಜನರಿಗೆ ( ನಮ್ಮಂಥಾ ಜೀವರಿಗೆ ) ಉತ್ತಮ ಜೀವರ ( ಸ್ವೋತ್ತಮರು ) ಅನುಗ್ರಹದಿಂದಲೇ ಏರ್ಪಡುತ್ತದೆ. ಇಲ್ಲದಿದ್ದರೆ ಇಲ್ಲ!

ಪೂರ್ವಾರ್ಧದಲ್ಲಿ ಹೇಳಿರುವ ಜ್ಞಾನ - ವೈರಾಗ್ಯ ಮೊದಲಾದ ಉತ್ತಮ ಗುಣಗಳೂ ಉತ್ತಮರ ಅನುಗ್ರಹದಿಂದಲೇ ಆಗುತ್ತದೆಂದು...

ಉಕ್ತಮೋಕ್ಷಾದೀನಾ೦ ಸಮುಚ್ಚಯೇ ಏಕಶ್ಚಕಾರಃ ।
ದ್ವಿತೀಯೋsನುಕ್ತ ಭಕ್ತಿವೈರಾಗ್ಯಾದೀನಾಮ್ ।।

ಎಂದೂ, ಉತ್ತರಾರ್ಧವನ್ನು ವಿವರಿಸುವ....

ಉತ್ತರೇಷಾ೦ ಶ್ರೇಷ್ಠಾನಾ೦ ಪ್ರಸಾದೇನೈವ ಮೋಕ್ಷಾದಿ: ಭವತಿ ಅನ್ಯಥಾ ತದಭಾವೇ ನ ಭವೇದಿತಿ ।।

ಉತ್ತಮರ ಅನುಗ್ರಹದಿಂದಲೇ ಮೋಕ್ಷ ಉಂಟಾಗುತ್ತದೆ ಎಂದೂ, ಇಲ್ಲದಿದ್ದರೆ ಇಲ್ಲವೆಂದೂ ಬಹಳ ಸ್ಪಷ್ಟವಾಗಿ ಹೇಳಿದೆ.

" ಸವೇಷಾ೦ ಚ ಹರೇರ್ನಿತ್ಯಂ ನಿಯಂತಾಂ ತದ್ವಶಾ ಪರೇ "

ಮೋಕ್ಷಾದಿಗಳನ್ನು ಕೊಡುವ ಯೋಗ್ಯತೆಯುಳ್ಳವರೆಂದು ಪೂರ್ವದಲ್ಲಿ ಹೇಳಿದ ಸ್ವೋತ್ತಮರು ಸರ್ವರೂ ಶ್ರೀ ಹರಿಯ ಅಧೀನರು. ಅವರೆಲ್ಲರಿಗೂ ಶ್ರೀ ಹರಿಯೇ ನಿಯಾಮಕನು. ಈ ಅರ್ಥವು...

ಅತ್ರಾಪಿ ಸ್ವಾ೦ತರ್ಯಾಮಿ ಪ್ರೇರಣಯಾ ಇತಿ ಗ್ರಾಹ್ಯಮ್ ।
ತದೇವಾಹ ಸರ್ವೇಷಾಮಿತಿ ।।

ಎಂಬ ವಾಕ್ಯವು ಸ್ಪಷ್ಟವಾಗಿ ಹೇಳುತ್ತಿದೆ.

ಮೇಲ್ಕಂಡ ಶ್ಲೋಕಗಳಿಂದ ಶ್ರೀ ಮಹಾವಿಷ್ಣುವು ಸ್ವತಂತ್ರನಾಗಿ, ಶ್ರೀ ಮಹಾಲಕ್ಷ್ಮೀ ಮತ್ತು ಶ್ರೀ ವಾಯುದೇವರು ಶ್ರೀ ಹರಿಯ ಆಜ್ಞೆಯಿಂದ ಮೋಕ್ಷವನ್ನು ಕೊಡುತ್ತಾರೆಂದೂ, ಸ್ವೋತ್ತಮರಾದ ಸರ್ವ ಜೀವರೂ ಮೋಕ್ಷ ಜ್ಞಾನ, ಮುಕ್ತಿಗತ ಸುಖಾನುಭವ, ಭಕ್ತಿ, ವೈರಾಗ್ಯ ಮುಂತಾದ ಫಲಗಳನ್ನು ಸ್ವಾ೦ತರ್ಗತ ಶ್ರೀ ಹರಿಯ ಪ್ರೇರಣೆಯಿಂದ ಕೊಡುತ್ತಾರೆಂದು ಸಿದ್ಧವಾಯಿತು.

೨. " ಅಥರ್ವಣೋಪನಿಷತ್ " ನಲ್ಲಿ...

ಯಂ ಯಂ ಲೋಕಂ ಮನಸಾ ಸಂವಿಭಾತಿ
ವಿಶುದ್ಧಸತ್ತ್ವ: ಕಾಮಯತೇ ಯಾಂಶ್ಚ ಕಾಮಾನ್ ।
ತಂ ತಂ ಲೋಕಂ ಜಯತೇ ತಾಂಶ್ಚ ಕಾಮಾನ್
ತಸ್ಮಾದಾತ್ಮಜ್ಞ೦ ಹ್ಯರ್ಚಯೇದ್ ಭೂತಿಕಾಮಃ ।।

ಎಂಬ " ಅಥರ್ವಣೋಪನಿಷತ್ತಿನ ಮಂತ್ರ " ವು ಶ್ರೀ ಪರಮಾತ್ಮನನ್ನು ಹೃದಯದಲ್ಲಿ ಕಂಡ ಅಪರೋಕ್ಷ ಜ್ಞಾನಿಗಳ ಬಯಕೆಗಳೆಲ್ಲವೂ ಪೂರ್ಣವಾಗುವುವು ಎಂದು ಹೇಳಿದೆ.

ಶುದ್ಧ ಸತ್ವ ಗುಣವುಳ್ಳ ಅಪರೋಕ್ಷಜ್ಞಾನಿಯು ಯಾವ ಯಾವ ಲೋಕವನ್ನು ಬಯಸುವನೋ ಮತ್ತು ಯಾವ ಯಾವ ವಸ್ತುಗಳನ್ನು ಬಯಸುವನೋ ಆಯಾ ಲೋಕವನ್ನೂ, ಅಭೀಷ್ಟ ವಸ್ತುಗಳನ್ನೂ ಪಡೆಯುತ್ತಾನೆ.

ಆದ್ದರಿಂದ ಭಾಗ್ಯವನ್ನು ( ಶ್ರೀ ಹರಿಯನ್ನು ) ಬಯಸುವವನು ಜ್ಞಾನಿಯನ್ನು ಪೂಜಿಸಬೇಕೆಂದು ಮೇಲ್ಕಂಡ ಮಂತ್ರದ ಅಭಿಪ್ರಾಯವಾಗಿದೆ.

ಆದರೆ, ಅಪರೋಕ್ಷ ಜ್ಞಾನಿಯು ಶ್ರೀ ಹರಿಯ ಹೊರತು ಯಾವ ಲೋಕವನ್ನಾಗಲೀ; ಶ್ರೀಹರಿ ಭಿನ್ನವಾದ ಯಾವುದೇ ವಸ್ತುವನ್ನಾಗಲೀ ಬಯಸಲಾರ. ಹಾಗೇನಾದರೂ ಬಯಸಿದ್ದಲ್ಲಿ ತನ್ನನ್ನು ಪೂಜಿಸುವ ಆಶ್ರಿತರಿಗಾಗಿ! ಆದ್ದರಿಂದ ಭಾಗ್ಯ " ಶ್ರೀಹರಿಯನ್ನು ) ಬಯಸುವವ ಅಪರೋಕ್ಷಜ್ಞಾನಿಯನ್ನು ಪೂಜಿಸಬೇಕು!!

