*******
(ಬಾಲಕ ವೆಂಕಟನಾಥ - ರಾಯರ ಪೂರ್ವಾಶ್ರಮದ ಹೆಸರು - ತಮ್ಮ ತಂದೆ ತಾಯಿಗಳಾದ ಶ್ರೀ ತಿಮ್ಮಣ್ಣ ಭಟ್ಟರು ಮತ್ತು ಶ್ರೀಮತಿ ಗೋಪಿಕಾಂಬ ದೇವಿಯ ತೊಡೆಯ ಮೇಲೆ ಕುಳಿತು ಆಟವಾಡುವ ಪರಿ. ಇದನ್ನು ಅವರ ಅಣ್ಣನವರಾದ ಶ್ರೀ ಗುರುರಾಜ ಮತ್ತು ಅಕ್ಕ ವೆಂಕಟಾಂಬ ನವರು ನೋಡಿ ಆನಂದಿಸುತ್ತಾ ಇರುವುದು. ಕಲಾವಿದ ನ ಕೈಯಲ್ಲಿ ಬಹು ಸುಂದರವಾದ ಚಿತ್ರ.)
(ಬಾಲಕ ವೆಂಕಟನಾಥ - ರಾಯರ ಪೂರ್ವಾಶ್ರಮದ ಹೆಸರು - ತಮ್ಮ ತಂದೆ ತಾಯಿಗಳಾದ ಶ್ರೀ ತಿಮ್ಮಣ್ಣ ಭಟ್ಟರು ಮತ್ತು ಶ್ರೀಮತಿ ಗೋಪಿಕಾಂಬ ದೇವಿಯ ತೊಡೆಯ ಮೇಲೆ ಕುಳಿತು ಆಟವಾಡುವ ಪರಿ. ಇದನ್ನು ಅವರ ಅಣ್ಣನವರಾದ ಶ್ರೀ ಗುರುರಾಜ ಮತ್ತು ಅಕ್ಕ ವೆಂಕಟಾಂಬ ನವರು ನೋಡಿ ಆನಂದಿಸುತ್ತಾ ಇರುವುದು. ಕಲಾವಿದ ನ ಕೈಯಲ್ಲಿ ಬಹು ಸುಂದರವಾದ ಚಿತ್ರ.)
ಮತ್ತೊಂದು ಪುತ್ರನ ಬಯಕೆ ಗಾಗಿ ತಿಮ್ಮಣ್ಣ ಭಟ್ಟರು ಹಾಗು ಗೋಪಿಕಾಂಬ ದಂಪತಿಗಳು ಭೂ ವೈಕುಂಠ ಎಂದು ಕರೆಯಲ್ಪಡುವ ತಿರುಪತಿ ಹೋಗಿ ಅನೇಕ ವ್ರತ ನೇಮಾದಿಗಳಿಂದ,ಸೇವೆಯನ್ನು ಮಾಡಿದರು.
ಇವರ ಸೇವೆಗೆ ಸ್ವಾಮಿ ಪ್ರಸನ್ನ ನಾಗಿ
ಆ ದಂಪತಿಗಳಿಗೆ ಸ್ವಪ್ನದಲ್ಲಿ ಬಂದು
ನನ್ನ ಭಕ್ತರಲ್ಲಿ ಅಗ್ರ ಗಣ್ಯನು,ಲೋಕಮಾನ್ಯ ನು ಆದ ಸತ್ಪುತ್ರನ್ನು ನಿಮಗೆ ಕರುಣಿಸುವೆನು ಅಂತ ಸೂಚನೆ ಕೊಡುತ್ತಾನೆ.. ಆನಂತರ ದಂಪತಿಗಳು ಪೂಜೆ ಸಲ್ಲಿಸಿ ಹಿಂತಿರುಗಿ ತಮ್ಮ ಊರಿಗೆ ಬರುತ್ತಾರೆ.
ಕಾಲ ಕ್ರಮೇಣ ಗೋಪಿಕಾಂಬ ದೇವಿಯು ಗರ್ಭಿಣಿ ಆಗುತ್ತಾಳೆ.
ಶ್ರೀ ವೆಂಕಟ ನ ದಯದಿಂದ ಗೋಪಿಕಾಂಬ ದೇವಿಯು
ಶ್ರೀ ಶಾಲಿವಾಹನ ಶಕೆ 1517ನೇ
ಮನ್ಮಥ ನಾಮ ಸಂವತ್ಸರದ
ಫಾಲ್ಗುಣ ಮಾಸದ ಶುಕ್ಲ ಪಕ್ಷದ ಸಪ್ತಮಿ ದಿನದಂದು ಗುರುವಾರ ಮೃಗಶಿರಾ ನಕ್ಷತ್ರ (ಕ್ರಿ.ಶ 1595)
ದಂದು ಸರ್ವ ಲಕ್ಷಣಗಳು ಉಳ್ಳ ಪುತ್ರ ರತ್ನ ವನ್ನು ಪ್ರಸವಿಸುತ್ತಾಳೆ
ಆ ಸಮಯದಲ್ಲಿ ಶುಭ ಸೂಚನೆ ಗಳು ಗೋಚರವಾಗುತ್ತದೆ.
ಲೋಕದ ಜನರನ್ನು ಉದ್ದರಿಸಲು
ಶ್ರೀ ಪ್ರಹ್ಲಾದ ರಾಜರು ಮತ್ತೆ ಜನಿಸುತ್ತಾರೆ.
ಇಂದು ರಾಯರು ಧರೆಯೊಳಗೆ ಅವತಾರ ಮಾಡಿದ ದಿನ
ಎಲ್ಲಾ ರು ಅವರ ಬೃಂದಾವನ ದರುಶನ ಮಾಡುವ.
ರಾಯರ ಅನುಗ್ರಹ ಎಲ್ಲಾ ಜೀವಿಗಳ ಮೇಲೆ ಆಗಲಿ
: ಶ್ರೀ ಗುರು ಜಗನ್ನಾಥ ದಾಸರು ತಮ್ಮ ಕೃತಿಯಲ್ಲಿ ರಾಯರ ಬಗ್ಗೆ ಹೇಳಿದ್ದಾರೆ.
ಮಾತ ಪಿತ ಸುತ ಭ್ರಾತ ಬಾಂದವ
ದೂತ ಸತಿ ಗುರು ನಾಥ ಗತಿ ಮತಿ
ನೀತ ಸಖ ಮುಖವ್ರಾತ ಸಂತತ ಎನಗೆ ನೀನಯ್ಯ
ಭೂತಿದಾಯಕ ಸರ್ವಲೋಕದಿ
ಖ್ಯಾತ ಗುರು ಪವಮಾನ ವಂದಿತ ದಾತ
ಗುರು ಜಗನ್ನಾಥ ವಿಠ್ಠಲನ ಪ್ರೀತಿ ಪಡೆದಿರುವಿ
********
ಹರೇ ಶ್ರೀನಿವಾಸ....
ಶ್ರೀಹರಿಯ, ಶ್ರೀಮುಖ್ಯಪ್ರಾಣದೇವರ ವಿಶೇಷ ಸಾನಿಧ್ಯದಿಂದ ಯುಕ್ತರಾಗಿ, ವರಾಹನಂದಿನಿಯ ದಡದ ಮಂತ್ರಾಲಯಕ್ಷೇತ್ರದಲ್ಲಿ ಬೃಂದಾವನದಲ್ಲಿ ಸನ್ನಿಹಿತರಾಗಿ ಆಶ್ರಿತಾಮರ ಕಲ್ಪಭೂಜರಾಗಿ ವಿರಾಜಮಾನರಾದಂತಹ ಶ್ರೀರಾಘವೇಂದ್ರತೀರ್ಥ ಗುರುಸಾರ್ವಭೌಮರ ಮಹಿಮೆಯನ್ನು, ಅವರು ವಿದ್ವದ್ ಪ್ರಪಂಚಕ್ಕೆ ಮಾಡಿದ ಮಹದುಪಕಾರವನ್ನು ಸಾಕಲ್ಯೇನ ವರ್ಣಿಸುವುದು ಪಾಮರರಾದ ನಮಗೆ ಅತ್ಯಂತ ದುಷ್ಕರವಾದಂತಹ ಸಂಗತಿ. ಪ್ರಹ್ಲಾದರಾಜರಾಗಿ, ಬಾಹ್ಲೀಕರಾಜರಾಗಿ, ವ್ಯಾಸತೀರ್ಥರಾಗಿ ಶ್ರೀಹರಿಯ ಸೇವೆಯಿಂದ ಅರ್ಜಿಸಿದ ಮಹಾಪುಣ್ಯವನ್ನು ತಮ್ಮನ್ನು ಆಶ್ರಯಿಸಿದ ಜನರ ಅಭೀಷ್ಟವನ್ನು ಪೂರೈಸಲು, ತನ್ಮೂಲಕ ಸಜ್ಜೀವರ ಮನೋಭೂಮಿಯಲ್ಲಿ ಭಗವದ್ಭಕ್ತಿಯ ಬೀಜಾವಾಪನೆ ಮಾಡಿ, ಶ್ರೀಹರಿ-ಮುಖ್ಯಪ್ರಾಣರ ಮಾರ್ಗವನ್ನು ತೋರಿ ಅವರನ್ನು ಉದ್ಧೃತರನ್ನಾಗಿ ಮಾಡಲು ವಿನಿಯೋಗಿಸುತ್ತಿರುವ ಯೋಗಿವರ್ಯ. ತಮ್ಮ ತಪೋಬಲದಿಂದ ಶ್ರೀರಾಮ-ಮಧ್ವರ ಪರಮಕಾರುಣ್ಯಕ್ಕೆ ಪಾತ್ರರಾಗಿ, 'ದೀನದಲಿತರ ಸೇವೆಯೇ ಭಗವಂತನ ರಾಜ್ಯದ ಪ್ರಜೆಗಳಾದ ನಾವು ಆತನಿಗೆ ಸಲ್ಲಿಸುವ ಕಂದಾಯ'ವೆಂದು ಸಾರಿ ಹೇಳಿದ ಶ್ರೀಪೂರ್ಣಪ್ರಜ್ಞರ ದಿವ್ಯಸಂದೇಶವನ್ನು ಶಿರೋಧಾರ್ಯವಾಗಿರಿಸಿಕೊಂಡು, ದು:ಖಿತರ ದು:ಖ, ಸಂತಾಪಗಳನ್ನು ದೂರ ಮಾಡುತ್ತಾ ತಮ್ಮನ್ನು