ದೇಹ ರಥ ಉಳಿಸಿದ ಮಂತ್ರಾಲಯ ಮುನಿಗೆ ರಜತ(ಬೆಳ್ಳಿ) ರಥ ಸಮರ್ಪಣೆ..
🙏ನಂಬಿ ಕೆಟ್ಟವರಿಲ್ಲವೋ ಈ ಗುರುಗಳ🙇♂
ರಾಯರ ಮಹಿಮೆ. ಮುಂದುವರೆದ ಭಾಗ
ಅದ್ಭುತವಾದ ಮತ್ತು ನಡೆದ ನೈಜಘಟನೆ. ಇದು ನಡೆದಿದ್ದು ೧೯೪೭ ನೇ ಇಸ್ವಿಯಲ್ಲಿ.
ತಮಿಳುನಾಡಿನ ಚೆಟ್ಟಿನಾಡು ಮನೆತನ ಶ್ರೀಮಂತಿಕೆ ಹೆಸರಾದದುದು.
ಅಲ್ಲಿ ಶ್ರೀ ರಾಮನಾಥನ್ ಚೆಟ್ಟಿಯಾರರು ದೊಡ್ಡ ಕೋಟ್ಯಾಧೀಶರು ಆಗಿನ ಕಾಲದಲ್ಲಿ. ಇಬ್ಬರು ಪತ್ನಿಯರು. ತುಂಬು ಸಂಸಾರ.ವಿದೇಶಗಳಲ್ಲಿ ಸಹ ಅವರ ವ್ಯಾಪಾರ.
ಪ್ರಾರಬ್ಧ ವಶಾತ್ ಅವರಿಗೆ ಹೃದಯರೋಗ ಪ್ರಾಪ್ತಿಯಾಗಿ ಎಷ್ಟೋ ವೈದ್ಯ ರು ಚಿಕಿತ್ಸಾ ನಡೆಸಿದರೂ ಸಹ ಗುಣವಾಗಲಿಲ್ಲ.ಮದ್ರಾಸ್ ನಲ್ಲಿ ಅದಕ್ಕೆ ಆಪರೇಶನ್ ಮಾಡಬೇಕು. ಆಪರೇಶನ್ ಸಮಯದಲ್ಲಿ ಏನಾದರು ಆದರೆ ಬದುಕುವ ಗ್ಯಾರಂಟಿ ಇಲ್ಲ.ಆಪರೇಷನ್ ಯಶಸ್ವಿ ಆದರೆ ಬದುಕಬಹುದು.ನಿಮ್ಮ ಧೈರ್ಯ ಅಂತ ವೈದ್ಯರು ಹೇಳಿದರು.ಅದೇ ಚಿಂತೆ ಯಲ್ಲಿ ರಾಮನಾಥರು ಕೃಶರಾಗುತ್ತಾರೆ.
ಆ ಸಮಯದಲ್ಲಿ ಅವರಿಗೆ ಒಬ್ಬರು ಕೃಷ್ಣಾಚಾರ್ಯರೆಂಬ ರಾಯರ ಭಕ್ತರ ಪರಿಚಯವಾಗುತ್ತದೆ. ಅವರು ರಾಯರ ಅಸಂಖ್ಯಾತ ಮಹಿಮೆಯನ್ನು ಹೇಳಿದಾಗ ಅದಕ್ಕೆ ರಾಮನಾಥರು ಎಷ್ಟೋ!! ದೊಡ್ಡ ವೈದ್ಯರು ಮತ್ತು ವೈದ್ಯಕೀಯ ಚಿಕಿತ್ಸೆ ಗಳಿಂದ ಆಗದ ರೋಗ
ಬೃಂದಾವನ ಪ್ರವೇಶ ಮಾಡಿದ ಒಬ್ಬ ಮಾಧ್ವಸನ್ಯಾಸಿಯಿಂದ ಆಗುವದೇ?? ಅಂತ ಸ್ಪಷ್ಟವಾಗಿ ತಮ್ಮ ಅನುಮಾನ ವ್ಯಕ್ತಪಡಿಸುತ್ತಾರೆ.