ಅಂತೆಯೇ ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮರು ಅಪರೋಕ್ಷ ಜ್ಞಾನಿಗಳು ಆಶ್ರಿತರಿಗೆ ಅವರ ಕಾಮನೆಗಳನ್ನೆಲ್ಲಾ ಪೂರೈಸಿ ಮೋಕ್ಷವನ್ನು ಕೊಡಿಸಲು ಸಮರ್ಥರು. ಆದ್ದರಿಂದಲೇ ಸ್ವಾ೦ತರ್ಯಾಮಿಯಾದ ಶ್ರೀ ಹರಿಯ ಪ್ರೇರಣೆಯಿಂದ " ವೆಂಕಣ್ಣ " ನಿಗೆ ಮೋಕ್ಷವನ್ನು ಕೊಟ್ಟಿದ್ದಾರೆ. ಅದನ್ನು ಸಾವಿರಾರು ಜನರು ಕಣ್ಣಾರೆ ನೋಡಿದ್ದಾರೆ.

ಈ ವಿಷಯವನ್ನು ಶ್ರೀ ಸಹ್ಲಾದಾಂಶ ಜಗನ್ನಾಥದಾಸರು ".....

ಪ್ರಕಟಿಸಿ ತೋರಿದಿ ।
ಮುಕುತಿಯ ಬೇಡಿದ ।
ಭಕುತನ ಯೋಗ್ಯತೆ ।
ನಿಖಿಳ ಜನರಿಗೆ ।।
ರಾಘವೇಂದ್ರ ರಾಜಿತ ಗುಣಸಾಂದ್ರ ।।

ಎಂದು ವರ್ಣಿಸಿದ್ದಾರೆ.

೩. ಶ್ರೀಮದಾಚಾರ್ಯರ " ಮಹಾಭಾರತ ತಾತ್ಪರ್ಯ ನಿರ್ಣಯ " ದಲ್ಲಿ....

ಸೃಷ್ಟಿರಕ್ಷಾಹೃತೀಜ್ಞಾನನಿಯತ್ಯ ಜ್ಞಾನ ಬಂಧನಮ್ ।
ಮೋಕ್ಷ೦ ಚ ವಿಷ್ಣುತಸ್ತ್ವೇವ ಜ್ಞಾತ್ವಾ ಮುಕ್ತಿರ್ನ ಚಾನ್ಯಥಾ ।।

" ಭವಿಷತ್ಪರ್ವ ವಚನ " ದಲ್ಲಿ...

" ವಿಷ್ಣುತ ಏವ ಸ್ವಾತಂತ್ರೇಣ ಅನ್ನೇಭ್ಯಸ್ತದಾಜ್ಞಯಾ ತತ್ಪ್ರೇರಣಯಾ ಚ "

ಪ್ರಪಂಚದ ಸೃಷ್ಟಿ, ಪಾಲನೆ, ಸಂಹಾರ, ಜ್ಞಾನ, ನಿಯಮನ, ಅಜ್ಞಾನ, ಬಂಧ, ಮೋಕ್ಷಗಳನ್ನು ಶ್ರೀ ಹರಿಯು ಸ್ವತಂತ್ರನಾಗಿಯೂ, ಇತರರು ಅವನ ಆಜ್ಞೆಯಿಂದಲೇ ಕೊಡುತ್ತಾರೆಂದು ತಿಳಿದರೆ ಮುಕ್ತಿ. ಇಲ್ಲವಾದರೆ ಇಲ್ಲ ಎಂದು ಹೇಳಿದ್ದಾರೆ!!!

ಆದ್ದರಿಂದ ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮರು ಅಪೇಕ್ಷಿತ ಪ್ರದಾತರೂ; ಮೋಕ್ಷ ಪ್ರದಾತರೂ ಎಂದು ಶ್ರೀಮದಪ್ಪಣ್ಣಾಚಾರ್ಯರು ಹೇಳಿದರೆ,

" ಶ್ರೀ ರಾಘವೇಂದ್ರವಿಜಯ ಮಹಾಕಾವ್ಯ " ವ್ಯಾಖ್ಯಾನಕಾರರಾದ " ಕೋರ್ಟ್ ಶ್ರೀ ರಾಘವೇಂದ್ರಾಚಾರ್ಯರು " ತಮ್ಮ " ಗುರುಪಾದಸೇವಾ " ವ್ಯಾಖ್ಯಾನದಲ್ಲಿ...

ಶ್ರೀ ರಾಘವೇಂದ್ರಸ್ವಾಮಿನಃ ಸೇವಯಾ ಜನಾನಾ೦ ಸಂಪಜ್ ಜ್ಞಾನವಿದ್ಯಾದಿಸರ್ವಾಭೀಷ್ಟಸಿದ್ಧಿರ್ಭವತೀತಿ ಭಾವಃ ।।

ಶ್ರೀ ರಾಘವೇಂದ್ರ ಸ್ವಾಮಿಗಳ ಸೇವೆಯಿಂದ ಜನರಿಗೆ ಸಂಪತ್ತು - ಜ್ಞಾನ - ವಿದ್ಯೆ ಮುಂತಾದ ಸರ್ವಾಭೀಷ್ಟವೂ ಸಿದ್ಧಿಸುತ್ತದೆ!!