ಆಶ್ರಯಿಸಿದವರನ್ನು ಪೊರೆಯುವ ತಮ್ಮ ಮಹಾವ್ರತಕ್ಕೆ ಶ್ರೀಹಯಗ್ರೀವದೇವರೇ ಸಾಕ್ಷಿ ಎಂದು ನುಡಿದು ಅದ್ಯಪಿ ಐಹಿಕ, ಆಮುಷ್ಮಿಕ ಫಲಧಾತೃಗಳಾಗಿ ಮೆರೆವ ಮಹಾಮಹಿಮರು ಶ್ರೀರಾಘವೇಂದ್ರರು. ಶ್ರೀಗುರುರಾಜರು ಶ್ರೀವೇದವ್ಯಾಸ-ಶ್ರೀಪೂರ್ಣಪ್ರಜ್ಞರ ಸತ್ಸಿದ್ಧಾಂತವನ್ನು ಕ್ಷಿತಿಯೊಳು ಪ್ರತಿಷ್ಠಾಪಿಸಿ 'ಮಧ್ವಮತ ದುಗ್ಧಾಬ್ಧಿಚಂದ್ರ'ರಂತೆ ಶೋಭಿಸುತ್ತಿರುವರು. "ಗುರುರಾಜರು ಅಯೋಗ್ಯವೂ, ಯುಕ್ತಿರಹಿತವೂ, ಅನುಪಪನ್ನವೂ ಆದ ಅರ್ಥವನ್ನು ಮನಸ್ಸಿನಲ್ಲಿ ಚಿಂತಿಸುವರಲ್ಲ, ದುಡುಕಿನಿಂದ ಅಥವಾ ಛಲದಿಂದ ಅಂತಹ ಅಯುಕ್ತವಾದ ಅರ್ಥವನ್ನು ಹೇಳುವವರಲ್ಲ, ಜ್ಞಾನಿಗಳೊಡನೆ ಕಲೆತಾಗ 'ಹೀಗೇಕಾಗಬಾರದು?' ಮುಂತಾದ ಜಿಜ್ಞಾಸೆಗೆ ಆಸ್ಪದನೀಡುವವರಲ್ಲ, ವಿತಂಡವಾದವಂತೂ ಅವರ ಬಳಿ ಸುಳಿಯುತ್ತಿರಲಿಲ್ಲ, ತಮ್ಮ ಗ್ರಂಥಗಳಲ್ಲಿ ಎಲ್ಲಿಯೂ ವಿಹಿತವಲ್ಲದ ಅರ್ಥವನ್ನು ಬರೆಯುವವರಲ್ಲ, ಮಾತಿನಿಂದ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುವವರಲ್ಲ, ಒಮ್ಮೆ ಒಂದು ಕಡೆ ಹೇಳಿದ್ದನ್ನು ಮತ್ತೊಮ್ಮೆ ಹೇಳುವವರಲ್ಲ, ತಾವು ಒಮ್ಮೆ ವಿಚಾರಮಾಡಿ ಬರೆದುದನ್ನು ಎಂದಿಗೂ ಅಳಿಸುವವರಲ್ಲ, ಇಂತಹ ಅಸಾಧಾರಣವಾದಂತಹ ಗುಣವಿರುವುದರಿಂದಲೇ ಅನನ್ಯ ಸಾಧಾರಣವಾದ ವೇದ, ಉಪನಿಷತ್ತು, ಗೀತಾ, ಪುರಾಣೇತಿಹಾಸ, ಸೂತ್ರಭಾಷ್ಯಟೀಕೆಗಳಿಗೆ ಸಮ್ಮತವಾದಂತಹ ಅತ್ಯಂತ ಸಮಂಜಸವಾದ ಏಕಸೂತ್ರತೆಯನ್ನು ಎತ್ತಿಹಿಡಿಯುವ ಗ್ರಂಥರತ್ನಗಳನ್ನು ರಚಿಸುವುದರಲ್ಲಿ ಏಕಮೇವಾದ್ವಿತೀಯರಾದ ಜ್ಞಾನಿವರ್ಯರೆಂದು ಶ್ರೀಗುರುಸಾರ್ವಭೌಮರು ವಿದ್ವಜ್ಜನರಿಂದ ಸ್ತುತ್ಯರಾಗಿದ್ದಾರೆ" ಎಂದು ಶ್ರೀಪರಿಮಳಾಚಾರ್ಯರ ಪ್ರಬಂಧಪ್ರಣಯನಶೈಲಿಯ ಬಗ್ಗೆ ಶ್ರೀವಾದೀಂದ್ರತೀರ್ಥ ಶ್ರೀಮಚ್ಚರಣರು ತಮ್ಮ 'ಗುರುಗುಣಸ್ತವನ'ದಲ್ಲಿ ಕೊಂಡಾಡಿದ್ದಾರೆ. ಶ್ರೀಮಧ್ವಭಗವತ್ಪಾದರ ನಿರ್ದುಷ್ಟವಾದ ಸಿದ್ಧಾಂತವನ್ನು ತಮ್ಮ ವ್ಯಕ್ತಿತ್ವದ ಮಹಿಮೆಯಿಂದ, ವಿದ್ವದ್ವಿಭವದಿಂದ ದಿಗಂತ ವಿಶ್ರಾಂತವನ್ನಾಗಿಸಿದ ಶ್ರೀರಾಘವೇಂದ್ರತೀರ್ಥ ಗುರುಸಾರ್ವಭೌಮರ ಕಾರುಣ್ಯಕ್ಕೆ ಎಣೆಯುಂಟೆ?
ಶ್ರೀ ಗುರುಸಾವ೯ಭೌಮರ ಆರಾಧನೆಯ ಶುಭಾಶಯಗಳು... 🙏🌹🙏
ಪೂಜ್ಯಾಯ ರಾಘವೇಂದ್ರಾಯ ಸತ್ಯಧರ್ಮರತಾಯ ಚ ।
ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ ॥
ದುರ್ವಾದಿಧ್ವಾಂತರವಯೇ ವೈಷ್ಣವೀಂದೀವರೀಂದವೇ
ನಮೋ ಶ್ರೀ ರಾಘವೇಂದ್ರಗುರವೇ ನಮೋಽತ್ಯಂತದಯಾಳುವೇ ॥
ಶ್ರೀಸುಧೀಂದ್ರಾಬ್ಧಿಸಂಭೂತಾನ್ ರಾಘವೇಂದ್ರಕಲಾನಿಧೀನ್
ಸೇವೇ ಸಜ್ಞಾನಸೌಖ್ಯಾರ್ಥಂ ಸಂತಾಪತ್ರಯ ಶಾಂತಯೇ ॥
********
***
ಹರೇ ಶ್ರೀನಿವಾಸ....
ಶ್ರೀಹರಿಯ, ಶ್ರೀಮುಖ್ಯಪ್ರಾಣದೇವರ ವಿಶೇಷ ಸಾನಿಧ್ಯದಿಂದ ಯುಕ್ತರಾಗಿ, ವರಾಹನಂದಿನಿಯ ದಡದ ಮಂತ್ರಾಲಯಕ್ಷೇತ್ರದಲ್ಲಿ ಬೃಂದಾವನದಲ್ಲಿ ಸನ್ನಿಹಿತರಾಗಿ ಆಶ್ರಿತಾಮರ ಕಲ್ಪಭೂಜರಾಗಿ ವಿರಾಜಮಾನರಾದಂತಹ ಶ್ರೀರಾಘವೇಂದ್ರತೀರ್ಥ ಗುರುಸಾರ್ವಭೌಮರ ಮಹಿಮೆಯನ್ನು, ಅವರು ವಿದ್ವದ್ ಪ್ರಪಂಚಕ್ಕೆ ಮಾಡಿದ ಮಹದುಪಕಾರವನ್ನು ಸಾಕಲ್ಯೇನ ವರ್ಣಿಸುವುದು ಪಾಮರರಾದ ನಮಗೆ ಅತ್ಯಂತ ದುಷ್ಕರವಾದಂತಹ ಸಂಗತಿ. ಪ್ರಹ್ಲಾದರಾಜರಾಗಿ, ಬಾಹ್ಲೀಕರಾಜರಾಗಿ, ವ್ಯಾಸತೀರ್ಥರಾಗಿ ಶ್ರೀಹರಿಯ ಸೇವೆಯಿಂದ ಅರ್ಜಿಸಿದ ಮಹಾಪುಣ್ಯವನ್ನು ತಮ್ಮನ್ನು ಆಶ್ರಯಿಸಿದ ಜನರ ಅಭೀಷ್ಟವನ್ನು ಪೂರೈಸಲು, ತನ್ಮೂಲಕ ಸಜ್ಜೀವರ ಮನೋಭೂಮಿಯಲ್ಲಿ ಭಗವದ್ಭಕ್ತಿಯ ಬೀಜಾವಾಪನೆ ಮಾಡಿ, ಶ್ರೀಹರಿ-ಮುಖ್ಯಪ್ರಾಣರ ಮಾರ್ಗವನ್ನು ತೋರಿ ಅವರನ್ನು ಉದ್ಧೃತರನ್ನಾಗಿ ಮಾಡಲು ವಿನಿಯೋಗಿಸುತ್ತಿರುವ ಯೋಗಿವರ್ಯ. ತಮ್ಮ ತಪೋಬಲದಿಂದ ಶ್ರೀರಾಮ-ಮಧ್ವರ ಪರಮಕಾರುಣ್ಯಕ್ಕೆ ಪಾತ್ರರಾಗಿ, 'ದೀನದಲಿತರ ಸೇವೆಯೇ ಭಗವಂತನ ರಾಜ್ಯದ ಪ್ರಜೆಗಳಾದ ನಾವು ಆತನಿಗೆ ಸಲ್ಲಿಸುವ ಕಂದಾಯ'ವೆಂದು ಸಾರಿ ಹೇಳಿದ ಶ್ರೀಪೂರ್ಣಪ್ರಜ್ಞರ ದಿವ್ಯಸಂದೇಶವನ್ನು ಶಿರೋಧಾರ್ಯವಾಗಿರಿಸಿಕೊಂಡು, ದು:ಖಿತರ ದು:ಖ, ಸಂತಾಪಗಳನ್ನು