ತಕ್ಷಣ ಆಚಾರ್ಯರು ನೋಡಿ!! .ಒಮ್ಮೆ ನಮ್ಮ ರಾಯರ ಸೇವೆ ಮಾಡಿ...
ಇದಕ್ಕೆ ಯಾವುದೇ ಹಣ ಖರ್ಚು ಇಲ್ಲ.ಇಲ್ಲಿ ನಂಬಿಕೆ, ಭಕ್ತಿ ವಿಶ್ವಾಸ ಮುಖ್ಯ. ಈಗಾಗಲೆ ಬಹಳಷ್ಟು ಹಣ ಕಳೆದುಕೊಂಡು ಕುಳಿತಿದ್ದಿರಿ..
ಒಮ್ಮೆ ಪ್ರಯತ್ನ ಮಾಡಿ ಅಂತ ಹೇಳಿ ರಾಯರ ಚಿತ್ರ ಕೊಟ್ಟು ಸೇವೆ ಮಾಡುವ ವಿಧಾನ ಮತ್ತು ರಾಯರ ಮೃತ್ತಿಕಾ ಮತ್ತು ಪೂಜ್ಯಾಯ ರಾಘವೇಂದ್ರಯಾ ಶ್ಲೋಕಗಳನ್ನು ಬರೆದು ಕೊಟ್ಟು ಹೋಗುತ್ತಾರೆ..
ಮರುದಿನ ಗುರುವಾರ.
ರಾಮನಾಥರು ಗುರುಗಳ ಚಿತ್ರ ಪಟವನ್ನು ಅನೇಕ ಬಗೆಯ ಹೂಗಳಿಂದ ಅಲಂಕರಿಸಿ, ಎರಡು ನಂದಾದೀಪ ಹಚ್ಚಿಟ್ಟು, ಫಲ ಸಮರ್ಪಣೆ ಮಾಡಿ ಮಂಗಳಾರತಿ ಮಾಡಿ ಮಲಗಿದರು.
ರಾತ್ರಿ ಸ್ವಪ್ನದಲ್ಲಿ
ರಾಯರು ದಂಡ ಕಮಂಡಲ ಧಾರಿಯಾಗಿ ಬಂದು
ಏನಪ್ಪಾ!!ರಾಮನಾಥ!! ನಮ್ಮನ್ನು ನಂಬಿ ಯಾರು ಕೆಟ್ಟಿಲ್ಲ. ಸಹಸ್ರ ಜನರು ನಮ್ಮನ್ನು ನಂಬಿ ಶುಭವನ್ನು ಪಡೆದಿದ್ದಾರೆ.ನೀನು ಸಹ ನನ್ನ ಭಕ್ತರಲ್ಲಿ ಒಬ್ಬ.
ಶ್ರೀ ಹರಿ ವಾಯು ಗುರುಗಳ ಅನುಗ್ರಹದಿಂದ ದೀನರಾದ ಭಕ್ತರ ಉದ್ದಾರಕ್ಕಾಗಿ ನಾವು ಮಂತ್ರಾಲಯ ದಲ್ಲಿ ಸಶರೀರವಾಗಿ ಬೃಂದಾವನ ದಲ್ಲಿ ಇದ್ದೇವೆ.ಮತ್ತು ಭಕ್ತರು ಕರೆದಲ್ಲಿಗೆ ಬರುತ್ತೇವೆ.ನೆನೆಸಿದವರ ಮನದಲ್ಲಿ ಸಹ ನಾವಿದ್ದೇವೆ.ಚಿಂತೆ ಮಾಡಬೇಡ...
ನಾಳೆಯೆ ವೈದ್ಯರ ಬಳಿ ಮಾತನಾಡಿ ಹೃದಯ ಆಪರೇಷನ್ ಮಾಡಿಸು .ನಾವು ಇದ್ದೇವೆ.ಯಾವ ತೊಂದರೆ ಆಗುವದಿಲ್ಲ.ಇದೊಂದೆ ಆಪರೇಷನ್ ಅಲ್ಲ.ಮುಂದೆ ಹಲವಾರು ಬಾರಿ ನಿನಗೆ ಶಸ್ತ್ರಚಿಕಿತ್ಸೆ ಆದರು ಎಲ್ಲಾ ಸಮಯದಲ್ಲಿ ನಿನಗೆ ರಕ್ಷಣೆ ಮಾಡುತ್ತೇವೆ. ನಿನಗೆ ಮಂಗಳವಾಗಲಿ ಅಂತ ಆಶೀರ್ವಾದ ಮಾಡಿ ಅದೃಶ್ಯ ರಾದರು.