ರಾಗ : ಖಮಾಜ್ ತಾಳ : ಅಟ್ಟ

ಬಾರೋ ನಮ್ಮ ಮನೆಗೆ ।
ಶ್ರೀ ರಾಘವೇಂದ್ರ ।। ಪಲ್ಲವಿ ।।

ಬಾರೋ ದುಃಖಾಪಹಾರ ।
ಬಾರೋ ದುರಿತ ದೂರ ।
ಬಾರಯ್ಯ ಸನ್ಮಾರ್ಗ ।
ದಾರಿ ತೋರುವ ಗುರು ।। ಆ. ಪ ।।

ಬಾಲ ಪ್ರಹ್ಲಾದನಾಗಿ ।
ಖೂಳ ಕಶ್ಯಪುವಿಗೆ ।
ಲೋಲ ಶ್ರೀ ನರಹರಿ ।
ಕಾಲ ರೂಪವ ತೋರ್ದೆ ।। ಚರಣ ।।

ವ್ಯಾಸ ನಿರ್ಮಿತ ಗ್ರಂಥ ಮಧ್ವಕೃತ ಭಾಷ್ಯವ ।
ಬೇಸರದೆ ಓದಿ ವ್ಯಾಸ ಮುನಿಯೇ ।। ಚರಣ ।।

ಮಂತ್ರ ಗೃಹದಲಿ ।
ನಿಂತ ಸು ಯತಿವರ್ಯ ।
ಅಂತ ತಿಳಿಯದೋ । ನೀ ।
ಅಂತರದೊಳು ।। ಚರಣ ।।

ಭೂತ ಪ್ರೇತಗಳನು ।
ಘಾತಿಸಿ ಬಿಡುವಂಥ ।
ಖ್ಯಾತಿಯುತ । ಯತಿ ।
ನಾಥನೆ ತುತಿಸುವೆ ।। ಚರಣ ।।

ಕುಷ್ಠ ರೋಗಾದಿಗಳ ।
ನಷ್ಟ ಮಾಡುವಂಥ ।
ಅಷ್ಟ ಮಹಿಮೆಯುತ ।
ಶ್ರೇಷ್ಠಮುನಿಯೇ ।। ಚರಣ ।।

ಕರೆದರೆ ಬರುವಿಯೆ೦ಬೊ ।
ಕೀರುತಿ ಕೇಳಿನಾ ।
ಕರಿದೆನೊ ।
ಕರುಣಾದಿ ಕೈ ಹಿಡಿಯೊ ।। ಚರಣ ।।

ಭಕ್ತವತ್ಸಲನೆಂಬ ಬಿರುದಿನಿಂದಾದರಾ ।
ನಕ್ತನ ಮೊರೆ ಕೇಳು ಮದ್ವೇಶವಿಠಲ ದಾಸ ।। ಚರಣ ।।

ಆಚಾರ್ಯ ನಾಗರಾಜು ಹಾವೇರಿ

ಗುರು ವಿಜಯ ಪ್ರತಿಷ್ಠಾನ
**********


|ನಂಬಿ ಕೆಟ್ಟವರಿಲ್ಲವೋ ಈ ಗುರುಗಳ|
🙏🙏🙏🙏
ಹಲವು  ವರುಷಗಳ ಹಿಂದೆ ಮೈಸೂರಿನಲ್ಲಿದ್ದ ಒಬ್ಬರು ಸುಪ್ರಸಿದ್ಧ ಕಲಾವಿದರಾದ ಮತ್ತು ರಾಯರ ಭಕ್ತರಾದ ಸಹಸ್ರ ಮುಖಿ ರಾಮಕುಮಾರ್ ಅವರಿಗೆ ಜಪಾನ್ ದೇಶದಿಂದ ಕಾರ್ಯಕ್ರಮ ಕೊಡಲು ಆಹ್ವಾನ ಬಂದಿತ್ತು. ತಕ್ಷಣ ಹೊರಟರು.
ಅಲ್ಲಿ ಇದ್ದಾಗ ಒಮ್ಮೆ ಅವರ ಕೈಯಲ್ಲಿ ಇದ್ದ ಹಣವೆಲ್ಲಾ ಖರ್ಚಾಗಿ,ಊಟಕ್ಕೆ ಸಹ ಹಣ ಇಲ್ಲದೇ ಬಹಳ ತೊಂದರೆ ಆಗಿದೆ.ಮುಂದಿನ ಊರಿಗೆ ಹೋಗಿ ಕಲೆಯನ್ನು ಪ್ರದರ್ಶನವನ್ನು ಮಾಡಿ ಹಣ ಸಂಗ್ರಹ ಮಾಡಿಕೊಂಡು ಭಾರತಕ್ಕೆ ಹಿಂದಿರುಗಿ ಹೋಗೋಣ ಎಂದು ಭಾವಿಸಿ ಪ್ರಯಾಣ ಬೆಳೆಸಿದರು. ಊರು ಬಿಟ್ಟು ೫/೬ ಮೈಲು ದೂರ ಸಾಗಿದ್ದಾರೆ.ಅನ್ನ ಆಹಾರ ಇಲ್ಲದೆ,ಬಾಯಾರಿಕೆ ಮತ್ತು ಹಸಿವೆಯಿಂದ ಬಹುವಾಗಿ ಬಳಲಿದರು. ದಾರಿಯಲ್ಲಿ ಒಂದು ಕಾಡು.ಮುಂದಿನ ಊರಿಗೆ ಹೋಗಬೇಕು ಎಂದರೆ ಇನ್ನೂ ೧೫/೨೦ ಮೈಲಿ ನಡೆಯಬೇಕು. ಆಗಲೇ ಸೂರ್ಯ ಅಸ್ತಂಗತನಾಗಿ ಸುತ್ತಲೂ ಕತ್ತಲೆ ಆವರಿಸಿದೆ.ತಲೆ ಸುತ್ತುತ್ತಾ ಇದೆ.ಒಂದು ಹೆಜ್ಜೆ ಸಹ ಮುಂದೆ ಇಡಲಿಕ್ಕೆ ಆಗುತ್ತಾ ಇಲ್ಲ. ಗೊತ್ತಿಲ್ಲದ ದೇಶದಲ್ಲಿ ಅನಾಥನಂತೆ ಸಾಯಬೇಕಾದ ಪರಿಸ್ಥಿತಿ ಬಂತಲ್ಲ ಏನು ಮಾಡಲಿ ಎಂದು ಯೋಚನೆ ಮಾಡುವಾಗ ತಕ್ಷಣ ದಲ್ಲಿ ಅವರಿಗೆ ರಾಯರು ನೆನಪಿಗೆ ಬಂದಿದ್ದಾರೆ.
"ಗುರುರಾಜ!,ಅನಾಥ ರಕ್ಷಕ,ಆಪತ್ಭಾಂದವ,ನೀನೆ ಗತಿ.ಕಾಪಾಡು ಎಂದು ಜೋರಾಗಿ ಕೂಗಿ ಕೆಳಗಡೆ ಬಿದ್ದಿದ್ದಾರೆ.ಪ್ರಜ್ಞೆ ಇಲ್ಲ.
ಮತ್ತೆ ಎಚ್ಚರಿಕೆ ಬಂದಾಗ ನೋಡುತ್ತಾರೆ. 
ಒಂದು ಗುಡಿಸಲಿನಲ್ಲಿ ಮಂಚದ ಮೇಲೆ ಇವರು ಮಲಗಿದ್ದಾರೆ.ಪಕ್ಕದಲ್ಲಿ ಒಬ್ಬರು  ವಯೋವೃದ್ದರು ಕುಳಿತು ಇವರ ಕಡೆ ನೋಡುತ್ತಾ ಮಂದಹಾಸ ಬೀರುತ್ತಾ ನಗುತ್ತಾ ಇದ್ದಾರೆ.ಪಕ್ಕದ ಮೇಜಿನ ಮೇಲೆ ಹಾಲು ತುಂಬಿದ ದೊಡ್ಡ ತಂಬಿಗೆ,ಹಣ್ಣುಗಳು ತಟ್ಟೆ ಯಲ್ಲಿ ಇವೆ.
ನಾನೆಲ್ಲಿ ಇದ್ದೇನೇ ??
ಎಂದು ಅವರನ್ನು  ಜಪಾನಿ ಭಾಷೆಯಲ್ಲಿ ಕೇಳಿದಾಗ 
ಅವರು ಕೊಟ್ಟ ಉತ್ತರ. "ನಿಮ್ಮವರ ಬಳಿ ನೀನು ಇದ್ದೀಯಾ..ಮಗು.. ಜಾಸ್ತಿ ಮಾತನಾಡಿ ಆಯಾಸ ಮಾಡಿಕೊಳ್ಳಲು ಬೇಡ.ಇಕೋ ಈ ಹಣ್ಣು ಗಳನ್ನು ಮತ್ತು ಹಾಲನ್ನು ತೆಗೆದುಕೊ.ಬೆಳಿಗ್ಗೆ ಮಾತನಾಡೋಣ" ಎಂದು ಆ ವೃದ್ದರು  ಜಪಾನೀ ಭಾಷೆಯಲ್ಲಿ ಹೇಳುತ್ತಾರೆ.
ತಕ್ಷಣ ಇವರಿಗೆ ಅಮೃತ ಸಿಕ್ಕಂತೆ ಸಂತೋಷವಾಗಿ ಮೆಲ್ಲನೇ ಮೇಲೆದ್ದು ಕುಳಿತು ಹಣ್ಣು ಹಾಲನ್ನು ಸ್ವೀಕಾರ ಮಾಡುತ್ತಾರೆ.ಹೊಟ್ಟೆ ತುಂಬಿತು.ಆ ವೃದ್ದನಿಗೆ ಧನ್ಯವಾದ ಹೇಳಲು ಸಾಧ್ಯ ವಾಗಲಿಲ್ಲ. ತಕ್ಷಣ ದಲ್ಲಿ ನಿದ್ರೆ ಬಂದು ಮತ್ತೆ ಮಲಗಿದ್ದಾರೆ.
ಮರುದಿನ ಸೂರ್ಯೋದಯವಾದಾಗ ನೋಡುತ್ತಾರೆ.ಅಲ್ಲಿ ಯಾವುದೇ ಗುಡಿಸಲು, ಮಂಚ  ಮತ್ತು ಆ ವಯೋ ವೃದ್ದರು ಇಲ್ಲ.ಬರಿಯ ಕಾಡು ಮಾತ್ರ.
ಹಿಂದಿನ ದಿನದ ಘಟನೆ ನೆನಪಿಗೆ ಬಂತು.ತಕ್ಷಣ ರಾಯರಿಗೆ ನಿಂತಲ್ಲಿ ಕರ ಮುಗಿದರು.
ಆದರು ಮಾನವ ಸಹಜ ವಾದ ಸಂಶಯದಿಂದ ಆ ಕಾಡಿನಲ್ಲಿ ಸುತ್ತಿ ಗುಡಿಸಲು ಮತ್ತು ಆ ವಯೋ ವೃದ್ದರನ್ನು ಕಂಡು ಹಿಡಿಯಲು ಪ್ರಯತ್ನ ಪಟ್ಟರು.ಎಲ್ಲಾ ಕಡೆ ಹುಡುಕಿದಾಗ ಅವರು ಸಿಗಲೇ ಇಲ್ಲ.
ರಾಯರ ಸ್ಮರಣೆ ಮಾಡುತ್ತಾ ಮುಂದಿನ ಊರಿಗೆ ಬಂದು ಸೇರಿದರು.
ನಂತರದಲ್ಲಿ ಆ ವೃದ್ದರ ಮುಖ ಚಿತ್ರ ಇವರಿಗೆ ನೆನಪಿಗೆ ಬಂತು.ತಮ್ಮ ಬಳಿಯಲ್ಲಿ ಇದ್ದ ರಾಯರ ಚಿತ್ರ ವನ್ನು ನೋಡಿದಾಗ ಬಂದವರು ಇವರೇ ಎಂದು ಖಚಿತವಾಯಿತು.
ನಂತರ ಅಲ್ಲಿ ಇಂದ ಹಿಂತಿರುಗಿ ಭಾರತಕ್ಕೆ ಬಂದಾಗ ಮಂತ್ರಾಲಯ ಕ್ಕೆ ಭೇಟಿ ಕೊಡುತ್ತಾರೆ. 
ಅವಾಗ ಅವರು ರಾಯರ ಮಠದ ಪೀಠದಲ್ಲಿ ಇದ್ದ ಶ್ರೀ ಸುಯಮೀಂದ್ರ ತೀರ್ಥ ಗುರುಗಳ ಮುಂದೆ ತಮ್ಮ ಈ ಅನುಭವವನ್ನು ಮತ್ತು ರಾಯರ ಕಾರುಣ್ಯ ವನ್ನು ಹೇಳಿ ಭಕ್ತಿ ಪರವಶರಾಗಿ ಕಣ್ಣೀರು ಹಾಕುತ್ತಾರೆ.
ಭಗವಂತ ಇವರೊಳಗೆ ನಿಂತು ಘಟನಾ ಅಘಟನಾ ಕಾರ್ಯಗಳನ್ನು ಮಾಡಿಸಿ ಇವರಿಗೆ ಲೋಕದಲ್ಲಿ ಪ್ರಸಿದ್ಧಿ ಯನ್ನು ತಂದುಕೊಡುವ.
ಹೀಗೆ ಭಗವಂತನ ಮತ್ತು ವಾಯುದೇವರ ಅನುಗ್ರಹ ದಿಂದ ರಾಯರು ತೋರಿದ 
 ಅಸಂಖ್ಯಾತ ಮಹಿಮಾ ಸಮುದ್ರದಲ್ಲಿ  ಮೇಲಿನ ಘಟನೆ ಇದೊಂದು ಬಿಂದು ಮಾತ್ರ.
ಅಂತಹ ಕರುಣಾ ಸಮುದ್ರ ರಾದ ರಾಯರು ಶ್ರೀರಾಮ, ಶ್ರೀನರಹರಿ ,ಶ್ರೀಕೃಷ್ಣ, ಶ್ರೀವೇದವ್ಯಾಸರ, ಅನುಗ್ರಹ ಮತ್ತು ಉಪಾಸನೆ ಬಲದಿಂದ ಈ ದೇಶಕ್ಕೆ ಬಂದಂತಹ ಈ ಮಹಾಮಾರಿಯನ್ನು ಓಡಿಸಲಿ.ಸಕಲ ಜೀವಿಗಳಿಗು ಅವರ ಅನುಗ್ರಹ ವಾಗಲಿ ಎಂದು ಪ್ರಾರ್ಥನೆ ಮಾಡುತ್ತಾ....
🙏ಶ್ರೀ ಕೃಷ್ಣಾರ್ಪಣಮಸ್ತು🙏
ಕರುಣಿಗಳೊಳಗೆಣೆ ಕಾಣೆನೊ ನಿನಗೆ| ಸದ್ಗುರುವರ ರಾಘವೇಂದ್ರ|