ದೂರ ಮಾಡುತ್ತಾ ತಮ್ಮನ್ನು ಆಶ್ರಯಿಸಿದವರನ್ನು ಪೊರೆಯುವ ತಮ್ಮ ಮಹಾವ್ರತಕ್ಕೆ ಶ್ರೀಹಯಗ್ರೀವದೇವರೇ ಸಾಕ್ಷಿ ಎಂದು ನುಡಿದು ಅದ್ಯಪಿ ಐಹಿಕ, ಆಮುಷ್ಮಿಕ ಫಲಧಾತೃಗಳಾಗಿ ಮೆರೆವ ಮಹಾಮಹಿಮರು ಶ್ರೀರಾಘವೇಂದ್ರರು. ಶ್ರೀಗುರುರಾಜರು ಶ್ರೀವೇದವ್ಯಾಸ-ಶ್ರೀಪೂರ್ಣಪ್ರಜ್ಞರ ಸತ್ಸಿದ್ಧಾಂತವನ್ನು ಕ್ಷಿತಿಯೊಳು ಪ್ರತಿಷ್ಠಾಪಿಸಿ 'ಮಧ್ವಮತ ದುಗ್ಧಾಬ್ಧಿಚಂದ್ರ'ರಂತೆ ಶೋಭಿಸುತ್ತಿರುವರು. "ಗುರುರಾಜರು ಅಯೋಗ್ಯವೂ, ಯುಕ್ತಿರಹಿತವೂ, ಅನುಪಪನ್ನವೂ ಆದ ಅರ್ಥವನ್ನು ಮನಸ್ಸಿನಲ್ಲಿ ಚಿಂತಿಸುವರಲ್ಲ, ದುಡುಕಿನಿಂದ ಅಥವಾ ಛಲದಿಂದ ಅಂತಹ ಅಯುಕ್ತವಾದ ಅರ್ಥವನ್ನು ಹೇಳುವವರಲ್ಲ, ಜ್ಞಾನಿಗಳೊಡನೆ ಕಲೆತಾಗ 'ಹೀಗೇಕಾಗಬಾರದು?' ಮುಂತಾದ ಜಿಜ್ಞಾಸೆಗೆ ಆಸ್ಪದನೀಡುವವರಲ್ಲ, ವಿತಂಡವಾದವಂತೂ ಅವರ ಬಳಿ ಸುಳಿಯುತ್ತಿರಲಿಲ್ಲ, ತಮ್ಮ ಗ್ರಂಥಗಳಲ್ಲಿ ಎಲ್ಲಿಯೂ ವಿಹಿತವಲ್ಲದ ಅರ್ಥವನ್ನು ಬರೆಯುವವರಲ್ಲ, ಮಾತಿನಿಂದ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುವವರಲ್ಲ, ಒಮ್ಮೆ ಒಂದು ಕಡೆ ಹೇಳಿದ್ದನ್ನು ಮತ್ತೊಮ್ಮೆ ಹೇಳುವವರಲ್ಲ, ತಾವು ಒಮ್ಮೆ ವಿಚಾರಮಾಡಿ ಬರೆದುದನ್ನು ಎಂದಿಗೂ ಅಳಿಸುವವರಲ್ಲ, ಇಂತಹ ಅಸಾಧಾರಣವಾದಂತಹ ಗುಣವಿರುವುದರಿಂದಲೇ ಅನನ್ಯ ಸಾಧಾರಣವಾದ ವೇದ, ಉಪನಿಷತ್ತು, ಗೀತಾ, ಪುರಾಣೇತಿಹಾಸ, ಸೂತ್ರಭಾಷ್ಯಟೀಕೆಗಳಿಗೆ ಸಮ್ಮತವಾದಂತಹ ಅತ್ಯಂತ ಸಮಂಜಸವಾದ ಏಕಸೂತ್ರತೆಯನ್ನು ಎತ್ತಿಹಿಡಿಯುವ ಗ್ರಂಥರತ್ನಗಳನ್ನು ರಚಿಸುವುದರಲ್ಲಿ ಏಕಮೇವಾದ್ವಿತೀಯರಾದ ಜ್ಞಾನಿವರ್ಯರೆಂದು ಶ್ರೀಗುರುಸಾರ್ವಭೌಮರು ವಿದ್ವಜ್ಜನರಿಂದ ಸ್ತುತ್ಯರಾಗಿದ್ದಾರೆ" ಎಂದು ಶ್ರೀಪರಿಮಳಾಚಾರ್ಯರ ಪ್ರಬಂಧಪ್ರಣಯನಶೈಲಿಯ ಬಗ್ಗೆ ಶ್ರೀವಾದೀಂದ್ರತೀರ್ಥ ಶ್ರೀಮಚ್ಚರಣರು ತಮ್ಮ 'ಗುರುಗುಣಸ್ತವನ'ದಲ್ಲಿ ಕೊಂಡಾಡಿದ್ದಾರೆ. ಶ್ರೀಮಧ್ವಭಗವತ್ಪಾದರ ನಿರ್ದುಷ್ಟವಾದ ಸಿದ್ಧಾಂತವನ್ನು ತಮ್ಮ ವ್ಯಕ್ತಿತ್ವದ ಮಹಿಮೆಯಿಂದ, ವಿದ್ವದ್ವಿಭವದಿಂದ ದಿಗಂತ ವಿಶ್ರಾಂತವನ್ನಾಗಿಸಿದ ಶ್ರೀರಾಘವೇಂದ್ರತೀರ್ಥ ಗುರುಸಾರ್ವಭೌಮರ ಕಾರುಣ್ಯಕ್ಕೆ ಎಣೆಯುಂಟೆ?
ಶ್ರೀ ಗುರುಸಾವ೯ಭೌಮರ ಆರಾಧನೆಯ ಶುಭಾಶಯಗಳು... 🙏🌹🙏
ಪೂಜ್ಯಾಯ ರಾಘವೇಂದ್ರಾಯ ಸತ್ಯಧರ್ಮರತಾಯ ಚ ।
ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ ॥
ದುರ್ವಾದಿಧ್ವಾಂತರವಯೇ ವೈಷ್ಣವೀಂದೀವರೀಂದವೇ
ನಮೋ ಶ್ರೀ ರಾಘವೇಂದ್ರಗುರವೇ ನಮೋಽತ್ಯಂತದಯಾಳುವೇ ॥
ಶ್ರೀಸುಧೀಂದ್ರಾಬ್ಧಿಸಂಭೂತಾನ್ ರಾಘವೇಂದ್ರಕಲಾನಿಧೀನ್
ಸೇವೇ ಸಜ್ಞಾನಸೌಖ್ಯಾರ್ಥಂ ಸಂತಾಪತ್ರಯ ಶಾಂತಯೇ ॥
********
***
ಭಗವಂತನು ಇಲ್ಲ,ಧರ್ಮ ಇಲ್ಲ ಎನ್ನುವ ಹಲವರ ನಿಂದನೆಯ ಮಾತು ಬರೀ ಕಲ್ಪನೆ ಅಂತ ಹೇಳಬಹುದು.
330ಕ್ಕು ಹೆಚ್ಚಿನ ವರ್ಷಗಳ ಹಿಂದೆ ಸಜೀವವಾಗಿ ಬೃಂದಾವನ ಪ್ರವೇಶ ಮಾಡಿ ಕಣ್ಮರೆಯಾದ ಒಬ್ಬ ಯತಿಗಳು ನೂರಾರು ಬೃಂದಾವನ ಗಳಲ್ಲಿ, ಮನೆ ಮನೆಗಳಲ್ಲಿ ಎಲ್ಲರ ಮನಗಳಲ್ಲಿ ಸನ್ನಿಹಿತ ರಾಗಿ,ಕರೆದಲ್ಲಿಗೆ ಬಂದು ನಾಮ ಸ್ಮರಣೆ ಮಾತ್ರ ದಿಂದ ಜಗತ್ತಿನ ಯಾವ ಮಾನವ ಶಕ್ತಿ ಗಳು ಗುಣಪಡಿಸುವಲ್ಲಿ ಸೋತ ಅನೇಕ ರೋಗ ಪರಿಹಾರ, ಬೇಡಿದ ಮನೋರಥ ಪೂರೈಸುವ, ಜ್ಞಾನವನ್ನು ನೀಡುವದು ಸಾಧ್ಯ ವಾಗುತ್ತಾಇತ್ತೇ??
ಒಬ್ಬರು, ಇಬ್ಬರು,ಅಥವಾ ನೂರಾರು ಜನ ಶ್ರೀ ರಾಯರನ್ನು ಭಜಿಸಬಹುದು.
ಆದರೆ ಕೋಟ್ಯಾಂತರ ಜನರು ಅವರನ್ನು ಆರಾಧಿಸುತ್ತಾರೆ ಅಂದರೆ
ಅವರಲ್ಲಿ ಯಾವುದೋ ಒಂದು ಮಹಾಶಕ್ತಿಅಡಗಿದೆ ಎಂಬುವದು ಸ್ಪಷ್ಟವಾಗಿ ಕಾಣುತ್ತದೆ.
ಇಂದು ಅತ್ಯಂತ ಪ್ರತಿಭಾ ಶಾಲಿಗಳು,ವೈದ್ಯರು,ರಾಜಕೀಯ ವ್ಯಕ್ತಿಗಳು, ಸಾಹಿತಿಗಳು ಉದ್ಯಮ ಮಾಡುವ ದೊಡ್ಡ ವ್ಯಕ್ತಿಗಳು ವಿಜ್ಞಾನಿಗಳು, ಸಣ್ಣ ಪುಟ್ಟ ಕೆಲಸ ಮಾಡುವ ಜನಗಳು, ಯಾವುದೇ ಮತ ಭಾಷೆ ಜಾತಿ ಭೇದ ವಿಲ್ಲದೇ ದೇಶದ ಹಲವಾರು ಕಡೆಗೆ ಇವರನ್ನು ಆರಾಧಿಸುತ್ತಾರೆ ಅಂದರೆ ಇದು ಸಣ್ಣ ಹಾಗು ಸಾಮಾನ್ಯವಾದ ವಿಷಯ ಅಲ್ಲ.