ಮರುದಿನ ರಾಯರನ್ನು ಪೂಜಿಸಿ ವೈದ್ಯರ ಬಳಿ ಹೋಗುತ್ತಾರೆ.
ವೈದ್ಯರು ಬದುಕುಳಿಯುವ ಸಾಧ್ಯತೆ ಇಲ್ಲ ವೆಂದು ಹೇಳಿದಾಗ ನಮ್ಮ ಗುರುಗಳು ಹೇಳಿದ್ದಾರೆ ನೀವು ಆಪರೇಶನಮಾಡಿ ಅಂತ ಹೇಳುತ್ತಾರೆ. ಆಪರೇಷನ್ ಆಗುತ್ತದೆ. ಕೆಲ ದಿನ ಆಸ್ಪತ್ರೆಯಲ್ಲಿ ಇದ್ದು ಮನೆಗೆ ಬರುತ್ತಾರೆ. ಉಳಿಯಲು ಅಸಾಧ್ಯ!?? ಎನ್ನುವ ವ್ಯಕ್ತಿ ಬದುಕಿರುವದನ್ನು ಕಂಡು ವೈದ್ಯಕೀಯ ಲೋಕ ಬೆರಗಾಗುತ್ತದೆ.
ಆ ನಂತರ ಮತ್ತೆ ಹೃದಯ ಕಾಯಿಲೆ ಬಂದಾಗ ಇನ್ನೊಂದು ಸಾರಿ ಶಸ್ತ್ರಚಿಕಿತ್ಸೆ ಆಗುತ್ತದೆ. ಹೀಗೆ ಅವರಿಗೆ ೨/೩ ಬಾರಿ ಶಸ್ತ್ರಚಿಕಿತ್ಸೆ ಆದಾಗ್ಯೂ
ವೈದ್ಯರು ನೀವು ಬದುಕುವದಿಲ್ಲ ಅಂತ ಹೇಳುವದು..
ರಾಯರು ನಾನು ಇದ್ದೇನೆ.ಏನು ಆಗುವುದಿಲ್ಲ!! ಅಂತ ಸ್ವಪ್ನದಲ್ಲಿ ಅಭಯ ಕೊಡುವದು.ಹೀಗೆ ರಾಯರ ಅನುಗ್ರಹ ದಿಂದ ಅವರು ಬದುಕಿದರು..
ಆ ಸಮಯದಲ್ಲಿ ದ್ವೀತಿಯ ಯುದ್ಧ ಆರಂಭವಾಗಿ ಅವರ ಸಂಪತ್ತು ಇರುವ ಮಲಯಾ ದೇಶವನ್ನು ಜಪಾನಿಯರು ಆಕ್ರಮಣ ಮಾಡುತ್ತಾರೆ.ಅಲ್ಲಿ ಇಂದ ಬರುವ ಹಣ ಬರದೇ ನಿಂತು ಹೋಗುತ್ತದೆ.
ಬಂಧು ಬಳಗದವರೆಲ್ಲ ಯಾವುದೋ ಒಬ್ಬ ಸನ್ಯಾಸಿ ಪೂಜೆ ಮಾಡಿದ ಪ್ರಭಾವ,ಸಂಪತ್ತು ನಾಶವಾಯಿತು ಅಂತ ಹೀಯಾಳಿಸುತ್ತಾರೆ.ಆದರು ಅವರು ರಾಯರ ಮೇಲೆ ನಂಬಿಕೆ, ವಿಶ್ವಾಸ, ಕಳೆದುಕೊಳ್ಳಲಿಲ್ಲ.