🙏ಅ.ವಿಜಯವಿಠ್ಠಲ🙏
**********
ಗುರುರಾಯರ ಪಾದಕ್ಕೊಂದು ಭಕ್ತಿಪೂರ್ವಕ‌ ನಮನ ಸಲ್ಲಿಸುತ್ತಾ ಓದುತ್ತಾ ಸಾಗಿರಿ.ಕಷ್ಟಗಳು ಎಲ್ಲರಿಗೂ ಸಾಮಾನ್ಯ .ಜೀವನದಲ್ಲಿ ಎಲ್ಲವನ್ನು ಕಳೆದುಕೊಂಡಾಗಿದೆ ಯಾವ ದೇವರ ಮೊರೆ ಹೋದರು ಬಗೆಹರಿಯುತ್ತಿಲ್ಲ ಎಂದಾಗ.ಕೆಲವೊಮ್ಮೆ ಪವಾಡದಂತೆ ಕಷ್ಟಗಳು ದೂರಾಗುತ್ತದೆ.ಹೀಗೆ ಕಷ್ಟಗಳಿಂದ ಮುಕ್ತಿ ಹೊಂದಲು ಕೆಲವು ಸುಲಭ ಮಾರ್ಗಗಳಿವೆ.ಶ್ರೀ ಗುರುರಾಯರ ಮಠಕ್ಕೆ ಹೋದಾಗ ತಪ್ಪದೇ ಈ ಕೆಲಸಗಳನ್ನು ಮಾಡಿ ಬನ್ನಿ ಶುಭಫಲ ಖಚಿತ.ಅದೆನೆಂದರೆ ಓಂ ಶ್ರೀ ರಾಘವೇಂದ್ರಾಯ ನಮಃ.ಗುರುಗಳ ನೆನೆದರೆ ಕಷ್ಟವಿಲ್ಲ ಗುರುಗಳ ನೆನದರೆ ನೋವಿಲ್ಲ ಗುರುಗಳ ನೆನೆದರೆ ಬಾಳಲ್ಲಿ ಅಪಜಯವಿಲ್ಲ. ಇಂತಹ ಮಹಾಮಹಿಮನ ಮಹತ್ವ ತುಂಬಾ ಅಪಾರ.
ರಾಯರು ಸರ್ವ ಶ್ರೇಷ್ಠ ರು ಕಲಿಯುಗದ ಕಾಮಧೇನು ಭಕ್ತರ ಒಳಿತಿಗಾಗಿ ಧರೆಗಿಳಿದ ದೈವಾಂಶ ಸಂಭೂತರು. ಭೂಮಿಯಲ್ಲಿ ಹುಟ್ಟಿದ ಪ್ರತಿಯೊಬ್ಬರಿಗೂ ಒಂದಲ್ಲ‌ ಒಂದು ಸಮಸ್ಯೆ ಕಾಡುತ್ತದೆ ಇಂತಹ ಸಮಸ್ಯೆ ಗೆ ಸಾಮಾನ್ಯ ಜನರಿಂದ ಪರಿಹಾರ ಸಿಗುವುದಿಲ್ಲ ಆಗ ನಾವೆಲ್ಲ‌ ಮೊರೆ ಹೋಗುವುದು ದೈವದ ಹತ್ತಿರ. ಮೊರೆ ಹೋದ ತಕ್ಷಣ ನಮಗೆ ಪರಿಹಾರ ಸಿಕ್ಕಿಬಿಡುವುದಿಲ್ಲ ಅದಕ್ಕೆ ಕೇಲವು ನಿಯಮಗಳನ್ನು ಅನುಸರಿಸಬೇಕು. ಆ ನಿಯಮಗಳೆಂದರೆ ಮೊದಲಿಗೆ ನಾವು ಅಹ್ಃ ಬಿಟ್ಟು ಪೂರ್ಣ ಪ್ರಮಾಣದಲ್ಲಿ ದೈವಕ್ಕೆ ತಲೆಬಾಗಬೇಕು ಮನಸ್ಸನ್ನು ಸಂಪೂರ್ಣ ರಾಯರ ಸ್ತೊತ್ರ ಪಠಿಸುತ್ತಾ ಅವರಲ್ಲಿ ವಿಜ್ಞಾಪನೆ ಮಾಡಬೇಕು. ರಾಯರ ನಂಬಿ ಕೆಟ್ಟವರಿಲ್ಲ‌ ಎಂಬ ವಾಕ್ಯದಂತೆ ನಿಮಗೆ ಜೀವನದಲ್ಲಿ ಎಲ್ಲವು ಒಳಿತಾಗುವುದು.