ಶ್ರೀ ರಾಯರು ಸಾಮಾನ್ಯ ಮಾನವರಲ್ಲ
ದೇವಾಂಶ ಸಂಭೂತರು
ಪರಮಪುರುಷ ನಾದ
ಆ ಶ್ರೀ ಹರಿಯ ಕಾರುಣ್ಯಕ್ಕೆ ಪಾತ್ರ ರಾದವರು
ಇಂತಹ ಗುರುಗಳಲ್ಲಿ ಭಗವಂತನು ನಿಂತು ಮಾಡಿಸುವ ಅನೇಕ ಮಹಿಮೆಯನ್ನು ನಾವುಗಳು ಇಂದಿಗು ನೋಡುತ್ತೇವೆ ಹಾಗು ಕೇಳುತೇವೆ.
ಶ್ರೀ ಗುರು ಜಗನ್ನಾಥ ದಾಸರು ಹೇಳಿದಂತೆ
ಏನು ಚೋದ್ಯವೋ ಕಲಿಯ ಯುಗದಲಿ
ಏನು ಈತನ ಪುಣ್ಯ ಬಲವೋ
ಏನು ಈತನ ವಶದಿ ಶ್ರೀಹರಿ ತಾನೇ ನಿಂತಿಹನೋ
ಏನು ಕರುಣಾನಿಧಿಯೋ ಈತನು
ಏನು ಭಕುತರಿಗಭಯದಾಯಕ
ಏನು ಈತನ ಮಹಿಮೆ ಲೋಕಕ್ಕೆ ಗಮ್ಯವೆನಿಸಿಹದೋ
ರಾಘವೇಂದ್ರರ ವಿಜಯ ಪೇಳುವೆ
ರಾಘವೇಂದ್ರರ ಕರುಣ ಬಲದಲಿ
ರಾಘವೇಂದ್ರರ ಭಕುತರಾದವ ಇದನು ಕೇಳುವದು
ದಾತ ಗುರು ಜಗನ್ನಾಥ ವಿಠ್ಠಲನ ಸೇವಕಾಗ್ರಣಿಯೋ
🙏ಅ.ವಿಜಯ ವಿಠ್ಠಲ🙏
*********
ಅವರ ಮಾತು ಶಾಪ ಮತ್ತು ಅನುಗ್ರಹ ಎರಡೂ ರೀತಿಯಲ್ಲಿ ವರ್ತಿಸಬಲ್ಲದು ಎಂಬ ಅರಿವಿದ್ದ ಅಧಿಕಾರಿಗಳು ಮುಚ್ಚಿದ್ದ ಬಾವಿಯನ್ನು ಎರಡೇ ದಿನಗಳಲ್ಲಿ ತೆಗೆಸಿದರು. ಸುಮಾರು 25 ಅಡಿಗಳಷ್ಟು ಶುದ್ಧವಾದ ನೀರು ಆ ಬಾವಿಯಲ್ಲಿ ಕೆಲವೇ ಗಂಟೆಗಳಲ್ಲಿ ತುಂಬಿಕೊಂಡಿತು. ಮುಂದೆ ಕೆಲ ದಿನಗಳಲ್ಲಿಯೇ ಶ್ರೀಗಳ ಅಪ್ಪಣೆಯಂತೆ ವಾಸ್ತು ಶಾಂತಿ ಹಾಗು ಕೂಪಶಾಂತಿಗಳೆರಡೂ ನಡೆದವು.
ಆರ್.ಓ ಫಿಲ್ಟರ್ ಮಾಡಲಾಗಿದೆಯೆಂಬಷ್ಟು ತಿಳಿಯಾದ ನೀರು ಅದು. ಉತ್ಪ್ರೇಕ್ಷೆಯಲ್ಲ. ಆದರೆ ಒಂದು ಕೊರತೆ ಉಳಿಯಿತು. ನೀರು ಸಮೃದ್ಧವಾಗಿ ಇದ್ದರೂ ರುಚಿಯು ಸಪ್ಪೆಯಾಗಿಯೇ ಇತ್ತು. ಇನ್ನೊಂದು ಕೆಲ ದಿನಗಳಲ್ಲಿ ಬಾವಿಯ ನೀರು ಸಿಹಿಯಾದೀತು ಎನ್ನುತ್ತಲೇ ಸುಮಾರು ಒಂದು ತಿಂಗಳು ಸಂದಿತು. ಒಂದು ದಿನ ಸಂಜೆ “ವಾಕಿಂಗ್ ಮಾಡಲು ಹೋಗುವಾ” ಎಂದು ಶ್ರೀಗಳು ಹೇಳಿದರು. ಅವರ ಸಹಾಯಕ್ಕಾಗಿ ಅಂದು ನಾನು ಮತ್ತು ಯೋಗೀಶ(ಈಗ ಮೈಸೂರಿನ ಶಾಖಾಮಠದಲ್ಲಿದ್ದಾನೆ) ಇದ್ದೆವು. ವಾಕಿಂಗ್ ಮುಗಿಸಿ ಮಠದ ಒಳಗೆ ಬರುತ್ತಿರುವಾಗ ಬಾವಿಯಲ್ಲಿ ಇಣುಕಿ ನೋಡಿ “ಸಿಹಿ ಆಯಿತೇ ನೀರು?” ಎಂದು ಕೇಳಿದರು. ನಾನು ’ಇಲ್ಲ’ ಎಂದು ಉತ್ತರಿಸಿದೆ. ಶ್ರೀಗಳವರು ಸ್ವಗತದಲ್ಲಿಯೇ “ಮಾಡೋಣ ಮಾಡೋಣ ಒಂದು ಕಥೆ ಇದಕ್ಕೆ” ಎಂದು ಹೇಳುತ್ತಾ ಮುನ್ನಡೆದರು.
ಇದಾಗಿ ಎರಡನೆಯ ದಿನದಂದು ದ್ವಾದಶಿ ಇತ್ತು. ಬೆಳಿಗ್ಗೆ ಭಿಕ್ಷೆಯನ್ನು ಮುಗಿಸಿಕೊಂಡು ಬರುವಾಗ, ಅವರ ಕೋಣೆಯ ಹಿಂಬದಿಯಲ್ಲಿ ನಿಂತಿದ್ದ ಒಂದು ಲಾರಿಯು ಶ್ರೀಗಳವರ ಗಮನಕ್ಕೆ ಬಂದಿತು. “ಅದು ಯಾವ ಲಾರಿ?” ಎಂದು ಕೇಳಿ, ಉತ್ತರಕ್ಕೆ ಕಾಯದೆ ಶ್ರೀಗಳವರು ಮುನ್ನಡೆದರು. ಮಧ್ಯಾಹ್ನ ಸುಮಾರು 2ರ ಹೊತ್ತಿಗೆ ನಮ್ಮನ್ನು ತಾವಾಗಿಯೇ ಆ ಲಾರಿಯ ಬಳಿ ಹೋಗಿ ಕರೆದೊಯ್ದರು. ಆಗಲೇ ನಮಗೆ ತಿಳಿದದ್ದು ಅದು ಸೌದೆಯರಾಶಿಯನ್ನು ಹೊತ್ತು ತಂದಿರುವ ಲಾರಿ ಎಂದು. ಸೌದೆ ಅಂದರೆ ಒಡೆದು ಹಾಕಿದ ಸೌದೆಯಲ್ಲ. ಅದರಲ್ಲಿ ಇದ್ದದ್ದು ದೊಡ್ಡ ದೊಡ್ಡ ಕಟ್ಟಿಗೆಗಳು(logs). ಶ್ರೀಗಳವರು ಸಂಬಂಧಪಟ್ಟವರನ್ನು ಕರೆಸಿ ತಕ್ಷಣವೇ ಆ ಲಾರಿಯಲ್ಲಿರುವ ಕಟ್ಟಿಗೆಯರಾಶಿಯನ್ನು ಕೆಳಗೆ ಹಾಕಿಸಲು ಹೇಳಿ, ತಾವು ಅಲ್ಲಿಯೇ ಕುರ್ಚಿ ತರೆಸಿಕೊಂಡು ಕುಳಿತರು. ಲಾರಿಯಲ್ಲಿ ಅರ್ಧದಷ್ಟು ದಿಮ್ಮಿಗಳು ಖಾಲಿಯಾದಾಗ ಶ್ರೀಗಳವರು ನಮ್ಮನ್ನು (ನಾವು ಇದ್ದದ್ದು ಮೂವರು. ತಂಬಿ ರಾಘವೇಂದ್ರ, ನಾನು ಮತ್ತು ಯೋಗಿ) ಕರೆದು ಲಾರಿಯನ್ನು ಹತ್ತಿ ಉಳಿದಿರುವ ಕಟ್ಟಿಗೆಯ ಮೇಲ್ಪದರವನ್ನು ತೋರುತ್ತಾ “ಆ ಎರಡು ದಿಮ್ಮಿನ ಕೆಳಗೆ ತನ್ನಿ” ಎಂದು ಸೂಚಿಸಿದರು. ಯೋಗಿಯು ತಾನೊಬ್ಬನೇ ಹತ್ತಿ ಅವೆರಡನ್ನೂ ಕೆಳಗೆ ಬೀಳಿಸಿದ. ಶ್ರೀಗಳವರು “ತೊಗೊಂಡು ಬನ್ನಿ ಇಲ್ಲಿ” ಎಂದು ಹೇಳಿ ತಾವು ಮುನ್ನಡೆದರು. ನಾವು ಅವನ್ನು ಹೊತ್ತುಕೊಂಡು ಅವರನ್ನು ಹಿಂಬಾಲಿಸಿದೆವು. ಶ್ರೀಗಳವರು ಹೊರಟಿದ್ದು ಬಾವಿಯ ಕಡೆಗೆ. ಅಲ್ಲಿಗೆ ಹೋದ ನಂತರ ಮೂರು ನಾಲ್ಕು ಬಕೆಟ್ಟ್ ನೀರಿನಿಂದ ಆ ಮೋಟು ದಿಮ್ಮಿಗಳನ್ನು ತೊಳೆಯಿಸಿ ಅವುಗಳನ್ನು ಬಾವಿಯೊಳಗೆ ಹಾಕಿಸಿದರು. ಆಮೇಲೆ “ಸಿಹಿ ಆಗುತ್ತೆ ನೀರು ಇನ್ನೊಂದು ಮೂರು ದಿನಗಳಲ್ಲಿ” ಎಂದು ಸ್ಪಷ್ಟವಾಗಿ ಹೇಳಿದರು.