ನನ್ನ ಹಣೆಬರಹದಲ್ಲಿ ಕಳೆದುಕೊಳ್ಳುವದು ಇರುವಾಗ ರಾಯರು ಹೇಗೆ ಹೊಣೆ ಆಗುತ್ತಾರೆ ಅಂತ ಹೇಳುತ್ತಾರೆ..
ನಂತರ ಒಂದು ದಿನ
ರಾಯರು ಸ್ವಪ್ನದಲ್ಲಿ ಬಂದು ರಾಮನಾಥ!! ಮಂತ್ರಾಲಯಕ್ಕೆ ನಮ್ಮ ದರುಶನಕ್ಕೆ ಬರುವದಿಲ್ಲವೇ?? ಅಂತ ಕೇಳಿದಾಗ
ಪತ್ನಿ ಸಮೇತರಾಗಿ ಹೊರಟರು. ಅಲ್ಲಿ ಅವಾಗ್ಗೆ ಪೀಠದಲ್ಲಿ ಇದ್ದ ಗುರುಗಳನ್ನು ಕಂಡು ತಮ್ಮ ಅನುಭವವನ್ನು ಹೇಳಿ ನಮಗೆ ಜೀವ ದಾನ ಮಾಡಿದ ರಾಯರಿಗೆ ಏನಾದರು ಸೇವೆ ಮಾಡಬೇಕು ಅದಕ್ಕೆ ಅಪ್ಪಣೆ ಕೊಡಿ ಎನ್ನಲು
ಅವಾಗ್ಗೆ ಶ್ರೀಗಳು
ರಾಯರಿಗೆ ಉತ್ಸವ ಮಾಡಲು ಬೆಳ್ಳಿ ರಥ ಮಾಡಿಸಬೇಕಾಗಿದೆ.ಅದಕ್ಕೆ ತಮ್ಮ ಸೇವೆ ಆಗಲಿ ಎಂದಾಗ ಸಂಪೂರ್ಣ ಸೇವೆಯನ್ನು ಒಪ್ಪಿಕೊಂಡರು.
ಆ ಸಮಯದಲ್ಲಿ ವಿದೇಶದಲ್ಲಿ ಸಿಕ್ಕಿ ಹಾಕಿ ಕೊಂಡ ಅವರ ಹಣವು ಸಹ ರಾಯರ ಅನುಗ್ರಹದಿಂದ ಅದೆಲ್ಲವು ಅವರಿಗೆ ಹಿಂತಿರುಗಿ ಬರುತ್ತದೆ..ತಮ್ಮ ಬಳಿ ಇದ್ದ ಹತ್ತಾರು ಸಾವಿರದ ಗಟ್ಟಿ ಬೆಳ್ಳಿ ಇಂದ ರಥವನ್ನು ಮಾಡಿಸಿದರು. ರಜತ ರಥ ಸಿದ್ಧವಾಯಿತು.
ದೇಹ ರಥ ಉಳಿಸಿದ ಮುನಿಗೆ ರಜತ ರಥ...
ಹೀಗೆ ರಾಮನಾಥರಿಗೆ ಪ್ರಾಣ,ಮತ್ತು ಧನವನ್ನು ಕೊಟ್ಟರು ನಮ್ಮ ರಾಯರು..
ಇದೇ ಬೆಳ್ಳಿರಥವನ್ನು ಇಂದಿಗು ಮಂತ್ರಾಲಯ ದಲ್ಲಿ ರಥೋತ್ಸವ ಸಮಯದಲ್ಲಿ ನೋಡಬಹುದು...
ನಮ್ಮ ಗುರುಗಳ ಮಹಿಮೆ ಮತ್ತು. ಅವರ ಅನುಗ್ರಹ ವರ್ಣಿಸಲು ಸಾಧ್ಯವಿಲ್ಲ... ನಾವಾಗಿ ಪೂಜೆ,ಸೇವೆ ಮಾಡಿದರೆ ಮಾತ್ರ ಇತರ ದೇವತೆಗಳ ಅನುಗ್ರಹ..
ರಾಯರು ಹಾಗಲ್ಲ,ಕರೆದ ಕೂಡಲೆ ಬಂದು ಅನುಗ್ರಹ ಮಾಡುತ್ತಾರೆ...