ನಿಮಗೆ ಜೀವನದಲ್ಲಿ ಅಂದುಕೊಂಡ ಕೆಲಸ ಆಗಬೇಕೆಂದರೆ ಗುರುವಾರ ತಪ್ಪದೇ ಈ ಕೆಲಸ ಮಾಡಿ.
ಅದೆನೆಂದರೆ ಗುರುವಾರ ಬೆಳಿಗ್ಗೆ ಎದ್ದು ಸ್ನಾನ ಮಾಡಿ ಮಡಿ ಬಟ್ಟೆ ಉಟ್ಟು ಶುದ್ಧ ತುಪ್ಪದಿಂದ ಐದು ದೀಪಗಳನ್ನು ಹಚ್ಚಿ ರಾಯರ ಮಠಕ್ಕೆ ತೆಗೆದುಕೊಂಡು ಹೋಗಿ ಆರತಿ‌ ಮಾಡಿ ನಂತರ ಅದನ್ನು ರಾಯರ ಬಲಭಾಗಕ್ಕೆ ಸೇರುವಂತೆ ಇಟ್ಟು ಬನ್ನಿ ಸತತ ಐದು ಗುರುವಾರಗಳ ತನಕ ಹೀಗೆ ಮಾಡಿ ನೀವು ಅಂದುಕೊಂಡ ಕೆಲಸ ಖಂಡಿತವಾಗಲು ನೇರೆವೆರುವುದು. ರಾಯರ ಅನುಗ್ರಹವಾಗಿ ನಿಮ್ಮ‌ ಜೀವನವು ತುಪ್ಪದ ದೀಪದಂತೆ ಬೆಳಗುವುದು.
ರಾಯರ ಮಠಕ್ಕೆ ಹೋದಾಗ ಒಂದು ಬದಿಯಲ್ಲಿ ನಿಂತು ರಾಯರನ್ನು ನೇರವಾಗಿ ನೋಡುತ್ತಾ ಭಕ್ತಿಯಿಂದ ಕೈ ಮುಗಿದು ರಾಯರೇ ನನ್ನ ಜೀವನದ ಬಗ್ಗೆ ನಿಮಗೆ ಗೊತ್ತು ನಾನು ಯಾವ ಕಷ್ಟದಿಂದ ಬಳಲುತ್ತಿದ್ದೇನೆ ಎಂಬುದು ನಿಮಗೆ ತಿಳಿದಿದೆ.ಕೆಲವು ತಪ್ಪುಗಳನ್ನು ಮಾಡಿರುವೆ ನನ್ನನ್ನು ಕ್ಷಮಿಸಿ ಈ ಕಷ್ಟಗಳಿಂದ ಮುಕ್ತಿ ನೀಡಿ ಎಂದು ಬೇಡಿಕೊಳ್ಳಿ.
***************



ನಮ್ಮ ಮತದ ಸತ್ಪರಂಪರೆಯಲ್ಲಿ ಸಾಕ್ಷಾತ್ ಪರಮಾತ್ಮನಿಂದ ಪ್ರಾರಂಭಿಸಿ ವಾಯುದೇವರ ಅವತಾರಿಗಳಾದ  ಶ್ರೀಮದಾಚಾರ್ಯರು,ಮೂರು ಲೋಕದ ಒಡೆಯರಾದ ಇಂದ್ರದೇವರ ಅವತಾರಿಗಳಾದ  ಶ್ರೀಜಯತೀರ್ಥರಂತಹ ಮಹನೀಯರಿಂದ ಮೊದಲುಗೊಂಡು ಅನೇಕ ದೇವತೆಗಳು, ಗಂಧರ್ವರು, ಋಷಿಗಳು ಬಂದು ಶ್ರೀಮದಾಚಾರ್ಯರ, ಮತ್ತು ಶ್ರೀವೇದವ್ಯಾಸದೇವರ ಅಪಾರ ಸೇವೆಯನ್ನು ಮಾಡಿ, ನಮ್ಮೆಲ್ಲರನ್ನು ಉದ್ಧಾರದ ಮಾರ್ಗದಲ್ಲಿ ನಡೆಸುತ್ತಿದ್ದಾರೆ. 
ಇಷ್ಟೆಲ್ಲಾ ದೊಡ್ಡ ದೇವತೆಗಳು ನಮ್ಮ ಪರಂಪರೆಯಲ್ಲಿ ಬಂದದ್ದಲ್ಲದೇ ಅವರದ್ದೇ ಆದ ವಿಶೇಷತೆಗಳು ಇವೆ. ಅದರಲ್ಲೂ ಭಗವಂತನ ಮತ್ತು ವಾಯುದೇವರ ವಿಶೇಷಾನುಗ್ರಹಕ್ಕೆ ಪಾತ್ರರಾದ, ಅವರಿಬ್ಬರ ನಿತ್ಯ ಸನ್ನಿಧಾನವುಳ್ಳ  ಶ್ರೀಪ್ರಹ್ಲಾದ ದೇವತೆಗಳ ಅವತಾರಿಗಳಾದ, ಕಲಿಯುಗದಲ್ಲಿ ಇವರನ್ನು ನಂಬಿದರೆ, ಅನುಸರಿಸಿದರೆ, ಭಕ್ತಿ ಮಾಡಿದರೆ ಮಾತ್ರ ನನ್ನನ್ನು ಸೇರಲಿಕ್ಕೆ ಸಾಧ್ಯ ಅಂತ ಶ್ರೀನರಸಿಂಹದೇವರಿಂದ ಅನುಗ್ರಹ ಪಡೆದುಕೊಂಡ ಮಂತ್ರಾಲಯ ಪ್ರಭುಗಳು ಸಕಲ ಭಕ್ತರ ಗುರುಗಳಾಗಿದ್ದಾರೆ. ಇವರ ಮಹಿಮೆಯನ್ನು ಯಾರಿಗೆ ತಾನೇ ಪೂರ್ಣವಾಗಿ ವರ್ಣಿಸಲು ಶಕ್ಯ! ಇಂತವರು ಒಬ್ಬ ಸಾಮಾನ್ಯ ಭಕ್ತರ  ಮೇಲೆ ಅನುಗ್ರಹಿಸಿದರೆ ಏನೆಲ್ಲಾ ಆಗುತ್ತವೆ ಅನ್ನುವುದನ್ನು ನೋಡೋಣ.