ಸಂಜೆ ಸ್ನಾನಕ್ಕೆ ಬಂದ ಅರ್ಚಕ ವರ್ಗದವರು ಈ ಕಟ್ಟಿಗೆಗಳನ್ನು ನೋಡಿ ಹೆಚ್ಚು ತಲೆ ಕೆಡಿಸಿಕೊಂಡಿದ್ದಿಲ್ಲ. ಆದರೆ ಮಾರನೆಯ ದಿನ ಆಡುಗೆಯವರು ನೋಡಿ ಬಾವಿಯಲ್ಲಿ ಕಟ್ಟಿಗೆಗಳು ಬಿದ್ದಿವೆ ಎಂದು ಸಂಬಂಧಪಟ್ಟವರಿಗೆ ದೂರು ಹೇಳಿದರು. ಅವುಗಳನ್ನು ತೆಗೆಸಬೇಕೆಂಬ ಪ್ರಯತ್ನಗಳು ಮೊದಲಾದವು. ಶ್ರೀಗಳವರು ತಾವಾಗಿಯೇ ಆ ಕಟ್ಟಿಗೆಗಳನ್ನು ಹಾಕಿಸಿದ್ದನ್ನು ನೋಡಿದ್ದ ರಕ್ಷಣಾವಿಭಾಗದ ಇಬ್ಬರು ಆ ವಿಷಯವನ್ನು ವ್ಯವಸ್ಥಾಪಕರ ಗಮನಕ್ಕೆ ತಂದರು. ನಂತರ ಅದು ಎಲ್ಲರಿಗೂ ಗೊತ್ತಾಗಿ ವಿಷಯವನ್ನು ಬೆಳೆಸದೆ ಸುಮ್ಮನಾದರು. ಆದರೆ ಎಲ್ಲರಿಗೂ ಕುತೂಹಲ. ಯಾಕೆ ಹಾಕಿಸಿದ್ದಾರೆ? ಎಂದು. ಇದಕ್ಕೆ ಉತ್ತರ ಸಿಕ್ಕಿದ್ದು ನಂತರದ ದಿನ. ಅಂದು ಆತ್ಮಕೂರು ಆನಂದತೀರ್ಥ ಆಚಾರ್ಯರು ಮಂತ್ರಾಲಯಕ್ಕೆ ಬಂದಿದ್ದರು. ಅವರು ಕೂಡ ಅಲಂಕಾರ ಶಾಲೆಯಲ್ಲಿ ಊಟಕ್ಕೆ ಕೂತಿದ್ದರು. ಊಟಕ್ಕೆ ಕುಳಿತ ಅರ್ಚಕರೆಲ್ಲರೂ ಈ ಕಟ್ಟಿಗೆಗಳ ಬಗ್ಗೆ ಚರ್ಚೆ ನಡೆಸಿದ್ದರು. ಕೇಳುತ್ತಾ ಕೂತಿದ್ದ ಆನಂದತೀರ್ಥಾಚಾರ್ಯರು ” ಶ್ರೀಗಳವರು ಹಾಕಿಸಿರುವುದು ಉಸಿರಿಕಾಯಿ ಮದ್ದು. ಅದರಿಂದ ಸಪ್ಪಗಿದ್ದ ನೀರು ಕೂಡ ಸಿಹಿಯಾಗ್ತದ” ಎಂದು ನುಡಿದರು. ಉಸಿರಿಕಾಯಿ ಎಂದರೆ ಬೆಟ್ಟದ ನೆಲ್ಲಿಕಾಯಿ. ಕರ್ನೂಲು ಪ್ರಾಂತ್ಯದ ಕನ್ನಡದಲ್ಲಿ ಮದ್ದು ಎಂದರೆ ಮರದ ದಿಮ್ಮಿ ಎಂದರ್ಥ. ಈ ಸ್ವಾರಸ್ಯವನ್ನು ತಿಳಿದ ಎಲ್ಲರೂ ಅಂದು ಶ್ರೀಗಳವರ ಜ್ಞಾನದ ಬಗ್ಗೆ ಬಹಳ ಆಶ್ಚರ್ಯವನ್ನು ವ್ಯಕ್ತಪಡಿಸಿದರು. ಕೈತೊಳೆಯಲು ಹೋದ ಸಂದರ್ಭದಲ್ಲಿ ಎಲ್ಲರೂ ಇಣುಕಿ ನೋಡಿದ್ದೇ ನೋಡಿದ್ದು.
ವಿಶೇಷವೆಂದರೆ ಶ್ರೀಗಳವರು ಹೇಳಿದಂತೆಯೇ ಕೆಲವೇ ದಿನಗಳಲ್ಲಿ ಆ ಬಾವಿಯ ನೀರು ಸಿಹಿಯಾಗತೊಡಗಿತು ಕೂಡ. “ಬಾವಿಯ ನೀರನ್ನು ಸಿಹಿಯಾಗಿಸಿದರಂತೆ” ಎಂದು ’ಅಂತೆಗಳ’ ಮೂಲಕ ಈ ವಿಷಯವನ್ನು ಬಹಳ ಜನ ಕೇಳಿರಬಹುದು. ಇದು ಅಂತೆ ಕಂತೆ ಏನಲ್ಲ. ನಾನು ಪ್ರತ್ಯಕ್ಷವಾಗಿ ನೋಡಿದ ಘಟನೆ. ನೋಡಿದ ಅಲ್ಲ, ಅನುಭವಿಸಿದ ಘಟನೆ. ಗುರುಗಳ ಮಾತನ್ನು ಗುರುರಾಯರು ನಡೆಸುತ್ತಿದ್ದರು ಎಂಬುದಕ್ಕೆ ಉದಾಹರಣೆಯಲ್ಲವೇ?
ಆಧುನಿಕ ವಿಜ್ಞಾನವು ಇದರ ಬಗ್ಗೆ ಏನೇ ತಾರ್ಕಿಕ ಅಂಶವನ್ನು ಹೇಳಲಿ. ನನ್ನ ಮಟ್ಟಿಗೆ ಅಂತೂ ಇದು ಶ್ರೀಗಳವರಲ್ಲಿ ಹುದುಗಿದ್ದ ಪ್ರಾಚೀನ ವಿಜ್ಞಾನದ ಚಮತ್ಕಾರವೇ ಸರಿ. ನೆಲ್ಲಿಕಾಯಿ ಮರದ ಕಾಂಡಗಳನ್ನು ಹಾಕಿದರೆ ಬಾವಿಯ ನೀರು ಸಿಹಿಯಾಗುವುದು ಎಂಬ ವಿಷಯ ಬಾಯಿಂದ ಬಾಯಿಗೆ ಹರಡಿ ಅದು ಶ್ರೀಗಳವರಿಗೆ ಸಹ ತಿಳಿದಿತ್ತು ಎಂದುಕೊಳ್ಳುವಾ. ಆದರೆ
ಸಪ್ಪೆಯಾಗಿದ್ದ ನೀರನ್ನು ಸಿಹಿಯಾಗಿ ಮಾಡೋಣ ಎನ್ನುವ ದೃಢವಿಶ್ವಾಸ (Conviction)ಅವರಿಗೆ ಎಲ್ಲಿಂದ ಮೂಡಿತು?
ನಿಂತಿದ್ದ ಲಾರಿಯು ಕಟ್ಟಿಗೆಯದ್ದೇ ಎಂದು ಅವರಿಗೆ ಮೊದಲೇ ಹೇಗೆ ತಿಳಿಯಿತು?
ಅಷ್ಟೊಂದು ವಿಭಿನ್ನವಾದ ಕಟ್ಟಿಗೆಗಳ ರಾಶಿಯ ಮಧ್ಯ ನೆಲ್ಲಿಕಾಯಿಮರದ ಎರಡು ದಿಮ್ಮಿಗಳಿವೆ ಎಂದು ಅವರಿಗೆ ಮೊದಲೇ ಯಾರು ಹೇಳಿದ್ದರು?
ಆ ರಾಶಿಯ ಮಧ್ಯ ಅವರು ಆ ಎರಡು ಕಟ್ಟಿಗೆಗಳನ್ನೇ ಅಷ್ಟು ಕರಾರುವಾಕ್ಕಾಗಿ ಹೇಗೆ ಗುರುತಿಸಿದರು?
ಅವರ ಈ ಕೆಲಸಕ್ಕೆ ದೇವರು ಮತ್ತೊಬ್ಬ ವಿಜ್ಞಾನಿಯ ಮೂಲಕವೇ ಪ್ರಮಾಣವನ್ನು ಒದಗಿಸಿದ್ದು ಕೂಡ ಒಂದು ವಿಶೇಷ. ಮದ್ದು ಎಂದು ಆತ್ಮಕೂರು ಆಚಾರ್ಯರು ಹೇಳಿದ್ದರಲ್ಲೇ ಒಂದು ಸ್ವಾರಸ್ಯವುಂಟು. ಮದ್ದು ಎಂಬ ಶಬ್ದವನ್ನು ದಿಮ್ಮಿ ಎಂಬ ಅರ್ಥದಲ್ಲೂ, ಔಷಧದ ಉಪಚಾರ ಎಂಬ ಅರ್ಥದಲ್ಲೂ ಪರಿಗಣಿಸಬಹುದು. ಸಪ್ಪಗಿದ್ದ ನೀರಿನ ಸೆಲೆಗೆ ಶ್ರೀಗಳವರು ನೆಲ್ಲಿಕಾಯಿಯ ಔಷಧೋಪಚಾರ ಮಾಡಿ ಅದನ್ನು ಸಿಹಿಯಾಗಿಸಿದ್ದಾರೆ ಎಂದು ತಿಳಿಯಬಹುದಲ್ಲವೇ?
ಮತ್ತೊಂದು ಗಮನಿಸಬೇಕಾದ ವಿಷಯವೆಂದರೆ, ಬಿಸಿಲು ಹಾಗು ನೀರಿನ ಅಭಾವವನ್ನು ಕುರಿತು ಶ್ರೀಗಳವರು ಹೇಳಿದ ಮಾತು ಸಾರ್ವಕಾಲಿಕವಾಗಿ ಅನ್ವಯವಾಗುವಂತಹುದು. ಹೆಚ್ಚುತ್ತಲೇ ಹೋಗುತ್ತಿರುವ ಉಷ್ಣತೆ ಮತ್ತು ನೀರಿನ ಕೊರತೆ ಈ ಎರಡೂ ಸಮಸ್ಯೆಗಳು ಜಾಗತಿಕವಾದವುಗಳು. ಇದನ್ನು ಕುರಿತು ಅವರು ಅಂದೇ ಸ್ಪಷ್ಟವಾಗಿ ಹೇಳಿದ್ದರು. ಇದಕ್ಕೆ ತಕ್ಕ ಉಪಕ್ರಮಗಳನ್ನು ಕಾಲಕಾಲಕ್ಕೆ ತೆಗೆದುಕೊಳ್ಳಬೇಕು ಮತ್ತು ಅದಕ್ಕೆ ದೈವಕೃಪೆಯು ಕೂಡ ಬೇಕು ಎಂಬುದನ್ನು ಅವರು ಪ್ರಾಯೋಗಿಕವಾಗಿ ಮಾಡಿ ತೋರಿಸಿದರು.