ಇದೇ ಮಹಾತ್ಮರ ಲಕ್ಷಣ🙏🙏
ನಂಬಿ ಕೆಟ್ಟವರಿಲ್ಲವೋ ಈ ಗುರುಗಳ
ನಂಬದೇ ಕೆಡುವರುಂಟೋ
🙏ಅ.ವಿಜಯವಿಠ್ಠಲ🙏
******
ಶ್ರೀ ಗುರು ರಾಘವೇಂದ್ರರ ಪರಮ ಮಂಗಳವಾದ ಚರಿತೆ ಬರೆಯುವೆ|
ಗುರು ವರದೇಂದ್ರರ ಕರುಣದಿಂದಪನಿತು ಹರುಷದಿಂದ|||
✍
ರಣ ರಣ ಬಿಸಿಲು,ಸೂರ್ಯನ ಪ್ರಕರ ಕಿರಣಗಳಿಗೆ ಎಲ್ಲರು ಬಳಲಿದ್ದರು.ಮುಂದೆ ಪ್ರಯಾಣ ಸಾಗದೇ. ಸ್ವಲ್ಪ ವಿಶ್ರಾಂತಿ ಗೊಸ್ಕರ ಶ್ರೀ ರಾಘವೇಂದ್ರ ಸ್ವಾಮಿಗಳ ಸಂಸ್ಥಾನದ ಪರಿವಾರದವರು ಪ್ರಯಾಣದ ಆಯಾಸ ಪರಿಹರಿಸಿಕೊಳ್ಳಲು ಒಂದು ಕಡೆ ನಿಂತಿದ್ದಾರೆ.
ಬಿಸಿಲಿನ ಬಾಧೆಗೆ ಬಳಲಿದ ಪಲ್ಲಕ್ಕಿ ಹೊರುವ ಮನುಷ್ಯರು ಪಲ್ಲಕ್ಕಿ ಯನ್ನು ಗಿಡದ ಕೆಳಗಡೆ ಇಳಿಸಿ ತಾವು ಒಂದು ಗಿಡದ ಕೆಳಗಡೆ ಕುಳಿತು ವಿಶ್ರಾಂತಿ ತೆಗೆದುಕೊಳ್ಳುತ್ತಾ ಇದ್ದಾರೆ.
ರಾಯರು ಅಲ್ಲಿ ಯೇ ಇದ್ದ ಒಂದು ದೊಡ್ಡ ಕಟ್ಟಿ ಯ ಮೇಲೆ ಕುಳಿತು ಭಗವಂತನ ಧ್ಯಾನ ಮಾಡುತ್ತಾ ಕುಳಿತಿದ್ದಾರೆ.
ಇದ್ದಕ್ಕಿದ್ದಂತೆ ಒಬ್ಬ ವ್ಯಕ್ತಿ ಬಂದು
ಅರೇ!!ಏನಿದು??ಏನು ಸ್ವಾಮಿ ಇದು??
ನಿಮ್ಮ ಗುರುಗಳು ನಮ್ಮ ನವಾಬನ ಮಗನ ಗೋರಿ ಮೇಲೆ ಕುಳಿತಿದ್ದಾರೆ.ಇದೇನು ಅವರು ಕೂಡುವ ಪೀಠವೇ??
ಗುರುಗಳಿಗೆ ತಿಳಿಯದು. ನಿಮಗೆ ಗೊತ್ತು ಆಗುವದಿಲ್ಲವೇ??ಗುರುಗಳನ್ನು ಅಲ್ಲಿ ಸತ್ತಹೆಣದ ಗೋರಿಯ ಮೇಲೆ ಕೂಡಿಸಿದ್ದೀರಿ ಎಂದು ಅಲ್ಲಿ ಬಂದ ವ್ಯಕ್ತಿ ಜೋರಾಗಿ ಮಾತನಾಡತೊಡಗಿದ.