ಒಬ್ಬ ಸಾಮಾನ್ಯ ಮನುಷ್ಯ, ಶಾಸ್ತವಾಗಲಿ, ಲೌಕಿಕವಾಗಲೀ ಅಷ್ಟೇನೋ ಬಲ್ಲವನಲ್ಲ. ಆದರೆ ರಾಯರೆಂದರೆ, ನಮ್ಮ ಪರಂಪರೆ ಅಂದರೆ ಅದೇನೋ ಭಕ್ತಿ, ಶ್ರದ್ಧೆ.ತಕ್ಕ ಮಟ್ಟಿಗೆ ಸದಾಚಾರಿಗಳು.  ಒಂದು ರಾಯರ ಮಠದಲ್ಲಿ ಕಟ್ಟೆಯ ಮೇಲೆ ಕೂತು ಬಂದ ಭಕ್ತರಿಗೆ ತೀರ್ಥ ಮಂತ್ರಾಕ್ಷತೆ ಕೊಡುತ್ತಿದ್ದರು. ಮಠಕ್ಕೆ ಎಂದಿನಂತೆ ನಿತ್ಯ ಬರುವ ಭಕ್ತರಲ್ಲಿ ಒಬ್ಬ ಸದಾಚಾಯಾದ ಮುತ್ತೈದೆ ಬಂದು ರಾಯರಿಗೆ ನಮಸ್ಕರಿಸಿ, ಅಷ್ಟೇನೂ ಸದಾಚಾರಿಗಳಲ್ಲದ ಇವರಿಂದ ತೀರ್ಥ ಮಂತ್ರಾಕ್ಷತೆ  ಹೇಗೆ ಸ್ವೀಕರಿಸಬೇಕು ಅಂತ ಯೋಚಿಸಿ, ನಿಮ್ಮಿಂದ ನಾನೂ ತೀರ್ಥ ಸ್ವೀಕರಿಸುವುದಿಲ್ಲ ಅಂತ ಅವರಿಗೆ ಹೇಳಿಯೂ ಬಿಟ್ಟರು.(ಸಕಲವೂ ದೇವರ ಪ್ರೇರಣೆ). 
ಆಗ ಆವ್ಯಕ್ತಿಗೆ ಅದೇನು ಆವೇಶ ಬಂದಿತೋ ಅಥವಾ ಒಳಗೆ ರಾಯರೇ ನಿಂತು ತಮ್ಮ ಕೂಸಿನ ಮುಖಾರವಿಂದದಿಂದ ನುಡಸಿದರೋ ಏನೋ ಎಂಬಂತೆ "ನೀವು ಈದಿನ‌‌ ನನ್ನ ಕೈಯಿಂದ ತೀರ್ಥ ಸ್ವೀಕರಿಲ್ಲ ಅಂತ ಹೇಳಿದ್ರಿ, ಆದರೆ ಒಂದು ದಿನ ಇಡೀ ಭಕ್ತಾದಿಗಳಿಗೆ ತೀರ್ಥವನ್ನು ಕೊಡು ಯೋಗ್ಯತೆಯನ್ನು ರಾಯರು ನನಗೆ ಕರುಣಿಸುತ್ತಾರೆ, ನೀವೇ ಬಂದು ನನ್ನಿಂದ ತೀರ್ಥ ಸ್ವೀಕರಿಸುತ್ತೀರಿ ಅಂತ ಹೇಳಿದ ಆ ಸುಸಮಯದಲ್ಲಿ ಬಹುಷಃ ಮೇಲಿಂದ ಸಕಲ ದೇವತೆಗಳೂ ತತಾಸ್ತು ಅಂದಿರಬೇಕು. ಆ ಮುಗ್ಧ ಭಕ್ತಿಯನ್ನು ರಾಯರ ಮೇಲೆ ಹೊಂದಿದ್ದ ಆ ವ್ಯಕ್ತಿಯ ಮಾತನ್ನು ಸತ್ಯ ಮಾಡಲೆಂದು, ಆ ವ್ಯಕ್ತಿಯನ್ನು ರಾಯರು ತಾವು ಬಂದ ಹಂಸನಾಮಕನ ಪರಂಪರೆಯಲ್ಲೇ ಕೂಡಿಸಿ, ತಾವೇ ಅವರಲ್ಲಿ ನಿಂತು ಲಕ್ಷಾಂತರ ಭಕ್ತರನ್ನು ಅನುಗ್ರಹಿಸಿ ಉದ್ಧರಿಸಿದ್ದಾರೆ. ಆ ಸಾಮಾನ್ಯ ಭಕ್ತನೇ ಮುಂದೆ ಶ್ರೀಸುಜಯೀಂದ್ರ ತೀರ್ಥರ ಕರಕಮಲ ಸಂಜಾತರಾದ,ಪ್ರಸ್ತುತ ಆರಾಧನಾ ನಾಯಕರಾದ, ಲೋಕದಲ್ಲಿ ನಡೆದಾಡುವ ರಾಯರು ಅಂತಲೇ ಪ್ರಸಿದ್ಧರಾದ ಶ್ರೀಸುಶಮೀಂದ್ರತೀರ್ಥ ಶ್ರೀಪಾದಂಗಳವರು.
ಮುಂದೆ ನಡೆದದ್ದೆಲ್ಲಾ ಇತಿಹಾಸ, ಎಲ್ಲರಿಗೂ ಗೊತ್ತಿರುವ ವಿಚಾರ. 
ಅವರು ನುಡಿದದ್ದೆಲ್ಲಾ ನಿಜವಾಯಿತು, ಮುಟ್ಟಿದ್ದೆಲ್ಲಾ ಬಂಗಾರವಾಯಿತು. ಅನುಗ್ರಹ ಪಡೆದವರೆಲ್ಲಾ ಮಹಾನ್ ವ್ಯಕ್ತಿಗಳಾದರು.ಅವರಿಂದ ಲೋಕಕ್ಕಾದ ಉಪಕಾರಗಳು ಎಷ್ಟು ಅಂತ ಹೇಳಲಿಕ್ಕೆ ಸಾಧ್ಯ! 
ಮಂತ್ರಾಕ್ಷತೆ ಅವರ ಕೈಯಿಂದ ಸಿಕ್ಕರೆ ಸಾಕು, ನಮ್ಮ ಇಷ್ಟಾರ್ಥಗಳು ನೆರವೇರುತ್ತವೆ ಅನ್ನುವ ಭಕ್ತರ ನಂಬಿಕೆ, ಅದಕ್ಕೆಂದೇ ಭಕ್ತಾದಿಗಳು ಅವರನ್ನು ಎಲ್ಲಿಗೆ ಹೋದರೂ ಬಿಡದೇ, ಮಠ ಮತ್ತು ಮತಗಳನ್ನೂ ಲೆಕ್ಕಿಸದೇ ಮುಧ್ರಧಾರಣೆ, ಪಾದ ಪೂಜೆ, ಮಂತ್ರಾಕ್ಷತೆಗಾಗಿ ಕಾದು ಕುಳಿತಿರುತ್ತಿದ್ದರು. ಆ ಮಂದಹಾಸ, ಮುಖದಲ್ಲಿ ಸದಾ ಇದ್ದ ಮುಗ್ಧ ನಗು ಇವುಗಳನ್ನು ನೋಡಲು ಭಕ್ತರು ಸದಾ ಇಚ್ಛೆ ಪಡುತ್ತಿದ್ದರು. ಇನ್ನೂ ಅವರು ಮಾಡುತ್ತಿದ್ದ ಸಂಸ್ಥಾನ ಪೂಜೆಯಂತೂ ನಿಜಕ್ಕೂ ಪರಮಾದ್ಭುತ. ಶ್ರೀಮೂಲ, ದಿಗ್ವಿಜಯ ಮತ್ತು ಜಯರಾಮ ದೇವರ ಪೂಜಾ ವೈಭವ ವರ್ಣನಾತೀತ. ನೋಡಿದವರೇ ನಿಜಕ್ಕೂ ಧನ್ಯರು.🙏🏻
ಯಾವುದೇ ಸಭೆಯಾಗಲೀ ಅವರ ಉಪಸ್ಥಿತಿ ಇಲ್ಲದೇ ಪೂರ್ಣವಾಗುತ್ತಲೇ ಇರಲಿಲ್ಲ. ಅದು ಬೃಹತ್ ಯಾಗಗಳಾಗಿರಬಹುದು, ಸುಧಾಮಂಗಳವೇ ಆಗಿರಬಹುದು ಅಲ್ಲಿ ಶ್ರೀಸುಶಮೀಂದ್ರ ತೀರ್ಥರು ಇರಲೇಬೇಕು.
ಅವರ ಅನುಗ್ರಹದ ಕೃಪಾ ದೃಷ್ಟಿ ಆ ಸುಧಾ ಪರೀಕ್ಷೆ ಕೊಡುವ ಪಂಡಿತರ ಮೇಲೆ ಒಮ್ಮೆ ಬಿದ್ದರೂ ಸಾಕು ಆ ಪಂಡಿತರೇ ಧನ್ಯ. ಆ ಕೃಪಾ ದೃಷ್ಟಿಗೆ ಎಲ್ಲರೂ ಹಂಬಲಿಸುತ್ತಿದ್ದರು. 
ಅವರಿಂದ ಪ್ರತಿಷ್ಠಾಪಿಸಲ್ಪಟ್ಟ ರಾಯರ ಬೃಂದಾವನಗಳೂ ಸುಮಾರು ನೂರರ ಮೇಲಿವೆ, ಯಾವುದೇ ಊರಲ್ಲಾಗಲೀ, ಯಾವುದೇ ಬಡಾವಣೆಯಾಗಲೀ ರಾಯರ ಮಠವಾದರೆ ಅದು ಶ್ರೀಸುಶಮೀಂದ್ರರಿಂದಲೇ ಪ್ರತಿಷ್ಠಾಪನೆಗೊಳ್ಳಬೇಕು ಅನ್ನುವುದು ಎಲ್ಲರ ಆಸೆ. ಪ್ರಾರ್ಥಿಸಿದರೆ ಸಾಕು , ಸಂತೋಷದಿಂದ ಒಪ್ಪಿ, ಎಷ್ಟೇ ಕಷ್ಟವಾದರೂ ಬಂದು ಪ್ರತಿಷ್ಠಾಪನೆ ಮಾಡುತ್ತಿದ್ದರು. ನಮ್ಮ ಕಾಲದಲ್ಲಿ ಬಹುಷಃ ಎಲ್ಲರೂ ಒಂದಲ್ಲ ಒಂದು ರೀತಿ  ಅವರಿಂದ ಅನುಗ್ರಹ ಪಡೆದವರೇ ಆಗಿದ್ದೇವೆ. ಮುಂದೆ ಯಮಧೂತರು ನೀನು ಮಾಡಿದ ಸಾಧನೆ ಏನೂ ಅಂತ ಕೇಳಿದರೆ, ಏನಾದರೂ ಮಾಡಿದ್ದರೂ, ಮಾಡದಿದ್ದರೂ ಸಹ ನಾನು ಶ್ರೀಸುಶಮೀಂದ್ರತೀರ್ಥರ ದರ್ಶನ ಮಾಡಿದ್ದೇನೆ, ಅವರಿಂದ ಮಂತ್ರಾಕ್ಷತೆ ಸ್ವೀಕರಿಸಿದ್ದೇನೆ, ಇದೇ ನನ್ನ ಸಾಧನೆ ಅಂತ ಧೈರ್ಯವಾಗಿ ಹೇಳಿದರೆ ಸಾಕು, ಅಲ್ಲಿಯೂ ಅವರ, ರಾಯರ ವಿಶೇಷ ಅನುಗ್ರಹವಾಗುವುದರಲ್ಲಿ ಯಾವುದೇ ಸಂಶಯವಿಲ್ಲ. 