ಮೌನಸಾಧಕರಿವರು ಸುಶಮೀಂದ್ರರು. ಅವಧೂತರ ಎಲ್ಲ ಲಕ್ಷಣಗಳು ಅವರಲ್ಲಿದ್ದವು. ಅಮಾಯಕನಂತೆ ಕಾಣುತ್ತಿದ್ದರೂ ಕೂಡ ಒಳಗೆ ಜ್ಞಾನವು ಜ್ವಲಿಸುತ್ತಲೇ ಇತ್ತು. ಲೌಕಿಕಾರ್ಥದ ಅಮಾಯಕರಾಗಿದ್ದಲ್ಲಿ ಈ ವೈಜ್ಞಾನಿಕ ಉಪಚಾರದ ಅರಿವಾದರೂ ಎಲ್ಲಿ ಇರುತ್ತಿತ್ತು? ಎಲ್ಲ ತಿಳಿದಿದ್ದೂ ಹಾರಾಡದೇ ಮಗುವಿನಂತೆ ಇದ್ದುಬಿಡುವುದು ಸಾಧಕರ ಲಕ್ಷಣ. ನಮ್ಮ ಅಜ್ಜಯ್ಯನು ಇದೇ ಸಾಲಿನ ಸಾಧಕರು.
ಅಂದ ಹಾಗೆ ಈ ಬಾವಿಯು ಇನ್ನೂ ನೀರಿನಿಂದ ಸಮೃದ್ಧವಾಗಿಯೇ ಇದೆ. ಮಂತ್ರಾಲಯಕ್ಕೆ ಹೋದಾಗ ನೋಡಬಹುದು. ಆದರೆ ದೂರದಿಂದಲೇ ನೋಡಿ. ಹತ್ತಿರ ಹೋಗಿ ಅಶುಚಿಯನ್ನು ಮಾಡದಿರಿ. ಇದು ಬರಿಯ ನೀರಲ್ಲ. ಶ್ರೀಹರಿವಾಯುಗುರುಗಳು ತಮ್ಮ ಮಹಿಮೆಯನ್ನು ತೋರಿದ ಪುಣ್ಯತೀರ್ಥವಿದು.
#ವಾಟ್ಸ್ಯಾಪನಿಂದಬಂದಿದ್ದು
*************
ಎಲ್ಲರೂ ಇಂದು ಎಲ್ಲಾ ಗುರುಗಳನ್ನು ವಿಶೇಷ ವಾಗಿ
ಸ್ತುತಿಸಿ, ಸೇವಿಸಿ ಭಕ್ತಿಯಿಂದ ನಾಮಸ್ಮರಣೆ ಮಾಡಿ ಅವರ ಅನುಗ್ರಹ ವನ್ನು ಪಡೆದು ಧನ್ಯತೆ ಹೊಂದುವ ಶುಭ ದಿನ.
ಶ್ರೀ ರಾಘವೇಂದ್ರ ಸ್ವಾಮಿಗಳು--
ದೇವರೆಂದರೆ ತಿರುಪತಿ ತಿಮ್ಮಪ್ಪ, ಗುರುಗಳೆಂದರೆ
ಮಂಚಾಲೆ ರಾಘಪ್ಪ"
ಮಂತ್ರಾಲಯದ ಪ್ರಭುಗಳನ್ನು ಶ್ರೇಷ್ಠ ಗುರುಗಳೆಂದು ಪ್ರಸಿದ್ಧಿ ಯಾಗಿದೆ.
ಇಂತಹ ಮಹಾ ಮಹಿಮರನ್ನು ಒಲಿಸಿ, ಸೇವಿಸಿ ಅನುಗ್ರಹವನ್ನು ಪಡೆದು ಜೀವನದಲ್ಲಿ ಏನಾದರೂ ಸಾಧನೆ ಮಾಡಬಹುದು.
ಪೂಜ್ಯಾಯ ರಾಘವೇಂದ್ರಾಯ ಸತ್ಯ ಧರ್ಮ ರತಾಯಚ ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನುವೇ.
ಶ್ರೀ ರಾಘವೇಂದ್ರ ಸ್ವಾಮಿಗಳ ಧ್ಯಾನ ಶ್ಲೋಕ.
ಶ್ರೀ ರಾಘವೇಂದ್ರಾಷ್ಟಕ್ಷರ ಮಂತ್ರವನ್ನು ದಿನವೂ ಜಪಿಸಿ
ಅವರನ್ನು ಭಕ್ತಿಯಿಂದ ಪ್ರಾರ್ಥನೆ ಮಾಡಿ ದರೆ ಅವರು ಒಲಿದು ಅನುಗ್ರಹ ಮಾಡುವುದರಲ್ಲಿ ಸಂದೇಹವಿಲ್ಲ.
ಧ್ಯಾನ ಶ್ಲೋಕ--
ತಪ್ತಕಾಂಚನಸಂಕಾಶಂ ಅಕ್ಷಮಾಲಾ ಕಮಂಡಲುಮ್/
ದೊರ್ಭ್ಯಾಂ ದಧಾನಂ ಕಾಷಾಯವಸನಂ ರಾಮಮಾನಸಮ್/
ಯೋಗೀಂದ್ರತೀರ್ಥವಂದ್ಯಾಂಘ್ರಿಂ ತುಲಸೀಧಾಮವಕ್ಷಸಮ್//
ಜ್ಞಾನ ಭಕ್ತಿ ತಪ:ಪೂರ್ಣಂ ಧ್ಯಾಯೇದಿಷ್ಟಾರ್ಥಸಿದ್ಧಯೇ//
ಓಂ ಶ್ರೀ ರಾಘವೇಂದ್ರಾಯ ನಮಃ.ಓಂ.
ಜಪ ಮುಗಿದ ಮೇಲೆ ಮತ್ತೆ ಧ್ಯಾನ ಶ್ಲೋಕ ವನ್ನು ಹೇಳಿ
ಕೃಷ್ಣಾರ್ಪಣ ಪೂರ್ವಕ ಭಗವಂತನಿಗೆ ಅರ್ಪಿಸಬೇಕು.
ಈ ಮಂತ್ರದಲ್ಲಿ ಮುಖ್ಯಪ್ರಾಣ ದೇವರು ಶ್ರೀ ರಾಮ ಚಂದ್ರ ದೇವರನ್ನು ಪ್ರತಿಪಾದಿಸಲಾಗಿದೆ.
ಶ್ರೀ ರಾಘವೇಂದ್ರ ಸ್ವಾಮಿಗಳು ಸರ್ವರನ್ನೂ ಅನುಗ್ರಹಿಸಲಿ.
ಶ್ರೀ ವಾದಿರಾಜರು--
ತಪೋ ವಿದ್ಯಾ ವಿರಕ್ತ್ಯಾದಿ ಸದ್ಗುಣೌಘಾಕರನಹಮ್ ವಾದಿರಾಜ ಗುರೂನ್ವಂದೇ ಹಯಗ್ರೀವ ದಯಾಶ್ರಯಾನ್.
ನಿನ್ನ ಧ್ಯಾನ ದ ಶಕ್ತಿಯ ಕೊಡೊ
ಅನ್ಯರಲಿ ವಿರಕ್ತಿ ಯ ಕೊಡೊ
ನಿನ್ನ ನೋಡುವ ಯುಕ್ತಿಯ ಕೊಡೊ
ನಿನ್ನ ಪಾಡುವ ಭಕ್ತಿಯ ಕೊಡೊ ನಿ-
ನ್ನ್ಹತ್ತೆ ಬರುವ ಸಂಪತ್ತಿಯ ಕೊಡೊ
ಚಿತ್ತದಿ ತತ್ವದ ಕೃತ್ಯವ ತೋರೊ
ಮತ್ತೆ ತುದಿಯಲಿ ಎನಗೆ ಮುಕ್ತಿಯ ಕೊಡೊ
ಅತ್ತತ್ತ ಮಾಡೊ ಭವಕತ್ತಲೆಯೆನಗೆ
ಮುತ್ತಿದೆ ಹಯವದನ//.
(ಶ್ರೀ ಭಾವೀ ಸಮೀರ ವಾದಿರಾಜರು ರಚಿಸಿದ ಉಗಾಭೋಗ).
ಶ್ರೀ ಹರಿ ಸಮರ್ಪಣೆ.
ಸರ್ವೇ ಜನೋ ಸುಖೀನೋಭವಂತು.
*************
✍ಸ್ತೋತ್ರ ಸಾಹಿತ್ಯದಲ್ಲಿ ಅತ್ಯಂತ ಪ್ರಸಿದ್ಧ ವಾದ ಸ್ತೋತ್ರ ವೆಂದರೆ ಅದು ಶ್ರೀ ರಾಯರ ಸ್ತೋತ್ರ.
ಇದರ ರಚನೆಯ ಹಿನ್ನೆಲೆ ತಿಳಿಸುವ ಪುಟ್ಟ ಪ್ರಯತ್ನ.
ಶ್ರೀ ಮಂತ್ರಾಲಯ ಮಹಾ ಪ್ರಭುಗಳ ಶಿಷ್ಯರಾದ ಶ್ರೀ ಬಿಚ್ಚಾಲಿ ಅಪ್ಪಣ್ಣ ಆಚಾರ್ಯರು ಇದನ್ನು ರಚನೆಯನ್ನು ಮಾಡಿದ್ದು.