ಮಠದ ಪರಿಚಾರಕರಿಗೆ ಆ ವ್ಯಕ್ತಿಯ ಮಾತುಗಳು ಅಧಿಕಪ್ರಸಂಗ ಎನಿಸಿತು.ಅವನ ವ್ಯಂಗ್ಯ ಭರಿತ ಮಾತುಗಳಿಗೆ ಸರಿಯಾದ ರೀತಿಯಲ್ಲಿ ಉತ್ತರ ಕೊಡಲು ಮುಂದಾದರು.
ತಕ್ಷಣ ರಾಯರು ತಡೆದು ಅಯ್ಯಾ!!ನೀನು ಹೇಳಿದ ಹಾಗೆ ಹಿಂದೆ ಅದು ಗೋರಿಯಾಗಿತ್ತು.ಇಂದು ಆಗಿಲ್ಲ.ಏನು ಸಂಗತಿ??ನಡೆದ ವಿಷಯ ವನ್ನು ಹೇಳು ಎನ್ನಲು
ಅದಕ್ಕೆ ಆ ವ್ಯಕ್ತಿ ಅಳುತ್ತಾ
ನಿನ್ನೆ ಇದೇ ಸಮಯದಲ್ಲಿ ನಮ್ಮ ನವಾಬರು ತಮ್ಮ ಮಗನ ಜೊತೆಗೆ ಇಲ್ಲಿ ಬಂದಿದ್ದರು. ಆಟವಾಡಲು ಹೋದ ನವಾಬನ ಮಗನಿಗೆ ಹಾವು ಕಚ್ಚಿ ಮೃತನಾದ.ಅತೀವ ದುಃಖದಿಂದ ಇಲ್ಲಿ ಮಣ್ಣಿನ ಗೋರಿ ಮಾಡಿದ್ದಾರೆ.ಆ ಹಸೀ ಗೋಡೆಯ ಮೇಲೆ ತಾವು ಕುಳಿತಿದ್ದಿರಿ ಎಂದು ಎಲ್ಲಾ ವಿಷಯ ಹೇಳಿದ.
ತಕ್ಷಣ ಗುರುಗಳು
ಅಲ್ಲಯ್ಯಾ!! ಆ ಬಾಲಕ ಸತ್ತಿದ್ದರೆ ಮಾತ್ರ ಇದು ಗೋರಿ.ಅವನು ಸತ್ತಿಲ್ಲ!! ಎಂದು ನಸು ನಗುತ್ತಾ ಹೇಳಿದಾಗ ಆ ವ್ಯಕ್ತಿ ಅಲ್ಲಿ ಇಂದ ಓಡಿಹೋಗಿ ಕೆಲವೇ ನಿಮಿಷದಲ್ಲಿ ನವಾಬ ಮತ್ತು ಅವನ ಪರಿವಾರವನ್ನು ಕರೆತಂದು ನವಾಬರೇ ಈ ಗುರುಗಳು ರಾಜಕುಮಾರ ಸತ್ತಿಲ್ಲ ಅಂತ ಹೇಳುತ್ತಾ ಇದ್ದಾರೆ ಎಂದು ರಾಯರಿಗೆ ತೋರಿಸಿ ಹೇಳಿದ.ತಕ್ಷಣ ನವಾಬ ಕುದುರೆಯ ಮೇಲಿಂದ ಕೆಳಗಡೆ ಹಾರಿ ರಾಯರ ಪಾದಕ್ಕೆ ಬಿದ್ದು ಇದ್ದ ಒಬ್ಬ ಮಗನನ್ನು ಬದುಕಿಸಿ ಕೊಡಲು ಅಂಗಲಾಚಿ ಬೇಡಿಕೊಂಡ.
ರಾಯರ ಅಪ್ಪಣೆ ಯಂತೆ ಗೋರಿಯನ್ನು ಒಡೆದು ಮಗುವಿನ ದೇಹವನ್ನು ಹೊರ ತೆಗೆದರು.ದೇಹದಲ್ಲಿ ಉಸಿರಾಟದ ಸೂಚನೆ ಇಲ್ಲ.ಮೈಯೆಲ್ಲಾ ನೀಲಿಯಾಗಿದೆ.
ಸುತ್ತ ಇದ್ದವರೆಲ್ಲ ತಲೆಗೊಂದು ಮಾತನಾಡಿದರು.