ಅವರ ಬಗ್ಗೆ ಹೇಳುವುದು ಸಾಗರದಷ್ಟಿದೆ ಆದರೆ ಹೇಗೆ ಸಾಗರಕ್ಕೆ ಹೋಗಿ ಪೂರ್ತಿ ನೀರಲ್ಲಿ ಮುಳುಗುವುದಕ್ಕೆ ಸಾಧ್ಯವಿಲ್ಲವೋ ಹಾಗೆಯೇ ಇವರ ಬಗ್ಗೆ  ಹೇಳುವುದಕ್ಕೆ ಸಾಧ್ಯವಿಲ್ಲ. ಆದರೂ ಹೇಗೆ ಒಂದು ದಡದಲ್ಲಿ ನಿಂತು ಮುಳುಗಿದರೂ ಪೂರ್ತಿ ಸಮುದ್ರ ಸ್ನಾನದ ಫಲ ಸಿಗುತ್ತದೆಯೋ ಹಾಗೆಯೇ ಶ್ರೀಸುಶಮೀಂದ್ರರ ಬಗ್ಗೆ ಸ್ವಲ್ಪ ತಿಳಿದರೂ ಅವರ ಪೂರ್ಣ ಅನುಗ್ರಹವಾಗಿ , ಅವರ ಅಂತರ್ಯಾಮಿ ಶ್ರೀರಾಯರ, ಶ್ರೀಜಯತೀರ್ಥರ, ಶ್ರೀಮದಾಚಾರ್ಯರ , ಶ್ರೀಮನ್ಮೂಲರಾಮದೇವರ ಸಂಪೂರ್ಣ ಅನುಗ್ರಹ ಸಿಗುತ್ತದೆ. ಇಂತಹ ಶ್ರೀಸುಶಮಿಂದ್ರತೀರ್ಥರ ಸ್ಮರಣೆ ಜನ್ಮಜನ್ಮಗಳಲ್ಲೂ ಸಿಗಲಿ ಅಂತ ಅವರ ಅಂತರ್ಯಾಮಿಯಲ್ಲಿ ಭಕ್ತಿಯಿಂದ ಪ್ರಾರ್ಥಿಸೋಣ. 🙏🏻🙏🏻
*************