ಶ್ರೀ ರಾಯರು ವೃಂದಾವನ ಪ್ರವೇಶ ಸಮಯದಲ್ಲಿ ಅವರು ಅಲ್ಲಿ ಇರುವುದಿಲ್ಲ. ಅನೀರಿಕ್ಷಿತವಾಗಿ ತಿಳಿದು ಬಂದ ವಾರ್ತೆ ಇಂದ ಆಘಾತಗೊಂಡ ಶ್ರೀ ಅಪ್ಪಣ್ಣ ಆಚಾರ್ಯರು ತತ್‌ಕ್ಷಣವೇ ಮಂಚಾಲೆಗೆ ಧಾವಿಸುತ್ತಾರೆ.
*ಶ್ರೀ ರಾಯರ ರೂಪ ವನ್ನು ಮನದಲ್ಲಿ ಚಿಂತಿಸುತ್ತಾ ತದೇಕಚಿತ್ತರಾಗಿ ಮಂಚಾಲೆ ಕಡೆ ಧಾವಿಸುತ್ತಿರುವಾಗ
ಶ್ರೀ ಪೂರ್ಣಭೋದ ಎಂದು ಪ್ರಾರಂಭವಾದ ಸ್ತೋತ್ರ ಮಂಚಾಲೆಗೆ ಬಂದಾಗ
ಯೋ ಭಕ್ತ್ಯಾ ಗುರು ರಾಘವೇಂದ್ರ.....
ವಿಭೂತಿರತಲಾ.. ಎಂಬ ಶ್ಲೋಕದವರೆಗೆ ಬಂದಿತ್ತಂತೆ.
ಗುರುಗಳ ಭವ್ಯವಾದ ವೃಂದಾವನ ವನ್ನು ನೋಡಿ ಅವರ ಹೃದಯ ಮತ್ತು ಕಣ್ಣು ತುಂಬಿ ಅವರ ಮಾತು ನಿಲ್ಲುತ್ತದೆ.
ಆದರೆ ಆ ಸ್ತೋತ್ರ ಅಲ್ಲಿಗೆ ಅಪೂರ್ಣ ವಾಗಲಿಲ್ಲ.
ತಮ್ಮ ಶಿಷ್ಯನ ವಾಣಿಗೆ ಶ್ರೀ ಮಂತ್ರಾಲಯ ಮಹಾಪ್ರಭುಗಳು ತಮ್ಮ ವಾಣಿಯನ್ನು ಜೋಡಿಸಿ
"ಸಾಕ್ಷಿ ಹಯಾ ಸ್ತೋತ್ರ ಹಿ" ಎಂದು ಹೇಳುತ್ತಾರೆ.
ಬೃಂದಾವನ ದಿಂದ ರಾಯರ ಧ್ವನಿ ಬಂದಿದ್ದು ಎಲ್ಲಾರಿಗು ಗೋಚರ ಮತ್ತು ಶ್ರವಣವಾಗಿದೆ.
ಶ್ರೀ ಗುರುರಾಜರಿಂದ ಮುದ್ರೆ ಬಿದ್ದ ಸ್ತೋತ್ರ ವೆಂದು ಅಂದಿನಿಂದ ಇಂದಿನವರೆಗೂ ಮತ್ತು ಈ ಕ್ಷಣದವರೆಗೆ ಸಹ ಅಬಾಲ ವೃದ್ದರಾದಿ ಎಲ್ಲಾ ರಾಯರ ಭಕ್ತರು ಪಠಣೆ ಮಾಡುವದು ರೂಢಿಯಲ್ಲಿದೆ.
ಶ್ರೀ ಅಪ್ಪಣ್ಣ ಆಚಾರ್ಯರು ಈ ಸ್ತೋತ್ರ ವನ್ನು ಮುಗಿಸಿದಾಗ ಶ್ರೀ ಗುರುರಾಜರು ವೃಂದಾವನ ಒಳಗಿದ್ದು ಶ್ರೀ ಹರಿಯ ಇನ್ನೊಂದು ರೂಪವಾದ ಶ್ರೀ ಹಯಗ್ರೀವ ದೇವರ ಸ್ತೋತ್ರ ವನ್ನು ಮಾಡುತ್ತಾ ಇದ್ದರಂತೆ.ಆದ್ದರಿಂದ ಕೊನೆಯಲ್ಲಿ ಹಯಗ್ರೀವನೇ ಸಾಕ್ಷಿ ಎಂದು ಹೇಳಿದ್ದಾರೆ.
ಈ ಸ್ತೋತ್ರ ಮಹಿಮೆ.
ಇದನ್ನು ಭಕ್ತಿ ಶ್ರದ್ಧೆ ಮತ್ತು ವಿಶ್ವಾಸ ದಿಂದ ಪಠಣೆ ಮಾಡಿದವರಿಗೆ ಶ್ರೀ ಹರಿಯ ಕರುಣೆ ಎಂಬ ಪ್ರಸಾದ ಸಿಗುತ್ತದೆ ಮತ್ತು ಅವರ ಇಷ್ಟಾರ್ಥ ಸಿದ್ದಿಯಾಗುವದು ಎಂಬುವದು ಬರಿ ಶ್ರೀ ಅಪ್ಪಣ್ಣ ಆಚಾರ್ಯರು ಮಾತಲ್ಲ. ನನಗು ಸಹ ಸಮ್ಮತ ಎನ್ನುವದು ಶ್ರೀ ಹಯಗ್ರೀವ ದೇವರು ರಾಯರ ಅಂತರಂಗ ದಲ್ಲಿದ್ದು ನುಡಿದಿದ್ದಾರೆ.
ಇದನ್ನು ಅರಿತ ಶ್ರೀ ರಾಯರು "ಸಾಕ್ಷಿ ಹಯಾ ಸ್ತೋತ್ರ ಹಿ" ಎಂದು ವೃಂದಾವನ ಒಳಗಿದ್ದುಕೊಂಡು ಘೋಷಿಸಿದ್ದಾರೆಂದು ಇದರ ಹಿನ್ನೆಲೆ ಆಗಿದೆ.
ಶ್ರೀ ರಾಯರ ಸ್ತೋತ್ರ ಮಹಿಮೆ ಯನ್ನು ಗುರುಗಳ ಪಾದಾರವಿಂದಗಳಲ್ಲಿ
ಅರ್ಪಣೆ ಮಾಡುತ್ತಾ*
🙏ಶ್ರೀ ಕೃಷ್ಣಾರ್ಪಣಮಸ್ತು🙏
ಶ್ರೀ ರಾಯರ ಸ್ತೋತ್ರ ವನ್ನು ಅರ್ಥ ಸಹಿತವಾಗಿ ಶ್ರೀ ಹರಿ ವಾಯು ಗುರುಗಳ ಮತ್ತು ಅವರ ಹಿರಿಯರ ಆಶೀರ್ವಾದ ಬಲದಿಂದ ನಮಗೆ ಎಲ್ಲಾ ಪಾರಾಯಣ ಮಾಡಲು ಪಿಡಿಎಫ್ ಮುಖಾಂತರ ಸಂಗ್ರಹಿಸಿ ಕೊಟ್ಟ ಶ್ರೀ ಶೇಷಗಿರಿ ರಾಜ ಸಂತಿಕೆಲ್ಲೂರು ಅವರಿಗೆ ಧನ್ಯವಾದ ತಿಳಿಸುತ್ತಾ
ನಿಮ್ಮ ಎಲ್ಲಾರ ಹಾರೈಕೆ,ಆಶೀರ್ವಾದ ಸಣ್ಣವನಾದ ಶ್ರೀ ಶೇಷಗಿರಿ ಮೇಲೆ ಇರಲಿ.
ಇನ್ನೂ ಹೆಚ್ಚಿನ ಜ್ಞಾನ ಕಾರ್ಯಗಳನ್ನು ಮಾಡಲಿ ಎಂದು ನೀವೆಲ್ಲರು ಆಶೀರ್ವಾದ ಮಾಡಿ ಎಂದು ಕೇಳಿಕೊಳ್ಳುತ್ತೇನೆ.
🙏ಅ.ವಿಜಯವಿಠ್ಠಲ🙏
***
ರಾಘವೇಂದ್ರ ಸ್ವಾಮಿಗಳು ಕುರಿತು ಪ್ರಶ್ನೋತ್ತರಗಳು :
(ಸಂಗ್ರಹ - ನರಹರಿ ಸುಮಧ್ವ)
ರಾಯರ ಮೂಲ ರೂಪ ಯಾವುದು ?
ಉತ್ತರ: ಶಂಖುಕರ್ಣ
ರಾಯರ ಮೂಲರೂಪಕ್ಕೆ ಶಪಿಸಿದವರಾರು?
ಉತ್ತರ: ಬ್ರಹ್ಮ ದೇವರು
ಶಂಖುಕರ್ಣನಿಗೆ ಶಾಪ ನೀಡಲು ಕಾರಣ ?
ಉತ್ತರ : ದೇವರ ಪೂಜೆಗೆ ಪುಷ್ಪ ತಡವಾಗಿ ತಂದಿದ್ದು.
ಶಂಖುಕರ್ಣ ಯಾವ ದೇವತೆ ?
ಉತ್ತರ: ಕರ್ಮಜದೇವತೆ (19ನೇ ಕಕ್ಷ್ಯ)
ಮೊದಲನೇ ಅವತಾರ ಯಾವುದು ? ಉತ್ತರ: ಪ್ರಹ್ಲಾದರಾಜರು
ಎರಡನೇ ಅವತಾರ ಯಾವುದು ? ಉತ್ತರ: ಬ್ಲಾಹೀಕ ರಾಜರು
ಮೊದಲನೇ ಅವತಾರದಲ್ಲಿ ಪರಮಾತ್ಮನ ಯಾವ ರೂಪವ ಕಂಡರು ?
ಉತ್ತರ: ನರಸಿಂಹಾವತಾರ
ಎರಡನೇ ಅವತಾರದಲ್ಲಿ ವಾಯುದೇವರ ಯಾವ ರೂಪ ಕಂಡರು ?
ಉತ್ತರ: ಭೀಮಾವತಾರ
ಮೂರನೇ ಅವತಾರ ಯಾವುದು ?
ಉತ್ತರ: ವ್ಯಾಸರಾಯರು
ರಾಯರ ತಂದೆ ಯಾರು ?
ಉತ್ತರ: ವೀಣಾ ತಿಮ್ಮಣ್ಣ ಭಟ್ಟರು
ರಾಯರ ಜನ್ಮನಾಮವೇನು ?
ಉತ್ತರ: ವೆಂಕಟನಾಥ
ಸುಮಧ್ವಸೇವಾ
ರಾಯರ ಗೋತ್ರ ಯಾವುದು ?