ಯಾವುದೊ ಒಬ್ಬ ಹಿಂದು ಸಾಧುವಿನ ಮಾತು ಕೇಳಿ ಮಗನ ಗೋರಿ ತೆಗೆಸಿದ್ದು ತಪ್ಪು ಎಂದು.
ಆ ಬಾಲಕನ ದೇಹವನ್ನು ಗುರುಗಳ ಮುಂದೆ ಮಲಗಿಸಿದರು.
ರಾಯರು ಮಂತ್ರ ವನ್ನು ಉಚ್ಚಾರಣೆ ಮಾಡಿ ಶ್ರೀ ಹರಿಯ ಸ್ಮರಣೆ ಮಾಡುತ್ತಾ ಆ ಬಾಲಕನ ಮೇಲೆ ಅಭಿಮಂತ್ರಿತ ಜಲವನ್ನು ಪ್ರೋಕ್ಷಣೆ ಮಾಡಲು
ತಕ್ಷಣ ಬಾಲಕ ನಿದ್ರೆ ಇಂದ ಎದ್ದು ಕುಳಿತವರಂತೆ ಕುಳಿತ.
ತನ್ನ ತಂದೆ ತಾಯಿಯ ಕಡೆ ನೋಡಿ ಅವರ ಬಳಿ ಓಡಿದ.
ಗುರುಗಳ ಮಹಿಮೆಯನ್ನು ನೋಡಿ ಸವಣೂರಿನ ನವಾಬ ತನ್ನ ಕಣ್ಣು ತಾನೇ ನಂಬದಾದ.
ಸತ್ತ ಮಗ ಬದುಕಿಬಂದದ್ದು ನೋಡಿ ಅವನು ಹಾಗು ಅವನ ಪರಿವಾರ ರಾಯರ ಪಾದಕ್ಕೆ ಅಡ್ಡಬಿದ್ದು ತಮ್ಮ ಊರಿಗೆ ಬಹು ಮರ್ಯಾದೆಯಿಂದ ಕರೆದುಕೊಂಡು ಹೋಗಿ , ವಿಶೇಷವಾದ ಗೌರವ ವನ್ನು ರಾಯರಿಗೆ ಮಾಡಿ ಕೃಷ್ಣಾಪುರ ಎಂಬ ಗ್ರಾಮವನ್ನು ದಾನ ಕೊಟ್ಟನು.ರಾಯರ ಅಂತರ್ಯಾಮಿಯಾದ ಶ್ರೀ ಕೃಷ್ಣ ಪ್ರೀತಿಯಾಗಲಿ.
ಶ್ರೀ ಕೃಷ್ಣಾರ್ಪಣಮಸ್ತು
*******
ಶ್ರೀ ಗುರು ಜಗನ್ನಾಥ ದಾಸರು ರಾಯರಲ್ಲಿ ಯಾವ ರೀತಿಯಲ್ಲಿ ಪ್ರಾರ್ಥನೆ ಮಾಡಬೇಕು ಅಂತ ಹೇಳಿದ್ದಾರೆ.👇
ನಿನ್ನ ಕಥೆಗಳ ಶ್ರವಣ ಮಾಡಿಸೋ|
ನಿನ್ನ ಗುಣ ಕೀರ್ತನೆಯ ಮಾಡಿಸೋ|
ನಿನ್ನ ಸ್ಮರಣೆಯ ನೀಡು ಸಂತತ ನಿನ್ನ ಪದ ಸೇವಾ|
ನಿನ್ನ ಅರ್ಚನಗೈಸೋ ಗುರುವರ|
ನಿನ್ನ ವಂದನೆ ಗೈಸೊ ದಾಸ್ಯವ|
ನಿನ್ನ ಗೆಳೆತನ ನೀಡೋ ಯತಿವರ ಎನ್ನನರ್ಪಿಸುವೆ||
ಇವರ ಪಾದ ಸ್ಮರಣೆಯ ಮಾಡದವನೇ ಪಾಪಿ|
ಮಂದಭಾಗ್ಯರಿಗೆ ದೊರಕದಿವರ ಸೇವಾ|
*****
No comments:
Post a Comment