ಗುರು ರಾಘವೇಂದ್ರ ಸ್ವಾಮಿಯ ಪವಾಡ
ಕಲಿಯುಗದ ಕಾಮದೇನು ಕೇಳಿದ ವರವನ್ನು ಕೊಡುವ ತುಂಗಭದ್ರಾ ತೀರದ ಮಂತ್ರಾಲಯದ ರಾಘವೇಂದ್ರ ಸ್ವಾಮಿ. ದೇಗುಲದಲ್ಲಿ ಕೊಟ್ಟ ರಾಯರ ಮಂತ್ರಾಕ್ಷತೆಯನ್ನು ಭಕ್ತಿ ಶ್ರದ್ಧೆಯಿಂದ ಏನು ಮಾಡಬೇಕು ಯಾವ ರೀತಿ ಅದನ್ನು ಬಳಸಿದರೆ ಗುರು ರಾಯರ ಅನುಗ್ರಹ ಪಡೆಯಬಹುದು . ಹಲವಾರು ದೇವರ ಸನ್ನಿಧಿಯಲ್ಲಿ ಮಂತ್ರಾಕ್ಷತೆಯನ್ನು ಪ್ರಸಾಧವಾಗಿ ಕೊಡುತ್ತಾರೆ ಮಂತ್ರಾಕ್ಷತೆಗಿರುವ ವಿಶೇಷ ಪ್ರಾಮುಖ್ಯತೆ ನಮ್ಮ ಯುವಪೀಳಿಗೆಗೆ ತಿಳಿದಿರುವುದು ತುಂಬಾ ಕಡಿಮೆ ಮಂತ್ರಾಕ್ಷತೆಯನ್ನು ಬೇಕಾಬಿಟ್ಟಿ ಬಿಳಿಸುತ್ತಾರೆ
ಇವುಗಳನ್ನು ತಲೆಗೂ ಸರಿಯಾಗಿ ಹಾಕಿಕೊಳ್ಳದೆ ಜೇಬಿನಲ್ಲೂ ಸರಿಯಾಗಿ ಇಡದೆ ನೆಲದ ಮೇಲೆ ಅರ್ಧಕ್ಕೆ ಅರ್ಧ ಮಂತ್ರಾಕ್ಷತೆಯನ್ನು ಚೆಲ್ಲುತ್ತಾರೆ. ಶ್ರೀ ಗುರುರಾಘವೇಂದ್ರ ಸ್ವಾಮಿ ದೇಗುಲದಿಂದ ಸಿಕ್ಕ ಮಂತ್ರಾಕ್ಷತೆ ಬಹಳ ಶಕ್ತಿಯುತವಾದದ್ದು ಗುರುಗಳ ಮಂತ್ರಾಕ್ಷತೆ ಪಡೆದ ಎಲ್ಲರಿಗೂ ಎಲ್ಲ ಕಾರ್ಯಕ್ಷೇತ್ರದಲ್ಲೂ ಯಶಸ್ಸು ಖಚಿತ. ಮದುವೆ ಶುಭಾರಂಭಗಳಲ್ಲಿಯೂ ಶುಭ ಸಂಕೇತವಾಗಿ ಅಕ್ಷತೆಯನ್ನು ಬಳಸಲಾಗುತ್ತದೆ. ಮದುವೆ ಮಾಡಿಕೊಳ್ಳುವ ಹುಡುಗ ಹುಡುಗಿಗೆ ಹಾಕುವ ಆರತಕ್ಷತೆಯಲ್ಲಿ ಸಾವಿರಾರು ಪ್ರಾರ್ಥನೆ ಇರುತ್ತದೆ. ರಾಯರ ಮಠದಲ್ಲಿ ಕೊಡುವ ಮಂತ್ರಾಕ್ಷತೆಯನ್ನು ನೀವು ತಲೆಗೆ ಹಾಕಿಕೊಳ್ಳುತ್ತಿರ ಮತ್ತು ಅದು ಕೆಲ ನಿಮಿಷಗಳಲ್ಲೆ ಕೆಳಗೆ ಬೀಳುತ್ತದೆ. ಮಂತ್ರಾಕ್ಷತೆಗೆ ಇರುವ ಶಕ್ತಿ ಅಪಾರ ಅದನ್ನು ಸರಿಯಾದ ರೀತಿಯಲ್ಲಿ ಬಳಸಿದರೆ ಎಲ್ಲ ಕೆಲಸದಲ್ಲಿಯೂ ಯಶಸ್ಸು ಖಚಿತ.
ಯಾವುದೇ ರೀತಿಯ ಆರೋಗ್ಯ ಸಮಸ್ಯೆಯಿಂದ ಮುಕ್ತಿ ಪಡೆಯಲು ಮಂತ್ರಾಕ್ಷತೆ ಬಳಸಬಹುದು ರಾಯರ ಮಠದಲ್ಲಿ ಕೊಡುವ ಮಂತ್ರಾಕ್ಷತೆಯನ್ನು ಒಂದು ಬಿಳಿ ಬಟ್ಟೆಯಲ್ಲಿ ಹಾಕಿ ಅದನ್ನು ನಿಮ್ಮ ದೇಹದ ಬಲ ಭಾಗದಲ್ಲಿ ಇಟ್ಟುಕೊಳ್ಳಬೇಕು ಅಂದರೆ ಬಲಭಾಗದ ಜೇಬಿನಲ್ಲಿ ನಂತರ ಮನೆಗೆ ತೆರಳಿದ ಮೇಲೆ ಅದಕ್ಕೆ ಶ್ರೀಗಂಧವನ್ನು ನೀರಿನಲ್ಲಿ ಕಲಸಿ ಒಂದೆರಡು ತುಳಸಿ ದಳವನ್ನು ತಲೆಗೆ ಪ್ರೋಕ್ಷಣೆಯನ್ನು ಮಾಡಿಕೊಂಡು ರಾಯರನ್ನು ನೆನೆಯುತ್ತ ಯಾವುದೇ ಕಾರ್ಯವನ್ನು ಮಾಡಿದರು ಯಶಸ್ಸು ಸಿಗುವುದು ಶತಸಿದ್ದ ಹಾಗೆಯೇ ಬಟ್ಟೆಯಲ್ಲಿದ್ದ ಅಕ್ಷತೆಯನ್ನು ತಲೆಗೆ ನಿತ್ಯ 2 ಕಾಳುಗಳನ್ನು ಹಾಕಿಕೊಳ್ಳಿ ಮಂತ್ರಾಕ್ಷತೆಯನ್ನು
ಸಂಗ್ರಹಿಸಿಟ್ಟುಕೊಳ್ಳಿ ಯಾವುದೇ ರೀತಿಯ ಸಮಸ್ಯೆ ಬಂದಾಗ ಮಂತ್ರಾಕ್ಷತೆ ನಿಮ್ಮ ತಲೆಮೇಲಿರಲಿ ಆಗ ರಾಯರ ಶ್ರೀರಕ್ಷೆ ನಿಮ್ಮ ಮೇಲಿರುತ್ತದೆ. ಕಷ್ಟಕಾಲದಲ್ಲಿ ರಾಯರ ಮಂತ್ರಾಕ್ಷತೆ ಬಳಸಿ ರಾಯರ ಪವಾಡವನ್ನು ನೇರವಾಗಿ ನೋಡಿ ಸ್ನೇಹಿತರೆ ನಿಮಗೂ ಕೂಡ ಸಾಧ್ಯವಾದರೆ ಜೀವನದಲ್ಲಿ ಒಮ್ಮೆಯಾದರೂ ತುಂಗಾತೀರ ಸ್ನಾನವನ್ನು ಮಾಡಿ ಮಂತ್ರಾಲಯದ ಶ್ರೀ ಗುರುರಾಯರ ದರ್ಶನವನ್ನು ಮಾಡಿ ದೇವಸ್ಥಾನದಲ್ಲಿ ನೀಡುವ ಪ್ರಸಾದವನ್ನು ಸ್ವೀಕರಿಸಿ ಜೊತೆಗೆ ಅಕ್ಷತೆಯನ್ನು ತೆಗೆದುಕೊಂಡು ಬನ್ನಿ.

 ಕೃಷ್ಣಾರ್ಪಣಮಸ್ತು

🙏🙏🙏🙏🙏
************



No comments:

Post a Comment