ಉತ್ತರ: ಗೌತಮ ಗೋತ್ರ
13. ರಾಯರ ತಂದೆತಾಯಿ ಯಾರ ಸೇವೆ ಮಾಡಿ ರಾಯರನ್ನು ಪಡೆದರು ?
ಉತ್ತರ: ತಿರುಪತಿ ತಿಮ್ಮಪ್ಪ
ರಾಯರ ಜನ್ಮಸ್ಥಳ ಯಾವುದು ?
ಉತ್ತರ: ಕುಂಭಕೋಣಂ ಹತ್ತಿರ ಭುವನಗಿರಿಯಲ್ಲಿ
ರಾಯರ ವೃಂದಾವನ ಎಲ್ಲಿದೆ ?
ಉತ್ತರ: ಮಂತ್ರಾಲಯದಲ್ಲಿ
ರಾಯರ ಮಠದ ಪ್ರಸ್ತುತ ಪೀಠಾಧಿಪತಿಗಳು ಯಾರು ?
ಉತ್ತರ: ಸುಬುದೇಂದ್ರ ತೀರ್ಥರು
ರಾಯರ ನಕ್ಷತ್ರ ಯಾವುದು ?
ಉತ್ತರ: ಮೃಗಶಿರ
ರಾಯರ ಜನ್ಮ ದಿನ ಎಂದು ?
ಉತ್ತರ: ಫಾಲ್ಗುಣ ಶುದ್ಧ ಸಪ್ತಮಿ
ರಾಯರ ಜನ್ಮ ಸಂವತ್ಸರ
ಉತ್ತರ: ಮನ್ಮಥ ನಾಮ ಸಂವತ್ಸರ 1595 AD ಶಾಲೀವಾಹನ ಶಕ 1518
ರಾಯರ ಅಕ್ಷರಾಭ್ಯಾಸವಾದ ವರ್ಷ ಯಾವುದು?
ಉತ್ತರ: ಕ್ರಿ.ಶಕ 1600 (ಶಾಲೀವಾಹನ ಶಕ 1520)
ರಾಯರ ಉಪನಯನವಾದ ವರ್ಷ ಯಾವುದು?
ಉತ್ತರ: 1606 AD (ಶಾಲೀವಾಹನ ಶಕ 1526)
ರಾಯರ ಆಶ್ರಮ ದಿನ ಎಂದು ?
ಉತ್ತರ: ಫಾಲ್ಗುಣ ಶುದ್ಧ ಬಿದಿಗೆ
ರಾಯರ ವೃಂದಾವನ ಪ್ರವೇಶದ ದಿನ ಎಂದು ?
ಉತ್ತರ: ಶ್ರಾವಣ ಬಹುಳ ಬಿದಿಗೆ ಶುಕ್ರವಾರ
24..ರಾಯರ ಗುರುಕುಲ ವಾಸ ಎಲ್ಲಿ ?
ಉತ್ತರ: ಕಾವೇರಿ ಪಟ್ಟನಂ
ರಾಯರ ಆಶ್ರಮ ಸ್ಥಳ ಎಲ್ಲಿ ?
ಉತ್ತರ: ತಂಜಾವೂರು
26 ರಾಯರು ಯಾವ ವಾದನದಲ್ಲಿ ಕುಶಲರಾಗಿದ್ದರು ?
ಉತ್ತರ: ವೀಣಾವಾದನದಲ್ಲಿ
ಸುಮಧ್ವಸೇವಾ
ರಾಯರು ಉಪಯೋಗಿಸುತ್ತಿದ್ದ ವೀಣೆ ಹೆಸರು?
ಉತ್ತರ: ವಾಗ್ದೇವಿ
28 ರಾಯರ ಆರಂಭಿಕ ವಿದ್ಯಾ ಗುರುಗಳು ಯಾರು ?
ಉತ್ತರ: ರಾಯರ ಅಣ್ಣನಾದ ಗುರುರಾಜಾಚಾರ್ಯರಿಂದ ಹಾಗೂ ಭಾವನವರಾದ ಲಕ್ಷ್ಮೀನರಸಿಂಹಾಚಾರ್ಯರ ಬಳಿ
ರಾಯರ ಹೆಚ್ಚಿನ ವಿದ್ಯಾಭ್ಯಾಸ ಯಾರಲ್ಲಿ ?
ಉತ್ತರ: ವಿಜಯೀಂದ್ರತೀರ್ಥರ ಹಾಗೂ ಸುಧೀಂದ್ರ ತೀರ್ಥರ ಬಳಿ.
ರಾಯರ ಆಶ್ರಮ ಗುರುಗಳು ಯಾರು ?
ಉತ್ತರ: ಸುಧೀಂದ್ರ ತೀರ್ಥರು.
ರಾಯರ ಆಶ್ರಮ ನಾಮವೇನು ?
ಉತ್ತರ: ರಾಘವೇಂದ್ರ ತೀರ್ಥರು
ರಾಯರ ಆಶ್ರಮ ಶಿಷ್ಯರಾರು ?
ಉತ್ತರ: ಯೋಗೀಂದ್ರತೀರ್ಥರು
ರಾಯರ ಪರಿಮಳ ಗ್ರಂಥ ಯಾವುದರ ವ್ಯಾಖ್ಯಾನ ?
ಉತ್ತರ: ಶ್ರೀಮನ್ಯಾಯಸುಧಾ
34. ರಾಯರ ಕೃತಿ ರಾಮಾಯಣದ ಸಂಕ್ಷಿಪ್ತ ಗ್ರಂಥ ಯಾವುದು ?
ಉತ್ತರ: ರಾಮಚಾರಿತ್ರ್ಯ ಮಂಜರಿ
ಕೃಷ್ಣಾವತಾರದ ಬಗ್ಗೆ ರಚಿಸಿದ ಕೃತಿ ?
ಉತ್ತರ: ಕೃಷ್ಣ ಚಾರಿತ್ರ್ಯ ಮಂಜರಿ
ರಾಯರ ಗ್ರಂಥಗಳನ್ನು ಏನೆಂದು ಕರೆಯುತ್ತಾರೆ ?
ಉತ್ತರ : ಭಾವದೀಪ
ರಾಯರ ಅಂಕಿತವೇನು ?
ಉತ್ತರ: ಧೀರ ವೇಣುಗೋಪಾಲ.
38 ನದಿಗಳ ತಾರತಮ್ಯ ಬಗ್ಗೆ ರಾಯರ ಸ್ತೋತ್ರ ?
ಉತ್ತರ: ನದಿ ತಾರತಮ್ಯ ಸ್ತೋತ್ರ
ಉಪನಿಷತ್ತುಗಳಿಗೆ ರಾಯರು ರಚಿಸಿದ ವ್ಯಾಖ್ಯಾನವನ್ನು ಏನೆನ್ನುತ್ತಾರೆ ?
ಉತ್ತರ: ಖಂಡಾರ್ಥ
ರಾಯರು ಪೂರ್ವಾಶ್ರಮದಲ್ಲಿ ರಚಿಸಿದ ಗ್ರಂಥ ?
ಉತ್ತರ : ಪ್ರಮೇಯ ನವಮಾಲಿಕಾ
(ಅಣುಮಧ್ವವಿಜಯ)
ರಾಯರ ಅಷ್ಟೋತ್ತರ ರಚಿಸಿದವರಾರು ?
ಉತ್ತರ: ಅಪ್ಪಣ್ಣಾಚಾರ್ಯರು.
ಮಂತ್ರಾಲಯ ಗ್ರಾಮದೇವತೆ ಯಾರು?
ಉತ್ತರ: ಮಂಚಾಲಮ್ಳ
ಅಣುಭಾಷ್ಯ ಗ್ರಂಥಕ್ಕೆ ರಾಯರ ವ್ಯಾಖ್ಯಾನ ಯಾವುದು ?
ಉತ್ತರ: ತತ್ವಮಂಜರಿ
ರಾಯರ ಅಷ್ಟೋತ್ತರಕ್ಕೆ ರಾಯರು ಕಡೆಯಲ್ಲಿ ಹೇಳಿದ ವಾಕ್ಯ ಯಾವುದು ?
ಉತ್ತರ: ಸಾಕ್ಷಿ ಹಯಾಸ್ಯೋತ್ರಹಿ
ಮಂಚಾಲೆ ಯಾವ ಕ್ಷೇತ್ರವೆಂದು ಪ್ರಸಿದ್ಧಿ ?
ಉತ್ತರ: ಪ್ರಹ್ಲಾದರಾಜರು ತಪಸ್ಸು ಮಾಡಿದ ಸ್ಥಳ
ರಾಯರು ರಚಿಸಿದ ಮಹಾಭಾರತ ಸಂಬಂಧಿ ಗ್ರಂಥ ಯಾವುದು?
ಉತ್ತರ: ಭಾವಸಂಗ್ರಹ:
47.ವ್ಯಾಸರಾಜರ ತಾತ್ಪರ್ಯ ಚಂದ್ರಿಕಾ ಗ್ರಂಥದ ವ್ಯಾಖ್ಯಾನ ಯಾವುದು ?
ಉತ್ತರ: ಚಂದ್ರಿಕಾ ಪ್ರಕಾಶ
ರಾಯರು ಚಾತುರ್ಮಾಸ್ಯ ವ್ರತದಲ್ಲಿ ಉಪಯೋಗಿಸದ ಯಾವ ಪದಾರ್ಥವನ್ನು ಕನಕದಾಸರ ಅವತಾರದ ರೂಪದಿಂದ ಸ್ವೀಕರಿಸಿದರು ?
ಉತ್ತರ: ಸಾಸಿವೆ
ರಾಯರಿಗೆ ಚಾತುರ್ಮಾಸ್ಯ ವ್ರತದಲ್ಲಿ ಸ್ವೀಕರಿಸದ ಸಾಸಿವೆಯನ್ನು ನೀಡಿದವರಾರು ?
ಉತ್ತರ: ಕನಕದಾಸರು
ರಾಯರ ಉತ್ತರಾಧಿಕಾರಿಗಳು
ಉತ್ತರ: ಶ್ರೀ ಯೋಗೀಂದ್ರ ತೀರ್ಥರು.
- ನರಹರಿ ಸುಮಧ್ವ , ಸುಮಧ್ವಸೇವಾ
***
No comments:
Post a Comment